Discover millions of ebooks, audiobooks, and so much more with a free trial

Only $11.99/month after trial. Cancel anytime.

Paridhi
Paridhi
Paridhi
Ebook428 pages2 hours

Paridhi

Rating: 0 out of 5 stars

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200200211
Paridhi

Read more from K.T. Gatti

Related to Paridhi

Related ebooks

Reviews for Paridhi

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Paridhi - K.T. Gatti

    http://www.pustaka.co.in

    ಪರಿಧಿ

    Paridhi

    Author :

    ಕೆ. ಟಿ. ಗಟ್ಟಿ

    K T Gatti

    For more books
    http://www.pustaka.co.in/home/author/kt-gatti

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೆ. ಟಿ. ಗಟ್ಟಿ
    ಪರಿಧಿ
    (ಕಾದಂಬರಿ)
    ಪರಿಧಿ

    ಕಣ್ಣಿಗೆ ಕಾಣಿಸದ ಕಪ್ಪು ರಂಧ್ರದ ಪರಿಧಿ. ಇದೆಯೆಂದರೆ ಇದೆ, ಇಲ್ಲ ಎಂದರೆ ಇಲ್ಲ. ಇಲ್ಲ ಎಂದ ಮೇಲೆ ಇರಲೇ ಬೇಕು! ಆದ್ದರಿಂದ ಇದೆ. ಈ ಕಪ್ಪು ರಂಧ್ರದ ಪರಿಧಿಯಲ್ಲಿ ಒಬ್ಬ ವ್ಯಕ್ತಿ ಸಿಲುಕಿಕೊಂಡಿದ್ದಾನೆ. ಅವನ ಹೆಸರು ದಿಗಂಬರ. ಅವನು ಅದರಲ್ಲೇ ಹುಟ್ಟಿಕೊಂಡವನು. ಆದ್ದರಿಂದ ಅವನ ಹುಟ್ಟೂ ಸಾವೂ ಒಂದೇ. ಎಲ್ಲ ಶಬ್ದಗಳಲ್ಲಿ, ಎಲ್ಲ ಸಂಭವಗಳಲ್ಲಿ ವ್ಯಕ್ತಿಗಳು ತಮಗೆ ಬೇಕಾದ ಅರ್ಥವನ್ನೇ ಕಾಣುತ್ತಾರೆ. ಅವರವರ ದೃಷ್ಟಿಕೋನ, ಅನುಭವ, ಅಭೀಪ್ಸೆ, ಅನುಕೂಲಗಳಂತೆ ಯಾವುದೂ ಏನೂ ಆಗಿ ತೋರಬಹುದು. ಹಾಗೆಯೇ ದಿಗಂಬರ ಕೂಡ ಯಾರೂ ಆಗಿರಬಹುದು. ಅವನ ವ್ಯಕ್ತಿತ್ವ ಏನು ಎಂಬುದನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಯಾರಿಂದಲೂ ಆಗಿಲ್ಲ; ಆಗುವುದೂ ಇಲ್ಲ. ಯಾಕೆಂದರೆ, ಸಾರ್ವಕಾಲಿಕ ಮೌಲ್ಯ ಎಂಬುದಕ್ಕೆ ಕಾಲದ ಮಿತಿ ಇದೆ. ಯಾವುದೇ ವಸ್ತುವಿನ ಅಥವಾ ವ್ಯಕ್ತಿಯ ಮೌಲ್ಯ ಬದಲಾಗುತ್ತಾ ಇರುತ್ತದೆ; ಮೌಲ್ಯ ಮಾಪಕವೂ ಬದಲಾಗುತ್ತಿರುತ್ತದೆ.

    ಕೆ. ಟಿ. ಗಟ್ಟಿ
    ಪರಿಧಿ
    ಪರಿಧಿಯ ಕುರಿತು
    ಜೀವನದ ಹುಡುಕಾಟ - `ಪರಿಧಿ’

    -ಡಾ| ಮನಮೋಹನ ಎಂ.

    ಕನ್ನಡದ ಮಹತ್ವದ ಕಾದಂಬರಿಕಾರರಲ್ಲಿ ಕೆ. ಟಿ. ಗಟ್ಟಿ ಒಬ್ಬರು. `ಪರಿಧಿ’ ಕಾದಂಬರಿಯಲ್ಲಿ ಓದು, ಜೀವನ, ಲೈಂಗಿಕತೆ, ಮದುವೆ, ಸಾವು, ಕಾಲ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಯುತ್ತದೆ. ಜೀವನವನ್ನು ಲೈಂಗಿಕ, ಮದುವೆ, ಸಾವು ಮತ್ತು ಕಾಲದ ಜೊತೆಗೆ ಸಂಯೋಜನೆಗೊಳಿಸುವ ಮುಖಾಂತರ ಅವುಗಳೊಳಗೆ ಸಂಬಂಧವನ್ನು ಬೆಸೆಯುತ್ತಾ ಹೋಗುತ್ತದೆ. ಜೀವನದ ಪರಿಧಿಗಳು ಮತ್ತು ಅದನ್ನು ಮೀರುವ ಪ್ರಕ್ರಿಯೆಗಳ ಸಂಘರ್ಷವೇ `ಪರಿಧಿ’ಯಾಗಿದೆ.

    ದಿಗಂಬರನ ಬದುಕು ಮತ್ತು ಚಿಂತನೆಯ ರೀತಿಗಳು ಒಟ್ಟು ಕಾದಂಬರಿಯ ಹಂದರವಾಗಿದೆ. ಕಚೇರಿಗೆ ತಡವಾಗಿ ಹೋಗುವಾಗ ಆಗುವ ಕಿರಿಕಿರಿಯ ಮೂಲಕ ಶಾಂತಿಯ ಅನ್ವೇಷಣೆ ಆರಂಭವಾಗುತ್ತದೆ. `ಇದು ಬೇಗ, ಆಗಬೇಕು’ ಎನ್ನುವ ಕಚೇರಿಯ ನೆಲೆ ಯಾಂತ್ರಿಕತೆ ಮತ್ತು ಬೌದ್ಧಿಕತೆಗೆ ಸಾಕ್ಷಿಯಾಗುತ್ತದೆ.

    ಭವಿಷ್ಯದ ಹುಡುಕಾಟ ಆಧುನಿಕ ಜೀವನದ ನಿರಂತರ ಪ್ರಕ್ರಿಯೆಯಾಗಿದೆ. ಭವಿಷ್ಯದ ಹುಡುಕಾಟದಲ್ಲಿ ಭೂತಕಾಲದಲ್ಲಿ ಬದುಕುವ ಹಳೆಯ, ಜಡ, ದಿಗಂಬರನಲ್ಲಿ ರೂಪಿತವಾಗುವ ಭವಿಷ್ಯವನ್ನು ವರ್ತಮಾನಕ್ಕೆಳೆದು ತರುವ ಪ್ರಯತ್ನದ ನಿರರ್ಥಕತೆಯ ಕುರಿತು ಮತ್ತು ವರ್ತಮಾನ ಹೇಗೆ ಭವಿಷ್ಯವಾಗಬಹುದು, ಅರ್ಥಾತ್ ವರ್ತಮಾನವನ್ನೇ ಹೇಗೆ ಭüವಿಷ್ಯವೆಂದು ಭಾವಿಸಿಕೊಳ್ಳಬಹುದು ಎಂಬ ಗೊಂದಲಮಯವಾದ ಯೋಚನೆಯಲ್ಲಿರುವ ಸ್ಥಿತಿ ಒಬ್ಬ ವ್ಯಕ್ತಿಯ ಅಸ್ತಿತ್ವದ ಪ್ರಶ್ನೆಯಾಗಿ ಒಡಮೂಡುತ್ತದೆ. ದಿಗಂಬರ ಕಾಲಕ್ಕೆ ನೀಡುವ ವ್ಯಾಖ್ಯಾನವು ಮಾನವ ಬದುಕಿನ ಸಂಕೀರ್ಣತೆಯನ್ನು ಸೂಚಿಸುತ್ತದೆ. `ಸತ್ತಿರುವುದು ಎಂದರೆ ಭೂತಕಾಲವನ್ನು ಜೀವಿಸುವುದು. ಜೀವಿಸಿರುವುದು ಎಂದರೆ ಭವಿಷ್ಯತ್ಕಾಲವನ್ನು ವರ್ತಮಾನ ಕಾಲದಲ್ಲಿ ಜೀವಿಸುವುದು. ನಿನ್ನೆಯಂತೆಯೇ ಇಂದೂ ಇರುವುದಾದರೆ ಅದು ಸಾವು. ನಾಳೆ ಹೇಗಿರಬೇಕೆಂದು ನಿರ್ಧರಿಸಿ ಅದನ್ನು ನಾಳೆಗಿಡದೆ ಇಂದೇ ಜೀವಿಸಿದರೆ ಅದು ನಾಳೆಯಂತಿರುವುದಿಲ್ಲ, ನಿನ್ನೆಯಂತೆಯೂ ಇರುವುದಿಲ್ಲ. ಅದೇ ಜೀವನ, ಅದೇ ಜೀವಿಸುವಿಕೆ’ (ಪರಿಧಿ, ಪುಟ 10-11) ಎನ್ನುವಲ್ಲಿ ಸಾವು ಮತ್ತು ಜೀವನದ ವ್ಯಾಖ್ಯಾನವಿದೆ.

    ರೂನಿ ದಿಗಂಬರನ ಕಚೇರಿಯ ಟೈಪಿಸ್ಟ್. ವಿವಾಹವಾಗಿ ಮಗುವನ್ನು ಪಡೆದ ತಾಯಿಯಾಗಿ ಡೈವೋರ್ಸಿಲ್ಲದೆ ಸರಳವಾಗಿಯೇ ರೂನಿಯ ಗಂಡ ಬೇರೊಬ್ಬಳ ಜೊತೆ ಇದ್ದಾನೆ. ಇದನ್ನು ರೂನಿಯ ತಾಯಿ `ಅಂಗಿ ಬದಲಾಯಿಸಿದಂತೆ ಹೆಂಡತಿ ಬದಲಾಯಿಸುವ ಮನುಷ್ಯ’ ಎಂದು ಕರೆಯುವ ಮೂಲಕ ದಾಂಪತ್ಯದ ಒಂದು ಮುಖವನ್ನು ತಿಳಿಸುತ್ತದೆ. ಅನಿಲ ಸಾಹುವಿನ ಮದುವೆಯಾದ ಮೇಲೆ ಅವನ ಹೆಂಡತಿ ಅಂಜು ಅನಿಲಸಾಹುವಿನ ತಂದೆ ಜೊತೆಗಿರುವುದು ಇನ್ನೊಂದು ವೈಚಿತ್ರ್ಯ. ಅಗರವಾಲನ ನಿರಂತರ ಘರ್ಷಣೆಯ ಸಂಸಾರ ಮತ್ತೊಂದು ನೆಲೆ. ಈ ದಾಂಪತ್ಯಗಳನ್ನು ಗಮನಿಸಿದ ದಿಗಂಬರನಲ್ಲಿ ಮದುವೆಯ ಆಸಕ್ತಿ ಕಳೆಯುವಂತೆ ಮಾಡುತ್ತದೆ. ಶೈಲ ಮತ್ತು ರೂನಿಯರು ಅವನ ಮೇಲೆ ಬಿದ್ದು ಪ್ರೀತಿ ಬಯಸಿದರೂ ದಿಗಂಬರ ನಿರ್ಲಿಪ್ತನಾಗುತ್ತಾನೆ. ದಿಗಂಬರ ಕೊಡುವ ಮನುಷ್ಯನ ಹುಟ್ಟಿನ ಚಿತ್ರಣದಲ್ಲಿ ಮನುಷ್ಯ ಸೃಷ್ಟಿಸಲ್ಪಡುವುದು ಒಂದು ಲೈಂಗಿಕ ಗೊಂದಲದಲ್ಲಿ. ಉದ್ದೇಶಪೂರ್ವಕವಾಗಿ ಯಾರ ಸೃಷ್ಟಿಯೂ ಆಗುವುದಿಲ್ಲ ಎನ್ನುವ ಮಾತಿಗೆ ಮೇಲಿನ ಪ್ರಸಂಗಗಳು ಸಾಕ್ಷಿಯಾಗುತ್ತವೆ. ಈ ಮೂಲಕ ಜೀವನ ಅಸಂಬದ್ಧ, ಗೊಂದಲ, ಅಸ್ಪಷ್ಟ ಎಂಬ ನಿಲುವಿಗೆ ಬರಲಾಗುತ್ತದೆ.

    ಆಧುನಿಕ ಜೀವನ ಅಸಂಗತತೆಯಿಂದ ಕೂಡಿರುವುದಾಗಿದೆ. ಇದನ್ನು ದಿಗಂಬರನ ಮನಸ್ಸಿನ ಕ್ರೂರತೆಯ ಮೂಲಕ ತಿಳಿಯಬಹುದು. ದಿಗಂಬರ ಕಾದಂಬರಿ ಬರೆಯಬೇಕು ಎಂದು ಆಲೋಚಿಸುವಾಗ ವಸ್ತುವಿಗಾಗಿ ತಡಕಾಡುತ್ತಾನೆ. ಆಗ ಅವನಿಗೆ ಹೊಳೆಯುವ ವಸ್ತು ಕೊಲ್ಲುವುದು. ಅವನಲ್ಲಿ ಈ ಆಲೋಚನೆ ಕತ್ತು ಹಿಸುಕಿ ಕೊಲ್ಲುವ ನೆಲೆಯಲ್ಲಿ ಸಂತೋಷ ಪಡುತ್ತದೆ. ದಿಗಂಬರನಂತಹ ಸಾತ್ವಿಕ ವ್ಯಕ್ತಿಯ ಒಳಗಡೆ ಇರುವ ಮನಸ್ಸಿನ ಕ್ರೂರತೆ ಆಧುನಿಕ ಜೀವನದ ಅಸಂಗತಿಯಾಗಿದೆ. ಇದಕ್ಕೆ ಇನ್ನೊಂದು ನಿದರ್ಶನ ಪಾನ್ಸರೆ ಮದುವೆಗೆ ನೀಡುವ ಉತ್ತರದಲ್ಲಿ ಕಾಣಬಹುದು. ಪಾನ್ಸರೆ ಮದುವೆಯ ಕುರಿತು ಹೇಳುವಾಗ, ಮನುಷ್ಯರು ಸ್ವತಂತ್ರವಾಗಿ ಜೀವಿಸಲು ಅಂದರೆ ಇಂಡಿಪೆಂಡೆಂಟ್ ಇಂಡಿವಿಜುವಲ್ಸ್ ಆಗಿ ಜೀವಿಸಲು ಆರಂಭಿಸಬೇಕು. ಗಂಡು ಗಂಡಿನ ಪಾಡಿಗೆ, ಹೆಣ್ಣು ಹೆಣ್ಣಿನ ಪಾಡಿಗೆ, ನೋಡು ನಾನಿರುವುದು ಮೂರು ಮೀಟರುದ್ದದ ಎರಡು ಮೀಟರು ಅಗಲದ ಒಂದು ಕೋಣೆಯಲ್ಲಿ. ನಾನು ಮದುವೆಯಾಗಿ ಇಲ್ಲಿ ಒಂದು ಸಂಸಾರವನ್ನು ಹೂಡುವುದು ಎಂದೂ ಸಾಧ್ಯವಿಲ್ಲ. ಒಂದು ಲಕ್ಷ ಎರಡು ಲಕ್ಷ ಸಂಪಾದಿಸಿ ಫ್ಲಾಟು ಪಡೆಯುವುದೂ ಈ ಜನ್ಮದ ಮಾತಲ್ಲ. ಆದುದರಿಂದ ಹೆಣ್ಣಿದ್ದಲ್ಲಿ ಹೆಣ್ಣಿರಲಿ ಗಂಡಿದ್ದಲ್ಲಿ ಗಂಡಿರಲಿ; ಬೇಕಾದಾಗ ಭೇಟಿಯಾಗಿ ಜೀವನ ಮಾಡೋದು. ಒಬ್ಬರನ್ನೊಬ್ಬರು ಗಂಡ ಹೆಂಡತಿ ಎಂದು ಕರೆಯಬೇಕಾದ ಅಗತ್ಯವೂ ಇಲ್ಲ. ಒಬ್ಬರಿಗೊಬ್ಬರು ಶಾಂತಿಯನ್ನು ಕೊಟ್ಟರಾಯಿತು. ಭೇಟಿಯಾಗುವುದು, ಬೇಕಾದಷ್ಟು ಹೊತ್ತು ಒಟ್ಟಿಗಿರೋದು, ಮತ್ತೆ ಅವರವರ ಗೂಡಿಗೆ ಹೋಗೋದು’ (ಪರಿಧಿ, ಪುಟ 49) ಎಂಬ ಮಾತುಗಳಲ್ಲಿ ಜೀವನದ ಅಸಂಗತತೆಯ ಜೊತೆಗೆ ಕೃತಕತೆಯಿಂದ ಕೂಡಿರುವುದನ್ನು ಗಮನಿಸಬಹುದು. ನವ ವಸಾಹತುಶಾಹಿಯ ಮನುಷ್ಯ ಸಂಬಂಧದ ಚಿತ್ರಣವೋ ಎಂಬಂತೆ ಈ ಮಾತುಗಳು ಭಾಸವಾಗುತ್ತವೆ. ಇಲ್ಲಿ ಗುರುತಿಸುವ ಗಂಡು ಹೆಣ್ಣಿನ ಸುಖ ಮುಖ್ಯವಾಗುವುದಲ್ಲದೆ, ಇನ್ನಿತರ ವಿಚಾರಗಳು ಗೌಣವಾಗುತ್ತವೆ. ಮನುಷ್ಯ ಸಂಬಂಧಗಳು ವಿಕಲ್ಪಗೊಂಡು ಕೇವಲ ಲೈಂಗಿಕತೆಯನ್ನು ಉನ್ನತೀಕರಿಸುವ ಮೂಲಕ ಭವಿಷ್ಯತ್ತಿನ ಜೀವನ ಬರಡು ಎಂದು ಸೂಚಿಸುತ್ತದೆ.

    ದಿಗಂಬರನ ತಾಯಿಯ ಸಾವನ್ನು ಗ್ರಹಿಸುವ ವಿಧಾನದಲ್ಲಿ ನ್ಯೂನತೆಯಿದೆ. ತಾಯಿಯ ಅಂತ್ಯಕ್ರಿಯೆ, ಆತ್ಮಕ್ಕೆ ಶಾಂತಿ, ದೇವರು ಮುಂತಾದ ವಿಚಾರಗಳು ಮಾನಸಿಕ ಭ್ರಮೆಯೆಂದು ಗುರುತಿಸುತ್ತಾನೆ. `ವಿಶ್ವದಲ್ಲಿ ಭೂಮಿಯೆಂಬುದು ಒಂದು ರಂಧ್ರವಾಗಿರಬಹುದು, ಶೂನ್ಯವಾಗಿರಬಹುದು, ಇದನ್ನು ಬೇರೇನೂ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಇದನ್ನು ನಮಗೆ ಖುಷಿಕೊಡುವ ಬಗೆಯಲ್ಲಿ ಭ್ರಮಿಸಿಕೊಳ್ಳುವುದು ಮಾತ್ರ ನಮ್ಮಿಂದ ಸಾಧ್ಯ’ (ಪರಿಧಿ, ಪುಟ 65-66) ಎನ್ನುವ ಮೂಲಕ ಮಾನವನ ಆಲೋಚನಾ ಪರಿಧಿಗೆ ಸೀಮಿತತೆಯಿರುವುದನ್ನು ಗುರುತಿಸುತ್ತಾನೆ.

    ಸುಧೀರ್ ಮತ್ತು ದಿಗಂಬರ ಹುಡುಗಿಯ ಕುರಿತ ಚಿಂತನೆಯಲ್ಲಿ ಸುಧೀರನ ನಿಲುವು ಪಕ್ವತೆ ಪಡೆಯುತ್ತದೆ. `ಹೆಣ್ಣನ್ನು ಕೆಟ್ಟವಳೆನ್ನಬೇಡಿ, ಒಳ್ಳೆಯವಳೆನ್ನಬೇಡಿ, ಪವಿತ್ರಳು, ಅಪವಿತ್ರಳು ಇತ್ಯಾದಿ ಶಬ್ದಗಳನ್ನು ಉಪಯೋಗಿಸಬೇಡಿ. ವಿಧೇಯತೆ, ಅವಿಧೇಯತೆಯ ಮಾತೆತ್ತಬೇಡಿ. ಅವಳಿಗಿಷ್ಟಕಂಡಂತೆ ನಡೆಯಲು ಬಿಡಿ. ನೀವು ಸಂತೋಷದಿಂದಿರಲು ಇದೊಂದೇ ದಾರಿ.  ನಿಮಗೆ ಶಾಂತಿ ಬೇಕಿದ್ದರೆ ಇದೊಂದೇ ದಾರಿ’ (ಪರಿಧಿ, ಪುಟ 77) ಎನ್ನುವಲ್ಲಿ ಪರಂಪರೆಯ ಹೆಣ್ಣಿನ ಗ್ರಹಿಕೆಗೂ, ಆಧುನಿಕ ಹೆಣ್ಣಿನ ಗ್ರಹಿಕೆಗೂ ಭಿನ್ನವಾಗಿ ಅವಳೊಬ್ಬಳು ಗಂಡಿನ ಹಾಗೆ ವ್ಯಕ್ತಿ ಎಂದು ಗುರುತಿಸಿದ್ದು ಪಕ್ವ ವಿಚಾರವಾಗಿದೆ. ಸುಧೀರನ ಮಾತಿನ ಲಹರಿಯಿಂದ ದಿಗಂಬರನ ಮನಸ್ಸಿನಲ್ಲಾಗುವ ಗೊಂದಲಗಳನ್ನು ಈ ಕಾದಂಬರಿ ಬಹಳ ಚೆನ್ನಾಗಿ ಹಿಡಿದಿಟ್ಟಿದೆ. ಇದು ಕೇವಲ ದಿಗಂಬರನ ಗೊಂದಲವಾಗದೆ ಪ್ರತಿಯೊಬ್ಬ ವ್ಯಕ್ತಿಯ ಗೊಂದಲವೂ ಆಗಿದೆ. `ಮನುಷ್ಯ ಏನು? ಈ ಮಾನವ ಜಾತಿ ಏನು? ಇಂದು ಇಂಥದೇ ಎಂದು ಈ ಕೋಟ್ಯಂತರ ವೈವಿಧ್ಯಗಳಲ್ಲಿ ಯಾವುದನ್ನು ತೋರಿಸಲು ಸಾಧ್ಯ? ಯಾರಿಂದ ಸಾಧ್ಯ? ನಿಯಮ ಏನು? ಕಾನೂನು ಏನು? ಯಾರ ಕಾನೂನು ಯಾರಿಗೆ? ಯಾರ ಅಧಿಕಾರ ಯಾರ ಮೇಲೆ? ನಿಯಮವನ್ನು ನಿರ್ಮಿಸುವ ಹಕ್ಕು ಯಾರಿಗೆ, ಹೇಗೆ, ಎಲ್ಲಿಂದ? ಯಾಕೆ ಈ ಹಕ್ಕು? ಈ ವ್ಯವಸ್ಥೆ ಏನು? ಕಾನೂನು ಏನು? ಯಾರ ಕಾನೂನು ಯಾರಿಗೆ? ಯಾರ ಅಧಿಕಾರ ಯಾರ ಮೇಲೆ? ನಿಯಮವನ್ನು ನಿರ್ಮಿಸುವ ಹಕ್ಕು ಯಾರಿಗೆ, ಹೇಗೆ, ಎಲ್ಲಿಂದ? ಯಾಕೆ ಈ ಹಕ್ಕು? ಈ ವ್ಯವಸ್ಥೆ ಏನು? ಇದೆಲ್ಲದರ ಅರ್ಥ ಏನು? ಇದೆಲ್ಲದರ ......(ಪರಿಧಿ, ಪುಟ78) ಎಂದು ಹೇಳುವಲ್ಲಿ ಮನುಷ್ಯನ ಮನಸ್ಸು ಮತ್ತು ಜೀವನದ ಸಂಘರ್ಷವನ್ನು ನಮ್ಮ ಮುಂದೆ ಇಡುತ್ತದೆ.

    ಲೈಂಗಿಕತೆಯ ಕುರಿತು ಚಿಂತಿಸುವ ಸುಧೀರ, ಲೈಂಗಿಕತೆಯೇ ಜೀವನದ ಅಂತ್ಯ’ ಎನ್ನುವಾಗ ಜೀವನದಲ್ಲಿ ಲೈಂಗಿಕತೆಯ ಅಗತ್ಯತೆಯನ್ನು ಹೇಳುತ್ತದೆ. ಆದರೆ ದಿಗಂಬರ ಇದಕ್ಕೆ ವಿರುದ್ಧವಾಗ ಆಲೋಚಿಸುತ್ತಾ, `ಎಲ್ಲಾ ಕ್ರಿಯೆಗಳ ಅನುಭವದ ಮೊತ್ತವೇ ಜೀವನ. ಅಲ್ಲದಿರುವುದು ಮರಣ’ ಎಂದು ಹೇಳುವಾಗ ಲೈಂಗಿಕ ಕ್ರಿಯೆಯನ್ನು ಮೀರಿದ ಜೀವನದ ಹುಡುಕಾಟವನ್ನು ಮಾಡುತ್ತಾನೆ. ಲೈಂಗಿಕತೆ ಒಂದು ಸಮಸ್ಯೆಯಾಗುವ ಕಾರಣ ಇದನ್ನು ಮೀರಿದ ಬದುಕನ್ನು ಕಾಣಬೇಕು ಎನ್ನುವ ಮುಖಾಂತರ ಒಂದು ಸಮಸ್ಯೆಯಾಗಿರದಿದ್ದರೆ ಮಾತ್ರ ಭೂತ ಭವಿಷ್ಯಗಳನ್ನು ಇಲ್ಲವಾಗಿಸಿ ಜೀವಿಸಲು ಸಾಧ್ಯ ಎಂದು ದಿಗಂಬರ ಜೀವನಕ್ಕೆ ವ್ಯಾಖ್ಯಾನ ಬರೆಯುತ್ತಾನೆ.

    ದಿಗಂಬರ ಒಬ್ಬ ದಾರ್ಶನಿಕನಾಗಿ ಕಾಣಿಸಿಕೊಳ್ಳುತ್ತಾನೆ. ಕಾದಂಬರಿಕಾರರು ದಿಗಂಬರನ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುವ ಜೊತೆಗೆ ಎಲ್ಲಾ ಪ್ರಯತ್ನಗಳಿಗೂ ಮನ್ನಣೆ ಕೊಡುತ್ತಾರೆ. ದಿಗಂಬರನಲ್ಲಿ ಲೈಂಗಿಕತೆ ಮತ್ತು ಮದುವೆಯ ವಿಚಾರದಲ್ಲಿ ನಿರ್ಲಿಪ್ತತೆಯಿದ್ದರೂ ಬದುಕಿನ ಸಹಜತೆಗೆ ಒತ್ತುಕೊಡುತ್ತಾನೆ. ಅನ್ಯಾಯ ಅಧರ್ಮ ನಡೆದಾಗ ಸಿಡಿದೇಳುತ್ತಾನೆ. ಆನಂದ ತ್ಯಾಗಿಯ ಮಗಳು ಶಬ್ದವಿಲ್ಲದೆ, ಚಲನೆಯಿಲ್ಲದೆ ಬದುಕುವ ಬದುಕಿನ ಕುರಿತು ಸ್ಪಂದನವಿದೆ. ಸೌಂದರ್ಯ ಎಲ್ಲವನ್ನೂ ತಂದುಕೊಟ್ಟರೆ, ಕುರೂಪಿಗೆ ಶಾಪದ ಸಹಿತ ಹುಟ್ಟುವವರಿಗೆ ಏನೂ ಇಲ್ಲ ಎನ್ನುವಲ್ಲಿ ಮನುಷ್ಯ ಸ್ವಾರ್ಥ ಜೀವನವನ್ನು ಖಂಡಿಸುವ ಗುಣವಿದೆ. ಹೀಗೆ ಸಾಮಾಜಿಕವಾಗಿ ಪ್ರೌಢವಾದ ಪಾತ್ರ ಕೌಟುಂಬಿಕ ನೆಲೆಯಲ್ಲಿ ತನ್ನತನವನ್ನು ಕಳೆದುಕೊಳ್ಳುತ್ತದೆ. ಕೌಟುಂಬಿಕ ನೆಲೆಯನ್ನು ಕಳೆದುಕೊಳ್ಳುವುದು ಆಧುನಿಕ ವಿಚಾರವಾಗಿದೆ. ಇಂದಿನ ಜಾಗತೀಕರಣದಲ್ಲಿ ಕುಟುಂಬದ ನೆಲೆಯನ್ನು ಕಳೆದುಕೊಳ್ಳುವುದು ಸಹಜವಾಗಿಯೇ ಕಾಣುತ್ತಿದ್ದೇವೆ. ಇದರಿಂದ ಮಾನವ ಸಮಾಜದ ವಿಕಾಸ ಸಾಧ್ಯವೇ ಎಂಬ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಇದಕ್ಕೆ ಕಾದಂಬರಿಕಾರರ ಉತ್ತರವಿಲ್ಲ. ದಿಗಂಬರನ ಚಿಂತನೆಗಳನ್ನು ಓದುಗರೇ ತಮ್ಮೊಳಗೆ ಮಥಿಸಿಕೊಳ್ಳಬೇಕೆಂಬುದು ಕಾದಂಬರಿಕಾರರ ನಿಲುವಾಗಿದೆ. `ಪರಿಧಿ’ ಕಾದಂಬರಿಯಲ್ಲಿ ಜೀವನದ ಪರಿಧಿಯನ್ನು ನಿರ್ಮಿಸುವುದು ಮತ್ತು ಮೀರುವುದು ಓದುವವನ ಪ್ರಜ್ಞೆಗೆ ಬಿಟ್ಟದ್ದು. ಮಾನವ ಬದುಕಿನ ಸಾಮಾಜಿಕ ಸ್ಥಿತ್ಯಂತರವನ್ನು ಮತ್ತು ಮನುಷ್ಯ ಸಂಬಂಧಗಳ ಬಿಕ್ಕಟ್ಟುಗಳನ್ನು ಒಂದು ಪರಿಮಿತಿಯೊಳಗೆ ಯಶಸ್ವಿಯಾಗಿಯೇ ಶೋಧಿಸಿದೆ.     

    (ಕರ್ನಾಟಕ ಸಂಘ, ಪುತ್ತೂರು ಅವರ ಕೃಪೆ)

    ಮುನ್ನುಡಿ

    23 ವರ್ಷಗಳ ಬಳಿಕ ಪುನರ್ಮುದ್ರಣಕ್ಕೆ ಹೋಗುತ್ತಿರುವ ಈ ಸಂದರ್ಭದಲ್ಲಿ `ಪರಿಧಿ’ಯ ಬಗ್ಗೆ ಬರೆದಿರುವ ಡಾ| ಮನಮೋಹನರಿಗೆ ಕೃತಜ್ಞತೆ ಸೂಚಿಸುತ್ತಾ ಎರಡು ಮಾತು. 

    1970ರ ಸುಮಾರಿಗೆ ನನ್ನ ತಲೆಹೊಕ್ಕ ಕತೆಯ ಕೀಟವೊಂದನ್ನು ನಾನು ಇಂಗ್ಲಿಷಿನಲ್ಲಿ ಬರೆಯತೊಡಗಿದೆ. ಅದು ಐವತ್ತು-ಅರುವತ್ತು ಪುಟಕ್ಕಿಂತ ಮುಂದೆ ಹೋಗಲಿಲ್ಲ. ಅನಂತರ 1973ರಲ್ಲಿ ಮೇ ಜೂನ್ ತಿಂಗಳ ಬಿರುಬೇಸಗೆಯಲ್ಲಿ ರಾಜಸ್ಥಾನದ ಪಿಲಾನಿ ಬಿಟ್ಸ್ ಕ್ಯಾಂಪಸಿನಲ್ಲಿ ನಡೆದ ಸಮ್ಮರ್ ಇನ್‍ಸ್ಟಿಟ್ಯೂಟಿನಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ, ಭಾರತದ ಬೇರೆ ಬೇರೆ ಕಾಲೇಜುಗಳಿಂದ ಬಂದ ಸುಮಾರು ನಲ್ವತ್ತೈದು ಮಂದಿ ಬೇರೆ ಬೇರೆ ವಯಸ್ಸಿನ, ಶಿಕ್ಷಕರ ಪೈಕಿ ಒಬ್ಬನಾಗಿದ್ದ ನನಗೆ ಅವರೆಲ್ಲರ ಪರಿಚಯವಾಗುತ್ತಾ ಒಂದು ಹೊಸ ಲೋಕ ಕಾಣಿಸತೊಡಗಿತು. ಕೆಲವರು ಎಷ್ಟು ವಿಲಕ್ಷಣವಾಗಿದ್ದರೆಂದರೆ ಅವರಾಗಲೇ ನನಗೆ ಕಥಾಪಾತ್ರಗಳಂತೆ ತೋರತೊಡಗಿದರು. ಅವರಲ್ಲೇನೇಕರು ಯಾವ್ಯಾವುದೋ ರೂಪ ತಾಳಿ ನನ್ನ ಮನಸ್ಸಿನಲ್ಲಿ ಉಳಿದುಕೊಂಡರು. ಆ ದಿನಗಳವೇಕೋ ಯಾವಾಗಲೂ ಒಂದು ವಿಲಕ್ಷಣ ದುಃಖದ ಅನುಭವದ ದಿನಗಳಾಗಿ ನನ್ನ ನೆನಪಿನಲ್ಲಿ ಉಳಿದುಕೊಂಡಿವೆ. ಅಸಹನೀಯವಾದ ಉಷ್ಣ ಹವೆ, ಮರುಭೂಮಿಯ ಮೇಲಿಂದ ಆಗಾಗ ಬೀಸಿ ಬರುವ ಮರಳು ಗಾಳಿ, ನಾಲಿಗೆಗೆ ಒಗ್ಗದ ಆಹಾರ; ಹೊಟ್ಟೆ ಕೆಟ್ಟು, ಸಾಸಿವೆ ಎಣ್ಣೆ ಬಳಸಿ ಮಾಡಿದ ಚಪಾತಿಯನ್ನು ತಿನ್ನಲು ಆಗದಿದ್ದುದು, ಇದ್ಯಾವುದೂ ಬೇಡವೆಂದು, `ನಾನು ವಾಪಾಸು ಹೋಗುತ್ತೇನೆ’ ಎಂದು ಸತ್ಯಾಗ್ರಹ ಮಾಡಿದಾಗ ಜೊತೆಗಿದ್ದ ಶಿಕ್ಷಕರು ಏನೇನೋ ಸಮಾಧಾನ ಮಾಡಿದ್ದು, ಕೊನೆಗೆ ಒಂದು ದಿನ, `ನಿಮಗೆ ಯಾವ ರೀತಿಯ ಆಹಾರ ಬೇಕೋ ಅದನ್ನೇ ಒದಗಿಸಿಕೊಡುತ್ತೇವೆ’ ಎಂದು ಇನ್ಸಿಟ್ಯೂಟಿನ ಡೈರೆಕ್ಟರು ನನ್ನ ಕೋಣೆಗೆ ಬಂದು ಹೇಳಿದಾಗ, `ಒಳ್ಳೆಯ ಅನ್ನ ಮತ್ತು ಮೊಸರು ಕೊಟ್ಟರೆ ಉಳಿಯುತ್ತೇನೆ’ ಎಂದು ನಾನಂದುದಕ್ಕೆ ಅವರು ಒಪ್ಪಿಕೊಂಡದ್ದು; ಮನಸ್ಸಿನಲ್ಲಿ ಸದಾ ಸುಳಿಯುತ್ತಿದ್ದ ಮಣಿಪಾಲದಲ್ಲಿ ಬಿಟ್ಟು ಬಂದ ನನ್ನ ಪುಟ್ಟ ಮಗು ಮತ್ತು ನನ್ನಾಕೆಯ ನೆನಪು, ಮನೆ ಮುಟ್ಟಿದೊಡನೆ ಅಫ್‍ಘಾನಿಸ್ತಾನಕ್ಕೆ ಹೊರಡಲು ಮಾಡಬೇಕಾದ ತಯಾರಿ; ಅನ್ನ ಮೊಸರಿನಲ್ಲಿ ಹೇಗೋ ಸಾಗುತ್ತಿದ್ದ ದಿನಗಳು, ಚೆನ್ನಾಗಿಲ್ಲದಿದ್ದ ಆರೋಗ್ಯ, ಪ್ರತಿ ಸಾಯಂಕಾಲ ಬಿರ್ಲಾ ದೇವಾಲಯದ ಮುಂದಿನ ಹಸಿರು ಹುಲ್ಲಿನಲ್ಲಿ ಕುಳಿತುಕೊಂಡು ಎಲ್ಲಾ ಕಡೆ ನವಿಲುಗಳು ಓಡಾಡುತ್ತಾ ನರ್ತಿಸುವುದನ್ನು ಕಂಡು ರೋಮಾಂಚಿತನಾಗುತ್ತಿದ್ದುದು ಮರೆಯುವಂಥ ಅನುಭವಗಳಲ್ಲ. ಆಗ ಇಂಗ್ಲಿಷಿನಲ್ಲಿ ಕವಿತೆಗಳನ್ನು ಬರೆಯುತ್ತಿದ್ದೆ. ಕೆಲವು ಸಮ್ಮರ್ ಇನಸ್ಟಿಟ್ಯೂಟಿನ ಮ್ಯಾಗಜೀನಿನಲ್ಲಿ ಪ್ರಕಟವಾಗಿ ಕೆಲವರಿಗಾದರೂ ಪುಲಕ ಹುಟ್ಟಿಸಿದ್ದು, ಹೇಗೋ ಸಮ್ಮರ್ ಇನಸ್ಟಿಟ್ಯೂಟ್ ಮುಗಿದಾಗ, `ನಮ್ಮಲ್ಲಿಗೆ ಬನ್ನಿ ಅಲ್ಲಿಗಿಂತ ನೂರು ರುಪಾಯಿ ಹೆಚ್ಚು ಸಂಬಳ ಕೊಡುತ್ತೇವೆ. ವರ್ಷಕ್ಕೆ ಎರಡು ಬಾರಿ ಊರಿಗೆ ಹೋಗಿ ಬರಲು ನಿಮಗೆ ಮತ್ತು ಕುಟುಂಬಕ್ಕೆ ಫಸ್ಟ್ ಕ್ಲಾಸ್ ಟಿಕೆಟ್ ಕೊಡುತ್ತೇವೆ’ ಎಂದು ಬಿಟ್ಸ್ ಯೂನಿವರ್ಸಿಟಿಯಿಂದ ಆಹ್ವಾನ ಬಂತು. `ಇಲ್ಲೇ ಪಿಎಚ್‍ಡಿ ಕೂಡ ಮಾಡಬಹುದು’ ಎಂಬ ಆಶ್ವಾಸನೆ ಕೂಡ. ಅತ್ಯಂತ ಸುಂದರವಾದ ಕ್ಯಾಂಪಸ್. ಶಿಸ್ತಿಗೆ ಮರ್ಯಾದೆ. ಒಂದು ಬಗೆಯ ರೊಮ್ಯಾಂಟಿಕ್ ಪರಿಸರ. ರಾಜಸ್ಥಾನದ ನೆಲವೇ ಹಾಗೆ. ಏನೋ ಚೆಲುವು, ಏನೋ ಮೋಹಕತೆ. ಆದರೆ ಬದುಕು, ನಮ್ಮೊಳಬದುಕು, ಅದ್ಯಾವುದರಲ್ಲಿಯೂ ಇಲ್ಲವಲ್ಲ? ಅಲ್ಲದೆ ನನ್ನ ಹೆಗಲ ಮೇಲೆ ಬೇರೆ ಜವಾಬ್ದಾರಿಗಳು ಕೂಡ ಇದ್ದವು. ಎಂದೂ ತೊಲಗದ ಜವಾಬ್ದಾರಿಗಳು!  ಅಷ್ಟೇ ಅಲ್ಲ, ರಾಜಸ್ಥಾನದ ಆ ಹವೆ, ಆ ದೂರ ನನ್ನನ್ನು ಬೆದರಿಸಿತು. ನಾನು ನಯವಾಗಿ ನಿರಾಕರಿಸಿದೆ. ಮಣಿಪಾಲ ಅದೇಕೋ ಆಗ ರಾಜಸ್ಥಾನಕ್ಕಿಂತ ಹೆಚ್ಚು ಆಕರ್ಷಕವಾಗಿತ್ತು. ಮಣಿಪಾಲಕ್ಕೆ ಬಂದ ನಂತರವೂ ಬಿಟ್ಸಿನಿಂದ ಕರೆ ಬಂತು. `ಒಪ್ಪಿಕೊಳ್ಳಲಾಗುವುದಿಲ್ಲ; ಕ್ಷಮಿಸಿ; ಎಂದು ಬರೆದೆ. ಅಲ್ಲದೆ ದೇಶ ಬಿಡುವ ಸನ್ನಾಹದಲ್ಲಿದ್ದೆ. ಅಫ್‍ಘಾನಿಸ್ತಾನದಲ್ಲಿ ಸೈನಿಕ ಕ್ರಾಂತಿಯಾಯಿತು. ದಾವೂದ್ ಇಬ್ರಾಹಿಮ್‍ನ ಸರಕಾರ ಪತನಗೊಂಡ ಮೊತ್ತ ಮೊದಲ ಸೈನಿಕ ಕ್ರಾಂತಿ ಅದು. ಅಫ್‍ಘಾನಿಸ್ಥಾನಕ್ಕೆ ಹೋಗುವ ಯೋಚನೆ ಅಲ್ಲೇ ಸ್ಥಗಿತಗೊಂಡಿತು.

    ಕೆಲ ದಿನಗಳಲ್ಲೇ, `ಅಫಘಾನಿಸ್ಥಾನದ ಆಫರ್ ವಜಾ ಆಗಿದೆ ಇಚ್ಛೆಯಿದ್ದರೆ ಸೊಮಾಲಿಯಕ್ಕೆ ಹೋಗಬಹುದು’ ಎಂದು ಫಾರಿನ್ ಅಸೈನ್‍ಮೆಂಟ್ ವಿಭಾಗದಿಂದ ಅದೇಶ ಬಂತು. `ಸೊಮಾಲಿಯಕ್ಕೆ ಹೋಗುವ ಇಚ್ಛೆಯಿಲ್ಲ’ ಎಂದು ತಿಳಿಸಿದೆ. ಕೂಡಲೇ ಮತ್ತೊಂದು ಆದೇಶ: `ಇಥಿಯೋಪಿಯಕ್ಕೆ ಹೋಗ್ತೀಯ? ಹೋಗುವುದಾದರೆ ಮದ್ರಾಸಿಗೆ ಹೋಗು. ಅಲ್ಲಿ ಇಥಿಯೋಪಿಯದ ಮಿನಿಸ್ಟ್ರಿ ಆಫ್ ಎಜುಕೇಶನ್ ಅಪೇಕ್ಷಿಸಿರುವ ಇಂಟರ್‍ವ್ಯೂವಿಗೆ ಹಾಜರಾಗು.’

    ಇಥಿಯೋಪಿಯಾ ಸೇರುವಂಥಾದದ್ದು ಹಾಗೆ. 

    ಯಾವುದು ಸುಖ, ಯಾವುದು ದುಃಖ ಎಂದು ಯೋಚಿಸಿದಾಗ ದುಃಖವೇ ಹೆಚ್ಚು ಎಂದು ಅನಿಸುತ್ತದೆ. ಅಥವಾ ಸುಖವೂ ಅಲ್ಲದ ದುಃಖವೂ ಅಲ್ಲದ ಏನೋ ಒಂದು ಅನುಭವ ಅನಿಸುತ್ತದೆ. ಬಿಟ್ಸಿನ ಆಹ್ವಾನವನ್ನು ನಿರಾಕರಿಸಿದ್ದಕ್ಕೆ ಯಾಕೋ ದಃಖವಾಗಿತ್ತು. ಮಣಿಪಾಲದಿಂದ ನಾನು ಹೊರಟಾಗ ಪ್ರಾಂಶುಪಾಲನ ಕೊಳಕು ಮನಸ್ಸು ಕಂಡು ಎಂದೂ ಮರೆಯಲಾಗದಂಥ ವಿಷಾದವಾಗಿತ್ತು. ಅದು ಬರೀ ವಿಷಾದವಲ್ಲ, ಒಂದು ಬಗೆಯ ಶಾಕ್! ಕೆಲವೊಮ್ಮೆ ಕನಸಿನಲ್ಲಿ ಬಂದು ಪೀಡಿಸುವಂಥದು!

    ಯಾವ ಊರೂ ಯಾವುದೇ ಕಾರಣಕ್ಕೆ ಆಕರ್ಷಕ ಅಥವಾ ಅನಾಕರ್ಷಕ ಎನಿಸುವುದು ಅಲ್ಲಿ ನಮಗೆ ನಮ್ಮಂತಿರುವ ಇತರ ಮನುಷ್ಯರಿಂದಾಗುವ ಅನುಭವದಿಂದ ಮಾತ್ರ. ಅದರಷ್ಟಕ್ಕೇ ಯಾವ ಊರೂ ಏನೂ ಅಲ್ಲ. ಊರು ಬದುಕಿನ ಕ್ಷೇತ್ರವಾದಾಗ ಸಹ್ಯಾದ್ರಿಯ ಉತ್ತುಂಗ ಶಿಖರವೂ ಇಲ್ಲ, ಜೋಗಿನ ಜಲಪಾತವೂ ಇಲ್ಲ.

    ಇಥಿಯೋಪಿಯ ವಿಶೇಷ ಸುಖವನ್ನೇನೂ ಕೊಡಲಿಲ್ಲ. ಅಲ್ಲಿಗೆ ಹೊರಟಾಗ ಅತಂಕವಿತ್ತು. ಒಂಬತ್ತು ವರ್ಷದ ನಂತರ ಅಲ್ಲಿಂದ ಹೊರಟಾಗಲೂ ಆತಂಕವಿತ್ತು. ಎಲ್ಲ ಬಿಟ್ಟು ಬಂದಾಗ, ಬದುಕು ಎಂದರೆ ಬದುಕು ಇಷ್ಟೇ, ಸುಖವೂ ಇಲ್ಲ, ದುಃಖವೂ ಇಲ್ಲ. ಸಾಧನೆಯೂ ಇಲ್ಲ ಸಫಲತೆಯೂ ಇಲ್ಲ ಎಂದು ಸುಸ್ಪಷ್ಟವಾಯಿತು. `ಸುಮ್ಮನೆ ಬದುಕಿಬಿಡು ಎಂದು ನನಗೆ ನಾನೇ ಹೇಳಿಕೊಂಡೆ’

    `ಕಾದಂಬರಿಯ ಕಥಾನಾಯಕ ಅಂದರೆ ಲೇಖಕನೇ; ಲೇಖಕನ ಫಿಲಾಸಫಿಯೇ ಕಾದಂಬರಿಯ ಕಥಾನಾಯಕನ ಫಿಲಾಸಫಿ’ ಎಂದು ಭಾವಿಸುವವರಿದ್ದಾರೆ. ಕಥಾನಾಯಕನ ಯಶಸ್ಸು ಅಥವಾ ಅಪಯಶಸ್ಸು ಕಾದಂಬರಿಕಾರನದೇ ಎಂದುಕೊಳ್ಳುವವರಿದ್ದಾರೆ. ಆ ಬಗೆಯ ವಿಮರ್ಶೆಗಳೂ ಇರುತ್ತವೆ! ಇದಕ್ಕೆಲ್ಲ ಕನಿಕರಿಸಬೇಕೋ ನಗಬೇಕೋ ಗೊತ್ತಾಗುವುದಿಲ್ಲ. ಒಬ್ಬ ಕಾದಂಬರಿಕಾರನ ಒಂದೆರಡು ಕಾದಂಬರಿಗಳನ್ನು ಓದಿ ಆತನ ಬರಹದ ಬಗ್ಗೆ ತೀರ್ಮಾನಗಳನ್ನು ನೀಡಲಿಕ್ಕಾದೀತೆ? ಒಬ್ಬ ಕಾದಂಬರಿಕಾರನ ಒಳಗೆ ನೂರಾರು ಪಾತ್ರಗಳಿರಬಹುದು. ಕೆಲವು ಪಾತ್ರಗಳೊಳಗೆ ಅವನ ಯೋಚನೆ, ಫಿಲಾಸಫಿ, ಅನುಭವ ನುಸುಳಬಹುದು. ಕೆಲವು ಪಾತ್ರಗಳ ಫಿಲಾಸಫಿ ಲೇಖಕನ ಫಿಲಾಸಫಿಗೆ ತದ್ವಿರುದ್ಧವಾಗಿರಬಹುದು.  ಓದುಗನಿಗೆ ವ್ಯವಧಾನವಿದ್ದರೆ ಅದನ್ನು ಪತ್ತೆ ಮಾಡಬಹುದು. ಆದರೆ ಆತನಿಗೆ ಕಾದಂಬರಿಕಾರನ ಬಗ್ಗೆ ಕೂಡ ಸಾಕಷ್ಟು ತಿಳಿದಿರಬೇಕಾಗುತ್ತದೆ. ಅಂಥ ಆಸಕ್ತಿಯಿರುವವರಿಗಾಗಿ ನಾನು ನನ್ನ ಬಗ್ಗೆ ಬರೆದಿದ್ದೇನೆ. ಇದನ್ನೆಲ್ಲ ನನ್ನ ಆತ್ಮಕಥೆಯಲ್ಲಿ ಬರೆಯಲು ಸಾಧ್ಯವಾಗಲಿಲ್ಲ. 

    1973 ಜುಲೈ ತಿಂಗಳಲ್ಲಿ ಮೊದಲ ಬಾರಿ ಮುಂಬಯಿಯಲ್ಲಿ ಓಡಾಡುತ್ತಿರುವಾಗ 1970ರಲ್ಲಿ ನನ್ನ ತಲೆಹೊಕ್ಕ ಕತೆಯ ಕೀಟಕ್ಕೆ ರೆಕ್ಕೆ ಮೂಡತೊಡಗಿತು. ಮತ್ತೆ ಹತ್ತೈವತ್ತು ಪುಟಗಳನ್ನು ಬರೆಯುವಷ್ಟರಲ್ಲಿ ಇಥಿಯೋಪಿಯಕ್ಕೆ ತೆರಳಬೇಕಾಯಿತು.

    ಅನಂತರ 1982ರಲ್ಲಿ ಇಥಿಯೋಪಿಯದಿಂದ ಸ್ವದೇಶಕ್ಕೆ ಮರಳಿದ ಬಳಿಕ ಇದನ್ನು ಕನ್ನಡದಲ್ಲೇ ಬರೆಯುವುದೆಂದು ತೀರ್ಮಾನಿಸಿದೆ.  ಬರೆದು ಮುಗಿಸಿ ಈ ಕಥೆಗೆ `ರಂಧ್ರ’ ಎಂದು ಹೆಸರಿರಿಸಿದೆ. ಅಷ್ಟರಲ್ಲಿ `ಸುಧಾ’ದಲ್ಲಿ ಧಾರಾವಾಹಿಯಾದವುಗಳೂ ಸೇರಿದಂತೆ ನನ್ನ ಇಪ್ಪತ್ತು ಕಾದಂಬರಿಗಳು ಪುಸ್ತಕಗಳಾಗಿ ಪ್ರಕಟವಾಗಿದ್ದವು. (ಅವುಗಳಲ್ಲಿ ಹನ್ನೆರಡು ಧಾರಾವಾಹಿಯಾಗಿದ್ದವು. ಶಬ್ದಗಳು, ಕರ್ಮಣ್ಯೇ ವಾದಿsಕಾರಸ್ತೇ, ಸಾಫಲ್ಯ, ಅಬ್ರಾಹ್ಮಣ, ಮೃತ್ಯೋಮರ್Á ಅಮೃತಂ ಗಮಯÁ, ಬಿಸಿಲ್ಗುದುರೆ, ಯುಗಾಂತರ (ಸುಧಾ ವಾರಪತ್ರಿಕೆ), ಅಶ್ರುತಗಾನ (ಸುಧಾ ಕಾದಂಬರಿ ಬಹುಮಾನ ಪಡೆದ ಪುಸ್ತಕ ಪ್ರಕಟಣೆ), ಮನೆ, ಕಾಮಯಜ್ಞ, (ತುಷಾರ ಮಾಸಪತ್ರಿಕೆ), ಪೂಜಾರಿ (ಗೆಳತಿ ಮಾಸಪತ್ರಿಕೆ) ಅವಿಭಕ್ತರು (ಕಾದಂಬರಿ ಮಾಸಪತ್ರಿಕೆ), ನಿರಂತರ (ತರಂಗ ವಾರಪತ್ರಿಕೆ). ಇವುಗಳ ಪೈಕಿ 1982ರಿಂದ 1985ರ ನಡುವೆ ಬರೆದ ಅಶ್ರುತಗಾನ, ನಿರಂತರ, ರಾಗ ಲಹರಿ, ಸ್ವರ್ಣಮೃಗ, ಅರಗಿನ ಮನೆ, ಮತ್ತು ಕಾಮಯಜ್ಞ ಮತ್ತು 1973ರಲ್ಲಿ ಬರೆದ ಮೊದಲ ಕಾದಂಬರಿ `ಶಬ್ದಗಳು’ವಿನ ಹೊರತು ಉಳಿದ ಹದಿಮೂರು ಕಾದಂಬರಿಗಳನ್ನು ನಾನು ಬರೆದುದು  1973ರಿಂದ 1982ರ ವರೆಗೆ, ಒಂಬತ್ತು ವರ್ಷ, ಇಥಿಯೋಪಿಯದ ನೆಲದಲ್ಲಿ. ಈ ಬರವಣಿಗೆಯಲ್ಲಿ ಎಷ್ಟು ಸುಖವಿತ್ತೋ ಅಷ್ಟೇ ದುಃಖವೂ ಇತ್ತು. ಲೇಖಕನಾಗಿರುವುದರಲ್ಲಿ ಸಾಧನೆ, ಸಫಲತೆ ಏನೂ ಇಲ್ಲ. ಎಲ್ಲಾ ಬಗೆಯ ಬದುಕಿನಂತೆ ಅದೂ ಒಂದು ಬದುಕು ಅಷ್ಟೆ. ಲಾಭ ನಷ್ಟದ ಲೆಕ್ಕಾಚಾರವಿಲ್ಲದ ಬದುಕು.

    ಇಷ್ಟಾದರೂ ನಾನು ಲೇಖಕನಾಗಿ ಇನ್ನೂ ಅಂಬೆಗಾಲಿಡುತ್ತಿರುವೆನೆನಿಸಿತು. ಪುಸ್ತಕ ಪ್ರಕಟಣಾ ಲೋಕದಲ್ಲಿ ನಾನು ಶುದ್ಧ ಅಜ್ಞಾನಿಯೇ ಆಗಿದ್ದೆ. ಅದಕ್ಕೆ ಅಷ್ಟು ಕಾಲ ಪರದೇಶಿಯಾಗಿದ್ದುದು ಮುಖ್ಯ ಕಾರಣವಾಯಿತು. ಬಹುಶಃ `ರಂಧ್ರ’ ನನಗೆ ಕನ್ನಡ ಪ್ರಕಾಶನ ಕ್ಷೇತ್ರದ ಹೊಸ ಬಾಗಿಲು ತೆರೆಯಿತು ಅನಿಸುತ್ತದೆ.

    1985ರಲ್ಲಿ `ರಂಧ್ರ’ ಪ್ರಕಟಣೆಗಾಗಿ ಕೊಟ್ಟೆ. ಪ್ರಕಾಶಕರು ಅಕ್ಷರ ಜೋಡಣೆ ಮುಗಿಸಿದ ನಂತರ ಒಂದು ತಗಾದೆ ಎಬ್ಬಿಸಿದರು.

    `ರಂಧ್ರ’ ಎಂದರೆ ಏನು ಅರ್ಥ ಎಂದು ಕೇಳಿದರು. ಅವರಿಗೆ ರಂಧ್ರದ ಅರ್ಥವನ್ನು `ಕಪ್ಪು ರಂಧ್ರ’ದ ವರೆಗೆ ವಿವರಿಸಿ ಹೇಳಿದೆ. `ರಂಧ್ರ ಎಂಬ ಹೆಸರು ಬೇಡ’ ಎಂಬ ವಾದ ಮುಂದಿಟ್ಟರು. `ಕಾದಂಬರಿಗಳ ಹೆಸರು ಸರಳವಾಗಿರಬೇಕು. ಹೆಣ್ಣು ಮಕ್ಕಳ ನಾಲಿಗೆಯಲ್ಲಿ ಸುಲಭವಾಗಿ ಹೊರಳಾಡುವಂತಿರಬೇಕು’ ಎಂದರು. ಪುಸ್ತಕದ ಹೆಸರು ಹೇಗಿರಬೇಕು, ಹೇಗಿರಬಾರದು ಎಂದು ಪ್ರಕಾಶಕರು ಹೇಳುವುದು ನನಗೆ ತೀರಾ ಹೊಸ ವಿಷಯವಾಗಿತ್ತು.

    `ನೀವು ಪ್ರಕಟಿಸುವುದು ಬೇಡ. ಕಾದಂಬರಿ ವಾಪಾಸು ತೆಗೆದುಕೊಳ್ಳುತ್ತೇನೆ’ ಎಂದೆ. `ಕಾದಂಬರಿಯ ಪ್ರಕಟಣೆಯ ಕೆಲಸ ಮುಗಿದಿದೆ, ಇನ್ನು ಉಳಿದಿರುವುದು ಕವರ್ ಪೇಜ್ ಮಾತ್ರ ಈಗ ನೀವು ಬೇಡ ಅಂದರೆ ತುಂಬಾ ನಷ್ಟವಾಗುತ್ತದೆ’ ಎಂದು ಅಲವತ್ತುಕೊಂಡರು. ಬಹಳ ಯೋಚಿಸಿ, ಮನಸ್ಸಿಲ್ಲದ ಮನಸ್ಸಿನಿಂದ `ಪರಿಧಿ’ ಎಂಬ ಹೆಸರು ಸೂಚಿಸಿದೆ. `ಪರಿಧಿ’ ಎಂದರೆ ಏನೆಂದು ಕೇಳಿದರು. ವಿವರಿಸಿದೆ. `ರಂಧ್ರ ಹೊರಗೆ, ಅದರ ಸುತ್ತ ಪರಿಧಿ’ ಎಂದು ಕಾಗದದಲ್ಲಿ ರೇಖೆಯೆಳೆದು ತೋರಿಸಿದೆ. `ಪರಿಧಿ’ಗೂ ಅವರ ಆಕ್ಷೇಪ ಬಂತು. ಆದರೆ ಅದಕ್ಕೆ ನಾನು ಮಣಿಯಲಿಲ್ಲ. `ನಿಮ್ಮ ಎಲ್ಲಾ ಕಾದಂಬರಿಗಳನ್ನು ನಾನು ಪ್ರಕಟಿಸುತ್ತೇನೆ. ಒಂದು ಒಪ್ಪಂದ ಮಾಡಿಕೊಳ್ಳೋಣ’ ಎಂದರು. ಅದಕ್ಕೂ ನಾನು ಒಪ್ಪಲಿಲ್ಲ. ಅಂಥ ಕೊಡುಗೆ ನನ್ನ ಮೊದಲ ಪುಸ್ತಕ

    Enjoying the preview?
    Page 1 of 1