Discover millions of ebooks, audiobooks, and so much more with a free trial

Only $11.99/month after trial. Cancel anytime.

Police Diary
Police Diary
Police Diary
Ebook363 pages1 hour

Police Diary

Rating: 0 out of 5 stars

()

Read preview

About this ebook

Born in Mangalore, Shyamala had schooling at Besant National Girls High School and college education at St Agnes College, Mangalore. Her father, Narayana Uchil, was an educationist and reformist and mother U Vasanthi worked as PT and Guiding teacher at th
LanguageKannada
Release dateMar 10, 2016
ISBN6580201900289
Police Diary

Read more from Shyamala Madhav

Related to Police Diary

Related ebooks

Reviews for Police Diary

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Police Diary - Shyamala Madhav

    http://www.pustaka.co.in

    ಪೊಲೀಸ್ ಡೈರಿ

    Police Diary

    Author :

    ಶ್ಯಾಮಲಾ ಮಾಧವ

    Shyamala Madhav

    For more books
    http://www.pustaka.co.in/home/author/shyamala-madhav

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಎರಡು ವರ್ಷದ ಹಿಂದೆ ಇಂಗ್ಲಿಷ್‍ನಲ್ಲಿ ಪ್ರಕಟವಾದ ನಿವೃತ್ತ ಡಿವೈಎಸ್‍ಪಿ ರಾಮಯ್ಯ ರೈ ಅವರ ಆತ್ಮ ಕಥನ ‘ಮೈ ಡೇಸ್ ಇನ್ ಪೊಲೀಸ್ ಪುಸ್ತಕದ ಕನ್ನಡ ಅನುವಾದವಿದು.

    ಕಥೆಗಿಂತಲೂ ವಿಚಿತ್ರವೆನಿಸುವ ವಾಸ್ತವತೆಯ ಅಧ್ಯಾಯಗಳು ಈ ಧಾರಾವಾಹಿಯಲ್ಲಿ ಮೈದಳೆದಿದೆ. ಅಂತರ್‍ರಾಷ್ಟ್ರೀಯ ಅಪರಾಧಿ ಪೆರಿಸ್ ಎಸಗಿದ್ದ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಆಧರಿಸಿ ‘ಟೆಲ್ ಟೇಲ್ ಟೀತ್’ ಎಂಬ ರೋಚಕ ಪತ್ತೇದಾರಿ ಕಾದಂಬರಿಯನ್ನು 80ರ ದಶಕದಲ್ಲಿ ಈ ಹಿರಿಯರು ಬರೆದಿದ್ದರು. ಎರಡನೇಜಾಗತಿಕ ಯುದ್ಧದ ಸಂದರ್ಭದ ಸನ್ನಿವೇಶಗಳೂ ಈ ಧಾರಾವಾಹಿ ಮೂಲಕ ಓದುಗರಿಗೆ ಪರಿಚಯವಾಗಲಿವೆ. ಪೊಲೀಸ್ ವೃತ್ತಿಗೆ ಸಂಬಂಧಿಸಿದಂತೆ ಅವರು ಹೇಳುವ ಹಲವು ಅನುಭವದ ಮಾತುಗಳೂ ವಿಶಿಷ್ಟವೆನಿಸುತ್ತವೆ. ಆರೋಗ್ಯಕರವಾದ ಅಭಿರುಚಿ ಹಾಗೂ ವೃತ್ತಿಪರತೆಯನ್ನು ಎತ್ತಿ ಹಿಡಿಯುವ ಅನುಭವ ಕಥನ ಈ ವಾರದಿಂದ ಆರಂಭ.

    ಜನರಲ್ ತಿಮ್ಮಯ್ಯನವರ ಜನ್ಮ ಶತಾಬ್ದಿಯನ್ನು ಈ ವರ್ಷ ಆಚರಿಸುತ್ತಿದ್ದೇವಲ್ಲವೆ? ಆಗ, ಕ್ಯಾಪ್ಟನ್ ತಿಮ್ಮಯ್ಯನವರು ಸೇನೆಯ ಮುಖ್ಯಸ್ಥರಾಗಿದ್ದಾಗ ಅವರನ್ನು ತಾವು ಕಂಡ ಬಗೆಯನ್ನೂ ಈ ಅಧ್ಯಾಯದಲ್ಲಿ ಲೇಖಕರು ವರ್ಣಿಸಿದ್ದಾರೆ.

    ಹಲವು ವಿಶಿಷ್ಟ ಅನುಭವಗಳ ಕಥನ ಮಾಲಿಕೆ ಈ ಸಂಚಿಕೆಯೊಂದಿಗೆ ಆರಂಭ.....

    ಪ್ರಾರಂಭ

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೋರ್ಡ್ ಹೈಸ್ಕೂಲಿನಿಂದ ಸಾವಿರದ ಒಂಬೈನೂರ ಮೂವತ್ಮೂರರಲ್ಲಿ ನಾನು ಮೆಟ್ರಿಕ್ಯೂಲೇಶನ್ ತೇರ್ಗಡೆಯಾದೆ. ಮಧ್ಯಮವರ್ಗದ ರೈತ ಕುಟುಂಬಕ್ಕೆ ಸೇರಿದ ನನ್ನ ತಾಯ್ತಂದೆಯರಿಗೆ ಹೆಚ್ಚಿನ ವಿದ್ಯಾಭ್ಯಾಸವಿರದಿದ್ದರೂ, ಕನ್ನಡ ಓದು, ಬರಹ ತಿಳಿದಿತ್ತು. ನಮ್ಮ ಕುಟುಂಬದಲ್ಲಿ ವಿದ್ಯಾವಂತರೆಂದಿದ್ದವರು ಕೇವಲ ಇಬ್ಬರೇ. ನನ್ನ ಚಿಕ್ಕಪ್ಪ ದಿ. ಡಾಕ್ಟರ್ ದಾಸಪ್ಪ ರೈ ಹಾಗೂ ನನ್ನ ಸೋದರಮಾವ ದಿ. ಕೆ. ಮಂಜಪ್ಪ ರೈ. ನನ್ನ ಚಿಕ್ಕಪ್ಪ ವೈದ್ಯರಾಗಿದ್ದಾರೆ, (ಎಲ್.ಎಮ್.ಪಿ.) ಸೋದರ ಮಾವ ಥರ್ಡ್ ಫಾರ್ಮ್ (ಈಗಿನ ಸೆವೆನ್ತ್ ಸ್ಟ್ಯಾಂಡರ್ಡ್‍ಗೆ ಸಮಾನ)ವರೆಗೆ ಕಲಿತು ಅಷ್ಟಿಷ್ಟು ಇಂಗ್ಲಿಷ್‍ನ ಜೊತೆಗೆ ಕನ್ನಡವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಶಿಕ್ಷಣದ ಬಗ್ಗೆ ಅಪಾರ ಪ್ರೀತಿಯಿದ್ದ ಇವರೀರ್ವರೂ. ಮುಂದಿನ ಕಾಲೇಜ್ ವಿದ್ಯಾಭ್ಯಾಸಕ್ಕಾಗಿ ನನ್ನನ್ನು ಮಂಗಳೂರಿಗೆ ಕಳುಹಿಸುವಂತೆ ನನ್ನ ತಂದೆಯವರ ಮೇಲೆ ಒತ್ತಡ ಹೇರಿದರು. ಜಿಲ್ಲೆಯಲ್ಲಿ ಆಗ ಬೇರೆಲ್ಲೂ ಕಾಲೇಜುಗಳಿರಲಿಲ್ಲ. ನನ್ನ ಶಿಕ್ಷಣದ ಬಗ್ಗೆ ಅವರಿಗಿದ್ದ ಅಂತಹ ಆಸಕ್ತಿಯಿಂದಾಗಿಯೇ ಎಷ್ಟೋ ಬಾರಿ ನಾನು ಕಲಿಯುವುದರಲ್ಲಿ ಹಿಂದಾದಾಗ ಅವರಿಂದ ತೀಕ್ಷ್ಣ ಏಟಿನ ರುಚಿಯನ್ನೂ ಕಾಣುವಂತಾಗಿತ್ತು. ಇದು ನನ್ನ ತಂದೆಯವರಿಗಾಗಲೀ, ಗ್ರಾಮ ಪಟೇಲರಾಗಿದ್ದ ನನ್ನ ದೊಡ್ಡಪ್ಪ ಕುಂಬ್ರ ಜತ್ತಪ್ಪ ರೈ ಅವರಿಗಾಗಲೀ ರುಚಿಸುತ್ತಿರಲಿಲ್ಲ. ಏಟು ಬೀಳುವ ಸಂದರ್ಭಗಳಲ್ಲಿ ಹೆಚ್ಚಾಗಿ ನನ್ನ ಈ ದೊಡ್ಡಪ್ಪನೇ ನನ್ನ ರಕ್ಷಣೆಗೆ ಬರುತ್ತಿದ್ದರು. ಮನೆಯಲ್ಲಿ ತಿಂದುಣ್ಣಲು ಸಾಕಷ್ಟು ಇರುವಾಗ ಪಟೇಲನೋ, ಶಾನುಭೋಗನೋ ಆಗುವಂತೆ ನನ್ನನ್ನು ಹೊಡೆದು ತಿನ್ನುವ ಅಗತ್ಯವೇನೂ ಇಲ್ಲವೆಂದೇ ಅವರ ಅಭಿಪ್ರಾಯವಾಗಿತ್ತು. ಹೊರಪ್ರಪಂಚದ ಜ್ಞಾನವಿರದ ಅವರ ಪಾಲಿಗೆ. ಮಕ್ಕಳಿಗಾಗಿ ಬಯಸುವ ಉನ್ನತ ಉದ್ಯೋಗಾವಕಾಶ ಇದಷ್ಟೇ ಆಗಿತ್ತು.

    ನನ್ನ ಅಜ್ಜ, ಕೆನ್ಯ ಅಮ್ಮ ಬಂಟರೇನೋ, ಪೊಲೀಸ್ ಇಲಾಖೆಯ ಬಗ್ಗೆ ತಮಗಿದ್ದ ಆಕರ್ಷಣೆಯಿಂದಾಗಿ ನಾನೊಬ್ಬ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಆಗಲೆಂದು ಬಯಸಿದ್ದರು.

    ನಮ್ಮೂರಿಗೆ ಭೇಟಿ ನೀಡುವ ಪೊಲೀಸ್ ಅಧಿಕಾರಿಗಳಿಗೆ, ನಮ್ಮಜ್ಜ ಒಳ್ಳೆಯ ಅತಿಥೇಯನಾಗಿದ್ದರು. ಕೊಲೆ ಕೇಸ್ ಒಂದರ ರಹಸ್ಯವನ್ನು ಬಿಡಿಸುವಲ್ಲಿ ಇತ್ತ ಸಹಕಾರಕ್ಕೆ, ಅವರೊಂದು ಬಹುಮಾನವನ್ನೂ ಪಡೆದುಕೊಂಡಿದ್ದರು. ಪೊಲೀಸ್ ಇಲಾಖೆಯಲ್ಲಿ ಇದಕ್ಕಿಂತ ಉನ್ನತ ಉದ್ಯೋಗಗಳಿರುವ ಬಗ್ಗೆ ಅವರು ಅರಿತಿರಲಿಲ್ಲವೆಂದನಿಸುತ್ತದೆ. ಕೃಷಿಕಾರ್ಯದಲ್ಲಿ ನಾನು ಜೊತೆಗೂಡಲೆಂದು ಇಚ್ಛಿಸಿದ ತಂದೆಯವರ ವಿರೋಧವನ್ನು ಗಣಿಸದೆ, ನನ್ನ ಸೋದರಮಾವ ನನ್ನನ್ನು ಮಂಗಳೂರಿಗೆ ಕರೆದೊಯ್ದು, ಗವರ್ನಮೆಂಟ್ ಕಾಲೇಜ್‍ನಲ್ಲಿ ಪದವಿಪೂರ್ವ ಇಂಟರ್‍ಮೀಡಿಯೇಟ್‍ಗೆ ಸೇರಿಸಿದರು.

    ಭವಿಷ್ಯದ ನಿಶ್ಚಿತ ಗುರಿಯಿರದೆ, ಅಲ್ಲಿ ನಾನು ಆರಿಸಿಕೊಂಡುದು, ವಿಜ್ಞಾನ ವಿಷಯಗಳನ್ನು! ಪ್ರಾಕೃತಿಕ ವಿಜ್ಞಾನ, ಫಿಸಿಕ್ಸ್ ಹಾಗೂ ಕೆಮಿಸ್ಟ್ರಿ. ದಿ. ಗೋವಿಂದ ಕೃಷ್ಣ ಚೆಟ್ಟೂರ್, ಕಾಲೇಜ್ ಪ್ರಿನ್ಸಿಪಾಲ್ ಆಗಿದ್ದರು. ಮಹಾನ್ ಶಿಕ್ಷಣ ತಜ್ಞರಾಗಿದ್ದ ಅವರು ಕವಿ, ನಟ, ತತ್ತ್ವಜ್ಞಾನಿ, ಮುಂದಾಳು, ಭಾಷಣಕಾರ, ಬರಹಗಾರ, ಕ್ರೀಡಾಳು ಎಲ್ಲವೂ ಆಗಿದ್ದರು. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಎಮ್.ಎ. ಪದವೀಧರರಾಗಿದ್ದ ಚೆಟ್ಟೂರರು ಆಗಿನ ಮದರಾಸ್ ಪ್ರಾಂತ್ಯದ ಮಲಬಾರ್ ಜಿಲ್ಲೆಗೆ ಸೇರಿದ ನಾಯರ್ ಕುಟುಂಬದವರಾಗಿದ್ದರು. 1924ರಲ್ಲಿ ಆಕ್ಸ್‍ಫರ್ಡ್‍ನಿಂದ ಭಾರತಕ್ಕೆ ಹಿಂದಿರುಗಿದೊಡನೆ, 24ರ ಆ ತರುಣ ಪ್ರಾಯದಲ್ಲೇ ಇಂಡಿಯನ್ ಎಜುಕೇಷನ್ ಸರ್ವಿಸ್‍ನ ಸೇವೆಯಲ್ಲಿ ಗವರ್ನ್‍ಮೆಂಟ್ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾದರು. ಸದಾ ಸಿಲ್ಕ್‍ಸೂಟ್‍ನ ಅಚ್ಚುಕಟ್ಟಾದ ಉಡುಪಿನ ಅವರ ಕೇಶವಿನ್ಯಾಸವು ‘ಚೆಟ್ಟೂರ್ ಕ್ರಾಪ್’ ಎಂದೇ ಪ್ರಸಿದ್ಧವಾಗಿ, ವಿದ್ಯಾರ್ಥಿಗಳು ತಮ್ಮ ಕ್ಷೌರಿಕರನ್ನು ಈ ವಿನ್ಯಾಸಕ್ಕಾಗಿ ಮೂವತ್ತೈದು ರೂಪಾಯಿಗಳಲ್ಲಿ ನಾನು ಬದುಕಬಲ್ಲೆನೇ ಎಂದಾತ ಕೇಳಿದಾಗ ತಾಯ್ತಂದೆಯರಿಂದ ನನಗೆ ಸ್ವಲ್ಪ ಹೆಚ್ಚಿನ ಹಣವೂ ಸಿಗುವುದೆಂದು ನಾನು ಉತ್ತರಿಸಿದೆ ಕೆಲಸಕ್ಕೆ ಸೇರಿದ ಬಳಿಕವೂ ಹೆತ್ತವರ ಆಸರೆಯನ್ನು ಪಢೆಯುತ್ತಿರಬಾರದೆಂದು ಸ್ವತಂತ್ರ ಸ್ವಾವಲಂಬಿ ಬದುಕು ನಮ್ಮದಾಗಬೆಕೆಂದು ಅವರು ಸಲಹೆಯಿತ್ತರು ಸಂಪಾದನೆಯ ಮಿತಿಯೊಳಗೇ ನಮ್ಮ ಬಾಳು ಸಾಗಬೇಕೆಂದು ಅವರು ನನಗೊಬ್ಬಳು ಹೆಂಡತಿ ಮಗುವೊಂದು ಇರುವ ಬಗ್ಗೆ ತಿಳಿಸಿದಾಗ ಆಶ್ಚರ್ಯಪಟ್ಟರು ಹಾಗಿದ್ದರೆ ಹಣದ ವ್ಯವಹಾರದಲ್ಲಿ ನಾನು ಇನ್ನೂ ಹೆಚ್ಚು ಜಾಗರೂಕನಾಗಿರಬೇಕೆಂದು ಅವರು ಕಾಲೇಜ್ ದಿನಗಳಲ್ಲಿ ತಾನು ಸಿಗರೇಟ್ ಸೇದುತ್ತಿದ್ದು ನಂತರ ಬಡವರಿಗೆ ನಿಲುಕುವ ಬೀಡಿಗೆ ಬದಲಿಸಿದೆ ಎಂದು ಸೂಚ್ಯಕವಾಗಿ ನುಡಿದರು ಈ ವಿವೇಕಯುತ ಸಲಹೆಯಂತೆ ನಡೆಯುವುದಾಗಿ ಮಾತಿತ್ತೆ ನಮಗಿಂತ ಕಿರಿಯರ ಎಳ್ಗೆಗೆ ಧಕ್ಕೆಯಾಗದಂತೆ,ಇನ್ನೂ ಹೆತ್ತವರನ್ನು ಅವಲಂಬಿಸಿದರೆ ಸ್ವತಂತ್ರರಾಗಿ ಬಾಳಬೆಕೆಂಬ ವಿವೇಕವನ್ನು ಸುರಿದರು ಸಂಪಾದನೆಯ ಮಿತಿಯೊಳಗೇ ಜೀವನ ನಡೆಸಲು ಕಲಿಯದೇ ಹೋದರೆ ಭ್ರಷ್ಟಾಚಾರದ ಸೆಳೆತಕ್ಕೊಳಗಾಗಬೆಕಾದೀತು ಎಂಬ ಅಮೂಲ್ಯ ಬೋದನೆಯನ್ನು ಅವರು ನನಗಿತ್ತರು.

    ನನ್ನ ಹೆಂಡತಿ ಲಕ್ಷ್ಮಿ ಹಾಗೂ ಮಗು ಬೇಬಿ ಕಾಸರಗೋಡಿನ ಕ್ವಾರ್ಟರ್ಸ್‍ನ ನಮ್ಮ ಬಾಡಿಗೆರಹಿತ ನಿವಾಸದಲ್ಲಿ ನನಗೆ ಜೊತೆಯಾಗಿ ಬಂದರು ಮೂವತ್ತೈದು ರೂಪಾಯಿ ಆದಾಯದಲ್ಲಿ ತಿಂಗಳ ಖರ್ಚು ಕಳೆಯಬೆಕ್ಕಿತ್ತು ಊರಿನಿಂದ ನಮಗಾಗಿ ಕೆಲಸದ ಹುಡುಗನೊಬ್ಬ ಬಂದಿದ್ದ. ಎಲ್ಲವೂ ಅಗ್ಗವಾಗಿದ್ದ ದಿನಗಳವು ಯುದ್ದ ನಡೆಯುತ್ತಿದ್ದ ಕಾಲವಾದರೂ. ಅಕ್ಕಿ ಮೀನು ಮಾಂಸ ಕಟ್ಟಿಗೆ ಎಲ್ಲವೂ ಅಗ್ಗ ಬೆಲೆಗೆ ದೊರೆಯುತ್ತಿದ್ದು ದುಬಾರಿ ಸಿಗರೇಟ್ ಕ್ಯೆಬಿಟ್ಟ ಕಾರಣ. ಸುಖವಾಗಿ ಜೀವಿಸುವುದು ಶಕ್ಕವಿತ್ತು. ಸಂತುಪ್ಪ.ತ್ರುಪ್ತ ಜೀವನ ನಮ್ಮದಾಗಿತ್ತು. ಭವ್ಯ ಪಿಠೋಪಕರಣಗಳಾಗಲೀ ಒಡವೇಗಳಾಗಲಿ ನಮ್ಮಲ್ಲಿರಲಿಲ್ಲ. ಪ್ರೆಸಿಡೆನ್ಸಿ ಕಾಲೇಜ್ ಹಾಗೂ ವಿಕ್ಟೋರಿಯಾ ಹಾಸ್ಟೆಲ್ ನಲ್ಲಿ ಕಳೆದ ದಿನಗಳಲ್ಲಿ ಕಳೆದ ದಿನಗಳ ಬಳಿಕ,ಈ ಮಂಗಳೂರಿಲ್ಲಿ ನಾನು ಡ್ಯೂಟಿಗೆ ಹಾಜರಾದೆ ಮಲಬಾರ್ ಜಿಲ್ಲೆಯ ಪಾಲ್‍ಘಾಟ್‍ಗೆ ಸೇರಿದ ಸೇತುಮಾಧವನ್ ಮೆನನ್, ಅಲ್ಲಿ ಸರ್ಕಲ್ ಇನ್‍ಸ್ಪೆಕ್ಟರ್ ಆಗಿದ್ದರು ಜಟ್ಟಿಯಂತಹ ಕಟ್ಟುಮಸ್ತಾದ ಶರೀರ, ಅವರದು ದೃಢಕಾಯವಷ್ಟೇ ಅಲ್ಲ, ಮನೋದಾಢ್ರ್ಯವೂ ಅವರಿಗಿತ್ತು, ನಿಷ್ಠೆ ಪರಿಶುದ್ದ ಪ್ರಮಾಣಿಕತೆ ಹಾಗೂ ಸ್ಥೈರ್ಯವನ್ನೇ ಬಯಸುತ್ತಿದ್ದರು, ಸಬ್ ಇನ್‍ಸ್ಪೆಕ್ಟರ್ ಪ್ರಾಮಾಣಿಕನಾಗಿದ್ದರೆ, ಆತನ ಇಡೀ ತಂಡವೇ ಶಿಸ್ತಿನಿಂದಿದ್ದು ಜನರೊಡನೆ ಸಜ್ಜನಿಕೆಯಿಂದ ವ್ಯವಹರಿಸಿ, ಸಾರ್ವಜನಿಕ ಸಂಪರ್ಕ ಉತ್ತಮಗೊಳ್ಳುವುದೆಂದು ಆತ, ಹೇಳುತ್ತಿದ್ದರು, ತನ್ನ ಕೈಕೆಳಗಿನವರಿಗಗೆ ಮಾದರಿಯಾಗಿದ್ದ ಆತ, ಪ್ರತಿದಿನ ಬೆಳಗ್ಗೆ ಎಂಟು ಗಂಟೆಯೊಳಗೆ ಕಛೇರಿಗೆ ಬಂದು, ರಾತ್ರಿ ಹನ್ನೆರಡರರ ಬಳಿಕವಷ್ಟೇ ಮನೆಗೆ ಹಿಂತಿರುಗುತ್ತಿದ್ದರು, ಆಗಲೂ ನೇರ ಮನೆಗೆ ಹೋಗದೆ, ರಾತ್ರಿ ಪಾಳಿಯ ಪೊಲೀಸ್ ಪೇದೆಗಳನ್ನು, ಅಧಿಕಾರಿಗಳನ್ನು ಆಯಕಟ್ಟಿನ, ಸ್ಥಳಗಳಲ್ಲಿ, ಭಂಡಸಾಲೆಗಳಲ್ಲಿ ಕಾವಲು ಕಾಯುತ್ತಿರುವವರನ್ನು ಪರೀಕ್ಷಿಸಿ, ಸುಮಾರು ಎರಡು ಗಂಟೆ ರಾತ್ರಿಗೆ ಮನೆ ಮುಟ್ಟುತ್ತಿದ್ದ ಮರು ಬೆಳಗ್ಗೆ ಎಂದಿನಂತೆ ಎಂಟು ಗಂಟೆಗೇ ಠಾಕುಠೀಕ್ಕಾಗಿ ಸಮವಸ್ತ್ರ ತೊಟ್ಟು,  ಬಿಗುಮುಖದೊಂದಿಗೆ ಕೆಲಸಕ್ಕೆ ಹಾಜರಾಗುತ್ತಿದ್ದರು, ಮುಂದೆ ಆತ ಐ,ಪಿ,ಎಸ್, ಅಧಿಕಾರಿಯಾಗಿದ್ದು, ಕೇರಳದಲ್ಲಿರುವಾಗ ನಿವೃತ್ತರಾದರು ಎಂದರಿತೆ, ಪೊಲೀಸ್‍ನ ಜೀವನವೆಂದರೆ ಹೂವಿನ ಹಾಸಿಗೆಯಲ್ಲ ಎಂದು ಆರಂಭದಲ್ಲೆ ನನ್ನನ್ನು ಹೆದರಿಸಿದ್ದರು ಮೆನನ್, ರಾಜಕೀಯ ಆಂದೋಲನ ತೀವ್ರವಾಗಿ ನಡೆಯುತ್ತಿರುವ ನಗರದಲ್ಲಂತೂ ಇದು ಇನ್ನೂ ಕಠಿಣ ಎಂದಿದ್ದರು ಆತ ನಾನು ಕಂಡಂತೆ, ದುರ್ಭರವಾದ ತನ್ನ ವೃತ್ತಿ ಜೀವನವೇ ಈ ರೀತಿ ಸ್ವಾನುಭವ್ಯದ ಸಲಹೆಯ ಮಾತುಗಳಾಗಿ ಆತನಿಂದ ಬಂದಿತ್ತು.

    ಮಂಗಳೂರಲ್ಲಿ ಸಬ್ ಇನ್‍ಸ್ಪೆಕ್ಟರಾಗಿ ನನ್ನ ವೃತ್ತಿ ಜೀವನ ಆರಂಭವಾಯಿತು, ನಗರಕ್ಕೆ ಅದೋಂದೇ ಪೊಲೀಸ್ ಠಾಣೆಯಾದ್ದರಿಂದ ಕೆಲಸದ ಭಾರ ಗುರುತರವಾಗಿತ್ತು, ಈಗೇನೋ ನಗರದಲ್ಲಿ ನಾಲ್ಕೈದು ಠಾಣೆಗಳಿವೆ, ಆಗ ಸಂಚಾರ ವ್ಯವಸ್ಥಾ ವಿಭಾಗವೂ ಕಾನೂನು ಹಾಗೂ ಶಿಸ್ತು ಸಂರಕ್ಷಣಾ ಕ್ಷೇತ್ರದೊಳಗೇ ಸೇರಿತ್ತು ಸತ್ಯಾಗ್ರಹ, ರಾಜಕೀಯ ಆಂದೋಲನ, ಅತ್ಯಾಚಾರ, ಕೊಲೆ,  ಹಿಂಸಾಚಾರ, ಲೂಟಿ ಮುಂತಾದ ಎಲ್ಲ ಕಾನೂನು-ಶಿಸ್ತುಉಳಿದಿರುವ ದೂರುಗಳನ್ನು ಅರ್ಜಿಗಳನ್ನು ವಿಚಾರಣೆಗಳ ಹೊಣೆಯನ್ನು ಸರಿಯಾಗಿ ಹಂಚಿ ಕಳಿಸುವುದು ಸಾಧ್ಯ, ಒಂಬತ್ತು ಗಂಟೆಗೆ ಮನೆಯಿಂದ ಕೆಲಸದ ಹುಡುಗ ನನ್ನ ಉಪಹಾರ ತರುತ್ತಿದ್ದ, ಮತ್ತೆ ಕೋರ್ಟ್ ಕೆಲಸ ಅಂದು ಕೋರ್ಟ್‍ನಲ್ಲಿ ಸಾಕ್ಷಿ ನುಡಿಯಬೇಕಾದವರ ಸ್ಮರಣಶಕ್ತಿಯನ್ನು ಚುರುಕುಗೊಳಿಸುವುದು ಅಂದಿನ ಕೆಲಸದ ಆರಂಭ, ಕೋರ್ಟ್ ಕಾನ್‍ಸ್ಟೇಬಲ್ ಒಬ್ಬ ಈ ಕೆಲಸಕ್ಕೆನಿಯುಕ್ತನಾಗಿದ್ದ, ಆತ ಈ ಸಾಕ್ಷಿಗಳನ್ನು ಕರೆತಂದ ಮೇಲೆ, ಸಬ್ ಇನ್‍ಸ್ಪೆಕ್ಟರ್‍ನ ಕೆಲಸ ಶುರುವಾಗುತ್ತಿತ್ತು, ಮತ್ತೆ ಅಂದು ನ್ಯಾಯಾಲಯದೆದುರು ಬರಲಿರುವ ಪ್ರಕರಣಗಳ ಸಂಭಂದ, ನಾನು ಕೋರ್ಟ್‍ನಲ್ಲಿ ಹಾಜರಾಗುತ್ತಿದ್ದೆ ಉಪ ವಿಭಾಗೀಯ ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್, ಹಾಗೂ ಚಿಲ್ಲರೆ ಪ್ರಕರಣಗಳಿಂದಾಗಿ ಬೆಂಚ್ ಕೋರ್ಟೊಂದು ಇತ್ತು, ಕೆಲವೊಮ್ಮೆ ಸಮಯ ಹೊಂದಿಸಿ, ಮೂರಕ್ಕು ಹಾಜರಾಗಬೇಕಿತ್ತು, ಸಾಕ್ಷಿಗಳು ತಪ್ಪದೆ ಹಾಜರಾಗಿ,ಅಭ್ಯಸಿಸಿದಂತೆ ತಪ್ಪದೆ ಸಾಕ್ಷಿ ನುಡಿಯುತ್ತಿದ್ದರು, ಎಸ್,ಐ ಸ್ವತಃ ಈ ಪ್ರಕರಣಗಳ ನಿರ್ವಹಣೆಯಲ್ಲಿ .

    ಆಸಕ್ತನಾಗಿರಬೇಕಿತ್ತು, ಎಲ್ಲಾದರು ಪ್ರಕರಣ ವಿಫಲವಾದರೆ, ಎನ್,ಪಿ,ಗೆ ಈ ಬಗ್ಗೆ ವಿವರಣೆ ಕೊಡಬೇಕಿತ್ತು, ಮುಂದೆ ನಾನು ಇನ್‍ಸ್ಪೆಕ್ಟರ್ ಆದಾಗ ಆ ಕೆಲಸದ ರೀತಿ ಬೇರಯೇ ಇತ್ತು.

    ನನ್ನ ಕೆಲಸದ ಹೊರಗನುಸಾರವಾಗಿ ಒಂದೋ ಕೋರ್ಟಿಗೆ, ಇಲ್ಲವೆ ಪೊಲೀಸ್ ಸ್ಟೇಷನ್‍ಗೆ ನನಗೆ ಊಟ ಬರುತ್ತಿತ್ತು, ಕೋರ್ಟ್‍ನ ಕೆಲಸದ ಬಳಿಕ ಬೀಟ್ ವೆಕ್ ಮಾಡಲು, ಇಲ್ಲವೆ ಇನ್ನೇನಾದರೂ ಶೋಧ ಕಾರ್ಯಕ್ಕಾಗಿ ಹೊರ ಹೋದ ನಾನು, ಸುಮಾರು ಏಳು ಗಂಟೆಗೆ ಹಿಂದಿರುಗಿ ಕಛೇರಿಯ ಟಪ್ಪಾಲುಗಳನ್ನೂ, ಹಣದ ವಿಲೇವಾರಿಯನ್ನೂ ನೋಡಿಕೊಂಡು ಸುಮಾರು 10 ಗಂಟೆಗೆ ಮನೆ ಮುಟ್ಟುತ್ತಿದ್ದೆ. ಇಷ್ಟು ತಡವಾಗಿ ಮನೆಗೆ ಹಿಂದಿರುಗಿದರು ಕೆಲವೊಮ್ಮೆ ನನ್ನ ಸಿ,ಐ ನಾನು ಬೇಗನೇ ಮನೆಗೆ ಮರಳಿದ್ದಾಗಿ ಗಣಿಸುತ್ತಿದ್ದರು, ನನ್ನ ಈ ಕೆಲಸದ ಬಾಹುಳ್ಯದಿಂದಾಗಿ ಎಷ್ಟೋ ದಿನಗಳ ಕಾಲ ನನ್ನ ಮಕ್ಕಳನ್ನು ಕಾಣುವುದೂ ನನ್ನಿಂದಾಗುತ್ತಿರಲಿಲ್ಲ, ಬೆಳಗ್ಗೆ ನಾನು ಹೊರಟಾಗ ಅವರು ಎದ್ದಿರುತ್ತಿರಲಿಲ್ಲ, ರಾತ್ರಿ ಹಿಂದಿರುಗಿದಾಗ ಅದಾಗಲೇ ಅವರು ನಿದ್ದೆ ಹೋಗಿರುತ್ತಿದ್ದರು, ವಾರಕ್ಕೊಮ್ಮೆ ಇಲ್ಲವೇ ಎರಡು ರಾತ್ರಿ, ರಾತ್ರಿ ಪಹರೆ ಹೋಗಿ, ರಾತ್ರಿ ಪಾಳಿಯ ಪೊಲೀಸರನ್ನೂ, ಆಯಕಟ್ಟಿನ ಸ್ಥಳಗಳಲ್ಲೂ ಭಂಡಸಾಲೆಗಳಲ್ಲೂ ನಿಯುಕ್ತರಾದ ಪೊಲೀಸ್ ಪಹರೆಯನ್ನೂ, ಪರೀಕ್ಷಿಸಲಿರುತ್ತಿತ್ತು. ಮಧ್ಯ ರಾತ್ರಿಯ ನಂತರ ಆರಂಭವಾಗುವ ಈ ಪಹರೆ ರಾತ್ರಿಯುದ್ದದ ಕಾಯಕವಾಗಿ ನಡೆಯತ್ತಿತ್ತು, ಕೆಲವೊಮ್ಮೆ ಸರಕಾರೀ ಆಸ್ಪತ್ರೆಗಳಿಂದ ಕರೆ ಬರುತ್ತಿತ್ತು, ಅಪಘಾತಕ್ಕೊಳಗಾಗಿ ಬಂದ ಗಾಯಾಳುಗಳ ಪ್ರವೇಶ ಪ್ರಕ್ರಿಯೆಯಲ್ಲಿ, ಅಂತಿಮ ಕ್ಷಣಗಳ ಅವರ ಹೇಳಿಗಳನ್ನೂ, ದೂರುಗಳನ್ನೂ ದಾಖಲಿಸಿಕೊಳ್ಳಬೇಕಾಗುತ್ತಿತ್ತು, ನಾವಲ್ಲಿಗೆ ತಲುಪುವ ಮೊದಲೇ ಗಾಯಾಳು ಕೊನೆಯುಸಿರೆದರೆ, ಈ ಲೋಪಕ್ಕೆ ನಾವೇ ಕಾರಣರಾಗುವುದರಿಂದ, ತಡ ಮಾಡುವಂತಿರಲಿಲ್ಲ, ಹೀಗಾಗಿ ಕರೆ ಬಂದ ತಕ್ಷಣ ನಾವು ಹೊರಟುಬಿಡುತ್ತಿದ್ದೆವು, ಒಮ್ಮೆ, ಊರಿನಿಂದ ನಮ್ಮ ತಂದೆಯವರು ಬಂದಿದ್ದಾಗಲೊಂದು ರಾತ್ರಿ, ನಾಲ್ಕೂ ಬಾರಿ ಆಸ್ಪತ್ರೆಯಿಂದ ಕರೆ ಬಂದು ನಾಲ್ಕೂ ಬಾರಿ ನಾನು ಅಸ್ಪತ್ರೆಗೆ ಹೋಗಬೇಕಾಯ್ತು, ರಾತ್ರಿ 10,12, ಮುಂಜಾವು 3 ಹಾಗೂ 5 ಗಂಟಗೆ ನನಗಂತೂ ಆ ರಾತ್ರಿ ಕಣ್ಣೆ ಮುಚ್ಚುವಂತಿರಲಿಲ್ಲ, ನನ್ನ ತಂದೆ ಹಾಗೂ ಪತ್ನಿಗೂ ಅಡಿಗಡಿಗೆ ಬಂದ ಕರೆಗಳಿಂದಾಗಿ ನಿದ್ದಿಸುವುದು ಸಾದ್ಯವಾಗಲಿಲ್ಲ, ಬೆಳಗ್ಗೆ, ನನಗೆ ಅಚ್ಚರಿ ಎನಿಸುವಂತೆ, ನನ್ನ ತಂದೆಯವರು, ನನ್ನೋಡನೆ ಈ ಕಷ್ಠಕರ ಪೊಲೀಸ್ ವೃತ್ತಿಯನ್ನು ಬಿಟ್ಟುಕೊಟ್ಟು ಊರಿಗೆ ಮರಳಿ, ಕೃಷಿಯಲ್ಲಿ ತನಗೆ ಜೊತೆಯಾಗುವಂತೆ ಕರೆಯಿತ್ತರು, ಅದು, ಆ ರಾತ್ರಿಯ ಬವಣೆಯನ್ನು ಕಮಡು ಅವರಾಡಿದ ಮಾತು, ಅಷ್ಟೇ!

    ನಡೆದಿದ್ದು ರಾಜಕೀಯ ಆಂದೋಲನವನ್ನು ದಮನಿಸಲೆಂದೇ ನನ್ನನ್ನು ಮಂಗಳೂರಿಗೆ ಕಳುಹಿಸಲಾಗಿದ್ದರೂ, ಅಲ್ಲಿ ಅಂತಹ ಸಮಸ್ಯೆಯೇನೂ ಹೆಚ್ಚಿರಲಿಲ್ಲ, ಸೆಕ್ಷನ್ 144 ಜಾರಿಯಲ್ಲಿದ್ದಾಗ ಒಂದೆರಡು ಬಾರಿ ನಿಷೇಧಾಜ್ಞೆ ಮುರಿದು ಗುಂಪಿನ ಮೇಲೆ ಲಾಠೀ ಪ್ರಹಾರ ಮಾಡಬೇಕಾಗಿ ಬಂದಿತ್ತಷ್ಟೇ, ಆದರೆ ಭೂಗತ ಚಳವಳಿಯನ್ನು ನಿಯಂತ್ರಿಸುವುದು ಮಾತ್ರ ಕಷ್ಟವಿತ್ತು, ದಿವಂಗತ ಕೈಡಳ ತಿಮ್ಮಪ್ಪಶೆಟಿಳೀ ಚಳವಳಿಯ ಮುಖಂಡರಲ್ಲೊಬ್ಬರಾಗಿದ್ದರು, ಜಿಲ್ಲಾ ಸಷನ್ಸ್ ಕೋರ್ಟ್‍ಗೆ ಈತನ ಯುವ ಅನುಯಾಯಿಗಳು ಬೆಂಕಿ ಹಚ್ಚಿದ್ದರು. ಚಳವಳಿಯಲ್ಲಿ ಸಕ್ರಿಯಾರಾಗಿದ್ದರು, ಜಿಲ್ಲಾ ತಿಮ್ಮಪ್ಪ ಶೆಟ್ಟಿಯವರನ್ನು ಹೇಗಾದರೂ ಪತ್ತೆ ಹಚ್ಚಿ ಬಂಧಿಸಿ, ಸೆರೆಗೆ ಕಳಿಸಲಾಯ್ತು, ಎರಡು-ಮೂರು ವರ್ಷ ಆತ ಬಂಧನದಲ್ಲಿದ್ದರು, ಆತನ ಪತ್ನಿ ನನ್ನ ದೂರದ ಸಂಬಂದಿಯಾಗಿದ್ದರು, ಆಗಾಗ ನಮ್ಮಲ್ಲಿಗೆ ಬರುತ್ತಿದ್ದರು, ತನ್ನ ಪತಿಯನ್ನು ಸೆರೆಯಿಂದ ಬಿಡಿಸುವಂತೆ ಆಕೆಯ ಆಗ್ರಹ ಬಲವಾಯಿತು, ಆಕೆಯ ಪತಿ ಜೈಲಿನಲ್ಲಿ ರಾಜಕೀಯ ನಾಯಕರೊಂದಿಗೆ ಸಂತೋಷದಿಂದಿರುವರೆಂದೂ, ಬಿಡುಗಡೆಯಾದಲ್ಲಿ ಪುನಾ ಇಂತಹ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿ ಪುನಾ ಬಂದಿಸಲ್ಪಟ್ಟು, ಮರಣದಂಡನೆಗೋ,ಅಜೀವ ಕಾರವಾಸಕ್ಕೋ ಗುರಿಯಾಗುವ ಸಾಧ್ಯತೆಯಿದೆಯೆಂದು ತಿಳಿಹೇಳಿ ಆಕೆಯನ್ನು ಸಮಾಧಾನಿಸಬೇಕಾಯಿತು, ಎಲ್ಲ ಸರಕಾರೀ ಕಟ್ಟಡಗಳಿಗೆ ಬೆಂಕಿಯಿಕ್ಕಿ, ಉಳ್ಳಾಲ ರೈಲು ಸೇತುವೆಯನ್ನು ಸ್ಪೋಟಿಸುವ ಯೋಜನೆ ಆತನದಿತ್ತೆಂದು ನನಗೆ ತಿಳಿದು ಬಂದಿತ್ತು, ಅಂತಹುದೇನಾದರೂ ಘಟಿಸುವ ಮೊದಲೇ ಆತನನ್ನು ಬಂಧಿಸಿ, ವಿಶ್ರಾಂತಿಗೆಂದು ಜೈಲಲ್ಲಿರಿಸಲಾಯ್ತು, ಒಮ್ಮೆ ಆತನ ಪತ್ನಿಯ ಆಗ್ರಹದಂತ ಜೈಲಿನಿಂದ ಬಿಡಿಸಿದಾಗ, ನಮ್ಮ ಮನೆಯಲ್ಲೇ ಅವವರಿಬ್ಬರನ್ನೂ ಗೃಹಬಂಧನದಲ್ಲಿರಿಸಲಾಯ್ತು, ಒಬ್ಬ ಸಿ,ಐ,ಡಿ ಕಾನ್‍ಸ್ಟೇಬಲ್ ನಗರದಿಂದ ಆತ ಹೊರಹೋದಾಗ ಮರೆಯಲ್ಲಿ ಹಿಂಬಾಲಿಸಿ, ಆತನ ಮೇಲೆ ಕಣ್ಣಿರಿಸಿದ್ದ, ಪುನಃಆತನ ಸೆರೆವಾಸ ಮುಂದುವರಿಸಲೆಂದು ಜೈಲಿಗೆ ಕಳಿಸಿದ ಬಳಿಕ ನಾನು ನೆಮ್ಮದಿಯ ಉಸಿರು ಬಿಡುವಂತಾಯ್ತು, ನಮಗೆ ಸ್ವಾತಂತ್ರ ದೊರಕಿಸಿ ಕೊಡಲೆಂದು ಭಾರತ ಮಾತೆಯ ಈ ಧೀರ ಪುತ್ರ ಸಾಕಷ್ಠು ತ್ಯಾಗ ಬಲಲಿದಾನಗಳನ್ನು ನೀಡಿದ್ದರು ಆದರೆ ಪ್ರತಿಯಾಗಿ ಯಾವುದೆ ಸೌಲಬ್ಯವೂ ಆತನಿಗೆ ಪ್ರಾಪ್ತವಾಗಲಿಲ್ಲ, ಒಬ್ಬ ಮಂತ್ರಿಯೋ ಎಮ್,ಎಲ್,ಎ ನೋ ಆಗಬಹುದಾಗಿತ್ತಾದರೂ, ಯಾವುದೇ ಪ್ರತಿಫಲ, ಸನ್ಮಾನ ಆತನಿಗೆ ಲಭ್ಯವಾಗಲಿಲ್ಲ, ಈಗಾತ ಜೀವಿಸಿಲ್ಲ ಆ ಆತ್ಮಕ್ಕೆ ಶಾಂತಿಯಿರಲಿ,ಏನನ್ನೂ ಮಾಡದೆಯೇ ಈಗ ಫಲಾನುಭವಿಗಳಾಗಿರುವರೂ ಇದ್ದಾರೆ.

    ರಾಜಕೀಯ ಚಳವಳಿಯಲ್ಲಿ ಸಕ್ರಿಯರಾಗಿದ್ದ ಇನ್ನೋರ್ವ ವ್ಯಕ್ತಿ ಶ್ರೀನಿವಾಸ ಮಲ್ಯರು, ಈತನ ಬಂಧನಕ್ಕೆ ಕಾರಣರಾಗುವವರಿಗೆ, ಬಹುಮಾನವನ್ನೂ ಘೋಶಿಸಲಾಗಿತ್ತು, ಚಳವಳಿಯಲ್ಲಿ ಭಾಗವಹಿಸದಿದ್ದರೂ ಕಾರ್ಯಕರ್ತರನ್ನು ನಿರ್ದೇಶಿಸಿ, ಮಾರ್ಗದರ್ಶನವೀಯುತ್ತಿದ್ದವರು ಇವರೇ ಎಂಬುದು ಖಚಿತವಾಗಿತ್ತು, ಈ ಬಹುಮಾನ ಪಡೆದ ಭಾಗ್ಯದಿಂದ ನಾನು ಅಲ್ಪದರದಲ್ಲೆ ವಂಚಿತನಾದೆನೆನ್ನಬೇಕು ಬಂದುವೊಬ್ಬನ ಮನೆಯಲ್ಲಿ ಆತನಿರುವುದನ್ನರಿತು, ಮುಂಜಾವಕ್ಕೆ ಮುನ್ನವೇ ನಾನಲ್ಲಿಗೆ ಮುತ್ತಿಗೆ ಹಾಕಿದಾಗ, ಅರ್ಧಗಂಟೆ ಮೊದಲಷ್ಟೇ ಆತ ಅಲ್ಲಿಮದ ಹೊರಟುಹೋಗಿದ್ದು, ತಿಳಿದುಬಂತು, ಆಂದೋಲನದ ದಿನಗಳಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿದ ಈತ, ಸ್ವಾತಂತ್ರಾನಂತರ ಒಬ್ಬ ಪ್ರಭಾವಶಾಲೀ ರಾಜಕಾರಣಿಯಾದರು. ಲೋಕಸಭೆಗಳ ಸದಸ್ಯರಾಗಿ, ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಗಳಲ್ಲೊಬ್ಬರಾಗಿ, ದಿವಂತ, ಲಾಲ್‍ಬಹದ್ದೂರ್ ಶಾಸ್ತ್ರಿಗಳೊಡನೆ ದುಡಿದವರು, ಕಾಂಗ್ರೆಸ್ ಪಕ್ಷದಲ್ಲಿ ಬಹಳ ಪ್ರಭಾವಶಾಲಿಯಾಗಿದ್ದ ಆತ, ತನ್ನ ಈ ಪ್ರಭಾವದಿಂದ ಜಿಲ್ಲೆಗಾಗಿ ಸಾಕಷ್ಟು ಒಳಿತನ್ನೇ ಮಾಡಿದರು, ಮಂಗಳೂರು ಬಂದರು ಹಾಗೂ ಸುರತ್ಕಲ್‍ನ ಇಂಜಿನಿಯರಿಂಗ್ ಕಾಲೇಜ್, ಜಿಲ್ಲೆಗೆ ಅವರ ಕೊಡುಗೆಗಳು, ಮಿತಭಾಷೆಯಿಂದೇ ಹೆಸರಾಗಿದ್ದ ಮಲ್ಯರು, ಪಾರ್ಲಿಮೆಂಟ್‍ನಲ್ಲಿ ತಾನಿದ್ದ ಹದಿನೈದು ವರ್ಷಗಳಲ್ಲಿ, ಅಲ್ಲಿ ಒಂದೇ ಒಂದು ಮಾತನ್ನೂ ಉಸುರದಿದ್ದ ಬಗ್ಗೆ ಖ್ಯಾತರಾಗಿದ್ದರು.ಕೇಂದ್ರ ಸರಕಾರದಲ್ಲಿ ಸ್ಠಾನಗಳಿಸುವುದು ಅವರಿಂದ ಅಸಾಧ್ಯವೇನೂ ಆಗಿರದಿದ್ದರೂ, ಅವರೇಕೆ ಮಂತ್ರಿ ಆಗಲಿಲ್ಲವೆಂದು ನನಗೆ ಅಚ್ಚರಿ ಅನಿಸುತ್ತದೆ, ವೈಯಕ್ತಿಕ ಸತ್ಯಾಗ್ರಹಗಳಿಂದ ಮೂರು-ನಾಲ್ಕೂ ತಿಂಗಳು ಸೆರೆವಾಸ ಅನುಬವಿಸಿ, ಈಗ ರಾಜಕೀಯ ಸಂತ್ರಸ್ತರೆಂದು ತಮ್ಮ ಸಣ್ಣ ಪುಟ್ಟ ತ್ಯಾಗಕ್ಕಾಗಿ ಬಹಳಷ್ಟು ಫಲಾನುಭವ ಪಡೆದು ಸುಖಿಗಳಾದವರಿದ್ದಾg, ಕೆಚ್ಚಿನಿಂದ ಲಾಠೀ ಪ್ರಹಾರವನ್ನೆದುರಿಸಿ, ಮೂಳೆ ಮುರಿದುಕೊಂಡು ನಿಜಕ್ಕೂ ಸಂತ್ರಸ್ತರಾದ ದಿವಂಗತ ಮಾರಪ್ಪ ಪಕಳ, ರಾಮಚಂದ್ರ ಮಲ್ಲಿ ಹಾಗೂ ಬಿ, ದಾಮೋದರ ಬಾಳಿಗಾರರಂತಹವರನ್ನು ಯಾವುದೇ ಸನ್ಮಾನ ಬಹುಮಾನ ಅರಸಿ ಬಂದಿಲ್ಲ, ಸ್ವಾತಂತ್ರಾಂದೋಲನಕ್ಕೆ ಇನಿತಾದರೂ ಕಾಣಿಕೆ ಸಲ್ಲಿಸದ ಏಷ್ಟೋ ಮಂದಿಗೆ ತಾಮ್ರ ಪ್ರಶಸ್ತಿ, ಸರಕಾರಿ ಹುದ್ದೆಗಳು, ವಿಧಾನ ಸಭಾ ಸದಸ್ಯತ್ವ, ಅಷ್ಟೇ ಏಕೆ, ಮಂತ್ರಿ ಪದವಿಯೂ ಪ್ರಾಪ್ತವಾದುದನ್ನು ನಾನು ಉದಾಹರಿಸಬಲ್ಲೆ.

    ಗವರ್ನಮೆಂಟ್ ಕಾಲೇಜ್‍ನಲ್ಲಿ ನನ್ನ ಸಹಪಾಠಿಯಾಗಿದ್ದ, ದಿವಂಗತ ಶಂಕರನಾರಾಯನ ಹೊಳ್ಳ ಹಾಗೂ ಬಿ,ವಿ ಕಕ್ಕಿಲ್ಲಾಯರಂತಹವರನ್ನೂ ಕಾಂಗ್ರೆಸ್ ಕಾರ್ಯಕರ್ತರೆಂದು ಬಂಧೀಸಿ ಜೈಲಿಗೆ ಕಳಿಸಿದ್ದೆವು. ಎರಡು-ಮೂರು ವರ್ಷಗಳ ಬಳಿಕ ಅವರು ಜೈಲಿನಿಂದ ಹೊರಬಂದಾಗ ಅವರು ಭಾರತೀಯ ಕಮ್ಯೂನಿಸ್ಟ್ ಪಾರ್ಟಿಯ ಕೆಂಪು ಲೇಬಲ್‍ಗಳನ್ನು ಹೊಂದಿ, ಮುಂದೆ ತುಂಬ ಸಕ್ರಿಯ ಕಮ್ಯೂನಿಸ್ಟರಾದರು ಬಿ,ವಿ, ಕಕ್ಕಿಲ್ಲಾಯರು ವಿಧಾನ ಸಭೆಯ ಸದಸ್ಯರಾದರು. ಹೊಳ್ಳರು ಸಕ್ರಿಯ ಪಕ್ಷ ಕಾರ್ಯಕರ್ತರಾಗಿದ್ದು, ಬಂಧಿತರಾಗಿ ವೆಲ್ಲೋರಿಗೆ ರೈಲಿನಲ್ಲಿ ಕರೆದೊಯ್ಯಲ್ಪಡುತ್ತಿರುವಾಗ, ಅವರ ಪಕ್ಷ ಕಾರ್ಯಕರ್ತರು ಮುತ್ತಿಗೆ ಹಾಕಿ,ಪೊಲೀಸರನ್ನು ಇರಿತದಿಂದ ಗಾಯಗೊಳಿಸಿ, ಹೊಳ್ಳರನ್ನು ಬಿಡಿಸಿ ಕರೆದೊಯ್ದಿದ್ದರು! ಈ

    Enjoying the preview?
    Page 1 of 1