ಸರ್ಕಾರಿ ಕನ್ನಡ ಹಿರಿಯ ಪ್ರಾ.
ಶಾಲೆ, ಗುಡಗನಹಟ್ಟಿಆರ್ ಸಿ
ರೂಪಣಾತ್ಮಕ ಪರೀಕ್ಷೆ -2
ವಿಷಯ:- ಪರಿಸರ ಅಧ್ಯಯನ, ತರಗತಿ:-5 ಅಂಕ:-25
ಪ್ರ 1:-ಬಿಟ್ಟ ಸ್ಥಳ ತುಂಬಿರಿ. (1*10=10)
1) ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಜನರ ಗುಂಪನ್ನು ______ಎನ್ನುತ್ತಾರೆ.
2)_____ಗ್ರಾಮೀಣ ಪ್ರದೇಶದ ಪ್ರಮುಖ ಉದ್ಯೋಗವಾಗಿದೆ.
3) ಕಾಡು ಮತ್ತು ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಜನರು____ ಸಮುದಾಯಕ್ಕೆ ಸೇರಿರುತ್ತಾರೆ.
4) ಮೌಂಟ್ ಎವರೆಸ್ಟ್ ಏರಿದ ಮೊಟ್ಟಮೊದಲ ಭಾರತೀಯ ಮಹಿಳೆ___.
5) ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಒಂದು ಪಾರಂಪರಿಕ ಕ್ರೀಡೆ_____.
6) ನಿಯಮಿತವಾಗಿ ಆಟಗಳು ಆಡಿದರೆ ____ಮತ್ತು _____ಆರೋಗ್ಯ ಸುಧಾರಿಸುತ್ತದೆ.
7) ಕಲ್ಲಿದ್ದಲು ಪೆಟ್ರೋಲ್ ಡೀಸೆಲ್ ಮತ್ತು ನೈಸರ್ಗಿಕ ಅನಿಲವು _____ಸಂಪನ್ಮೂಲಗಳಾಗಿವೆ.
8) ಭೂಮಿಯ ಅತಿ ಹೊರಗಿನ ಪದರವನ್ನು _____ಎಂದು ಕರೆಯುತ್ತಾರೆ.
9) ಕಾಡುಗಳು ಉಸಿರಾಟಕ್ಕೆ ಅಗತ್ಯ ಇರುವ ____ಅನ್ನು ಬಿಡುಗಡೆ ಮಾಡುತ್ತವೆ.
10) ಖನಿಜುಗಳನ್ನು ___ರೂಪದಲ್ಲಿ ಹೊರ ತೆಗೆಯಲಾಗುತ್ತದೆ.
ಪ್ರಶ್ನೆ .2) ಹೊಂದಿಸಿ ಬರೆಯಿರಿ. (1*6=6)
A B
11) ಸೂರ್ಯನ ಶಕ್ತಿಯಿಂದ. a)ಬಡವರಿಗೆ ಮನೆ
12) ಮಣ್ಣಿನ ಸವೆತವನ್ನು ತಡೆಗಟ್ಟುವ ವಿಧಾನ b)ರಜೆ
13) ಸರ್ವ ಶಿಕ್ಷಣ ಅಭಿಯಾನ c)ತರಬೇತಿ ಮತ್ತು ಕೌಶಲ್ಯ
14) ಯೋಗ. d)ಸೌರಶಕ್ತಿ
15) ಭಾನುವಾರ. e)ಶಿಕ್ಷಣ ಯೋಜನೆ
16) ಆಶ್ರಯ ಯೋಜನೆ. f)ಸಮಪಾತಳಿ ಬೇಸಾಯ
ಪ್ರಶ್ನೆ .3) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
17) ಕರ್ನಾಟಕದಲ್ಲಿ ಸಾಲುಮರಗಳನ್ನು ನೆಟ್ಟ ಮಹಿಳೆ ಯಾರು?
18) ಯಾವ ತರಹದ ಆಟಗಳಿಗೆ ವಿಶೇಷ ಉಪಕರಣ ಮತ್ತು ತರಬೇತಿ ಬೇಕು?
19) ನೀವು ತಿಳಿದುಕೊಂಡಿರುವ ಒಂದು ಅಂತರಾಷ್ಟ್ರೀಯ ಆಟವನ್ನು ಹೆಸರಿಸಿ.
20) ಕರ್ನಾಟಕದ ಒಂದು ಬುಡಕಟ್ಟು ಸಮುದಾಯವನ್ನು ಹೆಸರಿಸಿ.
21) ನಗರ ಪ್ರದೇಶದ ಒಂದು ಪ್ರಮುಖ ಸಮಸ್ಯೆ ಏನು?
ಪ್ರಶ್ನೆ 4) ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ. (2*2=4)
21) ಯಾವುದಾದರೂ ಎರಡು ಕೃಷಿಯೇತರ ಗ್ರಾಮೀಣ ಉದ್ಯೋಗಗಳನ್ನು ಹೆಸರಿಸಿ.
22) ಆಟಗಳ ಎರಡು ಉಪಯೋಗಗಳನ್ನು ಬರೆಯಿರಿ.