You are on page 1of 4

ನೀ ನನ್ನ ಕನಸಿಗೆ ಬಂದು ಹಾಡುವಾಗ ಕವನ

ಎಲ್ಲ ನೋವು ಮರೆತು ನಿನ್ನೆಡೆಗೆ ತಿರುಗಿತು ನನ್ನ ಗಮನ


ಕಂಗಾಲಾದ ಮನಸಿನ ಭಾರ ಇಳಿಸಿದ ನಿನಗೆ ನನ್ನ ನಮನ
ಕಣ್ಣಿಂದಲೇ ಸ್ಪರ್ಶಿಸಿದ ಮನಸು ಪಾವನ

ನಾ ನಿನ್ನ ಕನಸಿಗೆ ಬಂದು ಹೋದರೆ


ನನಗಿರಲಿ ಒಂದೇ ಒಂದು ದೂರವಾಣಿ ಕರೆ
ನಾ ನಿನ್ನ ಮಾತನು ಕೇಳದೆ ಇನ್ನು ಇರಲಾರೆ
ನಿನ್ನ ನಾ ನೋಡದೆ ಕ್ಷಣಕಾಲವು ಜೀವಿಸಲಾರೆ

ಕನಸಿನ ಕನ್ನಡಿಯಲ್ಲಿ ಕಾಣುತಿದೆ ನಿನ್ನದೇ ಮುಖವು


ಮನಸಿನ ಮುಖ ಪುಟದಲ್ಲಿ ಕುಳಿತಿದೆ ನಿನ್ನದೇ ಚಿತ್ರವು
ಬಾಳಿನ ಮುನ್ನುಡಿ ತುಂಬ ನಿನ್ನದೇ ಹೆಸರು
ನಿನ್ನಿಂದಲೇ ನನ್ನ ಬಾಳು ಹಸಿರು

ಮಳೆಯಲಿ ನೆನೆಯುತ ನಿನ್ನನು ನೆನೆಸುತ 

ಸುರಿಸುವ ಕಣ್ಣೀರಿಗೆ ಏನಿದೆ ಅರ್ಥ 


ಮಳೆಯೊಂದಿಗೆ ಬೆರೆತಿರುವ ಕಣ್ಣೀರು ಬರೀ ವ್ಯರ್ಥ
 
ಗಾಳಿಯಲಿ ನಿನ್ನುಸಿರನು ಹುಡುಕುತ 
ಹುಡುಕಾಟದ ಅಮಲಿನಲಿ ಬದುಕುತ 
ಬಯಸುವ ಪ್ರೀತಿಗೆ ಏನಿದೆ ಅರ್ಥ 
ಗಾಳಿಯೊಂದಿಗೆ ಬೆರೆತಿರುವ ನನ್ನುಸಿರು ಬರೀ ವ್ಯರ್ಥ
 
ನೀನಾಡಿದ ಮಾತುಗಳ ಬರೆಯುತ 
ಹೃದಯಕೆ ನಿನ್ನ ಮರೆಯುವ ಪಾಠ ಕಲಿಸುತ 
ಬದುಕುವ ಬಯಕೆಗೆ ಏನಿದೆ ಅರ್ಥ 
ನೀನಿಲ್ಲದ ಜೀವನ ಬರೀ ವ್ಯರ್ಥ
 
ನಾಡಿಯಲ್ಲಿರದ ನಿನ್ನ ಪ್ರೀತಿಯ ಮಿಡಿತ 
ನಿನ್ನೊಂದಿಗೆ ಕಂಡ ಕನಸುಗಳ ಮರೆಯುತ 
ಬದುಕಿದ್ದು ಸತ್ತಂತಿರುವ ಜೀವಕೆ ಏನಿದೆ ಅರ್ಥ 
ನೀನಿಲ್ಲದೆ ಕಳೆಯುವ ಕಾಲ ಬರೀ ವ್ಯರ್ಥ 
ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು 

ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು 

ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು 

ಎರಡೂವರೆ ದಶಕದಿಂದ ನನ್ನ ಮುತ್ತಿಗಾಗಿ ಕಾಯುತ್ತಿರುವ ನಿನ್ನ ಕೆನ್ನೆಗಳು

ಸ್ಪೂರ್ತಿಯಾಗಬಹುದು 

ಕೆನ್ನೆಗೆ ಮೊದಲು ಮುತ್ತು ಕೊಟ್ಟರೆ ಸುಮ್ಮನಿರೊಲ್ಲ ಎಂದು ಗದರಿಸುವ ನಿನ್ನ

ತುಟಿಗಳು ಸ್ಪೂರ್ತಿಯಾಗಬಹುದು 

ನಿನ್ನ ಮೋಹಕ ನಡೆ ಸ್ಪೂರ್ತಿಯಾಗಬಹುದು 

ನಿನ್ನ ಭಾವುಕ ನುಡಿ ಸ್ಪೂರ್ತಿಯಾಗಬಹುದು 

ನಿನ್ನೊಡನೆ ಕಳೆಯುವ ಪ್ರತಿ ಕ್ಷಣ ಕವಿತೆಯಾಗಬಹುದು 

ಕನ್ನೋಟಗಳು ಬೆರೆತಾಗ ಮೌನ ಕಾವ್ಯಸುಧೆಯಾಗಿ ಹರಿಯಬಹುದು 

ನಿನ್ನ ಸ್ಪರ್ಶದ ರೋಮಾಂಚನ ಪಲ್ಲವಿಯಾಗಬಹುದು 

ನಿನ್ನ ಕನಸುಗಳು ನವೀನ ಚರಣಗಳಾಗಬಹುದು


ನೀ ನನ್ನ ಕರೆಯುವ ಹೆಸರು ಕವಿತೆಯ ಶೀರ್ಷಿಕೆಯಾಗಬಹುದು

ಸುಂದರ ಚೆಲುವೆ ನನ್ನೊಡನೆ ಇರುವಾಗ ಮುಂದಿನ ಜನ್ಮದಲ್ಲೂ ನಾ

ಕವಿಯಾಗಬಹುದು 

ನಮ್ಮ ಬಾಳಿಗೆ ಪ್ರೀತಿ ದೀವಿಗೆ 

ಕೊಟ್ಟ ದೇವರಿಗೆ ಹೇಳೋಣ ವಂದನೆ 

ಒಲವ ಹಾದಿಗೆ ಪ್ರೇಮ ಬಳ್ಳಿಗೆ 

ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ 

ನಿನ್ನ ಕಣ್ಣನು ಕಂಡು ಕರಗಿದೆ 

ನಿನ್ನ ಕಣ್ಣಲೆ ನಾನು ನೆಲೆಸಿದೆ 

ನೀನು ಎದುರಿದ್ದರೆ ನನಗೇನು ಬೇಡವೆ

ನಿನ್ನ ನೋಡುತ ಹಸಿವನ್ನೆ ಮರೆಯುವೆ 

ನನ್ನ ಪ್ರೀತಿಯು ಎಂದು ಕಡಿಮೆಯಾಗದು, ಭಯವು ಬೇಡವೆ 

ನೀನು ಅತ್ತರೆ ಭಯವ ಪಟ್ಟರೆ ತಾಳೆನು ಓ ಚೆಲುವೆ 

ನಮ್ಮಿಬ್ಬರ ಉಸಿರು ಒಂದೇ ಆಗಿರಲೆಂದು ನಾನು ಬೇಡುವೆ 

ನೀನೆ ಇರದಿರೆ ಬಾಳಿಗೆ ಅರ್ಥ ಇಲ್ಲವೇ, ಎಲ್ಲ ಶೂನ್ಯವೆ

ನನ್ನ ದೇಹ ದೂರವಿದ್ದರೇನು


ಮನಸು ನಿನ್ನ ಬಳಿಯೆ ಇರುವಾಗ
ನನ್ನ ಮಾತು ಕೇಳಿಸದಿದ್ದರೇನು
ಮೌನವೆ ಎಲ್ಲ ಹೇಳುತಿರುವಾಗ
ಚಿಂತೆಗಳು ಚುಚ್ಚಲು ಬಂದರೇನು
ನಿನ್ನ ರಕ್ಷಿಸಲು ನಾನಿರುವಾಗ
ಎದೆಯ ಬಾಗಿಲಲ್ಲಿ ಕುಳಿತು ನಿನ್ನ ಕಾಪಾಡುತಿರುವಾಗ

ಕಣ್ಣಂಚಿನಲ್ಲಿ ನೀರು ಬಂದರೇನು


ಕಣ್ಣೀರು ಒರೆಸಲು ನನ್ನ ಪ್ರೀತಿ ಭಾಷೆ ಇರುವಾಗ
ಒಂಟಿತನವೆಂಬ ಭೂತ ಕಾಡಲು ಬಂದರೇನು
ಒಲವೆಂಬ ದೈವಶಕ್ತಿ ನಿನ್ನ ಹೃದಯದೊಳು ಇರುವಾಗ

ಕಾಡುವ ದಿನಗಳು ಎಷ್ಟೇ ಕಾಡಿದರೇನು


ಪ್ರೀತಿಯೆಂಬ ಅಮೃತ ಸುಧೆಯನು ಇನಿಯನು ಹರಿಸುತಿರುವಾಗ

<<ನೀ ನಿಂತರೆ ನಿಲ್ಲುತಿದೆ ಗಡಿಯಾರ


ನೀ ನಡೆದರೆ ಬರುವೆನು ತುಸುದೂರ
ನಿನ್ನ ಉಸಿರಾಟವೆ ಈ ಜೀವಕೆ ಆಧಾರ>>>

ನಿನ್ನಾ ಕಣ್ಣೋಟದಲ್ಲಿದೆ ಮಿಂಚಿನ ಸಂಚಾರ


ನೀ ನಕ್ಕರೆ ಕಣ್ಣ್ಮುಂದೆ ಮುತ್ತಿನಹಾರ
ನಿನ್ನಾ ಓಟದಲ್ಲಿದೆ ಜಿಂಕೆಯ ವೈಯಾರ
ನೀ ಬಂದರೆ ನನ್ನ ಬಾಳಲ್ಲಿ ಆಗುವುದು
ನಮ್ಮದು ಒಂದು ಪುಟ್ಟ ಸಂಸಾರ

You might also like