You are on page 1of 10

ಚೋಂಗಿನ ಚೆರಾಂಟೆ

ಚೋಂಗು ಬಂದಿರುವ ಗುಡ್ಡೆಯಂಗಡಿಗೆ


ಗುಡ್ಡೆ ಅಂಗಡಿ ಇರುವುದು ಉಡುಪಿಯಲ್ಲಿ
ಉಡುಪಿ ಇರುವುದು ಕರ್ನಾಟಕದಲ್ಲಿ
ಕ-ರ್ನಾ-ಟ-ಕ
ಕ-ರ್ನಾ-ಟ-ಕ
ಕ-ರ್ನಾ-ಟ-ಕ
ಕ-ರ್ನಾ-ಟ-ಕ
ಕರ್ನಾಟಕ ಇರುವುದು ಭಾರತದಲ್ಲಿ
ಚೋಂಗಿಗಿರುವರು ಅಮ್ಮ
ಅಮ್ಮ ಮತ್ತು ಅಪ್ಪ
ಅಪ್ಪ ಮತ್ತು ಅಕ್ಕ
ಅಕ್ಕ ಮತ್ತು ಅಜ್ಜ
ಅಜ್ಜ ಮತ್ತು ಅಜ್ಜಿ
ಅಜ್ಜಿ ಮತ್ತು ಗುಳ್ಳ
ಗುಳ್ಳ ಮತ್ತು ತುಕ್ರ
ತುಕ್ರ ಮತ್ತು ಚೋಂಗು
ಚೋಂಗು ಮತ್ತು ತುಕ್ರ
ಪಾಡಿಯಲ್ಲಿರುವರು
ಪಾಡಿಯಲ್ಲಿರುವುದು ಮರಗಳು ಬಹಳ
ಬಹಳ ಮರಗಳು ದೊಡ್ಡ, ಸಣ್ಣ,
ಸಣ್ಣ ಅಣಬೆ, ಬಿದಿರು ದೊಡ್ಡ,
ದೊಡ್ಡ ಮಾವು, ಕರಾಂಡೆ ಸಣ್ಣ,
ಸಣ್ಣ ಮಿಂಚುಳ್ಳಿ, ನವಿಲು ದೊಡ್ಡ,
ದೊಡ್ಡ ಹಾವು.... ತಡಿ ತಡಿ ಇದು ಏನು ಸಣ್ಣ?
ನೋಡು ಇದು ತೆವಳುವುದು
ನೋಡು ಇದು ಮಿನುಗುವುದು,
ನೋಡು ಅದರ ಕಾಲುಗಳು
ಅಬ್ಬ! ಎಣಿಸಲು ಸಾವಿರಗಳು

ಚೋಂಗುಗುಂಟು ಕಾಲು ಎರಡು


ಗುಳ್ಳಗುಂಟು ಕಾಲು ನಾಕು
ಇಷ್ಟು ಸಣ್ಣ ಹುಳುವಿಗೆ
ಸಾವಿರ ಕಾಲು ಯಾಕೆ ಬೇಕು?
ಚೋಂಗು ಕಂಡ ಅದರ ಕೆಂಪು
ಚೋಂಗು ಕಂಡ ಅದರ ಕಪ್ಪು
ಚೋಂಗು ಎತ್ತು ಹಿಡಿದ ಹುಳುವ
ಹುಳುವು ಮುದುಡಿ ಚಕ್ರವಾಯ್ತು
ಚೋಂಗು ಕೂಗಲು ತುಕ್ರ ಬಂದು
ತುಕ್ರ ಹುಸಿ ನಗುವ ನಗುತನಿಂದು
‘’ ಅವ್ವು ಚೆರಾಂಟೆ ಅತಾ ಚೋಂಗು
‘’ಅವ್ವು ಚೆರಾಂಟೆ?’’ ಅಂದ ಚೋಂಗು
ಚೆರ್ ಚೆರ್ ಚೆರ್
ಚೆರಾಂಟೆ ಚೆರ್
ಮುದದಿಂದ ಮುಟ್ಟಲು
ಮುದುಡಿತು ಮುದುಡಿತು
ಕಂಡೆನಾ ಚೆರಾಂಟೆಯಾ
ಅಪ್ಪನ ಮೀಸೆಯಲ್ಲಿ

ಕಂಡೆನಾ ಚೆರಾಂಟೆಯಾ
ಅಮ್ಮನ ಗುಂಗುರಿನಲ್ಲಿ

ಕಂಡೆನಾ ಚೆರಾಂಟೆಯಾ
ಅಜ್ಜಿಯ ಚಕ್ಕುಲಿಯಲ್ಲಿ

ಕಂಡೆನಾ ಚೆರಾಂಟೆಯಾ
ಅಜ್ಜನ ಮುಂಡಾಸಿನಲ್ಲಿ

ಕಂಡೆನಾ ಚೆರಾಂಟೆಯಾ
ಗುಳ್ಳನ ಬಾಲದಲ್ಲಿ
ಕಂಡೆನಾ ಚೆರಾಂಟೆಯಾ
ಚಂದಾಮಾಮನಲ್ಲಿ
ಚೆರಾಂಟೆ ಕಾಣುವುದು ಎಲ್ಲೆಡೆಯೂ ನನಗೆ
ಚೆರಾಂಟೆ ಕಾಣುವುದು ಇಲ್ಲಿ, ಅಲ್ಲಿ, ಹಿಂದೆ,
ಮುಂದೆ,

ಚೆರ್ ಚೆರ್ ಚೆರ್ ಚೆರಾಂಟೆ ಚೆರ್


ಚೆರ್ ಚೆರ್ ಚೆರ್ ಚೆರಾಂಟೆ ಚೆರ್

ಚೆರಾಂಟೆ ಚೆರಾಂಟೆ ಅಕ್ಕ ಹೇಳುವಳು


ಎಲ್ಲಕ್ಕಿಂತ ದೊಡ್ಡ ಚೆರಾಂಟೆ

ನಮ್ಮ ಆಕಾಶಗಂಗೆ!!!

You might also like