You are on page 1of 1

ಬೇಕಾಗುವ ಸಾಮಗ್ರಿಗಳು

1. ರವೆ - 1/2 ಕಪ್ ( ಹುರಿದಿಟ್ಟುಕೊಳ್ಳಿ)


2.ಹೆಸರುಕಾಳು- 1/2 ಕಪ್( ಬೇಯಿಸಿಕೊಳ್ಳಿ)
3. ತುಪ್ಪ- 2 ಟೀಚಮಚ
4. ಕರಿಮೆಣಸು - 1/4 ಟೀಚಮಚ
5. ಜೀರಿಗೆ- 1/4 ಚಮಚ
6. ಗೋಡಂಬಿ- ಸ್ವಲ್ಪ
7. ಕರಿಬೇವು- ಸ್ವಲ್ಪ
8. ಶುಂಠಿ- 1/4 ಟೀಚಮಚ (ತುರಿದುಕೊಳ್ಳಿ)
9. ನೀರು- 3 ಕಪ್
ಮಾಡುವ ವಿಧಾನ
ಮೊದಲಿಗೆ ಹೆಸರುಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ರವೆಯನ್ನು ಹುರಿದುಕೊಳ್ಳಿ. ನಂತರ ಬಾಣಲೆಯಲ್ಲಿ ತುಪ್ಪ ಹಾಕಿ ಕಾಯಿಸಿ ಮೆಣಸು
ಮತ್ತು ಗೋಡಂಬಿಯನ್ನು ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಜೀರಿಗೆ ಸೇರಿಸಿ. ಅದಕ್ಕೆ 3 ಕಪ್ ನೀರು ಹಾಕಿ ಅದಕ್ಕೆ ರುಚಿಗೆ
ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ. ನೀರು ಕುದಿ ಬಂದಾಗ ಅದಕ್ಕೆ ಹುರಿದಿಟ್ಟ ರವೆ ಸೇರಿಸಿ ಬೇಯಿಸಿ. ರವೆ ಬೇಯಲು ಆರಂಭವಾದ ತಕ್ಷಣ
ಬೇಯಿಸಿಕೊಂಡ ಹೆಸರು ಬೇಳೆ ಸೇರಿಸಿ. ಇದನ್ನು ಒಂದು ಹದಕ್ಕೆ ಬರುವವರೆಗೆ ಕಲಸಿ. ಸಿದ್ಧವಾದ ನಂತರ ಅದಕ್ಕೆ ಕರಿಬೇವಿನ ಎಲೆ ಮತ್ತು
ತುಪ್ಪವನ್ನು ಸೇರಿಸಬಹುದು.

You might also like