You are on page 1of 37

ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ

ಕ�ೋವಿಡ್–19
ಕ�ೋವಿಡ್–19
ಕ�ೋರಂಟೈನ್ ಲಸಿಕೆ ಶುಚಿತ್ವ ಅಂತರ

ಪ್ರಜಾವಾಣಿ ಕೋವಿಡ್–19 ಕೈಪಿಡಿ 1


ಪರಿವಿಡಿ
ವೈರಸ್ ಹೇಗೆ ಹರಡುತ್ತದೆ ? : 3

ಸುರಕ್ಷಿತವಾಗಿರುವುದು ಹೇಗೆ ? : 4

ಲಸಿಕೆ ಏಕೆ ? ಹೇಗೆ? : 5

ನಿಮಗಿದು ತಿಳಿದಿರಲಿ : 8

ಎರಡು ಮಾಸ್ಕ್‌ ಧರಿಸುವುದು : 9

ಲಕ್ಷಣಗಳನ್ನು ಗಮನಿಸಿ : 10

ತೀವ್ರ ಸೋಂಕಿನ ಲಕ್ಷಣಗಳು : 11

ತುರ್ತು ವೈದ್ಯಕೀಯ ಸೌಲಭ್ಯ ಪಡೆಯಿರಿ : 12

ಯಾರು ಪರೀಕ್ಷೆ ಮಾಡಿಸಿಕೊಳ್ಳಬೇಕು ? : 13

ಮನೆಯಲ್ಲಿ ಏಕಾಂತವಾಸದ ಸಂದರ್ಭದಲ್ಲಿ : 14

ಮನೆಯಲ್ಲಿ ಕೋವಿಡ್ ರೋಗಿಗಳ ಆರೈಕೆ : 16

ಕೋವಿಡ್‌ ರೋಗಿಯ ನಿರ್ವಹಣೆ ಹೇಗೆ? : 18

ಪಲ್ಸ್ ಆಕ್ಸಿಮೀಟರ್ ಬಳಕೆ ಹೇಗೆ? : 19

ಸರಾಗವಾಗಿ ಉಸಿರಾಡಲು ಪ್ರೋನಿಂಗ್ : 20

ಕೋವಿಡ್ ನಂತರದ ಮುಂಜಾಗ್ರತೆಗಳು : 21

ಕೋವಿಡ್ ನಂತದ ಸ್ಥಿತಿಗಳು : 22

ಸುದೀರ್ಘ ಕೋವಿಡ್‌ : 23

ಕೋವಿಡ್‌ನ ಬಹು ಅಂಗಾಂಗ ಪರಿಣಾಮಗಳು : 24

ಸಾಂಕ್ರಾಮಿಕದ ವೇಳೆ ಸ್ವಯಂ ಕಾಳಜಿ : 25

ಪದೇ ಪದೇ ಕೇಳುವ ಪ್ರಶ್ನೆಗಳು (ಎಫ್‌ಎಕ್ಯು) : 26

ಮಿಥ್ಯೆ ಮತ್ತು ಸತ್ಯ : 29

ಕೋವಿಡ್ 19 – ಉಪಯುಕ್ತ ದೂರವಾಣಿ : 32

ಕೋವಿಡ್ 19 – ಸಹಾಯವಾಣಿಗಳು : 33
ಪ್ರಜಾವಾಣಿ ಕೋವಿಡ್–19 ಕೈಪಿಡಿ 2
‘ಕೋವಿಡ್‌–19’ ಪಿಡುಗಿನ ಎರಡನೇ ಅಲೆ ನಮ್ಮ ಸುತ್ತ ವ್ಯಾಪಿಸಿದೆ. ಇಂಥ ಸಮಯದಲ್ಲಿ,
ಸೋಂಕಿನಿಂದ ರಕ್ಷಿಸಿಕೊಳ್ಳಲು ‘ಸಹಾಯವಾಣಿ’ ನಮಗೆ ತಿಳಿದಿರಬೇಕು. ಸೋಂಕು
ನಿಯಂತ್ರಣಕ್ಕಾಗಿ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರವನ್ನು ಅರ್ಥ
ಮಾಡಿಕೊಳ್ಳಬೇಕು. ಸೋಂಕಿನ ಕುರಿತು ಅನುಮಾನಗಳಿದ್ದರೆ, ಅವುಗಳನ್ನು ಪರಿಹರಿಸಿ
ಕೊಳ್ಳಬೇಕು. ಸಕಾಲಿಕ ಮಾಹಿತಿ ಪಡೆಯುವ ಮೂಲಕ ಈ ಪಿಡುಗಿನಿಂದ ಪಾರಾಗಬೇಕು.
ಕೋವಿಡ್‌– 19 ಕುರಿತ ಇಂಥ ಹಲವು ಅಂಶಗಳಿರುವ ಮಾಹಿತಿಯನ್ನು ಸೇರಿಸಿ ಈ
ಕಿರು ಕೈಪಿಡಿಯನ್ನು ತಯಾರಿಸಲಾಗಿದೆ. ಈ ಕೈಪಿಡಿಯಲ್ಲಿ ಈಗಾಗಲೇ ಸಾರ್ವಜನಿಕವಾಗಿ
ಲಭ್ಯವಿರುವ ಮಾಹಿತಿಯನ್ನು ವಿಶ್ವಾಸಾರ್ಹ ಮೂಲಗಳಿಂದ ಸಂಗ್ರಹಿಸಿ, ಪರಿಶೀಲಿಸಿ,
ವಿಭಾಗಾವಾರು ನೀಡಲಾಗಿದೆ. ಪ್ರತಿ ವಿಭಾಗದ ಕೊನೆಯಲ್ಲಿ ಮಾಹಿತಿ ಪಡೆದಿರುವ ಮೂಲವನ್ನು
ನಮೂದಿಸಲಾಗಿದೆ.

ವೈರಸ್ ಹೇಗೆ ಹರಡುತ್ತದೆ ?


ಸಾರ್ಸ್‌–ಕೋವ್‌–2 ವೈರಸ್‌ನಿಂದ ‘ಕೋವಿಡ್‌-19‘ ರೋಗ ಬರುತ್ತದೆ.
ಸೋಂಕಿತ ವ್ಯಕ್ತಿಯ ನಿಕಟ ಸಂರ್ಪಕಕ್ಕೆ ಬಂದ ಮತ್ತೊಬ್ಬ ವ್ಯಕ್ತಿಗೆ ಈ ರೋಗ
ಹರಡುತ್ತದೆ.
ಸೋಂಕು ತಗುಲಿದ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ, ಮಾತನಾಡುವಾಗ
ಅಥವಾ ಉಸಿರಾಡುವಾಗ, ಬಾಯಿ ಅಥವಾ ಮೂಗಿನಿಂದ ಚಿಮ್ಮುವ ದ್ರವದ
ಕಣಗಳಿಂದ ಸೋಂಕು ಹರಡಬಹುದು. ಈ ದ್ರವದ ಕಣಗಳು ವಿಭಿನ್ನ ಗಾತ್ರಗಳ-
ಲ್ಲಿರುತ್ತವೆ. ಉಸಿರಾಡುವಾಗ ಚಿಮ್ಮುವ ದಪ್ಪ ಕಣಗಳಿಂದ ಹಿಡಿದು ಏರೊಸೋಲ್ಸ್‌
ರೂಪದ ಸಣ್ಣ ಕಣಗಳಾಗಿಯೂ ಇರುತ್ತವೆ.
n ದೊಡ್ಡ ಹನಿಗಳು ಕಣ್ಣಿಗೆ ಕಾಣುತ್ತವೆ. ಅವು ತಮ್ಮ ಮೂಲದಿಂದ (ಇಲ್ಲಿ ವ್ಯಕ್ತಿ)
ಬಹು ಕ್ಷಿಪ್ರವಾಗಿ, ಕೆಲವೇ ಸೆಕೆಂಡು ಅಥವಾ ನಿಮಿಷಗಳಲ್ಲಿ ಗಾಳಿಯಲ್ಲಿ ತೇಲಿ,
ಕೆಳಗೆ ಬೀಳುತ್ತವೆ.
n ಅದೇ ಹನಿಗಳು ಮತ್ತು ಕಣಗಳು ಗಾತ್ರದಲ್ಲಿ ಚಿಕ್ಕದಾಗಿ ಇದ್ದರೆ, ಅವುಗಳು
ಗಾಳಿಯಲ್ಲಿ ತೇಲಿದಾಗ ಬಹಳ ಬೇಗನೆ ತೇವಾಂಶ ಕಳೆದುಕೊಂಡು
ಒಣಗುತ್ತವೆ. ಈ ರೀತಿ ಒಣಗಿದ ರೂಪದಲ್ಲಿರುವ ಹನಿಗಳು/ಕಣಗಳು
ಗಂಟೆಗಳ ಕಾಲ ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಗಾಳಿಯೊಂದಿಗೆ ಇವು ಬಹಳ
ದೂರದವರೆಗೂ ಚಲಿಸಬಲ್ಲವು

ಸೋಂಕು ಹೇಗೆ ಪ್ರಸರಣವಾಗುತ್ತದೆ ?


1 2 3
ಸ�ೋಂಕಿತ ವ್ಯಕ್ತಿಯ
ಹನಿಗಳ ಮೂಲಕ ಗಾಳಿಯ ಮೂಲಕ
ಸ್ಪರ್ಶ/ ಸಂಪರ್ಕದಿಂದ
ಪ್ರಸರಣ ಪ್ರಸರಣ
ಪ್ರಸರಣ

ಪ್ರಜಾವಾಣಿ ಕೋವಿಡ್–19 ಕೈಪಿಡಿ 3


ಸುರಕ್ಷಿತವಾಗಿರುವುದು
ಹೇಗೆ ?
n ಮನೆಯಲ್ಲೇ ಇರಿ. ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ.
n ಮನೆಯಿಂದ ಹೊರ ಹೋಗುವಾಗ ಅಥವಾ ಮನೆಯಲ್ಲಿ
ಯಾರಿಗಾದರೂ ಸೋಂಕು ತಗುಲಿದ್ದರೆ.. ಎಲ್ಲ
ಸಮಯದಲ್ಲೂ ಎರಡು ಪದರಗಳಿರುವ ಮುಖಗವಸು
(ಮಾಸ್ಕ್‌) ಬಳಸಿ.
n ಮನೆಯಿಂದ ಹೊರಗಡೆ ತೆರಳಿದಾಗ, ವ್ಯಕ್ತಿಗಳಿಂದ ಕನಿಷ್ಠ
6 ಅಡಿಯಷ್ಟು ಅಂತರ ಕಾಯ್ದುಕೊಳ್ಳಿ.
n ಸಭೆ–ಸಮಾರಂಭಗಳಂತಹ ಜನ ಸೇರುವ ಜಾಗಗಳಿಗೆ
ಹೋಗುವುದನ್ನು ನಿಲ್ಲಿಸಿ.
n ಅನಾರೋಗ್ಯದಿಂದ ಬಳಲುತ್ತಿರುವವರಿಂದ ದೂರವಿರಿ.
n ಪದೇ ಪದೇ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳುವ
ಅಭ್ಯಾಸವನ್ನು ಕಡಿಮೆ ಮಾಡಿ.
n ಅನಾರೋಗ್ಯದಿಂದ ಬಳಲುತ್ತಿದ್ದರೆ ಮನೆಯಲ್ಲೇ ಇರಿ.
n ಕೆಮ್ಮುವಾಗ ಮತ್ತು ಸೀನುವಾಗ ಟಿಶ್ಯೂಪೇಪರ್‌ನಿಂದ
ಬಾಯಿಯನ್ನು ಮುಚ್ಚಿಕೊಳ್ಳಿ. ನಂತರ ಟಿಶ್ಯೂ ಪೇಪರ್‌
ಅನ್ನು ಕಸದ ಬುಟ್ಟಿಗೆ ಹಾಕಿ.
n ನೀವು ಪದೇ ಪದೇ ಮುಟ್ಟುವ (ಸ್ಪರ್ಶಿಸುವ) ಸ್ಥಳ /
ಜಾಗಗಳನ್ನು ಸೋಂಕುನಿವಾರಕ ದ್ರಾವಣದಿಂದ
ಆಗಾಗ್ಗೆ ಸ್ವಚ್ಛಗೊಳಿಸಿ.
n ಸಾಬೂನಿನಿಂದ ಆಗಾಗ್ಗೆ ಕೈಗಳನ್ನು 20 ಸೆಕೆಂಡುಗಳ ಕಾಲ
ಸ್ವಚ್ಛಗೊಳಿಸಿ.
n ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ ಮತ್ತು ಪ್ರತಿನಿತ್ಯ
ವ್ಯಾಯಾಮ ಮಾಡಿ.
n ನೀವು ಲಸಿಕೆ ಹಾಕಿಸಿಕೊಳ್ಳಲು ಅರ್ಹ-
ರಾಗಿದ್ದರೆ, ಸಾಧ್ಯವಾದಷ್ಟು ಬೇಗ ಲಸಿಕೆ
ಹಾಕಿಸಿಕೊಳ್ಳಿ.
n ನಿಮಗೆ ಯಾವುದಾದರೂ ರೋಗ
ಲಕ್ಷಣಗಳು ಕಂಡು ಬಂದಲ್ಲಿ, ತಕ್ಷಣ
ವೈದ್ಯರ ಸಲಹೆ ಪಡೆಯಿರಿ.

ಪ್ರಜಾವಾಣಿ ಕೋವಿಡ್–19 ಕೈಪಿಡಿ 4


ಲಸಿಕೆ ಏಕೆ? ಹೇಗೆ?
ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ ಹಾಕಲು
ಏ. 28ರಿಂದ ನೋಂದಣಿ ಆರಂಭಿಸಿದೆ. ಕೋವಿನ್‌ (CoWin) ವೆಬ್‌ಸೈಟ್‌
ಮತ್ತು ಆರೋಗ್ಯ ಸೇತು ಆ್ಯಪ್‌ ಮೂಲಕ ಲಸಿಕೆ ಪಡೆಯಲು ಹೆಸರು
ನೋಂದಾಯಿಸಬಹುದು.
ಮೂರನೇ ಹಂತದ ಲಸಿಕೆ ಅಭಿಯಾನಕ್ಕೆ ಕರ್ನಾಟಕ ಸೇರಿದಂತೆ
ಕೆಲವು ರಾಜ್ಯಗಳಲ್ಲಿ ಹಿನ್ನಡೆಯಾಗಿದೆ. ಅಗತ್ಯ ಪ್ರಮಾಣದ ಲಸಿಕೆ ಸಂಗ್ರಹ
ಇಲ್ಲದಿರುವುದು ಇದಕ್ಕೆ ಕಾರಣ.

ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಹೇಗೆ ?


ಕ್ರಮ 1:ಲಸಿಕೆ ಹಾಕಿಸಿಕೊಳ್ಳುವವರು ಕೋವಿನ್‌ ವೆಬ್‌ಸೈಟ್‌
(www.cowin.gov.in)ನಲ್ಲಿ ನಿಮ್ಮ ಮೊಬೈಲ್‌ ಫೋನ್‌ ನಂಬರ್‌
ಮತ್ತು ಆಧಾರ್‌ ಸಂಖ್ಯೆಯನ್ನು ನಮೂದಿಸಿ ಮತ್ತು ಒನ್‌ ಟೈಮ್‌
ಪಾಸ್‌ವರ್ಡ್‌ಗಾಗಿ (ಒಟಿಪಿ) ಕಾಯಿರಿ.
ಕ್ರಮ 2: ಒಟಿಪಿ ಸಂದೇಶ ಬಂದ ನಂತರ ಅದನ್ನು ನಮೂದಿಸಿ. ಹೆಸರು,
ಹುಟ್ಟಿದ ದಿನಾಂಕ, ಭಾವಚಿತ್ರಸಹಿತ ಗುರುತಿನ ಚೀಟಿ ಇತ್ಯಾದಿ
ವಿವರಗಳನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ. ಇಲ್ಲಿ ಆಧಾರ್
ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ
ಪರವಾನಗಿ ಮತ್ತು ಪಾನ್‌ ಕಾರ್ಡನ್ನು ಗುರುತಿನ
ದಾಖಲೆಯಾಗಿ ಬಳಸಬಹುದು.
ಕ್ರಮ 3: ನಿಮಗೆ ಅನುಕೂಲವೆನಿಸುವ ಸಮೀಪದ
(ಸರ್ಕಾರಿ ಅಥವಾ ಖಾಸಗಿ) ಲಸಿಕೆ ಕೇಂದ್ರವನ್ನು
ಆಯ್ಕೆ ಮಾಡಿಕೊಳ್ಳಿ
ಕ್ರಮ 4: ದಿನಾಂಕ ಮತ್ತು ಲಸಿಕೆ ಪಡೆಯುವ
ಸಮಯವನ್ನು ಆಯ್ಕೆ ಮಾಡಿ. ನೀವು
ಬಯಸಿದ ದಿನದಂದು ಸಮಯ ಸಿಗದಿದ್ದರೆ
ಬೇರೆ ದಿನಾಂಕ ಅಥವಾ ಸಮಯವನ್ನು
ಪರಿಶೀಲಿಸಿ ಅಥವಾ ಬೇರೆ ಲಸಿಕೆ
ಕೇಂದ್ರಗಳನ್ನು ಆಯ್ಕೆ ಮಾಡಬಹುದು.
ಕ್ರಮ 5: ಮೇಲಿನ ಹಂತಗಳು ಪೂರ್ಣಗೊಂಡ
ಬಳಿಕ ಲಸಿಕೆ ಕೇಂದ್ರಕ್ಕೆ ಭೇಟಿ ನೀಡುವ ಪೂರ್ವ
ನಿಗದಿಯ ದೃಢೀಕರಣ ಪತ್ರ ಸಿದ್ಧವಾಗುತ್ತದೆ. ಅದನ್ನು
ಡೌನ್‌ಲೋಡ್‌ ಮಾಡಿ ಮುದ್ರಿತ ಪ್ರತಿಯೊಂದಿಗೆ
ಲಸಿಕಾ ಕೇಂದ್ರಕ್ಕೆ ತೆರಳಿ.

ಪ್ರಜಾವಾಣಿ ಕೋವಿಡ್–19 ಕೈಪಿಡಿ 5


ನಿಗದಿಪಡಿಸಿಕೊಂಡ ಭೇಟಿಯ ದಿನಾಂಕ ಮತ್ತು ಸಮಯವನ್ನು
ಬದಲಾಯಿಸಬಹುದೇ?
ನೋಂದಣಿ ಮಾಡಿಕೊಂಡ ದಿನಾಂಕ ಮತ್ತು ಸಮಯವನ್ನು
ಬದಲಾಯಿಸುವ ಆಯ್ಕೆ ಇದೆ. ಆದರೆ ನಿಗದಿತ ದಿನಕ್ಕಿಂತ ಮೊದಲೇ
ಬದಲಾಯಿಸಿಕೊಳ್ಳಬೇಕು. ವೆಬ್‌ಸೈಟಿನಲ್ಲಿರುವ ಮರು ಹೊಂದಾಣಿಕೆ
(Reschedule) ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ. ಬೇರೆ ದಿನಾಂಕ ಮತ್ತು
ಸಮಯ ಆಯ್ಕೆ ಮಾಡಿ.

ಎರಡನೇ ಡೋಸ್‌ ಲಸಿಕೆ ಪಡೆಯಲು ಮತ್ತೆ


ನೋಂದಾಯಿಸಬೇಕೇ?
ಇಲ್ಲ. ಮೊದಲ ಡೋಸ್‌ ಪಡೆದ ನಂತರ 29ನೇ ದಿನದಂದು
ವೆಬ್‌ಸೈಟ್‌/ ಕಂಪ್ಯೂಟರ್‌ ವ್ಯವಸ್ಥೆ ಸ್ವಯಂ ಚಾಲಿತವಾಗಿ ನಿಮ್ಮ
ಎರಡನೇ ಡೋಸ್‌ನ ದಿನಾಂಕವನ್ನು ನಿಗದಿಪಡಿಸುತ್ತದೆ.

ಒಂದೇ ಲಾಗಿನ್ ಐಡಿ ಮೂಲಕ ಎಷ್ಟು ಜನರು


ನೋಂದಾಯಿಸಿಕೊಳ್ಳಬಹುದು?
ಒಂದೇ ಫೋನ್ ಸಂಖ್ಯೆಯನ್ನು ಬಳಸಿಕೊಂಡು ನಾಲ್ಕು ಜನರು
ಹೆಸರು ನೋಂದಾಯಿಸಿಕೊಳ್ಳಬಹುದು.

ನೋಂದಣಿಗೆ ಬೇರೆ ವಿಧಾನಗಳು/ ಆಯ್ಕೆಗಳು ಇವೆಯೇ?


ಮೇಲೆ ಹೇಳಿದ ಸ್ವಯಂ ನೋಂದಣಿ ಮಾತ್ರವಲ್ಲ. ಆನ್‌ಸೈಟ್‌
ನೋಂದಣಿ (ಲಸಿಕೆ ಕೇಂದ್ರದಲ್ಲಿ ನೋಂದಣಿ) ಮತ್ತು ಸ್ಥಳದಲ್ಲೇ
ನೋಂದಣಿ (ವಾಕ್‌ ಇನ್‌ ನೋಂದಣಿ) ಸೌಲಭ್ಯವೂ ಇದೆ. ಈ
ಮೊದಲು ಹೇಳಿದ ವಿಧಾನ ಅನುಸರಿಸಲು ಆಗದವರಿಗೆ ಸ್ಥಳೀಯ
ಅಧಿಕಾರಿಗಳು (ಆರೋಗ್ಯ ಕಾರ್ಯಕರ್ತರು) ಬೇರೆ ವಿಧಾನಗಳ
ಮೂಲಕ ನೋಂದಣಿ ಮಾಡಿಕೊಳ್ಳಲು ನೆರವಾಗುತ್ತಾರೆ.

ಕೋವಿಡ್ -19 ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿಯೇ?


ಲಸಿಕೆ ಪಡೆದ ನಂತರ ಸಣ್ಣಪುಟ್ಟ ಅಡ್ಡಪರಿಣಾಮ
ಕಾಣಿಸಿಕೊಳ್ಳಬಹುದು. ಇದು ಸಹಜ. ಈ ಲಸಿಕೆಯು ಕೊರೊನಾ
ವೈರಸ್‌ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸಲು ಎರಡು ವಾರಗಳ
ಕಾಲ ತೆಗೆದುಕೊಳ್ಳುತ್ತದೆ. ಆದ್ದರಿಂದ ಎರಡನೇ ಡೋಸ್‌ ಪಡೆದ
ಬಳಿಕವೇ ನೀವು ಪೂರ್ಣ ಪ್ರಮಾಣದ ಲಸಿಕೆ ಪಡೆದಂತಾಗುತ್ತದೆ.

ಮೂಲ: ಸಿಡಿಸಿ

ಪ್ರಜಾವಾಣಿ ಕೋವಿಡ್–19 ಕೈಪಿಡಿ 6


ಕೋವಿಡ್‌ನಿಂದ ಚೇತರಿಸಿಕೊಂಡ ನಂತರ ಲಸಿಕೆ ಪಡೆಯಲು ಎಷ್ಟು ಸಮಯ
ಕಾಯಬೇಕು?
ಈ ಪ್ರಶ್ನೆ ಸ್ವಲ್ಪ ಕ್ಲಿಷ್ಟಕರವಾದದ್ದು. ಸೋಂಕಿಗೆ ಒಳಗಾದವರ ದೇಹದಲ್ಲಿ
ಈಗಾಗಲೇ ಪ್ರತಿಕಾಯಗಳು ಸೃಷ್ಟಿಯಾಗಿರುತ್ತವೆ. ಈ ಲಸಿಕೆಗಳ ಉದ್ದೇಶ ಕೂಡ
ದೇಹದಲ್ಲಿ ಪ್ರತಿಕಾಯಗಳನ್ನು ಸೃಷ್ಟಿ ಮಾಡುವುದೇ ಆಗಿರುತ್ತದೆ. ಹಾಗಾಗಿ ಅದೇನೂ
ದೊಡ್ಡ ವ್ಯತ್ಯಾಸವನ್ನುಂಟು ಮಾಡಲಾರದು. ಆದಾಗ್ಯೂ, ಐಸಿಎಂಆರ್ (ಭಾರತೀಯ
ವೈದ್ಯಕೀಯ ಸಂಶೋಧನಾ ಮಂಡಳಿ) ಪ್ರಕಾರ, ಯಾವುದೇ ರೋಗಲಕ್ಷಣಗಳಿಲ್ಲದ
ಮೊದಲ ದಿನದ ನಂತರ ಒಬ್ಬರು ನಾಲ್ಕು ವಾರಗಳವರೆಗೆ ಕಾಯಬೇಕಾಗುತ್ತದೆ. ನೀವು
‘ಕೋವಿಡ್ -19’ ಚಿಕಿತ್ಸೆಗೆ ಬಳಸುವ ಮೊನೊಕ್ಲೋನಲ್ ಪ್ರತಿಕಾಯಗಳು ಅಥವಾ
ಚೇತರಿಸಿಕೊಳ್ಳುವ ಪ್ಲಾಸ್ಮಾವನ್ನು ಸ್ವೀಕರಿಸಿದ್ದರೆ, ಲಸಿಕೆ ಹಾಕುವ ಮೊದಲು ಕನಿಷ್ಠ
90 ದಿನಗಳಾದರೂ ಕಾಯಬೇಕು. ಏಕೆಂದರೆ ನಿಮ್ಮ ದೇಹದಲ್ಲಿನ ಪ್ರತಿಕಾಯಗಳು
ದೀರ್ಘಕಾಲ ಉಳಿದಿರುತ್ತವೆ. ಪ್ರತಿ ದಿನವೂ ಕೋವಿಡ್‌ನ ಹೊಸ ತಳಿಗಳು ಬರುತ್ತಿವೆ.
ಆದ್ದರಿಂದ ಲಸಿಕೆಯನ್ನು ತೆಗೆದುಕೊಳ್ಳುವುದು ಸುರಕ್ಷಿತ. ಅದು ರೂಪಾಂತರಗೊಂಡ
ವೈರಸ್‌ಗಳಿಂದಲೂ ರಕ್ಷಿಸಬಲ್ಲದು.

ಎರಡು ಡೋಸ್‌ ಲಸಿಕೆಗಳನ್ನು


ಪಡೆಯುವ ನಡುವಿನ ಅಂತರ
ಎಷ್ಟಿರಬೇಕು?
ಇದುವರೆಗಿನ ಶಿಫಾರಸಿನಂತೆ
ಎರಡು ಲಸಿಕೆಗಳ ನಡುವಿನ
ಅಂತರವು ಆರು ವಾರಗಳವರೆಗೆ
ಇರುತ್ತದೆ. ಈ ಅಂತರದಲ್ಲಿ ಎರಡು
ಡೋಸ್‌ ಲಸಿಕೆ ಪಡೆಯಬೇಕು.
ಲಸಿಕೆ ತಯಾರಕರು ಅತ್ಯುತ್ತಮ
ಇಮ್ಯುನೊಜೆನಿಕ್ ಪ್ರತಿಕ್ರಿಯೆಯ ಪುರಾವೆಗಳ ಆಧಾರದ ಮೇಲೆ ಈ ಅಂತರವನ್ನು
ಪರಿಷ್ಕರಿಸುತ್ತಾರೆ. ಆದ್ದರಿಂದ ಸಂಶೋಧನಾ ಸಂಸ್ಥೆಗಳು ನೀಡುವ ಅಂತಹ ಶಿಫಾರಸು-
ಗಳನ್ನು ಗಮನಿಸುತ್ತಿರಿ.

ನಾನು ಮುಟ್ಟಿನ ದಿನಗಳಲ್ಲಿದ್ದೇನೆ. ಲಸಿಕೆ ತೆಗೆದುಕೊಳ್ಳಬಹುದೇ?


ಮುಟ್ಟಿನ ದಿನಗಳಲ್ಲಿ ಲಸಿಕೆ ತೆಗೆದುಕೊಳ್ಳುವುದಕ್ಕೆ ಇದುವರೆಗೆ ಯಾವುದೇ
ನಿರ್ಬಂಧ ಇಲ್ಲ. ಪ್ರತಿರೋಧ ಶಕ್ತಿ ಸಂಬಂಧಿಸಿದಂತೆ ಏನಾದರೂ ವ್ಯತ್ಯಾಸಗಳಿದ್ದರೆ
ನಿಮ್ಮ ದೇಹ ಪರಿಸ್ಥಿತಿಯನ್ನು ಅವಲಂಬಿಸಿ ವೈದ್ಯರು ನಿರ್ಧರಿಸಬಹುದು.

ಪ್ರಜಾವಾಣಿ ಕೋವಿಡ್–19 ಕೈಪಿಡಿ 7


ನಿಮಗಿದು
ತಿಳಿದಿರಲಿ
ಲಸಿಕೆ ಪಡೆದ ನಂತರ ನೀವು ಒಂದು ತಿಂಗಳು ರಕ್ತದಾನ ಮಾಡಬಾರದು.

ಲಸಿಕೆ ಪಡೆದ ಮೇಲೂ ಮಾಸ್ಕ್‌ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು


ಮತ್ತು ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯುವುದು ಮುಂತಾದ ಎಲ್ಲಾ
ಕೋವಿಡ್ -19 ಮಾರ್ಗಸೂಚಿಗಳನ್ನು ನೀವು ಅನುಸರಿಸಬೇಕು.

ಲಾಕ್‌ಡೌನ್‌ ನಡುವೆ ಲಸಿಕೆಗಾಗಿ ತೆರಳುವಾಗ ಕನಿಷ್ಠ ದಾಖಲೆಗಳನ್ನು ಇಟ್ಟುಕೊಳ್ಳಿ.


ಹೊರಡುವ ಮೊದಲು ಲಸಿಕೆ ನೀಡಲಾಗುತ್ತಿದೆಯೇ ಎಂದು ಕೇಂದ್ರವನ್ನು ಸಂಪರ್ಕಿಸಿ
ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.

ಕೇಂದ್ರಕ್ಕೆ ಹೊರಡುವ ಮೊದಲು ಲಸಿಕೆ ಲಭ್ಯ ಇದೆಯೇ ಇಲ್ಲವೇ ಎಂದು ಅಲ್ಲಿಗೆ ಕರೆ
ಮಾಡಿ ತಿಳಿದುಕೊಳ್ಳಿ.

ಮಾಹಿತಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ಕೊಡಿ:


http://dashboard.cowin.gov.in/
ಆಧಾರ: mohfw.gov.in

ಪ್ರಜಾವಾಣಿ ಕೋವಿಡ್–19 ಕೈಪಿಡಿ 8


ಎರಡು ಮಾಸ್ಕ್‌ಗಳನ್ನು
ಧರಿಸುವುದು (ಡಬಲ್ ಮಾಸ್ಕಿಂಗ್)
ಒಂದರ ಬದಲು ಎರಡು ಮಾಸ್ಕ್‌ಗಳನ್ನು ಧರಿಸುವುದು ಇನ್ನೂ ಉತ್ತಮ. ಇದು
ಕೋವಿಡ್ -19 ನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವ ಪ್ರಬಲ ಮಾರ್ಗವಾಗಿದೆ. ಒಂದೊಂದು
ಮಾಸ್ಕ್‌ ಮುಖಕ್ಕೆ ಸರಿಯಾಗಿ ಜೋಡಣೆಯಾಗುವುದಿಲ್ಲ.
ಹೀಗೆ ಜೋಡಣೆಯಾಗದ ಒಂದೇ ಮಾಸ್ಕ್‌ ಧರಿಸಿದಾಗ ಸೃಷ್ಟಿಸುವ ಕಿಂಡಿ (ಗ್ಯಾಪ್‌)
ಗಳಿಂದ ವೈರಸ್‌ಯುಕ್ತ ಉಸಿರಿನ ಹನಿಗಳು ಹೊರ ಬರಬಹುದು ಅಥವಾ ಅಂಥದ್ದೇ
ಹೊರಗಿನ ಗಾಳಿ ಒಳಸೇರುವ ಸಾಧ್ಯತೆ ಇದೆ.
ಎರಡು ಮಾಸ್ಕ್‌ಗಳನ್ನು ಧರಿಸುವುದರಿಂದ, ಒಳಗಿನ ಮಾಸ್ಕ್‌ ಮೇಲೆ ಹೊರಗಿನ
ಮಾಸ್ಕ್‌ ಒತ್ತಡ ಹೇರಿ ವೈರಸ್‌ಯುಕ್ತ ಉಸಿರು ಹೊರ ಬರದಂತೆ ಅಥವಾ ಒಳ ಹೋಗದಂತೆ
ತಡೆಯುತ್ತದೆ.
ಎರಡು ಮಾಸ್ಕ್‌ ಧರಿಸುವುದು ಹೇಗೆ ?
l ಸ
ರ್ಜಿಕಲ್‌ ಮಾಸ್ಕ್‌ನ ತುದಿಯಲ್ಲಿರುವ
ಎರಡು ದಾರಗಳನ್ನು ಕಿವಿಗಳ ಮೇಲೆ ಹೊಲಿಗೆ ಹಾಕದ ಯಾವುದೇ
ಕೆಳಗಿನಿಂದ ಹಾಯಿಸಿ ತಲೆಯ ಹಿಂದಕ್ಕೆ ಸರ್ಜಿಕಲ್‌ ಮಾಸ್ಕ್‌ ಶೇ 56.1
ಕಟ್ಟಿಕೊಳ್ಳಿ. ಏರೋಸಾಲ್‌ಗಳನ್ನು ಮತ್ತು
l ಮಾ
 ಸ್ಕ್‌ನ ಅಂಚುಗಳನ್ನು ಚಪ್ಪಟ್ಟೆಯಾಗಿಸಿ. ಬಟ್ಟೆ ಮಾಸ್ಕ್‌ ಶೇ 51.4
ಇದರಿಂದ ಅಂಚುಗಳಲ್ಲಿರುವ ಹೆಚ್ಚುವರಿ- ಏರೋಸಾಲ್‌ಗಳನ್ನು ತಡೆಯುತ್ತದೆ.
ಯಾಗಿರುವ ವಸ್ತುಗಳನ್ನು ಒಳಗೆ ಸೇರಿಸಿ- ಬಟ್ಟೆಯ ಮಾಸ್ಕ್‌ ಅಡಿಯಲ್ಲಿ
ದಂತಾಗುತ್ತದೆ. (ಒಳಭಾಗದಲ್ಲಿ) ಹೊಲಿದ ಅಥವಾ
l ಸ
ರ್ಜಿಕಲ್ ಮಾಸ್ಕ್‌ ಮತ್ತು ಉತ್ತಮವಾಗಿ ಅಳವಡಿಸಿದ ಸರ್ಜಿಕಲ್‌ ಮಾಸ್ಕ್‌
ಜೋಡಿಸಿರುವ ಬಟ್ಟೆ ಮಾಸ್ಕ್‌ ಹಾಕಿಕೊಳ್ಳಿ. ಶೇ 85.4 ಏರೋಸಾಲ್‌ಗಳನ್ನು
l ಮಾ
 ಸ್ಕ್‌ ಸರಿಯಾಗಿ ಮುಖಕ್ಕೆ ಹೊಂದಿ- ತಡೆಯುತ್ತದೆ.
ಕೊಳ್ಳಬೇಕಾದರೆ ಸರ್ಜಿಕಲ್‌ ಮಾಸ್ಕ್‌ ಗಮನಿಸಿ: ನೀವು ಮುಖಕ್ಕೆ
ಮೇಲೆ ಮಾಸ್ಕ್ ಫಿಟ್ಟರ್ ಅಥವಾ ನೈಲಾನ್ ಸರಿಯಾಗಿ ಹೊಂದಿಕೊಳ್ಳುವ
ಹೊದಿಕೆಯನ್ನು ಸಹ ಬಳಸಬಹುದು. ಎನ್‌-95 ಮಾಸ್ಕ್‌
l ಬ
ಟ್ಟೆ ಮಾಸ್ಕ್‌ ಮತ್ತು ಸರ್ಜಿಕಲ್‌ ಮಾಸ್ಕ್‌ ಧರಿಸುವುದಾದರೆ, ಅದು ಶೇ 95
ತುದಿಗಳಲ್ಲಿರುವ ದಾರಗಳನ್ನು ಸರಿಯಾಗಿ ಏರೋಸಾಲ್‌ಗಳನ್ನು ತಡೆಯುತ್ತದೆ.
ಬಿಗಿದು ಗಂಟು ಹಾಕಲಾಗಿದೆಯೇ ಎಂದು ಹಾಗಾಗಿ ಎನ್‌–95 ಮಾಸ್ಕ್‌
ಪರಿಶೀಲಿಸಿ. ಧರಿಸುವವರು, ಎರಡು ಮಾಸ್ಕ್
l ಎ
ರಡೆರಡು ಸರ್ಜಿಕಲ್‌ ಮಾಸ್ಕ್‌ ಧರಿಸುವ ಅಗತ್ಯವಿಲ್ಲ.
ಬಳಸುವುದು ಅಥವಾ ಎನ್‌–95 ಮಾಸ್ಕ್‌ ಮೂಲ: ರೋಗ ನಿಯಂತ್ರಣ
ಮೇಲೆ ಇನ್ನೊಂದು ಮಾಸ್ಕ್‌ (ಲೇಯರ್‌) ಮತ್ತು ತಡೆಗಟ್ಟುವಿಕೆ ಕೇಂದ್ರಗಳು
ಧರಿಸುವುದು ಮಾಡಬೇಡಿ. ಇದರಿಂದ (ಯುಎಸ್ಎ)
ಉಸಿರಾಟಕ್ಕೆ ತೊಂದರೆ ಆಗಬಹುದು.‌
ಪ್ರಜಾವಾಣಿ ಕೋವಿಡ್–19 ಕೈಪಿಡಿ 9
ಲಕ್ಷಣಗಳನ್ನು ಗಮನಿಸಿ
ಸಾಮಾನ್ಯ ಲಕ್ಷಣಗಳು

ಜ್ವರ ಒಣ ಕೆಮ್ಮು ಸುಸ್ತು/ಬಳಲಿಕೆ/ಆಯಾಸ

ಕೆಲವು ರೋಗಿಗಳಿಗೆ
ಹೀಗೂ ಲಕ್ಷಣಗಳಿರುತ್ತವೆ..
nರುಚಿ ಮತ್ತು ವಾಸನೆ ಗ್ರಹಿಕೆಯನ್ನು
ಕಳೆದುಕೊಳ್ಳುವುದು
nಮೂಗು ಕಟ್ಟುವುದು nಕಣ್ಣು ಉರಿ /
ಕಣ್ಣಿನ ನವೆ
nಗಂಟಲು ಕೆರೆತ nತಲೆ ನೋವು
n ಮೈಕೈ ನೋವು ಅಥವಾ ಸಂಧಿವಾತ
nಚರ್ಮದ ಮೇಲೆ ಬೊಬ್ಬೆ nವಾಂತಿ
nಭೇದಿ nತಲೆ ಸುತ್ತುವಿಕೆ nಕಿರಿಕಿರಿ
nಗೊಂದಲ nಏಕಾಗ್ರತೆ
ಕಡಿಮೆಯಾಗುವುದು (Reduced
consciousness),
nಆತಂಕ nಖಿನ್ನತೆ nನಿದ್ರಾಹೀನತೆ

ಮೂಲ: ಡಬ್ಲ್ಯುಎಚ್‌ಒ

ಪ್ರಜಾವಾಣಿ ಕೋವಿಡ್–19 ಕೈಪಿಡಿ 10


ತೀವ್ರ ಸೋಂಕಿನ
ಲಕ್ಷಣಗಳು
mಹಸಿವಾಗದಿರುವುದು

mಗೊಂದಲ

ಎದೆಯ ಮೇಲೆ ನಿರಂತರ ಒತ್ತಡ ಅಥವ


m
ನೋವು

ಈ ಮೇಲೆ ಹೇಳಿರುವ ಲಕ್ಷಣಗಳಿರುವವರು ವಯಸ್ಸಿನ


ಭೇದವಿಲ್ಲದೇ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.
ಸಾಧ್ಯವಾದರೆ, ವೈದ್ಯಕೀಯ ಸೌಲಭ್ಯ ನೀಡಿರುವವರನ್ನು ಸಂಪರ್ಕಿಸಿ,
ಸಹಾಯವಾಣಿಗೆ ಕರೆ ಮಾಡಿ. ನಿಮಗೆ ಸೂಕ್ತ ಆಸ್ಪತ್ರೆಯ ಬಗ್ಗೆ ಮಾಹಿತಿ
ದೊರೆಯುತ್ತದೆ.

ಭಾರತದಲ್ಲಿ ‘ಕೋವಿಡ್‌– 19‘ ಎರಡನೇ ಅಲೆ ರೋಗ


ಲಕ್ಷಣಗಳಿಲ್ಲದವರಿಗೆ ಹೊಸ ಸವಾಲುಗಳನ್ನು ಒಡ್ಡಿದೆ. ಕೊರೊನಾ
ವೈರಸ್‌ನ ಹೊಸ ತಳಿ(ಡಬಲ್‌ ಮ್ಯುಟೆಂಟ್ ಅಥವಾ ಬಿ.1.617)
ಯ ರಚನೆಯಲ್ಲಾಗಿರುವ ಬದಲಾವಣೆಯಿಂದಾಗಿ ಆರ್‌ಟಿ– ಪಿಸಿಆರ್‌
ಪರೀಕ್ಷೆಯಲ್ಲಿ ನೆಗೆಟಿವ್ ಬಂದ ವ್ಯಕ್ತಿಗೂ ಕೊರೊನಾ ಸೋಂಕಿರುವ
ಸಾಧ್ಯತೆ ಇದೆ ಎಂದು ಕೆಲವು ವೈದ್ಯರು ಹೇಳುತ್ತಿದ್ದಾರೆ. ಕೆಲವು
ತಜ್ಞರು ಇದನ್ನು ಸ್ಪಷ್ಟಪಡಿಸುತ್ತಾ, ಆರ್‌ಟಿ–ಪಿಸಿಆರ್ ಪರೀಕ್ಷೆ ಶೇ
75ರಷ್ಟುಮಾತ್ರ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ ಎಂದಿದ್ದಾರೆ.
ವೈರಸ್‌ ದೇಹದೊಳಗೆ ಮತ್ತಷ್ಟೂ ಆಳಕ್ಕೆ ಸೇರಿಕೊಳ್ಳುವುದರಿಂದ
‘ಸುಳ್ಳು–ನೆಗೆಟಿವ್‌’ ಫಲಿತಾಂಶ ನೀಡುತ್ತಿರಬಹುದು ಎಂದು ತಜ್ಞರು
ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಕೋವಿಡ್–19 ಕೈಪಿಡಿ 11


ತುರ್ತು ವೈದ್ಯಕೀಯ
ಸೌಲಭ್ಯ ಪಡೆಯಿರಿ
ಈ ಕೆಳಗಿನ ಲಕ್ಷಣಗಳು
ಕಾಣಿಸಿಕೊಂಡವರು..
l ಉ
 ಸಿರಾಟದ ತೊಂದರೆ
l ಎ
ದೆಯ ಮೇಲೆ ನಿರಂತರ ಒತ್ತಡ
ಅಥವ ನೋವು
l ಗೊಂ
 ದಲ
l ಎ
ಚ್ಚರಗೊಳ್ಳಲು ಅಥವಾ ಎಚ್ಚರ-
ವಾಗಿರಲು ಸಾಧ್ಯವಾಗದಿರುವುದು
l ಚ
ರ್ಮ, ತುಟಿಗಳು ಮತ್ತು ಉಗುರಿನ
ಬಣ್ಣ ಮಸುಕಾಗಿ, ಬೂದು ಅಥವಾ
ನೀಲಿ ಬಣ್ಣಕ್ಕೆ ತಿರುಗಿದಾಗ
l ಅ
ತಿ ಹೆಚ್ಚು ಜ್ವರ
l ಹ
ಸಿವಾಗದಿರುವುದು

ತೀವ್ರತರಹದ ರೋಗದಿಂದ ಬಳಲುತ್ತಿದ್ದು, ಹೆಚ್ಚು ಅಪಾಯ ಎದುರಿಸುತ್ತಿರುತ್ತಾರೆ.


ಇಂಥ ಲಕ್ಷಣ ಗೋಚರವಾಗಲು ಶುರುವಾದಾಗ ತಕ್ಷಣ ತಮ್ಮ ವೈದ್ಯರಿಗೆ ಕರೆ ಮಾಡಿ
ಅಥವಾ ಸಹಾಯವಾಣಿ 14410ಗೆ ಕರೆ ಮಾಡಿ.
ಮೂಲ: ಸಿಡಿಸಿ

ಪ್ರಜಾವಾಣಿ ಕೋವಿಡ್–19 ಕೈಪಿಡಿ 12


ಯಾರು ಪರೀಕ್ಷೆ

ಮಾಡಿಸಿಕೊಳ್ಳಬೇಕು?
ಕೋವಿಡ್‌–19 ಸೋಂಕಿನ ಲಕ್ಷಣಗಳಿರುವ ಪ್ರತಿಯೊಬ್ಬರೂ ಪರೀಕ್ಷೆ ಮಾಡಿ-
ಸಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದಿದ್ದರೂ, ಸೋಂಕಿನ ಲಕ್ಷಣಗಳಿರುವವರ ಜತೆಗೆ
ಅಥವಾ ಸೋಂಕು ದೃಢಪಟ್ಟವರ ಜತೆಗೆ ಸಮೀಪದ ಸಂಪರ್ಕಕ್ಕೆ ಒಳಗಾಗಿರುವವರು ಸಹ
ಪರೀಕ್ಷೆಗೆ ಒಳಗಾಗಬೇಕು. ಪರೀಕ್ಷೆಯ ಫಲಿತಾಂಶಕ್ಕೆ ಕಾಯುತ್ತಿರುವವರು ಕಡ್ಡಾಯವಾಗಿ
ಇತರರಿಂದ ಪ್ರತ್ಯೇಕವಾಗಿ ವಾಸ ಮಾಡಬೇಕು.

ಇತರ ತಪಾಸಣೆಗಳು
ಸಿಬಿಸಿ, ಸಿಆರ್‌ಪಿ, ಸಾಧ್ಯವಾದರೆ, ಅಗತ್ಯಕ್ಕೆ ಅನುಗುಣವಾಗಿ ಐದನೇ
ದಿನದಿಂದ 17ನೇ ದಿನದವರೆಗೆ, 48ರಿಂದ 96 ಗಂಟೆಗಳ ಅಂತರದಲ್ಲಿ
ಡಿ–ಡೈಮರ್‌. ಸಿಬಿಜಿ, ಸೀರಂ ಕ್ರಿಯೇಟಿನೈನ್‌, ಅಗತ್ಯಕ್ಕೆ ಅನುಗುಣವಾಗಿ
ಇಸಿಜಿ

ಸಿಆರ್‌ಪಿ ಪರೀಕ್ಷೆ
(ಪ್ರತಿಕ್ರಿಯಾತ್ಮಕ ಪ್ರೊಟೀನ್‌ ಪ್ರಮಾಣ ಮಿಲಿ ಗ್ರಾಂ/ಲೀ)

ಕಡಿಮೆ ಸಾಮಾನ್ಯ ಹೆಚ್ಚು ಅಪಾಯಕಾರಿ ಇತರ


1 3 10

ಪ್ರಜಾವಾಣಿ ಕೋವಿಡ್–19 ಕೈಪಿಡಿ 13


ಮನೆಯಲ್ಲಿ
ಏಕಾಂತವಾಸದ
ಸಂದರ್ಭದಲ್ಲಿ
l ನಿ
ಗದಿ ಮಾಡಲಾದ ಕೋಣೆಯಲ್ಲೇ ಕಡ್ಡಾಯವಾಗಿ ಇರಿ.
l ಸ
ದಾಕಾಲ ವೈದ್ಯಕೀಯ ಅಥವಾ ಎನ್‌–95 ಮಾಸ್ಕ್‌ ಧರಿಸಿ. ಎಂಟು ಗಂಟೆಗಳ
ಕಾಲ ಬಳಸಿದ ಮಾಸ್ಕ್ ಅನ್ನು ಎಸೆಯಬೇಕು ಅಥವಾ ಮರು ಬಳಕೆಗೂ ಮುನ್ನ
ಶುಚಿಗೊಳಿಸಬೇಕು. ಮಾಸ್ಕ್‌ ಒದ್ದೆಯಾದ ಅಥವಾ ಕೊಳೆಯಾದ ಕೂಡಲೇ
ಬದಲಿಸಬೇಕು ಅಥವಾ ಶುಚಿಗೊಳಿಸಬೇಕು.
l ಕ
 ೋಣೆಯಲ್ಲಿ ನೀವೊಬ್ಬರೇ ಇದ್ದರೆ ಮಾಸ್ಕ್‌ ಧರಿಸದೆಯೇ ವಿಶ್ರಾಂತಿ
ಪಡೆಯಬಹುದು. ಆದರೆ, ಯಾರಾದರೂ ಬರುತ್ತಿದ್ದಂತೆಯೇ ಕಡ್ಡಾಯವಾಗಿ
ಮಾಸ್ಕ್‌ ಧರಿಸಬೇಕು.
l ಕೆಮ್
 ಮು ಬಂದಾಗ ಅಥವಾ ಸೀನುವಾಗ ಟಿಶ್ಯೂ ಪೇಪರ್‌ ಅಥವಾ ಕರವಸ್ತ್ರದಿಂದ
ಮೂಗು ಮತ್ತು ಬಾಯಿಯನ್ನು ಮುಚ್ಚುವ ಮೂಲಕ ಶಿಷ್ಟಾಚಾರವನ್ನು ಪಾಲಿಸಿ.
ಬಳಸಿದ ಟಿಶ್ಯೂ ಪೇಪರ್‌ ಅನ್ನು ಮುಚ್ಚಳವಿರುವ ಕಸದಬುಟ್ಟಿಗೆ ಹಾಕಬೇಕು.
l ಮ
 ನೆಯಲ್ಲಿ ಯಾವಾಗಲೂ ಇತರರಿಂದ ಆರು ಅಡಿಗಳ ಅಂತರವನ್ನು
ಕಾಪಾಡಬೇಕು.
l ಸಾ
 ಬೂನು ಮತ್ತು ನೀರಿನಿಂದ ಆಗಾಗ ಕನಿಷ್ಠ 40 ಸೆಕೆಂಡ್‌ಗಳ ಕಾಲ
ಕೈತೊಳೆಯುತ್ತಿರಿ ಅಥವಾ ಆಲ್ಕೊಹಾಲ್‌ ಆಧಾರಿತ ಸ್ಯಾನಿಟೈಜರ್‌ ಬಳಸಿ.
l ಮ
 ನೆಯಲ್ಲಿರುವ ವಯೋವೃದ್ಧ ವ್ಯಕ್ತಿಗಳು ಅಥವಾ ಇತರ ಆರೋಗ್ಯ
ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ.
l ಮ
 ನೆಯ ಪ್ರತ್ಯೇಕ
ವಾಸದಿಂದ ಬಿಡುಗಡೆ
ಹೊಂದುವವರೆಗೂ
ಸಂದರ್ಶಕರನ್ನು
ಭೇಟಿಮಾಡಬೇಡಿ.
l ಸಾ
 ಕಷ್ಟು ವಿಶ್ರಾಂತಿ ಹಾಗೂ
ನಿದ್ದೆಯನ್ನು ಪಡೆಯಿರಿ.
l ವ
ೈಕ್ತಿಕ ವಸ್ತುಗಳನ್ನು ಇತರರ
ಜತೆ ಹಂಚಿಕೊಳ್ಳಬೇಡಿ.
l ವ
ೈದ್ಯರ ಸಲಹೆಗಳನ್ನು
ಕಟ್ಟುನಿಟ್ಟಾಗಿ ಪಾಲನೆ
ಮಾಡಿ.
ಪ್ರಜಾವಾಣಿ ಕೋವಿಡ್–19 ಕೈಪಿಡಿ 14
l ಡಿ
ಜಿಟಲ್‌ ಥರ್ಮಾಮೀಟರ್‌ ಬಳಸಿ ನಿಮ್ಮ ದೇಹದ ತಾಪಮಾನವನ್ನು (ಅದು ಕಂಕುಳಲ್ಲಿ
100.40ಕ್ಕಿಂತ ಕಡಿಮೆ ಇರಬೇಕು) ಮತ್ತು ಪಲ್ಸ್‌ ಆಕ್ಸಿಮೀಟರ್‌ ಸಹಾಯದಿಂದ
ಆಮ್ಲಜನಕದ ಪ್ರಮಾಣವನ್ನು ದಿನಕ್ಕೆ ಮೂರು ಬಾರಿ ಪರಿಶೀಲಿಸುತ್ತಿರಿ. (ಅದು ಶೇ 95ಕ್ಕೂ
ಹೆಚ್ಚು ಇರಬೇಕು) ನಾಡಿ ಹಾಗೂ ರಕ್ಷದೊತ್ತಡವನ್ನೂ ಪರೀಕ್ಷಿಸಿಕೊಳ್ಳಿ
l ಸಾ
 ಕಷ್ಟು ನೀರನ್ನುಕುಡಿಯಿರಿ
l ಸ
ಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವಿಸಿ
l ಆ
ಹಾರ ಸೇವನೆಗೆ ನಿಮಗಾಗಿ ಪ್ರತ್ಯೇಕ ಪಾತ್ರೆಗಳನ್ನು ಬಳಸಿ ಮತ್ತು ನಿಮ್ಮ ಕೊಠಡಿಯಲ್ಲೇ
ಆಹಾರ ಸೇವಿಸಿ
l ಧೂ
 ಮಪಾನ, ತಂಬಾಕು ಜಗಿಯುವುದು ಹಾಗೂ ಮದ್ಯಸೇವನೆಯನ್ನು ಕಡ್ಡಾಯವಾಗಿ
ತ್ಯಜಿಸಿ
l ಅ
ಗತ್ಯವೆನಿಸಿದಾಗ ಆಪ್ತ ಸಮಾಲೋಚನಾ ಸೇವೆಯನ್ನು ಪಡೆದುಕೊಳ್ಳಿ
l ನಿ
ಮ್ಮ ಕೊಠಡಿಯಲ್ಲಿ ಆಗಾಗ ಮುಟ್ಟುವ ವಸ್ತುಗಳನ್ನು ಶೇ 7ರಷ್ಟು ಸೋಂಕು ನಿವಾರಕವಿರುವ
ಅಥವಾ ಶೇ 1ರಷ್ಟು ಸೋಡಿಯಂ ಹೈಪೊಕ್ಲೋರೈಟ್‌ ಇರುವ ದ್ರಾವಣ ಬಳಸಿ ಆಗಾಗ ಸ್ವ-
ಚ್ಛಮಾಡುತ್ತಿರಿ. ಈ ದ್ರಾವಣಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ
l ಮಾ
 ಸ್ಕ್‌, ಕೈಗವಸು, ಟಿಶ್ಯೂ ಪೇಪರ್ ಮುಂತಾಗಿ ಏಕಾಂತವಾಸದ ಸಂದರ್ಭದಲ್ಲಿ
ಬಳಸಿ ಬಿಸಾಡಿದ ತ್ಯಾಜ್ಯಗಳನ್ನು ಕನಿಷ್ಠ 30 ನಿಮಿಷಗಳ ಕಾಲ ಶೇ 1ರಷ್ಟು ಸೋಡಿಯಂ
ಹೈಪೊಕ್ಲೋರೈಟ್‌ ಹೊಂದಿರುವ ದ್ರಾವಣದಲ್ಲಿ ನೆನೆಸಿಟ್ಟು, ಪ್ರತ್ಯೇಕವಾಗಿ ವಿಲೇವಾರಿ
ಮಾಡಬೇಕು
l ಸ್ನಾ
 ನದ ಕೊಠಡಿ, ನೀವು ಮುಟ್ಟಿದ ವಸ್ತುಗಳು ಹಾಗೂ ಶೌಚಾಲಯವನ್ನು ಕನಿಷ್ಠ
ದಿನಕ್ಕೊಂದುಬಾರಿ ಶುಚಿಗೊಳಿಸಿ
l ಶು
ಚಿಗೊಳಿಸಲು ಮೊದಲು ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಸಾಬೂನು ಅಥವಾ
ಇತರ ವಸ್ತುವನ್ನು ಬಳಸಬೇಕು. ಆನಂತರ ಶೇ 1ರಷ್ಟು ಸೋಡಿಯಂ ಹೈಪೋಕ್ಲೋರೈಟ್‌
ಇರುವ ದ್ರಾವಣದಿಂದ ಶುಚಿಗೊಳಿಸಬೇಕು
l ಆ
ರೋಗ್ಯಸೇತು, ಕ್ವಾರಂಟೈನ್‌ ವಾಚ್‌ ಹಾಗೂ ಆಪ್ತಮಿತ್ರ ಆ್ಯಪ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ
ಡೌನ್‌ಲೋಡ್‌ ಮಾಡಿಕೊಳ್ಳಿ. (https://covid19.karnataka.gov.in/new-page/
softwares/en ನಿಂದ ಡೌನ್‌ಲೋಡ್‌ ಮಾಡಬಹುದು) ಅವು ಯಾವತ್ತೂ ಸಕ್ರಿಯವಾಗಿ-
ರುವಂತೆ ನೋಡಿಕೊಳ್ಳಿ
l ದೂ
 ರವಾಣಿ ಮೂಲಕ ಪರಿಶೀಲನಾ ಕರೆಗಳಿಗೆ ಸಮರ್ಪಕವಾಗಿ ಉತ್ತರಿಸಿ
l ನಿ
ಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಪ್ರತಿನಿತ್ಯ ವೈದ್ಯರು ಅಥವಾ ಸಂಬಂಧಪಟ್ಟ ಆರೋಗ್ಯ
ಸೇವಾಕರ್ತರಿಗೆ ಮಾಹಿತಿ ನೀಡುತ್ತಿರಿ
l ವ
ೈದ್ಯಾಧಿಕಾರಿಗಳು, ನಿಮಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಆಂಬುಲೆನ್ಸ್ ಸೇವಾ ಸಂಸ್ಥೆಯ
ದೂರವಾಣಿ ಸಂಖ್ಯೆಯನ್ನು ಬೇಕಾದಾಗ ಲಭ್ಯವಾಗುವಂತೆ ಬರೆದಿಟ್ಟುಕೊಳ್ಳಿ
l ಸ
 ೋಂಕಿನಲಕ್ಷಣಕಾಣಿಸಿದದಿನದಿಂದ(ರೋಗಲಕ್ಷಣಗಳಿಲ್ಲದವ್ಯಕ್ತಿಯಾದರೆಮಾದರಿಯನ್ನು
ಪರೀಕ್ಷೆಗಾಗಿ ನೀಡಿದ ದಿನದಿಂದ) 17 ದಿನಗಳ ನಂತರ ಸೋಂಕಿನ ಲಕ್ಷಣಗಳು ವಾಸಿಯಾ-
ಗಿದ್ದಲ್ಲಿ ಅಥವಾ ಮೂರು ದಿನಗಳ ಕಾಲ ಜ್ವರ ಬಾರದಿದ್ದಲ್ಲಿ ಮತ್ತು ನೆಗೆಟಿವ್ ವರದಿ ಬಂದಲ್ಲಿ
ಪ್ರತ್ಯೇಕವಾಸವನ್ನು ಕೊನೆಗೊಳಿಸಬಹುದು
ಮಾಹಿತಿ: ಕರ್ನಾಟಕ ಸರ್ಕಾರ

ಪ್ರಜಾವಾಣಿ ಕೋವಿಡ್–19 ಕೈಪಿಡಿ 15


ಮನೆಯಲ್ಲೇ ಕೋವಿಡ್‌
ರೋಗಿಗಳ ಆರೈಕೆ
l ಸ
 ೋಂಕಿತರ ಓಡಾಟವವನ್ನು ಮನೆಯ ಬಳಸಬಹುದು. ಕೈಗಳಲ್ಲಿ ಕೊಳೆ ಇದ್ದರೆ
ಆವರಣಕ್ಕೆ ಸೀಮಿತಗೊಳಿಸಿ. ಒಂದೇ ಯಾವತ್ತೂ ಸಾಬೂನು ಮತ್ತು ನೀರನ್ನು
ಜಾಗ ಹಂಚಿಕೊಳ್ಳುವುದನ್ನು ಆದಷ್ಟು ಬಳಸಿ ಕೈ ತೊಳೆಯಬೇಕು
ಕಡಿಮೆಗೊಳಿಸಿ l ರೋಗಿಗೆ ವೈದ್ಯಕೀಯ ಮಾಸ್ಕ್‌ ಅನ್ನು
l ರ
 ೋಗಿಯು ಇರುವ ಕೊಠಡಿಯೊಳಗೆ ಒದಗಿಸಬೇಕು. ಎಷ್ಟು ಸಾಧ್ಯವೋ
ಮನೆಯ ಇತರ ಸದಸ್ಯರು ಪ್ರವೇಶಿಸುವು- ಅಷ್ಟು ಹೊತ್ತು ರೋಗಿಯು ಅದನ್ನು
ದನ್ನು ತಪ್ಪಿಸಬೇಕು. ಅಥವಾ ಅದು ಸಾಧ್ಯ- ಧರಿಸಬೇಕು. ಪ್ರತಿನಿತ್ಯ ಮತ್ತು ಒದ್ದೆ ಅಥವಾ
ವಾಗದಿದ್ದಲ್ಲಿ ರೋಗಿಯಿಂದ ಕನಿಷ್ಠ 6 ಅಡಿ ಕೊಳೆಯಾದರೆ ಅದನ್ನು ಬದಲಿಸಬೇಕು
ದೂರವನ್ನು ಕಾಯ್ದುಕೊಳ್ಳಬೇಕು l ಬಾ
 ಯಿ ಮತ್ತು ಮೂಗನ್ನು ಮುಚ್ಚಲು
l ರ
 ೋಗಿಯ ಆರೈಕೆ ಮಾಡುವವರ ಬಳಸಿದ ವಸ್ತುಗಳನ್ನು ಸರಿಯಾಗಿ ವಿಲೇವಾರಿ
ಸಂಖ್ಯೆಯನ್ನು ಮಿತಿಗೊಳಿಸಿ ಅಥವಾ ಬಳಕೆಯ ನಂತರ ಸರಿಯಾಗಿ
ಆರೋಗ್ಯವಂತರಾಗಿರುವ ಮತ್ತು ಶುಚಿಗೊಳಿಸಬೇಕು
ಯಾವುದೇ ದೀರ್ಘಕಾಲದ l ರ
 ೋಗಿಯ ಆರೈಕೆ ಮಾಡುವವರು
ಕಾಯಿಲೆಗಳಿಲ್ಲದ ವ್ಯಕ್ತಿಯನ್ನು ಆರೈಕೆಗೆ ರೋಗಿಯ ಕೊಠಡಿಯೊಳಗೆ
ನಿಯೋಜಿಸುವುದು ಸೂಕ್ತ ಪ್ರವೇಶಿಸುವಾಗ ವೈದ್ಯಕೀಯ ಮಾಸ್ಕ್‌
l ವ
್ಯಕ್ತಿಯು ಸಂಪೂರ್ಣವಾಗಿ ಮೂಲಕ ಮೂಗು ಮತ್ತು ಬಾಯಿಯನ್ನು
ಗುಣಮುಖವಾಗಿ, ಮನೆಯ ಪ್ರತ್ಯೇಕ- ಸರಿಯಾಗಿ ಮುಚ್ಚಿರಬೇಕು. ಮಾಸ್ಕ್‌ ಕೊಳೆ
ವಾಸದಿಂದ ಬಿಡುಗಡೆಯಾಗುವವರೆಗೆ ಅಥವಾ ಒದ್ದೆಯಾಗಿದ್ದರೆ ಕೂಡಲೇ ಅದನ್ನು
ಮನೆಗೆ ಯಾವುದೇ ಅತಿಥಿಯನ್ನು ಬರಲು ಬದಲಿಸಿ, ಒಣಗಿದ ಮತ್ತು ಸ್ವಚ್ಛವಾಗಿ-
ಬಿಡಬೇಡಿ ರುವ ಮಾಸ್ಕ್‌ ಧರಿಸಬೇಕು. ಮಾಸ್ಕ್‌ನ
l ಕ
ೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಮುಂಭಾಗವನ್ನು ಮುಟ್ಟದೆಯೇ ಸರಿಯಾದ
ಕೈಗಳು ಕೊಳೆಯಾಗಿರದಿದ್ದಲ್ಲಿ ಆಲ್ಕೋಹಾಲ್ ವಿಧಾನದಲ್ಲಿ ಮಾಸ್ಕ್‌ ಅನ್ನು ತೆಗೆಯಬೇಕು
ಆಧಾರಿತ ಹ್ಯಾಂಡ್ ರಬ್ ಅನ್ನು

ಪ್ರಜಾವಾಣಿ ಕೋವಿಡ್–19 ಕೈಪಿಡಿ 16


l ರ
 ೋಗಿಯ ದೇಹದ ದ್ರವಗಳು, ವಿಶೇಷವಾಗಿ ಇವುಗಳನ್ನು ಬಳಸಿದ ನಂತರ ಸಾಬೂನು
ಬಾಯಿ ಅಥವಾ ಉಸಿರಾಟದ ಸ್ರವಿಸುವಿಕೆ ಮತ್ತು ನೀರಿನಿಂದ ಸ್ವಚ್ಛಗೊಳಿಸಬೇಕು.
ಮತ್ತು ಮಲದೊಂದಿಗೆ ನೇರ ಸಂಪರ್ಕವನ್ನು ಹೀಗೆ ಬಳಸಿದ ವಸ್ತುಗಳನ್ನು ಎಸೆಯುವ
ತಪ್ಪಿಸಿ. ಎಲ್ಲಾ ಸಮಯದಲ್ಲೂ ಬಳಸಿ ಬದಲು, ಸ್ವಚ್ಛಗೊಳಿಸಿ ಮರು ಬಳಕೆ
ಎಸೆಯಬಹದಾದ ಕೈಗವಸು ಮತ್ತು ಮಾಸ್ಕ್‌ ಮಾಡಬಹುದು
ಬಳಸಿ l ಕೊ
 ಳೆಯಾದ ಬಟ್ಟೆಗಳನ್ನು ಪ್ರತ್ಯೇಕ
l ಮ
 ರುಬಳಕೆ ಮಾಡಲು ಬ್ಯಾಗ್‌ನಲ್ಲಿಡಿ. ಅವುಗಳನ್ನು ಹೆಚ್ಚು
ಯೋಗ್ಯವಾದವುಗಳನ್ನು ಹೊರತುಪಡಿಸಿ, ಅಲುಗಾಡಿಸಬೇಡಿ. ಇತರ ವಸ್ತುಗಳು
ಇತರ ವೈದ್ಯಕೀಯ ಮಾಸ್ಕ್‌ ಅಥವಾ ಹಾಗೂ ಬೇರೆಯವರ ಚರ್ಮ ಮತ್ತು
ಕೈಗವಸುಗಳನ್ನು ಮರುಬಳಕೆ ಮಾಡಬೇಡಿ ಬಟ್ಟೆಯ ಜತೆಗೆ ಅವು ಸಂಪರ್ಕಕ್ಕೆ
l ರ
 ೋಗಿಯು ಇರುವ ಕೊಠಡಿಯಲ್ಲಿ ಬರುವುದನ್ನು ತಪ್ಪಿಸಿ
ಅವರು ಆಗಾಗ ಮುಟ್ಟುವ ವಸ್ತು ಅಥವಾ l ರ
 ೋಗಿಗಳು ಧರಿಸಿದ ಬಟ್ಟೆ, ಹೊದಿಕೆ,
ಜಾಗ, ಅವರು ಬಳಸುವ ಸ್ನಾನದಕೊಠಡಿ ಮೈ ಒರೆಸುವ ಬಟ್ಟೆ ಮುಂತಾದವುಗಳನ್ನು
ಶೌಚಾಲಯವನ್ನು ಕನಿಷ್ಠ ದಿನಕ್ಕೊಂದು ಸಾಮಾನ್ಯವಾಗಿ ಬಟ್ಟೆ ಒಗೆಯಲು ಬಳಸುವ
ಬಾರಿಯಾದರೂ ಸ್ವಚ್ಛ ಹಾಗೂ ಸೋಂಕು ಸಾಬೂನು ಅಥವಾ ಡಿಟರ್ಜೆಂಟ್‌ ಮತ್ತು
ಮುಕ್ತಗೊಳಿಸಿ. ಮೊದಲ ಹಂತದ ನೀರು ಬಳಸಿ ಶುಚಿಗೊಳಿಸಿ

ಶುಚಿತ್ವಕ್ಕೆ ದೈನಂದಿನ ಸಾಬೂನು ಅಥವಾ l ಕ


 ೋವಿಡ್‌ ರೋಗಿಗೆ ಚಿಕಿತ್ಸೆ ನೀಡುತ್ತಿದ್ದ
ಇತರ ವಸ್ತುಗಳನ್ನು ಬಳಸಬಹುದು. ಸಂದರ್ಭದಲ್ಲಿ ಮನೆಯಲ್ಲಿ ಉತ್ಪತ್ತಿಯಾಗಿ-
ಅದಾದನಂತರ ಶೇ 0.1ರಷ್ಟು ಸೋಡಿಯಂ ರುವ ತ್ಯಾಜ್ಯಗಳನ್ನು ಗಟ್ಟಿಯಾದ ಚೀಲದಲ್ಲಿ
ಹೈಪೊಕ್ಲೋರೈಟ್‌ ನಿಂದ (ಅಂದರೆ 1000 ತುಂಬಿ, ಬಿಗಿಯಾಗಿ ಅದನ್ನು ಮುಚ್ಚಿ
ಪಿಪಿಎಂಗೆ ಸಮನಾದಷ್ಟು) ಒರೆಸಿ ಸ್ವಚ್ಛಗೊ- ವಿಲೇವಾರಿ ಮಾಡಬೇಕು. ಕಸ ಸಂಗ್ರಹಿಸು-
ಳಿಸಬೇಕು. ವವರಿಗೆ ಆ ಕುರಿತು ಮಾಹಿತಿ ನೀಡಿಯೇ
l ರ
 ೋಗಿಗಳಿಗೆ ಪ್ರತ್ಯೇಕ ಬಟ್ಟೆಬರೆ ಹಾಗೂ ವಿಲೇವಾರಿ ಮಾಡಬೇಕು.
ಊಟಕ್ಕೆ ಪ್ರತ್ಯೇಕವಾದ ಪಾತ್ರೆಗಳನ್ನು ಬಳಸಿ.

ಪ್ರಜಾವಾಣಿ ಕೋವಿಡ್–19 ಕೈಪಿಡಿ 17


ಕೋವಿಡ್‌ ರೋಗಿಯ
ನಿರ್ವಹಣೆ ಹೇಗೆ?
ಅವರ
ಕಾಯಿಲೆಗೆ
ಸಾಕುಪ್ರಾಣಿಗಳನ್ನು
ಒಳಗಾಗಿರುವ ತುರ್ತು ಸಂದರ್ಭವಲ್ಲಿ
ನೋಡಿಕೊಳ್ಳಿ.
ವ್ಯಕ್ತಿಗೆ ಸಹಾಯ ಮಾಡಿ. ಲಭ್ಯವಾಗುವಂತೆ
ಸಾಕುಪ್ರಾಣಿ ಮತ್ತು
ಆರೈಕೆ ಹಾಗೂ ಔಷಧಗಳ ಅವರ ವೈದ್ಯರ ದೂರವಾಣಿ
ರೋಗಿಯ ಮಧ್ಯೆ
ವಿಚಾರವಾಗಿ ಅವರ ವೈದ್ಯರು ಸಂಖ್ಯೆಯನ್ನು
ಸಂಪರ್ಕವನ್ನು
ನೀಡಿರುವ ಸಲಹೆಗಳನ್ನು ಬರೆದಿಟ್ಟುಕೊಳ್ಳಿ
ಸಾಧ್ಯವಾದಷ್ಟು
ಪಾಲಿಸಿ
ಮಿತಿಗೊಳಿಸಿ

ಹೆಚ್ಚಿನ
ವ್ಯಕ್ತಿಗಳಲ್ಲಿ ರೋಗ
ದೇಹದ ಉಷ್ಣಾಂಶ
ಲಕ್ಷಣಗಳು ಕೆಲವು
ಹಾಗೂ ಆಮ್ಲಜನಕದ
ದಿನಗಳ ಕಾಲ ಮಾತ್ರ
ಪ್ರಮಾಣವನ್ನು ಗಮನಿಸುತ್ತಿರಿ
ಕಾಣಿಸುತ್ತವೆ. ಒಂದು ವಾರದ
(ಬೆರಳ ತುದಿಗೆ ಆಕ್ಸಿ ಮೀಟರ್‌
ನಂತರ ಹೆಚ್ಚಿನವರ
ಹಾಕುವ ಮೂಲಕ)
ಆರೋಗ್ಯದಲ್ಲಿ ಚೇತರಿಕೆ
ಕಾಣಿಸುತ್ತದೆ

ಅನಾರೋಗ್ಯದಿಂದ
ಬಳಲುತ್ತಿರುವ ಆರೈಕೆ ಮಾಡುವವರು
ವ್ಯಕ್ತಿಯು ಹೆಚ್ಚುಹೆಚ್ಚು ಮನೆಯಲ್ಲೇ ಇದ್ದು,
ದ್ರವಾಹಾರ ಸೇವಿಸುವುದನ್ನು ರೋಗಿಯ ಕೋವಿಡ್‌–19
ಮತ್ತು ಹೆಚ್ಚು ವಿಶ್ರಾಂತಿ ರೋಗ ಲಕ್ಷಣಗಳ ಬಗ್ಗೆ
ಪಡೆಯುವುದನ್ನು ನಿಗಾ ವಹಿಸುತ್ತಿರಬೇಕು
ಖಚಿತಪಡಿಸಿಕೊಳ್ಳಿ

ರೋಗದ ಸರಿಯಾದ
ಅಪಾಯಕಾರಿ ವೈದ್ಯಕೀಯ
ಲಕ್ಷಣಗಳ ಬಗ್ಗೆ ಆರೈಕೆಯನ್ನು
ಎಚ್ಚರವಿರಲಿ ಪಡೆಯಿರಿ

ಪ್ರಜಾವಾಣಿ ಕೋವಿಡ್–19 ಕೈಪಿಡಿ 18


ಪಲ್ಸ್ ಆಕ್ಸಿಮೀಟರ್
ಬಳಕೆ ಹೇಗೆ?
l ಉಗುರಿಗೆ ಹಚ್ಚಿರುವ ಬಣ್ಣವನ್ನು, ಕೃತಕ ಉಗುರುಗಳನ್ನು ತೆಗೆಯಿರಿ. ನಿಮ್ಮ
ಕೈ ತಣ್ಣಗಿದ್ದರೆ, ತುಸು ಬೆಚ್ಚಗೆ ಮಾಡಿಕೊಳ್ಳಿ

l ಮಾಪನಕ್ಕೆ ಮುನ್ನ ಐದು ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ

l ಆಕ್ಸಿಮೀಟರ್‌ ಅನ್ನು ಚಾಲನೆಗೊಳಿಸಿ, ತೋರುಬೆರಳು ಅಥವಾ ಮಧ್ಯದ


ಬೆರಳಿಗೆ ಇಟ್ಟುಕೊಳ್ಳಿ

l ಗುಣಾಂಕ (ರೀಡಿಂಗ್) ಸ್ಥಿರವಾಗಲು ಸಮಯ ಬೇಕು. ಒಂದು ನಿಮಿಷ


ಅಥವಾ ಅದಕ್ಕಿಂತ ಹೆಚ್ಚು ಕಾಲ ಆಕ್ಸಿಮೀಟರ್‌ ಕದಲಿಸಬೇಡಿ

l ಐದು ಸೆಕೆಂಡ್‌ಗಳ ಕಾಲ ಸ್ಥಿರವಾಗಿ ನಿಲ್ಲುವ ಗರಿಷ್ಠ ಸಂಖ್ಯೆಯನ್ನು ದಾಖಲಿಸಿ-


ಕೊಳ್ಳಿ

l ಎಲ್ಲ ಗುಣಾಂಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ

l ಬೇಸ್‌ಲೈನ್‌ನಿಂದ ಮಾಪನ ದಾಖಲಿಸಲು ಆರಂಭಿಸಿ. ಪ್ರತಿದಿನ ಮೂರು


ಬಾರಿ ನಿಗದಿತ ಸಮಯಕ್ಕೆ ಪರೀಕ್ಷಿಸಿಕೊಳ್ಳಿ

l ಉಸಿರಾಡಲು ಕಷ್ಟವಾದಲ್ಲಿ, ಆಮ್ಲಜನಕದ ಪ್ರಮಾಣ ಶೇ 92 ಹಾಗೂ


ಅದಕ್ಕಿಂತ ಕಡಿಮೆಯಾದಲ್ಲಿ, ಗಂಭೀರ ಅನಾರೋಗ್ಯ ಉಂಟಾದಲ್ಲಿ ತಕ್ಷಣ
ವೈದ್ಯಕೀಯ ನೆರವು ಪಡೆಯಿರಿ

ಪ್ರಜಾವಾಣಿ ಕೋವಿಡ್–19 ಕೈಪಿಡಿ 19


ಸರಾಗವಾಗಿ
ಉಸಿರಾಡಲು ಪ್ರೋನಿಂಗ್
ಪ್ರೋನಿಂಗ್ ಎಂಬುದು ವೈದ್ಯಕೀಯವಾಗಿ ಒಪ್ಪಿತವಾಗಿರುವ ಒಂದು ಭಂಗಿ. ಹೊಟ್ಟೆ
ನೆಲಕ್ಕೆ ತಾಗುವಂತೆ ಮಲಗಿ ಉಸಿರಾಡಬೇಕು. ಹೀಗೆ ಮಾಡುವುದರಿಂದ ಆಮ್ಲಜನಕದ
ಪ್ರಮಾಣ ಹೆಚ್ಚಾಗಿ, ಉಸಿರಾಟವು ಸರಾಗವಾಗುತ್ತದೆ
ನೀವು ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿದ್ದು, ಉಸಿರಾಡಲು ಕಷ್ಟವಾಗುತ್ತಿದ್ದಲ್ಲಿ ಹೀಗೆ ಮಾಡಿ:
l ನಿಮ್ಮ ಹೊಟ್ಟೆಯನ್ನು ಕೆಳಗೆ ಮಾಡಿ ಮಲಗಿ
l ಕುತ್ತಿಗೆಯ ಕೆಳಗಡೆ ಒಂದು ದಿಂಬು ಇರಿಸಿ
l ಎದೆಗಿಂತ ಕೆಳಭಾಗದಲ್ಲಿ ಮತ್ತು ತೊಡೆಯ ಮೇಲ್ಭಾಗದಲ್ಲಿ ಒಂದೆರಡು ದಿಂಬು ಇರಿಸಿ
l ಮೊಣಕಾಲಿಗಿಂತ ಕೆಳಗಿನ ಭಾಗದಲ್ಲಿ ಎರಡು ದಿಂಬು ಇರಿಸಿ
l ಪ್ರತಿ 30 ನಿಮಿಷದಿಂದ 2 ಗಂಟೆವರೆಗೆ ಭಂಗಿಯನ್ನು ಬದಲಿಸುತ್ತಿದ್ದರೆ ದೇಹದ ಎಲ್ಲ ಭಾಗಗಳಿಗೆ ಆಮ್ಲಜಕನದ ಪೂರೈಕೆ
ಹೆಚ್ಚುತ್ತದೆ
l ನಿಮ್ಮ ಬಲಭಾಗಕ್ಕೆ ತಿರುಗಿಕೊಳ್ಳಿ
l ನಿಮ್ಮ ಎಡಭಾಗಕ್ಕೆ ತಿರುಗಿಕೊಳ್ಳಿ
l ಪುನಃ ನಿಮ್ಮೆ ಹೊಟ್ಟೆಯ ಮೇಲೆ ಮಲಗುವ ಆಸನಕ್ಕೆ ಮರಳಿ
l ನಂತರ ಸ್ವಲ್ಪ ಹೊತ್ತು ಕುಳಿತುಕೊಳ್ಳಿ
l ಒಂದು ದಿನದಲ್ಲಿ ನೀವು 16 ಗಂಟೆವರೆಗೂ ಪ್ರೋನಿಂಗ್ ಮಾಡಬಹುದು
l ದೇಹದ ಯಾವುದಾದರೂ ಭಾಗದ ಮೇಲೆ ಒತ್ತಡ ಉಂಟಾದಲ್ಲಿ ದಿಂಬುಗಳ ಸ್ಥಳವನ್ನು ಕೊಂಚ ಬದಲಿಸಬಹುದು

30 ನಿಮಿಷದಿಂದ 2 ಗಂಟೆ: ನಿಮ್ಮ ಹೊಟ್ಟೆಯನ್ನು ಕೆಳಮಾಡಿ ಮಲಗಿ


ಯಾವಾಗ
ಪ್ರೋನಿಂಗ್
ಮಾಡಬಾರದು?
30 ನಿಮಿಷದಿಂದ 2 ಗಂಟೆ:ನಿಮ್ಮ ಬಲಭಾಗಕ್ಕೆ ತಿರುಗಿ ಮಲಗಿ
l ಊಟ ಮಾಡಿ ಒಂದು
ಗಂಟೆಯ ಒಳಗೆ
l ಗಂಭೀರ ಹೃದಯದ
ಸಮಸ್ಯೆ ಇದ್ದಾಗ
l ಕಾಲಿನ ಮೂಳೆ
30 ನಿಮಿಷದಿಂದ 2 ಗಂಟೆ: ಕುಳಿತುಕೊಳ್ಳಿ ಮುರಿತದ ಸಮಸ್ಯೆ
ಇದ್ದಾಗ
l ಗರ್ಭಿಣಿ ಆಗಿದ್ದಾಗ

30 ನಿಮಿಷದಿಂದ 2 ಗಂಟೆ:ನಿಮ್ಮ ಎಡಭಾಗಕ್ಕೆ ತಿರುಗಿ ಮಲಗಿ


ಆಧಾರ: ಭಾರತ ಸರ್ಕಾರದ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಮೊದಲ ಭಂಗಿಗೆ ಮರಳಿ: ನಿಮ್ಮ ಹೊಟ್ಟೆಯನ್ನು ಕೆಳಮಾಡಿ ಮಲಗಿ


ಪ್ರಜಾವಾಣಿ ಕೋವಿಡ್–19 ಕೈಪಿಡಿ 20
ಕ�ೋವಿಡ್ ನಂತರದ
ಮುಂಜಾಗ್ರತೆಗಳು
ನಿಯಮಾವಳಿಗಳು
n ಕೋ
 ವಿಡ್ ತಡೆ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಅಂತರ ಕಾಯ್ದುಕೊಳ್ಳು-
ವಿಕೆ, ಸ್ವಚ್ಛತೆ ಕಾಪಾಡಿಕೊಳ್ಳಬೇಕು
n ಬೆಚ್ಚಗಿನ ನೀರು ಕುಡಿಯಿರಿ
n ಆ
ರೋಗ್ಯ ಸರಿಯಿದ್ದಲ್ಲಿ, ದೈನಂದಿನ ಮನೆಗೆಲಸಗಳನ್ನು ಮುಂದುವರಿಸಿ.
ವೃತ್ತಿಗೆ ಸಂಬಂಧಿಸಿದ ಕೆಲಸವನ್ನು ಹಂತ ಹಂತವಾಗಿ ಆರಂಭಿಸಿ
n ಆ
ರೋಗ್ಯ ಸರಿಯಿದ್ದಲ್ಲಿ, ಲಘು ವ್ಯಾಯಾಮ ಹಾಗೂ ಪ್ರಾಣಾಯಾಮ ಮಾಡಿ.
ಚಿಕಿತ್ಸೆ ನೀಡುತ್ತಿರುವ ನಿಮ್ಮ ವೈದ್ಯರು ಸಲಹೆ ನೀಡಿದಲ್ಲಿ, ಉಸಿರಾಟದ
ವ್ಯಾಯಾಮ ಮಾಡಿ. ಬೆಳಗಿನ ಹಾಗೂ ಸಂಜೆಯ ನಡಿಗೆಯನ್ನು ನಿಮಗೆ
ಆರಾಮದಾಯಕ ಎನಿಸುವ ವೇಗದಲ್ಲಿ ಮುಂದುವರಿಸಿ
n ಸ
ಮತೋಲಿತ ಪೌಷ್ಠಿಕ ಆಹಾರ ಸೇವಿಸಿ. ಸುಲಭವಾಗಿ ಜೀರ್ಣವಾಗಬಹು-
ದಾದ ತಾಜಾ ಆಹಾರಕ್ಕೆ ಆದ್ಯತೆ ನೀಡಿ
n ಸಾ
 ಕಷ್ಟು ನಿದ್ದೆ ಮಾಡಿ ವಿಶ್ರಾಂತಿ ಪಡೆಯಿರಿ. ಮದ್ಯಪಾನ,
ಧೂಮಪಾನದಿಂದ ದೂರವಿರಿ
n ವ
ೈದ್ಯರ ಸಲಹೆಯಂತೆ ಔಷಧ ತೆಗೆದುಕೊಳ್ಳಿ. ಸೂಚಿತ ಔಷಧ ಅಲಭ್ಯವಿದ್ದು,
ಬದಲಿ ಔಷಧ ತೆಗೆದುಕೊಳ್ಳಬೇಕಿದ್ದರೆ ಆ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿ
n ವ
ೈದ್ಯರು ಸಲಹೆ ನೀಡಿದ್ದಲ್ಲಿ, ರಕ್ತದೊತ್ತಡ, ಮಧುಮೇಹ, ಪಲ್ಸ್
ಆಕ್ಸಿಮೀಟರ್ ಮೊದಲಾದ ಪರೀಕ್ಷೆಗಳನ್ನು ಮನೆಯಲ್ಲಿ ಮಾಡಿ, ಆರೋಗ್ಯದ
ಮೇಲೆ ಸ್ವಯಂ ನಿಗಾ ಇಡಿ
n ಒ
ಣಕೆಮ್ಮು, ಗಂಟಲು ಕೆರೆತ ಇದ್ದಲ್ಲಿ ಬಿಸಿ ನೀರಿಗೆ ಉಪ್ಪು ಸೇರಿಸಿ ಬಾಯಿ
ಮುಕ್ಕಳಿಸಿ. ಹಬೆ ತೆಗೆದುಕೊಳ್ಳಿ. ಗಿಡಮೂಲಿಕೆಯುಕ್ತ ಹಬೆ ಸೇವಿಸಬೇಕಿದ್ದರೆ,
ಔಷಧಯುಕ್ತ ನೀರಿನಿಂದ ಬಾಯಿ ಮುಕ್ಕಳಿಸಬೇಕಿದ್ದರೆ, ಕೆಮ್ಮು ನಿವಾರಣೆ
ಔಷಧ ಪಡೆಯಬೇಕಿದ್ದರೆ ವೈದ್ಯರ ಸಲಹೆ ಪಡೆಯಿರಿ
n ಅ
ತಿ ಜ್ವರ, ಉಸಿರಾಟದ ಸಮಸ್ಯೆ, ಎಸ್‌ಪಿ 02<95%, ಎದೆ ನೋವು,
ಗೊಂದಲದ ಮನಸ್ಥಿತಿಗಳ ಆರಂಭಿಕ ಸೂಚನೆಗಳ ಬಗ್ಗೆ ಎಚ್ಚರಿಕೆ ವಹಿಸಿ
ಆಧಾರ: ವಿವಿಧ ರಾಜ್ಯ ಸರ್ಕಾರಗಳ ಸೂಚನೆಗಳು

ಪ್ರಜಾವಾಣಿ ಕೋವಿಡ್–19 ಕೈಪಿಡಿ 21


ಕ�ೋವಿಡ್‌ ನಂತರದ
ಸ್ಥಿತಿಗಳು
ಹೆಚ್ಚಿನ ಕೋವಿಡ್‌ ಸೋಂಕಿತರು ಅಸ್ವಸ್ಥಗೊಂಡ ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ
ಗುಣಮುಖರಾಗುತ್ತಿದ್ದರೂ, ಕೆಲವರಿಗೆ ಹಾಗೆ ಆಗುವುದಿಲ್ಲ. ಕೆಲವು ಕೋವಿಡೋತ್ತರ ಸ್ಥಿತಿಗಳು
ಇತರ ಕೆಲವು ಸೋಂಕು ರೋಗಗಳ ರೀತಿಯಲ್ಲೇ ಇರುತ್ತವೆ, ಆದರೆ ಕೆಲವು ಸ್ಥಿತಿಗಳು ಮಾತ್ರ
ಕೋವಿಡ್‌ಗೆ ಮಾತ್ರ ನಿರ್ದಿಷ್ಟವಾಗಿ ಸೀಮಿತವಾಗಿರುತ್ತವೆ. ವಿಜ್ಞಾನಿಗಳು ಕೋವಿಡೋತ್ತರ
ಸ್ಥಿತಿಗಳ ಬಗ್ಗೆ ಸಕ್ರಿಯವಾಗಿ ಸಂಶೋಧನೆ ನಡೆಸುತ್ತಿದ್ದು, ಅದಕ್ಕೆ ನಿರ್ದಿಷ್ಟ ಕಾರಣಗಳನ್ನು ಇನ್ನೂ
ಪತ್ತೆಹಚ್ಚಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ.

ಪ್ರಜಾವಾಣಿ ಕೋವಿಡ್–19 ಕೈಪಿಡಿ 22


ಸುದೀರ್ಘ ಕೋವಿಡ್‌
ಕೋವಿಡ್‌ ಸೋಂಕು ತಗುಲಿದ ನಂತರ ಕೆಲವು ವಾರ,
ಕೆಲವು ತಿಂಗಳ ಕಾಲ ರೋಗಲಕ್ಷಣ ಮುಂದುವರಿಯುವುದಕ್ಕೆ
ಅಥವಾ ಸೋಂಕು ತಗುಲಿ ವಾರಗಳ ಬಳಿಕ ಕಾಣಿಸಿಕೊಳ್ಳುವ
ರೋಗಲಕ್ಷಣಕ್ಕೆ ಸುದೀರ್ಘ ಅವಧಿಯ ಕೋವಿಡ್‌ ಎನ್ನುತ್ತಾರೆ.
ಕೋವಿಡ್‌–19 ಸೋಂಕು ತಗುಲಿದ ಯಾರೊಬ್ಬರಿಗೂ
ಸುದೀರ್ಘ ಕೋವಿಡ್‌ ಬಾಧಿಸಬಹುದು, ಅಂತಹರಿಗೆ
ತಗುಲಿದ ಕೋವಿಡ್ ಸೌಮ್ಯ ಸ್ವಭಾವದ್ದು ಇರಬಹುದು ಅಥವಾ
ಲಕ್ಷಣರಹಿತವಾಗಿರಬಹುದು. ಸುದೀರ್ಘ ಕೋವಿಡ್ ಸೋಂಕು
ಹೊಂದಿರುವವರು ಈ ಕೆಳಗಿನ ವಿವಿಧ ಸಂಯುಕ್ತ ರೋಗ
ಲಕ್ಷಣಗಳನ್ನು ಅನುಭವಿಸಬಹುದು.

n ದ
ಣಿವು ಅಥವಾ ಆಯಾಸ
n ಯ
 ೋಚಿಸಲು ಕಷ್ಟವಾಗುವುದು ಅಥವಾ ಏಕಾಗ್ರತೆ
ಇಲ್ಲದಿರುವುದು (ಮಿದುಳಿಗೆ ಮಂಕು)
n ಲೆನೋವು

n  ಸನೆ ಅಥವಾ ರುಚಿ ಇಲ್ಲದಿರುವುದು
ವಾ
n ಲೆತಿರುಗುವಿಕೆ

n ೇಗವಾದ ಎದೆಬಡಿತ (ಹಾರ್ಟ್‌ ಪಾಲ್ಪಿಟೇಷನ್‌)

n ದೆ ನೋವು

n  ಸಿರಾಟಕ್ಕೆ ಕಷ್ಟವಾಗುವುದು ಅಥವಾ ಉಸಿರಾಟದ

ಕೊರತೆ
n ಮ್ಮು
ಕೆ
n ಂಧಿ ಅಥವಾ ಸ್ನಾಯು ನೋವು

n ನ್ನತೆ ಅಥವಾ ಆತಂಕ
ಖಿ
n ್ವರ

n ೈಹಿಕ ಅಥವಾ ಮಾನಸಿಕ ಚಟುವಟಿಕೆಗಳ ಬಳಿಕ

ರೋಗಲಕ್ಷಣ ಉಲ್ಬಣಿಸುವುದು

ಪ್ರಜಾವಾಣಿ ಕೋವಿಡ್–19 ಕೈಪಿಡಿ 23


ಕೋವಿಡ್‌ನ ಬಹು ಅಂಗಾಂಗ
ಪರಿಣಾಮಗಳು
ಕೋವಿಡ್‌ ಸೋಂಕು ತಗುಲಿದ ಎಲ್ಲರಿಗೂ ಅಲ್ಲದಿದ್ದರೂ ಹಲವರಿಗೆ
ಬಹು ಅಂಗಾಂಗ ದುಷ್ಪರಿಣಾಮಗಳು ಉಂಟಾಗಬಹುದು. ಅದರಲ್ಲಿ
ಮುಖ್ಯವಾದುದು ಹೃದಯ, ಶ್ವಾಸಕೋಶ, ಮೂತ್ರಪಿಂಡ (ಕಿಡ್ನಿ), ಚರ್ಮ
ಮತ್ತು ಮಿದುಳಿನ ಕಾರ್ಯಗಳು. ಕೋವಿಡ್ ಬಂದ ನಂತರ ಕಾಣಿಸಿಕೊಳ್ಳುವ
ಬಹು ಅಂಗಾಂಗ ಉರಿಯುವಂತಹ ಲಕ್ಷಣ ಮತ್ತು ಸ್ವಯಂನಿರೋಧಕ
ರೂಪದಲ್ಲೂ ಬಹು ಅಂಗಾಂಗ ಪರಿಣಾಮಗಳು ಉಂಟಾಗಬಹುದು.

ಆಸ್ಪತ್ರೆಗೆ ದಾಖಲಿಸುವುದರ ಪರಿಣಾಮಗಳು


n ತೀವ್ರ ನಿಗಾ ಘಟಕದಲ್ಲಿನ ವಾಸದ ನಂತರದ ಲಕ್ಷಣ
n ತೀವ್ರ ಬಲಹೀನತೆ
n ಆಘಾತ ನಂತರದ ಒತ್ತಡ ಅಸ್ವಸ್ಥತೆ

ಆರೈಕೆ
ಕೋವಿಡೋತ್ತರ ಪರಿಸ್ಥಿತಿಗಳಿಂದ ಹೊರಬರಲು ಹಲವಾರು
ದಾರಿಗಳಿವೆ. ಈ ಲಕ್ಷಣ ಹೊಂದಿದ್ದವರು ಕಾಲಕ್ರಮೇಣ ಸಂಪೂರ್ಣ
ಗುಣಮುಖರಾಗುತ್ತಾರೆ. ನಿಮ್ಮಲ್ಲೂ ಕೋವಿಡೋತ್ತರ ಲಕ್ಷಣಗಳು ಇವೆ
ಎಂದು ಭಾವಿಸಿದರೆ, ಇದನ್ನು ನಿಭಾಯಿಸುವುದು ಹೇಗೆ ಅಥವಾ ಇದಕ್ಕೆ
ಯಾವ ರೀತಿಯ ಆರೈಕೆ ಮಾಡಬೇಕು ಮತ್ತು ಪೂರಕವಾಗಿ ಏನೆಲ್ಲಾ
ಮಾಡಬೇಕು ಎಂಬ ಬಗ್ಗೆ ನಿಮ್ಮ ವೈದ್ಯರಲ್ಲಿ ಸಲಹೆ ಪಡೆಯಿರಿ.
ಮೂಲ: ಸಿಡಿಸಿ

ಪ್ರಜಾವಾಣಿ ಕೋವಿಡ್–19 ಕೈಪಿಡಿ 24


ಸಾಂಕ್ರಾಮಿಕದ ವೇಳೆ ಸ್ವಯಂ ಕಾಳಜಿ
l ವಾ
 ಸ್ತವದ ಬಗ್ಗೆ ಮಾತ್ರ ಗಮನ ಹರಿಸಿ– ವದಂತಿಗಳು ಮತ್ತು ಸುಳ್ಳು ಸಿದ್ಧಾಂತಗಳನ್ನು
ತಿರಸ್ಕರಿಸಿ
l ಜ್
 ಞಾನವೇ ಶಕ್ತಿ– ನಿರ್ದಿಷ್ಟ ವಿಷಯದ ಬಗ್ಗೆ ನೀವು ಹೆಚ್ಚು ಹೆಚ್ಚು ತಿಳಿದುಕೊಂಡಷ್ಟೂ,
ನೀವು ಅನುಭವಿಸಬಹುದಾದ ಆತಂಕ ಕಡಿಮೆಯಾಗುತ್ತದೆ. ಸ್ವಯಂ ರಕ್ಷಣೆಗಾಗಿ ನೀವು
ಅತ್ಯಂತ ವಿಶ್ವಾಸಾರ್ಹವಾದ ಮಾಹಿತಿ ಮೂಲವನ್ನು ಮಾತ್ರ ಸ್ವೀಕರಿಸಿ ಮತ್ತು ನಂಬಿ
lಇ
 ದನ್ನು ಅನುಸರಿಸಬೇಡಿ– ಸಂವೇದನಾಶೀಲ ಸುದ್ದಿಗಳು ಅಥವಾ ಸಾಮಾಜಿಕ ಜಾಲ-
ತಾಣಗಳಲ್ಲಿ ಬರುವ ಪೋಸ್ಟ್‌ಗಳು. ಇವುಗಳು ನಿಮ್ಮ ಮನಸ್ಸಿನ ಮೇಲೆ ‍ಪರಿಣಾಮ
ಬೀರಬಹುದು. ಪರಿಶೀಲನೆಗೆ ಒಳಪಡದ ಸುದ್ದಿ ಅಥವಾ ಮಾಹಿತಿಯನ್ನು ಹಬ್ಬಿಸಬೇಡಿ
ಅಥವಾ ಹಂಚಿಕೊಳ್ಳಬೇಡಿ
lದ
 ೈನಂದಿನ ದಿನಚರಿ ಅನುಸರಿಸಿ– ಇದು ನಿಮ್ಮ ದೈನಂದಿನ ಬದುಕಿಗೆ ಅಗತ್ಯವಾದ
ಚೌಕಟ್ಟನ್ನು ಒದಗಿಸಿಕೊಡಬಹುದು
lಕ
 ೃತಜ್ಞತೆಯನ್ನು ಬೆಳೆಸಿಕೊಳ್ಳಿ–ಜೀವನದಲ್ಲಿ ಧನಾತ್ಮಕ ಅಂಶಗಳ ಬಗ್ಗೆ ಗಮನ ಹರಿಸಲು
ದಿನದ ಒಂದಿಷ್ಟು ಸಮಯ ಮೀಸಲಿಡಿ. ಪುಸ್ತಕಗಳನ್ನು ಓದುವ ಮೂಲಕ, ಧ್ಯಾನ
ಮಾಡುವ ಮೂಲಕ ಮನಸ್ಸನ್ನು ಉಲ್ಲಸಿತಗೊಳಿಸಿಕೊಳ್ಳಿ
lಆ
 ರೋಗ್ಯಕರ, ಉತ್ತಮ ಸಮತೋಲಿತ ಆಹಾರ
ಸೇವಿಸಿ– ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ
ಸೇವಿಸುವುದು ನಿಮ್ಮ ಆರೋಗ್ಯ ಮತ್ತು
ಜೀವನಕ್ಕೆ ಉತ್ತಮ
l ಲೌ
 ಕಿಕದಿಂದ ದೂರ ಇರಿ– ದಿನದ
ಒಂದಿಷ್ಟು ಹೊತ್ತು ಸುದ್ದಿ ಮತ್ತು ಇತರ
ಚಟುವಟಿಕೆಗಳಿಂದ ದೂರ ಇದ್ದು ಮನಸ್ಸನ್ನು
ನಿರಾಳಗೊಳಿಸಿಕೊಳ್ಳಲು ಪ್ರಯತ್ನಿಸಿ
lಹ
 ವ್ಯಾಸವೊಂದನ್ನು ರೂಢಿಸಿಕೊಳ್ಳಿ– ಹೊಸ
ಹವ್ಯಾಸವೊಂದನ್ನು ರೂಢಿಸಿಕೊಳ್ಳುವುದರಿಂದ ಒತ್ತಡ ನಿವಾರಣೆಯಾಗಬಹುದು
lಇ
 ತರರೊಂದಿಗೆ ಸಂಪರ್ಕದಲ್ಲಿರಿ– ಇತರರೊಂದಿಗೆ ಸಂಪರ್ಕದಲ್ಲಿರುವುದು ಭಾವನಾತ್ಮಕ
ಆರೋಗ್ಯಕ್ಕೆ ಅಗತ್ಯ. ಫೋನ್ ಮತ್ತು ವಿಡಿಯೊ ಕರೆಗಳ ಜತೆಗೆ ಆನ್‌ಲೈನ್‌ ಹವ್ಯಾಸ
ತರಗತಿಗಳು ಮತ್ತು ಸಾಮಾಜಿಕ ಜಾಲತಾಣಗಳು ಇತರರೊಂದಿಗೆ ನೀವು ಸಂಪರ್ಕದಲ್ಲಿ
ಇರಿಸಲು ನೆರವಾಗುತ್ತವೆ
ಮೂಲಗಳು: ಡಬ್ಲ್ಯುಎಚ್‌ಒ, ಆರೋಗ್ಯಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಇಂಡಿಯಾ ಬಯೋಸೈನ್ಸ್

ಪ್ರಜಾವಾಣಿ ಕೋವಿಡ್–19 ಕೈಪಿಡಿ 25


(FAQs)
ಪದೇ ಪದೇ
ಕೇಳುವ ಪ್ರಶ್ನೆಗಳು
ನಾನು ಸೋಂಕಿಗೆ ಒಳಗಾಗಿದ್ದರೆ, ನನ್ನ ಸಾಕುಪ್ರಾಣಿಗೂ ನನ್ನಿಂದ
ಸೋಂಕು ತಗುಲಬಹುದೇ?

ಕೆಲವು ಸಂದರ್ಭಗಳಲ್ಲಿ ಅದರಲ್ಲೂ ಮುಖ್ಯವಾಗಿ ನಿಕಟವಾದ


ಸಂಪರ್ಕದಲ್ಲಿದ್ದಾಗ ಮನುಷ್ಯರಿಂದ ಪ್ರಾಣಿಗಳಿಗೆ ಕೋವಿಡ್‌–19 ಹರಡಿದ
ನಿದರ್ಶನ ಇದೆ ಎಂಬುದನ್ನು ಅಮೆರಿಕದ ರೋಗ ನಿಯಂತ್ರಣ ಕೇಂದ್ರ
ಹೇಳಿದೆ. ‌ಒಂದೇ ಮನೆಯೊಳಗೆ ಮನುಷ್ಯರ ನಡುವೆ ವೈರಸ್‌ಗಳನ್ನು ಹರಡುವ
ವಾಹಕಗಳಾಗಿಯೂ ಸಾಕುಪ್ರಾಣಿಗಳು ವರ್ತಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ
ಕೋವಿಡ್‌ ದೃಢಪಟ್ಟವರು ಅಥವಾ ಕೋವಿಡ್ ಸೋಂಕಿನ ಶಂಕೆ ಇರುವವರು
ಸಾಕು ಪ್ರಾಣಿಗಳು, ಜೀವ ಸಂಕುಲ ಅಥವಾ ಕಾಡು ಪ್ರಾಣಿಗಳಿಂದ ದೂರ
ಇರುವುದು ಉತ್ತಮ.

ನನಗೆ ಕೋವಿಡ್ –19 ಇದೆಯೇ ಎಂಬುದನ್ನು ಖಚಿತಪಡಿಸಲು ನಾನು


ಯಾವ ಪರೀಕ್ಷೆ ಮಾಡಿಸಿದರೆ ಉತ್ತಮ?

ಹೆಚ್ಚಿನ ಸಂದರ್ಭಗಳಲ್ಲಿ ಎಸ್ಎಆರ್‌ಎಸ್‌–ಸಿಒವಿ–2 ಪತ್ತೆಹಚ್ಚಲು


ಮತ್ತು ಸೋಂಕನ್ನು ದೃಢಪಡಿಸಲು ಅಣ್ವಿಕ (ಮೊಲ್ಯಾಕ್ಯುಲರ್) ಪರೀಕ್ಷೆಯನ್ನು
ನಡೆಸಲಾಗುತ್ತದೆ. ಪಾಲಿಮೆರೇಸ್ ಚೈನ್‌ ರಿಯಾಕ್ಷನ್‌ (ಪಿಸಿಆರ್) ಹೆಚ್ಚಾಗಿ
ನಡೆಸುವಂತಹ ಅಣ್ವಿಕ ಪರೀಕ್ಷೆಯಾಗಿದೆ. ಗಂಟಲು ಮತ್ತು (ಅಥವಾ)
ಮೂಗಿನಿಂದ ಹೀರುಮೆತ್ತೆಯ (ಸ್ವ್ಯಾಬ್‌) ಮೂಲಕ ಮಾದರಿಯನ್ನು ಸಂಗ್ರ-
ಹಿಸಲಾಗುತ್ತದೆ. ರೋಗಕಾರಕ ಸೂಕ್ಷ್ಮಜೀವಿಯ ಅನುವಂಶಿಕ ಸಾಧನವನ್ನು
ಪತ್ತೆಹಚ್ಚುವ ಮಟ್ಟಕ್ಕೆ ವರ್ಧಿಸುವ ಮೂಲಕ ಸಂಗ್ರಹಿಸಲಾದ ಮಾದರಿಯಲ್ಲಿ
ವೈರಸ್‌ ಇರುವಿಕೆಯನ್ನು ಈ ಅಣ್ವಿಕ ಪರೀಕ್ಷೆ ಪತ್ತೆಹಚ್ಚುತ್ತದೆ. ಹೀಗಾಗಿಯೇ
ಕೊರೊನಾ ವೈರಸ್‌ನಿಂದ ಸೋಂಕು ಉಂಟಾಗಿರುವುದನ್ನು ದೃಢಪಡಿಸಿ
ಕೊಳ್ಳಲು ಅಣ್ವಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸ
‌ ೋಂಕು ತಗುಲಿದ ಕೆಲವೇ
ದಿನಗಳಲ್ಲಿ ರೋಗ ಲಕ್ಷಣಗಳೂ ಕಾಣಿಸಿಕೊಳ್ಳತೊಡಗುತ್ತವೆ.

ಪ್ರಜಾವಾಣಿ ಕೋವಿಡ್–19 ಕೈಪಿಡಿ 26


6 ಎಂಡಬ್ಲ್ಯುಟಿ ಎಂದರೇನು? ಇದನ್ನು ಏಕೆ ಬಳಸುತ್ತಾರೆ?
6 ಎಂಡಬ್ಲ್ಯುಟಿ ಎಂದರೆ 6 ನಿಮಿಷದ ನಡಿಗೆ ಎಂದರ್ಥ. ಆಕ್ಸಿಮೀಟರ್ ಅನ್ನು
ಬೆರಳಿಗೆ ಸಿಕ್ಕಿಸಿ, ಆರು ನಿಮಿಷ ನಡೆಯುವ ಮೂಲಕ ಈ ಪರೀಕ್ಷೆ ನಡೆಸಲಾಗುತ್ತದೆ.
ನಡಿಗೆಯ ಕೊನೆಯಲ್ಲಿ ಆಮ್ಲಜನಕ ಪ್ರಮಾಣ ಶೇ 92ಕ್ಕಿಂತ ಕೆಳಕ್ಕೆ ಇಳಿಯಬಾರದು.
ನಿಮ್ಮ ಶ್ವಾಸಕೋಶ ಆಮ್ಲಜನಕದ ಕೊರತೆಯಿಂದ ಅಪಾಯದಲ್ಲಿದೆಯೇ
ಎಂಬುದನ್ನು ತಿಳಿಯಲು ನಿಮಗೆ ಈ ಪರೀಕ್ಷೆ ನೆರವಾಗುತ್ತದೆ.
ನನಗೆ ಕೋವಿಡ್ ಲಕ್ಷಣವಿದೆ, ಆದರೆ ನನ್ನ ಆರ್‌ಟಿ–ಪಿಸಿಆರ್ ಪರೀಕ್ಷೆಯಿಂದ
ನೆಗೆಟಿವ್‌ ವರದಿ ಬಂದಿದೆ. ಈಗ ನಾನೇನು ಮಾಡಬೇಕು?
ನಿಮ್ಮಲ್ಲಿ ಕೋವಿಡ್ ಲಕ್ಷಣ ಇದ್ದರೂ ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌
ವರದಿ ಬಂದಿದೆ ಎಂದಾಕ್ಷಣ ನಿಮಗೆ ಕೋವಿಡ್‌ ಇಲ್ಲ ಎಂದು ಅರ್ಥವಲ್ಲ. ನೀವು ನಿಮ್ಮ
ಬಗ್ಗೆಯೇ ಜಾಗರೂಕತೆಯಿಂದ
ಗಮನ ಇಟ್ಟಿರಿ. ಸೂಕ್ತ
ಔಷಧಗಳಿಂದ ನಿಮ್ಮ ರೋಗ-
ಲಕ್ಷಣಕ್ಕೆ ಆರೈಕೆ ಪಡೆದುಕೊಳ್ಳಿ.
ನಿಮ್ಮ ಆಮ್ಲಜನಕ ಮಟ್ಟವನ್ನು
ಗಮನಿಸುತ್ತ ಇರಿ, 6
ಎಂಡಬ್ಲ್ಯುಟಿ ಮಾಡುತ್ತಿರಿ.
ನಿಮ್ಮ ಆಮ್ಲಜನಕ ಮಟ್ಟ ಶೇ
92ಕ್ಕಿಂತ ಕೆಳಕ್ಕೆ ಹೋದರೆ
ಶ್ವಾಸಕೋಶ ಮತ್ತು ಎದೆಯ
ಎಚ್‌ಆರ್‌ಸಿಟಿ ಸ್ಕ್ಯಾನ್‌ ಮಾಡಿಸಿಕೊಳ್ಳಿ. ಇದರಿಂದ ನಿಮ್ಮ ಎದೆ/ ಶ್ವಾಸಕೋಶದಲ್ಲಿ
ಸೋಂಕು ಇದೆಯೇ, ಸೋಂಕಿನ ತೀವ್ರತೆ ಎಷ್ಟಿದೆ, ಅದಕ್ಕೆ ಯಾವ ರೀತಿಯ ಸೂಕ್ತ
ಔಷಧ ನೀಡಬೇಕು ಎಂಬುದನ್ನು ಕಂಡುಕೊಳ್ಳಲು ವೈದ್ಯರಿಗೆ ಸಹಾಯವಾಗುತ್ತ-
ದೆ. ಈ ಪರೀಕ್ಷೆ ವೇಳೆ 7/25ಕ್ಕಿಂತ ಹೆಚ್ಚಿನ ಫಲಿತಾಂಶ ಬಂದಿದ್ದೇ ಆದರೆ ಗಂಭೀರ
ಎಂದೇ ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯವಾ-
ಗುತ್ತದೆ.
ರೋಗಲಕ್ಷಣ ಇಲ್ಲದ ರೋಗಿಯ ಆರೋಗ್ಯ ಏಕಾಏಕಿ ಹದಗೆಡಬಹುದೇ?
ಅವರು ಯಾವುದರ ಬಗ್ಗೆ ಎಚ್ಚರ ವಹಿಸಬೇಕು?
ಕೆಲವೊಂದು ಸಂದರ್ಭಗಳಲ್ಲಿ ಸೈಲೆಂಟ್ ಹೈಪೋಕ್ಸಿಯಾ (ಹ್ಯಾಪಿ
ಅಪೇಕ್ಷಿಯಾ ಎಂದೂ ಹೆಸರು) ಎಂಬ ಪರಿಸ್ಥಿತಿ ಇರುತ್ತದೆ. ಇಂತಹ ಸ್ಥಿತಿಯಲ್ಲಿ ದೇಹಕ್ಕೆ
ಆಮ್ಲಜನಕದ ಕೊರತೆ ಇರುತ್ತದೆ, ಆದರೆ ವ್ಯಕ್ತಿಗೆ ಕೊನೆಯ ಹಂತದ ವರೆಗೂ ಅದರ
ಬಗ್ಗೆ ಗೊತ್ತಾಗಿರುವುದಿಲ್ಲ. ಆಗ ದೇಹವು ಕಡಿಮೆ ಆಮ್ಲಜನಕ ಮತ್ತು ಯಾತನೆಯ
ಪರಿಸ್ಥಿತಿಗಳಿಗೆ ಹೊಂದಿಕೊಂಡಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿರುವ ಕೋವಿಡ್‌
ರೋಗಲಕ್ಷಣ ರಹಿತ ವ್ಯಕ್ತಿಗೆ ಏಕಾಏಕಿ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ.

ಪ್ರಜಾವಾಣಿ ಕೋವಿಡ್–19 ಕೈಪಿಡಿ 27


ಹೀಗಾಗಿ ರೋಗಲಕ್ಷಣ ಇಲ್ಲದವರು ತಮ್ಮ ಆರೋಗ್ಯ ಉತ್ತಮವಾಗಿದೆ ಎಂದು
ಹೇಳಿ ಮೈಮರೆಯುವುದು ಸಾಧ್ಯವಿಲ್ಲ. ಅವರು ತಮ್ಮ ದೇಹದ ಆಮ್ಲಜನಕ ಮಟ್ಟ,
ರಕ್ತದೊತ್ತಡ, ಹೃದಯ ಬಡಿತದ ಪ್ರಮಾಣ, ದೇಹದ ಉಷ್ಣಾಂಶ ಮೊದಲಾದವುಗಳನ್ನು
ನಿರಂತರ ಗಮನಿಸುತ್ತಲೇ ಇರಬೇಕು. ಈ ಯಾವುದೇ ಪರೀಕ್ಷೆಗಳಲ್ಲಿ ಯಾವುದೇ
ವ್ಯತ್ಯಾಸ ಕಂಡುಬಂದರೂ ವೈದ್ಯರನ್ನು ಸಂಪರ್ಕಿಸಬೇಕು.
ಕೋವಿಡ್ ಲಕ್ಷಣವಿರುವ ಹಲವು ರೋಗಿಗಳಿಗೆ ಆರ್‌ಟಿ–ಪಿಸಿಆರ್
ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿರುತ್ತದೆ, ಆದರೆ ಮುಂದಿನ ಹಂತದ
ಪರೀಕ್ಷೆಗೆ ಕರೆದೊಯ್ಯುವಾಗ ಅವರು ಬಹಳ ದುರ್ಬಲರಾಗಿರುತ್ತಾರೆ. ಇಂತಹ
ಸಂದರ್ಭದಲ್ಲಿ ಏನು ಮಾಡಬೇಕು?
ಬೆರಳಿಗೆ ಇಟ್ಟು ಆಮ್ಲಜನಕ ಪರೀಕ್ಷೆ ನಡೆಸುವ ಆಕ್ಸಿಮೀಟರ್‌ ಸಾಧನವನ್ನು
ಮನೆಯಲ್ಲಿ ಇಟ್ಟುಕೊಂಡಿರುವುದು ಉತ್ತಮ. ಸಾಮಾನ್ಯ ಶೀತ ಮತ್ತು ಜ್ವರದ ಲಕ್ಷಣ
ಕಂಡುಬಂದ ತಕ್ಷಣ ಕನಿಷ್ಠ 4 ಗಂಟೆಗೊಮ್ಮೆ ಆಮ್ಲಜನಕ ಮಟ್ಟವನ್ನು ಪರೀಕ್ಷಿಸುತ್ತ
ಇರಬೇಕು. ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿದ್ದರೂ, ಆಮ್ಲಜನಕ ಮಟ್ಟ
ಶೇ 92ಕ್ಕಿಂತ ಕೆಳಗೆ ಇಳಿದರೆ ಅಥವಾ 6 ನಿಮಿಷದ ನಡಿಗೆಯ ಬಳಿಕ ಆಮ್ಲಜನಕದ ಮಟ್ಟ
ಶೇ 92ಕ್ಕಿಂತ ಕಡಿಮೆ ಇದ್ದರೆ, ಅದನ್ನು ಅಪಾಯದ ಸಂಕೇತ ಎಂದೇ ಭಾವಿಸಬೇಕು.
ಕೆಮ್ಮ ಮತ್ತು ಎದೆ ಬಿಗಿತ ಇದ್ದರೆ ಹಾಗೂ ಈ ಲಕ್ಷಣ 2–3 ದಿನ ಮುಂದುವರಿದರೆ
ಅದನ್ನು ರೋಗ ಲಕ್ಷಣ ಎಂದು ಭಾವಿಸಬೇಕು ಮತ್ತು ಆರ್‌ಟಿ–ಪಿಸಿಆರ್ ವರದಿಯಲ್ಲಿ
ನೆಗೆಟಿವ್‌ ಬಂದಿದ್ದರೂ, ಎಚ್‌ಆರ್‌ಸಿಟಿ ಸ್ಕ್ಯಾನ್‌ ಮಾಡಿಸಲೇಬೇಕು.

ಮೂಲ: ಡಬ್ಲ್ಯುಎಚ್‌ಒ, ಸಿಡಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಪ್ರಜಾವಾಣಿ ಕೋವಿಡ್–19 ಕೈಪಿಡಿ 28


ಮಿಥ್ಯೆ ಮತ್ತು
ಸತ್ಯ
ಮಿಥ್ಯೆ: ಸೋಂಕು ನಿವಾರಣೆಗೆ ದೇಹದ ಮೇಲೆ ಅತಿನೇರಳೆ ಕಿರಣಗಳು
ಬಳಸುವುದು ಸುರಕ್ಷಿತ.
ಸತ್ಯ: ವಸ್ತುಗಳು ಮತ್ತು ಮೇಲ್ಮೈ ಪ್ರದೇಶವನ್ನು ಸೋಂಕಿನಿಂದ
ಮುಕ್ತಗೊಳಿಸಲು ಅತಿನೇರಳೆ ಕಿರಣಗಳನ್ನು ಬಳಸಲಾಗುತ್ತದೆ. ಅತಿನೇರಳೆ
ಕಿರಣಗಳಿಗೆ ನೇರವಾಗಿ ದೇಹವನ್ನೊಡ್ಡುವುದರಿಂದ ಚರ್ಮಕ್ಕೆ
ಹಾನಿಯಾಗುತ್ತದೆ ಮತ್ತು ಕಣ್ಣಿಗೆ ತೊಂದರೆಯಾಗುತ್ತದೆ. ನಿಮ್ಮ ದೇಹದ
ಅಂಗಗಳನ್ನು ಸೋಂಕಿನಿಂದ ಮುಕ್ತಗೊಳಿಸಲು ಈ ಪದ್ಧತಿಯನ್ನು
ಅನುಸರಿಸಬೇಡಿ.

ಮಿಥ್ಯೆ: ಹ್ಯಾಂಡ್‌ ಡ್ರೈಯರ್ಸ್‌ ಕೊರೊನಾ ವೈರಸ್‌ ಅನ್ನು ಸಾಯಿಸುತ್ತದೆ.


ಸತ್ಯ: ಕೊರೊನಾ ವೈರಸ್‌ ಸಾಯಿಸಲು ಹ್ಯಾಂಡ್‌ ಡ್ರೈಯರ್‌ಗಳು
ಪರಿಣಾಮಕಾರಿ ಅಲ್ಲ. ನಿಮ್ಮ ಕೈಗಳ್ಳನ್ನು ಸೋಂಕಿನಿಂದ ಮುಕ್ತಗೊಳಿಸಲು
ಸಾಬೂನು ಅಥವಾ ಅಲ್ಕೋಹಾಲ್‌ ಆಧಾರಿತ ಸ್ಯಾನಿಟೈಸರ್‌ ಬಳಸಿ.

ಮಿಥ್ಯೆ: ನ್ಯೂಮೊನಿಯಾ ಲಸಿಕೆಯಿಂದ ಕೋವಿಡ್‌–19 ವೈರಸ್‌ ವಿರುದ್ಧ ರಕ್ಷಣೆ


ದೊರೆಯುತ್ತದೆ.
ಸತ್ಯ: ಕೋವಿಡ್‌–19 ವೈರಸ್‌ ಹೊಸತು. ಹೀಗಾಗಿ, ಈ ವೈರಸ್‌ಗೆ ತನ್ನದೇ
ಆದ ಲಸಿಕೆ ಬೇಕು.

ಮಿಥ್ಯೆ: ನಿರಂತರವಾಗಿ ನಿಮ್ಮ ಮೂಗನ್ನು ಲವಣಯುಕ್ತ ದ್ರವದಿಂದ (ಸಲೈನ್‌)


ತೊಳೆಯುವುದರಿಂದ ಕೋವಿಡ್‌ ಸೋಂಕು ತಡೆಯಲು ನೆರವಾಗುತ್ತದೆ.
ಸತ್ಯ: ಲವಣಯುಕ್ತ ದ್ರವದಿಂದ ಕೋವಿಡ್‌ ಸೋಂಕು ತಡೆಯಲು
ನೆರವಾಗುತ್ತದೆ ಎನ್ನುವುದಕ್ಕೆ ದೃಢಪಡಿಸಿದ ಸಾಕ್ಷ್ಯಗಳು ಇಲ್ಲ. ಆದರೆ,
ಮೂಗಿನ ಒಳಗೆ ಸ್ವಚ್ಛಗೊಳಿಸುವುದರಿಂದ ಸುಗಮ ಉಸಿರಾಟದ
ದೃಷ್ಟಿಯಿಂದ ಅನುಕೂಲವಾಗಬಹುದು.

ಮಿಥ್ಯೆ: ವಯಸ್ಸಾದವರ ಮೇಲೆ ಮಾತ್ರ ಕೋವಿಡ್‌–19 ಪರಿಣಾಮ


ಬೀರುತ್ತದೆ.
ಸತ್ಯ: ವಯಸ್ಸಾದವರು ವೈರಸ್‌ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.
ಅದೇ ರೀತಿ ಯುವಕರಿಗೂ ಸಹ ಮಾರಕವಾಗಿದ್ದು, ವೈರಸ್‌ ಸೋಂಕಿಗೆ
ಒಳಗಾಗಿ ಸಾವಿಗೀಡಾಗಬಹುದು.

ಪ್ರಜಾವಾಣಿ ಕೋವಿಡ್–19 ಕೈಪಿಡಿ 29


ಮಿಥ್ಯೆ: ಕೋವಿಡ್‌–19 ಚಿಕಿತ್ಸೆ ನೀಡಲು ಮತ್ತು ತಡೆಯಲು ಆ್ಯಂಟಿಬಯಾಟಿಕ್ಸ್‌
ಪರಿಣಾಮಕಾರಿಯಾಗಿವೆ.
ಸತ್ಯ: ಬ್ಯಾಕ್ಟೇರಿಯಾಗಳ ವಿರುದ್ಧ ಮಾತ್ರ ಆ್ಯಂಟಿಬಯಾಟಿಕ್ಸ್‌ಗಳು ಪರಿಣಾಮ
ಬೀರುತ್ತವೆಯೇ ಹೊರತು ವೈರಸ್‌ ಮೇಲೆ ಅಲ್ಲ. ಕೋವಿಡ್‌–19 ವೈರಸ್‌ನಿಂದ
ಹಬ್ಬುವ ಸಾಂಕ್ರಾಮಿಕ ಕಾಯಿಲೆ. ಹೀಗಾಗಿ, ವೈರಸ್‌ ತಡೆಯಲು ಅಥವಾ
ಸೋಂಕಿನಿಂದ ಹೊರಬರಲು ಆ್ಯಂಟಿಬಯಾಟಿಕ್ಸ್‌ಗಳನ್ನು ಬಳಸಬಾರದು.

ಮಿಥ್ಯೆ: ಮನೆ ಪದ್ಧತಿಗಳಾದ ಬಾಯಿ ಮುಕ್ಕಳಿಸುವುದು, ಎಳ್ಳೆಣ್ಣೆ ಅಥವಾ ಬೆಳ್ಳುಳ್ಳಿ


ಬಳಸುವುದರಿಂದ ವೈರಸ್‌ ತಡೆಗಟ್ಟಬಹುದು.
ಸತ್ಯ: ಪೊವಿಡೋನ್‌ ಐಯೊಡಿನ್‌ನಿಂದ ಬಾಯಿ ಮುಕ್ಕಳಿಸುವುದರಿಂದ
ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಕಡಿಮೆ ಎಂದು ಸಂಶೋಧನೆಗಳು
ತಿಳಿಸಿವೆ. ಬೆಳ್ಳುಳ್ಳಿಯಲ್ಲಿ ಆ್ಯಂಟಿಬಯಾಟಿಕ್‌ ಗುಣಲಕ್ಷಣಗಳಿವೆ. ಆದರೆ, ಈ ಎಲ್ಲ
ಪದ್ಧತಿಗಳಿಂದಲೇ ಒಟ್ಟಾರೆಯಾಗಿ ಸೋಂಕು ತಡೆಯಲು ಸಾಧ್ಯವಾಗುವುದಿಲ್ಲ.

ಮಿಥ್ಯೆ: ಕೋವಿಡ್‌–19ನಿಂದ ಅನಾರೋಗ್ಯಕ್ಕೆ ಒಳಗಾಗುವುದು ಅಥವಾ ಸಾವಿ-


ಗೀಡಾಗುವುದನ್ನು ಹೈಡ್ರಾಕ್ಸಿಕ್ಲೊರೊಕ್ವಿನ್‌ ತಡೆಯುತ್ತದೆ.
ಸತ್ಯ: ಮಲೇರಿಯಾ ಮತ್ತು ಕೆಲವು ಆಯಾ ಋತುಮಾನಕ್ಕೆ ತಕ್ಕಂತೆ ಬರುವ
ಕಾಯಿಲೆಗಳಿಗೆ ಹೈಡ್ರಾಕ್ಸಿಕ್ಲೊರೊಕ್ವಿನ್‌ ಅಥವಾ ಕ್ಲೊರೊಕ್ವಿನ್‌ ನೀಡುವುದು
ಸಾಮಾನ್ಯ ಚಿಕಿತ್ಸೆಯಾಗಿದೆ. ಆದರೆ, ಕೋವಿಡ್‌–19 ಚಿಕಿತ್ಸೆ ನೀಡಲು
ಅಥವಾ ತಡೆಯಲು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು
ಅಧ್ಯಯನಗಳು ತಿಳಿಸಿವೆ.

ಮಿಥ್ಯೆ: ಮದ್ಯ ಸೇವಿಸುವುದರಿಂದ ಕೋವಿಡ್‌–19 ಸೋಂಕಿಗೆ ಒಳಗಾಗುವ


ಅಪಾಯ ಕಡಿಮೆಯಾಗುತ್ತದೆ
ಸತ್ಯ: ಸೋಂಕಿಗೆ ಒಳಗಾಗುವ ಅಪಾಯ ಕಡಿಮೆಯಾಗುವ ಬದಲು, ಮದ್ಯ
ಸೇವಿಸುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ.

ಮಿಥ್ಯೆ: ಕ್ಲೋರಿನ್ ಅಥವಾ ಮದ್ಯ ಸಿಂಪಡಿಸುವುದರಿಂದ ದೇಹದಲ್ಲಿನ


ವೈರಸ್‌ಗಳು ಸಾಯುತ್ತವೆ.
ಸತ್ಯ: ಬ್ಲೀಚ್‌ ಪುಡಿ ಅಥವಾ ಮದ್ಯ ಸಿಂಪಡಿಸುವುದರಿಂದ ಚರ್ಮ ಮತ್ತು
ಕಣ್ಣುಗಳ ಉರಿಗೆ ಕಾರಣವಾಗುತ್ತದೆ. ಜತೆಗೆ, ಇವುಗಳನ್ನು ಸೇವಿಸುವುದು
ವಿಷಪೂರಿತವೂ ಹೌದು.

ಮಿಥ್ಯೆ: ಮಕ್ಕಳಿಗೆ ಕೋವಿಡ್‌–19 ಸೋಂಕು ತಗಲುವುದಿಲ್ಲ


ಸತ್ಯ: ಎಲ್ಲ ವಯಸ್ಸಿನ ಗುಂಪಿನ ಜನರಿಗೆ ಕೋವಿಡ್‌–19 ವೈರಸ್‌ ತಗುಲಬಹುದು.

ಪ್ರಜಾವಾಣಿ ಕೋವಿಡ್–19 ಕೈಪಿಡಿ 30


ಮಿಥ್ಯೆ: ಕೆಮ್ಮು ಅಥವಾ ಯಾವುದೇ ರೀತಿ ತೊಂದರೆ ಅನುಭವಿಸದೆ 10
ಸೆಕೆಂಡ್‌ಗಳ ಕಾಲ ಅಥವಾ ಹೆಚ್ಚಿನ ಸಮಯ ಉಸಿರಾಟವನ್ನು ಹಿಡಿದಿಟ್ಟು-
ಕೊಂಡರೆ ಕೊರೊನಾ ವೈರಸ್‌ ಅಥವಾ ಶ್ವಾಸಕೋಶದ ಕಾಯಿಲೆಯಿಂದ
ಮುಕ್ತವಾಗಿದ್ದೇವೆ ಎಂದು ಭಾವಿಸಿಕೊಳ್ಳಬಹುದು.
ಸತ್ಯ: ಉಸಿರಾಟದಲ್ಲಿ ತೊಂದರೆಯಾಗುವುದು ಕೋವಿಡ್‌–
19ನ ಲಕ್ಷಣಗಳಲ್ಲಿ ಒಂದು. ಆದರೆ, ಉಸಿರಾಟವನ್ನು
ಹಿಡಿದಿಟ್ಟುಕೊಳ್ಳುವುದರಿಂದ ವೈರಸ್‌ನಿಂದ ಮುಕ್ತವಾಗಿದ್ದೇವೆ ಎಂದು
ಅರ್ಥೈಸಿಕೊಳ್ಳಬಾರದು.

ಮಿಥ್ಯೆ: ಕೋವಿಡ್‌–19 ಲಸಿಕೆ ಪಡೆಯುವುದರಿಂದ ನಾನು ಅಸ್ವಸ್ಥನಾಗು-


ತ್ತೇನೆ.
ಸತ್ಯ: ಲಸಿಕೆ ಪಡೆದ ಬಳಿಕ ಅಲ್ಪಮಟ್ಟದ ಅಡ್ಡಪರಿಣಾಮಗಳಾಗಬಹುದು.
ಅನುಮೋದನೆ ಪಡೆದುಕೊಂಡಿರುವ ಯಾವುದೇ ಲಸಿಕೆಗಳು ಜೀವಂತ
ಕೋವಿಡ್‌–19 ವೈರಸ್‌ ಹೊಂದಿಲ್ಲ. ಅಂದರೆ, ಕೋವಿಡ್‌–19 ವಿರುದ್ಧದ
ಲಸಿಕೆಯಿಂದ ನೀವು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ.

ಮಿಥ್ಯೆ: ಕೋವಿಡ್‌–19 ಲಸಿಕೆಯಿಂದ ಗರ್ಭಿಯಾಣಿಗುವುದನ್ನು


ತಡೆಯುತ್ತದೆ ಅಥವಾ ಬಂಜೆತನ ಉಂಟಾಗುತ್ತದೆ
ಸತ್ಯ: ಲಸಿಕೆ ಪಡೆಯುವುದರಿಂದ ಬಂಜೆತನ ಉಂಟಾಗುತ್ತದೆ ಎನ್ನುವುದಕ್ಕೆ
ಇದುವರೆಗೆ ಯಾವುದೇ ಅಧ್ಯಯನಗಳು ನಡೆದಿಲ್ಲ.

ಮಿಥ್ಯೆ: ಬಿಸಿ ನೀರು ಕುಡಿಯುವುದರಿಂದ ಗಂಟಲಿನಲ್ಲಿರುವ ಕೊರೊನಾ


ವೈರಸ್‌ ಅನ್ನು ತೊಳೆಯುತ್ತದೆ.
ಸತ್ಯ: ಬಿಸಿ ನೀರಿನಿಂದ ಒಣ ಗಂಟಲಿಗೆ ಸಮಾಧಾನವಾಗುತ್ತದೆ. ಆದರೆ,
ವೈರಸ್‌ ಅನ್ನು ನಾಶಗೊಳಿಸುವುದಿಲ್ಲ.

ಮಿಥ್ಯೆ: ಕೋವಿಡ್‌–19ಗೆ ಒಂದು ಬಾರಿ ಸೋಂಕಿಗೆ ಒಳಗಾದವರು


ಮತ್ತೊಮ್ಮೆ ಸೋಂಕು ಒಳಗಾಗುವುದಿಲ್ಲ.
ಸತ್ಯ: ಒಂದು ಬಾರಿ ಕೋವಿಡ್‌–19 ಸೋಂಕಿಗೆ ಒಳಗಾದವರಲ್ಲಿ ವೈರಸ್‌
ವಿರುದ್ಧ ದೇಹ ನಿರೋಧಕ ಸೃಷ್ಟಿಯಾಗುತ್ತದೆ. ಆದರೆ, ಮತ್ತೊಮ್ಮೆ
ಸೋಂಕಿಗೆ ಒಳಗಾಗುವುದಿಲ್ಲ ಎಂದು ಭಾವಿಸಿಕೊಳ್ಳಬಾರದು.

ಪ್ರಜಾವಾಣಿ ಕೋವಿಡ್–19 ಕೈಪಿಡಿ 31


ಕ�ೋವಿಡ್‌–19
ಉಪಯುಕ್ತ ದೂರವಾಣಿ
14410
ಆಪ್ತಮಿತ್ರ
ಸಹಾಯವಾಣಿ

ರಾಜ್ಯ ಕೋವಿಡ್‌ ನಿಯಂತ್ರಣ ಕೊಠಡಿಯ ಸಂಖ್ಯೆಗಳು:

104, 1075

080-46848600,
080-66692000,
9745697456,
080-1070

9980299802
(ವಾರ್ತಾ ಮತ್ತು ಸಾರ್ವಜನಿಕ
ಸಂಪರ್ಕ ಇಲಾಖೆಯಿಂದ ನಿರ್ವಹಣೆ)

ಆ್ಯಂಬುಲೆನ್ಸ್‌: 102/108

ಪ್ರಜಾವಾಣಿ ಕೋವಿಡ್–19 ಕೈಪಿಡಿ 32


ಜಿಲ್ಲಾವಾರು
ಕೋವಿಡ್‌–19 ಸಹಾಯವಾಣಿಗಳು
ಬೆಂಗಳೂರು ನಗರ
080–1077, 080–22967200
ಬೆಂಗಳೂರು ಗ್ರಾಮಾಂತರ
080–29781021
ಧಾರವಾಡ
0836–1077/2447547

ಬೆಳಗಾವಿ
0831–2407290 (1077), 0831–2424284
ಗದಗ
08372–239177, 08372–1077

ಹಾವೇರಿ
8375–249102/249104
ಉತ್ತರ ಕನ್ನಡ
1077, 08382–229857
ಬಾಗಲಕೋಟೆ
08354–236240, 08354–236240/1077
ಕೊಪ್ಪಳ
08539–225001
ರಾಯಚೂರು
08532–228559, 08532–1095, 08532–1077, 08532–226383, 08532–226020
ವಿಜಯಪುರ
08352–1077, 08352–221261

ಪ್ರಜಾವಾಣಿ ಕೋವಿಡ್–19 ಕೈಪಿಡಿ 33


ಬಳ್ಳಾರಿ
08392–1077, 08392–277100, 8277888866 (ವಾಟ್ಸ್ಆ್ಯಪ್‌ ಸಂಖ್ಯೆ)
ಬೀದರ್
1800 425 4316

ಕಲಬುರ್ಗಿ
1047, 08472 278648, 278698, 278604, 278677
ಕೋವಿಡ್‌–19 ಸುರಕ್ಷಾ ಚಕ್ರ ಸಹಾಯವಾಣಿ:

7406054333, 7406084333, 7406092333 ಮತ್ತು 7406094333

ದಾವಣಗೆರೆ
08192–234034, 08192–1077
ಯಾದಗಿರಿ
08473–253950, 9449933946
ಉಡುಪಿ
9663957222, 9663950222
ತುಮಕೂರು
08162–1077/278787/251414/257368/252025/252321
ಶಿವಮೊಗ್ಗ
08182–221010, 08182–1077
ರಾಮನಗರ
8277517672, 080–27271195, 080–27276615
ಮೈಸೂರು
0821–2423800, 0821–1077
ದಕ್ಷಿಣ ಕನ್ನಡ
0824–1077, 0824–2442590
ಮಂಡ್ಯ
08231–1077, 08232–224655

ಪ್ರಜಾವಾಣಿ ಕೋವಿಡ್–19 ಕೈಪಿಡಿ 34


ಕೊಡಗು
08272220606, 08272–1077
ಕೋಲಾರ
08152–243521
ಹಾಸನ
08172–261111/1077
ಚಿತ್ರದುರ್ಗ
08194–222050/222044/ 222027/222056/222035
ಚಿಕ್ಕಮಗಳೂರು
08262–238950, 08262–1077
ಚಿಕ್ಕಬಳ್ಳಾಪುರ
08156– 1077/ 277071
ಚಾಮರಾಜನಗರ
08226–1077, 08226–223160

ಪ್ರಜಾವಾಣಿ ಕೋವಿಡ್–19 ಕೈಪಿಡಿ 35


ಇತರ ಸಹಾಯವಾಣಿಗಳಿಗೆ ಕೆಳಗಿನ
ಲಿಂಕ್‌ಗಳನ್ನು ಪರಿಶೀಲಿಸಿ
https://docs.google.com/spreadsheets/
d/1kXyK6D0QphEe4QXtj3lsyjYJu_k3jIxM1xP9_
QVuudI/edit?usp=sharing

ಕೋವಿಡ್‌–19 ಸಂಪನ್ಮೂಲಗಳು
https://www.covid19india.org/resources

ಕೋವಿಡ್‌ಫೈ–ಭಾರತದಾದ್ಯಂತ
https://life.coronasafe.network/
ಫ್ಯಾಕ್ಟ್‌ಚೆಕ್‌ – ಭಾರತದಾದ್ಯಂತ
https://www.factchecker.in/fact-check/factchecker-
-verified-covid-19-helplines-remdesivir-hospital-beds-
oxygen-743175
ಸ್ವತಂತ್ರ ಮಾಹಿತಿ ಕ್ರೋಢೀಕರಣ– ಭಾರತದಾದ್ಯಂತ
https://docs.google.com/document/d/16WeMKah
7RXoB1gnqa9YXVTuWM4TR6hY9Qys48Pf8mCc/
edit?usp=drivesdk

https://www.covidfacts.in/

https://docs.google.com/spreadsheets/d/1J2kO
bssgqNH0cpIZcjkdc8szhlz9pJazTMFyQ-fDo_A/
edit#gid=1745413321

https://linktr.ee/Okayival

https://external.sprinklr.com/insights/explorer/dashb
oard/601b9e214c7a6b689d76f493/tab/4?id=DASH
BOARD_601b9e214c7a6b689d76f493&home=1

https://covid19.nalsar.ac.in/crowdsourced-data/

ಪ್ರಜಾವಾಣಿ ಕೋವಿಡ್–19 ಕೈಪಿಡಿ 36


https://docs.google.com/spreadsheets/d/1OL7go19rRpSdxemQX-
HM0cTBds2hjspj7_U7Ag7NdOCQ/htmlview

https://www.theuncutteam.com/covidresources

https://docs.google.com/spreadsheets/d/1-HDRXAnMGkFIr8H-
QB_fUaZiL70c-rSuShYYfO2U6754/edit#gid=1554547770

https://indiacovidresources.in/

https://covidfood.retool.com/embedded/public/57eb2d29-47b4-
4322-aadf-83cf368d2990/

http://friends2support.org/inner/news/searchresult.aspx

https://covidfightclub.org/

ಸಂಪೂರ್ಣ ಮಾಹಿತಿ– ಬೆಂಗಳೂರು


https://oxygenblr.in/

https://covidhelplinebangalore.com/

ಸರ್ಕಾರದ ಸಂಪನ್ಮೂಲಗಳು– ಕರ್ನಾಟಕ


https://covid19.karnataka.gov.in/page/Helpline/en

ಸೂಚನೆ: ಈ ದಾಖಲೆಯಲ್ಲಿ ಯಾವುದೇ ರೀತಿ ಮಾಹಿತಿ ತಪ್ಪಾಗಿದ್ದರೆ ಅಥವಾ


ಸಂಖ್ಯೆಗಳು ಕಾರ್ಯನಿರ್ವಹಿಸದೆ ಇದ್ದಲ್ಲಿ ವಾಟ್ಸ್‌ಆ್ಯಪ್ ಸಂಖ್ಯೆ 9606038256
ಅಥವಾ ಮೇಲ್‌ feedback@prajavani.co.in ಮೂಲಕ ಮಾಹಿತಿ ನೀಡಿ. ನಾವು
ಪರಿಶೀಲಿಸಿ ತಿದ್ದುಪಡಿ ಮಾಡುತ್ತೇವೆ.

ಪ್ರಜಾವಾಣಿ ಕೋವಿಡ್–19 ಕೈಪಿಡಿ 37

You might also like