You are on page 1of 1

ತಾಜಾ ಕೊತ್ತಂಬರಿ ಸೊಪ್ಪನ್ನು ಹಲವಾರು ಬಗೆಯ ಅಡುಗೆಯ ತಯಾರಿಯಲ್ಲಿ 

ಬಳಸುತ್ತೇವೆ. ಪ್ರತಿಯೊಬ್ಬರ
ಮನೆಯ ರೆಫ್ರಿಜಿರೇಟರ್ ನಲ್ಲಿ ಕೊತ್ತಂಬರಿ ಸೊಪ್ಪು ತನ್ನದೇ ಆದ ಪ್ರತ್ಯೇಕ ಸ್ಥಾನವನ್ನು ಅಲಂಕರಿಸಿರುತ್ತದೆ.
ಹಲವಾರು ಆಹಾರ ಪದಾರ್ಥಗಳಿಗೆ ರುಚಿಯನ್ನು ತುಂಬುವ ಕೊತ್ತಂಬರಿ ಸೊಪ್ಪು ಒಂದು ಪರಿಣಾಮಕಾರಿ
ಗಿಡಮೂಲಿಕೆಯಾಗಿದ್ದು, ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.

ಈ ಸೊಪ್ಪಿನಲ್ಲಿ ಖನಿಜಗಳು, ಥಿಯಮೈನ್, ವಿಟಮಿನ್ ಸಿಯಂತಹ ವಿಟಮಿನ್‍ಗಳು, ರೈಬೊಫ್ಲವಿನ್, ರಂಜಕ,


ಕ್ಯಾಲ್ಸಿಯಂ, ಪ್ರೊಟೀನ್, ಕೊಬ್ಬು, ನಾರು ಮತ್ತು ನೀರು ಇರುತ್ತವೆ. ಕೊತ್ತಂಬರಿ ಸೊಪ್ಪಿನಲ್ಲಿ ಮೆದುವಾದ
ಮೆಣಸಿನಂತಹ ರುಚಿಯಿದೆ. ಇದು ಆಹಾರಕ್ಕೆ ಅನುಪಮವಾದ ರುಚಿಯನ್ನು ನೀಡುತ್ತದೆ. ಕೊತ್ತಂಬರಿ ಸೊಪ್ಪಿನ ಬೆಲೆ
ತೀರ ಕಡಿಮೆ, ಆದರೆ ಅದರಿಂದುಂಟಾಗುವ ಲಾಭ ಅಮೂಲ್ಯವಾದುದು. ಆಹಾರಕ್ಕೆ ಬಳಕೆಯಾಗುವುದರ ಜೊತೆಗೆ
ಈ ಕೊತ್ತಂಬರಿ ಸೊಪ್ಪು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಸಹ ನೆರವಾಗುತ್ತದೆ

You might also like