You are on page 1of 35

2 ನೇ ಹೆಚ್ಚು ವರಿ 2 ನೇ ದಿವಾಣಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ

ದಂಡಾಧಿಕಾರಿಗಳ ನ್ಯಾಯಾಲಯ, ಮೈಸೂರು

ದಿನಾಂಕ. 16 ನೇ ಏಪ್ರಿಲ್‍ ಮಾಹೆ 2021 ರಂದು


ಉಪಸ್ಧಿತರು :- ಶ್ರೀ ಭೀಮಪ್ಪ ಪೋಳ್, ಬಿ.ಎ., ಎಲ್.ಎಲ್.ಬಿ.

2 ನೇ ಹೆಚ್ಚು ವರಿ 2 ನೇ ದಿವಾಣಿ ನ್ಯಾಯಾಧೀಶರು, ಮೆೃಸೂರು

ಅಸಲು ದಾವಾ ಸಂಖ್ಯೆಃ 583/2008 

ವಾದಿಯರು :- 1. ನಿಂಗರಾಜು ಬಿನ್‍ಮಾದಶೆಟ್ಟಿ .,


46 ವರ್ಷ ವಯಸ್ಸು ,

2. ಬಸವರಾಜು ಬಿನ್‍ಮಾದಶೆಟ್ಟಿ .,
42 ವರ್ಷ ವಯಸ್ಸು ,
ಇವರು ಮೃತರಾಗಿದ್ದು
ಮೃತರ ವಾರಸುದಾರರುಗಳಾದ
(ಎ) ಶ್ರೀಮತಿ ಜಯಮ್ಮ ಕೋಂ ಲೇಟ್‍ಬಸವರಾಜು,
38 ವರ್ಷ ವಯಸ್ಸು ,

(ಬಿ) ಮಂಜು ಬಿನ್‍ಲೇಟ್‍ಬಸವರಾಜು,


17 ವರ್ಷ ಅಪ್ರಾಪ್ತ ವಯಸ್ಕ ರು,
ಇವರ ಗಾರ್ಡಿಯನ್ನಾಗಿ ಇವರ ಖಾಸಾ
ತಾಯಿ ಶ್ರೀಮತಿ ಜಯಮ್ಮ ರವರು ಪ್ರತಿನಿಧಿಸ್ಪ ಡುತ್ತಾರೆ.
ಪ್ರತಿವಾದಿ (ಎ) ಮತ್ತು (ಬಿ) ರವರ ವಾಸ ಬೈತಹಳ್ಳಿ ಗ್ರಾಮ,
ಜಯಪುರ ಹೋಬಳಿ,
ಮೈಸೂರು ತಾಲ್ಲೂ ಕು.

3. ಶ್ರೀಮತಿ ಚೆನ್ನ ಜಿ ಬಿನ್‍ ಮಾದಶೆಟ್ಟಿ .,


50 ವರ್ಷ ವಯಸ್ಸು ,

4. ಬಸಮ್ಮ ಣ್ಣಿ ಬಿನ್‍ ಮಾದಶೆಟ್ಟಿ .,


44 ವರ್ಷ ವಯಸ್ಸು ,
2 ಓ. ಎಸ್‍ನಂ.583/2008

5. ಯಶೋದ ಬಿನ್‍ಮಾದಶೆಟ‍್ಟಿ,
35 ವರ್ಷ ವಯಸ್ಸು ,
ಎಲ್ಲ ರ ವಾಸಃ ಬೈತಹಳ್ಳಿ ಗ್ರಾಮ,
ಜಯಪುರ ಹೋಬಳಿ,
ಮೈಸೂರು ತಾಲ್ಲೂ ಕು .

(ಪರವಾಗಿ ಶ್ರೀ ಪಿ.ಕೆ.ಪಿ., ವಕೀಲರು )


:- ವಿರುದ್ಧ :-

ಪ್ರತಿವಾದಿಯರು :- 1. ಶ್ರೀ ಮಾದಶೆಟ್ಟಿ ಬಿನ್‍ಮಲ್ಲ ಯ್ಯ ನಪುರ ಮಲ್ಲ ಶೆಟ್ಟಿ,


75 ವರ್ಷ ವಯಸ್ಸು ,

2. ಶ್ರೀಮತಿ ಸೀತಮ್ಮ ಬಿನ್‍ ಮಾದಶೆಟ್ಟಿ


ಕೋಂ ಶ್ರೀ ಮಾದಶೆಟ್ಟಿ,
70 ವರ್ಷ ವಯಸ್ಸು ,

3. ಶ್ರೀ ರಾಧಕೃಷ್ಣ ಬಿನ್‍ಮಾದಶೆಟ್ಟಿ,


55 ವರ್ಷ ವಯಸ್ಸು ,
ವಾಸ ನಂ.878, ಎಂ.ಬ್ಲಾಕ್,
ಮಹದೇವಪುರ, ಜೆ.ಪಿ.ನಗರ ಹತ್ತಿರ,
ಮೈಸೂರು.

4. ಶ್ರೀ ಸಿದ್ದ ಪ್ಪ ಬಿನ್‍ಮಾದಶೆಟ್ಟಿ,


53 ವರ್ಷ ವಯಸ್ಸು ,
ಇವರು ಮೃತರಾಗಿದ್ದು ಮೃತರ ವಾರಸುದಾರರುಗಳಾದ
(ಎ) ಶ್ರೀಮತಿ ಲಕ್ಷ್ಮಮ್ಮ ಕೋಂ ಲೇಟ್‍ಸಿದ್ದ ಶೆಟ್ಟಿ
50 ವರ್ಷ ವಯಸ್ಸು ,

(ಬಿ) ಶ್ರೀಮತಿ ನಾಗರತ್ನ ಬಿನ್‍ಲೇಟ್‍ ಸಿದ್ದ ಶೆಟ್ಟಿ


30 ವರ್ಷ ವಯಸ್ಸು ,
(ಸಿ) ಶ್ರೀಮತಿ ಸುಮ ಕೋಂ ಲೇಟ್‍ಸಿದ್ದ ಶೆಟ್ಟಿ
3 ಓ. ಎಸ್‍ನಂ.583/2008

28 ವರ್ಷ ವಯಸ್ಸು ,

(ಡಿ) ಶ್ರೀಮತಿ ಶಶಿ ಕೋಂ ಲೇಟ್‍ಸಿದ್ದ ಶೆಟ್ಟಿ


26 ವರ್ಷ ವಯಸ್ಸು ,

(ಇ) ಶ್ರೀಮತಿ ಆಶಾ ಕೋಂ ಲೇಟ್‍ಸಿದ್ದ ಶೆಟ್ಟಿ


24 ವರ್ಷ ವಯಸ್ಸು ,

(ಎಫ್) ಮಂಜು.ಎಸ್. ಬಿನ್‍ಲೇಟ್‍ಸಿದ್ದ ಶೆಟ್ಟಿ


20 ವರ್ಷ ವಯಸ್ಸು ,
ಪ್ರತಿವಾದಿ ನಂ.4(ಎ) ರಿಂದ (ಎಫ್) ರವರ ವಾಸ
ಮನೆ ನಂ.4-149, 2 ನೇ ಕ್ರಾಸ್,
ಜೆ.ಪಿ.ನಗರ, ಮೈಸೂರು.

5. ಶ್ರೀ ಬಿ.ಕೆ.ಪುಟ್ಟ ಮಾದಪ್ಪ ,


ಬಿನ್‍ಲೇಟ್‍ಬಿ.ಎಂ.ಕರಿಯಣ್ಣ ,
50 ವರ್ಷ ವಯಸ್ಸು ,

6. ಶ್ರೀಮತಿ ಸಿದ್ದ ಮ್ಮ ಬಿನ್‍ಪುಟ್ಟ ಮಾದಮ್ಮ


ಉರುಫ್‍ಶ್ರೀ ಈರಶೆಟ್ಟಿ
46 ವರ್ಷ ವಯಸ್ಸು ,

7. ಶ್ರೀ ಬಿ.ವಿ.ರಾಜೇಂದ್ರಸ್ವಾಮಿ,
ಬಿನ್‍‍ಬಿ.ಪಿ.ವೆಂಕಟೇಶಪ್ಪ ,
46 ವರ್ಷ ವಯಸ್ಸು ,

8. ಶ್ರೀ ಬಿ.ವಿ.ಶಿವಕುಮಾರಸ್ವಾಮಿ,
ಬಿನ್‍ಬಿ.ಪಿ.ವೆಂಕಟೇಶಪ್ಪ ,
44 ವರ್ಷ ವಯಸ್ಸು ,

9. ಶ್ರೀ ಪ್ರಕಾಶ್‍ಬಿನ್‍ಬಿ.ಪಿ.ವೆಂಕಟೇಶಪ್ಪ ,
40 ವರ್ಷ ವಯಸ್ಸು ,
4 ಓ. ಎಸ್‍ನಂ.583/2008

10. ಶ್ರೀ ಜಗದೀಶ


ಬಿನ್‍ಬಿ.ಪಿ.ವೆಂಕಟೇಶಪ್ಪ ,
38 ವರ್ಷ ವಯಸ್ಸು ,
ಪ್ರತಿವಾದಿ ನಂ.1,2 ಮತ್ತು 4 ರಿಂದ 10 ರವರ
ವಾಸ: ಬೈತಹಳ್ಳಿ ಗ್ರಾಮ,
ಜಯಪುರ ಹೋಬಳಿ,
ಮೈಸೂರು ತಾಲ್ಲೂ ಕು.

( ಪ್ರತಿವಾದಿ ನಂ.1 ರವರ ಪರ ಶ್ರೀ ಎಂ.ಬಿ.ಪಿ., ವಕೀಲರು )


(ಪ್ರತಿವಾದಿ ನಂ.2,3 ಮತ್ತು 4 ರವರ ಪರ ಶ್ರೀ ಕೆ ಎನ್‍ಕೆ., ವಕೀಲರು)
(ಪ್ರತಿವಾದಿ ನಂ.5 ರವರ ಪರ ಶ್ರೀ ಎ. ಎಸ್.ಎನ್. ವಕೀಲರು)
(ಪ್ರತಿವಾದಿ ನಂ. 7 ರಿಂದ 10 ರವರ ಪರ ಎ.ಎಸ್.ಎನ್.ವಕೀಲರು)

ದಾವಾ ಹೂಡಿದ ದಿನಾಂಕ : 18.10.2008


ದಾವಾ ಸ್ವ ರೂಪ : ವಿಭಾಗ ಮತ್ತು ಪ್ರತ್ಯೇಕ ಸ್ವಾಧೀನ ಕೋರಿ

ಸಾಕ್ಷ್ಯ ಪ್ರಾರಂಭಿಸಿದ ದಿನಾಂಕ : 12.07.2019


ತೀರ್ಪಿನ ದಿನಾಂಕ : 16.04.2021
ಒಟ್ಟು ಸಮಯ ದಿನಗಳು ತಿಂಗಳುಗಳು ವರ್ಷಗಳು
28 05 12

2 ನೇ ಹೆಚ್ಚು ವರಿ 2 ನೇ ದಿವಾಣಿ ನ್ಯಾಯಾಧೀಶರು, ಮೈಸೂರು

: ತೀರ್ಪು :

ಈ ದಾವೆಯನ್ನು ವಾದಿಯರು ಪ್ರತಿವಾದಿಯರ ವಿರುದ್ಧ ವಿಭಾಗ ಮತ್ತು

ಸ್ವಾದೀನತೆ ಕೋರಿ ಹಾಗೂ ಪ್ರತಿವಾದಿ 6 ರವರಿಗೆ ದಾವಾ ಅನುಸೂಚಿ ಐಟಂ ನಂ.6 ರಲ್ಲಿ

ಯಾವುದೇ ಹಕ್ಕು ಹಿತಾಸಕ್ತಿ ಇರುವುದಿಲ್ಲ ಎಂದು ಘೋಷಿಸಬೇಕು ಮತ್ತು ಪ್ರತಿವಾದಿ 6

ರವರ ಹೆಸರಿಗೆ ಆಗಿರುವ ಖಾತೆಯು ಕಾನೂನುಬಾಹಿರ ಎಂದು ಕೋರಿ ಸಲ್ಲಿಸಿರುತ್ತಾರೆ.


5 ಓ. ಎಸ್‍ನಂ.583/2008

ಷೆಡ್ಯೂ ಲ್‍

1. ಮೈಸೂರು ತಾಲ್ಲೂ ಕು, ಜಯಪುರ ಹೋಬಳಿ, ಬೈತಹಳ್ಳಿ ಗ್ರಾಮದ ಮನೆ ಖಾತಾ


ನಂ.47, ಕ್ಷೇತ್ರ 60 ಇಂಟು 24 (5 ಅಂಕಣ) ಮನೆಗೆ ಚಕ್ಕು ಬಂಧಿಃ-
ಪೂರ್ವಕ್ಕೆ :- ಗಲ್ಲಿ ಮತ್ತು ಖಾಲಿ ಜಾಗ
ಪಶ್ಚಿಮಕ್ಕೆ :- ಚಿಕ್ಕ ತಾಯಮ್ಮ ರವರ ನಿವೇಶನ
ಉತ್ತರಕ್ಕೆ :- ಓಣಿ
ದಕ್ಷಿಣಕ್ಕೆ :- ಬೀದಿ

2. ಮೈಸೂರು ತಾಲ್ಲೂ ಕು, ಜಯಪುರ ಹೋಬಳಿ, ಬೈತಹಳ್ಳಿ ಗ್ರಾಮದ ಖಾಲಿ


ಜಾಗದ ಖಾತಾ ನಂ.133, ಅಳತೆ ಪೂರ್ವ ಪಶ್ಚಿಮ 24 ಅಢಿ ಉತ್ತರ ದಕ್ಷಿಣ 14 ಅಡಿ
ಇದಕ್ಕೆ ಚಕ್ಕು ಬಂಧಿಃ-
ಪೂರ್ವಕ್ಕೆ :- ಚಿಕ್ಕ ತಾಯಮ್ಮ ರವರ ನಿವೇಶನ
ಪಶ್ಚಿಮಕ್ಕೆ :- ರಸ್ತೆ
ಉತ್ತರಕ್ಕೆ :- ಚಿಕ್ಕ ತಾಯಮ್ಮ ರವರ ಮನೆ
ದಕ್ಷಿಣಕ್ಕೆ :- ಪುಟ್ಟ ಶೆಟ್ಟಿ ಹಿತ್ತಲು

3. ಮೈಸೂರು ತಾಲ್ಲೂ ಕು, ಜಯಪುರ ಹೋಬಳಿ, ಬೈತಹಳ್ಳಿ ಗ್ರಾಮದ ಜಮೀನಿನ


ಸರ್ವೆ ನಂ.50/2 ಅಳತೆ 0.34 ಗುಂಟೆ ಇದಕ್ಕೆ ಚಕ್ಕು ಬಂಧಿಃ-
ಪೂರ್ವಕ್ಕೆ :- ಸಿದ್ದ ಶೆಟ್ಟಿರವರು ಈರಶೆಟ್ಟಿರವರಿಂದ ಖರೀದಿ ಮಾಡಿರುವ ಜಮೀನು
ಪಶ್ಚಿಮಕ್ಕೆ :- ಜವನಶೆಟ್ಟಿರವರ ಜಮೀನು
ಉತ್ತರಕ್ಕೆ :- ಜವನಶೆಟ್ಟಿರವರ ಜಮೀನು
ದಕ್ಷಿಣಕ್ಕೆ :- ಮಾರಮ್ಮ ದೇವಸ್ದಾನದ ಜಮೀನು ಈಗ
ರುದ್ರಪ್ಪ ರವರ ಹೆಸರಿನಲ್ಲಿದೆ.

4. ಮೈಸೂರು ತಾಲ್ಲೂ ಕು, ಜಯಪುರ ಹೋಬಳಿ, ಬೈತಹಳ್ಳಿ ಗ್ರಾಮದ ಜಮೀನಿನ


ಸರ್ವೆ ನಂ.125/3 ಅಳತೆ 1 ಎಕರೆ 22 4 ಗುಂಟೆ ಇದಕ್ಕೆ ಚಕ್ಕು ಬಂಧಿಃ-
ಪೂರ್ವಕ್ಕೆ :- ಹಳ್ಳ
ಪಶ್ಚಿಮಕ್ಕೆ :- ಜವನರಪ್ಪ ರವರ ಜಮೀನು
ಉತ್ತರಕ್ಕೆ :- ವೆಂಕಟೇಶಪ್ಪ ರವರು ಈರಶೆಟ್ಟಿರವರಿಂದ ಖರೀದಿ ಮಾಡಿರುವ
ಜಮೀನು
ದಕ್ಷಿಣಕ್ಕೆ :- ಹಳ್ಳ ಮತ್ತು ಜವನಶೆಟ್ಟಿರವರ ಜಮೀನು
6 ಓ. ಎಸ್‍ನಂ.583/2008

5. ಮೈಸೂರು ತಾಲ್ಲೂ ಕು, ಜಯಪುರ ಹೋಬಳಿ, ದೊಡ್ಡ ಕಾನ್ಯ ಗ್ರಾಮದ


ಜಮೀನಿನ ಸರ್ವೆ ನಂ.43/2 ಅಳತೆ 3.30 ಗುಂಟೆ ಜಮೀನು ಇದಕ್ಕೆ ಚಕ್ಕು ಬಂಧಿಃ-
ಪೂರ್ವಕ್ಕೆ :- ಮುದ್ದ ಬಸಪ್ಪ ರವರ ಜಮೀನು
ಪಶ್ಚಿಮಕ್ಕೆ :- ರಸ್ತೆ
ಉತ್ತರಕ್ಕೆ :- ಸಿದ್ದ ರಾಜಮ್ಮ ರವರ ಜಮೀನು
ದಕ್ಷಿಣಕ್ಕೆ :- ಮಹದೇವ ಮತ್ತು ರಾಜಶೇಖರ ಬಿನ್‍ಅಪ್ಪ ಜಣ್ಣ ರವರ ಜಮೀನು

6. ಮೈಸೂರು ತಾಲ್ಲೂ ಕು, ಜಯಪುರ ಹೋಬಳಿ, ಚಿಕ್ಕ ಕಾನ್ಯ ಗ್ರಾಮದ ಜಮೀನಿನ


ಸರ್ವೆ ನಂ.23/2 ಅಳತೆ 2.15 ಗುಂಟೆ ಇದಕ್ಕೆ ಚಕ್ಕು ಬಂಧಿಃ-
ಪೂರ್ವಕ್ಕೆ :- ಸಿದ್ದ ರಾಜಮ್ಮ ನ ಜಮೀನು
ಪಶ್ಚಿಮಕ್ಕೆ :- ಖಾಸಗಿ ಜಮೀನು
ಉತ್ತರಕ್ಕೆ :- ಸಿದ್ದ ರಾಜಮ್ಮ ನ ಜಮೀನು
ದಕ್ಷಿಣಕ್ಕೆ :- ಖಾಸಗಿ ಜಮೀನು

7. ಮೈಸೂರು ತಾಲ್ಲೂ ಕು, ಜಯಪುರ ಹೋಬಳಿ, ಚಿಕ್ಕ ಕಾನ್ಯ ಗ್ರಾಮದ ಜಮೀನಿನ


ಸರ್ವೆ ನಂ.23/3 ಅಳತೆ 1.08 ಗುಂಟೆ ಇದಕ್ಕೆ ಚಕ್ಕು ಬಂಧಿಃ-
ಪೂರ್ವಕ್ಕೆ :- ಮಲ್ಲ ಕ್ಕಾಜಿ ಜಮೀನು
ಪಶ್ಚಿಮಕ್ಕೆ :- ಸಿದ್ದ ರಾಜಮ್ಮ ನ ಜಮೀನು
ಉತ್ತರಕ್ಕೆ :- ಬಸವರಾಜಪ್ಪ ರವರ ಜಮೀನು
ದಕ್ಷಿಣಕ್ಕೆ :- ಸಿದ್ದ ರಾಜಮ್ಮ ರವರ ಜಮೀನು

2. ವಾದಿಯರ ದಾವೆಯ ಸಂಕ್ಷಿಪ್ತ ವಿವರಃ

ವಾದಿ 1 ರಿಂದ 5 ರವರು ಮತ್ತು ಪ್ರತಿವಾದಿ 3 ಮತ್ತು 4 ರವರು ಪ್ರತಿವಾದಿ 1 ರಿಂದ 2

ರವರ ಮಕ್ಕ ಳಾಗಿದ್ದು , ದಾವಾ ಸ್ವ ತ್ತು ಗಳು ಮೂಲತಃ ಸಿದ್ದ ಶೆಟ್ಟಿಯ ಮಗನಾದ ಮೃತ

ನಿಂಗಶೆಟ್ಟಿಗೆ ಸಂಬಂಧಿಸಿದ ಸ್ವ ತ್ತು ಗಳಾಗಿದ್ದು , ಸದರಿ ನಿಂಗಶೆಟ್ಟಿ ಚನ್ನ ಬಸಮ್ಮ ಎಂಬುವವರನ್ನು

ಮದುವೆಯಾಗಿದ್ದು , ಅವರಿಗೆ ಮಕ್ಕ ಳು ಇರದ ಕಾರಣ ಮಾದಶೆಟ್ಟಿಯ ಮಗಳಾದ

ಸೀತಮ್ಮ ನನ್ನು ಸಾಕು ಮಗಳು ಎಂದು ತೆಗೆದುಕೊಂಡಿದ್ದು , ಸದರಿ ನಿಂಗಶೆಟ್ಟಿ ಸದರಿ

ಸೀತಮ್ಮ ನ ಮದುವೆಯನ್ನು ಮೊದಲನೇ ಪ್ರತಿವಾದಿಯೊಂದಿಗೆ ಮಾಡಿದ್ದು , ಆದ್ದ ರಿಂದ


7 ಓ. ಎಸ್‍ನಂ.583/2008

ಸದರಿ ಮಾದಶೆಟ್ಟಿ ನಿಂಗಶೆಟ್ಟಿಗೆ ಅಳಿಯನಾಗಿದ್ದು , ಪ್ರತಿವಾದಿ 1 ರಿಂದ 3 ರವರು ನಿಂಗಶೆಟ್ಟಿ

ಮತ್ತು ಚೆನ್ನ ಬಸಮ್ಮ ರವರ ಪಾಲನೆ ಮತ್ತು ಪೋಷಣೆಯಲ್ಲಿದ್ದು ಪ್ರತಿವಾದಿ 1 ಮತ್ತು 2

ರವರು ದಾವಾ ಸ್ವ ತ್ತು ಗಳ ಸ್ವಾದೀನದಲ್ಲಿ ನಿಂಗಶೆಟ್ಟಿಯೊಂದಿಗೆ ಇದ್ದು , ಸದರಿ ನಿಂಗಶೆಟ್ಟಿ

ದಾವಾ ಸ್ವ ತ್ತು ಗಳನ್ನು ನೊಂದಾಯಿತ ಮರಣ ಶಾಸನದ ಮೂಲಕ ನೀಡಿದ್ದು , ಸದರಿ

ಮರಣ ಶಾಸನವು ದಿನಾಂಕ.8.12.1965 ರಂದು ನಿಂಗಶೆಟ್ಟಿ ಮರಣ ಹೊಂದಿದ ನಂತರ

ಜಾರಿಗೆ ಬಂದಿದ್ದು , ಸದರಿ ಮರಣ ಶಾಸನದ ಪ್ರಕಾರ ದಾವಾ ಸ್ವ ತ್ತು ಗಳನ್ನು ಪ್ರತಿವಾದಿ 1

ಮತ್ತು 2 ರವರು ಅನುಭವಿಸಿಕೊಂಡು ಬರುತ್ತಿದ್ದು , ಅವರಿಗೆ ಸದರಿ ಸ್ವ ತ್ತು ಗಳನ್ನು ಪರಭಾರೆ

ಮಾಡುವ ಸಂಪೂರ್ಣ ಹಕ್ಕು ಇರುವುದಿಲ್ಲ . ಏಕೆಂದರೆ ಸದರಿ ಸ್ವ ತ್ತು ಗಳಿಗೆ ಮಾಲೀಕತ್ವ ದ ಹಕ್ಕು

ಪ್ರತಿವಾದಿ 1 ಮತ್ತು 2 ರವರ ಮಕ್ಕ ಳು ಅಂದರೆ ವಾದಿ 1 ರಿಂದ 5 ಮತ್ತು ಪ್ರತಿವಾದಿ 3

ಮತ್ತು 4 ರವರಲ್ಲಿ ನಿಹಿತವಾಗಿದ್ದು , ಸದರಿ ನಿಂಗಶೆಟ್ಟಿ ಮರಣ ಹೊಂದಿದ ನಂತರ

ವಾದಿಯರು ಪ್ರತಿವಾದಿ 1 ಮತ್ತು 2 ದಾವಾ ಸ್ವ ತ್ತು ಗಳಲ್ಲಿನ ಮಾಲೀಕತ್ವ ದ ಆಧಾರದ

ಮೇಲೆ ಸ್ವಾದೀನಾನುಭವದಲ್ಲಿ ಇದ್ದು , ಪ್ರತಿವಾದಿ 3 ರವರು ವಾದಿಯರಿಂದ ಹಲವಾರು

ವರ್ಷಗಳಿಂದ ಬೇರೆಯಾಗಿ ವಾಸ ಮಾಡುತ್ತಿದ್ದು , ವಾದಿಯರು ಜಂಟಿ ಕುಟುಂಬದಿಂದ

ಬೇರೆಯಾಗುವ ವಿಚಾರದಿಂದ ಪ್ರತಿವಾದಿ 1 ರಿಂದ 4 ರವರನ್ನು ದಾವಾ ಸ್ವ ತ್ತಿನಲ್ಲಿ ತಮಗೆ

ಬರಬೇಕಾಗಿರುವ ಭಾಗವನ್ನು ಕೇಳಿದ್ದು , ಪ್ರತಿವಾದಿ 1 ರಿಂದ 4 ರವರು ಒಂದಲ್ಲ ಒಂದು

ಕಾರಣ ನೀಡಿ ಮುಂದೂಡುತ್ತಾ ಬಂದಿದ್ದು , ಕಂದಾಯ ದಾಖಲೆಗಳನ್ನು ಪರಿಶೀಲಿಸಿ

ನೋಡಿದಾಗ ಅವುಗಳು ಪ್ರತಿವಾದಿ 5 ರಿಂದ 7 ರವರ ಹೆಸರುಗಳು ನಮೂದಾಗಿದ್ದು ,

ಆದರೆ ದಾವಾ ಅನುಸೂಚಿ ಐಟಂ ನಂ.1, 2, 4 ರಿಂದ 7 ವಾದಿಯರ

ಸ್ವಾಧೀನಾನುಭವದಲ್ಲಿ ಇದ್ದು , ಪ್ರತಿವಾದಿ 1 ರಿಂದ 4 ರವರು ಕಾನೂನುಬಾಹಿರವಾಗಿ

ಕ್ರಯಪತ್ರ ಮಾಡಿಕೊಟ್ಟಿದ್ದು , ಅವರಿಗೆ ಆ ರೀತಿ ಕ್ರಯಪತ್ರ ಬರೆದುಕೊಡುವ ಸಂಪೂರ್ಣ


8 ಓ. ಎಸ್‍ನಂ.583/2008

ಅಧಿಕಾರ ಇರುವುದಿಲ್ಲ . ಸದರಿ ಬಿ.ಎಂ.ಕರಿಯಣ್ಣ ಮತ್ತು ಪ್ರತಿವಾದಿ 7 ರವರ ಪರವಾಗಿ

ಬರೆದುಕೊಟ್ಟಿರುವ ಕ್ರಯಪತ್ರವು ಕಾನೂನುಬಾಹಿರವಾಗಿದ್ದು , ಅದು ಪ್ರತಿವಾದಿಯರಿಗೆ

ಯಾವುದೇ ಬಂಧನಕಾರಿಯಲ್ಲ , ದಾವಾ ಅನುಸೂಚಿ ಐಟಂ ನಂ.6 ರಲ್ಲಿ ವಾದಿಗಳು

ಸ್ವಾಧೀನಾನುಭವದಲ್ಲಿ ಇದ್ದು , ಸದರಿ ಸ್ವ ತ್ತಿನ ಸಂಬಂಧಿ ಪ್ರತಿವಾದಿ 6 ರವರ ಹೆಸರಿಗೆ

ಆಗಿರುವ ಖಾತೆಯು ಕಂದಾಯ ಅಧಿಕಾರಿಗಳ ಜೊತೆ ಶಾಮೀಲಾಗಿ ಆಗಿರುವ ಖಾತೆ

ಆಗಿರುತ್ತದೆ. ಸದರಿ ಖಾತೆಯ ತಪ್ಪ ನ್ನು ತಿದ್ದು ಪಡಿ ಮಾಡಲು ಪ್ರತಿವಾದಿ 6 ರವರಿಗೆ

ಕೋರಿಕೊಂಡರು ಅವರು ಅದಕ್ಕೆ ಸ್ಪಂದನೆ ಮಾಡಿರುವುದಿಲ್ಲ . ಆದ್ದ ರಿಂದ ಅವರನ್ನು

ಪಕ್ಷಕಾರರನ್ನಾಗಿ ಮಾಡಲಾಗಿದ್ದು , ಪ್ರತಿವಾದಿ 1 ರಿಂದ 4 ರವರು ವಾದಿಯರಿಗೆ ದಾವಾ

ಸ್ವ ತ್ತಿನಲ್ಲಿ ಭಾಗ ಕೊಡದೇ ಇರುವುದರಿಂದ ಈ ದಾವೆ ಸಲ್ಲಿಸಿರುವುದಾಗಿ ಹೇಳಿರುತ್ತಾರೆ.

3. ಪ್ರತಿವಾದಿ ನಂ.4(ಎ) ರಿಂದ (ಎಫ್‍) ರವರು ದಾವಾ ಸಮನ್ಸ

ಜಾರಿಯಾದ ನಂತರ ತಮ್ಮ ವಕೀಲರ ಮುಖಾಂತರ ನ್ಯಾಯಾಲಯಕ್ಕೆ ಹಾಜರಾಗಿ

ಪ್ರತಿವಾದಿ ಪತ್ರ ಸಲ್ಲಿಸಿರುತ್ತಾರೆ.

ಪ್ರತಿವಾದಿ ನಂ.4(ಎ) ರಿಂದ (ಎಫ್‍) ರವರು ವಾದ ಪತ್ರದ ಎಲ್ಲಾ ಅಂಶಗಳನ್ನು

ಒಪ್ಪಿಕೊಂಡಿದ್ದು ಅವರು ಹೇಳುವುದೆನೆಂದರೆ, ಪ್ರತಿವಾದಿ 4 ರವರು ಕುಟುಂಬದಲ್ಲಿ

ಭಿನ್ನಾಭಿಪ್ರಾಯ ಬಂದಿದ್ದ ರಿಂದ ಜಂಟಿ ಕುಟುಂಬದಿಂದ ಬೇರೆ ಕಡೆಗೆ ವಾಸಿಸುತ್ತಿದ್ದು , ದಾವಾ

ಸ್ವ ತ್ತು ಗಳಲ್ಲಿ ಅವರು ಜಂಟಿ ಸ್ವಾದೀನದಲ್ಲಿ ಇದ್ದು , ಇತ್ತೀಚೆಗೆ ತಮಗೆ ಪ್ರತಿವಾದಿ 1 ಮತ್ತು 2

ರವರು ಯಾವುದೇ ಅಧಿಕಾರ ಇಲ್ಲ ದೇ ಮತ್ತು ಯಾವುದೇ ಕಾನೂನುಬದ್ಧ ಅವಶ್ಯ ಕತೆ

ಇಲ್ಲ ದೇ, ದಾವಾ ಅನುಸೂಚಿ ಐಟಂ ನಂ.6 ನ್ನು ದಿನಾಂಕ.27.1.1969 ರಂದು ಲಕ್ಷ್ಮಮ್ಮ

ಉರುಫ್‍ ರಂಗಮ್ಮ ರವರಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡಿದ್ದು , ದಿ

13.2.1970 ರಂದು 2 ನೇ ಪ್ರತಿವಾದಿ ದಾವಾ ಅನುಸೂಚಿ ಐಟಂ ನಂ.4 ನ್ನು


9 ಓ. ಎಸ್‍ನಂ.583/2008

ಕೆ.ರಂಗನಾಯಕರವರಿಗೆ ಮಾರಾಟ ಮಾಡಿದ್ದು , ಸದರಿ ಕ್ರಯಪತ್ರಗಳು ಪ್ರತಿವಾದಿ ರಿ

ರವರಿಗೆ ಬಂಧನಕಾರಿಯಲ್ಲ ಸದರಿ ಮೃತ ಪ್ರತಿವಾದಿ 4 ರವರು ಅವರ ಜೀವಿತ ಕಾಲದಲ್ಲಿ

ದಾವಾ ಸ್ವ ತ್ತು ಗಳಲ್ಲಿ ತಮಗೆ ಬರಬೇಕಾಗಿರುವ ಭಾಗವನ್ನು ಕೇಳಿದ್ದು , ಅವರು ಮರಣ

ಹೊಂದಿದ ನಂತರ ತಾವು ಅದರಲ್ಲಿ ಭಾಗ ಕೇಳಿದ್ದು , ತಮ್ಮ ಭಾಗವನ್ನು ನೀಡದೇ

ಇರುವುದರಿಂದ ತಾವು ಈ ಒಂದು ಕೌಂಟರ್ ಕ್ಲೇಮ್‍ ಸಲ್ಲಿಸಿದ್ದು , ತಮಗೆ 1/7 ಅಂಶ

ಹಿಸ್ಸೆ ಯನ್ನು ಕೊಡಬೇಕೆಂದು ವಿನಂತಿಸಿರುತ್ತಾರೆ.

4. ಪ್ರತಿವಾದಿ 5 ರವರು ತಮ್ಮ ವಕೀಲರ ಮೂಲಕ ತಮ್ಮ ಪ್ರತಿವಾದ ಪತ್ರ ಸಲ್ಲಿಸಿದ್ದು ,

ಅವರು ಹೇಳುವುದೆನೆಂದರೆ, ವಾದಿಯರು ಮತ್ತು ಪ್ರತಿವಾದಿ 1 ರಿಂದ 4 ರವರು

ಶಾಮೀಲಾಗಿ ಈ ದಾವೆ ಸಲ್ಲಿಸಿದ್ದು , ಪ್ರತಿವಾದಿ 1 ರವರಿಗೆ ದಾವಾ ಅನುಸೂಚಿ ಸ್ವ ತ್ತು ಗಳನ್ನು

ಮಾರಾಟ ಮಾಡುವ ಹಕ್ಕು ಇರಲಿಲ್ಲ ಎಂಬುದು ಸರಿಯಲ್ಲ . ವಾದಿಯರು ಮತ್ತು

ಪ್ರತಿವಾದಿ 1 ರಿಂದ 4 ರವರು ದಾವಾ ಸ್ವ ತ್ತಿನ ಜಂಟಿ ಸ್ವಾದೀನದಲ್ಲಿ ಇರುವುದಿಲ್ಲ . ವಾದಿ 1

ಮತ್ತು 2 ರವರು ಮಂಡ್ಯ ನಿವಾಸಿಗಳಾಗಿದ್ದು , ಪ್ರತಿವಾದಿ 3 ಮತ್ತು 4 ರವರ‍ು

ಮೈಸೂರಿನ ನಿವಾಸಿಗಳಾಗಿದ್ದು , ಪ್ರತಿವಾದಿ 1 ಮತ್ತು 2 ರವರು ಬ್ಯಾತಹಳ್ಳಿ ಗ್ರಾಮದ

ನಿವಾಸಿಗಳಾಗಿದ್ದು , ವಾದಿ 3 ರಿಂದ 5 ರವರು ವಿವಾಹಿತ ಹೆಣ್ಣು ಮಕ್ಕ ಳಾಗಿದ್ದು , ಅವರು

ಅವರ ಗಂಡನ ಮನೆಯಲ್ಲಿ ವಾಸವಾಗಿದ್ದು , ತಮ್ಮ ತಂದೆ ಬಿ.ಕೆ.ಕರಿಯಣ್ಣ ದಾವಾ

ಅನುಸೂಚಿ ಐಟಂ ನಂ.1,3, 5 ಮತ್ತು 6 ನ್ನು ದಿನಾಂಕ.21.2.1970 ರಂದು

ಪ್ರತಿವಾದಿ 1 ರವರಿಂದ ಹಾಗೂ ವಾದಿ 1 ಮತ್ತು 2 ಮತ್ತು ಪ್ರತಿವಾದಿ 3 ಮತ್ತು 4

ರವರಿಂದ ಕ್ರಯಕ್ಕೆ ಪಡೆದಿದ್ದು , ಅದೇ ದಿನ ಸ್ವಾದೀನವನ್ನು ಸಹ ತಮಗೆ ನೀಡಿದ್ದು , ಸದರಿ

ಕ್ರಯಪತ್ರದ ದಿನದಂದು, ವಾದಿ 1 ಮತ್ತು 2 ಮತ್ತು ಪ್ರತಿವಾದಿ 3 ಮತ್ತು 4 ರವರು

ಅಪ್ರಾಪ್ತ ವಯಸ್ಕ ರಾಗಿದ್ದು , ಪ್ರತಿವಾದಿ 1 ರವರು ಅವರ ಪರವಾಗಿಯೂ ಸಹ ಕ್ರಯಪತ್ರ


10 ಓ. ಎಸ್‍ನಂ.583/2008

ಬರೆದುಕೊಟ್ಟಿದ್ದು , ಮತ್ತು ಸದರಿ ಸ್ವ ತ್ತು ಗಳನ್ನು ಕೈ ಸಾಲ ತೀರಿಸಲು ಮತ್ತು ಇತರ

ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಹಾಗೂ ಹಸುಗಳನ್ನು ಖರೀದಿಸಲು ಮಾರಾಟ ಮಾಡಿದ್ದು ,

ವಾದಿಯರಿಗೆ ಸದರಿ ಸ್ವ ತ್ತು ಗಳ ಮೇಲೆ ಯಾವುದೇ ಹಕ್ಕು ಹಿತಾಸಕ್ತಿ ಇರುವುದಿಲ್ಲ . ಸದರಿ

ಸ್ವ ತ್ತು ಗಳ ಖಾತೆ ತಮ್ಮ ತಂದೆ ಹೆಸರಿಗೆ ಖಾತೆ ಆಗಿದ್ದು , ವಾದಿಯರು ಮತ್ತು ಪ್ರತಿವಾದಿ 1

ರಿಂದ 4 ರವರು ಹಲವು ಸ್ವ ತ್ತು ಗಳನ್ನು ರಂಗನಾಯಕರವರಿಗೆ ಮಾರಾಟ ಮಾಡಿದ್ದು ಸದರಿ

ರಂಗನಾಯಕ ಬಿ.ಪಿ.ವೆಂಕಟೇಶ್‍ ರವರಿಗೆ ಮಾರಾಟ ಮಾಡಿದ್ದು , ಪ್ರತಿವಾದಿ 6 ರವರ

ತಂದೆ ಹಲವು ಸ್ವ ತ್ತು ಗಳನ್ನು ಪಡೆದುಕೊಂಡಿರುವುದು ತಮ್ಮ ಗಮನಕ್ಕೆ ಬಂದಿದ್ದು , ತಮ್ಮ

ತಂದೆ ಸದ್ಬಾವಿಕ ಕ್ರಯದಾರನಾಗಿದ್ದು , ಪಿ ಎಲ್‍ ಡಿ ಬ್ಯಾಂಕಿನಿಂದ ತಮ್ಮ ತಂದೆ ಸದರಿ

ಸ್ವ ತ್ತು ಗಳ ಮೇಲೆ ಅವುಗಳ ಅಭಿವೃದ್ಧಿಗಾಗಿ ರೂ.2,28,000-00 ಸಾಲ ಪಡೆದಿದ್ದು , ಸದರಿ

ಸ್ವ ತ್ತು ಗಳಿಗೆ ರೂ.50 ಲಕ್ಷಕ್ಕಿಂತ ಹೆಚ್ಚಿಗೆ ಬೆಲೆ ಇರುವುದರಿಂದ ಈ ದಾವೆಯನ್ನು ವಿಚಾರಣೆ

ಮಾಡುವ ಮೌಲ್ಯಾ ಧಾರಿತ ನ್ಯಾಯಾಧೀಕರಣ ಈ ನ್ಯಾಯಾಲಯಕ್ಕೆ ಇರುವುದಿಲ್ಲ .

ವಾದಿಯರು ತಮ್ಮ ತಂದೆಯ ಹೆಸರಿಗೆ ಆಗಿರುವ ಖಾತೆಯನ್ನು ಪ್ರಶ್ನೆ ಮಾಡಿರುವುದಿಲ್ಲ .

ಆದ್ದ ರಿಂದ ಈ ದಾವೆಯನ್ನು ವಜಾಗೊಳಿಸಲು ವಿನಂತಿಸಿರುತ್ತಾರೆ.

5. ಪ್ರತಿವಾದಿ ನಂ.6, ರವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ

ಹಾಜರಾಗಿದ್ದು ತಮ್ಮ ಪ್ರತಿವಾದ ಪತ್ರವನ್ನು ಸಲ್ಲಿಸಿರುತ್ತಾರೆ, ಅವರು ಹೇಳುವುದೆನೆಂದರೆ,

ಅವರು ವಾದ ಪತ್ರದ ಅಂಶಗಳನ್ನು ಅಲ್ಲ ಗಳೆದಿದ್ದು , ಅವರು ಹೇಳುವುದೆನೆಂದರೆ, ದಾವಾ

ಅನುಸೂಚಿ ಐಟಂ ನಂ.2 ಸರ್ವೆ ನಂ.23/2, 2 ಎಕರೆ 15 ಗುಂಟೆ ಜಮೀನು ಮೂಲತಃ

ಸಿದ್ದ ಶೆಟ್ಟಿ ಎಂಬುವವರಿಗೆ ಸಂಬಂಧಿಸಿದ್ದು , ಸದರಿಯವರು 2 ನೇ ಪ್ರತಿವಾದಿಯ

ತಾತನಾಗಿದ್ದು , ಸದರಿ ಸಿದ್ದ ಶೆಟ್ಟಿಗೆ ಲಿಂಗಶೆಟ್ಟಿ ಮತ್ತು ಈರಶೆಟ್ಟಿ ಎಂಬ ಇಬ್ಬ ರೂ ಮಕ್ಕ ಳಿದ್ದು ,

ಸದರಿ ಸಿದ್ದ ಶೆಟ್ಟಿ ಮರಣ ಹೊಂದಿದ ನಂತರ ಸದರಿ ಸ್ವ ತ್ತು ಅವರ ಹಿರಿಯ ಮಗನಾದ
11 ಓ. ಎಸ್‍ನಂ.583/2008

ಲಿಂಗಶೆಟ್ಟಿಗೆ ಬಂದಿದ್ದು , ಸದರಿ ಲಿಂಗೆಶೆಟ್ಟಿಗೆ ಅವರ ನಡುವೆ ಆಗಿರುವ ವಿಭಾಗದ ಮೂಲಕ

ಬಂದಿದ್ದು , ಸದರಿ ಲಿಂಗಶೆಟ್ಟಿ ಸದರಿ ಸ್ವ ತ್ತನ್ನು ದಿನಾಂಕ.8.12.1965 ರ ಮರಣ ಶಾಸನದ

ಮೂಲಕ ಪ್ರತಿವಾದಿ 1 ಮತ್ತು 2 ರವರಿಗೆ ನೀಡಿದ್ದು ಅಂದಿನಿಂದ ಅವರು ಅದರ

ಮಾಲೀಕರಾಗಿದ್ದು ಮತ್ತು ಸ್ವಾದೀನದಲ್ಲಿದ್ದು , ನಂತರ ಪ್ರತಿವಾದಿ 1 ಮತ್ತು 2 ರವರು

ಸದರಿ ಸ್ವ ತ್ತನ್ನು ಲಕ್ಷ್ಮಮ್ಮ ಉರುಫ್‍ ರಂಗಮ್ಮ ರವರಿಗೆ ದಿನಾಂಕ.27.1.1969 ರಂದು

ಕ್ರಯಪತ್ರದ ಮೂಲಕ ವರ್ಗಾವಣೆ ಮಾಡಿದ್ದು , ಸದರಿ ಲಕ್ಷ್ಮಮ್ಮ ಉರುಫ್‍ ರಂಗಮ್ಮ

ಈರಶೆಟ್ಟಿಯ ಮೊದಲನೇ ಹೆಂಡತಿಯಾಗಿದ್ದು , ನಂತರ ಸದರಿ ಲಕ್ಷ್ಮಮ್ಮ ಉರುಫ್‍

ರಂಗಮ್ಮ ಗೆ ಮಕ್ಕ ಳು ಇರದೇ ಇರುವುದರಿಂದ ದಿನಾಂಕ.4.5.1981 ರಂದು ಪ್ರತಿವಾದಿ 6

ರವರಿಗೆ ನೊಂದಾಯಿತ ಮರಣ ಶಾಸನದ ಪ್ರಕಾರ ಸದರಿ ಸ್ವ ತ್ತನ್ನು ನೀಡಿದ್ದು , ಸದರಿ ಲಕ್ಷ್ಮಮ್ಮ

ಮರಣ ಹೊಂದಿದ ನಂತರ 6 ನೇ ಪ್ರತಿವಾದಿಯ ಹೆಸರಿಗೆ ಖಾತೆ ಆಗಿದ್ದು , ಅವರು ಅದರ

ಸ್ವಾದೀನಾನುಭವದಲ್ಲಿ ಇದ್ದು , ಸದರಿ ಖಾತೆಯನ್ನು ಪ್ರಶ್ನಿಸಿ ಪ್ರತಿವಾದಿ 1 ಮತ್ತು 2

ರವರು ಉಪ ವಿಭಾಗಾಧಿಕಾರಗಳ ಮುಂದೆ ಪ್ರಕರಣ ದಾಖಲ್ಮಾ ಡಿದ್ದು , ಸದರಿ ಪ್ರಕರಣ

30.5.2011 ರಂದು ವಜಾ ಆಗಿದ್ದು , ಸದರಿ ಆದೇಶವನ್ನು ಪ್ರತಿವಾದಿ 1 ಮತ್ತು 2 ರವರು

ಪ್ರಶ್ನೆ ಮಾಡಿರುವುದಿಲ್ಲ . ವಾದಿ ಮತ್ತು ಪ್ರತಿವಾದಿ 1 ರಿಂದ 4 ರವರಿಗೆ ಈ ಎಲ್ಲಾ ವಿಷಯ

ಗೊತ್ತಿದ್ದ ರೂ ಸಹ ಈ ಒಂದು ಸುಳ್ಳು ದಾವೆಯನ್ನು ದುರುದ್ದೇಶದಿಂದ ಸಲ್ಲಿಸಿದ್ದು

ಆದ್ದ ರಿಂದ ವಾದಿಯರ ಈ ದಾವೆಯನ್ನು ವಜಾಗೊಳಿಸಲು ವಿನಂತಿಸಿರುತ್ತಾರೆ.

6. ಪ್ರತಿವಾದಿ 9 ಮತ್ತು 10 ರವರು ಸಲ್ಲಿಸಿರುವ ಪ್ರತಿವಾದ ಪತ್ರದ ಸಂಕ್ಷೀಪ್ತ

ವಿವರ.

ಈ ದಾವೆಯು ಊರ್ಜಿತವಲ್ಲ ಏಕೆಂದರೆ ಹಲವಾರು ವರ್ಷಗಳ ಹಿಂದೆ

ಆಗಿರುವ ಪರಭಾರೆಯನ್ನು ವಾದಿಯರು ಪ್ರಶ್ನೆ ಮಾಡಿದ್ದು , ಇದಲ್ಲ ದೇ ಸದರಿ


12 ಓ. ಎಸ್‍ನಂ.583/2008

ವರ್ಗಾವಣೆಯನ್ನು ರದ್ದು ಪಡಿಸಲು ಅವರು ಕೋರಿಕೊಂಡಿರುವುದಿಲ್ಲ . ಈ ದಾವೆಯು

ಶಾಮೀಲಾಗಿ ಸಲ್ಲಿಸಿರುವ ದಾವೆ ಆಗಿರುತ್ತದೆ. ದಾವಾ ಅನಸುೂಚಿ ಐಟಂ ನಂ.4 ತಮಗೆ

ಸಂಬಂಧಿಸಿದ್ದಾಗಿದ್ದು , ಪ್ರತಿವಾದಿ 1 ರಿಂದ 5 ರವರು ಪ್ರತಿವಾದಿ 1 ಮತ್ತು 2 ರವರ

ಮಕ್ಕ ಳು ಎಂದು ಅವರೇ ರುಜುವಾತು ಮಾಡಬೇಕಾಗಿದೆ. ಪ್ರತಿವಾದಿ 2 ರವರು

ನಿಂಗಶೆಟ್ಟಿಯ ಮತ್ತು ಚೆನ್ನ ಬಸಮ್ಮ ನ ಸಾಕು ಮಗಳು ಆಗಿರುವುದಿಲ್ಲ . ಅವರು ಅವರ ದತ್ತು

ಮಗಳಾಗಿದ್ದು , ಪ್ರತಿವಾದಿ 2 ರವರು ಮಾದಶೆಟ್ಟಿ ಮಗಳು ಎಂದು ತೋರಿಸಿರುವುದು ತಪ್ಪು

ಇರುತ್ತದೆ. ಸದರಿ ನಿಂಗಶೆಟ್ಟಿ ಮತ್ತು ಚೆನ್ನ ಬಸಮ್ಮ ಮರಣ ಹೊಂದಿದ ನಂತರ ಪ್ರತಿವಾದಿ 2

ರವರಿಗೆ ದಾವಾ ಅನುಸೂಚಿ ಐಟಂ ನಂ.4 ವಾರಸ ನಾತೆಯಿಂದ ಬಂದಿದ್ದು ಸದರಿ

ವ್ಯ ಕ್ತಿಗಳಿಗೆ ಇವರೊಬ್ಬ ರೇ ವಾರಸುದಾರರಾಗಿದ್ದು , ದಿನಾಂಕ 20.2.1951 ರ ಮರಣ

ಶಾಸನದ ಬಗ್ಗೆ ತಮಗೆ ಗೊತ್ತಿಲ್ಲ , ಒಂದು ವೇಳೆ ಸದರಿ ಮರಣ ಶಾಸನವು ರುಜುವಾತದರೆ

ಕಲಂ 14 ರ ಹಿಂದೂ ಉತ್ತರಾಧಿಕಾರದ ಅಧಿನಿಂದ‍ುಮ 1956 ರ ಪ್ರಕಾರ 2 ನೇ

ಪ್ರತಿವಾದಿ ದಾವಾ ಅನುಸೂಚಿ ಐಟಂ ನಂ.4 ಕ್ಕೆ ಸಂಪೂರ್ಣ ಮಾಲೀಕರಾಗಿರುತ್ತಾರೆ.

ಸದರಿ ಸೀತಮ್ಮ ದಿನಾಂಕ.13.2.1970 ರಂದು ದಾವಾ ಅನುಸೂಚಿ ಐಟಂ ನಂ.4 ನ್ನು

ಕೆ.ರಂಗನಾಯಕ ರವರಿಗೆ ಮಾರಾಟ ಮಾಡಿದ್ದು , ನಂತರ ಸದರಿ ಕೆ ರಂಗನಾಯಕ

ದಿನಾಂಕ.30.5.1970 ರಂದು ಸದರಿ ಸ್ವ ತ್ತನ್ನು ಬಿ.ಪಿ.ವೆಂಕಟೇಶಪ್ಪ ರವರಿಗೆ ಮಾರಾಟ

ಮಾಡಿದ್ದು ಅವರು ತಮ್ಮ ತಂದೆಯಾಗಿದ್ದು , ಸದರಿ ಕ್ರಯದ ದಿನದಿಂದ ತಮ್ಮ ತಂದೆ ಅದರ

ಮಾಲೀಕರಾಗಿದ್ದು ಅದರ ಸ್ವಾದೀನಾನಭವದಲ್ಲಿ ಇದ್ದು , ದಾವಾ ಅನುಸೂಚಿ ಐಟಂ

ನಂ.4, 39 ವರ್ಷಗಳಿಂದ ತಮ್ಮ ಸ್ವಾದೀನದಲ್ಲಿ ಇದ್ದು , ಆದ್ದ ರಿಂದ ಈ ದಾವೆ

ಅನೂರ್ಜಿತವಾಗಿರುತ್ತದೆ, ಏಕೆಂದರೆ ಈ ದಾವೆಗೆ ಕಾಲ ಪರಿಮಿತಿ ಮೀರಿ ಹೋಗಿರುತ್ತದೆ.

ಈ ದಾವೆಗೆ ಯಾವುದೇ ವ್ಯಾಜ್ಯಾ ಕಾರಣ ಇಲ್ಲ , ತಾವು ಸದರಿ ಸ್ವ ತ್ತಿನ ಸದ್ಬಾವಿಕ
13 ಓ. ಎಸ್‍ನಂ.583/2008

ಕ್ರಯದಾರರಾಗಿದ್ದು , 40 ವರ್ಷಗಳಿಂದ ಅದರ ಸ್ವಾದೀನಾನುಭವದಲ್ಲಿ ಇದ್ದು , ಆದ್ದ ರಿಂದ

ವಾದಿಯರ ಈ ದಾವೆಯನ್ನು ವಜಾಗೊಳಿಸಲು ವಿನಂತಿಸಿರುತ್ತಾರೆ.

7. ಪ್ರತಿವಾದಿ ನಂ. 7,8, 9 ಮತ್ತು 10 ರವರು ನ್ಯಾಯಾಲಯಕ್ಕೆ ಹಾಜರಾಗಿ

ಪ್ರತಿವಾದ ಪತ್ರವನ್ನು ಸಲ್ಲಿಸಿದ್ದು , ಅವರು ಹೇಳುವುದೆನೆಂದರೆ, ದಾವಾ ಅನುಸೂಚಿ ಐಟಂ

ನಂ.4 ನ್ನು ದಿನಾಂಕ.7.12.1970 ರಂದು ತಮ್ಮ ತಂದೆ ಮಾದಶೆಟ್ಟಿರವರಿಂದ ಕ್ರಯಕ್ಕೆ

ಪಡೆದಿದ್ದು , ತದ ನಂತರ ರಂಗನಾಯಕ ಸದರಿ ಸ್ವ ತ್ತಿನ ಮೇಲೆ ಹಕ್ಕು ಕ್ಲೇಮ್‍ ಮಾಡಿದ್ದು

ನಂತರ ದಿನಾಂಕ.30.5.1970 ರಂದು ಒಂದು ನೊಂದಾಯಿತ ಪತ್ರ ಬರೆದುಕೊಟ್ಟಿದ್ದು ,

ಅಂದಿನಿಂದ ತಮ್ಮ ತಂದೆ ದಾವಾ ಅನುಸೂಚಿ ಐಟಂ ನಂ.4 ಕ್ಕೆ ಮಾಲೀಕರಾಗಿದ್ದು ಅದರ

ಸ್ವಾದೀನಾನುಭವದಲ್ಲಿ ಇದ್ದು , ಸದರಿ ಸ್ವ ತ್ತಿನ ಮೇಲೆ ರಂಗನಾಯಕನ ಪರವಾಗಿ ಭೋಗ್ಯ

ಇದ್ದು , ಸದರಿ ಭೋಗ್ಯ ವನ್ನು ವಿಮೋಚನೆ ಮಾಡಿದ್ದು , ಈಗ ದಾವಾ ಅನುಸೂಚಿ ಐಟಂ

ನಂ.4 ತಮ್ಮ ಸ್ವಾದೀನಾನುಭವದಲ್ಲಿ ಇದ್ದು , ಆದ್ದ ರಿಂದ ವಾದಿಯರ ದಾವೆಯನ್ನು

ವಜಾಗೊಳಿಸಲು ವಿನಂತಿಸಿರುತ್ತಾರೆ.

8. ವಾದ ಮತ್ತು ಪ್ರತಿವಾದ ಪತ್ರದ ಆಧಾರದ ಮೇಲೆ ಕಛೇರಿ ಮೊದಲನೆ

ಪೀಠಾಸೀನಾಧಿಕಾರಿ ಈ ಕೆಳಗಿನ ವಿವಾದಂಶಗಳನ್ನು ರಚಿಸಿರುತ್ತಾರೆ.

1. ವಾದಿಯರು ದಾವಾ ಸ್ವ ತ್ತು ಗಳು ತಮ್ಮ ಮತ್ತು ಪ್ರತಿವಾದಿ 1


ರಿಂದ 4 ರವರ ಜಂಟಿ ಕುಟುಂಬದ ಸ್ವ ತ್ತು ಗಳಾಗಿವೆ ಎಂದು
ರುಜುವಾತು ಪಡಿಸಿರುತ್ತಾರೆಯೇ ?

2. ವಾದಿಯರು ಪ್ರತಿವಾದಿ 1 ರಿಂದ 4 ರವರು


ಕಾನೂನುಬಾಹಿರವಾಗಿ ವಿ.ಕೆ.ಕರಿಯಣ್ಣ ಮತ್ತು ವಿ.ಪಿ.
ವೆಂಕಟಶೆಪ್ಪ ರವರಿಗೆ ಕ್ರಯಪತ್ರದ ಮೂಲಕ ವರ್ಗಾವಣೆ ಮಾಡಿದ್ದಾರೆ
ಎಂದು ರುಜುವಾತು ಪಡಿಸಿರುತ್ತಾರೆಯೇ ?
14 ಓ. ಎಸ್‍ನಂ.583/2008

3. ಪ್ರತಿವಾದಿ 9 ಮತ್ತು 10 ರವರು ಕ್ರಯಪತ್ರಗಳ ರದ್ಧ ತಿಯ


ಪರಿಹಾರ ಕೇಳದೇ ಇರುವುದರಿಂದ ಈ ದಾವೆ ಅನೂರ್ಜಿತವಾಗಿದೆ
ಎಂದು ರುಜುವಾತುಪಡಿಸಿರುವರೇ ?

4. ಪ್ರತಿವಾದಿ 9 ಮತ್ತು 10 ರವರು ಈ ದಾವೆಗೆ ಕಾಲ ಪರಿಮಿತಿ


ಮೀರಿ ಹೋಗಿದೆ ಎಂದು ರುಜುವಾತುಪಡಿಸಿರುತ್ತಾರೆಯೇ ?

5. ವಾದಿಯರು ದಾವೆಯಲ್ಲಿ ಕೇಳಿದಂತೆ ವಿಭಾಗ ಮತ್ತು ಪ್ರತ್ಯೇಕ


ಸ್ವಾಧಿನತೆ ಪರಿಹಾರ ಪಡೆಯಲು ಆರ್ಹರೆ ?

6. ವಾದಿಯರು ದಾವೆಯಲ್ಲಿ ಕೇಳಿದಂತೆ ಘೋಷಣೆ ಪರಿಹಾರ


ಪಡೆಯಲು ಆರ್ಹರೆ ?

7. ಮಾಡುವ ಆದೇಶ ಅಥವಾ ಡಿಕ್ರಿ ಏನು ?

ದಿನಾಂಕ.6.2.2013 ರಂದು ರಚಿಸಲಾದ ಹೆಚ್ಚು ವರಿ


ವಿವಾದಾಂಶಗಳು .
1. 6 ನೇ ಪ್ರತಿವಾದಿಯು, ತಾನು ದಾವಾ ಅನುಸೂಚಿ ಐಟಂ
ನಂ.6 ಕ್ಕೆ ದಿನಾಂಕ.4.5.1981 ರಂದು ಲಕ್ಷ್ಮಮ್ಮ ಉರುಫ್
ರಂಗಮ್ಮ ತನಗೆ ಬರೆದುಕೊಟ್ಟಿರುವ ಮರಣ ಶಾಸನದ ಪ್ರಕಾರ
ಮಾಲೀಕರಾಗಿದ್ದಾರೆಂದು ರುಜುವಾತುಪಡಿಸಿರ‍ುತ್ತಾರೆಯೆ?

2. ಪ್ರತಿವಾದಿ 6 ರವರು ದಾವಾ ಅನುಸೂಚಿ ಐಟಂ ನಂ.6 ರಲ್ಲಿ


ಸ್ವಾದೀನದಲ್ಲಿ ಇದ್ದಾರೆ ಎಂದು ರುಜುವಾತು
ಪಡಿಸಿರುತ್ತಾರೆಯೇ?

ದಿನಾಂಕ.23.2.2017 ರಂದು ರಚಿಸಲಾದ ಹೆಚ್ಚು ವರಿ


ವಿವಾದಾಂಶ 1 .

3. ಪ್ರತಿವಾದಿ 4 ರವರ ಕಾನೂನುಬದ್ಧ ವಾರಸುದಾರರು


ಕೌಂಟರ್ ಕ್ಲೇಮ್‍ನಲ್ಲಿ ಕೇಳಿದ ಪರಿಹಾರ ಪಡೆಯಲು ಅರ್ಹರೆ?
15 ಓ. ಎಸ್‍ನಂ.583/2008

9. ವಾದಿಯರು ತಮ್ಮ ದಾವೆಯನ್ನು ಸಮರ್ಥಿಸಲು 3 ನೇ ವಾದಿ ಪಿ ಡಬ್ಲ್ಯೂ. 1

ಎಂದು ಸಾಕ್ಷ್ಯ ನುಡಿದಿದ್ದು , ತಮ್ಮ ಪರವಾಗಿ 14 ದಾಖಲೆಗಳನ್ನು ನಿಶಾನೆ ಪಿ.1 ರಿಂದ

14 ಎಂದು ಗುರುತಿಸಿಕೊಂಡಿದ್ದು , ಅವುಗಳೆಂದರೆ ನಿಪಿ.1 ಮತ್ತು 2 ರಶೀದಿ ಪಟ್ಟಾ

ಪುಸ್ತಕ, ನಿಪಿ.3 ರಿಂದ 10 ಪಹಣಿ ಪತ್ರಿಕೆಗಳು, ನಿಪಿ.11 ಕ್ರಯಪತ್ರದ ದೃಢೀಕೃತ ನಕಲು

ನಿಪಿ.12 ಕ್ರಯಪತ್ರದ ದೃಢೀಕೃತ ನಕಲು, ನಿಪಿ.13 ಕ್ರಯಪತ್ರದ ದೃಢೀಕೃತ ನಕಲು ಮತ್ತು

ನಿಪಿ.14 ಮೃತ್ಯು ಪತ್ರದ ದೃಢೀಕೃತ ನಕಲುಗಳಾಗಿರುತ್ತವೆ.

10. ಪ್ರತಿವಾದಿಯರು ನ್ಯಾಯಾಲಯಕ್ಕೆ ಹಾಜರಾಗಿ ಪ್ರತಿವಾದ ಪತ್ರವನ್ನು

ಸಲ್ಲಿಸಿರುತ್ತಾರೆ. 5 ಮತ್ತು 6 ನೇ ಪ್ರತಿವಾದಿ ತಮ್ಮ ತಕರಾರನ್ನು ಸಮರ್ಥಿಸಲು ಅವರು

ಡಿ ಡಬ್ಲ್ಯೂ. 1 ಮತ್ತು 2 ಎಂದು ಸಾಕ್ಷ್ಯ ನುಡಿದಿದ್ದು , ತಮ್ಮ ಪರವಾಗಿ ಮೂರು ಜನ

ಸಾಕ್ಷಿದಾರರನ್ನು ಡಿ ಡಬ್ಲೂ 3 ರಿಂದ 5 ಎಂದು ಸಾಕ್ಷ್ಯ ವಿಚಾರಣೆ ಮಾಡಿಸಿದ್ದು , ಮತ್ತು ತಮ್ಮ

ಪರವಾಗಿ 57 ದಾಖಲೆಗಳನ್ನು ನಿಶಾನೆ ಡಿ.1 ರಿಂದ ನಿಡಿ. 57 ಎಂದು

ಗುರುತಿಸಿಕೊಂಡಿದ್ದು , ಅವುಗಳೆಂದರೆ ನಿಡಿ.1 ಕ್ರಯಪತ್ರದ ದೃಢೀಕೃತ ನಕಲು, ನಿಡಿ.2

ಋಣಭಾರ ಪ್ರಮಾಣ ಪತ್ರದ ನಮೂನೆ 15, ನಿಡಿ.3 ಋಣಭಾರ ಪ್ರಮಾಣ ಪತ್ರದ

ನಮೂನೆ 16, ನಿಡಿ.4 ಮತ್ತು 5 ಮ್ಯು ಟೇಷನ್‍ ರಿಜಿಸ್ಟ ರ್ ಪ್ರತಿಗಳು, ನಿಡಿ.6 ರಿಂದ 12

ಕರ ಸಂದ ರಶೀದಿಗಳು, ನಿಡಿ. 13 ಆರ್ ಆರ್ ಟಿ ಅಪೀಲ್‍ ನಂ.378/07-08 ರ

ದೃಢೀಕೃತ ನಕಲು, ನಿಡಿ.14 ಪಹಣಿ ಪತ್ರಿಕೆ, ನಿಡಿ.15 ಪಹಣಿ ಪತ್ರಿಕೆ ನಿಡಿ.16 ಮತ್ತು 17

ಫಸಲು ಪಹಣಿಗಳು, ನಿಡಿ.18 ರಿಂದ 21 ಪಹಣಿ ಪತ್ರಿಕೆಗಳು, ನಿಡಿ. 22 ಫಸಲು ಪಹಣಿ,

ನಿಡಿ.23 ಫಸಲು ಪಹಣಿ, ನಿಡಿ.24 ರಿಂದ 29 ಕಂದಾಯ ರಶೀದಿಗಳು, ನಿಡಿ 30 ಮತ್ತು

31 ಪಹಣಿ ಪತ್ರಿಕೆಗಳ ದೃಢೀಕೃತ ನಕಲುಗಳು, ನಿಡಿ.32 ರಿಂದ 34 ಪಹಣಿ ಪತ್ರಿಕೆಗಳು,

ನಿಡಿ. 35 ಕ್ರಯಪತ್ರ, ನಿಡಿ.36 ಮೃತ್ಯು ಪತ್ರ, ನಿಡಿ.36(ಎ), ಮೃತ್ಯು ಪತ್ರದ ತರ್ಜುಮೆ


16 ಓ. ಎಸ್‍ನಂ.583/2008

ಪ್ರತಿ, ನಿಡಿ.37 ದಿನಾಂಕ.13.2.1970 ರ ಕ್ರಯಪತ್ರದ ದೃಢೀಕೃತ ನಕಲು, ನಿಡಿ.38

ದಿನಾಂಕ.30.5.1970 ರ ಕ್ರಯಪತ್ರದ ದೃಢೀಕೃತ ನಕಲು, ನಿಡಿ.39 ಋಣಭಾರ

ಪ್ರಮಾಣ ಪತ್ರ, ನಿಡಿ.40 ಭೋಗ್ಯ ಪತ್ರದ ದೃಢೀಕೃತ ನಕಲು, ನಿಡಿ.41 ಫಸಲು ಪಹಣಿ

ಪತ್ರಿಕೆಯ ದೃಢೀಕೃತ ನಕಲು, ನಿಡಿ.42 ರಿಂದ 47 ಬರಹದ ಪಹಣಿ ಪತ್ರಿಕೆಗಳು, ನಿಡಿ.48

ಮತ್ತು 49 ಪಹಣಿ ಪತ್ರಿಕೆಗಳು, ನಿಡಿ.50 ಹಿಂಬರಹ, ನಿಡಿ.51 ರಿಂದ 56 ಕರ ಸಂದ

ರಶೀದಿಗಳು, ನಿಡಿ.57 ದಿನಾಂಕ.7.2.1970 ರ ಕ್ರಯಪತ್ರದ ದೃಢೀಕೃತ

ನಕಲುಗಳಾಗಿರುತ್ತವೆ.

11. ವಾದಿಯರ ಪರ ಮತ್ತು ಪ್ರತಿವಾದಿ 5 ಮತ್ತು 7 ರಿಂದ 10 ರ ಪರ

ವಕೀಲರ ವಾದವನ್ನು ಆಲಿಸಲಾಯಿತು.

12. ವಾದಿ ಮತ್ತು ಪ್ರತಿವಾದಿಯರು ಸಲ್ಲಿಸಿರುವ ದಾಖಲಾತಿಗಳನ್ನು

ಪರಿಶೀಲಿಸಿದ ನಂತರ ಮೇಲಿನ ವಿವಾದಂಶಗಳಲ್ಲಿ ಈ ಕೆಳಕಂಡಂತೆ ಉತ್ತರಿಸಿರುತ್ತೇನೆ.

ವಿವಾದಾಂಶ 1 : ನಕಾರಾತ್ಮ ಕವಾಗಿ

ವಿವಾದಾಂಶ 2 : ನಕಾರಾತ್ಮ ಕವಾಗಿ

ವಿವಾದಾಂಶ 3 : ಸಕಾರಾತ್ಮ ಕವಾಗಿ

ವಿವಾದಾಂಶ 4 : ಸಕಾರಾತ್ಮ ಕವಾಗಿ

ವಿವಾದಾಂಶ 5 : ಸಕಾರಾತ್ಮ ಕವಾಗಿ

ವಿವಾದಾಂಶ 6 : ನಕಾರಾತ್ಮ ಕವಾಗಿ

ಹೆಚ್ಚು ವರಿ ವಿವಾದಾಂಶ 1 : ಚರ್ಚಿಸುವ ಅಗತ್ಯ ತೆ ಇಲ್ಲ

ಹೆಚ್ಚು ವರಿ ವಿವಾದಾಂಶ 2 : ಚರ್ಚಿಸುವ ಅಗತ್ಯ ತೆ ಇಲ್ಲ

ಹೆಚ್ಚು ವರಿ ವಿವಾದಾಂಶ 3 : ನಕಾರಾತ್ಮ ಕವಾಗಿ

ವಿವಾದಾಂಶ 7 : ಅಂತಿಮ ಆದೇಶದಂತೆ

ಈ ಕೆಳಕಂಡ
17 ಓ. ಎಸ್‍ನಂ.583/2008

ಕಾರಣಗಳು

13. ವಿವಾದಾಂಶ -1 : ವಿವಾದಾಂಶ 1 ರ ಪ್ರಕಾರ ವಾದಿಯರು ದಾವಾ

ಸ್ವ ತ್ತು ಗಳು ತಮ್ಮ ಮತ್ತು ಪ್ರತಿವಾದಿ 1 ರಿಂದ 4 ರವರ ಜಂಟಿ ಕುಟುಂಬದ ಸ್ವ ತ್ತು ಗಳು

ಆಗಿವೆ ಎಂದು ರುಜುವಾತುಪಡಿಸಬೇಕಾಗಿರುತ್ತದೆ.

14. ವಾದಿಯರು ಹೇಳುವುದೆನೆಂದರೆ, ದಾವಾ ಸ್ವ ತ್ತು ಗಳು ಮೂಲತಃ

ನಿಂಗಶೆಟ್ಟಿರವರಿಗೆ ಸಂಬಂಧಿಸಿದ್ದು , ಸದರಿ ನಿಂಗಶೆಟ್ಟಿಯ ಹೆಂಡತಿ ಚನ್ನ ಬಸಮ್ಮ ಆಗಿದ್ದು ,

ಸದರಿ ನಿಂಗಶೆಟ್ಟಿ ಮತ್ತು ಚನ್ನ ಬಸಮ್ಮ ಗೆ ಮಕ್ಕ ಳು ಇರದ ಕಾರಣ ಅವರು ಮಾದಶೆಟ್ಟಿಯ

ಮಗಳಾದ ಸೀತಮ್ಮ ಎಂಬುವವರನ್ನು ಸಾಕು ಮಗಳು ಎಂದು ಅವರನ್ನು ಸಾಕಿದ್ದು , ಸದರಿ

ಸೀತಮ್ಮ ಈ ದಾವೆಯ 2 ನೇ ಪ್ರತಿವಾದಿ ಆಗಿದ್ದು , ಅವರ ಗಂಡ ಮಾದಶೆಟ್ಟಿ 1 ನೇ

ಪ್ರತಿವಾದಿ ಆಗಿದ್ದು , ಸದರಿ ಪ್ರತಿವಾದಿ 1 ಮತ್ತು 2 ರವರ ಮಕ್ಕ ಳು ತಾವುಗಳು ಮತ್ತು

ಪ್ರತಿವಾದಿ 3 ರಿಂದ 4 ರವರಾಗಿದ್ದು , ದಾವಾ ಸ್ವ ತ್ತು ಗಳು ಪ್ರತಿವಾದಿ 1 ಮತ್ತು 2 ರವರಿಗೆ

ದಿನಾಂಕ.8.12.1965 ರಂದು ಮರಣ ಶಾಸನದ ಮೂಲಕ ಬಂದಿದ್ದು , ಸದರಿ ಮರಣ

ಶಾಸನದ ಮೂಲಕ ಅವರಿಗೆ ಕೇವಲ ಅನುಬೋಗದ ಹಕ್ಕು ಇದ್ದು , ಪರಭಾರೆ ಮಾಡುವ

ಹಕ್ಕು ಇರುವುದಿಲ್ಲ . ಸದರಿ ಹಕ್ಕು ತಮಗೆ ಇದ್ದು , ಸದರಿ ಸ್ವ ತ್ತು ಗಳಲ್ಲಿ ತಾವು ಭಾಗ

ಕೇಳಿದಾಗ ಪ್ರತಿವಾದಿ 1 ಮತ್ತು 2 ರವರು ಒಂದಲ್ಲ ಒಂದು ಕಾರಣ ನೀಡಿ

ಮುಂದೂಡುತ್ತಾ ಬಂದಿದ್ದು , ತಾವು ಕಂದಾಯ ದಾಖಲೆಗಳನ್ನು ಪರಿಶೀಲಿಸಿ ನೋಡಿದಾಗ,

ಸದರಿ ದಾಖಲೆಗಳಲ್ಲಿ ದಾವಾ ಸ್ವ ತ್ತು ಪ್ರತಿವಾದಿ 5 ರಿಂದ 7 ರವರ ಹೆಸರು

ನಮೂದಾಗಿರುವುದು ಕಂಡು ಬಂದಿದ್ದು , ಆದರೆ ದಾವಾ ಸ್ವ ತ್ತು ಗಳ ಸ್ವಾದೀನಾನುಭವದಲ್ಲಿ

ತಾವು ಇದ್ದು , ಪ್ರತಿವಾದಿ 1 ಮತ್ತು 2 ರವರು ಕಾನೂನುಬಾಹಿರವಾಗಿ ಕ್ರಯಪತ್ರ

ಮಾಡಿಕೊಟ್ಟಿದ್ದು , ದಾವಾ ಅನುಸೂಚಿ ಐಟಂ ನಂ.6 ಕ್ಕೆ ಪ್ರತಿವಾದಿ 6 ರವರು ಕಂದಾಯ


18 ಓ. ಎಸ್‍ನಂ.583/2008

ಅಧಿಕಾರಿಗಳ ಜೊತೆ ಶಾಮೀಲಾಗಿ ಅವರು ಖಾತೆ ಮಾಡಿಕೊಂಡಿರುತ್ತಾರೆ. ಆದ್ದ ರಿಂದ

ಅವರನ್ನು ಈ ದಾವೆಗೆ ಪಕ್ಷಕಾರರನ್ನಾಗಿ ಮಾಡಲಾಗಿದ್ದು , ಪ್ರತಿವಾದಿ 1 ರಿಂದ 4 ರವರು

ತಮಗೆ ಭಾಗ ಕೊಡದೇ ಇರುವುದರಿಂದ ಈ ದಾವೆ ಸಲ್ಲಿಸಿರುವುದಾಗಿ ಹೇಳಿರುತ್ತಾರೆ.

15. ಪ್ರತಿವಾದಿ 5 ರವರು ಹೇಳುವುದೆನೆಂದರೆ ದಾವಾ ಅನುಸೂಚಿ ಐಟಂ

ನಂ.1,3,5 ಮತ್ತು 6 ನ್ನು ತಮ್ಮ ತಂದೆ 1970 ರಲ್ಲಿ ಕ್ರಯಕ್ಕೆ ಪಡೆದಿದ್ದು , ಅಂದಿನಿಂದ

ಅವರು ಅದರ ಸ್ವಾದೀನಾನುಭವದಲ್ಲಿ ಇದ್ದು , ಅವರ ಮರಣ ನಂತರ ಈಗ ತಾನು ಮತ್ತು

ತನ್ನ ಸಹೋದರ ಅವುಗಳನ್ನು ವಿಭಾಗ ಮಾಡಿಕೊಂಡು ಅವುಗಳ ಸ್ವಾಧೀನಾನುಭವದಲ್ಲಿ

ಇರುವುದರಿಂದ, ವಾದಿಯರಿಗೆ ಮತ್ತು ಪ್ರತಿವಾದಿ 1 ರಿಂದ 4 ರವರಿಗೆ ಅವುಗಳ ಮೇಲೆ

ಯಾವುದೇ ಹಕ್ಕು ಹಿತಾಸಕ್ತಿ ಇರುವುದಿಲ್ಲ , ಆದ್ದ ರಿಂದ ಅವರ ಈ ದಾವೆಯನ್ನು

ವಜಾಗೊಳಿಸಲು ವಿನಂತಿಸಿರುತ್ತಾರೆ.

16. ಪ್ರತಿವಾದಿ 6 ರವರು ಹೇಳವುದೆನೆಂದರೆ ದಾವಾ ಅನುಸೂಚಿ ಐಟಂ ನಂ.4

ನ್ನು ಪ್ರತಿವಾದಿ 1 ಮತ್ತು 2 ಲಕ್ಷ್ಮಮ್ಮ ಎಂಬುವವರಿಗೆ 1969 ರಂದು ಮಾರಾಟ

ಮಾಡಿದ್ದು , ಸದರಿ ಲಕ್ಷ್ಮಮ್ಮ ಗೆ ಮಕ್ಕ ಳು ಇರದ ಕಾರಣ ತನ್ನ ಹೆಸರಿಗೆ ಸದರಿ ಸ್ವ ತ್ತನ್ನು 1981

ರಂದು ಮರಣ ಶಾಸನದ ಮೂಲಕ ತನಗೆ ಅವರು ನೀಡಿದ್ದು , ಅಂದಿನಿಂದ ತಾನು ಅದರ

ಸ್ವಾದೀನಾನುಭವದಲ್ಲಿ ಇದ್ದು , ವಾದಿಯರು ಅದರ ಸ್ವಾದೀನಾನುಭವದಲ್ಲಿ ಇರದೆ

ಇರುವುದರಿಂದ ಅವರ ಈ ದಾವೆಯನ್ನು ವಜಾಗೊಳಿಸಲು ವಿನಂತಿಸಿರುತ್ತಾರೆ.

17. ಪ್ರತಿವಾದಿ 9 ಮತ್ತು 10 ರವರು ಹೇಳುವುದೆನೆಂದರೆ ದಾವಾ ಅನುಸೂಚಿ

ಐಟಂ ನಂ.4 ನ್ನು 1970 ರಲ್ಲಿ ಪ್ರತಿವಾದಿ 2 ರವರು ಕೆ.ರಂಗನಾಯಕನಿಗೆ ಮಾರಾಟ

ಮಾಡಿದ್ದು , ಸದರಿಯವರು ನಂತರ ಅದನ್ನು ಬಿ ಪಿ ವೆಂಕಟೇಶಪ್ಪ ರವರಿಗೆ ಮರಾಟ


19 ಓ. ಎಸ್‍ನಂ.583/2008

ಮಾಡಿದ್ದು , ಸದರಿಯವರು ತಮ್ಮ ತಂದೆಯಾಗಿದ್ದು , 40 ವರ್ಷಗಳಿಂದ ತಾವು ಅದರ

ಸ್ವಾದೀನಾನುಭವದಲ್ಲಿ ಇರುವುದರಿಂದ, ಈ ದಾವೆಗೆ ಕಾಲ ಪರಿಮಿತಿ ಮೀರಿ ಹೋಗಿದೆ.

ಮತ್ತು ಹಿಂದೂ ಉತ್ತರಾಧಿಕಾರದ ಅಧಿನಿಯಮ ಕಲಂ 14 ರ ಪ್ರಕಾರ 2 ನೇ ಪ್ರತಿವಾದಿ

ದಾವಾ ಅನುಸೂಚಿ ಐಟಂ ನಂ.4 ಕ್ಕೆ ಸಂಪೂರ್ಣ ಮಾಲೀಕರಾಗಿರುತ್ತಾರೆ. ಆದ್ದ ರಿಂದ ತಮ್ಮ

ತಂದೆ ಹೆಸರಿಗೆ ಆಗಿರುವ ಕ್ರಯಪತ್ರ ಊರ್ಜಿತವಾಗಿರುತ್ತದೆ. ಆದ್ದ ರಿಂದ ವಾದಿಯರ

ದಾವೆಯನ್ನು ವಜಾಗೊಳಿಸಲು ವಿನಂತಿಸಿರುತ್ತಾರೆ.

18. ವಾದಿಯರು ತಮ್ಮ ದಾವೆಯನ್ನು ಸರ್ಮಥಿಸಲು 3 ನೇ ವಾದಿ ಪಿ ಡಬ್ಲ್ಯೂ

1 ಎಂದು ಸಾಕ್ಷ್ಯ ನುಡಿದಿದ್ದು ತಮ್ಮ ಪರವಾಗಿ 14 ದಾಖಲೆಗಳನ್ನು ನಿಪಿ.1 ರಿಂದ 14

ಎಂದು ಗುರುತಿಸಿಕೊಂಡಿರುತ್ತಾರೆ.

19. ವಾದಿಯರು ದಾವಾ ಸ್ವ ತ್ತು ಗಳು ತಮ್ಮ ಜಂಟಿ ಕುಟುಂಬದ ಸ್ವ ತ್ತು ಗಳಾರಗಿವೆ

ಮತ್ತು ಅವುಗಳ ಸ್ವಾದೀನದಲ್ಲಿ ಇದ್ದೇವೆ ಎಂದು ಹೇಳಿರುತ್ತಾರೆ. ಸದರಿ ವಿಷಯವನ್ನು

ಸಮರ್ಥಿಸಲು ಅವರು ಯಾವುದೇ ದಾಖಲಾತಿಯನ್ನು ಹಾಜರು ಮಾಡಿಲ್ಲ . ಅವರು

ಹಾಜರು ಮಾಡಿದ ನಿಪಿ.3 ರ ಪಹಣಿ ಪತ್ರಿಕೆ ಪರಿಶೀಲಿಸಿದಾಗ ಅದು 2007-08 ರ

ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ ಪ್ರತಿವಾದಿ 5 ರವರ ಹೆಸರು ಕಾಲಂ ನಂ.9 ಮತ್ತು 12

ರಲ್ಲಿ ನಮೂದಾಗಿರುವುದು ಕಂಡು ಬರುತ್ತದೆ. ಅವರು ಹಾಜರು ಮಾಡಿದ ನಿಪಿ.4 ರ

ಪಹಣಿ ಪತ್ರಿಕೆ ಪರಿಶೀಲಿಸಿದಾಗ ಅದು 2007-08 ರ ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ

ಪ್ರತಿವಾದಿ 9 ಮ್ತು 10 ರವರ ಹೆಸರು ಕಾಲಂ ನಂ.9 ಮತ್ತು 12 ರಲ್ಲಿ

ನಮೂದಾಗಿರುವುದು ಕಂಡು ಬರುತ್ತದೆ. ಅವರು ಹಾಜರು ಮಾಡಿದ ನಿಪಿ.5 ರ ಪಹಣಿ

ಪತ್ರಿಕೆ ಪರಿಶೀಲಿಸಿದಾಗ ಅದು 1971 ರಿಂದ 1976 ರ ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ

ಲಿಂಗಶೆಟ್ಟಿ ಮತ್ತು ಈರಶೆಟ್ಟಿರವರ ಹೆಸರು ಕಾಲಂ ನಂ.9 ಮತ್ತು 12 ರಲ್ಲಿ


20 ಓ. ಎಸ್‍ನಂ.583/2008

ನಮೂದಾಗಿರುವುದು ಕಂಡು ಬರುತ್ತದೆ. ಅವರು ಹಾಜರು ಮಾಡಿದ ನಿಪಿ.6 ರ ಪಹಣಿ

ಪತ್ರಿಕೆ ಪರಿಶೀಲಿಸಿದಾಗ ಅದು 1976 ರಿಂದ 1981 ರ ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ

ಲಿಂಗಶೆಟ್ಟಿರವರ ಹೆಸರು ಕಾಲಂ ನಂ.9 ಮತ್ತು 12 ರಲ್ಲಿ ನಮೂದಾಗಿರುವುದು ಕಂಡು

ಬರುತ್ತದೆ. ಅವರು ಹಾಜರು ಮಾಡಿದ ನಿಪಿ.7 ರ ಪಹಣಿ ಪತ್ರಿಕೆ ಪರಿಶೀಲಿಸಿದಾಗ ಅದು

1986 ರಿಂದ 1989 ರ ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ ಪುಟ್ಟ ಮಾದಮ್ಮ ರವರ ಹೆಸರು

ಕಾಲಂ ನಂ.9 ಮತ್ತು 12 ರಲ್ಲಿ ನಮೂದಾಗಿರುವುದು ಕಂಡು ಬರುತ್ತದೆ. ಅವರು

ಹಾಜರು ಮಾಡಿದ ನಿಪಿ.8 ರ ಪಹಣಿ ಪತ್ರಿಕೆ ಪರಿಶೀಲಿಸಿದಾಗ ಅದು 2007-08 ರ

ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ ಸಿದ್ದ ರಾಜಮ್ಮ ರವರ ಹೆಸರು ಕಾಲಂ ನಂ.9 ಮತ್ತು 12

ರಲ್ಲಿ ನಮೂದಾಗಿರುವುದು ಕಂಡು ಬರುತ್ತದೆ. ಅವರು ಹಾಜರು ಮಾಡಿದ ನಿಪಿ.9 ರ

ಪಹಣಿ ಪತ್ರಿಕೆ ಪರಿಶೀಲಿಸಿದಾಗ ಅದು 2007-08 ರ ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ

ಪ್ರತಿವಾದಿ 6 ರವರ ಹೆಸರು ಕಾಲಂ ನಂ.9 ಮತ್ತು 12 ರಲ್ಲಿ ನಮೂದಾಗಿರುವುದು ಕಂಡು

ಬರುತ್ತದೆ. ಅವರು ಹಾಜರು ಮಾಡಿದ ನಿಪಿ.10 ರ ಪಹಣಿ ಪತ್ರಿಕೆ ಪರಿಶೀಲಿಸಿದಾಗ ಅದು

2007-08 ರ ಪಹಣಿ ಪತ್ರಿಕೆ ಆಗಿದ್ದು , ಅದರಲ್ಲಿ ಪ್ರತಿವಾದಿ 5 ರವರ ಹೆಸರು ಕಾಲಂ

ನಂ.9 ಮತ್ತು 12 ರಲ್ಲಿ ನಮೂದಾಗಿರುವುದು ಕಂಡು ಬರುತ್ತದೆ. ವಾದಿಯರು ತಮ್ಮ

ಹೆಸರಿಗೆ ಇರುವ ಯಾವುದೇ ಪಹಣಿ ಪತ್ರಿಕೆಯನ್ನು ಹಾಜರು ಮಾಡಿಲ್ಲ , ತಾವು ಅವುಗಳ

ಸ್ವಾದೀನದಲ್ಲಿ ಇದ್ದೇವೆ ಎಂದು ತೋರಿಸಲು ಯಾವುದೇ ದಾಖಲಾತಿಯನ್ನು ಹಾಜರು

ಮಾಡಿಲ್ಲ . ಕನಿಷ್ಟ ಪಕ್ಷ ಕಂದಾಯ ಸಂದಾಯ ಮಾಡಿದ್ದೇವೆ ಎಂದು ತೋರಿಸಲು ಅವರು

ಯಾವುದೇ ದಾಖಲೆಗಳನ್ನು ಹಾಜರು ಮಾಡಿಲ್ಲ . ಇದಲ್ಲ ದೇ ಪಿ ಡಬ್ಲ್ಯೂ 1 ರವರು

ದಿನಾಂಕ.27.1.2020 ರ ಪಾಟೀ ಸವಾಲಿನ 2 ನೇ ಪುಟದ 3 ನೇ ಖಂಡಿಕೆಯಲ್ಲಿ

“ದಾವಾ ಸ್ವ ತ್ತು ಗಳಿಗೆ ಸಂಬಂಧಿಚಿಸಿದಂತೆ 1970 ರಿಂದ ಇವತ್ತಿನವರೆಗೂ ನೀವು ಕಂದಾಯ
21 ಓ. ಎಸ್‍ನಂ.583/2008

ಕಟ್ಟಿಲ್ಲ ಅಂದರೆ ಅವರು ನಾನು ಕಟ್ಟಿಲ್ಲ , ನನ್ನ ಅಣ್ಣಂದಿರು ಕಟ್ಟಿರುತ್ತಾರೆ ಎಂದು

ಹೇಳಿರುತ್ತಾರೆ.” ಆದರೆ ಸದರಿ ವಿಷಯವನ್ನು ತೋರಿಸಲು ಅವರು ಯಾವುದೇ

ದಾಖಲಾತಿ ಹಾಜರು ಮಾಡಿಲ್ಲ . ಆದ್ದ ರಿಂದ ನಿಪಿ.12 ನ್ನು ಪರೀಶಿಲಿಸಿದಾಗ ದಾವಾ

ಅನುಸೂಚಿ ಐಟಂ ನಂ.1, 5 ಮತ್ತು 6 ನ್ನು 21.2.1970 ರಲ್ಲಿಯೇ ಮಾರಾಟ

ಮಾಡಿರುವುದು ಕಂಡು ಬರುತ್ತದೆ. ಇದಲ್ಲ ದೇ ನಿಪಿ.11 ನ್ನು ಪರಿಶೀಲಿಸಿದಾಗ ದಾವಾ

ಅನುಸೂಚಿ ಐಟಂ ನಂ.4 ನ್ನು ಸಹ 1970 ರಲ್ಲಿ ಮಾರಾಟ ಮಾಡಿರುವುದು ಕಂಡು

ಬರುತ್ತದೆ ಮತ್ತು ನಿಡಿ.35 ನ್ನು ಪರಿಶೀಲಿಸಿದಾಗ ದಾವಾ ಅನುಸೂಚಿ ಐಟಂ ನಂ.6 ನ್ನು

1969 ರಲ್ಲಿಯೇ ಮಾರಾಟ ಮಾಡಿರುವುದು ಕಂಡು ಬರುತ್ತದೆ.

20. ವಾದಿಯರ ಪರ ವಕೀಲರು ತಮ್ಮ ವಾದವನ್ನು ಸರ್ಮಥಿಸಲು ಈ ಕೆಳಗಿನ

ತೀರ್ಪುಗಳನ್ನು ಹಾಜರು ಮಾಡಿರುತ್ತಾರೆ.

1. 2013(7) ಎಸ್‍ ಸಿಸಿ ಪುಟ 490, ಎಂ.ಬಿ.ರಮೇಶ (ಮೃತರು )


ಅವರ ಕಾನೂನುಬದ್ಧ ವಾರಸುದಾರರು ವಿರುದ್ಧ ಕೆ.ಎಂ.ವೀರಾಜೆ ಅರಸ್‍
(ಮೃತರು ) ಅವರ ಕಾನೂನುಬದ್ಧ ವಾರಸುದಾರರು ಮತ್ತು ಇತರರು.

2. (2019) ಎಸ್‍ ಸಿ ಆರ್ 550, ಅಜಿತ್‍ ಕುಮಾರ್ ಉರುಫ್‍


ಸುರ್ಜಿತ್‍ ಕೌರ್ ವಿರುದ್ಧ ದರ್ಶನ್‍ ಸಿಂಗ್‍ (ಮೃತರು ) ಅವರ
ಕಾನೂನುಬದ್ಧ ವಾರಸುದಾರರು ಮತ್ತು ಇತರರು,

3. 92019)2 ಸಿಸಿಸಿ 398 (ಎಸ್‍ ಸಿ ) ತುಳಸೀದರ ಮತ್ತು ಇತರರು


ವಿರುದ್ಧ ನಾರಾಯಣಪ್ಪ ಮತ್ತು ಇತರರು,

ಸದರಿ ಈ ವೆುೕಲಿನ ಪ್ರಕರಣಗಳು ಈ ದಾವೆಗೆ ಅನ್ವ ಯವಾಗುವುದಿಲ್ಲ , ಏಕೆಂದರೆ ಈ

ದಾವೆಯ ವಸ್ತು ಸ್ಧಿತಿ ಮತ್ತು ಸಂದರ್ಭ ಬೇರೆ ಇದೆ. ಮೇಲಿನ ಪ್ರಕರಣಗಳ ವಸ್ತು ಸ್ಧಿತಿ ಮತ್ತು

ಸಂದರ್ಭ ಬೇರೆ ಇದೆ.


22 ಓ. ಎಸ್‍ನಂ.583/2008

21. ಪ್ರತಿವಾದಿ 5 ರವರು ವಾದಿಸಿರುವುದೇನೆಂದರೆ ದಾವಾ ಸ್ವ ತ್ತು ಗಳು

ವಾದಿಯರು ತಮ್ಮ ಜಂಟಿ ಕುಟುಂಬದ ಸ್ವ ತ್ತು ಎಂದು ತೋರಿಸಲು ವಿಫಲರಾಗಿರುತ್ತಾರೆ.

ಆದ್ದ ರಿಂದ ಅವರು ಈ ದಾವೆಯಲ್ಲಿ ಯಾವುದೇ ಪರಿಹಾರ ಪಡೆಯಲು ಅರ್ಹರಲ್ಲ ಎಂದು

ವಾದಿಸಿದ್ದು , ಸದರಿ ವಿಷಯವನ್ನು ಸಮರ್ಥಿಸಲು ಮಾನ್ಯ ಕರ್ನಾಟಕ ಉಚ್ಚ

ನ್ಯಾಯಾಲಯದಿಂದ ವರದಿಯಾಗಿರುವ ಪ್ರಕರಣವಾದ “ಡಿ.ಎಸ್‍. ಜಗನ್ನಾತ್‍ ಮೃತ ಅವರ

ಕಾನೂನುಬದ್ಧ ವಾರಸುದಾರರು ವಿರುದ್ಧ ಶ್ರೀಮತಿ ಎಸ್.ಶಾಂತ ಮತ್ತು ಇನ್ನೊಬ್ಬ ರು,” ಈ

ಪ್ರಕರಣ ಹಾಜರು ಮಾಡಿದ್ದು , ಈ ಪ್ರಕರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು

ಸ್ಪ ಷ್ಟ ಪಡಿಸಿರುವುದೆನೆಂದರೆ, ದಾವಾ ಸ್ವ ತ್ತು ಗಳು ಜಂಟಿ ಕುಟುಂಬದ ಸ್ವ ತ್ತು ಗಳು ಅಥವಾ

ಸ್ವ ಯಾರ್ಜಿತ ಸ್ವ ತ್ತು ಗಳು ಎಂದು ರುಜುವಾತು ಮಾಡಲು ವಾದಿಯರು ವಿಫಲರಾದಾಗ

ಸದರಿ ಸ್ವ ತ್ತು ಗಳಿಗೆ ಸಂಬಂಧಿಸಿದಂತೆ ವಾದಿಯರ ಹಕ್ಕಿ ನ ಕುರಿತು ಚರ್ಚಿಸುವ ಅಗತ್ಯ ತೆ ಇಲ್ಲ

ಎಂದು ಸ್ಪ ಷ್ಟ ಪಡಿಸಿದ್ದು , ಈ ದಾವೆಯಲ್ಲೂ ಸಹ ವಾದಿಯರು ದಾವಾ ಸ್ವ ತ್ತು ಗಳು ತಮ್ಮ ಜಂಟಿ

ಕುಟುಂಬದ ಸ್ವ ತ್ತು ಗಳಾಗಿದ್ದ ವು, ಅವುಗಳಲ್ಲಿ ತಾವು ಜಂಟಿ ಸ್ವಾದೀನಾನುಭವದಲ್ಲಿ ಇದ್ದೇವೆ

ಎಂದು ರುಜುವಾತು ಮಾಡಲು ವಿಫಲರಾಗಿರುವುದರಿಂದ ಈ ಮೇಲಿನ ಪ್ರಕರಣ ಈ

ದಾವೆಗೆ ಅನ್ವ ಯವಾಗುತ್ತದೆ. ದಾವಾ ಅನುಸೂಚಿ ಐಟಂ ನಂ.2 ಕ್ಕೆ ಸಂಬಂಧಿಸಿದಂತೆ

ಯಾವುದೇ ದಾಖಲಾತಿಯನ್ನು ವಾದಿಯರು ಹಾಜರು ಮಾಡಿರುವುದಿಲ್ಲ . ಆದ್ದ ರಿಂದ

ಸದರಿ ಸ್ವ ತ್ತು ವಾದಿಯರ ಜಂಟಿ ಕುಟುಂಬದ ಸ್ವ ತ್ತು ಆಗಿರುತ್ತದೆ ಎಂದು ಕೇವಲ ವಾದ

ಪತ್ರದ ಆಧಾರದ ಮೇಲೆ ನಿರ್ಣಯಿಸಲು ಬರುವುದಿಲ್ಲ .

22. ವಾದಿಯರು ದಾವಾ ಸ್ವ ತ್ತು ಗಳು ದಾವಾ ಸಲ್ಲಿಸುವ ದಿನಾಂಕದಂದು ತಮ್ಮ

ಜಂಟಿ ಕುಟುಂಬದ ಸ್ವ ತ್ತು ಗಳಾಗಿರುತ್ತವೆ ಮತ್ತು ಅವುಗಳ ಸ್ವಾದೀನದಲ್ಲಿ ತಾವು ಇದ್ದೇವೆ
23 ಓ. ಎಸ್‍ನಂ.583/2008

ಎಂದು ರುಜುವಾತುಪಡಿಸಲು ವಿಫಲರಾಗಿರುವುದರಿಂದ ವಿವಾದಾಂಶ 1 ನ್ನು

ನಕಾರಾತ್ಮ ಕವಾಗಿ ಉತ್ತರಿಸಲಾಗಿದೆ.

23. ವಿವಾದಾಂಶ 2 ಮತ್ತು 3 :- ವಿವಾದಾಂಶ 2 ರ ಪ್ರಕಾರ ವಾದಿಯರು

ಪ್ರತಿವಾದಿ 1 ರಿಂದ 4 ರವರು ದಾವಾ ಸ್ವ ತ್ತು ಗಳನ್ನು ವಿ.ಕೆ. ಕರಿಯಣ್ಣ ಮತ್ತು ವಿ. ಕೆ.

ವೆಂಕಟೇಶಪ್ಪ ರವರಿಗೆ ಕಾನೂನುಬಾಹಿರವಾಗಿ ಕ್ರಯಪತ್ರ ಬರೆದುಕೊಟ್ಟಿದ್ದಾರೆ ಎಂದು

ರುಜುವಾತುಪಡಿಸಬೇಕಾಗಿರುತ್ತದೆ.

ವಿವಾದಾಂಶ 3 ರ ಪ್ರಕಾರ ಪ್ರತಿವಾದಿ 9 ಮತ್ತು 10 ರವರು ಕ್ರಯಪತ್ರಗಳನ್ನು ರದ್ದ ತಿ

ಕೇಳದೇ ಇರುವುದರಿಂದ ಈ ದಾವೆ ಅನೂರ್ಜಿತವಾಗಿದೆ ಎಂದು ಅವರು ರುಜುವಾತು

ಮಾಡಬೇಕಾಗಿದೆ.

24. ವಾದಿಯರು ಹೇಳುವುದೆನೆಂದರೆ, ಪ್ರತಿವಾದಿ 1 ಮತ್ತು 2 ರವರಿಗೆ ದಾವಾ

ಸ್ವ ತ್ತು ಗಳನ್ನು ಮಾರಾಟ ಮಾಡುವ ಅಧಿಕಾರ ಇರಲಿಲ್ಲ , ಆದರೂ ಸಹ ಅವುಗಳನ್ನು

ಮರಾಟ ಮಾಡಿದ್ದಾರೆ ಎಂದು ಹೇಳಿರುತ್ತಾರೆ. ನಿಪಿ.14 ರ ಮೃತ್ಯು ಪತ್ರವನ್ನು

ಪರಿಶೀಲಿಸಿದಾಗ ದಾವಾ ಸ್ವ ತ್ತು ಗಳನ್ನು ಅನುಭವಿಸುವ ಹಕ್ಕು ಮಾತ್ರ ಪ್ರತಿವಾದಿ 1 ಮತ್ತು 2

ರವರಿಗೆ ಇರುವುದು ಕಂಡು ಬರುತ್ತದೆ. ಆದರೆ “ಹಿಂದೂ ಉತ್ತರಾಧಿಕಾರಿ ಅಧಿನಿಯಮ

1956 ರ ಕಲಂ 14(1) ರ ಪ್ರಕಾರ ಒಬ್ಬ ಹಿಂದೂ ಮಹಿಳೆಯು ಹೊಂದಿರುವ

ಯಾವುದೇ ಆಸ್ತಿಯು ಅದನ್ನು ಈ ಅಧಿನಿಯಮದ ಪ್ರಾರಂಭಕ್ಕೆ ಮುಂಚೆ ಗಳಿಸಿರಲಿ

ಅಥವಾ ತರುವಾಯ ಗಳಿಸಿರಲಿ, ಆಕೆ ಅದನ್ನು ಸಂಪೂರ್ಣ ಮಾಲೀಕಳು ಎಂಬ

ರೀತಿಯಲ್ಲಿ ಹೊಂದಿರತಕ್ಕ ದ್ದೇ ಹೊರತು, ಸೀಮಿತ ಮಾಲೀಕಳು ಎಂಬ ರೀತಿಯಲ್ಲಿ ಅಲ್ಲ

ಎಂಬುದಾಗಿದೆ.” ನಿಪಿ.14 ರ ಪ್ರಕಾರ ಸೀತಮ್ಮ ಳಿಗೆ ಕೇವಲ ಅನುಭವಿಸುವ ಹಕ್ಕು


24 ಓ. ಎಸ್‍ನಂ.583/2008

ಇದ್ದ ರೂ ಸಹ ಕಲಂ 14(1) ರ ಪ್ರಕಾರ ಅವರು ಸದರಿ ಸ್ವ ತ್ತು ಗಳಿಗೆ ಸಂಪೂರ್ಣ

ಮಾಲೀಕರಾಗುತ್ತಾರೆ. ಅವುಗಳನ್ನು ಪರಭಾರೆ ಮಾಡುವ ಹಕ್ಕ ನ್ನು ಸಹ ಪಡೆಯುತ್ತಾರೆ.

ಸದರಿ ಈ ವಿಷಯವನ್ನು ಸರ್ಮಥಿಸಲು ಪ್ರತಿವಾದಿ 7 ರಿಂದ 10 ರ ಪರ ವಕೀಲರು ಮಾನ್ಯ

ಸರ್ವೋಚ್ಚ ನ್ಯಾಯಾಲಯದಿಂದ ವರದಿಯಾದ Vaddeboyina Tulasamma

and others Vs. Vaddeboyina Sesha Reddi (dead) by L.R ,ಈ

ಪ್ರಕರಣ ಹಾಜರು ಮಾಡಿದ್ದು ಸದರಿ ಈ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ

ನ್ಯಾಯಾಲಯವು ಸ್ಪ ಷ್ಟ ಪಡಿಸಿರುವುದೆನೆಂದರೆ ಯಾವುದೇ ಹಿಂದೂ ಮಹಿಳೆಯು ಹಿಂದೂ

ಉತ್ತರಾಧಿಕಾರದ ಅಧಿನಿಯಮ 1956 ಬರುವ ಮೊದಲು ಆಗಲೀ ಅಥವಾ ನಂತರ

ವಾಗಲೀ ಪಡೆದಿರುವ ಸ್ವ ತ್ತು ಅವಳ ಸಂಪೂರ್ಣ ಸ್ವ ತ್ತು ಆಗುತ್ತದೆ ಆಗ ಕಲಂ 14(1)

ಅನ್ವ ಯವಾಗುತ್ತದೆ. ಕಲಂ 14(2) ಅಲ್ಲ ಎಂದು ಮಾನ್ಯ ನ್ಯಾಯಾಲಯವು

ಸ್ಪ ಷ್ಟ ಪಡಿಸಿರುತ್ತದೆ.

25. ಈ ದಾವೆಯಲ್ಲಿ ಪ್ರತಿವಾದಿ 9 ಮತ್ತು 10 ರವರು ಹೇಳಿದಂತೆ ವಾದಿಯರು

ಪ್ರತಿವಾದಿ 5 ರವರ ಹೆಸರಿಗೆ ಆಗಿರುವ ಕ್ರಯಪತ್ರವನ್ನಾಗಲಿ, ಪ್ರತಿವಾದಿ 9 ರಿಂದ 10 ರವರ

ತಂದೆಯ ಹೆಸರಿಗೆ ಆಗಿರುವ ಕ್ರಯಪತ್ರವನ್ನಾಗಲಿ ಅವರು ರದ್ದ ತಿ ಕೇಳಿರುವುದಿಲ್ಲ . ಕೇವಲ

ವಿಭಾಗಕ್ಕಾಗಿ ಮಾತ್ರ ದಾವೆ ಸಲ್ಲಿಸಿರುವುದು ಕಂಡು ಬರುತ್ತದೆ. ಯಾವುದೇ ಒಂದು

ದಾಖಲಾತಿ ಒಂದು ಸ್ಧಿರ ಸ್ವ ತ್ತಿನ ಕುರಿತು ನೊಂದಣಿ ಆದಾಗ ಸದರಿ ದಾಖಲಾತಿ

ರದ್ದಾಗಬೇಕಾಗಿರುವುದು ಅವಶ್ಯ ಕತೆ ಇರುತ್ತದೆ. ಆದರೆ ನಿಪಿ.11 ಮತ್ತು ನಿಪಿ.12 ರ

ಕ್ರಯಪತ್ರಗಳನ್ನು ವಾದಿಯರು ಈ ದಾವೆಯಲ್ಲಿ ಅವುಗಳ ರದ್ಧ ತಿಯನ್ನು

ಕೋರಿರುವುದಿಲ್ಲ . ಕನಿಷ್ಟ ಪಕ್ಷ ಅವುಗಳು ತಮಗೆ ಬಂಧನಕಾರಿ ಅಲ್ಲ ಎಂತಲೂ ಸಹ

ಅವರು ಯಾವುದೇ ಪರಿಹಾರವನ್ನು ಕೇಳಿರುವುದು ಕಂಡು ಬರುವುದಿಲ್ಲ . ಸದರಿ ನಿಪಿ.11


25 ಓ. ಎಸ್‍ನಂ.583/2008

ಕ್ಕೆ ಪ್ರತಿವಾದಿ 3, 4, ವಾದಿ 3 ವಾದಿ 1 ರವರು ಪಕ್ಷಕಾರರಾಗಿರುವುದು ಕಂಡು

ಬರುತ್ತದೆ. ಸದರಿ ಸಮಯದಲ್ಲಿ ಅವರು ಅಪ್ರಾಪ್ತ ವಯಸ್ಕ ರಿರುವುದು ಕಂಡು ಬರುತ್ತದೆ.

ಅವರು ಪ್ರಾಪ್ತ ವಯಸ್ಕ ರಾದ ನಂತರ ಅದನ್ನು ಪ್ರಶ್ನೆ ಮಾಡಬಹುದಿತ್ತು , ಆದರೆ ಸದರಿ

ದಾಖಲಾತಿಯನ್ನು ಪ್ರಶ್ನೆ ಮಾಡಿಲ್ಲ . ಇದಲ್ಲ ದೇ ನಿಪಿ.12 ರ ಕ್ರಯಪತ್ರಕ್ಕೂ ಸಹ ಪ್ರತಿವಾದಿ

3, 4 ವಾದಿ 2 ರವರು ಸಹ ಪಕ್ಷಕಾರರಾಗಿರುವುದು ಕಂಡು ಬರುತ್ತದೆ. ಸದರಿ

ಸಮಯದಲ್ಲಿ ಅವರು ಅಪ್ರಾಪ್ತ ವಯಸ್ಕ ರಿರುವುದು ಕಂಡು ಬರುತ್ತದೆ. ಅವರು ಪ್ರಾಪ್ತ

ವಯಸ್ಕ ರಾದ ನಂತರ ಅದನ್ನು ಪ್ರಶ್ನೆ ಮಾಡಬಹುದಿತ್ತು , ಆದರೆ ಸದರಿ ದಾಖಲಾತಿಯನ್ನು

ಪ್ರಶ್ನೆ ಮಾಡಿಲ್ಲ . ಉಳಿದ ವಾದಿಯರು ಕನಿಷ್ಟ ಪಕ್ಷ ಸದರಿ ಕ್ರಯಪತ್ರವು ತಮ್ಮ ಹಿಸ್ಸೆ ಗೆ

ಬಂಧನಕಾರಿಯಲ್ಲ ಎಂದು ಪರಿಹಾರ ಕೇಳಬಹುದಿತ್ತು ಆದರೆ ಅಂತಹ ಯಾವುದೇ

ಪರಿಹಾರವನ್ನು ಈ ದಾವೆಯಲ್ಲಿ ಕೇಳಿರುವುದಿಲ್ಲ . ಈ ಬಗ್ಗೆ ಪಿ ಡಬ್ಲ್ಯೂ 1 ರವರನ್ನು ಪ್ರಶ್ನೆ

ಮಾಡಿದಾಗ “ ದಾವಾ ಸ್ವ ತ್ತು ಗಳನ್ನು ಮಾರಾಟವಾಗಿರುವ ಕ್ರಯಪತ್ರಗಳನ್ನು ನಾನಗಲಿ

ನನ್ನ ಸಹೋದರರಾಗಲಿ, ಪ್ರಶ್ನೆ ಮಾಡಿಲ್ಲ ಅಂದರೆ ಸರಿ . ಸದರಿ ಕ್ರಯಪತ್ರಗಳು

ಮೋಸದಿಂದ ಆಗಿವೆ ಎಂದು ಈ ದಾವೆಯಲ್ಲೂ ಸಹ ಅವುಗಳನ್ನು ರದ್ದು ಗೊಳಿಸಲು

ನಾನು ಕೇಳಿಲ್ಲ ಅಂದರೆ ನಿಜ ಎಂದು ಒಪ್ಪಿಕೊಂಡಿರುತ್ತಾರೆ. ” ಒಂದು ವೇಳೆ ವಾದಿಯರು

ಹೇಳಿದಂತೆ ಸದರಿ ಕ್ರಯಪತ್ರಗಳನ್ನು ಮೋಸದಿಂದ ಮಾಡಿಕೊಂಡಿದ್ದ ರೆ ಅವುಗಳ

ರದ್ದ ತಿಯನ್ನು ಕೋರಬಹುದಿತ್ತು , ಆದರೆ ಅಂತಹ ಯಾವುದೇ ಪರಿಹಾರವನ್ನು

ವಾದಿಯರು ಈ ದಾವೆಯಲ್ಲಿ ಕೇಳಿಲ್ಲ .

26. ಈ ಸಂಬಂಧಿ ಪ್ರತಿವಾದಿ 5 ರ ಪರ ವಕೀಲರು ಕರ್ನಾಟಕ ಉಚ್ಚ ,

ನ್ಯಾಯಾಲಯದಿಂದ ವರದಿಯಾಗಿರುವ “ ಸತ್ಯ ಪ್ಪ ವಿರುದ್ಧ ಸದಾಶಿವ ಮತ್ತು ಇತರರು” ಈ

ಪ್ರಕರಣವನ್ನು ಹಾಜರು ಮಾಡಿದ್ದು , ಸದರಿ ಈ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಉಚ್ಚ


26 ಓ. ಎಸ್‍ನಂ.583/2008

ನ್ಯಾಯಾಲಯವು ಸ್ಪ ಷ್ಟ ಪಡಿಸುವುದೆನೆಂದರೆ, ನೊಂದಣಿ ಆಗಿರುವ ಕ್ರಯಪತ್ರವನ್ನು ಪ್ರಶ್ನೆ

ಮಾಡದೇ ಇದ್ದ ರೆ ಸದರಿ ಸ್ವ ತ್ತಿಗೆ ಸಂಬಂಧಿಸಿದಂತೆ ಮಾಲೀಕತ್ವ ದ ಪರಿಹಾರ ಪಡೆಯಲು

ವಾದಿ ಅಹರ್ರಲ್ಲ ಎಂಬುದಾಗಿದೆ. ಈ ದಾವೆಯಲ್ಲೂ ಸಹ ವಾದಿಯರು ನಿಪಿ.11 ಮತ್ತು

12 ಮೋಸದಿಂದ ಆಗಿರುವ ಕ್ರಯಪತ್ರಗಳು ಎಂದು ಸಾಕ್ಷ್ಯ ನುಡಿದಿದ್ದಾರೆ, ಆದರೆ

ಸದರಿಯವುಗಳನ್ನು ಈ ದಾವೆಯಲ್ಲಿ ಪ್ರಶ್ನೆ ಮಾಡಿಲ್ಲ . ಆದ್ದ ರಿಂದ ಈ ಒಂದು ಪ್ರಕರಣ ಈ

ದಾವೆಗೆ ಅನ್ವ ಯವಾಗುತ್ತದೆ. ವಾದಿಯರು ನಿಪಿ.11 ಮತ್ತು 12 ಮತ್ತು ನಿಡಿ.35

ಮೋಸದಿಂದ ಆದ ದಾಖಲೆಗಳು ಎಂದು ತಮ್ಮ ವಾದ ಪತ್ರದಲ್ಲಿ ಹೇಳಿದ್ದಾರೆ. ಆದರೆ ಅದನ್ನು

ರುಜುವಾತು ಮಾಡಿಲ್ಲ . ಆದ್ದ ರಿಂದ ವಿವಾದಾಂಶ 2 ನ್ನು ನಕಾರಾತ್ಮ ಕವಾಗಿ ಮತ್ತು

ವಿವಾದಾಂಶ 3 ನ್ನು ಸಕಾರಾತ್ಮ ಕವಾಗಿ ಉತ್ತರಿಸಿರುತ್ತೇನೆ.

27. ವಿವಾದಾಂಶ 4 :- ವಿವಾದಾಶಂ 4 ರ ಪ್ರಕಾರ ಪ್ರತಿವಾದಿ 9 ಮತ್ತು 10

ರವರು ಈ ದಾವೆಗೆ ಕಾಲ ಪರಿಮಿತಿ ಮೀರಿ ಹೋಗಿದೆ ಎಂದು

ರುಜುವಾತುಪಡಿಸಬೇಕಾಗಿರುತ್ತದೆ.

ಪ್ರತಿವಾದಿ 5, 9 ಮತ್ತು 10 ರವರು ವಾದಿಸಿರುವುದೆನೆಂದರೆ, ಈ ದಾವೆಗೆ ಕಾಲ

ಪರಿಮಿತಿ ಮೀರಿ ಹೋಗಿರುವುದರಿಂದ ಈ ದಾವೆ ಅನೂರ್ಜಿತವಾಗಿದೆ ಎಂದು ವಾದ

ಮಂಡನೆ ಮಾಡಿರುತ್ತಾರೆ. ವಾದಿ ಹಾಜರು ಮಾಡಿದ ನಿಪಿ.11 ಕ್ರಯಪತ್ರವನ್ನು ಪರಿಶೀಲಿಸಿ

ನೋಡಿದಾಗ 1970 ರಲ್ಲಿಯೇ ದಾವಾ ಅನುಸೂಚಿ ಐಟಂ ನಂ.4 ನ್ನು ಮಾರಾಟ

ಮಾಡಿರುವುದು ಕಂಡು ಬರುತ್ತದೆ. ನಿಪಿ.12 ನ್ನು ಪರಿಶೀಲಿ ಸಿದಾಗ ದಾವಾ ಅನುಸೂಚಿ

ಐಟಂ ನಂ.1,3,5 ಮತ್ತು 6 ನ್ನು 21.2.1970 ರಲ್ಲಿಯೇ ಮಾರಾಟ ಮಾಡಿರುವುದು

ಕಂಡು ಬರುತ್ತದೆ. ಈ ದಾವೆಯನ್ನು 2008 ರಲ್ಲಿ ಸಲ್ಲಿಸಿರುವುದು ಕಂಡು ಬರುತ್ತದೆ.


27 ಓ. ಎಸ್‍ನಂ.583/2008

ಅಂದರೆ ಸದರಿ ಕ್ರಯಪತ್ರಗಳು ಆದ 38 ವರ್ಷಗಳ ನಂತರ ಈ ದಾವೆ ಸಲ್ಲಿಸಿರುವುದು

ಕಂಡು ಬರುತ್ತದೆ.

28. ನಿಪಿ.11 ಕ್ಕೆ ಪ್ರತಿವಾದಿ 3, 4, ವಾದಿ 3 ವಾದಿ 1 ರವರು

ಪಕ್ಷಕಾರರಾಗಿರುವುದು ಕಂಡು ಬರುತ್ತದೆ. ಸದರಿ ಕ್ರಯಪತ್ರದ ದಿನದಂದು ಅಪ್ರಾಪ್ತ

ವಯಸ್ಕ ರಾಗಿರುವುದು ಕಂಡು ಬರುತ್ತದೆ. ಆದರೆ ವಾದ ಪತ್ರವನ್ನು ಪರಿಶೀಲಿಸಿದಾಗ ದಾವಾ

ದಿನಾಂಕದಂದು ಪ್ರತಿವಾದಿ 3 ರವರಿಗೆ 55 ವರ್ಷ, ಪ್ರತಿವಾದಿ 4 ರವರಿಗೆ 53 ವರ್ಷ,

ವಾದಿ 3 ರವರಿಗೆ 50 ವರ್ಷ, ವಾದಿ 1 ರವರಿಗೆ 46 ವರ್ಷ ಆಗಿರುವುದು ಕಂಡು

ಬರುತ್ತದೆ. ಸದರಿಯವರು ಪ್ರಾಪ್ತ ವಯಸ್ಕ ರಾದ 3 ವರ್ಷಗಳ ಒಳಗಾಗಿ ಅನುಚ್ಛೇದ 60

ರ ಕಾಲ ಪರಿಮಿತಿ ಅಧಿನಿಯಮದ ಪ್ರಕಾರ ಸದರಿ ದಾಖಲೆಯನ್ನು ಪ್ರಶ್ನೆ ಮಾಡಬಹುದಿತ್ತು ,

ಆದರೆ ಅವರು ಸದರಿ ದಾಖಲಾತಿಯಾದ 38 ವರ್ಷಗಳ ನಂತರ ಈ ಒಂದು ದಾವೆ

ಸಲ್ಲಿಸಿರುವುದು ಕಂಡು ಬರುತ್ತದೆ. ಆದ್ದ ರಿಂದ ಈ ದಾವೆಗೆ ಕಾಲ ಪರಿಮಿತಿ ಮೀರಿ

ಹೋಗಿದೆ.

29. ನಿಪಿ.12 ಕ್ಕೆ ಪ್ರತಿವಾದಿ 3, 4 ವಾದಿ 2 ರವರು ಸಹ ಪಕ್ಷಕಾರರಾಗಿರುವುದು

ಕಂಡು ಬರುತ್ತದೆ. ಸದರಿ ಕ್ರಯಪತ್ರದ ದಿನದಂದು ಅಪ್ರಾಪ್ತ ವಯಸ್ಕ ರಾಗಿರುವುದು ಕಂಡು

ಬರುತ್ತದೆ. ಆದರೆ ವಾದ ಪತ್ರವನ್ನು ಪರಿಶೀಲಿಸಿದಾಗ ದಾವಾ ದಿನಾಂಕದಂದು ಪ್ರತಿವಾದಿ 3

ರವರಿಗೆ 55 ವರ್ಷ, ಪ್ರತಿವಾದಿ 4 ರವರಿಗೆ 53 ವರ್ಷ, ವಾದಿ 2 ರವರಿಗೆ 42 ವರ್ಷ

ಆಗಿರುವುದು ಕಂಡು ಬರುತ್ತದೆ. ಸದರಿಯವರು ಪ್ರಾಪ್ತ ವಯಸ್ಕ ರಾದ 3 ವರ್ಷಗಳ

ಒಳಗಾಗಿ ಅನುಚ್ಛೇದ 60 ರ ಕಾಲ ಪರಿಮಿತಿ ಅಧಿನಿಯಮದ ಪ್ರಕಾರ ಸದರಿ

ದಾಖಲೆಯನ್ನು ಪ್ರಶ್ನೆ ಮಾಡಬಹುದಿತ್ತು , ಆದರೆ ಅವರು ಸದರಿ ದಾಖಲಾತಿಯಾದ 38


28 ಓ. ಎಸ್‍ನಂ.583/2008

ವರ್ಷಗಳ ನಂತರ ಈ ಒಂದು ದಾವೆ ಸಲ್ಲಿಸಿರುವುದು ಕಂಡು ಬರುತ್ತದೆ. ಆದ್ದ ರಿಂದ ಈ

ದಾವೆಗೆ ಕಾಲ ಪರಿಮಿತಿ ಮೀರಿ ಹೋಗಿದೆ.

30. ಇದಲ್ಲ ದೇ ಯಾವುದೇ ಒಂದು ನೊಂದಾಯಿತ ದಾಖಲೆಯನ್ನು ಮೋಸದ

ಆಧಾರದ ಮೇಲೆ ಪ್ರಶ್ನೆ ಮಾಡಬೇಕಾದರೆ ಸದರಿ ದಾಖಲೆ ಬಗ್ಗೆ ತಿಳಿದ ದಿನದಿಂದ 3

ವರ್ಷದ ಒಳಗಡೆ ಅದನ್ನು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಕಾಲ ಪರಿಮಿತಿ

ಅಧಿನಿಯಮ ಅನುಚ್ವೇದ 59 ಸ್ಪ ಷ್ಟ ಪಡಿಸುತ್ತದೆ. ನಿಪಿ.11 ಮತ್ತು 12 ನ್ನು

ಪರಿಶೀಲಿಸಿದಾಗ ಅವುಗಳು 1970 ರ ದಾಖಲೆಗಳಾಗಿದ್ದು , ಈ ದಾವೆಯನ್ನು 2008

ರಲ್ಲಿ ಸಲ್ಲಿಸಲಾಗಿದ್ದು . ಇದಲ್ಲ ದೇ ಪ್ರತಿವಾದಿಯರು ಹಾಜರು ಮಾಡಿದ ನಿಡಿ.35 ನ್ನು

ಪರಿಶೀಲಿಸಿದಾಗ ಪ್ರತಿವಾದಿ 1 ಮತ್ತು 2 ರವರು ಸೇರಿ ಲಕ್ಷ್ಮಮ್ಮ ಉರುಫ್‍ ರಂಗಮ್ಮ ರವರಿಗೆ

ದಾವಾ ಅನುಸೂಚಿ ಐಟಂ ನಂ.6 ನ್ನು 1969 ರಲ್ಲಿಯೇ ಮಾರಾಟ ಮಾಡಿರುವುದು

ಕಂಡು ಬರುತ್ತದೆ. ಸದರಿ ದಾಖಲಾತಿಯಾದ 39 ವರ್ಷಗಳ ನಂತರ ಈ ದಾವೆ

ಹಾಕಿರುವುದು ಕಂಡು ಬರುತ್ತದೆ. ಆದ್ದ ರಿಂದ ಈ ದಾವೆಗೆ ಕಾಲ ಪರಿಮಿತಿ ಮೀರಿ

ಹೋಗಿರುವುದು ಕಂಡು ಬರುತ್ತದೆ. ಆದ್ದ ರಿಂದ ವಿವಾದಾಂಶ 4 ನ್ನು ಸಕಾರಾತ್ಮ ಕವಾಗಿ

ಉತ್ತರಿಸಿರುತ್ತೇನೆ.

31. ವಿವಾದಾಂಶ 5 ಮತ್ತು ಹೆಚ್ಚು ವರಿ ವಿವಾದಾಂಶ 3 :- ವಿವಾದಾಶಂ 5 ರ

ಪ್ರಕಾರ ವಾದಿಯರು ದಾವಾ ಸ್ವ ತ್ತು ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮತ್ತು ಸ್ವಾದೀನತೆಯನ್ನು

ಪಡೆಯಲು ಅರ್ಹರೇ ಎಂಬುದಾಗಿದೆ. ಮತ್ತು ಹೆಚ್ಚು ವರಿ ವಿವಾದಾಂಶ 3 ರ ಪ್ರಕಾರ ಮೃತ

4 ನೇ ಪ್ರತಿವಾದಿಯ ವಾರಸುದಾರರು ಕೌಂಟರ್ ಕ್ಲೇಮ್‍ ನಲ್ಲಿ ಕೇಳಿದ ಪರಿಹಾರ

ಪಡೆಯಲು ಅರ್ಹರೆ ಎಂಬುದಾಗಿದೆ.


29 ಓ. ಎಸ್‍ನಂ.583/2008

32. ವಿವಾದಾಂಶ 1 ರಿಂದ 4 ರಲ್ಲಿ ಚರ್ಚಿಸಿದ ಕಾರಣಗಳಿಗಾಗಿ ವಾದಿಯರು

ದಾವೆಯಲ್ಲಿ ಕೇಳಿದ ಪರಿಹಾರ ಪಡೆಯಲು ಅರ್ಹರಿಲ್ಲ . ಇದಲ್ಲ ದೇ ಪ್ರತಿವಾದಿ 4 ರ

ವಾರಸುದಾರರು ಸಹ ಕೌಂಟರ್ ಕ್ಲೇಮ್‍ ನಲ್ಲಿ ಕೇಳಿದ ಪರಿಹಾರ ಪಡೆಯಲು ಅರ್ಹರಲ್ಲ್ಠ

ಆದ್ದ ರಿಂದ ವಿವಾದಾಂಶ 5 ಮತ್ತು ಹೆಚ್ಚು ವರಿ ವಿವಾದಾಂಶ 3 ನ್ನು ನಕಾರಾತ್ಮ ಕವಾಗಿ

ಉತ್ತರಿಸಲಾಗಿದೆ.

33. ವಿವಾದಾಂಶ 6 :- ವಿವಾದಾಂಶ 6 ರ ಪ್ರಕಾರ ವಾದಿಯರು ದಾವೆಯಲ್ಲಿ

ಘೋಷಣೆ ಪರಿಹಾರ ಪಡೆಯು ಅರ್ಹರೇ ಎಂಬುದಾಗಿದೆ. ವಾದಿಯರು ಪ್ರತಿವಾದಿ 6

ರವರಿಗೆ ದಾವಾ ಅನುಸೂಚಿ ಐಟಂ ನಂ.6 ರಲ್ಲಿ ಯಾವುದೇ ಹಕ್ಕು ಹಿತಾಸಕ್ತಿ ಇರುವುದಿಲ್ಲ ,

ಏಕೆಂದರೆ ಸದರಿ ಪ್ರತಿವಾದಿ 6 ರವರು ದಾವಾ ಅನುಸೂಚಿ ಐಟಂ ನಂ.6 ಕ್ಕೆ ಕಂದಾಯ

ಅಧಿಕಾರಿಗಳ ಜೊತೆ ಶಾಮೀಲಾಗಿ ತಮ್ಮ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ

ಎಂಬುದಾಗಿದೆ. ಆದರೆ, ಪ್ರತಿವಾದಿ 6 ರವರು ಹೇಳುವುದೆನೆಂದರೆ, ದಾವಾ ಅನುಸೂಚಿ

ಐಟಂ ನಂ.6 ನ್ನು ಪ್ರತಿವಾದಿ 1 ಮತ್ತು 2 ರವರಿಂದ ದಿನಾಂಕ.27.1.1969 ರಂದು

ಲಕ್ಷ್ಮಮ್ಮ ಉರುಫ್‍ ರಂಗಮ್ಮ ರವರು ಕ್ರಯಕ್ಕೆ ಪಡೆದಿದ್ದು , ನಂತರ ಅವರಿಗೆ ಮಕ್ಕ ಳು ಇರದ

ಕಾರಣ ಸದರಿ ಸ್ವ ತ್ತನ್ನು , ದಿನಾಂಕ.4.5.1981 ರಂದು ಮರಣ ಶಾಸನದ ಮೂಲಕ ತನಗೆ

ನೀಡಿದ್ದಾರೆ ಎಂದು ಹೇಳಿದ್ದು , ಸದರಿ ವಿಷಯವನ್ನು ಸಮರ್ಥಿಸಲು ಅವರು ನಿಡಿ.35 ನ್ನು

ಹಾಜರು ಮಾಡಿದ್ದು , ಸದರಿ ನಿಡಿ.35 ನ್ನು ಪರೀಶಿಲಿಸಿದಾಗ ದಾವಾ ಅನುಸೂಚಿ ಐಟಂ

ನಂ.6 ನ್ನು ಪ್ರತಿವಾದಿ 1 ಮತ್ತು 2 ರವರು ಲಕ್ಷ್ಮಮ್ಮ ಉರುಫ್‍ರಂಗಮ್ಮ ರವರಿಗೆ ಮಾರಾಟ

ಮಾಡಿರುವುದು ಕಂಡು ಬರುತ್ತದೆ. ನಂತರ ನಿಡಿ.36 ನ್ನು ಪರಿಶೀಲಿಸಿದಾಗ ಸದರಿ ಲಕ್ಷ್ಮಮ್ಮ

ಉರುಫ್‍ ರಂಗಮ್ಮ ರವರು ಪ್ರತಿವಾದಿ 6 ರವರಿಗೆ ಮರಣ ಶಾಸನ ಬರೆದುಕೊಟ್ಟಿರುವುದು

ಕಂಡು ಬರುತ್ತದೆ. ಸದರಿ ಪತ್ರ ದಿನಾಂಕ.7.7.1981 ರಂದೇ ನೊಂದಣಿ ಆಗಿರುವುದು ಸಹ


30 ಓ. ಎಸ್‍ನಂ.583/2008

ಕಂಡು ಬರುತ್ತದೆ. ತದನಂತರ ನಿಡಿ.31 ರಿಂದ ನಿಡಿ.34 ನ್ನು ಪರಿಶೀಲಿಸಿದಾಗ ಸದರಿ

ಸ್ವ ತ್ತಿಗೆ ಸಂಬಂಧಿಸಿದಂತೆ ಅವರ ಹೆಸರಿಗೆ ಖಾತೆ ಆಗಿರುವುದು ಸಹ ಕಂಡು ಬರುತ್ತದೆ ಮತ್ತು

ಅವರ ಹೆಸರು ಸದರಿ ಪಹಣಿ ಪತ್ರಿಕೆಗಳ ಕಾಲಂ ನಂ.9 ಮತ್ತು 12 ರಲ್ಲಿ ಕಂಡು ಬರುತ್ತದೆ.

ಸದರಿ ಪಹಣಿ ಪತ್ರಿಕೆಗಳು 2000 ನೇ ಇಸವಿಯಿಂದ 2012 ನೇ ಇಸವಿಯ ಪಹಣಿ

ಪತ್ರಿಕೆಗಳಾಗಿರುತ್ತವೆ. ವಾದಿಯರು ಸದರಿ ಖಾತೆಯು ಕಾನೂನುಬಾಹಿರ ಎಂದು ತಮ್ಮ

ವಾದ ಪತ್ರದಲ್ಲಿ ಹೇಳಿದ್ದಾರೆ. ಆದರೆ ಅದನ್ನು ರುಜುವಾತು ಮಾಡಲು ಅವರು

ವಿಫಲರಾಗಿರುತ್ತಾರೆ. ಏಕೆಂದರೆ ಸದರಿ ನಿಡಿ.35 ನ್ನಾಗಲಿ, 36 ನ್ನಾಗಲಿ ಈ ದಾವೆಯಲ್ಲೂ

ಪ್ರಶ್ನೆ ಮಾಡಿಲ್ಲ ಮತ್ತು ಅವುಗಳ ರದ್ಧ ತಿಯನ್ನು ಸಹ ಕೋರಿಲ್ಲ . ಆದ್ದ ರಿಂದ ವಾದಿಯರು

ದಾವೆಯಲ್ಲಿ ಕೋರಿಕೊಂಡಂತೆ ದಾವಾ ಅನುಸೂಚಿ ಐಟಂ ನಂ.6 ಕ್ಕೆ ಸಂಬಂಧಪಟ್ಟಂತೆ

ಘೋಷಣೆ ಪರಿಹಾರ ಪಡೆಯಲು ಅರ್ಹರಲ್ಲ . ಆದ್ದ ರಿಂದ ವಿವಾದಾಂಶ 6 ನ್ನು

ನಕಾರಾತ್ಮ ಕವಾಗಿ ಉತ್ತರಿಸಿರುತ್ತೇನೆ.

34. ಹೆಚ್ಚು ವರಿ ವಿವಾದಾಂಶ 1 ಮತ್ತು 2 :- ಹೆಚ್ಚು ವರಿ ವಿವಾದಾಂಶ 1 ಮತ್ತು

2 ರ ಪ್ರಕಾರ ಪ್ರತಿವಾದಿ 6 ರವರು ದಿನಾಂಕ.4.5.1981 ರ ಮರಣ ಶಾಸನದ ಪ್ರಕಾರ

ತಾನು ದಾವಾ ಅನುಸೂಚಿ ಐಟಂ ನಂ.6 ಕ್ಕೆ ಮಾಲೀಕಳಾಗಿದ್ದು ಮತ್ತು ಅದರ

ಸ್ವಾದೀನಾನುಭವದಲ್ಲಿ ಇರುವುದಾಗಿ ರುಜುವಾತು ಮಾಡಬೇಕಾಗಿದೆ.

35. ವಾದಿಯರು ದಾವಾ ದಿನಾಂಕದಂದು ದಾವಾ ಸ್ವ ತ್ತು ಗಳು ತಮ್ಮ ಜಂಟಿ

ಕುಟುಂಬದ ಸ್ವ ತ್ತು ಗಳಾಗಿವೆ ಮತ್ತು ಅವುಗಳ ಸ್ವಾದೀನದಲ್ಲಿ ತಾವುಗಳು ಇದ್ದೇವೆ ಹಾಗೂ

ಪ್ರತಿವಾದಿ 1 ಮತ್ತು 2 ರವರಿಗೆ ಸದರಿ ಸ್ವ ತ್ತು ಗಳನ್ನು ಮಾರಾಟ ಮಾಡಲು ಅಧಿಕಾರ

ಇರಲಿಲ್ಲ ಹಾಗೂ ಈ ದಾವೆಯನ್ನು ಕಾಲಪರಿಮಿತಿಯಲ್ಲಿ ಸಲ್ಲಿಸಲಾಗಿದೆ ಎಂದು

ರುಜುವಾತು ಮಾಡಲು ವಿಫಲರಾಗಿರುವುದರಿಂದ ಹಾಗೂ ಪ್ರತಿವಾದಿ 6 ರವರು ಈ


31 ಓ. ಎಸ್‍ನಂ.583/2008

ದಾವೆಯಲ್ಲಿ ದಾವಾ ಅನುಸೂಚಿ ಐಟಂ ನಂ.6 ಕ್ಕೆ ಸಂಬಂಧಪಟ್ಟಂತೆ ಯಾವುದೇ

ರೀತಿಯಾದ ಕೌಂಟರ್ ಕ್ಲೇಮನ್ನು ಕೇಳದೇ ಇರುವುದರಿಂದ ಈ ವಿವಾದಾಂಶಗಳ ಬಗ್ಗೆ

ಚರ್ಚಿಸುವ ಅಗತ್ಯ ತೆ ಇಲ್ಲ .

36. ವಿವಾದಾಂಶ 7 :- ವಿವಾದಾಂಶ 1 ರಿಂದ 6, ಮತ್ತು ಹೆಚ್ಚು ವರಿ ವಿವಾದಾಶಂ

1 ರಿಂದ 3 ರಲ್ಲಿ ಚರ್ಚಿಸಿದ ಕಾರಣಗಳಿಗಾಗಿ ಈ ರೀತಿಯಾಗಿ ಆದೇಶ.

ಆದೇಶ

ವಾದಿಯರ ಈ ದಾವೆಯನ್ನು ವಜಾ ಮಾಡಲಾಗಿದೆ.

ಪ್ರತಿವಾದಿ 4(ಎ) ಯಿಂದ 4 (ಎಫ್) ರವರ ಕೌಂಟರ್


ಕ್ಲೇಮನ್ನು ಸಹ ವಜಾ ಮಾಡಲಾಗಿದೆ.

ದಾವೆ ಸ್ವ ರೂಪವನ್ನು ಗಮನದಲ್ಲಿಟ್ಟು ಕೊಂಡು ತಮ್ಮ


ತಮ್ಮ ದಾವೆ ಖರ್ಚನ್ನು ತಾವೇ ಭರಿಸಲು ವಾದಿಯರಿಗೆ
ಮತ್ತು ಪ್ರತಿವಾದಿಗಳಿಗೆ ಆದೇಶಿಸಲಾಗಿದೆ.

ಮೇಲಿನಂತೆ ಡಿಕ್ರಿ ಬರೆಯಲು ಆದೇಶಿಸಲಾಗಿದೆ.

(ಈ ತೀರ್ಪನ್ನು ಶೀಘ್ರಲಿಪಿಗಾರರಿಗೆ ಉಕ್ತಲೇಖನ ಕೊಟ್ಟು , ಗಣಕಯಂತ್ರದಲ್ಲಿ ನೇರವಾಗಿ ಗಣಕೀಕರಣ


ಮಾಡಿಸಿ ನಂತರ ನಾನು ಅದನ್ನು ಓದಿ ತಪ್ಪು ಗಳನ್ನು ತಿದ್ದಿದ ನಂತರ ಈ ದಿನ ಅಂದರೆ ದಿನಾಂಕ 16 ನೇ ಏಪ್ರಿಲ್‍
ಮಾಹೆ 2021 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಿರುತ್ತೇನೆ )

( ಭೀಮಪ್ಪ ಪೋಳ )
2 ನೇ ಹೆಚ್ಚು ವರಿ 2 ನೇ ದಿವಾಣಿ ನ್ಯಾಯಾಧೀಶರು, ಮೈಸೂರು

ಅನುಬಂಧಗಳ ಪಟ್ಟಿ

ವಾದಿ ಪರ ವಿಚಾರಣೆಯಾದ ಸಾಕ್ಷಿದಾರರ ಪಟ್ಟಿಃ


ಪಿಡಬ್ಲ್ಯೂ 1 : ಚೆನ್ನ ಜ್ಜಿ
32 ಓ. ಎಸ್‍ನಂ.583/2008

ವಾದಿ ಪರ ನಿಶಾನೆಯಾಗಿ ಗುರುತಿಸಲ್ಪ ಟ್ಟ ದಾಖಲೆಗಳ ಪಟ್ಟಿಃ


ನಿಪಿ.1 ಮತ್ತು 2 : ರಶೀತಿ ಪಟ್ಟಾ ಪುಸ್ತಕ
ನಿಪಿ.3 ರಿಂದ 10 : ಪಹಣಿ ಪತ್ರಿಕೆಗಳು
ನಿಪಿ.11 : ಕ್ರಯಪತ್ರದ ದೃಢೀಕೃತ ನಕಲು
ನಿಪಿ.12 : ಕ್ರಯಪತ್ರದ ದೃಢೀಕೃತ ನಕಲು
ನಿಪಿ.13 : ಕ್ರಯಪತ್ರದ ದೃಢೀಕೃತ ನಕಲು
ನಿಪಿ.14 : ಮೃತ್ಯು ಪತ್ರದ ದೃಢೀಕೃತ ನಕಲು

ಪ್ರತಿವಾದಿಯರ ಪರ ವಿಚಾರಣೆಯಾದ ಸಾಕ್ಷಿದಾರರ ಪಟ್ಟಿ


ಡಿ ಡಬ್ಲ್ಯೂ 1 : ಬಿ.ಕೆ.ಪುಟ್ಟ ಮಾದಪ್ಪ
ಡಿ ಡಬ್ಲ್ಯೂ 2 : ಸಿದ್ದ ರಾಜಮ್ಮ
ಡಿ ಡಬ್ಲ್ಯೂ 3 : ರಾಜೇಂದ್ರ ಸ್ವಾಮಿ
ಡಿ ಡಬ್ಲ್ಯೂ 4 : ನಾಗರಾಜು ಬಿ.ಎಸ್.
ಡಿ ಡಬ್ಲ್ಯೂ 5 : ಎಸ್.ಚಂದ್ರಶೇಖರ್
ಪ್ರತಿವಾದಿಯರ ಪರ ನಿಶಾನೆಯಾಗಿ ಗುರುತಿಸಲ್ಪ ಟ್ಟ ದಾಖಲೆಗಳ ಪಟ್ಟಿಃ
ನಿಡಿ.1 : ಕ್ರಯಪತ್ರದ ದೃಢೀಕೃತ ನಕಲು
ನಿಡಿ.2 : ಋಣಭಾರ ಪ್ರಮಾಣ ಪತ್ರದ ನಮೂನೆ 15
ನಿಡಿ.3 : ಋಣಭಾರ ಪ್ರಮಾಣ ಪತ್ರದ ನಮೂನೆ 16
ನಿಡಿ.4 ಮತ್ತು 5 : ಮ್ಯು ಟೇಷನ್‍ರಿಜಿಸ್ಟ ರ್ ಪ್ರತಿಗಳು
ನಿಡಿ.6 ರಿಂದ 12 : ಕರ ಸಂದ ರಶೀದಿಗಳು
ನಿಡಿ. 13 : ಆರ್ ಆರ್ ಟಿ ಅಪೀಲ್‍ನಂ.378/07-08 ರ ದೃಢೀಕೃತ ನಕಲು
ನಿಡಿ.14 : ಪಹಣಿ ಪತ್ರಿಕೆಗಳು
ನಿಡಿ.15 : ಪಹಣಿ ಪತ್ರಿಕೆ
ನಿಡಿ.16 ಮತ್ತು 17 : ಫಸಲು ಪಹಣಿಗಳು
ನಿಡಿ.18 ರಿಂದ 21 : ಪಹಣಿ ಪತ್ರಿಕೆಗಳು
ನಿಡಿ. 22 : ಫಸಲು ಪಹಣಿ
ನಿಡಿ.23 : ಫಸಲು ಪಹಣಿ
ನಿಡಿ.24 ರಿಂದ 29 : ಕಂದಾಯ ರಶೀದಿಗಳು
ನಿಡಿ 30 ಮತ್ತು 31 : ಪಹಣಿ ಪತ್ರಿಕೆಗಳ ದೃಢೀಕೃತ ನಕಲುಗಳು
ನಿಡಿ.32 ರಿಂದ 34 : ಪಹಣಿ ಪತ್ರಿಕೆಗಳು
33 ಓ. ಎಸ್‍ನಂ.583/2008

ನಿಡಿ. 35 : ಕ್ರಯಪತ್ರ
ನಿಡಿ.36 : ಮೃತ್ಯು ಪತ್ರ
ನಿಡಿ.36(ಎ) : ಮೃತ್ಯು ಪತ್ರದ ತರ್ಜುಮೆ ಪ್ರತಿ
ನಿಡಿ.37 : ದಿನಾಂಕ.13.2.1970 ರ ಕ್ರಯಪತ್ರದ ದೃಢೀಕೃತ ನಕಲು
ನಿಡಿ.38 : ದಿನಾಂಕ.30.5.1970 ರ ಕ್ರಯಪತ್ರದ ದೃಢೀಕೃತ ನಕಲು
ನಿಡಿ.39 : ಋಣಭಾರ ಪ್ರಮಾಣ ಪತ್ರ
ನಿಡಿ.40 : ಭೋಗ್ಯ ಪತ್ರದ ದೃಢೀಕೃತ ನಕಲು
ನಿಡಿ.41 : ಫಸಲು ಪಹಣಿ ಪತ್ರಿಕೆಯ ದೃಢೀಕೃತ ನಕಲು
ನಿಡಿ.42 ರಿಂದ 47 : ಬರಹದ ಪಹಣಿ ಪತ್ರಿಕೆಗಳು
ನಿಡಿ.48 ಮತ್ತು 49 : ಪಹಣಿ ಪತ್ರಿಕೆಗಳು
ನಿಡಿ.50 : ಹಿಂಬರಹ
ನಿಡಿ.51 ರಿಂದ 56 :ಕರ ಸಂದ ರಶೀದಿಗಳು
ನಿಡಿ.57 :ದಿನಾಂಕ.7.2.1970 ರ ಕ್ರಯಪತ್ರದ ದೃಢೀಕೃತ ನಕಲು

( ಭೀಮಪ್ಪ ಪೋಳ )
2 ನೇ ಹೆಚ್ಚು ವರಿ 2 ನೇ ಸಿವಿಲ್‍ನ್ಯಾಯಾಧೀಶರು, ಮೈಸೂರು
34 ಓ. ಎಸ್‍ನಂ.583/2008
35 ಓ. ಎಸ್‍ನಂ.583/2008

You might also like