You are on page 1of 1

Comet ಅಥವಾ ಕೇತು : ಪುರಾತನ ವೈದೀಕರು ಕಂಡಂತೆ:

ವರಾಹಮಿರಾಚಾರ್ಯರು ತಮ್ಮ ಬೃಹತ್ ಸಂಹಿತಾ ಗ್ರಂಥದಲ್ಲಿನ ೧೧ನೇ ಅಧ್ಯಾಯವನ್ನು ಈ ವಿಚಾರಕ್ಕಾಗಿ ಮೀಸಲಿಟ್ಟಿದ್ದಾರೆ -


"ಕೇತುಚಾರ:"
ವಿ. ಸೂ.: ಈ ಕೇತು, ಚಂದ್ರ ಕಕ್ಷೆ ಮತ್ತು ಭೂಮಿ ಸೂರ್ಯನ ಸುತ್ತುವ ಕಕ್ಷೆಗಳ ಛೇದಿಸುವ ಬಿಂದು( ರಾಹು - ಕೇತು)ಗಳಲ್ಲ!!!

ಕೇತುಗಳಲ್ಲಿ ಮೂರು ವಿಧ. "ದಿವ್ಯಾಂತರೀಕ್ಷಭೌಮಾಸ್ತ್ರಿವೀಧಾ". ಅವು - ದಿವ್ಯಾ, ಅಂತರಿಕ್ಷ ಮತ್ತು ಭೂಮಿ.

ಭೂಮಿಯಮೇಲೆ ಈ ಕೇತುಗಳ ಪ್ರಭಾವದ ಕಾಲವನ್ನು ಅವುಗಳ ಗೋಚರ ಕಾಲವನ್ನು ಹೊಂದಿಕೊಂಡು ಹೇಳಲಾಗಿದೆ. ಕೇತು ಎಷ್ಟು
ದಿನಗಳು ಗೋಚರಿಸುವಿದೋ ಅಷ್ಟು ಅಷ್ಟು ತಿಂಗಳುಗಳು ಮತ್ತು ಎಷ್ಟು ತಿಂಗಳುಗಳು ಗೋಚರಿಸುವುದೋ ಅಷ್ಟು ವರ್ಷಗಳ ವರೆಗೆ ಇದರ
ಪ್ರಭಾವ ಹೇಳಲಾಗಿದೆ. ಈ ಪ್ರಭಾವವು ಕೇತುವಿನ ಪ್ರಥಮ ದರ್ಶನದಿಂದ ಮೂರು ಪಕ್ಷಗಳ ನಂತರ ಪ್ರಾರಂಭವಾಗುವುದೆಂದೂ
ಹೇಳಲಾಗಿದೆ.

ಕೇತುವು ತೆಳ್ಳಗೆ, ಗಿದ್ದವಾಗಿ, ಸ್ಪಷ್ಟವಾಗಿ, ಹೊಳೆಯುವ ಮತ್ತು ನೇರವಾದ ರೂಪ ಹೊಂದಿದ್ದರೆ ಹಾಗೂ ಕಡಿಮೆ ಸಮಯದವರೆಗೆ
ಗೋಚರಿಸಿದರೆ (C/2020 F3 - NEOWISE ???) ಸುಖ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಒಂದುವೇಳೆ ಇದಕ್ಕೆ
ವಿರೂಪ ಲಕ್ಷಣ ಉಳ್ಳದ್ದಾಗಿದ್ದರೆ, ಅಂದರೆ ಕಾಮನಬಿಲ್ಲಿನಂತಾಗಿದ್ದಾರೆ ಅಥವಾ ಎರಡು - ಮೂರು ತಲೆಗಳು ಉಳ್ಳದ್ದಾಗಿದ್ದರೆ ದು:ಖ -
ದುಮ್ಮಾನ ಮತ್ತು ಕಷ್ಟ - ನಷ್ಟಗಳನ್ನು ಹೊತ್ತು ತರುತ್ತದೆ.

ಸುಮಾರು ೧೦೦೦ ವಿಧದ ಕೇತುಗಳನ್ನು ವರಾಹಮಿಹಿರಾಚಾರ್ಯರು ಬಣ್ಣಿಸಿದ್ದಾರೆ. ವಸಾಕೇತು, ಅಸ್ಥಿಕೇತು, ಶಸ್ತ್ರಕೇತು, ಕಪಾಲಕೇತು,
ರುದ್ರಕೇತು, ಚಲಕೇತು, ಶ್ವೇತಕೇತು, ಕಕೇತು, ರಶ್ಮಿಕೇತು, ಧ್ರುವಕೇತು, ಕುಮುದಕೇತು, ಮಣಿಕೇತು, ಜಲಕೇತು, ಭವಕೇತು,
ಪದ್ಮಕೇತು, ಆವರ್ತಕೇತು ಮತ್ತು ಸಂವರ್ತಕೇತು ಮುಂತಾದವುಗಳು ಪ್ರಮುಖ ಕೇತು ವಿಧಗಳು.

ಅಂತೆಯೇ ಭಚಕ್ರದಲ್ಲಿ ಕೇತುವಿನ ಸ್ಥಾನವನ್ನು ಹೊಂದಿಕೊಂಡು ಸಮಷ್ಟಿಯ ಹಾಗೂ ಆಡಳಿತ ನಡೆಸುವವರ ( ಗಮನಿಸಿ: ವೈಯಕ್ತಿಕವಾಗಿ
ಹೇಳಿಲ್ಲ) ಮೇಲೆ ಇದರ ಫಲಾಫಲಗಳನ್ನೂ ವರಾಹಮಿಹಿರಾಚಾರ್ಯರು ಹೇಳಿದ್ದಾರೆ. ಇಲ್ಲಿ ಈ ಫಲವಿಚಾರವು ಅಪ್ರಸ್ತುತ ಎಂದು ನಾನು
ಅದನ್ನು ಇಲ್ಲಿ ಉಲ್ಲೇಖಿಸಬಯಸುವುದಿಲ್ಲ.

ಕೃಷ್ಣಾರ್ಪಣಮಸ್ತು

ಸಂಗ್ರಹ: ಕಿದಿಯೂರು ಗಣೇಶ ಭಟ್ಟ

You might also like