You are on page 1of 2

ವಂದೇಮಾತರಂ ಸೋಮಶಂಕರ್

ಭಾರತದ ಶ್ರೇಷ್ಠ ನೈಜ ಇತಿಹಾಸ ಪ್ರತಿವರ್ಷ ಪೋಸ್ಟ್ ಮಾಡುವೆ. ಓದದೆ ಇರುವವರು ಓದಿ ಇತರರಿಗೆ ಹಂಚಿ, ಮತ್ತೆ ಎದೆತಟ್ಟಿ ಹೇಳಿ
ನಾ ಹಿಂದೂಸ್ಥಾನಿಯೆಂದು.
ಸಾವಿರಾರು ವರ್ಷಗಳ ಹಿಂದೆಯೇ ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಮಾನವರು ಮೃಗಗಳಂತೆ ಜೀವಿಸುತ್ತಿದ್ದಾಗ ಅಲ್ಲಿಗೆ ವಲಸೆ ಹೋಗಿ
ನಗರಗಳನ್ನು ನಿರ್ಮಿಸಿ ಅಲ್ಲಿಯ ವಾತಾವರಣಕ್ಕೆ ಬೆರೆತು ಹೋದ ಭರತವರ್ಷದವರು ಯಾರೇಂದು ತಿಳಿಯಬೇಕೇ.
ಅದಕ್ಕೂ ಮೊದಲು ಇದನ್ನು ನೀವು ಅರಿಯಲೇ ಬೇಕು. #ಆರ್ಯರು ಅನ್ನುವ ಜನಾಂಗ ಇತ್ತು ಅನ್ನುವುದೇ ಪ್ರಪಂಚದ ಮಹಾ ಸುಳ್ಳು. ಈ
ಸುಳ್ಳಿನ ಪಿತಾಮಹ ಮ್ಯಾಕ್ಸ್ ಮುಲ್ಲರ್. ಪೂರ್ವದ ಭಾರತದಿಂದ ಸುಸಂಸ್ಕೃತ ಜನಾಂಗ ಪಶ್ಚಿಮಕ್ಕೆ ಪ್ರಯಾಣ ಬೆಳೆಸಿದರೆ ವಿನಹ,
ಪಶ್ಚಿಮದಿಂದ ಅನಾಗರಿಕ ಯಾವೊಂದು ಜನಾಂಗ ಪೂರ್ವದ ಭಾರತಕ್ಕೆ ಬರಲಿಲ್ಲ .( ಪರ್ಶಿಯಾದ ಪಾರ್ಸಿಗಳು ಮಾತ್ರವೇ ಅದು ಕ್ರಿ.ಶ
700/800 ವರ್ಷಗಳ ಲ್ಲಿ ಭಾರತಕ್ಕೆ ಬಂದರು ಅದು ಸಾವಿರಾರು ಸಂಖ್ಯೆಯಲ್ಲಿ ಮಾತ್ರವೇ. ಮೂಲತಃ ಅವರು ಸಾವಿರಾರು ವರ್ಷಗಳ
ಹಿಂದೆ ಹಿಂದೂಸ್ಥಾನದಿಂದ ವಲಸೆ ಹೋದವರೆ.) ಅಂದರೆ ಬ್ರಿಟಿಷ್ ರು ಸೃಷ್ಟಿಸಿದ ಪೊಳ್ಳು ಕಥೆ, ಇದೆ ಪೊಳ್ಳು ಕಥೆಯನ್ನೆ ನಮ್ಮ
ಸಾಚಾಗಳ ನೆರಳಲ್ಲಿ ನಿಷ್ಠೆಯಿಲ್ಲದೆ ಕಾಪಿ ಪೇಸ್ಟ್ ಮಾಡಿ ತಮ್ಮ ಹೆಸರು ಹಾಕಿದನ್ನು ನಾವು ಓದಿ ತಿಳಿದುಕೊಳ್ಳುತ್ತಿರುವುದು ನಮ್ಮ ಕರ್ಮ.
ಈಗ ಆರ್ಯರು ಭಾರತಕ್ಕೆ ವಲಸೆ ಬಂದರು ಎಂಬುದು ಸುಳ್ಳು ಎಂದು ಅನೇಕ ಉತ್ಖನನ ಮತ್ತು ಸಂಶೋಧನೆಗಳಿಂದ ಸಾಬೀತಾಗಿದೆ.
ಇದರ ಬಗ್ಗೆ ಮತ್ತೊಮ್ಮೆ ಪೋಸ್ಟ್ ಮಾಡುವೆ.
ಈಗ ಭಾರತದಿಂದ ಪಶ್ಚಿಮದ ಕಡೆ ಅದು ತ್ರೇತಾಯುಗದಲ್ಲಿ ಎಂಬುದನ್ನು ತಿಳಿಯುವ
ಯಯಾತಿ: ನಹುಷನ ಮಗನಾದ ಯಯಾತಿಯು ಭರತವರ್ಷದ ಚಕ್ರವರ್ತಿಯಾಗಿದ್ದ ಕಾಲದಲ್ಲಿ (ಹಿಂದಿನ ಇತಿಹಾಸ ಪೂರ್ಣ
ಬರೆಯಲಾರೆ, ಸಮಯವಕಾಶವಿಲ್ಲ) ಯಯಾತಿಗೆ ಇಬ್ಬರು ಪತ್ನಿಯರು.೧. ಶುಕ್ರಾಚಾರ್ಯ‌ನ ಮಗಳು #ದೇವಯಾನಿ ಮತ್ತು ೨. ರಾಕ್ಷಸ
ರಾಜ ವೃಷಪರ್ವನ ಮಗಳು #ಶರ್ಮಿಷ್ಠೆ.
ಮೊದಲ ಪತ್ನಿ ದೇವಯಾನಿ ಗೆ ಇಬ್ಬರು ಪುತ್ರರು #ಯದು ಮತ್ತು #ತುರ್ವಸು. ದೇವಯಾನಿಗೆ ಕಾರಣಾಂತರದಿಂದ ದಾಸಿಯಾಗಿದ್ದ ಶರ್ಮಿಷ್ಠೆ
ಯನ್ನು ಯಯಾತಿ ಗಾಂಧರ್ವ ವಿವಾಹವಾಗಿ ಮೂರು ಪುತ್ರರು #ದ್ರುಹು, #ಪುರು ಮತ್ತು #ಅನು ಜನಿಸಿದರು.
ದೇವಯಾನಿ ತನ್ನ ದಾಸಿಯಾದ ಶರ್ಮಿಷ್ಠೆ ಗೆ ಮೂವರು ಪುತ್ರರು ಜನಿಸಿದ್ದು ಮತ್ತು ಯಯಾತಿ ಶರ್ಮಿಷ್ಠೆ ಮೇಲೆ ಅತಿಹೆಚ್ಚು ಪ್ರೀತಿ
ತೋರುವುದುನ್ನು ಕಂಡು ಸಹಿಸಲಾರದೆ ಕೋಪಗೊಂಡ, ದೇವಯಾನಿ ತನ್ನ ತಂದೆ ಶುಕ್ರಾಚಾರ್ಯರಿಗೆ ತಿಳಿಸಿ ಯಯಾತಿಗೆ ಅಕಾಲಿಕ
ವೃದ್ಧಾಪ್ಯದ ಶಾಪ ನೀಡಲಾಯಿತು, ನಂತರ ಶರ್ಮಿಷ್ಠೆ ಯನ್ನು ಗಾಂಧರ್ವ ವಿವಾಹವಾದ ಸನ್ನಿವೇಶ ವಿವರಿಸಿ ಕ್ಷಮೆ ಯಾಚಿಸಿದಾಗ,
ಶುಕ್ರಾಚಾರ್ಯರು ನಿನ್ನ ಮಕ್ಕಳಲ್ಲಿ ಯಾರಾದರೂ ಒಬ್ಬರಿಂದ ನೀನು ಯೌವನವನ್ನು ಪಡೆದರೆ ನಿನಗೆ ಯೌವನ ಪುನಃ ಪ್ರಾಪ್ತಿಯಾಗುತ್ತದೆ
ಎಂದು ಸಲಹೆ ನೀಡಿ ಕಳಿಸುವರು. (ಇಲ್ಲಿ ಗಮನಿಸಿ ಆ ಕಾಲದಲ್ಲೆ ನಮ್ಮ ಪ್ರಾಚೀನ ವಿಜ್ಞಾನ ಎಷ್ಟು ಮುಂದುವರಿದಿತ್ತು ಎಂದು. ಈಗೀಗ
ಸಂಶೋಧನೆ ಹಂತದಲ್ಲೇ ಇರುವ " #ಹಾರ್ಮೋನ್ ಟ್ರಾನ್ಸ್ ಫಾ ಼ ರ್ಮ್" ಬಗ್ಗೆ ನಮ್ಮ ಪ್ರಾಚೀನರಿಗೆ ಶ್ರೇಷ್ಠ ಮಟ್ಟದ ಜ್ಞಾನವಿತ್ತು)
ಯಯಾತಿ ವೃದ್ಧಾಪ್ಯದಿಂದ ಬೇಸರವಾಗಿ ತನ್ನ ಮಕ್ಕಳನ್ನು ಒಬ್ಬೊಬ್ಬರಾಗಿ ಕರೆದು ತಮ್ಮ ಯೌವನವನ್ನು ಕೆಲವು ವರ್ಷಗಳು ದಾರೆಯರೆಯಲು
ಕೆಳಿಕೊಂಡಾಗ
೧. ಯದು: ದೇವಯಾನಿ ಮಗ ತಂದೆಗೆ ಯೌವನ ಕೊಡಲು ನಿರಾಕರಿಸಿದನು , ಇದರಿಂದ ಯಯಾತಿ ಇವನಿಗೆ ನಿನ್ನ ವಂಶದವರು
ಯಾರು ಚಕ್ರವರ್ತಿಗಳಾಗದಿರಲಿ ಎಂದು ಶಾಪನೀಡಿದ.
ಯದುವಿನಿಂದ ಯದುವಂಶ ಪ್ರಾರಂಭವಾಯಿತು. ತಂದೆಯ ಶಾಪದಿಂದ ಮಹಾ ಪರಾಕ್ರಮಿಗಳು ಅಷ್ಟೇಕೆ ಜಗದೊಡೆಯ ಶ್ರೀಕೃಷ್ಣ
ಪರಮಾತ್ಮನೆ ಈ ವಂಶದಲ್ಲಿ ಜನಿಸಿದರು ಯಾರು ಚಕ್ರವರ್ತಿಗಳಾಗಿ ಬಾಳಲಿಲ್ಲ.
ಮುಂದೆ ಶ್ರೀಕೃಷ್ಣನ ಹಿರಿಯ ಮಕ್ಕಳಾದ ಸಾಂಬ ಮೊದಲಾದ ಮೂವರು ಅನೇಕರೊಂದಿಗೆ ಸೈಬೀರಿಯಕ್ಕೆ ಹೋಗಿ ಅಲ್ಲಿ ನೆಲೆಸಿ ಅಲ್ಲಿ ತಮ್ಮ
ಸಾಮ್ರಾಜ್ಯದ ರಾಜಧಾನಿಗೆ ವಜ್ರಪುರವೆಂದು ಹೆಸರಿಟ್ಟರು.
ಸೈಬೀರಿಯಾ ಮತ್ತು ಫಿನ್ಲಂಡಿನ ವರೆಗೆ ಜ್ಯಾರುಸಾಮಾ ಯದುಗಳೆಂಬ ಹೆಸರಿತ್ತು . ಹಿಂದೆ ಗಝನಿಯಿಂದ ಸಮರ್ ಕಂದ್ ವರೆವಿಗಿನ
ಪ್ರದೇಶವೆಲ್ಲ ಯದುವಂಶೀಯರ ಕೈಯಲಿತ್ತು.
೨. ದ್ರುಹು: (#ಮ್ಲೇಚ್ಚರು) ತಂದೆ ಯಯಾತಿಗೆ ಯೌವನ ನೀಡಲು ಒಪ್ಪದೇ ಇದ್ದಾಗ, ಯಯಾತಿ ಈತನಿಗೆ ತನ್ನ ಸಾಮ್ರಾಜ್ಯದಿಂದಲೇ
ಬಹಿಷ್ಕಾರ ಮಾಡಿದ .
ಇದೇ ದ್ರುಹ್ಯು (ಮ್ಲೇಚರು) ತನ್ನ ಸಂಗಡಿಗರೊಂದಿಗೆ ಪಶ್ಚಿಮದ ಕಡೆಗೆ ವಲಸೆ ಹೋದರು ಅಂದರೆ ಈಗಿನ ಸೌದಿ ಅರೇಬಿಯಾ ಅಥವಾ
ಪರ್ಶಿಯಾ ದಲ್ಲೆ ನೆಲೆಸಿ ರಾಜ್ಯಭಾರ ಮಾಡಿದರು ಮುಂದೆ ಇವನ ವಂಶದಲ್ಲೆ ಮುಂದೆ ಕ್ರಿ.ಪೂ ೬೨೮-೫೫೧ ರಲ್ಲಿ ಝರತುಷ್ಟ್ರರೆಂಬ
ಮಹಾನ್ ಸಂತನಿಂದ ಪಾರಸಿ ಮತದ ಸ್ಥಾಪನೆ ಯಾಯಿತು. ಕೊನೆಗೆ ಪಾರಸಿ ಮತ ಭಾರತದಲ್ಲೇ ಆಶ್ರಯ ದೊರೆತು ಒಂದರ್ಥದಲ್ಲಿ
ಹಿಂದೂಧರ್ಮದಲ್ಲೆ ಲೀನವಾಗಿದೆ.
ಹಿಂದೆ ಕ್ರಿ.ಪೂ೨೫೦೦- ‌೧೨೦೦ ರವರೆಗೆ ಇರಾನ್‌, ಇರಾಕನ ಸುತ್ತಮುತ್ತಲಿನ ಪ್ರದೇಶವಾಳಿದ ಆಳಿದ ಮಿರನ್ನಿ ವಂಶ #ಕೃತ
ಎಂಬುವನಿಂದ ಸ್ಥಾಪಿತವಾಯಿತು. ಇವರ ಭಾಷೆ ವೈದಿಕ ಅಥವಾ ಸಂಸ್ಕೃತ ಮೂಲದ ಪ್ರಾಕೃತಕವಾಗಿತ್ತು
೩. ಅನು:(#ಅಯೋನಿಯನ್ನರು/ಯವನರು- ಗ್ರೀಕರು) ಶರ್ಮಿಷ್ಠೆ ಯ ಮಗ ಈತನು ತಂದೆಗೆ ತನ್ನ ಯೌವನ ನೀಡಲು ಒಪ್ಪಲಿಲ್ಲ,
ಯಯಾತಿಯ ಆಗ್ನೇಯ ಮೇರೆಗೆ ಭಾರತವನ್ನು ಬಿಟ್ಟು ಪಶ್ಚಿಮದ ಇಂದಿನ ಗ್ರೀಕ್ ಕಡೆಗೆ ವಲಸೆ ಅನೇಕ ತನ್ನ ಅನುಯಾಯಿಗಳೊಂದಿಗೆ
ಹೋದ .
ಗ್ರೀಕ್ ನ ಪೂರಾತನ ಸಂಸ್ಕೃತಿಯಲ್ಲಿ ಮುಕ್ಕಾಲು ಭಾಗ ಹಿಂದೂ ಧರ್ಮದಲ್ಲಿ ಇದ್ದಂತೆ ಸ್ವರ್ಗದ ದೇವತೆಗಳು ಹಾಗೂ ದಾನವ,
ರಾಕ್ಷಸರನ್ನು ಕಾಣಬಹುದು.
ಇವರು ನಮ್ಮ ರೀತಿಯಲ್ಲಿಯೇ ಅನೇಕ ಸ್ವರ್ಗದ ದೇವತೆಗಳನ್ನು ಆರಾಧಿಸುತ್ತಿದ್ದರು. ಯುರೋಪಿನ ಬಹುಭಾಗ ಜನಾಂಗ ಅಯೋನಿಯನ್ಸ್
ಅಥವಾ ಯವನರು ಎಂದು ಕರೆಯಲಾಗುತ್ತದೆ.
(ಗ್ರೀಕ್ ಮತ್ತು ಹಿಂದೂ ಧರ್ಮದ ಸಂಸ್ಕೃತಿ,ಪರಂಪರೆಯಲ್ಲಿ ಬರುವ ಅನೇಕ ವಿಷಯಗಳ ಹೋಲಿಕೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ
ನಿಮಗೆ ನನ್ನ ಸೋದರ Vinod Kumar ಬರೆದ ಒಂದು ಲಿಂಕ್ ಕೊಟ್ಟಿರುವೆ ಆಸಕ್ತರು ಓದಿ
http://nationalistviews.com/greek-believes-krishna-as.../ )
೪. ತುರ್ವಸು: ದೇವಯಾನಿಯ ಮಗ . ಈತನು ತಂದೆಗೆ ಯೌವನ ಧಾರೆಯೆರೆಯದೆ ಹಿಂದೆ ಸರಿದ, ಯಯಾತಿಯ ಆಗ್ನೆ ಮೀರಿದ್ದರಿಂದ
ಇವನಿಗೂ ರಾಜ್ಯ ದೊರೆಯದೆ ಭಾರತದಿಂದ ಬಹಿಷ್ಕಾರವಾಗಿ ಈಗಿನ ಪಶ್ಚಿಮದ ಟರ್ಕಿ ಪ್ರದೇಶಕ್ಕೆ ವಲಸೆ ಹೋದ ತನ್ನ
ಅನುಯಾಯಿಗಳೊಂದಿಗೆ. #ತುರಷ್ಕರು ಎಂಬ ನಾಮಧೇಯದೊಂದಿಗೆ ಟರ್ಕಿ ಪ್ರದೇಶದಲ್ಲೆ ನೆಲೆಸಿ ನಗರಗಳನ್ನು ನಿರ್ಮಿಸಿ ರಾಜ್ಯವಾಳಿದರು.
೫. ಪುರು: ಶರ್ಮಿಷ್ಠೆಯ ಮಗ ತನ್ನ ತಂದೆಯ ಮಾತಿನಂತೆ ತನ್ನ ಯೌವನವನ್ನು ನೀಡಿ ನಂತರ ಮತ್ತೆ ತಂದೆಯಾದ ಯಯಾತಿಯೇ
ಮಗನಿಗೆ ಯೌವನವನ್ನು ಹಿಂದಿರುಗಿಸಿ ತನ್ನ ಸಂಪೂರ್ಣ ಚಕ್ರಾಧಿಪತ್ಯವನ್ನು ನೀಡಿ ವಾನಪ್ರಸ್ಥಾಶ್ರಮಕ್ಕೆ ತೆರುಳುತ್ತಾನೆ.
ಪುರುವಿನ ವಂಶದಲ್ಲೆ ಮುಂದೆ ಪ್ರಖ್ಯಾತ ಕುರುವಂಶ ಕಾಣಬಹುದು, ಅದರಲ್ಲಿ ನಾವು ಕೌರವರು ಮತ್ತು ಪಾಂಡವರನ್ನು ಮಹಾಭಾರತ ಎಂಬ
ಜಗತ್ತಿನ ಅತಿಶ್ರೇಷ್ಠ ಇತಿಹಾಸ ಗ್ರಂಥದಲ್ಲಿ ತಿಳಿದಿದ್ದೇವೆ.
ಈ ರೀತಿ ಯಯಾತಿ ಚಕ್ರಾಧಿಪತ್ಯದ ಆಡಳಿತದ ಜೀವನದಲ್ಲಿ ನಾವು ಭಾರತದಿಂದ ಪಶ್ಚಿಮಕ್ಕೆ ವಲಸೆ ಹೋಗಿ ವೈದಿಕ ಸಂಸ್ಕೃತಿ ಹರಡಿದ
ವಿಷಯ ಅರಿಯಬಹುದು. ಹಾಗೇಯೇ ನಾ ಈ ಹಿಂದೆ ಬರೆದಂತ ಸಾವಿರಾರು ವರ್ಷಗಳ ಹಿಂದೆಯೇ ಬಲಿಚಕ್ರವರ್ತಿಯು ಭಾರತದಿಂದ
ದಕ್ಷಿಣ ಅಮೇರಿಕಾದ ಪೆರುದೇಶಕ್ಕೆ ಹೋಗಿ ನೆಲೆಸಿದ್ದನ್ನು ನೆನಪಿಸಿಕೊಳ್ಳಿ ( ಓದದೆ ಇರುವವರು ಈ ಲಿಂಕ್ ನೋಡಿ
https://www.facebook.com/100025029990737/posts/290803261764005/ )
ಒಟ್ಟಿನಲ್ಲಿ ಎಲ್ಲಾ ಭಾಷೆಗಳ ತಾಯಿಬೇರು ಸಂಸ್ಕೃತ ವಿದ್ದಂತೆ, ಎಲ್ಲಾ ಜನಾಂಗಗಳ ಬೇರು ಭಾರತದಿಂದಲೇ ಹರಡಿದೆ. ಇದರಿಂದಲೇ ವಿಶ್ವದ
ಪೂರಾತನ ನಾಗರಿಕತೆಗಳ ಪರಂಪರೆಯಲ್ಲಿ ವೈದಿಕ ಸಂಸ್ಕೃತಿಯ ಬಿಂಬ ನಾವು ಕಾಣಬಹುದು.
ನಮ್ಮ ಇತಿಹಾಸಗಳನ್ನು ತಿರುಚಿ ನಾವು ಹೆಮ್ಮೆ ಪಡುವ ವಿಚಾರಗಳನ್ನು ತಿಳಿಯದೇ, ನಾವು ಅಸಹ್ಯ ಪಡುವಂತೆ ಬರೆದು ನಮ್ಮ ನಮ್ಮಲ್ಲೇ
ಉತ್ತರ- ದಕ್ಷಿಣ ಎಂದು ಭೇದಭಾವ ನಿರ್ಮಿಸಿ ಈ ದೇಶ ಒಡೆಯಲು ಸಂಚು ರೋಪಿಸುವ ಇತಿಹಾಸ ನಿರ್ಮಿಸಿದ ಆಂಗ್ಲರು ಮತ್ತು ಅವರ
ನಂತರ ಅವರ ಸಾಚತನದಂತೆ ಬದುಕಿದವರ ಅವರ ನೆರಳಲ್ಲಿ ರಚಿಸಿದ ಇತಿಹಾಸ ಓದಿ, ಓದಿ ಹಾಳಾಗಿದ್ದೇವೆ. ಅನೇಕ ಉತ್ಖನನ,
ಸಂಶೋಧನೆಗಳಿಂದ ನೈಜ ಇತಿಹಾಸ ಬೆಳಕಿಗೆ ಬಂದರು ನಾವು ಅದನ್ನು ಓದುವುದಿಲ್ಲ!
ಬ್ರಿಟಿಷ್ ರು ಬರೆಸಿದ ಪೊಳ್ಳು ಇತಿಹಾಸ ಮತ್ತು ಮೇಕಾಲೆ ಸೃಷ್ಠಿಸಿದ ಶಾಲೆಗಳಲ್ಲಿ ಓದಿ ಇದೆ ಸತ್ಯ ಎಂಬುವಂತೆ ಆಗಿದೆ.
ಭಾರತದಲ್ಲಿ ಬದಲಾಗಬೇಕಾದದ್ದು
೧.ಆಧುನಿಕ ಸಂಶೋಧನೆಯ ನೈಜ ಇತಿಹಾಸ ಗ್ರಂಥಗಳ ಪ್ರಚಾರ ಮತ್ತು ಪಠ್ಯ ಪುಸ್ತಕಗಳಲ್ಲಿ ಆಧಾರ ಸಮೇತ ಪ್ರಕಟಣೆ.
೨. ಮತ-ಜಾತಿಗಳ, ಅಸ್ಪ್ರಶ್ಯತೆ, ಅಸಮಾನತೆ, ರಾಜ್ಯರಾಜ್ಯಗಳ ಮತ್ತು ಬಾಷೆಗಳ ಅಂದ ವ್ಯಾಮೋಹ ಮಹಾಮಾರಿ ರೋಗ
ನಾಶವಾಗಬೇಕು.
೩. ರಾಷ್ಟ್ರೀಯತೆಯ ಪಾಠವೇ ಬಹುಮುಖ್ಯವಾಗಿ ಭಾರತದಲ್ಲಿ ನಾವೆಲ್ಲರೂ ಹಿಂದೂಸ್ಥಾನಿಗಳು ಎಂಬ ಏಕತೆಯ ಮನೋಭಾವದಿಂದ
ಬಾಳಬೇಕು.
ಒಂದು ವರ್ಷದ ಹಿಂದೆ ಇದೆ ದಿನ ಈ ಪೋಸ್ಟ್ ಮಾಡಿರುವೆ. ಓದದೆ ಇರುವವರು ಓದಿ ಮತ್ತು ಇತರರಿಗೆ ಹಂಚಿ ಬಂಧುಗಳೇ.
#ವಿಶೇಷ_ಸೂಚನೆ
ಬ್ರಿಟಿಷ್‌ ಏಜೆಂಟ್ ಮ್ಯಾಕ್ಸ್ ಮುಲ್ಲರ್ ಅವರ ನಂತರದ ಸಾಚಾಗಳು ಬರೆದ ಡೊಂಗಿ ಮಸಾಲೆ ಇತಿಹಾಸವನ್ನೇ ಶ್ರೇಷ್ಠವೆಂದು ನಂಬಿ
ಕಾಮೆಂಟ್ ಮಾಡುವವರ ಕಾಮೆಂಟ್ ಗೆ ಉತ್ತರವಿಲ್ಲ ಅದನ್ನು ಡಿಲೀಟ್ ಮಾಡಲಾಗುವುದು.
ಜೈಹಿಂದ್
#ವಂದೇಮಾತರಂ_ಸೋಮಶಂಕರ್

You might also like