You are on page 1of 1

|| ಓಂ ಶ್ರೀಗುರುಭ್ಯೋನ್ನಮ: ಹರಿ: ಓಮ್ ||

ಸನ್ಯಾಸಿ

ಜೀವತ್ ಚ್ಚ್ರಾದ್ಧಂ ತಥೌ ಕ್ಷೌರಂ ಶಾಕಲಂ ಹೋಮ ಜಾಗರಂ |


ಕೃತ್ವಾ ಪರೇದ್ಯು: ಪುಂಸೂಕ್ತವಿರಜಾಖ್ಯಸಹೋಮಕೇ |
ಷಟ್ ಕೃತ್ವಾ ಸನ್ಯಸೇತ್ ಬ್ರಹ್ಮಚಾರ್ಯಥವಾ ಗೃಹೀ ||
-- ಪಾಂಚರಾತ್ರಾಗಮ

ಸನ್ಯಾಸವನ್ನು ಸ್ವೀಕರಿಸಬಯಸುವ ಬ್ರಹ್ಮಚಾರೀ ಅಥವಾ ಗೃಹಸ್ಥನು - ಜೀವತ್ ಶ್ರಾದ್ಧ, ಕ್ಷೌರ, ಶಾಕಲಹೋಮ, ಇವುಗಳನ್ನು ಮಾಡಿ
ಮರುದಿನ ಪುರುಷಸೂಕ್ತ ಹೋಮ, ವಿರಜಾಹೋಮಗಳನ್ನು ಮಾಡಿ ಸನ್ಯಾಸವನ್ನು ಸ್ವೀಕರಿಸಬೇಕು.

ಸನ್ಯಾಸಿಗಳಲ್ಲಿ ವೈವಿಧ್ಯ :
ಸನ್ಯಾಸವು ಕುಟೀಚಕ, ಬಹೂದಕ, ಹಂಸ ಮತ್ತು ಪರಮಹಂಸ ಎಂಬ ನಾಲ್ಕು ವಿಧವಾಗಿದೆ. ಇವರ ಶ್ರೇಷ್ಠತೆಯೂ ಇದೇ ಕ್ರಮದಲ್ಲಿ
ಇರುತ್ತದೆ. ಸ್ಕಾಂದಪುರಾಣ, ಪರಾಶರ ಸ್ಮೃತಿ ಮತ್ತಿತರ ಗ್ರಂಥಗಳಲ್ಲಿ ಹೇಳಿದಂತೆ ಇವರ ವೈವಿಧ್ಯಗಳು ಈ ಕೆಳಗಿನಂತಿವೆ.

೧. ಕುಟೀಚಕ: ಪತ್ನಿ - ಪುತ್ರ - ಮಿತ್ರಾದಿಗಳ ಜೊತೆ ಇದ್ದು, ಕಾವಿಯನ್ನು ಧರಿಸಿ, ಶಿಖಾ - ಯಜ್ಞೋಪವೀತವನ್ನು ಮತ್ತು
ತ್ರಿದಂಡಗಳನ್ನು ಧರಿಸಿ ಭಗವದ್ ಜ್ಞಾನಿಯಾಗಿ ಇರುತಾರೆ.
೨. ಬಹೂದಕ: ಕಾವಿಯನ್ನು ಧರಿಸಿ, ಶಿಖಾ - ಯಜ್ಞೋಪವೀತವನ್ನು ಮತ್ತು ಏಕದಂಡವನ್ನು ಧರಿಸಿ, ಭಗವದ್ ಜ್ಞಾನಿಯಾಗಿ ,
ಗೃಹತ್ಯಾಗ ಮಾಡಿ ಏಳು ಮನೆಗಳಲ್ಲಿ ಭಿಕ್ಷಾಟನೆ ಮಾಡಿ ಜೀವಿಸುತ್ತಾ ಇರುತ್ತಾರೆ.
೩. ಹಂಸ: ಶಿಖಾ - ಯಜ್ಞೋಪವೀತ, ಕಾವಿಯನ್ನು ಮತ್ತು ಏಕದಂಡವನ್ನು ಧರಿಸಿ, ಭಗವದ್ ಜ್ಞಾನಿಯಾಗಿ ಜೀವಿಸುತ್ತಾರೆ.
೪. ಪರಮಹಂಸ: ಶಿಖಾ - ಯಜ್ಞೋಪವೀತಜಳನ್ನು ತ್ಯಜಿಸಿ, ಏಕದಂಡವನ್ನು ಧರಿಸಿ ವಾಕ್ - ಮನಸ್ಸು - ಕರ್ಮಗಳ
ನಿಯಂತ್ರಣರೂಪ ವಿರಕ್ತನಾಗಿ ಸದಾ ಪರಮಾತ್ಮನನ್ನೇ ಭಜಿಸುತ್ತಾ ಇರುತ್ತರೆ.

ಮೂಲ: ಶ್ರೀ ಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತ 'ಯತಿಪ್ರಣವಕಲ್ಪ'

ಶ್ರೀಕೃಷ್ಣಾರ್ಪಣಮಸ್ತು

You might also like