You are on page 1of 11

ಅನುಶಾಸನ ಪರ್ವ: ದಾನಧರ್ಮ ಪರ್ವ

ದೋಷಗಳಿಂದ ಕೂಡಿರುವ ಸ್ತ್ರೀಯರನ್ನು ರಕ್ಷಿಸುವುದರ ಕುರಿತು ಯುಧಿಷ್ಠಿರನು ಭೀಷ್ಮನನ್ನು ಪ್ರಶ್ನಿಸುವುದು (೧-೧೨).

ಯುಧಿಷ್ಠಿರನು ಹೇಳಿದನು: “ಪಾರ್ಥಿವ! ಈ ಲೋಕದ ಮಾನವರು ದೈವನಿರ್ಮಿತ ಮೋಹದಿಂದ ಆವಿಷ್ಟರಾಗಿ ಸದಾ


ಸ್ತ್ರೀಯರಲ್ಲಿಯೇ ಆಸಕ್ತಿಯುಳ್ಳವರಾಗಿರುತ್ತಾರೆ. ಸ್ತ್ರೀಯರೂ ಕೂಡ ಪುರುಷರಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ. ಇದು
ಪ್ರತ್ಯಕ್ಷವಾಗಿಯೇ ಇದೆ. ಲೋಕವೇ ಇದಕ್ಕೆ ಸಾಕ್ಷಿಯಾಗಿದೆ.

ಈ ವಿಷಯದಲ್ಲಿ ನನ್ನ ಹೃದಯದಲ್ಲಿ ತೀವ್ರ ಸಂಶಯವುಂಟಾಗಿದೆ. ಕುರುನಂದನ! ಇಂಥಹ ಸ್ತ್ರೀಯರೊಂದಿಗೆ ನರರು ಹೇಗೆ
ಕೂಡುತ್ತಾರೆ? ಸ್ತ್ರೀಯರು ಎಂಥಹ ಪುರುಷರಲ್ಲಿ ಅನುರಕ್ತರೂ ಅಥವಾ ಪುನಃ ವಿರಕ್ತರೂ ಆಗುತ್ತಾರೆ?

ಪುರುಷವ್ಯಾಘ್ರ! ಯೌವನದಿಂದ ಉನ್ಮತ್ತಳಾಗಿರುವ ಸ್ತ್ರೀಯನ್ನು ಪುರುಷನು ಹೇಗೆ ತಾನೇ ರಕ್ಷಿಸಬಲ್ಲನು? ಇದನ್ನು ನನಗೆ

ಗೋವುಗಳು ಹೊಸ ಹುಲ್ಲುಗಳನ್ನು ಹೇಗೋ ಹಾಗೆ ಸ್ತ್ರೀಯರು ಹೊಸ ಹೊಸ ಪುರುಷರನ್ನು ಹುಡುಕುತ್ತಲೇ ಇರುತ್ತಾರೆ.
ಸ್ವೇಚ್ಛಾಚಾರೀ ಸ್ತ್ರೀಯರು ಹೀಗೆ ಪತಿಯನ್ನು ವಂಚಿಸುತ್ತಲೇ ಇರುತ್ತಾರೆ. ಅಂಥವರ ಕೈಗೆ ಸಿಲುಕಿದ ಪುರುಷನಿಗೆ
ಬಿಡುಗಡೆಯೆನ್ನುವುದೇ ಇರುವುದಿಲ್ಲ.

ಮಾಯಾವಿಗಳಾಗಿದ್ದ ಶಂಬರ, ನಮುಚಿ, ಬಲಿ, ಕುಂಭೀನಸ ಇವರು ತಿಳಿದಿದ್ದ ಎಲ್ಲ ಮಾಯೆಗಳನ್ನೂ ಸ್ತ್ರೀಯರು
ತಿಳಿದುಕೊಂಡಿರುತ್ತಾರೆ.

ನಗುವವನೊಡನೆ ನಗುತ್ತಾರೆ. ಅಳುವವನೊಡನೆ ಅಳುತ್ತಾರೆ. ಸಮಯ ಬಂದರೆ ಅಪ್ರಿಯನಾದವನನ್ನೂ


ಪ್ರಿಯಮಾತುಗಳಿಂದ ಸೆಳೆದುಕೊಳ್ಳುತ್ತಾರೆ.

ಉಶನ ಶುಕ್ರನು ತಿಳಿದಿರುವ ಮತ್ತು ಬೃಹಸ್ಪತಿಯು ತಿಳಿದಿರುವ ಶಾಸ್ತ್ರಗಳಿಗಿಂತಲೂ ಸ್ತ್ರೀಬುದ್ಧಿಯು ಹೆಚ್ಚಿನದು.


ಅಂತವರನ್ನು ಹೇಗೆ ನರರು ರಕ್ಷಿಸಬಲ್ಲರು?

ವೀರ! ಸುಳ್ಳನ್ನು ಸತ್ಯವೆನ್ನುತ್ತಾರೆ. ಸತ್ಯವನ್ನು ಸುಳ್ಳೆನ್ನುತ್ತಾರೆ. ಹೀಗಿರುವವರನ್ನು ಪುರುಷರು ಹೇಗೆ ರಕ್ಷಿಸಬಲ್ಲರು?

ಸ್ತ್ರೀಯರ ಬುದ್ಧಿಯು ಇಂತಹುದೇ ಎಂದು ನಿಷ್ಕರ್ಷಿಸಿ ಬೃಹಸ್ಪತಿ ಮೊದಲಾದ ಸತ್ಪುರುಷರು ಅದಕ್ಕೆ ತಕ್ಕುದಾದ
ನೀತಿಶಾಸ್ತ್ರಗಳನ್ನು ರಚಿಸಿರಬಹುದು.

ಪುರುಷರಿಂದ ಸಂಪೂಜ್ಯರಾಗಿದ್ದರೂ  ಅಥವಾ ಅವರಿಂದ ತಿರಸ್ಕೃತಗೊಂಡರೂ ಸ್ತ್ರೀಯರು ಮನುಷ್ಯರ ಮನಸ್ಸನ್ನು


ವಿಕಾರಗೊಳಿಸುತ್ತಾರೆ.ಅವರ ರಕ್ಷಣೆಯನ್ನು ಭಲಾ ಯಾರು ಮಾಡಬಲ್ಲರು? ಇದೇ ನನ್ನಲ್ಲಿರುವ ಮಹಾ ಸಂಶಯವು.
ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೧

ಧರ್ಮಾಧರ್ಮಗಳ ಸ್ವರೂಪ ನಿರ್ಣಯ (1-26).

ಯುಧಿಷ್ಠಿರ ಉವಾಚ|

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಾನವರೆಲ್ಲರೂ ಸಾಧಾರಣವಾಗಿ ಧರ್ಮದ ಕುರಿತು ಶಂಕಿಸುತ್ತಿರುತ್ತಾರೆ. ಈ


ಧರ್ಮವು ಯಾವುದು ಮತ್ತು ಧರ್ಮವು ಎಲ್ಲಿಂದ ಬಂದಿತು ಎನ್ನುವುದನ್ನು ಹೇಳು.

ಪಿತಾಮಹ! ಐಹಿಕ ಪ್ರಯೋಜನವನ್ನು ನೀಡುವುದು ಧರ್ಮವೇ ಅಥವಾ ಪಾರಲೌಕಿಕ ಪ್ರಯೋಜನವನ್ನು ನೀಡುವುದು


ಧರ್ಮವೇ ಅಥವಾ ಎರಡೂ ಕಡೆಗಳಲ್ಲಿ ಪ್ರಯೋಜನವನ್ನು ನೀಡುವುದು ಧರ್ಮವೇ? ಇದರ ಕುರಿತು ನನಗೆ ಹೇಳು.”

ಭೀಷ್ಮ ಉವಾಚ|

ಭೀಷ್ಮನು ಹೇಳಿದನು”: “ಸದಾಚಾರ, ಸ್ಮೃತಿ ಮತ್ತು ವೇದಗಳು – ಇವು ಮೂರು ಧರ್ಮದ ಲಕ್ಷಣಗಳು. ವಿದ್ವಾಂಸರು
ಅರ್ಥವೂ ಧರ್ಮದ ನಾಲ್ಕನೆಯ ಲಕ್ಷಣವೆಂದು ಹೇಳುತ್ತಾರೆ.

ಶಾಸ್ತ್ರಗಳಲ್ಲಿ ಹೇಳಿರುವ ಕರ್ಮಗಳಲ್ಲಿಯೂ ಪ್ರಧಾನವಾದವುಗಳು ಮತ್ತು ಅಷ್ಟು ಪ್ರಧಾನವಲ್ಲದವುಗಳು ಇವೆ.


ಲೋಕಯಾತ್ರೆಗೆಂದೇ ಧರ್ಮದ ನಿಯಮಗಳನ್ನು ಮಾಡಲಾಗಿದೆ. ಧರ್ಮವನ್ನು ಪಾಲಿಸುವವನಿಗೆ ಇಹ ಮತ್ತು ಪರ
ಎರಡರಲ್ಲಿಯೂ ಸುಖೋದಯವಾಗುತ್ತದೆ.

ಧರ್ಮದ ನೈಪುಣ್ಯತೆಯನ್ನು ಹೊಂದಿರದವನು ಪಾಪದಿಂದ ಪಾಪಗಳನ್ನು ಹುಟ್ಟಿಸುತ್ತಿರುತ್ತಾನೆ. ಪಾಪಿಯು


ಆಪತ್ತಿನಲ್ಲಿಯೂ ಪಾಪಕರ್ಮವನ್ನು ಮಾಡುವುದನ್ನು ಬಿಡುವುದಿಲ್ಲ.

ಧರ್ಮವಿದುವಾದಾಗ ಅಪಾಪವಾದಿಯಾಗುತ್ತಾನೆ. ಧರ್ಮದ ನಿಷ್ಠೆಯು ಅವನ ಆಚಾರವನ್ನೇ ಆಶ್ರಯಿಸಿರುತ್ತದೆ; ಅವನ


ಮಾತನ್ನಲ್ಲ.

ಧರ್ಮಸಮಾವಿಷ್ಟನಾಗಿದ್ದರೂ ಕಳ್ಳನು ಇತರರ ಸ್ವತ್ತನ್ನು ಅಪಹರಿಸುತ್ತಾನೆ. ಅರಾಜಕತೆಯಿರುವಲ್ಲಿ ಪರರ ಸ್ವತ್ತನ್ನು


ಅಪಹರಿಸಿಯೂ ಕಳ್ಳನು ಸುಖವಾಗಿಯೇ ಇರುತ್ತಾನೆ.

ಆದರೆ ಕಳ್ಳನ ಧನವನ್ನೇ ಬೇರೆ ಯಾರಾದರೂ ಅಪಹರಿಸಿದರೆ ಆ ಕಳ್ಳನೇ ರಕ್ಷಣೆಗಾಗಿ ರಾಜನನ್ನು ಅಪೇಕ್ಷಿಸುತ್ತಾನೆ. ಆಗ
ಅವನು ತನ್ನ ಧನದಿಂದಲೇ ತುಷ್ಟರಾಗಿರುವವರನ್ನು ಬಯಸುತ್ತಾನೆ.
ಶುಚಿಯಾಗಿದ್ದವನು ಭಯವಿಲ್ಲದೇ ಶಂಕೆಗಳಿಲ್ಲದೇ ರಾಜದ್ವಾರಕ್ಕೆ ಹೋಗುತ್ತಾನೆ. ಏಕೆಂದರೆ ಅವನು ತನ್ನ
ಅಂತರಾತ್ಮನಲ್ಲಿ ಕಿಂಚಿತ್ತಾದರೂ ದೋಷವನ್ನು ಕಾಣುವುದಿಲ್ಲ.

ಸತ್ಯವಚನವೇ ಸಾಧುವು. ಸತ್ಯಕ್ಕಿಂತ ಶ್ರೇಷ್ಠವಾದುದಿಲ್ಲ. ಸತ್ಯವೇ ಸರ್ವವನ್ನೂ ಧರಿಸಿದೆ. ಸರ್ವವೂ ಸತ್ಯದಲ್ಲಿ


ಪ್ರತಿಷ್ಠಿತವಾಗಿದೆ.

ರೌದ್ರ ಪಾಪಕೃತರೂ ಕೂಡ ಪ್ರತ್ಯೇಕವಾಗಿ ಸತ್ಯಶಪಥಮಾಡಿ ಸತ್ಯವನ್ನೇ ಆಶ್ರಯಿಸಿ ನಡೆದುಕೊಳ್ಳುತ್ತಾರೆ. ಕೆಲವೊಮ್ಮೆ


ಸತ್ಯವನ್ನೇ ಆಶ್ರಯಿಸಿ ಅನಂತರ ಸತ್ಯಕ್ಕೆ ದ್ರೋಹವೆಸಗಿ ತಮ್ಮ ದುಷ್ಕಾರ್ಯಗಳಲ್ಲಿ ಪ್ರವೃತ್ತರಾಗುತ್ತಾರೆ. ಹೀಗೆ ಪರಸ್ಪರ
ಮಾಡಿಕೊಂಡ ಸತ್ಯಪ್ರತಿಜ್ಞೆಗಳನ್ನು ಮುರಿದುಕೊಂಡು ಪರಸ್ಪರ ಕಾದಾಡಿ ವಿನಾಶಹೊಂದುತ್ತಾರೆ.

ಪರರ ಧನವನ್ನು ಅಪಹರಿಸಬಾರದು ಎನ್ನುವುದು ಸನಾತನ ಧರ್ಮವು. ಬಲವಂತರು ಕೆಲವರು ಧರ್ಮವು ಕೇವಲ
ದುರ್ಬಲರು ಅನುಸರಿಸುವುದು ಎಂದು ತಿಳಿದಿರುತ್ತಾರೆ. ಆದರೆ ದೈವಬಲದಿಂದ ಅವರು ದುರ್ಬಲರಾದರೆ ಆಗ ಅವರಿಗೆ
ಧರ್ಮವನ್ನು ಪಾಲಿಸುವುದೇ ರುಚಿಸುತ್ತದೆ.

ಅತ್ಯಂತ ಬಲಯುತರಾದವರು ಸುಖಿಗಳಾಗಿರುತ್ತಾರೆ ಎನ್ನುವುದಕ್ಕಾಗುವುದಿಲ್ಲ. ಆದುದರಿಂದ ನಿನ್ನ ಬುದ್ಧಿಯು


ಯಾವಾಗಲೂ ಕುಟಿಲತೆಯ ಕಡೆ ಹೋಗದಿರಲಿ.

ಯಾರು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲವೋ ಮತ್ತು ಮಾಡುವುದಿಲ್ಲವೋ ಅವನಿಗೆ ದುಷ್ಟರಿಂದಾಗಲೀ,


ಕಳ್ಳರಿಂದಾಗಲೀ, ರಾಜನಿಂದಾಗಲೀ ಭಯವಿರುವುದಿಲ್ಲ. ಶುದ್ಧ ಆಚಾರ-ವಿಚಾರಗಳುಳ್ಳವನು ಯಾವಾಗಲೂ
ನಿರ್ಭಯನಾಗಿರುತ್ತಾನೆ.

ಗ್ರಾಮಕ್ಕೆ ಬಂದ ಜಿಂಕೆಯಂತೆ ಕಳ್ಳನು ಯಾವಾಗಲೂ ಎಲ್ಲರ ವಿಷಯದಲ್ಲಿಯೂ ಸಂಶಯಪಡುತ್ತಾನೆ. ಇತರರ


ವಿಷಯದಲ್ಲಿ ತಾನು ಹೇಗೆ ಪಾಪಬುದ್ಧಿಯನ್ನಿಟ್ಟುಕೊಂಡಿರುವನೋ ಅಂತೆಯೇ ಇತರರೂ ತನ್ನ ವಿಷಯದಲ್ಲಿ
ಪಾಪಬುದ್ಧಿಯನ್ನಿಟ್ಟುಕೊಂಡಿರುವರೆಂದು ಅವನು ಭಾವಿಸುತ್ತಾನೆ.

ಆಚಾರ-ವಿಚಾರಗಳಲ್ಲಿ ಶುಚಿಯಾಗಿರುವವನು ಎಲ್ಲರಿಂದಲೂ ಗೌರವನ್ನು ಪಡೆದುಕೊಳ್ಳುತ್ತಾನೆ. ಸದಾ


ಪ್ರಸನ್ನಚಿತ್ತನಾಗಿಯೂ ನಿರ್ಭಯನಾಗಿಯೂ ಇರುತ್ತಾನೆ. ತನ್ನಲ್ಲಿರುವ ಕಿಂಚಿತ್ತು ದುಶ್ಚರಿತವೂ ಬೇರೆಯವರಲ್ಲಿದೆಯೆಂದು
ಭಾವಿಸುವುದಿಲ್ಲ.

ಭೂತಹಿತರತರು ದಾನಮಾಡಬೇಕು ಮತ್ತು ಅದೇ ಧರ್ಮ ಎಂದು ಹೇಳಿದ್ದಾರೆ. ಆದರೆ ಧನಯುತರು ಈ ಧರ್ಮವನ್ನು
ದರಿದ್ರರು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ.
ಆದರೆ ದೈವವಶಾತ್ ಅವರೇ ದರಿದ್ರರಾಗಿಬಿಟ್ಟರೆ ಆಗ ಅವರಿಗೆ ದಾನಧರ್ಮವೇ ಚೆನ್ನಾಗಿ ಕಾಣುತ್ತದೆ. ಮೇಲಾಗಿ ಅತ್ಯಂತ
ಧನವಂತರೂ ಸುಖಿಗಳೂ ಆಗಿರುವುದಿಲ್ಲ.

ತನಗೆ ಅಪ್ರಿಯವಾದುದೆಂದು ತಿಳಿದು ಯಾವುದನ್ನು ಇತರರು ತನ್ನ ವಿಷಯದಲ್ಲಿ ಮಾಡಬಾರದೆಂದು ಭಾವಿಸುತ್ತೀವೋ


ಅದನ್ನು ನಾವೂ ಇನ್ನೊಬ್ಬರ ವಿಷಯದಲ್ಲಿ ಮಾಡಬಾರದು.

ಒಬ್ಬ ವಿವಾಹಿತ ಸ್ತ್ರೀಗೆ ಉಪಪತಿಯಾಗಿ ವ್ಯಭಿಚಾರದಲ್ಲಿ ತೊಡಗಿರುವವನು ಮತ್ತೊಬ್ಬನ ವಿಷಯದಲ್ಲಿ ಏನು


ಹೇಳುತ್ತಾನೆ? ತಾನೇ ವ್ಯಭಿಚಾರಿಯಾಗಿದ್ದುಕೊಂಡು ಮತ್ತೊಬ್ಬನನ್ನು ವ್ಯಭಿಚಾರಿ ಎಂದು ನಿಂದಿಸಿದರೆ ಆ ನಿಂದೆಯನ್ನು
ಅವನು ಖಂಡಿತವಾಗಿಯೂ ಸಹಿಸಿಕೊಳ್ಳುವುದಿಲ್ಲ ಎಂದು ನನ್ನ ಅಭಿಪ್ರಾಯ.

ಸ್ವಯಂ ಜೀವಿಸಲು ಇಚ್ಛಿಸುವವನು ಅನ್ಯರನ್ನು ಹೇಗೆತಾನೇ ಕೊಂದಾನು? ತನಗೆ ಯಾವ ಸುಖಸಂತೋಷಗಳನ್ನು


ಬಯಸುತ್ತಾನೋ ಅದೇ ಸುಖಸಂತೋಷಗಳು ಇತರರಿಗೂ ಆಗಬೇಕೆಂದು ಯೋಚಿಸಬೇಕು.

ತನ್ನ ಅವಶ್ಯಕತೆಗಿಂತಲೂ ಹೆಚ್ಚಾಗಿರುವ ಧನ-ಭೋಗಾದಿಗಳನ್ನು ದರಿದ್ರರಿಗೆ ಹಂಚಿಕೊಡಬೇಕು. ದರಿದ್ರರಿಗೆ ಧನವನ್ನು


ಹಂಚಿಕೊಡಬೇಕೆಂಬ ಕಾರಣದಿಂದಲೇ ಬ್ರಹ್ಮನು ಬಡ್ಡಿಗಾಗಿ ಹಣಕೊಡುವ ವೃತ್ತಿಯನ್ನು ಸೃಷ್ಟಿಸಿದ್ದಾನೆ.

ಬಡ್ಡಿಗಾಗಿ ಹಣವನ್ನು ಕೊಟ್ಟು ತೆಗೆದುಕೊಳ್ಳುವ ಸಮಯದಲ್ಲಿ ದೇವತೆಗಳೇ ಸಾಕ್ಷಿಗಳಾಗಿರುತ್ತಾರೆ. ಅದು ಹಾಗೆಯೇ


ನಿಬಂಧನೆಗಳಿಗನುಗುಣವಾಗಿ ನಡೆಯಬೇಕು. ಬಡ್ಡಿಯ ಲಾಭವನ್ನು ಯಜ್ಞ-ಯಾಗಾದಿ ಧರ್ಮಕಾರ್ಯಗಳಲ್ಲಿ
ತೊಡಗಿಸಿಕೊಳ್ಳುವುದು ಶುಭದಾಯಕವು.

ಯುಧಿಷ್ಠಿರ! ಎಲ್ಲರೊಡನೆಯೂ ಪ್ರೀತಿಯಿಂದ ವ್ಯವಹರಿಸುವುದು ಧರ್ಮವೆಂದು ಮನೀಷಿಣರು ಹೇಳುತ್ತಾರೆ. ಇದಕ್ಕೆ


ವಿಪರೀತವಾದುದು ಅಧರ್ಮ. ಧರ್ಮಾಧರ್ಮಗಳಿಗೆ ಸಂಕ್ಷೇಪರೂಪದಲ್ಲಿರುವ ಈ ಲಕ್ಷಣವನ್ನು ನೀನು ಗಮನಿಸು.

ಹಿಂದೆ ವಿಧಾತೃವು ಲೋಕಸಂಗ್ರಹಸಂಯುಕ್ತವಾದ ಸೂಕ್ಷ್ಮಧರ್ಮಾರ್ಥನಿಯತ ಉತ್ತಮ ಸದಾಚಾರಗಳನ್ನು ವಿಹಿಸಿದ್ದನು.

ಕುರುಸತ್ತಮ! ಧರ್ಮಲಕ್ಷಣಗಳನ್ನು ನಿನಗೆ ಹೇಳಿದ್ದೇನೆ. ಆದುದರಿಂದ ನಿನ್ನ ಬುದ್ಧಿಯು ಯಾವುದೇ ಕಾರಣದಿಂದಲೂ


ಕುಟಿಲತೆಯ ಕಡೆಗೆ ಹೋಗದಿರಲಿ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಧರ್ಮಲಕ್ಷಣೇ


ಏಕಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಧರ್ಮಲಕ್ಷಣ ಎನ್ನುವ ಇನ್ನೂರಾಐವತ್ತೊಂದನೇ


ಅಧ್ಯಾಯವು.
ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೨

ತುಲಾಧಾರ-ಜಾಜಲಿ ಸಂವಾದ

ಯುಧಿಷ್ಠಿರನು ಧರ್ಮದ ಕುರಿತಾದ ಸಂದೇಹಗಳನ್ನು ಹೇಳಿಕೊಳ್ಳುವುದು (1-20).

12252001 ಯುಧಿಷ್ಠಿರ ಉವಾಚ|

12252001a ಸೂಕ್ಷ್ಮಂ ಸಾಧು ಸಮಾದಿಷ್ಟಂ ಭವತಾ ಧರ್ಮಲಕ್ಷಣಮ್|

12252001c ಪ್ರತಿಭಾ ತ್ವಸ್ತಿ ಮೇ ಕಾ ಚಿತ್ತಾಂ ಬ್ರೂಯಾಮನುಮಾನತಃ||

ಯುಧಿಷ್ಠಿರನು ಹೇಳಿದನು: “ಸೂಕ್ಷ್ಮವಾದ ಧರ್ಮಲಕ್ಷಣವನ್ನು ನೀನು ಚೆನ್ನಾಗಿಯೇ ಉಪದೇಶಿಸಿರುವೆ. ಆದರೆ ನನ್ನ ಚಿತ್ತಕ್ಕೆ
ಇನ್ನೂ ಕೆಲವು ವಿಷಯಗಳು ಹೊಳೆಯುತ್ತಿವೆ. ಅನುಮಾನದಿಂದ ನಾನು ಅದನ್ನು ಹೇಳುತ್ತೇನೆ.

12252002a ಭೂಯಾಂಸೋ ಹೃದಯೇ ಯೇ ಮೇ ಪ್ರಶ್ನಾಸ್ತೇ ವ್ಯಾಹೃತಾಸ್ತ್ವಯಾ|

12252002c ಇಮಮನ್ಯಂ ಪ್ರವಕ್ಷ್ಯಾಮಿ ನ ರಾಜನ್ ವಿಗ್ರಹಾದಿವ||

ರಾಜನ್! ನನ್ನ ಹೃದಯದಲ್ಲಿದ್ದ ಇನ್ನೂ ಅನೇಕ ಪ್ರಶ್ನೆಗಳನ್ನು ನೀನು ಹೋಗಲಾಡಿಸಿದ್ದೀಯೆ. ಅದರೆ ಈ ಪ್ರಶ್ನೆಯನ್ನು
ತಿಳಿಯಬೇಕೆಂದು ಕೇಳುತ್ತಿದ್ದೇನೆಯೇ ಹೊರತು ವಾದಿಸಬೇಕೆಂದು ಕೇಳುತ್ತಿಲ್ಲ.

12252003a ಇಮಾನಿ ಹಿ ಪ್ರಾಪಯಂತಿ[1] ಸೃಜಂತ್ಯುತ್ತಾರಯಂತಿ ಚ|

12252003c ನ ಧರ್ಮಃ ಪರಿಪಾಠೇನ ಶಕ್ಯೋ ಭಾರತ ವೇದಿತುಮ್||

ಭಾರತ! ಪ್ರಾಣಿಗಳು ಬದುಕುತ್ತವೆ, ಹುಟ್ಟಿಸುತ್ತವೆ ಮತ್ತು ಶರೀರಗಳನ್ನು ತೊರೆಯುತ್ತವೆ. ಕೇವಲ ಪರಿಪಾಠದಿಂದ


ಧರ್ಮವನ್ನು ತಿಳಿದುಕೊಳ್ಳಲು ಶಕ್ಯವಿಲ್ಲ.

12252004a ಅನ್ಯೋ ಧರ್ಮಃ ಸಮಸ್ಥಸ್ಯ ವಿಷಮಸ್ಥಸ್ಯ ಚಾಪರಃ|

12252004c ಆಪದಸ್ತು ಕಥಂ ಶಕ್ಯಾಃ ಪರಿಪಾಠೇನ ವೇದಿತುಮ್||


ಉತ್ತಮ ಪರಿಸ್ಥಿತಿಯಲ್ಲಿರುವವನಿಗೆ ಧರ್ಮವು ಅನ್ಯ. ವಿಷಮ ಪರಿಸ್ಥಿತಿಯಲ್ಲಿರುವವನಿಗೆ ಬೇರೆಯ ಧರ್ಮ.
ಆಪತ್ತಿನಲ್ಲಿರುವವನಿಗೆ ಇರುವ ಧರ್ಮಗಳನ್ನು ಪರಿಪಾಠದಿಂದ ಹೇಗೆ ತಿಳಿದುಕೊಳ್ಳಲು ಶಕ್ಯ?

12252005a ಸದಾಚಾರೋ ಮತೋ ಧರ್ಮಃ ಸಂತಸ್ತ್ವಾಚಾರಲಕ್ಷಣಾಃ|

12252005c ಸಾಧ್ಯಾಸಾಧ್ಯಂ ಕಥಂ ಶಕ್ಯಂ ಸದಾಚಾರೋ ಹ್ಯಲಕ್ಷಣಮ್||

ಸದಾಚಾರವೇ ಧರ್ಮ. ಧರ್ಮಾಚರಣೆಯ ಲಕ್ಷಣವುಳ್ಳವರು ಸಂತರು[2]. ಸದಾಚಾರಕ್ಕೆ ನಿರ್ದಿಷ್ಟ ಲಕ್ಷಣವೇ


ಇಲ್ಲದಿರುವಾಗ ಸದಾಚಾರವನ್ನು ಪಾಲಿಸುವುದು ಸಾಧ್ಯ ಅಥವಾ ಅಸಾಧ್ಯ ಎಂದು ಹೇಗೆ ತಿಳಿದುಕೊಳ್ಳಬಹುದು?

12252006a ದೃಶ್ಯತೇ ಧರ್ಮರೂಪೇಣ ಅಧರ್ಮಂ ಪ್ರಾಕೃತಶ್ಚರನ್|

12252006c ಧರ್ಮಂ ಚಾಧರ್ಮರೂಪೇಣ ಕಶ್ಚಿದಪ್ರಾಕೃತಶ್ಚರನ್||

ಸಾಮಾನ್ಯ ಜನರು ಧರ್ಮರೂಪದಲ್ಲಿ ಅಧರ್ಮವನ್ನು ಆಚರಿಸುವುದೂ ಮತ್ತು ಶಿಷ್ಟರು ಅಧರ್ಮರೂಪದಲ್ಲಿ ಧರ್ಮವನ್ನು


ಆಚರಿಸುವುದೂ ಕಂಡುಬರುತ್ತದೆ[3].

12252007a ಪುನರಸ್ಯ ಪ್ರಮಾಣಂ ಹಿ ನಿರ್ದಿಷ್ಟಂ ಶಾಸ್ತ್ರಕೋವಿದೈಃ|

12252007c ವೇದವಾದಾಶ್ಚಾನುಯುಗಂ ಹ್ರಸಂತೀತಿ ಹ ನಃ ಶ್ರುತಮ್||

ಮತ್ತು ಶಾಸ್ತ್ರಕೋವಿದರು ಧರ್ಮಕ್ಕೆ ವೇದವೇ ಪ್ರಮಾಣವೆಂದು ನಿರ್ದಿಷ್ಟಪಡಿಸಿರುತ್ತಾರೆ. ಆದರೆ ವೇದವು ಒಂದು


ಯುಗದಿಂದ ಮತ್ತೊಂದು ಯುಗಕ್ಕೆ ಹೋಗುವಾಗ ಕ್ಷೀಣವಾಗುತ್ತದೆ ಎನ್ನುವುದನ್ನೂ ನಾವು ಕೇಳಿದ್ದೇವೆ.

12252008a ಅನ್ಯೇ ಕೃತಯುಗೇ ಧರ್ಮಾಸ್ತ್ರೇತಾಯಾಂ ದ್ವಾಪರೇಽಪರೇ|

12252008c ಅನ್ಯೇ ಕಲಿಯುಗೇ ಧರ್ಮಾ ಯಥಾಶಕ್ತಿಕೃತಾ ಇವ||

ಕೃತಯುಗದಲ್ಲಿ ಅನ್ಯ ಧರ್ಮಗಳಿವೆ. ತ್ರೇತಾಯುಗದಲ್ಲಿ ಬೇರೆ ಮತ್ತು ದ್ವಾಪರಯುಗದಲ್ಲಿ ಬೇರೆ ಧರ್ಮಗಳಿವೆ. ಮತ್ತು
ಕಲಿಯುಗದ ಧರ್ಮಗಳೇ ಬೇರೆ. ಹೀಗೆ ಮನುಷ್ಯರ ಶಕ್ತಿಗನುಸಾರವಾಗಿ ಧರ್ಮಗಳನ್ನು ಮಾಡಿರುವಂತಿದೆ.

12252009a ಆಮ್ನಾಯವಚನಂ ಸತ್ಯಮಿತ್ಯಯಂ ಲೋಕಸಂಗ್ರಹಃ|

12252009c ಆಮ್ನಾಯೇಭ್ಯಃ ಪರಂ ವೇದಾಃ ಪ್ರಸೃತಾ ವಿಶ್ವತೋಮುಖಾಃ[4]||


ವೇದವಾಕ್ಯವು ಸತ್ಯ ಎಂಬ ಈ ಮಾತು ಕೇವಲ ಲೋಕರಂಜನೆಗೆ ಮಾತ್ರವೇ ಆಗಿದೆ. ಏಕೆಂದರೆ ವೇದಗಳಿಂದಲೇ
ಅನೇಕ ಪ್ರಕಾರದ ಸ್ಮೃತಿಗಳು ಸರ್ವತೋಮುಖವಾಗಿ ಬೆಳೆದಿವೆ.

12252010a ತೇ ಚೇತ್ಸರ್ವೇ ಪ್ರಮಾಣಂ ವೈ ಪ್ರಮಾಣಂ ತನ್ನ ವಿದ್ಯತೇ|

12252010c ಪ್ರಮಾಣೇ ಚಾಪ್ರಮಾಣೇ ಚ ವಿರುದ್ಧೇ ಶಾಸ್ತ್ರತಾ ಕುತಃ||

ಕೆಲವರು ಸಂಪೂರ್ಣ ವೇದವನ್ನೇ ಪ್ರಮಾಣವೆಂದು ಹೇಳುತ್ತಾರೆ. ಆದರೆ ವೇದಗಳಲ್ಲಿ ಪರಸ್ಪರ ವಿರುದ್ಧ ವಾಕ್ಯಗಳೂ
ಕಂಡುಬರುತ್ತವೆ. ಅವುಗಳಲ್ಲಿ ಒಂದರ ದೃಷ್ಟಿಯಿಂದ ಮತ್ತೊಂದು ಅಪ್ರಮಾಣವಾಗುತ್ತದೆ. ಆಗ ಅಪ್ರಮಾಣ ವಾಕ್ಯಗಳು
ಪ್ರಮಾಣವನ್ನು ಬಾಧಿಸಿದಂತಾಗುತ್ತದೆ. ಹಾಗಾದರೆ ವೇದಕ್ಕೆ ಶಾಸ್ತ್ರತ್ವವು[5] ಹೇಗೆ ಉಂಟಾಗುತ್ತದೆ?

12252011a ಧರ್ಮಸ್ಯ ಹ್ರಿಯಮಾಣಸ್ಯ[6] ಬಲವದ್ಭಿರ್ದುರಾತ್ಮಭಿಃ|

12252011c ಯಾ ಯಾ ವಿಕ್ರಿಯತೇ ಸಂಸ್ಥಾ ತತಃ ಸಾಪಿ ಪ್ರಣಶ್ಯತಿ||

ಬಲಶಾಲೀ ದುರಾತ್ಮರು ಧರ್ಮವನ್ನು ಅಪಹರಿಸಿ ಅದರ ಮೂಲಸ್ಥಾನವನ್ನೇ ವಿನಾಶಗೊಳಿಸಲು ಧರ್ಮವು


ನಾಶಹೊಂದುತ್ತದೆ.

12252012a ವಿದ್ಮ ಚೈವಂ ನ ವಾ ವಿದ್ಮ ಶಕ್ಯಂ ವಾ ವೇದಿತುಂ ನ ವಾ|

12252012c ಅಣೀಯಾನ್ ಕ್ಷುರಧಾರಾಯಾ ಗರೀಯಾನ್ ಪರ್ವತಾದಪಿ[7]||

ಧರ್ಮವನ್ನು ನಾವು ತಿಳಿದಿರುವೆವೋ ಇಲ್ಲವೋ ಅಥವಾ ಧರ್ಮವನ್ನು ತಿಳಿದುಕೊಳ್ಳಲು ಶಕ್ಯವೋ ಇಲ್ಲವೋ, ಇಷ್ಟು
ಮಾತ್ರ ಹೇಳಬಹುದಾಗಿದೆ: ಧರ್ಮವು ಕತ್ತಿಯ ಅಲುಗಿಗಿಂತಲೂ ಸೂಕ್ಷ್ಮವಾದುದು ಮತ್ತು ಪರ್ವತಕ್ಕಿಂತಲೂ
ದೊಡ್ಡದಾದುದು.

12252013a ಗಂಧರ್ವನಗರಾಕಾರಃ ಪ್ರಥಮಂ ಸಂಪ್ರದೃಶ್ಯತೇ|

12252013c ಅನ್ವೀಕ್ಷ್ಯಮಾಣಃ ಕವಿಭಿಃ ಪುನರ್ಗಚ್ಚತ್ಯದರ್ಶನಮ್||

ಮೊಟ್ಟಮೊದಲು ಧರ್ಮವು ಗಂಧರ್ವನಗರದ ಆಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಅದನ್ನೇ ವಿಶೇಷರೂಪದಲ್ಲಿ


ವಿಚಾರಮಾಡುವ ವಿದ್ವಾಂಸರಿಗೆ ಅದು ಕಾಣಿಸದೇ ಮಾಯವಾಗಿಬಿಡುತ್ತದೆ.

12252014a ನಿಪಾನಾನೀವ ಗೋಭ್ಯಾಶೇ ಕ್ಷೇತ್ರೇ ಕುಲ್ಯೇವ ಭಾರತ|


12252014c ಸ್ಮೃತೋಽಪಿ ಶಾಶ್ವತೋ ಧರ್ಮೋ ವಿಪ್ರಹೀಣೋ ನ ದೃಶ್ಯತೇ||

ಭಾರತ! ಹಸುಗಳು ನೀರು ಕುಡಿಯುವ ತೊಟ್ಟಿ ಮತ್ತು ಗದ್ದೆಗಳಿಗೆ ನೀರು ಹಾಯಿಸುವ ಕಾಲುವೆಯು ಹೇಗೆ ಒಂದೇ
ಸಮನಾಗಿರುವುದಿಲ್ಲವೋ ಹಾಗೆ ಸ್ಮೃತಿಯೂ ಕೂಡ ಒಂದೇ ರೀತಿಯಾಗಿರದೇ ಕಾಲಕಾಲಕ್ಕೆ
ವ್ಯತ್ಯಾಸವಾಗುತ್ತಿರುತ್ತದೆ[8]. ಆದುದರಿಂದ ನಾಶಹೊಂದದೇ ಇರುವ ಶಾಶ್ವತ ಧರ್ಮವೇ ಇಲ್ಲ.

12252015a ಕಾಮಾದನ್ಯೇ ಕ್ಷಯಾದನ್ಯೇ ಕಾರಣೈರಪರೈಸ್ತಥಾ|

12252015c ಅಸಂತೋ ಹಿ ವೃಥಾಚಾರಂ ಭಜಂತೇ ಬಹವೋಽಪರೇ||

ಕೆಲವರು ಕಾಮಕ್ಕಾಗಿ, ಕೆಲವರು ಇಚ್ಛೆಗಳಿಗಾಗಿ ಮತ್ತು ಅನ್ಯರು ಇತರ ಅನೇಕ ಕಾರಣಗಳಿಗಾಗಿ ಧರ್ಮಾಚರಣೆಯನ್ನು
ಮಾಡುತ್ತಾರೆ. ಕೆಲವು ಅಸಾಧು ಪುರುಷರು ಕೇವಲ ತೋರಿಕೆಗಾಗಿ ವ್ಯರ್ಥ ಧರ್ಮಾಚರಣೆಯನ್ನು ಮಾಡುತ್ತಾರೆ.

12252016a ಧರ್ಮೋ ಭವತಿ ಸ ಕ್ಷಿಪ್ರಂ ವಿಲೀನಸ್ತ್ವೇವ[9] ಸಾಧುಷು|

12252016c ಅನ್ಯೇ ತಾನಾಹುರುನ್ಮತ್ತಾನಪಿ ಚಾವಹಸಂತ್ಯುತ||

ಬೇಗನೇ ಮುಂದೆ ಅದೇ ಧರ್ಮವಾಗಿಬಿಡುತ್ತದೆ. ಸಾಧುಗಳ ಧರ್ಮವು ವಿಲೀನವಾಗಿಬಿಡುತ್ತದೆ. ಅನ್ಯರು


ಸಾಧುಪುರುಷರನ್ನು ಹುಚ್ಚರೆಂದು ಕರೆಯುತ್ತಾ ಅಪಹಾಸ್ಯವನ್ನೂ ಮಾಡುತ್ತಾರೆ.

12252017a ಮಹಾಜನಾ ಹ್ಯುಪಾವೃತ್ತಾ ರಾಜಧರ್ಮಂ ಸಮಾಶ್ರಿತಾಃ|

12252017c ನ ಹಿ ಸರ್ವಹಿತಃ ಕಶ್ಚಿದಾಚಾರಃ ಸಂಪ್ರದೃಶ್ಯತೇ||

ದ್ರೋಣಾದಿ ಮಹಾಜನರೂ ಸ್ವಧರ್ಮವನ್ನು ಬಿಟ್ಟು ರಾಜಧರ್ಮವನ್ನು ಆಶ್ರಯಿಸಿದ್ದಾರೆ. ಆದುದರಿಂದ ಸರ್ವರಿಗೂ


ಹಿತಕರವಾದ ಸಮಾನರೂಪವಾದ ಯಾವ ಆಚಾರವೂ ಪ್ರಚಲಿತವಾಗಿರುವುದಿಲ್ಲ.

12252018a ತೇನೈವಾನ್ಯಃ ಪ್ರಭವತಿ ಸೋಽಪರಂ ಬಾಧತೇ ಪುನಃ|

12252018c ದೃಶ್ಯತೇ ಚೈವ ಸ ಪುನಸ್ತುಲ್ಯರೂಪೋ ಯದೃಚ್ಚಯಾ||

ಇಂತಹ ಧರ್ಮದ ಆಚರಣೆಯಿಂದಲೇ ಕೆಲವರು[10] ಔನ್ನತ್ಯವನ್ನು ಹೊಂದಿದರು. ಅದೇ ರೀತಿ ಇತರರು ಧರ್ಮದ
ಬಲದಿಂದಲೇ ಇತರರನ್ನು ಪೀಡಿಸಿದರು[11]. ಇತರರು ಈಶ್ವರೇಚ್ಛೆಯಿಂದ ಧರ್ಮದ ಮೂಲಕವಾಗಿಯೇ ಸಮತ್ವವನ್ನು
ಪಡೆದುಕೊಂಡಿರುವುದೂ ಕಂಡು ಬರುತ್ತದೆ.
12252019a ಯೇನೈವಾನ್ಯಃ ಪ್ರಭವತಿ ಸೋಽಪರಾನಪಿ ಬಾಧತೇ|

12252019c ಆಚಾರಾಣಾಮನೈಕಾಗ್ರ್ಯಂ ಸರ್ವೇಷಾಮೇವ ಲಕ್ಷಯೇತ್||

ಒಬ್ಬನು ಧರ್ಮವನ್ನು ಆಚರಿಸಿ ಔನ್ನತ್ಯವನ್ನು ಹೊಂದುತ್ತಾನೆ. ಮತ್ತೊಬ್ಬನು ಅದೇ ಧರ್ಮವನ್ನು ಆಶ್ರಯಿಸಿ ಇತರರನ್ನು
ಪೀಡಿಸುತ್ತಾನೆ. ಆದುದರಿಂದ ಧರ್ಮಾಚರಣೆಯನ್ನು ಮಾಡಿದರೂ ಎಲ್ಲರಲ್ಲಿಯೂ ಆಚಾರವ್ಯವಹಾರಗಳು ಒಂದೇ
ಆಗಿರುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ.

12252020a ಚಿರಾಭಿಪನ್ನಃ ಕವಿಭಿಃ ಪೂರ್ವಂ ಧರ್ಮ ಉದಾಹೃತಃ|

12252020c ತೇನಾಚಾರೇಣ ಪೂರ್ವೇಣ ಸಂಸ್ಥಾ ಭವತಿ ಶಾಶ್ವತೀ||

ಹಿಂದೆ ವಿದ್ವಾಂಸರು ಬಹಳ ಕಾಲದಿಂದ ಆಚರಿಸುತ್ತಿದ್ದ ಧರ್ಮದ ಕುರಿತು ನೀನು ಹೇಳಿರುವೆ. ಇದರ ಆಚರಣೆಯ
ಮೂಲಕವಾಗಿಯೇ ಸಮಾಜವು ಬಹಳ ಕಾಲದವರೆಗೆ ಸುಸ್ಥಿರವಾಗಿರುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಧರ್ಮಪ್ರಮಣ್ಯಾಕ್ಷೇಪೇ


ದ್ವಿಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಧರ್ಮಪ್ರಮಾಣ್ಯಾಕ್ಷೇಪ ಎನ್ನುವ


ಇನ್ನೂರಾಐವತ್ತೆರಡನೇ ಅಧ್ಯಾಯವು.
ಶಾಂತಿ ಪರ್ವ: ಆಪದ್ಧರ್ಮ ಪರ್ವ

ಕೃತಘ್ನಗೌತಮೋಪಾಖ್ಯಾನ

ಮಿತ್ರನಾಗಲು ಯೋಗ್ಯನಾದ ಪುರುಷನ ಲಕ್ಷಣಗಳು ಮತ್ತು ಕೃತಘ್ನ ಗೌತಮನ ಕಥೆಯ ಪ್ರಾರಂಭ (೧-೪೯).

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಕುರುಗಳ ಕೀರ್ತಿವರ್ಧನ! ನಾನು ಇನ್ನೂ ಕೆಲವು


ಪ್ರಶ್ನೆಗಳನ್ನಿಡುತ್ತೇನೆ. ಅವುಗಳ ಕುರಿತು ಹೇಳಬೇಕು.

ಸೌಮ್ಯ ಸ್ವಭಾವದ ಮನುಷ್ಯರು ಹೇಗಿರುತ್ತಾರೆ? ಯಾರೊಂದಿಗೆ ಪರಮ ಪ್ರೀತಿಯಿಂದಿರಬೇಕು? ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ
ಎಂಥಹ ಮನುಷ್ಯರು ಉಪಕಾರ ಮಾಡಲು ಸಮರ್ಥರಾಗಿರುತ್ತಾರೆ? ಅದರ ಕುರಿತು ನನಗೆ ಹೇಳು.

ಸುಹೃದರ ಸ್ಥಾನವನ್ನು ಸಮೃದ್ಧ ಧನವಾಗಲೀ ಮತ್ತು ಸಂಬಂಧಿ ಬಾಂಧವರಾಗಲೀ ತುಂಬಲಾರರು ಎಂದು ನನ್ನ ಅಭಿಪ್ರಾಯ.

ಶಾಸ್ತ್ರಗಳನ್ನು ತಿಳಿದಿರುವ ಸ್ನೇಹಿತನು ದುರ್ಲಭನು ಮತ್ತು ಹಿತಕಾರೀ ಸ್ನೇಹಿತನೂ ದುರ್ಲಭನೇ. ಧರ್ಮಭೃತರಲ್ಲಿ ಶ್ರೇಷ್ಠ! ಈ ಎಲ್ಲ

ಪ್ರಶ್ನೆಗಳಿಗೂ ವ್ಯಾಖ್ಯಾನಮಾಡಬೇಕು.”

ಭೀಷ್ಮನು ಹೇಳಿದನು: “ರಾಜನ್! ಯುಧಿಷ್ಠಿರ! ಯಾರೊಡನೆ ಮೈತ್ರಿಯನ್ನು ಮಾಡಿಕೊಳ್ಳಬೇಕು ಮತ್ತು ಯಾರನ್ನು ಮಿತ್ರನನ್ನಾಗಿ

ಮಾಡಿಕೊಳ್ಳಬಾರದು ಇದರ ಕುರಿತು ತತ್ತ್ವತಃ ಹೇಳುತ್ತೇನೆ. ಅದನ್ನು ಸಂಪೂರ್ಣವಾಗಿ ಮನವಿಟ್ಟು ಕೇಳು.

ನರರ್ಷಭ! ಲೋಭಿ, ಕ್ರೂರ, ಅಧರ್ಮಿ, ಕಪಟಿ, ಶಠ, ಕ್ಷುದ್ರ, ಪಾಪಾಚಾರೀ, ಎಲ್ಲರನ್ನೂ ಶಂಕಿಸುವ, ಆಲಸಿ, ದೀರ್ಘಸೂತ್ರೀ, ಕುಟಿಲ,

ಕಷ್ಟಕರ, ಗುರುಪತ್ನಿಯನ್ನು ಉಲ್ಲಂಘಿಸಿದ, ಸಂಕಟದ ಸಮಯದಲ್ಲಿ ಬಿಟ್ಟು ಹೋಗುವ, ದುರಾತ್ಮ, ನಿರ್ಲಜ್ಜ, ಎಲ್ಲ ಕಡೆ

ಪಾಪದೃಷ್ಟಿಯನ್ನೇ ಬೀರುವ, ನಾಸ್ತಿಕ, ವೇದನಿಂದಕ, ಇಂದ್ರಿಯಗಳನ್ನು ಸ್ವಚ್ಛಂದವನ್ನಾಗಿಸಿ ಜಗತ್ತಿನಲ್ಲಿ ಕಾಮನಿರತನಾಗಿ

ಸಂಚರಿಸುವ, ಅಸತ್ಯ, ಎಲ್ಲರ ದ್ವೇಷಕ್ಕೂ ಪಾತ್ರನಾದ, ತನ್ನ ಪ್ರತಿಜ್ಞೆಯಂತೆ ನಡೆದುಕೊಳ್ಳದೇ ಇರುವ, ಚಾಡಿಹೇಳುವ, ಅಪವಿತ್ರ

ಬುದ್ಧಿಯುಳ್ಳ, ಅಸೂಯೆಪಡುವ, ಪಾಪಪೂರ್ಣ ವಿಚಾರಗಳನ್ನಿಟ್ಟುಕೊಂಡಿರುವ, ಕೆಟ್ಟ ನಡತೆಯುಳ್ಳ, ಮನಸ್ಸನ್ನು

ನಿಯಂತ್ರಣದಲ್ಲಿಟ್ಟುಕೊಂಡಿಲ್ಲದ, ಕ್ರೂರಿ, ಧೂರ್ತ, ಮಿತ್ರರಿಗೆ ಅಪಕಾರವನ್ನೆಸಗುವ, ನಿತ್ಯವೂ ಪರರ ಧನವನ್ನು ಬಯಸುವ,

ಯಥಾಶಕ್ತಿಯಾಗಿ ಕೊಡುವವನ ಮೇಲೂ ಸಂತುಷ್ಟನಾಗಿರದ, ಮಂದಬುದ್ಧಿ, ಮಿತ್ರರನ್ನೂ ಧೈರ್ಯದಿಂದ ವಿಚಲಿತರನ್ನಾಗಿ ಮಾಡುವ,

ಸಾವಧಾನವಿಲ್ಲದ, ಅಕಾರಣವಾಗಿ ಸಿಟ್ಟಾಗುವ, ಅಕಸ್ಮಾತ್ತಾಗಿ ವಿರೋಧಿಯಾಗಿ ಕಲ್ಯಾಣಕಾರೀ ಮಿತ್ರರನ್ನೂ ಶೀಘ್ರದಲ್ಲಿಯೇ

ಬಿಟ್ಟುಬಿಡುವ, ತಿಳಿಯದೇ ಅಲ್ಪ ಅಪರಾಧವನ್ನು ಮಾಡಿದ್ದರೂ ಮಿತ್ರನಿಗೆ ಅನಿಷ್ಟವನ್ನುಂಟುಮಾಡುವ, ತನ್ನ ಸ್ವಾರ್ಥಸಾಧನೆಗಾಗಿ

ಮೈತ್ರಿಯನ್ನು ಇಟ್ಟುಕೊಳ್ಳುವ, ವಾಸ್ತವವಾಗಿಯೂ ಮಿತ್ರದ್ವೇಷಿಯಾಗಿರುವ, ಬಾಯಲ್ಲಿ ಮೈತ್ರಿಯ ಮಾತನಾಡುತ್ತಾ ಒಳಗೆ

ಶತ್ರುಭಾವವನ್ನಿಟ್ಟುಕೊಂಡಿರುವ, ಕುಟಿಲ ದೃಷ್ಟಿಯಿಂದ ನೋಡುವ, ವಿಪರೀತದರ್ಶೀ, ಯಾವಾಗಲೂ ಹಿತಕಾರಿಯಾಗಿರುವ

ಮಿತ್ರನನ್ನೂ ತ್ಯಜಿಸುವ, ಕುಡುಕ, ದ್ವೇಷೀ, ಕ್ರೋಧೀ, ನಿರ್ದಯೀ, ಕ್ರೂರ, ಇತರರನ್ನು ಪೀಡಿಸುವ, ಮಿತ್ರದ್ರೋಹೀ, ಪ್ರಾಣಿಗಳನ್ನು

ಹಿಂಸಿಸುವ, ಕೃತಘ್ನ, ನೀಚ - ಇಂಥವರೊಂದಿಗೆ ಸಂಸಾರದಲ್ಲಿ ಎಂದೂ ಮೈತ್ರಿಯನ್ನು ಮಾಡಿಕೊಳ್ಳಬಾರದು. ಇನ್ನೊಬ್ಬರಲ್ಲಿ


ದುರ್ಬಲತೆಯನ್ನೇ ಹುಡುಕುವವನೊಂದಿಗೂ ಎಂದೂ ಮೈತ್ರಿಯನ್ನು ಮಾಡಿಕೊಳ್ಳಬಾರದು. ಈಗ ಮೈತ್ರಿಗೆ ಯೋಗ್ಯರಾದ ಪುರುಷರ

ಕುರಿತು ಕೇಳು.

ಕುಲೀನ, ವಾಕ್ಯಸಂಪನ್ನ, ಜ್ಞಾನವಿಜ್ಞಾನಕೋವಿದ, ಮಿತ್ರಜ್ಞ, ಕೃತಜ್ಞ, ಸರ್ವಜ್ಞ, ಶೋಕವರ್ಜಿತ, ಮಾದುರ್ಯಗುಣಸಂಪನ್ನ,

ಸತ್ಯಸಂಧ, ಜಿತೇಂದ್ರಿಯ, ವ್ಯಾಯಾಮಶೀಲ, ಸತತವೂ ಪತ್ನೀ-ಪುತ್ರರನ್ನು ಪಾಲಿಸುವ, ಕುಲವನ್ನು ಉದ್ಧರಿಸುವ, ರೂಪವಂತ,

ಗುಣೋಪೇತ, ಅಲುಬ್ಧ, ಜಿತಶ್ರಮಿ, ದೋಷಗಳಿಂದ ವಿಮುಕ್ತನಾದ ಮತ್ತು ಲೋಕದಲ್ಲಿ ಪ್ರಸಿದ್ಧನಾದವನೊಂದಿಗೆ ರಾಜನು

ಮಿತ್ರತ್ವವನ್ನು ಕಲ್ಪಿಸಿಕೊಳ್ಳಬೇಕು.

ಪ್ರಭೋ! ಯಥಾಶಕ್ತಿನಡೆದುಕೊಳ್ಳುವ, ಸದಾ ತೃಪ್ತಿಯಿಂದಿರುವ, ಕಾರಣವಿಲ್ಲದೇ ಕೋಪಗೊಳ್ಳದಿರುವ, ಅಕಸ್ಮಾತ್ತಾಗಿ ಸ್ನೇಹವನ್ನು

ತ್ಯಜಿಸದೇ ಇರುವ, ಮನಸ್ಸಿನಲ್ಲಿ ಉದಾಸೀನರಾದರೂ ರೋಷಗೊಳ್ಳದ, ಅರ್ಥದ ತತ್ತ್ವವನ್ನು ತಿಳಿದುಕೊಂಡಿರುವ, ತಮ್ಮನ್ನು

ತಾವೇ ಕಷ್ಟದಲ್ಲಿ ಬಿದ್ದು ಹಿತೈಷಿಯ ಕಾರ್ಯಸಿದ್ಧಿಯನ್ನು ಮಾಡುವ, ಕೆಂಪುಬಣ್ಣದ ವಸ್ತ್ರವು ಹೇಗೆ ತನ್ನ ಬಣ್ಣವನ್ನು ಬಿಡುವುದಿಲ್ಲವೋ

ಹಾಗೆ ಮಿತ್ರನನ್ನೂ ಬಿಡದಿರದ, ಕ್ರೋಧವಶನಾಗಿ ಮಿತ್ರನಿಗೆ ಅನರ್ಥವನ್ನುಂಟುಮಾಡದ, ಲೋಭ-ಮೋಹಗಳ ವಶನಾಗಿ ಮಿತ್ರನ

ಯುವತಿಯರ ಮೇಲೇ ಆಸಕ್ತನಾಗಿರದ, ಮಿತ್ರನ ವಿಶ್ವಾಸಪಾತ್ರನೂ, ಧರ್ಮಾನುರಕ್ತನೂ ಆಗಿರುವ, ಲೋಷ್ಠ-ಕಾಂಚನಗಳನ್ನು

ಒಂದೇ ಸಮನಾಗಿ ಕಾಣುವ, ಮಿತ್ರರಮೇಲೆ ಸುಸ್ಥಿರ ಬುದ್ಧಿಯನ್ನಿಟ್ಟಿರುವ, ಸರ್ವರೊಂದಿಗೂ ಪ್ರಮಾಣಭೂತ ಶಾಸ್ತ್ರಗಳ

ಅನುಸಾರವಾಗಿ ವರ್ತಿಸುವ, ಪ್ರಾರಬ್ಧವಶ ಪ್ರಾಪ್ತವಾದ ಧನದಲ್ಲಿಯೇ ಸಂತುಷ್ಟನಾಗಿರುವ, ಕುಟುಂಬದವರೊಂದಿಗೆ ಸದಾ ಮಿತ್ರ

ಮತ್ತು ಸ್ವಾಮಿಯ ಕಾರ್ಯಸಾಧನೆಗಳಲ್ಲಿ ತತ್ಪರನಾಗಿರುವ ಶ್ರೇಷ್ಠ ಪುರುಷರೊಂದಿಗೆ ರಾಜನು ಮೈತ್ರಿಯನ್ನಿಟ್ಟುಕೊಂಡಿರಬೇಕು.

ಅಂಥವರ ರಾಜ್ಯವು ಪೂರ್ಣಿಮೆಯ ಚಂದ್ರನಂತೆ ವೃದ್ಧಿಯಾಗುತ್ತದೆ.

ನಿತ್ಯವೂ ಶಾಸ್ತ್ರಗಳ ಸ್ವಾಧ್ಯಾಯದಲ್ಲಿ ನಿರತರಾಗಿರುವ, ಜಿತಕ್ರೋಧ, ಬಲವಂತ, ರಣಪ್ರಿಯ, ಕ್ಷಮಾಶೀಲ, ಶೀಲಗುಣೋಪೇತ

ಪುರುಷೋತ್ತಮರು ಮಿತ್ರರಾಗಿರಲು ಯೋಗ್ಯರು.

ಅನಘ! ನಾನು ಯಾವ ದೋಷಸಮಾಯುಕ್ತ ನರರ ಕುರಿತು ಹೇಳಿದೆನೋ ಅವರಲ್ಲಿಯೇ ಅತ್ಯಂತ ಅಧಮನು ಕೃತಘ್ನ ಮತ್ತು

ಮಿತ್ರಘಾತಕನು. ಈ ದುರಾಚಾರಿಯನ್ನು ಎಲ್ಲರಕ್ಕಿಂತಲೂ ದೂರವಿಡಬೇಕು. ಇದು ಎಲ್ಲ ಶಾಸ್ತ್ರಗಳ ನಿಶ್ಚಯವು

.”ಯುಧಿಷ್ಠಿರನು ಹೇಳಿದನು: “ಪಾರ್ಥಿವ! ಮಿತ್ರದ್ರೋಹೀ ಮತ್ತು ಕೃತಘ್ನ ಎಂದು ನೀನು ಹೇಳಿದೆಯಲ್ಲ ಅದರ ಯಥಾರ್ಥ

ಇತಿಹಾಸವೇನು? ಇದರ ಅರ್ಥಸಂಬಂಧವನ್ನು ವಿಸ್ತಾರದಿಂದ ಕೇಳಬೇಕೆಂದು ಬಯಸುತ್ತೇನೆ. ಅದರ ಕುರಿತು ನನಗೆ ಹೇಳು.”

You might also like