You are on page 1of 1

ಗೆ, ದಿನಾಂಕ:

ಮಾನ್ಯ S. ಸುರೇಶ್ ಕುಮಾರ್ ರವರು

ವಿಧಾನಸಭಾ ಸದಸ್ಯರು, ರಾಜಾಜಿನಗರ,

ಬೆಂಗಳೂರು.

ವಿಷಯ: ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಿಯ ಅಭಿಯಂತರರು ಮತ್ತು ಸಹಾಯಕ ಅಭಿಯಂತರರ
ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಕುರಿತು.

ಮಾನ್ಯರೇ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯ
ಸಹಾಯಕ ಅಭಿಯಂತರರ(129+59) ನೇಮಕಾತಿಗೆ ಸಂಬಂಧಿಸಿದಂತೆ, ಕರ್ನಾಟಕ ಲೋಕಸೇವಾ ಆಯೋಗವು ದಿ: 21-2-2022
ರಂದು ಅಧಿಸೂಚನೆ ಸಂಖ್ಯೆ: PSC 1 RTB -1/2021 ಅಧಿಸೂಚನೆ ಹೊರಡಿಸಿತ್ತು ಹಾಗೂ ಇದೇ ಅಧಿಸೂಚನೆಗೆ ದಿನಾಂಕ
1/09/2022 ರಂದು ಹೆಚ್ಚುವರಿಯಾಗಿ 100 ಹುದ್ದೆಗಳನ್ನು ಸೇರಿಸಲಾಗಿತ್ತು ಹಾಗಾಗಿ ಒಟ್ಟು 229+59 ಹುದ್ದೆಗಳನ್ನು
ಅಧಿಸೂಚಿಸಲಾಗಿತ್ತು , ಮುಂದುವರಿದು ಸದರಿ ಹುದ್ದೆಗಳಿಗೆ 26/2/2023 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿರುತ್ತದೆ
ಹಾಗೂ ದಿನಾಂಕ 5/05/2023 ರಂದು ಮೌಲ್ಯಮಾಪನ ಕಾರ್ಯವನ್ನು ಮುಗಿಸಿ 1:3 ಅರ್ಹತಾ ಪಟ್ಟಿಯನ್ನು ಪ್ರಕಟಿಸಿರುತ್ತದೆ
ಹಾಗೂ ದಿನಾಂಕ 22/05/2023 ರಿಂದ 24/05/2023 ರವರೆಗೆ ದಾಖಲಾತಿ ಪರಿಶೀಲನೆ ಮುಗಿದಿರುತ್ತದೆ.ಆದರೆ ತಾತ್ಕಾಲಿಕ
ಆಯ್ಕೆ ಪಟ್ಟಿಯನ್ನು ತಯಾರಿಸಿ ಇನ್ನೂ ಆಯೋಗಕ್ಕೆ ನೀಡಿಲ್ಲ.

ಹಾಗೆಯೇ ಕಿರಿಯ ಅಭಿಯಂತರರು(89+47) ನೇಮಕಾತಿಗೆ ಸಂಬಂಧಿಸಿದಂತೆ, ಕರ್ನಾಟಕ ಲೋಕಸೇವಾ ಆಯೋಗವು ದಿ: 17-3-
2022 ರಂದು ಅಧಿಸೂಚನೆ ಸಂಖ್ಯೆ: PSC 201 RTB-2/2021/2431 ಅಧಿಸೂಚನೆ ಹೊರಡಿಸಿತ್ತು ,ಮುಂದುವರಿದು ಸದರಿ
ಹುದ್ದೆಗಳಿಗೆ 24/12/2022 ಮತ್ತು 25/12/2022 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿರುತ್ತದೆ ಹಾಗೂ ದಿನಾಂಕ
13/04/2023 ರಂದು ಮೌಲ್ಯಮಾಪನ ಕಾರ್ಯವನ್ನು ಮುಗಿಸಿ 1:3 ಅರ್ಹತಾ ಪಟ್ಟಿಯನ್ನು ಪ್ರಕಟಿಸಿರುತ್ತದೆ ಹಾಗೂ ದಿನಾಂಕ
24/04/2023 ರಂದು ದಾಖಲಾತಿ ಪರಿಶೀಲನೆ ಮುಗಿದಿರುತ್ತದೆ, ಮುಂದುವರಿದು ದಿನಾಂಕ 29/05/2023 ರಂದು ಕೆಪಿಎಸ್ಸಿ
ಆಯೋಗಕ್ಕೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮಾನ್ಯ ಕಾರ್ಯದರ್ಶಿಗಳಾದ ವಿಕಾಸ್ ಕಿಶೋರ್ ಅವರು ಕಳುಹಿಸಿರುತ್ತಾರೆ ಆದರೆ
ಆಯೋಗವು ಒಂದು ತಿಂಗಳು ಕಳೆದರೂ ಇನ್ನೂ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಿಲ್ಲ.

ಈ ಮೇಲ್ಕಂಡ ಎರಡೂ ವಿಷಯಗಳಿಗೆ ಸಂಭಂದಿಸಿದಂತೆ ಆಯೋಗವು ಅನುಮೋದನೆ ನೀಡದೆ ವಿಳಂಬ ಧೋರಣೆ


ಅನುಸರಿಸುತ್ತಿದೆ.ಇದಕ್ಕೆ ಲೋಕಸೇವಾ ಆಯೋಗದ ಒಳ ಜಗಳವೇ ಕಾರಣವೆಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತಾವುಗಳು
ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹಾಗೂ ಅಭ್ಯರ್ಥಿಗಳ ಹಿತದೃಷ್ಟಿಯಿಂದ
ಶೀಘ್ರದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಅನುಮೋದನೆ ಪ್ರಕಟಿಸುವ ಹಾಗೆ ಮಾಡಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇವೆ.

ಧನ್ಯವಾದಗಳೊಂದಿಗೆ,

ಇಂತಿ ತಮ್ಮ ವಿಶ್ವಾಸಿ ವರ್ಗ,


ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉದ್ಯೋಗ ಆಕಾo ಕ್ಷಿಗಳು

You might also like