You are on page 1of 21

ಪುಟ-೧

ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ತಾಂಡವಪುರ

ಸಾಂಸ್ಕೃತಿಕ ಕನ್ನಡ ಪ್ರಶ್ನೋತ್ತರಗಳು


ಅಧ್ಯಾಯ-೧
ಕರ್ನಾಟಕ ಸಂಸ್ಕೃತಿ
ಲೇಖಕರ ಪರಿಚಯ : ಹಂಪ ನಾಗರಾಜಯ್ಯ

ಆಧುನಿಕ ಕನ್ನಡ ಸಾಹಿತ್ಯದ ಅಗ್ರಗಣ್ಯ ಸಂಶೋಧಕರು ಮತ್ತು ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಪ್ರಖ್ಯಾತರಾದ ಶ್ರೀಯುತ ಹಂಪ
ನಾಗರಾಜಯ್ಯನವರು ವಿಶಿಷ್ಟ ಮತ್ತು ವೈಚಾರಿಕ ದೃಷ್ಟಿಕೋನದಲ್ಲಿ ಕನ್ನಡ ಸಂಸ್ಕೃತಿಯ ವಿವರಗಳನ್ನು ಈ ಲೇಖನದಲ್ಲಿ ನೀಡಿದ್ದಾರೆ.
ಶ್ರೀಯುತರ ಪರಿಚಯವನ್ನು ಈ ಕೆಳಗೆ ನೀಡಲಾಗಿದೆ.

ಕೋಲಾರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದಲ್ಲಿ 1936 ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ
ಸ್ನಾತಕೋತ್ತರ ಪದವಿ ಪಡೆದ ಹಂಪನಾ ಶ್ರೇಷ್ಠ ವಿದ್ವಾಂಸರೆನಿಸಿದ ಕುವೆಂಪು, ಬಿ.ಎಂ.ಶ್ರೀ., ತೀ.ನಂ.ಶ್ರೀ ಹಾಗೂ ಡಿ.ಎಲ್.ಎನ್. ಅವರ
ಗರಡಿಯಲ್ಲಿ ಪಳಗಿದವರು. ಪ್ರಾಚೀನ ಮತ್ತು ಆಧುನಿಕ ಸಾಹಿತ್ಯಗಳೆರಡರಲ್ಲಿಯೂ ಪರಿಣತಿ ಪಡೆದ ಹಂಪನಾ ಇದುವರೆಗೆ ಸುಮಾರು 60 ಕ್ಕೂ
ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜೈನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅವರು ಮಾಡಿರುವ ಸಂಶೋಧನೆ ಅನುಪಮವಾದದ್ದು. ಇವರ
ಸೇವೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳಲ್ಲದೆ, ಕನ್ನಡದ ಪ್ರತಿಷ್ಠಿತ ಪಂಪ ಪ್ರಶಸ್ತಿಯೂ ಲಭಿಸಿದೆ.

ಆಶಯ
ವಿಶ್ವವಿದ್ಯಾಲಯದ ತಾಂತ್ರಿಕ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಕರ್ನಾಟಕ ಸಂಸ್ಕೃತಿಯ ವಿವರಗಳನ್ನು ಗ್ರಹಿಸಲು ಈ ಲೇಖನವು ಹೆಚ್ಚು
ಪೂರಕವಾಗಿ ಮತ್ತು ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲಾ ವಿಚಾರಗಳನ್ನು ವಿವಿಧ ಮಾದರಿಗಳ
ಮುಖಾಂತರ ವಿವರಿಸಲಾಗಿದೆ. ಕರ್ನಾಟಕದ ಚರಿತ್ರೆ, ಕನ್ನಡ ಸಂಸ್ಕೃತಿ, ವಾಸ್ತುಶಿಲ್ಪ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪರಿಣತರಾದ
ಬಿಹಂಪನಾ ಅವರು ಕರ್ನಾಟಕ ಸಂಸ್ಕೃತಿ ಬಿಎಂಬ ಈ ಲೇಖನದಲ್ಲಿ ಪ್ರಾಚೀಯಿನಯಿದಿಂದ ಇಲ್ಲಿಯವರೆಗೆ ಕನ್ನಡ ಬಿನಾಡು ರಾಜಕೀಯವಾಗಿ
ಮತ್ತು ಸಾಂಸ್ಕೃತಿಕವಾಗಿ ಬೆಳೆದು ಬಂದ ರೀತಿಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಪ್ರಸ್ತುತ "ಕರ್ನಾಟಕ ಸಂಸ್ಕೃತಿ" ಈ ಲೇಖನವು
ಕರ್ನಾಟಕ ಮತ್ತು ಕನ್ನಡ ನಾಡಿನ ಸಂಸ್ಕೃತಿ ಹೇಗೆ ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂಬುದನ್ನು ವಿವಿಧ ಹಂತಗಳಲ್ಲಿ ವಿವಿಧ
ನಿದರ್ಶನಗಳ ಮುಖಾಂತರ ವಿವರಿಸಲು ಯತ್ನಿಸುತ್ತದೆ. ಕರ್ನಾಟಕ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯೇ ಆಗಿದ್ದರೂ ತನ್ನ ಪ್ರಾದೇಶಿಕ
ವೈಶಿಷ್ಟಗಳ ಪರಿಣಾಮವಾಗಿ ವಿಶೇಷ ರೂಪದಲ್ಲಿ ವ್ಯಕ್ತವಾಗುವುದನ್ನು ಹಲವಾರು ಪ್ರಾದೇಶಿಕ ನಿದರ್ಶನಗಳು ಮತ್ತು ಸಂಸ್ಕೃತಿಯ ವಿಭಿನ್ನ
ನೆಲೆಗಳ ಮುಖಾಂತರ ಕರ್ನಾಟಕ ಸಂಸ್ಕೃತಿಯನ್ನು ವಿವರಿಸಲಾಗಿದೆ. ಧರ್ಮ, ಸಮದೃಷ್ಟಿ, ವೀರಗಲ್ಲು, ಸಿಡಿತಲೆಗಲ್ಲು ಮತ್ತು ಮಾಸ್ತಿ
(ಮಹಾಸತಿ) ಈ ಕಲ್ಪನೆಗಳನ್ನು ಸಂಸ್ಕೃತಿಯ ದೃಷ್ಟಿಯಲ್ಲಿ ವಿವರಿಸಲಾಗಿದೆ. ಸಾಕಾರ ಸಂಸ್ಕೃತಿ ಮತ್ತು ಸಂಸ್ಕೃತಿ ಪ್ರಕಾರ ಇವುಗಳ
ನಡುವಿನ ವ್ಯತ್ಯಾಸವನ್ನು ಲೇಖಕರು ವಿವರಿಸಿದ್ದಾರೆ. ಕರ್ನಾಟಕ ಸಂಸ್ಕೃತಿಯನ್ನು ವಿಭಿನ್ನವಾಗಿ ಕಂಡರೂ ಕೊನೆಯಲ್ಲಿ
ಪುಟ-೨

ಭಾರತೀಯ ಸಂಸ್ಕೃತಿಯ ಭಾಗವಾಗಿ ವಿಶೇಷ ವಿಭಿನ್ನ ರೂಪದಲ್ಲಿ ನೋಡಬೇಕು. ಆ ಮುಖಾಂತರ ಕರ್ನಾಟಕ ಸಂಸ್ಕೃತಿಯ ಅಸ್ತಿತ್ವವನ್ನು
ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಈ ಲೇಖನವು ತಿಳಿಸುತ್ತದೆ.

ಅಭ್ಯಾಸಕ್ಕಾಗಿ ಪ್ರಶ್ನೆಗಳು:- ಬಹು ಆಯ್ಕೆಯ ಮಾದರಿಯ ಪ್ರಶ್ನೆಗಳು.

1. ಕರ್ನಾಟಕ ಸಂಸ್ಕೃತಿ ಲೇಖನವನ್ನು ಬರೆದವರು ಯಾರು ? -- ಹಂಪ ನಾಗರಾಜಯ್ಯ

2. ಹಂಪನಾಗರಾಜಯ್ಯ ಅವರ ಜನ್ಮ ಸ್ಥಳ ಯಾವುದು ?-- ಹಂಪಸಂದ್ರ

3. ಅಚ್ಚ ಕನ್ನಡದಲ್ಲಿ ಕಾವ್ಯವನ್ನು ಬರೆದ ಕವಿ ಯಾರು ?-- ಆಂಡಯ್ಯ

4. "ಕನ್ನಡಮೆನಿಪ್ಪನಾಡು ಚೆಲ್ವಾಯ್ತು" ಈ ಸಾಲು ಯಾವ ಕಾವ್ಯದಲ್ಲಿ ಬರುತ್ತದೆ. ಬರೆದವರು ಯಾರು ?


ಕಬ್ಬಿಗರ ಕಾವ್ಯ, ಆಂಡಯ್ಯ

5. ಭೈಷಜ್ಯ ಪದದ ಅರ್ಥ-- ಔಷದಿ

6. ಧರ್ಮ ಸಹಿಷ್ಣುತೆಯನ್ನು ಸಾರುವ ಶಾಸನ ಎಲ್ಲಿದೆ ? --ಬೇಲೂರು ಶಾಸನ

7. ವೈಷ್ಣವರಿಗೂ ಜೈನರಿಗೂ ಒಂದು ಭೇದ ಕಾಣಲಾಗದು ಎಂದು ಹೇಳುವ ಶಾಸನ ಎಲ್ಲಿದೆ ?

ಶ್ರವಣಬೆಳಗೊಳದ ಭಂಡಾರ ಬಸದಿಯಲ್ಲಿದೆ.

8. ವೈಷ್ಣವರಿಗೂ ಜೈನರಿಗೂ ಸಂಧಾನ ಮಾಡಿಸಿದ ದೊರೆ ಯಾರು ? --ಬುಕ್ಕರಾಯ

9. ಕನ್ನಡ ನಾಡಿನ ಶಾಸನಗಳಲ್ಲಿ ಮುಕ್ಕಾಲುಪಾಲು ಈ ........ವಿವರಣೆ ಹಾಗೂ ಪ್ರಶಸ್ತಿಗೆ ಮೀಸಲಾಗಿದೆ.

ದಾನಗಳು.

10. ಅಂದಿನಿಂದಲೂ ಪ್ರಚಾರದಲ್ಲಿರುವ ದಾನಗಳು ಯಾವುವು ?

ಆಹಾರ, ವಸ್ತ್ರ, ಭೇಷಜ್ಯ(ಔಷದಿ) ಮತ್ತು ಶಾಸ್ತ್ರದಾನ.

11. "ಹಸಿವಾದರೆ ಊರೊಳಗೆ ಭಿಕ್ಷಾನ್ನಾಗಳುಂಟು, ತೃಷೆಯಾದರೆ ಕೆರೆ ಭಾವಿ, ಹಳ್ಳಗಳುಂಟು. ಶಯನಕ್ಕೆ ಹಾಳು

ದೇಗುಲಗಳುಂಟು" - ಈ ಸಾಲನ್ನು ಬರೆದವರು ಯಾರು ?-- ಅಕ್ಕಮಹಾದೇವಿ

12. ಕನ್ನಡದ ಮೊದಲ ಕವಯತ್ರಿ ಯಾರು ? --ಅಕ್ಕಮಹಾದೇವಿ

13. “ಗೆದ್ದು ಬಂದರೆ ಕೀರ್ತಿ ಸತ್ತರೆ ಸ್ವರ್ಗ

14. ಅರಸನಿಗೆ ಗಂಡು ಮಗುವಾದರೆ ಒಬ್ಬ ಏನನ್ನು ಕೊಟ್ಟು ಪ್ರಾಣ ಕೊಟ್ಟನು.—ಸಿಡಿತಲೆ

ಪುಟ-೩

15. ಒಡೆಯರೊಡನೆ ತಾನು ಸಾಯುವೆನೆಂದು ಪ್ರಮಾಣ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವವರನ್ನು

ಏನೆಂದು ಕರೆಯುವರು ? --ವೇಳಿವಾಳಿ / ವೇಳವಡಿಚ

16. ಒಡೆಯನ ಹೆಣದ ಕೆಳಗೆ ತನ್ನನ್ನು ಹುದುಗಿಸಿಕೊಳ್ಳುವವರಿಗೆ ಏನೆಂದು ಕರೆಯುತ್ತಾರೆ.—ಕೋಳ್ಗಂಟೆ

17. ಒಡೆಯನ ಮರಣವಾದೊಡನೆ ಸ್ವಾಮಿ ಭಕ್ತಿಯ ಹೆಸರಿನಲ್ಲಿ ಬೆಂಕಿಗೆ ಬಿದ್ದು ಪ್ರಾಣ ತ್ಯಾಗ

ಮಾಡುವವರನ್ನು ಏನೆಂದು ಕರೆಯುತ್ತಾರೆ ?-- ಗರುಡರು

18. ಪತಿಯೊಡನೆ ಸಹಗಮನ ಮಾಡುವ ಸ್ತ್ರೀಯರನ್ನು ಏನೆಂದು ಕರೆಯುತ್ತಾರೆ ? --ಮಹಾಸತಿ/ ಮಾಸ್ತಿ

19. ಕನ್ನಡದ ಮೊದಲ ಉಪಲಬ್ದ (ಸಿಕ್ಕಿದ್ದು) ಕೃತಿ ಯಾವುದು ? --ಕವಿರಾಜಮಾರ್ಗ

20. "ದಕ್ಷಿಣದ ಕಾವೇರಿಯಿಂದ ಉತ್ತರದ ಗೋದಾವರಿ ನದಿಯವರೆಗೆ ಹಬ್ಬಿದ ನಾಡು ಯಾವುದು ?


ಕನ್ನಡ ನಾಡು.

21. "ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತಮತಿಗಳ್" -ಈ ಸಾಲು ಯಾವ ಕಾವ್ಯದಲ್ಲಿ ಬರುತ್ತದೆ,

ಬರೆದವರು ಯಾರು ? ಕವಿರಾಜಮಾರ್ಗ. -- ಶ್ರೀ ವಿಜಯ.

22. ಶಾಸನಗಳಲ್ಲಿ ಸಾಹಿತ್ಯದಲ್ಲಿ ಎತ್ತಿ ಹಿಡಿದ ಜೀವನ ಮೌಲ್ಯಗಳು ಯಾವುವು ?

ಸತ್ಯ, ಶೌಯ್ಯ, ವೀರ ಮತ್ತು ದಾನ

23.ಆದಿ ಕವಿಯೆಂದು ಯಾರನ್ನು ಕರೆಯುತ್ತಾರೆ ? --ಪಂಪ

24. ಪಂಪನ ಎರಡು ಕಾವ್ಯಗಳು ಯಾವುವು ? -- ಆದಿಪುರಾಣ, ವಿಕ್ರಮಾರ್ಜುನ ವಿಜಯ

25. "ಚಾಗದ ಭೋಗದಕ್ಕರದ ಗೇಯದ ಮಾನಸರ್" –ಈ ಸಾಲನ್ನು ಬರೆದ ಕವಿ ಯಾರು ?

ಗೊಟ್ಟಿಯಲಂಪಿನಿಂಪುಗಳೆ ಆಗರವಾದ ಪಂಪ

25.ಎ ಇಂದಿಗೂ ಗಮಕಿಗಳು ಕೀರ್ತನೆಕಾರರು ಕರ್ನಾಟಕ ಸಂಸ್ಕೃತಿಯ ಸಾರವನ್ನು ಜನತೆಯ ಬಳಿಗೆ

ಕೊಂಡೊಯ್ಯುವ --ಹರಿಕಾರರಾಗಿದ್ದಾರೆ.

26. ಭರತೇಶ ವೈಭವ ಕೃತಿಯನ್ನು ಬರೆದವರು ಯಾರು ?—ರತ್ನಾಕರವರ್ಣಿ

ಪುಟ-೪

27. ಪರಿಸರ ಪರಂಪರೆ ಹಾಗೂ ಪ್ರತ್ಯಕ್ಷ ಜೀವನದ ಅನೇಕ ಸಂಸ್ಕಾರಗಳ ಮೂಲಕ ಮನುಷ್ಯನ ಅಂತರಂಗ

ಪಡೆಯುವ ಪಕ್ವತೆಯನ್ನು- ಸಂಸ್ಕೃತಿ ಎನ್ನುವರು .

28. ಕವಿರಾಜಮಾರ್ಗವನ್ನು ಬರೆದ ಕಾಲಘಟ್ಟ ಯಾವುದು ? 9 ನೇ ಶತಮಾನ 29. ಕವಿರಾಜಮಾರ್ಗದಲ್ಲಿ

ಯಾರನ್ನು ಕುರಿತು ವರ್ಣಿಸಲಾಗಿದೆ. -- ಕನ್ನಡಿಗರನ್ನು

30. ಹಗೆ > ಶತ್ರು, ಸಮರ > ಕಾಳಗ, ಯುದ್ದ. ನೃಪತಿ > ರಾಜ, ಅರಸ.

ಮುಕ್ತಾಯ.
ಪುಟ-೫
ಅಧ್ಯಾಯ-೨

ಕರ್ನಾಟಕ ಏಕೀಕರಣ : ಒಂದು ಅಪೂರ್ವ ಚರಿತ್ರೆ


ಲೇಖಕರ ಪರಿಚಯ : ಪ್ರೊ ಗಂಜಾಂ ವೆಂಕಟಸುಬ್ಬಯ್ಯ

ಕರ್ನಾಟಕ ಏಕೀಕರಣ ಚಳವಳಿ ಒಂದು ಅಪೂರ್ವ ಚರಿತ್ರೆಯಾಗಿದ್ದು ಇಂತಹ ಏಕೀಕರಣ ಚಳವಳಿಯಲ್ಲಿ ಸ್ವತಹ ಭಾಗವಹಿಸಿ ವೈಯಕ್ತಿಕ
ಮತ್ತು ಏಕೀಕರಣ ಚಳುವಳಿ ನಡೆದು ಬಂದ ದಾರಿಯ ಸಮಾಗಮವನ್ನು “ಕರ್ನಾಟಕ ಏಕೀಕರಣ : ಒಂದು ಅಪೂರ್ವ ಚರಿತ್ರೆ ಎಂಬ
ಜಿ.ವೆಂಕಟಸುಬ್ಬಯ್ಯ ಅವರು ಬರೆದಿರುವ ಈ ಲೇಖನದಲ್ಲಿ ನಾವು ಹಲವಾರು ಅಂಶಗಳನ್ನು ಕಾಣಬಹುದಾಗಿದೆ.

ಪ್ರೊ ಗಂಜಾಂ ವೆಂಕಟಸುಬ್ಬಯ್ಯ (23 ಆಗಸ್ಟ್‌1913-19 ಏಪ್ರಿಲ್‌2021)ಕನ್ನಡ ನಿಘಂಟುಶಾಸ್ತ್ರ ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ
ಕ್ಷೇತ್ರಗಳಲ್ಲಿ ತಜ್ಞರು. ಇವರ ʼ ಇಗೋ ಕನ್ನಡ “ ಎಂಬ ಪ್ರಜಾವಾಣಿ ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿದೆ. ಇವರ ಭಾಷಾ ಸಾಹಿತ್ಯ
ಕೊಡುಗೆಗೆ 2005 ರಲ್ಲಿ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಇವರಿಗೆ ಪ್ರತಿಷ್ಟಿತ ನಾಡೋಜ ಪ್ರಶಸ್ತಿಯನ್ನು ನೀಡಿದೆ. ಇವರು
ಬೆಂಗಳೂರಿನಲ್ಲಿ ನಡೆದ 77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.

ಅಭ್ಯಾಸಕ್ಕಾಗಿ ಪ್ರಶ್ನೆಗಳು:- ಬಹು ಆಯ್ಕೆಯ ಮಾದರಿಯ ಪ್ರಶ್ನೆಗಳು.

1. ಕರ್ನಾಟಕ ಏಕೀಕರಣ ಒಂದು ಅಪೂರ್ವ ಚರಿತ್ರೆ ಈ ಲೇಖನವನ್ನು ಬರೆದವರು ಯಾರು ?


ಜಿ.ವೆಂಕಟಸುಬ್ಬಯ್ಯ.

2. ಜಿ.ವೆಂಕಟಸುಬ್ಬಯ್ಯನವರ ಜನ್ಮ ಸ್ಥಳ ಯಾವುದು ? --ಗಂಜಾಂ

3. ಸ್ವತಃ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದ್ದವರು ಯಾರು ?-- ಜಿ.ವೆಂಕಟಸುಬ್ಬಯ್ಯ


4. ಇಗೋ ಕನ್ನಡ ನಿಘಂಟು, ನಿಘಂಟು ರಚನಾಶಾಸ್ತ್ರ ಗ್ರಂಥಗಳನ್ನು ಬರೆದವರು ಯಾರು ?

ಜಿ.ವೆಂಕಟಸುಬ್ಬಯ್ಯ.

5. ಮೊದಲ ಬಾರಿಗೆ ಕರ್ನಾಟಕ ಏಕೀಕರಣಕ್ಕೆ ಅಭಿಪ್ರಾಯ ತಿಳಿಸಿದ ವಿದೇಶಿಯ ಯಾರು ?

ಸರ್ ಥಾಮಸ್ ಮನೋ

6. ಸರ್ ಥಾಮಸ್ ಮನೋ ಯಾವ ಜಿಲ್ಲೆಯಲ್ಲಿ ಕಲೆಕ್ಟರ್ ಆಗಿದ್ದರು ? ಯಾವ ವರ್ಷ ?

ಬಳ್ಳಾರಿ ಜಿಲ್ಲೆ (ಆಂಧ್ರ ಪ್ರದೇಶ), 1800

ಪುಟ-೬

7. ಧಾರವಾಡದ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದವರು ಯಾರು ? -- ರಾ. ಹ. ದೇಶಪಾಂಡೆ

8. ವಿದ್ಯಾವರ್ಧಕ ಸಂಘವನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು ? - 1890

9. ಕರ್ನಾಟಕದ ಮೊದಲ ರಾಜಮನೆತನ ಯಾವುದು ? – ಕದಂಬ


10. ಕನ್ನಡದ ಮೊದಲ ಶಾಸನ ಯಾವುದು ? -- ಹಲ್ಟಿಡಿ ಶಾಸನ, ಕ್ರಿ.ಪೂ.450, 5 ನೇ ಶತಮಾನ

11. ಗ್ರಂಥಕರ್ತರ ಸಮ್ಮೇಳನವು ಎಲ್ಲಿ ನಡೆಯಿತು ? ಯಾವ ವರ್ಷ? -- ಧಾರವಾಡ, 1907

12. ಕರ್ನಾಟಕ ಗತವೈಭವ ಕೃತಿಯನ್ನು ಬರೆದವರು ಯಾರು ? -- ಆಲೂರು ವೆಂಕಟರಾಯರು

13. ಕರ್ನಾಟಕ ಏಕೀಕರಣಕ್ಕೆ ಒಪ್ಪಿಗೆ ದೊರೆತ 1920 ರ ಕಾಂಗ್ರೆಸ್ಸಿನ ಅಧಿವೇಶನ ಎಲ್ಲಿ ನಡೆಯಿತು ?

- ನಾಗಪುರ

14. ಮೈಸೂರು ಸಂಸ್ಥಾನವನ್ನು ಕರ್ನಾಟಕದಲ್ಲಿ ಸೇರಿಸಬೇಕೋ ಬೇಡವೋ ಎಂಬ ಅಭಿಪ್ರಾಯಕ್ಕೆ

ಮೈಸೂರು ಸೇರಲೇಬೇಕು ಎಂದು ಹೇಳಿದವರು ಯಾರಾರು ?


ಶ್ರೀರಂಗ, ಕೆ.ಆರ್. ಕಾಮತ್, ಕೆಂಗಲ್ ಹನುಮಂತರಾಯ, ಕೆ. ಚಂಗಲರಾಯ ರೆಡ್ಡಿ,

15. 1955 ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಸಮ್ಮೇಳನ

ಅಧ್ಯಕ್ಷರು ಯಾರು ? -- ಶ್ರೀರಂಗ

16. ಕರ್ನಾಟಕ ಏಕೀಕರಣ ಎಷ್ಟರಲ್ಲಿ ಪ್ರಾರಂಭವಾಗಿ ಎಷ್ಟರಲ್ಲಿ ಸಾಧಿತವಾಯಿತು ? -- 1890-1956

17. ಏಕೀಕರಣಕ್ಕೆ ಆರಂಭದಿಂದ ಅಂತ್ಯದವರೆಗೂ ಹೋರಾಡಿದ ಮಹನೀಯರು ಯಾರಾರು ?

ಶ್ರೀರಂಗ, ಅ.ನ.ಕೃ., ಶಿವಮೂರ್ತಿ ಶಾಸ್ತ್ರಿ


18. ರಾಜ್ಯ ಪುನರ್ವಿಂಗಡಣಾ ನೀತಿಯಂತೆ ಎಷ್ಟರಲ್ಲಿ ಮೈಸೂರಿನ ಎಲ್ಲೆಕಟ್ಟು ನಿರ್ಮಾಣವಾಯಿತು -1956

19. ಬೀದರ ಜಿಲ್ಲೆಯ ಯಾವ ಊರು ಕರ್ನಾಟಕಕ್ಕೆ ಸೇರಿರಲಿಲ್ಲ ? -- ಬಸವ ಕಲ್ಯಾಣ

20. ಬೀದ‌ರ್ ನಗರದಲ್ಲಿ ಯಾವ ಭಾಷೆ ಹೊರಗಿನ ಭಾಷೆಯಾಗಿದೆ ? -- ಮರಾಠಿ


21. ಬೀದರ ನಗರದಲ್ಲಿ, ಭಾಲ್ಕಿ ತಾಲ್ಲೋಕಿನಲ್ಲಿ ಪ್ರಚಾರ ಮಾಡಲು ಯಾವುದರಲ್ಲಿ ಪ್ರಯಾಣ ಮಾಡುತ್ತಿದ್ದರು ? -- ಕುದುರೆ.

22. ಬೀದರಿನ ನೆಲ ಯಾವ ಮಣ್ಣಿನಿಂದ ಕೂಡಿತ್ತು ? -- ಕಪ್ಪು ಮಣ್ಣು/ ಕರಿಮಣ್ಣು

23. ಹೈದರಾಬಾದ್ ಸಚಿವ ಮಂಡಲದಲ್ಲಿ ಇದ್ದ ಕನ್ನಡಿಗರು ಯಾರು ? -- ಡಾ. ಮೇಲುಕೋಟೆ

ಪುಟ-೭

24, 1957-58 ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು ? ಎಲ್ಲಿ ನಡೆಯಿತು ?

ಡಿ.ಎಲ್. ನರಸಿಂಹಚಾರ್ಯ, ಬೀದ‌ರ್ ನಗರ

25. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು ? -- ಹಂಪಿ

26. ಕದಂಬರು ಕರ್ನಾಟಕದ ಉತ್ತರಭಾಗದ ಪ್ರದೇಶವನ್ನು ಸುಮಾರು ಎರಡು ಶತಮಾನದವರೆಗೆ

ಆಳಿದ್ದಾರೆಂದು ಹೇಳಬಹುದು.

ಮುಕ್ತಾಯ.

ಪುಟ-೮
ಅಧ್ಯಾಯ-೩

ಆಡಳಿತ ಭಾಷೆಯಾಗಿ ಕನ್ನಡ


ಲೇಖಕರ ಪರಿಚಯ : ಡಾ ಎಲ್‌ತಿಮ್ಮೇಶ್‌ಮತ್ತು ಪ್ರೊ ವಿ ಕೇಶವ ಮೂರ್ತಿ.

1. ಆಡಳಿತ ಭಾಷೆಯಾಗಿ ಕನ್ನಡ ಲೇಖನವನ್ನು ಯಾವ ಪಠ್ಯ ಪುಸ್ತಕದಿಂದ ಆರಿಸಲಾಗಿದೆ ?-- ಆಡಳಿತ ಕನ್ನಡ

2. ಆಡಳಿತ ಭಾಷೆಯಾಗಿ ಕನ್ನಡ ಲೇಖನವನ್ನು ಬರೆದವರು ಯಾರು ?

ಡಾ.ಎಲ್. ತಿಮ್ಮೇಶ್ ಮತ್ತು ಪ್ರೊ. ಬಿ. ಕೇಶವ ಮೂರ್ತಿ,

3. ಕರ್ನಾಟಕ ರಾಜ್ಯದ ಆಡಳಿತ ಭಾಷೆ ಯಾವುದು ? -- ಕನ್ನಡ

4. ಕನ್ನಡ ಭಾಷೆಗೆ ಎಷ್ಟು ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ? -- 8

5. ಕರ್ನಾಟಕ ರಾಜ್ಯದ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಯಾವ ಭಾಷಾಸೂತ್ರ ಅಸ್ತಿತ್ವದಲ್ಲಿದೆ ?

ತ್ರಿಭಾಷಾ ಸೂತ್ರ

6. ಕನ್ನಡ ಭಾಷೆ ಯಾವ ಭಾಷಾ ವಂಶಕ್ಕೆ ಸೇರಿದ್ದು ? -- ದ್ರಾವಿಡ ಭಾಷಾ ವಂಶ

7. ಕನ್ನಡ ಭಾಷೆಯನ್ನು ವಿವಿಧ ರೂಪಗಳಲ್ಲಿ ಸುಮಾರು ಎಷ್ಟು ಜನರು ಆಡುನುಡಿಯಾಗಿ ಬಳಸುತ್ತಿದ್ದಾರೆ ?

ಸುಮಾರು ಅರವತ್ತು ದಶಲಕ್ಷ ಜನ (60 ದಶಲಕ್ಷ)

8. ಜಗತ್ತಿನಲ್ಲಿ ಹೆಚ್ಚು ಮಂದಿ ಮಾತನಾಡುವ ಭಾಷೆಯ ನೆಲೆಯಲ್ಲಿ ಎಷ್ಟನೇ ಸ್ಥಾನ ಕನ್ನಡಕ್ಕಿದೆ ?

ಇಪ್ಪತ್ತೊಂಬತ್ತನೇ ಸ್ಥಾನ.

9. ಕನ್ನಡ ಬರಹಗಳಿಗೆ ಎಷ್ಟು ವರ್ಷದ ಚರಿತ್ರೆ ಇದೆ ?-- 1500 (ಸಾವಿರದ ಐದುನೂರು ವರ್ಷಗಳ ಚರಿತ್ರೆ )

10. ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಕರೆದವರು ಯಾರು ? - - ವಿನೋಭಾ ಭಾವೆ

11. ನಮ್ಮ ಭಾರತೀಯ ಸಂವಿಧಾನ ಎಷ್ಟರಲ್ಲಿ ಜಾರಿಗೆ ಬಂದಿದೆ ? - 1950

12. ಸಂವಿಧಾನದ ಮುನ್ನೂರ ನಲ್ವತ್ತೂರನೇ (343) ಅನುಚ್ಛೇದದ ಅನುಸಾರ ಆಯಾಯ

ರಾಜ್ಯಗಳಲ್ಲಿ ಬಳಕೆಯಾಗುವ ಭಾಷೆಯನ್ನೆ ಆಡಳಿತ ಭಾಷೆಯಾಗಿ ತಿರ್ಮಾನಿಸಲಾಗಿದೆ.

ಪುಟ-೯

13. ಪ್ರಾದೇಶಿಕ ಭಾಷೆಗಳನ್ನು ಸಂವಿಧಾನದ ಎಷ್ಟನೇ ಅನುಚ್ಛೇದದಲ್ಲಿ ಸೂಚಿಸಲಾಗಿದೆ ?

343 (ಮುನ್ನೂರ ನಲ್ವತ್ತೂರು).

14. --- ರಲ್ಲಿ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಲಯದ ವಾದ ಮತ್ತು ತೀರ್ಪಿನ ಭಾಷೆ
ಕನ್ನಡದಲ್ಲೇ ಇರಬೇಕೆಂದು ತಿರ್ಮಾನಿಸಲಾಗಿದೆ. -- 1974

15. 1980 ರಲ್ಲಿ ಸಾರ್ವತ್ರಿಕವಾಗಿ ನ್ಯಾಯಲಯಗಳ ತೀರ್ಪಿನ ಭಾಷೆ

ಕನ್ನಡವೇ ಆಗಿರಬೇಕೆಂದು ಅಂತಿಮ ಆಜ್ಞೆ ಹೊರಡಿಸಲಾಯಿತು.

16. 1979 ರಿಂದ ಉಚ್ಚನ್ಯಾಯಾಲಯದ ಪರಿಧಿಯಲ್ಲಿ ಬರುವ ಎಲ್ಲಾ ಸಿವಿಲ್ ನ್ಯಾಯಾಲಯಗಳ ಭಾಷೆ

ಕನ್ನಡವೇ ಆಗಿರಬೇಕೆಂದು ಆದೇಶಿಸಲಾಯಿತು.

17. ಲಿಪಿಯುಳ್ಳ ಭಾಷೆಯು ಎಷ್ಟು ಕೌಶಲಗಳನ್ನು ಹೊಂದಿರುತ್ತದೆ ? -- 2 (ಎರಡು)

18. ಲಿಪಿ ಇರದ ಭಾಷೆಯು ಎಷ್ಟು ಕೌಶಲಗಳನ್ನು ಹೊಂದಿರುತ್ತದೆ ? -- 2 (ಎರಡು)

19. ಒಂದು ಭಾಷೆಗೆ ಅದರ ಬಳಕೆಯ ನೆಲೆಯಲ್ಲಿ ಎಷ್ಟು ಕೌಶಲಗಳಿರುತ್ತವೆ ? - 4 (9)

20. ಆಡಳಿತ ಭಾಷೆಯ ಲಕ್ಷಣಗಳು

ಸರಳವಾಗಿರಬೇಕು , ಸ್ಪಷ್ಟತೆಯಿಂದ ಕೂಡಿರಬೇಕು , ನಿರ್ದಿಷ್ಟತೆ ಮತ್ತು ನಿಖರತೆಯಿಂದ

ಸಮಗ್ರತೆ ಮತ್ತು ಸೌಜನ್ಯದಿಂದ ಕೂಡಿರಬೇಕು. ಬಳಸುವ ವಾಕ್ಯಗಳು ಚಿಕ್ಕದಾಗಿರಬೇಕು.

ಭಾಷೆ ಶುದ್ಧವಾಗಿರಬೇಕು ಹಾಗೂ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಿರಬೇಕು.

21. ಆಡಳಿತ ಭಾಷೆಯ ಪ್ರಯೋಜನಗಳು

ಪಾರದರ್ಶಕವಾಗಿರುತ್ತದೆ., ಸರ್ಕಾರದ ವಿಚಾರಗಳು ನೇರವಾಗಿ ತಲುಪುತ್ತವೆ.

ಹೆಚ್ಚು ಸ್ಪಂದನಶೀಲವಾಗಿರುತ್ತದೆ. ಪರಸ್ಪರ ನಂಬಿಕೆ ಮತ್ತು ವಿಶ್ವಾಸ ಹೆಚ್ಚಿಸುತ್ತದೆ.

ಸರ್ಕಾರ ಮತ್ತು ಜನರ ನಡುವೆ ಒಳ್ಳೆಯ ಹೊಂದಾಣಿಕೆ ಏರ್ಪಡಿಸುತ್ತದೆ.

ಮುಕ್ತಾಯ.
ಪುಟ-೧೦
ಕಾವ್ಯ ಭಾಗ ( ಆಧುನಿಕ ಪೂರ್ವ)

ಅಧ್ಯಾಯ-೪

ವಚನ ಸಾಹಿತ್ಯ
ವಚನಕಾರರ ಪರಿಚಯ

ಕರ್ನಾಟಕದಲ್ಲಿ ನಡೆದ ಹನ್ನೆರಡನೇ ಶತಮಾನದ ಶರಣ ಚಳವಳಿ ಸಮಾನತೆ ಮತ್ತು ಮಾನವತೆಯನ್ನು ಸಾರಿದ ಒಂದು ಐತಿಹಾಸಿಕ
ಘಟನೆ. ಆ ಚಳವಳಿಯ ಭಾಗವಾಗಿ ರೂಪುಗೊಂಡ ವಚನ ಸಾಹಿತ್ಯ ಇವತ್ತಿಗೂ ಅತ್ಯಂತ ಪ್ರಸ್ತುತ. ಸಾಮಾಜಿಕ ಅಸಮಾನತೆ, ಧಾರ್ಮಿಕ
ಗೊಡ್ಡು ಸಂಪ್ರದಾಯಕ್ಕೆ ಪ್ರತಿಕ್ರಿಯೆಯಾಗಿ ಬಂದ ವಚನ ಸಾಹಿತ್ಯ ಉಂಟು ಮಾಡಿದ ಅರಿವು ಸಾರ್ವಕಾಲಿಕವಾದದ್ದು. ಶರಣ ಚಳವಳಿಗೆ
ಪ್ರೇರಕ ಶಕ್ತಿಯಾಗಿ ನಿಂತ ಮಹಾ ಮಾನವತಾವಾದಿ ಬಸವಣ್ಣನವರ ನೇತೃತ್ವದಲ್ಲಿ, ವಿವಿಧ ವೃತ್ತಿಗಳಿಗೆ ಸೇರಿದ ನೂರಾರು ಕಾಯಕ
ಜೀವಿಗಳು ತಮ್ಮ ತಮ್ಮ ಅನುಭವ ಜ್ಞಾನವನ್ನು ಸಾಮೂಹಿಕವಾಗಿ ಬಿತ್ತರಿಸಿದರು. ಅಪೂರ್ವ ಸಂದರ್ಭ ಅದಾಗಿತ್ತು. ಸಾಮಾಜಿಕವಾದ
ಕ್ರಾಂತಿಗೂ ನಾಂದಿ ಹಾಡಿದ ಆ ಚಳವಳಿಯ ಉತ್ಪನ್ನವು ಈ ವಚನಗಳನ್ನು ಸೃಜಿಸಿತು. ಅಂಧಕಾರದಲ್ಲಿದ್ದ ಸಮಾಜಕ್ಕೆ ಅರಿವಿನ ಬೆಳಗನ್ನು
ತೋರಿತು. ವಚನ ಚಳವಳಿಯನ್ನು ಸಾಕ್ಷೀಕರಿಸಿದ ಇನ್ನೂ ಅನೇಕ ಪ್ರಮುಖ ವಚನಕಾರರು ಇದ್ದರಾದರೂ ಇಲ್ಲಿ ಸಾಂಕೇತಿಕವಾಗಿ ಈ ಆರು
ವಚನಕಾರರ ಒಂದೊಂದು ವಚನಗಳನ್ನು ಮಾತ್ರ ನೀಡಲಾಗಿದೆ.

ಅಭ್ಯಾಸಕ್ಕಾಗಿ ಪ್ರಶ್ನೆಗಳು

ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ಮತ್ತು ಅಧ್ಯಯನದ ದೃಷ್ಟಿಯಿಂದ ಬಹು ಆಯ್ಕೆ ಮಾದರಿಯ ಹಲವಾರು
ಪ್ರಶ್ನೆಗಳನ್ನು ಈ ಲೇಖನದ ವಿಷಯಗಳಿಗೆ ಪೂರಕವಾಗಿ ನೀಡಲಾಗಿದೆ.

1. ವಚನ ಎಂದರೇನು?. -- ಮಾತು , ಅಂಗ ಪದದ ಅರ್ಥ--- ದೇಹ

2. ವಚನ ಸಾಹಿತ್ಯದ ಕಾಲಘಟ್ಟ ಯಾವುದು? -- 12 ನೇ ಶತಮಾನ

3. ವಚನಕಾರರು ಸಾರಿದ ಸಮಾನತೆಯ ತತ್ವ ಯಾವುದು? -- ಸಾಮಾಜಿಕ ಸಮಾನತೆ

4. ಸುಂಕಕ್ಕೆ ಹೆದರಿ ಹರಿದಗೋಣಿಯಲ್ಲಿ ಭತ್ತ ತುಂಬಿದ.

5. ಜೇಡರ ದಾಸಿಮಯ್ಯನ ಅಂಕಿತನಾಮ ಯಾವುದು? -- ರಾಮನಾಥ

6. ಇರುಳು ಪದದ ಅರ್ಥವೇನು? – ರಾತ್ರಿ. ಅಕ್ಕಮಹಾದೇವಿ ತಂದೆ ಹೆಸರು – ನಿರ್ಮಲ ಶೆಟ್ಟಿ

7. ಗುಲ್ಬರ್ಗ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರು- ಜೇಡರದಾಸಿಮಯ್ಯ ಅವರ ಜನ್ಮ ಸ್ಥಳ.

8. ಸುಂಕ ಪದದ ಅರ್ಥವೇನು?- -- ತೆರಿಗೆ, ಕರಿ ಪದದ ಅರ್ಥವೇನು?-- ಆನೆ

9 ರಾಮನಾಥ ಯಾರ ಅಂಕಿತನಾಮ? -- ಜೇಡರದಾಸಿಮಯ್ಯ ,ಇವರ ಕಾಯಕ ಯಾವುದು?--ನೆಯ್ಗೆ

10. ಜೇಡರ ದಾಸಿಮಯ್ಯರವರ ಹೆಂಡತಿಯ ಹೆಸರೇನು?- ದುಗ್ಗಳೆ.

ಪುಟ-೧೧

11. 'ಪಾಲ್ಕುರಿಕೆ ಸೋಮನಾಥ' ಪುಸ್ತಕದಲ್ಲಿ ಯಾರ ವೃತ್ತಾಂತವಿದೆ ? - ಜೇಡರದಾಸಿಮಯ್ಯ

14. ಅಲ್ಲಮಪ್ರಭು ರವರ ಅಂಕಿತ ನಾಮ ಯಾವುದು? --ಗುಹೇಶ್ವರ.

15. ಅಂಜಿ ಪದದ ಅರ್ಥವೇನು? – ಭಯ. ಮೃತ್ಯು ಪದದ ಅರ್ಥವೇನು? -- ಸಾವು


16, ಕಳ್ಳಗಂಜಿ------ ಹೊಕ್ಕಡೆ ಹುಲಿ ತಿಂಬುದ ಮಾಬುದೇ? -- ಕಾಡು

17. ಹುಲಿಗಂಜಿ ಹುತ್ತವ ಹೊಕ್ಕಡ ತಿಂಬುದ ಮಾಬುದೇ? -- ಸರ್ಪ

18. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ ಅಲ್ಲಮಪ್ರಭು ಅವರ ಜನ್ಮಸ್ಥಳ.

19. ಕಾಲಕ್ಕಂಜಿ ಭಕ್ತನಾದಡೆ ತಿಂಬುದ ಕರ್ಮ ತಿಂಬುದೆ ಮಾಬುದೆ?

20. ಅಲ್ಲಮಪ್ರಭುರವರ ಗುರು – ಅನಿಮಿಷ ಯೋಗಿ

22. ಶೂನ್ಯಸಂಪಾದನೆ ಕೃತಿಯ ಕೇಂದ್ರಬಿಂದು ಯಾರು?-- ಅಲ್ಲಮಪ್ರಭು

23. ಅನುಭವಮಂಟಪದ ಅಧ್ಯಕ್ಷರುಯಾರು? – ಅಲ್ಲಮಪ್ರಭು

25. ಬಸವಣ್ಣನವರ ಅಂಕಿತ ನಾಮ ಯಾವುದು?- ಕೂಡಲ ಸಂಗಮದೇವ

26. ಕರಿಘನ ಕಿರಿದೆನ್ನ ಬಹುದೆ ಬಾರದಯ್ಯ. ಬಸವಣ್ಣನ ತಂದೆ ಹೆಸರು – ಮಾದಿರಾಜ

27. ತಮಂದ ಘನಜ್ಯೋತಿ ಕಿರಿದೆನ್ನ ಬಹುದೆ ಬಾರದಯ್ಯ.

28. ಬಿಜಾಪುರ ಜಿಲ್ಲೆ ಬಸವನ ಬಾಗೆವಾಡಿ ಬಸವಣ್ಣನ ಜನ್ಮ ಸ್ಥಳ.

29. ಆಯ್ದಕ್ಕಿ ಲಕ್ಕಮ್ಮನ ಅಮಕಿತನಾಮ ಯಾವುದು. – ಮಾರಯ್ಯ ಪ್ರಿಯ ಅಮುಗೇಶ್ವರಲಿಂಗ

30. ಯಾರ ಆಸ್ತಾನದಲ್ಲಿ ಬಸವಣ್ಣನಿದ್ದನು. – ಬಿಜ್ಜಳನ

31. ಬಸವಣ್ಣನ ಪತ್ನಿಯರ ಹೆಸರೇನು ? – ಗಂಗಾಂಭಿಕೆ ನೀಲಾಂಭಿಕೆ

32. ಅಕ್ಕ ಮಹಾದೇವಿ ಜನ್ಮ ಸ್ಥಳ- -- ಉಡುತಡಿ , ಕನ್ನಡದ ಮೊದಲ ಕವಯತ್ರಿ

33. ಕಾಯಕವೇ ಕೈಲಾಸ ಪದವನ್ನು ತಮ್ಮ ವಚನದಲ್ಲಿ ಬಳಕೆ ಮಾಡಿದವರು – ಮಾರಯ್ಯ

34. ಅಕ್ಕಮಹಾದೇವಿ ಐಕ್ಯವಾದ ಸ್ಥಲ - ಶ್ರೀಶೈಲ, ಅಂಕಿತನಾಮ ಚನ್ನಮಲ್ಲಿಕಾರ್ಜುನ

35. ಹುಸಿ ಎಂದರೆ—ಸುಳ್ಳು . ಶಶಿ ಎಂದರೆ ಚಂದಿರ , ರವಿ ಎಂದರೆ ಸೂರ್ಯ

36. ಮಾರಯ್ಯನ ಕಾಯಕ ಯಾವುದು. – ಅಕ್ಕಿ ಆಯುವುದು. ಊರು..ಅಮುಗೇಶ್ವರ

37. ಮಾರಯ್ಯನ ಹೆಂಡತಿಯಾರು- ಆಯ್ದಕ್ಕಿ ಲಕ್ಕಮ್ಮ .ಬಸವಣ್ಣ ಒಬ್ಬ ಮಹಾಮಾನವತಾ ವಾದಿ.

ಮುಕ್ತಾಯ.
ಪುಟ-೧೨

ಅಧ್ಯಾಯ-೫

ಕೀರ್ತನಾ ಸಾಹಿತ್ಯ

ಕೀರ್ತನಕಾರರಲ್ಲಿ ಪುರಂದರದಾಸ ಮತ್ತು ಕನಕದಾಸ ಪ್ರಮುಖರು, ಅವರ -ಒಂದೊಂದು ಕೀರ್ತನೆಗಳನ್ನು ಇಲ್ಲಿ ಸಾಂಕೇತಿಕವಾಗಿ
ನೀಡಲಾಗಿದೆ.

ಅಭ್ಯಾಸಕ್ಕಾಗಿ ಪ್ರಶ್ನೆಗಳು ಬಹು ಆಯ್ಕೆ ಮಾದರಿಯ ಪ್ರಶ್ನೆಗಳು

1. ಆದರಿಂದೇನು ಫಲ ಇದರಿಂದೇನು ಫಲ' ಕೀರ್ತನೆಯ ರಚನಕಾರರು ಯಾರು?-- ಪುರಂದರದಾಸರು


2. ಯಾರನ್ನು ನೆನೆಯಬೇಕೆಂದು ಪುರಂದರದಾಸರು ಹೇಳಿದ್ದಾರೆ? -- ಪುರಂದರವಿಠಲ

3. ಹೃದಯದ ಮಲ ತೊಳೆಯಲಾರದೆ ವ್ಯರ್ಥ, . ತೊರೆಯೊಳು ಮಿಂದರೆ ದುರಿತ ಪೋಗುವುದೆ.

4. ಹಲವು ಕಾಲ ಕಲ್ಲು ನೀರೊಳಗಿದ್ದರೇನು ಬಲು ನೆನೆದು ಅಮೃತಶಿಲೆ ಆಗುವುದೆ.

5. ನಾಮ ಪದದ ಅರ್ಥವೇನು? -- ಹೆಸರು , ಧನ ಪದದ ಅರ್ಥವೇನು?—ಹಣ..

6. ಕರ್ನಾಟಕ ಸಂಗೀತದ ಪಿತಾಮಹ ಯಾರು? --ಪುರಂದರದಾಸರು

7. ರಾಮಧಾನ್ಯ ಚರಿತೆ ಈ ಕೃತಿಯ ಕತೃ ಯಾರು? – ಕನಕದಾಸರು

8. ಪುರಂದರದಾಸರು ಯಾರ ಶಿಷ್ಯರು? -- ವ್ಯಾಸರಾಯರು

9. ಮಿಂದು ಎಂದರೆ ಏನು? – ಮುಳುಗು, ಅಡಿ ಪದದ ಅರ್ಥವೇನು? -- ಪಾದ

10. 'ತಲ್ಲಣಿಸದಿರು ಕಂಡ್ಯ ತಾಳು ಮನವೆ' ಕೀರ್ತನೆಯ ರಚನಗಾರರು ಯಾರು? -- ಕನಕದಾಸರು

11. ವೃಕ್ಷ ಪದದ ಅರ್ಥವೇನು? – ಮರ, ಜನನಿ ಪದದ ಅರ್ಥವೇನು? --ತಾಯಿ

12. ಪವಳ ಪದದ ಅರ್ಥವೇನು? -- ಹವಳ , ಲತೆ ಪದದ ಅರ್ಥವೇನು? -- ಬಳ್ಳಿ

13. ಅಡವಿ ಪದದ ಅರ್ಥವೇನು?-- ಕಾಡು ,, ಕನಕದಾಸರ ಮೂಲ ಹೆಸರೇನು? . -- ತಿಮ್ಮಪ್ಪ

14. ಕನಕದಾಸರ ಹುಟ್ಟೂರು ಯಾವುದು? - ಬಾಡ , ಕನಕದಾಸರ ತಂದೆಯ ಹೆಸರೇನು? – ಬೀರಪ್ಪ

15. ಕನಕದಾಸರ ಅಂಕಿತನಾಮ ಯಾವುದು? - --ಕಾಗಿನೆಲೆ ಆದಿಕೇಶವ

16. ಕನಕದಾಸರು ಬರೆದ ಕೃತಿ ಯಾವುದು? ಮೋಹನ ತರಂಗಿಣಿ, ಹರಿಭಕ್ತಿಸಾರ.

17. ಬೀರಪ್ಪ ವಿಜಯನಗರದ ಅರಸರ ಕಾಲಘಟ್ಟದಲ್ಲಿ ಏನಾಗಿದ್ದ? – ಪಾಳೇಗಾರ.

ಮುಕ್ತಾಯ.
ಪುಟ-೧೩

ಅಧ್ಯಾಯ-೬

ತತ್ವಪದಗಳು
ಮೂಲ ಆಶಯ:

ಶಿಶುನಾಳ ಶರೀಫರು ಕನ್ನಡ ಸಾಹಿತ್ಯ ತತ್ವಪದಗಳ ರೂವಾರಿ. ಬದುಕಿಗೆ ಅವಶ್ಯಕವಾದ ಜೀವನ ತತ್ವವನ್ನು, ಆಧ್ಯಾತ್ಮಿಕ -ಜ್ಞಾನವನ್ನು
ಸುಶ್ರಾವ್ಯ ಹಾಡುಗಳ ಮೂಲಕವೇ ಧಾರೆ ಎರೆದಿದ್ದಾರೆ. ಅವರಲ್ಲಿ ಸಂತ ಶಿಶುನಾಳ ಷರೀಫ ಮತ್ತು ಬಾಲಲೀಲಾ ಮಹಾಂತ ಶಿವಯೋಗಿ
ಅವರ ತತ್ವಪದಗಳನ್ನು ಇಲ್ಲಿ ನೀಡಲಾಗಿದೆ.

ಅಭ್ಯಾಸಕ್ಕಾಗಿ ಪ್ರಶ್ನೆಗಳು ಬಹು ಆಯ್ಕೆ ಮಾದರಿಯ ಪ್ರಶ್ನೆಗಳು


.
1. ಶಿಶುನಾಳರ ಜನ್ಮಸ್ಥಳ ಯಾವುದು? -- ಶಿಶುನಾಳ. ಶಿಶುನಾಳರ ಕಾಲ ಎಷ್ಟು? –1819

2. ಶಿಶುನಾಳರ ತಂದೆಯ ತಾಯಿಯ ಹೆಸರೇನು? . --ಮುಹಮ್ಮದ್ ಷರೀಫ್, ಹುಚ್ಚಾಮಾ


5. ಶಿಶುನಾಳರ ಗುರುಗಳು ಯಾರು? -- ಗೋವಿಂದ ಭಟ್ಟರು

6. ತಿಗರಿ ಪದದ ಅರ್ಥವೇನು? -- ಚಕ್ರ

7. ಶಿಶುನಾಳ ಶರೀಫರ ತತ್ವಪದ ಯಾವುದು? -- ಸಾವಿರಕೊಡಗಳ ಸುಟ್ಟು

8. ಈ ಬ್ರಹ್ಮಾಂಡವನ್ನೆಲ್ಲ ಯಾರು ತುಂಬಿಕೊಂಡಿದ್ದಾರೆಂದು ಶರೀಫರು ಹೇಳಿದ್ದಾರೆ? – ಕುಂಬಾರಕಿ

9 . ಗಡಗಿ ತಯಾರುಮಾಡುವಾಕಿ ಎಷ್ಟು ಸುತ್ತನ್ನು ತಿರುಗಿ ತಯಾರು ಮಾಡುವಳು? – 360

10. ಕುಂಬಾರಕಿ ಯಾವ ಬಡಗಿಯನ್ನು ಊರುವಳು? -- ಧ್ಯಾನ

11. ಕುಂಬಾರಕಿ ಯಾವ ತಿಗರಿಯನ್ನು ಮಾಡುವಳು? -- ಭಕ್ತಿ

12. ಯಾವ ಹುದಲನ್ನು ಕುಂಬಾರಕಿ ಕಲಸುವಳು? -- ಗುಣ

13. ಎಷ್ಟು ಕೊಡಗಳನ್ನು ಕುಂಬಾರಕಿ ಸುಡುವಳು. –1000

14. ಎಷ್ಟು ಕಾಸಿಗೆ ಕುಂಬಾರಕಿ ಗಡಿಗೆ ಮಾರುವಳು – 6

15. ಕುಂಬಾರಕಿ ಯಾವುದರ ಮೇಲೆ ಮಗಿಯನ್ನು ಇಡುವಳು? – ವಸುಧೆ/ ಭೂಮಿ

ಮುಕ್ತಾಯ.

ಪುಟ-೧೪

ಕಾವ್ಯ ಭಾಗ (ಆಧುನಿಕ ಸಾಹಿತ್ಯ)


ಅಧ್ಯಾಯ- ೭
ಮಂಕುತಿಮ್ಮನ ಕಗ್ಗ – ಡಿ ವಿ ಜಿ

ಅಭ್ಯಾಸಕ್ಕಾಗಿ ಪ್ರಶ್ನೆಗಳು : ಬಹು ಆಯ್ಕೆ ಮಾದರಿಯ ಪ್ರಶ್ನೆಗಳು

1. ಮಂಕುತಿಮ್ಮನ ಕಗ್ಗ ಕೃತಿಯ ರಚನಾಕಾರರು ಯಾರು? -- ಡಿ.ವಿ.ಜಿ

2. ಡಿ.ವಿ.ಜಿ ಅವರು ಎಷ್ಟರಲ್ಲಿ ಜನಿಸಿದರು? -- 1887 ಊರು ಮುಳಬಾಗಿಲು

3. ಉಮರನ ಒಸಗೆ ಇದು ಯಾರ ಕೃತಿ? -- ಡಿ.ವಿ.ಜಿ

4. ಆರದೋ ಜಗವೆಂದು ಭೇದ ಎಣಿಸದಿರು.

5. ನಗುವು ಸಹಜದ ಧರ್ಮ; ನಗಿಸುವುದು -- ಪರಧರ್ಮ

6. ವಿಷಸರ್ಪಗಳಿಗೆ ಯಾವುದರ ಗೂಡು ಹುತ್ತವಾಗುವುದು? -- ಗೆದ್ದಲಿರುವೆ


7. ಕಣಕಣದಿ ಗೆದ್ದಲಿರುವೆಗಳು ಏನನ್ನು ಹೊರುವವು? -- ಮಣ್ಣು

8. ದೀನದುರ್ಬಲರಿಗೆ ಏನಾಗಬೇಕೆಂದು ಡಿ.ವಿ.ಜಿ. ಉದಾಹರಿಸಿದ್ದಾರೆ? -- ಬೆಲ್ಲ ಸಕ್ಕರೆ

9. ಕಷ್ಟಗಳ ಮಳೆಯ ವಿಧಿ ಸುರಿಯುವಾಗ ಏನಾಗ ಬೇಕೆಂದು ಡಿ.ವಿ.ಜಿ. ತಿಳಿಸಿದ್ದಾರೆ? -- ಕಲ್ಲು

10. ಎಲ್ಲರೊಳಗೆ ನಾವು ಏನಾಗಬೇಕೆಂದು ಡಿ.ವಿ.ಜಿ. ತಿಳಿಸಿದ್ದಾರೆ? -- ಒಂದಾಗಬೇಕು

11. ಹುಲ್ಲಾಗು -- ಬೆಟ್ಟದಡ

12. ಮನೆಗೆ – ಮಲ್ಲಗೆಯಾಗು

13. ಹೊಸಚಿಗುರು------ಕೂಡಿರಲು. – ಹಳೆಬೇರು

14. ಹೊಸಯುಕ್ತಿ----------- ಒಳಗೂಡೆ ಧರ್ಮ. – ಹಳೆ ತತ್ವ

ಮುಕ್ತಾಯ.
ಪುಟ-೧೫

ಅಧ್ಯಾಯ- ೮
ಕುರುಡು ಕಾಂಚಾಣಾ—ದ ರಾ ಬೇಂದ್ರೆ

ಅಭ್ಯಾಸಕ್ಕಾಗಿ ಪ್ರಶ್ನೆಗಳು : ಬಹು ಆಯ್ಕೆ ಮಾದರಿಯ ಪ್ರಶ್ನೆಗಳು

L ಕುರುಡು ಕಾಂಚಾಣ ಪದ್ಯದ ರಚನಾಕಾರರು ಯಾರು? -- ಬೇಂದ್ರೆ

2 ದ.ರಾ.ಬೇಂದ್ರೆಯವರ ಪೂರ್ಣ ಹೆಸರೇನು? -- ದತ್ತಾತ್ರೇಯ ರಾಮಚಂದ್ರ ಬೇಂದ್ರೆ

3. ದ.ರಾ ಬೇಂದ್ರೆಯವರ ಕಾವ್ಯನಾಮ ಯಾವುದು? -- ಅಂಬಿಕಾತನಯದತ್ತ

4 ಬೇಂದ್ರೆಯವರ ಕಾಲ ಎಷ್ಟು? -- 1896 ಧಾರವಾಡ

5. 1974 ರಲ್ಲಿ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು ಯಾರು?

6. ಕುರುಡು ಕಾಂಚಾಣ ಪದ್ಯವನ್ನು ಯಾವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ? -- ನಾದಲೀಲೆ

7. ಕುರುಡು ಕಾಂಚಾಣ ಯಾರನ್ನು ತುಳಿಯುತಲಿತ್ತು? -- ಕಾಲಿಗೆ ಬಿದ್ದವರು

8. ಯಾರ ಎಲುಬನ್ನು ಕಾಂಚಾಣ ಕಿರುಗೆಜ್ಜೆಯಾಗಿ ಮಾಡಿಕೊಂಡಿದೆ? -- ಬಾಣಂತಿ

9. ಸಾಬಾಣ ಪದದ ಅರ್ಥವೇನು? -- ಸಾಬೂನು

10.ಬಾಣಂತಿ ಎಲುಬನಲ್ಲಿ ಏನು ಮಾಡಿಕೊಂಡಿರುವರು? -- ಕಿರುಗೆಜ್ಜೆ

11. ಶ್ರೀಮಂತರು ಹಾಕುವ ಜೋಮಲೆ ಯಾವುದರಿಂದ ಮಾಡಿದ್ದು? -- 'ಕಣ್ಣಿನ ಕವಡ

12. ಶ್ರೀಮಂತರು ಯಾರ ಕಣ್ಣಿನ ಕವಡೆಯನ್ನು ಜೋಮಾಲೆ ಮಾಡಿಕೊಂಡು ಹಾಕಿಕೊಳ್ಳುವರು?


ಸಣ್ಣ ಕಂದಮ್ಮ

13. ಕಾಂಚಾಣವು ಬಡವರ ಕಣ್ಣೀರನ್ನು ಕುಡಿದು ಏನು ಮಾಡುತ್ತಿತ್ತು? .-- ಉಧೋ ಉಧೋ ಎನ್ನುತ್ತಿತ್ತು

14. ಶ್ರೀಮಂತರ ಹಣೆಯಲ್ಲಿ ಯಾರ ಧೂಳಿಯ ಭಂಡಾರ ಇರುವುದು? -- ಕೂಲಿ ಕಂಬಳಿ

15. ಕಾಂಚಾಣ ಗುಡಿಯಲ್ಲಿ ಯಾವ ಶಬ್ದ ಮಾಡುವುದು? -- ಝಣಝಣ

16. ಕಾಂಚಾಣ ಮಹಡಿಯೊಳಗೆ ಯಾವ ಶಬ್ದ ಮಾಡುವುದು -- ತನನ

ಮುಕ್ತಾಯ.
ಪುಟ-೧೬

ಅಧ್ಯಾಯ- ೯
ಹೊಸ ಬಾಳಿನ ಗೀತೆ – ಕುವೆಂಪು

ಅಭ್ಯಾಸಕ್ಕಾಗಿ ಪ್ರಶ್ನೆಗಳು : ಬಹು ಆಯ್ಕೆ ಮಾದರಿಯ ಪ್ರಶ್ನೆಗಳು

1.ಹೊಸಬಾಳಿನ ಗೀತೆ ಕವನದ ರಚನಕಾರರು ಯಾರು? -- ರಾಷ್ಟ್ರ ಕವಿ ಕುವೆಂಪು

2. ಕುವೆಂಪುರವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿತು? -- ರಾಮಾಯಣ ದರ್ಶನಂ

3. ಕುವೆಂಪುರವರ ಪೂರ್ಣ ಹೆಸರೇನು? -- ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ , ತೀರ್ಥಹಳ್ಳಿತಾಲೂಕು

4. ಕುವೆಂಪುರವರು ಎಷ್ಟರಲ್ಲಿ ಜನಿಸಿದರು?--1904

5. ವಿಪ್ಲವ ಪದದ ಅರ್ಥವೇನು? -- ಕ್ರಾಂತಿ

6 ನಾಕ ಪದದ ಅರ್ಥವೇನು? -- ಸ್ವರ್ಗ

7. ಕೇಲಿ ಪದದ ಅರ್ಥವೇನು? -- ಆಟ

8. ಸರ್ವರಿಗೆ ಸಮಬಾಳು! ಸರ್ವರಿಗೆ -- ಸಮಪಾಲು

9. ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು ಎಂದು ನವ ಯುಗ ಯಾವ ಯುಗವಾಣಿ ಘೋಷಿಸಿದೆ?

10. ಕಾಳಿಯು ಯಾರನ್ನು ಸೀಳಿ ಬರುತಿಹಳು? -- ದಾನವರು

11. ದಾನವರನ್ನು ಯಾವ ಕಾಳಿ ಬರುತಿಹಳು? – ಕ್ರಾಂತಿ

12. ಯಾವ ಸಿಂಹಾಸನಕ್ಕೆ ಕೊನೆಗಾಲಮ ಬಂದಿದೆ. – ಇಂದ್ರ

13. ದಾನವರು ಯಾರಿಗೆ ಮರುಳಾದರು -- ಮೋಹಿನಿಗೆ

ಮುಕ್ತಾಯ.
ಘಟಕ – ತಾಂತ್ರಿಕ ವ್ಯಕ್ತಿಗಳ ಪರಿಚಯ ಪುಟ-೧೭

ಅಧ್ಯಾಯ- ೧೦
ಡಾ. ವಿಶ್ವೇಶ್ವರಯ್ಯ –ವ್ಯಕ್ತಿ ಮತ್ತು ಐತಿಹ್ಯ
ಲೇಖಕರ ಪರಿಚಯ
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್ (1900) ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದವರು. ಕನ್ನಡದ
ಲಲಿತ ಪ್ರಬಂಧಗಳಲ್ಲಿ ಅವರಷ್ಟು ಎತ್ತರದ ಸಾಧನೆ ಮಾಡಿದವರಿಲ್ಲ. ಬಹಳ ಸುಂದರವಾದ ಸರಸಪೂರ್ಣವಾದ ಗದ್ಯವನ್ನು ಬರೆದ
ಮೂರ್ತಿರಾಯರು, 'ಹಗಲುಗನಸುಗಳು', 'ಅಲೆಯುವ ಮನ', 'ಮಿನುಗುಮಿಂಚು' ಮುಂತಾದ ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಅವರ 'ಪತ್ರಗಳು ಚಿತ್ರಗಳು' ಕೃತಿಗೆ 1979 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಕನ್ನಡದಲ್ಲಿ ಶಿವರಾಮ ಕಾರಂತರಂತೆ
ಮೂರ್ತಿರಾಯರು ಕೂಡ ನಾಸ್ತಿಕವಾದಿ ಚಿಂತನೆಯ ಪ್ರತಿಪಾದಕರು. ಅವರು ಬರೆದ 'ದೇವರು' ಪುಸ್ತಕವು ಬಹಳ ಚರ್ಚೆಗೆ ಒಳಗಾಗಿದೆ.
ಅವರ ಪ್ರವಾಸ ಕಥನದ ಹೆಸರು 'ಅಪರವಯಸ್ಕನ ಅಮೆರಿಕಾ ಯಾತ್ರೆ', ಕನ್ನಡದಲ್ಲಿ ನೂರು ವರ್ಷಕ್ಕೂ ಮೀರಿದ ಸುದೀರ್ಘ ಬಾಳುವೆ
ಮಾಡಿದ ಲೇಖಕರಲ್ಲಿ ಒಬ್ಬರಾಗಿರುವ ಮೂರ್ತಿರಾಯರು 'ಸಂಜೆಗಣ್ಣಿನ ಹಿನ್ನೋಟ' ಎಂಬ ಆತ್ಮಚರಿತ್ರೆಯನ್ನು ಬರೆದಿದ್ದಾರೆ.
ಮೂರ್ತಿರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. 1984 ರಲ್ಲಿ ಕೈವಾರದಲ್ಲಿ ನಡೆದ 56 ನೇ ಕನ್ನಡ ಸಾಹಿತ್ಯ ಪರಿಷತ್ತಿನ
ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಈ ವ್ಯಕ್ತಿ ಚಿತ್ರವನ್ನು ಅವರ 'ಸಮಗ್ರ ಲಲಿತ ಪ್ರಬಂಧಗಳು' ಎಂಬ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಇಲ್ಲಿ ಲೇಖಕರು ಸರ್ ಎಂ
ವಿಶ್ವೇಶ್ವರಯ್ಯನವರ ಬಗ್ಗೆ ಜನರಲ್ಲಿರುವ ನೆನಪಿನ ಪ್ರಸಂಗಗಳನ್ನು ಇಟ್ಟುಕೊಂಡು, ಕರ್ನಾಟಕಕ್ಕೆ ಅವರು ಮಾಡಿದ ಸೇವೆಯನ್ನು
ಚಿತ್ರಿಸಿದ್ದಾರೆ. ಯತ್ನಿಸಿದ್ದಾರೆ. ಬಗ್ಗೆ ಇರುವ ಕೆಲವು ಟೀಕೆಗಳಿಗೆ ಉತ್ತರಿಸಲು ಅವರ

ಅಭ್ಯಾಸಕ್ಕಾಗಿ ಪ್ರಶ್ನೆಗಳು : ಬಹು ಆಯ್ಕೆ ಮಾದರಿಯ ಪ್ರಶ್ನೆಗಳು

1. ವಿಶ್ವೇಶ್ವರಯ್ಯನವರಿಗೆ ಭಾರತದ ಯಾವ ಅತ್ಯುನ್ನತ ಪ್ರಶಸ್ತಿ ಲಭಿಸಿದೆ?. -- ಭಾರತರತ್ನ

2. ಬ್ರಿಟಿಷರು ವಿಶ್ವೇಶ್ವರಯ್ಯನವರಿಗೆ ನೀಡಿದ ಅತ್ಯುನ್ನತ ಪ್ರಶಸ್ತಿ ಯಾವುದು? -- ಸರ್

3. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ಏನೆಂದು ಆಚರಿಸಲಾಗುತ್ತದೆ? -- ಇಂಜಿನಿಯರ್ ದಿನ

4. ವಿಶ್ವೇಶ್ವರಯ್ಯನವರು ಹುಟ್ಟಿದ ವರ್ಷ ಯಾವುದು? -- 1861

5. ವಿಶ್ವೇಶ್ವರಯ್ಯನವರು ಯಾವ ಸಂಸ್ಥಾನದ ದಿವಾನರಾಗಿದ್ದರು? -- ಮೈಸೂರ.

6. ಎ ಎನ್ ಮೂರ್ತಿರಾವ್ ಅವರ ಪೂರ್ಣ ಹೆಸರೇನು? -- ಅಕ್ಕಿ ಹೆಬ್ಬಾಳು ನರಸಿಂಹ ಮೂರ್ತಿರಾವ್

7. ಡಾ. ವಿಶ್ವೇಶ್ವರಯ್ಯ ? ವ್ಯಕ್ತಿ ಮತ್ತು ಐತಿಹ್ಯ ಲೇಖನದ ಲೇಖಕರು ಯಾರು? -- ಎ ಎನ್ ಮೂರ್ತಿರಾವ್

8. ಎ ಎನ್ ಮೂರ್ತಿರಾವ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎಷ್ಟರಲ್ಲಿ ದೊರೆಯಿತು? -- 1979

9. ಮಂಡ್ಯ ಜಿಲ್ಲೆಯ ಸೌಂದರ್ಯದಲ್ಲಿ, ಅಲ್ಲಿಯ ಜನರ ಅಭ್ಯುದಯದಲ್ಲಿ ಜೀವಂತವಾಗಿರುವವರು ಯಾರು?

--- ವಿಶ್ವೇಶ್ವರಯ್ಯ
ಪುಟ-೧೮

10. ಕೃಷ್ಣರಾಜ ಸಾಗರವನ್ನು ಕಟ್ಟಿಸಿದವರು ಯಾರು? --- ವಿಶ್ವೇಶ್ವರಯ್ಯ

11. ಡಾ.ವಿಶ್ವೇಶ್ವರಯ್ಯನವರು ಎಷ್ಟರಲ್ಲಿ ದಿವಾನ ಗಿರಿಯನ್ನು ತ್ಯಜಿಸಿದರು? -- 1919

12. 'ನಮ್ಮ ಬಂಧುಗಳಲ್ಲಿ ಯಾರೊಬ್ಬರಿಗಾಗಲಿ ನೌಕರಿ ಕೊಡಬೇಕೆಂದು ನೀನು ಶಿಫಾರಸು ಮಾಡಬಾರದು: ಮಾಡುವುದಿಲ್ಲವೆಂದು
ಭರವಸೆ ಕೊಟ್ಟರೆ ದಿವಾನಗಿರಿಯನ್ನು ಒಪ್ಪಿಕೊಳ್ಳುತ್ತೇನೆ. ಎಂದು ಹೇಳಿದವರು ಯಾರು?
--- ವಿಶ್ವೇಶ್ವರಯ್ಯ

13. ವಿಶ್ವೇಶ್ವರಯ್ಯ ಅವರ ತವರೂರು ಯಾವುದು? -- ಮುದ್ದೇನ ಹಳ್ಳಿ

ಮುಕ್ತಾಯ.
ಪುಟ-೧೯
ಅಧ್ಯಾಯ - ೧೧

ಕರಕುಶಲ ಕಲೆಗಳು ಮತ್ತು ಪರಂಪರೆಯ ವಿಜ್ಞಾನ

ಡಾ. ಕರೀಗೌಡ ಬೀಚನಹಳ್ಳಿ

ಅಭ್ಯಾಸಕ್ಕಾಗಿ ಪ್ರಶ್ನೆಗಳು : ಬಹು ಆಯ್ಕೆ ಮಾದರಿಯ ಪ್ರಶ್ನೆಗಳು

1. ಕರಕುಶಲ ಕಲೆಗಳು ಮತ್ತು ಪರಂಪರೆಯ ವಿಜ್ಞಾನ ಲೇಖನದ ಲೇಖಕರು ಯಾರು--ಕರೀಗೌಡ ಬೀಚನಹಳ್ಳಿ

2. ಕ್ರಿ.ಪೂ ವರ್ಷಗಳಿಂದಲೂ ಭಾರತೀಯ ಕರಕುಶಲ ಕಲೆಗಳಿಗೆ ಅಪಾರ ಬೇಡಿಕೆ ಇದೆ. -- 2500

3. ಭಾರತವು ಬಟ್ಟೆಯ ಮೇಲಿನ ಕಲೆಗೆ ಮೂಲ ನೆಲೆ. -- ಮುದ್ರಣ

4. ಭಾರತೀಯ ನೇಕಾರರು . ಬಣ್ಣಗಳನ್ನು ಬಳಸಿ ಬಟ್ಟೆಗಳಿಗೆ ಬಣ್ಣಕಟ್ಟುವ ಕಲೆಯಲ್ಲಿ ನಿಷ್ಣಾತರಾಗಿದದ್ದಾರೆ.

--ಪ್ರಕೃತಿ ದತ್ತ

5. ಬಣ್ಣಗಾರಿಕೆ ಎಂಬ ಹೆಸರು ಬಣ್ಣವನ್ನು ನಿಸರ್ಗದತ್ತವಾದ ಗಿಡಮೂಲಿಕೆ, ಖನಿಜಾಂಶಗಳು ಮತ್ತು -----

ಗಳಿಂದ ಪಡೆದು ಬಣ್ಣ ಕಟ್ಟುವ ಕ್ರಿಯೆಯನ್ನು ಸೂಚಿಸುತ್ತದೆ. — ಕ್ರಿಮಿ ಕೀಟ

6. ಭಾರತದಲ್ಲಿ ಬೇರೆ ಬೇರೆ ಬಣ್ಣಗಳನ್ನು ನೀಡುವ ಸು. 300 ಗಿಡಗಳಿವೆ ಎಂದು ಅಂದಾಜು ಮಾಡಲಾಗಿದೆ.

7. ----- ದ ಲವಣಗಳನ್ನು ನೇರಳೆ, ನೀಲಿ, ಹಸಿರು ಬಣ್ಣಗಳನ್ನು ಪಡೆಯಲು ಮಧ್ಯವರ್ತಿ ವಸ್ತುವನ್ನಾಗಿ

ಬಳಸಲಾಗುತ್ತದೆ. -- ಹಿತ್ತಾಳೆ

8. ---- ದಲ್ಲಿ ತಯಾರಾದ ಬಟ್ಟೆಗೆ ಗ್ರೀಸ್, ವಿಷಿಯಾ, ಅರೆಬಿಯಾ ಹಾಗು ಮೆಡಿಟರೇನಿಯನ್ ದೇಶಗಳಲ್ಲಿ

ಅಪಾರವಾದ ಬೇಡಿಕೆಗಳಿವೆ. -- ಭಾರತ

9. ----ಭಾರತದ ಕೆಲವು ನೇಕಾರು ಚಿಂದಿ ಬಟ್ಟೆಯ ಕಂಬಳಿಗಳನ್ನು ತಮ್ಮ ಮಗ್ಗಗಳಲ್ಲಿ ನೇಯುವರು. – ದಕ್ಷಿಣ

10. ಕರಕುಶಲ ಕಲೆಗಳಿಗೆ ಪೆಟ್ಟು ಬಿದ್ದಿದ್ದು ಯಾವುದರಿಂದ? – ಕೈಗಾರಿಕರಣ ದಿಂದ

ಮುಕ್ತಾಯ.

ಪುಟ-೨೦
ಘಟಕ - 5: ಸಾಂಸ್ಕೃತಿಕ, ಜನಪದ ಕಥೆ ಮತ್ತು ಪ್ರವಾಸ ಕಥನ

ಅಧ್ಯಾಯ - ೧೨
ಯುಗಾದಿ- ವಸುಧೇಂದ್ರ

ಅಭ್ಯಾಸಕ್ಕಾಗಿ ಪ್ರಶ್ನೆಗಳು : ಬಹು ಆಯ್ಕೆ ಮಾದರಿಯ ಪ್ರಶ್ನೆಗಳು

1. ಯುಗಾದಿ ಕಥೆಯ ಲೇಖಕರು ಯಾರು? -- ವಸುಧೇಂದ್ರ

2. ವಸುಧೇಂದ್ರ ಅವರ ಜನ್ಮ ಸ್ಥಳ ಯಾವುದು? -- ಸಂಡೂರು

3.ಗೋಪಣ್ಣ ಏನಾಗಿದ್ದರು? - - ಮಾಸ್ತರ್

4.ಗೋಪಣ್ಣನ ಹೆಂಡತಿ ಹೆಸರೇನು? -- ರುಕ್ಮಿಣಿಯಮ್ಮ

5. ಗೋಪಣ್ಣನ ಮಗನ ಹೆಸರೇನು? -- ಪ್ರಹ್ಲಾದ

6. ಪ್ರಹ್ಲಾದನ ಮನೆ ಗೋಪಣ್ಣನಿಗೆ ಹೇಗೆ ಕಾಣಿಸುತ್ತದೆ? -- ಇಂದ್ರಪ್ರಸ್ಥ

7.ಗೋಪಣ್ಣ ಮಾಸ್ತರು ಕಣಗಲಿ ಗಿಡದಲ್ಲಿ ಏನು ನೋಡಿದರು? -- ಜನಿವಾರ

8. ಪ್ರಹ್ಲಾದ ಎಲ್ಲಿ ಕೆಲಸಕ್ಕೆ ಸೇರಿದ? - ಮಲ್ಟಿ ನ್ಯಾಷನಲ್ ಸಂಸ್ಥೆ

9. ಕೆಲಸಕ್ಕೆ ಸೇರಿದ ಎರಡನೇ ವರ್ಷಕ್ಕೆ ಪ್ರಹ್ಲಾದನ ಪಗಾರ ಎಷ್ಟು? -- 20,000


.
10. ಪ್ರಹ್ಲಾದನನ್ನು ಎಲ್ಲಿಗೆ ಕರೆದು ಕೊಂಡು ಹೋಗಿ ಬಂದ ಮೇಲೆ ಮಾತು ಬಂದಿತು? -- ದರ್ಗಾ

11. ಪ್ರಹ್ಲಾದನಿಗೆ ಎಷ್ಟನೇ ವರ್ಷಕ್ಕೆ ಮಾತು ಬಂದಿತು? - 3 ವರ್ಷ

12. ಪ್ರಹ್ಲಾದನನ್ನು ದರ್ಗಾಕ್ಕೆ ಕರೆದುಕೊಂಡು ಹೋಗಲು ಸೂಚಿಸಿದವರು ಯಾರು? -- ಕಾಸಿಂಸಾಬರು

13. ಗೋಪಣ್ಣ ಮಾಸ್ತರಿಗೆ ಎಷ್ಟು ವರ್ಷ ಸರ್ವಿಸ್ ಆಗಿತ್ತು? – 40 ವರ್ಷ

14. ಕಾಸೀಂಸಾಬರ ಮಗಳ ಹೆಸರೇನು? –- ಚಾಂದಿನಿ

15. ಅಂತರ್ಜಾಸಿ ವಿವಾಹ ಆದವರು ಯಾರು? -- ಪ್ರಹ್ಲಾದ

16. ಪ್ರಹ್ಲಾದನ ಹೆಂಡತಿಯ ಹೆಸರೇನು? -- ರೇಖಾ

ಪುಟ-೨೧

17. ಕಾಸಿಂಸಾಬರ ಮಗನ ಹೆಸರೇನು? –- ಇಸ್ಮಾಯಿಲ್

18. ಸರ್ಕಾರಿ ಆಸ್ಪತ್ರೆಯಲ್ಲಿ ಮಾಸ್ತರಿಗೆ ಸಹಾಹ ಮಾಡಿದ ದಾದಿ ಯಾರು? - - ರಾಧಾ

ಮುಕ್ತಾಯ.
ಪುಟ-೨೨
ಅಧ್ಯಾಯ - ೧೨

ಪ್ರವಾಸ ಕಥನ- ಮೆಗಾನೆ ಎಂಬ ಗಿರಿಜನ ಪರ್ವತ- ಡಾ. ಹಿ ಚಿ ಬೋರಲಿಂಗ

ಅಭ್ಯಾಸಕ್ಕಾಗಿ ಪ್ರಶ್ನೆಗಳು : ಬಹು ಆಯ್ಕೆ ಮಾದರಿಯ ಪ್ರಶ್ನೆಗಳು

1. ಮೆಗಾನೆ ಎಂಬ ಗಿರಿಜನ ಪರ್ವತ ಲೇಖನದ ಕರ್ತೃ? -- ಡಾ. ಹಿ ಚಿ ಬೋರಲಿಂಗ


2. ಮೆಗಾನೆ ಎಂಬ ಗಿರಿಜನ ಪರ್ವತ ಪ್ರಬಂಧವನ್ನು ಯಾವ ಪ್ರವಾಸ ಕಥನದಿಂದ ಆರಿಸಿಕೊಳ್ಳಲಾಗಿದೆ.

---ಗಿರಿಜನ ನಾಡಿಗೆ ಪಯಣ.

3. ಗಿರಿಜನರ ಜೀವನ ವಿಧಾನಗಳನ್ನು ಕುರಿತಂತೆ ವೀಡಿಯೋ ಸಾಕ್ಷ್ಯ ಚಿತ್ರಗಳನ್ನು ತಯಾರಿಸುವ ಯೋಜನೆ


ಮಾಡಿದವರು ಯಾರು? -- ಕರೀಂಖಾನ್
4. ತಾಳಗುಪ್ಪ ಗಿರಿಜನ ಶ್ರಮ ಶಾಲೆಯ ಮಾಸ್ತರರು ಯಾರು? -- ಹುಚ್ಚಪ್ಪ
5. ಗಿರಿಜನರ ಜೀವನ ವಿಧಾನಗಳನ್ನು ಕುರಿತಂತೆ ವೀಡಿಯೋ ಸಾಕ್ಷ್ಯ ಚಿತ್ರಗಳನ್ನು ತಯಾರಿಸುಲು ಮೊದಲ
ಹಂತವಾಗಿ ಎಲ್ಲಿಗೆ ಪ್ರಯಾಣಿಸಿದರು? – ಸಾಗರ
6. ಯಾವ ಜನಾಂಗದ ಚಿತ್ರೀಕರಣ ಲೇಖಕರ ಮನದಲ್ಲಿತ್ತು? -- ಗೊಂಡ
7. ನಾಗವಳ್ಳಿಯಿಂದ ಗೆ ಲೇಖಕರು ಪ್ರಯಾಣ ಬೆಳೆಸಿದರು. – ಹಾಡುವಳ್ಳಿ
8. ಹಾಡುವಳ್ಳಿಯ ಹಿಂದಿನ ಹೆಸರೇನು? -- ಸಂಗೀತಪುರ

9. ಹಾಡುವಳ್ಳಿ ಹಿಂದೆ ಯಾರ ಊರಾಗಿತ್ತು? --ಜೈನರ

10. ಹಾಡುವಳ್ಳಿಯಲ್ಲಿ ಎಷ್ಟು ಮನೆಗಳಿವೆ? -- 10 - 15

11. ಹಾಡುವಳ್ಳಿಯಿಂದ ಲೇಖಕರು ಎಲ್ಲಿಗೆ ಹೋದರು? – ಆರ್ಕಳ

12. ಕುಪ್ಪಯ್ಯ ಯಾರಂತೆ ಗೋಚರವಾಗುತ್ತಿದ್ದ? -- ಪುಟ್ಟಣ್ಣ

13. ಮೆಗಾನೆ ಹಳ್ಳಿಯನ್ನು ತೋರಿಸಿದವರು ಯಾರು ? – ಕುಪ್ಪಯ್ಯ

14. ಮೆಗಾನೆ ಹಳ್ಳಿಯಲ್ಲಿ ಯಾವ ಜನಾಂಗ ವಾಸವಿದ್ದರು – ಕುಣಬಿ


ಪುಟ-೨೩

15. ಕ್ಯಾಮರಮ್ಯಾನ್‌ಯಾರು ? – ಶ್ರೀನಿವಾಸ ಮೂರ್ತಿ

16. ಮೆಗಾನೆ ಕಾಡಿನ ಯಜಮಾನ ಯಾರು – ಯಂಕು


17. ಮೆಗಾನೆ ಜನಸಂಖ್ಯೆ ಎಷ್ಟು – ಸು 180

18. ಶಾಲೆಗೆ ಹೋಗಬೇಕಾದ ಸುಮಾರು ಎಷ್ಟು ಮಕ್ಕಳು ಕುಣಬಿ ಸಮುದಾಯದಲ್ಲಿ ಇದ್ದಾರೆ. – ಸು 40

19. ಹೆಂಗಸರ ವೇಷ ತೊಟ್ಟು ಗಂಡಸರು ಕುಣಿಯುವ ಸಮುದಾಯ---ಕುಣಬಿ

20. ಮೆಗಾನೆ ಕಾಡಿನ ಪ್ರಮುಖ ಕಲಾವಿದ ಗಣೇಶನ ವಯಸ್ಸು ಎಷ್ಟು. -- 70

21. ಗಣೇಶನು ರಾಮಾಯಣ ಕಾವ್ಯವನ್ನು ಯಾರಿಂದ ಕಲಿತನು. – ತಂದೆ ತಾಯಿಯಿಂದ

22. ಕೊಂಕಣಿ ಮಿಶ್ರಿತ---ಭಾಷೆಯಲ್ಲಿ ಗಣೇಶನು ರಾಮಾಯಣ ಕಾವ್ಯವನ್ನು ಹಾಡುತ್ತಿದ್ದನು.—ಮರಾಠಿ

23. ಹಾಸನ ಕಡೆಯ ಬಯಲು ಸೀಮೆಯಿಂದ ಆಕಸ್ಮಿಕವಾಗಿ ಮೆಗಾನೆ ಸೇರಿರುವವರು ಯಾರು? – ಲಕ್ಷಮಮ್ಮ

24. ಯಾವ ಪಾಯಸವನ್ನು ಮಾಡಿ ಕುಣಬಿಯರು ಸತ್ಕರಿಸಿದರು. ? –ಗುಳ್ಳಾಣಿ

25. ------ ಶಿಖರಕ್ಕು ಆಧುನಿಕತೆಯ ಗಾಳಿ ಬೀಸಿದೆ. – ಮೆಗಾನೆ

26. ಯಾರ ಮನೆಯಲಿ ಮೀನಿನ ಊಟ ಕಾದಿತ್ತು? – ಕುಪ್ಪಯ್ಯ.

ಮುಕ್ತಾಯ.

You might also like