You are on page 1of 7

ಇಡೀ ಹರಿಕಥಾಮೃತಸಾರಕ್ಕೆ ನಿಯಾಮಕ ಭಗವದ್ರೂಪ ನಾರಾಯಣ. ಬಿಂಬಾಭಿನ್ನನಾದ ನಾರಾಯಣರೂಪಕ್ಕೆ ನಮೋ ನಮಃ.

ಹರಿಕಥಾಮೃತಸಾರವನ್ನ 4 ಭಾಗಗಳಾಗಿ ವಿಭಾಗ ಮಾಡಿದರೆ 4 ಪಾದಗಳಾಗುತ್ತೆ. ಒಂದೊಂದು ಪಾದಕ್ಕೆ 8 ಸಂಧಿಯ ಪ್ರಕಾರ ನಾಲ್ಕು ಪಾದಗಳಿಗೆ 32 ಸಂಧಿಗಳಾಗುತ್ತೆ. ಮೊದಲನೆಯ ಪಾದದ 8
ಸಂಧಿಗಳಿಗೆ ನಾರಾಯಣ ಉದ್ಭೂತ ವಾಸುದೇವ ನಿಯಾಮಕ. ಎರಡನೆಯ ಪಾದದ 8 ಸಂಧಿಗಳಿಗೆ ನಾರಾಯಣ ಉದ್ಭೂತ ಸಂಕರ್ಷಣ ನಿಯಾಮಕನಾಗಿದ್ದಾನೆ. ಮೂರನೆಯ ಪಾದದ 8 ಸಂಧಿಗಳಿಗೆ
ನಾರಾಯಣ ಉದ್ಭೂತ ಪ್ರದ್ಯುಮ್ನ ನಿಯಾಮಕನಾಗಿದ್ದಾನೆ. ನಾಲ್ಕನೆಯ ಪಾದದ 8 ಸಂಧಿಗಳಿಗೆ ನಾರಾಯಣ ಉದ್ಭೂತ ಅನಿರುದ್ಧ ನಿಯಾಮಕನಾಗಿದ್ದಾನೆ.

ಮೊದಲನೆಯ ನಮಃ ಎಂಬುವುದಕ್ಕೆ ನನ್ನ ಶರೀರ, ಇಂದ್ರಿಯಗಳು, ಮನಸ್ಸು, ಪ್ರಾಣ ಹಾಗು ಹಿಂದಿನ, ಇಂದಿನ, ಮುಂದಿನ ಸಕಲ ಜನ್ಮಗಳಲ್ಲಿ ಅಸ್ವತಂತ್ರನಾದ ನನ್ನಿಂದ ಸ್ವತಂತ್ರಮೂರ್ತಿಯಾದ
ನೀನು ಮಾಡಿ ಮಾಡಿಸಿದ ಸಕಲೇಂದ್ರಿಯಗಳ ಕರ್ಮಗಳು, ಕ್ರಿಯೆಗಳು, ಸಕಲ ಸುಖದುಃಖ, ಅದಕ್ಕೆ ಕಾರಣವಾದ ಪದಾರ್ಥಗಳ ರಾಶಿ, ಸಕಲವೂ ನಿನ್ನ ಆಧೀನವೆಂದು ಅರ್ಪಿಸುತ್ತಿದ್ದೇನೆ ಎಂದು
ತಾತ್ಪರ್ಯ. ಬಿಂಬೋಪಾಸನೆಯಲ್ಲಿ ಆತ್ಮಸಮರ್ಪಣಾ ಎಂಬುವುದೇ ಒಂದೇ ನಮಃ ಎಂಬ ಶಬ್ದದಿಂದ ಭಾಗವತದಲ್ಲಿ ಹೇಳಿದಂತೆ ದೇವರ ಪೂಜಾ ಎಂದು ಅರ್ಪಿಸಬೇಕು. ಎರಡನೆಯ ನಮಃ
ಎಂಬುದಕ್ಕೆ ಬಿಂಬೋಪಾಸನೆಯ ಆತ್ಮೀಯಸಮರ್ಪಣೆಯೇ ಅರ್ಥ. ಅದು ಏನಂದರೆ ನನ್ನ ಸಕಲ ಜನ್ಮಗಳಲ್ಲಿ ನೀನು ಕೊಟ್ಟ ಸಜ್ಜನರಾದ ಸಕಲ ವ್ಯಕ್ತಿಗಳು ಮಾಡಿದ ಸಕಲ ಕರ್ಮವೂ ಅವರ ದೇಹ,
ಇಂದ್ರಿಯ, ಪ್ರಾಣ, ಮನಸ್ಸು ಮೊದಲಾದ ಸಕಲವೂ ನಿನ್ನ ಅಧೀನ. ಇದೆಲ್ಲವೂ ನಿನ್ನ ಪೂಜೆಯಾಗಲಿ, ಹರಿಯೇ. ನನ್ನ ಸಕಲ ಜನ್ಮಗಳಲ್ಲಿ ನೀನು ದಯಪಾಲಿಸಿದ ಸಕಲ ಭೋಗ ಪದಾರ್ಥ ನಿನಗರ್ಪಿತ,
ನಿನ್ನ ಅಧೀನ ಹರಿಯೇ.
1 ವಿಶ್ವ ಮಂಗಳಾಚರಣ ಸಂಧಿ
2 ತೈಜಸ ಕರುಣಾ ಸಂಧಿ
3 ಪ್ರಾಜ್ಞ ವ್ಯಾಪ್ತಿ ಸಂಧಿ
4 ತುರ್ಯ ಭೋಜನರಸವಿಭಾಗ ಸಂಧಿ
5 ಆತ್ಮ ವಿಭೂತಿ ಸಂಧಿ
6 ಅಂತರಾತ್ಮ ಪಂಚಾಗ್ನಿಹೋತ್ರ ಸಂಧಿ
7 ಪರಮಾತ್ಮ ಪಂಚತನ್ಮಾತ್ರ ಸಂಧಿ
8 ಜ್ಞಾನಾತ್ಮ ಮಾತೃಕಾ ಸಂಧಿ
9 ವಿಶ್ವ ವರ್ಣಪ್ರಕ್ರಿಯಾ ಸಂಧಿ
10 ತೈಜಸ ಸರ್ವಪ್ರತೀಕ ಸಂಧಿ
11 ಪ್ರಾಜ್ಞ ಧ್ಯಾನಪ್ರಕ್ರಿಯಾ ಸಂಧಿ
12 ತುರ್ಯ ನಾಡೀಪ್ರಕರಣ ಸಂಧಿ
13 ಆತ್ಮ ನಾಮಸ್ಮರಣ ಸಂಧಿ
14 ಅಂತರಾತ್ಮ ಜೀವನಪ್ರಕ್ರಿಯಾ ಸಂಧಿ
15 ಪರಮಾತ್ಮ ಶ್ವಾಸ ಸಂಧಿ
16 ಜ್ಞಾನಾತ್ಮ ದತ್ತಸ್ವಾತಂತ್ರ್ಯ ಸಂಧಿ

17 ವಿಶ್ವ ಸ್ವಗತಸ್ವಾತಂತ್ರ್ಯ ಸಂಧಿ


18 ತೈಜಸ ಬಿಂಬೋಪಾಸನ ಸಂಧಿ
19 ಪ್ರಾಜ್ಞ ಆರೋಹಣತಾರತಮ್ಯ ಸಂಧಿ
20 ತುರ್ಯ ಗುಣತಾರತಮ್ಯ ಸಂಧಿ
21 ಆತ್ಮ ಕರ್ಮವಿಮೋಚನ ಸಂಧಿ
22 ಅಂತರಾತ್ಮ ಸಕಲದುರಿತನಿವಾರಣ ಸಂಧಿ
23 ಪರಮಾತ್ಮ ಬೃಹತ್ತಾರತಮ್ಯ ಸಂಧಿ
24 ಜ್ಞಾನಾತ್ಮ ಕಲ್ಪಸಾಧನ ಸಂಧಿ
25 ವಿಶ್ವ ಕ್ರೀಡಾವಿಲಾಸ ಸಂಧಿ
26 ತೈಜಸ ಅವರೋಹಣ ತಾರತಮ್ಯ ಸಂಧಿ
27 ಪ್ರಾಜ್ಞ ಅನುಕ್ರಮಣಿಕಾ ತಾರತಮ್ಯ ಸಂಧಿ
28 ತುರ್ಯ ಗಣಪತಿ ಸಂಧಿ
29 ಆತ್ಮ ಅಣುತಾರತಮ್ಯ ಸಂಧಿ
30 ಅಂತರಾತ್ಮ ದೈತ್ಯತಾರತಮ್ಯ ಸಂಧಿ
31 ಪರಮಾತ್ಮ ನೈವೇದ್ಯಪ್ರಕರಣ ಸಂಧಿ
32 ಜ್ಞಾನಾತ್ಮ ಕಕ್ಷಾತಾರತಮ್ಯ ಸಂಧಿ
ಹರಿಕಥಾಮೃತಸಾರದ ಸಂಧಿಗಳ ಪದ್ಯಗಳಲ್ಲಿ ಭಗವದ್ರೂಪ ಚಿಂತನೆ

ಪ್ರಣವ ವಿಶ್ವಾದಿ ನಾರಾಯಣಾದಿ ಸಾಮ ವಿಶ್ವಾದಿ - ಮತ್ಸ್ಯಾದಿ ಯೋಗ ಶಕ್ತ್ಯಾದಿ ಕೇಶವಾದಿ ಅಜಾದಿ ಒಟ್ಟು
ಪ್ರತಿಪಾದ್ಯ (ಗುಣ) ಪ್ರತಿಪಾದ್ಯ ಪ್ರಣವ ದಶಾವತಾರ ಶಕ್ತ್ಯಾದಿ ಪದ್ಯಗಳು/ರೂಪ
ನಾರಾಯಣ ಗಳು
1 ಮಂಗಳಾಚರಣ ಸಂಧಿ 5 8 13
2 ಕರುಣಾ ಸಂಧಿ 1 5 7 8 10 31
3 ವ್ಯಾಪ್ತಿ ಸಂಧಿ 3 5 24 32
4 ಭೋಜನರಸವಿಭಾಗ ಸಂಧಿ 1 5 24 30
5 ವಿಭೂತಿ ಸಂಧಿ 1 5 10 24 40
6 ಪಂಚಾಗ್ನಿಹೋತ್ರ ಸಂಧಿ 1 10 24 35
7 ಪಂಚತನ್ಮಾತ್ರ ಸಂಧಿ 1 3 5 24 33
8 ಮಾತೃಕಾ ಸಂಧಿ 3 5 24 32
9 ವರ್ಣಪ್ರಕ್ರಿಯಾ ಸಂಧಿ 1 5 7 8 10 31
10 ಸರ್ವಪ್ರತೀಕ ಸಂಧಿ 1 24 25
11 ಧ್ಯಾನಪ್ರಕ್ರಿಯಾ ಸಂಧಿ 3 5 24 32
12 ನಾಡೀಪ್ರಕರಣ ಸಂಧಿ 3 8 10 24 45
13 ನಾಮಸ್ಮರಣ ಸಂಧಿ 1 3 5 24 33
14 ಜೀವನಪ್ರಕ್ರಿಯಾ ಸಂಧಿ 1 5 7 8 10 31
15 ಶ್ವಾಸ ಸಂಧಿ 5 24 29
16 ದತ್ತಸ್ವಾತಂತ್ರ್ಯ ಸಂಧಿ 3 10 24 37
17 ಸ್ವಗತಸ್ವಾತಂತ್ರ್ಯ ಸಂಧಿ 5 10 15
18 ಬಿಂಬೋಪಾಸನ ಸಂಧಿ 1 5 7 8 10 31
19 ಆರೋಹಣತಾರತಮ್ಯ ಸಂಧಿ 1 3 5 10 19
20 ಗುಣತಾರತಮ್ಯ ಸಂಧಿ 5 24 29
21 ಕರ್ಮವಿಮೋಚನ ಸಂಧಿ 1 10 24 35
22 ಸಕಲದುರಿತನಿವಾರಣ ಸಂಧಿ 11 24 35
23 ಬೃಹತ್ತಾರತಮ್ಯ ಸಂಧಿ 1 5 51 57
24 ಕಲ್ಪಸಾಧನ ಸಂಧಿ 3 9 51 63
25 ಕ್ರೀಡಾವಿಲಾಸ ಸಂಧಿ 5 11 24 40
26 ಅವರೋಹಣ ತಾರತಮ್ಯ ಸಂಧಿ 7 7
27 ಅನುಕ್ರಮಣಿಕಾ ತಾರತಮ್ಯ ಸಂಧಿ 5 5
28 ಗಣಪತಿ ಸಂಧಿ 10 11 21
29 ಅಣುತಾರತಮ್ಯ ಸಂಧಿ 5 11 16
30 ದೈತ್ಯತಾರತಮ್ಯ ಸಂಧಿ 1 24 25
31 ನೈವೇದ್ಯಪ್ರಕರಣ ಸಂಧಿ 1 24 25
32 ಕಕ್ಷಾತಾರತಮ್ಯ ಸಂಧಿ 5 51 56
ಹರಿಕಥಾಮೃತಸಾರದ ಪದ್ಯಗಳ ಪ್ರತಿ ಸಾಲಿನಲ್ಲೂ ಭಗವದ್ರೂಪ ಚಿಂತನೆ

ಹರಿಕಥಾಮೃತಸಾರದ ಪ್ರತಿಯೊಂದು ಪದ್ಯದ್ಲಲೂ ಆರು ಪಾದಗಳಿದ್ದರೆ ಅಲ್ಲಿ ಭಗವಂತ ಷಟ್ಪದಿ ಎಂಬ


ಹೆಸರಿನಿಂದ ನಿಂತಿದ್ದಾನೆ. ಷಟ್ಪದಿ ಎಂದರೆ ದುಂಬಿ. ಅದಕ್ಕೂ ಆರು ಪಾದಗಳಿರುತೆ. ಇಲ್ಲಿ ಭಗವಂತ ಏಳು
ರೂಪಗಳಿಂದ ನಿಂತಿದ್ದಾನೆ. ದುಂಬಿಗೆ ಮಧ್ಯ ದೇಹ, ಆರು ಪಾದಗಳು ಇರುವಂತೆ, ಒಂದೊಂದು ಪದ್ಯಕ್ಕೂ ಹಿಂ
ಕಾರಾದಿ ಸಪ್ತ ಸಾಮ ಪ್ರತಿಪಾದ್ಯ ರೂಪಗಳು ನಿಯಾಮಕವಾಗಿ ನಿಂತಿವೆ. ಆರು ಪಾದಗಳಲ್ಲಿ

ಮೊದಲನೆಯ ಪಾದಕ್ಕೆ ಹಿಂಕಾರ ಸಾಮ ಪ್ರತಿಪಾದ್ಯ ಪ್ರದ್ಯುಮ್ನ ನಿಯಾಮಕನಾಗಿದ್ದಾನೆ

ಎರಡನೆಯ ಪಾದಕ್ಕೆ ಪ್ರಸ್ತಾವ ಸಾಮ ಪ್ರತಿಪಾದ್ಯ ವಾಸುದೇವ ನಿಯಾಮಕನಾಗಿದ್ದಾನೆ.

ಮೂರನೆಯ ಪಾದಕ್ಕೆ ಆದಿ ಸಾಮ ಪ್ರತಿಪಾದ್ಯ ಶ್ರೀಭೂವರಾಹ ನಿಯಾಮಕನಾಗಿದ್ದಾನೆ.

ನಾಲ್ಕನೆಯ ಪಾದಕ್ಕೆ ಪ್ರತೀಹಾರ ಸಾಮ ಪ್ರತಿಪಾದ್ಯ ಅನಿರುದ್ಧ ನಿಯಾಮಕನಾಗಿದ್ದಾನೆ.

ಐದನೆಯ ಪಾದಕ್ಕೆ ಉಪದ್ರವ ಸಾಮ ಪ್ರತಿಪಾದ್ಯ ನರಸಿಂಹ ನಿಯಾಮಕನಾಗಿದ್ದಾನೆ.

ಆರನೆಯ ಪಾದಕ್ಕೆ ನಿಧನ ಸಾಮ ಪ್ರತಿಪಾದ್ಯ ಸಂಕರ್ಷಣ ನಿಯಾಮಕನಾಗಿದ್ದಾನೆ.

ಇಡೀ ಪದ್ಯಕ್ಕೆ ಉದ್ಗೀಥ ಸಾಮ ಪ್ರತಿಪಾದ್ಯ ನಾರಾಯಣ ನಿಯಾಮಕನಾಗಿದ್ದಾನೆ.

ಈ ರೀತಿಯಲ್ಲಿ ಶ್ರೀ ಹರಿಕಥಾಮೃತಸಾರದ ಒಂದೊಂದು ಪದ್ಯದಲ್ಲೂ ಹಿಂ ಕಾರಾದಿ ರೂಪಗಳಿಂದ


ನಾರಾಯಣನೇ ಷಟ್ಪದಿ ಎಂದರೆ ದುಂಬಿಯ ರೊಪದಲ್ಲಿ ಇದ್ದಾನೆ.

ಯಾರು ಭಾಮಿನೀ ಷಟ್ಪದಿಯ ಒಂದೊಂದು ಪದ್ಯದಲ್ಲೂ ಭಗವಂತ ಈ ರೀತಿಯಾಗಿ ನಿಂತಿದ್ದಾನೆ ಎಂದು ತಿಳಿದು ಚಿಂತನೆಯನ್ನು ಅಥವಾ ಉಪಾಸನೆಯನ್ನು ಮಾಡುತ್ತಾರೋ
ಅವರಿಗೆ ಭಗವಂತ ದುಂಬಿ ಅಥವಾ ಮಧುಕರ, ಅದಕ್ಕೆ ಸಂಬಂಧಪಟ್ಟ ವೃತ್ತಿ ಮಾಧುಕರೀ ವೃತ್ತಿಯನ್ನು ದಯಪಾಲಿಸುತ್ತಾನೆ. ದಾಸವರ್ಯರು ಹರಿಕಥಾಮೃತಸಾರದ
ಪದ್ಯಪದ್ಯದಲ್ಲೂ ದುಂಬಿಯ ಅಥವಾ ಷಟ್ಪದಿಯ ರೂಪವನ್ನ ಧಾರಣೆ ಮಾಡಿದ ಭಗವದ್ರೂಪವನ್ನ ಪ್ರತಿಷ್ಠಾಪನೆ ಮಾಡಿದ್ದಾರೆ.
ಮಂಗಳಾಚರಣ ಸಂಧಿಯ ಮೊದಲ ಪದ್ಯದ ಭಗವದ್ರೂಪ ಅನುಸಂಧಾನ

ಗ್ರಂಥ ನಿಯಾಮಕ: ಬಿಂಬಾಭಿನ್ನ ನಾರಾಯಣರೂಪನಿಗೆ ನಮೋ ನಮಃ

ಪಾದದ ನಿಯಾಮಕ (ಮೊದಲ ಪಾದ ೧ ರಿಂದ ೮ ಸಂಧಿಗಳು): ಬಿಂಬಾಭಿನ್ನ ನಾರಾಯಣಾತ್ಮಕ ವಾಸುದೇವ ರೂಪನಿಗೆ ನಮೋ ನಮಃ

ಸಂಧಿಯ ನಿಯಾಮಕ (ಮೊದಲ ಪಾದದ ಮೊದಲ ಸಂಧಿ) : ಬಿಂಬಾಭಿನ್ನ ನಾರಾಯಣಾತ್ಮಕ ವಾಸುದೇವಾತ್ಮಕ ವಿಶ್ವರೂಪನಿಗೆ ನಮೋ ನಮಃ

ಪದ್ಯದ ನಿಯಾಮಕ(ಮೊದಲ ಪಾದದ ಮೊದಲ ಸಂಧಿಯ ಮೊದಲ ಪದ್ಯ) : ಬಿಂಬಾಭಿನ್ನ ನಾರಾಯಣಾತ್ಮಕ ವಾಸುದೇವಾತ್ಮಕ ವಿಶ್ವಾತ್ಮಕ ನಾರಾಯಣನಿಗೆ ನಮೋ ನಮಃ

ಬಿಂಬಾಭಿನ್ನ ನಾರಾಯಣಾತ್ಮಕ ವಾಸುದೇವಾತ್ಮಕ ವಿಶ್ವಾತ್ಮಕ ನಾರಾಯಣಾತ್ಮಕ ಉದ್ಗೀಥಸಾಮ ಪ್ರತಿಪಾದ್ಯ ನಾರಾಯಣನಿಗೆ ನಮೋ ನಮಃ

ಶ್ರೀರಮಣಿಕರಕಮಲಪೂಜಿತ ಬಿಂಬಾಭಿನ್ನ ನಾರಾಯಣಾತ್ಮಕ ವಾಸುದೇವಾತ್ಮಕ ವಿಶ್ವಾತ್ಮಕ ನಾರಾಯಣಾತ್ಮಕ ಉದ್ಗೀಥಾತ್ಮಕ ಹೀಂಕಾರ ಸಾಮಪ್ರತಿಪಾದ್ಯ ಪ್ರದ್ಯುಮ್ನನಿಗೆ
ನಮೋ ನಮಃ

ಚಾರುಚರಣಸರೋಜ ಬ್ರಹ್ಮಸ ಬಿಂಬಾಭಿನ್ನ ನಾರಾಯಣಾತ್ಮಕ ವಾಸುದೇವಾತ್ಮಕ ವಿಶ್ವಾತ್ಮಕ ನಾರಾಯಣಾತ್ಮಕ ಉದ್ಗೀಥಾತ್ಮಕ ಪ್ರಸ್ತಾವ ಸಾಮಪ್ರತಿಪಾದ್ಯ ವಾಸುದೇವನಿಗೆ
ನಮೋ ನಮಃ

ಮೀರವಾಣಿಫಣೀಂದ್ರವೀಂದ್ರಭವೇಂದ್ರಮುಖವಿನುತ ಬಿಂಬಾಭಿನ್ನ ನಾರಾಯಣಾತ್ಮಕ ವಾಸುದೇವಾತ್ಮಕ ವಿಶ್ವಾತ್ಮಕ ನಾರಾಯಣಾತ್ಮಕ ಉದ್ಗೀಥಾತ್ಮಕ ಆದಿ ಸಾಮಪ್ರತಿಪಾದ್ಯ


ಭೂವರಾಹನಿಗೆ ನಮೋ ನಮಃ

ನೀರಜಭವಾಂಡೋದಯಸ್ಥಿತಿ ಬಿಂಬಾಭಿನ್ನ ನಾರಾಯಣಾತ್ಮಕ ವಾಸುದೇವಾತ್ಮಕ ವಿಶ್ವಾತ್ಮಕ ನಾರಾಯಣಾತ್ಮಕ ಉದ್ಗೀಥಾತ್ಮಕ ಪ್ರತೀಹಾರ ಸಾಮಪ್ರತಿಪಾದ್ಯ ಅನಿರುದ್ಧನಿಗೆ
ನಮೋ ನಮಃ

ಕಾರಣನೆ ಕೈವಲ್ಯದಾಯಕ ಬಿಂಬಾಭಿನ್ನ ನಾರಾಯಣಾತ್ಮಕ ವಾಸುದೇವಾತ್ಮಕ ವಿಶ್ವಾತ್ಮಕ ನಾರಾಯಣಾತ್ಮಕ ಉದ್ಗೀಥಾತ್ಮಕ ಉಪದ್ರವ ಸಾಮಪ್ರತಿಪಾದ್ಯ ನರಸಿಂಹನಿಗೆ ನಮೋ
ನಮಃ

ನಾರಸಿಂಹನೆ ನಮಿಪೆ ಕರುಣಿಪುದಮಗೆ ಮಂಗಳವ ಬಿಂಬಾಭಿನ್ನ ನಾರಾಯಣಾತ್ಮಕ ವಾಸುದೇವಾತ್ಮಕ ವಿಶ್ವಾತ್ಮಕ ನಾರಾಯಣಾತ್ಮಕ ಉದ್ಗೀಥಾತ್ಮಕ ನಿಧನ ಸಾಮಪ್ರತಿಪಾದ್ಯ
ಸಂಕರ್ಷಣನಿಗೆ ನಮೋ ನಮಃ
ಅಜಾದಿ 51 ಭಗವದ್ರೂಪಗಳು

1 ಅಜ 11 ಏಕಾತ್ಮ 21 ಙಸಾರ 31 ಣಾತ್ಮಾ 41 ಮನು 51 (ಕ್ಷ್ಮ) ನೃಸಿಂಹ


2 ಆನಂದ 12 ಐರ 22 ಚಾರ್ವಂಗ 32 ತಾರ 42 ಯಜ್ಞ
3 ಇಂದ್ರ 13 ಓಜೋಭೃತ್ 23 ಛಂದೋಗಮ್ಯ 33 ಥಬ 43 ರಾಮ
4 ಈಶ 14 ಔರಸ 24 ಜನಾರ್ದನ 34 ದಂಡೀ 44 ಲಕ್ಷ್ಮೀಪತಿ
5 ಉಗ್ರ 15 ಅಂತ 35 ಝಾಟಿತಾರಿ 35 ಧನ್ವೀ 45 ವರ
6 ಊರ್ಜ 16 ಅರ್ಧಗರ್ಭ 26 ಞಮ 36 ನಮ್ಯ 46 ಶಾಂತಸಂವಿತ್
7 ಋತುಂಭರ 17 ಕಪಿಲ 27 ಟಂಕೀ 37 ಪರ 47 ಷಡ್ಗುಣ
8 ಋೂಘ 18 ಖಪತಿ 28 ಠಲಕ 38 ಫಲೀ 48 ಸಾರಾತ್ಮಾ
9 ಲೃಶ 19 ಗರುಡಾಸನ 29 ಡರಕ 39 ಬಲೀ 49 ಹಂಸ
10 ಲೃಜಿ 20 ಘರ್ಮ 30 ಢರೀ 40 ಭಗ 50 ಳಾಳುಕ

ಕೇಶವಾದಿ 24 ಭಗವದ್ರೂಪಗಳು

ಭಗವದ್ರೂಪ ತತ್ತ್ವ ಭಗವದ್ರೂಪ ತತ್ತ್ವ


1 ಕೇಶವ ಅವ್ಯಕ್ತ 13 ಸಂಕರ್ಷಣ ಪಾಯು
2 ನಾರಾಯಣ ಮಹತ್ 14 ವಾಸುದೇವ ಉಪಸ್ಥ
3 ಮಾಧವ ಅಹಂಕಾರ 15 ಪ್ರದ್ಯುಮ್ನ ಶಬ್ದ
4 ಗೋವಿಂದ ಮನಸ್ 16 ಅನಿರುದ್ಧ ಸ್ಪರ್ಶ
5 ವಿಷ್ಣು ಕರ್ಣ 17 ಪುರುಷೋತ್ತಮ ರೂಪ
6 ಮಧುಸೂದನ ನೇತ್ರ 18 ಅಧೋಕ್ಷಜ ರಸ
7 ತ್ರಿವಿಕ್ರಮ ತ್ವಕ್ 19 ನರಹರಿ ಗಂಧ
8 ವಾಮನ ಜಿಹ್ವಾ 20 ಅಚ್ಯುತ ಆಕಾಶ
9 ಶ್ರೀಧರ ನಾಸಿಕ 21 ಜನಾರ್ದನ ವಾಯು
10 ಹೃಷೀಕೇಶ ವಾಕ್ 22 ಉಪೇಂದ್ರ, ತೇಜಸ್
ಪರಶುರಾಮ
11 ಪದ್ಮನಾಭ ಪಾಣಿ 23 ಹರಿ ಆಪ
12 ದಾಮೋದರ ಪಾದ 24 ಶ್ರೀಕೃಷ್ಣ ಪೃಥಿವಿ
ವಿಶ್ವಾದಿ 8 ರೂಪಗಳು

ಭಗವದ್ರೂಪ ಪ್ರಣವ
ಪ್ರತಿಪಾದ್ಯ
1 ವಿಶ್ವ ಅ
2 ತೈಜಸ ಉ
3 ಪ್ರಾಜ್ಞ ಮ
4 ತುರ್ಯ ಬಿಂದು
5 ಆತ್ಮ ನಾದ
6 ಅಂತರಾತ್ಮ ಘೋಷ
7 ಪರಮಾತ್ಮ ಶಾಂತ
8 ಜ್ಞಾನಾತ್ಮ ಅತಿಶಾಂತ

ಯೋಗಾದಿ 9 ರೂಪಗಳು

1 ವಿಮಲಾ
2 ಉತ್ಕರ್ಷಿಣಿ
3 ಜ್ಞಾನಾ
4 ಕ್ರಿಯಾ
5 ಯೋಗಾ
6 ಪ್ರಹ್ವಿ
7 ಸತ್ಯಾ
8 ಈಶಾನಾ
9 ಅನುಗ್ರಹಾ

ಶಕ್ತ್ಯಾದಿ 11 ರೂಪಗಳು

1 ಶಕ್ತ್ಯಾತ್ಮ
2 ಪ್ರತಿಷ್ಠಾತ್ಮ
3 ಸಂವಿಧಾತ್ಮ
4 ಸ್ಫೂರ್ತ್ಯಾತ್ಮ
5 ಪ್ರಕೃತ್ಯಾತ್ಮ
6 ಕಲಾತ್ಮ
7 ವಿದ್ಯಾತ್ಮ
8 ಮತ್ಯಾತ್ಮ
9 ನಿಯತ್ಯಾತ್ಮ
10 ಮಾಯಾತ್ಮ
11 ಕಾಲಾತ್ಮ

You might also like