You are on page 1of 64

ಸಂಧ್ಯಾವಂದನೆ ಎಂಬುದು ಉಪನಯನವಾದ ಹಿಂದೂಗಳು ಆಚರಿಸುವ

ಒಂದು ದೈನಂದಿನ ಕ್ರಿಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ


ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ
ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ
“ಸಂಧ್ಯಾವಂದನೆ”.

ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುತ್ತದೆ.


ಆರೋಗ್ಯ ದೃಷ್ಠಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ದವಾಗುತ್ತದೆ,
ಬುದ್ಧಿ ಚುರುಕಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ಧೀರ್ಘಾಯುಷ್ಯದ
ಗುಟ್ಟು ಈ “ಪ್ರಾಣಾಯಾಮ”. ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ
ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ
ಕಿರಣಗಳಲ್ಲಿನ ವಿಟಮಿನ್ ಗಳು ನಮ್ಮ ದೇಹವನ್ನು ಸೇರುತ್ತವೆ. ಅಷ್ಟೆ ಅಲ್ಲದೆ
ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.

ಮಾಡುವ ಕ್ರಮ

ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು. ಮಣೆ ಅಥವಾ


ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು
ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನದಲ್ಲಿ ಕುಳಿತು
ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು
ಶುದ್ಧಿ ಇರಬೇಕು.
*******

ಸಂದ್ಯಾವಂದನೆ ಹಿಂದಿರುವ ವೈಜ್ಞಾನಿಕ ಸತ್ಯಗಳು!!!

ಸಂಧ್ಯಾವಂದನೆ ಎಂಬುದು ಉಪನಯನವಾದ ಹಿಂದೂಗಳು ಆಚರಿಸುವ


ಒಂದು ದೈನಂದಿನ ಕ್ರಿಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ
ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ
ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ
“ಸಂಧ್ಯಾವಂದನೆ”.

ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುತ್ತದೆ.


ಆರೋಗ್ಯ ದೃಷ್ಠಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ದವಾಗುತ್ತದೆ,
ಬುದ್ಧಿ ಚುರುಕಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ಧೀರ್ಘಾಯುಷ್ಯದ
ಗುಟ್ಟು ಈ “ಪ್ರಾಣಾಯಾಮ”. ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ
ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ
ಕಿರಣಗಳಲ್ಲಿನ ವಿಟಮಿನ್ ಗಳು ನಮ್ಮ ದೇಹವನ್ನು ಸೇರುತ್ತವೆ. ಅಷ್ಟೆ ಅಲ್ಲದೆ
ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.

ಮಾಡುವ ಕ್ರಮ

ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು. ಮಣೆ ಅಥವಾ


ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು
ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನದಲ್ಲಿ ಕುಳಿತು
ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು
ಶುದ್ಧಿ ಇರಬೇಕು.

ಸಂಧ್ಯಾವಂದನೆಯ ಬೋಧಾಯನ ಪದ್ಧತಿಯ ಹದಿನಾಲ್ಕು ಕ್ರಿಯೆಗಳು :-

೧. ಆಚಮನ
೨. ಮಂತ್ರ ಸ್ನಾನ
೩. ಭಸ್ಮಧಾರಣ
೪. ಸಂಕಲ್ಪ
೫. ಮಾರ್ಜನ
೬. ಜಲ ಪ್ರಾಶನ ( ದುರಿತ ನಿವಾರಣ)
೭. ಪುನಃ ಮಾರ್ಜನ
೮. ಅರ್ಘ್ಯ ಪ್ರದಾನ
೯. ಗಾಯತ್ರೀ ಜಪ
೧೦. ಸೂರ್ಯ ಉಪಸ್ಥಾನ
(ಸೂರ್ಯನ ಬೀಳ್ಕೊಡಿಗೆ ವಂದನೆ)
೧೧. ಅಭಿವಾದನ
೧೨. ಅಷ್ಟಾಕ್ಷರೀ ಜಪ
೧೩. ಪಂಚಾಕ್ಷರೀ ಜಪ
೧೪. ಭಗವದರ್ಪಣ
******

ಸಂಧ್ಯಾವಂದನೆ ಕಿರುಪರಿಚಯ
ಊರ್ಧ್ವಪುಂಡ್ರ ವಿಧಿ

ಸಂಧ್ಯಾವಂದನೆ ಎರಡು ಬಗೆಯ ಪಾವಿತ್ರ್ಯವನ್ನು ಒದಗಿಸುತ್ತದೆ:-

1. ಆಚಮನ, ಆಪ:ಪ್ರಾಶನ ಮುಂತಾದುವುಗಳ ಮೂಲಕ ಅಂತ:ಕರಣವನ್ನು


ಕಲುಷಿತಗೊಳಿಸಿದ ಪಾಪಗಳಿಂದ ಪರಿಹಾರ.

2. ಮನ ಮತ್ತು ದೇಹದ ಅಂಗಾಂಗಗಳಲ್ಲಿ ಭಗವಂತನ ಸನ್ನಿಧಾನ ಸಿದ್ಧಿ.

ಸಂಧ್ಯಾವಂದನೆಯಲ್ಲಿ ತಿಳಿಸಿರುವ ಊರ್ಧ್ವಪುಂಡ್ರ ವಿಧಿಯು ಅಂತರಶುದ್ಧಿಯ


ಸಾಧನವಾಗಿರುತ್ತದೆ.

ಊರ್ಧ್ವಪುಂಡ್ರಧಾರಣೆ ಮತ್ತು ಪ್ರಾಣಾಯಾಮದ  ಮಹತ್ವ ತಿಳಿಯಲು ಚಕ್ರಗಳು


ಮತ್ತು ಕುಂಡಲಿನಿಯ ಪ್ರಾಸ್ತಾವಿಕ ವಿವೇಚನೆ ಆವಶ್ಯಕ.

ಮನುಷ್ಯನಿಗೆ ಮೂರು ಶರೀರಗಳು:-


ಸ್ಥೂಲ, ಸೂಕ್ಷ್ಮ, ಹಾಗೂ ಕಾರಣ ಶರೀರಗಳು.
ಕಣ್ಣಿಗೆ ಕಾಣಿಸುವ ದೇಹ ಸ್ಥೂಲ ಶರೀರ.
ಸ್ಥೂಲ ಶರೀರಕ್ಕೂ ಸೂಕ್ಷ್ಮ ಶರೀರಕ್ಕೂ ನಂಟು ಕಲ್ಪಿಸುವ  ಆರು ಶಕ್ತಿ ಕೇಂದ್ರಗಳು
(Spinal Cord) ಆದ್ಯಂತ ಇವೆ.
ಇವನ್ನು ಚಕ್ರ ಎನ್ನುತ್ತಾರೆ.
ಮೂಲಾಧಾರ, ಮಣಿಪೂರ, ಅನಾಹತ, ವಿಶುದ್ಧಿ, ಆಜ್ಞಾ, ಸಹಸ್ರಾರ - ಆರು (6)
ಚಕ್ರಗಳು.
(ಸ್ವಾಧಿಷ್ಟಾನ - ಹೊರಗೆ ಕಾಣಿಸುವ ಮೊದಲ ಬೆನ್ನು ಮೂಲೆಯ ಬಳಿ. ಇದನ್ನು
ಯೋಗದಲ್ಲಿ ಹೇಳಿದೆ ಆದರೆ ಬ್ರಹದಾರಣ್ಯಕ ಮುಂತಾದ ಕಡೆ ಹೇಳಲಿಲ್ಲ.)

ಈ ಆರು ಚಕ್ರಗಳ ಸ್ಥಾನಗಳು:-

01. ಮೂಲಾಧಾರ - ಜನನೇಂದ್ರಿಯದ ಬಳಿ.


02. ಮಣಿಪೂರ - ನಾಭಿಯಿಂದ ನೇರ ಹಿಂದೆ ಬೆನ್ನುಮೂಳೆಯ ಬಳಿ.
03. ಅನಾಹತ - ಹೃದಯದಿಂದ ನೇರ ಹಿಂದೆ ಬೆನ್ನುಮೂಳೆಯ ಬಳಿ.
04. ವಿಶುದ್ಧಿ - ಕಂಠಕೂಪದಿಂದ ನೇರ ಹಿಂದೆ ಬೆನ್ನು ಮೂಳೆಯ ಬಳಿ.
05. ಆಜ್ಞಾ - ಹುಬ್ಬುಗಳ ಮಧ್ಯದಿಂದ ನೇರ ಒಳಗೆ ಸಾಧಾರಣ ಮೆದುಳಿನ
ಮಧ್ಯ.
06. ಸಹಸ್ರಾರ - ತಲೆಯಿಂದ 12 ಇಂಚುಗಳಷ್ಟು ಮೇಲೆ.

ಸೂಕ್ಷ್ಮ ಶರೀರದಲ್ಲಿ 72,000 ನಾಡಿಗಳಿವೆ.


(ವೈದ್ಯಕೀಯ ನಾಡಿಗಳಿಗೂ ಇದಕ್ಕೂ ಸಂಬಂಧವಿಲ್ಲ.)
ಇವುಗಳಲ್ಲಿ ಮೂರು ನಾಡಿಗಳು ಅತಿಮುಖ್ಯ.
ಇಡಾ, ಪಿಂಗಳಾ ಮತ್ತು ಸುಷುಮ್ನಾ.
ಇಡಾ ಎಡಮೂಗಿನ ಹೊಳ್ಳೆಯಿಂದ ಆಜ್ಞಾಚಕ್ರದ ಮೂಲಕ ಕೆಳಗೆ
ಮೂಲಾಧಾರದಿಂದ ಆಜ್ಞಾಚಕ್ರದವರೆಗೂ ಅಲ್ಲಿಂದ ಸಹಸ್ರಾರಕ್ಕೆ ಸಾಗುತ್ತದೆ.

ದೇಹದಲ್ಲಿ ಪಂಚಪ್ರಾಣಗಳು ಇರುತ್ತವೆ:-


ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ.
ಇದರಲ್ಲಿ ಪ್ರಾಣ ಮತ್ತು ಅಪಾನ ಮುಖ್ಯ.
ಪ್ರಾಣದ ಗತಿ ಮೇಲ್ಮುಖವಾಗಿದ್ದು ದೇಹವನ್ನು ನಿಯಂತ್ರಿಸುತ್ತದೆ.
ಅಪಾನದ ಗತಿ ಕೆಳಮುಖವಾಗಿದ್ದು ಮಲಮೂತ್ರ ಋತುಸ್ರಾವ ಇತ್ಯಾದಿಗಳ
ವಿಸರ್ಜನೆಗೆ ಆವಶ್ಯಕ.
ಆಧ್ಯಾತ್ಮಿಕ ಮುನ್ನಡೆಗೆ ಪ್ರಾಣ ಅಪಾನ ಎರಡೂ ಸುಷುಮ್ನಾದ ಒಳಹೊಕ್ಕು
ಮೇಲಕ್ಕೆ ಸಾಗಬೇಕು.
ಭಕ್ತಿ, ಅಧಿಕ ಮಂತ್ರ, ಜಪ ಇತ್ಯಾದಿಗಳಿಂದ ಆಧ್ಯಾತ್ಮಿಕ ಪ್ರಗತಿಯಾದಾಗ
ಇವೆರಡೂ ಮೇಲ್ಮುಖವಾಗಿ ದೇಹದ ಅನವಶ್ಯಕ ವಸ್ತುಗಳ ವಿಸರ್ಜನೆಗೆ ಬೇಕಾದ
ಅಪಾನ ಶಕ್ತಿ ಕಡಿಮೆಯಾಗುತ್ತದೆ.

ಮನುಷ್ಯರು ಕೆಳಕ್ಕೆ ಇಳಿಯುವವರು.


ತಮ್ಮ ಶಕ್ತಿಯನ್ನು ದುರುಪಯೋಗ ಪಡಿಸಿ ಬದುಕಿನಲ್ಲಿ ಸೋಲನ್ನು
ಪಡೆಯುವವರು.
ರಾಜಸ-ತಾಮಸ ಭಾವನೆಗಳಿಂದ ಕುಸಿಯುವವರು.

ಇವರ ಮೇಲ್ಮುಖವಾದ ಗತಿಗೆ ಊರ್ಧ್ವಪುಂಡ್ರ ಧಾರಣೆ ಸಹಾಯಕ.


ಹೊರಗೆ ಧರಿಸುವ ಊರ್ಧ್ವಪುಂಡ್ರ ಒಳಗಿನ ಶಕ್ತಿ ಸಂಚಾರದ ಸೂಚಕ.
ಮೂಲಾಧಾರ ಚಕ್ರದಿಂದ ಕುಂಡಲಿನೀ ಶಕ್ತಿ ಜಾಗೃತವಾಗಿ ಸಹಸ್ರಾರಕ್ಕೆ
ಸಾಗುವ ಸಂಕೇತವೇ ಊರ್ಧ್ವಪುಂಡ್ರ.

01. ಕಶೇರುಕದ (ಬೆನ್ನುಮೂಳೆ) ಬುಡದ ಊರ್ಧ್ವಪುಂಡ್ರ ಜಾಗೃತಗೊಳ್ಳುವ


ಕುಂಡಲಿನಿಯ ಸಂಕೇತ.
02. ನಾಬಿಯ ಬಳಿಯ ಮೂರು ನಾಮ ಇಡಾ, ಪಿಂಗಳಾ ಮತ್ತು ಸುಷುಮ್ನಾ
ನಾಡಿಗಳ ಸಂಕೇತ.
03. ಎದೆಯಲ್ಲಿ ಕಮಲದ ನಾಮ ಅನಾಹತ ಚಕ್ರದ ವಿಕಾಸದ ಸಂಕೇತ.
04. ಕಂಠದ ನಾಲ್ಕು ದಿಕ್ಕುಗಳಲ್ಲಿಯ ಪುಂಡ್ರಗಳು ಅನಾಹತ ಚಕ್ರದಿಂದ ವಿಶುದ್ಧಿ
ಚಕ್ರದತ್ತ ಪಯಣದ ಸಂಕೇತ.
05. ಅಂಗೈ ಮೂಲಕ ನಿರಂತರ ಹರಿಯುತ್ತಿರುವ ಪ್ರಾಣಶಕ್ತಿಯನ್ನು
ಊರ್ಧ್ವಮುಖಗೊಳಿಸಲು ಎರಡು ತೋಳುಗಳಲ್ಲಿ ಪುಂಡ್ರಗಳು.
06. ಲಲಾಟದ ನಾಮ ಆಜ್ಞಾ ಚಕ್ರದಿಂದ ಸಹಸ್ರಾರದತ್ತ ಶಕ್ತಿ ಸಂಚಲನದ
ಸಂಕೇತ.
07. ಸ್ತನಪಾಶ್ವದ ಎರಡು ನಾಮಗಳು ಶ್ರೀವತ್ಸ ಮತ್ತು ಕೌಸ್ತುಭದ ಸಂಕೇತ.

ಇವೆಲ್ಲವೂ ನಮ್ಮ ಗುರಿಯ ನಿರಂತರ ಜಾಗೃತಿಗೋಸ್ಕರ ಸಹಾಯಕವಾಗಿ


ಇರುವವೇ ಹೊರತು ಬರೇ ಹಚ್ಚಿದ ಮಾತ್ರಕ್ಕೆ ಪವಾಡ ಆಗುವುದಿಲ್ಲ.

ಗೋಪೀಚಂದನ ತೇಯುವಾಗ ಗಾಯತ್ರಿ ಇತ್ಯಾದಿ ಚಿಂತನೆ ಸಹಾಯಕ.


ಇದರಿಂದ ಭಗವನ್ನಾಮಸ್ಮರಣೆಯೂ ಆಗುವುದು.
******

ಪ್ರಾಣಾಯಾಮ

ಯೋಗಶಾಸ್ತ್ರದಲ್ಲಿ ಪ್ರಾಣಾಯಾಮಕ್ಕೆ ವಿಶೇಷ ಸ್ಥಾನವನ್ನು ನೀಡಿದೆ ಮತ್ತು


ದಿನಕ್ಕೆ ನಾಲ್ಕುಸಲ ಮಾಡಬೇಕೆಂದು ಸಲಹೆ ನೀಡಿರುತ್ತದೆ.

"ಪ್ರಾತರ್ಮಧ್ಯಂದಿನೇ ಸಾಯಂ ಅರ್ಧರಾತ್ರೇ ಚ ಕುಂಭಕಾನ್|


ಶನೈರಶೀತಿ ಪರ್ಯಂತಂ ಚತುರ್ವಾರಂ ಸಮಭ್ಯಸೇತ್||"
ರೇಚಕ-ಪೂರಕ-ಕುಂಭಕಗಳಿಂದ ಕೂಡಿದ ಪ್ರಾಣಾಯಾಮ ಚಕ್ರಗಳನ್ನು
ಪ್ರತಿದಿನವೂ ಅರುಣೋದಯ, ಮಧ್ಯಾಹ್ನ, ಸಾಯಂಕಾಲ ಮತ್ತು ಅರ್ಥರಾತ್ರಿ
ವೇಳೆಗಳಲ್ಲಿ ಅಭ್ಯಸಿಸಬೇಕು ಎಂದಿದೆ.
ಆದರೆ ಸಂಧ್ಯಾವಂದನೆಯಲ್ಲಿ ಪ್ರಾಣಾಯಾಮವು ಮೂರು ಸಲ
ಮಾಡುವುದಾಗಿರುತ್ತದೆ.

ಸಂಧ್ಯಾವಂದನೆಯಲ್ಲಿ ತಿಳಿಸಿರುವ ಪ್ರಾಣಾಯಾಮವು ಅಂತರ ಶುದ್ಧಿಯೇ


ಆಗಿರುತ್ತದೆ.
"ಪ್ರಾಣಾಯಾಮೈರೇವ ಸಕಲಂ ಪಶುಷ್ಯಂತಿ ಮಲಾ:||"
ಸ್ವರ್ಣಾದಿ ಧಾತುಗಳು ಅಗ್ನಿಯಲ್ಲಿ ಕಾಯಿಸಿದರಿಂದ ಹೇಗೆ
ನಿರ್ಮಲವಾಗುತ್ತದೆಯೋ, ಅದರಂತೆಯೇ ನಾನಾರದ ಪಾಪಗಳಿಂದ
ಮಲಿನವಾದ ಮನಸಾದಿ ಇಂದ್ರಿಯಗಳೆಲ್ಲ ಪ್ರಾಣಾಯಾಮ ಮಾಡುವುದರಿಂದ
ನಿರ್ಮಲವಾಗುವುದಲ್ಲದೇ ಒಂದೇ ಕಡೆಯಲ್ಲಿ ಮನಸ್ಸನ್ನು ಇಡುವುದಕ್ಕೆ ಈ
ಸಾದನೆಯಿಂದ ಪ್ರಯೋಜನವಾಗುವುದು.

ಪ್ರಾಣಾಯಾಮದ ಹೆಚ್ಚಿನ ವಿವರಣೆ ಅಷ್ಟಾಂಗಯೋಗದಲ್ಲಿಯೇ ಇದೆ.

ಸಂಧ್ಯಾವಂದನೆಯಲ್ಲಿ ತಿಳಿಸಿರುವ ಪ್ರಾಣಾಯಾಮ ಮಾಡುವ ಕ್ರಮ

ಬ್ರಹ್ಮಚಾರಿಯು ಬಲಗೈಯ ಕನಿಷ್ಠ, ಅನಾಮಿಕ, ಅಂಗುಷ್ಟ ಈ ಮೂರು


ಬೆರಳುಗಳಿಂದಲೂ, ಗ್ರಹಸ್ಥ-ವಾನಪ್ರಸ್ಥರು ಐದೂ ಬೆರಳುಗಳಿಂದಲೂ,
ನಾಸಿಕಾಗ್ರವನ್ನು ಹಿಡಿದು ಪ್ರಾಣಾಯಾಮವನ್ನು ಮಾಡುವುದು.

1. ಬಲನಾಸಾರಂದ್ರದಿಂದ ಉದರವಾಯುವನ್ನು ಹೊರಗೆ ಬಿಡಬೇಕು. (ಇದು


ರೇಚಕ).
2. ಎಡನಾಸಾರಂದ್ರದಿಂದ ಹೊರವಾಯುವನ್ನು ಉದರದಲ್ಲಿ
ಆಕರ್ಷಿಸಿಕೊಳ್ಳಬೇಕು. (ಇದು ಪೂರಕ).
3. ನಂತರ ಎರಡೂ ನಾಸಾರಂದ್ರಗಳನ್ನು ಬೆರಳುಗಳಿಂದ ಮುಚ್ಚಿ ಬಿಗಿಹಿಡಿದು,
(ಇದು ಕುಂಭಕ), ಈ ಕುಂಭಕ ಸ್ಥಿತಿಯಲ್ಲಿ ಸಪ್ತವ್ಯಾಹೃತಿ ಸಹಿತ ಗಾಯತ್ರೀ
ಮಂತ್ರವನ್ನು ಶಿರೋಮಂತ್ರ ಸಹಿತ ಏಕಾಗ್ರ ಮನಸ್ಸಿನಿಂದ ಜಪಿಸುವುದೇ
ಪ್ರಾಣಾಯಾಮವು.

ಹೀಗೆ ಮೂರು, ಹನ್ನೆರಡು ಅಥವಾ ಇಪ್ಪತ್ತ್ನಾಲ್ಕು ಬಾರಿ ಮಾಡಬೇಕು.

ಪ್ರಾಣಾಯಾಮದ ಪೂರಕ ಕುಂಭಕ ರೇಚಕ ದ ಅನುಪಾತ (Ratio) 16-64-


32.

ಒಂದು ಹ್ರಸ್ವ ಅಕ್ಷರವನ್ನು ಒಂದು ಮಾತ್ರೆ ಎಂದುಕೊಂಡು ಓಂ ಅನ್ನು


ದೀರ್ಘಾಕ್ಷರವನ್ನಾಗಿ ಜಪಿಸಿದರೆ, ದಶಪ್ರಣವ ಗಾಯತ್ರೀ ಸರಿಯಾಗಿ 64
ಮಾತ್ರೆಯಾಗುತ್ತದೆ. ಇದರಿಂದ ಪೂರಕ ರೇಚಕದ ಅವಧಿ ತಿಳಿಯುತ್ತದೆ.

ಸಪ್ತವ್ಯಾಹೃತಿ ಸಹಿತ ಗಾಯತ್ರೀ ಮಂತ್ರ

"ಓಂ|| ಭೂ: || ಓಂ ಭೂವ: || ಓಂ ಸ್ವ: || ಓಂ ಮಹ: || ಓಂ ಜನ: || ಓಂ


ತಪ: || ಓಂ ಸತ್ಯಮ್ ||
(ಇದು ಸಪ್ತವ್ಯಾಹೃತಿ - ಓಂ ಏಳು ಸಲ).

ಓಂ ತತ್ಸವಿತುರ್ವರೇಣ್ಯಂ  ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನ:


ಪ್ರಚೋದಯಾತ್ ||
(ಇದು ಗಾಯತ್ರೀ - ಓಂ ಒಂದು ಸಲ).

ಓಂ ಆಪೋ ಜ್ಯೋತೀ ರಸೋಮೃತಂ ಬ್ರಹ್ಮ ಭೂರ್ಭುವ: ಸ್ವರೋಮ್ ||" 


(ಇದು ಗಾಯತ್ರೀ ಶಿರಸ್ಸು - ಓಂ ಎರಡು ಸಲ).

ಇದನ್ನು ದಶಪ್ರಣವ ಗಾಯತ್ರೀ ಎಂದು ಹೇಳುವುದು.


ಅಂದರೆ ಇದರಲ್ಲಿ ಹತ್ತು 'ಓಂ' ಕಾರಗಳು ಇವೆ.

ಈ ಜಪದಿಂದ ಒಳಗೆ ಹಿಡಿಯಲ್ಪಟ್ಟ ಗಾಳಿಯು ಮಂತ್ರಮಯವಾಗಿ ದೇಹದಲ್ಲಿ


ರಕ್ತದ ಮೂಲಕ ಪ್ರವಹಿಸಿ ದೇಹದೊಳಗಿನ ದೋಷಗಳನ್ನು ನಿವಾರಿಸುತ್ತದೆ.

ಪ್ರಾಣಾಯಾಮದಲ್ಲಿ ಮಾಡುವ ಈ ಜಪವನ್ನು ಮಂತ್ರಾರ್ಥ ಸಹಿತ ಮಾಡಬೇಕು.


ಪ್ರಾಣವಾಯುವನ್ನು ಸುಷುಮ್ನಾ ನಾಡಿಯಲ್ಲಿ ಧಾರಣೆ ಮಾಡಬೇಕು. ಇದು
ಧಾರಣೆ ಮಾಡಬೇಕಾದರೆ ಕುಂಡಲಿನಿ ಜಾಗೃತಿಯಾಗಿರಬೇಕು.

ಇದರಿಂದ ಮಂತ್ರಮಯವಾದ ವಾಯುವು ದೇಹದ ಕಣಕಣದಲ್ಲಿ ವ್ಯಾಪಿಸಿ ಆತ


ಮಂತ್ರದೇಹಿಯಾಗುವನು.

ಅವಿದ್ಯೆಯಿಂದ ಲೌಕಿಕದತ್ತ ಹರಿಯುವ ಮನವನ್ನು ಭಗವಂತನೆಡೆಗೆ


ತಿರುಗಿಸುವುದು ಈ ಪ್ರಾಣಾಯಾಮದಿಂದ ಸಾಧ್ಯವಾಗುವುದು.

ಆದ್ದರಿಂದಲೇ ಭಾಗವತದಲ್ಲಿ ಶ್ರೀಕೃಷ್ಣನು ಹೇಳಿರುವನು:-


"ಪ್ರಾಣಾಯಾಮ: ಪರಂ ಬಲಂ"
(ಪ್ರಾಣಾಯಾಮವೇ ಪ್ರಮುಖ ಬಲ).

ಪತಂಜಲಿ ಮಹರ್ಷಿಯವರ ಅಬಿಪ್ರಾಯ:-

ಈ ಪ್ರಾಣಾಯಾಮದಲ್ಲಿ ಸ್ವಾಮ್ಯವನ್ನು ಪಡೆದುದೇ ಆದರೆ, ಆತನು ಈ ಬಾಹ್ಯ


ಪ್ರಪಂಚದಿಂದ ಕ್ರಮ ಕ್ರಮವಾಗಿ ಬೇರ್ಪಟ್ಟು, ಕಾಲಕ್ರಮದಿಂದ
ಸರ್ವವ್ಯಾಪಿಯಾದ ಪರಮಾರ್ಥ ತತ್ತ್ವದೆಡೆಗೆ ಸರಿಯುತ್ತಾನೆ.
ಸಾಧಕನ ಒಳಗಿರುವ 'ದಿವ್ಯಾಗ್ನಿ' ಇಲ್ಲವೇ 'ದಿವ್ಯಜ್ಯೋತಿ' ಯು ಸಾಧಕನ ಒಳಗೇ
ಅತಿ ವೈಭವದಿಂದ ಹೊಳೆದು, ಅವನ ಮನಸ್ಸನ್ನು 'ಧಾರಣ' ಸ್ಥಿತಿಗೂ 'ಧ್ಯಾನ'
ಸ್ಥಿತಿಗೂ ಒಯ್ಯುತ್ತದೆ.
ಆದರೆ ಈ ಹಂತವನ್ನು ತಲುಪಲೂ ಬಹುವರ್ಷಕಾಲ ಹಿಡಿಯುತ್ತದೆ.

******

ಮಂತ್ರಗಳು

ಒಂದು ಜಿಜ್ಞಾಸೆ

"ಸಂಧ್ಯಾವಂದನೆ/ಪೂಜೆಯ ಭಾಷೆಯು ಸಂಸ್ಕೃತವಾಗಿರುವ ಕಾರಣ


ಕಲಿಯಲಿಕ್ಕೆ ಬಹು ಕಷ್ಟವಾದದ್ದು.
ತಿಳಿಯದೆ ಮಾಡುವುದಕ್ಕಿಂತ, ನಮಗೆ ತಿಳಿಯುವ ಯಾವುದಾದರೂ
ಭಾಷೆಯಿಂದ ದೇವರನ್ನು ನಾವು ಯಾಕೆ ಪ್ರಾರ್ಥಿಸಬಾರದು?
ದೇವರು ಸರ್ವ ಭಾಷೆಗಳನ್ನು ತಿಳಿದವನೂ, ಸರ್ವಾಂತರ್ಯಾಮಿಯೂ
ಆದ್ದರಿಂದ ಈ ವೇದಮಂತ್ರಗಳಿಂದಲೇ ಸಂಧ್ಯಾವಂದನೆ ಮಾಡಬೇಕೆಂದೇನು?
******

ಈ ಕೆಳಗಿನಂತೆ ನಾವು ಅರ್ಥ ಮಾಡಿಕೊಂಡರೆ, ಉತ್ತರ ನಮಗೇ ತಿಳಿಯುತ್ತದೆ.

1. ಸಂಧ್ಯಾವಂದನೆ ಎಂಬ ವೇದೋಕ್ತ ನಿತ್ಯಕರ್ಮವನ್ನು ಉಪನಯನ


(ಜ್ಞಾನಚಕ್ಷು) ವಾದಂದಿನಿಂದ ಪ್ರಾಣ ಬಿಡುವ ತನಕ ಮಾಡಲೇ ಬೇಕು.

2. ಸಂಧ್ಯವಂದನೆ ಮಾಡದವನು ಕರ್ಮಭೃಷ್ಟ ಎಂದು ಕರೆಸಿಕೊಳ್ಳುತ್ತಾನೆ. 


3. ಸಂಧ್ಯಾವಂದನ ಮಾಡದವನು ವೇದೋಕ್ತ  ಸಮಸ್ತ ಕರ್ಮಗಳಲ್ಲಿಯೂ
ಅನರ್ಹನಾಗುತ್ತಾನೆ. ಅಂದರೆ ಅವನಿಗೆ ವೇದೋಕ್ತ ಕರ್ಮಾಧಿಕಾರವಿಲ್ಲ. 

4. ಸಂಧಾಯವಂದನ ಲೋಪ ಮಾಡಿ ಬೇರೆ ಯಾವ ತರದ ಪುಣ್ಯ ಕಾರ್ಯ


ಮಾಡಿದರೂ ಅದರ ಪುಣ್ಯಫಲ ಸಹಾ ಆತನಿಗೆ ಸಿಗುವುದಿಲ್ಲ. 
ದೇವತೆಗಳು ಆತನು ಮಾಡಿದ ಪೂಜೆಯನ್ನೂ, ಪಿತೃಗಳು ಆತನು ಕೊಟ್ಟ
ಪಿಂಡ-ತರ್ಪಣಗಳನ್ನೂ ಸ್ವೀಕರಿಸುವುದಿಲ್ಲ. 

5. ಅನಂತ ಜ್ಞಾನರಾಶಿಯಾದ ವೇದಗಳು ಭಗವಂತನ ನಿ:ಶ್ವಾಸದಿಂದ


ಪ್ರಾಪ್ತವಾಗಿವೆ. ಮತ್ತು ಇವು ಸಂಸ್ಕೃತದಲ್ಲಿಯೇ ಇವೆ ವಿನಹ ಬೇರೆ ಯಾವ
ಭಾಷೆಯಲ್ಲಿಯೂ ಇಲ್ಲ.

6 ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ, ಹಾಗೆ ಪ್ರತಿಯೊಂದು


ವೇದದಲ್ಲಿ ಸಂಹಿತಾ, ಬ್ರಾಹ್ಮಣ, ಆರರ್ಣ್ಯಕ, ಉಪನಿಷತ್ ಮತ್ತು
ವೇದಾಂಗಗಳಾದ ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ, ಮತ್ತು
ಕಲ್ಪ. ಇವೆಲ್ಲವೂ ಸೇರಿ "ವೇದ" ಎನ್ನುವುದಾಗಿದೆ. ಆದ್ದರಿಂದಲೇ ಇದನ್ನು
ಅನಂತಜ್ಞಾನರಾಶಿ ಎಂದು ಹೇಳುವುದು. 

7. ಮಂತ್ರಗಳು ದೇವತೆಗಳ ಶರೀರ. 


"ಛಂದ: ಪಾದೌತು ವೇದಸ್ಯ ಹಸ್ತೌ ಕಲ್ಪೋ ಥ ಪಠ್ಯತೇ|
ಜ್ಯೋತಿಷಾಮಯನಂ ಚಕ್ಷು: ನಿರುಕ್ತಂ ಶ್ರೋತ್ರಮೇವ ಚ||
ಶಿಕ್ಷಾ ಘ್ರಾಣಂತು ವೇದಸ್ಯ ಮುಖಂ ವ್ಯಾಕರಣಂ ಸ್ಮೃತಂ|
ತಸ್ಮಾತ್ಸಾಂಗಮೇಧೀತ್ಯೈವ ಬ್ರಹ್ಮಲೋಕೇಮಹೀಯತೆ||" 

8. ಸಂಧ್ಯಾವಂದನೆ, ಪೂಜೆ, ಎಲ್ಲವೂ ವೇದೋಕ್ತ ಕರ್ಮಗಳಾದ್ದರಿಂದ,


ಸಂಸ್ಕೃತದಲ್ಲಿಯೇ ಇದೆ, ಮತ್ತು ಅದೇ ರೀತಿ ಮಾಡಬೇಕಾಗಿರುವುದು. 

9. ಉಳಿದ ಎಲ್ಲಾ ಭಾಷೆಗಳು ಭಗವಂತನ ನಿ:ಶ್ವಾಸದಿಂದ ಪ್ರಾಪ್ತವಾದದ್ದಲ್ಲ. 


ಆದ್ದರಿಂದ ನಮಗೆ ತಿಳಿದ ಭಾಷೆಯಿಂದ ಸಂಧ್ಯಾವಂದನೆ, ಪೂಜೆ ಮುಂತಾದ
ವೇದೋಕ್ತ ಕರ್ಮಗಳನ್ನು ಮಾಡಿದರೆ, ಕಣ್ಣಿನ ತಜ್ಞ ವೈಧ್ಯನು ಹೃದಯದ
ಶಸ್ತ್ರಚಿಕಿತ್ಸೆ ಮಾಡಿದಂತೆ ಆಗಬಹುದು. 

10. ಆದ್ದರಿಂದ ಸಂಸ್ಕೃತವನ್ನು ಸಂಸ್ಕೃತ ಲಿಪಿಯಲ್ಲಿ ಅಲ್ಲದಿದ್ದರೂ, ನಮಗೆ


ತಿಳಿದಿರುವ ಲಿಪಿಯಲ್ಲಿ ಇದ್ದುದನ್ನು ಓದಿ, ಕರ್ಮವನ್ನು ಆಚರಿಸಬೇಕು. 

11. ತಿಳಿದುಕೊಂಡು ಮಾಡುವುದು ಉಪನಯನ ಆದವನ ಕರ್ತವ್ಯವು.


ಹೇಗೆಂದರೆ, ಅರಸನು ವಿಧಿಸಿರುವ ಕಾಯಿದೆಗಳು ನಮಗೆ ತಿಳಿಯುವುದಿಲ್ಲ
ಎಂದು ನಾವು ತಪ್ಪು ಮಾಡಿದರೆ ಅರಸನು ಆ ತಪ್ಪಿನಿಂದ ಹೇಗೆ
ಮುಕ್ತಪಡಿಸುವುದಿಲ್ಲವೋ ಹಾಗೆಯೇ ಸಂಧ್ಯಾವಂದನಾಧಿಕಾರಿ ಆದವನು
ಸಂಧ್ಯಾವಂದನೆಯನ್ನು ಕಲಿತುಕೊಂಡು ಮಾಡದಿದ್ದರೆ, ಅದರ ಬದಲಿಗೆ ಬೇರೆ
ಪುಣ್ಯ ಮಾಡಿದರೂ ಕರ್ಮಭ್ರಷ್ಟನಾಗಿ ಪಾಪದಿಂದ ಎಂದಿಗೂ
ಮುಕ್ತನಾಗಲಾರನು ಎಂದು ಸ್ಮೃತಿಗಳಲ್ಲಿ ಇರುತ್ತದೆ. 

"ಸಂಧ್ಯೋಪಾಸ್ತಿಂ ವಿನಾ ವಿಪ್ರ: ಪುಣ್ಯಾನ್ಯನ್ಯಾನಿ ಚಾಚರೇತ್ |


ಯಸ್ಯಸ್ಯ ತಾನಿ ಪಾಪಾನಿ ಭವತ್ಯೇವ ನ ಸಂಶಯ:||
ಯೋನತ್ರ ಕುರುತ್ ಯತ್ನಂ ಧರ್ಮಕಾರ್ಯೇ ದ್ವಿಜೋತ್ತಮ:|
ವಿಹಾಯ ಸಂಧ್ಯಾಪ್ರಣತಿಂ ಸ ಯಾತಿ ನರಕಾಯುತಮ್||" 

||ಶ್ರಿಕೃಷ್ಣಾರ್ಪಣಮಸ್ತು||

**********

ಸಂಧ್ಯಾವಂದನೆಯಿಂದಾಗುವ ಪರಿಣಾಮಗಳು

ನಿತ್ಯವೂ ಸಂಧ್ಯಾವಂದನೆ ಮಾಡುವುದರಿಂದ ಚಿತ್ತಚಾಂಚಲ್ಯ ದೂರವಾಗಿ


ಏಕಾಗ್ರತೆ ಹೆಚ್ಚುತ್ತದೆ.

ಭಗವಂತನಲ್ಲಿ ಶ್ರದ್ಧೆ,ನಂಬಿಕೆ,ಪ್ರೀತಿ,ಭಕ್ತಿ ಮುಂತಾದ ಭಾವನೆಗಳು ಅಚಲವಾಗಿ


ವ್ಯಕ್ತಿ ಆಧ್ಯಾತ್ಮ ಸಾಧನೆಗೆ ಅರ್ಹನಾಗುತ್ತಾನೆ.

ವ್ಯಕ್ತಿಯ ಅಂತಃಪ್ರೇರಣೆ ಜಾಗೃತವಾಗಿ ಜೀವನದ ಪ್ರತಿಕ್ಷಣದಲ್ಲೂ ಸನ್ಮಾರ್ಗದಲ್ಲಿ


ನಡೆಯುವಂತೇ ಪ್ರೇರೇಪಿಸುತ್ತದೆ.

ಅಂತಃಕರಣದ ಸಂಸ್ಕಾರದಿಂದ ಜನ್ಮಜನ್ಮಾಂತರದ ಅಜ್ಞಾನ ದೂರವಾಗಿ ವ್ಯಕ್ತಿ


ಸಂಸ್ಕಾರವಂತನಾಗುತ್ತಾನೆ.

ಮನುಷ್ಯನ ಕಾಂತಿ ಹಾಗೂ ತೇಜಸ್ಸು ಅಧಿಕವಾಗುತ್ತದೆ.

ಮಾತಿನಲ್ಲಿ ಮೃದುತ್ವ , ವಿನಯ ಹಾಗೂ ಸತ್ಯ ನೆಲೆಗೊಳ್ಳುತ್ತದೆ.


ಮನಸ್ಸಿನಲ್ಲಿ ಸದ್ಭಾವನೆ,ಶ್ರೇಷ್ಟವಿಚಾರ ಹಾಗೂ ಸಾತ್ವಿಕಗುಣಗಳು ಸ್ಥಾನ
ಪಡೆಯುತ್ತವೆ.

ಮನಸ್ಸಿನಲ್ಲಿ ಸಂಕಲ್ಪ ಶಕ್ತಿಯು ಪ್ರಬಲವಾಗುತ್ತದೆ.

ಶಾಂತಿ,ಸಂತೋಷ,ಕ್ಷಮೆ,ದಯೆ,ಪ್ರೀತಿ ಮುಂತಾದ ಸದ್ಭಾವನೆಗಳು ಮನದಲ್ಲಿ


ನೆಲೆಗೊಳ್ಳುತ್ತವೆ.

ಮನುಷ್ಯನಲ್ಲಿರುವ ಪ್ರಮುಖ ಗುಣ ಅಹಂಕಾರ.ಅಹಂಕಾರದ ಮೂಲರೂಪ


ನಾನು.ನಾನು ಎಂಬ ಭಾವನೆ ಬಂದಾಗ ಆಧ್ಯಾತ್ಮಸಾಧನೆ
ಸಾಧ್ಯವಿಲ್ಲ.ಸಂಧ್ಯಾವಂದನೆ ನಾನು ಎಂಬ ಅಹಂಕಾರವನ್ನು ದೂರಮಾಡಿ,ವ್ಯಕ್ತಿ
ಆಧ್ಯಾತ್ಮಸಾಧನೆ ಮಾಡಲು ಪ್ರೇರೇಪಿಸುತ್ತದೆ.

ಪ್ರಾತಃಕಾಲದ ಸಂಧ್ಯಾವಂದನೆ ರಾತ್ರಿಯ ಪಾಪಗಳನ್ನು ನಾಶಗೊಳಿಸುತ್ತದೆ.

ಮಧ್ಯಾಹ್ನದ ಸಂಧ್ಯಾವಂದನೆ ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಮಾಡಿದ


ಪಾಪಗಳನ್ನು ನಾಶಗೊಳಿಸುತ್ತದೆ

ಸಾಯಂಕಾಲದ ಸಂಧ್ಯಾವಂದನೆ ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡಿದ


ಪಾಪಗಳನ್ನು ನಾಶಗೊಳಿಸುತ್ತದೆ.

ಹಾಗಾಗಿ ನಿತ್ಯಸಂಧ್ಯಾವಂದನೆಯನ್ನು ಮಾಡುವವನು ಪಾಪಗಳಿಂದ


ವಿಮುಕ್ತನಾಗಿರುತ್ತಾನೆ.

ಸಂಧ್ಯಾವಂದನೆಯಿಂದ ದೈಹಿಕ ಆರೋಗ್ಯ ಸ್ಥಿರವಾಗಿರುತ್ತದೆ.


ಸಂಧ್ಯಾವಂದನೆಯಲ್ಲಿ ಮಾಡುವ ಪ್ರಾಣಾಯಾಮ ಹಲವು ರೋಗಗಳನ್ನು
ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಷ್ಣುಪುರಾಣದಲ್ಲಿ ಔರ್ವ ಎಂಬ
ಋಷಿ ಸಗರರಾಜನಿಗೆ ತಿಳಿಸುತ್ತಾನೆ..

ಹೇ ಸಗರರಾಜ,ಬುದ್ಧಿವಂತನಾದ ಮನುಷ್ಯ ಪ್ರಾತಃಸಂಧ್ಯೋಪಾಸನೆ ಹಾಗೂ


ಸಾಯಂಸಂಧ್ಯೋಪಾಸನೆಯನ್ನು ಪ್ರತಿನಿತ್ಯ ತಪ್ಪದೇ ಮಾಡಿ ಪಾಪಗಳಿಂದ
ವಿಮುಕ್ತನಾಗುತ್ತಾನೆ.ಸಂಧ್ಯಾಕಾಲದಲ್ಲಿ ಯಾರು ಸಂಧ್ಯಾವಂದನೆಯನ್ನು
ಮಾಡದೇ ಮಲಗಿರುತ್ತಾರೋ ಅಥವಾ ಅನ್ಯಕಾರ್ಯಗಳಲ್ಲಿ
ಮಗ್ನರಾಗಿರುತ್ತಾರೋ ಅಂತವರು ಪ್ರಾಯಶ್ಚಿತ್ತ
ಮಾಡಿಕೊಳ್ಳಬೇಕಾಗುತ್ತದೆ.ಆದ್ದರಿಂದ ಹೇ ರಾಜ..ಪ್ರಾತಃಕಾಲೀನ ಹಾಗೂ
ಸಾಯಂಕಾಲದ ಸಂಧ್ಯಾವಂದನೆಯನ್ನು ತಪ್ಪದೇ ಮಾಡಬೇಕು.ಇದರಿಂದ
ಮನುಷ್ಯ ಉತ್ತರೋತ್ತರ ಶ್ರೇಯಸ್ಸನ್ನು ಪಡೆಯುತ್ತಾನೆ.
(ವಿಷ್ಣುಪುರಾಣ,ತೃತೀಯ ಅಂಶ - ೧೧-೧೦೨,೧೦೩)
ಹಾಗಾಗಿ ಸಂಧ್ಯಾವಂದನೆ ನಿತ್ಯನೈಮಿತ್ತಿಕಕರ್ಮಗಳಲ್ಲೊಂದಾಗಿದೆ.ಅದನ್ನು
ತಪ್ಪದೇ ಆಚರಿಸುವುದು ನಮ್ಮ ಕರ್ತವ್ಯ.
********

ಸಂಧ್ಯಾವಂದನೆ ಮಂತ್ರ
ಈ ಸಂಧ್ಯಾವಂದನೆ ಮಂತ್ರವನ್ನು ಪಠಿಸಿದವರು ಶೃಂಗೇರಿ ಶಿಷ್ಯ ಚಿರಂಜೀವಿ
ಅತ್ರೇಯ 

ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಈ ಧ್ವನಿ ಮುದ್ರಿಕೆಯನ್ನು


ಮುದ್ರಿಸಿದೆ.

( ಸ್ಪಷ್ಟನೆ :: ಆಡಿಯೋ ರೂಪದಲ್ಲಿ ಇದ್ದ ಕಾರಣ ಪೇಸ್ಬುಕ್ ನಲ್ಲಿ ಹಾಕಲು


ಸಾಧ್ಯವಾಗುವುದಿಲ್ಲ ಅದರಿಂದ ವಿಡಿಯೋ ರೂಪಕ್ಕೆ ಬದಲಾಯಿಸಲಾಗಿದೆ)

click
https://youtu.be/oJCS-pZ5ZrY   ಯೂಟ್ಯೂಬ್ ನಲ್ಲಿಯೂ ಲಭ್ಯ
ಯಸ್ಯ ಸ್ಮೃತ್ಯಾ ಚ :-
ಯಾರ ಸ್ಮರಣೆ ನಾಮೋಚ್ಚಾರಣೆಗಳಿಂದ ತಪಸ್ಸು,ಸಂಧ್ಯಾವಂದನೆ,ಜಪ
ಮುಂತಾದ ಕರ್ಮಗಳಲ್ಲಿ ನ್ಯೂನತೆ ತಕ್ಷಣ ಪರಿಹಾರವಾಗುವುದೋ ಆ
ಅಚ್ಯುತನನ್ನು ವಂದಿಸುತ್ತೇನೆ.
ಜನಾರ್ಧನ! ಮಂತ್ರ,ಕ್ರಿಯೆ,ಭಕ್ತಿಗಳಿಲ್ಲದೆಯೇ ಜಪತಪಾದಿಅನುಷ್ಠಾನ ನಾನು
ಮಾಡಿದ್ದರೂ ನಿನ್ನ ಈ ಪೂಜೆ ಪರಿಪೂಣ೯ವೆನಿಸಲಿ.
ಹೀಗೆ ಕಾಯಿಕ, ವಾಕ್ಕು,ಮನಸ್ಸು,ಇಂದ್ರಿಯ,ಬುದ್ಧಿಗಳಿಂದ ನನ್ನ ಸಾಮರ್ಥ್ಯಕ್ಕೆ
ಅನುಗುಣವಾಗಿ,ಸ್ವತಂತ್ರನಾದ ಹರಿಯ ಇಚ್ಛೆಯನ್ನು ಅನುಸರಿಸಿ ನಾನು ಯಾವ
ಯಾವ ಕರ್ಮವನ್ನು ಮಾಡುವೆನೋ ಮಾಡಿರುವೆನೋ ,ಅದನ್ನು
ಪರತತ್ವವೆನೆಸಿದ ನಾರಾಯಣನಿಗೇ ಅರ್ಪಿಸುತ್ತೇನೆ.
ಪೂರ್ವೋಕ್ತವಾದ ಇಂತಹ  ವಿಶೇಷಗಳಿಂದ ಕೂಡಿದ ಶುಭ ಪುಣ್ಯ ತಿಥಿಯಲ್ಲಿ
ನಾನು ಮಾಡಿದ ಪ್ರಾತಃ ಸಂಧ್ಯಾವಂದನೆ,ಜಪ,ತರ್ಪಣಗಳಿಂದ  ಭಗವಾನ್
ಮಧ್ವಾಂತರ್ಗತ ಶ್ರೀ ಗೋಪಾಲಕೃಷ್ಣನು ಪ್ರೀತನಾಗಲಿ,ಅವನಿಗೆ ಇದು
ಅರ್ಪಿತವಾಗಲಿ.
ತುಲಸೀ ದಲ ಸಹಿತ ನೀರು ಬಿಟ್ಟು ಎರಡು ಸಲ ಆಚಮನ ಮಾಡಿ,ಜಪಕಾಲದಲ್ಲಿ
ಮಂತ್ರ, ತಂತ್ರ,ಸ್ವರ,ವರ್ಣಗಳಲ್ಲಿ ಸಂಭವಿಸಿರಬಹುದಾದ ಎಲ್ಲಾ।
ಲೋಪದೋಷಗಳ ಪ್ರಾಯಶ್ಚಿತ್ತಕ್ಕಾಗಿ ಯಥಾಶಕ್ತಿ ನಾಮತ್ರಯವನ್ನು
ಜಪಿಸುತ್ತೇನೆ  ಎಂದು ಸಂಕಲ್ಪಸಿ ಅಚ್ಯುತನಿಗೆ ನಮಸ್ಕಾರ ಅನಂತನಿಗೆ
ನಮಸ್ಕಾರ,ಗೋವಿಂದನಿಗೆ ನಮಸ್ಕಾರ ಎಂದುಕನಿಷ್ಠ ಮೂರು
ಬಾರಿಯಾದರೂ  ವಿಷ್ಣುಸ್ಮರಣೆ ಮಾಡಬೇಕು.ವಿ, ಸೂ:- ಪ್ರತಿಯೊಬ್ಬರೂ
ತ್ರಿಸಂಧ್ಯೆಯಲ್ಲಿ ಸಂಧ್ಯಾಭಿಮಾನೀ ದೇವತೆಗಳನ್ನು ಗೌರವಿಸಲೇ ಬೇಕು
ಕಾಲಗತಿಯಲ್ಲಿನ ಅಡೆತಡೆಗಳಿಂದ ಮೂರುಹೊತ್ತು ಸಂಧ್ಯೋಪಾಸನೆ
ಮಾಡಲಾಗದಿರುವುದರಿಂದ ಮಧ್ಯಾಹ್ನದ ಪರವಾಗಿ ಬೆಳಗಿನ ಸಂಧ್ಯಾನಂತರ
ಕನಿಷ್ಟ ಹತ್ತು ಗಾಯತ್ರೀ ಜಪ ಮಾಡಿರಿ. ಈ ಸಂಧ್ಯಾವಂದನೆ
ಉಪನೀತರಾದವರಿಗೆ ವಿಧಿಸಲ್ಪಟ್ಟಿದೆ.

ಹಾಗಾಗಿ ಸಂಧ್ಯಾವಂದನೆ ನಿತ್ಯನೈಮಿತ್ತಿಕಕರ್ಮಗಳಲ್ಲೊಂದಾಗಿದೆ.ಅದನ್ನು


ತಪ್ಪದೇ ಆಚರಿಸುವುದು ನಮ್ಮ ಕರ್ತವ್ಯ..

ಆಚಮನ ವಿಧಿ

ಪರಿಶುದ್ಧನಾಗಿ ಪವಿತ್ರ ಸ್ಥಾನದಲ್ಲಿ ಕುಳಿತು ಪೂರ್ವ ಅಥವಾ ಉತ್ತರ ದಿಕ್ಕಿಗೆ


ಮುಖವಾಗಿ ಕುಳಿತು ಬಲಕೈಯನ್ನು ಮೊಣಕಾಲಿನ ಮಧ್ಯದಲ್ಲಿಟ್ಟು ಉಷ್ಣವಲ್ಲದ
ನೊರೆಯಿಲ್ಲದ ಶೀತಲ ನಿರ್ಮಲ ಜಲದಲ್ಲಿ ಆಚಮನವನ್ನು ಮಾಡತಕ್ಕದ್ದು.
ಅತ್ತಿತ್ತ ತಿರುಗಿ ನೋಡುತ್ತಾ, ಮಾತನಾಡುತ್ತಾ ಆಚಮನ ಮಾಡಲಾಗದು.

ಬ್ರಾಹ್ಮಣನ ಬಲಗೈಯಲ್ಲಿ ಐದು ತೀರ್ಥಗಳಿವೆ.

1. ದೇವತೀರ್ಥ,
2. ಪಿತೃರ್ರ್ತೀ,
3. ಬ್ರಹ್ಮತೀರ್ಥ,
4. ಪ್ರಾಜಾಪತ್ಯ ತೀರ್ಥ,
5. ಸೌಮ್ಯ ತೀರ್ಥ.
ಈ ರೀತಿಯಲ್ಲಿ ಒಟ್ಟು 5 ತೀರ್ಥಗಳಿವೆ. ಅಂಗುಷ್ಟ ಮೂಲದಲ್ಲಿ ಬ್ರಾಹ್ಮತೀರ್ಥವೂ,
ಕನಿಷ್ಠಿಕೆಯ ಮೂಲದಲ್ಲಿ ಪ್ರಾಜಾಪತ್ಯ ತೀರ್ಥವೂ, ಜೊತೆಯಾಗಿ ಕೂಡಿಸಿದ
ನಾಲ್ಕು ಅಂಗುಲಿಗಳ ಮಧ್ಯಭಾಗದಲ್ಲಿ ದೇವತೀರ್ಥವೂ, ತರ್ಜನೀ ಮತ್ತು
ಅಂಗುಷ್ಠಗಳ ಮಧ್ಯಭಾಗದಲ್ಲಿ ಪಿತೃತೀರ್ಥವೂ, ಅಂಗೈಯಲ್ಲಿ ಸೌಮ್ಯತೀರ್ಥವೂ
ಇದೆ.

“ಅಂಗುಷ್ಠಮೂಲೋತ್ತರತೋ ಯೇಯಂ ರೇಖಾ ಮಹೀಪತೇ |


ಬ್ರಾಹ್ಮಂ ತೀರ್ಥಂ ವದಂತ್ಯೇತತ್ ವಸಿಷ್ಠಾದ್ಯಾ ದ್ವಿಜೋತ್ತಮ ||
ಕಾಯಂ ಕನಿಷ್ಠಿಕಾಮೂಲೇ ಅಂಗುಲ್ಯಗ್ರೇತು ದೈವತಂ
ಕರಮಧ್ಯೇ ಸ್ಥಿತಂ ಸೌಮ್ಯಂ ಪ್ರಶಸ್ತಂ ದೇವತಕರ್ಮಣಿ”||

• ದೇವತಾರ್ಚನೆ ದಕ್ಷಿಣೆ ಆದಿಗಳು ದೇವತಾತೀರ್ಥದಲ್ಲಿಯೂ,


• ತಪರ್ಣ ಪಿಂಡದಾನಾದಿ ಕರ್ಮಗಳು ಪೈತೃಕ ತೀರ್ಥದಲ್ಲಿಯೂ,
• ಆಚಮನ ಬ್ರಾಹ್ಮತೀರ್ಥದಲ್ಲಿಯೂ,
• ವಿವಾಹದ ಸಮಯದಲ್ಲಿ ಲಾಜಹೋಮದಲ್ಲಿ ಪ್ರಾಜಾಪತ್ಯ ತೀರ್ಥದಿಂದಲೂ,
• ಕಮಂಡಲು ಗ್ರಹಣ ದಧಿಪ್ರಾಶನಾದಿ ಕರ್ಮಗಳು ಸೌಮ್ಯತೀರ್ಥದಲ್ಲಿಯೂ
ವಿಹಿತಗಳಾಗಿವೆ.
ಅಂಗುಲಿಗಳನ್ನು ಜೊತೆಗೂಡಿಸಿ ಏಕಾಗ್ರಚಿತ್ತದಿಂದ ಶಬ್ದ ಮಾಡದೆ ಮೂರು
ಬಾರಿ ಪವಿತ್ರ ಜಲದಿಂದ ಮಾಡಿದ ಆಚಮನದಿಂದ ದೇವತೆಗಳು
ತೃಪ್ತರಾಗುತ್ತಾರೆ.

• ಒಂದನೆಯ ಆಚಮನದಿಂದ ಋಗ್ವೇದವೂ,


• ಎರಡನೆಯದರಿಂದ ಯಜುರ್ವೇದವೂ,
• ಮೂರನೆಯ ಆಚಮನದಿಂದ ಸಾಮವೇದವೂ ತೃಪ್ತಿಗೊಳ್ಳುವುದು
ಎನ್ನಲಾಗಿದೆ.

ಓಷ್ಠಗಳ ಮಾರ್ಜನದಿಂದ ಇತಿಹಾಸ ಪುರಾಣಗಳೂ, ಕಣ್ಣುಗಳ ಸ್ಪರ್ಶದಿಂದ ದಿಗ್


ದೇವತೆಗಳೂ, ಭುಜಸ್ಪರ್ಶದಿಂದ ಯಮ ಕುಬೇರ ಇಂದ್ರ ವರುಣ ದೇವತೆಗಳೂ,
ತೃಪ್ತರಾಗುತ್ತಾರೆ. ಅಂಗುಷ್ಠ ತರ್ಜನಿಗಳಿಂದ ನೇತ್ರ, ಅಂಗುಷ್ಠ ಅನಾಮಿಕಗಳಿಂದ
ನಾಸಿಕ, ಅಂಗುಷ್ಠ ಕನಿಷ್ಠಿಕೆಗಳಿಂದ ಕಿವಿ, ಅಂಗುಲಿಗಳಿಂದ ಭುಜವನ್ನೂ
ಅಂಗುಷ್ಠದಿಂದ ನಾಭಿ ಮಂಡಲವನ್ನೂ ಎಲ್ಲಾ ಅಂಗುಲಿಗಳಿಂದ ತಲೆಯನ್ನೂ
ಸ್ಪರ್ಶಿಸತಕ್ಕದ್ದು.ಆಚಮನ ಜಲವು ಹೃದಯಕ್ಕೆ ತಲಪುವ ಮಿತಿಗೆ ಮಾತ್ರ
ಬ್ರಾಹ್ಮಣನು ಪ್ರಾಶನ ಮಾಡ ತಕ್ಕದು. ಕಂಠದವರೆಗೆ ಕ್ಷತ್ರಿಯನೂ, ವೈಶ್ಯನು
ಕೇವಲ ಜಲಪ್ರಾಶನದಿಂದ ಮಾತ್ರ ಪುನೀತನಾಗುವನು.

ಕುತ್ತಿಗೆಯಿಂದ ಬಲಕೈಯ ಕೆಳಗಡೆ ಯಜ್ಞೋಪವೀತವಿರುವಾಗ (ಸವ್ಯ)


ಉಪವೀತೀ ಎನಿಸುವನು. ಇದಕ್ಕೆ ವಿಪರೀತವಾಗಿ ಎಡದ ಕೈಯ ಕೆಳಗಡೆ
ಯಜ್ಞೋಪವೀತವಿದ್ದರೆ ‘ಪ್ರಾಚೀನಾ ವೀತಿ’ ಯುಳ್ಳವನು. ಮಾಲಾಂಕಾರದಲ್ಲಿ
ಕಂಠದಲ್ಲಿ ಯಜ್ಞೋಪವೀತವಿದ್ದಾಗ ‘ನೀವೀತಿ’ ಎನ್ನಲಾಗಿದೆ.

ಮೇಖಲಾದಂಡ ಯಜ್ಞೋಪವೀತಗಳು ಭಗ್ನಗಳಾದಾಗ ನೀರಿನಲ್ಲಿ ಬಿಡತಕ್ಕದ್ದು.


ಬ್ರಾಹ್ಮಣನ ಹಸ್ತರೇಖಗಳು ನದಿಗಳಂತೆ ಪವಿತ್ರಗಳಾಗಿವೆ. ಅಂಗುಲಿಗಳ
ಪರ್ವಗಳು ದೇವಪರ್ವಗಳೆಂದೂ ಗ್ರಹಿಸಬೇಕು. ಆದ್ದರಿಂದ ಬಲಗೈಯು
ಸರ್ವದೇವಮಯವಾಗಿದೆ.

ಮೇಲೆ ವಿವರಿಸಿದಂತೆ ಆಯಾಯ ಸಂದರ್ಭಗಳಲ್ಲಿ ಆಚಮನ ಮಾಡುವುದರಿಂದ


ಸ್ವರ್ಗಪ್ರಾಪ್ತಿ ಎನ್ನಲಾಗಿದೆ.

“ಯಾಸ್ತ್ವೇತಾ ಕರಮಧ್ಯೇ ತು ರೇಖಾವಿಪ್ರಸ್ಯ ಭಾರತ |


ಗಂಗಾದ್ಯಾಃ ಸರಿತಃ ಸರ್ವಾಃ ಜ್ಞೇಯಾ ಭಾರತಸತ್ತಮ |
ಯಾನ್ಯಂಗುಲೀಷುಪರ್ವಾಣಿ ಗಿರಯಸ್ತಾನಿ ವಿದ್ಧಿ ಮೇ |
ಸರ್ವದೇವಮಯೋ ರಾಜನ್ ಕರೋ ವಿಪ್ರಸ್ಯ ದಕ್ಷಿಣಃ ||”

ಗಾಯತ್ರಿ ಮಂತ್ರ 

ಬ್ರಾಹ್ಮಣ್ಯಕ್ಕೆ ಮೂಲ(foundation)  ಗಾಯತ್ರೀ. ಮೂಲ ಮೂಲಿಯಲ್ಲಿ


ಸೇರಿದರೆ, ಮೂಲವನ್ನು ಆಶ್ರಯಿಸಿದ ಮಹಲ್ ಕೆಳಕ್ಕುರುಳುವದರಲ್ಲಿ
ಸಂಶಯವೇ ಇಲ್ಲ. ಆ ಕಾರಣದಿಂದಾಗಿಯೇ ಇಂದಿನ ಬ್ರಾಹ್ಮಣ ಯುವಕರು
ಕೆಳಕ್ಕುರಳಿದ್ದು. ಸಕಲಕ್ಕೆ ಮೂಲವಾದ "ಗಾಯತ್ರಿ"ಯನ್ನು  ಮೂಲೆಗುಂಪು
ಮಾಡಿದ್ದೇ ಮೂಲಕಾರಣ. 

ಇಂದು ಪುನಹ ಗಾಯತ್ರಿಯನ್ನು ಮೂಲೆ ಇಂದ ಹೊರತರಬೇಕಾದ ಆವಷ್ಯಕತೆ


ಇದೆ. ತರುವ ಮನವರಿಕೆ ಯುವಕರಿಗೆ ಆಗಬೇಕು. ಅನೇಕ ಜ್ಙಾನಿಗಳ
ಹಿತೋಪದೇಶದಿಂದ ಆ ಕೆಲಸವೂ ಆಗ್ತಾ ಇದೆ. 

ಉಪನಿಷತ್ತು ಬಹಳ ಸುಂದರವಾಗಿ "ಗಾಯತ್ರಿ"ಯ ಮಹತಿಯನ್ನು ತಿಳಿಸುತ್ತದೆ. 

೧) ಗಾಯತ್ರೀ ಜಪ ದೇವರಿಗೆ ಭೋಜನದಂತೆ. ಅಂದರೆ ಗಾಯತ್ರೀ ದೇವರಿಗೆ


ಅನ್ನವಿದ್ದಂತೆ. ಅನ್ನದಿಂದ  ನಮಗೆ ಹೇಗೆ ಪಪ್ರೀತಿಯೋ,  ಹಾಗೆ ದೇವರಿಗೆ
ಗಾಯತ್ರೀಜಪದಿಂದಲೇ ಪ್ರೀತಿ. ಪ್ರೀತನಾದ ದೇವರು ಎಲ್ಲಿದ್ದರೂ ನಾವು
ಮಹಾಬಲಿಷ್ಠರೇ. ಅಪ್ರೀತನಾದ ದೇವರು ಪಕ್ಕದಲ್ಲಿ ಇದ್ದರೂ ನಾವು ಮಹಾ
ದುರ್ಬಲರೇ. 

೨) ಗಾಯಂತಂ ತ್ರಾಯತೇ ಯಸ್ಮಾತ್

ಗಾಯತ್ರೀ ತ್ವಂ ತತಸ್ಮೃತಃ" ಯಾರು ಗಾಯತ್ರಿಯನ್ನು ನಿರಂತರ


ಕೊಂಡಾಡುತ್ತಾರೆಯೊ ಅವರನ್ನು ಯಾವಕಾಲಕ್ಕೂ ಕಾಪಾಡದೇ ಇರುವದಿಲ್ಲ.
ಆದ್ದರಿಂದಲೇ ಈ ಮಂತ್ರಕ್ಕೆ ಗಾಯತ್ರೀ ಎಂದು ಹೆಸರು. 

ಇಂದಿನ ತಮ್ಮ ರಕ್ಷಣೆ ತಮ್ಮಿಂದ ಆಗಲು ಸಾಧ್ಯವೇ ಇಲ್ಲ ಎಂದು


ಮನವರಿಕೆಯಾಗಿ, ಅನಾಥರಂತೆ ಅಲೆಮಾರಿಗಳ ತರಹ ಬಿದ್ದಿದ್ದರೂ, ಈಗಿನ
ಯುವಕರಿಗೆ ಇರುವ  ಗಾಯತ್ರೀಯ ಬಗ್ಗೆ ತಾತ್ಸಾರವೇನಿದೆ ನಿಜವಾಗಲೂ
ಹಾಸ್ಯಾಸ್ಪದ (shame) ಅನಿಸುವಂತಹದ್ದೇ .

೨) "ಅಲೇಪಂ ಸರ್ವಪಾಪಾಣಾಂ ವಿಶೇಷೇಣ ಪ್ರತಿಗ್ರಹಾತ್"

ಕಂಡದ್ದು ಬೇಡುವದು. ಕಂಡದ್ದು ತಿನ್ನುವದು.  ಕಂಡದ್ದು ಅನುಭವಿಸುವದು ಇದು


ಯುವಕರ ಸಾಮಾನ್ಯ ಪ್ರವೃತ್ತಿ. ಇದು ಒಂದಾದರೆ "ಧರ್ಮದ ಫಲಬೇಕು, ಧರ್ಮ
ಮಾಡಲಾರೆ" ಇದು ಮತ್ತೊಂದು. ಇವೆರಡೂ ಮಹಾ ಅನರ್ಥಾಕಾರಿ,
ಮಹಾಮಾರಿ ಎಂದೂ ,  ಅದೂ ತಮಗೆ ಎಂಬ ಪರಿಜ್ಙಾನವೂ ಅಷ್ಟೇ ಅವರಿಗೆ
ಮನವರಿಯಾಗಬೇಕು. 

ಕಂಡದ್ದು ಬೇಡುವದಿರಿಂದ ಪಾಪ. ಕಂಡದ್ದು ತಿನ್ನುವದರಿಂದ ಪಾಪ. ಕಂಡದ್ದು


ಅನುಭವಿಸುವದರಿಂದ ಮಹಾಪಾಪ. ಪಾಪವಿರುವಾಗ ಬೇಡಿದ್ದು ಸಿಗುವದು
ದುರ್ಲ್ಲಭ. ಸಿಕ್ಕಿದ್ದು ಅನುಭವಿಸುವದು ಕಷ್ಟದ ಮಾತೇ . ಪಾಪಕಳೆದು ಕೊಳ್ಳಲು
ಸುಲಭ ಮಾರ್ಗ ಗಾಯತ್ರೀ. 

೩) ಸಂಹರ್ತಾ ಸರ್ವದೋಷಾಣಾಂ ಅಗ್ನಿಸ್ಥಃ ಸರ್ವದಾಹಕಃ"

ಯುವಕರ ಏಳಿಗೆಗೆ ಪ್ರತಿಬಂಧಕವಾದ ಪಿತೃದೋಷ, ಮಾತೃದೋಷ,


ಗ್ರಹದೋಷ, ಪ್ರೇತದೋಷ, ಸ್ತ್ರೀದೋಷ, ಕುಲದೇವತಾ ದೋಷ, ಸರ್ಪದೋಷ,
ಬ್ರಾಹ್ಮಣದೋಷ, ಸಜ್ಜನದೋಷ, ದೇವತಾ ದೋಷ, ಗುರುದೋಷ,
ಬ್ರಹ್ಮಹತ್ಯಾದಿ ಪಾಪಗಳಿಂದ ಉಂಟಾದ ದೋಷ, ಎಲ್ಲ ದೊಇಷಗಳನ್ನೂ
ಭಸ್ಮಮಾಡಿ ಹಾಕುವ ಏಕೈಕ ಬ್ರಹ್ಮಾಸ್ತ್ರ "ಗಾಯತ್ರೀ" ಮಾತ್ರ. ಇದು
ಶ್ರೀಮದಚಾರ್ಯರ ಮಾತು. ಪಾಲಿಸುವದು ನಮಗೆ ಬಿಟ್ಟಿದ್ದು. ಪಾಲಿಸಿದವರು
ಜಗತ್ತಿನಲ್ಲಿಯೇ ಮಾನ್ಯರು. ಸುಖಿಗಳು. ಸಮೃದ್ಧರು.

ಅಗ್ನಿಹೋತ್ರ : ಏನು, ಏಕೆ, ಹೇಗೆ?

ಅಗ್ನಿಹೋತ್ರ : ಪರಿಸರವನ್ನು ಶುದ್ಧಗೊಳಿಸಿಕೊಳ್ಳಲು ಸುವರ್ಣಮಾರ್ಗ

ನಮ್ಮ ಸನಾತನ ಸಂಸ್ಕೃತಿಯ ಅಡಿಪಾಯವಿರುವುದು ಯಜ್ಞ, ಯಾಗಗಳಲ್ಲಿ.


ಯಜ್ಞ ಯಾಗಗಳೆಂದರೆ ಕೇವಲ ಒಂದು ಹೋಮವನ್ನು ಆಚರಿಸುವುದು,
ಮನಸ್ಸಿನ ಕಾಂಕ್ಷೆಗಳನ್ನು ದೇವರಮುಂದಿಟ್ಟು ಅದನ್ನು ಫಲಿಸಿಕೊಳ್ಳುವುದು
ಎಂಬಷ್ಟು ಸುಲಭವಾಗಿ ವ್ಯಾಖ್ಯಾನಿಸುವ ಸಂಗತೆಯಲ್ಲ. ಅದರಲ್ಲಿ
ಅಡಕವಾದದ್ದು ಮುಖ್ಯವಾಗಿ ತ್ಯಾಗ ಮನೋಭಾವ. ನನ್ನದಲ್ಲ, ಇದು
ಸಂಪೂರ್ಣವಾಗಿ ನಿನಗೆ ಅರ್ಪಿತ ಎಂಬ ಭಾವನೆಯಿಂದ ನಡೆದ ಅನೇಕಾನೇಕ
ಹೋಮಗಳ ಫಲವೇ ನಮ್ಮೆಲ್ಲರ ಅಸ್ತಿತ್ವ, ಈ ಪುಣ್ಯ ಭೂಮಿಯಲ್ಲಿ ಜನನ ಎಂಬ
ಮಾತು ಆಗಿಂದ್ದಾಗ್ಗೆ ಕೇಳಿಬರುತ್ತದೆ. ದಿನಗಟ್ಟಲೆ ನಡೆಯುವ ಹೋಮಗಳನ್ನು
ಹೆಸರಿಸಬಹುದಾದರೂ ಹೋಮಗಳೆಲ್ಲವೂ ಹಿಂದೂಗಳ ಒಂದು ವರ್ಗಕ್ಕಷ್ಟೇ
ಸೇಮಿತ ಎಂದು ಅವನ್ನು ಅನುಸರಿಸಲು ಕಟ್ಟುಪಾಡುಗಳಿವೆಯೆಂದು ಕೆಲವರು
ಅನಾಸಕ್ತಿ ತೋರಬಹುದು. ಆದರೆ ನಮ್ಮಲ್ಲೊಂದು ಹೋಮವಿದೆ. ಈ ಹೋಮ
ಮಾಡಲು ಸಮಯವೂ ತಗಲುಗುದಿಲ್ಲ. ಯಾರಾದರೂ ಮಾಡಬಹುದು. ಹಾಗೂ
ಅಂತಹ ಹೋಮದಿಂದ ಕ್ರಮೇಣ ಉತ್ತಮ ಪರಿಣಾಮಗಳನ್ನು
ಕಂಡುಕೊಳ್ಳಬಹುದು ಎಂದು ಸಾಕಷ್ಟು  ಚರ್ಚೆ, ಪರೀಕ್ಷೆಗಳ ನಂತರ
ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಿದ್ದಾರೆ. ೬೪ ವಿದ್ಯೆಗಳಲ್ಲಿ ಒಂದದ ಈ ಹೋಮದ
ಹೆಸರೇ ಅಗಿಹೋತ್ರ.

ನಮ್ಮ ವೈದಿಕ ಪರಂಪರೆಯಲ್ಲಿ ಋಷಿಮುನಿಗಳು ಅನುಸರಿಸುತ್ತಿದ್ದ,


ಪ್ರತಿಯೊಬ್ಬರೂ ನಡೆಸಬಹುದಾದುದು ಅದರಿಂದಾಗುವ ಸತ್ಪರಿಣಾಮಗಳು
ಹೆಚ್ಚು ಎಂದು ಹೇಳಲ್ಪಡುತ್ತಿದ್ದುದು ಈ ಅಗ್ನಿಹೋತ್ರದ ಬಗ್ಗೆಯೇ. ಮುಂಚೆಲ್ಲ
ಹಲವಾರು ಜನರು ನಡೆಸುತ್ತಿದ್ದ ಅಗ್ನಿಹೋತ್ರಕ್ಕೆ ಕ್ರಮೇಣ ಜನರ
ಭಾಗಗೊಳ್ಳುವಿಕೆ ಇಳಿಮುಖವಾಗಿತ್ತು. ಅಗ್ನಿಹೋತ್ರವು ಚರ್ಚೆಗೆ ಗ್ರಾಸವಾದದ್ದು
ಭೋಪಾಲ್ ಅನಿಲ ದುರಂತದ ನಂತರ. ಡಿಸೆಂಬರ್ ೧೯೮೪ರಲ್ಲಿ
ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‍ನಿಂದ ಹೊರಬಂದ ಮಿಥೈಲ್
ಐಸೊಸಯನೈಡ್  ಸುಖನಿದ್ರೆಯಲ್ಲಿದ್ದ ಭೋಪಾಲದ ಜನರನ್ನು ಸಹಸ್ರ
ಸಂಖ್ಯೆಯಲ್ಲಿ ಕೊಂದಿತು. ಮಡಿದವರು, ಅಂಗಾಗಗಳು ಊನವಾದವರು,
ನಾನಾ ರೋಗಗಳಿಗೆ ತುತ್ತಾದವರು ಅಸಂಖ್ಯ. ಆದ್ದರಿಂದಲೇ ಈ ಅನಿಲ
ದುರಂತವನ್ನು ಮನುಕುಲದ ಮೇಲೆ ನಡೆದ ಅತಿದೊಡ್ಡ ದುರಂತಗಳಲ್ಲಿ ಒಂದು
ಎಂದು ಪರಿಗಣಿಸಲಾಗಿದೆ. ಆದರೆ ವಿಚಿತ್ರವೆಂದರೆ ಈ ದುರ್ಘಟನೆ
ನಡೆದಾಗ್ಯೂ, ಕಾರ್ಖಾನೆಯ ಒಂದು ಮೈಲಿ ದೂರದಲ್ಲಿದ್ದ ಎರಡು ಮನೆಗಳನ್ನು
ಕಿಂಚಿತ್ತೂ ಹಾಳುಗೆಡವಲು ಆಗಲೇ ಇಲ್ಲ. ಅದಕ್ಕೆ ಕಾರಣವು ದಿನನಿತ್ಯ ಆ
ಮನೆಗಳಲ್ಲಿ ನಡೆಯುತ್ತಿದ್ದ ಅಗ್ನಿಹೋತ್ರ ಹೋಮ ಎಂಬ ಮಾತು
ಪ್ರಚಲಿತವಾಗತೊಡಗಿತು. ಆ ಮನೆಯಲ್ಲಿ ವಾಸಿಸುವವರು ವಿಜ್ಞಾನಿಗಳಿಗೆ
ಸವಾಲೆಸೆದಿದ್ದರು.

೧೯೮೬ರಲ್ಲಿ ಅಂದಿನ ಯುಎಸ್‍ಎಸ್‍ಆರ್ ನ ಚರ್ನೋಬಿಲ್ (Chernobyl)


ಎಂಬಲ್ಲಿ ಪರಮಾಣು ವಿಸ್ಫೋಟದ ನಂತರದ ವಿಕಿರಣದಿಂದ ಯೂರೋಪ್
ಖಂಡದ ದೇಶಗಳಲ್ಲಿಯೂ ದುಷ್ಪರಿಣಾಮಗಳು ಕಂಡುಬಂತು. ಇತ್ತೀಚೆಗಿನ ವಿಶ್ವ
ಆರೋಗ್ಯ ಸಂಸ್ಥೆಯ ವರದಿಯನುಸಾರ ಈ ವಿಕಿರಣದಿಂದ ಸುಮಾರು
೬೦,೦೦೦ ಜನರು ಕ್ಯಾನ್ಸರ್  ಖಾಯಿಲೆಯಿಂದ ಬಳಲಿ ಸತ್ತಿದ್ದಾರೆ.
ಚರ್ನೋಬಿಲ್ ನ ೩೦ಕಿಮಿ ಸುತ್ತಲಿನ ಜಾಗವನ್ನು ಈಗ ವಾಸಿಸಲು
ಯೋಗ್ಯವಲ್ಲವೆಂದು ಅಲ್ಲಿಂದ ಜನರನ್ನು ಬೇರೆಡೆಗೆ
ಸ್ಥಳಾಂತರಿಸಿದ್ದಾರೆ.ಚರ್ನೋಬಿಲ್ ದುರಂತದ ನಂತರ ಆಸ್ಟ್ರಿಯಾ ಸರ್ಕಾರವು
ಅಲ್ಲಿನ ರೈತರುಗಳಿಗೆ ತಮ್ಮ ಹಸುಗಳ ಹಾಲನ್ನು ವಿಕಿರಣಶೀಲಕ್ಕಾಗಿ
ಪರೀಕ್ಷಿಸಬೇಕೆಂದು ಆದೇಶಿಸಿತ್ತು. ಎಲ್ಲರೂ ಪರೀಕ್ಷೆಗೆ ಒಳಪಡಿಸಿದಾಗ ಕೇವಲ
ಕರಿನ್ ಹರ್ಷಲ್ ಎಂಬ ರೈತರ ಆವರಣದಲ್ಲಿ ಬೆಳೆದ ಹುಲ್ಲು, ಆ ಹುಲ್ಲನ್ನು
ಸೇವಿಸಿದ್ದ ಹಸುಗಳ ಹಾಲಲ್ಲಿ ವಿಕಿರಣಶೀಲದ ಅಂಶಗಳು ತೋರಿಬರಲಿಲ್ಲ.
ಉಳೆದಲ್ಲ ಹಾಲಿನ ಮಾದರಿಗಳು(ಗೋವುಗಳು ವಿಕಿರಣ ಭರಿತ ಲಭ್ಯ ಹುಲ್ಲನ್ನು
ಸೇವಿಸಿದ್ದರಿಂದ) ವಿಕಿರಣಶೀಲವಾಗಿತ್ತು.

ಭೋಪಾಲದ ಅನಿಲ ದುರಂತದಿಂದ ಯಾವುದೇ ದುಷ್ಪರಿಣಾಮ ಕಾಣದ ಆ


ಎರಡು ಮನೆಗಳು ಹಾಗೂ ಆಸ್ಟ್ರಿಯಾದ ಕರಿನ್ ಹರ್ಷಲ್‍ರ ಹಸುಸಾಕಣೆ
ಪ್ರದೇಶಗಳಲ್ಲಿ ಸಾಮ್ಯವಿದ್ದುದು ಅಗ್ನಿಹೋತ್ರದ ಪದ್ಧತಿ ನಡೆಸುತ್ತಿದ್ದುದು.
ಹಾಗಾದರೆ ಈ ಅಗ್ನಿಹೋತ್ರವೆಂದರೇನು? ಅಗ್ನಿಯ ಮೂಲಕ ವಾತಾವರಣವನ್ನು
ಶುದ್ಧೀಕರಿಸುವ ಪ್ರಕ್ರಿಯೆಯೇ ಅಗ್ನಿಹೋತ್ರದ ಮೂಲ ತತ್ತ್ವವಾಗಿರುತ್ತದೆ.
ಸೂರ್ಯ ಉದಯವಾಗುವ ಸಮಯಕ್ಕೆ, ಸೂರ್ಯ ಮುಳುಗುವ ಸಮಯಕ್ಕೆ
ನಮ್ಮ ದೇಹದಲ್ಲಿ, ಪ್ರಾಣಿ,ವೃಕ್ಷಗಳಲ್ಲಿ ಹೊಸ ಕೋಶಗಳು ಹೆಚ್ಚಿನ ಪ್ರಮಾಣದಲ್ಲಿ
ಹುಟ್ಟುತ್ತವೆ ಎಂದು ಜೀವವಿಜ್ಞಾನಿಗಳು ನಿರೂಪಿಸಿದ್ದಾರೆ. ಅದೇ ಸಮಯದಲ್ಲಿ
ಸೂರ್ಯನ ಕಿರಣಗಳಿಗೆ ಅತಿ ಹೆಚ್ಚು ಶಕ್ತಿಯಿರುತ್ತದೆಂಬುದು ನಾವೆಲ್ಲರೂ
ತಿಳಿದುಕೊಂಡಿರುವ ಸತ್ಯ. ಬ್ರಾಹ್ಮಿ (ಸೂರ್ಯೋದಯ),ಗೋಧೂಳಿ
(ಸೂರ್ಯಾಸ್ತ) ಸಮಯಗಳಲ್ಲಿ ಕೆಲ ಮಂತ್ರಗಳನ್ನು ಪಠಿಸಿ, ಅಗ್ನಿಗೆ ಆಹುತಿ
ನೀಡಬೇಕು, ಅದರಿಂದ ಧನಾತ್ಮಕ ತರಂಗಗಳು ಸೃಷ್ಟಿಗೊಂಡು, ಮನುಷ್ಯನ
ಮನಸ್ಸುಗಳು ಧನಾತ್ಮಕ ಚಿಂತನೆ ನಡೆಸುತ್ತವೆ ಎಂಬುದು ಸಾವಿರಾರು
ವರ್ಷಗಳ ಹಿಂದಿನ ನಮ್ಮ ಪೂರ್ವಜರು ಅರಿತುಕೊಂಡು, ಅವರಿಗೆ ಸತ್ಯದ
ಸಾಕ್ಷಾತ್ಕಾರವೂ ಆಗಿತ್ತು. "Heal the atmosphere and the
atmosphere will heal you" (ವಾತಾವರಣವನ್ನು ಶುದ್ಧಗೊಳಿಸಿದರೆ,
ವಾತಾವರಣವು ನಿಮ್ಮನ್ನು ಗುಣಪಡಿಸುತ್ತದೆ) ಎಂಬ ಮೂಲ ತತ್ತ್ವವನ್ನು
ವೇದಗಳಲ್ಲಿ ಹೇಳಲಾಗಿದೆ ಎಂಬುದನ್ನು ಭಾರತದ ವಸಂತ ಪರಾಂಜಪೆಯವರು
ದೇಶವಿದೇಶಗಳಲ್ಲಿ ತಮಗೆ ಲಭಿಸಿದ್ದ ಜ್ಞಾನವನ್ನು ಹರಡಲು ಮೂಂದಾದರು.
ಅವರ ಅನುಯಾಯಿಗಳು ವಿಶ್ವದೆಲ್ಲೆಡೆ ಈಗ ಅಗ್ನಿಹೋತ್ರವನ್ನು ನಿತ್ಯ ಯಜ್ಞವಾಗಿ
ನಿರ್ವಹಿಸುತ್ತಿದ್ದಾರೆ. ಹಸುವಿನ ಸಗಣಿಯಿಂದ ಮಾಡಿದ ಬೆರಣಿ, ತುಪ್ಪ,
ಅಕ್ಕಿಯನ್ನು ಸೂರ್ಯೋದಯ, ಸೂರ್ಯಾಸ್ತವಾಗುವ ಸಮಯಕ್ಕೆ ಸರಿಯಾಗಿ
ತಾಮ್ರ/ಚಿನ್ನದ ಕುಂಡದಲ್ಲಿ ತಯಾರಿಸಿದ ಅಗ್ನಿಗೆ ಆಹುತಿ ನೀಡಬೇಕು. ಜೊತೆಗೆ
ಈ ಆಹುತಿಗೆ ಸರಿಯಾಗಿ ಕೆಲ ಮಂತ್ರ ಪಠನವನ್ನೂ ಮಾಡಬೇಕು.
ಅಗ್ನಿಹೋತ್ರವನ್ನು ಮಾಡಿದಾಗ, ಅದರಿಂದ ಬರುವ ಹೊಗೆ, ವಿಕಿರಣ
ಹೊರಚೆಲ್ಲುವ ವಸ್ತುವನ್ನು ಆಕರ್ಷಿಸಿ ಅದರ ಮೂಲ ಪ್ರವೃತ್ತಿಯಾದ
ವಿಕಿರಣಶೀಲತೆಯನ್ನು ತಟಸ್ಥಗೊಳಿಸುತ್ತದೆ ಎಂಬುದು ಅಗ್ನಿಹೋತ್ರಕ್ಕೆ ಇರುವ
ಸೈದ್ಧಾಂತಿಕ ಹಾಗೂ ವೈಜ್ಞಾನಿಕ ಹಿನ್ನೆಲೆ. (ಚರ್ನೊಬಿಲ್‍ನಲ್ಲಿ ವಿಕಿರಣ
ಉಂಟಾದಾಗ ವಿಚಿತ್ರವೆಂದರೆ ಕೆಲ ಕೀಟಗಳು ಸಾಯದೇ ತಾವೂ
ವಿಕಿರಣಶೀಲವಾದದ್ದು. ಇದರ ಪರಿಣಾಮವನ್ನು ಜಗತ್ತು ನೋಡುತ್ತಿದೆ, ಬಹುಷಃ
ಇನ್ನೂ ನೋಡಬಹುದು) ಇನ್ನು ವೈಜ್ಞಾನಿಕವಾಗಿ ಇಂಗಾಲದ ಡೈ-ಆಕ್ಸಿಡ್
ಹೊರಸೂಸುವ ಅಗ್ನಿಹೋತ್ರ ತಪ್ಪಲ್ಲವೇ? ಪರಿಸರಕ್ಕೆ ವ್ಯತಿರಿಕ್ತವಲ್ಲವೇ ಎಂಬ
ಪ್ರಶ್ನೆಗೆ ಉತ್ತರ - ಅಗ್ನಿಹೋತ್ರದಿಂದ ಸೃಷ್ಟಿಯಾಗುವ ತರಂಗಗಳು ಕೇವಲ
ಮನೆಯಲ್ಲದೇ ಸುತ್ತಲಿನ ಗಿಡ ಮರಗಳಿಗೆ ಆ ತರಂಗಗಳು
ದ್ಯುತಿಸಂಶ್ಲೇಷಣೆಯನ್ನು (photosynthesis) ಹೆಚ್ಚಿಸಿ ಇಂಗಾಲದ ಡೈ-
ಆಕ್ಸೈಡ್‍ಅನ್ನು ಹೀರಿ ಆಮ್ಲಜನಕವನ್ನು ಹೊರಹಾಕುತ್ತವೆ.

ರಷ್ಯಾ, ಜರ್ಮನಿ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವಾರು


ದೇಶಗಳಲ್ಲಿ ಅಗ್ನಿಹೋತ್ರವು ಸಾಮೂಹಿಕವಾಗಿ ಇಲ್ಲವೇ,ಆಸಕ್ತಿಯುಳ್ಳವರ
ಸ್ಥಳಗಳಲ್ಲಿ ನಡೆಯುತ್ತಿವೆ. ಅದರಿಂದ ಬರುವ ಭಸ್ಮವನ್ನು ದೈಹಿಕ, ಶಾರೀರಿಕ
ಸಮಸ್ಯೆಗಳಿಗೆ ಮದ್ದಾಗಿ ಕೆಲ ವೈದ್ಯರು ಸೂಚಿಸುತ್ತಿದ್ದಾರೆ. ಅಗ್ನಿಹೋತ್ರದ
ಭಸ್ಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಬೇಕು ಎಂದು ವಿಶ್ವದ ಹಲವಾರು
ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆ ಭಸ್ಮವನ್ನು ಮುಂದೆ ಆಮದು
ಮಾಡುಕೊಳ್ಳುವ ಕೆಲಸವೂ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಆ
ದೃಷ್ಟಿಯಿಂದಲೂ ಭಾರತದ ಕಡೆಗೆ ಮುಖ ಮಾಡುವ ಸಾಧ್ಯತೆಗಳು ಸಧ್ಯಕ್ಕೆ
ಹೆಚ್ಚಿದೆ ಎಂದು ತೋರಿಸಲಾಗಿದೆ. ಕಾರಣ ಭಾರತದಲ್ಲಿರುವ ಅಗ್ನಿಹೋತ್ರದ
ಬಗೆಗಿನ ಜ್ಞಾನ ಹಾಗೂ ಅದನ್ನು ನಿಷ್ಠೆಯಿಂದ ಅನುಸರಿಸುವ ಆಸ್ತಿಕರ ಸಂಖ್ಯೆ.

(Photo taken at Agnihotra deeksha program in


Malleshwaram, Bengaluru organised by Sri Sai Bhiksha
Kendra where deeksha was given to 500 plus devotees
who were interested in Agnihotra)

ಇನ್ನು ಅಗ್ನಿಹೋತ್ರಕ್ಕೆ ಬಳಸುವ ಕುಂಡವು ತಾಮ್ರದ್ದೋ, ಚಿನ್ನದ್ದೋ ಆದರೆ


ಉತ್ತಮವೆಂದು ವಾದಿಸುವ, ಹಾಗೂ ಹಿಂದೆಲ್ಲಾ ಬಳಸುತ್ತಿದ್ದುದು ತಾಮ್ರ/ಚಿನ್ನದ
ಕುಂಡಗಳೇ ಎಂದು ಹೇಳುವವರಿದ್ದಾರಾದರೂ, ಇಟ್ಟಿಗೆಯ ಕಲ್ಲುಗಳನ್ನು ಚಿಕ್ಕ
ಹೋಮಕುಂಡದ ರೀತ್ಯ ಕಟ್ಟಿಕೊಂಡು ಮರಳಲ್ಲಿ ಅಗ್ನಿಹೋತ್ರ ಮಾಡುವುದು
(ಕಾರಣ ಚಿನ್ನ, ತಾಮ್ರ ಏಕಧಾತು ಪದಾರ್ಥವಾದರೆ ಮರಳು
ಬಹುಧಾತುಗಳನ್ನು ಹೊಂದಿದೆ) ಮತ್ತೂ ಉತ್ತಮವೆಂದು ನಿರೂಪಿಸುವವರು
ಇದ್ದಾರೆ.

ಅಗ್ನಿಹೋತ್ರದ ಪರಿಣಾಮಗಳು ಅಧ್ಯಾತ್ಮಿಕವಾಗಿ, ಪರಿಸರದ ಶುಚಿತ್ವಕ್ಕಾಗಿ,


ದೈಹಿಕ, ಮಾನಸಿಕ ರೋಗಗಳಿಗೆ ಮದ್ದಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು
ಅಗ್ನಿಹೋತ್ರವನ್ನು ಮಾಡುತ್ತಿರುವವರ ಸಮರ್ಥನೆ. ಕೆಲ ಸಂಘಟನೆಗಳು ತಮ್ಮ
ಸೇವಾ ಕಾರ್ಯಗಳನ್ನು ಅಗ್ನಿಹೋತ್ರದಿಂದಲೇ ಮಾಡುತ್ತಿವೆ. ಉದಾಹರಣೆಗೆ
ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಹಿಂದೂ ಆಧ್ಯಾತ್ಮ ಮತ್ತು ಸೇವಾ
ಮೇಳದಲ್ಲಿ  ತಮ್ಮ ಮಳಿಗೆಯಲ್ಲಿ ಅನಂತ ಭಾರತ ಚಾರಿಟಬಲ್ ಟ್ರಸ್ಟ್
ಹೇಳಿಕೆಯ ಪ್ರಕಾರ, ಎಚ್‍ಐವಿ ಪೀಡಿತರು ತಮ್ಮ ಸಂಸ್ಥೆಯ ಮೂಲಕ ಮಾಡಿದ
ನಿತ್ಯ  ಅಗ್ನಿಹೋತ್ರದ ವಿಧಿಯಿಂದಾಗಿ ತಮ್ಮ ದೇಹದಲ್ಲಿದ್ದ ಏಡ್ಸ್ ವೈರಾಣುಗಳು
ಇಳಿಮುಖಗೊಂಡಿವೆ. ಅಲ್ಲದೇ ಬೆಂಗಳೂರಿನಲ್ಲಿ ನಡೆದ ಒಂದು ಅಗ್ನಿಹೋತ್ರದ
ದೀಕ್ಷೆಯ ಕಾರ್ಯಕ್ರಮದಲ್ಲಿ ನೆರೆದಿದ್ದ ನಿತ್ಯ ಅಗ್ನಿಹೋತ್ರಿಗಳು ತಮ್ಮ ಧನಾತ್ಮಕ
ಚಿಂತನೆಗಳು ಹೆಚ್ಚಿದ್ದ ಪ್ರಸಂಗಗಳನ್ನು ನಮ್ಮ ಮುಂದೆ ಹೇಳಿಕೊಂಡರು.
ಕೆಲವರು ಅಗ್ನಿಹೋತ್ರದ ವಿಧಿಯಿಂದ ಬಂದ ಭಸ್ಮವನ್ನು ತಮ್ಮ
ಚರ್ಮರೋಗಗಳ ನಿವಾರಣೆಗೆ ಬಳಸಿದ್ದರು( ಗೋಮಯಕ್ಕೆ ವೈದ್ಯಕೀಯ
ಉಪಯುಕ್ತತೆ ಹಲವಷ್ಟು ಎಂಬುದು ವಿವಾದಾತೀತ) ಊಟಿಯಲ್ಲಿ ಚಹಾ
ತೋಟವನ್ನು ನಿರ್ವಹಿಸುತ್ತಿರುವ ಸುರೇನ್ ಕುಮಾರ್ ದಂಪತಿಗಳು ತಮ್ಮ
ತೋಟದ ಮಣ್ಣಿನಲ್ಲಿ ನೀರು ಹೀರಿಕೊಳ್ಳುವ ಪ್ರಮಾಣ ಹೆಚ್ಚಾದುದು ತಾವು
ಮಾಡುವ ಅಗ್ನಿಹೋತ್ರದ ಭಸ್ಮವನ್ನು ಗಿಡದ ಬುಡಗಳಿಗೆ
ಹಾಕುತ್ತಿರುವುದರಿಂದಲೇ ಎಂದು ಖಡಾಖಂಡಿತವಾಗಿ ನುಡಿಯುತ್ತಾರೆ. ಅಲ್ಲದೇ
ಮಣ್ಣಿನ ಸವಕಳಿ, ಮಳೆ ನೀರು ಇಂಗದೇ ಹರಿದುಹೋಗುವ ಸಮಸ್ಯೆಗಳಿಗೆ
ಅಗ್ನಿಹೋತ್ರದ ಭಸ್ಮವೇ ಪರಿಹಾರವೆನ್ನುತ್ತಾರೆ. ಕೆಲ ರೈತರುಗಳು ತಮ್ಮ
ಹೊಲಗಳಲ್ಲಿ ಈಗಾಗಲೇ ಕೆಲವರ್ಷಗಳಿಂದಲೇ ಅಗ್ನಿಹೋತ್ರವನ್ನು
ಮಾಡುತ್ತಿದ್ದು, ಭಸ್ಮವನ್ನು ಹೊಲದಲ್ಲಿ ಹರಡುವುದರಿಂದ, ಬೆಳೆಗಳ ಮೇಲೆ
ಸಿಂಪಡಿಸಿದ್ದರಿಂದ, ಕ್ರಿಮಿ ಕೀಟಗಳು ಬೆಳೆ ನಾಶ ಮಾಡುತ್ತಿದ್ದ ದಿನಗಳು
ಇನ್ನಿಲ್ಲವೆಂಬ ನಿಟ್ಟುಸಿರು ಬಿಡುತ್ತಾರೆ. ಅಲ್ಲದೇ ಹೊಲದಲ್ಲಿನ ಇಳುವರಿಯೂ
ಹೆಚ್ಚಾಗಿದೆ ಎಂದು ವಾದಿಸುತ್ತಾರೆ.

ಇಂದಿನ ದಿನಗಳಲ್ಲಿ ಯಾವುದೇ ಭಾರತದ ಪುರಾತನ ಕ್ರಿಯಿಯನ್ನೂ


ವಿಜ್ಞಾನನದ ಚೌಕಟ್ಟಿನಲ್ಲಿರಿಸಿ ನಂಬಿಕೆಯನ್ನೇ ಬುಡಮೇಲು ಮಾಡುತ್ತಿರುವ
ಸಂದರ್ಭದಲ್ಲಿ, ಅಗ್ನಿಹೋತ್ರವೂ ವೈಜ್ಞಾನಿಕವಾಗಿ ಹಲವರಿಂದ ಧೃಡಪಟ್ಟಿದೆ.
ವೈಜ್ಞಾನಿಕ, ಆಧ್ಯಾತ್ಮ ಕಾರಣಗಳಿಗಾಗಿಯೇ ಅದನ್ನು ಅಭ್ಯಸಿಸುವವರ
ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಲ್ಲದೇ ಅಗ್ನಿಹೋತ್ರ
ಮಾಡಲು ಬೇಕಿರುವ ಮಂತ್ರಗಳೂ ಕ್ಲಿಷ್ಟಕರವಲ್ಲ.

ಸೂರ್ಯೋದಯದ ಹೊತ್ತಿಗೆ,
ಸೂರ್ಯಾಯ ಸ್ವಾಹಾಃ ಸೂರ್ಯಾಯ ಇದಂ ನ ಮಮ ||
ಪ್ರಜಾಪತಯೇ ಸ್ವಾಹಾಃ ಪ್ರಜಾಪತಯೇ ಇದಂ ನ ಮಮ ||

ಎಂದೂ, ಸೂರ್ಯಾಸ್ತದ ಹೊತ್ತಿಗೆ,


ಅಗ್ನಯೇ ಸ್ವಾಹಾಃ ಅಗ್ನಯೇ ಇದಂ ನ ಮಮ ||
ಪ್ರಜಾಪತಯೇ ಸ್ವಾಹಾಃ ಪ್ರಜಾಪತಯೇ  ಇದಂ ನ ಮಮ ||

ಎಂದೂ ಕುಂಡದಲ್ಲಿ ಪ್ರದೀಪನಗೊಳಿಸಿದ ಬೆರಣಿಗೆ ಎರಡು ಚಿಮಟಿಗೆಯಷ್ಟು


ಅಕ್ಕಿ, ಗೋವಿನ ತುಪ್ಪವನ್ನು ಆಹುತಿಯನ್ನು ಅರ್ಪಿಸಬೇಕಾಗುತ್ತದೆ.

ವೈಶ್ವದೇವ vaishwa deva

ಪ್ರತಿದಿನ ಊಟಕ್ಕೂ ಮುಂಚೆ. ಗೃಹಸ್ಥರು ಈ "ವೈಶ್ವದೇವ"ಯಜ್ನವನ್ನು


ಮಾಡುತ್ತಾರೆ. ಅಂದರೆ, ಅಗ್ನಿಗೆ,  ಮಾಡಿದ ಅಡಿಗೆಯ ಸ್ವಲ್ಪ ಭಾಗವನ್ನು
ಅರ್ಪಿಸುವುದು..
ಈ ಯಜ್ಞದ ಅವಶ್ಯಕತೆ ಏನು?ಅನ್ನೋದು ಭಾಳ ದಿನದಿಂದ ನನ್ನ ಕಾಡಿತ್ತು. ಆ
ನಂತರ ನಮ್ಮ ತಂದೆಯವರು ಹೇಳಿದ ಪ್ರಮಾಣವಾಕ್ಯಗಳಿಂದ
ಸ್ಫುಟವಾಯಿತು..
ಅದೇನೆಂದರೆ, ನಾವು ಸಸ್ಯಾಹಾರಿಗಳೂ, ಸಸ್ಯಗಳನ್ನು ಕೊಂದು ಆ ಪಾಪದಿಂದ
ಲೆಪಿತರಾಗಿರುತ್ತೇವೆ..
ಅದನ್ನು ಕ್ಷಮಿಸು ಎಂದು ಪ್ರಾರ್ಥನೆ ಮಾಡಿಯೇ, ಆ ಭಾಗವನ್ನು ಅಗ್ನಿಗೆ
ಅರ್ಪಿಸುವುದು..

ಅಂದ ಮೇಲೆ, ಒಂದಂತೂ ಸ್ಪಷ್ಟವಾಯಿತು.. ಕೇವಲ ಪ್ರಾಣಿವಧೆಯೊಂದೆ


ಹಿಂಸೆಯಲ್ಲ.. ಸಸ್ಯಹಿಮ್ಸೆಯೂ ಹಿಂಸೆಯೇ..ಆ ಪಾಪದ ಪ್ರಯಶ್ಚಿತ್ತವೆ
"ವೈಶ್ವದೇವ."

"ಮಣಿಕ":-  ಅಗ್ನಿಹೋತ್ರ ಮಾಡುವಾಗ ಬಳಿಯಲ್ಲಿ ಇಟ್ಟಿರುವ ಒಂದು


ಶೇಷಪಾತ್ರೆ.

"ವೈಶ್ವದೇವ":-   ಆಹಾರ ಸಮರ್ಪಣೆ, ಸೇವನೆ ಎಂದರ್ಥ.


ಯಾವುದೇ ವ್ಯಕ್ತಿಯು ತಾನು ಆಹಾರವನ್ನು ಸೇವಿಸುವುದಕ್ಕೆ ಮೊದಲು ಎಲ್ಲ
ದೇವತೆಗಳಿಗೂ, ಪ್ರಾಣಿಗಳಿಗೂ, ಅತಿಥಿಗಳಿಗೂ ಸಾಂಕೇತಿಕವಾಗಿ ಆಹಾರವನ್ನು
ಸಮರ್ಪಿಸಿ, ಅನಂತರವೇ ಅಂದರೆ ಅವರೆಲ್ಲರೂ ತೃಪ್ತರಾಗಿದ್ದಾರೆ ಎಂದು
ತಿಳಿದಬಳಿಕ ತಾನು ಆಹಾರವನ್ನು ಸೇವಸಬೇಕು.‌
ಪ್ರತಿಯೊಬ್ಬನ ಹೊಟ್ಟೆಯಲ್ಲೂ 'ವೈಶ್ವಾನರ' ಎಂಬ ಅಗ್ನಿಯಿರುತ್ತಾನೆ.
ಅವನಿಗೆ ಅನ್ನವೆಂಬ ಹವಿಸ್ಸನ್ನು ಸಮರ್ಪಿಸಬೇಕು.
ಇದಕ್ಕೆ 'ಪ್ರಾಣಾಗ್ನಿಹೋತ್ರ'ವೆಂದು ಕರೆಯುತ್ತಾರೆ.

*******

ವೈಶ್ವದೇವ ಮಹತ್ವ
ಖಂಡನೀ ಪೇಷಣೀ ಚುಲ್ಲೀ ಉದಕುಂಭೀ ಚ ಮಾರ್ಜನೀ | ಪಂಚಸೂನಾ
ಗೃಹಸ್ಥಸ್ಯ ತಾಭಿಃ ಸ್ವರ್ಗಂ ನ ವಿಂದತಿ ||

ಜೀವನೋಪಯುಕ್ತವಾಗಿ ಆಹಾರವನ್ನು ಸಿದ್ಧಪಡಿಸಿಕೊಳ್ಳುವಾಗ


ಹಿಂಸಾರೂಪವಾದ ಐದು ದೋಷಗಳು ತಪ್ಪದೇ ಬರುವವು. ಅವನ್ನು ಸೂನಾ
ಎಂಬುದಾಗಿ ಶಾಸ್ತ್ರದಲ್ಲಿ ಕರೆದಿರುವರು.ಅವು  ಯಾವುವೆಂದರೆ :- 
ಖಂಡನೀ = ಭತ್ತದ ಧಾನ್ಯವನ್ನು ಸಂಗ್ರಹಿಸುವಾಗ ಪೈರನ್ನು ಕುಯ್ಯಿವುದರಿಂದ
ಸಸ್ಯ ಪ್ರಾಣಿ ಹಿಂಸೆ

೨ ಪೇಷಣೀ = ಧಾನ್ಯವನ್ನು ಬಡಿದು , ಕುಟ್ಟಿ ಬೀಸುವಾಗ ಸಂಭವಿಸಬಹುದಾದ


ಪ್ರಾಣಿಹಿಂಸೆ

೩  ಚುಲ್ಲೀ = ಒಲೆಯೊಳಗೆ ಬೆಂಕಿ ಹಾಕಿ ಉರಿಸುವಾಗ ಸಂಭವಿಸುವ


ಪ್ರಾಣಿಹಿಂಸೆ

೪ ಉದಕುಂಭೀ = ನೀರನ್ನು ತರುವಾಗ ,ಕಾಯಿಸುವಾಗ ಸಂಭವಿಸುವ


ಪ್ರಾಣಿಹಿಂಸೆ

೫ ಮಾರ್ಜನೀ = ಒಲೆ ಮುಂತಾದುವನ್ನು ಗುಡಿಸಿಸಾರಿಸುವಾಗ ಸಂಭವಿಸುವ


ಪ್ರಾಣಿಹಿಂಸೆ.  ಇವೆ ಪಂಚಸೂನಾ = ಐದು ಪಾಪಗಳು ಇವು ಸದ್ಗತಿಗೆ
ಪ್ರತಿಬಂಧಕವು . ಇವು ವೈಶ್ವದೇವ ಮಾಡುವುದರಿಂದ ಪರಿಹಾರವಾಗುತ್ತವೆ.
ಆದ ಕಾರಣ ವೈಶ್ವದೇವ ಮಾಡಿ ಈ ಪಾಪಗಳನ್ನು ಪರಿಹರಿಸಿಕೊಂಡು ಉಳಿದ
ಅನ್ನವನ್ನು ಭುಂಜಿಸುವುದು ಶ್ರೇಷ್ಠ
*********

c ವೈಶ್ವದೇವ/ಅಗ್ನಿಕಾರ್ಯ ಮಾಡುವವರಿಗೆ ಈ ಚಿತ್ರಪಟ ಅಗ್ನಿಯ


ಧ್ಯಾನಶ್ಲೋಕ ಹೇಳುವಾಗ ತುಂಬಾ ಉಪಯೋಗಕ್ಕೆ  ಬರುತ್ತದೆ
ವೃದ್ಧಿ (ಪುರುಡು) ಮತ್ತು ಸೂತಕ ಇವೆರಡರ ನಡುವಿನ ಆಚರಣೆಯ
ವ್ಯತ್ಯಾಸವನ್ನು ಯಾರಾದರೂ ವಿವರಿಸಬಹುದೆ....?????

: ವೃದ್ಧಿ ಅಂದ್ರೆ ಮನೆಯಲ್ಲಿ ಶಿಶು ಜನಿಸಿದಾಗ ಹತ್ತು ದಿವಸಗಳವರೆಗೆ ಆಚರಿಸುವ


ಆಚರಣೆ , ಈ ಆಚರಣೆಯಲ್ಲಿ ದೇವರ ಪೂಜೆ ಗ್ರಂಥಾದಿಗಳ ಅಧ್ಯಯನ ,
ದೇವರಿಗೆ ದೀಪ ಹಚ್ಚುವದು , ಮತ್ತೆ ಮಡಿಯಿಂದ ಮಾಡುವ ಇನ್ನಿತರ
ಯಾವುದೇ ಕಾರ್ಯಗಳು ಬರುವದಿಲ್ಲಾ , ಆದರೆ ಇನ್ನಿತರರನ್ನು ಮುಟ್ಟಬಾರದು
ಅನ್ನೋ ನಿಯಮವಿಲ್ಲ . ಮಡಿಯಿಂದ ಊಟಕ್ಕೆ ಕುಳಿತ ಆಚಾರ್ಯರ ಪಂಕ್ತಿಯಲ್ಲಿ
ಊಟಕ್ಕೆ ಮಾತ್ರ ಕೂಡಬಾರದು . 
    ಸೂತಕ ಅಂದ್ರೆ ಮನೆಯಲ್ಲಿ ಯಾರಾದರೂ ತೀರಿಕೊಂಡಾಗ ಆಚರಿಸುವ
ಆಚರಣೆ . 
ಆಶೀರ್ವಾದಂ ದೇವಪೂಜಾಂ ಪ್ರತ್ಯುತ್ಥಾನಾಭಿವಂದನಮ್|ಪರ್ಯಂಕೇ
ಶಯನಂ ಸ್ಪರ್ಶಂ ನ ಕುರ್ಯಾನ್ಮೃತಸೂತಕೇ || 
     ಯಾರಾದರೂ ಮನೆಗೆ ಬಂದರೆ ಎದ್ದು ನಮಸ್ಕರಿಸಬಾರದು , ಮಂಚದ
ಮೇಲೆ ಮಲಗಬಾರದು , ಸೂತಕ ಇರದೇಇರುವವರನ್ನೂ ಮುಟ್ಟಬಾರದು
ಹಾಗೂ ಸೂತಕ ಇದ್ದವರೂ ಪರಸ್ಪರ ಮುಟ್ಟಬಾರದು . 
ಸಂಧ್ಯಾ ದಾನಂ ಜಪಂ ಹೋಮಂ ಸ್ವಾಧ್ಯಾಯಂ ಪಿತೃತರ್ಪಣಮ್ |
ಬ್ರಹ್ಮಭೋಜ್ಯಂ ವ್ರತಂ ನೈವ ಕರ್ತವ್ಯಂ ಮೃತಸೂತಕೇ || 
    ಸಂಧ್ಯಾ , ದಾನ , ಜಪ , ಹೋಮ ಸ್ವಾಧ್ಯಾಯ , ನಿಷಿದ್ಧ ಪದಾರ್ಥಗಳನ್ನು
ತಿನ್ನುವದು , ಬ್ರಾಹ್ಮಣ ಭೋಜನ , ಸಿಹಿಪದಾರ್ಥಗಳನ್ನು ತಿನ್ನುವದು ,
ಮುಂತಾದವುಗಳನ್ನು ಸೂತಕದಲ್ಲಿ ಮಾಡಬಾರದು . 
    ಯಾರಾದರೂ ಸೂತಕದಲ್ಲಿ ನಿತ್ಯ ಹಾಗೂ ನೈಮಿತ್ತಿಕ ಕರ್ಮಗಳನ್ನು
ಆಚರಿಸಿದರೆ ಅವನು ಮೊದಲು ಮಾಡಿದ ಎಲ್ಲ ಕರ್ಮಗಳೂ ನಾಶವಾಗುತ್ತವೆ .
ಕೇವಲ ಭಗವನ್ನಾಮಸ್ಮರಣೆ ಮಾತ್ರ ಮಾಡಬೇಕು . 
    ಈ ನಿಯಮ ನೈಷ್ಠಿಕ ಬ್ರಹ್ಮಚಾರಿಗಳಿಗೆ , ಚಾಂದ್ರಾಯಣಾದಿ ಮಹಾವ್ರತಗಳ
ಆಚರಣೆಯಲ್ಲಿರುವವರಿಗೆ , ಮಹಾಮಂತ್ರಗಳನ್ನು ಸಿದ್ಧಿಮಾಡಿಕೊಂಡವರಿಗೆ ,
ಯತಿಗಳಿಗೆ , ಸನ್ಯಾಸಿಗಳಿಗೆ ಮತ್ತು ಅಭಿಷಿಕ್ತರಾಜನಿಗೆ ಅನ್ವಯಿಸುವದಿಲ್ಲ . 
ವಿವಾಹೋತ್ಸವಯಜ್ಞೇಷು ಜಾತೇ ಚ ಮೃತಸೂತಕೇ |ತಸ್ಯ ಪೂರ್ವಕೃತಂ
ಚಾನ್ನಂ ಭೋಜ್ಯಂ ತನ್ಮನುರಬ್ರವೀತ್|| 
    ಯಾರಾದರೂ ವಿವಾಹ , ಉತ್ಸವ , ಯಜ್ಞಾದಿಗಳು ನಡೆದಾಗ ಮರಣ
ಹೊಂದಿದರೆ ಸುದ್ದಿ ಗೊತ್ತಾಗುವದಕ್ಕಿಂತ ಮೊದಲು ಮಾಡಿಟ್ಟ ಅಡಿಗೆಯನ್ನು
ಇನ್ನಿತರರಿಗೆ ಮಾತ್ರ ಬೇರೆಯವರಿಂದ ಹಾಕಿಸಬಹುದು , ಸುದ್ದಿ ತಿಳಿದ‌ನಂತರ
ಅಡುಗೆ ಮಾಡಿದ್ದರೆ ಅದನ್ನು ಚಲ್ಲಲೇಬೇಕು . ಎಂದು ಮನುವು ತನ್ನ ಸ್ಮೃತಿಯಲ್ಲಿ
ಹೇಳಿದ್ದಾನೆ . 
   ತನಗೆ ಸೂತಕವು ಗೊತ್ತಿದ್ದು ಬ್ರಾಹ್ಮಣರಿಗೆ ಗೊತ್ತಿಲ್ಲದಾಗ , ಅವರು
ಅನ್ನಾದಿಗಳನ್ನು ಸ್ವೀಕರಿಸಲು ಬಂದಾಗ ಸೂತಕೀ ಪುರುಷನು ಬಂದವರಿಗೆ
ಅನ್ನಾದಿಗಳನ್ನು ಕೊಟ್ಟರೆ , ಭಿಕ್ಷುಕರಿಗೆ ಭಿಕ್ಷೆ ಹಾಕಿದರೆ , ಸೂತಕ ಇದ್ದವನ
ಪಿತೃಗಳು ನರಕಭಾಗಿಗಳಾಗುತ್ತಾರೆ . 
   ಇವು ವೃದ್ಧಿ ಹಾಗೂ ಸೂತಕದ ಸಾಮಾನ್ಯ ನಿಯಮಗಳು 🙏🏼ಹರೇ
ಶ್ರೀನಿವಾಸಾ 🙏🏼
******

ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳು ಪ್ರಕೃತಿಯ ನಿಯಮವಾಗಿದೆ.


ಉತ್ಪತ್ತಿಯೆಂದರೆ ಜನನ. ಇದು ರಜೋಗುಣಕ್ಕೆ ಸಂಬಂಧಿಸಿದೆ ಮತ್ತು
ಲಯವೆಂದರೆ ಮೃತ್ಯು ಇದು ತಮೋಗುಣಕ್ಕೆ ಸಂಬಂಧಿಸಿದೆ. ಮಗುವಿನ ಜನನದ
ಸಮಯದಲ್ಲಿ ಮಗುವಿನೊಂದಿಗೆ ಸಂಬಂಧಿಸಿರುವ ಇತರೆ ವ್ಯಕ್ತಿಗಳಲ್ಲಿಯೂ
ರಜೋಗುಣಗಳು ವೃದ್ಧಿಸುತ್ತವೆ. ರಜೋಗುಣ ವೃದ್ಧಿಸಿರುವಾಗ ಮಾಡುವ
ಧಾರ್ಮಿಕ ಕಾರ್ಯಗಳಿಂದ ವ್ಯಕ್ತಿಗೆ ಪೂರ್ಣವಾಗಿ ಲಾಭವಾಗುವುದಿಲ್ಲ. ಹಾಗೆಯೇ
ಆ ವ್ಯಕ್ತಿಯು ಆ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದು, ತೀರ್ಥಯಾತ್ರೆ
ಮಾಡುವುದು ಮುಂತಾದ ವಿಷಯಗಳನ್ನು ಮಾಡಿದರೆ, ಆ ವ್ಯಕ್ತಿಯಲ್ಲಿರುವ
ರಜೋಗುಣಗಳ ಪರಿಣಾಮ ಅಲ್ಲಿಯ ಸಾತ್ತ್ವಿಕತೆಯ ಮೇಲೆ ಪರಿಣಾಮವಾಗಿ
ಸಾತ್ತ್ವಿಕತೆಯು ಕ್ಷೀಣಿಸುತ್ತದೆ. ಇದರಿಂದ ಸಮಷ್ಟಿಗೆ ಲಾಭವಾಗುವುದಿಲ್ಲ.
ಹಾಗಾಗಬಾರದೆಂದು ಆ ಸಮಯದಲ್ಲಿ ದೇವರ ಪೂಜೆ ಇತ್ಯಾದಿ
ಸತ್ತ್ವಗುಣಗಳನ್ನು ವೃದ್ಧಿಸುವ ಕಾರ್ಯಗಳನ್ನು ಮಾಡಲು ನಿರ್ಬಂಧಿಸಲಾಗಿದೆ.
ಈ ಕಾರಣದಿಂದ ಪುರುಡು(ಜನನಶೌಚದ) ಸಮಯದಲ್ಲಿಯೂ ಸೂತಕವನ್ನು
ಪಾಲಿಸಬೇಕಾಗುತ್ತದೆ.- ವೇದಮೂರ್ತಿ ಶ್ರೀ. ಕೇತನ ಶಹಾಣೆ, ಅಧ್ಯಾಪಕರು,
ಸನಾತನ ಪುರೋಹಿತ ಪಾಠಶಾಲೆ, ರಾಮನಾಥಿ, ಗೋವಾ.
***********
ಅಶುಚಿ ಎಂದು ಸೂಚಿಸುವ ಒಂದು ಬಗೆಯ ಪಾಪ (ಮೈಲಿಗೆ). ಅದೇ ಅರ್ಥದಲ್ಲಿ
ಈಗ ಸೂತಕ ಪದ ಬಳಕೆಯಲ್ಲಿದೆ. ಕಾರಣಾನುಗುಣವಾಗಿ ಗೊತ್ತಾದ
ಕಾಲದವರೆಗೆ ಮಾತ್ರ ಇರುತ್ತದೆ. ಆಶೌಚ (ಶಾವ) ಇರುವ ಕಾಲದಲ್ಲಿ
ಪಿಂಡದಾನ, ಉದಕದಾನ ಮಾಡುತ್ತಾರೆ. ಆದರೆ ವೇದಾಧ್ಯಯನ ಮತ್ತು
ಶ್ರೌತಸ್ಮಾರ್ತಕರ್ಮಗಳನ್ನು ಮಾಡಲು ಅರ್ಹತೆ ಇರುವುದಿಲ್ಲ. ಆಶೌಚ
ಇರುವವರಿಗೆ ಸಂಬಂಧಪಟ್ಟ ಪದಾರ್ಥಗಳಿಗೂ ಶುದ್ಧಿ ಇರುವುದಿಲ್ಲ. ಆಶೌಚ
ಕಣ್ಣಿಗೆ ಕಾಣುವುದಿಲ್ಲ. ಆದರೂ ಕರ್ಮಾನರ್ಹತೆಯನ್ನುಂಟುಮಾಡುವ,
ಜನಸಾಮಾನ್ಯರಲ್ಲೂ ಗೊತ್ತಾದ ಕಾಲದವರೆಗಿರುವ, ಶರೀರಗತವಾದ ಒಂದು
ವಿಧದ ಮಾಲಿನ್ಯ. ಗೊತ್ತಾದ ಕಾಲ ಕಳೆದ ಮೇಲೆ ಸ್ನಾನಾದಿಗಳಿಂದ ಮಾಲಿನ್ಯ
ಕಳೆದು ಕರ್ಮಾರ್ಹತೆ ಉಂಟಾಗುತ್ತದೆ. ಆಶೌಚದ ಕೊನೆಯಲ್ಲಿ ಶುದ್ಧಿಯಾಗಲು
ಕೆಲವರಿಗೆ ಕ್ಷೌರವೂ ವಿಹಿತವಾಗಿದೆ. ಆಶೌಚದಲ್ಲಿ ಜನನ, ಮರಣ, ಆರ್ತವ,
ಸಾಂಸರ್ಗಿಕ, ಸನ್ನಿಪಾತ-ಎಂದಿವೇ ಮೊದಲಾಗಿ ಅನೇಕ ಭೇದಗಳಿವೆ.

ಮಕ್ಕಳು ಹುಟ್ಟಿದರೆ ಬರುವುದು ಜನನಾಶೌಚ (ಸೂತಿಕಾಶೌಚ). ಇದಕ್ಕೆ


ಪುರುಡು, ವೃದ್ಧಿ ಎಂಬ ಪದಗಳೂ ಬಳಕೆಯಲ್ಲಿವೆ. ಸಾವಿನಿಂದ ಬರುವುದು
ಮರಣಾಶೌಚ (ಶಾವಾಶೌಚ). ಇದನ್ನೀಗ ಬಳಕೆಯಲ್ಲಿ ಕ್ಷಯ ಎನ್ನುತ್ತಾರೆ. ಈ
ಎರಡು ವಿಧಗಳಲ್ಲೂ ಏಳು ತಲೆಮಾರಿನವರೆಗಿನ ದಾಯಾದಿಗಳಲ್ಲಿ
ಬ್ರಾಹ್ಮಣರಿಗೆ ಹತ್ತು ದಿನಗಳು, ಕ್ಷತ್ರಿಯರಿಗೆ ಹನ್ನೆರಡು ದಿನಗಳು, ವೈಶ್ಯರಿಗೆ
ಹದಿನೈದು ದಿನಗಳು, ಚತುರ್ಥವರ್ಣದವರಿಗೆ ಒಂದು ತಿಂಗಳು
ಆಶೌಚಕಾಲವೆಂದು ಶಾಸ್ತ್ರದಲ್ಲಿ ಹೇಳಿದೆ. ಇದು ಆಶೌಚದ ಪರಮಾವಧಿ.
ಜನನಾಶೌಚದಲ್ಲಿ ಗರ್ಭಸ್ರಾವನಿಮಿತ್ತ ಗರ್ಭಮಾಸಾನುಗುಣವಾಗಿ 4, 5, 6
ದಿನಗಳು ಆಶೌಚವೂ ಉಂಟು.

ಇದಕ್ಕಿಂತ ಕಡಿಮೆಯಾದುದು ಮೂರು ದಿನಗಳ ಆಶೌಚ. ಇದರಂತೆಯೇ ಪಕ್ಷಿಣೇ


(ಒಂದೂವರೆ ದಿನಗಳು) ಮತ್ತು ಒಂದು ದಿನದ ಆಶೌಚವೂ ಇವೆ. ಅವೆರಡೂ
ಶಾವಾಶೌಚ ದಲ್ಲಿ ಮಾತ್ರ. ಈ ನಿಯತಕಾಲಿಕವಲ್ಲದೆ ಕೇವಲ ಸ್ನಾನ
ನಿಮಿತ್ತಕವಾದ ಆಶೌಚವೂ ಉಂಟು. ಇದರಲ್ಲಿ ಸ್ನಾನಮಾತ್ರದಿಂದ ಶುದ್ಧಿ.
ಬಾಂಧವ್ಯ ದೂರವಾದಂತೆಲ್ಲ ಆಶೌಚಕಾಲ ಕಡಿಮೆಯಾಗುತ್ತದೆ. ಕೆಲವು
ಸಂದರ್ಭಗಳಲ್ಲಿ ಸ್ತ್ರೀ ಪುರುಷ ಭೇದದಿಂದಲೂ ಆಶೌಚಕಾಲ ಭಿನ್ನವಾಗುತ್ತದೆ.
ಹಲ್ಲು ಹುಟ್ಟುವುದಕ್ಕಿಂತ ಮೊದಲು ಮಗು ಸತ್ತರೆ ತಂದೆತಾಯಿಗಳಿಗೆ
ಪುರ್ಣಕಾಲದ ಆಶೌಚ. ದಾಯಾದಿಗಳಿಗೆ ಸ್ನಾನದಿಂದ ಕೂಡಲೇ ಶುದ್ಧಿ.
ಚೌಲಕಾಲದೊಳಗೆ ಮೃತನಾದರೆ ಒಂದು ದಿನದ ಆಶೌಚ.
ಉಪನಯನದವರೆಗೆ ಮೂರು ದಿನಗಳ ಆಶೌಚ. ಅಲ್ಲಿಂದ ಮುಂದೆ
ಹತ್ತುದಿನಗಳ ಆಶೌಚ. ಮರಣಾಶೌಚದಲ್ಲಿ ಇದರಂತೆಯೇ ಇನ್ನೂ ಹಲವು
ಪ್ರಭೇದಗಳಿವೆ. ಗಂಡನಿಗೆ ಬಂದ ಆಶೌಚ ಹೆಂಡತಿಗೂ ಉಂಟು. ಆದರೆ
ಹೆಂಡತಿಗೆ ಬಂದ ಆಶೌಚ ನಿಯತವಾಗಿ ಗಂಡನಿಗೆ ಬರುವುದಿಲ್ಲ. ಸ್ತ್ರೀಯರಿಗೆ
ವಿವಾಹಾನಂತರ ತಂದೆ ಕಡೆಯ ಬಂಧುಗಳ ಆಶೌಚ ಕಡಿಮೆಯಾಗುತ್ತದೆ.
ಗಂಡನ ಬಂಧುಗಳ ಆಶೌಚ ಪುರ್ಣವಾಗಿರುತ್ತದೆ.
ಜನನ ಅಥವಾ ಮರಣದ ಅರಿವು ಉಂಟಾಗುವವರೆಗೂ ಆಶೌಚ ಬರುವುದಿಲ್ಲ.
ಜನನಾಶೌಚ ವಿಷಯ ಕಾಲ ಕಳೆದ ಮೇಲೆ ತಿಳಿದರೂ ಆಶೌಚ ಇರುವುದಿಲ್ಲ.
ಮರಣಾಶೌಚದಲ್ಲಿ ಕಾಲ ಕಳೆದ ಮೇಲೂ ಆಶೌಚ ಉಂಟು, ಆದರೆ ಅವಧಿ
ಕಡಿಮೆಯಾಗುತ್ತದೆ. ಹತ್ತು ದಿನಗಳ ಆಶೌಚದ ವಿಷಯವನ್ನು ಆ ಕಾಲ ಕಳೆದ
ಮೇಲೆ ಮೂರು ತಿಂಗಳೊಳಗೆ ಕೇಳಿದರೆ ಮೂರು ದಿನಗಳೂ ಆರು
ತಿಂಗಳೊಳಗೆ ಪಕ್ಷಿಣಿಯೂ, ವರ್ಷದೊಳಗೆ ಒಂದು ದಿನವೂ ಆಶೌಚ ಇರಬೇಕು.
ವರ್ಷಾನಂತರ ಮರಣ ವಿಷಯ ತಿಳಿದರೆ ಸ್ನಾನಮಾತ್ರದಿಂದ ಶುದ್ಧಿ. ಮಗನನ್ನು
ಬಿಟ್ಟು ಉಳಿದ ಸಪಿಂಡ ಬಂಧುಗಳಿಗೆ ಈ ಕ್ರಮ.

ಮೂರು ದಿನಗಳ ಆಶೌಚದಲ್ಲಿ ಆ ಕಾಲ ಕಳೆದ ಮೇಲೆ ಹತ್ತು ದಿವಸಗಳೊಳಗೆ


ವಿಷಯ ತಿಳಿದರೆ ಒಂದು ದಿನವೂ ಪಕ್ಷಿಣಿಯಲ್ಲಿ ಒಂದು ಕಾಲವೂ ಆಶೌಚ. ಹತ್ತು
ದಿವಸಗಳು ಕಳೆದ ಬಳಿಕ ಕೇವಲ ಸ್ನಾನ ಮಾತ್ರ. ದಿನಾಶೌಚದಲ್ಲಿಯೂ ನಿಯತ
ಕಾಲಾನಂತರ ತಿಳಿದ ಆಶೌಚಕ್ಕೆ ಸ್ನಾನದಿಂದ ಶುದ್ಧಿ.

ಒಂದು ಜನನಾಶೌಚ ಮಧ್ಯದಲ್ಲಿ ಇನ್ನೊಂದು ಜನನಾಶೌಚ ಬಂದರೆ


ಎರಡನೆಯ ಜನನನಿಮಿತ್ತ ಪ್ರತ್ಯೇಕವಾಗಿ ಆಶೌಚ ಇರಬೇಕಾಗಿಲ್ಲ.
ಮೊದಲನೆಯ ಆಶೌಚದಿಂದ ಅದೂ ಹೋಗುತ್ತದೆ. ಜನನಾಶೌಚ ಮಧ್ಯದಲ್ಲಿ
ಶಾವಾಶೌಚ ಬಂದರೂ ಶಾವಾಶೌಚ ಮಧ್ಯದಲ್ಲಿ ಜನನಾಶೌಚ ಬಂದರೂ
ಶಾವಾಶೌಚ ಕಾಲದಿಂದಲೇ ಶುದ್ದಿ. ಶಾವಾಶೌಚ ಮಧ್ಯದಲ್ಲಿ ಸಮಾನ ಕಾಲದ
ಮತ್ತೊಂದು ಶಾವಾಶೌಚ ಬಂದರೆ ಆಗ ಮೊದಲಿನ ಶಾವಾಶೌಚ ಕಾಲದಿಂದಲೇ
ಶುದ್ಧಿ. ಅಧಿಕಕಾಲದ ಆಶೌಚದ ಮಧ್ಯದಲ್ಲಿ ಅಲ್ಪಕಾಲದ ಆಶೌಚ ಬಂದರೆ ಅಧಿಕ
ಕಾಲದ ಆಶೌಚದೊಡನೆಯೇ ಮತ್ತೊಂದು ಆಶೌಚ ಕಳೆದು ಹೋಗುತ್ತದೆ.
ತಂದೆ-ತಾಯಿ ನಿಮಿತ್ತಕವಾದ ಆಶೌಚದಲ್ಲಿ ಈ ನಿಯಮ ಕೂಡುವುದಿಲ್ಲ.

ಆಶೌಚಾಂತ್ಯಸ್ನಾನವನ್ನು ಸಂಗಮಕಾಲದಲ್ಲಿ ಎಂದರೆ, ಸೂರ್ಯೋದಯ


ಕಾಲಕ್ಕೆ 2 ಗಂ 24 ನಿ. ಮೇಲೆ 4 ಗಂ 48 ನಿ. ಒಳಗೆ ಮಾಡಬೇಕು.

ಆಶೌಚಿ ದೇವಾಲಯಕ್ಕೆ ಹೋಗಕೂಡದು; ಆತ ನಮಸ್ಕಾರಕ್ಕೆ ಅನರ್ಹ.


ಪುಜೋಪಯುಕ್ತ ಪುಷ್ಪ ಮೊದಲಾದುವನ್ನೂ ಮನೆಯಲ್ಲಿ ಉಪಯೋಗಿಸುತ್ತಿರುವ
ಮಣ್ಣಿನ ಪಾತ್ರೆಗಳನ್ನೂ ಮುಟ್ಟಕೂಡದು. ಅಭ್ಯಂಗಸ್ನಾನ ಕೂಡದು. ತಾಂಬೂಲ,
ಗಂಧ ಮೊದಲಾದುವನ್ನು ಉಪಯೋಗಿಸಬಾರದು.

ವೈಯಕ್ತಿಕ ಆಶೌಚಕಾಲದ ಬಗ್ಗೆ ಧರ್ಮಶಾಸ್ತ್ರದಲ್ಲಿ ವಿವರವಾಗಿ ಉಕ್ತವಾಗಿದೆ.

ರಾತ್ರಿಕಾಲದಲ್ಲಿ ಜನನ ಮರಣಗಳು ಸಂಭವಿಸಿದರೆ ಸಾಮಾನ್ಯವಾಗಿ 12 ಗಂ.


ಒಳಪಟ್ಟು ಅದೇ ದಿವಸದಿಂದ, 2 ಗಂ. 30 ನಿ. ಮೇಲ್ಪಟ್ಟು ಮಾರನೆಯ
ದಿನದಿಂದ ಆಶೌಚ ದಿನಸಂಖ್ಯೆಯನ್ನು ಗಣಿಸಲು ಪ್ರಾರಂಭಿಸಬೇಕು. ಈ ಎರಡು
ಕಾಲಗಳ ಮಧ್ಯದಲ್ಲಿ ಸಂಭವಿಸುವುದರ ದಿನಗಣನೆಯನ್ನು ಲೆಕ್ಕದಿಂದ
ಗೊತ್ತುಪಡಿಸಬೇಕು. ಆ ಗೊತ್ತಾದ ದಿನದ ಹಗಲಿನ ಕಾಲ ಪ್ರಮಾಣವನ್ನು 24
ಗಂಟೆಗಳಲ್ಲಿ ಕಳೆದುಳಿದುದು ರಾತ್ರಿ ಪ್ರಮಾಣ. ಈ ಕಾಲದಲ್ಲಿ ಮೂರು ಗಂಟೆ
ಕಾಲವನ್ನು ಕಳೆದು ಉಳಿದುದರ ಮೂರನೆಯ ಎರಡು ಭಾಗಕ್ಕೆ 11/2 ಗಂಟೆ
ಕಾಲವನ್ನೂ ಹಗಲಿನ ಕಾಲಪ್ರಮಾಣವನ್ನೂ ಕೂಡಿಸಿ ಬರುವ ಕಾಲದಿಂದ
ಮುಂದಿನದು ಮಾರನೆಯ ದಿನದ ಗಣನೆಗೆ ಸೇರುತ್ತದೆ. ಈ ಕಾಲಗಣನೆಯಂತೆ
ಅರ್ಧ ರಾತ್ರಿಯಲ್ಲಿ ಸಂಭವಿಸುವ ಜನನ ಮರಣಗಳ ದಿನವನ್ನು
ನಿಷ್ಕರ್ಷಿಸಬೇಕು. ರಜಸ್ವಲಾಶೌಚ : ಹೆಂಗಸರು ಮುಟ್ಟಾದ ದಿನದಿಂದ ಮೂರು
ದಿನಗಳ ಕಾಲ ಇರುವ ಮೈಲಿಗೆ. ಮುಟ್ಟಾದ ದಿನದಿಂದ 18 ನೆಯ ದಿನ ಮತ್ತೆ
ಮುಟ್ಟಾದರೆ 1 ದಿನವೂ 19 ನೆಯ ದಿನ ಆದರೆ 2 ದಿನಗಳೂ ಅಲ್ಲಿಂದ ಮುಂದೆ 3
ದಿನಗಳೂ ಆಶೌಚ ಇರುತ್ತದೆ. ಆ ಕಾಲ ಕಳೆದ ಮೇಲೆ ಸ್ನಾನದಿಂದ ಶುದ್ಧಿ.

ಅನ್ಯ ಸಂಪರ್ಕದಿಂದ ಬರುವ ಆಶೌಚ ಸಾಂಸರ್ಗಿಕ. ಆಶೌಚ ಮಧ್ಯದಲ್ಲಿ


ಮತ್ತೊಂದು ಆಶೌಚ ಬರುವುದು ಸನ್ನಿಪಾತ.

ಪುರುಷನಿಗೆ ಸಂಸರ್ಗಾಶೌಚ ಬಂದರೆ ಅದು ಅವನಿಗೆ ಮಾತ್ರ. ಅವನ


ಹೆಂಡತಿಗಾಗಲೀ ಸಂಬಂಧಪಟ್ಟ ಪದಾರ್ಥಗಳಿಗಾಗಲೀ ಆಶೌಚ ಇಲ್ಲ.
ಹೆಂಡತಿಗೆ ವಿಷಯ ತಿಳಿದು ಆಶೌಚ ಕಳೆದ ಮೇಲೆ ಕಾಲಾನಂತರದಲ್ಲಿ ಗಂಡನಿಗೆ
ಅದೇ ವಿಷಯ ತಿಳಿದು ಆಶೌಚವಿರುವ ಸನ್ನಿವೇಶದಲ್ಲಿ ಮತ್ತೆ ಆಕೆಯೂ ಆಶೌಚ
ಇರಬೇಕಾಗಿಲ್ಲ.
ಅಗ್ನಿಮುಖ ಪ್ರಯೋಗ : ಅದರಿಂದೇನು ಉಪಯೋಗ? ಯಾವುದೇ
ಹೋಮವನ್ನು ಮೊದಲು ಅಗ್ನಿಮುಖವೆಂಬ ವಿಧಿಯ ಮೂಲಕವೇ
ಆರಂಭಿಸಲಾಗುತ್ತದೆ. ಹೋಮ ಮಾಡುವಾತನು ಈ ವಿಧಿಗಳ ಸ್ಥೂಲ
ಸ್ವರೂಪವನ್ನು ಅರಿತವನಾಗಿದ್ದರೆ, ಹೋಮವಿಧಿಯು ಎಷ್ಟು ಕ್ರಮಬದ್ಧವಾಗಿ,
ತಪ್ಪಿಲ್ಲದಂತೆ ನಿರ್ವಹಿಸಲು ಸಹಕಾರಿಯಾಗಿದೆ ಎಂದಂತೂ ತಿಳಿಯಬಹುದು.
ಇದೇ ತತ್ತ್ವಗಳನ್ನು ಜೀವನದ ಹಾದಿಯಲ್ಲಿಯೂ ಬಳಸಿಕೊಳ್ಳುವ
ತಿಳುವಳಿಕೆಯಿದ್ದರೆ ಜೀವನ ಹೆಚ್ಚು ಸುಗಮವಾಗುತ್ತದೆ. ಅಗ್ನಿಮುಖದ ಸ್ಥೂಲ
ಪರಿಚಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಹೋಮಾದಿಗಳನ್ನು
ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ, ವಾಂಛಿತ ಫಲಗಳು ಲಭಿಸುತ್ತವೆ
ಎಂಬೆಲ್ಲ ಅಂಶಗಳನ್ನು ಬದಿಗಿಟ್ಟು, ಹೋಮ-ಹವನಗಳ ರಚನಾ ಮತ್ತು ಕಾರ್ಯ
ಸ್ವರೂಪವನ್ನು ಅಧ್ಯಯನ ಮಾಡಿದರೆ, ಇವು ಹೇಗೆ ಲೌಕಿಕ ಜೀವನಕ್ಕೆ
ನೆರವಾಗಬಲ್ಲದು ಎಂದಂತೂ ತಿಳಿಯುತ್ತದೆ.

ಹೋಮ ಮಾಡುವ ಸ್ಥಳ, ಬಳಸುವ ವಸ್ತುಗಳು, ಮಾಡುವಾತನ


ಮನಃಸಂಕಲ್ಪಗಳು ಶುದ್ಧವಾಗಿರಲೆಂಬ ಉದ್ದೇಶದಿಂದ ಸ್ವಸ್ತಿ ಪುಣ್ಯಾಹ
ವಾಚನವೆಂಬ ಕಲಾಪ ಇರುತ್ತದೆ. ಸ್ವಸ್ತಿ ಎಂದರೆ ಮಂಗಲ. ಪುಣ್ಯಾಹ-ಮಾಡುವ
ದಿನವು ಪುಣ್ಯಮಯವಾಗಲಿ ಎಂಬ ಆಶಯದೊಡನೆ ಆರಂಭಿಸಲಾಗುತ್ತದೆ.
ನಂತರ ನಾಂದೀ ಶ್ರಾದ್ಧವೆಂಬ ವಿಧಿಯಿದೆ. ನಾಂದಿ ಎಂದರೆ ಆರಂಭ ಎಂಬುದು
ಜನಜನಿತ ಅರ್ಥ. ಅದು ಆನಂದವನ್ನು ಸೂಚಿಸುತ್ತದೆ. ಹೋಮಕರ್ತನು
ಮಾಡಲು ಉದ್ದೇಶಿಸಿರುವ ಹೋಮವು ಯಶಸ್ವಿಯಾಗಲು, ಆತನ ಪಿತೃ,
ಪಿತಾಮಹರ ಆಶೀರ್ವಾದವನ್ನು ಕೋರುತ್ತಾನೆ. ಅವರಿಲ್ಲದೆ ಈತನಿಲ್ಲ. ಗತಿಸಿ
ಹೋದ ಹಿರಿಯರನ್ನು ಸ್ಮರಿಸಿ, ಅವರಿಗೆ ಜಲ ಸಮರ್ಪಣೆಯ ಮೂಲಕ
ಗೌರವವನ್ನು ಸಲ್ಲಿಸುವನು.
ನಂತರದಲ್ಲಿ ಹೋಮ ಮಾಡಲೆಂದು ಅಗ್ನಿಸ್ಥಾಪನೆ, ಅಗ್ನಿಯ ಆವಾಹನೆಗಳನ್ನು
ಮಾಡಲಾಗುವುದು. ಮಾಡಲು ಉದ್ದೇಶಿಸಿರುವ ಹೋಮದ ಪ್ರಧಾನ ದೇವತೆ
ಯಾರು, ಅವರಿಗೆ ಸಲ್ಲತಕ್ಕ ಹೋಮದ್ರವ್ಯಗಳು ಯಾವುವು ಎಂದು
ಪೂರ್ವನಿರ್ಧಾರಿತವಾಗಿ ಮಾಡುವ ಕಾರ್ಯವನ್ನು ಅನ್ವಾಧಾನ ಎನ್ನಲಾಗುತ್ತದೆ.
ಹೋಮದಲ್ಲಿ “ನ ಮಮ ಎಂಬ ಶಬ್ದ ಪ್ರಯೋಗವಾಗುತ್ತದೆ. ಎಂದರೆ ಇಲ್ಲಿ
ಅರ್ಪಿಸುತ್ತಿರುವ ಯಾವುದೂ ನನ್ನದಲ್ಲ ಎಂಬ ಭಾವ ಅಲ್ಲಿರುತ್ತದೆ. ಇಧ್ಮ- 15
ಸಮಿತ್ತುಗಳನ್ನು ರಜ್ಜು (ದರ್ಭೆಯ ಹಗ್ಗ)ದಿಂದ ಕಟ್ಟಿರುವ ಯಜ್ಞಸಾಧನ. ಸ್ರುಕ್,
ಸೃವಗಳು-ಹೋಮಕ್ಕೆ ತುಪ್ಪವನ್ನು ಹಾಕಲು ಬಳಸುವ ಸಾಧನ. ಬರ್ಹಿ, ಆರು
ಪಾತ್ರೆಗಳನ್ನು ಬಳಸಿ ಮಾಡುವ ಹೋಮದಲ್ಲಿ ಪ್ರೋಕ್ಷಿಣೀ, ಸ್ರುವ, ಚಮಸ,
ಆಜ್ಯಪಾತ್ರ, ಇಧ್ಮ, ಬರ್ಹಿಸ್ ಗಳು ಇರುತ್ತವೆ. ಯಜ್ಞವು ವಿಸ್ತಾರಗೊಂಡಂತೆ
ಪಾತ್ರಗಳ ಸಂಖ್ಯೆಯೂ ಹೆಚ್ಚಿ, ಪ್ರಯೋಗವಿಧಿಗಳಲ್ಲೂ ವಿಸ್ತಾರ ಕಂಡುಬರುತ್ತದೆ.
ಹೋಮಕುಂಡದ ಸುತ್ತಲೂ ದರ್ಭೆಯ ಆವರಣವನ್ನು ಸೂಕ್ತಕ್ರಮದಲ್ಲಿ
ರಚಿಸುವುದನ್ನು ಪರಿಸ್ತರಣ ಎನ್ನಲಾಗಿದೆ. ಅಗ್ನಿಯನ್ನು ಈಶಾನ್ಯದಿಂದ ಸ್ಥಾಪನೆ
ಮಾಡಿದ ನಂತರ, ಆಘಾರ ಹೋಮವನ್ನು ಮಾಡಲಾಗುತ್ತದೆ.
ನಂತರ ಉದ್ದೇಶಿತ ಹೋಮಗಳನ್ನು ವಿಧಿಗೆ ಅನುಸಾರವಾಗಿ, ನಿಗದಿಗೊಳಿಸಿದ
ಸಂಖ್ಯೆಯಂತೆ ಆಹುತಿಗಳನ್ನು, ಸೂಕ್ತ ದ್ರವ್ಯಗಳೊಂದಿಗೆ ನೀಡಲಾಗುತ್ತದೆ. ಹೀಗೆ
ಮಾಡುವಲ್ಲಿ, ಲೆಕ್ಕ ತಪ್ಪದಂತೆ, ಅನಗತ್ಯ ಆಹುತಿಯಾಗಲೀ, ದ್ರವ್ಯಗಳಾಗಲೀ
ಇರದಂತೆ ಆಚಾರ್ಯನು ಎಚ್ಚರಿಕೆ ವಹಿಸುವನು. ಯಜ್ಞವು ಸರಿಯಾಗಿ
ನಡೆಯುತ್ತಿದೆಯೇ ಎಂದು ವೀಕ್ಷಿಸಲು ಓರ್ವ ವ್ಯಕ್ತಿಯನ್ನು ಬ್ರಹ್ಮನ ಸ್ಥಾನದಲ್ಲಿ
ಕೂಡಿಸಲಾಗುತ್ತದೆ. ಆತನು ಯಜ್ಞವಿಧಿಗಳ ಸಂಪೂರ್ಣ ತಿಳುವಳಿಕೆ
ಹೊಂದಿದವನಾಗಿರಬೇಕೆಂದು ವಿಧಿಯಿದೆ. ಮುಖ್ಯ ಹೋಮವನ್ನು ಮುಗಿಸಿದ
ನಂತರ, ಸ್ವ ಇಷ್ಟ ಪೂರ್ತಿಗೆಂದು ನಡೆಸುವ ಸ್ವಿಷ್ಟಕೃತ್ ಹೋಮಾದಿಗಳನ್ನು
ನಡೆಸಿ, ಉದ್ದೇಶ ತ್ಯಾಗ ಮಾಡುವರು.
ಯಜ್ಞದಲ್ಲಿ ಸಂಭವಿಸಿರಬಹುದಾದ ಲೋಪದೋಷಗಳಿಗೆ
ಪ್ರಾಯಶ್ಚಿತ್ತಹೋಮಗಳನ್ನು ಮಾಡುವರು. ಪೂರ್ಣಾಹುತಿಯ ನಂತರ ಯಜ್ಞವು
ಸಂಪನ್ನವಾಗುತ್ತದೆ. ಹೋಮಾದಿಗಳನ್ನು ಮಾಡಿಸುವ ಆಚಾರ್ಯರು ಈ
ಪ್ರಯೋಗದ ವಾಕ್ಯಗಳನ್ನು ಹೇಳಿಕೊಳ್ಳುತ್ತಲೇ, ಅದನ್ನು ಅನುಸರಿಸುತ್ತ
ಸಾಗುತ್ತಾರೆ. ಇವು ಯಾವವೂ ವೇದ ಮಂತ್ರಗಳಲ್ಲವಾದರೂ, ವಿಧಿ, ಕ್ರಮಗಳಲ್ಲಿ
ಒಂದನ್ನೂ ಮರೆಯದಂತೆ ಮಾಡಿಕೊಂಡು ಹೋಗಲು ಸಹಾಯಕವಾಗುವ
ಇಲ್ಲಿನ ವಾಕ್ಯಗಳು ಸರಳ ಸಂಸ್ಕೃತದಲ್ಲಿ ಇವೆ. ಗಮನವಿಟ್ಟು ಕೇಳಿಸಿಕೊಂಡರೆ,
ಅದನ್ನು ಅನುಸರಿಸುವುದು ಕಷ್ಟವಾಗಲಾರದು. ಹೀಗಾಗಿ ಸ್ವಲ್ಪ ಸಂಸ್ಕೃತದ
ತಿಳುವಳಿಕೆ ಮತ್ತು ಮಾಡುತ್ತಿರುವ ಕ್ರಿಯೆಗಳ ಅನುಸರಣೆಯ
ಮನೋಭಾವವಿದ್ದರೆ, ಶ್ರದ್ಧಾಸಕ್ತಿಗಳಿಂದ ತಿಳಿಸಿಕೊಡುವ ಆಚಾರ್ಯರಿದ್ದರೆ
ಹೋಮದ ಕಲಾಪಗಳನ್ನು ಆನಂದಿಸಬಹುದು.

ಕೃಷ್ಣನ ಎಂಟು ಹೆಂಡತಿಯರಿಗೂ ತಲಾ ಹತ್ತು ಮಕ್ಕಳು wives and


children of krishna
ಶ್ರೀ ಕೃಷ್ಣನ ಎಂಟು ಹೆಂಡತಿಯರಿಗೂ ತಲಾ ಹತ್ತು ಮಕ್ಕಳು.🌹

 ಹೀಗೆ ಅಷ್ಟಪತ್ನಿಯರಿಂದ ಕೃಷ್ಣ ಪಡೆದ ಮಕ್ಕಳ ಸಂಖ್ಯೆ 80! ಯಾವ ರಾಣಿಯಲ್ಲಿ


ಯಾರು ಜನಿಸಿದರು? ಇಲ್ಲಿದೆ ನೋಡಿ…

ಪಟ್ಟದ ರಾಣಿ ರುಕ್ಮಿಣಿ : ಪ್ರದ್ಯುಮ್ನ, ಚಾರುದೇಷ್ಣೆ, ಸುದೇಷ್ಣೆ, ಚಾರುದೇಹ,


ಸುಚಾರು , ಚಾರುಗುಪ್ತ , ಭದ್ರಚಾರು , ಚಾರುಚಂದ್ರ , ವಿಚಾರು , ಚಾರು

ಸತ್ಯಭಾಮಾ : ಭಾನು , ಸುಭಾನು , ಸ್ವರ್ಭಾನು , ಪ್ರಭಾನು, ಭಾನುಮಂತ ,


ಚಂದ್ರಭಾನು , ಬೃಹದ್ಭಾನು , ಅತಿಭಾನು , ಶ್ರೀ ಭಾನು , ಪ್ರತಿಭಾನು
ಜಾಂಬವತಿ : ಸಾಂಬ , ಸುಮಿತ್ರ , ಪುರಜಿತ್, ಶತಜಿತ್ , ಸಹಸ್ರಜಿತ್ , ವಿಜಯ
, ಚಿತ್ರಕೇತು , ವಸುಮಂತ , ದ್ರವಿಡ ಕ್ರತು

ಕಾಲಿಂದಿ : ಶ್ರುತ , ಕವಿ, ವೃಷ , ವೀರ , ಸುಬಾಹು , ಭದ್ರ , ಶಾಂತಿ , ದರ್ಶ,


ಪೂರ್ಣಮಾಸ , ಸೋಮಕ

ಮಿತ್ರವೃಂದಾ : ವೃಕ , ಹರ್ಷ , ಅನಿಲ, ಗೃಧ್ರ , ವರ್ಧನ , ಅನ್ನಾದ , ಮಹಾಶ ,


ಪಾವನ , ವಹ್ನಿ , ಕ್ಷುಧಿ

ಸತ್ಯಾ : ವೀರ , ಚಂದ್ರ , ಅಶ್ವಸೇನ , ಚಿತ್ರಗು , ವೇಗವಂತ , ವೃಷ , ಆಮ ,


ಶಂಕು , ವಸು , ಕುಂತಿ

ಲಕ್ಷ್ಮಣಾ : ಪ್ರಘೋಷ , ಗಾತ್ರವಂತ , ಸಿಂಹ , ಬಲ , ಪ್ರಬಲ, ಊರ್ಧ್ವಗ ,


ಮಹಾಶಕ್ತಿ , ಸಹ , ಓಜ , ಅಪರಾಜಿತ

ಭದ್ರಾ : ಸಂಗ್ರಾಮಜಿತ್ , ಬೃಹತ್ಸೇನ , ಶೂರ , ಪ್ರಹರಣ , ಅರಿಜಿತ್ , ಜಯಾ ,


ಸುಭದ್ರ , ವಾಮ , ಆಯು , ಸತ್ಯಕ ..

ನಿಮ್ಮ ಮನೆಯ ಮುದ್ದು ಮಗುವಿಗೆ ಇಡಬಹುದಾದ ಅಪರೂಪ ಮತ್ತು ಭಿನ್ನ


ಎನಿಸುವ ಕೃಷ್ಣಸುತರ ಹೆಸರುಗಳು  : ಚಾರು, ಶ್ರುತ,ವಹ್ನಿ, ವಸು, ಅಪರಾಜಿತ್,
ಅರಿಜಿತ್, ಆಯು

Beej Mantras
  
Om: ॐ  Kreem: क् रीं  Shreem: श्रीं  Hroum: ह्रौं
Doom: दंु   Hreem: ह्रीं  Ayeim: ऐं  Gam: गं   Fraum: फ् रौं  
Dam: दं   Bhram: भ्रं  Dhoom: धूं   Hleem: हलीं  
Treem : त्रीं  Kshraum: क्ष्रौं  Dhham: धं   Ham: हं   Ram: रां
Yam: यं   Ksham: क्षं   Tam: तं
A Beej Mantra is the shortest form of a Mantra just like a
beej (seed) which when sown grows into a tree. Similarly
beej mantras of different Gods, when recited together
give humans lot of positive energy and blessings of all the
Gods. They are the vibrations, and represent the "call" of
the soul. It is belief that when the universe was created
then the sounds produce during the cosmic evolution are
basically the beej mantra. There are Various Beej
Mantras which are an important part of Mantras and each
Beej mantra has its own power and when mixed with
mantras add extra power to the benefits of that mantra.
Accordingly the mantras which contain up to nine words
are termed Beej Mantra, ten or twenty words forms
Mantra and beyond are known Maha Mantra.
Basic beej mantra "Om" is further expanded into the
following types of beej - yog beej ,tejo beej, shanti beej
and raksha beej, which are respectively known as aeng
(aim) hreem, sreem, kreem, kleem, dum, gam, glaum,
lam, yam, aam or um or ram.
Om: ॐ
This beej mantra is the mystic name for the Hindu
Trimurti, and represents the union of the three gods, viz.
‘A’ for Brahma, ‘U’ for Vishnu and ‘M’ for Mahadev Shiva.
The three sounds also symbolize the three Vedas
(Rigveda, Samaveda, Yajurveda).
Kreem: क् रीं
This is Goddess Kali beej mantra. Kali Mata gives us
health, strength, all round success and protects from evil
powers. This mantra creates a strong base for Kali
Mahavidya Sadhana. In this mantra ‘ Ka ' is Maa Kali , ‘ Ra
' is Brahman, and ‘ ee ' is Mahamaya. ‘ Nada ' is the
Mother of the Universe, and bindu is the dispeller of
sorrow.
Shreem: श्रीं
This is the beej mantra for Goddess Mahalaxmi. It is
recited for wealth, material gains, success in business or
profession, elimination of ailments & worries, protection,
getting beautiful wife, happy married life and all round
success. ‘ Sha ' is Maha Lakshmi, ‘ Ra ' means wealth. ‘ Ee
' is satisfaction or contentment. Nada is the manifested
Brahman, and bindu is the dispeller of sorrow.
Hroum: ह्रौं
This is the beej mantra for Lord Shiva. Lord Shiva
protects from sudden death, fatal diseases, gives
immortality, moksha and all round success if a person
recites it with devotion along with the mantras of Shiva.
Doom: दंु
This is the beej Mantra of Maa Durga . It is recited for
power, strength,protection, health, wealth, victory,
wisdom, knowledge, elimination of enemies & grave
problems, happy married life and all round success. ‘ Da '
means Durga, and ‘ U ' means to protect. Nada means
Mother of the universe, and bindu signifies worship.
Hreem: ह्रीं
This is the Mantra of Mahamaya or Bhuvaneshwari. The
best and the most powerful make a person leader of men
and help get a person all he needs. ‘ Ha ' means Shiva, ‘
Ra ' is prakriti, ‘ ee ' means Mahamaya. Nada is the
Mother of the Universe, and bindu is the dispeller of
sorrow.
Ayeim: ऐं
This is the beej Mantra of Devi Saraswati. Goddess
Saraswati is the goddess of knowledge of all fields and
with the recitation of this mantra one can attain
knowledge, wisdom and success in any field. ‘ Ai ' stands
for Saraswati, and bindu is the dispeller of sorrow.
Gam: गं
This is the beej mantra of Lord Ganapati. Lord Ganesha
gives His devotees knowledge, wisdom, protection,
fortune, happiness, health, wealth and eliminate all
obstacles. ‘ Ga ' means Ganesha, and bindu is the
dispeller of sorrow.
Fraum: फ् रौं
This is the beej mantra for Lord Hanuman. Chanting of it
gives unlimited strength, power, protection, wisdom,
happiness, elimination of bad spirits & ghosts, victory
over enemies and all round success.
Dam: दं
This is beej mantra for Lord Vishnu. With recitation of it
a person gets wealth, health, protection, happy married
life, happiness, victory and all round success.
Bhram: भ्रं
This is the beej mantra of Lord Bhairav. It is recited for
strength, protection, victory, health, wealth, happiness,
fame, success in court cases, elimination of enemies, and
all round success.
Dhoom: धूं
This is the beej mantra for Goddess Dhoomavati.
Chanting of this mantra gives quick eradication of all
enemies, strength, fortune, protection, health, wealth
and all round success.
Hleem: हलीं
This is the beej mantra for Goddess Bagalamukhi. It is
recited for quick elimination of all enemies, power,
victory, fame, and all round success.
Treem : त्रीं
This is the beej mantra for Goddess Tara. Recitation of
this mantra gives unending financial gain, unlimited
wealth, fortune, fame, happiness, victory and all round
success.
Kshraum: क्ष्रौं
This is a beej mantra of Lord Narsimha. Lord Narsimha
removes humans all sorrows and fears and bring quick
victory over enemies. This also creates a strong base for
other Narsimha sadhanas.
Dhham: धं
This is the beej mantra of Lord Kuber. It is recited for
massive monetary gain, wealth, fortune and all round
success.
Ham: हं
This beej mantra is receited for awakening of Kundalini.
It is chanted for activating the Akash Tatva (space
element) in us which gets us siddhis and eliminates
ailments related to this element.
Ram: रां
This beej mantra is related to Agni Tatva (fire element).
Chanting of this mantra activates the Agni Tatva and
eliminates ailments related to this element. It is helpful
for quicker awakening of Kundalini.
Yam: यं
This beej mantra is related to Vayu Tatva (air element).
Chanting of this mantra activates the Vayu Tatva and
eliminates ailments related to this element. Activation of
all elements leads to quicker awakening of Kundalini 
Ksham: क्षं
This is related to the Prithvi Tatva (earth element) in us
which gets us siddhis and eliminates ailments related to
this element. Activation of all elements leads to quicker
awakening of Kundalini and enables a sadhak to access
all supernatural powers.
Tam: तं
This beej mantra is for getting rid of disease, worry, fear
and illusions

ವಂಶವೃಕ್ಷ

* ಬ್ರಹ್ಮನ ಮಗ ಮರೀಚಿ
• ಮರೀಚಿಯ ಮಗ ಕಾಶ್ಯಪ
• ಕಾಶ್ಯಪರ ಮಗ ಸೂರ್ಯ
• ಸೂರ್ಯನ ಮಗ ಮನು
• ಮನುವಿನ ಮಗ ಇಕ್ಷ್ವಾಕು
• ಇಕ್ಷ್ವಾಕುವಿನ ಮಗ ಕುಕ್ಷಿ
• ಕುಕ್ಷಿಯ ಮಗ ವಿಕುಕ್ಷಿ
• ವಿಕುಕ್ಷಿಯ ಮಗ ಬಾಣ
• ಬಾಣನ ಮಗ ಅನರಣ್ಯ
• ಅನರಣ್ಯನ ಮಗ ಪೃಥು
• ಪೃಥುವಿನ ಮಗ ತ್ರಿಶಂಕು
• ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
• ದುಂಧುಮಾರುವಿನ ಮಗ ಮಾಂಧಾತ
• ಮಾಂಧಾತುವಿನ ಮಗ ಸುಸಂಧಿ
• ಸುಸಂಧಿಯ ಮಗ ಧೃವಸಂಧಿ
• ಧೃವಸಂಧಿಯ ಮಗ ಭರತ
• ಭರತನ ಮಗ ಅಶೀತಿ
• అಶೀತಿಯ ಮಗ ಸಗರ
• ಸಗರನ ಮಗ ಅಸಮಂಜಸ*
• ಅಸಮಂಜಸನ ಮಗ ಅಂಶುಮಂತ
• ಅಂಶುಮಂತನ ಮಗ ದಿಲೀಪ
• ದಿಲೀಪನ ಮಗ ಭಗೀರಥ
• ಭಗೀರಥನ ಮಗ ಕಕುತ್ಸು
• ಕಕುತ್ಸುವಿನ ಮಗ ರಘು
• ರಘುವಿನ ಮಗ ಪ್ರವುರ್ಧ
• ಪ್ರವುರ್ಧನ ಮಗ ಶಂಖನು
• ಶಂಖನುವಿನ ಮಗ ಸುದರ್ಶನ
• ಸುದರ್ಶನನ ಮಗ ಅಗ್ನಿವರ್ಣ
• ಅಗ್ನಿವರ್ಣನ ಮಗ ಶೀಘ್ರವೇದ
• ಶೀಘ್ರವೇದನ ಮಗ ಮರು
• ಮರುವಿನ ಮಗ ಪ್ರಶಿಷ್ಯಕ
• ಪ್ರಶಿಷ್ಯಕನ ಮಗ ಅಂಬರೀಶ
• ಅಂಬರೀಶನ ಮಗ ನಹುಶ
• ನಹುಶನ ಮಗ ಯಯಾತಿ
• ಯಯಾತಿಯ ಮಗ ನಾಭಾಗ
• ನಾಭಾಗನ ಮಗ ಅಜ

• ಅಜನ ಮಗ ದಶರಥ*

ದಶರಥನ ಮಗ #ರಾಮ...
ರಾಮನಿಗೆ ಲವ-ಕುಶರೀರ್ವರು ಮಕ್ಕಳು..

• ಭರತನಿಗೆ ತಕ್ಷ-ಪುಷ್ಕಲರು..
• ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು..
• ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು..
• ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ
ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..
• ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು
ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು
ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು
ವಿದಿಶಾನಗರಿಯಲ್ಲಿ ರಾಜ್ಯವಾಳಿದರು..
• ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ.
• ಅವನಿಂದ ನಿಷಧ
• ನಭ
• ಪುಂಡರೀಕ
• ಕ್ಷೇಮಧನ್ವಾ
• ದೇವಾನೀಕ
• ಅನೀಹ
• ಪಾರಿಯಾತ್ರ
• ಬಲಸ್ಥಲ
• ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ.
• ಇವನ ಮಗ ಖಗಣ
• ವಿಧೃತಿ
• ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ
ಯೋಗಾಚಾರ್ಯನೆಂದು ಖ್ಯಾತನಾಗಿದ್ದ.ಕೋಸಲದೇಶದ
ಯಾಜ್ಞವಲ್ಕ್ಯಮಹರ್ಷಿಯು ಹಿರಣ್ಯನಾಭನಿಂದ ಅಧ್ಯಾತ್ಮಶಿಕ್ಷಣವನ್ನು ಪಡೆದ.
• ಹಿರಣ್ಯನಾಭನ ಮಗ ಪುಷ್ಯ
• ಧ್ರುವಸಂಧಿ
• ಸುದರ್ಶನ
• ಅಗ್ನಿವರ್ಣ
• ಶೀಘ್ರ
• ಮರು.ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ.ಈಗಲೂ ಈ
ಮರುಮಹಾರಾಜನು ಕಲಾಪವೆಂಬ ಗ್ರಾಮದಲ್ಲಿವಾಸಿಸುತ್ತಿದ್ದಾನೆ.ಕಲಿಯುಗದ
ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ
ಸೂರ್ಯವಂಶವನ್ನು ಬೆಳೆಸುತ್ತಾನೆ.
• ಮರುವಿನ ಮಗ ಪ್ರಸುಶ್ರುತ
• ಸಂಧಿ
• ಅಮರ್ಷಣ
• ಮಹಸ್ವಂತ
• ವಿಶ್ವಸಾಹ್ವ
• ಪ್ರಸೇನಜಿತ್
• ತಕ್ಷಕ
• ಬೃಹದ್ಬಲ-ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು
ಸಂಹರಿಸಿದ.
• ಬೃಹದ್ಬಲನ ಮಗ ಬೃಹದ್ರಣ
• ಉರುಕ್ರಿ
• ವತ್ಸವೃದ್ಧ
• ಪ್ರತಿವ್ಯೋಮ
• ಭಾನು
• ದಿವಾಕ
• ಸಹದೇವ
• ಬೃಹದಶ್ವ
• ಭಾನುಮಂತ
• ಪ್ರತೀಕಾಶ್ವ
• ಸುಪ್ರತೀಕ
• ಮರುದೇವ
• ಸುನಕ್ಷತ್ರ
• ಪುಷ್ಕರ
• ಅಂತರಿಕ್ಷ
• ಸುತಪಸ
• ಅಮಿತ್ರಜಿತ್
• ಬೃಹದ್ರಾಜ
• ಬರ್ಹಿ
• ಕೃತಂಜಯ
• ರಣಂಜಯ
• ಸಂಜಯ
• ಶಾಕ್ಯ
• ಶುದ್ಧೋದ
• ಲಾಂಗಲ
• ಪ್ರಸೇನಜಿತ್
• ಕ್ಷುದ್ರಕ
• ರಣಕ
• ಸುರಥ..
ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ
ಹುಟ್ಟಿದನು.
ಇವರೆಲ್ಲರೂ ಇಕ್ಷ್ವಾಕು ವಂಶಸಂಭೂತರು.
ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತು.

You might also like