You are on page 1of 9

ಸರ್ಪ ದೋಷ ಮತ್ತು ಕಾಳ ಸರ್ಪಗಳ ದೋಷವು ಕೇವಲ ಈ ಜನ್ಮಕ್ಕೆ ಮಾತ್ರ

ಸೀಮಿತವಾಗಿರುವುದಿಲ್ಲ. ಅದು ನಮ್ಮ ಪೂರ್ವ ಜನ್ಮದಿಂದ ಬರುವುದು.


ಜೊತೆಗೆ ಮುಂದಿನ ಜನ್ಮಕ್ಕೂ ಮುಂದುವರಿಯುವುದು ಎಂದು
ಹೇಳಲಾಗುವುದು.
 
ಹಿಂದೂ ಧರ್ಮದಲ್ಲಿ ಹಾವುಗಳಿಗೆ ವಿಶೇಷ ಸ್ಥಾನ ಹಾಗೂ ಗೌರವವನ್ನು ನೀಡಲಾಗುತ್ತದೆ.
ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಹಾವುಗಳು ದೇವತೆಗಳೊಂದಿಗೆ ನಿಕಟ
ಸಂಬಂಧವನ್ನು ಪಡೆದುಕೊಂಡಿವೆ. ನಾಗರ ಹಾವು ಮತ್ತು ಕಾಳ ಸರ್ಪವು ಅತ್ಯಂತ
ಶಕ್ತಿಯುತವಾದ ಹಾಗೂ ದೈವ ಶಕ್ತಿಯನ್ನು ಪಡೆದಿರುವ ಸರೀಸೃಪ. ಇವುಗಳನ್ನು ಸಾಯಿಸುವುದು
ಅಥವಾ ಹಿಂಸಿಸುವುದು ಮಾಡಿದರೆ ನಮ್ಮ ಜನ್ಮಕ್ಕೆ ಕಳಂಕ ಹಾಗೂ ಮಹಾ ಪಾಪ
ಅಂಟಿಕೊಳ್ಳುವುದು. ಒಮ್ಮೆ ಹಾವು ದ್ವೇಷವನ್ನು ಹೊಂದಿದ್ದರೆ 12 ವರ್ಷಗಳ ಕಾಲ ಕಾಯುವುದು.
ದೀರ್ಘ ಸಮಯದ ನಂತರವಾದರೂ ಅಂದುಕೊಂಡ ಶಿಕ್ಷೆಯನ್ನು ನೀಡುವುದು ಎಂದು
ನಂಬಲಾಗಿದೆ. ಕಾಳ ಸರ್ಪದೋಷವೆಂದು ನೀವು ಕೇಳಿರಬಹುದು, ಇದು ಮುಖ್ಯವಾಗಿ
ಜನ್ಮಕುಂಡಲಿಯಲ್ಲಿನ ರಾಹು- ಕೇತುವಿನ ಸ್ಥಾನದಿಂದಾಗಿ ಕಂಡು ಬರುವ ದೋಷ. ಈ
ದೋಷಗಳಲ್ಲೂ ಹಲವು ವಿಧಗಳಿವೆ ಅವು ಯಾವುವು ಹಾಗೂ ದೋಷ ನಿವಾರಣಾ ಪರಿಹಾರ
ಕ್ರಮಗಳೇನು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

ಪಂಚಮ ಶನಿ ಪ್ರಭಾವದಿಂದ ಯಾವ ಸಮಸ್ಯೆ ಉಂಟಾಗುತ್ತೆ ಗೊತ್ತಾ?

ವ್ಯಕ್ತಿ ತನ್ನ ಜನ್ಮ ಕುಂಡಲಿಯ ಆಧಾರದ ಮೇಲೆ ಸರ್ಪ ಅಥವಾ ಕಾಳ ಸರ್ಪ ದೋಷ ಇರುವುದನ್ನು
ಕಂಡುಕೊಳ್ಳಬಹುದು. ನಂತರ ಅದಕ್ಕೆ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದರೆ
ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ತಲೆ ದೂರುತ್ತವೆ. ಯಾರು ತಮ್ಮ ಜಾತಕ ಅಥವಾ
ಕುಂಡಲಿಯನ್ನು ಹೊಂದಿರುವುದಿಲ್ಲವೋ ಅವರು ಸಹ ಕೆಲವು ಸೂಚನೆಗಳೊಂದಿಗೆ ಕಾಳ ಸರ್ಪ
ದೋಷ ಇರುವುದನ್ನು ಗುರುತಿಸಿಕೊಳ್ಳಬಹುದು.

ನಿಜ, ನಿದ್ರೆಯಲ್ಲಿರುವಾಗ ಹಾವುಗಳ ಕನಸು ಕಾಣುವುದು, ಕನಸಿನಲ್ಲಿ ಮನೆಯು ಸಂಪೂರ್ಣವಾಗಿ


ನೀರಿನಿಂದ ಮುಳುಗಿದಂತೆ ಕಾಣುವುದು, ಯಾರೋ ಅಪರಿಚಿತರು ತೊಂದರೆ ಕೊಡುವಂತೆ,
ಮನೆಯು ಕಳ್ಳತನಕ್ಕೆ ಒಳಗಾಗಿರುವಂತೆ, ಆಸ್ತಿ ಪಾಸ್ತಿ ನಾಶ ಹೊಂದಿರುವಂತೆ, ಆಪ್ತರು ಸಾವನ್ನು
ಕಂಡಂತೆ ಹೀಗೆ ವಿವಿಧ ಬಗೆಯಲ್ಲಿ ಅಹಿತಕರವಾದ ಕನಸುಗಳು ಆಗಾಗ ಕಾಡುತ್ತಲೇ ಇರುತ್ತವೆ
ಎಂದಾದರೆ ಅವರ ಜನ್ಮ ಕುಂಡಲಿಯಲ್ಲಿ ಕಾಳ ಸರ್ಪ ತೊಂದರೆ ಇದೆ ಎಂದು ಸುಲಭವಾಗಿ
ನಿರ್ಧರಿಸಬಹುದು. ನಾಗ ಮತ್ತು ಕಾಳ ಸರ್ಪ ದೋಷ ಇರುವವರಿಗೆ ಮಾತ್ರ ಇಂತಹ ಕನಸುಗಳು
ಕಾಣಿಸಿಕೊಳ್ಳುತ್ತವೆ ಎನ್ನಲಾಗುವುದು.
ಕುಂಡಲಿಯಲ್ಲಿ ರಾಹು ಕೇತುಗಳ ಪ್ರಭಾವ
ನಮ್ಮ ಕುಂಡಲಿಯಲ್ಲಿ ಇರುವ ಕಾಳ ಸರ್ಪ ದೋಷವು ಬದುಕಿನ ನೆಮ್ಮದಿ, ಯಶಸ್ಸು, ಆರ್ಥಿಕ
ಸಮಸ್ಯೆಯನ್ನು ಹೆಚ್ಚಿಸುತ್ತವೆ. ಈ ದೋಷವು ರಾಹು ಮತ್ತು ಕೇತು ಗ್ರಹಗಳಿಂದ ಉಂಟಾಗುವುದು
ಎಂದು ಹೇಳಲಾಗುವುದು. ಅಂದರೆ ಕುಂಡಲಿಯಲ್ಲಿ 1, 2, 5, 8 ನೇ ಮನೆಯಲ್ಲಿ ರಾಹು-ಕೇತು
ಇದ್ದರೆ ಅದನ್ನು ಕಾಳ ಸರ್ಪ ದೋಷ ಎಂದು ಪರಿಗಣಿಸಲಾಗುತ್ತದೆ.
1 ಮತ್ತು 2 ನೇ ಮನೆಯಲ್ಲಿ ರಾಹುಗಳಿದ್ದರೆ ವಿವಾಹ ಯೋಗವು ದೀರ್ಘ ವರ್ಷದ ನಂತರ
ಬರುವುದು. 5 ನೇ ಮನೆಯಲ್ಲಿ ಇದ್ದರೆ ತಡವಾದ ಸಂತಾನ ಭಾಗ್ಯ, 7 ನೇ ಮನೆಯಲ್ಲಿ ಇದ್ದರೆ
ಲೈಂಗಿಕ ಅಥವಾ ಸಂಸಾರದಲ್ಲಿ ಸಾಕಷ್ಟು ತೊಂದರೆ ಮತ್ತು ಕಷ್ಟಗಳು ಎದುರಾಗುತ್ತವೆ. 8 ನೇ
ಮನೆಯಲ್ಲಿ ಇದ್ದರೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಹೇಳಲಾಗುವುದು.

ಈ ಸರಳ ಪರಿಹಾರ ಮಾಡಿದರೆ ನವಗ್ರಹದೋಷಗಳು ನಿವಾರಣೆಯಾಗುವುದು..!

ವಿವಿಧ ಬಗೆಯ ಕಾಳಸರ್ಪ ಯೋಗ


ಸರ್ಪ ಎಂದರೆ ಅದೊಂದು ವಿಷದಿಂದ ಕೂಡಿರುವ ಭಯಾನಕ ಪ್ರಾಣಿ. ಇದು ದೈವ ಶಕ್ತಿಯನ್ನು
ಹೊಂದಿರುವುದರಿಂದ ಇದನ್ನು ಹೊಡೆದರೆ ಅಥವಾ ಹಿಂಸೆಯನ್ನು ಮಾಡಿದರೆ ಅದರಿಂದ ಅಧಿಕ
ಪಾಪಕರ್ಮಗಳು ಸುತ್ತಿಕೊಳ್ಳುತ್ತವೆ. ಅವು ಏಳು ಜನ್ಮದ ವರೆಗೂ ಕಾಡುತ್ತವೆ ಎಂದು
ಹೇಳಲಾಗುವುದು. ಅನಂತ, ವಾಸುಕಿ, ಪದ್ಮನಾಭ, ಕುಳಿಕ, ಶಂಕಪಾಲ, ಮಹಾ ಪದ್ಮ, ತಕ್ಷಕ,
ಶೇಷ, ಘಟಕ ಎನ್ನುವ ಹೆಸರುಗಳನ್ನು ಹೊಂದಿರುವ 9 ಬಗೆಯ ಸರ್ಪಗಳಿವೆ. ರಾಹು ಕೇತುಗಳು
ಇರುವ ಮನೆಗಳಿಗೆ ಅನುಗುಣವಾಗಿ ಯಾವ ಸರ್ಪ ದೋಷ ಎಂದು ಗುರುತಿಸಲಾಗುವುದು.

ಅನಂತ ಕಾಳ ಸರ್ಪ ಯೋಗ


ಅನಂತ ಕಾಳ ಸರ್ಪ ಯೋಗವು ಅತ್ಯಂತ ದೀರ್ಘಾವಧಿಯ ಕಾಳ ಸರ್ಪ ಯೋಗ. ಇದು ಸುಮಾರು
27 ವರ್ಷಗಳ ಕಾಲ ಬಾಧಿಸುವುದು ಎಂದು ಹೇಳಲಾಗುತ್ತದೆ. ರಾಹು ಒಂದನೇ ಮನೆಯಲ್ಲಿ
ಹಾಗೂ ಕೇತು ಏಳನೇ ಮನೆಯಲ್ಲಿ ಇದ್ದರೆ ಅದನ್ನು ಅನಂತ ಕಾಳ ಸರ್ಪಯೋಗ ಎಂದು
ಪರಿಗಣಿಸಲಾಗುವುದು. ಈ ದೋಷ ಹೊಂದಿದವರು ದೀರ್ಘ ಆರೋಗ್ಯ ಸಮಸ್ಯೆ, ಸಂಸಾರದಲ್ಲಿ
ಕಲಹ, ಉದ್ಯೋಗದಲ್ಲಿ ತೊಂದರೆಯನ್ನು ಅನುಭವಿಸುವರು. ಇವರು ಅತ್ಯಂತ ಕೀಳು
ಮನೋಭಾವವನ್ನು ಹೊಂದಿರುತ್ತಾರೆ.

ವಾಸುಕಿ ಕಾಳ ಸರ್ಪ ಯೋಗ


ನಮ್ಮ ಕುಂಡಲಿಯ 3 ನೇ ಮನೆಯಲ್ಲಿ ರಾಹುವಿನ ವಾಸ ವಿದ್ದು, 9 ನೇ ಮನೆಯಲ್ಲಿ ಕೇತು
ಕುಳಿತುಕೊಂಡಿದ್ದರೆ ಆಗ ವ್ಯಕ್ತಿಯು ವಾಸುಕಿ ಸರ್ಪ ದೋಷವನ್ನು ಅನುಭವಿಸುವನು. ಅದರಿಂದ
ವ್ಯಕ್ತಿ ಅಕಾಲಿಕ ಮರಣ, ಹಣದ ಸಮಸ್ಯೆ, ಸಂಬಂಧಗಳಲ್ಲಿ ತೊಂದರೆಯನ್ನು ಅನುಭವಿಸುವನು.
ಪದ್ಮನಾಭ ಕಾಳ ಸರ್ಪ ಯೋಗ
ಈ ಯೋಗವು ವ್ಯಕ್ತಿಗೆ 48 ವರ್ಷ ಕಾಡುವುದು. ಜನ್ಮ ಕುಂಡಲಿಯ 5 ನೇ ಮನೆಯಲ್ಲಿ ರಾಹು ಮತ್ತು
11 ನೇ ಮನೆಯಲ್ಲಿ ಕೇತುವಿನ ಆಡಳಿತ ಇದ್ದರೆ ಅದು ಪದ್ಮನಾಭ ಕಾಳ ಸರ್ಪ ಯೋಗ
ಎನಿಸಿಕೊಳ್ಳುವುದು. ಈ ಸಮಸ್ಯೆ ಇದ್ದವರಿಗೆ ಸಂತಾನ ಹೀನತೆ ಉಂಟಾಗುವುದು. ಇಲ್ಲವೇ
ಮಕ್ಕಳ ಬಗ್ಗೆಯೇ ಅಧಿಕ ಚಿಂತನೆ ನಡೆಸಿ ಮಾನಸಿಕ ತೊಂದರೆಯನ್ನು ಅನುಭವಿಸುವ
ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಕುಳಿಕ ಕಾಳ ಸರ್ಪ ಯೋಗ


ಆಗಾಗ ಅಪಘಾತಗಳು, ಆರ್ಥಿಕ ನಷ್ಟ ಅನ್ಯರಿಂದ ತೊಂದರೆ ಉಂಟಾಗುತ್ತಿದ್ದರೆ ಅದನ್ನು ಕುಳಿಕ
ಕಾಳ ಸರ್ಪ ಯೋಗ ಎಂದು ಹೇಳಲಾಗುವುದು. 2 ನೇ ಮನೆಯಲ್ಲಿ ರಾಹು ಮತ್ತು 8 ನೇ
ಮನೆಯಲ್ಲಿ ಕೇತು ಇದ್ದರೆ ಅದು ಕುಳಿಕ ಕಾಳ ಸರ್ಪದ ಯೋಗವಾಗಿರುತ್ತದೆ.

ಶಂಕಪಾಲ ಕಾಳ ಸರ್ಪಯೋಗ


ಶಂಕಪಾಲ ಕಾಳ ಸರ್ಪ ಯೋಗವು ಸಾಮಾನ್ಯವಾಗಿ 42 ವರ್ಷಗಳ ಕಾಲ ಕಾಡುವುದು. ರಾಹು
4 ನೇ ಮನೆಯಲ್ಲಿ ಹಾಗೂ ಕೇತು 10 ನೇ ಮನೆಯಲ್ಲಿ ಇರುವಾಗ ಈ ಸಮಸ್ಯೆ ಉಂಟಾಗುವುದು
ಎಂದು ಹೇಳಲಾಗುವುದು. ಈ ದೋಷದಿಂದ ವ್ಯಕ್ತಿ ಸಾಕಷ್ಟು ಆತಂಕ ಹಾಗೂ ಒತ್ತಡದಿಂದ
ಜೀವನವನ್ನು ನಡೆಸುವನು.

ಮನೆಯಲ್ಲಿ ಈ ಗಿಡಗಳನ್ನು ನೆಡುವುದರಿಂದ ಸಂಪತ್ತು, ಅದೃಷ್ಟ ನಿಮ್ಮದಾಗುವುದು..

ಮಹಾಪದ್ಮ ಕಾಳ ಸರ್ಪ ಯೋಗ


ಈ ದೋಷವನ್ನು ವ್ಯಕ್ತಿ 54 ವರ್ಷಗಳ ಕಾಲ ಅನುಭವಿಸಬೇಕಾಗುವುದು. ಕುಂಡಲಿಯ 6 ನೇ
ಮನೆಯಲ್ಲಿ ರಾಹು ಮತ್ತು 12 ನೇ ಮನೆಯಲ್ಲಿ ಕೇತುವಿನ ವಾಸ್ತವ್ಯ ಇರುತ್ತದೆ. ಈ ದೋಷದಿಂದಾಗಿ
ವ್ಯಕ್ತಿಯ ಜೀವನದಲ್ಲಿ ಅಧಿಕ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಅನೇಕ ಖಾಯಿಲೆಯಿಂದ
ಬಳಲುತ್ತಾರೆ.

ತಕ್ಷಕ ಕಾಳ ಸರ್ಪ ಯೋಗ


ಈ ಯೋಗದಲ್ಲಿ ವ್ಯಕ್ತಿ ಎಲ್ಲಾ ಬಗೆಯ ವ್ಯಸನಗಳಿಗೂ ಬಲಿಯಾಗುತ್ತಾನೆ. ಇವರ
ವ್ಯಸನದಿಂದಾಗಿಯೇ ಸಾಕಷ್ಟು ತೊಂದರೆಗಳು ಉಂಟಾಗುವುದು. ಕುಟುಂಬ ಜೀವನದಲ್ಲಿ ಅಧಿಕ
ಸಮಸ್ಯೆಯನ್ನು ಅನುಭವಿಸಬೇಕಾಗುವುದು. ಕುಂಡಲಿಯ 7 ನೇ ಮನೆಯಲ್ಲಿ ರಾಹು ಮತ್ತು 1 ನೇ
ಮನೆಯಲ್ಲಿ ಕೇತು ಇದ್ದರೆ ತಕ್ಷಕ ಕಾಳಸರ್ಪ ಯೋಗ ಎಂದು ಪರಿಗಣಿಸಲಾಗುವುದು.

ಶೇಷ ಕಾಳ ಸರ್ಪಯೋಗ


ಕುಂಡಲಿಯ 12 ನೇ ಮನೆಯಲ್ಲಿ ರಾಹು, 6 ನೇ ಮನೆಯಲ್ಲಿ ಕೇತು ಇದ್ದರೆ ಶೇಷ ಕಾಳಸರ್ಪ
ಯೋಗ ಎನ್ನಲಾಗುತ್ತದೆ. ಈ ಸಮಸ್ಯೆಯ ಪ್ರಭಾವದಿಂದ ವ್ಯಕ್ತಿ ಜೀವನದಲ್ಲಿ ಸಾಕಷ್ಟು
ದೌರ್ಭಾಗ್ಯವನ್ನು, ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು.

ಘಟಕ ಕಾಳ ಸರ್ಪಯೋಗ


ಘಟಕ ಕಾಳ ಸರ್ಪಯೋಗವು ಇದ್ದರೆ ವ್ಯಕ್ತಿ ಜೀವನದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ
ಶಿಕ್ಷೆಯನ್ನು ಅನುಭವಿಸುವನು. ಕುಂಡಲಿಯ 10 ನೇ ಮನೆಯಲ್ಲಿ ರಾಹು ಮತ್ತು 4 ನೇ ಮನೆಯಲ್ಲಿ
ಕೇತು ಇದ್ದರೆ ಘಟಕ ಕಾಳ ಸರ್ಪಯೋಗವು ಕಾಡುವುದು.

ಅಷ್ಟಮದಲ್ಲಿ ಚಂದ್ರನಿದ್ದರೆ ಜನ್ಮಕುಂಡಲಿಯಲ್ಲಿ ಯಾವ ಸಮಸ್ಯೆಗಳು ಉಂಟಾಗುತ್ತೆ ಗೊತ್ತಾ?

ಕಾಳ ಸರ್ಪ ಯೋಗಕ್ಕೆ ಪರಿಹಾರ ಕ್ರಮಗಳು


ಈ ಯೋಗಗಳು ಅತ್ಯಂತ ಹಾನಿಕಾರಕ ಹಾಗೂ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇಂತಹ
ಸಮಸ್ಯೆಗಳಿಂದ ಮುಕ್ತಿ ಹೊಂದಲು ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಬೇಕು.

 ಬೆಳ್ಳಿಯಿಂದ ಮಾಡಿದ ಜೋಡಿ ನಾಗ ಹಾಗೂ ಮೊಟ್ಟೆಯನ್ನು ಸುಬ್ರಹ್ಮಣ ದೇವಸ್ಥಾನಕ್ಕೆ


ಅಥವಾ ಗರುಡ ಗೋವಿಂದ ದೇವಸ್ಥಾನಕ್ಕೆ ಅರ್ಪಿಸಿ.

 ನಿತ್ಯವೂ ಪಂಚಾಕ್ಷರಿ ಮಂತ್ರ, ಮಹಾ ಮೃತ್ಯುಂಜಯ ಜಪವನ್ನು 108 ಬಾರಿ ಮಾಡಬೇಕು.


ಅವು ಕುಂಡಲಿಯಲಿರುವ ದೋಷಗಳನ್ನು ನಿಯಂತ್ರಿಸುತ್ತವೆ.

 ನಿತ್ಯವೂ 108 ಬಾರಿ ರಾಹುವಿನ ಬೀಜ ಮಂತ್ರವನ್ನು ಜಪಿಸಿ.


 ಪ್ರತಿ ಶನಿವಾರ ಅಶ್ವತ್ಥ ಮರಕ್ಕೆ ಪೂಜೆ ಹಾಗೂ ನೀರನ್ನು ಎರೆಯಬೇಕು. ಇದು ಅತ್ಯಂತ
ಫಲಪ್ರದವಾದ ಪರಿಣಾಮವನ್ನು ನೀಡುವುದು.

 ನಾಗರ ಪಂಚಮಿಯ ದಿನ ಉಪವಾಸ ಕೈಗೊಳ್ಳುವುದು, ಶ್ರೀ ಕೃಷ್ಣ ದೇವರ ಹೆಸರಿನಲ್ಲಿ 11


ತೆಂಗಿನ ಕಾಯನ್ನು ನೀರಿನಲ್ಲಿ ಬಿಡಬೇಕು. ಅದು ಪಂಚಮಿಯ ದಿನ ಸಾಧ್ಯವಾಗದೆ ಇದ್ದರೆ
ಶನಿವಾರ ಈ ಕ್ರಮವನ್ನು ಕೈಗೊಳ್ಳಬಹುದು.

 ಲೋಹದಿಂದ ಮಾಡಿದ ನಾಗ ಮತ್ತು ನಾಗಿಣಿಯ 108 ಜೋಡಿಯನ್ನು ಶನಿವಾರ ನದಿ


ನೀರಿಗೆ ಬಿಡಬೇಕು.

 ಸೋಮವಾರ ರುದ್ರಾಭಿಷೇಕ ಮಾಡಿಸಿ.

 ನಿತ್ಯವೂ ಕಾಳಸರ್ಪ ಗಾಯತ್ರಿ ಮಂತ್ರವನ್ನು ಜಪಿಸುವುದು ಅತ್ಯಂತ ಫಲಪ್ರದ ವಿಧಾನ.


ಇವುಗಳಿಂದ ನಮಗೆ ಅಂಟಿರುವ ದೋಷವನ್ನು ನಿಯಂತ್ರಿಸಬಹುದು ಎಂದು ಹೇಳಲಾಗುವುದು.

You might also like