You are on page 1of 16

ಏಕಶೀತಿ ಪದವಾಸ್ತು ಮಂಡಲದ ರೀತಿ ಸಿಂಹದ್ವಾರ ಸ್ಟಪನೆ ಮತ್ತು ಅದರ ಫಲಗಳು

ಯಾವುದೇ ಜೀವಿಗಳಿಗಾಗಲಿ ಅಥವಾ ನಿರ್ಜೀವ ವಸ್ತುಗಳಿಗಾಗಲಿ ಅದಕ್ಕೆ ಸರಿಯಾದ ಆಕಾರಗಳಿದ್ದರೇನೆ ನೋಡಲು


ಸುಂದರವಾಗಿರುವುದು ಉದಾಹರಣೆಗೆ ಮನುಷ್ಯರನ್ನೇ ತೆಗೆದುಕೊಳ್ಳಿ ಎಲ್ಲಾ ಅವಯವಗಳೂ ಸರಿಯಾಗಿದ್ದರೇನೇ ನೋಡಲು
ಚೆನ್ನಾಗಿರುವುದು ಹಾಗು ಅಂಗಹೀನವಾದರೆ ನೋಡುವುದಕ್ಕೆ ಸಾದ್ಯವಾಗುವುದಿಲ್ಲ. ಹಾಗೆಯೇ ನಿರ್ಮಿಸುವ ಕಟ್ಟಡಕ್ಕೂ ಎಲ್ಲಾ
ಅವಯವಗಳೂ ಅವಶ್ಯಕವೇ ಉದಾಹರಣೆಗೆ ಬಾಗಿಲು, ಕಿಟಕಿಗಳು, ಮುಂತಾದವಗಳು ಎಲ್ಲೆಲ್ಲರಬೇಕೋ ಅಲ್ಲಲ್ಲಿದ್ದರೇನೇ ಆ
ಕಟ್ಟಡಕ್ಕೆ ಪಂಚಬೂತಗಳ ಕೃಪೆ ದೊರೆಯುವುದು. ಹಾಗೆಯೇ ದ್ವಾರಗಳ ಅವಶ್ಯಕತೆಯಬಗ್ಗೆ ಎಲ್ಲರಿಗೂ ತಿಳಿದಿರುವುದೇ
ಆಗಿರುವುದು.

ದ್ವಾರಗಳನ್ನು ನಿರ್ಮಿಸಿಕೊಳ್ಳುವುದಕ್ಕೆ ಅನೇಕ ಆಯಾಮಗಳಿರುವುದು ಅದರಲ್ಲಿ ಮುಖ್ಯವಾಗಿ ನಾಲಕ್ಕು ವಿದಾನಗಳು


ಜನಜನಿತವಾಗಿರುವುದು.

1. ಕಟ್ಟಡದ ಆಯದಿಂದ ಸಿಂಹದ್ವಾರ ನಿರ್ಮಿಸುವ ಪದ್ದತಿ.


2. ಕಟ್ಟಡದ ಮಾಲೀಕನ ರಾಶಿಯ ಮುಕಾಂತರ ಸಿಂಹದ್ವಾರ ನಿರ್ಮಿಸುವ ಪದ್ದತಿ.
3. ಸೂರ್ಯ ಸಂಕ್ರಾಂತಿಯ ಮೂಲಕ ಸಿಂಹದ್ವಾರ ನಿರ್ಮಿಸುವ ಪದ್ದತಿ.
4. ಏಕಾಶೀತಿ ಪದವಾಸ್ತುಮಂಡಲದ ರೀತಿಯಾಗಿ ಸಿಂಹದ್ವಾರ ನಿರ್ಮಿಸುವ ಪದ್ದತಿ.

ಇದಲ್ಲದೇ ವರ್ಣ ಅಥವಾ ಜಾತಿಯ ಆದರದಮೇಲೆ ಸಿಂಹದ್ವಾರ ನಿರ್ಮಿಸುವ ಪದ್ದತಿಯನ್ನೂ ಹೇಳಿರುವರು.

ನಾವುಗಳು ಈಗಾಗಲೇ ಕಟ್ಟಡದ ಆಯವನ್ನನುಸರಿಸಿ ಸಿಂಹದ್ವಾರ ನಿರ್ಮಿಸುವ ಪದ್ದತಿಯಬಗ್ಗೆ ತಿಳಿದುಕೊಂಡಿರುವೆವು

ಈಗ ಏಕಾಶೀತಿ ಪದವಾಸ್ತುಮಂಡಲದ ರೀತಿಯಾಗಿ ಯಾವ ಯಾವ ಪದಗಳಲ್ಲಿ ಸಿಂಹದ್ವಾರವನ್ನು ನಿರ್ಮಿಸಬಹುದು ಹಾಗು


ಯಾವಯಾವ ಪದಗಳಲ್ಲಿ ಸಿಂಹದ್ವಾರವನ್ನು ನಿರ್ಮಿಸಬಾರದು ಹಾಗು ಅದರಿಂದ ಬರುವ ಶುಭ ಮತ್ತು ಅಶುಭ ಫಲಗಳ ಬಗ್ಗೆ
ತಿಳಿದುಕೊಳ್ಳೋಣ.

ಏಕಾಶೀತಿ ಪದವಾಸ್ತುಮಂಡಲದರೀತಿಯಲ್ಲಿ ಇರುವ ಪದದಂತೆ ಸಿಂಹದ್ವಾರವನ್ನು ಇಡುವುದು ಅತ್ಯಂತ ಶುಭಕರ ಎಂದು


ಸಮರಾಂಗಣ ಸೂತ್ರದಾರದಲ್ಲಿ ವಿಕ್ರಮಾರ್ಕ ಮಹಾರಾಜ ವಿವರಿಸಿರುವರು ಅದರ ಪ್ರಕಾರ ಸಿಂಹದ್ವಾರ ಯಾವ ಯಾವ
ಪದಗಳಲ್ಲಿ ಇದ್ದರೆ ಶುಭಫಲ ದೊರೆಯುವುದು ಹಾಗು ಯಾವಯಾವ ಪದಗಳಲ್ಲಿ ಸಿಂಹದ್ವಾರ ಇದ್ದರೆ ಅಶುಭ ಫಲಗಳು
ದೊರೆಯುತ್ತದೆ ಹಾಗು ಏನು ಅದರ ಫಲಗಳು ಎಂದು ಮುಂದೆ ತಿಳಿಸಲಾಗುವುದು.

1). ಆದಿತ್ಯಪದದಲ್ಲಿ ಸಿಂಹದ್ವಾರವಿದ್ದರೆ ವಂಶ ನಾಶ, ಸಂತಾನ ನಷ್ಟ, ಕೋಪ ತಾಪಗಳು ಹಾಗು
ಕ್ರೋದಗಳನ್ನುಂಟುಮಾಡುವುದು.

2). ಸತ್ಯಪದದಲ್ಲಿ ಸಿಂಹದ್ವಾರವಿದ್ದರೆ ಆಗ ಸ್ನೇಹಿತರಿಂದ ಅವಹೇಳನಕ್ಕೆ ಗುರಿಯಾಗುವರು, ಸುಳ್ಳು ಹೇಳುವವರಾಗುವರು.

3). ಭೃಶಪದದಲ್ಲಿ ಸಿಂಹದ್ವಾರವಿದ್ದರೆ ಅಂತಹ ಮನೆಯಲ್ಲಿ ವಾಸಿಸುವವರು ಒಂದುರೀತಿ ಏಕಾಂಗಿಗಳಾಗುವರು ಕ್ರೌರ್ಯ


ಆವರಿಸಿಕೊಳ್ಳುವುದು.

4). ಅಂತರಿಕ್ಷ ಪದದಲ್ಲಿ ಸಿಂಹದ್ವಾರವಿದ್ದರೆ ದಾಂಪತ್ಯನಾಶವಾಗುವುದು ಕಳ್ಳಕಾಕರ ಬಯ ಆವರಿಸಿಕೊಳ್ಳುವುದು.


5). ವಾಯು ಪದದಲ್ಲಿ ಸಿಂಹದ್ವಾರವಿದ್ದರೆ ಅಂತಹ ಮನೆಯ ಯಜಮಾನ ನಾಶಹೊಂದುವನು ಹಾಗು ಅಲ್ಪಸಂತಾನ
ಹೊಂದುವರು.

6). ಪೂಷ ಪದದಲ್ಲಿ ಸಿಂಹದ್ವಾರವಿದ್ದರೆ ಅಪಾಯಗಳಿಂದಾಗಿ ನಷ್ಟವಾಗುವುದು ಧನ ಕ್ಷಯವಾಗುವುದು ಹಾಗು ಬೇರೆಯವರ


ಕೈಕೆಳಗೆ ಕೆಲಸ ಮಾಡುವವರಾಗುವರು.

7). ವಿತಥ ಪದದಲ್ಲಿ ಸಿಂಹದ್ವಾರವಿದ್ದರೆ ಮನೆಯ ಯಜಮಾನರು ನಿದನಹೊಂದುವರು ಹಾಗು ಆಮನೆಯವರಲ್ಲಿ ನೀಚತ್ವ
ಆವರಿಸಿಕೊಳ್ಳುವುದು.

8. ಗೃಹಕ್ಷತ ಪದದಲ್ಲಿ ಸಿಂಹದ್ವಾರವಿದ್ದರೆ ಸಂಪತ್ತಿನ ಕ್ರೋಡೀಕರಣವಾಗುವುದು ಒಳ್ಳೆಯ ಭಕ್ಷ್ಯ ಬೋಜನ ಮಾಡುವವರಾಗುವರು,


ಉತ್ತಮ ಪಾನೀಯ ಸೇವಿಸುವವರಾಗುವರು ಪುತ್ರ ಸಂತಾನ ವೃದ್ದಿಯಾಗುವುದು.

9). ಯಮಪದದಲ್ಲಿ ಸಿಂಹದ್ವಾರವಿದ್ದರೆ ಸರ್ವವಿದದಲ್ಲಿಯೂ ನಷ್ಟಹೊಂದುವರು.

10). ಗಂಧರ್ವಪದದಲ್ಲಿ ಸಿಂಹದ್ವಾರವಿದ್ದರೆ ಎಲ್ಲವಿದದಲ್ಲಿಯೂ ಅಭಿವೃದ್ಧಿಯನ್ನು ಹೊಂದುವರು.

11). ಬೃಂಗರಾಜಪದದಲ್ಲಿ ಸಿಂಹದ್ವಾರವಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ, ಹಾಗು ಧನ ಕ್ಷಯವಾಗುವುದು.

12). ಮೃಗಪದದಲ್ಲಿ ಸಿಂಹದ್ವಾರವಿದ್ದರೆ ಬೆಳೆ ನಷ್ಟವಾಗುವುದು, ಗಂಡುಸಂತತಿಯ ಅವನತಿ .

13). ಪಿತೃಪದದಲ್ಲಿ ಸಿಂಹದ್ವಾರವಿದ್ದರೆ ಅಪಾಯ ತಪ್ಪಿದ್ದಲ್ಲ ಹಾಗು ಪುತ್ರರಿಗೆ ಹಾಗು ಯಜಮಾನಾನಿಗೆ


ಹಾನಿಯನ್ನುಂಟುಮಾಡುವುದು.

14). ದೌವಾರಿಕಪದದಲ್ಲಿ ಸಿಂಹದ್ವಾರವಿದ್ದರೆ ಸರ್ವವಿದದಲ್ಲಿಯೂ ನಷ್ಟ ಹೊಂದುವರು, ಅನೇಕ ಶತ್ರುಗಳ ಕಾಟ.

15). ಸುಗ್ರೀವಪದದಲ್ಲಿ ಸಿಂಹದ್ವಾರವಿದ್ದರೆ ಸರ್ವದಭಿವೃದ್ಧಿಯನ್ನು ಹೊಂದುವರು. (ಕೆಲವು ಗ್ರಂಥಗಳಲ್ಲಿ ಸಂತಾನ ನಾಶ, ಧನಕ್ಷಯ
ಎಂದಿರುವರು).

16). ಪುಷ್ಪದಂತಪದದಲ್ಲಿ ಸಿಂಹದ್ವಾರವಿದ್ದರೆ ಒಳ್ಳೆಯ ಗುಣವಂತರಾಗಿರುವರು ಪುತ್ರಸಂತಾನ ವಾಗುವುದು ಹಾಗು


ಧನಸಂಪಾದನೆಯಾಗುವುದು.

17). ವರುಣಪದದಲ್ಲಿ ಸಿಂಹದ್ವಾರವಿದ್ದರೆ ಕಳ್ಳಕಾಕರ ಹಾಗು ಶತೃಗಳ ಭಯವಿರುವುದು.

18). ಅಸುರಪದದಲ್ಲಿ ಸಿಂಹದ್ವಾರವಿದ್ದರೆ ಸದಾಕಾಲ ಯಾವುದಾದರೂ ಪ್ರಯತ್ನದಲ್ಲಿ ಅಥವಾ ಕೆಲಸದಲ್ಲಿ ತೊಡಗಿರುವರು ಮತ್ತು
ಅದರಿಂದಾಗಿ ಆಯಾಸ ಪಡುವರು ಮತ್ತು ಸರ್ಕಾರದಿಂದ ತೊಂದರೆ.

19). ಶೋಷ ಪದದಲ್ಲಿ ಸಿಂಹದ್ವಾರವಿದ್ದರೆ ಕೀಳುವರ್ತನೆಯವರಾಗುವರು ಒಂದುರೀತಿ ಕೆಟ್ಟನಡವಳಿಕೆ ಹೊಂದಿದವರಾಗುವರು


ಧನನಷ್ಟ .

20). ರೋಗಪದದಲ್ಲಿ ಸಿಂಹದ್ವಾರವಿದ್ದರೆ ಕಾಮಾಲೆ ರೋಗ ಬರುವುದು ಅಥವಾ ಅದಕ್ಕೆ ಸಮಾನವಾದ ಕಾಯಿಲೆ ಬರುವುದು
ಬಂಧುಗಳನ್ನು ಕಳೆದುಕೊಳ್ಳುವರು.
21). ಪಾಪಯಕ್ಷ ಪದದಲ್ಲಿ ಸಿಂಹದ್ವಾರವಿದ್ದರೆ ವಾತರೋಗ ಬರುವುದು.

22). ನಾಗಪದದಲ್ಲಿ ಸಿಂಹದ್ವಾರವಿದ್ದರೆ ಸರ್ಪಗಳ ಭಯ ಕಾಡುವುದು, ಶತ್ರುಗಳ ಕಾಟ.

23). ಮುಖ್ಯಪದದಲ್ಲಿ ಸಿಂಹದ್ವಾರವಿದ್ದರೆ ಒಂದುರೀತಿಯ ಶೋಖ ಆವರಿಸುವುದು.

24). ಬಲ್ಲಾಟಪದದಲ್ಲಿ ಸಿಂಹದ್ವಾರವಿದ್ದರೆ ಅನನ್ಯತೆಯ, ಎಣೆಯಿಲ್ಲದ ಮಾಲೀಕರಾಗುವರು.

25). ಸೋಮಪದದಲ್ಲಿ ಸಿಂಹದ್ವಾರವಿದ್ದರೆ ಅಂತಹ ಮನೆಯಲ್ಲಿ ವಾಸಿಸುವವರು ದೈವಕಾರ್ಯಗಳನ್ನು ಮಾಡುವವರಾಗುವರು


ಮತ್ತು ಯಗ್ನ ಯಾಗಾದಿಗಳನ್ನು ಮಾಡುವವರಾಗುವರು ಮತ್ತು ಧರ್ಮ ಕರ್ಮಗಳಬಗ್ಗೆ ಅರಿವಿರುವವರಾಗಿರುತ್ತಾರೆ, ಯಾವುದೇ
ಕೆಲಸ ಕಾರ್ಯಗಳಿಗೂ ಧೈರ್ಯದಿಂದ ಮುನ್ನುಗ್ಗುವವರಾಗುವರು.

26. ಭುಜಂಗಪದದಲ್ಲಿ ಸಿಂಹದ್ವಾರವಿದ್ದರೆ ನೀರಿನಿಂದ ಮೃತಿಹೊಂದುವರು ಗಂಡುಮಕ್ಕಳೆ ಶತ್ರುಗಳಂತೆ ವರ್ತಿಸುವರು.

27). ಅದಿತಿಪದದಲ್ಲಿ ಸಿಂಹದ್ವಾರವಿದ್ದರೆ ಹೊಟ್ಟೆಗೆ ಸಂಬಂಧಿಸಿದಂತೆ ತೊಂದರೆಗಳನ್ನು ಅನುಭವಿಸುವರು, ಸ್ರೀಯರಿಂದ


ದ್ವೇಶಿಸಲ್ಪಡುವವರಾಗುವರು.

28). ದಿತಿಪದದಲ್ಲಿ ಸಿಂಹದ್ವಾರವಿದ್ದರೆ ಅಲ್ಲಿನವರು ಹೆಂಗಸರಿಂದ ಹಾಗು ಜಾತಿಗೆಸಂಬಂಧಿಸಿದಂತೆ ಅವನತಿಯನ್ನು ಹೊಂದುವರು,


ಧನಕ್ಷಯವಾಗುವುದು.

29). ರುದ್ರಪದದಲ್ಲಿ (ಶಿಖಿ) ಸಿಂಹದ್ವಾರವಿದ್ದರೆ ಅಗ್ನಿಭಯ ಕಾಡುವುದು.

30). ಪರ್ಜನ್ಯಪದದಲ್ಲಿ ಸಿಂಹದ್ವಾರವಿದ್ದರೆ ಹಣಕಾಸಿನ ಹಾಗು ಸಂಪತ್ತಿನ ನಷ್ಟ.

31). ಜಯಂತಪದದಲ್ಲಿ ಸಿಂಹದ್ವಾರವಿದ್ದರೆ ಎಲ್ಲರೀತಿಯ ಯಶಸ್ಸು ದೊರೆಯುವುದು ಧನಲಾಭವಾಗುವುದು.

32). ಇಂದ್ರಪದದಲ್ಲಿ ಸಿಂಹದ್ವಾರವಿದ್ದರೆ ಒಂದುರೀತಿಯ ಹಿರಿಮೆಯನ್ನು ಹೊಂದಿದವರಾಗುವರು, ಸರ್ಕಾರದಿಂದ ಸರ್ಕಾರದ


ಅಧಿಕಾರಿಗಳಿಂದ ಲಾಭವಾಗುವುದು.

ಮೇಲೆ ಹೇಳಿದಂತೆ ಸಾದಕ ಬಾದಕಗಳನ್ನು ಅರಿತು ಸಿಂಹದ್ವಾರವನ್ನು ಇಟ್ಟು ಗೃಹನಿರ್ಮಾಣ ಮಾಡಿದರೆ ಅಭಿವೃದ್ಧಿಯನ್ನು
ಹೊಂದುವುದರಲ್ಲಿ ಸಂಶಯವಿಲ್ಲ. ಅಂದರೆ

1). ಪೂರ್ವದಿಕ್ಕಿನ ಸಿಂಹದ್ವಾರದ ಗೃಹನಿರ್ಮಾಣ ಮಾಡಬೇಕಿದ್ದರೆ ಆಗ ಜಯಂತ, ಮತ್ತು ಮಹೇಂದ್ರ ಈ ಪದದಲ್ಲಿ


ಸಿಂಹದ್ವಾರವನ್ನು ಇಡಬಹುದು.

2). ದಕ್ಷಿಣ ದಿಕ್ಕಿನಲ್ಲಿ ಸಿಂಹದ್ವಾರವನ್ನಿಟ್ಟು ಗೃಹ ನಿರ್ಮಾಣ ಮಾಡಬೇಕಾದರೆ ಗೃಹಕ್ಷತ ಹಾಗು ಗಂಧರ್ವ ಈ ಭಾಗದಲ್ಲಿ
ಸಿಂಹದ್ವಾರವನ್ನಿಡಬಹುದು.

3). ಪಶ್ಚಿಮ ದಿಕ್ಕಿನಲ್ಲಿ ಸಿಂಹದ್ವಾರವನ್ನಿಟ್ಟು ಗೃಹ ನಿರ್ಮಾಣ ಮಾಡಬೇಕಾದರೆ ಸುಗ್ರೀವ ಹಾಗು ಪುಷ್ಪದಂತ ಈ ಭಾಗದಲ್ಲಿ
ಸಿಂಹದ್ವಾರವನ್ನಿಡಬಹುದು.
4). ಉತ್ತರ ದಿಕ್ಕಿನಲ್ಲಿ ಸಿಂಹದ್ವಾರವನ್ನಿಟ್ಟು ಗೃಹ ನಿರ್ಮಾಣ ಮಾಡಬೇಕಾದರೆ ಬಲ್ಲಾಟ ಹಾಗು ಸೋಮ ಈ ಭಾಗದಲ್ಲಿ
ಸಿಂಹದ್ವಾರವನ್ನಿಡಬಹುದು.

ಗೃಹ ಕಟ್ಟಡದ ಮದ್ಯಭಾಗದಲ್ಲಿ ಯಾವುದೇ ಕಾರಣಕ್ಕೂ ಸಿಂಹದ್ವಾರವನ್ನಿಡಬಾರದು. ಅಂದರೆ ಗೃಹದ ಒಟ್ಟು ಅಳತೆಯ
ಮದ್ಯಬಾಗದಲ್ಲಿ (ಉದಾಹರಣೆಗೆ ಅಗಲ 25 ಅಡಿಗಳಿದ್ದರೆ 12.5 ಅಡಿಗೆ ಬರುವಂತೆ) ದ್ವಾರವನ್ನು ನಿರ್ಮಿಸಬಾರದು ಅದರಿಂದ
ಅನೇಕ ಕೆಟ್ಟಫಲಗಳನ್ನು ಅನುಭವಿಸಬೇಕಾಗುವುದು.

ವರ್ಣಗಳಿಗನುಸಾರವಾಗಿ ದ್ವಾರ ನಿರ್ಮಾಣ

ಬ್ರಾಹ್ಮಣರಿಗೆ ಗೃಹನಿರ್ಮಾಣ ಮಾಡಬೇಕಿದ್ದರೆ ದ್ವಾರವನ್ನು ಪೂರ್ವದಲ್ಲಿ ಮಹೇಂದ್ರ ಪದದಲ್ಲಿ ಮತ್ತು ದಕ್ಷಿಣದಲ್ಲಿ ಗೃಹಕ್ಷತ ಪದದಲ್ಲಿ
ಸ್ಥಾಪಿಸ್ಬಹುದು. ಮಲಗುವ ಕೋಣೆಯನ್ನು ಉತ್ತರದಿಕ್ಕಿನ ಮಹೇಂದ್ರ, ಬಲ್ಲಾಟ, ಸೋಮ ಸ್ಥಾನದಲ್ಲಿ ನಿರ್ಮಿಸಲು ಅತ್ಯುತ್ತಮ
ಸ್ಥಳವಾಗಿರುವುದು ಮತ್ತು ತಲೆಯ ಬಾಗವನ್ನು ಪೂರ್ವ ದಿಕ್ಕಿಗೆ ಇಡಬೇಕು ಎಂದು ಹೇಳಿರುವರು.

ಕ್ಷತ್ರಿಯ ವರ್ಣಕ್ಕೆ ಗೃಹ ನಿರ್ಮಾಣ ಮಾಡುವಾಗ ದ್ವಾರವನ್ನು ದಕ್ಷಿಣದಲ್ಲಿ ಗೃಹಕ್ಷತಾ ಮತ್ತು ಪಶ್ಚಿಮದ ಪುಷ್ಪದಂತ ಪದದಲ್ಲಿ
ನಿರ್ಮಿಸಬಹುದು ನಂತರ ಅಡುಗೆ ಮನೆಯನ್ನು ದಕ್ಷಿಣ ಆಗ್ನೇಯದ ಕಡೆಗೆ ಬರುವ ವಿತಥ ಪದದಲ್ಲಿ ನಿರ್ಮಿಸಬಹುದು ಮತ್ತು
ಪಶ್ಚಿಮದ ಅಸುರ ಪದದಲ್ಲಿ ಹಾಲ್ ಅಥವಾ ಲಿವಿಂಗ್ ರೂಮ್ ನಿರ್ಮಿಸಬಹುದು. ಸ್ನಾನಗೃಹ / ಬಾತ್ ರೂಮ್ ದಕ್ಷಿಣ
ದಿಕ್ಕಿನಲ್ಲಿರುವ ಗಂಧರ್ವ ಪದದಲ್ಲಿ ನಿರ್ಮಾಣ ಮಾಡಿಕೊಳ್ಳಬಹುದು.

ವೈಶ್ಯ ವರ್ಣಕ್ಕೆ ಗೃಹ ನಿರ್ಮಾಣ ಮಾಡುವಾಗ ದ್ವಾರವನ್ನು ಉತ್ತರದಿಕ್ಕಿನಲ್ಲಿ ಬಲ್ಲಾಟ ಪದ ಇಲ್ಲವೇ ಪಶ್ಚಿಮ ದಿಕ್ಕಿನ ಪುಷ್ಪದಂತ
ಪದದಲ್ಲಿ ನಿರ್ಮಿಸುವುದು ಅತ್ಯಂತ ಶುಭದಾಯಕವು. ಮಲಗುವ ಕೋಣೆಯನ್ನು ದಕ್ಷಿಣದ ಗೃಹಕ್ಷತ, ಯಮ, ಗಂಧರ್ವ ಮತ್ತು
ವಿವಸ್ವಾನ್ ಪದಗಳಲ್ಲಿ ನಿರ್ಮಾಣ ಮಾಡಬೇಕು ಮತ್ತು ತಲೆಯನ್ನು ಪೂರ್ವದಿಕ್ಕಿ ಇಟ್ಟುಕೊಂಡು ನಿದ್ರಿಸಬೇಕು. ಸ್ನಾನ ಗೃಹವನ್ನು
ದಕ್ಷಿಣದ ಗಂಧರ್ವ ಪದದಲ್ಲಿ ಮತ್ತು ಹಾಲ್ ಅಥವಾ ಲಿವಿಂಗ್ ರೂಮ್ ಪಶ್ಚಿಮ ದಿಕ್ಕಿನ ಅಸುರ ಪದದಲ್ಲಿ ನಿರ್ಮಿಸಬಹುದು.

ಶೂದ್ರ ವರ್ಣದವರಿಗೆ ಗೃಹನಿರ್ಮಾಣ ಮಾಡುವಾಗ ದ್ವಾರವನ್ನು ಉತ್ತರದಿಕ್ಕಿನ ಬಲ್ಲಾಟ ಪದದಲ್ಲಿ ಹಾಗೂ ಪೂರ್ವ ದಿಕ್ಕಿನ
ಮಹೇಂದ್ರ ಪದದಲ್ಲಿ ನಿರ್ಮಿಸಬೇಕು ಎಂದು ಹೇಳಿರುವರು. ಮಲಗುವ ಕೋಣೆ ಮತ್ತು ಅದರ ದ್ವಾರವು ನೈರುತ್ಯ ಮತ್ತು ಪಶ್ಚಿಮದ
ಕಡೆಗೆ ದೌವಾರಿಕ, ಸುಗ್ರೀವ, ಪುಷ್ಪದಂತ, ಮತ್ತು ವರುಣ ಪದದಲ್ಲಿ ನಿರ್ಮಿಸಬೇಕು. ಅಡುಗೆ ಮನೆಯನ್ನು ಆಗ್ನೇಯ ಮೂಲೆಯ
ಪೂಷಾ ಪದದಲ್ಲಿ ಮತ್ತು ಹಾಲ್ ಅಥವಾ ಲಿವಿಂಗ್ ರೂಮ್ ಪಶ್ಚಿಮದ ಅಸುರ ಪದದಲ್ಲಿ ಮತ್ತು ಸ್ನಾನ ಗೃಹವನ್ನು ಗಂಧರ್ವ
ಪದದಲ್ಲಿ ನಿರ್ಮಾಣ ಮಾಡುವುದು ಶಭಕರ.

ಬಾಗಿಲಿನ ಚೌಟ್ಟಿನ ಬಾಗಗಳಿಗೆ ಕೆಲವು ಹೆಸರುಗಳಿರುವುದು ಅದು ಈರೀತಿಯಾಗಿರುವುದು.

ಬಾಗಿಲಿನ ಚೌಕಟ್ಟಿಗೆ ಸಾಮಾನ್ಯವಾಗಿ ನಾಲಕ್ಕು ಮರಗಳನ್ನು ಉಪಯೋಗಿಸುವರು ಆದರೆ ಕೆಲವು ಭಾಗಗಳಲ್ಲಿ ಚೌಕಟ್ಟಿನ
ಮೇಲ್ಬಾಗದಲ್ಲಿ ವಾತಾಯನದ ಅನುಕೂಲಕ್ಕಾಗಿ ಒಂದು ಸಣ್ಣ ಕಿಟಕಿಯನ್ನು ಏರ್ಪಡಿಸಿಕೊಳ್ಳುವರು ಹಾಗೆ ಏರ್ಪಡಿಸಿಕೊಂಡರೆ
ಐದು ಮರಗಳ ಅವಶ್ಯಕತೆ ಬರುವುದು ಅದಲ್ಲದೇ ಬಾಗಿಲ ಚೌಟ್ಟಿನ ಎರಡೂ ಬದಿಗಳಲ್ಲಿಯೂ ಎರಡು ಕಿಟಕಿಗಳಿರಬೇಕಾದದ್ದು
ಅವಶ್ಯಕ.
ಹೀಗೆ ಬಾಗಿಲ ಚೌಕಟ್ಟಿಗೆ ಬಳಸಾಲಾಗುವ ನಾಲಕ್ಕು ಮರಗಳಿಗೂ ನಾಲಕ್ಕು ಪ್ರತ್ಯೇಕವಾದ ಹೆಸರುಗಳಿರುವುದು ಅವುಗಳು
ಹೀಗಿರುವುದು.

1. ಮೇಲೆ ಉಪಯೋಗಿಸುವ ಮರಕ್ಕೆ ದೇವಿ ಎಂದು ಹೆಸರಿರುವುದು.


2. ಬಲಬಾಗದ ಮರಕ್ಕೆ ಭದ್ರ ಎಂದು ಹೆಸರಿರುವುದು.
3. ಎಡಬಾಗದ ಮರಕ್ಕೆ ಪ್ರಿಯಾನನ ಎಂದು ಹೆಸರಿರುವುದು.
4. ಕೆಳಬಾಗ ಬರುವ ಹೆಸ್ತಿಲಿಗೆ ಸುಂದರಿ ಎಂದು ಕರೆಯುವರು.

ಯಾವುದೇ ದ್ವಾರವನನ್ನಾದರೂ ದಿಕ್ಕುಗಳಿಗೆ ಅನುಗುಣವಾಗಿ ಇಡುವುದು ಶಾಸ್ತ್ರಸಮ್ಮತ ಹಾಗು ಯಾವುದೇ ವಿದಿಕ್ಕುಗಳಲ್ಲಿ


ದ್ವಾರಗಳನ್ನು ನಿರ್ಮಿಸಬಾರದು. ಅದರಿಂದ ಆ ಗೃಹದ ಅಥವಾ ಕಟ್ಟಡದ ಕೋನಗಳನ್ನು ಕತ್ತರಿಸಿದಂತಾಗುವುದು ಮತ್ತು
ಪಂಚಬೂತಗಳ ಅನುರಹವನ್ನೂ ಕಳೆದುಕೊಳ್ಳುವಂತಾಗುವುದು ಅದರಿಂದ ಅನೇಕ ಅಶುಭ ಫಲಗಳು ಆ ಮನೆಯವರಿಗೆ
ಕಾಡುವುದು.

ಚೌಕಟ್ಟನ್ನು ಯಾವುದೇ ಕಾರಣಕ್ಕೂ ಗೋಡೆಯ ಕೊನೆಯವರೆಗೂ ಇಡಬಾರದು ಕನಿಷ್ಟ ನಾಲಕ್ಕು ಅಂಗುಲವನ್ನಾದರೂ ಬಿಟ್ಟು
ಬಾಗಿಲನ್ನು ಇಡಬಹುದು.

ವಾಸಯೋಗ್ಯ ಗೃಹಗಳ ಸಿಂಹದ್ವಾರ, ಪೂಜಾಗೃಹ, ಸ್ನಾನದ ಕೊಠಡಿ ಹಾಗು ಹಿಂಬದಿಗೆ ಇಡುವ ಬಾಗಿಲುಗಳಿಗೆ ಕಡ್ಡಾಯವಾಗಿ
ಹೊಸ್ತಿಲನ್ನು ನಿರ್ಮಿಸಬೇಕೆಂದು ಶಾಸ್ತ್ರಕಾರರು ಬರೆದಿರುವರು. ಉಳಿದಂತೆ ಮಲಗುವ ಕೋಣೆಗೆ ಹಾಗು ಇತರ ಕೋಣೆಗಳಿಗೆ
ಇದು ಅನ್ವಯವಾಗುವುದಿಲ್ಲಾ.

ಯಾವ ಯಾವ ಆಯದ ಮನೆಗೆ ಯಾವ ಯಾವ ಅಳತೆಯ ಚೌಕಟ್ಟು

ನಾವು ವಾಸಿಸುವ ಮನೆಗೆ ಆಯದ ಅಳತೆ ಇರುವಂತೆ ಬಾಗಿಲ ಚೌಕಟ್ಟಿಗೂ ಕೆಲವು ಅಳತೆಗಳನ್ನು ನಮ್ಮ ಪೂರ್ವೀಕರು
ತಿಳಿಸಿರುವರು. ಅದರಂತೆ ನಿರ್ಮಿಸಿದರೆ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು ಇದನ್ನು ಅನುಕೂಲಕ್ಕನುಸಾರ ನಿರ್ಧರಿಸಬೇಕು.

1. ದ್ವಜಾಯ: 35” x 83”, 35” x 75” 35” x 67”, 33” x 73”, 33” x 65”, 31” x 79”, 27” x 75”
2. ಸಿಂಹಾಯ: 35” x 81”, 35” x 73”, 33” x 65”, 33” x 75”, 29” x 79”,
3. ವೃಷಭಾಯ: 37” x 81”, 33” x 77”, 33” x 69”, 27” x 71”,
4. ಗಜಾಯ: 33” x 79”, 31” x 71”, 31” x 73”, 29” x 83”, 27” x 77”,

ಎಲ್ಲಾ ವಾಸ್ತು ಗ್ರಂಥಕರ್ತರು 5:9 ಲೆಕ್ಕದಲ್ಲಿ ಬಾಗಿಲನ್ನು ನಿರ್ಮಾಣ ಮಾಡುವುದು ಸರ್ವಸಮ್ಮತವೆಂದು ತಿಳಿಸಲ್ಪಟ್ಟಿದೆ.

ಯಾವುದೇ ಆಯದ ಮನೆಗಾದರು ಯಾವಾಗಲೂ ಉಚ್ಚಸ್ಥಾನದಲ್ಲಿ ಮಾತ್ರ ಬಾಗಿಲು ಬರುವಂತೆ ನಿರ್ಮಾಣ ಮಾಡಬೇಕು.
ಪೂರ್ವ ಹಾಗು ಉತ್ತರದ ಬಾಗಿಲಿನ ಕಟ್ಟಡ ಪ್ರಾರಂಭಿಸುವ ಮೊದಲು ಬಾಗಿಲ ಚೌಕಟ್ಟು ಇಡಬೇಕು.

ಪಶ್ಚಿಮ ಹಾಗು ದಕ್ಷಿಣದ ನಿರ್ಮಾಣಗಳಿಗೆ ಕಟ್ಟಡ ನಿರ್ಮಾಣ ಮಾಡಿದ ನಂತರ ಇಡುವುದು ಶ್ರೇಯಸ್ಕರ.

ಮುಖ್ಯದ್ವಾರದ ಎದರೂಗಡೆ ಹಿಂಬಾಗದಲ್ಲಿ ಮತ್ತೊಂದು ಬಾಗಿಲು ಇಟ್ಟರೆ ಒಳ್ಳೆಯ ಫಲಿತಗಳು ಲಭಿಸುವುದು.


ಒಂದೇ ದಿಕ್ಕಿನಲ್ಲಿ ಸಮಾನಾಂತರವಾಗಿ ಮೂರುಬಾಗಿಲುಗಳನ್ನು ಯಾವುದೇ ಕಾರಣಕ್ಕೂ ಇಡಬಾರದು. ಬಾಗಿಲುಗಳು
ಯಾವಾಗಲೂ ಸಮಸಂಖ್ಯೆಯಲ್ಲಿ ಇರಬೇಕು.

ಯಾವುದೇ ಆಯ ಮನೆಗೆ ಮೂರು ದಿಕ್ಕಿನಲ್ಲಿ ಬರುವಂತೆ ಬಾಗಿಲುಗಳನ್ನು ಇಡಬಾರದು ನಾಲಕ್ಕು ದಿಕ್ಕಿನಲ್ಲಿ ಬಾಗಿಲು ಇಟ್ಟರೆ
ಶುಭವಾಗುವುದು.

ಮುಖ್ಯ ದ್ವಾರ ಹಾಗು ಪೂಜಾಗೃಹದ ಬಾಗಿಲುಗಳನ್ನು ಶುಭ ಮುಹೂರ್ತಗಳಲ್ಲಿಮಾತ್ರ ಇಡಬೇಕು. ಹೆಸಿ

ಲು ಇಲ್ಲದೇ ಮುಖ್ಯದ್ವಾರ ಹಾಗು ಪೂಜ ಮಂದಿರದ ಬಾಗಿಲನ್ನು ನಿರ್ಮಿಸಬಾರದು.

ಪ್ರತಿದಿನ ಹೊಸಿಲಿಗೆ ಪೂಜೆ ಸಲ್ಲಿಸಬೇಕು.

ಬಾದ್ರಪದ, ಆಶ್ವಯುಜ, ಕಾರ್ತೀಕ ಮಾಸಗಳಲ್ಲಿ ವಾಸ್ತು ಪುರುಷ ಪೂರ್ವ ದಿಕ್ಕಿಗೆ ತಲೆಯನ್ನಿಟ್ಟುಕೊಂಡು ಮಲಗಿದ್ದು ಪಶ್ಚಿಮ ಹಗು
ದಕ್ಷಿಣ ದಿಕ್ಕನ್ನು ನೋಡುವನು ಹಾಗಾಗಿ ಈ ಮಾಸಗಳಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿರುವ ಗೃಹವನ್ನು ನಿರ್ಮಿಸಿದರೆ ಕ್ಷೇಮ
ಅಥವಾ ಪಶ್ಚಿಮ ಅಥವಾ ದಕ್ಷಿಣದಕಡೆ ದ್ವಾರವನ್ನು ಇಡಬಹುದು. ಹಾಗೆಯೇ ಮಾರ್ಗಶಿರ, ಪುಷ್ಯ ಮತ್ತು ಮಾಘ ಈ
ಮೂರೂಮಾಸಗಳಲ್ಲಿ ದಕ್ಷಿಣದಕಡೆ ಮುಖಮಾಡಿರುವ ಗೃಹ ನಿರ್ಮಾಣಮಾಡಬಹುದು ಅಥವಾ ಉತ್ತರ ಮತ್ತು ಪಾಶ್ಚಿಮದಕಡೆ
ಬಾಗಿಲನ್ನು ಇಟ್ಟು ಗೃಹನಿರ್ಮಾಣ ಮಾಡಬಹುದು. ಹಾಗೆಯೇ ಮುಂದಿನ ಮೂರುತಿಂಗಳುಗಳಕಾಲ ಹೇಗೆ ನಿರ್ಮಾಣ
ಮಾಡಬೇಕುಎಂದು ತಿಳಿಯೋಣ ಪಾಲ್ಗುಣ, ಚಿತ್ರ, ವೈಶಾಖ ಈ ಮೂರುಮಾಸಗಳಲ್ಲಿ ಪಶ್ಚಿಮದ ಗೃಹ ಅಥವಾ ಪೂರ್ವ ಅಥವಾ
ಉತ್ತರದ ದ್ವಾರವನ್ನಿಟ್ಟು ಗೃಹನಿರ್ಮಾಣ ಮಾಡಬಹುದು. ಇನ್ನುಳಿದ ಮೂರುಮಾಸಗಳು ಅಂದರೆ ಜ್ಯೇಷ್ಠ, ಆಷಾಡ, ಶ್ರಾವಣ
ಮಾಸಗಳಲ್ಲಿ ಉತ್ತರದಿಕ್ಕಿನ ಗೃಹ ಅಥವಾ ದಕ್ಷಿಣ ಅಥವಾ ಪೂರ್ವ ದಿಕ್ಕಿನ ದ್ವಾರವನ್ನಿಟ್ಟು ನಿರ್ಮಾಣ ಮಾಡಬಹುದು.

ಪೂರ್ವದಿಕ್ಕಿಗೆ ಸಿಂಹದ್ವಾರವನ್ನು ನಿರ್ಮಿಸಬೇಕಿದ್ದರೆ ಕರ್ಕಾಟಕ ರಾಶಿಯಲ್ಲಿ ಸೂರ್ಯನಿರಬೇಕು ಆದರೆ ಪಶ್ಚಿಮದ ದ್ವಾರವನ್ನು


ಇಡಬಾರದು.

ಪಶ್ಚಿಮದಿಕ್ಕಿಗೆ ಸಿಂಹದ್ವಾರವನ್ನು ನಿರ್ಮಿಸಬೇಕಿದ್ದರೆ ಸಿಂಹರಾಶಿಯಲ್ಲಿ ಸೂರ್ಯನಿರಬೇಕು

ಉತ್ತರ ದಿಕ್ಕಿನಲ್ಲಿ ಸಿಂಹದ್ವಾರವನ್ನು ನಿರ್ಮಿಸಬೇಕಿದ್ದರೆ ತುಲಾರಾಶಿಯಲ್ಲಿ ಸೂರ್ಯನಿರಬೇಕು

ಕರ್ಕಾಟಕ ಹಾಗು ಸಿಂಹರಾಶಿಗಳಲ್ಲಿದ್ದಾಗ ದಕ್ಷಿಣದ ದ್ವಾರವನ್ನು ನಿರ್ಮಿಸಬಾರದು.

ಮಕರ ಹಾಗು ಕುಂಭರಾಶಿಗಳಲ್ಲಿ ಸೂರ್ಯನಿರುವಾಗ ಉತ್ತರದ ದ್ವಾರವನ್ನು ನಿರ್ಮಿಸಬಾರದು.

ಹಾಗೆಯೇ ಮಿಥುನ, ಕನ್ಯ, ಧನಸ್ಸು ಹಾಗು ಮೀನರಾಶಿಗಳಲ್ಲಿ ಸೂರ್ಯನಿರುವಾಗ ಯಾವುದೇ ದ್ವಾರವನ್ನೂ ನಿರ್ಮಿಸಬಾರದು
ಮತ್ತು ಅದಕ್ಕೆ ಬೇಕಾದ ಮರವನ್ನೂ ಕರೀದಿಸಿ ತಂದಿಟ್ಟುಕೊಳ್ಳಬಾರದು.

ಮಾಘಮಾಸವಾಗಿದ್ದು ಸೂರ್ಯ ಸಿಂಹದಲ್ಲಿದ್ದರೆ ಆಗ ಯಾವುದೇ ಗಿಡ ಮರಗಳನ್ನು ತೆಗೆಯಬಾರದು. ಹಾಗೇನಾದರೂ ಮಾಡಿದ್ದೇ


ಆದರೆ ಅಂತಹ ಮನೆಯು ಅಗ್ನಿ ಅನಾಹುತಗಳಿಗೆ ತುತ್ತಾಗುವುದು.

ಪೌರ್ಣಮಿಯಿಂದ ಅಷ್ಟಮಿ ತಿಥಿಯವರೆಗೆ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ದ್ವಾರವನ್ನು ನಿರ್ಮಾಣ ಮಾಡಬಾರದು ನವಮಿ


ಮೊದಲ್ಗೊಂಡು ಚತುರ್ಧಶಿ ತಿಥಿಯವರೆಗೂ ಉತ್ತರಾಭಿಮುಖವಾಗಿ ದ್ವಾರವನ್ನು ನಿರ್ಮಾಣ ಮಾಡಬಾರದು
ಬ್ರಾಹ್ಮಣ ವರ್ಣದವರಿಗೆ ಪಶ್ಚಿಮ ದ್ವಾರವು, ಕ್ಷತ್ರಿಯ ವರ್ಣದವರಿಗೆ ಉತ್ತರ ದ್ವಾರವು, ವೈಶ್ಯ ವರ್ಣದವರಿಗೆ ಪೂರ್ವ ದಿಕ್ಕಿನ
ದ್ವಾರವು ಮತ್ತು ಶೂದ್ರ ವರ್ಣದವರಿಗೆ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿರುವ ದ್ವಾರ ಶುಭಪ್ರದವೂ

ಧನಸ್ಸು ಮೇಷ ಸಿಂಹ ರಾಶಿಗಳು ಜನ್ಮರಾಶಿ ಆದರೆ ಪೂರ್ವ ದಿಕ್ಕಿನ ದ್ವಾರವನ್ನು ನಿರ್ಮಾಣ ಮಾಡಬೇಕು ಮಕರ ಕನ್ಯಾ
ವೃಷಭರಾಶಿ ಗಳಾದರೆ ದಕ್ಷಿಣ ದಿಕ್ಕಿನ ದ್ವಾರವನ್ನು ತುಲಾ ಮಿಥುನ ಕುಂಭ ರಾಶಿ ಗಳಾದರೆ ಪಶ್ಚಿಮ ದಿಕ್ಕಿನ ದ್ವಾರ ವನ್ನು ಮತ್ತು
ಕರ್ಕಾಟಕ ವೃಶ್ಚಿಕ ಮೀನ ರಾಶಿಗಳಾದರೆ ಉತ್ತರ ಉತ್ತರ ದಿಕ್ಕಿನ ದ್ವಾರ ನಿರ್ಮಾಣ ಶುಭಪ್ರದವೂ

ಭಾನುವಾರದಿಂದ ಆರಂಭಿಸಿ ಕ್ರಮವಾಗಿ ನೈರುತ್ಯ ಉತ್ತರ ಆಗ್ನೇಯ ಪಶ್ಚಿಮ ಈಶಾನ್ಯ ದಕ್ಷಿಣ, ವಾಯುವ್ಯ ಹಾಗೂ ಪೂರ್ವ ಈ
ದಿಕ್ಕುಗಳಲ್ಲಿ ರಾಹುವಿನ ವಾಸವಿರುತ್ತವೆ ಆದ್ದರಿಂದ ಈ ವಾರಗಳಲ್ಲಿ ರಾಹುವು ವಾಸವಿರುವ ದಿಕ್ಕಿಗೆ ಪ್ರಯಾಣ
ಗೃಹನಿರ್ಮಾಣವನ್ನು ಪ್ರಾರಭಿಸಬಾರದು.

ಅಶ್ವಿನಿ ಉತ್ತರಾಫಲ್ಗುಣಿ ನಕ್ಷತ್ರ ಹಸ್ತ, ಪುಷ್ಯಾ ಶ್ರವಣ ಮೃಗಶಿರಾ ಸ್ವಾತಿ ರೇವತಿ ಮತ್ತು ರೋಹಿಣಿ ನಕ್ಷತ್ರದಲ್ಲಿ ದ್ವಾರ ನಿರ್ಮಾಣವು
ಶುಭಪ್ರದವೂ.

ಪಂಚಮಿ ತಿಥಿ ಯಲ್ಲಿ ಧನಲಾಭವಾಗುವುದು ಸಪ್ತಮಿ ಅಷ್ಟಮಿ ನವಮಿ ತಿಥಿಗಳಲ್ಲಿ ಶುಭ ಫಲಗಳು ದೊರೆಯುವುದು ಪ್ರತಿಪದೆಯಲ್ಲಿ
ದ್ವಾರ ನಿರ್ಮಾಣ ಮಾಡಬಾರದು ಮಾಡಿದರೆ ದುಃಖ ಸುಖದಾಯಕವಾಗುವುದು

ತೃತೀಯ ತಿಥಿಗಳಲ್ಲಿ ಮಾಡಿದರೆ ರೋಗಕಾರಕವಾಗಬಹುದು ಚತುರ್ಥಿತಿಥಿಯದಿನ ಭಂಗವನ್ನು ತರುತ್ತದೆ ಷಷ್ಠಿಯದಿನ


ಕುಲಕ್ಷಯವನ್ನು ದಶಮಿಯಲಿ ದ್ವಾರ ಸ್ಥಾಪನೆ ಮಾಡುವುದರಿಂದ ಧನನಾಶವಾಗುವುದು.

ನಕ್ಷತ್ರ ರೀತಿಯ ದ್ವಾರ ಸ್ಥಾಪನೆ

ಕೃತಿಕಾ ಪೂರ್ವಫಲ್ಗುಣಿ ಅನುರಾಧಾ ವಿಶಾಖಾ ಪುನರ್ವಸು ಪುಷ್ಯ ಹಸ್ತ ಆರಿದ್ರಾ ನಕ್ಷತ್ರಗಳಂದು ಪೂರ್ವ ದಿಕ್ಕಿನಲ್ಲಿ ಸ್ಥಾಪಿಸಬೇಕು
ಅನುರಾಧಾ ವಿಶಾಖ ರೇವತಿ ಮೂಲ ಭರಣಿ ಉತ್ತರಾಷಾಢ ಅಶ್ವಿನಿ ಚಿತ್ತಾ ನಕ್ಷತ್ರಗಳಂದು ದಕ್ಷಿಣ ದಿಕ್ಕಿನಲ್ಲಿ ಸ್ಥಾಪಿಸಬೇಕು ಮಕಾ
ಪೂರ್ವಾಭಾದ್ರಾ ಉತ್ತರಾಫಲ್ಗುಣಿ ಮೂಲ ಶತಭಿಷಾ ಅಶ್ವಿನಿ, ಹಸ್ತಾ ನಕ್ಷತ್ರಗಳಂದು ಪಶ್ಚಿಮ ದಿಕ್ಕಿನಲ್ಲಿ ಸ್ಥಾಪಿಸಬೇಕು ಸ್ವಾತಿ
ಆಶ್ಲೇಷಾ ಅಭಿಜಿತ್ ಮೃಗಶಿರಾ ಶ್ರವಣ ಧನಿಷ್ಠ ಭರಣಿ ರೋಹಿಣಿ ನಕ್ಷತ್ರಗಳಂದು ಉತ್ತರದಿಕ್ಕಿನಲ್ಲಿ ಸ್ಥಾಪನೆ ಮಾಡಬೇಕು

ಅಂದರೆ ಯಾವ ದಿಕ್ಕಿನಲ್ಲಿ ದ್ವಾರವನ್ನು ನಿರ್ಮಾಣ ಮಾಡಬೇಕೋ ಆ ದಿಕ್ಕಿನ ನಕ್ಷತ್ರದಲ್ಲಿ ಮಾಡಬೇಕು ಕಂಬಾ ಇತ್ಯಾದಿಗಳನ್ನು
ಸ್ಥಾಪನೆ ಮಾಡುವಾಗಲೂ ಸಹ ಇದೇ ಕ್ರಮವನ್ನು ಅನುಸರಿಸಬೇಕು ಹೊಸ್ತಿಲನ್ನು ಸ್ಥಾಪಿಸುವಾಗ ಮತ್ತು ಭೂಮಿ ಅಗೆಯುವಾಗ
ಅಧೋಮುಖ ನಕ್ಷತ್ರಗಳಲ್ಲಿ ಮಾಡಬೇಕು ಕಂಬ, ದ್ವಾರಗಳ ಸ್ಥಾಪನೆಯನ್ನು ತಿರ್ಯನ್ಮುಖ ನಕ್ಷತ್ರಗಳಲ್ಲಿ ಮಾಡಬೇಕು

ಸಿಂಹದ್ವಾರವನ್ನು ದಿಕ್ಕುಗಳಿಗೆ ಅನುಗುಣವಾಗಿ ಇಡುವುದು ಶುಭಕರವು ಮತ್ತು ಅತ್ಯಂತ ಪ್ರಶಂಸನೀಯವೂ ಹೌದು. ಇನ್ನು
ವಿದಿಕ್ಕುಗಳಲ್ಲಿ ದ್ವಾರವನ್ನು ನಿರ್ಮಿಸಲೇಬಾರದು ಹಾಗೇನಾದರೂ ನಿರ್ಮಿಸಿದ್ದೇ ಆದರೆ ಅದರಿಂದ ದುಶ್ಪಲಗಳೇ ಲಭಿಸುವುದು.

ಸಿಂಹದ್ವಾರವು ಒಂದುವೇಳೆ ವಿದಿಕ್ಕುಗಳಾದ ಆಗ್ನೇಯ, ವಾಯುವ್ಯವನ್ನು ನೋಡುತ್ತಿದ್ದರೆ ಅದರಿಂದ ಆ ಮನೆಯಲ್ಲಿ ಅಗ್ನಿ


ಅವಗಡಗಳು ಜರುಗುವುದು ಹಾಗು ಈಶಾನ್ಯ ಅಥವ ನೈರುತ್ಯವನ್ನು ನೋಡುತ್ತಿದ್ದರೆ ಅದರಿಂದ ವಂಶನಾಶ ಎಂದು
ಬೃಗುಸಂಹಿತೆಯಲ್ಲಿ ತಿಳಿಸಿರುವರು.

ಇನ್ನು ರಾಜಮಾರ್ತಾಂಡ, ವಿಶ್ವಕರ್ಮ ವಾಸ್ತು, ಮಯನ್ಮತಗಳಲ್ಲಿ ಈಶಾನ್ಯವನ್ನು ನೋಡುವುದು ಶುಭಕರವೆಂದು ತಿಳಿಸಿರುವರು.


ಈ ಗ್ರಂಥಗಳು ಪ್ರಕಾರ ಈ ಕೆಳಕಂಡ ಫಲಗಳನ್ನು ತಿಳಿಸಿರುವರು.

1. ಪೂರ್ವದಿಕ್ಕಿನ ಕಡೆಗಿರುವ ಮುಖ್ಯದ್ವಾರವು

ಈಶಾನ್ಯವನ್ನು ನೋಡುವಂತಿದ್ದರೆ ಸಂತಾನ ವೃದ್ದಿ, ಐಶ್ವರ್ಯ ಹಾಗು ಸಕಲರೀತಿಯ ಅಭಿವೃದ್ದಿ,

ಪೂರ್ವವನ್ನು ನೋಡುವಂತಿದ್ದರೆ ಯಶೋವಂತರಾಗುವರು, ಸುಗುಣ ಶೀಲರಾಗುವರು, ವಂಶ


ವೃದ್ದಿಯಾಗುವುದು, ಅಧೀಕಾರ ಪ್ರಾಪ್ತವಾಗುವುದು. ಪುರುಷರಿಗೆ ಹಾಗು ಮನೆಯ ಹಿರಿಯರಿಗೆ ಶುಭವನ್ನುಂಟುಮಾಡುವುದು.

ಆಗ್ನೇಯವನ್ನು ನೋಡುವಂತಿದ್ದರೆ ಸ್ತ್ರೀಯರಿಗರ ಆರೋಗ್ಯ ಸಮಸ್ಯೆ ಕಾಡುವುದು, ಚೋರಬಯ, ಅಗ್ನಿಬಯ, ಮನೆಯ ಕಿರಿಯ
ಮಕ್ಕಳಿಗೆ ತೊಂದರೆ.

2. ದಕ್ಷಿಣದಿಕ್ಕಿನ ಕಡೆಗಿರುವ ಮುಖ್ಯದ್ವಾರವು

ಆಗ್ನೇಯವನ್ನು ನೋಡುವಂತಿದ್ದರೆ ಸ್ತ್ರೀಯರಿಗರ ಆರೋಗ್ಯ ಸಮಸ್ಯೆ ಕಾಡುವುದು, ಚೋರಬಯ, ಅಗ್ನಿಬಯ, ವಂಶ


ನಾಶವಾಗುವುದು, ಹಿರಿಯ ಪುತ್ರ ಮನೆಯನ್ನು ತೊರೆಯುವನು.

ದಕ್ಷಿಣವನ್ನು ನೋಡುವಂತಿದ್ದರೆ ವ್ಯಾಪಾರಾಭಿವೃದ್ದಿ, ಹಣಕಾಸಿನ ಹರಿವಿಗೆ ರಹದಾರಿಯಾಗುವುದು,

ನೈರುತ್ಯವನ್ನು ನೋಡುವಂತಿದ್ದರೆ ಶತ್ರುಗಳ ಕಾಟ, ಸ್ತ್ರೀಯರ ಆರೋಗ್ಯ ನಾಶ, ಸ್ತ್ರೀಯರಿಗೆ ಮೃತ್ಯುಪ್ರದವು.

3. ಪಶ್ಚಿಮದಿಕ್ಕಿನ ಕಡೆಗಿರುವ ಮುಖ್ಯದ್ವಾರವು

ನೈರುತ್ಯವನ್ನು ನೋಡುವಂತಿದ್ದರೆ ವಂಶ ಕ್ಷಯ, ದಾರಿದ್ರ್ಯತೆ, ಮನೆಯ ಯಜಮಾನ ಹಾಗು ಹಿರಿಯ ಪುತ್ರರಿಗೆ ಮೃತ್ಯುಪ್ರದವು.

ಪಶ್ಚಿಮವನ್ನು ನೋಡುವಂತಿದ್ದರೆ ಸಂತಾನ ವೃದ್ದಿ, ಐಶ್ವರ್ಯ ಹಾಗು ಸಕಲರೀತಿಯ ಅಭಿವೃದ್ದಿ,

ವಾಯುವ್ಯವನ್ನು ನೋಡುವಂತಿದ್ದರೆ ಮಾನಸಿಕ ವೇದನೆ, ಮನೆಯ ಯಜಮಾನಿ ಹಾಗು ಕಿರಿಯ ಸಂತತಿಗೆ ಹಾನಿ.

4. ಉತ್ತರದಿಕ್ಕಿನ ಕಡೆಗಿರುವ ಮುಖ್ಯದ್ವಾರವು

ವಾಯುವ್ಯವನ್ನು ನೋಡುವಂತಿದ್ದರೆ ಹಣಕಾಸಿಗೆ ತೊಂದರೆ, ಮಾನಹಾನಿ, ಸ್ತ್ರೀಯರಿಂದ ಮಾನಹಾನಿ,

ಉತ್ತರವನ್ನು ನೋಡುವಂತಿದ್ದರೆ ಸಕಲರೀತಿಯ ಅಭಿವೃದ್ದಿ, ಯಶೋವಂತರಾಗುವರು, ಸುಗುಣ ಶೀಲರಾಗುವರು, ವಂಶ


ವೃದ್ದಿಯಾಗುವುದು, ಅಧೀಕಾರ ಪ್ರಾಪ್ತವಾಗುವುದು. ಪುರುಷರಿಗೆ ಹಾಗು ಮನೆಯ ಹಿರಿಯರಿಗೆ ಶುಭವನ್ನುಂಟುಮಾಡುವುದು.

ಈಶಾನ್ಯವನ್ನು ನೋಡುವಂತಿದ್ದರೆ ಧಾರ್ಮಿಕ ಕಾರ್ಯಗಳು ಜರುಗುವುದು, ಸುಖ ಸಮೃದ್ದಿಗಳು ಲಭಿಸುವುದು, ಸಂತಾನ


ವೃದ್ದಿಯಾಗುವುದು.

ಗೃಹದಲ್ಲಿ ಜಲಸ್ಥಾನದ ವಿವರಗಳನ್ನು ಹೇಳುವುದಾದರೆ ಮೀನರಾಶಿಯಲ್ಲಿ ಬಾವಿ ಇರುವುದು ಅತ್ಯಂತ ಪ್ರಶಸ್ತವಾದುದು.


ಸರ್ವಾರ್ಥ ಪುಷ್ಟಿಯನ್ನು ನೀಡುತ್ತದೆ ಮೇಷ ಮತ್ತು ಕುಂಭ ರಾಶಿಯಲ್ಲಿ ಐಶ್ವರ್ಯ ಶ್ರೇಯಸ್ಸನ್ನು ನೀಡುತ್ತದೆ ಮಕರ ಇಲ್ಲವೇ
ವೃಷಭರಾಶಿಯಲ್ಲಿ ಬಾವಿಯು ಧನಪ್ರದವು. ಆಪ ಮತ್ತು ಅಪವತ್ಸ ಪದದಲ್ಲಿಯೂ ಶುಭಪ್ರದವು. ಇದೇ ರೀತಿ ಇಂದ್ರಜಿತ್ ಪದದಲ್ಲಿ
ಮತ್ತು ವರುಣ ಪದದಲ್ಲಿ ಶುಭದಾಯಕ. ವಾಯು ಪದದಲ್ಲಿ ಸ್ತ್ರೀಯರಿಗೆ ಅಶುಭದಾಯಕವಾಗುವುದು. ಬಾವಿಯು ಅಂತರಿಕ್ಷ ಪದದಲ್ಲಿ
ಮಂಗಳಪ್ರದ ಹೀಗೆಯೇ ಮಹೇಂದ್ರ, ಮಹಿಧರ, ವರುಣ, ಸೋಮ ಹಾಗೂ ಈಶಾನ ಮತ್ತು ಮೇಷ ಮತ್ತು (ವೃಷಭಲ್ ರಾಶಿಗಳಲ್ಲಿ
ಕೊಳ ಅಥವಾ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಶುಭವು.

ಬಾವಿ, ಬೋರ್ವೆಲ್, ಸಂಪ್:-

ಪ್ರತಿಯೊಂದು ಜೀವಕ್ಕೂ ನೀರು ಅತ್ಯಾವಶ್ಯಕವಾದುದು ಅಂದರೆ ಮನುಷ್ಯನಿಂದ ಹಿಡಿದು ಎಲ್ಲಾರೀತಿಯ ಪ್ರಾಣಿ ಪಕ್ಷಿಗಳು ಕ್ರಿಮಿ
ಕೀಟಾದಿಯಾಗಿ ಎಲ್ಲ ಜೀವಿಗಳಿಗೆ ಹಾಗೂ ಗಿಡಮರಗಳಿಗೆ ಅವಶ್ಯಕ ಜೀವಿಗಳಿಗೆ ನೀರು ಮಳೆಯಿಂದ ಮತ್ತು ಭೂಮಿಯ ಒಳಗೆ
ದೊರೆಯುತ್ತದೆ. ಭೂಮಿಯ ಆಳದಲ್ಲಿರುವ ನೀರನ್ನು ಬಾವಿಗಳನ್ನು ಅಗೆದು, ಬೋರ್ವೆಲ್ ಕೊರೆದು ಅದರಲ್ಲಿ ಉತ್ಪತ್ತಿಯಾಗುವ
ನೀರನ್ನು ತೆಗೆದು ಉಪಯೋಗಿಸಿಕೊಳ್ಳಬಹುದು ಇಷ್ಟೇ ಅಲ್ಲದೆ ಕೆರೆ, ನದಿ ಇತ್ಯಾದಿಗಳಿಂದಲೂ ಸಹ ಪ್ರತಿ ಜೀವಿಗಳಿಗೂ ನೀರು
ದೊರೆಯುತ್ತದೆ ಎಲ್ಲವನ್ನೂ ಶೇಕರಿಸಿ ಇಡುವ ಬುದ್ದಿಯಿರುವ ಮನುಷ್ಯ ಭೂಗರ್ಭದಲ್ಲಿನ ಜಲವನ್ನು ಪಡೆದು ಅದನ್ನು ಶೇಖರಿಸಿ
ಇಡುವ ಅನೇಕ ವಿಧಾನಗಳನ್ನು ಅಳವಡಿಸಿಕೊಂಡಿರುವನು ಅವುಗಳು ಯಾವುದೆಂದರೆ ವಾಪಿ(ಚಿಕ್ಕಚಿಕ್ಕ ಹೊಂಡ,) ಬಾವಿ,
ತಟಾಕ, ಪುಷ್ಕರಿಣಿ, ಇತ್ಯಾದಿಗಳನ್ನು ಅಭಿವೃದ್ದಿಗೊಳಿಸುವ ಕಲೆಯನ್ನು ಮೈಗೂಡಿಸಿಕೊಂಡನು. ವಾಸ್ತುಶಾಸ್ತ್ರದಲ್ಲಿಯೂ ಸಹ ಜಲ
ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ವಿಧಾನಗಳನ್ನು ವಿವರಿಸಿರುವರು ವಾಸಯೋಗ್ಯ ನಿವಾಸಗಳಲ್ಲಿ ಯಾವ ದಿಕ್ಕಿನಲ್ಲಿ
ಬಾವಿಗಳನ್ನು, ತೊಟ್ಟಿಗಳನ್ನು ನೀರಿನ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಬೇಕು ಎಂಬುದನ್ನು ಸವಿವರವಾಗಿ ತಿಳಿಸಿದ್ದಾರೆ. ಈಗ
ನಾವು ಅದರಂತೆ ನೀರಿನ ಸೆಲೆಗಳಾದ ಬಾವಿ ಅಥವಾ ಬೋರ್ವೆಲ್ ಮತ್ತು ನೀರಿನ ಸಂಪ್ ಅಥವಾ ತೊಟ್ಟಿ, ಹಾಗು
ಮನೆಯಮೇಲೆ ಇಡುವ ನೀರಿನ ಟ್ಯಾಂಕ್ ಅಥವಾ ತೊಟ್ಟಿ ಎಂದುಕರೆಯುವ ಇವುಗಳ ಸ್ಥಾನ ಗೃಹದಲ್ಲಿ ಎಲ್ಲಿರಬೇಕು ಎಂಬುದನ್ನು
ತಿಳಿಸಲಾಗುವುದು.

ನೈರುತ್ಯ ವಾಯುವ್ಯ ಆಗ್ನೇಯ ಮತ್ತು ದಕ್ಷಿಣ ದಿಕ್ಕುಗಳನ್ನು ಬಿಟ್ಟು ಮಿಕ್ಕ ಎಲ್ಲಾ ದಿಕ್ಕುಗಳಲ್ಲಿಯೂ ಜಲಾಶಯವನ್ನು
ನಿರ್ಮಿಸಬಹುದು ಹಾಗೂ ಪೂರ್ವ ಉತ್ತರ ಮತ್ತು ಈಶಾನ್ಯದಲ್ಲಿ ನಿರ್ಮಾಣ ಮಾಡುವುದರಿಂದ ಸೌಖ್ಯ ಮತ್ತು ಪುತ್ರ
ಲಾಭವಾಗುವುದು.

ಉತ್ತರ, ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಬಾವಿ ಅಥವಾ ಕೊಳವೇ ಬಾವಿಯನ್ನು ನಿರ್ಮಿಸುವುದರಿಂದ ಅಂತಹ ಮನೆಗಳಲ್ಲಿ
ಲಕ್ಷ್ಮಿಯು ನೆಲೆಸುವಳೆಂದು ನಮಗೆ ಅನೇಕ ಗ್ರಂಥಗಳಿಂದ ತಿಳಿದುಬರುವುದು.

ಇನ್ನು ಆಗ್ನೇಯ ನೈರುತ್ಯ ವಾಯುವ್ಯದ ಮೂಲೆಯಲ್ಲಿ ಬಾವಿ, ಕೊಳವೇ ಬಾವಿಯನ್ನು ನಿರ್ಮಿಸಬಾರದು ಉತ್ತರ, ಪೂರ್ವ,
ಈಶಾನ್ಯ ಈ ದಿಕ್ಕುಗಳಲ್ಲಿ ಹಳ್ಳ, ಕೊಳ, ಬಾವಿ, ಕೊಳವೇ ಬಾವಿ, ತಟಾಕ ಇವುಗಳನ್ನು ವಾಸಗೃಹಗಳಿರಬಹುದು ಅಥವಾ
ದೇವಾಲಯಗಳಿರಬಹುದು ನಿರ್ಮಿಸಿದ್ದಾದರೆ ಅತ್ಯಂತ ಶುಭಫಲಗಳು ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು
ಮಯನ್ಮತದಲ್ಲಿ ಉಲ್ಲೇಕಿಸಿದ್ದಾರೆ.

ಬಾವಿಯನ್ನು ಪೂರ್ವದಲ್ಲಿ ನಿರ್ಮಾಣ ಮಾಡಿದರೆ ಮಗನನ್ನು ಕಳೆದುಕೊಳ್ಳುವ ಸಂಭವ ಬರುವುದು, ಇನ್ನು ಆಗ್ನೇಯದಲ್ಲಿ
ನಿರ್ಮಿಸಿದರೆ ಆಗ ಅಗ್ನಿಯಿಂದಾಗಿ ನಷ್ಟಸಂಭವಿಸುತ್ತದೆ. ದಕ್ಷಿಣದಲ್ಲಿದ್ದರೆ ಶತ್ರುಗಳು ತುಂಬಾ ಪೀಡಿಸುತ್ತಿರುತ್ತಾರೆ,
ನೈರುತ್ಯದಲ್ಲಿದ್ದರೆ ಸ್ತ್ರೀಯರು ಕಲಹದಲ್ಲಿ ತೊಡಗುವರು, ಪಶ್ಚಿಮದಲ್ಲಿದ್ದರೆ ಆಗ ಸ್ತ್ರೀಯರು ದುರ್ನಡತೆಯವರಾಗುವರು,
ವಾಯುವ್ಯದಲ್ಲಿದ್ದರೆ ಆಗ ದಾರಿದ್ರ್ಯತೆ ಆವರಿಸಿಕೊಳ್ಳುವುದು, ಉತ್ತರದಲ್ಲಿ ಸಂಪತ್ತು, ವಂಶಾಭಿವೃದ್ಧಿ, ಅನೇಕವಿದದ
ಲಾಭವಾಗುವುದು, ಈಶಾನ್ಯದಲ್ಲಿದ್ದರೆ ವಂಶವು ವೃದ್ದಿಯಾಗುವುದು.

ಬಾವಿಯು ಮನೆಯ ಯವಯವ ದಿಕ್ಕಿನಲ್ಲಿದ್ದರೆ ಏನೇನು ಫಲಗಳು ಲಭಿಸುವುದು ಎಂದು ಮುಂದೆ ತಿಳಿಯೋಣ.
ಮನೆಯ ಮಧ್ಯದಲ್ಲಿ ಇದ್ದರೆ - ಧನಹಾನಿ.

ಈಶಾನ್ಯದಲ್ಲಿದ್ದರೆ ಒಂದುರೀತಿಯ ಶಕ್ತಿ ದೊರೆಯುವುದು.

ಪೂರ್ವದಲ್ಲಿದ್ದರೆ ಸಕಲ ಐಶ್ವರ್ಯ ವೃದ್ಧಿಯಾಗುವುದು.

ಆಗ್ನೇಯದಲ್ಲಿದ್ದರೆ ಸಂತಾನ ನಷ್ಟ ಮತ್ತು ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಮತ್ತು ಒಂದುರೀತಿ ವಿನಾಶಕ್ಕೆ ದಾರಿಯಾಗುವುದು.

ದಕ್ಷಿಣದಲ್ಲೇನಾದರೂ ಇದ್ದದ್ದೇ ಆದರೆ ಆಗ ಆ ಮನೆಯ ಯಜಮಾನ ಗೃಹಿಣಿಯನ್ನು ಕಳೆದುಕೊಳ್ಳುತ್ತಾನೆ.

ನೈರುತ್ಯದಲ್ಲೇನಾದರೂ ಇದ್ದದ್ದೇ ಆದರೆ ಆಗ ಆ ಮನೆಯ ಯಜಮಾನನಿಗೆ ನಂತರ ಅವನ ದೊಡ್ಡಮಗನಿಗೆ


ಮೃತ್ಯುಕಾರಕವಾಗುವುದು.

ಪಶ್ಚಿಮದಲ್ಲಿದ್ದರೆ ಆಮನೆಯ ಯಜಮಾನ ಚಿಂತೆಗೀಡಾಗುವನು ಹಾಗು ಧನನಷ್ಟವಾಗುವುದು.

ವಾಯುವ್ಯದಲ್ಲಿದ್ದರೆ ಸ್ತ್ರೀಯರಿಗೆ ಪೀಡೆ ಮತ್ತು ಆಮನೆಯ ಕನಿಷ್ಟ ಸಂತಾನದ ಅಭಿವೃದ್ದಿಗೆ ಸಂಚಕಾರವಾಗುವುದು. ಉತ್ತರದಲ್ಲಿ
ಇದ್ದರೆ ಸರ್ವ ಸುಖ ಮತ್ತು ಸೌಖ್ಯ ಲಭಿಸುವುದು. ಕೆಲವು ಗ್ರಂಥಗಳಲ್ಲಿ ಆಗ್ನೇಯ ದಿಕ್ಕಿನಲ್ಲಿಯೂ ಬಾವಿಯನ್ನು
ನಿರ್ಮಿಸಿಕೊಳ್ಳಬಹುದೆಂದಿರುವರು.

ಪದವಾಸ್ತು ಮಂಡಲದರೀತಿ ನೋಡುವಾಗ ಆಗ್ನೇಯದಲ್ಲಿ ಇರುವ ಅಂತರಿಕ್ಷ, ಅನಲ, ಪೂಷ ಇರುವ ಪದಗಳಲ್ಲಿಯೂ ಕೂಪವನ್ನು
ನಿರ್ಮಿಸಬಹುದೆಂದು ತಿಳಿಸಿರುವರು.

ಈ ಮಾತನ್ನು ಉದ್ದರಿಸಿ ಹೇಳುವುದಾದರೆ ಮೀನರಾಶಿಯಲ್ಲಿ ಬಾವಿಯನ್ನು ನಿರ್ಮಾಣ ಮಾಡುವುದು ಬಹಳ ಉತ್ತಮ ಮತ್ತು
ಇದರಿಂದ ಒಂದುರೀತಿಯ ಪುಷ್ಟಿಯು ದೊರೆಯುವುದೆಂದು ತಿಳಿಸಿರುವರು. ಹಾಗೆಯೇ ಮೇಷ ಮತ್ತು ಕುಂಭ ರಾಶಿಗಳಲ್ಲಿ ಬಾವಿ
ಇದ್ದರೆ ಸುಖ ಸಮೃದ್ಧಿಯನ್ನು ಕೊಡುವುದು. ಮಕರ ಮತ್ತು ವೃಷಭರಾಶಿಗಳಲ್ಲಿ ಬಾವಿಯಿದ್ದರೆ ಸಂಪತ್ಕರವಾದ ಧನ ವೃದ್ಧಿ ಆಪ,
ಅಪವತ್ಸ, ಇಂದ್ರಜಿತ್ ಮತ್ತು ವರುಣ ಪದ ಗಳಲ್ಲಿಯೂ ಸಹ ಬಾವಿಯನ್ನು ನಿರ್ಮಿಬಹುದು ಹಾಗು ಇದು ಒಂದುರೀತಿ ಶುಭಪ್ರದವೂ
ಆಗುವುದೆಂದು ಮನಸಾರ ಗ್ರಂಥದಲ್ಲಿ ತಿಳಿಸಿರುವರು. ಹಾಗೆಯೇ ವಾಯವ್ಯದಲ್ಲೇನಾದರೂ ಬಾವಿ ಇದ್ದಿದ್ದೇ ಆದರೆ ಅದರಿಂದಾಗಿ
ಆ ಮನೆಯ ಗೃಹಲಕ್ಷ್ಮಿಗೆ ಮರಣ ಸಂಭವಿಸುವುದು ಅಥವಾ ಮಾರಣಾಂತಿಕವಾದಂತಹ ಅಶುಭ ಫಲಗಳು ದೊರೆಯುವುದು.

ಮನೆಯ ಆಗ್ನೇಯ ದಿಕ್ಕಿನಲ್ಲಿ ಯಾವಕಾರಣಕ್ಕೂ ಬಾವಿ ಇರಬಾರದು ಒಂದುವೇಳೆ ಇದ್ದಿದ್ದೇ ಆದರೆ ಅದನ್ನು ತತ್ಕ್ಷಣವೇ
ಮುಚ್ಚಬೇಕೆಂದು ತಿಳಿಸಿರುವರು. ಇಲ್ಲದಿದ್ದರೆ ಅದರಿಂದಾಗಿ ಅಗ್ನಿ ಭಯವುಂಟಾಗುವುದು ಹಾಗೂ ದಕ್ಷಿಣ ದಿಕ್ಕಿನಲ್ಲಿ ಬಾವಿ ಇದ್ದರೂ
ಇದೇ ರೀತಿಯ ಫಲಗಳನ್ನು ಅನುಭವಿಸಬೇಕಾಗುವುದು.

ಈಗಾಗಲೇ ಬಾವಿಯನ್ನು ಯಾವ ಯಾವ ದಿಕ್ಕಿನಲ್ಲಿ ನಿರ್ಮಾಣ ಮಾಡಬೇಕು ಮತ್ತು ಅದರಿಂದ ದೊರೆಯುವ ಶುಭಾಶುಬ
ಫಲಗಳಬಗ್ಗೆ ತಿಳಿದುಕೊಂಡೆವು ಈಗ ನಮ್ಮ ಪೂರ್ವೀಕರಾದ ಋಷಿ ಮುನಿಗಳು ಹಾಗು ವಾಸ್ತು ತಗ್ನರುಗಳು ಎಲ್ಲರೂ ಒಪ್ಪುವಂತಹ
ಕೆಲವು ವಿಚಾರಗಳನ್ನುತಿಳಿಯೋಣ.

ಉತ್ತರ, ಈಶಾನ್ಯ ಮತ್ತು ಪೂರ್ವ ಈ ದಿಕ್ಕುಗಳಲ್ಲಿ ಬಾವಿಯ ನಿರ್ಮಾಣವು ಅತ್ಯಂತ ಶುಭವೆಂದು ತಿಳಿಸಿರುವರು, ಇನ್ನು
ಮನಸಾರ ಗ್ರಂಥದಲ್ಲಿ ಆಗ್ನೇಯದಲ್ಲಿ ಏಕಾಶೀತಿ ಪದವಾಸ್ತು ಮಂಡಲದಲ್ಲಿ ಇರುವಂತಹ ಅಂತರಿಕ್ಷ, ವಾಯು ಮತ್ತು ಪೂಷ ಇರುವ
ಪದದಲ್ಲಿ ಬಾವಿಯನ್ನು ನಿರ್ಮಿಸಬಹುದು ಎಂದಿರುವರು. ಮನುಷ್ಯಾಲಯ ಚಂದ್ರಿಕೆ ಯಲ್ಲಿ ಏಕಾಶಿತಿಪದವಾಸ್ತು ಮಂಡಲದಲ್ಲಿ
ನೈರುತ್ಯ ದಿಕ್ಕಿನಲ್ಲಿ ಸ್ಥಾನಪಡೆದಿರುವ ಇಂದ್ರಜಿತು ಪದದಲ್ಲಿಯೂ ಬಾವಿಯ ನಿರ್ಮಾಣ ಶುಭಕರವೆಂದು ತಿಳಿಸಿದ್ದಾರೆ. ಹಾಗೆಯೇ
ಮಕರ, ಕುಂಭ, ಮೀನಾ, ಮೇಷ, ಮತ್ತು ವೃಷಭ ರಾಶಿ ಇವುಗಳಲ್ಲಿ ಬಾವಿಯನ್ನು ನಿರ್ಮಿಸಬಹುದು ಅದರಿಂದ ಅನೇಕವಿದವಾದ
ಶುಭ ಹಾಗು ಸಮೃದ್ಧಿಯನ್ನು ಕೊಡುತ್ತದೆ ಎಂದರು ಇಲ್ಲಿ ರಾಶಿ ಚಕ್ರ ದಿಂದ ದಿಕ್ಕುಗಳನ್ನು ನಿರ್ಣಯ ಮಾಡಿ ಬಾವಿಯನ್ನು ನಿರ್ಮಾಣ
ಮಾಡುವ ಪದ್ಧತಿಯನ್ನು ಹೇಳಿರುವರು.

ರಾಶಿಗಳಿಂದ ದಿಕ್ಕುಗಳನ್ನು ಹೇಗೆ ತಿಳಿಯುವುದು ಎಂದು ಈಗ ತಿಳಿಯೋಣ.

ಪೂರ್ವದಿಕ್ಕಿಗೆ ಮೇಷ ಮತ್ತು ವೃಷಭ ರಾಶಿಗಳು ಸೇರುತ್ತದೆ.

ಆಗ್ನೇಯಕ್ಕೆ ಮಿಥುನ ಕನ್ಯಾ ರಾಶಿಗಳು ಸೇರುವುದು.

ದಕ್ಷಿಣ ದಿಕ್ಕಿಗೆ ಕಟಕ ಸಿಂಹ ರಾಶಿಗಳು ಸೇರುತ್ತದೆ.

ನೈರುತ್ಯದಿಕ್ಕಿಗೆ ಕನ್ಯಾ ರಾಶಿಯು ಸೇರುತ್ತದೆ.

ಪಶ್ಚಿಮದಿಕ್ಕಿಗೆ ವೃಶ್ಚಿಕ ಮತ್ತು ತುಲಾ ರಾಶಿಗಳು ಸೇರುವುದು.

ವಾಯುವ್ಯದಿಕ್ಕಿಗೆ ಧನಸ್ಸು ರಾಶಿಯು ಸೇರುವುದು.

ಮಕರ ಮತ್ತು ಕುಂಭ ರಾಶಿ ಗಳು ಉತ್ತರ ದಿಕ್ಕಿಗೆ ಸೇರುತ್ತದೆ.

ಈಶಾನ್ಯ ದಿಕ್ಕಿಗೆ ಮೀನರಾಶಿಯಾಗುವುದು.

ಆಕಾರಣದಿಂದಾಗಿ ಉತ್ತರ ದಿಕ್ಕಾದ ಮಕರ ಮತ್ತು ಕುಂಭ. ಈಶಾನ್ಯ ಕೋನವಾದ ಮೀನಾ ಹಾಗೂ ಪೂರ್ವ ದಿಕ್ಕಿಗೆ ಬರುವ
ಮೇಷ ವೃಷಭ ರಾಶಿಗಳಲ್ಲಿ ಬಾವಿಗಳ ನಿರ್ಮಾಣ ಮಾಡಿದಲ್ಲಿ ಅತ್ಯಂತ ಶುಭಫಲಗಳನ್ನು ಕೊಡುವುದರಲ್ಲಿ ಯಾವುದೇ
ಸಂಶಯವೂ ಇರುವುದಿಲ್ಲ. ಉಳಿದಂತೆ ದಕ್ಷಿಣ ನೈರುತ್ಯ ದಿಕ್ಕುಗಳಲ್ಲಿ ಬಾವಿಗಳಿರುವುದೂ ದೋಷಕರವಾಗುವುದು ಮತ್ತು
ಅಶುಭಫಲಗಳನ್ನು ಕೊಡುವುದಾಗಿರುತ್ತದೆ.

ಈಗ ಯಾವ ದಿಕ್ಕಿನಲ್ಲಿ ಬಾವಿಯನ್ನು ನಿರ್ಮಿಸಿದರೆ ಏನು ಫಲವೆಂದು ತಿಳಿದುಕೊಳ್ಳೋಣ.

ಪೂರ್ವ ಐಶ್ವರ್ಯಪ್ರದ.

ಆಗ್ನೇಯ ಪುತ್ರ ಹಾನಿ.

ದಕ್ಷಿಣ ಸ್ತ್ರೀ ನಾಶ.

ನೈರುತ್ಯ ಮೃತ್ಯುಪ್ರದವಾಗುವುದು.

ಪಶ್ಚಿಮ ಸಂಪದ.

ವಾಯುವ್ಯ ಶತ್ರುಭಯ.

ಉತ್ತರ ಸೌಖ್ಯ.

ಈಶಾನ್ಯ ಪುಷ್ಪಿ.
ಹಾಗೂ ವಾಸ್ತುಪುರುಷನ ಮಧ್ಯಭಾಗದಲ್ಲಿ ಬಾವಿಯನ್ನು ನಿರ್ಮಾಣ ಮಾಡುವುದು ಧನಹಾನಿಯನ್ನುಂಟುಮಾಡುವುದು.
ಕಾಶ್ಯಪಶಿಲ್ಪ ಶಾಸ್ತ್ರ ದಲ್ಲಿಯೂ ಸಹ ಇದರೀತಿಯ ವಿಚಾರಗಳನ್ನು ತಿಳಿಸಿರುವರು ಆದಕಾರಣದಿಂದ ಈ ಎಲ್ಲಾ ಗ್ರಂಥಗಳನ್ನೂ
ಅವಲೋಕಿಸಿ ಹೇಳುವುದಾದರೆ ಮನೆಗಳಲ್ಲಿ ಬಾವಿಯನ್ನು ನಿರ್ಮಾಣ ಮಾಡುವಾಗ ಉತ್ತರ, ಈಶಾನ್ಯ, ಪೂರ್ವ ದಿಕ್ಕುಗಳಲ್ಲಿ
ನಿರ್ಮಿಸುವುದು ಶುಭಫಲಗಳನ್ನು ತರುತ್ತದೆ ಆಗ್ನೇಯ, ದಕ್ಷಿಣ, ನೈರುತ್ಯ, ವಾಯುವ್ಯ ದಿಕ್ಕುಗಳಲ್ಲಿ
ಬಾವಿಯನ್ನು ನಿರ್ಮಿಸುವುದು ಅಶುಭ ಫಲದಾಯಕವೂ ಹಾಗೂ ವಾಸ್ತುವಿನ ಮದ್ಯಭಾಗದಲ್ಲಿ ಅಂದರೆ ಬ್ರಹ್ಮಸ್ಥಾನದಲ್ಲಿ
ಬಾವಿಯನ್ನು ಯಾವಕಾರಣಕ್ಕೂ ನಿರ್ಮಾಣ ಮಾಡಬಾರದು ಹಾಗು ಅದು ಸರ್ವತ್ರ ವರ್ಜ್ಯವೆಂದು ತಿಳಿಯತಕ್ಕದ್ದು.

ಕೊಳವೆ ಭಾವಿ ಮೊದಲೇ ತಿಳಿಸಿದ ಹಾಗೆ ಭೂಮಿಯಲ್ಲಿರುವ ನೀರನ್ನು ನಿರ್ಮಾಣ ಮಾಡುವುದು ಆದ್ದರಿಂದ ಉತ್ತರ ಈಶಾನ್ಯ
ಪೂರ್ವ ದಿಕ್ಕುಗಳಲ್ಲಿ ಇರುವುದು ಒಳ್ಳೆಯದು.

ನೀರನ್ನು ಶೇಖರಿಸಲು ಭೂಮಿಯನ್ನು ಅಗೆದು ಟ್ಯಾಂಕ್ ಗಳನ್ನು ನಿರ್ಮಿಸಲು ಹಾಗೂ ಮಾಳಿಗೆಯ ಮೇಲೆ ಓವರ್ ಹೆಡ್ ಟ್ಯಾಂಕ್
ನಿರ್ಮಾಣ ಮಾಡುವರು ಭೂಮಿಯಲ್ಲಿ ನಿರ್ಮಿಸುವ ಟ್ಯಾಂಕ್ ಅನ್ನು ಉತ್ತರ ಈಶಾನ್ಯ ಪೂರ್ವ ದಿಕ್ಕಿನಲ್ಲಿ ಮನೆಯ ಪಕ್ಕದಲ್ಲಿದಲ್ಲಿ
ಅಥವಾ ಮುಂಭಾಗದಲ್ಲಿ ಬರುವಂತೆ ನಿರ್ಮಾಣ ಮಾಡಬಹುದು ಓವರ್ ಹೆಡ್ ಟ್ಯಾಂಕುಗಳನ್ನು ನೈರುತ್ಯ ಅಥವಾ ಪಶ್ಚಿಮ
ಪಶ್ಚಿಮದಲ್ಲಿ ಇಡಬಹುದು.

ಪ್ರತಿದಿನಬಳಸುವ ನೀರು ಇತ್ಯಾದಿಗಳು ಗೃಹದಿಂದ ಹೊರ ಹೋಗ ಬೇಕಾದ ಅವಶ್ಯಕ ಆದ್ದರಿಂದ ಮನೆಯಲ್ಲಿರುವ ಬೇಡದೇ
ಇರುವ ನೀರು ಮನೆಯಿಂದ ಹೊರ ಹೋಗಬೇಕಾದರೆ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಹೇಳಿರುವರು ಸಾಮಾನ್ಯವಾಗಿ
ನೀರು ಹಳ್ಳದ ಕಡೆಗೆ ಹರಿವುದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಅದನ್ನೇ ಆಧಾರವಾಗಿಟ್ಟುಕೊಂಡು ಈಶಾನ್ಯವು ಜಲ
ತತ್ವ ಪ್ರಧಾನವಾದ ಕೋನ ವಾದ್ದರಿಂದ ಉತ್ತರ ಈಶಾನ್ಯ ಪೂರ್ವ ದಿಕ್ಕುಗಳಲ್ಲಿ ತಗ್ಗಾಗಿದ್ದರೆ ನೀರು ಆ ದಿಕ್ಕಿಗೆ ಹರಿಯುತ್ತದೆ
ಮತ್ತು ಇದು ಶುಭ ಫಲದಾಯಕವೆಂದು ವಿಶ್ವಕರ್ಮರು ಕಾಶ್ಯಪರು ವಸಿಷ್ಠರು ಮುಂತಾದ ಮಹರ್ಷಿಗಳು ಇದೇ ನಿಯಮಗಳನ್ನು
ಹೇಳಿರುವರು.

ಇನ್ನು ಯವಯವ ದಿಕ್ಕಿಗೆ ಮನೆಯ ಒಳಗಿನ ನೀರು ಹರಿದರೆ ಏನು ಫಲಗಳು ಲಭಿಸುವುದು ಎಂದು
ತಿಳಿದುಕೊಳ್ಳೋಣ.

ಪೂರ್ವ ರಾಜ ಪೂಜೆ ಯಶಸ್ಸು ಕೀರ್ತಿ.

ಆಗ್ನೇಯ ಸಂತಾಪ ಶತ್ರುಭಯ.

ದಕ್ಷಿಣ ಗಂಡಾಂತರ ಪುರುಷರಿಗೆ ತೊಂದರೆ.

ನೈರುತ್ಯ ಧನಹಾನಿ ರೋಗ.

ಪಶ್ಚಿಮ ನೌಕಾ ಸಂಪತ್ತು ನಾಶ.

ವಾಯುವ್ಯ ಶತ್ರುಭಯ ಸ್ತ್ರೀಯರಿಗೆ ಬಾಧೆ.

ಉತ್ತರ ಗೌರವ ವಂಶವೃದ್ಧಿ.


ಈಶಾನ್ಯ ಸರ್ವತೋಮುಖ ಅಭಿವೃದ್ಧಿ.

ಎಂದು ವಾಸ್ತುವಿದ್ಯಾ ಗ್ರಂಥದಲ್ಲಿ ಹೇಳಿರುವರು ಇನ್ನೂ ಕೆಲವು ಗ್ರಂಥದಲ್ಲಿ ನೀರು ಇಂಗಿ ಹೋಗುವಂತಿದ್ದರೆ ಅಪವಾದ ಧನ
ನಷ್ಟಗಳನ್ನು ಎದುರಿಸಬೇಕು.

ಇನ್ನು ಮಯಬ್ರಹ್ಮನ ಗೃಹದಿಂದ ನೀರು ಹೊರಹೋಗುವ ವಿಷಯವಾಗಿ ವಿಶೇಷ ಸೂತ್ರವನ್ನು ಹೇಳಿರುವರು ಅದೇನೆಂದರೆ ಗೃಹದ
ಸಿಂಹ ದ್ವಾರವು ಯಾವ ದಿಕ್ಕಿನಲ್ಲಿರುವುದು ನೋಡಿಕೊಂಡು ಗೃಹದ ಎಡಪಾರ್ಶ್ವದಲ್ಲಿ ನೀರು ಹೊರಹೋಗಲು ವ್ಯವಸ್ಥೆಯನ್ನು
ಮಾಡಬೇಕೆಂದಿರುವವರು.

ಮತ್ಸ್ಯಪುರಾಣದಲ್ಲಿಯೂಸಹ ಇದರಕುರಿತು ಈ ರೀತಿ ತಿಳಿಸಿರುವರು ಅದೇನೆಂದರೆ ಗೃಹದ ಅಗ್ರಭಾಗದಲ್ಲಿ ಎಂದರೆ


ಮುಂಬಾಗದಿಂದ ನೀರು ಹೊರಹೋಗುವುದು ಅತ್ಯಂತ ಶುಭವೆಂದೂ ಅದನ್ನು ಉತ್ಸರ್ಗ ಎಂದು ತಿಳಿಸಿರುವರು.

ಮನೆಯ ಹಿಂಭಾಗದಿಂದ ನೀರು ಹೊರ ಹೋಗುವುದಕ್ಕೆ ಸವ್ಯವರ್ಯ ಎಂದಿರುವರು ಇದೂಸಹ ಅತ್ಯಂತ ಶುಭವೆಂದಿರುವರು.

ಗೃಹ ದಕ್ಷಿಣ ಅಂದರೆ ಬಲ ಭಾಗದಿಂದ ನೀರು ಹೊರ ಹೋದರೆ ಅದನ್ನು ಅಪಸವ್ಯ ಎನ್ನುವರು ಈ ರೀತಿ ಗೃಹದಿಂದ ನೀರು ಹೊರ
ಹೋಗುವ ಪದ್ದತಿಯು ವಿನಾಶವನ್ನು ತರುತ್ತದೆ.

ಮನೆಯ ಉತ್ತರ ಅಥವಾ ಎಡಭಾಗದಿಂದ ನೀರು ಹೊರ ಹೋದರೆ ಅದನ್ನು ಸಂಪೂರ್ಣ ಎಂದು ಕರೆಯುವರು ಇದು ಸರ್ವಕಾಮ
ಫಲಪ್ರದವೂ ಎಂದಿರುವರು.

ಆದ್ದರಿಂದ ಮನೆಯ ಮೇಲೆ ಬೀಳುವ ಮಳೆಯ ನೀರು ಇತ್ಯಾದಿಗಳು ಗೃಹದಲ್ಲಿ ಸವ್ಯಾ ಕಾರವಾಗಿ ಹರಿದು ಗೃಹದ ಉತ್ತರ
ಈಶಾನ್ಯ ಮತ್ತು ಪೂರ್ವ ದಿಕ್ಕಿನಲ್ಲಿ ಹೊರಹೋಗುವುದು ಉತ್ತಮ ಮತ್ತು ಪಶ್ಚಿಮ ಹಾಗು ದಕ್ಷಿಣ ಸಿಂಹ ದ್ವಾರವಿರುವ ಮನೆಗಳಿಗೆ
ಹಿಂಭಾಗದಲ್ಲಿ ಮತ್ತು ಎರಡೂ ಪಾರ್ಶ್ವಗಳಲ್ಲಿ ನೀರು ಹೊರಹೋಗಲು ಅವಕಾಶ ಇರುವ ಪಕ್ಷದಲ್ಲಿ ಮಯಬ್ರಹ್ಮನ
ನಿರ್ದೇಶಿಸಿರುವಂತೆ ಗೃಹದ ಎಡಪಾರ್ಶ್ವದಲ್ಲಿ ಹರಿದೋ ಗೃಹದ ಅಗ್ರ (ಮುಂದೆ) ಭಾಗದಲ್ಲಿ ಹೊರಹೋಗುವಂತೆ ಮಾಡುವುದು
ಹಾಗೂ ಪಶ್ಚಿಮ ಸಿಂಹ ದ್ವಾರವಿರುವ ಗೃಹಗಳಿಗೆ ಗೃಹದ ಅಗ್ರಭಾಗದಿಂದ ಹೊರಹೋಗುವಂತೆ ಮಾಡುವುದು ಶುಭವು.

ಆದುದರಿಂದ ಪೂರ್ವ ಮತ್ತು ಉತ್ತರ ಸಿಂಹ ದ್ವಾರವಿರುವ ಮನೆಗಳಿಗೆ ಉತ್ತರ, ಈಶಾನ್ಯ, ಪೂರ್ವ ದಿಕ್ಕಿನಲ್ಲಿ ನೀರು ಮನೆಯಿಂದ
ಹೊರ ಹೋಗುವಂತೆ ಮಾಡುವುದು ಮತ್ತು ದಕ್ಷಿಣ, ಪಶ್ಚಿಮ ಸಿಂಹ ದ್ವಾರವಿರುವ ಮನೆಗಳಿಗೆ ಆಗ್ನೇಯದಲ್ಲಿ ಮತ್ತು ವಾಯುವ್ಯದಲ್ಲಿ
ತಕ್ಕ ರೀತಿಯಲ್ಲಿ ನೀರು ಹೊರಹೋಗುವಂತೆ ಮಾಡುವುದು ಶುಭವು.

ಗೃಹಾರಂಭ ಮಾಡಲು ಶುಭ ಮುಹೂರ್ತಗಳು.

ಚೈತ್ರ - ಧನಹಾನಿ.

ವೈಶಾಖ - ಶುಭ.

ಜೇಷ್ಠ - ಮರಣಭಯ.

ಆಷಾಢ - ಪಶುಹಾನಿ.

ಶ್ರಾವಣ - ಪುತ್ರವೃದ್ಧಿ.
ಭಾದ್ರಪದಮಾಸ - ರೋಗಪೀಡೆ.

ಆಶ್ವಯುಜ - ಕಲಹ.

ಕಾರ್ತೀಕ - ಶುಭ.

ಮಾರ್ಗಶಿರ - ಮಹಾಭಯ.

ಪುಷ್ಯ - ಅಗ್ನಿಭಯ.

ಮಾಘ - ಸಂಪದ.

ಫಾಲ್ಗುಣ - ರತ್ನಲಾಭ.

ಆದ್ದರಿಂದ ಚಾಂದ್ರಮಾನ ಪದ್ಧತಿ ಯಲ್ಲಿ ವೈಶಾಖ, ಶ್ರಾವಣ, ಕಾರ್ತಿಕ, ಮಾಘ, ಪಾಲ್ಗುಣ ಮಾಸಗಳು ಗೃಹಾರಂಭಕ್ಕೆ
ಶುಭವೆಂದು ನಾರದರು ನಾರದೀಯ ಪುರಾಣದಲ್ಲಿ ತಿಳಿಸಿರುವರು. ಮಾರ್ಗಶೀರ್ಷ ಮಾಸವು ಶುಭವೆಂದು ಹೇಳುವರು.

ಮೇಷ - ಮಹಾಭಯ.

ವೃಷಭ - ಧನಲಾಭ.

ಮಿಥುನ - ಮರಣ.

ಕರ್ಕಾಟಕ - ಪಶು ನಾಶ.

ಸಿಂಹ - ಪುತ್ರ ವೃದ್ಧಿ.

ಕನ್ಯಾ - ರೋಗ.

ತುಲಾ - ಸೌಖ್ಯ.

ವೃಶ್ಚಿಕ - ಧನವೃದ್ಧಿ.

ಧನಸ್ಸು - ಮಹಾಹಾನಿ.

ಮಕರ - ಅಗ್ನಿಭಯ.

ಕುಂಭ - ರತ್ನಲಾಭ.

ಮೀನ - ಎಲ್ಲ ರೀತಿಯ ಭಯ.

ಆದ್ದರಿಂದ ಸೌರಮಾನ ರೀತ್ಯ ವೃಷಭ, ಸಿಂಹ, ವೃಶ್ಚಿಕ, ಕುಂಭ, ಮಾಸಗಳು ಗೃಹಾರಂಭಕ್ಕೆ ಉತ್ತಮವೆಂದು

ಹಾಗೂ ಮೇಷ, ಕರ್ಕಾಟಕ, ತುಲಾ, ಮಕರ ಮಾಸಗಳು ಗೃಹಾರಂಭಕ್ಕೆ ಮಧ್ಯಮವು. ಸೌರಮಾನ ಮತ್ತು
ಚಾಂದ್ರಮಾನ ಮಾಸಗಳ ರೀತ್ಯಾ ಏಕೀಕರಿಸಿ ಹಿಂದಿನಂತೆ ಹೇಳಿರುವರು. ಅವುಗಳಲ್ಲಿ ಫಾಲ್ಗುಣದಲ್ಲಿ

ಕುಂಭ ರವಿ, ಶ್ರಾವಣದಲ್ಲಿ ಸಿಂಹ ಮತ್ತು ಕಟಕ ರವಿ, ಪುಷ್ಯಮಾಸದಲ್ಲಿ ಮಕರ ರವಿ ಇರುವಾಗ ಪೂರ್ವ

ಮತ್ತು ಪಶ್ಚಿಮ ದ್ವಾರವಿರುವ ಗೃಹವನ್ನು ನಿರ್ಮಾಣ ಮಾಡುವುದು ಶುಭ.

ಹಾಗೆಯೇ ವೈಶಾಖಮಾಸದಲ್ಲಿ ಮೇಷ ಹಾಗೂ ವೃಷಭ ರಾಶಿಯಲ್ಲಿ ರವಿ ಇರುವಾಗ ಮಾರ್ಗಶಿರ ಮಾಸದಲ್ಲಿ ತುಲಾ ಮತ್ತು
ವೃಶ್ಚಿಕ ರಾಶಿಯಲ್ಲಿ ರವಿ ಇರುವಾಗ ದಕ್ಷಿಣ ಮತ್ತು ಉತ್ತರ ದ್ವಾರ ವಿಡುವ ಗೃಹವನ್ನು ನಿರ್ಮಾಣ ನ ಮಾಡಲು ಪ್ರಾರಂಭ
ಮಾಡುವುದು ಶುಭಾ ಫಲಪ್ರದವೂ.

ಮೀನಮಾಸದಲ್ಲಿ ಚೈತ್ರಮಾಸವು, ಮಿಥುನ ಮಾಸದಲ್ಲಿ ಆಷಾಡ ಮಾಸವು, ಕನ್ಯಾಮಾಸದಲ್ಲಿ ಭಾದ್ರಪದ ಮಾಸವೂ, ಧನಸ್ಸು
ಮಾಸದಲ್ಲಿ ಪುಷ್ಯಮಾಸವು ಶೂನ್ಯ ಮಾಸವೆಂದು ಪರಿಗಣಿಸಿರುವುದರಿಂದ ಎಲ್ಲಾ ಶುಭಕಾರ್ಯಗಳಿಗೂ ವರ್ಜ್ಯ.

ಗೃಹಕ್ಕೆ ಪಕ್ಷ ಸುದ್ದಿ ಶುಕ್ಲಪಕ್ಷದಲ್ಲಿ ಸೌಖ್ಯ ಕೃಷ್ಣಪಕ್ಷದಲ್ಲಿ ಚೋರಭಯ ಗೃಹಾರಂಭಕ್ಕೆ ತಿಥಿ ಸುದ್ದಿ ಪ್ರತಿಭಾ ದಾರಿದ್ರ ಚತುರ್ಥಿ
ಧನಹಾನಿ ಅಸ್ಸಾಮಿ ಉಚ್ಚಾಟನೆ ನವಮಿ ಶಾಸ್ತ್ರಾಗಮ ಶಸ್ತ್ರ ಘಾತ ಚತುರ್ದಶಿ ಸ್ತ್ರೀ ಹಾನಿ ಪೌರ್ಣಮಿ ಮಿಶ್ರಫಲ ಅಮಾವಾಸ್ಯೆಯ
ರಾಜ ಭಯ ಮರಣ ಮತ್ತೆ ದ್ವಾದಶಿ ಉತ್ತರ ನಾಶ ಆದ್ದರಿಂದ ಬಿದಿಗೆ ತದಿಗೆ ಪಂಚಮಿ

ಆದ್ದರಿಂದ ಬಿದಿಗೆ ತದಿಗೆ ಪಂಚಮಿ ಸಪ್ತಮಿ ದಶಮಿ ತ್ರಯೋದಶಿ ಇತ್ಯಾದಿಗಳು ಗೃಹಾರಂಭಕ್ಕೆ ಶುಭವು ಗೃಹ ಗೃಹಾರಂಭಕ್ಕೆ ವಾರ
ಶುದ್ದಿ ಇರಲೇಬೇಕು

ರವಿವಾರ - ವ್ಯಾಧಿ

ಸೋಮವಾರ - ಕ್ಷೇಮ

ಮಂಗಳವಾರ - ಅಗ್ನಿಭಯ

ಬುಧವಾರ - ಧನಲಾಭ ಗುರುವಾರ ಆ ಹುದ್ದೆ ಶುಕ್ರವಾರ ಐಶ್ವರ್ಯ ಶನಿವಾರ ದಾರಿದ್ರ ಆದ್ದರಿಂದ ಸೋಮವಾರ ಬುಧವಾರ
ಗುರುವಾರ ಶುಕ್ರವಾರ ಗಳು ಸುಖವು ಗೃಹಾರಂಭಕ್ಕೆ ಲಗ್ನ ಶುದ್ದಿ ಸ್ಥಿರ ಲಗ್ನ ಗಳಾದ ವೃಷಭ ಸಿಂಹ ವೃಶ್ಚಿಕ ಕುಂಭ ಲಗ್ನ ಗಳು
ಉತ್ತಮ ಫಲದಾಯಕವೂ ಇತರ ಲಕ್ಷಣಗಳಾದ ಮೇಷ ಕರ್ಕಾಟಕ ತುಲಾ ಮಕರ ಲಗ್ನ ಗಳು ಮಧ್ಯಮ ಮಧ್ಯಮ
ಫಲದಾಯಕವೂ ದ್ವಿಸ್ವಭಾವ ಮಿಥುನ ಕನ್ಯಾ ಧನಸ್ಸು ಮೀನ ಲಗ್ನ ಗಳು ಫಲದಾಯಕವೂ ಅಧಮ ಫಲದಾಯಕವೂ
ಗೃಹಾರಂಭಕ್ಕೆ ನಕ್ಷತ್ರ ಸುದ್ದಿ ಅಶ್ವಿನಿ ಯೋಗ್ಯವಾದುದು ಭರಣಿ ಕೃತ್ತಿಕಾ ಅಗ್ನಿ ಭಯ ರೋಹಿಣಿ ಧನಪ್ರಾಪ್ತಿ ಮೃಗಶಿರಾ ಆರೋಗ್ಯ
ಸ್ವಾತಿ ಐಶ್ ಸ್ಥೈರ್ಯ ವಿಷಾದ ಅಗ್ನಿಭಯ ಅನುರಾಧ ಮಿತ್ರವೃಂದೆ ಜೇಷ್ಠ ಕ್ಷುದ್ಬಾಧೆ ಮೂಲ ವಿರೋಧ ಆರಿದ್ರಾ ಪುನರ್ವಸು
ಧನಪ್ರಾಪ್ತಿ ಪುಷ್ಯ ಅಭಿವೃದ್ಧಿ ಆಶ್ಲೇಷಾ ರಾಜ ಭಯ ಸ್ವಲ್ಪ ಸಂತಾನ ಅಲ್ಪ ಸಂತಾನ ಒಬ್ಬ ದೀನತ್ವ ಧನಹಾನಿ ಉತ್ತರ
ಕೀರ್ತಿಮಾನ ಹಸ್ತ ಉತ್ತಮ ಸಂತಾನ ಸಿದ್ಧ ಗೃಹ ಅಭಿವೃದ್ಧಿ ಪೂರ್ವಾಷಾಢ ಉತ್ತರಾಷಾಢ ತನಪುತ್ರ ವೃದ್ಧೆ ಶ್ರವಣ ಕೀರ್ತಿ ಧನಿಷ್ಠ
ಸಂತೋಷ ಶತಭಿಷಾ ಆಯುರಾರೋಗ್ಯ ಪೂರ್ವಾಭಾದ್ರಾ ದರಿದ್ರ ಉತ್ತರಾಭಾದ್ರ ಸಂತೋಷ ರೇವತಿ ಅಭಿಜಿತ್ ಸಂಪದ
ಆದ್ದರಿಂದ ಅಶ್ವಿನಿ ರೋಹಿಣಿ ಮೃಗಶಿರಾ ಪುನರ್ವಸು ಪುಷ್ಯ ಹಸ್ತಾ ಚಿತ್ತಾ ಅಂಗವಾದ ಉತ್ತರ ಉತ್ತರಾಷಾಢ ಉತ್ತರಾಭಾದ್ರಾ
ಶ್ರವಣಾ ಧನಿಷ್ಠಾ ಶತಭಿಷಾ ನಕ್ಷತ್ರಗಳು ಗೃಹಾರಂಭಕ್ಕೆ ಉತ್ತಮವಾದುದು
ಈಗ ದ್ವಾರವಿಡಲು ಶುಭಮುಹೂರ್ತಗಳನ್ನು ನೋಡೋಣ ಗೃಹ ದ್ವಾರವನ್ನು ಇಡುವುದಕ್ಕೆ ತಿಥಿ ಬಿದಿಗೆ ತದಿಗೆ ಪಂಚಮಿ ಸಪ್ತಮಿ
ದಶಮಿ ತ್ರಯೋದಶಿ ವಾರ ಸೋಮವಾರ ಬುಧವಾರ ಗುರುವಾರ ಶುಕ್ರವಾರ ನಕ್ಷತ್ರ ಅಶ್ವಿನಿ ರೋಹಿಣಿ ಮೃಗಶಿರಾ ಉತ್ತರ ಪುಷ್ಯ
ಪುನರ್ವಸು ಹಸ್ತಾ ಚಿತ್ತಾ ಸ್ವಾತಿ ಹಸ್ತ ಚಿತ್ತ ಸ್ವಾತಿ ಅನೂರಾಧ ಜೇಷ್ಠ ಶ್ರವಣ ಕನಿಷ್ಠ ಹಾಗೂ ರೇವತಿ ನಕ್ಷತ್ರಗಳ ಒಳ್ಳೆಯದು
ಲಗ್ನಾ ವೃಷಭ ಸಿಂಹ ತುಲಾ ವೃಶ್ಚಿಕ ಕುಂಭ ಲಗ್ನ ಗಳು ಉತ್ತಮ ಸುದ್ದಿ ಇರತಕ್ಕದ್ದು

You might also like