You are on page 1of 3

ಭಾರತದ ಆಧ್ಯಾತ್ಮಿಕ ಪಂಥಗಳಲ್ಲಿ ರಾಮನಾಮದ ಮಹತ್ವ ವಿಶಿಷ್ಟವಾಗಿದೆ.

ಆದಿಕವಿ ವಾಲ್ಮಕಿಯಿಂದ ಹಿಡಿದು ಆಧುನಿಕ


ಯುಗದವರೆಗೂ ಶ್ರೀರಾಮಚಂದ್ರನ ದಿವ್ಯವ್ಯಕ್ತಿತ್ವದೊಂದಿಗೆ ಜೊತೆಜೊತೆಯಾಗಿ ಬರುವ ಅವನ ದಿವ್ಯನಾಮವನ್ನು ಕುರಿತು.

ದಶಾವತಾರಗಳಲ್ಲಿ ನಮ್ಮ ಬದುಕಿಗೆ ಅತ್ಯಂತ ಸಮೀಪವಾದದ್ದು ರಾಮಾವತಾರ. ರಾಮೋಪಾಸನೆ ನಮ್ಮಲ್ಲಿ


ಅನೂಚಾನವಾಗಿ, ಒಂದು ಪರಂಪರೆಯಾಗಿಯೇ ಬೆಳೆದು ಬಂದಿದೆ. ನಮ್ಮ ಉದ್ದಾರಕ್ಕೆ ಅದು ಅತ್ಯಗತ್ಯವೂ ಹೌದು..

ಬದುಕಿನ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು, ಇಷ್ಟ ಪ್ರಾಪ್ತಿ, ಅನಿಷ್ಟ ನಿವಾರಣೆಗೆ ನಾವು ಅವಲಂಬಿಸುವ ಸಾಧನವೇ
ಉಪಾಸನೆ. ಉಪಾಸನೆಯಲ್ಲಿ ನಾಲ್ಕು ವಿಧ. ಪಠಣ, ಸಂಕೀರ್ತನೆ, ಧ್ಯಾನ ಮತ್ತು ಪೂಜೆ.

ನವವಿಧ ಭಕ್ತಿಯಲ್ಲಿ ನಾಮ ಸಂಕೀರ್ತನೆಯೂ ಒಂದು. ನಾಮ ಜಪದಿಂದ ಚಿತ್ತಶುದ್ಧಿ, ಏಕಾಗ್ರತೆ ಹಾಗೂ ಮಾನಸಿಕ ನೆಮ್ಮದಿ
ದಿರೆಯುತ್ತದೆ.

ಹೀಗೆ ನಾಮೋಪಾಸನೆ ಮಾಡಲು ಅತ್ಯಂತ ಸುಲಭವಾದ ವಿಶಿಷ್ಟ ಮಂತ್ರ ಶ್ರೀರಾಮ ಮಂತ್ರ. “ಓಂ ನಮೋ
ನಾರಾಯಣಾಯ” ಎಂಬ ಅಷ್ಟಾಕ್ಷರೀ ಮಹಾ ಮಂತ್ರದ ರಾ ಹಾಗೂ ಓಣ್ ನಮಃ ಶಿವಾಯ ಎಂಬ ಪಂಚಾಕ್ಷರೀ ಮಂತ್ರದ ಮ
ಮತ್ತು ಶಾಕ್ತ ಮಂತ್ರಗರ್ಭಿತವಾದ ಶ್ರೀ ಕಾರಗಳು ಸೇರಿ ಶ್ರೀರಾಮ ಮಹಾಮಂತ್ರವಾಗಿದೆ. ಇದು ನಾರಾಯಣ, ಶಿವ ಮತ್ತು
ಶಕ್ತಿತತ್ವಗಳ ಸಂಗಮ.

ಸಪ್ತಕೋಟಿ ಮಹಾಮಂತ್ರಾಃ ಚಿತ್ತವಿಭ್ರಮಕಾರಕಾಃ |


ಏಕ ಏವ ಪರೋ ಮಂತ್ರೋ ರಾಮ ಇತ್ಯಕ್ಷರ ದ್ವಯಂ ||

ಮನಸ್ಸನ್ನು ಪರವಶಗೊಳಿಸುವ ಏಳುಕೋಟಿ ಮಹಾಮಂತ್ರಗಳಲ್ಲಿ ಅತ್ಯಂತ ವಿಶಿಷ್ಟವಾದ, ಮಹತ್ತರವಾದ ಏಕೈಕ ಮಂತ್ರ


ಶ್ರೀರಾಮ ಮಂತ್ರವಾಗಿದೆ ಎಂದರ್ಥ. ಈ ಮಂತ್ರದ ಪ್ರಭಾವದಿಂದಲೇ ಆದಿಶೇಷ ಇಡೀ ಬ್ರಹ್ಮಾಂಡದ ಭಾರವನ್ನು ಹೊರಲು
ಸಮರ್ಥನಾದದ್ದು, ಅಗಸ್ತ್ಯರು ಸಮುದ್ರಪಾನ ಮಾಡಲು, ವಿಂಧ್ಯಾಪರ್ವತವನ್ನು ನಿಗ್ರಹಿಸಲು ಸಾಧ್ಯವಾದದ್ದು, ಹೆಚ್ಚು
ಹೇಳುವುದೇಕೆ, ಅತ್ಯಂತ ದುಷ್ಟನಾದ ಕಡು ಕ್ರೂರಿಯಾದ ದಾರಿಗಳ್ಳನಾದ ಬೇಡನೊಬ್ಬ ಮಹಾಮುನಿಯಾಗಿ, ವಾಲ್ಮೀಕಿಯಾಗಿ
ಪರಿವರ್ತಿತನಾದದ್ದು.

ರಾಮನಾಮ ಸಮಂ ತತ್ತ್ವಂ ನಾಸ್ತಿ ವೇದಾಂಗೋಚರಂ |


ಯತ್ಪ್ರಸಾದಾತ್ಪರಾಂಸಿದ್ಧಿಂಸಂಪ್ರಾಪ್ತಃ ಮುನಯೋಽಮಲಾಂ ||
ರಾಮನಾಮಕ್ಕೆ ಸಮನಾದ ತತ್ತ್ವ ಯಾವುದೂ ಇಲ್ಲ. ಋಷಿ ಮುನಿಗಳು ಈ ನಾಮ ಜಪದಿಂದಲೇ ಪರಾಸಿದ್ಧಿ ಪಡೆದರು. ರಾಮ
ಎಂಬ ಎರಡಕ್ಷರದಿಂದಲೇ ದೇವತೆಗಳ ದರ್ಶನವಾಗುತ್ತದೆ, ಮುಕ್ತಿ ಸಿಗುತ್ತದೆ ಎನ್ನುತ್ತಾರೆ ಬಲ್ಲವರು.

ರಾಮ, ರಾಮ, ರಾಮ ಎಂದು ಮೂರು ಸಲ ಹೇಳಿದರೂ ಸಾಕು, ವಿಷ್ಣುಸಹಸ್ರನಾಮ ಪಾರಾಯಣದ ಫಲ ಸಿಗುತ್ತದೆ.
ರಾಮನಾಮವನ್ನು ಒಮ್ಮೆ ಬರೆದರೆ ಮೂರು ಬಾರಿ ಜಪ ಮಾಡಿದ ಪುಣ್ಯ ಬರುತ್ತದೆ. ನಾಮ ಸಂಕೀರ್ತನೆ, ಭಜನೆ,
ನಾಮಸ್ಮರಣೆ – ಹೇಗೇ ರಾಮನನ್ನು ನೆನೆದರೂ ಬದುಕು ಸಾರ್ಥಕವಾಗುತ್ತದೆ. ರಾಮ ಎಂಬ ಹೆಸರಿನ ಮಹಿಮೆ ರಾಮನನ್ನೂ
ಮೀರಿದೆ. ಅದು ರಾಮಾವತಾರಕ್ಕಿಂತ ಹಿರಿಯು.

ರಾಮನಾಮ ಸ್ಮರಣೆ, ರಾಮಭಜನ ಸಂಪ್ರದಾಯವನ್ನು ಪ್ರಸಾರ ಮಾಡಿದವರಲ್ಲಿ ಸಂತ ತುಲಸೀದಾಸ, ಕಬೀರದಾಸ,


ಸಮರ್ಥ ರಾಮದಾಸ, ತುಕಾರಾಮ ಚೈತನ್ಯ, ಬ್ರಹ್ಮಚೈತನ್ಯರು ಪ್ರಮುಖರು.
ಗೋಂದಾವಳಿ ಮಹಾರಾಜ್ ಎಂದೇ ಖ್ಯಾತರಾಗಿದ್ದ ಶ್ರೀ ಬ್ರಹ್ಮಚೈತನ್ಯರು ತಮ್ಮ ಸಂಪರ್ಕಕ್ಕೆ ಬಂದವರಿಗೆಲ್ಲಾ ರಾಮ
ನಾಮೋಪದೇಶ ಮಾಡಿ, ಅವರಲ್ಲಿದ್ದ ದೋಷ, ಕಳಂಕಗಳನ್ನು ದೂರ ಮಾಡುತಿದ್ದರು.

ಶ್ರೀರಾಮ ನಾಮ ಸ್ಪರ್ಶಮಣಿ ಇದ್ದಂತೆ. ತನ್ನ ಸಂಪರ್ಕಕ್ಕೆ ಬಂದವರನ್ನೆಲ್ಲಾ ಪರಿವರ್ತಿಸಿಬಿಡುತ್ತದೆ. ಅದು ಮಂತ್ರದಷ್ಟೇ
ಪ್ರಭಾವಶಾಲಿ. ತಾರಕ ನಾಮ, ಮಂಗಳಗಳ ನಿಧಿ. ಕಲಿಮಲ ನಿವಾರಕ. ಮುಮುಕ್ಷುಗಳ ವಿಶ್ರಾಮ ಸ್ಥಾನ. ಜೀವನವನ್ನು
ಪಾವನಗೊಳಿಸುವ ಧರ್ಮದ ಬೀಜ. ಅದನ್ನು ನೆಚ್ಚಿದವರಿಗೆ ಇಹಪರಗಳ ಭಯವಿಲ್ಲ.
ಜಾತಿ, ಮತಭೇದ, ಸ್ತ್ರೀ-ಪುರುಷ ಎಂಬ ವ್ಯತ್ಯಾಸವಿಲ್ಲದೆ ಎಲ್ಲ ದೇಶ, ಕಾಲಗಳಲ್ಲೂ, ಎಲ್ಲ ಜನರೂ ಸುಲಭವಾಗಿ
ಜಪಿಸಬಹುದಾದ ಏಕೈಕ ದಿವ್ಯಮಂತ್ರ ಶ್ರೀರಾಮ ಮಂತ್ರ. ಅದು ಸಂಸಾರ ತಾರಕ, ಸಕಲೇಷ್ತದಾಯಕ. ಆ ತಾರಕ
ಮಂತ್ರವನ್ನು ನಾವೆಲ್ಲಾ ಸದಾ, ಸರ್ವದಾ, ಅನವರತ ಜಪಿಸುತ್ತಾ ಧನ್ಯರಾಗೋಣ.

You might also like