You are on page 1of 1

ವೈಶಾಖ ಶುಕ್ಲ ಪಂಚಮಿ ಅಂದರೆ ದಿನಾಂಕ 09.05.

2019 ಗುರುವಾರದಂದು
ಪ್ರಪಂಚದಾದ್ಯಂತ #ಜಗದ್ಗುರು#ಶ್ರೀ_ಆದಿ_ಶಂಕರಾಚಾರ್ಯರ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಅನಾದಿ ವೇದಕಾಲದಿಂದ ಇಂದಿನವರೆಗೂ ನಿರಂತರವಾಗಿ ಹರಿಯುತ್ತಿರುವ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಗಂಗೆಯ ಮೂರ್ತ


ಸ್ವರೂಪರೇ ಆದಿ ಶಂಕರಾಚಾರ್ಯರು. ಪರಮಜ್ಞಾನದ ತವನಿಧಿಗಳಾದ #ಉಪನಿಷತ್ತುಗಳಿಗೆ, ಶಾಸ್ತ್ರಮರ್ಯಾದೆಗೆ
ಮಾದರಿಯಾಗಿರುವ #ಬ್ರಹ್ಮಸೂತ್ರಕ್ಕೆ, ಕಾಲಾನಂತರದಲ್ಲಿ ಭಾಗವತ ಧರ್ಮದ ವಿನೂತನ ಯುಗವನ್ನೇ
ಪ್ರವರ್ತಿಸಿದ #ಭಗವದ್ಗೀತೆಗೆ ಶಂಕರರು ಬರೆದಿರುವ “#ಭಾಷ್ಯ”ಗಳು ಬರಿಯ ವಿವರಣೆಗಳಲ್ಲ; ಅವು ಸ್ವಂತಂತ್ರ
ಪ್ರಮಾಣಗ್ರಂಥಗಳೇ ಎನ್ನುವ ಖ್ಯಾತಿಯನ್ನು ಗಳಿಸಿದೆ. ಅವರನ್ನು#ಪರಮಹಂಸ #ಪರಿವ್ರಾಜಕಾಚಾರ್ಯ, ಲೋಕೈಕ
ಜಗದ್ಗುರು,#ಷಣ್ಮತಸ್ಥಾಪನಾಚಾರ್ಯ, #ಭಗವತ್ಪಾದ,#ಅಧ್ವೈತಪ್ರತಿಷ್ಠಾಪನಾಚಾರ್ಯ, #ಪರಮಗುರು, ಪರಶಿವನ
ಪುರುಷಾವತಾರ ಎಂದು ಮುಂತಾಗಿ ಕರೆದು ವೇದಾಂತವಿದ್ಯಾರಸಿಕರು ಅವರ ಬಗೆಗೆ ತಮ್ಮ ಗೌರವವನ್ನು
ಶತಶತಮಾನಗಳಿಂದಲೂ ಸಲ್ಲಿಸುತ್ತ ಬಂದಿದ್ದಾರೆ. 

ನಮ್ಮ ನಾಡು, ನಮ್ಮ ನುಡಿ, ನಮ್ಮ

You might also like