You are on page 1of 4

।। श्री: ।।

ಧನುರ್ಮಾಸ

मासानामत्तु मम ् प्रोक्तम ् मासे मार्गशिराभिधे |


तस्मिन ् मासे कथम ् कार्या हरे : पज ू ा महामते ||

ಸಾಮಾನ್ಯವಾಗಿ ಪ್ರತಿ ವರುಷದ ಮಾರ್ಗಶಿರ ಮಾಸದ (ಡಿಸೆಂಬರ) 17 ಅಥವಾ 18 ಧನುರ್ಮಾಸ ಆರಂಭವಾಗುತ್ತದೆ.

ಧನುರ್ಮಾಸ ಎಂದರೇನು?

ಸೂರ್ಯನು ಒಂದು ರಾಶಿಯಲ್ಲಿ ಒಂದು ತಿಂಗಳಿನಂತೆ ಮೇಷಾದಿ ಹನ್ನೆರಡು ರಾಶಿಗಳಲ್ಲಿ ಸಂಚರಿಸಿದಾಗ ಒಂದು ವರ್ಷ
ಪೂರ್ತಿಯಾಗುವುದು. ಸೂರ್ಯನು ವೃಶ್ಚಿಕ ರಾಶಿಯನ್ನು ಬಿಟ್ಟು ಧನು ರಾಶಿಯಲ್ಲಿ ಪ್ರವೇಶಿಸಿದ ದಿನಕ್ಕೆ ಧನು ಸಂಕ್ರಾಂತಿ ಎಂದು
ಹೆಸರು. ಧನು ರಾಶಿಯಲ್ಲಿ ಸೂರ್ಯನು ಒಂದು ಇರುವ ಅವಧಿಯು ಅಂದರೆ ಧನು ಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ
ವರೆಗಿನ ಅವಧಿಯು ಧನುರ್ಮಾಸವೆಂದು ಕರೆಯಲ್ಪಡುತ್ತದೆ.

ಧನುರ್ಮಾಸ ಪೂಜಾ ಸಮಯ

ಅತ್ಯಂತ ಪವಿತ್ರವಾದ ಈ ಧನುರ್ಮಾಸದಲ್ಲಿ ಪ್ರತಿನಿತ್ಯ ಉಷ:ಕಾಲದಲೆದ್ದು


ಸ್ನಾನಾದಿಗಳನ್ನು ಮಾಡಿ ಸ್ತೋತ್ರಗಳನ್ನು ಪಠಿಸಿ, ಪರಮಾತ್ಮನನ್ನು ಪೂಜಿಸಿ,
ಹೆಸರುಬೇಳೆಯ ಹುಗ್ಗಿ,ಬೆಣ್ಣೆ,ಸರ್ವ ಉಪಸ್ಕಾರಗಳಿಂದ ಕೂಡಿದ ಉದ್ದಿನಹಿಟ್ಟು,
ಉದ್ದಿನ ದೋಸೆ ಪಲ್ಯಗಳು,ವಿವಿಧ ಭಕ್ಶ್ಯಗಳು,ರಸಗಳು,(ಲೇಹ್ಯ) ಪಾನೀಯಗಳು
(ಕಶಾಯ) ಗಟ್ಟಿಯಾದ ಮೊಸರು ಹಾಗೂ ವಿವಿಧ ಫಲಗಳನ್ನು ಶ್ರೀಹರಿಗೆ
ನಿವೇದಿಸಬೇಕು. ಎಲ್ಲ ಪದಾರ್ಥಗಳನ್ನು ಮಾಡಲಾಗದಿದ್ದರೂ
ಮುದ್ಗಾನ್ನವನ್ನು,ಉದ್ದಿನ ದೋಸೆಯನ್ನು ಮಾಡುವುದು ಸೂಕ್ತ. ಹೀಗೆ
ಮಾಡುವುದರಿಂದ ದೀರ್ಘಾಯುಷ್ಯ,ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ.
ಮುಖ್ಯವಾಗಿ ಶ್ರೀಮಹಾಲಕ್ಷ್ಮಿಯ ಅನುಗ್ರಹ ವಿಶೇಷವಾಗಿ ಆಗುವುದು, ಸಕಲ
ಐಶ್ವರ್ಯಗಳೂ ಪ್ರಾಪ್ತವಾಗುತ್ತವೆ.

www.purnapramati.in
ಆಗ್ನೇಯಪುರಾಣ
52 ನೇ ಅಧ್ಯಾಯ
ಸ್ಮೃತಿ ಮುಕ್ತಾವಲೀ

ವೈಜ್ಞಾನಿಕವಾಗಿ ಧನುರ್ಮಾಸ ಫಲ

ಈ ಸಮಯದಲ್ಲಿ ಛಳಿ ಅತ್ಯಂತ ಹೆಚ್ಚಾಗಿರುವುದರಿಂದ ದೇಹಕ್ಕೆ ಉಷ್ಣತೆಯ ಅವಶ್ಯಕತೆ ಹೆಚ್ಚಾಗಿರುತ್ತದೆ. ಜಠರಾಗ್ನಿಯೂ


ತೀವ್ರವಾಗಿರುತ್ತದೆ. ಅದಕ್ಕಾಗಿ ನಮ್ಮ ಪ್ರಾಚೀನರ ಅತ್ಯುತ್ತಮ ಕ್ರಮ ಹೀಗಿದೆ. ದೇಹಾರೋಗ್ಯಕ್ಕೆ ಹಿತಕರವಾದ ಉಷ್ಣತೆಯನ್ನು
ತಂದುಕೊಡುವ ಮುದ್ಗಾನ್ನ, ಶುಂಠಿ,ಬೆಣ್ಣೆ,ತುಪ್ಪ, ನೆಲ್ಲೀಕಾಯಿ ರಸ, ಮುಂತಾದವುಗಳನ್ನು ಶ್ರೀಹರಿಗೆ ಸಮರ್ಪಿಸಿ ಸೇವಿಸುವುದು.
ನಮ್ಮ ಭಾರತದ ಎಲ್ಲ ಧಾರ್ಮಿಕ ಕರ್ಮಗಳು ನಮಗೆ ಧರ್ಮದಲ್ಲಿ ನಡೆಯುವುದನ್ನು ತಿಳಿಸಿಕೊಡುವುದರ ಜೊತೆಗೆ ಆರೋಗ್ಯ
ವಂತರಾಗಿರುವುದನ್ನು ಕಲಿಸಿಕೊಡುತ್ತದೆ.

ಮುದ್ಗಾನ್ನ ಮಾಡುವ ವಿಧಾನ (ಹುಗ್ಗಿ)

ಬೇಕಾಗುವ ಪದಾರ್ಥಗಳು
ಹೆಸರುಬೇಳೆ - 1
ಅಕ್ಕಿ - ½
ತುಪ್ಪ - 1 ಬಟ್ಟಲು
ಗೋಡಂಬಿ - 10
ಶುಂಠಿ - 1 ಚಮಚ
ಅಕ್ಕಿ ಹಾಗೂ ಬೇಳೆಯನ್ನು 2 ಬಾರಿ ತೊಳೆದು ಬೇಯಿಸಿ ಚೆನ್ನಾಗಿ ಬೆಂದ ನಂತರ ಮಸಾಲೆ,ಶುಂಠಿ,ತುಪ್ಪ, ಲವಂಗ
ಗೋಡಂಬಿಯನ್ನು ತುಪ್ಪದಲ್ಲಿ ಕರೆದು ಹಾಕಬೇಕು.

ಮಸಾಲೆ ಪುಡಿ ಮಾಡುವ ವಿಧಾನ

ಒಣಕೊಬ್ಬರಿ–1 ಬಟ್ಟಲು
ಒಣಮೆಣಸಿನಕಾಯಿ– 5,6
ಚಕ್ಕೆ –1
ಲವಂಗ –6
ಜೀರಿಗೆ –1 ಚಮಚ
ಮೆಣಸು–½ ಚಮಚ
ಏಲಕ್ಕಿ –4

ಎಲ್ಲವನ್ನೂ ಹುರಿದು ಪುಡಿ ಮಾಡಿ ಮುದ್ಗಾನ್ನಕ್ಕೆ 1 ಚಮಚ ಹಾಕಬೇಕು. ಹೀಗೆ ಮಾಡಿ ಭಗವಂತನಿಗೆ ಸಮರ್ಪಿಸಿ
ಕುಟುಂಬದವರೆಲ್ಲರೂ ಸೇರಿ ಭೋಜನವನ್ನು ಪ್ರಸಾದರೂಪವಾಗಿ ಸ್ವೀಕರಿಸಬೇಕು.

ದಾಸಸಾಹಿತ್ಯ

ಹಕ್ಕಿ ಚಿಲಿಪಿಲಿ ಎನ್ನಲಿ ಹರಿಯೆ ಕಾಗೆ ಕಾಕಾ ಎನ್ನಲಿ|


ಕೋಗಿಲೆ ಸ್ವರ ಗೈಯಲಿ ಕೃಷ್ಣ ನಾಗಸಂಪಿಗೆ ಅರಳಲಿ ರಾಮ ||ಪ||

ಎದ್ದು ಮುಖ ತೊಳೆಯೇಳು ತಿದ್ದು ಕಸ್ತೂರಿ ತಿಲಕ|


ಮುದ್ದೆ ಬೆಣ್ಣೆಯ ನಿನಗೆ ನಾನು ಕೊಡುವೆ ||
ಮುತ್ತಿಟ್ಟ ಕತ್ತಲು ಹರಿದು ಬೆಳಗಾಯಿತು |

www.purnapramati.in
ನಿದ್ದೆ ತಿಳಿದೆದ್ದು ಏಳಯ್ಯ ಶ್ರೀಕೃಷ್ಣ||೧||

ಬಿಸಿಯ ದೋಸೆಯ ಹೊಯ್ಡು ಮೊಸರು ಗೆಡ್ಡೆಯ ತೆಗೆದು |


ಹೊಸದಾದ ಹಸುವಿನ ತುಪ್ಪವನ್ನು ||
ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |
ಹಸುಳೆ ನಿನಗಾರೋಗಣೆ ಮಾಡುವೆ ||೨||

ಎಂದು ಇಲ್ಲದ ಹಟವ ಇಂದೇಕೆ ಮಾಡುವಿಯೊ |


ಕಂದರೊಳಗತಿ ನೀನು ಅರಿಯಾದೆಯಾ ||
ಇಂದು ತರಳನೆ ನಿನ್ನ ಎತ್ತಿ ಕೊಳ್ಳುವರಿಲ್ಲ |
ಕಂದ ಅಳಬೇಡವೊ ಪುರಂದರವಿಠಲ ||೩||

ಶ್ರೀಮಹಾಲಕ್ಷ್ಮೀಸ್ತೋತ್ರಮ್

ಶ್ರೀದೇವೀ ಪ್ರಥಮಂ ನಾಮ ದ್ವಿತೀಯಂ ಅಮೃತೋದ್ಭವಾ ।


ತೃತೀಯಂ ಕಮಲಾಪ್ರೋಕ್ತಾ ಚತುರ್ಥಂ ಚಂದ್ರಲೋಚನಾ ।।
ಪಂಚಮಂ ವಿಷ್ಣುಪತ್ನೀ ಚ ಷಷ್ಠಂ ಶ್ರೀವೈಷ್ಣವೀ ತಥಾ ।
ಸಪ್ತಮಂ ತು ವರಾರೋಹಾ ಹ್ಯಷ್ಟಮಂ ಹರಿವಲ್ಲಭಾ ।।
ನವಮಂ ಶ್ರಾಙ್ಗಿಣೀ ಪ್ರೋಕ್ತಾ ದಶಮಂ ದೇವದೇವಿಕಾ ।
ಏಕಾದಶಂ ತು ಮಹಾಲಕ್ಷೀ: ದ್ವಾದಶಂ ಲೋಕಸುಂದರೀ ।।
ಶ್ರೀಪದ್ಮಾ ಕಮಲಾ ಮುಕುಂದ ಮಹಿಷೀ ಲಕ್ಷ್ಮೀಸ್ತ್ರೀಲೋಕೇಶ್ವರೀ ।
ಮಾ ಕ್ಷೀರಾಬ್ಧಿಸುತಾ ವಿರಿಂಚಜನನೀ ವಿದ್ಯಾ ಸರೋಜಾನನಾ ।।
ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ ।
ಪ್ರಾತ: ಶುದ್ಧತರಾ: ಪಠಂತ್ಯಭಿಮತಾನ್ ಸರ್ವಾನ್ ಲಭಂತೇ ಗುಣಾನ್ ।।
ಶ್ರೀಲಕ್ಷ್ಮೀಹೃದಯಂ ಚೈತನ್ನಾಮದ್ವಾದಶಯುಗ್ಮಕಮ್ ।
ತ್ರಿವಾರಂ ಪಠತೇ ಯಸ್ತು ಸರ್ವೈಶ್ವರ್ಯಮವಾಪ್ನುಯಾತ್ ।।

।। ಇತಿ ಶ್ರೀ ಸಂಕ್ಷಿಪ್ತ ಲಕ್ಷ್ಮೀಹೃದಯ ಸ್ತೋತ್ರಮ್ ।।

ದಾರಿದ್ಯ್ರನಾಶನ ಲಕ್ಷ್ಮೀಸ್ತೋತ್ರಮ್

ಯದುದ್ಭವಾಃ ಸತ್ವರಜಸ್ತಮೋಗುಣಾಃ ।
ಸರ್ಗಸ್ಥಿತಿಧ್ವಂಸನಿದಾನಕಾರಣಾಃ ।।
ಯದಿಚ್ಛಯಾ ವಿಶ್ವಮಿದಂ ಭವಾಭವೌ ।
ತತೋ ಹಿ ಮೂಲಪ್ರಕೃತಿಂ ನತೋಽಸ್ಮಿತಾಮ್ ।।೧।।

ಯಾ ಹಿ ತ್ರಯೋವಿಂಶತಿಭೇದಸಂಜ್ಞಿತಾ ।
ಜಗತ್ಯಶೇಷೇ ಸಮಧಿಸ್ಥಿತಾ ಪುರಾ ।।
ಯದ್ರೂಪಕರ್ಮಾಣಿ ಜಡಾಸ್ತ್ರಯೋಽಪಿ ।
ದೇವಾಸ್ತು ದೇವ್ಯಃ ಪ್ರಕೃತಿಂ ನತೋಽಸ್ಮಿತಾಮ್ ।।೨।।

ಯದ್ಭಕ್ತಿಯುಕ್ತಾಃ ಪುರುಷಾಸ್ತು ನಿತ್ಯಂ ।


ದಾರಿದ್ರ್ಯದುಃಖಾದಿಪರಾಭವಾದೀನ್ ।।
ನ ಪ್ರಾಪ್ನುವಂತ್ಯೇವ ಹಿ ಭಕ್ತವತ್ಸಲಾತ್ ।

www.purnapramati.in
ಸದೈವ ಮೂಲಪ್ರಕೃತಿಂ ನತೋಽಸ್ಮಿತಾಮ್ ।।೩।।

।। ಇತಿ ಶ್ರೀಸ್ಕಂದಪುರಾಣೇ ದಾರಿದ್ರ್ಯನಾಶನ ಲಕ್ಷ್ಮೀ ಸ್ತೋತ್ರಮ್ ।।

ಆಧಾರ
ಪಂಚರಾತ್ರಾಗಮೋಕ್ತ ಧನುರ್ಮಾಸಮಹಾತ್ಮೆ

www.purnapramati.in

You might also like