You are on page 1of 7

।। श्रीः ।।

ದೀಪಾವಳಿ

ಹಕ್ಕಿಯ ಹೆಗಲೇರಿ ಬಂದವಗೆ…


ನೋಡಕ್ಕ ಮನಸೋತೆ ನಾನವಗೆ…

ಸನಾತನ ಭಾರತೀಯರ ಅತ್ಯಂತ ಜನಪ್ರಿಯ ಪರ್ವವೆಂದರೆ ಅದು "ದೀಪಾವಳಿ". ಭಾರತದ ಎಲ್ಲ ರಾಜ್ಯ ನಗರಗಳಲ್ಲಿ
ಸಂಭ್ರಮ, ಸಡಗರಗಳಿಂದ ಆಚರಿಸುವ ರಾಷ್ಟ್ರೀಯ ಹಬ್ಬ. ಆಶ್ವಯುಜ ಕೃಷ್ಣ ದ್ವಾದಶಿಯಂದು ಆರಂಭಿಸಿ ಬಲಿಪಾಡ್ಯದ ತನಕ
ಪ್ರತಿದಿನ ಸಾಯಂಕಾಲ ದೇವರಿಗೆ ದೀಪಮಾಲೆಯನ್ನು ಸಮರ್ಪಿಸಬೇಕು. ಆದ್ದರಿಂದ ಇದಕ್ಕೆ ದೀಪಾವಲೀ ಎಂದು ಹೆಸರು. ದೀಪ-
ಆವಲೀ ಎಂದರೆ ಸಾಲು ದೀಪಗಳ ಸಾಲು ದೀಪಗಳ ಮಾಲೆ ಎಂದರ್ಥ. ದೇವರಿಗೆ ಸಮರ್ಪಿಸುವ ಒಂದು ವಿಶೇಷ ಉಪಚಾರ
"ಭಕ್ತ್ಯಾ ದೀಪಂ ಪ್ರಯಚ್ಛಾಮಿ" ಎಂದು ಭಕ್ತಿಯಿಂದ ದೀಪವನ್ನು ಸಮರ್ಪಿಸಬೇಕು. ಈ ಹಬ್ಬದ ಹಿನ್ನೆಲೆ ಬಹಳ ಸುಂದರ. ಸ್ನಾನದ
ಕೋಣೆಯಿಂದ ಮನೆಯ ಎಲ್ಲ ಪರಿಸರಗಳನ್ನು ಸ್ವಚ್ಛಗೊಳಿಸುವ ಸುಂದರವಾಗಿಸುವ ಪರಿಕಲ್ಪನೆ ಅತ್ಯದ್ಭುತ.

ಈ ಹಬ್ಬವನ್ನು ಹೀಗೆ ಹೆಸರಿಸುವ ರೂಢಿ ಹಲವೆಡೆ ಇದೆ :-


● ಗಂಗಾಪೂಜೆ(ನೀರುತುಂಬುವ ಹಬ್ಬ)
● ನರಕಚತುರ್ದಶೀ
● ಲಕ್ಷ್ಮೀ ಪೂಜೆ
● ಬಲಿಪಾಡ್ಯ
● ಭಗಿನೀತೃತಿಯಾ
● ಅಮ್ಮನ ಚೌತಿ
● ಕಡೆ ಪಂಚಮಿ

ಯಮದೀಪ- ನೀರು ತುಂಬುವ ಹಬ್ಬ

ಆಶ್ವೀನ ಕೃಷ್ಣ ತ್ರಯೋದಶೀ ನೀರು ತುಂಬುವ ಹಬ್ಬ, ಇಂದು ಸಾಯಂಕಾಲ ಸೂರ್ಯಾಸ್ತವಾದೊಡನೆ ಮನೆಯ ಹೊರಗೆ
ದಕ್ಷಿಣಾಭಿಮುಖವಾಗಿ ಎಳ್ಳೆಣ್ಣೆಯಿಂದ ಯಮದೀಪವನ್ನು ಬೆಳಗಿಸುವುದರಿಂದ ಅಪಮೃತ್ಯು ಪರಿಹಾರವಾಗುವುದು . ಕಂಚಿನ ದೀಪ,
ಬಾಳೆದಿಂಡಿನ ದೀಪ, ಮಣ್ಣಿನ ದೊಡ್ಡ ಹಣತೆಯಲ್ಲಿ ದೀಪ ಹಚ್ಚಿ ಗಂಧ ಪುಷ್ಪ ಮಾಲೆಗಳಿಂದ ಅಲಂಕರಿಸಿ ಪ್ರಾರ್ಥಿಸಬೇಕು.

ಯಮದೀಪ ದಾನ ಸಂಕಲ್ಪ

ಈ ದಿನ ಸಂಜೆ ದೇಶ,ಕಾಲಾದಿಗಳನ್ನುಚ್ಚರಿಸಿ, 'ಆಶ್ವೀನ ಕೃಷ್ಣ ತ್ರಯೋದಶ್ಯಾಂ


ಶುಭತಿಥೌ ಸಾಯಂಕಾಲೇ ಯಮಾಂತರ್ಗತ ಶ್ರೀಲಕ್ಷ್ಮೀನೃಸಿಂಹಾತ್ಮಕ ಕಾರ್ತಿಕ
ದಾಮೋದರ ಪ್ರೇರಣಯಾ ಕಾರ್ತಿಕ ದಾಮೋದರ ಪ್ರೀತ್ಯರ್ಥಂ
ಅಪಮೃತ್ಯುಬಾಧಾದಿಸಮಸ್ತಪೀಡಾಪರಿಹಾರಾರ್ಥಂ ದೀರ್ಘಾಯುರಾರೋಗ್ಯಸಿದ್ಧ್ಯರ್ಥಂ

www.purnapramati.in
ಯಮದೀಪದಾನಾಖ್ಯಂ ಕರ್ಮ ಕರಿಷ್ಯೇ ' ಎಂದು ಸಂಕಲ್ಪಿಸಿ ದಕ್ಷಿಣಾಭಿಮುಖವಾಗಿ ದೀಪವನ್ನು ಹಚ್ಚಬೇಕು.

ಪ್ರಾರ್ಥನಾಮಂತ್ರ

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಲಾಯುತ: ।


ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜ: ಪ್ರೀಯತಾಂ ಮಮ ।।
- ಸ್ಕಾಂದ ಪುರಾಣ
ಎಂದು ಪ್ರಾರ್ಥಿಸಿ ದೀಪವನ್ನು ಎತ್ತರದಲ್ಲಿ ದಕ್ಷಿಣಾಭಿಮುಖವಾಗಿ ಇಟ್ಟು ದಕ್ಷಿಣಕ್ಕೆ ಮುಖ ಮಾಡಿ ಯಮನಿಗೆ ವಂದಿಸಬೇಕು.

ಗಂಗಾಪೂಜೆ

ಯಮದೀಪದಾನದ ನಂತರ ವಿಷ್ಣುಪೂಜೆಯ ನಂತರ


ಗಂಗಾಪೂಜೆಯನ್ನು ಮಾಡಬೇಕು. ಸ್ನಾನದ ಕೋಣೆಯನ್ನು, ಹಂಡೆ,
(ಬಿಸಿನೀರಿನ ಭಾಂಡ ಒಲೆ) ಯನ್ನು ತೊಳೆದು ಸೆಗಣಿಯಿಂದ ಸಾರಿಸಿ
ಕೆಮ್ಮಣ್ಣು,ಸುಣ್ಣದಿಂದ, ತೋರಣ ಪುಷ್ಪಮಾಲೆಗಳಿಂದ ಅಲಂಕರಿಸಿ
ಒಲೆಯ ಮೇಲಿಟ್ಟು ನೀರು ತುಂಬಬೇಕು.
ದೇವರಕೋಣೆಯಲ್ಲಿ ದೇವರ ಮುಂದೆ ರಂಗೋಲಿ ಬರೆದು ಮಣೆಯ
ಮೇಲೆ ಅದರಲ್ಲಿ ಅಕ್ಕಿಯನ್ನು ಹರವಿ ಮೈಮೇಲೆ ನೀರಿನ ಕಲಶವನ್ನಿಟ್ಟು
(ಗಂಗಾ ಕಲಶದಲ್ಲಿ ನಾಣ್ಯವನ್ನು ಹಾಕಬೇಕು). ಆ ಜಲದಲ್ಲಿ ಗಂಗಾಜನಕ
ತ್ರಿವಿಕ್ರಮನನ್ನು ಗಂಗಾದಿ ತೀರ್ಥಗಳನ್ನು ಆವಾಹಿಸಿ ಪೂಜಿಸಬೇಕು.
ಅಪೂಪ ನಿವೇದನೆಯನ್ನು ಮಾಡಬೇಕು. ಬಿಸಿನೀರಿನ ಹಂಡೆಯನ್ನು
ಪೂಜಿಸಬೇಕು.

ಪಾರಾಯಣ

ಗಂಗೇ ಚ ಯಮುನೆ ……….


ನಂದಿನೀ ನಲಿನೀ ಸೀತಾ…….

ಭಾಗೀರಥೀದೇವಿ
ಗಂಗೆ ಭಾಗೀರಥೀ

ಪೂಜಾನಂತರ ಕಲಶದಲ್ಲಿರುವ ನೀರನ್ನು ಬಿಸಿನೀರಿನ ಭಾಂಡಕ್ಕೆ ಹಾಕಿಕೊಂಡು ನರಕ ಚತುರ್ದಶೀ ಸ್ನಾನಕ್ಕೆ


ಉಪಯೋಗಿಸಬೇಕು.

ನರಕಚತುರ್ದಶೀ

ಹಿನ್ನೆಲೆ

ಶ್ರೀಕೃಷ್ಣನು ಸತ್ಯಭಾಮೆಯೊಡಗೂಡಿ ಆಶ್ವೀನ ಕೃಷ್ಣ


ಚತುರ್ದಶೀಯಂದು ನರಕಾಸುರನನ್ನು ಸಂಹರಿಸಿ ನರಕನ ಅರಮನೆಯಲ್ಲಿ
ಬಂಧಿಗಳಾಗಿದ್ದ 16,100 ಮಂದಿ ರಾಜಕುಮಾರಿಯರನ್ನು ಬಿಡುಗಡೆಗೊಳಿಸಿ
ಅನುಗ್ರಹಿಸಿದ ಪರ್ವದಿನ. ದೇಶದ ಸಮಗ್ರ ಜನತೆ ಒಗ್ಗೂಡಿ ಸಂಭ್ರಮದಿಂದ
ಉತ್ಸವವನ್ನು ಆಚರಿಸಿತು. ಅಭ್ಯಂಗಸ್ನಾನ ಮಾಡಿ ನವವಸ್ತ್ರವನ್ನು ಧರಿಸಿ
ಅಲಂಕೃತಗೊಂಡಿತು. ಸತ್ಯಭಾಮಾ,ರುಗ್ಮಿಣಿಯರು ಶ್ರೀಕೃಷ್ಣನಿಗೆ ಅಭ್ಯಂಗವನ್ನು

www.purnapramati.in
ಮಾಡಿಸಿದರು. ಇದರ ಸ್ಮರಣೆಗಾಗಿ ಈಗಲೂ ಕೂಡ ಈ ದಿನದಲ್ಲಿ ಮನೆ ಮಂದಿಯೆಲ್ಲ ಸೇರಿ ಸಂತಸದಿಂದ ಅಭ್ಯಂಗವನ್ನು
ಮಾಡುತ್ತಾರೆ. ಈ ದಿನ ಅಭ್ಯಂಗವನ್ನು ಮಾಡಲೇಬೇಕು ಎಂದು ಶಾಸ್ತ್ರ ಹೇಳುತ್ತದೆ.

ಆಚರಣೆ

ಪ್ರಾತ: 4.30 ರ ಅರುಣೋದಯ ಕಾಲದಲ್ಲಿ ಎದ್ದು ಕೈಕಾಲು ಮುಖ ತೊಳೆದು ಮಂತ್ರಸ್ನಾನದಿಂದ ಶುದ್ಧರಾಗಿ
ವಸ್ತ್ರಾಂತರ ಮಾಡಿ (ಹೊಸ ಬಟ್ಟೆ ಧರಿಸುವ ಸಂಪ್ರದಾಯವೂ ಹಲವೆಡೆ ಇದೆ) ದೇವರ ಮುಂದೆ ಕುಳಿತು ಸಂಕಲ್ಪ ಮಾಡಬೇಕು.

ಸಂಕಲ್ಪ
……ಚತುರ್ದಶ್ಯಾಂ ಶುಭತಿಥೌ ಚಂದ್ರೋದಯಕಾಲೇ ನರಕಾಂತಕ ಶ್ರೀಗೋಪಾಲಕೃಷ್ಣ ಪ್ರೇರಣಯಾ ಶ್ರೀಗೋಪಾಲಕೃಷ್ಣ
ಪ್ರೀತ್ಯರ್ಥಂ ಸಪರಿವಾರಾಯ ಶ್ರೀಗೋಪಾಲಕೃಷ್ಣಾಯ ಸುಗಂಧಿತೈಲಾಭ್ಯಂಗಸಮರ್ಪಣಪೂಜಾಂ ಕರಿಷ್ಯೇ.

ಎಳ್ಳೆಣ್ಣೆ,ಭೃಂಗಾಮಲಕ ತೈಲ, ಸುಗಂಧದೆಣ್ಣೆ, ಸೀಗೆಪುಡಿ, ಕಡಲೆಹಿಟ್ಟು, ಬಿಸಿನೀರು,ಎಲ್ಲ ಅಭ್ಯಂಗ ಸಾಮಗ್ರಿಗಳನ್ನು ದೇವರ


ಮುಂದೆ ಇಟ್ಟು ನಿವೇದಿಸಿ ಕೃಷ್ಣಾಷ್ಟೋತ್ತರವನ್ನು ಪಠಿಸಿ ಜಲದಲ್ಲಿ ಗಂಗೆಯನ್ನು, ತೈಲದಲ್ಲಿ ಲಕ್ಷ್ಮಿಯನ್ನು ಧ್ಯಾನಿಸಿ
ಶಂಖ,ತಾಳ,ಘಂಟೆಗಳ ನಿನಾದದಿಂದ ಮಂಗಳಾರತಿ ಮಾಡಬೇಕು. ನಂತರ…

ಎಣ್ಣೆಶಾಸ್ತ್ರ
ಗುರುಗಳು ಇದ್ದಲ್ಲಿ ಗುರುಗಳ ಬಳಿ ಎಣ್ಣೆ ಶಾಸ್ತ್ರ
ಮಾಡಿಸಿಕೊಂಡು ನಂತರ ಮನೆಯಲ್ಲಿ ಶಾಸ್ತ್ರ ಮಾಡಿಸಿಕೊಳ್ಳಬೇಕು .
ಮನೆಯ ಗೃಹಿಣಿ ಎಣ್ಣೆಶಾಸ್ತ್ರ ಮಾಡಬೇಕು. ಮನೆಯ ಹಿರಿಯರಿಂದ
ಆರಂಭಿಸಿ ಪುಟ್ಟ ಮಕ್ಕಳವರೆಗೆ ಎಲ್ಲರಿಗೂ 7 ಗರಿಕೆಗಳನ್ನು ಹಿಡಿದು
ಭಗವಂತನಿಗೆ ಸಮರ್ಪಿಸಿದ ಸುಗಂಧಿತ ಎಣ್ಣೆಯನ್ನು ಭಗವಂತನ
ಸ್ಮರಣೆಯೊಂದಿಗೆ, ದಾಸರಪದಗಳಿಂದ, ಸಾಂಪ್ರದಾಯಿಕ ಹಾಡುಗಳನ್ನು
ಹೇಳುತ್ತಾ ಭೂಮಿಗೆ ಗರಿಕೆ 7 ಬಾರಿ ಸ್ಪರ್ಶಿಸಿ 3 ಬಾರಿ ನೆತ್ತಿಗೆ ಹಚ್ಚಿ
ಎಣ್ಣೆಶಾಸ್ತ್ರ ಮಾಡಬೇಕು.

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚವಿಭೀಷಣಃ।


ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ। ।

ಆಶೀರ್ವಾದದ ಹಾಡು

ಬಣ್ಣಿಸಿ ಗೋಪಿ ಹರಸಿದಳು


ಎಣ್ಣೆಯನೊತ್ತುತ ಯದುಕುಲ ತಿಲಕಗೆ

ಆಯುಷ್ಯವಂತನಾಗು ಅತಿ ಬಲ್ಲಿದನಾಗು/


ಮಾಯದ ಖಳರ ಮರ್ದನನಾಗು//
ರಾಯರ ಪಾಲಿಸು ರಕ್ಕಸರ ಸೋಲಿಸು/
ವಾಯುಸುತಗೆ ನೀನೊಡೆಯನಾಗೆನುತಲಿ //1//

ಧೀರನು ನೀನಾಗು ದಯಾಂಬುಧಿಯಾಗು/


ಆ ರುಕ್ಮಿಣಿಗೆ ನೀನರಸನಾಗು//
ಮಾರನ ಪಿತನಾಗು ಮಧುಸೂದನನಾಗು/
ದ್ವಾರಾವತಿಗೆ ನೀ ಧೊರೆಯಾಗೆನುತಲಿ//2//

www.purnapramati.in
ಆನಂದ ನೀನಾಗು ಅಚ್ಯುತ ನೀನಾಗು/
ದಾನವಾಂತಕನಾಗು ದಯವಾಗು//
ಶ್ರೀನಿವಾಸನಾಗು ಶ್ರೀನಿಧಿ ನೀನಾಗು/
ಜ್ಞಾನಿ ಪುರಂದರವಿಠಲನಾಗೆನುತಲಿ//3//

ವಿಶೇಷ ಸೂಚನೆ

1. ಹಿರಿಯ ಮುತ್ತೈದೆಯರಿಂದ ಶಾಸ್ತ್ರಮಾಡಿಸಿಕೊಳ್ಳಬೇಕು


2. ಎಳ್ಳೆಣ್ಣೆಯನ್ನೇ ಉಪಯೋಗಿಸಬೇಕು
3. ಪೂರ್ವಾಭಿಮುಖವಾಗಿ ಕುಳಿತು ಎಣ್ಣೆಶಾಸ್ತ್ರ ಮಾಡಿಸಿಕೊಳ್ಳಬೇಕು.
4. ಎಣ್ಣೆಶಾಸ್ತ್ರಕ್ಕೆ ಕುಳಿತುಕೊಳ್ಳುವವ ದೇವರಿಗೂ ಹಿರಿಯರಿಗೂ ನಮಸ್ಕರಿಸಿ ಕುಳಿತುಕೊಳ್ಳಬೇಕು
5. ಎಣ್ಣೆಶಾಸ್ತ್ರದ ನಂತರ ನಮಸ್ಕರಿಸುವಂತಿಲ್ಲ
6. ಸ್ನಾನದ ತಕ್ಷಣ ಅಪಾಮಾರ್ಗದ ( ಉತ್ತರಣೆ ಗಿಡದ ) ಬೇರಿನಿಂದ ಕೂಡಿದ ಮಣ್ಣಿನ ಹೆಂಟೆಯನ್ನು…

ಸೀತಾಲೋಷ್ಠಸಮಾಯುಕ್ತ ಸಕಂಟಕದಲಾನ್ವಿತ।
ಹರ ಪಾಪಮಪಾಮಾರ್ಗ ಭ್ರಾಮ್ಯಮಾಣ ಪುನಃಪುನಃ ।।
- - ಭವಿಷ್ಯೋತ್ತರ ಪುರಾಣ

ಹೀಗೆ ಹೇಳಿ ಸ್ನಾನ ಮಾಡಿದವನ ಶಿರಸ್ಸಿಗೆ ಮೂರು ಬಾರಿ ನಿವಾಳಿಸಿ, ನೈಋತ್ಯದಡೆಗೆ ಎಸೆಯಬೇಕು. ಇದರಿಂದ ಪಾಪ
ಪರಿಹಾರವಾಗಿ ದೃಷ್ಟಿ ನಿವಾರಣೆಯಾಗುತ್ತದೆ.

ಅಭ್ಯಂಗದ ನಂತರ ಲಕ್ಷ್ಮೀ ಸಮುತ್ಥಾನ ಪೂಜೆಯನ್ನು ಮಾಡಬೇಕು.


ಆಷಾಢ ಮಾಸದ ಶಯನೀ ಏಕಾದಶೀಯಂದು ನಾರಾಯಣನೊಡನೆ ಮಲಗಿದ್ದ ಮಹಾಲಕ್ಷ್ಮಿಯು ಆಶ್ವೀನ ದ್ವಾದಶೀಯಂದು
ಎಚ್ಚರಗೊಂಡು ಚತುರ್ದಶಿಯಂದು ಎದ್ದೇಳುತ್ತಾಳೆ. ಇನ್ನು 13 ದಿನಕ್ಕೆ ಭಗವಂತನ ಉತ್ಥಾನ. ಗೃಹಿಣಿಯ ಕರ್ತವ್ಯವನ್ನು
ತೋರಿಸಿಕೊಟ್ಟ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಬೇಕು.

ಉಲ್ಕಾ ಪ್ರದರ್ಶನ

ಇಂದು ಸಂಜೆ ಅಥವಾ ಅಮಾವಾಸ್ಯೆಯ ರಾತ್ರಿ ಬೆಂಕಿಯ ಕೊಳ್ಳಿಯನ್ನು ದಕ್ಷಿಣ ಮುಖವಾಗಿ ಪ್ರದರ್ಶಿಸುವ ಉಲ್ಕಾ
ಪ್ರದರ್ಶನವೆಂಬ ವಿಧಿ ಧರ್ಮಶಾಸ್ತ್ರಗಳಲ್ಲಿದೆ. "ಉಲ್ಕಾಹಸ್ತಾ: ನರಾ: ಕುರ್ಯು: ಪಿತೃಣಾಂ ಮಾರ್ಗದರ್ಶನಂ" ಪಿತೃಗಳ
ಪ್ರೀತಿಗಾಗಿ ಇದನ್ನು ಮಾಡಬೇಕು.

ಲಕ್ಷ್ಮಿ ಪೂಜೆ - ಅಲಕ್ಷ್ಮೀ ನಿಸ್ಸರಣ

ಅಮಾವಾಸ್ಯೆಯ ದಿನದಂದು ಶ್ರೀ ಮಹಾಲಕ್ಷ್ಮಿದೇವಿಯನ್ನು ಎಲ್ಲಾ


ಆಭರಣಗಳನ್ನು ಧನ ಧಾನ್ಯಗಳನ್ನು ಕಲಶದಲ್ಲಿ ಹಾಕಿ ಷೋಡಶೋಪಚಾರಗಳಿಂದ
ಸ್ತೋತ್ರ ಪಾರಾಯಣ ಭಜನೆಗಳಿಂದ ಪೂಜಿಸಬೇಕು.

ಹರಿವಾಣದಲ್ಲಿ ಧಾನ್ಯದ ಮೇಲೆ ೫ ದೀಪಗಳನ್ನು ಹಚ್ಚಿ ಮನೆಯ ಇತರ


ಎಲ್ಲೆಡೆಯೂ ದೀಪ ಹಚ್ಚಿಟ್ಟು ಎಲ್ಲಾ ಕಡೆಗೂ ಧಾನ್ಯದ ದೀಪವನ್ನು ತೋರಿಸಿ, ಪುಷ್ಪ
ಸಮರ್ಪಣೆ ಮಾಡಬೇಕು. ( ಚಿರಕಾಲಂ ಲಕ್ಷ್ಮೀನಿವಾಸ ಸಿದ್ಧ್ಯರ್ಥಂ ಅಲಕ್ಷ್ಮೀ ನಿಸ್ಸರಣಪೂರ್ವಕಂ ನೀರಾಜನಂ ಕರಿಷ್ಯೇ ಎಂದು
ಹೇಳಿ ದೀಪವನ್ನು ಎಲ್ಲೆಡೆ ತೋರಿಸಬೇಕು)

www.purnapramati.in
ಬಲಿಪಾಡ್ಯ

ಬಲಿರಾಜನು ಪ್ರಹ್ಲಾದನ ಮೊಮ್ಮಗ, ಮುಂದಿನ ಮನ್ವಂತರದ ಇಂದ್ರ


ಆದ್ದರಿಂದಲೇ ಬಲೀಂದ್ರ ಇಂದು ಇವನನ್ನು ಪೂಜಿಸಬೇಕೆಂಬುದು ತ್ರಿವಿಕ್ರಮ ವಾಮನನ
ಆದೇಶ. ಇದು ಭಗವದ್ಭಕ್ತನಾದ ಬಲೀಂದ್ರನಿಗೆ ಭಗವಂತ ನೀಡಿದ ವರ. ಮನೆಯ
ಮುಂದೆ ರಂಗೋಲಿಯಿಂದ ಬಲಿ ಪ್ರತಿಮೆಯನ್ನು ಬರೆದು ಅಥವಾ ಮಂಡಲದಲ್ಲಿ
ಸ್ವಸ್ತಿಕವನ್ನಿಟ್ಟು ಬಲೀಂದ್ರಾಂತರ್ಗತ ವಾಮನನನ್ನು ಧ್ಯಾನಿಸಿ ಪೂಜಿಸಬೇಕು.
ಬಲಿಪಾಡ್ಯದಂದು ದಾನಗಳನ್ನು ಕೊಟ್ಟಷ್ಟು ಅದು ಅಕ್ಷಯವಾಗುತ್ತದೆ ಭಗವಂತನಿಗೆ
ಸಂತೋಷವನ್ನು ಉಂಟುಮಾಡುತ್ತದೆ

ಬಲಿಮುದ್ದಿಶ್ಯ ದೀಯಂತೇ ಬಲಯಃ ಕುರುನಂದನ ।


ಯಾನಿ ತಾನ್ಯಕ್ಷಯಾಣ್ಯಾಯುಃ ಮಯೈವಂ ಸಂಪ್ರದರ್ಶಿತಂ ।।
- ಭವಿಷ್ಯೊತ್ತರಪುರಾಣ

ಬಲಿಪಾಡ್ಯದಂದು ಉತ್ತರ ಕರ್ನಾಟಕದ ಕಡೆ ಪಗಡೆಯಾಟ ಆಡುವ ಸಂಪ್ರದಾಯವಿದೆ.

ಸಂಕಲ್ಪ

ಸರ್ವಸಂಪದಭಿವೃಧ್ಯರ್ಥಂ ವೃಷ್ಟಿ ಪುಷ್ಟ್ಯಾದಿ ಸಿದ್ಧ್ಯರ್ಥಂ ಬಲೀಂದ್ರಾಂತರ್ಗತ ಶ್ರೀ ವಾಮನ ಪೂಜಾಂ ಕರಿಷ್ಯೇ.

ಧ್ಯಾಯೇದ್ ಬಲೀಂದ್ರಂ ಜಗದೇಕನಾಥಂ


ಮುಕ್ತಾಫಲಾಲಂಕೃತಸರ್ವಗಾತ್ರಮ್ ।
ನಕ್ಷತ್ರನಾಥಂ ಭುವನಾರ್ಘವಸ್ತ್ರಮ್
ಪ್ರಿಯಂ ಮುರಾರೇ: ಕರವಾಲಹಸ್ತಮ್ ।।

ಬಲೀಂದ್ರ ಪ್ರಾರ್ಥನೆ

ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ ।


ಇಂದ್ರಸ್ಥಾನೇ ಸಮಾಸೀನ ವಿಷ್ಣುಸಾನಿಧ್ಯದೋ ಭವ ।।

ಬಲೀಂದ್ರಾಂತರ್ಗತ ಶ್ರೀವಾಮನ: ಪ್ರೀಯತಾಮ್.

ತುಲಸೀಸಂಕೀರ್ತನೆ

ಬಲಿಪಾಡ್ಯದಿಂದ ಆರಂಭಿಸಿ ಉತ್ಥಾನ ದ್ವಾದಶಿಯವರೆಗೆ ತುಳಸಿ


ಸಂಕೀರ್ತನೆಯನ್ನು ಮಾಡಬೇಕು. ತುಳಸೀ ಕಟ್ಟೆಯ ಸುತ್ತ ದೀಪಗಳನ್ನು
ಬೆಳಗಿಸಿ ಪ್ರದಕ್ಷಿಣಾಕಾರವಾಗಿ ಹಾಡು ಹಾಡುತ್ತಾ, ಸ್ತೋತ್ರ ಹೇಳುತ್ತಾ,
ತಾಳತಟ್ಟುತ್ತಾ, ಮನೆ ಮಂದಿ ಎಲ್ಲರೂ ಸೇರಿ ನರ್ತನವನ್ನು ಮಾಡುವ ವಿಶೇಷ
ಸಂಪ್ರದಾಯ ಹಲವಾರು ಕಡೆ ಇದೆ. ಇದನ್ನು ನಾವು ನೀವು ರೂಢಿಸಿಕೊಂಡು
ಆಚರಿಸೋಣ. ಕಾರ್ತಿಕ ಮಾಸದಲ್ಲಿ ತುಳಸಿಯಲ್ಲಿ ವಿಶೇಷವಾಗಿ ಮಹಾಲಕ್ಷ್ಮಿಯ ಸಾನಿಧ್ಯ ಇರುತ್ತದೆ. ಉತ್ಥಾನ ದ್ವಾದಶಿಯವರೆಗೆ
ಈ ಆಚರಣೆ ಮುಂದುವರಿಯಬೇಕು.

ಗೋಪೂಜೆ

www.purnapramati.in
ಗೋವುಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಅವುಗಳಿಗೆ ಅರಿಷಿಣ, ಕುಂಕುಮ, ಸುಣ್ಣ, ಮೊದಲಾದವುಗಳಿಂದ ಅಲಂಕರಿಸಿ,
ತಿನ್ನುವುದಕ್ಕೆ ಆಹಾರವನ್ನಿತ್ತು ಮಂಗಳಾರತಿ ಮಾಡಬೇಕು.

ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಾಯ ಚ ।


ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ।।

ಗವಾಂತರ್ಗತ ಗೋಪಾಲಕೃಷ್ಣನನ್ನು ಅರ್ಚಿಸಿ, ಪೂಜಿಸಿ,


ಪ್ರಾರ್ಥಿಸಿ, ನಮಸ್ಕರಿಸಬೇಕು.

( ಗೋಪೂಜೆಗೆ ಅವಕಾಶವಿಲ್ಲದ ಸ್ಥಿತಿಯಲ್ಲಿ ಗೋಗ್ರಾಸಕ್ಕಾಗಿ


ಒಂದಿಷ್ಟು ಧನವನ್ನು ತೆಗೆದಿಟ್ಟು ಪ್ರಾರ್ಥಿಸಬೇಕು )

ಸುರಭಿರ್ವೈಷ್ಣವೀ ಮಾತಾ ನಿತ್ಯಂ ವಿಷ್ಣುಪದಾಶ್ರಿತಾ ।


ಗೋಗ್ರಾಸಸ್ತು ಮಯಾದ ತ್ತಃ ಸುರಭೇ ಪ್ರತಿಗೃಹ್ಯತಾಮ್ ।।
ಗವಾಮಂಗೇಶು ತಿಷ್ಠಂತಿ ಭುವನಾನಿ ಚತುರ್ದಶ ।
ಯಸ್ಮಾತ್ ತಸ್ಮಾತ್ ಶುಭಂ ಮೇ ಸ್ಯಾತ್ ಇಹ ಲೋಕೇ ಪರತ್ರ ಚ ।।

ಗೋವರ್ಧನಪೂಜೆ

ಭಗವಾನ್ ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ಬಲಿಪಾಡ್ಯದಂದು


ಗೋವರ್ಧನ ಗಿರಿಯನ್ನು ಎತ್ತಿದ ಸ್ಮರಣೆಗಾಗಿ ಇಂದು ಗೋವರ್ಧನ
ಪೂಜೆಯನ್ನು ಮಾಡಬೇಕು. ಗೋಮಯದಲ್ಲಿ ಗೋವರ್ಧನದ
ಆಕಾರವನ್ನು ಮಾಡಿ ಅದನ್ನು ಮುಖ್ಯದ್ವಾರದ ಹೊಸ್ತಿಲಲ್ಲಿಟ್ಟು ಪೂಜಿಸಿ
ಪ್ರಾರ್ಥನೆ ಮಾಡಬೇಕು.

ಗೋವರ್ಧನಾಚಲಾಧಾರ ಗೋಕುಲತ್ರಾಣಕಾರಕ ।
ಬಹುಬಾಹುಕೃತಚ್ಛಾಯ ಗವಾಮ್ ಕೋಟಿಪ್ರದೋ ಭವ ।।

ಯಮದ್ವೀತೀಯ

ಕಾರ್ತಿಕ ಶುದ್ಧ ದ್ವಿತೀಯ ದಿನದಂದು ಯಮದೇವರು ತಾನಾಗಿಯೇ ತನ್ನ ತಂಗಿಯಾದ ಯಮುನೆಯ ಮನೆಗೆ ಹೋಗಿ
ಔತಣವನ್ನು ಸ್ವೀಕರಿಸಿ, ತಂಗಿ ಯಮುನೆಗೆ ಉಡುಗೊರೆಯನಿತ್ತು ಬಂದರಂತೆ. ಆದ್ದರಿಂದ ಅಂದು ಮಧ್ಯಾಹ್ನ ಪುರುಷರು
ಸೋದರಿಯರ ಮನೆಗೆ ಹೋಗಿ ಅವರ ಕೈಯಿಂದ ಪ್ರೀತಿಯ ಭೋಜನವನ್ನು ಔತಣವನ್ನು ಸ್ವೀಕರಿಸಬೇಕು. ಸೋದರಿಗೆ ಪ್ರೀತಿಯ
ಉಡುಗೊರೆಯನ್ನು ಕೊಟ್ಟು ಗೌರವಿಸಬೇಕು.

ಯಮನಿಗೂ, ಯಮುನಾ ದೇವಿಗೂ, ಚಿತ್ರಗುಪ್ತನಿಗೂ ಇಬ್ಬರು ಅರ್ಘ್ಯವನ್ನು ಅರ್ಪಿಸಿ ಪೂಜೆ ಸಲ್ಲಿಸಬೇಕು -

ಯಮಂ ಚ ಯಮುನಾಂ ಚೈವ ಚಿತ್ರಗುಪ್ತಂ ಚ ಪೂಜಯೇತ್।


ಅರ್ಘ್ಯಶ್ಚಾತ್ರ ಪ್ರದಾತವ್ಯೋ ಯಮಾಯ ಸಹಜ ದ್ವಯೈ: ।।

ಸೋದರಿಯರು ಇಲ್ಲದಿದ್ದ ಪಕ್ಷದಲ್ಲಿ ಸೋದರಿಯನ್ನು ಹೋಲುವ ಸಂಬಂಧವುಳ್ಳ

www.purnapramati.in
ಚಿಕ್ಕಪ್ಪನ ಮಗಳು ದೊಡ್ಡಪ್ಪನ ಮಗಳು ಸ್ನೇಹಿತನ ಮಗಳು ಮುಂತಾದವರ ಮನೆಯಲ್ಲಿ ಪ್ರೀತಿಯ ಭೋಜನವನ್ನು
ಸ್ವೀಕರಿಸಬೇಕು.

ಭಗಿನಿ ತೃತೀಯ

ಇದು ಸಂಪ್ರದಾಯವಾಗಿ ಆಚರಣೆಗೆ ಬಂದ ಪದ್ಧತಿ. ಇಂದು ಅಕ್ಕ ತಂಗಿಯರನ್ನು ಮನೆಗೆ ಕರೆದು ಆತಿಥ್ಯವನ್ನು ನೀಡಬೇಕು.
ಭಾರತದ ಎಲ್ಲಾ ಪರ್ವಗಳು ಸಂಬಂಧವನ್ನು ಗಟ್ಟಿಗೊಳಿಸುವ ನಿಲುವನ್ನು ಹೊಂದಿರುವುದನ್ನು ಇಲ್ಲಿ ಕಾಣಬಹುದು.

ಅಮ್ಮನ ಚೌತಿ

ಮನೆಯ ಶ್ರೇಯಸ್ಸಿಗಾಗಿ ಹಗಲಿರಲು ಬೇಸರವಿಲ್ಲದೆ ಪ್ರೀತಿಯಿಂದ ದುಡಿಯುವ ತಾಯಿಯನ್ನು ಇಂದು ಕೂಡಿಸಿ ಉಪಚರಿಸಬೇಕು.
ಇದು ಹಲವು ಪ್ರಾಂತ್ಯಗಳಲ್ಲಿ ಸಂಪ್ರದಾಯವಾಗಿ ಆಚರಣೆಯಲ್ಲಿದೆ ಹಾಗೂ ಅರ್ಥಗರ್ಭಿತವಾಗಿದೆ.

ಕಡೆಪಂಚಮೀ

ಇಂದು ಮನೆ ಮಂದಿ ಎಲ್ಲರೂ ಸೇರಿ ಒಂದಾಗಿ ಸಂತೋಷದಿಂದ


ಪಗಡೆಯಾಟ, ಚೌಕಾಬಾರಾ ಬಲಿಪಾಡ್ಯದಿಂದ ಪಂಚಮೀವರೆಗೆ 5 ದಿನಗಳು
ಆಡುವ ಸಂಪ್ರದಾಯ ಹಲವೆಡೆ ಇದೆ.

ಪೋಷಕರಿಗೆ ಒಂದು ಸೂಚನೆ:-

ಈ ಹಬ್ಬದ ಪ್ರತಿಯೊಂದು ಕೆಲಸಗಳನ್ನು ನಿಮ್ಮ ಮಕ್ಕಳನ್ನು ಸೇರಿಸಿಕೊಂಡು ಹಬ್ಬದ ಆಚರಣೆಯನ್ನು ನಡೆಸಿ, ಮಕ್ಕಳಿಗೆ ಆಚರಣೆಯ
ಮಹತ್ವವನ್ನು ತಿಳಿಸಿ ಕೊಡಿ. ಆಹಾರ ಪದಾರ್ಥಗಳನ್ನು ಮಕ್ಕಳೊಂದಿಗೆ ಸಿದ್ಧಪಡಿಸಿ. ಇದರಿಂದ ಮಕ್ಕಳಿಗೆ ಪದಾರ್ಥಗಳ ಹಿಂದಿನ
ಶ್ರಮ,ರುಚಿ, ಶುಚಿಯ ಮಹತ್ವ ತಿಳಿಯಲು ಸಹಾಯವಾಗುತ್ತದೆ.
ಪ್ರತಿಯೊಂದು ಮಗು ತಾವು ತಿಳಿದ ವಿಷಯವನ್ನು ಅಧ್ಯಾಪಕರೊಂದಿಗೆ ಹಂಚಿಕೊಳ್ಳುವಂತೆ ಆಗಲಿ.

ಸೂಚನೆ
ಈ ಲೇಖನ ಒಂದು ಮಾದರಿ ಮಾತ್ರ. ನಿಮ್ಮ ಕುಲದ ಸಂಪ್ರದಾಯವನ್ನು ಕುಟುಂಬದ ಹಿರಿಯರಿಂದ ತಿಳಿದು
ಅದರಂತೆ ಆಚರಿಸುವುದು ಬಹಳ ಉತ್ತಮ. ಇದಕ್ಕೆ ಅವಕಾಶ ಇಲ್ಲದ ಪಕ್ಷದಲ್ಲಿ ಈ ಲೇಖನ ಉಪಕಾರಿಯಾದೀತು.

।। ಶ್ರೀಕೃಷ್ಣಾರ್ಪಣಮಸ್ತು ।।

www.purnapramati.in

You might also like