You are on page 1of 5

।। श्रीः ।।

ಹೋಳಿ ಹಬ್ಬಹೋಳಿ ಹುಣ್ಣಿಮೆ

ಚೆಲ್ಲಿದರೋಕುಳಿಯ ಕೃಷ್ಣಯ್ಯನ ಮೇಲೆ ।


ಚೆಲ್ಲಿದರೋಕುಳಿಯ ರಂಗಯ್ಯನ ಮೇಲೆ ।।

ಹೋಳಿ, ಹೋಲಿಕಾ, ಹೋಳಿಕೋತ್ಸವ, ವಸಂತೋತ್ಸವ, ಕಾಮದಹನ, ಕಾಮನಹಬ್ಬ, ಫಾಲ್ಗುನಿಕಾ, ಋತುವಿನ ಹಬ್ಬ


ಎಂಬ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಹಬ್ಬ ಭಾರತದೇಶದ ಎಲ್ಲ ರಾಜ್ಯಗಳಲ್ಲಿಯೂ ಆಚರಿಸಲ್ಪಡುತ್ತದೆ.
ಆಚರಣೆಯ ವಿಧಾನಗಳಲ್ಲಿ ವ್ಯತ್ಯಾಸವಿರುತ್ತದೆಯಾದರೂ ನಮ್ಮ ಭಾರತ ದೇಶದೆಲ್ಲೆಡೆ ಆಚರಣೆಯಾಗುವ ಪರ್ವ.

ಆಚರಣೆ

ಹಬ್ಬದ ಆಚರಣೆಯ ವಿಧಾನಗಳು ಅನೇಕ ಪ್ರಕಾರವಾಗಿವೆ. ಮನೆಯ ಅಂಗಳವನ್ನು ಗುಡಿಸಿ, ಸಾರಿಸಿ ರಂಗವಲ್ಲಿಯಿಂದ
ಅಲಂಕರಿಸಿ ಮಧ್ಯದಲ್ಲಿ ಬಿಳಿಯ ಬಟ್ಟೆಯ ಪೀಠವನ್ನು ಇರಿಸಿ ಅದರ ಮುಂದೆ ಚಿಗುರುಗಳ ಕೂಡಿದ ಕಲಶವನ್ನು ಸ್ಥಾಪಿಸಿ
ಅಕ್ಷತೆಗಳನ್ನು ಅದರಲ್ಲಿ ಸಮರ್ಪಿಸಿ ಶ್ವೇತ ಚಂದನವನ್ನು ಲೇಪಿಸಿ ಅದರ ಮೇಲೆ ಕೆಂಪು ಬಟ್ಟೆಯನ್ನು ಸುತ್ತಿ ಪುಷ್ಪಮಾಲೆಗಳಿಂದ
ಅಲಂಕರಿಸಿ ಪ್ರತಿಷ್ಠೆ ಮಾಡಬೇಕು. ಗಂಧ,ಪುಷ್ಪ, ಧೂಪ,ದೀಪ,ನೈವೇದ್ಯಗಳಿಂದ ಅರ್ಚಿಸಿ ಅರ್ಘ್ಯವನ್ನು ಭಗವಂತನಿಗೆ
ಸಮರ್ಪಿಸಬೇಕು. ಹೀಗೆ ದೇವನನ್ನು ಪೂಜಿಸಿ ಪುರುಷರು ವೇದಮಂತ್ರಗಳನ್ನು ಹೇಳಬೇಕು, ಸುವಾಸಿನಿಯರು ಚಂದನವೃಕ್ಷವನ್ನು
ಪೂಜಿಸಬೇಕು, ಪುಷ್ಪಮಾಲೆ, ಮೊಸರು, ದೂರ್ವೆ, ಅಕ್ಷತೆಗಳನ್ನು ಅದಕ್ಕೆ ಸಮರ್ಪಿಸಿ ನಮಸ್ಕಾರ ಮಾಡಿದರೆ ಆಯಸ್ಸು
ವೃದ್ಧಿಯಾಗುತ್ತದೆ. ಕಾಮದೇವನು ಪ್ರಸನ್ನನಾಗಲಿ ಎಂದು ಯಥಾಶಕ್ತಿ ದಾನಾದಿಗಳನ್ನು ಮಾಡಬೇಕು, ಭೋಜನ ಸಮಯದಲ್ಲಿ
ಮೊದಲು ಪಕ್ವವಾದ ಪಾಯಸಾನ್ನ ಪ್ರಸಾದವನ್ನು ಸ್ವೀಕರಿಸಿ ಆನಂತರ ಭೋಜನ ಮಾಡುವುದು.

ವೃತ್ತೇ ತುಷಾರಸಮಯೇ ಸಿತಪಂಚದಶ್ಯಾ: ।


ಪ್ರಾತರ್ವಸಂತಸಮಯೇ ಸಮುಪಸ್ಥಿತೇ ಚ ।।
ಸಂಪ್ರಾಶ್ಯ ಚೂತಕುಸುಮಂ ಸಹ ಚಂದನೇನ ।
ಸತ್ಯಂ ಹಿ ಪಾರ್ಥ ಸತತಂ ಪುರುಷಸ್ಸುಖೀ ಸ್ಯಾತ್ ।।

ಪಾಡ್ಯದ ದಿನ ಧೂಲಿವಂದನಮ್ ಎಂಬ ಆಚರಣೆ ಮಾಡುವ ನಂತರ ಚಂದನದೊಡನೆ ಮಾವಿನ ಚಿಗುರುಗಳನ್ನು ಸ್ವೀಕರಿಸುವ
ಸಂಪ್ರದಾಯವೂ ಇದೆ.

ಆಮ್ರ ಕುಸುಮ ಪ್ರಾಶನ ಮಂತ್ರ -

www.purnapramati.in
ಚೂತಮಗ್ರ್ಯಂ ವಸಂತಸ್ಯ ಮಾಕಂದಂ ಕುಸುಮಂ ತವ ।
ಸಚಂದನಂ ಪಿಬಾಮ್ಯದ್ಯ ಸರ್ವಕಾಮಾರ್ಥಸಿದ್ಧಯೇ ।।

ಸೌದೆಯ ರಾಶಿಯನ್ನು ಸುಡುವುದು, ಗುಲಾಬಿ ಬಣ್ಣದ ನೀರನ್ನು ಎರಚುವುದು, ಸಂತೋಷ, ಸಂಭ್ರಮ, ಕುಣಿದಾಟ
ಇತ್ಯಾದಿಗಳು ಸಾಮಾನ್ಯವಾಗಿ ಎಲ್ಲ ಕಡೆ ಕಂಡು ಬರುತ್ತವೆ. ವಂಗ ದೇಶದಲ್ಲಿ (ಬಂಗಾಳ ದೇಶ) ಶ್ರೀಕೃಷ್ಣನಿಗೆ ಡೋಲೋತ್ಸವವನ್ನು
ಮಾಡುವ ರೂಢಿಯಿದೆ. ಹೋಳಿಗೆಯನ್ನು ತಯಾರಿಸಿ ಭಗವಂತನಿಗೆ ನಿವೇದಿಸಿ ಪ್ರಸಾದ ರೂಪದಲ್ಲಿ ಸ್ವೀಕರಿಸುವ ಹಬ್ಬವಾಗಿದೆ.

ಕಾಮ ಎಂದರೆ ಮನ್ಮಥ. ಈ ಮನ್ಮಥನೇ ಕಾರ್ತಿಕೇಯ, ಷಣ್ಮುಖ, ದೇವತೆಗಳ ಸೇನಾಧಿಪತಿ, ಎಂದು ಹೆಸರಿನಿಂದ
ರುದ್ರದೇವರಲ್ಲಿ ಜನಿಸುತ್ತಾರೆ. ಇಂತಹ ಕಾಮನ ಅನುಗ್ರಹದಿಂದ ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ಅಗ್ನಿಯಲ್ಲಿ ಸುಡುವ
ಪ್ರಕ್ರಿಯೆಯನ್ನು ನಾವು ಮಾಡಬೇಕು. ನಮ್ಮಲ್ಲಿ ಮನೆ ಮಾಡಿರುವ ಕಾಮನೆಗಳನ್ನು ನಿಗ್ರಹಿಸು ಎಂದು ಕಾಮದೇವನನ್ನು
ಷೋಡಶೋಪಚಾರಗಳಿಂದ ಪೂಜಿಸಿ ಬಳಿ ಪ್ರಾರ್ಥನೆ ಮಾಡಬೇಕು.

ಹೋಲಿ ಹಬ್ಬದ ಕಥೆಗಳು

1. ತಪಸ್ಸಿನ ಸಮಾಧಿಯಲ್ಲಿ ಮಗ್ನನಾಗಿದ್ದ ರುದ್ರದೇವರ ಮನಸ್ಸನ್ನು ಕಲಕಲು ಪ್ರಯತ್ನಿಸಿದ ಆ ಕಾಮದೇವ. ಆಗ ಆತನ


ಲಲಾಟದಿಂದ ಬಂದ ಅಗ್ನಿಯಲ್ಲಿ ಕಾಮದೇವನು ಸುಟ್ಟು ಬೂದಿಯಾದ ಕಥೆ ಎಲ್ಲ ಪುರಾಣೇತಿಹಾಸಗಳಲ್ಲೂ ಕಂಡು
ಬರುತ್ತದೆ. ಆ ಕಾಮದಹನದ ಸ್ಮ್ರತಿಗಾಗಿ ಅಂದಿನ ದಿನ ಬೆಂಕಿಯನ್ನು ಸುಡುವ ಪದ್ಧತಿಯುಳ್ಳ ಹೋಳಿ ಹಬ್ಬದ ಆಚರಣೆ
ನಡೆಯುತ್ತದೆ.

2. ಹೋಳಿಕಾ ಎಂಬುವವಳು ಹಿರಣ್ಯಾಕ್ಷ ಹಿರಣ್ಯಕಶಿಪುಗಳ ಸೋದರಿ, ಮಹಾ ಮಾಯಾವಿನಿ ಹಾಗೂ ಅಗ್ನಿ ಸಿದ್ಧಿಯುಳ್ಳವಳು.
ದೈತ್ಯರಾಜ ಹಿರಣ್ಯಕಶಿಪುವು ಮಹಾವಿಷ್ಣು ಭಕ್ತನಾಗಿದ್ದ ತನ್ನ ಪುತ್ರ ಪ್ರಹ್ಲಾದನನ್ನು ಸಾಯಿಸಲು ನಾನಾ ಪ್ರಯತ್ನಗಳನ್ನು
ಮಾಡಿದರೂ ಅದು ಸಾಧ್ಯವಾಗಲಿಲ್ಲ, ಆಗ ಆತನು ತನ್ನ ಸಹೋದರಿಗೆ ಹೀಗೆ ಆಜ್ಞೆ ಮಾಡಿದನು:- ನೀನು ಪ್ರಹ್ಲಾದನನ್ನು
ಹಿಡಿದುಕೊಂಡು ಉರಿಯುತ್ತಿರುವ ಬೆಂಕಿಯಲ್ಲಿ ಕುಳಿತುಕೋ ಆಗ ಪ್ರಹ್ಲಾದ ಸುಟ್ಟುಹೋಗುವನು, ನೀನು ಎಂದಿನಂತೆ
ಅಪಾಯವಿಲ್ಲದೆ ಹೊರಗೆ ಬರುವೆ ಎಂದು. ಅಣ್ಣನ ಆಣತಿಯನ್ನು ಶಿರಸಾವಹಿಸಿ ಹೋಳಿಕೆ ಪ್ರಹ್ಲಾದನನ್ನು ಅಪ್ಪಿ
ತೊಡೆಯಮೇಲೆ ಕೂರಿಸಿಕೊಂಡು ತನ್ನ ಮೇಲೆ ಕಟ್ಟಿಗೆಯ ರಾಶಿಗಳನ್ನು ಹಾಕಿ ಬೆಂಕಿ ಹಚ್ಚಲು ರಾಕ್ಷಸರಿಗೆ ಹೇಳಿದಳು.
ಅದರಂತೆಯೇ ಬೆಂಕಿಯು ಹಚ್ಚಿಸಲ್ಪಡಲು ಪರಿಣಾಮವು ಹೋಳಿಕೆಯು ತಿಳಿದು ಕೊಂಡಿದ್ದಕ್ಕೆ ವಿರುದ್ಧವಾಯಿತು.
ಪ್ರಹ್ಲಾದನು ವಿಷ್ಣುಭಕ್ತಿಯ ಬಲದಿಂದ ಯಾವ ತಾಪಕ್ಕೂ ಒಳಗಾಗದೆ ಸುಖವಾಗಿ ಕುಳಿತಿದ್ದ. ಬೆಂಕಿಯ ಝಳದಿಂದ
ಹೋಳಿಕೆ ಸಂತಪ್ತಳಾಗಿ ಕೂಗುತ್ತಿದ್ದರೂ ರಾಕ್ಷಸರು ತಮ್ಮ ತಪ್ಪುತಿಳುವಳಿಕೆಯಿಂದ ಸಂತೋಷದಿಂದ ಇನ್ನೂ ಹೆಚ್ಚಿನ
ಕಟ್ಟಿಗೆಗಳನ್ನು ಬೆಂಕಿಗೆ ಹಾಕತೊಡಗಿದರು. ಕೊನೆಗೆ ಹೋಳಿಕಾ ರಾಕ್ಷಸಿಯ ಮೂಳೆಗಳು ಉಳಿಯದೆ ಪೂರ್ಣವಾಗಿ
ಸುಟ್ಟುಹೋದಳು. ಪ್ರಹ್ಲಾದನು ಸಂತೋಷದಿಂದ ಬೂದಿಯ ರಾಶಿಯಿಂದ ಹೊರಕ್ಕೆ ಬಂದು ಭಗವಂತನ ಭಜನೆ
ಮಾಡತೊಡಗಿದ. ಹೋಳಿಕಾ ಎಂಬ ದುಷ್ಟ ರಾಕ್ಷಸಿಯ ಸಂಹಾರಗೊಂಡ ಸಂತಸಕ್ಕಾಗಿ ಎಲ್ಲ ದೇವತೆಗಳು ಪಂಚಮಿಯ
ದಿನದಂದು ಬಣ್ಣದ ಓಕುಳಿ ಆಡಿದರೆಂದು ತಿಳಿದು ಬರುತ್ತದೆ. ಹೀಗೆ ಹೋಳಿಕೆಯ ಸಂಹಾರದ ಸ್ಮ್ರತಿಗಾಗಿ ಹೋಳಿ ಹಬ್ಬ
ಮಾಡುವ ಆಚರಣೆ ಬಂದಿದೆ ಎಂಬುದು ಪುರಾಣದ ಕಥೆ.
- ಸ್ಕಾಂದಪುರಾಣ

3. ಸತ್ಯ ಯುಗದಲ್ಲಿದ್ದ ಪೃಥು ರಾಜನ ಕಾಲದಲ್ಲಿ ಶಿಶುಹತ್ಯೆ ಮಾಡುತ್ತಿದ್ದ ಡುಂಢಾ ಎಂಬ ರಾಕ್ಷಸಿಯ ಸಂಹಾರದ
ಸ್ಮರಣೆಗಾಗಿ ಆಚರಣೆ ಎಂಬುದು ಇನ್ನೊಂದು ಕಥೆ. ಆ ದುಷ್ಟ ರಾಕ್ಷಸಿಯು ಹಗಲೂ ರಾತ್ರಿ ಸಂಚರಿಸುತ್ತಾ ಯಾರೂ
ಕಾಣದ ವೇಳೆಯಲ್ಲಿ ಏಕಾಂತದಲ್ಲಿ ಸಿಕ್ಕಿದ ಮಕ್ಕಳನ್ನು ಹಿಡಿದು ಕೊಂದು ಹಾಕುತ್ತಿದ್ದಳು. ಆಕೆಯನ್ನು ನೋಡಿದೊಡನೆಯೇ
ಕೆಲವು ಮಕ್ಕಳು ರೋಗಗ್ರಸ್ತರಾಗುತ್ತಿದ್ದರು, ಪ್ರಾಣ ಸಂಕಟಕ್ಕೆ ಒಳಗಾಗುತ್ತಿದ್ದರು. ಆ ಮಾಯಾವಿನಿಯಾದ ರಾಕ್ಷಸಿಯನ್ನು
ಹಿಡಿದು ಹಾಕಲು ಯಾರಿಗೂ ಸಾಧ್ಯವಾಗಲಿಲ್ಲ. ಅವಳು ಮಾಲೀ ಎಂಬ ರಾಕ್ಷಸರಾಜನ ಪುತ್ರಿ, ಶಿವನನ್ನು ಕುರಿತು
ಕಠೋರವಾದ ತಪಸ್ಸನ್ನಾಚರಿಸಿ ಯುವಕರಾದ ಅಥವಾ ವೃದ್ಧರಾದ ಮನುಷ್ಯರು, ದೇವತೆಗಳು ಅಥವಾ ಯಾವುದೇ
ಪ್ರಾಣಿಯಿಂದಲೂ ತನಗೆ ಮರಣವುಂಟಾಗಬಾರದೆಂದು ವರವನ್ನು ಪಡೆದಳು. ಮಕ್ಕಳು ತನ್ನನ್ನು ಏನು ಮಾಡಿಯಾವು?
ಎಂದು ಆಕೆ ಅವುಗಳ ಬಗ್ಗೆ ಉಪೇಕ್ಷೆ ಮಾಡಿದಳು . ಈ ರಹಸ್ಯವನ್ನು ವಸಿಷ್ಠ ಋಷಿಗಳ ಮೂಲಕ ತಿಳಿದ ರಾಜನು

www.purnapramati.in
ಆಕೆಯನ್ನು ಹಿಡಿಯಲು ಚಂಚಲಪ್ರಕೃತಿಯ ಬಾಲಕರನ್ನು ನೇಮಿಸಿದನು. ಆ ರಾಕ್ಷಸಿಗೆ ಭಯವು ಆರಂಭವಾಗಿ ತನ್ನ ಪ್ರಾಣ
ರಕ್ಷಣೆಗಾಗಿ ಅವಿತುಕೊಳ್ಳುವುದು, ಓಡಿಹೋಗುವುದನ್ನು ಮಾಡಲಾರಂಭಿಸಿದಳು . ಆಗ ಪೃಥು ರಾಜನು ಫಾಲ್ಗುಣ
ಮಾಸದ ಪೂರ್ಣಿಮೆಯಂದು ದೇಶದ ಎಲ್ಲ ಬಾಲಕರಿಗೆ ಮನಸೋ ಇಚ್ಛೆ ಸೌದೆ, ಬೆರಣಿ, ಕಸ, ಕಡ್ಡಾಯಗೊಳಿಸಲು
ಸೇರಿಸಿ ಬೆಂಕಿ ಹಚ್ಚಲು ಆಜ್ಞಾಪಿಸಿದ. ಬಾಲಕರು ಹಾಗೆ ಮಾಡಲು ರಾಕ್ಷಸಿಯು ಭಯಗ್ರಸ್ತಳಾಗಿ ಮನುಷ್ಯ ಲೋಕವನ್ನು
ಬಿಟ್ಟು ಓಡಿ ಹೋದಳು, ಅದರ ನೆನಪಿಗಾಗಿ ಈ ಹೋಳಿ ಹಬ್ಬದಲ್ಲಿ ಬೆಂಕಿ ಹಚ್ಚುವ ಪದ್ಧತಿ ಬಂದಿದೆ.

- ಭಾರತೀಯ ಹಬ್ಬ ಹರಿದಿನಗಳು

ದಾಸಸಾಹಿತ್ಯ

1.
ಚೆಲ್ಲಿರೆ ಓಕುಳಿಯ ರಂಗಯ್ಯನ ಮೇಲೆ।
ಚೆಲ್ಲಿರೆ ಓಕುಳಿಯ ಕೃಷ್ಣಯ್ಯನ ಮೇಲೆ ।।ಪ।।

ಚೆಲ್ಲಿರೆ ಓಕುಳಿ ಫುಲ್ಲಾಕ್ಷನ ಮೇಲೆ।


ಮಲ್ಲಿಗೆ ಮೊದಲಾದ ಫುಲ್ಲ ವನಿತೆಯರು ।।ಅ.ಪ।।

ವೇದ ಉದ್ಧರನ ಮ್ಯಾಲೆ ಆದಿ ಕೂರ್ಮನ ಮ್ಯಾಲೆ।


ಮೇದಿನಿ ಪತಿ ಪ್ರಹ್ಲಾದ ವರದನ ಮ್ಯಾಲೆ।।1।।

ವಟುರೂಪಿಯ ಮ್ಯಾಲೆ ದಿಟ ಭಾರ್ಗವನ ಮ್ಯಾಲೆ।


ಜಟಧಾರಿ ರಾಮನ ನಟುವೋ ಕೃಷ್ಣನ ಮ್ಯಾಲೆ।।2।।

ವತ್ಸಗಳ ಹಿಂಡು ವತ್ಸ ಬಾಲರ ದಂಡು ।


ಲಕುಮಿ ದೊರೆ ರಾಜ ಇಚ್ಛೆ ಬರುವ ವ್ಯಾಳೆ।।3।।

ಪೊನ್ನಂಬರವನುಟ್ಟು ಸಣ್ಣ ನಾಮವ ಇಟ್ಟು।


ಚೆನ್ನ ಮುಂಗುರುಳಲಿ ಕೆಂಧೂಳಿ ರಾಜಿಸುವನಮ್ಯಾಲೆ।।4।।

ಅಡವಿಯೊಳಗೆ ಖಳರ ಮಡುಹಿ ಬಂದಾನೆಂದು ।


ಸಡಗರದಿಂದ ಉಪ್ಪು ಬೇವು ನಿವಾಳಿಸಿ।।5।।

ಬಾಲೆಯರು ತಮ್ಮ ತಮ್ಮ ಬಾಗಿಲೊಳಗೆ ನಿಂತು।


ಸಾರಸಾಕ್ಷಗೆ ದಿವ್ಯ ಕನಕದಾರುತಿಯೆತ್ತಿ ।।6।।

ಬೌದ್ಧ ರೂಪನ ಮ್ಯಾಲೆ ಪ್ರಸಿದ್ಧ ಕಲ್ಕಿಯ ಮ್ಯಾಲೆ।


ಶುದ್ಧ ನಂದನ ನಮ್ಮ ಬಾಲ ಶ್ರೀಕೃಷ್ಣನ ಮ್ಯಾಲೆ।।7।।

2.
ಆಡಿದನೋಕುಳಿಯ ನಮ್ಮ ರಂಗ ಆಡಿದನೋಕುಳಿಯ ನಮ್ಮ ಕೃಷ್ಣ ।।ಪ।।
ನಂಬಿಸಿ ಕರೆದನು ಚುಂಬಿಸಿ ಒಗೆದನು ರಂಭೆರಿಗೋಕುಳಿಯ ।।ಅ.ಪ।।

ಕದಂಬ ಕಸ್ತೂರಿಯ ಆಳಿ ಗಂಧದೋಕುಳಿಯ ।


ಬಂದರು ಹೊರಗಿನ್ನಾರೇರಾಡುತ ತಂದ ಚಂದದ ಓಕುಳಿಯ ।।1।।

www.purnapramati.in
ಪಟ್ಟೆ ಮಂಚದ ಮೇಲೆ ನಮ್ಮ ರಂಗ ಇಟ್ಟ ಮುತ್ತಿನಹಾರ ।
ವೃಂದಾವನದ ಗೋಪೇರ ಮೇಲೆ ಹಾಕಿದನೋಕುಳಿಯ ।।2।।

ಆರ್ಹತ್ತು ಸಾವಿರ ಗೋಪ ಸ್ತ್ರೀಯರೆಲ್ಲರ ಕೂಡೆ ।


ಮಾರನಯ್ಯ ಶ್ರೀಪುರಂದರವಿಟ್ಠಲ ಹರಿಸಿದನೋಕುಳಿಯ।।3।।

3.
ಕರೆಯೆ ಕರೆಯೆ ಕೃಷ್ಣನ ।
ಕರೆಯೆ ಕೃಷ್ಣೆ ಹರಿಯ ಕೂಡ ಭರದಿ ಓಕುಳಿಯಾಡೋಣವಂತೆ ।। ಪ।।

ಮತ್ಸ್ಯನಾಗಿ ಜಲಧಿಯೊಳಗೆ ಇಚ್ಚಾನುಸಾರ ಆಡಿದವಗೆ ।


ಸ್ವಚ್ಛವಾದ ಓಕುಳಿ ಮೈಗಚ್ಚುವೆ ಕೊಳಕು ನಾರದಂತೆ ।।1।।

ಮಂದರವನು ಪೊತ್ತ ಮೈಗೆ ತುಂಬಿದೋಕುಳಿ ಚೆಲ್ಲಿದರೀಗ ।


ಹಿಂದೆ ಬೆನ್ನು ಘಟ್ಟಿ ಛಳಿಲಿಂದ ರಹಿತನಾದ ಹರಿಯ ।।2।।

ಕುಸುಮನಾಭ ಬ್ರಹ್ಮನ ನಾಸಿಕದ ಉಸಿರಿನಿಂದ ಜನಿಸಿ ।


ಕೆಸರು ಬಗೆದ ಕೋರೆ ಮೈಗೆ ಹಸನದೋಕುಳಿ ಹಾಕೋಣಂತೆ ।।3।।

ಖಳನ ರಕ್ತ ಎಳೆದು ಶವದ ಕೊರಳಬಿಡಿಸಿ ಕರುಳಮಾಲೆ ।


ತೊಳೆದು ಮೈಶುದ್ದ ಮಾಡಿ ಘಳಿರನೋಕುಳಿ ಹಾಕೋಣಂತೆ।।4।।

ಎಷ್ಪು ಓಕುಳಿ ಸಾಲದು ತ್ರಿವಿಕ್ರಮನಾಗಿ ಬೆಳೆದೆ ಮ್ಯಾಲೆ ।


ಪುಟ್ಟ ವಟುವಾಗಿರಲಿಕ್ಕೊಂದು ಪಟ್ಟಣದೊಳಗೆ ಮುಗಿಸೋಣವಂತೆ।।5।।

ಭೂತಳವನೆ ದ್ವಿಜರಿಗಿತ್ತ ಮಾತೆ ಕೊಂದ ಪಾತಕ ಕಳೆದು।


ಪ್ರಖ್ಯಾತನಾಗಿ ಬರಲು ತಡವು ಮಾತೃಹಸ್ತ ಮಾಡದ ಮುಂಚೆ ।।6।।

ಜನನಿ ಮಾತು ಕೇಳಿ ವನ ವನವ ಚರಿಸಿ ಅನುಜರೊಡನೆ ।


ವಾನರೇಶನ ಬಲವು ಕಟ್ಟಿ ವನಿತೆ ತಂದ ಘನತೆಗಂಜೋರೆ ।।7।।

ಬಾಲಕಿಯರ ಮನೆ ಮನೆ ಗೋಪಾಲಕರನು ಕೂಡಿ।


ಮಾರ್ಜಾಲನಂತೆ ತಿರುಗೋ ಕೃಷ್ಣ ಗೆ ಹಾಲಿನೋಕುಳಿ ಹಾಕೋಣವಂತೆ ।।8।।

ಅಂಬರವನು ಕಾಣದೆ ದಿಗಂಬರಾನಾಗೋಡಾಡುತಿಹನು ।


ಚೆಂದದಿಂದ ಓಕುಳಿನಾಡಿ ನೊಂದ ವಸ್ತ್ರ ಕೊಡೋಣವಂತೆ।।9।।

ಘೋರ ತುರಗ ನೇರಿ ಹಾರಾಡಲು ಓಕುಳಿ ಹಾಕೋದ್ಯಾಗೆ।


ಧೀರ ಪಾರ್ಥರಾಯರ ರಥಕೆ ಸಾರಥಿ ಮಾಡಿ ಮೇರೆಸೋಣಂತೆ ।।10।।

ನಕುಲ ಸಹದೇವ ಧರ್ಮ ಬಕನ ವೈರಿ ಭೀಮ ಪಾರ್ಥ ।


ಸಖಿ ಸುಭದ್ರಿ ದ್ರೌಪದೀ ಕೂಡ ಸಕಲ ಸದ್ಗುಣಗ್ಹಾಕಿದರಾಗ।।11।।

www.purnapramati.in
ಇಂದಿರೇಶ ಭಾಮೆ ರುಕ್ಮಿಣಿಯಿಂದಲೇ ಭೀಮೇಶಕೃಷ್ಣ ।
ಕುಂದಣದ ಕುಲವಿನೋಕುಳಿ ಪಾಂಡು ಭೂಪನ ಸುತರಿಗ್ಹಾಕಿದ।।12।।

ರಂಗೋಲಿ

ಪ್ರಾರ್ಥನೆ ಹೀಗಿರಲಿ

ಸುಸಂಸ್ಕೃತ ಭಾರತದ ಪ್ರಜೆಗಳಾದ ನಮ್ಮೆಲ್ಲರಲ್ಲಿ ಸದಾ ಕಾಲ ಸಾತ್ವಿಕ ಕಾಮನೆಗಳು ಜಾಗೃತವಾಗಿರಲಿ, ದುಷ್ಟ
ಕಾಮನೆಗಳು ನಮ್ಮೆಲ್ಲರಿಂದ ದೂರವಿರಲಿ, ವಿಶ್ವಗುರು ಭಾರತದ ಪರಂಪರೆಯ, ಸಂಸ್ಕೃತಿಯ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ
ಮೇಲಿದೆ. ಇದಕ್ಕನುಗುಣವಾದ ಮನಸ್ಥಿತಿಯನ್ನು ಮನ್ಮಥನ ಅಂತರ್ಗತನಾದ ಮಹರುದ್ರದೇವರು ಸುಮನಸ್ಕರಾಗಿ ಅನುಗ್ರಹಿಸಲಿ.

ಎಲ್ಲ ಬಾಂಧವರಿಗೆ ಹೋಲಿ ಹಬ್ಬದ ಶುಭಾಶಯಗಳು !!

।। ಶ್ರೀಕೃಷ್ಣಾರ್ಪಣಮಸ್ತು ।।

www.purnapramati.in

You might also like