You are on page 1of 1

ನವರಾತ್ರಿ ಹಬ್ಬವು ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗಿ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ

ದೇಶದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ.


ಕರ್ನಾಟಕದ ಮೈಸೂರಿನಲ್ಲಿ ನವರಾತ್ರಿ ಹಬ್ಬವನ್ನು “ದಸರಾ” ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಈ
ಮಹೋತ್ಸವವು ಜಗತ್ಪ್ರಸಿದ್ಧಿಯಾಗಿದ್ದು ದೇಶ ವಿದೇಶಗಳಿಂದ ಲಕ್ಷಾಂತರ ಜನರು ವಿಕ್ಷಿಸಲು ಮೈಸೂರಿಗೆ ಬರುತ್ತಾರೆ.

ಮೈಸೂರಿನ  ದಸರಾ ಮಹೋತ್ಸವಕ್ಕೆ ವಿಶೇಷ ಪಾರಂಪರಿಕ ಇತಿಹಾಸವಿದೆ. ಹಿಂದೊಮ್ಮೆ ಮೈಸೂರಿನ ಪ್ರಜೆಗಳು


ಮಹಿಶಾಸುರನೆಂಬ ರಕ್ಕಸನಿಂದ ವಿವಿಧ ರೀತಿಯ ತೊಂದರೆಗಳಿಗೆ ಒಳಗಾಗಿದ್ದರು. ದೇವಾನು ದೇವತೆಗಳಿಂದ
ಮಹೋನ್ನತ ವರವನ್ನು ಪಡೆದಿದ್ದ ಮಹಿಶಾಸುರನು ಗರ್ವದಿಂದ ಎಲ್ಲರಿಗೂ ತೊಂದರೆ ಕೊಡುತ್ತಿದ್ದ. ಆಗ ಮೈಸೂರಿನ
ಪ್ರಜೆಗಳು ತಾಯಿ ಚಮುಂಡೇಶ್ವರಿಯನ್ನು ಪ್ರಾರ್ಥಿಸಿ ಮಹಿಶಾಸುರನ ಉಪಟಳದಿಂದ ಪಾರು ಮಾಡುವಂತೆ
ಕೇಳಿಕೊಳ್ಳುತ್ತಾರೆ. ಪ್ರಜೆಗಳ ಅಳಲನ್ನು ಆಲಿಸಿದ ತಾಯಿ ಚಮುಂಡೇಶ್ವರಿಯು ಮಹಿಶಾಸುರನನ್ನು ಸಂಹರಿಸಿ
ಪ್ರಜೆಗಳನ್ನು ಕಾಪಾಡುತ್ತಾಳೆ. ಆಶ್ವಯುಜ ಶುದ್ಧ ದಶಮಿಯಂದು ತಾಯಿ ಚಾಮುಂಡೇಶ್ವರಿಯು ಮಹಿಶಾಸುರನನ್ನು
ಸಂಹರಿಸಿ, ಯುದ್ಧದಲ್ಲಿ ವಿಜಯ ಪ್ರಾಪ್ತಿಯಾದ ಸಂಕೇತವಾಗಿ ಇಂದಿಗೂ ಮೈಸೂರಿನಲ್ಲಿ “ವಿಜಯ ದಶಮಿ”ಯನ್ನು
ಆಚರಿಸಲಾಗುತ್ತದೆ.

ನವರಾತ್ರಿಯ ಸಮಯದಲ್ಲಿ ಶಕ್ತಿದೇವತೆಯಾದ ದುರ್ಗಾ ದೇವಿಯ ಒಂಭತ್ತು ವಿವಿಧ ರೂಪಗಳನ್ನು


ಆರಾಧಿಸಲಾಗುತ್ತದೆ. ಈ ಒಂಭತ್ತು ದಿನಗಳ ಕಾಲ “ಗೊಂಬೆ”ಗಳನ್ನು ಕೂರಿಸುತ್ತಾರೆ. ವಿವಿಧ ಬಗೆಯ ನವರಾತ್ರಿ
ವಿಶೆಷವಾದ ಗೊಂಬೆಗಳು, ಶಿವ-ಪಾರ್ವತಿ, ಚಾಮುಂಡೇಶ್ವರಿ, ಸೇರಿದಂತೆ ವಿವಿಧ ದೇವರ ಗೊಂಬೆಗಳು, ಮತ್ತು ಇರತೆ
ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.

ಹತ್ತನೇಯ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ, ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಪದ್ಧತಿ. ಹತ್ತನೆಯ
ದಿನ ಅಂದರೆ ದಶಮಿಯಂದು ಮೈಸೂರಿನಲ್ಲಿ ಇರುವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ
ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ.

ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಬಂಧು-ಮಿತ್ರರ ಮನೆಯಲ್ಲಿ ಗೊಂಬೆಗಳನ್ನು ಕೂರಿಸಿರುವ ಫೋಟೋವನ್ನು


ಕಾಮೆಂಟ್‌ನಲ್ಲಿ ಕಳುಹಿಸಿ. ನಮ್ಮ Some ಸ್ಕೃತಿಯನ್ನು ಉಳಿಸಿ ಬೆಳೆಸೋಣ. ಹಬ್ಬದ ಬಗ್ಗೆ ನಿಮಗೆ ತಿಳಿದಿರುವ
ಇನ್ನಷ್ಟು ಸ್ವಾರಸ್ಯಕರ ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಾಯಿ ಚಾಮುಂಡೇಶ್ವರಿಯ ಶ್ರೀರಕ್ಷೆ ಸದಾ
ನಮ್ಮಮೇಲಿರಲಿ. ಧನ್ಯವಾದಗಳು.

You might also like