Professional Documents
Culture Documents
ಹಸ್ತಸಾಮುದ್ರಿಕ ಶಾಸ್ತ್ರ - ವಿಕಿಪೀಡಿಯ
ಹಸ್ತಸಾಮುದ್ರಿಕ ಶಾಸ್ತ್ರ - ವಿಕಿಪೀಡಿಯ
ಇತಿಹಾಸ
ಹಸ್ತ ಸಾಮುದ್ರಿಕ ಶಾಸ್ತ್ರದ ಮೂಲ ಚೈನೀಸ್
ಯೀಜಿಂಗ್ (I Ching), ಭಾರತದಲ್ಲಿನ (ಹಿಂದೂ)
ಜ್ಯೋತಿಷ್ಯಶಾಸ್ತ್ರ ( ಸಂಸ್ಕೃತದಲ್ಲಿ ಜ್ಯೋತಿಷ್ ಎಂದು
ಕರೆಯಲಾಗುತ್ತದೆ) ಮತ್ತು ರೋಮಾ (ಜಿಪ್ಸಿ) ಎಂಬ
ಹೆಸರಿನ ಕಣಿ ಹೇಳುವವರು. ಹಿಂದು ಸಂತ ವಾಲ್ಮೀಕಿ
"ಪುರುಷ ಸಾಮುದ್ರಿಕತೆ ಕುರಿತು ವಾಲ್ಮೀಕಿ
ಮಹರ್ಷಿಯ ಬೋದನೆಗಳು" ಎಂಬ ಗ್ರಂಥ
ರಚಿಸಿರುವರೆಂದು ನಂಬಲಾಗಿದ್ದು, ಇದರಲ್ಲಿ 567
ಪದ್ಯಗಳಿವೆ. ಹಸ್ತ ಸಾಮುದ್ರಿಕ ಶಾಸ್ತ್ರವು ಭಾರತದಿಂದ
ಚೀನಾ, ಟಿಬೆಟ್, ಈಜಿಪ್ಟ್, ಪರ್ಷಿಯಾ ಹಾಗೂ
ಯೂರೋಪಿನ ಇತರೆ ದೇಶಗಳಿಗೆ ಹರಡಿಕೊಂಡಿತು.
ಚೀನಾದಿಂದ ಗ್ರೀಸ್ ದೇಶಕ್ಕೆ ಬಂದ ಹಸ್ತ ಸಾಮುದ್ರಿಕಾ
ಶಾಸ್ತ್ರವನ್ನು ಅನಾಕ್ಸಾಗೊರಸ್ ಎಂಬುವವನು
ಅಭ್ಯಾಸ ಮಾಡಿದ. ಆದರೂ, ಆಧುನಿಕ ಹಸ್ತ್ರ
ಸಾಮುದ್ರಿಕ ಶಾಸ್ತ್ರಜ್ಞರು ಪಾರಂಪರಿಕ
ಊಹಾತಂತ್ರಗಳೊಂದಿಗೆ ಮನಃ ಶಾಸ್ತ್ರ, ಸಮಗ್ರ
ಗುಣಮುಖ ವಿಧಾನ, ಮತ್ತು ಪರ್ಯಾಯ
ವಿಧಾನವಾದ ಕಣಿ ಹೇಳುವುದನ್ನೂ ಸಹ ಮಿಶ್ರ
ಮಾಡುತ್ತಾರೆ.
ತಂತ್ರಗಳು
ಚಿತ್ರ:Right hand.JPG
ಪುರುಷನ ಬಲ ಕೈಯ ಹಸ್ತ
ಕೈಯ ಆಕಾರ
ಅಭ್ಯಾಸದಲ್ಲಿರುವ ಹಸ್ತ ಸಾಮುದ್ರಿಕ ರೀತಿ, ಓದನ್ನು
ನಿರ್ವಹಿಸುವ ರೀತಿಯನ್ನು ಅವಲಂಬಿಸಿರುವ ಹಸ್ತ
ಸಾಮುದ್ರಿಕರು ಕೈನ ಅನೇಕ ಗುಣಗಳು, ಆಕಾರ
ಮತ್ತು ಹಸ್ತದ ಗೆರೆಗಳನ್ನು ಗಮನಿಸಬಹುದು;
ಚರ್ಮದ ಬಣ್ಣ ಮತ್ತು ಹೆಣಿಗೆ ಮತ್ತು ಉಗುರು, ಹಸ್ತ
ಮತ್ತು ಬೆರಳುಗಳ ತುಲನಾತ್ಮಕ ಗಾತ್ರ, ಗಿಣ್ಣುಗಳ
ಪ್ರಾಮುಖ್ಯತೆ ಮತ್ತು ಇನ್ನೂ ಅನೇಕ ಕೈ ಚಹರೆಗಳನ್ನೂ
ಕೂಡಾ ಗಮನಿಸಬಹುದು.ಹಸ್ತ ಸಾಮುದ್ರಿಕ ಶಾಸ್ತ್ರದ
ಬಹುತೇಕ ವಿಧಾನಗಳಲ್ಲಿ ಕೆಲವು ಸಲ ಮಾದರಿಯಾದ
ಅಂಶಗಳು ಅಥವಾ ವ್ಯಕ್ತಿಯ
ಸ್ವಭಾವಕ್ಕನುಗುಣವಾಗಿ ಕೈನ ಆಕಾರಗಳನ್ನು ನಾಲ್ಕು
ಅಥವಾ 10 ಮಾದರಿಗಳಾಗಿ ವಿಭಾಗಿಸಲಾಗುತ್ತದೆ.
ಕೈಯ ಆಕಾರಗಳು ಸೂಚಿಸಿದ ಕೈ ಮಾದರಿಗೆ
ಅನುಗುಣವಾಗಿ ಗುಣ ಚಹರೆಗಳನ್ನು ಸೂಚಿಸುತ್ತವೆ (
ಅಂದರೆ ಅಗ್ನಿಕೈ ಅಧಿಕ ಚೈತನ್ಯ, ಸೃಜನಶೀಲತೆ,
ಮುಂಗೋಪ, ಆಕಾಂಕ್ಷೆ ಇತ್ಯಾದಿ- ಈ ಎಲ್ಲಾ
ಗುಣಗಳು ಮಾದರಿ ಅಂಶಗಳಿಗೆ ಸಂಬಂಧಿಸಿವೆ
ಎಂದು ನಂಬಲಾಗಿದೆ).ಅನೇಕ ಏರಿಳಿತಗಳಿದ್ದರೂ
ಆಧುನಿಕ ಹಸ್ತ ಸಾಮುದ್ರಿಕರು ಬಳಸುವ ತುಂಬಾ
ಸಾಮಾನ್ಯ ವರ್ಗೀಕರಣಗಳೆಂದರೆ:
ಇವನ್ನೂ ನೋಡಿ
ಅಲೆಕ್ಟೋರ್ಮ್ಯಾನ್ಸಿ
ಡರ್ಮ್ಯಾಟೊಗ್ಲಿಫಿಕ್ಸ್
ಡಿಜಿಟ್ ರೇಶಿಯೊ
ಸಿಂಗಲ್ ಟ್ರ್ಯಾನ್ಸ್ವರ್ಸ್ ಪಾಮರ್ ಕ್ರೀಸ್
ಕೈರೊನೊಮಿಯಾ - ಭಾವಾಭಿನಯಗಳನ್ನು
ಉಪಯೋಗಿಸುವ ಒಂದು ಕಲೆ ಅಥವಾ
ಸಾಂಪ್ರದಾಯಿಕ ಪೂಜಾಮಂದಿರಗಳಲ್ಲಿ ಉತ್ತಮ
ಪರಿಣಾಮಗಳನ್ನು ಹೊಂದಲು
ಉಪಯೋಗಿಸಬಹುದಾದಂತಹ ಕೈಯ
ಚಲನೆಗಳು
ಗಿಡೋನಿಯನ್ ಹ್ಯಾಂಡ್
ಫ್ರೆನಾಲಜಿ
ಆಕರಗಳು
1. Sara Sirolli - Palmistry diagram of hand
2008
2. David Vernon in Skeptical — a Handbook of
Pseudoscience and the Paranormal ,
editors: Donald Laycock, David Vernon,
Colin Groves, Simon Brown, Imagecraft,
Canberra, 1989, ISBN 0-7316-5794-2, p. 44.
ಬಾಹ್ಯ ಕೊಂಡಿಗಳು
Cheiro. Palmistry for All at Project
Gutenberg
chiromancy
"https://kn.wikipedia.org/w/ind
ಸಂಬಂಧಿತ
ex.php? ಮೀಡಿಯಾ
title=ಹಸ್ತಸಾಮುದ್ರಿಕ_ಶಾಸ್ತ್ರ&oldid= ವಿಕಿಮೀಡಿಯ
1022501" ಇಂದ ಪಡೆಯಲ್ಪಟ್ಟಿದೆ ಕಾಮನ್ಸ್ನಲ್ಲಿ
ಲಭ್ಯವಿದೆ.