You are on page 1of 160

ಅಜಿತ ಕುಮಾರ

NE 4 ೬ pO
ಮೂವತ್ತೆರಡನೆಯ
ಎಡ ಯನ. ಪ್ರಕಟಣೆ
ರತ

ಶರೀರ ಶಿಲ

ಅಜಿತ್‌ ಕುಮಾರ್‌

ಫ್ರಿ”
ಎಂಕ
Ep)
Y
ಡಾ|| ಹೊ. ಶ್ರೀನಿವಾಸಯ್ಯನವಳ ಗ್ರಂಥ ಭಂಡಾರ
ACC. ?10.:.....

ದOS
ರಾಷೊ ್ರೀತ್ಥಾನ ಸಾಹಿತ್ಯ
' ಕೇಶವ ಶಿಲ್ಪ'
' ಕೆಂಪೇಗೌಡ ನಗರ
ಬೆಂಗಳೂರು - ೫೬೦ ೦೧೯

' ಮೊದಲ ಮಂದ್ರಣ : ೧೯೭೩


ಎರಡನೆ ಮುದ್ರಣ : ೧೯೯೧

ರುಷ್ಕೊ್ಟ್ರೀತ್ಮಾನ ಮುದ್ರಣಾಲಯ
ಬೆಂಗಳೂರು - ೫೬೦೦೧೯

ಮವಲ ಲಲ

SHARIRA SHILPA. Kannada. By AiTKUMAR. A collec


of essays on the acquisition of health and strength thro
simple excrcixes,. Publishers: RASHTROTTHANA SAHr
Kempegowda Nagar, Bangalore-560019. 8೩609 : ೪111 +
Price: Rs. 20-00. Second edition. 1991.
ಸಮಕ್ಷಮದಲ್ಲಿ
ಅನೇಕ ಶತಮಾನಗಳ ನಮ್ಮ ಸ್ವಾತಂತ್ರ್ಯ ಸಂಘರ್ಷ ಇಂದು ಯಶಸ್ಸಿನ ಒಂದು
ಘಟ್ಟ ಮುಟ್ಟಿದೆ. ನಮ್ಮ ರಾಷ್ಟ್ರದ ಸ್ವತಂತ್ರ ಸಾರ್ವಭೌಮ ಜೀವನವನ್ನು ಕಟ್ಟುವ
ಸುವರ್ಣಸಂಧಿ ನಮಗಿಂದು ಸುಜ
ಇದೊಂದು ಸುವರ್ಣಸಂಧಿ ಆಗಿರುವಂತೆಯೇ ಒಂದು ಗಂಭೀರ ಸವಾಲೂ ಆಗಿದೆ.
ನಮ್ಮ ರಾಷ್ಟ್ರಜೀವನವನ್ನು ಯಾವ ಆದರ್ಶದ ಬೆಳಕಿನಲ್ಲಿ, ಯಾವ ಸಿದ್ಧಾಂತದ ಅಡಿಗಲ್ಲ
ಮೇಲೆ ಕಟ್ಟಬೇಕು ಎಂಬ ಸವಾಲಿಗೆ ನಾವಿಂದು ಉತ್ತರ ಕೊಡಬೇಕಾಗಿದೆ.
ಆದರೆ ನಮ್ಮ ನಾಡಿನ ದೌರ್ಭಾಗ್ಯದಿಂದ ಇವತ್ತಿಗೂ ಈ ಮೂಲಪ್ರಶ್ನೆಯೆ ಬಗ್ಗೆ
ನಮ್ಮ ಸ್ವತಂತ್ರ ಪ್ರತಿಭೆಯಿಂದ ವಿಚಾರಮಂಥನ ನಡೆಯುತ್ತಲೇ ಇಲ್ಲ. ಇಂಗ್ಲೆಂಡ್‌
ಅಮೆರಿಕಾಗಳಂತೆಯೋ ಇಲ್ಲವೆ ರಷ್ಯ ಚೀನಾಗಳಂತೆಯೋ ನಮ್ಮ ಜೀವನವನ್ನು ಎರಕ
ಹೊಯ್ಯುವ ಆತುರ ಎಲ್ಲ ಕ್ಷೇತ್ರಗಳಲ್ಲಿ ಕಂಡುಬರುತ್ತಿದೆ. ನಮ್ಮ ರಾಜಕೀಯ, ಆರ್ಥಿಕ,
ಸಾಮಾಜಿಕ, ಶೈಕ್ಷಣಿಕ ಇತ್ಕಾದಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಪರದೇಶ, ಪರ
ಸಂಸ್ಕೃತಿಗಳ ಅಗ್ಗದ ನಕಲಾಗಿ ಮಾಡುವ ಪ್ರಯತ್ನವೇ ನಡೆದಿದೆ. ನಮ್ಮ ರಾಷ್ಟ್ರೀಯ
ಪ್ರತಿಭೆ, ಪರಂಪರೆ, ತತ್ತ್ವಜ್ಞಾನ, ಜೀವನಾದರ್ಶ ಇವೆಲ್ಲಕ್ಕೂ ಇಂದು ಗ್ರಹಣ ಹಿಡಿದಂತಾಗಿದೆ.
ಹೀಗಾಗಿ ಇಂದು ಕೋಟಿಕೋಟಿ ಭಾರತೀಯರ ಹೃದಯಕ್ಕೆ ನಮ್ಮ ಸ್ವತಂತ್ರ ರಾಷ್ಟ್ರ
ಜೀವನದ ಅಮೃತಸ್ಪರ್ಶಅನುಭವಕ್ಕೆ ಬರುತ್ತಿಲ್ಲ. ನಮ್ಮ ಜನಸಾಮಾನ್ಯರ ಅಂತಃಕರಣ
ವನ್ನು ತಟ್ಟಿ ಎಬ್ಬಿಸುವ ರಾಷ್ಟ್ರೀಯ ಆದರ್ಶಗಳಿಲ್ಲದೆ ಹೋದಲ್ಲಿ ರಾಷ್ಟ್ರದ ಪುನರುತ್ಮಾನ
ಕ್ಕಾಗಿ ಅವರಲ್ಲಿಸMyಯೆಂಪ್ರೇರಣೆ, ಕಾರ್ಯೋತ್ಸಾಹ, ತ್ಯಾಗ, ಪೌರುಷಗಳು ಬೆಳೆದು ನಿಲ್ಲುವು
ದಾದರೂ ಹೇಗೆ? ಆದ್ದರಿಂದಲೇ ಇಂದು ರಾಷ್ಟ್ರದ ಆಗುಹೋಗುಗಳ ಬಗೆಗೆ ಸರ್ವತ್ರ
ಉದಾಸೀನತೆ, ಕ್ರಿಯಾಶೂನ್ಯತೆ, ವಿಫಲತೆಗಳೇ ಜಾ ಡುತ್ತಿವೆ. ಎಂದಮೇಲೆ ಜನರೆದೆಗೆ
ಸ್ಫೂರ್ತಿ, ಉತ್ಸಾಹಗಳನ್ನೆ ರೆಯಬಬಲ್ಲ ಭಾರತೀಯತೆಯ ಆದರ್ಶವನ್ನುತ್ನ್ನ ಯ ಎತ್ತೀ
ಇಂದು ತೀರ ಅನಿವಾರ್ಯ ಹಾಗೂ ತುರ್ತು ಕರ್ತವ್ಯವಾಗಿದೆ. ಭಾರತವು 'ತನ್ನತನ

ನಮ್ಮ ಭಾರತೀಯತೆಯ- ನಮ್ಮ ಸಂಸ್ಕೃತಿ, ಪರಂಪರೆ. ಇತಿಹಾಸ, ತತ್ತ್ವಜ್ಞಾನ,


ಜೀವನಾದರ್ಶಗಳ - ಹಿರಿಮೆ ಈ ಲೋಕದಲ್ಲಿ ಸಾಟಿಮಿಲ್ಲದ್ದು. ನೂರಾರು ಶತಮಾನಗಳ
ವರೆಗೆ ನಮ್ಮ ರಾಷ್ಟ್ರಜೀವನವನ್ನು ವೈಭವಶಾಲಿಯಾಗಿ ಮಾದಿದ್ದಷ್ಟೆ ಅಲ್ಲ, ಜಗತ್ತಿಗೆಲ್ಲ ದಿವ್ಯ
ಜೀವನದ ಸುಧೆ ಕುಡಿಸಿದಂತಹ ಅದ್ಭುತ ಚೈತನ್ಯ ಅದರಲ್ಲಿದೆ. ಇಂದಿಗೂ ಸಹ ಆಧುನಿಕ
ಜೀವನದ ಅನೇಕ ವಿಕಟ ಸಮಸ್ಯೆ- ಸವಾಲುಗಳಿಗೆ ಸಮರ್ಪಕವಾಗಿ ಸಮಾಧಾನ ನೀದಬಲ್ಲಂತಹೆ
ಸಮಗ್ರ ಜೀವನದೃಷ್ಟಿ, ವಿಚಾಧಸಂಪತ್ತು ಅದರಲ್ಲಿದೆ.

IV

ರಾಷ್ಟ್ರೋತ್ಥಾನದ ಅಡಿಗಲ್ಲಾದ ನಮ್ಮ ಭಾರತೀಯ ಜೀವನದ ಜ್ಞಾನ - ನಿಷ್ಮೆಗಳನ್ನು


ಜನಮನದಲ್ಲಿ ಬೇರೂರಿಸುವ ಈ ಚರಿತ್ರಾರ್ಹ ಕಾರ್ಯಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್ತು
ಜನ್ಮ ತಾಳಿದೆ.
ಪರಿಷತ್ತು ಈ ನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆ ಎಂದರೆ, "ರಾಷ್ಟ್ರೋತ್ಥಾನ
ಸಾಹಿತ್ಯ' ಎಂಬ ನೂತನ ಪ್ರಕಾಶನದ ಸ್ಥಾಪನೆ. ಪ್ರಕಾಶನದ ಮುಖ್ಯ ಯೋಜನೆ ಹೀಗಿದೆ :
* ಸುಲಭ ಬೆಲೆಯಲ್ಲಿ ಸಾಮಾಜಿಕ ಚಿಂತನಪ್ರಧಾನವಾದ ಗ್ರಂಥಗಳನ್ನು ಹೊರ
ತರುವುದು. ಇಂದು ಕನ್ನಡ ಸಾಹಿತ್ಯಲೋಕದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಕೊರತೆ, ಅಗತ್ಯತೆ
ಇರುವುದು ಅಂತಹ ಗ್ರಂಥಗಳಿಗೇ. ಈ ಕೊರತೆಯನ್ನು ತುಂಬಲು ಮೂಲ ಕನ್ನಡ ಕೃತಿಗಳ
ಜೊತೆಗೆ ಇತರ ಭಾಷೆಗಳಿಂದಲೂ ಉತ್ತಮ ರಾಷ್ಟ್ರೀಯ ಸಾಹಿತ್ಯವನ್ನು ಕನ್ನಡಕ್ಕೆ ತರುವುದು.
* ನಿಜವಾದ ರಾಷ್ಟ್ರೀಯ ಇತಿಹಾಸದ ಗ್ರಂಥಗಳಿಗಂತೂ ಕನ್ನಡದಲ್ಲೇ ಏಕೆ, ಇಡೀ
ದೇಶದಲ್ಲೇ ತೀವ್ರ ಕೊರತೆ ಇದೆ. ಇದುವರೆಗೆ ಪಾಶ್ಚಾತ್ಯ ವಿದ್ವಾಂಸರ ಗ್ರಂಥಗಳು, ಅವರ
ದೃಷ್ಟಿ - ಧೋರಣೆಗಳ ಜಾಡಿನಲ್ಲೇ ನಮ್ಮ ಇತಿಹಾಸದ ಅಧ್ಯಯನ ಸಾಗಿದೆ. ಇನ್ನಾದರೂ
ನಮ್ಮ ರಾಷ್ಟ್ರೀಯ ದೃಷ್ಟಿಯಿಂದ ಚರಿತ್ರೆಯನ್ನು ಬರೆಯುವ, ಓದುವ ಅಭ್ಯಾಸವಾಗುವಂತೆ
ರಾಷ್ಟ್ರೀಯ ಇತಿಹಾಸ ಗ್ರಂಥಗಳಿಗೆ “ರಾಷ್ಟ್ರೋತ್ಥಾನ ಸಾಹಿತ್ಯ'ದಲ್ಲಿ ಅಗ್ರಸ್ಥಾನ ಕೊಡುವುದು.
* ಸಮಾಜದಲ್ಲಿ ಸತ್ಸಂಸ್ಕಾರಗಳನ್ನು ಮೂಡಿಸುವ ಸದಭಿರುಚಿಯ ಕಾದಂಬರಿ. ಕಥೆ -
ಕವನ - ಲೇಖನ ಸಂಗ್ರಹಗಳನ್ನು ಪ್ರಕಟಿಸುವುದು.
* ಸರಳ ಹಾಗೂ ಉದ್ಬೋಧಕ ರೀತಿಯಲ್ಲಿ ಸ್ತ್ರೀಸಾಹಿತ್ಮ ಶಿಶುಸಾಹಿತ್ಯಗಳನ್ನು
ಹೊರತರುವುದು.
ಈ ಯೋಜನೆ ರೂಪುಗೊಳ್ಳುತ್ತಿದ್ದಂತೆಯೇ ನಮ್ಮ ದೇಶದ ಮೇಲೆ ದೊಡ್ಡ ಪ್ರಮಾಣ
ದಲ್ಲಿ ಪಾಕಿಸ್ತಾನದ ದುರಾಕ್ರಮಣ ನಡೆಯಿತು. ಭಾರತವೂ ಅದಕ್ಕೆ ತಕ್ಕ ಪರಾಕ್ರಮದ ಉತ್ತರ
ನೀಡಿ, ತನ್ನ ವಿಜಯಧ್ವಜವನ್ನು ಮೆರೆಸಿತು. ಅದರ ಸಂಸ್ಮರಣೆಯಾಗಿ ಸ್ವತಂತ್ರ ಭಾರತದ
ಸಮರಶೂರರ ಕೆಚ್ಚು ಕಲಿತನಗಳನ್ನು ಪರಿಚಯಿಸುವ ಸತ್ಮಘಟನೆಗಳ ಕಥಾಚಿತ್ರಣ "ರಣವೀಳ್ಕ'
ರಾಷ್ಟ್ರೋತ್ಥಾನ ಸಾಹಿತ್ಯಮಾಲೆಯ ಪ್ರಥಮ ಪುಷ್ಟವಾಗಿ ಅರಳಿತು. ನಾಡಿನ ಜನತೆಯಿಂದ
ಅದಕ್ಕೆ ಬೂರೆತ ಆತ್ಮೀಯ ಸ್ವಾಗತ ನಮ್ಮ ಮುಂದಿನೆಲ್ಲ ಪ್ರಯತ್ನಗಳಿಗೆ ಶುಭಹರಕೆಯಾಯಿತು.
ತಾಯಿ ಭಾರತಿಯ ದಿವ್ಯಮಂದಿರದಲ್ಲಿ ಮತ್ತೊಮ್ಮೆ ಹೊತ್ತಿರುವ ಈ ಜ್ಞಾನದ
ಸೊಡರಿಗೆ ಜನರ ಒಲವು ನೆರವುಗಳ ತೈಲಧಾರೆ ಹೀಗೆಯೇ ನಿರಂತರವಾಗಿ ಒದಗಿಬರಲಿ
ಎಂಬುದೊಂದೇ ನಮ್ಮ ಹೃದಯದಾಳದ ಹಾರೈಕೆ.

ವಿಶ್ವಾವಸು - ಮಾರ್ಗಶಿರ ಶುದ್ಧ ಏಕಾದಶಿ ಪ್ರಕಾಶಕರು


ಗೀತಾಜಯಂತಿ: ೪-೧೨-೧೯೬೫
ಪುಸ್ತ ಭು Ne 2 ಪ

ಬುದ್ಧಿಗೂ ಮನಸ್ಸಿಗೂ ದೇಹಕ್ಕೂ ನೇರ ನಂಟು. ಒಂದಕ್ಕೆ ಕುಂದಾದರೆ


ಇನ್ನೊಂದಕ್ಕೂ ಮತ್ತೊಂದಕ್ಕೂ ತೊಂದರೆ. ವಿದ್ಯೆಯ ಫಲಕ್ಕೆ ಬುದ್ಧಿಯ ಬಾಹು, ಗುಣದ
ಜೇನಿಗೆ ಮನದ ನಾಲಗೆ ನೀಡುವಂತೆ ಶಕ್ತಿಯ ನಿರ್ಮಾಣಕ್ಕೆ ಶರೀರದ ಕೈಕಾಲುಗಳನ್ನೂ
ಆಡಿಸುವ ಅಭ್ಯಾಸ ಆಗಬೇಕು. ಆಗಲೇ ವ್ಯಕ್ತಿತ್ವಕ್ಕೆ ಸಮತೋಲನ ಲಭ್ಯ. ಬುದ್ಧಿ -ಗುಣ-
ಶಕ್ತಿ ಮೂರನ್ನೂ ಉಳ್ಳ ವ್ಯಕ್ತಿಗೆ ಮೂರು ಆಯಾಮದ ಘನತೆ. ಆಗಲೇ ಘನವಾದ
ಕಾರ್ಯ ಮಾಡುವ ಸಾಧ್ಯತೆ.
“ರಾಷ್ಟ್ರೋತ್ಥಾನ ಸಾಹಿತ್ಮ' ಬುದ್ಧಿಗೆ, ಮನಸ್ಸಿಗೆ ವಿಚಾರದ ಆಹಾರ ಒದಗಿಸುತ್ತಲೇ
ಇದೆ. ಶರೀರಕ್ಕೆ ವ್ಯಾಯಾಮದ ವಿಹಾರ ನೀಡದಿದ್ದರೆ ಹೇಗೆ ? ಓದುಗರ ಮನ - ಬುದ್ಧಿಗಳು
ತಮ್ಮ ಗೂಡಾದ ಶರೀರವನ್ನು ಶಪಿಸಿಕೊಳ್ಳುವಂತಾಗಬಾರದಷ್ಟೆ. "ಶರೀರಮಾದ್ಕಂ ಖಲು
ಧರ್ಮಸಾಧನಂ.' ಆದ್ದರಿಂದ ದುರ್ಬಲತೆಯ ಶಾಪವಿಮೋಚನೆಗೆ ತೆಗೆದುಬಿಟ್ಟಂಥ
ಅಸ್ತ್ರವಿದೊ ಕೊಳ್ಳಿ
- "ಶರೀರ ಶಿಲ್ಪ'. ನೂರೆಂಟು ಕೀಲುಗಳುಳ್ಳ ನಿಮ್ಮ ಶರೀರ ಯಂತ್ರ
ನೂರ್ಕಾಲ ಲವಲವಿಕೆಯಿಂದ ಹಸನಾಗಿ ಬಾಳುವಂತೆ - ಒಳ್ಳೆಯ ಸಮಯದಲ್ಲಿ ಕೆಟ್ಟು
“ಕೈಕೊಟ್ಟು' ನಿಲ್ಲದಂತೆ - ವ್ಯಾಯಾಮದ ಎಣ್ಣೆ ಎರೆಯಲು ಮರೆಯದಿರಬೇಕು. ಅದಕ್ಕೊಂದು
ಅಕ್ಷಯ ತೈಲಾಗಾರ ಈ `ಶರೀರ ಶಿಲ್ಪ'. ಇದರ ಆಚರಣೆಯಿಂದ ಪ್ರತಿಯೊಬ್ಬರೂ
ಪಡೆಯಬಹುದು “ಕಾಯಕಲ್ಪ'.
ಈ ಪುಸ್ತಕ ನಿಮ್ಮ ಕೈಯನ್ನಂತೂ ಸೇರುತ್ತದೆ. ಮೈಯನ್ನೂ ಸೇರಿದಾಗ ಸಾರ್ಥಕ
ಆಗುತ್ತದೆ. ಇಲ್ಲಿ "ಲೇಖಕರ ಮಾತು' ಸಹ ಒಂದು ಮುಖ್ಯ ಅಧ್ಯಾಯವೇ. ಅದನ್ನು
ಮೊದಲೇ ಓದುವುದು ಅಗತ್ಯ, ಉಪಯುಕ್ತ.
ಶರೀರಶಾಸ್ತ್ರದಲ್ಲಿ ಎರಡು ವಿಧ
- ಒಂದು 'ನಿರ್ಜೀವ', ಇನ್ನೊಂದು 'ಸಜೀವ'.
“ಸಜೀವ ಶರೀರ'ದ ಶಾಸ್ತ್ರದಲ್ಲಿ ತಮ್ಮ ಸ್ವಾನುಭವದ ಅಮೂಲ್ಯ ನಿಧಿಯನ್ನು ಸರ್ವರಿಗಾಗಿ
ತೆರೆದಿಟುಶಾ ಈ ಪುಸ್ತಕದ ಪ್ರಕಟಣೆಗೆ ಅನುಮತಿ ಕೊಟ್ಟು. ಉಪಕಾರ ಮಾಡಿರುವ
ಲೇಖಕರಾದ ಶ್ರೀ ಅಜಿತ್‌ ಕುಮಾರ್‌ ಅವರು ವ್ಯಾಯಾಮಪಟುಗಳು, "ರಾಷ್ಟ್ರೋತ್ಥಾನ
ಶಾರೀರಿಕ ಶಿಕ್ಷಾಕೇಂದ್ರ'ದ ಪ್ರಧಾನ ಸಲಹೆಗಾರರು, 'ಜ್ಲ್ಞಾನಗಂಗೋತ್ರಿ' ಕಿರಿಯರ ವಿಶ್ವ
ಕೋಶದ 'ಕ್ರೀಡೆ, ಮನೋಲ್ಲಾಸ' ಸಂಪುಟದ ಸಮಾಲೋಚಕರಲ್ಲೊಬ್ಬರು. ಅವರಿಗೆ ನಮ್ಮ
ಹಾರ್ದಿಕ ಕೃತಜ್ಞತೆಗಳು. ಅಂದವಾದ ಚಿತ್ರ ಬರೆದುಕೊಟ್ಟ ಶ್ರೀ ವಿ. ಪದ್ಮನಾಭನ್‌ರಿಗೂ
ನಮ್ಮ ವಂದನೆಗಳು.

ಶ್ರೀ ಪ್ರಮಾದೀಚ - ಪುಷ್ಯ ಶುದ್ಧ ಸಪ್ತಮಿ ಪ್ರಕಾಶಕರು


೩೧-೧೨-೧೯೭೩
ಲೇಖಕರ ಮಾತು
ಶಾರೀರಿಕ ಚಟುವಟಿಕೆಗಳ ಭಿನ್ನಭಿನ್ನ ಮುಖಗಳನ್ನು ಬೇರೆಬೇರೆ ವಯೋಧರ್ಮ,
ಮನೋಧರ್ಮಗಳವರಿಗೆ ಪರಿಚಯ ಮಾಡಿಕೊಡಲು ಬೇರೆಬೇರೆ ಸಮಯದಲ್ಲಿ ಸ್ವತಂತ್ರವಾಗಿ
ಬರೆದವು ಈ ಲೇಖನಗಳು. ಇವನ್ನು ಮೂರು ಮುಖ್ಯ ಭಾಗಗಳಲ್ಲಿ ವಿಂಗಡಿಸಲಾಗಿದೆ.
ಈ ಲೇಖನಗಳು ತಜ್ಞರಿಗಾಗಿ ಅಲ್ಲ; ಶಾರೀರಿಕ ಶಿಕ್ಷಕರಿಗೂ ಅಲ್ಲ; ತಮ್ಮ ಶರೀರದ
ಬಗ್ಗೆ ಪ್ರೀತಿ ಇದ್ದು, ಅದರ ಸುಪ್ತ ಸಾಮರ್ಥ್ಯಗಳನ್ನು ಪ್ರಕಟಗೊಳಿಸಲು ಪ್ರಾಮಾಣಿಕ
ಪ್ರಯತ್ನ ಮಾಡಬಲ್ಲವರಿಗೆ. ಜೊತೆಗೆ ಈಗಾಗಲೇ ಪ್ರಯತ್ನ ಪ್ರಾರಂಭಿಸಿ ಅಡ್ಡಿಗಳು ಅಡ್ಡ
ಬಂದು ಅಸಹಾಯಕರಾಗಿ ಪ್ರಯತ್ನವನ್ನೇ ಕೈಬಿಟ್ಟಿರುವ ವ್ಯಕ್ತಿಗಳಿಗೂ ಉಪಯುಕ್ತ.
ಈ ಪುಸ್ತಕ ಓದಿದನಂತರವೂ ಒಂದು ಪ್ರಶ್ನೆ ಕಾಡಬಹುದು. ವ್ಯಾಯಾಮದ ಪ್ರಾರಂಭ
ಎಲ್ಲಿಂದ ? ಜೊತೆಗೆ ಯಾವುದು ಎಷ್ಟೆಷ್ಟು? ಅದಕ್ಕೆ ಉತ್ತರ ಇಷ್ಟೆ: ಇಡೀ ಪುಸ್ತಕವನ್ನು
ಓದಿ ಆದ್ಯತೆಯ (pಃಂrity) ಪ್ರಕಾರ ಭಿನ್ನಭಿನ್ನ ವಿಷಯಗಳನ್ನು ಬರೆದುಕೊಂಡು, ಬರೆದ
ದಿನದಿಂದಲೇ ಮೊದಲನೆಯದನ್ನು ಪ್ರಾರಂಭ ಮಾಡಿ. ಇಲ್ಲಿರುವ ಪ್ರಯೋಗಗಳನ್ನು
ಅಭ್ಯಾಸ ಮಾಡಲು ವ್ಯಾಯಾಮಶಾಲೆಗೆ ಹೋಗಬೇಕಾಗಿಲ್ಲ. ಗುರುವಿನ ಸಾನ್ನಿಧ್ಯ ಅರಸ
ಬೇಕಾಗಿಲ್ಲ. ॥
ಲೇಖನಗಳಲ್ಲಿ ಬರೆದಿರುವ ಪರಿಣಾಮಗಳನ್ನು ಓದಿ, ಎಲ್ಲ ಪರಿಣಾಮಗಳನ್ನು ಒಂದೇ
ತಿಂಗಳಲ್ಲಿ ಸಂಪಾದಿಸಲು ಎಲ್ಲವನ್ನೂ ಒಟ್ಟಿಗೇ ಮಾಡುವ ಉತ್ಸಾಹಕ್ಕೆ ಕೈಹಚ್ಚಬೇಡಿ. ನಿಮ್ಮ
ಮನಸ್ಸಿಗೆ ಹಿಡಿಸುವ, ಪ್ರವೃತ್ತಿಗೆ ಒಪ್ಪುವ ವಿಧಾನಗಳನ್ನು ಆರಿಸಿಕೊಂಡು ಸಾವಕಾಶವಾಗಿ
ಪ್ರಯತ್ನ ಮುಂದುವರಿಸಿ. ಒಂದೊಂದನ್ನೇ ಬಳಕೆಗೆ ತಂದುಕೊಂಡು ಅನಂತರ ಮಿಕ್ಕದ್ದನ್ನು
ಅಳವಡಿಸಿಕೊಳ್ಳಿ. ಅಥವಾ ಕೆಲವು ತಿಂಗಳು ಒಂದು ಗುಂಪಿನ ಪ್ರಯೋಗಗಳ ಅಭ್ಯಾಸ
ಮಾಡಿ. ಮತ್ತೆ ಕೆಲವು ತಿಂಗಳಲ್ಲಿ ಮಿಕ್ಕವುಗಳನ್ನು ಮಾಡಿ. ಹೆಚ್ಚು ಉಪಯುಕ್ತವಾದವು
ಗಳು ಎಂದು ಅನ್ನಿಸಿದ್ದನ್ನು ಸದಾ ಕಾಲ ಮಾಡಿ. ಪ್ರತಿಯೊಬ್ಬರ ಅಭಿರುಚಿಯೂ ಬೇರೆ
ಬೇರೆ ಎಂಬುದು ನೆನಪಿಡಬೇಕಾದ ಸಂಗತಿ, e

ಎಷ್ಟು ಸಮಯ ಮಾಡಬೇಕು? ಇದು ನಿಮಗೇ ಸೇರಿದ್ದು. ದಿನದ ಅನೇಕ ಚಟು


ವಟಿಕೆ, ಆಹಾರವಿಹಾರಗಳಲ್ಲಿ ವ್ಯಾಯಾಮದ ಪಾತ್ರ ಏನು, ಎಷ್ಟು ಎಂದು ನಿಶ್ಚಯಮಾಡಿ.
ಅದಕ್ಕೆ ಬೇಕಾದ ಸಮಯ ಸಂಪಾದಿಸಿ. ಹತ್ತು ನಿಮಿಷದಿಂದ ಆರಂಭ ಮಾಡಿ. ವಿಶೇಷ
ಸಂದರ್ಭಗಳಲ್ಲಿ, ಬಿಕ್ಕಟ್ಟಿನ ಪ್ರಸಂಗಗಳಲ್ಲಿ, ಪರೀಕ್ಷೆ ದಿನಗಳಲ್ಲಿ ಕಡೆಯ ಪಕ್ಷ ಒಂದು ಸೂರ್ಯ
ನಮಸ್ಕಾರವಾದರೂ ಮಾಡಿ. ಆದರೆ ಹತಾಶರಾಗಿ ವ್ಯಾಯಾಮಕ್ಕೆ ಅರ್ಧಚಂದ್ರ ಮಾಡದಿರಿ.
ಪ್ರಬಲ ಆಸೆ, ನಿರಂತರ ಪ್ರಯತ್ನ ಇರುವವರಿಗೆ ಈ ಪುಸ್ತಕ ಕೈಮರ ಅಷ್ಟೆ.
ಮುಂದಕ್ಕೆ ಆಯಾ ದಿಕ್ಕಿನಲ್ಲಿ ಇರಬಹುದಾದ ಮಾರ್ಗದರ್ಶಕರ ಆಶ್ರಯ ಪಡೆಯಬೇಕು.
Vii

ಅಂಗಸೌಷ್ಠವ, ಭಾರ ಎತ್ತುವಿಕೆ, ಗರಡಿಸಾಧನೆ, ಕ್ರೀಡೆಗಳು, ಯೋಗಾಸನಗಳು ಇವೆಲ್ಲವೂ


ಹೆದ್ದಾರಿಗಳು.

ಇಂದಿಗೂ ನಮ್ಮ ಜನರಲ್ಲಿ ಒಂದು ಭ್ರಮೆ ಉಳಿದೇ ಇದೆ - ವ್ಮಾಯಾಮ ಕೇವಲ


ಪುರುಷರಿಗೆ ಮಾತ್ರ ಮಾಸಲು ಎಂದು. ಇದು ತಪ್ಪಿ ಸ್ತ್ರೀಪುರುಷರೆಲ್ಲರಲ್ಲೂ ವ್ಯಾಯಾಮದ
ಹವ್ಯಾಸ ಬೆಳೆಯಬೇಕು. ಶಿಶುಗಳಿಗೆ, ಬಾಲಕರಿಗೆ, ಕಿಶೋರರಿಗೆ, ಯುವಕರಿಗೆ, ವಯಸ್ಕರಿಗೆ,
ವೃದ್ಧರಿಗೆ, ರೋಗಿಗಳಿಗೆ, ದುರ್ಬಲರಿಗೆ ಆಹಾರದ ಹದ, ಪ್ರಮಾಣ ವ್ಯತ್ಕಾಸವಾಗುವಂತೆ
ವ್ಯಾಯಾಮದ ವಿಧಾನ, ಪ್ರಮಾಣದಲ್ಲಿ ವ್ಯತ್ಯಾಸವಿದ್ದೀತು, ಆದರೆ ವ್ಯಾಯಾಮವಂತೂ
ಅವಶ್ಯಕ ಎಂಬ ಸಂಗತಿ ಮನದಟ್ಟಾಗಬೇಕು. ಮೂರು ವರ್ಷದ ಶಿಶುಗಳಿಗೂ ವ್ಯಾಯಾಮ
ಪ್ರಾರಂಭಿಸಬಹುದು (ಈಜು ಸಹ). ದಂಡ, ಕೂಡೇಳು ಕಿಶೋರರು ಮತ್ತು ಯುವಕರಿಗೆ
ಹೆಚ್ಚು ಉಪಯುಕ್ತ.

ವ್ಯಕ್ತಿ ದಿನವಿಡೀ ಕೆಲಸಮಾಡಿಖು, ಉತ್ಸಾಹದಿಂದಿರಲು ಅನ್ಯಾನ್ಯ ದುಶ್ಚಟಗಳಿಗೆ ಮೊರೆ


ಹೋಗುವುದು ಅನಾವಶ್ಯಕ. ಅವು ಆರೋಗ್ಯಕ್ಕೆ ಹಾನಿಕಾರಕವೂ ಹೌದು. ಉಲ್ಲಾಸದ,.
ಚೈತನ್ಮದ ಮಾಧ್ಯಮ ಬಹಿರಂಗವಲ್ಲ. ಅದು ನಮ್ಮಲ್ಲಿಯೇ ಉಂಟು. ಅದು ಪ್ರಕಟವಾಗಲು
' ಶರೀರವನ್ನು ಅಣಿಮಾಡಿಕೊಳ್ಳಬೇಕು. ವ್ಯಾಯಾಮ ಎಲ್ಲ ಕಾಲಗಳಲ್ಲಿ, ಎಲ್ಲ ಖಯುತುಗಳಲ್ಲಿ
ಮಾಡಬೇಕು. ಚಳಿ, ಮೆ, ಗಾಳಿ, ಬಿಸಿಲು ಅದಕ್ಕೆ ಅಡ್ಡಿಯಾಗಬಾರದು. ವ್ಯಾಯಾಮದ
ರೀತಿಯಲ್ಲಿ ಅದಲು ಬದಲು ಮಾಡಿಕೊಳ್ಳಬಹುದು. ಸೂರ್ಯ ಹುಟ್ಟದಿರುವ ದಿನ ಮಾತ್ರವೇ
ಇ ೨. ಶರೀರ ಹದವಾಗಿರಲು ಶಾಸ್ತ್ರೀಯ, ವ್ಯಾಯಾಮ,
pe [a — pS
ವ್ಯಾಯಾಮಕ್ಕೆ ವಿರಾಮ
¢
ತಾ ತ್ಯಾತಾತ
ಮಿತ ಆಹಾರ ಮತ್ತು
ಹ ಹ ೨
Ww ವಾದ "ಮಸಾಜ್‌" ಅನಿವಾರ್ಯ ಸಂಗತಿಗಳು. `ಮಸಾಜ್‌'
ಕಲೆ ಅರಿಯದವರು
pS SS ಎ
ಕಡೆಯ ಪ ಎಣ್ಣೆಯನ್ನು

ಆಗಾಗ್ಗೆ ಶರೀರಕ್ಕೆ ಹಚ್ಚಿ, ಹೃದಯದ ಕಡೆಗೆ
ಚಲನೆ ಇರುವಂತೆ ಚೆನ್ನಾಗಿ ಆಂಗಾಂಗಗಳನ
ಪೆ
LU ತಿಕ್ಕಿ ಸ್ನಾನ ಮಾಡುವುದು ಸೂಕ್ತ ಶಂ

ಗ್‌ ೨ ~~“ — ಓ2 ಇಗ ಸಜೆ _ ಸರಾ ಈ


ಈ ಊಮಖನಗಳ ಪ್ರಕಟಣೆಗಳ ನಾವು ಣಜ

ನನ್ನಿಲ
ಣಿ
ಒಡನಾಡಿಗಳ ಶಾರೀ [a

ತಾ J — ತತ್‌ ವಾ ಗ್ರಾ | ಗ ತ್‌ ವ ಗ್‌ ಜಾಗ ಐ (ಇಗ NA


ಗಳನ್ನು ಕೂಡಿಡುವ ಸಂಗಾ;ಪಕ
/
ವಾತ, ವಾನ. SU Von, ಬಗ, ಶಾರೀರಿಕ
ಹೆ ಡೆ

ಶಕ್ತಿಯ ಬಗ್ಗೆ ಇರುವ ಅನೇಕ ಗ್ರಂಥಗಳೂ po


ನಿಯತಕಾರಿಕಗಳೂ ಮತ್ತು ಈ ದೇಶದ, ವಿದೇಶ
ಇ ಈ. ಕಾ 1 ಎ ಹಾ - ಹ =

ಗಳ ಪ್ರಮೋಗಕೇಂದ್ರಗಳ ನಿಷಷ
pa pe ತ್‌

ತ್‌
ಎ ತಟ್ಟು ಎಪಿ ) $18 La )
ಪಡೆದವರ ಬಳಿ ಕುಳಿತು ಸಂಗ ಹಯೋಗ್ಯ ಸಂಗತಿಗಳನ್ನು ಶಕ್ತಿ ತೆಗೆದಿಟಿ ರುವ ಪ್ರಯತ್ನ
| ವ್‌ ತಪ ವಿ ಗ ಗ
ತ ತಿ, ತೆ
ಕಳ) ನ . BRIG ಸ್‌ ನೆರವಾದವರೆಲ್ಲರಿಗೂ ಇಳಣರಿ ಬಲಯ.

ಅಜಿತ್‌ ಕುಮಾರ"
ಪರಿವಿಡಿ
] ಸರಳ ವ್ಯಾಯಾಮ
೧. ನಿತ್ಯ ವ್ಯಾಯಾಮವೂ ಒಂದು ಆಹಾರ -
೨. ಎಲ್ಲಾದರು ಇರು, ಹೇಗಾದರು ಇರು... € |
೩. ನಿಲಯಕ್ಕೊಂದು ನಿಲುವುಗನ್ನಡಿ, |
ಜೀವಕ್ಕೊಂದು ಜೀವಂತ ಕನ್ನಡಿ ೧೧
೪, ನಿಮ್ಮನ್ನು ನೀವು- ೧೫
೫. ತೂಕ ಬೇಕೇ, ತೂರಾಡುವ ಮೈಗೆ? ೨೨
೬, ವ್ಯಾಯಾಮವಿಲ್ಲದೆಯೆ ವ್ಯಾಯಾಮ ೨೯
೭. ಅಂಗಸಾಧನೆಯ ಆರಂಭ ರ೯
೮. ಶರೀರ ಸಂಚಾಲನ ೪೬
೯, ಸಿಂಹಕಟಿ ೫೨
೧೦. ಕಾಲಬಲಕ್ಕೊಂದು ಕಸರತ್ತು : ಕೂಡೇಳು ೫೮
೧೧. ದಂಡ ೬೩
೧೨. ಬಾಳಿನ ಜೀವಾಳ: ಆಟ ೬೭
11 ಗೆಲುವು - ಕಸುವು
೧೩. ಯಾರಿಗೆ ಎಷ್ಟು? ೭೫
೧೪. ವಾಕಿಂಗ್‌ ಹೋಗೋಣ ಬನ್ನಿ ೮೩
೧೫. ಓಟ ೯೨
೧೬. ' ಸೈಕಲ್‌ ಸವಾರಿ ೯೬
(
ತ್ನ್ನ 3
ಬಿನನನೀನಾ ಬ
೪ K

₹್ಞ1 ಸನ ನಮಸ್ಕಾ
(೮. ಶರೀರಮಾದ್ಕಂ ಖಲು ಧರ್ಮಸಾಧನಂ ೧೧೩
೧೯... ಸೂರ್ಯನಮಸ್ಕಾರ ೧೧೮
೨. ಯೋಗಾಭ್ಯಾಸ ೧೨೭
ಸರಳ ವ್ಯಾಯಾಮ
ನಿತ್ಯ ವ್ಯಾಯಾಮವೂ
೧ ಒಂದು ಆಹಾರ

ನಾವು ಶರೀರದ ಕಷ್ಟಗಳನ್ನು ಕಡಿಮೆ ಮಾಡುತ್ತಿದ್ದೇವೆ. ದೇಹದಿಂದ


ಮಾಡುವ ಕೆಲಸಗಳಿಗಾಗಿ ಯಂತ್ರಗಳನ್ನು ತರುತ್ತಿದ್ದೇವೆ. ದಿನದಿನವೂ
ಹೊಸಹೊಸ ಯಂತ್ರಗಳು ಬರುತ್ತಿವೆ, ದೇಹದ ಶ್ರಮ ಕಡಿಮೆಯಾಗು
ತ್ತಿದೆ.
ಆದರೆ ನಮ್ಮ ಓಡಾಟ, ದೇಹಕಷ್ಟ ಕಡಿಮೆಯಾದಂತೆ ಅಂಗಾಂಗಗಳ,
ಅವಯವಗಳ ಕೆಲಸವೂ ಕಡಿಮೆಯಾಗುತ್ತದೆ. ಈ ರೀತಿ ಕೆಲಸವಿಲ್ಲದೆ,
ಶ್ರಮವಿಲ್ಲದೆ ನಮ್ಮ ದೇಹದಲ್ಲಿ ದೋಷಗಳು ಕಾಣಿಸುತ್ತವೆ. ದೇಹದ
ಬೇರೆಬೇರೆ ಭಾಗಗಳಲ್ಲಿ ಇರುವ ಪರಸ್ಪರ ಸಂಬಂಧ, ಹೊಂದಾಣಿಕೆ ತಪ್ಪು
ತ್ತದೆ. ಇದರಿಂದ ನಾವು ಆರೋಗ್ಯವಂತರಾಗಿ ಉಳಿಯಲಾರೆವು. ನಮ್ಮ
ಶಕ್ತಿ ಬೆಳೆಯಲಾರದು.
ಆರೋಗ್ಯವನ್ನು ಕಾಪಾಡಲು ನಾವು ಸ್ವಚ್ಛತೆಯನ್ನು ಪಾಲಿಸುತ್ತೇವೆ.
ಒಳ್ಳೆಯ ಪೌಷ್ಟಿಕ ಆಹಾರ ಸೇವಿಸುತ್ತೇವೆ. ಅನೇಕ ಮುನ್ನೆಚ್ಚರಿಕೆಗಳನ್ನು
ವಹಿಸುತ್ತೇವೆ. ಅನೇಕ ಮಾತ್ರೆಗಳನ್ನು ನುಂಗುತ್ತೇವೆ, ಔಷಧಿಗಳನ್ನು ಕುಡಿ
೪ ಶರೀರ ಶಿಲ್ಪ

ಯುತ್ತೇವೆ. ಆದರೆ ಆದರ್ಶವಾದ ಆರೋಗ್ಯ ನಮ್ಮಲ್ಲನೇಕರಿಗಿಲ್ಲ. ಇದ್ದರೂ


ಅದು ಬಲುದಿನ ಉಳಿಯಬಹುದೆಂದು ಖಂಡಿತವಾಗಿ ಹೇಳಲು ಬಾರದು.
ಇದಕ್ಕೆ ಕಾರಣ ನಮ್ಮೆಲ್ಲ ಪ್ರಯತ್ನಗಳು ಹೆಣರಗಿನವು, ಮೇಲುಮೇಲಿ
ನವು. ಮೂಲಭೂತವಾಗಿ ಮಾಡಬೇಕಾದ ಕೆಲಸ ನಾವು ಮಾಡುವುದಿಲ್ಲ.
ನಮ್ಮ ಆರೋಗ್ಯವನ್ನು ಕಾಪಾಡಲು ಎಲ್ಲ ಅವಯವಗಳಿಗೂ ಕೆಲಸ
ಬೇಕು. ಹೊರಗಿನ ಅಂಗಾಂಗಗಳಿಗೂ ಶ್ರಮ ಬೇಕು; ಶ್ವಾಸಕೋಶ,
ಜಠರ, ನರನಾಡಿಗಳಿಗೂ ವ್ಯಾಯಾಮ ಬೇಕು.
ನಮ್ಮ ಸುತ್ತಲಿನ ವಾತಾವರಣ ಅಶುದ್ಧವಾಗಿದೆ ; ವಾಹನಗಳ
ಓಡಾಟ, ಕಾರ್ಯಾನೆಗಳ ಯಂತ್ರಗಳ ತಿರುಗಾಟದಿಂದ ಗಾಳಿಯಲ್ಲಿ ಕೊಳೆ
ತುಂಬುತ್ತದೆ. ಅನೇಕ ರೋಗಾಣುಗಳು ಗಾಳಿಯಲ್ಲಿ ಮನೆಮಾಡುತ್ತವೆ.
ಇದರಿಂದ ನಾವು ರೋಗಗಳಿಗೆ ತುತ್ತಾಗುವ ' ಭಯವಿದೆ. ಹೀಗಾಗದಂತೆ
ನಮ್ಮ ದೇಹದಲ್ಲಿ ಪ್ರತಿರೋಧ ಶಕ್ತಿ (ತಡೆತ) ಬೆಳೆಸಿಕೊಳ್ಳಬೇಕು. ಒಮ್ಮೆ
ನಮ್ಮ ದೇಹದ ಪ್ರತಿರೋಧ ಶಕ್ತಿ ಕುಗ್ಗಿದರೆ ನಮ್ಮ ದೇಹದಲ್ಲಿ ಸೇರಿದ
ರೋಗಾಣಂಗಳು ಇಂದಲ್ಲ ನಾಳೆ ಬಲವಾಗಬಹುದು ; ನಮಗೆ ಅಪಾಯ
ತರಬಹುದು. ನಾವು ಇಂದು ಆರೋಗ್ಯವಂತರಾಗಿ ಕಾಣಿಸಬಹುದು ; ಆದರೆ
ನಾಳೆ ನಮ್ಮ ಶಕ್ತಿ ಒಮ್ಮೆಲೇ ಕುಗ್ಗಬಹುದು.
ಜೀವನದಲ್ಲಿ ಹೋರಾಟ ಬೆಳೆಯುತ್ತದೆ; ಅನೇಕ ಜವಾಬ್ದಾರಿಗಳಿಂದ
ಬಿಕ್ಕಟ್ಟುಗಳು ಹೆಚ್ಚಾಗುತ್ತವೆ, ನಮ್ಮ ಶರೀರ ಇದರಿಂದ ತಣಿಯುತ್ತದೆ;
ಬಳಲಿ ಬೆಂಡಾಗುತ್ತದೆ. ಶಕ್ತಿಶಾಲಿಯಾದ ವಂತ್ತು ದೃಢವಾದ ಶರೀರ ಹಾಗೂ
ಮನಸ್ಸುಗಳಿದ್ದರೆ ಮಾತ್ರ ನಾವು ಇದನ್ನು ಎದುರಿಸಬಲ್ಲೆವು.
ಶರೀರವು ದೇವರು ನಮಗಿತ್ತ ಒಂದು ಬಹಳ ಒಳ್ಳೆಯ ಯಂತ್ರ. '
ಈ ಯಂತ್ರ ಗಟ್ಟೆಯಾಗಿದ್ದರೆ ಇದರಿಂದ ನಮ್ಮ ಮತ್ತು ಇತರರ - ನಮ್ಮ '
ದೇಶದ -. ಅನೇಕ ಕೆಲಸಗಳನ್ನು ಚೆನ್ನಾಗಿ ಮಾಡಬಹುದು ; ಮಹತ್ಕಾರ್ಯ
ಗಳನ್ನು ಸಾಧಿಸಬಹುದು. ಆದರೂ ಇತರ ಯಂತ್ರಗಳಂತೆ ಈ ಯಂತ್ರವೂ
ದಿನದಿನಕ್ಕೆ ಸವೆಯುತ್ತದೆ. ಆದರೆ ಸವೆಯದಂತೆ ನಾವು ಎಚ್ಚರಿಕೆ ವಹಿಸ
ಬೇಕು. ಪ್ರಯತ್ನಿಸಿದರೆ, ಸವೆಯುವ ಬದಲು ಬೆಳೆಯುವ, ಬಲಶಾಳಿ
ಇ.
ನಿತ್ಯ ವ್ಯಾಯಾಮವೂ ಒಂದು ಆಹಾರ ೫

ಯಾಗುವ ಗುಣವನ್ನು ಅದರಲ್ಲಿ ತರಬಹಂದು. ಆದರೆ ಇದಕ್ಕೆ ವಿಶೇಷ


ಯತ್ನ ಬೇಕು.
ದೇವರು, ನಮ್ಮ ದೇಹದಲ್ಲಿ ಕೊಟ್ಟಿರುವ ಗುಣ, ಶಕ್ತಿಗಳನ್ನು ನಾವು
ಬೆಳೆಸಬೇಕು ; ದೃಢಪಡಿಸಬೇಕು. ಇದಕ್ಕಾಗಿ ನಿತ ಸಾಧನೆ ಬೇಕು; ಆಟ,
ಓಟಗಳು ಬೇಕು. ಇದಕ್ಕಿಂತ ಹೆಚ್ಚಾಗಿ ವ್ಮಾಯಾಮ ಬೇಕು.
ವ್ಯಾಯಾಮದಿಂದ ನಮ್ಮ ದೇಹ ಸಂಪೂರ್ಣವಾಗಿ ಬೆಳೆಯಂತ್ತದೆ.
ಒಳ್ಳೆಯ ಮೈಕಟ್ಟು, ಸುಂದರವಾದ ಆಕಾರ ಬರುತ್ತದೆ. ರೋಗಗಳು ನಮ್ಮ
ಹತ್ತಿರ ಹಾಯಲಾರವು. ದುರ್ಬಲವೆನಿಸುವ ಮುದಿಪ್ರಾಯದ ದಿನಗಳಲ್ಲೂ
ನಾವು “ತರುಣ'ರಾಗಿರುತ್ತೇವೆ ; .ಎಂದರೆ ಯುವಕರಲ್ಲಿರುವ ಲವಲವಿಕೆ
ಆಗಲೂ ನಮ್ಮಲ್ಲಿ ಉಳಿಯುತ್ತದೆ. ನಾವು ದಿವಂಗತ ಮೋಕ್ಷಗುಂಡಂರಂತೆ
ದೀರ್ಫಾಯುಷ್ಕ ಪಡೆಯುತ್ತೇವೆ.
ಬಾಲ್ಕದಿಂದ ಅಥವಾ ತಾರುಣ್ಮದಲ್ಲಿಯಾದರೂ ವ್ಯಾಯಾಮ ಮಾಡ
ದಿದ್ದರೆ ನಮ್ಮ ದೇಹ ದುರ್ಬಲವಾಗಿಯೇ ಉಳಿಯುತ್ತದೆ. ಅನೇಕ ಸಣ್ಣ
ಪುಟ್ಟ ರೋಗಗಳು, ಕೆಮ್ಮು, ಉಬ್ಬಸ, ನಿತ್ರಾಣ ಮುಂತಾದವುಗಳು
ನಮ್ಮನ್ನು ಕಾಡಿಸುತ್ತವೆ. ಜೀವನವೆಲ್ಲ ಡಾಕ್ಟರರ ನಿತ್ಕಗ್ರಾಹಕರಾಗಿ ಉಳಿ
ಯುತ್ತೇವೆ. ನಮ್ಮ ಹಣವೆಲ್ಲ ಔಷಧ, ಉಪಚಾರಗಳಿಗಾಗಿಯೇ ಹೋಗು
ತ್ತದೆ. ಬಡದೇಹದವನು ಸದಾ ಬಡವನಾಗಿಯೇ ಉಳಿಯುತ್ತಾನೆ. ಏಕೆಂದರೆ
ಅವನು ಗಳಿಸಿದ್ದೆಲ್ಲ ಡಾಕ್ಟರರಿಗೆ ಸೇರುತ್ತಿರುತ್ತದೆ.
ಡಾಕ್ಟರರಾಗಿರಲಿ, ವಕೀಲರು, ಉಪಾಧ್ಯಾಯರು, ಲೇಖಕರು, ವಿಜ್ಞಾನಿ
ಗಳಾಗಿರಲಿ ಅಥವಾ ಯಾವುದೇ ಉದ್ಯೋಗದಲ್ಲಿರಲಿ, ನಾವು ಯೋಗ್ಯರಾಗಿ
ಕೆಲಸ ಮಾಡಬೇಕು. ಇದರಿಂದಲೇ ಸಮಾಜಕ್ಕೂ ನಮಗೂ ಒಳಿತಾದೀತು.
ಆಯಾ ಕ್ಷೇತ್ರಗಳಲ್ಲಿ ನಮ್ಮ ಮುದ್ರೆ ಬಿದ್ದೀತು. ನಮ್ಮ ಹೆಸರು ಉಳಿದೀತು.
ಇದಕ್ಕೆ ಚುರುಕಾದ ಬುದ್ಧಿ, ದೃ ಢವಾದ ಮನಸ್ಸು ಮತ್ತು ಲವಲವಿಕೆಯ
ದೇಹ ಅವಶ್ಯಕ.
ನಮ್ಮ ಹಿಂದೆ ಆಗಿಹೋದವರ ಮತ್ತು ಮುಂದೆ ಬರಲಿರುವವರ
ನಡುವಿನ “ಕೊಂಡಿ'ಯಂತೆ ನಾವು. ಹಿಂದಿನವರು ಗಳಿಸಿದ ಜ್ಞಾನ ನಮಗೆ
೬ ಶರೀರ ಶಿಲ್ಪ

ಮೈಗೂಡಬೇಕು, ಆ ಜ್ಞಾನವನ್ನು ಇನ್ನಷ್ಟು ಬೆಳೆಸಿ ನಾವು ಮುಂದಿನವರಿಗೆ


ಕೊಡಬೇಕು. ಇದಕ್ಕೆ ಬೇಕಾದ ಮನಸ್ಸಿನ ಮತ್ತು ದೇಹದ ಶಕ್ತಿ ನಮ್ಮಲ್ಲಿರ
ಬೇಕು. ಇದಿಲ್ಲದಿದ್ದರೆ "ಕೊಂಡಿ'ಯಾಗಿ ನಾವು ಮಾಡಬೇಕಾದ ಕೆಲಸ
ಮಾಡಲಾರೆವು. ಆಗ ನಮ್ಮ ಕರ್ತವ್ಯದಲ್ಲಿ ನಾವು ತಪ್ಪಿದಂತಾಗುತ್ತದೆ.
ಮನಸ್ಸು ಮತ್ತು ದೇಹ ಬೆಳೆಯುವುದಕ್ಕಾಗಿ ನಾವು ಶಾಸ್ತ್ರೀಯ
ಪದ್ಧತಿಯಿಂದ ವ್ಮಾಯಾಮ ಮಾಡಬೇಕು. ನಮ್ಮ ಹಿಂದೆ ಆಗಿಹೋದ
ಹಿರಿಯರು ಅನುಭವದಿಂದ ತಯಾರು ಮಾಡಿರುವ ಪದ್ಧತಿಯೇ ಶಾಸ್ತ್ರೀಯ
ಪದ್ಧತಿ; ಅದನ್ನೇ ವೈಜ್ಞಾನಿಕ ಪದ್ಮತಿ ಎನ್ನಲೂಬಹುದು. ಅದನ್ನು
ಅನುಸರಿಸಿ ನಿತ್ಯ ವ್ಮಾಯಾಮ ಮಾಡಿದರೇನೇ ನಾವು ದೃಢದೇಹಿಗಳಾಗ
ಬಹಂದು. ಒಳ್ಳೆಯ ನಾಗರಿಕರಾಗಿ ನಮ್ಮ ಕರ್ತವ್ಯಗಳನ್ನು ಪೂರೈಸಬಹುದು.
ನಿತ್ಯ ಆಹಾರ, ನಿದ್ರೆ, ವಿಶ್ರಾಂತಿಗಳಂತೆ ವ್ಯಾಯಾಮ ಕೂಡ ನಮ್ಮ ಜೀವ
ನಕ್ಕೆ ಬೇಕೇಬೇಕು.
ಎಲ್ಲಾದರು ಇರು,
೨ ಹೇಗಾದರು ಇರು....

ಆಹಾರಕ್ಕೆ “*ಏಕಾದಶಿ'ಯಾದರೂ ನ್ಯ ಯಾಮದ ಮಟ್ಟಿಗೆ


“ದ್ವಾದಶಿ ವ್ರತ' ಪಾಲಿಸಬೇಕು!

ನಾವು ದೃಢಕಾಯರಾಗಿರಬೇಕು, ಅದಕ್ಕಾಗಿ ವ್ಮಾಯಾಮ ಮಾಡ


ಬೇಕು ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಅದರ ಜತೆ ಅನೇಕ ಭ್ರಮೆ
ಗಳು ಮನವನ್ನು ಆವರಿಸಿ ವ್ಮಾಯಾಮ ಆರಂಭಿಸುವ ವಿಚಾರದಿಂದ ದೂರ
ವಿರುತ್ತಾರೆ.

| “ವ್ಯಾಯಾಮವೆಂದರೆ ಗರಡಿಮನೆಯಲ್ಲೇ ಮಾಡಬೇಕಾದ ಸಂಗತಿ;


ಅದನ್ನು ಗುರುಮುಖೇನ ಅಭ್ಯಸಿಸಬೇಕು ; ಅದಕ್ಕೆ ಅನೇಕ ಸಲಕರಣೆಗಳು
ಬೇಕು; ಅವುಗಳನ್ನು ಹೊಂದಿಸಿಕೊಳ್ಳುವುದು ಕಷ್ಟ; ವಿಶಾಲವಾದ, ಗಾಳಿ
ಬೆಳಕು ಧಾರಾಳವಾಗಿರುವ ಕೊಠಡಿ ಇಲ್ಲವೇ ಪ್ರಾಂಗಣ ಬೇಕು; ಗಂಟೆ
ಗಟ್ಟಲೆ ಅಭ್ಯಾಸ ಮಾಡಬೇಕು. ಹಾಲು, ಹಣ್ಣು ಮುಂತಾದ ಪೌಷ್ಟಿಕವಾದ
ಬೆಲೆಬಾಳುವ ಆಹಾರ ಪದಾರ್ಥಗಳನ್ನು ಸೇವಿಸಬೇಕಂ.”
೮ ಶಗೀರ ಶಿಲ್ಪ

ಇಂತಹ ಕಲ್ಪನೆಗಳಿಂದ ಭೀತರಾಗಿ “ವ್ಯಾಯಾಮ” ಎಂದೊಡನೆ


ಹಿಂದೆಗೆಯಂವ ಜನರಣ ಇದ್ದಾರೆ!
ಆದರೆ ಈ ಕಲ್ಪನೆಗಳಲ್ಲಿ ಸತ್ಕಾಂಶವೇನೂ ಇಲ್ಲ! ಶಾರೀರಿಕ ಶಿಕ್ಷಣವೇ
ಜೀವನದ ಪ್ರಮುಖ ವ್ಮವಹಾರವೆಂದು : ತಿಳಿಯುವ *ವಸ್ತಾದ್‌',
“ಪೈಲ್‌ವಾನ್‌?ರಿಗೆ ಮೇಲಿನ ಎಲ್ಲ ಅನುಕೂಲತೆಗಳು ಬೇಕು ; ದೃಢ ಶರೀರ
ಪಡೆಯುವ ಇಚ್ಛೆಯಿಂದ ವ್ಮಾಯಾಮ ಮಾಡಬಯಸಂವವರಿಗೆ ಈ ಎಲ್ಲ
"ಸ್ಮಾವರ - ಜಂಗಮ” ಸರಂಜಾಮುಗಳು ಬೇಕಾಗಿಲ್ಲ.
ಪ್ರತಿನಿತ್ಯ ಇಪ್ಪತ್ತು -ಮೂವತ್ತ ನಿಮಿಷಗಳ ಅವಕಾಶ ಮತ್ತಾ
ಎರಡಂ ಹೊತ್ತು ಸಾಮಾನ್ಯ ಆಹಾರ ಪಡೆಯಬಲ್ಲ ವ್ಯಕ್ತಿ ತನ್ನ ಮನೆ
ಯಲ್ಲೇ ೮೬೬ ವಿಸ್ತೀರ್ಣದ ಜಾಗದಲ್ಲಿ ವ್ಮಾಯಾಮ ಮಾಡಬಲ್ಲ.
ಬುದ್ಧಿ ಜೀವಿಗಳಾದ ಅನೇಕರು ವ್ಯಾಯಾಮ “ಹಾಥ್‌ ಪೈರ್‌ ಕಾ
ಕಾಮ್‌” ಮಾಡುವ ಶ್ರಮಜೀವಿಗಳಿಗೇ ಅವಶ್ಯ, ತಮಗಲ್ಲ ಎಂದು ವಾದಿ
ಸಂವುದೂ ಉಂಟು; ಇದು ಜೀವನದ ವಾಸ್ತವಿಕತೆಯಿಂದ ದೂರ ಓಡಲು
ಹುಟ್ಟಿಸಿಕೊಂಡ ಸುಳ್ಳು ತತಜ್ಞಾನ; ತಮ್ಮ ಆಲಸ್ಕಕ್ಕಿತ್ತ “ತಾತ್ವಿಕ
ಅಧಿಷ್ಕಾನ', ಅಷ್ಟೆ. ಬಂದ್ಧಿಯೂ ಶರೀರದ ಭಾಗವಾಗಿರಂವುದರಿಂದ
ಬುದ್ಧಿಯ ಬೆಳವಣಿಗೆಗೂ ವ್ಮಾಯಾಮ ಅನಿವಾರ್ಯ, ಬುದ್ಧಿಯ ಚೇತನ
ಕ್ಕಾಗಿಯೇ ನಮ್ಮ ಪೂರ್ವಜರು ಕೆಲವು ಶಾರೀರಿಕ ವ್ಯಾಯಾಮಗಳನ್ನು
ರೂಪಿಸಿದ್ದಾರೆಂದು ನಮಗೆ ತಿಳಿದಿದೆಯೆ?
ವ್ಯಾಯಾಮ ಮಾಡಹೊರಟವನನ್ನು ಕಾಡುವ ಇನ್ನೊಂದು
ಸಂಕೋ
- ಸಂಗಡಿಗರ
ಚ ಮತ್ತು ಮನೆಮಂದಿಯ ಮುಂದೆ ಅಂಗಸಾಧನೆ
ಮಾಡಲು ಆಗುವ ನಾಚಿಕೆ. ಆದರೆ ದೃಢಕಾಯನಾಗಬೇಕಾದವನಿಗೆ ದೃಢ
ನಿಶ್ಚಯ ಬೇಕು; ಸಣ್ಣಪುಟ್ಟ ಅಡಚಣೆಗಳನ್ನು ಅವನು ಬದಿಗಿರಿಸಬೇಕು;
ವಾಸ್ತವಿಕವಾಗಿ ವ್ಯಾಯಾಮ ಮಾಡದವರೇ ವ್ಯಾಯಾಮ ಮಾಡುವವನನ್ನು
ಕಂಡು ನಾಚಬೇಕಲ್ಲದೇ ತದ್ವಿರುದ್ಧವಲ್ಲ!
ಶರೀರಪ್ರಕೃತಿ ಮತ್ತು ಅಂಗಾಂಗಗಳ ಸ್ಥಿತಿಗತಿಗೆ ಅನುಗುಣವಾಗಿ ನಾವು
ಯಾವ ವಿಧದ ವ್ಮಾಯಾಮ ಮಾಡಬೇಕೆಂದು” ನಿರ್ಣಯಿಸಬೇಕು. ಆರೋಗ್ಯ
ಎಲ್ಲಾದರು ಇರು, ಹೇಗಾದರು ಇರು.... ೯

ಸುಧಾರಿಸಲು, ಇಲ್ಲವೇ ಕಾಪಾಡಲು ಮಾಡಬೇಕಾದ ವ್ಯಾಯಾಮದ ಪದ್ಧತಿ


ಸರ್ವರಿಗೂ ಸಾಮಾನ್ಮವಾದುದು. (ವೃದ್ಧರಿಗೆ ಮತ್ತು ರೋಗಿಗಳಿಗೆ
ಮಾತ್ರ ಇದು ಸಂಬಂಧಿಸಿಲ್ಲ).
ಇದರ ಹೊರತಾಗಿ ಅನ್ಯಾನ್ಯ ಉದ್ದೇಶಗಳಿಗಾಗಿ ವ್ಯಾಯಾಮ
ಮಾಡುತ್ತಾರೆ : -
೧) ಎದ್ದುಕಾಣುವ ಮೂಳೆಗಳನ್ನು ಮುಚ್ಚಲು,
೨) ಸ್ಕೂಲ ಶರೀರದ ತೂಕ ಇಳಿಸಲು,
೩) ಎತ್ತರ ಹೆಚ್ಚು ಮಾಡಿಕೊಳ್ಳಲು,
೪) ಶಕ್ತಿ ಗಳಿಸಲು,
೫) ವಿಶಿಷ್ಟ ರೋಗ ನಿವಾರಣೆಗಾಗಿ,
೬) ವಿಶಿಷ್ಟ ಅಂಗಾಂಗಗಳ ಬೆಳವಣಿಗೆಗಾಗಿ
(ಉದಾ : ತೊಡೆ, ತೋಳು),
೭) ಎತ್ತರ, ಗಾತ್ರಗಳ ಹೊಂದಾಣಿಕೆಗಾಗಿ,
೮) ಪ್ರಮಾಣಬದ್ಧ ಬೆಳವಣಿಗೆಗಾಗಿ.
(ಇದಲ್ಲದೆ ಸ್ತ್ರೀಯರಿಗೂ ವಿಶೇಷ ವ್ಯಾಯಾಮಗಳಿವೆ.)
ಲವಲವಿಕೆ, ಚಟುವಟಿಕೆ, ಉಲ್ಲಾಸ, ಮನರಂಜನೆ, ಪ್ರದರ್ಶನ, ವಿಶೇಷ
ಪ್ರಾವೀಣ್ಮತೆ ಮುಂತಾದ ಸಂಗತಿಗಳಿಗಾಗಿಯೂ ಅನೇಕ ಬಗೆಯ ವ್ಯಾಯಾಮ
ಗಳುಂಟು.
ಈ ವಿವಿಧ ವ್ಯಾಯಾಮ ಪ್ರಕಾರಗಳ ಪರಿಚಯ, ಅವುಗಳ ಉಪ
ಯೋಗ, ಮತ್ತು ಪೌರ್ವಾತ್ಮ ಹಾಗೂ ಭಾರತೀಯ ಪದ್ಧತಿಗಳ ಸಾಮಾನ್ಯ,
ತಿಳುವಳಿಕೆಯಾದರೂ ಎಲ್ಲರಿಗೂ ಇದ್ದರೆ ಒಳಿತು.
ಇದೆಲ್ಲವನ್ನೂ ತಿಳಿಯುವ ಮೊದಲು ವ್ಯಾಯಾಮ ಮಾಡುವ ಸಂಕಲ್ಪ
ಮಾಡಬೇಕು. ಆದರೆ ಈ ಸಂಕಲ್ಪಕ್ಕೆ ಬರುವ ಅಡಚಣೆಗಳು ಅಪಾರ!
ಪರೀಕ್ಷೆಗಾಗಿ ಅಭ್ಯಾಸ ಆರಂಭಿಸಬೇಕೆನ್ನುವ ವಿದ್ಯಾರ್ಥಿಯ ಸಂಕಲ್ಪಕ್ಕೆ ಬರುವ
ಅಡಚಣೆಗಳಿಗೆ ಇವನ್ನು ಹೋಲಿಸಬಹುದು. ಸೆಪ್ಟೆಂಬರ್‌ ೧ಕ್ಕೆ ಓದಲು
ಆರಂಭಿಸಬೇಕೆಂದು ನಿಶ್ಚಯಿಸುವ ವಿದ್ಯಾರ್ಥಿಗೆ ಮನೆಗೆ ಬಂದ ಅತಿಥಿಗಳ
೧೦ ಶರೀರ ಶಿಲ್ಪ

ಹಿಂದೆ ಓಡಾಡುವುದರಿಂದ, "ಶಿಷ್ಟಾಗಮನೇ ಅನಧ್ಮಯನಃ'. ಮುಂದಿನ


ಸೋಮವಾರ ಕಾಲೇಜಿನಲ್ಲಿ ಸಮಾರಂಭ; ಅನಂತರದ ಸೋಮವಾರ ಅಮಾ
ವಾಸ್ಮೆ, ಶುಭದಿನವಲ್ಲ; ಅದರ ಮುಂದಿನ ಸೋಮವಾರ ತಿಂಗಳ ಕೊನೆ...
ಬೇಡ. ಡಿಸೆಂಬರ್‌ ೪. ಗೀತಾ ಜಯಂತಿ
- ಅರ್ಜುನನ ಯುದ್ಧಸಂಕಲ್ಪದ
ಪುಣ್ಮ ಪರ್ವ; ಆದರೆ ಆ ದಿನ ಗಡಿಯಾರ ಕೈಕೊಡಬೇಕೆ ? ಅದರ ಮುಂದಿನ
ದಿನಗಳಲ್ಲಿ ಅಸಾಧ್ಯ ಛಳಿ ಬೆಳಗ್ಗೆ ಎದ್ದರೆ ಕಾಯಿಲೆ ಬಿದ್ದರೆ? ರಾತ್ರಿ ಓದ
ಬೇಕೆಂದು ಅಜ್ಜಿಯ ಸಲಹೆ ಬೇರೆ; ಇಲ್ಲಾದರೂ ಅಜ್ಜಿಯ ಮಾತು ಕೇಳ
ಬೇಡವೆ? ಹೀಗೆಲ್ಲಾ ಸತ್ಕಾರ್ಯಕ್ಕೆ ಅನಂತ ವಿಘ್ನಗಳು....!
ಆದರೆ ಇವೆಲ್ಲ ಮನಸ್ಸಿನ ದುರ್ಬಲತೆಯಿಂದಾದ ಅಡಚಣೆಗಳಲ್ಲದೆ
ವಾಸ್ತವವಾದುವಲ್ಲ. ಸತ್ಸಂಕಲ್ಪಕ್ಕೆ ಪ್ರತಿ ದಿನವೂ ಸುದಿನ, ಪ್ರತಿ ಕ್ಷಣವೂ
ಪುಣ್ಮಘಟಿ.
"ಅಲ್ಪ ಶ್ರಮದಿಂದ ಅಪಾರ ಶ್ರೇಯ” ಪಡೆವ ತತ್ವ ಜೀವನದ ಎಲ್ಲ
ಕ್ಷೇತ್ರಗಳನ್ನು ವ್ಯಾಪಿಸಿದೆ. :ನಾಲ್ಕಾಣೆ ದಕ್ಷಿಣೆಗೆ ಪ್ರತಿಫಲವಾಗಿ ಅಪಾರ
ಧನ ಬೇಕು; ಒಂದೆರಡು ರೂಪಾಯಿಯ “ಗೈಡ್‌” ಒಮ್ಮೆ ಓದಿ ಪ್ರಥಮ
ವರ್ಗದಲ್ಲಿ ಉತ್ತೀರ್ಣನಾಗಬೇಕು ; ವ್ಮಾಯಾಮದ ಬಗ್ಗೆ ಲೇಖನ ಓದಿ ಓದಿ
ಅಥವಾ ವ್ಮಾಯಾಮ ಮಾಡುವ ಇಚ್ಛೆಯನ್ನು ಮನದಲ್ಲಿ ತಂದುಕೊಂಡು
ತಮ್ಮ ಸಡಿಲಾಗುತ್ತಿರುವ ಬಟ್ಟೆ ಬಿಗಿಯಾಗಬೇಕು ಎನ್ನುವವರ ಸಂಖ್ಯೆ
ಅಪಾರ. ಶಾರೀರಕ ದೃಢತೆ, ಸೌಷ್ಠವ, ಈ ರೀತಿ ಅಗ್ಗವಾಗಿ. ಗಳಿಸುವ
ವಸ್ತುವಲ್ಲ; ಅದಕ್ಕೆ ಹತ್ತಿರದ ಅಡ್ಡಹಾದಿಯಿಲ್ಲ; ಅಂಗಸಾಧನೆಯೊಂದೇ
ಅದಕ್ಕೆ ರಾಜಮಾರ್ಗ, No gain without pain and price.
ಯಾವುದೇ “ಶುಭಾಶುಭ” ಕಾರ್ಯದ ಕಾರಣದಿಂದ ನಾವು ಆಹಾರ
ಬಿಟ್ಟಿರಬಹುದು; ಆದರೆ ವ್ಯಾಯಾಮವನ್ನು ಎಂದಿಗೂ ಬಿಡಬಾರದು.
ನಿಲಯಕ್ಕೊಂದು ನಿಲುವುಗನ್ನಡಿ,
ಷಿ ಜೀವಕ್ಕೊಂದು ಜೀವಂತ ಕನ್ನಡಿ

ಸರ್ವಪ್ರಿಯವಾಗುವ, ಸಾರ್ವತ್ರಿಕವಾಗುವ ಭಾಗ್ಕ ಜಗತ್ತಿನಲ್ಲಿ ಕೆಲವೇ


ಸಂಗತಿಗಳಿಗೆ. ಹೀಗೆ ಸರ್ವಸ್ಪರ್ಶಿಯಾಗಿ ಸರ್ವವ್ಮಾಹಿಯಾಗಿ ಪಸರಿಸಿರುವ,
ಎದ್ದುಕಾಣುವ ವಸ್ತು ಕನ್ನಡಿ. ಮನೆಗಳಲ್ಲಿ, ಮಂದಿರಗಳಲ್ಲಿ, ವಸತಿಗೃಹ
ಗಳಲ್ಲಿ, ವಾಹನನಿಲ್ದಾಣಗಳಲ್ಲಿ, ಅಂಗಡಿಗಳಲ್ಲಿ, ಆಸ್ಪತ್ರೆಗಳಲ್ಲಿ, ಉಪಹಾರ
ಗೃಹಗಳಲ್ಲಿ, ಆಯುಷ್ಯರ್ಮಶಾಲೆಗಳಲ್ಲಿ, ವಾಹನಗಳಲ್ಲಿ, ವಿಹಾರಕೇಂದ್ರ
ಗಳಲ್ಲಿ
- ಎಲ್ಲೆಲ್ಲೂ ಕನ್ನಡಿಯೇ. ಪ್ರವಾಸಿಯ ಗಂಟಿನಲ್ಲಿಯ ಉಂಟು.
ಭಕ್ತನ ಭರಣಿಯಲ್ಲಿ(ಪೂಜಾ ಪೆಟ್ಟಿಗೆ ಯೂ ಉಂಟು. ಕರಿಯನ ಕಡೆಯೂ
ಉಂಟು; ಬಿಳಿಯನ ಬಳಿಯೂ ಉಂಟು. ವಾಯುಗುಣ, ಭಾಷೆ, ಬಣ್ಣ,
ಲಿಂಗ, ದೂರಗಳ ವೃತ್ಶ್ಕಾಸಗಳನ್ನು ಮಾರಿದ್ದು ಕನ್ನಡಿ.
ಇಡೀ ಮಾನವಕೋಟಿಯನ್ನೇ ಒಟ್ಟಿಗೆ ಸೇರಿಸಬೇಕಾದರೆ, ಕನ್ನಡಿಯಂ
ಬಳಕೆಯನ್ನೇ. ಸದಸ್ಮತ್ವದ ನಿಯಮಂವನ್ನಾಗಿಟ್ಟರೆ ಸಾಕು. ಆಗ ಮಾನವನನ್ನು
ಏಕಸೂತ್ರದಲ್ಲಿ ಪೋಣಿಸಬಹುದು; ಒಂದೇ ವಿಚಾರದಿಂದ ಹೆಣೆಯಬಹುದು.
ಆದರೆ ಈ ಭಾಗ್ಯ ದರ್ಪಣಕ್ಕೇಕೆ ಬಂತು? ಅದರ ಸ್ನಭಾವದಿಂದ; ಪಕ್ಷಪುತ
೧೨ ಶರೀರ ಶಿಲ್ಪ

ರಹಿತ ಪ್ರವೃತ್ತಿಯಿಂದ. ಪ್ರತಿಯೊಬ್ಬನಿಗೂ ಆಸೆ ಮೂಡಿಸುವ ಯಂತ್ರ,


ತನ್ನ ಬಗ್ಗೆ ತಿರಸ್ಕಾರವನ್ನು ದೂರ ಸರಿಸುವ ತಂತ್ರ, ತನ್ನನ್ನು ಗುಲಗಂಜಿ
ತೂಕದಷ್ಟೂ ವ್ಮತ್ಮಾಸವಿಲ್ಲದೆ ತೋರಿಸುವ ಸಾಧನ ಎಂದರೆ ಕನ್ನಡಿ.
ಮೂದಲಿಸಿದ ಮೊಗವನ್ನೂ ಮುದ್ದಾಗಿ ಕಾಣಿಸುವ ಉಪಕರಣ.
ಪೋಲೀಸ್‌ ಠಾಣೆಗಳಲ್ಲೂ ಸೇನಾ ಕೇಂದ್ರ ಗಳಲ್ಲೂ ನಿಲುವುಗನ್ನಡಿಗಳು
ಇರುತ್ತವೆ. ಯೋಧ ನಿಂತು ತನ್ನನ್ನು ತಾನು ಅಳೆಯಬೇಕು. ಆಜ್ಞಾ
ಪಾಲನೆಗೆ ಅಣಿಯಾದೆನೇ ? ನಿಯಮಪಾಲನೆಗೆಸಜ್ಜಾದ
ಸ ೆನೇ? ದಕ್ಷತೆಗೆ ಸಿದ್ಧ
ನಾದೆನೇ? ಅಪೇ ಕ್ಷೆಗೆ ಎಟುಕುವಂತೆ, ನಿರೀ ಕ್ಷೆಗೆ ನಿಲುಕುವಂತೆ ತಯಾ
ರಾದೆನೇ? - ಎಂದು ಲೆಕ ಹಾಕಲು ಅದು ಉಪಯೋಗಿ.
ಕನ್ನಡಿ ಈಗ ಕೇವಲ ವೇಷಭೂಷಣ, ಆಭರಣಗಳನ್ನು ಧರಿಸಿ
ದ್ದನ್ನು
ಕಾಣಲು ಮಾತ್ರ ಉಪಯೋಗವಾಗುತ್ತಿದೆ. ಬಾಹ್ಮ
ಸಂಗತಿಗಳಿಂದ ಅಲಂಕೃತ
ವಾಗಲು, ಅವುಗಳಲ್ಲಿನ ದೋಷಗಳನ್ನು ತಿದ್ದಲು
ಹಲವರು ಉಪಭೋಗ
ಸುವರು. ಈ ಉಪಯೋಗ ಕೇವಲ ಸಾಮಾನ್ಯ ಮಟ್ಟದ್ದು
. ಆದರೆ
ನಿಜವಾಗಿ ಕನ್ನಡಿಯ ಉಪಯೋಗ ಬಹಳ ಮಹತ್ವ ದ್ವಿದ
ೆ. ನಿಲುವುಗನ್ನ ಡಿಯ
ನಿಲಯಕ್ಕೊಂದು ನಿಲುವುಗನ್ನಡಿ, ಜೀವಕ್ಕೊಂದು ಜೀವಂತ ಕನ್ನಡಿ ೧೩

ಮುಂದೆ ಹೋಗಿ ನಿಂತುಕೊಳಿ ೨) ಕನಿಷ್ಟ ವಸ್ತ್ರಗಳನ್ನು ಧರಿಸಿ, ಅಲಂಕಾರ


ರಹಿತರಾಗಿ, ಆಭರಣಶೂನ್ಮರಾಗಿ ಹೋಗಿ ನಿಲ್ಲಿ. ಅದೋ ನೋಡಿ, ಕಾಣುವು
ದೇನು? ಉಬ್ಬಿದ ಉದರ, ಕುಗ್ಗಿದ `ಭುಜ, ಸೊರಗಿದ ಎದೆ, ತಿರುಗಿದ ಕ್ಕೆ,
ವಾಲಿದ ಮೈ, ಬಾಗಿದ ಬೆನ್ನು. ಇದು ಸಹಜವಾದದ್ದಲ್ಲ, ಅಪ್ಪಾಕೃತಿಕ
ವಾದದ್ದು. ಇದನ್ನು ಹೋಗಲಾಡಿಸಂವುದಕ್ಕಾಗಿ ನಿಶ್ಚಯಿಸುವುದೇ ಆ
ಮಹತ್ವದ ಉಪಯೋಗ. ಶರೀರವನ್ನು ಮಾಟವಾಗಿ ತಿದ್ದುವುದೇ ಕರ್ತವ್ಯ.
ಶರೀರವನ್ನು ಸುಧಾರಿಸುವ, ಪ್ರಮಾಣಬದ್ಧವಾಗಿ ಮಾಡುವ ಶಿಲ್ಪಿ
ನಾವಾಗಬಾರದೇಕೆ? ಅದಕ್ಕಾಗಿ ಆರಿಸಿದ ವ್ಯಾಯಾಮ ಅವಶ್ಯಕ.
ಅದಕ್ಕೆಂದೇ ವ್ಮಾಯಾಮಕ್ಕೆ ಶರೀರ ಶಿಲ್ಪ ಶಾಸ್ತ್ರವೆಂದು ನಾಮಧೇಯ.
ಶರೀರದ ಎಲ್ಲ ಬಾಧೆಗಳಿಗೂ ಅನಾರೋಗ್ಯಕ್ಕೂ ಮೂಲವೆಂದರೆ ಈ
ದೋಷಪೂರ್ಣ ರಚನೆ. ಆದ್ದರಿಂದ ಈ ರಚನೆಯಲ್ಲಿನ ದೋಷವನ್ನು
ಗುರುತಿಸುವುದೇ ಒಂದು ಮಹತ್ವದ ಅಂಶ. ಗುರುತಿಸಿದನಂತರ ಅದರ
ನಿವಾರಣೆಗಾಗಿ ನಿತ್ಕ ಪ್ರಯತ್ನಿಸುವುದು ಮತ್ತೂ ಮಹತ್ವದ್ದು. ಸುಧಾರಿಸಿದ
ಸ್ಥಿತಿಯನ್ನು ಉಳಿಸಿಕೊಳ್ಳುವುದು ಮತ್ತಷ್ಟು ಮಹತ್ವದ್ದು. ಇವೆಲ್ಲಕ್ಕೂ
ಅಧಿಕ ನೆರವು ಕೊಡುವ ವ್ಯಾಯಾಮಗಳನ್ನು ಆರಿಸಬೇಕು.
ಕನ್ನಡಿ ಕೇವಲ ಬಾಹ್ಮ ವಸ್ತುಗಳಿಂದ ಸಜ್ಜಿತ ಶರೀರದ ಅಂದವನ್ನು
ಅಳೆಯುವ ಸಾಧನವಷ್ಟೇ ಅಲ್ಲ. ಶರೀರ ಸೌಷ್ಟವವನ್ನು ವೃದ್ಧಿಸಲು ಪ್ರೇರಣೆ
ನೀಡುವ ಗುರುವೂ ಆಗಿದೆ. ಈ ವರೌನ ಗುರುವಿನ ಮಾತನ್ನು ಅಳೆಯುವ
ಮನವೂ ನಮ್ಮದಾಗಬೇಕು.
ಶರೀರ ಸುಧಾರಣೆಗಾಗಿ ಕನ್ನಡಿ ನೋಡುವುದೇ ವಾಡಿಕೆಯಾಗಲಿ.
ಮನೆಮನೆಗಳಲ್ಲೂ ನಿಲುವುಗನ್ನಡಿ ಇರಲಿ. ಶರೀರ ಶಿಲ್ಪ ಶಾಸ್ತ್ರದ ಆರಾಧಕರು
ಎಲ್ಲೆಲ್ಲೂ ಸಿಗಲಿ. ಈ ಕನ್ನಡಿ ನೆಲದಿಂದಲೂ ಇರಲಿ, ಶಿರದ ಮೇಲಕ್ಕೂ
ಚಾಚಿರಲಿ. ಆಗ ಅದರ ಪೂರ್ಣ ಉಪಯೋಗ. ಮರದ ಚೌಕಟ್ಟು ಇಲ್ಲದ,
ಕಬ್ಬಿಣದ ಕೊಂಡಿಗಳಿಂದ ಹಿಡಿದ ಬರಿಯ ಕನ್ನಡಿ ಹೆಚ್ಚು ಅನುಕೂಲ.
ಮುಂಬರುವ ಸೌಷ್ಟವಕ್ಕಾಗಿ, ಇಂದು ದೋಷ ತೋರಿಸುವ ದಾರಿದೀಪ
ಇದಾಗಲಿ. ಅಡ್ಡದಾರಿಗೆಳೆಯದ ಕೈಮರ ಕನ್ನಡಿಯಾಗಲಿ.

>
೧೪ ಶರೀರ ಶಿಲ್ಪ

ಆದರೆ ಈ ಕನ್ನಡಿಯ ಕೊರತೆ ಒಂದೇ. ಮೈಯನ್ನು ಗಂರಂತಿಸ


ಬಲ್ಲುದು. ಮನವನ್ನು ಅಳೆಯಲಾರದು. ಮನವನ್ನೂ ಪ್ರತಿಬಿಂಬಿಸುವ
ಕನ್ನಡಿ ಸಿಕ್ಕಿದರೆ ಮಾನವ ಅದೆಷ್ಟು ಭಾಗ್ಮಶಾಲಿ! ಆದರೆ ಅದು ಸಿಗದಿರುವ
ವಸ್ತುವಲ್ಲ. ಅದು ಹೊಳಪುಗೊಂಡ ಒಡೆಯಂವ ಕನ್ನಡಿಯಲ್ಲ. ಅದು
ಜೀವಂತ ಕನ್ನಡಿ. ಸತತ ಸಾಧನೆಯ ಶಿಶುವಾಗಿ ಬೆಳೆದುಬಂದ ಕನ್ನಡಿ.
ಮನವನ್ನು ಅಳೆಯುವ ಕನ್ನಡಿ. ಮಾತನಾಡುವ ಕನ್ನಡಿ. ಶರೀರವೇ
ಅದರ ಚೌಕಟ್ಟು. ಸಾಧನೆಯೇ ಅದರ ಹೊಳಪು. ಆದರೆ ಇಲ್ಲೂ ಅಷ್ಟೆ;
ಮುಚ್ಚಿದ ಮನವನ್ನು ಪ್ರತಿಬಿಂಬಿಸುವುದಿಲ್ಲ. ತೆರೆದ ಮನವನ್ನು ತೋರಿಸುವ
ಕನ್ನಡಿ. ಈ ಕನ್ನಡಿಗೆ ಸ್ವಾರ್ಥವಿಲ್ಲ, ಮತ್ಸರವಿಲ್ಲ. ಇದರಿಂದಲೇ ಆ
ನಾಣ್ಮುಡಿ--"ನಿಲಯಕ್ಕೊಂದು ನಿಲುವುಗನ್ನಡಿ, ಜೀವಕ್ಕೊಂದು ಜೀವಂತ
ಕನ್ನಡಿ.
ಯಾರಾದರೂ ಮಾರ್ಗದರ್ಶಕ ಅಥವಾ “ಆಪ್ತ'ನೇ ಆ ಜೀವಂತ
ಕನ್ನಡಿ.
ಹ್ಮ
೪ ನಿಮ್ಮನ್ನು ನೀವು --

- ಪ್ರಶ್ನಿಸಿಕೊಳ್ಳಿ. ಪತ್ತೆ ಹಚ್ಚಿ. ಇತ್ತೀಚೆಗೆ ಕ್ರೀಡೆಗಳಲ್ಲಿ ಮೈಮನ


ಗಳನ್ನು ಬಿಚ್ಚಿ ಆಡುವ ಹವ್ಮಾಸ ನಿಮಗೆ ಕಡಿಮೆ ಆಗಿದೆಯೆ? ಲೆಕ್ಕಕ್ಕುಂಟು
ಆಟಕ್ಕಿಲ್ಲ ಎಂದೆಣಿಸುವ ಕಾಲ ಸನ್ನಿಹಿತವಾಗಿದೆಯೆ ? ಆಟ ಆಡುವ
ಬದಲು ನೋಡುವ ಆಸಕ್ತಿ ಹೆಚ್ಚುತ್ತಿದೆಯೆ ? ನೋಡುವ ಬದಲು
ಅದರ ಬಗ್ಗೆ ಓದುವ ಅಥವಾ ಬಾನುಲಿಯಲ್ಲಿ ಕೇಳುವ ಕುತೂಹಲ
ಕೆರಳಿದೆಯೆ ? ಆಟ ಆಡಿ ಬೆವರು ಸುರಿಸಿ, ಬಟ್ಟೆ ಕೆಡಿಸಿಕೊಂಡು ಬಂದವರ
ಬಗ್ಗೆ ತಿರಸ್ಕಾರ ಮೂಡುತ್ತಿದೆಯೇ? "ಈ ಎಲ್ಲಾ ಚಟಗಳಿಂದ ದೂರವಿರುವ
ಸಂಭಾವಿತ, ಸಜ್ಜನ ನಾನು' ಎಂದು ನಿಮ್ಮ ಬಗ್ಗೆ ನೀವು ಎಣಿಸಲು ಪ್ರಾರಂಭ
ವಾಗಿದೆಯೆ ?
ನಿಂತು ನೆಲ ಮುಟ್ಟಲು ಪ್ರಯತ್ನಿಸಿದರೆ ನೆಲ ದೂರ ಹೋದಂತೆ ಭಾಸ
ವಾಗುತ್ತದೆಯೆ ? ಮಹಡಿಯ ಮೇಲೆ ಹೋಗಲು ಮನಸ್ಸು ಒಲ್ಲೆ
ಎನ್ನುತ್ತದೆಯೆ ? ಹೋಗಲೇಬೇಕಾದಾಗ "ಲಿಫ್ಟ್‌ ಇದ್ದಿದ್ದರೆ' ಎಂದು
ಅನ್ನಿಸುತ್ತದೆಯೆ ?' ಬೇರೆ ಯತ್ನವಿಲ್ಲದೆ ಮೆಟ್ಟಲು ಹತ್ತುವಾಗ ಕೈಪಿಡಿಯ
೧೬ ಶರೀರ ಶಿಲ್ಪ

ಮೇಲೆ ಭಾರ ಬಿಟ್ಟು ಮೇಲೇರುವಿರಾ? ತಕ್ಷಣ ಏಳಲೇಬೇಕಾದಾಗ ಅಂತಹ


ಪ್ರಸಂಗವನ್ನು ಶಪಿಸುವ ಇಚ್ಛೆಯಾಗುವುದೆ? ನಿಂತಿದ್ದಾಗ ಪಾದಗಳನ್ನು
ನೋಡಲು ಶ್ರಮ ಆಗುವುದೆ? ನಡೆಯುವಾಗ ಪಾದಗಳು ದಾರಿಯಲ್ಲಿ
ತೂರಾಡುವುವೆ? ಅಥವಾ ನೆಲದ ಮೇಲೆ ಇಟ್ಟಾಗ ನೆಲ ಕಚ್ಚಲು ಸಮಯ
ಬೇಕಾಗುವುದೆ ? ನೆಲ ಕಚ್ಚಿದ ಮೇಲೂ ಕಂಪನ ಸುಧಾರಿಸಲು ಬುದ್ಧಿಯ
ಉಪಯೋಗ ಬೇಕೆ? ಅನಿವಾರ್ಯವಾಗಿ ಓಡಿಬಂದು ಬಸ್ಸು ಹತ್ತಿದಾಗ
ಕಂಡಕ್ಟರನ )ಶ್ನಗೆ ಉತ್ತರ ಕೊಡಲು ತಡ ಮಾಡಬೇಕೆ? ಹತ್ತಾರು
ಮಂದಿಗೆ ಊಟಕ್ಕೆ ಬಡಿಸಿದನಂತರ ವಿಶ್ರಾಂತಿ ಬೇಕಾದೀತೆ? ತನ್ನ ಹಸು
ಗೂಸನ್ನು ಎತ್ತಿ ಕೊಳ್ಳೆಯ ಮನಸ್ಸಿನಲ್ಲಿ ನಿರ್ಧಾರ ಮಾಡಬೇಕೆ ?
ಈಗ ಪ್ರಾಮಾಣಿಕವಾಗಿ ಉತ್ತರ ಕೊಡಿ. ಇನ್ನೊಬ್ಬರಿಗೆ ತಿಳಿಸ
ಬೇಕಾಗಿಲ್ಲ. ಮೊದಲನೆ ಪ್ರಶ್ನೆಮಾಲಿಕೆಗೆ "ಹೌದು' ಎಂದು ಉತ್ತರಿಸುವವರು
ಎಚ್ಚರಿಕೆ ವಹಿಸಬೇಕು. ಅವರಿಗೆ ಇಂದೇ ಸುಸಂಧಿ- ಮತ್ತೆ ಮುಂದಿನ
ಪ್ರಶ್ನೆ
ಗಳಿಗೆ "ಹಹೌದು” ಎಂದು ಉತ್ತರಿಸುವ ಪ್ರಸಂಗ ಬಾರದಿರುವಂತೆ ಕಾಯ್ದು
ಕೊಳ ನ
ರಿ ಎರಡನೆ ಗುಂಪಿನಪಶ್ರಶ್ನೆಗಳಿಗೆ "ಹೌದು' ಎಂದು ಉತ್ತರಿಸುವ
ವರು ಗು ಕಾಲ ಮಿಂಚುತ್ತಾ ಬಂದಿದೆ. ಅನಂತರ ಪಶ್ಚಾ ತ್ತಾಪ ಪಡ
ಬಾರದು. ಇಂದೇ ಕ್ರಿಯಾಶೀಲರಾಗಿ.
ಈ ಎರಡೂ ಗುಂಪಿನ ಪ್ರಶ್ನೆಗಳಿಗೆ ಧೈರ್ಯವಾಗಿ "ಇಲ್ಲ' ಎಂದು
ಉತ್ತರಿಸುವವರು ಈ ಸ್ಥಿತಿಗೆ ಮುಂದೆ ಎಂದೂ ಬಾರದಿರಲು. ಪ್ರಯತ್ನ
ಪ್ರಾರಂಭ ಮಾಡಿ.
ಒಟ್ಟಿನಲ್ಲಿ ನಮಗೆಲ್ಲರಿಗೂ ವಾ ಯಾಮ ಬೇಕು. ಶರೀರ, ಬುದ್ಧಿ
ಜಾವಾಗಲೂ ಹೆಚ್ಚು ಹೆಚ್ಚು ಉಪಯೋಗಿಸಿದಷ್ಟೂ ಶಕಿ_ಶಾಲಿಯಾಗುವುವು.
ಬಳಕೆಯಲ್ಲಿಲ್ಲದ ಅಂಗಗಳು” ದಿನೇದಿನೇ ದುರ್ಬಲವಾಗುವುಪು. ಶಸ್ಥಚಿಕಿತ್ಸೆ
ಗಾಗಿ ಬಂದ ರೋಗಿಗಳಲ್ಲಿ ಶೇಕಡ ೬೦ಕ್ಕಿಂತ ಹೆಚ್ಚು ಮಂದಿ ವ್ಮಾಯಾಮಂದ
ಕೊರತೆ ಇರುವವರು.

ನೀವು ವ್ಯ ೧೭
ನಿಮ್ಮನ್ನು

ನೆಲಕ್ಕೂ ಒಂದೇ ಪರಿಹಾರ... ವ್ಯಾಯಾಮ ದಿನನಿತ್ಯದ "ಆನಿ


ವಾರ್ಯ'ಗಳಲ್ಲಿ ಒಂದಾಗಬೇಕು - ನಿತ್ಕವೂ ತಲೆ ks. ಹಲ್ಲು ಉಜ್ಜು
ಹೆಟ್ಟಿ
ಸಾಮಾನ್ಯವಾಗಿ ವ್ಯಾಯಾಮದಲ್ಲಿ ಸ್ವಲ್ಪ ವಿಶೇಷ ಶ್ರಮದ ಭಾಗವೂ
ಸೇರಿದ್ದರೆ ಉತ್ರಮ ಟೂ. ಈಜು, ಶೀಘ್ರ ನಡಿಗೆ ಇತ್ಮಾದಿ. ಇವಾವು
ದನ್ನೂ ಮಾಡಲಾರದ ಸ್ಥಿತಿಯಲ್ಲಿ, ಸುಲಭವಾಗಿ ಸಾಕಷ್ಟು
ಪರಿಣಾಮಕಾರಿಯಾದ ರೀತಿಯಲ್ಲಿ ಮಾಡುವ ಅನೇಕ ವ್ಯಾಯಾಮಗಳಿವೆ.
ಉದಾಹರಣೆಗೆ, ನೀವು ಹಲ್ಲು ಉಜ್ಜುವ ಸಮಯದಲ್ಲಿಯೇ ಉದರದ
ಸ್ನಾಯುಗಳನ್ನು ಒಳಗೆಳೆದುಕೊಂಡು, ಪೃಷ್ಠಗಳನ್ನು ಸಂಕೋಚಗೊಳಿಸಿ
ಪೂರ್ಣ ಪಾದದ ಮೇಲೆ. ನಿಲ್ಲದೆ ಬೆರಳ ತುದಿಯ ಮೇಲೇ ನಿಂತು ಕೆಲಸ
ಮುಗಿಸಿ. ಬಸ್ಸು ಹಿಡಿಯಲು ಹೊರಟಾಗ ದೊಡ್ಡ ಹೆಜ್ಜೆ ಹಾಕಿರಿ, ಶ್ವಾಸ
ದೀರ್ಫ್ಥ ಮಾಡಿರಿ ಮತ್ತು ಹಿಮ್ಮಡಿ ಮೊದಲು ನೆಲ ತಗುಲಲಿ. ಓಡುವ
ಪ್ರಸಂಗ ಬಂದಾಗಲೆಲ್ಲಾ ಸಂಕೋಚಮಾಡದೆ ಓಡಿರಿ. ಒಳನಿಕ್ಕರ್‌, ಕಾಲು
ಚೀಲ ಹಾಕುವಾಗ ತೆಗೆಯುವಾಗ, ಮತ್ತಿತರ ಸಂದರ್ಭಗಳಲ್ಲಿ ಒಂಟಿ ಕಾಲಲ್ಲಿ
ನಿಲ್ಲಿರಿ. ವಾಹನಗಳಲ್ಲಿ ಓಡಾಡುವವರು ಒಂದು ಟ್ರಾಫಿಕ್‌ ಸಿಗ್ನಲ್‌ನಿಂದ
ಇನ್ನೊಂದು ಸಿಗುವವರೆಗೆ ಬೆನ್ನು ನೇರ ಮಾಡಿ, ಉದರದ ಸ್ನಾಯುಗಳನು
ಒಳಗೆಳೆದುಕೊಂಡು ಕೂಡಿರಿ. ಹೆಚ್ಚು ಹೊತ್ತು ಅದೇ ರೀತಿ ಇರಲು
ಯತ್ನಿಸಿ. ಅನಿವಾರ್ಯವಿಲ್ಲದಾಗ ಮೇಲೇರಲು “ಲಿಫ್ಟ್‌' ಉಪಯೋಗಿಸ
ಬೇಡಿ. ಮನೆಯಲ್ಲಿರುವಾಗ ಒಂಟಿ ಕಾಲಲ್ಲಿ ಮತ್ತು ತುದಿಗಾಲಲ್ಲಿ ನಿಂತು
ಪೇಪ5್‌ ಓದಿ. ಮಕ್ಕಳನ್ನು ಆಡಿಸುವಾಗ ಐದಾರು ಬಾರಿ ಚಾವಣಿಯ ಕಡೆ
ಆದಷ್ಟು, (0)
ಮೇಲೆ ಎತ್ತಿ ಹಿಡಿಯಿರಿ.
ಹೀಗೆ ಸ್ವಲ್ಪ ಯೋಚಿಸಿ ಅನೇಕ ಸುಲಭ ವ್ಯಾಯಾಮದ ಪ್ರಕಾರಗಳನ್ನು
ಜೋಡಿಸಿಕೊಳ ಬಹುದು.
ಅನೇಕರಿಗೆ ದಿನದಲ್ಲಿ ಬಹಳ ಹೊತ್ತು ಬಳಲಿಕೆಯೂ ದಿನವಿಡೀ
ಬೇಜಾರೂ ಸ್ವಲ್ಪ ಕೆಲಸದ ಆನಂತರ ವಿಶ್ರಾಂತಿ ಅನಿವಾರ್ಯವೂ ಆಗುವುದು.
ಆಂತಹವರು ಒಮ್ಮೆ ನಿಲುವುಗನ್ನಡಿಯ ಮುಂದೆ ನಿಲ್ಲಲಿ. ಸಾಮಾನ್ಯವಾಗಿ
೨]
ಗೆಇ
೧೮ ಶರೀರ ಶಿಲ್ಪ
ಅವರಿಗೇ ಅರ್ಥವಾಗುವುದು - ತಮ್ಮ ಶರೀರದ ತೂಕ, ಗಾತ್ರ ಅಗತ್ಯಕ್ಕಿಂತ
ಹೆಚ್ಚಿದೆ ಎಂದು. ಹೆಚ್ಚು ತೂಕವನ್ನು ಹೊತ್ತೂ ಹೊತ್ತೂ ಸಹಜವಾಗಿ :
`ಶರೀರ ಹೆಚ್ಚು ಬಳಲುತ್ತದೆ. ಶರೀರಕ್ಕೆ ಹೆಚ್ಚು ಕೆಲಸ; ಶೀಘ್ರ ಸುಸ್ತು.
ವಿಪರೀತ ಕೆಲಸ ಮಾಡಿದ ಸ್ನಾಯುಗಳಲ್ಲಿ ವಿಷಪದಾರ್ಥಗಳು ಸಂಗ್ರಹವಾಗಿ, '
ಅವುಗಳ ನಿರ್ಮೂಲನಕ್ಕೆ ಅವಶ್ಯಕವಾದ ಆಮ್ಲಜನಕದ ಸರಬರಾಜು ಸಾಲದೆ
ಹೋಗಿ ನೋವು ಕಾಣಿಸುತ್ತದೆ.
ಈ ರೀತಿ ಬಳಲುವವರಲ್ಲಿ ತೂಕ, ಗಾತ್ರ ಹೆಚ್ಚಿಲ್ಲದೆ ಇರುವವರೂ
ಇರಬಹುದು. ಅಂತಹವರಿಗೆ ಇನ್ನೊಂದು ಪುಟ್ಟ ಪರೀಕ್ಷೆ. ಸೆಕೆಂಡ್‌ಗಳನ್ನು
ತೋರಿಸುವ ನಿಮ್ಮ ಕೈಗಡಿಯಾರವನ್ನು ಅಂಗೈಯಲ್ಲಿ ಹಿಡಿಯಿರಿ. ಸಾಧ್ಮ
ವಾದಷ್ಟೂ ದೀರ್ಫವಾಗಿ ಉಸಿರು ತೆಗೆದುಕೊಳ್ಳಿರಿ. ಸೆಕೆಂಡ್‌ಗಳನ್ನು
ಗುರುತುಹಾಕಿ. ಅದೇ ರೀತಿ ಉಸಿರು ಬಿಗಿಹಿಡಿಯದೆ ನಿಧಾನವೌಗಿ ಉಸಿರನ್ನು
ಬಿಡಿ. ಸೆಕೆಂಡ್‌ಗಳನ್ನು ಗುರುತು ಹಾಕಿ. ಬೇಗ ಬಳಲುವ ವೃಕ್ತಿಗಳೆಲ್ಲರ
ಶ್ವಾಸ, ನಿಶ್ವಾಸದ ಸಮಯ ೩ ರಿಂದ ೫ ಸೆಕೆಂಡುಗಳಿರಬಹುದಂ. ಇದೇ
ಕಾರಣ--ರಕ್ತಶುದ್ದಿಗೆ ಬೇಕಾದ ಪ್ರಮಾಣದಲ್ಲಿ ಆಮ್ಲಜನಕ ಸರಬರಾಜು
ಇಲ್ಲದಿರುವುದು.
ಇದಕ್ಕೆ ಪರಿಹಾರ-ವ್ಯಾಯಾಮ ಮತ್ತು ದೀರ್ಫ ಶ್ರರಸನ,
ಪುಟ್ಟಪುಟ್ಟ ವ್ಯಾಯಾಮಗಳಿಂದಲೂ ಶಕ್ತಿ ಲಭಿಸುವುದಂ. ಬಳಲಿಕೆ,
ನೋವು ನಿವಾರಣೆಯಾಗುವುವು. ಮೊದಲನೇ ವಾರ ವ್ಮಾಯಾಮ ನಿಧಾನ
ವಾಗಿ ಮಾಡಿ. ಪ್ರಾರಂಭಿಸಿದ ಒಂದೆರಡು ದಿನ ನೋವು ಕಾಣಿಸಬಹುದು.
ಆದರೆ ಪ್ರಯತ್ನ ಬಿಡಬೇಡಿ. ನೋವು ನಿಮ್ಮನ್ನು ಬಿಟ್ಟೋಡುವುದು.
ಈ ಕೆಳಗಿನ ಕೆಲವು ಪ್ರಯೋಗಗಳನ್ನು ನೋಡಿ. ಯಾರು ಬೇಕಾದರೂ
ತಮ್ಮ ದಿನಚರಿಯಲ್ಲಿ ಜೋಡಿಸಿಕೊಳ ಬಹುದು. ದಿನಕ್ಕೆ ಕನಿಷ್ಠ ಮೂ
ಬಾರಿಯಾದರೂ ಮಾಡಿ. (ಪ್ರತಿಯೊಂದು ಕ್ರಿಯೆಗೂ ಆಯಾ ಕ್ರಮಾಂ
ಚಿತ್ರ ನೋಡಿ.)
೦. ಕೊರಳ ಕ್ರಿಯೆ: ಕೈಗಳನ್ನು ತಲೆಯ ಹಿಂದೆ ಬೆರಳುಗಳನು
ನಿಮ್ಮನ್ನು ನೀವು - ೧೯

ಪರಸ್ಪರ ಜೋಡಿಸಿ ಹಿಡಿಯಿರಿ. ಕತ್ತನ್ನು ಹಿಂದಕ್ಕೆ ತಳ್ಳಿ. ಹಿಂದಕ್ಕೆ


ಹೋಗದಂತೆ ಕೈಗಳಿಂದ ತಲೆಯನ್ನು ತಡೆಯಿರಿ.
ಕತ್ತು ಮುಂದೆ ಬಾಗಿದ್ದಾಗ, ನೇರವಾಗಿದ್ದಾಗ, ಹಿಂದೆ ಬಾಗಿದ್ದಾಗ
ಮೇಲಿನ ಕ್ರಿಯೆ ಮಾಡಿರಿ. ಇದೇ ರೀತಿ ಕತ್ತನ್ನು ಎಲ್ಲ ದಿಕ್ಕುಗಳಲ್ಲೂ
ತಿರುಗಿಸಿ ಮಾಡಿ. ಪ್ರತಿ
೩)
ಕ್ರಿಯೆಗೂ ೬ ಸೆಕೆಂಡುಗಳು ಸಾಕು.
೨. ಭುಜ-ಬಾಹು ಕ್ರಿಯೆ: ನಿಮ್ಮ ಮೇಜಿನ ಕೆಳಗಡೆ ಕೈಚಾಚಿ.
ಮೇಲಿನ ಹಲಗೆಯ ತಳಭಾಗಕ್ಕೆ ನಿಮ್ಮ ಹಸ್ತಗಳ ಹಿಂಭಾಗ ತಗಲುವಂತೆ
ಒಡಿಯಿರಿ. ಮೊಣಕ್ಕೆ ಬಗ್ಗಿಸದೆ ಮೇಜನ್ನು ಎತ್ತಲು ಪ್ರಯತ್ನ ಮಾಡಿ
೬ ಸೆ.
ಅದೇ ರೀತಿ ಹೊಸ್ತಿಲ ಮೇಲೆ ನಿಂತು ಕೈಗಳ ಹಿಂಭಾಗದಿಂದ ಬಾಗಿ
ಲನ್ನು ಅಕ್ಕಪಕ್ಕಕ್ಕೆ ತಳ್ಳಿ - ೬ ಸೆ.
೩. ಎದೆ ಕ್ರಿಯೆ: ಮೇಜಿನ ಬಳಿ ಕುಳಿತು ಆ ಕಡೆ ಈ ಕಡೆ ಎರಡೂ
ಕೈಗಳಿಂದ ಅದನ್ನು ಒತ್ತಿರಿ.(೬ ಸೆ.) ಇದರಿಂದ ಎದೆಯ ಸ್ನಾಯುಗಳು ಶಕ್ತಿ
ಸಂಪನ್ನವಾಗುವುವು.
೪. ಬೆನ್ನಿನ ಕ್ರಿಯೆ: ಸೊಂಟದಲ್ಲಿ ಮುಂದಕ್ಕೆ ಬಗ್ಗಿ ಮೊಣಕಾಲು
ಗಳ ಹಿಂಭಾಗವನ್ನು ಕೈಗಳಿಂದ ಹಿಡಿಯಿರಿ. ಉದರದ ಸ್ನಾಯುಗಳನ್ನು ಬಿಗಿ
al
py

೨೦ ಶರೀರ ಶಿಲ್ಪ

ಹಿಡಿದು ಬೆನ್ನನ್ನು ಆದಷ್ಟು ಮೇಲಕ್ಕೆ ಬಿಲ್ಲಿನಂತೆ ಬಗ್ಗಿಸಿ. ಇದೇ ಸಮಯ:


ದಲ್ಲಿ ಕೈಗಳಿಂದ ಬೆನ್ನನ್ನು ಕೆಳಕ್ಕೆ ಎಳೆಯಿರಿ. (೬ ಸೆ.)
೫. ಕಾಲಿನ ಕ್ರಿಯೆ: ಮೇಜಿನ ಮೇಲೆ ಕೈ ಊರಿ ನಿಲ್ಲಿ. ನಿಧಾನ
ವಾಗಿ ಒಂದು ಕಾಲನ್ನು ಆದಷ್ಟು ಮೇಲೆ ಎತ್ತಿ.(೬ ಸೆ.) ನಿಧಾನವಾಗಿ.
ಇಳಿಸಿ. ಇದೇ ರೀತಿ ಮತ್ತೊಂದು ಕಾಲಿನಿಂದ.
ಈ ಕ್ರಿಯೆಯಲ್ಲಿ ಕಾಲುಗಳನ್ನು ಮಂಡಿಯಲ್ಲಿ ಬಗ್ಗಿಸದೆ ಮಾಡಿ.
೬. ಮಲಗುವ ಮುನ್ನ: ಒಂದೇ ಸಾರಿಗೆ ನಿಮ್ಮ ಎರಡೂ ಕಾಲು
ಗಳನ್ನು ಮತ್ತು ಸೊಂಟದ ಮೇಲ್ಭಾಗವನ್ನು ಹಾಸಿಗೆಯಿಂದ ಮೇಲಕ್ಕೆ ಎತ್ತಿ.
ಮಂಡಿಯಲ್ಲಿ ಮಡಿಸಬಾರದು. ಸಮತೋಲನಕ್ಕಾಗಿ ಕೈಗಳು ಮುಂದೆ
ಚಾಚಿರಲಿ. ಈ ಸ್ಥಿತಿ ೬ ಸೆ. ಇರಲಿ. ನಿಧಾನವಾಗಿ ಮುಂಚಿನ ಸ್ಥಿತಿಗೆ ಬನ್ನಿ.
ಈಗ ಸುಖನಿದ್ರೆಗೆ ಅರ್ಹರು ನೀವು.
೭. ಕಾಫಿ ಕುಡಿದನಂತರ : ನಿಮ್ಮ ಮುಂದಿರುವ ಟೀಪಾಯಿಯ.
ಕೆಳಗೆ ಕಾಲು ಚಾಚಿ. ಮೊಣಕಾಲು ಬಗ್ಗಿಸದೆ ಒಂದೇ ಕಾಲಿನಿಂದ ಅದನ್ನು
ಎತ್ತಿ... ಸಾಧ್ಯವಾದರೆ ಟೀಪಾಯಿಯ ಮೇಲೆ ಸ್ವಲ್ಪ ಭಾರವನ್ನು ಇಡಿ.
ಟೀಪಾಯಿ ಉರುಳದಿರುವಂತೆ ಎಚ್ಚರಿಕೆ.(೧೦ ಸೆ.) ಇದನ್ನೇ ಇನ್ನೊಂದು:
ಕಾಲಿನಿಂದ, ಎರಡೂ ಕಾಲುಗಳಿಂದ ಮಾಡಿ. ಟೀಪಾಯಿಯ ಮೇಲೆ ಹೆಚ್ಚು
ಭಾರ ಇಡಿ.
೮. ಮೇಲೇರುವಾಗ: ಮೆಟ್ಟಲುಗಳ ಕೈಹಿಡಿಯನ್ನು ಹಿಡಿದು
ಮೆಟ್ಟಲ ತುದಿಯಲ್ಲಿ ಮುಂಗಾಲ ಮೇಲೆ ನಿಲ್ಲಿ. ಮುಂಗಾಲ ಮೇಲೆ ಭಾರ
ಬಿಟ್ಟು ಹಿಮ್ಮಡಿ ಎತ್ತಿ.(೧೦ ಸೆ.) ನಿಧಾನವಾಗಿ ಇಳಿಸಿ. ಹಿಮ್ಮಡಿ ಕೆಳಕ್ಕೆ
ಹೋಗಲಿ... ಮೆಟ್ಟಲ ಮಟ್ಟಕ್ಕಿಂತ ಕೆಳಗೆ. (೧೦ ಸೆ.)
ಇವಿಷ್ಟೂ ಮಾದರಿಗಾಗಿ. ನಿಮ್ಮ ವೃತ್ತಿ ಯಾವುದೆಂಬುದನ್ನು
ಗಮನಿಸಿ, ಅವರಲ್ಲಿ ಜೋಡಿಸಬಹುದಾದ, ವ್ಯಾಯಾಮದ ಪ್ರಕಾರಗಳನ್ನು '
ಪಟ್ಟಿ ಮಾಡಿ. ತಿಂಗಳು, ಎರಡು ತಿಂಗಳಿಗೊಮ್ಮೆ ಬದಲಾಯಿಸಿ.
“ಇದೆಲ್ಲಾ ಸರಿ. ಕೆಲವು ದಿನ ಉತ್ಸಾಹದಿಂದ ಮಾಡುತ್ತಿರುತ್ತೇವೆ.
ನಿಮ್ಮನ್ನು ನೀವು - ೨೧

ಅದರೆ ಯಾವಾಗ ವ್ಯಾಯಾಮ ಮಾಡುವುದು ನಿಂತುಹೋಯಿತೋ, ಅದೇ


ನೆನಪಿರುವುದಿಲ್ಲ. ಏನು ಮಾಡೋಣ?” ಎನ್ನುವವರು ಬಹಳ. |
ಈ ಉಪಾಯ ಪ್ರಯತ್ನಮಾಡಿ. ನಿಮ್ಮ ಮನೆಯ ಕನ್ನಡಿಯ ಮೇಲೆ
ಒಂದು ದೊಡ್ಡ ಚುಕ್ಕೆಯನ್ನು ಇಡಿ. ಅದನ್ನು ನೋಡಿದಾಗಲೆಲ್ಲಾ
ವ್ಯಾಯಾಮದ ಸ್ಮರಣೆಯಾಗಲಿ. ಅಥವಾ "ಕಾಲಿಂಗ್‌ ಬೆಲ್‌, “ಟೆಲಿರ್ಫೋ
ರಿಂಗ್‌' ನಿಮಗೆ ವ್ಯಾಯಾಮದ ಸ್ಮರಣೆ ಮಾಡಿಕೊಡಲಿ. ನಿಮ್ಮ ಕೈಗಡಿ
ಯಾರದ ಸ್ಟ್ರಾಪ್‌ ಮೇಲೆ ಅಂಟುವ ಪ್ಲ್ಯಾಸ್ಟರ್‌ ಸಿಗಿಸಿ. ಅಂಟುವ ಭಾಗ
ಮೇಲಕ್ಕೆ. ಅದು ಆಗಾಗ್ಗೆ ನಿಮ್ಮ ಕೈಗೆ ಅಂಟಿದಾಗ ನಿಮಗೆ ವ್ಯಾಯಾಮದ
ನೆನಪಾಗಲಿ.
ಇಂತಹ “ಕುರುಡು ಗುರುತು'ಗಳನ್ನು ನಿಮ್ಮ ಪ್ರತಿಭೆಗೆ ತಕ್ಕಂತೆ
ಜೋಡಿಸಿಕೊಳ್ಳಿ.
ನೆನಪಿಡಿ. ಸ್ನಾಯುವನ್ನು ಚಲಿಸಿದರೆ ಅದನ್ನು ಬಲಗೊಳಿಸುವಿರಿ.
ವಯಸ್ಸು ಎಷ್ಟೇ ಆಗಿರಲಿ, ಚಿಂತೆಯಿಲ್ಲ. ನಿಧಾನವಾಗಿ ಪ್ರಾರಂಭಿಸಿ. ಆಗ
ಸ್ನಾಯುವಿನ ತಡೆತವನ್ನೂ ಹೆಚ್ಚಿಸುವಿರಿ ಮತ್ತು ಅದರ ಚಲನೆಯ ವ್ಯಾಪ್ತಿ
ಯನ್ನೂ ಹೆಚ್ಚಿ ಸುವಿರಿ. ಇಂದೇ ಆರಂಭಿಸಿ. ನಾಳೆ ನಿಮಗೆ ಇನ್ನು ೨೪
“ಗಂಟೆ ಹೆಚ್ಚು ವಯಸ್ಸು ಆಗಿರುತ್ತದೆ.
“ಸ್ನಾಯುಗಳನ್ನು ಚಲಿಸುವ, ಕೆಲಸ ಮಾಡಬಯಸುವ ವೃದ್ಧನಿಗೂ
ಮುಖ್ಬಲ್ಲ.' |
ತೂಕ ಬೇಕೇ,
೫ ತೂರಾಡುವ ಮೆ ಗೆ 4

ಇಂದಿನ ನಾಗರಿಕತೆಯ ಕೊಡುಗೆ ಎರಡು ರೀತಿಯ ಶರೀರದ ಮಾದರಿ:


ಗಳು: ೧) ಎಷ್ಟು ಬಯಸಿದರೂ ತೂಕ ಇಳಿಯದೆ ಇರುವಂತಹವು.
೨) ಇನ್ನಿಲ್ಲದ ಪ್ರಯತ್ನ ಮಾಡಿದರೂ ತೂಕವೇರದಂತಹವು.
ತೂಕ ಇಳಿಸಲು ಇಂದು ಜಗತ್ತಿನಲ್ಲಿ ಬಿಲಿಯನ್‌ಗಳಷ್ಟು ಹಣವನ್ನು
ಸುರಿಯಲಾಗುತ್ತಿದೆ. ಅಂತೆಯೇ ತೂಕ ಹೆಚ್ಚಿಸಲೂ ಅಪಾರ ಧನರಾಶಿ
ವ್ಯಯವಾಗುತ್ತಿದೆ. ಆದರೆ, ಈ ಎಲ್ಲ ಪ್ರಯತ್ನಗಳೂ ಜಾಹೀರಾತಿನಲ್ಲಿರುವ
ಸುಲಭದ ಅಡ್ಡಹಾದಿಗಳನ್ನಲ್ಲದೆ ರಾಜಮಾರ್ಗಗಳನ್ನು ತುಳಿಯುತ್ತಿಲ್ಲ.
ಹೀಗಿರುವಾಗ ಮೈಯನ್ನು ಬಲಿಷ್ಮಗೊಳಿಸಿ, ಕೆಲವು ಕಿಲೋಗಳನ್ನು
ಸೇರಿಸಲು ಸಾಧ್ಯವಿದೆ. ಜೊತೆಗೆ ಶರೀರವನ್ನು ಪ್ರಮಾಣಬದ್ಧವನ್ನಾಗಿಯೂ
ಮಾಡಬಹುದು.
ಹಗುರವಾದ ವ್ಯಕ್ತಿಗಳ ಸಮಸ್ಕೆ ಒಂದೇ. ಪ್ರತಿ ದಿನವೂ ಸ್ನಾಯು
ಗಳನ್ನು ಕಟ್ಟಲು, ಮೂಳೆಗಳನ್ನು ಮುಚ್ಚಿ ಹಸನಾಗಿ ಮಾಡಿ ಮಾಂಸಖಂಡ
ಗಳನ್ನು ವೃದ್ಧಿಸಲು ಬೇಕಾದ ಶಕ್ತಿ ದಿನದ ಕೊನೆಯಲ್ಲಿ ಉಳಿಯುವುದೇ ಇಲ್ಲ..
ತೂಕ ಬೇಕೇ, ತೂರಾಡುವ ಮೈಗೆ? ೨೩
ಈ ಶಕ್ತಿರಾಶಿಯನ್ನು ಬೆಳೆಸುವ ಅಲ್ಪ ಶಕ್ತಿಯಾದರೂ ಪ್ರತಿದಿನ ಕೂಡಿ
ಕೊಂಡರೆ ಆಕಾರ ಬದಲಾಗಿ ತೂಕ ಹೆಚ್ಚುವುದು. ಈ ನಿಯಮಕ್ಕೆ ಪ್ರಾಯಃ
ಯಾರೂ ಅಪವಾದವಿಲ್ಲ.
ಅನೇಕ ಬಾರಿ ಒಂದೇ ರೀತಿಯ ಒಂದೇ ಪ್ರಮಾಣದ ಆಹಾರ ಸ್ಹೀಕರಿ
ಸುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ತೂಕ ಹೆಚ್ಚಿಸಿಕೊಳ್ಳುವರು; ಇನ್ನೊ
ಬ್ಬರು ಅಷ್ಟೇ ಇರುವರು. ಅದೇಕೆ? ಕೆಲವು ವ್ಯಕ್ತಿಗಳ “ಶಕ್ತಿ ದಹಿಸುವ
ಗತಿ” ಮಿಕ್ಕವರಿಗಿಂತ ಹೆಚ್ಚು ಇರುವುದೇ ಇದಕ್ಕೆ ಕಾರಣ. ಇದು ಶರೀರದ
ಸ್ವಭಾವ ಮತ್ತು ಜೀವನರೀತಿಯನ್ನು
ಅವಲಂಬಿಸಿದೆ. ಎಲ್ಲ ವ್ಯಕ್ತಿಗಳೂ ಎಲ್ಲ
ಸಮಯದಲ್ಲಿ ಶರೀರದ ಇಂಧನವನ್ನು
ಸುಡುವರು ಮಲಗಿದ್ದಾಗಲೂ ಸಹ.
ಶ್ವಾಸಕೋಶದ, ಹೃದಯದ ಮಾಂಸ
ಖಂಡಗಳನ್ನು ಪುಷ್ಟಿಗೊಳಿಸಲು, ನಶಿಸಿ
ದ್ದನ್ನು ಸೃಜಿಸಲು, ಜೀರ್ಣಾಂಗ
ಶುದ್ಧೀಕರಣಾಂಗಗಳನ್ನು ದಕ್ಷತೆಯಿಂದಿ
ಡಲು ಇತ್ಮಾದಿ ಶರೀರದ ಅತ್ಯಂತ
ಅವಶ್ಶಕ ಆಂತರಿಕ ಚಟುವಟಿಕೆಗಳಿಗಾಗಿ _
ಶಕ್ತಿ ಬೇಕು. ವಿಶ್ರಾಂತಿ ಪಡೆಯುತ್ತಿ
ದ್ವಾಗ ಬೇಕಾದ ಕನಿಷ್ಠ ಶಕ್ತಿ' ಪ್ರತಿ
ವ್ಯಕ್ತಿಯಲ್ಲೂ ವ್ಯತ್ಯಾಸವಾಗುವುದು. ಕೆಲವರಲ್ಲಿ ಇದು ಅತಿ ಹೆಚ್ಚಾಗುವುದ
ರಿಂದ ಸಂಪಾದಿಸಿದ ಶಕ್ತಿಯೆಲ್ಲಾ ಕಳೆದುಹೋಗಿ ಕೊನೆಗೇನೂ ಉಳಿಯುವು
ದಿಲ್ಲ. ಅದರಿಂದ ಈ ವೃತ್ಕಾಸ.
ಕೆಲವರ ಆಹಾರ ಪ್ರಮಾಣ ಅತಿ ಹೆಚ್ಚಾದರೂ ಸಹ ಅವರು ಬೆಳೆಯು
ವುದೇ ಇಲ್ಲವಲ್ಲಾ! ಹೀಗೇಕೆ? ಮೊದಲನೆಯದಾಗಿ ಎಷ್ಟು ತಿನ್ನುವರು
ಎನ್ನುವುದಕ್ಕಿಂತ ಏನು ತಿನ್ನುವರು ಎಂಬುದೇ ಮುಖ್ಯ. ಶಕ್ತಿ ನೀಡುವ
ಸತ್ವವುಳ್ಳಆಹಾರ ಒಟ್ಟು ಆಹಾರದ ಎಷ್ಟನೇ ಅಂಶ ಎಂಬುದೇ ಪ್ರಮುಖ.

೨೪ ಶರೀರ ಶಿಲ್ಪ

ಎರಡನೆಯದಾಗಿ, ಮನಸ್ಸು ಶರೀರಗಳ ಮಧ್ಯೆ ಅಭೇದ್ಯ ಸಂಬಂಧ


ಉಂಟು. ಮನಸ್ಸಿಗೆ ಆಗುವ ಎಲ್ಲ ಬಗೆಯ ಅನುಭವಗಳೂ ಶರೀರದ ರಚನೆ, E

ಅಳತೆ, ತೂಕದ ಮೇಲೆ ಪರಿಣಾಮ ಮಾಡುವುವು. ಸುಖದ, ಪ್ರಸನ್ನತೆಯ


ಮತ್ತು ಸುರಕ್ಷಿತತೆಯ ಅನುಭವ ಆರೋಗ್ಯವನ್ನು ಸುಧಾರಿಸುವುದು. ಹಿಂದಿನ
ದರ ಬಗ್ಗೆ ತೃಪ್ತಿ, ಇಂದಿನದರ ಬಗ್ಗೆ ಅಲಕ್ಷ )ಪೂರ್ಣ ಆಸಕ್ತಿ, ಮುಂದಿನದರ
ಬಗ್ಗೆ ತಿರಸ್ಕಾರ . ಈ ಭಾವನೆಗಳು ತೂಕವನ್ನು ಹೆಚ್ಚಿಸುವುವು.
ಆತಂಕ, ಗಡಿಬಿಡಿ ಇವು ತೂಕವನ್ನು ಕುಗ್ಗಿ ಸುವುವು. ಕೋಪ, ತಾಪ,
ಮತ್ಸರಗಳು ಆರೋಗ್ಯವನ್ನು ಕೆಡಿಸುವುವು. ಅವಯವಗಳಲ್ಲಿ ವಿಕೃತಿ
ಉತ್ಪನ್ನವಾಗುವುದು. “ಚಿಂತಾ ದಹತಿ ಜೀವಿನಂ'
- ಚಿಂತೆಯು ಬದುಕಿರು
ವವನನ್ನು ಸುಡುತ್ತದೆ ; ಚಿತೆ ಸತ್ತವನನ್ನು ಸುಡುತ್ತದೆ.
ಥೈರಾಯಿಡ್‌ ಗ್ರಂಥಿ ಶರೀರದಲ್ಲಿ ಇಂಧನದ ಬಳಸುವಿಕೆಯನ್ನು
ನಿಯಂತ್ರಣಗೊಳಿಸುವ ಪುಟ್ಟ ಅಂಗ. ಇದು ಉತ್ಪನ್ನ ಮಾಡಿದ ಹಾರ್ಮೊೋ
ನುಗಳು ರಕ್ತ ಪ್ರವಾಹದಲ್ಲಿ ಬೆರೆತು ಇಂಧನ ದಹನಕ್ಕೆ ಕಾರಣವಾಗುವುವು.
ದುರ್ಬಲ ಗ್ರಂಥಿ ಇರುವವರು ಅವಶ್ಯಕತೆಗಿಂತ ಕಡಮೆ ಇಂಧನ ಸುಡುವರು.
ಇದರಿಂದ ಶರೀರದ ಚಟುವಟಿಕೆಗಳಲ್ಲಿ ಲವಲವಿಕೆ ಇರುವುದಿಲ್ಲ. ಸಂಜೆಯ
ವೇಳೆಗೆ ನಿರುತ್ಸಾಹ, ನಿತ್ರಾಣದ ಅನುಭವ.
ಅದೇ ರೀತಿ ಅವಶ್ಯಕತೆಗಿಂತ ಹೆಚ್ಚು ಹಾರ್ಮೋನುಗಳನ್ನು ಉತ್ಪನ್ನ
ಮಾಡುವ ಗ್ರಂಥಿಗಳು ಇಂಧನವನ್ನು ಬೇಗ ಬೇಗ ಸುಡುವುವು. ಈ ದಳು ರಿ
ಯಂದಾಗಿ ಎಲ್ಲ ಇಂಧನವೂ ಸುಟ್ಟು ಶರೀರ ಪೋಷಣೆಗೆ ಶಕ್ತಿಯೇ
ಉಳಿಯುವುದಿಲ್ಲ. |
ತೂಕವನ್ನು ಹೆಚ್ಚಿಸುವ ಯೋಜನೆ ಈ ಎಲ್ಲ ಅಂಶಗಳನ್ನು ಗಣನೆಗೆ
ತೆಗೆದುಕೊಳ್ಳಬೇಕು. ತೂಕ ಇಳಿಸಲು ಅನುಕೂಲವಾಗಿರುವ ಸಂಗತಿಗಳನ್ನು
ತಡೆದು, ಬೆಳೆಸಲು ಪೋಷಕವಾಗಿರುವ ಅಂಶಗಳನ್ನು ಉಳಿಸಿಕೊಂಡು ಬೆಳೆಸುವ
ಎಧಾನಗಳನ್ನು ಅವಲಂಬಿಸಬೇಕು.
ಆಹಾರ: ಹೆಚ್ಚು ಸಸಾರಜನಕ(Proetin)ಗಳು ಇರುವ ಪದಾರ್ಥ
ಗಳು ಮತ್ತು ಸಾಕಷ್ಟು ಮೇದಸ್ಸು ಇರುವ ಆಹಾರವನ್ನು ಸೇವಿಸಬೇಕು.
ತೂಕ ಬೇಕೇ, ತೂರಾಡುವ ಮೈಗೆ ) ೨೫

ಹೀಗೆ ಬೆಳವಣಿಗೆಯನ್ನು ಹೆಚ್ಚಿಸಿ ತೂಕವನ್ನು ವರ್ಧಿಸುವ ಆಹಾರದಲ್ಲಿ


ಹಾಲು ಮತ್ತು ಹಾಲಿನ ಪದಾರ್ಥಗಳು ಅತ್ಯುತ್ತಮ ಸಹಕಾರಿ. ಬರಿ
ಹಾಲು, ಸಕ್ಕರೆ ಬೆರೆಸಿದ ಹಾಲು, ವಿವಿಧ ಮಾಲ್ಟ್‌ಗಳನ್ನು ಬೆರೆಸಿದ ಹಾಲು,
ಅನ್ನದ ಜೊತೆ ಹಾಲು, ಖೀರು, ಖೋವಾ, ಹಣ್ಣಿನ ರಸದ ಜೊತೆಗೆ.
ಇತ್ಯಾದಿ ಅನೇಕ ರೀತಿಗಳಲ್ಲಿ ಹಾಲನ್ನು ಸೇವಿಸಬಹುದು. ಬಿಸಿಯಾಗಿ
ಆಥವಾ ಆರಿಸಿ, ಇಲ್ಲವೆ ತಂಪಾಗಿ ಮಾಡಿಯೂ ಸೇವಿಸಬಹುದು. ಲೀಟರ್‌
ಗಟ್ಟಲೆ ಹಾಲು ಸೇವನೆ ಮತ್ತು ಕಿಲೋಗ್ರಾಮ್‌ಗಟ್ಟಲೆ ತೂಕ ಏರಿಕೆ ನೇರ
ಸಂಬಂಧದ್ದು. ಪಂಜಾಬಿ ಬಂಧುಗಳ ನಾಣ್ಮುಡಿಯೇ ಹೀಗಿದೆ: “ಲಸ್ಸೀ
ಪೀವೋ - ಧೀಡ್‌ಗಜಕಾ ಛಾತೀವಾಲಾ ಬನೋ.?
ಲಸ್ಸೀ ಮುಖ್ಯವಾಗಿ ಮೂರು ವಿಧ: ದೂಧ್‌ ಕೀ ಲಸ್ಸೀ, ದಹೀ ಕೀ
ಲಸ್ಸೀ, ಬದಾಮ್‌ ಕೀ ಲಸ್ಸೀ. ಶೆ
ಮೂಧ್‌ ಕೀ ಲಸ್ಸೀ: ಹಾಲಿಗೆ ನೀರು ಸಕ್ಕರೆ ಮಂಜುಗಡ್ಡೆ ಬೆರೆಸಿ
ಕುಡಿಯುವುದು.

ದಹೀಕೀ ಲಸ್ಸೀ: ಮೊಸರಿಗೆ ಸಕ್ಕರೆ ಮಂಜುಗಡ್ಡೆ ಬೆರೆಸಿ


ಸೇವಿಸುವುದು.

ಬದಾಮ ಕೀ ಲೀ: ರಾತ್ರಿ ನೆನೆಹಾಕಿದ ಬಾದಾಮಿ ಬೀಜಗಳನ್ನು


'ಆರೆದು ಹಾಲು, ನೀರು, ಸಕ್ಕರೆ ಬೆರೆಸಿ, ಮಂಜುಗಡ್ಡೆ ಸೇರಿಸಿ ಸೇವಿಸುವುದು.
ವಾತಾವರಣಕ್ಕೆ ತಕ್ಕಂತೆ ಮಂಜುಗಡ್ಡೆಯ ಪ್ರಮಾಣ ವ್ಯತ್ಕಾಸ
ಮಾಡಬಹುದು.
ಬೆಳವಣಿಗೆ ಮತ್ತು ತೂಕದ ದೃಷ್ಟಿಯಿಂದ ಮೊಳೆಯುತ್ತಿರುವ ಧಾನ್ಮ
ಗಳು ಮತ್ತು ಹಣ್ಣಿನ ರಸ ಸಹಕಾರಿ.
ನಿಧಾನವಾದ ಆಹಾರ ಸೇವನೆಯು ಗಡಿಬಿಡಿ, ಅವಸರದ ಸ್ವಭಾವವನ್ನು
ಕಡಿಮೆಮಾಡುವುದು.
ಸಾಕಷ್ಟು ನಿದ್ರೆ, ವಿಶ್ರಾಂತಿ, ಶರೀರ ಸಡಿಲಿಕೆ ಮತ್ತು ಜೀವನವನ್ನು
ಆತಂಕರಹಿತ ದೃಷ್ಟಿಕೋಣದಿಂದ ಕಾಣುವುದರಿಂದ ತೂಕ ಹೆಚ್ಚು ವುದು.
೨೬ ಶರೀರ ಶಿಲ್ಪ

ಆಹಾರದ ಸೇವನೆಯನ್ನು ಒಮ್ಮೆಗೇ ಹೆಚ್ಚಿಸಬಾರದು. ಅದರಿಂದ


ಜೀರ್ಣಾಂಗಗಳ ಮೇಲೆ ಒತ್ತಡ ಹೆಚ್ಚಾಗುವುದು; ಇದು ಕ್ರಮೇಣವಾಗಿ
ಆಗಬೇಕು. ಜೀರ್ಣಶಕ್ತಿಯನ್ನೇ ಹೆಚ್ಚಿಸಿಕೊಳ್ಳಬೇಕು. ಕಡಮೆ ಆಹಾರ
ವನ್ನು ಹೆಚ್ಚು ಹೆಚ್ಚು ಬಾರಿ ಸೇವಿಸಬೇಕು.
ಥೈರಾಯಿಡ್‌ ಗ್ರಂಥಿಗಳನ್ನು ಸುಧಾರಿಸಬೇಕು. ದುರ್ಬಲ ಗ್ರಂಥಿ
ಗಳನ್ನು ಸಬಲಗೊಳಿಸಬೇಕು. » ಆತಿ ಚಟುವಟಿಕೆಯನ್ನು ತಡೆಹಿಡಿಯಬೇಕು.
ಇವಕ್ಕೆ ಕೆಲವು ಆರಿಸಿದ ಆಸನಗಳು ಸಹಾಯಕಾರಿ.
ಶಾಶ್ವತ ಹಾಗೂ ದೀರ್ಥಕಾಲೀನ ಪರಿಣಾಮಗಳನ್ನು ಮಾಡಲು
ವ್ಯಾಯಾಮವೇ ಸಾಧನ. ಇನ್ನೊಂದು ಭ್ರಾಮಕ ಕಲ್ಪನೆ ಎಂದರೆ
ವ್ಯಾಯಾಮ ಸಾಮಾನ್ಯವಾಗಿ ತೂಕ ಇಳಿಸಲು ಮಾತ್ರ ಮಾಡಬೇಕು;
ತೂಕ ಹೆಚ್ಚಿಸುವವರು ಮಾಡುವ ಅಗತ್ಯವಿಲ್ಲ ಎಂಬುದು. ಆದರೆ
ವ್ಯಾಯಾಮ ಎರಡೂ ವೈಪರೀತ್ಯಗಳನ್ನು ತೊಡೆದುಹಾಕಿ ಸುದೃಢಗೊಳಿಸುವ
ಸಾಧನ.
ವ್ಯಾಯಾಮಗಳಲ್ಲಿ ಉಪಕರಣರಹಿತ ವ್ಯಾಯಾಮ ಪ್ರಾಥಮಿಕ
ವಾದದ್ದು. ಇದರಲ್ಲೂ ಸಾಕಷ್ಟು ಸುಧಾರಿಸಬಹುದು ಮತ್ತು ಹೆಚ್ಚು ತೂಕ
ಬೇಕಾದವರು ಡಂಬ್‌ಬೆಲ್‌, ಬಾರ್‌ಬೆಲ್‌, ಕೇಬಲ್‌, ಸ್ಟ್ರಿಂಗ್‌ ಇವುಗಳನ್ನು
ಅವಲಂಬಿಸಬೇಕು. ಉಪಕರಣರಹಿತ ವ್ಯಾಯಾಮಕ್ಕಿಂತ ಉಪಕರಣಗಳ
ಉಪಯೋಗದಿಂದ ಶೀಘ್ರ ಬದಲಾವಣೆ ಆಗುವುದು.

ತಪ್ಪದೆ ಮಾಡಿ
ಉಸಿರಾಟ: ಮೇಲಿನ ಎಲ್ಲ ಸಂಗತಿಗಳಿಗೆ ಪೋಷಕವಾದ, ಪರಿಣಾಮ
ಕಾರಿಯಾದ, ನೋಡಲು ಸರಳವಾದ *ಸಾಧನೆ' ಇದು. ಶರೀರಕ್ಕೆ ಸ್ಕೂಲ
ವಾಗುವ ಸ್ವಭಾವವನ್ನು ಗಳಿಸಿಕೊಡಬೇಕು, ಅದು ವಾಯುವಿನಿಂದಲೇ
ಸಾಧ್ಯ. ಲ
ಪ್ರಯೋಗ: ತೂಕ ಹೆಚ್ಚಲು ಬಯಸುವವರು ಉಸಿರು ಬಿಡುವ
ಆವಧಿಗಿಂತ ಉಸಿರು ತೆಗೆದುಕೊಳ್ಳುವ ಆವಧಿ ಜಾಸ್ತಿ ಮಾಡಬೇಕು.
ತೂಕ ಬೇಕೇ, ತೂರಾಡುವ ಮೈಗೆ? ೨೭.
ಉಸಿರು ತೆಗೆದುಕೊಳು ಮುದು ಉಸಿರು ಬಿಡುವುದು

೧೨ ಸೆಕೆಂಡ್‌ ೮ ಸೆಕೆಂಡ್‌
೧೫ ೫ ೧೨ »

ಎಟ್ಟು ೧೬೫
೩೨ » ಹಿಫಿ »

ಹೀಗೆ ಪ್ರಮಾಣಗಳನ್ನು ಸುಧಾರಿಸುತ್ತಾ ಹೋಗುವುದು. ಕ್ರಮೇಣ:


ಹೆಚ್ಚು ಮಾಡಿ.

ಮರೆಯದೆ ಮಾಡಿ
ನಿತ್ಯದ ಆಹಾರದ ಜೊತೆಗೆ ಈ ತಯಾರಿಕೆಯನ್ನು ಸೇವಿಸಿ:
ಅಕ್ಕಿ, ಗೋಧಿ, ರಾಗಿ, ಜೋಳ, ಕಡಲೆ, ಹೆಸರು, ಉದ್ದು ಈ.
ಧಾನ್ಯಗಳನ್ನು ಒಂದೇ ಅಳತೆಯಲ್ಲಿ ತೆಗೆದುಕೊಳ್ಳಿ. ಅವನ್ನು ಪ್ರತ್ಮೇಕವಾಗಿ
ಕಂದು ಬಣ್ಣದವರೆಗೆ ಹುರಿದು ಪುಡಿ ಮಾಡಿ. ಎಲ್ಲವನ್ನೂ ಬೆರೆಸಿ. ಭರಣಿ
ಯಲ್ಲಿ ಭದ್ರವಾಗಿಡಿ. ಅದೇ ರೀತಿ ಅಕ್ಕಿಯ ತೌಡನ್ನು (ಪಾಲಿಷ್‌ ತೌಡು)
ಹುರಿದು ಪ್ರತ್ಯೇಕವಾಗಿ ಶೇಖರಿಸಿ. ಪ್ರತಿದಿನವೂ ಬೆಳಗ್ಗೆ ಮತ್ತು ಸಂಜೆ
ಎರಡೆರಡು ದೊಡ್ಡ ಚಮಚದ ಧಾನ್ಯದ ಪುಡಿಯನ್ನು ಹಾಲು, ಸಕ್ಕರೆ, ತುಪ್ಪ
ಮತ್ತು ಒಂದು ಚಮಚ ತೌಡಿನೊಂದಿಗೆ ಬೆರೆಸಿ ಚೆನ್ನಾಗಿ ಅಗೆದು ತಿನ್ನಿ.

ತೂಕ ಹೆಚ್ಚದೆ ವಿಧಿಯಿಲ್ಲ


ತೂಕ ಹೆಚ್ಚು ಮಾಡಲು ಬಯಸುವವರು ಒಂದು ದಿನಾಂಕ ನಿಶ್ಚಯ
ಮಾಡಿ. ಅಂದಿನ ತೂಕ, ಅಳತೆ, ಬೇಕಾದರೆ ಒಂದು ಭಾವಚಿತ್ರವನ್ನು
ದಾಖಲೆಗಾಗಿ ತೆಗೆದಿಡಿ. ಅವರವರ ಶರೀರ ಸ್ವಭಾವಕ್ಕನುಗುಣವಾಗಿ
ಯೋಜನೆಯಂತೆ ತಪ್ಪದೆ ವ್ಯಾಯಾಮ ಮಾಡಿ. ಮೂರು ತಿಂಗಳನಂತರ
' ಪ್ರತಿ ವಾರವೂ ತೂಕ ನೋಡಿ. ಹೆಚ್ಚಿನ ತೂಕದ ಸುದ್ದಿಯನ್ನು ಸುತ್ತಲೂ
ಸಾರಿ.
4

೨೮ ಶರೀರ ಶಿಲ್ಪ
ಎಚ್ಚರಿಕೆ: ತೂಕವನ್ನು ಏರಿಸುವ ಉತ್ಸಾಹದಲ್ಲಿ ಅನವಶ್ಯಕ ಜಾಗ
ಗಳಲ್ಲಿ ತೂಕ ಹೆಚ್ಚದಂತೆ ಜಾಗರೂಕರಾಗಿರಬೇಕು. ಕರಗದ ಕೊಬ್ಬು ಉದರ
' ದಲ್ಲಿ ಕಾಣಿಸಿಕೊಳ್ಳದಂತೆ ಪುರುಷರು ಎಚ್ಚರಿಕೆ ವಹಿಸಬೇಕು. ಮಹಿಳೆಯರಲ್ಲಿ
ಮತ್ತೊಂದು ಸಮಸ್ಯೆ ಇದೆ. ಅವರ ಶರೀರ ರಚನೆಯಲ್ಲಿ ಮಾಂಸಖಂಡಗಳ
ಒಟ್ಟು ರಾಶಿಗೂ ಇರುವ ಮೇದಸ್ಸಿಗೂ ಪ್ರಮಾಣ ಕಡಮೆ. ಅಂದರೆ
ಮಾಂಸಖಂಡಗಳು ಬೆಳೆಯುವ ಪ್ರಮಾಣಕ್ಕಿಂತ ಶೀಘ್ರವಾಗಿ ಮೇದಸ್ಸು
ಹೆಚ್ಚುವುದು. ಅದರಿಂದ ಇದರ ಕಡೆ ಗಮನವಿರುವುದು ಉಚಿತ.
ಸೂತ್ರ: ಮನಸ್ಸನ್ನು "ಹಗುರ' ಮಾಡಿ- ಶರೀರ ಭಾರವಾಗುವುದು.
ತಾಂ ದ
ವ್ಯಾಯಾಮುವಿಲ್ಲದೆಯೆ
೬ ವ್ಯಾಯಾಮ

ಕೆಲವು ಬಗೆಯ ವಿಶೇಷ ವ್ಯಾಯಾಮ ಮಾಡಿ ಶರೀರದ


ಮೇಲ್ಮೆ $ ಲಕ್ಷಣಗಳನ್ನು ಬದಲಿಸಿ, ಎದ್ದು ಕಾಣುವ ಮಾಂಸ
ಖಂಡಗಳನ್ನು ಪಡೆದಿರುವವರು ಅಪರೂಪವೇನಲ್ಲ. ಅಲ್ಲ ಸಮಯದಲ್ಲೇ
ಸುರುಳಿ ಸುರುಳಿಯಾಗಿ ಮಾಂಸಖಂಡಗಳನ್ನು ಬೆಳೆಸಿದವರೂ ಅನೇಕರು.
ಆದರೆ ಇಂತಹ ತೋರಿಕೆಯ ದೃಢಕಾಯರಲ್ಲಿಯೂ ಹೃದಯಾಘಾತ
ವಾಗಿ ಆಕಾಲ ಮರಣಕ್ಕೆ ಈಡಾದ, ರೋಗರುಜಿನಗಳಿಗೆ ತಂತ್ತಾಗಿ ನರಳುವವರ
ಸಂಖ್ಯೆಯೂ ವಿರಳವೇನಲ್ಲ. ಎಲ್ಲಿಯವರೆಗೆ ಅವರ ಉಪಕರಣಗಳು
ಉಪಯೋಗ ಆಗುತ್ತಿರುವುವೋ ಅಲ್ಲಿಯವರೆಗೆ ಮಾತ್ರ ಇವರ ಸುರುಳಿಗಳು
ಇರುತ್ತವೆ. ವ್ಯಾಯಾಮ ಕೆಲಕಾಲ ನಿಂತ ಕೂಡಲೇ ಇವರ ಶರೀರವೂ
ಸೊರಗುವುದು. ಇವರು ಗಳಿಸಿದ ಶರೀರಶಕ್ತಿ ಯಾವುದೋ ಹೊದಿಕೆ ಇದ್ದಂತೆ
ಅಥವಾ ಬಣ್ಣ ಬಳಿದಂತೆ ಕಳಚಿಹೋಗುವುದು.
ನಿತ್ಯ ವ್ಯಾಯಾಮ ಮಾಡುವ ಅನೇಕರಲ್ಲಿ ವ್ಯಾಯಾಮದಿಂದ
ಅಪೇಕ್ಷಿಸಲಾದ ಸಂಗತಿಗಳ ಗಳಿಕೆಯೇ ಆಗುವುದಿಲ್ಲ - ಶಕ್ತಿ, ದೃಢತೆ, ತಡೆತ
"೩೦ ಶರೀರ ಶಿಲ್ಪ

ಮುಂತಾದವು. ಇದಕ್ಕೆ ಅನೇಕ ಮಿತಿಗಳುಂಟು. ೧೫-೨೦ ನಿಮಿಷಗಳು ಮಾಡಿದ


ವ್ಯಾಯಾಮದಿಂದ ಕೂಡಿಬರುವ ಶಕ್ತಿ ದಿನವಿಡೀ ಶರೀರವು ಜೀವನ
ಸಂಘರ್ಷದಲ್ಲಿ ವ್ಯಯಿಸುವ ಶಕ್ತಿಗೆ ಹೋಲಿಸಿದರೆ ಅತ್ಮಲ್ಪ.
ಜೊತೆಗೆ ಆ ಅಲ್ಪ ಸಮಯದಲ್ಲಿ ಕೇವಲ ಕೆಲವು ಮಾಂಸಖಂಡಗಳ
ಗುಂಪಿಗೆ ಮಾತ್ರ ವ್ಯಾಯಾಮ ಸಿಕ್ಕುವುದು. ಆ ರೀತಿಯಲ್ಲಿ ಎಲ್ಲ
ಮಾಂಸಖಂಡಗಳ ಗುಂಪಿಗೆ ವ್ಯಾಯಾಮ ಲಭಿಸಬೇಕಾದರೆ ಅದಕ್ಕೇ ಅನೇಕ
ಗಂಟೆಗಳನ್ನು ದಿನದಲ್ಲಿ ಮಾಸಲಾಗಿಡಬೇಕಾದೀತು. ಆದರೆ ನಿತ್ಕ ಜೀವನದಲ್ಲಿ
ಸಮಯಕ್ಕೂ ಮಿತಿ ಇದೆ. ಹೀಗಾಗಿ ಅನೇಕರಲ್ಲಿ ವ್ಯಾಯಾಮವು ಶರೀರವನ್ನು
ಬೆಳೆಸಿ ಉಳಿಸುವ ಸಾಧನವಾಗಿರದೆ ಕೇವಲ ಆರೋಗ್ಯ ಕೆಡದಂತೆ ಇಡಲು
ಮುನ್ನೆಚ್ಚರಿಕೆಯ ಸಂಗತಿಯಾಗಿಯೇ ಉಳಿದಿದೆ.
ಇದಕ್ಕೆ ವಿಪರೀತವಾಗಿ ಅನೇಕ ಉದಾಹರಣೆಗಳೂ ದೊರೆಯುವು
ದುಂಟು. ಕೆಲವು ವ್ಯಕ್ತಿಗಳು ಎಂದೂ ತಾವಾಗಿಯೇ ಔಪಚಾರಿಕವಾದ ಯೋಗ
ಪ್ರಯೋಗಗಳಿಂದೊಡಗೂಡಿದ ವ್ಯಾಯಾಮಗಳನ್ನು ಮಾಡದೆ ಇದ್ದಾಗ್ಯೂ
ಸಹ ಆರೋಗ್ಯವಂತರಾಗಿ, ದೃಢಕಾಯರಾಗಿ, ಜೀವನಸಂಗ್ರಾಮದಲ್ಲಿ ಇದಿರು
ಬರುವ ಎಲ್ಲ ಪ್ರಸಂಗಗಳನ್ನೂ ಯಶಸ್ವಿಯಾಗಿ ಎದುರಿಸುವ ದಷ್ಟಪುಷ್ಟವಾದ
ಮೈಕಟ್ಟನ್ನು ಪಡೆದಿರುವರು. ಇವರ ಶಕ್ತಿ ಯಾವುದೇ ಯತುವಿಶೇಷಗಳಿಂದ
ವ್ಯತ್ಯಾಸ ಆಗದೆ ಉಳಿಯುವಂತಹದು. ತಾತ್ಕಾಲಿಕ ಏರಿಳಿತಗಳಿಂದ
ದೂರವಾದದ್ದು. ಇವರ ಆರೋಗ್ಯ ಮತ್ತು ಸೌಷ್ಠವ ಯೌವನ ದಾಟಿದರೂ
ಉಳಿಯುವಂತಹದು.
ಹಾಗಾದರೆ ಈ ವ್ಯತ್ಮಾಸಕ್ಕೆ ಕಾರಣವೇನು ? ವ್ಮಾಯಾಮ ಮಾಡದೆ
ಇದ್ದರೂ ಜೀವನವಿಡೀ ಆರೋಗ್ಯವಾಗಿ ದೃಢಕಾಯರಾಗಿರುವುದರ
ರಹಸ್ಕವೇನು ?
ವ್ಯಾಯಾಮ ಮಾಡಿಯೂ ದೃಢಕಾಯರಾಗಿಲ್ಲದಿರುವುದರ ಗುಟ್ಟೇನು?
ಕೆಲವು ತಜ್ಞರು ಈ ರೀತಿಯ ನೂರಾರು ವ್ಯಕ್ತಿಗಳ ಸೂಕ್ಷ್ಮ
ಅವಲೋಕನ. ಮಾಡಿ ಕಂಡುಬಂದ ಸಂಗತಿಗಳನ್ನು ಜೋಡಿಸಿ ಕೆಲವು
ನಿಷ್ಕರ್ಷೆಗಳಿಗೆ ಬಂದು ಮುಟ್ಟಿದ್ದಾರೆ.
ವ್ಯಾಯಾಮವಿಲ್ಲದೆಯೆ ವ್ಯಾಯಾಮ ೩೧

ನೈಸರ್ಗಿಕವಾಗಿ ದೃಢವಾಗಿರುವವರಲ್ಲಿ ಕೆಲವು ಸಮಾನ ಅಭ್ಯಾಸ


ಗಳಿರುತ್ತವೆ. ದಿನವಿಡೀ ಅವರ ಶರೀರದ ಚಲನವಲನಗಳಲ್ಲಿ ಒಂದು ರೀತಿ
“ಸಮಾನತೆ ಎದ್ದು ಕಾಣುತ್ತದೆ. ಅವಶ ನಿಲುವು, ನಡಿಗೆ, ಕುಳಿತುಕೊಳು ವುದು,
ಉಸಿರಾಟಗಳಲ್ಲಿ ಸಾಮ್ಮತೆಯೇ ಹೆಚ್ಚು. ವ್ಯಾಯಾಮ ಮಾಡಿಯೂ
ಸೊರಗುವ ವ್ಯಕ್ತಿಗಳಲ್ಲಿ ಈ ರೀತಿ ಸಾಮ್ಮ ಕಾಣದೆ ದಿನವಿಡೀ ಅವರ
ಚಲನೆಗಳಲ್ಲಿ ಅನಿರ್ದಿಷ್ಟತೆಯೇ ಕಾಣುವುದು.

ಅಂದಮೇಲೆ ನಿಲುವು, ನಡಿಗೆ, ಉಸಿರಾಟಗಳನ್ನು ಯೋಗ್ಯ ರೀತಿಯಲ್ಲಿ


ಮಾಡಿದರೆ ದಿನವಿಡೀ ಜೀವನವಿಡೀ ಶಕ್ತಿ ಉಳಿಸಿಕೊಳ್ಳಬಹುದು.
ಸಲ್ಲದ ರೀತಿಯಲ್ಲಿ ಆಚರಿಸಿದರೆ ಶಕ್ತಿಯ ಹ್ರಾಸ ಆಗುವುದು. ೧೫-೨೦ ನಿಮಿಷ
ಗಳು ವ್ಯಾಯಾಮ ಮಾಡಿ, ದಿನವಿಡೀ ೧೦-೧೨ ಗಂಟೆಗಳು ಸಲ್ಲದ ಚಟುವಟಿಕೆ
ಗಳನ್ನು ನಡೆಸಿದ ವ್ಯಕ್ತಿಯು ದೃಢಕಾಯನಾಗಿ ಹೇಗೆ ತಾನೇ
ಇರಬಲ್ಲನು ? ವಾರವೆಲ್ಲಾ ಪಾಪಗಳನ್ನು ಮಾಡುತ್ತಾ ವಾರಾಂತ್ಮದಲ್ಲಿ ಕೆಲವು
ಕ್ಷಣ ಪರಮಾತ್ಮನನ್ನು ಪ್ರಾರ್ಥಿಸಿ ಪಾಪಮುಕ್ತನಾದಂತೆ ! ಅಲ್ಪ ಸಮಯದ
ವ್ಯಾಯಾಮ ಮಾಡದೆ ಇದ್ದರೂ ದಿನವಿಡೀ ಯೋಗ್ಯ ಚಟುವಟಿಕೆ ಮಾಡು
ತ್ತಿರುವ ವ್ಯಕ್ತಿಗೆ ಶಕ್ತಿ ಮೂಡಿಬಂದು ದೃಢಕಾಯನಾಗಿರಲೂ ಬಲ್ಲ.
ನಿರಂತರವಾದ, ಕ್ರಮವಾದ ವ್ಯಾಯಾಮ ನೀಡುವ ರಚನಾತ್ಮಕ ಅಂಶ
"ಗಳು ನಿಲುವು, ನಡಿಗೆ, ಉಸಿರಾಟ, ಕುಳಿತುಕೊಳ್ಳುವುದರಲ್ಲಿ ಕೂಡಿಕೊಂಡಿವೆ.
ಅಂಚೆಯವನು ನಿತ್ಕ ಅನೇಕ ಗಂಟೆಗಳು ನಡೆಯುತ್ತಾನೆ. ಅಂತೆಯೇ
'ಗಗನಸಖಿಯೂ ಮಾಡುತ್ತಾಳೆ. ಒಬ್ಬ ವ್ಯಾಪಾರಿ ೮-೧೦ ಗಂಟೆಗಳು
'ಅಂಗಡಿಯಲ್ಲಿ ಕುಳಿತಿರುತ್ತಾನೆ. ಕಾರ್ಮಿಕ ಪ್ರತಿದಿನ ೮ ಗಂಟೆ ನಿಂತಿರುತ್ತಾನೆ.
ಇವರೆಲ್ಲರೂ ಏಕೆ ದೃಢಕಾಯರಾಗಿಲ್ಲ? ಈ ಕ್ರಿಯೆಗಳನ್ನು ಇವರು
ಯತ್ನವಿಲ್ಲದೆ, ಅಪರಿಹಾರ್ಯವಾಗಿ ಮಾಡುತ್ತಾರೆ. ಅದರಿಂದ ಈ ಕ್ರಿಯೆಗಳು
ಇವರ ಭಾಗಕ್ಕೆ ಹೊರೆಯೇ ಹೊರತು "ವರ'ವಾಗಿಲ್ಲ.
ಹಾಗಾದರೆ ಈ ಕ್ರಿಯೆಗಳ ಕಲೆ ಏನು? ಹೊರೆಯಾಗಿ ಕಾಣುವ ಈ
ಕ್ರಿಯೆಗಳನ್ನು "ವರ”ವಾಗಿ ಮಾಡಿಕೊಳ್ಳುವ ವಿಧಾನ ಯಾವುದು?
“a

೩೨ ಶರೀರ ಶಿಲ್ಪ

ವೊದಲನೇ ಸೂತ್ರವೆಂದರೆ ಭೂಮಿಯ ಆಕರ್ಷಣ ಶಕ್ತಿಯ ವಿರುದ್ದ


ಎದ್ದು ನಿಲ್ಲಂವುದು, ಜೀವನಪರ್ಯಂತ ಗಮನಪೂರ್ವಕ ಹೋರಾಡುವುದು.
ಈ "ಆಕರ್ಷಣ ಶಕ್ತಿ” ಪೌರಾಣಿಕ ರಾಕ್ಷಸನಂತೆ. ಅವನನ್ನು ಗೆದ್ದರೆ ಅವನು
ನಮ್ಮ ಸೇವಕ; ಸೋಲು ಒಪ್ಪಿದರೆ ಅವನು ನಮ್ಮ ಸವಾರ.
ಓಡಾಡುವಾಗ, ಕುಳಿತಾಗ, ನಿಂತಾಗ ಶರೀರದ ಅಂಗಾಂಗಗಳನ್ನು
ು ದಿಕ್ಕಿನಲ್ಲಿಕುಸಿಯಲು ಬಿಟ್ಟರೆ ಅದು ಸೋಲು. ಕುಸಿಯಲು
ಬಿಡದೆ ಗಮನಪೂರ್ವಕ ಎದ್ದು ನಿಂತರೆ, ಎತ್ತಿ "ಹಿಡಿದರೆ ಅದೇ ವಿಜಯ. ಇದೇ
ಠಿ ವರದಾನದ ವ್ಯಾಖ್ಯೆ.
ವ್ಯಕ್ತಿಯ ಬಲ ಬಹುಪಾಲು ಅವನ ಬೆನ್ನಿನ ಬಲದ ಮೇಲೆ
ಅವಲಂಬಿತವಾದದ್ದು. ಆದರೆ ಸಾಮಾನ್ಯ ವ್ಯಕ್ತಿಯ ಬೆನ್ನು ಸಾಮಾನ್ಯವಾಗಿ
ದು ರ್ಬಲವಾದದ್ದು.. ಸೊಂಟದ ಬಳಿ "ವನ್ನು ಮುಂದಕ್ಕೆ ಬಹಳ ಬಾಗಿ
ಡೋಕಾಗಿರುವುದೇ ಇದಕ್ಕೆ ಕಾರಣ. ಈ ಕ್ಷೇತ್ರದಲ್ಲಿರುವ ಮಾಂಸಖಂಡಗಳಿಗೆ
ಶಕ್ತಿ ಕುಂದಿರುತ್ತದೆ. ಅನೇಕ ವರ್ಷಗಳ ಗಮನರಹಿತ ಕುಸಿತ ಮತ್ತು
ಕ್ರಮವಿಲ್ಲದ ಉಸಿರಾಟಗಳಿಂದ ಈ ರೀತಿ ಆಗುವುದು. ಪದೇಪದೇ ಈ
ಒತ್ತಡಕ್ಕೆ ಉದರದ ಮಾಂಸಖಂಡಗಳು ತುತ್ತಾಗಿ ದುರ್ಬಲವಾಗಿ ಮುಂದಕ್ಕೆ
ಉಬ್ಬಿದಆಕಾರ ಪಡೆಯುವುವು; ಕೊಬ್ಬುಸ ಸಂಗ್ರಹ ಆಗುವುದು. ಎದೆಯನ್ನು
ಎತ್ತಿ.ಹಿಡಿಯದೆ ಇರುವುದರಿಂದ -ಉದರ ಮತ್ತು ಎದೆಯ ಅವಯವಗಳ
ಮೇಲೆ ಆನಾವಶ್ಶಕ ಒತ್ತಡ ಬೀಳುವುದು ಮತ್ತು ಅವುಗಳ ಕ್ಷಮತೆ
ಕುಂದುವುದು.

ಇದಕ್ಕೆ ವಿಪರೀತವಾಗಿ ನೈಸರ್ಗಿಕವಾಗಿ ಶಕ್ತಿ ಶಾಲಿಯಾಗಿರುವ ವ್ಯಕ್ತಿಯ


ನಾ ಚಪ್ಪಟಿ ಇರುತ್ತದೆ. ಡೊಂಕು ಅತ್ಯಲ್ಪ. ಆದ್ದರಿಂದ ಶಕ್ತಿ ಗಳಿಸುವ.
ಮೊದಲನೆ ಮೆಟ್ಟಲು ಅಂದರೆ ಜಿನ್ನನ್ನು ಚಪ್ಪಟಿ ಮಾಡುವುದು.
ಪೃಷ್ಠಗಳ ಹೊಂದಾಣಿಕೆಯಿಂದ, ಸತತ ಅಭ್ಯಾಸದಿಂದ ಈ ಸಿತಿಯನ್ನು
ಗಳಿಸಬಹುದು. ಮಲಗಿ ಮೊಣಕಾಲನ್ನು ಎತ್ತಿ ಮತ್ತು ನಿಂತಾಗ "ಗೋಡೆಗೆ
ಬೆನ್ನು ತಾಗಿಸಿ ಅಭ್ಯಾಸ ಮಾಡಬಹುದು.
ವ್ಯಾಯಾಮವಿಲ್ಲದೆಯೆ ವ್ಯಾಯಾಮ ೩೩

ನಿಲುವ ಇತಿ ಗ:

5) ನಡೆ ಇನೆ ಇಗ
ಸಂ" ಹರವಾಗಿಲ್ಲ ತೆಪ್ರಟಿ
ತೀರಾ ತಪ್ಪು
೧. ತಲೆ, ಸೊಂಟ, ೧. ತಲೆ ಮುಂದೆ. ೧. ಸುಸ್ತಾದ ಸ್ಥಿತಿ. ೧. ತಲೆ ಹೆಚ್ಚು
ತೊಡೆ ಒಂದೇ ೨. ಉದರ ಸ್ವಲ್ಪ ೨. ತಲೆ ಮುಂದೆ. ಮುಂದಿದೆ.
ನೇರದಲ್ಲಿ. ಕಾಣುತ್ತಿದೆ. ೩. ಉದರದ ೨. ಬೆನ್ನಿನ
೨. ಎದೆ ಮೇಲೆ, ೩. ಬೆನ್ನು ಕೊಂಚ ಹಿಡಿತ ಇಲ್ಲ. ಮೇಲ್ಭಾಗ ವಿಪ
ಮುಂದಿ. ಹಳ್ಳ. ೪. ಭುಜದ ಎಲುಬು ರೀತ ಬಾಗಿದೆ.
೩. ಉದರ ಚಪ್ಪಟೆ. ೪. ಬೆನ್ನಿನ ಗಳು ಎದ್ದು ೩. ಉದರ ಸಡಿಲ.
೪. ಬೆನ್ನು ಸಹಜ. ಮೇಲ್ಭಾಗ ಕಾಣುತ್ತಿವೆ. ೪. ಎದೆ ಚಪ್ಪಟೆ.
ಬಾಗಿದೆ. ೫. ಬೆನ್ನ ಕೆಳಭಾಗ ೫. ಬೆನ್ನ ಕೆಳಭಾಗ
ಹಳ್ಳ. ಹಳ್ಳ.

ಸೊಂಟದ ಸಮತೋಲವನ್ನು ಒಂದು ನೀರು ತುಂಬಿದ ಬಟ್ಟಲು ಎಂದು


ಕಲ್ಪನೆ ಮಾಡೋಣ. ಬೆನ್ನೆಲುಬು ಡೊಂಕಾಗಿ ಮುಂದಕ್ಕೆ ಬಾಗಿದಾಗ ಬಟ್ಟಲೂ
ಮುಂದಕ್ಕೆ ವಾಲುತ್ತದೆ, ನೀರು ಚೆಲ್ಲುತ್ತದೆ. ಬೆನ್ನೆಲುಬು ನೇರವಾಗಿದ್ದಾಗ
ಬಟ್ಟಲಿನ ನೀರು ಚೆಲ್ಲುವುದಿಲ್ಲ. ಇದೇ ಯೋಗ್ಯವಾದ ನಿಲುವು. ಪೃಷ್ಠಗಳ
ಹೊಂದಾಣಿಕೆಯಿಂದ ಗಳಿಸಬೇಕಾದ ಸಮತೋಲ ಸ್ಥಿತಿಯೇ ಇದು.
೩]
೩೪ ಶರೀರ ಶಿಲ್ಪ

ಹೇಗೋ ಹಾಗೆ ಡೊಂಕುಡೊಂಕಾಗಿ ನಿಲ್ಲುವ ಶರೀರಗಳಲ್ಲಿ ಅತಿಕಡಿಮೆ


ಮಾಂಸಖಂಡಗಳ ಕ್ರಿಯೆ ಮತ್ತು ಹೆಚ್ಚು ಒತ್ತಡ ಇರುವುದು. ಇದು
ಸರ್ವಥಾ ಅಪೇಕ್ಷಣೀಯವಾದದ್ದಲ್ಲ.
ನೈಸರ್ಗಿಕ ದೃಢಕಾಯರ ಶರೀರ ಅವಲೋಕನ ಮಾಡಿದರೆ ಕಿಲವು
ಸಂಗತಿಗಳು ತಿಳಿದುಬರುತ್ತವೆ - ಸೊಂಟ ಸಮತೋಲವಾಗಿದೆ ಮತ್ತು
ಬೆನ್ನೆಲುಬು ನೇರವಾಗಿದೆ. ಈ ಸ್ಥಿತಿಯೇ ಅನುಕರಣೀಯವಾದದ್ದು. ಶರೀರದ
ಗಂರುತ್ವಕೇಂದ್ರ ಪಾದಗಳ ಅಗಲವಾದ ಭಾಗದ ಮೇಲೆ ಬಿದ್ದಿರುತ್ತದೆ. ಈ
ಸ್ಥಿತಿಯಲ್ಲಿ. ಮೂಗಿನ ಬುಡದಿಂದ ಎಳೆದ ಲಂಬರೇಖೆ ಎದೆಗೆ ತಗಲಿದಂತೆ
ಪಾದದ ಹೆಬ್ಬೆರಳಿನ ಮೇಲೆ ಹಾದುಹೋಗುವುದು.
ಎಂದೂ ಹಿಮ್ಮಡಿಯ ಮೇಲೆ ನಿಲ್ಲಬಾರದು. ಹಿಮ್ಮಡಿ ಕೇವಲ
ಸಮತೋಲಕ್ಕಾಗಿಯೇ ಹೊರತು ಭಾರ ಹೊರಲು ಅಲ್ಲ.
ಮೂಣಕಾಲುಗಳ ಕೀಲುಗಳ ಪಾತ್ರವೂ ಅತಿ ಮಹತ್ವದ್ದು. ಕೀಲುಗಳು
ಸಡಿಲವಾಗಿರದೆ ನೇರವಾಗಿ ಬಿಗಿ ಹಿಡಿದಿರಬೇಕು.
ಎದೆ ಎತ್ತಿರಬೇಕು. ಕತ್ತು ಹಿಂದಕ್ಕೆ ಮತ್ತು ಗಲ್ಲ ಕೆಳಕ್ಕೆ
- ದೃಷ್ಟಿ
ನೇರವಾಗಿರಬೇಕು. (೩೩ ನೇ ಪುಟದಲ್ಲಿರುವ ಚಿತ್ರ ನೋಡಿ.)
ಮೇಲಿನ ಎಲ್ಲ ಸ್ಥಿತಿಗಳೂ ಸಾಮಾನ್ಮವಾಗಿ ಎತ್ತರ ಕಂಡುಹಿಡಿಯುವ
ಉಪಕರಣಗಳ ಬಳಿ ವ್ಯಕ್ತಿಗಳು ನಿಲ್ಲುವ ಸ್ಥಿತಿಯಂತೆಯೇ. ಅದೇ ಸ್ಥಿತಿಯನ್ನು
ಸದಾ ಉಳಿಸಿಕೊಂಡರೆ !
ಸೂತ್ರವೇ ಅದು. ಆದಷ್ಟು ಎತ್ತರವಾಗಿ ನಿಲ್ಲಿ. ಠಿ
ಈ ಸ್ಥಿತಿಯಲ್ಲಿ

ಶರೀರದ ಮಾಂಸಖಂಡಗಳು ಶರೀರದ ತೂಕವನ್ನು ಹಿಡಿದುನಿಲ್ಲುವುವು.
ಗುರುತ್ವಾಕರ್ಷಣೆಯನ್ನು ಮೆಟ್ಟಿ ಶರೀರದ ಭಾರ ಹೊರುವುವು. ಇದೇ ಇಲ್ಲಿನ
ವ್ಯಾಯಾಮ. ಇದನ್ನು ಗಂಟೆಗಳ ಕಾಲ ಮಾಡಿದರೆ ನಿರಂತರವಾಗಿ ಶಕ್ತಿ ಕೂಡಿ
ಬರುವುದು. ಮಾಂಸಖಂಡಗಳು ಬಲಿಷ್ಮವಾಗುವುವು.
ಈ ನಿಲುಮೆ ಸಹಜ ಸ್ವಭಾವವಾಗಚೇಕು. ಆಗ ಗಮನವಿಲ್ಲದೆಯೆಂ
ಶರೀರಕ್ಕೆ ರಚನಾತ್ಮಕ, ಉಪಯೋಗ ಆಗುವುದು. ಶರೀರಕ್ಕೆ ಮಾತ್ರವಲ್ಲ,
ವ್ಯಾಯಾಮವಿಲ್ಲದೆಯೆ ವ್ಯಾಯಾಮ ೩೫

ವ್ಯಕ್ತಿಯ ಸ್ವಭಾವಕ್ಕೂ ಅನೇಕ ಇಷ್ಟಗುಣಗಳನ್ನು ಗಳಿಸಿಕೊಳ್ಳಬಹುದು,


ಈ ನಿಲುಮೆಯಿಂದ.
ನಾವು ದಿನದಲ್ಲಿ ಅನೇಕ ಗಂಟೆಗಳು ಕುಳಿತುಕೊಳ್ಳುತ್ತೇವೆ, ಓದಲು
ಬರೆಯಲು, ಉಣ್ಣಲು, ತಿನ್ನಲು, ಯೋಚಿಸಲು, ಮಾತನಾಡಲು ಅಥವಾ
ಸುಮ್ಮನೆ. ಈ ಗಂಟೆಗಳನ್ನು ಶ್ರಮವೆಂದುಕೊಂಡಾದರೂ ಕಳೆಯಬಹುದು
ಅಥವಾ ರಚನಾತ್ಮಕ ವ್ಯಾಯಾಮವಾಗಿಯಾದರೂ ಪರಿವರ್ತಿಸಬಹುದು.
ನಿಂತಾಗ ಮುಂದಕ್ಕೆ ಬಾಗುವ ಬೆನ್ನು ಕುಳಿತಾಗ ಹಿಂದಕ್ಕೆ ಬಾಗುವುದು.
ಇವೆರಡನ್ನೂ ತಡೆಯಬೇಕು.
ನೈಸರ್ಗಿಕವಾಗಿ ಬಲಿಷ್ಠವಾಗಿರುವ ವ್ಯಕ್ತಿಗಳು ಕುಳಿತಾಗ ಬೆನ್ನು
ನೇರವಾಗಿಯೇ ಇರುವುದು. ಕುಳಿತಾಗಲೂ ಎತ್ತರವಾಗಿ ಕೂಡುವರು.
ಇಂತಹ ವ್ಯಕ್ತಿಗಳು ಕುರ್ಚಿಯ ಮೇಲೆ ಕುಳಿತಾಗ ಆದಷ್ಟು ಹಿಂದಕ್ಕೆ
ಕುಳಿತು, ಕಾಲುಗಳನ್ನು ನೆಲದ ಮೇಲೆ ನೇರವಾಗಿಡುವರು. ಪಾದ ಪೂರ್ಣ
ನೆಲದ ಮೇಲೆ. ಕಾಲಿನ ಮೇಲೆ ಕಾಲು ಅಡ್ಡ ಹುಕುವುದಿಲ್ಲ ಮತ್ತು ಕುರ್ಚಿಯ
ಹಿಂಭಾಗಕ್ಕೆ ಯಾರೂ ಒರಗಂವುದಿಲ್ಲ. ಕುರ್ಚಿಯ ಹಿಂಭಾಗದ ಅವಶ್ಯಕತೆಯೇ
ಇವರಿಗಿರುವುದಿಲ್ಲ. ಈ ರೀತಿ ಕುಳಿತಾಗ ರಕ್ತಚಲನೆಗೆ, ಉಸಿರಾಟಕ್ಕೆ ಮತ್ತು
ಮಿಕ್ಕ ಕ್ರಿಯೆಗಳಿಗೆ ಹೊಂದಾಣಿಕೆ ತಾನಾಗಿಯೇ ಆಗುವುದು.
ನಿಲ್ಲುವಿಕೆಯಲ್ಲಿ ೧) ಸೊಂಟದ ಸಮತೋಲವಿರಬೇಕು, ೨) ಹಿಮ್ಮಡಿಯ
ಮೇಲೆ ಭಾರ ಬೀಳದೆ ಇಡೀ ಪಾದದ ಮೇಲೆ ಬೀಳಬೇಕು, ೩) ಮೊಣ
ಕಾಲುಗಳನ್ನು ಬಿಗಿಹಿಡಿಯಬೇಕು ಮತ್ತು ಕೊಂಚ ಹೊರಕ್ಕೆ ತಿರುಗಿರಬೇಕು.
೪) ಎದೆ ಮುಂದೆ ಇರಬೇಕು, ೫) ಕತ್ತು ಹಿಂದಕ್ಕೆ, ಗಲ್ಲ ಕೆಳಕ್ಕೆ, ದೃಷ್ಟಿ
ನೇರಕ್ಕೆ ಇರಬೇಕು.
ಕೂಡುವುದರಲ್ಲಿ, ಕುರ್ಚಿಯ ಮೇಲೆ ಕುಳಿತಾಗ ೧) ಆದಷ್ಟು ಹಿಂದಕ್ಕೆ
ಕುಳಿತುಕೊಳ್ಳಬೇಕು, ೨) ಕಾಲಿನ ಮೇಲೆ ಕಾಲು ಕೂಡದು, ಕಾಲುಗಳು
ನೇರವಾಗಿರಲಿ, ನೆಲದ ಮೇಲೆ ಪಾದಗಳು ಪೂರ್ಣ ಇರಲ, ೩) ಬೆನ್ನು ನೇರ,
ಎದೆ ಮುಂದೆ. ಇರಲಿ, ೪) ಬಗ್ಗುವಾಗ ಸೊಂಟದಿಂದಲೇ ಬಗ್ಗಬೇಕು,
೫) ಕುರ್ಚಿಯ ಹಿಂಭಾಗದ ಉಪಯೋಗ ಕೂಡದು. ನೆಲದ ಮೇಲೆ
ಕೂಡುವ ಹ
ದ್ಯ

9 4 ಛ್‌

Y
ವ್ಯಾಯಾಮವಿಲ್ಲದೆಯೆ ವ್ಯಾಯಾಮ ೩೭

ಹುಖಾಸನದಲ್ಲಿ ಕುಳಿತು ಸೂಚನೆ ೩) ಮತ್ತು ೪) ನ್ನು ಅನುಸರಿಸಬೇಕು. ಈ


'ರೀತಿ ಸುಲಭವಾಗಿ ಮಾಡಲಂ ಸೊಂಟವನ್ನು ಮುಂದೆ ತಳ್ಳಿರಿ. ಎದೆ ಎತ್ತಿರಿ.
(ಚಿತ್ರ ನೋಡಿ.)

ಈ ಅಭ್ಯಾಸಗಳನ್ನು ಪ್ರಾರಂಭ ಮಾಡಲು ವಯಸ್ಸಿನ ಮಿತಿ ಇಲ್ಲ.


೯೦ ದಾಟಿದ ಮುಪ್ಪಿನಲ್ಲೂ ಪ್ರಾರಂಭ ಮಾಡಬಹುದು. ಬಾಲ್ಕ ಅಥವಾ
ತಾರುಣ್ಮದಲ್ಲಿ ಪ್ರಾರಂಭ ಮಾಡಿದರಂತೂ, ಆ ವಯಸ್ಸಿಗೆ ಯೋಗ್ಕವಾದ
ಪೂರ್ಣ ಶಕ್ತಿ ಕೂಡಿಕೊಳ್ಳುವುದು. ನಮ್ಮೆಲ್ಲರಲ್ಲಿಯೂ ಇರಬೇಕಾದ ಶಕ್ತಿ
ಮತ್ತು ಇರುವ ಶಕ್ತಿಗಳಲ್ಲಿನ ಅಂತರ ಆನೆ. ಮತ್ತು ಇಲಿಗಳ
ನಡುವಿನ ಅಂತರ ಎನ್ನುವುದು ನೆನಪಿರಲಿ.

ಈ ನಿಲುವು, ನಡಿಗೆ, ಕುಳಿತುಕೊಳು ವಿಕೆಗಳಿಂದ ಸ್ಥೂಲಕಾಯ


'ನಷ್ಟವಾಗುವುದಷ್ಟೇ ಅಲ್ಲ, ದಂರ್ಬಲ ಶರೀರಗಳು ತುಂಬಿಕೊಳ್ಳುವುವು;
ಕೊಬ್ಬಿನಿಂದಲ್ಲ, ಮಾಂಸಖಂಡಗಳಿಂದ.

ಉದರದ ಮಾಂಸಖಂಡಗಳು ಕ್ರೀಯಾಶೂನ್ಯವಾಗಿ ದುರ್ಬಲ: ಆದಾಗ


ಕೊಬ್ಬು ಹೆಚ್ಚುಹೆಚ್ಚು ಸಂಗ್ರಹ ಆಗುವುದು. ಮೇಲಿನ ಕ್ರಿಯೆಗಳಲ್ಲಿ
ಪೃಷ್ಠ ಮತ್ತು ಉದರದ ಮಾಂಸಖಂಡಗಳು ಸಕ್ರಿಯ ಆಗುವುವು. ಕೊಬ್ಬು
ತಾನಾಗಿಯೇ ಕರಗುವುದು. ಚಟುವಟಿಕೆ ಮತ್ತು ಕೊಬ್ಬು ಹಾವು ಕಪ್ಪೆ
“ಇದಂತೆ.
೦ಎ

ಮೇಲಿನ ಸೂಕ್ತ ಕ್ರಿಯೆಗಳನ್ನು ಸತ್ಕರ್ಮಗಳು ಎಂದು


ಭಾವಿಸೋಣ. ಆದರೆ ಇದರ ವಿರುದ್ಧ ನಾವುನಿತ್ಯ ಮಾಡುವ ಪಾಪ
ಅದೆಷ್ಟೋ! ಅದಕ್ಕೆ ಪ್ರಾಯಶ್ಚಿತ್ತವಾಗಿ ಸೂಕ್ತ ವ್ಯಾಯಾಮಗಳನ್ನು
ಮಾಡಬೇಕು.

ಸೂಕ್ತ ನಿಲುವು, ಯೋಗ್ಯ ನಡಿಗೆ, ಒಪ್ಪುವ ಉಸಿರಾಟ, ಹಿತವಾದ


ಶೂಡುವಿಕೆಗಳ ಅಭ್ಯಾಸ ಶರೀರಕ್ಕೆ ಆದಮೇಲೆ ಆಕ್ರಮ ತಪ್ಪಿದರೆ ಶರೀರಕ್ಕೆ
೩೮ ಶರೀರ ಶಿಲ್ಪ.
ಗಾಸಿಯಾಗುವುದು. ಆದರೆ ಇವುಗಳ ಅಭ್ಯಾಸಕ್ಕೆ ತೊಡಗಿದಾಗ ಪ್ರಾರಂಭದಲ್ಲಿ
ಸ್ವಲ್ಪ ಕಷ್ಟ ಆಗುವುದು. ಅದಂ ಕೆಲ ಕಾಲ ಅಷ್ಟೆ, ಸಹಿಸಬೇಕು.
ಆದ್ದರಿಂದ ನಿಲ್ಲುವಾಗ ಚಾವಣಿ ಮುಟ್ಟುವಂತೆ ನಿಲ್ಲಿ; ನಡೆಯುವಾಗ
ಆಕಾಶಕ್ಕೆ ತಲೆತಾಗುವಂತೆ ನಡೆಯಿರಿ; ಕೂಡುವಾಗ ನಿಂತವರಿಗಿಂತ ಎತ್ತರವಾಗಿ.
ಕೂಡಿ; ಇರುವ ಗಾಳಿಯನ್ನೆಲ್ಲಾ ಸೇವಿಸಿ, ಎತ್ತರವಾಗಿ ನಿಲ್ಲಿ, ಉದ್ದವಾಗಿ
ಮಲಗಿ.
೭ ಅಂಗಸಾಧನೆಯ ಆರಂಭ

ನಮ್ಮ ಶರೀರ ಆರೋಗ್ಯವಾಗಿರಬೇಕು, ಗಟ್ಟೆಮುಟ್ಟಾಗಿರಬೇಕು, ಸಬಲ


ವಾಗಬೇಕು, ಎಂಬೆಷ್ಟೋ ಸಂಗತಿಗಳಂ ನಮ್ಮ ಮನಸ್ಸಿನಲ್ಲಿ ಸುಳಿದುಹೋಗಿರ
ಬಹುದು. ಇವುಗಳಲ್ಲಿ ಯಾವ ಸಂಗತಿಯನ್ನೂ ಗಳಿಸಿಲ್ಲ, ಏಕೆ?
ವ್ಯಾಯಾಮದಲ್ಲಿ ಸಾಮಾನ್ಮವಾಗಿ ನಾವು ಅಂತಿಮ ಗುರಿಯ ಕಲ್ಪನೆ
ಮಾಡಿಕೊಳ್ಳಬಲ್ಲೆವು. ಅನೇಕ ವೇಳೆ ಸರ್ಕಸ್ಸಿನಲ್ಲೋ ಪ್ರದರ್ಶನದಲ್ಲೋ.
ಅಂತಹ ಗುರಿಮುಟ್ಟಿದ, ಒಳ್ಳೆಯ ದೇಹದಾರ್ಥ್ಯದ ವ್ಯಕ್ತಿಗಳನ್ನು ಕಾಣಲೂ
ಬಹುದು. ಆದರೆ. ಆ ಮಟ್ಟಕೈ ಮುಟ್ಟಿಸುವ ಏಣಿಯ ಮೆಟ್ಟಲು ನಮಗೆ
ಕಾಣುವುದಿಲ್ಲ. ಆ ದಡಕ್ಕೆ ಕೊಂಡೊಯ್ಕು ವ ದೋಣಿಯೂ ದೊರೆಯುವು
ದಿಲ್ಲ. ಅಂದಮೇಲೆ ನಾವು ಮತ್ತು ನಮ್ಮ ಗುರಿ ಇವುಗಳನ್ನು ಸೇರಿಸುವ
ಸುಂದರ, ಸುಗಮ, ಸರಳ ಸೇತುವೆ ಅದಾವುದು?
ಈಜಿನ ಹೆಜ್ಜೆಯಿಂದಲೋ ? ಆಟಗಳ ಆಧಾರದಿಂದಲೋ ? ಆಸನಗಳ
ಮೂಲಕವೋ? ಜಿಗಿತಗಳ ಜೊತೆಗೋ? ತೂಕಗಳ ಮುಖೇನವೋ?
ಕುಸ್ತಿಯ ಕಲೆಯಿಂದಲೋ ? ಸೂರ್ಕನಮಸ್ನಾರದ ಸಹಾಯದಿಂದಲೋ?
| ೪೦ ಶರೀರ ಶಿಲ್ಪ

ಗರಡಿಮನೆಯ ನೆರವಿನಿಂದಲೋ ? ವ್ಯಾಯಾಮಶಾಲೆಯ ಆಸರೆಯಿಂದಲೋ?


ಅರಿತ ಗುರುವಿನ ಗಮನದಲ್ಲಿಯೋ ? ಕಡೆಗೆ ಏನೂ: ತೋಚದಾಗದೆ,
ಮುನ್ನಡೆವ ಉತ್ಸಾಹ ಕುಗ್ಗುತ್ತದೆ.
ಈ ಎಲ್ಲ ರೀತಿಗಳು ಮಾನವ ಶರೀರವನ್ನು ಸಜ್ಜುಗೊಳಿಸುವ ನೈವಿಧ್ಮ
ಪೂರ್ಣ ವಿಧಾನಗಳು. ಪ್ರತಿಯೊಂದು ಬಗೆಯಲ್ಲಿಯೂ ಅದರದೇ ಆದ
ವಿಶೇಷತೆ ಇದೆ. ಪ್ರತಿಯೊಂದೂ ವಿಶಿಷ್ಟ ಫಲಪ್ರದವೂ ಹೌದು. ಅಲ್ಲದೆ
ಎಲ್ಲದರಲ್ಲೂ ಎಚ್ಚರಿಕೆಯ ಅಂಶಗಳುಂಟರಿ - ಆಹಾರದ ಬಗ್ಗೆ ಯಾವ ರೀತಿ
ಇವೆಯೋ ಆ ರೀತಿ. ನಮಗೆ ಏನು ಫಲ ಬೇಕು ಅನ್ನುವುದರ ಮೇಲೆ
ನಿಂತಿದೆ ನಮಗೆ ಒಪ್ಪುವ ವ್ಮಾಯಾಮ.
ಆದರೆ ಈ ನಿರ್ಣಯಕ್ಕೆ ಬರುವ ಕ್ರಮ ಹೇಗೆ? ಕೇವಲ ಎಲ್ಲ ವಿಧಾನ
ಗಳ, ಪರಿಣುಮಗಳ ಪಟ್ಟೆಯನ್ನು ಓದಿ ತಾಳೆಹಾಕುವುದರಿಂದ ಈ ನಿರ್ಣಯ
ಸಾಧ್ಯವಿಲ್ಲ. ಎಲ್ಲ ವಿಧಾನಗಳ ವೈಶಿಷ್ಟ್ಯಗಳನ್ನು ತಾಳೆ ಹಾಕಲು ಸಹ
ಯಾವುದಾದರೂ. ವ್ಯಾಯಾಮದ ಜ್ಞಾನ, ಅನುಭವ ಅವಶ್ಯಕ. ಅಲ್ಲಿಯ
ವರೆಗೆ ಅದರ ಗೊಡವೆಯೇ ಬೇಡ.
ಅದರ ಬದಲು” ವ್ಮಾಯಾಮದ ನೊದಲನೆ ಹಂತವೆದರೆ ಶರೀರದ
ಕೆಲವು ಚಟುವಟಿಕೆಗಳನ್ನು ಇಂದೇ ಪ್ರಾರಂಭ ಮಾಡುವುದು; ಕೈ ಕಾಲುಗಳನ್ನು
ಅಲ್ಲಾಡಿಸುವುದು; ಉಸಿರಾಟವನ್ನು ಹದ ಮಾಡುವುದು.
ಈ ಪ್ರಾರಂಭಕ್ಕೆ ಅಡ್ಡಬರುವ ಇನ್ನೊಂದು ಅಡ್ಡಿ ಎಂದರೆ ಒಂದೊಂದು
ವಿಧಾನದ ಅನುಯಾಯಿಗಳು ಇನ್ನೊಂದು ವಿಧಾನದ. ಬಗ್ಗೆ ಮಾಡುವ ಅಪ
ಪ್ರಚಾರ.
ನಿತ್ಕ ವ್ಯಾಯಾಮದಲ್ಲಿರುವ ವ್ಯಕ್ತಿಗಳಿಗೆ ಆಸನಗಳು ಹಾನಿಕಾರಕ;
ನೀರಿನ ಸಹವಾಸ (ಈಜು), ಪ್ರಾಣುಯಾಮ, ಕುಸ್ತಿ ಕಲಿತರೆ ಸ`ಒರಣಶಕ್ತಿಗೆ
ಊನ ; ಶರೀರ ದಷ್ಟಪುಷ್ಟವಾದರೆ ಬುದ್ಧಿ ದುರ್ಬಲವಾಗುತ್ತ ದೆ;
ವ್ಯಾಯಾಮ ಮಾಡುವವರು ಸ್ವಲ್ಪ ಕಾಲ ನಿಲ್ಲಿಸಿದರೆ ಹೊಟ್ಟೆ ಬರುತ್ತದೆ -
ಇತ್ಮಾದಿ ಅನೇಕ ಅಪಪ್ರಚಾರಗಳ ಬಲಿಗೆ ಬಿದ್ದು ಆರಂಭಮಾಡುವ ಗೋಜಿಗೇ '
ಅನೇಕರು ಹೋಗುವುದಿಲ್ಲ.
ಅಂಗಸಾಧನೆಯ ಆರಂಭ ೪೧

ಸ್ವಾಮಿ ವಿವೇಕಾನಂದರು ಜಗಜಟ್ಟಿ ಆಗಿರಲಿಲ್ಲವೆ? ಸಮರ್ಥ ರಾಮ


ದಾಸರು ದಷ್ಟಪುಷ್ಟವಾಗಿರಲಿಲ್ಲವೆ? ಅವರ ಸ್ಮರಣಶಕ್ತಿ, ಬುದ್ಧಿ ಬಲಗಳಲ್ಲಿ
ಖಿಂದಂಶವಾದರೂ ನಮ್ಮಲ್ಲಿ ಬೆಳೆದರೆ ಅದೇ ಮಹದ್ಭಾಗ್ಮ.
ವ್ಯಾಯಾಮ ಆರಂಭ ಮಾಡುವವರಿಗೆ ಇನ್ನೊಂದು ಕುತ್ತು ಎಂದರೆ
ಮಿಕ್ಕವರು ಇವರ ಬಗ್ಗೆ ಏನನ್ನುವರೋ ಎಂಬ ಅಳುಕು; ಜಗತ್ತು ತನ್ನ ಬಗ್ಗೆ
-ಏನು ತಿಳಿದುಕೊಳ್ಳಬಹುದು ಎನ್ನುವ ಭ್ರಾಂತಿ.
ಕೆಲವರು ಇವನಿಗೆ ಹೆಚ್ಚು ಆಹಾರ ಬೇಕು ಎಂದು ಆಡಿಕೊಳ್ಳಬಹುದು.
ವ್ಯಾಯಾಮ ಮಾಡಿ ವಸ್ತಾದ್‌ ಆದ ಎಂದು ವ್ಮಂಗ್ಯನುಡಿ ಆಡಬಹುದು.
“ಆಸನ ಕಲಿತು ಸರ್ಕಸ್ಸಿನ ಸದ್ಗುರುನಾಥನಾದ ಎಂದು ಮೂದಲಿಸಬಹುದು.
ಜಿಗಿತ ಜಿಗಿದು ಕಡ್ಡಿ ಪೈಲ್ವಾನ್‌ ಆದ ಎಂದು ಚೇಷ್ಟೆ ಮಾಡಬಹುದು.
'ಇವನ ಬಟ್ಟೆಗಳು ಚಿಕ್ಕದಾದವು ಎಂದು ಹಾಸ್ಮ ಮಾಡಬಹುದು. ಮೂರು
ದಂಡ ಹೊಡೆದು ಸ್ಕಾಂಡೋ ಆಗುತ್ತಾನೆ ಎಂದು ಕುಚೋದ್ಕ
ಮಾಡಬಹುದು
- ಇವೆಲ್ಲವೂ ಒಂದು ವಿಶಿಷ್ಟ ಪ್ರಕಾರದ ಅಸೂಯೆಯ
"ಉಕ್ತಿಗಳು.
ಹೊರಗೆ ಏನೂ ಅನ್ನದೆ ತಮ್ಮೊಳಗೆ ತಾವೇ ಅಂದುಕೊಳ್ಳುವವರೆ
ಖಗ್ಗೆ ಇರುವ ಅಂಜಿಕೆಯೂ ಭ್ರಾಂತಿಯೇ. “ಇದುವರೆಗೂ ವ್ಯಾಯಾಮ
ಮಾಡುತ್ತಿರಲಿಲ್ಲ; ಈಗ ಪ್ರಾರಂಭ ಮಾಡಿದ್ದಾನೆ” ಎಂಬುದನ್ನು
"ಬಿಟ್ಟು ಇನ್ನೇನು ತಾನೇ ಅಂದುಕೊಳ್ಳಲು ಸಾಧ್ಯ ? ನಿಕ್ಕರ್‌
ಧರಿಸುತ್ತಿದ್ದ ಬಾಲಕ ಪ್ಯಾಂಟ್‌ ತೊಡಲು ಪ್ರಾರಂಭಿಸಿದಾಗ ಅಥವಾ
ಹೊಸದಾಗಿ ಕೈಗಡಿಯಾರ ಕಟ್ಟಿದ ತರುಣನ ಬಗ್ಗೆ ಏನು ತಿಳಿದುಕೊಳ್ಳುವರೋ
ಅಂತೆಯೇ.
ಇದರಲ್ಲಿ ಮುಖ್ಯ ಸಂಗತಿ ಎಂದರೆ ಮಿಕ್ಕವರ ತಾಳಕ್ಕೆ ತಾನು ಕುಣಿಯ
ಬೇಕೇ ಎಂದು. "ನನ್ನ ಇಚ್ಛೆಗೆ ತಕ್ಕಂತೆ ಸೂಕ್ತವಾದದ್ದನ್ನು ಮಾಡುವೆನು”
“ಎಂಬ ನಿಶ್ಚಯ ಬೇಕು. "ನನ್ನ ಇಚ್ಛೆಯನ್ನು ರೂಪಿಸಲು ಮಿಕ್ಕವರ ನೆರ
ವನ್ನು ಪಡೆಯುವೆನು; ಜಗತ್ತು ಅದೇ ರೀತಿ ಅರ್ಥಮಾಡಿಕೊಳ್ಳುವುದು?
ಅಂಬ ಬಗ್ಗೆ ವಿಶ್ವಾಸವಿರಲಿ.
೪೨ ಶರೀರ ಶಿಲ್ಪ

ಈ ಪ್ರಾರಂಭಕ್ಕೆ ನೆರವಾಗುವ ವ್ಯಾಯಾಮದ ಶ್ರೀಗಣೇಶ ಮಾಡಲು.


ಕೆಳಗಿನ ಪಾಠಕ್ರಮ ಕೊಡಲಾಗಿದೆ. ಇವುಗಳನಂತರ ಸೂರ್ಯನಮಸ್ಕಾರ
ಇತ್ಯಾದಿ ವ್ಯಾಯಾಮಗಳನ್ನು ಆರಿಸಿಕೊಳ್ಳಬಹುದು.

ಸರಳ ವ್ಯಾಯಾಮ ಸರಣಿ


(ಚಿತ್ತ ನೋಡಿ)
೧) ಅ) ಎರಡು ಪಾದಗಳನ್ನು ಜೋಡಿಸಿ ನೇರವಾಗಿ:
ನಿಂತಲ್ಲಿಯೇ ಎರಡೂ ಹಿಮ್ಮಡಿಗಳನ್ನು ಆದಷ್ಟು ಮೇಲೆ ಎತ್ತಿ.
ಅನಂತರ ಹಿಮ್ಮಡಿಗಳನ್ನು ಕೆಳಗಿಳಿಸಿ - ೧೨ ಸಾರಿ.
ಆ) ಯಾವುದಾದರೂ ಮೆಟ್ಟಲಿನ ಅಥವಾ ಇನ್ನಾವುದಾದರೂ
ಅಂಚಿನ ಮೇಲೆ ಎರಡು ಮುಂಗಾಲುಗಳನ್ನೂ ಜೋಡಿಸಿ ಇಡಿ. ಹಿಮ್ಮಡಿ.
ಗಳು ಆಧಾರರಹಿತವಾಗಿರಲಿ. ಮೇಲಿನಂತೆಯೇ ಆದಷೂ ಶ್ರ ಮೇಲೆ ಕೆಳಗೆ
ಹಿಮ್ಮಡಿಗಳನ್ನು ಆಡಿಸಿ - ೧೨ ಸಾರಿ.
೨) ಅ) ನೇರವಾಗಿ ನಿಲ್ಲಿ. ಎಡಗಾಲನ್ನು ಮೇಲೆತ್ತಿ ಮೊಣ
ಕಾಲನ್ನು ಮಡಿಸಿ. ಪಾದ ನೆಲಕ್ಕೆ ಲಂಬವಾಗಿರಲಿ, ತೊಡೆ ಸಮಾನಾಂತರ
ವಾಗಿರಲಿ. ಎಡಗಾಲು ಕೆಳಗಿಡಿ. ಬಲಗಾಲಿನಿಂದ ಇದೇ ಕ್ರಮ ಮಾಡಿ ೮
ಸಾರಿ.
ಆ) ಈ ಕ್ರಿಯೆಯನ್ನು ಒಂದೊಂದು ಕಾಲಿನ ಮೇಲೆ ನೆಗೆಯುತ್ತಾ
ಮಾಡಿ
_ ಒಂದು ನಿಮಿಷ.
>) ಒಂದೊಂದು ಕಾಲಿನ ಮೇಲೆ ಎರಡೆರಡು ಬಾರಿ ನೆಗೆದು
- ೮ ಸಾರಿ.
ಮಾಡಿ

೩) ನಿಂತಲ್ಲಿಯೇ ಎರಡೂ ಕಾಲುಗಳನ್ನು ಜೋಡಿಸಿ ಮೇಲೆ. ಮೇಲೆ


ನೆಗೆಯಿರಿ-೮ ಸಾರಿ.
೪) ನಿಂತಲ್ಲಿಯೇ ಕೈಗಳು ಓಡುವ ಸ್ಥಿತಿಯಲ್ಲಿ ಹಿಡಿಯಿರಿ. ಸ್ವಲ್ಪ
ಮುಂದಕ್ಕೆ ಬಾಗಿ ನಿಂತಲ್ಲಿಯೇ ವೇಗವಾಗಿ ಓಡ_ಿ೩೦ ಸೆಕೆಂಡ್‌.
ಅಂಗಸಾಧನೆಯ ಆರಂಭ ೪೩

[ಕೆ ೯೪ ೯೪ ೯

ಸರಳ ವ್ಯಾಯಾಮ ಸರಣಿ


೫) ನೇರವಾಗಿ ನಿಲ್ಲಿ. ಹಿಮ್ಮಡಿಗಳನ್ನು ಎತ್ತಿ ಕುಳಿತುಕೊಳ್ಳಿ.
'ಪೃಷ್ಠಗಳು ಹಿಮ್ಮಡಿಯ ಮೇಲೆ. ಮೇಲೇಳಿ - ೨೪ ಸಾರಿ.
೬) ಕಾಲುಗಳನ್ನು ಅಗಲಿಸಿ ನಿಲ್ಲಿ. ಕೈಗಳು ಸೊಂಟದ ಮೇಲೆ.
ಅ) ಎಡಕ್ಕೆ ಬಲಕ್ಕೆ ಬಗ್ಗಿ -೮ ಸಾರಿ.
ಆ) ಮುಂದಕ್ಕೆ ಹಿಂದಕ್ಕೆ ಬಗ್ಗಿ-೮ ಸಾರಿ.
ಇ) ಕೈಗಳನ್ನು ಮೇಲೆ ಸಮಾನಾಂತರವಾಗಿ ಹಿಡಿದು ಮೇಲಿನ
ಕ್ರಿಯೆ ಮಾಡಿ-೮ ಸಾರಿ.
ಈ) ಮುಂದಕ್ಕೆ ಬಗ್ಗಿ ನೆಲವನ್ನು ಕೈಗಳಿಂದ ಮುಟ್ಟಿ, ಮತ್ತೆ ನೇರ
ವಾಗಿ ನಿಲ್ಲಿ-೮ ಸಾರಿ.
ಓ) ನೇರವಾಗಿ ನಿಲ್ಲಿ. ಕೈಗಳನ್ನು ಮುಂದೆ ನೆಲಕ್ಕೆ ಸಮಾನಾಂತರವಾಗಿ
ತನ್ನಿ. ಅಂಗೈಗಳು ಪರಸ್ಪರ ನೋಡುತ್ತಿರಲಿ. ಕೈಗಳು ಪಕ್ಕಕ್ಕೆ. ಅಂಗೈಗಳು
ನೆಲ ನೋಡುತ್ತಿರಲಿ. ಕೈಗಳು ಮೇಲೆ. ಅಂಗೈಗಳು ಪರಸ್ಪರ ನೋಡು
ತ್ತಿರಲಿ. ಮುಂಚಿನ ಸ್ಥಿತಿಗೆ ಕೈಗಳು ಬರಲಿ -೧೬ ಸಾರಿ.
೮) ಅ) ಕೈಗಳನ್ನು ಮುಂದೆ ಚಾಚಿ. ಮುಷ್ಟಿ ಹಿಡಿಯಿರಿ. ಎಡ
ಮೊಣಕ್ಕೆ ಮಡಿಸಿ. . ಮುಷಿ ಶ್ರ ಭುಜದ ಬಳಿ.
ಈಗ ಬಲ ಮೊಣಕ್ಕೆ ಮಡಿಸುತ್ತಾ ಎಡಗೈ ನೇರಮಾಡಿ. ಇದೇ
ರೀತಿ -೮ ಸಾರಿ,
ಅನಂತರ ಎರಡೂ ಕೈಗಳನ್ನು ಒಟ್ಟಿಗೇ ಮಡಿಸಿ ವಾಪಸು ಕೊಂಡು
ಹೋಗಿ -೮ ಸಾರಿ.
ಆ) ಕೈಗಳನ್ನು ಪಕ್ಕಕ್ಕೆ ಚಾಚಿ, ಮೇಲಿನ ಕ್ರಿಯೆ -೮ ಸಾರಿ.
ಇ) ಕೈಗಳನ್ನು ಮೇಲೆ ಚಾಚಿ, ಮೇಲಿನ ಕ್ರಿಯೆ -೮ ಸಾರಿ.
೯) ಅ) ಕತ್ತನ್ನು ಮುಂದೆ ಹಿಂದೆ ಬಗ್ಗಿಸಿ -೮ ಸಾರಿ.
ಆ) ಎಡಕ್ಕೆ ಬಲಕ್ಕೆ ಬಗ್ಗಿಸಿ-೮ ಸಾರಿ.
ಇ) ಎಡಕ್ಕೆ ಬಲಕ್ಕೆ ತಿರುಗಿಸಿ _ ೮ ಸಾರಿ.
೧೦) ಎರಡೂ ಕೈಗಳು ನೆಲದ ಮೇಲೆ, ಕಾಲುಗಳನ್ನು ಹಿಂದಕ್ಕೆ
ಅಂಗಸಾಧನೆಯ ಆರಂಭ ೪೫:

ಎಸೆದು ಕಾಲಬೆರಳುಗಳ ಮೇಲೆ ಮತ್ತು ಎರಡು ಕೈಗಳ ಮೇಲೆ ಸಮೆಭಾರ-


ಬಿಡಿ. ಕೈಗಳು, ಶರೀರ ನೇರ ಇರಲಿ.
ವೊಣಕ್ಕೆ ಮಡಿಸಿ ಶರೀರ ಕೆಳಗೆ ತನ್ನಿ. ಶರೀರ ನೆಲಕ್ಕೆ ಸಮಾನಾಂತರ...
ಮುಂಚಿನ ಸ್ಥಿತಿಗೆ. (೧೬ ಬಾರಿ)
ಈ ಸರಳ ವ್ಯಾಯಾಮ ಸರಣಿಯಿಂದ ಎಲ್ಲ ಕೀಲುಗಳೂ ಸಡಿಲ:
ಆಗುವುವು; ವ್ಯಾಯಾಮ ಮಾಡುವ ಸ್ವಭಾವ ಮೈಗೆ ಹತ್ತುವುದು;
ರಕ್ತಚಲನೆ ಸೊಗಸಾಗುವುದು ; ನಿಲುವು ಸುಧಾರಿಸುವುದು. ಮುಂದಿನ.
ವ್ಯಾಯಾಮಕ್ಕೆ ಮುನ್ನುಡಿಯರಾಗುವುದು, ನಾಳಿನ ಗಳಿಕೆಗೆ ಇಂದಿನ ನಾಂದಿ:
ಯಾಗುವುದು.
ಆ ಶರೀರ ಸಂಚಾಲನ

ಸಾಮಾನ್ಮವಾಗಿ ಎಲ್ಲ ಸಂಕಲ್ಪಗಳನ್ನು ಕಾರ್ಯಗತ ಮಾಡಲು


ಕೂಡಲೇ ಅನುವಾಗಿ ನೆರವಾಗುವ ಶರೀರದ ಸ್ಥಿತಿಗೆ “ಲವಲವಿಕೆ” ಎಂದು
ಹೆಸರು. ರಚನೆಯಲ್ಲಿಯೇ ಲವಲವಿಕೆಯನ್ನು ಅಳವಡಿಸಿಕೊಂಡಿರುವ ಶರೀರ
'ವನ್ನು ಪಡೆದವರು ಅತಿ ವಿರಳ.
ಶರೀರದ ಗಾತ್ರ ಹೆಚ್ಚಿದಷ್ಟು ಲವಲವಿಕೆ ನಷ್ಟವಾಗಲೇಬೇಕೆಂಬ
ನಂಬಿಕೆ ವಾಸ್ತವಿಕತೆಗೆ ದೂರವಾದ ಸಂಗತಿ. ಅನೇಕ ಸ್ಕೂಲಕಾಯರು
ಲವಲವಿಕೆಯಿಂದಲೂ, ತೆಳ್ಳನೆ ಶರೀರದವರು ಆಲಸ್ಮದಿಂದಲೂ ಇರುವು
ದನ್ನು ಕಾಣಬಹುದು.
ಲವಲವಿಕೆಯಿಂದಿರಲು, ಮನಸ್ಸು - ದೇಹಗಳು ಚಪ್ಪಾಳೆ ತಟ್ಟುವ
ಎರಡು ಕೈಗಳಂತೆ. ಯಾವ ಕೈ ಹಿಂದೆ ಸರಿದರೂ ಚಪ್ಪಾಳೆ ಆಗುವುದಿಲ್ಲ; ಸದ್ದು
ಬರುವುದಿಲ್ಲ. ಅನೇಕ ವೇಳೆ ಮನಸ್ಸು ಸಿದ್ಧವಾಗಿದ್ದರೂ ಶರೀರ ಒಲ್ಲೆ
ಎನ್ನುವುದು. My will is strong, but the flesh is weak
ಎನ್ನುವ ಮಹಾನುಭಾವರಿಗೆ ಕೊರತೆಯೆೋನಿಲ್ಲ.
ಶರೀರ ಸಂಚಾಲನ ೪೭

ಇಂತಹ ಸಂದರ್ಭಗಳಲ್ಲಿ ಶರೀರವನ್ನು ಎಡೆಬಿಡದ ಪ್ರಯತ್ನದಿಂದ


ಸುಧಾರಿಸಬಹುದು. ಅದಕ್ಕಾಗಿ ಎಲ್ಲ ತಿರುಗುವ, ಮಡಿಸುವ ಮತ್ತು
ಅಲ್ಲಾಡಿಸುವ ಕೀಲುಗಳು (;ಂints) ಸಡಿಲವಾಗಿರಬೇಕು. ಎಲ್ಲ ಮಾಂಸ
ಖಂಡಗಳು ಉಪಯೋಗದಲ್ಲಿರಬೇಕು, ಎಲ್ಲ ಶಾರೀರಿಕ ಕ್ರಿಯೆಗಳು ಸರಾಗ
ವಾಗಿ ನಡೆಯುತ್ತಿರಬೇಕು.
ಈ ನಿಟ್ಟಿನಲ್ಲಿ "ಶರೀರ ಸಂಚಾಲನ್‌ ಉಪಯುಕ್ತವಾದದ್ದು. ಈ
ವ್ಯಾಯಾಮದಿಂದ ರಕ್ತಚಲನೆ ಚೆನ್ನಾಗಿ ಆಗುವುದು. ಕೀಲುಗಳು ಸಡಿಲಾಗು
ವುವು. ಮಲಬದ್ಧತೆ ನಿವಾರಣೆಯಾಗುವುದು. ಆಲಸ್ಯ ದೂರವಾಗಿ :
ಲವಲವಿಕೆ ಹೆಚ್ಚುವುದು. ಶರೀರದ ಭಾರ ಕಡಿಮೆಯಾಗಲೂ ಸಹಾಯಕ
ವಾಗುವುದು. ಅನೇಕರನ್ನು ಕಾಡುವ “ತನಗೇ ತಾನು ಭಾರ' ಎನ್ನುವ
ಮಾನಸಿಕ ಚಿಂತೆ ನಷ್ಟವಾಗುವುದು.
"ಶರೀರ ಸಂಚಾಲನ'ವನ್ನು ಬೆಳಗಿನ ವೇಳೆಯಲ್ಲಿ ಮಿಕ್ಕ ವ್ಯಾಯಾಮ
ಗಳಿಗೆ ಮುನ್ನ ಮಾಡುವುದು ಹೆಚ್ಚು ಹಿತವಾದದ್ದು.
ವೃದ್ಧರಿಗೆ ಕೀಲುಗಳಲ್ಲಿನ ನೋವು ಮತ್ತು ವೃದ್ಧಾಪ್ಯದ ಬಾಗುವಿಕೆ
'ಯಿಂದ ಪಾರಾಗಲು ಈ ವ್ಯಾಯಾಮ ಹೆಚ್ಚು ನೆರವಾಗುವುದು.

ವ್ಯಾಯಾಮ
(ಚಿತ್ರ ನೋಡಿ)
ಅ) ನೆಲದ ಮೇಲೆ ಚಾಪೆ ಅಥವಾ ಜಮಖಾನ ಹಾಸಿ ಬೆನ್ನು ಕೆಳಗೆ
ಮಾಡಿ ಮಲಗಿ. ಎರಡೂ ಕೈಗಳನ್ನು ತಲೆಯ ಕಡೆ ಚಾಚುತ್ತ ಉಸಿರು
ಹಿಡಿದು ಎರಡೂ ಗಳು ಒಂದು ಗೇಣು ಎತ್ತರದಲ್ಲಿ ಮೇಲೆ ಕೆಳಗೆ
ಮಾಡಿ(ಒಟ್ಟಿಗೆ ಯಾ ಪ್ರತ್ಯೇಕ). ಕೊನೆಯಲ್ಲಿ' ಕಾಲುಗಳನ್ನು ಕೆಳಗೆ
ಇಟ್ಟು ಉಸಿರು ಬಿಡಿ.
ಆ) ೧) ಪಾದದಿಂದ ಸೊಂಟದವರೆಗೂ ಸ್ಥಿರವಾಗಿಟ್ಟುಕೊಂಡು
ಶರೀರದ ಮೇಲಿನ ಭಾಗವನ್ನು ನೆಲದ ಮೇಲೆಯೇ ಎಡಕ್ಕೆ ನಿಧಾನವಾಗಿ.
ಸ್ವಲ್ಪಸ್ವಲ್ಪವಾಗಿ ಕೊಂಡುಹೋಗಿ.
ಛ (0) ಛ(೨)

ಶರೀರ ಸಂಚಾಲನ
ಶರೀರ ಸಂಚಾಲನ ೪೯

೨. ಮುಂಚಿನ ಸ್ಥಿತಿ.
೩. ಬಲಕ್ಕೆ ಕೊಂಡುಹೋಗಿ.
೪. ಮುಂಚಿನ ಸ್ಥಿತಿ.
ಇ) ತಲೆಯಿಂದ ಸೊಂಟದವರೆಗೂ ಸ್ಥಿರವಾಗಿಟ್ಟು ಶರೀರದ ಕೆಳ
ಭಾಗವನ್ನು (ಕಾಲುಗಳನ್ನು) ಎಡಕ್ಕೆ ಬಲಕ್ಕೆ (ಆ) ನಂತೆ ನಿಧಾನವಾಗಿ
ಸ್ಪಲ್ಪಸ್ವಲ್ಪ ಪಕ್ಕಕ್ಕೆ ಕೊಂಡುಹೋಗಿ ವಾಪಸು ತರಬೇಕು. (ಎರಡೂ
ಕಾಲುಗಳು ಒಟ್ಟಿಗೆ ಚಲಿಸಬೇಕು.)
ಈ) ಹೊಟ್ಟೆಯನ್ನು ಕೆಳಗೆಮಾಡಿ ಮಲಗಿ; ತಲೆಕಡೆಯಿಂಂದ
ಎಡಕ್ಕೆ, ಬಲಕ್ಕೆ (ಆ) ನಂತೆ ಚಲಿಸಿ.
ಉ) ಕಾಲುಗಳ ಕಡೆಯಿಂದ ಎಡಕ್ಕೆ ಬಲಕ್ಕೆ ಮೇಲಿನಂತೆ (ಈ) ಚಲಿಸಿ.
ಈ ರೀತಿ ಪ್ರತಿಯೊಂದನ್ನು (ಅ, ಆ, ಇ, ಈ, ಉ) ಮೂರು ನಾಲ್ಕು
ಬಾರಿ ಮಾಡುವುದು.

ಎದ್ದು ನಿಂತು :
ಎರಡು ಪಾದಗಳ ಮಧೆ ಒಂದಂ ಗೇಣು ಆಂತರವಿಟ್ಟು ನಿಲ್ಲಿ.
ಕೈಗಳು ಪಕ್ಕದಳಿ, ಶರೀರಕ್ಕೆ ತಗುಲಿದಂತೆ.
ಕ) ೧. ಕೈಬೆರಳುಗಳು ನೇರವಾಗಿರಲಿ; ಕೈಗಳನ್ನು ಸಡಿಲ ಬಿಟ್ಟುಸ
ಎಡಕ್ಕೆ ತಿರುಗಿ; ತಿರುಗಿದಾಗ ಬಲಗೈ ಎಡತೊಡೆಯ ಮೇಲೆ, ಎಡಗೈ ಬಲ
ತೊಡೆಯ ಬಳಿ ಬರಂವಂತೆ ನಿಲ್ಲಬೇಕು.
ಬಲಭುಜ ಮಂಂದೆ, ಎಡಭುಜ ಹಿಂದೆ.
೨. ಮುಂಚಿನ ಸ್ಥಿತಿ.
೩. ಬಲಕ್ಕೆ
ತಿರಂಗಿ; ಎಡಗೈ ಬಲತೊಡೆಯ ಮೇಲೆ, ಬಲಗೈ
ಎಡತೊಡೆಂ:0 ಬಳಿ ; ಎಡಭಂಜ ಮುಂದೆ, ಬಲಭುಜ ಹಿಂದೆ.
೪, ವರುಂಚಿನ ಸ್ಥಿತಿ.
ಖ) ಕೈಗಳನ್ನು ತಲೆಯ ಮೇಲೆ ಜೋಡಿಸಿ (ಚಪ್ಪಾಳೆ ಹೊಡೆವ
ಸ್ಥಿತಿ); ಕೈಗಳು ನೇರ.
೪]
೫೦ ಶರೀರ ಶಿಲ್ಪ

ಎಡಕ್ಕೆ ಬಾಗಿ (ಮೊಣಕಾಲು ನೇರವಿರಲಿ).


ಮುಂಚಿನ ಸ್ಥಿತಿ.
ಬಲಕ್ಕೆ ಬಾಗಿ.

ಜಟಮುಂಚಿನ ಸ್ಥಿತಿ.

ಗ್ರ ೧. ಕೈಗಳ ಕಡೆ ನೋಡುತ್ತ ಹಿಂದಕ್ಕೆ ಬಾಗಿ.


೨. ಮುಂಚಿನ ಸ್ಥಿತಿ.
೩. ಮುಂದಕ್ಕೆ ನೆಲದವರೆಗೂ ಬಾಗಿ.
೪, ಮುಂಚಿನ ಸ್ಥಿತಿ.
ಕೈಗಳನ್ನು ಕೆಳಕ್ಕೆ ತರುವುದು.
ಘ) ಪಾದಗಳನ್ನು ಜೋಡಿಸಿ ನಿಲ್ಲುವುದು.
(1) ೧. ಮೊಣಕಾಲಿನಲ್ಲಿ ಮಡಿಸದೆ ಎಡಗಾಲನ್ನು ನಿಧಾನವಾಗಿ
ಮೇಲೆತ್ತುವುದು, ಭೂಮಿಗೆ ಸಮಾನಾಂತರವಾಗುವ ತನಕ.
೨. ಕೆಳಕ್ಕೆ ತರುವುದು.
೩. ಬಲಗಾಲು ಮೇಲೆ.
೪, ಕೆಳಕ್ಕೆ ತರುವುದು.
(i) ೧. ಎಡಗಾಲು ಪಕ್ಕಕ್ಕೆ ೨. ಮುಪಸ್‌. ೩. ಬಲಗಾಲು
ಪಕ್ಕಕ್ಕೆ ೪. ವಾಪಸ್‌
(11) ೧. ಎಡಗಾಲು ಹಿಂದಕ್ಕೆ ೨. ವಾಪಸ್‌ ೩. ಬಲಗಾಲು
ಹಿಂದಕ್ಕೆ ೪. ವಾಪಸ್‌.
(iv) ಎಡಗಾಲು ೧. ಮುಂದಕ್ಕೆ ೨. ಪಕ್ಕಕ್ಕೆ ೩. ಹಿಂದಕ್ಕೆ
ಪಸ್‌, ಬಲಗಾಲು ೧0, ಮುಂದಕ್ಕೆ ೨. ಪಕ್ಕಕ್ಕೆ ೩. ಹಿಂದಕ್ಕೆ
ಪ ಸ್‌
ಈ ಮುಂದಿನ ಕ್ರಿಯೆಗಳನ್ನು ನೆಗೆಯುತ್ತಾ ಮಾಡುವುದು. ಕೈಗಳು
ಸೊಂಟದ ಮೇಲೆ,
ಚೆ) ೧. ಎಡಗಾಲು ಮುಂದೆ, ಬಲಗಾಲು ಹಿಂದೆ. ೨. ಮುಂಚಿನ
ಶರೀರ ಸಂಚಾಲನ ೫೧

ಸ್ವಿತಿ
-ಜೋಡಿಸಿ ನಿಲ್ಲುವುದು. ೩. ಕಾಲುಗಳು ಪಕ್ಕಕ್ಕೆ. ೪. ಮುಂಚಿನ
ಸ್ಥಿತಿ. ೫. ಬಲಗಾಲು ಮುಂದೆ, ಎಡಗಾಲು ಹಿಂದೆ. ೬. ಮುಂಚಿನ ಸ್ಥಿತಿ
೭. ಕಾಲುಗಳು ಪಕ್ಕಕ್ಕೆ. ೮. ಮುಂಚಿನ ಸ್ಥಿತಿ.

ಛ) ೧. ಎಡಗೈ ಮುಂದೆ ೨. ಮೇಲೆ ೩. ಪಕ್ಕಕ್ಕೆ ೪. ಕೆಳಕ್ಕೆ.


೧. ಬಲಗೈ ಮುಂದೆ ೨. ಮೇಲೆ ೩, ಪಕ್ಕಕ್ಕೆ ೪, ಕೆಳಕ್ಕೆ.
ಎರಡೂ ಕೈಗಳು ೧. ಮುಂದೆ ೨. ಮೇಲೆ ೩. ಪಕ್ಕಕ್ಕೆ ೪. ಕೆಳಕ್ಕೆ.

ಕೈಗಳನ್ನೂ ಕಾಲುಗಳನ್ನೂ ಒಟ್ಟಿಗೆ ಅಥವಾ ಪ್ರತ್ಕೇಕವಾಗಿ ನಿಧಾನ


ವಾಗಿ ಅನಂತರ ವೇಗವಾಗಿ ಹಿಂದೆ, ಮಂಂದೆ, ಎಡಕ್ಕೆ, ಬಲಕ್ಕೆ, ಹಿಮ್ಮಡಿ ಎತ್ತಿ
ಅಥವಾ ನೆಲದ ಮೇಲಿಟ್ಟು ಇಚ್ಛಾನುಸಾರ ಚಲಿಸಿದರೆ ಶರೀರದ ಚಪಲತೆ
ಮತ್ತೂ ಹೆಚ್ಚಿ ಸದಾಕಾಲಕ್ಕೂ ಲವಲವಿಕೆಯಿಂದಿರಲು ಸಹಾಯಕವಾಗುವುದು.

ಸಲಹೆಗಳು:
೧. ಪ್ರತ್ಯೇಕ ಪ್ರಯೋಗವನ್ನು ಎರಡೆರಡು ನಿಮಿಷ ಮಾಡಬೇಕು.
೨. ಚಲನೆಯಲ್ಲಿ ಉಸಿರು ಹಿಡಿದಂ ಮುಂಚಿನ ಸ್ಥಿತಿಗೆ ಬಂದಾಗ ಉಸಿರಂ
ಬಿಟ್ಟು ಮತ್ತೆ ಹಿಡಿದು ಮುಂದಿನ ಕ್ರಿಯೆ: ಮಾಡುವುದು ಹೆಚ್ಚು ಉಪಕಾರಿ.
ಪ್ರಾರಂಭದಲ್ಲಿ ಸಹಜವಾಗಿ ಉಸಿರಾಡಬೇಕು.
ತ ಸಿಂಹ ಕಟಿ

ನೀವು ಚಿಲ್ಲರೆ ಎಣಿಸುವಾಗ ಅಕಸ್ಮಾತ್‌ ಕೆಳಗೆ ಬಿದ್ದ ನಾಣ್ಮಗಳನ್ನು :


ಎಶ್ತಿಕೊಡಲು ನಿಮ್ಮ ತಮ್ಮನ ನೆರವು ಅಗತ್ಕವಾಗುವುದೇ? ಹಾಗೆಯೇ |
ಜಾರಿದ ಉಂಗುರವನ್ನು ಎತ್ತಲು ನೀವೇ ಬಗ್ಗಿದಾಗ, ಒಮ್ಮೆ ನಿಮ್ಮ ಮೊಣ |
ಕಾಲುಗಳನ್ನು ನೋಡಿ. ಅವು ಎಷ್ಟು ಬಗ್ಗಿವೆಯೋ ಅದೇ ಪ್ರಮಾಣದಲ್ಲಿ ನಿಮ್ಮ
ಕಟೆಯೂ ದುರ್ಬಲವಾಗಿದೆ ಎಂದರೆ ನೀವು ನಂಬಲಾರಿರಿ. ಆದರೆ ಇದು
ವಾಸ್ತವ ಸಂಗತಿ. ಸಶಕ್ತ ಕಟಿ ಇರುವವನಿಗೆ ನೆಲದ ಮೇಲೆ ಬಿದ್ದ ಗುಂಡಂ
ಸೂಜಿಯನ್ನು ಎತ್ತಲೂ ಸಹ ಮೊಣಕಾಲು ಬಗ್ಗಿಸುವ ಅವಶ್ಮಕತೆ ಇಲ್ಲ.
ಕಟಿ (ಸೊಂಟ) ಶರೀರದಲ್ಲಿ ಚಟುವಟಿಕೆಯ ಮಿಾಟುಕೇಂದ್ರ ; ಕೀಲುಗಳ
ಕೂಟ. ಇದರ ಕಾರ್ಯಕ್ಷಮತೆಯ ಮೇಲೆ ಶರೀರದ ಸರಳ ಸರಾಗ ಚಲನ
ವಲನಗಳು, ಇದರ ಬಲದ ಮೇಲೆ ಶರೀರದ ರಚನೆ ಅವಲಂಬಿತವಾಗಿವೆ. |
ಆರೈಕೆ ಇಲ್ಲದ ಕಟಿ ಕೃಶವಾಗುತ್ತದೆ; ಶರೀರ ಬಾಗುತ್ತದೆ ; ಕೋಲಿ
ಕಾಲು ಬೇಕಾಗುತ್ತದೆ. ಆಗ “ಸೊಂಟ ಬಿದಿ ಹೋಯಿತು” ಎಂದು ಆಡಿ
ಕೊಳ್ಳುವರು. |
ಸಿಂಹ ಕಟಿ ೫೩.

ಸೊಂಟ ಬಗ್ಗಿಸಿ ಕೆಲಸ ಮಾಡಿದರೆ ಯಶಸ್ಸು ಸಿಕ್ಕೇ ಸಿಕ್ಕುತ್ತದೆ ಎಂದು


ಹಿರಿಯರಂ ಆಗಾಗ್ಗೆ ಹೇಳುವರು. ಅರ್ಥಾತ್‌ ಶರೀರದ ಚಟುವಟಿಕೆ, ಶ್ರವಂ
ಎಲ್ಲಕ್ಕೂ ಕಟಿಯೇ ಆಧಾರ.
ಹಾಗೆಯೇ ದಿನವಿಡೀ ದುಡಿದು ಹಣ್ಣಾದಾಗ, ಬಳಲಿ ಬೆಂಡಾದಾಗ
ಕೈಗಳು ಅರಿವಿಲ್ಲದೇ ಸೊಂಟದ ಮೇಲೆ ಹೋಗುವುವು. ಏಕೆ?
ಮೂಗು ಹಿಡಿದರೆ ಬಾಯಿ ಹೇಗೆ ತಾನಾಗಿಯೇ ಬಿಡುವುದೋ
ಹಾಗೆಯೇ ಸೊಂಟವನ್ನು ಒತ್ತಿದಾಗ ಶರೀರ ಸೆಟೆಯುವುದು; ಮತ್ತಷ್ಟು
ಶಾರ್ಯಶೀಲವಾಗುವುದು.
ಪಕ್ಕೆಗಳಲ್ಲಿರುವ ವ್ಯಾನ ವಾಯುವನ್ನು ತಡೆಹಿಡಿದರೆ ಶರೀರ ನಿಮಿರಿ
ನೇರವಾಗುವುದು ; ಸೊಂಟದ ಮೇಲ್ಭಾಗಕ್ಕೆ ಆಧಾರ, ಕೆಳಭಾಗಕ್ಕೆ ಬೆಂಬಲ
ವಾಗುವುದು. ಇದೇ ಕಾರಣಕ್ಕಾಗಿಯೇ ಸೋಮಾರಿಗಳ ಕೈಗಳೂ ಸಹ
ಸೊಂಟದ ಮೇಲೆ ಹೋಗುವುವು.
ಅಷ್ಟೇ ಅಲ್ಲ, ಶರೀರಚಲನೆಯಲ್ಲಿ ಅತ್ಯುತ್ತಮವಾದ ನೃತ್ಯ
ಶಾಸ್ತ್ರದಲ್ಲೂ ಸಮಸ್ಥಿತಿಯಲ್ಲಿ ಸೊಂಟದ ಮೇಲೇ ಕೈಗಳು!
ಜೊತೆಗೆ ಶ್ರೇಷ್ಠ ಕಾರ್ಯಗಳಿಗೆ ಕೈ ಹಚ್ಚುವ ಮುನ್ನ ಸಂಕಲ್ಪ
ಮಾಡುವಾಗಲೂ ಅದೇ ಪದಪುಂಜ
- "ಕಟೀಯಾಯ ಬದ್ಧ'.
ಸಮಾರಾಧನೆಗಳಲ್ಲಿ ಬಡಿಸಬೇಕಾದರೆ, ರಥವನ್ನು ಎಳೆಯಬೇಕಾ
ದರೆ, ಏಕೆ, ಹೆಣವನ್ನು ಹೊರಬೇಕಾದರೂ ಸೊಂಟಕ್ಕೆ ಬಟ್ಟೆ ಕಟ್ಟಿಯೇ
ಆರಂಭ!
ಗಂಟೆಗಟ್ಟಲೆ ನೃತ್ಯವನ್ನು ಅನಾಯಾಸವಾಗಿ ಮಾಡಬೇಕಾದರೆ
ಆಧಾರವೇ ಕಟಿಗೆ ಕಟ್ಟೆದ "ನಡುಕಟ್ಟು'. ಎಲ್ಲ ಸಮವೇಷ, ಗಣವೇಷಗಳಲ್ಲಿ
ಸೊಂಟಪಟ್ಟಿ ಕಟ್ಟುವ ಮೂಲ ಇಲ್ಲಿಯೇ ಇರುವುದು. ಶರೀರದಲ್ಲಿ ಕಟಿಯ
ಪಾತ್ರ ಬೀಜದಂತೆ. ಸಸಿಗೆ ಜನ್ಮಕೊಟ್ಟು ತಾನು ಸವೆಯುವಂತೆ, ಕಟಿ ಮಿಕ್ಕ
ಅಂಗಗಳಿಗೆ ಶಕ್ತಿ ತುಂಬಿ ತಾನು ಕೃಶವಾಗಿದೆಯೋ ಎಂಬಂತೆ ಕಾಣುವುದು.
ಹಾಗೆ ಇರದೆ ಉಬ್ಬಿದ ಕಟಿ ಇದ್ದರೆ ಮಿಕ್ಕ ಅಂಗಗಳಿಗೆ ಶಕ್ತಿಪ್ರದಾನ
ಮಾಡಲಿಲ್ಲವೆಂದೇ ಅರ್ಥ. ಪ್ರತ್ಯಕ್ಷ ಅನುಭವವೂ ಅದೇ ಅಲ್ಲವೇ ?
೫೪ ಶರೀರ ಶಿಲ್ಪ

ಸಿಂಹ ಕಟಿ
ಸಿಂಹ ಕಟಿ ೫೫

"ಸಿಂಹದ ನಡು” ಇದನ್ನೇ ಸಾರಿ ಸಾರಿ ಹೇಳುತ್ತದೆ. ತಾನು ಕನಿಷ್ಠ


ಅಳತೆಯದಾಗಿದ್ದು ಮಿಕ್ಕ ಅಂಗಗಳನ್ನು ಪ್ರಚಂಡ ಶಕ್ತಿಯುತವಾಗಿ
ಮಾಡಿದೆ. ುನುಜರಲ್ಲೂ ಈ ಸಂಗತಿಯನ್ನು ಮನದಟ್ಟು ಮಾಡಿ
ಸಲು ಒಬ್ಬ ಕವಿ ಬರೆಯುತ್ತಾನೆ -ಅವನ ರಾಜನ ಆಸ್ಥಾನದಲ್ಲಿದ್ದ ಸುಂದರ
ಮಾನವಮಾದರಿಗಳ ಶರೀರಗಳು ಕಾಲುಗಳ ಮೇಲೆ ತೇಲಾಡುತ್ತಿದ್ದವಂತೆ!
ಕಟಿಯೇ ಇರಲಿಲ್ಲವಂತೆ!
ಕಟಿಯ ಕತರ್ತತ್ವಕ್ಕೆ ಕಳಂಕ ಹಚ್ಚುವ ವಸ್ತು ಕೊಬ್ಬು. ಅನ್ಮಾನ್ಮ
ಕಾರಣಗಳಿಂದಾಗಿ ಅದು ತೆಕ್ಕೆತೆಕ್ಕೆಗಳಾಗಿ ಪಕ್ಕಗಳಲ್ಲಿ, ಪದರಪದರಗಳಾಗಿ
ಉದರದ ಮೇಲೆ, ಬಳಿಬಳೆಯಾಗಿ ಪೃಷ್ಠಗಳು ಮತ್ತು ತೊಡೆಯ ಮೇಲೆ
ಪುರುಷರಲ್ಲಿ ಮತ್ತು ಸ್ತ್ರೀಯರಲ್ಲಿ ಕೂಡಿಕೊಳ್ಳುತ್ತಾ ಹೋಗುವುದು. ಹೀಗಾಗಿ
ಶರೀರದ ಮೇಲ್ಭಾಗದ ಚಲನೆ ಇಡೀ ಶರೀರ ತಿರುಗಿದಾಗ ಆಗುವುದೇ ಹೊರತು
ಕಟಿಯ ನೆರವಿನಿಂದಲ್ಲ.
ಆದ್ದರಿಂದ ಶರೀರದ ಚಟುವಟಿಕೆ ಲವಲವಿಕೆಯಿಂದ ಕೂಡಿರಬೇಕಾದರೆ
ಕೊಬ್ಬು ಕರಗಬೇಕು; ಕಟಿ ಕುದುರಬೇಕು. ಆಗ ಹದವಾದ, ಹಿತವಾದ
ಚಲನವಲನಗಳನ್ನು ಕಾಣಬಹುದು.
ಕಟಿಯ ಕೊಬ್ಬು ಕರಗಿಸಲು ಸೂರ್ಯನಮಸ್ಕಾರ, ಆಸನಗಳು, ಶೀಘ್ರ
ನಡಿಗೆ, ಕ್ಷಿಪ್ಪ ಓಟ, ಈಜು,
ಬೆಟ್ಟ ಏರುವುದು, ಅವಶ್ಶಕ ಆಹಾರ ಮತ್ತು
ಕ್ರಮಬದ್ಧವಾದ ನಿಲುವುಗಳಿಂದ ಸಾಧ್ಯ.
ಕಟಿಯನ್ನು ಕುದುರಿಸಬೇಕಾದರೆ ಕೆಲವು ವ್ಯಾಯಾಮಗಳನ್ನು ಜೋಡಿಸಿ
ಕೊಳ್ಳಬೇಕು. ಮಾದರಿಗಾಗಿ ಕೆಲವನ್ನು ಕೆಳಗೆ ಕೊಡಲಾಗಿದೆ. (ಚಿತ್ರ ನೋಡಿ)
ಪ್ರಯೋಗ ೧: ಪದ್ಮಾಸನದಲ್ಲಿ ಅಥವಾ ಸುಖಾಸನದಲ್ಲಿ ಬೆನ್ನು
ಬಗ್ಗಿಸದೆ ಕುಳಿತುಕೊಳ್ಳಿ. ಎದೆ ಮೇಲಕ್ಕೆ ಎತ್ತಿ ಉಸಿರನ್ನು ತೆಗೆದುಕೊಳ್ಳಿ.
ಉಸಿರನ್ನು ಬಿಡುತ್ತಾ ಬಲಕ್ಕೆ ತಿರುಗಿ. ಬಲಗೈಯನ್ನು ಹಿಂದೆ ನೆಲದ ಮೇಲೆ,
ಎಡಗೈಯನ್ನು ಬಲಪೃಷ್ಠದ ಬಳಿ ನೆಲದ ಮೇಲೆ ಇಡಿ. ದೃಷ್ಟಿ ಹಿಂದಕ್ಕೆ.
ಉಸಿರನ್ನು ತೆಗೆದಂಕೊಳ್ಳುತ್ತಾ ಪೂರ್ವ ಸ್ಥಿತಿ. ಹೀಗೆಯೇ ಎಡಕ್ಕೆ.
೫೬ ಶರೀರ ಶಿಲ್ಪ

ಒಂದೊಂದು ಕಡೆ ೨೦ ರಿಂದ ೨೫ ಬಾರಿ ಮಾಡಿ. ಅವಶ್ಯಕತೆಗೆ ತಕ್ಕಂತೆ


ಹೆಚ್ಚಿಸುತ್ತಾ ಹೋಗಿ. ಆದಷ್ಟೂ ಹಿಂದೆ ತಿರುಗಿ.

ಪ್ರಯೋಗ ೨: ನೆಲದ ಮೇಲೆ ಕುಳಿತಂ ಎರಡೂ ಕಾಲುಗಳನ್ನು


ಮುಂದಕ್ಕೆ ಚಾಚಿ ಅಗಲಿಸಿಡಿ. ಉಸಿರು ತೆಗೆದುಕೊಳ್ಳಿ.

ಉಸಿರು ಬಿಡುತ್ತಾ ಬಲಕ್ಕೆ ತಿರುಗಿ ಎಡಗಾಲಿನ ರೇಖೆ ಹಿಂದಕ್ಕೆ


ಮುಂದುವರಿಸಿದರೆ ಬರುವ ಕಲ್ಪನೆಯ ರೇಖೆಯ ಮೇಲೆ ಹಣೆಯನ್ನು ನೆಲಕ್ಕೆ
ತಾಗಿಸಿ ಎರಡೂ ಕೈಗಳ ಸೂಕ್ತ ಸಹಾಯ ಪಡೆಯಿರಿ. ಮತ್ತೆ ಉಸಿರು
ತೆಗೆದುಕೊಳ್ಳುತ್ತಾ ಪೂರ್ವ ಸ್ಥಿತಿ. ಇದರಂತೆ ಎಡಗಡೆ ತಿರುಗಿ ಹಣೆ
ತಾಗಿಸಿ... ಒಂದೊಂದು ಕಡೆಯೂ ೨೦ ಬಾರಿ. ಹಣೆ ತಾಗಿಸಬೇಕು.

ಪ್ರಯೋಗ ೩: ಎದೆ ಮೇಲ ಮಾಡಿ ಮಲಗಿಕೊಳ್ಳಿ. ಎರದೂ


ಕೈಗಳನ್ನು ಎಡಕ್ಕೆ ಬಲಕ್ಕೆ ಚಾಚಿ. ಉಸಿರು ಬಿಡುತ್ತಾ ಎಡಗಾಲನ್ನು ಎತ್ತಿ
ಮೊಣಕಾಲಿನಲ್ಲಿ ಬಗ್ಗಿ ಸದೆಬಲಹಸ್ತದ ಆಚೆ (ಶಿರದ ಕಡೆ) ಕಾಲಬೆರಳುಗಳನ್ನು
ನೆಲಕ್ಕೆ ತಗುಲಿಸಿ. ಉಸಿರು ತೆಗೆದುಕೊಳ್ಳುತ್ತಾ ಕಾಲು ಪೂರ್ವ ಸ್ಥಿತಿಗೆ. ಇದೇ
ರೀತಿ ಬಲ ಪಾದದಿಂದ.
ಕ್ರಮೇಣ ನೆಲಕ್ಕೆ ತಾಗಿಸುವ ಸ್ಥಾನವನ್ನು ದೂರ ದೂರ ಮಾಡುತ್ತಾ
ಹೋಗಿ. ಪ್ರತಿ ಕಡೆಯೂ ೨೫ ಬಾರಿ ಮಾಡಿ.

ಅನ್ಕ ಪ್ರಯೋಗಗಳು: ಕಾಲುಗಳನ್ನು ದೂರ ಇಟ್ಟು ಸೊಂಟದಲ್ಲಿ


ಬಗ್ಗುವ,. ತಿರುಗುವ ಪ್ರಯೋಗಗಳನನ್ನು ಮಾಡಿ. ಮುಂದೆ, ಹಿಂದೆ, ಕೈಗಳ
ಸಹಿತ, ಎಡಕ್ಕೆ, ಬಲಕ್ಕೆ ಬಗ್ಗುವ, ಹೊರಳುವ, ಅರ್ಧ ಚಕ್ರಾ ಸ
ಸುತ್ತುವ, ಮಂಡಲಾಕಾರವಾಗಿ ತಿರುಗುವ ಪ್ರಯೋಗಗಳನ್ನು ಜೋಡಿಸಿ
ಕೊಂಡು ಮಾಡಬೇಕು.

ಹೊಟ್ಟೆಯ ಮೇಲೆ ಮಲಗಿ ಕಾಲುಗಳನ್ನು ಎತ್ತುವ ಮತ್ತು ಬೆನ್ನಿನ


ಮೇಲೆ ಮಲಗಿ ಕಾಲುಗಳನ್ನು ಸ್ಮಿರವಾಗಿಟ್ಟು ದೇಹದ ಮೇಲ್ಭಾಗವನ್ನು

ಟ್ರ
ಮಹಂ
ಮಸತ
ಬಡುವ.
ಶಹವಾತ
ತಾ
ಸಿಂಹ ಕಟಿ ೫೭

ಎತ್ತುವ ಪ್ರಯೋಗಗಳು ಹೆಚ್ಚು ಉಪಯುಕ್ತ.


ಈ ಎಲ್ಲಾ
(
೧೨
ಬ ಜಾಂ ಬೆಂಬೀ ಹ ೂಡಲಾ
w ಸೃಚ್ಛ.ಡೆ ಮಲವಿಸರ್ಜ

ಮ್‌ —

ಅಗತ್ಯ. ಅದರ ಕೊರತೆ ಇರುವವರುವೆಓದೃಕೀಯ ನೆರವು ಪಡೆಯಬೇಕು.


ಸುಲಭ ಪ್ರಯೋಗವನ್ನೂ ಸತವ ತತ್ತ ದಿನವಿಡೀ ಆಗಾಗ್ಗೆ ನೀರನ್ನು
ಕುಡಿಯುವುದು. ಗುಟುಕು ಗುಟುಕಾಗಿ ಕುಡಿಯಬೇಕು. ರೇಡಿಯೇಟರಿಗೆ

ಕಾಲಬಲಕ್ಕೊಂದು ಕಸರತ್ತು :
೧೦ ಕೂಡೇಳು

ಒಳ್ಳೆಯ ನಿಲುವು ಯಾರಿಗೆ ಒಲ್ಲದ ವಸ್ತು ? ಅದರ ಗಳಿಕೆಯ ರೀತಿ


ಯಾವುದು? ಆರಿಸಿದ ಅಗಸನ ನೆರವಿನಿಂದಲೇ? ಅಥವಾ ಚತುರ ಚಿಪ್ಪಿಗನ
ಸಹಕಾರದಿಂದಲೇ ? ಅನೇಕರು ಇವರ ಮೊರೆಹೋಗುವವರೇ !
"ಒಳ್ಳೆಯ ನಿಲುವಿನ ಗಳಿಕೆಗೆ ರಾಜಮಾರ್ಗ ಅನ್ಕರ ಸಹಾಯವಲ್ಲ;
ಸ್ವಂತ ಸಾಧನೆ.
ಶರೀರದ ಅಂಗಾಂಗಗಳು ಸಶಕ್ತವಾಗಿ ಪ್ರಮಾಣಬದ್ಧವಾಗಿರಬೇಕು.
ಹಲವು ಬಾರಿ ಸಮಗ್ರ ಕಲ್ಪನೆ ಇಲ್ಲದ ವ್ಯಾಯಾಮದಿಂದ ಕೆಲವು ಅಂಗಗಳು
ಅಲಕ್ಷ್ಯ ಮಾಡಲ್ಪಟ್ಟು ದುರ್ಬಲವಾಗುವುವು. ಆ ದುರ್ಬಲ ಅಂಗಗಳೇ ಶರೀರ
ಶಕ್ತಿಯ ಅಳತೆಗೋಲಾಗುವುವು ಎಂಬುದನ್ನು ಮರೆಯಬಾರದು. ಅಂತಹ
ದುರ್ಬಲ ಅಂಗಗಳನ್ನು ವಿಶೇಷ ಪ್ರಯಾಸದಿಂದ ಸರಿಪಡಿಸಬೇಕು.
ನಿಲುವಿನಲ್ಲಿ ತೊಡೆ ಮತ್ತು ಮಾನಖಂಡಗಳ ಆಕಾರ ಮತ್ತು ಶಕ್ತಿ
ಅತಿ ಗಣನೀಯವಾದ ಅಂಶಗಳು. ಅದಕ್ಕಾಗಿ ಕಾಲುಗಳ ಶಕ್ತಿ
ಸಂವರ್ಧನೆಗಾಗಿ ಈ ನಾಡಿನ ಶರೀರಶಾಸ್ತ್ರಜ್ಞರೇ ತಯಾರು ಮಾಡಿದ
ಕಾಲಬಲಕ್ಕೊಂದು ಕಸರತ್ತು : ಕೂಡೇಳು ೫೯

ಉತ್ತಮ ವ್ಮಾಯಾಮ ಇದೆ. ಅದರ ಬಗೆಗಳು ಹಲವಾರು. ಅವುಗಳ


ಪ್ರಾಥಮಿಕ ಪರಿಚಯವನ್ನು ಮಾತ್ರ ಇಲ್ಲಿ ಗಮನಿಸಬಹುದು.
ಪ್ರತಿದಿನವೂ ಕೆಲವು ಬಗೆಗಳನ್ನು ಆರಿಸಿಕೊಂಡು ಅವರವರ ಶಕ್ತಿಗನು
ಗುಣವಾಗಿ ಬೈಠಕ್‌ (ಕೂಡೇಳು) ಸಂಖ್ಯೆಗಳನ್ನು ಏರಿಸುತ್ತಾ ಹೋಗಬೇಕು..
ಪ್ರಾರಂಭ ೨೦ ರಿಂದ ಆಗಲಿ.

I ಗುಟನ್‌ ಬೈಠಕ್‌: ಪ್ರಕಾರ ೧:


ಸ್ಥಿತಿ: ಮಂಡಿಗಳು ಮತ್ತು ಕಾಲಬೆರಳುಗಳು ನೆಲದ ಮೇಲೆ, ೧೨
ದೂರದಲ್ಲಿ. ಅಂಗೈಗಳು ನೆಲದ ಮೇಲೆ ಮಂಡಿಯ ಮುಂದೆ. ಎದೆ.
ಮುಂದೆ. ಮೊಣಕ್ಕೆ ನೇರ, ಬೆನ್ನು ಹಿಂದಕ್ಕೆ ಬಾಗಿರಬೇಕು. ತಲೆ ನೇರ,
ದೃಷ್ಟಿ ಮುಂದೆ.
೧. ಮಂಡಿಗಳನ್ನು ಚಲಿಸದೆ ಮೊಣಕ್ಕೆ ಬಗ್ಗಿ ಸಬೇಕು, ಹಣೆ ನೆಲಕ್ಕೆ
ತಾಗಿಸಬೇಕು. ೨. ಪೂರ್ವ ಸ್ಥಿತಿ.
ಪ್ರಕಾರ ೨. ಸ್ಥಿತಿ: ಬಲಗೈಯನ್ನು ಎತ್ತಿ ಮೊಣಕ್ಕೆ ಮಡಿಸಿ, ಅಂಗೈ
ಮುಂದೆ ನೋಡುವಂತೆ ಹಿಡಿಯುವುದು. ಅಂಗೈ ಭುಜದ ಮಟ್ಟಕ್ಕೆ ಇರಲಿ.
೧. ಎಡ ಮೊಣಕ್ಕೆ ಬಗ್ಗಿಸಿ ಎದೆಯನ್ನು ನೆಲಕ್ಕೆ ಸಮಾನಾಂತರ ಮಾಡುವುದು.
೨. ಪೂರ್ವ ಸ್ಥಿತಿ.
ಇದೇ ರೀತಿ ಎಡಗೈನಿಂದ ಮಾಡುವುದು.
ಪ್ರಕಾರ ೩: ಎರಡೂ ಕೈಗಳನ್ನು ಭುಜದ ಮಟ್ಟಕ್ಕೆ ಮೇಲಿನಂತೆಯೇ
ಎತ್ತಿ ಪ್ರಕಾರ ೨ ರಂತೆ ಬೈಠಕ್‌ ಮಾಡುವುದು.
ಪ್ರಕಾರ ೪: ಪ್ರಕಾರ ೧ ರಂತೆ ಬೈಠಕ್‌ ಮಾಡುವಾಗ ಸೊಂಟವನ್ನು
ತಿರುಗಿಸಿ ಎಡಕ್ಕೆ ಅಥವಾ ಬಲಕ್ಕೆ ಬಗ್ಗುವುದು. ಪೂರ್ವ ಸ್ಥಿತಿ.

1] ಬಾಗುವ ಬೈಠಕ್‌. ಸ್ಥಿತಿ: ಎರಡು ಮೊಣಕಾಲುಗಳನ್ನು ಬಗ್ಗಿಸಿ


ಕೈಗಳನ್ನು ಪಾದಗಳ ಬಳಿ ಮುಂದೆ ಇಡುವುದು. ಕೈಗಳ ಸ್ಥಾನ ಬದಲಿಸದೆ
ಬೈಠಕ್‌ ಮಾಡುವುದು.
1H.
SS
Io ೫
ಕಾಲಬಲಕ್ಕೊಂದು ಕಸರತ್ತು : ಕೂಡೇಳು ೬೧

ಪ್ರಕಾರ ೧: ಬಲ ಮೊಣಕಾಲು ಕೈಗಳ ಮಧ್ಯೆ ತೂರಿಸುವುದು, ಎಡ


ಮೊಣಕಾಲು ಎಡಗೈ ಹೊರಗಡೆ.
ಅಂತೆಯೇ ಅದಲು ಬದಲು ಮಾಡಿಯೂ ಮಾಡಬಹುದು.
ಪ್ರಕಾರೆ ೨: ಎರಡೂ ಮೊಣಕಾಲುಗಳನ್ನು ಎರಡು ಕೈಗಳ ಮಧ್ಯೆ
ತೂರಿಸುವುದು. ಆದಷ್ಟು ಮುಂದೆ ತಳ್ಳುವುದು. ಪೂರ್ವ ಸ್ಥಿತಿ.
ಎರಡೂ ಮೊಣಕಾಲುಗಳನ್ನು ಎಡಗೈ ಅಥವಾ ಬಲಗೈ ಹೊರಗಡೆ
ತೆಗೆದುಕೊಂಡು ಮೇಲಿನಂತೆ ಬೈಠಕ್‌ ಮಾಡುವುದು.

111 ಸಾದಾ ಬೈಠಕ್‌. ಪ್ರಕಾರ ೧: ಸ್ಥಿತಿ: ನೇರವಾಗಿ ನಿಲ್ಲುವುದು,


ಕೈಬೆರಳುಗಳು ಮಡಿಸುವುದು, ಪಾದಗಳು ಕಿಂಚಿತ್‌ ದೂರ.
ಹಿಮ್ಮಡಿಗಳನ್ನು ಎತ್ತಿ ಕೂಡುವುದು. ಮೊಣಕಾಲುಗಳು ಪೂರ್ತಿ
ಬಗ್ಗಿರಬೇಕು. ಕೈಗಳು ಮೇಲಕ್ಕೆ ಬಗ್ಗಿ ಮೊಣಕ್ಕೆ ಮುಂದಕ್ಕೆ. ಪೂರ್ಣ
ಭಾರ ಕಾಲಬೆರಳುಗಳ ಮೇಲೆ, ದೃಷ್ಟಿ ಮುಂದೆ. ಪೂರ್ವ ಸ್ಥಿತಿ.
ಪ್ರಕಾರ ೨. ಸ್ಥಿತಿ: ಎಡಗಾಲನ್ನು ಮುಂದೆ ಅಥವಾ ಪಕ್ಕಕ್ಕೆ ಅಥವಾ
ಹಿಂದಕ್ಕೆ ಇಡುವುದು.
ಮೇಲಿನಂತೆಯೇ ಬೈಠಕ್‌ - ಕುಳಿತಾಗಲೂ ಎಡಗಾಲು ಮುಂದೆ, ಪಕ್ಕಕ್ಕೆ
ಅಥವಾ ಹಿಂದೆ ಇಡುವುದು.
ಪ್ರಕಾರ ೩: ಸಾದಾ ಬೈಠಕ್‌ ಮಾಡುವಾಗ ಮಂಂದಕ್ಕೆ
ಪಕ್ಕಕ್ಕೆ, ಹಿಂದಕ್ಕೆ ನೆಗೆದು ಬೈಠಕ್‌ ಮಾಡುವುದು.

Iv ನಮಸ್ಕಾರ ಬೈಠಕ್‌. ಸ್ಥಿತಿ: ನಮಸ್ಕಾರ.


ಕಿಂಚಿತ್‌
ಮುಂದೆ ನೆಗೆದು, ಎಡಗಾಲು ಹಿಂದೆ ನೇರವಾಗಿ, ಎಡಕಾಲ
ಬೆರಳುಗಳಂ ನೆಲದ ಮೇಲೆ, ಬಲಮಂಡಿ ಬಾಗಿರಬೇಕು. ಪೂರ್ವ ಸ್ಥಿತಿ.

೪ ಚಕ್ರ ಬೈಠಕ್‌. ಪ್ರಕಾರ ೧: ಸಾದಾ ಬೈಠಕ್‌ ಮಾಡಿ ಪೂರ್ವ ಸ್ಥಿತಿಗೆ


ಎ ಶರೀರ ಶಿಲ್ಪ

ಬರುವಾಗ ಎಡಕ್ಕೆ ತಿರುಗಿ ನಿಲ್ಲುವುದು. ಇದನ್ನೇ ಚಕ್ರಾಕಾರವಾಗಿ ಮುಂದು


ವರೆಸುವುದು.
ಪ್ರಕಾರೆ ೨: ಬಲಕ್ಕೆ ತಿರುಗುವುದು.
ಪ್ರಕಾರ ೩: ಸಾದಾ ಬೈಠಕ್‌ ಮಾಡುವಾಗ ಎಡಕ್ಕೆ ಕೂಡುವುದು.
ಪೂರ್ವ ಸ್ಲಿತಿ. ಮತ್ತೊಮ್ಮೆ ಮಾಡುವಾಗ ಬಲಕ್ಕೆ ಕೂಡುವುದು. ಪೂರ್ವ

ತಿ,
೨೭

VI ಹನುಮಾನ್‌ ಬೈಠಕ್‌. ಪ್ರಕಾರ ೧: ಸ್ಥಿತಿ: ಅರ್ಧ ಬಗ್ಗಿ


ಮೊಣಕಾಲ ಮೇಲೆ ಎರಡು ಕೈಗಳು. ನೆಗೆದು ಎಡಕ್ಕೆ ತಿರುಗುವುದು. ಎಡ
ಗಾಲು ಮುಂದೆ. ಎಡಗೈ ಮೇಲಕ್ಕೆ ಬಗ್ಗಿರುವುದು, ಅಂಗೈ ಮುಂದೆ
ನೋಡುವುದು. ಬಲಗಾಲು ಹಿಂದಕ್ಕೆ. ಬಲಗೈ ಬಲ ತೊಡೆಯ ಮೇಲೆ.

ಪ್ರಕಾರ ೨. ಸ್ಥಿತಿ: ಕುಳಿತುಕೊಳ್ಳುವಾಗ ಬಲಮಂಡಿಯನ್ನು


ಬಗ್ಗಿಸಿ ಬಲಗಾಲ ಬೆರಳುಗಳ ಮೇಲೆ ಕೂಡುವುದು, ಎಡಪಾದ ನೆಲದ ಮೇಲೆ.
ಎರಡು ಅಂಗೈಗಳು ಮಂಡಿಗಳ ಮೇಲೆ. ಸತತವಾಗಿ ಸ್ಥಿತಿಯನ್ನು
ಬದಲಿಸಂವುದು. ಎಡಮಂಡಿ ಬಗ್ಗಿಸಿ ಎಡಪಾದದ ಬೆರಳು ನೆಲದ ಮೇಲೆ.
ಬಲಪಾದ ನೆಲದ ಮೇಲೆ. ಶರೀರದ ಭಾರ ಬಲಗಾಲಿನಿಂದ ಎಡಗಾಲಿಗೆ
ಬದಲಿಸುವುದು. ಅಂತೆಯೇ ಪೃಷ್ಠಗಳು.
೧೧ ದಂಡ

ಭಾರತೀಯ ಪದ್ಧತಿಯಲ್ಲಿ, ಶರೀರವನ್ನು ದೃಢ ಮಾಡುವ ಉಪಕರಣ


ರಹಿತ ವ್ಯಾಯಾಮದಲ್ಲಿ "ದಂಡ'ದ ಸ್ಮಾನ ಉಲ್ಲೇಖನೀಯ. ಈ ನಾಡಿನ
ಎಲ್ಲ ವ್ಮಾಯಾಮಿಗಳು, ಮಲ್ಲಯುದ್ಧದ ಪಟುಗಳು ದಂಡವನ್ನು ಮಾಡಿಯೇ
ತಮ್ಮ ಶರೀರದಲ್ಲಿ ಅಪೇಕ್ಷೆಗೆ ತಕ್ಕಂತೆ ಶಕ್ತಿಯನ್ನು ಕೂಡಿಸಿಕೊಳ್ಳುತ್ತಿದ್ದರು;
ಆಕಾರವನ್ನು ಪಡೆಯುತ್ತಿದ್ದರು. ಈ ಶತಮಾನದ ಪ್ರಾರಂಭದ ದಶಕಗಳಲ್ಲಿ '
ಹೆಸರಾಂತ ಮಲ್ಲಶಾಸ್ತ್ರದ ಜಟ್ಟೆ “ಗಾಮ'ನ ಸಾಧನೆ ಪ್ರಶಂಸನೀಯ. ಆತ
ಜಗತ್ತಿನಲ್ಲಿ ಅಂದು ಇದ್ದ ಕೆಲವೇ ಪ್ರಮುಖ ಜಟ್ಟಿಗಳಿಗೆ ಸಾಟಿಯಾಗಿದ್ದ.
ಅವನ ರಟ್ಟೆಯೇ ೧೭.೫”, ಎದೆ ೪೮”, ಕತ್ತು ೧೯”, ತೊಡೆ ೨೯,
ಎತ್ತರ ೫.೯೫.
ಈ ಅದ್ಭುತ ಪ್ರಮಾಣದ ಗಳಿಕೆ ಮತ್ತು ಉಳಿಕೆಗೆ ಸಾಮಾನ್ಯ "ದಂಡ?
ಮತ್ತು ಅದರ ಪರಿವರ್ತನಗಳೇ ಆಧಾರವಾಗಿದ್ದವು. ನಿತ್ಯವೂ ಸಾವಿರಾರು
ದಂಡಗಳನ್ನು ಈ ಜಟ್ಟಿಗಳು ಮಾಡುತ್ತಿದ್ದರು. ಅಂದಮೇಲೆ ಅವರ ಸಾಧನೆ
ಮತ್ತು ತಾಳ್ಮೆಯ ಕಲ್ಪನೆ ಬಂದೀತು.
ದಂಡ ೬೫

“ದಂಡ'ದಲ್ಲಿ ಚಿಕ್ಕ ಚಿಕ್ಕ ಬದಲಾವಣೆಗಳಿಂದ ಅನೇಕ ಹೊಸ ರೀತಿ


ಗಳನ್ನು ಹುಡುಕಿದ್ದಾರೆ ನಮ್ಮ ಪೂರ್ವಜರು. ಅವುಗಳಲ್ಲಿ ಕೆಲವು ವಿಧಾನಗಳ
ಪರಿಚಯ ಮಾತ್ರ ಇಲ್ಲಿ ಕೊಡಲಾಗಿದೆ. (ಚಿತ್ರ ನೋಡಿ)
ಅ) ಸಾದಾ ದಂಡ
೧. ಸ್ಥಿತಿ: ಎರಡು ಕೈಗಳು, ಎರಡು ಕಾಲುಗಳು ನೆಲದ ಮೇಲೆ. ಕೈಗಳ
ಮಧ್ಯೆ, ಸುಮಾರು ಎದೆಯ ಅಗಲದಷ್ಟು ಅಂತರ. ಸೊಂಟ ಮೇಲಕ್ಕೆ.
ಶರೀರ ಹಿಂದಕ್ಕೆ ಎಳೆಯುವುದು. ಮೊಣಕ್ಕೆ ಮೊಣಕಾಲು ಬಗ್ಗಿರಬಾರದು.
೨. ಶರೀರವನ್ನು ಆದಷ್ಟು ಹಿಂದಕ್ಕೆ ಎಳೆದು, ಮೊಣಕೈಗಳನ್ನು
ನಿಧಾನವಾಗಿ ಬಗ್ಗಿಸುತ್ತ, ಇಡೀ ಶರೀರ ನೆಲಕ್ಕೆ ಸಮಾನಾಂತರವಾಗುವಂತೆ
ಎದೆಯನ್ನು ನೆಲದ ಬಳಿ ತರುವುದು. ಶರೀರ ಕಾಲಬೆರಳುಗಳು ಮತ್ತು
ಕೈಗಳ ಮೇಲೆ ಸಮತೋಲವಾಗಿರಬೇಕು. ೩. ಅನಂತರ ಎದೆಯನ್ನು
ಮುಂದಿನಿಂದ ಮೇಲಕ್ಕೆ ತರಬೇಕು, ಮೊಣಕ್ಕೆಗಳು ನೇರವಾಗಿರಬೇಕು. ಈ
ಸ್ಥಿತಿಯಲ್ಲಿ ಎದೆ ಪೂರ್ತಿ ಎತ್ತಿರಬೇಕು. ತಲೆ ಹಿಂದಕ್ಕೆ ವಾಲಿರಬೇಕು. ಬೆನ್ನು
ಹಿಂದಕ್ಕೆ ಬಾಗಿರಬೇಕು. ೪. ಸೊಂಟ ಮೇಲೆತ್ತಿ ಮೊದಲಿನ ಸ್ಥಿತಿಗೆ.
ಆ) ಸೀದಾ ದಂಡ
ಪೂರ್ವ ಸ್ಥಿತಿ: ಸಾದಾ ದಂಡದ ಸ್ಥಿತಿ. ೧. ಕೈಗಳನ್ನು ನೇರವಾಗಿಟ್ಟು,
ಹಿಮ್ಮಡಿಗಳನ್ನು ಎತ್ತಿ ಶರೀರವನ್ನು ಮುಂದಕ್ಕೆ ತರಬೇಕು. ಆಗ ಬೆನ್ನು
ಸಮನಾಗಿ ಇಡೀ ಶರೀರ ಒಂದೇ ನೇರವಾಗಿರಬೇಕು. ೨. ಮೊಣಕೈಯಲ್ಲಿ
ಬಗ್ಗಿಸಿ ಶರೀರವನ್ನು ನೆಲಕ್ಕೆ ಸಮಾನಾಂತರವಾಗಿ ತರುವುದು. ಶರೀರ ಸಮ
ತೋಲವಾಗಿರಬೇಕು. ೩. ಕೈಗಳನ್ನು ನೇರ ಮಾಡಿ ಸ್ಥಿತಿ ೧ಕ್ಕೆ
ಬರಬೇಕು. ೪. ಪ್ರಾರಂಭದ ಸ್ಥಿತಿಗೆ ಬರುವುದು. (ಸಾದಾ ದಂಡದ ಸ್ಥಿತಿ)
ಇ) ಜೋರ್‌ ದಂಡ
ಸ್ಥಿತಿ: ಸೀದಾ ದಂಡದ ೧ ನೇ ಸ್ಥಿತಿ. ೧. ಸೀದಾ ದಂಡದ ೨ನೇ
ಸ್ಥಿತಿ. ೨. ಸಾದಾ ದಂಡದ ೩ ನೇ ಸ್ಥಿತಿ. ೩. ಸೀದಾ ದಂಡದ೨
ನೇ ಸ್ಥಿತಿ. ಹೀಗೆಯೇ ೨ ಮತ್ತು ೩ ರ ಕ್ರಿಯೆಯ ಪುನರಾವರ್ತನೆ
ಮಾಡುವುದು.
೫]
೬೬ ಶರೀರ ಶಿಲ್ಪ

ಈ) ವ ಶ್ವಿಕ ದಂಡ
೧. ದಂಡ ಸಿತಿ ೨. ಕೈಗಳನ್ನು ಮಡಿಸಿ ಎದೆ ಕೆಳಕ್ಕೆ ತರುವುದು.

ಅದೇ ಸಮಯಕ್ಕೆ ಒಂದು ಕಾಲನ್ನು ಮೇಲೆತ್ತಿ ಹಿಂದಕ್ಕೆ ಬಗ್ಗಿಸುವುದು.


೩. ಕಾಲನ್ನು ಕೆಳಗೆ ಇಟ್ಟು ಎದೆ ಮುಂದಿನಿಂದ ಮೇಲಕ್ಕೆ. ೪. ಪೂರ್ವ
ಸ್ಥಿತಿ.
ಉ) ಸರ್ಪ ದಂಡ
ಒಂದು ಸಾದಾ ದಂಡ ಮಾಡುವುದು. ಎಡಗೈಯನ್ನು ೬” ಮುಂದೆ
ಇಟ್ಟು ಕೈಗಳನ್ನು ಬಗ್ಗಿಸುವುದು. ಅದೇ ಸಮಯಕ್ಕೆ ಬಲಗಾಲನ್ನು ಮಡಿಸಿ
ತ್‌್‌ ಕೆಳಗೆ ತೂರಿಸಬೇಕು. ತಲೆ ಎಡಗಡೆಗೆ ತಿರುಗಿಸಿ.
ಕೈಗಳನ್ನು ನೇರಮಾಡಿ ಅದೇ ಸಮಯಕ್ಕೆ ಬಲಗೈಯನ್ನು ೬” ಮುಂದೆ
ಇಡುವುದು. ಎಡಗಾಲನ್ನು ಮಡಿಸಿ ಬಲಗಾಲಿನ ಕೆಳಗೆ ತೂರಿಸುವುದು, ತಲೆ
ಬಲಕ್ಕೆ ತಿರುಗಿಸುವುದು. ಇದೇ ರೀತಿ ಮುಂದುವರಿಯುವುದು.
ಊ) ಚಕ್ರದಂಡ. ೧
೧. ಸಾದಾ ದಂಡದಂತೆ ಒಂದು ದಂಡ ಮಾಡುವುದು. ೨. ಬಲ
ತೊಣಕಾಲು ಮಡಿಸಿ ಬಲ ಪಾದವನ್ನು ಕೈಗಳ ಮಧ್ಯೆ ನೆಲದ ಮೇಲೆ
ಇಡುವುದು. ೩. ಸ್ವಲ್ಪ ಎಡಕ್ಕೆ ತಿರುಗಿ, ಎಡಗಾಲನ್ನು ಎತ್ತಿ,
ಕ ದ ಬಲಕ್ಕೆ ಮಂಡಲಾಕಾರವಾಗಿ ಸುತ್ತಿಸಬೇಕು.
[ಈ ₹1 ಷೂ «J Cs ಛಿ ಶ್ರಈ) (GL( ೮) ಹಾ ತೆ €.ಶ್ತ೪ ಆ ಹಾಲಗ್ನ4; ತ್ರ [ಈGL©್ತ ಬಲಗಾಲನ್ನು ಯೋಗ್ಮ
ಸಮಯದಲ್ಲಿ ಮೇಲೆತ್ತಿ ಎಡೆಮಾಡಿಕೊಡಬೇಕು. ಎರಡೂ ಕಾಲುಗಳನ್ನು
- ೧ ರಂತೆ ಹಿಂದೆ ಇಡುವುದು. ೪. ಮುಂಚಿನ ಸ್ಥಿತಿ. ಮರು ದಂಡ
ಲ್ಲ ಇದೇ ಕ್ರಿಯೆಯನ್ನು ಕಾಲುಗಳನ್ನು ಬದಲಾಯಿಸಿ ಮಾಡಬೇಕು.
ಚಕ್ರದಂಡ ೨
ಮೇಲಿನ ಚಲನೆಯನ್ನೇ ಈ ಕೆಳಗಿನ ವೃತ್ಕಾಸದೊಂದಿಗೆ ಮಾಡುವುದು:
ರಶಡೂ ಕಾಲುಗಳ ಕ್ರಿಯೆ ಒಟ್ಟಿಗೆ ಆಗಬೇಕು ಎಡಗಾಲು ಮುಂದೆ
ದಾಗ (ಕೈಗಳ ಮಧ್ಯೆ) ಬಲಗಾಲನ್ನು ಪಕ್ಕದಿಂದ ಕೈಗಳ ಕೆಳಗಿನಿಂದ

ಸು
ಜಾ
ಶ್ರಿಸಿ ತರಬೇಕು. ಹಾಗೆಯೇ ಕಾಲುಗಳನ್ನು ಬದಲಾಯಿಸಿ ಮಾಡಬೇಕು.
ದಿ೨ ಬಾಳಿನ ಜೀವಾಳ: ಆಟಿ

ಆಟ ಉಲ್ಲಾಸದ ವಸ್ತು. ಇದರ ಪರಿಚಯ ಎಲ್ಲರಿಗೆ ಇದೆ ಎಂದೇ


ನಂಬಿಕೆ. ಇದರ ಬಳಕೆ ನೀರು ಗಾಳಿಯಷ್ಟೇ ಪ್ರಾಚೀನ.
ಆಟದ ವಿಶೇಷವೆಂದರೆ, ಅದು ಶರೀರದ ಎಲ್ಲ ಅವಯವಗಳನ್ನು
ಮತ್ತು ಅಂತಃಕರಣವನ್ನು (ಮನಸ್ಸು, ಬುದ್ಧಿ, ಚಿತ್ತ) ಆವರಿಸುತ್ತದೆ.
ಜೊತೆಗೆ ಈ ಎಲ್ಲ ಅಂಗಗಳಿಂದ ಅರಿವಾಗದಂತೆ ಕೆಲಸ ಮಾಡಿಸುತ್ತದೆ.
ಎಲ್ಲ ಚಟುವಟಿಕೆ ಮತ್ತು ಕೃತಿಗಳಿಗೆ ನಿಶ್ಚಿತ ಗುರಿ-ವಿಜಯ ಸಂಪಾದನೆ...
ಆಟದಲ್ಲಿ ಸಿಗುತ್ತದೆ. ಸಹಜವಾಗಿ ಈ ಉದ್ದೇಶಪೂರ್ತಿಗಾಗಿ ಶರೀರ,
ಮನಸ್ಸು, ಬುದ್ಧಿ ತೊಡಗುವುದರಿಂದ ಅಲ್ಲಿಯವರೆಗೆ ಇದ್ದ ಮಿಕ್ಕೆಲ್ಲಾ ಭಾವ
ನೆಗಳು, ವಿಚಾರಗಳು ಆಟವಾಡುವಾಗ ಮಾಯವಾಗುವುವು. ಅರ್ಥಾತ್‌
ಶರೀರದ ಆಲಸ್ಯ, ಮನಸ್ಸಿನ ಚಿಂತೆ, ಬುದ್ಧಿಯ ವಿಕಾರಗಳು ದೂರ ಸರಿಯು
ವುವು. ಅಲ್ಲದೆ ಶರೀರದ ಚಪಲತೆ, ಮನಸ್ಸಿನ ಏಕಾಗ್ರತೆ, ಬುದ್ಧಿಯ
ತೀಕ್ಷ್ಣತೆ ಹೆಚ್ಚುವುವು.
೬೮ ಶರೀರ ಶಿಲ್ಪ

ಆಟದಲ್ಲಿ ಸ್ವರ್ಧೆಯ ಮನೋಭಾವ ಬಂದು ಅಧಿಕ ಕತಗೃತ್ವಕ್ಕೆ ಆವಾ


ಹನೆ ಸಿಗುತ್ತದೆ. ಉತ್ಸಾಹ ಹೆಚ್ಚುತ್ತದೆ. ವಿಜಯಸಂಪಾದನೆ ಮಾಡಿದ
ಮೇಲಂತೂ, ಅದರಲ್ಲೂ ಅಧಿಕ ಶಕ್ತಿಯ ಎದುರಾಳಿಗಳನ್ನು ಗೆದ್ದ
ಮೇಲಂತೂ, ಎಣೆ ಇಲ್ಲದಷ್ಟು ಆನಂದ ಸಿಗುತ್ತದೆ. ಇಲ್ಲಿ ವಿಶೇಷ ಎಂದರೆ
ಸೋತರೆ ದುಃಖವಿಲ್ಲ.

ಸಾಮಾನ್ಯವಾಗಿ ಆಟದಲ್ಲಿ ಮಿತ್ರರು, ಆತ್ಮೀಯರೇ ಎದುರಾಳಿಗಳಾಗು


ವುದರಿಂದ ಆಟಕ್ಕೆ ಮುಂಚೆಯೂ ಅನಂತರವೂ ಅವರೆಲ್ಲರೂ ಒಂದೇ ಗುಂಪು.
ಆಟದ ಸಮಯದಲ್ಲಿ ಮಾತ್ರ ಅವರು ಸ್ಪರ್ಧೆಗಾಠರು. ಈ ರೀತಿ ಆಟವಾ
ಡುವುದರಿಂದ ಸಂಘರ್ಷ ಶಕ್ತಿಯ ವೃದ್ಧಿಯಾಗುವುದರ ಜೊತೆಗೆ ಆಟದ ಸಮ
ಯದಲ್ಲಿ ಆದ ನೋವುಗಳನ್ನು ನುಂಗುವಂತಹ, ಭಿನ್ನತೆಗಳನ್ನು ಮರೆಯು
ವಂತಹ, ಕಷ್ಟಗಳನ್ನು ಒಟ್ಟಿಗೆ ಸಹಿಸುವಂತಹ, ಆನಂದವನ್ನು ಹಂಚಿಕೊಳ್ಳು
ವಂತಹ ಸ್ವಭಾವ ಪ್ರಯತ್ನರಹಿತವಾಗಿಯೇ ದೊರಕುತ್ತದೆ. ಒಮ್ಮೆ ಈ
ಸ್ವಭಾವ ತಮ್ಮದಾದನಂತರ ಮಿತ್ರರಲ್ಲದವರ ಜೊತೆ ಆಡಿದಾಗಲೂ ಅವ
ರೆಲ್ಲಾ ಮಿತ್ರರಾಗುವರು, ಆತ್ಮೀಯರಾಗುವರು. ಅಂದರೆ ಆಟ ಕದನದ
ಕಣವಾದಾಗ್ಮೂ ಅದಂ ವಾಸ್ತವಿಕವಾಗಿ ಸ್ನೇಹದ ಸೇತುವೆ.

ಆಟದ ಆಂತರ್ಯ ಇದಾದ್ದರಿಂದ ಆಟವಾಡುವುದರಿಂದ ದಣವಾರು


ತ್ತದೆ, ಆಲಸ್ಮ ನೀಗುತ್ತದೆ. ಸ್ವಭಾವ ಬದಲಿಸಿ ಹಿತಕರ ಗುಣ
ವರ್ಧನೆ ಆಗುತ್ತದೆ, ಆನಂದಪ್ರಾಪ್ತಿಯಾಗಿ ಉಲ್ಲಾಸ ಹೆಚ್ಚುತ್ತದೆ.
ಕರ್ತತ್ವಕ್ಕೆ ಕರೆ ಸಿಕ್ಕಿ ಶರೀರ, ಮನಸ್ಸು, ಬುದ್ಧಿಗಳ ವಿಕಾಸ ಆಗು
ತ್ತದೆ. ಸ್ವರ್ಧೆಯಿಂದಾಗಿ ಸಂಘರ್ಷ ಶಕ್ತಿ ಹೆಚ್ಚಿ ಹೋರಾಟದ ಪ್ರವೃತ್ತಿ
ಬೆಳೆಯುತ್ತದೆ. ವಿಜಯ ಸಂಪಾದನೆಗಾಗಿ ಅಧಿಕ ಸಾಧನೆಗೆ ಆವಾಹನೆ ಸಿಗು
ತ್ತದೆ. ಅದರಿಂದ ಔಪಚಾರಿಕ ವ್ಮಾಯಾಮದಿಂದ ಗಳಿಸಬಹುದಾದ ಎಲ್ಲ
ಸಂಗತಿಗಳನ್ನು ಗಳಿಸಿ ಜೊತೆಗೆ ಗಂಣಗಳನ್ನು ಕೂಡಿಸಿಕೊಳ | ಬಹುದು.
ಆಟದಲ್ಲಿ ಗಳಿಸುವ ಎಲ್ಲ ಸಂಗತಿಗಳೂ ಅಗೋಚರವಾಗಿ, ಅರಿವಾಗದಂತೆ
ಬಾಳಿನ ಜೀವಾಳ : ಆಟ ೬೯

ಸಿಗುವುವು. ಆಟದಿಂದ ಸಿಗುವ ಆನಂದ, ಸಮಾಧಾನದಿಂದಾಗಿ. ಜೀವನದಲ್ಲಿ


ಅಭಿರುಚಿ ಹೆಚ್ಚುವುದು.

ಆಟ ಇಷ್ಟು ಬಹುಮುಖ ಉಪಯೋಗಿ ವಿಷಯವಾದಾಗ್ಕೂ ಅದರ


ಬಗ್ಗೆ ಅನೇಕ ವಿಕೃತ ಕಲ್ಪನೆಗಳು ಉತ್ಪನ್ನವಾಗಿವೆ. ಮೊದಲನೆಯದಾಗಿ,
ಕಡಿಮೆ ವಯಸ್ಸಿನವರು ಮಾತ್ರ ಆಡಬೇಕು ಎಂಬುದು. ಈ ಧೋರಣೆ
ತಳೆದ ದೊಡ್ಡವರಿಗೆ ಆಟದ ಮಹತ್ವವೇ ಗೊತ್ತಿಲ್ಲ. ಚಿಂತೆಯಿಂದ
ದಹಿಸಲ್ಪಟ್ಟು, ದುಃಖದ ದಳ್ಳುರಿಯಲ್ಲಿ ಸಿಲುಕಿದ "ದೊಡ್ಡವರು' ನಿಜಕ್ಕೂ
ಆಡಬೇಕು ; ಪ್ರಸನ್ನವದನರಾಗಬೇಕು ; ದುಃಖದಿಂದ ದೂರ ಸರಿಯಬೇಕು.
ಅದಕ್ಕಾಗಿಯೇ ಜೀವನದ ಅನೇಕ ವ್ಯವಹಾರಗಳಿಗೆ ನಮ್ಮ ದ್ರಷ್ಟಾರರು
ಆಟದ ಹೆಸರನ್ನೇ ಇಟ್ಟಿದ್ದಾರೆಂದು ಕಾಣುತ್ತದೆ.
ಆಟದ ಹೆಸರಿನ ಜಾದುವಿ
ನಿಂದ ಆ ವ್ಯವಹಾರಗಳ ವಿಕೃತಿ ದೂರವಾಗಿ ಸಮಾಜದ ಏಕಸೂತ್ರತೆ ಕಡಿದು
ಹೋಗದಿರಲೆಂದು. ಉದಾ: ನುಗ್ಗಾಟ, ಹೊಡೆದಾಟ, ಬೈದಾಟ, ಗುದ್ದಾಟ,
ಹೋರಾಟ.

ಎರಡನೆಯದಾಗಿ, ಆಟವಾಡದೆ ಇರುವುದೇ ದೊಡ್ಡಸ್ತಿಕೆಯ


ದ್ಯೋತಕವೆಂಬುದು, ಹಿರಿತನದ ಹೆಗ್ಗುರುತು ಎಂಬುದು. ಇದಕ್ಕಿಂತ ಹುಚ್ಚು
ಕಲ್ಪನೆ ಇನ್ನೊಂದಿರಲಾರದು. ಸಮಾಜಕ್ಕೆ ಒಪ್ಪುವಂತಹ ಆಟಗಳನ್ನು
ಸರ್ವರೂ ಆಡುವಂತೆ ಮಾಡಿದಾಗಲೇ ಸಮಾಜದ ಸದ್ಗುಣಗಳನ್ನು ಕಾದಿಡಲಂ
ಸಾಧ್ಯ. ಆಟವಾಡದೆ ದೊಡ್ಡವರಾದವರು ಸ್ವಭಾವದಲ್ಲಿ ಸ್ಪರ್ಧಿಗಳಾಗಿ,
ಇನ್ನೊಬ್ಬರ ಜೊತೆಗೆ ಸೇರದವರಾಗಿ ಮಾರ್ಪಟ್ಟು ಸಮಾಜಕ್ಕೆ ಹೊರೆಯಾಗು
ವರು.

ಆಟ ಶ್ರೇಣಿಗಳನ್ನು ಮರೆತು, ಸೊಟ್ಟ ಸ್ವಭಾವವನ್ನು ನೆಟ್ಟಗೆ ಮಾಡಿ


ಕೊಂಡು, ಓರೆಕೋರೆಗಳನ್ನು ತಿದ್ದಿಕೊಂಡು ಉತ್ತಮ ನಾಗರಿಕರಾಗಲು
ಸಹಾಯಕವಾಗಂವುದು. ಸ
೭೦ ಶರೀರ ಶಿಲ್ಪ

ಒಬ್ಬ ಪಾಶ್ಚಾತ್ಮ ಸೇನಾನಿ “ನಮ್ಮ ರಾಷ್ಟ್ರ ಗೆದ್ದದ್ದು ಯುದ್ಧ ಭೂಮಿ


ಯಲ್ಲಲ್ಲ, ನಾಡಿನ ಆಟದ ಮೈದಾನಗಳಲ್ಲಿ” ಎಂದು ಹೇಳಿದ. ಅದರ ಅರ್ಥ
ಪರಾಕ್ರಮ, ಪೌರುಷ, ವಿಧೇಯತೆ, ಏಕಸೂತ್ರತೆ, ಹೊಣೆಗಾರಿಕೆ, ಸಾತತ್ಮ.
ವಿಕಾಸಗಳನ್ನು ನಾಗರಿಕರು ಆಟದ ಮೈದಾನದಲ್ಲಿ ಪಡೆದರೆಂದು.

ಆಟದ ಸಾಮ್ರಾಜ್ಯಕ್ಕೆ ಅಡ್ಡಿ ಬಂದಿರುವ ಮತ್ತೊಂದು ಕಂಟಕವೆಂದರೆ


ಹಿರಿಯರ ವಿರೋಧ. ಇದಕ್ಕೆ ಕಾರಣ ಗೊತ್ತಿಲ್ಲ. ಯಾರಾದರೂ ಆಡಿದರೆ
ಸಾಕು, ಇವರ ಮೈ ಪರಚಿದಂತಾಗುತ್ತದೆ. ಸಾವಿರ ಚೇಳು ಕುಟುಕಿ
ದಂತಾಗುತ್ತದೆ. ಅವರ ಸುತ್ತಲೂ ಆಟದ ವಿರುದ್ಧ ಬಂಡಾಯವನ್ನೇ
ಎಬ್ಬಿಸುವರು. ಇಂತಹವರೇ ಅನೇಕರು ನಗರಪಿತೃಗಳಾಗುವರು. ಆಟದ
ಮೈದಾನಗಳನ್ನು ಉದ್ಯಾನವನಗಳನ್ನಾಗಿ ಮಾಡುವರು. ಆಟವಾಡುವವರಿಂದ
ಆಟದ ಮೈದಾನವನ್ನೇ ಕಸಿದು ಸೇಡಂ ತೀರಿಸಿಕೊಳ್ಳುವರು. ಇಂತಹವರ
ಮನಃಪರಿವರ್ತನೆಯಾಗುವಂತೆ ಪ್ರಯತ್ನಿಸಬೇಕು.

ಆಟಗಳಲ್ಲಿ ಅನೇಕ ವಿಧ. ಹೊಸಲು ದಾಟಿ ಆಡುವ ಆಟಗಳು;


ಹೊಸಲು. ದಾಟದೆ ಆಡುವ ಆಟಗಳು. ಎರಡನೇ ಪ್ರಕಾರದಲ್ಲಿ
ವ್ಯಾಯಾಮದ ಅಂಶ ಅತ್ಮಲ್ಪ. ಆದರೆ ಬುದ್ಧಿ, ಏಕಾಗ್ರತೆ, ಸ್ಮರಣ ಶಕ್ತಿ,
ಕೌಶಲ್ಯ ಇತ್ಮಾದಿ ಗುಣಗಳಿಗೆ ಪುಷ್ಟಿ ಕೊಡುವ ಸಾಮರ್ಥ, ಅವುಗಳಲ್ಲಿದೆ;
Recs ಹಿಡಿದು ಟೇಬಲ್‌ ಟೆನಿಸ್‌ ವರೆಗೆ.

ಮೊದಲನೆ ಪ್ರಕಾರದಲ್ಲಿ ಕಣ್ಣುಮುಚ್ಚಾಲೆ, ಕುಂಟುವ ಆಟ


ದಿಂದ ಹಿಡಿದು ಕುಸ್ತಿ, ಕುದುರೆ ಸವಾರಿವರೆಗೆ ಎಲ್ಲವೂ ಸೇರುತ್ತವೆ.
ಪ್ರತಿ ಆಟದಲ್ಲಿಯೂ ಪ್ರತ್ಯೇಕ ಗುಣವರ್ಧನೆ ಆಗುವುದು. ಸ್ವಭಾವಕ್ಕೆ
ತಕ್ಕಂತೆ, ಅರಿತವರ ಆದೇಶದಂತೆ, ಆವಶ ಕತೆಗಳಿಗೆ ಅನುಗುಣವಾಗುವಂತೆ,
ಉಪಕರಣಗಳ ಉಪಲಬ್ಧ ತೆಗೆ ಹೊಂದುವಂತೆ ಆಟಗಳನ್ನು ಆರಿಸಿಕೊಳ್ಳ,
ಬೇಕು.
ಈ.
ರ್‌
ಬಾಳಿನ ಜೀವಾಳ : ಆಟ ೭೧

ಸಮಾಜದ ಹಿತಚಿಂತಕರು ಇದರ ಬಗ್ಗೆ ಸದಾ ಯೋಜನೆಗಳನ್ನು ಹಾಕು


ತ್ತಿರಬೇಕು. ಸಮಾಜದ ದಿಕ್ಕನ್ನು ಬದಲಾಯಿಸಲು, ಅನಿಷ್ಟ ಗುಣಗಳನ್ನು
ನಿವಾರ ಕೆಮಾಡಲು ಆಟಗಳನ್ನು ಆರಿಸಿ ಬೇಕಾದ ದಿಕ್ಕಿನಲ್ಲಿ ಪ್ರೋತ್ಸಾಹ
ಕೊಡಬೇಕು.

ಸ್ವತಂತ್ರ ಸಮಾಜದಲ್ಲಿ ಸ್ವಾಭಿಮಾನ ಕೆರಳಿ ಪ್ರಕಟವಾಗುವ ಹೊರ


ರೂಪ ಆಟ, ವೇಷ, ಭಾಷೆ. ಅದರಿಂದ ಸಮಾಜನೌಕೆಗೆ ಬೇಕಾದ ದಿಕ್ಸೂಚಿ
ಯನ್ನು ನಾಡಿನ ಹಿತಚಿಂತಕರು ಕಂಡುಹಿಡಿಯಲಿ.

ಸಾಮಾನ್ಯವಾಗಿ ಹೊಸದಾಗಿ ಆಡಿದನಂತರ ಮೈಕ್ಕೆ ನೋವು ಬರು


ವುದು ಸಹಜ. , ಏಕೆಂದರೆ ನಿತ್ಯಜೀವನದಲ್ಲಿ ಉಪಯೋಗಿಸುವ ಮಾಂಸಖಂಡ
ಗಳ ಗುಂಪು ಬಹಳ ಕಡಿವೆ. ಆಟದಲ್ಲಿ ಎಲ್ಲ ಮಾಂಸಖಂಡಗಳೂ ಕೆಲಸ
ಮಾಡುವುದರಿಂದ ದುರ್ಬಲವಿದ್ದೆಡೆ ನೋವು ಕಾಣಿಸುವುದಂ. ಅದರಿಂದ
ಯಾರೂ ಅಧೀರರಾಗಬೇಕಾಗಿಲ್ಲ. ನೋವನ್ನು ಸಹಿಸಿ ಮತ್ತಷ್ಟು ಆಡುವುದೇ
ಅವುಗಳನ್ನು ಬಲಗೊಳಿಸುವ ಸೂಕ್ತ ಸಾಧನ. ಆಟದಿಂದ ಮುಕ್ತರಾಗುವುದು
ಉಪಾಯವೂ ಆಲ್ಲ, ಪರಿಹಾರವೂ ಅಲ್ಲ.

ಸಾಮಾನ್ಯವಾಗಿ ಒಬ್ಬರಿಗಿಂತ ಹೆಚ್ಚುಮಂದಿ ಆಡುವುದರಿಂದ, ಒಂಟಿ


ತನದ ಅಧೀರತೆ, ಅಸಹಾಯಕತೆಯನ್ನು ತೊಡೆದುಹಾಕಲು ಅದಕ್ಕಿಂತ
ಉತ್ತಮವಾದುದು ಬೇರೊಂದಿಲ್ಲ.

ಆಟವಾಡುವಾಗ ಆನಂದವನ್ನು ಅನುಭವಿಸಬೇಕಾದರೆ ಹೆಚ್ಚುಕಡಿಮೆ


ಒಂದೇ ವಯಸ್ಸಿನವರ ಜೊತೆಗೆ ಆಟವಾಡಬೇಕು. ಆಗಲೇ ಮುಕ್ತವಾಗಿ
ವ್ಯಕ್ತಿ ವ್ಯವಹರಿಸಬಲ್ಲ; ತನ್ನನ್ನು ತಾನು ವಿಕಾಸಮಾಡಿಕೊಳ್ಳಬಲ್ಲ. ತನ್ನ
ವಯಸ್ಸನ್ನು ಮಾರಿದ ಅಥವಾ ಕಡಿಮೆ ವಯಸ್ಸಿನವರ ಜೊತೆಗೆ ಆಡುವುದ
ರಿಂದ ಆನಂದವೂ ಲಭಿಸದು, ವಿಕಾಸವೂ ಆಗಲಾರದು. ಆಟದ ಆತುರ
೭೨ ಶರೀರ ಶಿಲ್ಪ

ಎಲ್ಲೆಡೆ ಹೆಚ್ಚಲಿ. "ನಾನೂ ಆಟವಾಡುವವ' ಎಂಬ ಅಭಿಮಾನದ ಹೇಳಿಕೆ


ಎಲ್ಲ ಕಡೆಗಳಿಂದ ಕೇಳಿಬರಲಿ. ಆಟವಾಡುವವನಿಗೆ ಮನೆಮನೆಗಳಿಂದ
ಪ್ರೋತ್ಸಾಹ ಸಿಗಲಿ.

ಉಸಿರನ್ನು ಉಪೇಕ್ಷೆ ಮಾಡುವವರು ಮಾತ್ರ ಆಟವನ್ನು ಅಲಕ್ಷ,


ಮಾಡಲಿ. ತಾಯಂದಿರು ಎಚ್ಚರಿಕೆ ವಹಿಸಲಿ. ದಿನಕ್ಕೊಂದು ಗಂಟೆಯಾದರೂ
ಮಕ್ಕಳು ಆಡಲು ವ್ಯವಸ್ಥೆ ಮಾಡಿಸಲಿ. ಅಥವಾ ಆಟವಾಡಿಸುವ ವ್ಯವಸ್ಥೆಗೆ
ಮುಕ್ತ ಮನಸ್ಸಿನಿಂದ ಮಕ್ಕಳನ್ನು ಒಪ್ಪಿಸಲಿ. ಮಕ್ಕಳನ್ನು ಚೆನ್ನಾಗಿ ಬೆಳೆಸಲು
ಆಹಾರ, ವಿದ್ಯೆಯ ಜೊತೆಗೆ ಆಟವೂ ಅನಿವಾರ್ಯ.

ಆಟದ ಆಟವೇ ಸಮಾಜದಲ್ಲಿ ನಿತ್ಯದ ಆಟವಾಗಲಿ.


ಗೆಲುವು-ಕಸುವು
ಎ ತಿ ಅತಿ ಗತೆ
೧೩ ಯಾರಿಗೆ ಎಷ್ಟು ?

ತೃಪ್ತ ಜೀವನಕ್ಕೆ ಬೇಕಾದ ಗೆಲುವು-ಕಸುವುಗಳನ್ನು ದೀರ್ಫ


ಕಾಲದವರೆಗೆ ಎಲ್ಲಾ ವಯಸ್ಸಿನಲ್ಲೂ ಉಳಿಸಿಕೊಂಡು ಬರಬೇಕೆಂಬುದು
ಪ್ರತಿಯೊಬ್ಬ ವ್ಯಕ್ತಿಯ ತೀವ್ರ ಬಯಕೆ. ಇದಕ್ಕಾಗಿ ಆರೋಗ್ಯ-ಆಹಾರ-
ವ್ಯಾಯಾಮಗಳ ಮೇಲೆ ಬರೆದ ಎಲ್ಲ ಕೈಪಿಡಿಗಳನ್ನು ತಿರುವಿಹಾಕಿದನಂತರವೂ
ವ್ಯಕ್ತಿಯ ಮೇಲೆ ಅವುಗಳಿಂದಾಗುವ ಅನಂತ ಪರಿಣಾಮಗಳನ್ನು, ಆಗು
ಹೋಗುಗಳನ್ನು, ಉಪಕಾರ-ಅಪಕಾರ-ವಿಕಾರಗಳನ್ನು ಗಣನೆಗೆ ತಂದುಕೊಂಡ
ನಂತರವೂ ಅನೇಕ ಭಿನ್ನಾಭಿಪ್ರಾಯಗಳು, ಪರಸ್ಪರ ವಿರುದ್ಧ
ತರ್ಕಗಳೇಳುವುದು ಸಹಜ. ಇವುಗಳ ಸುಳಿಯಲ್ಲಿ ಸಿಕ್ಕಿದ ವ್ಯಕ್ತಿ ಮಾರ್ಗ
ದರ್ಶನವಿಲ್ಲದೆ, ಮಾದರಿ ದೊರೆಯದೆ ನಿರಾಶನಾಗಿಯೇ ಉಳಿಯುತ್ತಾನೆ.

ಕೇವಲ ಇಂಜೆಕ್ಷನ್‌ ಚುಚ್ಚುವ. ವ್ಯಾಯಾಮವನ್ನೇ ಜೀವನವಿಡೀ


ಮಾಡಿರುವ ವೈದ್ಯ ರೋಗಿಗೆ “ನೀವು ಚೆನ್ನಾಗಿ ವ್ಯಾಯಾಮ ಮಾಡಬೇಕು”
ಎಂದು ಸಲಹೆ ಕೊಟ್ಟರೆ, ಸೂಚನೆ ಕೊಟ್ಟರೆ ಪರಿಣಾಮ ಆದೀತೆ? ಬೊಕ್ಕ
೭೬ ಶರೀರ ಶಿಲ್ಪ

ಲಾಲನೆ-ಪಾಲನೆ ಬಗ್ಗೆ ಉಪದೇಶ ನೀಡಿದಂತೆ


ತಲೆಯ ವ್ಯಕ್ತಿ ಕೂದಲಿನ
ಅದಂ.
ಮಲಗಿದರೆ ಉಚಿತವೋ, ಅನುಚಿತವೋ?
ಮಧ್ಯಾಹ್ನ ತುಸು ಕಾಲ
ಊಟದ ಸಮಯದಲ್ಲಿ ನೀರನ್ನು ಯಾವಾಗ ಕುಡಿಯಬೇಕು - ಮುಂಚೆಯೋ,
ಅನಂತರವೋ ಅಥವಾ ಮಧ್ಮದಲ್ಲೋ? ಆಪಾದಮಸ್ತಕ ತಣ್ಣೀರು ಸ್ನಾನ
ರ '
ಮಾಡಬೇಕೋ, ಕೂಡದೋ? ಈ ಎಲ್ಲ ಪ್ರಶ್ನೆಗಳಿಗೆ ಭಿನ್ನ ಭಿನ್ನ ಉತ್ತ

ಗಳನ್ನು ಕೇಳಿ, ಬೇಸತ್ತು ಇದರ ಗೋಜಿಗೆ ಹೋಗದೆ ತಮ್ಮ ಪಾಡಿಗ
ತಾವು, ತಮಗೆ ತೋಚಿದಂತೆ ಮಾಡುವ ಮಂದಿಯೇ ಅನೇಕ.
ಈ ರೀತಿ ಕಾಡುವ ಮತ್ತೊಂದು ಪ್ರಶ್ನೆ: ವ್ಮಾಯಾಮ ಎಷ್ಟು
ಮಾಡಬೇಕು? ಹೇಗೆ ಮಾಡಬೇಕು ? ಯಾವ ವಯಸ್ಸಿಗೆ ಎಷ್ಟು ಯುಕ್ತ?
ಗಂಡಸಿಗೆ ಯಾವುದು? ಹೆಂಗಸಿಗೆ ಯಾವುದು?
ಒಬ್ಬ ವೈದ್ಯ ತಮ್ಮ ರೋಗಿಗಳನೇಕರಿಗೆ: “ನೀವು ವ್ಯಾಯಾವಂ
ಮಾಡಿರಿ” ಎಂದ. ಒಬ್ಬ ಜಾಣರೋಗಿ ಪ್ರಶ್ನೆ ಕೇಳಿದ: “ಎಂತಹ
ವ್ಯಾಯಾಮ?” «ನಡಿಗೆ ಇತ್ಮಾದಿಯಿಂದ ಪ್ರಾರಂಭ ಮಾಡಿ” ಎಂದು
ಉತ್ತರ ಸಿಕ್ಕಿತು. ಮರುಪ್ರಶ್ನೆ : “ಎಷ್ಟು ಹೊತ್ತು? ಎಷ್ಟು ದೂರ ? ವೇಗ
ಏನು?” ವೈದ್ಯ ನಿರುತ್ತರನಾದ. ಅನಂತರ ತತ್ಕಾಲಕ್ಕೆ ಉತ್ತರ ನೀಡಿ
ಅದರ ಬಗ್ಗೆ ದೀರ್ಫ ಚಿಂತೆ ಮಾಡಹತ್ತಿದ. ಎಷ್ಟು? ಹೇಗೆ? ಯಾವಾಗ?
ಇವುಗಳಿಗೆ ಆತ ಉತ್ತರ ಕಂಡುಹಿಡಿಯತೊಡಗಿದ.
ಆ ವೈದ್ಯನಿಗೆ ಒಳ್ಳೆಯ ಅವಕಾಶ . ದೊರೆಯಿತು. ಅಮೆರಿಕ
ಸರ್ಕಾರದಿಂದ ವ್ಮಾಯಾಮದ ಬಗ್ಗೆ ಸಂಶೋಧನೆ ನಡೆಸಲ್ಮುಅವಕಾಶ ಸಿಕ್ಕಿತು.
ಸರ್ಕಾರದ ವಾಯಂಪಡೆಯಲ್ಲಿ ಈತನ ಸೇರ್ಪಡೆಯಾಯಿತು. ಅತ್ಮಂತ ಆಧು
ನಿಕವಾದ ಯಂತ್ರೋಪಕರಣಗಳನ್ನು ಒದಗಿಸಲಾಯಿತು. ಪ್ರಯೋಗಕ್ಕೆ
ಮುಖ್ಯ ಸಾಮಗ್ರಿಯಾದ ಹಿಂಡುಹಿಂಡು ಸೈನಿಕರನ್ನು ನೀಡಲಾಯಿತು.
ಸುಮಾರು ೫೦೦೦ ಜನರ ಮೇಲೆ ಪ್ರಯೋಗ ನಡೆಯಿತು,
ಚುರುಕಾಗಿರುವವರು, ಆಲಸಿಗಳು, ರೋಗಿಗಳು, ನಿರೋಗಿಗಳು, ಗಂಡಸರು,
-ರು
“ಹೆಂಗಸ ಎಲ್ಲರ ಮೇಲೆ ಪ್ರಯೋಗ ನಡೆಯಿತು. ಈ ಪ್ರಯೋಗದ
ಯಾರಿಗೆ ಎಷ್ಟು? ೭೬
ಆಧಾರದ ಮೇಲೆ ವ್ಯಾಯಾಮದಿಂದ ಅಥವಾ ಅದರ ಅಭಾವದಿಂದ ಆಗುವ:
ಪರಿಣಾಮಗಳ ಬಗ್ಗೆ ವಿವರವಾಗಿ ಆರಿತುಕೊಳ್ಳೆಲಾಯಿತು.

ಹದಗೊಳಿಸಿದ, ಸಸ್ಮ ಶರೀರದ ಮುಖ್ಯವಾದ ಲಕ್ಷಣ ನಿರಂತರ ಕರ್ಮ


ಶಕ್ತಿ; ಯಾವುದೇ ಒಂದು ಕೆಲಸವನ್ನು ದೀರ್ಫಕಾಲದವರೆಗೆ ಅನಾಯಾಸವಾಗಿ
ಮಾಡುವುದು. ಈ ರೀತಿ ಮಾಡಲು ಇಡೀ ಶರೀರ, ಹೃದಯ, ಶ್ವಾಸಕೋಶ
ರಕ್ತಪರಿಕ್ರಮ, ಮತ್ತಿತರ ಅಂಗಗಳು ಹಾಗೂ ಸ್ನಾಯುಗಳು
ನೆರವಾಗಬೇಕು. ಇದೆಲ್ಲಕ್ಕೂ ಮೂಲ ಆಮ್ಲಜನಕ. ಇನ್ನೂ ಸುಲಭವಾಗಿ
ಹೇಳುವುದಾದರೆ, ಶರೀರದ ಯಾವುದೇ ಚಟುವಟಿಕೆಗಾಗಲಿ _ ಉಸಿರಾಟ,
ಆಹಾರವನ್ನು ಅರಗಿಸುವುದು, ಹೃದಯದ ಮಿಡಿತ- ಶಕ್ತಿ ಬೇಕು. ಶರೀರವು
ಆಹಾರವನ್ನು ಸುಡುವುದರ ಮೂಲಕ ಈ ಶಕ್ತಿಯನ್ನು ಉತ್ಪತ್ತಿಮಾಡುತ್ತದೆ.
ಈ ರೀತಿ ಸುಡಲು ಸಾಧನ ಆಮ್ಲಜನಕ. ಶರೀರ ಆಹಾರವನ್ನು ಕೂಡಿಡ
ಬಹುದು. ಆದರೆ ಆಮ್ಲಜನಕವನ್ನು ಕೂಡಿಡಲು ಸಾಧ್ಯವಿಲ್ಲ. ಅದಕ್ಕಾಗಿ
ಪ್ರತಿ ಕ್ಷಣವೂ ಈ ಶಕ್ತಿಯ ಸರಬರಾಜನ್ನು ಅಖಂಡವಾಗಿಡಲು ನಾವು
ಉಸಿರಾಡುತ್ತೇವೆ. ಇಲ್ಲದ್ದಿದ್ದಲ್ಲಿ ಹೃದಯದ ಬಡಿತವೂ ಇಲ್ಲ, ಬುದ್ಧಿಯ
J 4 ರ೯ವೂ ಇಲ್ಲ - ಎಲ್ಲ ಕ್ರಿಯೆಗಳೂ ನಿಂತುಹೋಗುವುವು.
ಆದಕ್ಕಾಗಿ ಅಧಿಕಾಧಿಕ ಆಮ್ಲಜನಕವನ್ನು ಹೀರಿ ಅದನ್ನು ಪ್ರಕ್ರಿಯೆಗೆ
ಒಳಪಡಿಸುವ ವ್ಯಾಯಾಮವೇ ಉತ್ತಮವಾದದ್ದು.
ಶರೀರಕ್ಕೆ ತಕ್ಕ ವ್ಯಾಯಾಮವು ಯೋಗ್ಯ ಪ್ರಮಾಣದಲ್ಲಿ ಸಿಕ್ಕುತ್ತಾ
ಹೋದರೆ ಕೆಳಕಂಡ ಉತ್ತಮ ಸಂಸ್ಕಾರಗಳು ಅದರ ಮೇಲೆ ಆಗುವುವು:
೧. ಶ್ವಾಸಕೋಶಗಳು ಕಡಿಮೆ ಶ್ರಮದಲ್ಲಿ ಹೆಚ್ಚು ಗಾಳಿಯಿಂದ ಹಚ್ಚು
ರಕ್ತವನ್ನು ಶುದ್ಧೀಕರಿಸುವುವು.
೨. ಹೃದಯ ಹೆಚ್ಚು ಶಕ್ತಿಶಾಲಿಯಾಗುವುದು. ಒಂದು ಬಡಿತಕ್ಕೆ ಹೆಚ್ಚು
ರಕ್ತವನ್ನು ಹೊರನೂಕುವುದು. ಅವಶ್ಯಕ ಬಡಿತಗಳ ಸಂಖ್ಯೆಯನ್ನು
ಇಳಿಸುವುದು. ಅದಕ್ಕೋಸ್ಕರ ಹದಗೊಳಿಸಿದ ವ್ಯಕ್ತಿಯಲ್ಲಿ ಸಾಮಾನ್ಯ ವ್ಯಕ್ತಿ
ಗಿಂತ ನಿಮಿಷಕ್ಕೆ ೨೦ ಹೃದಯಬಡಿತಗಳು ಕಡಿಮೆ ಇರುವ ಸಂಭವವುಂಟು.

ಆ ಟೆ ಟ್ಟ ಹ್‌ ಚಾ . ತ
೭೮ ಶರೀರ ಶಿಲ್ಪ

ಈ ರೀತಿ ಒಂದು ರಾತ್ರಿಗೆ ಸುಮಾರು ೧೦,೦೦೦ ಬಡಿತಗಳು ಉಳಿತಾಯ


ವಾಗುವುಪು. ಅಂದರೆ ದಿನಕ್ಕೆ ೩೦,೦೦೦ ಬಡಿತಗಳು. ಕಡಿಮೆಯಾದಂತೆ.
೩. ರಕ್ತನಾಳಗಳ ಗಾತ್ರ ಮತ್ತು ಸಂಖ್ಯೆ ಹೆಚ್ಚಾಗುವುದು ಹಾಗೂ
ಪ್ರವಹಿಸುವ ರಕ್ತದ ಪ್ರಮಾಣ ಹೆಚ್ಚುವುದು; ಕೆಲವು ಬಾರಿ ಶೇಕಡ ೨೦
ಭಾಗದಷ್ಟು.
೪. ಸ್ನಾಯುಗಳ ಕ್ಷಮತೆ ಹೆಚ್ಚುವುದು.
ಯೋಗ್ಯ ಪ್ರಮಾಣ: ಓಡುವುದು, ನಡೆಯುವುದು, ನಿಂತಲ್ಲೇ
ಓಡುವುದು, ಸೈಕಲ್‌ ತುಳಿಯುವುದು ಮತ್ತು ಈಜುವುದು - ಈ ಎಲ್ಲ
ವ್ಯಾಯಾಮಗಳು ಹೆಚ್ಚುಹೆಚ್ಚು ಆಮ್ಲಜನಕವನ್ನು ಹೀರುವುವು. ಇವುಗಳನ್ನು
ಸಾಕಷ್ಟು ದೀರ್ಫ್ಥಕಾಲ ಮಾಡಿದಾಗ ಮಾತ್ರ ಶರೀರದ ಮೇಲೆ ಉತ್ತಮ
ಸಂಸ್ಕಾರಗಳು ಆಗುವುವು.
ಈ “ಸಾಕಷ್ಟು ದೀರ್ಫಕಾಲ' ಎಷ್ಟು?
ಮೇಲ್ಕಂಡ ವೈದ್ಯರ ಪ್ರಯೋಗದ ಪ್ರಕಾರ, ಹೃದಯದ ಬಡಿತ
ವನ್ನು ನಿಮಿಷಕ್ಕೆ ೧೫೦ ಕ್ಕೆ ಏರಿಸುವ ಕ್ಷಮತೆ ಇರುವ ಬಿರುಸಿನ ವ್ಯಾಯಾಮ
ವನ್ನು ಆರಂಭಿಸಿದ ಐದು ನಿಮಿಷಗಳನಂತರ ಈ ಸತ್ಪರಿಣಾಮ ಪ್ರಾರಂಭ
ವಾಗುವುದು ಹಾಗೂ ವ್ಯಾಯಾಮ ನಡೆಯುತ್ತಿರುವವರೆಗೆ ಈ ಪರಿಣಾಮ
ಇರುವುದು.
ಆದರೆ ವ್ಯಾಯಾಮ ಮಾಡುತ್ತಿರುವಾಗ ಬಡಿತಗಳನ್ನು ಲೆಕ್ಕ
ಹಾಕುವುದು ಹೇಗೆ? ಮೇಲಿನ ಪ್ರಯೋಗದ ವೈಶಿಷ್ಟ್ಯವೇ ಇದು. ಇದೆಲ್ಲ
ಲೆಕ್ಕಾಚಾರವನ್ನೂ ಮಾಡಲಾಗಿದೆ. ಅನೇಕ ವಿಧದ ವ್ಯಾಯಾಮಗಳನ್ನು
ಆರಿಸಿ ಅವು ಬೇಡುವ ಆಮ್ಲಜನಕದ ಆಧಾರದ ಮೇಲೆ ವರ್ಗೀಕರಣ
ಮಾಡಲಾಗಿದೆ. ಅವುಗಳ ಬೇಡಿಕೆಯನ್ನು ಅಳೆಯಲಾಗಿದೆ. ಪರಿಮಾಣಗಳನ್ನು
ನಿಗದಿ ಮಾಡಲಾಗಿದೆ. ಅವುಗಳಿಗೆ ಅಂಕಗಳನ್ನು ಕೊಡಲಾಗಿದೆ.
ಸಾಧಾರಣ ವ್ಯಕ್ತಿ (ಪುರುಷರು _ ಸ್ತ್ರೀಯರು) ವಾರಕ್ಕೆ ಕನಿಷ್ಠ ೩೦
ಅಂಕಗಳನ್ನು ಗಳಿಸುವಷ್ಟಾದರೂ ವ್ಯಾಯಾಮ ಪಡೆಯಬೇಕು. ಈ ಮಟ ಕ
ಮುಟ್ಟಿದ ಅನಂತರ ಆದೇ ಸ್ಥಿತಿ ಉಳಿಸಿಕೊಳ ಲು ಯತ್ನಿಸಬೇಕು.
ಯಾರಿಗೆ ಎಷ್ಟು? ೭೯
ವ್ಮಾಯಾಮ ಪ್ರಾರಂಭಿಸುವ ಮುನ್ನ ನಿಮ್ಮ ಈಗಿನ ಮಟ್ಟ
ಯಾವುದು ಎಂಬುದನ್ನು ಅರಿಯಬೇಕು. ಅಡಕ್ಕಾಗಿ ಈ ಕೆಳಗಿನ ಪರೀಕ್ಷೆ
ಮಾಡಿಕೊಳಿ A

ಸಾಧಾರಣವಾಗಿ ವಿಶೇಷ ಶ್ರಮ ಇಲ್ಲದೆ ೧೨ ನಿಮಿಷಗಳಲ್ಲಿ ನೀವು


ಓಡುತ್ತಾ ಎಷ್ಟು ದೂರ ಸವೆಸಬಲ್ಲಿರಿ? ಇದೇ ಪರೀಕ್ಷೆ. ಓಡುವಾಗ
ಸುಸ್ತಾದರೆ ಸ್ವಲ್ಪ ನಡೆಯುತ್ತಾ ಮುಂದೆ ಹೋಗಿ. ಶ್ವಾಸ ಕೂಡಿಬಂದ
ಅನಂತರ ಮತ್ತೆ ಓಡಿ. ಆದರೆ ೧೨ ನಿಮಿಷಗಳು ಪೂರೈಸುವವರೆಗೆ
ಎಲ್ಲಿಯೂ ನಿಲ್ಲಬೇಡಿ. ಬೇಕಾದರೆ ೧೨ ನಿಮಿಷ ಮುಗಿದದ್ದನ್ನು ತಿಳಿಸಲು
ನಿಮ್ಮ ಮಿತ್ರ ಸೈಕಲ್‌ ಮೇಲೆ ಬರಲಿ. ಅನಂತರ ನಿಮ್ಮ ಮಟ್ಟ ನೋಡಿಕೊಳ್ಳಿ.

೧೨ ನಿಮಿಷಗಳಲ್ಲಿ ಸವೆಸುವ ದೂರ ಅರ್ಹತೆ


೧. ಒಂದುವೆಮೈ ಲಿಗಿಂತ ಕಡಿಮೆ. ತೀರ ಕಡಿಮೆ
ಪಿ ಇಡದ. ಒಂದೂಕಾಲು: ಮೈಲಿ ಕಡಿಮೆ
೩. ೧ ೧/೪ರಿಂದ೧ ೧/೨ ಮೈಲಿ ಪರವಾಗಿಲ್ಲ
೪. ೧ ೧/೨ ಇಂದ ೧ ೩/೪ ಮೈಲಿ ತೃಪ್ತಿಕರ1
೫. ೧ ೩/೪ ರಿಂದ ೨ ಮೈಲಿ ಸೊಗಸು
1 (೩೬ ವರ್ಷ ದಾಟಿದ ಮೇಲೆ ಪುರುಷರಿಗೆ ೧.೪ ಮೈಲಿ;
ಸ್ತ್ರೀಯರಿಗೆ ೧.೩ ಮೈಲಿ ತೃಪ್ತಿಕರ.)
ಮೊದಲನೇ ಮೂರು ಗುಂಪಿನಲ್ಲಿದ್ದರೆ ನೀವು ಪರೀಕ್ಷೆಯಲ್ಲಿ ಅನುತ್ತೀ
ರ್ಣರು. ಆದರೆ ನಿರಾಶರಾಗಬೇಡಿ. ಪ್ರಯತ್ನ ಮಾಡಿ. ನೀವು ಬಯಸಿ.
ದಾಗ ಮತ್ತೆ ಪರೀಕ್ಷೆ ಮಾಡಿಕೊಳ್ಳಿಬಹಂದು. ಈ ವರ್ಗೀಕರಣ ಬಹಳ'
ಮುಖ್ಯವಾದದ್ದು. ನಿಮಗೆ ತರಬೇತಿ ಎಷ್ಟೆಷ್ಟು ಎಂಬುದನ್ನು ಇದರಿಂದ
ಲೆಕ್ಕ ಹಾಕಬಹುದು. ಉತ್ತೀರ್ಣರಾಗಲು "ಅಂದರೆ ೪, ೫ನೇ ಗುಂಪಿಗೆ
ಸೇರಲು ನಿಮೆಗೆ ಬೇಕಾಗುವ ಅವಧಿ ಮೊದಲನೆ ಗುಂಪಿಗೆ ೧೬ ವಾರಗಳು.
೨ನೇ ಗುಂಪು - ೧೩ ವಾರಗಳು, ೩ನೇ ಗುಂಪು - ೧೦ ವಾರಗಳು.
೮೦ ಶರೀರ ಶಿಲ್ಪ

ಮೇಲಿನ ಪರೀಕ್ಷೆ ಬಿಟ್ಟುಬಿಡುವುದಾದರೆ ನೀವು ಮೊದಲನೇ ಗುಂಪು


ಎಂದು ತಿಳಿದು ತರಬೇತಿ ಆರಂಭಮಾಡಿರಿ.
ನಾಲ್ಕು, ಐದನೇ ಗುಂಪಿನಲ್ಲಿದ್ದರೆ ನೀವು ಅರ್ಹರು. ೩೦ ಅಂಕಗಳಿಗೆ
ಬೇಕಾಗುವ ವ್ಮಾಯಾಮ ಮುಂದಂವರಿಸಿ - ಈ ಅರ್ಹತೆ ಉಳಿಸಿಕೊಳ ಲು.

ಓಟ
ಮೈಲಿಗಳು ೧ ೧ ೧ ೧/೨ *' ವಿ
ನಿಮಿಷಗಳು ೮ ೬:೩೦ ೧೨ ೧೬
ವಾರದಲ್ಲಿ ಎಷ್ಟು ಬಾರಿ ೬ ೫ ೪ ೩
ಅಂಕಗಳು ೩೦ - ೩೦ ೩೦ ೩೦
ನಾಲ್ಕು, ಐದನೇ ಗುಂ&ಿನಲ್ಲಿರುವವರು ತಮ್ಮ ಅರ್ಹತೆಯನ್ನು ಉಳಿಸಿ
ಕೊಳ್ಳಲು ಹಾ ಮಾಡುತ್ತಿರಬೇಕು. ಮೇಲಿನ ಪಟ್ಟಿಯ ಪ್ರಕಾರ
೩೦ ಅಂಕಗಳನ್ನು ಪಡೆಯಲು ವಾರದಲ್ಲಿ ೬ ಬಾರಿ ಮಾಡುವವರು ೧ ಮೈಲಿ :
ಯನ್ನು ೮ ನಿಮಿಷಗಳಲ್ಲಿ ಓಡಬೇಕು. ವಾರೆದಲ್ಲಿ ೫, ೪, ೩ ಬಾರಿ
ವ್ಯಾಯಾಮ ಮಾಡುವವರು ಎಷೆಷ್ಟೆಷ್ಟು ಮೈಲಿ ದೂರವನ್ನು ಎಷ್ಟು ನಿಮಿಷ
ಗಳಲ್ಲಿಓದಬೇಕು ಎಂಬುದನ್ನು ಅರಿತುಕೊಳ್ಳ
ಳ್ಳ ಬೇಕು.
ನಡೆಯುವವರಿಗೆ, ನಿಂತಲ್ಲೇ ಓಡುವವರಿಗೆ, ಸೈಕಲ್‌ ತುಳಿಯುವವರಿಗೆ,
ಈಜುವವರಿಗೆ ಬೇರೆಬೇರೆ ಪಟ್ಟಿಗಳಿವೆ.
ಜೋಕೆ, ತರಬೇತಿ ಪ್ರಾರಂಭ ಆದಕೂಡಲೇ ಮೈಕ್ಕೆ ನೋವು ಆರಂಭ
ವಾಗುವುದು. ತರಬೇತಿ ಯೋಗ್ಯವಾಗಿ ಪ್ರಾರಂಭವಾಗಿರುವುದರ ಮುನ್ಸೂ
ಚನೆ ಅದಂ. ಉಪಯೋಗದಲ್ಲಿರದ ಸ್ನಾಯುಗಳನ್ನು ಉಪಯೋಗಿಸಲು
ಉದ್ಯುಕ್ತರಾಗಿರುವಿರಿ ಎಂಬುದೇ ನೋವಿಗೆ ಕಾರಣ. ಅರ್ಹತೆಯ ಸುಳ್ಳು
ಕನಸುಗಳನ್ನು ಇಟ್ಟುಕೊಂಡು ನೇರವಾಗಿ ಮೊದಲನೇ ಗುಂಪಿನ ವ್ಮಾಯಾ
ಮಕ್ಕೆ ಕೈಹಚ್ಚಬೇಡಿ. ಎಲ್ಲ ಓಟದ ಶಿಕ್ಷಣವೂ ನಡಿಗೆಯಿಂದಲೇ ಆರಂಭ
ವಾಗಿ ದಿನೇದಿನೇ ಏರುತ್ತಾ ಹೋಗಲಿ. ಅನಂತರ ಕ್ರಮಕ್ಕೆ ತಕ್ಕಂತೆ
ಅಭ್ಯಾಸ ನಡೆಯಲಿ. ಅದು ಪರಿಣಾಮಕಾರಿ.
ಯಾರಿಗೆ ಎಷ್ಟು? ' ೮೧

ಒಮ್ಮೆ ಸುಸ್ಥಿತಿಯನ್ನು ಗಳಿಸಿದನಂತರ ಅದೇ ಸ್ಥಿತಿಯನ್ನು ಕಾಪಾಡಿ


ಕೊಳ ಬೇಕು, ತಗ್ಗಿಸಬಾರದು. ಪ್ರತಿ ವಾರವೂ ೩೦ ಅಂಕಗಳಷ್ಟು
ವ್ಯಾಯಾಮ ಮಾಡುತ್ತಾ ಹೋಗಿ. ಇಷ್ಟು ಮಾಡಿದರೆ ನಿಮಗೆ ವೈಜ್ಞಾ
ನಿಕ ಕನಿಷ್ಠ ಪ್ರಮಾಣದ ವ್ಯಾಯಾಮ ದೊರಕಿದೆ ಎಂದು ವಿಶ್ವಾಸದಿಂದಿರ
ಬಹುದು. ಈ ಅಳತೆ ೧೦ ವರ್ಷದ ಮೇಲ್ಲಟ್ಟವರಿಗೆಲ್ಲಾ ಅನ್ವಯಿಸು
ವುದು. ತರುಣರಿಗೆ ವಾರಕ್ಕೆ ೫೦ ಅಂಕ ಉಚಿತವಾದದ್ದು. ತೂಕ ಜಾಸ್ತಿ
ಇರುವವರೂ ೩೦ ಅಂಕ ಪಡೆಯಬೇಕು ಮತ್ತು ಕಡಿಮೆ ಆಹಾರ ಸೇವಿಸ
ಬೇಕು. ನೆಗೆತ, ಕುಣಿತ, ಕ್ರೀಡೆಗಳಲ್ಲಿ ತಲ್ಲೀನರಾದವರಿಗೆ ವಾರಕ್ಕೆ ೫೦ ಅಂಕ
ಗಳು ಅವಶ್ಶಕ. ಬಾಕ್ಸಿಂಗ್‌ ಮತ್ತು ಕಾಲ್ವೆಂಡು ಆಡುವವರಿಗೆ ವಾರಕ್ಕೆ
೧೦೦ ಅಂಕಗಳು. ಅತಿ ದೂರದ ಓಟಗಾರರಿಗೆ ವಾರಕ್ಕೆ ೫೦೦ ಅಂಕಗಳು
ಅನಿವಾರ್ಯ. ಮಹಿಳೆಯರಿಗೆ ವಾರಕ್ಕೆ ೨೫ ರಿಂದ ೩೦ ಅಂಕಗಳು.

ಮೇಲಿನೆಲ್ಲ ಪರಿಣಾಮಗಳಲ್ಲಿ ಹೃದಯದ ಮೇಲೆ ಪರಿಣಾಮ ತಿಲಕ


ಪ್ರಾಯವಾದದ್ದು. ಇದೊಂದು ವಿಚಿತ್ರ ಯಂತ್ರ. ಕಡಿಮೆ ಕೆಲಸ
ಕೊಟ್ಟಷ್ಟೂ ವೇಗವಾಗಿ ಬಡಿಯುತ್ತದೆ ಮತ್ತು ದಕ್ಷತೆ ಕಡಿಮೆ ಆಗುತ್ತದೆ.
ಹದಗೊಳಿಸಿದ ವ್ಯಕ್ತಿಯಲ್ಲಿ ನಿಮಿಷಕ್ಕೆ ೬೦ ಬಡಿತ ಇರುತ್ತದೆ. ಸಾಮಾನ್ಮ
ವ್ಯಕ್ತಿಗೆ ೮೦ ಇರುತ್ತದೆ.
೫ ನಿಮಿಷ ಸುಮ್ಮನೆ ಕುಳಿತಿದ್ದು ನಿಮ್ಮ ಬಡಿತ ಅಳೆಯಿರಿ. ೮೦
ದಾಟಿದರೆ ನಿಮ್ಮ ಸ್ಥಿತಿ ಹದವಾಗಿಲ್ಲ. ವ್ಯಾಯಾಮ ಮಾಡಿ ದಿನಕ್ಕೆ
೨೦,೦೦೦ - ೩೦,೦೦೦ ದವರೆಗೆ ಬಡಿತಗಳನ್ನು ಉಳಿತಾಯ ಮಾಡಿ. ಪ್ರಾರಂಭ
ದಲ್ಲಿ ಕಷ್ಟವಾಗಬಹುದು. ಬರಬರುತ್ತಾ ಅಗತ್ಯ ವ್ಯಾಯಾಮವನ್ನು
ಆಯಾಸವಿಲ್ಲದೆ ಮಾಡುವ ಅಭ್ಯಾಸ ಬರಂವುದು.
ದಿನದ ಯಾವುದೇ ಸಮಯ ವ್ಯಾಯಾಮದ ಸಮಯ. ಊಟ ಆಂ
ತ್ರಿದ್ದಂತೆಯೇ ಮಾಡಬಾರದು. ವ್ಯಾಯಾಮ ಆದ ಕೂಡಲೇ ನಿದ್ರಿಸ
ಬಾರದು. ಒಂದಂ ಗಂಟೆ ಬಿಟ್ಟು ನಿದ್ರಿಸಬಹುದು. ಊಟ ಆದ ಮೇಲೆ
ಎರಡು ಗಂಟೆ ಬಿಟ್ಟ ವ್ಯಾಯಾಮ ಮಾಡಬಹಂದು;
೬)
೮೨ ಶರೀರ ಶಿಲ್ಪ

ಕೆಲವೊಮ್ಮೆ ಅಧೀರರಾಗುವ ಸಂಭವ ಇದೆ. ಇಷ್ಟೆಲ್ಲಾ ಒದ್ದಾಟ


ಏಕೆ ಪ್ರಾರಂಭ ಮಾಡಿದೆ ಎಂದು ಪ್ರಶ್ನೆ ಏಳಬಹುದು. ಚಿಂತೆ ಮಾಡಬೇಡಿ.
ಪ್ರಯತ್ನವನ್ನು ಮುಂದುವರಿಸಿ. ಚೈತನ್ಯ ಮೂಡಿಬರುವುದು. ಗೆಲುವು-
ಕಸುವು ನಿಮ್ಮ ಪಾಲಿನದಾಗುವುದು. ಮಿಕ್ಕವರಿಗೆ ಮಾದರಿ ಆಗುವಿರಿ.
ಮೇಲಿನ ವ್ಯಾಯಾಮಗಳಲ್ಲಿ ಎಲ್ಲಕ್ಕಿಂತ ಸೊಗಸಾದದ್ದು ಓಟ.
ಶೀಘ್ರವಾಗಿ, ಖರ್ಚಿಲ್ಲದೆ ಮಾಡುವ ನಿಶ್ಚಿತ ಪರಿಣಾಮದ ವ್ಮಾಯಾವ,
ಕೈಕಾಲುಗಳಿಗೆ ವ್ಯಾಯಾಮ. ಶರೀರದ ಎಲ್ಲ ಸ್ನಾಯುಗಳ ಗುಂಪುಗಳೂ
ಗಟ್ಟಿಯಾಗುವುವು; ವಿಶೇಷವಾಗಿ ಉದರದ ಸ್ನಾಯುಗಳು. ಒಂಟಿಯಾಗಿ
ಮಾಡಬಹುದು, ಜಂಟಿಯಾಗಿಯೂ ಮಾಡಬಹುದು.
ನಡಿಗೆ ಓಟಕ್ಕಿಂತ ಕಡಿಮೆ ಶ್ರೇಣಿಯದು. ಹೆಚ್ಚು ಸಮಯ
ಹಿಡಿಯುವುದು; ಆದರೂ ಪರಿಣಾಮಕಾರಿ. ಇದರ ವೈಶಿಷ್ಟ್ಯ ಎಂದರೆ.
ಯಾರು ಬೇಕಾದರೂ ಯಾವುದೇ ಸಮಯದಲ್ಲಾದರೂ ಮಾಡಬಹುದು.
ವ್ಮಾಯಾಮದಂತೆಯೂ ಕಾಣಿಸುವುದಿಲ್ಲ.
ನಿಂತಲ್ಲೇ ಓಟ ಕಳಪೆ ಅಲ್ಲ. ಮಳೆಗಾಲದಲ್ಲಿ ವಿಶೇಷ ಚಳಿ ಇರುವೆಡೆ
ಮಾಡಬಹುದು. ಎಡಗಾಲು ಕೆಳಗೆ ಬಂದಾಗ ಎಣಿಸುತ್ತಾ ಹೋಗಿ.
ಪಾದಗಳನ್ನು ಸುಮಾರು ೬ರಿಂದ ೮ ಇಂಚು ಮೇಲೆತ್ತಿ.
ಸೈಕಲ್‌ ಸವಾರಿಗೆ ಸೈಕಲ್‌ ಬೇಕು. ದಾರಿ, ವಾತಾವರಣ ಹಿತವಾಗಿರ
ಬೇಕು. ಇದರಿಂದ ಕಾಲುಗಳಿಗೆ ಪೃಷ್ಠಗಳಿಗೆ ವಿಶೇಷ ವ್ಯಾಯಾಮ.
ಈಜಿನಿಂದ ಶರೀರದ ಎಲ್ಲ ಸ್ನಾಯುಗಳಿಗೂ ವ್ಯಾಯಾಮ ಆಗುವುದು;
ಆದರೆ ಓಟದಷ್ಟು ಆಗುವುದಿಲ್ಲ. ಉದರದ ಸ್ನಾಯುಗಳ ಬಗ್ಗೆಯೂ ಅಷ್ಟೇ.
ಈಜಿನಲ್ಲಿ "ಕ್ರಾಲ್‌? ನಿಮ್ಮ ಬಳಕೆಯಲ್ಲಿದ್ದರೆ “ಬ್ರೆಸ್ಟ್‌ ಸ್ಟೋಕ್‌? *ಬ್ಮಾಕ್‌
ಸ್ಟ್ರೋಕ್‌'ಗಳಲ್ಲಿ ಕಡಿಮೆ ವ್ಮಾಯಾಮ; "ಬಟರ್‌ಫ್ಲೈ'ನಲ್ಲಿ ಹೆಚ್ಚು ಶ್ರಮ.
ವಿಶೇಷ ಸೂಚನೆ: ಇವುಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯ
ಲಿಚ್ಛಿಸುವವರು ಬೆಂಗಳೂರಿನಲ್ಲಿರುವ “"ರಾಷೊ ್ರೀತ್ಮಾನ ಶಾರೀರಿಕ ಶಿಕ್ಷಾ
ಕೇಂದ್ರ'ಕ್ಕೆ ಬರೆದು ತಿಳಿದುಕೊಳ್ಳಬಹುದು. ಕೇಂದ್ರದ ವಿಳಾಸ: ೩೬ನೇ
ಅಡ್ಡರಸ್ತೆ, ೪ನೇ ಬ್ಲಾಕ್‌, ಜಯನಗರ, ಬೆಂಗಳೂರು-೧0.
೧೪ ಕ ವಾಕಿಂಗ್‌ ಹೋಗೋಣ ಬನ್ನಿ

ತಾಂತ್ರಿಕ ಯುಗದ ಇಂದಿನ ಆಧುನಿಕ ಜೀವನವು ಮಾನವನನ್ನು ದಿನೇ


ದಿನೇ ಅನೇಕ ಚಲನವಲನಗಳಿಂದ ತಪ್ಪಿಸಿ “ರಕ್ಷಿಸುತ್ತಿದೆ'.. ಸ್ವತಶ್ಚಲಿ
ಕೈಗಾರಿಕೋದ್ಕಮಗಳು, ಟ್ರ್ಮ್ಮಾಕ್ಟರುಗಳಂ, ಅಗೆತದ ಯಂತ್ರಗಳು, ಕಸ
ಗಂಡಿಸುವುದಕ್ಕೂ ಯಂತ್ರಗಳು
- ಇವುಗಳಿಂದ ನಮ್ಮ ಕೈ, ಎದೆ, ಹೊಟ್ಟೆ,
ಬೆನ್ನು ಇತ್ಮಾದಿಗಳ ಮಾಂಸಖಂಡಗಳ ಚಟುವಟಿಕೆ ತೀರ ಕಡಿಮೆಯಾಗಿದೆ.
ಮೋಟಾರುಕಾರುಗಳು, ಬಸ್ಸುಗಳು, ಸ್ಕೂಟರುಗಳ ಸೌಕರ್ಯದಿಂದ ಮಾನ
ವನ ನಡಿಗೆಯೂ ಬಹುಮಟ್ಟಿಗೆ ಕಡಿಮೆಯಾಗಿದೆ.
ಇಂದಿನ ನಿಷ್ಕ್ರಿಯ ಜೀವನದಲ್ಲಿ ವಯಸ್ಕರು ದಿನವೂ ಎರಡು ಮೂರು
ಕಿಲೋಮಾಟರು ದೂರ ನಡೆಯುತ್ತಾರೆ. ಅಂದರೆ ವರ್ಷಕ್ಕೆ ೧,೦೦೦
ಕಿಲೋಮಾಟರು ದೂರವಾಯಿತು. ೩೫-೪೦ ವರ್ಷಗಳಲ್ಲಿ ಪ್ರಪಂಚವನ್ನು
ಸುತ್ತುಹಾಕುವಷ್ಟು ದೂರ ನಡೆದಂತೆ ಆಯಿತು. ಇಷ್ಟು ದೂರವನ್ನು
ಸರಿಯಾಗಿ ನಡೆದ ಪಕ್ಷದಲ್ಲಿ ಎಷ್ಟು ಪ್ರಯೋಜನಕಾರಿಯಾದೀತೆಂದು ಕಲ್ಪಿಸಿ
ಕೊಳ್ಳುವುದು ಲಾಭಕರವಾದೀತು.
೮೪ ಶರೀರ ಶಿಲ್ಪ

ನೀವು ಹೇಗೆ 'ನಡೆಯುತ್ತೀರಿ ಎಂಬುದನ್ನು ಆಲೋಚಿಸಲು ನೀವೆಂದಾ


ದರೂ ಪ್ರಯತ್ನಿಸಿದ್ದೀರಾ ? ನೀವು ಹೇಗೆ ಮುಂದಡಿ ಇಡುತ್ತೀರಿ, ಮೊಣ
ಕಾಲನ್ನು ಹೇಗೆ ಬಗ್ಗಿ ಸುತ್ತೀರಿ, ಭೂಮಿಯ ಮೇಲೆ ಹೇಗೆ ಹೆಜ್ಜೆ ಇಡುತ್ತೀರಿ,
ನಡೆಯುವಾಗ ನಿಮ್ಮ ತಲೆ, ಭುಜ, ಶರೀರ ಹೇಗೆ ಇರುತ್ತವೆ, ಆಗ
ನೀವು ಹೇಗೆ ಉಸಿರಾಡುತ್ತೀರಿ, ಎಷ್ಟು ವೇಗವಾಗಿ ನಡೆಯುತ್ತೀರಿ, ನಿಮ್ಮ
ಹೆಜ್ಜೆಗಳು ಎಷ್ಟು ದೂರಕ್ಕಿರುತ್ತವೆ ಎಂಬ ವಿಷಯಗಳನ್ನು ನೀವೆಂದಾದರೂ
ಆಲೋಚಿಸಿದ್ದೀರಾ?
ಕೇವಲ ದೂರ ಸವೆಸುವವನು “ನಡೆದನು” ಎಂದು ಹೇಳಲು ಸಾಧ್ಯ
ವಿಲ್ಲ. ಕೈ ಬೀಸದೆ ಹೋಗುವವರು ಕೈ ಕಟ್ಟಿ ಹೋಗುವವರು, ಕತ್ತು
ಬಾಗಿಸಿ ಹೋವು. ಬೆನ್ನು MR ಮುಂಗಾಲ ಮೇಲೆ
ನಡೆಯುವವರು - ಇತ್ಮಾದಿ ಅನೇಕ ವಕ್ರ ಪ್ರಕಾರದ ನಮೂನೆಗಳನ್ನು ಕಾಣ '
ಬಹುದು. ಇವೆಲ್ಲವುಗಳಿಂದ ನಡಿಗೆಯ ಪ್ರಯೋಜನ ಲಭಿಸುವುದಿಲ್ಲ ಮಾತ್ರ '
ವಲ್ಲ, ಅನೇಕ ದುಷ್ಪರಿಣಾಮಗಳೂ ಆಗುವುವು.
ಸರಿಯಾಗಿ ನಡೆಯುವುದೆಂದರೆ ಕೈಬೀಸಿಕೊಂಡು ಅಂದವಾಗಿ ಹೆಜ್ಜೆ
ಹಾಕಬೇಕು (ಎಡಗಾಲು ಮುಂದಿರುವಾಗ ಬಲಗೈ ಮುಂದೆ, ಬಲಗಾಲು |
ಮುಂದಿರುವಾಗ ಎಡಗೈ ಮುಂದೆ); ಹಿಮ್ಮಡಿಯನ್ನೂರುತ್ತಾ ಹೆಜ್ಜೆ ಇಡ |
ಬೇಕು; ಕಾಲುಗಳನ್ನು ಒತ್ತದೆ ಹಗುರವಾಗಿ ಒಂದನ್ನೆತ್ತಿ ಇನ್ನೊಂದನ್ನು
ಮುಂದಿಡಬೇಕು ; ಕಾಲಿನ ಹರಡುಗಳು (ಆ್ಮಂಕಲ್ಸ್‌ ), ಮೊಣಕಾಲುಗಳು,
ತೊಡೆಯ ಕೀಲುಗಳು ಸುಲಭವಾಗಿ ಬಾಗಬೇಕು; ಪ್ರತಿಯೊಂದು ಹೆಜ್ಜೆಯೂ |
ಸುಮಾರು ೮೦ ಸೆಂ. ಮಾ. ಉದ್ದವಾಗಿರಬೇಕು; ಶರೀರವನ್ನು ನೆಟ್ಟಗೆ
ಹಿಡಿದಿರಬೇಕು ; ಎದೆ ಎತ್ತಿರಬೇಕು; ಹೊಟ್ಟೆಯನ್ನು ಒಳಕ್ಕೆ ಎಳೆದಿರಬೇಕು;
ತಲೆಯನ್ನು ಎತ್ತಿ ದೃಷ್ಟಿ ನೇರವಾಗಿ ಮುಂದಿರಬೇಕು; ಭಾ!
೨೦ - ೧೨೫ ಹೆಜ್ಜೆಗಳ ವೇಗದಲ್ಲಿ ನಡೆಯಬೇಕು.
ಎಷ್ಟೇ ಆಗ್ರ"ಹ ಮಾಡಲಿ, ನಿಧಾನವಾಗಿ ನಡೆಯುವುದನ್ನು ಮಾತ್ರ
ಅನೇಕರು ತಪ್ಪಿಸಂವುದಿಲ್ಲ. ಇದರಿಂದ ಅವರ ಅಸಿಒರಜ್ಜುಗಳು (ಲಿಗಮೆಂಟ್ಸ್‌ )
ಬಲಗೊಳ್ಳುವುದಿಲ್ಲ. ಮಾಂಸಖಂಡಗಳಂ ವಿಕಾಸಗೊಳ್ಳುವುದಿಲ್ಲ. ರಕ್ತ |
ವಾಕಿಂಗ್‌ ಹೋಗೋಣ ಬನ್ನಿ ೮೫

ಶಡಜ ನೆಡಿಸೆ

ಪರಿಚಲನೆಗೆ ಉತ್ತೇಜನ ದೊರೆಯುವುದಿಲ್ಲ... ದೀರ್ಥಶ್ವಾಸದ ಅವಶ್ಯ


ಕತೆಯೂ ಬೀಳುವುದಿಲ್ಲ. ಒಟ್ಟಿನಲ್ಲಿ ನಿಧಾನ ನಡಿಗೆ ನಿರುಪಯೋಗಿ ಮಾತ್ರ
"ವಲ್ಲ ಸಮಯಹಾನಿಯನ್ನೂ ಮಾಡುತ್ತದೆ. ವೇಗವಾಗಿ ನಡೆಯುವಾಗ
ಮೇಲಿನ ಎಲ್ಲಾ ಕೊರತೆಗಳೂ ನಿವಾರಣೆಯಾಗಿ ಶರೀರ ನಿರೋಗಿ, ಸದೃಢ,
'ಸಬಲವಾಗುವುದು. ಅನುಭವಿಗಳ ಹೇಳಿಕೆಯಂತೆ ಪ್ರತಿಯೊಬ್ಬರೂ ದಿನವಹಿ
೯-೧೦ ಕಿ.ಮಾ. ನಡೆಯಬೇಕು. ಅದರಲ್ಲಿ ಅರ್ಧದಷ್ಟಾದರೂ ವೇಗವಾಗಿ
“ನಡೆಯಬೇಕು.
ನಡೆಯುವಾಗ ನೆಲದ ಆಧಾರವನ್ನು ಯಾವುದೇ ಕ್ಷಣದಲ್ಲಿ ಕಳದು
ತೊಳ್ಳದೇ ಇರುವ ನಡಿಗೆ ಸಹಜವಾದದ್ದು. ಒಂದು ಪಾದವನ್ನು ಎತ್ತಿದಾಗ,
ಅದು ನೆಲಕ್ಕೆ ಬರುವವರೆಗೆ ಇನ್ನೊಂದು ಪಾದ ನೆಲದ ಆಧಾರವನ್ನು ಉಳಿಸಿ
ಕೊಂಡಿರುತ್ತದೆ. ಓಟಕ್ಕೂ ನಡಿಗೆಗೂ ಇರುವುದು ಇದೇ ವೃತ್ಕಾಸ. ಓಟ
ದಲ್ಲಿ ಎರಡೂ ಪಾದಗಳು ಕ್ಷಣಮಾತ್ರ ನೆಲದ ಆಧಾರ ಬಿಟ್ಟು ಇರುವುವು.
ಪಾದಗಳು ಸಹಜವಾದ ನಡಿಗೆಯಲ್ಲಿ ನೇರವಾಗಿ ಬೀಳದೆ ೧೫ ಡಿಗ್ರಿ
“ಗಳಷ್ಟು ಹೊರಮುಖವಾಗಿ, ಓರೆಯಾಗಿ ಬೀಳುವುವು. ತೊಡೆಯಲ್ಲಿರುವ
೮೬ ಶರೀರ ಶಿಲ್ಪ

ಮಾಂಸಖಂಡಗಳ ರಚನೆಯೇ ಇದಕ್ಕೆ ಕಾರಣ. ಪಾದಗಳು ನೇರವಾಗಿ ಬೀಳ


ಬೇಕಾದರೆ ವೆಣಣಕಾಲುಗಳನ್ನು ಬಗ್ಗಿಸಿ ಇಡಬೇಕು. ಇದು ಅಸಹಜವಾಗಿ
ಕಾಣುವುದು.
ಪಾದವನ್ನು ನೆಲಕ್ಕೆ ಇಟ್ಟಾಗ ಹಿಮ್ಮಡಿ ಮೊದಲು ನೆಲಕ್ಕೆ ತಗಲು
ವುದು. ಅನಂತರ ಪಾದದ ಮುಂಭಾಗ ನೆಲಕ್ಕೆ ತಗಲುವುದು. ಹಿಂದಿನ
ಕಾಲಬೆರಳುಗಳಂ ಮತ್ತು ಮುಂಗಾಲು ನೆಲವನ್ನು ಹಿಂದಕ್ಕೆ ಮೆಟ್ಟುವುವು.
ಈ ರೀತಿ ಹಿಂದಕ್ಕೆ ಅದುಮಿದಾಗ ಅದರ ಪರಿಣಾಮವಾಗಿ ಶರೀರ ಮುಂದಕ್ಕೆ
ಚಲಿಸುವುದು. ಅದಕ್ಕಾಗಿಯೇ ಗಟ್ಟಿನೆಲ ನಡೆಯಲು ಸುಲಭವಾದ ಅಚಲ
ವಾದ ಆಧಾರವಾಗುವುದು. ಆದರೆ ಮರಳಿನ ರಸ್ತೆ, ಉತ್ತಿರುವ ನೆಲ,
ಕೆಸರಿನ ಜಾಡುಗಳಲ್ಲಿ ಹಿಂದಿನ ಕಾಲು ಮೆಟ್ಟಿದಾಗ ಕುಸಿಯುವುದು ;
ನಡೆಯಲು ಕಷ್ಟ ಮತ್ತು ಆಯಾಸವಾಗುವುದು.
ಮೊಣಕಾಲುಗಳು ಆದಷ್ಟೂ ಬಗ್ಗದೆ ನೇರವಾಗಿ ಸೊಂಟದಿಂದಲೇ
ಕಾಲುಗಳ ಚಲನೆ ಪ್ರಾರಂಭವಾಗಬೇಕು. ಮೊಣಕಾಲುಗಳನ್ನು ಬಲವಾಗಿ
ಬಿಗಿ ಹಿಡಿಯಬಾರದು.
ಪೃಷ್ಠಗಳು ಅತ್ತಿತ್ತ ಸರಿಯುವುದು, ಅಲ್ಲಾಡುವುದು ಅಸಹ್ಮಕರ.
ಇದು ಅನೇಕ ವೇಳೆ ಒಯ್ಕಾರದಿಂದಾದ ವೈಪರೀತ್ಮ. ಒಂದು ಕಾಲನ್ನು
ಎತ್ತಿದ ಮೇಲೆ, ಇನ್ನೊಂದು ಕಾಲಿನ ಮೇಲೆ ಅನವಧಾನವಾಗಿ ಕುಸಿಯುವುದ
ರಿಂದ ಈ ಅಭ್ಯಾಸಕ್ಕೆ ಎಡೆಯಾಗುವುದು. ಸ್ವಲ್ಪ ಎಚ್ಚರಿಕೆಯಿಂದ ಹಾಗೂ
ಎರಡೂ ಕಾಲುಗಳ ಮೇಲೆ ಸಮಭಾರ ಬಿಟ್ಟುಸ ನಿಲುವ ಅಭ್ಯಾಸದಿಂದ
ಇದನ್ನು ತಡೆಯಬಹುದು.
ಗಂಭೀರವಾದ ಚಲನೆಗೆ ಗಂಭೀರವಾದ ನಿಲುಮೆಯ ಅಭ್ಯಾಸ ಅವ
ಶ್ಮಕ. ಎದೆ ಎತ್ತಿರಬೇಕು. ಸೊಂಟದ ಮೇಲ್ಭಾಗ, ಮುಂದೆ, ಹಿಂದೆ,
ಅಕ್ಕಪಕ್ಕಗಳಲ್ಲಿ ಯಾವುದೇ ಕಾರಣಕ್ಕಾಗಿ ಬಾಗಬಾರದು. ಈ ಬೆಡಗಿನ
ದುಶ್ಚಟ ಅಸಭ್ಮ ವರ್ತನೆಯ ದ್ಮೋತಕ. ಕೈಗಳು ಸಹಜವಾಗಿ ನೇರವಾಗಿರ
ಬೇಕು. ವೆೊಣಕ್ಕೆಗಳು ಹೆಚ್ಚು ಬಗ್ಗಿರಬಾರದು. ಕತ್ತು ನೇರವಾಗಿರ
ಬೇಕು.
ವಾಕಿಂಗ್‌ ಹೋಗೋಣ ಬನ್ನಿ ೮೭

ನಡಿಗೆಯಲ್ಲಿ ಕೆಳಗಿನ ನಿಷೇಧಗಳನ್ನು ಗಮನಿಸಬೇಕು :


೧. ಎತ್ತರ ಕಡಿಮೆ ಇರುವವರು ದೂರದ ಹೆಜ್ಜೆ ಹಾಕಬಾರದು.
೨. ಮೊಣಕಾಲನ್ನು ಹೆಚ್ಚು ಬಗ್ಗಿಸಬಾರದು.
೩. ಬಟ್ಟೆ ಮತ್ತು ಪಾದರಕ್ಷೆಗೆ ತಕ್ಕ ನಡಿಗೆ ಇರಬಾರದು.
(ನಡಿಗೆಗೆ ತಕ್ಕ ಬಟ್ಟೆ, ಪಾದರಕ್ಷೆ ಇರಬೇಕು.)
೪. ಸೊಂಟ, ಪೃಷ್ಠ ಅತ್ತಿತ್ತ ಅಲ್ಲಾಡಬಾರದು.
೫. ಎರಡು ಹೆಜ್ಜೆಗಳಲ್ಲಿ ವೃತ್ಮಾಸವಿರಬಾರದು.
೬. ಕೈಗಳನ್ನು ಹಿಂದೆ ಮುಂದೆ ಬೀಸದೆ ಇರಬಾರದು.
ನಡಿಗೆಯ ಲಕ್ಷಣಗಳು ಸಾಮಾನ್ಯವಾಗಿ ವ್ಯಕ್ತಿಯ ಸ್ವಭಾವವನ್ನು
ಪ್ರಕಟಿಸುತ್ತವೆ. ಆತ್ಮವಿಶ್ವಾಸ, ಎಚ್ಚರಿಕೆ, ನಿರ್ದಿಷ್ಟತೆ, ಅಲಕ್ಷ,,
ಸ್ವಚ್ಛಂದತೆ,
ತ್‌
ಅವ್ಯವಸ್ಥೆ ಇತಾದಿ ಗುಣಾವಗುಣಗಳು ನಡಿಗೆಯಲ್ಲಿ ಎದ್ದು
ಕಾಣುವುವು. ಗುಣಗಳು ಯಾವರೀತಿ ನಡಿಗೆಯಲ್ಲಿ ಪ್ರಕಟವಾಗುವುವೋ,
ಅದೇ ರೀತಿ ನಡಿಗೆಯೂ ಗುಣದ ಮೇಲೆ ಪ್ರಭಾವ ಬೀರುವುದು. ನಡಿಗೆ
ಯನ್ನು ತಿದ್ದುಕೊಳ್ಳುವುದರಿಂದ, ಅನುಕರಣೀಯ ನಡಿಗೆಯನ್ನು ಅನುಸರಿ
ಸುವುದರಿಂದ ಸದ್ಗುಣಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬಹುದು.
ರಾತ್ರಿ ಊಟವಾದ ಬಳಿಕ, ಮಲಗುವ ಮುನ್ನ ವೇಗವಾದ ನಡಿಗೆ
ಕೂಡದು. ಮೆಲ್ಲನೆ ನಡೆಯಬೇಕು. ದಿನಕ್ಕೆ ಕಡೆಯ ಪಕ್ಷ ೫೦-೬೦ ನಿವಿಂಷ
ಗಳಾದರೂ ವೇಗವಾದ ನಡಿಗೆ ಅಭ್ಯಾಸ ಮಾಡಬೇಕು. ಇದನ್ನು ಬೆಳಗಿನ
ವೇಳೆ ಅಥವಾ ಸಂಜೆಯ ವೇಳೆ ಮಾಡಬಹುದು.
ಮನೋಲ್ಲಾಸಕ್ಕಾಗಿ, ಕಾಡುಹರಟೆಗಾಗಿ ಅಡ್ಡಾಡುವುದರಲ್ಲಿ ವ್ಮಾಯಾ
ಮದ ಭಾಗ ಕಡಿಮೆ!
ಮೂಗಿನ ಮೂಲಕ ಪ್ರತಿ ೪ ಹೆಜ್ಜೆಗಳಿಗೊಮ್ಮೆ ಉಸಿರೆಳೆದುಕೊಂಡು
ಕೊಂಡು ಅದೇ ಪ್ರಮಾಣದಲ್ಲಿ ಉಸಿರನ್ನು ಬಿಡುತ್ತಿರಬೇಕು. ಬಳಲಿಕೆ,
ಏದುಸಿರು ಬಂದಾಗ ಸ್ವಲ್ಪ ವಿಶ್ರಮಿಸಿ ಅನಂತರ ನಡಿಗೆ ಪ್ರಾರಂಭಿಸಬೇಕು.
ವೇಗವಾದ ನಡಿಗೆಯ” ಅಭ್ಮಾಸವನ್ನು ಹಂತಹಂತವಾಗಿ ಮಾಡಬೇಕು.
ನಿಮ್ಮ ಸಹಜ ಗತಿಯಲ್ಲಿ ೨೦-೩೦ ನಿಮಿಷ ನಿತ್ಮವೂ ಅಭ್ಯಾಸ ಮಾಡಿ.
ಕಲ ` ಶರೀರ ಶಿಲ್ಪ
ಅನಂತರ ೪೫-೬೦ ನಿಮಿಷಗಳ ವರೆಗೆ ಏರಿಸಿ. ಅದಾದ ಮೇಲೆ ನಿಮಿಷಕ್ಕೆ
೧೨೦ ಹೆಜ್ಜೆಗಳಂತೆ ಕೆಲವು ನಿಮಿಷಗಳು ಗಮನವಿಟ್ಟು ನಡೆಯಿರಿ. ಆ ಸಮಯ
ವನ್ನು ಏರಿಸುತ್ತಾ ಹೋಗಿ. ಕಡೆಗೆ ವೇಗವಾಗಿ ೫೦-೬೦ ನಿಮಿಷಗಳು
ನಡೆಯಬಲ್ಲಿರಿ.
| ನಿರಂತರವಾಗಿ, ಬಹಳ ಹೊತ್ತು ಮಾಡುವ ಯಾವುದೇ ಕೆಲಸಕ್ಕಿಂತ
ಹೆಚ್ಚು ಶ್ರಮ ನಡಿಗೆಯಲ್ಲಿ ಆಗುವುದು." ಆದರಿಂದಾಗಿಯೇ ನಡಿಗೆ ಉತ್ತಮ
ವಾ ಯಾಮ. ಇಷ್ಟೊಂದು ಶ್ರಮವಾದರೂ ಅದೇ ಪ್ರಮಾಣದಲ್ಲಿ
ಸಾ ಗದೇ ಇರುವುದು ನಡಿಗೆಯವೆ
ವೈಶಿಷ್ಟ್ಯ. ಕಾರಣ, ನಡಿಗೆಯಲ್ಲಿ
ಶರೀರದ ಸುಮಾರು ಶೇಕಡ ೫೫-೬೦ ಭಾಗದಷ್ಟು ಮಾಂಸಖಂಡಗಳು
ಭಾಗವಹಿಸುವುವು. ಆಗುವ ಒಟ್ಟು ಶ್ರಮವನ್ನು ಈ ಎಲ್ಲ ಮಾಂಸಖಂಡ
ಗಳೂ ಹಂಚಿಕೊಳ್ಳುವುದರಿಂದ ಆಯಾಸ ಕಡಿಮೆ ಎನಿಸುವುದು. ಅಲ್ಲದೆ
ಬುದ್ಧಿ ಉಪಯೋಗಿಸದೆ ಮಾಡುವ ಕೆಲಸಗಳಲ್ಲಿ ನಡಿಗೆ ಒಂದಾದ್ದರಿಂದ ಅದ
ರಲ್ಲಿ "ಅಂಯಾಸ ಕಡಿಮೆ. ಬುದ್ಧಿಯ ನೇರ ಆಗ್ರಹ ಇಲ್ಲದೆ ತನ್ನಷ್ಟಕ್ಕೆ
ತಾನು ನಡೆಯಲು ಅನುಕೂಲವಾಗುವಂತೆ ಶರೀರದ ರಚನೆ ಇದೆ. ಆದ
ಕ್ಯುಗಿಯೇ ಏರುತಗ್ಗುಗಳಲ್ಲಿ, ಕೆಸರಿನಲ್ಲಿ, ಡೊಂಕಾದ ರಸ್ತೆಯಲ್ಲಿ ನಡಿಗೆ
ಆಯಾಸಕರ. " ಒಂದೇ ಸಮನಾದ, ನೇರವಾದ, ಅಡ್ಡಿಗಳಿಲ್ಲದ ರಸ್ತೆಗಳಲ್ಲಿ
ಆಖಾಸ ಕಡಿಮೆ - ಏಕೆಂದರೆ ಇಲ್ಲಿ ಬುದ್ಧಿಯ ಪಾತ್ರ ಕಡಿಮೆ. ಆದ್ದರಿಂದಲೇ
ಚಿಂತನಶೀಲ ವ್ಯಕ್ತಿಗಳು ಇಂತಹ ನಡಿಗೆಯ ಬಗೆಗೆ ವಿಶೇಷ ಒಲವನ್ನು
ತೋರುವರು. ಅವರ ಬುದ್ಧಿಯ ವಿಕಾಸಕ್ಕೆ, ಕಲ್ಪನಾಶಕ್ತಿಯ ವಿಹಾರಕ್ಕೆ
ಮುಕ್ತ ಅವಕಾಶ ಇಲ್ಲಿದೆ. ಜೊತೆಗೆ ಅಮೂಲ್ಮವಾದ ವ್ಮಾಯಾಮ. |
ಲಯಬದ್ಧವಾದ ಚಲನೆಗಳಿಂದ ಶರೀರಕ್ಕೆ ಆಯಾಸ ಕಡಿಮೆ. ಆದ್ದ
ರಿಂದಲೇ ನಿಶ್ಚಿತ ಸಮಯದಲ್ಲಿ ಸಮಾನ ದೂರದ ನಿರ್ದಿಷ್ಟ ಸಂಖ್ಯೆಯ ಹೆಜ್ಜೆ
ಇಡುವವರಿಗೆ ನಡಿಗೆ ಹೆಚ್ಚು ಸುಖಕರ, ಅದಕ್ಕಾಗಿ ಲಯಬದ್ಧವಾಗಿ ನಡೆ
ಯುವುದನ್ನು ಕಲಿಯಬೇಕು. ನಿಮಿಷಕ್ಕೆ ೧೦೦ರಿಂದ ೧೧೫ ಹೆಜ್ಜೆಗಳು
ಮತ್ತು ಪ್ರತಿ ಹೆಜ್ಜೆ ೬೦ರಿಂದ ೯೦ ಸೆಂ. ಮಾ. (೨೭ ರಿಂದ ೩೬ ಇಂಚುಗಳು)
ಇರಬೇಕು.
ವಾಕಿಂಗ್‌ ಹೇಗೋಣ ಬನ್ನಿ ರ್ರ್‌

ಬ್ಯಾಂಡ್‌” ವಾದ್ಮದೊಡನೆ ಆಥವಾ ಹಾಡುಗಳ ಜೊತೆಗೆ ಹೆಜ್ಜೆ


ಹಾಕುವ ಅಭ್ಯಾಸದಿಂದ ತಾಳಬದ್ಧವಾಗಿ ನಡೆಯಬಹುದು. ಅಲ್ಲದೆ ಇಂಪಾದ
ಸ್ವರ, ಧ್ವನಿಗಳಿಂದ ಆಯಾಸ ಪರಿಹಾರಕ್ಕಾ ಗಿ ಅನೇಕ ಘಂಟೆಗಳು
ನಿರಾಯಾಸವಾಗಿ ನಡೆಯಲು ಅನುಕೂಲವಾ ಬವರ, ಪಕ್ಕವಾದ್ಮಗಳ ಸಹಿತ
ನಾಲ್ಕಾರು ಗಂಟೆಗಳ “ನೃತ” ಮಾಡಿದರೂ ಕೊನೆಯಲ್ಲಿ ವ್ಯಕ್ತಿ ಆನಂದ
ವಾಗಿರುವುದಕ್ಕೆ ಇದೇ ಕಾರಣ.
ವಿರೋಧಾಭಾಸದಂತೆ ಕಾಣುವ ಇನ್ನೊಂದು ರಹಸ್ಯ ನಡಿಗೆಯಲ್ಲಿದೆ.
ವೇಗವಾದ ಧಾ ಶ್ರಮ ಹೆಚ್ಚಾದರೂ "ಸುಸ್ತು? ಕಡಿವೆಂ. ಏಕೆಂದರೆ
ವೇಗವಾದ 1೫ಗ ಹೃದಯ 'ಮತ್ತು ಶ್ವಾಸಕೋಶಗಳ ಚಟುವಟಿಕೆ
[ಈ-ಚ್ಹಾಗಿ i ಕರ್ತ ಚ್ಹುವುದು. ಹೃದಯ ಮತ್ತು ಶ್ವಾಸಕೋಶ
ಗಳು ರಕ್ತವನ್ನು ತನ್ನ ನ ಸ ನೈವ ಶಕ್ತಿ ಹೆಚ್ಚುವುದು. ಹೀಗಾಗಿ
ರಕ್ತಸಂಚಾರ ಹೆಚ್ಚಾಗುವುದು. ಇದರಿಂದ ಡಸ ಸುಗಮವಾಗುವುದು.
ನಿಜವಾದ ಆರೋಗ್ಯ ವನ್ನು ಅನುಭವಿಸಲು ಹಾಗೂ ಸುತ್ತಮುತ್ತಲಿನ
ವಾತಾವರಣದ ಏರಿಳಿತಗಳಲ್ಲಿ ವೈಪರೀತ (ರ ತೊಂದರೆಗೆ ಈಡಾಗದೆ
ಅನೇಕ ರೋಗಾಣುಗಳನ್ನು ತಡೆಯಬೇಕಾದರೆ ಶರೀರವನ್ನು ಅದಕ್ಕೆ ತಕ್ಕಂತೆ
ಹದಮಾಡಬೇಕು. ಶರೀರವನ್ನು ವ ರೀತಿಗಳು ಆನೇಕ, ಆಪಿ
ರಲ್ಲಿ ಪಶ್ರಮುಖವಾದದ್ದು ನಡಿಗೆ. ಬರಿಗಾಲಿನಲ್ಲಿ ಸಹಜವಾಗಿ ನೆಲವ ಮೇಲೆ
ನಡೆಯುವು ತ ಬೇರೆ ಉತ್ತಮ ರೀತಿಯಿಲ್ಲ. ಅದೇ ರೀತಿ ಒದ್ದೆ ಕಲ್ಲಿನ
ಮೇಲೆ ನೆತ್ತ ಒದ್ದೆ ಹುಲ್ಲಿನ ಮೇಲೆ ನಡೆಯುವುದು ಪ್ರಸೋಜ
ಕಾರಿ. ಈ ಸಂಗತಿಗಳಿಂದ ಉಷ್ಣ, ಶೀತ್ಕ ಮಳೆ, ಗಾಳಿಗಳಲ್ಲಿ ಶರಿ:ರದ
ಸ್ಥಿತಿವೈತ್ಯಾಸವಾಗಿ ಆರೋಗ್ಯ ಕೆಡದ: ತೆ ಕಾಪುಡಿಕೊಳ್ಳಬಹುದು.
ಎಷ್ಟೋ ತಂದೆತಾಯಂದಿರು ಮಕ್ಕ ಳಿಗೆ ಚಿಕ್ಕ ೧ದಿನಿಂದ ಪಾದರಕ್ಷೆಗಳನ್ನು
ತೊಡಿಸಿ ನಡೆಸುವುದನ್ನು ಅಭ್ಯಾಸ ಮಾಡಿಸುತ್ತಾ ರೆ. ಪ್ರಾಯಶಃ ಇದಕ್ಕಿಂತ
ಹೆಚ್ಚಿನ ಅಪಕಾರ ಅವರಿಗೆ ಮತ್ತೊಂದಿಲ್ಲ. ಇದರಿಂದ ಸಹಜವಾಗಿ ರರೀರ
ಹದವಾಗುವ ವ್ಯವಸ್ಥೆಯಿಂದ ಮಕ್ಕಳು ವಂಚಿತರಾಗುತ್ತಾರೆ.
ಮಕ್ಕಳನ್ನು ಪಾದರಕ್ಷೆಗಳಿಂದ ಮುಕ್ತಗೊಳಿಸಿ, ಚೆನ್ನಾಗಿ ಓದಾಡಿ,
೯೦ ಶರೀರ ಶಿಲ್ಪ
ಅಡ್ಡಾಡಿ, ಅಲೆದಾಡಲಂ ಅವಕಾಶ ನೀಡಿ, ಅವರ ಬೆಳವಣಿಗೆಗೆ ಅದೇ ನಿಜ
ವಾದ ಟಾನಿಕ್‌.
ಕೋಮಲ ಶರೀರದ ವ್ಯಕ್ತಿಗಳು ತಮ್ಮ ಶರೀರವನ್ನು ದೃಢವಾಗಿ
ಮಾಡಬೇಕಾದರೆ ನಡಿಗೆ ಉಪಯುಕ್ತವಾದದ್ದು. ನಿರ್ಬಲ ಸಂಕುಚಿತ ಎದೆ
ಯವರು ಚೆನ್ನಾಗಿ ನಡೆದರೆ ಸಬಲ, ವಿಶಾಲ ಎದೆಯವರಾಗಬಹುದು.
ನಡಿಗೆಗೆ ಚಿಕಿತ್ಸಕ ಶಕ್ತಿಯೂ ಉಂಟು. ಮೂಲವ್ಯಾಧಿಯನ್ನು ತಡೆಹಿಡಿ-
ಯಲಂ ಮತ್ತು ಉಲ್ಬಣಗೊಳಿಸದಿರಲು, ಶರೀರದ ಸಕ್ಕರೆ ಪ್ರಮಾಣವನ್ನು
ಕಡಿಮೆ ಮಾಡಲು, ಶರೀರದ ಕೊಬ್ಬನ್ನು ಕರಗಿಸಿ, ತೂಕವನ್ನು ಕಡಿಮೆ
ಮಾದಲು, ಹೃದ್ರೋಗಗಳನ್ನು ನಿವಾರಿಸಲು, ಶ್ವಾಸಕೋಶಗಳನ್ನು ಕತೃತ್ವ
ಸಂಪನ್ನ ಮಾಡಲು ನಡಿಗೆಗಿಂತ ಉತ್ತವಂ ಔಷಧಿ ಮತ್ತೊಂದಿಲ್ಲ.
ಜೀವನದ ಎಲ್ಲ ಚಟುವಟಿಕೆಗಳಿಗೆ, ಆಟಪಾಟಗಳಿಗೆ, ಶಾರೀರಿಕ ಸಿದ್ಧಿ
ಗಳಿಗೆ ಪ್ರಾರಂಭದ ಸಾಧನ ನಡಿಗೆ. ಆರೇಳು ಮೈಲಿಗಳು ಶ್ರಮವಿಲ್ಲದೆ
ನಡೆಯುವ ಅಭ್ಯಾಸ ಆಗಬೇಕು.
ಒಬ್ಬರಂ ತಜ್ಞರು “ವ್ಯಕ್ತಿ ತನ್ನ ಶರೀರದ ಅಳತೆಯನ್ನು ಹೆಚ್ಚು
ಮಾಡಲು ೬ ತಿಂಗಳು ನಿತ್ಯವೂ ಬೆಳಗ್ಗೆ ಸಂಜೆ ದೂರದೂರ ಅಡ್ಡಾಡಿ ಬರಲಿ.
ಅವನಿಗೆ ಇನ್ನು ಯಾವ ಶಾರೀರಿಕ ವ್ಯಾಯಾಮವೂ ಬೇಡ. ಇದ್ದ, ಗಾತ್ರ
ಎಲ್ಲವೂ ಹೆಚ್ಚಿಯೇ ತೀರುವುದು” ಎಂದಿದ್ದಾರೆ. ನಿತ್ಯವೂ ಬೆಳಗಿನ
ಹೊತ್ತು ಸುಮಾರು ೨ ಮೈಲಿ ನಡಿಗೆ ಎಲ್ಲ ಪಥ್ಮ-ಪಾನ, ಔಷಧ- S

ಉಪಚಾರಗಳಿಗಿಂತ ಶ್ರೇಷ್ಠವಾದದ್ದು.
ಇಲ್ನಡಿಗೆಗೆ ಸಿಗುವ ಎಲ್ಲಾ ಅವಕಾಶಗಳನ್ನು ತಪ್ಪದೆ. ಉಪಯೋಗಿಸಿ
ಹೆಚ್ಚುಹೆಚ್ಚು ನಡೆಯಲು ಅಭಾಸ ಮಾಡಿ. ನಮ್ಮ ಪೂರ್ವಜರು ದೃಢ
ಕಾಯರಾಗಿದ್ದರು ಎಂದು ಹೇಳಿ ಸಮಾಧಾನಪಡುವ ಜೊತೆಗೆ ನಾವೂ
ದೃಢಕಾಯರಾಗೋಣ ; ಮನೆಮಕ್ಕಳಲ್ಲಿ ಸೇರಿ ನಡೆಯೋಣ; ಬೆಳದಿಂಗ
ಳಲ್ಲಿ ನಡೆಯೋಣ.
ಯತ್ತು ಚಂಕ್ರಮಣಂ ನ್ಯಾತಿ ದೇಹ ಪೀಡಾಕರಂ ಭವೇತ್‌|
ತದಾಯುರ್ಬಲ ವೇಧಾಗ್ನಿ ಪದವಿಂಂದ್ರಿಯ ಬೋಧನಂ ॥
ವಾಕಿಂಗ್‌ ಹೋಗೋಣ ಬನ್ನಿ ೯೧

(ಪರ್ಯಾಪ್ತ ನಡಿಗೆಯಿಂದ ಆಯಸ್ಸು, ಬಲ, ಬುದ್ಧಿ, ಜೀರ್ಣ


ಶಕ್ತಿಗಳೂ ಇಂದ್ರಿಯಗಳ ಲವಲವಿಕೆಯೂ ಹೆಚ್ಚುವುದು.)
— ಸುಶ್ರುತ
ಅಧನಸ್ತ್ವ ಬಾಂಧವೋ ವಾ ಪಾದತ್ರಾಣಾ ತಪತ್ರ ವಿರಹಿತೋ |
ಭೈಕ್ಷಾಶ್ರೀ ಗ್ರಾಮೈಕ ರಾತ್ರವಾಸೀ
ಮುನಿರವ ಸಂಯತಾತ್ಮಾ ಯೋಜನ ಶತಮಧಿಕಂಗಚ್ಛೇತಾ ॥
೨ ಚರಕ
(ಮಧುಮೇಹ ರೋಗಕ್ಕೆ ಚಂಕ್ರಮಣ ಗುಣಕಾರಿ. ಅದಕ್ಕಾಗಿ ಊರೂ
ರುಗಳನ್ನು ಅಲೆಯಬೇಕು. ಸುಖಾಭಿಲಾಷೆಯನ್ನು ತೃಜಿಸಿ ಬರಿಗಾಲಲ್ಲಿ
ಮುನಿಗಳಂತೆ ಓಡಾಡಬೇಕು.)
ಚರನ್ವೆ ಮಧು ವಿಂದತಿ ಚರನ್‌ ಸ್ವಾದುದಂಬರಂ |
ಸೂರ್ಯಸ್ಮ ಪಶ್ಯ ಶ್ರೇಮಾಣಂ ಯೋನತಂದ್ರಯತೇ ಚರತ್‌
ಚರೈ ವೇತಿ ಚರೈವೇತಿ ॥
— ಚರಕ
(ನಡೆದಾಡಂವವನಿಗೇ ಜೇನು ಸಿಗುತ್ತದೆ. ನಡೆಯುವವನೇ ಮಧುರ
ಫಲಗಳನ್ನು ಪಡೆಯುತ್ತಾನೆ. ಒಂದು ಕ್ಷಣವೂ ಆಲಸಿಯಾಗಿರದೆ ಚಲಿಸು
ತ್ತಿರುವ ಸೂರ್ಯನನ್ನು ನೋಡು....ನಡೆ.... ನಡೆ.)
ಕಾಲ್ನಡಿಗೆ ಕೃತಕತೆಯೇ ಇಲ್ಲದ ವ್ಯಾಯಾಮ. ಈ ವ್ಯಾಯಾಮದಲ್ಲಿ
ಉಪಕರಣಗಳ ಉಪಯೋಗವಿಲ್ಲ; ಸಲಕರಣೆಗಳ ಸಂಕೋಲೆ ಇಲ್ಲ; ವೇಷಗಳ
ವೈಪರೀತ್ಯ ಇಲ್ಲ; ಪ್ರಕೃತಿಯೇ ಶರೀರದಲ್ಲಿ ಕಾಲ್ನಡಿಗೆಗೆ ಬೇಕಾದ ಸಕಲ
ವ್ಯವಸ್ಥೆಯನ್ನು ಮಾಡಿಟ್ಟಿದೆ. ಆದ್ದರಿಂದ ಕಾಲ್ನಡಿಗೆ ಸಹಜವಾದದ್ದು;
ಸಾರ್ವತ್ರಿಕವಾದ, ಉಪಯಂಕ್ತವಾದ ವ್ಯಾಯಾಮ.
೧೧೫ ಓಟ

ಎಂದಾದರೂ ಹಾವಿನ ಹರಿದಾಟವನ್ನು ನೋಡುವ ಘಳಿಗೆ ಒದಗಿ


'ಬಂದಿತ್ತೆ? ಕುದುರೆಯ ಓಟವನ್ನು ವೀಕ್ಷಿಸುವ ಪ್ರಸಂಗ ಕೂಡಿಬಂದಿಕ್ತೆ?
ಮಾನಿನ ಮುಂದೋಟವನ್ನು ಕಾಣುವ ಕ್ಷಣ ಸಿಕ್ಕಿತ್ತೆ? ಹರಿಣದ ಎಗು
ರಾಟವನ್ನು ಅವಲೋಕಿಸುವ ಅವಕಾಶ ಉಂಟಾಗಿತ್ತೆ?
ಅಂದು ಹರಿಣದ ಬಗ್ಗೆ ಹೊಟ್ಟೆಕಿಚ್ಚು ಉತ್ಕಶೈನ್ನವಾಯಿತೆ? ಮಾನಿ
ನಿಂದಾಗಿ ನಿಮ್ಮ ಬಗ್ಗೆ ಮರುಕ ಉಂಟಾಯಿತೆ ? ಕುದುರೆಯನ್ನು ಕಂಡು
`ಕರುಬುವಂತಾಯಿತೆ? ಹಾವನ್ನು ನೋಡಿ ಹಳಿದುಕೊಳ್ಳುವಂತಾಯಿತೆ ?
ಎರಡನೆ ನಾಲ್ಕು ಪ್ರಶ್ನೆಗಳಿಗೆ "ಹೌದು' ಎಂದು ಉತ್ತರಿಸುವ
ಎಲ್ಲರೂ ಭಾಗ್ಯವಂತರು. ಅವರಲ್ಲಿ ಚಟುವಟಿಕೆಯ ಮೊಳಕೆ ಬದುಕಿದೆ
ಯೆಂದೂ ಉತ್ಸಾಹದ ಕುಡಿ ಸತ್ತಿಲ್ಲವೆಂದೂ ಅದರ ಅರ್ಥ.
ಈ ಮೊಳಕೆ ಬೆಳೆದು, ಕುಡಿ ಒಡೆದು, ಹೆಮ್ಮರವ್ಧಾಗಬೇಕಾದರೆ
-ಏನು ಮಾಡುವುದು ? *ಬೌರನ್‌ವಿಟಾ' ಕುಡಿದರೆ ಸಾಕೆ? ಸಾಲದು,
"ಮತ್ತೇನು ಮಾಡಿದರೆ ಸಾಕು? ಓಡಿದರೆ ಸಾಕು!
ಓಟ ೯೩
ಈಗ "ಓಟ'ದ ಒಂದೇ ಒಂದು ಪ್ರಕಾರ ಸದ್ಯದಲ್ಲಿ ಬಳಕೆಯಲ್ಲಿದೆ.
ಸಮಸ್ಯೆಗಳಿಂದ ಕಾಲು ಕೀಳುವ, ಸಂಭಾವ್ಮ ಕಷ್ಟಗಳಿಂದ ಪಾರಾಗುವ
ರೂಪದಲ್ಲಿ ಮಾತ್ರ ಅದು ಪ್ರಚಲಿತ!
ಆದರೆ “ಓಟ” ಸಮಸ್ಕೆಗಳನ್ನು ಬಗ್ಗಿಸಲು, ಕಷ್ಟಗಳನ್ನು ಕುಗ್ಗಿ
ಸಲು ಬೇಕಾಗುವ ಗಟ್ಟಿ ಹೃದಯವನ್ನು ನಿರ್ಮಾಣ ಮಾಡುವುದೆಂದು ಎಷ್ಟು
ಮಂದಿ ಅರಿತಿರುವರು?
ಸುಮಾರು ಎಲ್ಲ ಅವಯವಗಳಿಗೆ ವ್ಮಾಯಾಮ ನೀಡುವ ಪೂರ್ಣ
ವ್ಯಾಯಾಮಗಳು ಕೆಲವು. ಅವುಗಳಲ್ಲಿ ಪ್ರಮುಖವಾದವು ಬೆಟ್ಟ ಹತ್ತು
ವುದು, ಕುದುರೆಸವಾರಿ, ಈಜು, ಸೂರ್ಯನಮಸ್ಕಾರ, ಕುಸ್ತಿ ಮತ್ತು ಓಟ.
ಸಾಮಾನ್ಯ ನಡಿಗೆಯಲ್ಲಿ ಶೇಕಡ ೫೬ ರಷ್ಟು ಮಾಂಸಖಂಡಗಳು
ಶ್ರಮದಲ್ಲಿ ಪಾಲ್ಗೊಳ್ಳುವುವು.
ಉಕ್ಕನ್ನು ಹದಮಾಡಲು ಉಷ್ಣ-ಶೀತಗಳಿಗೆ ಅದನ್ನು ಗುರಿ
ಮಾಡುವಂತೆ, ಶರೀರವನ್ನು ಹದಮಾಡಲು. ನಡಿಗೆ. ಓಟಗಳಿಗೆ ಗುರಿ
ಪಡಿಸಬೇಕು.
ಓಟ ನಡಿಗೆಯಿಂದ ಯಾವ ರೀತಿ ಭಿನ್ನವಾದುದು? ನಡಿಗೆಯಲ್ಲಿ
ಮುಂದಿನ ಕಾಲು ನೆಲಕ್ಕೆ ಬರುವವರೆಗೆ ಹಿಂದಿನ ಕಾಲು ಎತ್ತಬಾರದು.
ಆದರೆ ಓಟದಲ್ಲಿ ಪ್ರತಿ ಹೆಜ್ಜೆಗೂ ಎರಡೂ ಕಾಲುಗಳು ನೆಲದ ಸಂಪರ್ಕ ಕಳೆದು
ಕೊಳ್ಳುವುವು ಮತ್ತು ಒಂದಾದ ಮೇಲೊಂದು ನೆಲದ ಸಂಪರ್ಕ ಗಳಿಸುವುವು.
ಓಟಗಾರರಲ್ಲಿ ಮುಖ್ಯವಾಗಿ ಎರಡು ಭಾಗಗಳು: 0) ಸ್ಪರ್ಧಿ
೨) ವ್ಯಾಯಾಮಿ.
ಸ್ಪರ್ಧೆಯ ಓಟಗಾರರಲ್ಲಿ ಪ್ರಮುಖವಾಗಿ ಮೂರು ಗುಂಪುಗಳು
೧) ಅಲ್ಪ ಅಂತರ ೨) ಮಧ್ಯ ಅಂತರ ೩) ದೀರ್ಫ ಅಂತರ.
ಶರೀರದ ಸಮತೋಲ ಓಟದ ಪ್ರಾಥಮಿಕ ಸಂಗತಿಗಳನ್ನು ಕಲಿಯು
ವಾಗ ಗಮನವಿಡಬೇಕಾದ ಮೊದಲನೇ ಅಗತ್ಯ ಅಂಶ. ಎಲ್ಲ ಓಟದ
ಪ್ರಕಾರಗಳಲ್ಲಿ ಶರೀರ ಲಂಬದಿಂದ ಕಿಂಚಿತ್‌ ಮುಂದೆ ಬಾಗಿರಬೇಕು. ತಲೆ
ಮತ್ತು ಕತ್ತು ಬಿಗಿ ಹಿಡಿಯದೆ ಸಹಜವಾಗಿರಬೇಕು. .
೯೪ ಶರೀರ ಶಿಲ್ಪಬ್ಬ

ಉದರದ ಮಾಂಸಖಂಡಗಳನ್ನು ಒಳಕ್ಕೆ ಎಳೆದು ಎದೆಯನ್ನು ಮೇಲೆತ್ತಿ


ಭುಜಗಳನ್ನು ಸ್ವಲ್ಪ ಹಿಂದಕ್ಕೆ ಮತ್ತು ಮೇಲಕ್ಕೆ ಎಳೆದುಕೊಳ್ಳಬೇಕು.
ಕೈಗಳನ್ನು ಮಡಿಸಿ, ಕಾಲುಗಳಿಗೆ ಹೊಂದಿಕೊಂಡು (ಬಲಗಾಲು, ಎಡಗೈ)
ಭುಜಗಳಿಂದ ಅಲ್ಲಾಡಿಸಬೇಕು.
ನಡಿಗೆಯಲ್ಲಿ ಪಾದಗಳು ಮಧ್ಯರೇಖೆಯಿಂದ ೧೫ ಡಿಗ್ರಿ ಪಕ್ಕಕ್ಕೆ ವಾಲಿ
ರುತ್ತವೆ. ಗತಿಕ್ರಮಕ್ಕೆ ಅದೇ ಸೂಕ್ತವಾದದ್ದು. ಆದರೆ ಓಡುವಾಗ
ಸಮಾನಾಂತರ ಪಾದಗಳು ಹೆಜ್ಜೆಯ ದೂರವನ್ನು ಹೆಚ್ಚಿಸುವುವು. ಸಾಕಷ್ಟು
ಎತ್ತರದಲ್ಲಿ ಓಡುವುದರಿಂದ ಕಾಲಂಗಳನ್ನು ನೇರಮಾಡಲು ಸಾಕಷ್ಟು ಅವಕಾಶ
ಸಿಕ್ಕಿ ಹೆಚ್ಚು ದೂರವನ್ನು ಕ್ರಮಿಸಬಹುದು.
ಕಾಲಗಳನ್ನು ಹೆಚ್ಚು ಮಡಿಸಲೂಬಾರದು ಅಥವಾ ಸಡಿಲವೂ
ಬಿಡಬಾರದು. ಕಾಲುಗಳು, ಕೈಗಳು ಸುಸಂಗತವಾಗಿ ಚಲಿಸಬೇಕು. ಇದ
ರಿಂದ ಶಕ್ತಿಯಲ್ಲಿ ಉಳಿತಾಯವೂ ಆಗುವುದು.
ಕಾಲಬೆರಳುಗಳ ಮೇಲೆ ಓಡುವುದರಿಂದ ದೂರ ಹೆಜ್ಜೆ ಹಾಕಬಹುದು
ಮತ್ತು ಜಿಗಿತಕ್ಕೆ ಹಿಮ್ಮಡಿ ಹೆಚ್ಚು ಸಹಾಯಕವಾಗಂವುದು. ಪಾದಗಳು
ನೇರವಾಗಿ ಮುಂದಕ್ಕೆ ಹೋಗಬೇಕು. ಹಿಮ್ಮಡಿ ಮತ್ತು ಬೆರಳುಗಳು
ಒಂದೇ ನೇರದಲ್ಲಿರಬೇಕು. ನೆಲವನ್ನು ಹೆಚ್ಚು ಒತ್ತಬಾರದು.
ಸ್ಪರ್ಧೆಯ ಓಟ ಮತ್ತು ವ್ಯಾಯಾಮಕ್ಕಾಗಿ ಓಟ ಓಡುವವರ ಮಾನ
ಸಿಕ ಸ್ಥಿತಿಯೇ ಬೇರೆಯಾಗಿರುತ್ತದೆ. ಸ್ಪರ್ಧೆಯ ಓಟಗಾರರಲ್ಲಿ ಮಿಕ್ಕವರನ್ನು
ಮಾರಿಸಲು, ದಾಖಲೆಯನ್ನು ಸ್ಥಾಪಿಸಲು ಸಾಧನೆ ಅಗತ್ಯ. ಆದ್ದರಿಂದ
ಓಟದ ಪ್ರಾರಂಭ, ಹೆಜ್ಜೆಯ ದೂರ ಮತ್ತು ರೀತಿ ಗತಿಯ ಕಲ್ಪನೆ,
ಗುರಿಮುಟ್ಟುವ ಕ್ಷಣದ ಕೃತಿ ಇವುಗಳನ್ನು ಪ್ರತ್ಮೇಕವಾಗಿ ಕೆಲವು ವಾರಗಳು
ಶಾಸ್ತ್ರೋಕ್ತವಾಗಿ ಅಭ್ಯಾಸ ಮಾಡಬೇಕು.
ವ್ಯಾಯಾಮಕ್ಕಾಗಿ ಓಡುವವನಿಗೆ ಮಾನಸಿಕ ಬಳಲಿಕೆ ಆಗುವುದಿಲ್ಲ.
ಆದ್ದರಿಂದ ಶರೀರದ ಹತೋಟಿ ಅವನಿಗೆ ಸಮಸ್ಯೆಯಾಗುವುದಿಲ್ಲ. ಈ ಓಟ
ದಲ್ಲಿ ಆರಂಭದ ಆತುರ ಮತ್ತು ಅಂತ್ಮದ ಆತಂಕ ಇರುವುದಿಲ್ಲ. ಆದ್ದರಿಂದ
ಸಮಾನವಾದ ಹೆಜ್ಜೆಗಳನ್ನು ಸುಧಾರಿಸಿದ ಗತಿಯಲ್ಲಿ ಹಾಕುತ್ತಾ ಹೋಗಬೇಕು.
ಓಟ ೯೫

ಲವಲವಿಕೆಗಾಗಿ ಒಂದರಿಂದ ಒಂದೂವರೆ ಮೈಲಿ ಓಡಬಹುದು.


ವ್ಯಾಯಾಮಕ್ಕಾಗಿ ೨ ರಿಂದ ೫ ಮೈಲಿಯವರೆಗೆ ಓಡಬೇಕು. ಶರೀರ ಚೆನ್ನಾಗಿ
`ಬೆವರುವುದಕ್ಕೆ ಸಾಕಷ್ಟು ಅವಕಾಶವಿರಲು ಹವಾಮಾನಕ್ಕೆ ತಕ್ಕ ಉಡುಪು
ಥರಿಸಬೇಕು.
ಹೃದಯ ಮತ್ತು ಶ್ವಾಸಕೋಶಗಳ ಪರೀಕ್ಷೆ ಆಗಾಗ್ಗೆ ೧ ಮಾಡಿಸಿಕೊಳ ೪
ಬೇಕು.
ಓಟವು ರಕ್ತಚಲನೆ ಮತ್ತು ಉಸಿರಾಟಗಳಿಗೆ ಅಧಿಕ ಕರೆ ಕೊಡುತ್ತದೆ.
ಹೃದಯ ಮತ್ತು ಶ್ವಾಸಕೋಶಗಳ ಕರ್ತತ್ವ
ಹೆಚ್ಚಿಸಲು ಸೊಗಸಾದ ಸಾಧನ ಓಟ. ಶರೀರದ
'ಅಡಗಿಟ್ಟ ಶಕ್ತಿಯನ್ನು ಹೊರಹೊಮ್ಮಿಸುವ,
ಕೂಡಿಟ್ಟ ಕೊಬ್ಬನ್ನು ಕರಗಿಸುವ ಯಶಸ್ವೀ
ಉಪಕರಣ. ಜೊತೆಗೆ ಓಟದಿಂದಾಗಿ ಮೈಕಟ್ಟು
ಗಟ್ಟಿಯಾಗುವುದಂ ; ಶರೀರ ಗಡಸಾಗುವುದು.
ನಿರೋಧ ಶಕ್ತಿ, ಸಹನ ಶಕ್ತಿ ಬೆಳೆಯುವುದು.
ಕಲ್ಲುಬಂಡೆಯ ಮೇಲೆ, ಮಂಜು ಕವಿದ ಹುಲ್ಲಿನ
ಮೇಲೆ, ಹಳ್ಳತಿಟ್ಟಗಳಲ್ಲಿ, ಗುಡ್ಡಗಾಡುಗಳಲ್ಲಿ
ಒಡುವುದರಿಂದ ಮೇಲಿನ ಉಪಯೋಗಗಳನ್ನು
ಮತ್ತಷ್ಟು ಹೆಚ್ಚಿಸಬಹುದು. ಬರಿಗಾಲಲ್ಲಿ, ಒಳ್ಳೆ
ನೆಲದಲ್ಲಿ ಓಡುವುದರಿಂದ ಪಾದಗಳ ಬಲ
ಹೆಚ್ಚುವುದು.
ಪಾದಗಳ ರಕ್ಷಣೆ ವಿಶೇಷ ಗಮನ ವಹಿಸಬೇಕಾದ ಸಂಗತಿ. ಹೆಚ್ಚು
ಶ್ರಮವಾದಾಗ ಮಸಾಜ್‌ನಿಂದಲೂ ಕಲ್ಲುಒತ್ತು ಮತ್ತು ಚಳಿಯಿಂದ ಬಿರುಕು
ಬಿಟ್ಟಾಗ ಯೋಗ್ಯ ಆರೈಕೆಯಿಂದಲೂ ಪೋಷಿಸಬೇಕು.
ಹೀಗೆ ಓಟದ ಅಭ್ಯಾಸ ಮಾಡಿ ಬೆನ್ನಟ್ಟೆ ಹೋದ ಹರಿಣ ಹಲುಬು
ವಂತೆ, ಸ್ಪರ್ಧೆಗೆ ನಿಂತ ಕುದುರೆ ಕೊರಗುವಂತೆ ಮಾಡುವ ಸಲುವಾಗಿ
ಓಡುವ ಸ್ವಭಾವ ಎಲ್ಲ ಕಡೆ ಹಬ್ಬಲಿ.
೧೬ ಸೈಕಲ್‌ ಸನಾರಿ'

ಇಂದಂತೂ ನಮ್ಮಲ್ಲಿ ಪ್ರಾಯಶಃ ಸೈಕಲ್‌ ಕಾಣದ ವ್ಯಕ್ತಿ ಇಲ್ಲ;


ಸೈಕಲ್‌ ಇರದ ಹಳ್ಳಿ ಇಲ್ಲ. ವ್ಯಕ್ತಿ
ಕ್ರೆಗಳನ್ನು,' ಸಣ್ಣಸಾಮಾನುಗಳನ್ನು ಸಾಗಿ
ಸಲು ಸೈಕಲ್‌ ಅತಿ ಉಪಯುಕ್ತ ವಾಹನ ಎನ್ನುವುದರಲ್ಲಿ ಸಂಶಯವಿಲ್ಲ.
ಸಾಮಾನ್ಯ ಕುಟುಂಬಗಳ ಕೈಬಿಡದ ನೆಂಟ, ನೆಚ್ಚಿನಸೇವ ನಮಗಿಂತಲೂ
"ಹೆಚ್ಚು ದುಡಿಯಂವ ಕಡಿಮೆ ಬಯಕೆಗಳುಳ್ಳ ಮಿಕ
ಸೈಕಲಿನ ಅನೇಕ ಉಪಯೋಗಗಳಲ್ಲಿ ಒಂದಂ ಬಹಳ ಕಡಿಮೆ ಬಳಕೆ
ಯಲ್ಲಿದೆ. ಸೈಕಲ್‌ ವ್ಯ್ಮಾಯಾವಂಕ್ಕೆ ಹಿತಕರವಾದ ಶ್ರೇಷ್ಠ ಉಪಕರಣ
ಎನ್ನುವುದನ್ನು ಮರೆತು ಅಧಿಕ ಹಣ ತೆತ್ತು ನಿರುಪಯೋಗಿ ಸಾಧನ
ಗಳನ್ನು ಕೊಳ್ಳುವರು ಅದೆಷ್ಟೋ ಮಂಂದಿ.
ಕೆಲವು ರಾಷಷ್ರಗಳಲ್ಲಂತೂ ಸೈಕಲ್‌ ಕೇವಲ ವ್ಯಾಯಾಮದ ಸಾಧನ
ವಾಗಿಯೇ ಉಪಯೋಗಿಸಲ್ಪಡುತ್ತಲಿದೆ. ಆದರೆ ಇದಂ ಹುಟ್ಟೂರು
ಪ್ಯಾರಿಸಿನಲ್ಲಿ ಇಂದಿಗೂ ವಾಹನವಾಗಿಯರೂ ಬಳಕೆಯಲ್ಲಿದೆ. ೧೬೯೦ ರಲ್ಲಿ
ಸಿವ್ರಕ್‌ ಎಂಬಾತ ಸೈಕಲ್‌ ಕಂಡುಹಿಡಿದನೆಂದು ಪ್ರತೀತಿ. ಆದರೆ ಈ ರೀತಿ
ಸೆೈಕಲ್‌ ಸವಾರಿ ೯೭

ಸವಾರನ ಶಕ್ತಿಯಿಂದ ಮುಂದೆ ಹೋಗುವ ವಾಹನಗಳ ಕಲ್ಪನೆ ಅತಿ ಪುರಾತನ


ವಾದದ್ದು. ಬರೀ ಸೈಕಲ್‌ ಏಕೆ, ಹಾರುವ ಸೈಕಲ್‌ನ (!) ಕಲ್ಪನೆಯನ್ನೂ
ಮಾಡಿದ್ದ ಹೆಸರಾಂತ ಕಲಾಕಾರ ಲಿಯೋನಾರ್ಡೊ ಡವಿಂಚಿ.
ಪ್ಮಾರಿಸಿನ ಸಿವ್ರಕ್‌ ಕಂಡುಹಿಡಿದರೂ ಸ್ಕಾಟ್ಲೆಂಡಿನ ಕಮ್ಮಾರ ಕರ್ಕ್‌
ಪ್ಯಾಟ್ರಿಕ್‌ ಮ್ಯಾಕ್ಕಿಲನ್‌ ತುಳಿಯುವ ವ್ಯವಸ್ಥೆಯನ್ನು ೧೮೩೪ರಲ್ಲಿ
ಚೊಕ್ಕಗೊಳಿಸಿದ. ಆಗ ಅದರ ಚಕ್ರಗಳಿಗೆ ಮರದ ಗಾಲಿಗಳೂ ಕಬ್ಬಿಣದ
ಪಟ್ಟೆಗಳೂ ಇದ್ದವು. ಇಷ್ಟಾದರೂ ಇಂದಿನ ಸೈಕಲಿನ ಮೂಲಸ್ವರೂಪದ
ಅವತಾರ ೧೮೫೦ ರಲ್ಲಿ ಇಂಗ್ಲೆಂಡ್‌ ಮತ್ತು ಫ್ರಾನ್ಸಿನಲ್ಲಾಯಿತು. ಮೊದಲನೆ
ಗಾಡಿ ಅಮೆರಿಕಕ್ಕೆ ಬಂದದ್ದು ೧೮೬೬ ರಲ್ಲಿ.
೧೮೭೮ ರಿಂದಲೇ ಸೈಕಲ್‌ ಸವಾರಿ ಸ್ಪರ್ಧೆ ಜಗತ್ತಿನಲ್ಲಿ ಪ್ರಾರಂಭ
ವಾಯಿತು. ೧೮೮೩ ರಲ್ಲಿ ಅಮೆರಿಕದಲ್ಲಿ ಪ್ರಥಮ
ರಾಷ್ಟ್ರೀಯ ಸ್ಪರ್ಧೆ
ನಡೆಯಿತು. ಅಂದಿನಿಂದ ಸೈಕಲ್‌ ಸವಾರಿ ಸ್ಪರ್ಧೆಯ ಅಧ್ಯಾಯ ಪ್ರಾರಂಭ
ವಾಯಿತು. ರೃಸ್ತೆಗಳಲ್ಲಿ ಸ್ಪರ್ಧೆಗಳು ಜನಪ್ರಿಯವಾದವು. ಇದಕ್ಕಾಗಿಯೇ
ಕಣಗಳನ್ನು ಕಟ್ಟಲು ಆರಂಭ ಮಾಡಿದರು.
ಸ್ಪರ್ಧೆ ಜನಪ್ರಿಯ ಆದಮೇಲೆ ಕಾಟ ದಾರಿಹೋಕರಿಗೆ. ಕಾರಣ,
ಎಲ್ಲ ಸ್ಪರ್ಧಿಗಳೂ ರಸ್ತೆಗಳಲ್ಲೆ ಅಭ್ಯಾಸಕ್ಕೆ ತೊಡಗುತ್ತಿದ್ದರು. ಇದನ್ನು
ತಪ್ಪಿಸಲು ಕಾನೂನುಗಳನ್ನು ಮಾಡಬೇಕಾಯಿತು.
ನ್ಯೂಯಾರ್ಕಿಸಲ್ಲಿ ೬ ದಿನಗಳ ಸೈಕಲ್‌ ಸ್ಪರ್ಧೆ ಏರ್ಪಡಿಸಲಾಯಿತು.
ಸ್ಪರ್ಧಿಗಳು ಹಗಲೂ ರಾತ್ರಿ ಸೈಕಲ್‌ ತುಳಿಯುತ್ತಿದ್ದರು. ತುಳಿಯುವಾ
ಗಲೇ ಆಹಾರವನ್ನೂ ಸ್ವೀಕರಿಸುತ್ತಿದ್ದರು.
ನಮ್ಮ ದೇಶದಲ್ಲೂ ಈ ರೀತಿ ಸಂತೆಗಳಲ್ಲಿ ಜಾತ್ರೆಗಳಲ್ಲಿ, ವಿಶೇಷ
ಪ ಸಂಗಗಳಲಿ ಹತ್ತಾರು ದಿನಗಳು ನಿರಂತರವಾಗಿ ಸೈಕಲ್‌ ತುಳಿಯುವ
ಧೀರರ ವರ್ಣನೆಗಳನ್ನು ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ. ಅವರಂ
ದಿನನಿತ್ಯದ ಎಲ್ಲ ಕರ್ಮಗಳನ್ನೂ ಸೈಕಲ್‌ ಮೇಲೆ ಇದ್ದೇ ಮಾಡುತ್ತಾರೆ!
ಮೊದಲನೇ ಆಧುನಿಕ ಒಲಿಂಪಿಕ್‌ ಪಂದ್ಯಗಳು ಫ್ರಾನ್ಸಿನ ಬ್ಯಾರನ್‌-
ಡಿ-ಕ್ಕುಬರ್ಟಿನನಿಂದ ಯೋಜಿಸಲ್ಪಟ್ಟವು. ಫ್ರೆಂಚ್‌ ಜನತೆಯ ಆಗ್ರಹ

೭]
೯೮ 'ಶರೀರ ಶಿಲ್ಪ

ದಿಂದಸೈಕಲ್‌ ಸವಾರಿಯನ್ನು ಸ್ನಶರ್ಧೆಗಳ ಮಾಲಿಕೆಯಲ್ಲಿ ಪೋಣಿಸಲಾಯಿತು.


ಅನಂತರ ಒಲಿಂಪಿಕ್‌ ಪಂದ್ಮಗಳ ಬೆಂಬಲದಿಂದ ಇಡೀ ಜಗತ್ತಿನಲ್ಲಿ ಸೈಕಲ್‌
ಸವಾರಿ ಅಂತರರಾಷ್ಟ್ರೀಯ ಡನ ಪರಿಗಣಿಸಲಾಯಿತು.
ಮೊದಲನೇ ಸೈಕಲ್‌ ಸ್ಪರ್ಧೆ (ಒಲಿಂಪಿಕ್‌) ಅಥೆನ್ಸಿನಲ್ಲಿ ನಡೆಯಿತು.
ಅದರನಂತರ ಪ್ರತಿ ಒಲಿಂಪಿಕ್‌ನಲ್ಲಿಯಯಊ ಸೈಕಲ್‌ ಸವಾರಿಯ ಪ್ರಾಮುಖ್ಯತೆ
ಬೆಳೆಯುತ್ತಾ ಹೋಯಿತು. ಈಗ ಸೈಕಲ್‌ ಸವಾರಿ ಒಲಿಂಪಿಕ್‌ ಪಂದ್ಮಗಳಲ್ಲಿ
ರೋಮಾಂಚನಗೊಳಿಸಿ ಕುತೂಹಲ ಕೆರಳಿಸುವ ಸ್ಪರ್ಧೆಗಳಲ್ಲಿ ಮುಖ್ಯ
ವಾದದ್ದಾಗಿದೆ.
| ಸೈಕಲ್‌ ಸವಾರಿಯಲ್ಲಿ ಬೇಗ
ಹೋಗುವ ಸ್ಪರ್ಧೆ ಎಷ್ಟು ಪ್ರಮು
ಖವೋ ಹಾಗೇ ನರಃ
ಹೋಗುವುದರಲ್ಲಿಯೂ ಸ್ಪರ್ಧೆ
ಗಳಿವೆ. ಅವೂ ಅಷ್ಟೇ ಸೋಜಿಗ
ದವು.
ಸೈಕಲ್‌ ಸವಾರಿ ಶಾರೀರಿಕ
ವಾಗಿಯೇ ಅಲ್ಲ, ಮಾನಸಿಕವಾಗಿ
ಬಾಮ್‌ ಯೂ ಹಿತಕಾರಿ. ಒಬ್ಬರೇ ಅಥವಾ
ಅನೇಕರ ಜೊತೆಗೂಡಿ ಸೈಕಲ್‌ ಹತ್ತಿ ಅಲೆಯುತ್ತಾ ದರ್ಶನೀಯ ಸ್ಮಾನಗಳ
ನೋಟಕ್ಕೆ ನುಗ್ಗಿದರೆ ಆಸು ಆನಂದ ಸಾಟಿ ಇಲ್ಲದ್ದು. ಹೀಗೆ ಅನಿಕೇ ತರಾಗಿ
ಡಾ ಬರುವ ಗಂಂಪುಗಳು ತಯಾರಾಗಲಿ. ಅನುಭವಗಳನ್ನು ಬರೆದಿಡಲಿ.
ಆದಂತಹ ಉಲ್ಲಾಸವನ್ನು ಇತರರೊಡನೆ ಹಂಚಿಕೊಳ್ಳ ಲಿ,
ಒಂದು ಎಚ್ಚರಿಕೆ. ಸೈಕಲ್‌ ತುಳಿಯುವಾಗ ಯಾವುದೋ ವಿಶಿಷ್ಟ
ಕೆಲಸಕ್ಕೆ ಯತ್ನಎಲ್ಲದೆ ಸೈಕಲ್‌ ತುಳಿಯುತ್ತಿರುವೆನೆಂಬ ಭಾವನೆ ಬಂದ.
ಕೂಡಲೇ ಸವಾರಿಯ ಉಲ್ಲಾಸ~ ನಷ್ಟವಾಗುವುದು. ಸೈಕಲ್‌ ಸವಾರಿಯ
ಅವಕಾಶ ಸಿಕ್ಕಿದಾಗಲೆಲ್ಲಾ ಸ್ವಸ
ಸಂತೋಷದಿಂದ ಗ ವಾ ಯಾಮ
ಸೆಕಲ್‌ ಸವಾರಿ ರ್ಥ

ಎಂದು ಅರಿತಾಗ ಮಾತ್ರ ವ್ಮಾಯಾಮವಾಗುವುದು ; ಉಲ್ಲಾಸವಾಗುವುದು.


ಇಲ್ಲದಿದ್ದಲ್ಲಿ ಶನ ಆಯಾಸವಾಗುವುದು.
ಶರೀರದ ಗಾತ್ರವನ್ನು ಕರಗಿಸಲು, ಹಸಿವನ್ನು ಹೆಚ್ಚಿಸಲು, ಬೆವ
ರನ್ನು ಇಳಿಸಲು, ಸೊಗಸಾದ ನಿದ್ರೆ ಪಡೆಯಲು ವೇಗವೇಗವಾಗಿ ಸೈಕಲನ್ನು
ದೂರೆ ದೂರ ಸವಾರಿ ಮಾಡುವುದು ಲಾಭದಾಯಕ.
ಸಾತತ್ಮದ ಗುಣ ಪಡೆಯಲು, ಶರೀರಕ್ಕೆ ಶ್ರಮಸಹನ ಶಕ್ತಿ
ಬೆಳೆಸಲು ಪ್ರತಿದಿನ ನಿಶ್ಚಿತ ಸೈಕಲ್‌ನಲ್ಲಿ, ಕಂಡಿರುವ ರಸ್ತೆಯಲ್ಲಿ, ಅದೇ
ಸಮಯಕ್ಕೆ ಒಂದೇ ವೇಗದಲ್ಲಿ (ಗಂಟೆಗೆ ೧೦ ಮೈಲಿಯಿಂದ ೨೦ ಮೈಲಿ
ವರೆಗೆ) ಹೋಗುವ ಅಭ್ಯಾಸ ಮಾಡಿಕೊಳ್ಳಬೇಕು. ಕನಿಷ್ಠ ಅವಧಿಯನ್ನು
ನಿಗದಿ ಮಾಡಿ ಸಾಧ್ಮವಾದಾಗಲೆಲ್ಲಾ ಅವಧಿಯನ್ನು ಹೆಚ್ಚಿಸುತ್ತಾ ಹೋಗ
ಬಹುದು. ಎಂದೂ ಕನಿಷ್ಮಕ್ಕಿಂತ ಕಡಿಮೆ ಮಾಡಬಾರದು. ಸೈಕಲ್‌ ಚಕ್ರ
ಗಳಿಗೆ ತುಂಬಾ ಗಾಳಿ ಹಾಕಿ ಸ್ವಚ್ಛ ಮಾಡಿ ಎಣ್ಣೆ ಕುಡಿಸುವುದನ್ನು ಎಂದೂ
ಮರೆಯಬಾರದು. ಸೈಕಲ್‌ ಸರ್ವಾಂಗಪೂರ್ಣವಾಗಿರಲಿ, ಅಲಂಕಾರರಹಿತ
ವಾಗಿರಲಿ.
|
೧೭ | ಈಜೋಣ ಬನ್ನಿ

ತಾನು ಹಿಡಿದ ಕೆಲಸವನ್ನು ಮುಗಿಸಲು ಪ್ರಯತ್ನ ಮಾಡುವ ಸನ್ನಿ


ವೇಶದಲ್ಲಿ ಪರಿಸ್ಥಿತಿ ವಿಕೋಪಗೊಂಡು, ನೂರಾರು ಅಡ್ಡಿಗಳು ಅಡ್ಡಬಂದು,
ಹತ್ತಾರು ಕಷ್ಟಗಳು ಎದುರುಬಿದ್ದಾಗ ವ್ಮಕ್ತಿಯ ನಡವಳಿಕೆಯ ಧಾಟಿಯೇ
ಅವನ ಪರಿಚಯ. ಆಗಲೇ ವೃಕ್ತಿಯ ವ್ಯಕ್ತಿತ್ವದ ಪರೀಕ್ಷೆಯಾಗುವುದು.
ಕವಡೆಯೋ ಕಬ್ಬಿಣವೋ, ಟೊಳ್ಳೋ ಗಟ್ಟೆಯೋ ಎಂದು.
೧೯೬೬ ರ ಚೈತ್ರ ಹುಣ್ಣಿಮೆಯ ದಿನ ಒಂದು ಅಸಾಧಾರಣ ವ್ಯಕ್ತಿತ್ವದ
ಪರಿಚಯ ಆಯಿತು, ಲೋಕಕ್ಕೆ. ಅಂದು ಕಲ್ಕತ್ತೆಯ ನ್ಯಾಯವಾದಿ
ಶ್ರೀ ಮಿಹಿರಸೇನ್‌ ಜಲವ್ಮಾಯಾಮದ ಇತಿಹಾಸದಲ್ಲಿ ನೂತನ ಅಧ್ಕಾಯ
ವನ್ನು ನಿರ್ಮಿಸಿದರು - ತಮ್ಮ ಅಪೂರ್ವ ಪ್ರಯತ್ನದಿಂದ, ಅಪ್ರತಿಮ ಸಾಹಸ
ದಿಂದ. ಶ್ರೀ ಸೇನ್‌ ತಲೈಮನ್ನಾರಿನಿಂದ ಧನುಷ್ಕೋಡಿಯವರೆಗೆ ಸುಮಾರು
೨೨ ಮೈಲಿಗಳನ್ನು ೨೫ ಗಂಟೆಗಳಲ್ಲಿ ಈಜಿ ದಾಟಿದರು. ಈ ಅನುಪಮ
ಉದ್ಯಮಕ್ಕೆ ಕೈಹಾಕುವ ಮುಂಚೆಯೇ ಈ ದೂರದ ಬಗ್ಗೆ ಭಯ ನಿರ್ಮಾಣ
ಮಾಡಲು ಅನೇಕ ಪ್ರಯತ್ನಗಳಾದುವು - ಮಿತ್ರರಿಂದ ಮತ್ತು ಬಂಧು
ಈಜೋಣ ಬನ್ನಿ ೧೦೧
ಗಳಿಂದ. ಈ ಸಮುದ್ರಭಾಗದ ಅನಿರ್ದಿಷ್ಟ ಸ್ವಭಾವದ ಬಗ್ಗೆ ಎಚ್ಚರಿಸ
ಲಾಗಿತ್ತು. ಅಂದು ಹೇಳಿಕೇಳಿ ಹುಣ್ಣಿಮೆ. ಸಮುದ್ರರಾಜ ಆನಂದದಿಂದ
ನರ್ತನ ಮಾಡುವ ಮುಹೂರ್ತ. ಜೊತೆಗೆ ಈ ಜಲಸಂಧಿ ಅತಿ ಕ್ರೂರ ಜಲ
ಚರಗಳ ತವರು ಎಂದು ಗೊತ್ತಿತ್ತು. ಇಷ್ಟಾದರೂ ಸೇನರ ನಿರ್ಧಾರ
ಜಗ್ಗಲಿಲ್ಲ; ಉತ್ಸಾಹ ಕುಗ್ಗಲಿಲ್ಲ; ಜಲಪ್ರಯಾಣ ಪ್ರಾರಂಭಿಸಿಯೇ
ಬಿಟ್ಟರು.
ಇಡೀ ಪ್ರಯಾಣಕ್ಕೆ ೧೨. ೧೪ ಗಂಟೆಗಳ ಲೆಕ್ಕ ಹಾಕಲಾಗಿತ್ತು. ಅಷ್ಟು
ಸಮಯಕ್ಕೆ ಅರ್ಧದಷ್ಟೇ ದೂರ ಹೋಗಲು ಸಾಧ್ಯವಾಯಿತು. ದಿನ
ಬೆಳೆಯುತ್ತಿದ್ದಂತೆ ಬಿಸಿಲು ತಡೆಯಲಾಗದಷ್ಟಾಯಿತು. ತಲೆಯ ಮೇಲೆ
ಇಡಲಾಗಿದ್ದ ಮಂಜಿನ ಗಡ್ಡೆಯೂ ಜಾರಿಹೋಯಿತು. ಮತ್ತೆ ತರಲು
ಅನೇಕ ಅಡ್ಡಿಗಳು. ಆದರೂ ತರಲಾಯಿತು - ಸಾಕಷ್ಟು ಸಮಯದನಂತರ.
ಮೂರಡಿ ಉದ್ದದ ಹಾವು ಅಡ್ಡ ಬಂದಿತ್ತು. ಭಾರಿ ಬಿರುಗಾಳಿಗಳು,
ಹೆದೆ_ರೆಗಳು

ಅವರನ್ನು ತಮ್ಮ ಪಥದಿಂದ ದೂರ ಕೊಂಡೊಯ್ಯುತ್ತಿ ದವು
ವು.
ಮತ್ತೆ ತಮ್ಮ ಜಾಡಿಗೆ ಬರುತ್ತಿದ್ದರು. ಅಂದಿನ ಉಬ್ಬರವಿಳಿತಗಳು
ಹೇಣ್ತೆಅಣವನ್ನ ಮಸ್ಸಾಧ್ಯ ಮಾಡಿದ್ದ ವು. ಆಹಾರ ಕೊಡುವವ್ಯವಸ್ಥೆಸ ಯೂ
ಕುಸಿದುಬಿದ್ದಿ ತ್ತು. ಪ್ರತಿನಿಮಿಷಕ್ಕೂ ತಮ್ಮ ನಿರ್ಧಾರದಿಂದ ಕದಲುವಂತೆ
ಮಾಡಲು ಸನ್ನಿವೇಶಗಳು ವಿಕೋಪಗೊಂಡಿದ್ದವು. ಆದರೂ ಸೇನ್‌
ನಿರ್ಧಾರದಲ್ಲಿ ಅಚಲರಾಗಿದ್ದರು. ಆ ಪ್ರಯಾಣ ಮುಗಿಸಿದ ಪ್ರಥಮ ಭಾರ
ಚತುರರು;
ವಾ ಪ್ರಯತ್ನಕ್ಕೆ ಕೈಹಾಕುವ ಮುಂಚೆ ಸೇನ್‌, “ನಮ್ಮ ತರುಣ
ರಲ್ಲಿ ಧೈರ್ಯ, ಸಾಹಸಕ್ಕೆ ಪ್ರೇರಣೆ ಕೊಡಲೆಂದೇ ಈ ಉದ್ಯಮಕ್ಕೆ ಕೈ
ಹಾಕಿದ್ದೇನೆ? ಎಂದರು. ಇನ್ನು ಮುಂದೆ ಇಂತಹ ಸಸಾಹಸಗಳಿಗೆ ಇದು ನಂದಿ

ಗ ಇಗ ಗ!

ಯಾಯಿತೆಂದು ಎಣಿಸೋ ಣವೇ


ಓಂ ) ಎಟುಕಲಾರದಂತಹ ಪರ್ವತಸಖರಗಳು,

ಅಡ್ಡಾಡಲಾರದಂತಹ ದಟ್ಟ ಕಾಡುಗಳು, ದಾಟಲಾರದಂತಹ ಜಂಚಲ


ನದಿಗಳು, ಪಳಗಿಸಲಾರದಂತಹ ಕ್ರೂರ ವನ್ಯ ಮೃಗಗಳು ನಮ್ಮ
ಭೂಮಿಯಲ್ಲಿ ಸಾಲದೆ ಹೋದಾವು, ಅಲ್ಲವೆ?
[ea]
೧೦೨ ಶರೀರ ಶಿಲ್ಪ

ಅಂದ ಮೇಲೆ ಪ್ರಾರಂಭ ಎಲ್ಲಿಂದ? ತಯಾರಿ ಎಂದಿನಿಂದ? ೨೫


ಗಂಟೆಗಳು ಸಮುದ್ರದಲ್ಲಿ೨೨ ಮೈಲಿ ಈಜು ಸುಂಟರಗಾಳಿಯ ನಡುವೆ
ಉಬ್ಬರವಿಳಿತಗಳ ಮಧ್ಯೆ ಸಮುದ್ರದ ಈಜು - ಇವೆಲ್ಲವುಗಳೂ ಮುಂಬರುವ
ದಿನಗಳಿಗೆ.
ಇಂದು, ಈಗ, ಕೇವಲ ಸಾಮಾನ್ಮ ಈಜಿನಿಂದಲೇ ಪ್ರಾರಂಭ
ಮಾಡೋಣ. ನಿಜ, ಈಜು ಎಂದರೆ ಅನೇಕರು ಬೆಚ್ಚಿಬೀಳುವ ಸಂಗತಿ.
ನೀರಿನ ಬಗ್ಗೆ ಭೀತಿ ಇರುವುದು ತಪ್ಪೇನೂ ಅಲ್ಲ. ಆದರೆ ಭೀತಿ ಇರುವುದು
ಗೊತ್ತಿದ್ದು, ಆ ಭೀತಿಯನ್ನು ತೊಡೆದುಹಾಕಲು ಪ್ರಯತ್ನಕ್ಕೆ ಕೈಹಾಕದಿರು
ವುದು ತಪ್ಪು. ಅನೇಕ ಬಾರಿ ಈ ಭೀತಿಗೆ ಅನೇಕ ತಾಯಂದಿರು ಮತ್ತು
ಪೋಷಕರೇ ಕಾರಣ.
ಆದರೆ ಲ್ಯಾಂಕಾಷೈರಿನ ಮಾರ್ಗರೆಟ್‌ ಯಾಟ್ಸ್‌ ತನ್ನ ಮೂರು ವರ್ಷದ
ಮಗಳು ರೆರೋ ಯಾಟ್ಸ್‌ಗೆ ಈಜಿನ ಅನೇಕ ಪ್ರಕಾರಗಳನ್ನು ಕಲಿಸಿದ
ಸುದ್ದಿ ಮತ್ತು ಚಿತ್ರವನ್ನು ಒಂದು ಪತ್ರಿಕೆ ಪ್ರಕಟಿಸಿತ್ತು. ಇದಕ್ಕಿಂತ
ಆಶ್ಚರ್ಯಜನಕವಾದ ಸುದ್ದಿ ಮತ್ತು ಚಿತ್ರವನ್ನು ದೆಹಲಿಯ *ಹಿಂದುಸ್ಮಾನ್‌
ಟೈಮ್ಸ್‌” ಪ್ರಕಟ ಮಾಡಿತ್ತು. ದಕ್ಷಿಣ ಆಫ್ರಿಕದ ಜೋಹಾನ್ಸ್‌ ಬರ್ಗ್‌ನಲ್ಲಿ
ಪ್ರಪಂಚದ ಅತಿ ಕಿರಿಯ ಈಜುಗಾರ ಹ್ಮಾರಿಗನ್‌ ವಾಲ್‌ಪೋಲ್‌ ಅತಿ
ಆಳವಾದ ಕೊಳದಲ್ಲಿ ಈಜಾಡುತ್ತಿದ್ದ. ಹ್ಮಾರಿಗನ್‌ ವಾಲ್‌ಪೋಲ್‌ನ
ವಯಸ್ಸು ಕೇವಲ ಎಂಟು ತಿಂಗಳು. ಅವನಿಗೆ ಆರು ತಿಂಗಳಾಗಿದ್ದಾಗ ಈಜು
ಕಲಿಯಲು ಪ್ರಾರಂಭಮಾಡಿದ. ಶಿಕ್ಷಕಿ ಶ್ರೀಮತಿ ಜಿಲ್‌. ಆಕೆ ಈ ರೀತಿ
ಮಕ್ಕಳಿಗೆ ಸುಲಭವಾಗಿ ಈಜು ಕಲಿಸುವ ವಿದ್ಮೆಯಲ್ಲಿ ತಜ್ಞ ಳಾಗಿದ್ದ ಆಂತೆ.
ಇಲ್ಲಿ ಅನೇಕ ಮಕ್ಕಳಿಗೆ ವಯಸ್ಸು ವರ್ಷಗಳನೇಕವಾದರೂ ತಣ್ಣೀರನ್ನು
ಸ್ವತಃ ಮುಟ್ಟುವ ಭಾಗ್ಯವೂ ದುರ್ಲಭ!
ಒಟ್ಟಿನಲ್ಲಿ ಈಜು ಶರೀರದ ಸಹಜ ಧರ್ಮ ಎಂದೇ ಕಾಣುತ್ತದೆ.
ಭೀತಿಯ ಪೊರೆ ಮಾತ್ರ ತೆಗೆಯಬೇಕು. ನೀರು ನಮ್ಮನ್ನು ಮುಳುಗಿಸ
ದಂತಹ ಶ್ರೇಷ್ಠ ಗುಣವನ್ನು ಪಡೆದಿದೆ ಎಂದು ಗುರುತಿಸುವುದೇ ಈಜು.
ಆ ಗುಣಕ್ಕೆ ಬೆಂಬಲವಾಗಿ ಕೈಕಾಲು ಆಡಿಸುವುದೇ ಕಲೆ.
ಈಜೋಣ ಬನ್ನಿ ೧೦೩

ನಾಯಿಗಳು, ಕುದುರೆಗಳು ಕೂಡ ತಮ್ಮ ಮೊದಲನೇ ಪ್ರಯತ್ನದಲ್ಲೇ


ಮೊದಲನೇ ಕ್ಷಣದಿಂದಲೇ ಈಜಾಡಬಲ್ಲವು. ಶಿಕ್ಷಕರ ಅವಶ್ಯಕತೆಯೇ ಇಲ್ಲ.
ಅಷ್ಟು ಸಹಜ ಸಂಗತಿ ಈಜು.
ಈಜಿನ ವೈಶಿಷ್ಟ್ಯವೆಂದರೆ ನೀರೇ ನಮ್ಮ ಬಹುಭಾರವನ್ನು ಹೊರು
ತ್ತದೆ. ಆದ್ದರಿಂ ಡನೆ
ನೆಲದ ಮೇಲೆ ಮಾಡಲಾರದಂತಹ ಅನೇಕ ಚಲನೆಗಳನ್ನು
ನೀರಿನಲ್ಲಿ ಸುಲಭವ ಇಗಿ ಮಾಡಬಹುದು. ಆದ್ದರಿಂದ ಇದು ಮಕ್ಕಳಿಗೆ,
ವೃದ್ಧರಿಗೆ, ಅಂಗವಿಕಲರಿಗೂ ಸಹ ಉ ಪಯುಕ, ಸಂಗತಿ. ಯಾವುದೇ
ಪ್ರಕಾರದ ಈಜಾಗಲಿ,
ಇಕ್‌
ಶರೀರದ ಎಲ್ಲ ಮಾಂಸಖಂಡಗಳಿಗೆ ವಾ $ಯಾಮವಾಗು
ವುದು. ಆದ್ದರಿಂದ ದೇಹದ ಬೆಳವಣಿಗೆ,ಪ$ ಮಾಣಬದ್ಧ ತೆಯನ್ನು ಪಡೆಯಲು
ಸೊಗಸಾದ ಪೂರ್ಣ ವ್ಯಾಯಾಮ ಈಜು. ಶ್ವಾಸಕೋಶ ಮತ್ತು ಹೃದ
ಯಗಳ ಕ್ಷಮತೆಯನ್ನು ಅದು ಹೆಚ್ಚುಮಾಡುವುದು.
ವ್ಯಾಯಾಮಕ್ಕಿಂತ ಮಿಗಿಲಾಗಿ ಈಜು ಉಲ್ಲಾಸಕರ. ದಣಿವು ಪೂರ್ಣ
ನಷ್ಟವಾಗುವುದು; ಆಲಸ್ಕ ದೂರವಾಗುವುದು. ಮೈ ಮರೆಸುವ ಸೊಗ
ಸಾದ ಸಾಧನ.
ನಮ್ಮ ದೇಶದಲ್ಲೇ ಸಾವಿರಾರು ಮಂದಿ ಅಸಾವಧಾನದಿಂದ ಕೆರೆಕಟ್ಟೆ
ಗಳಲ್ಲಿ, ನದಿ, ಸಮುದ್ರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ ಪ್ರಾಣ ತಾಕು
ಆದ್ದರಿಂ ಪ್ರತಿಯೊಬ್ಬರೂ ಈಜಿನ ಪ್ರಾಥಮಿಕ ಸಂಗತಿಗಳನ್ನಾದರೂ
ಕಲಿಯುವುದು ಕರ್ತವ್ಯವೆಂದೇ ಪರಿಗಣಿಸಬೇಕು. ಇದರ ಅರಿವನ್ನು ಮನೆ,
ಶಾಲೆ, ಸಮಾಜ ಜೀವನದಲ್ಲಿ ಮಾಡಿಕೊಡಬೇಕಾದ ಅಗತ್ಯ ಅಪಾರವಾಗಿದೆ.
ತನ್ನನ್ನು 4
ತಾನು ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ತನ್ನ ಆಪ್ತರನ್ನೂ
K

ಸಮಾಜ ಬಾಂಧವರನ್ನೂ ಅಪಾಯಗಳಿಂದ ಪಾರು ಮಾಡುವ ಹೊಣೆಗಾರಿ


ಕೆಯಂತೂ ತೀವ್ರವಾಗಿದ.
ತರುಣಃ ನಿಗೆ॥ಜಲರಾಶಿ ನೀಡಿರುವಂತಹ ಚಿರಂತನ ಸವಾಲು ಇದು. ಈಗ
ಲಕ್ಷ "ಜನಗಳನ್ನು ಭಕ್ಷ್ಮವನ್ನಾಗಿ ಮಾಡಿಕೊಳ್ಳುತ್ತಿದೆ.
ತರಗೆಲೆ, ಸತ್ತ ನಾಯಿಗಳೂ ಸಹ ಪ್ರವಾಹ. ಹರಿಯುತ್ತಿರುವ ಕಡೆ
ಕೊಚಿ ಹೋಗುವುವು. ಆದರೆ ಪ್ರವಾಹಕ್ಕೆ ಅಡ್ಡ ವಾಗಿ, ಏಕೆ, ವಿರುದ್ಧವಾಗಿ

೧೦೪ ಶರೀರ ಶಿಲ್ಪ

ಚಲಿಸುವುದೇ ಮಾನವನ ಪ್ರಯತ್ನ. ಆ ಪ್ರಯತ್ನಕ್ಕೆ ಕೈಹಚ್ಚುವವನೇ


ತರುಣ!
ಚಿಕ್ಕಂದಿನಲ್ಲಿ ಈಜಿನ ತಜ್ಞರಾದುದರಿಂದಲೇ ಸಾವರಕರ್‌ ಹಡಗಿನ
ರಂಧ್ರದಿಂದ ಜಿಗಿದು ಸಮುದ್ರದ ದಡವನ್ನು ತಲುಪಿದ್ದು ; ಜಗತ್ತಿನ ಕಣ್ಣು
ತೆರೆಸಿದ್ದು. ಸ್ವಾಮಿ ವಿವೇಕಾನಂದರು ಕನ್ಮಾಕುಮಾರಿ ದಂಡೆಯಿಂದ ಬಂಡೆ
ಯನ್ನು ತಲುಪಿದ್ದು; ಈ ನಾಡಿನ ಅಂತರಂಗದ ಅನುಭೂತಿಯನ್ನು
ಸವಿದದ್ದು.
ಇಂದೇ ಈಜಿನ ಪಾಠ ಪ್ರಾರಂಭ ಆಗಲಿ. ಎಷ್ಟೇ ವಯಸ್ಸಾದರಂ
ಈಜು ಕಲಿಯಲು ತಡವಲ್ಲ. ಶಿಕ್ಷಕನಿಲ್ಲದೇ ಹೋದರೂ ಚಿಂತೆ ಇಲ್ಲ. ಈಜಂ
ಬರುವ ಅಥವಾ ಬಾರದೇ ಇರುವ ಒಬ್ಬ ನೇಹಿಗನಿದ್ದರೆ ಸಾಕು. ಆತ್ಮ
ವಿಶ್ವಾಸಿಗಳಿಗೆ ಅವರೂ ಬೇಕಿಲ್ಲ.
ಈಜು ಕಲಿಯುವ ವಿಧಾನ ಬಹು ಆಹ್ಲಾದಕರ. : ಆಟವಾಡುತ್ತ
ಈಜು ಕಲಿಯಬಹುದು. ಇದಕ್ಕೆ ವಿಶೇಷ ಸಾಧನಗಳು ಅನಗತ್ಯ. ನದಿ
ಸಮುದ್ರಗಳನ್ನೇ ಹುಡುಕಿಕೊಂಡು ಹೋಗಬೇಕಾಗಿಲ್ಲ. ಕೆರೆಯೋ, ಕಟ್ಟೆಯೋ
ಅಥವಾ ಬಾವಿಯೋ ಸಾಕು. ಕೆಲವು ನಿಷ್ಣಾತರ ಅಭಿಪ್ರಾಯದಲ್ಲಿ ನೀರಿಲ್ಲದೆ
ಈಜು ಕಲಿಯುವುದು ದುಸ್ಸಾಧ್ಮವೇನಲ್ಲ! ನೆಲದ ಮೇಲೆ ಕೈಕಾಲುಗಳ
ಎಲ್ಲ ಚಲನೆಗಳನ್ನು ಅಭ್ಯಸಿಸಿ ನೀರಿಗಿಳಿದು ಒಂದೇ ಸಾರಿಗೆ ಈಜಿದ ಕಲಿಗಳ
ನೇಕ! ಈಜು ಕಲಿಯುವಿಕೆಗಿಂತ ದೊಡ್ಡ ಸಾಂಕ್ರಾಮಿಕ ಇನ್ನೊಂದಿಲ್ಲ!
ಇದಕ್ಕೆ ಜೊತೆಗಾರರನ್ನು ಕೂಡಿಸುವುದು ಅತಿ ಸುಲಭದ ಸಂಗತಿ.
ಈಜನ್ನು ವೈಯಕ್ತಿಕವಾಗಿ ಕಲಿಯುವುದಕ್ಕಿಂತ ಸಾಮೂಹಿಕವಾಗಿ
ಬೇಗನೆ ಮತ್ತು ಸುಲಭವಾಗಿ ಕಲಿಯಬಹುದು.
ಮೇಲ್ಕಂಡ ನಿಟ್ಟಿನಿಂದ ತಯಾರಿಸಲಾದ ಕೆಲವು ಪ್ರಯೋಗಗಳನ್ನು
ಕೆಳಗೆ ಕೊಡಲಾಗಿದೆ. ಇವುಗಳನ್ನು ಯೋಗ ರೀತಿಯಿಂದ ಅಭ್ಯಾಸ ಮಾಡಿ
ದರೆ ಈಜಿನ ವರ್ಣಮಾಲೆಯನ್ನು ಕಲಿತಂತೆಯೇ. ಅನಂತರ ಕಲೆಯನ್ನು
ಸಿದ್ದಿಸಿಕೊಳ್ಳಬಹುದು.
ಈಜೋಣ ಬನ್ನಿ ೧೦%

ಪ್ರಯೋಗ ೧
ನೀರಿನ ಭಯಂ ನಿಜಕ್ಕೂ ನೀರಿನ ಭಯವಾಗಿರದೆ ಕೇವಲ ತಣ್ಣೀರಿನ
ಸ್ಪರ್ಶದ ತೊಂದರೆ ಮಾತ್ರ.
ನಮ್ಮಲ್ಲಂತೂ ಬಿಸಿನೀರಿನ ಈಜುವ ಕೊಳಗಳು ಅಪರೂಪ! ಅದ
ರಿಂದ ತಣ್ಣೀರಿನ ಜೊತೆಗೆ ಸಲಿಗೆ ಬೆಳೆಸುವುದು ಮೊದಲನೆ ಪಾಠ.
ಅದಕ್ಕೇ ತಣ್ಣೀರಿನ ಸ್ನಾನ್ನ ಮಾಡುವವರು ಮಿಕ್ಕವರಿಗಿಂತ ಕಡಿಮೆ
ಪ್ರಯತ್ನದಲ್ಲಿ ಈಜನ್ನು ಕಲಿಯಬಹುದು.
ಸೊಂಟದ ಅಥವಾ ಎದೆ ಮಟ್ಟದ ನೀರಿನಲ್ಲಿ ನಿಧಾನವಾಗಿ ನಡೆಯುವು
ದನ್ನು ಅಭ್ಯಾಸ ಮಾಡಿ. ಕಾಲನ್ನು ಮೇಲಕ್ಕೆತ್ತದೆ ತಳದ ಮೇಲೆ ಮೆಲ್ಲನೆ
ಸರಿಸುವುದರಿಂದ ಶರೀರವನ್ನು ಸಮತೂಕದಲ್ಲಿಡಬಹುದು. ವೇಗವನ್ನು
ನಿಧಾನವಾಗಿ ಹೆಚ್ಚು ಮಾಡಿ. ಅನಂತರ ಶರೀರದ ಚಲನೆಗೆ ಅನುಕೂಲ
ವಾಗುವಂತೆ ಕೈಗಳನ್ನು ನೀರಿನಲ್ಲಿ ಮುಂದಿನಿಂದ ಹಿಂದಕ್ಕೆ ಚಲಿಸಬೇಕು.
ನೀರಿನಲ್ಲಿ ನಡೆಯುವ ಅಭ್ಯಾಸಕ್ಕೆ ಮುಂಚೆ ಮುಖಕ್ಕೆ ನಿಮ್ಮ ಕೈಯಿಂದ
ನೀರೆರಚಿಕೊಳ್ಳುವ ಅಭ್ಯಾಸ ಮತ್ತೂ ಉತ್ತಮ.

ಪ್ರಯೋಗ ೨
ಸೊಂಟದ ಆಳದ ನೀರಿನಲ್ಲಿ ಕಾಲುಗಳನ್ನು ಎರಡು ಅಡಿ ದೂರದಲ್ಲಿಡಿ.
ಉಸಿರನ್ನು ಕಟ್ಟಿ ಮುಖವನ್ನು ನೀರಿನ ಮಟ್ಟಕ್ಕಿಂತ ಕೆಳಗೆ ಇಡಿ. ಕೆಲವು
ಸೆಕೆಂಡುಗಳನಂತರ ಮುಖ ಮೇಲೆತ್ತಿ. ಕ್ರಮೇಣ ಕಾಲವನ್ನು ಹೆಚ್ಚು
ಮಾಡಿ. ಅನಂತರ ದೀರ್ಫ ಶ್ವಾಸ ತೆಗೆದುಕೊಂಡು ಕಾಲುಗಳನ್ನು ಎಳೆದು
ಹಿಡಿದು ಮಂಡಿಗಳನ್ನು ಬಗ್ಗಿಸಿ ಎದೆಗೆ ಅಪ್ಪಿಕೊಳ್ಳಿ. (ಕಾಲುಗಳನ್ನು ಚಲಿಸ
ಬೇಡಿ.) ಕೆಲವು ಕ್ಷಣಗಳನಂತರ ಕೈಬಿಟ್ಟು, ಮೇಲೆದ್ದು ಉಸಿರಾಡಿ.
(ಚಿತ್ರ ನೋಡಿ.)
ಪ್ರಯೋಗ ೩
ಕೈಸಿಡಿ, ಕಟ್ಟೆ ಅಥವಾ ಚಾಚಿರುವ ಗೂಟಗಳಿರುವ ಬಾವಿಯನ್ನೋ
೧೦೬ ಶರೀರ ಶಿಲ್ಪ

ಜಿನ ವರ್ಣಮಾಲೆ

y
ಈಜೋಣ ಬನ್ನಿ ೧೦೭

ಈಜುವ ಕೊಳವನ್ನೋ ಆರಿಸಿ. ಆಳದ ಬಗ್ಗೆ ಚಿಂತೆ ಬೇಡ. ಎಷ್ಟೇ ಆಳ


ಇದ್ದರೂ ಅಡ್ಡಿ ಇಲ್ಲ.
ಈಗ ತಳದ ಆಧಾರವಿಲ್ಲದೆ ನಡೆಯುವ ಅಭ್ಯಾಸ ಮಾಡಬೇಕು.
ಕೈಪಿಡಿಯನ್ನು ಹಿಡಿದು ಶರೀರವನ್ನು ನೀರಿನಲ್ಲಿ ತೂಗುಬಿಡಿ. ಅನಂತರ
ಎರಡೂ ಕೈಗಳನ್ನೂ ಬಿಟ್ಟು ಒಂದು ಅಡಿ ದೂರದಲ್ಲಿ ನೆಗೆದು ಹಿಡಿದುಕೊಳ್ಳಿ.
ವಿಶ್ವಾಸ ಬಂದನಂತರ ದೂರವನ್ನು ಹೆಚ್ಚುಮಾಡಿ.
ಈ ಸಮಯದಲ್ಲಿ ತುಂಬಿದ ಕೊಡವನ್ನು ನೀರಿನಲ್ಲಿ ಚಲಿಸಂವುದು
ಎಷ್ಟು ಸುಲಭವೆಂಬುದನ್ನು ನೆನಪು ಮಾಡಿಕೊಳ್ಳಿ.
ಅಂತೆಯೇ ಶರೀರವನ್ನು ಸುಲಭವಾಗಿ ೪, ೫ ಅಡಿಗಳು ಅನಾಯಾಸ
ವಾಗಿ ಮುಂದೂಡಬಹುದು.
ಈ ಪ್ರಯತ್ನಕ್ಕೆ ವರ್ತುಲಾಕಾರದ ಬಾವಿ ಬಹಳ ಸೂಕ್ತ.
ಪ್ರಯೋಗ ೪
ಮೇಲಿನಂತೆಯೇ ಭದ್ರವಾದ ಕೈಪಿಡಿಯನ್ನು ಹಿಡಿದು ಶರೀರವನ್ನು
ಸಮಾನಾಂತರ ಸ್ಥಿತಿಗೆ ತರಲು ಪ್ರಯತ್ನ ಮಾಡಿ; ಕಾಲುಗಳನ್ನು ಅವಶ್ಯಕತೆಗೆ
ತಕ್ಕಂತೆ ಚಲನೆ ಮಾಡಿ. ಮೂರು, ನಾಲ್ಕು ಪ್ರಯತ್ನಗಳನಂತರ ಸಲೀಸಾಗಿ
ಕ್ರಿಯೆ ಸಾಧ್ಯವಾಗುವುದು. (ಚಿತ್ರ ನೋಡಿ.)
ಪ್ರಯೋಗ ೫
ಭದ್ರವಾದ ಕೈಪಿಡಿಯನ್ನು ಹಿಡಿದು, ಕಾಲುಗಳನ್ನು ಕಟ್ಟೆಗೆ
ಒತ್ತಿ ನಿಲ್ಲಿ. ಕೈಗಳನ್ನು ಬಿಟ್ಟು ಕಟ್ಟೆಯನ್ನು ಒದೆಯಿರಿ ಅಥವಾ
ಕಾಲುಗಳನ್ನು ಕೂಡಲೇ ನೇರ ಮಾಡಿ. ಶರೀರ ನೀರಿಗೆ ಸಮಾನಾಂತರವಾಗಿ
ಸ್ವಲ್ಪ ದೂರ ಚಲಿಸುವುದು. ಅನಂತರ ಕಾಲ ಮೇಲೆ ನಿಲ್ಲಿ.
ನಿಲ್ಲಲು ಸ್ನೇಹಿತರ ಸಹಾಯ ಪಡೆಯಬಹುದು. ಸ್ನೇಹಿತ ನಿಮ್ಮನ್ನು
ಮೇಲೆತ್ತಬಾರದು. ಕೇವಲ ಹೆಗಲಿಗೆ ಕಿಂಚಿತ್‌ ಆಧಾರ ಕೊಡಬೇಕು ಅಷ್ಟೆ.
(ಚಿತ್ರ ನೋಡಿ.)
೧೦೮ ಶರೀರ ಶಿಲ್ಪ

ಪ್ರಯೋಗ ೬
ಅ) ಮೇಲಿನ ಅಭ್ಯಾಸದನಂತರ ನಿಂತಲ್ಲಿಯೇ ನೆಗೆದು ಚಿತ್ರ ದಲ್ಲಿರುವಂತೆ '
ಸಮಾನಾಂತರವಾಗಿ ಚಲಿಸಿ. ಕೈಕಾಲುಗಳ ಚಲನೆ ಇಲ್ಲ. ನೆಗೆತದ |
ಪ್ರಮಾಣಕ್ಕೆ ತಕ್ಕಂತೆ ಮುಂದೆ ಭೋಗಾನ್‌
ಅನುಚರ ಕಾಲುಗಳ ಮೇಲೆ 'ನಿಲ್ಲಿ. ಸೊಂಟದ ಎತ್ತರ ನೀರಿನಲ್ಲಿ
ಮುಂಚೆ. ಅಭ್ಯಾಸದನಂತರ ಎದೆ ಮಟ್ಟದ ನೀರಿನಲ್ಲಿ.
ಆ) ಇದಾದ ಮೇಲೆ ನೀರಿನ ಮಟ್ಟದಲ್ಲಿಯೇ ಇರುವ ಕಟ್ಟೆಯ ಬಳಿ
ಮಂಡಿಯ ಮೇಲೆ ಕುಳಿತುಕೊಳ್ಳಿ. ಪಾದಗಳು ಕಟ್ಟೆಯ ಕೊನೆಯ ಭಾಗ
ದಲ್ಲಿರಲಿ. ಕೈಗಳನ್ನು ಮುಂದೆ ಚಾಚಿ ಕಟ್ಟೆಯನ್ನು ಒದೆಯಿರಿ. ಮೇಲಿ
ನಂತೆಯೇ ಬಾಣದಂತೆ ಚಲಿಸಿರಿ. ಕಾಲುಗಳ ಮೇಲೆ ನಿಲ್ಲಿರಿ. (ಚಿತ್ರ ನೋಡಿ.)
ಅದೇ ಎತ್ತರದ ನೀರಿನಲ್ಲಿ ತಳದಲ್ಲಿ ಕುಳಿತು ಈ ಕ್ರಿಯೆ ಮಾಡಿ.
ಮುಂದೆ ಹೋಗಿ ಎದ್ದು ನಿಲ್ಲಿ.

ಪ್ರಯೋಗ ೭
ಅ) ಉಸಿರಾಟದ ಅಭ್ಯಾಸ ವ ಎನೆಯಲ್ಲಿಯೇ ಮಾಡಬಹುದು. ಕೈ
ತೊಳೆಯುವ ತೊಟ್ಟೆಯಲ್ಲಿ ನೀರು ತುಂಬಿ ಅಥವಾ ಅಗಲವಾದ ಬಾಯುಳ ಈ
t
ಪಾತ್ರೆಯಲ್ಲಿ ಮುಖ ಇಟ್ಟು ಉಸಿರನ್ನು ಬಿಡಿ. (ಚಿತ್ರ ನೋಡಿ.)
ಮೊದಲನೆ ಬಾರಿಗೆ ಮೂಗಿನಿಂದ ಉಸಿರು ಬಿಡಿ.
ಎರಡನೆ ಬಾರಿಗೆ ಬುಯಿಂದ ಉಸಿರು ಬಿಡಿ.
ಮೂರನೇ ಬಾರಿಗೆ ಬಾಯಿ, ಮೂಗಿನಿಂದ ಉಸಿರು ಬಿಡಿ.
ಇದರ ಅನುಭವ ಈ ರೀತಿ ಆಗುವುದು:
ಮೂಗಿನಿಂದ ಉಸಿರು ಬಿಡುವುದು ಸರಾಗವಲ್ಲ.
ಬಾಯಿಯಿಂದ ಬಿಡುವುದು ಸುಲಭವಾದರೂ ಮೂಗಿನಿಂದ ನೀರು
ಒಳಗೆ ಹೋಗುವ ಸಂಭವ ಇದೆ. ಆದರೆ ಮೂಗು ಬಾಯಿಯಿಂದ
ಬಿಡುವುದು ಸರಾಗ ಮತ್ತು ಸುಖಕರ.
ಆ) ಅಂತೆಯೇ ಉಸಿರನ್ನು ಬಿಟ್ಟ ಬಳಿಕ ಕತ್ತನ್ನು ಹೊರಳಿಸಿಬಾಂ
ಈಜೋಣ ಬನ್ನಿ ೧೦೯

ಯಿಂದ ಉಸಿರು ತೆಗೆದುಕೊಳಿ ಗ ಬಿಡಿ. ಇನ್ನೊಮ್ಮೆ ಮೂಗಿನಿಂದ ಉಸಿರು


ತೆಗೆದುಕೊಳ್ಳಿ, ಬಿಡಿ. (ಚಿತ್ರ ನೋಡಿ.) ಬಾಯಿಯಿಂದ ಉಸಿರು ತೆಗೆದು
ಕೊಳ್ಳುವುದು ಸರಾಗ. ಈಜುವಾಗ ಉಸಿರಾಡಲು ಅತಿ ಉತ್ತಮ ಮಾರ್ಗ
ವೆಂದರೆ ಬಾಯಿಯಿಂದ ಉಸಿರು ತೆಗೆದುಕೊಂಡು ಮೂಗು, ಬಾಯಿಯಿಂದ
ಉಸಿರು ಬಿಡುವುದು.

ಪ್ರಯೋಗ ೮
ಕೊಳದ ಕೈಪಿಡಿಯನು ಸ ಹಿಡಿಯಿರಿ. ಹಿಂದಿನ ಅಭ್ಯಾಸದಿಂದ ಶರೀರ
ವನ್ನು ನೀರಿಗೆ ಸಮಾನಾಂತರ ಮಾಡಿ. ಅನಂತರ ಒಂದಾದ ಮೇಲೆ ಒಂದು
ಕಾಲನ್ನು ಕೆಳಗೆ ಮೇಲೆ ಮಾಡಿ. ಮೊಣಕಾಲು ಬಗ್ಗಿಸಬೇಡಿ. ಪ್ರತಿ ಕಾಲೂ
ನೀರಿನ ಮಟ್ಟದಿಂದ ಸುಮಾರು ೧೮ ಅಂಗುಲ ಕೆಳಗೆ ಹೋಗಲಿ. ಚಲನೆ
ಪೃಷ್ಠದಿಂದ ಪ್ರಾರಂಭ ಆಗಲಿ. ಪಾದಗಳ ಸ್ಥಿತಿ ಚಿತ್ರದಲ್ಲಿರುವಂತೆ ಇರಲಿ.
೧೧೦ ಶರೀರ ಶಿಲ್ಪ

ಎರಡು ನಿಮಿಷ ಅಭ್ಕಾಸ ಮಾಡಿ. ೧೦ ನಿಮಿಷದವರೆಗೆ ಅಭ್ಮಾಸವಾಗಲಿ.

ಪ್ರಯೋಗ ೯

ಕೈಗಳ ಚಲನೆಯನ್ನು ಎದೆಮಟ್ಟದ ನೀರಿನಲ್ಲಿ ಮುಂಚೆ ಅಭ್ಮಾಸ


ಮಾಡಿ. |
ನೀರಿನಲ್ಲಿ ನಿಲ್ಲಿ. ಭುಜಗಳು ನೀರಿನಲ್ಲಿರುವಂತೆ ಮಂಂದಕ್ಕೆ ಬಾಗಿ!
ಒಂದು ಕೈಯನ್ನು ಮುಂದೆ ಚಾಚಿ. ಸ್ವಲ್ಪ ಮೊಣಕ್ಕೆನಲ್ಲಿ ಬಗ್ಗಿಸಿ - ಮುಖದ
ಮುಂದೆ ನೀರಿನ ಸ್ವಲ್ಪ ಒಳಗಡೆ -ನೀರನ್ನು ಚೆನ್ನಾಗಿ ಒತ್ತಿ ಎಳೆಯಿರಿ.
ಕೆಳಕ್ಕೆ ಎಳೆದು ಅನಂತರ ಹಿಂದಕ್ಕೆ ತೊಡೆಯ ಕಡೆಗೆ ಎಳೆಯಿರಿ, ಕೈಗಳನ್ನು [4

ಮಡಿಸಿ ಮೊಣಕ್ಕೆ ಎತ್ತಿ ನೀರಿನ ಮೇಲೆ ತನ್ನಿ. ಮತ್ತೆ ಮುಂದೆ ಚಾಚಿ 2

ಮುಂಚಿನ ಸ್ಥಿತಿಗೆ.
ಈಗ ಮತ್ತೊಂದು ಕೈಯಿಂದ ಪ್ರಾರಂಭ ಮಾಡಿ. ಹೀಗೆಯೇ
ಒಂದಾದ ಮೇಲೊಂದರಂತೆ ನೀರನ್ನು ಒತ್ತಿ ಎಳೆಯುತ್ತಿರುವಾಗ ಇನ್ನೊಂದು
ಕೈ ಮೇಲೆ ಬರಲಿ. ಎದೆ ನೀರಿಗೆ ಸಮಾನಾಂತರವಾಗಿರಲಿ. (ಚಿತ್ರ ನೋಡಿ.)
ECW
Wey ತ್ರ ಭಾ ಸ
ಶರೀ ರಮಾದ್ಯಂ
೧೮ ಖಲು ಧರ್ಮಸಾಧನಂ

೧. ವ್ಯಾಯಾಮದ ಉದ್ದಿಶ್ಯವೇನು?
ಲಾಘವಂ ಕರ್ಮಸಾಮರ್ಥ,ಂ ದೀಪ್ತೋಗ್ನಿಃ ಮೇಧಸಕ್ಷಯಃ।
ವಿಭಕ್ತ ಘನಗಾತ್ರತ್ವಂ ವ್ಮಾಯಾಮಾತ್‌ ಉಪಜಾಯತೇ ॥
ಹಗುರ ಶರೀರ ಮತ್ತು ಲವಲವಿಕೆ, ಅಧಿಕ ಕೆಲಸ ಮಾಡಲು ಅರ್ಹತೆ,
ಪ್ರಖರ ಜಠರಾಗ್ನಿ, ಅನವಶ್ಶಕ ಕೊಬ್ಬನ್ನು ಕರಗಿಸುವಿಕೆ, ಎಲ್ಲ ಅಂಗಾಂಗಗಳು
ಅವುಗಳ ಪಾತ್ರಕ್ಕೆ ಅನುಗುಣವಾಗಿ ಆಕಾರ ಮತ್ತು ಶಕ್ತಿ ಹೊಂದಿರುವಿಕೆ-
ಈ ಗುಣಗಳು ವ್ಯಾಯಾಮದಿಂದ ಲಭಿಸಬೇಕು.

೨. ಪೂರ್ಣ ವ್ಯಾಯಾಮದ ಕಲ್ಪನೆ ಏನು?


ವ್ಯಕ್ತಿಯನ್ನು ಬಿಡಿಬಿಡಿಯಾಗಿ ಕಾಣದೆ, "ಇಡಿ'ಯಾಗಿ ಕಂಡು, ಸಮಗ್ರ
ಜೀವನದ ಪೂರ್ಣ ವಿಕಾಸಕ್ಕೆ ಎಡೆ ಮಾಡಿಕೊಡುವ ಸಾಧನ ಪೂರ್ಣ
ನ್ಯಾಯಾಮ. ದೇಹದಾರ್ಡ,, ಶರೀರದ ಆರೋಗ್ಯ, ಬುದ್ಧಿಯ ವಿಕಾಸ
ಮನಸ್ಸಿನ ಸಂಯಮ, ಚಿತ್ರೈಕಾಗ್ರತೆ, ದೀರ್ಫಾಯಸ್ಸು, ಬ್ರಹ್ಮಚರ್ಯ-
೮]
೧೧೪ ಶರೀರ ಶಿಲ್ಪ
ಇವುಗಳನ್ನು ಪಡೆಯಲು ಸಹಾಯಕವಾಗುವ ಪ್ರಯತ್ನಕ್ಕೇ ಪೂಣ
ವ್ಯಾಯಾಮ ಎನ್ನುವರು. '
|
೩. ಆ ರೀತಿಯ ಸಾಧನೆ?” ಯಾವುದು?
ಸೂರ್ಯನಮಸ್ಕಾರ, ಆಸನ, ಪ್ರಾಣಾಯಾಮ, ಮನಯಾಮ.

\_ ೪, 4ಯೋಗಿ' ಎಂದರೆ ಏನು?

ಸಾಮಾನ್ಶ ವ್ಯಕ್ತಿ ಕೂಡ ವಿಕಾಸದ ತುತ್ತತುದಿ


ಹತ್ತಿನಿಲ್ಲಲು ಹೋಗಬೇಕಾದ ಮಾರ್ಗ ಯೋಗಮಾರ್ಗ.
ಅದಕ್ಕಾಗಿ ಇಡೀ ಜೀವನವನ್ನೇ ಅಳವಡಿಸಿಕೊಂಡು
ಹಂತಹಂತವಾಗಿ ಏರಿಹೋಗುವುದೇ ಯೋಗಸಾಧನೆ.
ಇದಕ್ಕೆ ಮುಖ್ಯವಾಗಿ ಎಂಟು ಮೆಟ್ಟಲುಗಳು. ಯಮ,
ನಿಯಮ, ಆಸನ, ಪ್ರಾಣಾಯಾಮ, ಪ್ರತ್ಕಾಹಾರ,
ಧ್ಮಾನ, ಧಾರಣ, ಸಮಾಧಿ; ಇದನ್ನೇ “ಅಷ್ಟಾಂಗ
ಯೋಗ' ಎಂದಿರುವುದು. ಆಸನ, ಪ್ರಾಣಾಯಾಮಗಳು
ಈ ಸಾಧನೆಯ ಪ್ರಾಥಮಿಕ ಅಂಗಗಳು. ಅದಕ್ಕಾಗಿ
ಯೋಗ ಎಂದರೆ ವಿಕಸಿತ ಶರೀರದ ಸರ್ವಶಕ್ತಿಗಳ ಸಮ
KA ; ರಸತೆ, ಸಂಗಮಕ್ಕಾಗಿ ಇರುವ ಶಾಸ್ತ್ರಶುದ್ಧವಾದ,
ಶೀರ್ಷಾಸನ ಅನುಭವಸಿದ್ಧವಾದ, ಕ್ರಮಬದ್ಧವಾದ ಪ್ರಯತ್ನ.

೫. ಇದು ಕೇವಲ ತಪಸ್ವಿಗಳಿಗೆ, ನೈಷ್ಠಿಕ ಬ್ರಹ್ಮಚಾರಿಗಳಿಗೆ ಮಾತ್ರ


ಸೀಮಿತವಲ್ಲವೇ?
ಅಲ್ಲ. ಇದು ಮಾನವ ಶರೀರ ಪಡೆದಿರುವ ಎಲ್ಲರಿಗೂ ಎಟಕು
ವಂತಹುದು. ಯಾವ ರೀತಿ ಜ್ಞಾನದ ಗಳಿಕೆ ಆಸಕ್ತಿ ಇರುವ ಸರ್ವರಿಗೂ
ನಿಲುಕುವಂತಹುದೋ ಅದೇ ರೀತಿ ಯೋಗದ ಪ್ರಯತ್ನ ಸೋಮಾರಿಗಳಲ್ಲದ
ಸರ್ವರಿಗೂ ಸಲ್ಲ ವಂತಹುದು.
ಶರೀರಮಾದ್ಕಂ ಖಲು ಧರ್ಮಸಾಧನಂ ೧೧೫
೬. ಸಕಲರಿಗೂ ಸಲ್ಲುವಂತಹುದೇ?
ಹೌದು.
ಯುವಾ ವೃದ್ಧೊೋಣ್ಯತಿವೃದ್ಧೋ ವಾ
ವ್ಮಾಧಿತೋ ದುರ್ಬಲೋಪಿ ವಾ।
ಅಭ್ಯಾಸಾತ್‌ ಸಿದ್ಧಿಮಾಪ್ನೋತಿ
ಸರ್ವಯೋಗೇಷ್ಟ ತಂದ್ರಿತಃ ॥
ಪ್ರಾಯದವರಾಗಲಿ, ಮುದುಕರಾಗಲಿ, ಹಣ್ಣುಮುದುಕರಾಗಲಿ,
ರೋಗಿಗಳಿರಲಿ, ದುರ್ಬಲರಿರಲಿ, ಸೋಮಾರಿತನವಿಲ್ಲದೆ ಸರಿಯಾದ ಹಾದಿ
ಯಲ್ಲಿ ಯೋಗಾಭ್ಮಾಸ ಮಾಡಿದವರು ಕೋರಿದ ಫಲವನ್ನು ಪಡೆಯುವರು.
ಅಂದರೆ, ಆಬಾಲವೃದ್ಧರಿಗೆ, ಸ್ವೀಪುರುಪರೆಲ್ಲರಿಗೆ ಸಲ್ಲುವಂತಹುದು
ಯೋಗ.

೬. ಗರಡಿಸಾಧನೆ, ವ್ಯಾಯಾಮಶಾಲೆಯ ಪ್ರಯತ್ನಕ್ಕೂ, ಯೋಗಕ್ಕೂ


ಇರುವ ಪ್ರಮುಖ ವೃತ್ಕಾಸವೇನು?
ಗರಡಿಸಾಧನೆ ಮತ್ತು ಉಪಕರಣಸಹಿತ ವ್ಯಾಯಾಮಗಳಿಂದ ಮಾಂಸ
ಖಂಡಗಳು ಆದ್ಭುತ ಆಕಾರವನ್ನು ಪಡೆಯುವುವು ಮತ್ತು ಅಂಗಾಂಗಗಳಲ್ಲಿ
ಅವುಗಳ ಪಾತ್ರನಿರ್ವಹಣೆಯ ಅವಶ್ಯಕತೆಗಿಂತ ಹೆಚ್ಚು ಶಕ್ತಿ ಕೂಡಿಕೊಳ್ಳು
ವುದು, ಗಟ್ಟಿ ಆಗುವುವು. ಈ ಕಾರಣಗಳಿಂದ ಶರೀರ ಪೋಷಣೆಯ ಅಪವ್ಯಯ
ಆಗುವುದು. ಜೊತೆಗೆ ಈ ಎಲ್ಲ ಪ್ರಯತ್ನದ ಪ್ರೇರಣೆ ಬಹಿರರ್ಮುಖವಾಗಿ
(ಆಕರ್ಷಣೆ, ಪ್ರದರ್ಶನ, ಸ್ಪರ್ಧೆ) ಸಮಗ್ರ ವಿಕಾಸ ಕುಂಠಿತವಾಗುವುದು.
ಯೋಗಾಭ್ಯಾಸದಲ್ಲಿ ಪ್ರೇರಣೆ ಅಂತರ್ಮುಖವಾಗುತ್ತದೆ.
ಅಂಗಾಂಗಗಳು ಅವಶ್ಯಕ ಆಕಾರ, ಅಳತೆ, ಶಕ್ತಿ ಗಳಿಸುವುವು. ಮಾಂಸ
' ಖಂಡಗಳು ಬೆಣ್ಣೆಯಂತೆ ಮೆತುವಾಗುವುವು. ಕಾರ್ಯ ಮಾಡುವಾಗ ಮಾತ್ರ
ಗಟ್ಟೆ ಆಗುವುವು. ಶರೀರ ಶಕ್ತಿ ಅಪವ್ಯಯವಾಗದೆ ಪೂರ್ಣ ವಿಕಾಸಕ್ಕೆ ಎಡೆ
ಮಾಡಿಕೊಡುವುದು. ಇದರಲ್ಲಿ ಚಮತ್ಕಾರವಿಲ್ಲ. ಸಾಧನೆ ಉಂಟು. ಇದು
೧೯ ಸೂರ್ಯನಮಸಾ ರ

ಸೃಷ್ಟಿಯಲ್ಲಿ ಸೂರ್ಯನಿಗಿಂತ ತೇಜೋವಂತವಾದುದು ಮತ್ತೊಂದಿಲ್ಲ.


ಆದುದರಿಂದ ತೇಜಸ್ಸನ್ನು, ವರ್ಚಸ್ಸನ್ನು, ಶಕ್ತಿಯನ್ನು ಪಡೆಯಲು
ಸೂರ್ಯೋಪಾಸನೆ ಉತ್ತಮ ಮಾಧ್ಯಮ. ಅದಕ್ಕಾಗಿಯೇ ಸೂರ್ಯ
ನಮಸ್ಕಾರವನ್ನು ಉಪಾಸನಾ ವ್ಯಾಯಾಮ ಎಂದು ಕರೆಯಲಾಗಿದೆ. ಜೊತೆಗೆ
ಬಲ್ಲವರು "ಆರೋಗ್ಯಂ ಭಾಸ್ಕರಾದಿಚ್ಛತ್‌' ಎಂದಿದ್ದಾರೆ. ಸೂರ್ಯದೇವನ
ಅನುಗ್ರಹ ಇರುವವರು ಆರೋಗ್ಮ ವಂತರಾಗಿರುವರು.
ದೇಹಾರೋಗ್ಯಕ್ಕೆ, ಇಂದ್ರಿಯನಿಗ್ರಹಕ್ಕೆ, ಮಾನಸಿಕ ಸಂಯಮ ಮತ್ತು
ಏಕಾಗ್ರತೆಗೆ, ಸ್ಮರಣಶಕ್ತಿಗೆ, ಬುದ್ಧಿ ವಿಕಾಸಕ್ಕೆಸೂರ್ಯನಮಸ್ಕಾರ ಸುಂದರ
ಸೋಪಾನ. ದೇಹದಾರ್ಡ್ಯ ಮತ್ತು ದೀರ್ಫಾಯಸ್ಸಿಗೆ ಉತ್ತಮ ಸಾಧನ.
ಸೂರ್ಯನಮಸ್ಕಾರವನ್ನು ಸ್ತ್ರೀಪುರುಷರು ಮತ್ತು ಆಬಾಲವೃದ್ಧರೆಲ್ಲರೂ
ತಪ್ಪದೆ ಮಾಡಬೇಕು. ಇದು ಸಾರ್ವತ್ರಿಕ, ಸರ್ವದೂರ ಅಭ್ಯಾಸವಾಗಬೇಕು.
ಸೂರ್ಯನಮಸ್ಕಾರ ವ್ಯಾಧಿಗಳು ಬರದಂತೆ ತಡೆಯುವುದಷ್ಟೆ ಅಲ್ಲ;
ಮಹಾವ್ಮಾಧಿಗಳನ್ನೂ ಗುಣಪಡಿಸಬಲ್ಲದು.

SN

ಸೂರ್ಯನಮಸ್ಕಾರ ೧೧೯
ಆದಿತ್ಕಸ್ಥ ನಮಸ್ಕಾರಾನ್‌ ಯೇ ಕುರ್ವಂತಿ ದಿನೇದಿನೇ ।
ದೀರ್ಥಮಾಯುರ್ಬಲಂ ವೀರ್ಯಂ ತೇಜಸ್ತೇಷಾಂ ಚ ಜಾಯತೇ ॥
ಅಕಾಲಮೃತ್ಮುಹರಣಂ ಸರ್ವವ್ಯಾಧಿವಿನಾಶನಮ್‌ ।
ಸೂರ್ಯಪಾದೋದಕಂ ತೀರ್ಥಂ ಜಠರೇ ಧಾರಯಾಮ್ಮಹಮ್‌ ॥
ಪ್ರತಿದಿನವೂ ಸೂರ್ಯನಮಸ್ಕಾರ ಮಾಡಿ ಸೂರ್ಯಪಾದೋದಕ
ವನ್ನು ಸೇವಿಸುವುದರಿಂದ ದೀರ್ಫಾಯಸ್ಸು, ಬಲ, ವೀರ್ಯ, ತೇಜಸ್ಸು
ಇವುಗಳು ಪ್ರಾಪ್ತವಾಗುತ್ತವೆ. ಮತ್ತು ಸರ್ವರೋಗ ನಿವಾರಣೆಯಾಗಿ
ಅಕಾಲಮೃತ್ಯುವಿನಿಂದ ಪಾರಾಗುತ್ತೇವೆ.
ಮೇಲಿನೆಲ್ಲ ಸಂಗತಿಗಳನ್ನು ಗಳಿಸಲು ಕಾರಣಗಳು ಹೀಗಿವೆ:
ಸೂರ್ಯನಮಸ್ಕಾರ ಮಾಡುವಾಗ ಹೇಳುವ ಮಂತ್ರಗಳಿಂದಾಗಿ ಆ,
ಉ, ಮ ಸ್ವರಗಳನ್ನು ಮತ್ತು ಹ್ರಾಂ, ಹ್ರೀಂ, ಹ್ರೂಂ, ಹ್ರೆNo ಹೌಂ,
ಹ್ರಃ ಬೀಜಮಂತ್ರಗಳನ್ನು ಉಚ್ಚರಿಸುವುದರಿಂದ ವಿವಿಧ ಶಬ್ದತರಂಗಗಳು
ನಿರ್ಮಾಣವಾಗುತ್ತವೆ. "ಆ ಸ್ವರದ ತರಂಗದಿಂದ ನಾಭಿಯ ಕೆಳಗಿನ
ಅಂಗಾಂಗಗಳ ಸ್ಥಿತಿ ಚಟುವಟಿಕೆಗಳೂ "ಉ' ಸ್ವರದ ತರಂಗಗಳಿಂದ ನಾಭಿ
ಯಿಂದ ಉರೋಮಧ್ಯ್ಮದ ಅಂಗಾಂಗಗಳ ಸುಸ್ಥಿತಿ ಮತ್ತು ಕ್ರಿಯೆಗಳಿಗೂ,
"ಮ? ಸ್ವರದಿಂದ ನೆತ್ತಿಯವರೆಗಿನ ಎಲ್ಲ ಪ್ರಕ್ರಿಯೆಗಳಿಗೂ ಚೈತನ್ಯ ಬರುವುದು.
ಬೀ ಸಮಂತ್ರಗಳ ತರಂಗಗಳಿಂದ ಹೃದಯ ವಂತ್ತು ಶ್ವಾಸಕೋಶದ ಕ್ರಿಯೆಗಳ
ಮೇಲೆ ಉತ್ತಮ ಸಂಸ್ಕಾರ ಆಗುವುದು. ಜೊತೆಗೆ ಸೂರ್ಯನ ನಾಮ,
ರೂಪದ ಮೇಲೆ ನೆಟ್ಟಮನಸ್ಕರಾಗಿ ಮಾಡುವುದರಿಂದ ಏಕಾಗ್ರತೆ
ಹೆಚ್ಚುವುದು.
ರೇಚಕ (ಉಸಿರು ಬಿಡುವುದು), ಪೂರಕ (ಉಸಿರು ತೆಗೆದುಕೊಳ್ಳು
ವುದು), ಕುಂಭಕ (ಉಸಿರು ತೆಗೆದುಕೊಂಡು ಅಥವಾ ಬಿಟ್ಟು ಅಲ್ಲೇ ತಡೆ
ಹಿಡಿಯುವುದು)ಗಳಿಂದ ಉಸಿರಾಟ ಹದಗೊಂಡು ಶರೀರದ ಸಮಸ್ಥಿತಿ ಸುಧಾ
ರಿಸುವುದು.
ಇಡೀ ಶರೀರದಲ್ಲಿ ಈ ಎಲ್ಲ ವಿನ್ಯಾಸಕ್ರಮ(ಸ್ಥಿತಿಗಳು), ರೇಚಕ
ಪೂರಕ ಕ್ರಮ, ಧ್ಮಾನಕ್ರಮ, ತ್ನಾ್ರಿಟಕಕ್ರಮ(ನೋಟ), ಬಂಧಾದಿಗಳಿಂದ

ಳಃ AT

SSN,
px ಸ್ಯ
ಸ a
೧೨೦ ಶರೀರ ಶಿಲ್ಪ

ಹಿತಕರ ಬದಲಾವಣೆಗಳು ಆಗುವುವು. ಸೂರ್ಯನಮಸ್ಕಾರ ಅನೇಕ ಆಸನ


ಗಳ ಸುಂದರ ಜೋಡಣೆ - ಊರ್ಧಾಸನ, ಪಾದಹಸ್ತಾಸನ, ಏಕಪಾದ
ಪ್ರಸರಣಾಸನ, ಚದುರಂಗದಂಡಾಸನ, ಸಾಷ್ಟಾಂಗ, ಭುಜಂಗಾಸನ, ಅಧೋ
ಮುಖಸ್ವಾನಾಸನ ಆದಿ.

ಸೂರ್ಯನಮಸ್ಕಾರದಲ್ಲಿಯೂ ಅನೇಕ ಪ್ರಕಾರಗಳಂಂಟು. ಯೋಗ


ನಮಸ್ಕಾರ, ಭದ್ರನಮಸ್ಕಾರ, ಗುರುನಮಸ್ಕಾರ, ಸಾಷ್ಟಾಂಗನಮಸ್ಕಾರ,
ಪಂಚಾಗನಮಸ್ಕಾರ ಇತ್ಮಾದಿ. ಮೂಲ ಉದ್ದೇಶ ಒಂದೇ ಆದರೂ ಅನೇಕ
ಪರಿವರ್ತನಗಳು, ರೂಪಾಂತರಗಳು ವಿವಿಧ ಉಪಾಸಕರಿಂದ ಬೆಳಕಿಗೆ ಬಂದಿವೆ.

ಸೂರ್ಯನಮಸ್ಕಾರದಲ್ಲಿ ಶರೀರದ ಪೋಷಣೆ, ರಕ್ಷಣೆ, ಬೆಳವಣಿಗೆಗೆ


ಬೇಕಾದ ಎಲ್ಲ ಅಂಶಗಳೂ ಅಡಕವಾಗಿವೆ. ಅದಕ್ಕಾಗಿ ಇದು ಪೂರ್ಣ
ವ್ಯಾಯಾಮ.
ನಮಸ್ಕಾರಗಳನ್ನು ಮಂತ್ರಸಮೇತ ಮಾಡಬೇಕು :
ಓಂ ಹ್ರಾಂ ಮಿತ್ರಾಯ ನಮಃ
ಓಂ ಹ್ರೀಂ ರವಯೇ ನಮಃ
ಓಂ ಹ್ರೂಂ ಸೂರ್ಯಾಯ ನಮಃ
ಓಂ ಹ್ರೈಂ ಭಾನವೇ ನಮಃ
ಒಂ ಹ್ರೌಂ ಖಗಾಯ ನಮಃ
ಓಂ ಹ್ರಃ ಪೂಷ್ಣೇ ನಮಃ
ಓಂ ಹ್ರಾಂ ಹಿರಣ್ಣಗರ್ಭಾಯ ನಮಃ
ಓಂ ಹ್ರೀಂ ಮರೀಚಯೇ ನಮಃ
ಓಂ ಹ್ರೂಂ ಆದಿತ್ಕಾಯ ನಮಃ
ಓಂ ಹ್ರೈಂ ಸವಿತ್ರೇ ನಮ;
ಓಂ ಹಂ ಅರ್ಕಾಯ ನಮಃ
ಓಂ ಹ್ರಃ ಭಾಸ್ಕರಾಯ ನಮಃ
ಓಂ ಶ್ರೀ ಸವಿತೃಸೂರ್ಯನಾರಾಯಣಾಯ ನಮಃ.
ಸೂರ್ಯನಮಸಾ ರ ೧೨೧

ಸೂರ್ಯನಮಸ್ಕಾರ: ವಿನ್ಮಾಸಕ್ರಮ (ಚಿತ್ರ ನೋಡಿ)


ಸ್ಥಿತಿ 1) ಎರಡು ಪಾದಗಳೂ ಸೇರಿರಲಿ. ಎರಡೂ ಪಾದಗಳ
ಮೇಲೆ ಸಮಭಾರ. ಹಿಮ್ಮಡಿ, ಮುಂಗಾಲು, ಕಾಲ್ಬೆರಳುಗಳು, ಬಲಪಾದದ
ಬಲ ಅಂಚು, ಎಡಪಾದದ ಎಡ ಅಂಚುಗಳ ಮೇಲೆ ಭಾರ ಸಮನಾಗಿ
ಹಂಚಿರುವಂತೆ ಎಚ್ಚರಿಕೆ.
i), ಮೊಣಕಾಲು ನೇರವಾಗಿದ್ದು ಬಿಗಿ ಹಿಡಿದಿರಬೇಕು. ಚಿಪ್ಪುಗಳು
ಮೇಲೆ ಎಳೆದಿರಲಿ. ತೊಡೆಗಳನ್ನು ಬಿಗಿ ಹಿಡಿದು ಪೃಷ್ಠಗಳನ್ನು ಸಂಕುಚಿತ
ಗೊಳಿಸಬೇಕು. ಸಹಜವಾಗಿ ತೊಡೆಗಳು ಒಂದಕ್ಕೊಂದು ತಾಗುವುವು.
ಕಿಬ್ಬೊಟ್ಟೆಯನ್ನು ಆಕುಂಚನಗೊಳಿಸಿ ನಾಭಿಯನ್ನು ಒಳಕ್ಕೆ ಎಳೆದುಕೊಳ್ಳ
ಬೇಕು.
111) ಎದೆಯನ್ನು ಮುಂದೆ ಮತ್ತು ಮೇಲೆ ಎತ್ತಿ ಪಕ್ಕೆಲುಬುಗಳು
ಪಕ್ಕಕ್ಕೆ ಸರಿಯುವಂತೆ ಶ್ವಾಸೋಚ್ಚ್ಛ್ಛ್ವಾಸ ನಡೆಯಲಿ. ಮುಂಗೈಗಳು ನೆಲಕ್ಕೆ
ಸಮಾನಾಂತರವಾಗಿ ಎರಡೂ ಹಸ್ತಗಳು ನಮಸ್ಕಾರ ಸ್ಥಿತಿಯಲ್ಲಿ. ಎಲ್ಲ
ಬೆರಳುಗಳು ಸೇರಿರಲಿ. ತಲೆ ನೇರವಾಗಿರಲಿ. ದೃಷ್ಟಿ ನೇರವಾಗಿ ಮುಂದೆ.
೧) ದೀರ್ಫ ಶ್ವಾಸವನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳು
ನಮಸ್ಕಾರದ ಸ್ಥಿತಿಯಲ್ಲೇ ಹಿಂದಕ್ಕೆ ಹೋಗಲಿ. ಸೊಂಟದಿಂದ ಪಾದದವರೆಗೆ
ಮೇಲೆ ತಿಳಿಸಿದ ಸ್ಥಿತಿಯನ್ನು ಸ್ಥಿರವಾಗಿಟ್ಟು, ಸೊಂಟದಿಂದ ಹಿಂದಕ್ಕೆ ಬಾಗ
ಬೇಕು. ಮೊಣಕಾಲುಗಳು ನೇರವಾಗಿರಲಿ. ತಲೆ ಆದಷ್ಟೂ ಹಿಂದೆ ಬಾಗಿ
ರಲಿ. (ಬಾಯಿ ಬಿಡದೆ ಹಲ್ಲು ಸೇರಿರಬೇಕು.) ಮೊಣಕ್ಕೆ, ಮೊಣಕಾಲುಗಳನ್ನು
ಬಗ್ಗಿ ಸದಂತೆ ಎಚ್ಚರ ವಹಿಸಬೇಕು. ಪಕ್ಕೆಗಳಲ್ಲಿ ಸೆಳೆತ ಬರುವಂತೆ ಎರಡೂ
ಕೈಗಳನ್ನು ಹಿಂದಕ್ಕೆ ಬಾಗಿಸಬೇಕು. ಕಿಬ್ಬೊಟ್ಟೆಯಲ್ಲಿ ಸಾಕಷ್ಟು ಸೆಳೆತ
ಅನುಭವ ಆಗುವವರೆಗೂ ಹಿಂದಕ್ಕೆ ಬಾಗಬೇಕು. ದೃಷ್ಟಿ ಕೈಗಳ ಕಡೆಗೆ.
೨) ಶ್ವಾಸವನ್ನು ಬಿಡುತ್ತಾ ಎರಡೂ ಕೈಗಳನ್ನು ಮುಂದೆಮುಂದಕ್ಕೆ
ಎಳೆಯುತ್ತಾ ಮುಂದಕ್ಕೆ ಬಾಗುತ್ತಾ ಹೋಗಬೇಕು. ಅದೇ ಸಮಯದಲ್ಲಿ
ಪಾದದಿಂದ ಸೊಂಟದವರೆಗಿನ ತೋಲ ಸುಧಾರಿಸಲು ಶರೀರ ಹಿಂದಕ್ಕೆ

4 P
ls ೪
ಜೌ
ಜಗ
ಶರೀರ ಶಿಲ್ಪ
ಸೂರ್ಯನಮಸ್ಕಾರ ೧೨೩
ಹೋಗಲಿ. ಮೊಣಕೈ ಗಳನ್ನು ಬಗ್ಗಿಸದಂತೆ ಎಚ್ಚರಿಕೆ. ಸೊಂಟದಿಂದ
ಬಾಗಿ ಎದೆಯನ್ನು ತೊಡೆಗೆ ತಾಗಿಸುವ ಪ್ರಯತ್ನ ಮಾಡಬೇಕು. ಇದಕ್ಕೆ
ಸಹಕಾರಿಯಾಗಿ ತಲೆ ಎತ್ತಿ ಬೆನ್ನನ್ನು ಮೇಲೆ ಹಳ್ಳಮಾಡಿಕೊಂಡು ಬಾಗ
ಬೇಕು. ಪ್ರತಿಕ್ಷಣದಲ್ಲೂ ಎರಡೂ ಕೈಗಳಿಂದ ಶರೀರವನ್ನು ಮುಂದಕ್ಕೆ
ಎಳೆಯುವ ಪ್ರಯತ್ನ ಸಡಿಲವಾಗದಿರಲಿ. ತಲೆ ಕಾಲುಗಳಿಗೆ ತಾಗಿರಲಿ.
ಎರಡೂ ಹಸ್ತಗಳು ನೆಲದ ಮೇಲೆ. ಪಾದಗಳ ಪಕ್ಕದಲ್ಲಿ ಅಂಗೈ ಪೂರ್ಣ ನೆಲದ
ಮೇಲೆ ಇರಲಿ. ಪೃಷ್ಠಗಳ ಮಾಂಸಖಂಡಗಳಲ್ಲಿ ಎಳೆತ ಬರಲಿ. ಕಡೆಗೆ
ಕಾಲುಗಳು ನೆಲಕ್ಕೆ ಲಂಬವಾಗಿರಲಿ.
೩) ಶ್ವಾಸ ತೆಗೆದುಕೊಳ್ಳುತ್ತಾ ಎಡಗಾಲು ಹಿಂದಕ್ಕೆ. ಎಡಮಂಡಿ
ನೆಲಕ್ಕೆ ತಾಗಿರಲಿ. ಬಲಗಾಲಿನ ಪಾದ ನೆಲದ ಮೇಲೆ ಮುಂಚಿನ ಸ್ಥಿತಿಯಲ್ಲೇ.
ಬಲಮಂಡಿ' ಪೂರ್ಣ ಮುಂದಕ್ಕೆ ಎಳೆಯಲ್ಲಡಲಿ. ಬಲತೊಡೆ ಬಲ
ಮಾನಖಂಡಕ್ಕೆ ಪೂರ್ಣ ತಾಗುವಂತೆ. ಸೊಂಟ ಪೂರ್ಣ ಕೆಳಕ್ಕೆ ಮತ್ತು
ಮುಂದಕ್ಕೆ ಎಳೆಯಲ್ಪಡಲಿ. ಬೆನ್ನು ಹಿಂದೆ ಹಳ್ಳವಾಗಲಿ. ತಲೆ ಪೂರ್ಣ
ಹಿಂದಕ್ಕೆ ಬಾಗಲಿ. ತುಟಿಗಳನ್ನು ಹಲ್ಲುಗಳನ್ನು ಬೇರ್ಪಡಿಸದಂತೆ ಎಚ್ಚರಿಕೆ.
ದೃಷ್ಟಿ ಮೇಲಕ್ಕೆ ಇರಲಿ. ಬಲತೊಡೆಯ ಮೇಲ್ಭಾಗ ಎದೆಯ ಬಳಿ.
೪) ಶ್ವಾಸ ಬಿಡುತ್ತಾ ಬಲಗಾಲನ್ನು ಹಿಂದಕ್ಕೆ ಚಾಚಿ, ಎಡಗಾಲಿನ
ಜೊತೆಗೆ. ಎರಡು ಹಿಮ್ಮಡಿಗಳೂ ಸೇರಿರಲಿ. ಇಡೀ ಶರೀರ ಒಂದೇ ನೇರ
ದಲ್ಲಿ ಇಳಿಜಾರಾಗಿರಲಿ. ಮೊಣಕೈಗಳು, ಮೊಣಕಾಲುಗಳು ನೇರವಾಗಿ ಇರಲಿ.
ದೃಷ್ಟಿ ಶರೀರಕ್ಕೆ ಲಂಬವಾಗಿರಲಿ.
೫) ಶ್ವಾಸ ತೆಗೆದುಕೊಳ್ಳದೆ ಕುಂಭಕ ಮಾಡಿ ಕೈಗಳನ್ನು ಮಡಿಸಿ ಇಡೀ
ಶರೀರ ಕೆಳಕ್ಕೆ ಬರಲಿ. ಮುಂಚೆ ಕಾಲುಗಳನ್ನು ತರಬಾರದು. ಹಣೆ, ಎದೆ
ನೆಲಕ್ಕೆ ತಾಗಿಸಲು ಯುಕ್ತ ಚಲನೆಯಾಗಲಿ. ಮೂಗು ನೆಲಕ್ಕೆ ತಾಗಬಾರದು.
ಗಲ್ಲ ಎದೆಗೆ ತಾಗಿರಲಿ. ಸೊಂಟ ಮೇಲೇಳಲಿ. ಮಂಡಿಗಳು ನೆಲಕ್ಕೆ
ತಾಗಿರಲಿ. ಹಿಮ್ಮಡಿಗಳು ಪರಸ್ಪರ ಸೇರಿರಲಿ. ಎರಡು ಕಾಲಬೆರಳುಗಳು,
ಎರಡು ಅಂಗೈಗಳು, ಎರಡು ಮಂಡಿಗಳು, ಹಣೆ ಮತ್ತು ಎದೆ ನೆಲದ
ನೇಲೆ._ ಸಾಷ್ಟಾಂಗ ನಮಸ್ಕಾರ. ಮೊಣಕ್ಕೆಗಳು ಶರೀರಕ್ಕೆ ತಾಗಿರಲಿ.
೧೨೪ ಶರೀರ ಶಿಲ್ಪ
೬) ಶ್ವಾಸ ತೆಗೆದುಕೊಳ್ಳುತ್ತಾ ಶರೀರವನ್ನು ಕೈಗಳ ಬಲದ ಮೇಲೆ!
ಮುಂದಕ್ಕೆ ತೂಗಿಸಿ ಎದೆ ಮೇಲಕ್ಕೆ ಎತ್ತಲ್ಪಡಲಿ. ನಾಭಿ ಕೈಗಳ ನೇರಕ್ಕೆ ಬರಲು 1
|
ಪ್ರಯತ್ನ. ಬೆನ್ನು ಹಿಂದಕ್ಕೆ ಹಳ್ಳವಾಗಿರಲಿ. ತಲೆ ಪೂರ್ಣವಾಗಿ ಹಿಂದಕ್ಕೆ |
ಎಳೆಯಲ್ಪಡಲಿ. ದೃಷ್ಟಿ ಆದಷ್ಟೂ ಹಿಂದಕ್ಕೆ, ಮಂಡಿಗಳು ನೆಲಕ್ಕೆ ತಾಗಿರಲಿ. '
ಹಿಮ್ಮಡಿಗಳು ಪರಸ್ಪರ ತಾಗಿರಲಿ. ಸೊಂಟ ಕೆಳಕ್ಕೆ ಮತ್ತು ಮುಂದಕ್ಕೆ|
ಎಳೆಯಲ್ಪಡಲಿ. ಮೊಣಕೈೆಗಳು ನೇರ.
೭) ಶ್ವಾಸ ಬಿಡುತ್ತಾ ತಲೆಯನ್ನು ಒಳತೆಗೆದುಕೊಂಡು ಪೂರ್ಣ.
ಹಿಂದಕ್ಕೆ, ಎರಡು ಪಾದಗಳು ಹಿಮ್ಮಡಿಸಹಿತ ಪೂರ್ಣ ನೆಲದ ಮೇಲೆ.
ಮೊಣಕೈ, ಮೊಣಕಾಲು ನೇರ. ಎರಡೂ ಭುಜಗಳಿಂದ ಶರೀರವನ್ನು ಒತ್ತಿ
ಶ್ರಿಕೋನದಂತೆ ಆಕೃತಿಗಾಗಿ ಪ್ರಯತ್ನ. ಗಲ್ಲ ಎದೆಗೆ ತಾಗಿರಲಿ. ದೃಷ್ಟಿ
ನಾಭಿಯ ಕಡೆಗೆ. ಸೊಂಟ ಮೇಲಕ್ಕೆ ಎಳೆದಿರಲಿ. ಇಡೀ ಶರೀರ ಹಿಂದಕ್ಕೆ
ತಳ್ಳಲು ಪ್ರಯತ್ನ. ತಲೆ ಆದಷ್ಟೂ ಕೆಳಕ್ಕೆ ಬರಲಿ.
೮) ಶ್ವಾಸ ತೆಗೆದುಕೊಳ್ಳುತ್ತಾ ಎಡಗಾಲು ಮುಂದೆ ಪೂರ್ವ ಸ್ಮಾನ
ದಲ್ಲಿ. ಬಲಮಂಂಡಿ ನೆಲಕ್ಕೆ ತಾಗಿರಲಿ. ಎಂಕೈಲ್ಲ ಸ್ಥಿತಿ ೩) ರಂತೆ. ಎಡ
ಮಂಡಿ ಮುಂದಕ್ಕೆ, ಮೇಲಕ್ಕೆ ಎಳೆಯಲ್ಪಡಲಿ.
೯) ಶ್ವಾಸ ಬಿಡುತ್ತಾ ಬಲಗಾಲನ್ನು ಮುಂದಕ್ಕೆ ತಂದು ಎರಡು
ಪಾದಗಳನ್ನು ಜೋಡಿಸಿ. ಅಂಗೈಗಳು ಪಕ್ಕದಲ್ಲಿ. ಮಂಡಿಗಳು ನೇರಮಾಡಿ.
೨)ರ ಸ್ಥಿತಿ.
೧೦) ಕೈಗಳನ್ನು ಮೇಲೆತ್ತಿ ಶ್ವಾಸ ತೆಗೆದುಕೊಳ್ಳದೆ ಕುಂಭಕದಲ್ಲಿ
ಸ್ಥಿತಿಗೆ. ಒಮ್ಮೆ ಸ್ಥಿತಿಗೆ ಬಂದನಂತರ ಅದೇ ಸ್ಥಿತಿಯಲ್ಲಿ ಶ್ವಾಸೋಚ್ಛ್ವಾಸ
ಮಾಡುತ್ತಾ ಇದ್ದು ಅನಂತರ ಮುಂದಿನ ಸ್ಥಿತಿಗೆ ಹೋಗಬಹುದು. ಒಂದು
ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ನಿಧಾನವಾಗಿ ಶ್ವಾಸದ ಗತಿಯ ಜೊತೆ
ಹೋಗಬೇಕಂ. ಶೀಘ್ರಚಲನೆ ಅನುಚಿತ.

ಪ್ರಕಾರವಾಗಿ ಹತ್ತು ಕ್ರಮಗಳಲ್ಲಿ ಒಂದು ಸೂರ್ಯನಮಸ್ಕಾರ
ಪೂರ್ಣವಾಗುವುದು.
ಸೂರ್ಯನಮಸ್ಕಾರ ೧೨೫.

ಮೊದಲನೆ ನಮಸ್ಕಾರದ ಕ್ರಮಾಂಕ ೩) ಮತ್ತು ೮)ರ ಕ್ರಿಯೆಗಳಲ್ಲಿ


ಎಡಗಾಲನ್ನೂ, ಎರಡನೇ ನಮಸ್ಕಾರದ ಅದೇ ಕ್ರಮಾಂಕದಲ್ಲಿ ಬಲಗಾಲನ್ನೂ
ಕ್ರಮವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ತೆಗೆದಂಕೊಂಡು ಹೋಗಬೇಕು.
ಮೇಲೆ ವಿವರಿಸಿದ ಎಲ್ಲ ಸ್ಥಿತಿಗಳೂ ಪ್ರಾರಂಭಿಕರಿಗೆ ಅಸಾಧ್ಮವಾಗ
ಬಹುದು. ಅದರಿಂದ ನಿರುತ್ಸಾಹ ಹೊಂದದೆ ಪ್ರಯತ್ನಪೂರ್ವಕವಾಗಿ
ಸ್ಥಿತಿಗಳನ್ನು ಪಡೆಯಲು ಶ್ರಮಿಸಿದರೆ, ಕ್ರಮೇಣ ಅಭ್ಯಾಸ ಮುಂದು
ವರೆದಂತೆಲ್ಲ ಸ್ಮಿತಿಗಳು ಸರಿಹೋಗುವುವು.
ಪ್ರತಿ ಸೂರ್ಯನಮಸ್ಕಾರಕ್ಕೆ ಮುಂಚೆ ಒಂದು ಮಂತ್ರ ಹೇಳಿ ಅನಂತರ
ಪ್ರಾರಂಭ ಮಾಡಬೇಕು. ಮಂತ್ರದ ಉಚ್ಚಾರ ಸ್ಪಷ್ಟವಾಗಿರಬೇಕು. ಒಂದು
ಮಂತ್ರಕ್ಕೆ ಒಂದರಂತೆ, ೧೨ ನಮಸ್ಕಾರಗಳ ಒಂದು, ಎರಡು ಅಥವಾ ಅನೇಕ
ಆವರ್ತನಗಳನ್ನು (೧೨, ೨೪, ೩೬, ೪೮) ಮುಗಿಸಿ ಕೊನೆಯಲ್ಲಿ “ಶ್ರೀ ಸವಿತೃ
ಸೂರ್ಯನಾರಾಯಣಾಯ ನಮಃ” ಎಂಬ ಮಂತ್ರ ಹೇಳಿ ಮತ್ತೊಂದು
ನಮಸ್ಕಾರ ಮಾಡಬೇಕು.
ಶ್ವಾಸವನ್ನು ತೆಗೆದುಕೊಳ್ಳುವ, ಬಿಡುವ, ತಡೆಹಿಡಿಯುವ ಕ್ರಿಯೆಗಳಿಗೆ
ಕ್ರಮವಾಗಿ ಪೂರಕ, ರೇಚಕ, ಕುಂಭಕ ಎಂದು ಕರೆಯಲಾಗಿದೆ. ಪ್ರತಿ ನಮ
ಸ್ಕಾರದ ವಿವಿಧ ಕ್ರಿಯೆಗಳಲ್ಲಿ ಶ್ವಸನಕ್ರಿಯೆ ಈ ರೀತಿ ಇರಬೇಕು:
೧. ಪೂರಕ ೨. ರೇಚಕ ೩. ಪೂರಕ ೪. ರೇಚಕ ೫. ಕುಂಭಕ
೬. ಪೂರಕ ೭. ರೇಚಕ. ೮. ಪೂರಕ ೯. ರೇಚಕ ೧೦. ಕುಂಭಕ.
ಸಲಹೆಗಳು : ನಮಸ್ಕಾರಗಳನ್ನು ಮಾಡಲು ಸ್ವಚ್ಛ ಮತ್ತು ಶಾಂತ
ಸ್ಮಾನವನ್ನು ಆರಿಸಿ, ಶರೀರದ ಮೇಲೆ ನ್ಯೂನತಮ ಮೇಲುವಸ್ತ್ರ(ಲಂಗೋಟಿ)
ವನ್ನು ಧರಿಸಿ ಪೂರ್ವಾಭಿಮುಖವಾಗಿ ನಿಂತು ಮಾಡಬೇಕು. ನಮಸ್ಕಾರ
ಗಳನ್ನು ಮಾಡಲು ಬೆಳಗಿನ ಜಾವದ ಸಮಯ ಬಹಳ ಸೂಕ್ತ. ಬೆಳಗ್ಗೆ
ಮತ್ತು ಸಂಜೆ ಆಹಾರ ತೆಗೆದುಕೊಳ್ಳುವ ಸಾಕಷ್ಟು ಮುನ್ನವೂ ಮಾಡ
ಬಹುದು.
ಹೆಚ್ಚು ನಮಸ್ಕಾರಗಳನ್ನು ಕೆಲವೇ ದಿನಗಳು ಮಾಡುವ ಬದಲು,

1 ಹ್‌ ೫ ್ಸ ಚಟ
೧೨೬ ಶರೀರ ಶಿಲ್ಪ
ಕೆಲವೇ ನಮಸ್ಕಾರಗಳನ್ನು ನಿಯಮಿತವಾಗಿ ತಪ್ಪಿ ಲ್ಲದೆ ಮಾಡುವುದು ಉಚಿತ.
ಬಾಲಕರು ಮತ್ತು ವಯಸ್ಕರು ಕನಿಷ್ಠ ಹದಿಮೂರು ಸೂರ್ಯನಮಸ್ಕಾರ
ಗಳನ್ನು, ತರುಣರು ಕನಿಷ್ಠ ಇಪ್ಪತ್ತ ದು ಸೂರ್ಯನಮಸ್ಕಾರಗಳನ್ನು ಮಾಡ |
ಬೇಕು. ವಿಶೇಷವಾಗಿ ೧೩ ನೇ ವಯಸ್ಸಿನಿಂದ ೨೦ ನೇ ವಯಸ್ಸಿನವರೆಗೆ ನಿತ್ಯ
ನಿಯಮಿತವಾಗಿ ಮಾಡಿದ ವ್ಯಾಯಾಮ ಇಡೀ ಜೀವನಕ್ಕೆ ಸಾಲುವಷ್ಟು
ಬಂಡವಾಳ.
ಮನೆಗಳಲ್ಲಿ, ಶಾಲೆಗಳಲ್ಲಿ, ವಿದ್ಮಾರ್ಥಿ ನಿಲಯಗಳಲ್ಲಿ ನಮಸ್ಕಾರಗಳನ್ನು
ಸಾಮೂಹಿಕವಾಗಿ ಮಾಡುವುದರಿಂದ ಆನಂದ ಉತ್ಸಾಹಗಳು ಉತ್ಸನ್ನ
ವಾಗಿ
ಉಪಾಸನೆ ಮತ್ತು ವ್ಯಾಯಾಮದ ಉಭಯವಿಧ ಲಾಭ ಆಗುವುದು.
ಉಸಿರಾಟದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಕೇವಲ ಮೂಗಿ
ನಿಂದಲೇ ಉಸಿರಾಡಬೇಕು. ಉಸಿರು ಬಿಡುವ ಮತ್ತು ತೆಗೆದುಕೊಳ್ಳುವ.
ಕ್ರಿಯೆ ನಿಧಾನವಾಗಿ ಏರಿಳಿತಗಳಿಲ್ಲದೆ ಒಂದೇ ಗತಿಯಿಂದ ಮಾಡಬೇಕು.
ಪ್ರಾರಂಭದಲ್ಲಿ ಪೂರಕ, ರೇಚಕ, ಕುಂಭಕದ ಬಗ್ಗೆ ಆಗ್ರಹ ಇಡದೆ.
ಕೇವಲ ಶರೀರ ಎಳೆದು ವಿಕಾಸ ಆದಾಗ ಉಸಿರು ತೆಗೆದುಕೊಂಡು, ಸಂಕೋಚ
ಆದಾಗ ಶ್ವಾಸ ಬಿಡುವ ಕ್ರಿಯೆಯಿಂದ ಅಭ್ಯಾಸ ಮಾಡಬೇಕು.

ನಮಸ್ಕಾರದಿಂದ ಶರೀರದ ಒಳ ಹೊರ ಅಂಗಗಳಿಗೆ ವ್ಮಾಯಾಮವಾಗಿ


ಶರೀರದ ಎಲ್ಲ ಕ್ರಿಯೆಗಳು - ಉಸಿರಾಟ, ರಕ್ತಚಲನೆ, ಶುದ್ಧೀಕರಣ, ಪಚನ,
ನರಗಳ ಶಕ್ತಿ ಇತ್ಮಾದಿ ಸುಧಾರಿಸಿ, ವ್ಯಕ್ತಿ ದೀರ್ಫಾಯುವಾಗುವನು.
ಸ್ತ್ರೀಯರಿಗೆ ವಿಶೇಷ ಉಪಯುಕ್ತ ವ್ಯಾಯಾಮ ನಮಸ್ಕಾರ.
ಇದು ಆಸನಗಳ ಜೋಡಣೆ. ಅದರಿಂದ ಆ ಸ್ಥಿತಿಯಲ್ಲಿ
ಬೇಕಾದರೂ ಆ ಸ್ಥಿತಿಗೆ ಬಂದನಂತರ ಶ್ವಾಸೋಚ್ಚ್ಛ್ವಾ ಸ ಮಾಡುತ್ತಾ ಹೆಚ್ಚು
ಹೊತ್ತು ನಿಲ್ಲಬಹುದು. ಈ ರೀತಿ ನಿಲ್ಲಲು.೨, ೪, MyrE ೭ ಸ್ಥಿತಿಗಳು ವಿಶೇಷ
ಲಾಭಕರ. ೨, ೭ ನೇ ವಿನ್ಮಾಸಗಳಲ್ಲಿ ೨ ನಿಮಿಷಗಳಿಗಿಂತ ಹೆಚ್ಚು ಹೊತ್ತು
ನಿಲ್ಲುವುದರಿಂದ ಮನಸ್ಸಿಗೆ 'ನೆಮ್ಮದಿಯೂ ಸಿಗುವುದು. ಸ್ಥಿತಿ ಬದಲಿಸುವಾಗ
ಮೇಲಿನ ವರ್ಣನೆ ಪ್ರಕಾರ ಪೂರಕ, ರೇಚಕಗಳನ್ನು ಮಾಡಬಹುದು.
೨೦ ಯೋಗಾಭ್ಯಾಸ

ಯೋಗವನ್ನು ಹೇಗೆ ಪ್ರಾರಂಭ ಮಾಡುವುದು? ಎಲ್ಲಿಂದ ಪ್ರಾರಂಭ


ಮಾಡುವುದು ? ಯೋಗಾಭ್ಯಾಸದ ವಿವರಗಳನ್ನು ತಿಳಿದ ಮಹಿಮೆಯನ್ನು
ಅರಿತ ಪ್ರತಿಯೊಬ್ಬ ನನ್ನೂ ಕಾಡುವ ಪ್ರಶ್ನೆಯಿದು. ಅದಕ್ಕಿಂತ ಮುಖ್ಯ
ಪ್ರಶ್ನೆ,ಜಾನ ಮಾಡಲು ನಾನು ಅರ್ಹನೇ? ಎಂಬುದು.
ಸ್ವಗಳ ಪ್ರಕಾರ “ಯುವಕನಾಗಲಿ, ವೃ ದ್ವನಾಗಲಿ, ಅತಿವೃ ದ್ವನಾಗಲಿ
(೬೦ ಅಟ್ಟೆ ರೋಗದಿಂದ ನರಳುತ್ತಿ ರುವವನಾಗಲಿ, ದುರ್ಬಲನೇ
ಆಗಲಿ, ಸ್ತ್ರೀಯರಾಗಲಿ, ಪುರುಷರಾಗಲಿ, ಅಭ್ಯಾಸ ಮಾಡಿದರೆ ಸಿದ್ಧಿಯನ್ನು
ಹೊಂದುವರು.”
ಹೀಗಿರುವಾಗ ಪ್ರತಿ ವ್ಯಕ್ತಿಯೂ ಯೋಗಾಭ್ಯಾಸ ಮಾಡಲು ಅರ್ಹ.
ಯೋಗಾಭ್ಯಾಸಕ್ಕೆ i, ಮಾತ್ರ ಅನರ್ಹ.
ಹಾಗಾದರೆ ಎಲ್ಲಿಂದ ಪ್ರಾರಂಭ ಮಾಡುವುದು ?
ಜೀವನ ಎಲ್ಲಿಂದ ಪ್ರಾರಂಭವಾಯಿತೋ ಅಲ್ಲಿಂದ! ಅರ್ಥಾತ್‌.
೧೩೦ ಶರೀರ ಶಿಲ್ಪ

ಏಗ ಕನಲಾರ್ಡನ
ಕ್ರಮ : ಶ್ವಾಸಕೋಶದ ಮೂರು ಭಾಗಗಳನ್ನು ಉಪಯೋಗಿಸುವೆವೋ
ಇಲ್ಲವೋ ಎಂದು ಕಂಡುಹಿಡಿಯಲು ಸುಲಭ ಕ್ರಮ ಇದು:
೧. .ಅಧಮ: ವಜ್ರಾಸನದಲ್ಲಿ ಕುಳಿತುಕೊಳ್ಳಿ. ಒಂದು ಕೈಯನ್ನು
ನಾಭಿಗಿಂತ ಸ್ವಲ್ಪ ಮೇಲೆ ಇಡಿ. ಈಗ ನಿಧಾನವಾಗಿ ಈ ಕ್ಷೇತ್ರಕ್ಕೆ ಉಸಿರು
ತುಂಬುವಂತೆ ಶ್ವಾಸವನ್ನು ತೆಗೆದುಕೊಳ್ಳಿ ಮತ್ತು ನಿಧಾನವಾಗಿ ಬಿಡಿ.
ಮನಸ್ಸು ಶಾ ಿಸಕೋಶದ "ಅಧಮ' ಭಾಗದಲ್ಲಿ ಕೇಂದ್ರಿತವಾಗಿರಲಿ. ಆಗ
ಶ್ವಾಸಕೋಶದ ಅಧಮ ಭಾಗ ತುಂಬುವುದು. ಬಳಿಕ ಖಾಲಿ ಆಗುವುದು.
ಹಾಗೆಯೇ ಕೈ ಕೂಡ ಮೇಲೆ ಕೆಳಗೆ ಓಡಾಡುವುದಂ. ಕೆಲವೇ ಉಸಿರಾಟ
ಗಳಲ್ಲಿ ಕೆಳಭಾಗ (ಕೋಶ) ದ ಉಪಯೋಗವಾಗುತ್ತಿದೆಯೋ ಇಲ್ಲವೋ
ಎಂಬುದು ಕೈಗೆ ಅನುಭವಕ್ಕೆ ಬರುವುದು.
೨. ಮಧ್ಯಮ: ಕೈಯನ್ನು ಎದೆಯ ಮಧ್ಯ್ಮಭಾಗದಲ್ಲಿಡಿ. ಈ
ಕ್ಷೇತ್ರಕ್ಕೆ ಉಸಿರು ತಂಟುವಂ ದೀರ್ಫ್ಥವಾಗಿ ಉಸಿರಾಡಿ. ಗಮನ ಶ್ವಾಸ
ಕೋಶದ ಮಧ್ಯಮ ಕ್ಷೇತ್ರದಲ್ಲಿ. ಕೆಲವೇ ಉಸಿರಾಟಗಳಲ್ಲಿ ಈ ಕ್ಷೇತ್ರದ
ಬಳಕೆಯಾಗುತ್ತಿದೆಯೋ ಇಲ್ಲವೋ ಎಂದು ಅರಿವಾಗುವುದು.
೩. ಆದ್ಕ: ಕೈಯನ್ನು ..ಎದೆಯ ಮೇಲುಭಾಗದಲ್ಲಿ ಕತ್ತಿನ ಬಳಿ
ಇಡಿ. ."ಆದ್ಯ' ಶ್ವಾಸದಿಂದ ಈ 'ಕ್ಷೇತ್ರವನ್ನು "ತುಂಬಿ. ಗಮನ ಈ
ಕ್ಷೇತ್ರದಲ್ಲಿ. ಶ್ವಾಸಕೋಶದ ಈ ಭಾಗ ಬಳಕೆಯಲ್ಲಿದೆಯೇ ಪರೀಕ್ಷೆ ಮಾಡಿ.
ಯೋಗಾಭ್ಯಾಸ ೧೩೧

'ಸಾಮಾನ್ಮವಾಗಿ ಈ ಭಾಗದಲ್ಲಿ ಉಸಿರಾಡಂವುದಂ ಕಷ್ಟ. ಆದಕಾರಣ ಇದಕ್ಕೆ


“ವಿಶೇಷ ಅಭ್ಯಾಸ ಅಗತ್ಯ.
ವ್ಯಕ್ತಿಯ ವಯಸ್ಸು ಹೆಚ್ಚುತ್ತಾ ಉಸಿರಾಟ "ಮೇಲೆ ಮೇಲೆ? ಆಗುವ
ಸಂಭವ ಹೆಚ್ಚು. ಅದರಿಂದಲೇ 'ಶರೀರಕ್ಕೆ ಅಗತ್ಯವಾದ ಆಮ್ಲಜನಕ ಕಡಿವೆಂ
ಯಾಗುವುದು. ಪರಿಣಾಮವಾಗಿ ಶರ್ಕರ ಪಿಷ್ಠಗಳನ್ನು ಹದಗೊಳಿಸುವ
ಕ್ರಿಯೆಯು ದುರ್ಬಲವಾಗಿ ಶರೀರ ಕೃಶವಾಗುವುದು. ಅದಕ್ಕಾಗಿ ಬುದ್ಧಿ
ಪುರಸ್ಸರವಾಗಿ ದೀರ್ಫಶ್ವಾಸ ಮಾಡುವ ಕಾರ್ಯವು ವಯಸ್ಸಿನ ಪರಿಣಾಮ
ಗಳನ್ನು ದೂರ ತಳ್ಳುವ ಪ್ರಭಾವೀ ಉಪಾಯಗಳಲ್ಲಿ ಒಂದು. ನಿಯಂತ್ರಿತ
ಆಧಮ ಶಾಸದಿಂದ. ನಾಭಿಯಿಂದ ಕೆಳಗಿರುವ ಶರೀರದ ಭಾಗಗಳಿಗೆ ಬಲ
ಬರುವುದು. ರಕ್ತ ಪರಿಕ್ರಮದ ದೋಷ ನಿವಾರಣೆಯಾಗುವುದು. ಮಲ
ಬದ್ಧತ್ಕ, ಪಚನಾದಿ ಕ್ರಿಯೆಗಳ ದೋಷಗಳು ದೂರವಾಗುವುವು. ಮಧ್ಯಮ
ಶಾಸವು ಹೃದಯದ ಕ್ರಿಯೆಗಳಲ್ಲಿಚೈತನ್ಮ ತುಂಬುವುದಂ... ಹೃದಯವಿಕಾರ
ಗಳನ್ನು ದೂರಮಾಡುವುದು. ತ ಗೂಡಿನ ಸೆಳೆತಗಳನ್ನು ಸಡಿಲಗೊಳಿ
ಸುವುದು. ಆದ್ಕ ಶ್ವಾಸದಿಂದ ಆಸ್ಕಸಮಾ, ತಲೆಸಿಡಿತ, ಕಣ್ಣುರಿ
ಮುಂತಾದ ವಿಕಾರಗಳನ್ನು ಹತೋಟಿಯಲ್ಲಿಡಬಹುದು.
ಶರೀರದ ಯಾವುದೇ ಭಾಗದ ದೋಷಗಳಿರಲಿ, ಅವುಗಳ ನಿವಾರಣೆಗಾಗಿ
ಅಧಮ, ಮಧ್ಯಮ, ಆದ್ಕ ವಿಭಾಗ ಪ್ರಾ ಡಾಬಾ ನ್ಟ ಮಾಡು
ವುದರಿಂದ ದೋಷಮುಕ್ತ ಚಂತ
ನಾಭಿಯಿಂದ ಕೆಳಗಿನ ಕ್ರಿಯೆ, ಪ್ರಕ್ರಿಯೆಗಳು. ಅಧಮ, ನಾಭಿಯಿಂದ
ಎದೆಯ ಗೂಡಿನವರೆಗೆ._ವಂಧ್ಕವಂ. ಎದೆಯ ಮೇಲಿನಿಂದ ಶಿರದವರೆಗೆ
--ಆದ್ಕ. |
ಆಯಾ ಕ್ಷೇತ್ರಗಳ ದೋಷವಿದ್ದಾಗ ಸಂಬಂಧಪಟ್ಟ ವಿಭಾಗ ಪ್ರಾಣಾ
ಯಾಮವನ್ನು ಮಾಡಬೇಕು. ಒಮ್ಮೆ ಕುಳಿತಾಗ ೫ ರಿಂದ ೧೦ ನಿಮಿಷಗಳು
ಆರಿಸಿದ ಶ್ವಾಸಕ್ರಿಯೆ ಮಾಡಬೇಕು. ದಿನಕ್ಕೆ ಎರಡು ಬಾರಿ ಮಾಡಬೇಕು.
ದೋಷಮುಕ್ತರಾಗುವವರೆಗೆ ಮಾಡಬೇಕು. ಅನಂತರ ಮುಂಜಾಗ್ರತೆಗಾಗಿ
(ದೋಷ ಬಾರದೆ ಇರ) ಮಾಡಬೇಕು.
೧೩೨ ಶರೀರ ಶಿಲ್ಪ

ಈ ಅಧಮ, ಮಧ್ಯಮ, ಆದ್ಕ ಶ್ವಾಸಕ್ರಿಯೆಗಳು ಸಹಜವಾಗಿ


ಮೇಲಿನ ಕ್ರಮದಲ್ಲಿ ಮಾಡಲು ಸಾಧ್ಯವಾಗದಿದ್ದಾಗ ಅಥವಾ ಶ್ವಾಸಕೋಶಕ್ಕೆ '
ಅಭ್ಯಾಸವೇ ಇಲ್ಲದಿರುವಾಗ ಕೆಲವು ವಿಶೇಷ ಕ್ರಿಯೆಗಳಿಂದ ಅದನ್ನು ಸಾಧಿಸಿ '
ಕೊಳ್ಳಬೇಕು. ಮೂರೂ ಶ್ವಾಸಕ್ಟಿಯೆಗಳಿಗೆ ಯೋಗ್ಕವಾದ ಆಸನಗಳು ಇವೆ.
ಆವುಗಳ ಅಭ್ಯಾಸದಿಂದ ಶ್ವಾಸಕೋಶದ ದೋಷ ನಿವಾರಣೆಯಾಗುವುದು.

ವಿಭಾಗ ಪ್ರಾಣಾಯಾಮದ ಮೂಲಕ ಶ್ವಾಸಕೋಶದ ಎಲ್ಲ ಭಾಗಗಳೂ:


ಸಕ್ರಿಯವಾಗಿವೆಯೋ ಇಲ್ಲವೋ ಎಂಬುದನ್ನು ಗುರುತಿಸಬಹುದು. ಪ್ರಾಕೃತಿಕ:
ವಾಗಿ ಬಲಕೋಶದಲ್ಲಿ ಮೂರು ಮುಖ್ಯ ಭಾಗಗಳೂ (ಉಪಕೋಶಗಳು)..
ಎಡಕೋಶದಲ್ಲಿ ಎರಡು, ಮುಖ್ಯ ಭಾಗಗಳೂ (ಉಪಕೋಶಗಳು) ಇವೆ..
ಯಾವ ಭಾಗದಲ್ಲಿ ಕೊರತೆ ಇದೆಯೋ ಆ ಭಾಗದ ಕ್ರಿಯೆಯನ್ನು ಸುಧಾರಿಸಲು.
ಕೆಲವು ಶ್ವಾಸಕ್ರಿಯೆ ಮಾಡಬೇಕಾಗುವುದು. ಅದಕ್ಕೆ ವಿಶೇಷ ಗಮನ,
ಪ್ರಯತ್ನ ಅವಶ್ಯಕ.

“ಅಧಮ” ಶ್ವಾಸ.ಸುಧಾರಣೆ-
ಉಷ್ಕ್ರಾಸನ (ಚಿತ್ರ - ಪುಟ ೧೩೪)
ವಜ್ಪಾಸನದಲ್ಲಿ ಕುಳಿತುಕೊಳ್ಳಿ. ದೀರ್ಫಶ್ವಾಸ ತೆಗೆದುಕೊಳ್ಳುತ್ತಾ, |
ಸೊಂಟವನ್ನೆತ್ತಿ ಮಂಡಿಯ ಮೇಲೆ ನಿಲ್ಲಿ. ಮಂಡಿಯಿಂದ ಕೆಳಗಿನ ಭಾಗ:
ನೆಲದ ಮೇಲಿರಲಿ.
ಹಂತ ೧: ಶ್ವಾಸ ಬಿಡುತ್ತಾ ಆದಷ್ಟು ಹಿಂದಕ್ಕೆ ವಾಲಿ. ವಾಲುವಾಗ, '
ಮಂಡಿ, ಸೊಂಟ, ಬೆನ್ನು, ಕುತ್ತಿಗೆಯ ಕೀಲುಗಳ ಉಪಯೋಗ ಆಗಲಿ.
ಎರಡೂ ಕೈಗಳು ಬದಿಯಲ್ಲಿ ನೇತಾಡುತ್ತಿರಲಿ. ತಲೆ ಭುಜದ ಮಧ್ಯದಲ್ಲಿ
ಬಾಗಿರಲಿ. ಕುತ್ತಿಗೆ ಹಿಂದಕ್ಕೆ ಎಳೆದಿರಲಿ.
ಶ್ವಾಸ ತೆಗೆದುಕೊಳ್ಳುತ್ತಾ ಮುಂಚಿನ ಸ್ಥಿತಿ ಅಭ್ಮಾಸದನಂತರ' |
: ವಜ್ರಾಸನದಲ್ಲಿ ಕುಳಿತಿದ್ದಂತೆಯೇ ಶ್ವಾಸ ತೆಗೆದುಕೊಳ್ಳುತ್ತಾ ಸೊಂಟ, ಪೃಷ್ಠ
ಗಳನ್ನು ಮೇಲೆತ್ತಿ ಈ ಸ್ಥಿತಿಗೆ ಬರಬಹುದು. ನಾಭಿ ಆದಷ್ಟು ಮುಂದಕ್ಕೆ.
ಯೋಗಾಭ್ಯಾಸ ೧೩೩

ಬೆನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಬಾಗಲಿ. * ಸ್ಥಿತಿಯಲ್ಲಿ ೧೦


ಸೆಕೆಂಡುಗಳಿದ್ದು ಮುಂಚಿನ ಸ್ಥಿತಿಗೆ. ಇದೇ ರೀತಿ ಮತ್ತೆರಡು ಬಾರಿ ಮಾಡಿ.
ಹಂತ ೨: ವಜ್ಪಾಸನದಲ್ಲಿ ಕುಳಿತುಕೊಳ್ಳಿ. ಹಸ್ತಗಳನ್ನು ಪಾದಗಳ
ಹಿಂದೆ ಇಡಿ, ಕೈಬೆರಳುಗಳು ಮತ್ತು ಕಾಲಬೆರಳುಗಳು ಒಂದಕ್ಕೊಂದು
ತಾಗಿರಲಿ. ಶರೀರದ ಭಾರ ಮಣಿಕಟ್ಟುಗಳ ಮೇಲೆ ಬಿಡುತ್ತಾ, ಶ್ವಾಸ
ತೆಗೆದುಕೊಳ್ಳುತ್ತಾ ಸೊಂಟ ಪೃಷ್ಮಗಳನ್ನು ಆದಷ್ಟು ಮೇಲೆತ್ತಿ. ತಲೆ
ಹಿಂದಕ್ಕೆ ಪೂರ್ಣ ಬಾಗಿರಲಿ. ೧೦ ಸೆಕೆಂಡುಗಳಿದ್ದು ಶ್ವಾಸ ಬಿಡುತ್ತಾ ಕುಳಿತು
ಕೊಳ್ಳಿ. ಮತ್ತೆರಡು ಬಾರಿ ಮಾಡಿ.

ಹಂತ ೩ : ಪೂರ್ಣ ಉಪಾ ಸನ

ವಜ್ಞಾಸನದಲ್ಲಿ ಕೂಡಿ. ಮೇಲೆದ್ದು ಮಂಡಿಯ ಮೇಲೆ ನಿಲ್ಲಿ.


ಶ್ವಾಸ ತೆಗೆದುಕೊಂಡು ನಿಧಾನವಾಗಿ ಬಿಡುತ್ತಾ ಹಿಂದಕ್ಕೆ ಬಾಗಿ ಎರಡೂ
ಕೈಗಳಿಂದ ಹಿಮ್ಮಡಿಗಳನ್ನು ಬಿಗಿ ಹಿಡಿಯಿರಿ. ಈ ಸ್ಥಿತಿಯಲ್ಲಿ ಸೊಂಟವನ್ನು
ಹಿಮ್ಮಡಿಗಳಿಂದ ದೂರದೂರ ತಳ್ಳಿ. ದೀರ್ಫ್ಥಶ್ವಾಸ ಮಾಡಿ. ಇದು
ಹೆಚ್ಚು ಶ್ರಮದಾಯಕ. ಆದರೂ ವಿಶೇಷ ಪ್ರಯತ್ನ ಹಾಕಿ. ಶ್ವಾಸ
ಬಿಡುತ್ತಾ ವಜ್ರಾಸನದ ಸ್ಲಿತಿಗೆ

ವಾಪಸು ಬನ್ನಿ. 8

ಉಷ್ಕ್ರಾಸನವನ್ನು “ಸೌಂದರ್ಯವರ್ಧಕ” ಎಂದು ಕರೆಯಲಾಗಿದೆ.


ಕೊಬ್ಬನ್ನು ಕರಗಿಸಲು ಅತಿ ಸುಲಭ ಮಾರ್ಗ. ಜೋತಾಡುವ ಕೊಬ್ಬಿನ
ಹೊಟ್ಟೆಯನ್ನು ತೆಳುವಾಗಿಸಲು, ಎದೆಯನ್ನು ಉಬ್ಬಿಸಲು, ಪೃಷ್ಠಗಳನ್ನು
'ಸೊರಗಿಸಲಂ ಮತ್ತು ಶರೀರದ ಮೇಲೆ ಮತ್ತು ಮುಖದ ಮೇಲಿನ ಮುಪ್ಪಿನ
ಸುಕ್ಕುಗಳನ್ನು ನಿವಾರಿಸಿ, ಕತ್ತು-ಕೆನ್ನೆಗಳಲ್ಲಿ ಕಲೆತ ಕೊಬ್ಬನ್ನು ಕರಗಿಸಿ ನೀಳ
ಮಾಡಲು ಸರಳ ಆಸನ. ಇದು ಅಧಮ ಶ್ವಾಸವನ್ನು ಸುಧಾರಿಸುವುದು,
ಶ್ವಾಸಕೋಶೆದ ರೋಗಗಳ- ಉದಾಹರಣೆಗೆ, ಆಸ್ಕಮಾ ಇತ್ಮಾದಿಗಳ
ನಿವಾರಣೆಗೆ ಮತ್ತು ಶ್ವಾಸಕೋಶಗಳನ್ನು ನಿರ್ಮಲಗೊಳಿಸಲು ಉತ್ತಮ
'ಆಸನ.
೧೩೪ ಶರೀರ ಶಿಲ್ಪ

ಮಹಾಮದ್ರಾ
ಯೋಗಾಭ್ಕಾಸ ೧೩೫

ಹೃದ್ರೋಗ ನಿವಾರಣೆ ಅಥವಾ


ಮಧ್ಯಮ ಶ್ವಾಸ ಸುಧಾರಣೆ :
ಶಾಸ್ತ್ರದ ಪ್ರಕಾರ ಹೃದ್ರೋಗಗಳಿಗೆ ಅನುಚಿತ ಆಹಾರ, ಸಂಯಮ
ರಹಿತ ಭಾವನೆಗಳ ಒತ್ತಡ, ತತ್ಪರಿಣಾಮವಾಗಿ ಸೆಳೆತ] ಮತ್ತು ವ್ಯಾಯಾಮ
ಇಲ್ಲದಿರುವಿಕೆಯೇ ಮುಖ್ಯ ಕಾರಣಗಳು. ಇವೆಲ್ಲವುಗಳನ್ನು ಗಣನೆಗೆ ತೆಗೆದು
ಕೊಂಡು ದುರ್ಬಲ ಹೃದಯವನ್ನು ಸಬಲಗೊಳಿಸುವ ವಿಧಾನ ಯೋಗ
ಮಾರ್ಗವೇ ಹೊರತು ಬೇರೊಂದಿಲ್ಲ. ಸೆಳೆತ ಮತ್ತು ಒತ್ತಡಗಳನ್ನು ಹಠಾಸನ
ದಿಂದ ನಿವಾರಿಸಿ, ಜ್ಞಾನಕ್ರಿಯೆಗಳಿಂದ ಸಡಿಲತೆ ಉಂಟುಮಾಡಬಹುದು.
ಪ್ರಾಣಾಯಾಮದ ಬಗ್ಗೆ ಆಗ್ರಹದಿಂದ ಹೃದಯದ ಮಾಂಸಖಂಡಗಳ ಮೇಲೆ
ಸತ್ತರಿಣಾಮ ಉಂಟಾಗುವುದು. ಮಧ್ಯಮ ಶಾ ಸದೋಷ ನಿವಾರಣೆಯಾಗಿ
ಎದೆಗೂಡಿನ ಮಧ್ಯದಲ್ಲಿ ಹೆಚ್ಚು ಸ್ಥಳಾವಕಾಶ ಉಂಟಾಗಿ ಶ್ವಾಸಕೋಶದ
ಶಕ್ತಿ ಹೆಚ್ಚಾಗುವುದು.

ಮತ್ಸ್ಯಾಸನ ಹಂತ ೧:
ಬೆನ್ನಿನ ಮೇಲೆ ಮಲಗಿ. ಕೈಗಳನ್ನು ಸೊಂಟದ ಮಧ್ಯದಲ್ಲಿಡಿ. ಶ್ವಾಸ
ತೆಗೆದುಕೊಳ್ಳುತ್ತಾ ಶರೀರವನ್ನು ಮೊಣಕ್ಕೆ ಸಹಾಯದಿಂದ ಎತ್ತಿ. ಅನಂತರ
ತಲೆಯನ್ನು ನೆಲದ ಆಸರೆಯಲ್ಲಿಡಿ. ಈ ಸ್ಥಿತಿಯಲ್ಲಿ ದೀರ್ಫಶ್ವಾಸ ಮಾಡಿ.
ಎ! ಯನ್ನು ಉಬ್ಬಿಸಿ ಮತ್ತು ಹೃದಯಕ್ಕೆ "ಮಸಾಜ್‌' ಮಾಡಿ.
ಹಂತ ೨: ಪದ್ಮಾಸನ ಹಾಕಿ. ಎಡ ಪಾದ ಬಲ ತೊಡೆಯ ಮೇಲೆ,
ಬಲ ಪಾದ ಎಡ ತೊಡೆಯ ಮೇಲೆ. ಹಿಂದಕ್ಕೆ ಬಗ್ಗುತ್ತಾ ಹೋಗಿ
ತಲೆಯನ್ನು (ಮಧ್ಯ) ನೆಲದ ಮೇಲಿಡಿ. ಎರಡೂ ಮೊಣಕಾಲುಗಳು ನೆಲಕೆ,
ತಾಗಿರಲಿ. ಕಾಲಿನ ಹೆಬ್ಬೆರಳುಗಳನ್ನು ಕೈಗಳಿಂದ ಹಿಡಿಯಿರಿ. ಮೊಣಕ್ಕೆ
ನೆಲದ ಮೇಲಿರಲಿ, ಈ ಸ್ಥಿತಿಯಲ್ಲಿ ದೀರ್ಫ್ಥ ಮಧ್ಯಮ ಶಾ ಒಸವನ್ನು ಮಾಡಿ.
ವ ಸ್ಲಿತಿಯಿಂದ ನೀರಿನಲ್ಲಿ ತೇಲಬಹುದು. ಅದರಿಂದಲೇ ಇದಕ್ಕೆ
ಮತ್ಸ್ಯಾಸನ ಎಂದು ಹೆಸರಾಯಿತು.
೧೩೬ ಶರೀರ ಶಿಲ್ಪ

ಆದ್ಯ ಶ್ವಾಸದೋಷ ನಿವಾರಣೆ


ಶ್ವಾಸಕೋಶದ ಅನೇಕ ತೊಂದರೆಗಳಿಗೆ ಮುಖ್ಯ ಕಾರಣವೆಂದರೆ,
ಉಪಯೋಗವಾನ ಶ್ವಾಸ ಹೊರಕ್ಕೆ ಬಾರದೆ ಶ್ವಾಸಕೋಶದ ಮೇಲಿನ
ಭಾಗಗಳಲ್ಲಿಯೇ ಇರುವುದು. ಎಲ್ಲಿಯವರೆಗೆ ಈ ಗಾಳಿಯನ್ನು ಹೊರತರುವ
ಪ್ರಯತ್ನ ನಡೆಯುವುದಿಲ್ಲವೋ ಅಲ್ಲಿಯವರೆಗೆ ದೋಷನಿವಾರಣೆಯಾಗುವು
ದಿಲ್ಲ. ಆದಕ್ಕಾಗಿ ಮಹಾಮುದ್ರಾ ಬಹು ಉಪಯುಕ್ತ.
ವಜ್ರಾಸನದಲ್ಲಿ ಹಿಮ್ಮಡಿಗಳ ಮೇಲೆ ಕೂಡಿ. ಕೈಗಳನ್ನು ಹಿಂದೆ ಕಟ್ಟಿ.
ಶ್ವಾಸ ತೆಗೆದುಕೊಂಡು ಬಿಡುತ್ತಾ ಸೊಂಟದಿಂದ ಮುಂದೆ ಬಾಗಿ. ತಲೆ
ನೆಲಕ್ಕೆ ತಾಗಲಿ - ಮೊಣಕಾಲುಗಳ ಮುಂದೆ. ಇದೇ ಸ್ಥಿತಿಯಲ್ಲಿ ಕೈಗಳನ್ನು
ಮೇಲೆತ್ತಿ. ಮಿಕ್ಕಿರುವ ಕೋಶದಲ್ಲಿರುವ ಗಾಳಿ ಹೊರಕ್ಕೆ ತಳ್ಳಲ್ಪಡುವುದು.
೬ ಸೆಕೆಂಡುಗಳಷ್ಟು ಕಾದು ಅನಂತರ ಶ್ವಾಸ ತೆಗೆದುಕೊಳ್ಳುತ್ತಾ ಮೇಲೆ 1
ಬನ್ನಿ. ಇದೇ ರೀತಿ ೬ ಬಾರಿ ಮಾಡಿ.
ಮೇಲಿನ ಮೂರು ಆಸನಗಳಿಂದ ಅಧಮ, ಮಧ್ಮಮ ಮತ್ತು ಆದ್ಯ '
ಶ್ವಾಸಗಳ ದೋಷನಿವಾರಣೆಯಾಗುವುದು. ಮಿಕ್ಕ ಮುಂದಿನ ಪ್ರಾಣಾ
ಯಾಮ ಕ್ರಿಯೆಗಳಿಗೆ ಈಗ ಶ್ವಾಸಕೋಶಗಳು ಸಿದ್ಧವಾಗಿವೆ.
ಉಪ್ಪಕ ಮತ, ಮಹಾಮುದ್ರಾ ಈ ಸುಧಾರಣೆಯನಂತರ ವಿಭಾಗ
ಪ್ರಾಣಾಯಾಮವನ್ನು ಕೇವಲ ಹಸ್ತಮುದ್ರೆಗಳಿಂದ ಮಾಡಬಹುದು.
ಅಧಮ ವಿಭಾಗ ಪ್ರಾಣಾಯಾಮ - ಚಿನ್ಮುದ್ರಾ. ಮಧ್ಯಮ ವಿಭಾಗ
ಪ್ರಾಣಾಯಾಮ-. ಚಿನ್ಮಯ ಮುದ್ರಾ. ಆದ್ದ ವಿಭಾಗ ಪ್ರಾಣಾ
ಯಾವು ಆದಿ ಮುದ್ರಾ. ಈ ಮುದ್ರೆಗಳ ಜೊತೆ ಉಸಿರಾಟ ಮಾಡಿದರೆ
ಸಂಬಂಧಪಟ್ಟ ವಿಭಾಗ ಪ್ರಾಣಾಯಾಮವು ತಾನಾಗಿಯೇ ಆಗುವಂತೆ ಇಡೀ
ಶರೀರವನ್ನು ಸಿದ್ಧಗೊಳಿಸಿದಂತಾಗುವುದು. (ಚಿತ್ರ ನೋಡಿ _ ಪುಟ ೧೪೦)

ಚಿನ್ಮುದ್ರಾ
ವಜ್ಞಾಸನದಲ್ಲಿ ಕುಳಿತುಕೊಳ್ಳಿ. ಹೆಬ್ಬೆರಳು ಮತ್ತು ತೋರುಬೆರಳು
ಗಳನ್ನು ಹಿಡಿದು ತೊಡೆ ಮತ್ತು ಉದರ ಸೇರುವ ಕಡೆ ಒತ್ತಿ ಹಿಡಿಯಿರಿ.
ಯೋಗಾಭ್ಯಾಸ ೧೩೭

ಈಗ ದೀರ್ವ ಉಸಿರಾಡಿ. ಶಾ ಸಕೋಶದ ಅಧಮ ಭಾಗದ ಮೇಲೆ ಮನ


ಸನ್ನು ಕೇಂದ್ರೀಕರಿಸಿ. ಈ ಉಸಿರಾಟ ಅಧಮ ವಿಭಾಗ ಪ್ರಾಣಾಯಾಮ
:ವಾಗುತ್ತದೆ.

ಚಿನ್ಮಯ ಮುದ್ರಾ
ವಜ್ರಾಸನದಲ್ಲಿ ಕುಳಿತುಕೊಳ್ಳಿ. ಹೆಬ್ಬೆರಳು ಮತ್ತು ತೋರುಬೆರಳನ್ನು
ಹಿಡಿದಿರುವಂತೆಯೇ ಮಿಕ್ಕ ಮೂರು ಬೆರಳುಗಳನ್ನು ಮಡಿಸಿ. ಮುಂಚಿನ ಸ್ಥಿತಿ
ಯಲ್ಲಿಯೇ ಕೈಗಳನ್ನು ಒತ್ತಿ ಇಡಿ. ದೀರ್ಫ ಉಸಿರಾಟ ನಡೆಯಲಿ. ಶ್ವಾಸ
ಕೋಶದ ಮಧ್ಯಮ ಭಾಗದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ಇದೇ
ಮಧ್ಯಮ ವಿಭಾಗ ಪ್ರಾಣಾಯಾಮ.

ಆದಿ ಮುದ್ರಾ
ವಜ್ರಾಸನದಲ್ಲಿ ಕುಳಿತುಕೊಳ್ಳಿ. ಕೈಗಳಲ್ಲಿ ಹೆಬ್ಬೆರಳನ್ನು ಮುಂಚೆ
ಮಡಿಸಿ. ಅನಂತರ ಅದರ ಮೇಲೆ ಮಿಕ್ಕ ನಾಲ್ಕು ಬೆರಳುಗಳನ್ನು ಮಡಿಸಿ.
ಮುಂಚಿನ ಸ್ಥಿತಿಯಲ್ಲೇ ಕೈಗಳನ್ನು ಇಡಿ. ದೀರ್ಫ ಉಸಿರಾಟ ನಡೆಯಲಿ.
ಶ್ವಾಸಕೋಶದ ಆದ್ಕ ಭಾಗದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ಇದೇ
ಆದ್ಯ ವಿಭಾಗ ಪ್ರಾಣಾಯಾಮ.
ಸಹಜತೆಯಿಂದ ದೂರ ಸರಿದ ಇಂದಿನ ಜೀವನಕ್ರಮದಲ್ಲಿ ಶಾರೀರಿಕ
ದುರುಪಯೋಗ ಮತ್ತು ಮಾನಸಿಕ ಒತ್ತಡಗಳು ಅನಿವಾರ್ಯ. ತತ್ನರಿಣಾವಂ
ವಾಗಿ ಎಳೆತಗಳು, ಸೆಳೆತಗಳು ನಿರ್ಮಾಣ ಆಗುವುವು. ಇವುಗಳ ನಿವಾರಣೆಗೆ
ಇಂದಿನ ವೈದ್ಯಶಾಸ್ತ್ರ ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೂ ಉಪ
ಶಮನ ವಸ್ತುಗಳ ಹೇರಳ ತಯಾರಿಕೆ ಮತ್ತು ಅವುಗಳ ಅಮಿತವಾದ ನೀಡುವಿಕೆ
ಯಲ್ಲಿಯೇ ಅದರ ಪ್ರಯತ್ನ ಪರ್ಯವಸಾನವಾಗಿದೆ. ಕೇವಲ ತಾತ್ಕಾಲಿಕ
ತೋರಿಕೆಯ ನಿವಾರಣೆ ಮಾತ್ರ ಅದರ ಲಾಭವಾಗಿದೆ.
ಇಂದಿನ ಈ ದೈತ್ಯ ಸಮಸ್ಮೆಗೆ ಯೋಗಕ್ರಿಯೆಗಳು ಮಾತ್ರ ನಿವಾ
ರಣೆಯ ದಿಕ್ಕನ್ನು ತೋರಿಸಬಲ್ಲವು.
(AV ಅಟ ಅಟ್ಟು

ಮಹತ್‌ಯೋಗ ಪ್ರಾಣಾಯಾಮ ಇಂತಹ ಕ್ರಿಯೆಗಳಲ್ಲಿ ಮೊದಲನೇ


ಹಂತ.

ಮಹತ್‌ಯೋಗ ಪ್ರಾಣಾಯಾಮ
ವಜ್ರಾಸನದಲ್ಲಿ ಕುಳಿತು ದೀರ್ಫವಾಗಿ ಮೂಗಿನ ಎರಡೂ 'ಹೊಳ್ಳೆ
ಗಳಿಂದ ಉಸಿರಾಡಿ. ಪ್ರಾರಂಭದಲ್ಲಿ ಶ್ವಾಸಕೋಶದ ಅಧಮ ಭಾಗವನ್ನು
ತುಂಬಿ. , ಆಮೇಲೆ ಮಧ್ಯಮ ಭಾಗವನ್ನು, ಬಳಿಕ ಆದ್ಕ ಭಾಗವನ್ನು
ತುಂಬಿ. ಈ ರೀತಿ ತುಂಬಿಸಲು ಆಯಾ ಭಾಗಗಳಲ್ಲಿ ಅಂಕಗಳನ್ನು ಎಣಿಸಿ.
೧,೨,೩ - ಅಧಮ, ೪,೫,೬ - ಮಧ್ಯಮ, ೭,೮- ಆದ.
ಹೀಗೆ ದೀರ್ಧಶ್ವಾಸದ ತರುವಾಯ ಸ್ವಲ್ಪ ಬಾಯಿ ತೆಗೆದು ಒಂದಿಷ್ಟು
ಗಾಳಿಯನ್ನು ನುಂಗಿ. ಕೂಡಲೇ ತುಟಿಗಳನ್ನು ಮುಚ್ಚಿ ದೀರ್ಥವಾಗಿ.
ಉಸಿರನ್ನು ಬಿಡಿ. ಬಿಡುವಾಗ ತುಂಬುವಾಗ ಇದ್ದ ಕ್ರಮದಲ್ಲೇ ಆಯಾ
ಭಾಗದಲ್ಲಿ ಗಮನ ಇಟ್ಟು ಬಿಡಬೇಕು. ೧,೨,೩-ಅಧಮ, ೪,೫, ೬-ಮಧ್ಮಮ,
೭,೮-ಆದ್ಮ.
ಇದು ಒಂದು ಸುತ್ತು ಆಯಿತು. ಹೀಗೆಯೇ ಒಮ್ಮೆ ಕುಳಿತಾಗ ೫-೬
ಸುತ್ತು ಮಾಡುವ ಅಭ್ಯಾಸ ಮಾಡಿ. ದಿನೇದಿನೇ ಈ ರೀತಿ ಎಂಟು ಅಂಕಿ
ಗಳಲ್ಲಿ ಶ್ವಾಸ ತೆಗೆದುಕೊಳ್ಳುವ ಅಭ್ಯಾಸದ ಬಳಿಕ ಹದಿನಾರು ಅಂಕಿಗಳಲ್ಲಿ
ಮಾಡುವ ಅಭ್ಯಾಸ ಮಾಡಿ.
೧,೨,೩,೪,೫,೬ - ಅಧಮ.
೭,೮,೯,೧೦,೧೧,೧೨ - ಮಧ್ಯಮ.
೧೩,೧೪,೧೫,೧೬ - ಆದ್ಕ.
ಇದೇ ಕ್ರಮದಲ್ಲಿ ಪೂರಕ ಮತ್ತು ರೇಚಕದಲ್ಲಿ ಅಭ್ಯಾಸ ನಡೆಯಲಿ.
ಪೂರಕದ ಬಳಿಕ ಒಂದಿಷ್ಟು ಗಾಳಿ ನುಂಗುವ ಅಭ್ಯಾಸ ಮಾಡಬೇಕು..
ಪ್ರಾರಂಭದಲ್ಲಿ ಇದು ಸಾಧ್ಯವಾಗದಿದ್ದರೆ ರೇಚಕವನ್ನು ಮಾಡಬೇಕು.
ಮಹತ್‌ಯೋಗ ಪ್ರಾಣಾಯಾಮಕ್ಕೆ ಶರೀರವನ್ನು ಅಣಿಗೊಳಿಸುವು
ದಕ್ಕೆ ಬ್ರಹ್ಮಮುದ್ರೆ ಉಪಯುಕ್ತ.
ಯೋಗಾಭ್ಯಾಸ ೧೩೯

ಆದಿಮುದ್ರಾದಲ್ಲಿರುವಂತೆ ವಜ್ಞಾಸನದಲ್ಲಿ ಕುಳಿತಂ ಎರಡು 'ಕೈಗಳ:


ನಾಲ್ಕು ಬೆರಳುಗಳನ್ನು ಮಡಿಸಿ. ಹೆಬ್ಬೆರಳುಗಳನ್ನು ಒಳಗಡೆ ಮಡಿಸಿ.
ಅನಂತರ ಎರಡೂ ಅಂಗೈಗಳು ಮೇಲೆ ಬರುವಂತೆ ಮತ್ತು ನಾಭಿಯ ಮೇಲೆ
ಇರುವಂತೆ ಹಿಡಿಗಳನ್ನು ಒಂದಕ್ಕೊಂದು ತಾಗಿಸಿ. ಇದೇ ಬ್ರಹ್ಮಮುದ್ರೆ. ಈ
ಸ್ಥಿತಿಯಲ್ಲಿ ಗಮನವಿಟ್ಟು ಉಸಿರಾಡಿದರೆ ಅದೇ ಮಹತ್‌ಯೋಗ ಪ್ರಾಣಾ
ಯಾಮ. '
ಈ ಪ್ರಾಣಾಯಾಮದಿಂದ ಶರೀರಕ್ಕೆ ಬೇಕಾಗುವ ಅಧಿಕ ಆಮ್ಲಜನಕ.
ಮತ್ತು ತತ್ಪರಿಣಾಮವಾದ ಶಾರೀರಿಕ ಲಾಭಗಳ ಜೊತೆಗೆ "ಪ್ರಾಣ'ದ ಮೇಲೆ:
ನಸ್ಸಿನ ಏಕತ್ರೀಕರಣದಿಂದ ಮನಸ್ಸಿಗೆ ಉಲ್ಲಾಸ ಆಗುವುದು, ಶಾಂತಿ
ಲಭಿಸುವುದು. ಅದಕ್ಕಾಗಿ ಇದು ಶಾರೀರಿಕ ಶಕ್ತಿವರ್ಧಕ ಮತ್ತು ಮಾನಸಿಕ:
ಚೈತನ್ಮವರ್ಧಕವಾಗಿ ಉಪಯುಕ್ತ.

ಧಾರ್ಮಿಕಾಸನ
ಶಾರೀರಿಕ ಮಾನಸಿಕ ಒತ್ತಡಗಳನ್ನು ನಿವಾರಿಸುವ ಮತ್ತೊಂದು ಆಸನ.
*“ಧಾರ್ಮಿಕಾಸನ'.
ವಜ್ರಾಸನದಲ್ಲಿ ಕುಳಿತುಕೊಳ್ಳಿ. ಪಾದಗಳನ್ನು ಎರಡೂ ಕೈಗಳಿಂದ
ಹಿಡಿದುಕೊಳ್ಳಿ. ದೀರ್ಫ ಶ್ವಾಸ ತೆಗೆದುಕೊಂಡು ರೇಚಕ ಮಾಡುತ್ತಾ
ಸೊಂಟದಿಂದ ಮುಂದೆ ಬಗ್ಗಿ. ತಲೆ ಮಂಡಿಯ ಮುಂದೆ ನೆಲಕ್ಕೆ ತಾಗುವ
ವರೆಗೆ ಮೊಣಕೈಗಳನ್ನು ನೆಲದ ಮೇಲೆ ಊರಿ. ಹಿಮ್ಮಡಿಗಳ ಮೇಲೆ ಕುಳಿತಿರ
ಬೇಕು. ಈ ಸ್ಥಿತಿಯಲ್ಲಿ ಒಂದೆರಡು ನಿಮಿಷಗಳು ಉಸಿರಾಡಿ (ಹ್ರಸ್ವ). ಈ
ಸಮಯದಲ್ಲಿ ತಲೆ ನೆಲಕ್ಕೆ ತಾಗಿರುವ ಜಾಗದಲ್ಲಿ, ತಲೆಯಲ್ಲಿ ಒಂದು ಬಿಂದುವಿನ
ಕಲ್ಪನೆಯನ್ನು i ಅದರ ಮೇಲೆ ಏಕಾಗ್ರಚಿತ್ತರಾಗಿ. ಆ ಬಿಂದು
ವಿನಲ್ಲಿ ಪ್ರಿಯವಾದ ವರ್ಣವನ್ನು ಚಿಂತನಮಾಡಿ.
ಕೆಲವು ನಿಮಿಷಗಳ ಬಳಿಕ ನಿಧಾನವಾಗಿ ಮಹತ್‌ಯೋಗ ಪ್ರಾಣಾ:
ಯಾವಂದ ರೀತಿಯಲ್ಲಿ ಪೂರಕ ಮಾಡುತ್ತಾ ಮುಂಚಿನ. ಸಿ ತಿಗೆ ಹೋಗಿ
೧೪೦ ಶರೀರ ಶಿಲ್ಪ
ಯೋಗಾಭ್ಯಾಸ (0೪೧%

ಧಾರ್ಮಿಕಾಸನದಲ್ಲಿ ವೈಶಿಷ್ಟ್ಯಪೂರ್ಣವಾದ ಶಾರೀರಿಕ ಲಾಭಗಳು ಇವೆ..


ಅನೇಕ ವಿಧವಾದ ತಲೆನೋವುಗಳು ದೂರವಾಗುವುವು.

ಇಲ್ಲಿ ಬೆನ್ನುಮೂಳೆ ಸುಮಾರು ೧/೩ ರಷ್ಟು ಹಿಗ್ಗುವುದು. ಈ:


ಕ್ರಿಯೆಯಿಂದ ಮುಂದೆ ನಿರ್ಮಾಣ ಆಗಬಹಂದಾದ ಅಪ್ರಿಯ ಬೆಳವಣಿಗೆಗಳು.
ಆಗುವುದಿಲ್ಲ.
ಮನಸ್ಸಿನ ಶಾಂತಿ ಮತ್ತು ಶಾರೀರಿಕ ಲಾಘವದ ಅನುಭವ ಆಗುವುದು...
ಇತ್ತೀಚೆಗೆ ಒಂದು ನವೀನ ಚಿಕಿತ್ಸಾಪದ್ಧತಿ ಪ್ರಾರಂಭವಾಗಿದೆ. ಅದರ.
ಪ್ರಕಾರ ವಿಶೇಷ ಕಾಯಿಲೆಗಳನ್ನು ಹಸ್ತಗಳಲ್ಲಿ ಮತ್ತು ಪಾದಗಳಲ್ಲಿನ ನರ
ಮಂಡಲಗಳನ್ನು ಸಚೇತನಗೊಳಿಸುವ ವಿಧಾನದಿಂದ ಪರಿಹಾರ ಮಾಡಬಹುದು
ಎಂದಂ ತಿಳಿದುಬಂದಿದೆ. ಇದನ್ನು ಪ್ರತಿಕ್ರಿಯಾತ್ಮಕ ಸಿದ್ಧಾಂತ (ಣೀಗೇxಂ--
108)) ಎಂದು ಕರೆಯುತ್ತಾರೆ. ಇದರ ಆಧಾರ ಎಂದರೆ ನರಗಳ ಕೊನೆಗಳು
ಎಷ್ಟು ಮುಕ್ತವಾಗಿ, ಸರಳವಾಗಿರುವುವೋ ಅಷ್ಟಷ್ಟು ಆರೋಗ್ಯ ಸುಧಾರಿಸು.
ವುದು. ಹಾಗೆಯೇ ನರಗಳ ಕೊನೆಗಳು ಎಷ್ಟು ಬಂಧಿತ ಅಥವಾ ಸಂಕುಚಿತ.
ವಾಗುವುವೋ ಆಷ್ಟು ಅನಾರೋಗ್ಯ ಹೆಚ್ಚುವುದು. ಇದು ಪೂರಾ:
ಯೋಗದ ಕಲ್ಪನೆ. ವಿವಿಧ ಅಂಗಗಳ ನರಗಳ ಕೊನೆಗಳನ್ನು ನಿರ್ದಿಷ್ಟ
ರೀತಿಯಲ್ಲಿ ಸಮನ _ಯಗೊಳಿಸುವುದೇ ಆಸನಗಳ ಉದ್ದಿಶ್ಯ.

ಏಕಿನ್‌ ವಜ್ರಾಸನ
ವಜ್ರಾಸನದಲ್ಲಿ ಕುಳಿತುಕೊಳಿ ಸ ಭಾರವನ್ನು ಮಂಡಿಗಳ ಮೇಲೆ
ಬರುವಂತೆ ಸ್ವಲ್ಪ ಎದ್ದು ಒಂದಂ ಪಾದದ ಮೇಲ್ಭಾಗ ಇನ್ನೊಂದು ಪಾದದ
ಅಂಗಾಲ ಮೇಲೆ ಬರುವಂತೆ ಇಡಿ. ಅನಂತರ ಮುಂಚಿನಂತೆ ಕುಳಿತುಕೊಳ್ಳಿ.
ಒಂದು ನಿಮಿಷದ ಅನಂತರ ಪಾದಗಳನ್ನು ಬದಲಾಯಿಸಿ. ಎರಡೂ ಕಾಲುಗಳ
ಮೇಲೆ ಸಮಾನವಾದ ಅವಧಿ ಕುಳಿತಿರಬೇಕು.
ಈ ಆಸನದಿಂದ ಸೋತ ಕಾಲುಗಳು. ಚೇತನಗೊಳ್ಳುವುವು. ಸದಾ:
ನಿಲ್ಲುವ ಅಥವಾ ಓಡಾಡುವ ಕೆಲಸವನ್ನು ಮಾಡುವವರು ಅದರಲ್ಲೂ
"ರಿ೪೨ ಶರೀರ ಶಿಲ್ಪ

ಸಿಮೆಂಟ್‌ ನೆಲದ ಮೇಲೆ ಓಡಾಡುವವರು ಈ ಆಸನದಿಂದ ಅದಿಕ ಲಾಭ!


ಪಡೆಯಬಹುದು.
ಜೀರ್ಣಾಂಗಗಳಿಂದ ಹೊರಡುವ ಪ್ರತಿಕ್ರಿಯಾತ್ಮಕ (೩06%) ನರಗಳಂ
ಪಾದದ ಕಮಾನಿನಲ್ಲಿ ಕೊನೆಯಾಗಿರುವುವು. ಈ ಆಸನದಿಂದ ಕೊನೆಗಳಂ
ಪುನಶ್ಚೇತನಗೊಂಡು ಜೀರ್ಣಶಕ್ತಿಯ ಮೇಲೆ ಸಾಕಷ್ಟು ಹಿತಕರ ಪರಿಣಾಮ
ವಾಗುವುದು.

ಗುಲ್ಫ್ಭ ವಜ್ರಾಸನ
ಮೇಲಿನಂತೆಯೇ. ಆದರೆ ಒಂದು ಪಾದದ ಮೇಲ್ಭಾಗವನ್ನು ಇನ್ನೊಂದು
ಪಾದದ ಹಿಮ್ಮಡಿಯ ಹಿಂಭಾಗದ ಮೇಲೆ (ಮಂಡಿಯ ಕೀಲಿನ ಕಡೆಗೆ) ಇಟ್ಟು
ವಜ್ರಾಸನದಲ್ಲಿ ಕೂಡುವಂತೆ ಕುಳಿತುಕೊಳ್ಳುವುದು. ಅನಂತರ ಪಾದಗಳನ್ನು
ಬದಲಾಯಿಸಬೇಕು ಕ

ಕಿಬ್ಬೊಟ್ಟೆಯನ್ನು ಕರಗಿಸಿ
ಕಟ್ಟಿಗೆ ಕಸುವು ತುಂಬುವ ಆಸನಗಳು (ಚಿತ್ರ
- ಪುಟ ೧೪೪)

ಆಸನಗಳನ್ನು ಮೂರು ಕ್ರಮಗಳಲ್ಲಿ ಮಾಡಬೇಕು. ಎಲ್ಲೂ
ಉಸಿರು ಹಿಡಿಯಬಾರದು. ಎರಡನೇ ಕ್ರಮವೇ ಆಸನದ ಸ್ಥಿತಿ. ಆಸನಸ್ಥಿತಿ
ಯಲ್ಲಿ ಹೆಚ್ಚು ಹೊತ್ತು ಇದ್ದು ಸರಳವಾಗಿ ಉಸಿರಾಡಬೇಕು. ಉಸಿರು ತೆಗೆ
ದುಕೊಳ್ಳುವುದು, ಬಿಡುವುದು ಸಮಾನವಾಗಿರುವಂತೆ, ನಿಧಾನವಾಗಿರುವಂತೆ
ಗಮನ ವಹಿಸುವುದು.
ಮುಂದಿನ ಮೂರೂ ಆಸನಗಳು ಕಿಬ್ಬೊಟ್ಟೆಯನ್ನು ಕರಗಿಸಿ ಮಲಮೂತ್ರ
ನಾಳಗಳನ್ನು ಶುದ್ಧಪಡಿಸುವುವು. ಆಸನಗಳನ್ನು ಸಮಸ್ಥಿತಿಯಿಂದ
ಪ್ರಾರಂಭಿಸಿ ಸಮಸ್ಥಿತಿಗೆ ಬಂದು ಕೊನೆಗಾಣಿಸಬೇಕು. ಇವು ಸ್ತ್ರೀಯರಿಗೂ
ಅತಿ ಉಪಯುಕ್ತ.
ಸಮಸ್ಥಿತಿ: ಹಿಮ್ಮಡಿ, ಹೆಬ್ಬೆರಳುಗಳು ತಗುಲಿರುವಂತೆ ಕಾಲುಗಳನ್ನು
ಯೋಗಾಭ್ಯಾಸ ೧೪೩

ಜೋಡಿಸಿ, ಎದೆ ಎತ್ತಿ, ತಲೆ ಸ್ವಲ್ಪ ತಗ್ಗಿಸಿ ಮೂಗಿನ ತುದಿ ನೋಡುತ್ತಾ


ಸಲ್ಲುವುದು. ಎರಡು ಕೈಗಳೂ ಪಕ್ಕದಲ್ಲಿ ನೀಳವಾಗಿರಲಿ.
೧. ಪಾದಾಂಗುಷ್ಮಾಸನ
ನೇರವಾಗಿ ಸಮಸ್ಥಿತಿಯಲ್ಲಿ ನಿಂತು ಪಾದಗಳನ್ನು ಅರ್ಧ ಅಡಿ ದೂರ
ದಲ್ಲಿಡಿ (ಸಮಾನಾಂತರವಾಗಿ).
೧) ಅ) ನಿಧಾನವಾಗಿ ಉಸಿರು ಬಿಡುತ್ತಾ ಬಗ್ಗಿ ಕಾಲಿನ ಹೆಬ್ಬೆರಳು
ಗಳನ್ನು ಕೈಗಳ ಹೆಬ್ಬೆರಳು ಮತ್ತು ಮೊದಳ ಎರಡು ಬೆರಳುಗಳಿಂದ ಭದ್ರ
ವಾಗಿ ಹಿಡಿಯಿರಿ. ಮಂಡಿ ನೆಟ್ಟಗೆ ಹಿಂದಕ್ಕಿರಬೇಕು.
” ಆ) ತಲೆಯನ್ನೂ ಎದೆಯನ್ನೂ ಉಸಿರು ತೆಗೆದುಕೊಳ್ಳುತ್ತಾ ಎತ್ತಿ
“ಹಿಡಿಯಿರಿ.
೨) ಮೇಲಿನ ಸ್ಥಿತಿಯಲ್ಲಿ ಎರಡು ಬಾರಿ ಉಸಿರೆಳೆದು, ಉಸಿರು
ಬಿಡುತ್ತಾ ತಲೆಯನ್ನು ಎರಡು ಮಂಡಿಗಳ ಮಧ್ಯದಲ್ಲಿ ತರಬೇಕು. ಹಿಡಿತ
ಸಡಿಲಿಸದೆ, ಕಾಲ ಹೆಬ್ಬೆರಳುಗಳನ್ನು ಮೇಲೆತ್ತದೆ, ಮಂಡಿ ಬಗ್ಗಿ ಸದೆ ಸೆಟೆಸಿ
ದಾಗ ಈ ಸ್ಥಿತಿ ಬರುವುದು. ಇದೇ ಸ್ಥಿತಿಯಲ್ಲಿ ಇಪ್ಪತ್ತು ಸೆಕೆಂಡುಗಳು
ಉಸಿರಾಡುತ್ತಿರಬೇಕು: ಕಿಬ್ಬೊಟ್ಟೆ ಒಳಕ್ಕೆ ಎಳೆದುಕೊಂಡಿರಬೇಕು.
೩) ಉಸಿರು ತೆಗೆದುಕೊಳ್ಳುತ್ತಾ ನಿಧಾನವಾಗಿ ತಲೆಯನ್ನೂ ಎದೆ
ಯನ್ನೂ ಮೇಲೆತ್ತಿ. ಕಾಲಿನ ಹೆಬ್ಬೆರಳುಗಳನ್ನು ಕೈಗಳಿಂದ ಹಿಡಿದೇ ಇರಬೇಕು.
ಎರಡು ಬಾರಿ ಉಸಿರಾಡಿ ಮುಂಚಿನ ಸ್ಥಿತಿಗೆ ಬರುವುದು.

೨. ಪಾದಹಸ್ತಾಸನ
ಸಮಸ್ಥಿತಿಯಲ್ಲಿ ನಿಲ್ಲಿ. ಪಾದಗಳನ್ನು ಅರ್ಧ ಅಡಿ ದೂರದಲ್ಲಿಡಿ.
೧) ಅ) ಉಸಿರು ಬಿಡುತ್ತಾ ಬಗ್ಗಿ ಪಾದಗಳ ಕೆಳಕ್ಕೆ ಮುಂದಿನಿಂದ
ಎರಡು ಹಸ್ತಗಳನ್ನು ಇಡುವುದು. ಕೈಬೆರಳುಗಳ ತುದಿ ಹಿಮ್ಮಡಿಯ ತನಕ
ಹೋಗಲಿ.
ಆ) ಉಸಿರು ತೆಗೆದುಕೊಳ್ಳುತ್ತಾ ತಲೆ, ಎಗೆ ಎತ್ತಿ ಹಿಡಿಯಿರಿ. ಮಂಡಿ
ಮಡಿಸಬೇಡಿ ; ಬಿಗಿ ಸಡಿಲಿಸಬೇಡಿ,
೧೪೪ ಶರೀರ ಶಿಲ್ಪ
ಯೋಗಾಭ್ಯಾಸ ೧೪೫

೨) ಮೇಲಿನ ಸ್ಥಿತಿಯಲ್ಲಿ ಎರಡು ಬಾರಿ ಉಸಿರಾಡಿ, ಉಸಿರಂ ಬಿಡುತ್ತಾ


ತಲೆಯನ್ನೂ ಎರಡು ಮಂಡಿಗಳ ಮಧ್ಯೆ, ತರಬೇಕು. ಈ ಸ್ಥಿತಿಯಲ್ಲಿ
ಮೂವತ್ತು ಸೆಕೆಂಡಂಗಳು ಉಸಿರಾಡುತ್ತಿರಬೇಕು. ಕಿಬ್ಬೊಟ್ಟೆಯನ್ನು ಒಳಕ್ಕೆ
ಎಳೆದುಕೊಳ್ಳಬೇಕು.
೩) ಉಸಿರಂ ತೆಗೆದುಕೊಳ್ಳುತ್ತಾ ನಿಧಾನವಾಗಿ ತಲೆಯನ್ನೂ
ಎದೆಯನ್ನೂ ಮೇಲೆತ್ತುವುದು. ಹಸ್ತ ಪಾದಗಳ ಕೆಳಗೇ ಇರಬೇಕು.
ಎರಡು ಬಾರಿ ಉಸಿರಾಡಿ, ಉಸಿರು ಎಳೆದುಕೊಳ್ಳುತ್ತಾ ಸಮಸ್ಥಿತಿಗೆ
ಬರುವುದು.
ಆಸನಸ್ಥಿತಿಯಲ್ಲಿ ಅಭ್ಮಾಸವಾದನಂತರ ಹೆಚ್ಚು ಹೊತ್ತು ನಿಲ್ಲಬಹುದು.
೩. ಉತ್ತಾನಾಸನ
ಸಮಸ್ಥಿತಿಯಲ್ಲಿ ನಿಲ್ಲಿ.
೧) ಉಸಿರು ಬಿಡುತ್ತಾ ಮುಂದೆ ಬಗ್ಗಿ ಕೈಬೆರಳುಗಳನ್ನು ಪಾದಗಳ
ಪಕ್ಕದಲ್ಲಿ ನೆಲದ ಮೇಲೆ ಇಡಿ. ಅನಂತರ ಅಂಗೈಗಳನ್ನು ನೆಲಕ್ಕೆ ತಾಗಿಸಿ.
ಮಂಡಿ ಬಗ್ಗಿ ಸಬಾರದಂ.
ತಲೆ ಎತ್ತಿ, ಬೆನ್ನು ಎಳೆಯಬೇಕು. ಕಾಲುಗಳು ನೆಲಕ್ಕೆ ಲಂಬವಾಗು
ವಂತೆ ಪೃಷ್ಠಗಳನ್ನು ಮುಂದಕ್ಕೆ ಸರಿಸಬೇಕು..
ಎರಡು ಬಾರಿ ಉಸಿರಾಡಿ.
೨) ಉಸಿರು ಬಿಡುತ್ತಾ ತಲೆಯನ್ನು ಮಂಡಿಗಳ ಮೇಲೆ ಇರಿಸಿ,
ಮಂಡಿಗಳು ಸೆಟೆದಿರಲಿ. ಒಂದು ನಿವಿಂಷ ನಿಧಾನವಾಗಿ ಉಸಿರಾಡಿ.
೩) ಉಸಿರು ತೆಗೆದುಕೊಳ್ಳುತ್ತಾ ತಲೆಯನ್ನು ಎತ್ತಿ. ಕೈಗಳನ್ನು
ಕದಲಿಸಬಾರದಂ. ಎರಡು ಬಾರಿ ಉಸಿರಾಡಿ, ಉಸಿರು ತೆಗೆದುಕೊಳು ತ್ತಾ,
ಕೈಗಳನ್ನು ಎತ್ತಿ ಸಮಸ್ಥಿತಿಗೆ ಬರುವುದು.
ಈ ಆಸನ ಹೊಟ್ಟೆನೋವು ದೂರ ಮಾಡಿ ಪಿತ್ತಕೋಶ, ಮೇದೋ
ಜೀರಕಾಂಗ ಮತ್ತು ಮೂತ್ರಪಿಂಡಗಳನ್ನು ಹದಗೊಳಿಸುವುದು. ಹೃದಯದ
ಬಡಿತವನ್ನು ಹತೋಟಿಗೆ ತರುವುದು. ಎರಡು ನಿಮಿಷ ಈ ಆಸನ ಮಾಡಿದರೆ
೧೦)
೧೪೬ ಶರೀರ ಶಿಲ್ಪ

ಕುಗ್ಗಿದ ಮನಸ್ಸು ಕುದುರುವುದು. ಇದ್ದಕ್ಕಿದ್ದಂತೆ ಉದ್ರೇಕಗೊಳ್ಳುವ


ಸ್ವಭಾವದವರಿಗೆ ಇದು ಮಹತ್ವದ ಪರಿಹಾರ. ಮಿದುಳು, ಕಣ್ಣುಗಳಿಗೆ ತಂಪ
ತರುವ ಈ ಆಸನ ತಲೆಭಾರ ಇರುವವರಿಗೆ, ಬಗ್ಗಿ ದರೆ ತಲೆಗೆ ಏನೋ ನುಗ್ಗಿ ದಂತೆ
ಭಾಸವಾಗುವವರಿಗೆ ಉತ್ತಮ. ಶೀರ್ಷಾಸನ ಮಾಡಲು ಅಡ್ಡಿ ಇರುವವರು
ಈ ಆಸನ ಮುಂಚೆ ಮಾಡಬೇಕು
ಸಲಹೆಗಳು: ಅರಿವಿಲ್ಲದೆ ಬಗ್ಗುವ ಮಂಡಿಗಳನ್ನು ನಿರ್ದಾಕ್ಷಿಣ್ಮವಾಗಿ
ನೇರ ಮಾಡಿ. ಬಗ್ಗಿದಾಗ ಕೈಗೆ ನೆಲವೇ ಸಿಗದಿರುವವಠು ಮಿತ್ರರ ನೆರವಿನಿಂದ
ನೆಲ ಮುಟ್ಟಿಸಲು, ತಲೆಯನ್ನು ಮೊಣಕಾಲ ಬಳಿ ತರಲು ಪ್ರಯತ್ನಿಸಬೇಕು.
ದಿನಕ್ಕೆ ಎರಡು ಮೂರು ಬಾರಿ ಪ್ರಯತ್ನ ಅಗತ್ಮ. . ಮೊಣಕಾಲಿನಲ್ಲಿ
ಹುಟ್ಟುವ ನೋವಿಗೆ ಸೊಪ್ಪ ಹಾಕದಿರಿ. - ಸ್ನಾನಕ್ಕೆ ಮುಂಚೆ, ಅನಂತರ
ಪ್ರಯತ್ನಿಸಿ ಬದಲಾವಣೆಯನ್ನು ಗಮನಿಸಿ. ಆಹಾರ ತೆಗೆದುಕೊಂಡಾಗ
ಮಾಡಲೇಬಾರದು. ನಾಲ್ಕು ಘಂಟೆ ಬಿಟ್ಟು ಮಾಡಬೇಕು. ಮಂಡಿಗಳ
ಮೊಂಡಾಟಕ್ಕೆ ಮಣಿಯಬೇಡಿ. ಅನುಭ ವಗಳನ್ನು ಗುರುತುಹಾಕಿ ಗೆಳೆಯರ
ಸಂಗಡ ಹಂಚಿಕೊಳ್ಳಿ.

ಶಕಹಾನಿ ಮತು ಸಸ ಹಾದಗಳಿಗಾಗಿ


“ ನಿ
ನಾಲ್ಕು ಆಸನಗಳು (ಚಿತ್ರ - ಪುಟ ೧೪೪)
ಮುಂದೆ ಕೊಡಲಾಗಿರುವ ನಾಲ್ಕು ಸನಗಳು ಪಕ್ಕೆಗಳಲ್ಲಿರುವ
ಕೊಬ್ಬನ್ನು ಕರಗಿಸಿ ಪಕ್ಕೆಲಬುಗಳನ್ನು ಹದಗೊಳಿಸಸುವುವು. ಪೃಷ್ಠ ಮತ್ತು
ಕಾಲುಗಳಲ್ಲಿರುವ ಸ್ನಾಯುಗಳನ್ನು ಎಳೆದು ದೊಳೀಷಗಳನ್ನು ದೂರಮಾಡಿ,
ರಕ್ತಚಲನೆಯನ್ನು ಸುಧಾರಿಸುವುವು ಮ ಹಿತಕರ ಬೆಳವಣಿಗೆಗೆ ಅವಕಾಶ
ಮಾಡುವುವು. ಬೆನ್ನೆಲುಬು ಮತ್ತು ನ್ವಸಕೋಶಗಳ ಕ್ರಿಯೆ ಸೊಗಸಾಗುವಂತ
ಮಾಡಿ ಎದೆಯನ್ನು ಉಬ್ಬಿ )ಸುವುವು. ಶರೀರದಲ್ಲಿ ಲವಲವಿಕೆಯನ್ನು ತರುವುವು.
ಈ ಆಸನಗಳಲ್ಲಿ ೫ ಕ್ರಮಗಳಿವೆ. ಎಲ್ಲಿಯೂ ಉಸಿರು ಹಿಡಿಯ
ಬಾರದು. ಎರಡು ಮತ್ತು ನಾಲ್ಕನೇ ಕ್ರಮಗಳೇ ಆಸನ ಸ್ಥಿತಿ. ಆ ಸ್ಥಿತಿ
ಲ್ಲಿ “ವ
ಹೆಚ್ಣು ಹೊತ್ತು po
ಇದ್ದ ನಿದಾನವಾಗಿ ಉಸಿರಾಡಬೇಕು 2
ಉಸಿರಾಟ


ಯೋಗಾಭ್ಯಾಸ ೧೪೭

ಸಮಾನ ಗತಿಯದಾಗಿರಲಿ. ಎಲ್ಲ ವಯಸ್ಸಿನ ಸ್ತ್ರೀ ಪುರುಷರೂ ಇದನ್ನು


ಮಾಡಬಹುದು.

ಸಮಸ್ಥಿತಿ :. ಎರಡು ಪಾದಗಳನ್ನು ಜೋಡಿಸಿ (ಹಿಮ್ಮಡಿ, ಹೆಬ್ಬೆರಳಂ


ತಗುಲಿರಲಿ) ನೇರವಾಗಿ ನಿಲ್ಲಿ. ಮೊಣಕಾಲುಗಳನ್ನು ಹಿಂದಕ್ಕೆ, ಉದರವನ್ನು
ಒಳಕ್ಕೆ ಎಳೆದು, ಎದೆ ಮೇಲೆ, ಮುಂದೆ ಮಾಡಿ. ಕತ್ತು ನೇರವಿರಬೇಕು.
ಕೈಗಳು ನೇರವಾಗಿ ಇಳಿಬಿಡಬೇಕು.
೪) ಉತ್ಕೃಿತ ತ್ರಿಕೋನಾಸನ
ಸಮಸ್ಥಿತಿಯಲ್ಲಿ ನಿಲ್ಲಿ.
೧) ಪೂರಕವನ್ನು ಮಾಡುತ್ತಾ, ಕಾಲುಗಳನ್ನು ಮೂರು ಅಡಿಗಳಷ್ಟು
ಅಗಲ ಮಾಡಿ ನಿಂತು, ಕೈಗಳನ್ನು ಎಡೆಗಳಿಗೆ ಸಮನಾಗಿಯೂ ಬಿಗಿಯಾಗಿಯಣ
ಅಕ್ಕ ಪಕ್ಕಗಳಲ್ಲಿ ನೀಡಿ (ನೆಲಕ್ಕೆ ಸಮಾನಾಂತರ) ನಿಲ್ಲಿ. ಅಂಗೈಗಳು ನೆಲದ ಕಡೆ.
೨) ಬಲಪಾದವನ್ನು ಬಲಕ್ಕೆ ೯೦ ಡಿಗ್ರಿ ತಿರಂಗಿಸಿ, ಎಡಪಾದವನ್ನು
ಸ್ವಲ್ಪ ತಿರುಗಿಸಿ. ಉಸಿರು ಬಿಡುತ್ತಾ ಬಲಕ್ಕೆ ಬಗ್ಗಿ, ಬಲಪಾದದ ಬಲಭಾಗ
ದಲ್ಲಿ ಅಂಗೈಯನ್ನು ನೆಲದ ಮೇಲೆ ಊರಿ. ಎಡಗೈಯನ್ನು ನೇರವಾಗಿ
' ಮೇಲೆತ್ತಿ ಬಲಭುಜದ ನೇರಕ್ಕೆ ತಂದು, ಎಡಗೈ ಹೆಬ್ಬೆಟ್ಟಿನ ಕಡೆ ದೃಷ್ಟಿ ಇಡಿ.
ಅನಂತರ ಅದೇ ಸ್ಥಿತಿಯಲ್ಲಿ ಮೂರು ಸಲ ಪೂರಕ, ರೇಚಕಗಳನ್ನು ಮಾಡಿ;
ಎರಡು ಮೊಣಕಾಲುಗಳೂ. ನೇರವಾಗಿರಲಿ.
೩) ಉಸಿರು ತೆಗೆದಂಕೊಳ್ಳುತ್ತಾ ಕ್ರಮ ೧) ಕೈ ಬಂದು ನಿಲ್ಲಿ.
೪) ಅನಂತರ ಎಡಗಾಲಿನ ಪಾದವನ್ನು ತಿರಂಗಿಸಿ (೯೦ ಡಿಗ್ರಿ), ಬಲ
ಪಾದವನ್ನು ಸ್ವಲ್ಪ ತಿರಂಗಿಸಿ ಎಡಕ್ಕೆ ಬಗ್ಗಿ ರೇಚಕ ಮಾಡುತ್ತಾ ಎಡಹಸ್ತ
ವನ್ನು ಎಡಪಾದದ ಎಡಬದಿಯಲ್ಲಿ ನೆಲದ ಮೇಲೆ ಊರಿ. ಬಲಗೈ ಮೇಲೆತ್ತಿ
ಎಡಭುಜದ ನೇರಕ್ಕೆ ತಂದು, ಬಲ ಹೆಬ್ಬೆಟ್ಟಿನ ಕಡೆ ನೋಡಿ. ಮೂರು ಬಾರಿ
ಪೂರಕ, ರೇಚಕಗಳನ್ನು ಮಾಡಿ.
೫) ಉಸಿರು ತೆಗೆದುಕೊಳ್ಳುತ್ತಾ ಕ್ರಮ ೧) ಕೈ ಬಂದು ನಿಲ್ಲಿ.
ಅನಂತರ ಸಮಸ್ಥಿತಿಗೆ ಬಂದು ನಿಲ್ಲಿ.
೧೪೮ ಶರೀರ ಶಿಲ್ಪ

೫) ಪರಿವೃತ ತ್ರಿಕೋನಾಸನ ,
ಕ್ರಮಗಳು ಮೇಲಿನ ಆಸನದಂತೆಯೇ.
ಬಲಗಡೆಗೆ ತಿರುಗಿದಾಗ ಬಲಪಾದವು ೯೦ ಡಿಗ್ರಿಗಳಷ್ಟು ಮತ್ತು ಎರ
ಪಾದವು ೩೦ ಡಿಗ್ರಿಗಳಷ್ಟು ತಿರುಗಲಿ. ಬಲ ಪಕ್ಕೆಯನ್ನು ತಿರುಗಿಸಿ, ಬಗ್ಗಿ
ಎಡಹಸ್ತವನ್ನು ನೆಲದ ಮೇಲೆ ಬಲಪಾದದ ಹೊರಗಡೆಯ ಪಕ್ಕದಲ್ಲಿರುವಂತ
ನೆಲದ ಮೇಲೆ ಊರಿ. ಬಲಗೈಯನ್ನು ಮೇಲೆತ್ತಿ ಬಲ ಹೆಬ್ಬೆರಳಿನ ಕಡ
ನೋಡಿ. ಎಡಪಾದ ಪೂರ್ಣವಾಗಿ ನೆಲದ ಮೇಲೆ ಇರಲಿ. ಎರಡು ಭುಜ
ಗಳು ಎಳೆಯಲ್ಪಡಲಿ.
ಅಂತೆಯೇ ಎಡಗಡೆಗೂ ಸಹ.
ಎರಡೂ ಕಡೆ ೩-೪ ಬಾರಿ ಉಸಿರಾಡಬೇಕು.

೬) ಉತ್ನಿತ ಪಾರ್ಚಕೋನಾಸನ
ಸಮಸ್ಥಿತಿಯಲ್ಲಿ ನಿಲ್ಲಿ.
೧) ನೆಗೆದು ಕಾಲುಗಳನ್ನು ಅಗಲ ಮಾಡಿ. ಅಂತರ ೪ ರಿಂದ :
ಅಡಿಗಳು. ಕೈಗಳು ಪಕ್ಕಕ್ಕೆ. ಅಂಗೈ ನೆಲದ ಕಡೆಗೆ, ಭೂಮಿಗೆ ಸಮಾನಾಂತರ
೨) ಉಸಿರು ಬಿಡುತ್ತಾ ಬಲಪಾದವನ್ನು ಬಲಕ್ಕೆ ತಿರುಗಿಸಿ (೯
ಡಿಗ್ರಿ) ಎಡಪಾದವನ್ನು ಸ್ವಲ್ಪ ಬಲಕ್ಕೆ ತಿರುಗಿಸಿ. ಎಡಗಾಲನ್ನು ನೇ
ವಾಗಿಟ್ಟು, ಬಲಗಾಲನ್ನು ಮೊಣಕಾಲಿನಲ್ಲಿ ಬಗ್ಗಿಸಿ, ತೊಡೆ ಮತ್ತು ಮಾ
ಖಂಡಗಳು ಪರಸ್ಪರ ಸಮಕೋನವಾಗುವಂತೆ ಮಾಡಿ ಮತ್ತು ಬಲತೊ!
ನೆಲಕ್ಕೆ ಸಮಾನಾಂತರವಾಗಿರಲಿ.
ಬಲ ಅಂಗೈಯನ್ನು ಬಲಪಾದದ ಬಳಿ ನೆಲದ ಮೇಲೆ ಇಡಿ. ಬ
ಕಂಕುಳು ಬಲ ಮೊಣಕಾಲಿನ ಹೊರಕ್ಕೆ ತಗುಲಿರಲಿ. ಎಡಗೈ ನೇರವಾಗಿ ಎ
ಕಿವಿಗೆ ತಗುಲಿರಲಿ. ತಲೆ ಎತ್ತಿರಿ.
, ಎದೆ, ಪೃಷ್ಠಗಳು, ಕಾಲುಗಳು, ನೇರವಾಗಿರಲಿ. ಇದೇ ಸ್ಥಿತಿಯ
೩-೪ ಬಾರಿ ಉಸಿರಾಡುವುದು.
ಯೋಗಾಭ್ಯಾಸ ೧೪೯

೩) ಉಸಿರು ತೆಗೆದುಕೊಳ್ಳುತ್ತಾ ಬಲಗಾಲನ್ನು ನೇರಮಾಡಿ ಕ್ರಮ


೧) ರ ಸ್ಥಿತಿಗೆ ಬನ್ನಿ.
೪) ಉಸಿರಂ ಬಿಡುತ್ತಾ ಎಡಗಡೆಗೆ, ಬಲಗಡೆಯಂತೆಯೇ ಮಾಡಿ.
೫) ಕ್ರಮಾಂಕ ೧) ರ ಸ್ಥಿತಿಗೆ ಬಂದು ಅನಂತರ ಸಮಸ್ಥಿತಿಗೆ ಬಂದು
ನಿಲ್ಲಿ.

೭) ಪರಿವೃತ ಪಾರ್ಶ್ವಕೋನಾಸನ
ಸಮಸ್ಥಿತಿಯಲ್ಲಿ ನಿಲ್ಲಿ.
೧) ಮೇಲಿನ ಆಸನದಂತೆಯೇ.
೨) ಮೇಲಿನ ಆಸನದಂತೆಯೇ ಬಗ್ಗಿ. ಬಲತೊಡೆ ನೆಲಕ್ಕೆ ಸಮಾ
ನಾಂತರವಾಗಿರಲಿ ಮತ್ತು ಮಾನಖಂಡ, ತೊಡೆಗಳ ಮಧ್ಯೆ ಸಮಕೋನ
ಇರಲಿ. ಉಸಿರು ಬಿಡುತ್ತಾ ಎಡಗೈಯನ್ನು ಬಲ ಮೊಣಕಾಲಿನ ಮೇಲೆ
ತಂದು ಎಡ ಕಂಕುಳನ್ನು ಬಲ ಮೊಣಕಾಲಿನ ಹೊರಭಾಗದಲ್ಲಿರುವಂತೆ ಮಾಡಿ.
ಮತ್ತು ಎಡ ಅಂಗೈಯನ್ನು ನೆಲದ ಮೇಲೆ ಬಲಪಾದದ ಪಕ್ಕದಲ್ಲಿ ಊರಿ.
ಬೆನ್ನೆಲುಬನ್ನು ಬಲಕ್ಕೆ ತಿರುಗಿಸಿ, ನಡುವನ್ನು ತಿರುಗಿಸಿ ಬಲಗೈಯನ್ನು
ಬಲಗಿವಿಯ ಮೇಲೆ ನೇರವಾಗಿ ಹಿಡಿದು ಆ ಕಡೆ ನೋಡಿ.
ಎಡ ಮೊಣಕಾಲನ್ನು ಎಳೆದಿರಬೇಕು. ಇದೇ ಸ್ಥಿತಿಯಲ್ಲಿ ಮೂರು
ನಾಲ್ಕು ಬಾರಿ ಉಸಿರಾಡಬೇಕು.
೩) ಉಸಿರು ತೆಗೆದುಕೊಳ್ಳುತ್ತಾ ಕ್ರಮಾಂಕ ೧) ರ ಸ್ಥಿತಿಗೆ ಬನ್ನಿ.
೪) ಇದೇ ಕ್ರಮವನ್ನು ಎಡಗಡೆಗೆ ಮಾಡಿ.
ಎಡ ಬಲದ ಕೃತಿ, ಆಕೃತಿ, ಅವಧಿಗಳು ಸಮಾನವಾಗಿರಲಿ.

೫) ಕ್ರಮಾಂಕ ೧) ರ ಸ್ಥಿತಿಗೆ ಬಂದು, ಸಮಸ್ಸಿ ತಿಗೆ ಬನ್ನಿ/


ಡಾ|| ಹೊ. ಕ್ರೀನಿ
ವಾಸಯ್ಯನವರ ಗ್ರಂಥ
ಭಂಡಾರ |
ACC.ಊಂ ೭೬07]
KR

ಶರೀರ ಶಿಲ್ಪ
ರಾಷ್ಟ್ರೋತ್ಹಾನ ಸಾಹಿತ್ಥ ಬುದ್ದಿಗೆ ಮನಸ್ಸಿಗೆ
ವಿಚಾರದ ಆಹಾರ ಒದಗಿಸುತ್ತಲೇ ಇದೆ. .ಶರೀರಕ್ಕೂ
ವ್ಠಾಯಾಮದ ವಿಹಾರ ನೀಡದಿದ್ದರೆ ಹೇಗೆ? ಓದುಗರ
ಮನ - ಬುದ್ಧಿಗಳು ತಮ್ಮ ಗೂಡಾದ ಶರೀರವನ್ನು ಶಪಿಸಿ
ಕೊಳ್ಳಬಾರದಷ್ಟೆ. “ಶರೀರಮಾದ್ದಂ ಖಲು ಧರ್ಮ
ಸಾಧನ೦.' ಆದ್ದರಿ೦ದ ದುರ್ಬಲತೆಯ
ಶಾಪವಿಮೋಚನೆಗೆ ತೆಗೆದುಬಿಟ್ಟ೦ಥ ಅಸ್ಪೃವಿದೋ ಕೊಳ್ಳಿ
- *ಶರೀರಶಿಲ್ಪ'. ನೂರೆಂಟು ಕೀಲುಗಳುಳ್ಳ ಮಾನವನ
ಶರೀರ ಯಂತ್ರ ನೂರ್ಕಾಲ ಲವಲವಿಕೆಯಿಂದ ಹಸನಾಗಿ
ಬಾಳುವಂತೆ - ಒಳ್ಳೆಯ ಸಮಯದಲ್ಲಿ ಕೆಟ್ಟು
“ಕೈಕೊಟ್ಟು' ನಿಲ್ಲದಂತೆ - ವ್ಧಾಯಾಮದ ಎಣ್ಣೆ
ಎರೆಯಲು ಮರೆಯದಿರಬೇಕು. ಅದಕ್ಕೊ೦ದು ಅಕ್ಷಯ
ತೈಲಾಗಾರ ಈ “ಶರೀರ ಶಿಲ್ಪ'. ಇದರ ಆಚರಣೆಯಿಂದ
ಪ್ರತಿಯೊಬ್ಬರೂ ಪಡೆಯಬಹುದು "ಕಾಯಕಲ್ಪ.

You might also like