You are on page 1of 548

ಸಮರ,

ವಚನ.

ಸಂಪುಟ

ಜನಪ್ರಿಯ ಆವೃತ್ತಿ

ಶಿವಶರಣೆಯರ್

ವಚನಸರಿಸುವ

ಸಂಪಾದಕ

ಡಾ . ವೀರಣ್ಣ ರಾಜೂರ

ಕರ್ನಾಟಕ ಸರ್ಕಾರ

ಕನ್ನಡ ಪುಸ್ತಕ ಪ್ರಾಧಿಕಾರ

ಬೆಂಗಳೂರು
ARRAN
ಣ , ಎಚ್ . ಶಶಿಕಲಾ
ಸಹಾಯಕ ಪ್ರಾಧ್ಯಾಪಕರು

ಕನ್ನಡ ಅಕ್ಕಯನ ಕೇಂದ್ರ

ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು-560 056
ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ : ಸಂಪುಟ - ೫

ದಿ , ಎಚ್ , ಶಾಲಾ

ಸಹಾಯಕ ಪ್ರಾಧ್ಯಾಪಕರು

ಕನ್ನಡ ಅಧ್ಯಯನ ಕೇಂದ್ರ


ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು- 560 056

ಶಿವಶರಣೆಯರ ವಚನಸಂಪುಟ
೧. ಬಸವಣ್ಣನವರ ವಚನಸಂಪುಟ - ಸಂ : ಡಾ . ಎಂ . ಎಂ . ಕಲಬುರ್ಗಿ
೨. ಅಲ್ಲಮಪ್ರಭುದೇವರ ವಚನಸಂಪುಟ - ಸಂ : ಡಾ . ಬಿ . ವಿ. ಮಲ್ಲಾಪುರ
೩. ಚೆನ್ನಬಸವಣ್ಣನವರ ವಚನಸಂಪುಟ - ಸಂ : ಡಾ . ಬಿ. ವಿ . ಮಲ್ಲಾಪುರ
೪. ಸಿದ್ದರಾಮೇಶ್ವರ ವಚನಸಂಪುಟ - ಸಂ : ಡಾ . ಎಸ್ . ವಿದ್ಯಾಶಂಕರ
೫. ಶಿವಶರಣೆಯರ ವಚನಸಂಪುಟ - ಸಂ : ಡಾ . ವೀರಣ್ಣ ರಾಜೂರ
ಸಂಕೀರ್ಣ ವಚನಸಂಪುಟ : ಒಂದು - ಸಂ : ಡಾ . ಎಂ . ಎಂ . ಕಲಬುರ್ಗಿ
೭. ಸಂಕೀರ್ಣ ವಚನಸಂಪುಟ : ಎರಡು - ಸಂ : ಡಾ . ಎಸ್ . ವಿದ್ಯಾಶಂಕರ
೮. ಸಂಕೀರ್ಣ ವಚನಸಂಪುಟ : ಮೂರು - ಸಂ : ಡಾ . ಬಿ . ಆರ್ . ಹಿರೇಮಠ
೯. ಸಂಕೀರ್ಣ ವಚನಸಂಪುಟ : ನಾಲ್ಕು - ಸಂ : ಡಾ . ಬಿ. ಆರ್ . ಹಿರೇಮಠ
೧೦. ಸಂಕೀರ್ಣ ವಚನಸಂಪುಟ : ಐದು - ಸಂ : ಡಾ . ವೀರಣ್ಣ ರಾಜೂರ
೧೧ . ಸಂಕೀರ್ಣ ವಚನಸಂಪುಟ : ಆರು - ಸಂ : ಎಸ್ . ಶಿವಣ್ಣ
೧೨. ಸಂಕೀರ್ಣ ವಚನಸಂಪುಟ : ಏಳು - ಸಂ : ಡಾ . ವೀರಣ್ಣ ರಾಜೂರ
೧೩ , ಸಂಕೀರ್ಣ ವಚನಸಂಪುಟ : ಎಂಟು - ಸಂ : ಡಾ . ವೀರಣ್ಣ ರಾಜೂರ
೧೪, ಸಂಕೀರ್ಣ ವಚನಸಂಪುಟ : ಒಂಬತ್ತು - ಸಂ : ಡಾ . ವೀರಣ್ಣ ರಾಜೂರ
೧೫ . ವಚನ ಪರಿಭಾಷಾಕೋಶ- ಸಂ : ಡಾ . ಎನ್ . ಜಿ. ಮಹಾದೇವಪ್ಪ
ಶಿವಶರಣೆಯರ ವಚನಸಂಪುಟ

೧ . ಎಚ್ . ಶಾ .
ಸಹಾಯಕ ಪ್ರಾದಳು .

ಕನ್ನಡ ಅಧ್ಯಯನ ಕೇಂದ್ರ . .

ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು- 560 056

ಸಂಪಾದಕ

ಡಾ . ವೀರಣ್ಣ ರಾಜೂರ

ಕನ್ನಡ ಪ್ರಾಧ್ಯಾಪಕರು , ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

ಕರ್ನಾಟಕ ಸರ್ಕಾರ

ಕನ್ನಡ ಪುಸ್ತಕ ಪ್ರಾಧಿಕಾರ

ಬೆಂಗಳೂರು
SHIVASHARANEYARA VACHANASAMPUTA : Complete Vachanas
of 35 Vachanakartis of Basaveshwara Period , Ed. by Dr. Veeranna
Rajur, Professor, Institute ofKannada Studies , Karnataka University ,
Dharwad - 580 003 and Published by The Administrative Officer,
Kannada Pusthaka Pradhikara (Kannada Book Authority ), Pampa
Mahakavi Road , Chamarajpet , Bangalore - 560 018

ISBN : 81 - 7713 - 098 -6

Pp . LXXXiv + 456

ಹಕ್ಕುಗಳನ್ನು ಕಾಯ್ದಿರಿಸಿದೆ

ಪ್ರಥಮ ಮುದ್ರಣ : ೧೯೯೩


ದ್ವಿತೀಯ ಪರಿಷ್ಕೃತ ಮುದ್ರಣ : ೨೦೦೧

ಪ್ರತಿ : ಐದು ಸಾವಿರ

ಬೆಲೆ : ರೂ . ೮೫೦/

( ೧೫ ಸಂಪುಟಗಳ ಸೆಟ್ )

ಅಕ್ಷರ ಜೋಡಣೆ :

ಶ್ರೀ ಗ್ರಾಫಿಕ್ಸ್

ಮಾಳಮಡ್ಡಿ, ಧಾರವಾಡ

ಮುದ್ರಣ :
ಗುರುದತ್ ಪ್ರಿಂಟರ್

೯೧ , ೪ನೇ ಕ್ರಾಸ್ , ೧ನೇ ಮುಖ್ಯರಸ್ತೆ


ನ್ಯೂ ಟಿಂಬರ್ ಯಾರ್ಡ್ ಲೇಔಟ್
ಮೈಸೂರು ರಸ್ತೆ , ಬೆಂಗಳೂರು- ೨೬
© : ೬೭೪೫೨೩೦ , ೬೭೪೭೦೮೧
ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ

ಸಂಪಾದಕ ಮಂಡಳಿ

ಪ್ರಧಾನ ಸಂಪಾದಕರು

ಡಾ . ಎಂ . ಎಂ . ಕಲಬುರ್ಗಿ

ವಿಶ್ರಾಂತ ಕುಲಪತಿಗಳು , ಕನ್ನಡ ವಿಶ್ವವಿದ್ಯಾಲಯ , ಹಂಪಿ

ಸದಸ್ಯರು

ಡಾ . ಎಂ . ಚಿದಾನಂದಮೂರ್ತಿ

ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ , ಬೆಂಗಳೂರ

ಡಾ . ಸಿ. ಪಿ. ಕೃಷ್ಣಕುಮಾರ

ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ , ಮೈಸೂರ

ಡಾ . ಎಸ್. ವಿದ್ಯಾಶಂಕರ

ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ , ಬೆಂಗಳೂರ

ಎಸ್ . ಶಿವಣ್ಣ

ವಿಶ್ರಾಂತ ಸಂಪಾದಕರು , ಬೆಂಗಳೂರು ವಿಶ್ವವಿದ್ಯಾಲಯ , ಬೆಂಗಳೂರ

ಕೆ. ಸಿ. ರಾಮಮೂರ್ತಿ

ನಿರ್ದೆಶಕರು , ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ , ಬೆಂಗಳೂರು


ಮುನ್ನುಡಿ

ಎಸ್ ಎಂ . ಕೃಷ್ಣ

ಮುಖ್ಯಮಂತ್ರಿಗಳು

ಕನ್ನಡನಾಡಿನ ಪ್ರಥಮ ಪ್ರಜಾಸಾಹಿತ್ಯವಾಗಿರುವ ವಚನವಾಯ ನಮ್ಮ

ಪರಂಪರೆಯ ಅಪೂರ್ವ ಸಾಂಸ್ಕೃತಿಕ ಆಸ್ತಿಯೆನಿಸಿದೆ. ಅನೇಕ ಜನ ವಿದ್ವಾಂಸರು

ಅನೇಕ ಸಂಸ್ಥೆಗಳು ಈ ಸಾಹಿತ್ಯವನ್ನು ಬೆಳಕಿಗೆ ತರಲು ಕಳೆದ ನೂರು ವರ್ಷಗಳಿಂದ

ದುಡಿಯುತ್ತ ಬಂದುದು, ಇದರ ವ್ಯಾಪಕತೆಯ ದ್ಯೋತಕವಾಗಿದೆ. ಹೀಗೆ

ಪ್ರಕಟವಾಗಿದ್ದ ಮತ್ತು ಅಪ್ರಕಟಿತ ಸ್ಥಿತಿಯಲ್ಲಿದ್ದ ಈ ಸಾಹಿತ್ಯದ ದ್ವಿತೀಯ ಆವೃತ್ತಿಯನ್


ವಚನ ಪರಿಭಾಷಾಕೋಶವೂ ಒಳಗೊಂಡಂತೆ ೧೫ ಸಂಪುಟಗಳ ಮೂಲಕ

ಕರ್ನಾಟಕ ಸರ್ಕಾರ ಹೊರತರುತ್ತಿರುವುದು , ನಮ್ಮ ಸಾಹಿತ್ಯ ಪ್ರಕಟಣೆಯ

ಇತಿಹಾಸದಲ್ಲಿ ಒಂದು ಗಣ್ಯ ಸಾಧನೆಯೆಂದೇ ಹೇಳಬೇಕು. ಈ ಪ್ರಜಾಸಾಹಿತ್ಯವನ್ನು

ಪ್ರಜೆಗಳಿಗೆ ಮುಟ್ಟಿಸುವುದು ತನ್ನ ಕರ್ತವ್ಯವೆಂದು ಭಾವಿಸಿ , ಕರ್ನಾ

ಪ್ರಜಾಸರ್ಕಾರ ಈ ಕೆಲಸವನ್ನು ಪೂರೈಸಿದೆ.

ವಚನಸಾಹಿತ್ಯಕ್ಕೆ ನಮ್ಮ ನಾಡಿನಲ್ಲಿ ಸುಮಾರು ೮೦೦ ವರ್ಷಗಳ


ಇತಿಹಾಸವಿದೆ. ಈವರೆಗೆ ಬಸವಯುಗದ ಬರವಣಿಗೆಯನ್ನು ಹೊರತರಲು

ವಿದ್ವಾಂಸರು ಹೆಚ್ಚು ಗಮನಕೊಟ್ಟಿದ್ದರು. ಈ ಯೋಜನೆ ಅದನ್ನೂ ಒಳ

ಬಸವೋತ್ತರ ಯುಗದ ಮೇಲೆಯೂ ಒತ್ತುಕೊಟ್ಟುದು ವಿಶೇಷವೆನಿಸಿದೆ. ಇದರಿಂದಾಗಿ

ಈ ಯೋಜನೆಗೆ ಒಂದು ಸಾಹಿತ್ಯ ಪ್ರಕಾರದ ಪ್ರಕಟಣೆ ” ಎಂಬ ಕೀರ್ತಿ ಸಲ್ಲುತ್ತದೆ.

ವಚನವೆಂಬುದು ಚಳುವಳಿ ಸಾಹಿತ್ಯಪ್ರಕಾರವಾಗಿದೆ. ಆತ್ಮ ಕಲ್ಯಾಣದೊಂದಿಗೆ

ಸಮಾಜಕಲ್ಯಾಣವನ್ನೂ ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ

ಸಾಹಿತ್ಯವಿದು. ರಾಜಸತ್ತೆ , ಪುರೋಹಿತಸತ್ತೆ , ಪುರುಷಸತ್ತೆಗಳೆಂಬ ಪ್ರತಿಗಾಮಿ

ಸತ್ತೆಗಳ ವಿರುದ್ಧ ಕರ್ನಾಟಕದ ಎಲ್ಲ ಸಮಾಜದ ಜನರು ನಡೆಸಿದ ಹೋರಾಟದ

ಉಪನಿಷ್ಪತ್ತಿಯಾದ ಈ ಸಾಹಿತ್ಯದಲ್ಲಿ ಜೀವಪರಧ್ವನಿಗಳು ದಟ್ಟವಾಗಿ ಕೇಳಿಸುತ್ತವೆ .

ಪ್ರಾಚೀನ ಕರ್ನಾಟಕದ ಬೌದ್ದಿಕ ಶ್ರಮದ ವಿದ್ವತ್ ಜನತಾಸಾಹಿತ್ಯಕ್ಕಿಂತ ದೈಹಿಕ

ಶ್ರಮದ ಜನತಾಸಾಹಿತ್ಯ ಹೇಗೆ ಭಿನ್ನವಾಗಿದೆಯೆಂಬುದನ್ನು ಕಾಣಬೇಕಾದರೆ ನ

ಈ ಸಾಹಿತ್ಯಕ್ಕೆ ಮೊರೆಹೊಗಬೇಕು.

“ ವಿಪ್ರ ಮೊದಲು ಅಂತ್ಯಜ ಕಡೆಯಾಗಿ ” ಸಮಾಜದ ಎಲ್ಲ ವರ್ಗದ

ಸ್ತ್ರೀ - ಪುರುಷರ ಸಂಕೀರ್ಣ ಧ್ವನಿಗಳು ಇದರಲ್ಲಿ ತುಂಬ ಕಲಾತ್ಮಕವಾಗಿ


viii

ಎರಕಗೊಂಡಿವೆ . ಹೀಗಾಗಿ ಸಮಗ್ರ ಕರ್ನಾಟಕದ ಪ್ರಾತಿನಿಧಿಕ ಧ್ವನಿಯೆನಿಸಿದ ಈ

ಸಾಹಿತ್ಯದ ಪ್ರಕಟನೆಯು ತನ್ನ ಕರ್ತವ್ಯದ ಭಾಗವೆಂದು ಭಾವಿಸಿರುವ ಕರ

ಸರ್ಕಾರ, ಅದನ್ನು ಸುಲಭ ಬೆಲೆಯಲ್ಲಿ ಜನತೆಗೆ ನೀಡುತ್ತಿದೆ.

ಈ ಯೋಜನೆಯ ನೇತೃತ್ವ ವಹಿಸಿ ದುಡಿದ ಡಾ . ಎಂ . ಎಂ . ಕಲಬುರ್ಗಿ

ಅವರ ಶ್ರದ್ಧೆಯನ್ನು, ಸಂಪಾದಕ ಮಂಡಳಿಯ ಮಾರ್ಗದರ್ಶನವನ್ನು , ಸಂಪಾದಕರ

ಶ್ರಮವನ್ನು ಸ್ಮರಿಸುತ್ತ , ಈ ಐತಿಹಾಸಿಕ ಪ್ರಕಟನೆಯ ಪರಿಷ್ಕೃತ ದ್ವಿತೀಯ ಆವೃತ್ತಿ


ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.
ಬಿನ್ನಹ

ರಾಣಿ ಸತೀಶ್

ಕನ್ನಡ ಮತ್ತು ಸಂಸ್ಕೃತಿ ಸಚಿವರು

ಸಾಹಿತ್ಯಕ್ಕೆ ಸಾಹಿತ್ಯ , ಶಾಸ್ತ್ರಕ್ಕೆ ಶಾಸ್ತ್ರವಾಗಿರುವ ವಚನವಾಣ್ಮಯ ನಮ್ಮ

ಪರಂಪರೆಯ ಅಪೂರ್ವ ಸೃಷ್ಟಿಯಾಗಿದೆ; ಅತ್ಯಪೂರ್ವ ಆಸ್ತಿಯೆನಿಸಿದೆ. ಪಂಡಿ

ಮಾರ್ಗಸಾಹಿತ್ಯಕ್ಕೆ ಪ್ರತಿಯಾಗಿ ಸಾಮಾನ್ಯರ ಈ ದೇಶೀಸಾಹಿತ್ಯ ಹೊರಹೊಮ್ಮಿದ್

೧೨ನೆಯ ಶತಮಾನದಲ್ಲಿ: ಕಲಚುರಿಗಳ ರಾಜಧಾನಿಯಾಗಿದ್ದ ಕಲ್ಯಾಣದ

ಬಸವಾದಿ ಶರಣರ ಚಳುವಳಿಯಲ್ಲಿ.

ಮೂಲತಃ ಭಾರತೀಯರದು ಆತ್ಮ ಪರಮಾತ್ಮನಾಗಬೇಕೆಂಬ ವ್ಯಕ್ತಿಕೇಂದ್ರಿತ

ಸಿದ್ದಾಂತ. ಶರಣರು ಇದನ್ನು ಸಮಾಜಕೇಂದ್ರಿತ ಸಿದ್ದಾಂತಕ್ಕೆ ವಿಸ್ತರಿಸಿದರು . ಹೀ

ವ್ಯಕ್ತಿ ಕಲ್ಯಾಣದ ಜೊತೆ ಸಮಾಜಕಲ್ಯಾಣವೂ ಈ ಚಳುವಳಿಯ ಮುಖ್ಯ


ಲಕ್ಷಣವೆನಿಸಿತು. ಸಾಹಿತ್ಯ ಸಾಹಿತ್ಯಕ್ಕಾಗಿ ಅಲ್ಲ , ವ್ಯಕ್ತಿ ಪರಿವರ್ತನೆಗಾಗಿ , ಸಮಾಜ

ಪರಿವರ್ತನೆಗಾಗಿಯೆಂಬ ಸಿದ್ದಾಂತ ಇಲ್ಲಿ ಅರ್ಥ ಪಡೆಯಿತು.

೧೨ನೆಯ ಶತಮಾನದ ಹೊತ್ತಿಗೆ , ಶೂದ್ರಜೀವ ದೇವನಾಗಲಾರನೆಂ

ಸಿದ್ದಾಂತ ಸ್ಥಾಪಿತವಾಗಿದ್ದಿತು. ಸಮಾಜದಲ್ಲಿ ಪುರುಷ- ಸ್ತ್ರೀ , ಪ್ರಭು- ಪ್ರಜೆ

ಬ್ರಾಹ್ಮಣ-ಶೂದ್ರರಲ್ಲಿ ಸಮಾನತೆ ಸಾಧ್ಯವಿಲ್ಲವೆಂಬ ಭೇದಸಂಸ್ಕೃತಿಯೂ

ನಿರ್ಮಾಣವಾಗಿದ್ದಿತು. ಈಗ, ಶೂದ್ರನಿಗೂ ದೇವರಾಗುವ ಅರ್ಹತೆಯಿದೆ; ಸ್ತ

ಪುರುಷನಷ್ಟು - ಪ್ರಜೆಗೆ ಪ್ರಭುವಿನಷ್ಟು - ಶೂದ್ರನಿಗೆ ಬ್ರಾಹ್ಮಣನಷ


ಅಧಿಕಾರವಿದೆಯೆಂದು ಶರಣರು ವಾದಿಸಿದರು. ಇದರ ಫಲವಾಗಿ , ಹೊಸ

ಸಮಾಜವೊಂದು ಸೃಷ್ಟಿಯಾಯಿತು. ಇದರಿಂದಾಗಿ ಎಲ್ಲರೂ ಸ್ವತಂತ್ರರು , ಎಲ್


ಸಮಾನರು , ಎಲ್ಲರೂ ಸಹೋದರರೆಂಬ ತತ್ವ ಅನುಷ್ಠಾನಕ್ಕೆ ಬಂದಿತು. ಇದರ
ಮುಂದುವರಿಕೆಯೆಂಬಂತೆ ಎಲ್ಲರೂ ದುಡಿಯಬೇಕು ಎಂಬ ಕಾಯಕತತ್ವ , ಎಲ್ಲರೂ

ಹಂಚಿಕೊಂಡು ಉಣ್ಣಬೇಕು ಎಂಬ ದಾಸೋಹತತ್ವಗಳು ಆಕಾರ ಪಡೆದವು.

- ಹೊಸ ಸಮಾಜದ ಈ ಎಲ್ಲ ನೆಲೆಗಳನ್ನು ಗುರಿಯಿಟ್ಟು ಆಡಿದ ಶರಣರ

ಮಾತು ವಚನವೆಂಬ ಸಾಹಿತ್ಯಪ್ರಕಾರವಾಗಿ ಮೂಡಿತು. ವರ್ಗಭೇದ, ವರ್ಣಭೇದ

ಲಿಂಗಭೇದವೆನ್ನದೆ ಎಲ್ಲ ಜನವರ್ಗದವರ ಸಾವಿರ ಸಾವಿರ ವಚನಗಳು ಈ

ಕಾಲದಲ್ಲಿ ಸೃಷ್ಟಿಯಾದವು. ಆದರೆ ಒಮ್ಮೆಲೇ ತಲೆದೋರಿದ ಕಲ್ಯಾ

ಕ್ರಾಂತಿಯಿಂದಾಗಿ ಈ ಸಾಹಿತ್ಯ ನಾಡಿನ ತುಂಬ ಹರಿದು ಹಂಚಿಹೋಯಿತು.

ಹೀಗೆ ಹಂಚಿಹೋಗಿದ್ದ ಈ ಸಾಹಿತ್ಯವನ್ನು ೧೫- ೧೬ನೆಯ ಶತಮಾನಗಳಲ್ಲಿ


ಶೋಧಿಸುವ, ಸಂಪಾದಿಸುವ ಪ್ರಯತ್ನ ನಡೆದು, ನೂರಾರು ಸಂಪಾದನ ಕೃತಿಗಳ

ಹುಟ್ಟಿ ಬಂದು, ವಚನಸಾಹಿತ್ಯ ವೀರಶೈವ ಮಠಗಳಲ್ಲಿ ತಕ್ಕ ಮಟ್ಟಿಗೆ ರಕ್ಷಿಸಲ್

ದುರ್ದೈವದ ಸಂಗತಿಯೆಂದರೆ ಮಠಗಳಲ್ಲಿ ಪ್ರವೇಶ ಪಡೆದ ಸ

ಭಾಷೆಯಿಂದಾಗಿ ಕನ್ನಡ ಭಾಷೆಯ ಈ ವಚನಗಳು ಅಲ್ಲಿ ಮೂಲೆ ಸೇರಿದವು

ಹೀಗೆಮೂಲೆಗುಂಪಾಗಿದ್ದ ವಚನಸಾಹಿತ್ಯವು ೨೦ನೆಯ ಶತಮಾನದಲ್ಲಿ

ಅನೇಕ ಜನ ವಿದ್ವಾಂಸರ , ಹತ್ತಾರು ಸಂಸ್ಥೆಗಳ ಪ್ರಯತ್ನದ ಫಲ

ಪ್ರಕಟಣೆಗೊಳ್ಳುತ್ತ ಬಂದಿತು. ಈಗ ೧೨ನೆಯ ಶತಮಾನದ ಶರಣಸಾ

ಪ್ರಕಟನೆಗೆ ಒತ್ತುಬಿದ್ದರೂ ಅದು ಬಿಡಿಬಿಡಿಯಾಗಿ ಪ್ರಕಟಣೆಗೊಂಡಿತ

ತರುವಾಯದ ಶರಣ ಸಾಹಿತ್ಯವಂತೂ ಉಪೇಕ್ಷೆಗೆ ಗುರಿಯಾಯಿತು. ಈ ಎರ

ಕೊರತೆಗಳನ್ನು ನೀಗಿಸುವ ಉದ್ದೇಶದಿಂದ ಎಲ್ಲ ಶರಣರ ಎಲ್ಲ ವಚನಗಳನ್ನ

ಸಂಪುಟ ಶ್ರೇಣಿಯಲ್ಲಿ ಪ್ರಕಟಿಸಲು ಕರ್ನಾಟಕ ಸರಕಾರ “ಸಮಗ್ರ ವಚನಸಾಹಿತ್ಯದ

ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆಯನ್ನು ಕೈಗೆತ್ತಿಕೊಂಡಿತು .

ಡಾ . ಎಂ . ಎಂ . ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ವ್ಯಾಪಕ

ಕಾರ್ಯ ನಡೆದು , ೨೦ ಸಾವಿರ ವಚನ , ೧೦ ಸಾವಿರ ಪುಟಗಳನ್ನೊಳಗೊಂಡ

೧೫ ಸಂಪುಟಗಳು ೧೯೯೩ರಲ್ಲಿ ಬೆಳಕು ಕಂಡವು. ಆಶ್ಚರ್ಯದ ಸಂಗತಿಯೆಂದರ

ಇದರ ೫ ಸಾವಿರ ಪ್ರತಿಗಳು ಒಂದೇ ವರ್ಷದಲ್ಲಿ ಮಾರಾಟವಾಗಿ, ಜ

ಬೇಡಿಕೆ ಹೆಚ್ಚುತ್ತ ನಡೆಯಿತು. ಇದನ್ನು ಪೂರೈಸುವ ದಿಕ್ಕಿನಲ್ಲಿ ಪರಿಷ್ಕ

ಆವೃತ್ತಿ ಈಗ ಹೊರಬರುತ್ತಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯ

ಕನ್ನಡದ ಈ ಅಪೂರ್ವ ಆಸ್ತಿಯನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.


ನಿರ್ದೆಶಕರ ಮಾತು

ಕೆ. ಸಿ . ರಾಮಮೂರ್ತಿ

ನಿರ್ದೆಶಕರು , ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ

ವಚನಸಾಹಿತ್ಯ , ಕರ್ನಾಟಕದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು ಪ್ರಾಚ

ಕರ್ನಾಟಕದ ಜನಸಾಮಾನ್ಯರ ಧ್ವನಿಯಾಗಿರುವ ಇದನ್ನು ಪ್ರಕಟಿಸುವುದು , ಪ್ರಸಾ

ಮಾಡುವುದು ಜನತಂತ್ರ ಸರಕಾರದ ಮುಖ್ಯ ಕರ್ತವ್ಯವಾಗಿದೆ.

ಭಾರತದಲ್ಲಿ ಆತ್ರೋದ್ದಾರದ ಬಗ್ಗೆ ಉದಾತ್ತ ತತ್ವಗಳನ್ನು ಪ್ರತಿಪಾದಿಸು

ಬಂದಿದ್ದರೂ ಸಮಾಜೋದ್ದಾರದ ಬಗ್ಗೆ ಉಪೇಕ್ಷೆ ಬೆಳೆದು , ಅಲ್ಲಿ ಶೋಷ

ವರ್ಧಿಸುತ್ತ ಬಂದುದು ನಮ್ಮ ಇತಿಹಾಸದ ಒಂದು ವಿಪತ್ಯಾಸವೇ ಸರಿ . ೧೨

ಶತಮಾನದಲ್ಲಿ ಉಲ್ಬಣಗೊಂಡಿದ್ದ ಈ ವಿಷಮ ಪರಿಸ್ಥಿತಿಯನ್ನು ನಾಶಗೊಳಿಸಿ ,


ಸಮಸ್ಥಿತಿಯನ್ನು ಸಮಾಜದಲ್ಲಿ ತರಲು ಹೋರಾಡಿದವರು , ಕಲ್ಯಾಣದ ಶರಣರು.

ಈ ಕಾರಕ್ಕಾಗಿ ಅವರು ಕೈಕೊಡ ಜನಪರ ಆಂದೋಲನ ನಮ್ಮ ದೇಶದ

ಇತಿಹಾಸದಲ್ಲಿಯೇ ಒಂದು ವಿಶಿಷ್ಟ ಘಟನೆಯಾಗಿದೆ.

ಭಾರತದಲ್ಲಿ ರಾಜಸತ್ತೆಯ ಸ್ಥಾಪನೆಗಾಗಿ ರಾಜರು, ಮತಸತ್ತೆಯ ಸ್ಥಾಪನೆಗಾಗಿ

ಧರ್ಮಗಳು ಪರಸ್ಪರ ಸಂಘರ್ಷಕ್ಕಿಳಿದುದು ಸರ್ವಶ್ರುತ . ಆದರೆ

ನ್ಯಾಯದ ಸ್ಥಾಪನೆಗಾಗಿ ಈ ರಾಜಸತ್ತೆ , ಮತಸತ್ತೆಗಳ ವಿರುದ್ದ ಸಮಾಜದ ವಿವಿಧ

ಸ್ತರಗಳ ಜನತೆ , ಅದರಲ್ಲಿಯೂ ದೀನರು - ದಲಿತರು - ಮಹಿಳೆಯರು ಬೀದಿಗಿಳಿದು


ನಡೆಸಿದ ಈ ಆಂದೋಲನ , ಇಪ್ಪತ್ತನೆಯ ಶತಮಾನವೂ ಆಶ್ಚರ್ಯಪಡುವ

ಸಂಗತಿಯಾಗಿದೆ.

ಅಂದಿನ ಸನ್ನಿವೇಶಕ್ಕೆ ಅನುಗುಣವಾಗಿ ಧಾರ್ಮಿಕ ಕ್ಷೇತ್ರದಲ್ಲಿ ಅಂಕ

ಈ ಆಂದೋಲನ , ಸಾಮಾಜಿಕ ಕ್ಷೇತ್ರವನ್ನೂ ಆವರಿಸಿದ ಕಾರಣ , ಇದನ್ನು


'ಸಮಾಜೋ ಧಾರ್ಮಿಕ ಆಂದೋಲನವೆಂದು ಗುರುತಿಸಲಾಗ

ಸಮಾಜವೆನ್ನುವುದು ಸಂಕೀರ್ಣ ವ್ಯವಸ್ಥೆ . ಅದರ ಎಲ್ಲ ಸ್ತರಗಳನ್ನೂ ಎಲ್ಲ

ಮಗ್ಗಲುಗಳನ್ನೂ ಬದಲಿಸಲು ಮಾಡಿದ ಪ್ರಯತ್ನವಾಗಿರುವುದರಿಂದ ಇದು ಒಂದ

“ ಸಮಗ್ರ ಆಂದೋಲನವಾಗಿದೆ . ಈ ಆಂದೋಲನದ ನೇರ ಧ್ವನಿ , ವಚನಸಾಹಿತ್ಯ .

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನಿಂದಾಗಿ ವ್ಯಕ್ತಿ ಸ್ವಾತಂತ್ರ್ಯ ಪ


ಜನವರ್ಗವು ವ್ಯಕ್ತಪಡಿಸಿದ ಅಭಿಪ್ರಾಯ ಸ್ವಾತಂತ್ರ್ಯದ ಫಲ , ಈ ಸಾಹಿತ್ಯ .

ಹೀಗಾಗಿ ಇಲ್ಲಿ ಆತ್ಮವಿಮರ್ಶೆಯಷ್ಟೇ ವಿಪುಲವಾಗಿ ಸಮಾಜವಿಮರ್ಶ

ಕಾಣಬಹುದಾಗಿದೆ. ಅದರಲ್ಲಿಯೂ ವರ್ಣಭೇದ ನಿರಾಕರಣೆ , ವರ್ಗಭೇ


ನಿರಾಕರಣೆ , ಲಿಂಗಭೇದ ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು

ಲಕ್ಷಿಸತಕ್ಕ ಸಂಗತಿಯಾಗಿದೆ. ಇಲ್ಲಿ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ ,

ಕುಲಜರಷ್ಟೇ ಪ್ರಧಾನವಾಗಿ ಅಂತ್ಯಜರೂ , ಪ್ರಭುಗಳಷ್ಟೇ ಪ್ರಧಾನವಾಗಿ ಪ್ರಜ


ಬಾಳಿದುದು , ಬರೆದುದು ಬಹುಶಃ ಜಗತ್ತಿನ ಇತಿಹಾಸದಲ್ಲಿಯೇ ಏಕೈಕ

ಉದಾಹರಣೆಯಾಗಿದೆ. ಇಂಥ ವಿಚಾರಶೀಲರ ಅಂದರೆ ಇವರ ತತ್ವ - ಸಾಹಿತ್ಯಗಳ

ಉತ್ತರಾಧಿಕಾರಿಗಳಾದುದು ನಮ್ಮ ಭಾಗ್ಯ ; ಇವರ ಸಾಹಿತ್ಯಸಂಪತ್ತನ್ನು ರಕ್ಷಿಸ

ಪ್ರಸಾರಮಾಡುವುದು ನಮ್ಮ ಕರ್ತವ್ಯ . ಈ ಕರ್ತವ್ಯದ ಭಾಗವಾಗಿ

ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆಯನ್ನು ಕರ್ನಾಟಕ

ಸರಕಾರ ಕೈಗೆತ್ತಿಕೊಂಡಿತು.

ಈವರೆಗೆ ವಚನಸಾಹಿತ್ಯ ಬಿಡಿಬಿಡಿಯಾಗಿ ಭಾಗಶಃ ಪ್ರಕಟವಾಗಿದ್ದಿತು ,

ಕೆಲವು ಭಾಗ ಅಪ್ರಕಟಿತ ಸ್ಥಿತಿಯಲ್ಲಿ ಉಳಿದಿದ್ದಿತು. ಇದೆಲ್ಲವನ್ನುಕ್ರೋಢೀ


ಪರಿಷ್ಕರಿಸಿ ಪ್ರಕಟಿಸುವುದು ಶ್ರಮದ ಕೆಲಸ. ಡಾ . ಎಂ . ಎಂ . ಕಲಬುರ್ಗಿಯವರ

ಪ್ರಧಾನ ಸಂಪಾದಕತ್ವದಲ್ಲಿ ಅನೇಕ ಜನ ವಿದ್ವಾಂಸರ ಮತ್ತು ಸಂಪಾದಕ

ಸದಸ್ಯರ ಸಂಯುಕ್ತ ಪರಿಶ್ರಮದಿಂದ ಈ ಬೃಹತ್ ಯೋಜನೆ ಪೂರ್ತಿಗೊಂಡುದು

ಸಂತೋಷದ ಸಂಗತಿ . ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯದ ಆಶ್ರಯದಲ್ಲ

ಅಸ್ತಿತ್ವಕ್ಕೆ ಬಂದು, ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಂಡ ಈ ಐತಿಹ

ಯೋಜನೆಗಾಗಿ ಸಂಬಂಧಪಟ್ಟ ಎಲ್ಲ ವಿದ್ವಾಂಸರನ್ನು ಅಭಿನಂದಿಸುತ್ತೇ

ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟವಾಗುತ್ತಲಿರುವ ಈ ಪರಿಷ್ಕತ ದ್ವಿತೀಯ

ಆವೃತ್ತಿ ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.


ಪ್ರಕಾಶಕರ ಮಾತು

ಪ್ರೊ . ಮಲ್ಲೇಪುರಂ ಜಿ. ವೆಂಕಟೇಶ

ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ

ಸಮಗ್ರ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿ ಪ್ರಕಟಣೆ ಕರ್ನಾಟ


ಸಾಂಸ್ಕೃತಿಕ ಇತಿಹಾಸದಲ್ಲಿ ನಡೆದಿರುವ ಒಂದು ದಿವ್ಯಘಟನೆ. ವಚನಸಾಹಿತ

ಪ್ರಕಟಣೆಗೆ ಸುಮಾರು ಎಂಬತ್ತು ವರ್ಷಗಳ ಇತಿಹಾಸವಿದೆ. ವಚನಪಿತಾಮಹ

ಶ್ರೀ ಫ. ಗು . ಹಳಕಟ್ಟಿ ಅವರಿಂದ ಪ್ರಕಟಣೆಯ ದಿವ್ಯಘಟನೆ ಆರಂಭಗೊಂಡಿತು.

ಇದೀಗ ಡಾ . ಎಂ . ಎಂ . ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದ ಮೂಲಕ

ಸಹಸ್ರಮಾನದ ಸೂರ್ಯೋದಯದ ವೇಳೆಗೆ ಇದು ಒಂದು ಪೂರ್ಣ ಘಟ

ಬಂದಿದೆ . ಶರಣ ಸಾಹಿತ್ಯದ ಪ್ರಕಟಣೆಯ ಇತಿಹಾಸದಲ್ಲಿ ಇದು ಚಾರಿತ್ರಿಕ

ಘಟನೆಯೇ ಸರಿ . ಈ ನಡುವೆ ವಚನಸಾಹಿತ್ಯದ ಸಹಸ್ರಾರು ಬಿಡಿ ಪ್ರಕಟಣೆಗಳು

ಹೊರಬಂದಿವೆ . ವಿಶ್ವವಿದ್ಯಾಲಯಗಳು , ಖಾಸಗಿ ಸಂಸ್ಥೆಗಳು , ಮಠಗಳು , ಶಿಕ್ಷಣ

ಕೇಂದ್ರಗಳು , ಖಾಸಗಿ ಪ್ರಕಾಶಕರು , ಆಸಕ್ತ ಲೇಖಕರು ಬಿಡಿಬಿಡಿಯಾಗಿ

ವಚನಸಾಹಿತ್ಯದ ಪ್ರಕಟಣೆಗಳನ್ನು ಹೊರತಂದಿದ್ದಾರೆ . ನಾವು ಪ್ರೀತಿಯ

ಇವರನ್ನೆಲ್ಲ ಈ ಹೊತ್ತಿನಲ್ಲಿ ನೆನೆಯುವುದು , ಆ ಪಾತ್ರಃಸ್ಮರಣೀಯರ ಹಾದಿಯಲ

ಮುನ್ನಡೆಯುವುದು ನಮ್ಮ ಸಾಂಸ್ಕೃತಿಕ ಕರ್ತವ್ಯ .

ಸಮಗ್ರ ವಚನ ಸಂಪುಟಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂ

೧೯೯೩ರಲ್ಲಿ ಪ್ರಕಟಗೊಂಡಿದ್ದವು. ಆ ಸಂಪುಟಗಳು ಪ್ರಕಟವಾದ ವರ್ಷವೇ

ಕನ್ನಡಿಗರ ಮನೆಯನ್ನು ಸೇರಿಕೊಂಡವು. ಆದರೆ , ಸಂಪುಟಗಳ ಬೇಡಿಕೆ


ಮಹಾಜನರಿಂದ ಇದ್ದೇ ಇತ್ತು . ಆನಂತರ ಕರ್ನಾಟಕ ಸರ್ಕಾರ ಪರಿಷ್ಕೃತ ಆವೃತ್ತಿಗೆ

ತಾತ್ವಿಕ ಒಪ್ಪಿಗೆ ನೀಡಿತು . ಹೀಗೆ ಒಪ್ಪಿಗೆ ನೀಡಿದ ಸಂಸ್ಕೃತಿ ಸಂಪನ್ನರೂ

ಮುಖ್ಯಮಂತ್ರಿಗಳೂ ಆದ ಸನ್ಮಾನ್ಯ ಶ್ರೀ ಎಸ್ . ಎಂ . ಕೃಷ್ಣ ಅವರನ್ನು ತುಂಬ


ಹೃದಯದಿಂದ ಈ ಪ್ರಕಟಣೆಯ ದಿವ್ಯಘಟನೆಯ ಹೊತ್ತಿನಲ್ಲಿ ಸ್ಮರಿಸಿಕೊಳ್ಳುತ್

ಅನಂತರ ನಾಡಿನ ಶ್ರೇಷ್ಠ ವಿದ್ವಾಂಸರಾದ ಡಾ . ಎಂ . ಎಂ . ಕಲಬುರ್ಗಿ ಅವರ


ಪ್ರಧಾನ ಸಂಪಾದಕತ್ವದಲ್ಲಿ ವಚನ ಸಂಪುಟಗಳ ಪರಿಷ್ಕತ ಆವೃತ್ತಿ ಸಿದ್ದಗೊಂಡವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಸಂಪುಟಗಳನ್ನು ಪ್ರಕಟಿಸಬ

ಆದರೆ , ಆ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಒಪ್ಪಿಸಿದ್ದು ಕನ್ನಡ ಮ

ಸಂಸ್ಕೃತಿ ಇಲಾಖೆಯ ಔದಾರ್ಯ; ಅದನ್ನು ಪಡೆದು ಪ್ರಕಟಿಸುತ್ತಿರುವುದ

ಪ್ರಾಧಿಕಾರದ ಭಾಗ್ಯ . ಈ ಭಾಗ್ಯಕ್ಕೆ ಕಾರಣರಾದವರು ಕನ್ನಡ ಮತ್ತು ಸಂಸ್ಕೃ


xiv

ಇಲಾಖೆಯ ಸಚಿವೆಯರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ಮತ್ತು

ಮತ್ತು ಸಂಸ್ಕೃತಿ ನಿರ್ದೆಶನಾಲಯದ ನಿರ್ದೆಶಕರಾದ ಶ್ರೀ ಕೆ. ಸಿ. ರಾಮಮೂರ

ಇವರಿಬ್ಬರ ಆಸಕ್ತಿಯ ಫಲ ಈ ಕಾರ್ಯವನ್ನು ಆಗುಗೊಳಿಸಿತು. ಕನ್ನಡ ಮತ

ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವೆಯರ ಆಪ್ತ ಕಾರ್ಯದರ್ಶಿ

ಡಾ . ಎ . ಆರ್ . ಮಂಜುನಾಥ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದ

ಶ್ರೀ ಸಿ. ಎಸ್ . ಕೇದಾರ್ , ಕನ್ನಡ ಸಂಸ್ಕೃತಿ ನಿರ್ದೆಶನಾಲಯದ ಜಂಟಿ ನಿರ್ದೇಶಕ

ಶ್ರೀ ಕಾ . ತ. ಚಿಕ್ಕಣ್ಣ ಪ್ರಕಟಣೆಯ ವಿವಿಧ ಹಂತಗಳಲ್ಲಿ ನನಗೆ ನೆರವಾಗಿದ್ದಾರೆ.

ಈ ಮೇಲಿನ ಎಲ್ಲ ಮಹನೀಯರಿಗೂ ಕನ್ನಡ ಪುಸ್ತಕ ಪ್ರಾಧಿಕಾರವು ಅನನ್ಯವಾದ

ಕೃತಜ್ಞತೆಯನ್ನು ಅರ್ಪಿಸುತ್ತದೆ .

ಸಮಗ್ರವಚನ ಸಂಪುಟಗಳ ಪರಿಷ್ಕೃತ ಆವೃತ್ತಿಯ ಸಂಪಾದಕ ಮಂಡಳಿಯ

ವಿದ್ವಾಂಸರಾದ ಡಾ . ಎಂ . ಎಂ . ಕಲಬುರ್ಗಿ , ಡಾ . ಎಂ . ಚಿದಾನಂದಮೂ

ಡಾ . ಸಿ. ಪಿ . ಕೃಷ್ಣಕುಮಾರ್ , ಡಾ . ಎಸ್ . ವಿದ್ಯಾಶಂಕರ್ , ಎಸ್ . ಶ

ಇವರನ್ನು , ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಹೊರತರಲು ಒಪ್ಪಿಗೆ ನೀಡಿದ

ಪುಸ್ತಕ ಪ್ರಾಧಿಕಾರದ ಸ್ಥಾಯಿಸಮಿತಿ ಸದಸ್ಯರಾದ ಪ್ರೊ . ರಾಮೇಗೌಡ,

ಶ್ರೀ ಆರ್ . ಜಿ . ಹಳ್ಳಿ ನಾಗರಾಜ್ , ಪ್ರೊ . ಸಿದ್ದಪ್ಪ ಉತ್ನಾಳ್ , ಶ್ರೀ ಛಾಯಾಪತಿ

ಮತ್ತುಶ್ರೀಮತಿ ಇಂದಿರಾ ಶಿವಣ್ಣ ಇವರನ್ನು ತುಂಬು ಮನಸ್ಸಿನಿಂದ ನೆನೆಯು

ಹದಿನೈದು ಸಂಪುಟಗಳ ಅಕ್ಷರ ಜೋಡಣೆ ಮಾಡಿಕೊಟ್ಟವರನ್ನು , ಬಹು ಅಂದವಾ

ಮುದ್ರಿಸಿದವರನ್ನು , ಸುಂದರವಾಗಿ ಮತ್ತು ಆಕರ್ಷಕವಾಗಿ ಸಂಪ

ಬೈಂಡ್ ಮಾಡಿಕೊಟ್ಟವರನ್ನು , ಮುಖಪುಟ ವಿನ್ಯಾಸ ಮಾಡಿಕೊಟ್

ತುಂಬು ಪ್ರೀತಿಯಿಂದ ನೆನೆಯುವುದು ನನ್ನ ಕರ್ತವ್ಯ. ಇವರ ಮುದ್ರಣ ಪರಿಣತಿಯ

ಫಲ ಈ ಸಂಪುಟಗಳಿಗೆ ದೊರಕಿ ಅಂದವಾಗಲು ಕಾರಣವಾಗಿದೆ. ಪುಸ್ತಕ

ಪ್ರಾಧಿಕಾರದ ಆಡಳಿತಗಾರರಾದ ಶ್ರೀ ಬಲವಂತರಾವ್ ಪಾಟೀಲ ನನ್ನೊಡನೆ

ಉದ್ದಕ್ಕೂ ಸಹಕರಿಸಿದ್ದಾರೆ . ಈ ಮೇಲೆ ಹೆಸರಿಸಿದ ಎಲ್ಲ ಮಹನೀಯರನ್ನು

ಕೃತಜ್ಞತಾಪೂರ್ವಕವಾಗಿ ನೆನೆಯುತ್ತೇನೆ.

- ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸುತ್ತಿರುವ ಸಮಗ್ರ ವಚನ ಸಂಪುಟ

ಕನ್ನಡದ ಮಹಾಜನತೆ ಪ್ರೀತಿಯಿಂದ ಸ್ವೀಕರಿಸಬೇಕೆಂದು ಬೇಡುತ್ತೇನೆ.


ಸಂಪಾದಕೀಯ

ಡಾ . ಎಂ . ಎಂ . ಕಲಬುರ್ಗಿ

ಪ್ರಧಾನ ಸಂಪಾದಕರು

ಕರ್ನಾಟಕದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನ

ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ, ಸಮಾಜದ ಎಲ್ಲ ವರ್ಗ , ಎಲ್ಲ ವರ್ಣಗ

ಜನಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಗೊಂಡಿದ್ದ ವ್ಯಕ್ತಿಕಲ್ಯಾಣ ಮ


ಸಮಾಜಕಲ್ಯಾಣ ಚಳುವಳಿಯ ಸೃಷ್ಟಿಯೆನಿಸಿದ ಈ ವಚನಗಳು , ಜಾಗತಿಕ ಸಾಹಿತ್ಯದ

ಮಹತ್ವಪೂರ್ಣ ಭಾಗವೆನಿಸಿವೆ.

' ವಚನ' ಶಬ್ದಕ್ಕೆ ಇಲ್ಲಿ ಗದ್ಯ ಸಾಹಿತ್ಯಪ್ರಕಾರವೆಂದು ಅರ್ಥವಲ್ಲ; ಪ್ರತಿಜ್ಞೆ ಆತ್ಮಸಾ

ಮಾತು ಎಂದು ಅರ್ಥ . ನಡೆ ಹೇಗೇ ಇರಲಿ , ನುಡಿ ಮಾತ್ರ ಕಲಾತ್ಮಕವಾಗಿ

` ರಚನೆ' ಯಾದರೆ , ನಡೆದಂತೆ ನುಡಿದ ಆತ್ಮಸಾಕ್ಷಿಯ ವಾಣಿ ' ವಚನ' ವೆನಿಸುತ್ತದೆ .

ವಚನಗಳು ಆಚಾರೈರ ಸಾಹಿತ್ಯವಲ್ಲ , ಅನುಭಾವಿಗಳ ಸಾಹಿತ್ಯ , ಆಚಾರರ

ಜೀವಿಸಿರುವಾಗಲೇ ತಮ್ಮ ವಿಚಾರಗಳನ್ನು ಬರೆದು , ಅವುಗಳಿಗೆ ಸಂವಿಧಾನ

ಒತ್ತುತ್ತಾರೆ. ಅನುಭಾವಿಗಳು ಮಾತ್ರ ತಮ್ಮ ಚಿಂತನೆಯನ್ನು ಹೃದಯದಿಂದ ಹ


ಮುಟ್ಟುವಂತೆ ಬಿಡಿಮಾತುಗಳ ಮೂಲಕ ಹೇಳುತ್ತಾರೆ . ಬಿಡಿಮುತ್ತುಗಳಂತೆ ಸೂರ

ಅವುಗಳನ್ನು ಸಂಗ್ರಹಿಸುವ, ಸಂಕಲಿಸುವ , ಸಂಪಾದಿಸುವ ಕೆಲಸವನ್ನು ಉತ್


ಅನುಯಾಯಿಗಳು ಮಾಡುತ್ತಾರೆ . ಏಸುವಿನ ವಾಣಿಯಾದ ಬೈಬಲ್ , ಮಹಮ್ಮದ

ಉಪದೇಶವಾದ ಕುರಾನ್ , ಬುದ್ಧನ ಬೋಧೆಯಾದ ತ್ರಿಪಿಟಕ , ಶರಣರ ಸಂದೇಶವಾದ

ವಚನಕೃತಿಗಳು ಈ ಬಗೆಯ ಉತ್ತರಕಾಲೀನ ಸಂಕಲನಗಳಾಗಿವೆ .

ಮೂಲತಃ ವಚನನಿಧಿ ಜನರಿಂದ, ಜನರಿಗಾಗಿ ಹುಟ್ಟಿ , ಜನರ ಮಧ್ಯದಲ್ಲಿ ಬಾಳಿದ

ಸಾಹಿತ್ಯವಾಗಿದೆ . ಹೀಗಾಗಿ ಹನ್ನೆರಡರಿಂದ ಹದಿನೈದನೆಯ ಶತಮಾನಕ್ಕೆ ಬರುವಷ್

ಅದಕ್ಕೆ ವಿಪುಲ ಭಿನ್ನಪಾಠಗಳು ಹುಟ್ಟಿಕೊಂಡವು. ಆಮೇಲೆ ಸಂಕಲನ- ಸಂಪ

ಕಾಲ್ಯದಿಂದಾಗಿ ಕೆಲವೊಮ್ಮೆ ಪ್ರಕ್ಷಿಪ್ತ ವಚನಗಳೂ ತಲೆಯೆತ್ತಿದವು. ಈ ಗೊಂದ


ಕಾರಣವಾಗಿ ಕವಿಸಾಹಿತ್ಯಕ್ಕಿಂತ ವಚನಸಾಹಿತ್ಯದ ಸಂಪಾದನಕಾರ ತುಂಬ ಜಟಿಲಸ್ವರೂಪ

ದ್ದಾಗಿದೆ.

ಪ್ರಾಚೀನ ಕನ್ನಡ ಸಾಹಿತ್ಯದ ಪ್ರಕಟನಕಾರವನ್ನು ಮೊದಲು ಕೈಗೆತ್ತಿಕೊಂಡವರು ,


ಕ್ರೈಸ್ತ ಪಾದ್ರಿಗಳು. ಜೈನ ಪುರಾಣ - ಕಾವ್ಯಗಳನ್ನು , ವೈದಿಕ ಪುರಾಣ -ಕೀರ್ತನೆಗಳನ್ನು , ವೀರ

ಶಾಸ್ತ್ರ - ಪುರಾಣಗಳನ್ನು ಪ್ರಕಟಿಸಿದ ಇವರು , ವಚನಸಾಹಿತ್ಯವನ್ನು ಮಾತ್ರ

ಪ್ರಕಟಿಸಲಿಲ್ಲ. ದೇಶೀ ವಿದ್ವಾಂಸರೇ ಈ ಕೆಲಸವನ್ನು ಪ್ರಾರಂಭ ಮಾಡಬೇಕಾಯಿತು


Xvi

ದಿಸೆಯಲ್ಲಿ ಮೊದಲು ಪ್ರಕಟವಾದ ವಚನಕೃತಿ ( ೧೮೮೩ ) ' ಅಪ್ರಮಾಣ

ಸಂಗಮದೇವಾ' ಮುದ್ರಿಕೆಯ ವಚನಗಳನ್ನೊಳಗೊಂಡ 'ಶಿಖಾರತ್ನಪ್ರಕಾಶ ". ಆಮೇಲ


ಒಂದು ಮೈಲಿಗಲ್ಲಿನಂತೆ ಪ್ರಕಟವಾದ ವಚನಕೃತಿ, ಬಸವಣ್ಣನವರ ಷಟ್‌ಸ್ಥಲವಚನ ಸಂ

ಅದು ಮೊದಲು ಬೆಳಕು ಕಂಡುದು ೧೮೮೯ರಲ್ಲಿ . ಅಲ್ಲಿಂದ ಸರಿಯಾಗಿ ಒಂದು

ಕಳೆಯುವಷ್ಟರಲ್ಲಿ ಅಂದರೆ ೧೯೮೮ರಲ್ಲಿ ಈ 'ಸಮಗ್ರ ವಚನಸಾಹಿತ್ಯದ ಜನಪ್

ಆವೃತ್ತಿ ಪ್ರಕಟನ ಯೋಜನೆ' ಅಸ್ತಿತ್ವಕ್ಕೆ ಬಂದುದು ಒಂದು ಯೋಗಾಯೋಗವಾ

ವಚನಸಾಹಿತ್ಯದ ಪ್ರಕಟನಚರಿತ್ರೆಯ ಶತಮಾನಸ್ಮರಣೆಯಾಗಿದೆ .

ಈ ನೂರು ವರ್ಷಗಳ ಕಾಲವ್ಯಾಪ್ತಿಯಲ್ಲಿ ವಚನಸಾಹಿತ್ಯ ಪ್ರಕಟಣೆಗಾಗಿ

ದುಡಿದಿರುವರಾದರೂ ಯೋಜನಾಬದ್ಧ ವ್ಯಾಪಕ ಪ್ರಯತ್ನಗಳು , ವಿಜಾಪುರ , ಧಾರವಾಡ

ಗದಗಗಳಲ್ಲಿ ಹೀಗೆ ಜರುಗಿವೆ :

೧. ಶಿವಾನುಭವ ಗ್ರಂಥಮಾಲೆ , ವಿಜಾಪುರ - ಡಾ . ಫ. ಗು . ಹಳಕಟ್ಟಿ

೨. ಕನ್ನಡ ಅಧ್ಯಯನ ಪೀಠ, ಕ. ವಿ . ಧಾರವಾಡ - ಡಾ . ಆರ್ . ಸಿ. ಹಿರೇಮಠ

೩ . ತೋಂಟದಾರ್ಯಮಠ , ಗದಗ - ಡಾ . ಎಂ . ಎಂ . ಕಲಬುರ್ಗಿ

ವಚನಸಾಹಿತ್ಯದ ಪ್ರಕಟನ ಕಾರ್ಯ ಹೀಗೆ ವಿಜಾಪುರದಲ್ಲಿ ಪ್ರಾರ

ಧಾರವಾಡದಲ್ಲಿ ಬೆಳೆದು, ಗದುಗಿನಲ್ಲಿ ಒಂದು ನಿಲುಗಡೆಗೆ ಬರುತ್ತಿದ್ದ

ನಾಲ್ಕನೆಯ ಘಟ್ಟದಲ್ಲಿ ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ' ಯ

ಅಂಗವಾಗಿ , ೧೫ ಸಂಪುಟಗಳು ಕರ್ನಾಟಕ ಸರಕಾರದ ಮೂಲಕ ಪ್ರಕಟವಾಗುತ್ತಲಿ

ಸುಮಾರು ೧೧೦ ಜನ ಪ್ರಕ್ಷಿಪ್ತ ವಚನಕಾರರನ್ನೂ ಪ್ರಕ್ಷಿಪ್ತವಾಗಿರಬಹುದಾದ ಅ

ವಚನಗಳನ್ನೂ ಕೈಬಿಟ್ಟು ಸಂಯೋಜಿಸಲಾದ ಈ ಹದಿನೈದು ಸಂಪುಟಗಳ ಒಟ

ಸುಮಾರು ಹತ್ತು ಸಾವಿರ ; ಒಟ್ಟು ವಚನ ಸಂಖ್ಯೆ ಸುಮಾರು ಇಪ್

ವಚನಸಾಹಿತ್ಯವನ್ನು ಒಮ್ಮೆ ಸಮಗ್ರವಾಗಿ ಹೊರತಂದ ಪ್ರಥಮ ಮಹತ್ವಾಕಾಂಕ್

ಯೋಜನೆಯಿದು. ಈ ಸಾಹಿತ್ಯದ ಗಡಿಗೆರೆಗಳನ್ನು , ಸಂಖ್ಯಾಬಾಹುಳ್ಯವನ್ನು ವ್ಯವ

ಕೊಟ್ಟು, ವಿದ್ವಾಂಸರ ಅಧ್ಯಯನದ ಮುಂದುವರಿಕೆಗೆ ಒಂದು ನಿರ್ದಿಷ್ಟ

ಹಿರಿಮೆ ಈ ಯೋಜನೆಗೆ ಸಲ್ಲುತ್ತದೆ .

ಈ ಯೋಜನೆಯ ಅಂಗವಾಗಿ ಬಸವಣ್ಣನವರ ವಚನ, ಪ್ರಭುದೇವರ ವಚನ ,

ಚೆನ್ನಬಸವಣ್ಣನವರ ವಚನ , ಸಿದ್ದರಾಮೇಶ್ವರ ವಚನ , ಶಿವಶರಣೆಯರ ವಚನ - ಹೀ

ಐದು ಸಂಪುಟಗಳು , ಬಸವ ಸಮಕಾಲೀನ ಮಿಕ್ಕ ಶರಣರ ವಚನಗಳ ನಾಲ್ಕು ಸಂಪುಟ

೧. ಮೊದಲು ಪ್ರಕಟವಾದ ವಚನಕೃತಿ ಅಖಂಡೇಶ್ವರ ವಚನ ( ೧೮೮೨) ವೆಂದು ಡಾ . ಬಿ. ನಂಜುಂ

ಸ್ವಾಮಿ ಅವರ ಅಭಿಪ್ರಾಯ . ( ಬಸವಪಥ ೧೬ . ೬ )

ಬಸವಣ್ಣನವರ ಷಟ್ಟಲದ ವಚನಗಳು ಪ್ರಥಮ ಸಲ ಬೆಳಕುಕಂಡುದು ೧೮೮೬ರಲ್ಲಿಯೆಂದು

ಡಾ . ಬಿ . ನಂಜುಂಡಸ್ವಾಮಿ ಹೇಳುತ್ತಾರೆ . ( ಬಸವಪಥ ೧೫ - ೫ ಪು. ೪೫)


Xvii

ಬಸವೋತ್ತರ ಕಾಲೀನ ಶರಣರ ವನಚಗಳ ಐದು ಸಂಪುಟಗಳು ಮತ್ತು ಒಂದ

ಪರಿಭಾಷಾಕೋಶ - ಹೀಗೆ ಹದಿನೈದು ಸಂಪುಟಗಳು ಬೆಳಕುಕಾಣುತ್ತಲಿವೆ . ಇವುಗಳಲ್

ಮೊದಲಿನ ಐದು ಸಂಪುಟಗಳು ( ಬಸವಣ್ಣ , ಅಲ್ಲಮಪ್ರಭು , ಚೆನ್ನಬಸವಣ್ಣ , ಸಿದ್ದರಾಮ

ಶಿವಶರಣೆಯರು) ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯದಮೂಲಕ ಪ್ರಕಟವಾಗಿದ್ದವು.


ಆ ಬಳಿಕ ಲಭ್ಯವಾದ ನೂರಾರು ಹೊಸ ವಚನಗಳನ್ನು ಸೇರಿಸಿ, ಈ ಐದೂ ಸಂಪುಟಗಳಿಗೆ

ಸಮಗ್ರರೂಪಕೊಟ್ಟಿದ್ದೇವೆ ಮತ್ತು ಪರಿಷ್ಕರಿಸಿದ್ದೇವೆ.

ಬಸವ ಸಮಕಾಲೀನ ಮಿಕ್ಕ ಶರಣರ ನಾಲ್ಕು ಸಂಪುಟಗಳ ಕೆಲಸ ಈವರೆಗ


ಸಮರ್ಪಕವಾಗಿ ನಡೆದಿರಲಿಲ್ಲ. ಈ ಶರಣರ ಸಂಖ್ಯೆ , ಇವರ ವಚನಸಂಖ್ಯೆ ಅಸ್ಪಷ

ಉಳಿದಿದ್ದಿತು. ವಚನಗಳೂ ಅಲ್ಲಿಷ್ಟು, ಇಲ್ಲಿಷ್ಟು ಪ್ರಕಟವಾಗಿದ್ದವು. ಒಂದಿಷ

ಸ್ಥಿತಿಯಲ್ಲಿಯೇ ಉಳಿದುಬಿಟ್ಟಿದ್ದವು. ಇವೆಲ್ಲವುಗಳನ್ನು ಸಂಗ್ರಹಿಸಿ , ಪರಿಷ್ಕರಿಸಿ ಈ ನಾಲ


ಸಂಪುಟಗಳಿಗೆ ಸಮಗ್ರ ರೂಪಕೊಟ್ಟಿದ್ದೇವೆ. ಒಟ್ಟಿನಲ್ಲಿ ಬಸವಯುಗದ ಈ ಎಲ್ಲ ಒ

ಸಂಪುಟಗಳಿಗೆ ಸುಮಾರು ಸಾವಿರದಷ್ಟು ಹೊಸ ವಚನಗಳನ್ನು ಸೇರಿಸಿದ್ದೇವ

ಬಸವೋತ್ತರ ಕಾಲೀನ ಶರಣರ ಸಂಪುಟಗಳ ಕೆಲಸ ಇನ್ನೂ ಅಲಕ್ಷಿತವಾಗಿದ್ದಿತು.

ಈವರೆಗೆ ತಿಳಿದುಬಂದಿದ್ದ ವಚನಕಾರರ ಹೊಸ ವಚನಗಳನ್ನು ಶೋಧಿಸುವುದರ

ಅನೇಕ ಹೊಸ ವಚನಕಾರರನ್ನೂ ಬೆಳಕಿಗೆ ತಂದಿದ್ದೇವೆ. ಇದರಿಂದಾಗಿ ಬಸವೋತ್ತ

ಶರಣರನ್ನೂ ಅವರ ವಚನಗಳ ವ್ಯಾಪ್ತಿಯನ್ನೂ ಜನತೆಯ ಮುಂದಿಟ್ಟ ಪ್ರಥಮ ಕೀರ್ತಿ

ಈ ಐದು ಸಂಪುಟಗಳಿಗೆ ಸಲ್ಲುತ್ತದೆ . ಹೀಗೆ ಬಸವಯುಗ, ಬಸವೋತ್ತರಯು


ವಚನಸಾಹಿತ್ಯಕ್ಕೆ ಸಂಬಂಧಪಟ್ಟ ಎಲ್ಲ ಕೊರತೆಗಳನ್ನು ತುಂಬಿಕೊಡುವ ಒಂದು ಪರಿಪ

ಯೋಜನೆ ಇದಾಗಿದೆ. ಮೊದಲ ಬಾರಿಗೆ ೧೯ನೆಯ ಶತಮಾನದವರೆಗಿನ ಎಲ್ಲ ಶರಣರ

ಎಲ್ಲ ವಚನಗಳನ್ನು ಒಂದೆಡೆ ಸಂಗ್ರಹಿಸಿ , ಒಂದು ಕ್ರಮಕ್ಕೆ ಅಳವಡಿಸಿ, ಸಂಪುಟ ಶ್ರೇಣಿಯ

ಹೊರತಂದ ದೊಡ್ಡಪ್ರಯತ್ನ ಇಲ್ಲಿದೆ.

ವಚನಸಾಹಿತ್ಯದ ಪರಿಷ್ಕರಣಕಾರ ತುಂಬ ಜಟಿಲವಾದುದು. ೧ . ಎಲ್ಲ ಶರಣರ

ಎಲ್ಲ ವಚನಗಳನ್ನು ಎಲ್ಲ ಪ್ರಾಚೀನ ಆಕರಗಳಿಂದ ಸಂಗ್ರಹಿಸುವುದು , ೨ . ಪ್ರಕ್ಷಿಪ್ತವಾಗಿ


ಬಹುದಾದ ವಚನಕಾರರನ್ನು , ವಚನಗಳನ್ನು ಕೈಬಿಡುವುದು , ೩ . ನಿಜವಚನಗಳ ಪಾಠ

ಪರಿಷ್ಕರಿಸುವುದು - ಇದು ಈ ಯೋಜನೆಯ ಉದ್ದೇಶವಾಗಿದೆ. ಈ ಉದ್ದೇಶ ಸಾಧನೆಗಾಗಿ

ಎಲ್ಲ ಪ್ರಾಚೀನ ಆಕರಗಳಿಂದ ಅಂದರೆ ಸುಮಾರು ೧೦೮ ಆಕರಗಳಿಂದ ಎಲ್ಲ ವಚನಗಳನ

ಸಂಗ್ರಹಿಸಿ , ಪ್ರತಿಯೊಂದು ವಚನದ ಕೆಳಗೆ ಅದರ ಎಲ್ಲ ಆಕರಗಳನ್ನು ನಮೂದಿಸ

' ವಚನ ಬ್ಯಾಂಕನ್ನು ಅಸ್ತಿತ್ವಕ್ಕೆ ತರಲಾಯಿತು. ಒಂದು ವಚನಕ್ಕೆ ಇರುವ ವಿವಿಧ ಪಾಠ
ರೂಪಾಂತರಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು, ಮುದ್ರಿಕೆಯ ವ್ಯತ್

ಗಮನಿಸಲು, ಒಬ್ಬ ವಚನಕಾರನ ಒಟ್ಟು ವಚನಗಳ ಸಂಖ್ಯೆಯನ್ನು ನಿರ್ಧರಿಸ


ಕೊನೆಯದಾಗಿ ವಚನದ ನಿಜಪಾಠವನ್ನು ನಿರ್ಣಯಿಸಲು ಈ ಬ್ಯಾಂಕ್
ನೆರವಾಯಿತು.
xviii

ಇವು ಜನಪ್ರಿಯ ಆವೃತ್ತಿಗಳಾಗಿರುವುದರಿಂದ ಲಭ್ಯವಿರುವ ಪಾಠಾಂತರಗಳಲ್ಲಿ

ಯೋಗ್ಯವಾದುದನ್ನು ಸ್ವೀಕರಿಸಿ , ಅನ್ಯಪಾಠಗಳನ್ನು ಅಡಿಯಲ್ಲಿ ನಮೂದಿಸದೆ ಕೈಬಿಟ

ಜನಸಾಮಾನ್ಯರ ಅನುಕೂಲತೆಗಾಗಿ ಶಕಟರೇಫೆಗೆ ಬದಲು ರೇಫೆ ಇಟ್ಟುಕೊಂ

ಅಭ್ಯಾಸಿಗಳ ಉಪಯೋಗ ದೃಷ್ಟಿಯಿಂದ ಕಠಿಣ ಪದಕೋಶ, ಅಕಾರಾದಿ , ಆಕರಸೂಚ


ಅನುಬಂಧದಲ್ಲಿ ಕೊಟ್ಟಿದ್ದೇವೆ. ಹೆಚ್ಚಿನದಾಗಿ ಪಾರಿಭಾಷಿಕ ಪದಗಳ ಒಂದು ಸ್ವತ

ಕೋಶವನ್ನೇ ಪ್ರಕಟಿಸಿದ್ದೇವೆ. ಒಟ್ಟಿನಲ್ಲಿ , ಇವು ಜನಪ್ರಿಯ ಆವೃತ್ತಿಗಳಾದರೂ ವಿದ್ವಜ್ಜನಪ

ಆವೃತ್ತಿಗಳೂ ಆಗಬೇಕೆಂಬ ಆದರ್ಶದಲ್ಲಿ ಈ ಸಂಪುಟಗಳನ್ನು ರೂಪಿಸಲು ಪ್ರಯತ್ನ

ಕೃತಜ್ಞತೆ

ವಿಶ್ವವಿದ್ಯಾಲಯದಂಥ ಶಿಕ್ಷಣ ಸಂಸ್ಥೆಗಳು , ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ

ಸಾರ್ವಜನಿಕ ಸಂಸ್ಥೆಗಳು , ವೀರಶೈವ ಮಠಗಳಂಥ ಧಾರ್ಮಿಕ ಸಂಸ್ಥೆ

ಡಾ . ಫ. ಗು . ಹಳಕಟ್ಟಿಯವರಂಥ ವಿದ್ವಾಂಸ ವ್ಯಕ್ತಿಗಳು ನಿರಂತರ ದುಡಿದರೂ ವಚನ

ಪೂರ್ಣಪ್ರಮಾಣದಲ್ಲಿ ಪ್ರಕಟವಾಗಲು ಒಂದುನೂರು ವರ್ಷ ಹಿಡಿ

ಗಾತ್ರಬಾಹುಳ್ಯಕ್ಕೆ ಸಾಕ್ಷಿಯಾಗಿದೆ . ನೂರುವರ್ಷ ದುಡಿದು , ಸಾಮಗ್ರಿಯನ್

ಈ ಎಲ್ಲ ವ್ಯಕ್ತಿ - ಸಂಸ್ಥೆಗಳಿಗೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು ಸಲ್ಲುತ್ತವೆ.

ಈ ಯೋಜನೆಯ ಕಾತ್ಯಾಲಯ ಅಸ್ತಿತ್ವಕ್ಕೆ ಬಂದು ಕೆಲಸ ಪ್ರಾರಂಭವಾದದ್ದ

ಅಕ್ಟೋಬರ್ ೧೫ , ೧೯೮೮ರಂದು. ಹಸ್ತಪ್ರತಿಗಳು ಅಚ್ಚಿಗೆ ಹೋದದ್ದು ೧೬ ಮಾರ್ಚ

೧೯೯೦ರಂದು. ಹೀಗೆ ಮೊದಲೇ ಯೋಜಿಸಿದಂತೆ ಎರಡು ವರ್ಷಗಳ ನಿರ


ಅವಧಿಯಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಪ್ರತಿಯೊಂದು

ಈ ಯೋಜನೆ ಸಕ್ರಮವಾಗಿ ಮುನ್ನಡೆಯುವುದಕ್ಕಾಗಿ ' ಸಂಪಾದಕ ಮಂಡಳಿಯ ಸದಸ್ಯರ

ಡಾ . ಎಂ . ಚಿದಾನಂದಮೂರ್ತಿ , ಡಾ . ಸಿ. ಪಿ . ಕೃಷ್ಣಕುಮಾರ , ಡಾ . ಎಸ್ . ವಿದ್ಯ

ಶ್ರೀ ಎಸ್ . ಶಿವಣ್ಣ ಅವರು ಉದ್ದಕ್ಕೂ ಬೆಲೆಯುಳ್ಳ ಸಲಹೆ- ಮಾರ್ಗದರ್ಶನ ನೀಡಿದ್

ಡಾ . ಎಚ್ . ತಿಪ್ಪೇರುದ್ರಸ್ವಾಮಿ ಅವರು ಆರಂಭದ ಕೆಲವು ತಿಂಗಳು ಸಂಪ

ಮಂಡಳಿಯ ಸದಸ್ಯರಾಗಿ , ವಿಶ್ವಾಸದಿಂದ ನೆರವಾಗಿದ್ದಾರೆ. ಸಂಪಾ

ಡಾ . ಬಿ . ವಿ . ಮಲ್ಲಾಪುರ , ಡಾ . ಎಸ್ . ವಿದ್ಯಾಶಂಕರ , ಡಾ . ವೈ . ಬಿ . ರಾಜೂ

ಡಾ . ಬಿ. ಆರ್ . ಹಿರೇಮಠ, ಶ್ರೀ ಎಸ್ . ಶಿವಣ್ಣ ತುಂಬ ಶ್ರಮ -ಶ್ರದ್ಧೆಗಳಿಂದ ಸಂಪ

ಕೆಲಸ ಪೂರೈಸಿದ್ದಾರೆ . ಸಹಾಯಕ ಸಂಶೋಧಕರಾದ ಶ್ರೀಮತಿ ವಿಜಯಶ್ರೀ ಹಿರ

ಶ್ರೀ ವಾಯ್ . ಎಂ . ಯಾಕೊಳ್ಳಿ, ಶ್ರೀ ಬಿ . ವಿ . ಕೋರಿ ಅವರು ದಣಿವನ್ನು

ದುಡಿದಿದ್ದಾರೆ. ಇವರೆಲ್ಲರಿಗೆ ನಾವು ಕೃತಜ್ಞರಾಗಿದ್ದೇವೆ.

ಈ ಯೋಜನೆಯನ್ನು ಅನುದಾನ ಮಾಡಿದ ಕರ್ನಾಟಕ ಸರಕಾರದ ಔದಾರಕ್ಕೆ

ನಮ್ಮ ಅಭಿನಂದನೆಗಳು ಸಲ್ಲುತ್ತವೆ . ಈ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ

ಶ್ರೀ ರಾಮಕೃಷ್ಣ ಹೆಗಡೆ , ಶ್ರೀ ಎಸ್ . ಆರ್ . ಬೊಮ್ಮಾಯಿ , ಶ್ರೀ ವೀರೇಂದ್ರ ಪಾಟೀಲ

ಶ್ರೀ ಎಸ್ . ಬಂಗಾರಪ್ಪ ಅವರಿಗೂ , ಸಾಹಿತಿಗಳೂ ಸಾಹಿತ್ಯ - ಸಂಸ್ಕೃತಿಗಳ ಗಾಢ ಆಸಕ್ತರೂ


ಆಗಿರುವ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಎಂ . ವೀರಪ್ಪ ಮೊಯಿಲಿ ಅವರಿಗೂ

ಋಣಿಯಾಗಿದ್ದೇವೆ.

ಈ ಯೋಜನೆ ಅಸ್ತಿತ್ವಕ್ಕೆ ಬರುವಲ್ಲಿ ವಿಶೇಷ ಆಸಕ್ತಿ ವಹಿಸಿದವರು , ಕನ್ನಡ ಮತ್


ಸಂಸ್ಕೃತಿ ಇಲಾಖೆಯ ಅಂದಿನ ಸಚಿವರಾಗಿದ್ದ ಶ್ರೀ ಎಂ . ಪಿ . ಪ್ರಕಾಶ ಅವರ

ಸಾಹಿತ್ಯ - ಸಂಸ್ಕೃತಿಗಳ ಬಗ್ಗೆ ಅನನ್ಯ ಪ್ರೀತಿ- ಗೌರವ ಬೆಳೆಸಿಕೊಂಡಿರುವ ಶ್ರೀಯುತರಿಗೆ

ನಾವು ಕೃತಜ್ಞರಾಗಿದ್ದೇವೆ. ಆಮೇಲೆ ಈ ಇಲಾಖೆಗೆ ಸಚಿವರಾಗಿ

ಶ್ರೀ ಎಂ . ವೀರಪ್ಪ ಮೊಯಿಲಿ , ಶ್ರೀ ಕೆ. ಎಚ್ . ರಂಗನಾಥ , ಶ್ರೀ ಎಸ್ . ರಮೇಶ್ ,

ಇಂದಿನ ಸಚಿವರಾದ ಮಾನ್ಯ ಶ್ರೀ ಎಚ್ . ವಿಶ್ವನಾಥ್ ಅವರಿಗೆ ನಮ್ಮ ಗೌರವಗಳು

ಸಲ್ಲುತ್ತವೆ.

ಈ ಪ್ರಸಂಗದಲ್ಲಿ ಆತ್ಮೀಯ ಆಡಳಿತ ನಿರ್ದೇಶನ ಮಾಡಿದ ಕನ್ನಡ ಮತ್ತು ಸಂಸ್ಕೃತಿ

ನಿರ್ದೆಶನಾಲಯದ ಅಂದಿನ ನಿರ್ದೆಶಕರಾಗಿದ್ದ ಶ್ರೀ ಐ. ಎಂ . ವಿಠಲಮೂರ

ಶ್ರೀ ಬಿ . ಪಾರ್ಥಸಾರಥಿ, ಕಮಿಷನರ್ ಡಾ . ಪಿ . ಎಸ್ . ರಾಮಾನುಜಂ, ಇಂದಿ

ಕಮಿಷನರ್‌ರಾದ ಶ್ರೀ ಪಿ. ಎಸ್ . ವಿ . ರಾವ್ ಅವರನ್ನೂ ಅಧಿಕ ನಿರ್ದೆಶಕ

ಶ್ರೀ ಕೆ. ದೇವರಸಯ್ಯ , ಉಪನಿರ್ದೆಶಕರಾದ ಶ್ರೀ ಕಾ . ತ. ಚಿಕ್ಕಣ್ಣ ಅವರನ್ನೂ ನೆನೆಯ

ಪ್ರೀತಿಯ ವಿಷಯವಾಗಿದೆ.

ಇಂಥ ಒಂದು ಬೃಹತ್ ಯೋಜನೆಗೆ ಕಾದ್ಯಾಲಯವೊಂದು ಅತ್ಯವಶ್ಯ . ಕರ್ನಾಟಕ

ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಈ ಅವಕಾಶ ಕಲ್ಪಿಸಿಕೊಟ್ಟ ಕರ್ನಾಟಕ

ವಿಶ್ವವಿದ್ಯಾಲಯದ ಅಂದಿನ ಕುಲಪತಿ ಡಾ . ಜಿ . ಕೆ. ನಾರಾಯಣರೆಡ್ಡಿ , ಇಂದಿನ ಕುಲಪತಿ

ಡಾ . ಎಸ್ . ರಾಮೇಗೌಡ ಅವರ ಔದಾಲ್ಯವನ್ನು , ಪೀಠದ ಮುಖ್ಯಸ್ಥರ ಸಹಕಾರವನ್ನ

ಕೃತಜ್ಞತೆಯಿಂದ ನೆನೆಯುತ್ತೇವೆ.

- ಇದು ಒಂದು ದೊಡ್ಡಯೋಜನೆ. ಇದರ ಸಂಪಾದನೆಯ ಸಮಸ್ಯೆಗಳೂ ದೊಡ್ಡವು.


ಪಾಠಾಂತರ , ರೂಪಾಂತರ , ಪ್ರಕ್ಷಿಪ್ತತೆ ಇತ್ಯಾದಿಗಳ ದಾಳಿಗೆ ಗುರಿಯಾಗು

ವ್ಯಾಪಕ ಪ್ರಮಾಣದ ಈ ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸುವುದು , ಪುನರುಕ್ತಿಗಳ

ಗುರುತಿಸುವುದು , ಮುದ್ರಿಕೆ ಪಲ್ಲಟಗಳನ್ನು ಸರಿಪಡಿಸುವುದು , ಪ್ರಕ್ಷಿಪ್ತ

ದೂರೀಕರಿಸುವುದು , ಕೊನೆಯದಾಗಿ ವಚನಗಳನ್ನು ಶುದ್ದೀಕರಿಸುವುದು - ಎಂಥವರನ್

ಧೈಯ್ಯಗೆಡಿಸುವ ಕೆಲಸ. ಹೀಗಿದ್ದೂ ವಚನಸಾಹಿತ್ಯದ ಮೇಲಿನ ಗೌರವ , ಕೆಲಸದ ಮೇಲಿನ

ಪ್ರೀತಿಗಳು ನಮ್ಮಿಂದ ಈ ಕಾರ ಮಾಡಿಸಿವೆ. ನಮ್ಮ ಶಕ್ತಿಗೆ ಮೀರಿ ಉಳಿದಿರಬಹುದ

ದೋಷಗಳನ್ನು ಮನ್ನಿಸಬೇಕೆಂದುಕೋರುತ್ತ, ಎರಡು ವರ್ಷ ರಾತ್ರಿಯನ


ದುಡಿದು ರೂಪಿಸಿದ ಈ ಹದಿನೈದು ಸಂಪುಟಗಳನ್ನು ಸಹೃದಯಲೋಕಕ್ಕೆ ಅರ್

`ಶಿವಶರಣರ ಸಮಗ್ರ ವಚನಸಾಹಿತ್ಯ' ಸುಲಭ ಬೆಲೆಯಲ್ಲಿ ಕನ್ನಡಿಗರ ಮನೆ- ಮನಗಳನ

ಬೆಳಗಲೆಂದು ಹಾರೈಸುತ್ತೇವೆ.
ದ್ವಿತೀಯ ಆವೃತ್ತಿ

ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಸಂಪುಟಗಳು ೧೯೯೩ರಲ್ಲಿ ಪ್ರಕಟವಾಗಿ ,

ಒಂದು ವರ್ಷ ಕಳೆಯುವಷ್ಟರಲ್ಲಿ ಮಾರಾಟವಾದವು. ಕರ್ನಾಟಕ ಸರಕಾರದ ಗ್ರಂಥಪ

ಇತಿಹಾಸದಲ್ಲಿಯೇ ಈ ಬಗೆಯ ಮಾರಾಟ ಒಂದು ದಾಖಲೆ. ಜನತೆಯ ಅಪ

ಬೇಡಿಕೆಯನ್ನು ಗಮನಿಸಿ , ಈಗ ಪರಿಷ್ಕೃತ ದ್ವಿತೀಯ ಆವೃತ್ತಿಯನ್ನು ಪ್ರಕಟಿಸ

ಇತ್ತೀಚೆಗೆ ಲಭ್ಯವಾದ ಸುಮಾರು ಒಂದು ಸಾವಿರ ಹೊಸವಚನಗಳನ್ನು ಸೇರ

ಮೊದಲ ಆವೃತ್ತಿಯ ವಚನಪಾಠವನ್ನು ಮತ್ತೆ ಪರಿಷ್ಕರಿಸುವ ಮೂಲಕ ಮೊದಲಿನ ೧

ಸಂಪುಟಗಳನ್ನು ಸಮಗ್ರವಾಗಿ ಮತ್ತೆ ರೂಪಿಸಿದ್ದೇವೆ. ೧೫ನೆಯ ಸಂಪುಟ ( ಪರ

ವನ್ನು ಹೊಸದಾಗಿ ಸಿದ್ಧಪಡಿಸಿದ್ದೇವೆ. ಹೊಸ ವಿಚಾರ , ಶೋಧಗಳ ಬೆಳಕ

ಸಂಪಾದಕೀಯ, ಪ್ರಸ್ತಾಪವನೆಗಳನ್ನು ಸೂಕ್ತರೀತಿಯಲ್ಲಿ ಪರಿಷ್ಕರಿಸಿದ್ದ

- ಈ ಆವೃತ್ತಿ ಬೆಳಕು ಕಾಣಲು ವಿಶೇಷ ಆಸಕ್ತಿ ವಹಿಸಿದ ನಮ್ಮ ರಾಜ್ಯದ

ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಎಸ್. ಎಂ . ಕೃಷ್ಣ ಅವರಿಗೂ , ಕನ್ನಡ ಮತ್ತು ಸಂ


ಇಲಾಖೆಯ ಸಚಿವರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ಅವರಿಗೂ

ಋಣಿಯಾಗಿದ್ದೇವೆ. ಈ ಕೆಲಸ ನಿರ್ದಿಷ್ಟ ಕಾಲಾವಧಿಯಲ್ಲಿ ಪೂರ್ಣಗ

ನೋಡಿಕೊಂಡ ಕನ್ನಡ ಸಂಸ್ಕೃತಿ ನಿರ್ದೆಶನಾಲಯದ ನಿರ್ದೆಶಕರ


ಶ್ರೀ ಕೆ . ಸಿ . ರಾಮಮೂರ್ತಿ ಅವರಿಗೂ ಅವರ ಸಿಬ್ಬಂದಿ ವರ್ಗಕ್ಕೂ ,

ಮಾಡಿ ಸಂಪುಟಗಳ ಉತ್ತಮಿಕೆ ಕಾರಣರಾದ ಸಂಪಾದಕ ಮಂಡಲದ ಸದಸ್ಯರಿಗೂ

ಸಂಸ್ಕೃತ ಶ್ಲೋಕಗಳನ್ನು ಪರಿಷ್ಕರಿಸಿಕೊಟ್ಟ ಮೈಸೂರಿನ ಪೂಜ್ಯ ಶ್ರೀ ಇ


ಶಿವಬಸವಸ್ವಾಮಿಗಳು ಕುಂದೂರುಮಠ ಅವರಿಗೂ , ೧೫ನೆಯ ಪರಿಭಾಷಾ ಸಂಪುಟ

ಹೊಸದಾಗಿ ರೂಪಿಸಿಕೊಟ್ಟ ಡಾ . ಎನ್ . ಜಿ. ಮಹಾದೇವಪ್ಪ ಅವರಿಗೂ ನಮ

ವಂದನೆಗಳು ಸಲ್ಲುತ್ತವೆ. ಹತ್ತು ಸಾವಿರ ಪುಟಗಳ, ಹದಿನೈದು ಸಂಪುಟಗ

ಸುಲಭದ ಕೆಲಸವೇನಲ್ಲ . ಸಾಹಿತ್ಯದ ಮೇಲಿನ, ಅದರಲ್ಲಿಯೂ ವಚನಸಾಹಿತ್ಯದ ಮೇಲಿನ

ಪ್ರೀತಿ ಕಾರಣವಾಗಿ ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟಿಸಿದ ಅಧ್ಯಕ್ಷರಾ

ಪ್ರೊ . ಮಲ್ಲೇಪುರಂ ಜಿ . ವೆಂಕಟೇಶ ಅವರಿಗೆ ನಾವು ಋಣಿಯಾಗಿದ್ದೇವೆ.

ಮೊದಲ ಆವೃತ್ತಿಯಲ್ಲಿ ಉಳಿದುಕೊಂಡಿದ್ದ ಕೊರತೆ, ದೋಷಗಳನ್ನು ಕಷ

ಹುಡುಕಿ , ನಮಗೆ ಪೂರೈಸಿದ ತುಮಕೂರಿನ ಶ್ರೀ ಎಂ . ಚಂದ್ರಪ್ಪ ಅವರಿಗೂ , ಬೆಂಗಳೂರಿನ

ಶ್ರೀ ಎಸ್ . ಶಿವಣ್ಣ ಅವರಿಗೂ ನಾವು ಕೃತಜ್ಞರಾಗಿದ್ದೇವೆ.


ಪ್ರಸ್ತಾವನೆ

ಪೀಠಿಕೆ :

“ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ” ಯ ಐದನೆಯ

ಸಂಪುಟವಿದು. ಇದರಲ್ಲಿ ೩೫ ಜನ ಶಿವಶರಣೆಯರ ೧೩೫೧ ವಚನಗಳನ್ನು

ಸಂಗ್ರಹಿಸಲಾಗಿದೆ. ೧೨ನೆಯ ಶತಮಾನದಲ್ಲಿ ಒಮ್ಮೆಲೆ ಇಷ್ಟು ಜನ ಮಹಿಳೆಯ

ಸಾಹಿತ್ಯಕ್ಷಿತಿಜದ ಮೇಲೆಕಾಣಿಸಿಕೊಂಡುದು ಪರಮ ಆಶ್ಚರ್ಯ.

- ಈ ಪೂರ್ವದಲ್ಲಿ ಭಾರತೀಯ ನಾರಿಯ ಸ್ಥಿತಿ ತುಂಬ ಶೋಚನೀಯವೆನಿಸಿತ್ತ

ದ್ರಾವಿಡಸಂಸ್ಕೃತಿಯಲ್ಲಿ ಎಲ್ಲ ರೀತಿಯಿಂದಲೂ ಗೌರವದ ಸ್ಥಾನವನ್ನು

ಕುಟುಂಬದ ಸಮಗ್ರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸು

ಆರ್ಯಸಂಸ್ಕೃತಿಯ ದಾಳಿಯಿಂದ ಪಿತೃಪ್ರಧಾನ ಕುಟುಂಬ ಪದ್ದತಿಗೆ ಜಾ

ಪರಾಧೀನಳಾದಳು. ವೇದ-ಉಪನಿಷತ್ತುಗಳ ಕಾಲದಲ್ಲಿ ಗಾರ್ಗಿ , ಮೈತ್ರೇಯಿಯರಂಥ

ಕೆಲವರು ಆಧ್ಯಾತ್ಮವಿದ್ಯೆಯಲ್ಲಿ ಬಲ್ಲಿದರಾಗಿದ್ದು , ಪುರುಷಸಮಾನ ಅವಕಾಶ

ಪಡೆದುಕೊಂಡಿದ್ದರೆಂದು ತಿಳಿದುಬಂದರೂ ಮುಂದೆ ಧರ್ಮಶಾಸ್ತ್ರಗಳು ಹುಟ

ಏನೆಲ್ಲ ಕಟ್ಟುಪಾಡುಗಳು ನಿರ್ಮಿತವಾಗಿ, ಅವಳಿಗೆ ನಿಯಮ - ನಿರ್ಬಂಧಗಳ ಶೃಂಖಲೆ

ತೊಡಿಸಲಾಯಿತು. ಸ್ತ್ರೀಯುಮೋಕ್ಷಯೋಗ್ಯಳಲ್ಲವೆಂದು ಹೇಳುತ್ತ ಜೈನಧರ

ಹಾದಿಯಲ್ಲಿ ನಡೆಯಿತು. ಹೀಗೆ ಹೇಳುವ ಮೂಲಕ ಭಾರತಿಯರು ಹೆಣ್ಣಿನ ಆಧ್

ಸಾಮಾಜಿಕ- ಆರ್ಥಿಕ- ನೈತಿಕ- ಸಾಂಸ್ಕೃತಿಕ ಅವಕಾಶಗಳನ್ನೆಲ್ಲ ಕಿತ್ತುಕೊಂಡ

ಮತ್ತಷ್ಟು ಕನಿಷ್ಟಳನ್ನಾಗಿ ಮಾಡಿದರು. ಇಂಥ ಅಗೌರವ, ಅವಹೇಳನಗಳಿಗೆ ಗುರಿಯ

ಆಕೆ , ಈ ನಯವಂಚಕ ಸಮಾಜದಲ್ಲಿ ದನಿಯಿಲ್ಲದವಳಾಗಿ, ಅಬಲೆಯೆನಿಸಿ ಕೀಳರಿಮೆಯನ್ನು

ಮೈಗೂಡಿಸಿಕೊಂಡು, ಉಸುರುಗಟ್ಟುವ ವಾತಾವರಣದಲ್ಲಿ ಜೀವವಿದ್ದೂ ಶವವ

ಬದುಕತೊಡಗಿದ್ದಳು. ಈ ಸಂದರ್ಭದಲ್ಲಿ ಹುಟ್ಟಿ ಬಂದ ಶಿವಶರಣರು ಸ್ತ್ರೀಸಮ

ಸಾಮಾಜಿಕ ನ್ಯಾಯದ ಆಧಾರದ ಮೇಲೆಕಟ್ಟಲು ಹೆಣಗಿದರು.

ಶರಣರು ಕಟ್ಟಬಯಸಿದ ಸಮಾಜ :

ವೈದಿಕ ವರ್ಣಾಶ್ರಮವ್ಯವಸ್ಥೆ ಮತ್ತು ಪಿತೃಪ್ರಧಾನ ಕುಟುಂಬ

ಸಮಾಜದಲ್ಲಿ ಸ್ತ್ರೀಗೆ ಉಂಟಾಗಿದ್ದ ಅಸಮಾನತೆ , ಶೋಷಣೆಗಳನ್ನು ಕಂಡ ಶರಣರ

೧. ಈ ಮುಂದಿನ ಸಂಗತಿಗಳನ್ನು ಬರೆಯುವಲ್ಲಿ ಡಾ . ಎಂ . ಎಂ . ಕಲಬುರ್ಗಿ ಅವರ ಇದೇ


ಲೇಖನಕ್ಕೆ ವಿಶೇಷವಾಗಿ ಋಣಿಯಾಗಿದ್ದೇನೆ. (ನೋಡಿ ಮಾರ್ಗ - ಸಂ . ೧ ಪು. ೩೧೬ - ೩೨೫)
೨೨ ಶಿವಶರಣೆಯರ ವಚನಸಂಪುಟ

ಸ್ತ್ರೀ - ಪುರುಷ ಭೇದರಹಿತ ಉಭಯಪ್ರಧಾನ ಕುಟುಂಬಪದ್ದತಿಯನ್ನು ಅಸ್ತಿತ್ವಕ್ಕೆ ತ

ಪ್ರಯತ್ನಿಸಿದರು. ಪ್ರಾಪಂಚಿಕ ಮತ್ತು ಪಾರಮಾರ್ಥಿಕ ಎರಡು ನೆಲೆಗಳಲ್ಲಿಯೂ ಆಕೆ ಸಮ

ಅವಕಾಶಗಳೊಂದಿಗೆ ಬದುಕಲು ಅನುವುಮಾಡಿಕೊಟ್ಟರು. ಇದನ್ನು ಅವರ

ಘಟನೆಗಳೂ , ಬದುಕಿನ ಮೌಲ್ಯಗಳ ಅಭಿವ್ಯಕ್ತಿಯನ್ನೇ ಮುಖ್ಯ ಗುರಿಯನ್ನಾ

ವಚನಗಳೂ ನಿಚ್ಚಳವಾಗಿ ನಿರ್ವಚಿಸುತ್ತವೆ.

ಆತ್ಮಕ್ಕೆ ಲಿಂಗಭೇದವಿಲ್ಲ : ಇದು ಶರಣರು ಘೋಷಿಸಿದ ಸ್ತ್ರೀ ಸಮಾನ

ಮೊದಲ ಮಂತ್ರ . ದೈಹಿಕ ವ್ಯತ್ಯಾಸಗಳನ್ನು ಮುಂದೆಮಾಡಿಕೊಂಡು ಹೆಣ

ಭೇದವನ್ನು ಕಲ್ಪಿಸಿ, ಆತ್ಮದ ಅಭೇದತ್ವವನ್ನೇ ಪುರುಷ ಮರೆತಿದ್ದ . ಅಂತರಂಗ ಬಹಿರಂಗ

ಸಾಮರಸ್ಯಸಾಧಕರಾದ ಶರಣರು ಮುಖ್ಯವಾಗಿ ಅದನ್ನು ಗುರುತಿಸಿ , ಎತ್ತಿಹೇಳ

ಭೇದದ ಮೂಲಬೇರಿಗೇ ಕೊಡಲಿಯ ಪೆಟ್ಟು ಹಾಕಿದರು.

ಜೇಡರ ದಾಸಿಮಯ್ಯ

“ಮೊಲೆ ಮುಡಿ ಬಂದಡೆ ಹೆಣ್ಣೆಂಬರು

ಮೀಸೆ ಕಾಸೆ ಬಂದಡೆ ಗಂಡೆಂಬರು

ನಡುವೆ ಸುಳಿವ ಆತ್ಮನು |

ಹೆಣ್ಣೂ ಅಲ್ಲ , ಗಂಡೂ ಅಲ್ಲ ಕಾಣಾ ರಾಮನಾಥಾ ”

ಎಂದು ಸಾರುತ್ತಾನೆ. ಅಂಬಿಗರ ಚೌಡಯ್ಯ

“ ಶುಕ್ಲ ಶೋಣಿತ ಪಿಂಡೈಕ್ಯನ ಚಿತ್ರವಾಯು

ಆರುದಳದ ಪದ್ಮದಲ್ಲಿ ಹುದು.

ಮೊಲೆ ಮುಡಿ ಬಂದಡೆ ಹೆಣ್ಣೆಂಬರು

ಗಡ್ಡ ಮೀಸೆ ಬಂದಡೆ ಆ ಪಿಂಡವನು ಗಂಡೆಂಬರು

ನಡುವೆ ಸುಳಿವಾತ್ಮನು ಹೆಣ್ಣೂ ಅಲ್ಲ , ಗಂಡೂ ಅಲ್ಲ .

ಇದರಂತುವ ತಿಳಿದುನೋಡಿಹೆನೆಂದಡೆ

ಶ್ರುತಿಗಗೋಚರವೆಂದಾತನಂಬಿಗ ಚೌಡಯ್ಯ .”

ಎಂದು ದಾಸಿಮಯ್ಯನ ಅಭಿಪ್ರಾಯವನ್ನು ಸಮರ್ಥಿಸುತ್ತಾನೆ. ಚಂದಿಮರಸ

“ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ

ಆತ್ಮನೆಂದರಿಯಬಹುದಲ್ಲದೆ ಕಾಣಿಸಬಾರದು"

ಎಂದು ಒಡನುಡಿಯುತ್ತಾನೆ. ಗೊಗ್ಗವ್ವ ಜ್ಞಾನಕ್ಕೆ ಹೆಣ್ಣು ಗಂಡೆಂಬ ಭೇದ

“ಮೊಲೆ ಮುಡಿ ಬಂದಡೆ ಹೆಣ್ಣೆಂಬರು


ಪ್ರಸ್ತಾವನೆ

ಮೀಸೆ ಕಾಸೆ ಬಂದಡೆ ಗಂಡೆಂಬರು

ಈ ಉಭಯದ ಜ್ಞಾನ ಹೆಣ್ಣೂ ಗಂಡೊ ನಾಸ್ತಿನಾಧಾ ?

ಆಯ್ದಕ್ಕಿ ಲಕ್ಕಮ್ಮ

“ಕೂಟಕ್ಕೆ ಸತಿ- ಪತಿಯೆಂಬ ನಾಮವಲ್ಲದೆ

ಅರಿವಿಂಗೆ ಬೇರೊಂದೊಡಲುಂಟೆ ? ”

ಎಂದು ಸವಾಲು ಹಾಕುತ್ತಾಳೆ. ಸತ್ಯಕ್ಕೆ ಹಣ್ಣಿನಲ್ಲಿಯ ಮಧುರದಂತೆ, ಪು

ವಾಸನೆಯಂತೆ ದೇಹದಲ್ಲಿ ಅಡಗಿರುವ ಆತ್ಮನಿಗೆ ಗಂಡು- ಹೆಣ್ಣು ಎಂಬ ಭೇದ ಕಲ್ಪಿಸುವ

ಬಲ್ಲವರ ನೀತಿಯಲ್ಲ ಎಂದು ನುಡಿಯುತ್ತಾಳೆ :

“ ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ .

ಕಾಸೆ ಮೀಸೆ ಕಠಾರಿಯಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ .

ಅದು ಜಗದ ಹಾಹೆ ; ಬಲ್ಲವರ ನೀತಿಯಲ್ಲ .

ಏತರ ಹಣ್ಣಾದಡೂ ಮಧುರವೇ ಕಾರಣ,

ಅಂದವಿಲ್ಲದ ಕುಸುಮಕ್ಕೆ ವಾಸನೆಯೇ ಕಾರಣ

ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ.”

ಹೀಗೆ ಅವಿನಾಶಿಯಾದ ಆತ್ಮಕ್ಕೆ ಸ್ತ್ರೀ ಪುರುಷ ಎಂಬ ಭೇದವಿಲ್ಲ ಎಂದು ಹೇ

ಅದನ್ನು ಆಚರಣೆಯಲ್ಲಿ ತಂದು ತೋರಿದರು, ಶರಣರು.

ಹೆಣ್ಣು ಮಾಯೆಯಲ್ಲ : ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು , ಹೊನ್ನು,

ಇವು ಮೂರನ್ನು ಮಾಯೆಯೆಂದು ಪರಿಗಣಿಸಿ, ಅನರ್ಥಕ್ಕೆ ಈಡುಮಾಡ

ಮೋಕ್ಷ ಸಾಧನೆಗೆ ಅಡ್ಡಿಯೊಡ್ಡುವ ಇವುಗಳಿಂದ ಸಾಧಕ ದೂರವಿರಬೇಕೆಂದು ಬೋ

ಬರಲಾಗಿತ್ತು . ಇವುಗಳಲ್ಲಿ ಹೆಣ್ಣನ್ನು ಪ್ರಧಾನ ಮಾಯೆಯೆಂದು ಭಾವ

ತಾಯಾಗಿ, ಕೂಟಕ್ಕೆ ಸತಿಯಾಗಿ, ಮೋಹಕ್ಕೆ ಮಗಳಾಗಿ, ಯೋಗಿಗೆ ಯೋಗಿಣಿಯಾ

ಸವಣಂಗೆ ಕಂತಿಯಾಗಿ' ಪುರುಷನನ್ನು ಬಿಟ್ಟೆನೆಂದರೆ ಬಿಡದೆ ಬೆಂಬತ್ತಿ ಕಾಡ

ದುಷ್ಟಶಕ್ತಿಯೆಂದು ದೂರತಳ್ಳಲಾಗಿತ್ತು . ಇದರಿಂದಾಗಿ ಅವಳಿಗೆ ಪಾರಮಾರ್ಥವನ

ಚಿಂತಿಸಲು, ವಿರಕ್ತಿ ಅಥವಾ ನಿವೃತ್ತಿಮಾರ್ಗವನ್ನು ಅನುಸರಿಸಲು ಅವಕಾಶವೇ ಇ

ಮನುಷ್ಯಳನ್ನು ಮನುಷ್ಯಳನ್ನಾಗಿ ಕಾಣದ ಈ ವಿಷಮಸ್ಥಿತಿಯನ್ನು ಕಂಡ ಶರಣರು

ಎಂಬ ಪರಿಕಲ್ಪನೆಯ ಬಗೆಗಿದ್ದ ತಪ್ಪು ನಂಬಿಕೆಯನ್ನೇ ಹೊಡೆದು ಹಾಕಿ , ಹೆಣ್ಣನ್ನು


ಸೆರೆಯಿಂದು ಮುಕ್ತಗೊಳಿಸಿದರು.

“ ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ .

ಹೆಣ್ಣು ಮಾಯೆಯೆಂಬರು, ಹೆಣ್ಣುಮಾಯೆಯಲ್ಲ .


ಶಿವಶರಣೆಯರ ವಚನಸಂಪುಟ

ಮಣ್ಣು ಮಾಯೆಯೆಂಬರು, ಮಣ್ಣುಮಾಯೆಯಲ್ಲ .

ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ.”

ಎಂದು ಅಲ್ಲಮಪ್ರಭು ಹೇಳಿದರೆ,

“ಇಲ್ಲದ ಮಾಯೆಯನುಂಟುಮಾಡಿಕೊಂಡು

ಬಲ್ಲತನಕ್ಕೆ ಬಾಯಿಬಿಡಲೇಕೊ ? ”

ಎಂದು ಚೆನ್ನಬಸವಣ್ಣ ಕೇಳುತ್ತಾನೆ. ಕೇವಲ ಹೆಣ್ಣು - ಹೊನ್ನು ಮಣ್ಣುಗಳು

ಮಾಯೆಯಲ್ಲ ; ಈ ಮಾಯೆ ಇನ್ನೂ ಅನೇಕ ರೂಪದಲ್ಲಿ ತೋರುತ್ತದೆ. ಅದು ಮನ

ಮುಂದಣ ಆಸೆಯಲ್ಲದೆ ಮತ್ತೊಂದಲ್ಲ . ಆ ಆಸೆ ಇಲ್ಲವಾದಾಗ ಮಾಯೆಯೆಂಬು

ಇಲ್ಲದಾಗುತ್ತದೆ. ಅರಿದೆ- ಅರಿಯೆನೆಂಬ ದ್ವಂದ್ವವ ಮೀರಿದ ಶರಣಂಗೆ ಮಾಯೆ

ಅಭಿಮಾನ ಇವಾವೂ ಇಲ್ಲ ಎಂದು ಸಾರಿ , ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ತಪ್ಪು

ತೊಡೆದುಹಾಕಿ, ಅವಳೂ ಪುರುಷನಂತೆ ಒಂದು ಜೀವ ಎಂಬ ಹಿತಕರ ವಾತಾವರಣವನ್

ಮೂಡಿಸಿದರು.

ಹೆಣ್ಣು ಅಸ್ಪೃಶ್ಯಳಲ್ಲ : ಹೆಣ್ಣಿನ ನೈಸರ್ಗಿಕ ಕ್ರಿಯೆಯಾದ ಋತ

( ಮುಟ್ಟಾಗುವಿಕೆ ) ವನ್ನು ಅಪವಿತ್ರವೆಂದು ಕಲ್ಪಿಸಿ, ಅವಳನ್ನು

ಶೂದ್ರರ ಸಾಲಿಗೆ ಸೇರಿಸಲಾಗಿತ್ತು . ಅದರಿಂದ ವೇದಾಧ್ಯಯನ, ಮಂತ್ರಪಠಣ

ಮತ್ತು ಉನ್ನತ ಧಾರ್ಮಿಕ ಕಾರಗಳನ್ನು ಮಾಡುವುದರಿಂದ ಅವ

ಹೆಣ್ಣಿನ ಈ ದಯನೀಯ ಸ್ಥಿತಿಯನ್ನು ಕಂಡ ಶರಣರು “ಹೊಲೆಗಂಡಲ್ಲದೆ ಪಿಂ

ನೆಲೆಗಾಶ್ರಯವಿಲ್ಲ ” “ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ? ” “ಸತಿ ಭಕ್ತಿಯಾದರೆ

ಗಂಜಲಾಗದು” “ ಮನದ ಸೂತಕ ಹಿಂಗಿದಡೆ ತನುವಿನ ಸೂತಕಕ್ಕೆ ತೆರಹುಂಟೆ ? ” ಎಂದ

ಹೇಳಿ ಅವಳನ್ನು ಸೂತಕದ ಪಾತಕದಿಂದ ಬಿಡುಗಡೆಮಾಡಿದರು. ಭಕ್ತಿಯಾದ ಬಳಿ

ಭವಿತನವಿಲ್ಲ . ಆಕೆ ಮಾಡಿದ ಅಡುಗೆ ಶುದ್ದ - ಪವಿತ್ರಪಾಕ ಎಂದು ತಿಳಿಸುವುದರ ಮೂಲ

ಮುಟ್ಟಾದ ಸ್ತ್ರೀ ಮಾಡಿದ ಅಡುಗೆ ಅಪವಿತ್ರ , ಅದನ್ನು ಗುರುವಿಗೆ ಬಡಿಸಲಾಗದು

ನಂಬಿದ್ದ ಅನಿಷ್ಟ ರೂಢಿಯನ್ನು ತಳ್ಳಿಹಾಕಿದರು. ಇದನ್ನು ಚೆನ್ನಬಸವಣ್ಣನವರ

ವಚನ ಸ್ಪಷ್ಟವಾಗಿ ಸೂಚಿಸುತ್ತದೆ :

“ ಭವಿಯ ಮನೆಯಲ್ಲಿ ಭವಿಪಾಕವಲ್ಲದೆ

ಭಕ್ತನ ಮನೆಯಲ್ಲಿ ಭವಿಪಾಕವಿಲ್ಲವಯ್ಯ .

ಆ ಭಕ್ತನಸ್ತ್ರೀಯು ಲಿಂಗಮುಂತಾಗಿ ಗುರುಲಿಂಗಜಂಗಮಕ್ಕೆ ಬೇಕೆಂ

ಭಕ್ತಿರತಿಯಿಂದ, ಲಿಂಗಹಸ್ತದಿಂದ ಮಾಡಿದ ದ್ರವ್ಯ ಸಕಲಪದಾರ್ಥಂಗ

ಶುದ್ಧಪಾಕ, ಅತ್ಯಂತ ಪವಿತ್ರಪಾಕವು.

ಅದು ಲಿಂಗಕ್ಕೆ ಸಲ್ಲುವುದು ; ಅದನತಿಗಳೆದಡೆದ್ರೋಹವಯ್ಯ .


೨೫
ಪ್ರಸ್ತಾವನೆ

ಆ ಭಕ್ತಿಪದಾರ್ಥವನು ಲಿಂಗಕ್ಕೆ ಕೊಟ್ಟು ಕೊಳಬೇಕಯ್ಯ

ಕೂಡಲಚೆನ್ನಸಂಗಮದೇವಾ.”

ಇದರಿಂದ ಸ್ತ್ರೀಯು ಎಲ್ಲ ಕಾರಗಳಲ್ಲಿ ಸಮಭಾಗಿತ್ವವನ್ನು ಪಡೆದುಕೊಂಡು

ಮುಕ್ತವಾಗಿ ಬದುಕಲು ಸಾಧ್ಯವಾಯಿತು.

ಹೆಣ್ಣು ಪ್ರತ್ಯಕ್ಷದೇವತೆ : ಹೆಣ್ಣನ್ನು ಮಾಯಾಸೆರೆಯಿಂದ ಮತ್ತು

ಸಂಕೋಲೆಯಿಂದ ಬಿಡಿಸಿದ ಶರಣರು 'ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯ

ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ' ಎಂದು ಅವಳಲ್ಲಿ ದೇವತ್ವವನ್ನು ಕಂಡರು; ಅವ

ದೇವತ್ವಕ್ಕೇರಲು ಅವಕಾಶವನ್ನು ಮಾಡಿಕೊಟ್ಟರು. ವೈದಿಕಸಂಸ್ಕೃತಿಯಲ್ಲಿ ಹೆಣ್ಣಿಗೆ

ಧಾರ್ಮಿಕಸ್ವಾತಂತ್ರ್ಯವಿಲ್ಲ , ಅವಳು ಪಾರಮಾರ್ಥವನ್ನು ಕುರಿತು ಚಿಂತಿ

ಹೀಗಾಗಿ ಅವಳು ಅವುಗಳನ್ನು ಕುರಿತು ವಿಚಾರಿಸದೆ, ಒಂದು ವೇಳೆ ವಿಚಾರಿಸಿದರೂ

ತನಗೆ ನಿಲುಕದ ಗಗನಕುಸುಮಗಳೆಂದು ಭಾವಿಸಿ, ಆತ್ರೋದ್ದಾರದ ಹಂಬಲವಿಲ್ಲದ

ಬದುಕವಂತಾಗಿತ್ತು . ಇಂಥ ವಾತಾವರಣದಲ್ಲಿ ಆತ್ಮದ ಏಕತೆಯನ್ನು

ಶರಣರು, ಆ ಆತ್ಮ ದೇವನಾಗುವಲ್ಲಿ ಸ್ತ್ರೀ ಪುರುಷನೆಂಬ ತೋರಿಕೆಯ ಭೇದಗಳು

ಅಡ್ಡಿಯಾಗಲಾರವು; ಅಡ್ಡಿಯಾಗಬಾರದು ಎಂದು ಹೇಳಿ ಆತ್ರೋದ್ದಾರದ

ಬಾಗಿಲಮುದ್ರೆಯನ್ನೊಡೆದು ಹೆಣ್ಣಿಗೆ ಅರಿವಿನಜ್ಯೋತಿರ್ಲಿಂಗದ ದರ್ಶನ ಮಾಡಿಸಿದರು. ಆ

ಬೆಳಕಿನಲ್ಲಿ ಅವಳು ಮುನ್ನಡೆದು ತನ್ನ ಗುರಿಯನ್ನು ಮುಟ್ಟಲು ಪ್ರಯತ್ನಿಸಿದಳು. ಗುರು

ದೀಕ್ಷೆ , ಲಿಂಗಪೂಜೆ, ಪಂಚಾಕ್ಷರಪಠಣ, ಜಂಗಮದಾಸೋಹ, ಅಷ್ಟಾವರ

ಪಂಚಾಚಾರಪಾಲನೆ, ಷಟ್‌ಸ್ಥಲಸಾಧನೆ, ಶಿವಯೋಗಸಿದ್ಧಿಗಳಿಂದ ಆಧ್ಯಾತ್ಮ , ಅನುಭ

ತುಟ್ಟತುದಿಯನ್ನೇರಿ ನಿಂತಳು. ಇದಕ್ಕೆ ಶಿವಶರಣೆಯರು ವ್ಯಕ್ತಪಡಿಸಿದ ಈ ಅಭಿಪ್ರ

ಪ್ರತ್ಯಕ್ಷ ನಿದರ್ಶನವೆನಿಸಿವೆ :

“ಕನಿಷ್ಟದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ,

ಸತ್ಯ ಶರಣರ ಪಾದವಿಡಿದೆ,

ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ,

ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ.

ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಿತ್ತು ,

ಕಂಗಳ ಮುಂದಣಕಲೆ ಹರಿಯಲೊಡನೆ

ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ”

- ಹಡಪದ ಲಿಂಗಮ್ಮ
ಶಿವಶರಣೆಯರ ವಚನಸಂಪುಟ

“ನಿಜದ ನಿರ್ವಯಲ ಬಾಗಿಲ ತೋರಿದಾತ ಬಸವಣ್ಣ ' - ಅಕ್ಕನಾಗಮ್ಮ

“ಆನು ಅನುಭವಶೀಲವನರಿದು ಮುಕ್ಯಾಂಗನೆಯಾದೆನಯ್ಯ ಬಸವಾ”

- - ನೀಲಮ್ಮ

“ ಪರಶಿವಮೂರ್ತಿ ಸಿದ್ದರಾಮಯ್ಯನ ಪಾದೋದಕವ ಕೊಂಡು ಪರವ

ನಾನಾದೆ” - ಗಂಗಾಬಿಕೆ

ಪರಸ್ತ್ರೀ ಪಾರ್ವತಿಯ ಸಮಾನ : ಆಚಾರಪ್ರಧಾನವಾದ ಶರಣಧರ್ಮದಲ್

ನಡವಳಿಕೆಗೆ ಪ್ರಥಮ ಪ್ರಾಶಸ್ಯ , ಶೀಲ, ಚಾರಿತ್ರ ವ್ಯಕ್ತಿಯ ಜೀವರತ್ನಗಳಿದ್ದಂತೆ ಎಂದು

ನಂಬಿ, ನೀತಿಯ ನೆಲೆಗಟ್ಟಿನಮೇಲೆ ಸುಂದರ ಸಮಾಜಸೌಧ ನಿರ್ಮಿಸಲು ಉದ್ದೇ

ಶರಣರು, ಅದನ್ನು ತಮ್ಮ ಜೀವನದ ಪ್ರಮುಖ ಮೌಲ್ಯವನ್ನಾಗಿ ಸ್ವೀಕರಿಸಿದರು.

ನೀತಿಸಂಹಿತೆಯಲ್ಲಿ ಪುರುಷರುಸ್ತ್ರೀಯರನ್ನು ಕಾಣಬೇಕಾದರೀತಿ ವಿಶಿಷ್ಟವ

ಪುರುಷಪ್ರಧಾನವಾದ ಸಮಾಜವ್ಯವಸ್ಥೆಯಲ್ಲಿ ಅಬಲೆ ಎನಿಸಿದ್ದ ಸ್ತ್ರೀ ಅವ

ಅನೇಕ ತೊಂದರೆಗಳನ್ನು ಅನುಭವಿಸುತ್ತ ನಡೆದಿದ್ದಳು. ಹೆಣ್ಣನ್ನು ಕೇವಲ ಭೋ

ಎಂದು ಭಾವಿಸಿದ್ದ ಪುರುಷ ಅವಳ ಮೇಲೆ ತನ್ನ ಕಾಕದೃಷ್ಟಿ ಬೀರುತ್ತ , ದೌರ

ತೋರುತ್ತ , ಸಮಯ ಬಂದಾಗ ಶೀಲಹರಣಕ್ಕೂ ಮುಂದಾಗುತ್ತ ನಡ

ಅಸಹಾಯಕಳಾದ ಅವಳು ಅವನ ಕಾಮಪಿಪಾಸೆಗೆ ಬಲಿಯಾಗಿ ತನ್ನ ಜೀವರತ್ನವೆನಿಸ

ಶೀಲವನ್ನು ಕಳೆದುಕೊಂಡು ಸಮಾಜದ ನಿಂದೆಗೆ ಗುರಿಯಾಗಿ , ಜೀವನವಿಡೀ

ಕೊರಗಬೇಕಾಗಿತ್ತು . ಇದನ್ನು ಕಂಡ ಶರಣರುಸ್ತ್ರೀಯರ ಬಗೆಗಿದ್ದ ಪುರುಷನ ದೋಷಪೂರ

ದೃಷ್ಟಿಯನ್ನು ಬದಲಿಸಲು ಪ್ರಯತ್ನಿಸಿದರು. ಮೊದಲು ಅವರು ನಯವಾದ ಮಾತುಗಳ

ಎಚ್ಚರಿಸುತ್ತಾರೆ :

“ ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ ”

“ ಪರಸ್ತ್ರೀ ಪರಧನವೆಂಬ ಜೂಬಿಂಗಂಜುವೆ "

“ತುಡುಗುಣಿತನದಲ್ಲಿ ಪರವಧುವ ನೋಡುವ ಸರಸ ಬೇಡ ಕಾಣಿರಣ್ಣಾ ? ”

“ನೋಡಲಾಗದು ನುಡಿಸಲಾಗದು ಪರಸತಿಯ ;

ತಗರ ಬೆನ್ನಿಲಿ ಹರಿವಸೊಣಗನಂತೆ ಬೇಡಕಾಣಿರೊ .

ಒಂದಾಸೆಗೆ ಸಾಸಿರ ವರುಷ ನರಕದಲ್ಲಿಕ್ಕುವಕೂಡಲಸಂಗಮದೇವಯ್ಯ ”

- - ಬಸವಣ್ಣ

“ ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೇ ನೇಮ ” - ಸತ್ಯಕ್ಕೆ

“ ಪರಸ್ತ್ರೀಯರಕೂಡದಿಪ್ಪುದೇ ಶೀಲ” - ಶಿವಲೆಂಕ ಮಂಚಣ್ಣ


ಪ್ರಸ್ತಾವನೆ

“ ಅಂಗನೆಯರ ಸಂಗವ ತೊರೆದಡೆಶೀಲವಂತ ” - - ಸಕಲೇಶ ಮಾದರಸ

“ಶಿವಲಿಂಗ ನೋಡುವ ಕಣ್ಣಿನಲ್ಲಿ ಪರಸ್ತ್ರೀಯ ನೋಡಿದರೆ ಅಲ್ಲಿ ಲಿಂಗವಿಲ್ಲ ”

- ಚೆನ್ನಬಸವಣ್ಣ

“ ಪರಧನ ಪರಸ್ತ್ರೀಯ ವಿಸರ್ಜಿಸಿ ಪೂಜಿಸು ಪರಶಿವನ ” - ಸಿದ್ದರಾಮ .

“ ಹೆಣ್ಣ ಕಂಡು ಹೆಚ್ಚಿ ಹೊಕ್ಕಳಬಡುವಂತೆ

ಕಣ್ಣಿಟ್ಟುನೋಡಿರೋ ಶಿವಲಿಂಗದೇವನ ”

“ಒಡೆಯರು ತಮ್ಮ ಮನೆಗೆ ಒಡಗೊಂಡುಹೋದರೆ

ತುಡುಗುಣಿತನದಲ್ಲಿ ಪರವಧುವನೋಡುವ ಸರಸಬೇಡ ಕಾಣಿರಣ್ಣಾ ”

- ಜೇಡರ ದಾಸಿಮಯ್ಯ

ಎರಡನೆಯ ಹಂತದಲ್ಲಿ ಪರಸ್ತ್ರೀಯರಲ್ಲಿ ಮಾತೃಸ್ವರೂಪವನ್ನು ಕಾಣಬೇಕೆನ್ನುತ್

“ ಗಂಡನುಳ್ಳ ಹೆಂಡಿರ ಕಂಡು ಅಳುಪದಿರಾ ಮನವೆ.

ಬಂದ ಬಸಿರ, ಉಂಡ ಮೊಲೆಯ ಕಂಡು ಮರುಗದಿರಾ ಮನವೆ ”

- ಸೊಡ್ಡಳ ಬಾಚರಸ

“ ಮೊಲೆಯುಂಬ ಭಾವ ತಪ್ಪಿ ಅಪ್ಪಿದರೆ

ತಲೆಯ ಕೊಂಬ ನಮ್ಮ ಕೂಡಲಸಂಗಮದೇವ" - ಬಸವಣ್ಣ

ಮೂರನೆಯ ಹಂತದಲ್ಲಿ ಅವಳನ್ನು ಪಾರ್ವತಿಯ ಸಮಾನವೆಂದು

ತಿಳಿಸುತ್ತಾರೆ :

“ ಮುನ್ನ ಪರಸತಿ ಪಾರ್ವತಿಯೊಂದು ನಡೆಸಿತ್ತು ನುಡಿಸಿತ್ತು ಗುರುವಚ

- ಜೋದರ ಮಾಯಣ್ಣ

“ ಪರವಧುವನು ಮಹಾದೇವಿಯೆಂದು ಕಾಂಬೆನು”

“ ಅನ್ಯವಧುವೆಂಬುದು ನಿಮ್ಮ ರಾಣೀವಾಸ ” - ಬಸವಣ್ಣ

“ ಗಂಡನುಳ್ಳಮ್ಮನ ಗೌರಿಯೆಂದು ಕಂಡರೆ |

ಭೂಮಂಡಲಕ್ಕೆ ಅರಸಾಗಿ ಪುಟ್ಟುವನಾತ ”

“ಶಿವಭಕ್ತರು ತಮ್ಮ ನಿಜಕೈಲಾಸಕ್ಕೆ ಹೋದಡೆ

ಅವರರಸಿಯರ ಪಾರ್ವತಿಯ ಸರಿಯೆಂದು ಕಾಣಬೇಕು”

- ಜೇಡರ ದಾಸಿಮಯ್ಯ
ಶಿವಶರಣೆಯರ ವಚನಸಂಪುಟ

“ ಲಿಂಗವಂತರು ತಾವಾದ ಬಳಿಕ ಅಂಗನೆಯರ ನಡೆನುಡಿಗೊಮ್ಮೆ

ಲಿಂಗದ ರಾಣಿಯರೆಂದು ಭಾವಿಸಬೇಕು”


- ಚೆನ್ನಬಸವಣ್ಣ

ಕೊನೆಯ ಹಂತದಲ್ಲಿ ಕಟುನುಡಿಗಳಿಂದ ನಿಂದಿಸಿ ಋಜುಮಾರ್ಗ

ಪ್ರಯತ್ನಿಸುತ್ತಾರೆ :

“ ಅಡಗ ತಿಂಬರು ಕಣಕದಡಿಗೆ ಇರಲಿಕೆ

ಸುರೆಯ ಕುಡಿವರು ಹಾಲಿರಲಿಕೆ

ಮುಕ್ಕುವರು ಭಂಗಿಯ ಸಕ್ಕರೆಯಿರಲಿಕೆ

ಸ್ವಸೀಯಿರಿ ಪರಸ್ತ್ರೀಗಳುಪುವರು

ಸತ್ತನಾಯ ಭಕ್ಷಿಸುವ ಹಡಕಿಗರನೇನೆಂಬೆನಯ್ಯ ರಾಮನಾಥಾ ? ”

- ಜೇಡರ ದಾಸಿಮಯ್ಯ

“ ಆತನ ಇದಿರಿನಲ್ಲಿ ಆತನ ಸತಿಯ ' ಅಪ್ಪಾ ' ಎಂದು

ಆತ ಸಂದಲ್ಲಿ ಸತಿ ಎಂಬ ಭಂಡರಿಗೇಕೆ ವ್ರತನೇಮ ನಿತ್ಯ ” - ಅಕ್ಕಮ್

ಹೀಗೆ ' ಪರಸತಿ ತಾಯಿಗೆಸಮಾನವೆಂದು ಭಾವಿಸಿ ಅವಳಲ್ಲಿ ಮಾತೃತ್ವವನ್ನಷ್ಟೇ

ಪಾರ್ವತಿಗೆ ಸಮಾನವೆಂದು ಭಾವಿಸಿ ಅವಳಲ್ಲಿ ದೈವತ್ವವನ್ನೂ ಕಾಣಬೇಕ

ಭಾವನೆಯನ್ನು ತುಂಬಿ ನಾರೀಗೌರವವನ್ನು ಎತ್ತಿಹಿಡಿದರು .

ಶರಣರ ನೀತಿಸಂಹಿತೆ ಕೇವಲ ಪುರುಷರಿಗೆ ಮಾತ್ರ ಸೀಮಿತವಾದುದಲ್ಲ .

ಸ್ತ್ರೀಯರನ್ನೂ ಒಳಗೊಳ್ಳುತ್ತದೆ. ನೈತಿಕ ಜವಾಬ್ದಾರಿ ಸಮಾಜದ ಮುಖ್ಯ

ಸ್ತ್ರೀ - ಪುರುಷರಿಬ್ಬರಿಗೂ ಸಮಾನವಾದುದೆಂದರಿತ ಶರಣರು ಇಬ್ಬರಲ್ಲಿಯೂ ಸದಾಚಾ

ಸದ್ಗುಣಗಳು ಅಳವಡಬೇಕೆಂದು ಬಯಸಿದರು. ಅದರಿಂದಾಗಿ ಪುರುಷರಂತೆ ಸ್ತ್

ನಡವಳಿಕೆಗಳನ್ನು ನೇರಗೊಳಿಸುವ ನೀತಿಯ ನುಡಿಗಳೂ ಮೂಡಿಬಂದವು.

' ನಾರಿಗೆ ಗುಣವೆ ಶೃಂಗಾರ' ' ಪರಮ ಪತಿವ್ರತೆಗೆ ಗಂಡನೊಬ್ಬ ಕಾಣಿರೊ ' ' ಗಂಡನ

ಮೇಲೆಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಟೆಯಿಲ್ಲದ ಭಕ್ತ , ಇದ್ದರೇನೋ ಶ

ಶಿವಾ ಹೋದರೇನೊ ? ' ' ಅರಸನ ಕಂಡು ತನ್ನ ಪುರುಷನ ಮರೆದರೆ ಮರನೇರಿ

ಕೈಬಿಟ್ಟಂತಾಯಿತ್ತು' ' ಗಂಡನ ಸಂಗವಲ್ಲದೆ ಬೊಜಗರ ಸಂಗವ ಮಾಡುವ

ತೊತ್ತಿಗೆಲ್ಲಿಯದೊ ನಿಜ ಮುತೈದೆತನ' ಎಂಬ ಮಾತುಗಳಲ್ಲಿ ಬಸವಣ್ಣನವರು ಮತ

ಅಂಬಿಗರ ಚೌಡಯ್ಯ ಹೆಣ್ಣಿಗೆ ಬಹಿರಂಗದ ಅಂಗಶೃಂಗಾರಕ್ಕಿಂತ ಅಂತರಂಗದ ಆತ್ಮ

ಶ್ರೇಷ್ಟ, ಹೆಂಡತಿಗೆ ಗಂಡನ ಮೇಲಿನ ಸ್ನೇಹ, ನಿಷ್ಠೆ , ಪಾತಿವ್ರತ್ಯ ಮುಖ್ಯ ಎಂ

ಹೇಳುವುದರ ಜೊತೆಗೆ ಇದಕ್ಕೆ ವ್ಯತಿರಿಕ್ತವಾದ ವರ್ತನೆ ಹಾನಿಕರ ಎಂದೂ


ಕೊಡುತ್ತಾರೆ.
ಪ್ರಸ್ತಾವನೆ

ದಾಂಪತ್ಯಧರ್ಮ ಶ್ರೇಷ್ಠವಾದುದು : ಶರಣಧರ್ಮದಲ್ಲಿ ಸಂಸಾರ ತ್ಯಾ

ಸನ್ಯಾಸಶ್ರೇಷ್ಠವಲ್ಲ . ನೈಸರ್ಗಿಕವಾದ ಇಂದ್ರಿಯಸುಖವನ್ನು ಸಾತ್ವಿಕವಾಗಿ ಅನುಭವಿ

ಪರಿಪೂರ್ಣ ಬದುಕಿನ ಲಕ್ಷಣ. ಅದು ವ್ಯಕ್ತಿಯ ಸಾಧನೆ - ಸಿದ್ಧಿಗಳಿಗೆ ಆತಂಕಕಾರಿ

ಪ್ರತಿಯಾಗಿ ಅವುಗಳಿಗೆ ಪ್ರೇರಕ, ಪೂರಕ. ಈ ಕಾರಣದಿಂದ ದಾಂಪತ್ಯ ಧರ್ಮವ

ಶ್ರೇಷ್ಠವೆಂದು ಸಾರಿದ ಶರಣರು ತಾವು ಸಂಸಾರಿಗಳಾಗಿ ಆದರ್ಶ ದಾಂಪತ್ಯ ಜೀವನ

ಸತಿಪತಿಗಳಿಬ್ಬರೂ ಸಿದ್ದಿಯ ಶಿಖರವನ್ನೇರಿ ನಿಂತರು.

“ ಇಂದ್ರಿಯ ನಿಗ್ರಹವ ಮಾಡಿದರೆ ಬಂದು ಕಾಡುವವುದೋಷಂಗಳು,

ಮುಂದೆ ಬಂದು ಕಾಡುವವು ಪಂಚೇಂದ್ರಿಯಗಳು.

ಸತಿಪತಿ- ರತಿಸುಖವ ಬಿಟ್ಟರೆ ಸಿರಿಯಾಳ ಚೆಂಗಳೆಯರು ?

ಸತಿಪತಿ ರತಿಭೋಗೋಪಭೋಗವಿಳಾಸವ ಬಿಟ್ಟನೆ ಸಿಂಧುಬಲ್ಲಾಳ ? ”

ಎಂದು ಬಸವಣ್ಣನವರು ಇಂದ್ರಿಯನಿಗ್ರಹವನ್ನು ನಿರಾಕರಿಸಿ, ಕೌಟುಂಬಿಕ ಜೀವನವನ್ನು

ಪುರಸ್ಕರಿಸಿದರೆ, ಸಿದ್ಧರಾಮ -

“ ಭಕ್ತನ ಮನ ಹೆಣ್ಣಿನೊಳಗಾದರೆ , ವಿವಾಹವಾಗಿ ಕೂಡುವದು.

ಭಕ್ತನ ಮನ ಮಣ್ಣಿನೊಳಗಾದರೆ , ಕೊಂಡು ಆಲಯವ ಮಾಡುವದು.

ಭಕ್ತನ ಮನ ಹೊನ್ನಿನೊಳಗಾದರೆ, ಬಳಲಿ ದೊರಕಿಸುವದು ನೋಡಾ”

ಎಂದು ಸಲಹೆಯನ್ನೀಯುವ ಮೂಲಕ , ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ -

“ ಹೆಣ್ಣಬಿಟ್ಟು ಲಿಂಗವನೊಲಿಸಬೇಕೆಂಬರು,

ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವ ? ”

ಎಂದು ಪ್ರಶ್ನೆ ಕೇಳುವುದರ ಮೂಲಕ ದಾಂಪತ್ಯ ಜೀವನಕ್ಕೆ ಮುಕ್ತದ್ವಾರವ

ತೆರೆದಿಡುತ್ತಾರೆ.

ದಾಂಪತ್ಯ ಜೀವನ ಸತ್ಯಶುದ್ಧವಾಗಿರಬೇಕು. ಸತಿಪತಿಗಳ ಅಂತರಂಗ ಬಹಿ

ಏಕವಾಗಿ ಅವರ ಆಚಾರ ವಿಚಾರಗಳಲ್ಲಿ ತಾದಾತ್ಮ ತೋರಬೇಕು. ಹಾಗಿದ್ದರೆ ಮಾತ್

ಕೌಟುಂಬಿಕ ನೆಮ್ಮದಿ ಸಾಧ್ಯ . ವಿಷಮದಾಂಪತ್ಯ ಅಮೃತದಲ್ಲಿ ವಿಷಬೆರೆಸಿದಂತೆ

ಧರ್ಮಾಚರಣೆ, ಭಿನ್ನಭಕ್ತಿ ಸಲ್ಲವು. ' ದಂಪತಿ ಏಕಭಾವ' ಮತ್ತು 'ಸತಿಪತಿಗಳೊ

ಮಾತ್ರ ಶಿವನಿಗೆ ಹಿತವೆನಿಸುತ್ತವೆ ಎಂದು ಹೇಳುವುದರ ಮೂಲಕ ಶರಣರು ಸುಖಿ

ದಾಂಪತ್ಯಕ್ಕೆ ಕರೆಕೊಟ್ಟರು.

“ ಗಂಡ ಶಿವಲಿಂಗದೇವರ ಭಕ್ತ , ಹೆಂಡತಿ ಮಾರಿಮಸಣೆಯ ಭಕ್ತಿ ,

ಗಂಡ ಕೊಂಬುದು ಪಾದೋದಕ ಪ್ರಸಾದ


ಶಿವಶರಣೆಯರ ವಚನಸಂಪುಟ

ಹೆಂಡತಿ ಕೊಂಬುದು ಸುರೆ ಮಾಂಸ,

ಭಾಂಡ ಭಾಜನ ಶುದ್ಧವಿಲ್ಲದವರ ಭಕ್ತಿ ಸಾರು

ಹೆಂಡದ ಮಡಕೆಯ ಹೊರಗೆ ತೊಳೆದಂತೆಕೂಡಲಸಂಗಮದೇವಾ”

ಬಸವಣ್ಣನವರ ಈ ವಚನ ಭಿನ್ನ ದೈವಾರಾಧನೆ ಮತ್ತು ಆಚರಣೆಯಲ್ಲಿ ತೊಡಗ

ಪತಿಗಳ ವಿಷಮಭಕ್ತಿಯನ್ನೂ ಹಾಗೂ ಅದರ ವಿಪತ್ಯಾಸವನ್ನೂ ಎತ್ತಿ ಹೇಳಿದರೆ ,

“ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ”

“ ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ

ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ ”

“ಉಭಯ ದೃಷ್ಟಿ ಏಕದೃಷ್ಟಿಯಲ್ಲಿ ಕಾಂಬಂತೆ

ದಂಪತಿ ಏಕಭಾವವಾಗಿ ನಿಂದಲ್ಲಿ

ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು.”

ಎಂಬ ಜೇಡರದಾಸಿಮಯ್ಯ , ಅಂಬಿಗರ ಚೌಡಯ್ಯ ಮತ್ತು ಪ್ರಭುದೇ

ದಂಪತಿ ಏಕಭಕ್ತಿಯ ಪರಿಣಾಮವನ್ನು ತಿಳಿಸುತ್ತವೆ.

ಶರಣರ ದಾಂಪತ್ಯ ಕೇವಲ ಲೌಕಿಕ ಮಟ್ಟದಲ್ಲಿ ಮಾತ್ರ ನಿಲ್ಲದೆ ಅದು ಆಧ

ಹಂತಕ್ಕೂ ಏರಿ ನಡೆಯುತ್ತದೆ. ಶರಣ ದಂಪತಿಗಳು ಸಾಮಾನ್ಯರಂತೆ ರತಿಸುಖ

ಅನುಭವಿಸುವುದು ಮೊದಲ ಹಂತ. ಅವರು ಅಂಗಭಾವವಳಿದು ಲಿಂಗಭಾವದಿಂ

ಇಂದ್ರಿಯಗಳ ಸುಖವನ್ನು ಅನುಭವಿಸುವುದು ದ್ವೀತಿಯ ಹಂತ. ಈಗಿನದು ದೈವೀದಾ

ಇಲ್ಲಿ ಹೆಣ್ಣು - ಗಂಡು, ಮೇಲು-ಕೀಳುಗಳೆಂಬ ಭೇದ ಉಳಿಯುವುದಿಲ್ಲ . ಆಚ

ಸ್ವಾತಂತ್ರ್ಯದಿಂದ ಅವರು ಬದುಕು ಸಾಗಿಸುತ್ತಾರೆ. ಇನ್ನೂ ಮುಂದೆ ಹೋಗಿ ಸಾಧ

ಚರಮ ಸೀಮೆಯನ್ನು ತಲುಪಿದಾಗ, ತಾವು ಸತಿ- ಪತಿಗಳೆಂಬ ಭಾವ ಸಂಪೂರ್ಣ ಇಲ್ಲವ

'ಶರಣಸತಿ ಲಿಂಗಪತಿ' ಭಾವ ಅವರಲ್ಲಿ ಅಳವಡುತ್ತದೆ. ಇಲ್ಲಿ ಇಬ್ಬರೂ ಆ ಲಿಂಗಪತಿಯ

ಸತಿಯರಾಗಿ ತೋರುತ್ತಾರೆ. ಇದು ವೀರಶೈವದಂಪತಿಗಳು ಸಾಧಿಸಬೇಕಾದಕೊನೆಯ

ಇದನ್ನು ಪ್ರಭುದೇವರ ವಚನ ಹೀಗೆ ತಿಳಿಸುತ್ತದೆ :

“ಸತಿ- ಪತಿಯೆಂಬ ಅಂಗಸುಖ ಹಿಂಗಿ ಲಿಂಗವೆ ಪತಿಯಾದ ಬಳಿಕ

ಸತಿಗೆ ಪತಿಯುಂಟೆ ? ಪತಿಗೆ ಸತಿಯುಂಟೆ ?

ಪಾಲುಂಡು ಮತ್ತೆ ಮೇಲುಂಬರೆ ಗುಹೇಶ್ವರಾ ? ”

ದಾಂಪತ್ಯಧರ್ಮವನ್ನು ಒಪ್ಪಿಕೊಂಡ ಶರಣರು ಅದಕ್ಕೆ ಮಾರಕವಾದ ವ

ಯನ್ನು ತಿರಸ್ಕರಿಸುತ್ತಾರೆ. ಪ್ರಾಚೀನ ಕಾಲದಿಂದಲೂ ಒಂದು ಸಂಪ್ರದಾಯವೆ

ನಡೆದು ಬಂದ ಈ ಅನಿಷ್ಟ ಪದ್ಧತಿಯನ್ನು ಉಚ್ಚಾಟಿಸಿ, ಸಂಸಾರ, ಸಮಾಜದ


೩೧
ಪ್ರಸ್ತಾವನೆ

ಮತ್ತು ನೆಮ್ಮದಿಗಳನ್ನು ಉಂಟುಮಾಡಲು ಮುಂದಾಗುತ್ತಾರೆ. ಹೀಗಾಗಿ

ಮಾಡುವವರನ್ನು ಕಟುವಾಗಿ ಟೀಕಿಸುತ್ತಾರೆ. ಇದು ಅವರ ತೀವ್ರವಾದ ಸಾಮಾಜಿಕ ಕಳಕಳಿಗೆ

ಸಾಕ್ಷಿಯಾಗಿದೆ :

“ಈಶನ ಶರಣರು ವೇಶಿಯ ಹೋದಡೆ

ಮೀಸಲೋಗರವ ಹೊರಗಿರಿಸಿದಡೆ

ಹಂದಿ ಮೂಸಿನೋಡಿದಂತೆ ರಾಮನಾಥ ” - ಜೇಡರ ದಾಸಿಮಯ್ಯ

“ ದಾಸಿಯ ಸಂಗವ ಮಾಡುವ ಪಾಪಿಗೆ.

ಈಶ್ವರನ ಪೂಜೆಯ ಆಸೆಯದೇಕೆ ?

ವೇಶಿಯ ಸಂಗವ ಮಾಡುವದ್ರೋಹಿಗೆ

ಶಿವಪ್ರಸಾದವ ಕೊಂಬ ಆಸೆಯದೇಕೆ ?

ಪರಸ್ತ್ರೀಯ ಸಂಗವ ಮಾಡುವ ಪಂಚಮಹಾಪಾತಕಂಗೆ

ಪರಬ್ರಹ್ಮದ ಮಾತಿನ ಮಾಲೆಯತವದೇಕೆ ? ”


- ಮಡಿವಾಳ ಮಾಚಿದೇವ

ದಾಸಿ, ವೇಶಿಯಿಂದ ದೂರವಿದ್ದು ಸಾಮರಸ್ಯದ ಸುಂದರ ದಾಂಪತ್ಯ ನಡೆಸಲು


ಬೋಧಿಸಿದ ಶರಣರು, ಜ್ಞಾನಿಯಾದ ಬಳಿಕ ಸಂಸಾರ ತ್ಯಜಿಸದೆ ಕೊನೆಯವರೆಗೂ ಅದನ್

ನಿರ್ವಹಿಸಿಕೊಂಡುಹೋಗಬೇಕೆಂದು ಎಚ್ಚರಿಕೆ ಕೊಡುತ್ತಾರೆ :

“ನಿಜವರಿತ ಬಳಿಕ ಸಂಸಾರ ಬಿಡಬೇಕೊ ?

ನಿಜವರಿತ ಬಳಿಕ ಅಂಗೀಕರಿಸಿದ ಹೆಣ್ಣ ಬಿಟ್ಟರೆ

ಅಘೋರನರಕದಲ್ಲಿಕ್ಕುವಕೇದಾರಗುರುದೇವ” – ಕೇದಾರಗುರು

ಈ ಎಲ್ಲ ಮಾತುಗಳಿಗೆ ನಿದರ್ಶನವೆನ್ನುವಂತೆ ಶರಣರೆಲ್ಲ ಸಂಸಾರಿಗಳಾಗಿ

ಅನ್ನೋನ್ಯ ದಾಂಪತ್ಯ ನಡೆಸಿದ್ದಾರೆ; ಸತಿಪತಿಗಳೊಂದಾಗಿ ಶಿವನಿಗೆ ಹಿತವಾದ ಭಕ್ತ

ಅರ್ಪಿಸಿದ್ದಾರೆ.

ಶಿವಶರಣೆಯರ ವಚನಗಳು :

ಹನ್ನೆರಡನೆಯ ಶತಮಾನದಲ್ಲಿ ಸ್ತ್ರೀಯರು ಪಡೆದ ಪುರುಷಸಮಾನ ಅವಕಾಶಗಳಲ್ಲಿ

ಅಭಿವ್ಯಕ್ತಿಸ್ವಾತಂತ್ರ್ಯ ತುಂಬ ಮುಖ್ಯವಾದುದು. ಇದು ಶತಶತಮಾನಗಳಿಂದ ಸಾಹಿತ್ಯ ರಚನೆ

ಕೇವಲ ಪುರುಷರ ಹಕ್ಕು ಎಂಬ ಸ್ಥಾಪಿತಕಲ್ಪನೆಯನ್ನು ಸುಳ್ಳಾಗಿಸಿತು. ಈ ಕ್ಷೇತ್

ಸಂಪೂರ್ಣವಾಗಿ ವಂಚಿತಳಾಗಿದ್ದ ಮಹಿಳ ಈಗ ಸಮಾನವೇದಿಕೆಯ ಮೇಲ

ಸಮಾವೇಶಗೊಂಡು ತನ್ನ ಅನುಭವಗಳನ್ನು ವಚನಮಾಧ್ಯಮದ ಮೂಲಕ ಸಮರ್

ಅಭಿವ್ಯಕ್ತಪಡಿಸಿ, ಅವಕಾಶ ಕೊಟ್ಟರೆ ಸ್ತ್ರೀಯೂ ಎಂಥ ಉತ್ಕಷ್ಟ ಸಾಹಿತ್ಯ ಸೃಷ್ಟಿ


೩೨ ಶಿವಶರಣೆಯರ ವಚನಸಂಪುಟ

ಮಾಡಬಲ್ಲಳು ಎಂಬುದನ್ನು ತೋರಿಸಿಕೊಟ್ಟಳು. ಹಿಂದೆಂದೂ ಕಾಣದ

ಮಹಿಳೆಯರು ಈ ಅವಧಿಯಲ್ಲಿ ವಚನರಚನೆ ಮಾಡಿ, ಜಾಗತಿಕ ಸಾಹಿತ್ಯೇತಿಹಾಸದಲ್ಲಿಯ

ಅಪೂರ್ವವೆನಿಸಿದಕೀರ್ತಿಗೆ ಭಾಜನರಾದರು. ಅಂಥ ಕವಯಿತ್ರಿಯರ ಸಮಗ್ರ

ಒಳಗೊಂಡಿದೆ ಪ್ರಸ್ತುತ ಶಿವಶರಣೆಯರ ವಚನ ಸಂಪುಟ'.

ಈ ಸಂಪುಟದಲ್ಲಿ ೩೫ ಜನ ವಚನಕಾರ್ತಿಯರ ಒಟ್ಟು ೧೩೫೧ ವಚನಗಳನ

ಸಂಗ್ರಹಿಸಲಾಗಿದೆ :

೧. ಅಕ್ಕಮಹಾದೇವಿ ೪೩೪

೧೫೪
೨. ಅಕ್ಕಮ್ಮ

೩. ಅಮುಗೆ ರಾಯಮ್ಮ ೧೧೬


ಕೈ
೪. ಆಯ್ದಕ್ಕಿ ಲಕ್ಕಮ್ಮ
2
೫. ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವ
C
೬. ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ
C
೭. ಕದಿರ ಕಾಯಕದ ಕಾಳವ್ವ

೮. ಕದಿರ ರೆಮ್ಮವ್ವ
C
೯. ಕನ್ನಡಿ ಕಾಯಕದ ರೇಮಮ್ಮ
C
೧೦ . ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವ
C
೧೧. ಕಾಲಕಣ್ಣಿಯ ಕಾಮಮ್ಮ
C
೧೨ . ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ
C
೧೩ .ಕೊಟ್ಟಣದಸೋಮಮ್ಮ
6
೧೪. ಗಂಗಾಂಬಿಕೆ
2
೧೫. ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
9
೧೬ . ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ
4
೧೭. ಗೊಗ್ಗವ್ವ
&
೧೮. ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ 5
೧೯ . ದುಗ್ಗಳೆ -
೧೪
೨೦. ನಾಗಲಾಂಬಿಕೆ

೨. ಇನ್ನೂ ೨೩ ಜನ ಪ್ರಕ್ಷಿಪ್ರವಚನಕಾರ್ತಿಯರೂ ಇದ್ದಾರೆ. (ನೋಡಿ : ಪ್ರಕ್ಷಿಪ್ತ ವಚ

ಡಾ . ಎಂ . ಎಂ . ಕಲಬುರ್ಗಿ, ಕಭಾ, ೨೪ -೧ ಪು. ೨೪ , ೧೯೯೧).


ಪ್ರಸ್ತಾವನೆ

೨೮೮
೨೧. ನೀಲಮ್ಮ
C
೨೨. ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವ 2
೨೩. ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವ
&
೨೪. ಬೊಂತಾದೇವಿ
3
೨೫ . ಮುಕ್ತಾಯಕ್ಕ

೨೬ . ಮೋಳಿಗೆ ಮಹಾದೇವಿ C

೨೭ . ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ C

೨೮ . ರೇವಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಕಮ್ಮ

೨೯ . ಸತ್ಯಕ್ಕೆ
C
೩೦. ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವ
C
೩೧. ಸೂಳೆ ಸಂಕವ್ವ
*
೩೨. ಹಡದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
C
೩೩ . ಹಾದರ ಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ
C
೩೪. ಕುರಂಗೇಶ್ವರಲಿಂಗ
C
೩೫. ಮಸಣಯ್ಯಪ್ರಿಯ ಮಾರೇಶ್ವರಲಿ

ಅಕ್ಕಮಹಾದೇವಿ :

ವಚನಸಾಹಿತ್ಯವೆಂದಾಕ್ಷಣ ಪುರುಷರಲ್ಲಿ ಮೊದಲು ನೆನಪಾಗುವ ಹೆಸರು

ಬಸವಣ್ಣನದು, ಸ್ತ್ರೀಯರಲ್ಲಿ ಮೊದಲು ನೆನಪಾಗುವ ಹೆಸರು ಅಕ್ಕಮಹಾದೇವಿಯದು.

ಶರಣರ ಚರಿತ್ರೆಗೆ ಸಂಬಂಧಪಟ್ಟಂತೆ ಅನೇಕ ಅಸ್ಪಷ್ಟತೆಗಳು ಅಲ್ಲಲ್ಲಿ ಉಳಿದುಕೊಂ

ಇದಕ್ಕೆ ಮಹಾದೇವಿಯಕ್ಕೆ ಹೊರತಾಗಿಲ್ಲ . ೧೫ನೆಯ ಶತಮಾನದ ಪೂರ್ವದಲ್ಲಿ ಕ

ಬರುವ ಅವಳ ಚರಿತ್ರೆ , ಆ ಬಳಿಕ ಪ್ರಭುದೇವರಂತೆ ವ್ಯತ್ಯಾಸಕ್ಕೆ ಗುರಿಯಾದಂತೆ ಕಾಣ

ಈ ಕಾಲದಲ್ಲಿ ಮಹತ್ವ ಪಡೆದ ವಿರಕ್ತ ಸಂಪ್ರದಾಯ ವೈರಾಗ್ಯಕ್ಕೆ ಒಂದು ಕಡೆ ಪ್ರಭುವನ

ಇನ್ನೊಂದು ಕಡೆ ಮಹಾದೇವಿಯನ್ನು ಚಿತ್ರಿಸಲು ತೊಡಗಿದುದೆ ಇದಕ್ಕೆ

೩. 'ಶೀಲಸಂಪಾದನೆ' ಎಂಬ ವಚನಸಂಕಲನದಲ್ಲಿ ಈ ಅಂಕಿತದ ವಚನವನ್ನು ಎಲ್ಲ ಪುರಾತೆಯರ

ವಚನ' ಎಂಬ ಶೀರ್ಷಿಕೆಯಡಿಯಲ್ಲಿ ಸೇರಿಸಲಾಗಿದೆ. ( ವ. ೪೨೮) ಹೀಗಾಗಿ ಇದು ಶಿವಶರಣ


ಯದೇ ಆಗಿದೆ ಎಂದು ಇಲ್ಲಿ ಸ್ವೀಕರಿಸಲಾಗಿದೆ.

೩, ಅ. ಈ ಅಂಕಿತದಲ್ಲಿ ಪ್ರಿಯ' ಎಂಬ ವಿಶೇಷಣ ಸೇರಿರುವುದರಿಂದ ಶಿವಶರಣೆಯದಿರಬೇಕೆಂದು ಇಲ್ಲಿ


ಸೇರಿಸಿಕೊಳ್ಳಲಾಗಿದೆ.
೩೪
ಶಿವಶರಣೆಯರ ವಚನಸಂಪುಟ

ತೋರುತ್ತದೆ. ಹೀಗಾಗಿ ಹರಿಹರನಲ್ಲಿ ಬರುವ ಇವಳ ಚರಿತ್ರೆ ಪ್ರಭುಲಿಂಗಲೀಲೆ ಮ

ಪರಂಪರೆಯ ಸಾಹಿತ್ಯ ಕೃತಿಗಳಲ್ಲಿ ವ್ಯತ್ಯಾಸ ರೂಪವನ್ನು ಪಡೆದಿದೆ.

ಕಾವ್ಯಗಳು ಒದಗಿಸುವ ಆಧಾರಗಳ ಮೇರೆಗೆ ಮಹಾದೇವಿಯ ಜನ್ಮಗ್

ಉಡುತಡಿ. ಇದನ್ನು ಇಂದಿನ ಉಡುಗಣಿಯೊಂದಿಗೆ ವಿದ್ವಾಂಸರು ಸಮೀ

ಗ್ರಾಮಗಳ ಉಲ್ಲೇಖ ಒಂದೆರಡು ಕಡೆ ಬಂದರೂ ಅವು ಉಪೇಕ್

ಯೋಗ್ಯವಾದವುಗಳೆಂದೇ ಹೇಳಬಹುದು. ಮಹಾದೇವಿಯ ತಂದೆ ನಿರ್ಮಲಶೆಟ್ಟಿ

ಸುಮತಿ ಎಂದು ಕಾವ್ಯಗಳು ಹೇಳುತ್ತಲಿದ್ದರೂ ಇವು ಆ ಕಾಲದ, ಆ ಪರಿಸರ

ವ್ಯಕ್ತಿನಾಮಗಳಾಗಿ ತೋರುವುದಿಲ್ಲವಾದುದರಿಂದ, ಇವುಗಳನ್ನು ಕಲ್ಪಿತ ಹೆಸರು

ಇಟ್ಟುಕೊಳ್ಳಬಹುದೇನೋ .

ಮಹಾದೇವಿಯ ಜೀವನದ ಮುಖ್ಯ ಘಟನೆಯೆಂದರೆ ರಾಜನಾದ ಕೌಶ

ವ್ಯಾಮೋಹಕ್ಕೆ ಆಕೆ ಗುರಿಯಾದುದು. ಈ ಕೌಶಿಕ ಯಾರು ? ಎಂಬುದು ಇನ್ನೂ

ಸ್ಪಷ್ಟವಾಗಿಲ್ಲ . ಈ ಬಗೆಯ ಹೆಸರು ಅಂದು ಪ್ರಚಾರದಲ್ಲಿರಲಿಲ್ಲವಾಗಿ ಇದನ್

ಕಲ್ಪಿತನಾಮವೆಂದು ಇಟ್ಟುಕೊಳ್ಳಬಹುದಾದರೂ ಇಂಥ ಒಂದು ಘಟನೆ ಅವಳ ಜೀವ

ಸಂಭವಿಸಿದುದು ಸತ್ಯವೆಂದು ತೋರುತ್ತದೆ. ಇದನ್ನು ಪೋಷಿಸುವ ಧ್ವನಿಗಳು ಅವ

ವಚನಗಳಲ್ಲಿ ಕೇಳಿಸುತ್ತವೆ. ವಿದ್ವಾಂಸರು ಈ ಕೌಶಿಕನನ್ನು ಬಳ್ಳಿಗಾ

ಆಳುತ್ತಿದ್ದ ಕಸಪಯ್ಯನೊಂದಿಗೆ ಸಮೀಕರಿಸುವ ಪ್ರಯತ್ನವನ್ನು ಮಾಡಿದ

ಮಹಾದೇವಿಯ ಉಜ್ವಲ ಲಾವಣ್ಯಕ್ಕೆ ಮೋಹಿತನಾದ ಕೌಶಿಕ ಒತ್ತಾಯದಿಂದ

ಅರಮನೆ ತುಂಬಿಸಿಕೊಂಡನೆಂದೂ , ತನ್ನ ಭಾಕ್ಕಿಕಜೀವನಕ್ಕೆ ಅಡ್ಡಿ ಬರದಂತೆ ವರ್ತ

ಬೇಕೆಂದು ಮಹಾದೇವಿ ಶರತ್ತು ಹಾಕಿದಳೆಂದೂ , ಆ ಶರತ್ತಿಗೆ ಕೌಶಿಕ ವ್ಯ

ನಡೆದುಕೊಂಡ ಕಾರಣ ಅವಳು ಅರಮನೆಯನ್ನು ತೊರೆದು ಮಲ್ಲಿಕಾರ್ಜುನ ಮೋಹ

ಹೊರಟಳೆಂದೂ ತಿಳಿದುಬರುತ್ತದೆ. ಈ ಸಂದರ್ಭದಲ್ಲಿ ಅವಳು ದಿಗಂ

ಹೊರಬಿದ್ದಳೆಂದು ಕಾವ್ಯಗಳು ಹೇಳುತ್ತವೆ. ವಿದ್ವಾಂಸರೂ ಇದನ್ನು ನಂಬಿದ

ಮೂಲತಃ ಕೇಶಾಂಬರಿಯಾಗಿ ಅರಮನೆಯಿಂದ ಹೊರಬಿದ್ದಳೆಂದು ಕ

ಬರೆದಿರುವುದನ್ನು ಮುಂದಿನವರು ತಲೆಗೂದಲಿನಿಂದಲೇ ಮೈಮುಚ್ಚಿಕೊಂಡಳ

ಭಾವಿಸುತ್ತ ಬಂದಂತಿದೆ. ಇಲ್ಲಿ ಕೇಶಾಂಬರವೆಂದರೆ ಕೂದಲಿನ ಬಟ್ಟೆ (ಕಂಬಳಿ) ಎ

ಅರ್ಥವಿದೆಯೆಂದು ಇತ್ತೀಚಿನ ವಿದ್ವಾಂಸರು ಹೇಳುತ್ತಿರುವುದು ಸರಿಯ

ಕೊಂಡಗುಳಿ ಕೇಶಿರಾಜನೂ ಮಂತ್ರಿ ಪದವಿಯನ್ನು ಧಿಕ್ಕರಿಸಿದ ಸಂ

ದಿವ್ಯವಸ್ರಾಭರಣಗಳನ್ನು ಕಳಚಿ, ಕೇಶಾಂಬರನಾಗಿ ಹೊರಬಿದ್ದನೆಂದು

ಹೇಳುತ್ತಾನೆ. ಇಲ್ಲಿ ಪುರುಷನಾದ ಕೇಶಿರಾಜ ಕಂಬಳಿಯನ್ನು ಹೊದ್ದುಕೊಂ

ಹೋದನೆಂದೇ ಅರ್ಥಮಾಡಬೇಕಾಗುತ್ತದೆ. ಕಂಬಳಿಯು ವೈರಾಗ್ಯದ ಸಂಕೇತವೆ


೩೫
ಪ್ರಸ್ತಾವನೆ

ಈಗಲೂ ಜನಪದರು ನಂಬಿರುವದನ್ನು ಇಲ್ಲಿ ನೆನೆಯಬಹುದು. ಈ ಹಿನ್ನೆಲೆಯಲ್ಲ

ಮಹಾದೇವಿಯಕ್ಕ ದಿಗಂಬರೆಯಾಗಿ ಹೊರಬಿದ್ದಳೆನ್ನುವುದಕ್ಕಿಂತ ಕಂಬಳಿಯನ್ನು ಹೊದ

ಹೊರಟಳೆಂದು ಇಟ್ಟುಕೊಳ್ಳುವುದೇ ಸೂಕ್ತವೆಂದು ತೋರುತ್ತದೆ.

ಇದು ಅಕ್ಕನ ಜೀವನದಲ್ಲಿ ಒಂದು ಅಗ್ನಿದಿವ್ಯಘಟನೆ. ಆಕೆ ವಿಚಾರಸ್ವಾತಂತ್ರ್ಯದ

ಮಹಿಳೆ. ಗಂಡ ಮತ್ತು ವಿಚಾರಸ್ವಾತಂತ್ರ್ಯ - ಈ ಎರಡು ಆಯ್ಕೆಗಳು ಆಹ್ವಾ

ಗಂಡನನ್ನು ಧಿಕ್ಕರಿಸಿ ವಿಚಾರಸ್ವಾತಂತ್ರ್ಯವನ್ನು ಆಯ್ದುಕೊಂಡುದು ಲೋಕದ ಇ

ದಲ್ಲಿಯೇ ಅಪರೂಪದ ಘಟನೆಯಾಗಿದೆ.

- ಅರಮನೆಯಿಂದ ಹೊರಬಿದ್ದ ಅಕ್ಕ ಮುಂದೆ ಬೇರೆ ಬೇರೆ ಒರೆಗಲ್ಲುಗಳಿಗೆ ವಸ್ತುವಾಗಿ

ನಿಲ್ಲಬೇಕಾಯಿತು. ಅವಳ ಅನೇಕ ವಚನಗಳಲ್ಲಿ ಈ ಮಾತಿಗೆ ನಿದರ್ಶನಗಳು

ದೊರೆಯುತ್ತವೆ. “ ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ


“ ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪಬಿಟ್ಟಿತ್ತೆ ? ”, “ ಮನೆಮನೆದಪ್ಪದೆ

ಕೈಯೊಡ್ಡಿ ಬೇಡುವಂತೆ ಮಾಡಯ್ಯ ”, “ ಹಸಿವಾದೊಡೆ ಊರೊಳಗೆ ಭಿಕ್ಷಾನ್ನ

ತೃಷೆಯಾದಡೆ ಕೆರೆ ಬಾವಿಗಳುಂಟು” ಮೊದಲಾದ ವಚನಗಳಲ್ಲಿ ಈ ಅಂಶಗಳನ್ನು

ಗುರುತಿಸಬಹುದಾಗಿದೆ. ತನ್ನ ಜೀವನದ ಉತ್ತರಾರ್ಧದಲ್ಲಿ ಅವಳು ಮಲ್ಲಿಕಾರ್ಜುನ

ವಶವರ್ತಿಯಾಗಿ ಲೋಕವನ್ನೆಲ್ಲ ಸುತ್ತಿ , ಕಲ್ಯಾಣವನ್ನು ಪ್ರವೇಶಿಸಿದ್ದು ಮತ್ತೊ

ಘಟನೆ. ಅನುಭವಮಂಟಪದಲ್ಲಿ ಅವಳು ಎದುರಿಸಿದ ಪ್ರಶ್ನೆ , ಕೊಟ್ಟ ಉತ್ತರಗಳು ಅವ

ಚಿಂತನೆಯ ಔನ್ನತ್ಯವನ್ನು ಸಾರುತ್ತವೆ. ಅಲ್ಲಿ ಪ್ರಭುದೇವ, ಬಸವಣ್ಣ , ಚೆನ್ನಬಸವಣ್ಣ

ಮೊದಲಾದ ಮಹಾತ್ಮರ ಮಧ್ಯೆ ಎದ್ದು ಕಾಣುವಂತೆ ಬದುಕಿದ ಮಹಾದೇವಿ, ಅವಳೇ

ಹೇಳುವಂತೆ “ ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು ಭಾವಿಸಲು ಗಂಡುರೂಪ

ಎಂಬಂತೆ ವ್ಯಕ್ತಿತ್ವವನ್ನು ರೂಪಿಸಿಕೊಂಡಳು. ಮುಂದೆ ಕಲ್ಯಾಣವನ್ನು ಬಿಟ್ಟು ಕದಳಿಗೆ ಹ


ಬಳಿಕಿನ ಅವಳ ಜೀವನ ವಿವರಗಳು ಅಷ್ಟಾಗಿ ತಿಳಿದುಬಂದಿಲ್ಲ .

ಮಹಾದೇವಿಯಕ್ಕ ಒಬ್ಬ ಶ್ರೇಷ್ಠ ವಚನಕಾರ್ತಿ, ಶ್ರೇಷ್ಠ ಕವಯಿತ್ರಿ.

೪೩೪ ವಚನಗಳು ಲಭ್ಯವಾಗಿವೆ. ಅವಳ ಜೀವನ ಸಾಧನೆಯ ಎಲ್ಲ ಹಂತದ

ಭಾವಲಹರಿಗಳು ಅವುಗಳಲ್ಲಿ ಜೀವಂತ ಅಭಿವ್ಯಕ್ತಿಯನ್ನು ಪಡೆದಿವೆ. ಆಕೆಯ ಬರವಣಿಗೆ

ಭಾವಗೀತಾತ್ಮಕವಾದುದು. ಜೀವನದ ನೋವು ನಲಿವು, ಆಧ್ಯಾತ್ಮಿಕ ನಿಲುವು ಅವಳ

ಅಭಿವ್ಯಕ್ತಿಯ ವೈಶಿಷ್ಟ್ಯಗಳಾಗಿವೆ. ಶರಣಸತಿ ಲಿಂಗಪತಿ ಭಾವವನ್ನು ಸ್ಥಾಯಿಯಾಗಿ ಹಿಡಿದು

ಬರೆದ ವಚನಗಳಲ್ಲಿ ಒಂದು ಬಗೆಯ ಔನ್ನತ್ಯವಿದ್ದರೆ, ಜೀವನದುದ್ದಕ್ಕೂ ಅನುಭವಿಸಿದ

ಸಂಕಷ್ಟಗಳ ನಿರೂಪಣೆಯಲ್ಲಿ ಇನ್ನೊಂದು ಬಗೆಯ ಔನ್ನತ್ಯವನ್ನು ಕಾಣ

“ ಬೆಳದಿಂಗಳು ಬಿಸಿಲಾಯಿತ್ತು ”, “ ಸುಡಲೀ ವಿರಹವ : ನಾನಾರಿಗೆ ಧೃತಿಗೆಡುವೆ”, “

ಬೇಗೆಯಲ್ಲಿ ಬೆಂದೆನವ್ವಾ ” ಮೊದಲಾದ ವಚನಗಳಲ್ಲಿ ಲಿಂಗವಿಕಳಾವಸ್ಥೆಯ ವಿ


೩೬
ಶಿವಶರಣೆಯರ ವಚನಸಂಪುಟ

ಪರಿಗಳನ್ನು ಕಾಣಬಹುದು. “ ವನವೆಲ್ಲ ನೀನೇ , ವನದೊಳಗಣ ದೇವತರುವೆಲ್ಲ ನ

ಎಂಬಂಥ ವಚನಗಳು ಅವಳು ಸೃಷ್ಟಿಯಲ್ಲಿ ಅನುಭವಿಸಿದ ಶಿವದರ್ಶನಕ್ಕೆ ಸಾಕ್ಷಿಯಾಗಿವೆ.

ಯೋಗಾಂಗತ್ರಿವಿಧಿ, ಸ್ವರವಚನ, ಸೃಷ್ಟಿಯವಚನ, ಮಂತ್ರಗೋಪ್ಯಗಳೆಂಬ

ಲಘುಕೃತಿಗಳನ್ನು ಬರೆದಿದ್ದರೂ ಅಕ್ಕನ ಅಂತರಂಗದರ್ಶನವಾಗುವುದು

ವಚನಗಳಲ್ಲಿ , ಭಾವತೀವ್ರತೆಯಿಂದ ಕೂಡಿರುವ ಅವುಗಳಿಗೆ ವಚನ ಸಾಹಿತ್ಯದಲ್ಲಿ ಎಲ್ಲ

ದೃಷ್ಟಿಯಿಂದಲೂ ಪ್ರತ್ಯೇಕವಾದ ಸ್ಥಾನ ಸಲ್ಲುತ್ತದೆ. ಇದನ್ನು ಸಮಕ

ಗುರುತಿಸಿದ್ದರೆನ್ನುವುದಕ್ಕೆ -

“ ಆದ್ಯರ ಅರುವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ,

ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ ,

ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ,

ಅಜಗಣ್ಣನ ಐದು ವಚನಕ್ಕೆ ಕೂಡಲಚೆನ್ನಸಂಗಮದೇವಾ

ಮಹದೇವಿಯಕ್ಕನ ಒಂದು ವಚನ ನಿರ್ವಚನ ”

ಎಂಬ ಚನ್ನಬಸವಣ್ಣನ ಈ ವಚನ ಸಾಕ್ಷಿಯಾಗಿದೆ. ಮುತ್ತು ನೀರಲಾಯಿತ್ತು ,

ನೀರಲಾಯಿತ್ತು, ಉಪ್ಪು ನೀರಲಾಯಿತ್ತು , ಉಪ್ಪು ಕರಗಿತ್ತು ,

ಮುತ್ತು ಕರಗಿದುದನಾರೂ ಕಂಡವರಿಲ್ಲ ' ಎಂಬ ಅವಳ ವಚನ, ಅವಳ ವ್

ಬರೆದ ವ್ಯಾಖ್ಯಾನವಾಗಿದೆ.

ಅಕ್ಕಮ್ಮ :

ಹೆಸರೊಂದನ್ನು ಬಿಟ್ಟರೆ ಈಕೆಯ ಜೀವನವೃತ್ತಾಂತದ ಬಗೆಗೆ ಬೇರಾವ ಸಂಗ

ದೊರಕುವುದಿಲ್ಲ . ' ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ' ಅಂಕಿತದ ಎರಡು

ವಚನಗಳನ್ನು ಉದಾಹರಿಸಿ ಅವುಗಳ ಕರ್ತೃ ' ರಮ್ಮವೈ', ಕಾಲ ಸು . ೧೧೬೦

ಕವಿಚರಿತ್ರೆಕಾರರು ಹೇಳಿದ್ದಾರೆ. ಆದರೆ ಇದೇ ಅಂಕಿತದ ಮೂರು ವಚ

ಗೊಗ್ಗವೈಯಿಂದ ಆರಂಭವಾಗುವ 'ಸಕಲ ಪುರಾತನರ ವಚನಗಳು' ಕಟ್ಟಿನಲ್ಲಿ ' ಅಕ್ಕಮ್

ಎಂಬ ಹೆಸರಿನಡಿಯಲ್ಲಿ ದೊರೆಯುತ್ತವೆ. ಇವುಗಳಲ್ಲಿ ಕವಿಚರಿತ್ರೆಕಾ

ಒಂದು ವಚನವೂ ಸೇರಿದೆ ( ವೇಷ ಎಲ್ಲೀರದು......) ಇದರಿಂದ ರೆಮ್ಮವೈಗೆ ಅಕ್ಕಮ್ಮ

ಎಂಬ ಇನ್ನೊಂದು ಹೆಸರು ಇರುವುದು ವ್ಯಕ್ತವಾಗುತ್ತದೆ. ಇದೇ ಅಂಕಿತದ ೧೫೨

ವಚನಗಳು ಕೋಲಶಾಂತಯ್ಯನಿಂದ ಆರಂಭವಾಗುವ ' ಸಕಲ ಪುರಾತನರ ವಚನ

೪ ಕಕಚ- ೧ ಪು. ೨೪೧ ( ಪ. ಆ. ೧೯೭೨)


ಪ್ರಸ್ತಾವನೆ

ಕಟ್ಟಿನಲ್ಲಿ ಏಲೇಶ್ವರದ ಕೇತಯ್ಯನ ಹೆಸರಿನಡಿಯಲ್ಲಿ ಜೋಡಿಸಿದ 'ಏಲೇಶ್ವರಲಿಂಗ'

ಅಂಕಿತದ ವಚನಗಳ ಜೊತೆಯಲ್ಲಿಯೂ ಬೆರೆತುಕೊಂಡಿವೆ. ಇವುಗಳಲ್ಲಿ ಕವಿಚರಿತೆಕಾ

ಉದಾಹರಿಸಿದ ಎರಡು ( ಆಚಾರ ತಪ್ಪಿದಡೆ ....., ವೇಷ ಎಲ್ಲಿರದು.... , ಗೊಗ್ಗವೈಯಿಂದ

ಆರಂಭವಾಗುವ ಕಟ್ಟಿನಲ್ಲಿ ಸೇರಿದ ಮೂರು ( ಬತ್ತಲೆ ಇದ್ದವರೆಲ್ಲ ....., ಹೋತಿನ

ಗಡ್ಡದಂತೆ....., ವೇಷ ಎಲ್ಲಿರದು....) ವಚನಗಳೂ ಇವೆ. ಇವುಗಳನ್ನೆಲ್ಲ ಪ್ರತ್ಯೇಕಿಸಿ

ಡಾ. ಆರ್ . ಸಿ. ಹಿರೇಮಠ ಅವರು ' ಅಕ್ಕಮ್ಮನ ವಚನಗಳು' ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.

'ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ' ಅಂಕಿತದ ವಚನಗಳು ಏಲೇಶ್ವರದ

ಕೇತಯ್ಯನ ಹೆಸರಿನಡಿಯಲ್ಲಿ ಸೇರಲು ಕಾರಣವೇನು ? ಕೇತಯ್ಯ ಮತ್ತು ಅಕ್ಕಮ

ಏನಾದರೂ ಸಂಬಂಧವಿರಬಹುದೆ ? ಇಬ್ಬರ ವಚನಗಳು ಶೀಲ- ವ್ರತ- ಆಚಾರ ಕುರಿತ

ಮಾಹೇಶ್ವರಸ್ಥಲದ ನಿಲವನ್ನು ಪ್ರಕಟಿಸುತ್ತವೆ. ಅಕ್ಕಮ್ಮನ ಒಂದು ವಚನದಲ್ಲಿ

“ ಏಲೇಶ್ವರದ ಗೊತ್ತು ಕೆಟ್ಟಿತ್ತು' ಎಂಬ ಹೇಳಿಕೆಯಿದೆ. ಅನುಭಾವ ಅಭಿಪ್

ತೋರುವ ಈ ಒಂದುತನಗಳು ಇವರಿಬ್ಬರಲ್ಲಿ ಸಂಬಂಧ ಕಲ್ಪಿಸಲು ಪ್ರೇರೇಪಿಸುತ್ತವೆ. ಆದರೆ

ಈ ಸಂಬಂಧವನ್ನು ಗಟ್ಟಿಗೊಳಿಸಲು ಇನ್ನಷ್ಟು ಆಧಾರಗಳ ಅವಶ್ಯಕತೆಯಿದೆ.

ಸದ್ಯ ಅಕ್ಕಮ್ಮನ ೧೫೪ ವಚನಗಳು ದೊರೆತಿವೆ. ವಚನಗಳ ಸಂಖ್ಯಾಮಾನದ

ದೃಷ್ಟಿಯಿಂದ ವಚನಕಾರ್ತಿಯರಲ್ಲಿ ಅಕ್ಕಮಹಾದೇವಿಯ ನಂತರದ ಸ್ಥಾನ ಈಕೆಗೆ ಸಲ

ಶೀಲ- ವ್ರತ-ನೇಮ - ಆಚಾರ ಇವು ಈಕೆಯ ವಚನಗಳ ಮೂಲದ್ರವ್ಯ , ತನ್ನ ವಚನಗಳಿಗೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ' ಎಂದು ಅಂಕಿತವನ್ನು ಇಟ್ಟುಕೊಳ

ಮೂಲಕ ಈ ಆಚಾರನಿಷ್ಠೆಯನ್ನು ಈಕೆ ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್

“ ಪರಸ್ತ್ರೀ ಪರಧನಂಗಳಲ್ಲಿ ನಿಂದೆಗೆ ಓಡಲಾಗದಿದ್ದುದೆ ವ್ರತ; ಸರ್ವಭೂತಹಿ

ದಯವಿದ್ದುದೆ ಆಚಾರ”, “ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದು

ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮ ತನುವಿನಲ್ಲಿ ಆ ತನುವಂ ಬಿಟ್ಟು

ನಿಂದುದೇ ವ್ರತ. ಸ್ಕೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ

ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದೆ ಆಚಾರ, ಇಂತೀ ಅಂತರಂಗದಲ್ಲಿ

ಬಹಿರಂಗದಲ್ಲಿ ಆಚಾರ ಉಭಯ ಸಿದ್ದವಾಗಿ ನಡೆವುದೆ ವ್ರತಾಚಾರ”, “ ಅಂಗಕ್ಕೆ ಆಚಾರ ,

ಮನಕ್ಕೆ ಅರಿವು, ಅರಿವಿಂಗೆ ಜ್ಞಾನ ನಿರ್ಧರವಾಗಿ ಕರಿಗೊಂಡುದೆ ವ್ರತ ”- ಇವು

ವ್ರತಾಚಾರದ ವ್ಯಾಖ್ಯೆಗಳು.

ವ್ರತಭ್ರಷ್ಟರು, ಆಚಾರವಿಹೀನರು ಮತ್ತು ವೇಷಧಾರಿಗಳನ್ನು ಅಕ್ಕಮ್ಮ


ಟೀಕಿಸುತ್ತಾಳೆ : “ ವೇಷವೆರದು ? ಸೂಳೆಯಲ್ಲಿ , ಡೊಂಬರಲ್ಲಿ , ಬೈರೂಪಿಗಳಲ್ಲಿ ಇರದ

ವೇಷವ ತೋರಿ ಒಡಲಹೊರೆವ ದಾಸಿಮೇಶಿಯ ಮಕ್ಕಳಿಗೆ ನಿಜಭಕ್ತಿ ಎಲ್ಲಿಯದು ? ”


೩೮
ಶಿವಶರಣೆಯರ ವಚನಸಂಪುಟ

“ಬತ್ತಲೆಯಿದ್ದವರೆಲ್ಲ ಕತ್ತೆಯ ಮರಿಗಳು, ತಲೆಬೋಳಾದವರೆಲ್ಲ ಮುಂಡೆಯ ಮಕ್ಕಳು,

ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ ", ಹೀಗೆಯೇ ತೋರಿಕೆಯ ಚಿಲುಮೆಯಗ

ವ್ರತಧಾರಿಗಳನ್ನು , ಭರಿತಾರ್ಪಣದ ಭವಭಾರಿಗಳನ್ನು , ಕಟ್ಟಳೆಗೊಳಗಾದ

ವ್ರತ ನೇಮಧಾರಿಗಳನ್ನು , ವಾಮಮಾರ್ಗದಿಂದ ಗಳಿಸಿ ತಂದು ಗುರುಲಿ

ಮಾಡುವೆನೆಂಬ ಅನಾಚಾರಿಗಳನ್ನು ವಿಡಂಬಿಸುತ್ತಾಳೆ.

ವ್ರತಾಚಾರಗಳಿಗೆ ವಿಶೇಷ ಗಮನ ಕೊಟ್ಟ ಅಕ್ಕಮ್ಮ ಅವುಗಳ ಜೊತೆಗೆ ಸತ

ಕಾಯಕವನ್ನೂ ನಿಷ್ಠೆಯಿಂದ ನಡೆಸಬೇಕೆನ್ನುತ್ತಾಳೆ. ಕೆಳಗಿನ ಅವಳ ಈ ಮಾತುಗಳು ಶರ

ಕಾಯಕತತ್ವದ ಮಹತಿಯನ್ನು ಎತ್ತಿಹಿಡಿಯುತ್ತವೆ :

“ ತಾ ಮಾಡುವಕೃಷಿಯ ಮಾಡುವನ್ನಬರ ಮಾಡಿ,

ಕೃಷಿ ತೀರಿದ ಮೇಲೆ ಮತ್ತೆ ಗುರುದರ್ಶನ ಲಿಂಗಪೂಜೆ ಜಂಗಮಸೇವೆ

ಶಿವಭಕ್ತರ ಸುಖಸಂಭಾಷಣೆ ಶರಣರ ಸಂಗ

ಈ ನೇಮವನರಿಯುತಿಪ್ಪುದು ಸದ್ಭಕ್ತನ ಸದಾತ್ಮನ ಯುಕ್ತಿ "

ಇದು 'ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬ

ಎಂಬ ಆಯ್ದಕ್ಕಿ ಮಾರಯ್ಯನ ವಚನದ ಭಾವವನ್ನೇ ಪ್ರತಿಧ್ವನಿಸುತ್ತದೆ.

ಇಲ್ಲಿ ಶರಣರ ಕಾಯಕತತ್ವದ ರಹಸ್ಯವನ್ನೇ ಬಿಚ್ಚಿಟ್ಟಿದ್ದಾಳೆ. ಇದು 'ಕಾಯಕವ

ಕೈಲಾಸ' ಎಂಬ ಸೂತ್ರಕ್ಕೆ ಬರೆದ ವ್ಯಾಖ್ಯಾನದಂತಿದೆ.

ಅಕ್ಕಮ್ಮನವಚನಗಳಲ್ಲಿ ಕಾವ್ಯಗುಣ ಅಷ್ಟಾಗಿ ತೋರುವುದಿಲ್ಲ . ಆದರೆ ವ

ಆಚಾರ-ಶೀಲ, ಅವುಗಳಿಗೆ ಪೂರಕವಾಗಿ ಅನೇಕ ವಸ್ತು , ಧಾನ್ಯ ಪದ

ಪಶುಪಕ್ಷಿಗಳು, ಜನಪದ ನಂಬಿಕೆ, ಜನಪದ ವೃತ್ತಿಗಳ ಉಲ್ಲೇಖಗಳನ್ನು ಒಳಗ

ವಚನಗಳು ಆ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಹಾಯಕ

ಅಮುಗೆರಾಯಮ್ಮ :

ಅಕ್ಕಮ್ಮನಂತೆ ಈಕೆಯ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿವರಗಳೂ ಹೆಚ

ಲಭ್ಯವಿಲ್ಲ . ಹಸ್ತಪ್ರತಿಗಳಲ್ಲಿ ( ಸಕಲ ಪುರಾತನರ ವಚನಗಳ ಕಟ್ಟುಗಳಲ್ಲಿ ) 'ಅ

ದೇವಯ್ಯಗಳ ಪುಣ್ಯಸ್ತ್ರೀಯ ವಚನ', ' ಅಮುಗೆರಾಯಮ್ಮನ ವಚನ' ಹಾಗೂ

ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮನ , ವಚನ' ಎಂಬ ಶೀರ್ಷಿಕೆಗ

“ ಅಮುಗೇಶ್ವರಲಿಂಗ' ಅಂಕಿತದ ವಚನಗಳು ದೊರಕುತ್ತವೆ. ರಾಯಸದ ಮಂಚಣ್

ಪುಣ್ಯಸ್ತ್ರೀ ರಾಯಮ್ಮ ಮತ್ತು ಅಮುಗಿದೇವಯ್ಯಗಳ ಪುಣ್ಯಸ್ತ್ರೀ

ದೊರೆತಿದ್ದು ಎರಡರಲ್ಲಿ ಆರಂಭದ ಒಂದು ವಾಕ್ಯ ಮಾತ್ರ ವ್ಯತ್ಯ

ರಾಯಮ್ಮನ ಹೆಸರಿನಲ್ಲಿ ೧೧೪ ವಚನಗಳು ಪ್ರತ್ಯೇಕವಾಗಿ ದೊರಕುತ್ತವೆ. ಮೂವ

ಒಂದೇ ರೀತಿಯ ಅಂಕಿತವಿರುವುದರಿಂದ ಗೊಂದಲಕ್ಕೆ ಎಡೆಮಾಡಿದೆ.


೩೯
ಪ್ರಸ್ತಾವನೆ

ಕೆಲವರು ರಾಯಮ್ಮ , ರಾಯಸದ ಮಂಚಣ್ಣಗಳ ಪತ್ನಿ, ಆಕೆಯೇ

“ಅಮುಗೇಶ್ವರಲಿಂಗ' ಎಂಬ ವಚನಗಳ ಕರ್ತೃ ಎಂದು ಹೇಳಿದರೆ. ಮತ್ತೆ ಕೆಲವರು

ಅಮುಗೆದೇವಯ್ಯಗಳ ಪತ್ನಿ ಎಂದು ಹೇಳುತ್ತಾರೆ. ಇನ್ನೂ ಕೆಲವರು ರಾಯಸದ

ಮಂಚಣ್ಣನನ್ನು ರಾಯಮ್ಮನ ಗಂಡನೆಂದು ಒಪ್ಪಿ , ' ಅಮುಗಿದೇವಯ್ಯ ' ಆಕೆಯ

ಗುರುವಾಗಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ಈ ಸಮಸ್ಯೆಗೆ ಪರಿಹಾರವನ್ನು ಹ

ಕಂಡುಕೊಳ್ಳಬಹುದು . ಇಲ್ಲಿ ಇಬ್ಬರು ' ರಾಯಮ್ಮ ' ಹೆಸರಿನ ಶರಣೆಯರಿದ್ದಾರೆ.

ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ , ಮತ್ತೊಬ್ಬಳು ಅಮುಗಿದೇವಯ್ಯಗ

ಪುಣ್ಯಸ್ತ್ರೀ ರಾಯಮ್ಮ . ಈಕೆಗೆ ' ಅಮುಗೆ ರಾಯಮ್ಮ ' ಎಂದೂ ಕರೆಯಲಾಗ

ಅಮುಗೆದೇವಯ್ಯಗಳ ಪತ್ನಿ ಎನ್ನಲು ಅಮುಗೆ ದೇವಯ್ಯಗಳಸಾಂಗತ್ಯದಲ್ಲಿ ಆಧಾರವಿದ

ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮನ ಹೆಸರಿನಲ್ಲಿ ಒಂದು ವಚನ ಮಾತ

ದೊರೆತಿದ್ದರೆ, ಅಮುಗೆರಾಯಮ್ಮನ ಹೆಸರಿನಲ್ಲಿ ೧೧೫ ( ಅಮುಗಿದೇವಯ್ಯಗಳ ಪುಣ್ಯಸ್ತ್ರ

ಹೆಸರಿನಲ್ಲಿದ್ದ ಒಂದು ವಚನವೂ ಸೇರಿ) ವಚನಗಳು ಉಪಲಬ್ದವಾಗಿವೆ. ಅಮು

ರಾಯಮ್ಮನ ಒಂದು ವಚನದ ಕೆಲವು ಭಾಗವನ್ನೇ ತೆಗೆದುಕೊಂಡು ರಾಯ

ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ ತನ್ನ ವಚನವೆಂದು ಕರೆದುಕೊ

(“ ಅಂಗಕ್ಕಾಚಾರ ಮನಕ್ಕೆ ಜ್ಞಾನ ಸಮರಸಾದೈತವಾದ ಮತ್ತೆ ಪುನರಪಿ ಪುನರ್ದಿಕ್ಷ

ಯುಂಟೆ ? ಗರುಡಿಯಲ್ಲಿಕೋಲಲ್ಲದೆ, ಕಾಳಗದಲ್ಲಿ ಉಂಟೆಕೋಲು? ಭವಿಗೆಮೇಲು

ಪುನರ್ದಿಕ್ಷೆಯಲ್ಲದೆ, ಭಕ್ತರಿಗುಂಟೆ ? ವ್ರತತಪ್ಪಿ ಅನುಗ್ರಹವಿಡಿದ ನರಕಿಗಳಿಗೆ ಮುಕ್ತಿಯ

೫. ಶಿವಶರಣೆಯರ ಚರಿತ್ರೆಗಳು : ಡಾ . ಫ. ಗು . ಹಳಕಟ್ಟಿ , ಪು. ೧೧೮ , ಶಿವಶರಣ ಕಥಾ ರತ್ನಕೋಶ:


ತ. ಸು . ಶಾಮರಾಯ , ಪು. ೩೬೪ ; ಬಸವಯುಗದ ಶಿವಶರಣೆಯರು : ಲಲ್ಲೇಶ್ವರಿ ಮೂಗಿ
ಪು. ೬೨ .

೬. ಶಿವಶರಣೆಯರ ವಚನಗಳು (ಸಮಗ್ರ ಸಂಪುಟ) : ಡಾ . ಆರ್. ಸಿ. ಹಿರೇಮಠ, ( ಭಾಗ - ೪


ಪ್ರ . ಪು. ೧); ಕನ್ನಡ ಸಾಹಿತ್ಯ ಚರಿತ್ರೆ ( ಸಂ . ೪) : ಪ್ರ . ಸಂ . ಡಾ . ಹಾ. ಮಾ . ನಾಯಕ ಪು. ೫೬೩
( ಮೈ . ವಿ. ವಿ.); ಶಿವದಾಸ ಗೀತಾಂಜಲಿ : ಡಾ . ಎಲ್ . ಬಸವರಾಜು ಪು. ೩೦೪,

ಕರ್ನಾಟಕದ ಕವಯಿತ್ರಿಯರು : ಡಾ. ಸರೋಜಿನಿ ಮಹಿಷಿ, ಪು. ೧೪೩ , ಶಾಂತಾದೇವಿ ಮಾಳವಾಡ


ಅವರು ಒಂದೆಡೆ ಈಕೆಯನ್ನು ರಾಯಸದ ಮಂಚಣ್ಣನ ಪತ್ನಿ ಎಂದು ಕರೆದರೆ, ಮತ್ತೊ

ಅಮುಗೆದೇವಯ್ಯನ ಪತ್ನಿ ಎಂದು ಹೇಳುತ್ತಾರೆ. ( ಬಸವಯುಗದ ಶಿವಶರಣೆಯರು : ಪು. ೬೮


ಮತ್ತು ೯೩.)
- ಒಂದೇ ಹೆಸರಿನ ಹಲವು ಜನ ಶರಣೆಯರಿರುವ ಉದಾಹರಣೆಗೆ : ಉರಿಲಿಂಗಪೆದ್ದಿಗಳ ಪುಣ್ಯಸ್ತ್ರ

ಕಾಳವ್ವ , ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವ , ಸಿದ್ದ ಬುದ್ದಯ್ಯಗ


ಕಾಳವ್ವ - ಇವರನ್ನು ನೋಡಬಹುದು.
ಶಿವಶರಣೆಯರ ವಚನಸಂಪುಟ

ಎಂದೆ ಅಮುಗೇಶ್ವರಲಿಂಗದಲ್ಲಿ ” ಈ ವಚನದಲ್ಲಿನ ' ಗರುಡಿಯಲ್ಲಿ ಕೋಲಲ್ಲದ


ಎಂಬ ಸಾಲಿನಿಂದ ಮುಂದಿನ ಭಾಗವೆಲ್ಲ ರಾಯಸದ ಮಂಚಣ್ಣಗಳ ಪುಣ್ಯಸ್ತ್

ವಚನವಾಗಿದೆ.) ಈ ವಚನವನ್ನು ಅಮುಗೆ ರಾಯಮ್ಮನಿಂದಲೇ ಈಕೆ ತೆ

ಬೇಕೆಂದು ಊಹಿಸಲು ಕಾರಣ , ಆಕೆಯ ಇನ್ನೊಂದು ವಚನದಲ್ಲಿಯೂ

ಬರುತ್ತಿರುವುದು : ( ಗರುಡಿಯಲ್ಲಿ ಸಾಮುವ ಮಾಡುವರಲ್ಲದೆ ಕಾಳಗದಲ್ಲಿ

ಮಾಡುವರೆ - ವ. ೬೪೦). ಹೀಗೆ ಒಬ್ಬರ ವಚನದ ಭಾಗವನ್ನೇ ಸ್ವಲ್ಪ ವ್ಯತ್ಯಾಸದ

ಮತ್ತೊಬ್ಬರು ತೆಗೆದುಕೊಂಡು, ಒಂದೆ ವಿಧವಾದ ಅಂಕಿತವನ್ನು ಇಟ್ಟುಕೊಂಡಿರ

ಉದಾಹರಣೆ ಎಂದರೆ 'ಕೊಟ್ಟಣದಸೋಮವ್ವ' ಮತ್ತು 'ಸೂಳೆ ಸಂಕವ್ವ ' ಅವರ

ಅಮುಗೆ ರಾಯಮ್ಮನಿಗೆ ' ವರದಾನಿಯಮ್ಮ ' ಎಂಬ ಇನ್ನೊಂದ

ತಿಳಿದು ಬರುತ್ತದೆ. ಈಕೆಯ ಪತಿ ಅಮುಗೆ ದೇವಯ್ಯನಿಗೆ ಸಂಬಂಧಿಸಿದಂತ

ಕಾವ್ಯ - ಪುರಾಣಗಳಲ್ಲಿ ಒಂದು ಪವಾಡಾತ್ಮಕ ಕಥೆ ಬರುತ್ತದೆ. ಅದರ ಪ್ರಕಾರ ಇವರ ಮ

ಸ್ಥಳ ಸೊನ್ನಲಾಪುರ ; ನಿಷ್ಠಾವಂತ ಭಕ್ತರಾದ ಇವರು ಅಲ್ಲಿ ನೆಮ್ಮೆಯ ಕಾಯಕ ಮಾಡ

ಇಷ್ಟಲಿಂಗ ಪೂಜಾನಿರತರಾಗಿದ್ದರು. ಒಂದು ದಿನ ಸಿದ್ದರಾಮಯ್ಯ ಕಪಿಲಸಿದ್ಧ

ಪರ್ವಕ್ಕೆಂದು ಊರವರಿಗೆಲ್ಲ ಭತ್ತ ಕುಟ್ಟಲುಕೊಟ್ಟಣ ಹಾಕಿಸಿದ, ಏಕಲಿಂಗ ನಿಷ

ಅಮುಗೆದೇವಯ್ಯದಂಪತಿಗಳು ' ಲಿಂಗವಿಲ್ಲದ ಭವಿಯ ಸೇವೆ ಮಾಡಲಾರೆವು'

ಅದನ್ನು ನಿರಾಕರಿಸಿದರು. ಅದರಿಂದ ಸಿದ್ದರಾಮ ಊರು ಬಿಡಲು ಆಜ್ಞೆಮಾಡಿದ. ಅ

ಅಳುಕದೆ ಅವರು ತಮ್ಮ ವಸ್ತುಗಳನ್ನೆಲ್ಲ ಮೂರು ಗಂಟಿನಲ್ಲಿ ಕಟ್ಟಿ , ಎರಡನ

ಹೊತ್ತುಕೊಂಡು, ಉಳಿದೊಂದನ್ನು ಮಲ್ಲಿನಾಥನಿಂದ ಹೊರಿಸಿಕೊಂಡು

ವಿಷಯ ತಿಳಿದ ಸಿದ್ದರಾಮ ಪಶ್ಚಾತ್ತಾಪದಿಂದ ಆ ಶರಣದಂಪತಿಗಳನ್ನು ಮರಳಿ ಕರ

ಹೋಗುತ್ತಾನೆ. ಅವರು ಅದಕ್ಕೊಪ್ಪದೆ ಕಲ್ಯಾಣದತ್ತ ಸಾಗುತ್ತಾರೆ. ಕಲ್ಯಾಣ

ಅನುಭವಮಂಟಪದ ಸದಸ್ಯರಾಗಿ ಅನುಭಾವಗೊಷ್ಠಿಯಲ್ಲಿ ಪಾಲ್ಗೊಳ್ಳು

ಕಾಯಕವನ್ನು ನಿಷ್ಠೆಯಿಂದ ಕೈಕೊಂಡು, ಕಲ್ಯಾಣ ಕ್ರಾಂತಿಯ ನಂತರ ' ಪ

ಗ್ರಾಮಕ್ಕೆ ಬಂದು, ಅಲ್ಲಿಯೇ ಐಕ್ಯರಾಗುತ್ತಾರೆ. ಸಿದ್ದರಾಮ ತನ್ನೊ

“ನಿಷ್ಕಾಮಹೇಶ್ವರನೆನಿಪ ಅಮುಗೆದೇವಯ್ಯಗಳಿಂದ ಪ್ರಭುದೇವರೆಂಬ ಅನಾದಿ ಜಂ

೯. ಶಿವಶರಣೆಯರ ವಚನಗಳು (ಸಮಗ್ರ ಸಂಪುಟ) : ಡಾ . ಆರ್ . ಸಿ. ಹಿರೇಮಠ, ಪು. ೪೫೫

( ಅ. ಟಿ.), 'ನೇಗಿಯ ಅಮುಗಯ್ಯ ' ಎಂಬ ಜನಪದ ಹಾಡಿನಲ್ಲಿಯೂ ಈ ಹೆಸರು ಬಂದಿದೆ


(ನೋಡಿಕನ್ನಡ ಜನಪದ ಗೀತೆಗಳು - ಡಾ . ಬಿ . ಎಸ್ . ಗದ್ದಗಿಮಠ, ಅನುಬಂಧ) .

೧೦ . ಇಲ್ಲಿ ದೊರೆತ ೧೨೦೦ ರಲ್ಲಿ ರಚಿತವಾದ ಒಂದು ಶಾಸನದಲ್ಲಿ ಅಮುಗೆ ದೇವಯ್ಯನ ಹೆಸರ
ಉಕ್ತವಾಗಿದೆ. ( ಶಾಸನಗಳಲ್ಲಿ ಶಿವಶರಣರು : ಡಾ . ಎಂ . ಎಂ . ಕಲಬುರ್ಗಿ, ಪು. ೯೯ )
೪೧
ಪ್ರಸ್ತಾವನೆ

ಕಂಡೆ” ಎಂದು ಹೇಳಿಕೊಂಡಿದ್ದಾನೆ. ಇದು ಮೇಲಿನ ಕಥೆಯಲ್ಲಿ ಬರುವ ಅ

ಏಕಲಿಂಗನಿಷ್ಠೆಯ ಸತ್ಯತೆಯನ್ನು ಎತ್ತಿಹಿಡಿಯುತ್ತದೆ.

ಈಗ ಅಮುಗೆ ರಾಯಮ್ಮನ ೧೧೬ ವಚನಗಳು ದೊರೆತಿವೆ. ಅಕ್ಕಮ್ಮನ

ಆಚಾರಶೀಲಳಾದ ಈಕೆಯ ವಚನಗಳ ವಸ್ತುವೂ ಆಚಾರಪ್ರಧಾನವಾಗಿದೆ. ಸಮ

ವಿಮರ್ಶ ಅಕ್ಕಮ್ಮನಿಗಿಂತಲೂ ಹೆಚ್ಚು ತೀಕ್ಷ್ಮವಾಗಿ, ಅಷ್ಟೇ ಕಟುವಾಗಿ ನಡೆದಿದ

ಜೊತೆಗೆ ಅಕ್ಕಮ್ಮನಲ್ಲಿ ಕಂಡುಬರದೇ ಇದ್ದ ಆತ್ಮನಿರೀಕ್ಷಣೆಯೂ ಈಕೆಯ ಕೆಲವ

ವಚನಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಅದು ಅಕ್ಕಮಹಾದೇವಿಯಷ್ಟು ತೀವ್ರತರವಾ

“ ಎನ್ನ ದೇಹವ ದಗ್ಗವ ಮಾಡಯ್ಯ ; ಎನ್ನ ಕಾಯದಲ್ಲಿಪ್ಪ ಕರ್ಮವ ತೊಡೆಯಯ್ಯ

ಭಾವದಲ್ಲಿಪ್ಪ ಭ್ರಮೆಯ ಜರೆಯಯ್ಯ ; ನಾ ಹಿಡಿದ ಛಲವ ಬಿಡದೆ ನಡೆಸಯ್ಯ ” “ ಹೆದರದಿರು


ಮನವೆ, ಹಿಮ್ಮೆಟ್ಟದಿರು ಮನವೆ, ಹಿಡಿದ ಛಲವ ಬಿಡದಿರು ಮನವೆ” ಎಂದು ತನು - ಮ

ಭಾವಗಳನ್ನು ಶುದ್ಧಗೊಳಿಸಿಕೊಂಡು ಛಲದಿಂದ ಮುನ್ನಡೆದ ಆಕೆ ಸಾಧನೆಯಿ

ಗುರುವನ್ನಾಗಿ ಮಾಡಿಕೊಳ್ಳುತ್ತಾಳೆ. ಈಗ ಆಕೆಗೆ ಅನ್ಯ ಗುರುಲಿಂಗ ಜಂಗಮದ ಅವ

ಬೀಳುವುದಿಲ್ಲ :

“ ಅರಿವುಳ್ಳವರಿಗೆ ಗುರುವಿನ ಹಂಗೇಕೆ ?

ಅರಿವುಳ್ಳವರಿಗೆ ಲಿಂಗದ ಹಂಗೇಕೆ ?

ಅರಿವುಳ್ಳವರಿಗೆ ಪಾದೋದಕ ಪ್ರಸಾದದ ಹಂಗೇಕೆ ?

ಅರಿವುಳ್ಳವರಿಗೆ ಅಮುಗೇಶ್ವರಲಿಂಗವನರಿದೆನೆಂಬ ಸಂದೇಹವೇಕೆ ?

ರಾಯಮ್ಮ ನಿಷ್ಟುರವಾದಿ, ತಾವು ಜ್ಞಾನಿಗಳೆಂದು ತಿರುಗುವ ವೇಷಧಾರಿ

ಆಕೆ ವಿಶೇಷವಾಗಿ ಟೀಕಿಸಿದ್ದಾಳೆ. ಈ ಸಂದರ್ಭದಲ್ಲಿ ಆಕೆ ಬಳಸುವ ಮಾತುಗ

ಏಟಿನಂತೆ ಚುರುಕುಮುಟ್ಟಿಸುತ್ತವೆ. ಇವು ಆಕೆ ವಿರಕ್ತರನ್ನು - ವಿರಕ್ತಿಯನ್ನ

ವ್ಯಕ್ತಪಡಿಸಿದ ಅಭಿಪ್ರಾಯಗಳು : “ದೇಶ ದೇಶವ ತಿರುಗಿ ಮಾತುಗಳ ಕಲಿತು ಗ್ರಾಸಕ್ಕೆ

ತಿರುಗುವ ದಾಸಿನೇಸಿಯ ಮಕ್ಕಳ ವಿರಕ್ತರೆಂಬೆನೆ ? ” “ನಿಜವನರಿದ ವಿರಕ್ತನು

ನಿಜಾನುಭಾವಿಯೆಂದು ನುಡಿವನೆ ? ” ಇಲ್ಲ . ಹಾಗಾದರೆ ವಿರಕ್ತನ ಲಕ್ಷಣವೇನ

“ ವಿರಕ್ತನಾದ ಬಳಿಕ ವಿಷಯಕ್ಕೆ ದೂರನಾಗಿರಬೇಕು. ಒಣಗಿದ ಮರನ ವಾಯು

ಅಪ್ಪಿದಂತಿರಬೇಕು. ಸಮುದ್ರದೊಳಗೆ ತರುಗಿರಿಗಳು ಮುಳುಗಿದಂತಿರಬೇಕು. ಮೂಗ

ಕನಸಿನಂತಿರಬೇಕು. ಜಾಲಗಾರ ಕಂಡ ರತ್ನದಂತಿರಬಲ್ಲಡೆ ವಿರಕ್ತನೆಂಬೆ”.

ಅಜ್ಞಾನಿಗಳನ್ನು ಕುರಿತು “ಕುಂಜರನ ವೇಷವ ತೊಟ್ಟು ಹಂದಿಯ

ಅಜ್ಞಾನಿಗಳನೇನೆಂಬೆನಯ್ಯ ? ” ಎಂದು ಪ್ರಶ್ನಿಸಿ, ಜ್ಞಾನಿಯಾದವನು “ಕತ್ತಲೆಯ ಮನ

ಸಕ್ಕರೆಯ ಸವಿದವನಂತಿರಬೇಕು” ಎನ್ನುತ್ತಾಳೆ.


೪೨ ಶಿವಶರಣೆಯರ ವಚನಸಂಪುಟ

ವಿಡಂಬನೆಯೇ ರಾಯಮ್ಮನ ವಚನಗಳಮೂಲ ಆಶಯವಾಗಿರುವುದರಿಂದ ಮೃದ

ಮಧುರ ಭಾವನೆಗಳನ್ನೊಳಗೊಂಡ ಸಾಹಿತ್ಯಕ ಅಭಿವ್ಯಕ್ತಿ ಗೌಣವಾಗಿ, ಕಟೂಕ್ತ

ವ್ಯಂಗೋಕ್ತಿಗಳಿಗೇ ಅಗ್ರಸ್ಥಾನ ಸಂದಿದೆ. ಅವಳು ಬಳಸುವ ಕೆಲವು ಸುಂದರ ಸೂತ್ರ

ವಾಕ್ಯಗಳು, ಗಾದೆ, ನುಡಿಗಟ್ಟುಗಳು ವಚನಗಳಿಗೆ ಧ್ವನಿಪೂರ್ಣತೆಯನ್ನು , ವಿಶೇಷ

ತಂದುಕೊಟ್ಟಿವೆ. ಇಲ್ಲಿ ಕೆಲವನ್ನು ನೋಡಬಹುದು: “ಕಾದಹಾಲ ನೊಣ ಮುಟ್ಟಬಹ

“ಉತ್ತಮ ತೇಜಿಗೆ ಚಬುಕಿನಲ್ಲಿ ತೆಗೆವರುಂಟೆ ? ” “ ಆಕಾಶಕ್ಕೆ ಹಾರುವಂಗೆದೋಟ

ಹಂಗೇತಕಯ್ಯ ? ” “ಕಾಗೆಯಮರಿ ಕೋಗಿಲೆಯಾಗಬಲ್ಲುದೆ ? ಆಡಿನ ಮರಿ ಆನೆಯ

ಬಲ್ಲುದೆ ? ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ ? ”

ಹೀಗೆ ರಾಯಮ್ಮನ ವಚನಗಳು ಅವಳ ವ್ಯಕ್ತಿವಿಶೇಷವೆನಿಸಿದಕೆಚ್ಚು , ಧೈರ್ಯ

ನಿಷ್ಟುರತೆಗಳನ್ನು ಹೆಚ್ಚಾಗಿ ಮೈಗೂಡಿಸಿಕೊಂಡು ಶರಣೆಯರ ವಚನಗಳಲ್ಲ

ಮೆರೆಯುತ್ತವೆ. ಹೀಗಾಗಿ ಅವಳ ಭಾಷೆಯ ಒರಟುತನವೇ ಅವಳ ಅಭಿವ್ಯಕ್ತಿಗೆ ನಾವಿನ್ಯತೆ

ಯನ್ನು ತರುತ್ತದೆ.” ಎಂಬ ಡಾ . ಚಿದಾನಂದಮೂರ್ತಿಯವರ ಮಾತು ಅನ್ವರ

ಆಯ್ದಕ್ಕಿ ಲಕ್ಕಮ್ಮ :

ಶರಣರು ರೂಪಿಸಿದ ಕಾಯಕ ಮತ್ತು ದಾಸೋಹತತ್ವಗಳನ್ನು ತನ್ನ ಬದುಕಿ

ಮೌಲ್ಯವನ್ನಾಗಿ ಸ್ವೀಕರಿಸಿದ ಲಕ್ಕಮ್ಮ ಶರಣಶ್ರೇಷ್ಠ ಆಯ್ದಕ್ಕಿ ಮಾರಯ್ಯನ ಪತ್ನಿ .ಮ

ರಾಯಚೂರ ಜಿಲ್ಲೆಯ ಲಿಂಗಸೂರು ತಾಲೂಕ ಅಮರೇಶ್ವರ ಗ್ರಾಮದವರಾದ ಈ

ದಂಪತಿಗಳು ಬಸವಣ್ಣನವರ ಕೀರ್ತಿವಾರ್ತೆ ಕೇಳಿಕಲ್ಯಾಣಕ್ಕೆ ಬಂದು, ಅಲ್ಲಿ ಮಹಾಮನೆ

ಅಂಗಳದಲ್ಲಿ ಬಿದ್ದ ಅಕ್ಕಿಯನ್ನು ಆಯ್ದು ಜಂಗಮದಾಸೋಹ ಮಾಡುವ ಕಾಯಕ

ಕೈಕೊಳ್ಳುತ್ತಾರೆ. ಅದನ್ನು ಪರೀಕ್ಷಿಸಲು ಬಸವಣ್ಣ ಒಂದು ದಿನ

ಅಕ್ಕಿಯನ್ನು ಅಂಗಳದಲ್ಲಿ ಚೆಲ್ಲಿಸುತ್ತಾನೆ. ಮಾರಯ್ಯ ಅವನ್ನೆಲ್ಲ ಸಂತೋಷದಿಂ

ಆಯ್ದು ತಂದು ಹೆಂಡತಿಯ ಕೈಯಲ್ಲಿ ಕೊಡುತ್ತಾನೆ. ಅದನ್ನು ಕಂಡು ಆಕೆ ಖುಷಿಪಡು

ಬದಲು ಕೋಪತಾಳುತ್ತಾಳೆ. “ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಇದು ನಿಮ್

ಮನವೋ ಬಸವಣ್ಣನ ಅನುಮಾನದ ಚಿತ್ರವೊ ?..... ಆಸೆಯೆಂಬುದು ಅರಸಿಂಗಲ್ಲದೆ

ಶಿವಭಕ್ತರಿಗುಂಟೆ ? ಈಸಕ್ಕಿಯಾಸೆ ನಿಮಗೇಕೆ ? ಈಶ್ವರನೊಪ್ಪ... ಇದು ಮಾರಯ್

ಅಮರೇಶ್ವರಲಿಂಗಕ್ಕೆ ಸಲ್ಲದ ಬೋನ....ನಮಗೆಂದಿನಂದವೆ ಸಾಕು.... ಕೊಂಡು ಹೋ

ಅಲ್ಲಿಯೇ ಸುರಿದು ಬನ್ನಿ ” ಎಂದು ಹೇಳಿಕಳಿಸುತ್ತಾಳೆ. ಹಾಗೆಯೇ ತಮ್ಮ ಮನ ಪರೀಕ್

ಬಯಸಿದ ಬಸವಣ್ಣನಿಗೆ ತನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮರನ್ನು

೧೧ . ವಚನ ಸಾಹಿತ್ಯ : ಡಾ . ಎಂ . ಚಿದಾನಂದಮೂರ್ತಿ , ಪು. ೧೪೮


ಪ್ರಸ್ತಾವನೆ

ಕರೆದುಕೊಂಡು ತಮ್ಮ ಮನೆಗೆ ಆರೋಗಣೆಗೆ ಬರಬೇಕೆಂದು ಆಹ್ವಾನಿಸಲೂ ತಿಳಿಸ

ಬಂದ ಜಂಗಮಕ್ಕೆಲ್ಲಾ ಭಕ್ತಿಯಿಂದ ಅಡುಗೆಯನ್ನು ಬಡಿಸಿ ತೃಪ್ತಿಪಡಿಸ

ಅಚ್ಚರಿಪಡುತ್ತಾರೆ. 'ಕಾಯಕದ ಮಹಿಮೆ ಅರಿವಾಯಿತು' ಎಂದು ಪ್ರಭುದೇವರ

ಕೊಂಡಾಡಿದರೆ, ' ಮನೆನೋಡಾಬಡವರು, ಮನ ನೋಡಾಸಂಪನ್ನರು' ಎಂದು ಬಸವಣ್ಣ

ಉದ್ಗಾರ ತೆಗೆಯುತ್ತಾನೆ.

* ಲಕ್ಕಮ್ಮನ ೨೫ ವಚನಗಳು ಲಭ್ಯವಾಗಿವೆ. ಅಂಕಿತ ಮಾರಯ್ಯ ಪ್ರಿಯ

ಅಮರೇಶ್ವರಲಿಂಗ ಎಲ್ಲವೂ ಸನ್ನಿವೇಶ ಪ್ರೇರಣೆಯಿಂದ ಹುಟ್ಟಿದುವಾದುದರ

ಬಿಡಿಯಾಗಿದ್ದರೂ ಅವುಗಳಲ್ಲಿ ಭಾವದ ಏಕಸೂತ್ರತೆ ಕಂಡುಬರುತ್ತದೆ.

“ ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ ? ” ಎಂಬ ನಿಶ್ಚಲ ನಿಲುವು;

“ ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ? ” ಎಂಬ ಅರಿವು; “ಕೂಟಕ್ಕೆ

ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ ?” ಎಂಬ ಸಮತಾಭ

“ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ , ಇದು ನಿಮ್ಮ ಮನವೋ ಬಸವಣ್ಣನ

ಅನುಮಾನದ ಚಿತ್ತವೋ ? ” ಎಂದು ಬಸವಣ್ಣನ ಒಳ್ಳೆಯತನವನ್ನೇ ಪ್ರಶ್ನಿಸುವ ಕೆಚ್

“ ಅಯ್ದಿಹೆನೆಂಬ ಕಾಯಕದ ಅರಿಕೆ ಹಿಂಗಿತೆ, ನಾ ಮಾಡಿಹೆನೆಂಬ ತವಕ ಹಿಂಗಿತೆ ? ” ಎಂದು

ಆಸೆಬುರುಕ ಗಂಡನನ್ನೇ ಝಂಕಿಸಿ ಕೇಳುವಂತಹ ರೋಷ, “ ಮಾರಯ್ಯಪ್ರಿಯ ಅಮಲೇಶ್ವರ

ಲಿಂಗವುಳ್ಳನ್ನಕ್ಕರ ನನಗಾರ ಹಂಗಿಲ್ಲ ” ಎಂಬ ಆತ್ಮವಿಶ್ವಾಸ- ಇವು ಲಕ್ಕಮ್ಮನಲ್ಲಿ ಕಾಣುವ

ಒಟ್ಟು ಅವಳ ವ್ಯಕ್ತಿತ್ವದ ಅಂಶಗಳು.

ಗಂಡ ಕಾಯಕ ಮರತು ಅನುಭಾವಗೋಷ್ಠಿಯಲ್ಲಿ ಮೈಮರೆತಾಗ 'ಕಾಯಕ ನಿಂದಿ

ಹೋಗಯ್ಯ ಎನ್ನಾಳನೆ' ಎಂದು ಎಚ್ಚರಿಸಿ ಸಮಯಪ್ರಜ್ಞೆಯನ್ನು ಮಿಡಿದುದ

ಅಕ್ಕಿಯನ್ನು ಆಯ್ದು ತಂದಾಗ “ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ ... ಅಲ್ಲಿಯ

ಸುರಿದು ಬನ್ನಿ ” ಎಂದು ಮರಳಿ ಕಳಿಸಿದುದು, ಮಾಡುವ ಭಕ್ತಿಯಲ್ಲಿ ಅಹಂಕಾರತೋರಿ

“ ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು” ಎಂದು ವಿವೇಕ ತೋರಿದುದು, ಭಕ್ತಿಗೆ

ಪ್ರತಿಫಲವನ್ನು ಅಪೇಕ್ಷಿಸಿದಾಗ “ ಮಾಡಿ ನೀಡಿ ಹೋದಹೆನೆಂಬಾಗ ಕೈಲಾಸವೇನ

ಕೈಕೂಲಿಯೆ ? ” ಎಂದು ನೀರಾಪೇಕ್ಷ ನಿಷ್ಕಾಮಭಕ್ತಿ ಅನುಸರಿಸಲು ತಿಳಿಸಿದು

ವಿರಕ್ತಿ ನಷ್ಟವಾಗದ ಮುನ್ನ ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಿರಯ್ಯ ” ಎಂ

ಅರಿವಿನ ಮಾರ್ಗ ಅನುಸರಿಸಲು ಬೋಧಿಸಿದುದು - ಇವೆಲ್ಲ ಲಕ್ಕಮ್ಮ ಏರಿನಿಂತ ಆಧ

ನಿಲವನ್ನು ನಿದರ್ಶಿಸುತ್ತವೆ. ಇಲ್ಲಿ ಲಕ್ಕಮ್ಮ ಶರಣರು ಕೊಟ್ಟ ಸ್ತ್ರೀಸ್ವಾತಂತ್ರ್ಯ ವೃಕ್ಷದ

ಸತ್ಪಲವಾಗಿ ಕಾಣುತ್ತಾಳೆ.

೧೨ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ ( ಸಂ . ನಾಲ್ಕು : ಪು. ೭೪೫ ( ಮೈ . ಎ . ಎ.)
ಶಿವಶರಣೆಯರ ವಚನಸಂಪುಟ

“ ಆವ ಬೀಜ ಬೀಳುವಲ್ಲಿ ಮೊಳೆ ಮುಖ ಹಿಂಚುಮುಂಚುಂಟೆ ? ಮೂಲನಷ್ಟವ

ಅಂಕುರ ನಿಂದಿತ್ತು ” “ಕೈದಕೊಡುವರಲ್ಲದೆ ಕಲಿತನವಕೊಡುವರುಂಟೆ ? ಹೆಣ್ಣ ಕೊ

ಕೂಟಕ್ಕೊಳಗಾದವರುಂಟೆ ? ಕಳುವ ಚೋರಂಗೆ ಬಡವರೆಂದು ದಯವುಂಟೆ ? ” “ನಡೆಯಿಲ

ನುಡಿ ಅರಿವಿಂಗೆ ಹಾನಿ; ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾ

ಬಡತನವುಂಟೆ ? ನಿತ್ಯಂಗೆ ಮರಣವುಂಟೆ ? ” “ ಮನ ಶುದ್ಧವಿಲ್ಲದವಂ

ಬಡತನವಲ್ಲದೆ, ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನ

ಲಕ್ಷ್ಮಿ ತಾನಾಗಿಪ್ಪಳು”, ಎಂಬಂತಹ ಸೂತ್ರಬದ್ಧವಾದ ಮಾತುಗಳು ವಚನಗಳ

ಹೆಚ್ಚಿಸಿವೆ; ಲಕ್ಕಮ್ಮನ ಭಾವಶ್ರೀಮಂತಿಕೆಯನ್ನು ಪ್ರಕಾಶಿಸಿವೆ.

ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವ :

ಕಾಳವ್ವ ಏಕೈಕ ದಲಿತ ವಚನಕಾರ್ತಿ, ಪ್ರಮುಖ ಶೂದ್ರ ವಚನಕಾರನಾ

ಉರಿಲಿಂಗಪೆದ್ದಿಯ ಸತಿ . ಈಕೆಯ ಜೀವನಕ್ಕೆ ಸಂಬಂಧಿಸಿದ ಯಾವ ವಿಷಯವೂ

ದೊರಕುವುದಿಲ್ಲ .

ಈಗ ಕಾಳವ್ವಯ ೧೨ ವಚನಗಳು ದೊರೆತಿವೆ. 'ಉರಿಲಿಂಗಪೆದ್ದಿಗಳರಸ '

ಎಂಬುದು ಅವುಗಳ ಅಂಕಿತ. ಭಕ್ತನ ಲಕ್ಷಣ, ವ್ರತಾಚರಣೆಯ ಮಹತ್ವ , ಪ್ರಸಾದದ

ಮಹಿಮೆ , ಕಾಯಕನಿಷ್ಠೆ - ಇವು ಈಕೆಯ ವಚನಗಳಲ್ಲಿ ಕಂಡುಬರುವ ಮುಖ್ಯ ಅಂಶಗಳ

“ತೂಬದ ಕೊಳ್ಳಿಯಂತೆ ಉರಿವಾತ, ಹಸಿದು ತಂದು ಮಾಡುವಾತ . ಭಕ್ತರ ಕುಲವನೆ

ನಿಂದಿಸುವಾತ, ಒಡೆಯರೆಂಬ ತುಡುಗುಣಿಗಳು ಪೂಜೆಗೊಂಬಲ್ಲಿ ಅವರ ಮ

ಹಣ್ಣು ಕಾಯಿ ಪತ್ರೆಗಳ ತರುವ, ಹೋಗುವ ಬರುವ ಊಳಿಗವ ಕೊಂಬಾತ ಭ

ಇಂಥವರ ಸಂಗವನ್ನು ಬಿಡಬೇಕು. “ ಕೃತ್ಯ ಕಾಯಕವಿಲ್ಲದವರು ಭಕ್ತರಲ್

ಸತ್ಯಶುದ್ಧವಿಲ್ಲದುದು ಕಾಯಕವಲ್ಲ . ಆಸೆಯೆಂಬುದು ಭವದ ಬೀಜ, ನಿರಾಶೆಯ

ನಿತ್ಯಮುಕ್ತಿ ” “ ವಂದಿಸಿ ನಿಂದಿಸಿ ಕೊಂಬ ಪ್ರಸಾದವ ಉರಿಲಿಂಗಪೆದ್ದಿಗಳರಸನೊಲ್ಲ”

ಭಕ್ತ -ಕಾಯಕ- ಪ್ರಸಾದದ ಬಗೆಗೆ ಕಾಳನ್ನೆ ಇಟ್ಟುಕೊಂಡ ನಂಬಿಕೆಗಳು.

ವ್ರತಾಚಾರಗಳ ಬಗೆಗೆ ಇತರ ಶರಣೆಯರಂತೆ ಕಾಳವ್ವಯದೂ ಹೆಚ್ಚಿನ ಕಾಳಜಿ

ಆಕೆಯ ದೃಷ್ಟಿಯಲ್ಲಿ 'ವ್ರತವೆಂಬುದು ನಾಯಕರತ್ನ , ವ್ರತವೆಂಬುದು ಸುಪ್ರಾಣಿ

ಮುತ್ತು , ವ್ರತವೆಂಬುದು ಜೀವನ ಕಳೆ, ವ್ರತವೆಂಬುದು ಸುಯಿಧಾನ' ಇಂಥ '

೧೩ . ಡಾ . ಆರ್. ಸಿ. ಹಿರೇಮಠ ಅವರ ಸಂಗ್ರಹದಲ್ಲಿ ಒಂದು ವಚನ ಒಂದು ಸಾಲು ವ್ಯತ್ಯಾಸದೊ
ಪುನರುಕ್ತವಾಗಿದೆ. ಹೀಗಾಗಿ ಅಲ್ಲಿನ ಸಂಖ್ಯೆ ೧೩ ಎಂದಿದೆ. (ನೋಡಿಶಿವಶರಣೆಯರ ವಚನಗ

ಸಮಗ್ರ ಸಂಪುಟ , ಪು. ೩೮೮, ವಚನ ೨೦೯ ಮತ್ತು ಪು. ೩೯೦ ವಚನ ೨೧೪.)
ಪ್ರಸ್ತಾವನೆ

ಹೋದಾಗಳ ಇಷ್ಟಲಿಂಗದ ಕಳೆ ನಷ್ಟ , ಅವರು ಲಿಂಗವಿದ್ದೂ ಭವಿಗಳು, ಪ್ರಾಣವಿಲ್ಲದ

ದೇಹದಂತೆ, ವ್ರತ ತಪ್ಪಲು ಉರಿಲಿಂಗಪೆದ್ದಿಗಳರಸನೋಲ್ಲ' - ಇದು ಆಕೆಯ ವ್ರತ ನಿಷ್ಠೆಯ

ಪರಾಕಾಷ್ಠೆಯ ಚಿತ್ರ .

ಈ ಕೃತಯುಗಾದಿ ಕೃಲಿಯುಗಾಂತ್ಯದ ವರೆಗೆ ಬೇರೆ ಬೇರೆ ಯುಗದಲ್ಲಿ ಬೇರೆ ಬ

ಪ್ರಾಣಿಗಳನ್ನು ಯಜ್ಞಕ್ಕೆ ಬಲಿಕೊಡುತ್ತ ಬಂದವರು ವಿಪ್ರರು. 'ಶಿವಭಕ್ತರು ಹೊತ್ತಾ

ಗುರುಲಿಂಗಜಂಗಮಕ್ಕೆ ಶರಣೆನ್ನದೆ ಮುನ್ನ ಬ್ರಾಹ್ಮಣನ ಕಂಡು ಶರಣಾರ

ಎಂಬತ್ನಾಲ್ಕು ಲಕ್ಷ ಯೋನಿಯಲ್ಲಿ ಹಂದಿಯ ಬಸುರಲ್ಲಿ ಬಪ್ಪುದು ತಪ್ಪದು' ಎಂದು

ಹೇಳುವ ಕಾಳವ್ವಯ ಮಾತಿನಲ್ಲಿ ಶತಶತಮಾನಗಳಿಂದ ತುಳಿಸಿಕೊಳ್ಳುತ್ತ ಬಂದ ನೊಂದ

ನೋವಿನ ಧ್ವನಿ ಅಡಗಿದೆ. ' ಈಕೆಯ ನೊಂದುಬೆಂದು ಬಂದ ಈ ನುಡಿಗಳಲ್ಲಿ ಯಾರ

ಅಳಿಸಲಾಗದ ದಟ್ಟ ಸತ್ಯ ಅಡಗಿದೆ.' ಒಬ್ಬ ಸಾಮಾನ್ಯ ಹೆಣ್ಣು ಮಗಳು ಸ್ಥಾಪಿತ ವ್ಯವಸ್ಥೆಯ

ಎದುರು ಹೀಗೆ ದಿಟ್ಟತನದಿಂದ ಧ್ವನಿ ಎತ್ತಿ ನಿಂತುದು ಶರಣರ ಚಳುವಳಿಯ ಸಾರ್ಥಕ


ಒಂದು ಜೀವಂತ ಸಾಕ್ಷಿಯಾಗಿದೆ.

ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ :

ಈಕೆಯ ಜೀವನ ವಿವರ ತಿಳಿದಿಲ್ಲ . ಎಡೆಮಠದ ನಾಗಿದೇವಯ್ಯನ ಪತ್ನಿಯಾದ ಈಕೆ


ಕಾಂಚೀನಗರದಿಂದ ಪತಿಯೊಡನೆ ಕರ್ನಾಟಕಕ್ಕೆ ಬಂದಳೆಂದು ತಿಳಿದುಬರುತ್ತದೆ.

ಒಂದು ವಚನ ಮಾತ್ರ ದೊರೆತಿದ್ದು , ನಿಜಗುಣೇಶ್ವರಲಿಂಗ' ಎಂಬ ಅಂಕಿತವನ್ನು

“ ವ್ರತವುಶಿವಭಕ್ತನಿಗೆ ಮಾತ್ರ ಸಲ್ಲುತ್ತದೆ, ಸಾಮಾನ್ಯನಿಗಲ್ಲ ' ಎನ್ನುತ್ತ ಆಕೆ

ತಿಂದವರಿಲ್ಲ , ವ್ರತಭ್ರಷ್ಟನ ಕೂಡಿದವರಿಲ್ಲ' ಎಂದು ಪ್ರತಬಾಹಿರನನ್ನು ನಿಂದಿ

' ನಾಯಿಗೆ ನಾರಂಗವಕ್ಕುವುದೆ ?' ಎಂಬ ಮಾತಿನಲ್ಲಿ ಅಜ್ಞಾನಿ ಮತ್ತು ಪರತತ್ವಗಳಿಗೆ ನಾಯ

ನಾರಂಗಗಳನ್ನು ಹೋಲಿಸಿರುವುದು ಅರ್ಥಪೂರ್ಣವೆನಿಸಿದೆ.

ಕದಿರಕಾಯಕದ ಕಾಳವ್ವ :

ಹೆಸರಿನ ಹಿಂದೆ ಸೇರಿದ ವಿಶೇಷಣದಿಂದ ಈಕೆ ರಾಟಿಯಿಂದ ನೂಲು ತೆಗೆಯ

ಕಾಯಕದವಳೆಂದು ತಿಳಿದುಬರುತ್ತದೆ. ಕಾಲ ೧೧೬೦ . 'ಗುಮ್ಮೇಶ್ವರ' ಅಂಕಿತದಲ್ಲಿ ಈಕೆ

ಒಂದು ವಚನ ಮಾತ್ರ ದೊರೆತಿದೆ. ಕೇವಲ ಎರಡು ಸಾಲಿನ ಅದರಲ್ಲಿ ಕಾಳವ್ವ

ಕಾಯಕದ ಪರಿಭಾಷೆ ಬಳಸಿ ವ್ರತಹೀನರನ್ನು ಕೂಡದಿರಲು ತಿಳಿಸುತ್ತಾ

ಮುರಿಯಲು ಹೇಗೆ ಕಾರ್ಯ ನಿಲ್ಲುವುದೋ ಹಾಗೆ ವ್ರತಹೀನನನ್ನು ಕೂಡಿದರೆ

ವ್ಯರ್ಥ ಎಂಬ ಆಶಯ ಇಲ್ಲಿದೆ. ವ್ರತನಿಷ್ಠೆಯೇ ಇವಳ ಜೀವನದ ಪ್ರಮುಖ ಮೌಲ್ಯವ

ಕದಿರ ರೆಮ್ಮವ್ವ :

ಈಕೆಗೆ ರೆಬ್ಬವ್ವ ಎಂದೂ ಕರೆಯಲಾಗುತ್ತದೆ. ಕಾಳವ್ವಯಂತೆ ಈಕೆಯೂ ಕದ

ಕಾಯಕದವಳು . ಕವಿಚರಿತೆಕಾರರು ಈಕೆಯ ಕಾಲ ಸುಮಾರು ೧೧೬೦ ಎಂದು ಊಹಿಸಿದ್ದರೆ,


ಶಿವಶರಣೆಯರ ವಚನಸಂಪುಟ

ಡಾ . ಎಲ್ . ಬಸವರಾಜು ಅವರು ಈಕೆಯ ವಚನಗಳಲ್ಲಿ ಬಳಕೆಯಾದ ' ಪರದಳ ವಿಭಾಡ'

'ಗಜವೇಂಟೆಕಾರ' ಎಂಬ ಪದಗಳನ್ನು ಗಮನಿಸಿ, ಇವು ವಿಜಯನಗರದ ಅರಸರ ಕಾಲದ

ಬಳಕೆಗೆ ಬಂದ ಬಿರುದಾವಳಿಗಳು , ಆದ್ದರಿಂದ ಈಕೆ ಸು . ೧೪೩೦ ರಲ್ಲಿರಬೇಕು ಎಂದು

ಹೇಳುತ್ತಾರೆ. ಹರಿಹರ ತನ್ನ ಲಿಂಗಾರ್ಚನೆಯ ರಗಳೆಯಲ್ಲಿ ಇತರ ಶಿವಶರಣೆಯರ ಜೊ

ರೆಮ್ಮವೈಯನ್ನೂ ಸ್ಮರಿಸಿದ್ದಾನೆ. ಪಾಲ್ಕುರಿಕೆ ಸೋಮನಾಥ ತನ್ನ ಪಂಡಿತಾ

ಚಾರಿತ್ರದಲ್ಲಿನ ಗಣಸಹಸ್ರನಾಮದಲ್ಲಿ ಈಕೆಯ ಹೆಸರನ್ನೂ ಸೇರಿಸಿದ್ದಾನೆ. ಕಾರಣ

ಕವಿಚರಿತ್ರೆಕಾರರ ಅಭಿಪ್ರಾಯದಂತೆ ಈಕೆ ಬಸವಸಮಕಾಲೀನಳೆಂದು ಗ್ರಹಿಸುವುದೇ

ಸಮಂಜಸವೆನಿಸುತ್ತದೆ. ಬಸವಾದಿ ಶರಣರ ವಚನಗಳ ಜೊತೆ ಈಕೆಯ ವಚನಗಳೂ

' ಸಕಲಪುರಾತನ ವಚನಗಳು' ಮತ್ತು ಇತರ ಸ್ಥಲಕಟ್ಟಿನ ಕೃತಿಗಳಲ್ಲಿ ಸಮಾವೇಶ

ಗೊಂಡಿರುವುದು ಈ ಅಭಿಪ್ರಾಯಕ್ಕೆ ಪೋಷಕವಾಗಿದೆ. ಸು. ೧೬೨೦ರಲ್ಲಿದ್ದ ಶಂ

ಇಷ್ಟಲಿಂಗ ಚಾರಿತ್ರ್ಯ ', ಅಜ್ಞಾತ ಕವಿಯ 'ನೂರೆಂಟುಶರಣೆಯರ ಅಷ

ಕೃತಿಗಳಲ್ಲಿಯೂ ಈಕೆಯ ಹೆಸರು ಉಲ್ಲೇಖವಾಗಿದೆ.

ಕವಿಚರಿತೆಕಾರರು ಈಕೆ ಕದಿರ ರೆಮಯ್ಯನ ಸತಿಯಾಗಿರಬಹುದೆಂದುಊಹಿಸಿ

ಕದಿರ ರೆಮಯ್ಯನ ಕಥೆ ಹೆಚ್ಚಾಗಿ ಎಲ್ಲ ವೀರಶೈವ ಪುರಾಣಗಳಲ್ಲಿ ಪ್ರಾಸಂಗಿಕವ

ಬರುತ್ತದೆ. ಆದರೆ ಅಲ್ಲೆಲ್ಲಿಯೂ ರೆಮ್ಮವ್ವಯ ಪ್ರಸ್ತಾಪವಿಲ್ಲ . ಇಬ್ಬರ ಹೆಸರಿನ ಹ

ಹತ್ತಿದ ವಿಶೇಷಣ ಸಾಮ್ಮದಿಂದ ಕವಿಚರಿತೆಕಾರರು ಮೇಲಿನಂತೆಊಹೆ ಮಾಡಿದಂತಿದೆ. ಆದ

ಇಬ್ಬರಿಗೂ 'ಕದಿರೆ' ಎಂಬ ವಿಶೇಷಣ ಹತ್ತಲು ಕಾರಣಗಳು ಬೇರೆಯೇ ಆಗಿವೆ.

ರೇಮಯ್ಯನಿಗೆ ಹತ್ತಿದ ವಿಶೇಷಣ ಅವನ ಸ್ಥಳವನ್ನು ಸೂಚಿಸಿದರೆ, ರೆಮ್ಮವ್ವಯದು

ವೃತ್ತಿ ಸೂಚಿಯಾಗಿ ಬಂದಿದೆ. ಹೀಗಾಗಿ ಈಕೆ ರೇಮಯ್ಯನ ಸತಿ ಎಂದು ನಂಬಲು ಸದ್ಯ

ಖಚಿತ ಆಧಾರಗಳು ಇಲ್ಲವೆಂದೇ ಹೇಳಬೇಕಾಗುತ್ತದೆ.

ರೆಮ್ಮವ್ವ ಒಬ್ಬ ನಿಷ್ಠಾವಂತ ಕಾಯಕಜೀವಿ. ರಾಟೆಯಿಂದ ನೂಲು ತೆಗೆಯು

ಅದರಿಂದ ಬಂದ ಆದಾಯದಿಂದ ಗುರುಲಿಂಗಜಂಗಮ ಸೇವೆ ಮಾಡುವುದು ,

ಶರಣರ ಅನುಭಾವಗೋಷ್ಠಿಯಲ್ಲಿ ಭಾಗವಹಿಸುವುದು ಅವಳ ನಿತ್ಯನೇಮವಾಗಿತ್

ರೆಮ್ಮವೈಯ ೪ ವಚನಗಳು ಮಾತ್ರ ದೊರೆತಿವೆ. ಅಂಕಿತ 'ಕದಿರ ರೆಮ್ಮಿಯೊಡೆ

ಗುಮ್ಮೇಶ್ವರ'. ಎರಡು ವಚನಗಳಲ್ಲಿ ಸತಿಪತಿಭಾವ ವ್ಯಕ್ತವಾಗಿದ್ದರೆ, ಉಳಿದ ಒಂದರಲ್ಲಿ

ಶರಣರ ಸ್ತುತಿ, ಇನ್ನೊಂದರಲ್ಲಿ ಕಾಯಕದ ಮಹತಿ ಅಡಕವಾಗಿದೆ. ನಾಲ್ಕರಲ್ಲಿ ಮೂರ

ಬೆಡಗಿನ ವಚನಗಳಾಗಿದ್ದರೆ, ಒಂದು ಸರಳ ವಚನವೆನಿಸಿದೆ. ಬೆಡಗಿನ ವಚನಗಳಿಗೆ ಸಿಂಗಳದ

ಸಿದ್ದಬಸವರಾಜ ಟೀಕೆಯನ್ನು ಬರೆದಿದ್ದಾನೆ.

“ ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ ” ಎಂಬ ವಚನದಲ್ಲಿ ತನ್ನ ಲೌಕ

ಕಾಯಕದ ಕ್ರಿಯೆಗಳನ್ನೆಲ್ಲ ಪಾರಲೌಕಿಕ ಪರಮಾತ್ಮನ ಸಂಬಂಧವಾದ


೪೭
ಪ್ರಸ್ತಾವನೆ

ಅನುಭವಕ್ಕೆ ಹೊಂದಿಸಿ ಹೇಳಿದ್ದಾಳೆ. ಮತ್ತೊಂದು ವಚನದಲ್ಲಿ ಬಸವಣ್ಣ , ಚೆನ್ನಬ

ಪ್ರಭುದೇವ ಈ ಮೂವರು ಶರಣಶ್ರೇಷ್ಠರು ತನ್ನ ಸ್ಕೂಲ- ಸೂಕ್ಷ್ಮ -ಕಾರಣ ತನುಗಳೆಂದೂ

ಅವರ ಕಾರುಣ್ಯದಿಂದ ತಾನು ಬದುಕಿ, ಜೀವನ ಸಾರ್ಥಕಪಡಿಸಿಕೊಂಡೆನೆಂದೂ ತ

' ಎಲ್ಲರ ಗಂಡಂದಿರು ಪರದಳ ವಿಭಾಡರು, ಎನ್ನ ಗಂಡ ಮನದಳ ವಿಭಾಡ'' ಅರಿವೆಂಬ ಕದ

ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತ್ತು ನೂಲು, ಕದಿರು ತುಂಬಿತ್

ಮಾತುಗಳು ಸುಂದರವಾಗಿವೆ .

ವಚನಗಳ ಭಾಷೆ ಸರಳವಾಗಿದ್ದರೂ ಭಾವ ಬಂಧುರವಾಗಿದೆ. ಲೌಕಿಕ- ಪಾರಲೌಕಿ

ಗಳನ್ನು ಸಮೀಕರಿಸಲು ಬಳಸಿದ ಬೆಡಗಿನ ವಿಧಾನ ಸಮರ್ಪಕವೆನಿಸಿದೆ.

ಕನ್ನಡಿಕಾಯಕದ ರೇವಮ್ಮ :

- ಈಕೆಗೆ ರೇಮಮ್ಮ ರೆಮ್ಮವ್ವ ಎಂಬ ನಾಮಾಂತರಗಳೂ ಉಂಟು. ಹೆಸರಿನ ಹಿಂದ

ಸೇರಿದ ವಿಶೇಷಣದಿಂದ ಈಕೆ ಕ್ಷೌರಿಕ ಜಾತಿಗೆ ಸೇರಿದವಳೆಂದು ತಿಳಿಯುತ್ತದೆ. 'ಕನ್ನಡ

ಕಾಯಕದ ಅಮ್ಮಿದೇವಯ್ಯ ' ಎಂಬ ಹೆಸರಿನ ಒಬ್ಬ ವಚನಕಾರನೂ ಇದ್ದು ಈಕೆಗೂ

ಅವನಿಗೂ ಏನಾದರೂ ಸಂಬಂಧವಿದೆಯೋ ಹೇಗೋ ತಿಳಿಯದು. 'ಕನ್ನಡಿ ಕಾಯಕ'


ಎಂದರೆ 'ಕೋರಿಕ ವೃತ್ತಿ ' ಎಂದು ತಿಳಿಯಲು ಅಮ್ಮಿದೇವಯ್ಯನ ವಚನಗಳಲ್ಲಿ ಈ ವೃತ್ತಿಗೆ

ಸಂಬಂಧಿಸಿದ ಕತ್ತಿ , ಕತ್ತರಿ, ಕನ್ನಡಿ ಮೊದಲಾದ ವಸ್ತುಗಳ ಬಳಕೆಯಾಗಿರುವು

ಕಾರಣವಾಗಿದೆ. ರೇಮಮ್ಮನೂ ತನ್ನ ವಚನದಲ್ಲಿ ಕನ್ನಡಿಯ ಉಲ್ಲೇಖ ಮಾಡಿದ್ದಾಳೆ


ಸು . ೧೧೬೦.

ರೇವಮ್ಮನ ಒಂದೇ ಒಂದು ವಚನ ದೊರೆತಿದ್ದು , 'ಸದ್ಗುರುಸಂಗ ನಿರಂಗಲ

ಎಂಬ ಅಂಕಿತವನ್ನು ಹೊಂದಿದೆ. ಅದರಲ್ಲಿ ಆಕೆ 'ಕೈಯಲು ಕನ್ನಡಿ ಇರಲು ತನ್ನ

ನೋಡಬಾರದೆ ? ಲಿಂಗ ಜಂಗಮ ಪ್ರಸಾದಕ್ಕೆ ತಪ್ಪಿದಲ್ಲಿ ಕೊಲ್ಲಬಾರದೆ ?' ಎಂ

ಗಣಾಚಾರದ ನಿಷ್ಠೆಯನ್ನು ಮೆರೆಯುತ್ತಾಳೆ, 'ಕೊಂದರೆ ಮುಕ್ತಿಯಿಲ್ಲವೆಂಬವರ

ಪಡಿಹಾರನ ಪಾದರಕ್ಷೆಯನಿಕ್ಕುವೆ' ಎಂದು ಸವಾಲು ಒಡ್ಡುತ್ತಾಳೆ. ಅದನ್ನು

ಎದುರಿಸದವರನ್ನು 'ಭ್ರಷ್ಟಭವಿಗಳೆಂದು ಕರೆದು, 'ಸತ್ಯ ಕುನ್ನಿಯ ಬಾಲವ ನಾಲಗೆ

ಮುರುಟಿರೊ ' ಎಂದು ಕಟುಮಾತುಗಳಿಂದ ಚುಚ್ಚುತ್ತಾಳೆ. ಇಲ್ಲಿ ರೇವಮ್ಮನ ಪ್ರಸಾದಪ್ರೀತ

ವ್ರತಾಚಾರನಿಷ್ಠೆ , ಅವುಗಳಿಗೆ ಚ್ಯುತಿ ತಂದವರ ಬಗೆಗಿನ ಕೋಪ ಪರಿಣಾಮಕಾರಿಯ

ಮೂಡಿಬಂದಿವೆ.

ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವ :

ಸಿದ್ಧನಂಜೇಶನ ಗುರುರಾಜಚಾರಿತ್ರದಲ್ಲಿ ಬರುವ ಈಕೆಯ ಹೆಸರಿನ ಉಲ್ಲೇ

ವೊಂದನ್ನು ಬಿಟ್ಟರೆ ಮತ್ಯಾವ ಸಂಗತಿಗಳೂ ದೊರಕುವುದಿಲ್ಲ. ಸು . ೧೧೬೦ ರಲ್ಲಿ ಈಕ


೪೮
ಶಿವಶರಣೆಯರ ವಚನಸಂಪುಟ

ಇದ್ದಿರಬೇಕೆಂದು ಕವಿಚರಿತೆಕಾರರು ಊಹಿಸಿದ್ದಾರೆ. ' ಸಕಲಪುರಾತನರ ವಚನಗಳು

ಶೀಲಸಂಪಾದನೆ' ಎಂಬ ವಚನ ಸಂಕಲನಗಳಲ್ಲಿ ಈಕೆಯ ಹೆಸರಿನಡಿಯಲ್ಲಿ ಒಂದು

ಮಾತ್ರ ದೊರೆತಿದೆ. 'ನಿಜಶಾಂತೇಶ್ವರ' ಎಂಬುದು ಅದರ ಅಂಕಿತ, ವ್ರತಾಚಾರನಿಷ್

ಅದರ ಆಶಯ . ' ಬಂಜೆ ಆವಿಂಗೆಕ್ಷೀರವುಂಟೆ ? ವ್ರತಹೀನನ ಬೆರೆಯಲುಂಟೆ ? ” ಎ

ಪ್ರಶ್ನಿಸುವುದರ ಮೂಲಕ ವ್ರತಹೀನರನ್ನು ಬೆರೆಯಬಾರದು. ಬೆರೆತರೆ ಬಂಜೆ

ಸಹವಾಸದಂತೆ ವ್ಯರ್ಥ ಎಂದು ತಿಳಿಸುತ್ತಾಳೆ. ಆ ಮಾತನ್ನು ಮನ್ನಿಸದೆ ಕೆಲವ

ಮುಂದುವರೆಯಬಹುದು. ಅಂಥವರನ್ನು ಕುರಿತು, ಅಷ್ಟೇ ಅಲ್ಲ , ತನ್ನ ಅಧಿದೈವ

ನಿಜಶಾಂತೇಶ್ವರನನ್ನು ಸಂಬೋಧಿಸಿ 'ನೀ ಬೆರೆದಡೂ ಬೆರೆ , ನಾನೊಲ್ಲೆ' ಎಂದು ಆಕ

ನಿಜವ್ರತ ನಿಷ್ಠಾಭಕ್ತಿಯ ನಿಲವನ್ನು ನಿರ್ಧಾರದ ಮಾತುಗಳಲ್ಲಿ ಸ್ಪಷ್ಟಪಡಿಸುತ್ತಾ

ಕಾಲಕಣ್ಣಿಯ ಕಾಮಮ್ಮ :

ಈಕೆಯ ಜೀವನ ಸಂಗತಿಗಳೇನೂ ಲಭ್ಯವಿಲ್ಲ . ಕವಿಚರಿತೆಕಾರರು ಈಕೆಯ ಕಾಲ

ಸು . ೧೫೦೦ ಎಂದಿದ್ದಾರೆ. ' ಸಕಲಪುರಾತನರ ವಚನಗಳು' ಕಟ್ಟುಗಳಲ್ಲಿ ಬಸವಾದಿ ಶ

ಸಮಕಾಲೀನ ಶರಣೆಯರ ಜೊತೆಗೆ ಈಕೆಯ ವಚನವೂ ಸೇರಿಕೊಂಡಿರುವುದರಿಂದ, ಇವಳೂ

ಅದೇ ಕಾಲದವಳಾಗಿರುವ ಸಂಭವವಿದೆ. ಈಕೆಯ ಹೆಸರಿನ ಹಿಂದ ಸೇರಿದ ' ಕಾಲಕಣ್ಣಿ '

ಎಂಬುದು ವೃತ್ತಿಸೂಚಕ ವಿಶೇಷಣವಾಗಿರಬೇಕು. 'ಕಣ್ಣಿ ' ಎಂದರೆ ದನಕರುಗಳನ್ನು ಕ

ಒಂದು ಹಗ್ಗ ವಿಶೇಷ. ಇಂಥ ಹಗ್ಗವನ್ನು ಹೊಸೆದು ಮಾರುವ ಕಾಯಕ ಇವಳದಾಗಿರಬೇಕು.

ಹಿಂದೆ ಕುಂಚಿಕೊರವರು ಈ ಕಾಯಕವನ್ನು ಮಾಡುತ್ತಿದ್ದುದನ್ನು , ಇಂದಿಗೂ ಕೊ

(ಕೊರಸರು) ಇದನ್ನು ಮುಂದುವರಿಸಿಕೊಂಡು ನಡೆದಿರುವುದನ್ನು ಗಮನ

ಕೊರವಜಾತಿಗೆ ಸೇರಿದವಳಾಗಿರಬೇಕೆಂದು ಊಹಿಸಲವಕಾಶವಿದೆ.

' ನಿರ್ಭಿತ ನಿಜಲಿಂಗ' ಎಂಬ ಅಂಕಿತದಲ್ಲಿ ಈಕೆಯ ಒಂದು ವಚನ ಮಾ

ದೊರೆತಿದೆ. ಅಂಕಿತಕ್ಕನುಗುಣವಾಗಿ ಈಕೆ ಸ್ವಭಾವತಃ ನಿರ್ಭಿಡೆಯ ವ್ಯಕ್ತಿಯ

ನಿರ್ಭೀತಿಯಿಂದ ವ್ರತಭ್ರಷ್ಟರನ್ನು ನಿಂದಿಸುತ್ತಾಳೆ. “ವ್ರತಭ್ರಷ್ಟರ ನಿಟ್ಟೂರಸುವೆ, ಸುಟ್

ತುರತುರನೆ ತೂರುವೆ ” ಎಂಬ ಮಾತಿನಲ್ಲಿ ಅವಳ ವ್ರತನಿಷ್ಠೆಯ ತೀವ್ರತೆಯಿದೆ. ಗಡು

ಆಡುನುಡಿಯ ಪ್ರಯೋಗ ಧ್ವನಿರಮ್ಯತೆಯನ್ನು ಹೆಚ್ಚಿಸಿದೆ. ವಚನಾರಂಭದ ಎರಡು

ಸಾಲುಗಳಲ್ಲಿ ತನ್ನ ವೃತ್ತಿಪರಿಭಾಷೆಯನ್ನು ಬಳಸಿ ವೀರಶೈವದ ಮೌಲಿಕ ತತ್ವಗಳಾದ ಗುರ

ಲಿಂಗ- ಜಂಗಮದ ಸುತ್ತ ಸುತ್ತುವ ಸಾಧಕನ ಮನಸ್ಸು - ಅಂತಃಕರಣಗಳ ವ್ಯಾಪಾರವನ್ನು ತುಂ

ಸೊಗಸಾಗಿ ಚಿತ್ರಿಸಿದ್ದಾಳೆ. “ ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ, ಗುರುಲ

ಕಾಲಕಟ್ಟುವೆ” ಎಂಬಲ್ಲಿ ಸದಾ ಸಂಚರಿಸುವ ಕರಣಂಗಳನ್ನು ಲಿಂಗದಲ್ಲಿ

ಕಲ್ಪನೆ ನಿಜಕ್ಕೂ ಅರ್ಥಪೂರ್ಣವಾದುದು. ವೀರಶೈವರ ನಿತ್ಯ ಆರಾಧ್ಯ ತತ್ವ

ಗುರುಲಿಂಗಜಂಗಮಗಳು ಸದಾ ತನ್ನ ಬಳಿ ಇರಲೆಂಬ ಅಭೀಷ್ಟೆಯಿಂದ ಮಾನವರೂಪ


ಪ್ರಸ್ತಾವನೆ

ಗ್ರಹಿಸಿಕೊಂಡು, ಅವುಗಳ ಕಾಲನ್ನು ಕಟ್ಟಿ ಆರಾಧಿಸಬೇಕೆಂಬ ಹಂಬಲವನ್ನು ವ

ಕಾಮಮ್ಮ ಹಾಗೆ ಪೂಜಿಸದವರನ್ನು ವ್ರತಭ್ರಷ್ಟರು ಎಂದು ನಿರ್ಭೀತಿಯಿಂ

ಹೀಗೆ ಗುರುಲಿಂಗಜಂಗಮರ ಅಂತಃಕರಣಪೂರ್ವಕವಾದ ಆರಾಧನೆಯ ಮಹತ್ವವನ್ನು

ಹೇಳುವುದೇ ಈಕೆಯ ವಚನದ ಮುಖ್ಯ ಉದ್ದೇಶವಾಗಿದೆ.

ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ :

ಹೆಸರಿನ ಹಿಂದೆ ಸೇರಿದ ವಿಶೇಷಣದಿಂದ ಈಕೆ ಕೊಂಡೆಮಂಚಣ್ಣನ ಪತ್ನಿ ಎಂದು

ತಿಳಿದುಬರುತ್ತದೆ. ಕೊಂಡೆಮಂಚಣ್ಣ ಬಿಜ್ಜಳನ ಆಸ್ಥಾನದಲ್ಲಿ ಒಬ್ಬ ಮಂತ್ರಿಯ

ಬಸವಣ್ಣನ ಬಗೆಗೆ ಚಾಡಿ ಹೇಳುತ್ತಿದ್ದ ಎಂದು ವೀರಶೈವಪುರಾಣ, ಕಾವ್ಯಗಳಲ್ಲಿ

ಉಕ್ತವಾಗಿದೆ. ಆದರೆ ಈತ ನಿಜವಾಗಿ ಬಸವವಿರೋಧಿಯಾಗಿರಲಿಲ್ಲ ; ಗುಪ್ತ ಶಿವಭ

ನಾಗಿದ್ದು, ಬಹಿರಂಗದಲ್ಲಿ ವೈಷ್ಣವ ಭಕ್ತನಂತೆ ನಟಿಸುತ್ತ ಬಸವಭಕ್ತಿಯನ್ನು ಮೆ


ಪರೋಕ್ಷವಾಗಿ ಸಹಾಯಮಾಡುತ್ತಿದ್ದ ; ಗುಪ್ತ ಭಕ್ತನಾದುದರಿಂದ ಈತನಿಗೆ ಗು

ಮಂಚಣ್ಣನೆಂದು, ಧೂಪದಿಂದ ಶಿವನನ್ನು ಅರ್ಚಿಸುತ್ತಿದ್ದುದ

ಮಂಚಣ್ಣನೆಂದು, ಬಹಿರಂಗದಲ್ಲಿ ಚಾಡಿಹೇಳುತ್ತಿದ್ದುದರಿಂದ ಕೊಂಡೆಯ ಮಂಚಣ್ಣ

ಕರೆಯಿಸಿಕೊಳ್ಳುತ್ತಿದ್ದ , ಹೀಗಾಗಿ ಕೊಂಡೆಯ ಮಂಚಣ್ಣ , ಗುಪ್ತ ಮಂಚಣ್ಣ , ಧ

ಮಂಚಣ್ಣ - ಈ ಮೂವರು ಬೇರೆ ಬೇರೆ ವ್ಯಕ್ತಿಗಳಲ್ಲ , ಒಬ್ಬನೇ ವ್ಯಕ್ತಿಯ ನಾಮಾಂತರಗಳು

ಎಂಬಂತೆ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರದಲ್ಲಿ ಬರುವ ವಿವರಗಳಿಂದ


ತಿಳಿದುಬರುತ್ತದೆ. ೧೪ ಗುಪ್ತ ಮಂಚಣ್ಣ ' ನಾರಾಯಣಪ್ರಿಯ ರಾಮನಾಥ' ಎಂಬ ಅಂಕಿತ

ವಚನಗಳನ್ನು ಬರೆದಿದ್ದಾನೆ. ಈ ವಚನಕಾರನೆ ಕೊಂಡೆಯ ಮಂಚಣ್ಣ . ಇವನ ಹೆಂಡತ

ಲಕ್ಷ್ಮಮ್ಮ . ಆದರೆ ಅವನಿಗೆ ಸಂಬಂಧಿಸಿದ ಕಥೆಗಳಲ್ಲಿ ಈಕೆಯ ಹೆಸರು ಬರುವುದಿಲ್ಲ .

' ಸಕಲಪುರಾತನರ ವಚನಗಳು' ಕಟ್ಟುಗಳಲ್ಲಿ ಈಕೆಯನ್ನು ಕೊಂಡೆ ಮಂಚಣ್ಣನ ಪುಣ್ಯ

ಎಂದು ಕರೆದಿರುವುದರಿಂದ ಅದನ್ನ ಒಪ್ಪಿಕೊಂಡು ನಡೆಯಲಾಗಿದೆ .

ಲಕ್ಷ್ಮಮ್ಮನ ಒಂದೇ ವಚನ ದೊರೆತಿದ್ದು ' ಅಗಜೇಶ್ವರಲಿಂಗ' ಎಂಬ ಅಂಕಿತವನ್

ಹೊಂದಿದೆ. ವ್ರತನಿಷ್ಠೆಯೇ ಅದರ ವಸ್ತುವಾಗಿದೆ. “ಆಯುಷ್ಯ ತೀರಲು ಮರಣ ,

ತಪ್ಪಲು ಶರೀರ ಕಡೆ. ಮೇಲುವ್ರತವೆಂಬ ತೂತರ ಮೆಚ್ಚ ನಮ್ಮ ಅಗಜೇಶ್ವರಲಿಂಗವು

ಎಂದು ಹೇಳುವಲ್ಲಿ , ವ್ರತ ಎನ್ನುವುದು ಪ್ರಾಣಸ್ವರೂಪ. ಅದಕ್ಕೆ ಭಂಗಬಂದರೆ ಪ್ರಾಣವೇ

ಹೋದಂತೆ - ಅಂದರೆ ಪ್ರಾಣವನ್ನೇ ಕೊಡಬೇಕು. ಹಾಗಲ್ಲದೆ ವ್ರತತಪ್ಪಿ ಮತ್ತೆ ಅದಕ್ಕೆ

೧೪. ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ ( ಸಂ . ೨) ಸಂ . ಡಾ . ಆರ್. ಸಿ. ಹಿರೇಮಠ


ಮತ್ತು ಡಾ . ಎಂ . ಎಸ್ . ಸುಂಕಾಪುರ, ಪುಟ ೧೬೪, ೨೫೧- ೨೫೩
೫೦
ಶಿವಶರಣೆಯರ ವಚನಸಂಪುಟ

ಪ್ರಾಯಶ್ಚಿತ್ತ ಉಂಟೆಂದು ಹೇಳುವ ಡಾಂಭಿಕರ ಮಾತನ್ನು ಅಗಜೇಶ್ವರಲಿಂಗ

ತನ್ನ ಗಣಾಚಾರನಿಷ್ಠೆಯನ್ನು ತೋರುತ್ತಾಳೆ, 'ಮೇಲುವ್ರತವೆಂಬ ತೂತರ ಮೆಚ

ಮಾತಿನಲ್ಲಿ ತೀಕ್ಷ್ಯ ನಿಂದೆಯಿದೆ.

ಕೊಟ್ಟಣದ ಸೋಮಮ್ಮ :

ಈಕೆಯ ಸ್ವವಿಷಯ ಸ್ವಲ್ಪವೂ ತಿಳಿದಿಲ್ಲ . ' ಸಕಲಪುರಾತನರ ವಚನಗಳು' ಮತ್ತು

'ಶೀಲಸಂಪಾದನೆ' ಎಂಬ ಕೃತಿಗಳಲ್ಲಿ ಈಕೆಯ ಹೆಸರಿನಡಿಯಲ್ಲಿ ಒಂದು ವಚನ ಮ

ದೊರೆಯುತ್ತದೆ. ಕವಚರಿತೆಕಾರರು ಈಕೆಯ ಕಾಲವನ್ನು ಸು. ೧೧೬೦ ಎಂದ

ಊಹಿಸಿದ್ದಾರೆ. ಇವಳು ಕಾಯಕ ಜೀವಿಯಾಗಿ ಬಸವಾದಿ ಶರಣರ ಮಧ್ಯೆ ಬಾಳಿ

ಸಾರ್ಥಕಪಡಿಸಿಕೊಂಡಿರಬೇಕು. ಇವಳ ಕಾಯಕ ಕೊಟ್ಟಣ ಕುಟ್ಟುವುದು. ಇದು

ಹೆಸರಿಗೆ ಹತ್ತಿದ ವಿಶೇಷಣ ಮತ್ತು ವಚನದಲ್ಲಿ ಬಳಸಿದ ದೃಷ್ಟಾಂತಗಳಿಂದ ವ್ಯಕ್ತವಾ

ನಿತ್ಯ ಭಕ್ತರ ಮನೆಯ ಅಕ್ಕಿಯನ್ನು ಕುಟ್ಟುವುದು , ಅದರಿಂದ ಬಂದ ಧನದಿ

ಗುರುಲಿಂಗಜಂಗಮಸೇವೆ ಮಾಡುವುದು ಇವಳ ದಿನಚರಿ.

- ಎಲ್ಲ ಶರಣೆಯರಂತ ವ್ರತಾಚಾರನಿಷ್ಠೆಯೇ ಸೋಮಮ್ಮನ ಜೀವನದ ಗುರಿಯೂ

ಆಗಿದೆ. ಅದನ್ನು ಆಕೆ ತನ್ನ ವಚನದಲ್ಲಿ ತನ್ನ ಕಾಯಕದ ದೃಷ್ಟಾಂತ ಬಳಸಿ

ಪರಿಣಾಮಕಾರಿಯಾಗಿ ನಿರೂಪಿಸಿದ್ದಾಳೆ. “ ಹದ ತಪ್ಪಿ ಕುಟ್ಟಲು ನುಚ್ಚಲ್ಲದೆ

ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ ” ಇದು ಆಕೆಯ ನೇರವಾದ ನಿರ್ಧಾ

ಮಾತು. ಇನ್ನೂ ಮುಂದುವರಿದು ಹೇಳುತ್ತಾಳೆ : “ ಅರಿಯದುದು ಹೋಗಲಿ, ಅರಿದ

ಬೆರೆದನಾದಡೆ ಕಾದ ಕತ್ತಿಯಲ್ಲಿ ಕಿವಿಯ ಕೊಯ್ಯರಯ್ಯ ", ವ್ರತಹೀನನನ್ನು ಬೆ

ಇರುವುದು ಭಕ್ತನ ಮೊದಲ ಕರ್ತವ್ಯ . ಒಂದು ವೇಳೆ ಅರಿಯದೇ ಬೆರೆತರೆ ಅದೂ ತಪ್ಪಲ್

ಆದರೆ ಅರಿತೂ ಬೆರೆಯುವುದು ಮಹಾ ಅಪರಾಧ. ಅದಕ್ಕೆ ಶಿಕ್ಷೆ ತಪ್ಪಿದ್ದಲ್ಲ . ಅದರಿಂದಾಗಿ

ನಾನು ವ್ರತಹೀನನನ್ನು ಬೆರೆಯಲು ಒಲ್ಲೆ ಎಂದು ಸೋಮಮ್ಮ ತನ್ನ ಇಷ್ಟದೈವ ಸಾಕ್ಷಿಯ

ಪ್ರತಿಜ್ಞೆ ಮಾಡುತ್ತಾಳೆ. ತಾನು ಅನುಸರಿಸುವ ಈ ವ್ರತಾಚಾರಶುದ್ಧಿಯ ಮಾರ್

ಇತರರೂ ನಡೆಯಬೇಕೆಂದು ಆಕೆ ಬಯಸುತ್ತಾಳೆ, ಕಟೂಕ್ತಿಯಿಲ್ಲದ ಈ ಪತ್ಯಾಯ

ಹಿತವೆನಿಸುತ್ತದೆ.

ಗಂಗಾಂಬಿಕೆ :

ಬಸವಣ್ಣನವರ ಹಿರಿಯ ಪತ್ನಿ , ಬಲದೇವಮಂತ್ರಿಯ ಮಗಳು. ಹರಿಹರನ

ಬಸವರಾಜದೇವರ ರಗಳೆ, ಭೀಮಕವಿಯ ಬಸವಪುರಾಣ, ಸಿಂಗಿರಾಜನ ಸಿಂಗಿರಾಜಪುರಾಣ,

ಸಿದ್ಧನಂಜೇಶನ ಗುರುರಾಜಚಾರಿತ್ರ , ಷಡಕ್ಷರದೇವನ ಬಸವರಾಜವಿಜಯ , ಶಾಂತಲಿ

ದೇಶಿಕನ ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ ಮುಖಬೋಳು ಸಿದ್ಧಲ


೫೧
ಪ್ರಸ್ತಾವನೆ

ಷಟ್‌ಸ್ಥಲತಿಲಕ, ಚೆನ್ನಪ್ಪಕವಿಯ ಶರಣಲೀಲಾಮೃತ ಮೊದಲಾದ ಕೃತಿಗಳಲ್ಲಿ ಈಕೆಗೆ

ಸಂಬಂಧಿಸಿದ ಕೆಲವು ಸಂಗತಿಗಳು ಉಕ್ತವಾಗಿವೆ. ಹರಿಹರ ' ಸತ್ಕುಲ ಸಾದೃಶ್ಯಮಪ್ಪ ಸು

ಎಂದು ಆಕೆಯನ್ನು ಬಣ್ಣಿಸಿದರೆ, ಭೀಮಕವಿ ಆಕೆಯ ಧೃತಿ, ಸಿರಿಪ್ರಭೆ, ಜಾಣ್ಮ , ರೂಪ

ಉನ್ನತಿ, ಪತಿವ್ರತಾಚರಣೆ, ಪವಿತ್ರತೆ, ತೇಜಗಳೆಲ್ಲ ದೇವಕುಲಸ್ತ್ರೀಯರಿಗಿಂತ ನೂರುಮಡ

ಮಿಗಿಲಾಗಿದ್ದವುಎಂದು ಉತ್ತೇಕ್ಷಿಸುತ್ತಾನೆ.

ಗಂಗಾಂಬಿಕೆ “ ಪತಿಯಾಜ್ಞೆಯಲ್ಲಿ ಚರಿಪ ಸತಿಗೇಕೆ ಪ್ರತಿಜ್ಞೆಯು” ಎಂದು ಪತ

ಪಾಲನೆಯಲ್ಲಿ ನಿಷ್ಠೆಯಿಟ್ಟು ನಡೆದ ಪತಿಭಕ್ತಿಸಂಪನ್ನೆ , ಸಂಪ್ರದಾಯಶೀಲ

ಕ್ರಾಂತಿಯ ನಂತರ ಬಸವಣ್ಣ ಕೂಡಲಸಂಗಮದತ್ತ ಸಾಗಲು, ಈಕೆ ಅವರನ್ನು ಅನುಸರಿಸದೆ

ಶರಣಸಮೂಹದ ಜೊತೆ ಬೆರೆತು, ಚೆನ್ನಬಸವಣ್ಣ , ಅಕ್ಕನಾಗಮ್ಮನವರೊಂದಿಗೆ

ಉಳುವೆಯತ್ತ ನಡೆದು, ಕಾಡ್ಕೊಳ್ಳಿ ಎಂಬ ಗ್ರಾಮದಲ್ಲಿ ಲಿಂಗೈಕ್ಯಳಾದಳೆಂದೂ ಮು

ಹುಬ್ಬಳ್ಳಿ ಸಮೀಪ ಮಲಪ್ರಭಾನದಿ ಎಡದಂಡೆಯ ಮೇಲೆ ಈಕೆಯ ಸಮಾಧಿ ಇಂದಿಗೂ

ಸ್ಮಾರಕವಾಗಿ ಉಳಿದುಬಂದಿದೆಯೆಂದೂ ತಿಳಿದುಬರುತ್ತದೆ. ..

ಹರಿಹರ, ಗಂಗಾಂಬಿಕೆಗೆ ಸಿದ್ದರಸನೆಂಬ ಮಗನಿದ್ದನೆಂದು ತಿಳಿಸುತ್ತಾನೆ. ಉಳ

ಪುರಾಣ , ಕಾವ್ಯಗಳಲ್ಲಿ ಇದರ ಪ್ರಸ್ತಾಪವಿಲ್ಲ . ಆಕೆಯ ನಾಲ್ಕು ವಚನಗಳಲ್ಲಿ ಮಗುವನ

ಕಳೆದುಕೊಂಡು ಕೊರಗುವ ತಾಯಿಯ ವೇದನೆ ವ್ಯಕ್ತವಾಗಿದೆ: “ ಇದೇನೋ ಮೀರಿತೋರುವ

ಮೂರುತಿ ಪುಷ್ಪಗುಂಪಿನಲ್ಲಿ ಕಾಣದೆ ಹೋಗಿದೆ. ಇದೇನೋ ಮೀರಿತೋರುವ ಮೂರ

ಕರದಲ್ಲಿಯ ಲಿಂಗದಂತೆ ಉಲುಹದ ಸ್ಥಿತಿ ತೋರುತ್ತದೆ”, “ ನಮ್ಮಯ್ಯನ ಮನದಲ್ಲ

ಮಾತಿನಲ್ಲಿ ಸೂಸುವ ಮೂರ್ತಿನೋಡನೋಡುತ್ತ ಬಯಲಾಯಿತ್ತಲ್ಲ ! ” “ಒಂದು ಹಾಳ

ಭೂಮಿಯ ಹುಲಿ ಬಂದು ಎನ್ನ ಎಳಗರುವ ಭಕ್ಷಿಸಿತ್ತಲ್ಲಾ ' ಎಂಬ ಮಾತುಗಳಲ್ಲಿ ಆಕೆಯ
ಮಗ ಬೇಗ ಐಕ್ಯನಾಗಿದ್ದಾನೆಂಬ ಸೂಚನೆ ಇದೆ. “ ಅವಳ ಕಂದ ಬಾಲಸಂಗ ನಿನ್ನ ಕಂದ

ಚೆನ್ನಲಿಂಗ ಎಂದು ಹೇಳಿದರಮ್ಮಾ ಎನ್ನ ಒಡೆಯರು. ಫಲವಿಲ್ಲದ ಕಂದನಿರ್ಪ

ಎನಗೆ ಫಲವಿಲ್ಲ , ಕಂದನಿಲ್ಲ . ಇದೇನೋ ದುಃಖ ದಂದುಗ ” ಎನ್ನುವಲ್ಲಿ ಮಗುವನ್ನ

ಕಳೆದುಕೊಂಡ ತನಗೆ ಅಂಗೈಯ ಲಿಂಗವನ್ನೇ ಮಗುವೆಂದು ಭಾವಿಸು ಎಂದು ಬಸವಣ

ಸಮಾಧಾನ ಹೇಳಿದನೆಂಬ ವಿವರಣೆಯಿದೆ.

ಗಂಗಾಂಬಿಕೆ ಗೃಹಕೃತ್ಯದಲ್ಲಿಯೇ ಹೆಚ್ಚು ತನ್ನ ಗಮನವನ್ನು ಕೇಂದ್ರೀಕರಿಸಿದ

ಪರಿಸರದ ಪ್ರಭಾವದಿಂದ ವಚನಗಳನ್ನೂ ರಚಿಸಿದ್ದಾಳೆ. ಆಕೆಯ ೯ ವಚನಗಳು ದೊರೆತಿವೆ .

' ಗಂಗಾಪ್ರಿಯ ಕೂಡಲಸಂಗ' ಎಂಬುದು ಅವುಗಳ ಅಂಕಿತ ಹೆಚ್ಚಾಗಿ ಎಲ್ಲವೂ ವೈಯಕ್

ಸಂಗತಿಗಳನ್ನು ಒಳಗೊಂಡಿವೆ . ಐದು ವಚನಗಳಲ್ಲಿ ಮೇಲೆ ವಿವರಿಸಿದಂತೆ ಮ

ಅಗಲಿಗೆಯ ' ದುಃಖದಂದುಗ' ದ ಚಿತ್ರವಿದ್ದರೆ, ಒಂದರಲ್ಲಿ ಬಸವಣ್ಣನ ಕಾರವೈಖರಿ ,

ಬಹುಮುಖ ವ್ಯಕ್ತಿತ್ವದ ವಿವರವಿದೆ. ಉಳಿದ ಮೂರರಲ್ಲಿ ಪ್ರತಿನಿಷ್ಟೆ , ಲಿಂಗನಿಷ್

ಸಿದ್ಧರಾಮಯ್ಯನಸ್ತುತಿ ಅಡಕವಾಗಿವೆ.
BRO
ಶಿವಶರಣೆಯರ ವಚನಸಂಪುಟ

“ ಸಾಂದ್ರವಾಗಿ ಹರಗಣಭಕ್ತಿಯ ಮಾಳನೆಂತೊ

ಮಾದಲಾಂಬಿಕಾ ನಂದನನು ?

ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯನೋಳ್ಳನೆಂತೊ

ಮಾದರಸನ ಮೋಹದ ಮಗನು ?

ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ಯನೆಂತೊ

ಗಂಗಾಪ್ರಿಯ ಕೂಡಲಸಂಗನ ಶರಣ ಚೆನ್ನಾ ? ”

ಈ ವಚನ ಏಕಕಾಲಕ್ಕೆ ಬಸವಣ್ಣನವರ ಜೀವನಚರಿತ್ರೆ ಮತ್ತು ಕಾರಕ್ಷಮತೆಯ

ಮೇಲೆ ಬೆಳಕು ಚೆಲ್ಲುವುದರಿಂದ ಚಾರಿತ್ರಿಕ ಮಹತ್ವವನ್ನು ಪಡೆದಿದೆ. ಹೇಳುವ ರೀತಿ

ಆತ್ಮೀಯವೆನಿಸಿದೆ.

ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ :

ಈಕೆಯ ಹೆಸರು ತಿಳಿದಿಲ್ಲ . ಗಜೇಶ ಮಸಣಯ್ಯನ ಪತ್ನಿ ಎಂಬುದು ಹಸ್ತಪ್ರತಿಗಳಲ್ಲಿ

ವಚನಗಳ ಹಣೆಯ ಮೇಲೆ ಬರೆದ ಉಲ್ಲೇಖದಿಂದ ತಿಳಿದುಬರುತ್ತದೆ. ' ಮಸಣಯ್ಯಪ್ರಿಯ

ಗಜೇಶ್ವರ' ಎಂಬ ಈಕೆಯ ವಚನಾಂಕಿತ ಇದನ್ನು ಖಚಿತಪಡಿಸುತ್ತದೆ. ಗಜೇಶಮಸಣಯ

ಸತಿಪತಿಭಾವದಶ್ರೇಷ್ಠ ವಚನಕಾರ. ಇವನ ಸ್ಥಳ ಅಕ್ಕಲಕೋಟೆತಾಲೂಕಿನ ಕರಜಿಗೆ ಗ್ರಾಮ .

ಕಾಲ ಸು . ೧೧೬೦. ಇವನ ಸತಿಯಾದ ಈಕೆಯೂ ಇದೇ ಕಾಲದಲ್ಲಿ ಇದ್ದವಳೆಂದ

ಊಹಿಸಬಹುದು.

ಈಗ ಈಕೆಯ ಹತ್ತು ವಚನಗಳು ದೊರೆತಿವೆ. ಸೃಷ್ಟಿಯ ಉತ್ಪತ್ತಿ , ಲಿಂಗ

ಅರಿವಿನ ಮಹತ್ವ , - ಗುರು- ಲಿಂಗ- ಜಂಗಮ - ಭಕ್ತರ ಸಂಬಂಧ, ಶರಣರ ಸ್ತುತಿ- ಇವು ಈ

ವಚನಗಳಲ್ಲಿ ಅಳವಟ್ಟ ಪ್ರಮುಖ ವಿಷಯಗಳಾಗಿವೆ.

“ ಅಂಗ ಪ್ರಾಣ ಭಾವಂಗಳನೊಳಕೊಂಡಿರ್ಪುದೆ ಲಿಂಗ ” ಇದು ಲಿಂಗದ ಸ್ವರ

“ ಇಬ್ಬರೂ ಪರಂಜ್ಯೋತಿಯಲ್ಲಿಯೇ ಅಡಗಿದವರಾಗಿ ಗುರುವಿಂಗೆಯೂ ಶಿಷ್ಯ

ಲಿಂಗಕ್ಕೆಯೂ ಭೇದವಿಲ್ಲ ” “ ಶಿವನೆ ಗುರುವಾಗಿ, ಲಿಂಗವಾಗಿ , ಜಂಗಮವಾಗಿ, ಭಕ್ತನಾಗ

ತೋರುತ್ತಾನೆ. ಇವರಿಗೆ ಭಾಜನವೊಂದೆ ಭೋಜನವೊಂದೆ ” – ಇದು ಗುರುಲಿ

ಭಕ್ತರ ಸಂಬಂಧದ ಸ್ವರೂಪ. “ ಎನ್ನನರಿಯಿಸದಿರುವೆ, ಎನನ್ನರಿಯಿಸು, ನಿನ್ನನರಿಯಿಸ

ಬೇಡ. ಎನ್ನನರಿಯದವ ನಿನ್ನನರಿಯ . ಎನ್ನನರಿಯಿಸದೆ ನಿನ್ನನರಿಯಿಸಿದಡೆ ನೀನೆನಗೆ

ಗುರುವಲ್ಲ ; ನಾ ನಿನಗೆ ಶಿಷ್ಯನಲ್ಲ ” “ ಪರಂಜ್ಯೋತಿ ಪರಮಕರುಣಿ ಪರಮಶಾಂತನೆ

ಲಿಂಗವುಕೋಪದ ಮುನಿಸನರಿದಡೆ ಕಾಣಬಹುದು. ಮರದಡೆ ಕಾಣಬಾರದು. ಅರಿವಿಂ

ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರ”- ಇದು ಅರಿವಿನಿಂದ ಪರವ

ಕಾಣಬಹುದಾದ ರೀತಿ.
೫೩
ಪ್ರಸ್ತಾವನೆ

ಈಕೆ ಬಸವಣ್ಣ , ಚೆನ್ನಬಸವಣ್ಣ , ಪ್ರಭುದೇವ, ಮರುಳಶಂಕರರನ್ನು ಗುರು- ಲಿಂಗ

ಜಂಗಮ -ಪ್ರಸಾದದ ಸ್ವರೂಪದಲ್ಲಿ ಕಂಡಿದ್ದಾಳೆ. ಅವರಿಂದ ಕ್ರಮವಾಗಿ ಶುದ್ಧ ,

ಪ್ರಸಿದ್ಧ , ಮಹಾಪ್ರಸಾದವ ಪಡೆದು ಪರಿಪೂರ್ಣಳೆನಿಸಿದ್ದಾಳೆ.

ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲೆ :

ಈಕೆ ಕುಂಭದ ಗತಿಗೆ ಶಿವನನ್ನೆ ಕುಣಿಯುವಂತೆ ಮಾಡಿದ ಕುಂಬರ ಗುಂಡಯ್ಯನ ಸತಿ.

ಬೀದರ ಜಿಲ್ಲೆಯ ಭಲ್ಲುಕೆ ( ಭಾಲ್ಕಿ ) ಈಕೆಯ ಸ್ಥಳ. ಪತಿಯ ಜೊತೆ ಗಡಿಗೆ ಸಿದ್ಧಪಡಿಸ

ಕಾಯಕದಲ್ಲಿ ತೊಡಗಿದ ಈಕೆ ಬಸವಾದಿ ಶರಣ- ಶರಣೆಯರ ಪ್ರಭಾವದಿಂದ

ವಚನರಚನೆಗೂ ಕೈಹಾಕಿದ್ದಾಳೆ. ಭುವನಕೋಶದಲ್ಲಿ ಈಕೆ ಮೆರೆದ ಒಂದು ಪವಾಡದ ವಿವರ

ಬರುತ್ತದೆ : ಕೇತಲದೇವಿ ನಿತ್ಯ ಲಿಂಗಕ್ಕೆ ಪಾವುಡವನ್ನು ಹಾಕುವ ವ್ರತವನ್

ಕೈಕೊಂಡಿದ್ದಳಂತೆ. ಒಮ್ಮೆ ಅದು ದೊರೆಯದೆಹೋಗಲು ತನ್ನ ಎದೆಯ ಚರ್ಮವನ್

ತೆಗೆದು ಹಾಕಲು ಶಿವನು ಮೆಚ್ಚಿದನಂತೆ. ಈ ಕಥೆ ಅವಳ ವ್ರತನಿಷ್ಠೆಯನ್ನು ಎತ್ತಿತೋರ

ಕಟ್ಟಿದುದಾಗಿರಬೇಕು.

ಕೇತಲದೇವಿಯ ಎರಡು ವಚನಗಳು ದೊರೆತಿವೆ. 'ಕುಂಭೇಶ್ವರ' ಅಥವಾ

'ಕುಂಭೇಶ್ವರಲಿಂಗ' ಎಂಬುದು ಅವುಗಳ ಅಂಕಿತ. ಎರಡೂ ವ್ರತಾಚಾರವನ್ನು ಕುರಿತ

ಹೇಳುತ್ತವೆ. ಒಂದು ವಚನದಲ್ಲಿ ತನ್ನ ವೃತ್ತಿಪರಿಭಾಷೆಯನ್ನು ಬಳಸಿ ವ್ರತಭ್ರಷ್ಟರ

ಬೆರೆಯಬಾರದೆಂದು ತಿಳಿಸಿದರೆ, ಇನ್ನೊಂದರಲ್ಲಿ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ

ಲಿಂಗಾರ್ಪಿತ ಮಾಡುವಲ್ಲಿ ಸಂದೇಹವಿಲ್ಲದಿರಬೇಕೆಂದು ತಿಳಿಸುತ್ತಾಳೆ

ಚರಿಸದೆ, ಕಂಡುದನು ನುಡಿಯದೆ ಕಾಣದುದನು, ಕಂಡುದನು ಒಂದೆಸಮವೆ

ಅರಿಯಬೇಕೆಂದು ಹೇಳುತ್ತಾಳೆ. ಒಂದು ವಚನದಲ್ಲಿ ಸಂಸ್ಕೃತಶ್ಲೋಕವನ್ನು ಸಾಕ್ಷಿಯ

ಬಳಸಿರುವುದು ಈಕೆ ಸುಶಿಕ್ಷಿತಳಾಗಿದ್ದಳೆಂಬುದನ್ನು ಪ್ರಕಟಿಸುತ್ತದೆ.

ಗೊಗ್ಗವ್ವ :

ಶಿವಭಕ್ತರಿಗೆ ಧೂಪ ಅರ್ಪಿಸುವ ಕಾಯಕವನ್ನು ಕೈಕೊಂಡಿದ್ದ ಈಕೆ ಧೂಪ

ಗೊಗ್ಗವ್ವ ಎಂದು ಪ್ರಸಿದ್ಧಳಾಗಿದ್ದಾಳೆ. ಈಕೆಗೆ ಸಂಬಂಧಿಸಿದ ಕೆಲವು ಸಂಗತಿಗ

ಭೈರವೇಶ್ವರಕಾವ್ಯ , ಗುರುರಾಜಚಾರಿತ್ರ , ಭೈರವೇಶ್ವರಕಾವ್ಯದ ಕಥಾಮಣಿಸೂತ್ರರ

ಮೊದಲಾದ ಕೃತಿಗಳಲ್ಲಿ ಉಕ್ತವಾಗಿವೆ. ಅವುಗಳ ಪ್ರಕಾರ ಈಕೆಯ ಸ್ಥಳ ಕೇರಳದ

ಅವಲೂರು, ಶಿವಭಕ್ತ ದಂಪತಿಗಳ ಉದರದಲ್ಲಿ ಜನಿಸಿದ ಈಕೆ ಬಾಲ್ಯದಿಂದಲೇ

ವೈರಾಗ್ಯ ತಾಳಿ, ಶಿವಭಕ್ತಿಯನ್ನು ಮೈಗೂಡಿಸಿಕೊಂಡಿದ್ದಳು. ವಯಸ್ಸಿಗೆ ಬರಲು

ತಾಯಿಗಳು ಮದುವೆಮಾಡಬೇಕೆಂದು ವಿಚಾರಿಸಿದಾಗ, ಮನೆಯಿಂದ


೫೪
ಶಿವಶರಣೆಯರ ವಚನಸಂಪುಟ

ಶಿವಾಲಯದಲ್ಲಿ ಅಡಗಿಕೊಂಡಳು. ಆಗ ಅವಳ ಮನದಿಂಗಿತ ಅರಿತ ತಂದೆ ತಾಯಿಗಳ

ಒತ್ತಾಯ ಮಾಡದೆ ಅವಳ ಇಚ್ಛೆಯಂತೆ ಇರಲು ಬಿಡುತ್ತಾರೆ. ಗೊಗ್ಗವೈ ಧೂಪ ಅರ್ಪಿಸ

ಕಾಯಕ ಕೈಕೊಂಡು ಶಿವಪೂಜೆಯಲ್ಲಿ ತೊಡಗುತ್ತಾಳೆ. ಒಮ್ಮೆ ಶಿವ ಇವಳ ನಿಷ್

ಪರೀಕ್ಷಿಸಲು ಸ್ಪುರದ್ರೂಪಿ ಯುವಕನ ವೇಷದಲ್ಲಿ ಕಾಣಿಸಿಕೊಂಡು ತನ್ನ

ಮದುವೆಯಾಗಲು ಗೊಗ್ಗವೈಗೆ ಒತ್ತಾಯಿಸುತ್ತಾನೆ. ಆಕೆ ಅದಕ್ಕೊಪ್ಪದೆ

ಮೆರೆಯಲು, ಮೆಚ್ಚಿ ವೀರಶೈವೋಪದೇಶಮಾಡಿ ಶಿವಭಕ್ತರಿಗೆ ಧೂಪವನ್ನರ್ಪಿಸುತ್ತ ಜ

ಸಾಗಿಸು ಎಂದು ಹೇಳುತ್ತಾನೆ. ಅಂದಿನಿಂದ ಆಕೆ ಧೂಪದ ಕಾಯಕವನ್ನು ನಿಷ್ಠೆ

ಮಾಡುತ್ತ ಮುನ್ನಡೆಯುತ್ತಾಳೆ. ಒಮ್ಮೆ ಕೂಡುಗಲೂರ ದೊರೆ ಚೇರಮರಾಯ

ದಾರಿ ಹುಡುಕುತ್ತ ಹೊರಟಾಗ, ಅವನಿಗೆ ಧೂಪದ ಹೊಗೆಯ ಮೂಲಕ

ತೋರಿಸುತ್ತಾಳೆ. ಹೀಗೆ ನಿಷ್ಠೆಯಿಂದ ಕಾಯಕ ಮಾಡುತ್ತ ತನ್ನಿಷ್ಟಲಿಂಗ ನಾಸ

ಐಕ್ಯಳಾಗುತ್ತಾಳೆ. ಇದನ್ನು ಸಿದ್ಧನಂಜೇಶ ಸಂಕ್ಷಿಪ್ತವಾಗಿ “ ಭವರಹಿತ ಧೂಪ

ಗೊಗ್ಗವೈಯೆಂಬಾಕೆ ಶಿವಗೆ ಧೂಪವ ನೀಡಿ ಕೈಲಾಸಪದವನುಂ ಶಿವಭಕ್ತರಿಗೆ ತೋರಿ

ಶಂಕರನ ಕೃಪೆ ಪಡೆದಳ್ ” ಎಂದು ಹೇಳುತ್ತಾನೆ. 'ನಾಸ್ತಿನಾಥಾ' ಅಂಕಿತದಲ್ಲಿ ಈಕೆಯ

ವಚನಗಳು ದೊರೆತಿವೆ.

ಚಿದ್ರೂಪನಾದ ಶಿವನನ್ನು ಅರ್ಚನೆ, ಪೂಜನೆ, ನಿತ್ಯನೇಮಗಳನ್ನು ಸತ್ಯದ

ಅರಿಯಬೇಕು. ಹಾಗಿಲ್ಲದೆ ಅವನ ಸಾಕ್ಷಾತ್ಕಾರ ಸಾಧ್ಯವಿಲ್ಲ . ಹಾಗೆ ಅರಿತು ಬೆರೆತ

ಅಂಗಲಿಂಗವೆಂಬ ಭೇದ ಇಲ್ಲವಾಗುತ್ತದೆ. “ ಮಾರುತನಲ್ಲಿ ಬೆರೆತ ಗಂಧದಂತೆ, ಸ

ಬೆರೆತ ಸುಖದಂತೆ, ಮಚ್ಚಿದಲ್ಲಿ ಕೊಡುವಉಚಿತದಂತೆ, ಶರದಿ ಕೊಂಡ ಸಾಗರದಂತೆ ” ಅ

ಸ್ಥಿತಿ. ಇದು ಲಿಂಗಾಂಗಸಾಮರಸ್ಯದ ರೀತಿ.

ಗೊಗ್ಗವ್ವ ಎರಡು ವಚನಗಳಲ್ಲಿ ಹೆಣ್ಣು ಗಂಡಿನ ಸಮಾನತೆಯ

ಚಿಂತನಗೈದಿದ್ದಾಳೆ. ಜೇಡರದಾಸಿಮಯ್ಯನ ಧಾಟಿಯಲ್ಲಿಯೇ ನಿರೂಪಿತವಾದ

ಮುಡಿ ಬಂದಡೆ ಹೆಣ್ಣೆಂಬರು, ಮೀಸೆಕಾಸೆ ಬಂದಡೆ ಗಂಡೆಂಬರು ಈ ಉಭ

ಹೆಣೋ ಗಂಡೋ ನಾಸ್ತಿನಾಥಾ ” ಎಂಬ ವಚನದಲ್ಲಿ ಜ್ಞಾನಕ್ಕೆ ಹೆಣ್ಣು ಗಂಡೆಂಬ

ಭೇದವಿಲ್ಲವೆಂದು ಸಾರುತ್ತಾಳೆ. ಇನ್ನೊಂದು ವಚನದಲ್ಲಿ - ಗಂಡು ಮೋ

ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ

ಉತ್ತರವಾವುದೆಂದರಿಯಬೇಕು. ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ

ನಾಸ್ತಿನಾಥನು ಪರಿಪೂರ್ಣನೆಂಬೆ ” ಎಂದು ಹೇಳುತ್ತ , ಅನಾದಿಕಾಲದಿಂ

ಒಂದು ಒಡವೆಯೆಂದು ಕಾಣುತ್ತ ಬಂದಿದ್ದ ಸ್ಥಾಪಿತ ಮೌಲ್ಯವನ್ನು ಧಿಕ್ಕರಿಸುವುದರ

ಮೋಹಿಸುವಕ್ರಿಯೆ ಹೆಣ್ಣು ಗಂಡಿಗೆ ಸಮಾನವಾದುದು ಎಂಬ ಒಳಸತ್ಯವನ್ನು ಪ್ರಕಟಿಸ

ಸ್ತ್ರೀಪುರುಷ ಸಮಾನತೆಯ ಕಹಳೆಯನ್ನು ಮೊಳಗಿಸುತ್ತಾಳೆ


೫೫
ಪ್ರಸ್ತಾವನೆ

ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ :

ಈಕೆ ಅಹಿಂಸೆಯನ್ನೇ ತನ್ನ ಜೀವನ ಮೌಲ್ಯವನ್ನಾಗಿಸಿಕೊಂಡು ಬದುಕಿದ

ದಸರಯ್ಯನ ಪತ್ನಿ , ಗುರುರಾಜಚಾರಿತ್ರದಲ್ಲಿ ಉಲ್ಲೇಖಗೊಂಡ ತೆರಕಣಾಂಬಿಯ ವೀರ

ಮತ್ತು ದೀಪದ ವೀರಮ್ಮರಿಂದ ಭಿನ್ನಳಾದ ಈಕೆಯ ಜೀವನದ ಬಗೆಗೆ ಹೆಚ್ಚಿಗೆ ತಿಳಿಯುವು

“ ದಯವೇ ಧರ್ಮದ ಮೂಲ' ( ಜೀವಿಯ ನೋವೇ ಲಿಂಗದ ನೋವು' ಎಂದು

ಸರ್ವಭೂತಹಿತವ್ರತವನ್ನು ಹಿಡಿದು ಸಾಗಿದ ದಸರಯ್ಯನ ವ್ಯಕ್ತಿವೈಶಿಷ್ಟ್ಯಗಳನ್ನು

ಅಳವಡಿಸಿಕೊಂಡು ಸಾಗಿದ ಶಿವಾನುಭಾವಿ , ಸಾತ್ವಿಕ ಶಿರೋಮಣಿ. ಈಕೆಯ ಕಾಲ ಸು . ೧೧೬೦

ವೀರಮ್ಮನ ಐದು ವಚನಗಳು ದೊರೆತಿವೆ. ' ಗುರುಶಾಂತೇಶ್ವರಾ' ಅವುಗಳ

ಮನದ ಚಂಚಲತೆ, ಶರಣನ ನಿಲವು, ವ್ರತನಿಷ್ಠೆ , ಪಾದೋದಕ - ಪ್ರಸಾದ ಮಹತ್ವ

ಅವುಗಳ ವಸ್ತು .

ದುರುಳ ಕಾಮಿನಿಯರಿಗೆ ಎರಗುವ ಮನಸ್ಸನ್ನು 'ಹೊಲೆಮನಸ್ಸೆಂದು ಕರೆದ

' ಗುರುವಿಂಗೆ ಎರಗಿ ಎರಕಡರ್ದಾತನ ಗುರುಕರಜಾತನೆಂದು' ಹೇಳುತ್ತಾಳೆ. ಉದ

ಜನನ- ಮರಣದ ನೆಲೆ, ಪರಂಜ್ಯೋತಿಸ್ವರೂಪನಾದ ಶಿವನ ನೆಲೆಗಳನ್ನು ಅರಿಯದೆ 'ತಾಯ

ಸತ್ತ ತಬ್ಬಲಿಯಂತೆ, ಹಲಬರಿಗೆ ಹಲ್ಲದೆರೆದು, ಹಲಬರಿಗೆ ಬೋಧಿಸಿ ತನ್ನ ಉದರವ

ಹೊರೆವ ಸಂದೇಹಿ' ಗಳನ್ನು ಟೀಕಿಸುತ್ತಾಳೆ. ಚರಣಾಯುಧ (ಕೋಳಿ) ವೇಳೆಯ

ಭಕ್ತ ವತಹೀನನನ್ನು ಅರಿತು ಬರೆಯಲಾರ. ಬೆರೆತರೆ ಅವನಿಗೆ ನರಕ ತಪ್ಪಿದ್ದಲ್ಲ ಎಂದು

ವ್ರತನಿಷ್ಠೆಯನ್ನು ತೋರುತ್ತಾಳೆ. ಇನ್ನೆರಡು ವಚನಗಳಲ್ಲಿ , ಒಂದರಲ್ಲಿ ಏಕಾದಶಪ್ರಸಾ

ವಿವರ ಬಂದಿದ್ದರೆ, ಮತ್ತೊಂದರಲ್ಲಿ ದಶವಿಧ ಪಾದೋದಕದ ಮಹತ್ವವನ್ನು

ವರ್ಣಿಸಲಾಗಿದೆ. 'ಇಹಪರವೆಂಬ ಉಭಯದೊಳಗಿಲ್ಲದನಿರಾಲಯ ಸ್ಥಿತಿ ಶರಣನ ನಿಲ

ಎಂದು ಇನ್ನೊಂದು ವಚನದಲ್ಲಿ ಹೇಳಲಾಗಿದೆ. ನಿರೂಪಣೆ ನೇರ, ಭಾಷೆ ಸರಳ

ದುಗ್ಗಳೆ ;

ಮೊದಲ ವಚನಕಾರನೆಂಬ ಖ್ಯಾತಿಗೆ ಕಾರಣನಾದ ಜೇಡರ ದಾಸಿಮಯ್ಯನ ಧರ್ಮ

ಪತ್ನಿ ,'ಸತಿ- ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ' ಎಂಬ ದಾಸಿಮಯ್ಯನ ಮಾತಿನಂತೆ

ಪತಿಯೊಂದಿಗೆ ಏಕವಾಗಿ ಬೆರೆತು ಹಿತವಾದ ಶಿವಭಕ್ತಿಯಲ್ಲಿ ನಿರತಳಾದ ಶಿವಶರಣೆ . ಈ

ಕಾಯಕ ಬಟ್ಟೆ ನೇಯುವುದು. ಈ ಅನುರೂಪವಾದ ಪತಿಪತ್ನಿಯರ ಕಾಯಕ ನಿಷ್ಟೆ ,

ವಸ್ತ್ರದಾನದ ವೈಶಿಷ್ಟ್ಯಗಳನ್ನು ಬಸವಣ್ಣ , ಕೋಲಶಾಂತಯ್ಯ , ಉಪ್ಪರ

ಸೋಮಿದೇವಯ್ಯ , ಸತ್ಯಕ್ಕೆ ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ. ವೀರಶೈವ

೧೫. ಮಿಶ್ರಣೋತ್ರದ ವಚನಗಳು ( ಎಳಮಲೆಯ ಗುರುಶಾಂತದೇವರ ವಚನ ಸಂಕಲನಗಳು) :


ಸಂ . ಡಾ. ವೀರಣ್ಣ ರಾಜೂರ, ವ. ೮, ೩೭, ೫೭, ೭೦.
೫೬
ಶಿವಶರಣೆಯರ ವಚನಸಂಪುಟ

ಪುರಾಣಗಳಲ್ಲಿ ಈಕೆಯ ಕಥೆ ದಾಸಿಮಯ್ಯನ ಜೊತೆ ಪ್ರಸಿದ್ದವಾಗಿದೆ. ತನ್ನ ಮನಸ್ಸ

ಒಪ್ಪುವ, ತನ್ನ ಮನದಿಂಗಿತವನ್ನು ಅರಿತು ನಡೆಯುವ ಸತಿಯನ್ನು ಹುಡುಕಿ

ಸಾಗಿದ ದಾಸಿಮಯ್ಯನಿಗೆ ಮಳಲಕ್ಕಿಯಲ್ಲಿ ಪಾಯಸಮಾಡಿ ಅವನ ಪರೀಕ್ಷೆಯಲ್ಲಿ ಯ

ಸತಿಯಾದ ಕಥೆ ಭೈರವೇಶ್ವರ ಕಾವ್ಯದಕಥಾಮಣಿಸೂತ್ರರತ್ನಾಕರದಲ್ಲಿ ಉಕ್ತವಾಗಿದೆ.

ಕಥೆಗೆ ಪೂರಕವೆನ್ನುವಂತೆ, ದುಗ್ಗಳೆಯ ಗುಣ-ಶೀಲ-ಸ್ವಭಾವಗಳನ್ನು ಬಣ್ಣಿಸ

ದಾಸಿಮಯ್ಯನ ವಚನವೊಂದು ಹೀಗಿದೆ :

“ ಬಂದುದನರಿದು ಬಳಸುವಳು,

ಬಂದುದ ಪರಿಣಾಮಿಸುವಳು .

ಬಂಧುಬಳಗವ ಮರಸುವಳು,

ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥಾ ” ೧೬

ಈ ಮಾತುಗಳು ದಾಸಿಮಯ್ಯನ ವ್ಯಕ್ತಿತ್ವ ಬೆಳಗುವಲ್ಲಿ ದುಗ್ಗಳೆಯ ಪಾತ್ರ

ಉನ್ನತವಾಗಿತ್ತು ಎಂಬುದನ್ನು ಪ್ರಕಟಿಸುತ್ತವೆ.

- ದಾಸಿಮಯ್ಯನಂತೆ ದುಗ್ಗಳೆಯೂ ವಚನಗಳನ್ನು ರಚಿಸಿದ್ದಾಳೆ.

ರಾಮನಾಥ' ೧೭ ಎಂಬ ಅಂಕಿತದಲ್ಲಿ ಈಗ ಎರಡು ವಚನಗಳು ಮಾತ್ರ ದೊರೆತಿ

ಅವುಗಳಲ್ಲಿ ಬಸವ, ಅಲ್ಲಮ , ಚೆನ್ನಬಸವ, ಮರುಳುಶಂಕರದೇವ, ಸಿದ್ಧರ

ಅಜಗಣ್ಣರನ್ನು ನೆನೆದಿದ್ದಾಳೆ. ಇದರಿಂದ ಬಸವಣ್ಣನವರ ಕಾಲದಲ್ಲಿಯೂ

ಬದುಕಿದ್ದಳೆಂದು ತಿಳಿದುಬರುತ್ತದೆ.

ನಾಗಲಾಂಬಿಕೆ :

ಶಿವಶರಣೆಯರ ಸಮೂಹದಲ್ಲಿ ಅಕ್ಕಮಹಾದೇವಿ, ನೀಲಲೋಚನೆ ಮತ್ತ

ನಾಗಲಾಂಬಿಕೆಯರದು ಎದ್ದು ಕಾಣುವ ಹೆಸರು. ಬಸವಣ್ಣನವರ ಜೀವನ

ಉತ್ತರಾರ್ಧವನ್ನು ನೀಲಲೋಚನೆ ರೂಪಿಸಿದರೆ, ಪೂರ್ವಾರ್

ರೂಪಿಸಿದವಳು ಅವನ ಸೋದರಿಯಾದ ನಾಗಲಾಂಬಿಕೆ. ಸಾಮಾನ್ಯವಾಗಿ ವೀರ

ಪುರಾಣಗಳು ಇವಳನ್ನು ಪ್ರಸ್ತಾಪ ಮಾಡುತ್ತ ಬಂದಿವೆ.

೧೬ . ಷಟ್‌ಸ್ಥಲಸ್ತೋತ್ರದ ವಚನ : ಅದೇ ವ. ೯೫

೧೭. 'ದೇವಾಂಗ ದಾಸಿಮಯ್ಯನವರ ವಚನಗಳು' ಎಂಬ ಶೀರ್ಷಿಕೆಯಡಿಯಲ್ಲಿ ' ದಾಸೋಹ


ರಾಮನಾಥ' ಅಂಕಿತದಲ್ಲಿ ೩೮ ವಚನಗಳು ಮೈ . ವಿ. ವಿ . ಹಸ್ತಪ್ರತಿಯೊಂದರಲ್ಲಿ ದೊರೆಯುತ್ತವೆ.

ಅವುಗಳ ವಸ್ತು ಭಾಷೆ ರಚನಾ ವಿಧಾನಗಳನ್ನು ಗಮನಿಸಿದರೆ ಇವು ಈಚಿನ

ದಾಸಿಮಯ್ಯನ ಶಿಷ್ಯ ಬರೆದವುಗಳಾಗಿರಬೇಕೆಂದು ಅನ್ನಿಸುತ್ತದೆ.


ಪ್ರಸ್ತಾವನೆ ೫೭

- ನಾಗಲಾಂಬಿಕೆಯ ಇನ್ನೊಂದು ಪ್ರಚಲಿತ ಹೆಸರು ನಾಗಮ್ಮ ಅಥವಾ ಅಕ್ಕ

ಚನ್ನಬಸವಣ್ಣನ ತಾಯಿಯಾದ ಇವಳನ್ನು ಬಸವಣ್ಣನ ಅಕ್ಕನೆಂದು ಈವರೆಗೆ ವಿದ

ಭಾವಿಸುತ್ತ ಬಂದಿದ್ದಾರೆ. ಆದರೆ ಇವಳನ್ನು ಪ್ರಸ್ತಾಪಿಸುವ ಪ್ರಥಮ

ಕವಿಯ ಬಸವಪುರಾಣದಲ್ಲಿ ಇವಳು ಬಸವಣ್ಣನ ತಂಗಿಯೆಂದು ಸ್ಪಷ್ಟವಾಗಿಯೆ ತಿಳಿಸಲಾಗಿದೆ

ಬಸವಣ್ಣನವರು ಬಾಗೇವಾಡಿಯಿಂದ ಕೂಡಲಸಂಗಮಕ್ಕೆ ಹೊರಟ ಸಂದರ

ಚಿತ್ರಿಸುತ್ತಾ “ ತನ್ನನುಜೆ ನಾಗಲದೇವಿಯು ನಿಜಸತಿಯು ಗಂಗಾದೇವಿಯುಂ

ಸಂಗಮಕ್ಕೆ ತೆರಳಿದನೆಂದು ಹೇಳಲಾಗಿದೆ. ಇದರಿಂದ ನಾಗಲಾಂಬಿಕೆ ಬಸವಣ್ಣನ ಅಕ್ಕನಲ

ತಂಗಿಯೆಂದು ಸ್ಪಷ್ಟವಾಗುತ್ತದೆ. ಈ ತರುವಾಯ ಬಂದ ಇನ್ನೊಂದು ಮುಖ

ಪ್ರಸಾದಿ ಮಹಾದೇವಯ್ಯನಶೂನ್ಯಸಂಪಾದನೆಯು “ ತನ್ನಿಂ ಕಿರಿಯಳಾದ ನಾಗಲಾಂ

ಯೊಂದಿಗೆ ಬಸವಣ್ಣನವರು ಕೂಡಲಸಂಗಮಕ್ಕೆ ಹೋದರೆಂದು ಹೇಳುತ್ತ ಭೀಮಕವಿಯ

ಅಭಿಪ್ರಾಯವನ್ನೇ ಅನುಮೋದಿಸುತ್ತದೆ. ಆದರೆ ಆ ಬಳಿಕ ಬಂದ ಲಕ್ಕಣ್ಣ ದಂಡೇಶ,

ಸಿಂಗಿರಾಜ ಮೊದಲಾದ ಕವಿಗಳು ಅವಳ ಹೆಸರಿಗೆ ಗೌರವಸೂಚಿ ವಿಶೇಷಣವಾಗಿರುವ' ಅಕ್ಕ '

ಎಂಬುದನ್ನು ವಾಚ್ಯಾರ್ಥದಲ್ಲಿಯೇ ಸ್ವೀಕರಿಸಿ ಅವಳನ್ನು ಬಸವಣ್ಣನ ಅಕ

ಚಿತ್ರಿಸಿದರು . ಇದೆಲ್ಲವನ್ನು ನೋಡಿದರೆ ನಾಗಲಾಂಬಿಕೆ ಬಸವಣ್ಣನ ಅಕ್ಕನಲ್ಲ , ತಂಗಿಯೆಂದ

ಸ್ಪಷ್ಟವಾಗುತ್ತದೆ.

ನಾಗಲಾಂಬಿಕೆಯ ಬಾಗೇವಾಡಿ ಜೀವನವಾಗಲಿ, ಕೂಡಲಸಂಗಮದ ಜೀವನವಾಗ

ನಮಗೆ ಯಾವ ಕಾವ್ಯದಲ್ಲಿಯೂ ಸ್ಪಷ್ಟವಾಗಿ ಸಿಕ್ಕುವದಿಲ್ಲ . ಅವಳ ಜೀವನದ ಮಹತ್ವದ

ಚಟುವಟಿಕೆಗಳು ಕಲ್ಯಾಣದಲ್ಲಿ ಮಾತ್ರ ಕಂಡುಬರುತ್ತವೆ.

ಸಣ್ಣ ಪುಟ್ಟ ಶರಣರನ್ನು ಕುರಿತು ರಗಳೆಗಳನ್ನು ಬರೆದಿರುವ, ಬರೆಯದಿದ್ದ ಪಕ್ಷದ

ಸಾಂದರ್ಭಿಕವಾಗಿ ಅವರನ್ನು ಸೂಚಿಸಿರುವ ಹರಿಹರ ಎಲ್ಲಿಯೂ ನಾಗಲ

ಅವಳ ಮಗನಾದ ಚನ್ನಬಸವಣ್ಣನನ್ನು ಸೂಚಿಸದಿರುವುದು ಆಶ್ಚರ್ಯದ ಸಂಗತಿಯಾಗಿದೆ.

ಮುಂದೆ ಬಂದ ಭೀಮಕವಿ ಮೊದಲಾದವರು ಇವರಿಬ್ಬರನ್ನು ಸೂಚಿಸುವುದು ತೀರ

ಪ್ರಾಸಂಗಿಕವಾಗಿ, ಸಾಮಾನ್ಯ ಶರಣರನ್ನು ಕುರಿತು ಸ್ವತಂತ್ರ ಕೃತಿಗಳನ್ನು ಬರೆದಿ

ಕವಿಯೂ ಇವರಿಬ್ಬರನ್ನು ವಸ್ತುವಾಗಿಟ್ಟುಕೊಂಡು ಪ್ರಾರಂಭದಲ್ಲಿ ಕೃತಿರಚನೆ ಮಾಡಲ

ಈ ದಿಕ್ಕಿನಲ್ಲಿ ಪ್ರಥಮ ಪ್ರಯತ್ನವೆಂದರೆ ಹದಿನಾರನೆಯ ಶತಮಾನದ ವಿರೂಪಾಕ್ಷ

ಪಂಡಿತನ ಚೆನ್ನಬಸವಪುರಾಣವಾಗಿದೆ. ಮೇಲೆ ಹೇಳಿದ ಕೃತಿಗಳು ಚೆನ್ನಬಸವಣ್ಣನವರು

ಅಕ್ಕನಾಗಮ್ಮನ ಮಗನಾಗಿ ಕಕ್ಕಯ್ಯನ ಪ್ರಸಾದದಿಂದ, ಬಸವಣ್ಣನ ಪ್ರಸಾದದಿ

ಪ್ರಸಾದದಿಂದ ಹುಟ್ಟಿದನೆಂದು ಹೇಳುತ್ತ ಬಂದ ಸಂದರ್ಭದಲ್ಲಿ ಸುಮಾರು ಹ

ಶತಮಾನದ ಸಿಂಗಿರಾಜ ಮಾತ್ರ ಅಕ್ಕನಾಗಮ್ಮನ ಪತಿ ಶಿವದೇವನೆಂದು ಹೇಳಿ ಈ ಸಮಸ್ಯೆಗೆ

ಪರಿಹಾರವನ್ನು ಸೂಚಿಸುತ್ತಾನೆ. ಬಹುಶಃ ಇವನನ್ನೇ ಆಧರಿಸಿ ದೇವರದಾಸಿಮ


೫೮
ಶಿವಶರಣೆಯರ ವಚನಸಂಪುಟ

ಪುರಾಣವೂ ಶಿವದೇವನ ಪ್ರಸ್ತಾಪ ಮಾಡುತ್ತದೆ. ಈತನು ' ಸಂಸಾರ ಭ್ರಾಂತಿಯ

ವ್ಯಕ್ತಿಯಾಗಿದ್ದನೆಂದು ಸಿಂಗಿರಾಜಪುರಾಣ ಇವನ ಮನೋಧರ್ಮವನ್ನು ತಿಳಿಸಿದೆ

ನಾಗಲಾಂಬಿಕೆ ತನ್ನ ಪೂರ್ವಾರ್ಧ ಜೀವನದಲ್ಲಿ ಬಸವಣ್ಣನನ್ನು ರೂಪ

ಉತ್ತರಾರ್ಧದಲ್ಲಿ ಮಗನಾದ ಚನ್ನಬಸವಣ್ಣನನ್ನು ರೂಪಿಸಿದ್ದಾಳೆ. ಅನುಭವಮ

ಅನನ್ಯ ಪಾತ್ರವಹಿಸಿದ ಈಕೆ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣಬಳಗದ ನೇತೃತ್

ವಹಿಸಿ ದಕ್ಷಿಣಕ್ಕೆ ಬಂದು ಉಳವಿಯ ಪರಿಸರದಲ್ಲಿ ಐಕ್ಯಳಾದಳೆಂದು ತಿಳಿದುಬರುತ್ತದೆ

- ಅಕ್ಕನಾಗಮ್ಮ ಬಸವಣ್ಣಪ್ರಿಯ ಚೆನ್ನಸಂಗಯ್ಯ ' ಎಂಬ ಅಂಕಿತದಲ್ಲಿ ವಚನಗಳನ

ಬರೆದಿದ್ದು , ಈಗ ೧೪ ಲಭ್ಯವಾಗಿವೆ. ಇವುಗಳಲ್ಲಿ ಬಸವಣ್ಣನವರ ಸ್ತುತಿಪರವ

ಆಗಾಗ ಮಡಿವಳಮಾಚಯ್ಯ , ರೇವಣಸಿದ್ದಯ್ಯ , ಸಿದ್ದರಾಮಯ್ಯ , ಅಕ್ಕಮ

ಗುರುಭಕ್ತಯ್ಯ , ಪ್ರಭುದೇವ, ಮರುಳಶಂಕರದೇವ, ಅನಿಮಿಷದೇವ, ಅಜಗಣ್ಣ

ಘಟ್ಟಿವಾಳಯ್ಯ , ಮಗ ಚೆನ್ನಬಸವಣ್ಣ ಇವರ ಪ್ರಸ್ತಾಪ ಮಾಡಿದ್ದಾಳೆ. ಬಸವ

ಭವ ನಾಶವಾಯಿತೆಂದು ಹೇಳಿಕೊಳ್ಳುವ ಇವಳ ವಚನಗಳಲ್ಲಿ ಬಹುಶ

ನಂತರ ನೊಂದು ನುಡಿದವು ಅಧಿಕವಾದಂತಿವೆ. “ ನಿಜದ ನಿರ್ವಯಲ ಬಾಗಿಲ ನಿಜವ

ತೋರಿದಾತ ಬಸವಣ್ಣ ” ಎಂದು ಹೆಮ್ಮೆಯಿಂದ ಹೇಳಿಕೊಂಡ ಇವಳು, “ ಭಕ್ತಿಯ

ತವನಿಧಿಯೆ , ಮುಕ್ತಿಯ ಮೂರುತಿಯೆ ಲಿಂಗಜಂಗಮದ ಚೈತನ್ಯವೆ ನಿಮ್ಮನಗಲಿ ಎಂತು

ಸೈರಿಸುವೆ” ಎಂದು ವ್ಯಥೆಪಟ್ಟುದನ್ನು ಗಮನಿಸಬೇಕು. ನಾಗಲಾಂಬಿಕೆಯ ಜೀವನದಲ

ಎಡರುಗಳು ಅನೇಕ ಎಂಬುದನ್ನು ಈಕೆಯ ಕೆಳಗಿನ ವಚನ ಧ್ವನಿಸುತ್ತದೆ :

“ ಮನದೊಡೆಯ ಮಹಾದೇವ ಮನವ ನೋಡಿಹೆನೆಂದು

ಮನುಜರ ಕೈಯಿಂದ ಒಂದೊಂದ ನುಡಿಸುವನು,

ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ಮನವೆ ,

ನಿಜವ ಮರೆದಿರು ಕಂಡಾ, ನಿಶ್ಚಿಂತನಾಗಿರು ಮನವೆ,

ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು

ಒಂದು ಬೋಟ್ಟಿನಲ್ಲಿ ತೊಡೆವನು ”

ಸಾಮಾನ್ಯವಾಗಿ ಶಿವಶರಣೆಯರ ವಚನಗಳು ಆಚಾರದ ಮಹತ್ವವನ್ನು

ಪ್ರಕಟಿಸುತ್ತಿದ್ದು , “ ಆಚಾರವೆಂಬುದು ಅಗೋಚರ ನೋಡಯ್ಯ ಆರಿಗೂ ಸಾಧ್ಯವಿಲ್ಲ

ವಚನವೂ ಈ ನಿಲವನ್ನು ಪ್ರತಿನಿಧಿಸುತ್ತದೆ. ಹೀಗೆ ನಾಗಲಾಂಬಿಕೆ ಪ್ರಸಿದ್ಧ ಶರಣೆ, ಸುಪ್ರಸಿದ್ದ

ಶರಣರ ನಿರ್ಮಾತೃವಾಗಿ, ವಚನ ಸಾಹಿತ್ಯದಸೃಷ್ಟಿಕರ್ತಳಾಗಿಶೋಭಿಸುತ್

ಶರಣರಾದ ಕೋಲಶಾಂತಯ್ಯ , ಮರುಳ ಶಂಕರದೇವ, ಆಯ್ದಕ್ಕಿ ಲಕ್ಕಮ್ಮ , ನೀಲ

ಮೊದಲಾದವರು ಈಕೆಯ ಅಕ್ಕರತೆಯನ್ನು ಕೊಂಡಾಡಿದ್ದಾರೆ.


೫೯
ಪ್ರಸ್ತಾವನೆ

ನೀಲಮ್ಮ :

ನೀಲಮ್ಮ , ನೀಲಾಂಬಿಕೆ, ನೀಲಲೋಚನೆ - ಈ ಹೆಸರುಗಳಿಂದ ಪ್ರಸಿದ್ದಳಾದ ಈಕೆ

ಬಸವಣ್ಣನವರ ಎರಡನೆಯ ಹೆಂಡತಿ. ಮೊದಲನೆಯ ಹೆಂಡತಿಯಾದ ಗಂಗಾಂಬಿಕೆಸೋದರ

ಮಾವನಾದ ಬಲದೇವನ ಮಗಳೆಂದು ಸ್ಪಷ್ಟವಿದೆ. ಆದರೆ ನೀಲಾಂಬಿಕೆ ಯಾರ ಮಗಳೆಂಬ

ವಿಷಯವಾಗಿ, ಇವಳ ನಿಜನಾಮದ ವಿಷಯವಾಗಿ ಕಾವ್ಯಗಳು ಸಂದೇಹರೂಪದ

ಅಭಿಪ್ರಾಯಗಳನ್ನು ನೀಡಿವೆ. ಹರಿಹರ ಮತ್ತು ಭೀಮಕವಿ ಗಂಗಾಂಬಿಕೆಯ

' ಮಾಯಿದೇವಿ' ಎಂಬ ಹೆಸರನ್ನು ಬಳಸಿರುವುದನ್ನು ನೋಡಿದರೆ ಮಾಯಿದೇವ

ಇನ್ನೊಂದು ಹೆಸರು ನೀಲಾಂಬಿಕೆಯೆಂದುಊಹಿಸಬೇಕಾಗುತ್ತದೆ.

ಶರಣರನ್ನು ಕುರಿತು ಸಾಹಿತ್ಯ ಬರೆದ ಪ್ರಥಮ ಕವಿಯಾದ ಹರಿಹರ ಬಸವಣ್

ಸಿದ್ದರಸಮಂತ್ರಿಯ ಆಸ್ತಿಗೆ ವಾರಸುದಾರನಾದನೆಂದು ಹೇಳುವನಾದರೂ ಈ ಮಾಯಿದೇವ

ಯಾರಮಗಳೆಂಬುದನ್ನು ಸ್ಪಷ್ಟಪಡಿಸುವುದಿಲ್ಲ . ಭೀಮಕವಿಯೂ ಈ ವಿಷಯವಾಗಿ

ಮೌನತಾಳಿದ್ದಾನೆ. ಲಕ್ಕಣದಂಡೇಶ ಇವಳನ್ನು ಬಿಜ್ಜಳನ ತಂಗಿಯೆಂದು

ಹೇಳಿದರೆ, ವೀರಶೈವಾಮೃತ ಮಹಾಪುರಾಣ ಸಿದ್ಧರಸನ ಮಗಳೆಂದು ಬಾಯಿ ಬಿಟ್


ಹೇಳುತ್ತದೆ. ಈ ಎರಡೂ ಅಭಿಪ್ರಾಯಗಳನ್ನು ಸಮೀಕರಿಸುವನೇನೋ

ಸಿಂಗಿರಾಜನು ನೀಲಲೋಚನೆ ಸಿದ್ಧರಸನ ಮಗಳು, ಬಿಜ್ಜಳನ ಸಾಕುತಂಗಿ ಎಂದು

ಸೂಚಿಸುತ್ತಾನೆ. ಈ ಎಲ್ಲ ಹೇಳಿಕೆಗಳನ್ನು ಕಣ್ಣು ಮುಂದಿಟ್ಟುಕೊಂಡರೆ, ಇವ

ತಂಗಿಯೇ ಆಗಿರುವ ಸಾಧ್ಯತೆಯ ಕಡೆ ಹೆಚ್ಚು ಒತ್ತುಬೀಳುತ್ತದೆ. ಇದಕ್ಕೆ

ಆಧಾರವೆನ್ನುವಂತೆ ಬ್ರಾಹ್ಮಣಕನೆಯಾದ ಗಂಗಾಂಬಿಕೆಗಿಂತ, ಕ್ಷತ್ರಿಯಕನೆಯ

ನೀಲಾಂಬಿಕೆ ತುಂಬಾ ಪ್ರಭಾವಶಾಲಿಯಾಗಿ ನಮ್ಮ ಸಾಹಿತ್ಯದಲ್ಲಿ ಕಂಡುಬರುತ್ತಾಳೆ.

ಗಂಗಾಂಬಿಕೆಗೆ ಸಿದ್ಧರಸ ಹೆಸರಿನ ಮಗನಿದ್ದನೆಂದು, ನೀಲಾಂಬಿಕೆಗೆ ಬಾಲಸ

ಹೆಸರಿನ ಮಗನಿದ್ದನೆಂದು ತಿಳಿದುಬರುತ್ತದೆ. ಇವರಿಬ್ಬರೂ ಸಣ್ಣ ವಯಸ್ಸಿನ

ಮೃತರಾದರೆಂದು ಕಾವ್ಯಗಳು ಸೂಚಿಸುತ್ತವೆ. ಗಂಗಾಂಬಿಕೆ ತನ್ನ ಒಂದು ವಚನದಲ್ಲಿ ' ಅವಳ


ಕಂದ ಬಾಲಸಂಗ' ಎಂದು ನುಡಿದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನೀಲಲೋಚನೆಯ ಜೀವನದ ವಿವರಗಳು ಅಷ್ಟಾಗಿ ನಮಗೆ ತಿಳಿದು ಬರದಿದ್ದರೂ

ಬಸವಣ್ಣನ ಬದುಕಿನಲ್ಲಿ ಇವಳ ಪ್ರವೇಶ ಅತಿ ಮುಖ್ಯವಾದುದೆಂದು ವಚನಸಾಹಿತ್ಯ

ಕಾವ್ಯಸಾಹಿತ್ಯಗಳು ಸ್ಪಷ್ಟಪಡಿಸುತ್ತವೆ. ಸಾಮಾಜಿಕ ಸುಧಾರಣೆಯ , ಧಾರ್ಮಿಕ ಜಾಗ್ರತ

ಮಹಾ ಮಣಿಹವನ್ನು ಹೊತ್ತ ಬಸವಣ್ಣನಿಗೆ ಹಿನ್ನೆಲೆ ಮುನ್ನೆಲೆಯಾಗಿ ದುಡಿದ ಇವಳೂ

ಅವನ ಜೀವನಪಥದಲ್ಲಿ ನಿಜವಾದ ಅರ್ಥದಲ್ಲಿ ಸಹಧರ್ಮಿಣಿಯಾಗಿ ಹೆಜ್ಜೆ ಹಾಕಿದ್ದ

ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಇವಳು ತಂಗಡಿಗಿಯಲ್ಲಿ ಐಕ್ಯಳಾದಳೆಂದು ಪ್ರತೀ


ಶಿವಶರಣೆಯರ ವಚನಸಂಪುಟ

ಬಸವಣ್ಣನ ಬದುಕಿನಲ್ಲಿ ಬಹುದೊಡ್ಡ ಪಾತ್ರವಾಡಿದ ನೀಲಾಂಬಿಕೆ ' ಸಂಗ

ಅಂಕಿತದಲ್ಲಿ ವಚನ, ಸ್ವರವಚನ, ಕಾಲಜ್ಞಾನಗಳನ್ನು ಬರೆದಿದ್ದಾಳೆ. ಈ

ಲಭ್ಯವಾಗಿವೆ. ಸಾಮಾನ್ಯವಾಗಿ ಎಲ್ಲ ವಚನಗಳೂ ಬಸವಣ್ಣನ ಸ್ತುತಿ ಮತ್ತು

ಅಗಲಿಕೆಯನ್ನು ಧ್ವನಿಸುತ್ತವೆ. “ ಏಕೆನ್ನ ಪುಟ್ಟಿಸಿದೆಯಯ್ಯ ಹೆಣ್ಣು ಜನ್ಮದಲ್ಲಿ ಪ

ಪಾಪಿಯ ” ಎಂಬಂಥ ಮಾತುಗಳು ಅವಳನೋವನ್ನು ವ್ಯಕ್ತಪಡಿಸಿದರೆ, “ ಪರಿಣಾಮಮೂರ್

ಬಸವನ ರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇಕಯ್ಯ ”

ಎಂಬಂಥ ಮಾತುಗಳು ಅವಳ ಲಿಂಗೈಕ್ಯಪ್ರಸಂಗವನ್ನು ನೆನಪಿಸುತ್ತವೆ. “ಬ

ಅನುಭವದಿಂದ ವಿವರವ ಕಂಡು ವಿಚಾರಪತ್ನಿಯಾದೆನಯ್ಯ ” ಎಂಬುದು ಬಹಳ ದೊಡ

ಮಾತು. ಹೆಂಡತಿ ಗಂಡನಿಗೆ ವಿಚಾರಪತ್ನಿಯಾಗಬೇಕು ಎಂಬ ಇದು

ಸಾಹಿತ್ಯದಲ್ಲಿಯೇ ಒಂದು ಅಪರೂಪದ ಅಭಿಪ್ರಾಯವಾಗಿದೆ. ಇವಳ ವಚನಗಳಲ್ಲಿ

“ ಮಾತಿನ ಹಂಗೇತಕ್ಕೆ ಮನವೇಕಾಂತದಲ್ಲಿ ನಿಂದಬಳಿಕ ” ಎಂಬಂಥ ವಾಕ್ಯಗಳು ಇವಳ

ಅನುಭಾವದ ಎತ್ತರವನ್ನು , ಅಭಿವ್ಯಕ್ತಿಯ ಬಿತ್ತರವನ್ನು ಎತ್ತಿ ತೋರ

ಕಲ್ಯಾಣದ ಅಂದೋಲನದಲ್ಲಿ ಸಕ್ರಿಯವಾಗಿ ಪಾತ್ರವಹಿಸಿ, ವಚನರಚನೆಯಲ್ಲಿ ನೇರವಾ

ತೊಡಗಿಕೊಂಡ ನೀಲಲೋಚನೆ ಕರ್ನಾಟಕದ ಸ್ತ್ರೀ ಪರಂಪರೆಯಲ್ಲಿಯೇ ಎದ್ದು ಕಾಣು

ವ್ಯಕ್ತಿ ಎನಿಸಿದ್ದಾಳೆ.

ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವ :

ವೀರಶೈವ ಕಾವ್ಯಗಳಲ್ಲಿ ಸದ್ಯ ಮೂರು ಜನ ' ಗುಡ್ಡವ್ವ' ಹೆಸರಿನ ಶರಣೆಯರ

ಉಲ್ಲೇಖ ಬರುತ್ತದೆ : ವರದಾನಿ ಗುಡ್ಡವ್ವ , ನಾವದಿಗೆಯ ಗುಡ್ಡವ್ವ ಮತ್ತು ಬತ್

ಪುಣ್ಯಸ್ತ್ರೀ ಗುಡ್ಡವ್ವ . ವರದಾನಿ ಗುಡ್ಡವ್ವ , ನಾವದಿಗೆಯ ಗುಡ್ಡವ್ವ ಒಂದೆಯಾ

ಬಸವಪೂರ್ವಯುಗದಲ್ಲಿದ್ದವಳೆಂದು ತಿಳಿದುಬರುತ್ತದೆ. ಇನ್ನುಳಿದ ಬತ್

ಪುಣ್ಯಸ್ತ್ರೀ ಗುಡ್ಡವ್ವ ೧೪೩೦ ರಲ್ಲಿದ್ದವಳೆಂದು ಕವಿಚರಿತೆಕಾರರು, ಡಾ . ಎಲ್. ಬಸವರಾಜ

ಮೊದಲಾದವರು ತಿಳಿಸುತ್ತಾರೆ. ಬತ್ತಲೇಶ್ವರ ಈಗ ತಿಳಿದಮಟ್ಟಿಗೆ ನೂರೊಂದು ವಿರಕ್ತರಲ್

ಒಬ್ಬನಾಗಿದ್ದಾನೆ. ಈತನ ಏಳು ಸ್ವರವಚನಗಳು ದೊರೆತಿವೆ.

ಗುಡ್ಡವ್ವಯ ಒಂದು ವಚನ ಮಾತ್ರ ದೊರೆತಿದೆ. ಅಂಕಿತ 'ನಿಂಬೇಶ್ವರ'.

ವ್ರತಾಚಾರನಿಷ್ಠೆಯ ವಿಚಾರವೇ ಇದರ ವಸ್ತು . ಆದರೆ ಹೇಳುವ ರೀತಿ ಇತರರಿಗ

ವಿಶಿಷ್ಟವಾಗಿದೆ. ಅಂತರಂಗ- ಬಹಿರಂಗ ಎರಡೂ ಶುದ್ಧವಾಗಿ ಮಾಡುವ

ನಿಜವಾದುದು; ಶ್ರೇಷ್ಠವಾದುದು. ಅಂತರಂಗ ಶುದ್ಧಿಯಿಲ್ಲದೆ ಕೇವಲ ಬಹಿರಂಗದಲ್ಲಿ

ವ್ರತಾಚರಣೆ ಮಾಡುವವ ಪ್ರತಿಯಲ್ಲ ; ಅವನು ವ್ರತಹೀನ. ಅಂಥವನ ಸಹವಾಸ ನರಕವಾಸ

- ಎಂಬುದು ಈಕೆಯ ನಿಲವು. “ತನು ಬತ್ತಲೆಯಾದಡೇನು ಮನ ಬತ್ತಲೆಯಾಗದನ್ನಕ್ಕ

ವ್ರತವಿದ್ದಡೇನು ಎತಹೀನನಾದಬಳಿಕ ? ” ಎಂಬ ಹೇಳಿಕೆ ಸೂತ್ರಬದ್ಧವಾಗಿದೆ ; ನೇರವ


೬೧
ಪ್ರಸ್ತಾವನೆ

ಮನಕ್ಕೆ ನಾಟುವಂತಿದೆ. ಬತ್ತಲೆಯ ಪರಿಭಾಷೆ ಆಕೆಯ ಗಂಡನ ಹೆಸರು ಹಾಗೂ ವ್ಯಕ್ತಿ

ವೈಶಿಷ್ಟ್ಯಗಳನ್ನು ಶ್ಲೇಷೆಗೊಳಿಸಿದಂತಿದೆ .

ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವ :

ಈಕೆಯ ಹೆಸರಿನ ಹಿಂದೆ ಸೇರಿದ ವಿಶೇಷಣದಿಂದ ಬಾಚಿಕಾಯಕದ ಬಸವಯ್ಯಗಳ

ಹೆಂಡತಿ ಎಂದು ತಿಳಿದುಬರುತ್ತದೆ. ಹೆಸರು, ಇಟ್ಟುಕೊಂಡ ಅಂಕಿತ, ವಚನದಲ್ಲಿ

ಪರಿಭಾಷೆ ಎಲ್ಲವೂ ಈಕೆ ಬಡಿಗಜಾತಿಗೆ ಸೇರಿದವಳೆಂದು ಸ್ಪಷ್ಟಪಡಿಸುತ್ತವೆ. ಈಕೆಯ ಪತ

ಬಸವಯ್ಯ ಅಥವಾ ಬಸವಪ್ಪಯ್ಯ ( ಬಸವಣ್ಣನೂ ವಚನಕಾರನಾಗಿದ್ದು , ' ಬಸ

ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ' ಎಂಬ ಅಂಕಿತದಲ್ಲಿ ವಚನ ರಚಿಸಿದ್

ಈತನ ಕಾಲವನ್ನು ೧೧೬೦ ಎಂದು ಊಹಿಸಲಾಗಿದೆ. ಇದೇ ಕಾಳವ್ವಯ ಕಾಲವೂ ಆಗಿದ

- ಕಾಳಿಯ ಎರಡು ವಚನಗಳು ದೊರೆತಿವೆ. 'ಕರ್ಮಹರ ಕಾಳೇಶ್ವರಾ' ಅ

ಅಂಕಿತ. ಚಿಕ್ಕ ಚೊಕ್ಕ ನುಡಿಗಳಲ್ಲಿ , ಸರಳ ಅಷ್ಟೇ ಸುಂದರವಾಗಿ ರಚಿತವಾದ ಅವುಗಳಲ್ಲಿ


ಕಾಯಕ, ವ್ರತ ಮತ್ತು ನುಡಿಯ ಮಹತಿಯನ್ನು ಎತ್ತಿಹೇಳಲಾಗಿದೆ. 'ಕಾಯಕ ತಪ್

ಸೈರಿಸಬಾರದು ; ವ್ರತ ತಪ್ಪಿದಡೆಂತೂ ಸೈರಿಸಬಾರದು' ಎಂದು ಹೇಳುವಲ್ಲಿ , ಕಾಯಕಕ್ಕಿಂತಲ

ವ್ರತಕ್ಕೆ ಹೆಚ್ಚು ಒತ್ತುಕೊಟ್ಟುದು ಕಂಡುಬರುತ್ತದೆ. 'ಕೈತಪ್ಪಿ ಕೆತ್ತಲು ಕಾಲಿಗೆಮೂಲ

ತಪ್ಪಿ ನುಡಿಯಲು ಬಾಯಿಗೆ ಮೂಲ, ವ್ರತಹೀನನ ನೆರೆಯಲು ನರಕಕ್ಕೆ ಮೂಲ' ಎನ್ನುವ

ಕಾಯಕ- ನುಡಿ- ವ್ರತ ಇವುಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕು, ಸ್ವಲ್ಪ ವ್ಯತ್ಯ

ತೊಂದರೆಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳುವುದರ ಜೊತೆಗೆ ಒಂದ

ತಪ್ಪಿನಿಂದ ದೊರಕುವ ಫಲಗಳನ್ನೂ ಸೂಚಿಸುತ್ತಾಳೆ. ಇಲ್ಲಿ ಬಳಸಿದ ದೃಷ್ಟಾಂತಗಳ ಸಾರ

ಅನನ್ಯವಾಗಿದೆ.

ಬೊಂತಾದೇವಿ :

ಬೊಂತಾದೇವಿ ಕಾಶ್ಮೀರ ದೇಶದ ಮಾಂಡವಪುರದ ಅರಸನ ಮಗಳು. ಈಕೆಯ

ಮೂಲಹೆಸರು ' ನಿಜದೇವಿ'. ಚಿಕ್ಕಂದಿನಲ್ಲಿಯೇ ಶಿವಭಕ್ತಿಯಲ್ಲಿ ನಿಷ್ಟೆನೆಲೆಗೊಂಡು

ತಾಳಿ ರಾಜ್ಯ , ಸುಖಭೋಗಗಳನ್ನೆಲ್ಲ ತೊರೆದು, ಉಟ್ಟ ವಸ್ತ್ರವನ್ನೂ ಕಳೆದೊಗೆದು

ದಿಗಂಬರೆಯಾಗಿ ಕಲ್ಯಾಣದತ್ತ ನಡೆಯುತ್ತಾಳೆ. ಶಿವನು ಅವಳನ್ನು ಪರೀಕ್ಷಿಸಲೆ

ಯುವಕನ ರೂಪಧರಿಸಿ ಬಂದು ನೀನು ನನ್ನ ಸತಿಯಾಗುವೆಯಾ ?' ಎಂದು ಕೇಳು

ಅವನ ನಿಜರೂಪ ಅರಿತ ಆಕೆ 'ಕಾಮವೈರಿಯಾದ ನಿನ್ನನ್ನು ಹೇಗೆ ಮದುವೆಯಾಗುವು

ಎಂದು ಪ್ರಶ್ನಿಸುತ್ತಾಳೆ. ಮತ್ತೊಮ್ಮೆ ಹರದನ ವೇಷತಾಳಿ ಬಂದು ಅದೇ ಪ್ರಶ್ನೆ ಕೇಳು

ಆಗಲೂ ಆಕೆ ' ನಿನಗೆ ಇಬ್ಬರು ಹೆಂಡರು, ಮೂವರು ಮಕ್ಕಳಿದ್ದಾರೆ. ನಿನ್ನೊಡನೆ ನಾನು

ಮದುವೆಯಾಗುವುದು ಸರಿಯೆ ?' ಎಂದು ಕೇಳುತ್ತಾಳೆ. ಶಿವನು ಅವಳ ವೀರವೈರಾಗ


ಶಿವಶರಣೆಯರ ವಚನಸಂಪುಟ

ಮೆಚ್ಚಿ ಒಂದು ಬೊಂತೆ (ಕೌದಿ) ಯನ್ನು ಕೊಟ್ಟು ಇದನ್ನು ಹೊದ್ದುಕ

ಎಂದು ತಿಳಿಸುತ್ತಾನೆ. ಅಂದಿನಿಂದ ಆಕೆಗೆ ' ಬೊಂತಾದೇವಿ' ಎಂಬ ಹೆಸರು ಪ್ರಾಪ್ತವಾ

ಕಲ್ಯಾಣಕ್ಕೆ ಬಂದು ಭಾಕ್ತಿಕ ಜೀವನ ನಡೆಸುತ್ತಾಳೆ

ಹೀಗಿರುವಾಗ ಕಲ್ಯಾಣ ಕ್ರಾಂತಿಯಾಗುತ್ತದೆ. ಶರಣ- ಶರಣೆಯರೆಲ್ಲ ದಿಕ್ಕುದ

ಚದುರಿ ಹೋಗುತ್ತಾರೆ. ಬೊಂತಾದೇವಿ ಮಾತ್ರ ಕೊನೆಯವರೆಗೆ ಅಲ್ಲಿಯೇ ಇದ

ಇಷ್ಟಲಿಂಗದಲ್ಲಿ ಅಡಗುತ್ತಾಳೆ. ಆಕೆಯ ಅಂತ್ಯಕಾಲದಲ್ಲಿ ಒಂದು ವಿಸ್ಮಯ ಘಟ

ಸಂಭವಿಸುತ್ತದೆ. ಶಿವನು ತನಗೆ ಕೊಟ್ಟಿದ್ದ ಬೊಂತೆಯನ್ನು ಆಕಾಶಕ್ಕೆ ತೂ

ಹಾರಾಡುತ್ತ ಹೋಗಿ ಬಯಲಾಗುತ್ತದೆ. ಅದರೊಡನೆ ಬೊಂತಾದೇವಿಯೂ ಲಿಂಗದ

ಬಯಲಾಗುತ್ತಾಳೆ. ಸೋಮನಾಥಪುರಾಣ, ಭೈರವೇಶ್ವರಕಾವ್ಯದಕಥಾಮಣಿಸೂತ್ರ ರ

ಚೆನ್ನಬಸವಪುರಾಣ ಮೊದಲಾದ ಕಾವ್ಯಗಳಲ್ಲಿ ಬರುವ ಈ ಕಥೆ ಬೊಂತಾದೇವಿಯ

ವೀರವೈರಾಗ್ಯ , ಗುಪ್ತಭಕ್ತಿಗಳನ್ನು ಪ್ರಕಟಿಸುತ್ತದೆ. ಈಕೆಯ ವಚನಗಳಲ್ಲಿಯೂ ಈ

ವ್ಯಕ್ತವಾಗಿದೆ.

ಬೊಂತಾದೇವಿಯ ಐದು ವಚನಗಳು ದೊರೆತಿವೆ . ಅಂಕಿತ ' ಬಿಡಾಡಿ'. ಇದು ಯಾ

ಬಂಧನಕ್ಕೂ ಒಳಗಾಗದ ಬಯಲರೂಪಿ ಶಿವನನ್ನು ಸಂಕೇತಿಸುತ್ತದೆ.

ವಚನಕಾರ್ತಿಯ ಸ್ವತಂತ್ರ ಮನೋವೃತ್ತಿಯನ್ನೂ ಪ್ರತಿನಿಧಿಸುತ್ತದೆ. ಎಲ್ಲ ವಚನಗಳ

ವಿಶೇಷವಾಗಿ ಶಿವನ ಸ್ವರೂಪ ಮತ್ತು ಅವನ ಅನಂತತೆ, ಸರ್ವಾಂತರಾಮಿತ್ವಗ

ಹೇಳಲಾಗಿದೆ.

“ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ?

ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೋಲೆಬಯಲೆಂದುಂಟ

ಎಲ್ಲಿ ನೋಡಿದಡೆ ಬಯಲೊಂದೆ;

ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ,

ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ”

ಎಂಬ ವಚನ ಬೊಂತಾದೇವಿಯ ಆಧ್ಯಾತ್ಮಿಕ ಸಾಧನೆ , ಸಮತಾಭಾವ ಹಾಗ

ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ.

ಮುಕ್ತಾಯಕ್ಕ :

' ಅಜಗಣ್ಣ ,' ' ಅಜಗಣ್ಣತಂದೆ' ಎಂಬ ಮುದ್ರಿಕೆಗಳಿಂದ ೩೭ ವಚನಗಳನ್ನು

ಮುಕ್ತಾಯಕ್ಕನ ಅನುಭಾವಿಕ ನೆಲೆ ಶಿವಶರಣೆಯರಲ್ಲಿ ಎದ್ದು ಕಾಣುವಂತಹದು. ಇ

ಚರಿತ್ರೆಯ ಅಂಶಗಳು ಕೆಲಮಟ್ಟಿಗೆ ಕಂಡುಬರುವುದು ಶೂನ್ಯಸಂಪಾದನೆ ಮ


ಪರಂಪರೆಗೆ ಸೇರಿದ ಕೆಲವು ಕೃತಿಗಳಲ್ಲಿ , ಇವಳ ತವರೂರು ಲಕ್ಕುಂಡಿ'; ಗಂಡನೂರ
ಪ್ರಸ್ತಾವನೆ ೬೩

' ಮೊಸಳೆಕಲ್ಲು ' ( ಮಸರಕಲ್ಲು ) ಎಂದು ಕಾವ್ಯಗಳು ತಿಳಿಸುತ್ತವೆ. ಇವಳ ಸೋದ

ಅಜಗಣ್ಣನ ವಚನ ಮುದ್ರಿಕೆ 'ಮಹಾಘನ ಸೋಮೇಶ್ವರ' ಎಂದು ಇತ್ತೀಚ

ತಿಳಿದುಬಂದಿದ್ದು , ಈ ಹೆಸರಿನ ದೇವಾಲಯ ಲಕ್ಕುಂಡಿಯಲ್ಲಿರುವುದು

ಮುಕ್ತಾಯಕ್ಕನ ತವರೂರು ಸುಪ್ರಸಿದ್ದ ಲಕ್ಕುಂಡಿಯೆಂದು ಈಗ ಸ್ಪಷ್ಟವಾಗಿದೆ. ಗಂಡನ ಊ

ಮೊಸಳೆಕಲ್ಲು ಯಾವುದೆಂಬುದನ್ನು ಇನ್ನೂ ಶೋಧಿಸಬೇಕಾಗಿದೆ.

ಅಜಗಣ್ಣ ಮತ್ತು ಮುಕ್ತಾಯಕ್ಕ ಅಣ್ಣ - ತಂಗಿಯಾಗಿದ್ದು ಇಬ್ಬರೂ ವಚನ

ಮಾಡಿದ್ದಾರೆ. ಅಣ್ಣನನ್ನೇ ಗುರುವಾಗಿ ಸ್ವೀಕರಿಸಿದ ಮುಕ್ತಾಯಕ್ಕ ಆ ಹೆಸರನ್ನೇ ತನ್ನ

ಮುದ್ರಿಕೆಯಾಗಿ ಇಟ್ಟುಕೊಂಡುದು ಸಹಜವಾಗಿದೆ. ಗುಪ್ತಭಕ್ತನಾಗಿದ್ದ ಅಜಗ

ಅಮಳೋಕ್ಯ ( ಬಾಯಿ ) ದಲ್ಲಿ ಲಿಂಗ ಧರಿಸುತ್ತಲಿದ್ದ ಶರಣ, ಒಮ್ಮೆ ಆಟವಾಡುತ್ತಲಿದ್

ಮಕ್ಕಳು ಆ ಲಿಂಗವನ್ನು ಕೊಡೆಂದು ಒತ್ತಾಯಿಸಲಾಗಿ ಅದನ್ನು ನುಂಗಿ

ಕೆಲವುಕೃತಿಗಳು, ಬಾಗಿಲು ತಲೆಗೆ ಬಡಿಯಲಾಗಿ ಲಿಂಗೈಕ್ಯನಾದನೆಂದು ಮತ್ತೆ ಕೆಲವು ಕೃತ

ಹೇಳುತ್ತವೆ. ಅದೇನೇ ಇದ್ದರೂ ಈತ ಲಿಂಗೈಕ್ಯನಾದ ಪ್ರಸಂಗದಲ್ಲಿ ವ್ಯಕ್ತಪಡಿಸಿದವೆಂಬಂಥ

ವಚನಗಳು ಮುಕ್ತಾಯಕ್ಕನವಾಗಿವೆ. ಅಣ್ಣನ ಶವವನ್ನು ತೊಡೆಯಮೇಲಿಟ್ಟುಕೊಂಡ

ದುಃಖಿಸುತ್ತಲಿದ್ದ ಮುಕ್ತಾಯಕ್ಕನನ್ನು ಸಂಧಿಸಿದ ಪ್ರಭುದೇವ ಜೀವನದ ನಿತ್ಯಾನಿತ್ಯತ

ಅನುಭಾವಿಯ ನಿಲವು ಮೊದಲಾದವುಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು

ಹಾಕುತ್ತಾನೆ. ಅದಕ್ಕೆ ಅಷ್ಟೇ ಎತ್ತರದ ಉತ್ತರವನ್ನು ಕೊಡುತ್ತಾಳೆ ಮುಕ್ತಾಯಕ್ಕ , ಬಹ

ವಚನಕಾರ್ತಿಯರಲ್ಲಿಯೇ ಇಷ್ಟು ಎತ್ತರದ ಆನುಭಾವಿಕ ನಿಲವಿನಲ್ಲಿ ನಿಂತ

ಮಹಾಜ್ಞಾನಿಯಾದ ಅಲ್ಲಮನನ್ನು ಎದುರಿಸಿದವರು ಮತ್ತೊಬ್ಬರಿಲ್ಲ . “ ಅರಿವನಣಲೊಳಗಿಕ್ಕ


ಅಗಿವುತ್ತಿದೆ ಮರ್ತ್ಯಲೋಕವೆಲ್ಲವು”, “ ವಾರಿಕಲ್ಲಕೊಡದಲ್ಲಿ ಮುತ್ತು

ಎತ್ತುವರಿಲ್ಲದೆ ಸಖಿಯರನರಸುತ್ತಿಪ್ಪೆ ”, “ ಸಾಕಾರವಲ್ಲದ ನಿರಾಕಾರಲಿಂಗವು ವ್


ವುಳ್ಳನ್ನಕ್ಕೆ ಸಾಧ್ಯವಾಗದು ಮೊದಲಾದ ವಚನಗಳು ಅವಳ ಆಧ್ಯಾತ್ಮಿಕ ಔನ್ನತ್ಯವ

ಸೂಚಿಸಿದರೆ, “ಸಿಡಿಲು ಹೋಯ ಬಾವಿಗೆ ಸೋಪಾನವುಂಟೆ”, “ಕರ್ಪೂರದ

ಅಗ್ನಿಯ ಸಿಂಹಾಸನವನಿಕ್ಕಿ ”, “ಮೂಗನ ಕೈಯಲ್ಲಿ ಕಾವ್ಯವ ಕೇಳಿಸಿದಂತಿರಬೇಕು , “ಉಟ್ಟು

ತೊರೆದವಂಗೆ ಊರೇನು ಕಾಡೇನು", “ ದೂರದಲ್ಲಿ ಹೋದವ ಊರ ಸುದ್ದಿಯನರಿಯ

ಮೊದಲಾದ ವಾಕ್ಯಗಳು ಅವಳ ಅಭಿವ್ಯಕ್ತಿಯ ಸೂಕ್ಷ್ಮ ಪದರುಗಳನ್ನು ಬಿಡಿಸಿತೋರಿಸುತ್ತವ

ಮೋಳಿಗೆ ಮಹಾದೇವಿ :

ಮೋಳಿಗೆ ಮಾರಯ್ಯ -ಮೋಳಿಗೆ ಮಹಾದೇವಿ ( ಇವರ ಮೂಲ ಹೆಸರು ಮಹಾದೇ


ಭೂಪಾಲ- ಗಂಗಾದೇವಿ) ಶಿವಶರಣರ ಸಮುದಾಯದಲ್ಲಿಯೇ ಅಪರೂಪದ ದಂಪತಿಗಳು ;

೧೮. ಅಜಗಣ್ಣನ ವಚನಗಳ ಅಭಿಜ್ಞೆ : ಡಾ . ಎಂ . ಚಿದಾನಂದಮೂರ್ತಿ ಮತ್ತು ಎ


(ನೋಡಿ-ಶೂನ್ಯಸಂಪಾದನೆಯನ್ನು ಕುರಿತು ಅನುಬಂಧ - ೫, ಪು. ೧೯೫- ೨೨೦ , ೧೯೮೮ )
೬೪
ಶಿವಶರಣೆಯರ ವಚನಸಂಪುಟ

ಅಪರೂಪದ ಸಾಹಿತ್ಯಸಂಗಾತಿಗಳು. ವೀರಶೈವ ಕಾವ್ಯಗಳ ಪ್ರಕಾರ ಕಾಶ್ಮೀರದಿಂದ ಕಲ್ಯಾಣಕ್ಕೆ

ಬಂದ ಈ ರಾಜದಂಪತಿಗಳು ಕಟ್ಟಿಗೆ ಮಾರುವ ಕಾಯಕವನ್ನು ಕೈಕೊಂಡಿದ್ದರ

ತಿಳಿದುಬರುತ್ತದೆ. ಇದಕ್ಕೆ ಐತಿಹಾಸಿಕ ಆಧಾರಗಳು ಸಿಗುತ್ತಿಲ್ಲವಾದರೂ

ರಾಜವ್ಯಕ್ತಿತ್ವದ ಗಾಂಭೀರ ಕಂಡುಬರುತ್ತದೆ. ಬಸವಪುರಾಣ, ಶೂನ್ಯ ಸಂಪಾದನೆ,

ಗೌರವಾಂಕನ ಮೋಳಿಗಯ್ಯನ ಪುರಾಣ, ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ

ಮೊದಲಾದ ಕೃತಿಗಳಲ್ಲಿ ಇವರ ಜೀವನಕ್ಕೆ ಸಂಬಂಧಿಸಿದ ಕೆಲವು ವಿವರಗಳು ದೊರಕುತ್ತವೆ.

ಕಾಶ್ಮೀರದಲ್ಲಿ ನಿತ್ಯ ಆರುಸಾವಿರ ಜಂಗಮರಿಗೆ ದಾಸೋಹ ಮಾಡುತ್ತ

ಶಿವಭಕ್ತಿಯನ್ನು ಆಚರಿಸುತ್ತಿದ್ದ ಮಹಾದೇವ ಮತ್ತು ಗಂಗಾದೇವಿಯೆಂಬ

ಬಸವಣ್ಣನ ಕೀರ್ತಿವಾರ್ತ ಕೇಳಿ ಕಲ್ಯಾಣಕ್ಕೆ ಬರುತ್ತಾರೆ. ಅಲ್ಲಿ ಮಾರಯ್ಯ

ಮಹಾದೇವಿ ಎಂಬ ಹೆಸರು ಧರಿಸಿ ಕಟ್ಟಿಗೆ ಮಾರುವ ಕಾಯಕವನ್ನು ಕೈಕೊ

ಹಣದಿಂದ ಜಂಗಮ ದಾಸೋಹ ಕಾರವನ್ನು ಮುಂದುವರಿಸುತ್ತಾರೆ. ಒಮ್ಮೆ ಜಂಗಮರು

ದಂಪತಿಗಳ ಮನೆಯ ಅಂಬಳಕವನ್ನು ಸವಿದು ಅದರ ರುಚಿಯನ್ನು ಬಸವಣ್

ತಿಳಿಸುತ್ತಾರೆ. ಬಸವಣ್ಣ ಅವರ ದಾಸೋಹನಿಷ್ಠೆ , ನಿರಪೇಕ್ಷ ಭಾವವನ್ನು ಪರೀಕ್ಷಿಸಲು ವೇಷ

ಮರೆಯಿಸಿಕೊಂಡು, ಮಾರಯ್ಯ ಮನೆಯಲ್ಲಿಲ್ಲದ ಸಮಯದಲ್ಲಿ ಹೋಗಿ ಮಹಾದೇವಿಯಿ

ಆದರಾತಿಥ್ಯ ಸ್ವೀಕರಿಸಿ ಅಂಬಳಕ ಸವಿದು, ಪೂಜಾಗೃಹದಲ್ಲಿ ಎರಡುಸಾವಿರ ಹೊನ್ನಿ

ಜಾಳಿಗೆಯನ್ನು ಇಟ್ಟು ಬರುತ್ತಾನೆ. ಮನೆಗೆ ಮರಳಿಬಂದ ಮಾರಯ್ಯ

ಮಹಾದೇವಿಯನ್ನು ಪ್ರಶ್ನಿಸುತ್ತಾನೆ. ಒಬ್ಬ ಭಕ್ತ ಬಂದಿದ್ದನೆಂದೂ , ತಾನು

ಕಳಿಸಿದೆನೆಂದೂ ಹೇಳುತ್ತಾಳೆ. ಇದು ತಮ್ಮ ಪರೀಕ್ಷೆಗೆಂದು ಬಸವಣ್ಣ ಹೂಡಿದ ತ

ಊಹಿಸಿದ ಅವರು ಆ ಹೊನ್ನನ್ನು ಜಂಗಮರಿಗೆ ಅರ್ಪಿಸಿ, ಧನದಲ್ಲಿ ಶುಚಿತ್ವವನ್ನ

ಶರಣರ ಗೌರವಕ್ಕೆ ಪಾತ್ರರಾಗುತ್ತಾರೆ.

ಕಲ್ಯಾಣಕ್ರಾಂತಿಯಿಂದಾಗಿ ಶರಣರೆಲ್ಲ ಚದುರಿಹೋಗಿ ಅಲ್ಲಿ

ಮಾರಯ್ಯನಿಗೂ ಕೈಲಾಸಕ್ಕೆ ಹೋಗಬೇಕೆಂಬ ಇಚ್ಛೆ ಉಂಟಾಗುತ್ತದೆ. ಆಗ ಜ್ಞಾನಿ

ಮಹಾದೇವಿ “ ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋದಹೆನೆಂಬುದು ಕೈಕೂಲಿ”, “ಮ

ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ ”, “ಕಾಯವೇ ಕೈಲಾಸವೆಂದಮೇಲೆ ಮ

ಕೈಲಾಸವುಂಟೆ ? ” ಎಂದು ಪ್ರಶ್ನಿಸಿ ಅವನ ಕಣ್ಣು ತೆರೆಯಿಸುತ್ತಾಳೆ. ಮಾರಯ

ಜಾಣ್ಮಗೆ ಮೆಚ್ಚಿ ನಿನ್ನ ಭಕ್ತಿಯ ಬೆಳೆಯೇ ಎನಗೆ ಸತ್ಯದ ಹಾದಿ' ಎನ್ನುತ್ತಾನೆ. ಮಹಾದೇವ
“ ನಿಮ್ಮ ಭಕ್ತಿಸೂತ್ರದಿಂದ ಎನ್ನ ಜಾತಿ ನಿಮ್ಮ ಶ್ರೀಪಾದದಲ್ಲಿ ಅಡಗಿತ್ತು , ಎನಗೆ

ಮಾತಿಲ್ಲ ” ಎಂದು ತನ್ನ ವಿನಯಸಂಪನ್ನತೆಯನ್ನು ಮೆರೆಯುತ್ತಾಳೆ. ಹೀಗ

ಗಳೊಂದಾಗಿ ಅನ್ನೋನ್ಯ ಆಧ್ಯಾತ್ಮ ಜೀವನ ನಡೆಸಿ ಕಲ್ಯಾಣದ ಸಮೀಪ

ಎಂಬಲ್ಲಿ ಐಕ್ಯರಾಗುತ್ತಾರೆ.
೬೫
ಪ್ರಸ್ತಾವನೆ

ಸದ್ಯ ಈಕೆಯ ೭೦ ವಚನಗಳು ದೊರೆತಿವೆ. “ ಎನ್ನಯ್ಯಪ್ರಿಯ ನಿಃಕಳಂಕ

ಮಲ್ಲಿಕಾರ್ಜುನ' ಎಂಬುದು ಅಂಕಿತ. ಎಲ್ಲ ವಚನಗಳು ತಾತ್ವಿಕವಾಗಿವೆ. ಪತಿಗೆ ಸತ

ನಿಲವನ್ನು ತೋರಿಸುವಲ್ಲಿ ನುಡಿದ ನುಡಿಗಳೆ ಅವುಗಳಲ್ಲಿ ಅಧಿಕ. ಜೊತೆಗೆ ಷಟ್‌ಸ

ಸ್ವರೂಪ, ಕ್ರಿಯಾ ಜ್ಞಾನ ಸಂಬಂಧ, ಇಷ್ಟಲಿಂಗ ಪ್ರಾಣಲಿಂಗ ಸಂಬಂಧಗಳನ್ನು ತಿ

ಗಂಭೀರವಾದ ತಾತ್ವಿಕ ಉದಾತ್ತ ವಿಚಾರಗಳೇ ಅವುಗಳ ಮುಖ್ಯ ವಸ್ತುವಾಗಿರುವುದರಿಂದ

ಕಾವ್ಯಗುಣ ಕಡಿಮೆ . “ಕಾಯಕ್ಕೆ ಕೈಲಾಸವೆಂಬುದಿಲ್ಲ , ಭಾವಕ್ಕೆ ಬಯಲೆಂ

“ಬೀಜದೊಳಗಣ ವೃಕ್ಷದ ಹಣ್ಣ ಅದನಾರು ಮೆಲಬಹುದು ? ” “ಕಾಯವುಳ್ಳನ್ನಕ್ಕ

ಕರ್ಮಬಿಡದು” “ ಎಸುವರ ಬಿ , ಎಚ್ಚ ಬಾಣ ತಿರುಗಿ ಬಪ್ಪಂತೆ ಎಸುವರ ಕಾಣೆ

ಆತ್ಮಕ್ಕೂ ಉಭಯ ಲಿಂಗವುಂಟೆ ? ” “ ಭಕ್ತಿಗೆ ಕ್ರೀ , ಕ್ರಿಗೆ ಶ್ರದ್ಧೆ , ಶ್ರದ್ಧೆಗೆ ಪೂಜೆ, ಪೂಜ

ವಿಶ್ವಾಸ, ವಿಶ್ವಾಸಕ್ಕೆ ವಸ್ತು ತನ್ಮಯವಾಗಿಪ್ಪುದು. ಇದು ತುರೀಯ ಭಕ್ತಿಯ

ಎಂಬಂಥ ಮಾತುಗಳು ಒಟ್ಟು ಆಕೆಯ ದೃಷ್ಟಿ -ಧೋರಣೆ, ನೆಲೆ-ನಿಲವು, ಅಭಿವ್ಯಕ

ಅನುಭಾವಗಳ ಇತಿಮಿತಿಗಳನ್ನು ಎತ್ತಿ ತೋರಿಸುತ್ತವೆ. ವಚನ ರಚನೆಯಲ್ಲಿ

ಸಹಜತೆ ತೋರದಿದ್ದರೂ ತನ್ನ ತೀವ್ರವಾದ ಆಧ್ಯಾತ್ಮ ಪ್ರಜ್ಞೆಯಿಂದಾಗಿ ಮೋಳ

ಮಹಾದೇವಿ ಇತರ ಶರಣೆಯರಿಂದ ಭಿನ್ನಳಾಗಿ ತೋರುತ್ತಾಳೆ.

ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ :

ಅಮುಗೆ ರಾಯಮ್ಮನಿಂದ ಭಿನ್ನಳಾದ ಈಕೆ, ಬಸವಣ್ಣನವರ ಪತ್ರವ್ಯವಹಾರವ

ನೋಡಿಕೊಳ್ಳುತ್ತಿದ್ದ ಆಪ್ತ ಕಾರೈದರ್ಶಿಯೂ , ವಚನಕಾರನೂ ಆದ ರಾಯಸದ ಮಂಚಣ್

ಪತ್ನಿ , ಪತಿಯೊಡನೆ ಶರಣರ ಸಂಪರ್ಕ ಸಂಸ್ಕಾರದಲ್ಲಿ ಬೆಳೆದ ಈಕೆಯೂ ಅನುಭವ

ಮಂಟಪದ ಸದಸ್ಯೆಯಾಗಿ ಅನುಭಾವಗೋಷ್ಠಿಯಲ್ಲಿ ಭಾಗವಹಿಸಿರಬೇಕು.


ಹೆಸರಿನಡಿಯಲ್ಲಿ ' ಸಕಲಪುರಾತನರ ವಚನಗಳು' ಮತ್ತು 'ಶೀಲಸಂಪಾದನೆ' ಎಂಬ

ಸಂಕಲನಗಳಲ್ಲಿ ಒಂದು ವಚನ ಮಾತ್ರ ದೊರೆತಿದ್ದು , ಅದು “ ಅಮುಗೇಶ್ವರಲಿ

ಅಂಕಿತವನ್ನು ಹೊಂದಿದೆ. ಇದೇ ವಚನ ಆರಂಭದ ಒಂದು ವಾಕ್ಯವನ್ನು ಮಾತ್ರ


ವ್ಯತ್ಯಾಸಗೊಳಿಸಿಕೊಂಡು ಅಮುಗೆರಾಯಮ್ಮನ ಹೆಸರಿನಡಿನಲ್ಲಿಯೂ ದೊರೆಯು

ಒಂದೇ ವಿಧದ ಅಂಕಿತವನ್ನು ಇಟ್ಟುಕೊಂಡು, ಒಂದೇ ಭಾವದ ವಚನಗಳನ

ಉದಾಹರಣೆಗಳು ಶಿವಶರಣೆಯರಲ್ಲಿ ಒಂದೆರಡು ಸಿಕ್ಕುತ್ತವೆ. 'ಗುರುವಿನಿಂದ ಲಿಂಗದೀಕ್ಷೆ

ಪಡೆದ ಭಕ್ತರಿಗೆ ಮೇಲುವ್ರತ, ಪುನರ್ದಿಕ್ಷೆಯೆಂಬುದಿಲ್ಲ ; ವ್ರತ ತಪ್ಪಿ ಶರೀರವಿಡಿದ

ನರಕಿಗಳಿಗೆ ಮುಕ್ತಿಯಿಲ್ಲ' ಎಂದು ವ್ರತ ನಿಷ್ಠೆಯನ್ನೇ ಬೋಧಿಸುವ ಈ ವಚನದಲ್ಲಿ


' ಗರುಡಿಯಲ್ಲಿ ಕೋಲಲ್ಲದೆ ಕಾಳಗದಲ್ಲಿ ಉಂಟೆಕೋಲು' ಎಂಬ ಹೇಳಿಕೆ ಸುಂದರವ

ರೇವಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಕಮ್ಮ :

ಈಕೆ, ಬಸವಣ್ಣನವರ ಸಮಕಾಲೀನನೆನಿಸಿದ ರೇವಣಸಿದ್ದಯ್ಯಗಳ ಪತ್ನಿ .

ಸೋಮೇಶ್ವರಪುರಾಣ, ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ, ಪ್ರಭುದ


ಶಿವಶರಣೆಯರ ವಚನಸಂಪುಟ

ಪುರಾಣಗಳಲ್ಲಿ ಈಕೆಯನ್ನು ಕುರಿತು ಒಂದು ಕಥೆಯಿದೆ : ಶಿವಲಿಂಗಕ್ಕೆ ನಿತ್ಯ

ದಂಡೆಕಟ್ಟಿ ಅರ್ಪಿಸುವುದು, ಹಾಗೆ ದಂಡೆಕಟ್ಟುವಾಗ ಮಧ್ಯದಲ್ಲಿ ಒಂದ

ಸಂಪಿಗೆಯನ್ನು ಇಡುವುದು ಇವಳ ಕ್ರಮವತ್ತಾದ ವ್ರತವಾಗಿತ್ತಂತೆ. ಒಮ್ಮೆ ಸ

ಸಿಗದಾಗಲು ತನ್ನ ದೇಹದ ಮಾಂಸವನ್ನೇ ತೆಗೆದು ದಂಡೆಯ ಮಧ್ಯೆ ಇರಿಸಿ ಅರ್ಪಿಸಿದ

ಅವಳ ನಿಷ್ಠೆಗೆ ಶಿವ ಮೆಚ್ಚಿದನಂತೆ. ಈ ಉಗ್ರಭಕ್ತಿ ಅವಳ ವಚನದಲ್ಲಿ ಚೆನ್ನಾಗಿ

ಪ್ರಕಟವಾಗಿದೆ.

ರೇಕಮ್ಮನ ಒಂದು ವಚನ ಮಾತ್ರ ದೊರೆತಿದೆ. ಶ್ರೀ ಗುರುಸಿದ್ದೇಶ್ವರ' ಅದರ ಅಂಕ

ಇದರಲ್ಲಿ ಲಿಂಗಬಾಹ್ಯ , ಆಚಾರಭ್ರಷ್ಟ, ವ್ರತ ತಪ್ಪುಕ, ಗುರುಲಿಂಗಜಂಗಮವನ್ನು

ಪಾದೋದಕ ಪ್ರಸಾದ ದೂಷಕ, ವಿಭೂತಿ ರುದ್ರಾಕ್ಷಿ ನಿಂದಕರನ್ನು ಕಂಡ

ಸಂಹಾರಮಾಡಲು, ಶಕ್ತಿ ಇಲ್ಲದಿದ್ದರೆ ಕಣ್ಣು ಕಿವಿ ಮುಚ್ಚಿಕೊಂಡು ಶಿವಮ

ಅದೂ ಆಗದಿದ್ದರೆ ಆ ಸ್ಥಳವನ್ನೇ ಬಿಟ್ಟುಹೋಗಲು ತಿಳಿಸುತ್ತಾಳೆ. ಹಾಗೆ ಮಾ

ಅವರನ್ನು ಗುರುಸಿದ್ದೇಶ್ವರ ನರಕದಲ್ಲಿಕ್ಕುತ್ತಾನೆ ಎಂದು ಎಚ್ಚರಿಸುತ್ತಾಳೆ. ಇಲ್ಲಿ

ಧರ್ಮವಿರೋಧಿಗಳನ್ನು ಸಂಹಾರ ಮಾಡಬೇಕೆನ್ನುವ ಅವಳ ಗಣಾಚ

ಗಟ್ಟಿಧ್ವನಿಯಲ್ಲಿ ವ್ಯಕ್ತವಾಗಿದೆ.

ಸತ್ಯಕ್ಕ :

- ಸತ್ಯಕ್ಕೆ ಏಕದೇವತಾ ನಿಷ್ಟೆಯ ನಿಬ್ಬೆರಗಿನಲ್ಲಿ ಬದುಕಿದ ಸತ್ಯಶರಣೆ. ಈಕೆಯ

ನಿಷ್ಠಾಭಕ್ತಿಯ ಕಥೆ ಶಿಷ್ಟ ಮತ್ತು ಜಾನಪದ ಸಾಹಿತ್ಯಗಳೆರಡರಲ್ಲಿಯೂ ಪ್ರಸಿದ್ಧವ

ಆದಯ್ಯ ತನ್ನ ಎರಡು ವಚನಗಳಲ್ಲಿ ಈಕೆಯ ' ಯುಕ್ತಿ ' ಯನ್ನು ಕೊಂಡ

ತನ್ನ ಲಿಂಗಾರ್ಚನೆಯ ರಗಳೆಯಲ್ಲಿ ಈಕೆಯ ಸ್ತುತಿಮಾಡಿದ್ದಾನೆ. ಭೈರವೇಶ

ಶಿವತತ್ವ ಚಿಂತಾಮಣಿ, ಚೆನ್ನಬಸವಪುರಾಣ, ಪಾಲ್ಕುರಿಕೆಸೋಮೇಶ್ವರಪುರಾಣ,

ವಿಜಯಂ, ಭೈರವೇಶ್ವರ ಕಾವ್ಯದಕಥಾಮಣಿಸೂತ್ರರತ್ನಾಕರ, ಪುರಾತನ ದೇವಿಯರ ತ್ರಿವಿ

ಸರ್ವಜ್ಞನ ವಚನ, ಮುಪ್ಪಿನ ಷಡಕ್ಷರಿಯ ಹಾಡು ಹಾಗೂ ಜನಪದ ಗರತಿಯ ಹಾಡುಗಳಲ್

ಈಕೆಗೆ ಸಂಬಂಧಿಸಿ ಬರುವ ಕಥೆಯಿಂದ ಕೆಳಗಿನ ಸಂಗತಿಗಳು ತಿಳಿದುಬರುತ್ತವೆ.

ಸತ್ಯಕ್ಕನ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರ

ಶಿವಭಕ್ತರ ಮನೆಯ ಅಂಗಳ ಕಸಗೂಡಿಸುತ್ತ ಶಿವಭಕ್ತಿಯನ್ನು ಆಚರಿಸುವುದು ಇ

ಕಾಯಕವಾಗಿತ್ತು . 'ಶಿವನನ್ನಲ್ಲದೆ ಅನ್ಯದೈವವ ಪೂಜಿಸಿ, ಶಿವಶಬ್ದವನ್ನಲ್ಲದೆ ಅನ್ಯದೈ

ಶಬ್ದವಕೇಳೆ'ನೆಂಬ ಪ್ರತಿಜ್ಞೆ ಅವಳದಾಗಿತ್ತು . ಅದನ್ನು ತಪ್ಪದೆ ಪಾಲಿಸುತ್ತ ನಡೆದಿದ

ನಿಷ್ಠೆಯನ್ನು ಪರೀಕ್ಷಿಸಲೆಂದು ಶಿವನು ಒಂದು ದಿನ ಭಿಕ್ಷುಕನ ವೇಷದಲ್ಲ

ಧಾನ್ಯದ ಭಿಕ್ಷೆಯನ್ನು ನೀಡಲು , ಹರಿದ ಜೋಳಿಗೆಯಿಂದ ಅದು ನೆಲಕ್ಕೆ ಬೀಳುತ್ತದೆ.


೬೭
ಪ್ರಸ್ತಾವನೆ

ಹರಿಯಿಂದ ಕಾಳು ಹರಿದುಹೋಯ್ತು' ಎಂದು ಭಿಕ್ಷುಕ ಉದ್ಗಾರ ತೆಗೆಯುತ್ತಾನ

ಶಬ್ದ ಕಿವಿಗೆ ಬೀಳುತ್ತಲೇ ಸತ್ಯಕ್ಕ ಸಿಟ್ಟಾಗಿ ಕೈಯಲ್ಲಿದ್ದ ಸಟ್ಟುಗದಿಂದ

ಹೊಡೆಯುತ್ತಾಳೆ. ಅವಳ ನಿಷ್ಠೆಗೆ ಶಿವನು ಮೆಚ್ಚಿ ಕರುಣಿಸುತ್ತಾನೆ.

ಈ ಕಥೆಯ ಆಶಯವನ್ನು ಧ್ವನಿಸುವಂತೆ ಈಕೆಯ ವಚನಗಳಲ್ಲಿ ಶಿವಪಾರಮ್ಮ ಮತ

ಏಕದೇವತಾ ನಿಷ್ಠೆ ಎದ್ದು ಕಾಣುತ್ತವೆ.

- ಸತ್ಯಕ್ಕನ ೨೭ ವಚನಗಳು ದೊರೆತಿವೆ. 'ಶಂಭುಜಕ್ಕೇಶ್ವರ' ಎಂಬುದು ಅವುಗಳ

ಅಂಕಿತ. ಸತ್ಯಕ್ಕನ ಸ್ಥಳವಾದ ಜಂಬೂರಿನಲ್ಲಿ 'ಜಂಬುಕೇಶ್ವರ' ಎಂಬ ದೇವರಿದ್ದು , ಅವನೇ

ಈಕೆಯ ಅಧಿದೈವವಾಗಿ ಅಂಕಿತರೂಪದಲ್ಲಿ ಬಳಕೆಯಾಗಿರಬೇಕು. ಆದರೆ ಈಗ, ಸತ್ಯಕ್ಕನ

ವಚನಗಳಲ್ಲಿ ದೊರೆಯುವ 'ಶಂಭುಜಕ್ಕೇಶ್ವರ' ಎಂಬುದು ' ಜಂಬುಕೇಶ್ವರ' ಎಂಬ

ವ್ಯತ್ಯಸ್ಥ ರೂಪವಾಗಿರಬಹುದೆ ? ವಿಚಾರಿಸಬೇಕು.

ಶಿವಪಾರಯ್ಯ , ಸದ್ಭಕ್ತರ ಮಹಿಮೆ, ಸತಿಪತಿಭಾವ, ಸದಾಚಾರದಲ್ಲಿ ನಡೆಯು

ಗುರು- ಶಿಷ್ಯ - ಜಂಗಮರ ಗುಣಲಕ್ಷಣವರ್ಣನೆ, ಡಾಂಭಿಕ ಗುರು- ಶಿಷ್ಯ - ಜಂಗಮರು ಮತ್ತು

ಭವಿಗಳ ಟೀಕೆ, ಸ್ತ್ರೀ ಪುರುಷ ಸಮಾನತೆ- ಇವು ಸತ್ಯಕ್ಕನ ವಚನಗಳಲ್ಲಿ ಅಳವಟ್ಟ ಮುಖ್ಯ

ವಿಷಯಗಳು .

“ ಏಕೆನ್ನ ಬಾರದ ಭವಂಗಳಲ್ಲಿ ಬರಿಸಿದೆ' ಎಂದು ಪ್ರಶ್ನಿಸಿ, ' ಸಾಕಲಾಗದೆಂದು ಅಕ್ಟೋತ

ನೂಕಿದಡೆ ಏಕೆ ನಾ ನಿಮ್ಮ ಬಿಡುವೆ' ಎಂದು ಕೇಳುವಲ್ಲಿ ಸಾಧಕನ ಅಚಲ ನಿರ್ಧಾರ; '

ಬಿಗಿದು ಮಡುಗಟ್ಟಿ, ಕಂಬನಿಯ ಕಡಲೊಳಗೆ ತೇಲಾಡುತಂದಿಪ್ಪಿನೊ ? ಮೃಡ ಶರಣ

ಶರಣೆಂಬ ಶಬ್ದ ಒಡಲುಗೊಂಡು ಶಂಭುಜಕ್ಕೇಶ್ವರದೇವರಿಗೆ ಶರಣೆನುತ ಮೈ

ದೆಂದಿಪ್ಪಿನೊ ? ' ಎನ್ನುವಲ್ಲಿ ಅವಳ ಭಕ್ತಿಯ ಉತ್ಕಟತೆ ಒಡೆದುತೋರುತ್ತದೆ.

ಸತ್ಯಕ್ಕನ ಸತಿಪತಿಭಾವದ ವಚನಗಳು ಸೊಗಸಾಗಿವೆ. ಅವುಗಳಲ್ಲಿ ಶರಣಸತಿಯ

ಹಂಬಲ, ವಿಕಳತೆ, ಸಾನ್ನಿಧ್ಯಸುಖ , ಸಮರ್ಪಣ ಭಾವಗಳು ಮಧುರವಾದ ಭಾವ

ಭಾಷೆಗಳಲ್ಲಿ ಮೈವೆತ್ತಿ ನಿಂತಿವೆ; ಇನಿಯನಿಗೆ ತವಕವಿಲ್ಲ , ಎನಗೆ ಸೈರಣೆಯಿಲ್

ಮನದಿಚ್ಛೆಯನರಿವ ಸಖಿಯರಿಲ್ಲ ಇನ್ನೇವೆನಾ ?' ' ಭಾವನೇಕೆ ಬಾರನೆನ್ನ ಮನೆಗೆ' ' ಆತನ

ಕರೆದು ತಾರವ್ವ ಶಂಭುಜಕ್ಕೇಶ್ವರನ ನೆರೆದುನೋಡುವೆನು.'

ಸತ್ಯಕ್ಕನದು ದೃಢನಿಲುವಿನ ನಿಷ್ಠಾಭಕ್ತಿ . 'ನೀವಿಕ್ಕಿದ ಭಿಕ್ಷೆಯೊಳಗಿಪ್ಪೆನಯ್ಯ '

' ಲಂಚವಂಚನಕ್ಕೆ ಕೈಯಾನದ ಭಾಷೆ, ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿ

ಕೈಮುಟ್ಟಿ ಎತ್ತಿದೆನಾದಡೆ ನಿಮ್ಮಾಣೆ' ' ಪರದ್ರವ್ಯಕ್ಕೆ ಆಸೆಮಾಡಿದೆನಾದಡೆ ನೀನಾಗಲೇ

ಎನ್ನ ನರಕದಲ್ಲದ್ದಿ ನೀನೆದ್ದು ಹೋಗು' ಎಂಬುದು ಆ ನಿಷ್ಠೆಗೆ ತಕ್ಕ ಗಟ್ಟಿಮಾತು


“ ಅರ್ಚನೆ ಪೂಜನೆ ಮಂತ್ರ ತಂತ್ರ ಧೂಪಾರತಿ ನೇಮವಲ್ಲ , ಪರಧನ ಪರಸ್ತ್ರೀ
೬೮ ಶಿವಶರಣೆಯರ ವಚನಸಂಪುಟ

ಪರದೈವಂಗಳಿಗೆರಗದಿಪ್ಪುದೇ ನೇಮ' ಎಂಬ ವ್ರತಶೀಲೆಯಾದ ಆಕೆ ಡಾಂಭಿ

ಗುರುಶಿಷ್ಯರನ್ನು , ಭವಿಗಳನ್ನು ಹುಟ್ಟಂಧಕರು', 'ಕೆಟ್ಟಗಣ್ಣವರು', 'ಜಡಜೀವಿಗಳ

ಹೀನರು' ಎಂದು ಟೀಕಿಸುತ್ತಾಳೆ. “ ಮೊಲೆ ಮುಡಿ ಇದ್ದುದೆ ಹೆಣ್ಣೆಂ

ಎಂಬ ವಚನದಲ್ಲಿ ಅನುಭಾವಕ್ಕೆ ಲಿಂಗಭೇದವಿಲ್ಲ ಎಂದು ಹೇಳುವುದರ ಮೂಲಕ ಸ್ತ

ಪುರುಷ ಸಮಾನತೆಯ ಉದಾತ್ತತೆಯನ್ನು ಎತ್ತಿಹಿಡಿಯುತ್ತಾಳೆ.

ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವ :

- ಸಿದ್ಧಬುದ್ಧಯ್ಯ ಮತ್ತು ಕಾಳವ್ವ ಈ ದಂಪತಿಗಳಿಬ್ಬರ ಬಗೆಗೂ ಏನೊಂ

ತಿಳಿದಿಲ್ಲ . ಬಸವಾದಿ ಶರಣರ ಮಧ್ಯ ಕಾಯಕ ಜೀವಿಗಳಾಗಿ ಬದುಕಿದ ಸಾಮಾನ್ಯ ವರ

ಸೇರಿದ ಶರಣರೆಂದು ತೋರುತ್ತದೆ. ಕಾಳವ್ವಯ ಒಂದು ವಚನ ಮಾತ್ರ

“ಭೀಮೇಶ್ವರ' ಎಂಬ ಅಂಕಿತವನ್ನು ಹೊಂದಿದೆ. ಅದರಲ್ಲಿ ಆಕೆ ವ್ರತಭ್ರಷ್ಟರು ಮ

ಲಿಂಗಬಾಹ್ಯರನ್ನು ಟೀಕಿಸುತ್ತಾಳೆ. ಅಂಥವರೊಡನೆ ಮಾತನಾಡಲಾಗದು, ಅ

ಸತ್ತ ನಾಯಿ , ಕಾಗೆಗಳನ್ನು ಕಂಡಂತೆ ಎಂದು ಭಾವಿಸಬೇಕು ಎನ್ನುತ್ತಾಳೆ.

ಸೂಳೆ ಸಂಕವ್ವ :

ಈಕೆಯ ಬಗೆಗೂ ಏನೂ ವಿವರ ದೊರೆತಿಲ್ಲ . ಮೊದಲು ವೇಶ್ಯಾವೃತ್ತಿಯನ

ಮಾಡುತ್ತಿದ್ದು , ನಂತರ ಶರಣರ ಚಳುವಳಿಯ ಪ್ರಭಾವಕ್ಕೊಳಗಾಗಿ ಸಾತ್ವಿಕ ಬದುಕಿ

ಸಾಗಿ ಬಂದಿರಬೇಕೆಂದು ಆಕೆಯ ಹೆಸರಿನ ಹಿಂದೆ ಹತ್ತಿದ ವಿಶೇಷಣ ಹಾಗೂ ವಚನದ

ವ್ಯಕ್ತವಾದ ವಿಷಯಗಳು ತಿಳಿಸುತ್ತವೆ. ಇವಳೊಬ್ಬ ಸ್ವಾಭಿಮಾನವನ್ನು ಬೆಳೆಸಿ

ಪ್ರಾಮಾಣಿಕವಾಗಿ ಬದುಕಿದ ದಿಟ್ಟ ಮಹಿಳೆ. ಈಕೆಯ ಒಂದು ವಚನ ಮಾತ್ರ ದೊ

ನಿರ್ಲಜೇಶ್ವರ' ಅದರ ಅಂಕಿತ. ವ್ರತಭ್ರಷ್ಟರ ಟೀಕಿಯೇ ಇದರ ವಸ್ತು . ವ್ರತಹೀನರ ಸ

ಶಿಕ್ಷಾರ್ಹ ಎಂಬುದು ಈಕೆಯ ನಿರ್ಧಾರದ ನಿಲವು. ಇದನ್ನು ತನ್ನ ವೃತ್ತಿಯ ಅನು

ಹಿನ್ನೆಲೆಯಲ್ಲಿ ಯಾವ ಅಂಜಿಕೆ , ಆತ್ಮವಂಚನೆಯಿಲ್ಲದೆ ಅತ್ಯಂತ ಸಹಜವಾಗಿ ಪ್ರಕಟಿಸಿದ

“ ಒತ್ತೆಯ ಹಿಡಿದು ಮತ್ತೊತ್ರೆಯ ಹಿಡಿಯೆ .

ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯ .”

ಎಂಬ ಮಾತಿನಲ್ಲಿ ಅವಳ ನಿಯತ್ತಿನ ಬದುಕಿನ ಪ್ರಾಮಾಣಿಕ ಚಿತ್ರ ಮೂಡಿನಿಂತಿದೆ. ಜೊತೆ

ಏಕದೇವನಿಷ್ಟೆಯ ಧ್ವನಿಯೂ ಕೇಳಿಬರುತ್ತದೆ.

“ವ್ರತ ಹೀನನನರಿದು ಬೆರೆದಡೆ

ಕಾದ ಕತ್ತಿಯಲ್ಲಿ ಕಿವಿಮೂಗುಕೊಯ್ಯರಯ್ಯ ”

ಎಂಬಲ್ಲಿ ವ್ರತಹೀನನನ್ನು ಅರಿತೂ ಬೆರೆತವರಿಗೆ ಒದಗುವ ಕಠಿಣ ಶಿಕ್ಷೆ , ಆ ಕಾಲ


ಪ್ರಸ್ತಾವನೆ

ವ್ರತಾಚಾರಕ್ಕಿದ್ದ ಮಹತ್ವ ವ್ಯಕ್ತವಾಗಿವೆ. ಸರಳ ದೇಶೀ ನುಡಿಗಳಲ್ಲಿ ಒಡಮೂಡಿದ

ಸಾಮಾನ್ಯ ಸ್ತ್ರೀಯೊಬ್ಬಳ ಈ ಸಹಜ ಅಭಿವ್ಯಕ್ತಿ ಅಪೂರ್ವವೆನಿಸಿದೆ.

ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ :

ಈಕೆ ಬಸವಣ್ಣನವರ ಆಪ್ತರಲ್ಲಿ ಅತಿಮುಖ್ಯವೆನಿಸಿದ ಹಡಪದ ಅಪ್ಪಣ್ಣನ ಸತಿ.

ಗುರುರಾಜ ಚರಿತ್ರೆಯಲ್ಲಿ ಬರುವ ' ಚಾರುಗುರುಭಕ್ತಿಲಿಂಗಮ್ಮ ' ಎಂಬ ಹೇಳಿಕೆಯನ

ಮತ್ತಾವ ವೀರಶೈವ ಕಾವ್ಯಗಳಲ್ಲಿಯೂ ಈಕೆಯ ಉಲ್ಲೇಖವಿಲ್ಲ . ಸ್ವರಚಿತ ವಚನಗಳಿಂದ

ಈಕೆಯ ಗುರು ಚೆನ್ನಮಲ್ಲೇಶ ೧೯ ಎಂದು ತಿಳಿದುಬರುತ್ತದೆ. 'ಹಡದಪ್ಪಣ್ಣನೆ ಎನ್ನ

ಕರಸ್ಥಲಕ್ಕೆ ಲಿಂಗವಾಗಿ ಬಂದು ನೆಲೆಗೊಂಡನು. ಚೆನ್ನಮಲ್ಲೇಶ್ವರನೆ ಎನ್ನ ಮನ

ಪ್ರಾಣವಾಗಿ ಬಂದು ಮೂರ್ತಿಗೊಂಡನು' ಎಂದು ಮುಂತಾಗಿ ೧೫ ವಚನಗಳಲ್ಲಿ ಆತನನ್

ನೆನೆದು, ತನ್ನ ಗುರುಭಕ್ತಿಯನ್ನು ಪ್ರಕಟಿಸಿದ್ದಾಳೆ.

ಕೀಳುಕುಲದಲ್ಲಿ ಹುಟ್ಟಿ ಬಂದ ಲಿಂಗಮ್ಮ ತನ್ನ ಕುಲದ ಸೂತಕವನ್ನು ಶರಣ

ಸಂಗದಿಂದ ಕಳೆದುಕೊಳ್ಳುತ್ತಾಳೆ. ಅದನ್ನವಳು ಮುಚ್ಚು ಮರೆಯಿಲ್ಲದೆ ಪ್ರಾಮ

ಬಿಚ್ಚಿ ಹೇಳುತ್ತಾಳೆ: “ಕನಿಷ್ಟದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ. ಸತ್ಯ ಶರಣರ

ಪಾದವಿಡಿದೆ. ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ,

ಪಾದೋದಕವ ಕಂಡೆ, ಪ್ರಸಾದವ ಕಂಡೆ. ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ

ಹರಿಯಿತ್ತು . ಕಂಗಳ ಮುಂದಣ ಕತ್ತಲೆ ಹರಿಯಲೊಡನೆ ಮಂಗಳದ ಮಹ

ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ. ”

ಲಿಂಗಮ್ಮನ ವೈಯಕ್ತಿಕ ಜೀವನದ ಬಗೆಗೆ ಹೆಚ್ಚಿನ ವಿವರಗಳು ದೊರಕದಿದ್ದರೂ

ಅಧಿಕ ಸಂಖ್ಯೆಯ ವಚನಗಳು ದೊರೆತು, ಆಕೆಯ ವ್ಯಕ್ತಿವೈಶಿಷ್ಟ್ಯಗಳನ್ನು ಅರಿತುಕೊಳ್ಳ

ಸಹಾಯಕವಾಗಿವೆ. ೧೧೪ ವಚನಗಳು, ಒಂದು ಮಂತ್ರಗೋಪ್ಯ ಹಾಗೂ ಒಂದು ಸ್ವ

ಸದ್ಯ ಲಿಂಗಮ್ಮನ ಹೆಸರಿನಲ್ಲಿ ದೊರೆತ ಕೃತಿಗಳು. ' ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ '

ಎಂಬುದು ಅವುಗಳ ಅ೦ಕಿತ. ಈಕೆಯ ವಚನಗಳನ್ನು 'ಬೋಧೆಯ ವಚನಗಳು' ಎಂದು

ಕರೆಯಲಾಗುತ್ತದೆ. ತತ್ವಬೋಧೆಯೇ ಅವುಗಳ ಮುಖ್ಯ ಉದ್ದೇಶವಾಗಿರುವುದು ಹಾಗ


ಕರೆಯಲು ಅನ್ವರ್ಥಕವಾದ ಕಾರಣವಾಗಿದೆ.

ಮನದ ಚಂಚಲತೆ, ಘನವಸ್ತುವನ್ನು ಕಾಣಲು ಆ ಮನವನ್ನು ನಿಗ್ರಹಿಸಬೇಕ


ವಿಧಾನ, ಗುರುಲಿಂಗಜಂಗಮಭಕ್ತಿ , ಶರಣರ ನಡೆನುಡಿಬೋಧೆ, ಆಚಾರ

ಶರಣರನರಿಯದ ಭವಿಗಳು, ತೋರಿಕೆಯ ಭಕ್ತಿಯ ಡಾಂಭಿಕರ ಅವಹೇಳನ ತಾನು

೧೯ , ಈತನ ಬಗೆಗೆ ಏನೊಂದೂ ವಿಷಯ ತಿಳಿದಿಲ್ಲ .


ಶಿವಶರಣೆಯರ ವಚನಸಂಪುಟ

ಸಾಮಾನ್ಯನಿಂದ ಅಸಾಮಾನ್ಯಕ್ಕೇರಿದ ಸಾಧನೆಯ ರೀತಿ, ಯೋಗವಿಚಾರ - ಇವು ಲಿಂಗ

ವಚನಗಳಲ್ಲಿ ತೋರುವ ಮುಖ್ಯ ವಿಷಯಗಳು.

ಸರ್ವ ಕಾರ್ಯಕ್ಕೂ ಕಾರಣವಾದ ಮನದ ಬಗೆಗೆ ಲಿಂಗಮ್ಮನಿಗೆ ಹೆಚ್ಚಿನ

ಅದನ್ನು ನಿಲ್ಲಿಸುವುದಕ್ಕೆ ಶರಣರ ಸಂಗವ ಮಾಡಬೇಕು. ಅವರ ಸಂಗ ಸಂಸ್ಕಾರದಿಂದ

ಬೀಸದ ಜಲದಂತೆ, ಮೋಡವಿಲ್ಲದ ಸೂರ್ಯನಂತೆ, ಬೆಳಗಿದ ದರ್ಪಣದಂತೆ

ನಿರ್ಮಲವಾದಲ್ಲದೆ ಮಹಾಘನವ ಕಾಣಬಾರದು.' ಇದು ಲಿಂಗಮ್ಮನಬೋಧ

ವಿಧಾನ. ಆಕೆಯ ಬೋಧೆಗೆ ಇನ್ನೊಂದು ಮುಖವೂ ಉಂಟು. ಅದು ಟೀಕಾತ್

ಇಲ್ಲಿ ಆಕೆ ಬಳಸುವ ಮಾತುಗಳಲ್ಲಿ ಮೇಲ್ನೋಟಕ್ಕೆ ರೋಷ, ಒರಟುತನ ಕಂಡುಬಂದರೂ

ಅದರ ಹಿಂದೆ ಸಾತ್ವಿಕಸಂತಾಪ ಅಡಗಿರುವುದನ್ನು ಕಾಣಬಹುದು.

' ಆಶೆ ರೋಷ ಪಾಶಕ್ಕೊಳಗಾದ ಹೇಸಿಗಳು' 'ಸತ್ತು ಹುಟ್ಟಿ ಹೂಣಿಸ

ವಿದ್ಯಾವಾದಿಗಳು' ' ನಿದ್ರೆಯ ಕೆಡಿಸಿ ಬುದ್ದಿಯ ಕಲಿತಿಹೆನೆಂಬ ಬುದ್ಧಿಹೀನರು' ' ಅಂತರಂಗ

ಬಹಿರಂಗ ಶುದ್ಧಿಯಿಲ್ಲದೆ ನುಡಿವ ಸಂತೆಯ ಸೂಳೆಯರು' ಇವು ಲಿಂಗಮ್ಮ ಬಳಸಿದ ಮಾತಿನ

ಕೆಲವು ಮಾದರಿಗಳು.

- ತತ್ವಬೋಧೆಯೇ ಮುಖ್ಯವಾಗಿರುವುದರಿಂದ ಈಕೆಯ ವಚನಗಳಲ್ಲಿ ಯಾವುದೇ

ವಿಧವಾದ ಮಾನಸಿಕ ತೊಳಲಾಟ ಕಂಡುಬರುವುದಿಲ್ಲ . ' ನಾನೊಂದು ಹಾಳೂರಿಗ

ಹೋಗುತ್ತಿರಲು', ' ಒಂದು ಹುತ್ತಕ್ಕೆ ಒಂಬತ್ತು ಬಾಗಿಲು'- ಎಂಬಂಥ, ಜನಪದ

ಧಾಟಿಯಲ್ಲಿ ಸಾಗುವ ವಚನಗಳು ಬೆಡಗಿನ ಪರಿಭಾಷೆಯನ್ನು ಬಳಸಿಕ

ದೀರ್ಘವಾಗಿವೆ. ಆಕೆ ತನ್ನ ವಚನಗಳಲ್ಲಿ ಬಳಸುವ ನಿರಾಳಲಿಂಗ', ' ಬಚ್ಚಬರಿಯಬೆಳ

“ಬಟ್ಟಬಯಲು', ' ಮಹಾಬೆಳಗು', ' ಮರವೆ', 'ಬಯಲದೇಹ' ಮೊದಲಾದ ಪದಗಳು

ಲಿಂಗಮ್ಮ ಶರಣತತ್ವ ಪರಿಭಾಷೆಯನ್ನು ಗಾಢವಾಗಿ ಮೈಗೂಡಿಸಿಕೊ

ನಿದರ್ಶನವೆನಿಸಿವೆ. ಸಾಮಾನ್ಯ ಸ್ತರದಿಂದ ಬಂದ ಸ್ತ್ರೀಯೊಬ್ಬಳು ಸಾಧಿಸಿದ ಈ ಆಧ

ಸಿದ್ದಿಯನ್ನು ಕಂಡು ವಿಸ್ಮಯ ಉಂಟಾಗದೆ ಇರದು.

ಲಿಂಗಮ್ಮನ ಹೆಚ್ಚಿನ ವಚನಗಳು ಗದ್ಯಾತ್ಮಕಗುಣವನ್ನು ಅಳವಡಿಸಿಕೊಂಡ ತತ್ವ

ಬೋಧಾತ್ಮಕ ರಚನೆಗಳಾಗಿರುವುದರಿಂದ ಅವುಗಳಲ್ಲಿ ಕಾವ್ಯಗುಣ ಕಡಿಮೆ . ಆದರೂ ಆಕ

ಬಳಸುವ ಕೆಲವು ಉಪಮೆ , ರೂಪಕ , ಶಬ್ದ ಚಿತ್ರ , ಉಕ್ತಿ, ದೇಶೀಪದಗಳು , ಗಾದೆ,

ಸಂಭಾಷಣಾರೂಪದ ಶೈಲಿ - ಹಿರಿಯ ಶರಣರ ಪ್ರಭಾವಕ್ಕೊಳಗಾಗಿಯೂ ಆಕರ್ಷಕವೆನಿಸಿವ

“ ತಿಪ್ಪೆಯಂತಹ ಒಡಲೊಳಗೆ ' ಬಂಡಿಯ ಮೇಗಣ ಹೆಳವನಂತೆ' ' ಹೊಸ್ತಿಲೊಳ

ಗಿರಿಸಿದ ಜ್ಯೋತಿಯಂತೆ' 'ಒಡಕು ಮಡಕೆಯಂತೆ ಹೋಗುವ ಹಡಿಕೆ ಕಾಯವ ನೆಚ್ಚಿ '

'ಜಲದೊಳಗಣ ಸೂರನ ಪ್ರತಿಬಿಂಬದಂತೆ' 'ಮೋಡವಿಲ್ಲದ ಚಂದ್ರಮನಂತೆ' ' ಬೆಳಗಿದ


೭೧
ಪ್ರಸ್ತಾವನೆ

ದರ್ಪಣದಂತೆ' ' ಗಾಳಿ ಬೀಸದ ಜಲದಂತೆ'- ಇವು ಲಿಂಗಮ್ಮನ ಪರಿಸರ ಪ್ರೇರಿತ

ಉಪಮೆಗಳೆನಿಸಿದರೆ, ಅರ್ಥಶ್ರೀಮಂತಿಕೆಯಿಂದ ಕೂಡಿದ ಸುಂದರ ಉಕ್ತಿಗಳು ಹೀಗಿವೆ :

' ತಾನು ತಾನಾದ ಬಳಿಕ ಮಾನವರ ಹಂಗುಂಟೆ ?' ' ಮನವು ಮಹದಲ್ಲಿ ನಿಂದ ಬಳಿ

ಮರವೆಯುಂಟೆ ?' ' ತನುವ ಮರೆದಂಗೆ ಇನ್ನರಿಯಬೇಕೆಂಬ ಅರುಹುಂಟೆ

ಕಂಡವರಿಗೆ ಕತ್ತಲೆಯ ಹಂಗುಂಟೆ ?' ' ಆಸೆಯನತಿಗಳೆದವಂಗೆ ರೋಷದ ಹಂಗೇಕೊ ?'

“ ನಡೆಗೆಟ್ಟವಂಗೆ ನುಡಿಯ ಹಂಗೇಕೊ ?' ' ಮನವು ಮಹದಲ್ಲಿ ನಿಂದುದೆ ಲಿಂಗ' 'ಕಾಮ

ಸುಟ್ಟವಂಗೆ ಕಳವಳದ ಹಂಗೇಕೊ ?'

ಲಿಂಗಮ್ಮನ ವಚನಭಾಷೆ, ತತ್ವನಿರೂಪಣೆಯಲ್ಲಿ ಬೆಡಗಿನಿಂದ ಕೂಡಿದ್ದರ

ಟೀಕಿಸುವಲ್ಲಿ ಸರಳ, ದೇಶೀ ಸೊಗಡಿನಿಂದ ಸಂಭ್ರಮಿಸಿದೆ. ದೇಶೀ ನುಡಿಗಳಲ್ಲಿ ಹೆಣ್ಣು

ಮಕ್ಕಳಾಡುವ ಸಹಜ ಮಾತುಗಳೂ ಸೇರಿಕೊಂಡಿವೆ. ಇವೀಸು, ನಿಮಗೆ ಬಂದುದೇನಿ

ಒಡಕಮಡಿಕೆ, ತಟತಟನೆ ತಾಗಿ, ತೂತು ಬಾಯೊಳಗೆ, ನನ್ನ ಕೈಯಲ್ಲೊಂದು

ತೆಕ್ಕೊಂಡು, ತೆಳ್ಳಬಳ್ಳಿಯನೆ ಹರಿದು, ಅಕ್ಕಿಯ ಥಳಿಸಿದಂತೆ, ಹಲ್ಲ ಸುಲಿದಂತೆ – ಇ

ಅನೇಕ ಅಚ್ಚಗನ್ನಡ ಮಾತುಗಳು ವಚನ ಸತ್ವವನ್ನು ಹೆಚ್ಚಿಸಿವೆ.

ಲಿಂಗಮ್ಮನಸಾಧನೆ, ಸಿದ್ದಿ , ವ್ಯಕ್ತಿವೈಶಿಷ್ಟ್ಯಗಳನ್ನು ಕುರಿತು ವ್ಯಕ್ತಪಡಿಸಿದ ವಿದ್

ಈ ಮಾತುಗಳು ಅರ್ಥಪೂರ್ಣವೆನಿಸಿವೆ.

- “ ಲಿಂಗಮ್ಮನಂಥವರಿಗೆ ಆಧ್ಯಾತ್ಮ ಎಂಬುದು ಒಂದು ತೊಡಗುವಿಕೆಯೇ ಹ

ಬೇಕಾದಾಗ ಇಟ್ಟು, ಬೇಡವಾದಾಗ ಬಿಚ್ಚಿ ಇಡುವ ತೊಡುವು ಅಲ್ಲ .” ೨೦ “ ಒಂದು ಜನ

ಮನಸ್ಸು ಹಿಂದೆ ತನಗೆಂದೂ ಎಟುಕದಿದ್ದ , ಮಾತಾಡಲಾರದಿದ್ದ ಆಧ್ಯಾತ್ಮಿಕ ಜ್ಞಾನದ

ದೊರೆತಾಗ ಆಗುವ ಆಶ್ಚಯ , ಸಂತೋಷ ದಿಗ್ರಮೆಗಳು, ಅಷ್ಟಲ್ಲದೆ ಇದನ್ನೆಂದೂ

ಬಿಟ್ಟುಕೊಡಬಾರದು ಎಂದು ಬಹು ಕಟ್ಟುನಿಟ್ಟಿನಿಂದ ಅದನ್ನು ಪಾಲಿಸು

ಲಿಂಗಮ್ಮ ಉತ್ತಮ ಉದಾಹರಣೆ. "೨೧

ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ :

ಗಂಗಮ್ಮ ಹಾದರಕಾಯದ ಮಾರಯ್ಯನ ಸತಿ ( ಹಾದರ ” ಎಂಬುದು ' ಹರದ'

ಆಗಿರಬೇಕೆಂದು ಕೆಲವರ ಊಹೆ), ಸೂಳೆ ಸಂಕವ್ವಯಂತೆ ಈಕೆಯೂ ಮೊದಲು

ವೇಶ್ಯಾವೃತ್ತಿಯಿಂದ ಜೀವನ ಸಾಗಿಸುತ್ತಿದ್ದು, ಬಸವಾದಿಗಳ ಪ್ರಭಾವದಿಂ

೨೦ . ಡಾ . ಎಂ . ಚಿದಾನಂದಮೂರ್ತಿ ( ವಚನ ಸಾಹಿತ್ಯ , ಬೆಂ . ವಿ . ವಿ . ಪು ೧೪೪) .


೨೧ . ಚ. ಸರ್ವಮಂಗಳಾ ( ಕನ್ನಡ ಸಾಹಿತ್ಯ ಚರಿತ್ರೆ - ಮೈ . ವಿ . ವಿ . ಪು. ೭೪೯ - ೫೦ )
‫عو‬ ಶಿವಶರಣೆಯರ ವಚನಸಂಪುಟ

ಸ್ವೀಕರಿಸಿರಬೇಕು. 'ಆವ ಕಾಯಕ ಮಾಡಿದಡೂ ಒಂದೆ ಕಾಯಕವಯ್ಯ ' ಎಂಬ ಅವಳ

ಮಾತಿನಲ್ಲಿ ತಾನು ಕೀಳು ಕುಲದಿಂದ ಬಂದವಳೆಂಬ ಧ್ವನಿ ಇದ್ದಂತಿದೆ. 'ಗಂಗೇಶ್ವರ' ಎ

ಅಂಕಿತದಲ್ಲಿ ಈಕೆಯ ಒಂದು ವಚನ ದೊರೆತಿದೆ. ಕಾಯಕ ಸಮಾನತೆ, ವ್ರತನಿಷ್ಠೆ ಇದ

ಮುಖ್ಯ ಆಶಯವಾಗಿದೆ. ಎಲ್ಲ ಕಾಯಕಗಳಲ್ಲಿ ಸಮಾನ ಗೌರವವನ್ನು ತಾಳಿದ ಗಂಗ

ಎಲ್ಲ ವ್ರತಗಳನ್ನು ಒಂದೇ ಎಂದು ಭಾವಿಸುತ್ತಾಳೆ. ವ್ರತನಿಷ್ಠರ

ಬೆರೆಯುವುದು ಕೋಗಿಲೆ ಕಾಗೆಯ ಸಂಗ ಬೆಳೆಸಿದಂತೆನಿಸುತ್ತದೆ, ಅಂಥವರಿಗೆ ಘೋರನ

ತಪ್ಪಿದ್ದಲ್ಲ ಎಂದು ಹೇಳುತ್ತ ವ್ರತಾಚಾರದ ಮಹತಿಯನ್ನು ಎತ್ತಿ ಹಿಡಿಯುತ್ತಾಳೆ.

ಒಟ್ಟು ನೋಟ:

ವಚನಕಾರ್ತಿಯರಲ್ಲಿ ವಿವಿಧ ಸ್ತರಗಳಿಂದ ( ಮೇಲುವರ್ಗ, ಮಧ್ಯಮವರ್ಗ ,

ಕೆಳವರ್ಗ ) ಬಂದ ಸ್ತ್ರೀಯರು ಸಮಾವೇಶಗೊಂಡಿದ್ದಾರೆ. ಆದರೆ ಅವರು

ಪೂರ್ವಾಶ್ರಯದ ಜಾತಿಭೇದ, ಅಂತರ- ಅಂತಸ್ತುಗಳನ್ನು ಮರೆತು , ಶರಣರ

ಭೇದರಹಿತ ಸರ್ವಸಮಾನ ಮಾನವಧರ್ಮದ ವೇದಿಕೆಯ ಮೇಲೆ ಒಂದಾಗಿ ಬೆರ

ಕೌಟುಂಬಿಕ, ಧಾರ್ಮಿಕ, ಸಾಮಾಜಿಕ , ಆರ್ಥಿಕ, ಆಧ್ಯಾತ್ಮಿಕ, ಆನುಭ

ಹಂತಗಳಲ್ಲಿ ತಮ್ಮ ಚಿಂತನೆಗಳನ್ನು ಪರಸ್ಪರ ಹಂಚಿಕೊಂಡು ಬದುಕಿದ್ದಾರೆ.

ವರ್ಗ, ವರ್ಣಭೇದದಂತೆ ಲಿಂಗಭೇದವನ್ನೂ ಒಪ್ಪದ ಅವರು, ಶರಣರ ಸ್ತ್ರೀ ಪು

ಸಮಾನತೆಯ ಘೋಷಣೆಯಲ್ಲಿ ತಮ್ಮ ಧ್ವನಿಯನ್ನೂ ಕೂಡಿಸಿ, ಅದನ

ಅರ್ಥಪೂರ್ಣವಾಗಿ ಆಚರಣೆಯಲ್ಲಿ ತಂದು ಜೀವನ ಸಾರ್ಥಕಪಡಿಸಿಕ

“ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು ಭಾವಿಸಲು ಗಂಡುರೂಪು ನೋಡ

( ಅಕ್ಕಮಹಾದೇವಿ) ಎಂಬಂಥ ಭಾವ ವ್ಯಕ್ತಪಡಿಸಿದ್ದಾರೆ.

- ಬಹುಸಂಖ್ಯೆಯ ಶರಣೆಯರು ಸಂಸಾರಿಗಳು. ' ಸತಿ- ಪತಿಗಳೊಂದಾದ

ಹಿತವಾಗಿಪ್ಪುದು ಶಿವಂಗೆ' ಎಂಬ ' ದಾಂಪತ್ಯಧರ್ಮ' ವನ್ನು ಒಪ್ಪಿಕೊಂಡು- ಅಪ್ಪಿ

ನಡೆದವರು. ಆಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಸಂಸಾರ ಹಗೆಯಲ್ಲ , ಪ್ರತಿಯ

ಅದಕ್ಕೆ ಪ್ರೇರಕ , ಪೂರಕ ಎಂಬ ಸತ್ಯವನ್ನು ಬದುಕಿ ತೋರಿಸಿದವರು. ಬದುಕಿನ ಬಗೆಗೆ ಅಪಾರ

ಪ್ರೀತಿಯನ್ನು ಇಟ್ಟುಕೊಂಡ ಅವರು ಪ್ರಪಂಚ ಸುಖದಲ್ಲಿಯೇ ಪಾ

ದರ್ಶನವನ್ನು ಮಾಡಿಕೊಂಡವರು. ಅವರದು ಒಬ್ಬರ ಮನವನ್ನೊಬ್ಬರು ಅರಿತು ಬೆ

ಸಾಗಿದ ನೆಮ್ಮದಿಯ ದಾಂಪತ್ಯ .

“ ಪುರುಷನ ಆಚಾರದಲ್ಲಿ ಸತಿ ನಡೆಯಬೇಕಲ್ಲದೆ ಸತಿಗೆ ಸ್ವತಂತ್ರವುಂಟೆ

( ಅಕ್ಕಮ್ಮ ), “ ಪತಿಯಾಜ್ಜೆಯಲ್ಲಿ ಚರಿಸುವ ಸತಿಗ್ಯಾಕೆ ಪ್ರತಿಜ್ಞೆಯು;

ಪತಿಯಾಜ್ಞೆಯಲ್ಲಿ " ( ಗಂಗಾಬಿಕೆ) ಎಂದು ಪತಿಯಾಜ್ಞೆಯಂತೆ ಅವನ ಆಚ

ಅನುಸರಿಸಿ ನಡೆದರೂ “ಕೂಟಕ್ಕೆ ಸತಿಪತಿಯೆಂಬ ನಾಮವಲ್ಲದೆ ಅರಿವಿಂ


೬೩
ಪ್ರಸ್ತಾವನೆ

ಬೇರೊಂದೊಡಲುಂಟೆ ? ” ( ಆಯ್ದಕ್ಕಿ ಲಕ್ಕಮ್ಮ ) ಎಂದು ತನ್ನ ಅರಿವೆಂಬ ಗು

ಮಾರ್ಗದರ್ಶನದಂತೆ ನಡೆದು, ಕೆಲವು ಸಲ ಪತಿ ಮಾರ್ಗ ತಪ್ಪಿದಾಗ ಎಚ್ಚರಿಸಿ,

ನಿಲವ ತೋರಿಸಿ ಸತಿಧರ್ಮಕ್ಕೂ ಚ್ಯುತಿ ಬರದಂತೆ ಜೀವನ ನಿರ್ವಹಿಸಿದವರು

ಅನುಭವದಿಂದ ವಿವರವ ಕಂಡು ವಿಚಾರಪತ್ನಿಯಾದೆನಯ್ಯ ” (ನೀಲಮ್ಮ ) ಎಂದು

ವೈಚಾರಿಕ ಸಂಗಾತಿಯಾಗಿ ಅವನ ಬದುಕಿನ ಉಜ್ವಲತೆಯಲ್ಲಿ ಪಾಲುಗೊಂಡ

ಅಕ್ಕಮಹಾದೇವಿ, ಬೊಂತಾದೇವಿ, ಗೊಗ್ಗವ್ವ ಮೊದಲಾದವರು ವೈರಾಗ್ಯ

ಶೀಲೆಯರು. ಶಿವನನ್ನೇ ತಮ್ಮ ಪತಿಯೆಂದು ನಂಬಿ ಅನುಭಾವದ ಎತ್ತರಕ್ಕೇರಿ ನಿಂತವ

ಶರಣಸತಿಯರಾಗಿ ಲಿಂಗಪತಿಯ ಲಿಂಗಾಂಗಸಾಮರಸ್ಯಸುಖವನ್ನು ಉಂಡು, ಅಲೌ

ಆನಂದವನ್ನು ಪಡೆದವರು.

ಕೆಲವು ಶರಣೆಯರು ಆಧ್ಯಾತ್ಮ - ಅನುಭಾವ- ಧರ್ಮತತ್ವಗಳಲ್ಲಿ

ಸಕ್ರಿಯವಾಗಿ ತೊಡಗಿಸಿಕೊಂಡು ಅವುಗಳ ಬಗೆಗೆ ಗಾಢವಾಗಿ ಚಿಂತನೆಮಾಡಿ ತಮ

ಬದುಕಿನಲ್ಲಿ ಆತ್ಮಸಾತ್ ಮಾಡಿಕೊಂಡರೆ, ಇನ್ನೂ ಕೆಲವರು ' ತತ್ವದ ಮಾತು ನಮಗ

( ದುಗ್ಗಳೆ) ಎಂದು ತಮಗೆ ನಿಲುಕದ ವಿಷಯಗಳಿಗೆ ಕೈಹಾಕದೆ ಆಚಾರಶುದ್ಧಿಯನ

ಬದುಕಿದರು.

ಎಲ್ಲ ಶರಣೆಯರೂ ಸತ್ಯಶುದ್ಧ ಕಾಯಕಜೀವಿಗಳು. 'ಆವ ಕಾಯಕವ ಮಾಡಿದಡೂ

ಒಂದೆ ಕಾಯಕವಯ್ಯ ' ( ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ

ತಾವು ಮಾಡುವ ಕಾಯಕದಲ್ಲಿ ಮೇಲುಕೀಳನ್ನೆಣಿಸದೆ ಪವಿತ್ರ ಭಾವನೆಯನ್ನಿಟ್ಟುಕ

“ ಇಂದಿಂಗೆ ನಾಳಿಂಗೆ ಎಂಬ ಸಂದೇಹಮಂ ಬಿಟ್ಟು , ಮುಂದಣಕಾಯಕ ಅಂದಂದಿಂಗೆ ಉಂ

ಎಂಬುದನರಿತು ಬಂದುದ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ ಸದಾನಂ

ಭಕ್ತನಂಗಳ ಮಂಗಳಮಯ ಕೈಲಾಸವೆಂದು” ( ಅಕ್ಕಮ್ಮ ) ಭಾವಿಸಿ ಅಂದಂದಿನ ಕಾಯಕವ

ಅಂದೇ ಮಾಡಿ ಜೀವಿಸಬೇಕೆಂಬ ಶರಣರ ಕಾಯಕತತ್ವಕ್ಕೆ ಬದ್ಧರಾಗಿ ನಡೆದವರು.

ಇಹದ ಬದುಕಿನ ಬಗೆಗೆ ಎಲ್ಲ ಶರಣೆಯರೂ ಅಪಾರ ಪ್ರೀತಿಯನ್ನಿಟ್ಟು

ಮರ್ತ್ಯವೇ ಶ್ರೇಷ್ಠವೆಂದು ನಂಬಿದವರು. ಉತ್ತಮ ನಡೆ- ನುಡಿ, ಆಚಾರ- ವಿಚ

ನೆಲದಲ್ಲಿಯೇ ಕೈಲಾಸದ ಸುಖವನ್ನು ಕಂಡವರು, ಉಂಡವರು. ಭಕ್ತಿಯ ಮಾಡಿ ಕೈಲಾಸಕ್ಕೆ

ಹೋಗುತ್ತೇನೆ ಎಂಬ ತಮ್ಮ ಪತಿಯಂದಿರಿಗೆ ' ಮರ್ತ್ಯ ಕೈಲಾಸವೆಂಬುದು

ಯುಕ್ತಿಯಲ್ಲ ' ' ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋದಹೆನೆಂಬುದು ಕೈಕೂಲಿ' (ಮೋಳ

ಮಹಾದೇವಿ), ' ಮಾಡಿ ನೀಡಿ ಹೋದೆನೆಂಬಾಗ ಕೈಲಾಸವೇನು ಕೈಕೂಲಿಯೆ ?' ( ಆಯ್

ಲಕ್ಕಮ್ಮ ) ಎಂದು ಪ್ರಶ್ನಿಸಿ ಅರಿವಿನ ಕಣ್ಣು ತೆರೆಯಿಸಿ, ಮರ್ತ್ಯದ ಮ

ಎತ್ತಿಹಿಡಿದವರು.
೭೪
ಶಿವಶರಣೆಯರ ವಚನಸಂಪುಟ

ಶರಣೆಯರದು ಸ್ವಾಭಿಮಾನದಿಂದ ಕೂಡಿದ ಉದಾತ್ತ ಬದುಕು. ಶ

ರಾಜತೇಜದಲ್ಲಿಪ್ಪ ಅವರು ಆರ ಹಂಗಿಲ್ಲದೆ ಧೈರ್ಯದಿಂದ ಬದುಕಿದರು . “ಕಾಮನ

ಕೊರೆದು ಕಾಲನ ಕಣ್ಣ ಕಳೆದು ಸೋಮಸೂರರ ಹರಿದು ಹುಡಿಮಾಡಿ ತಿಂಬವಳಿಗ

ನಾಮವನಿಡುವರಾರು ಹೇಳಿರಿ ? ” ಎಂದು ಕೇಳುತ್ತಾಳೆ ಅಕ್ಕಮಹಾದೇವಿ, “ಗಂಡು ಮೋಹ

ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹ

ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು ? ” ಎಂದು ಪ್ರಶ್ನಿಸುತ್ತಾಳೆ ಗೊ

“ಹೆದರದಿರು ಮನವೆ, ಹಿಮ್ಮೆಟ್ಟದಿರು ಮನವೆ, ಹಿಡಿದ ಛಲ ಬಿಡದಿರು ಮನವೆ,

ಜರಿದರೆಂದು ಝಂಕಿಸಿದರೆಂದು ಘಟವಬಿಡದಿರು ” ಎನ್ನುವ ಅಮುಗೆರಾಯಮ್ಮ , “ಆಚ

ಶ್ರದ್ದೆ ಇದ್ದಲ್ಲಿ ನೀನೆಂಬೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ ಆ ಗುಣವಿ

ನೀನು ಎನ್ನವನಲ್ಲಾ ಎಂಬೆ” ಎನ್ನುವ ಅಕ್ಕಮ್ಮ , “ ನಾನಿಲ್ಲದಿದ್ದಡೆ ನಿನ್ನ ನಾರುಬ

ನಿನಗೆ ಎನಗೆ ಬೇರೊಂದೆಡೆಯುಂಟೆ ನಿಃಕಳಂಕ ಮಲ್ಲಿಕಾರ್ಜುನ ” ಎನ್ನುವ ಮ

ಮಹಾದೇವಿ, ನರರಬೇಡೆನು , ಸುರರ ಹಾಡೆನು, ಕರಣಂಗಳ ಹರಿಯಬಿಡೆನು, ಕಾಮ

ಬಲೆಗೆ ಸಿಲೆನು, ಮರವೆಗೊಳಗಾಗೆನು ” “ ಎನಗೆ ಮಾರಯ್ಯಪ್ರಿಯ ಅಮರೇಶ್ವರ

ಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ ಮಾರಯ್ಯ ” “ ಆರು ಇಲ್ಲದವಳೆಂದು ಆಳಿಗೊಳಲು

ಆಳಿಗೊಂಡಡೆ ಆನು ಅಂಜುವಳಲ್ಲ ' ಎನ್ನುವ ಹಡಪದ ಲಿಂಗಮ್ಮ , ಆಯ್ದಕ್ಕಿ

ಮುಕ್ತಾಯಕ್ಕರು ಶಿವಶರಣೆಯರ ಸ್ವಾಭಿಮಾನದ ಬದುಕಿನ ಪ್ರತಿನಿಧಿಗಳಾಗಿ ಇಡೀ

ಶರಣಸಮಾಜದ ಸ್ವಾಭಿಮಾನದ ಧ್ವಜವನ್ನು ಎತ್ತಿಹಿಡಿದಿದ್ದಾರೆ.

ಶಿವಶರಣೆಯರು ವ್ರತಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಶೀಲ

' ವ್ರತವೆಂಬುದು ನಾಯಕರತ್ನ , ವ್ರತವೆಂಬುದು ಸುಪ್ಪಾಣಿಯ ಮುತ್ತು , ವ್ರತವೆಂಬ

ಜೀವಕಳೆ' (ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವ )' 'ಹಿಡಿದ ವ್ರತ ಬಿಡದಿರಲ

ಮಹಾಜ್ಞಾನ' ( ಮುಕ್ತಾಯಕ್ಕ), 'ವ್ರತ ಹೋದಾಗಲೆ ಇಷ್ಟಲಿಂಗದ ಕಳೆ

(ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವ) ಎಂದು ವ್ರತದ ಮಹತಿಯನ

ಅವರು, 'ವ್ರತಹೀನನ ನೆರೆಯಲಾಗದು, ನೋಡಲು ನುಡಿಸಲು ಎಂತೂ ಆಗದು' ( ಅದ

“ ವ್ರತಭ್ರಷ್ಟರ ನಿಟ್ಟೂರೆಸುವೆ, ಸುಟ್ಟು ತುರತುರನೆ ತೂರುವೆ ನಿರ್ಭಿತನಿಜಲಿಂಗದ

( ಕಾಲಕಣ್ಣಿಯ ಕಾಮಮ್ಮ ) ಎಂದು ವ್ರತಹೀನರನ್ನು ಟೀಕಿಸುವ ಮೂಲಕ ಗಣಾ

ನಿಷ್ಠೆಯನ್ನು ಮೆರೆಯುತ್ತಾರೆ.

ಶಿವಶರಣೆಯರು ಕೇವಲ ಕೌಟುಂಬಿಕ ನೆಲೆಯಲ್ಲಿ ಮಾತ್ರನಿಲ್ಲದೆ, ಸಾಹ

ಕ್ಷೇತ್ರದಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಶರಣರು

ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು ರಚಿಸಿದ


ವಚನಗಳು ಅನೇಕ ದೃಷ್ಟಿಯಿಂದ ಗಮನಾರ್ಹವೆನಿಸಿವೆ. ಒಟ್ಟು ವಚನ ಸಾಹಿತ್ಯದ ವೈಪ

ಮತ್ತು ವೈವಿಧ್ಯತೆಗಳಿಗೆ ಸಹಾಯಕವಾಗಿವೆ .


ಪ್ರಸ್ತಾವನೆ

ಸಂಖ್ಯೆ ಮತ್ತು ಸತ್ವಗಳ ದೃಷ್ಟಿಯಿಂದ ಅಕ್ಕಮಹಾದೇವಿಯ ವಚನಗಳಿಗೆ ಅಗ

ಶರಣೆಯರಲ್ಲಿ ಮಾತ್ರವಲ್ಲ ಒಟ್ಟು ವಚನಕಾರರ ಸಮೂಹದಲ್ಲಿಯೇ ಈಕೆಯ ವಚನಗಳು,

ವಸ್ತು , ಅಭಿವ್ಯಕ್ತಿಸಾಧ್ಯತೆ, ಭಾವಶ್ರೀಮಂತಿಕೆ, ಶೈಲಿಸೌಂದರ್ಯ, ದರ್ಶನ ಮ

ವಿಶೇಷ ಗಮನವನ್ನು ಸೆಳೆಯುತ್ತವೆ. ಇನ್ನುಳಿದ ವಚನಕಾರ್ತಿಯರಲ್ಲಿ

ಅಮುಗೆರಾಯಮ್ಮ , ನೀಲಮ್ಮ , ಹಡಪದಲಿಂಗಮ್ಮ , ನೂರಕ್ಕಿಂತ ಹೆಚ್ಚು ವ

ಬರೆದಿದ್ದರೆ, ಮೋಳಿಗೆ ಮಹಾದೇವಿ, ಮುಕ್ತಾಯಕ್ಕ , ಸತ್ಯಕ್ಕೆ , ಆಯ್ದಕ್ಕಿ ಲಕ್ಕಮ್ಮ ,

ನಾಗಲಾಂಬಿಕೆಯರು ಹತ್ತಕ್ಕಿಂತ ಹೆಚ್ಚು ವಚನಗಳನ್ನು ರಚಿಸಿದ್ದಾರ

ವಚನಗಳನ್ನು ಬರೆದವರ ಸಂಖ್ಯೆಯೇ ಅಧಿಕ.

ವಸ್ತುವಿನ ದೃಷ್ಟಿಯಿಂದ ಅಕ್ಕಮಹಾದೇವಿಯ ವಚನಗಳಲ್ಲಿ ಆತ್ಮನಿರೀಕ

ಶರಣಸತಿ ಲಿಂಗಪತಿಭಾವ, ತೀವ್ರವಿರಕ್ತಿ , ಶಿವನ ಸಾಕಾರ ರೂಪವರ್ಣನ

ಷಟ್‌ಸ್ಥಲಸಿದ್ಧಾಂತ , ವಿರಕ್ತನ ಲಕ್ಷಣ, ಪ್ರಕೃತಿ ಪ್ರತಿಮೆಗಳ ಚಿತ್ರಣ, ವೈಯಕ್ತಿಕ ಸಂಗತಿಗಳು,

ಅಲ್ಪಮಟ್ಟಿಗೆ ಸಮಾಜವಿಮರ್ಶ ಕಂಡುಬಂದರೆ, ಮೋಳಿಗೆ ಮಹಾದೇವಿ ಮತ್

ಲಿಂಗಮ್ಮನ ವಚನಗಳಲ್ಲಿ ತಾತ್ವಿಕ, ಬೋಧಪ್ರದವಾದ ಅಂಶಗಳು ಹೆಚ್ಚು . ಅಕ್ಕಮ್ಮ


ಅಮುಗೆರಾಯಮ್ಮ , ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವ , ಗಜೇಶ

ಪುಣ್ಯಸ್ತ್ರೀಯರ ವಚನಗಳಲ್ಲಿ ಸಮಾಜವಿಮರ್ಶೆ ಅಧಿಕ. ನೀಲಮ್ಮ , ಅಕ್ಕನಾ

ಗಂಗಾಂಬಿಕೆಯರ ವಚನಗಳಲ್ಲಿ ಹೆಚ್ಚಾಗಿ ಬಸವಸ್ತುತಿ, ವೈಯಕ್ತಿಕ ಸಂಗತಿಗಳು


ಒಂದೊಂದೇ ವಚನ ಬರೆದ ಶರಣೆಯರ ವಚನಗಳಲ್ಲಿ ವ್ರತಾಚಾರಕ್ಕೆ ಮುಖ್ಯಸ್ನಾನ

ಶಿವಶರಣೆಯರೆಲ್ಲ ಧಾರ್ಮಿಕ ತಳಹದಿಯ ಮೇಲೆ ಜೀವನ ನಡೆಸಿದವರು. ಆದರೆ

ಶರಣರು ರೂಪಿಸಿದ ವೀರಶೈವಧರ್ಮತತ್ವಗಳ ವಿವೇಚನೆ ಅವರ ವಚನಗಳಲ್ಲಿ ಅಷ್ಟ

ಕಂಡುಬರುವುದಿಲ್ಲ . ಷಟ್‌ಸ್ಥಲ, ಅಷ್ಟಾವರಣ , ಪಂಚಾಚಾರ, ಕಾಯಕ, ದಾಸೋಹ

ಶಿವಯೋಗ, ಶೀಲ, ವಿರಕ್ತಿ ಇತ್ಯಾದಿ ಕುರಿತ ವಿಚಾರಗಳು ಬಿಡಿಬಿಡಿಯಾಗಿ ಮಾತ್

ತೋರುತ್ತವೆ. ಇದಕ್ಕೆ ಪ್ರತಿಯಾಗಿ ಪಾರಂಪರಿಕವಾಗಿ ಧರ್ಮದ ಹೆಸರಿನಲ್ಲಿ ನಡೆದ

ಕರ್ಮಕಾಂಡ, ಯಜ್ಞಯಾಗಾದಿ, ಜೀವಹಿಂಸೆ, ಅನ್ಯಾಯ , ಶೋಷಣೆ, ಮೂಢನಂಬಿಕೆ,

ಡಾಂಭಿಕ ವ್ರತಾಚರಣೆಗಳನ್ನು ಟೀಕಿಸಿ ಶುದ್ಧವಾದ ವೀರಶೈವಧರ್ಮತ

ಅನುಸರಿಸಬೇಕೆಂಬ ಒತ್ತಾಸೆ ವಿಶೇಷವಾಗಿ ಕಂಡುಬರುತ್ತದೆ. ' ಜಾತಿಗಳ

ಕೀಳಾದಿರೊ ?' ಎಂದು ಕೇಳುವ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವ ಜ

ಎಣಿಸುತ್ತ ಬಂದ ವೈದಿಕ ವರ್ಣಾಶ್ರಮಧರ್ಮಿಗಳಿಗೆ ಸವಾಲು ಹಾಕಿದಂತಿದೆ. “ವ

ಆಗಮ ಪುರಾಣಂಗಳೆಲ್ಲ ಕೊಟ್ಟಣ ಕುಟ್ಟಿದ ನುಚ್ಚು ತೌಡು ಕಾಣಿಭೋ ಇವ ಕುಟ್ಟಲೇಕೆ


ಕುಸುಕಲೇಕೆ ?” ಎಂದು ಕೇಳುವ ಅಕ್ಕಮಹಾದೇವಿ, “ವೇದಶಾಸ್ತ್ರ ಪುರಾಣ

ನುಡಿವುದು ಪುಸಿ” ಎಂದು ಹೇಳುವ ಅಮುಗೆರಾಯಮ್ಮ , “ಕೃತಯುಗ ಮೂವತ್ತೆರಡ


ಶಿವಶರಣೆಯರ ವಚನಸಂಪುಟ

ಎಂಬ ವಚನದಲ್ಲಿ ಯಜ್ಞಯಾಗಾದಿಗಳ ಜೀವಹಿಂಸೆಯನ್ನು ಟೀಕಿಸಿದ ಉರಿಲಿಂಗಪ

ಪುಣ್ಯಸ್ತ್ರೀ ಕಾಳವ್ವಯರ ನುಡಿಗಳು ವೇದಾಗಮ ಶಾಸ್ತ್ರಪುರಾಣಗಳು ಬೋಧಿಸುವ

ಅಮಾನವೀಯ ಧರ್ಮವನ್ನು ವಿರೋಧಿಸುತ್ತವೆ. ಹಾಗೆಯೇ “ ಅರ್ಚನ

ನೇಮವಲ್ಲ , ಮಂತ್ರತಂತ್ರ ನೇಮವಲ್ಲ , ಧೂಪದೀಪಾರತಿ ನೇಮವಲ್ಲ , ಪರಧನ ಪರಸ್ತ್ರೀ

ಪರದೈವಂಗಳಿಗೆರಗದಿಪ್ಪುದೇ ನೇಮ ” ಎಂಬ ಸತ್ಯಕ್ಕನ ಮಾತು ಮನ ಶುದ್ಧಿಯ

ಆಡಂಬರದ ಧರ್ಮಾಚರಣೆಯನ್ನು ಅಲ್ಲಗಳೆಯುತ್ತದೆ; ಏಕದೇವೋಪಾಸನ

ಹಿಡಿಯುತ್ತದೆ.

ಧಾರ್ಮಿಕ ವಿಚಾರಗಳಿಗಿಂತ ಶರಣೆಯರ ವಚನಗಳಲ್ಲಿ ಸಾಮಾಜಿಕ ಸ

ಹೆಚ್ಚು ಪ್ರಮಾಣದಲ್ಲಿ ಪ್ರಕಟವಾಗಿವೆ. ಸಮಾಜಸುಧಾರಣೆಯನ್ನೇ ಮುಖ್ಯ ಗ

ಕೊಂಡು ನಡೆದ ಶರಣರ ಸಂಗಾತಿಗಳಾದ ಇವರು ಆ ಕಡೆಗೆ ಹೆಚ್ಚು ಗಮನಹರಿಸ

ಸಹಜವೇ ಆಗಿದೆ. ಸಮಾಜದಲ್ಲಿ ಮೊದಲಿನಿಂದಲೂ ಬೇರೂರಿ ಬೆಳೆದು ಬಂದಿದ್ದ ಮೇಲ

ಕೀಳು, ಸ್ಪೃಶ್ಯ- ಅಸ್ಪೃಶ್ಯ , ಗಂಡು- ಹೆಣ್ಣು ಎಂಬ ಭೇದ ಮತ್ತು ಅನೈತಿಕ ನಡ

ಇವರು ಮುಖ್ಯವಾಗಿ ವಿಮರ್ಶೆಗೆ ಒಳಪಡಿಸುತ್ತಾರೆ. ಜೊತೆಗೆ ಸತ್ಯ

ದಾಸೋಹಗಳ ಮೂಲಕ ಆರ್ಥಿಕಸಮಾನತೆಯನ್ನು ಕಾಯ್ದುಕೊಳ್ಳಲು, ನೀತಿಯ

ನಡೆಸಿ ವೈಯಕ್ತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಬೋಧ

ಅದರಂತೆ ಆಚರಿಸಿ, ಶರಣರ ನವಸಮಾಜ ನಿರ್ಮಾಣ ಮಣಿಹದಲ್ಲಿ ಮನಃಪೂರ್

ಪಾಲ್ಗೊಂಡಿದ್ದಾರೆ.

- ಸಾಹಿತ್ಯಕವಾಗಿ ಶರಣೆಯರ ವಚನಗಳು, ಶರಣರ ವಚನಗಳ ಶಿಲ್ಪ , ಅಲಂಕಾ

ಭಾಷೆ, ಶೈಲಿ, ತಂತ್ರಗಳ ದಟ್ಟವಾದ ಪ್ರಭಾವಲಯದಲ್ಲಿಯೇ ಮೂಡಿಬಂದಿದ್ದರ

ಅಕ್ಕಮಹಾದೇವಿಯ ವಚನಗಳು ಹೆಚ್ಚು ಮಟ್ಟಿಗೆ ಸ್ವಂತಿಕೆಯನ್ನು ತೋರುತ್ತವೆ.

ವಚನಗಳ ಭಾವತೀವ್ರತೆ, ಭಾಷೆಯ ಪ್ರಾಸಾದಿಕತೆ, ರಚನೆಯಲ್ಲಿ ತೋರ

ನಯನಾಜೂಕು, ಅಭಿವ್ಯಕ್ತಿಯ ಅನನ್ಯತೆ, ಲಯಗಾರಿಕೆ, ಭಾವಗೀತಾತ್ಮಕತೆ ಬಸ

ನವರನ್ನು ಬಿಟ್ಟರೆ ಉಳಿದ ಮತ್ತಾವ ವಚನಕಾರರಲ್ಲಿ ಇಷ್ಟು ಪರಿಣಾಮ

ಕಂಡುಬರುವುದಿಲ್ಲ .

ಇತರ ಶರಣೆಯರ ವಚನಗಳಲ್ಲಿಯೂ ಪ್ರಭಾವವನ್ನು ಮೀರಿದ ಕೆಲವು ವಿಶೇಷತ

ಗೋಚರಿಸುತ್ತವೆ. ಅಕ್ಕಮ್ಮ ಮತ್ತು ಅಮುಗೆರಾಯಮ್ಮನ ವಚನಗಳಲ್ಲಿ ಗದ್

ಹೆಚ್ಚು . ಆದರೆ ವ್ರತಾಚಾರಗಳ ನಿರೂಪಣೆ, ವ್ರತಹೀನರ ನಿಂದೆಯಲ್ಲಿ ಬಳಕೆಯ

ತುಂಬ ಹರಿತ ಚುರುಕು ಮುಟ್ಟಿಸುವಂತಹದು. ಅವುಗಳಲ್ಲಿ ಬರುವ ಪಶುಪಕ್ಷಿ ಗಿಡಮರ

ಸಸ್ಯಾದಿ ಪದಾರ್ಥಗಳ ಪ್ರತಿಮೆ , ರೂಪಕಗಳು, ಗಾದೆ, ಶಬ್ದ ಚಿತ್ರ ಉಕ್ತಿವೈಚಿತ್ರಗಳು

ವಿಶಿಷ್ಟವೆನಿಸಿವೆ. ಲಿಂಗಮ್ಮನ ವಚನಗಳೂ ದೀರ್ಘವಾಗಿವೆ. ಬೆಡಗಿನ ಭಾಷೆಯ ಜ


೭೭
ಪ್ರಸ್ತಾವನೆ

ಅಚ್ಚ ಜಾನಪದ ಶಬ್ದಗಳ ಬಳಕೆ, ಹೇಳುವ ಧಾಟಿಯಲ್ಲಿ ಜನಪದ ಕಥೆಯ ತಂತ್ರವನ್ನು

ತಂದಿರುವುದು ಉಳಿದವರಿಂದ ಈಕೆಯನ್ನು ಪ್ರತ್ಯೇಕಿಸಲು ಕಾರಣವಾಗಿದೆ. ಉಳ

ಶರಣೆಯರ ವಚನಗಳೆಲ್ಲ ಮುಕ್ತಕ ರೂಪದ ಸಂಕ್ಷಿಪ್ತ ರಚನೆಗಳಾಗಿದ್ದು , ಹೆಚ್ಚಿನವು ಆಯ

ಶರಣೆಯರ ವೃತ್ತಿಪರಿಭಾಷೆಯನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರ

ಅಭಿವ್ಯಕ್ತಿಗಳೆನಿಸಿವೆ. ಸಾಮಾನ್ಯವಾಗಿ ಈ ವಚನಗಳನ್ನು ರಚಿಸಿದವರು ಕೆಳಸ್ತರದಿಂದ

ಬಂದವರು. ಹೀಗಾಗಿ ಇವರಲ್ಲಿ ದಟ್ಟವಾದ ಸಾಮಾಜಿಕ ಪ್ರಜ್ಞೆ, ಮಾತಿನಲ್ಲಿ ಒರಟುತನ,

ಗಡಸುಗಾರಿಕೆಯಿಂದ ಕೂಡಿದ ದೇಶೀಯ ಸೊಗಡು, ಶೋಷಣೆಯ ವಿರುದ್ದದ ರೊಚ್

ಬಂಡಾಯ ಧೋರಣೆ ಸಹಜವಾಗಿ ಒಡೆದು ಕಾಣುತ್ತವೆ.

ಒಟ್ಟಾಗಿ ಹೇಳುವುದಾದರೆ ಅಕ್ಕಮಹಾದೇವಿಯ ಭಾವೋತ್ಕಟತೆ, ಕವಿಪ್

ಮುಕ್ತಾಯಕ್ಕನ ಬೌದ್ಧಿಕಪ್ರಖರತೆ, ಅಕ್ಕಮ್ಮ ಅಮುಗೆರಾಯಮ್ಮ ಅವರ ಸಾತ್ವಿಕ ನಿಷ

ಲಿಂಗಮ್ಮ , ಮೋಳಿಗೆ ಮಹಾದೇವಿಯರ ತಾತ್ವಿಕನಿಷ್ಠೆ , ಲಕ್ಕಮ್ಮನ ಕಾಯಕ ಶ್ರದ್ದೆ,

ಉಳಿದವರ ವ್ರತನಿಷ್ಠೆ , ನೀಲಮ್ಮನ ಪತಿಭಕ್ತಿ , ನಾಗಮ್ಮನ ಭ್ರಾತೃಪ್ರೇಮ ಇವುಒಬ್ಬೊಬ್ಬರ

ವ್ಯಕ್ತಿತ್ವ ಮತ್ತು ವಚನಗಳ ಮುಖ್ಯ ಮೌಲ್ಯಗಳೆನಿಸಿವೆ.

ಹೀಗೆ ಶರಣರು ಒದಗಿಸಿದ ಸ್ವಾತಂತ್ರ್ಯವನ್ನು ಮುಕ್ತವಾಗಿ ಸ್ವೀಕರಿಸಿ, ಅವರ

ಸಮಾಜೋ - ಧಾರ್ಮಿಕ ಆಂದೋಲನದಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಂಡು,

ಸಾಹಿತ್ಯವನ್ನು ಸೃಷ್ಟಿಸಿ, ಜಾಗತಿಕ ಇತಿಹಾಸದಲ್ಲಿ ವಿಸ್ಮಯಕರ ಘಟನೆಯನ್ನು

ದಾಖಲುಗೊಳಿಸಿದ ಶಿವಶರಣೆಯರು ಕರ್ನಾಟಕದ, ಕನ್ನಡದ ಹೆಮ್ಮೆ ಎನಿಸಿದ್ದಾರೆ.

ಪರಿಷ್ಕರಣ :

ಈ ಸಂಪುಟದ ವಚನಗಳನ್ನು ಡಾ . ಆರ್ . ಸಿ. ಹಿರೇಮಠ ಅವರು ಸಂಪಾದಿಸ

' ಶಿವಶರಣೆಯರ ವಚನಗಳು' ಸಮಗ್ರ ಸಂಪುಟ , ಬೇರೆ ಬೇರೆ ವಿದ್ವಾಂಸರು ಸಂಪ

ಬಿಡಿಬಿಡಿ ಸಂಕಲನಗಳು ಮತ್ತು ಇದುವರೆಗೆ ದೊರೆತ ವಿವಿಧ ಸ್ಟಲಕಟ್ಟಿನ ಪ್ರಕಟಿತ ಅಪ್ರಕಟ

ಕೃತಿ ಹಾಗೂ ಹಸ್ತಪ್ರತಿಗಳ ಆಧಾರದಿಂದ ಪರಿಷ್ಕರಿಸಲಾಗಿದೆ. ಈ ಮೊದಲು ಪ್ರಕ

ಸಂಕಲನಗಳಲ್ಲಿನ ಪುನರುಕ್ತ ವಚನಗಳನ್ನು ತೆಗೆದುಹಾಕುವುದು, ಪಾಠದೋಷಗಳನ್ನ

ಆಕರಗಳ ಹಿನ್ನೆಲೆಯಲ್ಲಿ ನಿವಾರಿಸಿಕೊಳ್ಳುವುದು, ಹೆಚ್ಚಿಗೆ ದೊರೆತ ವಚನಗಳನ್ನ

ಸ್ವೀಕರಿಸುವುದು, ಆ ಮೂಲಕ ಇಂದಿನ ಮಿತಿಗೆ ಒಬ್ಬೊಬ್ಬ ಶರಣೆಯರ ವಚನಗಳ ಒಟ್ಟು

ಮೊತ್ತವನ್ನು ನಿರ್ಧರಿಸುವುದು ಇದು ಇಲ್ಲಿ ಅನುಸರಿಸಿದ ಪರಿಷ್ಕರಣದ ವಿಧಾನ


ತೊಡಗಿದಾಗ ಎದುರಾದ ಸಮಸ್ಯೆಗಳು, ಅವುಗಳನ್ನು ಪರಿಹರಿಸಿಕೊಂಡ ರೀತಿ ಹೀಗಿದೆ :

ಅಂಕಿತ ಸಮಸ್ಯೆ : ಹಲವು ವಿಧದ ಅಂಕಿತಗಳನ್ನು ಒಬ್ಬಳೇ ವಚನಕಾರ್

ಇಟ್ಟುಕೊಂಡಿರುವುದು, ಒಂದೇ ಅಂಕಿತವನ್ನು ಹಲವರು ಇಟ್ಟ


ಶಿವಶರಣೆಯರ ವಚನಗಳಲ್ಲಿ ಕಂಡುಬರುವ ಒಂದು ವಿಶೇಷ.
ಶಿವಶರಣೆಯರ ವಚನಸಂಪುಟ

ಅಕ್ಕಮಹಾದೇವಿಯ ವಚನಗಳಲ್ಲಿ ಚೆನ್ನಮಲ್ಲಿಕಾರ್ಜುನ, ಶ್ರೀಶೈಲಮಲ್ಲಿಕ

ಶ್ರೀಗಿರಿಮಲ್ಲಿಕಾರ್ಜುನ, ಸದ್ಗುರುಮಲ್ಲಿಕಾರ್ಜುನ ಎಂಬ ನಾಲ್ಕ

ಕಂಡುಬರುತ್ತವೆ. ಇವುಗಳಲ್ಲಿ ಸದ್ದು ರುಮಲ್ಲಿಕಾರ್ಜುನ ಎಂಬು

ವಚನಾಂಕಿತವಾಗಿರಬಹುದು ಎಂದು ಆ ಅಂಕಿತಹೊಂದಿದ ವಚನಗಳ ವಸ್ತು , ಧೋರ

ನಿರೂಪಣೆಯ ಹಿನ್ನೆಲೆಯಲ್ಲಿ ನಿರ್ಧರಿಸಿ, ಅಂಥ ವಚನಗಳನ್ನು ಕೈಬಿಟ್ಟು ಉಳ

ವಚನಗಳನ್ನು ಮಾತ್ರ ಸ್ವೀಕರಿಸಲಾಗಿದೆ.

ನೀಲಮ್ಮನ ಹೆಸರಿನಲ್ಲಿ ಮೂರು ವಿಧವಾದ ಅಂಕಿತಗಳು ದೊರೆಯುತ್ತವ

ಸಂಗಯ್ಯ , ಬಸವಪ್ರಿಯ ಕೂಡಲಸಂಗಮದೇವ, ಗೊಹೇಶ್ವರಲಿಂಗದಲ್ಲಿ ಪ

ಸಾಕ್ಷಿಯಾಗಿ ಬಸವಪ್ರಿಯ ಕೂಡಲಸಂಗಮದೇವ. ಇವುಗಳಲ್ಲಿ ಎರಡನೆಯ ಅಂಕಿತ

ಹೊಂದಿದ ವಚನಗಳು ಇದುವರೆಗೆ ದೊರೆತಿಲ್ಲ . ದೊರೆತಿರಬಹುದಾದ ವಚನಗಳು

ನೀಲಮ್ಮನವಾಗಿರದೆ, ಅಂಕಿತ ಮಧ್ಯದ ' ಚಿನ್ನ ' ಪದವನ್ನು ಕಳೆದುಕೊಂಡ ಸಂಗಮೇಶ್

ಅಪ್ಪಣ್ಣನ ವಚನಗಳಾಗಿರಬೇಕು. ಮೂರನೆಯ ಅಂಕಿತದ ವಚನಗಳಲ್ಲಿ ಪುರುಷ

ಸಂಬೋಧನೆಯ ರೀತಿ ಕಂಡುಬರುವುದರಿಂದ ಅವುಗಳ ಕರ್ತೃ ಭಿನ್ನನೆ

ಹೇಳಬೇಕಾಗುತ್ತದೆ. ಇನ್ನು ಉಳಿದ ' ಸಂಗಯ್ಯ ' ಎಂಬ ಅಂಕಿತ ಪ್ರಾಚೀನ ತ

ಹಸ್ತಪ್ರತಿಯಲ್ಲಿ ನೀಲಮ್ಮನ ಹೆಸರಿನಡಿಯಲ್ಲಿ ಸಂಗ್ರಹವಾದ ವಚನಗಳಲ್ಲಿ

ದೊರೆಯುತ್ತದೆ. ಈ ಕಾರಣದಿಂದ ಇದೇ ನೀಲಮ್ಮನನಿಜ ಅಂಕಿತವೆಂದು ಗಣಿಸಲಾಗಿದೆ

- 'ನಿರ್ಲಜೇಶ್ವರ' ಎಂಬ ಅಂಕಿತ ಸೂಳೆ ಸಂಕವ್ವ ಮತ್ತು ಕೊಟ್ಟದ ಸೋಮ

ಇಬ್ಬರ ವಚನಗಳಲ್ಲಿಯೂ ಕಂಡುಬರುತ್ತದೆ. ದೊರೆತ ಇವರ ಒಂದೊಂದೇ ವಚನದಲ್

ಎರಡು ವಾಕ್ಯಗಳು ಸಮಾನವಾಗಿ ಉಳಿದೆರಡು ವಾಕ್ಯಗಳು ಮಾತ್ರ ಭಿನ್ನವಾಗಿವೆ.

ಪುರಾತನರ ವಚನ ಕಟ್ಟುಗಳಲ್ಲಿ ಇಬ್ಬರೂ ಬೇರೆ ಬೇರೆ ಎಂಬಂತೆ ಸೂಚಿಸಿರುವುದರಿಂದ

ಒಂದೆ ವಿಧವಾದ ಅಂಕಿತವನ್ನು ಇಟ್ಟುಕೊಂಡ ಭಿನ್ನ ವಚನಕಾರ್ತಿಯರ

ಸ್ವೀಕರಿಸಲಾಗಿದೆ.

ಅಮುಗೇಶ್ವರ' ' ಅಮುಗೇಶ್ವರಲಿಂಗ' ಅಂಕಿತಗಳನ್ನು ಅಮುಗಿದೇವಯ್ಯ

ಪುಣ್ಯಸ್ತ್ರೀ , ಅಮುಗೆರಾಯಮ್ಮ , ರಾಯಸದ ಮಂಚಣ್ಣಗಳ ಪುಣ್ಯಸ್ತ್ರ

ಮೂವರು ವಚನಕಾರ್ತಿಯರಿಗೆ ಆರೋಪಿಸಲಾಗಿದೆ. ಮೊದಲನೆಯ ಮತ್ತು ಮೂರನೆಯ

ವಚನಕಾರ್ತೆಯರ ಹೆಸರಿನಡಿಯಲ್ಲಿ ಒಂದೊಂದೇ ವಚನ ದೊರೆತಿದ್ದು ,

ಆರಂಭದ ಎರಡು ಸಾಲಿನ ಒಂದು ವಾಕ್ಯ ಮಾತ್ರ ವ್ಯತ್ಯಾಸವಿದ್ದು ಉಳಿದು

ಆಗಿದೆ. ಎರಡನೆಯ ವಚನಕಾರ್ತಿಯ ಹೆಸರಿನಡಿಯಲ್ಲಿ ೧೧೫ ವಚನಗಳು

ಸಂಗ್ರಹವಾಗಿದ್ದು , ಅದರಲ್ಲಿ ಈ ವಚನವೂ ಒಂದಾಗಿದೆ. ಇದರಿಂದ ಈ ಅ

ವಚನಗಳ ಕರ್ತೃಗಳು ಮೂವರಲ್ಲ , ಇಬ್ಬರು ಎಂದು ಹೇಳಬೇಕಾಗುತ್ತದೆ.


ಅಮುಗೆದೇವಯ್ಯಗಳ ಪುಣ್ಯಸ್ತ್ರೀ ಮತ್ತು ಅಮುಗೆರಾಯಮ್ಮ ಇಬ್ಬರೂ
ಪ್ರಸ್ತಾವನೆ

ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ ಇವರಿಂದ ಭಿನ್ನಳು. ಕೊಟ್ಟಣದ ಸೋಮ


ಸೂಳೆಸಂಕವ್ವಯರಂತೆ ಈ ಇಬ್ಬರೂ ಒಂದೇ ವಿಧವಾದ ಅಂಕಿತವನ್ನು ಇಟ್ಟ

ಒಂದೇ ವಚನವನ್ನು ಸ್ವಲ್ಪ ವ್ಯತ್ಯಾಸಗೊಳಿಸಿ ರಚಿಸಿದಂತೆ ತೋರುತ್ತದೆ. ಕದಿರ ರೆ

ಮತ್ತು ಕದಿರ ಕಾಯಕದ ಕಾಳವ್ವಯರ ಅಂಕಿತಗಳಲ್ಲಿಯೂ ಗುಮ್ಮೇಶ್ವರ ಎಂಬುದು

ಸಮಾನವಾಗಿದ್ದು , 'ಕದಿರೆಮ್ಮಿಯೊಡೆಯ ' ಎಂಬ ವಿಶೇಷಣ ಎರಡೂ ಭಿನ್ನವೆಂದು

ಕಾರಣವಾಗಿದೆ.

' ಪಟ್ಟಕಾರ ಸಂಗ್ರಹ' ಎಂಬ ಸ್ಥಲಕಟ್ಟಿನ ವಚನಸಂಕಲನದಲ್ಲಿ ' ಎನ್ನಯ್ಯಪ್ರಿಯ

ಚೆನ್ನರಾಮ ' ಎಂಬ ಅಂಕಿತದ ಒಂದು ವಚನವಿದ್ದು , ಅದನ್ನು ಸಂಪಾ

ಏಕಾಂತರಾಮಯ್ಯನ ಪುಣ್ಯಸ್ತ್ರೀಯದೆಂದು ( ಏಕಾಂತ ರಾಮಯ್ಯನ ಅಂಕಿತ ' ಎನ್ನಯ

ಚೆನ್ನರಾಮ ' ಇರುವುದನ್ನು ಗಮನಿಸಿ) ಕಲ್ಪಿಸಿದ್ದಾರೆ. ಆದರೆ ಇದು ಈಗಾಗಲೇ ಪ್ರಕಟವ

ಏಕಾಂತರಾಮಯ್ಯನ ವಚನವೇ ಆಗಿದ್ದು , ಈ ಸಂಕಲನದಲ್ಲಿ ಮಾತ್ರ ಅಂಕಿತ ಮಧ್ಯದಲ್ಲಿ

“ಪ್ರಿಯ' ಎಂಬ ಪದ ಹೆಚ್ಚಿಗೆ ಸೇರಿಕೊಂಡು ಅವನ ಸತಿಯದಿರಬೇಕೆಂದು ಊಹಿಸ

ಕಾರಣವಾಗಿದೆ. ಹೀಗಾಗಿ ಇಲ್ಲಿ ಇದನ್ನು ಗಣನೆಗೆ ತೆಗೆದುಕೊಂಡಿಲ್ಲ .

“ಶೀಲಸಂಪಾದನೆ' ಎಂಬ ಇನ್ನೊಂದು ಸ್ಟಲಕಟ್ಟಿನ ವಚನ ಸಂಕಲನದಲ್ಲಿ ಉರಿಲಿಂ

ಪೆದ್ದಿಯ ಪುಣ್ಯಸ್ತ್ರೀ ಕಾಳವ್ವಯ ಒಂದು ವಚನ ಅಕ್ಕಮ್ಮನ ಅಂಕಿತದಲ್ಲಿಯ

ದೊರೆಯುತ್ತದೆ. ಅದನ್ನು ಕಾಳವ್ವಗೆ ವರ್ಗಾಯಿಸಲಾಗಿದೆ.

ಇತರ ಸಂಗತಿಗಳು : ಇದು ಜನಪ್ರಿಯ ಆವೃತ್ತಿಯಾಗಿರುವುದರಿಂದ ಪಾಠ

ಸೂಚಿಸಿಲ್ಲ , ಊಹಿತ ಪಾಠವನ್ನು ಚೌಕ ಕಂಸಿನಲ್ಲಿ ಕೊಡಲಾಗಿದೆ. ವಚನಕಾರ್ತಿಯರ

ಹೆಸರನ್ನು ವಿಶೇಷಣ ಸಹಿತವಾಗಿ ಅಕಾರಾದಿಯಲ್ಲಿ ಜೋಡಿಸಲಾಗಿದೆ. ಹಡಪದಪ್ಪಣ

ಪುಣ್ಯಸ್ತ್ರೀಯ ವಚನಗಳು ಮಾತ್ರ ತಾತ್ವಿಕ ಹಿನ್ನೆಲೆಯಲ್ಲಿ ಜೋಡಣೆಗೊಂಡು

ಹಸ್ತಪ್ರತಿಗಳಲ್ಲಿ ದೊರೆಯುವುದರಿಂದ ಅವುಗಳನ್ನು ಮೂಲದಲ್ಲಿದ್ದಂತೆಯೇ ಇ

ಹಾಗೆ ಯಾವುದೇ ವ್ಯವಸ್ಥೆಗೆ ಒಳಗಾಗದೆ ಬೇರೆ ಬೇರೆ ಸಂಕಲನಗಳಲ್ಲಿ ಬಿಡಿಬಿಡಿಯಾಗಿ

ದೊರೆಯುವ ಇತರ ಶರಣೆಯರ ವಚನಗಳನ್ನು ಅಕಾರಾದಿಯಾಗಿ ಜೋಡಿಸಲಾ

ಹಡಪದಪ್ಪಣ್ಣನ ಪುಣ್ಯಸ್ತ್ರೀಯ ವಚನಗಳ ಅಕಾರಾದಿಯನ್ನು ಮಾತ್ರ ಅನ

ಕೊಡಲಾಗಿದೆ. ಜೊತೆಗೆ ಕಠಿಣಪದಕೋಶವನ್ನು ಈ ಸಂಪುಟದ ವಚನಗಳನ್ನು ಪರಿಷ

ಬಳಸಿಕೊಂಡ ಆಕರಗ್ರಂಥಗಳ ಸೂಚಿಯನ್ನು ಸೇರಿಸಲಾಗಿದೆ .

ಮರುಪರಿಷ್ಕರಣ :

ಈ ಆವೃತ್ತಿಯ ವಚನಗಳನ್ನು ಹೊಸದಾಗಿ ದೊರೆತ ಹೆಚ್ಚಿನ ಆಕರಗಳು ಮತ

ವಿದ್ವಾಂಸರು ಸೂಚಿಸಿದ ತಿದ್ದುಪಡಿ, ಸಲಹೆ ಸೂಚನೆಗಳ ಹಿನ್ನೆಲೆಯಲ್ಲಿ ಮರುಪರಿಷ್


ಮಾಡಲಾಗಿದೆ. ಅದರಿಂದಾಗಿ ಕೆಳಗಿನಂತೆ ಬದಲಾವಣೆಗಳು ಉಂಟಾಗಿವೆ :
೮೦
ಶಿವಶರಣೆಯರ ವಚನಸಂಪುಟ

೧. ಮೊದಲ ಆವೃತ್ತಿಯಲ್ಲಿ ಒಟ್ಟು ವಚನಗಳ ಸಂಖ್ಯೆ ೧೧೦೫ ಇದ್ದರೆ, ಇಲ್ಲಿ

೧೩೫೧ ಕ್ಕೆ ಏರಿದೆ. ವಚನಕಾರ್ತಿಯರ ಸಂಖ್ಯೆ ೩೩ ರಿಂದ ೩೫ ಕ್ಕೆ ಹೆಚ್ಚಿದೆ.

೨. ಮೊದಲ ಆವೃತ್ತಿಯಲ್ಲಿ ಅಕ್ಕಮಹಾದೇವಿಯ ೩ ವಚನಗಳು (ಕ್ರ . ಸಂ . ೨೪೬ ,

೨೯೩ , ೩೧೧), ಸತ್ಯಕ್ಕನ ೨ ವಚನಗಳು (೯೭೨, ೯೮೩ ), ನಾಗಲಾಂಬಿಕೆಯ ೧ ವಚನ

( ೨೦೬) ಪುನರುಕ್ತವಾಗಿವೆ. ಈ ೬ ವಚನಗಳನ್ನು ತೆಗೆದುಹಾಕಲಾಗಿ,

ಆವೃತ್ತಿಯಲ್ಲಿ ಉಳಿದ ಒಟ್ಟು ವಚನಗಳ ಸಂಖ್ಯೆ ೧೦೯೯ ಆಗುತ್ತದೆ.

೩. ಈ ಆವೃತ್ತಿಯಲ್ಲಿ ಹೊಸದಾಗಿ ದೊರೆತ ೨೪೮ ವಚನಗಳನ್

ಸೇರಿಸಲಾಗಿದೆ. ಅವುಗಳಲ್ಲಿ ಅಕ್ಕಮಹಾದೇವಿಯ ೮೨ ವಚನಗಳು, ನೀಲಮ್ಮನ ೧೬೧

ವಚನಗಳು, ಅಮುಗೆರಾಯಮ್ಮ , ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ

ಮಹಾದೇವಿ ಮತ್ತು ಹಡಪದ ಲಿಂಗಮ್ಮನ ಒಂದೊಂದು ವಚನ, ಅಜ್ಞಾತ ಶ

ಎರಡು ವಚನಗಳು ಸಮಾವೇಶಗೊಂಡಿವೆ.

೪. ತುಮಕೂರಿನ ಶ್ರೀ ಎಂ . ಚಂದ್ರಪ್ಪನವರು ಗುರುತಿಸಿದ ಪುನರುಕ್ತಿ , ಪಾದಸಾಮ್ಮ

ಭಾವಸಾಮ್ಮದ ವಚನಗಳಲ್ಲಿ ಸಂಪೂರ್ಣ ಪುನರುಕ್ತಿಯಾದವುಗಳನ್ನು ಮಾತ್ರ ತೆಗೆದ

ಪಾದಸಾಮ್ಮ , ಭಾವಸಾಮ್ಯದ ವಚನಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

೫. ಒಂದೇ ವಚನ ಇಬ್ಬರ ಹೆಸರಿನಲ್ಲಿ ಬಂದಾಗ ಅದರ ಕರ್ತೃತ್ವವನ್ನು

ನಿರ್ಧರಿಸುವಲ್ಲಿ ವಚನದ ಭಾವ, ಶಿಲ್ಪ, ವಸ್ತು , ಶೈಲಿ ಇತ್ಯಾದಿಗಳನ್ನು

ಹಾಗೆ ಬೇರೆಯವರಿಗೆ ಕೊಟ್ಟ ವಚನಗಳಲ್ಲಿ ಅಕ್ಕಮಹಾದೇವಿಯ ಒಂದು ವಚನ

ಚೆನ್ನಬಸವಣ್ಣನಿಗೆ (೩೧೧), ಸತ್ಯಕ್ಕನ ಒಂದು ವಚನ ಬಸವಣ್ಣನಿಗೆ (೯೭೨) ಸೇರಿವೆ.

ಚೆನ್ನಬಸವಣ್ಣ ಮತ್ತು ಘಟ್ಟಿವಾಳಯ್ಯ ಇಬ್ಬರಲ್ಲಿಯೂ ಬಂದ ೨೯೨ ನೆಯ

( ಲಿಂಗವನ್ನೆ .....) ಅಕ್ಕಮಹಾದೇವಿಯ ರಚನೆಗಳನ್ನು ಹೆಚ್ಚು ಮಟ್ಟಿಗೆ ಹೋ

ಅದನ್ನು ಇಲ್ಲಿಯೇ ಉಳಿಸಿಕೊಳ್ಳಲಾಗಿದೆ. ಅಕ್ಕಮ್ಮನ ೩೮೫ನೆಯ ವಚನ

ಕೇತಯ್ಯನಲ್ಲಿಯೂ ಬಂದಿದ್ದು ( ಸಂ . ೬. ವಚನ ೧೬೭೭), ಮೊದಲ ಐದುಪಾ

ಇಬ್ಬರಲ್ಲಿಯೂ ಒಂದೇ ಆಗಿವೆ. ಅಕ್ಕಮ್ಮನಲ್ಲಿ ಮುಂದೆ ನಾಲ್ಕು ಪಾದಗಳು ಹೆಚ್ಚಿ

ಈ ವಚನ ಅಕ್ಕಮ್ಮನ ರಚನೆಗಳನ್ನು ಹೆಚ್ಚುಮಟ್ಟಿಗೆ ಹೋಲುವುದರಿಂದ ಇಲ್ಲಿಯ

ಉಳಿಸಿಕೊಳ್ಳಲಾಗಿದೆ.

೬. ಪರಿಶಿಷ್ಟದಲ್ಲಿ ಕೊಟ್ಟಿದ್ದ ಅಕ್ಕಮಹಾದೇವಿಯ ಎರಡು ವಚನ,

ಒಂದು ವಚನ ಮತ್ತು ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮನ ಎರಡು

ಅವರವರ ವಚನಗಳಲ್ಲಿ ಅಕಾರಾದಿಗನುಗುಣವಾಗಿ ಅಳವಡಿಸಿಕೊಳ್ಳಲಾಗಿದೆ.

೭. ಮೊದಲ ಆವೃತ್ತಿಯಲ್ಲಿ ಅಕ್ಕಮಹಾದೇವಿಯ ೩೫೧ ನೆಯ ವಚನದ ಆರಂಭ

ನಾಲ್ಕು ಸಾಲು ಬಿಟ್ಟು ಹೋಗಿದ್ದವು. ಅವುಗಳನ್ನು ಶರಣಚಾರಿ


ಪ್ರಸ್ತಾವನೆ

ಸಂಕಲನಗ್ರಂಥದ ೯ ನೆಯ ವಚನದಿಂದ ಪೂರ್ಣಗೊಳಿಸಿಕೊಂಡು ಅಕಾರಾದಿಗನು ಗು

ಜೋಡಿಸಲಾಗಿದೆ ( ೨೨೧). ಹಾಗೆಯೇ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವಯ

ನೆಯ ವಚನದ ಆದಿಭಾಗ ಬಿಟ್ಟುಹೋಗಿದ್ದು , ಅದನ್ನು ಎಸ್‌.ಶಿವಣ್ಣನವರು ಸಾಧನ

೪, ೧೯೭೫) ಪತ್ರಿಕೆಯಲ್ಲಿ ಪ್ರಕಟಿಸಿದ ವಚನದಿಂದ ಪೂರ್ಣಗೊಳಿಸಿಕೊಂಡು ಅಕ

ಕ್ರಮದಲ್ಲಿ ಜೋಡಿಸಿಕೊಳ್ಳಲಾಗಿದೆ.

೮. ಒಪ್ಪೋಲೆಯಲ್ಲಿಯ ತಿದ್ದುಪಡಿಗಳನ್ನು ಸರಿಪಡಿಸಿಕೊಳ್ಳಲಾಗಿದೆ.

೯. ಆಕರ ಸೂಚಿಯಲ್ಲಿ ಹೊಸದಾಗಿ ದೊರೆತ ವಚನಗಳ ಆಕರಗ್ರಂಥ, ಹಸ್ತಪ್ರತ

ಪತ್ರಿಕೆಗಳ ಹೆಸರುಗಳನ್ನು ಸೇರಿಸಿಕೊಳ್ಳಲಾಗಿದೆ.

೧೦ . ಪ್ರಸ್ತಾವನೆಯನ್ನು ಕೆಲವು ತಿದ್ದುಪಡಿಗಳೊಂದಿಗೆ ಹಾಗೆಯೇ ಉ

ಲಾಗಿದೆ. ' ಪರಿಷ್ಕರಣ' ಎಂಬ ಭಾಗದಲ್ಲಿ ಕೆಲವು ಪ್ಯಾರಾ ತೆಗೆದು ಮರುಪರಿಷ್ಕರಣದ ಈ

ವಿಷಯವನ್ನು ಜೋಡಿಸಲಾಗಿದೆ.

ಕೃತಜ್ಞತೆಗಳು :

ಈ ಆವೃತ್ತಿಯ ವಚನಗಳನ್ನು ಮರುಪರಿಷ್ಕರಿಸುವಲ್ಲಿ ತಮ್ಮ ಅಮೂಲ್

ಸೂಚನೆಗಳನ್ನು ಇತ್ಯ ಈ ಯೋಜನೆಯ ಪ್ರಧಾನ ಸಂಪಾದಕರಾದ ಡಾ . ಎಂ . ಎಂ .

ಕಲಬುರ್ಗಿ ಅವರು ಹಾಗೂ ಸಲಹಾಮಂಡಳಿಯ ಎಲ್ಲ ಸದಸ್ಯರಿಗೆ, ಕನ್ನಡ ಸಂಸ್ಕೃತ

ಇಲಾಖೆಯ ನಿರ್ದೇಶಕರಿಗೆ ಕೃತಜ್ಞತೆಗಳು. ಸಮಗ್ರ ಸಂಪುಟಗಳನ್ನೆಲ್ಲ ವಿಶೇಷ ಆಸಕ್ತಿಯ

ಪರಿಶೀಲಿಸಿ, ಪುನರುಕ್ತಿ , ಪಾದಸಾಮ್ಮ , ಭಾವಸಾಮ್ಯಗಳುಳ್ಳ ವಚನಗಳನ್ನು ಗ

ತಿಳಿಸಿದ ತುಮಕೂರಿನ ಶ್ರೀ ಎಂ . ಚಂದ್ರಪ್ಪ ಅವರಿಗೆ, ಹೆಚ್ಚಿಗೆ ದೊರೆತ ವಚನಗಳ

ಮಾಹಿತಿಯನ್ನು ಎಂದಿನಂತೆ ಪ್ರೀತಿಯಿಂದ ಒದಗಿಸಿದ ಸ್ನೇಹಿತರಾದ ಶ್ರೀ ಎಸ್

ಅವರಿಗೆ, ಕರಡು ತಿದ್ದುವಲ್ಲಿ ಸಹಾಯಕಳಾದ ನನ್ನ ಶ್ರೀಮತಿ ಮಂಗಳಾ ಅವರಿಗ


ವಂದನೆಗಳು.

- ವೀರಣ್ಣ ರಾಜೂರ
ಪರಿವಿಡಿ

ಮುನ್ನುಡಿ

ಬಿನ್ನಹ

ನಿರ್ದೆಶಕರ ಮಾತು

ಪ್ರಕಾಶಕರ ಮಾತು

ಸಂಪಾದಕೀಯ

ಪ್ರಸ್ತಾವನೆ
C
ಅಕಮಹಾದೇವಿಯ ವಚನಗಳು
¿i
C ಕ C
ಅಕ್ಕಮ್ಮನ ವಚನಗಳು ೧೩೧

ಅಮುಗೆರಾಯಮ್ಮನ ವಚನಗಳು ೧೮೬


2
ಆಯ್ದಕ್ಕಿ ಲಕ್ಕಮ್ಮನ ವಚನಗಳು ೨೧೯

೫. ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವಯ ೨೨೫


ವಚನಗಳು
j
ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮನ ವಚನ
೨೨೯
j
ಕದಿರಕಾಯಕದ ಕಾಳವ್ವಯ ವಚನ ೨೩೦
jw
೮. ಕದಿರರೆಮ್ಮವ್ವಯ ವಚನಗಳು ೨೩೧

ಕನ್ನಡಿಕಾಯಕದ ರೇಮಮ್ಮನ ವಚನ ೨೩೩

೧೦ . ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವಯ ವಚನ ೨೩೪

೧೧ . ಕಾಲಕಣ್ಣಿಯ ಕಾಮಮ್ಮನ ವಚನ ೨೩೫ .

೧೨. ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮನ ವಚನ ೨೩೬

೧೩ . ಕೊಟ್ಟಣದಸೋಮಮ್ಮನ ವಚನ ೨೩೭

೧೪ . ಗಂಗಾಂಬಿಕೆಯ ವಚನಗಳು
೨೩೮

೧೫ . ಗಜೇಶಮಸಣಯ್ಯಗಳ ಪುಣ್ಯಸ್ತ್ರೀಯ ವಚನಗಳು ೨೪ ೧

೧೬ . ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿಯ ವಚನಗಳು ೨೪ ೫

೧೭ . ಗೊಗ್ಗವ್ವಯ ವಚನಗಳು ೨೪೬


೧೮ . ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮನ ವಚನಗಳು ೨೪೮

೧೯ . ದುಗ್ಗಳೆಯ ವಚನಗಳು ೨೫೧


೧ * ೧
೨೦. ನಾಗಲಾಂಬಿಕೆಯ ವಚನಗಳು
೨೫೨

೨೧ . ನೀಲಮ್ಮನ ವಚನಗಳು
೨೫೭

೨೨. ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವಯ ವಚನ ೩೨೨
೧ಡ ದ
೨೩ . ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವಯ ವಚನಗಳು
೧ ೧
೨೪ . ಬೊಂತಾದೇವಿಯ ವಚನಗಳು

೨೫ . ಮುಕ್ತಾಯಕ್ಕನ ವಚನಗಳು ೩೨೫
೧ ನಿ
೨೬ . ಮೋಳಿಗೆಮಹಾದೇವಿಯ ವಚನಗಳು
೧ ನಿ ೧
೨೭ . ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮನ ವಚನ
ಡ ೨ ಕ
೨೮. ರೇವಣಸಿದ್ಧಯ್ಯಗಳ ಪುಣ್ಯಸ್ತ್ರೀ ರೇಕಮ್ಮನ ವಚನ

೨೯ . ಸತ್ಯಕ್ಕನ ವಚನಗಳು ೩೬೪

೩೦ . ಸಿದ್ದ ಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವಯ ವಚನ ೩೭೩

೩೭೪
೩೧. ಸೂಳೆಸಂಕವ್ವಯ ವಚನ

೩೨ . ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋಧೆಯ ೩೭೫


ವಚನಗಳು
* C &
೩೩ . ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮನ ವಚನ
* C J
೩೪, ಕುರಂಗೇಶ್ವರಲಿಂಗಾಂಕಿತ ವಚನ ೪೧೬
* CJC
೩೫. ಮಸಣಯ್ಯಪ್ರಿಯ ಮಾರೇಶ್ವರಲಿಂಗ ಅಂಕಿತದ ವಚನ ပုဂ

ಅನುಬಂಧ

ವಚನಗಳ ಅಕಾರಾದಿ ೪೨೧

ಕಠಿಣ ಪದಕೋಶ ೪೨೭

ಆಕರ ಗ್ರಂಥಗಳು ೪ ೪೪
ಅಕ್ಕಮಹಾದೇವಿಯ ವಚನಗಳು

ಅಂಗ ಕ್ರಿಯಾಲಿಂಗವ ವೇಧಿಸಿ,

ಅಂಗ ಲಿಂಗದೊಳಗಾಯಿತ್ತು.

ಮನ ಅರಿವ ಬೆರಸಿ, ಜಂಗಮ ಸೇವೆಯ ಮಾಡಿ,

ಮನ ಜಂಗಮಲಿಂಗದೊಳಗಾಯಿತ್ತು.

ಭಾವ ಗುರುಲಿಂಗದೊಳಗೆ ಬೆರಸಿ, ಮಹಾಪ್ರಸಾದವ ಭೋಗಿಸಿ,

ಭಾವ ಗುರುಲಿಂಗದೊಳಗಾಯಿತ್ತು .

ಚೆನ್ನಮಲ್ಲಿಕಾರ್ಜುನಾ,

ನಿಮ್ಮ ಒಲುಮೆಯಿಂದ ಸಂದಳಿದು

ಸ್ವಯಲಿಂಗಿಯಾದೆನಯ್ಯಾ ಪ್ರಭುವೆ. || ೧ ||
ಶಿವಶರಣೆಯರ ವಚನಸಂಪುಟ

ಅಂಗದಲ್ಲಿ ಆಚಾರವ ತೋರಿದ

ಆ ಆಚಾರವೇ ಲಿಂಗವೆಂದರುಹಿದ.

ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ;

ಆ ಅರಿವೆ ಜಂಗಮವೆಂದುತೋರಿದ.

ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು

ಎನಗೀ ಕ್ರಮವನರುಹಿದನಯ್ಯ ಪ್ರಭುವೆ. || ೨ ||

ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ.

ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ.

ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ.

ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ.

ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆತೋರುವ

ಕಾಮನ ಸುಟ್ಟುರುಹಿದ ಭಸ್ಮವನೋಡಯ್ಯಾ !

ಚೆನ್ನಮಲ್ಲಿಕಾರ್ಜುನ,

ಕಾಮನಕೊಂದು ಮನಸಿಜನಾಗುಳುವಡೆ

ಮನಸಿಜನ ತಲೆಯ ಬರಹವ ತೊಡೆದೆನು. || ೩ ||

ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ.

ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ.

ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ.

ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ.

ಜ್ಞಾನದೊಳಗೆ ಜ್ಞಾನವಾಗಿ , ಜ್ಞಾನವ ಲಿಂಗೈಕ್ಯವ ಮಾಡಿದೆ.

ಕ್ರೀಗಳೆಲ್ಲವ ನಿಲಿಸಿಕ್ರಿಯಾತೀತವಾಗಿ,

ನಿಃಪತಿ ಲಿಂಗೈಕ್ಯವ ಮಾಡಿದೆ.

ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ,

ಉಭಯವ ಲಿಂಗೈಕ್ಯವ ಮಾಡದೆ.

ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ,

ಲಿಂಗವೆಂಬ ಘನವು ಎನ್ನಲ್ಲಿ

ಅಳಿಯಿತ್ತು ಕಾಣಾ ಸಂಗನಬಸವಣ್ಣಾ ..


ಅಕ್ಕಮಹಾದೇವಿಯ ವಚನಗಳು

ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.

ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು .

ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು .

ಚೆನ್ನಮಲ್ಲಿಕಾರ್ಜುನಾ,

ನಿಮ್ಮ || ೫ ||
ಒಲುಮೆಯ ಸಂಗದಲ್ಲಿರ್ದುಸ್ವಯಲಿಂಗವಾಯಿತ್ತು .

ಅಂಗವ ಲಿಂಗಮುಖದಲ್ಲಿ ಅರ್ಪಿಸಿ,

ಅಂಗ ಅನಂಗವಾಯಿತ್ತು .

ಮನವ ಅರಿವಿಂಗರ್ಪಿಸಿ, ಮನ ಲಯವಾಯಿತ್ತು.


A , SS # 4 ಕಿ .
ಭಾವವ ತೃಪ್ತಿಗರ್ಪಿಸಿ , ಭಾವ ಬಯಲಾಯಿತ್ತು.
fons h SAS synus .
ಅಂಗ ಮನ ಭಾವವಳಿದ ಕಾರಣ

ಕಾಯ ಅಕಾಯವಾಯಿತ್ತು.

ಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ,

ಶರಣಸತಿ ಲಿಂಗಪತಿಯಾದೆನು.

ಇದು ಕಾರಣ, ಚೆನ್ನಮಲ್ಲಿಕಾರ್ಜುನನೆಂಬ ಗಂಡನ

ಒಳಹೊಕ್ಕು ಬೆರಸಿದೆನು.

ಅಂಗವಿಕಾರಸಂಗವ ಮರೆದು ,

ಲಿಂಗವನೊಡಗೂಡುತಿಪ್ಪವರತೋರಾಎನಗೆ,

ಕಾಮವಿಕಾರಕತ್ತಲೆಯಳಿದು,

ಭಕ್ತಿಪ್ರಾಣವಾಗಿಪ್ಪವರ ತೋರಾಎನಗೆ.

ತ್ರಿಕರಣ ಶುದ್ಧವಾಗಿ ನಿಮ್ಮ ನೆರೆ ನಂಬಿದ

ಸದ್ಭಕ್ತರ ತೋರಾಎನಗೆ ಚೆನ್ನಮಲ್ಲಿಕಾರ್ಜುನಾ. || ೭ ||

ಅಂಗಸಂಗದಲ್ಲಿ ಲಿಂಗಸಂಗಿಯಾದೆನು.

ಲಿಂಗಸಂಗದಲ್ಲಿ ಅಂಗಸಂಗಿಯಾದೆನು.

ಉಭಯಸಂಗವನೂ ಅರಿಯದೆ ಪರಿಣಾಮಿಯಾದೆನು .

ನುಡಿಯ ಗಡಣವ ಮರೆದು ತೆರಹಿಲ್ಲದಿದ್ದನು.


ಶಿವಶರಣೆಯರ ವಚನಸಂಪುಟ

ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಬೆರಸಿದ ಬಳಿಕ

ಎನ್ನ ನಾನು ಏನೆಂದೂ ಅರಿಯೆನಯ್ಯಾ . || ೮ ||

ಅಂಗೈಯೊಳಗಣ ಲಿಂಗವ ಪೂಜಿಸುತ್ತ ,

ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದ ನೋಡಯ್ಯಾ ,

ಕಂಗಳ ನೋಟ, ಕರುವಿಟ್ಟ ಭಾವ, ಹಿಂಗದ ಮೋಹ

ತೆರಹಿಲ್ಲದಿರ್ದ ನೋಡಯ್ಯಾ,

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.

ಅಂದೂ ನೀನೆ, ಇಂದೂ ನೀನೆ, ಎಂದೂ ನೀನೆ, ಕೇಳಾ ತಂದೆ.

ನಿನ್ನ ಬೆಂಬಳಿವಿಡಿದ ಹಳೆಮಗಳಾನಯ್ಯ

ಅಂದೂ ಇಂದೂ ಎಂದೂ ನಿನ್ನ ನಂಬಿದ ಒಲವಿನ ಶಿಶು ನಾನಯ್ಯ .

ಒಂದಲ್ಲದೆ ಎರಡರಿಯೆನಯ್ಯಾ ,

ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾ

ನಿಮ್ಮ ಎಂಜಲನುಂಬ ಹಳೆಯವಳಾನಯ್ಯಾ , || ೧೦ ||

ಅಕ್ಕ ಕೇಳಕ್ಕಾ , ನಾನೊಂದು ಕನಸ ಕಂಡೆ.

ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು

ಬಂದೆನ್ನ ನೆರೆದ ನೋಡಪ್ಪಾ ,

ಆತನನಪ್ಪಿಕೊಂಡು ತಳವೆಳಗಾದೆನು.

ಚೆನ್ನಮಲ್ಲಿಕಾರ್ಜುನನ ಕಂಡು

ಕಣ್ಣಮುಚ್ಚಿ ತೆರೆದು ತಳವೆಳಗಾದೆನು. || ೧೧ ||

ಅಕ್ಕ ಕೇಳ್ತಾ, ನಾನೊಂದು ಕನಸ ಕಂಡೆ.

ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ.

ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು

ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ .


ಅಕ್ಕಮಹಾದೇವಿಯ ವಚನಗಳು

ಮಿಕ್ಕು ಮೀರಿಹೋಹನ ಬೆಂಬತ್ತಿ ಕೈವಿಡಿದೆನು.


|| ೧೨ ||
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣೆರೆದೆನು.

- ೧೩

ಅಕ್ಕಟಕ್ಕಟಾ, ಸಂಸಾರದ ಹಗರಣ ಬಂದಾಡಿತ್ತಲ್ಲಾ !

ಅಪ್ಪಾ ಬೊಪ್ಪಾ ಎಂಬ ಚೋಹವು .

ಅದು ಮೊಟ್ಟಮೊದಲಲ್ಲಿ ಬಂದಾಡಿತ್ತು .

ತುಪ್ಪುಳು ತೊಡೆದಂತೆ ಮೀಸೆಯ ಚೋಹವು

ಅದು ನಟ್ಟನಡುವೆ ಬಂದಾಡಿತ್ತು .

ಮುಪ್ಪು ಮುಪ್ಪು ಎಂಬ ಚೋಹವು

ಅದು ಕಟ್ಟಕಡೆಯಲಿ ಬಂದಾಡಿತ್ತು .

ನಿಮ್ಮ ನೋಟವುತೀರಲೊಡನೆ
|| ೧೩ ||
ಜಗದಾಟವುತೀರಿತ್ತು ಕಾಣಾ ಚೆನ್ನಮಲ್ಲಿಕಾರ್ಜುನಾ.

ಅಕ್ಕಿಯಿಲ್ಲದ ತುಷಕ್ಕೆ ಅಗ್ಗವಣಿಯನೆರೆದಡೆ

ಅದೆಂದಿಂಗೆ ಬೆಳೆದು ಫಲವಪ್ಪುದಯ್ಯಾ ?

ಅರಿವಿಲ್ಲದವರಿಗೆ ಆಚಾರವಿದ್ದಡೆ

ಅರಕೆಗೆಟ್ಟು ಸುಖವೆಂದಪ್ಪುದಯ್ಯಾ

ಹೊರೆದ ಪರಿಮಳ ಸ್ಥಿರವಾಗಬಲ್ಲುದೆ ?

ಎನ್ನದೇವ ಚೆನ್ನಮಲ್ಲಿಕಾರ್ಜುನನನರಿಯದವರಿಗೆ

ಆಚಾರವಿಲ್ಲ ಕಾಣಿರಣ್ಣಾ ! || ೧೪ ||

ಅಗ್ನಿ ಸರ್ವವ್ಯಾಪಕನಾಗಿರುವಂತೆ,

ಚಿದ್ವಹ್ಮರೂಪನಾದ ಶಿವನು ಸರ್ವವ್ಯಾಪಕನಾಗಿರ್ಪನು.

ಹೃದಯಕಮಲವು ಮುಕುರದೋಪಾದಿಯಲ್ಲಿ ಪ್ರಕಾಶಿಸುತಿರ್ದಪುದು.


ಆ ಕನ್ನಡಿಯೋಪಾದಿಯ ಹೃದಯಕಮಲದಲ್ಲಿ

ವ್ಯಾಪಕನಾದ ಶಿವನು,

ಆತ್ಮನೆನಿಸಿಕೊಂಡು ಪ್ರತಿಬಿಂಬಿಸುತಿರ್ದಪನು.

ವೇದೋಪನಿಷದ್ದಾಯತ್ರಿ ಪ್ರಸಿದ್ಧವಾದೀ ರಹಸ್ಯವ

ಗುರೂಪದೇಶದಿಂ ತಿಳಿವುದಯ್ಯ

ಶ್ರೀ ಚೆನ್ನಮಲ್ಲಿಕಾರ್ಜುನದೇವಾ. || ೧೫ ||
ಶಿವಶರಣೆಯರ ವಚನಸಂಪುಟ

೧೬

ಅಘಟಿತ ಘಟಿತನ ಒಲವಿನ ಶಿಶು !

ಕಟ್ಟಿದೆನು ಜಗಕ್ಕೆ ಬಿರಿದನು.

ಕಾಮ ಕ್ರೋಧಲೋಭಮೋಹ ಮದ ಮತ್ಸರಂಗಳಿಗೆ

ಇಕ್ಕಿದೆನು ಕಾಲಲಿ ತೊಡರನು .

ಗುರುಕೃಪೆಯೆಂಬ ತಿಗುರನಿಕ್ಕಿ

ಮಹಾಶರಣೆಂಬ ತಿಲಕವನಿಕ್ಕಿ

ನಿನ್ನ ಕೋಲುವೆ ಗೆಲುವೆ ಶಿವಶರಣೆಂಬ ಅಲಗ ಕೊಂಡು,

ಬಿಡು ಬಿಡು ಕರ್ಮವೆ, ನಿನ್ನ ಕೊಲ್ಲದ ಮಾಣೆನು.

ಕೆಡಹಿಸಿಕೊಳ್ಳದೆನ್ನ ನುಡಿಯ ಕೇಳಾ.

ಕೆಡದ ಶಿವಶರಣೆಂಬ ಅಲಗನೆ ಕೊಂಡು

ನಿನ್ನ ಕೊಲುವೆ ಗೆಲುವೆ ನಾನು .

ಬ್ರಹ್ಮಪಾಶವೆಂಬ ಕಳವನೆ ಸವರಿ ,

ವಿಷ್ಣು ಮಾಯೆಯೆಂಬ ಎಡೆಗೋಲನೆ ನೂಕಿ,

ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ
-
ತಲೆದೂಗಲಿ ಕಾದುವೆನು ನಾನು. an || ೧೬ ||

೧೭

ಅತ್ತೆ ಮಾಯೆ , ಮಾವ ಸಂಸಾರಿ,

ಮೂವರು ಮೈದುನರು ಹುಲಿಯಂತವದಿರು,

ನಾಲ್ವರು ನಗೆವೆಣ್ಣು ಕೇಳು ಕೆಳದಿ.

ಐವರು ಭಾವದಿರನೊಬ್ಬ ದೈವವಿಲ್ಲ .

ಆರು ಪ್ರಜೆಯತ್ತಿಗೆಯರ ಮೀರಲಾರೆನು,

ತಾಯೆ, ಹೇಳುವಡೆ ಏಳು ಪ್ರಜೆಘೋರಕಾಹು.

ಕರ್ಮವೆಂಬ ಗಂಡನ ಬಾಯ ಟೊಣೆದು,

ಹಾದರವನಾಡುವೆನು ಹರನಕೊಡೆ.

ಮನವೆಂಬ ಸಖಿಯ ಪ್ರಸಾದದಿಂದ |

ಅನುಭಾವವ ಕಲಿತೆನು ಶಿವನೊಡನೆ ;

ಕರಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನೆಂಬ

ಸಜ್ಜನ ಗಂಡನ ಮಾಡಿಕೊಂಡೆ.


ಅಕ್ಕಮಹಾದೇವಿಯ ವಚನಗಳು

ಅನ್ನವನೀಡುವವರಿಂಗೆ ಧಾನ್ಯವೆಸೆವ ಲೋಕ.

ಅರ್ಥವಕೊಡುವವರಿಂಗೆ ಪಾಷಾಣವೆಸೆವ ಲೋಕ.

ಹೆಣ್ಣು ಹೊನ್ನು ಮಣ್ಣು ಮೂರನೂ

ಕಣ್ಣಿನಲಿ ನೋಡಿ, ಕಿವಿಯಲಿ ಕೇಳಿ,

ಕೈಯಲಿ ಮುಟ್ಟಿ , ಮಾಡುವ ಭಕ್ತಿ

ಸಣ್ಣವರ ಸಮಾರಾಧನೆಯಾಯಿತ್ತು .

ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ

ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ. || ೧೮ ||

ಅನಿಮಿಷನಲ್ಲಮಯ್ಯ , ಮರುಳಶಂಕರಯ್ಯ ,

ಕೋಲಶಾಂತಯ್ಯ , ಮಾದಾರ ಧೂಳಯ್ಯ ,

ಮಿಂಡಮಲ್ಲಿನಾಥ, ಚೆನ್ನಬಸವಣ್ಣ ,

ಚೇರಮರಾಯ , ತೆಲುಗ ಜೊಮ್ಮಣ್ಣ, ಕಿನ್ನರಯ್ಯ ,

ಹಲಾಯುಧ, ದಾಸಿಮಯ್ಯ , ಭಂಡಾರಿ, ಬಸವರಾಜ ಮುಖ್ಯವಾದ

ಚೆನ್ನಮಲ್ಲಿಕಾರ್ಜುನನ ಶರಣರಿಗೆ ನಮೋ ನಮೋ ಎಂಬೆನು


|| ೧೯ ||

ಅನುತಾಪದೊಡಲಿಂದೆ ಬಂದ ನೋವನುಂಬವರು

ಒಡಲೊ , ಪ್ರಾಣಿ , ಆರು ಹೇಳಾ ?

ಎನ್ನೊಡಲಿಂಗೆ ನೀನು ಪ್ರಾಣವಾದ ಬಳಿಕ

ಎನ್ನ ಒಡಲ ಸುಖ ದುಃಖವಾರ ತಾಗುವುದು ಹೇಳಯ್ಯಾ ?

ಚೆನ್ನಮಲ್ಲಿಕಾರ್ಜುನಯ್ಯಾ ,

ಎನ್ನ ನೊಂದ ನೋವು, ಬೆಂದ ಬೇಗೆ,

ನಿಮ್ಮ ತಾಗದೆ ಹೋಹುದೆ ಅಯ್ಯಾ ? || ೨೦ ||

೨೧

ಅಪಾರ ಘನಗಂಭೀರದ ಅಂಬುಧಿಯಲ್ಲಿ

ತಾರಾಪಥವಂನೋಡಿನಡೆಯೆ ,

ಭೈತ್ರದಿಂದ ದ್ವೀಪದೀಪಾಂತರಕ್ಕೆ

ಸಕಲ ಪದಾರ್ಥವನೆಯ್ದಿಸುವುದು ,
ಶಿವಶರಣೆಯರ ವಚನಸಂಪುಟ

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ

ಸಮೀಪತೂರ್ಯಸಂಭಾಷಣೆಯನರಿದಡೆ

ಮುನ್ನಿನಲ್ಲಿಗೆಯ್ಲಿಸುವುದು. || ೨೧ ||

១១

ಅಮೃತವನುಂಬ ಶಿಶುವಿಂಗೆ ವಿಷವನೂಡುವರೆ ಅಯ್ಯಾ ?

ನೆಳಲ ತಂಪಿನಲ್ಲಿ ಬೆಳೆದ ಸಸಿಗೆ ಉರಿಯ ಬೇಲಿಯ ಕಟ್ಟುವರೆ ಅಯ್ಯಾ ?

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ ಕರುಣದ ಕಂದನೊಡನೆ

ಸೂನೆಗಾರರ ಮಾತನಾಡಿಸುವರೆ ಅಯ್ಯಾ ? || ೨೨ ||

೨೩

ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ,

ಎಲುವಿನ ತಡಿಕೆ, ಕೀವಿನ ಹಡಿಕೆ

ಸುಡಲೀ ದೇಹವ; ಒಡಲುವಿಡಿದು ಕೆಡದಿರು,

ಚೆನ್ನಮಲ್ಲಿಕಾರ್ಜುನನನರಿಯದ ಮರುಳೆ. ... || ೨೩ ||

೨೪

ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯಶರಣರ

ಪರಿಯನೇನೆಂಬೆನಯ್ಯಾ ?

ಘನವನೊಳಕೊಂಡ ಮನದ ಮಹಾನುಭಾವಿಗಳ

ಬಳಿವಿಡಿದು ಬದುಕುವೆನಯ್ಯಾ .

ಅಯ್ಯಾ, ನಿನ್ನಲ್ಲಿ ನಿಂದು ಬೇರೊಂದರಿಯದ

ಲಿಂಗಸುಖಿಗಳ ಸಂಗದಲ್ಲಿ ದಿನವ ಕಳೆಯಿಸಯ್ಯಾ

ಚೆನ್ನಮಲ್ಲಿಕಾರ್ಜುನಾ. * || ೨೪ ||

೨೫

ಅಯ್ಯಾ , ಚಿದಂಗ ಚಿದ್ಘನಲಿಂಗ |

ಶಕ್ತಿ ಭಕ್ತಿ ಹಸ್ತ ಮುಖ ಪದಾರ್ಥ ಪ್ರಸಾದ

ಎಂಬಿವಾದಿಯಾದ ಸಮಸ್ತ ಸಕೀಲಂಗಳ ನೆಲೆ ಕಲೆಯರಿಯದೆ,

ಜಿಹ್ವಾಲಂಪಟಕ್ಕೆ ಆಹ್ವಾನಿಸಿ, ಗುಹ್ಯಾಲಂಪಟಕ್ಕೆ ವಿಸರ್ಜಿಸಿ,

ಸಕಲೇಂದ್ರಿಯಮುಖದಲ್ಲಿ ಮೋಹಿಯಾಗಿ,

ಸದ್ಗುರುಕರುಣಾಮೃತರಸ ತಾನೆಂದರಿಯದ
ಅಕ್ಕಮಹಾದೇವಿಯ ವಚನಗಳು

ಬರಿದೆ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ

ಗುರುಚರಪರವೆಂದು ಬೊಗಳುವ ಕುನ್ನಿಗಳ ನೋಡಿ

ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯಾ,


|| ೨೫ ||
ಚೆನ್ನಮಲ್ಲಿಕಾರ್ಜುನಾ.

೨೬

ಅಯ್ಯಾ , ತನ್ನ ತಾನರಿಯಬೇಕಲ್ಲದೆ,

ತನ್ನಲ್ಲಿ ಅರಿವುಸ್ವಯವಾಗಿರಲು ಅನ್ಯರಲ್ಲಿ ಕೇಳಲುಂಟೆ ?

ಚೆನ್ನಮಲ್ಲಿಕಾರ್ಜುನಾ,

ನೀನರಿವಾಗಿ ಎನಗೆ ಮುಂದುದೋರಿದ ಕಾರಣ

ನಿಮ್ಮಿಂದ ನಿಮ್ಮನರಿವೆನು. || ೨೬ ||

೨೭

ಅಯ್ಯಾ, ನಿನ್ನ ಮುಟ್ಟಿ ಮುಟ್ಟದೆನ್ನ ಮನನೋಡಾ.

ಬಿಚ್ಚಿ ಬೀಸರವಾಯಿತ್ತೆನ್ನ ಮನ.

ಹೊಳಲ ಸುಂಕಿಗನಂತೆ ಹೊದಕುಳಿಗೊಂಡಿತ್ತೆನ್ನ ಮನ.

ಎರಡೆಂಬುದ ಮರದು ಬರಡಾಗದೆನ್ನ ಮನ.

ನೀನು ಆನಪ್ಪ || ೨೭ ?||


ಪರಿಯೆಂತು ಹೇಳಾ, ಚೆನ್ನಮಲ್ಲಿಕಾರ್ಜುನಾ

- ೨೮

ಅಯ್ಯಾ , ನಿಮ್ಮ ಅನುಭಾವಿಗಳ ಸಂಗದಿಂದ

ಎನ್ನ ತನು ಶುದ್ಧವಾಯಿತ್ತು.

ಅಯ್ಯಾ , ನಿಮ್ಮ ಅನುಭಾವಿಗಳ ಸಂಗದಿಂದ

ಎನ್ನ ಮನ ಶುದ್ದವಾಯಿತ್ತು .

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ

ಎನ್ನ ಪ್ರಾಣ ಶುದ್ಧವಾಯಿತ್ತು .

ಅಯ್ಯಾ , ನಿಮ್ಮ ಅನುಭಾವಿಗಳು


ಎನ್ನ ಒರೆದೊರೆದು ಆಗುಮಾಡಿದ ಕಾರಣ

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮಗಾನು ತೊಡಿಗೆಯಾದೆನು. || ೨೮ ||

ಅಯ್ಯಾ, ನಿಮ್ಮ ಶರಣರ ಕೂಡಿದ


ಸುಖವನುಪಮೆಗೆ ತರಬಾರದಯ್ಯಾ.
24
ಶಿವಶರಣೆಯರ ವಚನಸಂಪುಟ

ಅಯ್ಯಾ , ನಿಮ್ಮ ಮಹಂತರ ಕೂಡಿ ಅಗಲುವ ಧಾವತಿಗಿಂತ

ಸಾವುದೇ ಕರಲೇಸಯ್ಯಾ.

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮನರುಹಿದ ಮಹಿಮರನಗಲಿ

ಆನು ನಿಲ್ಲಲಾರೆನಯ್ಯಾ . || ೨೯ ||

೩೦

ಅಯ್ಯಾ , ನಿಮ್ಮ ಶರಣರ ಬರವಿಂಗೆ

ಗುಡಿ ತೋರಣವಕಟ್ಟುವೆ.

ಅಯ್ಯಾ , ನಿಮ್ಮ ಶರಣರ ಬರವಿಂಗೆ

ಮುಡುಹಿನಲ್ಲಿ ಪಟ್ಟವಕಟ್ಟುವೆ.

ಅಯ್ಯಾ , ನಿಮ್ಮ ಶರಣರೆನ್ನ ಮನೆಗೆ ಬಂದಡೆ,

ಅವರ ಶ್ರೀಪಾದವನೆನ್ನ ಹೃದಯದಲ್ಲಿ ಬರೆದಿಟ್ಟುಕೊಂಬೆ,

ಕಾಣಾ ಚೆನ್ನಮಲ್ಲಿಕಾರ್ಜುನಾ. || ೩೦ ||

- ೩೧

ಅಯ್ಯಾ , ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ .

ಅಯ್ಯಾ , ನಿಮ್ಮ ಶರಣರಿದ್ದ ಪುರವೆ ಕೈಲಾಸಪುರವಯ್ಯಾ .

ಅಯ್ಯಾ , ನಿಮ್ಮ ಶರಣರು ನಿಂದುದೆ ನಿಜನಿವಾಸವಯ್ಯಾ .

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ,

ಆನು ಸಂಗನಬಸವಣ್ಣನ ಶ್ರೀಪಾದಕ್ಕೆ

ನಮೋ ನಮೋ ಎನುತಿರ್ದೆನು. || ೩೧ ||

೩೨

ಅಯ್ಯಾ, ನಿಮ್ಮ ಸಜ್ಜನ ಸದ್ಭಕ್ತರ ಕಂಡೆನಾಗಿ,

ಎನ್ನ ಕಂಗಳ ಪಟಲ ಹರಿಯಿತ್ತಿಂದು.

ಅಯ್ಯಾ , ನಿಮ್ಮ ಸಜ್ಜನಸದ್ಬಕ್ತರ ಶ್ರೀಚರಣಕ್ಕೆರಗಿದೆನಾಗಿ,

ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದು.

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ ಶರಣ ಸಂಗನಬಸವಣ್ಣನ ಪಾದವ ಕಂಡು

ಮಿಗೆ ಮಿಗೆ ನಮೋ ನಮೋ ಎನುತಿರ್ದೆನಯ್ಯಾ , | ೩೨ ||


ಅಕ್ಕಮಹಾದೇವಿಯ ವಚನಗಳು

- ೩೩

ಅಯ್ಯಾ , ನೀನು ಕೇಳಿದಡೆ ಕೇಳು, ಕೇಳದಡೆ ಮಾಣು;

ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ.

ಅಯ್ಯಾ , ನೀನು ನೋಡಿದಡೆ ನೋಡು, ನೋಡದಡೆ ಮಾಣು;

ಆನು ನಿನ್ನ ನೋಡಿಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ ,

ಅಯ್ಯಾ , ನೀನು ಮಚ್ಚಿದೆಡೆ ಮಚ್ಚು , ಮಚ್ಚದಡೆ ಮಾಣು;

ಆನು ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯಾ .

ಅಯ್ಯಾ , ನೀನು ಒಲಿದಡೆ ಒಲಿ , ಒಲಿಯದಡೆ ಮಾಣು;

ಆನು ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ ,

ಚೆನ್ನಮಲ್ಲಿಕಾರ್ಜುನಯ್ಯಾ,

|| ೩೩ ||
ಆನು ನಿಮ್ಮನರ್ಚಿಸಿ ಪೂಜಿಸಿ ಹರುಷದೊಳೋಲಾಡುವೆನಯ್ಯಾ .

೩೪

ಅಯ್ಯಾ , ನೀನೆನ್ನ ಮೊರೆಯನಾಲಿಸಿದಡಾಲಿಸು,

ಆಲಿಸದಿರ್ದಡೆ ಮಾಣು.

ಅಯ್ಯಾ , ನೀನೆನ್ನ ದುಃಖವನೋಡಿದಡೆನೋಡು,

ನೋಡದಿರ್ದಡೆ ಮಾಣು.

ನಿನಗಿದು ವಿಧಿಯೆ !

ನೀನೊಲ್ಲದ ಆನೊಲಿಸುವ ಪರಿಯೆಂತಯ್ಯಾ ?

ಮನವೆಳಸಿ ಮಾರುವೋಗಿ ಮರೆವೊಕ್ಕಡೆ

ಕೊಂಬ ಪರಿಯೆಂತಯ್ಯಾ ಚೆನ್ನಮಲ್ಲಿಕಾರ್ಜುನಾ ? 1| ೩೪ ||

ಅಯ್ಯಾ , ಪರಾತ್ಪರ ಸತ್ಯ ಸದಾಚಾರ

ಗುರುಲಿಂಗಜಂಗಮದಶ್ರೀಚರಣವನು

ಹಿಂದೆ ಹೇಳಿದ ಅಚ್ಚಪ್ರಸಾದಿಯೋಪಾದಿಯಲ್ಲಿ

ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ

ಅರ್ಥಪ್ರಾಣಾಭಿಮಾನವ ಸಮರ್ಪಿಸಿ,

ಒಪ್ಪತ್ತು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ

ಅರ್ಚನೆಯ ಮಾಡಿ, ಆ ಚರಣೋದಕ ಪ್ರಸಾದವನು

ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗದೇವಂಗೆ

ಕೊಟ್ಟು ಕೊಂಬುವಂತಹದೆ ಇದಿರಿಟ್ಟು


ಶಿವಶರಣೆಯರ ವಚನಸಂಪುಟ

ಜಂಗಮ ಪಾದೋದಕ ಪ್ರಸಾದವ ಕೊಂಬ

ಆಚರಣೆಯ ನಿಲುಗಡೆ ನೋಡಾ.

ಆಮೇಲೆ ಒಪ್ಪತ್ತು ಸಂಬಂಧವಿಟ್ಟು

ಆಚರಿಸುವ ನಿಲುಕಡೆ ಎಂತೆಂದಡೆ:

ಅಯ್ಯಾ, ನಿನ್ನ ಷಟ್‌ಸ್ಥಾನದಲ್ಲಿ ನೆಲೆಸಿರ್ಪ ಇಷ್ಟಮಹಾಲಿಂಗದೇವ

ತ್ರಿವಿಧಸ್ಥಾನದಲ್ಲಿ ಓಂ ಬಸವಣ್ಣ ಚೆನ್ನಬಸವಣ್ಣ ಅಲ್ಲಮಪ್ರಭುವೆಂಬ


ತ್ರಿವಿಧ ನಾಮಸ್ವರೂಪವಾದ ಷೋಡಶಾಕ್ಷರಂಗಳೆ

ಷೋಡಶವರ್ಣವಾಗಿ ನೆಲೆಸಿಪ್ಪರುನೋಡಾ.

ಇಂತು ಷೋಡಶಕಳಾಸ್ವರೂಪವಾದ

ಚಿನ ಮಹಾಲಿಂಗದೇವನ

ನಿರಂಜನ ಜಂಗಮದೋಪಾದಿಯಲ್ಲಿ

ಸಗುಣ ನಿರ್ಗುಣ ಪೂಜೆಗಳ ಮಾಡಿ

ಜಂಗಮಚರಣಸೋಂಕಿನಿಂ ಬಂದ

ಗುರುಪಾದೋದಕವಾದಡೂ ಸರಿಯೆ,

ಅದು ದೊರೆಯದಿದ್ದಡೆ,

ಲಿಂಗಾಣತಿಯಿಂ ಬಂದೊದಗಿದ

ಪರಿಣಾಮೋದಕವಾದಡೂ ಸರಿಯೆ ,

ಒಂದು ಭಾಜನದಲ್ಲಿ ಸೂಕ್ಷ್ಮದಿಂರಚಿಸಿ

ಆ ಉದಕದೊಳಗೆ ಹಸ್ತೋದಕ

ಮಂತ್ರೋದಕ ಭಸ್ಕೋದಕವ ಮಾಡಿ,

ಆ ಮೇಲೆ ಅನಾದಿ ಮೂಲಪ್ರಣವ ಪ್ರಸಾದಪ್ರಣವದೊಳಗೆ

ಅಖಂಡಜ್ಯೋತಿಪ್ರಣವ, ಅಖಂಡಮಹಾಜ್ಯೋತಿಪ್ರಣವವ ಲಿಖಿತವಮಾಡಿ,

ಶುದ್ದಾದಿಯಾದ ಪೂರ್ಣಭಕ್ತಿಯಿಂದ

ಮಹಾಚಿದ್ಘನತೀರ್ಥವೆಂದು ಭಾವಿಸಿ

ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ

ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ,

ಮೂರು ವೇಳೆ ಪ್ರದಕ್ಷಿಣವ ಮಾಡಿ,

ಆ ಚಿದ್ಘನ ತೀರ್ಥವನು ದ್ವಾದಶದಳ ಕಮಲದ ಮಧ್ಯದಲ್ಲಿ ನೆಲೆಸಿರ್ಪ

ಇಷ್ಟ ಮಹಾಲಿಂಗ ಜಂಗಮಕ್ಕೆ

ಅಷ್ಟವಿಧಮಂತ್ರ ಸಕೀಲುಗಳಿಂದ

ಆಚಾರಾದಿ ಶೂನ್ಯಾಂತವಾದ ಅಷ್ಟವಿಧ ಲಿಂಗಧ್ಯಾನದಿಂದ


ಅಕ್ಕಮಹಾದೇವಿಯ ವಚನಗಳು

ಅಷ್ಟವಿಧ ಬಿಂದುಗಳ ಸಮರ್ಪಿಸಿದಲ್ಲಿಗೆ

ಅಷ್ಟವಿಧೋದಕವಾಗುವುದಯ್ಯಾ,

ಆ ಇಷ್ಟಮಹಾಲಿಂಗ ಜಂಗಮವೆತ್ತಿ

ಅಷ್ಟಾದಶಮಂತ್ರ ಸ್ಮರಣೆಯಿಂದ

ಮುಗಿದಲ್ಲಿಗೆ ನವಮೋದಕವಾಗುವುದಯ್ಯಾ,

ಉಳಿದೋದಕವ ತ್ರಿವಿಧ ಪ್ರಣವಧ್ಯಾನದಿಂದ

ಮುಕ್ತಾಯವ ಮಾಡಿದಲ್ಲಿಗೆ

ದಶವಿಧೋದಕವೆನಿಸುವುದಯ್ಯಾ .

ಹೀಗೆ ಮಹಾಜ್ಞಾನ ಲಿಂಗ- ಜಂಗಮಸ್ವರೂಪ ಪಾದತೀರ್ಥ

ಮುಗಿದ ಮೇಲೆ ತಟ್ಟೆ ಬಟ್ಟಲಲ್ಲಿ ಎಡೆಮಾಡಬೇಕಾದಡೆ

ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿರ್ದಡೆ


ತಾ ಸಲಿಸಿದ ಪಾದೋದಕ ಪ್ರಸಾದವ ಕೊಡುವುದಯ್ಯಾ .

ಸಹಜಲಿಂಗಭಕ್ತರಾದಡೆ
ಮುಖ ಮಜ್ಜನವ ಮಾಡಿಸಿ ತಾ ಧರಿಸುವ

ವಿಭೂತಿಧಾರಣವ ಮಾಡಿಸಿ

ಶಿವಶಿವಾ ಹರಹರ ಬಸವಲಿಂಗಾ ಎಂದು ಬೋಧಿಸಿ

ಎಡೆಮಾಡಿಸಿಕೊಂಬುವುದಯ್ಯಾ ,

ಆಮೇಲೆ ತಾನು ಸ್ವಲವಾದಡೆ ಸಂಬಂಧಪಟ್ಟು ,

ಪರಸ್ಥಲವಾದಡೆ ಚಿದ್ದನ ಇಷ್ಟಮಹಾಲಿಂಗ ಜಂಗಮವ

ವಾಮಕರಸ್ಥಲದಲ್ಲಿ ಮೂರ್ತಮಾಡಿಸಿಕೊಂಡು

ದಕ್ಷಿಣಹಸ್ತದಲ್ಲಿ ಗುರುಲಿಂಗಜಂಗಮ ಸೂತ್ರವಿಡಿದು

ಬಂದ ಕ್ರಿಯಾಭಸಿತವ ಲೇಪಿಸಿ,

ಮೂಲಪ್ರಣವ ಪ್ರಸಾದಪ್ರಣವದೊಳಗೆ

ಗೋಳಕಪ್ರಣವ ಅಖಂಡಗೋಳಕಪ್ರಣವ

ಅಖಂಡ ಮಹಾಗೋಳಕಪ್ರಣವ,

ಜ್ಯೋತಿಪ್ರಣವ ಧ್ಯಾನದಿಂದ

ದ್ವಾದಶ ಮಣಿಯ ಧ್ಯಾನಿಸಿ ಪ್ರದಕ್ಷಿಸಿ,

ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆಸ್ಪರ್ಶನವ ಮಾಡಿ,

ಬಟ್ಟಲಿಗೆ ಮೂರುವೇಳೆ ಸ್ಪರ್ಶನವ ಮಾಡಿ ,

ಪದಾರ್ಥದ ಪೂರ್ವಾಶ್ರಯವ ಕಳೆದು

ಶುದ್ಧಪ್ರಸಾದವೆಂದು ಭಾವಿಸಿ,
ಶಿವಶರಣೆಯರ ವಚನಸಂಪುಟ

ಆ ಇಷ್ಟ ಮಹಾಲಿಂಗ ಜಂಗಮಕ್ಕೆ

ಅಷ್ಟಾದಶ ಮಂತ್ರಸ್ಮರಣೆಯಿಂದ

ಮೂರುವೇಳೆರೂಪ ಸಮರ್ಪಿಸಿ, ಎರಡು ವೇಳೆರೂಪತೋರಿ,

ಚಿರಪ್ರಾಣಲಿಂಗ ಮಂತ್ರ ಜಿಹೈಯಲ್ಲಿಟ್ಟು

ಆರನೆಯ ವೇಳೆಗೆ ಭೋಜ್ಯಗಟ್ಟಿ

ಆ ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ,

ಷಧ ಲಿಂಗಲೋಲುಪ್ತಿಯಿಂದ ಸಂತೃಪ್ತನಾಗಿ ಆಚರಿಸಿದಾತನೆ

ಗುರುಭಕ್ತನಾದ ನಿಚ್ಚಪ್ರಸಾದಿಯೆಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ.

೩೬

ಅಯ್ಯಾ, ವಿರಕ್ತ ವಿರಕ್ತರೆಂದೇನೂ ?

ವಿರಕ್ತಿಯ ಮಾತನಾಡುವರಲ್ಲದೆ ವಿರಕ್ತಿಕೆ ಎಲ್ಲರಿಗೆಲ್ಲಿಯದೊ ?

ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ , ಬಾಯೊಳಗಣ ಮಾತು.

ಪುಣ್ಯವಿಲ್ಲ - ಪಾಪವಿಲ್ಲ , ಕರ್ಮವಿಲ್ಲ - ಧರ್ಮವಿಲ್ಲ ,

ಸತ್ಯವಿಲ್ಲ - ಅಸತ್ಯವಿಲ್ಲವೆಂದು ಮಾತನಾಡುತಿಪ್ಪರು.

ಅದೆಂತೆಂದಡೆ :

ಕಂಗಳ ನೋಟ ಹಿಂಗದನ್ನಕ್ಕ , ಕೈಯೊಳಗಣ ಬೆರಟು ನಿಲ್ಲದನ್ನಕ್ಕ ,

ಹೃದಯದ ಕಾಮ ಉಡುಗದನ್ನಕ್ಕ

ವಿರಕ್ತಿಕೆ ಎಲ್ಲರಿಗೆಲ್ಲಿಯದೊ ?

ಬಲ್ಲ ವಿರಕ್ತನ ಹೃದಯವುದಕದೊಳಗಣ ಗುಂಡಿನಲ್ಲಿ

ಮಾಣಿಕ್ಯದ ಪ್ರಭೆಯ ಕಂಡವರಾರೊ ?

ಕಂಡಾತಂಗೆ ಕಂಗಳಲ್ಲಿ ನೋಡಿದ ಸರ್ವವಸ್ತುಗಳು

ಆ ಲಿಂಗಕ್ಕರ್ಪಿತ.

ಆ ಲಿಂಗವ ಕಂಡಾತಂಗೆ, ಕರ್ಣದಲ್ಲಿ ಕೇಳಿದ ಆಗಮ

ಪುರಾಣಂಗಳು ಆ ಲಿಂಗಕ್ಕರ್ಪಿತ.

ಆ ಲಿಂಗವ ಕಂಡಾತಂಗೆ ಜಿಹ್ನೆಯಲ್ಲಿ ರುಚಿಸಿದ

ಪದಾರ್ಥಗಳು ಆ ಲಿಂಗಕ್ಕರ್ಪಿತ.

ಅದೆಂತೆಂದಡೆ :

ಅಂಗವೂ ಲಿಂಗವೂ ಏಕೀಭವಿಸಿದಡೆ

ಅವಂಗೆ ಪುಣ್ಯವಿಲ್ಲ - ಪಾಪವಿಲ್ಲ ,

ಕರ್ಮವಿಲ್ಲ - ಧರ್ಮವಿಲ್ಲ , ಸತ್ಯವಿಲ್ಲ - ಅಸತ್ಯವಿಲ್ಲ .

ಅದೆಂತೆಂದಡೆ :
ಅಕ್ಕಮಹಾದೇವಿಯ ವಚನಗಳು

ಬಂದುದ ಲಿಂಗಕ್ಕೆ ಕೊಟ್ಟನಾಗಿ, ಬಾರದುದ ಬಯಸನಾಗಿ,

ಅಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ

ತಾ ಮಹಾಲಿಂಗವನಪ್ಪುವನಾಗಿ,

ಅವಂಗೆ ಮುಖ ಬೇರಲ್ಲದೆ, ಆತ್ಮನೆಲ್ಲಾ ಒಂದೆ.

ಅದಕ್ಕೆ ಜಗವು ಪಾಪ ಪುಣ್ಯವೆಂದು ಮಾತನಾಡುತಿಪ್ಪರು.

ಅದೆಂತೆಂದಡೆ :

ಶಿವಂಗೆ ತಾಯಿಯಿಲ್ಲ , ಭುವನಕ್ಕೆ ಬೆಲೆಯಿಲ್ಲ .

ತರು ಗಿರಿ ಗಹ್ವರಕ್ಕೆ ಮನೆಯಿಲ್ಲ .

ಲಿಂಗವನೊಡಗೂಡಿದ ವಿರಕ್ತಂಗೆ ಪುಣ್ಯ ಪಾಪವಿಲ್ಲ ಕಾಣಾ

ಚೆನ್ನಮಲ್ಲಿಕಾರ್ಜುನಾ. || ೩೬ ||

೩೭

ಅಯ್ಯಾ , ಸದಾಚಾರ ಸದ್ಭಕ್ತಿ ಸಮ್ಮಿಯಾಸಮ್ಯಕ್‌ಜ್ಞಾನ ಸದ್ವರ್ತನೆ

ಸಗುಣ ನಿರ್ಗುಣ ನಿಜಗುಣ ಸಚ್ಚರಿತ್ರ ಸದ್ಭಾವ

ಅಕ್ರೋಧಸತ್ಯವಚನ ಶಮದಮೆ ಭವಿಭಕ್ತಭೇದ

ಸತ್ಪಾತ್ರದ್ರವ್ಯಾರ್ಪಣ ಗೌರವಬುದ್ದಿ ಲಿಂಗಲೀಯ ಜಂಗಮ

ದಶವಿಧಪಾದೋದಕ ಏಕಾದಶಪ್ರಸಾದ ಷೋಡಶಭಕ್ತಿನಿರ್ವಾಹ,

ತ್ರಿವಿಧ ಷಡ್ಯಧ ನವವಿಧ ಲಿಂಗಾರ್ಚನೆ,

ತ್ರಿವಿಧ ಷಡ್ತಿಧ ನವವಿಧ ಜಪ,

ತ್ರಿವಿಧ ಪಕ್ಷಿಧ ನವವಿಧ ಲಿಂಗಾರ್ಪಣ.

ಚಿದ್ವಿಭೂತಿ ಸ್ನಾನ ಧೂಳನ ಧಾರಣ, ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿ ಧಾರಣ,

ತಾ ಮಾಡುವ ಸತ್ಯಕಾಯಕ,

ತಾ ಬೇಡುವ ಸದ್ಭಕ್ತಿಭಿಕ್ಷ , ತಾ ಕೊಟ್ಟು ಕೊಂಬ ಭೇದ,

ತಾನಾಚರಿಸುವ ಸತ್ಯ ನಡೆನುಡಿ, ತಾ ನಿಂದ ನಿರ್ವಾಣಪದ.

ಇಂತೀ ಬತ್ತೀಸ ನೆಲೆಕಲೆಗಳ ಸದ್ಗುರುಮುಖದಿಂದರಿದ

ಬಸವ ಮೊದಲಾದ ಸಮಸ್ತ ಗಣಂಗಳೆಲ್ಲಾ ಪ್ರಮಥ

ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದರು ನೋಡಾ.

ಇಂತು ಪ್ರಮಥಗಣವಾಚರಿಸಿದ

ಸತ್ಯ ಸನ್ಮಾರ್ಗವರಿಯದಮೂಢ ಅಧಮರನೆಂತು

ಶಿವಶಕ್ತಿ ಶಿವಭಕ್ತ ಶಿವಜಂಗಮವೆಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ


ಶಿವಶರಣೆಯರ ವಚನಸಂಪುಟ

೩೮ |

ಅಯ್ಯಾ , ಸರ್ವಮೂಲಹಂಕಾರವಿಡಿದು

ಕುಲಭ್ರಮೆ ಛಲಭ್ರಮೆ ಜಾತಿಭ್ರಮೆ ,

ನಾಮ ವರ್ಣ ಆಶ್ರಮ ಮತ ಶಾಸ್ತ್ರಭ್ರಮೆ ,

ತರ್ಕಭ್ರಮೆ ರಾಜ್ಯಭ್ರಮೆ , ಧನ ಧಾನ್ಯ ಪುತ್ರ ಮಿತ್ರಭ್ರಮೆ ,

ಐಶ್ವರ್ಯ ತ್ಯಾಗ ಭೋಗಯೋಗಭ್ರಮೆ ,

ಕಾಯ ಕರಣ ವಿಷಯಭ್ರಮೆ


ಧಮ್ರ ,,

ವಾಯು ಮನ ಭಾವ ಜೀವ ಮೋಹಭ್ರಮೆ ,

ನಾಹಂಕೋಹಂಸೋಹಂ ಮಾಯಾಭ್ರಮೆ ಮೊದಲಾದ

ಬತ್ತೀಸ ಪಾಶಭ್ರಮಿತರಾಗಿ ತೊಳಲುವ ವೇಷಧಾರಿಗಳ ಕಂಡು

ಶಿವಶಕ್ತಿ ಶಿವಭಕ್ತ ಶಿವಪ್ರಸಾದಿ ಶಿವಶರಣ ಶಿವೈಕ್ಯ

ಶಿವಜಂಗಮವೆಂದು ನುಡಿಯಲಾರದೆ ಎನ್ನ ಮನ ನಾಚಿ

|| ೩೮ ||
ನಿಮ್ಮಡಿಗಭಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ

- ೩೯

ಅರಲುಗೊಂಡ ಕೆರೆಗೆ ತೊರೆಬಂದು ಹಾಯ್ದಂತಾಯಿತ್ತು.

ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾಇಂದೆನಗೆ.

ಇಹದ ಸುಖ ಪರದ ಗತಿ ನಡೆದು ಬಂದಂತಾಯಿತ್ತು ನೋಡಾಎನಗೆ.

ಚೆನ್ನಮಲ್ಲಿಕಾರ್ಜುನಯ್ಯಾ ,

ಗುರುಪಾದವ ಕಂಡು ಧನ್ಯಳಾದೆ ನೋಡಾ | ೩೯ ||

ಅರಸಿ ತೊಳಲಿದಡಿಲ್ಲ , ಹರಸಿ ಬಳಲಿದಡಿಲ್ಲ ,

ಬಯಸಿ ಹೊಕ್ಕಡಿಲ್ಲ , ತಪಸ್ಸು ಮಾಡಿದಡಿಲ್ಲ .

ಅದು ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು.

ಶಿವನೊಲಿದಲ್ಲದೆಕೈಗೂಡದು.

ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ
|| ೪೦ ||
ನಾನು ಸಂಗನಬಸವಣ್ಣನಶ್ರೀಪಾದವ ಕಂಡು ಬದುಕಿದೆನು.

- ೪೧

ಅರಸಿ ಮೊರೆವೊಕ್ಕಡೆಕಾವ ಗುರುವೆ,

ಜಯ ಜಯ ಗುರುವೆ,
೧೭
ಅಕ್ಕಮಹಾದೇವಿಯ ವಚನಗಳು

ಆರೂ ಅರಿಯದ ಬಯಲೊಳಗೆ ಬಯಲಾಗಿ ನಿಂದ ನಿಲವ

ಹಿಡಿದೆನ್ನ ಕರದಲ್ಲಿ ತೋರಿದ ಗುರುವೆ,


|| ೪೦ ||
ಚೆನ್ನಮಲ್ಲಿಕಾರ್ಜುನ ಗುರುವೆ, ಜಯ ಜಯ ಗುರುವೆ.

ಅರಿದೆನೆಂದಡೆಅರಿಯಬಾರದುನೋಡಾ.

ಘನಕ್ಕೆ ಘನ ತಾನೆ ನೋಡಾ.

ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆಸೋತೆನು. || ೪೨ ||

೪೩

ಅರಿಯದವರೊಡನೆ ಸಂಗವ ಮಾಡಿದಡೆ

ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ.


ಬಲ್ಲವರೊಡನೆ ಸಂಗವ ಮಾಡಿದಡೆ

ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.

ಚೆನ್ನಮಲ್ಲಿಕಾರ್ಜುನಯ್ಯಾ , ನಿಮ್ಮ ಶರಣರ ಸಂಗವ ಮಾಡಿದಡೆ

ಕರ್ಪುರದ ಗಿರಿಯನುರಿಕೊಂಬಂತೆ. || ೪೩ ||

ပုပ္ပ

ಅರಿವು ಸಾಧ್ಯವಾಯಿತ್ತೆಂದು,

ಗುರುಲಿಂಗಜಂಗಮವ ಬಿಡಬಹುದೆ ?

ಸಂದು ಸಂಶಯವಳಿದು ಅಖಂಡ ಜ್ಞಾನವಾಯಿತ್ತೆಂದು

ಪರಧನ ಪರಸ್ತ್ರೀಯರುಗಳಿಗೆ ಅಳುಪಬಹುದೆ ?

' ಯತ್ರ ಜೀವಃತತ್ರ ಶಿವ ಎಂಬ ಅಭಿನ್ನ ಜ್ಞಾನವಾಯಿತ್ತೆಂದು

ಶುನಕ ಸೂಕರ ಕುಕ್ಕುಟ ಮಾರ್ಜಾಲಂಗಳ ಕೂಡೆ ಭುಂಜಿಸಬಹುದೆ ?

ಭಾವದಲ್ಲಿ ತನ್ನ ನಿಜದ ನೆಲೆಯನರಿತಿಹುದು;

ಸುಜ್ಞಾನ ಸಮ್ಮಿಯಾ ಸುನೀತಿ ಮಾರ್ಗದಲ್ಲಿ ವರ್ತಿಸುವುದು.

ಹೀಂಗಲ್ಲದೆ ಜ್ಞಾನವಾಯಿತ್ತೆಂದು ತನ್ನ ಮನಕ್ಕೆ ಬಂದಹಾಂಗೆ


ಮೀರಿನುಡಿದು ನಡೆದೆನಾದಡೆ

ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನ

೪೫

ಅರಿಸಿನವನೆ ಮಿಂದು, ಹೊಂದೊಡಿಗೆಯನೆತೊಟ್ಟು,

ದೇವಾಂಗವನುಟ್ಟೆನೆಲೆ ಪುರುಷ ಬಾರಾ,


೧೮
ಶಿವಶರಣೆಯರ ವಚನಸಂಪುಟ

ಪುರುಷ ರತ್ನವೆ ಬಾರಾ.

ನಿನ್ನ ಬರವೆನ್ನ ಅಸುವಿನ ಬರವಾದುದೀಗ,

ಬಾರಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ ,

ನೀನು ಬಂದಹನೆಂದು ಬಟ್ಟೆಯ ನೋಡಿ ಬಾಯಾರುತಿರ್ದೆನು.


|| ೪೫ ||

ಅರ್ಥಸನ್ಯಾಸಿಯಾದಡೇನಯ್ಯಾ ,

ಆವಂಗದಿಂದ ಬಂದಡೂ ಕೊಳದಿರಬೇಕು.

ರುಚಿಸನ್ಯಾಸಿಯಾದಡೇನಯ್ಯಾ,

ಜಿಹೈಯ ಕೊನೆಯಲ್ಲಿ ಮಧುರವನರಿಯದಿರಬೇಕು.

ಸ್ತ್ರೀ ಸನ್ಯಾಸಿಯಾದಡೇನಯ್ಯಾ ,

ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.

ದಿಗಂಬರಿಯಾದಡೇನಯ್ಯಾ ,

ಮನ ಬತ್ತಲೆ ಇರಬೇಕು.

ಇಂತೀ ಚತುರ್ವಿಧದ ಹೊಲಬರಿಯದೆ ವೃಥಾ ಕೆಟ್ಟರು

ಕಾಣಾ ಚೆನ್ನಮಲ್ಲಿಕಾರ್ಜುನಾ. || ೪೬ ||

೪೭

ಅಲ್ಲದವರೊಡನಾಡಿ ಎಲ್ಲಾ ಸಂಗವ ತೊರೆದೆ ನಾನು.

ನಾರಿ ಸಂಗವತೊರೆದೆ, ನೀರ ಹೊಳೆಯ ತೊರೆದೆ ನಾನು.

ಎನ್ನ ಮನದೊಡೆಯ ಚೆನ್ನಮಲ್ಲಿಕಾರ್ಜುನನಕೂಡುವ ಭರದಿಂದ

ಎಲ್ಲಾ ಸಂಗವ ತೊರೆದೆ ನಾನು. || ೪೭ ||

೪೮

ಅಲ್ಲೆಂದಡೆ ಉಂಟೆಂಬುದೀ ಮಾಯೆ ;

ಒಲ್ಲೆನೆಂದಡೆ ಬಿಡದೀ ಮಾಯೆ ; ಎನಗಿದು ವಿಧಿಯೆ !

ಚೆನ್ನಮಲ್ಲಿಕಾರ್ಜುನಯ್ಯಾ ,

ಒಪ್ಪಿ ಮರೆವೊಕ್ಕಡೆ ಮತ್ತುಂಟೆ ?

ಕಾಯಮ್ಮಾ ಶಿವಧೋ ! * || ೪೮ ||

೪೯

ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ ಜನಿಸಿ,

ಕೂರುವ ದಿಗುದಂತಿ ದಿಗುವಳಯವ ನುಂಗಿ ,


ಅಕ್ಕಮಹಾದೇವಿಯ ವಚನಗಳು

ನಿಜಶೂನ್ಯ ತಾನಾದ ಬಳಿಕ ,

ತನ್ನ ತಾನರಿದ ನಿಜಪದ ಭಿನ್ನಯೋಗಕ್ಕೆ ಬಹುದೆ ?

ಕಂಗಳ ನೋಟದಲ್ಲಿ ಮನದ ಸೊಗಸಿನಲ್ಲಿ ,

ಅನಂಗನ ದಾಳಿಯನಗಲಿದೆನಣ್ಣಾ.

ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಯೊಳಗಹುದೆ ?

ಎನ್ನದೇವ ಚೆನ್ನಮಲ್ಲಿಕಾರ್ಜುನನಲ್ಲದೆ

ಪರಪುರುಷರು ನಮಗಾಗದಣ್ಣಾ . | ೪೯ ||

೫೦

ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ ?

ನೀನು ಬಹಿರಂಗವ್ಯವಹಾರದೂರಸ್ಥನು.

ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ ?

ನೀನುವಾನಕ್ಕತೀತನು.

ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ ?

ನೀನು ನಾದಾತೀತನು.

ಭಾವಜ್ಞಾನದಿಂದ ಒಲಿಸುವೆನೆ ಅಯ್ಯಾ ?


ನೀನು ಮತಿಗತೀತನು.

ಹೃದಯ ಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ ?

ನೀನು ಸರ್ವಾಂಗ ಪರಿಪೂರ್ಣನು.

ಒಲಿಸಲೆನ್ನಳವಲ್ಲ ; ನೀನೊಲಿವುದೆ ಸುಖವಯ್ಯಾ

ಚೆನ್ನಮಲ್ಲಿಕಾರ್ಜುನಯ್ಯಾ . | ೫೦ ||

೫೧

ಅಸನದಿಂದ ಕುದಿದು,

ವ್ಯಸನದಿಂದ ಬೆಂದು,

ಅತಿ ಆಸೆಯಿಂದ ಬಳಲಿ ,

ವಿಷಯಕ್ಕೆ ಹರಿವ ಜೀವಿಗಳು ನಿಮ್ಮನರಿಯರು.

ಕಾಲಕಲ್ಪಿತ ಪ್ರಳಯ ಜೀವಿಗಳೆಲ್ಲ

ನಿಮ್ಮನೆತ್ತ ಬಲ್ಲರಯ್ಯ ಚೆನ್ನಮಲ್ಲಿಕಾರ್ಜುನಾ ? || ೩೧ ||

ಅಳಿಸಂಕುಲವೆ, ಮಾಮರವೆ, ಬೆಳುದಿಂಗಳೆ, ಕೋಗಿಲೆಯೆ

ನಿಮ್ಮನೆಲ್ಲರನೂ ಒಂದ ಬೇಡುವೆನು .


ಶಿವಶರಣೆಯರ ವಚನಸಂಪುಟ

ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವಕಂಡಡೆ

ಕರೆದು ತೋರಿದೆ.

೫೩

ಆಕಾರವಿಲ್ಲದ ನಿರಾಕಾರ ಲಿಂಗವ

ಕೈಯಲ್ಲಿ ಹಿಡಿದು ಕಟ್ಟಿದೆವೆಂಬರು ಅಜ್ಞಾನಿ ಜೀವಿಗಳು.

ಹರಿಬ್ರಹ್ಮರು ವೇದ ಪುರಾಣ ಆಗಮಂಗಳು

ಅರಸಿ ಕಾಣದ ಲಿಂಗ,

ಭಕ್ತಿಗೆ ಫಲವಲ್ಲದೆ ಲಿಂಗವಿಲ್ಲ .

ಕರ್ಮಕ್ಕೆ ನರಕವಲ್ಲದೆ ಲಿಂಗವಿಲ್ಲ .

ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ .

ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ .

ಇದು ಕಾರಣ ತನ್ನ ತಾನರಿದು ತಾನಾದಡೆ

ಚೆನ್ನಮಲ್ಲಿಕಾರ್ಜುನ ತಾನೆ ಬೇರಿಲ್ಲ . || ೩ ||

೫೪

ಆಡಬಹುದು ಪಾಡಬಹುದಲ್ಲದೆ

ನುಡಿದಂತೆ ನಡೆಯಬಾರದು ಎಲೆ ತಂದೆ.

ಲಿಂಗಕ್ಕೆ ಶರಣೆನ್ನಬಹುದಲ್ಲದೆ

ಜಂಗಮಕ್ಕೆ ಶರಣೆನ್ನಬಾರದೆಲೆ ತಂದೆ.

ಚೆನ್ನಮಲ್ಲಿಕಾರ್ಜುನದೇವಾ,

ನಿಮ್ಮ ಶರಣರು ನುಡಿದಂತೆ ನಡೆಯಬಲ್ಲರು ಎಲೆ ತಂದೆ. || ೫೪ ||

ಆಡುವುದು ಹಾಡುವುದು ಹೇಳುವುದು ಕೇಳುವುದು

ನಡೆವುದು ನುಡಿವುದು

ಸರಸ ಸಮ್ಮೇಳವಾಗಿಪ್ಪುದಯ್ಯಾ ಶರಣರೊಡನೆ.

ಚೆನ್ನಮಲ್ಲಿಕಾರ್ಜುನಯ್ಯಾ , ನೀ ಕೊಟ್ಟ ಆಯುಷ್ಯವುಳ್ಳನ್ನಕ್ಕರ


;

ಲಿಂಗಸುಖಿಗಳ ಸಂಗದಲ್ಲಿ ದಿನಗಳ ಕಳೆವೆನು. || ೫೫ ||

೫೬

ಆತುರದ ಧ್ಯಾನದಿಂದ ಧಾವತಿಗೊಂಡೆ,

ಜ್ಯೋತಿರ್ಲಿಂಗವ ಕಾಣಿಸಬಾರದು.
ಅಕ್ಕಮಹಾದೇವಿಯ ವಚನಗಳು

ಮಾತಿನ ಮಾಲೆಗೆ ಸಿಲುಕುವನಲ್ಲ ;

ಧಾತುಗೆಡಿಸಿ ಮನವನೋಡಿಕಾಡುವನು.

ಆತುಮನಂತರ ಪರವನರಿದಡೆ ಆತನೆ ಯೋಗಿ;

ಆತನ ಪಾದಕ್ಕೆ ಶರಣೆಂಬೆನಯ್ಯಾ


Il೫೬||
ಚೆನ್ನಮಲ್ಲಿಕಾರ್ಜುನಾ.

- ೫೭

ಆದಿ ಅನಾದಿಗಳಿಂದyಲಯ್ಯಾ ಬಸವಣ್ಣನು.

ಮೂದೇವರ ಮೂಲಸ್ಥಾನವಯ್ಯಾ ಬಸವಣ್ಣನು.

ನಾದ ಬಿಂದು ಕಳಾತೀತ ಆದಿ ನಿರಂಜನನಯ್ಯಾ ಬಸವಣ್ಣನು.

ಆ ನಾದಸ್ವರೂಪೇ ಬಸವಣ್ಣನಾದ ಕಾರಣ ,

ಆ ಬಸವಣ್ಣನಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು

ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ. || ೫೭ ||

- ೫೮

ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ

ವಾಯಕ್ಕೆ ಪರಬ್ರಹ್ಮವ ನುಡಿವ


ವಾಯುಪ್ರಾಣಿಗಳವರೆತ್ತ ಬಲ್ಲರೋ ,

ಆ ಪರಬ್ರಹ್ಮದ ನಿಜದ ನಿಲವ ?


ಅದೆಂತೆಂದಡೆ :

ಆದಿಯೆ ದೇಹ, ಅನಾದಿಯೆ ನಿರ್ದೆಹ,


ಆದಿಯೆ ಸಕಲ, ಅನಾದಿಯೆ ನಿಷ್ಕಲ,

ಆದಿಯೆ ಜಡ, ಅನಾದಿಯೆ ಅಜಡ.

ಆದಿಯೆ ಕಾಯ , ಅನಾದಿಯೆ ಪ್ರಾಣ.

ಈ ಎರಡರ ಯೋಗವ ಭೇದಿಸಿ

ತನ್ನಿಂದ ತಾನೆ ತಿಳಿದು ನೋಡಲು,

ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ .

ದಶವಿಧೇಂದ್ರಿಯಂಗಳು ನಾನಲ್ಲ , ದಶವಾಯುಗಳು ನಾನಲ್ಲ .

ಅಷ್ಟಮದಂಗಳು, ಸಪ್ತವ್ಯಸನಂಗಳು,

ಅರಿಷಡ್ವರ್ಗಗಳು , ಷಡೂರ್ಮಿಗಳು, ಷಷ್ಪಮೆಗಳು,

ಷಡ್ವಾವವಿಕಾರಂಗಳು , ಷಟ್ಕರ್ಮಂಗಳು, ಷಡ್ತಾತುಗಳು,


ಶಿವಶರಣೆಯರ ವಚನಸಂಪುಟ

ತನುತ್ರಯಂಗಳು, ಜೀವತ್ರಯಂಗಳು,

ಮಲತ್ರಯಂಗಳು , ಮನತ್ರಯಂಗಳು,

ಗುಣತ್ರಯಂಗಳು, ಭಾವತ್ರಯಂಗಳು , ... ..

ತಾಪತ್ರಯಂಗಳು , ಅಂತಃಕರಣಂಗಳು

ಇಂತಿವಾದಿಯಾಗಿತೋರುವ ತೋರಿಕೆಯೇನೂ

ನಾನಲ್ಲ , ನನ್ನವಲ್ಲ .

ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು

ನಾನಿವರಾಧೀನದವನಲ್ಲ .

ನಾನು ತೂರ್ಯತೂರ್ಯಾತೀತವಪ್ಪ

ಸತ್ತು ಚಿತ್ಯಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ ,

ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು

ನಿರಾಳದಲ್ಲಿ ನಿಜವನೈದಲರಿಯದೆ

ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು,

ಇಂತೀ ತತ್ವದಾದಿ ತಾನೆಂತೆನಲು :

ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ

ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ

ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು .

ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು .

ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು .

ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು .

ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ .

ಆ ಪಂಚಾಕ್ಷರಿಯಿಂದವೆ ಪಂಚಕಲೆಗಳು .

ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ದಿ ಚಿತ್ರ

ಅಹಂಕಾರಗಳು ,

ಆ ಜ್ಞಾನ ಮನ ಬುದ್ದಿ ಚಿತ್ತ ಅಹಂಕಾರಗಳಿಂದವೆ

ಪಂಚತನ್ಮಾತ್ರಂಗಳು .

ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳು .

ಆ ಪಂಚಭೂತಂಗಳೇ ಪಂಚೀಕರಣವನೆ

ಆತ್ಮಂಗೆ ಅಂಗವಾಯಿತ್ತು .

ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು

ಪ್ರತ್ಯಂಗವೆಂದೆನಿಸಿತ್ತು .
ಅಕ್ಕಮಹಾದೇವಿಯ ವಚನಗಳು

ಇಂತು ದೇಹ ಸಂಬಂಧಮಂ

ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ,

ಆ ಸಂಬಂಧಿಸಿದ ಕಾಯದಪೂರ್ವಾಶ್ರಯವು

ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ

ಆ ಕಾಯದ ಪೂರ್ವಾಶ್ರಯವನಳಿದು

ಮಹಾ ಘನಲಿಂಗವ ವೇಧಿಸಿ ಕೊಟ್ಟು,

ಶಿವ ತಾನೆ ಗುರುವಾಗಿ ಬಂದು

ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ :

ಆತ್ಮ ಗೂಡಿ ಪಂಚಭೂತಂಗಳನೆಷಧಅಂಗವೆಂದೆನಿಸಿ,

ಆ ಅಂಗಕ್ಕೆ ಆ ಕಲೆಗಳನೆ ಷಧ ಶಕ್ತಿಗಳೆಂದೆನಿಸಿ,

ಆ ಶಕ್ತಿಗಳಿಗೆ ಪಕ್ಷಿಧ ಭಕ್ತಿಯನಳವಡಿಸಿ,

ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ದಿ ಚಿತ್ತ ಅಹಂಕಾರಂಗಳನೆ

ಷಡ್ತಿಧ ಹಸ್ತಂಗಳೆಂದೆನಿಸಿ,

ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ

ಪಂಚಲಿಂಗಗಳನೆ ಪಕ್ಷಿಧ ಲಿಂಗಂಗಳೆಂದೆನಿಸಿ,

ಆ ಮುಖಂಗಳಿಗೆ ತನ್ಮಾತ್ರಂಗಳನ ದ್ರವ್ಯಪದಾರ್ಥಗಳೆಂದೆನಿಸಿ,

ಆ ದ್ರವ್ಯಪದಾರ್ಥಗಳು ಆಯಾಯ ಮುಖದ ಲಿಂಗಂಗಳಲ್ಲಿ

ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಳೊಡನೆ.

ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು

ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ

ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ದ ಪ್ರಸಾದ,

ಜಂಗಮದಲ್ಲಿ ಪ್ರಸಿದ್ದ ಪ್ರಸಾದ.

ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ,

ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ

ಜ್ಞಾನಿಯಲ್ಲ , ಅಜ್ಞಾನಿ ಮುನ್ನವೇ ಅಲ್ಲ .

ಶೂನ್ಯನಲ್ಲ , ನಿಃಶೂನ್ಯ ಮುನ್ನವೇ ಅಲ್ಲ .

ದ್ವೀತಿಯಲ್ಲ ,ಅತಿ ಮುನ್ನವೇ ಅಲ್ಲ .

ಇಂತೀ ಉಭಯಾತ್ಮಕ ತಾನೆಯಾಗಿ !

ಇದು ಕಾರಣ, ಇದರ ಆಗು-ಹೋಗುಸಕೀಲಸಂಬಂಧವ

ಚೆನ್ನಮಲ್ಲಿಕಾರ್ಜುನಯ್ಯಾ , ನಿಮ್ಮ ಶರಣರೇ || ೧೮ ||


ಬಲ್ಲರು.
ಶಿವಶರಣೆಯರ ವಚನಸಂಪುಟ

೫೯

ಆದಿ ಅನಾದಿಯೆನ್ನದೆ ಬಸವಣ್ಣ ಗಣಮೇಳಾಪವಾಗಿದೆ .

ಅನಂತ ಯುಗಂಗಳಲ್ಲಿಯೂ ಸಕಲ ಲೋಕದೊಳು

ಚರಿಸುತ್ತಿಪ್ಪ ಸುಳುಹನರಿಯದೆ

ಸಕಲ ನಿಃಕಲರೆಲ್ಲ ಭ್ರಮೆಗೊಂಡು ಬೀಳುತ್ತೇಳುತ್ತಿರ್ದರು,

ಇವರೆಲ್ಲರ ಮುಂದೆ ಆ ಗಣಂಗಳ ನಾನರಿದು ಬದುಕಿದೆನು

ಕಾಣಾ ಶ್ರೀಶೈಲಚೆನ್ನಮಲ್ಲಿಕಾರ್ಜುನಾ.

೬೦

ಆಧಾರ ಸ್ವಾಧಿಷ್ಠಾನ ಮಣಿಪೂರಕ

ವಿಶುದ್ದಿ ಆಜ್ಞೆಯವ ನುಡಿದಡೇನು ?

ಆದಿ. ಅನಾದಿಯ ಸುದ್ದಿಯ

ಕೇಳಿದಡೇನು ಹೇಳಿದಡೇನು ?

ತನ್ನಲ್ಲಿದ್ದುದ ತಾನರಿಯದನ್ನಕ್ಕರ.

ಉನ್ಮನಿಯ ರಭಸದ ಮನ ಪವನದ ಮೇಲೆ

ಚೆನ್ನಮಲ್ಲಿಕಾರ್ಜುನಯ್ಯನಭೇದಿಸಲರಿಯರು.
- || ೬೦ ||

ಆನು ನೊಂದೆನಯ್ಯಾ , ಆನು ಬೆಂದೆನಯ್ಯಾ ,

ಆನು ಬೆಂದ ಬೇಗೆಯನರಿಯದೆಕೆಟ್ಟೆನಯ್ಯಾ ,

ಆನು ಕೆಟ್ಟ ಕೇಡನೇನೆಂದು ಹವಣಿಸುವೆನಯ್ಯಾ ?

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ ಶರಣರ ನೋವಕಂಡು ಆನು ಬೆಂದೆನಯ್ಯಾ . - || ೬೧ ||

ಆಯತ ಸ್ವಾಯತ ಅನುಭಾವವ ನಾನೆತ್ತ ಬಲ್ಲೆನಯ್ಯಾ ?

ಗುರು ಲಿಂಗ ಜಂಗಮಕ್ಕೆ ಅರ್ಥಪ್ರಾಣಾಭಿಮಾನವಂ ಸಮರ್ಪಿಸಿ,

ಅಹಂಕಾರವಳಿದಿಹಂತಹ ಪುರಾತನರ ಮನೆಯಲ್ಲಿ

ನೃತ್ಯರ ನೃತ್ಯಳಾಗಿಪ್ಪೆನಯ್ಯಾ ,

ಇದು ಕಾರಣ , ಚೆನ್ನಮಲ್ಲಿಕಾರ್ಜುನಯ್ಯನ


|| ೬೨ ||
ಗಣಂಗಳಲ್ಲದವ ನಾನರಿಯೆನಯ್ಯಾ ,
೨ .
ಅಕ್ಕಮಹಾದೇವಿಯ ವಚನಗಳು

ಆಯುಷ್ಯ ಹೋಗುತ್ತಿದೆ, ಭವಿಷ್ಯ ತೊಲಗುತ್ತಿದೆ,

ಕೂಡಿರ್ದ ಸತಿಸುತರು ತಮತಮಗೆ ಹರಿದು ಹೋಗುತ್ತೆದಾರೆ;

ಬೇಡ ಬೇಡವೆಲೆ ಬಂಜೆಯಾಗಿ ಕೆಡಬೇಡ ಬಯಲಿಂಗೆ ಮನವೆ,

ಚೆನ್ನಮಲ್ಲಿಕಾರ್ಜುನನ ಶರಣರ ಸಂಗದಲ್ಲಿ ,

ಹೂಣಿ ಹೊಕ್ಕು ಬದುಕು ಕಂಡಾ, ಮನವೆ. || ೬೩ ||

ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಕಂಡೆಯಾ ?

ಏನ ಮಾಡಿದಡೂ ಆನಂಜುವಳಲ್ಲ .

ತರಗೆಲೆಯ ಮೆಲಿದು ಆನಿಹೆನು,

ಸರಿಯ ಮೇಲೊರಗಿ ಆನಿಹೆನು.

ಚೆನ್ನಮಲ್ಲಿಕಾರ್ಜುನಯ್ಯಾ , ಕರ ಕೇಡನೊಡ್ಡಿದಡೆ

ಒಡಲನು ಪ್ರಾಣವನ್ನು ನಿಮಗರ್ಪಿಸಿ ಶುದ್ಧಳಹೆನು. || ೬೪ ||

ಆಲಿಸೆನ್ನ ಬಿನ್ನಪವ, ಲಾಲಿಸೆನ್ನ ಬಿನ್ನಪವ, ಪಾಲಿಸೆನ್ನ ಬಿನ್ನಪವ.

ಏಕೆನ್ನ ಮೊರೆಯ ಕೇಳೆಯಯ್ಯಾ ತಂದೆ

ನೀನಲ್ಲದೆ ಮತ್ತಿಲ್ಲ ಮತ್ತಿಲ್ಲ .

ನೀನೆ ಎನಗೆ ಗತಿ, ನೀನೆ ಎನಗೆ ಮತಿಯಯ್ಯಾ,

ಚೆನ್ನಮಲ್ಲಿಕಾರ್ಜುನಯ್ಯಾ . || ೬೫ ||

೬೬

ಆವ ವಿದ್ಯೆಯ ಕಲಿತಡೇನು ?

ಸಾವ ವಿದ್ಯೆ ಬೆನ್ನ ಬಿಡದು.

ಅಶನವ ತೊರದಡೇನು, ವ್ಯಸನವ ಮರೆದಡೇನು ?

ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು ?

ಚೆನ್ನಮಲ್ಲಿಕಾರ್ಜುನದೇವಯ್ಯಾ ,

ನೆಲ ತಳವಾರನಾದಡೆ ಕಳ್ಳನೆಲ್ಲಿಗೆಹೋಹನು ? || ೬೬ ||

೬೭

ಆವಾಗಳೂ ಎನ್ನ ಮನ ಉದರಕ್ಕೆ ಹರಿವುದು.

ಕಾಣಲಾರೆನಯ್ಯಾ ನಿಮ್ಮುವನು, ಭೇದಿಸಲರಿಯೆ .


ಶಿವಶರಣೆಯರ ವಚನಸಂಪುಟ

ಮಾಯದ ಸಂಸಾರದಲ್ಲಿ ಸಿಲುಕಿದೆನು .

ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ ಹೊದ್ದುವಂತೆ ಮಾಡಾ, ನಿಮ್ಮ ಧರ್ಮ. ಅದು


|| ೬೭ ||

೬೮

ಆಶೆಯಾಮಿಷವಳಿದು, ಹುಸಿ ವಿಷಯಂಗಳೆಲ್ಲ ಹಿಂಗಿ,

ಸಂಶಯ ಸಂಬಂಧ ವಿಸಂಬಂಧವಾಯಿತ್ತು ನೋಡಾ.

ಎನ್ನ ಮನದೊಳಗೆ ಘನಪರಿಣಾಮವ ಕಂಡು

ಮನ ಮಗ್ನವಾಯಿತ್ತಯ್ಯಾ,

ಚೆನ್ನಮಲ್ಲಿಕಾರ್ಜುನಾ,

ನಿಮ್ಮ ಶರಣ ಪ್ರಭುದೇವರ ಕರುಣದಿಂದ ಬದುಕಿದೆನಯ್ಯಾ


|| ೬೮
. ||

ಆಹಾರವ ಕಿರಿದು ಮಾಡಿರಣ್ಣಾ , ಆಹಾರವ ಕಿರಿದು ಮಾಡಿ.

ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ .

ಆಹಾರದಿಂ ನಿದ್ರೆ, ನಿದ್ರೆಯಿಂ ತಾಮಸ, ಅಜ್ಞಾನ, ಮೈಮರಹು,

ಅಜ್ಞಾನದಿಂ ಕಾಮವಿಕಾರ ಹೆಚ್ಚಿ,

ಕಾಯವಿಕಾರ, ಮನೋವಿಕಾರ, ಇಂದ್ರಿಯವಿಕಾರ ,

ಭಾವವಿಕಾರ, ವಾಯುವಿಕಾರವನುಂಟುಮಾಡಿ,

ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿಪೋಷಣ ಬೇಡ.

ಅತಿ ಪೋಷಣೆ ಮೃತ್ಯುವೆಂದುದು.

ಜಪ ತಪ ಧ್ಯಾನ ಧಾರಣ ಪೂಜೆಗೆ ಸೂಕ್ಷ್ಮದಿಂತನುಮಾತ್ರವಿದ್ದರೆ ಸಾಲದ

ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು.

ತನು ಪೋಷಣೆಯಿಂದ ತಾಮಸ ಹೆಚ್ಚಿ, ಅಜ್ಞಾನದಿಂ ವಿರಕ್ತಿ ಹಾನಿ ,

ಅರಿವು ನಷ್ಟ , ಪರವು ದೂರ, ನಿರಕೆ ನಿಲವಿಲ್ಲದ ಕಾರಣ ,

ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯುವ

ಕೆಡಿಸದೆ ಉಳಿಸಿಕೊಳ್ಳಿರಯ್ಯಾ , || ೬೯ ||

- ೭೦

ಆಳುತನದ ಮಾತನಾಡದಿರಲಿ

ಮೇಲೆಕಾರ್ಯದಿಮ್ಮಿತ್ತಣ್ಣಾ. .

ಅಲಗಿನ ಮೊನೆಯ ಧಾರೆ ಮಿಂಚುವಾಗ


ಅಕ್ಕಮಹಾದೇವಿಯ ವಚನಗಳು

ಕೋಡದೆ ಕೊಂಕದ ನಿಲಬೇಕಯ್ಯ .

ಬಂಟ ಬೆಟ್ಟ ಭಕ್ತಿಯೊಂದೆ ಕಂಡಯ್ಯ .


|| ೭೦ ||
ಚೆನ್ನಮಲ್ಲಿಕಾರ್ಜುನನಂತಲ್ಲದೋಲ್ಲ.

- ೭೧

ಆಳುತನದ ಮಾತನೇರಿಸಿ ನುಡಿದಡೆ

ಆಗಳೆ ಕಟ್ಟಿದೆನು ಗಂಡುಗಚ್ಚೆಯ .

ತಿಗುರವೇರಿಸಿ ತಿಲಕವನಿಟ್ಟು
AVAGSS
ಕೃದುವ ಕೊಂಡು ಕಳನೇರಿದ ಬಳಿಕ,

ಕಟ್ಟಿದ ನಿರಿ ಸಡಿಲಿದಡೆ ಇನ್ನು ನಿಮ್ಮಾಣೆ,

ಕಾಣಾ ಚೆನ್ನಮಲ್ಲಿಕಾರ್ಜುನಾ. - || ೭೧ ||

ಇಂದ್ರನೀಲದ ಗಿರಿಯನೇರಿಕೊಂಡು

ಚಂದ್ರಕಾಂತದ ಶಿಲೆಯನಪ್ಪಿಕೊಂಡು

ಕೂಂಬ ಬಾರಿಸುತ್ತೆ ಎಂದಿಪ್ಪೆ ಶಿವನೆ ?

ನಿಮ್ಮ ನೆನೆವುತ್ತ ಎಂದಿಪ್ಪನೊ ?

ಅಂಗಭಂಗ ಮನಭಂಗವಳಿದು

ನಿಮ್ಮನಂದಿಂಗೊಮ್ಮೆ ನೆರೆವೆನಯ್ಯಾ ಚೆನ್ನಮಲ್ಲಿಕಾರ್ಜುನಾ


|| ೭೨ ||

ಇಂದ್ರಿಯವ ಬಿಟ್ಟು ಕಾಯವಿರದು;

ಕಾಯವ ಬಿಟ್ಟು ಇಂದ್ರಿಯವಿರದು.

ಎಂತು ನಿಃಕಾಮಿಯೆಂಬೆ , ಎಂತು ನಿರ್ದೋಷಿಯೆಂಬೆ ?

ನೀನೊಲಿದಡೆ ಸಖಿಯಾಗಿಪ್ಪೆ ,

ನೀನೊಲ್ಲದಿರೆ ದುಃಖಿಯಾಗಿಪ್ಪೆನಯ್ಯಾ ,

ಚೆನ್ನಮಲ್ಲಿಕಾರ್ಜುನಾ. || ೭೩ ||

ಇಂದೆನ್ನ ಮನೆಗೆ ಒಡೆಯರು ಬಂದಡೆ

ತನುವೆಂಬ ಕಳಶದಲುದಕವ ತುಂಬಿ,

ಕಂಗಳಸೋನೆಯೊಡನೆ ಪಾದಾರ್ಚನೆಯ ಮಾಡುವೆ.

ನಿತ್ಯ ಶಾಂತಿಯೆಂಬ ಶೈತ್ಯದೊಡನೆ ಸುಗಂಧವ ಪೂಸುವೆ.


೨೮
ಶಿವಶರಣೆಯರ ವಚನಸಂಪುಟ

ಅಕ್ಷಯ ಸಂಪದವೆಂದರಿದು ಅಕ್ಷತೆಯನೇರಿಸುವೆ.

ಹೃದಯಕಮಲ ಪುಷ್ಪದೊಡನೆ ಪೂಜೆಯ ಮಾಡುವೆ.

ಸದ್ಭಾವನೆಯೊಡನೆ ಧೂಪವ ಬೀಸುವೆ.

ಶಿವಜ್ಞಾನ ಪ್ರಕಾಶದೊಡನೆ ಮಂಗಳಾರತಿಯನೆತ್ತುವೆ.

ನಿತ್ಯತೃಪ್ತಿಯೊಡನೆ ನೈವೇದ್ಯವ ಕೈಕೊಳಿಸುವೆ.

ಪರಿಣಾಮದೊಡನೆ ಕರ್ಪೂರ ವೀಳೆಯವಕೊಡುವೆ.

ಪಂಚಬ್ರಹ್ಮದೊಡನೆ ಪಂಚಮಹಾವಾದ್ಯವ ಕೇಳಿಸುವೆ.

ಹರುಷದೊಡನೆನೋಡುವೆ,

ಆನಂದದೊಡನೆ ಕುಣಿಕುಣಿದಾಡುವೆ,

ಪರವಶದೊಡನೆ ಹಾಡುವೆ, ಭಕ್ತಿಯೊಡನೆ ಎರಗುವೆ,

ನಿತ್ಯದೊಡನೆ ಕೂಡಿ ಆಡುವೆ.

ಚೆನ್ನಮಲ್ಲಿಕಾರ್ಜುನಾ,

ನಿಮ್ಮ || ೭೪ ||
ನಿಲವತೋರಿದ ಗುರುವಿನಡಿಯಲ್ಲಿ ಅರನಾಗಿ ಕರಗುವೆ

- ೭೫

ಇಂದೆನ್ನ ಮನೆಗೆ ಗಂಡ ಬಂದಹನೆಲೆಗಟ್ಬಾ .

ನಿಮನಿಮಗೆಲ್ಲಾ ಶೃಂಗಾರವ ಮಾಡಿಕೊಳ್ಳಿ.

ಚೆನ್ನಮಲ್ಲಿಕಾರ್ಜುನನೀಗಳೆ ಬಂದಹನು,
|| ೭೫ ||
ಇದಿರುಗೊಳ್ಳಿ ಬನ್ನಿರವ್ವಗಳಿರಾ.

- ೭೬

ಇದನಾರಯ್ಯ ಬಲ್ಲರು ?

ಹಮ್ಮಳಿದ ಶರಣರ ಮೇಲಿಹ ಪರವ ಬಲ್ಲ ಶರಣ.

ಪಂಚೇಂದ್ರಿಯದ ಇಂಗಿತವ ಬಲ್ಲ ಶರಣ.

ಒಡಲ ಬಿಟ್ಟ ಶರಣನಲ್ಲದೆ, ಉಳಿದ ಪ್ರಾಣಘಾತಕ ಪಾತಕರಿವರೆತ್ತಲು,


ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯ , ನಿಮ್ಮ ಶರಣ ಬಸವಣ್ಣಂಗಲ್ಲದೆ

೭೭

ಇಹಕ್ಕೊಬ್ಬ ಗಂಡನೆ ? ಪರಕ್ಕೊಬ್ಬ ಗಂಡನೆ ? ...

ಲೌಕಿಕ್ಕೊಬ್ಬ ಗಂಡನೆ ? ಪಾರಮಾರ್ಥಕ್ಕೊಬ್ಬ ಗಂಡನೆ ?

ಎನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ


|| ೭೭ ||
ಮಿಕ್ಕಿನ ಗಂಡರೆಲ್ಲ ಮುಗಿಲಮರೆಯ ಬೊಂಬೆಯಂತೆ.
೨೯
ಅಕ್ಕಮಹಾದೇವಿಯ ವಚನಗಳು

೭೮

ಈಳೆ ನಿಂಬೆ ಮಾವು ಮಾದಲಕೆ

ಹುಳಿನೀರನೆರೆದವರಾರಯ್ಯಾ ?

ಕಬ್ಬು ಬಾಳೆ ಹಲಸು ನಾರಿವಾಳಕ್ಕೆ

ಸಿಹಿನೀರನೆರೆದವರಾರಯ್ಯಾ ?

ಕಳವೆ ರಾಜಾನ್ನ ಶಾಲ್ಯನ್ನಕ್ಕೆ ಕೈ

ಓಗರದ ಉದಕವನೆರೆದವರಾರಯ್ಯಾ ?

ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ 3


'ಕ್ಕೆ 3A &
ಪರಿಮಳದುದಕವನೆರೆದವರಾರಯ್ಯಾ ?

ಇಂತೀ ಜಲವು ಒಂದೆ, ನೆಲನು ಒಂದೆ, ಆಕಾಶವು ಒಂದೆ.

ಜಲವು ಹಲವು ದ್ರವ್ಯಂಗಳ ಕೂಡಿ

ತನ್ನ ಪರಿ ಬೇರಾಗಿಹ ಹಾಗೆ, ದಿ

ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯನು

ಹಲವು ಜಗಂಗಳ ಕೂಡಿಕೊಂಡಿರ್ದಡೇನು ?

ತನ್ನ ಪರಿ ಬೇರೆ. || ೭೮ ||

೭೯

ಉಡುವೆ ನಾನು ಲಿಂಗಕ್ಕೆಂದು,

ತೊಡುವೆ ನಾನು ಲಿಂಗಕ್ಕೆಂದು,

ಮಾಡುವೆ ನಾನು ಲಿಂಗಕ್ಕೆಂದು,

ನೋಡುವೆ ನಾನು ಲಿಂಗಕ್ಕೆಂದು,

ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ,

ಮಾಡಿಯೂ ಮಾಡದಂತಿಪ್ಪೆ ನೋಡಾ.

ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ

ಹತ್ತರೊಡನೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವಾ


|| !೭೯ ||

೮೦

ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು.

ಕಾಣಲೆಂದು ಬಂದ ದುಃಖ ಕಂಡಲ್ಲದೆ ಹರಿಯದು.

ತನುವಿಂಗೆ ಬಂದ ಕರ್ಮ ಹರಿವ ಕಾಲಕ್ಕೆ

|| ೮೦ ||
ಚೆನ್ನಮಲ್ಲಿಕಾರ್ಜುನದೇವರು ಕಡೆಗಣ್ಣಿನಿಂದನೋಡಿದರು.
ಶಿವಶರಣೆಯರ ವಚನಸಂಪುಟ

೮೧

ಉದಯದಿದ್ದು ನಿಮ್ಮ ನೆನೆವೆನಯ್ಯಾ . say

ಕಸದೆಗೆದು ಚಳೆಯ ಕೊಟ್ಟು

ನಿಮ್ಮ ಬರವ ಹಾರುತಿರ್ದೆನಯ್ಯಾ.

ಹಸೆ ಹಂದರವನಿಕ್ಕಿ ನಿಮ್ಮಡಿಗಳಿಗೆಡೆಮಾಡಿಕೊಂಡಿರ್ದೆನಯ್ಯಾ ,

ಚೆನ್ನಮಲ್ಲಿಕಾರ್ಜುನಯ್ಯಾ ,

ನೀನಾವಾಗ ಬಂದೆಯಾ ಎನ್ನ ದೇವಾ ? ದಯಾತವಾದ || ೮೧ ||

- ೮೨

ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ ,

ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ

ಶಿವನ ನೆನೆಯಿರೆ ! ಶಿವನ ನೆನೆಯಿರೆ ! ಈ ಜನ್ಮ ಬಳಿಕಿಲ್ಲ .

ಚೆನ್ನಮಲ್ಲಿಕಾರ್ಜುನದೇವರದೇವನ ನೆನೆದು
ಪಂಚಮಹಾಪಾತಕರೆಲ್ಲರು ಮುಕ್ಕಿವಡೆದರಂದು ! || ೮೨ ||

ಉಪಮಾತೀತರು ರುದ್ರಗಣಂಗಳು,

ಅವರೆನ್ನ ಬಂಧುಬಳಗಂಗಳು.
-
ನಮ್ಮ ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದಡೆ
|| ೮೩ ||
ಮರಳಿ ಬಾರನಮ್ಮಾ ತಾಯೆ .

೮೪

ಉರಕ್ಕೆ ಜವ್ವನಗಳು ಬಾರದ ಮುನ್ನ , ನಗರದಲ್ಲಿ

ಮನಕ್ಕೆ ನಾಚಿಕೆಗಳು ತೋರದ ಮುನ್ನ ,

ನಮ್ಮವರಂದೆ ಮದುವೆಯ ಮಾಡಿದರು;

ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ.

ಹೆಂಗೂಸಂಬ ಭಾವ ತೋರದ ಮುನ್ನ


|| ೮೪ ||
ನಮ್ಮವರಂದೆ ಮದುವೆಯ ಮಾಡಿದರು.

೮೫

ಉರಿಯ ಫಣಿಯನುಟ್ಟು ಊರಿಂದ ಹೊರಗಿರಿಸಿ,

ಕರೆಯಲಟ್ಟಿದ ಸಖಿಯ ನೆರೆದನೋಡೆಲೆಗಟ್ಬಾ .


ಅಕ್ಕಮಹಾದೇವಿಯ ವಚನಗಳು

ತೂರ್ಯಾವಸ್ಥೆಯಲ್ಲಿ ತೂಗಿತೂಗಿನೋಡಿ

ಬೆರಗಾಗಿ ನಿಲಲಾರೆನವ್ವಾ .

ಆರವಸ್ಥೆ ಕರ ಹಿರಿದು ಎಲೆ ತಾಯೆ .

ಗಿರಿ ಬೆಂದು ತರುವುಳಿದು ಹೊನ್ನರಳೆಯ ಮರನುಲಿವಾಗ

ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನನ . || ೮ ||

- ೮೬

ಉರಿಯೊಡ್ಡಿದಡೆ ಸೀತಳವೆನಗೆ.

ಗಿರಿಮೇಲೆ ಬಿದ್ದರೆ ಪುಷ್ಪವೆನಗೆ.

ಸಮುದ್ರಮೇಲುವಾಯಿದರೆ ಕಾಲುವೆಯೆನಗೆ.

ಚೆನ್ನಮಲ್ಲಿಕಾರ್ಜುನಾ, ನಿಮ್ಮಾಣೆಯೆಂಬುದು

ತಲೆಯೆತ್ತಿ ಬಾರದ ಭಾರವೆನಗೆ. || ೮೬ ||

೮೭

ಉಸುರಿನ ಪರಿಮಳವಿರಲು

ಕುಸುಮದ ಹಂಗೇಕಯ್ಯಾ ?

ಕ್ಷಮೆ ದಮೆ ಶಾಂತಿ ಸೈರಣೆಯಿರಲು

ಸಮಾಧಿಯ ಹಂಗೇಕಯ್ಯಾ ?

ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ

ಚೆನ್ನಮಲ್ಲಿಕಾರ್ಜುನಾ ? | ೮೭ ||

೮೮

ಉಳುಹುವ, ಕರವ ನೇಹವುಂಟೆ ನಿಮ್ಮಲ್ಲಿ ?

ಸಂಸಾರಕ್ಕೆಡೆಯಾ [ ಡದ] ಭಕ್ತಿಯೊಳವೆ ?

ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ ,

ಏನ ಹೇಳುವೆನಯ್ಯ ಲಜ್ಜೆಯ ಮಾತನು ? || ೮೮ ||

೮೯

ಉಳ್ಳುದೊಂದು ತನು, ಉಳ್ಳುದೊಂದು ಮನ.

ನಾನಿನ್ನಾವ ಮನದಲ್ಲಿ ಧ್ಯಾನವ ಮಾಡುವೆನಯ್ಯಾ ?

ಸಂಸಾರವನಾವ ಮನದಲ್ಲಿ ತಲ್ಲೀಯವಾಹೆನಯ್ಯಾ ?


ಒಡನಯ್ಯಾ ?
ಅಕಟಕಟಾ, ಕೆಟ್ಟೆ ಕೆಟ್ಟೆ ! ಸಂಸಾರಕ್ಕಲ್ಲಾ , ಪರಮಾರ್ಥಕ್ಕಲ್ಲಾ !

ಎರಡಕ್ಕೆ ಬಿಟ್ಟ ಕರುವಿನಂತೆ !


ಶಿವಶರಣೆಯರ ವಚನಸಂಪುಟ

ಬಿಲ್ವ ಬೆಳವಲಕಾಯನೊಂದಾಗಿ ಹಿಡಿಯಬಹುದೆ

ಚೆನ್ನಮಲ್ಲಿಕಾರ್ಜುನಾ ? || ೮೯ ||

‫رک‬
{ ತಿ
. ‫یل‬
ಊಡಿದಡುಣ್ಣದು, ನೀಡಿದಡೊಲಿಯದು.

ಕಾಡದು ಬೇಡದು ಒಲಿಯದುನೋಡಾ. )


page
ಊಡಿದಡುಂಡು ನೀಡಿದಡೋಲಿದು ಬೇಡಿದ ವರವ ಕೊಡುವ

ಜಂಗಮಲಿಂಗದ ಪಾದವ ಹಿಡಿದು ಬದುಕಿದೆ,


Yojo
ಕಾಣಾ ಚೆನ್ನಮಲ್ಲಿಕಾರ್ಜುನಾ. || ೯೦ ||

೯೧

ಊರನಡುವೆ ಒಂದು ಬೇಂಟೆ ಬಿದ್ದಿತ್ತು .

ಆರು ಕಂಡವರು ತೋರಿರಯ್ಯಾ , ೧


: ೧೯೨೧ .
, S
ಊರಿಗೆ ದೂರುವೆನಗುಸೆಯನಿಕ್ಕುವ ೬
* ‫لك‬ -
ಇವೆ + : ‫نم‬
nouses ‫رکاهام‬
ಅರಸುವೆನೆನ್ನ ಬೇಂಟೆಯ .
SS೬೧L : ನಿ &
.
ಅರಿತು ಅರಿಯದೆ ಒಂದು ಬೇಂಟೆಯನಾಡಿದೆನು.
* ಬVಬಯನಾಡಿದನು. ೯೨
ಓNG
ಅರಸಿಕೊಡಾ, ಚೆನ್ನಮಲ್ಲಿಕಾರ್ಜುನಾ, || ೯೧ ||

ಊರ ಮುಂದೆ ಹಾಲತೊರೆ ಇರಲು S &JS


ಆ3
ಆ೬
ನೀರಡಸಿ ಬಂದೆನಲ್ಲಯ್ಯ ನಾನು.
5 6 &
ಬರುದೊರೆವೋದವಳನೆನ್ನನಪ್ಪದಿರಯ್ಯಾ
ಇನಿಪ್ಪದಿರಯ್ಯಾ ,.
ನೀನೊತ್ತಿದ ಕಾರಣ ಬಂದೆನಯ್ಯ .

ಹೆರಿಗೆಕೂತವಳ ತೆಗೆದಪ್ಪುವನೆರ್ ನೋಡಾ!


ಗೆ ನೋಡಾ| ೨ - ೩L , & J.5
5yA
ಈ ಸೂಳೆಗಾರಂಗೆ ಕುರಿಯ ಮಾರುವರೆ ?

ಮಾರಿದರೆಮ್ಮವರೆನ್ನ ನಿನಗೆ.

ಎನ್ನತ್ತ ಮುಂದಾಗದಿರು, ಎನ್ನ ಮೇಲೆ ಕಾಲನಿಡದಿರು.

ಚೆನ್ನಮಲ್ಲಿಕಾರ್ಜುನಂಗೆ ಸಲೆ ಮಾರುವೋದವಳಾನು. || ೯೨ ||

ಊರಸೀರೆಗೆ ಅಸಗ ತಡಬಡಗೊಂಬಂತೆ

ಹೊನ್ನೆನ್ನದು, ಮಣ್ಣೆನ್ನದು ಎಂದು ನೆನನೆನದು ಬಡವಾದೆ.


ಅಕ್ಕಮಹಾದೇವಿಯ ವಚನಗಳು

ನಿಮ್ಮನರಿಯದ ಕಾರಣ ಕೆಮ್ಮನೆಕೆಟ್ಟೆನಯ್ಯಾ


|| ೯೩ ||
ಚೆನ್ನಮಲ್ಲಿಕಾರ್ಜುನಾ.

ಎನಗೇಕಯ್ಯಾ ? ನಾ ಪ್ರಪಂಚಿನ ಪುತ್ಥಳಿ,

ಮಾಯಿಕದ ಮಲಭಾಂಡ, ಆತುರದ ಭವನಿಳಯ .

ಜಲಕುಂಭದ ಒಡೆಯಲ್ಲಿ ಒಸರುವ ನೆಲೆವನೆಗೇಕಯ್ಯಾ ?

ಬೆರಳು ತಾಳಹಣ್ಣ ಹಿಸುಕಿದಡೆ ಮೆಲಲುಂಟೆ ?

ಬಿತ್ತೆಲ್ಲಾ ಜೀವ ಅದರೊಪ್ಪದ ತೆರ ಎನಗೆ.

ಎನ್ನ ತಪ್ಪನೊಪ್ಪಗೊಳ್ಳಿ,

ಚೆನ್ನಮಲ್ಲಿಕಾರ್ಜುನದೇವರದೇವನೀವ ಅಣ್ಣಗಳಿರಾ. || ೯೪ ||

೯೫

ಎನ್ನ ಅಂಗದಲ್ಲಿ ಆಚಾರವ ತೋರಿದನಯ್ಯಾ ಬಸವಣ್ಣನು.

ಆ ಆಚಾರವನ ಲಿಂಗವೆಂದರುಹಿದನಯ್ಯಾ ಬಸವಣ್ಣನು.

ಎನ್ನ ಪ್ರಾಣದಲ್ಲಿ ಅರಿವ ತೋರಿದನಯ್ಯಾ ಬಸವಣ್ಣನು.

ಆ ಅರಿವೆ ಜಂಗಮವೆಂದರುಹಿದನಯ್ಯಾ ಬಸವಣ್ಣನು. ಸಿಂಗಿ -


" ಬಸವಣ್ಣನು, ಸಿಂಗಿ . 5)0A -
ಚೆನ್ನಮಲ್ಲಿಕಾರ್ಜುನಯ್ಯಾ ,

ಎನ್ನ ಹೆತ್ತ ತಂದೆ ಸಂಗನಬಸವಣ್ಣನು

ಎನಗೀ ಕ್ರಮವನರುಹಿದನಯ್ಯಾ ಪ್ರಭುವೆ.

ಎನ್ನ ಕಾಯ ಮಣ್ಣು , ಜೀವ ಬಯಲು,

ಆವುದ ಹಿಡಿವೆನಯ್ಯಾ ,

ದೇವಾ, ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯಾ ?

ಎನ್ನ ಮಾಯೆಯನು ಮಾಣಿಸಯ್ಯಾ

ಚೆನ್ನಮಲ್ಲಿಕಾರ್ಜುನಾ. || ೯೬ ||

೯೭

ಎನ್ನ ತುಂಬಿದ ಜವ್ವನ, ತುಳುಕುವ ಮೋಹನವ,

ನಿನಗೆ ಇಂಬು ಮಾಡಿಕೊಂಡಿರ್ದೆನಲ್ಲಾ ಎಲೆಯಯ್ಯಾ.

ಎನ್ನ ಲಂಬಿಸುವ ಲಾವಣ್ಯದ ರೂಪುರೇಖೆಗಳ

ನಿನ್ನ ಕಣ್ಣಿಂಗೆ ಕೈವಿಡಿದಂತೆ ಮಾಡಿರ್ದೆನಯ್ಯ .


ಶಿವಶರಣೆಯರ ವಚನಸಂಪುಟ

ನಿನ್ನ ಮುಂದಿಟ್ಟಲನ್ಯರು ಕೊಂಡೊಯಿವಾಗಲೆಂತು ಸೈರಿಸಿದೆ ಹೇಳಾ

ಚೆನ್ನಮಲ್ಲಿಕಾರ್ಜುನಾ ? || ೯೭ ||

Ees

ಎನ್ನಂತೆ ಪುಣ್ಯಗೈದವರುಂಟೆ ?

ಎನ್ನಂತೆ ಭಾಗ್ಯಂಗೈದವರುಂಟೆ ?

ಕನ್ನರನಂತಪ್ಪ ಸೋದರರೆನಗೆ,

ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನಗೆ.

ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾಎನಗೆ. .

2 6 3ಎ 9 ೯೯ ೬ ೨3 + ಎ _ AS •

- ಎನ್ನ ನಾನರಿಯದಲ್ಲಿ
ಎಲ್ಲಿರ್ದೆ ಹೇಳಯ್ಯಾ ?
- gಆಕಿ 5 S - 33%
ಚಿನ್ನದೊಳಗಣ ಬಣ್ಣದಂತೆ ಎನ್ನೋಳಗಿರ್ದೆ. * * S JK

ಅಯ್ಯಾ ಎನ್ನೊಳಗೆ ಇನಿತಿರ್ದು ಮೈದೋರದ ಭೇದವ 39 X (

ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ. || ೯೯ ||

& Ao • • EvA
ಎನ್ನ ನಾಲಗೆಗೆ ಬಪ್ಪರುಚಿ ನಿಮಗರ್ಪಿತ. 68° N
ನಿಮಗರ್ಪಿತ.
೧೦ ಸಾ೦AJ ೧•,
ಎನ್ನ ನಾಸಿಕಕ್ಕೆ ಬಪ್ಪ ಪರಿಮಳ ನಿಮಗರ್ಪಿತ.
ಳ ನಿಮಗರ್ಪಿತ. ಈ -

ಎನ್ನ ಕಾಯಕ್ಕೆ ಬಪ್ಪ ಸುಖ ನಿಮಗರ್ಪಿತ. & ss


ಓS} -
ತ.
ಚೆನ್ನಮಲ್ಲಿಕಾರ್ಜುನಯ್ಯಾ,

ನಿಮಗರ್ಪಿಸದ ಮುನ್ನ ಮುಟ್ಟಲಮ್ಮೆನಯ್ಯಾ , || ೧೦೦ ||

ಎನ್ನನಿರಿದಡೆ ಸೈರಿಸುವೆ, ಎನ್ನ ಕೊರೆದಡೆ ಸೈರಿಸುವೆ,

ಎನ್ನ ಕಡಿದು ಹರಹಿದಡೆ ಮನಕ್ಕೆ ತಾರೆನು. . .

ಚೆನ್ನಮಲ್ಲಿಕಾರ್ಜುನಯ್ಯಾ , So 5

ನಿಮ್ಮ ಶರಣರನೊಡನೆನ್ನ ಕಣ್ಣ ಮುಂದೆ ಕಂಡು |


|| ೧೦೧ ||
ಮೊಗೆದುಂಡಮೃತದಂತೆ ಆದೆನಯ್ಯಾ ,

ಎನ್ನ ಪ್ರಾಣ ಜಂಗಮ ,

ಎನ್ನ ಜೀವ ಜಂಗಮ ,


2² -
# - ಇತ
ಅಕ್ಕಮಹಾದೇವಿಯ ವಚನಗಳು
]

ಎನ್ನ ಪುಣ್ಯದ ಫಲವು ಜಂಗಮ

ಎನ್ನ ಹ[ ರು ] ಷದ ಮೇರೆ[ ಜಂಗಮ ]

ಚೆನ್ನಮಲ್ಲಿಕಾರ್ಜುನಾ,
|| ೧೦೨ ||
ಜಂಗಮ ತಿಂಥಿಣಿಯಲೋಲಾಡುವೆ.
ಓy &

- ೧೦೩

ಎನ್ನ ಭಕ್ತಿ ಬಸವಣ್ಣನ ಧರ್ಮ, ಎನ್ನ ಜ್ಞಾನ ಪ್ರಭುವಿನ ಧರ್ಮ,

ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ .

ಈ ಮೂವರು ಒಂದೊಂದಕೊಟ್ಟೂಡೆನಗೆ

ಮೂರು ಭಾವವಾಯಿತ್ತು .

ಆ ಮೂರನು ನಿಮ್ಮಲ್ಲಿ ಸಮರ್ಪಿಸಿದ ಬಳಿಕ

ಎನಗಾವ ಜಂಜಡವಿಲ್ಲ .

ಚೆನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ

ನಿಮ್ಮ ಕರುಣದ ಕಂದನಾಗಿದ್ದೆ ಕಾಣಾ ಸಂಗನಬಸವಣ್ಣಾ . || ೧೦೩ ||

ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ

ಕಾಯದಸುಖವ ನಾನೇನೆಂದರಿಯೆನು.

ಆರು ಸೋಂಕಿದರೆಂದರಿಯೆನು.

ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚತವಾದ ಬಳಿಕ

ಹೊರಗೇನಾಯಿತ್ತೆಂದರಿಯೆನು. || ೧೦೪ ||

ಎನ್ನ ಮನವ ಮಾರುಗೊಂಡನವ್ಯಾ ,

ಎನ್ನ ತನುವಸೂರೆಗೊಂಡನವ್ವಾ ,

ಎನ್ನ ಸುಖವನೊಪುಗೊಂಡನವ್ವಾ .

ಎನ್ನ ಇರವನಿಂಬುಗೊಂಡನವ್ಯಾ . 25 ನಿ

ಚೆನ್ನಮಲ್ಲಿಕಾರ್ಜುನನ ಒಲುಮೆಯವಳಾನು. || ೧೦೫ ||

೧೦೬

ಎನ್ನ ಮಾಯದ ಮದವ ಮುರಿಯಯ್ಯಾ,

ಎನ್ನ ಕಾಯದ ಕತ್ತಲೆಯ ಕಳೆಯಯ್ಯಾ,



ಶಿವಶರಣೆಯರ ವಚನಸಂಪುಟ

ಎನ್ನ ಜೀವದ ಜಂಜಡವ ಮಾಣಿಸಯ್ಯಾ .

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ ,

ಎನ್ನ ಸುತ್ತಿದ ಪ್ರಪಂಚವ ಬಿಡಿಸಾ ನಿಮ್ಮ ಧರ್ಮ ! || ೧೦೬ ||

೧೦೭

ಎನ್ನ ಮೀಸಲ ಬೀಸರ ಮಾಡಿದೆಯಲ್ಲಯ್ಯ ,

ಎನ್ನ ಮೀಸಲ ಬೀಸಾಡಿ ಕಳೆದೆಯಲ್ಲಯ್ಯ ,

ಎನ್ನ ಭಾಷೆಯ ಪೈಸರ ಮಾಡಿದೆಯಲ್ಲಯ್ಯ . - GK UP


ದೇGS 164T GPvvy
ಎನ್ನ ಭಾಷೆಗೆ ದೋಷವ ತೋರಿಸಿದೆಯಲ್ಲಯ್ಯ , ಓಓ -
-
ಎನ್ನ ಮೀಸಲ ಕಾಯವನಿಮಗೆಂದಿರಿಸಿಕೊಂಡಿದ್ದಡೆ,

ಬೀಸಾಡಿ ಕಳೆವರೆ ಹೇಳಾ ತಂದೆ ?

ಏಸು ಕಾಲ ನಿಮಗೆ ನಾನು ಮಾಡಿದ ತಪ್ಪ

ಈ ಸಮಯದಲ್ಲಿ ಹೊರಿಸಿ ಕೊಂದೆಯಲ್ಲಾ

ಚನ್ನಮಲ್ಲಿಕಾರ್ಜುನಾ. || ೧೦೭ ||

- ೧೦೮

ಎಮ್ಮೆಗೊಂದು ಚಿಂತೆ; ಸಮ್ಮಗಾರಗೊಂದು ಚಿಂತೆ.

ಧರ್ಮಿಗೊಂದು ಚಿಂತೆ; ಕರ್ಮಿಗೊಂದು ಚಿಂತೆ.

ಎನಗೆ ಎನ್ನ ಚಿಂತೆ, ತನಗೆ ತನ್ನ ಕಾಮದ ಚಿಂತೆ.

ಒಲ್ಲೆ ಹೋಗು, ಸೆರಗ ಬಿಡು ಮರುಳೆ.

ಎನಗೆ ಚೆನ್ನಮಲ್ಲಿಕಾರ್ಜುನದೇವರು

ಒಲಿವರೊ ಒಲಿಯರೊ ಎಂಬ ಚಿಂತೆ ! || ೧೦೮ ||

೧೦೯

ಎರದ ಮುಳ್ಳಿನಂತೆ ಪರಗಂಡರೆನಗವ್ವಾ .

ಸೋಂಕಲಮ್ಮೆ ಸುಳಿಯಲಮ್ಮೆ ;

ನಂಬಿ ನಚ್ಚಿ ಮಾತಾಡಲಮ್ಮೆನವ್ವಾ .

ಚೆನ್ನಮಲ್ಲಿಕಾರ್ಜುನನಲ್ಲದ ಗಂಡರಿಗೆ
|| ೧೦೯ ||
ಉರದಲ್ಲಿ ಮುಳ್ಳುಂಟೆಂದು ನಾನಪ್ಪಲಮ್ಮೆನವ್ವಾ .

೧೧೦

ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು,

ಕನಸಿನಲ್ಲಿ ಕಳವಳಿಸಿ, ಆನು ಬೆರಗಾದೆ.


ಅಕ್ಕಮಹಾದೇವಿಯ ವಚನಗಳು

ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ ;

ಆಪತ್ತಿಗೆ ಸಖಿಯರನಾರನೂ ಕಾಣೆ.

ಅರಸಿ ಕಾಣದ ತನುವ, ಬೆರಸಿ ಕೂಡದ ಸುಖವ,

ಎನಗೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ. || ೧೧೦ ||

ಎಲುವಿಲ್ಲದ ನಾಲಗೆ ಹೊದಕುಳಿಗೊಂಡಾಡುದು,

ಎಲೆ ಕಾಲಂಗೆ ಗುರಿಯಾದ ಕರ್ಮಿ.

ಉಲಿಯದಿರು, ಉಲಿಯದಿರು ಭವಭಾರಿ ನೀನು.

ಹಲವು ಕಾಲದ ಹುಲುಮನುಜಂಗೆ

ಹುಲುಮನುಜ ಹೆಂಡತಿ : ಇವರಿದ್ದರೆ ಅದಕ್ಕದು ಸರಿ.

ಚೆನ್ನಮಲ್ಲಿಕಾರ್ಜುನನ ಗಂಡನೆನಗೆ

ಲೋಕದೊಳಗೊಂಡಿರುಂಟಾದರೆ ಮಾಡಿಕೊ ,

ಎನ್ನ ಬಿಡು ಮರುಳೆ. || ೧೧೧ ||

ಎಲೆ ಅಣ್ಣಾ ಅಣ್ಣಾ , ನೀವು ಮರುಳಲ್ಲಾ ಅಣ್ಣಾ ,

ಎನ್ನ ನಿನ್ನಳವೆ ?

ಹದಿನಾಲ್ಕು ಲೋಕವ ನುಂಗಿದ ಕಾಮನ ಬಾಣದ ಗುಣ

ಎನ್ನ ನಿನ್ನಳವೆ ?
ವಾರುವ ಮುಗಿದಡೆ, ಮಿಡಿಹರಿಯ ಹೊಯ್ದರೆ ?

ಮುಗ್ಗಿದ ಭಂಗವ ಮುಂದೆ ರಣದಲ್ಲಿ ತಿಳಿವುದು.

ನಿನ್ನ ನೀ ಸಂವರಿಸಿ ಕೈದುವ ಕೊಳ್ಳಿರಣ್ಣಾ ,

|| ೧೧೨ .||
ಚೆನ್ನಮಲ್ಲಿಕಾರ್ಜುನನೆಂಬ ಹಗೆಗೆ ಬೆಂಗೊಡದಿರಣ್ಣಾ

೧೧೩

ಎಲೆ ಕಾಲಂಗೆ ಸೂರೆಯಾದ ಕರ್ಮಿ,

ಎಲೆ ಕಾಮಂಗೆ ಗುರಿಯದ ಮರುಳೆ,

ಬಿಡು ಬಿಡು ಕೈಯ ;

ನರಕವೆಂದರಿಯದೆ ತಡೆವರೆ ಮನುಜಾ ?

ಚೆನ್ನಮಲ್ಲಿಕಾರ್ಜುನನ ಪೂಜೆಯ ವೇಳೆ ತಪ್ಪಿದರೆ

ನಾಯಕ ನರಕ ಕಾಣಾ ನಿನಗೆ. || ೧೧೩ ||


೩೮
ಶಿವಶರಣೆಯರ ವಚನಸಂಪುಟ

ಎಲೆ ತಾಯಿ ನೀನಂತಿರು ,

ಎಲೆ ತಂದೆ ನೀನಂತಿರು,

ಎಲೆ ಬಂಧುವೆ ನೀನಂತಿರು,

ಎಲೆ ಕುಲವೆ ನೀನಂತಿರು ,

ಎಲೆ ಬಲವೆ ನೀನಂತಿರು .

ಚೆನ್ನಮಲ್ಲಿಕಾರ್ಜುನನ ಕೂಡುವ ಭರದಿಂದ

ಹೋಗುತ್ತಿದ್ದೇನೆ.

ನಿಮಗೆ ಶರಣಾರ್ಥಿ ಶರಣಾರ್ಥಿ. || ೧೧೪ ||

೧೧೫ ,

ಎಲೆ ದೇವಾ, ಸಕಲ ಕರಣಂಗಳ ಉಪಟಳಕ್ಕಂಜಿ

ನಿಮ್ಮ ಶರಣರ ಮರೆಯೊಕ್ಕು ಕಾರುಣ್ಯಮಂ ಪಡೆದು,

ಬಂದು ನಿಮ್ಮ ಶ್ರೀ ಮೂರ್ತಿಯ ಕಂಡೆ.

ಇನ್ನು ಎನ್ನ ನಿಮ್ಮೊಳಗೆ ಐಕ್ಯವ ಮಾಡಿಕೊಳ್ಳಾ

ಚೆನ್ನಮಲ್ಲಿಕಾರ್ಜುನಾ. || ೧೧೫ ||

೧೧೬

ಎಲ್ಲ ಎಲ್ಲವನರಿದು ಫಲವೇನಯ್ಯಾ ,

ತನ್ನ ತಾನರಿಯಬೇಕಲ್ಲದೆ ?

ತನ್ನಲ್ಲಿ ಅರಿವುಸ್ವಯವಾಗಿರಲು

ಅನ್ಯರ ಕೇಳಲುಂಟೆ ?

ಚೆನ್ನಮಲ್ಲಿಕಾರ್ಜುನಾ,

ನೀನರಿವಾಗಿ ಮುಂದುದೋರಿದ ಕಾರಣ


|| ೧೧೬ ||
ನಿಮ್ಮಿಂದ ನಿಮ್ಮನರಿದೆನಯ್ಯಾ ಪ್ರಭುವೆ.

೧೧೭

ಎಲ್ಲರ ಗಂಡರ ಶೃಂಗಾರದ ಪರಿಯಲ್ಲ ,

ಎನ್ನ ನಲ್ಲನ ಶೃಂಗಾರದ ಪರಿ ಬೇರೆ.

ಶಿರದಲ್ಲಿ ಕಂಕಣ, ಉರದಮೇಲಂದುಗೆ, ಕಿವಿಯಲ್ಲಿ ಹಾವುಗೆ,


ವಯಲ್ಲಿ ಹಾವುಗೆ,
ಉಭಯ ಸಿರಿವಂತನ ಮೊಳಕಾಲಲ್ಲಿ ಅಳವಟ್ಟಿಗೆ.

ಉಂಗುಟದಲ್ಲಿ ಮೂರುತಿ - ಇದು ಜಾಣರಿಗೆ ಜಗುಳಿಕೆ .


ಜಾಣರಿಗೆ ಜಗುಳಿಕೆ.
|| ೧೧೭ | |
ಚೆನ್ನಮಲ್ಲಿಕಾರ್ಜುನಯ್ಯನಶೃಂಗಾರದ ಪರಿ ಬೇರೆ.
ಅಕ್ಕಮಹಾದೇವಿಯ ವಚನಗಳು

೧೧೮

ಎಲ್ಲರ ಪ್ರಾಣವಂಗೈಯಲದೆ;

ಎನ್ನ ಪ್ರಾಣ ಜಂಗಮದಲದೆ.

ಎಲ್ಲರ ಆಯುಷ್ಯ ಶಿರದಲ್ಲಿ ಬರೆದಿದೆ;

ಎನ್ನ ಆಯುಷ್ಯ ನಿಮ್ಮಲ್ಲಿ ಸಂದಿದೆ.

ಚೆನ್ನಮಲ್ಲಿಕಾರ್ಜುನಾ,

ನಿಮ್ಮ ಶರಣರೆನ್ನ ಪ್ರಾಣಲಿಂಗವೆಂದು ಧರಿಸಿದನು. || ೧೧೮ ||

ಎಲ್ಲಿ ಹೋದಡೆ ಕಲಿಗೆ ಭಯವಿಲ್ಲ ,

ಹಂದೆಗೆ ಸುಖವಿಲ್ಲ ಕಾಣಿರಣ್ಣಾ .

ಈವಂಗವಗುಣವಿಲ್ಲ , ಕರುಣವುಳ್ಳವಂಗೆ ಪಾಪವಿಲ್ಲ .

ನಿಮ್ಮ ಮುಟ್ಟಿ ಪರಧನ ಪರಸ್ತ್ರೀಯ ತೊರೆದಾತಂಗೆ

ಮುಂದೆ ಭವವಿಲ್ಲ ಚೆನ್ನಮಲ್ಲಿಕಾರ್ಜುನಾ. || ೧೧೯ ||

೧೨೦

ಎಳವರದಲ್ಲಿ ಮೋಹಮೊಳೆ ಹುಟ್ಟಿತ್ತು,

ಗುರುಹಸ್ತದಲ್ಲಿ ಅಂಕುರವಾಯಿತ್ತು,

ಏಳೆಲೆ ಹೋಯಿತ್ತು ಬಳಗದ ನಡುವೆ.

ಕೇಳೆಲೆಯಾ , ನೀನು ಕೇಳು ತಾಯೆ .

ಒಂಬತ್ತೆಲೆ ಎಂದಿಂಗೆ ಪರಿಪೂರ್ಣವಾಯಿತ್ತು ನೋಡಪ್ಪಾ ,

ಚೆನ್ನಮಲ್ಲಿಕಾರ್ಜುನನ ಗಂಡನೆನಗೆ

ಲೋಕದವರ ಸಂಬಂಧವಿಲ್ಲೆಂದು

ಬಿಟ್ಟು ತೊಲಗಿದೆನು ಕಾಣಾ ಎಲೆಯಪ್ಪಾ. || ೧೨೦ ||

೧೨೧

ಐದು ಪರಿಯ ಬಣ್ಣವ ತಂದು ಕೊಟ್ಟರೆ

ನಾಲ್ಕು ಮೊಲೆಯ ಹಸುವಾಯಿತ್ತು.

ಹಸುವಿನ ಬಸಿರಲ್ಲಿ ಕರುವು ಹುಟ್ಟಿತ್ತು .

ಕರುವ ಮುಟ್ಟಲೀಯದೆ ಹಾಲು ಕರೆದುಕೊಂಡಡೆ


ಕರ ರುಚಿಯಾಯಿತು

ಮಧುರ ತಲೆಗೇರಿ ಅರ್ಥವ ಗಾಡಿ


ಶಿವಶರಣೆಯರ ವಚನಸಂಪುಟ

ಆ ಕರುವಿನ ಬೆಂಬಳಿವಿಡಿದು ಭವಹರಿಯಿತ್ತು

ಚೆನ್ನಮಲ್ಲಿಕಾರ್ಜುನಾ. - || ೧೨೧ ||

೧೨೨

ಒಂದರಳ ಶಿವಂಗೆಂದ ಫಲದಿಂದ |

ಶಿವಪದಂಗಳಾದುದ ಕೇಳಿಯರಿಯಾ ?

ಒಂದರಳನೇರಿಸುವಲ್ಲಿ ಅಡ್ಡವಿಸಿದರೆ

ಗೊಂದಣದ ಕುಲಕೋಟಿಗೆ ನರಕ ಕಾಣಾ.

ಇಂದು ಚೆನ್ನಮಲ್ಲಿಕಾರ್ಜುನನ ವೇಳೆ ತಡೆದಡೆ

ಮುಂದೆ ಬಹ ನರಕಕ್ಕೆ ಕಡೆಯಿಲ್ಲ ಮರುಳೆ. || ೧೨೨ ||

೧೨೩

ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ

ಎಂಬತ್ತುನಾಲ್ಕುಲಕ್ಷಯೋನಿಯೊಳಗೆ ಬಾರದ ಭವಂಗಳಲ್ಲಿ ಬಂದೆ ಬಂದೆ.

ಉಂಡೆ ಉಂಡೆ ಸುಖಾಸುಖಂಗಳ.

ಹಿಂದಣ ಜನ್ಮ ತಾನೇನಾದಡೆಯೂ ಆಗಲಿ

ಮುಂದೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ. || ೧೨೩ ||

೧೨೪

ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.

ಗಿಡುಗಿಡುದಪ್ಪದೆ ಬೇಡಿದನೆನ್ನಂಗಕ್ಕೆಂದು.

ಅವುನೀಡಿದವು ತಮ್ಮ ಲಿಂಗಕ್ಕೆಂದು.

ಆನು ಬೇಡಿ ಭವಿಯಾದೆನು; ಅವುನೀಡಿ ಭಕ್ತರಾದವು.

|| ೧೨೪ ||, ನಿಮ್


ಇನ್ನು ಬೇಡಿದೆನಾದಡೆ ಚೆನ್ನಮಲ್ಲಿಕಾರ್ಜುನಯ್ಯಾ

೧೨೫

ಒಡಲಿಲ್ಲದ ನುಡಿಯಿಲ್ಲದಕಡೆಯಿಲ್ಲದ

ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯಾ .

ಭಾಷೆ ಪೈಸರವಿಲ್ಲ , ಓಸರಿಸನನ್ಯಕ್ಕೆ,

ಆಸೆ ಮಾಡೆನು ಮತ್ತೆ ಭಿನ್ನ ಸುಖಕ್ಕೆ ,

ಅರಳಿದು ಮೂರಾಗಿ, ಮೂರಳಿದು ಎರಡಾಗಿ,

ಎರಡಳಿದು ಒಂದಾಗಿ ನಿಂದೆನಯ್ಯಾ .

ಬಸವಣ್ಣ ಮೊದಲಾದ ಶರಣರಿಗೆ ಶರಣಾರ್ಥಿ :


ಅಕ್ಕಮಹಾದೇವಿಯ ವಚನಗಳು

ಆ ಪ್ರಭುವಿನಿಂದ ಕೃತಕೃತ್ಯಳಾದೆನು ನಾನು.

ಮರೆಯಲಾಗದು, ನಿಮ್ಮ ಶಿಶುವೆಂದು ಎನ್ನನು,

ಚೆನ್ನಮಲ್ಲಿಕಾರ್ಜುನನ ಬೆರೆಸೆಂದು ಹರಸುತ್ತಿಹುದು. || ೧೨ ||

೧೨೬

ಒಪ್ಪುವ ವಿಭೂತಿಯ ನೊಸಲಲ್ಲಿ ಧರಿಸಿ,

ದೃಷ್ಟಿವಾ[ ] ನಿಮ್ಮನೊಡಲೊಡನೆ

ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವುನೋಡಾ.

ದುರಿತ ಅನ್ಯಾಯವ ಪರಿಹರಿಸಬಲ್ಲಡೆ


“ ಓಂ ನಮಃ ಶಿವಾಯ ' ಶರಣೆಂಬುದೆ ಮಂತ್ರ .

ಅದೆಂತೆಂದಡೆ :

ನಮಃ ಶಿವಾಯೇತಿ ಮಂತ್ರಂ ಯಃ ಕರೋತಿತ್ರಿಪುಂಡ್ರಕಂ

ಸಪ್ತಜನ್ಮ ಕೃತಂ ಪಾಪಂ ತತ್‌ಕ್ಷಣಾದೇವ ನಶ್ಯತಿ'

ಇಂತೆಂದುದಾಗಿ,

ಸಿಂಹದ ಮರಿಯ ಸೀಳ್ಳಾಯಿ ತಿಂಬಡೆ

ಭಂಗವಿನ್ನಾರದೊ ಚೆನ್ನಮಲ್ಲಿಕಾರ್ಜುನಾ ? || ೧೨೬ ||

೧೨೭

ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು,

ಒಬ್ಬಂಗೆ ಇಹವಿಲ್ಲ ಒಬ್ಬಂಗೆ ಪರವಿಲ್ಲ .


ಒಬ್ಬಂಗೆ ಇಹಪರವೆರಡೂ ಇಲ್ಲ .

ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ
ಇಹಪರವೆರಡೂ ಉಂಟು. || ೧೨೭ ||

೧೨೮

ಒಬ್ಬನ ಮನೆಯಲುಂಡು, ಒಬ್ಬನ ಮನೆಯಲುಟ್ಟು ,


ಒಬ್ಬನ ಬಾಗಿಲ ಕಾದಡೆ ನಮಗೇನಯ್ಯಾ ?

ನೀನಾರಿಗೊಲಿದಡೂ ನಮಗೇನಯ್ಯಾ ?

ಚೆನ್ನಮಲ್ಲಿಕಾರ್ಜುನಯ್ಯಾ ,

ಭಕ್ತಿಯ ಬೇಡಿ ಬಾಯಿ ಬೂತಾಯಿತ್ತು . || ೧೨೮ ||

೧೨೯

ಒಮ್ಮೆ ಕಾಮನ ಕಾಲ ಹಿಡಿವೆ,

ಮತ್ತೊಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ.


ಶಿವಶರಣೆಯರ ವಚನಸಂಪುಟ

ಸುಡಲೀ ವಿರಹವ, ನಾನಾರಿಗೆ ಧೃತಿಗೆಡುವೆ ?

ಚೆನ್ನಮಲ್ಲಿಕಾರ್ಜುನ ಕಾರಣ

ಎಲ್ಲರಿಗೆ ಹಂಗುಗಿತ್ತಿಯಾದೆನವ್ವಾ . || ೧೨೯ ||

೧೩೦

ಒಲುಮೆ ಒಚ್ಚತವಾದವರು ಕುಲಛಲವನರಸುವರೆ ?

ಮರುಳುಗೊಂಡವರು ಲಜ್ಜೆನಾಚಿಕೆಯ ಬಲ್ಲರೆ ?

ಚೆನ್ನಮಲ್ಲಿಕಾರ್ಜುನದೇವಗೊಲಿದವರು

ಲೋಕಾಭಿಮಾನವ ಬಲ್ಲರೆ ? || ೧೩೦ ||

೧೩೧

ಒಲೆಯ ಹೊಕ್ಕು ಉರಿಯ ಮರೆದವಳ,

ಮಲೆಯ ಹೊಕ್ಕು ಉಲುಹ ಮರೆದವಳ ನೋಡುನೋಡಾ.

ಸಂಸಾರ ಸಂಬಂಧವನೋಡಾ.

ಸಂಸಾರ ಸಂಬಂಧ ಭವಭವದಲ್ಲಿ ಬೆನ್ನಿಂದ ಬಿಡದು.

ಸರವು ನಿಸ್ಸರವು ಒಂದಾದವಳನು ,

ಎನ್ನಲೇನನೋಡುವಿರಯ್ಯಾ , ಚೆನ್ನಮಲ್ಲಿಕಾರ್ಜುನಯ್ಯ
|| ೧೩೧ || ?

೧೩೨

ಒಳಗಣ ಗಂಡನಯ್ಯಾ , ಹೊರಗಣ ಮಿಂಡನಯ್ಯಾ ,

ಎರಡನೂ ನಡೆಸಲು ಬಾರದಯ್ಯಾ .

ಲೌಕಿಕ ಪಾರಮಾರ್ಥವೆಂಬೆರಡನೂ ನಡೆಸಲು ಬಾರದಯ್ಯಾ .

ಚೆನ್ನಮಲ್ಲಿಕಾರ್ಜುನಯ್ಯಾ ,

ಬಿಲ್ವ || ೧೩೨ ||
ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯಾ.

೧೩೩

ಒಳಗಶೋಧಿಸಿ ಹೊರಗ ಶುದ್ದಯಿಸಿ;

ಒಳಹೊರಗೆಂಬ ಉಭಯ ಶಂಕೆಯ ಕಳೆದು,

ಸ್ಪಟಿಕದ ಶಲಾಕೆಯಂತೆ ತಳವೆಳಗು ಮಾಡಿ

ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ

ಶಿಷ್ಯನ ಸರ್ವ ಪ್ರಪಂಚ ನಿವೃತ್ತಿಯಂ ಮಾಡಿ ನಿಜೋಪದೇಶವನಿತ್ತು

ಆ ಶಿಷ್ಯನ ನಿಜದಾದಿಯನೈದಿಸುವನೀಗ ಜ್ಞಾನಗುರು.


ಅಕ್ಕಮಹಾದೇವಿಯ ವಚನಗಳು

ಆ ಸಹಜ ಗುರುವೀಗ ಜಗದಾರಾಧ್ಯನು,

ಅವನ ಶ್ರೀಪಾದಕ್ಕೆ ನಮೋ ನಮೋ ಎಂಬೆ


|| ೧೩೩ ||
ಕಾಣಾ ಚೆನ್ನಮಲ್ಲಿಕಾರ್ಜುನಾ.

ಓದಿ ಓದಿ ವೇದ ವಾದಕ್ಕಿಕ್ಕಿತ್ತು.

ಕೇಳಿಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು .

ಅರಿದೆರೆ ಅರಿದಹೆನೆಂದು ಆಗಮ ಅರೆಯಾಗಿ ಹೋಯಿತ್ತು .

ಪೂರೈಸಿಹೆ ಪೂರೈಸಿಹೆನೆಂದು

ಪುರಾಣ ಪೂರ್ವದ ಬಟ್ಟೆಗೆ ಹೋಯಿತ್ತು .

ನಾನೆ ತಾನೆ ?
|| ೧೩೪ ||
ಬೊಮ್ಮ ಬಟ್ಟಬಯಲು ಚೆನ್ನಮಲ್ಲಿಕಾರ್ಜುನ.

ಕಂಗಳ ಕಳೆದು ಕರುಳ ಕಿತ್ತು ಕಾಮನ ಮೂಗಕೊಯು

ಭಂಗದ ಬಟ್ಟೆಯ ಭವ ಗೆಲಿದವಳಿಗಂಗವಲ್ಲಿಯದು ಹೇಳಾ !

ಶೃಂಗಾರವೆಂಬ ಹಂಚಿಗೆ ಹಲ್ಲಿ ತೆರೆದಡೇನುಂಟು ?

ಅಂಗವ ಲಿಂಗವಹ ಪರಿಯನೆನಗೆ ಹೇಳಾ

ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ ? || ೧೫ ||

೧೩೬

ಕಂಗಳಲ್ಲಿ ಕಾಂಬೆನೆಂದು

ಕತ್ತಲೆಯ ಹೊಕ್ಕಡೆಂತಹುದಯ್ಯಾ ?

ಬೆಟ್ಟದ ತುದಿಯ ಮೆಟ್ಟಲೆಂದು

ಹಳ್ಳಕೊಳ್ಳಗಳಲ್ಲಿ ಇಳಿದಡೆಂತಹುದಯ್ಯಾ ?

ನೀನಿಕ್ಕಿದ ಸಯದಾನವನೊಲ್ಲದೆ

ಬೇರೆ ಬಯಸಿದೊಡೆಂತಹುದಯ್ಯಾ ?

ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು

ಕಿರುಕುಳಕ್ಕೆ ಸಂದಡೆಂತಹುದಯ್ಯಾ ? || ೧೩೬ ||

೧೩೭

ಕಂಗಳೊಳಗೆ ತೊಳಗಿ ಬೆಳಗುವ

ದಿವ್ಯ ರೂಪವ ಕಂಡು ಮೈಮರೆದೆನವ್ವಾ .||


ಶಿವಶರಣೆಯರ ವಚನಸಂಪುಟ

ಮಣಿಮುಕುಟದ ಫಣಿಕಂಕಣದ ನಗೆಮೊಗದ

ಸುಲಿಪಲ್ಲ ಸೊಬಗನ ಕಂಡು ಮನಸೋತೆನವ್ವಾ .

ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ,

ಆನು ಮದುವಣಿಗಿ ಕೇಳಾ ತಾಯೆ . || ೧೩೭ ||

೧೩೮

ಕಂಡಡೆ ಒಂದು ಸುಖ , ಮಾತಾಡಿದಡೆ ಅನಂತ ಸುಖ .

ನೆಚ್ಚಿ ಮೆಚ್ಚಿದಡೆ ಕಡೆಯಿಲ್ಲದ ಹರುಷ.

ಮಾಡಿದ ಸುಖವನಗಲಿದರೆ ಪ್ರಾಣದ ಹೋಕುಕಂಡಯ್ಯಾ .

ಚೆನ್ನಮಲ್ಲಿಕಾರ್ಜುನದೇವಯ್ಯಾ ,

ನಿಮ್ಮ ತೋರಿದ ಶ್ರೀಗುರುವಿನ ಪಾದವ ನೀನೆಂದು ಕಾಂಬೆನು


|| ೧೩೮ ||

೧೩೯

ಕಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ ?

ಸುಟ್ಟ ಮಡಕೆ ಮುನ್ನಿನಂತೆ ಮರಳಿ ಧರೆಯನಪ್ಪಬಲ್ಲುದೆ ?

ತೊಟ್ಟ ಬಿಟ್ಟು ಬಿದ್ದ ಹಣ್ಣು ಮರಳಿ ತೊಟ್ಟನಪ್ಪಬಲ್ಲುದೆ ?

ಕಷ್ಟಕರ್ಮಿ ಮನುಜರು ಕಾಣದೆ ಒಂದ ನುಡಿದಡೆ,

ನಿಷ್ಠೆಯುಳ್ಳ ಶರಣರು ಮರಳಿ ಮರ್ತ್ಯಕ್ಕೆ ಬಪ್ಪರೆ

ಚೆನ್ನಮಲ್ಲಿಕಾರ್ಜುನಾ ? || ೧೩೯ ||

೧೪೦

ಕಟ್ಟಿದಕೆರೆಗೆ ಕೋಡಿ ಮಾಣದು.

ಹುಟ್ಟಿದ ಪ್ರಾಣಿಗೆ ಪ್ರಳಯ ತಪ್ಪದಿನ್ನೆಂತಯ್ಯಾ ?

ಅರುಹಿರಿಯರೆಲ್ಲ ವೃಥಾ ಕೆಟ್ಟು ಹೋದರಿನ್ನೆಂತಯ್ಯಾ ?

ಚೆನ್ನಮಲ್ಲಿಕಾರ್ಜುನದೇವರಿಗೋತು

ಮುಟ್ಟಿದವರೆಲ್ಲಾ ನಿಶ್ಚಿಂತರಾದರು. || ೧೪೦ ||

೧೪೧

ಕಡೆಗೆ ಮಾಡಿದ ಭಕ್ತಿ ದೃಢವಿಲ್ಲದಾಳುತನ,

ಮೃಡನೋಲಿಯ ಹೇಳಿದಡೆ ಎಂತೊಲಿವನಯ್ಯಾ ?

ಮಾಡಲಾಗದು ಅಳಿಮನವ,

ಮಾಡಿದಡೆ ಮನದೊಡೆಯ ಬಲ್ಲನೈಸೆ ?


೪೫
ಅಕ್ಕಮಹಾದೇವಿಯ ವಚನಗಳು

ವಿರಳವಿಲ್ಲದೆ ಮಣಿಯ ಪವಣಿಸಿಹೆನೆಂದಡೆ


|| ೧೪ ||
ಮರುಳಾ, ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನಯ್ಯಾ ?

ಕಣ್ಣೆ ಶೃಂಗಾರ ಗುರುಹಿರಿಯರ ನೋಡುವುದು.

ಕರ್ಣಕ್ಕೆ ಶೃಂಗಾರ ಪುರಾತನರ ಸುಗೀತಂಗಳ ಕೇಳುವುದು .

ವಚನಕ್ಕೆ ಶೃಂಗಾರ ಸತ್ಯವ ನುಡಿವುದು.

ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ.

ಕರಕ್ಕೆ ಶೃಂಗಾರ ಸತ್ಪಾತ್ರಕ್ಕಿವುದು.

ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ

ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ

ಚೆನ್ನಮಲ್ಲಿಕಾರ್ಜುನಾ ? || ೧೪೨ ||

ಕದಳಿ ಎಂಬುದು ತನು , ಕದಳಿ ಎಂಬುದು ಮನ,

ಕದಳಿ ಎಂಬುದು ವಿಷಯಂಗಳು .


ಕದಳಿ ಎಂಬುದು ಭವಘೋರಾರಣ್ಯ .

ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದು


ಕದಳಿಯ ಬನದಲ್ಲಿ ಭವಹರನ ಕಂಡೆನು .

ಭವ ಗೆದ್ದು ಬಂದ ಮಗಳೆ ಎಂದು

ಕರುಣದಿ ತೆಗೆದು ಬಿಗಿಯಪ್ಪಿದಡೆ

ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು. || ೧೪೩ ||

උබලා

ಕರಣ ಮೀಸಲಾಗಿ ನಿಮಗರ್ಪಿತವಾಯಿತ್ತು .

ಆನೊಂದುಯೆನಯಾ,

ಎನ್ನ ಗತಿ ನೀನಾಗಿ, ಎನ್ನ ಮತಿ ನೀನಾಗಿ,

ಪ್ರಾಣ ನಿನಗರ್ಪಿತವಾಯಿತ್ತು.
ನೀನಲ್ಲದೆ ಪರತೊಂದ ನೆನೆದಡೆ

ಆಣೆ , ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ. || ೧೪ ||

ಕರಸ್ಥಲಕ್ಕೆ ಲಿಂಗಸ್ವಾಯತವಾದ ಬಳಿಕ


ಕಾಯಕ ನಿವೃತ್ತಿಯಾಗಬೇಕು.
ಶಿವಶರಣೆಯರ ವಚನಸಂಪುಟ

ಅಂಗದಲಳವಟ್ಟಲಿಂಗ,

ಲಿಂಗೈಕ್ಯಂಗೆ ಅಂಗಸಂಗ ಮತ್ತೆಲ್ಲಿಯದೊ ?

ಮಹಾಘನವನರಿತ ಮಹಾಂತಂಗೆ

ಮಾಯವೆಲ್ಲಿಯದೊ ಚೆನ್ನಮಲ್ಲಿಕಾರ್ಜುನಾ ? || ೧೪ ||

ಕರುವಿನರೂಹು ಅರಗಿಳಿಯನೊದಿಸುವಂತೆ,

ಓದಿಸುವುದಕ್ಕೆ ಜೀವವಿಲ್ಲ ; ಕೇಳುವುದಕ್ಕೆ ಜ್ಞಾನವಿಲ್ಲ .

ಚೆನ್ನಮಲ್ಲಿಕಾರ್ಜುನದೇವಯ್ಯಾ,

ನಿಮ್ಮನರಿಯದವನ ಭಕ್ತಿ

ಕರುವಿನ ರೂಹು ಆ ಅರಗಿಳಿಯನೊದಿಸುವಂತೆ. * || ೧೪೬ ||

೧೪೭

ಕರ್ಮವೆಂಬ ಕದಳಿ ಎನಗೆ, ಕಾಯವೆಂಬ ಕದಳಿ ನಿಮಗೆ.

ಮಾಟವೆಂಬ ಕದಳಿ ಬಸವಣ್ಣಂಗೆ,

ಭಾವವೆಂಬ ಕದಳಿ ಚೆನ್ನಬಸವಣ್ಣಂಗೆ.

ಬಂದ ಬಂದ ಭಾವ ಸಲೆ ಸಂದಿತ್ತು .


|| ೧೪೭ ||
ಎನ್ನಂಗದ ಅವಸಾನವ ಹೇಳಾ, ಚೆನ್ನಮಲ್ಲಿಕಾರ್ಜುನಾ.

ಕರ್ಮ ಸೆರಗ ಹಿಡಿದವರೇಕೆ ಬಿಟ್ಟಪೆ ತಂದೆ.

ಕರ್ಮ ಘಾಯ [ ಇ]ಮ್ಮೆಗೊಂಡು ನೊಂದೆನೋಡಯ್ಯ .

ನಿಮ್ಮ ನಂಬಿದ ನಚ್ಚಿಹ ಮಗಳ ಬೆಂಬಿಟ್ಟರೆ

ಎಂತು ಬದುಕುವೆನಯ್ಯ , ಚೆನ್ನಮಲ್ಲಿಕಾರ್ಜುನಾ ? || ೧೪೮ ||

೧ರ್೪

ಕಲ್ಲ ತಾಗಿದ ಮಿಟ್ಟೆ ಕೆಲಸಕ್ಕೆ ಸಾರುವಂತೆ

ಆನು ಬಲ್ಲೆನೆಂಬ ನುಡಿ ಸಲ್ಲದು.

ಲಿಂಗದಲ್ಲಿ ಮರೆದು ಮಚ್ಚಿರ್ದ ಮನವು

ಹೊರಗೆ ಬೀಸರವೋಗದೆ ?

ಉರೆ ತಾಗಿದಕೋಲು ಗರಿ ತೋರುವುದೆ ?

ಮೊರೆದು ಬೀಸುವ ಗಾಳಿ ಪರಿಮಳವನುಂಡಂತೆ ಬೆರಸಬೇಕು


| ೧೪ ||
ಚೆನ್ನಮಲ್ಲಿಕಾರ್ಜುನಯ್ಯನ.
೪೭
ಅಕ್ಕಮಹಾದೇವಿಯ ವಚನಗಳು

೧೫೦

ಕಲ್ಲ ಹೊಕ್ಕಡೆ ಕಲ್ಲ ಬರಿಸಿದೆ,

ಗಿರಿಯ ಹೊಕ್ಕಡೆ ಗಿರಿಯ ಬರಿಸಿದೆ.

ಭಾಪು ಸಂಸಾರವೆ, ಬೆನ್ನಿಂದ ಬೆನ್ನ ಹತ್ತಿ ಬಂದೆ.

ಚೆನ್ನಮಲ್ಲಿಕಾರ್ಜುನಯ್ಯಾ , ಇನ್ನೇವೆನಿನ್ನೇವೆ ?|| ೧೦ ||

೧೫೧

ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು.

ಒಳಗೂ ಕಲ್ಯಾಣ ಹೊರಗೂ ಕಲ್ಯಾಣ.

ಇದರಂತುವನಾರು ಬಲ್ಲರಯ್ಯಾ ?

ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ,

ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು


|| ೧೧ ||
ಕೇಳಾ ಚೆನ್ನಮಲ್ಲಿಕಾರ್ಜುನಾ.

ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು ?

ಹೊಗಬಾರದು, ಅಸಾಧ್ಯವಯ್ಯಾ .
ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದಲಡಿಯಿಡಬಾರದು.

ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು.

ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು.

ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ


10
ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು. ೧೨

ಕಲ್ಲಹೊತ್ತು ಕಡಲೊಳಗೆ ಮುಳುಗಿದಡೆ

ಎಡರಿಂಗೆ ಕಡೆಯುಂಟೆ ಅವ್ವಾ ?

ಉಂಡು ಹಸಿವಾಯಿತ್ತೆಂದಡೆ ಭಂಗವೆಂಬೆ.

ಕಂಡ ಕಂಡ ಠಾವಿನಲ್ಲಿ ಮನ ಬೆಂದಡೆ

| ೧೫
ಗಂಡ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನಪ್ಪಾ ? |

ಕಳನೇರಿ ಇಳಿವುದು ವೀರಂಗೆ ಮತವಲ್ಲ .

ಶಿವಶರಣಂಗೆ ಹಿಮ್ಮೆಟ್ಟುವುದು ಪಥವಲ್ಲ .


೪೮
ಶಿವಶರಣೆಯರ ವಚನಸಂಪುಟ

ಮನದೊಡೆಯ ಮನವನಿಂಬುಗೊಂಬನಯ್ಯಾ .

ಏರಲಾಗದು ಶ್ರೀಪರ್ವತವ ; ಏರಿ ಇಳಿದಡೆ ವ್ರತಕ್ಕೆ ಭಂಗ.

ಕಳನೇರಿ ಕೈದು ಮರೆದಡೆ

ಮಾರಂಕ ಚೆನ್ನಮಲ್ಲಿಕಾರ್ಜುನನಿಮ್ಮೆಗಾಣಲಿರಿವನು.
|| ೧೫೪ ||

ಕಳವಳದ ಮನ ತಲೆಕೆಳಗಾದುದಾ ;

ಸುಳಿದು ಬೀಸುವ ಗಾಳಿ ಉರಿಯಾದುದಾ ;

ಬೆಳುದಿಂಗಳು ಬಿಸಿಯಾಯಿತ್ತು ಕೆಳದಿ

ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವಾ ;

ತಿಳುಹಾ, ಬುದ್ದಿಯ ಹೇಳಿ ಕರೆತಾರೆಲಗಪ್ಪಾ ,

ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸಪ್ಪಾ .

೧೫೬

ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವಾ .

ಕೇಳುತ್ತ ಕೇಳುತ್ತ ಮೈಮರೆಗೊರಗಿದೆ ನೋಡಪ್ಪಾ .

ಹಾಸಿದ ಹಾಸಿಗೆಯ ಹಂಗಿಲ್ಲದೆಹೋಯಿತ್ತು ಕೇಳವ್ವಾ .

ಚೆನ್ನಮಲ್ಲಿಕಾರ್ಜುನದೇವರದೇವನ ಕೂಡುವಕೂಟವ

ನಾನೇನೆಂದರಿಯದೆ ಮರೆದೆ ಕಾಣವ್ವಾ . || ೧೫೬ ||

೧೫೭

ಕಾಮನ ತಲೆಯ ಕೊರೆದು, ಕಾಲನ ಕಣ್ಣ ಕಳೆದು,

ಸೋಮಸೂರ್ಯರ ಹುರಿದು ಹುಡಿಮಾಡಿ ತಿಂಬವಳಿಂಗೆ.

ನಾಮವನಿಡಬಲ್ಲವರಾರು ಹೇಳಿರೆ !

ನೀ ಮದವಳಿಗನಾಗೆ ನಾ ಮದವಳಿಗಿತ್ತಿಯಾಗೆ

ಯಮನಕೂಡುವ ಮರುತನಂತೆ ನೋಡಾ


|| ೧೭ ||
ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ.

೧೫೮

ಕಾಮ ಬಲ್ಲಿದನೆಂದಡೆ ಉರುಹಿ ಭಸ್ಮವ ಮಾಡಿದ.

ಕಾಲ ಬಲ್ಲಿದನೆಂದಡೆ ಕೆಡಹಿ ತುಳಿದ.

ಎಲೆ ಅವ್ವಾ , ನೀನು ಕೇಳಾ ತಾಯೆ .

ಬ್ರಹ್ಮ ಬಲ್ಲಿದನೆಂದಡೆ ಶಿರವ ಚಿವುಟಿಯಾಡಿದ.


ಅಕ್ಕಮಹಾದೇವಿಯ ವಚನಗಳು

ಎಲೆ ಅವ್ವಾ ನೀನು ಕೇಳಾ ತಾಯೆ .

ವಿಷ್ಣು ಬಲ್ಲಿದನೆಂದಡೆ ಆಕಳ ಕಾಯ್ದಿರಿಸಿದ.

ತ್ರಿಪುರದಕೋಟೆಬಲ್ಲಿತ್ತೆಂದಡೆ

ನೊಸಲಕಂಗಳಲುರುಹಿದನಾ .

ಇದು ಕಾರಣ, ಚೆನ್ನಮಲ್ಲಿಕಾರ್ಜುನ ಗಂಡನೆನಗೆ,

ಜನನ ಮರಣಕ್ಕೊಳಗಾಗದ ಬಲುಹನೇನ ಬಣ್ಣಿಪೆನವ್ವಾ . || ೧೫೮ ||

೧೫೯

ಕಾಮವುಳ್ಳವರಿಗೆ ಕಾಯಸಂಗ ಮಚ್ಚು ನೋಡಾ.

ಕಾಮವಿಲ್ಲದವರಿಗೆ ಲಿಂಗಸಂಗ ಮಚ್ಚು ನೋಡಾ.

ಕಾಮವಿಕಾರಿ ಕಾಯದತ್ತ ಮುಂತಾದಡೆ,

ನಾ ನಿಮ್ಮ ಮುಂತಾದೆ.

ಚೆನ್ನಮಲ್ಲಿಕಾರ್ಜುನಯ್ಯಾ ,

ಕಾಮವಿಕಾರಿಯ ಸಂಗವ ಹೊದ್ದಿದಡೆ ನಿಮ್ಮಾಣೆ. || ೧೯ ||

೧೬೦

ಕಾಮಾರಿಯ ಗೆಲಿದನು ಬಸವಾ ನಿಮ್ಮಿಂದ.

ಸೋಮಧರನ ಹಿಡಿತಪ್ಪೆನು ಬಸವಾ ನಿಮ್ಮ ಕೃಪೆಯಿಂದ.

ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು ?

ಭಾವಿಸಲು ಗಂಡು ರೂಪುಬಸವಾ ನಿಮ್ಮ ದಯದಿಂದ.

ಅತಿಕಾಮಿ ಚೆನ್ನಮಲ್ಲಿಕಾರ್ಜುನಂಗೆ ತೊಡರಿಕ್ಕಿ

ಎರಡುವರಿಯದಕೂಡಿದೆನು ಬಸವಾ ನಿಮ್ಮ ಕೃಪೆಯಿಂದ.|| ೧೬೦ ||

೧೬೧

ಕಾಮಿಸಿ ಕಲ್ಪಿಸಿ ಕಂದಿ ಕುಂದಿದೆನವ್ವಾ .

ಮೋಹಿಸಿ ಮುದ್ದಿಸಿ ಮರುಳಾದೆನವ್ವಾ .

ತೆರೆಯದೆತೊರೆಯದೆ ನಲಿದು ನಂಬಿದೆ ನಾನು.

ಎನ್ನ ದೇವ ಚೆನ್ನಮಲ್ಲಿಕಾರ್ಜುನನೆನ್ನನೊಲ್ಲದಡೆ

ಆನೇವೆನವ್ವಾ ? || ೧೬೧ ||

೧೬೨

ಕಾಯ ಕರನೆ ಕಂದಿದಡೇನಯ್ಯಾ ?

ಕಾಯ ಮಿರನೆ ಮಿಂಚಿದಡೇನಯ್ಯಾ ?


೫೦
ಶಿವಶರಣೆಯರ ವಚನಸಂಪುಟ

ಅಂತರಂಗ ಶುದ್ಧವಾದ ಬಳಿಕ

ಚೆನ್ನಮಲ್ಲಿಕಾರ್ಜುನಯ್ಯಾ

ನೀನೊಲಿದ ಕಾಯವುಹೇಗಿದ್ದಡೇನಯ್ಯಾ ? || ೧೬೨ ||

೧೬೩

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ .

ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ .

ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ .

ನೆನಹಿಂಗೆ ಅರುಹಾಗಿ ಕಾಡಿತ್ತು ಮಾಯೆ .

ಅರುಹಿಂಗೆ ಮರಹಾಗಿ ಕಾಡಿತ್ತು ಮಾಯೆ .

ಜಗದ ಜಂಗುಳಿಗೆ ಬೆಂಗೋಲನೆ ಕಾಡಿತ್ತು ಮಾಯೆ !

ಚೆನ್ನಮಲ್ಲಿಕಾರ್ಜುನಾ,

ನೀನೊಡ್ಡಿದ ಮಾಯೆಯನಾರಿಗೂ ಗೆಲಬಾರದು. 11 ೧೬೩ ||

೧೬೪

ಕಾಯದಕಳವಳವ ಕೆಡಿಸಿ, ಮನದ ಮಾಯೆಯ ಮಾಣಿಸಿ,

ಎನ್ನ ಹರಣವ ಮೇಲೆತ್ತಿ ಸಲಹಿದೆಯಯ್ಯಾ,

ಶಿವಶಿವಾ, ಎನ್ನ ಭವಬಂಧನವ ಬಿಡಿಸಿ,

ನಿಮ್ಮತ್ತ ತೋರಿದ ಘನವನುಪಮಿಸಬಾರದಯ್ಯಾ ,

ಇರುಳೊಸರಿಸಿದ ಜಕ್ಕವಕ್ಕಿಯಂತೆ

ನಾನಿಂದು ನಿಮ್ಮ ಶ್ರೀಪಾದವನಿಂಬುಗೊಂಡು


|| ೧೬೪ ||
ಸುಖದೊಳೋಲಾಡುವೆನಯ್ಯಾ , ಚೆನ್ನಮಲ್ಲಿಕಾರ್ಜುನಾ.

ಕಾಯದ ಕಾರ್ಪಣ್ಯವರತಿತ್ತು , ಕರಣಂಗಳ ಕಳವಳವಳಿದಿತ್ತು .

ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು.

ಇನ್ನವೆನಿನ್ನವೆನಯ್ಯಾ ?

ನಿಮ್ಮ ಶರಣ ಬಸವಣ್ಣನಶ್ರೀಪಾದವ ಕಂಡಲ್ಲದೆ

ಬಯಕೆ ಬಯಲಾಗದು.
|| ೧೬ ||
ಇನ್ನೇವೆನಿನ್ನೇವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?

೧೬೬

ಕಾಯದ ನುಂಪನೊಬ್ಬ ಕಂಡು ಬಯಸಿದನು.

ಅವಂಗೆ ಮಾಂಸವ ಬೆಲೆಮಾಡಿಕೊಡುವೆನು .


S
ಅಕ್ಕಮಹಾದೇವಿಯ ವಚನಗಳು

ಎನ್ನ ಪ್ರಾಣದೊಡೆಯಂಗೆ ಎನ್ನ ಹೃದಯವಸೂರೆಗೊಡುವೆನು

ಚೆನ್ನಮಲ್ಲಿಕಾರ್ಜುನದೇವಯ್ಯನು ಮುನಿದು

ಭವಿಗೆ ಮಾರಿದಡೆ ಹೊಲಬುಗೆಡದಿರಾ ಮನವೆ. || ೧೬ ||

೧೬೭

ಕಾಯದೊಳಗೆ ಅಕಾಯವಾಯಿತ್ತು .

ಜೀವದೊಳಗೆ ನಿರ್ಜಿವವಾಯಿತ್ತು.

ಭಾವದೊಳಗೆ ನಿರ್ಭಾವವಾಯಿತ್ತು.

ಎನ್ನ ಮನದೊಳಗೆ ಘನ ನೆನಹಾಯಿತ್ತು .

ಎನ್ನ ತಲೆ ಮೊಲೆಗಳನೋಡಿಸಲಹಿದಿರಾಗಿ.

ಚೆನ್ನಮಲ್ಲಿಕಾರ್ಜುನಯ್ಯನ ಧರ್ಮದವಳಾನು.|| ೧೬೭ ||

Czes

ಕಾಯ ಪ್ರಸಾದವೆನ್ನ , ಜೀವ ಪ್ರಸಾದವೆನ್ನ ,

ಪ್ರಾಣ ಪ್ರಸಾದವೆನ್ನ , ಮನಪ್ರಸಾದವೆನ್ನ ,

ಧನ ಪ್ರಸಾದವೆನ್ನ , ಭಾವ ಪ್ರಸಾದವೆನ್ನ ,

ಸಯದಾನ ಪ್ರಸಾದವೆನ್ನ , ಸಮಭೋಗಪ್ರಸಾದವನ್ನ .

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ ಪ್ರಸಾದವ ಹಾಸಿ ಹೊದಿಸಿಕೊಂಡಿಪ್ಪೆನು. || ೧೬೮ ||

- ೧೬೯

- ಕಾಯ ಮೀಸಲಾಗಿ ನಿನಗರ್ಪಿತವಾಯಿತ್ತು.

ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು .

ಆನೊಂದುಯೆನಯ್ಯಾ .

ಎನ್ನ ಗತಿ ನೀನಾಗಿ, ಎನ್ನ ಮತಿ ನೀನಾಗಿ,

ಪ್ರಾಣ ನಿನಗರ್ಪಿತವಾಯಿತ್ತು.

ನೀನಲ್ಲದೆ ಪರತೊಂದ ನೆನೆದಡೆ

ಆಣೆ , ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ. || ೧೬೯ ||

೧೭೦

ಕಾಯವಿಕಾರಿಗೆ ಕಾಯಕ್ಕೆ ಮೆಚ್ಚಿದೆ.

ವಾಯದ ಸುಖ ನಿನಗೆ ಮುಂದೆ ನರಕವೆಂದರಿಯೆ .

ದೇವರ ದೇವಂಗೆ ವಂದಿಸಹೊದರೆ ಬಾಯಬಿಡದಿರು ,


ಶಿವಶರಣೆಯರ ವಚನಸಂಪುಟ

ಕೈವಿಡಿದು ಸೆಳೆಯದಿರು.

ಚೆನ್ನಮಲ್ಲಿಕಾರ್ಜುನನ ಪಾದಕ್ಕೆರಗುವ ಭರವೆನಗೆ ಮರುಳೆ,


|| ೧೭೦ ||

೧೭೧

ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ .

ಏರಿಲ್ಲದ ಗಾಯದಲ್ಲಿ ನೊಂದೆನವ್ವಾ .

ಸುಖವಿಲ್ಲದೆ ಧಾವತಿಗೊಂಡೆನವ್ವಾ .

ಚೆನ್ನಮಲ್ಲಿಕಾರ್ಜುನದೇವಂಗೊಲಿದು

|| ೧೭೧ ||
ಬಾರದ ಭವಂಗಳಲ್ಲಿ ಬಂದೆನವ್ವಾ .

೧೭೨

ಕಿಡಿ ಕಿಡಿ ಕೆದರಿದಡೆ ಎನಗೆ ಹಸಿವು ತೃಷೆಯಡಗಿತ್ತೆಂಬೆನು.

ಮುಗಿಲು ಹರಿದು ಬಿದ್ದಡೆ ಎನಗೆ ಮಜ್ಜನಕ್ಕೆರೆದರೆಂಬೆನು.

ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು.

ಚೆನ್ನಮಲ್ಲಿಕಾರ್ಜುನಯ್ಯಾ,

more ಶಿರ ಹರಿದು ಬಿದ್ದಡೆ ಪ್ರಾಣ ನಿಮಗರ್ಪಿತವೆಂಬೆನು. || ೧೭೨ ||

*
೧೭೩

- ಕಿರಿಯರಹದರಿದಲ್ಲದೆ,

ಹಿರಿಯರಹುದರಿದಲ್ಲ ನೋಡಾ!

[ ಭವಿಯಹುದರಿದಲ್ಲದೆ]

ಭಕ್ತನಹುದರಿದಲ್ಲ ನೋಡಾ.
ಗೆ ನಿರಾಳವಹುದರಿದಲ್ಲ
ಕುರುಹಹುದರಿದಲ್ಲದೆ, ನಿರಾಳವಹುದರಿದಲ್ಲ
|| ೧೭೩ ||
ಚೆನ್ನಮಲ್ಲಿಕಾರ್ಜುನಯ್ಯಾ ?

೧೭೪

ಕೀಡಿ ತುಂಬಿಯ ಹಂಬಲದಿಂದ ತುಂಬಿಯಾಗಿ

ತನ್ನ ಬಿಡಲುಂಟೆ ಅಯ್ಯಾ ?

ಆನು ನಿಮ್ಮ ನೆನೆದು

ಎನ್ನ ಕರತುಂಬಿ , ಎನ್ನ ಮನತುಂಬಿ , ಎನ್ನ ಭಾವತುಂಬಿ ,

ಮತ್ತಿಲ್ಲದೆ ನಿನ್ನ ಕೂಟದ ಸವಿಗಲೆಯನೆಂತು


|| ೧೭೪ ||
ಕಾಣುವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?
ಅಕ್ಕಮಹಾದೇವಿಯ ವಚನಗಳು

೧೭೫

ಕುಲಗಿರಿಯ ಶಿಖರದ ಮೇಲೆ ಬಾಳೆ ಬೆಳೆವುದಯ್ಯಾ ಎಂದಡೆ,

ಬಾಳೆ ಬೆಳೆವುದಯ್ಯಾ ಎನಬೇಕು.

ಓರೆಗಲ್ಲ ನುಗ್ಗುಗುಟ್ಟಿ ಮೆಲಬಹುದಯ್ಯಾ ಎಂದಡೆ,

ಅದು ಅತ್ಯಂತ ಮೃದು ಮೆಲಬಹುದಯ್ಯಾ ಎನಬೇಕು.

ಸಿಕ್ಕದ ಠಾವಿನಲ್ಲಿ ಉಚಿತವ ನುಡಿವುದೆ ಕಾರಣ

ಚೆನ್ನಮಲ್ಲಿಕಾರ್ಜುನಯ್ಯಾ] ಮರ್ತ್ಯಕ್ಕೆ || ೧೭೫ ||


ಬಂದುದಕ್ಕಿದೆ ಗೆಲ

೧೭೬

ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ,

ಛಲಮದವೆಂಬುದಿಲ್ಲ. ಪ್ರತಿದೋರನಾಗಿ,

ಧನಮದವೆಂಬುದಿಲ್ಲ ತ್ರಿಕರಣ ಶುದ್ಧನಾಗಿ,

ವಿದ್ಯಾಮದವೆಂಬುದಿಲ್ಲ ಅಸಾಧ್ಯವ ಸಾಧಿಸಿದನಾಗಿ,

ಮತ್ತಾವ ಮದವೆಂಬುದಿಲ್ಲ ನೀನವಗ್ರಹಿಸಿದ ಕಾರಣ,


ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ ಶರಣನು ಅಕಾಯ ಚರಿತ್ರನಾಗಿ, || ೧೭೬ ||

೧೭೭

ಕೂಡಿಕೂಡುವ ಸುಖದಿಂದ

ಒಪ್ಪಚ್ಚಿ ಅಗಲಿ ಕೂಡುವ ಸುಖ ಲೇಸು, ಕೆಳದಿ !

ಒಕ್ಕೊತ್ತಗಲಿದಡೆ ಕಾಣದಿರಲಾರೆ.

ಎನ್ನ ದೇವ ಚೆನ್ನಮಲ್ಲಿಕಾರ್ಜುನನಗಲಿಯಗಲದ

ಸುಖವೆಂದಪ್ಪುದೊ ? || ೧೭೭ ||

೧೭೮

ಕೆಂಡದ ಶವದಂತೆ, ಸೂತ್ರ ತಪ್ಪಿದ ಬೊಂಬೆಯಂತೆ,

ಜಲವರತ ತಟಾಕದಂತೆ, ಬೆಂದ ನುಲಿಯಂತೆ

ಮತ್ತೆ ಹಿಂದಣಂಗವುಂಟೆ ಅಣ್ಣಾ ,

ಚೆನ್ನಮಲ್ಲಿಕಾರ್ಜುನನಂಗವೆ ಆಶ್ರಯವಾದವಳಿಗೆ ? || ೧೭೮ ||

- ೧೭೯

ಕೆಚ್ಚಿಲ್ಲದ ಮರನ ಕ್ರಿಮಿ ಇಂಬುಗೊಂಬಂತೆ,

ಒಡೆಯನಿಲ್ಲದ ಮನೆಯ ಶುನಕ ಸಂಚುಗೊಂಬಂತೆ,



ಶಿವಶರಣೆಯರ ವಚನಸಂಪುಟ

ನೃಪತಿಯಿಲ್ಲದ ದೇಶವ ಮನ್ನೆಯರಿಂಬುಗೊಂಬಂತೆ,

ನಿಮ್ಮ ನೆನಹಿಲ್ಲದ ಶರೀರವ

ಭೂತಪ್ರೇತ ಪಿಶಾಚಿಗಳಿಂಬುಗೊಂಬಂತೆ

ಚೆನ್ನಮಲ್ಲಿಕಾರ್ಜುನಾ. || ೧೭೯ ||

೧೮೦

ಕೆಡದಿರೆ ಕೆಡದಿರೆ ಮೃಡನಡಿಯ ಹಿಡಿಯಿರೇ .

ದೃಢವಲ್ಲ ನೋಡಿರೆ ನಿಮ್ಮೊಡಲು.

ದೃಢವಲ್ಲ ನೋಡಿರೆ ಸಂಸಾರಸುಖವು.

ಚೆನ್ನಮಲ್ಲಿಕಾರ್ಜುನ ಬರೆದ ಅಕ್ಷರವುತೊಡೆಯದ ಮುನ್ನ

ಬೇಗ ಬೇಗ ಶಿವಶರಣೆನ್ನಿ . || ೧೮೦ ||

೧೮೧

ಕೆತ್ತಿದ ತಿಗುಡು ಹತ್ತೂದೆ ಮುನ್ನಿನಂತೆ ?

ರಿಣ ತಪ್ಪಿದಲ್ಲಿ ಗುಣವನರಸುವರೆ ?

ಸಕ್ಕರೆ ಹಾಲು ತುಪ್ಪ ಎಂದರೆ

ಕಪ್ಪ ಕಂಡಲ್ಲಿ ಮನ ಹಿಡಿವುದೆ ?

ಕರ್ತೃವೆ ಚೆನ್ನಮಲ್ಲಿಕಾರ್ಜುನಯ್ಯಾ

ಸತ್ತವರು ಮರಳಿ ತಕ್ಕೆಸಿಕೊಂಬರೆ ? ೧೮೧

೧೮೨

ಕೇಳವ್ವಾ ಕೇಳವ್ವಾ ಕೆಳದಿ ನಾನೊಂದು ಕನಸಕಂಡೆ.

ಗಿರಿಯಮೇಲೊಬ್ಬ ಗೊರವ ಕುಳ್ಳಿರ್ದುದ ಕಂಡೆ.

ಗಿರಿಯೆಂಬುದು ಸಿರಿಶೈಲ

ಗೊರವನೆ ಚೆನ್ನಮಲ್ಲಿಕಾರ್ಜುನನು. || ೧೮೨ ||

೧೮೩

ಕೇಳವ್ವಾ ಕೇಳವ್ವಾ ಕೆಳದಿ ನಾನೊಂದು ಕನಸು ಕಂಡೆ.

ಗಿರಿಯಮೇಲೊಬ್ಬ ಗೊರವ ಕುಳ್ಳಿರ್ದುದ ಕಂಡೆ

ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು

ಬಂದೆನ್ನ ನೆರೆದ ನೋಡವ್ವಾ

ಆತನನಪ್ಪಿಕೊಂಡು ತಳವೆಳಗಾದೆನು .
ಅಕ್ಕಮಹಾದೇವಿಯ ವಚನಗಳು

ಚೆನ್ನಮಲ್ಲಿಕಾರ್ಜುನನ ಕಂಡು

ಕಣ್ಣು ಮುಚ್ಚಿ ತೆರೆದು ತಳವೆಳಗಾದೆನು || ೧೮೩ ||

೧೮೪

ಕೈಯ ಧನವ ಕೊಂಡಡೆ, ಮೈಯ ಭಾಷೆಯ ಕೊಳಬಹುದೆ ?

ಉಟ್ಟ ಉಡುಗೆಯ ಸೆಳೆದುಕೊಂಡರೆ,

ಮುಚ್ಚಿ ಮುಸುಕಿದ ನಿರ್ವಾಣವ ಸೆಳೆಯಬಹುದೆ ?

ನೋಡುವಿರಿ ಎಲೆ ಅಣ್ಣಗಳಿರಾ,

ಕುಲವಳಿದು ಛಲವಳಿದು ಭವಗೆಟ್ಟು ಭಕ್ತಿಯಾದವಳ.

ಎನ್ನನೇಕೆನೋಡುವಿರಿ ಎಲೆ ತಂದೆಗಳಿರಾ,

|| ೧೮೪ ||
ಚೆನ್ನಮಲ್ಲಿಕಾರ್ಜುನನ ಕೂಡಿಕುಲವಳಿದು ಛಲವುಳಿದವಳು.

೧೮೫

ಕೈಯ ಸಂಕಲೆಯ ಕಳೆದೆಯಲ್ಲಾ !

ಕಾಲ ಸುತ್ತಿದ ಪಾಶವ ಹರಿದೆಯಲ್ಲಾ !

ಸುತ್ತಿ ಮುರ್ದಬಲೆಯ ಕುಣಿಕೆಯಿಂದ ಹೊರವಡಿಸಿದೆಯಲ್ಲಾ !

ಚೆನ್ನಮಲ್ಲಿಕಾರ್ಜುನಾ,

ನೀನುಕೊಟ್ಟವಧಿ ತುಂಬುವ ಮುನ್ನ ಮುಟ್ಟುವ ನಿಮ್ಮನು.


|| ೧೮ ||

೧೮೬

ಕೈಸಿರಿಯ ದಂಡವ ಕೊಳಬಹುದಲ್ಲದೆ,

ಮೈಸಿರಿಯ ದಂಡವ ಕೊಳಲುಂಟೆ ?

ಉಟ್ಟಂತಹ ಉಡಿಗೆ ತೊಡಿಗೆಯನೆಲ್ಲ ಸೆಳೆದುಕೊಳ್ಳಬಹುದಲ್ಲದೆ,

ಮುಚ್ಚಿರ್ದ ಮುಸುಕಿರ್ದ ನಿರ್ವಾಣವ ಸೆಳೆದುಕೊಳ್ಳಬಹುದೆ ?

ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ


ಉಡುಗೆ ತೊಡುಗೆಯ ಹಂಗೇಕೊ ಮರುಳೆ ? || ೧೮೬ ||

೧೮೭

ಕೊಳಲ ದನಿಗೆ ಸರ್ಪ ತಲೆದೂಗಿದಡೇನು,

ಒಳಗಣ ವಿಷದ ಬಯಕ ಬಿಡದನ್ನಕ್ಕ ?

ಹಾಡಿದಡೇನು, ಕೇಳಿದಡೇನು,

ತನ್ನಲುಳ್ಳ ಅವಗುಣ ಬಿಡದನ್ನಕ್ಕ ?


೫೬
ಶಿವಶರಣೆಯರ ವಚನಸಂಪುಟ

ಒಳಗನರಿದು ಹೊರಗೆ ಮರೆದವರ

ನೀ ಎನಗೆತೋರಯ್ಯಾ ಚೆನ್ನಮಲ್ಲಿಕಾರ್ಜುನಾ. || ೧೮೭ ||

೧೮೮

ಕೋಲತುದಿಯ ಕೋಡಗದಂತೆ,

ನೇಣ ತುದಿಯ ಬೊಂಬೆಯಂತೆ,

ಆಡಿದೆನಯ್ಯಾ ನೀನಾಡಿಸಿದಂತೆ,

ಆನು ನುಡಿದೆನಯ್ಯಾ ನೀ ನುಡಿಸಿದಂತೆ,

ಆನು ಇದ್ದೆನಯ್ಯಾ ನೀನು ಇರಿಸಿದಂತೆ,

ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ


|| ೧೮೮ . ||

೧೮೯

ಕ್ರೀಯುಳ್ಳಡಂತೊಂದಾಸೆ,

ಸದ್ಭಕ್ತರ ನುಡಿಗಡಣವುಳ್ಳಡಂತೊಂದಾಸೆ,

ಶ್ರೀಗಿರಿಯನೇರಿ ನಿಮ್ಮ ಬೆರಸಿದಡೆ ಎನ್ನಾಸೆಗೆ ಕಡೆಯೆ ಅಯ್ಯಾ

ಆವಾಸೆಯೂ ಇಲ್ಲದೆ ನಿಮ್ಮ ನಂಬಿ ಬಂದು ಕೆಟ್ಟೆನಯ್ಯಾ

ಚೆನ್ನಮಲ್ಲಿಕಾರ್ಜುನಾ. || ೧೮೯ ||

೧೯೦

ಕ್ರಿಯೆಗಳು ಮುಟ್ಟಲರಿಯವು,

ನಿಮ್ಮನೆಂತು ಪೂಜಿಸುವೆ ?

ನಾದ ಬಿಂದುಗಳು ಮುಟ್ಟಲರಿಯವು,

ನಿಮ್ಮನೆಂತು ಹಾಡುವೆ ?

ಕಾಯ ಮುಟ್ಟುವಡೆ ಕಾಣಬಾರದ ಘನವು,

ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆ ?

ಚೆನ್ನಮಲ್ಲಿಕಾರ್ಜುನಯ್ಯಾ , ನಾನೇನೆಂದರಿಯದೆ

ನಿಮ್ಮ ನೋಡಿನೋಡಿಸೃವೆರಗಾಗುತಿರ್ದೆನು. || ೧೯೦ ||

೧೯೧

ಗಂಗೆಯೊಡನಾಡಿದ ಘಟ್ಟ ಬೆಟ್ಟಂಗಳು ಕೆಟ್ಟ ಕೇಡನೋಡಿರಯ್ಯಾ.

ಅಗ್ನಿಯೊಡನಾಡಿದ ಕಾಷ್ಠಂಗಳು ಕೆಟ್ಟ ಕೇಡನೋಡಿರಯ್ಯಾ.

ಜ್ಯೋತಿಯೊಡನಾಡಿದ ಕತ್ತಲೆ ಕೆಟ್ಟ ಕೇಡನೋಡಿರಯ್ಯಾ.

ಜ್ಞಾನಿಯೊಡನಾಡಿದ ಅಜ್ಞಾನಿ ಕೆಟ್ಟ ಕೇಡ ನೋಡಿರಯ್ಯಾ ,


೫೭
ಅಕ್ಕಮಹಾದೇವಿಯ ವಚನಗಳು

ಎಲೆ ಪರಶಿವಮೂರ್ತಿ ಹರನೆ, ನಿಮ್ಮ ಜಂಗಮಲಿಂಗದೊಡನಾಡಿ

ಎನ್ನ ಭವಾದಿ ಭವಂಗಳು ಕೆಟ್ಟ ಕೇಡನೋಡಾ, ಚೆನ್ನಮಲ್ಲಿಕಾರ್ಜು

೧೯೨

ಗಂಡ ನೀನು ಹೆಂಡತಿಯಾನು ಮತ್ತೊಬ್ಬರಿಲ್ಲಯ್ಯಾ.

ನಿನ್ನ ಬೆಂಬಳಿಯಲಾನು ಮೆಚ್ಚಿಬಂದೆ.

ಕಂಡಕಂಡವರೆಲ್ಲ ಬಲುಹಿಂದ ಕೈಹಿಡಿದರೆ,

ಗಂಡಾ, ನಿನಗೆ ಸೈರಣೆಯೆಂತಾಯಿತ್ತು ಹೇಳಾ ?

ಚೆನ್ನಮಲ್ಲಿಕಾರ್ಜುನಯ್ಯಾ,

ನಿನ್ನ ತೋಳಮೇಲಣವಳನನ್ಯರೆಳದೊಯ್ಯುವರೆ

ನೋಡುತಿಹುದುಚಿತವೆ ಕರುಣಿಗಳರಸಾ ? || ೧೯೨ ||

೧೯೩

ಗಂಡ ಮನೆಗೆ ಒಡೆಯನಲ್ಲ ;

ಹೆಂಡತಿ ಮನೆಗೆ ಒಡತಿಯೇ ? ಒಡತಿಯಲ್ಲ.

ಗಂಡಹೆಂಡಿರ ಸಂಬಂಧವಿಲ್ಲಯ್ಯಾ ,

ಗಂಡುಗಲಿಯೇ ಚೆನ್ನಮಲ್ಲಿಕಾರ್ಜುನಾ

ನೀ ಮನೆಯೊಡೆಯನೆಂದು ನಾ ದುಡಿವೆ ತೊತ್ತುಗೆಲಸವನು.|| ೧೯ ||

ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ,

ಕಡೆಯಲಿದ್ದಾಡುವ ಹದ್ದು ಬಲ್ಲುದೆ ಅಯ್ಯಾ ?

ನದಿಯ ಗುಂಪ ತಾವರೆ ಬಲ್ಲುದಲ್ಲದೆ,

ಕಡೆಯಲಿದ್ದ ಹೊನ್ನಾವರಿಕೆ ಬಲ್ಲುದೆ ಅಯ್ಯಾ ?

ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೆ,

ಕಡೆಯಲಿದ್ದಾಡುವ ನೊರಜು ಬಲ್ಲುದೆ ಅಯ್ಯಾ ?

ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ನಿಲವ ನೀವೆಬರಲ್ಲದ

ಈ ಕೋಣನ ಮೈಮೇಲಣ ಸೊಳ್ಳೆಗಳತ್ತ ಬಲ್ಲವಯ್ಯಾ ? || ೧೯೪

ಗಟ್ಟಿದುಪ್ಪ ತಿಳಿದುಪ್ಪಕ್ಕೆ ಹಂಗುಂಟೆ ಅಯ್ಯಾ ?

ದೀಪಕ್ಕೆ ದೀಪ್ತಿಗೆ ಭೇದವುಂಟೆ ಅಯ್ಯಾ ?

ಅಂಗಕ್ಕೆ ಆತ್ಮಂಗೆ ಭಿನ್ನವುಂಟೆ ಅಯ್ಯಾ ?


೫೮
ಶಿವಶರಣೆಯರ ವಚನಸಂಪುಟ

ಎನ್ನಂಗವನು ಶ್ರೀಗುರು ಮಂತ್ರವಮಾಡಿ ತೋರಿದನಾಗಿ,

ಸಾವಯಕ್ಕೂ ನಿರವಯಕ್ಕೂ ಭಿನ್ನವಿಲ್ಲವಯ್ಯಾ.

ಚೆನ್ನಮಲ್ಲಿಕಾರ್ಜುನದೇವರ ಬೆರಸಿ

ಮತಿಗೆಟ್ಟವಳನೇತಕ್ಕೆ ನುಡಿಸುವಿರಯ್ಯಾ ? || ೧೯ ||

೧೯೬

ಗಿರಿಯಲಲ್ಲದೆ ಹುಲ್ಲು ಮೊರಡಿಯಲ್ಲಾಡುವುದೆ ನವಿಲು ?

ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸ ?

ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ ?

ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ ?

ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ

ಅನ್ಯಕ್ಕೆಳಸುವುದೆ ಎನ್ನ ಮನ ?

ಪೇಳಿರೆ, ಕೆಳದಿಯರಿರಾ ! || ೧೯ ||

೧೯೭

ಗಿರಿಯೊಳು ಮನದೊಳು ಗಿಡಗಿಡದತ್ತ

ದೇವ, ಎನ್ನದೇವ, ಬಾರಯ್ಯಾ ,

ತೋರಯ್ಯಾ ನಿಮ್ಮ ಕರುಣವನೆಂದು,

ನಾನು ಅರಸುತ್ತ ಅಳಲುತ್ತ ಕಾಣದೆ

ಸುಯಿದು ಬಂದು ಕಂಡೆ.

ಶರಣರ ಸಂಗದಿಂದ ಅರಸಿ ಹಿಡಿದಿಹೆನಿಂದು

ನೀನಡಗುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಾ, || ೧೯೭ ||

೧೯೮ |

ಗುಣ ದೋಷಸಂಪಾದನೆಯ ಮಾಡುವನ್ನಕ್ಕ

ಕಾಮದ ಒಡಲು,ಕ್ರೋಧದ ಗೊತ್ತು, ಲೋಭದ ಇಕ್ಕೆ ,

ಮೋಹದ ಮಂದಿರ, ಮದದಾವರಣ, ಮತ್ಸರದ ಹೊದಕೆ.

ಆ ಭಾವವರತಲ್ಲದೆ

|| ೧೯೮ .
ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣಾ ||

೧೯೯

ಗುರು ತನ್ನ ವಿನೋದಕ್ಕೆ ಗುರುವಾದ

ಗುರು ತನ್ನ ವಿನೋದಕ್ಕೆ ಲಿಂಗವಾದ


೫೯
ಅಕ್ಕಮಹಾದೇವಿಯ ವಚನಗಳು

ಗುರು ತನ್ನ ವಿನೋದಕ್ಕೆ ಜಂಗಮವಾದ

ಗುರು ತನ್ನ ವಿನೋದಕ್ಕೆ ಪಾದೋದಕವಾದ

ಗುರು ತನ್ನ ವಿನೋದಕ್ಕೆ ಪ್ರಸಾದವಾದ

ಗುರು ತನ್ನ ವಿನೋದಕ್ಕೆ ವಿಭೂತಿಯಾದ

ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ

ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ.

ಇಂತೀ ಭೇದವನರಿಯದೆ,

ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿರುದ್ರಾಕ್ಷಿ

ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು.

ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ

ಅಂಗೈಯಲ್ಲಿರ್ದ ಲಿಂಗವು ಜಾರಿತ್ತು .

ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು

ಭವಹೇತುಗಳ ಮಾಡುವನಯ್ಯಾ .

ಇಷ್ಟಲಿಂಗದಲ್ಲಿ ನೈಪೈ ನಟ್ಟು ಬಿಟ್ಟು ವಿಧವ ಮರಳಿ ಹಿಡಿಯದೆ


|| ೧೯೯ ||
ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನ.

೨೦೦

ಗುರುಪಾದತೀರ್ಥವ ಮಂಗಳ ಮಜ್ಜನವೆನಗೆ.

ವಿಭೂತಿಯೆ ಒಳಗುಂದದರಿಷಿಣವೆನಗೆ

ದಿಗಂಬರವೆ ದಿವ್ಯಾಂಬರವೆನಗೆ.

ಶಿವಭಕ್ತರ ಪಾದರೇಣುವೆ ಅನುಲೇಪನವೆನಗೆ.

ರುದ್ರಾಕ್ಷಿಯೆ ಮೈದೊಡಿಗೆಯೆನಗೆ.

ಶರಣರ ಪಾದರಕ್ಷೆಯ ಶಿರದಲ್ಲಿ ತೊಂಡಿಲುಬಾಸಿಗವೆನಗೆ.

ಚೆನ್ನಮಲ್ಲಿಕಾರ್ಜುನನ ಮದವಳಿಗೆಗೆ

ಬೇರೆ ಶೃಂಗಾರವೇಕೆ ಹೇಳಿರೆ ಅವ್ವಗಳಿರಾ ! || ೨೦೦ ||

೨೦೧

ಗುರುವಿನ ಕರುಣದಿಂದ ಲಿಂಗವ ಕಂಡೆ, ಜಂಗಮನ ಕಂಡೆ.

ಗುರುವಿನ ಕರುಣದಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ.

ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಯೋಷ್ಠಿಯ ಕಂಡೆ.

ಚೆನ್ನಮಲ್ಲಿಕಾರ್ಜುನಯ್ಯಾ ,
ಶಿವಶರಣೆಯರ ವಚನಸಂಪುಟ

ನಾ ಹುಟ್ಟಲೊಡನೆ ಶ್ರೀಗುರು ವಿಭೂತಿಯ ಪಟ್ಟವಕಟ್ಟಿ

ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು. || ೨೦೧ ||

೨೦೨

ಗುರುವೆಂಬ ತೆತ್ತಿಗನು

ಲಿಂಗವೆಂಬಲಗನು ಮನನಿಷ್ಠೆಯೆಂಬ ಕೈಯಲ್ಲಿ ಕೊಡಲು,

ಕಾದಿದೆ ಗೆಲಿದೆ ಕಾಮನೆಂಬವನ,

ಕ್ರೋಧಾದಿಗಳು ಕೆಟ್ಟು , ವಿಷಯಂಗಳೋಡಿದವು.

ಅಲು ಎನ್ನೋಳುನಟ್ಟು ಆನಳಿದ ಕಾರಣ

ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ. || ೨೦೨ ||

೨೦೩

ಗುರುವ ತೆತ್ತಿಗನಾದ,

ಲಿಂಗವೆ ಮದುವಣಿಗನಾದ, ನಾನೆ ಮದುವಳಿಗೆಯಾದೆನು.

ಈ ಭುವನವೆಲ್ಲರಿಯಲು ಅಸಂಖ್ಯಾತರೆನಗೆ ತಾಯಿತಂದೆಗಳು.

ಕೊಟ್ಟರು ಸಾದೃಶ್ಯವಪ್ಪ ವರನ ನೋಡಿ.

ಇದು ಕಾರಣ ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ.

ಮಿಕ್ಕಿನಲೋಕದವರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೆ. || ೨೦ ||

೨೦೪

ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ಯುದು.

ಕಾಗೆ ಕಣ್ಣ ಕಾಣಲರಿಯದೆ ಶಶಿಯ ಬಯ್ಯುದು.

ಕುರುಡ ಕಣ್ಣ ಕಾಣಲರಿಯದೆ ಕನ್ನಡಿಯ ಬಯ್ಯನು.

ಇವರ ಮಾತೆಲ್ಲವುಸಹಜವೆ

ನರಕಸಂಸಾರದಲ್ಲಿ ಹೊದಕುಳಿಗೊಳುತ್ತ

ಶಿವನಿಲ್ಲ ಮುಕ್ತಿಯಿಲ್ಲ , ಹುಸಿಯೆಂದಡೆ

ನರಕದಲ್ಲಿಕ್ಕದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯ || ?೨೦೪ ||

- ೨೦೫

ಘನವ ಕಂಡೆ, ಅನುವ ಕಂಡೆ,

ಆಯತ ಸ್ವಾಯತ ಸನ್ನಿಹಿತ ಸುಖವ ಕಂಡೆ.

ಅರಿವರಿದು ಮರಹ ಮರೆದೆ.

ಕುರುಹಿನ ಮೋಹಮೊರೆಗೆಡದೆ
೬೧
ಅಕ್ಕಮಹಾದೇವಿಯ ವಚನಗಳು

ಚೆನ್ನಮಲ್ಲಿಕಾರ್ಜುನಾ,

ನಿಮ್ಮನರಿದು ಸೀಮೆಗೆಟ್ಟೆನು. || ೨೦ ||

೨೦೬

ಚಂದನವ ಕಡಿದು ಕೊರೆದು ತೇದಡೆ

ನೊಂದೆನೆಂದು ಕಂಪ ಬಿಟ್ಟಿತ್ತೆ ?

ತಂದು ಸುವರ್ಣವ ಕಡಿದೊರೆದಡೆ

ಬೆಂದು ಕಳಂಕ ಹಿಡಿಯಿತ್ತೆ ?

ಸಂದುಸಂದು ಕಡಿದ ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ,

ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ ?

ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು

ನಿಮಗೇ ಹಾನಿ.

ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ ,

ನೀ ಕೊಂದಡೆಯೂ ಶರಣೆಂಬುದ ಮಾಣೆ. || ೨೦೬ ||

೨೦೭

ಚಂದ್ರಕಾಂತದ ಶಿಲೆಗೆ ಒಂದು ಗಜ ಹೋರುವಂತೆ

ತನ್ನ ನೆಳಲಿಂಗೆ ತಾನೆ ಹೋರಿ ಸಾವಂತೆ

ಆನೆಯ ಗತಿ ಆನೆಯ ಮತಿ.

ಆನೆಯಹುದು, ಆನೆಯಲ್ಲ , ಅದನೇನೆಂಬೆ ?

ನೀನೆನ್ನ ಕರಸ್ಥಲದಲ್ಲಿ ಸಿಕ್ಕಿದೆಯಾಗಿ ನೀ ನಾನೆಂಬ ಭ್ರಾಂತೇಕೆ ?

ನಾನು ನೀನಲ್ಲದ ತೆರಹಿಲ್ಲ , ಚೆನ್ನಮಲ್ಲಿಕಾರ್ಜುನಾ. || ೨೦೭ ||

೨೦೮

ಚಕ್ರ ಬೆಸಗೆಯ್ಯಡೆ ಅಲಗಿನ ಹಂಗೇಕೆ ?

ಮಾಣಿಕ್ಯದ ಬೆಳಗುಳ್ಳಡೆ ದೀಪದ ಹಂಗೇಕೆ ?

ಪರುಷಕೈಯ್ಯಲುಳ್ಳಡೆ ಸಿರಿಯ ಹಂಗೇಕೆ ?

ಕಾಮಧೇನು ಕರೆವಡೆ ಕರುವಿನ ಹಂಗೇಕೆ ?

ಎನ್ನ ದೇವ ಚೆನ್ನಮಲ್ಲಿಕಾರ್ಜುನಲಿಂಗವು

ಕರಸ್ಥಳದೊಳಗುಳ್ಳಡೆ ಇನ್ನಾವ ಹಂಗೇಕೆ ? || ೨೦೮ ||

೨೦೯

ಚರಾಚರಾತ್ಮಕ ಪ್ರಪಂಚವೆಲ್ಲ

ಶಿವನ ಚಿದ್ದರ್ಭದಿಂದುಯಿಸಿಪ್ಪವೆಂದು,
ಶಿವಶರಣೆಯರ ವಚನಸಂಪುಟ

ಶಿವಾಭಿನ್ನತ್ವದಿಂ ಸಕಲಪ್ರಾಣಿಗಳಲ್ಲಿ ತನ್ನಾತ್ಮಚೇತನವ

ತನ್ನಲ್ಲಿ ಸಕಲ ಪ್ರಾಣಿಗಳ ಆತ್ಮ ಚೇತನವ ಕಂಡು,

ದಯಾಪರತ್ವವನುಳ್ಳ ಸರ್ವಜ್ಞತಾ ಶಕ್ತಿಯನು

ಭಕ್ತಿಸ್ಥಲದಲ್ಲಿ ಪಡೆವುದು ನೋಡಾ.

ತನಗೆ ಬಂದ ಅಪವಾದ ನಿಂದೆ ಎಡರಾಪುಗಳಲ್ಲಿ ಎದೆಗುಂದದೆ

ಬಪ್ಪ ಸುಖ ದುಃಖ ಖೇದ ಹರ್ಷಾದಿಗಳು

ಶಿವಾಜ್ಞೆಯಹುದೆಂದು ಪರಿಣತನಪ್ಪ ತೃಪ್ತಿಯ ಶಕ್ತಿಯನ್ನು

ಮಾಹೇಶ್ವರಸ್ಥಲದಲ್ಲಿ ಪಡೆವುದು ನೋಡಾ.

ದೇಹಾದಿ ಆದಿ ಪ್ರಪಂಚಕ್ಕೆ ಮೂಲಿಗನಾದ

ಅನಾದಿ ಪರಶಿವನು ಪ್ರಸನ್ನತ್ವವನುಂಟುಮಾಡುವ

ಅನಾದಿ ಬೋಧಶಕ್ತಿಯನು

ಪ್ರಸಾದಿಸ್ಥಲದಲ್ಲಿ ಪಡೆವುದು ನೋಡಾ.

ಅಂತಪ್ಪ ದೇಹಾದಿ ಪ್ರಪಂಚದ ಚಲನವಲನವು

ತನ್ನಾಶ್ರಯದಲ್ಲಿ ನಡೆದು ತಾನು ಆವುದನ್ನೂ ಆಶ್ರಯಿಸದೆ

ಸರ್ವಸ್ವತಂತ್ರ ತಾನೆಂಬರಿವನುಂಟುಮಾಡುವ

ಸ್ವತಂತ್ರ ಶಕ್ತಿಯನ್ನು ಪ್ರಾಣಲಿಂಗಿಸ್ಥಲದಲ್ಲಿ ಪಡೆವುದು ನೋಡಾ.

ತನ್ನಾಶ್ರಯವ ಪಡೆದ ದೃಶ್ಯಮಾನ ದೇಹಾದಿ ಜಗವೆಲ್ಲ ಅನಿತ್ಯವೆಂಬ

ಆ ದೃಶ್ಯಮಾನದೇಹಾದಿಗಳ ಮೂಲೋತ್ಪತ್ತಿಗಳಿಗೆ

ಕಾರಣನಪ್ಪ ಪತಿಪರಶಿವಲಿಂಗವೇ ನಿತ್ಯವೆಂಬರಿವನುಂಟುಮಾಡುವ

ಅಲುಪ್ತ ಶಕ್ತಿಯನು ಶರಣಸ್ಥಲದಲ್ಲಿ ಪಡೆವುದು ನೋಡಾ.

ಅಂಗಲಿಂಗಗಳ ಸಂಯೋಗವ ತೋರಿ,

ಅಖಂಡ ಪರಶಿಲಿಂಗೈಕ್ಯವನುಂಟುಮಾಡಿಕೊಡುವ

ಅನಂತ ಶಕ್ತಿಯನು ಐಕ್ಯಸ್ಥಲದಲ್ಲಿ ಪಡೆವುದು ನೋಡಾ,

ಇದಕ್ಕೆ ಶಿವರಹಸ್ಯೆ :

“ಯಕ್ತಿಸ್ಥಲಮಿತ್ಯಾಹುಸ್ತತ್ಸರ್ವಜ್ಞತ್ವಮಿತೀರ್ಯತೇ |
ಯನ್ಮಾಹೇಶ್ವರಂ ನಾಮ ಸಾ ತೃಪ್ತಿರ್ಮಮ ಶಾಂಕರಿ ||

ಯತ್ನಸಾದಾಭಿದಂ ಸ್ಟಾನಂ ತದ್ರೋಧೋ ನಿರಂಕುಶಃ |

ಯತ್ಸಾಣಲಿಂಗಕಂ ನಾಮ ತತ್ತ್ವಾತಂತ್ರ್ಯಮುದಾಹೃತಂ ||

ಯದಸ್ತಿ ಶರಣಂ ನಾಮ ಹೈಲುಪ್ತಾ ಶಕ್ಕಿರುಚ್ಯತೇ |

ಯದೈಕ್ಯಸ್ಥಾನಮೂರ್ಧನ್ಹಾ ಹ್ಯನಂತಾಶಕ್ಕಿರುಚ್ಯತೇ ||”

ಎಂದುದಾಗಿ,
ಅಕ್ಕಮಹಾದೇವಿಯ ವಚನಗಳು

ಇಂತಪ್ಪ ಷಟ್‌ಸ್ಥಲಗಳಲ್ಲಿ ಪಕ್ಷಿಧ ಶಕ್ತಿಗಳ

ಸ್ಥಳಕುಳಂಗಳ ತಿಳಿದು, ಷಧ ಲಿಂಗಗಳಲ್ಲಿ

ಧ್ಯಾನ ಪೂಜಾದಿಗಳಿಂದ ಅಂಗಗೊಂಡು

ಭವದ ಬಟ್ಟೆಯ ಮೆಟ್ಟಿ ನಿಂದಲ್ಲದೆ ಷಟ್‌ಸ್ಥಲಬ್ರಹ್ಮಗಳಾಗರು.

ಇಂತಲ್ಲದೆ ಅಪವಾದ ನಿಂದೆಗಳ ಪರರ ಮೇಲೆಕಾಣದೆ ಹೊರಿಸುತ್ತ

ಪರದಾರ ದಾಶಿ ವೇಶಿ ಸೂಳೆಯರಕೂಡಿ ಭುಂಜಿಸಿ

ತೊಂಬತೆಂಬ ಹೇಸಿಮೂಳರು

ಪೋತರಾಜ, ಜೋಗಿ, ಕ್ಷಪಣರಂತೆ

ಜಟಾ, ತುರುಬು, ಬೋಳುಮುಂಡೆಗೊಂಡು

ಕೂಳಿಗಾಗಿ ತಿರುಗುವ ಮೂಳ ಚುಕ್ಕೆಯರ

ವಿರಕ್ತ ಷಟ್‌ಸ್ಥಲಬ್ರಹ್ಮಗಳೆನಬಹುದೇನಯ್ಯ ?

ಅಂತಪ್ಪ ಅನಾದಿ ಷಟ್‌ಸ್ಥಲಬ್ರಹ್ಮದ ಷಡ್ತಿಧಶಕ್ತಿಯನರಿದು

ವಿರಕ್ತ ಜಂಗಮ ಷಟ್‌ಸ್ಥಲ ಬಾಲಬ್ರಹ್ಮ ನಿರಾಭಾರಿಯಾದ

ಚೆನ್ನಬಸವಣ್ಣನಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ

ಚೆನ್ನಮಲ್ಲಿಕಾರ್ಜುನಾ. || ೨೦೯ ||

೨೧೦

ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ ಚಿನ್ನಕ್ಕರಿಸಿನವ ಕೊಳ್ಳಿರಾ.

ಎಮ್ಮ ನಲ್ಲನ ಮೈಯ ಹತ್ತುವ ಅರಿಸಿನವಕೊಳ್ಳಿರವ್ವಾ .

ಒಳಗುಂದದರಿಸಿನವ ಮಿಂದು

ಚೆನ್ನಮಲ್ಲಿಕಾರ್ಜುನನ ಅಪ್ಪಿರವ್ವಾ . || ೨೧೦ ||

೧೧

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ,

ನೀವುಕಾಣಿರೆ, ನೀವು ಕಾಣಿರೆ.

ಸರವೆ ಪಾಡುವಕೋಗಿಲೆಗಳಿರಾ ,

ನೀವುಕಾಣಿರೆ, ನೀವುಕಾಣಿರೆ.

ಎರಗಿ ಬಂದಾಡುವ ತುಂಬಿಗಳಿರಾ,

ನೀವುಕಾಣಿರೆ, ನೀವುಕಾಣಿರೆ.

ಕೊಳದತಡಿಯೊಳಾಡುವ ಹಂಸಗಳಿರಾ,

ನೀವುಕಾಣಿರೆ, ನೀವುಕಾಣಿರೆ.

ಗಿರಿ ಗಹ್ವರದೊಳಗಾಡುವ ನವಿಲುಗಳಿರಾ,


ಶಿವಶರಣೆಯರ ವಚನಸಂಪುಟ

ನೀವುಕಾಣಿರೆ, ನೀವುಕಾಣಿರೆ.

ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ . || ೨೧೧ ||

೨೧೨

- ಜಂಗಮದ ಕೈ ಹೊಯ್ದು ಹೊಯ್ತು ನಕ್ಕು ಕೆಟ್ಟರಯ್ಯ !

ಸರಸದಲ್ಲಿ ಮುಟ್ಟಿ ಪೂಜಿಸುವರೆ ನಿಮಗೆ ಲಿಂಗವಿಲ್ಲ .

ಹುತ್ತಿನೊಳಗೆ ಕೈಯನಿಕ್ಕೆ ಸರ್ಪದಷ್ಟವಾದರೆ

ಮತ್ತೆ ಗಾರುಡವುಂಟೆ ಚೆನ್ನಮಲ್ಲಿಕಾರ್ಜುನಾ ? || ೨೧೨ ||

೨೧೩

ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ,

ಜಂಗಮವೆನ್ನ ಪುಣ್ಯದ ಫಲ, ಜಂಗಮವೆನ್ನ ನಿಧಿವಿಧಾನ ,

ಜಂಗಮವೆನ್ನ ಹರುಷದ ಮೇರೆ.

ಚೆನ್ನಮಲ್ಲಿಕಾರ್ಜುನಾ,

ಜಂಗಮದ ತಿಂಥಿಣಿಯಲ್ಲಿ ಓಲಾಡುವೆನು. || ೨೧೩ ||

೨೧೪

ಜಲದ ಮಂಟಪದ ಮೇಲೆಉರಿಯ ಚಪ್ಪರವನಿಕ್ಕಿ ,

ಆಲಿಕಲ್ಲ ಹಸೆಯ ಹಾಸಿ ಬಾಸಿಗವ ಕಟ್ಟಿ ,

ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು.

ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ .

ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ

ಮದುವೆಯ ಮಾಡಿದರೆಲೆ ಅವ್ವಾ . || ೨೧೪ ||

೨೧೫

ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ,

ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ.

ತನ್ನ ಮನೆಯಲೊಂದು ಶಿಶು ಸತ್ತಡೆ

ಅದಕ್ಕೆ ಮರುಗುವಂತೆ ಅವರೇಕೆ ಮರುಗ ?

ಅದೆಂತೆಂದಡೆ :

“ಸ್ವಾತ್ಮಾನಮಿತರಂ ಚೇತಿ ಭಿನ್ನತಾ ನೈವ ದೃಶ್ಯತಾಂ |


ಸರ್ವಂ ಚಿಜ್ಯೋತಿರೇವತಿ ಯಃ ಪಶ್ಯತಿ ಸ ಪಶ್ಯತಿ||”

ಎಂದುದಾಗಿ,
೬೫
ಅಕ್ಕಮಹಾದೇವಿಯ ವಚನಗಳು

ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ.

ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು

ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ ? || ೨೧೫ ||

೨೧೬

ಜೀವೇಶ್ವರಗಾಶ್ರಯವಾದ ಸೂಕ್ಷ್ಮದೇಹಮಧ್ಯದಲ್ಲಿ

ಷಟ್‌ಚಕ್ರಂಗಳಲ್ಲಿ ಹುಟ್ಟಿರ್ದ ಷಟ್ಕಮಲಂಗಳನು

ಆಧಾರ ತೊಡಗಿ ಆಜ್ಞಾಚಕ್ರವೇ ಕಡೆಯಾಗುಳ್ಳ

ಬ್ರಹ್ಮಾದಿಗಳ ಸ್ಥಾನಂಗಳ ಗುರೂಪದೇಶದಿಂದೆ ಭಾವಿಸುವುದು.

ಆಜ್ಞಾಚಕ್ರದತ್ತಣಿಂದೆ ಊರ್ಧ್ವ ಭಾಗವಾದ

ಬ್ರಹ್ಮರಂಧ್ರದಲ್ಲಿಯಾಯಿತ್ತಾದಡೆ

ಸಹಸ್ರದಳ ಕಮಲವನು ಭಾವಿಸುವುದು.

ಆ ಸಹಸ್ರದಳ ಕಮಲದಲ್ಲಿ ನಿರ್ಮಲವಾದ

ಚಂದ್ರಮಂಡಲವನು ಧ್ಯಾನಿಸುವುದು.

ಆ ಚಂದ್ರಮಂಡಲದ ಮಧ್ಯದಲ್ಲಿ ವಾಲಾಗ್ರ ಮಾತ್ರದೋಪಾದಿಯಲ್ಲಿ

ಪರಮ ಸೂಕ್ಷ್ಮರಂಧ್ರವನ್ನು ಉಪದೇಶದಿಂದರಿವುದು.

ಆ ಸೂಕ್ಷ್ಮರಂಧ್ರವನೆಕೈಲಾಸಸ್ಥಾನವಾಗಿ ಅರಿದು

ಆ ಕೈಲಾಸದಲ್ಲಿ ಇರುತಿರ್ದ ಪರಮೇಶ್ವರನನು

ಸಮಸ್ತ ಕಾರಣಂಗಳಿಗೆ ಕಾರಣವಾಗಿದ್ದಾತನಾಗಿ

ಧ್ಯಾನಿಸುವುದಯ್ಯಾ ಶ್ರೀ ಚೆನ್ನಮಲ್ಲಿಕಾರ್ಜುನದೇವಾ. |

೨೧೭

ಜ್ಞಾನದ ಕಾರಣಾಂಗವೆ ಭಕ್ತಿಯು.

ಭಕ್ತಿಯ ಮಹಾಕಾರಣಾಂಗವೆ ಜ್ಞಾನವು.

ಭಕ್ತಿ ಜ್ಞಾನವೆಂಬುದು ಕಾಕಾಕ್ಷಿಯಂತೆ.

ಭಕ್ತಿ ಜ್ಞಾನವೆಂಬುದು ಎನ್ನ ಮೋಹದ

ಚೆನ್ನಮಲ್ಲಿಕಾರ್ಜುನಾ ನಿಮ್ಮಂತೆ. || ೨೧೭ ||

೨೧೮

ತನು ಕರಗದವರಲ್ಲಿ

ಮಜ್ಜನವನೊಲ್ಲೆಯಯ್ಯಾ ನೀನು.

ಮನ ಕರಗದವರಲ್ಲಿ
ಶಿವಶರಣೆಯರ ವಚನಸಂಪುಟ

ಪುಷ್ಪವನೊಲ್ಲೆಯಯ್ಯಾ ನೀನು.

ಹದುಳಿಗರಲ್ಲದವರಲ್ಲಿ

ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.

ಅರಿವು ಕಣ್ಣೆರೆಯದವರಲ್ಲಿ

ಆರತಿಯನೊಲ್ಲೆಯಯ್ಯಾ ನೀನು.

ಭಾವಶುದ್ಧವಿಲ್ಲದವರಲ್ಲಿ

ಧೂಪವನೊಲ್ಲೆಯಯ್ಯಾ ನೀನು.

ಪರಿಣಾಮಿಗಳಲ್ಲದವರಲ್ಲಿ

ನೈವೇದ್ಯವನೊಲ್ಲೆಯಯ್ಯಾ ನೀನು.

ತ್ರಿಕರಣ ಶುದ್ಧವಿಲ್ಲದವರಲ್ಲಿ

ತಾಂಬೂಲವನೊಲ್ಲೆಯಯ್ಯಾ ನೀನು.

ಹೃದಯಕಮಲ ಅರಳದವರಲ್ಲಿ

ಇರಲೊಲ್ಲೆಯಯ್ಯಾ ನೀನು.

ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ


|| ೨೧೮ ||
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ ?

- ೨೧೯

ತನು ನಿಮ್ಮ ರೂಪಾದ ಬಳಿಕ

ಆರಿಗೆ ಮಾಡುವೆ ?

ಮನ ನಿಮ್ಮ ರೂಪಾದ ಬಳಿಕ

ಆರ ನೆನೆವೆ ?

ಪ್ರಾಣ ನಿಮ್ಮ ರೂಪಾದ ಬಳಿಕ

ಆರನಾರಾಧಿಸುವೆ ?

ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ

ಆರನರಿವೆ ?

ಚೆನ್ನಮಲ್ಲಿಕಾರ್ಜುನಯ್ಯಾ,

ನಿಮ್ಮಿಂದ ನೀವೆಯಾದಿರಾಗಿ
|| ೨೧೯ ||
ನಿಮ್ಮನೆ ಅರಿವುತ್ತಿರ್ದೆನು.

೨೨೦

ತನು ಮೀಸಲಾಗಿ, ಮನ ಮೀಸಲಾಗಿ,

ಭಾವವಚ್ಚುಗೊಂಡಿಪ್ಪುದಪ್ಪಾ .
ಅಕ್ಕಮಹಾದೇವಿಯ ವಚನಗಳು

ಅಚ್ಚುಗನ ಸ್ನೇಹ, ನಿಚ್ಚಟದ ಮೆಚ್ಚುಗೆ,

ಬೆಚ್ಚು ಬೇರಾಗದ ಭಾವವಾಗೆ


|| ೨೨೦ ||
ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡಿಪ್ಪನವ್ಯಾ ,

೨೨೧

ತನುವನುವಾಯಿತ್ತು, ಮನವನುವಾಯಿತ್ತು ,

ಪ್ರಾಣವನುವಾಯಿತ್ತು.

ಮುನಿದು ಬಾರದ ಪರಿ ಇನ್ನೆಂತು ಹೇಳಾ ?

ಎನ್ನ ಪ್ರಾಣದಲ್ಲಿ ಸಂದು, ಎನ್ನ ಮನಕ್ಕೆ ಮನವಾಗಿ ನಿಂದ

ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಕಾಣದಡೆ

ಆನೆಂತು ಬದುಕುವೆನಯ್ಯಾ ? || ೨೨೧ ||

೨೨೨

ತನುವನೆಲ್ಲವ ಜರಿದು ಮನವ ನಿಮ್ಮೊಳಗಿರಿಸಿ,

ಘನಸುಖದಲೋಲಾಡುವ ಪರಿಯ ತೋರಯ್ಯಾ ಎನಗೆ.

ಭಾವವಿಲ್ಲದ ಬಯಲಸುಖವು ಭಾವಿಸಿದಡೆಂತಹುದು

ಬಹುಮುಖರುಗಳಿಗೆ ?

ಕೇಳಯ್ಯಾ ,ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವಾ

ನಾನಳಿದು ನೀನುಳಿದ ಪರಿಯ ತೋರಯ್ಯಾ ಪ್ರಭುವೆ. || ೨೨೨ ||

೨೨೩

ತನುವಬೇಡಿದಡೆ ತನುವಕೊಟ್ಟು ಶುದ್ಧವಪ್ಪ .

ಮನವ ಬೇಡಿದಡೆ ಮನವಕೊಟ್ಟು ಶುದ್ಧವಪ್ಪ .

ಧನವ ಬೇಡಿದಡೆ ಧನವಕೊಟ್ಟು ಶುದ್ಧವಪ್ಪೆ .

ನೀನಾವುದ ಬೇಡಿದಡೂ ಓಸರಿಸಿದಡೆ,

ಕೈವಾರಿಸಿದಡೆ ಹಿಡಿದು ಮೂಗಕೊಯಿ.

ಎನ್ನ ಕಲಿತನದ ಬಿನ್ನಪವ ಕಡೆತನಕ ನಡೆಸದಿರ್ದಡೆ

ತಲೆದಂಡ ಕಾಣಾ ಚೆನ್ನಮಲ್ಲಿಕಾರ್ಜುನಾ. || ೨೨ ||

೨೨೪

ತನುವ ಮೀರಿತ್ತು , ಮನವ ಮೀರಿತ್ತು ,


ಘನವ ಮೀರಿತ್ತು .
ಶಿವಶರಣೆಯರ ವಚನಸಂಪುಟ

ಅಲ್ಲಿಂದ ಭಾವುಕರಿಲ್ಲವಾಗಿ ತಾರ್ಕಣೆಯಿಲ್ಲ.

ಚೆನ್ನಮಲ್ಲಿಕಾರ್ಜುನಯ್ಯನ ಬೆರಸಲಿಲ್ಲದ ನಿಜತತ್ವವು.


|| ೨೨೪ ||

೨೨೫

ತನುವಿಕಾರದಿಂದ ಸವದು ಸವದು,

ಮನವಿಕಾರದಿಂದ ನೊಂದು ಬೆಂದವರೆಲ್ಲಾ ಬೋಳಾಗಿ;

ದಿನ ಜವ್ವನಂಗಳು ಸವದು ಸವದು,

ಜಂತ್ರ ಮುರಿದು ಗತಿಗೆಟ್ಟವರೆಲ್ಲಾ ಬೋಳಾಗಿ;

“ಹೇಸಿ, ಒಲ್ಲೆ ಸಂಸಾರವನೆಂಬರು

ವೈರಾಗ್ಯವ ಬಲ್ಲವರಲ್ಲ ಕೇಳವ್ವಾ .

ಕನ್ನೆಯಳಿಯದ ಜವ್ವನ ಸತಿಗಲ್ಲದೆ

ಚೆನ್ನಮಲ್ಲಿಕಾರ್ಜುನದೇವಗಲ್ಲ ಕೇಳವ್ವಾ . || ೨೨ ||

೨೨೬

ತನುವಿಡಿದ ಇಂದ್ರಿಯಸುಖ

ಸಿರಿಯಂತೆ ತೋರಿ ಅಡಗುತ್ತಲಿದೆ.

ಗಗನದೊಡ್ಡಣೆಯಂತೆ ತನು;

ನೋಡನೋಡಲನುಮಾನವಿಲ್ಲದೆ ಹರಿದು ಹೋಗುತ್ತದೆ.

ಇವಾದಿಯ ಮಾಣಿಸಿ , ನಿಮ್ಮ ಘನನೆನಹಿನೊಳಿರಿಸಾ

ಚೆನ್ನಮಲ್ಲಿಕಾರ್ಜುನಯ್ಯಾ. || ೨೨೬ ||

೨೨೭

ತನುವಿನ ಸತ್ವವ ನಿಲಿಸಿತ್ತು , ಮನದ ವಿರಕ್ತಿಯ ಕೆಡಿಸಿತ್ತು .

ಘನವ ಕಾಣಲೀಯದು ದುಃಖ .

ಅರುಹಿರಿಯರ ತರಕಟ ಕಾಡಿತ್ತು .

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ || .೨೨೭ ||
ಮರೆಗೊಂಡ ಸಂಸಾರದ ತೆರೆ ಎನ್ನ ಬರಲೀಯದಯ್ಯಾ

೨೨೮

ತನುವೆಂಬ ಸಾಗರ ತುಂಬಲು,

ಮನವೆಂಬುದು ಹರುಗೋಲಾಯಿತ್ತು ಅಂಬಿಗಾ

ಎನ್ನ ಗಮ್ಮನೆ ತೆಗೆಯೋ ಅಂಬಿಗಾ.

ತೊರೆದು ದಾಂಟಿಹೆನೆಂಬ ಭರವಸ ಕರಘನ,


ಅಕ್ಕಮಹಾದೇವಿಯ ವಚನಗಳು

ಗಮ್ಮನೆ ತೆಗೆಯೋ ಅಂಬಿಗಾ

ಸಿರಿಶೈಲ ಚೆನ್ನಮಲ್ಲಿಕಾರ್ಜುನಾ
| ೨೨೮ ||
ನಿನ್ನ ಕಾಣಲು ಬಂದಿದೆ ಅಂಬಿಗಾ.

೨೨೯

ತನುಶುದ್ಧ ಮನಶುದ್ದ ಭಾವಶುದ್ಧ

ವಾದವರನೆನಗೊಮ್ಮೆ ತೋರಾ!

ನಡೆಯೆಲ್ಲ ಸದಾಚಾರ; ನುಡಿಯೆಲ್ಲ ಶಿವಾಗಮ ;

ನಿತ್ಯಶುದ್ಧರಾದವರನೆನಗೊಮ್ಮೆ ತೋರಾ!

ಕತ್ತಲೆಯ ಮೆಟ್ಟಿ ತಳವೆಳಗಾಗಿ


ಹೊರಗೋಳಗೊಂದಾಗಿ ನಿಂದ

ನಿಮ್ಮ ಶರಣರನೆನಗೊಮ್ಮೆ ತೋರಾ

ಚೆನ್ನಮಲ್ಲಿಕಾರ್ಜುನಾ ! || ೨೨೯ ||

೨೩೦

ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕೊಂಡೆನ್ನ .

ಮನ ಶುದ್ಧವಾಯಿತ್ತು ಅಸಂಖ್ಯಾತರ ನೆನದೆನ್ನ .

ಕಂಗಳು ಶುದ್ಧವಾಯಿತ್ತು ಸಕಲಗಣಂಗಳ ನೋಡಿಎನ್ನ .

ಪ್ರೋತ್ರ ಶುದ್ಧವಾಯಿತ್ತು ಅವರ ಕೀರ್ತಿಯ ಕೇಳಿ ಎನ್ನ .

ಭಾವನೆ ಎನಗಿದು ಜೀವನ ಲಿಂಗತಂದೆ.

ನೆಟ್ಟನೆ ನಿಮ್ಮ ಮನಮುಟ್ಟಿ ಪೂಜಿಸಿ

ಭವಗೆಟ್ಟೆ ನಾನು ಚೆನ್ನಮಲ್ಲಿಕಾರ್ಜುನಾ. || ೨೩೦ ||

೨೩೧

ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದಡೆ,

ತನ್ನ ಸವೆಯಲಿಲ್ಲ , ಕಳವು ದೊರೆಯಲಿಲ್ಲ !

ಬೋಬ್ಬುಲಿಯನೇರಿದ ಮರ್ಕಟನಂತೆ

ಹಣ್ಣ ಮೆಲ್ಲಲಿಲ್ಲ , ಕುಳ್ಳಿರೆ ಠಾವಿಲ್ಲ .

ನಾನು ಸರ್ವಸಂಗಪರಿತ್ಯಾಗಮಾಡಿದವಳಲ್ಲ ,

ನಿಮ್ಮ ಕೂಡಿಕುಲವಳಿದವಳಲ್ಲ , ಚೆನ್ನಮಲ್ಲಿಕಾರ್ಜುನಾ. || ೨೩೧ ||

೨೩೨

ತನ್ನ ವಿನೋದಕ್ಕೆ ತಾನೆ ಸೃಜಿಸಿದ ಸಕಲ ಜಗತ್ಯ .

ತನ್ನ ಎನೋದಕ್ಕೆ ತಾನೆ ಸುತ್ತಿದುದಕ್ಕೆ ಸಕಲ ಪ್ರಪಡನು.


ಶಿವಶರಣೆಯರ ವಚನಸಂಪುಟ

ತನ್ನ ವಿನೋದಕ್ಕೆ ತಾನೆ ತಿರುಗಿಸಿದನನಂತ ಭವದುಃಖಂಗಳಲ್ಲಿ .

ಇಂತೆನ್ನ ಚೆನ್ನಮಲ್ಲಿಕಾರ್ಜುನನೆಂಬ ಪರಶಿವನು

ತನ್ನ ಜಗದ್ವಿಲಾಸ ಸಾಕಾದ ಮತ್ತೆ

ತಾನೆ ಪರಿವನದರ ಮಾಯಾಪಾಶವನು. || ೨೩೨ ||

೨೩೩

ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ.

ಏಕೆ ? ಆತನ ಧನಕ್ಕೆ ತಂದೆಯಾದನಲ್ಲದೆ

ಆತನ ಮನಕ್ಕೆ ತಂದೆಯಾದನೆ ?

ಏಕೆ ? ಆತನ ಮನವನರಿಯನಾಗಿ, ಆತನ ಧನಕ್ಕೆ ತಂದೆಯಾದನು.

ತನ್ನಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು

ನಿಮ್ಮ ನಿಜಭಕ್ತರಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಾ.|| ೨೩೩ ||

೨೩೪

ತಲೆಯಲ್ಲಿ ನಿರಿ, ಟೊಂಕದಲ್ಲಿ ಮುಡಿ,

ಮೊಳಕಾಲಲ್ಲಿ ಕಿವಿಯೋಲೆಯ ಕಂಡೆ.

ಹರವಸದ ಉಡಿಗೆ !

ಏಕಾಂತದಲ್ಲಿ ಮುಖವಕಂಡು ಕಾಣದೆ

ಚೆನ್ನಮಲ್ಲಿಕಾರ್ಜುನನ ನೆರೆವ ಪರಿಕರ ಹೊಸತು. || ೨೩೪ ||

೨೩೫

ತಾನು ದಂಡುಮಂಡಲಕ್ಕೆ ಹೋದಹೆನೆಂದಡೆ

ನಾನು ಸುಮ್ಮನಿಹೆನಲ್ಲದೆ,

ತಾನೆನ್ನ ಕೈಯೊಳಗಿದ್ದು ತಾನೆನ್ನ ಮನದೊಳಗಿದ್ದು

ಎನ್ನ ಕೂಡದಿದ್ದಡೆ ನಾನೆಂತು ಸೈರಿಸುವೆನವ್ವಾ ?

ನೆನಪೆಂಬ ಕುಂಟಿಣಿ ಚೆನ್ನಮಲ್ಲಿಕಾರ್ಜುನನ

ನೆರಹದಿದ್ದಡೆ ನಾನೇವೆ ಸಖಿಯೆ ? || ೨೩೫ ||

೨೩೬

ತಾಯ ತೊರದು ನಾನೇನ ಮಾಡುವೆ ?

ತಂದೆಯ ತೊರದು ನಾನೇನ ಮಾಡುವೆ ?

ಎತ್ತ ಮುಂತಾಗಿ ನಡೆದು ನಾನೇನ ಮಾಡುವೆ ?


|| ೨೩೬ ||
ಚೆನ್ನಮಲ್ಲಿಕಾರ್ಜುನಾ ನೀನೊಲಿಯದನ್ನಕ್ಕರ ?
೭೧
ಅಕ್ಕಮಹಾದೇವಿಯ ವಚನಗಳು

೨೩೭

ತುಂಬಿದುದು ತುಳುಕದು ನೋಡಾ.

ನಂಬಿದುದು ಸಂದೇಹಿಸದು ನೋಡಾ.

ಒಲಿದುದು ಓಸರಿಸದುನೋಡಾ.

ನೆರೆಯರಿದುದು ಮರೆಯದುನೋಡಾ.

ಚೆನ್ನಮಲ್ಲಿಕಾರ್ಜುನಯ್ಯಾ,

ನೀನೊಲಿದ ಶರಣಂಗೆ ನಿಸ್ಸಿಮಸುಖವಯ್ಯಾ . || ೨೩೭ ||

೨೩೮

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ

ತನ್ನ ನೂಲು ತನ್ನನೆ ಸುತ್ತಿ ಸಾವಂತೆ ,

ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ ,

ಎನ್ನ ಮನದ ದುರಾಶೆಯ ಮಾಣಿಸಿ

- ನಿಮ್ಮತ್ತತೋರಾಚೆನ್ನಮಲ್ಲಿಕಾರ್ಜುನಾ. || ೨೩೮ ||

೨೩೯

ದೂರದಲ್ಲಿರ್ದನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ .

ಸಾರಿ ಬೆರಸಿ ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡಡೆ

ಎನ್ನ ಆರತವೆಲ್ಲವೂ ಲಿಂಗಾ ನಿಮ್ಮಲ್ಲಿ ನಟ್ಟಿತುನೋಡಯ್ಯಾ .

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮನುಕರಸ್ಥಲದಲ್ಲಿ ನೋಡಿ

ಕಂಗಳ ಪ್ರಾಣವಾಗಿರ್ದೆನಯ್ಯಾ . || ೨೩೯ ||

೨೪೦

ದೇವಲೋಕದವರಿಗೂ ಬಸವಣ್ಣನೆ ದೇವರು.

ಮರ್ತ್ಯಲೋಕದವರಿಗೂ ಬಸವಣ್ಣನೆ ದೇವರು.

ನಾಗಲೋಕದವರಿಗೂ ಬಸವಣ್ಣನ ದೇವರು.

ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು.

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ದೇವರು. || ೨೪೦ ||

- ೨೪೧

ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು.


ದೇಹದೊಳಗೆ ಮನ ಉಳ್ಳನ್ನಕ್ಕರ ಅಭಿಮಾನ ಬಿಡದು,
ಶಿವಶರಣೆಯರ ವಚನಸಂಪುಟ

ನೆನಹಿನ ವ್ಯಾಪ್ತಿ ಬಿಡದು.

ದೇಹ ಮನವೆರಡೂ ಇದ್ದಲ್ಲಿ ಸಂಸಾರ ಬಿಡದು.

ಸಂಸಾರವುಳ್ಳಲ್ಲಿ ಭವ ಬೆನ್ನ ಬಿಡದು.

ಭವದ ಕುಣಿಕೆಯುಳ್ಳನ್ನಕ್ಕರ ವಿಧಿವಶ ಬಿಡದು.

ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ

ದೇಹವಿಲ್ಲ , ಮನವಿಲ್ಲ , ಅಭಿಮಾನವಿಲ್ಲ ಕಾಣಾ ಮರುಳೆ, || ೨೪೧ ||

೨೪೨

ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,

ವಾಯುವಿನ ಚಲನೆ, ತರುಗುಲತಾದಿಗಳಲ್ಲಿಯ ತಳಿರು ಪುಷ್ಟ

ಷಡುವರ್ಣಂಗಳೆಲ್ಲ ಹಗಲಿನ ಪೂಜೆ.

ಚಂದ್ರಪ್ರಕಾಶ ನಕ್ಷತ್ರ ಅಗ್ನಿ ವಿದ್ಯುತ್ತಾದಿಗಳು

ದೀಪ್ತಮಯವೆನಿಸಿಪ್ಪವೆಲ್ಲ ಇರುಳಿನ ಪೂಜೆ.

ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪನಯ್ಯಾ

ಚೆನ್ನಮಲ್ಲಿಕಾರ್ಜುನಾ. | | ೨೪೨ ||

೨೪೩

ದೃಷ್ಟಿವರಿದು ಮನ ನೆಲೆಗೊಂಡುದಿದೇನೊ ?

ಆವನೆಂದರಿಯೆ ಭಾವನಟ್ಟುದಪ್ಪಾ .

ಕಳೆವರಿದು ಅಂಗ ಗಸಣೆಯಾದುದಪ್ಪಾ .


೨೪೩ ||
ಇನ್ನಾರೇನೆಂದಡೆ ಬಿಡೆನು ಚೆನ್ನಮಲ್ಲಿಕಾರ್ಜುನಲಿಂಗವ.

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ

ಆಗುಮಾಡಬಂದವರಲ್ಲ .

ಮನದ ಮೇಲೆ ಬಂದು ನಿಂದು ಜರೆದು ನುಡಿದು

ಪಥವತೋರಬಲ್ಲಡಾತನೆ ಸಂಬಂಧಿ.

ಹಾಗಲ್ಲದೆ ಅವರಿಚ್ಛೆಯ ನುಡಿದು ತನ್ನು ದರವ ಹೊರೆವ


|| ೨೪ ||
ಬಚ್ಚಣಿಗಳ ಮಚ್ಚುವನೆ ಚೆನ್ನಮಲ್ಲಿಕಾರ್ಜುನ ?

೨೪೫

ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ,

ಕೂರ್ತಡೆ ಫಲವೇನೋ ಕೂಟವಿಲ್ಲದನ್ನಕ್ಕ ?


ಅಕ್ಕಮಹಾದೇವಿಯ ವಚನಗಳು

ಇಂಬನರಿಯದ ಠಾವಿನಲ್ಲಿ ಕಣೋಟವ ಮಾಡಿದಡೆ,

ತುಂಬಿದ ತೊರೆಯ ನಡುವೆ ಮಾಮರ ಕಾತಂತೆ.

ಚೆನ್ನಮಲ್ಲಿಕಾರ್ಜುನದೇವಾ,

ದೂರದ ಸ್ನೇಹವಮಾಡಲು ಬಾರದ ಭವಕ್ಕೆ ಬಂದೆ. || ೨೪೫ ||

೨೪೬

ನಂದಿ ದೇವಂಗೆ, ಖಳ ಸಿರಿಯಾಳಂಗೆ,

ಲಿಂಗ ದಾಸಿಮಯ್ಯಂಗೆ, ಜಾಗರ ಬಸವಣ್ಣಂಗೆ,

ಆದರಿಕೆಯ ಬಿಟ್ಟು ಜೂಜನಾದರೆ ನಮ್ಮವರದು ?

ಒಬ್ಬಂಗೆ ಮಗನ ರಪಣ, ಒಬ್ಬಂಗೆ ಸೀರೆಯ ರಹಣ ,

ಒಬ್ಬಂಗೆ ತನು ಮನ ಧನದ ರಪಣ .

ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು

ಎನ್ನ ದೇವ ಚೆನ್ನಮಲ್ಲಿಕಾರ್ಜುನಾ. || ೨೪೬ ||

೨೪೭

ನಚ್ಚುಗೆ ಮನ ನಿಮ್ಮಲ್ಲಿ, ಮಚ್ಚುಗೆ ಮನ ನಿಮ್ಮಲ್ಲಿ,

ಸಲುಗುಗೆ ಮನ ನಿಮ್ಮಲ್ಲಿ ಸೋಲುಗೆ ಮನ ನಿಮ್ಮಲ್ಲಿ,

ಅಳಲುಗೆ ಮನ ನಿಮ್ಮಲ್ಲಿ, ಬಳಲುಗೆ ಮನ ನಿಮ್ಮಲ್ಲಿ,

ಕರಗುವ ಮನ ನಿಮ್ಮಲ್ಲಿ ,ಕೊರಗುಗೆ ಮನ ನಿಮ್ಮಲ್ಲಿ.

ಎನ್ನ ಪಂಚೇಂದ್ರಿಯಂಗಳು ಕಬ್ಬುನ ಉಂಡ ನೀರಿನಂತೆ


|| ೨೪೭ ||
ನಿಮ್ಮಲ್ಲಿ ಬೆರಸುಗೆ ಚೆನ್ನಮಲ್ಲಿಕಾರ್ಜುನಯ್ಯಾ,

೨೪೮

CH
ನಡೆಯದ ನುಡಿಗಡಣ , ಮಾಡದ ಕಲಿತನ,

ಚಿತ್ರದಸತಿಯ ಶೃಂಗಾರವದೇತಕ್ಕೆ ಪ್ರಯೋಜನ ?

ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು,

ಗುಣಿಯಲ್ಲದ ಅವಗುಣಿಯ ಸಂಗವದೇತಕ್ಕೆ ಪ್ರಯೋಜನ ? )

ದಯವಿಲ್ಲದ ಧರ್ಮ, ಉಭಯವಿಲ್ಲದ ಭಕ್ತಿಯು,

ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ

ಎನ್ನ ದೇವ ಚೆನ್ನಮಲ್ಲಿಕಾರ್ಜುನ ? || ೨೪೮ ||

- ೨೪೯

ನಡೆಶುಚಿ, ನುಡಿಶುಚಿ, ತನುಶುಚಿ, ಮನಶುಚಿ, ಭಾವಶುಚಿ.


ಇಂತೀ ಪಂಚ ತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ
ಶಿವಶರಣೆಯರ ವಚನಸಂಪುಟ

ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ

ಚೆನ್ನಮಲ್ಲಿಕಾರ್ಜುನಾ ! || ೨೪೯ ||

೨೫೦

ನಮಗೆ ನಮ್ಮ ಲಿಂಗದ ಚಿಂತೆ, ನಮಗೆ ನಮ್ಮ ಭಕ್ತರ ಚಿಂತೆ,

ನಮಗೆ ನಮ್ಮ ಆದ್ಯರ ಚಿಂತೆ,

ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ

ಲೋಕದ ಮಾತು ನಮಗೇಕಣ್ಣಾ ? || ೨೫೦ ||

೨೫೧

ನರಜನ್ಮವತೊಡೆದು ಹರಜನ್ಮವ ಮಾಡಿದ ಗುರುವೆ ನಮೋ .

ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ .

ಭವಿಯೆಂಬುದ ತೊಡೆದು ಭಕ್ತಿ ಎಂದೆನಿಸಿದ ಗುರುವೆ ನಮೋ .

ಚೆನ್ನಮಲ್ಲಿಕಾರ್ಜುನನ ತಂದೆನ್ನ

ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ . || ೨೫೧ ||

೨೫೨

ನಾಣಮರೆಯ ನೂಲು ಸಡಿಲಲು

ನಾಚುವರು ನೋಡಾ ಗಂಡು ಹೆಣ್ಣೆಂಬ ಜಾತಿಗಳು.

ಪ್ರಾಣದೊಡೆಯ ಜಗದೊಳಗೆ ಮುಳುಗಲು ತೆರಹಿಲ್ಲದಿರಲು

ದೇವರ ಮುಂದೆ ನಾಚಲೆಡೆಯುಂಟೆ ?

ಚೆನ್ನಮಲ್ಲಿಕಾರ್ಜುನ ಜಗವೆಲ್ಲ ಕಣ್ಣಾಗಿನೋಡುತ್ತಿರಲು


|| ೨೨ ||
ಮುಚ್ಚಿ ಮರಸುವ ಠಾವಾವುದು ಹೇಳಯ್ಯಾ ?

೨೫೩

ನಾನುಣ್ಣದ ಮುನ್ನವೆ ಜಂಗಮಕ್ಕೆ

ಅಮೃತಾನ್ನಾದಿ ನೈವೇದ್ಯವ ನೀಡುವೆ.

ನಾನುಡದ ಮುನ್ನವೆ ಜಂಗಮಕ್ಕೆ

ದೇವಾಂಗಾದಿ ವಸ್ತ್ರವನುಡಿಸುವೆ.

ನಾನು ಹೂಸದ ಮುನ್ನವೆ ಜಂಗಮಕ್ಕೆ

ಸುಗಂಧಾದಿ ಪರಿಮಳದ್ರವ್ಯವ ಹೂಸುವೆ .

ನಾನು ಮುಡಿಯದ ಮುನ್ನವೆ ಜಂಗಮಕ್ಕೆ


೭೫
ಅಕ್ಕಮಹಾದೇವಿಯ ವಚನಗಳು

ಪರಿಪರಿಯ ಪುಷ್ಪವ ಮುಡಿಸುವೆ.

ನಾನು ತೊಡದ ಮುನ್ನವೆ

ಜಂಗಮಕ್ಕೆ ತೊಡಿಗೆಯ ತೊಡಿಸುವೆ .

ನಾನಾವಾವ ಭೋಗವ ಭೋಗಿಸುವದ ಜಂಗಮಕ್ಕೆ ಭೋಗಿಸಲಿತ್ತು ,

ಆ ಶೇಷಪ್ರಸಾದವ ಲಿಂಗಕ್ಕಿತ್ತು

ಭೋಗಿಸಿದ ಬಳಿಕಲಲ್ಲದೆ ಭೋಗಿಸಿದಡೆ

ಬಸವಣ್ಣಾ , ನಿಮ್ಮಾಣೆಯಯ್ಯಾ ಚೆನ್ನಮಲ್ಲಿಕಾರ್ಜುನಾ.

೨೫೪

ನಾನು ನಿನಗೊಲಿದೆ, ನೀನು ಎನಗೊಲಿದೆ.

ನೀನೆನ್ನನಗಲದಿಪ್ಪೆ, ನಾನಿನ್ನನಗಲದಿಪ್ಪೆನಯ್ಯಾ .

ನಿನಗೆ ಎನಗೆ ಬೇರೊಂದು ಠಾವುಂಟೆ ?

ನೀನು ಕರುಣಿಯೆಂಬುದ ಬಲ್ಲೆನು;

ನೀನಿರಿಸಿದ ಗತಿಯೊಳಗಿಪ್ಪವಳಾನು.

ನೀನೆ ಬಲ್ಲೆ ಚೆನ್ನಮಲ್ಲಿಕಾರ್ಜುನಾ. || ೨೫೪ ||

೨೫೫

ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ

ಜಂಗಮಕ್ಕೆ ಮಜ್ಜನವ ಮಾಡಿಸುವೆ.

ನಾನು ಸೀರೆಯನುಡುವುದಕ್ಕೆ ಮುನ್ನವೆ

ಜಂಗಮಕ್ಕೆ ದೇವಾಂಗವನುಡಿಸುವೆ.

ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೆ

ಜಂಗಮಕ್ಕೆ ಸುಗಂಧದ್ರವ್ಯಗಳ ಲೇಪಿಸುವೆ.

ನಾನು ಅಕ್ಷತೆಯನಿಡುವುದಕ್ಕೆ ಮುನ್ನವೆ

ಜಂಗಮಕ್ಕೆ ಅಕ್ಷತೆಯನಿಡುವೆ .

ನಾನು ಪುಷ್ಪವ ಮುಡಿವುದಕ್ಕೆ ಮುನ್ನವೆ

ಜಂಗಮಕ್ಕೆ ಪರಿಮಳಪುಷ್ಪವ ಮುಡಿಸುವೆ.

ನಾನು ಧೂಪವಾಸನೆಯ ಕೊಳ್ಳುವ ಮುನ್ನವೆ

ಜಂಗಮಕ್ಕೆ ಧೂಪವಾಸನೆಯ ಕೊಡುವೆ.

ನಾನು ದೀಪಾರತಿಯ ನೋಡುವ ಮುನ್ನವೆ

ಜಂಗಮಕ್ಕೆ ಆರತಿಯ ನೋಡಿಸುವೆ.


ನಾನು ಸಕಲ ಪದಾರ್ಥಗಳ ಸ್ವೀಕರಿಸುವ ಮುನ್ನವೆ
ಶಿವಶರಣೆಯರ ವಚನಸಂಪುಟ

ಜಂಗಮಕ್ಕೆ ಮೃಷ್ಟಾನ್ನವ ನೀಡುವೆ.

ನಾನು ಪಾನಂಗಳ ಕೊಳ್ಳುವ ಮುನ್ನವೆ

ಜಂಗಮಕ್ಕೆ ಅಮೃತಪಾನಂಗಳ ಕೊಡುವೆ.

ನಾನು ಕೈಯ ತೊಳೆಯುವ ಮುನ್ನವೆ

ಜಂಗಮಕ್ಕೆ ಹಸ್ತಪ್ರಕ್ಷಾಲನವ ಮಾಡಿಸುವೆ.

ನಾನು ವೀಳೆಯವ ಮಾಡುವುದಕ್ಕೆ ಮುನ್ನವೆ

ಜಂಗಮಕ್ಕೆ ತಾಂಬೂಲವಕೊಡುವೆ.

ನಾನು ಗದ್ದುಗೆಯ ಮೇಲೆ ಕುಳ್ಳಿರುವುದಕ್ಕೆ ಮುನ್ನವೆ

ಜಂಗಮಕ್ಕೆ ಉನ್ನತಾಸನವನಿಕ್ಕುವೆ.

ನಾನು ಸುನಾದಂಗಳ ಕೇಳುವುದಕ್ಕೆ ಮುನ್ನವೆ

ಜಂಗಮಕ್ಕೆ ಸುಗೀತ ವಾದ್ಯಂಗಳ ಕೇಳಿಸುವೆ.

ನಾನು ಭೂಷಣಂಗಳ ತೊಡುವುದಕ್ಕೆ ಮುನ್ನವೆ

ಜಂಗಮಕ್ಕೆ ಆಭರಣಂಗಳ ತೊಡಿಸುವೆ.

ನಾನು ವಾಹನಂಗಳಕೇರುವುದಕ್ಕೆ ಮುನ್ನವೆ

ಜಂಗಮಕ್ಕೆ ವಾಹಂಗಳನೇರಿಸುವೆ.

ನಾನು ಮನೆಯೊಳಗಿಹುದಕ್ಕೆ ಮುನ್ನವೆ

ಜಂಗಮಕ್ಕೆ ಗೃಹವಕೊಡುವೆ.

ಇಂತೀ ಹದಿನಾರು ತೆರದಭಕ್ತಿಯನು ಚರಲಿಂಗಕ್ಕೆ ಕೊಟ್ಟು

ಆ ಚರಲಿಂಗಮೂರ್ತಿಭೋಗಿಸಿದ ಬಳಿಕ

ನಾನು ಪ್ರಸಾದ ಮುಂತಾಗಿ ಭೋಗಿಸುವೆನಲ್ಲದೆ

ಜಂಗಮವಿಲ್ಲದೆ ಇನಿತರೊಳೊಂದು ಭೋಗವನಾದರೂ

ನಾನು ಭೋಗಿಸಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ.

ಇಂತೀ ಕ್ರಮದಲ್ಲಿ ನಡೆವಾತಂಗೆ |

ಗುರುವುಂಟು ಲಿಂಗವುಂಟು ಜಂಗಮವುಂಟು,

ಪಾದೋದಕವುಂಟು ಪ್ರಸಾದವುಂಟು ಆಚಾರವುಂಟು ಭಕ್ತಿಯುಂ

ಈ ಕ್ರಮದಲ್ಲಿ ನಡೆಯದಾತಂಗೆ

ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ

ಪಾದೋದಕವಿಲ್ಲ ಪ್ರಸಾದವಿಲ್ಲಾಚಾರವಿಲ್ಲ ಭಕ್ತಿಯಿಲ್ಲ.

ಅವನ ಬಾಳುವೆ ಹಂದಿಯ ಬಾಳುವೆ.

ಅವನ ಬಾಳುವೆ ನಾಯ ಬಾಳುವೆ.

ಅವನ ಬಾಳುವೆ ಕತ್ತೆಯ ಬಾಳುವೆ.


೭೭
ಅಕ್ಕಮಹಾದೇವಿಯ ವಚನಗಳು

ಅವನು ಸುರೆಮಾಂಸ ಭುಂಜಕನು,


|| ೨೫ ||
ಅವನು ಸರ್ವ ಚಾಂಡಾಲನಯ್ಯಾ ಚೆನ್ನಮಲ್ಲಿಕಾರ್ಜುನಾ.

೨೫೬

ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು .

ಸಂಸಾರ ಹುಟ್ಟಿದಲ್ಲಿ ಅಜ್ಞಾನ ಹುಟ್ಟಿತ್ತು .

ಅಜ್ಞಾನ ಹುಟ್ಟಿದಲ್ಲಿ ಆಶೆ ಹುಟ್ಟಿತ್ತು .

ಆಶೆ ಹುಟ್ಟಿದಲ್ಲಿ ಕೋಪ ಹುಟ್ಟಿತ್ತು .

ಆಕೋಪಾಗ್ನಿಯ ತಾಮಸಧೂಮ್ರ ಮುಸುಕಿದಲ್ಲಿ

ನಾ ನಿಮ್ಮ ಮರೆದು ಭವದುಃಖಕ್ಕೀಡಾದೆ.

ನೀ ಕರುಣದಿಂದೆತ್ತಿ ಎನ್ನ ಮರಹ ವಿಂಗಡಿಸಿ

ನಿಮ್ಮ || ೨೫೬ ||
ಪಾದವನರುಹಿಸಯ್ಯಾ , ಚೆನ್ನಮಲ್ಲಿಕಾರ್ಜುನಾ.

೨೫೭

ನಾಳದ ಮರೆಯ ನಾಚಿಕೆ,

ನೂಲಮರೆಯಲ್ಲಿ ಅಡಗಿತ್ತೆಂದು ಅಂಜುವರು, ಅಳುಕುವರು.

ಮನ ಮೆಚ್ಚಿದಭಿಮಾನಕ್ಕೆ ಆವುದು ಮರೆ ಹೇಳಾ ?

ಕಾಯ ಮಣ್ಣೆಂದು ಕಳೆದ ಬಳಿಕ ,

ದೇಹದಭಿಮಾನ ಅಲ್ಲಿಯೇ ಹೋಯಿತ್ತು .

ಪ್ರಾಣ ಬಯಲೆಂದು ಕಳೆದ ಬಳಿಕ ,

ಮನದ ಲಜ್ಜೆಯಲ್ಲಿಯೆ ಹೊಯಿತ್ತು .

ಚೆನ್ನಮಲ್ಲಿಕಾರ್ಜುನನಕೂಡಿ ಲಜ್ಜೆಗೆಟ್ಟವಳ

ಉಡಿಗೆಯ ಸೆಳೆದುಕೊಂಡಡೆ,

ಮುಚ್ಚಿದ ಸೀರೆ ಹೋದರೆ ಅಂಜುವರೆ ಮರುಳೆ ? || ೨೭ ||

೨೮

ನಾಳೆ ಬರುವುದು ನಮಗಿಂದೆ ಬರಲಿ,

ಇಂದು ಬರುವುದು ನಮಗೀಗಲೆ ಬರಲಿ;

ಆಗೀಗ ಎನ್ನದಿರೊ , ಚೆನ್ನಮಲ್ಲಿಕಾರ್ಜುನಾ. || ೨೮ ||

೨೫೯

ನಿತ್ಯತೃಪ್ತಂಗೆ ನೈವೇದ್ಯದ ಹಂಗೇತಕ್ಕೆ ?

ಸುರಾಳ ನಿರಾಳಂಗೆ ಮಜ್ಜನದ ಹಂಗೇತಕ್ಕೆ ?


೭೮

ಸ್ವಯಂಜ್ಯೋತಿರ್ಮಯಂಗೆ ದೀಪಾರಾಧನೆಯ ಹಂಗೇತಕ್ಕೆ ?

ಸುವಾಸನೆ ಸೂಕ್ಷ್ಮಗಂಧ ಕರ್ಪೂರಗೌರಂಗೆ ಪುಷ್ಟದ ಹಂಗೇತಕ್ಕೆ ?

ಮಾಟದಲಿ ಮನ ನಂಬುಗೆಯಿಲ್ಲದ, ಅಹಂಕಾರಕ್ಕೀಡಾದ,

ಭಕ್ತಿಯೆಂಬ ಪಸಾರವನಿಕ್ಕಿ

ಹೊಲಹದಿನೆಂಟುಜನ್ಮವ ಹೊರೆವುದರಿಂದ

ಅಂಗೈಯಲೊರಸಿ ಮುಕ್ತಿಯ

ಮೂಲಶಿಖಿರಂಧ್ರದ ಕಾಮನ ಸುಟ್ಟು

ಶುದ್ಧ ಸ್ಪಟಿಕ ಸ್ವಯಂಜ್ಯೋತಿಯನು

ಸುನಾಳದಿಂದ ಹಂ ಕ್ಷಂ ಎಂಬೆರಡಕ್ಷರವ

ಸ್ವಯಾನುಭಾವಭಕ್ತಿನಿರ್ವಾಣವಾದವರನೆನಗೊಮ್ಮೆ ತೋರಿದೆ.

ಶ್ರೀಗಿರಿ ಚೆನ್ನ ಮಲ್ಲಿಕಾರ್ಜುನಾ. || ೨೫೯ ||

೨೬೦

ನಿತ್ಯವೆಂಬ ನಿಜಪದವನ್ನ ಹಸಾರ್ದು ಕಂಡಬಳಿಕ

ಚಿತ್ರ ಕರಗಿ ಮನಕೊರಗಿ ಹೃದಯವರಳಿತ್ತು ನೋಡಯ್ಯಾ .

ಒತ್ತಿ ಬಿಗಿದ ಸೆರೆಯೊಳಗೆ ಅತ್ತಿತ್ತಲೆಂದರಿಯದೆ

ಚೆನ್ನಮಲ್ಲಿಕಾರ್ಜುನನ ಪಾದದಲ್ಲಿ

ಮರೆಯೊರಗಿದೆ ನೋಡಯ್ಯಾ . || ೨೬೦ ||

೨೬೧

ನಿತ್ಯವೆನ್ನ ಮನೆಗೆ ನಡೆದುಬಂದಿತ್ತಿಂದು.

ಮುಕ್ತಿ ಎನ್ನ ಮನೆಗೆ ನಡೆದುಬಂದಿತ್ತಿಂದು.

ಜಯ ಜಯಾ, ಹರಹರಾ, ಶಂಕರ ಶಂಕರಾ,

ಗುರುವೆ ನಮೋ , ಪರಮಗುರುವೆ ನಮೋ .


|| ೨೬೧ ||
ಚೆನ್ನಮಲ್ಲಿಕಾರ್ಜುನನ ತೋರಿದ ಗುರುವೆ ನಮೋ ನಮೋ .

೨೬೨

ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ ,

ನಿನ್ನನರಿಯದ ಮುಕ್ತಿಯೆ ನರಕ ಕಂಡಯ್ಯಾ ,

ನೀನೊಲ್ಲದ ಸುಖವೆ ದಃಖ ಕಂಡಯ್ಯಾ,

ನೀನೊಲಿದ ದುಃಖವೆ ಪರಮಸುಖ ಕಂಡಯ್ಯಾ ,

ಚೆನ್ನಮಲ್ಲಿಕಾರ್ಜುನಯ್ಯಾ ,
|| ೨೬೨ ||
ನೀ ಕಟ್ಟಿ ಕೆಡಹಿದ ಬಂಧನವ ನಿರ್ಬಂಧವೆಂದಿಪ್ಪೆನು.
ಅಕ್ಕಮಹಾದೇವಿಯ ವಚನಗಳು

೨೬೩

ನಿಮ್ಮ ಒಕ್ಕುದ ಕೊಂಡು ಓಲಾಡುವೆ,

ಮಿಕ್ಕುದ ಕೊಂಡು ಕುಣಿದಾಡುವೆ.

ನಿಮ್ಮ ತೊತ್ತಿನ ತೊತ್ತಿನ ಕರುಣಪ್ರಸಾದವ ಕೊಂಡು


|| ೨೬೩ ||
ನಿತ್ಯಳಾಗಿ ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನಾ.

೨೬೪

ನಿಮ್ಮ ನಿಲವಿಂಗೆನೀವುನಾಚಬೇಡವೆ ?

ಅನ್ಯರ ಕೈಯಲ್ಲಿ ಅಲ್ಲ ಎನಿಸಿಕೊಂಬ ನಡೆನುಡಿ ಏಕೆ ?

ಅಲ್ಲ ಎನಿಸಿಕೊಂಬುದರಿಂದ

ಆ ಕ್ಷಣವೆ ಸಾವುದು ಲೇಸು

ಕಾಣಾ ಚೆನ್ನಮಲ್ಲಿಕಾರ್ಜುನಾ. || ೨೬೪ ||

೨೬೫

ನೀನು ಹೋಗೆಂದಡೆ ಹೋದೆನಯ್ಯಾ .

ನೀನು ಹುಟ್ಟೆಂದಡೆ ಹುಟ್ಟಿದೆನಯ್ಯಾ .

ನೀನು ಬೆಳೆಯೆಂದ ಠಾವಿನಲ್ಲಿ ಬೆಳೆದೆನಯ್ಯಾ ,

ನೀನು ಹಿಡಿಯೆಂದವರ ಮನೆಯ ಹೊಕ್ಕೆನಯ್ಯಾ .

ನೀನು ಮಾಡೆಂದ ಕೆಲಸವ ಮಾಡಿಕೊಂಡು

ನಿಮ್ಮ ಬೆಸಲಾದ ಮಗಳಾಗಿರ್ದ ಕಾಣಾ

ಚೆನ್ನಮಲ್ಲಿಕಾರ್ಜುನಾ. || ೨೬೫ ||

೨೬೬

ನೀನಿಕ್ಕಿದ ಸರಿದೊಡಕನಾರು ಬಿಡಿಸಬಲ್ಲರಯ್ಯಾ ?

ನೀನಿಕ್ಕಿದ ಕಟ್ಟನಾರು ಕಳೆಯಬಲ್ಲರಯ್ಯಾ ?

ನೀ ಸೀಳಿದ ರೇಖೆಯನಾರು ಮೀರಬಹುದಯ್ಯಾ ?

ಚೆನ್ನಮಲ್ಲಿಕಾರ್ಜುನಯ್ಯಾ ,

ನೀನು ಕಳುಹಿದ ಸೆರೆಗೆ ಮಾರುವೋಗದಿರ್ದಡೆ

ಎನ್ನಿಚ್ಚೆಯ ಅಯ್ಯಾ ? || ೨೬೬ ||

೨೬೭

ನೀರಕ್ಷೀರದಂತೆ ನೀನಿಪ್ಪೆಯಾಗಿ ,

ಆವುದು ಮುಂದು, ಆವುದು ಹಿಂದು ಎಂದರಿಯೆ .


OSO
ಶಿವಶರಣೆಯರ ವಚನಸಂಪುಟ

ಆವುದು ಕರ್ತೃ , ಆವುದು ನೃತ್ಯನೆಂದರಿಯೆ .

ಆವುದು ಘನ, ಆವುದು ಕಿರಿದೆಂದರಿಯೆ .

ಚೆನ್ನಮಲ್ಲಿಕಾರ್ಜುನಯ್ಯಾ ,

ನೀನೊಲಿದು ಕೊಂಡಾಡಿದಡೆ ಇರುಹೆ ರುದ್ರನಾಗದೆ ಹೇಳಯ್ಯಾ ? ||

- ೨೬೮

ನೆಲದ ಮರೆಯ ನಿಧಾನದಂತೆ

ಫಲದ ಮರೆಯ ರುಚಿಯಂತೆ

ಶಿಲೆಯ ಮರೆಯ ಹೇಮದಂತೆ

ತಿಲದ ಮರೆಯ ತೈಲದಂತೆ

ಮರದ ಮರೆಯ ತೇಜದಂತೆ

ಭಾವದ ಮರೆಯ ಬ್ರಹ್ಮವಾಗಿಪ್ಪ

ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು. || ೨೬೮ ||

೨೬೯

ನೋಡಿನುಡಿಸಿ ಮಾತಾಡಿಸಿದಡೊಂದು ಸುಖ,

ಏನ ಮಾಡದಯ್ಯಾ ನಿಮ್ಮ ಶರಣರ ಅನುಭಾವ ?

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ ಶರಣರ ಸದ್ಯೋಷ್ಠಿ ಏನ ಮಾಡದಯ್ಯಾ ? || ೨೬೯ ||

೨೭೦

ನೋಡಿಹೆನೆಂದಡೆ ದೃಷ್ಟಿಮರೆಯಾಯಿತ್ತು.

ಕೂಡಿಹೆನೆಂದಡೆ ಭಾವ ಮರೆಯಾಯಿತ್ತು.

ಏನೆಂಬೆನೆಂತೆಂಬೆನಯ್ಯಾ ?

ಅರಿದಿಹೆನೆಂದಡೆ ಮರಹು ಮರೆಯಾಯಿತ್ತು .

ನಿನ್ನ ಮಾಯೆಯನತಿಗಳೆವಡೆ ಎನ್ನಳವೆ ?

- ಕಾಯಯ್ಯಾ ಚೆನ್ನಮಲ್ಲಿಕಾರ್ಜುನಾ. || ೨೭೦ !!

೨೭೧

ನೋಡುವ ಕಂಗಳಿಗೆ ರೂಪಿಂಬಾಗಿರಲು

ನೀವು ಮನನಾಚದೆ ಬಂದಿರಣ್ಣಾ .

ಕೇಳಿದಪ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣಾ .

ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣಾ .


೮೧
ಅಕ್ಕಮಹಾದೇವಿಯ ವಚನಗಳು

ಮೂತ್ರವು ಬಿಂದು ಒಸರುವ ನಾಳವೆಂದು

ಕಂಗಾಣದೆ ಮುಂದುಗೆಟ್ಟು ಬಂದಿರಣ್ಣಾ .

ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ ಹೋಗಲಾಡಿಸಿಕೊಂಡು

ಇದಾವ ಕಾರಣವೆಂದರಿಯದೆ,

ನೀವುನರಕಹೇತುವೆಂದರಿತು ಮನ ಹೇಸದೆ ಬಂದಿರಣ್ಣಾ .

ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು.

ಛೀ , ಹೋಗಾ ಮರುಳೆ. || ೨೭೧ ||

೨೭೨

ನೋಡೆನೆಂಬವರ ನೋಡಿಸುವೆ,

ನುಡಿಯೆನೆಂಬವರ ನುಡಿಯಿಸುವೆ,

ಒಲ್ಲೆನೆಂಬವರನೊಲಿಸುವೆ,

ಒಲಿದೆನೆಂಬವರ ತೊಲಗಿಸುವೆನೋಡಯ್ಯಾ ,

ಚೆನ್ನಮಲ್ಲಿಕಾರ್ಜುನಯ್ಯಾ ,

ನೀನಲ್ಲದನ್ಯರ ಮುಖದನೋಡೆನೆಂದಡೆ

ನೋಡುವಂತೆ ಮಾಡಿದೆಯಲ್ಲಾ ಲಿಂಗವೆ ? || ೨೭೨ ||

೨೭೩

ಪಂಚೇಂದ್ರಿಯಂಗಳೊಳಗೆ

ಒಂದಕ್ಕೆ ಪ್ರಿಯನಾದಡೆ ಸಾಲದೆ ?

ಸಪ್ತವ್ಯಸನಂಗಳೊಳಗೆ

ಒಂದಕ್ಕೆ ಪ್ರಿಯನಾದಡೆ ಸಾಲದೆ ?

ರತ್ನದ ಸಂಕಲೆಯಾದಡೇನು

ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ? || ೨೭೩ ||

೨೭೪

ಪಂಚೇಂದ್ರಿಯದ ಉರವಣೆಯ

ಉದುಮದದ ಭರದ ಜವ್ವನದೊಡಲು ವೃಥಾಹೋಯಿತ್ತಲ್ಲಾ !

ತುಂಬಿ ಪರಿಮಳವ ಕೊಂಡು ಲಂಬಿಸುವ ತೆರನಂತೆ

ಇನ್ನೆಂದಿಂಗೆ ಒಳಕೊಂಬೆಯೊ , ಅಯ್ಯಾ ಚೆನ್ನಮಲ್ಲಿಕಾರ್ಜುನಾ ?

೨೭೫

ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ !

ಹರಿಬ್ರಹ್ಮರಬಲುಹ ಮುರಿದು ಕೊಂದು ಕೂಗಿತಲ್ಲಾ !


೮೨ ಶಿವಶರಣೆಯರ ವಚನಸಂಪುಟ

ಮಹಾ ಋಷಿಯರ ತಪವ ಕೆಡಿಸಿ ಕೊಂದು ಕೂಗಿತಲ್ಲಾ !

ಚೆನ್ನಮಲ್ಲಿಕಾರ್ಜುನಂಗೆ ಶರಣೆಂದು ನಂಬಿ

ಮರೆಹೊಕ್ಕಡೆ ಅಂಜಿ ನಿಂದುದಲ್ಲಾ ! || ೨೭೫ ||

೨೭೬

ಪಚ್ಚೆಯ ನೆಲೆಗಟ್ಟು , ಕನಕದ ತೋರಣ , ವಜ್ರದ ಕಂಬ,

ಪವಳದ ಚಪ್ಪರವಿಕ್ಕಿ , ಮುತ್ತುಮಾಣಿಕದ ಮೇಲುಕಟ್ಟ ಕಟ್ಟಿ ,

ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು.

ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯಮಾಡಿದರು. || ೨೭೬

೨೭೭

ಪಡೆವುದರಿದು ನರಜನ್ಮವ,

ಪಡೆವುದರಿದು ಹರಭಕ್ತಿಯ ,

ಪಡೆವುದುದು ಗುರುಕಾರುಣ್ಯವ,

ಪಡೆವುದರಿದು ಲಿಂಗಜಂಗಮಸೇವೆಯ,

ಪಡೆವುದರಿದು ಸತ್ಯಶರಣರನುಭಾವವ.

ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನಶರಣರ ಅನುಭಾವದಲ್ಲಿ

ನಲಿನಲಿದಾಡು ಕಂಡೆಯಾ ಎಲೆ ಮನವೆ. || ೨೭೭ ||

೨೭೮

ಪರರೊಡತಣ ಮಾತು ನಮಗೇತರದಯ್ಯ ?

ಪರರೊಡತಣ ಗೊಟ್ಟಿ ನಮಗೇಕಯ್ಯ ?

ಲೋಕದ ಮಾನವರೊಡನೆ ನಮಗೇತರ ವಿಚಾರವಯ್ಯ ?

ಚೆನ್ನಮಲ್ಲಿಕಾರ್ಜುನನ ಒಲವಿಲ್ಲದವರೊಡನೆ
|| ೨೭೮ ||
ನಮಗೇತರ ವಿಚಾರವಯ್ಯಾ ?

೨೭೯

ಪಾತಾಳವಿತ್ರ, ಪಾದಂಗಳತ್ತತ್ತ,

ದಶದಿಕ್ಕು ಇತ್ತಿ , ದಶಭುಜಂಗಳತ್ತತ್ತ,

ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ,

ಚೆನ್ನಮಲ್ಲಿಕಾರ್ಜುನಯ್ಯಾ ,
|| ೨೭೯ ||
ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಲ್ಲಾ ಲಿಂಗವೆ.
ಅಕ್ಕಮಹಾದೇವಿಯ ವಚನಗಳು

೨೮೦

ಪುಣ್ಯಪಾಪಂಗಳನರಿಯದ ಮುನ್ನ ,

ಅನೇಕ ಭವಂಗಳ ಬಂದೆನಯ್ಯಾ !

ಬಂದು ಬಂದು ನೊಂದು ಬೆಂದೆನಯ್ಯಾ !

ಬಂದು ನಿಮ್ಮ ನಂಬಿ ಶರಣುವೊಕ್ಕೆನಯ್ಯಾ !

ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯಾ ನಿಮ್ಮ ಧರ್ಮ ನಿಮ್ಮ ಧ

ನಿಮ್ಮಲೊಂದು ಬೇಡುವೆನು,

ಎನ್ನ ಬಂಧನ ಬಿಡುವಂತೆ ಮಾಡಯ್ಯಾ ಚೆನ್ನಮಲ್ಲಿಕಾರ್ಜುನಾ. |

೨೮೧

ಪುದುಗಿದ ಸಂಸಾರದ ಬಂಧನದೊಳು ಪೆಣಗಿದೆ

ಅದೆಂದಿಗೆ ಬಿಟ್ಟು ಪೋಪುದೊ ?

ಎಂದು ನಿಮ್ಮನೊಡಗೂಡಿ

ಬೇರಾಗದೆಂದಿಪ್ಪನೊ ಚೆನ್ನಮಲ್ಲಿಕಾರ್ಜುನಾ ? || ೨೮೧ ||

೨೮೨

ಪುರುಷನ ಮುಂದೆ ಮಾಯೆ

ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು .

ಸ್ತ್ರೀಯ ಮುಂದೆ ಮಾಯೆ

ಪುರುಷನೆಂಬ ಅಭಿಮಾನವಾಗಿ ಕಾಡುವುದು.


ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ

ಮರುಳಾಗಿ ತೋರುವುದು .

ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ

ಮಾಯೆಯಿಲ್ಲ , ಮರಹಿಲ್ಲ , ಅಭಿಮಾನವೂ ಇಲ್ಲ . || ೨೮೨ ||

೨೮೩

ಪ್ರಥಮದಲಾದ ಮೋಹ ಸಾತ್ವಿಕವಾದಡೆ ಕಿತವೇಕಯ್ಯಾ

ಹೆರರನೊಲ್ಲದ ಬೇಟಕ್ಕೆ ಕಿತವೇಕಯ್ಯಾ ?

ಚೆನ್ನಮಲ್ಲಿಕಾರ್ಜುನದೇವರದೇವನನೆಂದಿಗೆ ಬಿಡದ

ನೇಹಕ್ಕೆ ಕಿತವೇಕಯ್ಯಾ ? || ೨೮೩ ||

೨೮೪

ಪ್ರಾಣ ಲಿಂಗವೆಂದರಿದಬಳಿಕ

ಪ್ರಾಣ ಪ್ರಸಾದವಾಯಿತ್ತು .
ಶಿವಶರಣೆಯರ ವಚನಸಂಪುಟ

ಲಿಂಗ ಪ್ರಾಣವೆಂದರಿದಬಳಿಕ

ಅಂಗದಾಸೆ ಹಿಂಗಿತ್ತು .

ಲಿಂಗ ಸೋಂಕಿನ ಸಂಗಿಗೆ ಕಂಗಳೆ ಕರುವಾದವಯ್ಯಾ ,

ಚೆನ್ನಮಲ್ಲಿಕಾರ್ಜುನಯ್ಯಾ ,

ಹಿಂಗದೆ ಅನಿಮಿಷನಾಗಿಹ ಶರಣಂಗೆ. || ೨೮೪ ||

೨೮೫

ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ !

ದೇವ ದಾನವ ಮಾನವರೆಲ್ಲಾ ಜೋಳವಾಳಿಯಿದಾರೆ.

ಜಾಣಕಲುಕುಟಿಗನನಗಲದ ಹೂವನೆ ಕೊಯ್ದು,

ಕಲಿಯುಗದ ಕರಸ್ಥಲದೇವಪೂಜೆ ಘನ.

ಮೇರುವಿನ ಕುದುರೆ ನಲಿದಾಡಲದುಭುತ.

ಜಾರಜಂಗುಳಿಗಳ ಜಗಳ ಮೇಳಾಪ,

ಮರುಪತ್ರದ ಮಾತು, ನಗೆ ಹಗರಣ !

ಕ್ಷೀರಸಾಗರದಲ್ಲಿ ದಾರಿಯಳವಡದಯ್ಯಾ .

ನೀ ಹೇಳಬೇಕು, ಭಕ್ತರೆಂತಿಪ್ಪರೆ ?

ಪಂಚವರ್ಣದ ಬಣ್ಣ ಸಂತೆಯ ಪರದಾಟವು

ಚೆನ್ನಮಲ್ಲಿಕಾರ್ಜುನಯ್ಯಾ ,

ತ್ರಿಭುವನದ ಹೆಂಡಿರ ನೀರಹೊಳೆಯಲ್ಲಿರಿಸಿತ್ತು . - || ೨೮೫ ||

೨೮೬

ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು

ಅಂತಃಕರಣಚತುಷ್ಟಯವೆಂಬ ಪಶುವಂ ಕಟ್ಟಿ

ಓಂಕಾರವೆಂಬ ಶಿಣಿಗೋಲಂಪಿಡಿದು

ವ್ರತಕ್ರಿಯವೆಂಬ ಸಾಲನೆ

ನಿರಾಶೆಯೆಂಬ ಕುಂಟೆಯಂ ತುರುಗಿ

ದುಷ್ಕರ್ಮಂಗಳೆಂಬ ದುರ್ಮಲರಿಗಳಂ ಕಳೆದು

ನಾನಾ ಮೂಲದ ಬೇರಂ ಕಿತ್ತು

ಜ್ಞಾನಾಗ್ನಿಯೆಂಬ ಬೆಂಕಿಯಂ ಸುಟ್ಟು

ಈ ಹೊಲನ ಹಸನಮಾಡಿ ಬಿತ್ತುವ

ಪಾಯವೆಂತೆಂದೊಡೆ:

ನಾದ ಬಿಂದು ಕಳೆ ಮೊಳೆ ಹದ ಬೆದೆಯನರಿದು


೮೫೩
ಅಕ್ಕಮಹಾದೇವಿಯ ವಚನಗಳು

ಸ್ಕೂಲವೆಂಬ ದಿಂಡಿಂಗೆ ಶ್ರೀದೇವರೆಂಬ ತಾಳನಟ್ಟು

ಸುಷುಮ್ಮನಾಳವೆಂಬ ಕೋವಿಯಂಜೋಡಿಸಿ

ಮೇಲೆತ್ರಿಕೂಟಸ್ಥಾನವೆಂಬ ಬಟ್ಟೆಯಂ ಬಲಿದು

ಕುಂಡಲಿಯ ಸರ್ಪನ ಹಗ್ಗವ ಬಿಗಿದು

ಹಂಸನೆಂಬ ಎತ್ತಂ ಕಟ್ಟಿ

ಪ್ರಣವವೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ

ಸಂತೋಷವೆಂಬ ಬೆಳೆಯಂ ಬೆಳೆದು

ಈ ಬೆಳೆಯ ಕೊಯಿದುಂಬ ಪರಾಯವೆಂತೆಂದೊಡೆ

ಬಾಗುಚಂದನೆಂಬ ಕುಡುಗೋಲಂಪಿಡಿದು

ಜನನದ ನಿಲವಂಕೊಯಿದು,

ಮರಣದಸೂಡಂಕಟ್ಟಿ

ಆಕಾಶವೆಂಬ ಬಣಬೆಯ ಒಟ್ಟಿ

ಅಷ್ಟಾಂಗಯೋಗವೆಂಬ ಜೀವಧನದಿಂದಮೊಕ್ಕಿ

ತಾಪತ್ರಯವೆಂಬ ಮೆಟ್ಟನಂ ಮೆಟ್ಟಿಸಿ

ಪಾಪದ ಹೊಟ್ಟ ತೂರಿ|

ಪುಣ್ಯದಜರ ಹಮ್ಮನುಳಿಯೆ

ನಿರ್ಮಲನೆಂಬ ಘನರಾಶಿಯಂ ಮಾಡಿ

ಚಿತ್ರಗುಪ್ತರೆಂಬ ಶಾನುಭೋಗರ

ಸಂಪುಟಕ್ಕೆ ಬರಹ ಬರೆಸದೆ

ವ್ಯವಹಾರಂ ಕದ್ದು

ನಮ್ಮ ಶ್ರೀಶೈಲ ಚೆನ್ನಮಲ್ಲಿಕಾರ್ಜುನನೆಲ್ಲಿ


ಭಾನುಗೆ ಒಂದೆ ಮುಖವಾದ |

ಒಕ್ಕಲುಮಗನತೋರಿಸಯ್ಯ ನಿಮ್ಮ ಧರ್ಮ

ಶ್ರೀಶೈಲಚೆನ್ನಮಲ್ಲಿಕಾರ್ಜುನಪ್ರಭುವೆ. || ೨೮೬ | |

೨೮೭

ಪೃಥ್ವಿಯಗಲಿದ ಏಲೇಶ್ವರನ ಕಂಡೆ.

ಭಾವಭ್ರಮೆಯ ಗೆಲಿದ ಬ್ರಹ್ಮಶ್ವರನ ಕಂಡೆ.

ಸತ್ವ ರಜ ತಮ ತ್ರಿವಿಧವ ಗೆಲಿದ ತ್ರಿಪುರಾಂತಕನ ಕಂಡೆ.

ಅಂತರಂಗದ ಆತ್ಮಜ್ಞಾನದಿಂದಜ್ಯೋತಿಸಿದ್ದಯ್ಯನ ಕಂಡೆ.

ಇವರೆಲ್ಲರ ಮಧ್ಯಮಸ್ಥಾನ ಪ್ರಾಣಲಿಂಗ ಜಂಗಮವೆಂದು


ಶಿವಶರಣೆಯರ ವಚನಸಂಪುಟ

ಸುಜ್ಞಾನದಲ್ಲಿ ತೋರಿದ ಬಸವಣ್ಣ ;

ಆ ಬಸವಣ್ಣನ ಪ್ರಸಾದದಿಂದ ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯಾ .

೨೮೮

ಪೃಥ್ವಿ ಪೃಥ್ವಿಯ ಕೂಡದ ಮುನ್ನ ,

ಅಪ್ಪು ಅಪ್ಪುವಕೂಡದ ಮುನ್ನ ,

ತೇಜ ತೇಜವ ಕೂಡದ ಮುನ್ನ ,

ವಾಯು ವಾಯುವ ಕೂಡದ ಮುನ್ನ ,

ಆಕಾಶ ಆಕಾಶವಕೂಡದ ಮುನ್ನ

ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ

ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ ! || ೨೮೮ ||

೨೮೯

ಫಲ ಒಳಗೆ ಪಕ್ಷವಾಗಿಯಲ್ಲದೆ,

ಹೊರಗಳ ಸಿಪ್ಪೆ ಒಪ್ಪಗೆಡದು.

ಕಾಮನ ಮುದ್ರೆಯ ಕಂಡು ನಿಮಗೆನೋವಾದಿಹಿತೆಂದು

ಆ ಭಾವದಿಂದ ಮುಚ್ಚಿದೆ.

ಇದಕ್ಕೆ ನೋವೇಕೆ ? ಕಾಡದಿರಣ್ಣಾ ,

ಚೆನ್ನಮಲ್ಲಿಕಾರ್ಜುನದೇವರದೇವನ ಒಳಗಾದವಳ. || ೨೮೯ ||

೨೯೦

ಬಂಜೆ ಬೇನೆಯನರಿವಳೆ ?

ಬಲದಾಯಿ ಮದ್ದ ಬಲ್ಲಳೆ ?

ನೊಂದವರ ನೋವನೋಯದವರೆತ್ತ ಬಲ್ಲರೊ ?

ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು

ಒಡಲಲ್ಲಿ ಮುರಿದು ಹೊರಳುವೆನ್ನಳಲನು

ನೀವೆತ್ತ ಬಲ್ಲಿರೆ, ಎಲೆ ತಾಯಿಗಳಿರಾ ? || ೨೯೦ ||

೨೯೧

ಬಂದಹನೆಂದು ಬಟ್ಟೆಯ ನೋಡಿ,

ಬಾರದಿದ್ದಡೆ ಕರಗಿಕೊರಗಿದೆನವ್ವಾ .

ತಡವಾದಡೆ ಬಡವಾದೆ ತಾಯೆ .


೮೭
ಅಕ್ಕಮಹಾದೇವಿಯ ವಚನಗಳು

ಚೆನ್ನಮಲ್ಲಿಕಾರ್ಜುನನ ಒಂದಿರುಳಗಲಿದಡೆ
|| ೨೯೧ ||
ತಕ್ಕೆ ಸಡಲಿದ ಜಕ್ಕವಕ್ಕಿಯಂತಾದೆನವ್ವಾ.

೨೯೨

ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ .

ಅಣ್ಣಾ , ನಾನು ಹೆಂಗೂಸಲ್ಲ ; ಅಣ್ಣಾ , ನಾನು ಸೂಳೆಯಲ್ಲ .

ಅಣ್ಣಾ , ಮತ್ತೆ ನನ್ನ ಕಂಡು ಕಂಡು ಆರೆಂದು ಬಂದಿರಣ್ಣಾ ?

ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪರಪುರುಷನು

ನಮಗಾಗದ ಮೋರೆನೋಡಣ್ಣಾ ! || ೨೯೨ ||

೨೯೩

ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ

ಐವರು ಮಕ್ಕಳು ಜನಿಸಿದರು .

ಒಬ್ಬ ಭಾವರೂಪ, ಒಬ್ಬ ಪ್ರಾಣರೂಪ;

ಒಬ್ಬ ಐಮುಖವಾಗಿ ಕಾಯರೂಪಾದ;

ಇಬ್ಬರು ಉತ್ಪತ್ತಿ ಸ್ಥಿತಿಗೆ ಕಾರಣವಾದರು.

ಐಮುಖನರಮನೆ ಸುಖವಿಲ್ಲೆಂದು

ಕೈಲಾಸವ ಹೊಗೆನು, ಮರ್ತ್ಯಕ್ಕೆ ಅಡಿ ಇಡೆನು ;

ಚೆನ್ನಮಲ್ಲಿಕಾರ್ಜುನದೇವಾ, ನೀನೇ ಸಾಕ್ಷಿ . || ೨೯೩ ||

೨೯೪

ಬಯಲು ಲಿಂಗವೆಂಬೆನೆ ? ಬಗಿದು ನಡೆವಲ್ಲಿ ಹೋಯಿತ್ತು .

ಬೆಟ್ಟ ಲಿಂಗವೆಂಬೆನೆ ? ಮೆಟ್ಟಿ ನಿಂದಲ್ಲಿ ಹೋಯಿತ್ತು .

ತರುಮರಾದಿಗಳು ಲಿಂಗವೆಂಬೆನೆ ? ತರಿದಲ್ಲಿ ಹೋಯಿತ್ತು.

ಲಿಂಗ ಜಂಗಮದ ಪಾದವೇ ಗತಿಯೆಂದು ನಂಬಿದ

ಚೆನ್ನಮಲ್ಲಿಕಾರ್ಜುನಾ,

ಸಂಗನಬಸವಣ್ಣನ ಮಾತು ಕೇಳದೆ ಕೆಟ್ಟೆನಯ್ಯಾ. || ೨೯೪ ||

೨೯೫

ಬಲ್ಲಿದ ಹಗೆಯವ ತೆಗೆವನ್ನಬರ,

ಬಡವರ ಹರಣ ಹಾರಿಹೋದತೆರನಂತಾಯಿತ್ತು .

ನೀ ಕಾಡಿ ಕಾಡಿ ನೋಡುವನ್ನಬರ,

ಎನಗಿದು ವಿಧಿಯೇ ಹೇಳಾ ತಂದೆ ?


೮೮
ಶಿವಶರಣೆಯರ ವಚನಸಂಪುಟ

ಮುರುವಾರುವನ್ನಬರ,

ಎಮ್ಮೆ ಗಾಳಿಗೆ ಹಾರಿಹೋದತೆರನಂತಾಯಿತ್ತು .

ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯಾ

ಚೆನ್ನಮಲ್ಲಿಕಾರ್ಜುನಾ ? || ೨೯೫ ||

೨೯೬

ಬಸವಣ್ಣನ ಪಾದವ ಕಂಡೆನಾಗಿ

ಎನ್ನಂಗ ನಾಸ್ತಿಯಾಯಿತ್ತು.

ಚೆನ್ನಬಸವಣ್ಣನ ಪಾದವ ಕಂಡೆನಾಗಿ

ಎನ್ನ ಪ್ರಾಣಬಯಲಾಯಿತ್ತು .

ಪ್ರಭುವೆ, ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ

ಎನ್ನ ಅರಿವುಸ್ವಯವಾಯಿತ್ತು .

ಚೆನ್ನಮಲ್ಲಿಕಾರ್ಜುನದೇವಯ್ಯಾ

ನಿಮ್ಮ ಶರಣರ ಕರುಣವ ಪಡೆದೆನಾಗಿ

ನಿನಗೆ ಮತ್ತಾವುದಿಲ್ಲವಯ್ಯ ಪ್ರಭುವೆ. || ೨೯೬ ||

೨೯೭

ಬಸವಣ್ಣನ ಭಕ್ತಿ , ಚೆನ್ನಬಸವಣ್ಣನ ಜ್ಞಾನ,

ಮಡಿವಾಳಯ್ಯನನಿಷ್ಠೆ , ಪ್ರಭುದೇವರ ಜಂಗಮಸ್ಥಲ,

ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,

ಸಿದ್ಧರಾಮಯ್ಯನ ಸಮಾಧಿಸ್ಥಲ.

ಇಂತಿವರ ಕರುಣಪ್ರಸಾದ ಎನಗಾಯಿತ್ತು

ಚೆನ್ನಮಲ್ಲಿಕಾರ್ಜುನಯ್ಯಾ, || ೨೯೭ ||

೨೯೮

ಬಸವಣ್ಣನ ಮನೆಯ ಮಗಳಾದ ಕಾರಣ

ಭಕ್ತಿಪ್ರಸಾದವ ಕೊಟ್ಟನು.

ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ

ಒಕ್ಕಪ್ರಸಾದವಕೊಟ್ಟನು.

ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ ಮಗಳಾದ ಕಾರಣ

ಜ್ಞಾನಪ್ರಸಾದವ ಕೊಟ್ಟನು.

ಸಿದ್ದರಾಮಯ್ಯನಶಿಶುಮಗಳಾದ ಕಾರಣ
ಅಕ್ಕಮಹಾದೇವಿಯ ವಚನಗಳು ೮೯

ಪ್ರಾಣಪ್ರಸಾದವ ಸಿದ್ಧಿಸಿಕೊಟ್ಟನು.

ಮಡಿವಾಳಯ್ಯನ ಮನೆಯ ಮಗಳಾದ ಕಾರಣ

ನಿರ್ಮಲಪ್ರಸಾದವ ನಿಶ್ಚಿಸಿಕೊಟ್ಟನು.

ಇಂತೀ ಅಸಂಖ್ಯಾತ ಗಣಂಗಳೆಲ್ಲರು

ತಮ್ಮ ಕರುಣದ ಕಂದನೆಂದು ತಲೆದಡಹಿದ ಕಾರಣ

ಚೆನ್ನಮಲ್ಲಿಕಾರ್ಜುನಯ್ಯನಶ್ರೀಪಾದಕ್ಕೆ ಯೋಗ್ಯಳಾದೆನು.
| ೨೯೮ ||

೨೯೯

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ,

ಸಿದ್ದರಾಮಯ್ಯನೆ ಜಂಗಮ ,

ಮಡಿವಾಳಯ್ಯನೆ ಜಂಗಮ ,

ಚೆನ್ನಬಸವಣ್ಣನೆನ್ನ ಪರಮಾರಾಧ್ಯರು.

ಇನ್ನು ಸುಖಿಯಾದೆನು ಕಾಣಾ

ಚೆನ್ನಮಲ್ಲಿಕಾರ್ಜುನಯ್ಯಾ . || ೨೯೯ ||

೩೦೦

ಬಸವಣ್ಣಾ , ನಿಮ್ಮಂಗದಾಚಾರವ ಕಂಡು

ಎನಗೆ ಲಿಂಗಸಂಗವಾಯಿತ್ತಯ್ಯಾ.

ಬಸವಣ್ಣಾ , ನಿಮ್ಮ ಮನದ ಸುಜ್ಞಾನವ ಕಂಡು

ಎನಗೆ ಜಂಗಮಸಂಬಂಧವಾಯಿತ್ತಯ್ಯಾ .

ಬಸವಣ್ಣಾ , ನಿಮ್ಮ ಸಬ್ಬಕ್ಕಿಯ ತಿಳಿದು

ಎನಗೆ ನಿಜವು ಸಾಧ್ಯವಾಯಿತ್ತಯ್ಯಾ.

ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು

ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ

ನಮೋ ನಮೋ ಎನುತಿರ್ದೆನು

ಕಾಣಾ ಸಂಗನಬಸವಣ್ಣಾ . || ೩೦೦ ||

೩೦೧

ಬಸವನ ಭಕ್ತಿ ಕೊಟ್ಟಣದಮನೆ.

ಸಿರಿಯಾಳನ ಭಕ್ತಿ ಕಸಬುಗೇರಿ.

ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ.


ಉಳಿದಾದ ಅಟಮಟಉದಾಸೀನ ದಾಸೋಹವ ಮಾಡುವವರ
ಶಿವಶರಣೆಯರ ವಚನಸಂಪುಟ

ದೈನ್ಯವೆಂಬ ಭೂತ ಸೋಂಕಿತು.

ಮಣ್ಣಿನ ಮನೆಯ ಕಟ್ಟಿ

ಮಾಯಾ ಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ

ಮಾಡುವ ಮಾಟ.

ಭಕ್ತನಲ್ಲಿ ಉಂಡುಉದ್ದಂಡವೃತ್ತಿಯಲ್ಲಿ ನಡೆವವರು ಶಿವನಲ್ಲ .

ಇವರು ದೇವಲೋಕ ಮರ್ತ್ಯಲೋಕಕ್ಕೆ ಹೊರಗು.

ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ,

ನನ್ನ || ೩೦೧ ||
ಭಕ್ತಿ ನಿನ್ನೊಳಗೈಕ್ಯವಾಯಿತ್ತಾಗಿ ನಿರ್ವಯಲಾದೆ ಕಾಣಾ

೩೦೨

ಬಾರದ ಭವಂಗಳಲ್ಲಿ ಬಂದೆನಯ್ಯಾ ,

ಕಡೆಯಿಲ್ಲದ ತಾಪಂಗಳಲ್ಲಿ ನೊಂದು

ನಿಮ್ಮ ಕರುಣೆಗೆ ಬಳಸಂದೆನಯ್ಯಾ.

ಇದು ಕಾರಣ ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗೆ

ತನುವನುವಾಗಿ ಮನಮಾರುವೋಗೆ

ಮತ್ತಿಲ್ಲದ ತವಕದ ಸ್ನೇಹಕ್ಕೆ || ?೩೦೨ ||


ತೆರಹಿನ್ನೆಂತು ಹೇಳಾ ತಂದೆ

೩೦೩

ಬಿಟ್ಟೆನೆಂದಡೆ ಬಿಡದೀ ಮಾಯೆ ,

ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ .

ಯೋಗಿಗೆ ಯೋಗಿಣಿಯಾಯಿತ್ತು ಮಾಯೆ ,

ಸವಣಂಗೆ ಸವಣಿಯಾಯಿತ್ತು ಮಾಯೆ .

ಯತಿಗೆ ಪರಾಕಿಯಾಯಿತ್ತು ಮಾಯೆ .

ನಿನ್ನ ಮಾಯೆಗೆ ನಾನಂಜುವಳಲ್ಲ ,


|| ೩೦೩ ||
ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮಾಣೆ.

೩೦೪

ಬಿಡು ಬಿಡು ಸಂಗವ, ಸುಡುಸುಡು ವಿಷಯವ,

ಎನ್ನೊಡೆಯರು ಬಾಗಿಲಿಗೆ ಬಂದರು,

ತಡೆಯದಿರಾ ಮರುಳೆ.

ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ,

ಇದಕ್ಕೆ ಹಿಡಿಯದಿರು ಸೆರಗನು .


ಅಕ್ಕಮಹಾದೇವಿಯ ವಚನಗಳು

ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ

ಇದಿರೇಳದಿರ್ದಡೆ ನಾಯಕ ನರಕ. || ೩೦೪ ||

೩೦೫

ಬೆಂದಸಂಸಾರ ಬೆಂಬಿಡದೆ ಕಾಡಿಹುದಯ್ಯ ,

ಏವೆನೆವೆನಯ್ಯಾ ?

ಅಂದಂದಿನ ದಂದುಗಕ್ಕೆ ಏವೆನೇವೆನಯ್ಯಾ ?

ಬೆಂದ ಒಡಲ ಹೊರೆವುದಕ್ಕೆ ನಾನಾರೆ.

ಚೆನ್ನಮಲ್ಲಿಕಾರ್ಜುನಯ್ಯಾ , ಕೊಲ್ಕು ಕಾಯಿ


|| ೩೦
, ನಿಮ್ಮ || ಧರ್ಮ

೩೦೬

ಬೆಟ್ಟಕ್ಕೆ ಸಾರವಿಲ್ಲೆಂಬರು;

ತರುಗಳು ಹುಟ್ಟುವಪರಿ ಇನ್ನೆಂತಯ್ಯಾ ?

ಇದ್ದಲಿಗೆ ರಸವಿಲ್ಲೆಂಬರು;

ಕಬುನ ಕರಗುವಪರಿ ಇನ್ನೆಂತಯ್ಯಾ ?

ಎನಗೆ ಕಾಯವಿಲ್ಲೆಂಬರು;

|| ೩೦೬ ?||
ಚೆನ್ನಮಲ್ಲಿಕಾರ್ಜುನನೊಲಿವಪರಿ ಇನ್ನೆಂತಯ್ಯಾ

- ೩೦೭

ಬೆಟ್ಟದ ಮೇಲೊಂದು ಮನೆಯ ಮಾಡಿ,

ಮೃಗಗಳಿಗಂಜಿದಡೆಂತಯ್ಯಾ ?

ಸಮುದ್ರದ ತಡಿಯಲೊಂದು ಮನೆಯ ಮಾಡಿ,

ನೊರೆತೆರೆಗಳಿಗಂಜಿದಡೆಂತಯ್ಯಾ ?

ಸಂತೆಯೊಳಗೊಂದು ಮನೆಯ ಮಾಡಿ,

ಶಬ್ದಕ್ಕೆ ನಾಚಿದಡೆಂತಯ್ಯಾ ?

ಚೆನ್ನಮಲ್ಲಿಕಾರ್ಜುನದೇವಕೇಳಯ್ಯಾ ,

ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ

ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. || ೩೦೭ ||

೩೦೮

ಬೆರಸುವಡೆ ಬೇಗತೋರಾ,

ಹೊರ ಹಾಯ್ದಿರಯ್ಯಾ ,

ನಿಮ್ಮಲ್ಲಿಗೆ ಸಲೆ ಸಂದ ತೊತ್ಮಾನು;


ಶಿವಶರಣೆಯರ ವಚನಸಂಪುಟ

ಎನ್ನ ಹೊರ ಹಾಯ್ದಿರಯ್ಯಾ .

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ ನಂಬಿ ಬೆಂಬಳಿಬಂದೆನು

ಇಂಬುಗೊಳ್ಳಯ್ಯಾ ಬೇಗದಲಿ . || ೩೦೮ ||

೩೦೯

ಬೋಳೆಯನೆಂದು ನಂಬಬೇಡ,

ಢಾಳಕನವನು ಜಗದ ಬಿನ್ನಾಣಿ.

ಬಾಣ ಮಯೂರಕಾಳಿದಾಸ ಓಹಿಲ ಉದ್ದಟ

ಮಲುಹಣರವರಿಗಿತ್ತ ಪರಿ ಬೇರೆ.

ಮುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬ

ಚೆನ್ನಮಲ್ಲಿಕಾರ್ಜುನನು . || ೩೦೯ ||

೩೧೦

- ಭಕ್ತನೆ ಕುಲಜನೆಂದ ಮಾತಿನಂತೆ ಹೋಗದು.

ಭಕ್ತನೆ ಕುಲಜನೆಂಬ ನುಡಿಯೆಲ್ಲಿಯು ಸಲ್ಲದು.

ಭಕ್ತನೆ ಕುಲಜನೆಂಬುದು ಪಾತಕವಯ್ಯ .

ಅವಯವವಮೂರ್ತಿಯಾಗಿ

ಸರ್ವಾಂಗಲಿಂಗಕ್ಕೆ ಅನುಭಾವವಿಲ್ಲಾಗಿ

ಎನ್ನ ದೇವ ಚೆನ್ನಮಲ್ಲಿಕಾರ್ಜುನನಲಿ

ಯಥಾ ತಥಾ ಎಂಬ ವಚನವನರಿಯಿರೆ. || ೩೧೦ ||

೩೧೧

ಭಯಾನಪ್ಪೆನಯ್ಯಾ ,

ಕರ್ತೃನೃತ್ಯವ ನಾನರಿಯೆ .

ಮಾಹೇಶ್ವರಿಯಾನಪ್ಪೆನಯ್ಯಾ,

ವ್ರತನೇಮ ಛಲವ ನಾನರಿಯೆ .

ಪ್ರಸಾದಿಯಾನಪ್ಪೆನಯ್ಯಾ ,

ಅರ್ಪಿತನರ್ಪಿತವೆಂಬ ಭೇದವ ನಾನರಿಯೆ .

ಪ್ರಾಣಲಿಂಗಿಯಾನಪ್ಪೆನಯ್ಯಾ ,

ಅನುಭಾವದ ಗಮನವ ನಾನರಿಯೆ .

ಶರಣೆಯಾನಪ್ಪೆನಯ್ಯಾ ,
ಅಕ್ಕಮಹಾದೇವಿಯ ವಚನಗಳು

ಶರಣಸತಿ ಲಿಂಗಪತಿ ಎಂಬ ಭಾವವ ನಾನರಿಯೆ .

ಐಕ್ಯಳಾನಪ್ಪೆನಯ್ಯಾ,

ಬೆರಸಿ ಭೇದವ ನಾನರಿಯೆ .

ಚೆನ್ನಮಲ್ಲಿಕಾರ್ಜುನಯ್ಯಾ,

ಷಟ್‌ಸ್ಥಲದಲ್ಲಿ ನಿಶ್ಚಲವಾಗಿಪ್ಪನು. || ೩೧೧ ||

- ೩೧೨

ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ?

ಎಂಬತ್ತುನಾಲ್ಕು ಲಕ್ಷ ಊರಲ್ಲಿ ಎಡೆಗೆಯ್ಯಬೇಕು.

ಒಂದೂರಭಾಷೆಯೊಂದೂರಲಿಲ್ಲ.

ಒಂದೂರಲ್ಲಿ ಕೊಂಡಂಥ ಆಹಾರ ಮತ್ತೊಂದೂರಲಿಲ್ಲ .

ಇಂತೀ ಊರ ಹೊಕ್ಕ ತಪ್ಪಿಂಗೆ

ಕಾಯವ ಭೂಮಿಗೆ ಸುಂಕವ ತೆತ್ತು

ಜೀವವನುಳುಹಿಕೊಂಡು ಬರಬೇಕಾಯಿತ್ತು .

ಇಂತೀ ಮಹಾಘನದ ಬೆಳಕಿನೊಳಗೆ

ಕಳೆದುಳಿದು ಸುಳಿದಾಡಿ

ನಿಮ್ಮ ಪಾದವ ಕಂಡು ಸುಯಿಧಾನಿಯಾದೆ ಕಾಣಾ

ಚೆನ್ನಮಲ್ಲಿಕಾರ್ಜುನಯ್ಯಾ || ೩೧೨ ||

೩೧೩

ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ,

ಆನೇವೆನಯಾ ?

ಹಸಿದುಂಡಡೆ ಉಂಡು ಹಸಿವಾಯಿತ್ತು .

ಇಂದು ನೀನೊಲಿದೆಯಾಗಿ,

ಎನಗೆ ಅಮೃತದ ಆಪ್ಯಾಯನವಾಯಿತ್ತು .

ಇದು ಕಾರಣ , ನೀನಿಕ್ಕಿದ ಮಾಯೆಯನಿನ್ನು ಮುಟ್ಟಿದೆನಾದಡೆ

ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ. || ೩೧೩ ||

ಭವಿಯಾಚಾರವ ಬಿಡದೆ ಭಯಾಗರವ ಹೊಗದೆ,

ಶಿವಾಚಾರದಲ್ಲಿ ನಡೆವ ನಾಯಿಗಳು ಬರಿದೆ ನಾವು ಶಿವಾಚಾರಿಗಳೆಂದರೆ

ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ .


೯೪
ಶಿವಶರಣೆಯರ ವಚನಸಂಪುಟ

ಶಿವಾಚಾರದ ಮಾರ್ಗವನ್ನು, ಶಿವಾಚಾರದ ಮರ್ಮವನು ,

ಶಿವಾಚಾರದ ವಿಸ್ತಾರವನ್ನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ

ಉದರವ ಹೊರವ ವೇಷಧಾರಿಗಳೆತ್ತಬಲ್ಲರಯ್ಯ ?

ಅಂತಪ್ಪ ಶಿವಾಚಾರದ ವಿಸ್ತಾರ ಸಕೀಲ ಹೇಳಿಹೆ ಕೇಳಿರಣ್ಣ .

ಅದೆಂತೆಂದೊಡೆ:

ಲಿಂಗಾಚಾರವೆಂದು, ಸದಾಚಾರವೆಂದು, ಶಿವಾಚಾರವೆಂದು,

ನೃತ್ಯಾಚಾರವೆಂದು, ಗಣಾಚಾರವೆಂದು ಶಿವಾಚಾರವು

ಐದುತೆರನಾಗಿಪ್ಪುದುನೋಡಯ್ಯಾ ,

ಶ್ರೀ ಗುರು ಕರುಣಿಸಿಕೊಟ್ಟ ಲಿಂಗವನಲ್ಲದೆ

ಅನ್ಯದೈವಂಗಳಿಗೆರಗದಿಹುದೇ ಲಿಂಗಾಚಾರ ನೋಡಯ್ಯ .

ತಾ ಮಾಡುವ ಸತ್ಯ ಕಾಯಕದಿಂದ ಬಂದ ಅರ್ಥಾದಿಗಳಿಂದ

ತನ್ನ ಕುಟುಂಬ ರಕ್ಷಣೆಗೊಂಬ ತೆರದಿ

ಗುರುಲಿಂಗಜಂಗಮ ದಾಸೋಹಿಯಾಗಿಪ್ಪುದೇ ಸದಾಚಾರ ನೋಡಯ್ಯ .

ಶಿವಭಕ್ತರಾದ ಲಿಂಗಾಂಗಿಗಳಲ್ಲಿ ಪೂರ್ವದ ಜಾತಿಸೂತಕಾದಿಗಳನ್ನು

ವಿಚಾರಿಸದೆ ಅವರ ಮನೆಯಲ್ಲಿ ತಾ ಹೊಕ್ಕು

ಒಕ್ಕು ಮಿಕ್ಕ ಪ್ರಸಾದವ ಕೊಂಬುದೇ ಶಿವಾಚಾರ ನೋಡಯ್ಯ .

ಲಿಂಗಾಂಗಿಗಳಾದ ಶಿವಭಕ್ತರೇ ಮರ್ತ್ಯದಲ್ಲಿ ಮಿಗಿಲಹರೆಂದು

ತಾನು ಅವರ ನೃತ್ಯನೆಂದರಿದು

ಅಂತಪ್ಪ ನಿಜಲಿಂಗಾಂಗಿಗಳ ಚಮ್ಮಾವುಗೆಯ

ಕಾಯ್ದಿಪ್ಪುದೇ ನೃತ್ಯಾಚಾರ ನೋಡಯ್ಯ .

ಗುರುಲಿಂಗಜಂಗಮ ಪಾದೋದಕ ಪ್ರಸಾದ

ರುದ್ರಾಕ್ಷಿ ಮಂತ್ರಗಳೆಂಬಷ್ಟಾವರಣಂಗಳು

ತನ್ನ ಪ್ರಾಣಸ್ವರೂಪವಾಗಿ ಅವುಗಳ ನಿಂದೆಯನ್ನು ಕೇಳಿ ಸೈರಿಸದೆ

ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ .

ಇದಕ್ಕೆ ಸಾಕ್ಷಿ , ಪರಮರಹಸ್ಯ

“ ಲಿಂಗಾಚಾರಸ್ಸದಾಚಾರಶೈವಾಚಾರಸ್ತಥೈವಚ| |

ನೃತ್ಯಾಚಾರೋ ಗಣಾಚಾರಃ ಪಂಚಾಚಾರಃ ಪ್ರಕೀರ್ತಿತಃ||

ಗುರೂಣಾ ದತ್ತಲಿಂಗಂಚ ನಾಸ್ತಿ ದೈವಂ ಮಹೀತಲೇ |

ಇತಿ ಭಾವಾನುಸಂಧಾನೋ ಲಿಂಗಾಚಾರಸ್ಸಮುಚ್ಯತೇ ||

ಧರ್ಮಾರ್ಜಿತವಿನತೃಪ್ತಿಶ್ವ ಕ್ರಿಯತೇ ಸದಾ |

ಗುರುಜಂಗಮಲಿಂಗಾನಾಂ ಸದಾಚಾರಃ ಪ್ರಕೀರ್ತಿತಃ||


೯೫.
ಅಕ್ಕಮಹಾದೇವಿಯ ವಚನಗಳು

ಅವಿಚಾರೇಷು ಭಕ್ತಷು ಜಾತಿಧರ್ಮಾದಿ ಸೂತಕಾನ್ ||

ತದ್ಮಹೇಷ್ಟನ್ನಪಾನಾದಿ ಭೋಜನ ಕ್ರಿಯತೇ ಸದಾ ||

ತಚ್ಛಿವಾಚಾರಮಿತ್ಮಾಹುರ್ವಿರಶೈವಪರಾಯಣಾ |

ಶಿವಭಕ್ತಜನಾ ಸರ್ವೆ ವರಿಷ್ಮಾ : ಪೃಥಿವೀತಲೇ ||

ತೇಷಾಂಬೃಹಮಿತ್ಯೇತತ್ಯಾಚಾರಸ್ಸ ಉಚ್ಯತೇ |

ಗುರುಲಿಂಗ ಜಂಗಮಶ್ವ ಪಾದತೀರ್ಥ ಪ್ರಸಾದತಃ|

ಇತಿ ಪಂಚಸ್ವರೂಪೋಲೆಯಹಂ ಗಣಾಚಾರಃ ಪ್ರಕೀರ್ತಿತಃ | "

ಎಂದುದಾಗಿ, ಇಂತಪ್ಪ ಶಿವಾಚಾರದ ಆಚಾರವನರಿಯದೆ

ನಾ ಶಿವಭಕ್ತ ನಾ ಶಿವಭಕ್ತ ನಾ ಶಿವಾಚಾರಿ ಎಂದು

ಕೊಂಬ ಶೀಲವಂತರ ನೋಡಿಎನ್ನ ಮನ ನಾಚಿ

ನಿಮ್ಮಡಿಮುಖವಾಯಿತ್ತಯ್ಯ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಯ್ಯ , || ೩೧೪

೩೧೫

ಭವಿಸಂಗವಳಿದು ಭಕ್ತನಾದ ಬಳಿಕ,

ಭಕ್ತಂಗೆ ಭವಿಸಂಗವತಿಘೋರನರಕ.

ಶರಣಸತಿ ಲಿಂಗಪತಿಯಾದ ಬಳಿಕ,

ಶರಣಂಗೆ ಸತಿಸಂಗವು ಅಘೋರನರಕ.

ಚೆನ್ನಮಲ್ಲಿಕಾರ್ಜುನಾ,

ಪ್ರಾಣಗುಣವಳಿಯದವರ ಸಂಗವೇ ಭಂಗ. || ೩೧೫ ||

೩೧೬

ಭಾನುವಿನಂತಿಪುದು ಜ್ಞಾನ ,

ಭಾನುಕಿರಣದಂತಿಪುದು ಭಕ್ತಿ .

ಭಾನುವನುಳಿದು ಕಿರಣಂಗಳಿಲ್ಲ ,

ಕಿರಣಂಗಳನುಳಿದು ಭಾನುವಿಲ್ಲ .

ಜ್ಞಾನವಿಲ್ಲದ ಭಕ್ತಿ , ಭಕ್ತಿಯಿಲ್ಲದ ಜ್ಞಾನವೆಂತಿಪ್ಪುದು

ಚೆನ್ನಮಲ್ಲಿಕಾರ್ಜುನಾ ? || ೩೧೬ ||

೩೧೭

ಭಾವ ಬೀಸರವಾಯಿತ್ತು , ಮನ ಮೃತ್ಯವನಪ್ಪಿತ್ತು ;

ಆನೇವೆನಯ್ಯಾ ?

ಆಳಿತನದ ಮನ ತಲೆಕೆಳಗಾಯಿತ್ತು ;
ಶಿವಶರಣೆಯರ ವಚನಸಂಪುಟ

ಆನೇವೆನಯ್ಯಾ ?

ಬಿಚ್ಚಿ ಬೇರಾಗದ ಭಾವವಾಗೆ, .

ಬೆರೆದೊಪ್ಪಚ್ಚಿ ನಿನ್ನ ನಿತ್ಯಸುಖದೊಳಗೆಂದಿಪ್ಪೆನಯ್ಯಾ ,

ಚೆನ್ನಮಲ್ಲಿಕಾರ್ಜುನಾ ! || ೩೧೭ ||

೩೧೮

ಭಾವಿಸಿನೋಡಿದಡೆ ಅಂಗವಾಯಿತ್ತು,

ಅಂಗಸಂಗವಾಗಿ ಸಂಯೋಗವ ಮರೆದು, ಲಿಂಗವೆರಗಾದೆ.

ಲಿಂಗೈಕ್ಯ , ನಿಮ್ಮನಗಲದೆ ಅಂಗರುಚಿಗಳ ಮರೆದು,

ಲಿಂಗರುಚಿಗಳಲ್ಲಿ ಸೈವೆರಗಾದೆ.

ಲಿಂಗ ಸೈವೆರಗಾದ ಬಳಿಕ

ಚೆನ್ನಮಲ್ಲಿಕಾರ್ಜುನನ ಕೊಂದು ಸಾವ ಭಾಷೆ. || ೩೧೮ ||

೩೧೯

ನೃತ್ಯನಾದ ಬಳಿಕ ಕರ್ತೃವಿಂಗೆ ಉತ್ತಮ ವಸ್ತುವನೀಯಬೇಕು,

ಇದೇ ಕರ್ತೃಬೃತ್ಯರ ಭೇದ.

ಲಿಂಗಭಕ್ತನಾದಡೆ ಜಂಗಮಪಾದತೀರ್ಥಪ್ರಸಾದವ

ಲಿಂಗಕ್ಕೆ ಮಜ್ಜನ ಭೋಜನ ನೈವೇದ್ಯವ ಮಾಡಿ,

ಪ್ರಸಾದವ ಕೊಳ್ಳಬೇಕು.

ಇದೇ ವರ್ಮ, ಇದೇ ಧರ್ಮ ಕಾಣಾ ಚೆನ್ನಮಲ್ಲಿಕಾರ್ಜುನಾ.


|| ೩೧೯ ||

೩೨೦

ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ,

ಎಚ್ಚಡೆ ಗರಿದೋರದಂತಿರಬೇಕು.

ಅಪ್ಪಿದಡೆ ಅಸ್ತಿಗಳು ನಗುನುಸಿಯಾಗಬೇಕು.

ಬೆಚ್ಚಡೆ ಬೆಸುಗೆಯರಿಯದಂತಿರಬೇಕು.
|| ೩೨೦
ಮಚ್ಚು ಒಪ್ಪಿತ್ತು, ಚೆನ್ನಮಲ್ಲಿಕಾರ್ಜುನನ ಸ್ನೇಹ ||
ತಾಯೆ .

೩೨೧.

ಮಡಿವಾಳಯ್ಯನ ಪ್ರಸಾದವ ಕೊಂಡು

ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ.

ಸಿದ್ದರಾಮಯ್ಯನ ಪ್ರಸಾದವ ಕೊಂಡು

ಎನ್ನ ಕರಣಂಗಳು ಶುದ್ಧವಾಯಿತ್ತಯ್ಯಾ.


ಅಕ್ಕಮಹಾದೇವಿಯ ವಚನಗಳು

ಬಸವಣ್ಣನ ಪ್ರಸಾದವ ಕೊಂಡು

ಭಕ್ತಿಸಂಪನ್ನನಾದೆನಯ್ಯಾ .

ಚೆನ್ನಬಸವಣ್ಣನ ಪ್ರಸಾದವ ಕೊಂಡು

ಜ್ಞಾನಸಂಪನ್ನನಾದೆನಯ್ಯಾ .

ನಿಜಗುಣನ ಪ್ರಸಾದವ ಕೊಂಡು ನಿಶ್ಚಿಂತನಾದೆನಯ್ಯಾ ,

ಅಜಗಣ್ಣನ ಪ್ರಸಾದವ ಕೊಂಡು ಆರೂಢನಾದೆನಯ್ಯಾ.

ಘಟ್ಟಿವಾಳಯ್ಯನ ಪ್ರಸಾದವ ಕೊಂಡು

ನಿರಾಕಾರ ಪರಬ್ರಹ್ಮ ಸ್ವರೂಪನಾದೆನಯ್ಯಾ ,

ಪ್ರಭುದೇವರ ಪ್ರಸಾದವ ಕೊಂಡು

ಚೆನ್ನಮಲ್ಲಿಕಾರ್ಜುನಯ್ಯನಕೂಡಿಸುಖಿಯಾದೆನು.|| ೩೨೧ ||

೩೨೨

ಮದನಾರಿಯೆಂಬ ಮಳೆ ಹೊಯ್ಯಲು,

ಶಿವಯೋಗವೆಂಬ ತೊರೆ ಬರಲು,

ಕಾಮನೆ ಅಂಬಿಗನಾದ ನೋಡಾ!

ಕರ್ಮದಕಡಲೆನ್ನನೆಳದೊಯ್ದಾಗ

ಕೈಯ ನೀಡು ತಂದೆ ಚೆನ್ನಮಲ್ಲಿಕಾರ್ಜುನಾ. || ೩೨೨ ||

೩೨೩

ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ .

ಅಸ್ತಮಾನದಿಂದ ಮೇಲೆ ಜಿತೇಂದ್ರಿಯರಿಲ್ಲ .

ವಿಧಿಯ ಮೀರುವ ಅಮರರಿಲ್ಲ .

ಕುಧೆ ವಿಧಿ ವ್ಯಸನಕ್ಕಂಜಿ,

ನಾ ನಿಮ್ಮ ಮರೆಹೊಕ್ಕು ಬದುಕಿದೆನು

ಚೆನ್ನಮಲ್ಲಿಕಾರ್ಜುನಾ. || ೩೨೩ ||

೩೨೪

ಮನ ಬೀಸರವಾದಡೆ ಪ್ರಾಣ ಪಲ್ಲಟವಹುದಪ್ಪಾ .


ತನು ಕರಣಂಗಳು ಮೀಸಲಾಗಿ

ಮನ ಸಮರಸವಾಯಿತ್ತು ನೋಡಾ.

ಅನ್ಯವನರಿಯೆ ಭಿನ್ನವನರಿಯೆ .

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ ಬಳಿಯವಳಾನು

ಕೇಳಾ ತಾಯೆ ! || ೩೨೪ ||


Ees
ಶಿವಶರಣೆಯರ ವಚನಸಂಪುಟ

೩೨೫

ಮನ ಮನ ತಾರ್ಕಣೆಗೊಂಡು ಅನುಭವಿಸಲು,

ನೆನಹ ಘನವಹುದಲ್ಲದೆ ಅದು ಹವಣದಲ್ಲಿ ನಿಲುವುದೆ ?

ಎಲೆ ಅವ್ವಾ , ನೀನು ಮರುಳ .

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಗೊಲಿದು

ಸಲೆ ಮಾರುಹೋದನು.

ನಿನ್ನ ತಾಯಿತನವನೊಲ್ಲೆ ಹೋಗಾ. || ೩೨೫ ||

೩೨೬

ಮನ ಮುನ್ನ ಮುನ್ನವೆ ಗುರುವಿನೆಡೆಗೆಯಿದಿತ್ತು .

ತನುವಿನಲ್ಲಿ ಡಿಂಬ ನೋಡಾ!

ಮನ ಬೇರಾದವರ ತನುವನಪ್ಪುವನೆರ್ ನೋಡಾ.

ಚೆನ್ನಮಲ್ಲಿಕಾರ್ಜುನನ ನೋಡಿಕೂಡಿ ಬಂದೆಹೆನಂತಿರುವಂತಿರು.

೩೨೭

ಮನೆ ಮನೆದಪ್ಪದೆಕೈಯೊಡ್ಡಿ ಬೇಡುವಂತೆ ಮಾಡಯ್ಯ !

ಬೇಡಿದಡೆ ಇಕ್ಕದಂತೆ ಮಾಡಯ್ಯ !

ಇಕ್ಕಿದಡೆ ನೆಲಕ್ಕೆ ಬೀಳುವಂತೆ ಮಾಡಯ್ಯ !

ನೆಲಕ್ಕೆ ಬಿದ್ದಡೆ ನಾನೆತ್ತಿಕೊಂಬುದಕ್ಕೆ ಮುನ್ನವೆ

ಸುನಿಯೆತ್ತಿಕೊಂಬಂತೆ ಮಾಡಾ ಚೆನ್ನಮಲ್ಲಿಕಾರ್ಜುನಯ್ಯ

೩೨೮

ಮನೆಯೆನ್ನದು, ತನುವೆನ್ನದು, ಧನವೆನ್ನದೆನ್ನೆನಯ್ಯಾ ,

ಮನ ನಿಮ್ಮದು, ತನು ನಿಮ್ಮದು, ಧನ ನಿಮ್ಮದು ಎಂದಿಪ್ಪೆನಯ್ಯಾ ,

ಸತಿಯಾನು, ಪತಿಯುಂಟು, ಸುಖ ಉಂಟೆಂಬುದ |

ಮನ, ಭಾವದಲ್ಲಿ ಅರಿದೆನಾದಡೆ, ನಿಮ್ಮಾಣೆಯಯ್ಯಾ.

ನೀನಿರಿಸಿದ ಗೃಹದಲ್ಲಿ ನಿನ್ನಿಚ್ಛೆಯವಳಾಗಿಪ್ಪನಲ್ಲದೆ


ಅನ್ಯವನರಿಯೆ ಕಾಣಾ ಚೆನ್ನಮಲ್ಲಿಕಾರ್ಜುನಾ. . ||

- ೩೨೯

ಮರಮರ ಮಥನಿಸಿ ಕಿಚ್ಚು ಹುಟ್ಟಿ,

ಸುತ್ತಣ ತರುಮರಾದಿಗಳ ಸುಡಲಾಯಿತ್ತು.


೯೯
ಅಕ್ಕಮಹಾದೇವಿಯ ವಚನಗಳು

ಆತ್ಮ ಆತ್ಮ ಮಥನಿಸಿ ಅನುಭಾವ ಹುಟ್ಟಿ

ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು .

ಇಂತಪ್ಪ ಅನುಭಾವರ ಅನುಭಾವವ ತೋರಿ|


|| ೩೨೯ ||
ಎನ್ನ ಒಡಲನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ.

೩೩೦

ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ?

ಧನವಿದ್ದು ಫಲವೇನು ದಯವಿಲ್ಲದನ್ನಕ್ಕ ?

ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ ?

ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ ?

ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ ?

ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ

ಚೆನ್ನಮಲ್ಲಿಕಾರ್ಜುನಾ ? || ೩೩೦ |

೩೩೧

ಮರಹು ಬಂದಿಹುದೆಂದು ಗುರು ಕುರುಹನೆ ಕೊಟ್ಟ

ಅರಿವಿಂಗೆ ಪ್ರಾಣಲಿಂಗ ಬೇರೆ ಕಾಣಿರಣ್ಣಾ .

ನಿರ್ಣಯವಿಲ್ಲದ ಭಕ್ತಿಗೆ ಬರಿದೆ ಬಳಲಲದೇತಕೆ ?

ಚೆನ್ನಮಲ್ಲಿಕಾರ್ಜುನಯ್ಯನನರಿದು ಪೂಜಿಸಿದಡೆ

ಮರಳಿ ಭವಕ್ಕೆ ಬಹನೆ ? || ೩೩೧ ||

೩೩೨

ಮರೆದೊರಗಿ, ಕನಸ ಕಂಡು ಹೇಳುವಲ್ಲಿ

ಸತ್ತ ಹೆಣ ಎದ್ದಿತ್ತು .

ತನ್ನ ಋಣ ನಿಧಾನ ಎದ್ದು ಕರೆಯಿತ್ತು .

ಹೆಪ್ಪಿಟ್ಟ ಹಾಲು ಗಟ್ಟಿ ತುಪ್ಪಾಗಿ ಸಿಹಿಯಾಯಿತ್ತು.

ಇದಕ್ಕೆ ತಪ್ಪ ಸಾಧಿಸಲೇಕೆ |

ಚೆನ್ನಮಲ್ಲಿಕಾರ್ಜುನದೇವರ ದೇವನಣ್ಣಗಳಿರಾ ? || ೩೩೨ ||

೩೩೩

ಮರ್ತ್ಯಲೋಕದ ಭಕ್ತರ ಮನವ


ಬೆಳಗಲೆಂದು ಇಳಿತಂದನಯ್ಯಾ ಶಿವನು;

ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ .


ಶಿವಶರಣೆಯರ ವಚನಸಂಪುಟ

ಚಿತ್ರದ ಪ್ರಕೃತಿಯ ಹಿಂಗಿಸಿ,

ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ.

ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ,

ಭಾವವೆಲ್ಲ ಮಹಾಘನದ ಬೆಳಗು.

ಚೆನ್ನಮಲ್ಲಿಕಾರ್ಜುನಯ್ಯಾ,

ನಿಮ್ಮ ಶರಣ ಸಮ್ಯಕ್‌ಜ್ಞಾನಿ ಚೆನ್ನಬಸವಣ್ಣನ

ಶ್ರೀ ಪಾದಕ್ಕೆ ಶರಣೆಂದು ಎನ್ನ ಭವಂ ನಾಸ್ತಿಯಾಯಿತ್ತಯ್ಯಾ ಪ್ರಭು

೩೩೪

ಮಾಟಕೂಟ ಬಸವಣ್ಣಂಗಾಯಿತ್ತು .

ನೋಟಕೂಟ ಪ್ರಭುದೇವರಿಗಾಯಿತ್ತು.

ಭಾವಕೂಟ ಅಜಗಣ್ಣಂಗಾಯಿತ್ತು.

ಸ್ನೇಹಕೂಟ ಬಾಚಿರಾಜಂಗಾಯಿತ್ತು .

ಇವರೆಲ್ಲರ ಕೂಟ ಚೆನ್ನಬಸವಣ್ಣಂಗಾಯಿತ್ತು.

ಎನಗಿನ್ನಾವಕೂಟವಿಲ್ಲವಯ್ಯಾ , ಚೆನ್ನಮಲ್ಲಿಕಾರ್ಜುನಯ್

೩೩೫

ಮಾಟಕೂಟದಲ್ಲಿ ಬಸವಣ್ಣನಿಲ್ಲ .

ನೋಟಕೂಟದಲ್ಲಿ ಪ್ರಭುದೇವರಿಲ್ಲ .

ಭಾವಕೂಟದಲ್ಲಿ ಅಜಗಣ್ಣನಿಲ್ಲ .

ಸ್ನೇಹಕೂಟದಲ್ಲಿ ಬಾಚಿರಾಜನಿಲ್ಲ .

ಇವರೆಲ್ಲರ ಕೂಟದಲ್ಲಿ ಚೆನ್ನಬಸವಣ್ಣನಿಲ್ಲ .


|| ೩೩೫ ||
ಎನಗಿನ್ನೇನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ ?

೩೩೬

ಮಾಟ ಮದುವೆಯ ಮನೆ.

ದಾನಧರ್ಮ ಸಂತೆಯ ಪಸಾರ,

ಸಾಜಸಾಜೇಶ್ವರಿ ಸೂಳೆಗೇರಿಯ ಸೊಬಗು.

ವ್ರತನೇಮವೆಂಬುದು ವಂಚನೆಯ ಲುಬ್ದ ವಾಣಿ .

ಭಕ್ತಿಯೆಂಬುದು ಬಾಜಿಗಾರರಾಟ.

ಬಸವಣ್ಣಗೆ ತರ; ನಾನರಿಯದೆ ಹುಟ್ಟಿದೆ, ಹುಟ್ಟಿ ಹುಸಿಗೀಡಾದೆ.

ಹುಸಿ ವಿಷಯದೊಳಡಗಿತ್ತು , ವಿಷಯ ಮಸಿಮಣ್ಣಾಯಿತ್ತು .


|| ೩೩೬ ||
ನಿನ್ನ ಗಸಣೆಯನೊಲ್ಲೆ ಹೋಗಾ, ಚೆನ್ನಮಲ್ಲಿಕಾರ್ಜುನಾ,
ಅಕ್ಕಮಹಾದೇವಿಯ ವಚನಗಳು

೩೩೭

ಮುಂಗೈಯಲ್ಲಿ ವೀರಗಂಕಣವಿಕ್ಕಿ ,

ಮುಂಗಾಲಲ್ಲಿ ತೊಡರುಬಾವುಲಿಯ ಕಟ್ಟಿದೆ.

ಗಂಡುಡಿಗೆಯನುಟ್ಟೆನೆಂಬ ಮಾತಿನ ಬಿರಿದ ನುಂಗಿದೆನು.

ಚೆನ್ನಮಲ್ಲಿಕಾರ್ಜುನಾ,

ನಿಮ್ಮಾಣೆಗೆಊಣೆಯವ ತಂದೆನಾದಡೆ,

ನಿಮ್ಮ ತೊತ್ತಿನ ಮಗಳಲ್ಲಯ್ಯಾ. || ೩೩೭ ||

೩೩೮

ಮುಡಿಬಿಟ್ಟು ತೊಂಗವಾರಿದವುಕೇಳು ತಂದೆ.

ಉಡಿಜೋಲಿ ಅಡಿಗಿಕ್ಕಿ ಹೋಯಿತ್ತು ಶಿವಶಿವಾ.

ನಡೆಗೆಟ್ಟು ನಿಧಿ ನಿಂದಿತ್ತು ಕೇಳಾ ಎನ್ನ ತಂದೆ.

ಪ್ರಾಣದೊಡೆಯಾ, ಕರುಣದಿಂದೊಪ್ಪುಗೊಳ್ಳಾ

ಚೆನ್ನಮಲ್ಲಿಕಾರ್ಜುನಾ. || ೩೩೮ ||

೩೩೯

ಮುಡಿಬಿಟ್ಟು ಮೊಗವಾಡಿ ತನುಕರಗಿದವಳ

ಎನ್ನನೇಕೆ ನುಡಿಸುವಿರಿ ?

ಎಲೆ ತಂದೆಗಳಿರಾ, ಬಲುಹಳಿದು ಭವಗೆಟ್ಟು ಛಲವಳಿದು

|| ೩೩೯
ಭಕ್ಕೆಯಾಗಿ ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದವಳ ? ||

೩೪೦

ಮುತ್ತು ಒಡೆದಡೆ ಬೆಸೆಯಬಹುದೆ ?

ಮನ ಮುರಿದಡೆ ಸಂತಕ್ಕೆ ತರಬಹುದೆ ?

ಅಪ್ಪುಗೆಸಡಲಿದ ಸುಖವ ಮರಳಿ ಅರಸಿದರುಂಟೆ ?

ಸಾಧಕನೊಯಿದನಿಧಾನದ ಕುಳಿಯಂತೆ ಅಲ್ಲಿ ಏನುಂಟು ?

ಮಚ್ಚು ಪಲ್ಲಟವಾಗಿ, ನೋಟದ ಸುಖವ ಹಿಂಗಿದರೊಳವೆ ?

ನೋಡದಿರು, ಕಾಡದಿರು, ಮನಬಳಸದಿರು.

ಭಾಷೆಗೆ ತಪ್ಪಿದರೆ ಮುಳ್ಳುಮೊನೆಯ ಕಿಚ್ಚಿನಂತೆ .

ಲೇಸು ಬೀಸರವೋಗದ ಮುನ್ನ

ಚೆನ್ನಮಲ್ಲಿಕಾರ್ಜುನನ ಕೂಡಿ ಧಾತುಗೆಟ್ಟ ಬಳಿಕ ಒಳವೆ


|| ೩೪೦
? ||
೧೨
ಶಿವಶರಣೆಯರ ವಚನಸಂಪುಟ

೩೪೧

ಮುತ್ತು ನೀರಲಾಯಿತ್ತು , ವಾರಿಕಲ್ಲು ನೀರಲಾಯಿತ್ತು ,

ಉಪ್ಪು ನೀರಲಾಯಿತ್ತು.

ಉಪ್ಪು ಕರಗಿತ್ತು , ವಾರಿಕಲ್ಲು ಕರಗಿತ್ತು,

ಮುತ್ತು ಕರಗಿದುದನಾರೂ ಕಂಡವರಿಲ್ಲ .

ಈ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು.

ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ

ಚೆನ್ನಮಲ್ಲಿಕಾರ್ಜುನಯ್ಯಾ. || ೩೪೧ ||

೩೪೨

ಮುನ್ನ ಮಾಡಿತ್ತನಾರು ಕಳೆಯಬಾರದು.

ಅದು ಬೆನ್ನ ಹಿಂದೆ ಬರುತ್ತಿಪ್ಪುದು.

ಅದನ್ನು ಕಳದೆಹೆನೆಂದಡೆ ಎನ್ನಿಚ್ಚೆಯುಂಟೆ ಅಯ್ಯಾ ?

ಚೆನ್ನಮಲ್ಲಿಕಾರ್ಜುನನೆನಗೆ ಕಟ್ಟಿದ ಕಟ್ಟಳೆಯ

ನನ್ನಿಂದ ನಾನೆ ಅನುಭವಿಸಿ ಕಳವೆನು. || ೩೪೨ ||

೩೪೩

ಮೂರು ತಪ್ಪ ಹೊರಿಸಿ ಬಂದವಳಿಗೆ

ಇನ್ನಾರ ಕೊಂಡು ಕೆಲಸವೇತಕ್ಕೆ ?

ಹೊಗದಿಹೆನೆ ಹೋಗಿಹೆನೆ, ಜ್ಞಾನಕ್ಕೆ ಹಾನಿ.

ಅರೆಗೋಣಕೊಯ್ದವನಂತೆ ಇನ್ನೇವೆ ?

ಈ ಗುಣವ ಬಿಡಿಸಾ ಎನ್ನ ತಂದೆ || ೩೪೩ ||


ಚೆನ್ನಮಲ್ಲಿಕಾರ್ಜುನಾ.

ပုပ္ပ

ಮೂಲಾಧಾರದ ಬೇರ ಮೆಟ್ಟಿ ,ಭೂಮಂಡಲವನೇರಿದೆ.

ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ.

ವೈರಾಗ್ಯದಸೋಪಾನದಿಂದ ಶ್ರೀಗಿರಿಯನೇರಿದೆ.
|| ೩೪೪ ||
ಕೈವಿಡಿದು ತೆಗೆದುಕೊಳ್ಳಾ, ಚೆನ್ನಮಲ್ಲಿಕಾರ್ಜುನಾ.

೩೪೫

ಮೊಲೆ ಬಿದ್ದು , ಮುಡಿ ಸಡಲಿ, ಗಲ್ಲ ಬತ್ತಿ, ತೋಳುಕಂದಿದವಳ

ಎನ್ನನೇಕೆ ನೋಡುವಿರಿ ಎಲೆ ಅಣ್ಣಗಳಿರಾ ?


೧೦
ಅಕ್ಕಮಹಾದೇವಿಯ ವಚನಗಳು

ಕುಲವಳಿದು ಛಲವಳಿದು ಭವಗೆಟ್ಟು ಭಕ್ತಿಯಾದವಳ,

ಎನ್ನನೇಕೆನೋಡುವಿರಿ ಎಲೆ ತಂದೆಗಳಿರಾ ?

ಚೆನ್ನಮಲ್ಲಿಕಾರ್ಜುನನ ಕೂಡಿಕುಲವಳಿದು ಛಲವಳಿದವಳು.

೩೪೬

ಮೊಲೆಮುಡಿಯಿದ್ದಡೇನು ಮೂಗಿಲ್ಲದವಳಿಂಗೆ ?

ತಲೆಯ ಮೇಲೆ ಸೆರಗೇತಕ್ಕೆ ಸಹಜಸಂಕಲ್ಪವಿಲ್ಲದವಳಿಂಗೆ ?

ಜಲದೊಳಗೆ ಹುಟ್ಟಿ ಗುಳ್ಳೆ ಜಾತಿಸ್ಮರತ್ವವರಿದಿತ್ತು .

ಹಲವರ ಹಾದಿಯೊಳು ಹರಿಸುರರ್ಗೆ ನಿಮ್ಮ ನೆಲೆಯ ತೋರಿದೆ

ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ. || ೩೪೬ ||

೩೪೭

ಮೋಹವುಳ್ಳಲ್ಲಿ ಮಚ್ಚುವಂತೆಮಾಡಯ್ಯಾ ,

ಮೋಹವುಳ್ಳಲ್ಲಿ ಕರುಳುವ ಕೊಯ್ಯಯ್ಯಾ.

ಮೋಹವುಳ್ಳಲ್ಲಿ ಬೆರಳುವ ಕಡಿಯಯ್ಯಾ.

ಚೆನ್ನಮಲ್ಲಿಕಾರ್ಜುನದೇವಯ್ಯಾ ,

ನೊಂದೆನೆಂದಡೆ ಮನಕತಮಾಡಯ್ಯಾ . || ೩೪೭ ||

೩೪೮

ರತ್ನದ ಸಂಕೋಲೆಯಾದಡೆ ತೊಡರಲ್ಲವೆ ?

ಮುತ್ತಿನ ಬಲೆಯಾದಡೆ ಬಂಧನವಲ್ಲವೆ ?

ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆಸಾಯದಿರ್ಪರೆ ?

ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ

ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ? || ೩೪೮ ||

೩ರ್೪

ರವಿಯ ಕಾಳಗವ ಗೆಲಿದು, ಒಂಬತ್ತು ಬಾಗಿಲ ಮುರಿದು,

ಅಷ್ಟಧವಳಾರಮಂ ಸುಟ್ಟು, ಮೇಲುಪ್ಪರಿಗೆಯ ಮೆಟ್ಟಿ ,


ಅಲ್ಲ - ಅಹುದು, ಉಂಟು- ಇಲ್ಲ , ಬೇಕು-ಬೇಡೆಂಬ

ಆರರಿತಾತನೆ ಗುರು ತಾನೆ ಬೇರಿಲ್ಲ .

ದ್ವಯಕಮಳದಲ್ಲಿ ಉದಯವಾದ ಚೆನ್ನಮಲ್ಲಿಕಾರ್ಜುನಯ್ಯಾ

ನಿಮ್ಮ ಶರಣ ಸಂಗನಬಸವಣ್ಣನಶ್ರೀಪಾದಕ್ಕೆ

ನಮೋ ನಮೋ ಎನುತಿರ್ದೆನು. ೩ರ್೪


ಶಿವಶರಣೆಯರ ವಚನಸಂಪುಟ

೩೫೦

ಲಾಂಛನ ಸಹಿತ ಮನೆಗೆ ಬಂದಡೆ,

ತತ್ಕಾಲವನರಿದು ಪ್ರೇಮವ ಮಾಡದಿರ್ದಡೆ

ನೀನಿರಿಸಿದ ಮನೆಯ ತೊತ್ತಲ್ಲ .

ತತ್ಕಾಲ ಪ್ರೇಮವ ಮಾಡುವಂತೆ ಎನ್ನ ಮುದ್ದ ಸಲಿಸಯ್ಯಾ .

ಅಲ್ಲದೊಡೆ ಒಯ್ಯಯ್ಯ ಸಿರಿಶೈಲ ಚೆನ್ನಮಲ್ಲಿಕಾರ್ಜುನಾ.


|| ೩೫೦ ||

೩೫೧

ಲಿಂಗಕ್ಕೆ ರೂಪಸಲಿಸುವೆ,

ಜಂಗಮಕ್ಕೆ ರುಚಿಯ ಸಲಿಸುವೆ,

ಕಾಯಕ್ಕೆ ಶುದ್ದ ಪ್ರಸಾದವ ಕೊಂಬೆ.

ಪ್ರಾಣಕ್ಕೆ ಸಿದ್ದ ಪ್ರಸಾದವ ಕೊಂಬೆ.

ನಿಮ್ಮ ಪ್ರಸಾದದಿಂದ ಧನ್ಯಳಾದೆನು.

ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ , || ೩೫೧ ||


ಬೆನ್ನಮಲ್ಲಿಕಾರ್ಜುನಯಾ '

೩೫೨

ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ,

ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ

ಶರಣೆನ್ನಬಾರದು ಎಲೆ ತಂದೆ.

ಆಡಬಹುದು ಪಾಡಬಹುದಲ್ಲದೆ,

ನುಡಿದಂತೆ ನಡೆಯಲು ಬಾರದು ಎಲೆ ತಂದೆ.

ಚೆನ್ನಮಲ್ಲಿಕಾರ್ಜುನದೇವಾ,

ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ.


|| ೩೫೨ ||

೩೫೩

ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ

ಇಂಗಿತವನೇನೆಂದು ಬೆಸಗೊಂಬಿರಯ್ಯಾ ?

ಅವರ ನಡೆಯೇ ಆಗಮ , ಅವರ ನುಡಿಯೇ ವೇದ;

ಅವರ ಲೋಕದಮಾನವರೆಂದೆನ್ನಬಹುದೆ ಅಯ್ಯಾ ?

ಅದೆಂತೆಂದಡೆ, ಸಾಕ್ಷಿ :

“ ವೃಕ್ಷಾವತಿ ಬೀಜಂ ಹಿ ತದ್ವೃಕ್ಷೇ ಲೀಯತೇ ಪುನಃ |

ರುದ್ರಲೋಕಂ ಪರಿತ್ಯಕ್ಕಾ ಶಿವಲೋಕೇ ಭವಿಷ್ಯತಿ||”


ಅಕ್ಕಮಹಾದೇವಿಯ ವಚನಗಳು

ಎಂದುದಾಗಿ,

ಅಂಕೋಲೆಯಬೀಜದಿಂದಾಯಿತ್ತು ವೃಕ್ಷವು;

ಆ ವೃಕ್ಷ ಮರಳಿ ಆ ಬೀಜದೊಳಡಗಿತ್ತು .

ಆ ಪ್ರಕಾರದಲ್ಲಿ ಲಿಂಗದೊಳಗಿಂದ ಪುರಾತನರುದ್ಭವಿಸಿ,

ಮರಳಿ ಆ ಪುರಾತನರು ಆ ಲಿಂಗದೊಳಗೆ

ಬೆರಸಿದರು ನೋಡಿರಯ್ಯಾ .

ಇಂತಪ್ಪ ಪುರಾತನರಿಗೆ ನಾನು ಶರಣೆಂದು ಹುಟ್ಟುಗೆಟ್ಟೆನಯ್ಯಾ

ಚೆನ್ನಮಲ್ಲಿಕಾರ್ಜುನಾ. || ೩೫೩ ||

೩೫೪

ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ !

ಧರ್ಮತ್ಯಾಗಿಗೆ ನರಕವಲ್ಲದೆ ಲಿಂಗವಿಲ್ಲ

ವೈರಾಗ್ಯಸಂಪನ್ನಂಗೆ ಮುಕ್ತಿಯಲ್ಲದೆ ಲಿಂಗವಿಲ್ಲ !

ಜ್ಞಾನಿಗೆ ಪರಿಭ್ರಮಣವಲ್ಲದೆ ಲಿಂಗವಿಲ್ಲ !

ಇಂತಪ್ಪ ಭ್ರಾಂತನತಿಗಳದು ತನು ತಾನಾದ ಇರವೆಂತೆಂದಡೆ :

ದೈತವಳಿದು ಅದ್ಭತದಿಂದ ತನ್ನ ತಾನರಿದಡೆ

ಚೆನ್ನಮಲ್ಲಿಕಾರ್ಜುನಲಿಂಗವು ತಾನೆ. || ೩೫೪ ||

೩೩ .

ಲಿಂಗವನು ಪುರಾತನರನು

ಅನ್ಯರ ಮನೆಯೊಳಯಿಕೆಹೋಗಿಹೊಗಳುವರು,

ತಮ್ಮದೊಂದುದರ ಕಾರಣ.

ಲಿಂಗವು ಪುರಾತನರು ಅಲ್ಲಿಗೆ ಬರಬಲ್ಲರೆ ?

ಅನ್ಯವನೆ ಮರೆದು ನಿಮ್ಮ ನೆನೆವರ ಎನಗೊಮ್ಮೆ ತೋರಾ

ಚೆನ್ನಮಲ್ಲಿಕಾರ್ಜುನಾ. || ೩೫೫ ||

೩೫೬

ಲಿಂಗವನ್ನೆ ಲಿಂಗೈಕ್ಯವೆನ್ನೆ , ಸಂಗವೆನ್ನೆ ಸಮರಸವೆನ್ನೆ .

ಆಯಿತೆನ್ನೆ ಆಗದೆನ್ನೆ , ನೀನೆನ್ನೆ ನಾನೆನ್ನೆ .


ಚೆನ್ನಮಲ್ಲಿಕಾರ್ಜುನಯ್ಯಾ ,

ಲಿಂಗೈಕ್ಯವಾದ ಬಳಿಕ ಏನೂ ಎನ್ನೆ , || ೩೫೬ ||


೧೦೬
ಶಿವಶರಣೆಯರ ವಚನಸಂಪುಟ

೩೫೭

ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹಿಗಳು ನೀವುಕೇಳಿರೆ ,

ಲಿಂಗಸ್ಥಲ ನಿಃಶೂನ್ಯವಾಯಿತ್ತು ಸಂಗಮದೇವರಬೆನ್ನಿನಲ್ಲಿ .

ಜಂಗಮಸ್ಥಲ ಬಲ್ಲೆನೆಂಬ ಪರಬ್ರಹ್ಮಗಳು ನೀವುಕೇಳಿರೆ,

ಜಂಗಮಸ್ಥಲ ನಿಃಶೂನ್ಯವಾಯಿತ್ತು ಪ್ರಭುದೇವರಬೆನ್ನಿನಲ್ಲಿ .

ಭಕ್ತಿಸ್ಥಲವ ಬಲ್ಲನೆಂಬ ಪರಬ್ರಹ್ಮಗಳು ನೀವುಕೇಳಿರೆ,

ಭಕ್ತಿಸ್ಥಲ ನಿಃಶೂನ್ಯವಾಯಿತ್ತು ಸಂಗನಬಸವರಾಜದೇವರಬೆನ್ನಿನಲ್ಲಿ .

ಪ್ರಾಣಲಿಂಗಿಸ್ಥಲವ ಬಲ್ಲೆನೆಂಬ ಪರಬ್ರಹ್ಮಗಳು ನೀವುಕೇಳಿರೆ,

ಪ್ರಾಣಲಿಂಗಿಸ್ಥಲ ನಿಃಶೂನ್ಯವಾಯಿತ್ತು ಸಿದ್ಧರಾಮೇಶ್ವರದೇವರಬೆನ

ಪ್ರಸಾದಿಸ್ಥಲವ ಬಲ್ಲೆನೆಂಬ ಪರಬ್ರಹ್ಮಗಳು ನೀವುಕೇಳಿರೆ,

ಪ್ರಸಾದಿಸ್ಥಲ ನಿಃಶೂನ್ಯವಾಯಿತ್ತು ಚಿಕ್ಕದಣ್ಣಾಯಕರಬೆನ್ನಿನಲ್ಲಿ .

ಐಕ್ಯಸ್ಥಲವ ಬಲ್ಲೆನೆಂಬ ಪರಬ್ರಹ್ಮಗಳು ನೀವುಕೇಳಿರೆ ,

ಐಕ್ಯಸ್ಥಲ ನಿಃಶೂನ್ಯವಾಯಿತ್ತು ಅಜಗಣ್ಣದೇವರಬೆನ್ನಿನಲ್ಲಿ .

ಇಂತೆನ್ನ ಷಟ್‌ಸ್ಥಲಂಗಳು ಒಬ್ಬೊಬ್ಬರ ಬೆನ್ನಿನಲ್ಲಿ ನಿಃಶೂನ್ಯವಾದವು

ಎನಗಿನ್ನಾವ ಕಿಂಚಿತುಸ್ಥಲವೂ ಇಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಯ

೩೫೮

ಲಿಂಗಾಂಗಸಂಗಸಮರಸಸುಖದಲ್ಲಿ ಮನ ವೇದ್ಯವಾಯಿತ್ತು .

ನಿಮ್ಮ ಶರಣರ ಅನುಭಾವಸಂಗದಿಂದ

ಎನ್ನ ತನು ಮನ ಪ್ರಾಣ ಪದಾರ್ಥವ

ಗುರುಲಿಂಗಜಂಗಮಕ್ಕಿತ್ತು,

ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದೆನು.

ಆ ಮಹಾಪ್ರಸಾದದ ರೂಪುರುಚಿ ತೃಪ್ತಿಯ

ಇಷ್ಟ ಪ್ರಾಣ ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ

ಮಹಾಘನಪ್ರಸಾದಿಯಾದೆನು.

ಇಂತೀ ಸರ್ವಾಚಾರಸಂಪತ್ತು ಎನ್ನ ತನುಮನ ವೇದ್ಯವಾಯಿತ್ತ

ಇನ್ನೆಲ್ಲಿಯಯ್ಯಾ, ಎನಗೆ ನಿಮ್ಮಲ್ಲಿ ನಿರವಯವು ?

ಇನ್ನೆಲ್ಲಿಯಯ್ಯಾ ನಿಮ್ಮಲ್ಲಿ ಕೂಡುವುದು ?

ಪರಮಸುಖದ ಪರಿಣಾಮ ಮನಮೆರೆದಪ್ಪಿ

ನಾನು ನಿಜವನೈದುವ ಠಾವ ಹೇಳಾ


|| ೩೫೮ ||
ಚೆನ್ನಮಲ್ಲಿಕಾರ್ಜುನ ಪ್ರಭುವೆ ?
೧೦೭
ಅಕ್ಕಮಹಾದೇವಿಯ ವಚನಗಳು

೩೯

ಲಿಂಗಾನುಭಾವ ಸಿದ್ದಿಯಾದ ಬಳಿಕ

ಮತ್ತೇಕಯ್ಯ ಕೂಟವೆಮಗೆ ಹೆರರೊಡನೆ ?

ಹೇಳಿರಯ್ಯಾ ,
|| ೩೫೯ ||
ಎನ್ನದೇವ ಚೆನ್ನಮಲ್ಲಿಕಾರ್ಜುನನು ಕರುಣಿಸಿದ ಬಳಿಕ ?

೩೬೦

ಲೇಸು ಹಾಸು, ನೋಟವಾಭರಣ, ಆಲಿಂಗನ ವಸ್ತು ,

ಚುಂಬನವಾರೋಗಣೆ, ಲಲ್ಲೆವಾತು ತಾಂಬೂಲ,

ಲವಲವಿಕೆಯ ಅನುಲೇಪನವೆನಗೆ.

ಚೆನ್ನಮಲ್ಲಿಕಾರ್ಜುನನಕೂಟ ಪರಮಸುಖವಾ . || ೩೬೦ ||

೩೬೧

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,

ಕರಣಂಗಳ ಚೇಷ್ಟೆಗೆ ಮನವೇ ಬೀಜ.

ಎನಗುಳ್ಳುದೊಂದು ಮನ.

ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ

ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ? || ೩೬೧ ||

೩೬೨

ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ .

ಆಕಾರವಿಡಿದು ಸಾಕಾರಸಹಿತ ನಡೆವೆ.

ಹೊರಗೆ ಬಳಸಿ ಒಳಗೆ ಮರೆದಿಪ್ಪ.

ಬೆಂದನುಲಿಯಂತೆ ಹುರಿಗುಂದದಿಪ್ಪೆ.

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ ,

ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆ . || ೩೬೨ ||

೩೬೩

ವಟವೃಕ್ಷದೊಳಡಗಿದ ಸಮರಸ ಬೀಜ

ಭಿನ್ನ ಭಾವಕ್ಕೆ ಬಪ್ಪುದೆ?

ಕಂಗಳ ನೋಟ, ಕರುವಿಟ್ಟ ಮನದಸೊಗಸು

ಅನಂಗನ ದಾಳಿಯ ಗೆಲಿದವು ಕಾಣಾ.


೧೦೮ ಶಿವಶರಣೆಯರ ವಚನಸಂಪುಟ

ಈ ಮರೀಚಿಕಾಜಲದೊಳಡಗಿದ ಪ್ರಾಣಿ

ವ್ಯಾಧನ ಬಲೆಗೆ ಸಿಲುಕುವುದೆ ?

ನಿನ್ನ ಕೈವಶಕ್ಕೆ ಸಿಕ್ಕಿಹಳೆಂಬುದ ಮರೆಯಾ ಮರುಳ.

ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷ

ನಮಗಾಗದ ಮೋರೆನೋಡಣ್ಣಾ . II ೩೬೩ ||

೩೬೪

ಮನವೆಲ್ಲಾ ಕಲ್ಪತರು, ಗಿಡವೆಲ್ಲಾ ಮರುಜವಣಿ,

ಶಿಲೆಗಳೆಲ್ಲಾ ಪರುಷ, ನೆಲವೆಲ್ಲಾ ಅವಿಮುಕ್ತಿಕ್ಷೇತ್ರ.

ಜಲವೆಲ್ಲಾ ನಿರ್ಜರಾಮೃತ, ಮೃಗವೆಲ್ಲಾ ಪುರುಷಾಮೃಗ,

ಎಡಹುವ ಹರಳೆಲ್ಲಾ ಚಿಂತಾಮಣಿ.

ಚೆನ್ನಮಲ್ಲಿಕಾರ್ಜುನಯ್ಯನನೆಚ್ಚಿನ ಗಿರಿಯ ಸುತ್ತಿ ,

ನೋಡುತ್ತ ಬಂದು ಕದಳಿಯ ಬನವ ಕಂಡೆ ನಾನು. || ೩೬೪ ||

- ೩೬೫

ವನವೆಲ್ಲಾ ನೀನೆ, ವನದೊಳಗಣ ದೇವತರುವೆಲ್ಲಾ ನೀನೆ,

ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ.

ಚೆನ್ನಮಲ್ಲಿಕಾರ್ಜುನಾ,

ಸರ್ವಭರಿತನಾಗಿ ಎನಗೇಕೆ ಮುಖದೋರೆ? || ೩೬೫ ||

೩೬೬

ವಾನರಂಗಳಿಗೆ ಭೈತ್ರ ತಪ್ಪಿ ಬಂದಡೆ

ಮುತ್ತು ಮಾಣಿಕ್ಯ ನವರತ್ನದ ಪೆಟ್ಟಿಗೆಗಳು ಸಾರಿದವು.

ಸಾರಿದಡೆ ಆ ವಾನರಂಗಳು ಬಲ್ಲವೆ ಮುತ್ತಿನ ರಕ್ಷೆಯ ?

ನವರತ್ನದ ಪೆಟ್ಟಿಗೆಯ ತೆರದು ನೋಡಿ,

ಕೆಯ್ಯೋಂಡು, ವಾನರಂಗಳು ಮೆದ್ದು ನೋಡಿ,

ಹಣ್ಣಲ್ಲವೆಂದು ಬಿಟ್ಟು ಕಳದವು.

ಲೋಕದೊಳಗೆ ಶರಣ ಸುಳಿದಡೆ,

ಆ ಶರಣನ ನಡೆ ನುಡಿ ಚಾರಿತ್ರವ ಕರ್ಮಿಗಳೆತ್ತ ಬಲ್ಲರು !

ಚೆನ್ನಮಲ್ಲಿಕಾರ್ಜುನಯ್ಯಾ,

ನಿಮ್ಮ ಶರಣರ ಇರವನು ನಿಮ್ಮ ಶರಣರು ಬಲ್ಲರಲ್ಲದೆ


|| ೩೬೬ ||
ಆ ವಾನರನಂತಹ ಮನುಜರೆತ್ತ ಬಲ್ಲರು.
ಅಕ್ಕಮಹಾದೇವಿಯ ವಚನಗಳು

೩೬೭

ವಿರಕ್ತಿ ವಿರಕ್ತಿಯೆಂಬವರು

ವಿರಕ್ತಿಯ ಪರಿಯೆಂತುಲು ಹೇಳಿರಯ್ಯಾ ?

ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದು

ಬತ್ತಲೆಯಿರ್ದಡೆ ವಿರಕ್ಕನೆ ?

ಉಟ್ಟುದ ತೊರದ ಮತ್ತೆ

ಕಟ್ಟಿದ ಲಿಂಗವ ಕೈಯಲ್ಲಿ ಹಿಡಿಯಲೇಬೇಕು.

ಉಟ್ಟುದ ತೊರೆಯದೆ

ಕಟ್ಟಿದ ಲಿಂಗವಕೈಯಲ್ಲಿ ಹಿಡಿದ ಭ್ರಷ್ಟರನೇನೆಂಬೆ

ಚೆನ್ನಮಲ್ಲಿಕಾರ್ಜುನಾ ? || ೩೬೭ ||

೩೬೮

ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಂಟು ಹೇಳಿರಯ್ಯಾ ,

ಕಟ್ಟಿದ ಲಿಂಗವಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ ?

ಹುಟ್ಟು ಕೆತ್ತುವ ಡೊಂಬನಂತೆ

ಬಿಟ್ಟಮಂಡೆಯ ಕೇಶವ ನುಣ್ಣಿಸಿ ಬಣ್ಣಿಸಿ,

ಎಣ್ಣೆಯ ಗಂಟ ಹಾಕಿದಡೆ ವಿರಕ್ತನೆ ?

ಕಟ್ಟುಹರಿದ ಪಂಜಿನಂತೆ,

ಬಿಟ್ಟಮಂಡೆಯ ಕಟ್ಟದಿರ್ದಡೆ ವಿರಕ್ತನೆ ?

ಹರದನಂತೆ ಹೇಸಿಯಾಗಿರ್ದಡೆ ವಿರಕ್ತನೆ ?

ಮೂಗನಂತೆ ಮಾತನಾಡದಿರ್ದಡೆ ವಿರಕ್ತನೆ ?

ಹೊನ್ನು ಹೆಣ್ಣು ಮಣ್ಣ ಬಿಟ್ಟು

ಅಡವಿಯಾರಣ್ಯದಲ್ಲಿ ರ್ದಡೆ ವಿರಕ್ತನೆ ? ಅಲ್ಲ .

ವಿರಕ್ತನ ಪರಿಯೆಂತೆಂದೊಡೆ

ಒಡಲ ಹುಡಿಗುಟ್ಟಿ , ಮೃಡನೊಳೆಡದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪನು.

ಅಲ್ಲದಿರ್ದಡೆ ಮೈಲಾರಿ ಮಲ್ಲಿ ಗೊರವಿಯಲ್ಲವೆ

ಚೆನ್ನಮಲ್ಲಿಕಾರ್ಜುನಾ ? || ೩೬೮ ||

೩೬೯

ವಿರಕ್ತಿಯೇ ಅವಿರಕ್ತಿ , ವಿರಕ್ತನೆನ್ನದಿರಣ್ಣಾ .

ನೋಟದ ಕರುಳಕೊಯ್ಯದನ್ನಕ್ಕರ ,

ಕ್ರೀಯದ ಕರಬೋನಗಳೊಡೆಯದನ್ನಕ್ಕರ,
ಶಿವಶರಣೆಯರ ವಚನಸಂಪುಟ

ಅಷ್ಟಮದಾದಿಗಳೆಂಬವಹೊಟ್ಟುಹುರಿಯದನ್ನಕ್ಕರ,

ಬೇಕುಬೇಡಾಯೆಂದು ಪರಿವ

ಸರ್ವಸಂದೇಹವ ಹೂಳದನ್ನಕ್ಕರ ವಿರಕ್ತ ವಿರಕ್ತನೆನ್ನದಿರಣ್ಣಾ .

ಶ್ರೀಶೈಲಚೆನ್ನಮಲ್ಲಿಕಾರ್ಜುನದೇವನೊಬ್ಬನೆ ವಿರಕ್ತ ಕಾಣಿರಣ್ಣಾ . |

೩೭೦

ವಿಷಯದ ಸುಖ ವಿಷವೆಂದರಿಯದ ಮರುಳೆ,

ವಿಷಯಕ್ಕೆ ಅಂಗವಿಸದಿರಾ.

ವಿಷಯದಿಂದ ಕೆಡನೆ ರಾವಣನು

ವಿಷಯದಿಂದ ಕೆಡನೆ ದೇವೇಂದ್ರನು ?

ವಿಷಯದಿಂದಾರು ಕಡರು ಮರುಳೆ ?

ವಿಷಯ ನಿರ್ವಿಷಯವಾಯಿತ್ತೆನಗೆ ನಿನ್ನಲ್ಲಿ.

ಚೆನ್ನಮಲ್ಲಿಕಾರ್ಜುನಂಗೆ ಒಲಿದವಳ

ನೀನಪ್ಪಿಹೆನೆಂದಡೆ ಒಣಗಿದ ಮರನಪ್ಪುವಂತೆ ಕಾಣಾ || ೩೭೦ ||

೩೭೧

ವೃಷಭನ ಹಿಂದೆ ಪಶುವಾನು ಬಂದೆನು;

ನಂಬಿ ನಚ್ಚಿ ಪಶುವಾನುಬಂದೆನು.

ಸಾಕಿ ಸಲಹಿಹನೆಂದು ಸಲೆ ನಚ್ಚಿ ಬಂದೆನು.

ಒಲಿದರ ಒಲಿದಹನೆಂದು ಬಳಿಯಲ್ಲಿ ಬಂದೆನು.

ಚೆನ್ನಮಲ್ಲಿಕಾರ್ಜುನಯ್ಯಾ,

ನಿಮ್ಮ ನಂಬಿ ಬಂದ ಹೆಂಗೂಸಹಿಂದೊಬ್ಬರೆಳದೊಯ್ದರೆ

ಎಂತು ಸೈರಿಸಿದೆ ಹೇಳಾ, ಎನ್ನ ದೇವರದೇವಾ ? || ೩೭೧ ||

೩೭.೨

ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು

ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ .

ಇವ ಕುಟ್ಟಲೇಕೆ ಕುಸುಕಲೇಕೆ ?

ಅತ್ತಲಿತ್ತ ಹರಿವ ಮನದ ಶಿರವನರಿದಡೆ

ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ. | ೩೭೨ ||

೩೭೩

ಶರಣರ ಮನನೋಯ ನುಡಿದೆನಾಗಿ,

ಹರಜನ್ಮವಳಿದು ನರಜನ್ಮಕ್ಕೆ ಬಂದನು.


ಅಕ್ಕಮಹಾದೇವಿಯ ವಚನಗಳು

ಹರನಟ್ಟಿದ ಬೆಸನ ಶಿರದೊಳಗಾಂತೊಡೆ,

ಗಿರಿಗಳ ಭಾರವೆನಗಾದುದಯ್ಯ .

ಚೆನ್ನಮಲ್ಲಿಕಾರ್ಜುನನ ಧರ್ಮದಿಂದ

ಸಂಸಾರ ಕರ್ಮದ ಹೊರೆಯನಿಳುಹಿ,

ನಡುದೊರೆಯ ಹಾಯಿದು ಹೋದೆನು. || ೩೭೩ ||

೩೭೪

ಶಿವಂಗೆ ತಪ್ಪಿದ ಕಾಲ ಭಸ್ಮವಾದುದನರಿಯಾ ?

ಶಿವಂಗೆ ತಪ್ಪಿದ ಕಾಮನುರಿದುದನರಿಯಾ ?

ಶಿವಂಗೆ ತಪ್ಪಿದ ಬ್ರಹ್ಮನ ಶಿರ ಹೋದುದನರಿಯಾ ?

ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ತಪ್ಪಿದಡೆ,

ಭವಘೋರನರಕವೆಂದರಿಯಾ, ಮರುಳೆ ? || ೩೭೪ ||

೩೭೫

ಶಿವಗಣಂಗಳ ಮನೆಯಂಗಳ

ವಾರಣಾಸಿಯೆಂಬುದು ಹುಸಿಯೆ ,

ಪುರಾತನರ ಮನೆಯಂಗಳದಲ್ಲಿ

ಅಷ್ಟಾಷಷ್ಟಿ ತೀರ್ಥಂಗಳು ನೆಲೆಸಿಪ್ಪವಾಗಿ ,

ಅದೆಂತೆಂದಡೆ ಅದಕ್ಕೆ ಆಗಮ ಸಾಕ್ಷಿ :

“ಕೇದಾರನ್ನೋದಕೆ ಪೀತೇ ವಾರಣಾಸ್ಮಾ ಮೃತೇ ಸತಿ |

ಶ್ರೀಶೈಲಶಿಖರೇ ದೃಷ್ಟೇ ಪುನರ್ಜನ್ಮ ನ ವಿದ್ಯತೇ ||”

ಎಂಬ ಶಬ್ದಕ್ಕಧಿಕವು.

ಸುತ್ತಿಬರಲುಶ್ರೀಶೈಲ, ಕೆಲಬಲದಲ್ಲಿ ಕೇದಾರ,

ಅಲ್ಲಿಂದ ಹೊರಗೆ ವಾರಣಾಸಿ.

ವಿರಕ್ಕಿ ಬೆದೆಯಾಗಿ, ಭಕ್ತಿ ಮೊಳೆಯಾಗೆ,

ಎನ್ನ ದೇವ ಚೆನ್ನಮಲ್ಲಿಕಾರ್ಜುನಾ

ನಿಮ್ಮ ಭಕ್ತರ ಮನೆಯಂಗಳ

ಪ್ರಯಾಗದಿಂದ ಗುರುಗಂಜಿಯಧಿಕ ನೋಡಾ! || ೩೭೫ ||

೩೭೬

ಶಿವನು ತಾನೆ ಗುರುವಾಗಿ ಬಂದು

ಮಹಾಘನಲಿಂಗವ ವೇದಿಸಿಕೊಟ್ಟ ಪರಿಯೆಂತೆಂದೊಡೆ:


ಶಿವಶರಣೆಯರ ವಚನಸಂಪುಟ

ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ,

ಆ ಅಂಗಕ್ಕೆ ಕಲೆಗಳನೆ ಷಡುಶಕ್ತಿಗಳೆನಿಸಿ,

ಆ ಶಕ್ತಿಗಳಿಗೆ ಷದ್ವಿಧ ಭಕ್ತಿಯನಳವಡಿಸಿ,

ಆ ಭಕ್ತಿಗಳಿಗೆ ಭಾವ- ಜ್ಞಾನ- ಮನ- ಬುದ್ದಿ - ಚಿತ್ರ

ಅಹಂಕಾರಗಳನೆ ಹಸ್ತಗಳೆಂದೆನಿಸಿ,

ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ

ಪಂಚಲಿಂಗಂಗಳನೆ ಷಧ ಲಿಂಗಂಗಳೆಂದೆನಿಸಿ,

ಆ ಮಂತ್ರಲಿಂಗಂಗಳಿಗೆ ಹೃದಯಗೂಡಿ

ಪಂಚೇಂದ್ರಿಯಂಗಳನೆ ಮುಖಂಗಳೆಂದೆನಿಸಿ,

ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ ಪದಾರ್ಥಗಳೆಂದೆನಿಸಿ,

ಆ ದ್ರವ್ಯಪದಾರ್ಥಗಳು ಆಯಾ ಮುಖದ ಲಿಂಗಗಳಲ್ಲಿ

ನಿರಂತರ ಸಾವಧಾನದಿಂದ ಅರ್ಪಿತವಾಗಿ

ಬೀಗಲೊಡನೆ ಅಂಗಸ್ಥಲಂಗಳಡಗಿ,

ತ್ರಿವಿಧ ಲಿಂಗಾಂಗ ಸ್ಥಲಂಗಳುಳಿದು,

ಕಾಯಗುರು, ಪ್ರಾಣಲಿಂಗ, ಜ್ಞಾನ ಜಂಗಮ ,

ಗುರುವಿನಲ್ಲಿ ಶುದ್ದ ಪ್ರಸಾದ

ಲಿಂಗದಲ್ಲಿ ಸಿದ್ಧಪ್ರಸಾದ

ಜಂಗಮದಲ್ಲಿ ಪ್ರಸಿದ್ಧ ಪ್ರಸಾದ

ಇಂತೀ ತ್ರಿವಿಧ ಪ್ರಸಾದ ಏಕಾರ್ಥವಾಗಿ

ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣಂ

ಜ್ಞಾನಿಯಲ್ಲ , ಅಜ್ಞಾನಿ ಮುನ್ನವೆ ಅಲ್ಲ ,

ಶೂನ್ಯನಲ್ಲ , ನಿಶೂನ್ಯನಲ್ಲ , ದ್ವೀತಿಯಲ್ಲ, ಅತಿಯಲ್ಲ .

ಇಂತೀ ಉಭಯಾತ್ಮಕ ತಾನೆಯಾಗಿ

ಇದು ಕಾರಣ, ಇದರಾಗುಹೋಗುಸಕಲಸಂಬಂಧವ

ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರೆ ಬಲ್ಲರು. || ೩೭೬ ||

೩೭೭

ಶಿವಭಕ್ತರರೋಮನೊಂದಡೆ, ಶಿವನು ನೋವನೋಡಾ.

ಶಿವಭಕ್ತರು ಪರಿಣಾಮಿಸಿದಡೆ, ಶಿವನು ಪರಿಣಾಮಿಸುವನೋಡಾ.

ಭಕ್ಕದೇಹಿಕದೇವನೆಂದು ಶ್ರುತಿ ಹೊಗಳುವ ಕಾರಣ,

ಶಿವಭಕ್ತರ ಲೇಸು ಹೊಲೆಹ ಶಿವನ ಮುಟ್ಟುವುದು ನೋಡಾ.



ಅಕ್ಕಮಹಾದೇವಿಯ ವಚನಗಳು

ತಾಯಿನೊಂದಡೆ ಒಡಲಶಿಶು ನೋವತೆರನಂತೆ,


|| ೩೭೭ ||
ಭಕ್ತರು ನೊಂದಡೆ ತಾ ನೋವನೋಡಾ ಚೆನ್ನಮಲ್ಲಿಕಾರ್ಜುನ

೩೭೮

ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ,

ನಿಮ್ಮ ನಿಜವನಾರಯ್ಯಾ ಬಲ್ಲವರು !

ವೇದಂಗಳಿಗಭೇದ್ಯನು, ಶಾಸ್ತ್ರಂಗಳಿಗಸಾಧ್ಯನು;

ಪುರಾಣಕ್ಕೆ ಆಗಮ್ಮನು; ಆಗಮಕ್ಕೆ ಅಗೋಚರನು;

ತರ್ಕಕ್ಕೆ ಅತರ್ಕ್ಕನು ;

ವಾನಾತೀತವಾಗಿಪ್ಪ ಪರಶಿವಲಿಂಗವನು

ಕೆಲಂಬರು ಸಕಲನೆಂಬರು; ಕೆಲಂಬರು ನಿಃಕಲನೆಂಬರು;

ಕೆಲಂಬರು ಸೂಕ್ಷ್ಮನೆಂಬರು; ಕೆಲಂಬರು ಸ್ಕೂಲನೆಂಬರು;

ಈ ಬಗೆಯ ಭಾವದಿಂದ, ಹರಿ , ಬ್ರಹ್ಮ , ಇಂದ್ರ , ಚಂದ್ರ , ರವಿ,

ಕಾಲ, ಕಾಮ , ದಕ್ಷ , ದೇವ, ದಾನವ, ಮಾನವರೆಲ್ಲರೂ

ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾದರು.

ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು

ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿ

ವೀರಶೈವ ಮಾರ್ಗವನರುಪುವುದಕ್ಕೆ

ಬಾವನ್ನ ವಿವರವನೊಳಕೊಂಡು ಚರಿಸಿದನದೆಂತೆಂದಡೆ :

ಗುರುಕಾರುಣ್ಯವೇದ್ಯನು, ವಿಭೂತಿ ರುದ್ರಾಕ್ಷಿಧಾರಕನು,

ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗ ಸಂಬಂಧಿ,

ನಿತ್ಯ ಲಿಂಗಾರ್ಚಕನು , ಅರ್ಪಿತದಲ್ಲಿ ಅವಧಾನಿ,

ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,

ಏಕಲಿಂಗನಿಷ್ಕಾಪರನು, ಚರಲಿಂಗಲೋಲುಪ್ತನು,

ಶರಣಸಂಗಮ್ಮೇಶ್ವರನು, ತ್ರಿವಿಧಕ್ಕಾಯತನು,

ತ್ರಿಕರಣ ಶುದ್ದನು, ತ್ರಿವಿಧ ಲಿಂಗಾಂಗಸಂಬಂಧಿ ,

ಅನ್ಯದೈವ ಸ್ಮರಣೆಯ ಹೊದ್ದ, ಭವಿಸಂಗವ ಮಾಡ,

ಭವಿಪಾಕವ ಕೊಳ್ಳ, ಪರಸತಿಯ ಬೆರಸ,

ಪರಧನವನೊಲ್ಲ, ಪರನಿಂದೆಯನಾಡ, ಅಮೃತವ ನುಡಿಯ ,

ಹಿಂಸೆಯ ಮಾಡ, ತಾಮಸಭಕ್ತಸಂಗವ ಮಾಡ,

ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ
ಶಿವಶರಣೆಯರ ವಚನಸಂಪುಟ

ಮುಂತಾದವೆಲ್ಲವ ಸಮರ್ಪಿಸಿ,

ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದೆಯ ಸೈರಿಸ,

ಪ್ರಸಾದನಿಂದೆಯ ಕೇಳ, ಅನ್ಯರನಾಸೆಗೆಯ್ಯ ,

ಪಾತ್ರಾಪಾತ್ರವನರಿದೀವ, ಚತುರ್ವಿಧಪದವಿಯ ಹಾರ,

ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ,

ದೈತಾದ್ಮತವ ನುಡಿವನಲ್ಲ , ಸಂಕಲ್ಪವಿಕಲ್ಪವ ಮಾಡುವನಲ್ಲ ,

ಕಾಲೋಚಿತವ ಬಲ್ಲ ,ಕ್ರಮಯುಕ್ತನಾಗಿ ಷಟ್‌ಸ್ಥಲಭರಿತ,

ಸರ್ವಾಂಗಲಿಂಗಿ, ದಾಸೋಹಸಂಪನ್ನ .

ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ

ಮೆರೆದ ನಮ್ಮ ಬಸವಣ್ಣನು.

ಆ ಬಸವಣ್ಣನಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ

ನಮೋ ನಮೋ ಎಂದು ಬದುಕಿದೆನು ಕಾಣಾ, ಚೆನ್ನಮಲ್ಲಿಕಾರ್ಜುನಾ |

೩೭೯

ಶಿವಶಿವಾ,ಶ್ರೀಗುರುಲಿಂಗಯ್ಯದೇವರು ತನ್ನ ಕರಸ್ಥಲವ ತಂದು

ಎನ್ನ ಶಿರಸ್ಥಲದ ಮೇಲಿರಿಸಿದ ಬಳಿಕ

ಎನ್ನ ಭವಂ ನಾಸ್ತಿಯಾಯಿತ್ತು.

ಎನ್ನ ತನ್ನಂತೆ ಮಾಡಿದ, ತನ್ನ ಎನ್ನಂತೆ ಮಾಡಿದ

ಎನ್ನಲ್ಲಿ ತನ್ನಲ್ಲಿ ತೆರಹಿಲ್ಲದೆ ಮನಕ್ಕೆ ತೋರಿದ.

ತನ್ನ ಕರಸ್ಥಲದೊಳಗಿದ್ದ ಶಿವಲಿಂಗದೇವರನು

ಎನ್ನ ಕರಸ್ಥಲದೊಳಗೆ ಮೂರ್ತಿಗೊಳಿಸಿದ.

ಎನ್ನ ಕರಸ್ಥಲದೊಳಗಿದ್ದ ಶಿವಲಿಂಗದೇವರನು

ಎನ್ನ ತನುವಿನ ಮೇಲೆಮೂರ್ತಿಗೊಳಿಸಿದ.

ಎನ್ನ ತನುವಿನ ಮೇಲಣ ಶಿವಲಿಂಗದೇವರನು

ಎನ್ನ ಮನವೆಂಬ ಮಂಟಪದೊಳಗೆ ಮೂರ್ತಿಗೊಳಿಸದ.

ಎನ್ನ ಮನವೆಂಬ ಮಂಟಪದೊಳಗೆ ಮೂರ್ತಿಗೊಳಿಸಿದ ಶಿವಲಿಂಗದೇವರನು

ಎನ್ನ ಜ್ಞಾನವೆಂಬ ಮಂಟಪದೊಳಗೆ ಮೂರ್ತಿಗೊಳಿಸಿದ.


ಅಳಸಿದೆ.

ಎನ್ನ ಜ್ಞಾನವೆಂಬ ಮಂಟಪದೊಳಗಣ ಶಿವಲಿಂಗದೇವರನು

ಮಹಾಘನದಲ್ಲಿ ಮೂರ್ತಿಗೊಳಿಸಿದ.

ಕಬ್ಬಿನ ತನಿರಸವ ಕೊಂಡು ಸಿಪ್ಪೆಯ ಬಿಡುವಂತೆ,

ಮನದ ಮೇಲಣ ಶಿವಲಿಂಗದೇವರಿರಲು


೧೧
ಅಕ್ಕಮಹಾದೇವಿಯ ವಚನಗಳು

ತನುವಿನ ಮೇಲಣ ಶಿವಲಿಂಗದೇವರು ಹೋಯಿತ್ತೆಂದು

ಆತ್ಮಘಾತವ ಮಾಡಿಕೊಂಬ ಬ್ರಹ್ಮತಿಸೂಳೆಗಾರರ ನೋಡಯ್ಯಾ ,

ಚೆನ್ನಮಲ್ಲಿಕಾರ್ಜುನಾ. || ೩೭೯ ||

೩೮೦

ಶಿವಶಿವಾ, ಕರ್ಮಕ್ಷಯವಾದಲ್ಲಿ

ಕರ್ಮದ ಮಾತ ಕೇಳಿಸಿದೆಯಯ್ಯಾ ?

ಪಾಪಲೇಪವಳಿದಲ್ಲಿ

ಪಾಪದ ಮಾತ ಕೇಳಿಸಿದೆಯಲ್ಲಯ್ಯಾ ?

ಶಿವಶಿವಾ, ಭವದ ಬಟ್ಟೆಯನಗಲಿದಲ್ಲಿ ?

ಬಂಧನದ ನುಡಿಯನಾಡಿಸಿದೆಯಲ್ಲಯ್ಯಾ ?

ಚೆನ್ನಮಲ್ಲಿಕಾರ್ಜುನಯ್ಯಾ ,

ನೀನೆ ಗಂಡನೆಂದಿದ್ದಲ್ಲಿ ,

ಪರಪುರುಷರ ಮಾತನಾಡಿಸಿದೆಯಲ್ಲಯ್ಯಾ ? || ೩೮೦ ||


ಟಿ .
೩೮೧ ಕೆ


ಸಂಗದಿಂದಲ್ಲದೆ ಅಗ್ನಿ ಹುಟ್ಟದು, 3²
* 1946 2
ಸಂಗದಿಂದಲ್ಲದೆ ಬೀಜ ಮೊಳೆದೋರದು, *
ಸಂಗದಿಂದಲ್ಲದೆಹೂವಾಗದು.

ಸಂಗದಿಂದಲ್ಲದೆ ಸರ್ವಸುಖದೋರದು .

ಚೆನ್ನಮಲ್ಲಿಕಾರ್ಜುನಯ್ಯಾ ,
ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು

ಪರಮಸುಖಿಯಾದೆನಯ್ಯಾ . || ೩೮೧ ||

೩೮೨

ಸಂಗನಬಸವಣ್ಣನ ಪಾದವ ಕಂಡೆನಾಗಿ

ಎನ್ನ ಅಂಗ ನಾಸ್ತಿಯಾಯಿತ್ತು .

ಚೆನ್ನಬಸವಣ್ಣನ ಪಾದವ ಕಂಡೆನಾಗಿ

ಎನ್ನ ಪ್ರಾಣ ಬಯಲಾಯಿತ್ತು .

ಪ್ರಭುವೆ, ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ

ಎನಗೆ ಅರಿವುಸ್ವಾಯತವಾಯಿತ್ತು.

ಚೆನ್ನಮಲ್ಲಿಕಾರ್ಜುನಯ್ಯಾ ,
೧೧೬
ಶಿವಶರಣೆಯರ ವಚನಸಂಪುಟ

ನಿಮ್ಮ ಶರಣರ ಕರುಣವ ಪಡೆದೆನಾಗಿ

ಎನಗಾವ ಜಂಜಡವೂ ಇಲ್ಲವಯ್ಯಾ ಪ್ರಭುವೆ.


. || ೩೮೨ ||

೩೮೩

ಸಂಸಾರವ ನಿರ್ವಾಣವ ಮಾಡಿ,

ಮನವವತುರಗವ ಮಾಡಿ,

ಜೀವವ ರಾವುತನ ಮಾಡಿ,

ಮೇಲಕ್ಕೆ ಉಪ್ಪರಿಸಲೀಯದೆ,

ಮುಂದಕ್ಕೆ ಮುಗ್ಗರಿಸಲೀಯದೆ

ಈ ವಾರುವನ ಹಿಂದಕ್ಕೆ ಬರಸೆಳೆದು ನಿಲಿಸಿ,

ಮೋಹರವಾಗಿದ್ದ ದಳದ ಮೇಲೆ,

ಅಟ್ಟಿ ಮುಟ್ಟಿ ತಿವಿದು ಹೊಯಿದು ನಿಲಿಸಲರಿಯದೆ,

ಧವಳಬಣ್ಣದಕೆಸರುಗಲ್ಲ ಮೆಟ್ಟಿ

ತೊತ್ತಳದುಳಿವುತ್ತಲು ಇದಾರಯ್ಯಾ,

ಅಂಗಡಿಯ ರಾಜಬೀದಿಯೊಳಗೆ ಬಿದ್ದ ರತ್ನ ಸೆಟ್ಟಿ,

ಈ ಥಳಥಳನೆ ಹೊಳವ ಪ್ರಜ್ವಲಿತವ ಕಾಣದೆ

ಹಳಹಳನೆ ಹಳಸುತ್ತೆದಾರೆ ಅಯ್ಯಾ ,

ಆಧಾರಸ್ಥಾನದ ಇಂಗಳವನಿಕ್ಕಿ

ವಾಯು ಪವನದಿಂದ ನಿಲಿಸಲು,

ಆ ಅಗ್ನಿಯ ಸೆಕೆ ಹೋಗಿಬ್ರಹ್ಮರಂಧ್ರವ ಮುಟ್ಟಲು,


೧ ಬ್ರಹ್ಮರಂಧ್ರವ ಮುಟ್ಟಲು,
ಅಲ್ಲಿರ್ದ ಅಮೃತದ ಕೊಡನೊಡೆದು

ಕೆಳಗಣ ಹೃದಯಸ್ಥಾನದ ಮೇಲೆಬೀಳಿ,

ಮರಸಿದ ಮಾಣಿಕ್ಯದ ಬೆಳಗು ಕಾಣಬಹುದು.

ಇದನಾರಯ್ಯಾ ಬಲ್ಲರು : ಹಮ್ಮಳಿದ ಶರಣರ ಮೇಲೆ ?

ಇಹಪರವ ಬಲ್ಲ ಶರಣ, ಪಂಚೇಂದ್ರಿಯದ ಇಂಗಿತವ ಬಲ್ಲ ಶರಣ.

ಒಡಲ ಬಿಟ್ಟ ಶರಣನಲ್ಲದೆ ಉಳಿದ ಪ್ರಾಣಘಾತಕ ಪಾತಕರಿವರೆತ್ತಲು,

ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ ಶರಣ ಬಸವಣ್ಣಂಗಲ್ಲದೆ ? || ೩೮೩ ||

೩೮೪

ಸಂಸಾರವೆಂಬ ಹಗೆಯಯ್ಯಾ ಎನ್ನ ತಂದೆ.

ಎನ್ನ ವಂಶವಂಶದಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯಾ,


೧೭
ಅಕ್ಕಮಹಾದೇವಿಯ ವಚನಗಳು

ಎನ್ನುವನರಸಿಯರಸಿ ಹಿಡಿದುಕೋಲುತ್ತಿದೆಯಯ್ಯಾ,

ನಿನ್ನ ನಾ ಮರೆಹೊಕ್ಕೆ ಕಾಯಯ್ಯಾ,


|| ೩೮೪ ||
ಎನ್ನ ಬಿನ್ನಪವನವಧರಿಸಾ, ಚೆನ್ನಮಲ್ಲಿಕಾರ್ಜುನಾ.

೩೮೫

ಸಂಸಾರಸಂಗದಲ್ಲಿರ್ದ ನೋಡಾನಾನು .

ಸಂಸಾರ ನಿಸ್ಸಾರವೆಂದು ತೋರಿದನೆನಗೆ ಶ್ರೀಗುರು.

ಅಂಗವಿಕಾರದ ಸಂಗವ ನಿಲಿಸಿ,

ಲಿಂಗವನಂಗದ ಮೇಲೆ ಸ್ಟಾಪ್ಯವ ಮಾಡಿದನೆನ್ನ ಗುರು,

ಹಿಂದಣ ಜನ್ಮವ ತೊಡೆದು, ಮುಂದಣ ಪಥವ ತೋರಿದನೆನ್ನ ತಂದೆ.

ಚೆನ್ನಮಲ್ಲಿಕಾರ್ಜುನನ ನಿಜವ ತೋರಿದನೆನ್ನ ಗುರು.|| ೩೮೫ ||

೩೮೬

ಸಜ್ಜನೆಯಾಗಿ ಮಜ್ಜನಕ್ಕೆರೆವೆ,

ಶಾಂತಳಾಗಿ ಪೂಜೆಮಾಡುವೆ,

ಸಮರತಿಯಿಂದ ನಿಮ್ಮ ಹಾಡುವೆ,

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ. || ೩೮೬ ||

೩೮೭

ಸಟೆದಿಟವೆಂಬ ಎರಡುವಿಡಿದು ನಡೆವುದೀ ಲೋಕವೆಲ್ಲವು.

ಸಟೆದಿಟವೆಂಬ ಎರಡುವಿಡಿದು ನುಡಿವುದೀ ಲೋಕವೆಲ್ಲವು.

ಸಟೆದಿಟವೆಂಬ ಎರಡುವಿಡಿದು ನಡೆವನೆ ಶರಣನು ?

ಗುರುಲಿಂಗಜಂಗಮದಲ್ಲಿ ಸಟೆಯ ಬಳಸಿದಡೆ

ಅವನು ತ್ರಿವಿಧಕ್ಕೆ ದ್ರೋಹಿ, ಅಘೋರನರಕಿ.

ಉಂಬುದೆಲ್ಲ ಕಿಷ, ತಿಂಬುದೆಲ್ಲ ಅಡಗು, ಕುಡಿವುದೆಲ್ಲ ಸುರೆ.

ಹುಸಿಯೆಂಬುದೆ ಹೊಲೆ, ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ

ಹುಸಿಯನಾಡಿ ಲಿಂಗವ ಪೂಜಿಸಿದಡೆ

ಹೊಳ್ಳ ಬಿತ್ತಿ ಫಲವನರಸುವಂತೆ , || ೩೮೭ ||

೩೮೮

ಸಟೆ ಹಿರಿದಾಯಿತ್ತು ಇನ್ನೇನಿನ್ನೇವೆ.

ದಿಟ ಕಿಳಿದಾಯಿತ್ತು ಇನ್ನೇವೆನಿನ್ನೇವೆ.


೧೧೮
ಶಿವಶರಣೆಯರ ವಚನಸಂಪುಟ

ಡಂಬಕ ಮಿಗಿಲಾಯಿತ್ತು ಇನ್ನೇವೆನಿನ್ನೇವೆ.

ನಂಬುಗೆಯೆದಿದ್ದೇವೆನಿನ್ನೇವೆ.

ಆಮಿಷ ಘನವಾಯತಿನ್ನವೆನಿನ್ನೇವೆ.

ತಾಮಸ ಘನವಾಯಿತ್ತಿನ್ನೇವೆನಿನ್ನೇವೆ.

ಚೆನ್ನಮಲ್ಲಿಕಾರ್ಜುನಯ್ಯಾ

ಭಕ್ತಿಯೆನ್ನಲ್ಲಿಲ್ಲ ಇನ್ನೇವೆನಿನ್ನೇವೆ. || ೩೮೮ ||

೩೮೯

ಸತ್ತ ಹೆಣ ಕೂಗಿದುದುಂಟು,

ಬೈತಿಟ್ಟ ಬಯಕೆ ಕರೆದುದುಂಟು,

ಹೆಪ್ಪಿಟ್ಟ ಹಾಲು ಗಟ್ಟಿಗೊಂಡು ಸಿಹಿಯಾದುದುಂಟು.

ಇದ ನಿಶ್ಚಿಸಿನೋಡಿ ಚೆನ್ನಮಲ್ಲಿಕಾರ್ಜುನದೇವರಲ್ಲಿ . || ೩೮೯ ||

೩೯೦

ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು

ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ.

ಬಚ್ಚಬಯ ಭವಿಗಳ ಸಂಗದಲ್ಲಿದ್ದರೆ

ಕಿಚ್ಚಿನೊಳಗೆ ಬಿದ್ದ ಕೀಡೆಯಂತಪ್ಪುದಯ್ಯ .

ಸುಚಿತ್ತದಿಂದ ನಿಮ್ಮ ಸದ್ಭಕ್ತರ ಸಂಗದಲ್ಲಿರಿಸದಿರ್ದಡೆ

ನಾನಿನ್ನು || ೩೯೦ || ?
ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ

೩೯೧

ಸತ್ತಾದಡೆ ಶರೀರಂ ಪೋದಡೆ ಪೋಗಲಿ ,

ಲೋಕದ ಗಂಡರನೊಲ್ಲೆ ;

ಲೋಕದ ಹೆಂಡಿರು ಬೇಕಾದೂಡ ಮಾಡಿಕೊಳ್ಳಲೆ; (S


- ಆರ್ಕಿ .
ಉರಿಯದಿರು ಉರಿಯದಿರು ಉರಿಯದಿರು. 5
ಚೆನ್ನಮಲ್ಲಿಕಾರ್ಜುನನಲ್ಲದೆ - ಆ೯೧೦ & 25 So ,

ಲೋಕದ ಗಂಡರು ಎನಗೆ ನೆನೆಯಲು ಬಾರದು,

|| ೩೯೧ ||
ಸೋಂಕಲಿ ಬಾರದು, ಅಲ್ಲದ ಮೋರೆಕಂಡಣ್ಣ
- .Go G+ - Do

೩೯೨

ಸತಿ ಎಂಬುದು ಮಾಟ, ಪತಿಯೆಂಬುದು ಮಾಟ,

ತನುವೆಂಬುದು ಮಾಯೆ , ಮನವೆಂಬುದು ಮಾಯೆ ,


ಅಕ್ಕಮಹಾದೇವಿಯ ವಚನಗಳು

ಸುಖವೆಂಬುದು ಮಾಯೆ ,

ಚೆನ್ನಮಲ್ಲಿಕಾರ್ಜುನನೆನಗೆ ಕೈಹಿಡಿದ ಗಂಡನಲ್ಲದೆ

ಮಿಕ್ಕಿನವರೆಲ್ಲರೂ ಮೂಗಿಲ್ಲದ ಬಣ್ಣದ ಬೊಂಬೆಗಳು ಕಾಣಯ್ಯಾ . || ೩೯೨

೩೯೩

ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ

ತಚ್ಛಿಷ್ಯನ ಮಸ್ತಕದ ಮೇಲೆ ತನ್ನ ಹಸ್ತವನಿರಿಸಿದಡೆ

ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ .

ಒಪ್ಪುವ ಶ್ರೀ ವಿಭೂತಿಯ ನೊಸಲಿಂಗೆ ಪಟ್ಟವಕಟ್ಟಿದಡೆ

ಮುಕ್ತಿರಾಜ್ಯದ ಒಡೆತನಕ್ಕೆ ಪಟ್ಟವಕಟ್ಟಿದಂತಾಯಿತ್ತಯ್ಯಾ .

ಸದ್ಯೋಜಾತ ವಾಮದೇವ ಅಘೋರತತ್ಪುರುಷ ಈಶಾನವೆಂಬ

ಪಂಚಕಳಶದಭಿಷೇಕವ ಮಾಡಿಸಲು,

ಶಿವನ ಕರುಣಾಮೃತದಸೋನೆಸುರಿದಂತಾಯಿತ್ತಯ್ಯಾ .

ನೆರೆದ ಶಿವಗಣಂಗಳ ಮಧ್ಯದಲ್ಲಿ

ಮಹಾಲಿಂಗವನು ಕರತಲಾಮಲಕವಾಗಿ ಶಿಷ್ಯನ ಕರಸ್ಥಲಕ್ಕೆ ಇತ್ತು ,

ಅಂಗದಲ್ಲಿ ಪ್ರತಿಷ್ಠಿಸಿ, ಪ್ರಣವಪಂಚಾಕ್ಷರಿಯುಪದೇಶವ

ಕರ್ಣದಲ್ಲಿ ಹೇಳಿ, ಕಂಕಣವಕಟ್ಟಿದಲ್ಲಿ ,

ಕಾಯವೇಕೈಲಾಸವಾಯಿತ್ತು ;

ಪ್ರಾಣವ ಪಂಚಬ್ರಹ್ಮಮಯಲಿಂಗವಾಯಿತ್ತು .

ಇಂತು ಮುಂದ ತೋರಿ ಹಿಂದ ಬಿಡಿಸಿದ

ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯಾ

ಚೆನ್ನಮಲ್ಲಿಕಾರ್ಜುನಾ. || ೩೯೩ ||

೩೯೪

ಸಪ್ತಧಾತುಗಳಿಂದ ಬಳಸಲ್ಪಟ್ಟ ಈ ಶರೀರವೆ

ಶಿವನ ಪಟ್ಟಣವೆಂದು ಹೇಳಲ್ಪಟ್ಟಿತ್ತು .

ಈ ಪಿಂಡವೆಂಬ ಪಟ್ಟಣದಲ್ಲಿ

ಸೂಕ್ಷ್ಮವಾದಂಥ ಧಾರಾಕಾಶದಿಂದ ಮನೋಹರವಾಗಿದ್ದ

ಹೃದಯಕಮಲವೆ ಅಂತಃಪುರವು.

ಅಲ್ಲಿ ನಿತ್ಯಪರಿಪೂರ್ಣತ್ವದಿಂದ ಸಿದ್ಧನಾಗಿ ಸಚ್ಚಿದಾನಂದವೇ

ಕುರುಹಾಗುಳ್ಳ ಪರಮಶಿವನು ಜಲದಲ್ಲಿ ತೋರುತ್ತಿರ್ದ


ಆಕಾಶದೋಪಾದಿಯಲ್ಲಿ ಪ್ರತ್ಯಕ್ಷವಾಗಿ
ಶಿವಶರಣೆಯರ ವಚನಸಂಪುಟ

ಪ್ರಕಾಶವೇ ಸ್ವರೂಪವಾಗುಳ್ಳಾತನಾಗಿ ಇರುತಿರ್ದನು.

ಆ ಜಲಮಧ್ಯದಲ್ಲಿಯ ಆಕಾಶ ಬಿಂಬದಲ್ಲಿರುತಿರ್ದ

ಘಟಾಕಾಶದೋಪಾದಿಯಲ್ಲಿ

[ ಅ] ಖಂಡಿತನಾಗಿರ್ದ ಚಿದ್ರೂಪನಾದ ಶಿವನನು

ಭಾವಿಸುವುದಯ್ಯ ಶ್ರೀ || ೩೯೪ ||


ಚೆನ್ನಮಲ್ಲಿಕಾರ್ಜುನದೇವಾ.

೩೯೫

ಸರ್ಪನ ಬಾಯ ಕಪ್ಪೆ ನೋಣಕ್ಕೆ ಹಾರುವಂತೆ

ಆಪ್ಯಾಯನ ಬಿಡದು.

ಕಾಯವರ್ಪಿತವೆಂಬ ಹುಸಿಯ ನೋಡಾ,

ನಾನು ಭಕ್ತಳೆಂಬ ನಾಚಿಕೆಯ ನೋಡಾ.

ನಾನು ಯುಕ್ತಳೆಂಬ ಹೇಸಿಕೆಯ ನೋಡಾ.

ಓಗರವನ್ನಾಗದು, ಪ್ರಸಾದ ಮುನ್ನಿಲ್ಲ ;

ಚೆನ್ನಮಲ್ಲಿಕಾರ್ಜುನಯ್ಯ ಉಪಚಾರದರ್ಪಿತವನವಗಡಿಸಿ ಕಳೆವ. || ೩೯೫

- ೩೯೬

ಸಾಕ್ಷಿ ಸತ್ತಿತ್ತು , ಪತ್ರ ಬಂದಿತ್ತು , ಲೆಕ್ಕ ತುಂಬಿತ್ತು ,

ಜೀವ ಜೀವಿತದ ಆಸೆ ನಿಂದುದು, ಭಾಷೆ ಹೋಯಿತ್ತು,

ದೇಶವೆಲ್ಲರಿಯೆ ಎನ್ನ ದೇವ ಚೆನ್ನಮಲ್ಲಿಕಾರ್ಜುನನ ನಂಬಿ

ಹಂಬಲ ಮರೆದೆನಾಗಿ, || ೩೯೬ ||

೩೯೭

ಸಾವಿರ ಹೊನ್ನಿಂಗೆ ಸಾದಕೊಂಡು

ಸುಣ್ಣವ ಬೆರಸಿದಂತೆ ಮಾಡಿದೆಯಯ್ಯಾ.

ಮೂರು ಲಕ್ಷದ ಬೆಲೆಗೆ ರತ್ನವ ಕೊಂಡು

ಮಡುವಿನಲ್ಲಿ ಇಟ್ಟಂತೆ ಮಾಡಿದೆಯಯ್ಯಾ.

ಚೆನ್ನಮಲ್ಲಿಕಾರ್ಜುನಯ್ಯಾ ,

ಎನ್ನ ಮುಟ್ಟಿ ಪಾವನವ ಮಾಡಿ


|| ೩೯೭ ||
ಕಷ್ಟಸಂಸಾರಿಗೊಪ್ಪಿಸುವಂತೆ ಮಾಡಿದೆಯಯ್ಯಾ,

೩೯೮

ಸಾವಿಲ್ಲದಕೇಡಿಲ್ಲದರೂಹಿಲ್ಲದ ಚೆಲುವಂಗೆ ನಾನೊಲಿದೆ.

ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ |


ಅಕ್ಕಮಹಾದೇವಿಯ ವಚನಗಳು

ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ !

ಭವವಿಲ್ಲವ ಭಯವಿಲ್ಲವ ನಿರ್ಭಯ ಚೆಲುವಂಗೊಲಿದೆ ನಾನು.

ಸೀಮೆಯಿಲ್ಲದ ನಿಸ್ಸಿಮಂಗೊಲಿದೆ ನಾನು.

ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ

ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ. || ೩೯೮ ||

೩೯೯

ಸುಖದ ಸುಖಿಗಳ ಸಂಭಾಷಣೆಯಿಂದ

ದುಃಖಕ್ಕೆ ವಿಶ್ರಾಮವಾಯಿತ್ತು .

ಭಾವಕ್ಕೆ ತಾರ್ಕಣೆಯಾದಲ್ಲಿ ,

ನೆನಹಕ್ಕೆ ವಿಶ್ರಾಮವಾಯಿತ್ತು .

ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತಯ್ಯಾ,

ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ || ೩೯೯ ||


ಶರಣರ ಸಂಗದಿಂದ.

೪೦೦

ಸುಖಸಾರಾಯ ಸುಶೀಲರನುವ ಸುಖಸಾರಾಯರೆ ಬಲ್ಲರು.

ನಿಸ್ಸಿಮರು ನಿಸ್ಸಿಮರು ನೆರೆವಲ್ಲಿ ಪರಮಸುಖಿಗಳ ಬಲ್ಲರು.

ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ

ನಿಮ್ಮ ಲಿಂಗೈಕ್ಯರನುವ ಲಿಂಗೈಕ್ಯರೆ ಬಲ್ಲರು. || ೪೦೦ ||

೪೦೧

ಸುಟ್ಟ ಬೂದಿಯೊಳಗೊಂದು ಸುಡದ ಬೂದಿಯ ಕಂಡೆ,

ಆ ಸುಡದ ಬೂದಿಯ ಬೆಟ್ಟವ ಮಾಡಿದಾತನ

ಗುಟ್ಟನಾರು ಕಂಡುದಿಲ್ಲ .

ನಾನು ಆತನನರಿದು ಶರಣೆಂದು ಬದುಕಿದೆ.

ಆ ಬೆಟ್ಟದ ಮೇಲೆ ಅನೇಕ ವಸ್ತುಗಳ ಕಂಡು

ಚರಿಸುತ್ತಿದ್ದೇನೆ ಚೆನ್ನಮಲ್ಲಿಕಾರ್ಜುನಾ. || ೪೦೧ ||

೪೦೨

ಸೂರ್ಯಪ್ರಕಾಶ ಆಕಾಶದ ವಿಸ್ತೀರ್ಣ,

ವಾಯುವಿನ [ ಚಲನೆಯೆಲ್ಲಾ ಹ] ಗಲಿನ ಪೂಜೆ.

ಚಂದ್ರಪ್ರಕಾಶ ನಕ್ಷತ್ರ ಅಗ್ನಿವಿದ್ಯುತ್ಯಾದಿ

ದೀಪ್ತಿಮಯವೆನಿಸಿಪ್ಪವೆಲ್ಲಾ ಇರುಳಿನ ಪೂಜೆ.


೧೨೫••t : ಧಿ ಕನ್ ಶಿವಶರಣೆಯರ ವಚನಸಂಪುಟ

ನಿನ್ನ ಪ್ರಕಾಶದಲ್ಲಿ ನನ್ನ ಮರದಿಪ್ಪೆನಯ್ಯಾ

ಚೆನ್ನಮಲ್ಲಿಕಾರ್ಜುನಾ. || ೪೦೨ ||

೪೦೩

ಸೆಜ್ಜೆಯನುಪ್ಪರಿಸಿ ಶಿವಲಿಂಗ ಕರಸ್ಥಲಕ್ಕೆ ಬರಲು,

ಪ್ರಜ್ವಲಿಸಿ ತೊಳತೊಳಗಿ ಬೆಳಗುತ್ತಿಹ ಕಾಂತಿಯೊಳು

ಪ್ರಜ್ವಲಿಸಿ, ದೃಷ್ಟಿನೆಟ್ಟು ಒಜ್ಜರಿಸಿ ಸುರಿವ ಅಶ್ರುಜಲ

ಶಿವಸುಖ ಸಾರಾಯನಲ್ಲಿ ಸಜ್ಜನಸತಿಯ ರತಿಯೊಡಗೂಡಿ

ಲಜ್ಜೆಗೆಟ್ಟು ನಿಮ್ಮ ನೆರೆದೆನು ಚೆನ್ನಮಲ್ಲಿಕಾರ್ಜುನಾ. || ೪೦೩ ||

- ೪೦೪

ಸ್ನಾನಭೇದ ಸಂಶಯ

ಆಧಾರ ಸ್ವಾದಿಷ್ಟ ಮಣಿಪೂರಕ ಅನಾಹತ ವಿಶುದ್ದಿ ಆಜ್ಞೆ

ಎಂಬ ಷಟ್‌ಚಕ್ರಂಗಳ ವರ್ತನೆಯ ನುಡಿದಡೇನು ?

ಆದಿ ಅನಾದಿಯ ಕೇಳಿದಡೇನು ?

ತನ್ನಲ್ಲಿದ್ದುದ ತಾನರಿಯದನ್ನಕ್ಕ

ಉನ್ಮನಿಯ ರಭಸದ ಸಿಂಹಾಸನದ ಮೇಲೆ

ಚೆನ್ನಮಲ್ಲಿಕಾರ್ಜುನನ ಭೇದಿಸಲರಿಯರು. || ೪೦೪ ||

೪೦೫

ಹಂದಿಯೂ ಮದಕರಿಯೂ ಒಂದೇ ದಾರಿಯಲ್ಲಿ ಸಂಧಿಸಿದಡೆ

ಹಂದಿಗಂಜಿ ಮದಕರಿ ಕೆಲಕ್ಕೆ ಸಾರಿದಡೆ

|| ೪೦
ಈ ಹಂದಿಯದು ಕೇಸರಿಯಪ್ಪುದೆ ಚೆನ್ನಮಲ್ಲಿಕಾರ್ಜುನಾ ||
?

೪೦೬

ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ;

ಇರುಳಿನಕೂಟದಲ್ಲಿ ಇಂಬರಿದು ಹತ್ತಿದೆ.

ಕನಸಿನಲ್ಲಿ ಮನಸಂಗವಾಗಿ ಮೈಮರೆದಿರ್ದೆ;

ಮನಸ್ಸಿನಲ್ಲಿ ಮೈಮರೆದು ಒರಗಿದೆ.

ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣೆರೆದೆ. || ೪೦೬ ||

೪೦೭

ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು.

ಇರುಳು ನಾಲ್ಕುಜಾವ ವ್ಯಸನಕ್ಕೆ ಕುದಿವರು.


. ಎಚ್ . ಶಶಿಕಲಾ
ಸಹಾಯಕ ಪ್ರಾಧ್ಯಾಪಕರು
ಅಕ್ಕಮಹಾದೇವಿಯ ವಚನಗಳು ಕನ್ನಡ ಅಧ್ಯಯನ ಕೇdಿ
ಬೆಂಗಳೂರು ವಿಶ್ವವಿದ್ಯಾಲಯ
ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ, 67

ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನಾ. |

೪೦೮

ಹಗಲು ನಾಲ್ಕುಜಾವ ನಿಮ್ಮ ಕಳವಳದಲ್ಲಿಪ್ಪನು.

ಇರುಳು ನಾಲ್ಕುಜಾವ ಲಿಂಗದ ವಿಕಳಾವಸ್ಥೆಯಲ್ಲಿ ಪೆನು.

ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿಪ್ಪನು.

ಚೆನ್ನಮಲ್ಲಿಕಾರ್ಜುನಯ್ಯಾ ,

ನಿಮ್ಮ || ೪೦೮ ||
ಒಲುಮೆ ನಟ್ಟು ಹಸಿವು ತೃಷೆ ನಿದ್ರೆಯ ತೊರೆದೆನಯ್ಯಾ

೪೦೯

ಹಗಲೆನ್ನೆ ಇರುಳನ್ನೆ ಉದಯವೆನ್ನೆ ಅಸ್ತಮಾನವೆನ್ನ ;

ಹಿಂದೆನ್ನ ಮುಂದೆನ್ನ , ನೀನಲ್ಲದೆ ಪರತೊಂದಹುದೆನ್ನೆ .

ಮನ ಘನವಾದುದಿಲ್ಲವಯ್ಯಾ,

ಕತ್ತಲೆಯಲ್ಲಿ ಕನ್ನಡಿಯ ನೋಡಿಕಳವಳಗೊಂಡೆನಯ್ಯಾ .


ನಿಮ್ಮ ಶರಣ ಬಸವಣ್ಣನತೇಜದೊಳಗಲ್ಲದೆ

|| ೪೦೯ ||
ಆನಿನ್ನೆಂದು ಕಾಂಬೆನು ಹೇಳಾ, ಚೆನ್ನಮಲ್ಲಿಕಾರ್ಜುನಾ.

೪೧೦

ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ?

ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೇನು ?

ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರು ಉತ್ತಡೇನು ?

ಚೆನ್ನ ಮಲ್ಲಿಕಾರ್ಜುನನರಿಯದ ಬಳಿಕ

ಆ ಕಾಯವ ನಾಯಿ ತಿಂದಡೇನು, ನೀರು ಕುಡಿದಡೇನು ? || ೪೧೦ ||

೪೧೧

CH
ಹರನೆ ನೀನೆನಗೆ ಗಂಡನಾಗಬೇಕೆಂದು

ಅನಂತಕಾಲ ತಪಸ್ಸಿದ್ದೆ ನೋಡಾ.

ಹಸೆಯಮೇಲಣ ಮಾತ ಬೆಸಗೊಳಲಟ್ಟಿದಡೆ,

ಶಶಿಧರನ ಹತ್ತಿರಕೆ ಕಳುಹಿದರೆಮ್ಮವರು.

ಭಸ್ಮವನೆ ಹೂಸಿ, ಕಂಕಣವನೆ ಕಟ್ಟಿದರು

ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದ . || ೪೧೧ ||


ಶಿವಶರಣೆಯರ ವಚನಸಂಪುಟ

೪೧೨

ಹರಿಯ ನುಂಗಿತ್ತು ಮಾಯೆ ,

ಅಜನ ನುಂಗಿತ್ತು ಮಾಯೆ ;

ಇಂದ್ರನ ನುಂಗಿತ್ತು ಮಾಯೆ ,

ಚಂದ್ರನ ನುಂಗಿತ್ತು ಮಾಯೆ ;

ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ,

ಅರಿಯೆನೆಂಬ ಅಜ್ಞಾನಿಗಳ ನುಂಗಿತ್ತು ಮಾಯೆ ,

ಈರೇಳುಭುವನವನಾರಡಿಗೊಂಡಿತ್ತು ಮಾಯೆ ,

ಚೆನ್ನಮಲ್ಲಿಕಾರ್ಜುನಯ್ಯಾ ,

ಎನ್ನ ಮಾಯವ ಮಾಣಿಸಾ ಕರುಣಿ. || ೪೧೨ ||

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು.

ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು.

ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು.

ಶಯನಕ್ಕೆ ಹಾಳು ದೇಗುಲಗಳುಂಟು.

ಚೆನ್ನಮಲ್ಲಿಕಾರ್ಜುನಯ್ಯಾ ,

ಆತ್ಮಸಂಗಾತಕ್ಕೆ ನೀನೆನಗುಂಟು. || ೪೧೩ ||

ပုပ္ပ

ಹಸಿವು ತೃಷೆಯಾದಿಗಳು ಎನ್ನೋಳಗಾದ ಬಳಿಕ,

ವಿಷಯ ವಿಕಾರವೆನ್ನನಿರಿಸಿ ಹೋದವು ಕಾಣಾ ತಂದೆ.

ಅದೇ ಕಾರಣ ನೀವು ಅರಸಿಕೊಂಡು ಬಂದಿರಣ್ಣ .

ನೀವುಅರಸುವ ಅರಕೆ - ಎನ್ನೋಳಗಾಯಿತ್ತು.

ಎನ್ನ ದೇವ ಚೆನ್ನಮಲ್ಲಿಕಾರ್ಜುನ

ತನ್ನೊಳಗೆನ್ನನಿಂಬಿಟ್ಟುಕೊಂಡನಾಗಿ
|| ೪೧೪ ||
ಇನ್ನು ನಿನ್ನ ತಂದೆ ತಾಯಿತನವನೊಲ್ಲೆ ನಾನು .

ಹಸಿವೆ ನೀನು ನಿಲ್ಲು ನಿಲ್ಲು ;

ತೃಷೆಯೆ ನೀನು ನಿಲ್ಲು ನಿಲ್ಲು ,

ನಿದ್ರೆಯೆ ನೀನು ನಿಲ್ಲು ನಿಲ್ಲು ;


ಅಕ್ಕಮಹಾದೇವಿಯ ವಚನಗಳು

ಕಾಮವೆನೀನು ನಿಲ್ಲು ನಿಲ್ಲು ;

ಕ್ರೋಧವೆ ನೀನು ನಿಲ್ಲು ನಿಲ್ಲು ; 54 ,

ಮೋಹವೆ ನೀನು ನಿಲ್ಲು ನಿಲ್ಲು ;

ಲೋಭವೆ ನೀನು ನಿಲ್ಲು ನಿಲ್ಲು ;


320 C60
* 35 407 -
243 / 9639
ಮದವೆ ನೀನು ನಿಲ್ಲು ನಿಲ್ಲು ;

*
ಮಚ್ಚರವೆ ನೀನು ನಿಲ್ಲು ನಿಲ್ಲು ;
ಸಚರಾಚರವೆ ನೀನು ನಿಲ್ಲು ನಿಲ್ಲು ;

ನಾನು ಚೆನ್ನಮಲ್ಲಿಕಾರ್ಜುನದೇವರ
|| ೪೧೫ ||
ಅವಸರದ ಓಲೆಯನೊಯ್ಯುತ್ತಲಿದ್ದೇನೆ, ಶರಣಾರ್ಥಿ.

೪೧೬

ಹಸ ಹಂದರವನಿಕ್ಕಿ , ತೊಂಡಿಲ ಬಾಸಿಗವ ಕಟ್ಟಿ ,

ಮದುವೆಯಾದೆನಲ್ಲಾ ನಾನು;

ಮಚ್ಚಿ ಮದುವೆಯಾದೆನಲ್ಲಾ ನಾನು.

ಗಂಡನೆ, ನಿನಗೋತುಕೈವಿಡಿದವಳನು

ಮತ್ತೊಬ್ಬರು ಕೈವಿಡಿದರೆ

ನಿನ್ನಭಿಮಾನವ ಪರರೆಳದೊಯಿದಂತೆ ಕಾಣಾ


|| ೪೧೬ ||
ಚೆನ್ನಮಲ್ಲಿಕಾರ್ಜುನಾ.

೪೧೭

ಹಾಲಹಿಡಿದು ಬೆಣ್ಣೆಯನರಸಲುಂಟೆ ?

ಲಿಂಗವಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ?

ಲಿಂಗದ ಪಾದತೀರ್ಥ ಪ್ರಸಾದವ ಕೊಂಡು

ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ ?

ಇಷ್ಟಲಿಂಗವಿದ್ದಂತೆ ಸ್ವಾವರಲಿಂಗಕ್ಕೆ ಶರಣೆಂದೆನಾದಡೆ

ತಡೆಯದೆ ಹುಟ್ಟಿಸುವನು ಶ್ವಾನನ ಗರ್ಭದಲ್ಲಿ .

ಅದೆಂತೆಂದಡೆ ಶಿವಧರ್ಮಪುರಾಣದಲ್ಲಿ -

“ ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಸ್ಯ ಪೂಜಕಃ |

ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ ||”

ಎಂದುದಾಗಿ,

ಇದನರಿದು ಗುರು ಕೊಟ್ಟ ಲಿಂಗದಲ್ಲಿಯೆ ಎಲ್ಲಾ ತೀರ್ಥಗಳೂ

ಎಲ್ಲಾ ಕ್ಷೇತ್ರಗಳೂ ಇದ್ದಾವೆಂದು ಭಾವಿಸಿ ಮುಕ್ಕರಪುದಯ್ಯಾ .


೧೨೬
ಶಿವಶರಣೆಯರ ವಚನಸಂಪುಟ

ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ,

ತೀರ್ಥಲಿಂಗವ ಹಿರಿದುಮಾಡಿ ಹೋದಾತಂಗೆ

ಅಘೋರನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನಾ.


|| ೪೧೭ ||

೪೧೮

ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ ?

ಸೂರ್ಯಕಾಂತದ ಅಗ್ನಿಯನಾರು ಭೇದಿಸಬಲ್ಲರು ?

ಅಪಾರಮಹಿಮ ಚೆನ್ನಮಲ್ಲಿಕಾರ್ಜುನಾ,

ನೀನೆನ್ನೊಳಡಗಿಪ್ಪ ಪರಿಯ

ಬೇರಿಲ್ಲದೆಕಂಡು ಕಣ್ಣೆರೆದೆನು. || ೪೧೮ ||

೪೧೯

ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ

ಹಾವಿನ ಸಂಗವೆ ಲೇಸು ಕಂಡಯ್ಯಾ ,

ಕಾಯದ ಸಂಗವ ವಿವರಿಸಬಲ್ಲಡೆ

ಕಾಯದ ಸಂಗವೆ ಲೇಸು ಕಂಡಯ್ಯಾ ,

ತಾಯಿ ರಕ್ಕಸಿಯಾದಂತೆ ಕಾಯವಿಕಾರವು.

ಚೆನ್ನಮಲ್ಲಿಕಾರ್ಜುನಯ್ಯಾ ,

ನೀನೊಲಿದವರು ಕಾಯಗೊಂಡಿದ್ದರೆನಬೇಡ. || ೪೧೯ ||

ಹಿಂಡನಗಲಿ ಹಿಡಿವಡೆದ ಕುಂಜರ

ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ಯಾ ,

ಬಂಧನಕ್ಕೆ ಬಂದ ಗಿಳಿ

ತನ್ನ ಬಂಧುವ ನೆನೆವಂತೆ ನೆನೆವೆನಯ್ಯಾ

ಕಂದಾ, ನೀನಿತ್ತ ಬಾ ಎಂದು


|| ೪೨೦ ||
ನೀವುನಿಮ್ಮಂದವ ತೋರಯ್ಯಾ, ಚೆನ್ನಮಲ್ಲಿಕಾರ್ಜುನಾ,

ಹಿಂದಣ ಹಳ್ಳ , ಮುಂದಣ ತೊರೆ,

ಸಲ್ಲುವ ಪರಿಯೆಂತು ಹೇಳಾ!

ಹಿಂದಣ ಕೆರೆ, ಮುಂದಣ ಬಲೆ,

ಹದುಳವಿನ್ನೆಯದು ಹೇಳಾ !
೧೨೭
ಅಕ್ಕಮಹಾದೇವಿಯ ವಚನಗಳು

ನೀನಿಕ್ಕಿದ ಮಾಯೆ ಕೊಲುತಿಪ್ಪುದು


|| ೪೨೧ ||
ಕಾಯಯ್ಯಾ, ಕಾಯಯ್ಯಾ ಚೆನ್ನಮಲ್ಲಿಕಾರ್ಜುನಾ.

ಹಿಡಿಯದಿರು ತಡೆಯದಿರು ಬಿಡುಬಿಡು ಕೈಯಸೆರಗ.

ಭಾಷೆಯ ಬರೆದುಕೊಟ್ಟ ಸತ್ಯಕ್ಕೆ ತಪ್ಪಿದರೆ

ಅಘೋರನರಕವೆಂದರಿಯಾ ?

ಚೆನ್ನಮಲ್ಲಿಕಾರ್ಜುನನ ಕೈವಿಡಿದ ಸತಿಯ ಮುಟ್ಟಿದರೆ

ಕೆಡುವೆ ಕಾಣಾ ಮರುಳೆ. || ೪೨೨ ||

೪೨೩

ಹಿಡಿವೆನೆಂದಡೆ ಹಿಡಿಗೆ ಬಾರನವ್ವಾ .


ತಡೆವೆನೆಂದಡೆ ಮೀರಿಹೋಹನವ್ಯಾ .

ಒಪ್ಪಚ್ಚಿ ಅಗಲಿದಡೆ ಕಳವಳಗೊಂಡೆ.

ಚೆನ್ನಮಲ್ಲಿಕಾರ್ಜುನನ ಕಾಣದೆ
CH ಕೇಳಾ, ತಾಯ .
ಆನಾರೆಂದರಿಯೆ || ೪೨೩ ||

೪೨೪

ಹಿತವಿದೆ ಸಕಲಲೋಕದ ಜನಕ್ಕೆ ,

ಮತವಿದೆ ಶ್ರುತಿಪುರಾಣಾಗಮದ,

ಗತಿಯಿದೆ, ಭಕುತಿಯ ಬೆಳಗಿನುನ್ನತಿಯಿದೆ.

ಶ್ರೀ ವಿಭೂತಿಯ ಧರಿಸಿದಡೆ ಭವವ ಪರಿವುದು ;

ದುರಿತಸಂಕುಳವನೊರಸುವುದು;

ಹರನ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದಲ್ಲಿರಿಸುವುದು.

ನಿರುತವಿದು ನಂಬು ಮನುಜಾ,

ಜನನಭೀತಿ ಈ ವಿಭೂತಿ.

ಮರಣಭಯದಿಂದ ಅಗಸ್ಯ ಕಾಶ್ಯಪ ಜಮದಗ್ನಿಗಳು

ಧರಿಸಿದರಂದು ನೋಡಾ.

ಶ್ರೀಶೈಲ ಚೆನ್ನಮಲ್ಲಿಕಾರ್ಜುನನ ಒಲಿವ ವಿಭೂತಿ. || ೪೨೪ ||

೪೨೫

ಹುಟ್ಟದ ಯೋನಿಯಲ್ಲಿ ಹುಟ್ಟಿಸಿ,

ಬಾರದ ಭವಂಗಳಲ್ಲಿ ಬರಿಸಿ,


೧೨೮ ಶಿವಶರಣೆಯರ ವಚನಸಂಪುಟ

ಉಣ್ಣದ ಊಟವನುಣಿಸಿ ವಿಧಿಗೊಳಗಾಗಿಸುವ ಕೇಳಿರಣ್ಣಾ .

ತನ್ನವರೆಂದಡೆ ಮನ್ನಿಸುವನೆ

ಹತ್ತರಿದ್ದ ಭಂಗಿಯ ಚರ್ಮವಕಿಡಾಡಿಸಿದವನು

ಮತ್ತೆ ಕೆಲಂಬರ ಬಲ್ಲನೆ ?

ಇದನರಿತು ಬಿಡದಿರು ಬಿಡದಿರು.

ಚೆನ್ನಮಲ್ಲಿಕಾರ್ಜುನನಿಂತಹ ಸಿತಗನಾ . || ೪೨೫ ||

೪೨೬

ಹುಟ್ಟಿದಶ್ರೀಗುರುವಿನ ಹಸ್ತದಲ್ಲಿ ,

ಬೆಳೆದೆನು ಅಸಂಖ್ಯಾತರ ಕರುಣದೊಳಗೆ.

ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ ,

ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ,

ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದಿರೆನ್ನ .

ವಿವಾಹವ ಮಾಡಿದಿರಿ , ಸಯವಪ್ಪ ಗಂಡಂಗೆ ಕೊಟ್ಟಿರಿ,

ಕೊಟ್ಟ ಮನೆಗೆ ಕಳುಹಲೆಂದು

ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ.

ಬಸವಣ್ಣ ಮೆಚ್ಚಲು ಒಗತನವ ಮಾಡುವೆ.

ಚೆನ್ನಮಲ್ಲಿಕಾರ್ಜುನನ ಕೈವಿಡಿದು

ನಿಮ ತಲೆಗೆ ಹೂವ ತಹೆನಲ್ಲದೆ ಹುಲ್ಲ ತಾರೆನು

ಅವಧರಿಸಿ, ನಿಮ್ಮಡಿಗಳೆಲ್ಲರೂ
|| ೪೨೬ ||
ಮರಳಿ ಬಿಯಂಗೈವುದು, ಶರಣಾರ್ಥಿ,

೪೨೭

ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವಾ .

ಹೊನ್ನು ಮಣ್ಣಿನ ಮಾಯೆಯ ಮಾಣಿಸಿದನವ್ವಾ .

ಎನ್ನ ತನುವಿನ ಲಜ್ಜೆಯನಿಳುಹಿ , ಎನ್ನ ಮನದ ಕತ್ತಲೆಯ ಕಳೆದ

ಚೆನ್ನಮಲ್ಲಿಕಾರ್ಜುನಯ್ಯನೊಳಗಾದವಳ

ಏನೆಂದು ನುಡಿಸುವಿರವ್ವಾ ? || ೪೨೭

೪೨೮

ಹೂವುಕಂದಿದಲ್ಲಿ ಪರಿಮಳವನರಸುವರೆ ?

ಕಂದನಲ್ಲಿ ಕುಂದನರಸುವರೆ ?
ಅಕ್ಕಮಹಾದೇವಿಯ ವಚನಗಳು

ಎಲೆ ದೇವ,ಸ್ನೇಹವಿದ್ದ ಠಾವಿನೊಳುದ್ರೋಹವಾದ ಬಳಿಕ

ಮರಳಿ ಸದ್ಗುಣವನರಸುವರೆ ?

ಎಲೆ ದೇವ, ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೆ ?

ಕೇಳಯ್ಯಾ , ಶ್ರೀಶೈಲ ಚೆನ್ನಮಲ್ಲಿಕಾರ್ಜುನಾ


|| ೪೨೮ ||
ಹೊಳೆಯಿಳಿದ ಬಳಿಕ ಅಂಬಿಗಂಗೇನುಂಟು ?

ಹೆಣ್ಣು ಹೆಣ್ಣಾದಡೆ ಗಂಡಿನಸೂತಕ.

ಗಂಡು ಗಂಡಾದಡೆ ಹೆಣ್ಣಿನಸೂತಕ.

ಮನದಸೂತಕ ಹಿಂಗಿದಡೆ

ತನುವಿನ ಸೂತಕಕ್ಕೆ ತೆರಹುಂಟೆ ?

ಅಯ್ಯಾ, ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ .

ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ ಗರುವಂಗೆ

ಜಗವೆಲ್ಲ ಹೆಣ್ಣು ನೋಡಾಅಯ್ಯಾ , || ೪೨೯ ||

ಹೆದರದಿರು ಮನವೆ, ಬೆದರದಿರು ತನುವೆ,

ನಿಜವನರಿತು ನಿಶ್ಚಿಂತನಾಗಿರು .

ಫಲವಾದ ಮರನ ಕಲ್ಲಲಿ ಇಡುವುದೊಂದುಕೋಟಿ,


ಎಲವದಮರನ ಇಡುವರೊಬ್ಬರ ಕಾಣೆ.

ಭಕ್ತಿಯುಳ್ಳವರ ಬೈವರೊಂದುಕೋಟಿ,

ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ.

ನಿಮ್ಮ ಶರಣರ ನುಡಿಯೆ ಎನಗೆ ಗತಿ,ಸೋಪಾನ,

ಚೆನ್ನಮಲ್ಲಿಕಾರ್ಜುನಾ. || ೪೩೦ ||

೪೩೧

ಹೊನ್ನು ಮುರಿದಡೆ ಬೆಸಸಬಹುದಲ್ಲದೆ,

ಮುತ್ತು ಒಡೆದಡೆ ಬೆಸಸಬಹುದೆ ?

ಮನ ಮುರಿದಡೆ ಮನಕೊಬ್ಬರೊಡೆಯರುಂಟೆ ?

ಚೆನ್ನಮಲ್ಲಿಕಾರ್ಜುನ ಸಾಕ್ಷಿಯಾಗಿ

ಬೇಟವುಳ್ಳಲ್ಲಿ ಬೆರೆಸಿ ಘನ . || ೪೩೧ ||


೧೩೦
ಶಿವಶರಣೆಯರ ವಚನಸಂಪುಟ

೪೩೨

ಹೊಳೆವ ಕೆಂಜೆಡೆಗಳ, ಮಣಿಮಕುಟದ, ಒಪ್ಪುವ ಸುಲಿಪಳ,

ನಗೆಮೊಗದ, ಕಂಗಳ ಕಾಂತಿಯ ,

ಈರೇಳುಭುವನವ ಬೆಳಗುವ ದಿವ್ಯಸ್ವರೂಪನ ಕಂಡೆ ನಾನು.

ಕಂಡೆನ್ನ ಕಂಗಳ ಬರ ಹಿಂಗಿತ್ತೆನಗೆ.

ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ

ಗರುವನ ಕಂಡೆ ನಾನು.

ಜಗದಾದಿ ಶಕ್ತಿಯೋಳು ಬೆರಸಿ ಮಾತನಾಡುವ

ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು. || ೪

೪೩೩

ಹೊಳೆ ಕೆಂಜೆಡೆಯ ಮೇಲೆ ಎಳವೆಳದಿಂಗಳು,

ಫಣಿಮಣಿ ಕರ್ಣಕುಂಡಲ ನೋಡಪ್ಪಾ ,

ರುಂಡಮಾಲೆಯ ಕೊರಳವನ ಕಂಡಡೆ ಒಮ್ಮೆ ಬರಹೇಳವ್ವಾ !

ಗೋವಿಂದನ ನಯನ ಉಂಗುಟದ ಮೇಲಿಪುದು,

ಚೆನ್ನಮಲ್ಲಿಕಾರ್ಜುನದೇವನ ಕುರುಹವ್ವಾ , || ೪೩೩ ||

ಹೋದೆನೂರಿಗೆ, ಇದ್ದೆ ನಾನಲ್ಲಿ ,

ಹೋದಡೆ ಮರಳಿ ಬಾರೆನವ್ವಾ . .

ಐವರು ಭಾವದಿರು, ಐವರು ನಗೆವೆಣ್ಣು

ಈ ಐವರು ಕೂಡಿ ಎನ್ನ ಕಾಡುವರು

ಬೆವರು ಹೊಯ್ಸರು ಮಿಗೆ ಕೇಡನುಡಿವರು.

ಇವರೈವರ ಕಾಟಕ್ಕೆ ನಾನಿನ್ನಾರೆ ಕಂಡವ್ವಾ .

ಅತ್ತೆ ಮಾವ ಮೈದುನ ನಗೆವೆಣ್ಣು ,


ಚಿತ್ರವನೊರೆದು ನೋಡುವ ಗಂಡ.

ಕತ್ತಲೆಯಾದಡೆ ಕರೆದನ್ನವನೀಡವ್ವಾ ,

ಅತ್ತಿಗೆ ಹತ್ತೆಂಟ ನುಡಿವಳಮ್ಮಮ್ಮ ತಾಯೆ .

ಉಪಮಾತೀತರು ಬಂಧುಬಳಗಂಗಳು.

ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದಡೆ


|| ೪೩೪ ||
ಮರಳಿ ಬಾರೆನಮ್ಮ ತಾಯೆ .
ಅಕ್ಕಮ್ಮನ ವಚನಗಳು

* ಅಂಗಲಿಂಗ ಸಹವಾಗಿ, ಆತ್ಮನರಿವು ಸಹವಾಗಿ,

ಇಷ್ಟಪದಾರ್ಥವ ಇಷ್ಟ ಲಿಂಗಸಹವಾಗಿ,

ರುಚಿಪದಾರ್ಥವ ಆತ್ಮಲಿಂಗಸಹವಾಗಿ,

ರಸ ಗಂಧ ರೂಪಶಬ್ದ ಸ್ಪರ್ಶ ಪಂಚೇಂದ್ರಿಯಗಳಲ್ಲಿ

ದೃಷ್ಟಪದಾರ್ಥವ ಇಷ್ಟಲಿಂಗಸಹವಾಗಿ,

ಸ್ಕೂಲಸೂಕ್ಷ್ಮ ಕಾರಣದಲ್ಲಿ ಒಳಗು ಹೊರಗು ಸಹವಾಗಿ,

ಅಳಿವುಉಳಿವುಸಹವಾಗಿ, ಕಾಬುದು ಕಾಣಿಸಿಕೊಂಬುದು ಸಹವಾಗಿ,

ರಸವ ಕೊಂಡವನಂತೆ, ಅಸಿಯ ಮೊನೆ ಹರಿದಲ್ಲಿ ರಸ ಬಂದು ನಿಂತಂತೆ,

ಎಲ್ಲಿ ಅರ್ಪಿತಕ್ಕೆ ಅಲ್ಲಿ ವಸ್ತು ಸಹವಾಗಿ

ಎಲ್ಲಾ ಎಡೆಯಲ್ಲಿ ಪರಿಪೂರ್ಣ ಸಹವಾಗಿ ,

ಇಪ್ಪುದು ಸಹಭೋಜನಸ್ಥಲ.

ಹೀಗಲ್ಲದೆ ಓಗರ ಮೇಲೋಗರವ ಲಾಗುಲಾಗಿಗೆ ತೋರುತ್ತ

ಸಕಲಸಂಸಾರದ ಸಾಗರದಲ್ಲಿ ಮುಳುಗುತ್ತ ,

ಮರವೆ ಅಜ್ಞಾನದಲ್ಲಿ ಮರಳಿ ತಿರುಗುತ್ತ

ನಾನಾವಿಕಾರತ್ರಯಗಳಿಂದ ಹುಟ್ಟು ಸಾವು ,

ಮತ್ತೆ ಸಾವಧಾನ ಸಹಭೋಜನವೆಂದಡೆ ನಾಚಿತ್ತು ಎನ್ನ ಮನ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ

ಉಭಯವನಳಿದು ಏಕವಾದುದು ಸಹಭೋಜನಸ್ಸಲ || ೧ ||

೪೩೬

ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ

ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ರಕ್ಕೆ ವ್ರತವೊ ?

ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ .

ವ್ರತವಾವುದೆಂದಡೆ :

ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ,

ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ,

ಆ ಸೂಕ್ಷ್ಮ ತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ.

ಸ್ಕೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ,


೧೩೨
ಶಿವಶರಣೆಯರ ವಚನಸಂಪುಟ

ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ

ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ .

ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ,

ಇಂತೀ ಉಭಯ ಸಿದ್ದವಾಗಿ ನಡೆವುದೆ ವ್ರತ ಆಚಾರ ;


ಟಿ
ಇಂತಿವನರಿದು ಮರದಲ್ಲಿ , ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ,

ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ. || ೨ ||

೪೩೭

ಅಜ ಎಮ್ಮೆ ಹಾಲಬಿಟ್ಟಲ್ಲಿ ಹೇರಂಡವ ಬೆಳೆಯಲಿಲ್ಲ ;

ಬೆಳೆದಡೆ ಮನೆಗೆ ತರಲಿಲ್ಲ ; ತರಲಿಲ್ಲದ ಮತ್ತೆ ಅಡಲಿಲ್ಲ ;

ಅದು ದೀಪದ ಬೆಳಗಿಂಗೆ ದೇವರಿಗೆ ನಿಹಿತವಲ್ಲ ,


5 3 ಅದು ರಾಕ್ಷಸವಂಶಭೂತವಾದ ಕಾರಣ .

ಕಂಡುದ ಬಿಟ್ಟು ಕಾಣದುದನರಸಿಕೊಳಬೇಕು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಪ್ರೀತಮುಕ್ತನ ನೇಮ . || ೩ |

೪೩೮

ಅಡಗು ಸುರೆ ಕಟಕ ಪಾರದ್ವಾರ ಪರಪಾಕ ಮುಂತಾದ

ಇಂತಿವ ಬೆರೆಸುವರ ನಾ ಬೆರಸೆನೆಂದು, ಅವರ ನಿರೀಕ್ಷಿಸೆನೆಂದು,

ಮತ್ತಿದ ಮರೆದು ಕೊಂಡು ಕೊಟ್ಟೆನೆಂದು ತ್ರಿವಿಧದಾಸೆಯ ಕುರಿತು

ಮತ್ತವರ ಸಂಗವ ಮಾಡಿದೆನಾದಡೆ,

ಲಿಂಗಕ್ಕೆ ಸಲ್ಲ , ಜಂಗಮಕ್ಕೆ ದೂರ, ಪ್ರಸಾದವಿಲ್ಲ .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ

ವ್ರತಭ್ರಷ್ಟನೆಂದು ಬಿಡುವೆ.

೪೩೯

ಅನಲನ ತಾಹಲ್ಲಿ , ಅನಿಲನ ಗಂಧ ಒಡಗೂಡಿ ಸೋಂಕುವಲ್ಲಿ ,

ಅಲ್ಲಿ ವ್ರತದಾಯತದ ಲಕ್ಷಣವನರಿಯಬೇಕು;

ಮಿಕ್ಕಾದ ತಿಲ, ತೈಲ, ಮೃತ, ಕ್ಷೀರ, ದಧಿ, ಮಧುರ,

ಇಕ್ಷುದಂಡ, ಕ್ರಮುಕ, ಪರ್ಣ , ಚೂರ್ಣ, ರಸ, ದ್ರವ್ಯ ಮುಂತಾದವಿಂತು

ಮಿಕ್ಕಾದ ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ

ಸಕಲಸುಯಿಧಾನಗಳಲ್ಲಿ ಲಿಂಗವ್ಯವಧಾನದಲ್ಲಿ ತಂದು


ಅಕ್ಕಮ್ಮನ ವಚನಗಳು

ಸ ತಪ್ಪದೆ, ವ್ರತಕ್ಕೆ ಭಂಗವಿಲ್ಲದೆ, ನಾಣ್ಣುಡಿಗೆ ಇದಿರೆಡೆಯಾಗದೆ,

ವಿಶ್ವಲಕ್ಷಣ ಶಸ್ತ್ರ ಅಭ್ಯಾಸಿಯಂತೆ, ಆವೆಡೆಯಲ್ಲಿ ಇದಿರಿಂಗೆ ತೆರಪಿಲ್ಲದೆ,

ತಾ ಮುಟ್ಟುವಲ್ಲಿ ಒಳಗೆ ಕೊಂಡಂತೆ ಇರಬೇಕು.

ಇಷ್ಟನರಿತು ಆಚರಣೆಯಲ್ಲಿ ಆದರಿಸಿ ನುಡಿವುದೆ ಸದ್ಭಕ್ತನ ಸ್ಥಲ.

ಆತ ಸರ್ವಶೀಲಸಂಪನ್ನ , ಸರ್ವಾಂಗಲಿಂಗ ಸನ್ನದ್ದ ;


|| ೫ ||
ಆತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.

೪೪೦

ಅನ್ಯದೈವ ಭವಿನಾಸ್ತಿಯಾದಲ್ಲಿ ,

ಪಾದತೀರ್ಥಪ್ರಸಾದವಿಲ್ಲದೆ ಬಾಯಿದೆರದಲ್ಲಿ ,

ಲಿಂಗಕ್ಕೆ ಕೊಡದೆ ಕೊಂಡಲ್ಲಿ ,

ಆ ವ್ರತಕ್ಕೆ ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗ


|| ೬ ||
ದೂರಸ್ಥನಾಗಿಪ್ಪನು.

೪೪೧

ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು


ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ . ಅದೆಂತೆಂದಡೆ :

ರಸ ಗಂಧ ರೂಪುಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ

ಪಂಚಾಚಾರವೆಂಬುದನರಿತು,

ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು,

ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ

ಸುಗುಣ ದುರ್ಗುಣವನರಿತು,

ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು,

ನುಡಿಯುವುದಕ್ಕೆ ಮುನ್ನವೆ ಮೃದು ಕಠಿಣವೆಂಬುದನರಿತು,

ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು,

ದೃಷ್ಟದಿಂದ ಕಟ್ಟುಮಾಡುವುದೆ ವ್ರತ

ಆ ಗುಣ ತಪ್ಪದೆ ನಡೆವುದೆ ಆಚಾರ.

ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ದನಾಗಿ,

ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ ,

ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ. || ೭ ||

೪೪೨

ಅನ್ಯಶಬ್ದಕ್ಕೆ ಜಿಹ್ವಾಬಂಧನ, ದುರ್ಗಂಧಕ್ಕೆ ನಾಸಿಕಬಂಧನ,

ನಿಂದೆಗೆ ಕರ್ಣಬಂಧನ, ದೃಕ್ಕಿಂಗೆ ಕಾಮ್ಮಬಂಧನ,


ಶಿವಶರಣೆಯರ ವಚನಸಂಪುಟ

ಚಿತ್ರಕ್ಕೆ ಆಶಾಬಂಧನ, ಅಂಗಕ್ಕೆ ಅಹಂಕಾರ ಬಂಧನ .

ಇಂತೀ ಷಾವಬಂಧಂಗಳ ಹರಿದಲ್ಲದೆ

ಅರುವತ್ತು ನಾಲ್ಕು ಶೀಲಕ್ಕೆ ಸಂಬಂಧಿಯಲ್ಲ .

ಹೀಂಗಲ್ಲದೆಕಾಂಬವರ ಕಂಡು,

ಅಲ್ಲಿ ಒಂದ ತಂದು, ಇಲ್ಲಿ ಒಂದ ಕೊಟ್ಟಿಹೆನೆಂದು

ಕಳ್ಳನ ತಾಯಂತೆ ಅಲ್ಲಿ ಇಲ್ಲಿ ಹಾರೈಸುತ್ತ

ಇಂತೀ ಸಜ್ಜನಗಳ್ಳರ ಕಂಡು ಬಲ್ಲವರೊಪ್ಪುವರೆ ಕಳ್ಳರ ವ್ರತವ ?

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು

ಅವರುವನೆಯುಒಲ್ಲನಾಗಿ ,

ပုပ္ပ

ಅರಸಿಗೆ ಆಚಾರ ಅನುಸರಣೆಯಾಯಿತೆಂದು,

ಸದಾಚಾರಿಗಳೆಲ್ಲಾ ಬನ್ನಿ ಎಂದು,

ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರೆದಂತೆ

ದ್ರವ್ಯದ ಮುಖದಿಂದ ಸರ್ವರ ಕೂಡಿ ತಪ್ಪನೊಪ್ಪಗೊಳ್ಳಿಯೆಂದು

ದಿಪ್ಪನೆ ಬೀಳುತ್ತ ತನ್ನ ವ್ರತದ ದರ್ಪಂಗೆಟ್ಟು ತಿಂದರೆ

ಕೀಲಿಗೆ ದೇವಾಲಯವನೋಡುವವನಂತೆ,

ಕಂಬಳಕ್ಕೆ ಅಮಂಗಲವ ತಿಂಬವನಂತೆ, ಇವನ ದಂದುಗವ ನೋಡಾ!

ಇವನ ಸಂಗವ ಮಾಡಿದವನು ಆಚಾರಕ್ಕೆ ಅಂದೆ ಹೊರಗು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ . || ೯ | |

ಅರುವತ್ತುನಾಲ್ಕು ಶೀಲ, ಐವತ್ತಾರು ನೇಮ , ಮೂವತ್ತೆರಡು ಕೃತ್ಯ - .

ಇಂತಿವುಕಟ್ಟಳೆಗೊಳಗಾದವು.

ಮಿಕ್ಕಾದ ಪ್ರಮಥರೆಲ್ಲರು ಸ್ವತಂತ್ರಶೀಲರು.

ಅಣುವಿಂಗಣು, ಘನಕ್ಕೆ ಘನ, ಮಹತ್ತಿಂಗೆ ಮಹತ್ತಪ್ಪ ಘನಶೀಲರುಂಟು.

ಆರಾರ ಅನುವಿನಲ್ಲಿ ಅನುವ ಅನುಕರಿಸಿ,

ಆರಾರ ಭಾವದಲ್ಲಿ ಬಂಧಿತನಾಗಿ ಸಿಕ್ಕಿದೆಯಲ್ಲಾ,

|| ೧೦ | |
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ?

೪೪೫

ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ ,

ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ


ಅಕ್ಕಮ್ಮನ ವಚನಗಳು

ಮುಂತಾದ ಕಾಯಕವ ಮಾಡಿಕೊಂಡು

ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ

1 ಈ ಭಕ್ತನ ಅಂಗಳ ಅವಿಮುಕ್ತಿಕ್ಷೇತ್ರ,


ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ. || ೧೧ ||

೪೪೬

ಆಚಾರ ಅನುಸರಣೆಯಾದಲ್ಲಿ ಅಲ್ಲ ಅಹುದೆಂದು ಎಲ್ಲರಕೂಡುವಾಗ

ಗೆಲ್ಲ ಸೋಲದ ಕಾಳಗವೆ ?

ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು,

ಸಂದೇಹವ ಬಿಟ್ಟು ಕಂಡ ಮತ್ತೆ

ಆತನಂಗವ ಕಂಡಡೆ, ಸಂಗದಲ್ಲಿ ನುಡಿದಡೆ,

ಈ ಗುಣಕ್ಕೆ ಹಿಂಗದಿದ್ದನಾದಡೆ ಲಿಂಗಕ್ಕೆ ಸಲ್ಲ ,

ಜಂಗಮಕ್ಕೆ ದೂರ, ಅದು ಕುಂಭೀನರಕ ;


ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ. || ೧೨ ||

೪೪೭

ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ

ಅನಾಚಾರಿಗಳ ಮುಖವ ನೋಡಬಹುದೆ ?

ಆಚಾರವಟ್ಟದ ಹೊನ್ನೆ ? ಮೊತ್ತದ ಮಡಕೆಯೆ ? ಸಂತೆಯ ಬೆವಹಾರವೆ ?

ಜೂಜಿನ ಮಾತೆ ? ವೇಶ್ಯಯ ಸತ್ಯವೆ ? ಪೂಸರ ವಾಚವೆ ?

ಇಂತೀ ವ್ರತದ ನಿಹಿತವ ತಿಳಿದಲ್ಲಿ ,

ಇಷ್ಟಬಾಹ್ಯನ ವ್ರತಭ್ರಷ್ಟನ ಸರ್ವಪ್ರಮಥರಲ್ಲಿ ಅಲ್ಲಾ ಎಂದವನ

ನಾನರಿತು ಕೂಡಿದೆನಾದಡೆ, ಅರಿಯದೆಕೂಡಿಮರಿದಡೆ,

ಆ ತನುವ ಬಿಡದಿರ್ದಡೆ ಎನಗದೆ ಭಂಗ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಪ್ಪಿದಡೆ

ಹೊರಗೆಂದು ಮತ್ತೆ ಕೂಡಿಕೊಳ್ಳಿ. || ೧೩ ||

೪೪೮

ಆಚಾರ ತಪ್ಪಿದಲ್ಲಿ , ಶ್ರೇಷ್ಠನು ನಾನೆಂದು

ಆಚಾರವನ್ನು ಅನುಸರಣೆಯಮಾಡಬಹುದೆ ?

ಆಚಾರಕ್ಕೂ ಪಕ್ಷಪಾತ ಉಂಟೆ ?

ಕಿತ್ತ ಕಣ್ಣಿ ಗಂಟನಿಕ್ಕಿದ ಮತ್ತೆ ಅಳತಕ್ಕುಂಟೆ ?


೧೩೬
ಶಿವಶರಣೆಯರ ವಚನಸಂಪುಟ

ಸತ್ಯ ತಪ್ಪಿ ನಡೆದ ಮತ್ತೆ ಭಕ್ತಿಯುಂಟೆ ?

ಕೆಟ್ಟು ನಡೆದ ಅಂಗನೆಯಲ್ಲಿ ದೃಷ್ಟವ ಕಂಡ ಮತ್ತೆ ದಿಷ್ಟ ದಿಬ್ಬ ಉಂಟೆ ?

ಅದು ಬಾಯ ಬಗದಳದಂತೆ, ಇನ್ನಾರಿಗೆ ಪೇಳುವೆ ?

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಲ್ಲದ ನೇಮ.

೪೪೯

ಆಚೆಯ ನೀರ ಈಚೆಯಲ್ಲಿ ತೆಗೆವುದು ಚಿಲುಮೆಯಲ್ಲ ;

ಆಚೆಯಲ್ಲಿ ಕೇಳಿದ ಮಾತ ಈಚೆಯಲ್ಲಿ ನುಡಿದು

ಮತ್ತಾಚೆಯಲ್ಲಿ ಬೆರೆಸುವನ ಭಕ್ತನಲ್ಲ ;

ಆತನ ಇದಿರಿನಲ್ಲಿ ಆತನ ಸತಿಯ ಅವ್ವಾ ಎಂದು,

ಆತ ಸಂದಲ್ಲಿ ಸತಿ ಎಂಬ ಭಂಡರಿಗೇಕೆ ವ್ರತ ನೇಮ ನಿತ್ಯ ?

ಇಂತಿವರಲ್ಲಿ ಕಳೆದುಳಿಯಬೇಕು.

| ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ . || ೧೫ ||

ಆರಾರ ಭಾವಕ್ಕೆ ಒಳಗಾದ ವಸ್ತು ,

ಆರಾರ ಭ್ರಮೆಗೆ ಹೊರಗಾದ ವಸ್ತು ,

ಆರಾರ ಆಚಾರಕ್ಕೆ ಒಳಗಾದ ವಸ್ತು ,

ಆರಾರ ಅನಾಚಾರಕ್ಕೆ ಹೊರಗಾದ ವಸ್ತು ,

ಆಚಾರ ಶ್ರದ್ಧೆ ಇದ್ದಲ್ಲಿ ನೀನೆಂಬೆ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ,


|| ೧೬ ||
ಆ ಗುಣ ಇಲ್ಲದಿರ್ದಡೆನೀನು ಎನ್ನವನಲ್ಲಾ ಎಂದೆ.

ပုဂ

ಆರೈದು ನಡೆವಲ್ಲಿ ತನ್ನ ಕ್ರೀಯನರಿತು,

ನೀರು ನೆಲ ಬಹುಜನ ಗ್ರಾಮಗಳಲ್ಲಿ ತನಗಾದಿಯ ಶೀಲವರಿದು

ಅಂಗಂಗಳ ಸೋಂಕುವಲ್ಲಿ ಮನದೆರೆದು ಮಾತನಾಡುವಲ್ಲಿ

ತನು ಮನಗೂಡಿ ಬೆರೆಸುವಲ್ಲಿ ,

ಶಿವಲಿಂಗಪೂಜೆ, ಶಿವಾಧಿಕ್ಯಸಂಬಂಧ, ಶಿವಪ್ರಸಾದಂಗಳಲ್ಲಿ

ಸರ್ವವ್ಯವಧಾನವ ತಿಳಿದು,

ತಾ ಹಿಡಿದ ಜ್ಞಾನದ ಸೀಮೆಗೆ ತಲೆವಿಡಿ ಕೊಳುವಿಡಿ ಬಾರದೆ

ವ್ರತವೆ ಘಟವಾಗಿ , ಸನ್ಮಾರ್ಗವೆ ಆತ್ಮನಾಗಿ,


೧೩೭
ಅಕ್ಕಮ್ಮನ ವಚನಗಳು

ಇಂತೀ ವ್ರತಸಂಬಂಧ ಕಾಯಜೀವದಂತೆ ಏಕವಾಗಿಪ್ಪ ಮಹಾವ್ರತಿಗೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು

ನಮೋ ನಮೋ ಎಂದು ಕೃತಾರ್ಥನಾದನು. || ೧೭ ||

೪೫೨

ಆವಾವ ವ್ರತಕ್ಕೂ ಗುರು ಲಿಂಗ ಜಂಗಮನೆಮೂಲಮಂತ್ರ .

ಆವಾವುದ ತಾ ಕೊಂಬ ಕೊಡುವಲ್ಲಿ

ಲಿಂಗ ಜಂಗಮನ ಮುಂದಿಟ್ಟುಕೊಂಬುದೆ ಶುದ್ದ ಕ್ರೀ .

ಹೀಗಲ್ಲದೆ,

ಲಿಂಗ ಜಂಗಮ ಹೊರತೆಯಾಗಿ ಮತ್ತೊಂದು ಕೊಂಡೆನಾಯಿತ್ತಾದಡೆ

ಎನಗದಲ್ಲದ ದ್ರವ್ಯ , ಎನಗಿದೆ ಭಾಷೆ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಸಾಕ್ಷಿಯಾಗಿ, || ೧೮ ||

ಉಳ್ಳ ಹೇರಂಡ ಮಹಿಷಿ ಇವೆಲ್ಲವ ನಿಷೇಧವೆಂದು ಬಿಟ್ಟಲ್ಲಿ

ಕೊಲ್ಲದಕೊಲೆಯ ಕೋಲಲೇತಕ್ಕೆ ?

ವ್ರತಿಗಳಲ್ಲಿ ಗೆಲ್ಲ ಸೋಲಕ್ಕೆ ಹೋರಲೇತಕ್ಕೆ ?

ಪ್ರಮಥರೆಲ್ಲರು ಅಲ್ಲಿ ಇಲ್ಲಿಯವರೆಂದು ಪ್ರಮಾಣಿಸಬಹುದೆ ?

ಸರ್ಪನೆತ್ತಮುಟ್ಟಿದಲ್ಲಿಯೂ ಪ್ರಾಣಕ್ಕೆ ಹೆಚ್ಚು ಕುಂದಿಲ್ಲ .

ಶರಣರತ್ತ ಇತ್ತಣವರೆಂದಡೆ ಭಕ್ತಿಗೆ ಹಾನಿ , ಸತ್ಯಕ್ಕೆ ದೂರ;

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ. || ೧೯

೪೫೪

ಎಂಬತ್ತುನಾಲ್ಕು ಲಕ್ಷ ವ್ರತದೊಳಗಾದ ಶೀಲ


ಸಂಭವಿಸಿ ನಿಂದುದು ಅರುವತ್ತುನಾಲ್ಕು .

ಅರುವತ್ತುನಾಲ್ಕರಲ್ಲಿ ಸಂಭವಿಸಿ ನಿಂದುದು ಮೂವತ್ತಾರು.

ಮೂವತ್ತಾರರಲ್ಲಿ ಸಂಭವಿಸಿ ನಿಂದುದು ಇಪ್ಪತೈದು.

ಇಪ್ಪತೈದರೊಳಗಾಗಿ ಸಂಭವಿಸಿನಿಂದುದು ಮೂರೆಯಾಯಿತ್ತು .

ಮೂರುವ್ರತಕ್ಕೆ ಮುಕುತವಾಗಿ, ತಬ್ಬಿಬ್ಬುಗೊಳ್ಳುತ್ತಿದ್ದೇನೆ.

ನಾ ಹಿಡಿದ ಒಂದು ನೇಮಕ್ಕೆ ಸಂದೇಹವಾಗಿ, ಒಂದನೂ ಕಾಣದಿದ್ದೇನೆ.

ಒಂದರ ಸಮಶೀಲಕ್ಕೆ ಸತಿಪುತ್ರರು ಎನ್ನಂಗದೊಳಗಿರರು.

ಎನ್ನಂಗದ ಜೀವಧನ ಹೊಂದಿ ಹೋದಾಗ ಎನ್ನಂಗದ ವ್ರತ ಅಲ್ಲಿಯೆ ಬಯ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ ಕಡೆ ನಡು ಮೊದಲಿಲ್ಲ . ||೨೦||


೧೩೮
ಶಿವಶರಣೆಯರ ವಚನಸಂಪುಟ

៦៦

ಎನ್ನ ಲಿಂಗದ ಸೀಮೆಯಲ್ಲಿದ್ದ ಗೋವತ್ಸ ಮೊದಲಾದ ಘಟಕ್ಕೆಲ್ಲಕ್ಕೂ

ಶಿವಲಿಂಗಪೂಜೆ, ಪಂಚಾಚಾರಶುದ್ದ ನೇಮ .

ಭಾವ ತಪ್ಪದೆ ಪಾದೋದಕ ಪ್ರಸಾದವಿಲ್ಲದೆ

ತೃಣ ಉದಕವ ಮುಟ್ಟಿದಡೆ

ಎನ್ನ ಸೀಮೆಗೆ, ಎನ್ನ ವ್ರತಾಚಾರಕ್ಕೆ , ನಾ ಕೊಂಡ ಗಮನಕ್ಕೆ

ತನುವಿಗೆ ಬಂದಲ್ಲಿ ಭೀತಿ, ಆತ್ಮಕ್ಕೆ ಬಂದಲ್ಲಿ ಸಂದೇಹವ ಮಾಡಿದಡೆ,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ. || ೨೧ ||

- ೪೫೬

ಎನ್ನ ವ್ರತದ ನೇಮ : ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ.

ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ?

ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ , ಇವನೆಷ್ಟು ಮಾಡಿದರೆ ಏನು ?

ತನ್ನ ಮನೆಗೆ ಕಟ್ಟಳೆ ಇರಬೇಕು.

ಎನ್ನ ಲಿಂಗವಂತೆಗೆಸೂತಕಮಾಸ ತಡೆದಲ್ಲಿ ,

ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ

ಆಕೆಯ ಉದರದ ಮೇಲೆನಿಹಿತ ಲಿಂಗವಿರಬೇಕು.

ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ

ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು.

ಇಂತೀ ಇಷ್ಟರಕ್ರೀಯಲ್ಲಿ ಸಂತತ ವ್ರತ ಇರಬೇಕು.

ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ .

ಇಂತೀ ವ್ರತದಲ್ಲಿ ನಿಶ್ಯಂಕನಾಗಬಲ್ಲಡೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ . || ೨೨ ||

೪೫೭

ಎನ್ನ ಸಮಗ್ರಾಹಕ ಶೀಲಸಂಪಾದಕರನಲ್ಲದೆ

ಎನ್ನ ಕಣ್ಣಿನಲ್ಲಿ ನೋಡೆ, ಜಿಹ್ನೆಯಲ್ಲಿ ನೆನೆಯೆ,

ಮಿಕ್ಕಾದ ತಟ್ಟುವ ಮುಟ್ಟುವ ತಾಗುವ ಸೋಂಕುವ

ನಾನಾ ಗುಣಂಗಳಲ್ಲಿ ಶೋಧಿಸಿಯಲ್ಲದೆ ಬೇರೆಯೆ .

ಕೊಂಬಲ್ಲಿ ಕೊಡುವಲ್ಲಿ

ಎನ್ನ ವ್ರತಾಚಾರವ ಅಂಗೀಕರಿಸಿದವರಲ್ಲಿಗಲ್ಲದೆ ಹೋಗೆ.

ಇದಕ್ಕೆ ದೃಷ್ಟವನೋಡಿಹೆನೆಂದಡೆ ತೋರುವೆ.


೧೩೯
ಅಕ್ಕಮ್ಮನ ವಚನಗಳು

ಶ್ರುತದಲ್ಲಿ ಕೇಳಿಹೆನೆಂದಡೆ ಹೇಳುವೆ.

ಅನುಮಾನದಲ್ಲಿ ಅರಿದಿಹೆನೆಂದಡೆ

ಎನ್ನ ಆಚಾರದ ಆತ್ಮನ ಎನ್ನ ಕೈಯಲ್ಲಿ ಹಿಡಿದು

ನಿಮ್ಮ ಕೈಯಲ್ಲಿ ಕೊಡುವೆ.

ಈ ಭಾಷೆಗೆ ತಪ್ಪೆನೆಂದು ಕಟ್ಟಿದ ತೊಡರುವ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ,


|| ೨೩ ||
ಎನಗೆ ಸರಿ ಇಲ್ಲ ಎಂದು ಎಲೆಹೊಟ್ಟು ನುಂಗಿದೆ.

೪೫೮

ಎಲ್ಲವ ಮೀರಿಶೀಲವಂತನಾದಲ್ಲಿ ರೋಗವೆಲ್ಲಿಂದ ಬಂದಿತು ?

ಆ ಗುಣ ತನುವಿನಲ್ಲಿಯ ತೊಡಕು; ರುಜೆ ಪ್ರಾಣವ ಕೊಳ್ಳಲರಿಯದು.

ಅಂಗದ ಡಾವರಕ್ಕೆ ಸೈರಿಸಲಾರದೆ,

ಮದ್ದ ತಾಲಿಂಗಕ್ಕೆ ತೋರಿ, ಜಂಗಮಕ್ಕೆ ಕೊಟ್ಟು, ಜಂಗಮಪ್ರಸಾದವೆಂದು

ಲಿಂಗ ಜಂಗಮವ ಹಿಂಗದೆಕೊಳ್ಳೆಂದು ಹೇಳುವ ಅನಂಗಿಗಳಿಗೆ

ಗುರು ಲಿಂಗ ಜಂಗಮ ಮೂರರಲ್ಲಿ ಒಂದೂ ಇಲ್ಲ ಎಂದೆ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ತಪ್ಪನೊಪ್ಪಗೊಳ್ಳೆ, || ೨೪ ||

೪೫೯

ಎಲ್ಲಾ ವ್ರತಕ್ಕೂ ಜಂಗಮದ ಪ್ರಸಾದವೆ ಪ್ರಾಣ.

ಎಲ್ಲಾ ನೇಮಕ್ಕೂ ಜಂಗಮದರ್ಶನವೆ ನೇಮ.


ಪು . ಎಲ್ಲಾ ಶೀಲಕ್ಕೂ ಜಂಗಮಮಾಟವೆ ಶೀಲ.

ಇಂತೀ ವ್ರತ ನೇಮ ಶೀಲಂಗಳೆಲ್ಲವೂ

ಜಂಗಮದ ಮುಂದಿಟ್ಟು ಶುದ್ಧತೆಯಹ ಕಾರಣ

ಆ ಜಂಗಮದಲ್ಲಿ ಅರ್ಥ ಪ್ರಾಣ ಅಭಿಮಾನಕ್ಕೆ

ಕಟ್ಟುಮಾಡಿದೆನಾದಡೆ ಎನಗದೆ ದ್ರೋಹ.

ಆ ಜಂಗಮದ ದರ್ಶನದಿಂದ ಸಕಲದ್ರವ್ಯ ಪವಿತ್ರ .

ಆ ಜಂಗಮದ ಪಾದತೀರ್ಥದಿಂದ ಘನಲಿಂಗಕ್ಕೆ ಜೀವಕಳೆ

ಆ ಜಂಗಮದ ಪ್ರಸಾದದಿಂದ ಘನಲಿಂಗಕ್ಕೆ ತೃಪ್ತಿ .

ಇಷ್ಟನರಿತಲ್ಲಿ ಜಂಗಮಲಿಂಗಕ್ಕೆ ಸಂದೇಹ ಮಾಡಿದಡೆ

ಎನಗೆ ಕುಂಭೀಪಾತಕದಲ್ಲಿ ನಾಯಕನರಕ ತಪ್ಪದು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿ ಮುಳುಗುವೆನು. || ೨೫


ಶಿವಶರಣೆಯರ ವಚನಸಂಪುಟ

೪೬೦

ಏರಿಯಕೆಳಗೆ ಬಿದ್ದ ನೀರು ಪೂರ್ವದ ತಟಾಕಕ್ಕೆ ಏರಬಲ್ಲುದೆ ?

ವ್ರತಾಚಾರವ ಮೀರಿಕೆಟ್ಟ ಅನಾಚಾರಿ ಸದ್ಭಕ್ತರಕೂಡಬಲ್ಲನೆ ?

ದೇವಾಲಯದಲ್ಲಿ ಸತ್ತಡೆ ಸಂಪ್ರೋಕ್ಷಣವಲ್ಲದೆ

ದೇವರು ಸತ್ತಲ್ಲಿ ಉಂಟೆ ಸಂಪ್ರೋಕ್ಷಣ ?

ಅಂಗದಲ್ಲಿ ಮರವೆಗೆ ಹಿಂಗುವ ಠಾವಲ್ಲದೆ,

ಮನವರಿದು ತಾಕು ಸೋಂಕಿಗೆ ಹೆದರದೆ ಕೂಡಿದ

ದುರ್ಗಣಕ್ಕುಂಟೆ ಪ್ರಾಯಶ್ಚಿತ್ತ ?

ಇಂತಿವ ಕಂಡಲ್ಲಿ ಗುರುವಾದಡೂ ಬಿಡಬೇಕು,

ಲಿಂಗವಾದಡೂ ಬಿಡಬೇಕು, ಜಂಗಮವಾದಡೂ ಬಿಡಬೇಕು;

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ || ೨೬ ||


ಬಿಡಬೇಕು.

೪೬೧ .

- ಏಳುನೂರೆಪ್ಪತ್ತು ಅಮರಗಣಂಗಳಿಗೆಲ್ಲಕ್ಕೂ ತಮ್ಮ ತಮ್ಮ ಭಾವನಶೀಲ

ಗಂಗೆವಾಳುಕ ಸಮಾರುದ್ರರೆಲ್ಲಕ್ಕೂ ತಮ್ಮ ತಮ್ಮ ಮನಕ್ಕೆ ಸಂದ ಸಂದ ನೇಮ

ಮರ್ತ್ಯಕ್ಕೆ ಬಂದ ಪ್ರಮಥರೆಲ್ಲರೂ ತಾವು ಬಂದುದನರಿದು

ಮುಂದಿನ ಪಯಣಕ್ಕೆ ಎಂದೆಂಬುದ ಕಂಡು,

ಬಸವಣ್ಣನ ಮಣಿಹ ಎಂದಿಗೆ ಸಲೆ ಸಂದು ನಿಂದಿಹ ವೇಳೆಯನರಿವನ್ನು

ತಾವು ಕೊಂಡ ವ್ರತದಲ್ಲಿ ಭಯ ಭಂಗವಿಲ್ಲದೆ ನಿಂದಿರಬೇಕು,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗಹನ್ನಕ್ಕ . - || ೨೭ ||

೪೬೨

ಒಂದ ವಿಶೇಷವೆಂದು ಹಿಡಿದು ,

ಮತ್ತೊಂದಧಮವ ಮುಟ್ಟದಿದ್ದುದೆ ಭರಿತಾರ್ಪಣ.

ಪರಸ್ತ್ರೀ ಪರಧನಂಗಳಲ್ಲಿ ದುರ್ವಿಕಾರ ದುಶ್ಚರಿತ್ರದಲ್ಲಿ

ಒಡಗೂಡದಿಪ್ಪುದೆ ಭರಿತಾರ್ಪಣ .

ಮರವೆಯಲ್ಲಿ ಬಂದ ದ್ರವ್ಯವ ತಾನರಿದು ಮುಟ್ಟಿದಲ್ಲಿಯೆ ಭರಿತಾರ್ಪಣ.

ತನ್ನ ವ್ರತ ನೇಮ ನಿತ್ಯಕೃತ್ಯಕ್ಕೆ ಅಪರಾಧ ಬಂದಲ್ಲಿ

ಸಕಲವ ನೇತಿಗಳೆದು, ಆ ವ್ರತ ನೇಮದ ಆಳಿ ತಪ್ಪದೆ

ಸಲೆ ಸಂದುದು ಭರಿತಾರ್ಪಣ.

ಹೀಗಲ್ಲದೆ ಓಗರ ಮೇಲೋಗರದ ಲಾಗಿಗೆ

ಭರಿತಾರ್ಪಣವುಂಟೆಂದು ನುಡಿವುದು ಸಹಜವೆ ?


ಅಕ್ಕಮ್ಮನ ವಚನಗಳು

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ


|| ೨೮ ||
ಭರಿತಾರ್ಪಣದ ಸಹಜದ ಭಾವ.

೪೬೩

ಒಡೆಯರ ಕಟ್ಟಳೆಯೆಂದು ಮಾಡಿಕೊಂಡು ಆಡುವ ತನಕ

ಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೆ ?

ಒಡೆಯರಂತೆ, ಮನೆಗೊಡೆಯನಂತೆ ಗಡಿತಡಿಯಲ್ಲಿ ಕಾಯಲುಂಟೆ ?

ಅದು ತುಡುಗುಣಿಕಾರರ ನೇಮ .

ಒಡೆಯರತ್ತ ನಾವಿ .

ಗಡಿಗೆಯ ತುಪ್ಪ , ಹೆಡಿಗೆಯ ಮೃಷ್ಟಾನ್ನ - ತುಡುಗುಣಿಯಂತೆ ತಿಂಬವಂಗೆ

ಮತ್ತೊಡೆಯರ ಕಟ್ಟಳೆಯೆ ?

ಇಂತೀ ಕಡುಕರ ಕಂಡು ಅಂಜಿದೆಯಲ್ಲಾ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ ? || ೨೯ ||

೪೬೪

ಒಡೆಯರ ಸಮಯಾಚಾರವೆಂದ ಮತ್ತೆ

ಹಲ್ಲುಕಡ್ಡಿ , ದರ್ಪಣ, ನಖಚಣ , ಮೆಟ್ಟಡಿ ಮುಂತಾದ

ತಾ ಮುಟ್ಟುವ, ತಾ ತಟ್ಟುವ, ಸೋಂಕುವ,

ತನ್ನಯ ಸಂದೇಹ ಮುಂತಾದ

ದಿಟ ಮೊದಲು ಹುಸಿ ಕಡೆಯಾದ ದ್ರವ್ಯವೆಲ್ಲವನು ಕೊಟ್ಟು

ತಾ ಕೊಳ್ಳದಿದ್ದನಾಯಿತ್ತಾದಡೆ

ಬೈವುದಕ್ಕೆ ಬಾಯಿ ತೆರಪಿಲ್ಲ ; ಹೊಯ್ದ ಕ್ಕೆ ಕೈಗೆ ಅಡಹಿಲ್ಲ .

ನೋಡುವ ಕಣ್ಣನೆ ಮುಚ್ಚುವೆ, ಈ ನೋವನಿನ್ನಾರಿಗೂ ಹೇಳೆ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ್ರಾ, ನೀನೇ ಬಲ್ಲೆ . || ೩೦ ||

PER

ಒಡೆಯರು ಭಕ್ತರಿಗೆ ಸಲುವ ಸಹಪಳ್ಳಿಯಲ್ಲಿ ಗುರುವೆಂದು, ಅರಸೆಂದು

ತನ್ನ ಪರಿಸ್ಪಂದದವರೆಂದು,

ರಸದ್ರವ್ಯವನೆಸಕದಿಂದ ನೀಡಿದೊಡೆ,

ಅದ ನಾನರಿದು ಕೈಕೊಂಡಡೆ ಕಿಸುಕುಳದ ಪಾಕುಳಕಿಚ್ಚಸಿದಂತೆ :

ಅಲ್ಪ ಜಿಹ್ವಾಲಂಪಟಕ್ಕೆ ಸಿಕ್ಕಿದ ಮತ್ತ್ವ ಬಂಧನದಿ ಸತ್ತಂತೆ.

ಇದನರಿದು ಭಕ್ತನಾಗಲಿ, ಗುರುವಾಗಲಿ, ಜಂಗಮವಾಗಲಿ,


೧೪೨ ಶಿವಶರಣೆಯರ ವಚನಸಂಪುಟ

ಶಿವಗಣಪಜ್ಯ ನಡುವೆ ತಾ ಕುಳ್ಳಿರ್ದು

ಮಿಗಿಲಾಗಿ ಷಡುರಸಾನ್ನವಾದಿಯಾದ ಸುಪದಾರ್ಥಂಗಳನಿಕ್ಕಿಸಿಕೊಂಡು

ತಿಂದನಾದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ. || ೩೧

See

ಕಂಗಳ ಮುಂದೆ ಕಂಡಂತೆ ಕಾಣಬಹುದೆ ?

( ಮನ ನೆನೆದಂತೆ ಆಡಬಹುದೆ ?

ಕಂಡಕಂಡವರಲ್ಲಿ ಸಂಗವ ಮಾಡಬಹುದೆ ?

ಅದು ಸ್ವಾನುಭಾವರಿಗೆ ಸಲ್ಲದ ಮತ.

ಶಿವಪೂಜಕರಲ್ಲಿ ಶಿವಧ್ಯಾನಮೂರ್ತಿಗಳಲ್ಲಿ , ಶಿವಕಥಾಪ್ರಸಂಗಿಗಳಲ್ಲಿ ,

ಶಿವಾಧಿಕ್ಯವಲ್ಲದೆ ಪರತೊಂದನರಿಯದವರಲ್ಲಿ

ತನು ಕರಗಿ, ಮನ ಸಲೆಸಂದು, ತ್ರಿವಿಧಪ್ರಸಾದದಲ್ಲಿ ಮಹಾಪ್ರಸಾದಿಯಾಗಿ ನಿಂ

ವ್ರತಾಂಗಕ್ಕೆ ಅಭಂಗ ಅವಿರಳನಾಗಿಪ್ಪ ಸದ್ದನಂಗವೆ,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಸುಖ . | ೩೨ ||

- ೪೬೭

ಕಾಮಿಗೆ ವ ತವುಂಟೆ, ನಿಃಕಾಮಿಗಲ ದೆ ?

ಕೊಧಿಗೆ ವ್ರತವುಂಟೆ, ಸಮಾಧಾನಿಗಲ್ಲದೆ ?

ಲೋಭಿಗೆ ವ್ರತವುಂಟೆ, ಉದಾರಿಗಲ್ಲದೆ ?

ಇಂತೀ ಕ್ಷಮೆ ದಮೆ ಶಾಂತಿ ಸಮಾಧಾನಸಂಪದ ಮುಂತಾಗಿ

ಗುರುಲಿಂಗಜಂಗಮಕ್ಕೆ, ತನುಮನಧನದಲ್ಲಿ ನಿರತನಾಗಿ,

ತನ್ನ ಪ್ರಾಣಕ್ಕೆ ಇದ್ದಂತೆ ಚಿತ್ತಶುದ್ಧಾತ್ಮನಾಗಿ ಇಪ್ಪ ಮಹಾಭಕ್ತನೆ

ಕೃತ್ಯವಿಲ್ಲದ ಶರಣ.

ಆತನ ಪಾದ ಎನ್ನ ಹೃದಯದಲ್ಲಿ ಅಷ್ಟೋತ್ತಿದಂತಿಪ್ಪುದು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು

ಅವರುವ ಎತ್ತುಕಟ್ಟುವಗೊತ್ತಾಗಿಪ್ಪನು. || ೩೩ ||

೪೬೮

ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ

ಆವ ಭಾವದ ವ್ರತವ ಮಾಡಲಿಕ್ಕೆ , ಅವ ಭಾವಿಸಿ ನಡೆಯಬಲ್ಲನೆ ?

ಕಾಗೆಗೆ ರಸಾನ್ನ ಮುಂದಿರಲಿಕೆ , ಹರಿವಕೀಟಕಂಗೆ ಸರಿವುದಲ್ಲದೆ

ಮತ್ತೆ ಅದು ಸವಿಯಸಾರವ ಬಲ್ಲುದೆ ?


೧೪೩
ಅಕ್ಕಮ್ಮನ ವಚನಗಳು

ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ,

ವ್ರತಾಚಾರವ ಸಂಬಂಧಿಸುವಲ್ಲಿ ಶರಣರೆಲ್ಲರಕೂಡಿ,

ಈ ಗುಣ ಅಹುದು ಅಲ್ಲ ಎಂದು ಹೇಳಿ,

ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ ,

ಸುಜಾತಿಯ ಅರಸಿನ ಪಟ್ಟವಂ ಕಟ್ಟಿ

ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ

ಇಂತೀ ಗುಣನಿಹಿತವ್ರತ್ತ ಅಜಾತನ ಒಲುಮೆ ,


ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ || ೩೪ ||

- ೪೬೯

ಕಾಯಕಕೃತ್ಯ ,ನೇಮಕೃತ್ಯ , ಆಚರಣೆಕೃತ್ಯ, ದಾಸೋಹಕೃತ್ಯ , ಭಾವಕೃತ್ಯ ,

ಸೀಮೆಕೃತ್ಯ , ಯಾಜಕಕೃತ್ಯ , ಗಮನಕೃತ್ಯ , ಲಿಂಗಕೃತ್ಯ , ಜಂಗಮಕೃತ್ಯ ,

ಪಾದೋದಕಕೃತ್ವ , ಪ್ರಸಾದಕೃತ್ಯ , ಕೊಡೆಕೊಳ್ಳೆನೆಂಬ ಉಭಯಕೃತ್ಯ ,


ಮರೆದರಿಯೆ ಅರಿದು ಮರೆಯೆನೆಂಬ ಅರಿವುಕೃತ್ಯ

ತನ್ನ ಕೃತ್ಯಕ್ಕೆ ಆವುದು ನಿಷೇಧವೆಂದು ಬಿಟ್ಟಲ್ಲಿ,

ರಾಜ ಹೇಳಿದನೆಂದು, ಗುರುವಾಜ್ಞೆಯ ಮೀರಿದಿರೆಂದು,

ಶರಣರ ಸಮೂಹಹೇಳಿದರೆಂದು

ಮಿಕ್ಕಾದ ತನ್ನ ಪರಿಸ್ಸಂದಿಗಳರಿದರೆಂದು

ಇಂತೀ ಗುಣಕ್ಕೆ ಅನುಸರಣೆಯ ಮಾಡಿದೆನಾದಡೆ ಎನಗದೆ ಭಂಗ.

ಇದಕ್ಕೆ ನೀ ಒಪ್ಪಿದಡೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ

ನೀ ತಪ್ಪಿದೆಯಾದಡೆ ನಿನಗೆ ಎಕ್ಕಲನರಕ.

೪೭೦

ಕೀಟಕ ವಿಹಂಗ ಮೊದಲಾದ ಆವ ಜೀವವು

ಮುಟ್ಟಿದ ಫಲಕುಸುಮ ದ್ರವ್ಯಂಗಳ ಮುಟ್ಟದೆ, ಸಂದೇಹವಿದ್ದಲ್ಲಿ ಒಪ್ಪದೆ,

ತಾ ಮಾಡಿಕೊಂಡ ಕೃತ್ಯಕ್ಕೆ ಆರನು ಆರೈಕೆಗೊಳ್ಳದೆ,

ತಾ ತಪ್ಪಿದಲ್ಲಿ , ತಪ್ಪನೊಳಗಿಟ್ಟುಕೊಳ್ಳಬೇಕೆಂದು,

ಭಕ್ತರು ಜಂಗಮದ ಬಾಗಿಲಕಾಯದೆ ತಪ್ಪಿದಲ್ಲಿಯೆ ನಿಶ್ಚಿಸಿಕೊಂಡು

ಮರ್ತ್ಯದ ಕಟ್ಟಳೆ ತಾನೆ ಎಂಬುದು ಕಟ್ಟಾಚಾರಿಯ ನೇಮ .

ಇದು ನಿಷ್ಟೆವಂತರಿಗಿಕ್ಕಿದಗೊತ್ತು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ . || ೩೬ ||


೧೪೪ ಶಿವಶರಣೆಯರ ವಚನಸಂಪುಟ

೪೭೧

ಕೂಪಚಿಲುಮೆ ಬಹುಜಲಂಗಳಲ್ಲಿ ಸ್ವೀಕರಿಸಿಕೊಂಬುದು ಅದೇತರ ಶೀಲ ?

ತನು ಕರಗದೆ, ಮನ ಮುಟ್ಟದೆ, ಆಗಿಗೆ ಮುಯ್ಯಾಂತು ಚೇಗಿಗೆ ಹಲುಬುತ್ತ ,

ಸುಖದುಃಖವೆಂಬ ಉಭಯವರಿಗಾಣದೆ,

ಅಂದಂದಿಗೆ ಆಯು ಸಂದಿತ್ತೆಂದಿರಬೇಕು.

ಆ ಗುಣ ಶಿವಲಿಂಗ ಖಂಡಿತನೇಮ, ಈ ಸಂಗವೆ ಎನಗೆ ಸುಖ ;

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಕೂಟ. || ೩೭ ||

೪೭೨

ಕೂಪಜಲವ ಬಳಸುವನ್ನಕ್ಕ , ಲವಣಬಳಕೆ ಸಾರೋಪಿತ ದ್ರವ್ಯವನ್ನರಿಯಬೇಕು.

ಸರ್ವಸಂಗ್ರಹಗಳಲ್ಲಿ ಸೌಕರ್ಯವ ತಿಳಿಯಬೇಕು.

ಪರ್ಣಫಲಂಗಳಲ್ಲಿ ಪುನರಪಿ ಪ್ರಕ್ಷಾಲನವಮಾಡಬೇಕು.

ಕೂಪೋದಕವ ತ್ರಿಪಾವಡೆಯಲ್ಲಿ ಸೋದಿಸಬೇಕು.

ಇಂತಿವು ಸಂತೋಷ;

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಅರ್ಪಿತ. || ೩೮ ||

೪೭೩

ಕೆಯಿಗೆ ಬೆಚ್ಚು ಬೆದರ ಕಟ್ಟುವಲ್ಲಿ

ಆ ಲೆಪ್ಪಕ್ಕೆ ಇಷ್ಟಲಿಂಗ, ರುದ್ರಾಕ್ಷಿ , ಭಸಿತಪಟ್ಟವಕಟ್ಟಿ ,

ಎನ್ನ ಕೆಯ್ಯ ತಪ್ಪಲಲ್ಲಿ ಕಾಷ್ಠವ ನೆಟ್ಟು ಕಟ್ಟಿದ ಮತ್ತೆ ,

ವಿಹಂಗಕುಲ ಮೃಗಜಾತಿ ಮುಟ್ಟಲಿಲ್ಲ .

ಮೀರಿಬಂದು ಮುಟ್ಟಿಹೆನೆಂದಡೆ ಮುಟ್ಟುವುದಕ್ಕೆ ಮುನ್ನವೆ

ಅಟ್ಟಿ ಅದ್ದರಿಸಿ ಕುಟ್ಟಿ ಓಡಿಸುವವು.

ಅದು ತೃಣದ ಲೆಪ್ಪದ ಬಲಿಕೆಯೋ ? ತನ್ನ ಚಿತ್ರದ ಬಲಿಕೆಯೋ ?

ಅದು ಎನ್ನ ನಿನ್ನ ದೃಷ್ಟದ ಭಾವ.

ಅದು ಎನ್ನ ಸ್ವತಂತ್ರವಲ್ಲ .

ಅದು ನಿಮ್ಮಯ ಭಾವ,


|| ೩೯ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ.

| 22

ಕೆರೆ ಪೂದೋಟ ಅರವಟ್ಟಿಗೆ ಬಾವಿ ವಿವಾಹ

ಮುಂತಾದ ಧರ್ಮಂಗಳ ಕಟ್ಟಿಹೆವೆಂದು


೧೪೫
ಅಕ್ಕಮ್ಮನ ವಚನಗಳು

ನೇಮದಿಂದ ತಿರುಗುವ ಶೀಲ ಅದಾರಿಗೆ ಯೋಗ್ಯ ?

ಸರಿಹುದುಗಿನಸೂಳೆ ಸೀರೆಯನುಟ್ಟಂತೆ

ಅದಾರಿಗೆ ಸುಖದು: ಖವೆಂಬುದ ನೀನೆ ಅರಿ .

ಸರಿ ಹುದುಗಿನ ಧರ್ಮವುಂಟೆ ?

ಅರಿಕೆಯ ಒಡವೆಯ ಊರೆಲ್ಲಕ್ಕೆ ತಂದಿಕ್ಕಿ ,

ನಾ ಮಾಡಿದೆನೆಂದಡೆ ಇದಾರು ಮೆಚ್ಚುವರು ?

ಆ ಮಾಟವನಾರಯ್ಯಲಿಲ್ಲ , ಅದು ಸ್ವಕಾರ್ಯಕ್ಕೆ ಏರಿದ ಪಥ.

ಇಂತೀ ವ್ರತ ನೇಮ ಶೀಲವನರಿಯಬೇಕು;

ಆಚಾರವೆ ಪ್ರಾಣವಾದ ರಾಮೇಶವರಲಿಂಗದಲ್ಲಿ


|| ೪೦ ||
ಧರ್ಮಜ್ಞನಾಗಿ ವ್ರತವನಂಗೀಕರಿಸಬೇಕು.

೪೭೫

ಕೊಡುವದು ಬೇಡ ಎಂದಲ್ಲಿ ಸರ್ವರ ಒಡಗೂಡಿಕಾಡುವುದು.

ನಿಂದಲ್ಲಿ ಮಾರಾಗುಳಯದ ಬಾಗಿಲ ಕಾಯ್ದಲ್ಲಿ

ಹೆಚ್ಚು ಕುಂದೆಂಬ ಆತ್ಮನಭೀಷ್ಟಿಕೆಯ ಬಿಟ್ಟಲ್ಲಿ

ಗೆಲ್ಲ ಸೋಲಕ್ಕೆ ಕಲ್ಲೆದೆಯಾಗದಲ್ಲಿ ಇಂತಿವನೆಲ್ಲವನರಿತು ಮರೆದಲ್ಲಿ

ನಿಜ ಬಲ್ಲವನ ಭರಿತಾರ್ಪಣ.

ಹೀಗಲ್ಲದೆ ಎಲ್ಲರ ಕಂಡು ಅವರ ಸೊಲ್ಲಿಗೆಸೋತು ಅಲ್ಲಿಗಲ್ಲಿಗೆ ತಕ್ಕವನಹ

ಕಳ್ಳನ ಭರಿತಾರ್ಪಣ ದ್ರವ್ಯದಲ್ಲಿಯೇ ಉಳಿಯಿತ್ತು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ ದೂರಸ್ಥನಾದ. || ೪೧ ||

22

ಖಂಡಿತಕಾಯಕದ ವ್ರತಾಂಗಿಯ ಮಾಟದ ಇರವೆಂತೆಂದಡೆ :

ಕೃತ್ಯದ ನೇಮದ ಸುಯಿದಾನವ ಅಚ್ಚೆತ್ತಿದಂತೆ ತಂದು

ಒಡೆಯರ ಭಕ್ತರ ತನ್ನ ಮಡದಿ ಮಕ್ಕಳು ಸಹಿತಾಗಿ ಒಡಗೂಡಿ,

ಎಡೆಮಾಡಿ ಗಡಿಗೆ ಭಾಜನದಲ್ಲಿ ಮತ್ತೊಂದೆಡೆಗೆ, ಈಡಿಲ್ಲದಂತೆ,


ಬಿಡುಮುಡಿಯನರಿಯದೆ,

ಮತ್ತೆ ಇರುಳೆಡೆಗೆಂದಿರಿಸದೆ, ಹಗಲೆಡೆಯ ನೆನೆಯದೆ,

ಇಂದಿಗೆ ನಾಳಿಗೆ ಎಂಬ ಸಂದೇಹಮಂ ಬಿಟ್ಟು

ಮುಂದಣ ಕಾಯಕ ಅಂದಂದಿಗೆ ಉಂಟು ಎಂಬುದನರಿತು

ಬಂದುದ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ


೧೪೬
ಶಿವಶರಣೆಯರ ವಚನಸಂಪುಟ

ಸದಾನಂದದಲ್ಲಿಪ್ಪ ಭಕ್ತನಂಗಳ ಮಂಗಳಮಯ ಕೈಲಾಸ;

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಬೆಳಗು. || ೪೨ ||

೪೭೭

ಖಂಡಿತ ವ್ರತ ಅಖಂಡಿತ ವ್ರತ,

ಸಂದ ವ್ರತ, ಸಲ್ಲದ ವ್ರತವೆಂದು ನೇಮವ ಮಾಡಿಕೊಂಡು

ಊರೂರ ತಪ್ಪದೆ ಸಾರಿ ದೂರಿಕೊಂಡು ತಿರುಗಲೇತಕ್ಕೆ ?

ತಾ ಮಾಡಿಕೊಂಡ ವ್ರತ ನೇಮ ಊರೆಲ್ಲಕ್ಕೂ ತನಗೊ

ಎಂಬುದ ತಾನರಿಯದೆ ನಿಕ್ಷೇಪವ ಕಂಡೆನೆಂದು ಸಾರಿದರುಂಟೆ ?


ಆ ಮನಜ್ಞಾನವ್ರತ ಕಳ್ಳನ ಚೇಳೂರಿದಂತೆ ಅಲ್ಲಿಯೆ ಅಡಗಬೇಕು.

ಹೀಗಲ್ಲದೆ ಕಲಕೇತರಂತೆ

ಊರಮಗನೆಂದು ಬಾಗಿಲಲ್ಲಿ ಇರಿದುಕೊಂಬನಂತೆ

ಅವ ಮಾಡಿಕೊಂಡ ವ್ರತ ಅದಾರಿಗೆ ಯೋಗ್ಯ ?

ಅದು ಸಾಗದ ನೇಮ, ಶೀಲವಾಗದ ಅಕೃತ್ಯ.

ಇಂತೀ ವ್ರತದ ಭೇದವನರಿಯಬೇಕು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ . || ೪೩ ||

೪೭೮

ಖಂಡಿತವ್ರತದ ನಿರಂಗನ ವ್ರತವೆಂತುಟೆಂದಡೆ:

ತನ್ನ ಸತಿಗೆ ಗರ್ಭ ತಲೆದೋರಿದಲ್ಲಿಯೆ ,

ಮುಖವ ಕಾಂಬುದಕ್ಕೆ ಮುನ್ನವೆ ಲಿಂಗಧಾರಣಮಂ ಮಾಡಿ,

ಮಾಡಿದ ಮತ್ತೆ ತನ್ನ ವ್ರತದ ಪಟ್ಟವಂ ಕಟ್ಟಿ ,

ಶಕ್ತಿಯಾದಲ್ಲಿ ತನ್ನ ನೇಮದ ಪ್ರತಿಗಳಿಗೆ ಕೊಟ್ಟಿಹೆನೆಂದು

ಸುತನಾದಲ್ಲಿ ತನ್ನ ನೇಮದ ಪ್ರತಿಗಳಲ್ಲಿ ತಂದೆಹೆನೆಂದು,

ಗಣಸಾಕ್ಷಿಯಾಗಿ ವಿಭೂತಿಯ ಪಟ್ಟವಂಕಟ್ಟಿ, ಇಪ್ಪುದು

ಖಂಡಿತನ ವ್ರತ, ಶೀಲ, ನೇಮ .

ಹಾಗಲ್ಲದೆ ದಿಂಡೆಯತನದಿಂದ ಹೋರಿ,

ಮಕ್ಕಳಿಗೆ ಸಂದೇಹದ ವ್ರತವ ಕಟ್ಟಬಹುದೆಯೆಂದು

ಬುದ್ದಿಯಾದಂದಿಗೆ ವ್ರತವಾಗಲಿಯೆಂಬವರ ಅಂಗಳವ ಮೆಟ್ಟಬಹುದೆ ?

ಅದೆಂತೆಂದಡೆ:

ವ್ರತದ ಅಂಗಳದಲ್ಲಿ ಬೆಳೆದ ಗರ್ಭವ

ಮಂದಿಗಾಗಲಿಯೆಂಬ ಭಂಡರ ನೋಡಾ!


೧೪ ೭
ಅಕ್ಕಮ್ಮನ ವಚನಗಳು

ಅಂದಿಗಾಗಲಿಯೆಂಬವನ ವ್ರತ ಇಂದೆ ಬಿಟ್ಟಿತ್ತು .

ಅದೆಂತೆಂದಡೆ :

ತನ್ನಂಗದಲ್ಲಿ ಆದ ಲಿಂಗದೇಹಿಯ

ಮುಂದಕ್ಕೆ ಭವಿಸಂಗಕ್ಕೆ ಈಡುಮಾಡುವ ವ್ರತಭಂಗಿತನ ಕಂಡು,

ಅವನೊಂದಾಗಿ ನುಡಿದಡೆ ಕುಂಭೀನರಕ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ


|| ೪ ||
ಅವನ ಹಂಗಿರಬೇಕಯ್ಯಾ .

೪೭೯

ಖ್ಯಾತಿಯ ಲಾಭಕ್ಕೆ ತವ ಮಾಡಿಕೊಂಡವನ ನೇಮವ ನೋಡಾ!

ಊರಿಗೆ ಬಲುಗಯ್ಯ ಬಂದುಣ್ಣಬೇಕೆಂದು ದಾರಿದಾರಿಯ ಕಾಯು

ಮತ್ತಾರನು ಏನೆಂದರಿಯದೆ.

ಮತ್ತಾರು ಆರೈಕೆಗೊಂಡಡೆ ದೇವರೆಂದು, ಬಂದವರ ದಾರಿಗರೆಂದು ಕಾಣುತ್ತ

ಇಂತೀ ಗಾರಾದ ಮನಕ್ಕೆ ಇನ್ನಾರು ಹೇಳುವರಯ್ಯಾ ?

ಮುಂದೆ ಬಸುರಾಗಿ ಹೆರುವಾಗಊರೆಲ್ಲರು ಅವಳಂಗವ ಕಂಡಂತೆ

ಜಗಭಂಡ ಶೀಲವಂತನಾಗಿ, ತನ್ನ ಕೊಂಡಾಡುವ

ಸತ್ತ ಮತ್ತೆ ಮೂರು ಹೆಂಡಗುಡಿ ಹೇಯಶೀಲಕಂಡವರಿಗೆ ನಗೆಯಾಯಿತ್ತು

ಇದರಂದಕಂಜಿ,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವುಕಂಡೂ ಕಾಣದಂತಿದ್ದ . || ೪೫

೪೮೦

ಗುರುವಾಗಿಬಂದು ತನುವ ಕೊರೆದರೂ ಕೇಳೆ,

ಲಿಂಗವಾಗಿಬಂದು ಮನದಲ್ಲಿ ಕುಳ್ಳಿರ್ದು ನಿಜಾಂಗವ ತೋರಿದರೂ ಕೇಳೆ,

ಜಂಗಮವಾಗಿಬಂದು ಬಯಲಬೆಳಗಿನಲ್ಲಿ ಒಳಗಾಗೆಂದಡೂ ಒಲ್ಲೆ .


ಅದೆಂತೆಂದಡೆ:

ಕುಟಿಲದಲ್ಲಿ ಬಂದು ವ್ರತವ ಕೆಡಿಸಿಹೆನೆಂದಡೆ ,

ಕುಟಿಲದ ದೇವರುಂಟೆ ?

ವ್ರತ ಮೊದಲು ಘಟಕಡೆಯಾಗಿ ಘಟಿಸುವೆನಲ್ಲದೆ,

ಮೂರುಕಿಸುಕುಳಕಾಗಿ ಘಟವ ಹೊರೆದಡೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ. || ೪೬ ||

ಗುರುವಾದಡೂ ಆಚಾರಭ್ರಷ್ಟನಾದಡೆ ಅನುಸರಿಸಲಾಗದು.

ಲಿಂಗವಾದಡೂ ಆಚಾರದೋಹಳವಾದಲ್ಲಿ ಪೂಜಿಸಲಾಗದು.


೧೪೮
ಶಿವಶರಣೆಯರ ವಚನಸಂಪುಟ

ಜಂಗಮವಾದಡೂ ಆಚಾರ ಅನುಸರಣೆಯಾದಲ್ಲಿ ಕೂಡಲಾಗದು.

ಆಚಾರವೆ ವಸ್ತು , ವ್ರತವೆ ಪ್ರಾಣ, ಕ್ರಿಯೆಯೆ ಜ್ಞಾನ, ಜ್ಞಾನವೆ ಆಚಾರ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. || ೪೭ ||

೪೮೨

ಚಂದ್ರ ಸೂರ್ಯಾದಿಗಳು ಭವಿಯೆಂದಲ್ಲಿ ಅವೆರಡರ ಸಂಸಂಧಿ

ಇರಬಹುದೆ ? ಇದರಂದವ ಹೇಳಿರಯ್ಯಾ ,

ತಾ ಕೊಂಡ ನೇಮದ ಸಂದೇಹವಲ್ಲದೆ, ಅವರಂದದ ಇರವ ವಿಚಾರಿಸಲಿಲ್ಲ .

ಅದೆಂತೆಂದದಡೆ:

ತಾನಿಹುದಕ್ಕೆ ಮುನ್ನವೆ ಅವು ಪುಟ್ಟಿದವಾಗಿ,

ನೀರು ನೆಲ ಆರೈದು ಬೆಳವ ದ್ರವ್ಯಂಗಳೆಲ್ಲವು ಆಧಾರ ಆರೈಕೆ.

ಇಂತೀ ಗುಣವ ವಾರಿಧಿಯನೀಜುವನಂತೆ

1ತರವೆ ತನ್ನ ಸಂದೇಹಕ್ಕೆ ಒಡಲಾಗಿ ನಿಂದುದೆ ತನ್ನ ನೇಮ.

ತನ್ನ ಹಿಂಗಿದುದೆ ಜಗದೊಳಗು ಎಂಬುದನರಿದ ಮತ್ತೆ

ಸಂದೇಹದ ವ್ರತವ ಸಂದೇಹಕ್ಕಿಕ್ಕಲಿಲ್ಲ .

ತಾ ಕೊಂಡುದೆ ವ್ರತ, ಮನನಿಂದುದೆ ನೇಮ.

ಇದಕ್ಕೆ ಸಂದೇಹವೆಂದು ಒಂದನೂ ಕೇಳಲಿಲ್ಲ .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ . || ೪೮ ||

೪೮೩

ಚತುಷ್ಪಾದಿ ಮುಂತಾದ, ನರ ವಿಹಂಗ ಕೀಟಕ ಮುಂತಾದ ಜೀವಂಗಳೆಲ್ಲವ

ತಮ್ಮ ತಮ್ಮ ಸ್ವಜಾತಿಯ ಕೂಡುವುದೆ ಶೀಲ,

ತಮ್ಮ ತಮ್ಮ ವ್ಯವಹಾರಂಗಳಲ್ಲಿ ಕೊಡುವ ಕೊಂಬುದೆ ಶೀಲ.

ಇಂತೀ ಜಾತಿವರ್ತಕದಲ್ಲಿ ನಡೆವ ಶೀಲವಂ ಬಿಟ್ಟು ,

ಲಿಂಗವಂತ ಲಿಂಗಮುಂತಾಗಿ ನಡೆವ ಶೀಲವೆಂತುಟೆಂದಡೆ:

ಅಸಿ, ಕೃಷಿ, ವಾಣಿಜ್ಯ , ವಾಚಕ ಮುಂತಾದ ಕಾಯಕಂಗಳ ವಿವರವನರಿತು

ಪಾಪ ಪುಣ್ಯ ಬಹುಕಾಯಕಮಂ ಕಂಡು, ತನ್ನ ವಂಶದ ಸ್ವಜಾತಿಯಂ ಬಿಟ್ಟ

ಶಿವಭಕ್ತರೆ ಬಂಧುಗಳಾಗಿ ಶಿವಾಧಿಕ್ಯವೆ ದಿಕ್ಕಾಗಿ ಕೊಂಡು ಗಮನಕ್ಕೆ

ಕಾಯಲಿಂಗ ಮನವರಿಕೆಯಾಗಿ, ತ್ರಿಕರಣ ಶುದ್ಧಾತ್ಮನಾಗಿ,

ಅಂಗಕ್ಕೆ ಆಚಾರ, ಮನಕ್ಕೆ ಅರಿವು, ಅರಿವಿಂಗೆ ಜ್ಞಾನ

ನಿರ್ಧಾರವಾಗಿ ಕರಿಗೊಂಡುದೆ ವ್ರತ.


ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಎಡೆದೆರಪಿಲ್ಲದ ನೇಮ . || ೪೯ ||
೧ರ್೪
ಅಕ್ಕಮ್ಮನ ವಚನಗಳು

೪೮೪

ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ

ಪರಿಹಾಸಕಂಗಳಿಂದ ಬೇಡಿ ತಂದು

ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ ?

ಮಾಡುವ ಠಾವಿನಲ್ಲಿ ಮಾಡಿಸಿಕೊಂಬವರಾರೆಂದು ತಾನರಿದ ಮತ್ತೆ

ಅಲ್ಲಿ ಬೇಡಬಹುದೆ ? ತಾ ಭಕ್ತಿಯ ಮಾಡಿಹೆನೆಂದು ಕಾಡಬಹುದೆ ?

ತಾ ದಾಸೋಹಿಯಾದ ಮತ್ತೆ ಅಲ್ಲಿಗೆ ತಾ ದಾಸನಾಗಿ

ಸಲೀಲೆಯಿಂ ಪ್ರಸಾದವ ಕೊಂಡು

ಅಲ್ಲಿ ಇಲ್ಲಿ ಎಲ್ಲಿಯೂ ತಾನಾಗಿ ಇರಬೇಕಲ್ಲದೆ,

ಅಲ್ಲಿ ಮಾಡಿಹೆನೆಂದು ಎಲ್ಲರ ಬೇಡುವ ಕಲ್ಲೆದೆಯವನನೊಲ್ಲ ,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದನೇಮ . || ೫೦ ||

មួយ ។

ಚಿನ್ನ ಒಡೆದಡೆ ಕರಗಿದಡೆ ರೂಪಪ್ಪುದಲ್ಲದೆ,

ಮುತ್ತು ಒಡೆದು ಕರಗಿದಡೆ ರೂಪಪ್ಪುದೆ ?

ಮರ್ತ್ಯದ ಮನುಜ ತಪ್ಪಿದರೊಪ್ಪಬೇಕಲ್ಲದೆ,

ಸದ್ಭಕ್ತ ಸದೈವ ತಪ್ಪಿದಡೆ ಒಪ್ಪಬಹುದೆ ?

ಆಚಾರಕ್ಕು ಅಪಮಾನಕ್ಕು ಅಂಗವೆ ಕಡೆಯಿಲ್ಲದೆ,

ಬೇರೊಂದಂಗವ ಮಾಡಿ ಗುರುಲಿಂಗಜಂಗಮದ ಮುಖದಿಂದ

ಶುದ್ದವೆಂದು ತಂದು ಕೂಡಿಕೊಳ್ಳಬಹುದೆ ?

ಲಿಂಗಬಾಹನ, ಆಚಾರಭ್ರಷ್ಟನ, ಜಂಗಮವಕೊಂದವನ

ಇವರುವ ಕಂಡು ನುಡಿದಡೆ ಕುಂಭೀಪಾತಕಕ್ಕೆ ಒಳಗು ;

ಇದಕ್ಕೆ ಸಂದೇಹವಿಲ್ಲ .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ. || ೧ ||

೪೮೬

ಜಗಮೆಚ್ಚಬೇಕೆಂಬ ಶೀಲವ ನಾನರಿಯೆ ,

ಕೊಳುಕೊಡೆಯಾಗಬೇಕೆಂಬ ಶೀಲವ ನಾನರಿಯೆ ,

ದ್ರವ್ಯದ ಕಳ್ಳತನಕ್ಕಂಜಿ ಶೀಲವಾದುದ ನಾನರಿಯೆ .

ಹೊರಗಣ ಬಾವಿ, ಮನೆಯ ಮಡಕೆ

ತನುಘಾತಕಕ್ಕಾದಶೀಲವೆಂದು ನಾನರಿಯೆ .

ತಾ ಹೋದಲ್ಲಿ ಇದಿರ ಕೇಳುವಲ್ಲಿ


೧೫೦ ಶಿವಶರಣೆಯರ ವಚನಸಂಪುಟ

ಆಯತ ಸ್ವಾಯತ ಸನ್ನಹಿತನೆಂಬುದ ವಿಚಾರಿಸಿ,

ಅಹುದಲ್ಲವೆಂಬುದ ಮನಕ್ಕೆ ಕುರುಹಿಟ್ಟು ,

ನೇಮಕ್ಕೆ ಬಂದುದ ವ್ರತಕ್ಕೆ ಸಂದುದ ಸಂದೇಹವುಳ್ಳನ್ನಕ್ಕ ವಿಚಾರಿಸಿ,

ಸಂದೇಹ ನಿಂದಲ್ಲಿ ತನ್ನ ಆಯತದ ಅನುವನರಿತು ಕೊಂಬುದು ಪ್ರಸಾದವು.

ಇಂತೀ ತನುವಿಚಾರ ಕ್ರೀವಿಚಾರ;

ಇಂತೀ ಭಾವಶುದ್ಧಾತ್ಮವಾದಲ್ಲಿ ವ್ರತ ಸಂದಿತ್ತು .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಶೀಲವಂತನಾದ. || ೨ ||

೪೮೭

ಜಾಗ್ರದಲ್ಲಿ ಮಾಡುವ ಹಾಹೆಯ ಗುಣಂಗಳು ಸ್ವಪ್ನದಲ್ಲಿ ತೋರುವಂತೆ

ಬಂದ ಮಣಿಹವ ಕಂಡು ಮುಂದಕ್ಕೆ ಶುಭಸೂಚನೆಯನ್ನರಿಯಬೇಕು.

ಅರಿವನ್ನಕ್ಕ ವ್ರತ, ಮಾಟ ವಸ್ತು ; ವಸ್ತುವಿನಕೂಟನೆರಿಗೆಯಲ್ಲಿ ನೆರೆ ನ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ. || ೧೩ ||

೪೮೮

ಜಾಗ್ರದಲ್ಲಿ ಹೊಹಡೆ,

ಎನ್ನ ವ್ರತಕ್ಕೆ ಅರ್ಹರಾಗಿದ್ದವರಲ್ಲಿಗಲ್ಲದೆ ಹೋಗೆನು .

ಸ್ವಪ್ನದಲ್ಲಿ ಕಾಂಬಲ್ಲಿ ಎನ್ನ ಸಮಶೀಲವಂತರನಲ್ಲದೆ ಕಾಣೆನು.

ಸುಷುಪ್ತಿಯಲ್ಲಿ ತೊಳಗಿ ಬೆಳಗಿ ಆಡುವಾಗ ಎನ್ನ ನೇಮದಲ್ಲಿಯೆ ಅಡಗುವೆ.

ಈ ಸೀಮೆಯಲ್ಲಿ ತಪ್ಪಿದೆನಾದಡೆ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ತಪ್ಪುಕನಹೆನು. || ೪

೪೮೯

ತಂದೆಯ ಒಂದಾಗಿ ಬಂದ ಸಹೋದರ ಗಂಡೆಲ್ಲ ತಂದೆಯಾದ ಕಾರಣ ,

ಆ ತಂದೆಯ ಒಡಹುಟ್ಟಿದ ಹೆಣ್ಣೆಲ್ಲ ತನಗೆ ತಾಯಲ್ಲವೆ ?

ಆಕೆಯನತ್ತೆಯೆಂಬ ಜಗದ ತೆತ್ತುಮತರ ನಾವರಿಯೆವಯ್ಯಾ.

ಮತ್ತೆ, ತಾವು ಬಳಸುವುದಕ್ಕೆ ಗೊತ್ತಿಲ್ಲವೆಂದಾಕೆಯ ಮಗಳನು

ಸತಿಯನೆ ಮಾಡಿಕೊಳ್ಳಬಹುದೆ ?

ಹೆತ್ತತಾಯ ಮಗಳ ಮಗಳು ಒಡಹುಟ್ಟಿದವಳಲ್ಲವೆ ?

ಸೊಸೆ ಮಾವನೆಂದು ಸತಿಯಂ ಮಾಡಿಕೊಂಬರು ನೋಡಾ.

ಸೊಸೆಗೂ ಮಾವಂಗೂ ಸಂಸರ್ಗ ನಿಲ್ಲುವುದೆ ?

ಸತ್ಯಕ್ಕೆ ಸಮವಲ್ಲ , ಭಕ್ತಿಗೆ ಇದಿರಿಲ್ಲವೆಂದರಿದು ಮತ್ತೆ


೧೧
ಚಿಕ್ಕಮ್ಮನ ವಚನಗಳು

ಜಗದಲ್ಲಿ ಹೊತ್ತು ಹೋರಲೇಕೆ ?

ಇದು ಆಚಾರಕ್ಕೆ ನಿಶ್ಚಯ ,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ

ಕೊಳುಕೊಡೆಯೆಂಬ ಸೂತಕ ಸದಾಚಾರದಲ್ಲಿ ಅಡಗಿತ್ತು .

೪೯೦

ತನ್ನ ತಾ ಬಂದುದ ಸೋಂಕಿಲ್ಲದುದ ವಿಚಾರಿಸಿ,

ತನ್ನನುವಿಂಗೆ ಬಂದುದ ಕೈಕೊಂಬುದು,

ಬಾರದ ದ್ರವ್ಯಕ್ಕೆ ಭ್ರಮೆಯಿಲ್ಲದೆ ಚಿತ್ತದೋರದಿಪ್ಪುದು ಭರಿತಾರ್ಪಣ.

ಅರ್ಪಿತವ ಮುಟ್ಟಿ, ಅನರ್ಪಿತವ ಜಾಗ್ರ ಸ್ವಪ್ನದಲ್ಲಿ

ಮುಟ್ಟದಿಪ್ಪುದು ಭರಿತಾರ್ಪಣ.

ಲಿಂಗಕ್ಕೆ ಸಲ್ಲದುದ ಇರಿಸದೆ, ಸಲುವಷ್ಟನೆ ಅರ್ಪಿತವ ಮಾಡಿ ,

ಮುಂದಣ ಸಂದೇಹವ ಮರೆದು, ಹಿಂದಣ ಸೋಂಕನರಿದು,

ಉಭಯದ ಖಂಡಿತವ ಖಂಡಿಸಿ ನಿಂದುದು ಭರಿತಾರ್ಪಣ.

ಹೀಗಲ್ಲದೆ, ಭಾಷೆಗೂಳಿನ ಭಟರಂತೆ,

ಓಗರ ಮೇಲೋಗರದಾಸೆಗೆ ಲೇಸಿನ ದ್ರವ್ಯಕ್ಕೆ ಆಸೆ ಮಾಡಲಿಲ್ಲ .

ಬಂದುದ ಕೈಕೊಂಡು ಸಂದನಳಿದು ನಿಂದುದೆ ಭರಿತಾರ್ಪಣ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಕ್ರೀ ಭಾವದ ಭೇದ || ೫೬ | |

೪೯೧

ತನ್ನ ಸ್ವಕಾರ್ಯದಿಂದ ಮಾಡುವ

ಭಕ್ತನ ವ್ರತವೆ ವ್ರತ;

ಆತನಾಚಾರವೆ ಸತ್ಯ ;

ಆತಾಶ್ರಯದಶೇಷವೆ ಸಂಜೀವನಪ್ರಸಾದ.

ಆತನ ರೂಪ ಆಚಾರವೆ ಪ್ರಾಣವಾದ

ರಾಮೇಶ್ವರಲಿಂಗದ ನಷ್ಟ ರೂಪು. || ೭ ||

೪೯೨

ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲದೆ,

ತನ್ನಾಚಾರಕ್ಕೆ ಹೊರಗಾದವರ ಅಣ್ಣತಮ್ಮನೆಂದು

ತಾಯಿತಂದೆ ಎಂದು, ಹೊನ್ನು ಮಣ್ಣು ಹೆಣ್ಣಿನವರೆಂದು

ಅಂಗೀಕರಿಸಿದಡೆ, ಅವರಂಗಣವಕೂಡಿದಡೆ,
೧೫೨
ಶಿವಶರಣೆಯರ ವಚನಸಂಪುಟ

ಅವರೊಂದಾಗಿ ನುಡಿದಡೆ, ಭಕ್ತರು ಸತ್ಯರಿಗೆ ಮುನ್ನವೆ ಹೊರಗು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರನೊಳಗಿಟ್ಟುಕೊಳ್ಳ, || ೫

೪೯೩

ತನುವಿಂಗೆ ಕ್ರೀ , ಆತ್ಮಂಗೆ ವ್ರತ.

ಆ ವ್ರತಕ್ಕೆ ನಿಶ್ಚಯ ಕರಿಗೊಂಡು

ಬಾಹ್ಯದ ಕ್ರೀ , ಅರಿವಿನ ಆಚರಣೆ,

ಭಾಷೆ ಓಸರಿಸದೆ ನಿಂದಾತನೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. . || ೧೯ ||

೪೯೪

ತನುವ್ರತ ಮನವ್ರತ ಮಹಾಜ್ಞಾನವ್ರತ

ತ್ರಿಕರಣದಲ್ಲಿ ಶುದ್ಧವಾಗಿಯಲ್ಲದೆ ಕ್ರೀ ಶುದ್ಧವಿಲ್ಲ .

ಕ್ರೀ ಶುದ್ಧವಾಗಿಯಲ್ಲದೆ ತನು ಶುದ್ಧವಿಲ್ಲ .

ತನು ಶುದ್ಧವಾಗಿಯಲ್ಲದೆ ಮನ ಶುದ್ಧವಿಲ್ಲ .

ಮನ ಶುದ್ಧವಾಗಿಯಲ್ಲದೆ ಜ್ಞಾನ ಶುದ್ಧವಿಲ್ಲ .

ಜ್ಞಾನ ಶುದ್ಧವಾಗಿ ನಿಂದು ಮಾಡಿಕೊಂಡ ನೇಮ ತಪ್ಪದೆ,

ಶರಣರಿಗೆ ದೂರಿಲ್ಲದೆ, ಮನಕ್ಕೆ ಮರವೆ ಇಲ್ಲದೆ,

ಮಹಾಜ್ಞಾನವೆ ವ್ರತ ನೇಮ ಲಿಂಗವಾಗಿ,

ಶ್ರುತ ದೃಷ್ಟ ಅನುಮಾನಕ್ಕೆ ಅಗೋಚರವಾಗಿ ನಿಂದ

ಶೀಲವಂತನಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಅಂಗ. || ೬೦ ||

ರ್೪

ತನುಶೀಲವಂತರುಂಟು, ಧನಶೀಲವಂತರುಂಟು,

ಧರೆಶೀಲವಂತರುಂಟು, ಕನಕ ವನಿತೆಶೀಲವಂತರುಂಟು.

ಕೆಯಿ ತೋಟಹಿಂದೆ ಮುಂದೆಸೆ ನಿಳಯಶೀಲವಂತರುಂಟು.

ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ

ರಸದ್ರವ್ಯ ಪಶು ಪಾಷಾಣ ವಸ್ತ್ರ ಪರಿಮಳ

ಛತ್ರ ಚಾಮರ ಅಂದಳ ಕರಿ ತುರಗಂಗಳು

ಮುಂತಾದವೆಲ್ಲಕ್ಕೂ ಶೀಲವಂತರುಂಟು.

ಅನುಸರಣೆಯ ಕಂಡಲ್ಲಿ , ಆಚಾರ ತಪ್ಪಿದಲ್ಲಿ , ಲಿಂಗ ಬಾಹ್ಯವಾದಲ್ಲಿ ,

ಆಗವೆ ಅಂಗವ ಬಿಟ್ಟು ಲಿಂಗದೊಡಗೂಡುವ ಶೀಲವಂತರಂಗವ ಕಾಣೆ


೧೫೩
ಅಕ್ಕಮ್ಮನ ವಚನಗಳು

ಎನ್ನ ಕ್ರೀ ಭಂಗವಹುದಕ್ಕೆ ಮುನ್ನವೆ ನಿರಂಗವ ಹೇಳಾ,


|| ೬೧ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ .

| E

ತಮ್ಮ ಆಯತದ ಉಪ್ಪೆಂದು ಬಳಸುವನ್ನಕ್ಕ

ತಾವು ತಂದು ಮಾಡಿಕೊಂಬ ಮೃತ್ತಿಕೆಯ ಸಾರವೆ ಲೇಸು.

ಅದೆಂತೆಂದಡೆ:

ಮಹಾ ಅಂಬುಧಿಗಳಲ್ಲಿ

ತಾಕು - ಸೋಂಕು, ತಟ್ಟು - ಮುಟ್ಟು ಬಹವಾದ ಕಾರಣ.

ಇಂತೀ ಇವ ತಾನರಿದ ಮತ್ತೆ ಆಯತವೆಂಬುದೇನು ?

ತನ್ನ ಕಾಯ ಮನ ಅರಿದು ಮಾಡಿಕೊಂಬುದೆ ವ್ರತ.

ಇಂತಿವನರಿಯದೆ ಬಳಸುವ ಬಳಕೆಗಳೆಲ್ಲವುಸೌಕರಿಯವಲ್ಲದೆ

ವ್ರತಕ್ಕೆ ಸಲ್ಲ ; ಆಚಾರವಲ್ಲ .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಇದೆ ಆಣತಿ. || ೬೨ ||

೪೯೭

ತಾ ಮಾಡುವ ಕೃಷಿಯ ಮಾಡುವನ್ನ ಬರ ಮಾಡಿ,

ಕೃಷಿ ತೀರಿದ ಮತ್ತೆ ಗುರುದರ್ಶನ ಲಿಂಗಪೂಜೆ ಜಂಗಮಸೇವೆ

ಶಿವಭಕ್ತರ ಸುಖಸಂಭಾಷಣೆ ಶರಣರ ಸಂಗ

ಈ ನೇಮವನರಿವುತಿಪ್ಪುದು ಸದ್ಭಕ್ತನ ಸದಾತ್ಮನ ಯುಕ್ತಿ .

ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ

ಆತನೆ ಚೇತನಭಾವ. || ೬೩ ||

೪೯೮

ತಾ ಮುಳುಗಿದ ಮತ್ತೆ ಸಮುದ್ರದ ಪ್ರಮಾಣ ತನಗೇನು ?

ತಾನೊಂದು ಶಸ್ತ್ರದಲ್ಲಿ ಸಲೆ ಸಂದ ಮತ್ತೆ

ತನ್ನಂಗವ ಹಲವು ಶಸ್ತ್ರ ಬಂಧಿಸಿದಡೇನು ?

ತಾ ನಿಂದ ನಿರಿಗೆಯಲ್ಲಿ ಸಂದ ಮತ್ತೆ

ಸಂದಣಿಗಾರರ ಬಂಧದ ಮಾತೇತಕ್ಕೆ ?

ಇದು ವ್ರತಾಚಾರದ ನಿಂದ ನಿರಿಗೆ, ಸಲೆ ಸಂದ ನೇಮ .

ಕಟ್ಟಾಚಾರಿಯ ದೃಷ್ಟನಿಷ್ಠೆ .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗೆ ಕಟ್ಟಿದ ತೊಡರು. || ೬೪ ||


೧೫೪
ಶಿವಶರಣೆಯರ ವಚನಸಂಪುಟ

೪೯೯ರಂದು

ತಾ ವತಿಯಾಗಿದ್ದಲ್ಲಿ ತನ್ನ ಸೀಮೆ ಒಳಗಾಗಿ,

ಕಟಕ ಪಾರದ್ವಾರ ಹುಸಿ ಕೊಲೆ ಕಳವು ಅನ್ಯಾಹಾರ ಮುಂತಾದ

ನಿಂದಕ ದುರ್ಜನ ಭವಿಸಂಗ ಉಳ್ಳವರ

ತಂದೆತಾಯಿಯೆಂದು ಹೆಂಡಿರುಮಕ್ಕಳೆಂದು ಬಂಧುಬಳಗವೆಂದು

ಅವರನು ಅಂಗಳದಲ್ಲಿ ಕೂಡಿಕೊಂಡಡೆ, ಅವರ ತಂದು ಕೊಳನಿಕ್ಕಿದಡೆ,

ತಿಂಗಳು ಸತ್ತ ನಾಯಮಾಂಸವ ತಂದು ತಿಂದ ದೋಷತಪ್ಪದು.

ಇದಕ್ಕೆ ಹಿಂದೆ ನೆನೆಯಲಿಲ್ಲ , ಮುಂದೆನೋಡಲಿಲ್ಲ .

ಈ ತಪ್ಪು ಹೊತ್ತಲ್ಲಿಯೆ ಅಂದಿಗೆ ನೂರು ತುಂಬಿತ್ತೆಂದು ಅಂಗವ

ಅಂಗವ ಬಿಡದ ಭಂಡರ ಕಂಡಡೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗನೊಪ್ಪ. . || ೬೫ ||

೫೦೦

ತಾ ಪ್ರತಿಯಾಗಿ ಮಕ್ಕಳೆಂದು ಮಾಡದಿರ್ದಡೆ ಆ ವ್ರತಕ್ಕೆ ತಾನೆ ಹೊರ

\ ತನ್ನಂಗ ಮನ ಭಾವ ಕರಣಂಗಳಲ್ಲಿ ಸಂಗದಲ್ಲಿ ಇದ್ದವರಿಗೆಲ್ಲಕ್ಕೂ

ತನ್ನಂಗದ ವ್ರತವ ಮಾಡಬೇಕು.

ಇದು ಸೀಮೆವಂತರಯುಕ್ತಿ ,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಚಾರದ ಸೊತ್ತು. ||

೫೦೧

ತುಷವ ಕಳೆದ ತಂಡುಲವನಡಬೇಕು.

ಸಿಪ್ಪೆಯ ಕಳೆದ ಹಣ್ಣ ಮೆಲಬೇಕು.

ಕ್ರೀಯನರಿತು ಆಚಾರವನರಿಯಬೇಕು.

ಆಚಾರವನರಿತು ವ್ರತಕ್ಕೆ ಓಸರಿಸದಿರಬೇಕು.

ಮನ ವಸ್ತುವಾಗಿ, ವಸ್ತು ತಾನಾಗಿ, ಉಭಯ ಭಿನ್ನಭಾವವಿಲ್ಲದೆ

ನಿಂದವಂಗೆ ಸಹಭೋಜನದಂಗ.

ಶೋಕ, ರೋಗ, ಜನನಮರಣಾದಿಗಳಲ್ಲಿರುವ

ಆಕರಣೆಗೊಳಗಾಗುತ್ತ

ಆರು ಸಹಭೋಜನಕ್ಕೆ ಘಾತಕತನವಲ್ಲವೆ ?

ಇಂತೀ ಜಗದ ವರ್ತಕರು ಮೆಚ್ಚಬೇಕೆಂಬ ಕೃತ್ಯವ

ಸದ್ಭಕ್ತರುನೀವೆ ಬಲ್ಲಿರಿ.
೧೯.
ಅಕ್ಕಮ್ಮನ ವಚನಗಳು

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ


|| ೬೭ ||
ಈ ಭಾವವ ನೀನೆ ಬಲ್ಲೆ .

೫೦೨

ತೋಡಿದ ಬಾವಿ , ಬಳಸುವ ಭಾಜನಕ್ಕೆ ಮರೆಯಲ್ಲದೆ,

ಹರಿದಾಡುವ ಚಿತ್ರಕ್ಕೆ , ಸರ್ವವಕೂಡುವ ಪ್ರಕೃತಿಗೆ,

ಗೆಲ್ಲ ಸೋಲಕ್ಕೆ , ಅಲ್ಲ ಅಹುದೆಂಬುದಕ್ಕೆ ಎಲ್ಲಿಯೂ ಮರೆಯ ಕಾಣೆ .

ಬಹುಮಾತನಾಡುವ ಬಾಯಿ ಸರ್ವರ ಕೂಡಿ

ಬೆರೆದೆನೆಂಬಂಗಕ್ಕೆ ಮರೆಯ ಕಾಣೆ.

ಕಳ್ಳನ ಜಾಳಿಗೆಯಂತೆ ಒಳ್ಳೆಯ ಮುದ್ರೆಯನಿಕ್ಕಿದಡೆ

ಸುರಿದಲ್ಲಿಯೆ ಕಾಣಬಂದಿತ್ತು .

ಕಲ್ಲಿಯ ಬಳಸಿನ ನೂಲಿನಂತೆ ಚಲ್ಲಿ ಸಿಕ್ಕಿನಲ್ಲಿ ತುಯಿದಡೆ

ಆ ಕಳ್ಳರ ಬಲ್ಲವರಿಗೆ ಎಲ್ಲಿಯ ವ್ರತ ?

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು

ಅವರುವ ಬಲ್ಲನಾಗಿ ಒಲ್ಲನು. || ೬೮ ||

- ೫೦೩

ದಾಸಿ ವೇಶಿ ಪರನಾರಿಸಹೋದರನಾಗಿರಬೇಕು.

ವೃತಹಸ್ತಂಗೆ, ಸದ್ಭಕ್ತಂಗೆ, ಸತ್ಪುರುಷಂಗೆ ವ್ರತಕ್ಕೆ ತಪ್ಪದೆ

ನೇಮಕ್ಕೆ ನಿತ್ಯವಾಗಿ ಭಾವಭ್ರಮೆಯಳಿದಿರಬೇಕು,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ ,

ದುಷ್ಟರಿಗಂಜಿ ಕಟ್ಟಿಕೊಳ್ಳಬಹುದೆ ಕಡ್ಡಾಯದ ವ್ರತವ ?

ಆ ವ್ರತದ ವಿಚಾರವೆಂತೆಂದಡೆ:

ಅಲಗಿನತುಪ್ಪದಸವಿಗೆ ಲಲ್ಲೆಯಿಂದ ನೆಕ್ಕಿದಡೆ

ಅಲಗಿನಧಾರೆ ನಾಲಗೆಯ ತಾಗಿ, ಆ ಜೀವ ಹಲುಬುವ ತೆರದಂತೆ.

ಒಲವರವಿಲ್ಲದ ಭಕ್ತಿ , ಛಲವಿಲ್ಲದನಿಷ್ಟೆ ,

ಎಲವದಮರನಕಾಯ್ದ ವಿಹಂಗನಂತೆ,

ಇಂತೀ ಸಲೆನೆಲೆಯನರಿಯದವನ ವ್ರತಾಚಾರ

ಕೊಲೆಹೊಲೆಸೂತಕಕೊಡಲಾಯಿತ್ತು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಹೊರಗಾದ ನೇಮ . || ೭೦ ||


೧೫೬
ಶಿವಶರಣೆಯರ ವಚನಸಂಪುಟ

೫೦೫

ದೇವರಿಗೆಂದು ಬಂದ ದ್ರವ್ಯ ಮತ್ತೆ ಸಂದೇಹವಾಯಿತ್ತೆಂದು

ಹಾಕೆಂದಾಗವೆ ಘನಲಿಂಗಕ್ಕೆ ದೂರ.

ಬೇಹುದಕ್ಕೆ ಮೊದಲೆ ಸಂದೇಹವನಳಿದು ತರಬೇಕಲ್ಲದೆ

ಉಂಡುಊಟವ ಹಳಿಯಲುಂಟೆ ?

ತಂದುಕೊಟ್ಟು ಕುಲವನರಸಲುಂಟೆ ?

ಇಂತಿವರು ತಮ್ಮಂಗವ್ರತವನರಿಯದೆ

ಇದಿರವ್ರತದಂಗ ತಪ್ಪಿತೆಂದು ಕೊಂಡಾಡುವರ ಕಂಡು

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು

ಅವರು ಕಂಡಹರೆಂದು ಅಂಜುತ್ತಿದ್ದನು. || ೭೦ ||

೫೦೬

ದೃಷ್ಟದಲ್ಲಿ ಆಗಾಗ ಅರ್ಪಿಸಿಕೊಂಡಿಹೆನೆಂಬುದು ನಿನ್ನ ಚಿತ್ತದ ಕಲೆಯ

ವಸ್ತುವಿಗೆ ನೀ ತೃಪ್ತಿಯ ಮಾಡಿಹೆನೆಂಬ ನಿಶ್ಚಯವೊ ?

ಆ ವಸ್ತು ವಿಷದಬುಡದಂತೆ, ಅಮೃತದಗಟ್ಟಿಯಂತೆ.

ನಿನ್ನ ಸರ್ವಾಂಗದಲ್ಲಿ ಛೇದಿಸಿದ ಲಿಂಗಕ್ಕೆ

ಸಹಭೋಜನದ ಭಾವವ ನಿನ್ನ ನೀನೆ ತಿಳಿ,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ . || ೭೨ ||

೫೦೭

ಧನಶೀಲ ಮನಶೀಲ ತನುಶೀಲ ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವ

ಇಂತೀ ವ್ರತಸಂಪದವೆಲ್ಲವುಅದಾರ ಕುರಿತು ಮಾಡುವ ನೇಮ

ಎಂಬುದ ತಾನರಿಯಬೇಕು.

ಗುರುವಿಂಗೆ ತನುವನರ್ಪಿಸಿ, ಲಿಂಗಕ್ಕೆ ಮನವನರ್ಪಿಸಿ,

ಜಂಗಮಕ್ಕೆ ಧನವನರ್ಪಿಸಿ, ತ್ರಿವಿಧಕ್ಕೆ ತ್ರಿವಿಧವ ಕೊಟ್ಟು,

ತನ್ನ ವ್ರತಕ್ಕೆ ಭಿನ್ನಭಾವವಿಲ್ಲದೆ ನಿಂದುದೆ ವ್ರತ.

ಹೀಗಲ್ಲದೆ, ಇದಿರ ಮಾತಿಂಗಂಜಿ

ಕೊಡುವ ಕೊಂಬುವರ ನಿಹಿತಕ್ಕಂಜಿ ನಡೆವನ ವ್ರತ

ಜಂಬುಕಶೀಲವಹಿಡಿದು ನಾಲಗೆಮುಟ್ಟದೆ ನುಂಗುವ ತೆರದಂತೆ

ಸರ್ವವ ತಾ ಮುಟ್ಟುವಲ್ಲಿ ಜಂಗಮಮುಟ್ಟದೆ ತಾ ಮುಟ್ಟಿದನಾದಡೆ

ಸಜ್ಜನ ಕೆಟ್ಟುನಡೆದಂತೆ.

ಬಾಯಿಯಿದ್ದು ಬಯ್ಯಲಾರೆ , ಕಮ್ಮಿದ್ದು ಪೊಯ್ಯಲಾರೆ ,


೧೫೭
ಅಕ್ಕಮ್ಮನ ವಚನಗಳು

ಕಾಂಬುದಕ್ಕೆ ಮೊದಲೆ ಕಣ್ಣ ಮುಚ್ಚುವೆನು. ಈ ಗುಣ ತಪ್ಪದು ನಿಮ್ಮಾಣೆ


|| ೭೩ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ.

- ೫೦೮

ಧೂಳುಪಾವಡ ಕಂಠಪಾವಡ ಸರ್ವಾಂಗಪಾವಡ

ಇಂತೀ ತ್ರಿವಿಧಶೀಲವ ನಡೆಸುವಲ್ಲಿ ಆ ಭೇದವನರಿತು,

ಕಡೆ ನಡು ಮೊದಲು ಮೂರುವ್ರತಕೂಡುವಲ್ಲಿ

ವ್ರತದ ಬಿಡುಮುಡಿಯನರಿಯಬೇಕು.

ಮನ ವಚನ ಕಾಯ ಈ ಮೂರರ ತೆರನ ಅರಿಯಬೇಕು.

ಹೆಣ್ಣು ಹೊನ್ನು ಮಣ್ಣಿನಂಗವನರಿಯಬೇಕು.

ಅರ್ಪಿತ, ಅನರ್ಪಿತ, ತೃಪ್ತಿ - ಈ ಮೂರರ ಚಿತ್ರವನರಿಯಬೇಕು.

ಮರ್ಕಟ ವಿಹಂಗ ಪಿಪಿಲಿಕ - ಈ ಮೂರು ಮುಟ್ಟುವ ಭೇದವನರಿಯಬೇಕು

ಇಂತೀ ಇವು ಆವಶೀಲವಾದಡೂ ಭಾವಶುದ್ಧವಾಗಿರಬೇಕು,


|| ೭೪ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ .

೫೦೯

ಧೂಳುಪಾವಡವಾದಲ್ಲಿ ಆವ ನೀರನ್ನು ಹಾಯಬಹುದು.

ಕಂಠಪಾವಡದಲ್ಲಿ ಉರದಿಂದ ಮೀರಿ ಹಾಯಲಾಗದು .

ಸರ್ವಾಂಗಪಾವಡದಲ್ಲಿ ಹೊಳೆ ತಟಾಕ ಮಿಕ್ಕಾದ

ಬಹುಜಲಂಗಳ ಮೆಟ್ಟಲಾಗದು .

ಅದೆಂತೆಂದಡೆ :

ಆ ಲಿಂಗವೆಲ್ಲವುವ್ರತಾಚಾರಲಿಂಗವಾದಕಾರಣ.

ತಮ್ಮ ಲಿಂಗದ ಮಜ್ಜನದ ಅಗ್ಗಣಿಯಲ್ಲದೆ

ತಮ್ಮಂಗವ ಮುಟ್ಟಲಾಗದು.

ಇಂತೀ ಇವು ತಾವು ಕೊಂಡ ವ್ರತದಂಗದ ಭೇದವಲ್ಲದೆ

ನಾನೊಂದು ನುಡಿದುದಿಲ್ಲ .

ಇದಕ್ಕೆ ನಿಮ್ಮ ಭಾವನೆ ಸಾಕ್ಷಿ .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ವ್ರತದಂಗದ ಭೇದ || ೭೫ ||

೫೧೦

ನಚ್ಚುಮೆಚ್ಚಿನ ವ್ರತ, ನಿಷ್ಕಹೀನನ ಪೂಜೆ, ಭಕ್ತಿ ಇಲ್ಲದವನ ಮಾಟಕೂಟ

ಇಂತಿವುಸತ್ಯವಲ್ಲ .
೧೫೮
ಶಿವಶರಣೆಯರ ವಚನಸಂಪುಟ

ಆ ವ್ರತ ನೇಮ ನಿತ್ಯಂಗಳಲ್ಲಿ ಮನ ವಚನ ಕಾಯ ತ್ರಿಕರಣ ಶುದ್ಧವಾಗಿ,

ಬಾಹ್ಯಕ್ತಿಯಲ್ಲಿ ಅರಿವ ಆತ್ಮನಲ್ಲಿ ,

ಮಿಕ್ಕಾದ ಪದಾರ್ಥಗಳಲ್ಲಿ ಸದ್ಭಾವ ತಾನಾಗಿ,

ಅರಿವಿಂಗೂ ಆಚಾರಕ್ಕೂ ಎಡೆದೆರಪಿಲ್ಲದೆ

ಕ್ರೀಯೆ ವಸ್ತುವಾಗಿ, ವಸ್ತುವೆಕ್ರೀಯಾಗಿ, ಬಣ್ಣ ಬಂಗಾರದಂತೆ ನಿಂದಂಗವೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ. || ೭೬ ||

೫೧೧

ನಾನಾ ವ್ರತಗಳ ಪಿಡಿವುದೆಲ್ಲವು ಮನದ ಶಂಕೆ .

ಮನ ಹರಿದಾಡುವುದೆಲ್ಲವುತನುವಿನ ಶಂಕೆ .

ಮನ ತನು ಕೂಡಿ ನಡೆವುದೆಲ್ಲವು ಪ್ರಕೃತಿಯ ಶಂಕೆ .

ಮನ ತನು ಪ್ರಕೃತಿ ಮೂಲೊಂದಾದಲ್ಲಿ ಶೀಲವೆಂಬ ಪಾಶ

ಜೀವನ ಕೊರಳ ಸುತ್ತಿತ್ತು .

ಬಹಿರಂಗದ ವ್ರತ ಅಂತರಂಗದ ಅರಿವುಉಭಯವುಕಟ್ಟುವಡೆದಲ್ಲಿ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆಂಬ ಗೊತ್ತಾಯಿತ್ತು


|| ೭೭ || .

೧೨

ನಾನಾ ವ್ರತದ ಭಾವಂಗಳುಂಟು.

ಲಕ್ಷಕ್ಕೆ ಇಕ್ಕಿಹೆನೆಂಬ ಕೃತ್ಯದವರುಂಟು.

ಬಂದಡೆ ಮುಯ್ಯಾಂತು ಬಾರದಿದ್ದಡೆ ಭಕ್ತರು ಜಂಗಮವ

ಆರನೂ ಕರೆಯೆನೆಂಬ ಕಟ್ಟಳೆಯವರುಂಟು.

ತಮ್ಮ ಕೃತ್ಯವಲ್ಲದೆ ಮತ್ತೆ ಬಂದಡೆ ಕತ್ತಿಹಿಡಿದು ನೂಕುವರುಂಟು.

ಗುರುಲಿಂಗಜಂಗಮದಲ್ಲಿ ತಪ್ಪಕಂಡಡೆ ಒಪ್ಪುವರುಂಟು.

ಮೀರಿ ತಪ್ಪಿದಡೆ ಅರೆಯಟ್ಟಿ ಅಪ್ಪಳಿಸುವರುಂಟು.


A
ಇಂತೀ ಶೀಲವೆಲ್ಲವುನಾವು ಮಾಡಿಕೊಂಡ ಕೃತ್ಯದ ಭಾವಕೃತ್ಯ .
Repe
ತಪ್ಪಿದಲ್ಲಿ ದೃಷ್ಟವ ಕಂಡು ಶರಣರೆಲ್ಲರುಕೂಡಿತಪ್ಪ ಹೊರಿಸಿದ ಮತ್ತೆ

ಆ ವ್ರತವನೊಪ್ಪಬಹುದೆ ?

ಕೊಪ್ಪರಿಗೆಯಲ್ಲಿ ನೀರ ಹೊಯಿದು ಅಪೇಯವ ಅಪ್ಪುವಿನಲ್ಲಿ ಕದಡಿ

ಅಶುದ್ಧ ಒಪ್ಪವಿಲ್ಲವೆಂದು ಮತ್ತೆ ಕುಡಿಯಬಹುದೆ ?

ತಪ್ಪದ ನೇಮವನೊಪ್ಪಿ ತಪ್ಪ ಕಂಡಲ್ಲಿ ಬಿಟ್ಟು

ಇಂತೀ ಉಭಯಕ್ಕೆ ತಪ್ಪದ ಗುರು ವ್ರತಾಚಾರಕ್ಕೆ ಕರ್ತನಾಗಿರಬೇಕು.

ಇಂತೀ ಕಷ್ಟವ ಕಂಡು ದ್ರವ್ಯದಾಸೆಗೆ ಒಪ್ಪಿದನಾದಡೆ


೧೫೯
ಅಕ್ಕಮ್ಮನ ವಚನಗಳು

ಅವನೂಟ ಸತ್ಯನಾಯಮಾಂಸ.

ನಾ ತಪ್ಪಿ ನುಡಿದೆನಾದಡೆ ಎನಗೆ ಎಕ್ಕಲನರಕ.

ನಾ ಕತ್ತಲೆಯೊಳಗಿದ್ದು ಅಂಜಿ ಇತ್ತ ಬಾ ಎಂಬವನಲ್ಲ .

ವ್ರತ ತಪ್ಪಿದವರಿಗೆ ನಾ ಕಟ್ಟಿದ ತೊಡರು.

ಎನ್ನ ಪಿಡಿದಡೆ ಕಾದುವೆ, ಕೇಳಿದಡೆ ಪೇಳುವೆ.

ಎನ್ನಾಶ್ರಯದ ಮಕ್ಷಿಕ ಮೂಷಕ ಮಾರ್ಜಾಲ ಗೋ ಮುಂತಾದ

ದೃಷ್ಟದಲ್ಲಿ ಕಾಂಬ ಚೇತನಕ್ಕೆಲ್ಲಕ್ಕೂ ಎನ್ನ ವ್ರತದ ಕಟ್ಟು .

ಇದಕ್ಕೆ ತಪ್ಪಿದೆನಾದಡೆ ನಿಮ್ಮಾಣೆನಿಮ್ಮ ಪ್ರಮಥರಾಣೆ.

| ೭೮ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎಚ್ಚತ್ತು ಬದುಕು.

- ೫೧೩

ನಾನಾ ವ್ರತನೇಮ ಭೇದಂಗಳಲ್ಲಿ ಅರುವತ್ತುನಾಲ್ಕು ವ್ರತ, ಐವತ್ತಾರು ಶೀಲ

ಮೂವತ್ತೆರಡು ನೇಮ , ನಿತ್ಯಕೃತ್ಯ ಲೆಕ್ಕಕ್ಕವಧಿಯಿಲ್ಲ , ಅಗೋಚರ.

3 ಆಚಾರವಾರಿಗೂ ಅಪ್ರಮಾಣ, ನೀತಿಯ ಮಾತಿಂಗೆ ಆಚಾರ,

ಶಿವಾಚಾರವೆ ಸರ್ವಮಯಲಿಂಗ, ಪಂಚಾಚಾರಶುದ್ದಭರಿತ,

ರಾಮೇಶ್ವರಲಿಂಗಕ್ಕೆ ಪ್ರಾಣವಾಗಿರಬೇಕು. || ೭೯ ||

೫೧೪

ನಿತ್ಯ ಚಿಲುಮೆಯ ಕೃತ್ಯಗಳಾದಲ್ಲಿ

ತೃಣ ಕಾಷ್ಠ ವಿದಳ ಮೊದಲಾದ ಸಂಗ್ರಹಂಗಳಲ್ಲಿ

ಸಂದೇಹ ಮಾತ್ರವಿಲ್ಲದೆ

ಮನ ನಂಬುವನ್ನಬರ ಸೋದಿಸಬೇಕು.

ಅದು ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗಕ್ಕರ್ಪಿತ


|| ೮೦ ||

೫೧೫

ನಿತ್ಯ ಚಿಲುಮೆಯ ಕೃತ್ಯವೆಂದು ಮಾಡುವಲ್ಲಿ ,

ಮಳಲಿನ ಮರೆಯ ನೀರ ಬಳಸದೆ,

ಸಲೆ ಪೃಥ್ವಿಯಲ್ಲಿ ನೆಲೆ ಚಿಲುಮೆಯಂಕಂಡು

ದಿನಕೃತ್ಯ ತಪ್ಪದೆ ನೇಮ ಸಲುವಂತೆ ಕಾಷ್ಠವಂತೊಳೆದು

ಜೀವಜಂತುಗಳನೋಡಿ, ಉಂಡೆ ಮರನ ಒಡೆಯದೆ,

ಜೀರ್ಣವಾದ ಕಾಷ್ಠಮಂ ಒಲೆಗಿಕ್ಕದೆ


೧೬೦
ಶಿವಶರಣೆಯರ ವಚನಸಂಪುಟ

ತುಳಿಯದ ಧಾನ್ಯವಂಶೋಧಿಸಿ,

ಲತೆ ಪರ್ಣ ಮೊದಲಾದ ಪಚ್ಚೆ ಪೈರು ಗೆಣಸು ವಿದಳ ಹುಡುಕಂ ಮುಟ್ಟದೆ,

ಲಿಂಗಾವಧಾನದಲ್ಲಿ ಸ್ವಯಂ ಪಾಕವಂ ಮಾಡಿ

ಸ್ವಾನುಭಾವದಿಂದ ಲಿಂಗಾರ್ಚನೆಯ ಮಾಡಿ

ಬೇಡದೆ ಕಾಡದೆ ಸ್ವ ಇಚ್ಛಾಪರನಾಗಿ ಆರೈದು ನಡೆವಲ್ಲಿ ,

ನೀರು ನೆಲ ಬಹುಜನಗ್ರಾಮ ಗಣಸಮೂಹಸಂಪದಸಮಯಕ್ಕೆ ಸಿಕ್ಕದೆ

ತ್ರಿವಿಧಕ್ಕೊಳಗಲ್ಲದೆ,

ಇಂತೀ ನೇಮವೆ ತಾನಾಗಿ, ತಾನೆ ನೇಮವಾಗಿ,

ಉಭಯಕ್ಕೆ ತೆರಪಿಲ್ಲದೆ ನಿಂದುದು

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. || ೮೧ ||

೫೧೬

ನಿತ್ಯ ಚಿಲುಮೆಯ ನೇಮಕ್ಕೆ ಶಿವಭಕ್ತರಸೀಮೆಯಲ್ಲಿಯಲ್ಲದೆ ಇರಲಿಲ್ಲ .

ಶಿವಭಕ್ತರು ಮುಟ್ಟಿ ತಂದ ದ್ರವ್ಯವನಲ್ಲದೆ ಒಪ್ಪಲಿಲ್ಲ .

ಭೋಜನಕ್ಕೆ ತಮ್ಮಾಯತದ ಜಲ

ಲಿಂಗಮುದ್ರೆಯ ಸೀಮೆಯ ಮೃತ್ತಿಕೆ ಮರಕಲ್ಲು

ಮುಂತಾದ ಮತ್ತಾವಾವ ಗುಣಂಗಳೆಲ್ಲವುಲಿಂಗಧಾರಣ ಸೀಮೆಯಾಗಿ,

ಮತ್ತೆ ಆವಾವ ಗುಣಂಗಳಿಂದ ಮನವೆಟ್ಟುವನ್ನಬರ ಚಿತ್ರಸುಯಿಧಾನಿಯಾಗಿ,

ತನ್ನಾಯತದ ಕೈಯ ಧಾನ್ಯವ ಕುಟ್ಟುವಲ್ಲಿ ,

ಒರಳು ಒನಕೆಯ ಶಬ್ದವಂ ಭವಿಗಳು ಕೇಳದಂತೆ

ಸ್ವಯಂ ಪಾಕವ ಮಾಡುವಲ್ಲಿ , ಅಗ್ನಿಯಲ್ಲಿ ಕಾಷ್ಠದಲ್ಲಿ ಭೂಮಿಯಲ್ಲ

3 ಇಂಬಿಡುವಲ್ಲಿ ತೆಗೆವಲ್ಲಿ ಲಿಂಗಸುಯಿಧಾನಿಯಾಗಿ,


ವುತ
ಮಜ್ಜನ ದಂತಾವಳಿಗಳಲ್ಲಿ ಶುಚಿರ್ಭೂತನಾಗಿ,

ಜಂಗಮಲಿಂಗದ ಮುಂದಿಟ್ಟು ಅವರು ಸ್ವೀಕರಿಸುವನ್ನಕ್ಕ ನೇತ್ರತುಂಬಿ ನ

ಅವರ ಕಾರುಣ್ಯವ ಪಡೆದು ಇಪ್ಪುದು ಸದ್ಭಕ್ತನ ವ್ರತ;


|| ೮೨ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ .

೫೧೭

ನಿರ್ಧನಿಕರು ನಡೆನುಡಿಗಳಿಂದ ತಾಕು- ಸೋಂಕು ಬರಲಾಗಿ

ಒಳಹೊರಗು ಎಂಬ ಸಂದೇಹಕ್ಕೆ ಈಡನಿಕ್ಕಿ ,

ಕಂಡಡೆ ನುಡಿಯದೆ ಬಂದಡೆ ಕರೆಯದೆ ಇಪ್ಪವರ ನೋಡಾ!

ಧನಪತಿ- ಶ್ರುತ ದೃಷ್ಟದಲ್ಲಿ ಕೆಡೆನುಡಿದು ಅಂಗಳ ಬಾಗಿಲಲ್ಲಿ ತಳ್ಳಿದಡೆ


ಅಕ್ಕಮ್ಮನ ವಚನಗಳು

ಇಲ್ಲಿಯೆ ಲೇಸೆಂದು ಕುಳ್ಳಿರುವರ ಕಂಡು ನಾಚಿತ್ತಯ್ಯಾ ಎನ್ನ ಮನ.

ಆಚಾರಕ್ಕೆ ಅರಸುಂಟೆ ?

ಇಂತೀ ಶೀಲವಂತರೆಲ್ಲರು ಮಹಾಲಕ್ಷ್ಮಿಯ ಮನೆಯ ಎತ್ತಾಗಿ ಉತ್ತು,

ತೊತ್ತಾಗಿ ಕೊಬ್ಬಿ , ಕತ್ತೆಯಾಗಿ ಹೊತ್ತು ಸಾವರೆಲ್ಲರುಸಕ್ಕರೆ ?

ಆಚಾರಕ್ಕೆ ಅರಸಾದಡು ಆಕಾಶವನೋಡುವುದಕ್ಕೂ ನೂಕು ತಾಕೆ ?

ಕಂಡ ಮತ್ತೆ ಒಳಗಿಟ್ಟುಕೊಳ್ಳಬಹುದೆ ?

ಇದು ಕಾರಣದಲ್ಲಿ

ಭಕ್ತಿ ಎನಗೆ ಸ್ವಪ್ನವಾಯಿತ್ತು ಸತ್ಯವೆಂಬುದು ಬೆಚ್ಚಿ ಓಡುತ್ತಿದೆ.

ಎನಗಿನ್ನು ಮುಕ್ತಿಯಾವುದು ?

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ


ಎನಗೊಂದು ಗೊತ್ತ ತೋರಾ. || ೮೩ ||

೧೮

ನೆರಹಿ ಮಾಡುವ ಮಾಟ ಅಘಹರನ ಮುಟ್ಟದು.

ಬೇಡಿ ಮಾಡುವ ಮಾಟ ಪುಣ್ಯವೃದ್ಧಿಗೆ ಸಲ್ಲದು.

ಕೃತ್ಯಕ್ಕೆ ಒಡೆಯರ ಕಟ್ಟಳೆಯಿಲ್ಲದೆ ಒಲ್ಲೆನೆಂದಡೆ

ಮನಮುಟ್ಟದಕಟ್ಟಳೆಯ ಗುತ್ತಿಗೆಯ ಹೋದವರುಂಟೆ ?

ನಿಶ್ಚಯವನರಿಯದಕೃತ್ಯವ ಮಾಡಿಕೊಂಡಂತೆ

ಮತ್ತೆ ಅದ ಬಿಟ್ಟು ಕೃತ್ಯವಿಲ್ಲದಿರೆ ಮತ್ತೊಂದುವ ಮುಟ್ಟಿದೆನಾದಡೆ

ಹೊಟ್ಟೆಯೊಳಗಣ ಸತ್ತಕತ್ತೆಯಮರಿಯ ನರಿಯು ತಿಂದು

ಮಿಕ್ಕುದ ನಾಯಿತಿಂದಡೆ, ಇದರಚ್ಚುಗಕ್ಕಂಜಿ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಗೊತ್ತಿಗೆ ಮರೆಯಾದ. || ೮

೫೧೯

ನೇಮವ ಮಾಡಿಕೊಂಡು ತನ್ನಯ ಸಂಸಾರದ ಕಾಮ್ಯಾರ್ಥಕ್ಕಾಗಿ

ಇದು ಹತ್ತು ಹದಿನೈದೆಂದು ಮೀರಿ ಬಂದಡೆ ಕೃತ್ಯವಿಲ್ಲ ಎಂದು

ಅವರಿಗಿಕ್ಕಿಹೆವೆಂದು ಭಕ್ತರ ಮನೆಯಲ್ಲಿ ಹೊಕ್ಕು ಹೊಕ್ಕು

ಬೇಡುವುದು ಭಕ್ತನ ಯುಕ್ತಿಯೆ ?

ಆರೊಡವೆಯ ಆರಿಗೆ ಬೇಡಿ ಮಾಡಿ

ತಾನು ದಾರಿಯಾದೆನೆಂಬ ಭೋಗಿಯ ನೋಡಾ?

ವೇಶಿಯ ಪುತ್ರ ಪೈತೃಕವ ಮಾಡಿದಲ್ಲಿ ಅದೇತರ ಊಟ ? ಅದೇತರ ಮಾಟ ?

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದನೇಮ. || ೮೫ ||


೧೬೨
ಶಿವಶರಣೆಯರ ವಚನಸಂಪುಟ

೫೨೦

ಪಂಚಾಚಾರವ ಧರಿಸಿದ ಶರೀರಕ್ಕೆ

ಅಷ್ಟೋತ್ತರಶತವ್ಯಾಧಿ ಬಂದಿತ್ತೆಂದು ಕಲ್ಪಿಸಬಹುದೆ ?

ಪಾದತೀರ್ಥ ಪ್ರಸಾದವೆಂದು ನೈಷ್ಠಿಕದಲ್ಲಿ ಕೊಂಬ ಜಿಜ್ಜೆ ,

ಔಷಧಿ ಕಷಾಯ ಕೊಂಡಡೆ ಪಂಚಾಚಾರಕ್ಕೆ ದೂರ;

ಪಾದೋದಕ ಪ್ರಸಾದವಿಲ್ಲ ಇಹಪರಕ್ಕೆ ಸಲ್ಲ .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಅವರನೊಲ್ಲ . || ೮೬ ||

ಪಂಚಾಚಾರ ಶುದ್ಧವಾದ ಸದ್ಭಕ್ತಂಗೆ, ಪಾದತೀರ್ಥಪ್ರಸಾದದಲ್ಲಿ ನಿ

ಆವ ವ್ರತನೇಮವ ನಡೆಸುವ ಸದೈವಂಗೆ ಆತನ ಸುಕಾಯಕದ ಇರವೆಂತೆಂದಡೆ :

ತಾ ದೃಷ್ಟದಲ್ಲಿ ಕಾಬ ಪ್ರಾಣಿಗಳಕೊಲ್ಲದೆ, ಕೊಲ್ಲುವುದಕ್ಕೆ ಒಡಂ

ತಾ ಮಾಡುವ ಕಾಯಕದಲ್ಲಿ ಅಧಮ ವಿಶೇಷವೆಂಬುದನರಿತು,

ನಡೆನುಡಿ ಸಿದ್ದಾಂತವಾಗಿ ಲಿಂಗವ ಒಡಗೂಡಿಪ್ಪ ಕಾಯಕದಿರವೆಂತೆಂದಡ

ನಿರತವಾಗಿ ಆ ಮುಖದಿಂದ ಬಂದ ದ್ರವ್ಯದ ಗುರುಲಿಂಗಜಂಗಮದ ಮುಂದಿ

ಆ ಪ್ರಸಾದಮಂ ಕೊಂಡ ಸದ್ಭಕ್ತನ ಪ್ರಸಾದವ ಕೊಂಡ

ಗುರುವಿಂಗೆ ಇಹಸುಖ , ಲಿಂಗಕ್ಕೆ ಪರಸುಖ , ಜಂಗಮಕ್ಕೆ ಪರಮಸುಖ .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಆ ಪ್ರಸಾದವೆ ಪರಮಪದ. || ೮೭

ಪಂಚಾಚಾರಶುದ್ದವಾಗಿ ಇರಬೇಕೆಂಬರಲ್ಲದೆ,

ಪಂಚಾಚಾರದ ವಿವರವನರಿಯರು ನೋಡಾ!

ತಮ್ಮ ಸ್ವಯಾಯತವೆಂಬುದನರಿಯದೆ ಉಂಡಲ್ಲಿ ,

ತಮ್ಮ ಲಿಂಗಕ್ಕೆ ಅಲ್ಲದುದ ವಾಸಿಸಿದಲ್ಲಿ ,

ತಮ್ಮ ವ್ರತಾಚಾರಕ್ಕೆ ಸಲ್ಲದುದ ನಿರೀಕ್ಷಿಸಿದಲ್ಲಿ ,

ತಮ್ಮಾಯತಕ್ಕೊಳಗಲ್ಲದ ಕುಶಬ್ದವಕೇಳಿ ಒಪ್ಪಿದಲ್ಲಿ ,

ತಮ್ಮ ಲಿಂಗಾಯತಕ್ಕೆ ಹೊರಗಾದುದ ಮುಟ್ಟಿ ಅಂಗೀಕರಿಸಿದಲ್ಲಿ ,

ಇಂತೀ ಪಂಚಾಚಾರದಲ್ಲಿ ಶುದ್ಧತೆಯಾಗಿ

ಗುರುಲಿಂಗಜಂಗಮ ಪಾದತೀರ್ಥ ಪ್ರಸಾದ

ಇಂತೀ ವರ್ತನಪಂಚಾಚಾರಶುದ್ಧವಾಗಿ,

ಬಾಹ್ಯ ಅಂತರಂಗದಲ್ಲಿ ಉಭಯನಿರತವಾಗಿ, ನಿಂದುದು ವ್ರತವಲ್ಲದೆ,


೧೬೩
ಅಕ್ಕಮ್ಮನ ವಚನಗಳು

ಉಂಬ ಉಡುವ ಕೊಂಬ ಕೊಡುವ ಸಂದಣಿಗಾರರ ಶೀಲ ಹಿಂದೆ ಉಳಿಯಿತ್ತು ,


|| ೮೮ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವ ಮುಟ್ಟದೆ.

೫೨೩

ಪರಪಾಕವ ಬಿಟ್ಟಿಹುದೊಂದೆ ವ್ರತ.

ಲವಣ ನಿಷೇಧವೆಂದು ಬಿಟ್ಟಿಹುದೊಂದೆ ವ್ರತ.

ಸಪ್ಪೆಯೆಂದು ಚಿತ್ರ ಬಿಟ್ಟಿಹುದೊಂದೆ ವ್ರತ.

ಇಂತೀ ತ್ರಿವಿಧವತಂಗಳಲ್ಲಿ ನಿರತವಾದವಂಗೆ

ಮತ್ತಾವ ವ್ರತಕ್ಕೂ ಅವಧಿಗೊಡಲಿಲ್ಲ .

ನುಡಿಗಡಣಕ್ಕೆ ತೆರಪಿಲ್ಲ ; ತಾವು ತಾವು ಕೊಂಡ ವ್ರತಕ್ಕೆ ತಾವೆ ಮುಕ್ಕರು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೇ ಬಲ್ಲೆ . || ೮೯ ||

೫೨೪

ಪಾಕಲವಣವ ಬಿಟ್ಟಲ್ಲಿ ಪರವಧುವ ಅಪೇಕ್ಷಿಸಿ ಬೇಡಲಾಗದು.

ಅಪ್ಪುಲವಣವ ಬಿಟ್ಟು ಸಪ್ಪೆಯ ಕೊಂಬಲ್ಲಿ ಉಚ್ಚೆಯಬಚ್ಚಲ ಮುಟ್ಟಲಾಗದ

ಉಚ್ಚೆಯ ಬಚ್ಚಲ ಬಿಟ್ಟಲ್ಲಿ ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು

ಬಾಗಿಲತಪ್ಪಲ ಕಾಯಲಾಗದು.

ಇಂತೀ ವ್ರತ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ತಪ್ಪದ ನೇಮ . || ೯೦ ||

೫೨೫

ಬಂದುದ ಸಾಕೆನ್ನದೆ, ಬಾರದುದ ತಾ ಎನ್ನದೆ,

ಗಡಿಗೆ ಬಟ್ಟಲು ನಮ್ಮೆಡೆಯಲ್ಲಿ ಒಡಗೂಡಿ ಸುರಿಯೆನ್ನದೆ,

ಮಂತ್ರ ಭಿನ್ನವಾಗಿ, ಮತ್ತಾರಿಗು ಸಂಚರಿಸದೆ,

ಕೆಲಬಲದಿಂದ ಅವರಿಗೆ ಅದು ನೇಮವೆಂದೆನಿಸದೆ

ಲಿಂಗಕ್ಕೆ ಬಂದು ಸಂದುದ ಆನಂದದಿಂದ ಸ್ವೀಕರಿಸಿ ನಿಂದುದೆ ಭರಿತಾರ್ಪಣ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ . || ೯೦ ||

- ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು.

ತಲೆಬೋಳಾದವರೆಲ್ಲ ಮುಂಡೆಯ ಮಕ್ಕಳು.


ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ .

ಆವ ಪ್ರಕಾರವಾದಡೇನು ? ಅರಿವೆ ಮುಖ್ಯವಯ್ಯಾ ,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ .


೧೬೪ ಶಿವಶರಣೆಯರ ವಚನಸಂಪುಟ

೫೨೭

ಬಸವಣ್ಣ , ಚೆನ್ನಬಸವಣ್ಣ , ಪ್ರಭು, ವೀರಮಡಿವಳ, ನಿಜಗುಣಶಿವಯೋಗಿ,

ಸಿದ್ಧರಾಮ , ಮೋಳಿಗೆಯಯ್ಯ , ಆಯ್ದಕ್ಕಿಯ ಮಾರಯ್ಯ , ಏಕಾಂತರಾಮಯ

ಅಜಗಣ್ಣ , ಶಕ್ತಿ , ಮುಕ್ತಿ , ಮಹಾದೇವಿಯಕ್ಕ ಮುಂತಾದ

ಏಳುನೂರೆಪ್ಪತ್ತು ಅಮರಗಣಂಗಳು ಕೊಟ್ಟ ವ್ರತಪ್ರಸಾದ.

ಆ ಪ್ರಸಾದ ಎನಗೆ ಪ್ರಸನ್ನ , ನಿಮಗೆ ಮರ್ತ್ಯದ ಮಣಿಹ ಹಿಂಗುವನ್ನಕ್ಕ .

ಎನ್ನ ವ್ರತದಲ್ಲಿ , ಎನ್ನ ಆಚಾರದಲ್ಲಿ , ನಾ ಹಿಡಿದ ನೇಮದಲ್ಲಿ , ಭಾಷೆಯಲ್ಲಿ ,

ನಾ ತಪ್ಪಿದಡೆ, ತಪ್ಪ ಹೊತ್ತಲ್ಲಿ ನಿಮ್ಮ ಕೇಳಿದಡೆ, ನಾ ಸತ್ತಿಹೆನೆಂದುಕೂಡಿದಡೆ

ಮತ್ತೆ ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಯಿಂದ ಘಟವ ಬಿಟ್ಟಡೆ

ನಿಮ್ಮಾಣೆನಿಮ್ಮ ಪ್ರಮಥರಾಣೆ.

ಕ್ರೀ ಭಿನ್ನ ಚಿಕ್ಕದೋರದಲ್ಲಿಯೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ನಿನ್ನಲ್ಲಿಯೆ ಲೀಯ . || ೯೩

೫೨೮

ಬಹುಜಲವಂ ಬಿಟ್ಟಲ್ಲಿ ಅದು ಶೀಲವಲ್ಲ .

ಪರಪಾಕ ಮುಂತಾದ ದ್ರವ್ಯವ ಬಿಟ್ಟಲ್ಲಿ ಶೀಲವಂತನಲ್ಲ .

ಅದೆಂತೆಂದಡೆ:

ಅದು ಮನದ ಅರೋಚಕ, ಆ ಗುಣ ಜಗದ ಮಚ್ಚು ,

ಸರ್ವರ ಭೀತಿ, ದ್ರವ್ಯದ ಒದಗು; ಈ ಗುಣ ವ್ರತಕ್ಕೆ ಸಲ್ಲ .

ವ್ರತವಾವುದೆಂದಡೆ:

ಪರಾಪೇಕ್ಷೆಯ ಮರೆದು, ಪರಸತಿಯ ತೊರೆದು,

ಗುರುಲಿಂಗಜಂಗಮದಲ್ಲಿ ತಾಗು ನಿರೋಧಮಂ ತಾಳದೆ,

ಹೆಣ್ಣು ಹೊನ್ನು ಮಣ್ಣಿಗಾಗಿ ತಪ್ಪಿ ನುಡಿಯದೆ,

ಒಡೆಯರು ಭಕ್ತರಲ್ಲಿ ತನ್ನ ಕುರಿತ ಗೆಲ್ಲ ಸೋಲಕ್ಕೆ ಹೋರದೆ,

ತನಗೊಂದು ಬೇಕೆಂದು ಅನ್ಯರ ಕೈಯಲ್ಲಿ ಹೇಳಿಸದೆ,

ಬಹು ತಾಳಕತನವ ಬಿಟ್ಟು ಸರ್ವರ ಆತ್ಮ ಚೇತನವನರಿತು,

ತಾ ಮರೆದುದ ಅರಿದು ಎಚ್ಚತ್ತು ನೋಡಿ,

ಅಹುದಾದುದ ಹಿಡಿದುಅದುದ ಬಿಟ್ಟು , ಬಹುದು:ಖಮಂ ಮರೆದ

ಇಂತೀ ಸರ್ವಗುಣಸಂಪನ್ನನಾಗಿ ಆತ್ಮಂಗೆ ಅರಿವಿನಶೀಲವ ಮಾಡಿ,

ಕಾಯಕ್ಕೆ ಮರವೆ ಇಲ್ಲದ ಆಚಾರವನಂಗೀಕರಿಸಿ,

ಇಂತೀ ಕಾಯ , ಮನ, ಅರಿವಿನ ಆಕಾರದಲ್ಲಿ ನಿಂದಲ್ಲಿ ನಿಂದು,


೧೬೫
ಅಕ್ಕಮ್ಮನ ವಚನಗಳು

ಏತಕ್ಕೂ ಮರವೆಯಿಲ್ಲದೆ ಸರ್ವ ಅವಧಾನಂಗಳಲ್ಲಿ

ಹೊರಗಣ ಮಾಟ ಒಳಗಣ ಕೂಟಉಭಯ ಶುದ್ದವಾದಲ್ಲಿ


ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಜಿಡ್ಡು ಹರಿಯಿತ್ತು. || ೯

೫೨೯

ಬೆಳ್ಳೆ , ಭಂಗಿ, ನುಗ್ಗೆ , ಉಿ ಮೊದಲಾದವನೆಲ್ಲವ ಬಿಡಬೇಕು.

ಬೆಳ್ಳಿಯಲ್ಲಿ ದೋಷ, ಭಂಗಿ ನುಗ್ಗಿಯಲ್ಲಿ ಲಹರಿ, ಉಿಯಲ್ಲಿ ದುರ್ಗು

ವ್ರತ ಲಿಂಗಕ್ಕೆ ಸಲ್ಲುವಾಗಿ ಈ ನಾಲ್ಕು ಬಂದ ಬಂದಲ್ಲಿ ದೋಷವುಂಟು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ


|| ೯ ||
ವ್ರತಕ್ಕೆ ಅಹುದಲ್ಲ ಅಂಬುದನರಿಯಬೇಕು.

೫೩೦

ಭಕ್ತಂಗೆ ಬಯಕೆ ಉಂಟೆ ? ನಿತ್ಯಂಗೆ ಸಾವುಂಟೆ ?

ಸದ್ಭಕ್ತಂಗೆ ಮಿಥ ತಥ್ಯ ಉಂಟೆ ?

ಕರ್ತೃ ನೃತ್ಯನಾದ ಠಾವಿನಲ್ಲಿ ಪ್ರತ್ಯುತ್ತರಂಗೆಯ್ದಡೆ

ಸತ್ಯ ಸದಾಚಾರಕ್ಕೆ ಹೊರಗು

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಣತಿ. || ೯೬ ||

ಭಕ್ತರ ಮನೆಗೆ ಸತ್ಯಶರಣರು ಬಂದಲ್ಲಿಯೆ

ಮದುವೆಯ ಉತ್ಸಾಹಕ್ಕಿಂದ ವೆಗ್ಗಳವೆಂದು ಕಂಡು,

ತನುಕರಗಿ, ಮನಬೆರಸಿ, ಕಂಗಳುತುಂಬಿ ಪುಳಕಿತವಾಗಿ

ವಂಚನೆ ಸಂಕಲ್ಪವೆಂಬ ಶಂಕೆದೋರದೆ,

ನಿಶ್ಯಂಕನಾಗಿ ಮಾಡುವ ಭಕ್ತನ ವಂಕದ ಬಾಗಿಲೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಮಸ್ತಕ. || ೯೭ ||

೫೩೨

ಭಕ್ತರ ಮನೆಯಲ್ಲಿ ಭಕ್ತರು ಬಂದು ಕಳವು ಪಾರದ್ವಾರವ ಮಾಡಿದರೆಂದು

ಹೊರಹಾ ಎಂದು ನುಡಿಯಬಹುದೆ ?

ಒಡೆಯರು ಭಕ್ತರ ನಿಂದೆಯ ಕೇಳೆನೆಂದು

ತನ್ನೊಡವೆ ಒಡೆಯರು ಭಕ್ತರ ದ್ರವ್ಯವೆಂದು ಭಾವಿಸಿದಲ್ಲಿ

ಮತ್ತೊಬ್ಬ ಅರಿಯದ ತುಡುಗುಣಿ ಮುಟ್ಟಿದಡೆ ಅವ ಕೆಡುವ.

ಆಚಾರಕ್ಕೆ ಹೊರಗು, ತಾನರಿಯದಂತಿರಬೇಕು

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಪ್ರತಸ್ಥನ ನೇಮ . || ೯೮ ||


೧೬೬
ಶಿವಶರಣೆಯರ ವಚನಸಂಪುಟ

೫೩೩

ಭರಿತಾರ್ಪಣವೆಂದು ಸ್ಥಲವನಂಗೀಕರಿಸಿದಲ್ಲಿ

ಆ ಭರಿತ ಅಂಗಕ್ಕೊ , ಲಿಂಗಕ್ಕೊ , ಆತ್ಮಕ್ಕೊ , ಸರ್ವೆಂದ್ರಿಯ ವಿಕಾ

ಹಿಡಿವ, ಬಿಡುವ, ಕೊಡುವ, ಕೊಂಬ ಸಡಗರಿಸುವ ಎಡೆಗಳಲ್ಲಿಯೆ

ಮೃತ, ರಸಾನ್ನ , ಸಕಲಪದಾರ್ಥಗಳ ಯಥೇಷ್ಟವಾಗಿ ಗ್ರಾಸಿಸುವ ಭರಿತವ

ಆತ್ಮನ ಕುಧೆಯ ಆಶಾಪಾಶವೊ ?

ಅಲ್ಲ , ಲಿಂಗಕ್ಕೆ ಸಂದುದನೆಲ್ಲವನು

ಒಂದೆ ಭಾವದಲ್ಲಿ ಕೊಳಬೇಕೆಂದು ಸಂದೇಹವೊ ?

ಇಂತೀ ಗುಣಂಗಳಲ್ಲಿ ಅಹುದಲ್ಲವೆಂಬುದ ತಿಳಿದುನೋಡಿಕೊಳ್ಳ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ . || ೯೯ ||

ಭವಿ ನಿರೀಕ್ಷಣೆಯಾದ ದ್ರವ್ಯಗಳ ಮುಟ್ಟೆನೆಂಬಲ್ಲಿ

ಮುಟ್ಟಿದ ಭೇದವಾವುದು ಹೇಳಿರಣ್ಣಾ . .

ಧಾನ್ಯ ವಿದಳಫಲ ಪಂಫಲಾದಿಗಳಲ್ಲಿ

ಆಯತಕ್ಕೆ ಮುನ್ನವೊ ಆಯತದೊಳಗಾದಲ್ಲಿಯೊ ?

ಆ ನಿರೀಕ್ಷಣೆ ವ್ರತಕ್ಕೆ ದ್ರವ್ಯ ಮೊದಲಾದ ದ್ರವ್ಯಕ್ಕೆ

ವ್ರತ ಮೊದಲೋ , ಅಲ್ಲ , ತಾ ಮಾಡಿಕೊಂಡ ನೇಮವೆ ಮೊದಲೊ ?

ಇದ ನಾನರಿಯೆ , ನೀವು ಹೇಳಿರಯ್ಯಾ.

ಭಾಷೆಗೆ ತಪ್ಪಿದ ಬಂಟ, ಲೇಸಿಗೆ ಒದಗದ ಸ್ತ್ರೀ , ವ್ರತದ ದೆಸೆಯನರಿಯದ ಆಚಾರರ,

ಕೂಸಿನವರವ್ವ ಹಣದಾಸೆಗೆ ಕರೆದು ತಾ ಘಾಸಿಯಾದಂತಾಯಿತ್ತು .

ವ್ರತಾಚಾರದ ಹೊಲಬು ನಿಹಿತವಾದುದಿಲ್ಲ .

ಏತದ ತುದಿಯಲ್ಲಿ ತೂತು ಮಡಕೆಯ ಕಟ್ಟದಲ್ಲಿ ಬಾವಿಯ ಘಾತಕ್ಕೆ ಸರಿ.

ತೂತಿನ ನೀರಿನ ನಿಹಿತವನರಿಯದವನಂತೆ ವ್ರತಾಚಾರ ಸಲ್ಲದು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ


|| ೧೦೦ ||
ನೇಮಘಾತಕರುಗಳಿಗಿದಸಾಧ್ಯ .

ಭವಿಪಾಕವ ಮುಟ್ಟದೆ ಸಮಸ್ತ ಮತದಿಂದ

ಅಯೋಗ್ಯವಾದ ಪದಾರ್ಥವನುಳಿದು ಯೋಗ್ಯವಾದ ಪದಾರ್ಥವ ಕೊಂಡು,

ಪಾದೋದಕದಲ್ಲಿ ಪವಿತ್ರತೆಯಿಂದ ಸ್ವಪಾಕವ ಮಾಡಿ,

ಪರಶಿವಲಿಂಗವೆಂದರಿದು ಸುಖಿಸಿ ನಿಜೈಕ್ಯರಾದರು.


೧೬೭
ಅಕ್ಕಮ್ಮನ ವಚನಗಳು

ಇದನರಿಯದ ಆಡಂಬರದ ವೇಷವ ಧರಿಸಿ

ಉದಕ ಹೊಯ್ದು ಸ್ವಯ ಚರ ಪರಷಲವ ಬೊಗಳುವ

ಕುನ್ನಿಗಳ ಕಂಡು ನಾಚಿತ್ತು ಕಾಣಾ, ಎನ್ನ ಮನವು

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ. || ೧೦೧ ||

೩೬

ಭವಿಯಲಾದ ಪಾಕವ ತಂದು ಮನೆಯಲ್ಲಿರಿಸಿಕೊಂಡು ಭುಂಜಿಸುತ್ತ

ಅವರ ಮನೆಯ ಒಲ್ಲೆನೆಂಬುದು ವ್ರತಕ್ಕೆ ಹಾನಿ ,

ಪಂಚಾಚಾರಕ್ಕೆ ದೂರ, ಪಂಚಾಚಾರಶುದ್ದತೆಗೆ ಹೊರಗು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು

ಅವರ ಬಲ್ಲನಾಗಿ ಒಲ್ಲನು. || ೧೦೨ | |

೫೩೭

ಭಾಜನಕ್ಕೆ ಸರ್ವಾಂಗ ಮುಸುಕಿಟ್ಟಲ್ಲಿ ಸರ್ವವ್ಯಾಪಾರ ನಿರಸನವಾ

ಸರ್ವಸಂಗವನೊಲ್ಲದೆ ಇರಬೇಕು.

ಒಡೆಯರು ಭಕ್ತರಲ್ಲಿ ನಿಗರ್ವಿಯಾಗಿ

ಬಂದು ನಿಂದುದ ಜಂಗಮಲಿಂಗವ ಮುಂದಿರಿಸಿ,

ಅವರು ಕೈಕೊಂಡು ಮಿಕ್ಕ ಪ್ರಸಾದವ ಲಿಂಗಕ್ಕೆ ಅರ್ಪಿತವ ಮಾಡಿ,


ಗುರುಲಿಂಗಜಂಗಮದಲ್ಲಿ ಸಂದುಸಂಶಯವಿಲ್ಲದೆ

ಆಚಾರವೆ ಪ್ರಾಣವಾಗಿ ನಿಂದುದು ರಾಮೇಶ್ವರಲಿಂಗದಂಗ. || ೧೦೩ |

- H೩೮

ಭಾಜನಕ್ಕೆ ಸರ್ವಾಂಗವ ಬಾಸಣಿಸುವಾಗ

ಅದು ಆ ಕುಂಭಕ್ಕೋ , ತನ್ನಂಗಕ್ಕೋ ಎಂಬುದನರಿತು,

ಸರ್ವಾಂಗ ಪಾವಡವ ಕಟ್ಟುವ ವಿವರ: ಮನ, ಬುದ್ಧಿ , ಚಿತ್ತ , ಅಹಂಕಾರ

ಎಂಬ ಚತುರ್ಭಾವದ ಸೆರಗಿನಲ್ಲಿ ಗುಹೇಂದ್ರಿಯವಂ ಕಳೆದು,

ಜಿಹೇಂದ್ರಿಯವೆಂಬ ಅಂಗ ಭಾಜನಕ್ಕೆ ಸರ್ವಾಂಗ ಪಾವಡವಂ ಕಟ್ಟಿ ,

ಮಣ್ಣೆಂಬ ಆಸೆಯ ಬಿಟ್ಟು , ಹೊನ್ನೆಂಬ ಆಸೆಯ ಬಿಟ್ಟು ,

ಹೆಣ್ಣೆಂಬ ಮೋಹದಲ್ಲಿ ಮಗ್ನವಾಗದೆ,

ಮಣ್ಣೆಂಬ ಆಸೆಯ ಗುರುವಿನಲ್ಲಿ ,

ಹೊನ್ನೆಂಬ ಆಸೆಯ ಲಿಂಗದಲ್ಲಿ , ಹೆಣ್ಣೆಂಬ ಮೋಹವ ಜಂಗಮದಲ್ಲಿ ,

ಕೊಡುವ ವ್ರತವನರಿಯದೆ ಆಚಾರ ಅಂಗದಲ್ಲಿ

ಇಂತೀ ವ್ರತನೇಮವಲ್ಲದ ಮಣ್ಣ ಮಡಕೆಯ ಗನ್ನದಲ್ಲಿ ಕಟ್ಟಿದಡೆ


೧೬೮ ಶಿವಶರಣೆಯರ ವಚನಸಂಪುಟ

ಪ್ರಸನ್ನನ ವ್ರತದಣ್ಣಗಳೆಲ್ಲರು ಇದ ಚೆನ್ನಾಗಿ ತಿಳಿದು ನೋಡಲಾಗಿ

ಆಚಾರವೆ ಪ್ರಾಣವಾದ

ರಾಮೇಶ್ವರಲಿಂಗದಲ್ಲಿ ವ್ರತ ನೇಮ ಹರಿತವಾಯಿತ್ತು. || ೧೦೪ ||

೫೩೯

ಭಾಜನದ ಕಂಠಕ್ಕೆ ಪಾವಡವ ಬಾಸಣಿಸಲಾಗಿ ವ್ರತಕ್ಕೆ ಬೀಜ ಮೊದಲಾಯಿತ್ತು.

ಭವಿಸಂಗ ಭವಿಪಾಕ ಅನ್ಯದೈವ ಪೂಜಿಸುವವರ ದೂರಸ್ಥನಾಗಿರಬೇಕು,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿಯಬೇಕಾದಡೆ. || ೧೦೫ ||

೫೪೦

ಮಣ್ಣಮಡಕೆಯ ಮುಸುಕಿಟ್ಟು ಗನ್ನದಲ್ಲಿ ನೀರು ತುಂಬಿ ,

ಇದಿರಿಗೆ ಬಿನ್ನಾಣವ ತೋರುತ- ಇಂತೀ ಬಣ್ಣ ಬಚ್ಚಣೆಯ ಶೀಲವ ನಾನೊಪ್ಪೆ.

ಇದಿರು ಕಂಡಲ್ಲಿ ಹಾಕಿ, ಆರೂ ಕಾಣದಡೆ ತಾನೊಪ್ಪಿಕೊಂಡಿಪ್ಪ

ಭಂಡನ ಶೀಲಮೂರುಕುಂಡೆಯೊಳಗಾಯಿತ್ತು.

ಇದರಂಗವ ಬಿಟ್ಟು , ಮನ ಲಿಂಗದಲ್ಲಿ ನಿಂದು, ಧನ ಜಂಗಮದಲ್ಲಿ ಸಂದು,

ಬಂಧನವಿಲ್ಲದೆ ನಿಂದ ನಿಜೈಕ್ಯನ ಅಂಗವೆ ಸರ್ವಾಂಗಶೀಲ.

ಆತ ಮಂಗಳಮಯಮೂರುತಿ
|| ೧೦೬ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ .

೫೪೧

ಮನಮುಟ್ಟದ ವ್ರತ, ತನುಮುಟ್ಟದ ಸುಖ ,

ಬೇರುಮುಟ್ಟದ ಸಾರ ಅದಾರಿಗೆ ಯೋಗ್ಯ ?

ಮನ ವಚನ ಕಾಯ ತ್ರಿಕರಣ ಏಕವಾಗಿ

ಅಂಗಕ್ಕೆ ಆಚಾರ , ಆಚಾರಕ್ಕೆ ಅರಿವು, ಅರಿವಿಂಗೆ ಕುರುಹು,

ಕುರುಹಿನಲ್ಲಿ ನೇಮಕ್ಕೊಡಲಾಗಿ, ಭಾವಕ್ಕೆ ರೂಪಾಗಿ,

ಬಾವಿಯ ನೀರ ಕುಂಭ ತಂದುಕೊಡುವಂತೆ,

ಮಹಾಜ್ಞಾನ ಸುಖಜಲವ ಜ್ಞಾತೃವೆಂಬ ಕಣ್ಣಿಗೆ

ಜೇಯವೆಂಬ ಕುಂಭದಲ್ಲಿ ಭಾವವೆಂಬ ಜಲ ಬಂದಿತ್ತು .

ಆ ಸುಜಲದಿಂದ ಅಂಗವೆಂಬ ಲಿಂಗಕ್ಕೆ ಮಜ್ಜನಕ್ಕೆರೆದೆ

ಪ್ರಾಣಲಿಂಗಕ್ಕೆ ಓಗರವನಟ್ಟೆ ,

ಮಹಾಘನವೆಂಬ ತೃಪ್ತಿಲಿಂಗ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕ


|| ೧೦೭ ||
ನೇಮ ಸಂದಿತ್ತು .
ಅಕ್ಕಮ್ಮನ ವಚನಗಳು

ಮರ್ಕಟ, ಕುಕ್ಕುಟ, ಮಾರ್ಜಾಲ, ಶುನಕ, ಶೂಕರ, ವಿಹಂಗ

ಇಂತಿವು ಮೊದಲಾದ ಅನ್ಯಜೀವಪ್ರಾಣಮಂ ಸಲಹದೆ

ಸಲಹುವರ ಮನೆಯಲ್ಲಿ ತಾನೊಪ್ಪಿಕೊಳ್ಳದೆ,

ಪರಪಾಕ ರಸದ್ರವ್ಯವ ಮುಟ್ಟದೆ, ಬಾಹ್ಯಜಲವಂ ಬಿಟ್ಟು

ಪಾದತೀರ್ಥ ಪ್ರಸಾದವಿಲ್ಲದೆ ತಾ ನೇಮವನೊಲ್ಲದೆ,

ಬೇರೊಂದು ಭಿನ್ನ ದೈವವೆಂದು ಪ್ರಮಾಣಿಸದೆ,

ಪಾದತೀರ್ಥ ಪ್ರಸಾದವಿಲ್ಲದವರ ಮನೆಯಲ್ಲಿ ಒಲ್ಲದೆ,

ತನ್ನನುವಿಂಗೆ ಅನುವಾದುದನರಿದು ಸಂಬಂಧಿಸಿ ಇಪ್ಪುದು ನೇಮ ಕ್ರೀ .

ಇಂತೀ ಭಾವಶುದ್ಧವಾಗಿ ನಡೆವುದು ,


ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಬಾಹ್ಯನೇಮ. || ೧೦೮ ||

೫೪೩

ಮರ್ತ್ಯಕ್ಕೆ ಬಂದ ಭಕ್ತಕಾಯರು ತಮ್ಮ ತಮ್ಮ ಗೊತ್ತಿನಲ್ಲಿಯೆ ಮು

ತಮ್ಮ ತಮ್ಮ ನಿಷ್ಠೆಯಲ್ಲಿಯೆ ತೃಪ್ತರು.

ಸ್ವ ಇಚ್ಚಾಮರಣ , ಸಂತೋಷಮರಣ, ಕಂಟಕಮರಣ,

ಖಂಡನೆಮರಣ , ದಿಂಡುಮರಣ, ಅರಿಲಯಮರಣ , ಶರೀರ ನಿರವಯಮರಣ,

ಅಂತರಿಕ್ಷ ಸುಮಾನಲಯ , ಸ್ವಾನುಭಾವಐಕ್ಯ , ಸದ್ಭಾವಕೂಟ,

ಪರತಂತ್ರಲಯ , ಸಮ್ಯಗ್‌ಜ್ಞಾನ ಸಂಬಂಧ, ದಿವ್ಯ ಜ್ಞಾನಕೂಟ


ಇಂತೀ ಸರ್ವಸಂಬಂಧ ಕಾಯಬಯಲಹರುಂಟು.

ನಾನೊಂದ ಭಾವಿಸಿ ಕಲ್ಪಿಸಿದವನಲ್ಲ .

ನಿಮ್ಮ ನಿಮ್ಮ ಭಾವವ ನೀವೆನೋಡಿಕೊಳ್ಳಿ.

ಎನಗೆ ಕಟ್ಟಾಚಾರದ ನೇಮ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾಡೂ

ಎನ್ನ ಕೀ ತಪ್ಪಿದಲ್ಲಿ ಕಂಡಡೆ ಮಸ್ತಕವನೊಡೆಯ ಹೊಯಿವೆನು. ೧೦೯ ||

ပု

ಮಹಾವ್ರತಸ್ಥರು ಪ್ರತಿಗಳ ಮನೆಗೆಹೋದಲ್ಲಿ ,

ಕಂಡುದ ಬೇಡದೆ, ಬಾಯಿಗೆ ಬಂದಂತೆ ನುಡಿಯದೆ,

ಕಾಮದೃಷ್ಟಿಯಲ್ಲಿ ಮತ್ತೇನುವನೋಡದೆ,

ಶಿವಲಿಂಗಪೂಜೆಶಿವಧ್ಯಾನಮೂರ್ತಿಶಿವಕಥಾ ಪ್ರಸಂಗ

ಶಿವಶರಣರ ಸಂಗ ತಮ್ಮ ಕ್ರಿಯಾನುಭಾವದ ವಿಚಾರ


೧೭೦
ಶಿವಶರಣೆಯರ ವಚನಸಂಪುಟ

ಹೀಂಗಲ್ಲದೆ ಸರಸ, ಸಮೇಳ, ಪಗುಡಿ, ಪರಿಹಾಸಕ,

ಚದುರಂಗ ನೆತ್ತ ಪಗಡಿ ಜೂಜು ಶಿವಭಕ್ತಂಗೆ ಉಂಟೆ ?

ಆತ್ಮನಲ್ಲಿದ್ದಡೆ ಎನ್ನ ಬೇಗೆ, ನುಡಿದಡೆ ಶರಣರ ಬೇಗೆ.

ಈ ಒಡಲೇಕೆ ಅಡಗದು ?

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ

ನಿನ್ನ ಕೊರಳೇಕೆ ಉಡುಗದು ? || ೧೧೦ ||

೫೪೫

ಮಾಡಿ ನೀಡುವ ಭಕ್ತನನರಸಿಕೊಂಡು ಹೋಗಿ

ಗಡ್ಡ ಮಂಡೆ ಬೋಳಿನ ಕುರುಹ ತೋರಿ,

ಬಲ್ಲವರಂತೆ ಅಧ್ಯಾತ್ಮವ ನುಡಿದು

ಉಪಾಧಿಯಿಂದ ಒಡಲ ಹೊರೆವಾತ ವಿರಕ್ತನೆ ? ಅಲ್ಲ .

ವಿರಕ್ತನ ಪರಿ ಎಂತೆಂದಡೆ:

ಆಚಾರಸಹಿತವಾಗಿ ಭಕ್ತಿ ಭಿಕ್ಷವ ತೆಗೆದುಕೊಂಡು

ಉಪಾಧಿರಹಿತವಾಗಿಪ್ಪ ವಿರಕ್ತನತೋರಿ ಬದುಕಿಸಯ್ಯಾ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ. || ೧೧೧ ||

೫೪೬

ಮೂಷಕ ಮಾರ್ಜಾಲ ಮಕ್ಷಿಕ ಇವು ಮೊದಲಾದ ಸಕಲ ಜೀವಪ್ರಾಣಿಗಳಿಗ

ಎಲ್ಲಕ್ಕು ತನುವಿಂಗಾಚಾರ ಮನಕ್ಕರಿವು ಅರಿವಿಂಗೆ ವ್ರತವ

ಬಿಡದಿದ್ದಡೇನಾಯಿತ್ತಾದಡೆ ಎನಗದೆ ಭಂಗ.

ಲಿಂಗಕ್ಕು ಲಿಂಗವೆಂಬುದ ಅಂಗದ ಮೇಲೆ ಅವಧರಿಸದಿದ್ದಡೆ

ನಾ ಕೊಂಡ ಪಂಚಾಚಾರಕ್ಕೆ ದೂರ.

ಈ ಕಟ್ಟಿದತೊಡರ ಬಿಡಿಸುವುದಕ್ಕೆ ಕಟ್ಟಾಚಾರಿಗಳಾರನು ಕಾಣೆ.

ಈ ಗುಣದ ದೃಷ್ಟ ಹಿಂದು ಮುಂದಿಲ್ಲ .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೀಯವಲ್ಲದೆ, || ೧

೫೪೭

ಮೂಷಕ, ವಿಹಂಗ, ಕುಕ್ಕುಟ, ಮಾರ್ಜಾಲ, ಕುಕ್ಕುರ, ದೌಷ್ಟ

ಇವು ಮೊದಲಾದ ನೇಮಿಗಳೆಲ್ಲರು ಸಿಕ್ಕಿದರಲ್ಲಾ !

ನೀವುಹಿಡಿದ ವ್ರತಕ್ಕೆ ಭಂಗಿತರಾಗಿ,

ಭವಿಯ ಪರಾಪೇಕ್ಷದಿಂದ ದ್ರವ್ಯವ ತಂದು


೧೭. ೧
ಅಕ್ಕಮ್ಮನ ವಚನಗಳು

ಗುರುಲಿಂಗಜಂಗಮಕ್ಕೆ ಮಾಡಿಹೆನೆಂದು ಮರೆಯಲ್ಲಿ ಒಡಲ ಹೊರೆವ

ಸುರೆಗುಡಿಹಿಗೆ ನೆರೆ ಭಕ್ತಿಯೇಕೆ ?

ವ್ರತಕ್ಕೆ ದೂರ, ಆಚಾರಕ್ಕೆ ಹೊರಗು :


|| ೧೧೩ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.

೫೪೮

ಲಕ್ಷವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ ,

ಕೃತ್ಯವಿಲ್ಲದ ನಿತ್ಯ ಎಷ್ಟಾದಡುಂಟು,

ಕಟ್ಟಳೆಗೊಳಗಾದವು ಅರುವತ್ತಾರು ಶೀಲ, ಅರುವತ್ತುನಾಲ್ಕು ನೇಮ,

ಅಯಿವತ್ತುಮೂರುನೇಮ ,ಮೂವತ್ತೆರಡು ನಿತ್ಯ .

ಇಂತಿವರ ಗೊತ್ತಿಗೊಳಗಾಗಿ ಕಟ್ಟಳೆಯಾಗಿ ನಡೆವಲ್ಲಿ

ಅರ್ಥ ಪ್ರಾಣ ಅಭಿಮಾನಂಗಳಲ್ಲಿ , ತಥಮಿಥ್ಯ ರಾಗದ್ವೇಷಂಗಳಲ್ಲಿ ,

ಭಕ್ತಿ ಜ್ಞಾನ ವೈರಾಗ್ಯಗಳಲ್ಲಿ ,ಸ್ಕೂಲಸೂಕ್ಷ್ಮ ಕಾರಣ ತನುತ್ರಯಂಗಳಲ್ಲಿ ,

ಜರ ನಿರ್ಜರ ಸಮನ ಸುಮನಂಗಳಲ್ಲಿ , ಸರ್ವೆಂದ್ರಿಯ ಭಾವಭ್ರಮೆಗಳಲ್ಲಿ ,

ಐದು ತತ್ವದೊಳಗಾದ ಇಪ್ಪತ್ತಾರು ಕೂಟದಲ್ಲಿ ,

ಆತ್ಮವಾಯು ಒಳಗಾದವನ ವಾಯುವ ಬೆರಸುವಲ್ಲಿ ,

ಜಿ . ದ್ವಾರದೊಳಗಾದ ಅಷ್ಟದ್ವಾರಂಗಳಲ್ಲಿ ,

ಇಂತೀ ಘಟದೊಳಗಾದ ಸಂಕಲ್ಪವೆಲ್ಲಕ್ಕೂ

ಬಾಹ್ಯದಲ್ಲಿ ತೋರುವ ತೋರಿಕೆಗಳೆಲ್ಲಕ್ಕೂ ಹೊರಗೆ ಕ್ರೀ , ಆತ್ಮಂಗೆ ವ್ರತ.

ಅವರವರ ತದ್ಭಾವಕ್ಕೆ ವ್ರತಾಚಾರವ ಮಾಡದೆ

ಕಾಮಿಸಿ ಕಲ್ಪಿಸಿದೆನಾಯಿತ್ತಾದಡೆ, ಎನ್ನರಿವಿಂಗೆ ಅದೆ ಭಂಗ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿಯೆ ಮಾಡುವೆನು. 11 ೧೧೪

- ೫ರ್೪

ಲವಣನಿರಶನದ ಆಯತದ ಭೇದವೆಂತೆಂದಡೆ :

ಕಾರಲವಣ ನಿಷೇಧವೆಂದು ಬಿಟ್ಟು , ಮತ್ತೆ ಬಿಳಿಯ ಲವಣಬಳಸುವುದು.

ಬಿಳಿಯಲವಣ ನಿಷೇಧವೆಂದು ಬಿಟ್ಟು ಮತ್ತೆ ಸೈಂಧಲವಣ ಬಳಸುವುದು.

ಸೈಂಧಲವಣ ನಿಷೇಧವೆಂದು ಬಿಟ್ಟು , ಮತ್ತೆ ಕೆಲವಣ ಬಳಸುವುದು.

ಮೃತ್ತಿಕೆಲವಣದಲ್ಲಿ ತಟ್ಟುಮುಟ್ಟು ಕಂಡ ಮತ್ತೆ

ಉಪ್ಪೆಂಬ ನಾಮವ ಬಿಟ್ಟಿಹುದೇ ಲೇಸು.

ಈ ಅನುವ ನಾನೆಂದುದಿಲ್ಲ , ನಿಮ್ಮ ಅನುವ ನೀವೇ ಬಲ್ಲಿರಿ.

ಅನುವಿಗೆ ತಕ್ಕ ವ್ರತ, ವ್ರತಕ್ಕೆ ತಕ್ಕ ಆಚಾರ , ಆಚಾರಕ್ಕೆ ತಕ್ಕ ಖಂಡಿತ.


೧೭೨
ಶಿವಶರಣೆಯರ ವಚನಸಂಪುಟ

ಆವಾವ ನೇಮದಲ್ಲಿಯೂ ಭಾವ ಶುದ್ಧವಾದವಂಗೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. || ೧೧೫ ||

೫೫೦

ಲವಣವ ಕೊಂಬುದೆಲ್ಲವುಒಂದೆ ಶೀಲ, ಸರ್ವ ಸಪ್ಪೆ ಎಂಬುದು ಒಂದೆ ಶ

ಇವೆಲ್ಲವವಿಚಾರಿಸಿ, ತಟ್ಟುಮುಟ್ಟಿಗೆ ಬಾರದೆ

ತೊಟ್ಟುಬಿಟ್ಟ ಹಣ್ಣಿನಂತೆ ನೆಟ್ಟನೆ ವ್ರತವಕೂಡುವುದು ಮೂರನೆಯ ಶೀಲ.

ಮೂರುಕೂಡಿ ಒಂದಾಗಿ ನಿಂದುದು,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ. || ೧೧೬ ||

ಲಿಂಗಕ್ಕೂ ತಮಗೂ ಸಹಭಾಜನ ಸಹಭೋಜನವಾಹಲ್ಲಿ

ಇದಿರಿಟ್ಟ ಪದಾರ್ಥಂಗಳ ಲಿಂಗಕ್ಕೆ ತೋರಿ, ತಾ ಕೊಂಬಲ್ಲಿ ದೃಷ್ಟವ

ಸ್ವಪ್ನ ಸುಷುಪ್ತಿಗಳಲ್ಲಿ , ಮಿಕ್ಕಾದ ಏಕಾಂತ ಸತಿಕೂಟಂಗಳಲ್ಲಿ

ಅದಕ್ಕೆ ದೃಷ್ಟವಹ ಸಹಭೋಜನವಾವುದಯ್ಯಾ ?

ಯೋನಿಸ್ವಪ್ನ ಸುಷುಪ್ತಿ ಮುಂತಾದ ಭಾವದ ಸಹಭೋಜನ ಎಲ್ಲಿ ಇದ್ದಿತ್ತು

ಆ ಭಾಜನದ ಸಹಭೋಜನದ ಸಂಬಂಧ ಎಲ್ಲಿದ್ದಿತು ?

ಅದು ಕಲ್ಲಿನೊಳಗಣ ನೀರು, ನೀರೊಳಗಣ ಶಿಲೆ, ಇದಾರಿಗೂ ಅಸಾಧ್ಯ

ಅದು ಕಾಯದ ಹೊರಗಾದ ಸುಖ , ಸುಖದ ಹೊರಗಾದ ಅರ್ಪಿತ.

ಇಂತೀ ಗೊತ್ತಮುಟ್ಟಿ ಸಹಭೋಜನದಲ್ಲಿ ಅರ್ಪಿಸಬಲ್ಲವಂಗೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು

ಸಹಭಾಜನ ಭೋಜನವಾಗಿಪ್ಪನು. || ೧೧೭ ||

ಲಿಂಗಗೂಡಿ ಭರಿತಾರ್ಪಣವ ಅಂಗೀಕರಿಸುವಲ್ಲಿ ,

ಭರಿತ ಲಿಂಗಕ್ಕೊ ತನಗೊ ಎಂಬುದನರಿದು,

ಲಿಂಗವೆಂತೆ, ತನ್ನಂಗವಂತೆ, ಬಂದಿತ್ತು ಬಾರದೆಂಬ ಆರೈಕೆಯನ

ಸಂದಿತ್ತು ಸಲ್ಲದೆಂಬ ಸಂದೇಹವ ತಿಳಿದು,

ಸ್ವಯವಾಗಿ ನಿಂದುದು ನಿಜಭರಿತಾರ್ಪಣ.

ಹೀಗಲ್ಲದೆ ಸಕಲವಿಷಯದಲ್ಲಿ ಹರಿದಾಡುತ್ತ

ಆಮಿಷ ತಾಮಸ ರಾಗ ದ್ವೇಷದಲ್ಲಿ ಬೇವು

ಇಂತಿವನರಿಯದ ತಮಗೆ ಸಂದುದಲ್ಲದೆ ಮರೆಯೊಂದು ಬಂದಡೆ,


೧೭೩
ಅಕ್ಕಮ್ಮನ ವಚನಗಳು

ಆ ಲಿಂಗಪ್ರಸಾದವ ಇರಿಸಬಹುದೆ ?

ನೇಮ ತಪ್ಪಿ ಸೋಂಕಿದಲ್ಲಿ ಕೊಳ್ಳಬಹುದೆ ?

ಇಂತೀ ಅರ್ಪಿತದ ಸೋಂಕ , ಭರಿತಾರ್ಪಣದ ಪರಿಭಾವವ

ನಿಮ್ಮ ನೀವೆ ನಿಶ್ಚಿಸಿಕೊಳ್ಳಿ


|| ೧೧೮ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ .

೫೫೩

ಲಿಂಗರೂಪನೋಡುವಲ್ಲಿ , ಗುರುಲಿಂಗಜಂಗಮವನರಿವಲ್ಲಿ,
CH
ಕಂಡ ದೋಷಸರಿಸುವದು ವ್ರತಾಂಗಿಗಳಿಗುಂಟೆ ?

ಅರ್ಥ ಪ್ರಾಣ ಅಭಿಮಾನವನ್ನು ಗುರುಲಿಂಗಜಂಗಮಕ್ಕೆಂದಿತ್ತು .

ಮರ್ತ್ಯರು ಕೊಲುವಾಗ ಸತ್ತ ಸಾವ ನೋಡುತ್ತ

ಮತ್ತವರಿಗಿನ್ನೆತ್ತಣ ವ್ರತ ಆಚಾರ ಭ್ರಷ್ಟರಿಗೆಲ್ಲಕ್ಕೆ ?

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು

ನೇಮಕ್ಕೆ ತಪ್ಪಿದಡೆ ಹೊರಗೆಂಬೆ . || ೧೧೯ ||

೫೫೪

ಲಿಂಗಸೀಮೆ ಸೀಮೋಲ್ಲಂಘನವಾದಲ್ಲಿ ,

ಸೀಮೆಯ ಮೀರಿದಲ್ಲಿ ಪ್ರಾಣಯೋಗವಾಗಬೇಕು.

ಆ ಗುಣ ತೋರುವುದಕ್ಕೆ ಮುನ್ನವೆ ಸಾವಧಾನಿಯಾಗಿರಬೇಕು.

ಲೌಕಿಕ ಮೆಚ್ಚಬೇಕೆಂಬುದಕ್ಕೆ , ಭಕ್ತರೊಪ್ಪಬೇಕೆಂಬುದಕ್ಕೆ ,

ಉಪಾಧಿಕೆಯ ಮಾಡುವಲ್ಲಿ ವ್ರತ ಉಳಿಯಿತ್ತು, ಆಚಾರ ಸಿಕ್ಕಿತ್ತು .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು

ಆತನ ದೃಕ್ಕಿಂಗೆ ಹೊರಗಾದ . || ೧೨೦ ||

ವಿಪ್ರಂಗೆ ವೇದಮಂತ್ರವ ಬಿಟ್ಟು ವಿಜಾತಿಯಲ್ಲಿ ಬೆರಸಲಿಕ್ಕೆ

ಸುಜಾತಿಗೆ ಹೊರಗಪ್ಪರು ನೋಡಾ.

ಶ್ರೀ ವಿಭೂತಿಶ್ರೀ ರುದ್ರಾಕ್ಷಿ ಶಿವಲಿಂಗ ಮುಂತಾದ

ನಾನಾ ವ್ರತ ನೇಮ ನಿತ್ಯದ ಭಾವವ ಬಿಟ್ಟು ಬಂದವನ

ಗುರುವಾದಡು ಲಿಂಗವಾದಡು ಜಂಗಮವಾದಡು ನೋಡಿದಡೆ ನುಡಿಸಿದಡೆ

ಆ ಘಟವಿದ್ದೆಡೆಯಲ್ಲಿ ನಾನಿದ್ದೆನಾದಡೆ ಎನ್ನ ವ್ರತಕ್ಕದೆ ಭಂಗ.

ಅನುಸರಣೆಯಲ್ಲಿ ಬಂದವರ ಕಂಡು ಕೇಳಿ


೧೭೪
ಶಿವಶರಣೆಯರ ವಚನಸಂಪುಟ

ಅವರ ಅಂಗಳವಕೂಡಿಕೊಂಡವರ

ಇದ ನಾನರಿತು ಅಂಗೀಕರಿಸಿದೆನಾದಡೆ ಇಹಪರಕ್ಕೆ ಹೊರಗು. .


ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾದಡೂ

ವ್ರತಬಾಹ್ಯವಾದಡೆ ಎತ್ತಿಹಾಕುವೆನು. || ೧೨೧ ||

ವಿಷವ ಅಂಗಕ್ಕೆ ಕೊಂಡು ವೇಧಿಸಿದಲ್ಲಿ ,

ಆವ ಠಾವಿನಲ್ಲಿ ಗಾಯ ? ಅದಾವ ಠಾವಿನ ಕುರುಹು ?

ಲಿಂಗದಷ್ಟ ಅಂಗಕ್ಕಾದಲ್ಲಿ ಅದಾರಿಗೆ ಮೊರೆ ? ಅದಾರಿಗೆ ಕೈಲೆಡೆ ?

ಆಚಾರಗೂಡಿಯೆ ಆ ಘಟವಳಿಯಬೇಕು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ

ಇದಿರೆಡೆಯಿಲ್ಲದೆಕೂಡಬೇಕು. || ೧೨೨ ||

೫೫೭

ವೇಷ ಎಲ್ಲಿರದು ? :

ಸೂಳೆಯಲ್ಲಿ , ಡೊಂಬನಲ್ಲಿ , ಭೈರೂಪನಲ್ಲಿರದೆ ?

ವೇಷವ ತೋರಿಒಡಲ ಹೊರೆವ

ದಾಸಿ ವೇಶಿಯ ಮಕ್ಕಳಿಗೆ ನಿಜಭಕ್ತಿ ಎಲ್ಲಿಯದೊ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ? || ೧೨೩ ||

ವ್ರತನೇಮ ಶೀಲಮಂ ಮಾಡಿಕೊಂಡು,

ಸಮಯಾಚಾರದಲ್ಲಿ ನಡೆದೆನೆಂಬ ಭಕ್ತನಕ್ರಮವೆಂತೆಂದಡೆ :

ತಾನು ಭೋಗಿಸುವಂತಹ ಸಕಲದ್ರವ್ಯಂಗಳೆಲ್ಲವನು,

ಜಂಗಮಕ್ಕೆ ಕೊಟ್ಟು ತಾನು ಕೊಳಬೇಕು.

ಅವಾವೆಂದಡೆ :

ಮಜ್ಜನ ಭೋಜನ ಅಂದಣ ಸತ್ತಿಗೆ ಚಾಮರ ಆನೆ ಕುದುರೆ

ಕನ್ನಡಿ ಪರಿಮಳ ಲೇಪನ ಗಂಧ ಅಕ್ಷತೆ ವಸ್ಯ ರತ್ನಾಭರಣ

ತಾಂಬೂಲ ಮಟ್ಟಡಿ ಮಂಚ ಸುಪ್ಪತ್ತಿಗೆ ಒಡೆಯರಿಗೆ ಆಯಿತೆಂಬುದ ಕೇಳಿ,

ಆ ಒಡೆಯನ ವಾಕ್ಯಪ್ರಸಾದದಿಂದ, ಮಹಾಪ್ರಸಾದವೆಂದು

ಎಲ್ಲ ವ್ರತಗಳಿಗೆಯೂ ಜಂಗಮಪ್ರಸಾದವೆ ಪ್ರಾಣ,


೧೭೫
ಅಕ್ಕಮ್ಮನ ವಚನಗಳು

ಎಲ್ಲ ಶೀಲಕ್ಕೆಯೂ ಜಂಗಮದ ಮಾಟವೆ ಶೀಲ,

ಎಲ್ಲ ವ್ರತ ನೇಮ ಶೀಲಂಗಳೆಲ್ಲವು

ಜಂಗಮವ ಮುಂದಿಟ್ಟು ಶುದ್ಧತೆಯಹಕಾರಣ ,

ಆ ಜಂಗಮದಲ್ಲಿ ಅರ್ಥ , ಪ್ರಾಣ, ಅಭಿಮಾನ ಮುಂತಾದ

ಈ ಮೂರಕ್ಕು ಕಟ್ಟು ಮಾಡಿದೆನಾದಡೆ ಎನಗೆದ್ರೋಹ.

ಆ ಜಂಗಮದ ದರ್ಶನದಿಂದವೆ ಸಕಲದ್ರವ್ಯಂಗಳು ಪವಿತ್ರವು;

ಆ ಜಂಗಮಪ್ರಸಾದದಿಂದವೆ ಮಹಾಘನಲಿಂಗಕ್ಕೆ ತೃಪ್ತಿ .

ಇಷ್ಟನರಿದ ಬಳಿಕ ಜಂಗಮಲಿಂಗಕ್ಕೆ ಸಂದೇಹವ ಮಾಡಿದೆನಾದಡೆ

ಎನಗೆ ಕುಂಭೀಪಾತಕ ನಾಯಕನರಕ ತಪ್ಪದು.

ಈ ಜಂಗಮದ ಭಕ್ತಿ ಕಿಂಚಿತ್ತು ಕೊರತೆ ಇಲ್ಲದ ಹಾಗೆ ಜೀವವುಳ್ಳ ಪರಿಯಂತರ

ಇದೆ ಆಚಾರವಾಗಿ, ಇದೇ ಪ್ರಾಣವಾಗಿ ನಡೆದು,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನೊಡಗೂಡುವೆನು || ೧೨೪ ||

೧೫೯

ವ್ರತನೇಮಿಯಾಗಿರ್ದಲ್ಲಿ, ಹಿರಿಯರು ಭಕ್ತರು ಮಿಕ್ಕಾದ ಮನುಜರ

ಸರಸಮೇಳ, ಪರಿಹಾಸಕಂಗಳಲ್ಲಿಂದ ಕೆಲದಲ್ಲಿ ನಿಂದಿತ್ತು .

ವ್ರತ ಹೋಯಿತ್ತು , ಆಚಾರ ಕೆಟ್ಟಿತ್ತು .

ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ದೂರವಾಯಿತ್ತು. || ೧೨೫ ||

ವ್ರತವನಾಶ್ರಯಿಸಿದ ಮತ್ತೆ ಹುಸಿ ನುಸುಳು ಕೊಲೆ ಕಳವು


ಪಾರದ್ವಾರವ ಮಾಡುವನ್ನಬರ

ವ್ರತಸ್ಥನಲ್ಲ , ನೇಮಕ್ಕೆ ಸಲ್ಲ , ಅವಂಗಾಚಾರವಿಲ್ಲ .


ಅವ ರಾಜನೆಂದು ದ್ರವ್ಯದಾಸೆಗಾಗಿ ಅವನ ಮನೆಯ ಹೊಕ್ಕು

ವಿಭೂತಿ ವೀಳೆಯ ಮೊದಲಾದ ಉಪಚಾರಕ್ಕೊಳಗಾದವ

ಸತ್ಯಕುಕ್ಕುರನ ಕೀಟಕ ತಿಂದು ಅದು ಸತ್ತಡೆ ತಾ ತಿಂದಂತೆ

ಪಂಚಾಚಾರಶುದ್ಧಕ್ಕೆ ಹೊರಗು.

ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ಮುನ್ನವೆ ಹೊರಗು. || ೧೨೬ ||

೫೬೧

ವ್ರತವ ಮಾಡಿಕೊಂಡಲ್ಲಿ ರತಿಗೆಡದೆ,ಕ್ಷೇತ್ರವಾಸ೦ಗಳ ಬೇಡದೆ,

ಪಡಿವರ ಧಾನ್ಯಗಳೆಂದು, ಗುಡಿಗಳ ಹೊಕ್ಕು,

ಸರಿಗರತಿಯರಲ್ಲಿ ಅಡುಮೆಯಾಗದೆ
೧೭೬
ಶಿವಶರಣೆಯರ ವಚನಸಂಪುಟ

ಭಕ್ತರಲ್ಲಿ ಬೇಡುವಾಗಳೆ ಕೆಟ್ಟಿತ್ತು ವ್ರತ.

ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ದೂರ. || ೧೨೭ ||

- ೫೬೨

ವ್ರತವ ಹಿಡಿವಲ್ಲಿ , ವ್ರತವ ಉಪದೇಶ ಮಾಡುವಲ್ಲಿ ,

ಹಿಡಿವಾತನ ಯುಕ್ತಿ ಎಂತೆಂದಡೆ :

ಮನ, ವಚನ, ಕಾಯ , ತ್ರಿಕರಣಶುದ್ಧಾತ್ಮನಾಗಿ,

ಸತಿ, ಸುತ, ಬಂಧುವರ್ಗಂಗಳೆಲ್ಲವು ಏಕತ್ರವಾಗಿ,

ನಡೆವುದ ನಡೆಯದಿಹುದೆಂಬುದ ಸ್ಟಿರಕರಿಸಿ,

ಶ್ರುತ, ದೃಷ್ಟ , ಅನುಮಾನ, ಮೂರನೊಂದುಮಾಡಿ

ಮತ್ತೆ ಏನುವ ತೋರದ ವ್ರತವಸ್ತುವನಾದರಿಸಬೇಕು.

ವ್ರತ ದೀಕ್ಷೆಯ ಮಾಡುವಲ್ಲಿ ಗುರುವಿನ ಇರವೆಂತೆಂದಡೆ :

ಅವನ ಆಗು ಚೇಗೆಯನರಿತು ಅರ್ತಿಕಾರರಿಗೆ ಇದಿರು ಮೆಚ್ಚುವಭೇದ.

ಹಿರಣ್ಯದ ಒದಗಿನ ಲಾಗು, ಕೊಲೆ ಹಗೆಯಪ್ಪನ

ರಾಗವಿರಾಗಗಳೆಂಬ ಭಾವವ ವಿಚಾರಿಸಿ,

ಈ ವ್ರತ ನೇಮ ನಿನಗೆ ಲಾಗಲ್ಲ ಎಂದು ಅರೆಬಿರಿದಿನ ನೇಮ .

ತೊಡಕಿನಂಬಿನ ಘಾಯ ತಪ್ಪಿದಡೆ

ಇಹಪರದಲ್ಲಿ ಉಭಯದೋಷ,

ಹೀಗೆಂದು ಉಪದೇಶಮಂ ಕೊಟ್ಟು ಸಂತೈಸುವುದು ಗುರುಸ್ಥಲ.

ಆ ಗುಣಕ್ಕೆ ಮುಯ್ಯಾಂತು, ಪರಮಹರುಷಿತನಾಗಿ, ..

ಗಣಸಮೂಹಂಕೂಡಿ, ಪರಮ ವಿರಕ್ತರಂ ಕರೆದು,

ಮಹತ್ತು ನೆರಹಿ , ಗುರುಲಿಂಗಜಂಗಮಸಾಕ್ಷಿಯಾಗಿ ಮಾಡುವುದೆ ವ್ರತ.

ಹೀಗಲ್ಲದೆ, ಮನಕ್ಕೆ ಬಂದಂತೆ, ತನು ಹರಿದಾಡುವಂತೆ,

ಊರೂರ ದಾರಿಗರಲ್ಲಿ ವ್ರತವ ಮಾಡಿಕೊಳ್ಳಿಯೆಂದು ಸಾರಲಿಲ್ಲ .

ಇಂತೀ ಉಭಯವನರಿತು ವ್ರತಕ್ಕೆ ಅರ್ಹನಾಗಬೇಕು.

ಇಂತೀ ಸರ್ವಗುಣಸಂಪನ್ನ ಮಾಡಿಸಿಕೊಂಬವನೂ ತಾನೆ,

ಮಾಡುವಾತನೂ ತಾನೆ.
|| ೧೨೮ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.

೫೬೩

ವ್ರತವೆಂಬುದೇನು ? ಮನವಿಕಾರಿಸುವುದಕ್ಕೆ ಕಟ್ಟಿದ ಗೊತ್ತು.

ಜಗದ ಕಾಮಿಯಂತೆ ಕಾಮಿಸದೆ,


೧೭೭
ಅಕ್ಕಮ್ಮನ ವಚನಗಳು

ಜಗದಕ್ರೋಧಿಯಂತೆಕ್ರೋಧಿಸದೆ,

ಜಗದಲೋಭಿಯಂತೆ ಲೋಭಿಸದೆ,

ಮಾಯಾಮೋಹಂಗಳು ವರ್ಜಿತವಾಗಿ

ಮನಬಂದಂತೆ ಆಡದೆ, ತನಬಂದಂತೆ ಕೂಡದೆ

ವ್ರತದಂಗಕ್ಕೆ ಸಂಗವಾಗಿ ನಿಂದ ಸದ್ಭಕ್ತನ ಅಂಗವೆ


|| ೧೨೯ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ.

RED

ವ್ರತವೆಂಬುದೇನು ? ವಸ್ತುವ ಕಾಂಬುದಕ್ಕೆ ನಿಚ್ಚಣಿಕೆ.

ವ್ರತವೆಂಬುದೇನು ? ಇಂದ್ರಿಯಂಗಳ ಸಂದಮುರಿವ ಕುಲಕುಠಾರ.

ವ್ರತವೆಂಬುದೇನು ? ಸಕಲ ವ್ಯಾಪಕಕ್ಕೆ ದಾವಾನಳ.


ವ್ರತವೆಂಬುದೇನು ? ಸರ್ವದೋಷನಾಶನ.

ವ್ರತವೆಂಬುದೇನು ? ಚಿತ್ರಸುಯಿದಾನದಿಂದ

ವಸ್ತುವ ಕಾಂಬುದಕ್ಕೆ ಕಟ್ಟಿದ ಗುತ್ತಗೆ.

ವ್ರತವೆಂಬುದೇನು ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು

ಅವರಿಗೆ ತತ್ಕಲಮಗನಾಗಿಪ್ಪನು. || ೧೩೦ ||

೫೬

ವ್ರತವೆಂಬ ಸೀಮೆಯ ವಿವರವೆಂತುಟೆಂದಡೆ :

ಬೀಗಿ ಬೆಳೆದ ಹೊಲಕ್ಕೆ ಬೇಲಿಯ ಕಟ್ಟಿದಡೆ ಚೇಗೆಯುಂಟೆ ?

ಹಾವ ಪಶುವಿಂಗೆ ಮಾಣಿಸಿದಡೆ ದೋಷಉಂಟೆ ?

ಗಾವಿಲಂಗೆ ಭಾವದ ಬುದ್ದಿಯ ಹೇಳಿದವಂಗೆ ನೋವುಂಟೆ ?

ಬೇವ ನೋವಕಾಯಕ್ಕೆ ಜೀವವೆಂಬ ಬೆಳಗೇ ವ್ರತ.

ಭಾವವೆಂಬ ಬೇಲಿಯ ಸಾಗಿಸಿಕೊಳ್ಳಿ.

ಲೂಟಿಗೆ ಮೊದಲೆ ಬಸವ ಚೆನ್ನಬಸವಣ್ಣ ಪ್ರಭುದೇವ ಮೊದಲಾಗಿ

ಶಂಕೆಗೆ ಮುನ್ನವೆಹೋದಹೆನೆಂಬ ಭಾವತೋರುತ್ತಿದೆ.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ

ಏಲೇಶ್ವರದ ಗೊತ್ತು ಕೆಟ್ಟಿತ್ತು . || ೧೩೧ ||

೫೬೬

ವ್ರತಾಚಾರವ ಅವಧರಿಸಿದ ಭಕ್ತಂಗೆ

ಕತ್ತಿ ಕೋಲು ಅಂಬು ಕಠಾರಿ ಈಟಿಕೊಡಲಿ


೧೭೮
ಶಿವಶರಣೆಯರ ವಚನಸಂಪುಟ

ಮತ್ತಾವ ಕುತ್ತುವ ಕೊರವ ಹಾಕುವ , ಗಾಣ ಮುಂತಾಗಿ

ದೃಷ್ಟದಲ್ಲಿ ಕೊಲುವ ಕೈದ ಮಾಡುತ್ತ ,

ಮತ್ತೆ ಅವ ವ್ರತಿಯೆಂದಡೆ ಮೆಚ್ಚುವರೆ ಪರಮಶಿವೈಕ್ಯರು ?

ಇಂತಿವ ಶ್ರುತದಲ್ಲಿ ಕೇಳಲಿಲ್ಲ ,

ದೃಷ್ಟದಲ್ಲಿ ಕಾಣಲಿಲ್ಲ , ಅನುಮಾನದಲ್ಲಿ ಅರಿಯಲಿಲ್ಲ .

ಸ್ವಪ್ನದಲ್ಲಿ ಕಂಡಡೆ ಎನ್ನ ವ್ರತಕ್ಕದೇ ಭಂಗ .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಒಲ್ಲೆನು


|| ೧೩೨ ||

೫೬೭

ವ್ರತಾಚಾರವೆಂದು ಹೆಸರಿಟ್ಟುಕೊಂಡಿಪ್ಪರಯ್ಯಾ !

ವ್ರತವೆಂದೇನು ಆಚಾರವೆಂದೇನು ?

ಅನ್ಯರು ಮಾಡಿದ ದ್ರವ್ಯವನೊಲ್ಲದಿಪುದು ವ್ರತವೆ ?

ಆರನು ಕರೆಯದಿಪುದು ಆಚಾರವೆ ?

ಪರಸ್ತ್ರೀ ಪರಧನಂಗಳಲ್ಲಿ ನಿಂದೆಗೆ ಓಡಲಾಗದಿದ್ದುದೆ ವ್ರತ.


ಸರ್ವಭೂತಹಿತನಾಗಿ ದಯವಿದ್ದುದೆ ಆಚಾರ.

ಇಂತೀ ಕ್ರೀಯನರಿತು,ಕ್ರೀಯ ಶುದ್ಧತೆಯಾಗಿ ನಿಂದುದೆ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ . || ೧೩ ||

೫೬೮

ವ್ರತಾಚಾರವೆಂಬುದು ತನಗೊ , ತನ್ನ ಸತಿಗೊ , ಇದಿರ ಭೂತಹಿತಕೊ ?

ತಾನರಿಯದೆ ತನಗೆ ವ್ರತ ಉಂಟೆ ?

ವ್ರತಾಚಾರಿಗಳ ಗರ್ಭದಿಂದ ಬಂದ ಶಿಶುವ ಅನ್ಯರಿಗೆ ಕೊಡಬಹುದೆ ?

ವ್ರತಾಚಾರವಿಲ್ಲದವರಲ್ಲಿ ತಂದು ವ್ರತವ ಮಾಡಬಹುದೆ ?

ಇಂತೀ ತಮ್ಮ ಕ್ರೀಮಂತರಲ್ಲಿಯೆ ತಂದುಕಿವಂತರಲ್ಲಿಯೆ ಕೊಟ್ಟು

ಉಭಯ ಭಿನ್ನವಿಲ್ಲದೆ ಇಪ್ಪುದೆ ಸಜ್ಜನವ್ರತ, ಸದಾತ್ಮ ಯುಕ್ತಿ ;

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಮುಕ್ತಿ . || ೧೩೪ ||

೫೬೯

ಪ್ರತಿಗಳ ಮನೆಗೆ ಪ್ರತಿಗಳು ಬಂದಲ್ಲಿ

ಎನ್ನ ಮನೆಗೆ ಇವರು ಬಂದರೆಂದು ಭಿನ್ನಭಾವವಾದಾಗಲೆ

ವ್ರತಕ್ಕೆ ದೂರ, ಆಚಾರಕ್ಕೆ ಕೊರತೆ.

ತಮ್ಮ ಮನೆಗೆ ತಾವು ಬಂದರಂದು ಅನ್ಯಭಿನ್ನವಿಲ್ಲದೆ


೧೭೯
ಅಕ್ಕಮ್ಮನ ವಚನಗಳು

ಅರ್ಥ ಪ್ರಾಣ ಅಭಿಮಾನವೆಂದು ಕಟ್ಟುಮಾಡಿದಡೆ

ಸಮಯಾಚಾರಕ್ಕೆ ದೂರ
|| ೧೩೫ ||
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಒಪ್ಪದ ನೇಮ .

ಸಂದೇಹವ ಹರಿದವಂಗಲ್ಲದೆ ಸಹಭೋಜನ ಭಾಜನವಿಲ್ಲ .

ಸಂದಿತ್ತು ಸಲ್ಲದೆಂಬ ಸಂಕಲ್ಪವಳಿದವಂಗಲ್ಲದೆ ಭರಿತಾರ್ಪಣವಿಲ್ಲ .

ನೇಮ ತಪ್ಪಿದಲ್ಲಿ ಆಶೆಯು ಬಿಟ್ಟವಂಗಲ್ಲದೆ ಸರ್ವವ್ರತದ ದೆಸೆಯಿಲ್ಲ .

ಇಂತೀ ಆಶೆಯ ಪಾಶದಿಂದ ತಾ ಹಿಡಿದ ವ್ರತದ ಭಾಷೆಯ ತಪ್ಪಿ

ಮತ್ತೆ ಪ್ರಾಯಶ್ಚಿತ್ತವೆಂದಲ್ಲಿ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾದಡೂ

ಇಹಪರಕೆ ಹೊರಗೆಂದು ಡಂಗುರವಿಕ್ಕುವ. || ೧೩೬ ||

- ೫೭೧

ಸಂದೇಹವುಳ್ಳನ್ನಕ್ಕ ವ್ರತಾಂಗಿಯಲ್ಲ .

ಅಲಗಿನ ಮೊನೆಗಂಜುವನ್ನಕ್ಕ ಪಟುಭಟನಲ್ಲ .

ತ್ರಿವಿಧದ ಅಂಗವುಳ್ಳನ್ನಕ್ಕ ಲಿಂಗಾಂಗಿಯಲ್ಲ .

ಸೋಂಕು ಬಂದಲ್ಲಿ ಆ ಅಂಗವ ಬಿಡದಿದ್ದಡೆಶೀಲವಂತನಲ್ಲ .

ಈ ನೇಮಂಗಳಲ್ಲಿ ನಿರತನಾದವಂಗೆ

ಅಲ್ಲಿ ಇಲ್ಲಿಯೆಂಬ ಅಂಜಿಕೆ ಎಲ್ಲಿಯೂ ಇಲ್ಲ ;

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಯೂ ಇಲ್ಲ . ||

೫೭೨

ಸದೈವ ಆವಾವ ಗೋತ್ರದಲ್ಲಿ ಬಂದಡೂ ಎಣ್ಣೆ ನೀರಿನಂತೆ,

ಮಣ್ಣು ಹೊನ್ನಿನಂತೆ,

ತನ್ನ ಅನು ಆಚಾರಕ್ಕೆ ಬಂದವರ ತನ್ನವರೆಂದು ಭಾವಿಸಬೇಕಲ್ಲದೆ,

ತನ್ನ ಆಚಾರಕ್ಕೆ ಹೊರಗಾದವರ

ಅಣ್ಣ ತಮ್ಮನೆಂದು ತಂದೆ ತಾಯಿಯೆಂದು,

ಮಿಕ್ಕಾದವರ ಹೊನ್ನು ಹೆಣ್ಣು ಮಣ್ಣಿನವರೆಂದು,

ದಿಕ್ಕುದೆಸೆಯೆಂದು ಅಂಗೀಕರಿಸಿದಡೆ, ಅವರಂಗಳವಕೂಡಿದಡೆ,

ಅವರೊಂದಾಗಿ ನುಡಿದಡೆ, ಭಕ್ತರು ಸತ್ಯರಿಗೆ ಮುನ್ನವೆ ಹೊರಗು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರ ಒಳಗಿಟ್ಟುಕೊಳ್ಳ, || ೧೩೮ ||


೧೮೦
ಶಿವಶರಣೆಯರ ವಚನಸಂಪುಟ

೫೭೩

ಸಪ್ಪೆಯ ವ್ರತವೆಂಬುದ ನಾವರಿಯೆವು, ನೀವುಹೇಳಿರಯ್ಯಾ,

ಸರ್ವ ಫಲರಸ ಮೃತ ತೈಲ ಮಧುರ ವಿದಳಧಾನ್ಯ ಮುಂತಾದವಕ್ಕೆ

ಎಲ್ಲಕ್ಕೂ ತಮ್ಮ ತಮ್ಮಲ್ಲಿಯ ರುಚಿ ಸಪ್ಪೆಯ ನೇಮವನೊಂದನೂ ಕಾಣೆ.


ಇದ ನೀವೆ ಬಲ್ಲಿರಿ.

ಸಪ್ಪೆ ಯಾವುದೆಂದಡೆ ಸುಖ - ದುಃಖಗಳೆಂಬುದನರಿಯದೆ,

ತನುವಾಡಿದಂತೆ ಆಡದೆ, ಮನ ಹರಿದಂತೆ ಹರಿಯದೆ,

ಬಯಕೆ ಅರತು ಭ್ರಾಮಕ ಹಿಂಗಿ ಸರ್ವವಿಕಾರ ವಿಸರ್ಜನವಾಗಿ,

ಹಿಂದಾದುದ ಮರೆದು ಮುಂದಕ್ಕೆ ಗತಿಯೆಂದು ಒಂದ ಕಾಣದೆ,

ಹಿಂದು ಮುಂದೆಂದು ಒಂದನರಿಯದಿದ್ದುದೆ ಸಪ್ಪೆ .

ಇದು ಅಂತರಂಗದ ವ್ರತ; ಲವಣವ ಬಿಟ್ಟುದು ಬಹಿರಂಗ ಶೀಲ.

ಇಂತೀ ಉಭಯವ್ರತ ಏಕವಾದಲ್ಲಿ ಸರ್ವಸಪ್ಪೆ ಸಂದಿತ್ತು

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ

ಸಪ್ಪೆಯ ವ್ರತ ಅರ್ಪಿತವಾಯಿತ್ತು. || ೧೩ ||

೫೭೪

ಸಮಶೀಲನೇಮ ಒಂದಾದಲ್ಲಿ ಉಡುವ ತೊಡುವಕೊಡುವ ಕೊಂಬ

ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ

ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂ

ಅಂಗ ಹಲವಲ್ಲದೆ ಕುಂದಣ ಒಂದೆ ಭೇದ.

ನೇಮ ಹಲವಲ್ಲದೆ ಜ್ಞಾನವೊಂದೆ ಭೇದ.

ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿಒಂದೆ.

ತಾ ಮುಂದಿಕ್ಕುವ ಯೋನಿಒಂದಾದ ಕಾರಣ .

ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ.

ಇದು ತಪ್ಪದ ಆಚಾರ , ಇದಕ್ಕೆ ಮಿಥ್ಯತಥ್ಯವಿಲ್ಲ , ತಪ್ಪದು ನಿಮ್ಮಾಣೆ.

ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ . || ೧೪೦ ||

೫೭೫

ಸಮಶೀಲಸಂಪಾದಕರು ಬಂದಿದ್ದಲ್ಲಿ

ತಮ್ಮ ತಮ್ಮನೆಯಲ್ಲಿ ವಿಶೇಷ ದ್ರವ್ಯವ ಸಂಚವಿರಿಸಿ

ಇದ್ದುದನಿದ್ದಂತೆ ಎಡೆಮಾಡೆಂದಡೆ ಬದ್ಧಕತನವಲ್ಲದೆ ಆ ವ್ರತ ನಿರ


೧೮೧
ಅಕ್ಕಮ್ಮನ ವಚನಗಳು

ಆ ಹರಶರಣರು ಮನೆಯಲ್ಲಿ ಬಂದರೆ ಅವರ ಮಲಗಿಸಿ,

ತಾ ತನ್ನ ಸತಿಯ ನೆರೆದಡೆ, ಅವರ ನಿಲಿಸಿ ತಾ ಮತ್ತೊಂದಕ್ಕೆ ಹೋದಡೆ,

ಶರಣಸಂಕುಳಕ್ಕೆ ಹೊರಗು,

ಅವರಲ್ಲಿ ಮುಖ್ಯಾಂತು ಬೀಳ್ಕೊಂಡು ತನ್ನ ಸಂದೇಹ ಒಂದೂ ಇಲ್ಲದಂತ

ಉಭಯವ ತಿಳಿದು ಮಾಡುವ ಮಾಟಕ್ಕೆ ಹಿಡಿದ ವ್ರತಕ್ಕೆ

ಭಾವಶುದ್ಧವಾಗಿ ಇಪ್ಪುದು
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಸಂಪಾದನೆ . || ೧೪೧ ||

- ೫೭೬

- ಸರಸಕ್ಕೆ ಸತ್ತವರುಂಟೆ ? ವಿನೋದಕ್ಕೆ ಪಾರದ್ವಾರ ಉಂಟೆ ?

ಅರ್ತಿಯೆಂದು ಕಣ್ಣ ಕುತ್ತಿದಡೆ ಆ ಕೆಟ್ಟ ಕೇಡು ಅದಾರಿಗೆ ಪೇಳಾ ?

ಸತ್ಯನಾಗಿದ್ದು ಭಕ್ತರು ಜಂಗಮದಲ್ಲಿ

ಚಚ್ಚಗೋಷ್ಠಿಯನಾಡುವ

ಮಿಟ್ಟಿಯ ಭಂಡರಿಗೆ ಸತ್ಯ ಸದಾಚಾರ ಮುಕ್ತಿಭಾವ ಒಂದೂ ಇಲ್ಲ .


ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದನೇಮ. || ೧೪೨ ||

೫೭೭

ಸರ್ವ ಇಂದ್ರಿಯಗಳ ಒಂದು ಮುಖವ ಮಾಡಿ

ಸರ್ವ ಮೋಹಂಗಳಲ್ಲಿ ನಿರ್ಮೋಹಿತನಾಗಿ,

ಅಂಗದಿಚ್ಛೆಯ ಮರೆದು ವ್ರತವೆಂಬ ಆಚಾರಲಿಂಗವ ಧರಿಸಬೇಕಲ್ಲದೆ

ತನುವಿಗೆ ಬಂದಂತೆ ಮುಟ್ಟಿ , ಮನಕ್ಕೆ ಬಂದಂತೆ ಹರಿದು,

ನಾನಿಲ್ಲಿ ಒಬ್ಬ ಶೀಲವಂತನಿದ್ದೇನೆ ಎಂದು

ಕಲಹಟ್ಟಿಯಂತೆ ಕೂಗುತ್ತ ಕೊರಚುತ್ತ ಅಲ್ಲಿ ಬೊಬ್ಬಿಡುತ್ತ

ಶೂಲವನೇರುವ ಕಳ್ಳನಂತೆ ಬಾಹ್ಯದಲ್ಲಿ ಬಾಯಾಲುವ,


ಮನದಲ್ಲಿ ಸತ್ತೆಹೆನೆಂಬ ಸಂದೇಹದವನಂತೆ ಸಾಯದೆ,

ಹೊರಗಣ ಕ್ರೀ ಶುದ್ಧವಾಗಿ, ಒಳಗಳ ಆತ್ಮ ಶುದ್ಧವಾಗಿ,


ಉಭಯ ಶುದ್ದವಾಗಿಪುದು ಪಂಚಾಚಾರ ನಿರುತ,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸರ್ವಾಂಗಭರಿತನು. || ೧

- ೫೭೮

ಸರ್ವಮಯ ಲಿಂಗಾಂಕಿತಸೀಮೆಯಾಗಬೇಕೆಂಬಲ್ಲಿ

ಆ ಘನವ ತಿಳಿದು ತನ್ನ ತಾನೆ ವಿಚಾರಿಸಿಕೊಂಬಲ್ಲಿ

ಸ್ಕೂಲತನುವಿನಲ್ಲಿ ಕಾಬ ಕಾಣಿಕೆ ದೃಷ್ಟವಾಗಿ ಲಿಂಗಾಂಕಿತ.


೧೮೨
ಶಿವಶರಣೆಯರ ವಚನಸಂಪುಟ

ಸೂಕ್ಷ್ಮತನುವಿನಲ್ಲಿ ಕಾಬ ಕಾಣಿಕೆ ಎಚ್ಚತ್ತಲ್ಲಿ ಬಯಲಾಯಿತ್ತು ಲಿಂಗ

ಕಾರಣದಲ್ಲಿ ಪ್ರಮಾಣಿಸುವುದಕ್ಕೆ ಲಿಂಗಾಂಕಿತಕ್ಕೆ ಒಡಲಾವುದು ?

ಇದ ನಾನರಿಯೆ , ನೀವೆ ಬಲ್ಲಿರಿ.

ಜಾಗ್ರ , ಸ್ವಪ್ನ, ಸುಷುಪ್ತಿಗಳಲ್ಲಿ ಕಾಬ ಲಿಂಗಾಂಕಿತದ ಭೇದ ನೇಮವಾವು

ಜಾಗ್ರದಲ್ಲಿ ತೋರುವ ನಿಜ ಸ್ವಪ್ನಕ್ಕೊಡಲಾಗಿ,

ಸ್ವಪ್ನದಲ್ಲಿ ತೋರುವ ನಿಜ ಸುಷುಪ್ತಿಗೊಡಲಾಗಿ,

ಉಭಯದಲ್ಲಿ ಕೂಡಿದ ಕೂಟ ತನ್ಮಯಲಿಂಗಾಂಕಿತವಾಯಿತ್ತು .

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೇಪವಾಗಿ, || ೧೪

- ಆ೭೯

ಸರ್ವಶೀಲದ ವ್ರತದಾಯತವಂತುಟೆಂದಡೆ :

ತನ್ನ ವ್ರತವಿಲ್ಲದ ಗುರುವ ಪೂಜಿಸಲಾಗದು.

ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದು.

ವ್ರತವಿಲ್ಲದವರ ಅಂಗಳವ ಮೆಟ್ಟಲಾಗದು.

ಅದೆಂತೆಂದಡೆ :

ಗುರುವಿಗೂ ಗುರು ಉಂಟಾಗಿ, ಲಿಂಗಕ್ಕೂ ಉಭಯಸಂಬಂಧ ಉಂಟಾಗಿ,

ಆ ಜಂಗಮಕೂ ಗುರುಲಿಂಗ ಉಭಯವುಂಟಾಗಿ ಜಂಗಮವಾದ ಕಾರಣ .

ಇಂತೀ ಗುರುಲಿಂಗಜಂಗಮಕ್ಕೂ ಪಂಚಾಚಾರ ಶುದ್ಧವಾಗಿರಬೇಕು.

ಪುರುಷನ ಆಚಾರದಲ್ಲಿ ಸತಿ ನಡೆಯಬೇಕಲ್ಲದೆ ಸತಿಗೆ ಸ್ವತಂತ್ರ ಉಂಟೆ ?

ಇಂತೀ ಉಭಯದ ವ್ರತವೊಡಗೂಡಿದಲ್ಲಿ

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ವ್ರತವ ವಸ್ತು . || ೧೪

೫೮೦

ಸೀಮೋಲ್ಲಂಘನವೆಂಬುದ ನಾನರಿಯೆ , ನೀವೆ ಬಲ್ಲಿರಿ.

ಇದ್ದ ಮನೆಯ ಬಿಡಲಾರದೆ, ತೊಟ್ಟಿದ್ದ ತೊಡಿಗೆಯ ಅಳಿಯಲಾರದೆ,

ಇದ್ದ ಠಾವ ಬಿಟ್ಟು ಹೋಗೆನೆಂಬುದು ಛಲವೆ ?

ಅದು ತನ್ನ ಸೀಮೆಯೋ ಜಗದ ಸೀಮೆಯೋ ಎಂಬುದ ತಾನರಿಯಬೇಕು.

ತನ್ನ ಸೀಮೆಯಲ್ಲಿ ಬಂದಂಗವ ಜಗದ ಸೀಮೆಯಲ್ಲಿ ಅಳಿಯಬಹುದೆ

ತನ್ನಂಗಕ್ಕೆ ಕಂಟಕ ನೇಮ ತಪ್ಪಿ ಬಂದಲ್ಲಿ

ಅಂಗವ ಲಿಂಗದಲ್ಲಿ ಬೈಚಿಟ್ಟು ಕೂಡಿದ ಅಂಗಸೀಮೋಲ್ಲಂಘನ.


ಇಂತೀ ನೇಮ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಂದಿತ್ತು . ||
೧೮೩
ಅಕ್ಕಮ್ಮನ ವಚನಗಳು

to

ಸೆರೆಗೆ ಸತಿ ಸಿಕ್ಕಿದಲ್ಲಿ ಅಪಮಾನವನರಸಲಿಲ್ಲ .

ಹುತ್ತವನೇರಿ ಹುಲ್ಲ ಕಚ್ಚಿದಲ್ಲಿ ಪಟುಭಟತನವನರಸಲಿಲ್ಲ .

ವ್ರತಾಚಾರಕ್ಕರ್ಹನಾಗಿ ಭವಿದ್ರವ್ಯವನೊಲ್ಲೆನೆಂದು

ಆ ಭವಿಯ ಸೀಮೆಯ ಭಕ್ತನಕೈಯಿಂದ ಕೊಂಡು

ಭಕ್ತ ಕೊಟ್ಟನೆಂದು ತಕ್ಕೊಂಬ ಮಿಟ್ಟೆಯ ಭಂಡನ ಶೀಲ ಸಿಕ್ಕಿತ್ತು .

ಹೊಸ್ತಲ ಪೂಜಿಸುವ ಪಾಣ್ಣೆಯಂತಾಯಿತ್ತು .

ಇನ್ನಾರಿಗೆ ಹೇಳುವೆ ?

ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವೆ ನೀನೆ ಬಲ್ಲೆ . || ೧೪೭ ||

- ೫೮೨

ಸ್ಥಾವರಕ್ಕೆ ಲಿಂಗಮುದ್ರೆ, ಪಾಷಾಣಕ್ಕೆ ಲಿಂಗಮುದ್ರೆ,

ಗೋವಿಗೆ ಲಿಂಗಮುದ್ರೆ ,

ಮತಾವಾವ ರೂಪಿನಲ್ಲಿ ಲಿಂಗಾಂಕಿತವ ಮಾಡಿದಡೂ ಪ್ರೇತಾಂಕಿತಭೇದ.

ಅದೆಂತೆಂದಡೆ :

ತರು ಫಲವ ಹೊತ್ತಂತೆ ಸವಿಯನರಿಯವಾಗಿ,

ಮಾಡಿಕೊಂಡ ನೇಮಕ್ಕೆ ತಮ್ಮ ಭಾವದ ಶಂಕೆಯಲ್ಲದೆ

ಧರಿಸಿದ್ದವು ಇದಾವ ಲಿಂಗವೆಂದರಿಯವು.

ತಾನರಿದು ಆ ವ್ರತನೇಮ ಮಾಟವ ಮಾಡುವಲ್ಲಿ

ಶೀಲದ ತೊಡಿಗೆ, ನೇಮದ ಖಂಡಿತ, ಮಾಟದ ಕೂಟ

ಇಂತಿವನರಿದು ತನುವಿಂಗಾಚಾರ, ಮನಕ್ಕೆ ವ್ರತ, ಮಾಟಕ್ಕೆ ನೇಮ, ಕೂಟಕ್ಕೆ ನಿಶ್ಚಯ .

ಇಂತೀ ಮರ್ತ್ಯದ ಆಟವುಳ್ಳನ್ನಕ್ಕ ಸದಾತ್ಮನಿಹಿತವಿರಬೇಕು.


ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ . || ೧೪೮ ||

೫೮೩

ಹರಿ ಬ್ರಹ್ಮ ದೇವರ್ಕಳು ಮುಂತಾಗಿ ಇದ್ದವರೆಲ್ಲರು

ತಮ್ಮ ತಮ್ಮ ಮಾರ್ಗದ ಕಲೆಯಲ್ಲಿಯೆ ಎಯ್ಲಿ ,

ಜಪ ತಪ ನೇಮ ನಿತ್ಯಂಗಳು ತಪ್ಪದೆ ಮಹಾದೇವನ ಓಲೈಸಿದರಾಗಿ,

ಇದು ಕಾರಣದಲ್ಲಿ ಕೊಂಡ ವ್ರತಕ್ಕೆ ಹಾನಿಯಿಲ್ಲದೆ, ನೇಮಕ್ಕೆ ಅನುಸರಣೆಯಿಲ್ಲದೆ,

ತಾ ನಡೆವಲ್ಲಿ , ಇದಿರ ತಾ ಕಾಲಲ್ಲಿ ,

ಅಣುಮಾತ್ರ ತಪ್ಪದೆ,ಕ್ಷಣಮಾತ್ರ ಸೈರಿಸದೆ ,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಹಾದಿಯನರಿಯಬೇಕು. || ೧೪೯ ||


೧೮೪ ಶಿವಶರಣೆಯರ ವಚನಸಂಪುಟ

- ೫೮೪

ಹಲವುತೆರದಕ್ರೀಯನಾಧರಿಸಿ ನಡೆವಲ್ಲಿ

ಅಂಗಕ್ಕೆ ಆಚಾರ, ಮನಕ್ಕೆ ಅರಿವು ಮುಂತಾಗಿ ,

ಪೂರ್ವದಸ್ವಸ್ಥಾನ, ಉತ್ತರದ ನಿಶ್ಚಯವಕಂಡು, ಸತ್ಮೀಯಿಂದ ಆದ

ಪರಧನ ಪರಸತಿ ಪರಾಪೇಕ್ಷೆ ಅನ್ಯನಿಂದೆ

ದುರ್ಗುಣ ದುಶ್ಚರಿತ್ರ ದುರ್ವಿಕಾರ ದುರ್ಬೋಧೆ

ಇಂತೀ ಅನ್ಯವ ನೇತಿಗಳೆದು, ತನಗೆ ಅನ್ಯವಿಲ್ಲದುದ ಅಂಗೀಕರಿಸಿ,

ತಾ ಹಿಡಿದ ವ್ರತಕ್ಕೆ ತನ್ನ ಸತಿಸುತ, ತನ್ನ ಕ್ರೀ ಮುಂತಾದ

ಒಡೆಯರು ಭಕ್ತರು ಸಹವಾಗಿ ತಾ ತಪ್ಪದೆ,

ತಪ್ಪಿದವರ ಕಂಡು ಒಳಗಿಟ್ಟುಕೊಂಡು ಒಪ್ಪದೆ ಇಪ್ಪ

ಭಕ್ತನ ಸತ್ಯದ ಕಾಯವಳಿಯಿತ್ತು ಉಳಿಯಿತ್ತೆಂಬ ಸಂದೇಹವಿಲ್ಲ .

ಆತನಿಹಪರದಲ್ಲಿ ಸುಖ .

ಆತನಾಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. || ೧೫೦ ||

೫೮೫

ಹಿಡಿಯೆನೆಂಬುದ ಹಿಡಿದಲ್ಲಿ ಅದು ಸುರಾಪಾನ.

ಒಡಗೂಡೆನೆಂದು ಮತ್ತೊಡಗೂಡಿದಡೆ ಅದು ಪರಪಾಕ.

ಮತ್ತಾವುದೊಂದು ಲಿಂಗಕ್ಕೆ ಸಲ್ಲದೆಂಬುದನರಿತು

ಮತ್ತೆಲ್ಲರ ಮಾತು ಕೇಳಿ ಮೆಲ್ಲನೆ ಆದಲ್ಲಿ ಆ ಗುಣ ಸಲ್ಲದು.

ಇವನೆಲ್ಲವನರಿತು ಮತ್ತೆ ಸಲ್ಲದುದ ಸಲ್ಲಿಸಿದೆನಾದಡೆ

ಎಲ್ಲಾ ಯೋನಿಗೆ ಕಡೆಯಪ್ಪ ಶ್ವಾನನಯೋನಿಯಲ್ಲಿ ಬಪ್ಪೆ .

ಈ ಗುಣ ತಪ್ಪದು,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಾಕ್ಷಿಯಾಗಿ , || ೧೧ ||

೫೮೬

ಹೆಣ್ಣು ಹೊನ್ನು ಮಣ್ಣಿಗಾಗಿ ವ್ರತವೆಂಬ ನೇಮವ ಮಾಡಿಕೊಳ್ಳ

ಕೂಲಿಗೆ ಬಳಿನೀರ ಕುಡಿದಡೆ ಅದಾರ ಮುಟ್ಟುವುದು ?

ವಾಸಿಗೆ ಮೂಗನರಿದುಕೊಂಡಡೆ ನಾಚಿಕೆ ಯಾರಿಗೆಂಬುದನರಿದ ಮತ್ತೆ

ಇಂತಿವ ಹಸಿ ಶೀಲವಂತನಾಗಬೇಕು.

ಇಂತೀ ಗುಣಕ್ಕೆ ನಾಚಿ ನೇಮವ ಮಾಡಿಕೊಳ್ಳಬೇಕು.

ಇಂತೀ ವ್ರತದ ಆಗುಚೇಗೆಯನರಿದ ಮತ್ತೆ


೧೮
ಅಕ್ಕಮ್ಮನ ವಚನಗಳು

ಇದಿರ ಬಯಕೆಯ ಬಿಟ್ಟು ತನ್ನ ತಾನರಿಯಬೇಕು

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ . || ೧೫೨ ||

೫೮೭

ಹೊಳೆಯ ಹರುಗೋಲಲ್ಲಿಯೆ ಮೆಟ್ಟಡಿಯ ಮೆಟ್ಟಿಹೆನೆಂದು

ಚರ್ಮಕ್ಕೆ ಕೊಟ್ಟು ತನ್ನ ಠಾವಿನಲ್ಲಿ ಕಚ್ಚಾಡಲೇತಕ್ಕೆ ?

ಆ ಗುಣ ವ್ರತನೇಮಿಗಳಿಗೆ ನಿಶ್ಚಯವೆ ?

ಕೊಟ್ಟಲ್ಲಿ ಬೇಯದೆ ತಂದಲ್ಲಿ ನೋಯದೆ

ಭಕ್ತರ ಒಡೆಯರ ಚಿತ್ರವಿದ್ದಂತೆ ಅಷ್ಟೊತ್ತಿದಂತಿರಬೇಕು.

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ನೇಮ ಸಂದಿತ್ತು . || ೧೫೩ ||

೫೮೮

ಹೋತನ ಗಡ್ಡದಂತೆ ಗಡ್ಡದ ಹಿರಿಯರನೋಡಾ.

ಬಿಡಾರ ಬಿಡಾರವೆಂದು ಹಿರಿಯತನಕ್ಕೆ ಅಹಂಕರಿಸಿ.

ಆಚಾರವಂ ಬಿಟ್ಟು ಅನಾಚಾರವಂ ಸಂಗ್ರಹಿಸಿ,

ಭಕ್ತರೊಳುಕ್ರೋಧ, ಭ್ರಷ್ಟರೊಳು ಮೇಳ

ಇವರು ನರಕಕ್ಕೆ ಯೋಗ್ಯರು,

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ . || ೧೪ ||


ಅಮುಗೆರಾಯಮ್ಮನ ವಚನಗಳು

- ೫ರ್೮

ಅಂಗಕ್ಕಾಚಾರ ಮನಕ್ಕೆ ಜ್ಞಾನ ಸಮರಸಾದೈತವಾದ ಮತ್ತೆ

ಪುನರಪಿ ಪುನರ್ದಿಕ್ಷೆಯುಂಟೆ ?

ಗರುಡಿಯಲ್ಲಿ ಕೋಲಲ್ಲದೆ, ಕಾಳಗದಲ್ಲಿ ಉಂಟೆಕೋಲು?

ಭವಿಗೆ ಮೇಲುವ್ರತ ಪುನರ್ದಿಕ್ಷೆಯಲ್ಲದೆ, ಭಕ್ತರಿಗುಂಟೆ ?

ವ್ರತತಪ್ಪಿ ಅನುಗ್ರಹವಿಡಿದ ನರಕಿಗಳಿಗೆ

ಮುಕ್ತಿ ಇಲ್ಲ ಎಂದೆ ಅಮುಗೇಶ್ವರಲಿಂಗದಲ್ಲಿ . || ೧ ||

- ೫೯೦

ಅಂಗದ ಆಪ್ಯಾಯನಕ್ಕೆ ಲಿಂಗವ ಮರೆದು ತಿರುಗುವ

ಭಂಡಭವಿಗಳನೇನೆಂಬೆನಯ್ಯಾ ?

ಲಿಂಗದಲ್ಲಿ ನಿತ್ಯರಲ್ಲ ; ಜಂಗಮದಲ್ಲಿ ಪ್ರೇಮಿಗಳಲ್ಲ !

ಹಿಡಿದ ಛಲದಲ್ಲಿ ಕಡುಗಲಿಗಳಲ್ಲ.

ಮೃಡನ ಕಂಡೆಹೆನೆಂಬ ಮೂರ್ಖರ ಮುಖವ ನೋಡಲಾಗದು ;

ಅವರಡಿಯ ಮೆಟ್ಟಲಾಗದು ಕಾಣಾ ಅಮುಗೇಶ್ವರಾ. || ೨ ||

೫೯೧

ಅಂಗದ ಮೇಲೆ ಲಿಂಗವಿಲ್ಲದವರಲ್ಲಿ

ಲಿಂಗಾರ್ಪಿತವ ಬೇಡಲೇಕೆ ?

ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ

ಲಿಂಗಾರ್ಪಿತವ ಬಿಡಲೇತಕ್ಕೆ ?

ಜಾತಿಗೋತ್ರವನೆತ್ತಿ ನುಡಿಯಲೇಕೆ ?

ಸಹಜ ಶಿವಭಕ್ತರೆಂದು, ಶೀಲವಂತರೆಂದು, ವ್ರತಾಚಾರಿಗಳೆಂದು,

ವ್ರತಭ್ರಷ್ಟರೆಂದು ಅವರ ಕುಲಛಲವ ಕೇಳಿಕೊಂಡು

ಆಚಾರವುಳ್ಳವರು ಅನಾಚಾರಿಗಳು ಎಂದು

ಬೇಡುವ ಭಿಕ್ಷವ ಬಿಡಲೇತಕ್ಕೆ ?

ಮದ್ಯಮಾಂಸವ ಭುಂಜಿಸುವವರು ಅನಾಚಾರಿಗಳು.

ಆವ ಕುಲವಾದಡೇನು, ಅಂಗದ ಮೇಲೆ ಲಿಂಗವುಳ್ಳವರೆಲ್ಲರು

ಆಚಾರವುಳ್ಳವರೆಂಬೆನಯ್ಯಾ ,
|| ೩ ||
ಅಮುಗೇಶ್ವರಲಿಂಗಕ್ಕೆ ಅವರೆ ಸದ್ಭಕ್ತರೆಂಬೆನಯ್ಯಾ.
೧೮೭
ಅಮುಗೆರಾಯಮ್ಮನ ವಚನಗಳು

೫೯೨

ಅಂದ ಚಂದಕ್ಕೆ ಲಿಂಗವ ಮರೆದು ತಿರುಗುವರು !

ಕಂಡ ಕನಸರಿಯರು! ಮುಂದಣ ಸುದ್ದಿಯ ನುಡಿವರು.

ನಿಜವನರಿಯದೆ ಲಿಂಗಸಂಗಿಗಳೆಂದರೆ

ಅಮುಗೇಶ್ವರನ ಶರಣರು ಅತ್ತತ್ತ ಹೋಗೆಂಬರು.

೫೯೩

ಅನುಭಾವಿ ಅನುಭಾವಿಗಳೆಂಬ ಅಜ್ಞಾನಿಗಳ

ಮುಖವ ನೋಡಲಾಗದು.

ಕಂಗಳ ಮುಂದಣ ಕಾಮ , ಮನದ ಮುಂದಣ ಆಸೆ,

ಅಂಗದಲ್ಲಿ ಅಹಂಕಾರವಾಗಿಪ್ಪವರ ಅನುಭಾವಿಗಳೆಂಬೆನೆ ?

ಸೂಳೆಯ ಮನೆಯಲ್ಲಿಪ್ಪ ಗವುಡಿಯಂತೆ

ತಮ್ಮ ತಮ್ಮ ಹಿರಿಯತನವ ಮುಂದುಗೊಂಡು

ಕುರಿಗಳಂತೆ ತಿರುಗುವ ಜಡರುಗಳ ಅನುಭಾವಿಗಳೆಂಬೆನೆ ?

ಹತ್ಯೆದ ಕೂಡಿಕೊಂಡು ಇಕ್ಕಿ ಎರೆವವರ ಮನೆಗೆ ಹೋಗಿ,

ಭಕ್ಕಿಬಿನ್ನಹವ ಕೈಕೊಂಡಡೆ ಬೆಕ್ಕು ಹಾಲುಕುಡಿದಂತೆ.

ಅತ್ಯತಿಷ್ಠದ್ದಶಾಂಗುಲನೆಂದು ಘಟವ ಹೊರೆವ ಮಿಟ್ಟೆಯ ಭಂಡರು

ಕಟ್ಟಿಗೆ ಮಣ್ಣ ಹಾಕಿ ಹೊಟ್ಟೆಯ ಹೊರೆವವನಂತೆ.

ಇಷ್ಟಲಿಂಗವನರಿಯದೆ ಸತ್ಯರೆಂದು ಘಟವ ಹೊರೆವ

ಘಟಕರ್ಮಿಗಳ ಮುಖವನೋಡಲಾಗದು ಅಮುಗೇಶ್ವರಲಿಂಗವೆ


|| ೫ ||

- ೫೯೪

ಅನುಭಾವಿಗೆ ಅಂಗಶೃಂಗಾರವುಂಟೆ ?

ಅನುಭಾವಿಗೆ ಕಾಮಕ್ರೋಧವುಂಟೆ ?

ಅನುಭಾವಿಗೆ ನಾಹಂಕೋಹಂಸೋಹಂ ಎಂಬ

ಭ್ರಾಂತಿನ ಭ್ರಮೆಯುಂಟೆ ?

ಅನುಭಾವಿಗೆ ನನ್ನವರು ತನ್ನವರೆಂಬ

ಗನ್ನಗದಕಿನ ಮಾತುಂಟೆ ?

ಅನುಭಾವಿಗಳೆಂಬವರು ಅಲ್ಲಿಗಲ್ಲಿಗೆ

ತಮ್ಮ ಅನುಭಾವಂಗಳ ಬೀರುವರೆ ?

ಅನುಭಾವಿಗಳ ಪರಿಯ ಹೇಳಿಕೆ ಕೇಳಿರಣ್ಣಾ ;


೧೮೮
ಶಿವಶರಣೆಯರ ವಚನಸಂಪುಟ

ನೀರಮೇಲಣ ತೆಪ್ಪದಂತೆ, ಸಮುದ್ರದೊಳಗಣ ಬೆಂಗುಂಡಿನಂತೆ

ಇರಬಲ್ಲಡೆ ಅನುಭಾವಿಗಳೆಂಬೆನಯ್ಯಾ.

ವಚನಂಗಳ ಓದಿ ವಚನಂಗಳ ಕೇಳಿ

ಕಂಡ ಕಂಡ ಠಾವಿನಲ್ಲಿ ಬಂಡುಗೆಲೆವ ಜಗಭಂಡರ,

ಆತ್ಮತೇಜಕ್ಕೆ ತಿರುಗುವ ವೇಷಧಾರಿಗಳ ಕಂಡು

ಅನುಭಾವಿಗಳೆಂದಡೆ ಅಘೋನರಕ ತಪ್ಪದು ಕಾಣಾ, ಅಮುಗೇಶ್ವರಾ.

೫೯೫

ಅರಿದಬಳಿಕ ಗರುಡಿಯ ಹೋಗಲೇತಕ್ಕೆ ?

ನಿಸ್ಸಾಧಕವ ಸಾಧಿಸಿದ ಬಳಿಕ ಸಾಧಿಸಲೇತಕ್ಕೆ ?

ಪಟುಭಟ ಬಂದಲ್ಲಿ ಪರಾಕ್ರಮವತೋರದಿರಬೇಕು.

ಮೈಯೆಲ್ಲಾ ಕಣ್ಣಾಗಿಪ್ಪವರು ಬಂದು ಮಥನಿಸಿದಡೆ -

ಮಾತಾಡದೆ ಇರಬೇಕು.

ಹೊದ್ದಿಯೂ ಹೊದ್ದದ ಸದ್ಯೋನ್ಮುಕ್ತನಾಗಿರಬಲ್ಲರೆ

ಅಮುಗೇಶ್ವರಲಿಂಗವು ಎಂಬೆನು. || ೭ ||

- ೫೯೬

ಅರಿಯಬಲ್ಲಡೆ ವಿರಕ್ತನೆಂಬೆನು.

ಆಚಾರವನರಿದಡೆ ಅಭೇದ್ಯನೆಂಬೆನು.

ಸ್ತುತಿ ನಿಂದೆಗೆ ಹೊರಗಾದಡೆ ಸುಮ್ಮಾನಿ ಎಂಬೆನು.

ಘನತತ್ವವನರಿದು ಶಿಶುಕಂಡ ಕನಸಿನಂತೆ ಇದ್ದಡೆ


|| ೮ ||
ಶಿವಜ್ಞಾನಿ ಎಂಬೆನಯ್ಯಾ ಅಮುಗೇಶ್ವರಾ.

೫೯೭

ಅರಿವು ಆಚಾರವುಳ್ಳ ಸಮ್ಮಜ್ಞಾನಿಗೆ ಹೇಳುವೆನಲ್ಲದೆ,

ಜಗದಲ್ಲಿ ನಡೆವ ಜಂಗುಳಿಗಳಿಗೆ ನಾ ಹೇಳುವನಲ್ಲ .

ಆರುಸ್ಥಲವನರಿದ ಲಿಂಗೈಕ್ಯಂಗೆ ಅಂಗದಮೇಲಣ ಲಿಂಗ ಭಿನ್ನವಾಗಲು

ಸಂದೇಹಗೊಳ್ಳಲಿಲ್ಲ , ಲಿಂಗ ಹೋಯಿತ್ತು ಎಂದು ನುಡಿಯಲಿಲ್ಲ .

ವೃತ್ತ ಗೋಳಕ ಗೋಮುಖ ಈ ತ್ರಿವಿಧ ಸ್ಥಾನದಲ್ಲಿ ಭಿನ್ನವಾಗಲು

ಲಿಂಗದಲ್ಲಿ ಒಡವೆರೆಯಬೇಕು.

ಹೀಂಗಲ್ಲದೆ ಸಂದೇಹವೆಂದು ಘಟವ ಹೊರೆವ ಅಜ್ಞಾನಿ

ಕೋಟಿಜನ್ಮದಲ್ಲಿ ಶೂರಕನಾಗಿ ಹುಟ್ಟುವ.


೧೮೯
ಅಮುಗೆರಾಯಮ್ಮನ ವಚನಗಳು

ಸಪ್ತಜನ್ಮದಲ್ಲಿ ಕುಷ್ಟನಾಗಿ ಹುಟ್ಟುವ.

ದಾಸೀ ಗರ್ಭದಲ್ಲಿ ಹುಟ್ಟಿ , ಹೊಲೆಯರ ಎಂಜಲ ತಿಂದು ,

ಭವಭವದಲ್ಲಿ ಬಪ್ಪುದು ತಪ್ಪದು ಕಾಣಾ,

ಚೆನ್ನಬಸವಣ್ಣ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ. || ೯ ||

೫೯೮

ಅರಿವುಉಳ್ಳವರು ನೀವುಅರಿಯದವರೊಡನೆ ನುಡಿಯದಿರಿ.

ಪೊಡವಿಯ ಶರಣರೆಂದು ನಿಮ್ಮ ಅರುವಿನ ಪ್ರಸಂಗವನುಸುರದಿರಿ.

ವೇಷಪೂರಿತರಾದವರ ಕಂಡು ನುಡಿಯದಿರಿ,

ಅಮುಗೇಶ್ವರನೆಂಬಲಿಂಗವನರಿದವರು .

೫೯೯

ಅರಿವುಸಂಬಂಧವುಳ್ಳ ಪರಿಪೂರ್ಣಜ್ಞಾನಿಗಳ

ಅಡಿಗಳಿಗೆ ನಾನೆರಗುವೆನಯ್ಯಾ,

ಎಡೆದೆರಹಿಲ್ಲದೆ ಮೃಡನ ನೆನೆವವರ

ಅಡಿಗಳಿಗೆ ನಾನೆರಗುವೆನಯ್ಯಾ .

ಕಡುಗಲಿಗಳ ಕಂಡಡೆ ಪರಶಿವನೆಂಬೆನಯ್ಯಾ ;

|| ೧೧
ಅಮುಗೇಶ್ವರಲಿಂಗವನರಿದ ಘನಮಹಿಮನೆಂಬೆನಯ್ಯಾ , ||

೬೦೦

ಅರುವತ್ತಾರುತತ್ವಗಳ ಮೇಲೆನಿನ್ನ ಅರಿವವರಿಲ್ಲ .

ಮೂವತ್ತಾರುತತ್ವಗಳ ಮೇಲೆನೀನು ರಟ್ಟೆಗೆ ಬಂದವನಲ್ಲ .

ಕೈಲಾಸಕ್ಕೆ ಬಂದು ನೀನು ಬ್ರಹ್ಮ ವಿಷ್ಣು ರುದ್ರನ ವಾದದಿಂದ

ಮರ್ತ್ಯಕ್ಕೆ ಬಂದವನಲ್ಲ .

ಅನಾದಿಯಿಂದ ಅತ್ತಲಾದ ಬಸವನಭಕ್ಕಿಯ ನೋಡಲೆಂದು ಬಂದವನಲ್ಲದೆ

ಮಾಯಾವಾದದಿಂದ ಮರ್ತ್ಯಕ್ಕೆ ಬಂದನೆಂದು

ನುಡಿವವರ ನಾಲಗೆಯ ಕಿತ್ತು ಕಾಲು ಮೆಟ್ಟಿ ಸೀಳುವೆನು.

ಹೊಟ್ಟೆಯ ಸೀಳಿ, ಮುಳ್ಳಿನ ರೂಂಪೆಯ ಮಡಗುವೆನು !

ಅದೇನು ಕಾರಣವೆಂದಡೆ :

ಬಸವಣ್ಣಂಗೆ ಭಕ್ತಿಯ ತೋರಲೆಂದು,

ಚೆನ್ನಬಸವಣ್ಣಂಗೆ ಆರುಸ್ಥಲವನರುಹಲೆಂದು,

ಘಟ್ಟಿವಾಳ, ಮಹಾದೇವಿ, ನಿರವಯಸ್ಥಲದಲ್ಲಿ ನಿಂದ ಅಜಗಣ್ಣ , ಬೊಂತಲಾದೇವಿ


ಶಿವಶರಣೆಯರ ವಚನಸಂಪುಟ

ಇಂತಿವರಿಗೆ ಸ್ವತಂತ್ರವತೋರಲೆಂದು ಬಂದೆಯಲ್ಲಾ .

ಅಮುಗೇಶ್ವರಲಿಂಗಕ್ಕೂ ಎನಗೂ ಪರತಂತ್ರವತೋರದೆ

ಸ್ವತಂತ್ರನ ಮಾಡಿ ನಿರವಯಸ್ಥಲದಲ್ಲಿ ನಿಲ್ಲಿಸಿದೆಯಲ್ಲಾ, ಪ್ರಭುವೆ. || ೧

೬೦೧

ಅರೆಯಮೇಲೆಮಳೆ ಹೊಯಿದಂತೆ,

ಅರಿವುಳ್ಳವರಲ್ಲಿ ಅಗಮ್ಯವುಂಟೆ ?

ವಾಯು ರೂಪಾದುದುಂಟೆ ?

ಸರ್ವಸಂಬಂಧವ ಅರಿದ ಶರಣನ ಕಣ್ಣಿನಲ್ಲಿ ಕಂಡವರುಂಟೆ ?

ತಿಪ್ಪೆಯ ಮೇಲಣ ಅರುವೆಯ ಸುಟ್ಟಡೆ ದಗ್ಗವಾದಂತೆ ಇರಬೇಕು.

ಹೀಂಗಿರಬಲ್ಲಡೆ ಅನುಭಾವಿ ಎಂಬೆನಯ್ಯಾ ,

ಅಭೇದ್ಯರೆಂಬೆನಯ್ಯಾ , ಅಂಗಲಿಂಗ ಸಂಬಂಧಿಗಳೆಂಬೆನಯ್ಯಾ ,

ಲಿಂಗೈಕ್ಯರೆಂಬೆ ನಿಜವಿರಕ್ತರೆಂಬೆನಯ್ಯಾ,

ಹೀಂಗಲ್ಲದೆ ಆತ್ಮತೇಜಕ್ಕೆ ಹೋರಾಡುವ ಘಾತಕರ

ನಿಜವಿರಕ್ತರೆಂದರೆ ಅಮುಗೇಶ್ವರಾ ? - || ೧೩ ||

೬೦೨

ಆಕಾಶಕ್ಕೆ ಹಾರುವಂಗೆ ದೋಟಿಯ ಕೋಲ ಹಂಗೇತಕಯ್ಯಾ ?

ಭೂಮಿಯ ಸೋಂಕದೆ ನಡೆವವಂಗೆ ಭೂಮಿಯ ಹಂಗೇತಕ್ಕಾ ?

ತನ್ನ ತಾನರಿಯದವಂಗೆ ಬಿನ್ನಾಣಿಗಳ ಮಾತೇತಕಯ್ಯಾ ?

ಅಗಮ್ಯವಾಗಿ ಚರಿಸುವಂಗೆ ಅಂಗನೆಯರ ಹಂಗೇತಕಯ್ಯಾ ?

ಅಮುಗೇಶ್ವರಲಿಂಗವನರಿದ ಶರಣಂಗೆ

ಕಾವಿ ಕಾಷಾಂಬರವ ಹೊದ್ದು ತಿರುಗುವ ಕರ್ಮಿಗಳ ಹಂಗೇತಕಯ್ಯ

೬೦೩

ಆರುಸ್ಥಲದಲ್ಲಿ ನಿಂದವಂಗೆ ಬೇರೊಂದು ಬ್ರಹ್ಮದ ಮಾತೇಕೆ ?

ಬೀದಿಯಲ್ಲಿ ನಿಂದು ನೀನೇನು, ತಾನೇನು ಎಂಬವಂಗೆ ಆದ್ಯರ ವಚನವೇಕೆ

ಗಗನವ ಮುಟ್ಟುವಂಗೆ ಅಗಣಿತನ ಸುದ್ದಿಯೇಕೆ ?

ಆರುಸ್ಥಲದಲ್ಲಿ ನಿಂದವಂಗೆ ಅಭೇದ್ಯನ ಸುದ್ದಿಯೇಕೆ ?

ಆರು ಸ್ಥಲವೆಂಬುವ ಷಟ್‌ಸ್ಥಲಜ್ಞಾನಿಗಳ

ಅರಿವು ಮೀರಿದ ಘನವುನಿಮಗೇಕೆ ?


|| ೧೫ ||
ಅಮುಗೇಶ್ವರಲಿಂಗವನರಿಯರಣ್ಣಾ .
೧೯೧
ಅಮುಗೆರಾಯಮ್ಮನ ವಚನಗಳು

೬೦೪

ಆಸೆಯುಳ್ಳವಂಗೆ ಮಾಟಕೂಟವಲ್ಲದೆ,

ನಿರಾಸೆಯುಳ್ಳವಂಗೆ ಮಾಟಕೂಟವೇಕೆ ?

ಮನಪರಿಣಾಮಿಗೆ ಮತ್ಸರವೇಕೆ ?

ಸುತ್ತಿದ ಮಾಯಾಪ್ರಪಂಚವ ಜರಿದವಂಗೆ


(O
ಅಂಗನೆಯರ ಹಿಂದು ಮುಂದೆ ತಿರುಗಲೇಕೆ ?

ಅಮುಗೇಶ್ವರನೆಂಬ ಲಿಂಗವನರಿದವಂಗೆ

ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ || ೧೬ ||

೬೦೫

ಇಮ್ಮೆಯ ಸಿರಿವಂತರ ಕಂಡಡೆ

ಎನ್ನಯ್ಯಾ , ಇತ್ತ ಬನ್ನಿ ಎಂಬರಯ್ಯಾ ,


ಕರ್ಮಿಗಳ ಕಂಡಡೆಕಹಿಡಿದು ನೂಕೆಂಬರಯ್ಯಾ ,

ಲಿಂಗವನಪ್ಪಿದನಿಜಶರಣರು ಅಮುಗೇಶ್ವರಲಿಂಗವೆ. || ೧೭ ||

೬೦೬

ಇಷ್ಟಲಿಂಗ ಭಿನ್ನವಾಗಿಡನೆ ತೆಗರ ಕಂಡಲ್ಲಿ

ವಸ್ತುವ ಬಿಡುವುದು.

ತರಗ ಕಾಣದಿರ್ದಡೆ ನೀರು ನೇಣು ವಿಷ ಔಷಧಂಗಳಲ್ಲಿ

ವಸ್ತುವಿನೊಡನೆ ವಸ್ತುವ ಬಿಡಬೇಕು, ಇದಕ್ಕೆ ಸಂದೇಹವಿಲ್ಲ .

ಆವಾವ ಪ್ರಕಾರದಲ್ಲಿ ಹೋದರೂ ಸಂದೇಹವಿಲ್ಲ ಲಿಂಗೈಕ್ಯಂಗೆ.

ಅಮುಗೇಶ್ವರಲಿಂಗವೆ, ನಿಮ್ಮ ಶರಣರು

ಈರೇಳುಭುವನ ಹದಿನಾಲ್ಕುಲೋಕದಲ್ಲಿ ಲಿಂಗಸಹಿತ ಒಪ್ಪುವರು . || ೧೮ ||

೬೦೭

- ಇಷ್ಟಲಿಂಗವ ಪೂಜಿಸುವ ಗುಪ್ತಪಾತಕರನೊಲ್ಲೆ.

ಅದೇನು ಕಾರಣವೆಂದಡೆ,

ಆ ಲಿಂಗದ ಘನವನರಿದು ತ್ರಿಕಾಲಪೂಜೆಯ ಮಾಡಬಲ್ಲಡೆ

ಮಹಾನುಭಾವಿಗಳೆಂಬೆ ಅಮುಗೇಶ್ವರಲಿಂಗವೆ. || ೧೯ ||

೬೦೮

ಉತ್ತಮತೇಜಿಗೆ ಚಬುಕಿನಲ್ಲಿ ತೆಗೆವರುಂಟೆ ?

ಪಟ್ಟಣಕ್ಕೆ ಒಡೆಯನಾದ ಬಳಿಕ , ಜಾತಿಗೋತ್ರವನರಸಲುಂಟೆ ?


ಶಿವಶರಣೆಯರ ವಚನಸಂಪುಟ

ಪರಮಸುಜ್ಞಾನಿಗೆ ಪ್ರಾಣದ ಹಂಗುಂಟೆ ?

ಲಿಂಗವನಪ್ಪಿದ ಶರಣನ ಕಂಡಕಂಡವರು ಜರಿದಡೆ, ಸಂದೇಹವುಂಟೆ ?

ಇಹಲೋಕದವರು ಜರಿದರೆಂದು ವಿಪರೀತಗೊಳಲೇಕೆ ?

ಅಮುಗೇಶ್ವರಲಿಂಗವನರಿದ ಶರಣಂಗೆ

ಆರು ಹರಸಿದಡೇನು, ಆರು ಹಳಿದಡೇನು ? || ೨೦ ||

೬೦೯

ಉತ್ತಮತೇಜಿಯಮರಿಗೆ ಸುಪ್ಪತ್ತಿಗೆಯಲ್ಲದೆ

ಕತ್ತೆಯ ಮರಿಗೆ ಸುಪ್ಪತ್ತಿಗೆಯ ಹಾಸುವರೆ ?

ಅಜ್ಞಾನಿಗಳ ಹೃದಯದಲ್ಲಿ ಪರಮಾಮೃತವ ಸುರಿದಡೆ

ಪರರ ಕಾಡಿ ಬೇಡದೆ ಮಾಣ್ಮರೆ ?

ಕುಂಜರನ ವೇಷವ ತೊಟ್ಟು ಹಂದಿಯಂತೆ ತಿರುಗುವ

ಅಜ್ಞಾನಿಗಳನೇನೆಂಬೆ ಅಮುಗೇಶ್ವರಾ ? || ೨೧ ||

೬೧೦

ಉತ್ತರಪಥಕ್ಕೆ ಹೋಗಿ ಮುಕ್ತಿಯನರಿದೆನೆಂಬವರು

ಅರಿಯಲಾರರು ನೋಡಾ.

ಭಕ್ತನಾದೆನೆಂಬವರೆಲ್ಲ ಭವಿಗಳಾದರು ನೋಡಾ.

ಜಂಗಮವಾದನೆಂಬವರೆಲ್ಲ ಜಗಭಂಡರಾದರು ನೋಡಾ.

ಲಿಂಗೈಕ್ಯನಾದೆನೆಂಬವರೆಲ್ಲ ಅಂಗವಿಕಾರಿಗಳಾದರು ನೋಡಾ.

ಅಮುಗೇಶ್ವರಲಿಂಗವನರಿಯದಜ್ಞಾನಿಗಳ
|| ೨೨ ||
ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು.

೬೧೧

ಉದರಪೋಷಣಕ್ಕೆ ಗಿಡುಗಿಡುದಪ್ಪದೆ ತಿರುಗುವ ಕುನ್ನಿ

ಒಡೆಯನ ಗುರುತಬಲ್ಲುದೆ ?

ಮಳೆಗಾಲದಲ್ಲಿ ಮೀನು ಮಿಡಿಚೆಯ ತಿಂಬ ನರಿ

ಕತ್ತಲೆಯಬಲ್ಲುದೆ ?

ಸತ್ಯ ಹಂದಿಯ ತಿಂಬ ನಾಯಿ

ಬೆಳುದಿಂಗಳಬಲ್ಲುದೆ ?

ಕರ್ತನನರಿಯದ ವೇಷಧಾರಿಗಳು
|| ೨೩ ||
ನಿಮ್ಮನೆತ್ತ ಬಲ್ಲರು ಅಮುಗೇಶ್ವರಾ ?
೧೯೩
ಅಮುಗೆರಾಯಮ್ಮನ ವಚನಗಳು

೬೧೨

ಉಪಮಾತೀತನಾದ ಶರಣನ ಉಪಾಧಿಕನೆನ್ನಬಹುದೆ ?

ತನ್ನ ತಾನರಿದ ಸಮ್ಮಜ್ಞಾನಿಗೆ ನನ್ನವರು ತನ್ನವರೆಂಬ

ಭಾವದ ಭ್ರಾಂತಿನಭ್ರಮೆ ಏತಕ್ಕೆ ?

ಸಮ್ಮಜ್ಞಾನಿಯ ನಾನೇನೆಂಬೆನಯ್ಯಾ
|| ೨೪ ||
ಅಮುಗೇಶ್ವರಲಿಂಗವೆ ?

೬೧೩

ಎನ್ನ ಅಂಗದಲ್ಲಿ ಅಗತ್ಯವಾಗಿ ಬಂದಬಳಿಕ,

ನಿನ್ನ ನೆನೆವವನಲ್ಲ ನಾನು.

ಎನ್ನ ಮನದಲ್ಲಿ ಮನೋಮೂರ್ತಿಯಾಗಿಪ್ಪೆಯಾಗಿ

ಮನದಲ್ಲಿ ನೆನೆವವನಲ್ಲವಯ್ಯಾ ನಿನ್ನ .

ನೀನೆ ಪತಿಯಾಗಿ ನಾನೆ ಸತಿಯಾದ ಕಾರಣ

ನಿನ್ನ ನೆನೆವವನಲ್ಲ ನಾನು ನಿನ್ನ ಪೂಜಿಸುವವನಲ್ಲ ನಾನು ;

ನಿನ್ನ ರಚಿಸುವವನಲ್ಲ .

ಎನಗೆ ನಿನಗೆ ಸಂದಿಲ್ಲದೆ ಸಮರಸವಯ್ಯಾ .

ಎನ್ನ ಅರ್ಚನೆ ಪೂಜನೆ ನಷ್ಟವಾಯಿತ್ತು ;

ಎನ್ನ ಕ್ರೀ ನಿಕ್ಕಿಯ ಕೂಡಿತ್ತು .

ಸಂದಿಲ್ಲದ ಸಮರಸವಾಗಿ, ನಿಮ್ಮ ಸಂದೇಹವಿಲ್ಲದೆ ಕಂಡೆನು.

ಮಹಾಲಿಂಗ ಅಮುಗೇಶ್ವರಲಿಂಗವೆ,

ನಿಮ್ಮ ಶರಣ ಪ್ರಭುದೇವರ ಘನವ ನಾನೇನೆಂದುಪಮಿಸುವೆನಯಾ || ೨೫ ||

೬೧೪

ಎನ್ನ ಕಣೋಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ.

ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ .

ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ

ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚುವ


ಕಡಿಸುವವರನಾರನೂ ಕಾಣೆನಯ್ಯಾ ,

ಆದ್ಯರ ವೇದ್ಯರ ವಚನಂಗಳಿಂದ

ಅರಿದೆನೆಂಬವರು ಅರಿಯಲಾರರು ನೋಡಾ.

ಎನ್ನ ಕಣೋಳಗಣ ಕಟ್ಟಿಗೆಯ ನಾನೆ ಮುರಿಯಬೇಕು.

ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು.


೧೯೪
ಶಿವಶರಣೆಯರ ವಚನಸಂಪುಟ

ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು.

ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು.

ಅಮುಗೇಶ್ವರಲಿಂಗವ ನಾನೆ ಅರಿಯಬೇಕು. || ೨೬ ||

೬೧೫

ಎನ್ನ ದೇಹವ ದಗ್ಗವ ಮಾಡಯ್ಯಾ ,

ಎನ್ನ ಕಾಯದಲಿಪ್ಪ ಕರ್ಮವ ತೊಡೆಯಯ್ಯಾ.

ಎನ್ನ ಭಾವದಲಿಪ್ಪ ಭ್ರಮೆಯ ಜರಿಯಯ್ಯಾ.

ನಾ ಹಿಡಿದ ಛಲವ ಬಿಡದೆ ನಡೆಸಯ್ಯಾ ಅಮುಗೇಶ್ವರಲಿಂಗವೆ


|| ೨೭ ||

೬೧೬

ಎಲ್ಲರೂ ಓದುವುದು ವಚನಂಗಳು;

ಎಲ್ಲರೂ ನುಡಿವರು ಬೊಮ್ಮವ.

ಎಲ್ಲರೂ ಕೇಳುವುದು ವಚನಂಗಳು;

ಹೇಳುವಾತ ಗುರುವಲ್ಲ , ಕೇಳುವಾತ ಶಿಷ್ಯನಲ್ಲ .

ಹೇಳಿಹೆ ಕೇಳಿಹೆನೆಂಬನ್ನಕ್ಕರ
-
ವಿರಕ್ತಿಸ್ಥಲಕ್ಕೆ ಭಂಗನೋಡಾ, ಅಮುಗೇಶ್ವರಾ. || ೨೮ ||

೬೧೭

ಒಡೆಯರ ಕಂಡಡೆ ಬಡಿವುದಯ್ಯಾ ಬಾಲವನು ಸುನಿ.

ಕೊಡುವ ಕೊಂಬುವರ ಕಂಡು ಅವರಡಿಗೆರಗುವರಯ್ಯಾ,

ಮೃಡನ ವೇಷವ ತೊಟ್ಟು

ಕುರಿಗಳಂತೆ ತಿರುಗುವ ಜಡಜೀವಿಗಳ ಕಂಡಡೆ,

ಮೃತನ ಶರಣರು ಮೋರೆಯನೆತ್ತಿ ನೋಡರು


|| ೨೯ ||
ಕಾಣಾ ಅಮುಗೇಶ್ವರಾ.

೬೧೮

ಒಡೆಯನ ಹೆಸರ ಹೇಳಿ ಒಡಲ ಹೊರೆವವರು ಕೋಟ್ಯಾನುಕೋಟಿ.

ಮೃಡನ ವೇಷವ ಧರಿಸಿ ಕಡುಗಲಿಗಳಾಗಿ

ಚರಿಸುವರ ಕಣ್ಣಿನಲ್ಲಿ ಕಾಣೆ.

ನುಡಿವರು , ಮಾತಿನಲ್ಲಿ ಬ್ರಹ್ಮವ ನುಡಿದಲ್ಲಿ ಫಲವೇನು ?

ಎನ್ನೊಡೆಯಾ, ಎನ್ನ ಬಿಡದೆ ಕಡುಗಲಿಯ ಮಾಡಯ್ಯಾ


|| ೩೦ ||
ಅಮುಗೇಶ್ವರಾ.
CE 23
ಅಮುಗೆರಾಯಮ್ಮನ ವಚನಗಳು

೬೧೯

ಕಂಗಳ ಕಾಮವ ಜರಿದವರ ಕಂಡಡೆ

ಎನ್ನ ಲಿಂಗಯ್ಯಾ ಬನ್ನಿ ಬನ್ನಿ ಎಂಬರಯ್ಯಾ !

ರುದ್ರಲೋಕದ ರುದ್ರಗಣಂಗಳೆಲ್ಲರು

ಬನ್ನಿ ಬನ್ನಿ ಎಂಬರಯ್ಯಾ !

ಸರ್ವಲೋಕದ ಶ್ರೇಷ್ಠಜನಂಗಳು

ಸಾಷ್ಟಾಂಗವ ಎರಗುವರಯ್ಯಾ !

ಬಸವಾದಿ ಪ್ರಮಥಗಣಂಗಳು ಕಂಡು

ಬಳಲಿದಿರಿ ಬಾರಯ್ಯಾ ಎಂದು ಅಡಿಗೆರಗುವರಯ್ಯಾ !


|| ೩೧ ,||
ಅಮುಗೇಶ್ವರಲಿಂಗವನರಿದ ಶರಣರು ಅಡಿಗೆರಗುವರಯ್ಯಾ

೬೨೦

ಕಣ್ಣಿಗೆ ಬಂದಂತೆ ಅನ್ಯದೇಶಕ್ಕೆ ಹೋಗುವ ಕುನ್ನಿಗಳಿಗೆ

ಬಣ್ಣದ ಮಾತೇಕೆ ?

ಕಾಮ ಕ್ರೋಧಲೋಭಮೋಹ ಮದ ಮತ್ಸರಗಳುಳ್ಳವಂಗೆ

ಮಹಾಜ್ಞಾನಿಗಳ ಮಾತೇಕೆ ?

ಕತ್ತಲೆಯ ಕಳೆದು ನಿಶ್ಚಿಂತನಾದವಂಗೆ

ನಚ್ಚುಮೆಚ್ಚಿನ ರಚ್ಚೆಯ ಮಾತೇಕೆ ?

ಅಮುಗೇಶ್ವರಲಿಂಗವನರಿದವಂಗೆ ? || ೩೨ ||

೬೨೧

ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು.

ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು.

ಇದಕ್ಕೆ ಗುರುವಿನ ಹಂಗೇಕೆ, ಲಿಂಗದಪೂಜೆ ಏಕೆ, ಸಮಯದ ಹಂಗೇಕೆ ?


CHO
ತನ್ನ ತಾನು ಅರಿದವಂಗೆ ಏಣಾಂಕನಶರಣರ ಸಂಗವೇಕೆ ?

ಇಷ್ಟವನರಿದವಂಗೆ ನಾನೇನು, ನೀನೇನು ಎಂಬ

ಗೊಜಡಿನ ಭ್ರಮೆಯೇಕೆ ಅಮುಗೇಶ್ವರಾ ? || ೧೩ ||

೬೨೨

ಕತ್ತೆಯಂತೆ ಬತ್ತಲೆಯಿದ್ದಡೆನು, ಇಷ್ಟಲಿಂಗಸಂಬಂಧಿಯಾಗಬಲ್ಲನೆ ?

ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದಡೇನು, ನಿತ್ಯನಾಗಬಲ್ಲನೆ ?


೧೯೬
ಶಿವಶರಣೆಯರ ವಚನಸಂಪುಟ

ಅನಿತ್ಯವ ಹೊತ್ತುಕೊಂಡು ತಿರುಗುವ ಅಘೋರಿಗಳ ಕಂಡಡೆ

ಮಾಗಿಯ ಕೋಗಿಲೆಯಂತೆ ಮೋರೆಯ ತೋರೆನು ಅಮುಗೇಶ್ವರಾ.

೬೨೩

ಕತ್ತೆಯನೇರಿ ಬಪ್ಪವರೆಲ್ಲಾ ನಿತ್ಯರಾಗಬಲ್ಲರೆ ?

ಉಪ್ಪು ಹುಳಿಯ ಮುಟ್ಟುವರಲ್ಲ ಕರ್ತನ ಕಾಣಬಲ್ಲರೆ ?

ಅಮುಗೇಶ್ವರನೆಂಬ ಲಿಂಗವನರಿದೆನೆಂಬವರು

ಅರಿಯಲರಿಯರು ಆರಾರೂ . || ೩೫ ||

೬೨೪

ಕನ್ನವನಿಕ್ಕುವ ಕಳ್ಳನು ಕನ್ನಗಳ್ಳನೆಂದುಉಸುರುವನೆ ?

ಅನ್ಯರಕೂಡೆಬಣ್ಣಬಚ್ಚಣೆಯ ಮಾತಾಡುವ

ಅಣ್ಣ ಅಪ್ಪ ಎಂಬ ಕುನ್ನಿಗಳ ಮೆಚ್ಚುವನೆ ಅಮುಗೇಶ್ವರಲಿಂಗವು ?

೬೨೫

ಕರ್ಮೇಂದ್ರಿಯಂಗಳ ಜರಿದು ಕಡುಗಲಿಯಾದೆನು .

ವರ್ಮವನತಿಗಳೆದು ನಿರ್ಮಳನಾದೆನು .

ಅಣ್ಣಾ ಅಪ್ಪಾ ಎಂದು ಬಿನ್ನಾಣದ ಮಾತ ನುಡಿಯೆನು.

ಅನ್ನ ಕೂಳಿಕ್ಕುವರ ಮನೆಯ ಕುನ್ನಿಗಳಾಗಿಪ್ಪವರ

ಎನಗೆ ಸರಿ ಎಂಬೆನೆ ಅಮುಗೇಶ್ವರಾ ? || ೩೭ ||

೬೨೬

ಕಲಿಯುಳ್ಳವನಾಗಿ ಕಟ್ಟಿದೆನು ಬ್ರಹ್ಮನಮೇಲೆ ಬಿರಿದ.

ನಿತ್ಯವುಳ್ಳವನಾಗಿ ಕಟ್ಟಿದೆನು ವಿಷ್ಣುವಿನ ಮೇಲೆ ಬಿರಿದ.

ಅವಿರಳತತ್ವದಲ್ಲಿ ನಿಂದು, ಬಂದ ಭವಪಾಶಂಗಳ ಹರಿದು

ಕುಂದು ಹೆಚ್ಚಿಲ್ಲದೆ ಸಂದೇಹವನತಿಗಳೆದು ಕಟ್ಟಿದನು.

ಎನ್ನ ಕರಣಂಗಳ ಕಟ್ಟಿದನಾಗಿ ರುದ್ರನ ಮೇಲೆಕಟ್ಟಿದೆನು ಬಿರಿದ.


|| ೩೮ ||
ಅಮುಗೇಶ್ವರಲಿಂಗವು ಅಪ್ಪಿಕೊಂಡ ಭಾಷೆ.

೬೨೭

ಕಳ್ಳೆಯ ಸಂಗವ ಮಾಡಿ, ಕಾಯವಿಕಾರವ ಮುಂದುಗೊಂಡು

ನಿಜವಲ್ಲಭನ ಅರಿದೆನೆಂಬ ಕರ್ಮಿಗಳ ನೋಡಾ!

ಘಟಪರಿದವನಂತೆ ಸಟೆದಿಟವನಾಡುವಿರಿ,
೧೯೭
ಅಮುಗೆರಾಯಮ್ಮನ ವಚನಗಳು

ಪಶುಪತಿಯ ಅರಿವೆನೆಂಬ ಪಾಷಂಡಿಗಳ


|| ೩೯ ||
ಮೆಚ್ಚುವನೆ ಅಮುಗೇಶ್ವರ ?

೬೨೮

ಕಾಗೆಯಮರಿಕೋಗಿಲೆಯಾಗಬಲ್ಲುದೆ ?

ಆಡಿನಮರಿ ಆನೆಯಾಗಬಲ್ಲುದೆ ?

ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ ?

ಅರಿವು ಆಚಾರ ಸಮ್ಮಜ್ಞಾನವನರಿಯದೆ

ನಾಮವಹೊತ್ತುಕೊಂಡು ತಿರುಗುವ ಗಾವಿಲರ

ಮುಖವ ನೋಡಲಾಗದು ಅಮುಗೇಶ್ವರಾ. || ೪೦ ||

೬೨೯

ಕಾದ ಹಾಲ ನೊಣ ಮುಟ್ಟಬಲ್ಲುದೆ ?

ಕಿಚ್ಚಿನೋಳಗಣ ಗುಂಡ ಬೆಕ್ಕು ಮುಟ್ಟಬಲ್ಲುದೆ ?

ಮರುಜವಣಿಯ ಕಡ್ಡಿ ಕಯ್ಯಲಿದ್ದವಂಗೆ ಸರ್ಪ ಕಡಿಯಬಲ್ಲುದೆ ?

ಈ ತ್ರಿವಿಧವನರಿದವಂಗೆ ಹಿಂದೆ ಶಂಕೆಯಿಲ್ಲ ! ಮುಂದೆ ಭೀತಿಯಿಲ್ಲ .


||. ೪೧ | |
ಕಳಂಕು ಇಲ್ಲದೆ ಅಮುಗೇಶ್ವರಲಿಂಗವು ಅಪ್ಪಿಕೊಂಡಿತ್ತು

೬೩೦

ಕಾಯವಿಕಾರಕ್ಕೆ ತಿರುಗುವರುಕೋಟ್ಯಾನುಕೋಟಿ,

ಕಡುಗಲಿಗಳನಾರನೂ ಕಾಣೆನಯ್ಯಾ

ಅಂಗಶೃಂಗಾರಿಗಳಾಗಿ ತಿರುಗುವರು ಕೋಟ್ಯಾನುಕೋಟಿ,

ಲಿಂಗಶೃಂಗಾರಿಗಳನಾರನೂ ಕಾಣೆನಯಾ .

ವಚನರಚನೆಯ ಅರ್ಥ ಅನುಭಾವವ ಬಲ್ಲೆನೆಂದು

ಒಬ್ಬರನೊಬ್ಬರು ಜರಿದು ಸದ್ಯೋನ್ಮತ್ತರಾದೆವೆಂಬ

ಜಗಭಂಡರ ಮೆಚ್ಚುವನೆ ಅಮುಗೇಶ್ವರಲಿಂಗವು ? || ೪೨ ||

೬೩೧

ಕಾಲಾಡಿಯಂತೆ ದೇಶದೇಶಕ್ಕೆ ತಿರುಗಲೇತಕ್ಕೆ ?

ಪರಸಮಯದ ಜೈನನಂತೆ ನುಡಿಯಲೇತಕ್ಕೆ ?

ಅರಿವುಳ್ಳವರ ಕಂಡು ಅಗತ್ಯವನುಡಿಯಲೇತಕ್ಕೆ ?

ಲಿಂಗವನಪ್ಪಿದ ನಿಜಮಹಿಮರ ಮಾತ ಕಲಿತು

ಮಂಡೆಯ ಬೋಳಿಸಿಕೊಂಡು ಈಶನ ವೇಷವ ತೊಟ್ಟು,


೧೯೮
ಶಿವಶರಣೆಯರ ವಚನಸಂಪುಟ

ಗ್ರಾಸಕ್ಕೆ ತಿರುಗುವ ವೇಷಧಾರಿಗಳ ಲಿಂಗೈಕ್ಯರೆಂದಡೆ

ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಾ.


|| ೪ ||

೬೩೨

ಕಾಲಿಲ್ಲದ ಕುದುರೆಯನೇರಿ ರಾವತಿಕೆಯ ಮಾಡಬೇಕು.

ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು.

ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಸಾಡಬಲ್ಲಡೆ,

ಇಹಲೋಕಕ್ಕೆ ವೀರನೆಂಬೆ, ಪರಲೋಕಕ್ಕೆ ಧಿರನೆಂಬೆ,

ಅಮುಗೇಶ್ವರಲಿಂಗಕ್ಕೆ ಅಧಿಕನೆಂಬೆ. - || ೪೪ 11

೬೩೩

ಕಾವಿ ಕಾಷಾಂಬರವ ಹೊದ್ದು ಕಾಮವಿಕಾರಕ್ಕೆ ತಿರುಗುವ

ಕರ್ಮಿಗಳಮುಖವ ನೋಡಲಾಗದು.

ಜಂಗಮವಾಗಿ ಜಗದಿಯ ನುಡಿವ

ಜಂಗುಳಿಗಳಮುಖವ ನೋಡಲಾಗದು.

ಲಿಂಗೈಕ್ಯರೆನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ

ಲಿಂಗದ್ರೋಹಿಗಳ ಮುಖವ ನೋಡಲಾಗದು

ಕಾಣಾ, ಅಮುಗೇಶ್ವರಲಿಂಗವೆ. || ೪ ||

೬೩೪

ಕಿರಿ ಕಿರಿದ ನುಡಿದು ಮರಣಕ್ಕೆ ಒಳಗಾಗುವರ ಗಂಡ .

ಬ್ರಹ್ಮವ ನುಡಿದು ಬ್ರಹ್ಮನ ಬಲೆಯಲ್ಲಿ ಸಿಲುಕುವ ಭವಿಗಳ ಗಂಡ.

ನಿತ್ಯವ ನುಡಿದು ವಿಷ್ಣುವಿನ ಬಲೆಯಲ್ಲಿ ಸಿಲುಕುವ ವಿಕಾರಿಗಳ ಗಂಡ.

ಅಮುಗೇಶ್ವರಲಿಂಗವನರಿಯದ ಅಜ್ಞಾನಿಗಳ ಗಂಡ ! || ೪೬ ||

ಕುಂಜರನ ಮರಿಯ ಸರಪಳಿಯಲ್ಲಿ ಕಟ್ಟುವರಲ್ಲದೆ,

ಹಂದಿಯ ಮರಿಯ ಸರಪಳಿಯಲ್ಲಿ ಕಟ್ಟುವರೆ ಅಯ್ಯಾ ?

ಸಿಂಹದ ಮರಿಯ ಕಂಡಡೆಸೋಜಿಗಬಡುವರಲ್ಲದೆ,

ಸಿಂಗಳೀಕನ ಮರಿಯ ಕಂಡಡೆಸೋಜಿಗುಡುವರೆ ಅಯ್ಯಾ ?

ಕಸ್ತೂರಿಯಮ್ಮಗವ ಕಂಡಡೆ ಆಶ್ಚರ್ಯಗೊಂಬರಲ್ಲದೆ |

ಕತ್ತೆಯಮರಿಯ ಕಂಡಡೆ ಕಣ್ಣಿನಲ್ಲಿ ನೋಡರುನೋಡಾ!

ಲಿಂಗವನಪ್ಪಿ ಅಗಲದಿಪ್ಪ ಲಿಂಗೈಕ್ಯನ ಕಂಡಡೆ


೧೯೯
ಅಮುಗೆರಾಯಮ್ಮನ ವಚನಗಳು

ಜಗವೆಲ್ಲಾ ಕೊಂಡಾಡುತಿಪ್ಪರುನೋಡಾ!

ಅಮುಗೇಶ್ವರನೆಂಬ ಲಿಂಗವನರಿಯದ ಅಜ್ಞಾನಿಗಳ ಕಂಡಡೆ


|| ೪೭ ||
ಕತ್ತೆಯಮರಿಯೆಂದು ಕಣ್ಣು ಮುಚ್ಚಿಕೊಂಡಿಪ್ಪರು ನೋಡಾ!

೬೩೬

ಕುಲವನತಿಗಳೆದವಂಗೆ ಕುಲದ ಹಂಗೇತಕಯ್ಯಾ ?

ಬಲ್ಲೆನೆಂಬವಂಗೆ ಗೆಲ್ಲ ಸೋಲದ ಹಂಗೇತಕಯ್ಯಾ ?

ಅಮುಗೇಶ್ವರನೆಂಬ ಲಿಂಗವನರಿದ ಶರಣಂಗೆ


|| ೪೮ ||
ಈ ಸಮಯದ ಹಂಗೇತಕಯ್ಯಾ ?

೬೩೭

ಕೊಂಬಿನಕುರಿಯಂತೆಕೂಗಿದಡೇನು, ಲಿಂಗೈಕ್ಯರಾಗಬಲ್ಲರೆ ?

ಕೋಟ್ಯಾನುಕೋಟಿಯನೋದಿದಡೇನು, ಸಾತ್ವಿಕರಾಗಬಲ್ಲರೆ ?

ಬೆನ್ನುಹುಳಿತಕೋಣನಂತೆ ಮನೆಮನೆಯ ತಿರಿದುಂಡಡೇನು,

ಮಹಾಜ್ಞಾನಿಯಾಗಬಲ್ಲರೆ ?

ಅಮುಗೇಶ್ವರಲಿಂಗವನರಿಯದವರು ಓದಿದಡೇನು ?

ಕತ್ತೆ ಬದಿಯಲ್ಲಿ ಬಿದ್ದಂತಾಯಿತು. || ರ್೪ ||

- ೬೩೮

ಕೋಣವನೇರಿಕೋಡಗದಾಟನಾಡುವಂಗೆ

ಭಾರವಣಿಯ ಸುದ್ದಿಯೆಲ್ಲಿಯದು ?

ಕರ್ತನನರಿಯದ ಕರ್ಮಿಗಳ ಕೈಯಲ್ಲಿ

ಇಷ್ಟಲಿಂಗವಿರ್ದು ಫಲವೇನು, ಅಮುಗೇಶ್ವರಾ ? || ೫೦ ||

ಗಡ್ಡ ಮಂಡೆಯ ಬೋಳಿಸಿಕೊಂಡವರೆಲ್ಲ ಕಬ್ಬಲಿಗರಮಕ್ಕಳಂಜೆ .

ಬತ್ತಲೆ ಇಪ್ಪವರೆಲ್ಲ ಕುಂಚಿಗನ ಮಕ್ಕಳೆಂಬೆ.

ಪಟ್ಟಣಕ್ಕೆ ಹೋಗಿ ಹೆಸರ ಹೇಳುವ ಜಾತಿಕಾರನಂತೆ

ಅರ್ಥ ಅನುಭಾವವ ಬಲ್ಲೆನೆಂದು ಅಗಮ್ಮವಬೀರುವ

ಅಘೋರಿಗಳ ವಿರಕ್ತರೆನ್ನಬಹುದೆ ? ಎನಲಾಗದು.

ವಚನದ ರಚನೆಯ ಅರಿದೆನೆಂಬ

ಅಹಂಕಾರವ ಮುಂದುಗೊಂಡು ತಿರುಗುವ

ಆತ್ಮತೇಜದ ಘಾತಕರ ವಿರಕ್ತರೆನಲಾಗದಯ್ಯಾ .


೨೦೦ ಶಿವಶರಣೆಯರ ವಚನಸಂಪುಟ

ವಿರಕ್ತನ ಪರಿಯ ಹೇಳಿಹೆನು ಕೇಳಿರಣ್ಣಾ :

ವಾಯು ಬೀಸದ ಉದಕದಂತಿರಬೇಕು;

ಅಂಬುಧಿಯೊಳಗೆ ಕುಂಭ ಮುಳುಗಿದಂತಿರಬೇಕು;

ದರಿದ್ರಗೆ ನಿಧಾನಸೇರಿದಂತಿರಬೇಕು;

ರೂಹಿಲ್ಲದ ಮರುತನಂತಿರಬೇಕು;

ಹಿಂಡನಗಲಿದ ಮದಗಜ ಹಿಂಡಸೇರಿದಂತಿರಬೇಕು;

ಸಂದೇಹ ಸಂಕಲ್ಪ ಮುಂದುಗೊಳ್ಳದೆ ಇರಬೇಕು.

ಅಂಗಲಿಂಗಿಗಳಲ್ಲಿ ಲಿಂಗಾರ್ಪಿತಕ್ಕೆ ಹೋಗಿ

ಬಂದುದನತಿಗಳೆಯದಿದ್ದಡೆ ವಿರಕ್ತರೆಂಬೆನು.
6
ರೋಗರುಜಿನಗಳು ಬಂದಲ್ಲಿ ಕಿಂಕಿಲನಾಗದೆ ಇರಬಲ್ಲಡೆ

ಅಮುಗೇಶ್ವರಲಿಂಗವೆಂಬೆನು.

೬೪೦

ಗಗುಡಿಯಲ್ಲಿ ಸಾಮುವ ಮಾಡುವರಲ್ಲದೆ,

ಕಾಳಗದಲ್ಲಿ ಸಾಮುವ ಮಾಡುವರೆ ?

ಆದ್ಯರ ವಚನಂಗಳ, ಅರಿವುಸಂಬಂಧಿಗಳಲ್ಲಿ

ಅರಿದಬಳಿಕ ಬಿಡಬೇಕು.

ಅವರು ಕಡುಗಲಿಗಳಾಗಿ ಆಚರಿಸುವನಿಜವಿರಕ್ತರ

ಎನಗೊಮ್ಮೆ ತೋರಾಅಮುಗೇಶ್ವರಾ.
|| ೨ ||

೬೪೧

ಗುರುವಿನಡಿಗೆರಗನೆಂಬ ಭಾಷೆ ಎನಗೆ.

ಲಿಂಗವ ಪೂಜಿಸಿ ವರವ ಬೇಡೆನೆಂಬ ಭಾಷೆ ಎನಗೆ.

ಜಡೆಮುಡಿಯುಳ್ಳ ನಿಜಜಂಗಮವ ಕಂಡು

ಅಡಿಗರಗದ ಭಾಷೆ ಎನಗೆ.

ಹಿಡಿದ ಛಲವ ಬಿಡದೆ ನಡೆಸಿ

ಮೃಡನ ಪಡೆದೆಹೆನೆಂಬ ಭಾಷೆ ಎನಗೆ.

ಕಡುಗಲಿಯಾಗಿ ಆಚರಿಸಿ ಜಡಿದೆನು

ಅಜ್ಞಾನಿಗಳ ಬಾಯ ಕೆರಹಿನಲ್ಲಿ .

ಮಾತಿನಲ್ಲಿ ವೇಷಧಾರಿಗಳು ಮೃಡನ ಅರಿದೆಹೆನೆಂದು ಗಳಹುತಿಪ್ಪರೆ,

ಕೆರಹಿನಟ್ಟೆಯಲ್ಲಿ ಹೊಯ್ಯದೆ ಮಾಣ್ಣನೆ ಅರಿವುಳ್ಳ ಘನಮಹಿಮನ


ಅಮುಗೆರಾಯಮ್ಮನ ವಚನಗಳು

ಅಮುಗೇಶ್ವರನೆಂಬ ಲಿಂಗವ ಅರಿದಿಪ್ಪ


|| ೩ ||
ಮಹಾಘನಮಹಿಮನ ನಾನೇನೆಂಬೆನಯ್ಯಾ ?

೬೪೨

ಗುರುವೆಂಬೆನೆ, ಗುರುವು ನರನು;

ಲಿಂಗವೆಂಬೆನೆ, ಲಿಂಗವುಕಲ್ಲು ,

ಜಂಗಮವೆಂಬೆನೆ, ಜಂಗಮವು ಆತ್ಮನು;

ಪಾದೋದಕವೆಂಬೆನೆ, ಪಾದೋದಕ ನೀರು;

ಪ್ರಸಾದವೆಂಬೆನೆ, ಪ್ರಸಾದ ಓಗರ .

ಇಂತೆಂದುದಾಗಿ,

ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧವ ಹಿಡಿದ ಕಾರಣ,

ಗುರುವೆಂಬವನು ನರನು.

ಅಷ್ಟವಿಧಾರ್ಚನೆಷೋಡಶೋಪಚಾರಕ್ಕೆ ಒಳಗಾದ ಕಾರಣ,

ಲಿಂಗವೆಂಬುದು ಕಲ್ಲು .

ಆಶಪಾಶೆಗೆ ಒಳಗಾದ ಕಾರಣ ,

ಜಂಗಮವೆಂಬುದು ಆತ್ಮನು.

ಲಾಂಛನಿಗಳೆಂದು ಕಾಂಚನಕ್ಕೆ ಕೈಯಾನುವರಲ್ಲಿ

ಪಾದೋದಕ ಪ್ರಸಾದವೆಂದು ಕೊಂಡೆನಾದಡೆ

ಕೆಸರಿನೊಳಗೆ ಬಿದ್ದ ಪಶುವಿನಂತೆ ಆಯಿತ್ತು ಕಾಣಾ

ಅಮುಗೇಶ್ವರಾ. || ೪ ||

ಚಂದ್ರಸೂರ್ಯರಿಬ್ಬರೂ ಬಂಧನಕ್ಕೆ ಬಪ್ಪುದ ಕಂಡೆ.

ಬ್ರಹ್ಮ ವಿಷ್ಣು ಭವಕ್ಕೆ ಗುರಿಯಾದುದ ಕಂಡೆ .

ದೇವ ದಾನವ ಮಾನವರು ಮಾಯಾಯೋನಿಮುಖವಾದುದ ಕಂಡೆ.

ಬಟ್ಟಬಯಲಲ್ಲಿ ನಿಂದು ನಿಮ್ಮ ಮುಟ್ಟಿದೆನಯ್ಯಾ ಅಮುಗೇಶ್ವರಾ. || ೫೫ ||

೬೪೪

ಚಿನ್ನಗಣೆಯ ಕಟ್ಟಿದವರೆಲ್ಲ
ಹೊನ್ನಿನನೋಟವ ಬಲ್ಲರೆ ?

ಕರ್ಮಕೆ ಗುರಿಯಾದವರು

ನಿಮ್ಮನೆತ್ತ ಬಲ್ಲರೊ ಅಮುಗೇಶ್ವರಾ ? || ೧೬ ||


೨೦೨
ಶಿವಶರಣೆಯರ ವಚನಸಂಪುಟ

೬೪೫

ಜ್ಞಾನವೆಂಬುದು ಬೀದಿಯ ಪಸರವೆ ?

ಬೊಕ್ಕಣಕ್ಕೆ ತುಂಬುವ ಹುರುಳಿಯೆ ?

ಚೀಲದೊಳಗಣ ಜೀರಿಗೆಯೆ ?

ಗಾಣದೊಳಗಣ ಹಿಂಡಿಯೆ ?

ಜ್ಞಾನವೆಂಬುದ ಎಲ್ಲರೊಡನೆ ಬೀರದಿರಬೇಕು.

ಗೆಲ್ಲ ಸೋಲಿನ ಮಾತು ಬಂದಡೆ ಗೆಲ್ಲವ ನುಡಿಯದಿರಬೇಕು

ಅಮುಗೇಶ್ವರಲಿಂಗವೆಂಬೆನು. || ೭ ||

트위트

ತುಪ್ಪ ಬೋನವನುಂಡು, ನಚ್ಚುಮೆಚ್ಚಿನ ಮಾತ ನುಡಿದು,

ರಟ್ಟೆಯಲ್ಲಿ ಕುಳಿತು ಇಷ್ಟಲಿಂಗವನಪ್ಪಿದವರ ನಿತ್ಯಜ್ಞಾನಿಗಳೆಂದಡೆ

ಪ್ರತ್ಯಕ್ಷವಾಗಿ ಸುರಿಯವೆ ಬಾಯಲ್ಲಿ ಬಾಲಹುಳು ?

ನಿತ್ಯರ ಕಂಡು ನಿಂದಿಸಿ ವಂದಿಸಿದಡೆ

ಪ್ರತ್ಯಕ್ಷವಾಗಿ ಪರಶಿವನ ಶರಣರು ಹೊಟ್ಟೆಯ ಸೀಳದೆ ಮಾಣ್ಮರೆ ?

ಅಮುಗೇಶ್ವರಲಿಂಗವನರಿಯದೆ

ಬರಿಯ ಮಾತಿನಲ್ಲಿ ಅರಿವು ಸಂಬಂಧಿಗಳೆಂದಡೆ,

ನೀವು ಸಾಕ್ಷಿಯಾಗಿ ಮಾರಿಗೆ ಹೊಯಿದ


|| ೧೮ ||
ಕೋಣನ ಕೊರಳಕೊಯಿದಂತೆಕೊಯ್ಯರಯ್ಯಾ.

22

ತೆಕ್ಕಿಗರು ಬಂದು ನಿತ್ಯನಾದೆಯಾ ಎಂದಡೆ,

ಬಿಚ್ಚದಿರಬೇಕು ತನ್ನ ಶಿವಜ್ಞಾನವ.

ತೆಕ್ಕಿಗರು ಕಂಡು ಮುಕ್ತನಾದೆಯಾ ಎಂದಡೆ,


|| ೫೯ ||
ಬಿಚ್ಚದಿರಬೇಕು ಅಮುಗೇಶ್ವರಲಿಂಗದ ಅರಿವ.

೬೪೮

ತೊಗಲಬೊಕ್ಕಣದಲ್ಲಿ ಪಾಷಾಣವಕಟ್ಟುವರಲ್ಲದೆ

ಪರುಷವ ಕಟ್ಟುವರೆ ?

ಮಣ್ಣಹರವಿನಲ್ಲಿ ಸುರೆಯ ತುಂಬುವರಲ್ಲದೆ

ರತ್ನವ ತುಂಬುವರೆ ?

ಆದ್ಯರ ವಚನಂಗಳಿರ್ದುದ ಕಾಣಲರಿಯದೆ


ಅಮುಗೆರಾಯಮ್ಮನ ವಚನಗಳು

ನಾ ಘನ ತಾ ಘನವೆಂದು ಅಗಮ್ಮವಬಿರುವ

ಅಜ್ಞಾನಿಗಳ ವಿರಕ್ತರೆಂಬೆನೆ ? ಅನುಭಾವಿಗಳೆಂಬೆನೆ ?

ನಿಜವನರಿದ ಲಿಂಗೈಕ್ಯರೆಂಬೆನೆ ?

ಅಮುಗೇಶ್ವರಲಿಂಗವನರಿಯದಜ್ಞಾನಿಗಳ ಆರೂಢರೆಂಬೆನೆ ? || ೬೦ ||

೬೪೯

ದೇಶದೇಶವ ತಿರುಗಿ ಮಾತುಗಳ ಕಲಿತು,

ಗ್ರಾಸಕ್ಕೆ ತಿರುಗುವ ದಾಸವೇಶಿಯ ಮಕ್ಕಳ ವಿರಕ್ತರೆಂಬೆನೆ ?

ತನುವಿನಲ್ಲಿಪ್ಪ ತಾಮಸವ ಕಳೆಯದೆ

ಕಾಬವರ ಕಂಡು ವಿರಕ್ತರೆಂದಡೆ,

ಕುಂಭೀಪಾತಕ ನಾಯಕನರಕ ತಪ್ಪದು ಅಮುಗೇಶ್ವರಾ. | ೬೧ ||

೬೫೦

ದೇಹವಿಲ್ಲದೆ ಸುಳಿಯಬಲ್ಲಡೆ ಲಿಂಗೈಕ್ಯನೆಂಬೆನು.

ಭಾವವಿಲ್ಲದೆ ಭ್ರಮಿತನಾಗಬಲ್ಲಡೆ ನಿರ್ಲೇಪಿಯೆಂಬೆನು.

ಬಂದ ಬಂದ ಭೇದವನರಿದು

ಲಿಂಗಾರ್ಪಿತವ ಮಾಡಬಲ್ಲಡೆ ಲಿಂಗೈಕ್ಯನೆಂಬೆನು ;

ಅಮುಗೇಶ್ವರಲಿಂಗವನರಿದ ಆರೂಢನಂಬೆನು. || ೬೨ ||

೬೫೧

ಧೀರನೆಂದು ಬೀದಿಯಲ್ಲಿ ನುಡಿಯಲೇಕೆ ?

ಕಾವಲ್ಲಿ ಕಾಣಬಹುದು.

ವಿರಕ್ತನೆಂದು ನುಡಿಯ ನುಡಿಯಲೇಕೆ ?

ಮಹಾಜ್ಞಾನಿಗಳು ನೋಡಲೊಡನೆ ಕಾಣಬಹುದು.

ನಾನೆ ಬ್ರಹ್ಮವೆಂಬ ಭವಗೇಡಿಗಳ

ಮೆಚ್ಚುವನೆ ಅಮುಗೇಶ್ವರಲಿಂಗವು ? || ೬೩ ||

೬೫೨

ನವನಾರಿಕುಂಜರ ಪಂಚನಾರೀತುರಂಗವೆಂಬವನ ಮೇಲೆ

ಬಿರಿದ ಕಟ್ಟಿದ ಬಳಿಕ ,

ಪರಶಿವಂಗೆ ಸಾಕಾರವಾಗಿರಬೇಕು.

ಬಸವಾದಿ ಪ್ರಮಥರಿಗೆ ಬಲುಗಯ್ಯನಾಗಿರಬೇಕು.


೨೦೪
ಶಿವಶರಣೆಯರ ವಚನಸಂಪುಟ

ಬಸವಣ್ಣಂಗೆ ಲಿಂಗವಾಗಿರಬೇಕು.

ಪ್ರಭುದೇವರಿಗೆ ಪ್ರಣವಸ್ವರೂಪವಾಗಿರಬೇಕು.

ಅಮುಗೇಶ್ವರನೆಂಬ ಲಿಂಗವನರಿದಡೆ ನಿರ್ಭೇದ್ಯನಾಗಿ

ನಿಜಲಿಂಗೈಕ್ಯನಾಗಿಪ್ಪನಯ್ಯಾ . || ೬೪ ||

ನಾನೆ ಕರ್ತನೆಂದು ಹಾಡಿದೆನು ವಚನವ.

ನಾನೆ ನಿತ್ಯನೆಂದು ಕಟ್ಟಿದನು ಬಿರಿದ.

ನಾನೆ ನಿರವಯಸ್ಸಲದಲ್ಲಿ ನಿಂದು ಓದಿದೆನು ವಚನವ.

ನಾ ಓದಿದುದೆಲ್ಲಾ ನೀ ಓದಿದುದು;

ನಾ ಕಟ್ಟಿದ ಬಿರಿದು ನಿನ್ನ ಬಿರಿದು.

ನಾನರಿದ ಅರಿವೆಲ್ಲಾ ನಿನ್ನರಿವು.

ನಾ ಕಟ್ಟಿದ ಬಿರಿದಿಂಗೆ ಹಿಂದೆಗೆವನಲ್ಲ .

ಅಮುಗೇಶ್ವರಲಿಂಗಕ್ಕೂ ಎನಗೂ ಪ್ರಭುದೇವರ ಗುರುವಲ್ಲದೆ

ಈರೇಳುಲೋಕ ಹದಿನಾಲ್ಕು ಭುವನದಲ್ಲಿ ಆರನೂ ಕಾಣೆ. || ೬೫ ||

ನಾನೆ ಗುರುವಾದಬಳಿಕ ಇನ್ನಾರ ನೆನೆವೆನಯ್ಯಾ ?

ನಾನೆ ಲಿಂಗವಾದಬಳಿಕ ಇನ್ನಾರ ನೆನೆವೆನಯ್ಯಾ ?

ನಾನೆ ಜಂಗಮವಾದಬಳಿಕ ಇನ್ನಾರ ನೆನೆವೆನಯ್ಯಾ ?

ಎನಗೆ ಗುರುವಾದಾತನು ನೀನೆ, ಎನಗೆ ಲಿಂಗವಾದಾತನು ನೀನೆ.

ಎನಗೆ ಜಂಗಮವಾದಾತನು ನೀನೆ.

ಎನಗೆ ಪಾದೋದಕ ಪ್ರಸಾದವಾದಾತನು ನೀನೆ.

ಅಮುಗೇಶ್ವರಲಿಂಗವಾಗಿ ಎನ್ನ ಕರಸ್ಥಲಕ್ಕೆ ಬಂದಾತನು ನೀನೆ, ಪ್ರಭುವೆ.|| ೬೬ ||

ನಾನೆ ಗುರುವಾದಬಳಿಕ ಗುರುವೆಂಬುದಿಲ್ಲ .

ನಾನೆ ಲಿಂಗವಾದಬಳಿಕ ಲಿಂಗವೆಂಬುದಿಲ್ಲ .

ನಾನೆ ಜಂಗಮವಾದಬಳಿಕ ಜಂಗಮವೆಂಬುದಿಲ್ಲ .

ನಾನೆ ಪ್ರಸಾದವಾದಬಳಿಕ ಪ್ರಸಾದವೆಂಬುದಿಲ್ಲ .

ಅಮುಗೇಶ್ವರನೆಂಬ ಲಿಂಗವು ತಾನೆಯಾದಬಳಿಕ


|| ೬೭ ||
ಲಿಂಗವನರಿದೆನೆಂಬ ಹಂಗಿನವನಲ್ಲ .
ಅಮುಗೆರಾಯಮ್ಮನ ವಚನಗಳು

೬೫೬

ನಿಜವನರಿದ ವಿರಕ್ತನು ನಿಜಾನುಭಾವಿಯೆಂದು ನುಡಿವನೆ ?

ಅತ್ಯತಿಷ್ಠದ್ದಶಾಂಗುಲನೆಂಬ ಘನವನರಿದು

ಕತ್ತಲೆಯ ಮನೆಯಲ್ಲಿ ಮಧುರವ ಸವಿದಂತೆ ಇರಬೇಕು,


|| ೬೮ ||
ಕಾಣಾ ಅಮುಗೇಶ್ವರಾ.

೬೫೭

ನಿತ್ಯನಾಗಿ ಇಷ್ಟಲಿಂಗವನಪ್ಪಿದ ಶರಣನಿರವ

ಭ್ರಷ್ಟಭವಿಗಳೆತ್ತ ಬಲ್ಲರೂ ?

ನೆಟ್ಟನೆ ನಿಂದು ಮುಟ್ಟಿದೆನು ಶಿವನ ಪಾದವ ;

ಎನ್ನಲಿ ಕೆಟ್ಟಗುಣ ಹೊದ್ದಲಿಲ್ಲವೆಂದು

ಮುಟ್ಟಿದನು ಎನ್ನ ಇಷ್ಟಲಿಂಗವ.

ಕೆಟ್ಟ ಭವಭಾರಿಗಳ ಕಂಡಡೆ


|| ೬೯ ||
ಭ್ರಷ್ಟರೆಂದು ನಿಮ್ಮನಪ್ಪಿಕೊಂಬೆನು ಅಮುಗೇಶ್ವರಾ.

೬೫೮

ನಿರವಯಸ್ಸಲದಲ್ಲಿ ನಿಂದ ಅಭೇದ್ಯನ

ಅರಿವಿನ ವಚನವುಳ್ಳವಂಗೆ ಅಂಗದ ಹಂಗೇಕೆ ?

ಅರಿವುಳ್ಳವಂಗೆ ಗುರುವಿನ ಹಂಗೇಕೆ ?

ಅರಿವುಳ್ಳವಂಗೆ ಲಿಂಗದ ಹಂಗೇಕೆ ?

ಅರಿವುಳ್ಳವಂಗೆ ಜಂಗಮದ ಹಂಗೇಕೆ ?

ಅರಿವುಳ್ಳವಂಗೆ ಪಾದೋದಕ ಪ್ರಸಾದದ ಹಂಗೇಕೆ ?

ಅರಿವುಳ್ಳವಂಗೆ ಅಮುಗೇಶ್ವರಲಿಂಗವನರಿದೆನೆಂಬ ಸಂದೇಹವೇಕೆ


|| ೭೦
? ||

೬೫೯

ನಿರವಯಸ್ಥಲದಲ್ಲಿ ನಿಂದ ಬಳಿಕ

ಹೊನ್ನ ಹಿಡಿಯೆನೆಂಬ ಭಾಷೆ ಎನಗೆ.

ಹೆಣ್ಣು ಹೊನ್ನು ಮಣ್ಣು ಹಿಡಿದು ಲಿಂಗೈಕ್ಯನಾದೆನೆಂದಡೆ

ಎನ್ನ ಅಂಗದ ಮೇಲೆ ಲಿಂಗವಿಲ್ಲ .

ಪಟ್ಟೆಮಂಚ ಹಚ್ಚಡ ಬಂದಡೆ ದಿಟ್ಟಿಸಿನೋಡೆ.

ಸಣ್ಣ ಬಣ್ಣಗಳು ಬಂದಡೆ ಕಣ್ಣೆತ್ತಿ ನೋಡೆನೆಂಬ ಭಾಷೆ ಎನಗೆ.

ಎನ್ನ ಲಿಂಗಕ್ಕೆ ಹೆಜ್ಜೆ ಶಿವದಾರವ


೨೦೬
ಶಿವಶರಣೆಯರ ವಚನಸಂಪುಟ

ಬಾಯೆತ್ತಿ ಭಕ್ತ ಜಂಗಮವ ಬೇಡಿದೆನಾದಡೆ,

ಎನ್ನ ಅರುವಿಂಗೆ ಭಂಗ ನೋಡಾ.

ಬಸವಣ್ಣ ಸಾಕ್ಷಿಯಾಗಿ, ಪ್ರಭುವಿಗರಿಕೆಯಾಗಿ,

ಪ್ರಭುದೇವರ ಕಂಡು ಕೈಯಲ್ಲಿ ಕಟ್ಟಿದ ಬಿರಿದಿಂಗೆ ಹಿಂದೆಗೆದೆನಾದಡೆ

ಎನಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ,

ಪಾದೋದಕ ಪ್ರಸಾದವೆಂಬುದು ಎಂದೆಂದಿಗೂ ಇಲ್ಲ .

ಅಮುಗೇಶ್ವರನೆಂಬ ಲಿಂಗವುಸ್ವಪ್ನದಲ್ಲಿ ಸುಳಿಯಲಿಲ್ಲ . || ೭೧ ||

೬೬೦

ನಿರವಯಸ್ಥಲದಲ್ಲಿ ನಿಂದ ಲಿಂಗೈಕ್ಯಂಗೆ

ಸಂದೇಹವುಂಟೆ ? ಸಂಕಲ್ಪವುಂಟೆ ?

ಹೇಹ ಉಂಟೆ ನಿಜವನರಿದವಂಗೆ ?

ಇಂತೀ ತ್ರಿವಿಧವನರಿದಡೆ ಲಿಂಗೈಕ್ಯನೆಂಬೆನು.

ಅರಿಯದಿರ್ದಡೆ ಕತ್ತೆ ಪರ್ವತಕ್ಕೆ ಹೋಗಿ,

ಕಲ್ಲನೆಡಹಿ ಕಾಲು ಮುರಿದಂತಾಯ್ತು ಕಾಣಾ

ಅಮುಗೇಶ್ವರಲಿಂಗವನರಿಯದ ಅಜ್ಞಾನಿಗಳಿಗೆ. || ೭೨ ||

೬೬೧

ನಿಶ್ಚಿಂತಂಗೆ ಅಚ್ಚುಗದ ಮಾತೇಕೆ ?

ಬಟ್ಟಬೋಳರಂತೆ ಹುಚ್ಚುಗೆಲೆಯಲೇಕೆ ?

ಹೋಗಿಬರುವವರ ಮಚ್ಚಿ ಒಂದೂರಲ್ಲಿ ಇಚ್ಛೆಯ ನುಡಿದವಂಗೆ

ಬಿಚ್ಚಬಣ್ಣನೆಯ ಮಾತೇಕೆ, ಅಮುಗೇಶ್ವರಾ ? || ೭೩ ||

೬೬೨

ನೀರೊಳಗೆ ಹೋದವನ ಹೆಜ್ಜೆಯ ಕಾಬವರುಂಟೆ ?

ಅಂದಳವನೇರಿದ ಆತ್ಮನ ಹೆಜ್ಜೆಯ ಕಾಬವರುಂಟೆ ?

ಆನೆಯನೇರಿಕೊಂಡು ಅರಿವನರಸುವನಂತೆ ,

ಜ್ಞಾನಿಗಳ ಸಂಗದಲ್ಲಿರ್ದು ಆತ್ಮತೇಜಕ್ಕೆ ಹೋರುವನಂತೆ,

ನಾನುನೀನೆಂಬುದನಳಿದು ತಾನೆಯಾಗಿರಬಲ್ಲಡೆ

ಅಮುಗೇಶ್ವರಲಿಂಗವು ತಾನೆ ಎಂಬೆನು . || ೭೪ ||

ನೊಸಲಿನಲ್ಲಿ ಮೂರುಕಣ್ಣುಳ್ಳ ಪಶುಪತಿಯಾದಡೂ ಆಗಲಿ ,

ಆದ್ಯರ ವಚನಗಳಲ್ಲಿ ,
೨೦೭
ಅಮುಗೆರಾಯಮ್ಮನ ವಚನಗಳು

ಹೊನ್ನ ಹಿಡಿದವರು ಗುರುದ್ರೋಹಿಗಳು;

ಹೆಣ್ಣ ಹಿಡಿದವರು ಲಿಂಗದ್ರೋಹಿಗಳು;

ಮಣ್ಣ ಹಿಡಿದವರು ಜಂಗಮದ್ರೋಹಿಗಳು;

ಹೀಗೆಂದು ಸಾರುತ್ತವೆ ವೇದ.

ಹಿಡಿದ ಆಚರಣೆ ಅನುಸರಣೆಯಾಗಿ, ತ್ರಿವಿಧವ ಹಿಡಿದು,

ನಾನೆ ಬ್ರಹ್ಮವೆಂದು ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಗಳು

ಎಂಬ ಭವಕರ್ಮಿಗಳಿಗೆ ನರಕವೆ ಪ್ರಾಪ್ತಿ ನೋಡಾ!

ಲಿಂಗವಂತನೆಂಬೆನೆ ಜಂಗಮವೆಂಬೆನೆ ?

ಹಿಡಿದ ಆಚರಣೆ ಅನುಸರಣೆಯಾದ ಬಳಿಕ ಜಂಗಮವೆನಲಿಲ್ಲ .

ಜಗದಲ್ಲಿ ನಡೆವ ಜಂಗುಳಿಗಳು

ಭವಭವದಲ್ಲಿ ಬಳಲುತಿಪ್ಪರು ಅಮುಗೇಶ್ವರಾ. || ೭೫ |

ಪಟ್ಟಣದ ಸೂಳೆಯ ಕೂಡೆ ಪರಬ್ರಹ್ಮವ ನುಡಿಯಲೇಕೆ ?


ಸಂತೆಗೆ ಬಂದವರಕೂಡೆ ಸಹಜವ ನುಡಿಯಲೇಕೆ ?

ಕತ್ತೆಯನೇರುವರಕೂಡೆ ನಿತ್ಯರೆಂದು ನುಡಿಯಲೇಕೆ ?

ಹೊತ್ತುಹೋಕರಕೂಡೆಕರ್ತನ ಸುದ್ದಿಯ ನುಡಿಯಲೇಕೆ ?

ಅಮುಗೇಶ್ವರಲಿಂಗವನರಿದ ಶರಣಂಗೆ

ಹತ್ತು ಸಾವಿರವನೋದಲೇಕೆ ?

ಹತ್ತುಸಾವಿರವಕೇಳಲೇಕೆ ?

ಭ್ರಷ್ಟರ ಕೂಡೆ ನುಡಿಯಲೇಕೆ ? || ೭೬ ||

೬೬೫

ಪೊಡವಿಯನಾಳುವರ ದೊರೆಗಳೆಂಬೆನೆ ?

ಮೃಡನ ವೇಷವ ಧರಿಸಿದವರ ಕಡುಗಲಿಗಳೆಂಬೆನೆ ?

ಅರಿವು ಆಚಾರವನರಿಯದವರ ಲಿಂಗೈಕ್ಯರೆಂಬೆನೆ ?

ಎನ್ನೆನಯ್ಯಾ ಅಮುಗೇಶ್ವರಲಿಂಗವೆ. || ೭೭ ||

೬೬೬

ಬಲ್ಲೆನೆಂಬ ವಿರಕ್ತರು ಬಾಯಿದೆರೆದು ಬಲ್ಲೆವೆಂದು ನುಡಿಯದಿರಿ.

" ತನಕ್ಕೆ ಹೋರಿಯಾಡಲೇಕೆ ?

ಮಹಾಜ್ಞಾನಿಗಳು ಬಂದು ಬಲ್ಲೆಯಾ ಎಂದಡೆ


೨೦೮
ಶಿವಶರಣೆಯರ ವಚನಸಂಪುಟ

ಬಲುಗೈಯ ಅರಿಯೆನೆನ್ನಬೇಕು.

ಇದಕೆ ತರ್ಕವೇಕೆ ಅಮುಗೇಶ್ವರಲಿಂಗವನರಿದವಂಗೆ. || ೭೮ ||

೬೬೭

ಬಾವಿಯ ಉದಕವ ಕುಡಿವರ ಕಂಡೆ,

ಬಾನಿನಲ್ಲಿಪ್ಪ ಉದಕವ ತರುವರ ಕಾಣೆ.

ಹರವಿಯ ಅಗ್ಗವಣಿಯ ಕುಡಿವವರನಲ್ಲದೆ

ಅಮುಗೇಶ್ವರನೆಂಬ ಲಿಂಗವನರಿವವರ ಕಾಣೆ . || ೭೯ ||

೬೬೮

ಬೀಜವಿಲ್ಲದೆ ವೃಕ್ಷ ಬೆಳೆಯಬಲ್ಲುದೆ ?

ಹೂವಿಲ್ಲದೆ ಹಣ್ಣಾಗಬಲ್ಲುದೆ ?

ತೆಂಗಿನ ಮರನ ಬಿತ್ತಿದಡೆ ಅಂಬರಕ್ಕೆ ಹೋಯಿತ್ತು;

ಕಾಯಿದೆ, ನೀರು ಇಲ್ಲದೆ

ಗಾಳಿಗೆ ಮರ ಮುರಿದಂತೆ ಆಯಿತ್ತು ಕಾಣಾ.

ಅಮುಗೇಶ್ವರಲಿಂಗವನರಿಯದ

ಅನಾಚಾರಿಗಳ ವಿರಕ್ತರೆಂಬೆನೆ ? ಎನಲಾಗದು. || ೮೦ ||

೬೬೯

ಬೆಟ್ಟದ ನೆಲ್ಲಿಯಕಾಯ ಪಟ್ಟಣಕ್ಕೆ ಹೊತ್ತುಕೊಂಡು ಹೋಗಿ

ಹೊಟ್ಟೆಯ ಹೊರೆವವನಂತೆ,

ಉತ್ತಮ ತೇಜಿಯ ಹೆಸರ ಕೇಳಿಕಡಲೆಯ ತಿಂಬ ಗಾವಲಿಗನಂತೆ,

ಅತ್ತೆಯ ಹೆಸರ ಹೇಳಿ ಹೊಟ್ಟೆಯ ಹೊರೆವ ತೊತ್ತಿನಂತೆ,

ಆದ್ಯರ ವಚನಂಗಳ ಅಲ್ಲಿಗಲ್ಲಿಗೆಉಸುರಿ

ಅನ್ನ ಕೂಳಿಂಗೆ ಹರಿದಾಡುವ ಅಜ್ಞಾನಿಗಳ

ಅನುಭಾವಿಗಳೆಂಬೆನೆ ? ಅಯ್ಯಾ , ವಿರಕ್ತರೆಂಬೆನೆ ?

ವೇಷವ ಹೊತ್ತು ತಿರುಗುವ ಡೊಂಬನಂತೆ

ಬಲೆ ಬಲ್ಲೆನೆಂಬ ಅಹಂಕಾರವ ನುಡಿವ ಭವಿಗಳ

ಅನುಭಾವಿಗಳೆಂಬೆನಲ್ಲದೆ ವಿರಕ್ತರೆಂಬೆನೆ ?

ವಿಷಯವ ಮುಂದುಗೊಂಡು ತಿರುಗುವ ಅನುಭಾವಿಗಳನೆಂತು


|| ೮೧ ||
ವಿರಕ್ತರೆಂಬೆನಯ್ಯಾ ಅಮುಗೇಶ್ವರಲಿಂಗವೆ ?
೨೦೯
ಅಮುಗೆರಾಯಮ್ಮನ ವಚನಗಳು

೬೭೦

ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತನಾಗಿ

ನನ್ನವರು ತನ್ನವರೆಂದು ನುಡಿವ ಕುನ್ನಿಗಳ ವಿರಕ್ತರೆಂಬೆನೆ ಅಯ್ಯಾ ?

ಪಕ್ಷ ಪರಪಕ್ಷಂಗಳನರಿತು

ಹೇಹಂಗಳ ಜರಿಯಬಲ್ಲಡೆ ವಿರಕ್ತನೆಂಬೆನು .

ತ್ರಿವಿಧವನತಿಗಳೆದು ವಿರಕ್ತನಾದ ಬಳಿಕ

ತ್ರಿವಿಧವ ಹಿಡಿದ ಗುರುವ ಕಂಡಡೆ, ಅವನ ಅಡಿಗೆರಗಿದೆನಾದಡೆ

ಅಘೋರನರಕ ತಪ್ಪದು, ಅದೇನು ಕಾರಣವೆಂದಡೆ :

ಭವಪಾಶಂಗಳ ಹರಿದು ಅವಿರಳನಾದ ಕಾರಣ,

ವ್ರತಭ್ರಷ್ಟ ಲಿಂಗಬಾಹ್ಯನ ಮುಖವ ನೋಡೆನು.

ಹೊನ್ನು ಹೆಣ್ಣು ಮಣ್ಣು ಹಿಡಿವರ ಕಂಡಡೆ,

ಎನ್ನ ಗುರುವೆಂದು ಅಡಿಗೆರಗೆನು ,

ಬಸವಣ್ಣನೆ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ. || ೮೨ ||

೬೭೧

ಭಾವವಿಲ್ಲದ ಬಯಲೊಳಗೆ ಮನೆಯ ಮಾಡಿದಡೆ

ಬೆಟ್ಟ ಬೆಟ್ಟಕ್ಕೆ ಜಗಳಬಂದು ಕಿಚ್ಚು ಹತ್ತಿತ್ತು.


ಭಾವವಿಲ್ಲದ ಬಯಲೊಳಗಣ ಮನೆ ಬೆಂದಿತ್ತು .

ಅಮುಗೇಶ್ವರನೆಂಬ ಲಿಂಗವರಿಯಬಂದಿತ್ತು . || ೮೩ ||

೬೭೨

ಮಂಡೆಬೋಳಾಗಿ ತುಂಡುಗಂಬಳಿಹೊದ್ದಬಳಿಕ

ಅಂದಚಂದಗಳೇಕೆ ?

ಖಂಡಿತನೆ, ಕಂಡಕಂಡವರ ಮನಮೆಚ್ಚುವಂತೆ

ಅಂದಚಂದಗಳೇಕೆ ?

ಮಂಡೆಬೋಳಾದಡೆ ಮಹಾನುಭಾವಿಗಳು ಮೆಚ್ಚುವಂತೆ ಇರಬೇಕು

ಕಾಣಾ, ಅಮುಗೇಶ್ವರಾ. || ೮೪ ||

೬೭೩

ಮಂಡೆಯ ಬೋಳಿಸಿಕೊಂಡು

ತುಂಡುಗಂಬಳಿಯ ಹೊದ್ದವರ ಕಂಡಡೆ

ನಂಬಲಾರೆ ನಚ್ಚಲಾರೆ.

ಈ ವೇಷವ ನಾಚಿದೆ ಅಮುಗೇಶ್ವರಾ. || ೮ ||


ಶಿವಶರಣೆಯರ ವಚನಸಂಪುಟ

೬೭೪

ಮರ್ತ್ಯದಲ್ಲಿ ಹುಟ್ಟಿದವರೆಲ್ಲರೂ ಇಷ್ಟಲಿಂಗಸಂಬಂಧಿಗಳೆ ?

ಗುರುವಿನಲ್ಲಿ ಉಪದೇಶವ ಪಡೆದವರೆಲ್ಲರೂ ವಿರಕ್ತರಾಗಬಲ್ಲರೆ ?

ಭೂಮಿಯ ಮೇಲಣ ಕಾವಿಯ ಹೊದ್ದು ಕಾಯವಿಕಾರಕ್ಕೆ ತಿರುಗುವ

ಗಾವಿಲರ ಲಾಂಛನಿಗಳೆಂದಡೆ

ಅಮುಗೇಶ್ವರಲಿಂಗವುನೋಡಿನೋಡಿನಗುತಿಪ್ಪುದು.
|| ೮೬ ||

೬೭೫

ಮನಕ್ಕೆ ಬಂದಂತೆ ಹಲವುಪರಿಯ ವೇಷವ ತೊಟ್ಟು ಹರಿದಾಡುವ

ಜಾತಿಕಾರರ ಈಶ್ವರನು ಮೆಚ್ಚನು;

ಸದಾಶಿವನು ಸೈರಣೆಯ ಮಾಡನು.

ಬಸವಾದಿ ಪ್ರಮಥರು ಬನ್ನಿ ಕುಳ್ಳಿರಿ ಎನ್ನರು.

ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ ಕಂಡಡೆ

ಬನ್ನಿ ಕುಳ್ಳಿರಿ ಎಂಬ ನುಡಿಯ ನುಡಿಯರು. || ೮೭ ||

೬೭೬

ಮರನನೇರಿ ಹಣ್ಣನರಸಹೋದಡೆ

ಮರ ಮುರಿದುಬಿದ್ದ ಮರುಳುಮಾನವನಂತೆ,

ಕೆಸರಿನೊಳಗಣ ಹುಲ್ಲ ಮೇಯಹೋದಪಶುವಿನಂತೆ,


ಕೊಂಬೆ ಕೊಂಬೆಗೆ ಹಾರುವಕೋಡಗನಂತೆ,

ಉಂಡ ಮನೆಯ ದೂರುವ ಒಡೆಕಾರನಂತೆ,

ಹಳ್ಳ ಹಳ್ಳ ತಿಬ್ಬಳಿ ತಿರುಗುವ ಬಳ್ಳುವಿನಂತೆ,

ಮಾತಿನಲ್ಲಿ ಬ್ರಹ್ಮವ ನುಡಿವ ವೇಷಧಾರಿಗಳ ಲಿಂಗಾಂಗಿಗಳೆಂದಡೆ

ಮಾರಿಗೆತಂದ ಹಂದಿಯ ನಾಯಿ ನರಿ ತಿಂಬಂತೆ

ಕಾಣಾ ಅಮುಗೇಶ್ವರಾ. || ೮೮ ||

೬೭೭

ಮರುಜವಣಿಯ ಕಂಡವಂಗೆ ಮರಣದ ಹಂಗುಂಟೆ ?

ಪರುಷವುಳ್ಳವಂಗೆ ಪಾಷಾಣದ ಹಂಗುಂಟೆ ?

ಸರ್ವಾಂಗಲಿಂಗವಾದವಂಗೆ ಅನರ್ಪಿತವುಂಟೆ ?

ಜ್ಯೋತಿಯ ಬೆಳಗಿನಲ್ಲಿದ್ದವಂಗೆ ಕತ್ತಲೆಯ ಹಂಗುಂಟೆ ?

ಅಮುಗೇಶ್ವರಲಿಂಗವಾದವಂಗೆ ಲಿಂಗದ ಹಂಗುಂಟೆ ? || ೮೯ ||


ಅಮುಗೆರಾಯಮ್ಮನ ವಚನಗಳು

೬೭೮

ಮಾಯಾಯೋನಿಯಲ್ಲಿ ಹುಟ್ಟುವ ಮರುಳರೆಲ್ಲರು

ಮಹಾಜ್ಞಾನಿಗಳಪ್ಪರೆ ?

ಕಾಮವಿಕಾರಕ್ಕೆ ತಿರುಗುವ ಜೀವಗಳ್ಳರು

ಅನಾದಿವಸ್ತುವನರಿವರೆ ?

ಮಾತಿನಲ್ಲಿ ಮಹಾಜ್ಞಾನಿಗಳೆಂಬ ವೇಷಧಾರಿಗಳ ಕಂಡು

ನಾಚುವೆ ಕಾಣಾ ಅಮುಗೇಶ್ವರಾ. || ೯೦ ||

೬೭೯

ಮುಂಡದಲ್ಲಿ ತಿರುಗುವವರು ಕೋಟ್ಯಾನುಕೋಟಿ;


ತಲೆಯಲ್ಲಿ ತಿರುಗುವವರನಾರನೂ ಕಾಣೆ.

ಅಂಗದಲ್ಲಿಪ್ಪ ಮಲಿನವ ಕಳೆವರುಕೋಟ್ಯಾನುಕೋಟಿ;

ಮನದಲ್ಲಿಪ್ಪ ಮಲಿನವ ಕಳೆವವರನಾರನೂ ಕಾಣೆ

ಅಮುಗೇಶ್ವರಾ. || ೯೧ ||

೬೮೦

ಮುಂಡವ ಬಿಟ್ಟು ತಲೆಯಲ್ಲಿ ನಡೆವ

ತತ್ವಜ್ಞಾನಿಗಳ ತೋರಿಸಯ್ಯಾ .

ಬೀದಿಯಲ್ಲಿ ಸುಳಿಯುವ

ಬಿಸಿಲಕುದುರೆಯ ಏರಬಲ್ಲಡೆ, ಕಡುಗಲಿ ಎಂಬೆನು .

ಮೃಡನ ಅರಿಯಬಲ್ಲಡೆ, ಪೊಡವಿಗೆ ಒಡೆಯರೆಂಬೆನು ;

ಅಮುಗೇಶ್ವರಲಿಂಗಕ್ಕೆ ಅತ್ತಲಾದವರೆಂಬೆನು. || ೯೨ ||

೬೮೧

ಮುಂಡವ ಹೊತ್ತುಕೊಂಡು ತಿರುಗುವ

ಮೂಕೊರೆಯರ ಮುಖವನೋಡೆ.

ಸತ್ತ ಕರುವ ಹೊತ್ತುಕೊಂಡು ತಿರುಗುವ

ಭವವಿಕಾರಿಗಳ ಮುಖವನೋಡೆ.

ನಿತ್ಯನಾದ ಬಳಿಕ, ಅನಿತ್ಯರಕೂಡೆ ಅಮುಗೇಶ್ವರಾ. || ೯ ||

೬೮೨

ಮೂಗಿಲ್ಲದವಂಗೆ ಕನ್ನಡಿಯ ತೋರಲೇಕೆ ?

ಕೈಯಿಲ್ಲದವಂಗೆ ಕುದುರೆಯನೇರಲೇಕೆ ?
೨೧೨ ಶಿವಶರಣೆಯರ ವಚನಸಂಪುಟ

ಕಾಲಿಲ್ಲದವಂಗೆ ನಿಚ್ಚಣಿಗೆಯನೇರಲೇಕೆ ?

ಭಕ್ತಿ ಜ್ಞಾನ ವೈರಾಗ್ಯವಿಲ್ಲದವಂಗೆ ಇಷ್ಟಲಿಂಗವೇಕೆ

ಅಮುಗೇಶ್ವರಾ ? || ೯೪ ||

೬೮೩

ಮೊತ್ತದ ಮಾಮರ ಉರಿಯಿತ್ತ ಕಂಡೆ.

ಉಪ್ಪರಿಗೆ ಬೆಂದು ಕರ್ಪೂರವಾದುದ ಕಂಡೆ.

ಬೆಟ್ಟಸುಟ್ಟು ಸರ್ಪನ ಶಿರ ಹರಿದುದ ಕಂಡೆ.

ನೋಡಿನೋಡಿನಿಮ್ಮ ಕೂಡಿಕೊಂಡೆನಯ್ಯಾ

ಅಮುಗೇಶ್ವರಾ. || ೯೫ ||

೬೮೪

ವಿರಕ್ತನಾದ ಬಳಿಕ ವಿಷಯಕ್ಕೆ ದೂರವಾಗಿರಬೇಕು.

ಒಣಗಿದ ಮರನ ವಾಯು ಅಪ್ಪಿದಂತಿರಬೇಕು.

ಸಮುದ್ರದೊಳಗೆ ತರುಗಿರಿಗಳು ಮುಳುಗಿದಂತಿರಬೇಕು.

ಮೂಗಕಂಡ ಕನಸಿನಂತಿರಬೇಕು.

ಜಾಲಗಾರ ಕಂಡ ರತ್ನದಂತಿರಬಲ್ಲಡೆ, ವಿರಕ್ತನೆಂಬೆನು.

ಹೀಂಗಲ್ಲದೆ ಅರುಹುಳ್ಳವರೆಂದು ತಮ್ಮ ಅಗಮ್ಮವ ಬೀರುವ

ಅಜ್ಞಾನಿಯ ಭಕ್ತನೆಂದಡೆ, ಮಾಹೇಶ್ವರನೆಂದಡೆ, ಪ್ರಸಾದಿಯೆಂದಡೆ,

ಪ್ರಾಣಲಿಂಗಿಯೆಂದಡೆ, ಶರಣನೆಂದಡೆ, ಐಕ್ಯನೆಂದಡೆ

ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಲಿಂಗವೆ. || ೯೬ ||

೬೮೫

ವಿರಕ್ತ ವಿರಕ್ತ ಎಂಬ ಹಾದಿಕಾರರ ವಿರಕ್ತರೆನ್ನಬಹುದೆ ?

ಕಾವಿಯ ಹೊದ್ದು ತಿರುಗುವ ಜೀವಗಳ್ಳರು ವಿರಕ್ತರೆ ?

ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ವಿರಕ್ತರೆಂದಡೆ ,

ಅಘೋರನರಕ ತಪ್ಪದು ಅಮುಗೇಶ್ವರಲಿಂಗವೆ. || ೯೭ ||

೬೮೬

ವಿಶ್ವಮಯರೂಪವಾಗಿ ಬಂದೆನಯ್ಯಾ ,

ಭಕ್ತಿಗೆ ಎನ್ನ ಮನಕ್ಕೆ ಸಲೆ ನಿಂದ ನಿಲವು


|| ೯೮ ||
ಅಮುಗೇಶ್ವರಲಿಂಗಕ್ಕೆ ಮಾಟವಾಯಿತ್ತು .
೨೧೩
ಅಮುಗೆರಾಯಮ್ಮನ ವಚನಗಳು

೬೮೭

ವೇದ ಶಾಸ್ತ್ರ ಆಗಮ ಪುರಾಣಗಳಲ್ಲಿ

ಶ್ರುತಿಸ್ಮೃತಿಗಳಲ್ಲಿ ನುಡಿವುದು ಪುಸಿ .

ಪುರಾತನರ ವಚನಂಗಳಲ್ಲಿ ಇಷ್ಟಲಿಂಗ ಭಿನ್ನವಾಗಲು

ಮತ್ತೊಂದು ಲಿಂಗವ ಧರಿಸಿಕೊಳ್ಳಬೇಕೆಂಬುದು ಇಲ್ಲ .

ವೀರಶೈವವುಳ್ಳವರಿಗೆ ಇಷ್ಟಲಿಂಗ ಸಹಸ್ರ ಭಿನ್ನವಾಗಲು ಧರಿಸುವುದೆಂದು

ಚಿಪ್ಪಿಂಡಾಗಮ ವಾತುಲಾಗಮದಲ್ಲಿ ಸಂದೇಹವಿಲ್ಲವೆಂಬವರಿಗೆ

ಏಳುಕೋಟಿ ಯುಗಂಗಳಲ್ಲಿ ನಾಯಕನರಕ ತಪ್ಪದು.

ಕಟ್ಟಿದವರು ಚಂದ್ರಸೂರ್ಯರು ಪೃಥ್ವಿ ಅಪ್ಪುವುಳ್ಳ ಪರಿಯಂತರವು


ನಾಯಕನರಕದಲ್ಲಿ ಪ್ರರು ಕಾಣಾ, ಅಮುಗೇಶ್ವರಲಿಂಗವೆ;

ನಿಮ್ಮ ಶರಣರು ಲಿಂಗಭಿನ್ನವಾಗಲು ಲಿಂಗದೊಡನೆ

ಅಂಗವ ಬಯಲು ಮಾಡುವರಯ್ಯಾ. || ೯೯ ||

೬೮೮

ವೇದ ಶಾಸ್ತ್ರ ಆಗಮ ಪುರಾಣಂಗಳಿಂದ ಅರಿದೆಹೆನೆಂಬ

ಅಜ್ಞಾನಿಗಳು ನೀವುಕೇಳಿರೋ .

ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತರಾದಹೆನೆಂಬರು

ನೀವುಕೇಳಿರೋ .

ವಿರಕ್ತಿ ವಿರಕ್ತಿ ಎಂದೆಂಬಿರಿ ವಿರಕ್ತಿಯ ಪರಿ ಎಂತುಲು ಹೇಳಿರಣ್ಣಾ.

ಅಷ್ಟಮದಂಗಳನೊತ್ತಿ ಮೆಟ್ಟಿ , ನೆಟ್ಟನೆ ನಿಂದು


ಇಷ್ಟಲಿಂಗವನರಿಯಬಲ್ಲಡೆ ವಿರಕ್ತನೆಂಬೆನು.

ಸೆಜ್ಜೆ ಶಿವದಾರವ ಧರಿಸಿ, ಒರ್ವನಾಗಿ ಒಂಟಿ ವಸ್ತ್ರವ ಕಟ್ಟಿ

ಸಂತೋಷಿಯಾಗಿರಬಲ್ಲಡೆ ವಿರಕ್ತನೆಂಬೆನು.

ಅಂಗದ ಮೇಲೆ ಲಿಂಗವುಳ್ಳ ಲಿಂಗಸಂಗಿಗಳಲ್ಲಿ

ಸಂದೇಹ ಸಂಕಲ್ಪವನತಿಗಳೆದು ಬಂದ ಭೇದವನರಿದು,

ಲಿಂಗಕ್ಕೆ ಕೊಟ್ಟು ಕೊಳಬಲ್ಲಡೆ ಲಿಂಗೈಕ್ಯನೆಂಬೆನು.

ಹೀಂಗಿಲ್ಲದೆ, ಕರದಲ್ಲಿ ತಂದುದನತಿಗಳೆದು

ಕರ್ಪರದಲ್ಲಿ ತಂದುದ ಕೈಕೊಂಡು ಲಿಂಗೈಕ್ಯರು ಎಂಬ

ಲಿಂಗದ್ರೋಹಿಗಳನೆಂತು ಲಿಂಗೈಕ್ಯರೆಂಬೆನಯ್ಯಾ ?

ಲಿಂಗಾಣತಿಯಿಂದ ಬಂದ ಪದಾರ್ಥವ ಸಂದೇಹದಿಂದತಿಗಳೆದು

ಲಿಂಗೈಕ್ಯರೆಂಬ ಲಿಂಗದ್ರೋಹಿಗಳ ಸಮ್ಯಕ್‌ಜ್ಞಾನಿಗಳೆಂದಡೆ


ಶಿವಶರಣೆಯರ ವಚನಸಂಪುಟ

ಸದಾಚಾರಿಗಳೆಂದಡೆ, ಅನುಭಾವದಲ್ಲಿ ಅಧಿಕರೆಂದಡೆ

ಅಘೋರನರಕವು ತಪ್ಪದು ಕಾಣಾ.

ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ

ಲಿಂಗೈಕ್ಯರೆನಲಾಗದು ಕಾಣಿರಣ್ಣಾ . || ೧೦೦ ||

೬೮೯

ವೇಷವ ತೊಟ್ಟು ಗ್ರಾಸಕ್ಕೆ ತಿರುಗುವ

ವೇಷಧಾರಿಗಳ ಕಂಡಡೆ ನಾಚಿತ್ತೆನ್ನ ಮನ.

ಲಿಂಗವನರಿಯದ ಲಿಂಗೈಕ್ಯರೆಂಬ

ಅಂಗವಿಕಾರಿಗಳ ಕಂಡಡೆ ಹೊದ್ದದು ಎನ್ನ ಮನ,

ಅರಿದು ಆಚರಿಸಿದೆನೆಂಬ ಅಜ್ಞಾನಿಗಳ ಕಂಡಡೆ

ಮೃಡನ ಶರಣರು ಮೆಚ್ಚುವರೆ ಅಮುಗೇಶ್ವರಾ ?

ಲಿಂಗವನರಿಯದಿರ್ದಡೆ ಎಂತು ಲಿಂಗೈಕ್ಯರೆಂಬೆನಯ್ಯಾ


|| ೧೦೧
? ||

೬೯೦

ಶರಣನ ಅಂತರಂಗದಲ್ಲಿ ಪ್ರಾಣಲಿಂಗವಾಗಿ,

ಬಹಿರಂಗದಲ್ಲಿ ಇಷ್ಟಲಿಂಗವಾಗಿಪ್ಪ ಭೇದವನರಿಯರಲ್ಲಾ !

ಲೀಲೆಯಾದಡೆ ಉಮಾಪತಿಯಾಗಿಪ್ಪನು,

ಲೀಲೆ ತಪ್ಪಲೊಡನೆ ಸ್ವಯಂಭುವೆಯಾಗಿಪ್ಪ.

ಶರಣಂಗೆ ಲಿಂಗ ಹೋಯಿತ್ತು ಎಂದು ನುಡಿವವರಿಗೆ

ಕುಂಭೀಪಾತಕ ನಾಯಕನರಕ ತಪ್ಪದು.

ಲಿಂಗೈಕ್ಯವಾದ ಶರಣನ ಸತ್ತನು ಎಂಬ ಭ್ರಷ್ಟರಿಗೆ

ಕೌರವನರಕ ತಪ್ಪದುಕಾಣಾ, ಅಮುಗೇಶ್ವರಲಿಂಗವೆ,

ನಿಮ್ಮ ಶರಣರು ಲಿಂಗೈಕ್ಯರು. || ೧೦೨ ||

೬೯೧

ಶೀಲವಂತನಾದಡೆ ಜಾತಿಯ ಬಿಡಬೇಕು.

ಶಿವಜ್ಞಾನಿಯಾದಡೆ ಸಮಯವ ಬಿಡಬೇಕು.

ಹೀಂಗಲ್ಲದೆ ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ


|| ೧೦೩ ||
ನಿಭ್ರಾಂತನಾದ ಶರಣಂಗೆ ಅಮುಗೇಶ್ವರಾ ?

೬೯೨

ಸಂತೆಗೆ ಬಂದವರೆಲ್ಲ ಸಾವಧಾನಿಯಾಗಬಲ್ಲರೆ ?

ಪಸರವ ಹರಡುವರೆಲ್ಲ ರತ್ನದ ಬೆಲೆಯ ಬಲ್ಲರೆ ?


೨೧೫
ಅಮುಗೆರಾಯಮ್ಮನ ವಚನಗಳು

ಕುದುರೆಯ ಹಿಡಿದವರೆಲ್ಲ ರಾವುತಿಕೆಯ ಮಾಡಬಲ್ಲರೆ

ಅಮುಗೇಶ್ವರಾ ? || ೧೦೪ ||

೬೯೩

ಸಪ್ತಸಮುದ್ರಂಗಳೆಲ್ಲ ಬತ್ತಿಹೋದವಯ್ಯಾ.

ಸಪ್ತವ್ಯಸನಂಗಳಲ್ಲ ಅರತುಹೋದವಯ್ಯಾ .

ನಿತ್ಯರಾದವೆಂಬವರೆಲ್ಲ ಅನಿತ್ಯರಾದರಯ್ಯಾ

|| ೧೦೫
ಮುಕ್ತಿಯೆಂಬುದು ಇನ್ನಣದಯ್ಯಾ ಅಮುಗೇಶ್ವರಲಿಂಗವೆ ? ||

೬೯೪

ಸಮಯದೊಡನೆ ಸುಳಿದಾಡುವೆನೆಂಬ ಭಾವದ ಭ್ರಮೆಯವನಲ್ಲ .

ಆತ್ಮತೇಜಕ್ಕೆ ಹರಿದಾಡುವೆನೆಂಬ ಭ್ರಾತಿನ ಭ್ರಮೆಯವನಲ್ಲ .

ಅಮುಗೇಶ್ವರನೆಂಬ ಲಿಂಗವನರಿದ ಬಳಿಕ

ನನ್ನವರು ತನ್ನವರು ಎಂಬ ಭ್ರಾಂತಿನವನಲ್ಲ . || ೧೦೬ ||

೬೯೫

ಸರ್ವಸಂಬಂಧಿಯಾಗಿ ಸಮ್ಯಕ್‌ಜ್ಞಾನಿಯಾಗಿ ಅರಿವೆನು ಶಿವನ ಆದಿಯ

ಅಷ್ಟಮದಂಗಳ ಒತ್ತಿದೆನಾಗಿ ನೆಟ್ಟನೆ ನಿಲ್ಲುವೆನು.


ಎನ್ನ ಅಂತರಂಗ ಬಹಿರಂಗ ಸರ್ವಾಂಗದಲ್ಲಿ ಕಳಂಕ ಇಲ್ಲವಾಗಿ ,

ಮುಟ್ಟುವೆನು ಅಮುಗೇಶ್ವರಲಿಂಗವ . || ೧೦೭ ||

೬೯೬

ಸರ್ವಾಗಮ ಶ್ರುತಿಸ್ಮೃತಿ ಪುರಾಣ ಪಾಠಕನಾದಡೇನು ?

ಸರ್ವಮಂತ್ರತಂತ್ರಸಿದ್ದಿ ಮರ್ಮವರಿತಡೇನು ?

ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ ;

ನಿತ್ಯಪಾದೋದಕ ಪ್ರಸಾದ ಸೇವನೆಯಿಲ್ಲ .

ಇದೇತರ ವೀರಶೈವವ್ರತ, ಇದೇತರ ಜನ್ಮ ಸಾಫಲ್ಯ

ಅಮುಗೇಶ್ವರಲಿಂಗವೆ ? || ೧೦೮ ||

೬೯೭

ಸಾಧನೆಯ ಬಲ್ಲೆನೆಂದು ಹಾದಿಹೋಕರಕೂಡೆಹೊರದಿರಬೇಕು.

ಬೀದಿಯಲ್ಲಿ ನಿಂದು ಬೀರದಿರಬೇಕು.

ಬಲ್ಲೆಯಾ ಎಂದಡೆ ಬಲುಗೈಯನರಿಯೆನೆನಬೇಕು.


ಶಿವಶರಣೆಯರ ವಚನಸಂಪುಟ

ನೆಟ್ಟನೆ ನಿಂದು ಪಟ್ಟಕ್ಕೊಡೆಯರಾದವರೆಂಬೆ

ಅಮುಗೇಶ್ವರಲಿಂಗಕ್ಕೆ ಅಧಿಕರೆಂಬೆ. || ೧೦೯ ||

೬೯೮

ಸಿಂಹದಮರಿಯ ಸೀಳಾಯ ಸರಿ ಎನ್ನಬಹುದೆ ?

ವರಹ ಕುಕ್ಕುಟನ ಸರಿ ಎನ್ನಬಹುದೆ ?

ಹೊನ್ನು ಹೆಣ್ಣು ಮಣ್ಣ ಹಿಡಿದು ಲಿಂಗೈಕ್ಯರೆನಿಸಿಕೊಂಬ ಅಜ್ಞಾನಿಗಳೆಲ್ಲರ

ಸೀಳ್ತಾಯಿಗಳೆಂಬೆನಯ್ಯಾ.

ಸಮ್ಯಕ್‌ಜ್ಞಾನವ ಮುಂದುಗೊಂಡು ಸದಾಚಾರಿಯಾಗಿ

ಭಕ್ತಿ ಭಿಕ್ಷವ ಬೇಡಬಲ್ಲಡೆ,

ನಿತ್ಯಲಿಂಗೈಕ್ಯರೆಂಬೆ.

ಅಮುಗೇಶ್ವರನೆಂಬ ಲಿಂಗಕ್ಕೆ ಅತ್ತತ್ತಲಾದ ಘನಮಹಿಮನೆಂಬೆನಯ್ಯ

೬೯೯

ಸುಳಿವ ಸುಳುಹು ಅಡಗಿತ್ತೆನಗೆ.

ಎನ್ನ ಕಂಗಳ ಕಾಮ ಕಳೆಯಿತ್ತು .

ಅರಿದೆನೆಂಬ ಮನ ಅಡಗಿದುದ ಕಂಡು

ನನ್ನ ನಾನೆ ತಿಳಿದು ನೋಡಿ,

ಕಟ್ಟಿದೆನು ಕಾಮನ ಮೇಲೆ ಬಿರಿದ.

ಮಾಯಾಯೋನಿಗಳಲ್ಲಿ ಹುಟ್ಟಿದರೆಲ್ಲ ,

ನಿರ್ಮಾಯನೆಂಬ ಗಣೇಶ್ವರಗೆ ಸರಿಯಪ್ಪರೆ ?

ಬ್ರಹ್ಮ ವಿಷ್ಣು ರುದ್ರರೆಲ್ಲರು ಮಾಯಾಕೋಳಾಹಳನೆಂಬ ಪ್ರಭುವಿಂಗೆ

ಸರಿಯಲ್ಲವೆಂದು ಕಟ್ಟಿದಕೃದುವ.

ಸರಿಯೆಂದು ನುಡಿವವರ ಪರಿಪರಿಯಲಿ ಮೆಟ್ಟಿ ಸೀಳುವೆನು ಕಾಣಾ.

ಅಮುಗೇಶ್ವರಲಿಂಗಕ್ಕೆ ಅಧಿಕನಾದನಯ್ಯಾ ಪ್ರಭುದೇವರು. || ೧೧೧

೭೦೦

ಸೂರ್ಯಂಗೆ ಅಲ್ಲಿ ಇಲ್ಲಿ ಎಂಬ ಸಂದೇಹವುಂಟೆ ?

ಎಲ್ಲೆಲ್ಲಿಯೂ ತನ್ನ ಪ್ರಭೆಯ ಬೀರುತಿಪ್ಪುದು.

ಬಲ್ಲ ಘನಮಹಿಮನ ಎಲ್ಲರು ಜರಿದಡೇನು ಕಿಂಕಿಲನೆ ?

ಸರ್ವಾಂಗವು ಲಿಂಗವಾದ ನಿರಾಲಂಬಿ

ಕಾಬರ ಕಂಡು ತಾ ಕಾಬವನಲ್ಲ ;


೨೧೭
ಅಮುಗೆರಾಯಮ್ಮನ ವಚನಗಳು

ಅರಿವವರ ಕಂಡು ತಾನರಿವವನಲ್ಲ ;

ಬಿಡುವವರ ಕಂಡು ತಾ ಬಿಡುವವನಲ್ಲ ;

ಹಿಡಿದ ಛಲವ ತಾ ಬಿಡುವವನಲ್ಲ ,


|| ೧೧೨ ||
ಅಮುಗೇಶ್ವರಲಿಂಗವನರಿದವನು.

೭೦೧

ಹಿಡಿದ ಛಲವ ಬಿಡದೆ ನಡೆಸುವರ ಕಂಡಡೆ

ಎನ್ನ ಕರ್ತು ಬಾರೆಂಬರಯ್ಯಾ ಮೃಡನ ಶರಣರು.

ಎನ್ನೊಡೆಯ ಕಡುಗಲಿಯಾಗಿ ಬಿಡದೆ ಆಚರಿಸಿ


|| ೧೧೩
ಬಳಲಿದಿರಯ್ಯಾ ಅಮುಗೇಶ್ವರನೆಂಬ ಲಿಂಗವನರಿದ ಶರಣರು ||

೭೦೨

ಹೆದರದಿರು ಮನವೆ, ಹಿಮ್ಮೆಟ್ಟದಿರು ಮನವೆ,

ಹಿಡಿದ ಛಲವ ಬಿಡದಿರು ಮನವೆ .

ಜರಿದರೆಂದು ಝಂಕಿಸಿದರೆಂದು
ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧದಲ್ಲಿ ಘಟವ ಬಿಡದೆ

ಗುರುವಾದಡು ಲಿಂಗವಾದಡು ಜಂಗಮವಾದಡು

ನೊಸಲಲ್ಲಿ ಕಣ್ಣುಳ್ಳ ಪಶುಪತಿಯಾದರು


HD
ತೆಕ್ಕಿಗರು ಕಂಡು ಒತ್ತಿ ನುಡಿದರೆಂದು ಘಟವ ಬಿಡುವ ಘಟಕರ್ಮಿಗಳು

ಏಳೇಳು ಜನ್ಮದಲ್ಲಿ ಸೂಕರನ ಹೊಟ್ಟೆಯಲ್ಲಿ ಹುಟ್ಟಿ ,

ನೂರೊಂದು ಕುಲ ಹದಿನೆಂಟು ಜಾತಿಯ ಅಮೇಧ್ಯವ ತಿಂದು

ಹೊಲೆಯರ ಮನೆಯ ಹೊಸ್ತಿಲ ಕಾಯ್ದುಕೊಂಡಿಪ್ಪರಯ್ಯಾ :

ಅಮುಗೇಶ್ವರಲಿಂಗವೆ , ನಿಮ್ಮಾಣೆನಿಮ್ಮ ಪ್ರಮಥರಾಣೆ. || ೧೧೪ ||

೭೦೩

ಹೊಟ್ಟೆಯ ಹೊರೆವ ಪಶು, ಕಟ್ಟಿ ಕೊಲ್ಲುವುದ ಬಲ್ಲುದೆ ?

ಕಷ್ಟ ಜೀವಗಳ್ಳರು: ಕರ್ತುವಿನ ವೇಷವ ತೊಟ್ಟು

ಕತ್ತೆಯಂತೆ ತಿರುಗುವ ಕಳ್ಳರನೊಲ್ಲ ಅಮುಗೇಶ್ವರಲಿಂಗವು.

೭೦೪

ಹೊನ್ನಬಿಟ್ಟಡೇನು, ಹೆಣ್ಣಬಿಟ್ಟಡೇನು, ಮಣ್ಣಬಿಟ್ಟರೇನು,

ವಿರಕ್ತನಾಗಬಲ್ಲನೆ ?
೨೧೮ ಶಿವಶರಣೆಯರ ವಚನಸಂಪುಟ

ಆದ್ಯರ ವಚನಂಗಳ ಹತ್ತುಸಾವಿರವ ಲೆಕ್ಕವಿಲ್ಲದೆ ಓದಿದಡೇನು,

ನಿತ್ಯರಾಗಬಲ್ಲರೆ ?

ಮಂಡೆಯ ಬೋಳಿಸಿಕೊಂಡು ಅಂದಚಂದಕೆ ತಿರುಗುವ

ಜಗಭಂಡರ ಮೆಚ್ಚುವನೆ, ಅಮುಗೇಶ್ವರಲಿಂಗವು ? || ೧೧೬ ||


ಆಯ್ದಕ್ಕಿ ಲಕ್ಕಮ್ಮನ ವಚನಗಳು

೭೦೫

ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ ?

ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ ?

ಘನಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ .

ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ


|| ೧ ||
ಆರ ಹಂಗಿಲ್ಲ ಮಾರಯ್ಯಾ .

೭೦೬

ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ ,

ಬಯಕೆಯರತಕೈಯಲ್ಲಿ ತಂಡುಲವನಾಯ್ದುಕೊಂಡು

ಸಂದ ಪ್ರಮಥರ ಅಂಗಳಕ್ಕೆ ಬೇಗ ಹೋಗಿ, ಕೊಂಡುಬಾರಯ್ಯಾ ,

ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಮಾರಯ್ಯಾ, || ೨ ||

೭೦೭

ಅವಾರಿಯೆಂದು ಮಾಡುವಲ್ಲಿ ಅವರಿವರೆಂದು ಪ್ರಮಾಣಿಸಲುಂಟೆ ?

ಸಮಯಕ್ಕೆ ಹೋಗಿಸಮಯವನರಿಯರೆಂದು ಭವಗೆಡಲುಂಟೆ ?

ಭಾವಜ್ಞನಾದಡೆ ಭಾವವನರಿದಲ್ಲಿ ಶುಚಿಯಾಗಿರಬಲ್ಲಡೆ

ಮಾರಯ್ಯಪ್ರಿಯ ಅಮಲೇಶ್ವರಲಿಂಗವ ಹೊದ್ದುವ ಭಾವ. || ೩ ||

- ೭೦೮

ಆಯ್ತಹೆನೆಂಬ ಕಾಯಕದ ಅರಿಕೆ ಹಿಂಗಿತೆ ?

ನಾ ಮಾಡಿಹೆನೆಂಬ ತವಕ ಹಿಂಗಿತೆ ?

ಉಭಯದ ಕೈಕೂಲಿ ಹಿಂಗಿ ,

ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಅಲಸಿಕೆಯಾಯಿತು.

೭೦೯

ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಡುಂಟೆ ?

ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ ?

ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು .

ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ


ಅರಿವಿಂಗೆ ಬೇರೊಂದೊಡಲುಂಟೆ ?
ಶಿವಶರಣೆಯರ ವಚನಸಂಪುಟ

ಬೇರೊಂದಡಿಯಿಡದಿರು,

ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಬಲ್ಲಡೆ. || ೫ ||

೭೧೦

ಆಸೆಯೆಂಬುದು ಅರಸಿಂಗಲ್ಲದೆ,

ಶಿವಭಕ್ತರಿಗುಂಟೆ ಅಯ್ಯಾ ?

ರೋಷವೆಂಬುದು ಯಮದೂತರಿಗಲ್ಲದೆ,

ಅಜಾತರಿಗುಂಟೆ ಅಯ್ಯಾ ?

ಈಸಕ್ಕಿಯಾಸೆ ನಿಮಗೇಕೆ ? ಈಶ್ವರನೊಪ್ಪ.

ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ದೂರ ಮಾರಯ್ಯ . || ೬ |

೭೧೧

ಇದು ಇಲ್ಲವಾದಂದಿಗಲ್ಲದೆ ಜಗದೊಳಗಾರಿಗೂ ಬಡತನವಲ್ಲದಿಲ್ಲ .

ಐದು ಉಳ್ಳನ್ನಕ್ಕ ಸಕಲಜೀವನಕ್ಕೆ ಚೇತನ .

ಮಾರಯ್ಯಪ್ರಿಯ ಅಮಲೇಶ್ವರಲಿಂಗ ಉಳ್ಳನ್ನಕ್ಕ ಧನಮನಸಂಪನ್ನರು. |

೭೧೨

ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ ,

ಇದು ನಿಮ್ಮ ಮನವೊ , ಬಸವಣ್ಣನ ಅನುಮಾನದ ಚಿತ್ರವೊ ?

ಈ ಮಾತು ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಸಲ್ಲದಯೋನ.


|| ೮ ||
ಅಲ್ಲಿಯೇ ಸುರಿದು ಬನ್ನಿ ಮಾರಯ್ಯಾ.

೭೧೩

ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳನೆ.

ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು

ನಿಶ್ಚಸಿ ಮಾಡಬೇಕು ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ,


|| ೯ ||
ಬೇಗ ಹೋಗು ಮಾರಯ್ಯಾ ,

೭೧೪

ಕಾಯವಳಿದ ಠಾವಿನಲ್ಲಿ ಜೀವದ ಎಡೆಯಾಟ ಉಂಟೆ ?

ಭಾವವಿಲ್ಲದ ಭಕ್ತಿ ಹೋಯಿತ್ತು,


|| ೧೦ ||
ಮಾರಯ್ಯಪ್ರಿಯ ಅಮಲೇಶ್ವರಲಿಂಗವ ಮುಟ್ಟದೆ.
ಆಯ್ದಕ್ಕಿ ಲಕ್ಕಮ್ಮನ ವಚನಗಳು

೭೧೫

ಕೈದಕೊಡುವರಲ್ಲದೆ ಕಲಿತನವಕೊಡುವರುಂಟೆ ಮಾರಯ್ಯಾ ?

ಹೆಣ್ಣಕೊಡುವರಲ್ಲದೆಕೂಟಕ್ಕೊಳಗಾದವರುಂಟೆ ಮಾರಯ್ಯಾ ?

ಕಳುವಟೋರಂಗೆ ಬಡವರೆಂದು ದಯವುಂಟೆ ಮಾರಯ್ಯಾ ?

ಮನವನೊರೆದು ಭಕ್ತಿಯನೋಡಿಹೆನೆಂಬವಂಗೆ

ಎಮ್ಮಲ್ಲಿ ಗುಣವ ಸಂಪಾದಿಸಲಿಲ್ಲ ಮಾರಯ್ಯಾ .

ಶೂಲವನೇರಿ ಸಂದಲ್ಲಿ ಮತ್ತಿನ್ನು ಸಾವಿಂಗೆ ಹಂಗುಪಡಲೇಕೆ ?

ಮಾರಯ್ಯಪ್ರಿಯ ಅಮಲೇಶ್ವರಲಿಂಗಾ ನೀನೆ ಬಲ್ಲೆ . || ೧೧ ||

- ೭೧೬

ಗರ್ವದಿಂದ ಮಾಡುವ ಭಕ್ತಿ ದ್ರವ್ಯದಕೇಡು;

ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ ;

ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ;

ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ,

ಮಾರಯ್ಯಪ್ರಿಯ ಅಮಲೇಶ್ವರಲಿಂಗವ ಮುಟ್ಟದ ಭಕ್ತಿ . || ೧೨ ||

೭೧೭

ಪೂಜೆಯುಳ್ಳನ್ನಕ್ಕ ಪುಣ್ಯದಗೊತ್ತು ಕಾಣಬಂದಿತ್ತು .

ಮಾಟವುಳ್ಳನ್ನಕ್ಕ ಮಹಾಪ್ರಮಥರ ಭಾಷೆ ಭಾಗ್ಯ ದೊರಕೊಂಡಿತ್ತು .

ಮಾಟವಿಲ್ಲದವನ ಭಕ್ತಿ ಹಾಳೂರ ವಂಕಕ್ಕೆ ಕೋಲ ಹಿಡಿದಂತಾಯಿತ್ತು.

ಮಾಡುವಲ್ಲಿ ಉಭಯವಳಿದು ಮಾಡಬಲ್ಲಡೆ,

ಮಾರಯ್ಯಪ್ರಿಯ ಅಮಲೇಶ್ವರಲಿಂಗವಕೂಡುವಕೂಟ. || ೧೩ ||

೭೧೮

ಪ್ರತಿಷ್ಠೆಗೆ ಮಾಟವಲ್ಲದೆಸ್ವಯಂಭುಗುಂಟೆ ಉಳಿ ?

ನನಗೂ ನಿನಗೂ ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿವುದಕ್ಕೆ

ಬೇರೊಂದು ಠಾವುಂಟೆ ಮಾರಯ್ಯಾ ? || ೧೪ ||

೭೧೯

ಪ್ರಭುದೇವರು, ಸಿದ್ದರಾಮಯ್ಯದೇವರು , ಮಡಿವಾಳ ಮಾಚಯ್ಯ ,

ಬಸವಣ್ಣ , ಚೆನ್ನಬಸವಣ್ಣ ಮೊದಲಾದ ಸಕಲಪ್ರಮಥಗಣಂಗಳು

ನೇಮ ನಿತ್ಯದ ಜಂಗಮಲಿಂಗ ಮುಂತಾದ ಸರ್ವಸಮೂಹಕ್ಕೆ


ಶಿವಶರಣೆಯರ ವಚನಸಂಪುಟ

ತ್ರಿಕರಣಶುದ್ಧವಾಗಿ ಭಾವಭ್ರಮೆಯಡಗಿ ಜೀವವಿಕಾರ ನಿಂದು

ಮಾಡುವ ಮಾಟದ ಸಮಯದಿಂದವೆ

ಮಾರಯ್ಯಪ್ರಿಯ ಅಮಲೇಶ್ವರಲಿಂಗದಲ್ಲಿಯೆ ಐಕ್ಯ . || ೧೫ | |

೭೨೦

ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮೊದಲಾದ

ನೇಮ ನಿತ್ಯ ಕೃತ್ಯ ಸಕಲಸಮೂಹ ನಿತ್ಯನೇಮದ

ಜಂಗಮಭಕ್ತರು ಗಣಂಗಳು ಮುಂತಾದ ಸಮೂಹಸಂಪದಕ್ಕೆ

ನೈವೇದ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯಾ ,

ಅಮಲೇಶ್ವರಲಿಂಗದ ಮನೆಯಲ್ಲಿ ಆದಿಹಿತೆಂದು. || ೧೬ ||

೭೨೧

ಬಸವಣ್ಣನ ಪ್ರಸಾದವಕೊಂಡು ಎನ್ನ ಕಾಯ ಶುದ್ಧವಾಯಿತ್ತಯ್ಯ

ಚೆನ್ನಬಸವಣ್ಣನ ಪ್ರಸಾದವಕೊಂಡು ಎನ್ನ ಜೀವ ಶುದ್ಧವಾಯಿತ್ತಯ್ಯಾ

ಮಡಿವಾಳಯ್ಯನ ಪ್ರಸಾದವಕೊಂಡು ಎನ್ನ ಭಾವ ಶುದ್ಧವಾಯಿತ್ತಯ

ಶಂಕರದಾಸಿಮಯ್ಯನ ಪ್ರಸಾದವಕೊಂದು ಎನ್ನ ತನು ಶುದ್ಧವಾಯಿತ್ತ

ಸಿದ್ಧರಾಮಯ್ಯನ ಪ್ರಸಾದವಕೊಂಡು ಎನ್ನ ಮನ ಶುದ್ಧವಾಯಿತ್ತಯ್

ಘಟ್ಟಿವಾಳಯ್ಯನಪ್ರಸಾದವಕೊಂಡು ಎನ್ನ ಪ್ರಾಣ ಶುದ್ಧವಾಯಿತ್ತಯ್ಯ

ಅಕ್ಕನಾಗಾಯಮ್ಮನಪ್ರಸಾದವಕೊಂಡು ಎನ್ನ ಅಂತರಂಗ ಶುದ್ಧವಾಯಿತ

ಮುಕ್ತಾಯಕ್ಕಗಳ ಪ್ರಸಾದವಕೊಂಡು ಎನ್ನ ಬಹಿರಂಗ ಶುದ್ದವಾಯಿತ್ತಯ್ಯಾ

ಪ್ರಭುದೇವರ ಪ್ರಸಾದವಕೊಂಡು ಎನ್ನ ಸರ್ವಾಂಗ ಶುದ್ದವಾಯಿತ್ತಯ

ಇವರು ಮುಖ್ಯವಾದ ಏಳುನೂರೆಪ್ಪತ್ತು ಅಮರಗಣಂಗಳ

ಪ್ರಸಾದವಕೊಂಡು ಬದುಕಿದೆನಯ್ಯಾ

ಮಾರೇಶ್ವರಪ್ರಿಯ ಅಮಲೇಶ್ವರಾ,

ನಿಮ್ಮ ಶರಣರ ಪಾದಕ್ಕೆ ಅಹೋರಾತ್ರಿಯಲ್ಲಿ

ನಮೋ ನಮೋ ಎನುತಿರ್ದೆನು. || ೧೭ ||

೭೨೨

ಬಾಹಾಗ ಕೊಂಡುಬಂದ ಪ್ರಾಪ್ತಿಯಲ್ಲದೆ,

ಬೇರೊಂದ ಗಳಿಸಲಿಲ್ಲ ; ಬೇರೊಂದ ಕೆಡಿಸಲಿಲ್ಲ .

ಬಂದುದು ನಿಂದುದು.
|| ೧೮ ||
ಮಾರಯ್ಯಪ್ರಿಯ ಅಮಲೇಶ್ವರಲಿಂಗ ಕೊಟ್ಟಲ್ಲದಿಲ್ಲ .
ಆಯ್ದಕ್ಕಿ ಲಕ್ಕಮ್ಮನ ವಚನಗಳು

೭೨೩

ಭಕ್ತಂಗೆ ಬಡತನವುಂಟೆ ? ನಿತ್ಯಂಗೆ ಮರಣವುಂಟೆ ?

ಭಕ್ತರು ಬಡವರೆಂದು ಮತ್ತೊಂದಕೊಟ್ಟೆಹೆನೆಂದಡೆ,


ಮಾರಯ್ಯಪ್ರಿಯ ಅಮಲೇಶ್ವರಲಿಂಗವು ಸಂದಿಗಲ್ಲದೆಬಡತನವಿಲ್ಲ . || ೧೯ ||

೭೨೪

ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು

ದಾಸೋಹವ ಮಾಡಬಹುದೆ ?

ಒಮ್ಮನವ ತಂದು ಒಮ್ಮನದಲ್ಲಿಯೇ ಮಾಡಿ

ಇಮ್ಮನವಾಗದ ಮುನ್ನವೆ

ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ಸಲಬೇಕು ಮಾರಯ್ಯಾ . || ೨೦ ||

೭೨೫

ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ

ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ

ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು

ಮಾರಯ್ಯಪ್ರಿಯ ಅಮಲೇಶ್ವರಲಿಂಗದ ಸೇವೆಯುಳ್ಳನ್ನಕ್ಕರ. || ೨೧ ||

೭೨೬

ಮಾಡಿ ನೀಡಿಹೋದೆನೆಂಬಾಗ ಕೈಲಾಸವೇನು ಕೈಕೂಲಿಯೆ ?

ಮುಂದೊಂದ ಕಲ್ಪಿಸದೆ, ಹಿಂದೊಂದ ಭಾವಿಸದೆ ಸಲೆಸಂದಿದ್ದಾಗವೆ

ಮಾರಯ್ಯಪ್ರಿಯ ಅಮಲೇಶ್ವರಲಿಂಗವಿದ್ದ ಠಾವೆ ಕೈಲಾಸ. || ೨೨ ||

೭೨೭

ಮಾಡುವ ಮಾಟವುಳ್ಳನ್ನಕ್ಕ ಬೇರೊಂದು ಪದವನರಸಲೇತಕ್ಕೆ ?

ದಾಸೋಹವೆಂಬ ಸೇವೆಯ ಬಿಟ್ಟು ನೀಸಲಾರದೆ

ಕೈಲಾಸವೆಂಬ ಆಸೆ ಬೇಡ.

ಮಾರಯ್ಯಪ್ರಿಯ ಅಮಲೇಶ್ವರಲಿಂಗವಿದ್ದ ಠಾವೆಕೈಲಾಸ . || ೨೩ ||

೭೨೮

ಸಂದಣಿಗೊಂಡು ಮನಹರುಷದಿಂದ ಬಸವಣ್ಣನ ಅಂಗಳಕ್ಕೆ ಹೋಗಿ

ತಿಪ್ಪೆಯ ತಪ್ಪಲಲ್ಲಿ ಬಿದ್ದಿದ್ದ ತಂಡುಲವ ಕಟ್ಟಿಕೊಂಡು


ಶಿವಶರಣೆಯರ ವಚನಸಂಪುಟ

ಎಯಿದಾಗಿ ತರಲು ಎಯಿದಾಗಿ ಬಂದಿತ್ತಲ್ಲಾ !

ನಮಗೆ ಎಂದಿನಂದವೆ ಸಾಕು,

ಮತ್ತೆ ಕೊಂಡು ಹೋಗಿ ಅಲ್ಲಿಯೆ ಸುರಿ ,

ಮಾರಯ್ಯಪ್ರಿಯ ಅಮಲೇಶ್ವರಲಿಂಗಕೊಟ್ಟ

ಕಾಯಕವೆ ಸಾಕು ಮಾರಯ್ಯಾ , | ೨೪ ||

೭೨೯

ಸಸಿಗೆ ನೀರೆರೆದಡೆ ಎಳಕುವುದಲ್ಲದೆ,

ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ ಎಳಕುವುದೆ ಮಾರಯ್ಯಾ ?

ನಿನ್ನ ವಿರಕ್ತಿ ನಷ್ಟವಾಗದ ಮುನ್ನವೆ

ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಿರಯ್ಯಾ . || ೨೫ |
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವಯ ವಚನಗಳು

೭೩೦

ಅರ್ಥಪ್ರಾಣಾಭಿಮಾನದ ಮೇಲೆ ಬಂದಡೂ ಬರಲಿ,

ವ್ರತಹೀನನ ನೆರೆಯಲಾಗದು;

ನೋಡಲು ನುಡಿಸಲು ಎಂತೂ ಆಗದು.

ಹರಹರಾ, ಪಾಪವಶದಿಂದನೋಡಿದಡೆ,

ರುದ್ರ ಜಪ ಮಾಹೇಶ್ವರಾರಾಧನೆಯ ಮಾಳ್ವುದು.

ಇಂತಲ್ಲದವರ ಉರಿಲಿಂಗಪೆದ್ದಿಗಳರಸ ನಕ್ಕು ಕಳವನವ್ವಾ . || ೧

೭೩೧

ಅಯ್ಯಾ, ಸೂಳೆಗೆ ಹುಟ್ಟಿದ ಮಕ್ಕಳಿಗೆ,

ಕೊಟ್ಟವರೊಳು ಸಮ್ಮೇಳ,ಕೊಡದವರೊಳುಕ್ರೋಧ.

ವ್ರತಹೀನರೊಳು ಮೇಳ, ವ್ರತನಾಯಕರೊಳು ಅಮೇಳ.

ಸುಡು ಸುಡು ! ಅವರ ಕೂಡಿದಡೆ ಉರಿಲಿಂಗಪೆದ್ದಿಗಳರಸನೊಲ್ಲೆನವ್ವಾ . ||

೭೩೨

ಉಂಡೊಡೆಯರಲ್ಲಿ ಕೊಂಬ ಪ್ರಸಾದ ಕಾರಿದಕೂಳು.

ಸಣ್ಣವರಲ್ಲಿ ಕೊಂಬ ಪ್ರಸಾದ ಸಂತೆಯ ಸೂಳೆಯ ಎಂಜಲು.

ಅಳಿಯನಲ್ಲಿ ಕೂಂಬ ಪ್ರಸಾದ ಅಮೇಧ್ಯ.

ಮಕ್ಕಳಲ್ಲಿ ಕೊಂಬ ಪ್ರಸಾದಗೋಮಾಂಸ.

ತಮ್ಮನಲ್ಲಿ ಕೊಂಬ ಪ್ರಸಾದ ಸಿಂಗಿ,

ನಂಟರಲ್ಲಿ ಕೊಂಬ ಪ್ರಸಾದ ನರಮಾಂಸ.

ವಂದಿಸಿ ನಿಂದಿಸಿ ಕೊಂಬ ಪ್ರಸಾದವ

ಉರಿಲಿಂಗಪೆದ್ದಿಗಳರಸನೆಲ್ಲನವ್ವಾ . || ೩ ||

೭೩೩

ಕುರಿಕೋಳಿಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು.

ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು .

ಅವರೆಂತು ಕೀಳುಜಾತಿಯಾದರು ? ಜಾತಿಗಳು ನೀವೇಕೆಕೀಳಾಗಿರೊ ?

ಬ್ರಾಹ್ಮಣನುಂಡುದು ಪುಲ್ಲಿಗೆಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.

ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆಶೋಭಿತವಾಯಿತು.


೨೨೬
ಶಿವಶರಣೆಯರ ವಚನಸಂಪುಟ

ಅದೆಂತೆಂದಡೆ : ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.

ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು

ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ.

ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ .

೭೩೪

ಕೃತಯುಗ ಮೂವತ್ತೆರಡುಲಕ್ಷವರುಷದಲ್ಲಿ ಹೋಮವನಿಕ್ಕುವಾಗ

ಕುಂಜರನೆಂಬ ಆನೆಯ ಕೊಂದು ಹೋಮವನಿಕ್ಕಿದರು ಬ್ರಾಹ್ಮಣರು.

ತ್ರೇತಾಯುಗ ಹದಿನಾರುಲಕ್ಷವರುಷದಲ್ಲಿ ಬ್ರಾಹ್ಮಣರು ಹೋಮವನಿಕ್ಕ

ಮಹಿಷನೆಂಬ ಕರಿ ಎಮ್ಮೆಯ ಮಗನ ಕೊಂದು ಹೋಮವನಿಕ್ಕಿದರು.

ದ್ವಾಪರಯುಗ ಎಂಟುಲಕ್ಷವರುಷದಲ್ಲಿ ಹೋಮವನಿಕ್ಕುವಾಗ

ಅಶ್ವನೆಂಬ ಕುದುರೆಯ ಕೊಂದುಹೋಮವನಿಕ್ಕಿದರು ಬ್ರಾಹ್ಮಣರು.

ಕಲಿಯುಗ ನಾಲ್ಕು ಲಕ್ಷ ವರುಷದಲ್ಲಿ ಹೋಮವನಿಕ್ಕುವಾಗ

ಜಾತಿಯಾಡಿನ ಮಗ ಹೋತನಕೊಂದು ಹೋಮವನಿಕ್ಕಿದರು ಬ್ರಾಹ್ಮಣರು.

“ ಅಣೋರಣೀಯಾನ್ ಮಹತೋ ಮಹೀಯಾನ್ ” ಎಂದುದಾಗಿ,

ಶಿವಭಕ್ತ ಹೊತ್ತಾರೆಯೆದ್ದು ಗುರುಲಿಂಗಜಂಗಮಕ್ಕೆ ಶರಣೆನ್ನದ

ಮುನ್ನ ಒಂಟಿಬ್ರಾಹ್ಮಣನ ಕಂಡು ಶರಣಾರ್ಥಿ ಎಂದಡೆ

ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ

ಹಂದಿಯ ಬಸುರಲ್ಲಿ ಬಪುದು ತಪ್ಪದು ಕಾಣಾ.

ಉರಿಲಿಂಗಪೆದ್ದಿಗಳರಸ ಒಲ್ಲೆನವ್ವಾ .

೭೩೫

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ ;

ಸತ್ಯಶುದ್ಧವಿಲ್ಲದುದು ಕಾಯಕವಲ್ಲ ;

ಆಸೆಯೆಂಬುದು ಭವದ ಬೀಜ,

ನಿರಾಸೆಯೆಂಬುದು ನಿತ್ಯಮುಕ್ತಿ .

ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣಾ .

೭೩೬

ಗುರುವಿದ್ದಂತೆ ಪರರಿಗೆ ನೀಡಬಹುದೆ ?

ಮನೆಯ ಆಕಳು ಉಪವಾಸ ಇರಲಾಗಿ

ಪರ್ವತಕ್ಕೆ ಸೊಪ್ಪೆಯ ಹೊರಬಹುದೆ ?


೨೨೭
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವಯ ವಚನಗಳು

ಎಂಬ ಪರವಾದಿ ಕೇಳು.

ಗುರುವು ಶಿಷ್ಯಂಗೆ ಲಿಂಗವಕೊಟ್ಟು

ತಾನು ವ್ರತಗೇಡಿಯಾಗಿ ಹೋಗುವಲ್ಲಿ

ಪರರ ಪಾದೋದಕ ಪ್ರಸಾದದಿಂದ ಪವಿತ್ರನಾದಕಾರಣ,

' ಪರರ ಕಂಡರೆ ತನ್ನಂತೆ ಕಾಣು' ಎಂದು

ಗುರುವು ಹೇಳಿದ ವಾಕ್ಯವ ಮರೆದಿರಲ್ಲ !

ಅಳಿಯ ಒಡೆಯರು, ಮಗಳು ಮುತೈದೆ,

ಮನೆದೇವರಿಗೆ ಶರಣೆಂದರೆ ಸಾಲದೆ ?

ಎಂಬ ಅನಾಚಾರಿಗಳ ಮಾತು ಅದಂತಿರಲಿ .

ಜಂಗಮದೇವರ ಪ್ರಾಣವೆಂಬ ಭಕ್ತರು

ಲಿಂಗಜಂಗಮದಕೈಯ ಹೂವು, ಹಣ್ಣು , ಕಾಯಿ , ಪತ್ರೆ ,

ಹೋಗುವ ಬರುವ ಊಳಿಗವ ಕೊಂಬಾತ ಭಕ್ತನಲ್ಲ .

ಅಲ್ಲಿ ಪೂಜೆಗೊಂಬಾತ ಜಂಗಮವಲ್ಲ

ಇವರು ನಾಯಕ ನರಕಕ್ಕೆ ಯೋಗ್ಯರಯ್ಯಾ ,

ಇವರಿಬ್ಬರ ಉರಿಲಿಂಗಪೆದ್ದಿಗಳರಸು ಒಲ್ಲೆನವ್ವಾ . | ೭ ||

೭೩೭

ತೂಬರದ ಕೊಳ್ಳಿಯಂತೆ ಉರಿವಾತ ಭಕ್ತನೆ ?

ಹುಸಿದು ತಂದು ಮಾಡುವಾತ ಭಕ್ತನೆ ?

ಭಕ್ತರ ಕುಲವನೆತ್ತಿ ನಿಂದಿಸುವಾತ ಭಕ್ತನೆ ?

“ನಿಂದಯಾ ಶಿವಭಕ್ತಾನಾಂಕೋಟಿ ಜನ್ಮನಿ ಸೂಕರಃ ||

ಸಪ್ತಜನ್ಮನಿ ಭವೇತ್ ಕುಷ್ಠಿ ದಾಸೀಗರ್ಭಷು ಜಾಯತೇ ||”

ಎಂದುದಾಗಿ , ತನ್ನ ಪ್ರಾಣದ ಮೇಲೆ ಬಂದಡೂ ಬರಲಿ, ಇವರ ಬಿಡಬೇಕು.

ಬಿಡದಿರಲು ಉರಿಲಿಂಗಪೆದ್ದಿಗಳರಸನೋಲ್ಡನವ್ವಾ . || ೮ ||

೭೩೮

ನಿಂದಿಸಿ ಕೊಂಬ ಪ್ರಸಾದ ಕುನ್ನಿಯಪ್ರಸಾದ.

ಅವರು ತ್ರಿವಿಧಕ್ಕೆ ಇಚ್ಛಿಸರು.


ಅಲ್ಲಿ ನಿಂದಿಸಿ ಅವರ ಬಿಟ್ಟಲ್ಲಿ ,

ಅವರ ಹಿಂದೆ ಕೊಂಡುದು ಅವರ ಮಲಮೂತ್ರ;

ಮುಂದೆ ಹುಳುಗೊಂಡವಯ್ಯಾ ,

ಉರಿಲಿಂಗಪೆದ್ದಿಗಳರಸನೊಲ್ಲೆನವ್ವಾ .
ಶಿವಶರಣೆಯರ ವಚನಸಂಪುಟ

೭೩೯

ಭಾಗ್ಯವುಳ್ಳ ಪುರುಷಂಗೆ ಕಾಮಧೇನು

ಕಾಮಿಸಿದುದನೀವುದಯ್ಯಾ .

ನಿರ್ಭಾಗ್ಯ ಪುರುಷಗೆ ಕಾಮಧೇನು

ತುಡುಗುಣಿಯಾಗಿ ತೋರುವುದಯ್ಯಾ .

ಸತ್ಯಪುರುಷಂಗೆ ಕಲ್ಪವೃಕ್ಷ

ಕಲ್ಪಿಸಿದುದನೀವುದಯ್ಯಾ .

ಅಸತ್ಯಪುರುಷಂಗೆ ಕಲ್ಪವೃಕ್ಷ

ಬೊಬ್ಬುಳಿಯಾಗಿ ತೋರುವುದಯ್ಯಾ.

ಧರ್ಮಪುರುಷಂಗೆ ಚಿಂತಾಮಣಿ

ಚಿಂತಿಸಿದುದನೀವುದಯ್ಯಾ .

ಅಧರ್ಮಪುರುಷಂಗೆ ಚಿಂತಾಮಣಿ

ಗಾಜಿನಮಣಿಯಾಗಿ ತೋರುವುದಯ್ಯಾ .

ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ

ಜಂಗಮಲಿಂಗವಾಗಿ ತೋರುವುದಯ್ಯಾ .

ಭಕ್ತನಲ್ಲದ ಪಾಪಿಷ್ಟಂಗೆ ಜಂಗಮಲಿಂಗ

ಮಾನವನಾಗಿ ತೋರುವುದಯ್ಯಾ .

ಉರಿಲಿಂಗಪೆದ್ದಿಗಳರಸು ಒಲ್ಲೆನವ್ವಾ . || ೧೦ ||
ಆರಸು ಒಲ್ಲೆನವ್ವ '

೭೪೦

ವ್ರತವೆಂಬುದು ನಾಯಕರತ್ನ ;

ವ್ರತವೆಂಬುದು ಸುಪ್ಪಾಣಿಯ ಮುತ್ತು ,

ವ್ರತವೆಂಬುದು ಜೀವನ ಕಳೆ;

ವ್ರತವೆಂಬುದು ಸುಯಿದಾನ.
|| ೧೧ ||
ವ್ರತ ತಪ್ಪಲು, ಉರಿಲಿಂಗಪೆದ್ದಿಗಳರಸನೊಲ್ಟನವ್ವಾ .

೭೪೧

ವ್ರತ ಹೋದಾಗಳೆ ಇಷ್ಟಲಿಂಗದ ಕಳೆ ನಷ್ಟವಾ .

ಅವರು ಲಿಂಗವಿದ್ದೂ ಭವಿಗಳು.

ಅದು ಹೇಗೆಂದಡೆ : ಪ್ರಾಣವಿಲ್ಲದ ದೇಹದಂತೆ.


|| ೧೨ ||
ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ .
ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮನ ವಚನ

೭೪೨

ಕಾಗೆಯ ನಾಯ ತಿಂದವರಿಲ್ಲ ;

ವ್ರತಭ್ರಷ್ಟನ ಕೂಡಿದವರಿಲ್ಲ .

ನಾಯಿಗೆ ನಾರಂಗವಕ್ಕುವುದೆ ?

ಲೋಕದ ನರಂಗೆ ವ್ರತವಕ್ಕುವುದೆ ಶಿವಬೀಜಕಲ್ಲದೆ ?

ನೀವೇ ಸಾಕ್ಷಿ ನಿಜಗುಣೇಶ್ವರಲಿಂಗದಲ್ಲಿ . || ೧ ||


ಕದಿರಕಾಯಕದ ಕಾಳವ್ವಯ ವಚನ |

೭೪೩

ಕದಿರು ಮುರಿಯೆ ಏನೂ ಇಲ್ಲ .

ವ್ರತಹೀನನ ನೆರೆಯಲಿಲ್ಲ , ಗುಮ್ಮೇಶ್ವರಾ. || ೧ ||


ಕದಿರರೆಮ್ಮವ್ವಯ ವಚನಗಳು

೭೪೪

ಎನ್ನ ಸ್ಕೂಲತನುವೆ ಬಸವಣ್ಣನಯ್ಯಾ ,

ಎನ್ನ ಸೂಕ್ಷ್ಮತನುವೆ ಚೆನ್ನಬಸವಣ್ಣನಯ್ಯಾ .

ಎನ್ನ ಕಾರಣತನುವೆ ಪ್ರಭುದೇವರಯ್ಯಾ,

ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ

ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ. || ೧ ||

೭೪೫

ಎಲ್ಲರ ಗಂಡಂದಿರು ಪರದಳವಿಭಾಡರು ;

ಎನ್ನ ಗಂಡ ಮನದಳವಿಭಾಡ.

ಎಲ್ಲರ ಗಂಡಂದಿರು ಗಜಬೇಂಟೆಕಾರರು ;

ಎನ್ನ ಗಂಡ ಮನವೇಂಟೆಕಾರ.

ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು;

ಎನ್ನ ಗಂಡ ತಾರದೆ ಇಕ್ಕಿಸಿಕೊಂಬ.

ಎಲ್ಲರ ಗಂಡಂದಿರಿಗೆ ಮೂರು,

ಎನ್ನ ಗಂಡಂಗೆ ಅದೊಂದೆ ;

ಅದೊಂದೂ ಸಂದೇಹ, ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ. || ೨ ||

೭೪:

- ಎಲ್ಲರ ಹೆಂಡಿರು ತೊಳಸಿಕ್ಕುವರು;

ಎನ್ನ ಗಂಡಂಗೆ ತೊಳಸುವುದಿಲ್ಲ .

ಎಲ್ಲರ ಗಂಡಂದಿರಿಗೆ ಬಸಿವರು;

ಎನ್ನ ಗಂಡಂಗೆ ಬಸಿವುದಿಲ್ಲ .

ಎಲ್ಲರ ಗಂಡಂದಿರಿಗೆ ಬೀಜವುಂಟು;

ಎನ್ನ ಗಂಡಂಗೆ ಅಂಡದ ಬೀಜವಿಲ್ಲ .

ಎಲ್ಲರ ಗಂಡಂದಿರು ಮೇಲೆ;

ಎನ್ನ ಗಂಡ ಕೆಳಗೆ, ನಾ ಮೇಲೆ.

ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ. || ೩ ||
೨೩೨ ಶಿವಶರಣೆಯರ ವಚನಸಂಪುಟ

೭೪೭

ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ :

ಅಡಿಯ ಹಲಗೆ ಬ್ರಹ್ಮ , ತೋರಣ ವಿಷ್ಣು

ನಿಂದ ಬೊಂಬೆ ಮಹಾರುದ್ರ ;

ರುದ್ರನ ಬೆಂಬಳಿಯವೆರಡು ಸೂತ್ರಕರ್ಣ.

ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ,

ಸುತ್ತಿತ್ತು ನೂಲುಕದಿರು ತುಂಬಿತ್ತು .

ರಾಟೆಯ ತಿರುಹಲಾರೆ- ಎನ್ನ ಗಂಡ ಕುಟ್ಟಿಹ;

ಇನ್ನೇವೆಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ ?
ಕನ್ನಡಿಕಾಯಕದ ರೇಮಮ್ಮನ ವಚನ

೭೪೮

ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ ?

ಲಿಂಗಜಂಗಮದ ಪ್ರಸಾದಕ್ಕೆ ತಪ್ಪಿದಲ್ಲಿ ಕೊಲ್ಲಬಾರದೆ ?

ಕೊಂದಡೆ ಮುಕ್ತಿಯಿಲ್ಲವೆಂಬವರ ಬಾಯಲ್ಲಿ

ಪಡಿಹಾರನ ಪಾದರಕ್ಷೆಯನಿಕ್ಕುವೆ.

ಮುಂಡಿಗೆಯನರೂ ಭ್ರಷ್ಟ ಭವಿಗಳಿರಾ !

ಎತ್ತಲಾರದಡೆ ಸತ್ತ ಕುನ್ನಿನಾಯ ಬಾಲವ

ನಾಲಗೆ ಮುರುಟಿರೋ ಸದ್ದುರುಸಂಗ ನಿರಂಗಲಿಂಗದಲ್ಲಿ . || ೧ ||


ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವಯ ವಚನ

೭೪೯

ಬಂಜೆಯಾವಿಗೆಕೀರವುಂಟೆ ?

ವ್ರತಹೀನನ ಬೆರೆಯಲುಂಟೆ ?

ನೀ ಬೆರೆದಡೂ ಬೆರೆ; ನಾನೊಲ್ಲೆ ನಿಜಶಾಂತೇಶ್ವರಾ. || ೧ ||


ಕಾಲಕಣ್ಣಿಯ ಕಾಮಮ್ಮನ ವಚನ

೭೫೦

ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ;

ಗುರುಲಿಂಗಜಂಗಮದ ಕಾಲ ಕಟ್ಟುವೆ;

ವ್ರತಭ್ರಷ್ಟರ ನಿಟ್ಟೂರಸುವೆ, ಸುಟ್ಟು ತುರುತುರನೆ ತೂರುವೆ,

ನಿರ್ಭಿತ ನಿಜಲಿಂಗದಲ್ಲಿ ? | ೧ ||
ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮನ ವಚ

೭೫೧

ಆಯುಷ್ಯತೀರಲು ಮರಣ ;

ವ್ರತ ತಪ್ಪಲು ಶರೀರ ಕಡೆ.

ಮೇಲುವ್ರತವೆಂಬ ತೂತರ ಮೆಚ್ಚ

ನಮ್ಮ ಅಗಜೇಶ್ವರಲಿಂಗವು.
ಕೊಟ್ಟಣದಸೋಮಮ್ಮನ ವಚನ

೭೫೨

ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.

ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ .

ಅರಿಯದುದು ಹೋಗಲಿ , ಅರಿದು ಬೆರೆದೆನಾದಡೆ,

ಕಾದ ಕತ್ತಿಯಲ್ಲಿ ಕಿವಿಯ ಕೊಯ್ಯರಯ್ಯಾ .

ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೆಶ್ವರಾ. || ೧ ||


ಗಂಗಾಂಬಿಕೆಯ ವಚನಗಳು

೭೫೩

ಅವಳ ಕಂದ ಬಾಲಸಂಗ, ನಿನ್ನ ಕಂದ ಚೆನ್ನಲಿಂಗ

ಎಂದು ಹೇಳಿದರಮ್ಮಾ ಎನ್ನ ಒಡೆಯರು.

ಫಲವಿಲ್ಲದ ಕಂದನಿರ್ಪನವಳಿಗೆ,

ಎನಗೆ ಫಲವಿಲ್ಲ , ಕಂದನಿಲ್ಲ .

ಇದೇನೋ ದುಃಖದಂದುಗ

ಗಂಗಾಪ್ರಿಯ ಕೂಡಲಸಂಗಮದೇವಾ ?

೭೫೪

ಇದೇನೂ ಮೀರಿತೋರುವ ಮೂರುತಿ

ಪುಷ್ಪಗುಂಪಿನಲ್ಲಿ ಕಾಣದೆ ಹೋಗಿದೆ ?

ಇದೇನೊ , ಮಿರಿತೋರುವ ಮೂರುತಿ

ಕರದಲ್ಲಿಯ ಲಿಂಗದಂತೆ ಉಲುಹದ ಸ್ಥಿತಿತೋರುತ್ತದೆ ?

ಇಂತಪ್ಪ ಮೂರ್ತಿಯ ಕಂಡು

ಗಂಗಾಪ್ರಿಯ ಕೂಡಲಸಂಗನ ಶರಣನ ಸತಿಯಳು

ಧನ್ಯಳಾದಳು ಚೆನ್ನಬಸವಣ್ಣಾ . || ೨ ||

೭೫೫

ಒಂದು ಹಾಳಭೂಮಿಯ ಹುಲಿಬಂದು

ಎನ್ನ ಎಳಗರುವ ಭಕ್ಷಿಸಿತ್ತಲ್ಲಾ ! ನ . ಸ ೨ - ,

ಆ ಹುಲಿ ಹಾಳಿಗೆ ಹೋಗದು. 5 .

ಆ ಹುಲಿ ಎಳೆಗರುವ ಕಂಡು ಜನನಿಯಾಯಿತ್ತು .

ಇದನೇನೆಂಬೆ ಗಂಗಾಪ್ರಿಯಕೂಡಲಸಂಗಮದೇವಾ ? || ೩ ||

೭೫೬

ನಮ್ಮಯ್ಯನ ಮನದಲ್ಲಿ , ಮಾತಿನಲ್ಲಿ ಸೂಸುವ ಮೂರ್ತಿ

ನೋಡನೋಡುತ್ತ ಬಯಲಾಯಿತ್ತಲ್ಲಾ !

ಇದು ಅಲ್ಲಮಯ್ಯ ಮಾಡಿದ ಬೇಟ.

ಹೋದುದು ನಿಶ್ಚಯವಾದಡೆ, ಕರುಳು ಕಳವಳಿಸುತ್ತಿದ್ದವು.

ಇಂತಪ್ಪ ಕಂದ ಪೋದಡೆಯೂ ಪೋಗಿಲ್ಲ .


ಗಂಗಾಂಬಿಕೆಯ ವಚನಗಳು ೨೩೯

ಗಂಗಾಪ್ರಿಯ ಕೂಡಲಸಂಗನ ಶರಣರ

ಮೊಲೆಯನುಂಬುದಕ್ಕೆ ಬಾರ , ಕೇಳಾ ಚೆನ್ನಬಸವಣ್ಣಾ .

೭೫೭

ನೇತ್ರಮಧ್ಯದಲ್ಲಿ ಸೂಸುವ ತ್ರಿಣೇತ್ರನರೂಪವೆ ಸಿದ್ದರಾಮಯ್ಯನಾದ.

ಜಿ . ಯಮಧ್ಯದಲ್ಲಿ ಸೂಸುವ ರುಚಿಯೆ ಸಿದ್ಧರಾಮಯ್ಯನಾದ.

ಶೂತ್ರದಲ್ಲಿ ತುಂಬಿ ಪೂರೈಸುವ ಶಬ್ದವೆ ಸಿದ್ದರಾಮಯ್ಯನಾದ.

ಫ್ಯಾಣದಲ್ಲಿ ತುಂಬಿತುಳುಕುವ ಮೂರ್ತಿಯ ಸಿದ್ದರಾಮಯ್ಯನಾದ.

ತ್ವಕ್ಕಿನಲ್ಲಿ ಅರಿವಮೂರ್ತಿಯ ಅಡ್ಕೊತಿದ ಸಿದ್ದರಾಮಯ್ಯನಾದ.

ಇಂತಪ್ಪ ಪರಶಿವಮೂರ್ತಿಸಿದ್ದರಾಮಯ್ಯನ ಪಾದೋದಕವ ಕೊಂಡು

ಪರವಸ್ತು ನಾನಾದೆ, ಗಂಗಾಪ್ರಿಯ ಕೂಡಲಸಂಗಮದೇವಾ.

೭೫೮

ಪತಿಯಾಜ್ಞೆಯಲ್ಲಿ ಚರಿಪ ಸತಿಗ್ಯಾಕೆ ಪ್ರತಿಜ್ಞೆಯು ?

ಪ್ರತಿಜ್ಞೆಯ ಪತಿಕರದಲ್ಲಿ ಪೋಪದಿರೆ ಯಾತನೆಯಲ್ಲವೆ ?


ಇವಳ ಲಿಂಗನಿಷ್ಠೆ ಇವಳಿಗೆ,

ನಮ್ಮ ನಿಷ್ಠೆ ಪತಿಯಾಜ್ಞೆಯಲ್ಲಿ ಕಾಣಾ


ಗಂಗಾಪ್ರಿಯ ಕೂಡಲಸಂಗಮದೇವಾ. || ೬ ||

೭೫೯

ಮಡಿವಾಳಣ್ಣಂಗೇಕೆ ಬಾರದವ್ವಾ ಕರುಣಾರಸ ?

ಮಡಿವಾಳಣ್ಣಂಗೇಕೆ ಬಾರದವ್ವಾ ಶೌರ್ಯರಸ ?

ಮಡಿವಾಳಣ್ಣಂಗೇಕೆ ಬಾರದವ್ವಾ ಅದ್ಭುತರಸ ?

ಮಡಿವಾಳಣ್ಣಂಗೇಕೆ ಬಾರದವ್ವಾ

ಗಂಗಾಪ್ರಿಯ ಕೂಡಲಸಂಗನ ಶರಣಪ್ರಾಣ ದಾನರಸ

ಸಿದ್ದರಾಮಯ್ಯಾ ? || ೭ ||

೭೬೦

ಲಿಂಗಕುಸುಮಗಳೆನ್ನಾಚಾರಲಿಂಗಕ್ಕಿಡಿಯೆ ಚೆನ್ನ .

ಲಿಂಗವಸನದಂತರಂಗವಸನ ತರಿಸಿದೆಯೆ ಚೆನ್ನ .

ಲಿಂಗದರ್ಚನೆಗುದಕವ ತರ ಪೋದೆಯೆ ಚೆನ್ನ .

ಲಿಂಗನಿಮಿತ್ತ ಕುಸುಮಾರಾಮ ವಿರಚಿಸ ಹೋದೆಯೆ ಚೆನ್ನ .


೨೪೦ ಶಿವಶರಣೆಯರ ವಚನಸಂಪುಟ

ಬಸವಯ್ಯನಾಚರಣೆ ಸೊಗಸಾಗದಾಗಿ ಹೋದೆಯೆ

ಗಂಗಾಪ್ರಿಯ ಕೂಡಲಸಂಗ ಚೆನ್ನ . || ೮ ||

೭೬೧

- ಸಾಂದ್ರವಾಗಿ ಹರಗಣಭಕ್ತಿಯ ಮಾಳನೆಂತೂ

ಮಾದಲಾಂಬಿಕಾನಂದನನು ?

ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ಳನೆಂತೊ

ಮಾದರಸನ ಮೋಹದ ಮಗನು ?

ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯನೆಂತೊ

ಗಂಗಾಪ್ರಿಯ ಕೂಡಲಸಂಗನ ಶರಣ ಚೆನ್ನ ? || ೯ ||


ಗಜೇಶಮಸಣಯ್ಯಗಳ ಪುಣ್ಯಸ್ತ್ರೀಯ ವಚನಗಳು

೭೬೨

ಅಂಗದಮೇಲಣ ಲಿಂಗವು ಲಿಂಗವಲ್ಲ :

ಮನದಮೇಲಣ ಲಿಂಗವು ಲಿಂಗವಲ್ಲ ;

ಭಾವದಮೇಲಣ ಲಿಂಗವು ಲಿಂಗವಲ್ಲ .

ಅಂಗದಮೇಲಣ ಲಿಂಗ ವ್ಯವಹಾರ ;

ಮನದಮೇಲಣ ಲಿಂಗ ಸಂಕಲ್ಪ ;

ಭಾವದಮೇಲಣ ಲಿಂಗ ಭ್ರಾಂತುತತ್ವ .

ಆಳಿನ ಆಳು ಅರಸನಪ್ಪನೆ, ಆಳನಾಳುವನರಸದೆ?

ಅಂಗ ಪ್ರಾಣ. ಭಾವಂಗಳನೊಳಕೊಂಡಿರ್ಪುದೆ ಲಿಂಗ


|| ೧ ||
ಕಾಣಾ, ಮಸಣಯ್ಯಪ್ರಿಯ ಗಜೇಶ್ವರಾ.

೭೬೩

ಅಹುದು ಅಹುದು

ಲಿಂಗವಿಲ್ಲದ ಶಿಷ್ಯನ ಅರಿಯಿಸಬಲ್ಲ ಗುರುವು

ಲಿಂಗವಿಲ್ಲದ ಗುರುವು.

ಲಿಂಗವಿಲ್ಲದೆ ಇದ್ದ ಗುರುವನರಿಯಬಲ್ಲ ಶಿಷ್ಯ ,


ಶಿಷ್ಯನನರಿಯಬಲ್ಲ ಗುರು,

ಇವರಿಬ್ಬರ ಭೇದವ ನೀನೆ ಬಲ್ಲೆ


|| ೨ ||
ಮಸಣಯ್ಯಪ್ರಿಯ ಗಜೇಶ್ವರಾ.

೭೬೪

ಎನ್ನನರಿಯಿಸದಿರುವೆ, ಎನ್ನನರಿಯಿಸು ನಿನ್ನನರಿಯಿಸಬೇಡ.

ಎನ್ನನರಿಯದವ ನಿನ್ನನರಿಯ .

ಎನ್ನನರಿಯಿಸದೆ ನಿನ್ನನರಿಯಿಸಿದಡೆ,

ನೀನೆನಗೆ ಗುರುವಲ್ಲ ; ನಾ ನಿನಗೆ ಶಿಷ್ಯನಲ್ಲ .

ಎನ್ನನರಿಯಿಸಿದಡೆ ನೀನೆನಗೆ ಗುರು ; ನಾ ನಿನಗೆ ಶಿಷ್ಯ ,

ಮಸಣಯ್ಯಪ್ರಿಯ ಗಜೇಶ್ವರಾ. || ೩ ||

೭೬೫

ಗುರುಕೊಟ್ಟ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಪ್ರಣವ

ಅನ್ಯರಿಗೆ ಕೊಡಬಹುದೆ ? ಕೊಡಬಾರದು.


ಶಿವಶರಣೆಯರ ವಚನಸಂಪುಟ

ಆ ಗುರುವಿಂಗೆ ಕೊಡಬೇಕು; ಆ ಗುರುವಲ್ಲದೆ ಈಸಿಕೊಳ್ಳಲರಿಯನಾಗಿ,

ಇಂತಲ್ಲದೆ ಗುರುಸಂಬಂಧಕ್ಕೆ ಬೆರೆವ ಗುರುದ್ರೋಹಿಯನೇನೆಂಬೆ

ಮಸಣಯ್ಯಪ್ರಿಯ ಗಜೇಶ್ವರಾ! || ೪ ||

೭೬೬

ಗುರುವಿಂಗೆ ಗುರುವಾಗಿ ಎನಗೆ ಗುರುವಾದನಯ್ಯಾ ಬಸವಣ್ಣನು.

ಲಿಂಗಕ್ಕೆ ಲಿಂಗವಾಗಿ ಎನಗೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.

ಜಂಗಮಕ್ಕೆ ಜಂಗಮವಾಗಿ

ಎನಗೆ ಜಂಗಮವಾದನಯ್ಯಾ ಪ್ರಭುದೇವರು.

ಪ್ರಸಾದಕ್ಕೆ ಪ್ರಸಾದವಾಗಿ

ಎನಗೆ ಪ್ರಸಾದವಾದನಯ್ಯಾ ಮರುಳಶಂಕರದೇವರು.

ಬಸವಣ್ಣನಿಂದ ಶುದ್ಧಪ್ರಸಾದಿಯಾದೆನು .

ಚೆನ್ನಬಸವಣ್ಣನಿಂದ ಸಿದ್ಧಪ್ರಸಾದಿಯಾದೆನು .

ಪ್ರಭುದೇವರಿಂದ ಪ್ರಸಿದ್ಧ ಪ್ರಸಾದಿಯಾದೆನು.

ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು .

ಇಂತೀ ಚತುರ್ವಿಧವೆನ್ನ ಸರ್ವಾಂಗದಲ್ಲಿ ಕರಿಗೊಂಡು

ಎಡದೆರಹಿಲ್ಲದೆ ಪರಿಪೂರ್ಣವಾಯಿತ್ತು.

ಮಸಣಯ್ಯಪ್ರಿಯ ಗಜೇಶ್ವರಾ,
|| ೫ ||
ನಿಮ್ಮ ಶರಣರ ಪಾದಕ್ಕೆ ನಮೋ ನಮೋ ಎನುತಿರ್ದೆನು.

೭೬೭

ಪರಂಜ್ಯೋತಿಗುರುವಿನಿಂದ ತನಗೆ

ಲಿಂಗಾನುಗ್ರಹ ಪ್ರಣವ ಪಂಚಾಕ್ಷರಿ ಅಳವಟ್ಟಿರಲು,

ಅದ ಕಂಡು ಮತ್ತೊಬ್ಬ ಗುರುಕರುಣವಾದಾತ ಬರಲು ,

ಆ ಲಿಂಗಾನುಗ್ರಹ ಪ್ರಣವಪಂಚಾಕ್ಷರಿಯನಾತಂಗೀಯಲು

ಆತಂಗೆ ತಾನು ಗುರುವೆನಬಹುದೆ ? ಎನ್ನಬಾರದು.

ಆತನೂ ತಾನೂ ಆ ಪರಂಜ್ಯೋತಿಯ ಆಣತಿವಿಡಿದವರಾಗಿ,

ಇಬ್ಬರೂ ದಾಯಾದರು.

ಆ ಪರಂಜ್ಯೋತಿಯಲ್ಲಿಯೆ ಅಡಗಿದರಾಗಿ,

ಗುರುವಿಂಗೆಯೂ ಶಿಷ್ಯಂಗೆಯೂ ಲಿಂಗಕ್ಕೂ ಭೇದವಿಲ್ಲ ,


|| ೬ ||
ಮಸಣಯ್ಯಪ್ರಿಯ ಗಜೇಶ್ವರಾ.
ಗಜೇಶಮಸಣಯ್ಯಗಳ ಪುಣ್ಯಸ್ತ್ರೀಯ ವಚನಗಳು

೭೬೮

ಪರದಿಂದಲಾಯಿತ್ತು ಪರಶಕ್ತಿ .

ಪರಶಕ್ತಿಯಿಂದಲೊದಗಿದ ಭೂತಂಗಳು ,

ಭೂತಂಗಳಿಂದಲೊದಗಿದ ಅಂಗ,

ಅಂಗಕ್ಕಾದಕರಣೇಂದ್ರಿಯಂಗಳು,

ಇಂದ್ರಿಯಂಗಳಿಂದಲೊದಗಿದ ವಿಷಯಂಗಳು.

ಆ ವಿಷಯಂಗಳ ಪರಮುಖಕ್ಕೆ ತಾ ಶಕ್ತಿಯಾಗಿ ಭೋಗಿಸಬಲ್ಲಡೆ,

ಆತ ನಿರ್ಲಿಪ ಮಸಣಯ್ಯಪ್ರಿಯ ಗಜೇಶ್ವರಾ. || ೭ ||

೭೬೯

ಶಿವನೆ, ನೀನು ಗುರುವಾದೆ ಲಿಂಗವಾದೆ ಜಂಗಮವಾದ ಭಕ್ತನಾದೆ.

ಗುರುವಾಗಿದ್ದು ಭಕ್ತನೊಳಡಗಿದೆ.

ಅದೇನು ಕಾರಣವೆಂದಡೆ :

ಗುರುವಿಂಗೆ ಅರ್ಥಪ್ರಾಣಾಭಿಮಾನವನ್ನು ಕೊಟ್ಟು,


ಆತ ಭೋಗಿಸಿದ ಬಳಿಕ

ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ,

ಆ ಗುರುವು ತನ್ನೊಳಡಗಿದ.

ಲಿಂಗವಾಗಿದ್ದು ಭಕ್ತನೊಳಡಗಿದೆ.

ಅದೇನು ಕಾರಣವೆಂದಡೆ:

ಲಿಂಗಕ್ಕೆ ಅರ್ಥಪ್ರಾಣಾಭಿಮಾನವನ್ನು ಕೊಟ್ಟು,

ಆತ ಭೋಗಿಸಿದ ಬಳಿಕ

ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ,

ಆ ಲಿಂಗವು ಭಕ್ತನೊಳಡಗಿದ.

ಜಂಗಮವಾಗಿದ್ದು ಭಕ್ತನೊಳಡಗಿದೆ.
CH
ಅದೇನು ಕಾರಣವೆಂದಡೆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವನ್ನುಕೊಟ್ಟು,
ಆ ಜಂಗಮವುಭೋಗಿಸಿದ ಬಳಿಕ

ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ,

ಆ ಜಂಗಮವು ಭಕ್ತನೊಳಡಗಿದ.

ಇಂತಡಗುವರೆ ಹಿರಿಯರು; ಇಂತಡಗುವರೆ ಗುರುವರು ;

ಇಂತಡಗುವರೆ ಮಹಿಮರು,

ಇವರಿಗೆ ಭಾಜನವೊಂದೆ ಭೋಜನವೊಂದೆ.


ಶಿವಶರಣೆಯರ ವಚನಸಂಪುಟ

ಈ ನಾಲ್ಕು ಒಂದಾದ ಘನಕ್ಕೆ ಪರಿಯಾಣಬೇರೆಂಬ

ಶಾಸ್ತ್ರದಸೂತಕಿಗಳನೆನಗೆ ತೋರದಿರಯ್ಯಾ ,

ಮಸಣಯ್ಯಪ್ರಿಯ ಗಜೇಶ್ವರಾ. - || ೮ ||

೭೭೦

ಸರ್ವಜನ ಸುಮತವೆಂಬ ಮಾತು ಸಾಮಾನ್ಯವೆ ಅವ್ವಾ ?

ತಾ ಮೆಚ್ಚ , ಕಲಿಯಾಗಿಪ್ಪವರ ಕೆಲ ಮೆಚ್ಚ .

ಸುಖಿಯಾಗಿಪ್ಪವರ ಒಬ್ಬರನಾದಡೂ ಕಾಣೆನವ್ವಾ .

ತಾ ಸತ್ತು ಹೆರರ ಕೊಂದವಸ್ಥೆಯ ಚಂದವ ಚಂದ್ರಮತಿಯಲ್ಲಿ ಕಂಡೆನು.

ಇಂದು ಕಂಡೆನು ಮಹಾಲಿಂಗ ಮಸಣಯ್ಯಗಳಲ್ಲಿ

ಗಜೇಶ್ವರದೇವರು* *ಮಾಡಿತ್ತ
* .

೭೭೧

ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು,

ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?

ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,

ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ದವೆ ?

ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,

ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?

ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು,

ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ?

ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು,

ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ ?

ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು,

ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ?

ಇದು ಕಾರಣ , ಪರಂಜ್ಯೋತಿಪರಮಕರುಣಿ ಪರಮಶಾಂತನೆಂಬ ಲಿಂಗವು

ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು.

ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ. || ೧೦ |


ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿಯ ವಚನಗಳು

- ೭೭೨

ಹದ ಮಣ್ಣಲ್ಲದೆ ಮಡಕೆಯಾಗಲಾರದು.

ವ್ರತಹೀನನ ಬೆರೆಯಲಾಗದು.

ಬೆರೆದಡೆ ನರಕ ತಪ್ಪದು

ನಾನೋ ಬಲ್ಲೆನಾಗಿ, ಕುಂಭೇಶ್ವರಾ. || ೧ ||

೭೭೩

ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ

ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು.

ಅದೆಂತೆಂದಡೆ :

“ ಭಿಕ್ಷಲಿಂಗಾರ್ಪಿತಂ ಗತಾ | ಭಕ್ತಸ್ಯ ಮಂದಿರಂ ತಥಾ |

ಜಾತಿ ಜನ್ಮ ರಜೋಚ್ಛಿಷ್ಟಂ | ಪ್ರೇತಸ್ಯ ವಿವರ್ಜಿತಃ ||”


ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ.

ಕಾಣದುದನು ಕಂಡುದನು ಒಂದೆಸಮವೆಂದು ಅರಿಯಬಲ್ಲರೆ

ಕುಂಭೇಶ್ವರಲಿಂಗವೆಂಬೆನು.
ಗೊಗ್ಗವ್ವಯ ವಚನಗಳು

೭೭೪

ಅನಲಕೊಂಡ ಭೋಗಕ್ಕೆ ಪರಿಪ್ರಕಾರವುಂಟೆ ?

ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೆ ?

ಲಿಂಗಮುಟ್ಟಿದ ಅಂಗಕ್ಕೆ ಮತ್ತೆ ಪುಣ್ಯವುಂಟೆ ?

ಹುಸಿ, ನಾಸ್ತಿನಾಥಾ.

೭೭೫

ಉದ್ದವನೇರುವುದಕ್ಕೆ ಗದ್ದುಗೆಯಿಲ್ಲದೆ ಎಲ್ಲೂ ಬಾರದು.

ಚಿದ್ರೂಪನನರಿವುದಕ್ಕೆ ಅರ್ಚನೆ ಪೂಜನೆ

ನಿತ್ಯನೇಮವಿಲ್ಲದೆ ಕಾಣಬಾರದು.

ಅದ ಸತ್ಯದಿಂದ ಮಾಡಿ ಅಸತ್ಯವ ಮರೆದಡೆ

ಇದೇ ಸತ್ಯ ನಾಸ್ತಿನಾಥಾ.

೭೭೬

ಗಂಡು ಮೋಹಿಸಿ ಹೆಣ್ಣ ಹಿಡಿದಡೆ

ಅದು ಒಬ್ಬರ ಒಡವೆ ಎಂದು ಅರಿಯಬೇಕು.

ಹೆಣ್ಣು ಮೋಹಿಸಿ ಗಂಡ ಹಿಡಿದಡೆ

ಉತ್ತರವಾವುದೆಂದರಿಯಬೇಕು.

ಈ ಎರಡರ ಉಭಯವ ಕಳದು ಸುಖಿ ತಾನಾಗಬಲ್ಲಡೆ


|| ೩ ||
ನಾಸ್ತಿನಾಥನು ಪರಿಪೂರ್ಣನೆಂಬೆ.

೭೭೭

ಭಕ್ತರು ಜಂಗಮದಲ್ಲಿ ಕಟ್ಟಿ ಹೋರಲೇಕೆ ?

ಧೂಪದ ಹೊಗೆ ಎತ್ತ ಹೋದರೂ ಸರಿ.

ಇದು ಸತ್ಯವೆಂದೆ ನಾಸ್ತಿನಾಥಾ.

೭೭೮

ಮಾರುತನಲ್ಲಿ ಬೆರೆದ ಗಂಧದಂತೆ,

ಸುರತದಲ್ಲಿ ಬೆರೆದ ಸುಖದಂತೆ,

ಮಚ್ಚಿದಲ್ಲಿ ಕೊಡುವಉಚಿತದಂತೆ,

ಭಕ್ತರಿಗದೆ ಹಾದಿ ಎಂದೆ ನಾಸ್ತಿನಾಥಾ.


೨೪೭
ಗೊಗ್ಗವೈಯ ವಚನಗಳು

೭೭೯

ಮೊಲೆ ಮುಡಿ ಬಂದಡೆ ಹೆಣ್ಣೆಂಬರು.

ಮೀಸೆಕಾಸೆ ಬಂದಡೆ ಗಂಡೆಂಬರು

ಈ ಉಭಯದ ಜ್ಞಾನ
|| ೬ ||
ಹೆಣ್ಣೂ ಗಂಡೊ ನಾಸ್ತಿನಾಥಾ ?
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮನವಚನಗಳು

೭೮೦

ಅಯ್ಯಾ , ದುರುಳಕಾಮಿನಿಯರಿಗೆ ಎರಗುವ ಹೊಲೆಮನಸೆ,

ಗುರುವಿಂಗೆ ಎರಗಿ ಎರಕಡರ್ದಡಾತನ ಗುರುಕರಜಾತನೆಂಬೆ.

ಉದರದ ನೆಲೆಯನರಿದಾತನ ಉದಾಸಿಯೆಂಬೆ.

ಜನನದ ನೆಲೆಯನರಿದಾತನ ಜಂಗಮವೆಂಬೆ .

ಮರಣದ ನೆಲೆಯನರಿದಾತನ ಮಹಾಂತಿನೊಳಗಣ ಹಿರಿಯನೆಂಬೆ.

ಸಕಲದ ಹಸಿಗೆಯ ನೆಲೆಯನರಿದಾತನ ಹಂಚು ಕಂತೆಯೆಂಬೆ .

ಅತ್ಯತಿಷ್ಠದ್ದಶದಿಂದತ್ತತ್ತ ಬೆಳಗುವ ಮಹಾಬೆಳಗನರಿದಾತನ ಅತೀತನೆಂಬೆ.

ಅರುಹು ಅರತು, ಮರಹು ನಷ್ಟವಾಗಿ ಅರುಹು ಕರಿಗೊಂಡಾತನ

ಮಂಕು ಮರುಳು ಎಂದೆ .

ತನುಧರ್ಮ ತರಹರಿಸಿ, ಮನದ ಸಂಚಲವಳಿದು ಒಳಗೆ ನುಣ್ಣಗಾಗಬಲ್ಲಡೆ

ಬೋಳಕಾಕಾರ, ಬೋಳನಿರ್ವಾಣಿಗಳೆಂಬೆ.

ಹೀಂಗಲ್ಲದೆ ತಾಯಿಸತ್ತ ತಬ್ಬಲಿಯಂತೆ,

ಹಲಬರಿಗೆ ಹಲ್ಲದೆರೆದು, ಹಲಬರಿಗೆ ಬೋಧಿಸಿ

ತನ್ನ ಉದರವ ಹೊರೆವ ಸಂದೇಹಿಗಳ ಕಂಡು ಎನ್ನ ಮನ


|| ೧ ||
ಸಂದೇಹಿಸಿತ್ತು ಕಾಣಾ ಮಹಾಗುರು ಶಾಂತೇಶ್ವರಪ್ರಭುವೆ.

- ೭೮೧

ಗುರುಮುಖದಿಂದ ಬಂದುದೇ ಗುರುಪ್ರಸಾದ;

ಆ ಪ್ರಸಾದವನು ಲಿಂಗಕ್ಕೆ ಅರ್ಪಿಸಿದಲ್ಲಿ ಲಿಂಗಪ್ರಸಾದ.

ಭೋಜ್ಯ ಕಟ್ಟಿ ಲಿಂಗಕ್ಕೆ ಕೊಟ್ಟು ಸಲಿಸುವುದೇ ಜಂಗಮಪ್ರಸಾದ.

ತತ್ಪಸಾದಿಗಳಲ್ಲಿ ಯಾಚಿಸಿ,

ಅವರ ಪ್ರಸಾದವ ಕೊಂಬುದೆ ಪ್ರಸಾದಿಯ ಪ್ರಸಾದ.

ಅಪೇಕ್ಷೆಯಿಂದ ಸಲಿಸುವುದೇ ಆಪ್ಯಾಯನಪ್ರಸಾದ.

ಗುರುಲಿಂಗಜಂಗಮವ ಕಂಡು,

ಆ ಸಮಯದಲ್ಲಿ ತೆಗೆದು ಕೊಂಬುವುದೇ ಸಮಯಪ್ರಸಾದ.

ಪಂಚೇಂದ್ರಿಯಂಗಳಲ್ಲಿ ಪಂಚವಿಷಯ ಪದಾರ್ಥಗಳನ್ನು

ಪಂಚವಿಧಲಿಂಗಕ್ಕೆ ಸಮರ್ಪಣ ಮಾಡುವುದೇ

ಪಂಚೇಂದ್ರಿಯವಿರಹಿತಪ್ರಸಾದ.
೨೪೯
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮನ ವಚನಗಳು

ಮನವೇ ಲಿಂಗ, ಬುದ್ಧಿಯೇ ಶಿವಜ್ಞಾನ, ಚಿತ್ತವೇ ಶಿವದಾಸೋಹ,

ಅಹಂಕಾರದಲ್ಲಿ ಶಿವಚಿಂತನೆಯುಳ್ಳವನಾಗಿ

ಸಲಿಸಿದ್ದೇ ಅಂತಃಕರಣವಿರಹಿತಪ್ರಸಾದ.

ತ್ರಿವಿಧಾಂಗದಲ್ಲಿ ತ್ರಿವಿಧಲಿಂಗವ ಸಂಬಂಧಿಸಿ

ಆ ಚಿದ್ಘನಲಿಂಗ ತಾನೆಂದರಿದು,

ಆ ತ್ರಿವಿಧಲಿಂಗಕ್ಕೆ ಕೊಡುವುದೇ ಸದ್ಭಾವಪ್ರಸಾದ.

ಬಹಿರಂಗದ ಪ್ರಪಂಚವ ನಷ್ಟಮಾಡಿ,

ಅರಿವುವಿಡಿದು ಸಲಿಸುವುದೇ ಸಮತಾಪ್ರಸಾದ.

ಶ್ರೀಗುರುವಿನ ಪ್ರಸನ್ನತ್ವವೆ ಜ್ಞಾನಪ್ರಸಾದ.

ಇಂತೀ ಏಕದಶ ಪ್ರಸಾದವನು ಒಳಹೊರಗೆ

ಪರಿಪೂರ್ಣವಾಗಿ ತಿಳಿಯುವುದೆ ಶಿವತಂತ್ರ ,

ಗುರುಶಾಂತೇಶ್ವರಾ. || ೨ ||

೭೮೨

- ಚರಣಾಯುಧ ವೇಳೆಯನರಿವುದಯ್ಯಾ .

ಭಕ್ತ ವ್ರತಹೀನನರಿದು ನೆರೆಯನಯ್ಯಾ ,

ನೆರೆದಡೆ ನರಕ, ಗುರುಶಾಂತೇಶ್ವರಾ. || ೩ ||

೭೮೩

ಪರಿಪೂರ್ಣನಲ್ಲ , ಪ್ರದೇಶಿಕನಲ್ಲ ,
ನಿರತಿಶಯದೊಳತಿಶಯ ತಾ ಮುನ್ನಲ್ಲ .

ಶರಣನಲ್ಲ , ಐಕ್ಯನಲ್ಲ , ಪರಮನಲ್ಲ , ಜೀವನಲ್ಲ ,

ನಿರವಯನಲ್ಲ , ಸಾವಯನಲ್ಲ ;
ಪರವಿಹವೆಂಬುಭಯದೊಳಿಲ್ಲದವನು .

ನಿರಾಲಯ ನಿಜಗುರು ಶಾಂತೇಶ್ವರನ ಶರಣನ ನಿಲವು

ಉಪಮೆಗೆ ತಾನನುಪಮ .

೭೮೪

ಪಾದದಲ್ಲಿ ಪಾದೋದಕ.

ಆ ಪಾದತೀರ್ಥವನು ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬ

ಇಚ್ಛೆ ಹುಟ್ಟಿದಲ್ಲಿ ಲಿಂಗೋದಕ .

ಮಜ್ಜನಕ್ಕೆರದಲ್ಲಿ ಮಜ್ಜನೋದಕ .
೨೫೦
ಶಿವಶರಣೆಯರ ವಚನಸಂಪುಟ

ಜಿಹ್ನೆಯಲ್ಲಿ ಪಂಚಾಂಗುಲದಿ ಸ್ವೀಕರಿಸಿದ್ದೇ ಸ್ಪರ್ಶನೋದಕ.

ಎಚ್ಚರಿಕೆ ಸಾವಧಾನದಿಂದ ಸೇವಿಸಿದ್ದೇ ಅವಧಾನೋದಕ.

ಸಲಿಸಿ ಸಂತೋಷವಾದರೆ ಆಪ್ಯಾಯನೋದಕ.

ಹಸ್ತದೊಳಗಿರ್ದ ತೀರ್ಥವನ್ನು ಸಲ್ಲಿಸಿದ್ದೇ ಹಸ್ತೋದಕ .

ಆ ಬಟ್ಟಲಲ್ಲಿದ್ದ ತೀರ್ಥವನು ಮೂರುಸಲ

ಸ್ವೀಕರಿಸಿದ್ದೇ ಪರಿಣಾಮೋದಕ .

ಆ ಪಾದೋದಕವನು ಅಂತಿಂತೆಂದು ಹೆಸರಿಡಲಿಲ್ಲವಾಗಿ ನಿರ್ನಾಮೋದಕ.

ಬ್ರಹ್ಮರಂಧ್ರದಲ್ಲಿರ್ದುದೇ ಆದಮೃತವೆಂದು ಭಾವಿಸುವುದೇ ಸತ್ಯೋದಕ.

ಇಂತೀ ದಶವಿಧ ಪಾದೋದಕವನು ಎನ್ನಂತರಂಗದಲ್ಲಿ ತಿಳಿದು

|| ೫ ||
ನಾನು ಸದ್ಯೋನ್ಮುಕನಾದೆನಯ್ಯಾ ಗುರುಶಾಂತೇಶ್ವರಾ.
ದುಗ್ಗಳೆಯ ವಚನಗಳು

೭೮೫

ಬಸವಣ್ಣನಿಂದ ಗುರುಪ್ರಸಾದಿಯಾದೆನು.

ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆನು.

ಪ್ರಭುದೇವರಿಂದ ಜಂಗಮಪ್ರಸಾದಿಯಾದೆನು.

ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು.

ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ

ಮಹಾಮಹಿಮಂಗೆ ಶರಣೆಂದು ಬದುಕಿದೆನಯ್ಯಾ

ದಾಸಯ್ಯಪ್ರಿಯ ರಾಮನಾಥಾ. || ೧ ||

೭೮೬

ಭಕ್ತನಾದಡೆ ಬಸವಣ್ಣನಂತಾಗಬೇಕು.

ಜಂಗಮವಾದಡೆ ಪ್ರಭುದೇವರಂತಾಗಬೇಕು.

ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು.

ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು.

ಐಕ್ಯನಾದಡೆ ಅಜಗಣ್ಣನಂತಾಗಬೇಕು.

ಇಂತಿವರ ಕಾರುಣ್ಯಪ್ರಸಾದವ ಕೊಂಡು

ಸುಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯಾ

ದಾಸಯ್ಯಪ್ರಿಯ ರಾಮನಾಥಾ ? || ೨ ||
ನಾಗಲಾಂಬಿಕೆಯ ವಚನಗಳು

೭೮೭

ಅಂಗದಿಂದುದಯವಾದಾತ ಮಡಿವಾಳಯ್ಯ .

ಲಿಂಗದಿಂದುದಯವಾದಾತ ರೇವಣಸಿದ್ದಯ್ಯ .

ಭಸ್ಮದಿಂದುದಯವಾದಾತ ಸಿದ್ಧರಾಮಯ್ಯ ,

ಪಾದೋದಕದಿಂದ ಉದಯವಾದವಳು ಅಕ್ಕಮಹಾದೇವಿ.

ಮಂತ್ರದಿಂದುದಯವಾದಾತ ನಿಮ್ಮ ಸೋದರಮಾವ ಬಸವಯ್ಯ .

ಪ್ರಸಾದದಿಂದುದಯವಾದಾತ ನೀನಲ್ಲವೆ ಚೆನ್ನಬಸವಯ್ಯ .

ಬಸವಣ್ಣಪ್ರಿಯ ಚೆನ್ನಸಂಗಯ್ಯ . || ೧ ||

೭೮೮

ಅಯ್ಯಾ , ನಾನಧವೆ , ಅಯ್ಯಯ್ಯ ಕೈಯ ಕೋಲಕೊಂಬರೆ ?

ಅಯ್ಯಾ , ಎಳೆಗರುವಿನ ಎಳಗಂತಿಯನೆಳೆದೊಯ್ದರೆ ಭಕ್ತರು ?

ಅಯ್ಯೋ ಅಯ್ಯೋ ಎನಲೊಯ್ದರೆ,


|| ೨ ||
ಬಸವಣ್ಣಪ್ರಿಯ ಚೆನ್ನಸಂಗಯ್ಯಾ ?

೭೮೯

ಅರಿಯದೆ ಮರಹಿಂದ ಭವದಲ್ಲಿ ಬಂದೆನಲ್ಲದೆ,

ಇನ್ನು ಅರಿದ ಬಳಿಕ ಬರಲುಂಟೆ ?

ಹೃದಯಕಮಲಮಧ್ಯದಲ್ಲಿ ನಿಜವು ನೆಲೆಗೊಂಡ ಬಳಿಕ,

ಪುಣ್ಯಪಾಪವೆಂಬುದಕ್ಕೆ ಹೊರಗಾದೆನು.

ಭುವನಹದಿನಾಲ್ಕರೊಳಗೆ ಪರಿಪೂರ್ಣ

ನಿರಂಜನಜ್ಯೋತಿಯಾಗಿ ಬೆಳಗುವ ಪ್ರಭುವ ಕಂಡು


|| ೩ ||
ಬದುಕಿದೆನು ಕಾಣಾ ಬಸವಣ್ಣಪ್ರಿಯ ಚೆನ್ನಸಂಗಯ್ಯಾ .

೭೯೦

ಆಚಾರವೆಂಬುದು ಆಗೋಚರ ನೋಡಯ್ಯಾ , ಆರಿಗೆಯೂ ಸಾಧ್ಯವಲ್ಲ .

ಮರ್ತ್ಯಲೋಕದಲ್ಲಿ ಆ ಸದಾಚಾರದ ಬೆಳವಿಗೆಯ ಮಾಡಲೆಂದು

ಬಸವಣ್ಣ ಬಂದು ಭಕ್ತಿಸ್ಥಲವ ಹರಹಿದ.

ಗುರು ಲಿಂಗ ಜಂಗಮ ದಾಸೋಹಪಾದೋದಕ ಪ್ರಸಾದದ

ಹಾದಿಯನೆಲ್ಲರಿಗೆ ತೋರಿದ.

ಶಿವಾಚಾರವ ಬೆಳವಿಗೆಯ ಘನವನಹುದಲ್ಲವೆಂದು ಬಿಜ್ಜಳ ತರ್ಕಿಸಲು


೨೩
ನಾಗಲಾಂಬಿಕೆಯ ವಚನಗಳು

ಅನಂತಮುಖದಿಂದ ಒಡಂಬಡಿಸಿ ಅಹುದೆನಿಸಿದ.

ಬಂದ ಮಣಿಹ ಪೂರೈಸಿತ್ತೆಂದು ಲಿಂಗದೊಳಗೆ ಬಗಿದು ಹೊಕ್ಕಡೆ,

ಹಿಂದೆ ಲೋಕವರಿದು ಬದುಕಬೇಕೆಂದು ಸೆರಗ ಕೊಟ್ಟ.

ನಾನು ಹಿಂದುಳಿದಹಳೆಂದು ಮುಂದಣ ಗತಿಯ ತೋರಿ,

ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ತನ್ನ ಪ್ರಸನ್ನದೊಳಗೆ

ಇಂಬಿಟ್ಟುಕೊಂಡನು ಎನ್ನ ಹೆತ್ತ ತಂದೆ ಸಂಗನಬಸವಣ್ಣನು.

೭೯೧

ಎನ್ನ ಕುಲಸೂತಕವ ಕಳೆದಾತ ಬಸವಣ್ಣ .

ಎನ್ನ ಛಲಸೂತಕವ ಕಳೆದಾತ ಬಸವಣ್ಣ .

ಎನ್ನ ತನುಸೂತಕವ ಕಳೆದಾತ ಬಸವಣ್ಣ .

ಎನ್ನ ಮನಸೂತಕವ ಕಳೆದಾತ ಬಸವಣ್ಣ .

ಎನ್ನ ನೆನಹುಸೂತಕವ ಕಳೆದಾತ ಬಸವಣ್ಣ .

ಎನ್ನ ಭಾವಸೂತಕವ ಕಳೆದಾತ ಬಸವಣ್ಣ .

ಎನ್ನ ಅರುಹುಮರಹಿನ ಸಂದುಸಂಶಯವಬಿಡಿಸಿದಾತ ಬಸವಣ್ಣ .

ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ .

ತನ್ನ ಎನ್ನೊಳಗೆ ಇಂಬಿಟ್ಟು ಕೊಂಡಾತ ಬಸವಣ್ಣ .


ನಿಜದ ನಿರ್ವಯಲ ಬಾಗಿಲ ನಿಜವ ತೋರಿದಾತ ಬಸವಣ್ಣ .

ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ

ನಿಜನಿವಾಸಿಯಾಗಿರಿಸಿದ ಎನ್ನ ತಂದೆ ಸಂಗನಬಸವಣ್ಣನು.

೭೯೨

ಎನ್ನ ತನು ಚೆನ್ನಬಸವಣ್ಣನ ಬಯಲ ಬೆರಸಿತ್ತು .

ಎನ್ನ ಮನ ಸಂಗನಬಸವಣ್ಣನ ನಿಜಪದವ ಬೆರಸಿತ್ತು .

ಎನ್ನ ಪ್ರಾಣ ಅಲ್ಲಮಪ್ರಭುದೇವರ ಅರಿವ ಬೆರಸಿತ್ತು .


ಇಂತೀ ಮೂವರು ಒಂದೊಂದ ಹಂಚಿಕೊಂಡ ಕಾರಣ ,

ಎನಗೇನೂ ಇಲ್ಲದೆ, ಬಸವಣ್ಣಪ್ರಿಯ ಚೆನ್ನಸಂಗಯ್ಯನ

ಹೃದಯಕಮಲದಲ್ಲಿ ನಿಜನಿವಾಸಿಯಾಗಿದ್ದನು.

೭೯೩

ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ

ಸಂಗನಬಸವಣ್ಣನ ಒಕ್ಕುದ ಕೊಂಡೆನಾಗಿ,


೨೫೪
ಶಿವಶರಣೆಯರ ವಚನಸಂಪುಟ

ಎನ್ನ ಮನದ ಕಪಟ ಹಿಂಗಿತ್ತಯ್ಯಾ

ಚೆನ್ನಬಸವಣ್ಣನ ಕರುಣವ ಪಡೆದೆನಾಗಿ,

ಎನ್ನಂತರಂಗದ ಸಂದುಸಂಶಯ ತೋಲಗಿತ್ತಿಂದು

ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ

ಎನ್ನ ಪರಮಗುರು ಅಲ್ಲಮಪ್ರಭುದೇವರ

ಶ್ರೀ ಚರಣವ ಕಂಡೆನಾಗಿ, || ೭ ||

೭೯೪

ಗುರುಸಂಬಂಧಿ ಗುರುಭಕ್ತಯ್ಯನು.

ಲಿಂಗಸಂಬಂಧಿ ಪ್ರಭುದೇವರು.

ಜಂಗಮಸಂಬಂಧಿ ಸಿದ್ಧರಾಮನು.

ಪ್ರಸಾದಸಂಬಂಧಿ ಮರುಳಶಂಕರದೇವರು.

ಪ್ರಾಣಲಿಂಗಸಂಬಂಧಿ ಅನಿಮಿಷದೇವರು.

ಶರಣಸಂಬಂಧಿ ಘಟ್ಟಿವಾಳಯ್ಯನು.

ಐಕ್ಯಸಂಬಂಧಿ ಅಜಗಣ್ಣಯ್ಯನು.

ಸರ್ವಾಚಾರಸಂಬಂಧಿ ಚೆನ್ನಬಸವಣ್ಣನು.

ಇಂತಿವರಸಂಬಂಧ ಎನ್ನ ಸರ್ವಾಂಗದಲ್ಲಿ ನಿಂದು

ಬಸವಣ್ಣಪ್ರಿಯ ಚೆನ್ನಸಂಗಯ್ಯನ

ಹೃದಯಕಮಲದಲ್ಲಿ ನಿಜನಿವಾಸಿಯಾಗಿದ್ದೆನು. . || ೮ ||

೭೯೫

ಬಸವಣ್ಣಾ , ನೀವುಮರ್ತ್ಯಕ್ಕೆ ಬಂದು ನಿಂದಡೆ

ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತ್ತಲ್ಲಾ !

ಅಯ್ಯಾ , ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ

ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು ?

ಅಣ್ಣಾ , ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು

ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ.

ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ .

ಮರ್ತ್ಯಲೋಕದ ಮಹಾಮನೆಶೂನ್ಯವಾಯಿತ್ತಲ್ಲಾ ಬಸವಣ್ಣಾ .

ಎನ್ನನೊಯ್ಯದೆಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ .

ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ

ಪ್ರಾಣಲಿಂಗವಾಗಿ ಹೋದೆಯಲ್ಲಾ ಸಂಗನಬಸವಣ್ಣಾ||! ೯ ||


೨೫೫
ನಾಗಲಾಂಬಿಕೆಯ ವಚನಗಳು

೭೯೬

ಬಸವನೆ ಮಖಸೆಜ್ಜೆ , ಬಸವನೆ ಅಮಳೋಕ್ಯ,

ಬಸವನ ನಾನೆತ್ತಿ ಮುದ್ದಾಡಿಸುವೆನು.

ಬಸವಾ ಸಂಗನಬಸವಿದೇವಾ ಜಯತು.

ಬಸವಾ, ಸಂಗನಬಸವಲಿಂಗಾ ಜಯತು.

ಬಸವಗೂ ಎನಗೂ ಭಾವಭೇದವಿಲ್ಲ ;

ಬಸವಗೂ ಎನಗೂ ರಾಸಿಕೂಟವುಂಟು.

ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ

ಬಸವನ ಬೆಸಲಾದ ಬಾಣತಿ ನಾನಯ್ಯಾ


|| ೧೦ ||
ಬಸವಾ ಬಸವಾ ಬಸವಾ !

೭೯೭

ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕು.

ಬಸವ ಮಾಡಿದಡಾಯ್ತು ಗುರುಲಿಂಗಜಂಗಮ ಪೂಜೆ.

ಬಸವ ಮಾಡಿದಡಾಯ್ತು ಲಿಂಗಾಂಗ ಸಾಮರಸ್ಯದಸುಧೆಯು.

ಬಸವ ಮಾಡಿದಡಾಯ್ತು ಭಕ್ತ ಭಕ್ತರಲಿ ಸಮಭಾವ.

ಎನ್ನ ಕಂಗಳೊಳಗಿಂಬಾದ ಬಸವ,

ಎನ್ನ ಮನ ಭಾವಂಗಳೊಳಗಾದ ಬಸವ,

ಎನ್ನಂತರಂಗ ತುಂಬಿ ನಿಂದಾತ ಬಸವ .

ಹೊರಗೆ ಗುರುಬಸವನ ಕೀರುತಿ.

ಬಸವನ ಮಣಿಹವೇ ಎನ್ನ ಪ್ರಾಣವಿಂದಿಂಗೆ.

ಬಸವಣ್ಣಪ್ರಿಯ ಚೆನ್ನಸಂಗಯ್ಯನ ಸಾಕ್ಷಿಯಾಗಿ

ಬಸವಾ ಬಸವಾ ಜಯತು.

ಗುರುಸಂಗನಬಸವಾ ಜಯತು. | ೧೧ ||

೭೯೮

ಭಕ್ತಿಯ ತವನಿಧಿಯೆ , ಮುಕ್ತಿಯ ಮೂರುತಿಯೆ ,

ಲಿಂಗಜಂಗಮದ ಚೈತನ್ಯವೆ

ನಿಮ್ಮನಗಲಿ ಎಂತು ಸೈರಿಸುವೆನು ?

ಎಲೆ ಅಯ್ಯಾ ಪರಮಗುರುವೆ,

ಆಹಾ ಎನ್ನ ಅಂತರಂಗದಜ್ಯೋತಿಯೆ ,


೨೫೬
ಶಿವಶರಣೆಯರ ವಚನಸಂಪುಟ

ನಿಮ್ಮ ಒಕ್ಕ ಶೇಷಪ್ರಸಾದವನಿಕ್ಕಿ

ಎನ್ನ ಪಾವನವಮಾಡಿ ಉಳುಹಿದೆಯಯ್ಯಾ,

ಲಿಂಗವೆ ಎನಗಿನ್ನಾರು ಹೇಳಯ್ಯಾ ನೀವಲ್ಲದೆ ?

ಬಸವಣ್ಣಪ್ರಿಯ ಚೆನ್ನಸಂಗಯ್ಯಾ ,

ನೀವಗಲಿದಡೆ ಎನ್ನ ಪ್ರಾಣ ನಿಮ್ಮೊಳಗಲ್ಲದೆ ಅಗಲಬಲ್ಲುದೆ ? || ೧೨ ||

೭೯೯

ಮನದೊಡೆಯ ಮಹಾದೇವ ಮನವ ನೋಡಿಹೆನೆಂದು

ಮನುಜರ ಕೈಯಿಂದ ಒಂದೊಂದ ನುಡಿಸುವನು.

ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ,

ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.

ಬಸವ[ಣ್ಣಪ್ರಿಯ ಚೆನ್ನಸಂಗಯ್ಯನು

ಬೆಟ್ಟದನಿತಪರಾಧವನು ಒಂದು ಬೆಟ್ಟಿನಲ್ಲಿ ತೊಡೆವನು.If ೧೩ ||

೮೦೦

ಶ್ರೀಗುರುವೆ ತಾಯಿತಂದೆಯಾಗಿ, ಲಿಂಗವೆ ಪತಿಯಾಗಿ,

ಜಂಗಮವೆ ಅತ್ತೆ - ಮಾವಂದಿರಾಗಿ, ಶಿವಭಕ್ತರೆ ಬಾಂಧವರಾಗಿ,

ಸತ್ಯ ಸದಾಚಾರವೆಂಬ ಮನೆಗೆ ಕಳುಹಿದರಾಗಿ,

ಶರಣಸತಿ ಎಂಬ ನಾಮ ನಿಜವಾಯಿತ್ತು.

ಆದಂತೆ ಇರುವೆ, ಹಿಂದುಮುಂದರಿಯದೆ ನಡೆವೆ.

ಮನಕ್ಕೆ ಮನಸಾಕ್ಷಿಯಾಗಿ ಮಾಡುವೆ,


|| ೧೪ ||
ಬಸವಣ್ಣಪ್ರಿಯ ಚೆನ್ನಸಂಗಯ್ಯಾ ನಿಮ್ಮಡಿಗಳಿಗೆ.
ನೀಲಮ್ಮನ ವಚನಗಳು

esoo

ಅಂಗದ ಸಂಗವ ಹಿಂಗಿ ಅಂಗವನಳಿದೆನಯ್ಯ .

ಆ ಅಂಗವನಳಿದ ಬಳಿಕ

' ಅಣೋರಣೀಯಾನ್ ಮಹತೋಮಹೀಯಾನ್‌ ' ಯೆಂಬ

ಶಬ್ದವಡಗಿತ್ತು .

ಮನವನರಿದು, ಆ ಮನ ಘನವ ತಿಳಿದು,

ಆನು ಬದುಕಿದೆನಯ್ಯ ;

ಆನು ಸುಖಿಯಾದೆನಯ್ಯ ,

ಆನು ಇಹಪರದ ಹಂಗಹರಿದು,

ಸುಖ ವಿಸುಖ ಪ್ರಸನ್ನರೂಪಾಯಿತ್ತಯ್ಯ ಸಂಗಯ್ಯ . || ೧ ||

೮೦೨

ಅಂಗದ ಸಂಗಿಗನಲ್ಲ ನಮ್ಮ ಬಸವಯ್ಯನು.

ಪ್ರಾಣದ ಭ್ರಮೆಯವನಲ್ಲ ನಮ್ಮ ಬಸವಯ್ಯನು.

ಉಭಯದ ಹಂಗಹರಿದು ಉಪಮಾತೀತನಾದ ನಮ್ಮ ಬಸವಯ್ಯನು.

ಸಂಗಯ್ಯನಲ್ಲಿ ಕೂಡಿ

ನಿರಾಳ ಪ್ರಸನ್ನಮೂರ್ತಿಯಾದ ನಮ್ಮ ಬಸವಯ್ಯನು. || ೨ ||

- ೮೦೩

ಅಂಗನೆಯ ಸಂಗವ ಮಾಡಿಹೆನು ನಾನು ,

ಆನುವಂಗನೆಯಲ್ಲ .

ಆ ಅಂಗನೆಯ ಅಂಗಸಂಗವ ಕಂಡು ನಿಂದವಳಯ್ಯ .

ನಿಲವನರಿದು, ನೆಲೆಯ ತಿಳಿದು,

ಆನು ಬದುಕಿದೆನಯ್ಯ ಸಂಗಯ್ಯ . || ೩ ||

೮೦೪

ಅಂಗವಡಗಿ ನಿರಂಗಿಯಾನಾದೆನು.

ನಿರಂಗಸಂಗ ಮಂತ್ರದ ಮಂತ್ರದಿಂದ

ಮನೋವಿಲಾಸವ ಕಂಡು ಮೂರ್ತಿಯನರಿದು

ಆ ಮೂರ್ತಿ ಸಂಗ ಹಿಂಗಿ,


೨೫೮
ಶಿವಶರಣೆಯರ ವಚನಸಂಪುಟ

ನಾನು ಪ್ರಸನ್ನಮೂರ್ತಿಯ ಇರವನರಿದು

ಪರವ ನಂಬಿ , ಬಹುವಿಕಾರವ ಕಳದು

ವಿಶುದ್ಧದಾಯಕಳು ನಾನಾದೆನಯ್ಯ ಸಂಗಯ್ಯ . || ೪ ||

೮೦೫

ಅಂಗವನರಿದು ಹಿಂಗಿದೆ ಪ್ರಾಣವ,

ಅಂಗ ಲಿಂಗವನುಂಡು ಪರಮ ಪರಿಣಾಮದೊಳೋಲಾಡುತಿರ್ದೆನ

ದಿನಮಣಿ ದಿನಪ್ರಕಾಶ ಸಾಧ್ಯವಾಯಿತ್ತಯ್ಯ .

ದಿನಮಣಿ ದಿನಪ್ರಕಾಶದ ಕೂಟದಿಂದ

ಆನು ಬದುಕಿದೆನಯ್ಯ ಸಂಗಯ್ಯ .

೮೦೬

ಅಂಗವಿಲ್ಲವೆನಗೆ ಲಿಂಗವಿಲ್ಲವೆನಗೆ

ಜಂಗಮವಿಲ್ಲವೆನಗೆ ಪ್ರಸಾದವಿಲ್ಲವೆನಗೆ

ಪ್ರಾಣವಿಲ್ಲವೆನಗೆ ಪರಿಣಾಮವಿಲ್ಲವೆನಗೆ

ಆವ ಸುಖವೂ ಇಲ್ಲ , ಆ ಸುಖವಿಲ್ಲದ ಕಾರಣ

ಪ್ರಸಾದವೆನಗೆ ಸಾಧ್ಯವಯ್ಯ ಸಂಗಯ್ಯ .

೮೦೭

ಅಂಡಜವ ಕಲ್ಪಿಸಲು ಆ ಅಂಡಜದ ರೂಪೆನ್ನಲಿಲ್ಲದ ಕಾರಣ

ಸಂಗಯ್ಯಾ, ಗುರುಬಸವನೆನ್ನ ಕಾಯದಲ್ಲಿ ಕಯ್ಯಲಗಿನಂತಿದ್ದನು.


| ೭ ||

esoes

ಅಂಡಜವಳಿದ ಬಸವಾ, ಪಿಂಡಜವಳಿದ ಬಸವಾ;

ಆಕಾರವಳಿದ ಬಸವಾ, ನಿರಾಕಾರವಳಿದ ಬಸವಾ,

ಸಂಗವಳಿದ ಬಸವಾ, ನಿಸ್ಸಂಗವಳಿದ ಬಸವಾ;


|| ೮ ||
ಸಂಗಯ್ಯನಲ್ಲಿ ಸ್ವಯಲಿಂಗವಾದ ಬಸವಾ.

೮೦೯

ಅಂಡದಲ್ಲಿಯೊಂದು ಆಕಾರದ ರೂಪು ಹುಟ್ಟಿತ್ತು.

ಆ ಆಕಾರದ ರೂಪಿನಲ್ಲಿ ಅನುವಿನ ಮೂರ್ತಿಯ ಭಕ್ತಿ ಹುಟ್ಟಿತ್ತು .

ಆ ಭಕ್ತಿಯ ಸುಖ ಏಸುಖವಾಗಿ ತೋರಿತ್ತು .

ವಿಸುಖ ವಿತೃಪ್ತಿಯ ಕಂಡು ತಲೆದೋರಿತ್ತು .


೨೫೯
ನೀಲಮ್ಮನ ವಚನಗಳು

ಮೂರ್ತಿಯಮೂರ್ತಿಯ ಮುಖವರಳಿ ಸುಖದಲ್ಲಿ


|| ೯ ||
ನಿರ್ವಯಲಾಯಿತ್ತಯ್ಯ ಸಂಗಯ್ಯ .

೮೧೦

ಅಘೋರವಕ್ಕ , ಅಜಾತವು , ಸಾಧ್ಯವಿಲ್ಲದ

ಸಮಯಾಚಾರಕ್ಕೆ ಸಂಭ್ರಮದ ವಿವೇಕವ ತಿಳಿದು,

ಸದ್ಯೋನ್ಮುಕ್ತಿಯ ಪಡೆಯಲು,

ಪ್ರಸಾದ ಇರಪರಕ್ಕೆ ಸಾಲದೆ ಹೋಯಿತ್ತು.

ಎನಗೆ ಕಾಯದ ಹಂಗಿಲ್ಲ , ಕರ್ಮದ ಹಂಗಿಲ್ಲ ಸಂಗಯ್ಯ . || ೧೦ ||

- ೮೧೧

ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ.

ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ .

ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ .

ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ ,

|| ?೧೧ ||
ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ

೮೧೨

ಅಡಲಿಲ್ಲದಊಟವನುಣಹೋದಡೆ,

ಆ ಊಟವೆನಗೆ ವಿಷವಾಯಿತ್ತಯ್ಯ ಸಂಗಯ್ಯ . || ೧೨ ||

೮೧೩

ಅಡವಿಯಲ್ಲಿ ಕಣ್ಣುಗೆಟ್ಟ ಪಶುವಿನಂತೆ ನಾನು ಪ್ರಳಾಪಿಸುತ್ತಿದ್ದೆ

ಕಡುದುಃಖದಿಂದ ಮರುಗಲು, ಶರಣ ಚೆನ್ನಣ್ಣನರಿದು

ಶಿವಶಿವಾ ಎಂಬ ಮಂತ್ರವನರುಹಿ

ಅಳಲುವ ಬಳಲಿಕೆಯ ಕಳೆದನಯ್ಯಾ ,

ಸಂಗಯ್ಯನಲ್ಲಿ ಚೆನ್ನಬಸವಣ್ಣಂಗೆ ನಮೋ ನಮೋ ಎನುತಿದ್ದೆನು. || ೧೩ ||

೮೧೪

ಅಡವಿಯ ಹುಯ್ಯಲು ಎನ್ನ ಮೇಲುವರಿಯಿತ್ತು.

ಎನ್ನ ಮೇಲುವರಿವ ಹುಯ್ಯಲಬೆಳಸಿ ನಾನು

ನಿಜಪ್ರಸಂಗಿಯಾದೆನಯ್ಯ .
೨೬೦ ಶಿವಶರಣೆಯರ ವಚನಸಂಪುಟ

ನಿತ್ಯವ ಹಡದು ನಿಃಶೂನ್ಯದ ಮಂಟಪದಲ್ಲಿ

ನಿರಾಲಂಬಿಯಾನಾದೆನಯ್ಯ ಸಂಗಯ್ಯ . || ೧೪ ||

ಅಡಿಯಿಡಲಿಲ್ಲ , ನುಡಿಯನೇನೆನಲಿಲ್ಲ ,

ಸರಸವೆನಲಿಲ್ಲ ,

ಆ ಸರಸ ವಿರೂಪಾದ ಬಳಿಕ ಪ್ರಸಾದವೆನಲಿಲ್ಲ .

ಆ ಪ್ರಸಾದ ಪರಿಣಾಮದಲ್ಲಿಯಡಗಿತ್ತಯ್ಯ ಸಂಗಯ್ಯ . || ೧೫ ||

೮೧೬

ಅಣ್ವಾಲ ಕರೆದು, ಪುಣ್ಯದಕಡೆಗೋಲಿನಲ್ಲಿ ಕಡೆದು,

ಕಂಪಿಲ್ಲದ ತುಪ್ಪವನು ಅನಂತ ಹಿರಿಯರಿಗೆಡೆಮಾಡಿ

ಉಣಬಡಿಸಲೊಡನೆ, ಊಟ ನಿರಾಕುಳವಾಗಿ ನಿಂದಿತ್ತು ;

ಪ್ರಾಣವಿಲ್ಲದೆ ಪರಿಣಾಮಿಗಳಾದರು ಅನಂತಕೋಟಿ ಹಿರಿಯರು.

ಅವರುಂಡ ಪ್ರಸಾದವನುಣಹೋದಡೆ ಎನಗವಧಿಯಾಯಿತಯ್ಯಾ .

ಹಿರಿಯತನದುಪಕಾರವನೋಡದೆ,

ಅವರ ಕಡಿದು ಆನಡಿಯಿಟ್ಟೆನಯ್ಯಾ ಸಂಗಯ್ಯನಲ್ಲಿಗೆ. || ೧೬ ||

೮೧೭

ಅತೀತವಡಗಿ , ನಿರಾಲಂಬದ ಮನದ ಮೂರ್ತಿಯಂ ತಿಳಿದು,

ಮನೋವ್ಯಾಧಿಯಂ ಪರಿಹರಿಸಿಕೊಂಡು,

ಭಾವದ ಸೂತಕವಳಿದು ಬ್ರಹ್ಮದ ನೆಮ್ಮುಗೆಯಂ ತಿಳಿದು,

ಮನ ವಿಶ್ರಾಂತಿಯನೆ , ವಿಚಾರದನುಭವವನರಿದು,

ವಿವೇಕದಿಂದಾನು ವಿಶೇಷಸುಖವ ಕಂಡೆನಯ್ಯಾ

ಸಂಗಯ್ಯಾ , ಬಸವನಿಂದಲಿ ! || ೧೭ ||

೮೧೮

ಅಧಿಕ ತೇಜೋನ್ಮಯ ಬಸವಾ.

ಅನಾದಿತತ್ವಮೂರ್ತಿನೀನೆ ಅಯ್ಯಾ ಬಸವಾ.

ಎಲೆ ಅಯ್ಯಾ ಸಮರಸದಲ್ಲಿ ಹುಟ್ಟಿದ

ಪ್ರಣವಮೂರ್ತಿಯಯ್ಯಾ ಬಸವಯ್ಯನು.
|| ೧೮
ಆ ಬಸವನಡಗಿದ ಬಳಿಕ ಆನು ಬದುಕಿದೆನಯ್ಯಾ ಸಂಗಯ್ಯಾ . ||
೨೬೧
ನೀಲಮ್ಮನ ವಚನಗಳು

೮೧೯

ಅನಾದಿಯ ಸ್ಕೂಲ, ಆದಿಯ ನಿಃಕಲ ,

ಆದಿಯನಾದಿಯೆಂಬ ಕುಳವಳಿದು ಕುಳಸ್ಥಳವಳಿದೆನಯ್ಯ .

ಆ ಕುಳಸ್ಥಳದ ಮೂರ್ತಿಯನರಿದು ಆನು ಬದುಕಿದೆನಯ್ಯ .

ಸಂಗಯ್ಯನಲ್ಲಿ ನಾನು ಬಸವನ ಸ್ವರೂಪಿಯಾದೆನಯ್ಯ . || ೧೯ ||

೮೨೦

ಅನುಭಾವದ ಸಾರವೆ ನಿಜಸಾರವಾಗಿ ನಿಂದನೆಮ್ಮ ಬಸವಯ್ಯನು.

ವಿವೇಕದ ಸಂಗವೆ ನಿಜಸಂಗವಾಗಿ ನಿಂದನಮ್ಮ ಬಸವಯ್ಯನು.

ಭಾವದ ಬಯಲಿಂಗೆ ಬಣ್ಣವಿಟ್ಟನಮ್ಮ ಬಸವಯ್ಯನು.

ಇತರೇತರ ಮಾರ್ಗವಳಿದು, ಗಮನನಾಸ್ತಿಯಾದನೆಮ್ಮ ಬಸವಯ್ಯನು.

ಸಂಗಯ್ಯನಲ್ಲಿ ಉಭಯಕುಳ ನಾಸ್ತಿಯಾದನೆಮ್ಮ ಬಸವಯ್ಯನು || ೨೦ ||

- ೮೨೧

ಅಪ್ರಮಾಣದ ತಾಣದಲ್ಲಿ
ಅಘೋರವಕ್ಕೆ ಸಂಭಾಷಣೆಯ ಮಾಡಲು

ಬಸವಯ್ಯನರೂಪುಎನುತಿದ್ದೆನು.

ಸಂಗಯ್ಯನಲ್ಲಿ ಪ್ರಭೆಯಳಿಯಿತ್ತು ಬಸವಾ. || ೨೧ ||

- ೮೨೨

ಅಮೃತದೊವಿಗೆಯೊಳಗೆ ಅಮೃತಡೆವಿಗೆ,

ಪ್ರಸಾದದ ಕುರುಹಿಲ್ಲ ಬಸವಗೆ.

ಆ ಪ್ರಸಾದಕ್ಕೆ ರೂಹಿಲ್ಲದ ಮೂರ್ತಿಯ ಕಂಡು

ಸಂಗಯ್ಯನಲ್ಲಿ ನಿಜಸುಖಿಯಾದ ಬಸವ. || ೨೨ ||

- ೮೨೩

ಅರಸರಸಲು ನಾನು

ಅರಸುವ ವಸ್ತು ಎನ್ನ ಕಣ್ಣಿಂಗೆ ಕಾಣಲಾಯಿತ್ತು .

ಬಯಕೆಯ ಬಯಸಲು ನಾನು

ಬಯಸುವ ವಸ್ತು ಕೈಗೂಡಿತ್ತು .

ನಾನೆಂತಹ ಪುಣ್ಯವುಳ್ಳವಳೋ !

ನಾನೆಂತಹ ಮುಕ್ತಿಯುಳ್ಳವಳೋ !
ಶಿವಶರಣೆಯರ ವಚನಸಂಪುಟ

ನಾನುಭಯದ ಸಂಗವ ಹರಿದು ನಿಸ್ಸಂಗಿಯಾದೆನು :

ಸಂಗಯ್ಯನಲ್ಲಿ ದ್ವಂದ್ವಕರ್ಮರಹಿತಳು. || ೨೩ ||

೮೨೪

ಅರಿಯದ ಶಬ್ದವ ಕುರುಹಿಂಗೆ ತಂದ ಬಸವಯ್ಯನು.

ಆ ಕುರುಹನೆರಡಮಾಡಿದ ಬಸವಯ್ಯನು.

ಅವೆರಡ ಒಂದರಲ್ಲಿ ವೇಧಿಸಿ ಸಂಗಯ್ಯನಲ್ಲಿ

ಸ್ವಯಲಿಂಗಿಯಾದನಯ್ಯ ಬಸವಯ್ಯನು. || ೨೪ ||

೮೨೫

ಅರಿಯೆನರಿಯೆ ನಾನು, ಏನುವನರಿಯೆನಯ್ಯ ;

ಎಲ್ಲವ ಮರದೆನಯ್ಯ ,

ಎಲ್ಲಾ ಪುರಾತರ ಹಂಗ ಹರಿದು ನಾನು

ಸಂಗ ನಿಸ್ಸಂಗಿಯಾದೆನು.

ಗುಣಕಥನದ ಮಾತ ಹರಿದು

ಬಸವ ಬಸವಾಯೆಂಬ ಮಾತಿನ ಭ್ರಮೆಯ ಕಳೆದುಳಿದೆನಯ್ಯ ||


. ೨೫ ||

೮೨೬

ಅರಿಯೆನರಿಯೆನಿಂತಹ ಮೂರ್ತಿಯ , ಅರಿಯದವನಲ್ಲ .

ನಾನು ಬೆರಸಿರಲು ಸುಖದಿಂದ ಪ್ರಣವಾಕ್ಷರವಾಯಿತ್ತಯ್ಯ .

ಆ ಪ್ರಣವಾಕ್ಷರವೆ ಪ್ರಸಾದವಾಯಿತ್ತು.

ಆ ಪ್ರಸಾದದ ನೆಲೆಯಿಂದ ಮನ ವಿಶೇಷವಾಯಿತ್ತು. ಆ

ವಿಶೇಷವಿಚಾರದಿಂದ ವಿನಯಾರ್ತ ಪ್ರಸಾದಿಯಾನಾದೆನಯ್ಯ ,

ಪ್ರಸಾದಸುಖದಿಂದ ಮುಖ ವಿಶೇಷವಾಯಿತ್ತು.

ಸಂಗಯ್ಯ , ನಿಮ್ಮ || ೨೬
ಬಸವನಿಂದಲಾನು ಪರಿಣಾಮಿಯಾದೆನು . ||

೮೨೭

ಅರಿವಡೆ ನಾನು ಅರಿವುಳ್ಳ ಹೆಣ್ಣಲ್ಲ ;

ಮರವಡೆ ನಾನು ಮರೆಯಿಲ್ಲದ ಕಾಮಿನಿಯಲ್ಲ .

ಏನೂ ರೂಪಿಲ್ಲವೆನಗೆ,
|| ೨೭ ||
ಏನೂ ನೆಲೆಯಿಲ್ಲವೆನಗಯ್ಯ ಸಂಗಯ್ಯ .
ನೀಲಮ್ಮನ ವಚನಗಳು

೮೨೮

ಅರಿವನರಸಿ, ಅರಿವ ಕುರುಹಿನಲ್ಲಿ ಕಂಡು,

ಆ ಕುರುಹ ಮರದು, ಮನ ಮಹಾಲಿಂಗದಲ್ಲಿ

ಒಚ್ಚತಗೊಟ್ಟು, ಉಭಯಪ್ರಸಾದವನುಂಡು,
|| ೨೮ ||
ಉಣಲಿಲ್ಲದೆಉಭಯಗೆಟ್ಟೆನಯ್ಯ ಸಂಗಯ್ಯ .

೮೨೯

ಅರುವೆರಳುದ್ದದೇಹವ ಮಾಡಿದ ಕರುಣಿ ಬಸವಾ.

ಬೆರಸಿ ಬೇರಿಲ್ಲದೆ ಇದ್ದೆ ಬಸವಾ.

ನೆರೆನಂಬಿದೆ ನಿಮ್ಮುವ ಬಸವಾ.

ಬರುಕಾಯದ ಭ್ರಮೆಯ ಬಿಡಿಸಿದೆಯಲ್ಲಾ ಬಸವಾ.

ನೀನು ತೃಪ್ತನಾಗಿ ನಾನು ತೃಪ್ತಳಲ್ಲ ಬಸವಾ.

ಸಂಗನಬಸವಾಮೂಲಕರ್ತೃ ನಾನು ನಿನಗೆ. || ೨೯ ||

೮೩೦

ಅರುಹನರಿಯಲು ಕುರುಹ ಮರೆಯಲೇಬೇಕು.

ಅರುಹನನುಗೊಳಿಸಲು

ಆನು ಪ್ರಸನ್ನಮೂರ್ತಿಯ ಪಡೆದೆನಯ್ಯ .

ಆನು ಉಭಯವಳಿದು ನಿರಾಭಾರಿಯಾದೆನಯ್ಯ .

ನಿರ್ಮಲ ನಿಜವ ಕಂಡು

ಮುಕ್ತಿಪದವ ಪಡದೆನಯ್ಯ ಸಂಗಯ್ಯ . || ೩೦ ||

- ೮೩೧
SS - -
- S SS
ಅಲ್ಲಮನ ವಂಶದವಳು ನಾನು.

ಅಜಾತ ಶರಣರ ವಂಶದವಳು ನಾನು .

ಅಪ್ರತಿಮ ಶರಣರ ವಂಶದವಳು ನಾನು.

ಆಗಮಾನಂದಿಗಳ ವಂಶದವಳಾನು.

ನಾನು ಆವ ದೇಶದಲ್ಲಿ ಯಿದ ಡೇನು ?

ನಾನು ಆವಸ್ಥಾನದಲ್ಲಿಯಿದ್ದಡೇನು ?

ಸಂಗಯ್ಯನಲ್ಲಿ ಬಸವ ಸ್ವಯಲಿಂಗಿಯಾದನು. || ೩೧ ||


‫ه‬
‫يندملل‬
‫يف‬
‫ما‬ ಶಿವಶರಣೆಯರ ವಚನಸಂಪುಟ
>
‫درکرید‬ you sh Bar
೮೩೨

ಅಲ್ಲಮನ ಸಂಗ, ಅಜಗಣ್ಣನ ಸಂಗ,

ಕಕ್ಕಯ್ಯನ ಸಂಗ , ಚಿಕ್ಕಯ್ಯನ ಸಂಗ,

ಎಲ್ಲರ ಸಂಗ, ಯತಿಗಳ ಸಂಗ, ಜತಿಗಳ ಸಂಗ,

ಮಾನ್ಯರ ಸಂಗ, ಮುಖ್ಯರ ಸಂಗ.

ಸಂಗಯ್ಯಾ , ಎನ್ನ ಸಂಗ, ಎನ್ನ ಬಸವಯ್ಯನ ಸಂಗ, || ೩೨ ||

೮೩೩

ಅಲ್ಲಲ್ಲಿಯ ಶರಣರು ಅಲ್ಲಲ್ಲಿಯೇ ನಿಲಲು,

ಅಲ್ಲಲ್ಲಿಯ ಭಕ್ತಿ ಅಲ್ಲಲ್ಲಿಯೆ ಅಡಗಿತ್ತು .

ಅಲ್ಲಲ್ಲಿಯ ಕಾಯವಲ್ಲಲ್ಲಿಯೆ ಸಂದು ನಾನು

ಅಲ್ಲಲ್ಲಿಯೆ ಅಡಗಿಯಾನು ಅನುಮಿಷ ದೃಷ್ಟಿಯುಳ್ಳವಳಾದೆನು. .

ಅಲ್ಲಲ್ಲಿಯೇ ಭ್ರಮಿಸಲು ಭ್ರಮೆಯಡಗಿ

ಸಂಗಯ್ಯನಲ್ಲಿ ಮುಖವರಿತೆನಯ್ಯ ಬಸವಪ್ರಭುವೆ. - || ೩೩ ||

೮೩೪

ಅಲ್ಲಲ್ಲಿಯ ಸುಖಂ ಭೋ ಎನ್ನಲಿಲ್ಲ .

ಅಲ್ಲಲ್ಲಿಯ ಪಶುತ್ವವಿಲ್ಲಂ ಭೋ .

ಆ ಪಶು ಕಾಯವಂ ಕಳದು ಆನು ಪರಿಣಾಮವಡಗಿದವಳಯ್ಯಾ .

ಪರಿಣಾಮದ ವಿವರದಿಂದ ಪರವಸ್ತುವಿನ ನೆಲೆಯ ತಿಳಿದು,

ಪರಮಪ್ರಸಾದಿಯಾದೆನು.

ಪ್ರಾಣಯೋಗಪ್ರಸಾದಮೂರ್ತಿಯುಳ್ಳವಳಾದ ಕಾರಣ,
|| ೩೪
ಆನು ಬಸವಾ ಬಸವಾ ಬಸವಾ ಎನುತಿರ್ದೆನಯ್ಯಾ ||
ಸಂಗಯ್

೮೩೫

ಆಗಿಂಗೆ ಮುಯ್ಯಾನದಿರು, ಚೇಗಿಂಗೆ ಬೆಂಬೀಳದಿರು ,

ಆಹಾ ಮನವೆ, ಸಂತೈಸಿಕೊ ನಿನ್ನ ನೀನೆ.

ಆಗೆಂದಡೆ ನಿನ್ನ ವಶವಲ್ಲ , ಹೋಗೆಂದಡೆ ನಿನ್ನಿಚ್ಛೆಯಲ್ಲ ,

ಭೋಗಾದಿಭೋಗಂಗಳೆಲ್ಲವು ಸಂಗಯ್ಯನಧೀನವಾಗಿ, || ೩ ||

೮೩೬

ಆಟವಳಿದು ನಿರಾಕುಳವಾಯಿತ್ತು ;

ನಿರಾಕುಳ ಸಂಬಂಧದಿಂದ ನಿಜವನರಿದು ಬದುಕಿದೆನಯ್ಯ .


೨೬೧
ನೀಲಮ್ಮನ ವಚನಗಳು

ಮುಕ್ತಿಯನರಿದು
|| ೩೬ ||
ಆನು ಬದುಕಿದೆನಯ್ಯ ಸಂಗಯ್ಯ .

೮೩೭

ಆಡದ ನುಡಿಯ ನುಡಿದನನ್ನ ಮನ ತುಂಬಿ .

ಮದದ ಹಂಗು ಹರಿದು, ಮಾತನಳಿದು,

ಉಳಿದ ಪ್ರಸಂಗ ಪ್ರಸನ್ನವನರಿದು,

ಅರಿಯದ ಮುಕ್ತಿಯ ಮರದು, ಕುರುಹನಳಿದು,

ನಾನು ನಿಂದೆನಯ್ಯ ಸಂಗಯ್ಯ . || ೩೭ ||

೮೩೮ acceptance

ಆಡದ ಭಾಷೆಯ ನುಡಿವಳಲ್ಲ ನಾನು ಬಸವಾ,

ಆ ನುಡಿಯ ಭಾಷೆಯ ಕೇಳುವಳಲ್ಲ ನಾನು ಬಸವಾ, ) -4²53 &


ತ್ರಿ
ರೂಪಳಿದ ನಿರೂಪಿಯಾನು ಬಸವಾ,

ಅಂಗವಳಿದ ನಿರಂಗಿಯಾನು ಬಸವಾ,


5S Sh50 .
ದ್ವಯವಳಿದ ಪ್ರಸಾದಿಯಾನು ಬಸವಾ,

ಪರಿಣಾಮವರತ ಹೆಣ್ಣೆಂದು ಎಮ್ಮವರೆನ್ನ ಹೆಸರಿಡಲು,

ನಾನು ಬಸವನ ಪಾದದಲ್ಲಿ ತಲ್ಲೀಯವಾದೆನಯ್ಯಾ ಸಂಗಯ್ಯಾ.


|| ೩೮ ||

೮೩೯

ಆಡದ ಮುನ್ನವಚ್ಚನೆ ಛಂದವಾಯಿತ್ತೆನಗಯ್ಯ .

sur ses ಅಚ್ಚನೆಯಳಿದು ನಿರೂಢವಾಯಿತ್ತು ಪ್ರಸಂಗ.

ಸಂಗಸ್ವಯಕೂಟವನ್ನೈದಲು,

ಅಪ್ರತಿಮ ಮೂರ್ತಿಯ ಇರವನರಿದೆ ನಾನು .

ಇಪ್ಪತೈದು ತತ್ವ ಸರಗೊಳಿಸಿ ಸುಖಿಯಾದೆನಯ್ಯ

ಸಂಗಯ್ಯ , ಬಸವನಳಿದು ನಿರಾಭಾರಿಯಾದ ಬಳಿಕ. || ೩೯ ||

- ೮೪೦

ಆಡಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ;

ನುಡಿಯಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ;

ನಾನು ಹೆಣ್ಣಲ್ಲದ ಕಾರಣ, ನಾನು ಇರಪರ ನಾಸ್ತಿಯಾದವಳಯ್ಯಾ .

ನಾನು ಉಭಯದ ಸಂಗವ ಕಂಡು ಕಾಣದಂತಿದ್ದೆನಯ್ಯಾ

ಸಂಗಯ್ಯಾ , ಬಸವ ಬಯಲ ಕಂಡ ಕಾರಣ . || ೪೦ ||


೨೬೬
ಶಿವಶರಣೆಯರ ವಚನಸಂಪುಟ

೮೪೧

ಆಡಲಿಲ್ಲ ಹಾಡಲಿಲ್ಲ ನುಡಿಯಲಿಲ್ಲ ನಡೆಯಲಿಲ್ಲ

ಪ್ರಾಣವಿಲ್ಲ ಪ್ರಸಾದವಿಲ್ಲ ಪರಿಣಾಮವಿಲ್ಲ ;

ಇರದಂಗ ಸಂಗ ಸುಖವಿಲ್ಲ

ಎವೆಯಿಕ್ಕಲಿಲ್ಲ ಎವೆಗಳೆಯಲಿಲ್ಲ

( ಜವೆಯರಿದು ಸವಿಗೂಟವನನುಭವ ಸುಖವಕಂಡೆನಯ್ಯ ಸಂಗಯ್ಯ .

೮೪೨

ಆದಿ ಅನಾದಿ ತತ್ವವ ಭೇದಿಸಿಕೊಟ್ಟ ಗುರುವೆ,

ಅಪ್ರಮಾಣದ ಬೆಳಗ ಭೇದಿಸಿಕೊಟ್ಟ ಗುರುವೆ,

ಅಕಾರ ಉಕಾರ ಮಕಾರ ಕಳೆಯನರುಹಿಸಿಕೊಟ್ಟ ಗುರುವೆ,

ಇಷ್ಟ ಪ್ರಾಣಭಾವವಿದೆಂದು ತೋರಿದ ಗುರುವೆ,

ನಿಜದರಿವನರುಹಿಸಿಕೊಟ್ಟ ಗುರುವೆ,

ನಿರ್ಮಳಪ್ರಭೆಯ ತೋರಿದ ಗುರುವೆ ,

ನಿಜವನನುಭವಕ್ಕೆ ತಂದ ಗುರುವೆ

ನಿಮ್ಮ ಘನವ ಕಾಬ್ರ ಕಣ್ಣು ಕಮಗೆಟ್ಟಿತ್ತು ಸಂಗಯ್ಯಾ ,


7/CA3
ಬಸವನ ಪ್ರಭೆ ಎಲ್ಲಿ ಅಡಗಿತ್ತೊ ? ಎAG || ೪೨

೮೪೩
37 ) ಶS - SURA

ಆದಿ ನಾದದ ಬಿಂದುವನರಿದು ಭಕ್ತಿಸಂಭಾಷಣೆಯ ಮಾಡಿದ ಬಸವಾ,

ಪ್ರಣವದಲ್ಲಿ ನಿಜವ ಕಂಡು ತೋರಿದ ಬಸವಾ.

ಆ ಪ್ರಣವದ ಘನವ ಕಂಡ ಬಸವಾ.

ಇತರ ತೃಪ್ತಿಯನನುಭವಿಸಬಲ್ಲ ಬಸವಾ

ನೀನೆನ್ನಲ್ಲಿ ಅಡಗಿ, ನಾ ನಿನ್ನಲ್ಲಿ ಅಡಗಿ,

ನಾ ನಿನ್ನ ಮನದ ಅರಿವನರಿದು ಉಭಯವಿಲ್ಲವೆಂದೆನೆಂದೆ ಬಸವಾ.

ಸುಖದ ಸಮಯಾಚಾರವ ಕಂಡು ನಿಜದಲ್ಲಿ ನಿಂದವಳಾನು ನಾನಯ್ಯ ಬಸವ

ಸಂಗಯ್ಯನಲ್ಲಿ ನಿಜವಿಡಿದ ಹೆಣ್ಣು ನಾನೇ ಅಹುದೆಂದು


|| ೪೩ ||
ನುಡಿದೆನಯ್ಯಾ ಅಪ್ಪಣ್ಣಾ ..

೮೪೪

ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು,

ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು,
ನೀಲಮ್ಮನ ವಚನಗಳು

ಯುಗಜುಗವಿಲ್ಲದಂದು , ಪಿಂಡಾಂಡ ಬ್ರಹ್ಮಾಂಡವಿಲ್ಲದಂದು,

ಏನೂ ಏನೂ ಇಲ್ಲದಂದು, ಎಲ್ಲಾ ಮೂರ್ತಿಗಳು ನೆಲೆಗೊಳ್ಳದಂದು,

ಅಂದು ಏನೆಂದು ಅರಿಯದಿರ್ಪ ನಮ್ಮ ಬಸವಯ್ಯನು.

ಒಂದು ಗುಣವನೊಂದು ಅಕ್ಷರಕ್ಕೆ ತಂದಾತ ನಮ್ಮ ಬಸವಯ್ಯನು.

ಆ ಅಕ್ಷರವ ರೂಪಮಾಡಿ,

ತ್ರಯಾಕ್ಷರದಲ್ಲಿ ಕಳೆಯ ಸಂಬಂಧಿಸಿದಾತ ನಮ್ಮ ಬಸವಯ್ಯನು.

ಆ ಕಳೆಯ ಮೂರು ತೆರನ ಮಾಡಿ,

ಪೃಥ್ವಿ ಅಪ್ಪು ತೇಜ ವಾಯು ಆಕಾಶ ಎಂಬ ಪಂಚತತ್ವವೆ ಪಂಚವದನವಾಗಿ,

ಆ ಪಂಚವದನವೇ ಪಂಚೀಕೃತವನೆ ,

ಜಗದಾದಿ ಸೃಷ್ಟಿಯನನುಮಾಡುವುದಕ್ಕೆ ಕರ್ತನಾದ ನಮ್ಮ ಬಸವಯ್ಯನು.

ಆ ಸೃಷ್ಟಿಯ ಮುಖವ ಕಂಡು ಸೃಜಿಸಲು ಪುಟ್ಟಿದರು ಪಂಚಶಕ್ತಿಯರು.

ಆ ಪಂಚಶಕ್ತಿಯರಿಗೆ ಪಂಚಮೂರ್ತಿಯರ

ಕೈಗೊಳಿಸಿದಾತ ನಮ್ಮ ಬಸವಯ್ಯನು.

ಆ ಪಂಚಮೂರ್ತಿಗಳಿಂದುತ್ಪತ್ಯವಾದ ಲೋಕವ ನೋಡಲೆಂದು,

ಕೈಲಾಸವನೆ ಕಲ್ಯಾಣವ ಮಾಡಿದಾತ ನಮ್ಮ ಬಸವಯ್ಯನು.

ಆ ಕೈಲಾಸವೇ ಕಲ್ಯಾಣವಾಗಲಾ ಕಲ್ಯಾಣಕ್ಕೆ


ಪ್ರಮಥಗಣಂಗಳ, ರುದ್ರಗಣಂಗಳ, ಅಮರಗಣಂಗಳ,

ಪುರಾತನಗಣಂಗಳ, ಪುಣ್ಯಗಣಂಗಳ, ಮಹಾಗಣಂಗಳ,

ಮುಖ್ಯಗಣಂಗಳ, ಮಹಾಲಿಂಗೈಕ್ಯಸಂಪನ್ನರಂ,

ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ

ಆಚಾರಾದಿ ಮಹಾಲಿಂಗಸಂಪನ್ನರಂ,

ಷಟ್‌ಸ್ಥಲಪ್ರಸಾದಪ್ರಸನ್ನರೂಪರಂ,

ಆದಿಮುಕ್ತರಂ, ಅನಾದಿಮುಕ್ತರಂ, ಅಜಾತರಂ , ಅಪ್ರಮಾಣರಂ,

ಅನಿಮಿಷಲಿಂಗನಿರೀಕ್ಷಣರಂ, ತ್ರಿವಿಧವಿದೂರರಂ,

ತ್ರಿವಿಧಲಿಂಗಾಂಗಮೂರ್ತಿಗಳು, ಅರ್ಪಿತಸಂಯೋಗರಂ ,

ಆಗಮವಿದರಂ, ಅನಾದಿಪರಶಿವಮೂರ್ತಿಗಳು,

ಏಕಲಿಂಗನಿಷ್ಕಾಪರರುಮಪ್ಪ ಮಹಾಪ್ರಮಥಗಣಂಗಳಂ

ತಂದು ನೆರಹಿದಾತ ನಮ್ಮ ಬಸವಯ್ಯನು.

ಮರ್ತ್ಯಲೋಕವನೆ ಮಹಾಪ್ರಮಥರ ಬಿಡಾರವ

ಮಾಡಿದಾತ ನಮ್ಮ ಬಸವಯ್ಯನು.

ಆದಿಯಸೃಷ್ಟಿಯನನಾದಿಯಸೃಷ್ಟಿಗೆ ತಂದು,
೨೬೮
ಶಿವಶರಣೆಯರ ವಚನಸಂಪುಟ

ಅನಾದಿಸೃಷ್ಟಿಯನಾದಿಸೃಷ್ಟಿಗೆ ತಂದು,

ಅಜಾತನಬೀಡನಂಗದಲ್ಲಿ ನೆರಹಿದಾತ ನಮ್ಮ ಬಸವಯ್ಯನು.

ಭಾವವಿಲ್ಲದ ಭ್ರಮೆಯ ಭ್ರಮೆಗೊಳಿಸಿ

ಭಾವಕ್ಕೆ ತಂದಾತ ನಮ್ಮ ಬಸವಯ್ಯನು.

ಬಯಲನೊಂದು ರೂಪಮಾಡಿ ಬಣ್ಣಕ್ಕೆ ತಂದು,

ಆ ಬಣ್ಣವ ನಿಜದಲ್ಲಿ ನಿಲಿಸಿದಾತ ನಮ್ಮ ಬಸವಯ್ಯನು.

ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ

ಇಚ್ಛೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು.

ಅಂಗಸಂಗಿಗಳನಂತರಿಗೆ .

ಅಂಗನೆಯರ ಅನುಭವವ ನಡಸಿದಾತ ನಮ್ಮ ಬಸವಯ್ಯನು.

ಮೂವತ್ತಾರುಸಾವಿರ ಮಾಹೇಶ್ವರರಿಗೆ ಮುಖಮೂರ್ತಿಯಾಗಿ,

ಅರ್ಪಿತಪ್ರಸಾದವನನುಭವಿಸಿದಾತ ನಮ್ಮ ಬಸವಯ್ಯನು.

ಹನ್ನೆರಡುಸಾವಿರ ರಾಣಿಯರ

ಅಂಗವನರ್ಪಿತಪ್ರಸಾದಿಗಳ ಮಾಡಿದಾತ ನಮ್ಮ ಬಸವಯ್ಯನು.

ಎಂಬತ್ತೆಂಟುಪವಾಡಮಂ ಗೆದ್ದು

ಮುನ್ನೂರರುವತ್ತು ಸತ್ತ ಪ್ರಾಣವನೆ ಮೆರೆದು

ಪರಸಮಯವನಳಿದಾತ ನಮ್ಮ ಬಸವಯ್ಯನು.

ಇಪ್ಪತೈದುಸಾವಿರ ಚಾರ್ವಾಕರಂ ನೆಗ್ಗಿಲೊತ್ತಿ,

ಅಪ್ರತಿಮ ಶಿವಗಣಂಗಳ ಮಹಾತ್ಮಿಯಂ

ಮೆರೆದಾತ ನಮ್ಮ ಬಸವಯ್ಯನು.

ಪ್ರಣವದ ಬೀಜವ ಬಿತ್ತಿ , ಪಂಚಾಕ್ಷರಿಯಬೆಳೆಯ ಬೆಳೆದು,

ಪರಮಪ್ರಸಾದವನೊಂದು ರೂಪಮಾಡಿ ಮೆರೆದು,

ಭಕ್ತಿಫಲವನುಂಡಾತ ನಮ್ಮ ಬಸವಯ್ಯನು.

ಚೆನ್ನಬಸವನೆಂಬ ಪ್ರಸಾದಿಯ ಪಡೆದು,

ಅನುಭವಮಂಟಪವನನುಮಾಡಿ,

ಅನುಭವಮೂರ್ತಿಯಾದ ನಮ್ಮ ಬಸವಯ್ಯನು.

ಅರಿವ ಸಂಪಾದಿಸಿ ಆಚಾರವನಂಗಂಗೊಳಿಸಿ,

ಏಳುನೂರೆಪ್ಪತ್ತು ಅಮರಗಣಂಗಳ

ಅನುಭವಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು.

ಆ ಅನುಭವದಲ್ಲಿ ಐಕ್ಯಪ್ರಸಾದವನಂಗಂಗೊಂಡು,

ಮಂತ್ರ ನಿರ್ವಂತ್ರವಾದಾತ ನಮ್ಮ ಬಸವಯ್ಯನು.


ನೀಲಮ್ಮನ ವಚನಗಳು

ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲಕೂಡಿ,

ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು. || ೪ ||

೮೪೫

ಆನಳಿದೆನು ನೀನಳಿದೆನೆಂಬ ಶಬ್ದವಡಗಿ ನಿಃಶಬ್ದವಾಗಿ, 3 4


-
4 .-
ನಿಃಶೂನ್ಯಮಂಟಪದಲ್ಲಿ ನಿಂದು

ನಾನು ಉರಿಯುಂಡ ಕರ್ಪೂರದಂತಾದೆನಯ್ಯ .

ಕರ್ಪೂರ ಉರಿಯುಂಡು ಕರವಳಿದು ಸುಖವ ಉಡುಗಿದೆನಯ್ಯ .

ಸುಖವಡಗಿ ದುಃಖ ನಿರ್ದ್ವಂದ್ವವಾಗಿ

ನಿರೂಪುಸ್ವರೂಪುವಾಯಿತ್ತಯ್ಯ ಸಂಗಯ್ಯ .
Sakiauti
|| ೪ || S

- ೮೪೬
Koos
ಆನು ನಿಷ್ಠೆಯುಳ್ಳವಳೆ ಅಲ್ಲವಯ್ಯ .

ಆನು ನಿಷ್ಠೆಯಿಲ್ಲದಕರ್ಮಿಯಾದ ಕಾರಣವೆನಗೆ

ಸುಖದ ತೃಪ್ತಿ ನೆಲೆಗೊಳ್ಳಲಿಲ್ಲವಯ್ಯ .

ಎನಗೆ ಪತಿನಾಮದರುಹು ಸಾಧ್ಯವಲ್ಲದ ಕಾರಣ

ಸಂಗಯ್ಯನಲ್ಲಿ ಬಸವನ ನೆನೆದು ಬದುಕಿದೆನಯ್ಯ . || ೪೬ ||

- ೮೪೭

ಆನು ಭಕ್ತಿಯಲ್ಲ, ಆನು ವಿರಕ್ತಿಯಲ್ಲ ,

ಆನು ನಿಜ ಸುಖಿಯಲ್ಲ.

ಆನು ಬಸವನ ಮೂರ್ತಿಯ ಕಂಡು ಬದುಕಿದೆನಯ್ಯ ಸಂಗಯ್ಯ


|| ೪೭ | | .

- ೮೪೮

ಆನೆತ್ತಲೀ ಸಂಸಾರವೆತ್ತ ! ಆನೆತ್ತಲೀ ಕಾಯವೆತ್ತ !

ಆನೆತ್ತಲೀ ನಿಜಮಹತ್ವವೆತ್ತ !
‫رک‬
ಸಂಗಯ್ಯನೆ , ಬಸವನೆ , ಆನೆ ! 3‫مد‬ || ೪೮ ||

- ೮೪೯ ‫لرک‬
‫ورد‬
ಆರಸಂಗವೂ ಸ್ವಯವಲ್ಲವೆನಗೆ,

ಆರ ಹಂಗೂ ಸ್ವಯವಲ್ಲವೆನಗೆ,

ಆರ ಸಂಗವ ಮಾಡಿ ನಾನು ಎಷ್ಟೆಷ್ಟು ಕಾಲ ಬಳಿನಯ್ಯ ?


೨೭೦
ಶಿವಶರಣೆಯರ ವಚನಸಂಪುಟ

ಎನ್ನ ಸಂಗವಿಹಪರದ ಹಂಗಿನ ಸಂಗವಲ್ಲಯ್ಯ ,

ಎನ್ನ ಸಂಗ ಸ್ವಯಲಿಂಗ ಸಂಬಂಧವಯ್ಯ ಸಂಗಯ್ಯ . || ೪೯ ||

SKO

ಆರಾಧ್ಯರಿಲ್ಲದಂದು ಹುಟ್ಟಿದ ಗಂಡನೆನ್ನ ಗಂಡ ,

ಹಿರಿಯರಿಲ್ಲದಂದು ಹುಟ್ಟಿದ ಗಂಡನಾತ ನಮ್ಮಯ್ಯ

ಮಾನುಷರಿಲ್ಲದುದನರಿದು

ಆ ಮಾನುಷರ ಇರವೆ ಪ್ರಸಾದವಾಯಿತ್ತು .

ಆ ಪ್ರಸಾದವ ತಿಳಿಯದ ಮುನ್ನ ,

ಹೆಣ್ಣುತನದ ರೂಪಳಿಯಿತ್ತೆನಗೆ.

ಆ ಹೆಣ್ಣುತನದ ರೂಪನಳಿದು

ನಿರೂಪಿಯಾದೆನಯ್ಯ ಸಂಗಯ್ಯ . || ೫೦ ||

೨ ೮೫೧ -
ಆರೆಸಳೆಂಬರು ಮೂರೆಸಳೆಂಬರು ;

ಆರು ಮೂರುಎಸಳ ಕಲೆಯ ನುಡಿವರು.

ನುಡಿವ ಪ್ರಸಾದವ ಪ್ರಸಾದವೆಂದು ನುಡಿವರು.

ಆ ನುಡಿಯ ನಾ ನುಡಿಯಲರಿಯದೆ

ಬಯಲ ಪದವ ಕಂಡು ಬದುಕಿದೆನಯ್ಯ ಸಂಗಯ್ಯ . || ೩೧ ||

೮೫೨

ಆವಾವ ಕಾಲದಲ್ಲಿಯೂ ಎನಗೆ ಎಮ್ಮವರೆ ಗತಿಮತಿಗಳಯ್ಯ .

ಆವಾವ ಕಾಲದಲ್ಲಿಯೂ ಎನಗೆ ಪ್ರಾಣಲಿಂಗಿಗಳ ಸಂಗವಲ್ಲದೆ

ಮತ್ತೊಂದನೊಲ್ಲೆನಯ್ಯ .

ಇರಪರದ ಹಂಗಿಲ್ಲದವಳಿಗೆ

ಕಾಯಕ ಕಪಟನಾಟಕವುಂಟೆ ಸಂಗಯ್ಯ ? || ೨ ||

೮೫೩

ಇಪ್ಪೆಯ ಹೂವನನುಗೊಳಿಸಲು ಇಪ್ಪೆ ಹಿಪ್ಪೆಯಾಯಿತ್ತು.

ಸರ್ಪನ ಶಿರ ಕಂಠದಲ್ಲಿ ಮೂಗುತಿಯ ಸರಗೊಳಿಸಿದೆನಯ್ಯಾ .

ನಾವಲ್ಲಿದ್ದಡೇನು, ನಾವಿಲ್ಲಿದ್ದಡೇನು ?

ನಮ್ಮ ನಮ್ಮ ಸಂಸರ್ಗದಲ್ಲಿ ನಿರುಪಮಾಕಾರಮೂರ್ತಿಗಳಾಗಿ

ನಿರವಯವನೈದಿ ನಿಜಸುಖಿಗಳಾದೆವು.
೨೭೧
ನೀಲಮ್ಮನ ವಚನಗಳು

ಬಸವನಲ್ಲಿ ಎಮಗೆ ತೆರಪಿಲ್ಲವಯ್ಯಾ, ಅಪ್ಪಣ್ಣಾ,


|| ೩ ||
ಭಾವಶೂನ್ಯಳು ನಾನು ಸಂಗಯ್ಯಾ .

೮೫೪

ಇಬ್ಬರು ನಾವು ಒಂದೆಡೆಯನುಂಡೆವು.

ಉಂಬ ಊಟದಲ್ಲಿ ತೃಪ್ತಿಯ ತಳದು

ತನು ಸೋಜಿಗವಾಯಿತ್ತಯ್ಯ .

ಮನ ಮಗ್ನವನೈದಿ ಮಹಾಲಿಂಗದತ್ತ

ಶುದ್ದಿ ನಿಃಶುದ್ಧಿಯಾಯಿತ್ತಯ್ಯ .

ಅಡಗಿದೆನಡಗಿದೆನಲೆನಾನು.

ಉಡುಗಿದ ಕಾಯವ.

ಉಭಯದ ಸಂಗವ ಹರಿದು


|| ೪ ||
ಉಲುಹಡಗಿದ ವೃಕ್ಷವಾದನಯ್ಯ ಸಂಗಯ್ಯ .

೮೫೫

ಇರವರಿದು ಪರವ ಮರದೆ.

ಆ ಪರವನರಿದು ಪರಬ್ರಹ್ಮವ ಕಂಡೆನಯ್ಯ .

ಆ ಪರಬ್ರಹ್ಮವಸುಯಿದಾನವ ಮಾಡಿ

( ಸುಖವಪಡೆದೆನಯ್ಯ ಸಂಗಯ್ಯ . || ೫ ||

ಧಾತ್ರಿಕತೆ ೮೫೬

ಇರವಿಲ್ಲದ ವಸ್ತುವಕಂಡು ಪರವಶದ ಮೂರ್ತಿಯನರಿದೆನಯ್ಯ .

ಪರಬ್ರಹ್ಮದಕಲ್ಯಾಣದಲ್ಲಿ ಪರಮಶಿವತತ್ವ ಕಂಡೆನಯ್ಯ .

ಪರಕಾಯ ಪ್ರವೇಶಿಯಾಗಿ ಪರತರಸುಖವನರಿದು

ಬದುಕಿದೆನಯ್ಯ ಸಂಗಯ್ಯ . || ೫೬ ||

೮೫೭

ಇಷ್ಟದ ಹಂಗಿಲ್ಲವೆನಗೆ ಶಿವಬಸವ ಶಿವಬಸವ.

ಪ್ರಾಣನಾಸ್ತಿ ಪ್ರಸಾದನಾಸ್ತಿ , ಶಿವಬಸವ ಶಿವಬಸವ.

ಪರಶಿವತತ್ವನಾಸ್ತಿ ಸಂಗಯ್ಯಾ . || ೭ ||

೮೮

ಇಷ್ಟವನು ಅಷ್ಟಮದಲ್ಲಿ ಕಂಡು,

ಕಾಮದ ಕಣ್ಣ ಕಿತ್ತು , ಕರ್ಮದ ಕಾಲ ಮುರಿದು,


೨೭೨
ಶಿವಶರಣೆಯರ ವಚನಸಂಪುಟ

ಬಯಕೆಯ ಮುದ್ರಿಸಿ, ಸಂಗಯ್ಯನಲ್ಲಿ

ಇಷ್ಟವನು ಅಷ್ಟಮದಲ್ಲಿಯೇ ನಿಲಿಸಿದಾತ ಬಸವಯ್ಯನು. || ೫೮ ||

೮೫೯

ಊಟಕ್ಕಿಕ್ಕದವರ ಕಂಡು ಎನಗೆ ತೃಪ್ತಿಯಾಯಿತ್ತು.

ಕೂಟವಿಲ್ಲದ ಪುರುಷನ ಕಂಡು ಕಾಮದ ಆತುರಹಿಂಗಿತ್ತೆನಗೆ.

ಏನೆಂದೆನ್ನದ ಮುನ್ನ ತಾನೆಯಾಯಿತ್ತು ;

ಸಂಗಯ್ಯನಲ್ಲಿ ಶಬ್ದ ಮುಗ್ಧವಾಯಿತ್ತು . || ೫೯ ||

೮೬೦

ಎಂಟೆಸಳ ಹೂವೆಂಬರು ; ಆ ಹೂವಿಂಗೆ ರೂಪಿಲ್ಲ ,

ಆ ರೂಪಿಂಗೆ ಕಾಯವಿಲ್ಲ .

ಆ ಕಾಯವಿಲ್ಲದ ಹೂವನುಂಬಶಕ್ತಿ ಬಯಲಾದನಯ್ಯ ಸಂಗಯ್ಯ .|| ೬೦ ||

೮೬೧

ಎಡದೆರಹಿಲ್ಲದ ಪ್ರತಿರೂಪಕಂಡೆ.

ಎಡದೆರಹಿಲ್ಲದ ಪ್ರತಿರೂಪನೆ ಅರಿದು,

ಪ್ರಸನ್ನ ಪ್ರಸನ್ನ ಪ್ರಸಾದವ ಕಂಡು

ಪ್ರಸಾದಿಯಾನಾದೆನಯ್ಯ .

ಪ್ರಸಾದ ಸಂಬಂಧದಲ್ಲಿ

ಪ್ರಸಾದಮೂರ್ತಿಯಾನಾದೆನಯ್ಯ ಸಂಗಯ್ಯ .

೮೬೨

ಎಡಬಲನ ಕಾಯವ ತಿಳಿದು, ಎಡಬಲನ ಅರಿವನರಿದು

ಏಕತ ಸಂಬಂಧವಯ್ಯ .

ಸಂಗಯ್ಯ , ಸರ್ವಜೀವ ದಯಾಪರವನರಿದು ನಾನು ಬದುಕಿದೆನಯ್ಯ .

೮೬೩ ೨೬೧

ಎಡೆಯ ಮಾಡಿದ ಎಡೆ ಏಕವಾರಕ್ಕೆ ಮುನ್ನವೇ [ ೫ ] ರಿತ್ತು .

ತೀರಿದ ಪ್ರಸಾದವನುಣಹೋದರೆ ಉಂಡವರೆಲ್ಲಾ ನನ್ನ ಗಂಡರಾದರು .

ಅವರ ಕಂಡು ನಾನು ಮರುಳುಗೊಂಡರೆ

ಮಹದನುಭವದಲ್ಲಿ ಕೂಟವಾಯಿತ್ತಯ್ಯ ಸಂಗಯ್ಯ .


೨೭೩
ನೀಲಮ್ಮನ ವಚನಗಳು

೮೬೪

ಎಡೆಯಲ್ಲಿ ಹುಟ್ಟಿದ ಭಕ್ತಿ ಎಡೆಯಲ್ಲಿಯೆ ಅಡಗಿತ್ತು .

ಕಡೆಮುಟ್ಟಿ ನಡೆಯಲು ಆ ಕಡೆಯಳ ಸುಖವನರಿದು

ಅರಿವನರಿದೆನಯ್ಯ .

ಆವಾವ ಕಾಲವೂ ಆವಾವ ವಸ್ತುವೆನಗೆ ಹೃದಯವೆ ಕಂಡು

ಮೂರ್ತಿ ಅನಿಮಿಷವಾಯಿತ್ತಯ್ಯ ಸಂಗಯ್ಯ . || ೬೪ ||

- ೮೬೫

ಎಡೆಯಿಲ್ಲ ಕಡೆಯಿಲ್ಲ ಎನಗೆ ಎಲೆ ಅಯ್ಯ .

ಪ್ರಾಣಲಿಂಗದ ಸಂಬಂಧದ ನೆಲೆಯ ಕಂಡಿಹೆನೆಂದರೆ,

ಆ ಪ್ರಾಣಲಿಂಗ ಸಂಬಂಧ ಸಮರಸದಿರವ ನಾನೆತ್ತ ಬಲ್ಲೆನಯ್ಯ ?

ಮರುಳು ಹೆಣ್ಣು ಪ್ರಣವ ಪ್ರಕಾಶದಿರವನರಿದು

ಪರಮಸುಖಮೂರ್ತಿಯಾದೆನಯ್ಯ ಸಂಗಯ್ಯ . || ೬ ||

೮೬೬

ಎಡೆಯಿಲ್ಲದ ಭಕ್ತಿಯ ಮಾಡಹೋದರೆ


ಆ ಭಕ್ತಿ ನಿಷ್ಪಲವಾಯಿತ್ತಯ್ಯ .

ಭಕ್ತಿ ನಿಷ್ಪಲವನೈದಲು

ಪ್ರಸಾದ ಸೂತಕವ ಕಾಣದೆ ಹೋದೆನಯ್ಯ .

ಎಡೆಯಿಲ್ಲದ ಕಡೆಯಿಲ್ಲದಮೂರ್ತಿಯನರಸಲು

ಏಕಪ್ರಸನ್ನ ವದನವಾಯಿತ್ತಯ್ಯ .

ಹಿಪ್ಪೆಯನಳಿದು ಸಪ್ಪೆಯನುಂಡು ನಾನು

ಪ್ರಸಾದಿಯಾದೆನಯ್ಯ ಸಂಗಯ್ಯ . || ೬೬ ||

೮೬೭

ಎಡೆಯಿಲ್ಲದೂಟವನುಂಡು ತಡವಳಿದು

ತನು ಮನ ಧನಂಗಳನಳಿದು

ನಾನು ನಿಃಪ್ರಪಂಚಿಯಾದೆನಯ್ಯ .

ನಿರಂಗ ಸಂಗವಾಗಿ

ನಿಯಮನಳಿದುಳಿದೆನಯ್ಯ ಸಂಗಯ್ಯ . || ೬೭ ||

೮೬೮

ಎತ್ತಳ ಸುಖ ಬಂದು ಎತ್ತಲಡಗಿತ್ತು ;

ಎತ್ತಳ ಪ್ರಸಾದ ಬಂದು ಎತ್ತಲಡಗಿತ್ತು ,


ಶಿವಶರಣೆಯರ ವಚನಸಂಪುಟ

ಎತ್ತಳ ಮನವನತ್ತಲಡಗಿಸಿದೆ ಬಸವಾ.

ನೀನತ್ತಲಡಗಿದರೇನು,

ನಾನತ್ತಲಡಗಿದಳೆಂಬ ಸಂಶಯವೆನಗಿಲ್ಲವಯ್ಯ .

ಸಂಶಯ ಸಂಬಂಧವ ತಿಳಿದು

ಸದಾಚಾರವನರಿದು ಬದುಕಿದೆನು .

ನಿಮ್ಮರಿವಿನಲ್ಲಿ ಸಂಗಯ್ಯ . || ೬೮ ||

೮೬೯

ಎತ್ತಿದ ಪ್ರಸಾದ ನಿತ್ಯದ ಮುಖವ ಕಂಡು

ಅತ್ಯಂತ ಶುದ್ಧಿಯನನುಭವಿಸಿ

ಆನು ಮುಕ್ತಿಯ ಮುಖವ ಕಂಡು ನಿರಾಲಂಬಿಯಾದೆನು. ..

ನಿರಾಲಂಬದ ಹಂಗಹರಿದು

ನಿಗೂಢರೂಢವಳಿದು

ನಿಯಮಾಕಾರಳಾದೆನಯ್ಯ ಸಂಗಯ್ಯ . || ೬೯ ||

೮೭೦

ಎದೆಬಿರಿವನ್ನಕ್ಕರ, ಮನದಣಿವನ್ನಕ್ಕರ,

ನಾಲಗೆ ನಲಿನಲಿದೋಲಾಡುವನ್ನಕ್ಕರ,

ನಿಮ್ಮ ನಾಮಾಮೃತವ ತಂದರೆಸು ಕಂಡಯ್ಯಾ .

ಶಿವನಾಮಾಮೃತವ ತಂದರೆಸು ಕಂಡಯ್ಯಾ ,

ಶಿವನಾಮಾಮೃತವ ತಂದರೆಸು ಕಂಡೆಲೆ ಹರನೆ.

ಬಿರಿಮುಗುಳಂದದ ಶರೀರ

ನಿಮ್ಮ ಚರಣದಮೇಲೆಬಿದ್ದುರುಳುಗೆ ಸಂಗಯ್ಯ . || ೭೦ ||

೮೭೧

ಎನಗಿನ್ನಾರು ಗತಿಯಿಲ್ಲವಯ್ಯ

ಎನಗಿನ್ನಾರು ಪ್ರತಿಯಿಲ್ಲವಯ್ಯ .

ಎನ್ನಯ್ಯನ ಪ್ರಾಣವೇ ನಾನಾದ ಕಾರಣ

ಎನಗಿನ್ನಾರು ಸರಿಯ ಕಾಣೆನಯ್ಯ .

ಎನಗೆ ಮುಖವನರಿಯದಿರಲು

ಮುಖಸ್ವರೂಪಿಯಾದೆನಯ್ಯ ಸಂಗಯ್ಯ . || ೭೧ ||
೨೭೫
ನೀಲಮ್ಮನ ವಚನಗಳು

೮೭೨

ಎನ್ನಗಿನ್ನೇನು ಎನಗಿನ್ನೇನು ಎನಗಿನ್ನೇನು

ಎನಲೇನು ಕಾರಣ ಬಸವಾ ?

ಎನಗಿನ್ನಾವುದು ಪರಿಣಾಮದ ನೆಲೆಯಿಲ್ಲ ಬಸವಾ.

ಎನಗೆ ನಿನ್ನ ರೂಪುನಿರೂಪಾದ ಬಳಿಕ


|| ೭೨ ||
ಭಕ್ತಿಸಾರಾಯದ ಪಥವನೊಲ್ಲೆನಯ್ಯಾ ಸಂಗಯ್ಯನ ಗುರುಬಸವಾ

೮೭೩

ಎನಗಿನ್ನೇನು ಎಮ್ಮಯ್ಯನೈಕ್ಯವನೈದಿದ ಬಳಿಕ ,

ಎನಗೆ ಕಾಯವಿಲ್ಲ , ಎನಗೆ ಪ್ರಾಣವಿಲ್ಲ .

ಎನಗೆ ಹೃದಯದ ಹಂಗು ಹರಿದು


|| ೭೩ ||
ಪರಿಣಾಮಪ್ರಸಾದಿಯಾದೆನಯ್ಯಾ ಸಂಗಯ್ಯಾ.

- ೮೭೪

ಎನಗೆ ಇಲ್ಲಿ ಏನು ಬಸವ ಬಸವಾ ?

ಎನಗೆ ಅದರ ಕುರುಹೇನು ಬಸವಾ ?

ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು,

ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು,

ನಾನು ಬಸವನ ಶ್ರೀಪಾದದಲ್ಲಿ

ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ ||? ೭೪ ||

೮೭೫

ಎನಗೆ ಈ ಪ್ರಾಣದ ಕುರುಹಿಲ್ಲವಯ್ಯ .

ಎನಗೆ ಪ್ರಾಣಪ್ರಸಾದದ ಕುರುಹಿಲ್ಲವಯ್ಯ .

ಎನಗೆ ಅಂಗ ನಿರಂಗದ ಕುರುಹಿಲ್ಲವಯ್ಯ .

ಎನಗೆ ವಿಶೇಷದಾಯತವಿಲ್ಲವಯ್ಯ .

ಎನಗೆ ಪ್ರಾಣಪರಿಣಾಮದನುಕೂಲವಿಲ್ಲವಯ್ಯ ಸಂಗಯ್ಯ . || ೭೫ ||

೮೭೬

ಎನಗೆ ಎಲ್ಲಿಯೂ ಕಾಣಿಸದು ಇರಪರದ ಸಿದ್ದಿಯು.

ಎನಗೆ ಏನೂ ತೋರದು ಮೂರ್ತಿಯ ಹಂಗು.

ಎನಗೇನೂ ಅರುಹಿಸದು ಇಷ್ಟದ ಪ್ರಸಾದ.

ಇಹಲೋಕಸಂಬಂಧ ನಿರ್ಮಲಾಕಾರವಾಯಿತ್ತಯ್ಯ ಸಂಗಯ್ಯ


|| ೭೬ ||
೨೭೬
ಶಿವಶರಣೆಯರ ವಚನಸಂಪುಟ

0
೮೭೭
36 -
ಎನಗೆ ಲಿಂಗವುನೀವೆ ಬಸವಯ್ಯಾ ,
2
ಎನಗೆ ಸಂಗವುನೀವೆ ಬಸವಯ್ಯಾ , 1
-
ಎನಗೆ ಪ್ರಾಣವುನೀವೆ ಬಸವಯ್ಯಾ ,

ಎನಗೆ ಪ್ರಸಾದವುನೀವೆ ಬಸವಯ್ಯಾ ,

ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ .

ಎನಗೆ ಸಂಗಯ್ಯನುನೀವೆ ಬಸವಯ್ಯಾ . || ೭೭ ||

೮೭೮

ಎನಗೆ ಸಂಸಾರ ಬಂಧ ಕಾರಣವೇನೆಂದು ಕೇಳಲು

ಎನಗೆ ಸಂಸಾರವಿಲ್ಲವಂದೆ ಹೋಯಿತ್ತು ಇಲ್ಲವೆಂದೇ ಹೇಳಿತ್ತು .

ಆವ ರೂಪನೂ ನಂಬುವಳಲ್ಲ ನಾನು ,

ಆವ ಮಾತನೂ ನಂಬುವಳಲ್ಲ ನಾನು ;

ಆವಲ್ಲಿ ಹೊಂದುವಳಲ್ಲ ನಾನು.

ಆವ ಕಾಲದಲ್ಲಿ ಐಕ್ಯವ ಕಂಡು ಬದುಕಿದೆನಲ್ಲಯ್ಯ ಸಂಗಯ್ಯ ||


. ೭೮ ||

೮೭೯

ಎನಗೆ ಹಾಲೂಟವನಿಕ್ಕುವ ತಾಯೆ ,

ಎನಗೆ ಪರಿಣಾಮವತೋರುವ ತಾಯೆ ,

ಪರಮಸುಖದೊಳಗಿಪ್ಪ ತಾಯೆ , ಪರವಸ್ತುವನಂಬಿದ ತಾಯೆ ,

ಬಸವನ ಗುರುತಾಯೆ ,
guwus
ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ, ಅಕ್ಕನಾಗಮ್ಮ ತಾಯೆ
|| ೭೯
! ||

೮೮೦

ಎನಗೆ ಹಿತಕಾರಿಗಳಾಗಿ ಇದ್ದವರೀ ಶರಣರು,

ಎನಗೆ ಪ್ರಭೆದೋರಿಇದ್ದವರೀ ಶರಣರು,

ಎನಗೆ ಸಂಗ ನಿಸ್ಸಂಗಕೊಟ್ಟವರೀ ಶರಣರು.

ಆ ಶರಣಪಥವ ನೋಡಹೋದರೆ,

ಆನು ನೋಡದ ಬಲವುಬಲವೆ ಆಯಿತಯ್ಯ ಸಂಗಯ್ಯ ಸಂಗಯ್ಯ . || ೮

೮೮೧

ಎನಗೆ ಹುಟ್ಟುವ ಮುನ್ನವೆ ಇಲ್ಲಿ

ಮುನ್ನ ಮುನ್ನ ತನುವ ನೀಗಿ,


೨೭೭
ನೀಲಮ್ಮನ ವಚನಗಳು

ಮೂರ್ತಿಯ ಅನುಭವವನರಿದೆ.

ಆನು ಭಾವವಡಗಿ ನಿಂದೆನಯ್ಯ ಸಂಗಯ್ಯ . || ೮೧ ||

೮೮೨

ಎನಗೇನೂ ತೋರದಂದು ನಮ್ಮವ್ವಯ ಮಗನಾಗಿದ್ದ ನಮ್ಮ ಬಸವಯ್ಯನು.

ಎನಗೇನೂ ಕಾಣಿಸದಂದು ಹುಟ್ಟಿಸುವ ಕರ್ತನಾಗಿದ್ದ ನಮ್ಮ ಬಸವಯ್ಯನು.

ಸಂಗ ನಿಸ್ಸಂಗವಿಲ್ಲದಂದು ಸಮಯಾಚಾರಿಯಾಗಿದ್ದ ನಮ್ಮ ಬಸವಯ್ಯನು.

ತನುಮನಧನವಿಲ್ಲದಂದು ನಿರೂಪರೂಪಮಾಡಿದನಯ್ಯಾ
|| ೮೨ ||
ಸಂಗಯ್ಯಾ , ನಿಮ್ಮ ಬಸವಯ್ಯನು.

೮೮೩

ಎನಗೇನೆಂಬೆನೆಂಬ ಸಂದೇಹ ಹರಿಯಿತ್ತು.

ಆ ಸಂದೇಹ ಹರಿದು

ಅಪ್ರಮಾಣದೊಳಗೆ ಐಕ್ಯವಾದೆನಯ್ಯ ನಾನು.

ಆನು ಅನುಭವಸುಖಿಯಾಗಿ

ಆ ಸುಖ ತೃಪ್ತಿಯ ಕಂಡು

ಬಯಲ ಸುಖವನುಂಡೆನಯ್ಯ ಬಸವಯ್ಯ .


|| ೮೩ ||
ಸಂಗಯ್ಯ ನಾನು ಮುಕ್ತಂಗನೆಯಾದೆನು.

- ೮೮೪

ಎನ್ನ ಕೈಯಳ ಮಾತುವೆನ್ನಕೈಯಲಡಗಿತ್ತು .

ಎನ್ನ ವಿಧಾನದಜ್ಯೋತಿವಿವೇಕದಲ್ಲಿಯಡಗಿತ್ತು .

ವಿನೇಯದ ಸುಖವ ಕಂಡು ನಾನು ನಿರ್ಮಲಾಂಗಿಯಾದೆನು.

ಭ್ರಮೆಯಳಿದು ಭಕ್ತಿಯಳಿದು ಭಾವ ನಿರ್ಭಾವವಾಗಿ,

ತನುಸೂತಕ ಮನಸೂತಕವ ಕಳೆದು ನಾನು

ಬ್ರಹ್ಮದನೆಮ್ಮುಗೆಯಲ್ಲಿ ಸುಮ್ಮನಿದ್ದೆನು

ಸುಖ ದುಃಖಗಳಡಗಿ ನಿರಾಲಂಬಿಯಾದೆನಯ್ಯ


|| ೮ ||
ಸಂಗಯ್ಯ ಬಸವನನ್ನಲ್ಲಿಯಡಗಲು.

೮೮೫

ಎನ್ನಯ್ಯನೆನ್ನಲ್ಲಿಯಡಗಿದನೆಂದು ನಾ ನಂಬಿರಲು,

ಎನ್ನಯ್ಯನೆನ್ನಿಯಡಗದೆ ಬಯಲನೈದಿದನು.
೨೭೮
ಶಿವಶರಣೆಯರ ವಚನಸಂಪುಟ

ಬಯಲಾಕಾರವಾದ ಪುತ್ತಳಿಯೆಂದು ಭ್ರಮೆಗೊಳಿಸಲು

ಸುಖಾಕಾರಮೂರ್ತಿಯಲ್ಲಿ

ಸುಯಿದಾನ ರೂಪನಾದೆನಯ್ಯ ಸಂಗಯ್ಯ . || ೮೫ ||

೮೮೬

ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ

ಆ ಪ್ರಾಣದ ಮಧ್ಯದಲ್ಲಿ ಮನೋಹರಮೂರ್ತಿ ಇರವಿರಲು,

ಆ ಇರದ ಸುಖವನೋಡಹೋದರೆ

ನೋಡನೋಡಲು ಬಯಲಾಯಿತ್ತು ಸಂಗಯ್ಯ || ೮೬ ||


ಆ ರೂಪು.

೮೮೭

ಎಣ್ಣದು ಎದ್ದದು ಈ ಮನ ಬಸವನಲ್ಲಿ .

ಎದುಎದ್ದುದು ಈ ಪ್ರಾಣ ಬಸವನಲ್ಲಿ .

ಎಲ್ಲದು ಎಯ್ದದು ಈ ಸುಖ ಬಸವನಲ್ಲಿ . ಸ್ಥಿತಿ


* ನಿತಿ ಇYASY
ಎಲ್ಲವನೆಯ್ದಿದ ಬಸವನಲ್ಲಿ ನಿರ್ಲಿಪಿ ನಾನಾದೆನು.

ನಾನು ನಿರ್ಲೇಪಿಯಾಗಿ ಕುಳವ ಹರಿದೆನಯ್ಯಾ


. ೨ ) .ಸಿಗು
S )

ಕುಳವಳಿದು ಸಂಗಯ್ಯಾ , ಬಸವ ನಾನಾದೆನು. 1| ೮೭ ||

eseses

ಎರಡಿಲ್ಲದ ಅಂಗಕ್ಕೆ ಒಂದೆ ಕುರುಹಿಲ್ಲದ ಸ್ಥಲವಾಯಿತ್ತು.

ಸಂದು ಸಂಶಯ ಭೇದವಳಿದು

ಸಮಾಧಾನ ನೆಲೆಗೊಂಡಿತ್ತಯ್ಯ ಸಂಗಯ್ಯ . || ೮೮ ||

SSESE

ಎರಡಿಲ್ಲದ ವಸ್ತುವೆ ನೀನೆರಡಾದೆಯಲ್ಲ ಬಸವಯ್ಯ .

ಎರಡನೇಕೀಕರಿಸಿ ಭ್ರಮೆಯ ಬಿಡಿಸಿದೆಯಲ್ಲ ಬಸವಯ್ಯ .

ಭ್ರಮೆಯನಳಿದು ಪರಿಣಾಮದ ಸಂಗವ ಮಾಡಿದೆಯಲ್ಲ ಬಸವಯ್ಯ .

ತೆರಹಿಲ್ಲದ ವಸ್ತುವಾದೆಯಲ್ಲಾ ಬಸವಯ್ಯ ಗುರುವೆ.


|| ೮೯ ||
ಸಂಗಯ್ಯನಲ್ಲಿ ಸದುಹೃದಯನಾದೆಯಲ್ಲ ಬಸವಯ್ಯ .

೮೯೦

ಎಲ್ಲರ ಸಂಗವಲ್ಲಲ್ಲಿಯೆ ;

ಆ ಎಲ್ಲರೂ ನಿರ್ಲಿಪ ಪ್ರಾಣಿಗಳಾದರಯ್ಯ .


೨೭೯
ನೀಲಮ್ಮನ ವಚನಗಳು
So { SAN A\
ಆ ಎಲ್ಲರಮೂರ್ತಿಯ ಅನುವ ಕಂಡು
|| ೯೦ ||
ನಿರ್ಲಿಪ ಪ್ರಸಾದಿಯಾದೆನಯ್ಯ ಸಂಗಯ್ಯ .

೮೯೧

ಎಲ್ಲವನರಿಯಬಹುದೆ ಎಂದು ನಾನು ತಿಳಿಯಲು

ಎಲ್ಲವನರಿಯದೆ ನಿರ್ಲೇಪಿಯಾನಾದೆನಯ್ಯ ಸಂಗಯ್ಯ . || ೯೧ ||

೮೯೨

ಎಲ್ಲವನರಿಯೆನೆಂದರೆ ಎನಗೆ

ಎಲ್ಲರಲ್ಲಿಯ ಪರಿಣಾಮ ಕಾಣಿಸಿತ್ತಯ್ಯ .

ಪರಿಣಾಮವಡಂಗಿ ಪರಂಜ್ಯೋತಿರ್ಲಿಂಗವ ಕಂಡು

|| ೯೨ ||
ನಾನು ಸುಖಿಯಾದೆನಯ್ಯ ಸಂಗಯ್ಯ .

೮೯೩

ಎಲೆ ಅಯ್ಯಗಳಿರಾ, ಎಲೆಗಳೆದ ವೃಕ್ಷವ ಕಂಡಿರೆ ಬಸವನ ?

ಎಲೆ ಅಯ್ಯಗಳಿರಾ, ರೂಹಿಲ್ಲದಜೋಹವ ಕಂಡಿರೆ ಬಸವನ ?

ಎಲೆ ಸ್ವಾಮಿಗಳಿರಾ, ನಿಮ್ಮ ನಿಲವಿನ ದರ್ಪಣವ ಕಂಡಿರೆ ಬಸವನ ?

ಸಂಗಯ್ಯನಲ್ಲಿ ಸ್ವಯವಳಿದ ಬಸವನ ಕುರುಹ ಕಂಡಿರೆ ? || ೯೩ ||

೮೯೪

ಎಲೆ ಅಯ್ಯಾ ಎಲೆ ಅಯ್ಯಾ ಏಕಾಕ್ಷರರೂಪ ಬಸವಾ,

ಎಲೆ ಅಯ್ಯಾ ಎಲೆ ಅಯ್ಯಾ ನಿರಕ್ಷರರೂಪ ಬಸವ ,

ಎಲೆ ಅಯ್ಯಾ ಎಲೆ ಅಯ್ಯಾ ಮುನಿಮಾರ್ಗಶೀಲ ಬಸವಾ,

ಸಂಗಯ್ಯಾ , ಎಲೆಯಿಲ್ಲದ ವೃಕ್ಷವಾದ ಬಸವಯ್ಯನು. || ೯೪ ||

೮೯೫

ಎಲೆ ಅಯ್ಯಾ ಬಸವಾ

ಎಲೆ ಪ್ರಣವ ಬಸವಾ

ಏನಯ್ಯಾ ಸಂಗಯ್ಯಾ , ಬಸವಾ. || ೯ ||

೮೯೬

ಎಲೆ ಅಯ್ಯಾ ಬಸವಾ, ಕರಸ್ಥಲ ಬಯಲಾಯಿತ್ತೆನಗೆ,

ಕರಸ್ಥಲ ಮನಸ್ಸಲವಾಯಿತ್ತು ಬಸವಾ.


೨೮೦ ಶಿವಶರಣೆಯರ ವಚನಸಂಪುಟ

ಸಂಗಯ್ಯಾ , ಬಸವ ಹೋದನು .

ನಾನಡಗಿದೆನಯ್ಯಾ ನಿಮ್ಮಲಿ .

es = 2

ಎಲೆಗಳೆದ ಮರದಲ್ಲಿ ನೆಳಲನರಸಲಿಲ್ಲ .

ಕಳೆಯರತ ದೀಪದಲ್ಲಿ ಬೆಳಗನರಸಲಿಲ್ಲ .

ಕುರುಹಳಿದ ಮೂರ್ತಿಯಲ್ಲಿ ರೂಪನರಸಲಿಲ್ಲ .

ಶಬ್ದವಡಗಿ ನಿಶ್ಯಬ್ದನಾದ ಬಸವನಲ್ಲಿ ಶಬ್ದವನರಸಲಿಲ್ಲ .

ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು. || ೯೭ ||

೮೯೮

ಎಲೆ ಲಿಂಗವೆ,

ಹೆಸರಿಲ್ಲದ ರೂಪದೋರಿಬಯಲಿಂಗೆ ಬಯಲನೆ ಕೂಡಿದೆಯಲ್ಲಾ .

ಭಾವವಿಲ್ಲದ ವಸ್ತುವಾಗಿ ಬಯಲಿಂಗೆ ಬಯಲನೆ ಕೂಡಿದೆಯಲ್ಲಾ .

ಮುನ್ನಲೊಂದು ರೂಪು ಮಾಡಿದೆ ಎನ್ನ ನೀನು.

ಈಗಲೊಂದು ರೂಪು ಮಾಡಿದೆ ಎಲೆ ಲಿಂಗವೆ.

ಬಸವನರಸಲು ನಾನು ಬಯಲ ನೆಮ್ಮಿ

ಮನೋಹರಮೂರ್ತಿಯಾದೆನಯ್ಯ ಸಂಗಯ್ಯ , || ೯೮ ||

CSEE

ಎಲೆಯಿಲ್ಲದೆ ಮರ ಕಾಯಾಯಿತ್ತು ,

ಆ ಮರ ಫಲವಾಯಿತ್ತು, ಆ ಫಲ ನಿಫಲವಾಯಿತ್ತು

ಆ ನಿಃಫಲವನುಂಡೀಗ ನನಗೆ

ಸುಖಸಂಯೋಗವಾಯಿತ್ತಯ್ಯ ಸಂಗಯ್ಯ . || ೯೯ ||

೯೦೦

ಎಲೆ ಶರಣರಿರಾ, ಎಲೆ ಭಕ್ತರಿರಾ,

ಭಕ್ತಿಕಾಂಡದ ಮೂಲಿಗನ ಕಾಣಿರೆ ಬಸವನ ?

ಆ ಭಕ್ತಿಯಸಂಗದ ಶಿವೈಕ್ಯನ ಕಾಣಿರೆ ಬಸವನ ?

ಭಕ್ತಿಯ ನಿಜಸಮಾಧಿಯಸುಖವ ಕರುಣಿಸುವ ಅಯ್ಯ ಬಸವನ,

ಸಂಗಯ್ಯನ ಪ್ರಸಾದಿಯಾದ ಬಸವನ ಕಾಣಿರೆ ಭಕ್ತರು ?|| ೧೦೦ ||


೨೮೧
ನೀಲಮ್ಮನ ವಚನಗಳು

೯೦೧

ಎಸಳ ಕಂಡು ಹೂವಿನ ಮೂಲವ ನೋಡಲು

ಆ ಮೂಲಎಸಳು ಎರಡೂ ಗಮನಗೆಟ್ಟವು. v/

ಪ್ರಾಣ ಮರುಗಿ ಬಳಲಲು

ಸಂಗಯ್ಯ , ಪುಷ್ಪ ಉಂಟೆಂದ ಬಸವನಲ್ಲಿ . || ೧೦೧ ||

೯೦೨

ಎಸಳ ಕರಣವ ಕಂಡು,

ಆ ಎಸಳೆಂದು ಹೆಸರುವಿಡಿಯಲು

ಎಸಳೆಸಳಿಂಗೆ ಎನಗೆ ಚೋದ್ಯವಾಯಿತ್ತಯ್ಯ .

ಆ ಎಸಳಕ್ಷರವ ಕಂಡು

ವಿಶುದ್ದಿದಳವ ಮುಟ್ಟಿದೆನಯ್ಯ ಸಂಗಯ್ಯ . || ೧೦೨ ||

೯೦೩

ಎಸಳಕ್ಷರವ ಕಂಡು ಎಸಳ ಬಗೆಯ ತಿಳಿದು

ನಿಜಸುಖಿಯಾದೆನಯ್ಯ ನಾನು.

ಇಷ್ಟ ಪ್ರಾಣ ಭಾವದಲ್ಲಿ

ಪ್ರಸನ್ನ ಮೂರುತಿಯ ನೆಲೆಯ ಕಂಡೆನಯ್ಯ ಸಂಗಯ್ಯ . || ೧೦೩ ||

೯೦೪

ಎಸಳದಳವನಳಿದು ನಿಂದ ಬಸವಾ,

ದಳರೂಪಿತದಲ್ಲಿ ಕುರುಹಡಗಿದ ಬಸವಾ,

ಕುರುಹಿನ ರೂಪಕಂಡು ದೃಢ ಸ್ವರೂಪನರಿದು


ಅನುಭಾವಿಯಾಗಿ ಅನುಭಾವದಿಂದ ಮುಕ್ತಿಯ ಕಂಡು

ಮುಖವಿಕಸಿತವನೆಯ್ದ ನಿಂದನಯ್ಯ ಸಂಗಯ್ಯನಲ್ಲಿ ಬಸವಯ್ಯನು. || ೧೦೪

೯೦೫

ಎಸಳ ಪಂಜರದ ಪಕ್ಷಿಯೆ ನೀನೆಲ್ಲಿ ತೋರಿ ಎಲ್ಲಿಯಡಗಿದೆ ?

ಎತ್ತಳ ಭ್ರಮೆ ಎತ್ತಳನುಕೂಲತೆ,

ಎನಗೆಳ ಮಾಯದ ಸಂಗವಯ್ಯ ?

ನಾನೆಲಿ ? ಬಸವನೆ ?

ಮನವೆ ? ತನುವೆ ?

ಸಂಗಯ್ಯನೆತ್ತ ಹೋಗು. || ೧೦೫ ||


೨೮೨
ಶಿವಶರಣೆಯರ ವಚನಸಂಪುಟ

೯೦೬

ಎಸಳು ಬಿಳಿದು ಆ ಎಸಳ ಕಂಪಿನ ವರ್ಣದ ಮುಂದೆ

ಕಂಪಿನ ಕುಸುಮವನೋಡ ನೋ [ ಡು ಹೋದರೆ

ಆ ಎಸಳೆಗಳಿಗೆ ಒಂದು ತುಂಬಿಗಳ ಬಳಗವ ಮೂರುತಿಗೂಡಿದರು.

ಆ ಮೂರುತಿಯ ಇರವನರಿದು

ಆನು ಬದುಕಿದೆನಯ್ಯ ಸಂಗಯ್ಯ . || ೧೦೬ ||

೯೦೭

ಎಸಳೆಸಳ ಮಾಡಿಸಲು

ಎಸಳೆಸಳಿಂಗೆ ಇರವ ಕಂಡು ಬದುಕಿದೆನಯ್ಯ .

ಬಯಲ ಪರಿಣಾಮವ ಕಂಡು ಬಯಲನೈದಿದನು.

ಆ ಬಯಲಿಂಗೆ ಈ ಬಯಲ ಸುಖವಕೂಡಿಸಿ

ಸುಖಪರಿಣಾಮಿಯಾದೆನಯ್ಯ ಸಂಗಯ್ಯ . || ೧೦೭ |

EOCS

ಎಸಳೆಸಳಹೊಸದುನೋಡುವ ಯೋಗಿಗಳು

ಬಸವನೈಕ್ಯವನ್ನು ಕಾಣದಾದರು.

ರೂಪ ನಿರೀಕ್ಷಿಸುವ ಯೋಗಿಗಳು

ಬಸವನೈಕ್ಯವ ಕಾಣದಾದರು.

ಸಂಗಯ್ಯಾ , ನಿಮ್ಮ ಬಸವನೈಕ್ಯವ ಬಲ್ಲಾತ


|| ೧೦೮ | |
ಚೆನ್ನಬಸವಣ್ಣನು.

೯೦೯

ಎಸೆವ ಅನಂಗನ ಸಂಗವ ಹರಿದು,

ಏಕತಯಬ್ರಹ್ಮಮೂರ್ತಿಯಾದೆನಯ್ಯಾ ಬಸವಾ.

ಆ ಮೂರ್ತಿಯ ಸಂಗವ ಮಾಡುವ ಬಸವನ


|| ೧೦೯ ||
ಇರವನರಿದು ಬದುಕಿದೆನಯ್ಯಾ ಸಂಗಯ್ಯಾ .

೯೧೦

ಎಸೆವಕ್ಷರಕ್ಕೆ ಹೆಸರಿಲ್ಲ , ಆ ಹೆಸರಿಂಗೆ ರೂಹಿಲ್ಲ ;

ರೂಪಿಂಗೆ ನಿರೂಪಿಲ್ಲ .

ನಿರೂಪಳಿದು ನಿರಾಕುಳವಾಗಿ
೨೮೩
ನೀಲಮ್ಮನ ವಚನಗಳು

ನೀರಸಂಗಕ್ಕೆ ಹೋದರೆ,

ಆ ನೀರು ಬಯಲಾಳವ ತೋರಿತ್ತಯ್ಯ ಸಂಗಯ್ಯ . || ೧೧೦ ||

೯೧೧

ಎಸೆವಾಕ್ಷರದ ಕುರುಹ ಕಂಡು

ಆನು ಬಸವಾ ಬಸವಾ ಬಸವಾ ಎನುತಿರ್ದೆನಯ್ಯಾ .

ಬ್ರಹ್ಮವನರಿದು ಮೂರ್ತಿಯ ಇರವನರಿದೆನಯ್ಯಾ ,


|| ೧೧೧ ||
ಸಂಗಯ್ಯನಲ್ಲಿ ಕುರುಹನಳಿದೆನು.

೯೧೨

ಏಕಮೂರ್ತಿತ್ರಿಮೂರ್ತಿದ್ವಿಮೂರ್ತಿಯಾಗಿ ತೋರಿ

ಬೇರೆ ಅರಿಯ ಬಂದಿತ್ತಯ್ಯ .

ಅರಿಯಲು,

ಪ್ರಭೆ ಪರಿಪೂರಿತವಂತಃಕ್ಕರುಣಮೂರ್ತಿಯುಳ್ಳವಳಾದೆನಯ್ಯ ಸಂಗಯ್ಯ . Il೧೧

೯೧೩

ಏಕಮೇವದೇವನೊಬ್ಬನೆ ಶರಣ ಬಸವಯ್ಯ .


ಆ ಶರಣ ಬಸವಯ್ಯನಿರವೆ ಪರಮಪ್ರಸಾದರೂಪವಾಯಿತ್ತು.

ಆ ಪರಮಪ್ರಸಾದರೂಪಮೂರ್ತಿ

ನಮ್ಮ ಸಂಗಯ್ಯನಲ್ಲಿ ಸದ್ದುರು ಬಸವಯ್ಯನು. || ೧೧೩ ||

೯೧೪

ಏಕಮೇವದೇವ ಬಸವಾ,

ಏಕಲಿಂಗಾಂಗಿ ಬಸವಾ,

ಪ್ರಸಾದಪರಿಪೂರ್ಣಮೂರ್ತಿಬಸವಾ,

ಪರಿಣಾಮವಡಗಿ ಪ್ರಸನ್ನನಾದ ಬಸವಾ

ಕಾಯವಿಲ್ಲದ ಗಮನಿ ಬಸವಾ,

ಕಲೆಯಳಿದುಳಿದೆ ಬಸವ ,

ಪ್ರಭಾವವಡಗಿ ಸಂಗಯ್ಯನಲ್ಲಿ ನಿಸ್ಸಂಗಿಯಾದೆಯಾ ಬಸವಾ. || ೧೧೪ ||

೯೧

ಏಕಲಿಂಗದಲ್ಲಿ ಏಕತ್ವವಲ್ಲ ಮೂರ್ತಿಗಳಲ್ಲ ;

ಆ ಮೂರ್ತಿಗಳಲ್ಲಿ ಶರಣ ಸಂಗ ಪರಿಣಾಮ

ಸಂಗಪ್ರಭೆಯ ಪೂರೈಸಿದ ಸಂಗವಯ್ಯ ಸಂಗಯ್ಯ . || ೧೧ ||


೨೮೪
ಶಿವಶರಣೆಯರ ವಚನಸಂಪುಟ

೯೧೬

ಏಕಲಿಂಗನಿಷ್ಠಾಪಾರಿಗಳೆಂದೆಂಬರಯ್ಯ ;

ತಾವು ಏಕಲಿಂಗ ಸಂಬಂಧಿಗಳಾದ ಕಾರಣವೇನಯ್ಯ ?

ತಾವು ಹಿತವಿಲ್ಲದ ವಸ್ತುವಕಂಡು

ಸ್ವಯ ಸಂಬಂಧಿಗಳಾದರು.

ಪರಿಣಾಮದ ನೆಲೆಯನರಿವ ಪರಿಯೆಂತಯ್ಯ ಸಂಗಯ್ಯ ? || ೧೧೬ ||

εο2

ಏಕ ಸಂಗ ನಿಸ್ಸಂಗವಾಗಿ ಪ್ರಸಾದದ ಹಂಗಿಗಳಲ್ಲ .

ಪ್ರಣವದ ಅಕ್ಷರರೂಪದಗಿ ನಿಂದು

ಏಕೋದೇಹವಾಯಿತ್ತೆನಗೆ ಸಂಗಯ್ಯ . || ೧೧೭ ||

೯೧೮

ಏಕಾಕಾರ ನಿರಾಕಾರವಾಯಿತ್ತಯ್ಯ , 40
- ಸಿ೦hy - { c೬ .
ಏಕಾಕಾರ ಶಿವಸುಖವಾಯಿತ್ತಯ್ಯ ,
ಎ .
ಅಧಿಕದ ತನುವನರಿದು

ಆನು ಬದುಕಿದೆನಯ್ಯ ಸಂಗಯ್ಯ . || ೧೧೮ ||

ಏಕಾಂಗವೆನಗೆ ಅನೇಕ ಬಸವಾ,

ಪ್ರಾಣಪ್ರಸನ್ನವದನೆಯಾದೆನು ಬಸವಾ,

ಎನಗೆ ಏತರಲ್ಲಿಯೂ ಹಂಗಿಲ್ಲ ಬಸವಾ,

ಇಷ್ಟದ ಸಂಗದ ಕುಳವಳಿದ ಬಳಿಕ

ಪ್ರಾಣಯೋಗವಾಯಿತ್ತು ಬಸವಾ,

ಸಂಗಯ್ಯಾ , ನಿಮ್ಮ ಬಸವನ ರೂಪು ಹೆಸರಿಲ್ಲದೆ ಹೋದಬಳಿಕ. || ೧೧೯

೯೨೦

ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ

ಪುಣ್ಯವಿಲ್ಲದ ಪಾಪಿಯ ?

ನಾನು ಇರಪರಕ್ಕೆ ದೂರಳಯ್ಯಾ .

ಎನ್ನ ನಾಮ ಹೆಣ್ಣು ನಾಮವಲ್ಲಯ್ಯಾ.

ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ ,


೨೮
ನೀಲಮ್ಮನ ವಚನಗಳು

ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ


|| ೧೨೦ ||
ಎನಗೆ ಹೆಣ್ಣು ನಾಮವಿಲ್ಲವಯ್ಯಾ .

೯೨೧

ಏಣನಗರ , ಎಸಳಗಂಗಳ ಸಾರಂಗ, ಪ್ರಭೆಯನೊಳಕೊಂಡ ಮೊಲ,

ಈ ಮೂರು ಮೃಗವನೆಚ್ಚು ಬಾಣಸವ ಮಾಡಿ ,

ಸಂಗಯ್ಯಂಗಿತ್ತು ಸುಖಿಯಾದನಯ್ಯಾ .

ಬಸವನಗಣಿತಮೂರ್ತಿಯಯ್ಯಾ, ಇರಪರ ನಾಯಕನು. || ೧೨೧ ||

೯೨೨

ಏತರಮಾರ್ಗವಡಗದ ಸಂಗ,

ಭ್ರಮೆಯಳಿಯದ ಸಂಗ.

ಇಂತೀ ಉಭಯಸಂಗ ಸಾಧ್ಯವಾಯಿತ್ತೆನಗೆ.

ಮನವನಳಿದು ತನುವಿನ ಹಂಗು ಹರಿದು

ಪರಮಪ್ರಸಾದಿಯಾಗಿ
|| ೧೨೨ ||
ಆನು ಬದುಕಿದೆನಯ್ಯ ಸಂಗಯ್ಯ .

- ೯೨೩

ಏತರಲ್ಲಿಯೂ ತೆರಹಿಲ್ಲವೆನಗೆ;

ಏತರಲ್ಲಿಯೂ ಕುರುಹಿಲ್ಲವೆನಗೆ;

ಏತರಲ್ಲಿಯೂ ಮೂರ್ತಿಯ ಮುಖ ಕಾಣಿಸದೆನಗೆ,


|| ೧೨೩ ||
ಸಂಗಯ್ಯನಲ್ಲಿ ಬಸವ ಪ್ರಸಾದಿಯಾದಬಳಿಕ.

೯೨೪

ಏತರಲ್ಲಿಯೂ ತೆರಹಿಲ್ಲವೆನಗೆ;

ಸುಖ ಎನಗೆ, ಸುಖದಿಂದ ವಿಪತ್ತನಳಿದೆನಯ್ಯಾ .

ವಿಚಾರವ ತಿಳಿದು ನಿಃಪತಿಯಾದೆನಯ್ಯ ಸಂಗಯ್ಯ . || ೧೨೪ ||

೯೨೫

ಏತರಲ್ಲಿಯೂ ಪರಿಣಾಮವಿಲ್ಲವೇತರಲ್ಲಿಯೂ ಗಮನವಿಲ್ಲ

ವೇತರಲ್ಲಿಯೂ ವಿವೇಕದನುಭವವಿಲ್ಲ

ವಪ್ರತಿಮನ ಸುಖವ ಕಂಡು ,

ಆನು ವಿವೇಕ ವಿವರವ ತಿಳಿದೆನಯ್ಯ .


೨೮೬
ಶಿವಶರಣೆಯರ ವಚನಸಂಪುಟ

ತಿಳಿದು ಮನೋಹರ ಪ್ರಸನ್ನ ಮೂರುತಿಯ

ವಿವರವ ಕಂಡೆ[ ನ] ಯ್ಯ ಸಂಗಯ್ಯ . || ೧೨೫ ||

- ೯೨೬

ಏತರಲ್ಲಿಯೂ ಹೆಸರಿಲ್ಲದ ಕುರುಹು ಈ ವಸ್ತು ಬಸವಯ್ಯನ

ಏತರಲ್ಲಿಯೂ ನೆಲೆಯಿಲ್ಲದಮೂರ್ತಿ ಈ ವಸ್ತು ಬಸವಯ್ಯನು.

ಏತರಲ್ಲಿಯೂ ತೆರಹಿಲ್ಲದೆ ಪರಿಪೂರ್ಣವಾಗಿರಲು ಬಸವಯ್ಯನು,

ಪ್ರಭೆ ಬೆಳಗಿತ್ತು ಬಸವಂಗೆ, ಪ್ರಕಾಶವಡಗಿತ್ತು ಬಸವಂಗೆ,

ಪರಿಣಾಮ ಉಡುಗಿತ್ತು ಬಸವಂಗೆ, ಮನವಳಿಯಿತ್ತು ಬಸವಂಗೆ,

ಸಂಗಯ್ಯನಲ್ಲಿ ಬಸವ ಸ್ವಯಲಿಂಗಿಯಾದ ಬಳಿಕ , || ೧೨೬ ||

೯೨೭

ಏನೂ ಏನೂ ಎನಲಿಲ್ಲ ;

ಎನ್ನ ಭಕ್ತಿಯಳಿದ ಭಾವಕ್ಕೆ ಇನ್ನೇನೂ ಏನೂ ಎನಲಿಲ್ಲ .

ಎನ್ನ ಪ್ರಾಣದ ಹಂಗಹರಿದಬಳಿಕ ಇನ್ನೇನೂ ಏನೂ ಎನಲಿಲ್ಲ .

ಎಕ್ಕದಸಮರಸ ಕೈಗೂಡಿದಬಳಿಕ ಇನ್ನೇನೂ ಏನೂ ಎನಲಿಲ್ಲ .

ಎನ್ನ ಭಿಮಾನದ ಕರ್ತು ನಿರಾಳದಲ್ಲಿ ನಿಂದ ಬಳಿಕ,


|| ೧೨೭ ||
ಸಯದಾನ ಸುಯಿದಾನವಾಯಿತ್ತಯ್ಯಾ , ಸಂಗಯ್ಯಾ .

೯೨೮

ಏನೆಂದೆನ್ನಬಹುದಯ್ಯ ? ಎಂತೆಂದೆನ್ನಬಹುದಯ್ಯ ?

ಈ ಘನದ ವಿಚಾರವ ?

ಈ ಘನದಲ್ಲಿ

ಇಹಪರದ ಸುಖವ ಕಂಡುಕೊಡುವೆನೆಂದು ಹೋದರೆ

ಆ ಲಿಂಗವೆನ್ನ ಕರದೊಳಗೆ ತಾನೆಯಡಗಿತ್ತು .

ನಾನಡಗಿ ನನ್ನ ವಿಚಾರವ ತಿಳಿಯಲು

ನಾನು ಬದುಕಿದೆನಯ್ಯ ಸಂಗಯ್ಯ . || ೧೨೮ ||

೯೨೯

ಏಹೆ ಎಲೆ ಅಥವ ಬಸವಾ,

ಏಕೆ ಎಲೆ ಪರಿಣಾಮಿ ಬಸವಾ,

ಏಕೆ ವಿಚಾರಿ ಬಸವಾ,

ವಿಚಾರ ಸಂಗನನರಿದು ಹೇಳಲಿಲ್ಲವೆನಗೆ ಬಸವಾ.


೨೮೭
ನೀಲಮ್ಮನ ವಚನಗಳು

ಹೇ ಹೇ ಎನಲೊಂದೆ ಸಂಗ ಸಂಗ, ನಿರಂಗ ನಿರಂಗ


|| ೧೨೯ ||
ಬಸವ ಬಸವ ಎಲೆ ಬಯಲು ?

೯೩೦

ಐಕ್ಯವತೋರಿ ಅಜಾತನಲ್ಲಡಗಿದ ಬಸವಾ.

ಅರ್ಪಿತದಲ್ಲಿ ನಿರಾಭಾರಿಯಾದ ಬಸವಾ,

ಆನು ಸುಖಸಂಯೋಗಿಯಾದೆ ನಿಮ್ಮಲ್ಲಿ ಬಸವಾ.

ಎನಗೆ ಹೆಸರಳಿಯಿತ್ತು ಕುರುಹಳಿಯಿತ್ತು ಬಸವಾ.

ಸಂಗಯ್ಯ ನಿನ್ನೊಳಡಗಿ ನೀನೆನ್ನೊಳಡಗಲು. || ೧೩೦ ||

೯೩೧

ಐದದು ಎನಗೆ ಕಡೆಮುಟ್ಟದ ಪ್ರಸಾದ;


ಐದದು ಎನಗೆ ಕಡೆಮುಟ್ಟದ ಹರನ ಕರುಣ;

ಐದದು ಎನಗೆ ಕಡೆಮುಟ್ಟದ ಸ್ವಯಲಿಂಗ ಸಂಬಂಧ

ಇದದು ಎನಗೆ ಪರವಸವುಕಡೆಮುಟ್ಟಲಯ್ಯ .

ಸಂಗಯ್ಯ , ಐದದು ಎನಗೆ ಕಡೆಮುಟ್ಟ ಬಸವನಭಕ್ತಿ . || ೧೩ ||

೯೩೨ -

ಒಡಲಗುಣವ ಕಳದ ಬಳಿಕ ಹೆಣ್ಣಿಂಗೆ,

ಓಂ ನಮಃಶಿವಾಯಯೆಂಬ ಸುಕೃತವನರುಹಿದ ಮೇಲೆ,

ಪರವಸ ವಸ್ತುವನರಿದು ಪರಬ್ರಹ್ಮವಕಂಡು

ಬದುಕಿದೆನಯ್ಯ ಸಂಗಯ್ಯ . || ೧೩೨ ||

೯೩೩

ಒಡಲಳಿದ ಕಾರಣ ಒಡಲಿಲ್ಲದ ಹೆಣ್ಣು ನಾನಾದೆನಯ್ಯಾ ಬಸವಾ,

ಪ್ರಾಣವಿಲ್ಲದ ಪಂಚಾಕ್ಷರಿಯ ತಿಳಿಯಲು.

ಆ ಪಂಚಾಕ್ಷರಿಯನರಿದು ಆನು ಬದುಕಿದೆನಯ್ಯಾ ಬಸವಾ.

ಗಮನ ನಿರ್ಗಮನಸೂಚನೆಯಾಯಿತ್ತು .

ಸಂಗಯ್ಯನಲ್ಲಿ ಹೃದಯದ ಕತ್ತಲೆಯಳಿದು

ಹೃದಯಪ್ರಸನ್ನೆಯಾದೆನಯ್ಯಾ ಬಸವಯ್ಯಾ . || ೧೩೩ ||

೯೩೪

ಕರಣಂಗಳ ಹಂಗಹರಿದು, ಕರಣಂಗಳ ಮುಖವನಳಿದು,

ಶರಣರ ಪರಿಣಾಮದಲ್ಲಿ ಮುಕ್ತಿಯನರಿದೆನಯ್ಯಾ .


೨೮೮
ಶಿವಶರಣೆಯರ ವಚನಸಂಪುಟ

ಬಸವನ ಕುರುಹ ಕಂಡು ಪ್ರಸನ್ನೆಯಾದೆನಯ್ಯಾ ,

ಪ್ರಸನ್ನ ಪರಿಣಾಮವಿಡಿದು ಆನು ಬದುಕಿದೆನಯ್ಯಾ ಸಂಗಯ್ಯಾ


|| ೧೩೪ ||.

೯೩೫

ಕರಣಂಗಳ ಹಂಗ ಹರಿದು

ಕಾಮದಸೀಮೆಯ ಹರಿದು

ಕಾಮದ ಪ್ರಪಂಚನ್ನಳಿದು ನಾನು

ಪ್ರಸನ್ನವದನೆಯಾದೆನಯ್ಯ ಸಂಗಯ್ಯ || ೧೩೫ ||

೯೩೬

ಕಲ್ಲಮಾಲೆಯ ಕಡಿದಾತ ಬಸವಯ್ಯನು.

ಕಾಲನ ಗೆಲಿದಾತ ಬಸವಯ್ಯನು.

ಎಲ್ಲವ ಮರೆದಾತ ಬಸವಯ್ಯನು.

ಜ್ಞಾನವನರಿದಾತ ಬಸವಯ್ಯನು.

ಸಂಗಯ್ಯನಲ್ಲಿ ಬೆರೆದು ನಿಃಪತಿಯಾದಾತ ನಮ್ಮ ಬಸವಯ್ಯನು


|| ೧೩೬ ||

೯೩೭

ಕಲ್ಯಾಣವಿಲ್ಲ ಕೈಲಾಸವಿಲ್ಲ , ಬಸವಾ.

ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ.

ಆ ಕಲ್ಯಾಣ ಕೈಲಾಸವಾಯಿತ್ತು ಬಸವಾ.

ಆ ಕಲ್ಯಾಣವಳಿದು ಕೈಲಾಸವಾದ ಬಳಿಕ, ಬಸವನ ಮೂರ್ತಿಯಿಲ್ಲ

ಬಸವನ ಮೂರ್ತಿಯನರಿಯದಕಾರಣ
|| ೧೩೭ ||
ಕೈಲಾಸವಿಲ್ಲ ಕಲ್ಯಾಣವಿಲ್ಲವಯ್ಯಾ , ಸಂಗಯ್ಯಾ .

೯೩೮

ಕಲಿಯುಗದಲ್ಲಿ ಹುಟ್ಟಿ ಆ ಕಲಿಯುಗದಲ್ಲಿ ಬೆಳೆದೆನಯ್ಯ .

ಕೃತಯುಗದಲ್ಲಿ ಹುಟ್ಟಿ ಆ ಕೃತಯುಗದಲ್ಲಿ ಬೆಳೆದೆನಯ್ಯ .

ದ್ವಾಪರದಲ್ಲಿ ಹುಟ್ಟಿ ಆ ದ್ವಾಪರದಲ್ಲಿಯೇ ಬೆಳೆದೆನಯ್ಯ .

ತ್ರೇತಾಯುಗದಲ್ಲಿ ಹುಟ್ಟಿ [ ಆ ]ತ್ರೇತಾಯುಗದಲ್ಲಿಯೇ ಬೆಳೆದೆನಯ್ಯ .

ಎನಗೆ ಪ್ರಾಣವಿಲ್ಲ ಎನಗೆ ಕಾಯವಿಲ್ಲ .

ನಾನೇತರಲ್ಲಿಯೂ ಹೊಂದಿದವಳಲ್ಲ .

ಅಜಾತನ ಕಲ್ಪಿತ ಸಂಬಂಧವಾಗಲು


|| ೧೩೮ ||
ಆನು ನಿಮ್ಮೆಕ್ಯದಲ್ಲಿ ನಿಂದೆನಯ್ಯ ಸಂಗಯ್ಯ .
೨೮೯
ನೀಲಮ್ಮನ ವಚನಗಳು

೯೩೯

ಕಾಮದ ಹಂಗಿಗನಲ್ಲ ಶರಣ ;

ಮೋಹದ ಇಚ್ಛೆಯವನಲ್ಲ ಶರಣ ;

ಉಭಯದ ಸಂಗದವನಲ್ಲ ಶರಣ ;

ಪ್ರಾಣದ ಕುರುಹಿಲ್ಲದ ಶರಣಂಗೆ ಪ್ರಸಾದದ ನೆಲೆಯಿಲ್ಲವಯ್ಯ .

ಎನಗೇನೂ ತಲೆದೋರದೆ ಮುಸುಕಿಟ್ಟು

ಬಸವಳಿದೆನಯ್ಯಾ ಸಂಗಯ್ಯ ನಿಮ್ಮಲ್ಲಿ. || ೧೩೯ ||

೯೪೦

ಕಾಮವನಳಿದ ಹೆಣ್ಣಲ್ಲ ನಾನು, ಕಾಮ ಉಂಟೆನಗೆ.

ಕಾಯ ಸಂಸಾರವಳಿಯಿತ್ತೆಂಬ

ಕಾಮ ಸೀಮೆ ನಿಸೀಮೆಯಳಿದು

ಕಲ್ಪಿತವ ಕಂಡುಳಿದು ಬದುಕಿದೆನಯ್ಯ ಸಂಗಯ್ಯ . || ೧೪೦ ||

೯೪೧

ಕಾಮಿತಸುಖವ ಕಂಗೊಳಿಸಿದ ಗುರುವೆ,

ಕಲ್ಪಿತವ ನಷ್ಟವ ಮಾಡಿದ ಗುರುವೆ,

ಎನಲಿಲ್ಲದ ಮೂರ್ತಿಯ ಎತ್ತಲಡಗಿದೆಯಯ್ಯಾ ಗುರುವೆ ?

ಸುಖದುಃಖವನೊಂದು ರೂಪಮಾಡಿದ ಗುರುವೆ,

ಎತ್ತಲಡಗಿದೆಯಯ್ಯಾ, ಸಂಗಯ್ಯನ ಗುರುಬಸವಾ ? || ೧೪ ||

೯೪೨

ಕಾಮಿಯಾನಾಗಿ ಕಾಮದ ಹಂಗಹರಿದೆನು ಬಸವಾ.

ಕಾಮ ನಿಃಕಾಮವಾಗಿ ಬಸವನ ಹೆಸರಲ್ಲಿ ಬಲವಂತರ ಕಂಡೆ.

ಬಲವಂತರ ಬಲುಹ ಕಂಡು ಬಲುಹನಳಿದು,

ಬಸವನಲ್ಲಿ ನಿರಾಲಂಬಿಯಾದೆ ನಾನು.

ನಿರಾಕುಳದ ಹಂಗ ಹರಿದು

|| ೧೪೨
ನಾನು ಸುಖಿಯಾದೆನಯ್ಯಾ , ಸಂಗಯ್ಯಾ , ಬಸವನಲ್ಲಿ . ||

೯೪೩

ಕಾಯದ ಹಂಗ ಹರಿದು, ಕಲ್ಪಿತದ ಗುಣವ ನಷ್ಟವಮಾಡಿ,

ಮನವಿಲ್ಲದೆ ಆ ಮನಕ್ಕೆ ವಿವೇಕತೃಪ್ತಿಯನರಿಯಲು


೨೯೦
ಶಿವಶರಣೆಯರ ವಚನಸಂಪುಟ

ವಿಶಿಷ್ಟದನುಜ್ಞೆಯಾಯಿತ್ತಯ್ಯಾ .

ಸಂಗಯ್ಯನಲ್ಲಿ ಬಸವನಡಗಲು ಎನ್ನ ಕಾಯವೆ ತೃಣರೂಪವಯ್ಯಾ . || ೧೪೩

ළිඳලා

ಕಾಯವಿಲ್ಲದೆಕಾಯಕ್ಕೆ ಕಲ್ಪಿತದ ಸಯದಾನವಕೂಡಲಿಕ್ಕಲು

ಆಯದ ಖಂಡವಯ್ಯ ,

ಕಾಯವಿಲ್ಲದೆ ಹೋದ ಬಯಲನುಂಬ ಪ್ರಾಣಿಗೆ

ಬಸವನ ಹಂಗೆನಗುಂಟೆಯಯ್ಯ ?

ಏತರಲ್ಲಿಯೂ ರೂಪಿಲ್ಲದ ಕಾರಣ

ಸಂಗಯ್ಯ , ನಾನು ನಿಮ್ಮ ಹೆಸರಿಲ್ಲದ ಮಗಳು. ೧೪ ||

೯೪೫

ಕಾಯವಿಲ್ಲದೆ ಪ್ರಾಣವಿರದು , ಪ್ರಾಣವಿಲ್ಲದೆಕಾಯವಿರದು .

ಆ ಕಾಯ ಪ್ರಾಣಕ್ಕೆ ಮೂಲಿಗನಾದ ಬಸವ.

ಬಸವನಿಲ್ಲದೆ ಭಾವ ನೆಲೆಗೊಳ್ಳದು.

ಭಕ್ತಿ ಸಂಗಸಂಯೋಗವಾದರೆ

ಬಸವನಲ್ಲಿ ಬಯಲನವಲಂಬಿಸಿದೆ ನಾನು.

|| ೧೪
ಸಂಗಯ್ಯಾ , ರೂಪಿಲ್ಲದ ಬಹುರೂಪನಾದ ಬಸವಯ್ಯನು ||

೯೪೬

ಕಾಯವಿಲ್ಲದೆ ಪುಷ್ಪಕವ ಕಂಡ ನಮ್ಮ ಬಸವಯ್ಯನು.

ನಮ್ಮ ಬಸವಯ್ಯನ ನೆಲೆಮಾಡ ಕರುಮಾಡವಾಯಿತ್ತು .

ನಮ್ಮ ಬಸವಯ್ಯ ಹೂವಿನರಥವೇರಿದ.

ನಮ್ಮ ಬಸವಯ್ಯ ಸಂಗಯ್ಯನಾದ.

ಬಸವನ ರೂಪುತದ್ರೂಪವಾಯಿತ್ತು. || ೧೪೬ ||

ಕಾಲವ ಕಂಡ ಬಸವಾ, ಕಲ್ಪಿತವ ಕಂಡ ಬಸವಾ,

ಕಾಲಕಲ್ಪಿತವರ್ಜಿತವಾದ ಬಸವಾ.

ನಯನುಡಿಯಿಲ್ಲದ ಬಸವಾ.

ನೀ ನಿಃಪತಿಯಾದೆಯಾ ಸಂಗಯ್ಯನ ಗುರುಬಸವಾಯ || ೧೪೭ ||


೨೯೧
ನೀಲಮ್ಮನ ವಚನಗಳು

೯೪೮

ಕಾವಲಕಾದಿದ್ದವರು ಕಾವಲಮೀರಿ

ಎನ್ನ ಸಂಗವನೆ ಮಾಡಿದರು ಬಸವಯ್ಯಾ ,

ಎನ್ನ ಸಂಗವ ಮಾಡಿದವರ ಎನ್ನಯ್ಯ ಬಸವಯ್ಯ ಕಂಡು,

ಎನ್ನ ತನುವಿನಲ್ಲಿಯೆ ಅಡಗಿದನಯ್ಯಾ ,


|| ೧೪೮ ||
' 8 ' ಟ ,ಸ್ವಯಲಿಂಗಿಯಾನಾದೆನಯ್ಯಾ
ಸಂಗಯ್ಯಾ ' ' ,

೯೪೯

ಕುಲವಳಿದ ಹೆಣ್ಣ ಕಣ್ಣ ಬಯಲ ಕಂಡು

ಕುಲವಡಗಿ ಸಂಗಸ್ವಯರೂಪಾಯಿತ್ತಯ್ಯ .

ಪ್ರಭೆಯರಿದು ಪ್ರಸನ್ನರೂಪವ ಕಂಡು

ಪ್ರಕಾಶಮೂರ್ತಿಯಾದನಯ್ಯ .

ಪ್ರಣಮಾಕ್ಷರ ಕಾಯರೂಪುನಿರೂಪಾಯಿತ್ತಯ್ಯಾ.
| ೧೪೯ ||
ಅಪ್ರಮಾಣವಧಿಕಸ್ಥಲ ಸಂಬಂಧವಯ್ಯ ಸಂಗಯ್ಯ .

೯೫೦

ಕೋಪದ ತಾಪದ ಸಂಗವ ಕಳೆದು

ವಿರೂಪ ನಿರೂಪವಾಯಿತ್ತಯ್ಯಾ.

ನಿರಾಲಂಬ ನಿರಾಭಾರಿಯಾಗಿರಲು ಆನು ಅನುವರಿದು

ಹೆಣ್ಣೆಂಬ ನಾಮವ ಕಳೆದು ಸುಖ ವಿಶ್ರಾಂತಿಯನೆಯುವೆನಯ್ಯಾ,


|| ೧೫೦ ||
ಸಂಗಯ್ಯಾ , ಬಸವನರೂಪವಡಗಿತೆನ್ನಲ್ಲಿ .

ಕ್ರಮವನರಿಯದೆ ಪೂಜೆಯ ಮಾಡಹೋದರೆ,

ಕ್ರಮದಲ್ಲಿಯೆ ಸಂದಿತ್ತು ಶಿವಲಿಂಗದಲ್ಲಿಯೆ ಸಂದಿತ್ತು .

ಆ ಪೂಜೆಯ ಕ್ರಮವನಳಿದೆನಯ್ಯ ಸಂಗಯ್ಯ . || ೧೫೧ ||

೯೫೨

ಗಮನದ ಸುಖವಡಗಿ ನಿರ್ಗಮನವಾಯಿತ್ತು ಬಸವಾ.

ನಿರ್ಗಮನದ ಸುಖಸುಯಿದಾನವಾಯಿತ್ತು ಬಸವಾ,

ನೋಡುವ ವಸ್ತು ಕೂಡೆಬಯಲಾಯಿತ್ತು ಬಸವಾ.

ಎನಗಿನ್ನೇತರಭಕ್ತಿ ಬಸವಾ ? ಎನಗಿನ್ನೇತರ ಮುಕ್ತಿ ಬಸವಾ.


೨೯೨
ಶಿವಶರಣೆಯರ ವಚನಸಂಪುಟ

ಎನಗಿನ್ನು ಶಬ್ದ ನಿಶ್ಯಬ್ದ ಸೂಚನೆಯಾಯಿತ್ತಯ್ಯಾ ಬಸವಾ,

ಸಂಗಯ್ಯಾ , ಬಸವನ ಗಮನದರಿವು ಎನಗೆಲ್ಲಿಯದು ? || ೧೨ ||

೯೫೩

ಜನನ ಮರಣವಳಿದು, ಜಲ್ಮದೊಪ್ಪವ ಕಳೆದು,

ಪ್ರಸನ್ನಮೂರ್ತಿಯ ಕಂಡು ಪ್ರಭಾಪೂರಿತ ಸ್ವರೂಪವಾಗಿ,

ಮನೋವಿಲಾಸದ ಹಂಗ ಹರಿದು,

ಅಂಗ ಲಿಂಗ ನಿಜವುಮೂರ್ತಿಯಾಗಿ ಹೊಳೆಯಲು

ಸಂಗ ಸಂಬಂಧ ಶಿವಾನುಕೂಲತೆಯಾಯಿತ್ತಿಂದು ಸಂಗಯ್ಯ . . |

೯೫೪

ಜಯ ಸುಖ ವಿಸುಖವಿಲ .

ಜಯ ವಿಜಯವಾಯಿತ್ತು.

ಅಪ್ರತಿಮನ ಅರುಹ ತಿಳಿದು,

ಆ ಅಪ್ರತಿಮನ ಇರವ ತಿಳಿದು,

ಅಲ್ಲದ ಅನುಭಾವಕ್ಕೆ ಅಲ್ಲದ ವಿವರವ ಕಂಡು

ಆನು ಬದುಕಿದೆನಯ್ಯ ಸಂಗಯ್ಯ . || ೧೫೪ ||

೯೫೫

ಜ್ಞಾನವಿಲ್ಲದಕ್ರೀಯ ಮಾಡಿದಲ್ಲಿ ಫಲವೇನಯ್ಯ ?

ಆ ಜ್ಞಾನವುಕ್ರೀಯನು ಸಂಬಂಧಿಸಲು

ಸಂಬಂಧ ಸ್ವಯವಾಯಿತ್ತಯ್ಯ .

ಅಪ್ರಮಾಣದ ಪ್ರಕಾಶವ ಕಂಡು

ಅರುವನರಿದು ತಿಳಿಯಲು ಸಂಗಯ್ಯನಲ್ಲಿ ಪ್ರಸಾದಿಯಾದೆನಯ್ಯ . . || ೧೫

೯೫೬

ಠಾವಿಲ್ಲ , ಆ ಠಾವಿಂಗೆ ಆ ಠಾವೆ ಮೂಲವಾಯಿತ್ತು .

ಮೂಲವಡಗಿದ ರೂಪಿಂಗೆ ಮುಕ್ತಳಾದೆನು.

ಮುನ್ನಲೊಂದು ಸುಖವ ಕಂಡು

ಮೂಲಾಧಾರ ರೂಪವರಿ .

ಎನಗೆ ಪ್ರಣವ ಸ್ವರೂಪೇ ಸಾಧ್ಯವಾಯಿತ್ತು .

ನಾನು ಹೆಣ್ಣು ರೂಪವಳಿದು ಮುಕ್ಯಂಗನೆಯಾದೆನಯ್ಯ ಸಂಗಯ್ಯ . || ೧


ನೀಲಮ್ಮನ ವಚನಗಳು ರ್೨ಃ

೯೫೭

ತತ್ವದ ಮನ ತಾಯಿಗಳ ಬಿಡಾರವೆಂದೆನಿಸುವುದು ಬಸವಾ.

ಮೂವತ್ತಾರು, ಇನ್ನೂರ ಹದಿನಾರು ಬಿಡಾರದಲ್ಲಿ ನಿಂದು,

ಬಯಲೊಂದುಗೂಡಲು ಬಸವಯ್ಯಾ ,

ಭಕ್ತಿಸ್ಥಲ ಶುಭಸೂಚನೆಯಾಯಿತ್ತು ಬಸವನಲ್ಲಿ ಎನಗೆ.

ಸಂಗಯ್ಯನಲ್ಲಿ ಬಸವನಂಗ ನಿರಂಗವಾದ ಬಳಿಕ

ಆನೆಂಬುದಿಲ್ಲವಯ್ಯಾ ಬಸವಯ್ಯಾ ನಿಮ್ಮಲ್ಲಿ. || ೧೭ ||

೯೫೮

ತತ್ವದ ಹಂಗೇನೋ ಶರಣ ಬಸವಂಗೆ ?

ಭಕ್ತಿಯ ಹಂಗೇನೋ ಶರಣ ಬಸವಂಗೆ ?

ಮುಕ್ತಿಯ ಹಂಗೇನೋ ಶರಣ ಬಸವಂಗೆ ?

ಇಹಪರ ಸಂಸಿದ್ಧಿಯಿಲ್ಲವಯ್ಯಾ ಸಂಗಯ್ಯಾ ,

ನಿಮ್ಮ ಶರಣಬಸವ ನಿರಾಭಾರಿಯಾದ ಬಳಿಕ , || ೧೫೮ ||

೯೫೯

ತನುವಾವುದಯ್ಯಾ ಬಸವಾ ?

ಮನವಾವುದಯ್ಯಾ ಬಸವಾ ?

ನೆನಹಿನ ಪರಿಣಾಮವಾವುದಯ್ಯಾ ಬಸವಾ ?


ಉಭಯದಗುಣ ನಷ್ಟವಾದ ಬಳಿಕ ,

ಪ್ರಸನ್ನ ಸುಖಭಾವವುಂಟೆ ಸಂಗಯ್ಯನಗುರುಬಸವಾ ? || ೧೫೯ ||

೯೬೦

ತನುವಿಲ್ಲ ಬಸವಯ್ಯಂಗೆ, ಮನವಿಲ್ಲ ಬಸವಯ್ಯಂಗೆ,

ನೆನಹಿನ ತನುಮನ ನಷ್ಟವಾದ ಬಳಿಕ,

ಸಂಗಯ್ಯನಲ್ಲಿ ಬಸವಯ್ಯನರೂಪುನಿರೂಪವಾದ ಬಳಿಕ. || ೧೬೦ ||

೯೬೧

ತಾಯಿಲ್ಲವೆನಗೆ ಬಸವ ಬಸವಾ.

ಭಕ್ತಿಯಿಲ್ಲವೆನಗೆ ಸಂಗ ಸಂಗ್ರಾ,

ಪ್ರತಿರೂಪುನಿಜರೂಪವಯ್ಯಾ ಸಂಗಯ್ಯಾ. || ೧೬೧ ||


೨೯೪
ಶಿವಶರಣೆಯರ ವಚನಸಂಪುಟ

೯೬೨

ತಿಳುವಿನ ಸಂಗವಿನ್ನೇತಕಯ್ಯ ಎನಗೆ.

ಆ ತಿಳುಹಿನ ಪ್ರಾಣ ನಿರಾಧಾರದಲ್ಲಿ ನಿಂದ ಬಳಿಕ,

ಕಳೆಯಿಲ್ಲವೆನಗೆ ತಿಳುಹಿಲ್ಲವೆನಗೆ,

ಅಂಗದ ಸಂಗಿಗಳಲ್ಲಿ ಆಚಾರದ ಕುರುಹಿನವಳಲ್ಲ .

ಅಕ್ಷಯದ ಸಮಾಧಾನದಲ್ಲಿ ನಿಂದ ಬಳಿಕ

ಪರಿಣಾಮಿಯಾನಯ್ಯ ಸಂಗಯ್ಯ . || ೧೬೨ ||

೯೬೩

ತ್ರಿವಿಧದ ಮಾಟವಿಲ್ಲವೆನಗೆ ಬಸವಾ.

ತ್ರಿವಿಧದ ಪ್ರಸಾದವಿಲ್ಲವೆನಗೆ ಬಸವಾ.

ತ್ರಿವಿಧದ ಕುರುಹಿಲ್ಲವೆನಗೆ ಬಸವಾ.

ತ್ರಿವಿಧದ ಗೊತ್ತಿಲ್ಲವೆನಗೆ ಬಸವಾ.

ಸಂಗಯ್ಯನಲ್ಲಿ ಬಸವ ಬಯಲಾದಬಳಿಕ. || ೧೬೩ ||

EE

ತ್ರಿವಿಧ ಪ್ರಸಾದವಿಲ್ಲ , ತ್ರಿವಿಧಾಕಾರವಿಲ್ಲ ,

ತ್ರಿವಿಧ ನಲವಿಲ್ಲ , ಕಾರುಣ ರೂಪಿನಲ್ಲಿ

ಪರಿಣಾಮವನಯಿದಲು

ಸಂಗ ನಿಸ್ಸಂಗವಾಯಿತ್ತಯ್ಯ ಸಂಗಯ್ಯ . || ೧೬೪ ||

೯೬೫

ದಾಯದಲ್ಲಿ ಹುಟ್ಟಿದ ಧ್ವನಿ ಆ ದಾಯದಲ್ಲಿ ಹೋಯಿತ್ತು.

ಆ ದಾಯ ನಿರಾಕಾರವಾಗಿ

ಸಂಗ ಸಂಯೋಗವಾಯಿತ್ತಯ್ಯ ಸಂಗಯ್ಯ . || ೧೬ ||

토트

ದೃಢವಿಡಿದ ಭಕ್ತಿಗೆ ಸಮಯಾಚಾರವೆತಕ್ಕಯ್ಯಾ ?

ಆ ದೃಢದ ಭಕ್ತಿಯನರಿಯಲು

ಆ ದೃಢದ ಮೂರುತಿಯಾಯಿತ್ತಯ್ಯ ಸಂಗಯ್ಯ . || ೧೬೬ ||

೯೬೭

ದ್ವಯಲಿಂಗವೆಂಬರು;

ದ್ವಯಲಿಂಗವಿಲ್ಲದವಳೆಂದರಿಯರು.
೨೯೫
ನೀಲಮ್ಮನ ವಚನಗಳು

ಪ್ರಸಾದಿಯೆಂದೆಂಬರೆನ್ನ ;

ಪ್ರಸಾದದ ಹಂಗಿಲ್ಲದವಳೆಂದರಿಯರನ್ನ ,

ಗುರುವಚನ ರಚನೆಯನರಿದು
|| ೧೬೭ ||
ನಿಃಪ್ರಪಂಚಿಯಾನಾದೆನಯ್ಯ ಸಂಗಯ್ಯ .

೯೬೮

ಧ್ವನಿಯ ತೋರಲು, ಆ ಧ್ವನಿಯ ಮರೆಯಲ್ಲಿ ಹುಟ್ಟಿದ

ಮದ್ದುರು ಬಸವಣ್ಣಂಗೆ ಶಿವಸುಖವಾಯಿತ್ತು ಬಸವಾ.

ಆ ಧ್ವನಿಯಡಗಿ ಅಪ್ರತಿಮಸಂಗ ನಿರ್ಮಲಾಕಾರವಾಯಿತ್ತಯ್ಯಾ ಎನಗೆ.

ಪ್ರಣವಸ್ವರೂಪಬಸವನ ಕಂಡಬಳಿಕ

ಆನು ಬಸವನ ಶಿಶುವಾದೆನಯ್ಯಾ ಸಂಗಯ್ಯಾ . || ೧೬೮ ||

೯೬೯

ನಡವ ಕಾಲಿಂಗೆ ಶಕ್ತಿ ನಿಃಶಕ್ತಿಯಾಯಿತ್ತು .

ನುಡಿವ ನಾಲಗೆಗೆ ವಚನ ನಿರ್ವಚನವಾಯಿತ್ತು .

ಶಬ್ದ ನಿಃಶಬ್ದವಾಗಿ ಪ್ರಾಣ ಪರಿಣಾಮವಾಗಿ

ಕಾಯದ ಕುರುಹನಳಿದು

ಶಬ್ದ ನಂದಿಯಾನಾದೆನಯ್ಯ ಸಂಗಯ್ಯ . || ೧೬೯ ||

೯೭೦

ನಡೆನೋಟವಿಲ್ಲವೆ ತೃಪ್ತಿಯ ಕೂಡಲು ?

ಆ ನಡೆನೋಟತೃಪ್ತಿಯಲ್ಲಿ ಸುಯಿದಾನವಾಯಿತ್ತು.

ಆ ಸುಯಿದಾನ ಸುಖದಲ್ಲಿ ನೆಲೆಗೊಳ್ಳಲು

ನಡವ ಗಮನ ಉಡುಗಿತ್ತು .

ಸಂಗ ನಿಸ್ಸಂಗವಾಯಿತ್ತು ಸಂಗಯ್ಯ . || ೧೭೦ ||

೯೭೧

ನಡೆಯಲಿಲ್ಲ ನುಡಿಯಲಿಲ್ಲ

ಕಾಣಲಿಲ್ಲ ಕೇಳಲಿಲ್ಲ

ಪ್ರಾಣವಿಲ್ಲ ಪ್ರಸಾದವಿಲ್ಲ ಪರಿಣಾಮವಿಲ್ಲ

ಏನೂ ಇಲ್ಲ ಏನೆಂದೆನಲಿಲ್ಲ ಸಂಗಯ್ಯ . || ೧೭೧ ||

೯೭೨

ನನಗೊಂದು ತಾಣವಾಗಿಯದೆ ನಾನಲಡಗಲೇಬೇಕು.

ನಾನು ನಿರಾಳ ಸಂಬಂಧಿಯಾಗಿರಲು


೨೯೬
ಶಿವಶರಣೆಯರ ವಚನಸಂಪುಟ

ಪ್ರತಿಯಿಲ್ಲದ ರೂಪನರುಹು ಕುರುಹ ಮಾಡಲು

ಒಡಲಿಲ್ಲದ ಹುಯ್ಯಲಕಂಡೆ ನಾನು.

ಸಂಗಯ್ಯನಲ್ಲಿ ಇರಪರವಳಿದು ಪ್ರಸಾದಿಯಾದೆನು. || ೧೭೨ ||

- ೯೭೩

ನನ್ನನಾರೂವರಿಯರು,

ನಾನು ಸ್ವರ್ಗಿಯಲ್ಲ ಅಪವರ್ಗಿಯಲ್ಲ;

ನನ್ನನಾರೂವರಿಯರು,

ನಾನು ಮುಕ್ಕಳಲ್ಲ ಅಮುಕ್ತಳಲ್ಲ .

ನನ್ನನಾರೂ ಅರಿಯರು,

ಸಂಗಯ್ಯನಲ್ಲಿ ರೂಪಿಲ್ಲದ ಹೆಣ್ಣಾದ ಕಾರಣ ನನ್ನನಾರೂ ಅರಿಯರು. || ೧೭೩ ||

೯೭೪

ನಮಗಾರ ಸಂಗವಿಲ್ಲ , ನಮಗಾರ ಸಂಗವಿಲ್ಲ ;

ನಮಗಾರ ಪರವಶವಿಲ್ಲ , ನಮಗಾರ ಇರಪರವಿಲ್ಲ ;

ನಮಗಾರ ಪರವಿಲ್ಲ , ನಮಗೆ ಹೃದಯದ ಹಂಗಿಲ್ಲವಯ್ಯಾ.

ನಮಗೆ ನಿಮ್ಮ ಹಂಗಿಲ್ಲ ,


|| ೧೭೪ ||
ಸಂಗಯ್ಯನಲ್ಲಿ ಬಸವಸ್ವಯಲಿಂಗಿಯಾದಬಳಿಕ .

೯೭೫

ನಮ್ಮ ಹಂಗಿಗನಲ್ಲ ಬಸವಯ್ಯನು.

ನಮ್ಮ ಸಂಗಿಗನಲ್ಲ ಬಸವಯ್ಯನು.

ನಮ್ಮ ಇರದವನಲ್ಲ ಬಸವಯ್ಯನು.

ನಮ್ಮ ಪರದವನಲ್ಲ ಬಸವಯ್ಯನು.

ಪ್ರಸಾದವೇದ್ಯಶರಣ ಬಸವಯ್ಯನು.
|| ೧೭೫ ||
ಪ್ರಸನ್ನ ಕಾಯವಾದನಯ್ಯ ಸಂಗಯ್ಯಾ .

೯೭೬

ನವಕಲ್ಪಿತದ ರೂಪನರಿದು,

ನವಯೌವನದ ಸ್ವರೂಪವ ಕಂಡು,

ನವಪ್ರಣವವಾಯಿತ್ತಯ್ಯಾ .

ನವಮಾಸವಳಿದು ನವಯೌವನ ಉದಯವಾಯಿತ್ತಯ್ಯಾ,


|| ೧೭೬ ||
ಸಂಗಯ್ಯಾ , ಬಸವಯ್ಯ ನಿಮ್ಮ ತದ್ರೂಪವಾದಬಳಿಕ .
೨೯೭
ನೀಲಮ್ಮನ ವಚನಗಳು

೯೭೭

ನಾಡನಾಳಹೋದರೆ,

ಆ ನಾಡು ಆಳುವ ಒಡೆಯಂಗೆ ನಾಡೆ ಹಗೆಯಾಯಿತ್ತು.

ಹಗೆಯಳಿದು ನಿಸ್ಸಂಗವಾಯಿತ್ತು .

ನಿಸ್ಸಂಗ ವೇದ್ಯವಾಗಿ

ಸಂಗಯ್ಯನಲ್ಲಿ ಮುಕ್ಕಳಾದೆನು ನಾನು. || ೧೭೭ ||

೯೭೮

ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ,

ಅಕ್ಕನರಸ ಬಸವಯ್ಯನು ಬಯಲಕಂಡು ಬಟ್ಟಬಯಲಾದನು. /

ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಯ್ಯನು.

ನಮ್ಮ ಸಂಗಯ್ಯನಲ್ಲಿ ಬಸವಯ್ಯನೈಕ್ಯ ಬಯಲಿಲ್ಲದ ಬಯಲು || ೧೭೮ ||

೯೭೯

ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ?

ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ?

ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ ?

ಪರಿಣಾಮಮೂರ್ತಿ ಬಸವನರೂಪುಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ

ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ ? || ೧೭೯ ||

೯೮೦

ನಾನಾರ ಹೆಸರ ಕುರುಹಿಡಲಯ್ಯಾ ಬಸವಾ ?

ನಾನಾರ ರೂಪ ನಿಜವಿಡಲಯ್ಯಾ ಬಸವಾ ?

ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ ?

ನಾನಾರ ಮನವನಂಗೈಸಲಯ್ಯಾ ಬಸವಾ ?

ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ ಎನಗೆ ಹೆಸರಿಲ್ಲ .

ರೂಪುನಿರೂಪವಾಯಿತ್ತಯ್ಯಾ ಸಂಗಯ್ಯಾ , ಬಸವನಡಗಿದಬಳಿಕ. || ೧೮೦

೯೮೧

ನಾನಾವ ಗಮನವ ಕಂಡೆನಯ್ಯ ?

ನಾನಾವ ಬ್ರಹ್ಮವನರಿದೆನಯ್ಯ ?

ನಾನಾವ ತೃಪ್ತಿಯನರಿದೆನಯ್ಯ ?
೨೯೮ ಶಿವಶರಣೆಯರ ವಚನಸಂಪುಟ

ಇಷ್ಟದಂಗಸುಖವಕಂಡು ಸುಖಿಯಾದೆನಯ್ಯ .

ಮನವಿಲ್ಲ ತನುವಿಲ್ಲ ಆಧಾರಾದಿ ಸುಖವಿಲ್ಲ

ಶುದ್ಧ ನಿಃಕಲ ತತ್ವವಿಲ್ಲವಯ್ಯ .

ಸಂಗಯ್ಯ , ಆತ್ಮಸುಖ ಸಂಭಾಷಣೆಯಂತಯ್ಯ

ಸಂಗಯ್ಯನ ಗುರುಬಸವ. || ೧೮೧ ||

೯೮೨

ನಾನು ನಿಮ್ಮವಳಲ್ಲವಯ್ಯಾ , ನಾನು ಅನಿಮಿಷನವರವಳು.

ನಾನು ನಿಮ್ಮವಳಲ್ಲವಯ್ಯಾ , ನಾನು ಅಜಗಣ್ಣನವರವಳು.

ನಾನು ನಿಮ್ಮವಳಲ್ಲವಯ್ಯಾ , ನಾನು ಪ್ರಭುವಿನಸಂತತಿಯವಳು.

ನಾನು ನಿಮ್ಮವಳಲ್ಲವಯ್ಯಾ , ನಾನು ಮಾದಾರಚೆನ್ನಯ್ಯನ ಮೊಮ್ಮಗಳು.

ನಾನು ನಿಮ್ಮವಳಲ್ಲವಯ್ಯಾ , ನಾನು ಪ್ರಸಾದಿಗಳ ಮನೆಯ ಕೀಳುದೊತ

ನಾನು ನಿಮ್ಮವಳಲ್ಲವಯ್ಯಾ , ಸಂಗಯ್ಯ ,

ನಾನು ಬಸವಯ್ಯನ ಮನೆಯ ತೊತ್ತಿನಮಗಳು . || ೧೮೨ ||

೯೮೩

ನಾವು ನಮ್ಮ ವಶವಲ್ಲದವರ ಸಂಗವ ಮಾಡಲಿಲ್ಲ

ನಾವು ನಮ್ಮ ಪ್ರತಿಯಿಲ್ಲದಮೂರ್ತಿಯ ಕಂಡು

ಕಲಿಯುಗಸಂಪನ್ನೆಯಾದೆನಯ್ಯ .

ಸರ್ವಸಮಯಾಚಾರವ ಕಂಡು

ಸರ್ವಶೀಲವ ತಿಳಿದೆನಯ್ಯ ಸಂಗಯ್ಯ . || ೧೮೩ ||

೯೮೪

- ನಿರ್ಮೂಲವಾಯಿತ್ತಾಹಾ ನಿರಾಲಂಬವಾಯಿತ್ತಾಹ

ನಿರಾಕುಳವಾಯಿತ್ತಾಹಾ!

ಪುಣ್ಯದಫಲ ತೋರಿಬಯಲನೆಕೂಡಿತ್ತು .

ಆ ಬಯಲು ನಿರ್ವಯಲಾಯಿತ್ತು.

ಆ ನಿರ್ವಲಯನುಡುಗಿ ನಿಜಸುಖಿಯಾದೆನಯ್ಯಾ ನಾನು,


|| ೧೮೪ ||
ಸಂಗಯ್ಯನಲ್ಲಿ ನಿಶೂನ್ಯವಾಯಿತ್ತಯ್ಯಾ .

ನಿರೂಪರೂಪಿನಲ್ಲಿ ಅಡಗಿ,

ನಿರಾಲಂಬವಾಯಿತ್ತು ಬಸವನಲ್ಲಿ .
೨೯೯
ನೀಲಮ್ಮನ ವಚನಗಳು

ನಿರಾಲಂಬಮೂರ್ತಿಯಲ್ಲಿ

ನಿರ್ಮಲಸುಧೆಯನನುಭವಿಸಿದೆನಯ್ಯಾ ನಾನು ಬಸವಾ.

ಅನುಭವಿಸಿ ಬಸವ ಕುಳವಳಿದು


|| ೧೮ ||
ಭ್ರಮೆಯಳಿದೆನಯ್ಯಾ ಸಂಗಯ್ಯಾ .

೯೮೬

ನಿರೋಧವಳಿದು ನಿರಾಕಾರವಾಯಿತ್ತು ಬಸವಾ,

* ನಿರಾಕುಳದ ಭಕ್ತಿ ನಿರ್ವಯಲಾಯಿತ್ತು ಬಸವಾ.

4 & ss = ನಿಃಪ್ರಪಂಚಿಕನಾದೆ ಬಸವಾ, ನಿಃಪರಿಣಾಮಿಯಾದೆ ಬಸವಾ,


> ನಿಸಿ
ರೂಪುನಿರೂಪುವಿಡಿದ ಬಸವಾ.

ಸಂಗಯ್ಯನ ಮನಃಪ್ರೀತಿಯ ಬಸವಾ

ಭರಿತ ನಿರ್ಧರಿತವಾಯಿತು. || ೧೮೬ ||

೯೮೭

ನಿಷ್ಠೆಯೆಂಬುದನೊಂದ ತೋರಿ

ಇಷ್ಟಪ್ರಾಣಭಾವದಲ್ಲಿ ಕಷ್ಟವನಳಿದೆನಯ್ಯ .

ಕಾಯದ ಸಂಗವಳಿದು ಕಾಮನಿಃಕಾಮವಾಗಿ ನಿಂದೆನಯ್ಯ .

ಅನುಭವಸುಖವಳಿದು ಅಪ್ರತಿಮ ಇರವ ಕಂಡು ಬದುಕಿದೆನಯ್ಯ ,


ಸಂಗಯ್ಯ ಬಸವನಡಗಿದ ಕಾರಣ ಕಾಯವ ನಾನಳಿದೆನು . || ೧೮೭ ||

Eeses

ನೀರುಂಡ ಸಾರ ನಿಸ್ಸಾರವಾಯಿತ್ತಯ್ಯ .

ನಿರಾಳದಪದ ನಿಃಪ್ರಪಂಚಿನಲ್ಲಿ ಅಡಗಿತ್ತಯ್ಯ .

ಅಂಗದ ಸಂಗವ ಹರಿದು ನಿರಂಗಿಯಾದೆ ನಾನು.

ಉಲುಹಡಗಿದೆ ನಾನು

ಸಂಗಯ್ಯನಲ್ಲಿ ಪ್ರಸನ್ನ ಮೂರುತಿಯುಳ್ಳವಳಾದೆನಯ್ಯ . || ೧೮೮ ||

ESSE

ನೆನಹು ನಷ್ಟವಾಯಿತ್ತು ಬಸವಾ, ಲೀಯವಾಗಲು.

ಇತರೇತರ ಮಾರ್ಗವನರಿಯದೆ ಇದ್ದೆನಯ್ಯಾ ಬಸವಾ,

ಸಂಗಯ್ಯನಲ್ಲಿ ಲೀಯವನೆಯ್ದಲು. || ೧೮ ||

εεο

ನೆನೆಯಲಾಗದು ಎನ್ನ ಹೆಣ್ಣೆಂದು ನೀವು ಭಕ್ತರು.

ನೆನೆಯಲಾಗದು ಎನ್ನ ಭಕ್ತಿಯೆಂದು ನೀವುಶರಣರು.


4

ಸಿಸಿ :

೩೦ ಶಿವಶರಣೆಯರ ವಚನಸಂಪುಟ

ನೆನೆಯಲಾಗದು ಎನ್ನ ಮುಕ್ತಿಯೆಂದು ನೀವು ಶರಣರು.

ನೆನೆಯಲಾಗದು ಎನ್ನ ರೂಪುನಿರೂಪಿಯಾದವಳೆಂದು ನೀವು

ನೆನದಹನೆಂಬ ನೆನಹು ನೀವೆ ನೀವೆಯಾದ ಕಾರಣ

ಸಂಗಯ್ಯನಲ್ಲಿ

ಪುಣ್ಯವಿಲ್ಲದ ಹೆಣ್ಣ ನೀವೇತಕ್ಕೆ ನೆನವಿರಿ ? || ೧೯೦ ||

εεο

ನೆಲೆಯಿಲದ ಜಲವ ಹೊಗ್ರಡೆ

ಆ ಜಲದ ನೆಲೆಯೆ ಕಾಣಬಂದಿತ್ತು ಎನಗೆ.

ಪಕ್ಷಿಯ ರೆಕ್ಕೆಯ ಕಂಡು ಅಕ್ಕಜಂ ಭೋ ಎನಲೊಡನೆ,

ಆ ನೀರೊಳಗೆ ಉದಾರತೆಯಾದೆನಯ್ಯಾ ನಾನು .

ಸಂಗಯ್ಯನಲ್ಲಿ ಬಸವಯ್ಯ ಕುರುಹಳಿದಮೂರ್ತಿಯಾದನು. || ೧೯೧ ||

೯೯೨

ನೋಡುವಡೆ ಎನ್ನ ಕಣ್ಣಿಂಗೆಗೋಚರವಲ್ಲ

ಆ ಕಾಯ ಕಲ್ಯಾಣ.

ಆ ಕಾಯ ಕಲ್ಯಾಣದೊಳಗೆ ( 5

ಸರೋವರದಷ್ಟದಳಂಗಳ ಮಧ್ಯದಲ್ಲಿ ಹೆಟ್ಟಿಗೆಯಿರಲು

ಆ ಹೆಟ್ಟಿಗೆಯ ಕುರುಹ ಕಂಡು

ನಿಷ್ಠೆಯ ಇರವನರಿದೆನಯ್ಯ ಸಂಗಯ್ಯ . || ೧೯೨ ||

εε8

ಪಯಣವಿಲ್ಲದೆ ಗಮನವ ಕಂಡವರುಂಟೆ ?

ಗತಿಯಿಲ್ಲದೆ ಪೂಜೆಯ ಮಾಡಿದವರುಂಟೆ ?

ಹೊಲನಿಲ್ಲದೆ ಫಲವನುಂಡವರುಂಟೆ ?

ಮೃಗವಿಲ್ಲದೆ ಬೇಂಟೆಯನಾಡಿದವರುಂಟೆ ?

ಅರಸಿಯಿಲ್ಲದೆ ಅರಸಾದವರುಂಟೆ ?

ಸಂಗಯ್ಯ , ಮುಖವಿಲ್ಲದ ಪ್ರಸಾದವನುಂಡವರುಂಟೆ ? || ೧೯೩ ||

* ೯೯೪

ಪರಮನ ಹಂಗು, ಪ್ರಾಣದ ಸಂಗ ಉಂಟೆಂದೆನಲಿಲ್ಲ ಬಸವಾ.

ಪರಶಿವನ ವಿಲಾಸದಲ್ಲಿರಲೊಂದುದಿನ

ಬಸವಾ ಎಂಬ ಮೂರಕ್ಷರವ ಕಂಡೆ.


೩೦೧
ನೀಲಮ್ಮನ ವಚನಗಳು

ಬಸವಾ ಎಂಬ ಮೂರಕ್ಷರವ ಕಂಡು,

ಪ್ರಾಣಲಿಂಗಸಂಬಂಧಿಯಾದೆನು ನಾನು ಬಸವಾ.

ಆ ಪ್ರಣವದ ಹೊಳಹನರಿಯಹೋದಡೆ,

ಆ ಬೆಳಗು ಅಲ್ಲಿ ಕಾಣಬಂದಿತ್ತಯ್ಯಾ ಬಸವಾ.

ಸಂಗಯ್ಯಾ , ಸ್ವಯಲಿಂಗಸಂಬಂಧಿಯಾನಾದೆನು. || ೧೯೪ ||

೯೯೫

ಪಾರ್ವತಿಯ ರೂಪಕಂಡು ಪರಶಿವನಸಂಗ ನಿಸ್ಸಂಗವಾಗಿ,

ತಾಯಿಮಗನಂಗದಿಂದ ತನುವಳಿದು ನಿರಾಭಾರರೂಪವನೆ ,

ಬಸವನ ಅನುಭವದಿಂದ ವಿವರವ ಕಂಡು

ವಿಚಾರಪತ್ನಿಯಾದೆನಯ್ಯಾ ಸಂಗಯ್ಯಾ . || ೧೯ ||

೯೯೬

ಪ್ರಣವದ ಹೆಸರಿಲ್ಲ ಬಸವಂಗೆ.

ಪ್ರಣವದ ಕುರುಹಿಲ್ಲ ಬಸವಂಗೆ.

ಪ್ರಣವದ ನೆಲೆಯಿಲ್ಲ ಬಸವಂಗೆ.

ಪ್ರಣವದ ರೂಪಿಲ್ಲ ಬಸವಂಗೆ.

ಪ್ರಣವವನೋದಿ ಮೊದಲಿಲ್ಲ ಬಸವಂಗೆ

ಪ್ರಣವಕ್ಕೆ ಅಪ್ರಮಾಣನಾದ ನಮ್ಮ ಬಸವನು ಸಂಗಯ್ಯಾ.|| ೧೯೬ ||

೯೯೭

ಪ್ರಣವಾಕ್ಷರವ ಕಂಡು ಪ್ರಣವರೂಪನರಿದೆನಯ್ಯ

ಪ್ರಣವದ ಆಯತವ ತಿಳಿದು

ಹೊರೆಯಳಿದುಳಿದೆನಯ್ಯ ಸಂಗಯ್ಯ . || ೧೯೭ | |

εες

ಪ್ರಸಾದಿಗಳು ಪ್ರಸಾದಿಗಳೆಂದೆಂಬರಯ್ಯ ,

ತಾವು ಪ್ರಸಾದಿಗಳಾದ ಪರಿಯೆಂತಯ್ಯ ?

ಪರಿಪೂರ್ಣದ ನೆಲೆಯ ತಿಳಿದು

ಪರಂಜ್ಯೋತಿಯ ಅನುಭವವನರಿಯದನ್ನಕ್ಕ

ತಾವು ಪ್ರಸಾದಿಗಳಾದ ಪರಿಯೆಂತಯ್ಯ ?

ಪರಮಸುಖದ ಅನುಭವವನರಿದು

ಇತರೇತರ ಮಾರ್ಗವ ಕಾಣದೆ


೩೦೨ ಶಿವಶರಣೆಯರ ವಚನಸಂಪುಟ

ಬಯಲಕೂಡಿದಾತ ನಮ್ಮ ಬಸವನೆ ಪ್ರಸಾದಿಯಲ್ಲದೆ

ಮತ್ತಾರಿಗೂ ಪ್ರಸಾದಿಸ್ಥಲ ಸಾಧ್ಯವಾಗದಯ್ಯ || ೧೯೮ ||


ಸಂಗಯ್ಯ ,

εεε

ಪ್ರಾಣದ ಹಂಗೆಮಗಿಲ್ಲ ,

ಪ್ರಸಾದದ ಹಂಗೆಮಗಿಲ್ಲ ,

ಪರಿಣಾಮದ ಹಂಗೆಮಗಿಲ್ಲ ,

ಈ ಕಾಯದ ಹಂಗೆಮಗೆ ಮುನ್ನವೆಯಿಲ್ಲ .

ಇಹ[ ಪ] ರದ ಹಂಗು ಎಮಗೆ ಮುನ್ನವೆಯಿಲ್ಲ .

ಸಂಗಯ್ಯ , ನೀನಿಲ್ಲದ ಕಾರಣ ನಾ ಮುನ್ನವೆಯಿಲ್ಲ . || ೧೯೯ ||

ಪ್ರಾಣಯೋಗವ ಕಂಡು ಮನಯೋಗ ಬಳಲಿತ್ತು .

ಮನಯೋಗವ ಕಂಡು ತನುಯೋಗಬಳಲಿತ್ತು .

ಈ ತ್ರಿವಿಧವೂ ಬಳಲಿದ ಬಳಲಿಕೆಯನರಿಯದೆ

ಮರಹು ನಷ್ಟವಾಯಿತ್ತಯ್ಯ ,

ಸಂಗಯ್ಯನ ಗುರುಬಸವ ನೀನಡಗಿದ ಬಳಿಕ . || ೨೦೦ ||

೧೦೦೧

ಪ್ರಾಣವಿಲ್ಲದ ಹೆಣ್ಣು ನಾನಾಗಿರಲು,

ಆ ಪ್ರಾಣವಿಲ್ಲದ ಕಾಯಕ್ಕೆ ಪ್ರಾಣ ಪ್ರಸನ್ನರೂಪಾಯಿತ್ತು .

ಎಲ್ಲವನಳಿದು ಎಲ್ಲವ ತಿಳಿದು ಎಲ್ಲಾ ವಸ್ತುವ ಕಂಡು

ನಿರ್ಲೇಪಿಯಾದೆನಯ್ಯ ಸಂಗಯ್ಯ . || ೨೦೧ ||

ಪ್ರಾಣವಿಲ್ಲ ಪ್ರಸಾದವಿಲ್ಲ

ಪರಿಣಾಮದರುಹು ಮುನ್ನವೆಯಿಲ್ಲ .

ಪರವಶದನುಭಾವವ ಕಂಡು

ಅನುಭವಸುಖಿಯಾದೆನಯ್ಯ ,
|| ೨೦೨ ||
ಆನು ಅನುಭವಪರಿಣಾಮಿಯಾದೆನಯ್ಯ ಸಂಗಯ್ಯ .

೧೦೦೩

ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.

ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು.


೩೦೩
ನೀಲಮ್ಮನ ವಚನಗಳು

ವ್ರತವಳಿದ ಪ್ರಪಂಚ ಎಂದರೆನ್ನ ಎಮ್ಮಯ್ಯನವರು .

ಸಂಸಾರ ಬಂಧನ ಹರಿದು ನಿಃಸಂಸಾರಿಯಾದೆನಯ್ಯ .

ಸಂಗಯ್ಯ , ಎಮ್ಮಯ್ಯನವರ ಕರುಣದಿಂದ


|| ೨೦೩ ||
ಆನು ಪರಮ ಪ್ರಸಾದಿಯಾದೆನಯ್ಯ .

ಬಸವಣ್ಣನೆ ಗುರುವೆಂದು ಭಾವಿಸಲಾಗಿ,

ಎನಗೆ ಬಸವಣ್ಣನೆ ಗುರುವಾದನಯ್ಯಾ,

ಚೆನ್ನಬಸವಣ್ಣನೆ ಲಿಂಗವೆಂದು ಭಾವಿಸಲಾಗಿ,

ಎನಗೆ ಚೆನ್ನಬಸವಣ್ಣನೆ ಲಿಂಗವಾದನಯ್ಯಾ ,

ಪ್ರಭುದೇವರೆ ಜಂಗಮವೆಂದು ಭಾವಿಸಲಾಗಿ,

ಎನಗೆ ಪ್ರಭುದೇವರೆ ಜಂಗಮವಾದನಯ್ಯಾ .

ಚಿಲ್ಲಾಳದೇವನೆ ದೇಹವೆಂದು ಭಾವಿಸಲಾಗಿ,

ಎನಗೆ ಚಿಲ್ಲಾಳದೇವನೆ ದೇಹವಾದನಯ್ಯಾ .

ಇಹಃಪಗೆಯಾಂಡರೆ ಧನವೆಂದು ಭಾವಿಸಲಾಗಿ ,

ಇಹಃಪಗೆಯಾಂಡರೆ ಧನವಾದನಯಾ .

ಇಂತೀ ಐವರ ಕಾರುಣ್ಯಪ್ರಸಾದವನುಂಡು

ಮಹಾಮನೆಯಲ್ಲಿ ಸುಖಿಯಾದೆ, ಸಂಗಯ್ಯಾ .

೧೦೦೫

ಬಸವನರಿವು ನಿರಾಧಾರವಾಯಿತ್ತು.

ಬಸವನ ಮಾಟ ನಿರ್ಮಾಟವಾಯಿತ್ತು .

ಬಸವನಭಕ್ತಿ ಬಯಲನೆಕೂಡಿನಿರ್ವಯಲಾಯಿತ್ತು .

ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ

ನಿಶ್ಯಬ್ದವಾಯಿತ್ತಯ್ಯಾ ಸಂಗಯ್ಯಾ. || ೨೦ ||

೧೦೦೬

ಬಸವನ ಹೆಸರಳಿಯಿತ್ತು, ಬಸವನ ಕುರುಹಳಿಯಿತ್ತು ,

ಬಸವನ ಭಾವವಳಿಯಿತ್ತು , ಬಸವನಮೂರ್ತಿಯ ಕರ್ಮವ ಹರಿದು

ಆನು ನಿಃಕರ್ಮಿಯಾದೆನಯಾ.

ನಿಃಕರ್ಮಿಯಾದ ಕಾರಣ ಅರಿವನರಿದು

ಪ್ರಣವಮೂರ್ತಿಯ ತಿಳಿದು

ಆನು ಬದುಕಿದೆನಯ್ಯಾ ಸಂಗಯ್ಯಾ . || ೨೦೬ ||


ಶಿವಶರಣೆಯರ ವಚನಸಂಪುಟ

೧೦೦೭

ಬಸವಯ್ಯಾ ಬಸವಯ್ಯಾ ಹುಯ್ಯಲಿಲ್ಲದ ಹುಲ್ಲೆಯಾದೆಯಾ ?

ಬಸವಯ್ಯಾ ಬಸವಯ್ಯಾ ಕಾಯವಿಲ್ಲದ ದೇಹಿಯಾದೆಯಾ ?

ಬಸವಾ ಬಸವಯ್ಯಾ ಕರ್ಮವಿರಹಿತನಾದೆಯಾ ?

ಸಂಗಯ್ಯನಲ್ಲಿ ನಿರ್ಮಳಮೂರ್ತಿ ಬಸವಯ್ಯಾ. || ೨೦೭ ||

೧೦೦೮

ಬಸವಾ ಬಸವಾ ಎಂಬ ಶಬ್ದವಡಗಿತ್ತು .

ಬಸವ ಬಸವಾಯೆಂಬ ರೂಪುನಿರೂಪಾಯಿತ್ತು .

ಬಸವನ ಕಾಯವಳಿದು ನಿರಾಕುಳವಾಗಲು

ಆನು ಬಸವಾ ಬಸವಾ ಬಸವಾಯೆಂದು

ಬಯಲಾದೆನಯ್ಯಾ . 1 ೨೦೮ ||

೧೦೦೯

ಬಸವಾ, ಹಂಗನಳಿದೆ ನಾ ನಿಮ್ಮ ಬಸವಾ.

ನಿಸ್ಸಂಗಿಯಾನಾದೆನಯ್ಯಾ ಬಸವಾ.

ಮುಖ ವಿಮುಖವಾಯಿತ್ತು .

ಬಸವನಿರವನರಿದು ಬಯಲಾನುಭಾವದಿಂದ ಮಾತಿನ ಮುಖವನರಿದು,

ಬಸವನ ಬಯಲವಿಚಾರವ ತಿಳಿದು ಭ್ರಮೆಯನಳಿದು

ಆನು ಬದುಕಿದೆನಯ್ಯಾ ಸಂಗಯ್ಯಾ , || ೨೦೯ ||

೧೦೧೦

ಬಹಿರಂಗದಾರೋಗಣೆಯ ರುಚಿಯನರಿಯಬಾರದು

ಏನು ಕಾರಣವೋ ಲಿಂಗಯ್ಯ ?

ಅಂತರಂಗದಾರೋಹಣೆಯ ಮಹಂತನೇ ಬಲ್ಲನೋ ಲಿಂಗಯ್ಯ .

ಅರಿದು ಮರದವಂ ವಿರೋಧನೆ ?

ಸಜ್ಜನಕ್ಕೆ ಉಪಸಾಕ್ಷಿಯುಂಟೇಲಿಂಗಯ್ಯಾ ?

ಅರುಹು ಸೋಂಕಿದ ಬಳಿಕ


|| ೨೧೦ ||
ನೋಡಲಿಲ್ಲ ಕೂಡಲಿಲ್ಲ ಸಂಗಯ್ಯನ.

೧೦೧೧

ಬುದ್ದಿಯನಳಿದು ನಿರ್ಬುದ್ಧಿವಂತಳಸಂಗದಿಂದ
ನಾನು ಸುಖವ ಕಂಡೆನೆಂದು ನುಡಿದನೆಂದೆ ಬಸವಾ.
೩೦೫
ನೀಲಮ್ಮನ ವಚನಗಳು

ಬಸವನ ಹಂಗುಹರಿದು
|| ೨೧೧ ||
ಆನು ಸಂಗಯ್ಯನಲ್ಲಿ ಸುಖಿಯಾದೆನಯ್ಯಾ ಸಂಗಯ್ಯಾ .

೧೦೧೨

ಬೆಳಗಿನಪ್ರಭೆ ಥಳಥಳಿಸಿ ಹೊಳೆಯಲು,

ಆ ಬೆಳಗಿನೊಳಗೆ ಬೆಳೆದ ಶಿಶುವಾನಯ್ಯಾ ,

ಕಳೆಯರಿಯದೆ ಬೆಳೆದೆನು, ತಿಳುಹಿಲ್ಲದೆ ನಿಂದೆನು.

|| ೨೧೨ ||
ಸಂಗಯ್ಯನಲ್ಲಿ ಬಸವಾ ಬಸವಾ ಬಸವಾ ಎನುತಿರ್ದೆನು.

೧೦೧೩

ಬ್ರಹ್ಮದನೆಮ್ಮುಗೆಯನಳಿದೆ

ಭಾವದ ಸೂತಕವ ಕಳೆದೆ

ಎನಗೆ ಹಿತವರಿಲ್ಲದೆ ನಾನಳಿದೆ.

ಏನಯ್ಯ ಏನಯ್ಯವೆಂಬ ಶಬ್ಬವಿಂದಿಂಗೆ

ಬಯಲೆ ಪರಿಣಾಮದ ಸುಖಬ್ರಹ್ಮದಲ್ಲಿಯಡಕವೆ ಎನಗೆ ?

ಹುಟ್ಟಿಲ್ಲ ಹೊಂದಿಲ್ಲದಮೂರ್ತಿಯಾದೆನೆ.

ಸಂಗಯ್ಯ , ಬಸವನ ಕೂಡಿ ಎನ್ನ ಕಾಯವ ನಾನಳಿದೆನೆ. || ೨೧೩ ||

೧೦೧೪

ಬ್ರಹ್ಮದ ಮುಂದೆ ಒಂದು ಬ್ರಹ್ಮದ ಕುರುಹ ಕಂಡೆ

ಆ ಬ್ರಹ್ಮಕ್ಕೆ ನೆಲೆಯ ಸುಕೃತವ ಕಂಡೆ

ನೆಲೆಯನರಿದು ನಿರುಪಮಾಕಾರಳಾದೆ ನಾನು ಸಂಗಯ್ಯ . || ೨೧೪ ||

೧೦೧೫

ಬ್ರಹ್ಮವಕೂಡಲು ಆ ಬ್ರಹ್ಮವನರಿದು
ಸುಯ್ಯನೆಕಂಡು ಸುಖವನರಿಯಲು

ಹೇಳಲಿಲ್ಲ ಕೇಳಲಿಲ್ಲ .

ಎರಡರ ಸಂಗ ಪರಿಪೂರ್ಣವಾಗಿ

ನಾನು ಬದುಕಿದೆನಯ್ಯ ಸಂಗಯ್ಯ . || ೨೧೫ ||

೧೦೧೬

ಭಕ್ತಿಪ್ರಸಾದ, ಮುಕ್ತಿಪ್ರಸಾದ,

ಇರಪರಪ್ರಸಾದದ ನೆಲೆಯ ಕಂಡು ಸುಖಿಸಿದೆವೆಂಬರು.


೩೦೬
ಶಿವಶರಣೆಯರ ವಚನಸಂಪುಟ

ತಾವರಿಯದ ವಿವರ ತಮಗೆಲ್ಲಿಯದೊ ?

ಸಂಗಯ್ಯನಲ್ಲಿ ಬಸವ ಕಾಯರಹಿತನಲ್ಲದೆ

ಮತ್ತಾರನೂ ಕಾಣೆನಯ್ಯಾ . || ೨೧೬ ||

೧೦೧೭

ಭಕ್ತಿಯಿಲ್ಲದ ಕಿಂಕುರ್ವಾಣವ ಮಾಡಹೋದರೆ

ಆ ಭಕ್ತಿ ಗಹಗಹಿಸಿ ನಕ್ಕಿತ್ತು .

ಕಿಂಕುರ್ವಾಣವಿಲ್ಲದಿದ್ದರೆ ಜ್ಞಾನವಿಲ್ಲದಾಯಿತ್ತು.

ಆ ಜ್ಞಾನ ಜ್ಞಾನಕ್ಕೆ ಸುಯಿದಾನವೃದಲು

ಭಕ್ತಿನೆಲೆಯಾಯಿತ್ತಯ್ಯ ಸಂಗಯ್ಯ . || ೨೧೭ ||

೧೦೧೮

ಭಾವವಿಲ್ಲದರೂಪರೂಪಿಲ್ಲದೆ ಅಡಗಿದೆ.

ನಿಯಮವಿಲ್ಲದ ಕಳೆಯೆ ಕಳೆಯಿಲ್ಲದೆ ಅಡಗಿದೆ.

ಕಾಯವಿಲ್ಲದ ಸುಖವೆ ಸುಖವಿಲ್ಲದೆ ಅಡಗಿದೆ.

ಕರಣಂಗಳ ಸಂಗವನಳಿದು ಕರ್ಮದ ಮಾಟಕೂಟವ ಕಳೆದು

ಕಲ್ಪಿತನಷ್ಟವಾಗಿ ಬಸವಾ ಬಸವಾ ಬಸವಾ ಎಂಬ ಶಬ್ದ

ನಿಶ್ಯಬ್ದವಾಯಿತ್ತಯ್ಯಾ ಸಂಗಯ್ಯಾ . || ೨೧೮ ||

೧೦೧೯

ನೃತ್ಯಾಚಾರವಳಿಯ ನೃತ್ಯವನನುಭವಿಸಿದನು.

ಅಪ್ರತಿಮಲಿಂಗ ನಿಜಾನಂದ ಸುಖವ ಕಂಡು ಸುಯಿದಾನಿಯಾನಾದೆನಯ್ಯ

ಎಲೆಯಯ್ಯ ಏನೆಂದೆನ್ನೆ ನಿಮ್ಮ ಮಹದ ಆಯತವ ?

ಮಹದನುಭವವ ಕಂಡು ಸುಖಿಯಾದೆನಯ್ಯ ಸಂಗಯ್ಯ . || ೨

೧೦೨೦

ಮಂಗಳಸೂತ್ರವ ಕಟ್ಟಲು

ಆ ಮಂಗಳಸೂತ್ರಕ್ಕೆ ಮಣಿಯ ಪವಣಿಸಲು

ಆ ಮಣಿಯ ದ್ವಯದ್ವಾರದಲ್ಲಿ ದಾರವಿದಾರವಾಯಿತ್ತು .

ಆ ದ್ವಾರದ ಮಧ್ಯದಲ್ಲಿ ಬೆಳಗುದೋರಿತ್ತಯ್ಯ

ಸಂಗಯ್ಯನಲ್ಲಿ ಹಿಂಗದ ಸುಖವ ಕಂಡೆನು. || ೨೨೦ ||

೧೦೨೧

ಮಂಡೆಯಿಲ್ಲದೆ ಪುಷ್ಪವ ಮುಡಿಯಲು

ಆ ಮುಡಿವ ಪುಷ್ಪ ಕಂಪಿಲ್ಲದೆಯಡಗಿತ್ತು .


೩ . ೦೭
ನೀಲಮ್ಮನ ವಚನಗಳು

ಕಡಲೇಳು ತುಂಬಿದ ಹೂವತಂದು ಮುಡಿಯಲು

ರೂಪಾಕಾರವಾಯಿತ್ತು .

ತದ್ರೂಪವಡದು ಸಂಗಯ್ಯನಲ್ಲಿ ಪುಷ್ಪಪರಿಮಳಿಸಿತ್ತಯ್ಯ . || ೨೨೧ ||

೧೦೨೨

ಮಂತ್ರಾಕ್ಷತೆಯನರಿದು ಮಂತ್ರಸರವ ಪರಿಗೊಳಿಸಲು

ಆ ಪರಿಯಯಿರವನರಿದು ಪರವಶಳಾದೆನು.

ಆ ಪರವಶದ ಸುಖವ ಕಂಡು ಪರಿಣಾಮಿಯಾದೆನಯ್ಯ ಸಂಗಯ್ಯ . || ೨೨೨ |

೧೦೨೩

ಮಡದಿ ಎಂಬ [ ಶಬ್ದ ] ನಿಶ್ಯಬ್ದವಾದಡೆ ನಾನೀಗ ನಿಜಸುಖಿ ಬಸವಾ.

ಬಸವನಂಗವ ಕಂಡಡೆ ನಾನು ಪರಿಣಾಮಿ ,

ಬಸವನ ಹರುಷವ ಕಂಡರಿದಡೆ

ನಾನೈಕ್ಯಸಂಪನ್ನೆಯಯ್ಯಾ ಸಂಗಯ್ಯಾ. | ೨೨೩ ||

widualistic
ಮಡದಿ ಎನಲಾಗದು ಬಸವಂಗೆ ಎನ್ನನು. *

ಪುರುಷನೆನಲಾಗದು ಬಸವನ ಎನಗೆ.


ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು ,

ಬಸವನನ್ನ ಶಿಶುವಾದನು.

ಪ್ರಮಥರು ಪುರಾತರು ಸಾಕ್ಷಿಯಾಗಿ

ಸಂಗಯ್ಯನಿಕ್ಕಿದ ದಿಬ್ಬವಮೀರದೆ ಬಸವನೊಳಗಾನಡಗಿದೆ. || ೨೨೪ ||

೧೦೨೫

ಮಧ್ಯಕಲ್ಪ ನಾಸ್ತಿಯಾಯಿತ್ತೆ ಬಸವಾ ?

ಪ್ರಾಣ ಪ್ರಸಾದದಲ್ಲಿ ಅಡಗಿತ್ತೆ ಬಸವಾ ?

ಭಕ್ತಿ ಬಯಲಾಯಿತ್ತೆ ಬಸವಾ ?


ಭಾವ ನಿರ್ಭಾವವಾಯಿತ್ತೆ ಬಸವಾ ?

ಕಲ್ಪಿತಗುಣ ನಾಸ್ತಿಯಾಯಿತ್ತೆ ಬಸವಾ ?

ಮನೋಮುಕ್ತವಾಯಿ ಸಂಗಯ್ಯನ ಗುರುಬಸವಾ ? || ೨೨ ||

೧೦೨೬

ಮನದ ಮಧ್ಯದಮೂರ್ತಿಯನರಿದು

ಆ ಮೂರ್ತಿಯ ಇರವನರಿದು
ಶಿವಶರಣೆಯರ ವಚನಸಂಪುಟ

ಶಿವಸೂತ್ರಿಯಾದೆನಯ್ಯ .

ಶಿವಸುಖಸಂಪದವ ಕಂಡು ಪ್ರಣವಾಕಾರವ

ನಿರವಯವ ಮಾಡಿಯಾನು ಬದುಕಿದೆನಯ್ಯ ಸಂಗಯ್ಯ . || ೨೨೬ ||

೧೦೨೭

ಮನದ ಹಂದೆ ಏತಕ್ಕೆ ? ನೀ ಧೀರನೆಂಬೆ.

ನಿನ್ನ ಧೀರವ ನಾ ಕಂಡೆ,

ನಾನು ಧೀರಳೆಂಬುದ ನೀನೇ ಬಲ್ಲೆಯಯ್ಯ ಸಂಗಯ್ಯ ||


. ೨೨೭ ||

೧೦೨೮

ಮನವಿಲ್ಲದ ಮಾತನಾಡಹೋದರೆ

ಆ ಮಾತುಸೊಗಸದಮ್ಮಯ್ಯಂಗೆ,

ಮನ ಘನವಾಯಿತ್ತೆಂದರೆ

ಆ ಮಾತು ಸೊಗಸದಮ್ಮಯ್ಯಂಗೆ,

ಹೆಸರಿಲ್ಲ ರೂಪೆಂದರೆ .

ಆ ಮಾತು ಸೊಗಸದೆಮ್ಮಯ್ಯಂಗೆ,

ಸಂಗಯ್ಯ ಬಸವನೆಂದ[ ರ]

[ ಆ ಮಾತು] ಸೊಗಸದೆಮ್ಮಯ್ಯಂಗೆ. || ೨೨೮ ||

೧೦೨೯

ಮನವಿಲ್ಲದೆ ತನುವ ಕುಡಹೋದರೆ

ಆ ತನು ಮನದಲ್ಲಿ ನಿಂದಿತ್ತು ,

ಮನತನುವಿನ ಸಂಗವಡಗಲು

ಉಭಯ ಸಮಾಧಿ ಸಾಧ್ಯವಾಯಿತ್ತಯ್ಯ .

ಹಿರಿಯತನದ ರೂಪಕಾಣಲು

ಪರಿಪರಿಯ ಭ್ರಮೆಯಡಗಿತ್ತಯ್ಯ .

ಇಷ್ಟ ಪ್ರಾಣದ ಭಾವದ ಸೂತಕ ಹಿಂಗಲು ಆನು

ಸಂಗಯ್ಯನಲ್ಲಿ ಬಸವನನುಭವಿಯಾದೆನಯ್ಯ . || ೨೨೯ ||

೧೦೩೦

ಮನವೊಂದು ರೂಪಾಗಿ ಧನವೊಂದು ರೂಪಾಗಿ

ಅಡಗಿದವು ಅಲ್ಲಲ್ಲಿ .
ಕನಕದ ಬಾಗಿಲ ಕಂಡು
ನೀಲಮ್ಮನ ವಚನಗಳು

ಆ ಬಾಗಿಲು ಬಯಲನನುಕರಿಸುವ ಸುಖವ ಕಂಡು


|| ೨೩೦ ||
ಬದುಕಿದೆನಯ್ಯ ಸಂಗಯ್ಯ .

೧೦೩೧

ಮಲಮೂತ್ರ ವಿಸರ್ಜನೆಯಿಲ್ಲದೆ

ಆ ಮಲ ಮೂತ್ರ ವಿಸರ್ಜನೆಯ ಮಾಡಿದ ಶರಣ

ಮಲ ಮಾಯವಹೊದ್ದದೆ

ಆ ಮಲ ನಿರ್ಮಲಾಕಾರನಾದ ಶರಣ
|| ೨೩೧ ||
ಸಂಗಯ್ಯನಲ್ಲಿ ಬಸವ ಪ್ರಸಾದಿ ಪರಿಣಾಮಿಯಾದೆನು.

೧೦೩೨

ಮನವಿಲ್ಲ ಬಸವಯ್ಯಂಗೆ , ತನುವಿಲ್ಲ ಬಸವಯ್ಯಂಗೆ,

ನೆನಹಿನ ತನುಮನ ನಷ್ಟವಾದಬಳಿಕ ,

ಸಂಗಯ್ಯನಲ್ಲಿ ಬಸವಯ್ಯನರೂಪುನಿರೂಪಾದಬಳಿಕ . || ೨೩೨ ||

೧೦೩೩

ಮಾಟಕೂಟಸಮಯಾಚಾರ ಸದ್ಭಕ್ತಿಯ ನೆಲೆಯ

ನಮ್ಮ ಬಸವಯ್ಯನಲ್ಲದೆ ಮತ್ತಾರೂ ಅರಿಯರು.

ಅರಿವಿನ ಕುರುಹನಾತ್ಮದಲ್ಲಿ ನಿಲಿಸಿ,

ಶಿವಕೂಟಸಮಾಧಿಯ ಕಂಡು

ಆನು ಬದುಕಿದೆನಯ್ಯಾ ಸಂಗಯ್ಯಾ. | ೨೩೩ ||

೧೦೩೪

ಮಾಟವಿಲ್ಲದ ಸಮಯಾಚಾರವ ಮಾಡಹೋದೆಬಸವಾ.

ಆ ಸಮಯಾಚಾರವನರಿದುಕೂಡಿದೆ ಬಸವಾ.

ಆ ಮಾಟ ಸುಯಿದಾನವಾಯಿತ್ತಯ್ಯಾ ಬಸವಾ.

ಆ ಸುಯಿದಾನದಸುಖವನರಿಯಲು

ಸಂಗಯ್ಯನಲ್ಲಿ ಬಸವನೊಂದೆ ರೂಪಾದ. || ೨೩೪ ||

೧೦೩೫

ಮಾತನಳಿದು ಮನವಳಿದು

ಭೀತಿಯ ಕಳದು ಪ್ರಸಂಗವ ಕಳದು

ಪ್ರಸಾದವನಳಿದು ಪ್ರಸನ್ನ ಹಿಂಗಿ ಪ್ರಭೆಯ ಕಂಡು


೩೧೦
ಶಿವಶರಣೆಯರ ವಚನಸಂಪುಟ

ಗಮನ ನಿರ್ಗಮನವಾಯಿತ್ತಯ್ಯ .

ಸಂಗಯ್ಯ , ನಿಮ್ಮ ಬಸವನ ಹಂಗ ಕಳದೆ ನಾನು. || ೨೩೫ ||

- ೧೦೩೬

ಮಾತಿನ ಹಂಗಿಲ್ಲದವಳಾದೆ ನಾನು.

ಅಜಾತನ ಒಲುಮೆಯಿಲ್ಲದವಳಾದೆ ನಾನು.

ಪ್ರಣವದ ಹಂಗಿಲ್ಲದವಳಾದೆ ನಾನು.

ಪ್ರಸಾದದ ಕುರುಹಿಲ್ಲದವಳಾದ ನಾನು.

ಪ್ರಯಾಣದ ಗತಿಯನಳಿದು

ಪರಂಜ್ಯೋತಿವಸ್ತುವ ಕಂಡು ನಾನು

ಬದುಕಿದೆನಯ್ಯ ಸಂಗಯ್ಯ . || ೨೩೬ ||

೧೦೩೭

ಮಾತಿನ ಹಂಗೇತಕ್ಕೆ , ಮನವೇಕಾಂತದಲ್ಲಿ ನಿಂದ ಬಳಿಕ , ಬಸವಯ್ಯಾ ?

ಅಜಾತನ ಒಲುಮೆ ಏತಕ್ಕೆ , ಅರ್ಪಿತದ ಹಂಗಹರಿದಬಳಿಕ , ಬಸವಯ್ಯ

ಎನಗೆ ಸಮಯಾಚಾರವಿನ್ನೇಕೆ, ಭಕ್ತಿಭಾವ ನಷ್ಟವಾದಬಳಿಕ, ಬಸವಯ್ಯಾ ?

ಮಾತಿನ ಸೂತಕ ಹಿಂಗಿ ಮನೋಲೀಯವಾಯಿತ್ತಯ್ಯಾ,

ಸಂಗಯ್ಯಾ, ಬಸವ ಕುರುಹಿಲ್ಲದಮೂರ್ತಿಯಾದ ಕಾರಣ. || ೨೩೭ |

೧೦೩೮

ಮಾತಿಲ್ಲದವನಕೂಡೆ ಮಾತನಾಡಹೋದಡೆ ,

ಎನ್ನ ಮಾತಿನ ಪ್ರಸಂಗವ ನುಡಿಯಲೊಲ್ಲ ಬಸವಯ್ಯನು.

ಮಾತಿನ ಹಂಗ ಹರಿದು, ಆ ಪ್ರಸಂಗದ ಸಂಗವ ಕೆಡಿಸಿ,

ಪರವಶನಾಗಿ ನಿಲಲು ಬಸವಯ್ಯನು,

ಸಂಗಯ್ಯನಲ್ಲಿ ಹೆಸರಿಲ್ಲದ ವೃಕ್ಷವನರಿದ ಬಸವಯ್ಯನು.

೧೦೩೯

ಮಾತಿಲ್ಲದ ಮಥನವ ಮಾಡಿ ಮೆರದೆ ಬಸವಾ.

ನೀತಿಯಿಲ್ಲದೆನಿಜವತೋರಿ ಮೆರದೆ ಬಸವಾ.

ಅನಿತನಿತು ತೃಪ್ತಿಯಮಾಡಿತೋರಿದೆಯಯ್ಯಾ.
ನಿಮ್ಮಂಗ ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಲ್ಲಾ ಬಸವಾ

೧೦೪೦

ಮಾತಿಲ್ಲವೆನಗೆ; ಆ ಮಾತು ನುಡಿಯಲಿಲ್ಲವೆನಗೆ.

ನೇಮವಳಿದು, ಸೀಮೆಯಕಳದು, ಉಭಯತನು ನಷ್ಟವಾಗಿ,


ನೀಲಮ್ಮನ ವಚನಗಳು

ಬಣ್ಣದ ಭ್ರಮೆಯಳಿದು, ಮೂರ್ತಿಯ ಕುರುಹ ನಷ್ಟವ ಮಾಡಿ,


|| ೨೪೦ ||
ಸಂಗಯ್ಯನಲ್ಲಿ ಬಸವಭಾವವಿಲ್ಲದೆ ಬಯಲಾದೆನು.

೧೦೪೧

ಮಾಯದ ಮನದ ಕರ್ಮದ ಹಂಗಹರಿದು

ಅನುಭವವ ನನ್ನಲ್ಲಿಯಡಗಿಸಿ,

ನಾನು ನಮ್ಮಯ್ಯನಲ್ಲಿ ನಮಸ್ಕಾರವನಳಿದೆನಯ್ಯ .

ನಮಸ್ಕಾರವನಳಿದು ನಮೋ ವಿಶ್ವರೂಪಳಾದೆನಯ್ಯ || ೨೪೧ ||.


ಸಂಗಯ್ಯ

೧೦೪೨

ಮಾಹೇಶ್ವರರ ಸಂಗವಳಿದು ಮಹಾಲಿಂಗವ ಕಂಡೆನಯ್ಯ ,

ಮಾಹೇಶ್ವರರಪ್ರತಿಮ ಪರಮಯೋಗಿಯರ ಸಿಎG - K -


ಅನುವನರಿಯದೆ ಆನು ಮರದಿರ್ದ ಮರಹು ‫ملک‬
೧೬
ವಿವೇಕಕಾಯವನಳಿದು ‫لدل‬
೧೮೮ -
ವಿವಿಧಾಚಾರವನರಿದು ‫اک‬

ಆನು ಬದುಕಿದೆನಯ್ಯ ಸಂಗಯ್ಯ . || ೨೪೨ ||


|
4ಗಿ4/ , ೨೮ ೩
೧೦೪೩

ಮುಕ್ತಿಯನಳಿದು ನಿರ್ಮುಕ್ತಳಾದ ಕಾರಣ

ಮುಕ್ತಿಯಿಲ್ಲವಯ್ಯಾ ಬಸವಯ್ಯಾ ಎನಗೆ.


ಸಂಗ ನಿಸ್ಸಂಗದವಳಾದ ಕಾರಣ

ಎನಗೆ ಸಂಗದ ಸಂಗವಿಲ್ಲವಯ್ಯಾ ಬಸವಯ್ಯಾ .

ನನಗೇತರ ಪರಿಣಾಮದಕೂಟಪ್ರಭೆ ?

ವಿರೂಪಾಕ್ಷಸಂಗವನನುಭವಿಸಿದೆನಯ್ಯಾ ಬಸವಯ್ಯಾ .

ಸಂಗಯ್ಯಾ , ಬಸವ ವರಪ್ರಣವಸ್ವರೂಪನಾಯಿತ್ತು . || ೨೪೩ ||

೧೦೪೪

ಮುಖದಂತರದ ಬಾಗಿಲ ಮುಂದೆ

ಸುಖ ತೃಪ್ತಿಯ ನಿಜದವತಾರವನರಿದು

ನಿರ್ಮಲಾಕಾರವ ತಿಳಿದೆನಯ್ಯ .

ತಿಳುಹಿನ ತಿಳುಹ ತಿಳಿದು

ಬೆಳವಿಗೆಯ ಸುಖವನರಿದು ಬದುಕಿದೆನಯ್ಯ ಸಂಗಯ್ಯ . || ೨೪೪ ||


ಶಿವಶರಣೆಯರ ವಚನಸಂಪುಟ

೧೦೪೫

ಮುಖವಿಲ್ಲದ ಕನ್ನಡಿಯ ನೋಡಲು ,

ಆ ಕನ್ನಡಿಯ ರೂಪಿನೊಳಗೆ ಸಂಗಯ್ಯನರೂಪುಕಾಣಬಂದಿತ್ತು .

ಆ ರೂಪನರಿದು ಪರಿಣಾಮವಕಂಡು ಬದುಕಿದೆನಯ್ಯಾ.

ಪ್ರಸನ್ನದವಳಾಗಿ ಪ್ರಭಾಪರಿಣಾಮಿಯಾದೆನು.

ಗಮನದಸಂಗ ನಿಸ್ಸಂಗವಾಗಿ ಎನಗಿರಪರವಿಲ್ಲವಯ್ಯಾ ಸಂಗಯ್ಯಾ . ||

೧೦೪೬

ಮುಗಿಸಿದೆ ಮುಗಿಸಿದೆ ಮನದಲ್ಲಿ ನಾನು ಬಸವಾ.

ಘನವ ಕಂಡೆ ಕಂಡೆ ಮನದಲ್ಲಿ ನಾನು ಬಸವಾ.

ತನುವಿಲ್ಲವೆನಗೆ ಬಸವಾ,

ಸಂಗಯಾ , ಬಸವನಳಿದಬಳಿಕ. || ೨೪೬ ||

೧೦೪೭

ಮುನ್ನಲೊಂದು ಕಾಯವಿಡಿದು ನಾನು ಹುಟ್ಟಿ

ಆ ಹುಟ್ಟಿದಕಾಯಕ್ಕೆ ನಿಜದಮೂರ್ತಿಯ ಅನುವ ತಿಳಿದು

ವಿನಯಪರಳಾದೆನು

ವೀರತ್ವದ ಸಂಗದಮೂರ್ತಿಯನರಿದು

ನಾನು ಬದುಕಿದೆನಯ್ಯ ಸಂಗಯ್ಯ . || ೨೪೭ ||

೧೦೪೮

ಮುನ್ನಲೊಂದು ಶಿಶು ಹುಟ್ಟಿತ್ತು .

ಆ ಶಿಶುವಿನಕೈಯಲೊಂದು ಮಾಣಿಕ್ಯವಕೊಡಲು,

ಆ ಮಾಣಿಕ್ಯ ಹಲವು ವರ್ಣವನೆ ತೋರಿಬಯಲನೆ ನೆಮ್ಮಿತ್ತು.

ಮಾಣಿಕ್ಯದ ಕುರುಹಿಲ್ಲ , ಬಯಲಿಂಗೆ ಬಣ್ಣವಿಲ್ಲ ,


|| ೨೪೮ ||
ಸಂಗಯ್ಯನಲ್ಲಿ ಹೆಸರಳಿದ ಬಸವಂಗೆ ?

೧೦೪೯

ಮುನ್ನವೆ ಮುನ್ನವೆ ಹುಟ್ಟಿದೆ ನಾನು.

ಆ ಮುನ್ನವೆ ಮುನ್ನ ಆನು ಪ್ರಸನ್ನ ಮುಂಕೊಂಡ ಶಕ್ತಿಯಾದೆ.

ಶಕ್ತಿಸಂಗವಳಿದು ಸಮಯಾಚಾರವಳವಡಲು
|| ೨೪ ||
ಪ್ರಭಾಪೂರಿತಳಾಗಿ ಬದುಕಿದೆನಯ್ಯ ಸಂಗಯ್ಯ .
- ನೀಲಮ್ಮನ ವಚನಗಳು

೧೦೫೦

ಮುನ್ನಳದೋಷವೆನ್ನ ಬೆನ್ನ ಬಿಡದಯ್ಯ ,

ಮುನ್ನಳ ಪಾಪವೆನ್ನ ಹಿಂದುವಿಡಿದು ಮುಂದೆ ನಡೆಯಲೀಯದು.

ಕಾಮಿತ ನಿಃಕಾಮಿತವ ಕಂಡು

ಬಸವನನರಿಯದೆಕೆಟ್ಟ ಪಾಪಿಯಾನು .

ಶಬ್ದದ ಹಂಗಿಗಳಲ್ಲಯ್ಯ ನಾನು


|| ೨೫೦ ||

೧೦೫೧

ಮುಯೂರಮನೆಯೊಳಗೆ ನಾನು ಸಂಸಾರವ ಮಾಡುತ್ತಿರಲು,

ಮೂವರು ದಿಬ್ಬಣಿಗರು ಬಂದು

ಮುಖಕನ್ನಡಿಯ ತೋರಿ ಮುದ್ದುಗೈಯಲು

ಆನು ಮೂಲಪ್ರಣವಸ್ವರೂಪಳಾದೆನು.

ಹಿತಪಡಿಸುತನ್ಯಾಯದಂತೆ

ಅಪ್ರತಿಮನ ಸುಖಕ್ಕೆ ಮನವನಿಂಬುಗೊಟ್ಟು

ಆನು ಉರಿಯುಂಡ ಕರ್ಪೂರದಂತೆ

ತೆರಹಿಲ್ಲದಿರ್ದೆನಯ್ಯಾ ಸಂಗಯ್ಯ ನಿಮ್ಮಲ್ಲಿ,

ಬಸವಯ್ಯನೆನ್ನಲ್ಲಿ ಅಡಗಲು. || ೨೫೧ ||

೧೦೫೨

ಮೂಲನಳಿದೆ ಮುಖವ ಕಳದೆ

ಆ ಮುಖ ವಿಮುಖವಾಗಿ ವಿಚಾರವ ತಿಳಿದು

ವಿನೇಯಪರತತ್ಯವನಳಿದು ನಿಃಶೂನ್ಯ ಶಬ್ದವಾಗಿ

ಉರಿಯುಂಡ ಕರ್ಪೂರದಂತೆ ತೆರಹಿಲ್ಲದೆ ನಿಂದೆನಯ್ಯ .

ನಿಂದು ನಿರ್ವಯಲಾಗಿ ಲಿಂಗ ಲಿಂಗಾಂಗಿಯಾನಾಗಿ

ನೀರೊಳಗೆ ನೀರು ಬೆರದಂತಾನಾದೆನಯ್ಯ

ಸಂಗಯ್ಯ ಸಂಗಯ್ಯ ಶಿವಸೂತ್ರಧಾರಿಯಾನಾದೆನು. || ೨೫೨ ||

೧೦೫೩

ಮೂರ್ತಿಯ ಸಂಗ ಮೂರಡಿಗೊಂಡಿತ್ತು .

ಆ ಮೂರ್ತಿಯ ಸಂಗ ನಿಸ್ಸಂಗವಾಯಿತ್ತು .

ಹೇಳಬಾರದ ಘನವ
ಶಿವಶರಣೆಯರ ವಚನಸಂಪುಟ

ಆರಿಗೂ ಹೇಳದ ವಸ್ತುವ ಕಂಡು

ಹೆಸರಿಲ್ಲದೆ ನಿಂದೆ ನಾನು.

ಪ್ರಣವಾಕ್ಷರದ ಕುರುಹ ಕಂಡು ಪರವಶಳಾದೆನಯ್ಯ .

ಏಕಾಕ್ಷರದ ಸಂಗ ನಿಸ್ಸಂಗವಾಯಿತ್ತಯ್ಯ ಸಂಗಯ್ಯ||. ೨೫೩ ||

೧೦೫೪

ಮೂರ್ತಿಯನರಿದು ಮುಖ ವಿಕಸಿತವಾಯಿತ್ತಯ್ಯಾ.

ಬಸವಮೂರ್ತಿಯ ತನುವ ಕಂಡು

ಬಸವನಲ್ಲಿ ಸ್ವಯಲಿಂಗಿಯಾದೆನಯ್ಯಾ ಸಂಗಯ್ಯಾ.|| ೨೫೪ ||

೧೦೫೫

ಮೂಲಪ್ರಣವ;

ಆ ಮೂಲಪ್ರಣವದ ಮೂರುತಿ ಅನಾದಿ ಪ್ರಣವ;

ಆ ಪ್ರಣವದ ಸುಖವನರಿದು

ಆನು ಬದುಕಿದೆನಯ್ಯ ಸಂಗಯ್ಯ . || ೨೫೫ ||

೧೦೫೬

ಮೂಲಾಧಾರದ ಬಾಗಿಲ ಕಾಯಲು

ಆ ಮೂಲಾಧಾರದ ಬಾಗಿಲಲ್ಲಿ ಉರಿಹತ್ತಿಯುರಿಯಲು

ಕರಸಮಯ ವಿರಸವಾಯಿತ್ತು.

ನಿರುಪಮ ನಿರಾಕಾರಮೂರ್ತಿಯ ಕಂಡು

ಆನು ಬದುಕಿದೆನಯ್ಯ ಸಂಗಯ್ಯ . - || ೨೫೬ ||

೧೦೫೭

ಮೂಲಾಧಾರದ ಮಂಟಪದ ಮನೆಯಮೇಲೆ

ಲೀಲಾವಿಚಾರಮೂರ್ತಿಯ ಅನುವ ಕಂಡೆನು .

ಆ ಅನುವನರಿದು ಮುಖರಸವನರಿದು
| ೨೫೭ ||
ನಾನು ಬದುಕಿದೆನಯ್ಯ ಸಂಗಯ್ಯ .

೧೦೫೮

ಮೂವರಳಿದು, ಮೂರ್ತಿಯ ಕಳದು,

ಅನಿಮಿಷಯೋಗ ವಿಚಾರವನನುಭವಿಸಿ,

ವಿಚಾರವನಂಗವನಂಗೈಸಿದಂಗವನಂಗದಲ್ಲಿಯೆ
|| ೨೫೮ ||
ಅಡಗಿ ನಿಂದೆನಯ್ಯ ಸಂಗಯ್ಯ .
ನೀಲಮ್ಮನ ವಚನಗಳು

೧೦೫೯

ಮೌಕ್ತಿಕದ ಮಂಟಪ ಕಟ್ಟಿ

ಮನೆಯೊಳಗೆ ತೋರಣಗಟ್ಟಿದವು.

ಮಾಣಿಕ್ಯದ ವರ್ಣದತೋರಣವು.

ಆ ಮಾಣಿಕ್ಯದ ವರ್ಣದ ತೋರಣವ ಕಂಡು,

ಆ ತೋರಣವ ಸರಗೊಳಿಸಿ

ಸರದ ಮುಂದೆ ಮಧ್ಯಸ್ವರೂಪವಾಗಿ


|| ೨೫೯ ||
ಆನು ನಿಜ ಪರಿಣಾಮಿಯಾದೆನಯ್ಯ ಸಂಗಯ್ಯ .

೧೦೬೦

ಮೃತವಳಿದು ಕಾಯವುಳ್ಳವಳಾದೆ.

ಅಮೃತವಿಲ್ಲದ ರಸವನುಂಡು ಅಮೃತಕಾಯಳಾದೆ.

ವಿಭ್ರಮದಸೂಚನೆಯ ಹಂಗಿಲ್ಲದೆ

ಪ್ರಣವಕಾಯಿಯಾನಾದೆನಯ್ಯ ಸಂಗಯ್ಯ . || ೨

೧೦೬೧

ಯತಿಯರ ಮನವನತಿ ವಿರತಾಕಾರವ ಮಾಡಿ ಕಂಡೆನಯ್ಯ .

ಆ ಯತಿಗಳು ಅತಿ ವೀರ ಸಂಬಂಧಿಗಳಾಗಿರಲು

ವೀರತತ್ವದ ನೆಲೆಯೊಂದೊಂದು ಸಂಗವನೈದಿ

ಮುಖವಿಕಸಿತವಾಯಿತ್ತು.

ಅಪ್ಪಣ್ಣ ತಂದ ಅಪ್ರತಿಮ ಶಿವಾಚಾರ ನೆಲೆಯಾಗಿರಲು

ಆನು ಶಿವ ಶುಭವಂತಳಾದೆನಯ್ಯಾ .


|| ೨೬೧ ||
ಸಂಗಯ್ಯನಲ್ಲಿ ಬಸವನ ಭ್ರಮೆ ನಮಗೇಕಯ್ಯಾ.

೧೦೬೨

ಯುಗವಿಲ್ಲ ಜುಗವಿಲ್ಲ ಕಾಲವಿಲ್ಲ ಕಲ್ಪಿತವಿಲ್ಲ

ಅರುಹಿಲ್ಲ ಮರಹಿಲ್ಲ ಆಚಾರವಿಲ್ಲ ವಿಚಾರವಿಲ್ಲ


|| ೨೬೨ ||
ಸಂಗ ನಿಸ್ಸಂಗವಿಲ್ಲವಯ್ಯ , ಸಂಗಯ್ಯ ನಿಮ್ಮ ಧರ್ಮದಿಂದ.

೧೦೬೩

ರೂಪಿಲ್ಲದ ವಸ್ತುವ ರೂಪಾದೆಯಾ ಬಸವಯ್ಯಾ ?

ನಿರೂಪಿದ ವಸ್ತುವೆ ನಿರೂಪಾದೆಯಾ ಬಸವಯ್ಯಾ ?


೩೧೬
ಶಿವಶರಣೆಯರ ವಚನಸಂಪುಟ

ರೂಪುನಿರೂಪುಸಂಗಷ್ಟವಾಯಿತ್ತಯ್ಯಾ

ಸಂಗಯ್ಯನಗುರುಬಸವಾ. || ೨೬೩ ||

೧೦೬೪

ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ

ಮಾಡುವ ಮಾಟವಳಿಯಿತ್ತು ಬಸವಾ;

ಇಂದಿಗೆಊಟವಳಿಯಿತ್ತು ಬಸವಾ.

ಇಂದಿಂಗೆ ಅವರ ಸಂಗವಳಿದು

ನಿರಾಲಂಬಮೂರ್ತಿಯ ಇರವುಕಾಣಿಸಿತಯ್ಯಾ ಬಸವಾ,

ಸಂಗಯ್ಯಾ , ಬಸವನ ರೂಪುಎನ್ನಲ್ಲಿ ಅಡಗಲು. || ೨೬೪ ||

೧೦೬೫

ಲಿಂಗದ ಹಂಗಿಗಳಲ್ಲಿ ನಾನು ಬಸವಾ.

ಜಂಗಮದ ಹಂಗಿಗಳಲ್ಲಿ ನಾನು ಬಸವಾ.

ಪ್ರಸಾದದ ಹಂಗಿಗಳಲ್ಲಿ ನಾನು ಬಸವಾ.

ಉಭಯಸುಖದ ಪರಿಣಾಮವಿಡಿದು ನಿಂದವಳಲ್ಲ ನಾನು ಬಸವಾ.

ಏನುವನರಿತವಳಲ್ಲ ನಾನು ಬಸವಾ.

ಎಲ್ಲವ ನನ್ನಲ್ಲಿ ನೆಲೆಗೊಳಿಸಿದ ಬಸವ.

ಪ್ರಸನ್ನಮೂರ್ತಿಯಲಡಗಿದ ಬಸವನ ಇರವ ಕಂಡು

ಬದುಕಿದೆನಯ್ಯಾ ಸಂಗಯ್ಯಾ. || ೨೬೫ ||

೧೦೬೬

ಲಿಂಗವಿದ್ದರೇನು ?

ಆ ಲಿಂಗಕ್ಕೆ ಶಿವಸೂತ್ರದನುಭಾವ ನೆಲೆಗೊಳ್ಳದನ್ನಕ್ಕ ?

ಆ ಲಿಂಗಕ್ಕೆ ಶಿವಸೂತ್ರ ಸಂಬಂಧದಿಂದ

ಸಂಗಯ್ಯನಲ್ಲಿಯಾನುಪ್ರಸಾದಿಯಾದೆನಯ್ಯ . || ೨೬೬ ||

ಲಿಂಗ ಸಂಗದಲ್ಲಿ ಹುಟ್ಟಿ

ಜಂಗಮದ ಸಂಗದಲ್ಲಿ ಬೆಳದು

ಭೇದವಡಗಿ ಬೆಳಗು ನಿರ್ವಯಲಾಗಲು

ಆನು ಸುಖಿಯಾದೆನಯ್ಯಾ ಸಂಗಯ್ಯಾ. || ೨೬೭ ||


೩೧೭
ನೀಲಮ್ಮನ ವಚನಗಳು

೧೦೬೮

ಶಿರ ಭಾಳ ಕರ್ಣಂಗಳ ಗುಣವಿಲ್ಲ .

ಶಿರ ಸುವರ್ಣದ ಕಳಸ,

ಭಾಳ ಭಾಳಾಕ್ಷನರಮನೆ,

ಕರ್ಣ ಕರುಣಾಳುವಿನ ಲೇಖನ.

ಕಾಯವಳಿದ ಬಳಿಕ ಭ್ರಮೆಯಿಲ್ಲ .

ಪರಶಿವನಲ್ಲಿ ಸೂತ್ರಧಾರಿಯಾದೆನಯ್ಯ ನಾನು

ಎಲ್ಲವನರಿದು

ಭಕ್ತಿಪದಾರ್ಥವನುಂಡು ಬದುಕಿದೆನಯ್ಯ

ಸಂಗಯ್ಯ , ಬಸವ ಬಯಲಾಗಲು. || ೨೬೮ ||

೧೦೬೯

ಶಿವತತ್ವವ ಕಾಣದ ಮುನ್ನ

ಅನುಭವತತ್ವವ ಕಾಣಲಾಯಿತ್ತಯ್ಯಾ ಬಸವಾ.

ಆನು ಅನುಭವಶೀಲವನರಿದು

ಮಕ್ಕಂಗನೆಯಾದೆನಯ್ಯಾ ಬಸವಾ.
ಆನು ಮುಕ್ಕಂಗನೆಯಾಗಿ ನಿಜದಲ್ಲಿ ನಿಲಲು,

ಬಸವನ ಕುರುಹು ಕಾಣಬಂದಿತ್ತು .

ಆ ಬಸವನ ಕುರುಹ ತಿಳಿದು

ಇಷ್ಟಮೂರ್ತಿಯ ನಿಷ್ಠೆಯನರಿವೆನಯ್ಯಾ ಸಂಗಯ್ಯಾ


|| .೨೬೯ ||

೧೦೭೦

ಸಂಗನಕೂಟಕ್ಕೆ ತೆರಹಿಲ್ಲ .

ಆ ಸಂಗನಕೂಟಕ್ಕೆ ತೆರಹಿಲ್ಲದ ಕಾರಣ

ಬಸವನಭಕ್ತಿಗೆ ನೆಲೆಯಿಲ್ಲವಯ್ಯಾ,

ಆನಂದಪ್ರಸಾದ ಅನಿಮಿಷಪ್ರಸಾದವನುಂಡು

ಬದುಕಿದೆನಯ್ಯಾ ಸಂಗಯ್ಯಾ . || ೨೭೦ ||

೧೦೭೧

ಸಂಗ ನಿಸ್ಸಂಗವಾಯಿತ್ತೆನಗೆ;

ನಿಸ್ಸಂಗ ಸಂಗವಾಯಿತ್ತೆನಗೆ;

ಸಂಗ ನಿಸ್ಸಂಗದಲ್ಲಿ ನಿಂದು ನಿರೂಢರೂಢಿಸಲು

ವಸ್ತು ಸಂಚಲವನಳಿದೆನಯ್ಯ ಸಂಗಯ್ಯ . || ೨೭೧ ||


೩೧೮
ಶಿವಶರಣೆಯರ ವಚನಸಂಪುಟ

೧೦೭೨

ಸಂಗಯ್ಯ ಸಂಗಯ್ಯ ನಿರಾಕಾರವೇನಯ್ಯ ?

ಲಿಂಗಾಕಾರ ನಿರಾಕಾರ ಒಡಲು

ಅಂಗ ಲಿಂಗ ಸುಯಿದಾನವಾಯಿತ್ತಯ್ಯ .

ಎನ್ನ ಸುಯಿದಾನ ನಿರವಯವಯ್ಯ ಸಂಗಯ್ಯ . - || ೨೭೨ ||

೧೦೭೩

ಸಂಗವಪ್ಪ ಬಸವಾ,

ನಿಸ್ಸಂಗ ನಿರಾಲಂಬಿಯಾದೆಯಾ ಬಸವಾ.

ಅಪ್ರತಿಮ ಅನುಪಮ ಬಸವಾ,

ಅನಾದಿಸ್ವಭಾವವಾದನಯ್ಯಾ .

ಸಂಗಯ್ಯಾ , ನಿಮ್ಮ ಬಸವ ಎನ್ನಲ್ಲಿ ಅಡಗಿದನು. || ೨೭೩ ||

೧೦೭೪

ಸಮಯಾಚಾರವಡಗಿದ ಬಸವಾ,

ಸಂಗ ನಿಸ್ಸಂಗವಾದ ಬಸವಾ,

ಶಬ್ದವಡಗಿದ ಬಸವಾ, ಶೂನ್ಯವಳಿದ ಬಸವಾ,

ಪ್ರಸಾದ ಹಿಂಗಿದ ಬಸವಾ,

ಪ್ರಸನ್ನಮೂರ್ತಿಯ ಕಂಡ ಬಸವಾ.

ಪ್ರಭೆಯಳಿದ ಬಸವಾ, ಪ್ರಸನ್ನರೂಪಬಸವಾ,

ಕಾಯವನಳಿದನಯ್ಯಾ ಸಂಗಯ್ಯನ ಗುರುಬಸವ. || ೨೭೪ ||

೧೦೭೫

ಸರ್ವಾಂಗಶುದ್ಧವಾಗಿ ಲಿಂಗದೇಹಿಯಾನಾದೆನು. ..

ಸರ್ವ ಪ್ರಪಂಚವನಳಿದು ಸಮಯಾಚಾರಮೂರ್ತಿಯ ಪಡದೆನು.


|| ೨೭೫ ||
ಸರ್ವಾಂಗಶುದ್ಧವಾಗಿ ವಿವರವನರಿದೆನಯ್ಯ ಸಂಗಯ್ಯ .

೧೦೭೬

* ಸಯದಾನವರತ ಬಸವಾ.

ಸಂಭ್ರಮಮೂರ್ತಿಬಸವಾ.

ಸಂಗ ನಿಸ್ಸಂಗ ಬಸವಾ,

ಎಲೆ ಅಯ್ಯನ ಅಯ್ಯ ಬಸವಾ,


ಏಕರೂಪನಿರೂಪಾದೆಯಾ ಬಸವಾ ?
೩೧೯
ನೀಲಮ್ಮನ ವಚನಗಳು

ನಿಸ್ಸಂಗ ಎನ್ನಲ್ಲಿ ರೂಪಾಯಿತ್ತು ಬಸವಾ.


ಬಸವ ಬಯಲನೆಯ್ಲಿ ಆನು ಬಯಲನೆ ಕೂಡಿದೆನಯ್ಯಾ ಸಂಗಯ್ಯಾ. || ೨

೧೦೭೭

ಸುವೀರವಾದಡಾಗಲಿ ಸಮಯಾಚಾರವಾದಡಾಗಲಿ ಸಂಗಪ್ರಸಾದ

ನಿಸ್ಸಂಗವಾಗಿ ಸಮಯಾನಂದದೊಳಗೆ ನಿಂದು

ಪರಿಣಾಮಿಯಾನಾದೆನು .

ಪರಿಣಾಮವಡಗಿ ಪ್ರಭೆಯನಳಿದು

ಮುಕ್ತಿಯಕಂಡು ಮುಖವಡಗಿ
|| ೨೭೭ ||
ನಾನು ಭಸಿತ ವಿಶುದ್ಧವಡಗಿದೆನಯ್ಯ ಸಂಗಯ್ಯ .

೧೦೭೮

ಸ್ವಯಸಮರಸದ ಇರವನಂಗವಿಸಿ

ತತ್ಯವಡಗಿ ನಿಃಶೂನ್ಯವ ತಿಳಿದು

ನಿಃಶೂನ್ಯ ಶಬ್ದವ ಕಂಡು ನಿಃಶಬ್ದ ಶಬ್ದವಾಗಿ

ಶಬುದಾಚಾರವನರಿದೆನಯ್ಯ

ಅರಿವ ಮರದು ಕುರುಹಳಿದು

ವಿಚಾರ ಮನನಷ್ಟವ ಮಾಡಿದೆನಯ್ಯ .

ನಷ್ಟದ ಮಾತನೊಂದು ರೂಪಮಾಡಿ


ಆ ರೂಪುಉರಿಯುಂಡಿತ್ತಯ್ಯ ಸಂಗಯ್ಯ , || ೨೭೮ ||

೧೦೭೯

ಸ್ಥಾನಮಾನವಿಲ್ಲದೆ ಶರಣರ ಹಂಗ ಹರಿದೆ.

ಶರಣರ ಹಂಗ ಹರಿದು ಶಿವಸೂತ್ರಿಕಳಾದೆ ನಾನು.

ಶಿವಸೂತ್ರಿಕಳಾಗಿ ಮುಖ ಏನೆಯಾಪರತತ್ವವನೈದಿ ನಾನು


|| ೨೭೯ ||
ಅನುಭಾವಿಯಾದೆನಯ್ಯ ಸಂಗಯ್ಯ .

೧೦೮೦

ಹಂದೆಯಲ್ಲ ನಾನು,

ಹರುಷದ ಧೈರ್ಯವುಳ್ಳ ಹೆಣ್ಣು ನಾನು.

ಕಾಮವನಳಿದವಳಾನಾದ ಕಾರಣ

ಬಸವನ ಹಂಗೆನಗಿಲ್ಲವಯ್ಯ .
೩೨೦ ಶಿವಶರಣೆಯರ ವಚನಸಂಪುಟ

ಭ್ರಮೆಯಡಗಿ ಕಲೆನಷ್ಟವಾಗಿ ಮುಖವರತು

ಮನವಿಚಾರವ ಕಂಡೆನಯ್ಯ ಸಂಗಯ್ಯ . || ೨೮೦ ||

- ೧೦೮೧

ಹಿರಿಯತನಕ್ಕೆ ಹೆಣ್ಣೆಂದು ಕರೆದರೆ

ಆ ಹೆಣ್ಣುರೂಪಾದ ನಾಮವು ನಿರ್ನಾಮವಯ್ಯ .

ಅರಿವನರಿದು ಅಪ್ರತಿಮ ಘನವ ಕಂಡುಳಿದು

ಹೆಣ್ಣುತನದ ಮಾತನಳಿದು

ಏಕೋದೇವನ ಕೃಪೆಯನು ಕಂಡು

ಬದುಕಿದೆನಯ್ಯ ಸಂಗಯ್ಯ . || ೨೮೧ ||

೧೦೮೨

ಹುಟ್ಟಿಲ್ಲದ ಭೂಮಿಯಲ್ಲಿ ಹುಟ್ಟಿದೆ ನಾನು.

ನಾ ಹುಟ್ಟಿ ಕಾಯವಸ್ಥಿರವಾಗಿ

ಅಸ್ಥಿರ ಸುಸ್ಥಿರವಾಗಿ ಆನು ಅನುಭವದಾಯಕಳಾದೆನು.

ಆನು ಸುಖದುಃಖವ ಕಳದು

ಅನುಭವಿಯಾದೆನಯ್ಯ ಸಂಗಯ್ಯ . || ೨೮೨ ||

೧೦೮೩

ಹುಟ್ಟುಗೆಟ್ಟೆ ನಾನು, ತೋಟ ಬಿಟ್ಟ ನಾನು,

ಕಟ್ಟಕ್ಕರಿನ ಸುಖವನಂಗವಿಸಿ ನಿರಂಗಿಯಾದೆ ನಾನು.

ನಿನ್ನ ಬಯಲುಹನಳಿದೆ ನಾನು ;

ನನ್ನ ಕುರುಹ ಕಳದೆ ನಾನು.

ಎಸನ ಬಸವನ ಬೆಸುಗೆಯ ಬಿಟ್ಟೆ ;

ಸಂಗಯ್ಯನಲ್ಲಿ ರೂಪವಳಿದ ಹೆಣ್ಣು ನಾನು. || ೨೮೩ ||

೧೦೮೪

ಹೆಚ್ಚನರಿದು ಪ್ರಣವವಕೂಡಲು

ಅಚ್ಚುಗ ಸಿದ್ದಿಯಾಯಿತ್ತೆನಗೆ.

ಸಂಗಯ್ಯನಲ್ಲಿ ಬಸವನಳಿದು ಬಯಲಾಗಲು


ಆನು ಪರಮಪ್ರಸಾದಿಯಾದೆನಯ್ಯಾ. .. || ೨೮೪ ||

೧೦೮

ಹೆಸರಿಲ್ಲದರೂಪಕಂಡು

ಹೆಸರಳಿದು ಹೆಣ್ಣು ರೂಪ ತಾಳಿದೆ ನಾನು.


ನೀಲಮ್ಮನ ವಚನಗಳು

ಕುರುಹಿಲ್ಲದಮೂರ್ತಿಯ ಕಂಡು

ಅದೈತಾನಂದಿಯಾದೆ ನಾನು.

ಪ್ರಣವಜ್ಯೋತಿಷ್ಟವರ್ಣವ ತಿಳಿದು
|| ೨೮೫ ||
ಪರಂಜ್ಯೋತಿಲಿಂಗವಾದನಯ್ಯ ಸಂಗಯ್ಯ .

೧೦೮೬

ಹೃದಯಮಧ್ಯದಲೊಂದುಜ್ಯೋತಿಯಮನೆ ಹುಟ್ಟಿತ್ತು .

ಆಜ್ಯೋತಿಯ ಮಧ್ಯದಲ್ಲಿ ಸ್ಪಟಿಕದ ತನು ಬೆಳಗಿತ್ತು .

ಆ ಬೆಳಗಿನ ತನುಮಧ್ಯದಲ್ಲಿ ಮರುಜವಣಿಯ ಕುಡಿ.

ಹೆಸರಿಲ್ಲದರೂಪಾಯಿತ್ತು ಬಸವಂಗೆ, ಸಂಗಯ್ಯಾ ನಿಮ್ಮಲ್ಲಿ. || ೨

೧೦೮೭

ಹೆಸರಳಿಯಿತ್ತು ಬಸವಾ, ಇಂದಿಂಗೆ ಭಕ್ತಿಯಿಲ್ಲದ ಕಾರಣ.

ಕುರುಹಳಿಯಿತ್ತು ಬಸವ ,

ಇಂದಿಂಗೆ ಬಸವನರೂಪುನಿರೂಪಾಯಿತ್ತಯ್ಯಾ.

ಭ್ರಮೆಯಳಿದು ಭ್ರಮರಕೀಟನ್ಯಾಯದಂತಾದೆನಯ್ಯಾ ಸಂಗಯ್ಯಾ . || ೨೮೭

೧೦೮೮

ಹೋಲಬರಿಯೆ ನಾನು,

ಆ ಹೋಲರಿಯದಿರುತಿರಲು,

ನಾನು ಹೊಲಬಿಗಳಲ್ಲವೆಂದು

ಬಸವಯ್ಯ ಹೊಲಬನರಿದು

ನಿಜಪದಸಂಬಂಧಿಯಾದನಯ್ಯಾ :

ಸಂಗಯ್ಯನಲ್ಲಿ ನಮ್ಮ ಬಸವಯ್ಯನು. || ೨೮೮ ||


ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವಯ ವಚನ

೧೦೮೯

ತನು ಬತ್ತಲೆಯಾದಡೇನು, ಮನ ಬತ್ತಲೆಯಾಗದನ್ನಕ್ಕ ?

ವ್ರತವಿದ್ದಡೇನು, ವ್ರತಹಿನರಾದ ಬಳಿಕ ?

ನೆರೆದಡೆ ನರಕವಯ್ಯಾ ನಿಂಬೇಶ್ವರಾ.


ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ

ಕಾಳವ್ವಯ ವಚನಗಳು

೧೦೯೦

ಕಾಯಕ ತಪ್ಪಿದಡೆ ಸೈರಿಸಬಾರದು;

ವ್ರತ ತಪ್ಪಲೆಂತೂ ಸೈರಿಸಬಾರದು

ಕರ್ಮಹರ ಕಾಳೇಶ್ವರಾ. || ೧ ||

೧೦೯೧

- ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ,

ಮಾತು ತಪ್ಪಿ ನುಡಿಯಲು ಬಾಯಿಗೆಮೂಲ,

ವ್ರತಹೀನನ ನೆರೆಯಲು ನರಕಕ್ಕೆ ಮೂಲ,

ಕರ್ಮಹರ ಕಾಳೇಶ್ವರಾ. || ೨ ||
ಬೊಂತಾದೇವಿಯ ವಚನಗಳು ..

೧೦೯೨

ಅಂತಾಯಿತ್ತಿಂತಾಯಿತ್ತೆಂತಾಯಿತ್ತೆನಬೇಡ,

ಅನಂತನಿಂತಾತನೆಂದರಿಯಾ ಬಿಡಾಡಿ.

ಕರೆದಡೆ ಓ ಎಂಬುದು ನಾದವೊ ಬಿಂದುವೊ ಪ್ರಾಣಿ

ಇದಾವುದು ? ಬಲ್ಲಡೆ ನೀ ಹೇಳಾ, ಬಿಡಾಡಿ.

ನಾಲ್ಕು ವೇದ, ಹದಿನಾರು ಶಾಸ್ತ್ರ , ಹದಿನೆಂಟು ಪುರಾಣ, ಇಪ್ಪತ್ತ

ಇದಪ್ರತಿ ಬಿಡಾಡಿ.

ಶಬ್ದವೆ ಬ್ರಹ್ಮ , ಶಬ್ದವೆ ಸಿದ್ದ, ಶಬ್ದವೆ ಶುದ್ದ ಕಾಣಿರೆ, ಬಿಡಾಡಿ ! ||

೧೦೯೩

ಅರಿವೆ ಬಿಡಾಡಿ, ಅರಿಯದೆ ಬಿಡಾಡಿ,

ಮರವೆ ಬಿಡಾಡಿ, ಮರೆಯದೆ ಬಿಡಾಡಿ,

ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ. || ೨ ||

೧೦೯೪

ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ?

ಊರೊಳಗೆ ಬ್ರಾಹ್ಮಣಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ

ಎಲ್ಲಿ ನೋಡಿದಡೆ ಬಯಲೊಂದೆ ;

ಭಿತ್ತಿಯಿಂದ ಒಳಹೊರಗೆಂಬನಾಮವೈಸೆ.

ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನ ಬಿಡಾಡಿ. || ೩ ||

೧೦೯೫

ಘಟದೊಳಗಣ ಬಯಲು, ಮಠದೊಳಗಣ ಬಯಲು,

ಬಯಲು ಬಯಲು ಬಯಲು !

ತಾನೆಲ್ಲಾ ಬಯಲು, ಬಿಡಾಡಿ ಬಯಲು.

೧೦೯೬

ಘಟಪಟನಾದ್ರಾ, ಓ ಎಂಬಾತ ಲಿಂಗ .

ತರಗೆಲೆಗಳಿಗೊಂದೆ ಗಾಳಿ ;

ಹಾರುತ್ತಿಪ್ಪವು.

ಒಂದೆ ಅನಿಲ, ನಿಂದ ದೇಹಪಟ್ಟೆಗಳೊಳಗೆಲ್ಲ .


|| ೫ ||
ಕರೆದಡೆ, ಓ ಎಂಬಾತನ ಬಿಡಾಡಿ .
ಮುಕ್ತಾಯಕ್ಕನ ವಚನಗಳು

೧೦೯೭

ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು.

ಮೂಗನಕೈಯಲ್ಲಿ ಕಾವ್ಯವಕೇಳಿದಂತಿರಬೇಕು.

ದರ್ಪಣದೊಳಗಣ ಪ್ರತಿಬಿಂಬದಂತೆ

ಹಿಡಿವರಿಗಳವಲ್ಲದಿರಬೇಕು ಅಣ್ಣಾ .

ಕೂರ್ಮನ ಶಿಶುವಿನ ಸ್ನೇಹದಂತೆ ಇರಲೊಲ್ಲದೆ


|| ೧ ||
ಆರೂಢಗೆಟ್ಟೆಯೊ ಅಜಗಣ್ಣಾ .

೧೦೯೮

ಅಂಬರದಲಾಡುವ ತುಂಬಿಯ ಬಿಂಬದ ಕಂಬನಿಯೊಳಗಣ ರತ್ನದ

ಬಯಕೆಯಾದ್ಯಂತವನೇನೆಂಬೆನಯಾ ?

ವೇದ ಶಾಸ್ತ್ರ ಶ್ರುತಿಸ್ಮೃತಿಗಳು ಸ್ತುತಿಸಲರಿಯವು.

ನಾದವಲ್ಲ , ಸುನಾದದ ನಿಲವಲ್ಲ ;

ಭೇದಿಸುವಡೆ ಅಗಮ್ಮ ನೋಡಾ!

ಸೂಲಿಲದಸೋಲದ ಘನವನೇನೆಂಬೆನು ?
ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯನು?

೧೦೯೯

ಅರಿವನಣಲೊಳಗಿಕ್ಕಿ ಅಗಿವುತ್ತಿದೆ ಮರ್ತ್ಯಲೋಕವೆಲ್ಲವು.

ಅರಿವು ಉಳಿಯಲರಿಯದೆಕೆಟ್ಟಿತ್ತು ಲೋಕವೆಲ್ಲವು.


ನಾನೆಂತು ಬದುಕುವೆನಣ್ಣಾ ?

ಕತ್ತಲೆ ಬೆಳಗ ಕಾಂಬ ಸಂದೇಹಿ ನಾನೊಬ್ಬಳು.


ಎನ್ನ ಕಣ್ಣ ಕಟ್ಟಿ ಕನ್ನಡಿಯ ತೋರಿತ್ತೊ ಅಜಗಣ್ಣಾ ನಿನ್ನ ಯೋಗ! || ೩ ||

ಅಲರೊಳಡಗಿದ ಪರಿಮಳದಂತೆ,

ಪತಂಗದೊಳಡಗಿದ ಅನಲನಂತೆ,

ಶಶಿಯೊಳಡಗಿದ ಷೋಡಶಕಳೆಯಂತೆ,

ಉಲುಹಡಗಿದ ವಾಯುವಿನಂತೆ,

ಸಿಡಿಲೊಳಡಗಿದ ಗಾತ್ರದ ತೇಜದಂತೆ

ಇರಬೇಕಯ್ಯಾ ಯೋಗ, ಎನ್ನ ಅಜಗಣ್ಣತಂದೆಯಂತೆ. || ೪ ||


೩೨೬ ಶಿವಶರಣೆಯರ ವಚನಸಂಪುಟ

೧೧೦೧

ಅಹುದಹುದು ಶಿವಶರಣರ ಮಹಿಮೆ ಆರಿಗೆಯೂ ಕಾಣಬಾರದು.

ಕಬ್ಬುನ ಉಂಡ ನೀರಿನಂತೆ, ಕಬ್ಬಿಸಿಲುಂಡ ಅರಿಸಿನದಂತೆ,

ಉರಿಯೊಳಡಗಿದ ಕರ್ಪುರದಂತೆ, ಬಯಲನಪ್ಪಿದ ವಾಯುವಿನಂತೆ

ಇಪ್ಪ ನಿಲವು ನುಡಿದು ಹೇಳಿಹೆನೆಂಬ ಮಾತಿಂಗೆ ಅಳವಡುವುದೆ ?

ಅರಿವಡೆ ಮತಿಯಿಲ್ಲ , ನೆನೆವಡೆ ಮನವಿಲ್ಲ ;

ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ ನಿಮ್ಮ ಮಹಿಮೆಗೆ

ನಮೋ ನಮೋ ಎನುತಿರ್ದೆನು. || ೫ ||

ಅತವ ನೆಲೆಗೊಳಿಸಿ ಎರಡಳಿದೆನೆಂಬವರು

ಶಿಶುಕಂಡ ಕನಸಿನಂತಿರಬೇಕಲ್ಲದೆ,

ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳಾ ?

ಅರಿವರತು ಮರಹು ನಷ್ಟವಾಗಿ ಗುರುವ ತೋರಿದೆನೆಂಬರು.

ಇದಿರಿಂಗೆ ಕರುಳಕಲೆಯನರುಹುವ ಪರಿಯೆಂತು ಹೇಳಾ ?

ಮನದ ಕೊನೆಯ ಮೊನೆಯ ಮೇಲಣ ಅರಿವಿನ ಕಣ್ಣಮುಂದೆ

ಸ್ವಯಂಪ್ರಕಾಶ ತೋರುತ್ತಿದ್ದಡೆ ತಾನಾಗಬಲ್ಲನೆ ?

ನೆರೆಯರಿತು ಮರೆಯಬಲ್ಲಡೆ

ಎನ್ನ ಅಜಗಣ್ಣನಂತೆ ಶಬ್ದ ಮುಗ್ಧನಾಗಿರಬೇಕಲ್ಲದೆ,

ಶಬ್ದಸಂದಣಿಯ ಮಾತು ಸಯವಲ್ಲ ನೋಡಯ್ಯಾ , || ೬ ||

೧೧೦೩

ಆರೂ ಇಲ್ಲದವಳೆಂದು ಆಳಿಗೊಳಲುಬೇಡ;

ಆಳಿಗೊಂಡಡೆ ಆನು ಅಂಜುವಳಲ್ಲ .

ಒಲವಿನ ಒತ್ತೆಕಲ್ಲನು ಬೆವರಿಸಬಲ್ಲೆ ಕಾಣಿರೊ !

ಅಪ್ಪಿದವರನಪ್ಪಿದಡೆ ತರಗೆಲೆಯಂತೆ
ಅಜಗಣ್ಣ ತಂದ ? || ೭ ||
ರಸವನರಸಿದಡುಂಟೆ ಅಜಗಣ್ಣತಂದೆ ?

ಆರೆಂದು ಕುರುಹ ಬೆಸಗೊಳಲು, ಏನೆಂದು ಹೇಳುವೆನಯ್ಯಾ ?

ಕಾಯದೊಳಗೆ ಮಾಯವಿಲ್ಲ ;

ಭಾವದೊಳಗೆ ಭ್ರಮೆಯಿಲ್ಲ.
ಮುಕ್ತಾಯಕ್ಕನ ವಚನಗಳು

ಕರೆದು ಬೆಸಗೊಂಬಡೆ ಕುರುಹಿಲ್ಲ .

ಒಬ್ಬರಿಗೂ ಹುಟ್ಟದೆ, ಅಯೋನಿಯಲ್ಲಿ ಬಂದು

ನಿರ್ಬುದ್ದಿಯಾದವಳನೇನೆಂಬೆನಣ್ಣಾ ?

ತಲೆಯಳಿದು ನೆಲೆಗೆಟ್ಟು ಬೆಳಗುವಜ್ಯೋತಿ


|| ೮ ||
ಎನ್ನ ಅಜಗಣ್ಣತಂದೆಯ ಬೆನ್ನಬಳಿಯವಳಾನಯ್ಯಾ .

೧೧೦೫

ಉಟ್ಟುದ ತೊರೆದವಂಗೆ ಊರೇನು, ಕಾಡೇನು ?

ನಷ್ಟಸಂತಾನಕ್ಕೆ ಕುಲವೇನು, ಛಲವೇನು ?

ಹುಟ್ಟುಗೆಟ್ಟಾತಂಗೆ ಪುಣ್ಯವೇನು, ಪಾಪವೇನು ?

ಅದು ಕೆಟ್ಟದು ಕೆಟ್ಟದು.


|| ೯ ||
ನಿನ್ನ ನೀನರಿಯದೆ ಬಟ್ಟಬಯಲಲ್ಲಿ ಬಿದ್ದೆಯಲ್ಲಾ ಅಜಗಣ್ಣತಂದೆ!

೧೧೦೬

ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು.

ಎನ್ನ ನೋಟಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.

ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.

ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.

ಎನ್ನ ಹೃದಯಕ್ಕೆ ಮಂತ್ರವಾದನಯ್ಯಾ ಮಡಿವಾಳಯ್ಯನು.

ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು


|| ೧೦ ||
ಬದುಕಿದೆನಯ್ಯಾ ಅಜಗಣ್ಣತಂದೆ.

೧೧೦೭

ಏಕತತ್ವ ತತ್ವ ಪಂಚತತ್ವ ಪಂಚವಿಂಶತಿತತ್ವ ಷಟ್ರಿಂಶತ್ ತತ್ವವ

ಗರ್ಭಿಕರಿಸಿಕೊಂಡಿಪ್ಪಾತನು ಅಜಗಣ್ಣನೆ.

ತತ್ವವೆಲ್ಲಕ್ಕಧಿಕವಾಗಿಪ್ಪಾತನು ಅಜಗಣ್ಣನೆ, ಮಹಾತತ್ವವು ಅಜಗಣ್ಣನೆ,

ಶ್ರೀಗುರುತತ್ವವು ಅಜಗಣ್ಣನೆ, ಪರತತ್ವವು ಅಜಗಣ್ಣನೆ.

ಶಿವಶಿವಾ ಹರಹರಾ, ಸಕಲವೇದಶಾಸ್ತ್ರಪುರಾಣಾಗಮ

ಅಷ್ಟಾದಶ ವಿದ್ಯ೦ಗಳು ಸರ್ವ ವಿದ್ಯ೦ಗಳು

ಸಪ್ತಕೋಟಿಮಹಾಮಂತ್ರಂಗಳು ಉಪಮಂತ್ರವನಂತಕೋಟಿಗಳಿಗೆ

ಮಾತೃಸ್ಥಾನವಾದಾತನು ಅಜಗಣ್ಣನೆ.

ಲಯ ಕಾಲ ಸ್ಥಿತಿಗಳಿಗೆ ಕಾರಣವಾಗಿರ್ಪಾತನು ಅಜಗಣ್ಣನೆ.


ಶಿವಶರಣೆಯರ ವಚನಸಂಪುಟ

ಮಂತ್ರರಾಜನು ಅಜಗಣ್ಣನೆ,ಮೂಲಮಂತ್ರವುಅಜಗಣ್ಣನೆ.

ಏಕವಾದ ಮಹಾಲಿಂಗವು ಅಜಗಣ್ಣನೆ,

ಮಹಾಲಿಂಗವಾಗಿಪ್ಪಾತನು ಅಜಗಣ್ಣನೆ.

ಮಹಾಸದ್ಭಕ್ತನು ಅಜಗಣ್ಣನವ್ವಾ .

ತತ್ವಜ್ಞಾನ ಅಜಗಣ್ಣನೆ, ತತ್ವಮಯನು ಅಜಗಣ್ಣನೆ.

ಮಹಾಮಂತ್ರ ಮುಖೋದ್ಗತವಾದಾತನು ಅಜಗಣ್ಣನೆ.

ಮಹಾಲಿಂಗೈಕ್ಯನು ಅಜಗಣ್ಣನೆ.

ಆತನೆ ಮಹಾಘನಮಹತ್ಯನೊಳಕೊಂಡಿರ್ಪನಾಗಿ

ಶಿವಶಿವಾ, ಸಧ್ಯಕ್ಕ ಅಜಗಣ್ಣ ಗುರುವಿಂಗೆ ಪೂಜೆ ಅರ್ಚನೆ ಭಜನೆಗಳಿಲ್ಲವ

ಉಪಮಾತೀತ ಅಜಗಣ್ಣನು, ವಾಲ್ಮನಕ್ಕತೀತ ಅಜಗಣ್ಣನು.

ಮಹಾಗುರುವ ಕಾಣದೆ ನಾನೆಂತು ತಾಳುವೆನವ್ವಾ ?

ಬ್ರಹ್ಮರಂಧ್ರದಲ್ಲಿ ಗುರುಮೂರ್ತಿಯಾಗಿಪ್ಪ ಪರಮಾತ್ಮನು ಅಜಗಣ್ಣನೆ.

ಭೂಮಧ್ಯದಲ್ಲಿ ಲಿಂಗಮೂರ್ತಿಯಾಗಿಪ್ಪಾತನು ಅಜಗಣ್ಣನೆ.

ಹೃದಯದಲ್ಲಿ ಜಂಗಮಮೂರ್ತಿಯಾಗಿಪ್ಪಾತನು ಅಜಗಣ್ಣನೆ

ಇಂತಪ್ಪ ಅಜಗಣ್ಣನೇನಡಗಿಸಿದನವ್ವಾ .

ಧ್ಯಾನಿಸಿ ನೆನೆದಡೆ ಶೋಕಿಸಿದರೆಂಬರೆಲೆ ಅವ್ವಾ .

ಈ ಅಜಗಣ್ಣತಂದೆಯನಗಲಿ ನಾನೆಂತು ಸೈರಿಸುವೆನೆಲೆ

ಸತ್ಯಕ್ಕ ತಾಯೆ ಆಹಾ !.

೧೧೦೮

ಕಣ್ಣ ಮೊದಲಲ್ಲಿ ಕುಳ್ಳಿರ್ದು ಬಣ್ಣದೋರುವ ಪರಿಯ ನೋಡ

ಬಣ್ಣವಿಲ್ಲದ ಬಣ್ಣವನುಟ್ಟು ಸುಳಿದನು.

ಈ ಅಜಗಣ್ಣನ ಯೋಗಕ್ಕೆ ಬೆರಗಾದೆನವ್ವಾ .

ಈ ಅರಿವೆಂತುಟೆಲ್ಲವನೊಳಗಿಟ್ಟುಕೊಂಡು,

ಶಿವಗಣಸಂಚ ಶಿವಯೋಗಿಅಜಗಣ್ಣ ದೇವನು

ಕೈಯದು ಕುರುಹು, ಬಾಯದು ಬೊಬ್ಬೆ.

ಉಲಿಯದಿರೊ ಭಾವಾ, ಉಲಿಯದಿರೊ ಭಾವಾ !

ವಾರಿಕ ಕೊಡನಲ್ಲಿ ಮುತ್ತು ಮಾಣಿಕವ ತುಂಬಿ,

ಎತ್ತುವರಿಲ್ಲದೆ ಸಖಿಯನರಸುತಿಪ್ಪೆ .

ಮನದ ತನುವಿನಲ್ಲಿ , ಆ ತನುವಿನ ಮನದಲ್ಲಿ


೩ರ್೨
ಮುಕ್ತಾಯಕ್ಕನ ವಚನಗಳು

ತನಗೆ ತಾನೆತ್ತಿಕೊಂಡಡೆ,
|| ೧೩ ||
ಮನ ಮೇರೆದಪ್ಪಿ ಕರಗಿ ಉಕ್ಕಿತ್ತು ನಮ್ಮ ಅಜಗಣ್ಣನಯೋಗ.

ಕ್ರೋಧವೆಂಬ ಹೊಲಗೇರಿಯ ಹೊರವಂಟು,

ಭೇದವೆಂಬೈವರನತಿಗಳೆದನು.

ನಾದಬಿಂದುವೆಂಬ ತೀರ್ಥವನು ಮಿಂದು,

ಆದಿ ಎಂಬ ಅಷ್ಟದಳವಂ ಕಿತ್ತೆತ್ತಿ ಹೋದನು.

ನಾದ ಬಿಂದು ಆದಿ ಬೋಧೆಗೆ ಒಳಗಾದ ಘನವನು


|| ೧೪ ||
ಸಾಧಿಸಿದಂ ಭೋ ಎನ್ನ ಅಜಗಣ್ಣತಂದೆ

ಗುರುವಚನದಿಂದಲ್ಲದೆ ಲಿಂಗವನರಿಯಬಾರದು.

ಗುರುವಚನದಿಂದಲ್ಲದೆ ಜಂಗಮವನರಿಯಬಾರದು.

ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು.

ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು.

ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ

ಗುರುವಿಲ್ಲದ ಮುನ್ನ ಆಯಿತೆನ್ನಬಹುದೆ ?

ತನ್ನಲ್ಲಿ ತಾನು ಸನ್ನಹಿತನಾದಹೆನೆಂದಡೆ ಗುರುವಿಲ್ಲದೆ ಆಗದು ಕೇಳಾ.

ಎನ್ನ ಅಜಗಣ್ಣನೆಂಬ ಗುರುವಿಲ್ಲದೆ


ಆರೂಢಿಯ ಕೂಟ ಸಮನಿಸದು ಕೇಳಾ. || ೧೫ ||

೧೧೧೨

ಘನಮಹಿಮಶರಣರ ಸಂಗದಿಂದ ಘನಕ್ಕೆ ಘನವೇದ್ಯವಾದ ಬಳಿಕ

ಅರಿಯಲಿಲ್ಲ , ಮರೆಯಲಿಲ್ಲ ,ಕೂಡಲಿಲ್ಲ , ಅಗಲಲಿಲ್ಲ .

ಮನ ಮೇರೆದಪ್ಪಿ ನಿರವಯಲಾದ ಸುಖವ

ಶೂನ್ಯ ನಿಶೂನ್ಯವೆಂದು ನುಡಿಯಲುಂಟೆ ?

ಶಬ್ಬಮುಗ್ಧವಾಗಿ ಎನ್ನ ಅಜಗಣ್ಣತಂದೆಯ ಬೆರಸಿದ ಬಳಿಕ

ಉರಿಯುಂಡ ಕರ್ಪೂರದಂತಾದೆನಯ್ಯಾ , || ೧೬ ||

ಜಲದ ಚಿತ್ತಾರದ ಕೊರಳಿನಲ್ಲಿ

ದಾರವಿಲ್ಲದ ಮುತ್ತಿನ ಸರವುನೋಡಾ!


೩೩೦
ಶಿವಶರಣೆಯರ ವಚನಸಂಪುಟ

ಚಿತ್ತಾರವಳಿಯದೆ, ಮುತ್ತು ಉಳಿಯದೆ

ನಿಂದ ನಿಲವಿನ ಪರಿಯ ನೋಡಾ!

ಗಮನವಿಲ್ಲದ ಗಂಭೀರ, ಶಬುದವಿಲ್ಲದ ಸಾರಾಯ

ಸಮತೆಯಾಗಿ ನಿಂದ ಅಜಗಣ್ಣಂಗೆ ಇನ್ನಾರು ಸರಿ ಎಂಬೆನು ||


? ೧೭ ||

೧೧೧೪

ಜ್ಞಾನಮೂಲಗುರುಸೇವೆ ಎಂಬೆನು.

ಐಶ್ವರ್ಯಮೂಲ ಲಿಂಗಾರ್ಚನೆ ಎಂಬೆನು.

ಮೋಕ್ಷಮೂಲ ಘಟಸಂತೃಪ್ತಿ ಎಂಬೆನು ಅಜಗಣ್ಣಲಿಂಗವೆ. |. ೧೮ ||

೧೧೧೫

ತನ್ನ ತಾನರಿದವಂಗೆ ಅರಿವೆ ಗುರು.

ಅರಿವರತು ಮರಹು ನಷ್ಟವಾದಲ್ಲಿ , ದೃಷ್ಟನಷ್ಟವೆ ಗುರು.

ದೃಷ್ಟನಷ್ಟವೆ ಗುರು ತಾನಾದಲ್ಲಿ ,

ಮುಟ್ಟಿ ತೋರಿದವರಿಲ್ಲದಡೇನು ?

ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೆ ಗುರುನೋಡಾ,

ಗುರು ತಾನಾದಡೂ ಗುರುವಿಡಿದಿರಬೇಕು ಎನ್ನ ಅಜಗಣ್ಣನಂತೆ. || ೧೯ ||

೧೧೧೬

ತನುವಿಡಿದನಾಗಿ ಅನುವನರಿಯದೆ ಕೆಟ್ಟೆನು.

ಮನವಿಡಿದೆನಾಗಿ ಅರಿವುಉಳಿಯದೆ ಕೆಟ್ಟೆನು.

ಭಾವದ ಬಯಕೆ ಹಿಂಗದಾಗಿ ವಿಯೋಗಿಯಾಗಿ ಕೆಟ್ಟೆನು.

ಅರಿವ ನುಡಿದು ಮರಹಿಗೊಳಗಾದೆನು.

ಎನ್ನ ಕಾಣದೆ ಭಿನ್ನಜ್ಞಾನಿಯಾದೆನು. ದರ

ಅಜಗಣ್ಣನೆಂಬ ಮಹಿಮನು ಘನವೇದ್ಯನಾಗಿ

ಎನ್ನ ಮತಿಗೆ ಮರವೆಯ ಮಾಡಿಹೋದನು. . || ೨೦ ||

೧೧೧೭

ತನುವಿನೊಳಗೆ ತನುವಾಗಿ, ಮನದೊಳಗೆ ಮನವಾಗಿ ,

ಪ್ರಾಣದೊಳಗೆ ಪ್ರಾಣವಾಗಿಪ್ಪುದೆಂದಡೆ
CH
ಕೆಲಬರಿಗೆ ಅರಿಯಬಪ್ಪುದೆ ?

ಅಂತರಂಗದೊಳಗೆ ಅದೆ ಎಂದಡೇನು ?

ಮನ ಮುಟ್ಟುವನ್ನಕ್ಕರ ಕಾಣಬಾರದು.
೩೩೧
ಮುಕ್ತಾಯಕ್ಕನ ವಚನಗಳು

ಬಹಿರಂಗದಲ್ಲಿ ಅದೆ ಎಂದಡೇನು ?

ಪೂಜಿಸುವನ್ನಕ್ಕರ ಕಾಣಬಾರದು.

ಸಾಕಾರವಲ್ಲದ ನಿರಾಕಾರ ಲಿಂಗವು

ವ್ಯಾಕುಲವುಳ್ಳನ್ನಕ್ಕರ ಸಾಧ್ಯವಾಗದು.

ಎನ್ನ ಮನದೊಳಗೆ ಘನವನನುಗೊಳಿಸಿತೋರುವರಿಲ್ಲದ ಕಾರಣ

ಎನ್ನ ಅಜಗಣ್ಣನಿಕ್ಕಿದ ದಸರಿದೊಡಕಿಂಗೆ


|| ೨೧ ||
ಬೆರಗಾದೆ ಕಾಣಾ ಪ್ರಭುವೆ !

೧೧೧೮

ತೊರೆಯ ಕಟ್ಟೆಯಕಟ್ಟಿ ನಿಲಿಸಲುಬಹುದೆ ?

ನೆರೆ ಮರುಳಿಗೆ ಬುದ್ದಿಯ ಹೇಳಲುಬಹುದೆ ?

ತರಿಸಲುವೋದವನಿದಿರಿಚ್ಚೆಯನರಿಯದೆ ಮರೆದಿದ್ದಡೆ

ಹಗೆ ಇರಿವುದ ಮಾಲ್ಪನೆ ?

ದೂರದಲ್ಲಿ ಹೋದವಊರ ಸುದ್ದಿಯನರಿಯ .

ಹೇಳದೆ ಬಯಲಾದ ಕಾಣಾ, ಎನ್ನ ಅಜಗಣ್ಣತಂದೆ. || ೨೨ ||

ದೇವದೇವ ಶರಣು ಶರಣಾರ್ಥಿ, ಅವಧರಿಸಯ್ಯಾ ,

ಕೇಳಿದ ಸುಖ ಕಿವಿಗೆ ಬೇಟವಾಯಿತ್ತು.

ಕಿವಿಗಳ ಬೇಟ ಕಂಗಳಮುಂದೆ ಮೂರ್ತಿಗೊಂಡಿತ್ತು .

ಕಂಗಳಮುಂದೆ ಕಂಡ ಸುಖವು ಮನಕ್ಕೆ ವೇದ್ಯವಾಯಿತ್ತು .

ಶಿವಶರಣರ ದರುಶನದ ಸುಖವನೇನೆಂದೆನಬಹುದು ?

ಮದವಳಿದು ಮಹವನೊಡಗೂಡಿದ ಎನ್ನ ಅಜಗಣ್ಣನನಗಲಿದ ದುಃಖ


|| ೨೩ ||
ನಿಮ್ಮ ಸಂಗದಲ್ಲಿ ಸಯವಾಯಿತ್ತು ಕಾಣಾ ಪ್ರಭುವೆ.

೧೧೨೦

ನಡೆದು ನಡೆದು ನಡೆಯ ಕಂಡವರು

ನುಡಿದು ನುಡಿದು ಹೇಳುತ್ತಿಹರೆ ?

ನುಡಿದು ನುಡಿದು ಹೇಳುವನ್ನಕ್ಕರ

ನಡೆದುದೆಲ್ಲಾ ಹುಸಿಯೆಂಬೆನು.

ಮಾತಿನ ಮಥನದಿಂದಾದ ಅರಿವು

ಕರಣಮಥನದಿಂದಾದುದಲ್ಲದೆ,
ಶಿವಶರಣೆಯರ ವಚನಸಂಪುಟ

ಅನುಪಮ ಸ್ವರಭೇದವಾದ ಪರಿ ಎಂತು ಹೇಳಾ ?

ಇದಿರ ಗೆಲಬೇಕೆಂದು ನುಡಿದುಕೊಂಡಡೇನು,

ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ!

ಎನ್ನ ಅಜಗಣ್ಣತಂದೆ ಶಬುದಕ್ಕೆ ಹೇಸಿ ಮುಗುದನಾದನು || ೨೪ ||

೧೧೨೧

ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ ,

ಬಯಲಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ

ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ ,

ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ,

ಎನ್ನ ಅಜಗಣ್ಣನ ಯೋಗಕ್ಕೆ . || ೨೫ ||

೧೧೨೨

ನುಡಿಯಲುಬಾರದು ಕೆಟ್ಟನುಡಿಗಳು

ನಡೆಯಲುಬಾರದು ಕೆಟ್ಟನಡೆಗಳ.

ನುಡಿದಡೇನು ನುಡಿಯದಿರ್ದಡೇನು ?

ಹಿಡಿದವ್ರತ ಬಿಡದಿರಲು, ಅದೆ ಮಹಾಜ್ಞಾನದಾಚರಣೆ

ಎಂಬೆನು ಅಜಗಣ್ಣ ತಂದೆ. 1| ೨೬ ||

೧೧೨೩

ನುಡಿಯ ಹಂಗಿನ್ನೂ ನಿಮಗೆ ಹಿಂಗದು,

ನಡೆಯನೆಂತು ಪರರಿಗೆ ಹೇಳುವಿರಿ ?

ಒಡಲ ಹಂಗಿನ ಸುಳುಹು ಬಿಡದು;

ಎನೊಡನೆ ಮತ್ತಿತರ ಅನುಭವವಣಾ ?

ತಾನಾದಲ್ಲದೆ ಇದಿರಿಂಗೆ ಹೇಳಬಹುದೆ ?

ಅರಿವ ತೋರಬಲ್ಲಡೆ ತನ್ನನರುಹದೆ ಅರಿವನು

ಕಾಣಾ ಎನ್ನ ಅಜಗಣ್ಣತಂದೆ. . || ೨೭ ||

ನುಡಿಯೆನೆಂಬಲ್ಲಿಯೆ ನುಡಿ ಅದೆ.

ನಡೆಯೆನೆಂಬಲ್ಲಿಯೆ ನಡೆ ಅದೆ.

ಭಾವಿಸೆನೆಂಬಲ್ಲಿಯೆ ಭಾವ ಅದೆ.

ಅರಿದು ಮರೆದೆನೆಂಬಲ್ಲಿಯೆ ಅರಿವು ಮರವೆ ಅದೆ.


೩೩೩
ಮುಕ್ತಾಯಕ್ಕನ ವಚನಗಳು

ಅಂಗದಲ್ಲಿ ಲಿಂಗ ಲೀಯವಾಯಿತ್ತೆಂದಡೆ

ಅಲ್ಲಿಯೆ ಅಂಗ ಅದೆ.

ಅನಂಗಸಂಗಿಯಾದೆನೆಂಬಲ್ಲಿಯ ವಿಷಯಸೂತಕ ಅದೆ.

ನಾನೆ ನಾನಾದೆನೆಂಬಲ್ಲಿಯೆ ನೀನೆಂಬುದು ಅದೆ.


ಅರಿದು ಮರೆದ ಪರಿ ಎಂತು ಹೇಳಾ ?

ಅರಿವು ನಷ್ಟವಾಗಿ, ಮರಹು ಲಯವಾಗಿಪ್ಪದೆ


|| ೨೮ ||
ಎನ್ನ ಅಜಗಣ್ಣತಂದೆಯಲ್ಲದೆ ಮತ್ತಾರನೂ ಕಾಣೆ.

೧೧೨

ರವಿಯೊಳಡಗಿದ ಪ್ರತಿಬಿಂಬದಂತೆ

ಹಿಡಿವರಿಗಳವಲ್ಲದಿರಬೇಕು ಅಣ್ಣಾ .

ನಿನ್ನೊಳಡಗಿದ ಭೇದವ ಭಿನ್ನವಮಾಡುವರೆ ಅಣ್ಣಾ ?

ನಿನ್ನ ನುಡಿಯೆಲ್ಲ ಪ್ರತಿಬಿಂಬಗಳಾದವೆ ಅಣ್ಣಾ .

ಕೊಡನೊಳಗಣಜ್ಯೋತಿಯ ಅಡಗಿಸಲರಿಯದೆ
|| ೨೯ ||
ಮಿಗೆವರಿದಂತಾದೆಯೊ ಅಜಗಣ್ಣಾ !

೧೧೨೬

ವಾಯುವನುಟ್ಟನೇಕವ್ವಾ ?

ಅಗ್ನಿಗೆ ಆಧಾರವಾಗಿ ಆಕಾಶವ ಹೊದ್ದದೆ ವೈರಾಗ್ಯದಿಂದ ಬಂದು

ಅರಣ್ಯವಹೊಕ್ಕು ಕದಳಿಯ ಹೊಕ್ಕನೆಂದು

ಕಥಾಕುಳಿ ಕಥಾಕುಳಿಗೊಳುತ್ತಿದ್ದೆ , ಹದುಳವೇಕವ್ವಾ ?

ಎಮ್ಮ ಸೋದರಕ್ಕೆ ಬಾಳಿಲ್ಲ .

ಬಾಣಸ ಕೂರಲಗಾಗಿ ಅವನಾಳಿಗೊಂಬ ಶಿವಯೋಗಿ,

ಅವಳಿಗೆಯಾಗಿ ಹೊಕ್ಕನವ್ಯಾ ನಮ್ಮ ಅಜಗಣ್ಣತಂದೆ. || ೩೦ ||

೧೧೨೭

ಸಚ್ಚಿದಾನಂದಸ್ವರೂಪವಾದ, ವಾಲ್ಮನಕ್ಕಗೋಚರವಾದ,

ಜ್ಞಾನಕೀಯನೊಳಕೊಂಡು ನಿಂದ ಜಂಗಮವೆ ಅಂಗ ಪ್ರಾಣವಾದ,

ಶರಣರನೊಳಕೊಂಡುಚಿನದೊಳಗೆ ಅವಿರಳ್ಳೆಕ್ಯವಾದ

ಎನ್ನ ಅಜಗಣ್ಣತಂದೆಯನರಿದು ಶರಣೆಂಬಾತ

ನೀನಾರು ಹೇಳಯ್ಯಾ ? || ೩೧ ||
೩೩೪
ಶಿವಶರಣೆಯರ ವಚನಸಂಪುಟ

೧೧೨೮

ಸತ್ಯವುಳ್ಳಲ್ಲಿ ಶಬುದ ಹಿಂಗದು;

ಭಾವವುಳ್ಳಲ್ಲಿ ಭಕ್ತಿ ಹಿಂಗದು .

ಮೂರುಲೋಕದ ಹಂಗಿನ ಶಬುದವೇನಯಾ ?

ಮುಕುತಿಯನೇವೆನಯ್ಯಾ ?

ಎನ್ನ ಯುಕುತಿಯ ಮುಕುತಿಯ ಬಕುತಿಯಪದವನು ಕಂಡು

ನಾಚಿದನಜಗಣ್ಣತಂದೆ. || ೩೨ ||

೧೧೨೯

ಸಿಡಿಲುಹೊಯ್ದ ಬಾವಿಗೆಸೋಪಾನವುಂಟೆ ?

ಷಡುವರ್ಣರಹಿತಂಗೆ ಬಣ್ಣವುಂಟೆ ?
ಕಡಲದಾಂಟಿದವಂಗೆ ಹರುಗೋಲುಂಟೆ ?

ಬಿಡದೆ ಕಟ್ಟಿದ ಒರೆಗೆ ಸಂಧಾನವುಂಟೆ ?

ಒಡಲಿಲ್ಲದವಂಗೆ ಒಡವೆಯುಂಟೆ ?

ನುಡಿಯುಂಟೆ ಎಮ್ಮ ಅಜಗಣ್ಣದೇವಂಗೆ ? || ೩೩ |

೧೧೩೦

ಸಿಡಿಲುಹೊಯ್ದ ಬಾವಿಗೆ ಸೋಪಾನವೇಕೆ ?

ನೆರೆಯರಿದ ಬಳಿಕ ಮತ್ತೆ ಮತಿ ಹುಟ್ಟಲುಂಟೆ ?

ಸೊಡರುಳ ಮನೆಗೆ ಮತ್ತೆ ತಮಂಧವೆಂಬುದೇನೊ ?

ತನ್ನಲ್ಲಿ ತಾನು ತದ್ಧತವಾದ ಬಳಿಕ

ಬೊಮ್ಮ ಪರಬೊಮ್ಮನಾದೆನೆಂಬುದಿಲ್ಲ ನೋಡಾ

ಎನ್ನ ಅಜಗಣ್ಣತಂದೆಗೆ.

೧೧೩೧

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ?

ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ?

ಮಾಡ ಬನ್ನಿ ದಿನ ಶಿವರಾತ್ರಿಯ , ಕೇಳ ಬನ್ನಿ ಶಿವಾನುಭವವ,

ನೋಡಬನ್ನಿ ಅಜಗಣ್ಣನಿರವ ಬಸವಣ್ಣತಂದೆ. || ೩ ||

೧೧೩೨

ಸ್ಪಟಿಕಪ್ರಜ್ವಲಜ್ಯೋತಿಘಟದೊಳಗೆತೋರುತ್ತಿರೆ,

ದಿಟಪುಟವನತಿಗಳೆದು ಸಟೆಯ ಬಳಸುವರೆ ?


& ೩೮
ಮುಕ್ತಾಯಕ್ಕನ ವಚನಗಳು

ಅಂತರಂಗದ ಶುದ್ದಿಯ ಬಹಿರಂಗಕ್ಕೆ ತಂದು

ಸಂತೈಸಲರಿಯದೆ ಮರುಳಾದಿರಣ್ಣಾ !

ಜಂತ್ರದಕೀಲಕೂಟದ ಸಂಚದ ಭೇದವು ತಪ್ಪಿ ,


|| ೩೬ ||
ಮಂತ್ರ ಭಿನ್ನವಾಗಿ ನುಡಿವರೆ ಅಜಗಣ್ಣಾ ?

೧೧೩೩

ಹಿಡಿದಾಚಾರವ ಬಿಡದನ್ನಕ್ಕರ,

ಎನ್ನ ಅರಿವ ಮರೆಯದನ್ನಕ್ಕರ,

ಎನ್ನ ಮನವ ಸುಡದನ್ನಕ್ಕರ,

ಎನ್ನ ಬೆಡಗಿನ ಗುರುವ ತೊರೆಯದನ್ನಕ್ಕರ,

ಸುಸರವೆಂತಪ್ಪುದೊ ಹೇಳಾ ?

ಹೋಹಬಟ್ಟೆಯನರಿಯದನ್ನಕ್ಕರ
|| ೩೭ ||
ತಾನಾಗಬಾರದು ಕಾಣಾ, ಎನ್ನ ಅಜಗಣ್ಣತಂದೆಯಂತೆ.
ಮೋಳಿಗೆಮಹಾದೇವಿಯ ವಚನಗಳು

೧೧೩೪

ಅಂಗಕ್ರಿಯೆಯನರಿವಲ್ಲಿ ಸ್ವಾಣುವಿನ ಬಾಯ ತಿಲದಂತೆ,

ಆತ್ಮನಕಳೆಯ ತಿಳಿವಲ್ಲಿ

ಶಿಲೆಯಲ್ಲಿರ್ದ ಬಿಂದು ಒಲವರದಿಂದ ಜಾರುವಂತೆ,

ಆ ಅರಿವು ಮಹದಲ್ಲಿ ಬೆರಸುವಾಗ,

ವಾರಿಶಿಲೆ ನೋಡನೋಡಲಿಕೆ ನೀರಾದಂತೆ ಇರಬೇಕು.

ಕಾಯವಶದಿಂದ ಕರ್ಮವ ಮೀರಿ,

ಕರ್ಮವಶದಿಂದ ವರ್ಮವಶಗತನಾದಲ್ಲಿ ,

ಅದೆ ಕಾಯವೆರಸಿ ಎಯ್ದಿದಕೈಲಾಸ.

ಆ ಭಾವವ ನಿಮ್ಮಲ್ಲಿ ನೀವೇ ತಿಳಿದುಕೊಳ್ಳಿ

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ. || ೧ ||

ಅಂಗದ ಲಿಂಗ ಆತ್ಮನಲ್ಲಿ ವೇಧಿಸಬೇಕೆಂಬುದಕ್ಕೆ ವಿವರ:

ತಿಲರಾಶಿಯಲ್ಲಿ ಸುಗಂಧದ ಕುಸುಮವ

ದ್ವಂದ್ವವಮಾಡಿ ಕೂಡಿಇರಿಸಲಿಕ್ಕಾಗಿ,

ಆ ಗಂಧ ತಿಲದಂಗವ ವೇಧಿಸಿ

ಆ ತಿಲರಸವ ಭೇದಿಸಿದಂತೆ ಆಗಬಲ್ಲಡೆ,

ಆ ಲಿಂಗ ಆತ್ಮನಲ್ಲಿ ವೇಧಿಸಿಹುದು.

ಕುಸುಮದ ಗಂಧ ಒಳಗಾದುದನು,

ತಿಲದ ಹಿಪ್ಪೆ ಹೊರಗಾದುದನು ಅರಿದು ನಿಶ್ಚಯವಕಂಡಲ್ಲಿ ,

ಹೊರಗಣ ಪೂಜೆ, ಒಳಗಣ ದಿವ್ಯಪ್ರಕಾಶ,

ವಸ್ತುವಿನ ಭಾವದಕೂಟ ಇಷ್ಟಲ್ಲದಿಲ್ಲ .

ಇದ ಮೀರಿ ಕಾಬ ನಿಜಲಿಂಗೈಕ್ಯರು ನೀವೆ ಬಲ್ಲಿರಿ.

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನ
- || ೨ ||
ಮುಳುಗಿದುದೆ ಸಮುದ್ರ.

೧೧೩೬

ಅಂಗದಲ್ಲಿ ಲಿಂಗ ವೇಧಿಸಿ ಪ್ರಾಣಕ್ಕೆ ಸಂಬಂಧವ ಮಾಡಬೇಕೆಂಬಲ್ಲಿ

ಅಂಗಕ್ಕೂ ಪ್ರಾಣಕ್ಕೂ ಲಿಂಗ ವೇಧಿಸುವುದಕ್ಕೆ ಹಾದಿಯ ಹೋಲಬು


ಓ೩೭
ಮೋಳಿಗೆಮಹಾದೇವಿಯ ವಚನಗಳು

ಅದಾವ ಠಾವಿನಲ್ಲಿ ವೇಧಿಸುವುದು ಹೇಳಯ್ಯಾ ?


ಆ ಅಂಗ ನೀರಬಾಗಿಲ ನೆಲನೆ ? ಮೆಳೆಯ ಸವರಿನ ಹಾದಿಯೆ ?

ಹೋಹ ಹೊಲಬಿನ ಪಥವೆ ?

ಈ ಅಪ್ರಮಾಣವಪ್ಪ ಲಿಂಗವ ಚಿತ್ರದ ಭೇದದಿಂದರಿತು

ಆತ್ಮನ ದೃಷ್ಟದಲ್ಲಿ ಲಕ್ಷಿಸಿ, ಇದಿರಿಟ್ಟು,

ಕರದ ಇಷ್ಟದಲ್ಲಿ ನಿರೀಕ್ಷಣೆಯಿಂದ ನಿಜವಸ್ತುವ ನಿಕ್ಷೇಪಿಸಿ ಬೈಚಿಟ್ಟಲ್ಲಿ

ಅಂಗಕ್ಕೂ ಪ್ರಾಣಕ್ಕೂ ಬೇರೆಡೆ ಲಿಂಗವಿಪ್ಪುದೆರಡಿಲ್ಲ .

ಇದುಕ್ರಿಯಾಲೇಪಸ್ಥಲ ಇದು ಸದ್ಭಾವ ಸಂಬಂಧ,


|| ೩ ||
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನನಲ್ಲಿ .

೧೧೩೭

ಅದೇತಕೆ ಅಯ್ಯಾ ,

ಶಿವನೊಳಗೆ ಕೂಟಸ್ಥನಾದಹೆನೆಂಬ ಹಲುಬಾಟ ?

ಇದು ನಿತ್ಯ ಸತ್ಯದ ಆಟವಲ್ಲ ,

ಇನ್ನಾರಿಗೆ ಕೇಳಿ, ಮತ್ತಿನ್ನಾರಿಗೆ ಹೇಳುವೆ ನೀ ಮಾಡುವ ಮಾಟ ?

ಮುನ್ನ ನೀನಾರೆಂದಿದ್ದೆ ಹೇಳಾ ?

ಆ ಭಾವವನರಿದು ನಿನ್ನ ನೀನೆ ತಿಳಿ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ. || ೪ ||

೧೧೩೮

ಅನಾಚಾರ ಅಳವಟ್ಟು ಗುರುವನರಿಯಬೇಕು.

ಅನಾಮಿಕನಾಗಿ ಲಿಂಗವ ಗ್ರಹಿಸಬೇಕು.

ಸರ್ವಪಾತಕ ಪ್ರಸನ್ನನಾಗಿ ಜಂಗಮವ ಭಾವಿಸಬೇಕು.

ಇಂತೀ ತ್ರಿವಿಧ ಪಾತಕಂಗಳಲ್ಲಿ ಪವಿತ್ರಂಗಳನರಿದು

ಇರವಿನಲ್ಲಿ ಇರವನಿಂಬಿಟ್ಟು

ಉರಿ ಎಣ್ಣೆಯ ವೇಧಿಸಿ ಉರಿದು ಯೋಗನಿಂದಲ್ಲಿ ,

ಮಾಡುವ ಕ್ರಿ ಮಾಡಿಸಿಕೊಂಬ ವಸ್ತು ಉಭಯ ನಷ್ಟವಹನ್ನಕ್ಕ

ನೀ ಎನ್ನಲ್ಲಿ ನಾ ನಿಮ್ಮಲ್ಲಿ ಎಂಬನ್ನಕ್ಕ ಅದು ಭಿನ್ನಭಾವ.

ಈ ಉಭಯದ ಗನ್ನ ಬೇಡ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ,

ಎನ್ನಲ್ಲಿ ತಲ್ಲೀಯವಾಗಿರು .
೩.೩೮
ಶಿವಶರಣೆಯರ ವಚನಸಂಪುಟ

೧೧೩೯

ಅಯ್ಯಾ, ನಿಮ್ಮಾದ್ಯರ ವಚನವಕೇಳಿ

ಎನ್ನಂಗದ ಭಂಗ ಹಿಂಗಿತ್ತು ನೋಡಾ.

ಅಯ್ಯಾ , ನಿಮ್ಮ ಶರಣರ ಸಂಗದಿಂದ

ಮಹಾಲಿಂಗದ ಸಂಯೋಗವಾಯಿತ್ತು ನೋಡಾ,

ಅಯ್ಯಾ , ನಿಮ್ಮ ಶರಣರ ಸಂಗದಿಂದ

ಮಹಾಪ್ರಸಾದದ ಪರುಷವ ಕಂಡೆ,

ಆ ಪರುಷದ ಮೇಲೆಮೂರುಜ್ಯೋತಿಯ ಕಂಡೆ,

ಆ ಜ್ಯೋತಿಯ ಬೆಳಗಿನಲ್ಲಿ ಒಂಬತ್ತು ರತ್ನವ ಕಂಡೆ ,

ಆ ರತ್ನಂಗಳ ಮೇಲೆ ಒಂದು ಅಮೃತದಕೊಡನ ಕಂಡೆ.

ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರದ,

ಕರದವನೆ ನೆರದ, ನೆರದವನೆ ಕುರುಹನರಿದ,

ಅರಿದವನೆ ನಿಮ್ಮನರಿದವ ಕಾಣಾ


| ೬ ||
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಾ.

೧೧೪೦

ಆರು ದೇವರ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ. .

ಮೂರುದೇವರ ನಿಮ್ಮ ಮೂಗಿನಲ್ಲಿ ಮುರಿದುಕೊಳ್ಳಿ,

ಗುರು ತೋರಿದ್ದು ಒಂದೇ ದೇವರು ಸಾಕು,

ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ. || ೭ ||

ဂန္ဓာ

ಆರು ಮಣಿಗೆ ದಾರವನೇರಿಸಿ,

ಕುಣಿಕೆಗೆ ಮಣಿಯಿಲ್ಲದೆ ಅರಸುತ್ತಿದ್ದರಲ್ಲಾ ತತ್ವಜ್ಞರು.

ಇದು ಆದಿಯ ಕ್ರೀ , ಅನಾದಿಯ ಜ್ಞಾನ.

ಈ ಉಭಯವಭೇದಿಸಿದಡೆ ಕುಣಿಕೆಯ ಮಣಿ ತಲಪಿಗೇರಿತ್ತು ,


ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಲಿಂಗವು ಏ

೧೧೪೨

ಆವ ಬೀಜವ ಬಿತ್ತಿದರೂ

ಪೃಥ್ವಿಗೆ ಬೇರು, ಬಯಲಿಂಗೆ ಶಾಖೆ ತಲೆದೋರಿ ಬೆಳೆವಂತೆ

ಐಕ್ಯಕ್ಕೆ ಮರೆ, ಹೀಗೆ ಬಾಹ್ಯ .


ಮೋಳಿಗೆಮಹಾದೇವಿಯ ವಚನಗಳು

ಉಭಯದಭೇದವುಳ್ಳನ್ನಕ್ಕ ಭಕ್ತಿಯ ಹೋರಾಟ ಬಿಡದು.

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ


|| ೯ ||
ಮಣಿಯುಳ್ಳನ್ನಕ್ಕ ಪವಣಿಕೆಯ ಹಂಗು ಬಿಡದು.

೧೧೪೩

ಇನ್ನೇವೆನಯಾ ನಾನು ಕೆಡೆದಿದೆನೆ.

ಕಾಯವುಳ್ಳನ್ನಕ್ಕ ಕರ್ಮ ಬಿಡದು;

ಜೀವವುಳ್ಳನ್ನಕ್ಕ ಪ್ರಕೃತಿ ಕೆಡದು ;

ಭಾವಿಸಿಹೆನೆಂಬನ್ನಕ್ಕೆ ವಿಶ್ವಾಸ ಬಿಡದು ;

ಈ ಉಭಯವುಳ್ಳನ್ನಕ್ಕ ಮನ ನಿನ್ನ ನೆನೆಯಬಿಡದು.

ನೀ ನಷ್ಟವಾದಲ್ಲಿ ಎನ್ನ ಭಾವ ನಷ್ಟ ,

ಭಾವ ನಷ್ಟವಾದಲ್ಲಿ ಎನ್ನಯ್ಯನಿಲ್ಲ ;

ನೀನು ಪ್ರಿಯನಲ್ಲ ; ಇಮ್ಮಡಿದೇವನಲ್ಲ .

ನಿಃಕಳಂಕಮಲ್ಲಿಕಾರ್ಜುನನೆಂಬ ಭಾವ
|| ೧೦ ||
ಎಲ್ಲಿ ಅಡಗಿತ್ತೆಂದರಿಯೆನಲ್ಲ !

ಇಷ್ಟದಲ್ಲಿ ನೋಟ, ಜ್ಞಾನದಲ್ಲಿ ಕೂಟ

ಏಕಾರ್ಥವಾದಲ್ಲಿ ಕಾಯವೆಂಬ ಕದಳಿಯ ಬಿಟ್ಟುದು

ಭಾವವೆಂಬ ಕುರುಹ ಮರೆದುದು.

ಇಂತೀ ಉಭಯ ನಿರ್ಭಾವವಾದಲ್ಲಿ

ಇಹಪರವೆಂಬ ಹೊಲಬುಗೆಟ್ಟಿತ್ತು ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಒಂದೆಂದಲ್ಲಿ . ||

ಇಷ್ಟಲಿಂಗ ಪ್ರಾಣಲಿಂಗವೆಂದು ವಿಭೇದಿಸುವಲ್ಲಿ

ಕುಸುಮದ ಗಿಡುವಿಂಗೆ ವಾಸನೆಯುಂಟೆ ಕುಸುಮಕಲ್ಲದೆ ?

ಅದು ಗಿಡುವಿಡಿದಾದ ಕುಸುಮವೆಂಬುದನರಿದು

ಗಿಡುವಿನ ಹೆಚ್ಚುಗೆ; ಕುಸುಮದ ನಲವು; ಸುಗಂಧದ ಬೆಳೆ.

ಭಕ್ತಿಗೆ ಕ್ರೀ ,ಕ್ರೀಗೆ ಶ್ರದ್ಧೆ , ಶ್ರದ್ಧೆಗೆ ಪೂಜೆ, ಪೂಜೆಗೆ ವಿಶ್ವಾಸ,

ವಿಶ್ವಾಸಕ್ಕೆ ವಸ್ತು ತನ್ಮಯವಾಗಿಪ್ಪುದು.

ಇದು ತುರೀಯಭಕ್ತಿಯ ಇರವು;


೩೪೦
ಶಿವಶರಣೆಯರ ವಚನಸಂಪುಟ

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಲಿಂಗವ

ಮೆಲ್ಲ ಮೆಲ್ಲನೆಕೂಡುವ ಕೂಟ. - || ೧೨ ||

೧೧೪೬

ಊರ್ವಸಿ ಕರ್ಪೂರವ ತಿಂದು

ಎಲ್ಲರಿಗೆ ಮುತ್ತ ಕೊಟ್ಟರೆ ಮಚ್ಚುವರಲ್ಲದೆ,

ಹಂದಿ ಕರ್ಪೂರವ ತಿಂದು

ಎಲ್ಲರಿಗೆ ಮುತ್ತ ಕೊಟ್ಟಡೆಮಚ್ಚುವರೆ ,

ಹುಡುಹುದು ಎಂದಟ್ಟುವರಲ್ಲದೆ ?

ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ

ಅನುಭಾವವ ಮಾಡಿದಡೆ ಮಚ್ಚುವರಲ್ಲದೆ,

ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ

ಅನುಭಾವವ ಮಾಡಿದಡೆ ಮಚ್ಚುವರೆ ?

ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ

ಆ ಹಂದಿಗಿಂದ ಕರಕಷ್ಟ ,

|| ೧೩ ||
ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕ ಮಲ್ಲಿಕಾರ್ಜುನಾ.

೧೧೪೭

ಎನಗೆ ನೀನಿಂಬುಕೊಡುವಲ್ಲಿ ,

ಸಕಲವ ಪ್ರಮಾಣಿಸುವುದ ಬಿಟ್ಟು ನಿಃಕಲವಸ್ತುವಾಗು.

ಶಕ್ತಿಸಮೇತವ ಬಿಟ್ಟು ನಿಶ್ಯಕ್ತಿನಿರ್ಲೆಪವಾಗು.

ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದ ಬಿಟ್ಟು ನಿಶ್ಚಿಂತನಾಗ

ಅಂದು ಮಿಕ್ಕಾದ ಭಕ್ತರ ಗುಣವನೋಡಿಹೆನೆಂದು ತೊಟ್ಟ

ಠಕ್ಕು ಠವಳವ ಬಿಡು.

ಸರ್ವ ರಾಗ ವಿರಾಗನಾಗಿ ಸರ್ವಗುಣಸಂಪನ್ನನಾಗಿ,

ಜ್ಞಾನಸಿಂಧುಸಂಪೂರ್ಣವಾಗಿ

ನಿನ್ನರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ.

ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೋಡಿಹೆ, ಇದಕ್ಕೆ ಗನ್ನಬೇಡ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.

೧೧೪೮

ಎಸುವರ ಬಲ್ಲೆ;

ಎಚ್ಚ ಬಾಣ ತಿರುಗಿ ಬಪ್ಪಂತೆ ಎಸುವರ ಕಾಣೆ .


ಮೋಳಿಗೆಮಹಾದೇವಿಯ ವಚನಗಳು

ಪೂಜಿಸುವವರ ಬಲೆ;

ಪೂಜಿಸಿದ ಲಿಂಗ ಅಭಿಮುಖವಾಗಿ

ಸರ್ವಾಂಗದಲ್ಲಿ ವೇಧಿಸುವರ ಕಾಣೆ.

ನುಡಿಗೆ ನಡೆ, ಆ ನಡೆಗೆ ನುಡಿ

ಉಭಯವವೇಧಿಸುವರ ಕಾಣೆ .

ಈ ಉಭಯವುಸಿದ್ದಿಯಾಗಿ ಸಿದ್ದಾಂತವಾದಲ್ಲಿ

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು

ಕ್ರೀ ಜ್ಞಾನ ನಿರುತವಾದವಂಗಲ್ಲದೆ ಸಾಧ್ಯವಿಲ್ಲ .

೧೧೪೯

ಏನೇನು ಎನಲಿಲ್ಲದ ನಿರಾಲಯದಿಂದಾಯಿತ್ತು ಸಹಜ.

ಆ ಸಹಜದಿಂದಾಯಿತ್ತು ಸೃಷ್ಟಿ ,

ಸೃಷ್ಟಿಯಿಂದಾಯಿತ್ತು ಸಂಸಾರ,

ಸಂಸಾರದಿಂದಾಯಿತ್ತು ಅಜ್ಞಾನ ,

ಅಜ್ಞಾನದಿಂದಾಯಿತ್ತು ಮರವೆ.

ಆ ಮರವೆಯಿಂದವೆ ಜ್ಞಾನರತ್ನವ ಮರೆದು

ತಾಮಸಕ್ಕೊಳಗಾದಲ್ಲಿ ನಾನೀನೆಂಬ ಅಹಂಕಾರ ತಲೆದೋರಿತ್ತು .

ಆ ಅಹಂಕಾರದಿಂದ ಸೀಮೆಗೆಟ್ಟು ದುಷ್ಕರ್ಮಕ್ಕೀಡಾಗಿ

ನೀನೆಂಬುದ ಮರೆದೆನಯ್ಯಾ ,

ಇನ್ನು ಕೃಪೆಯಮಾಡು , ಕೃಪೆಯ ಮಾಡು ಶಿವಧೋ ಶಿವಧೋ


|| ೧೬ ||
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.

೧೧೫೦

ಕನಕಶಿಲೆಯೆನಿಸುವ ಪಾಷಾಣದಲ್ಲಿ ರತಿ ಪುಟ್ಟಲಿಕ್ಕಾಗಿ,

ಆ ಮಧ್ಯದಲ್ಲಿ ಸೂತ್ರ ತೋರಲಿಕ್ಕೆ ,

ಆ ಸೂತ್ರ ಆ ಪಾಷಾಣವ ಗ್ರಹಿಸಿ,

ಆವ ಕಡೆ ಮುಖವಾದಲ್ಲಿ ಸೂತ್ರ ಆವರಣಿಸುವಂತೆ,

ಶಿವಲಿಂಗಪೂಜೆಯಲ್ಲಿ ಲಿಂಗವ ಮುಟ್ಟುವಕೈ , ನಟ್ಟ ದೃಷ್ಟಿ


ತನ್ನಂಗದಲ್ಲಿ ಸರ್ವಾಂಗದೋಷಂಗಳ ಮರೆದು

ಜಾಗ್ರದಿರವುಸ್ವಪ್ನದಲ್ಲಿ ತೋರುವಂತೆ

ಸ್ವಪ್ನದ ಸಂಗ ಸುಷುಪ್ತಿಯನೆದಿದಂತೆ ಇಪ್ಪುದು


ಶಿವಪೂಜಕನ ಶಿವಮೂರ್ತಿಧ್ಯಾನ.
ಶಿವಶರಣೆಯರ ವಚನಸಂಪುಟ

ಈ ಗುಣ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ

ಲಿಂಗವನರಿವವರಿಗಲ್ಲದೆ ಕಾಣಬಾರದು. || ೧೭ ||

೧೧೫೧

ಕಪಟಕ್ಕೆ ಒಳಗು ಹೊರಗಲ್ಲದೆ,

ಸ್ವಯಂಭು ಹೇಮಕುಂಟೆ ಒಳಗು ಹೊರಗು ?

ಕುಟಿಲದಿಂದ ಘಟವ ಹೊರೆವಂಗೆ ಪ್ರಕಟಪೂಜೆಯಲ್ಲದೆ,

ಅಘಟಿತಂಗುಂಟೆ ಅಖಿಳರ ಮೆಚ್ಚಿನ ಪೂಜೆ ?

ತೃಣದ ತುದಿಯ ಬಿಂದುವಾದಡೂ ,ಉದುರಿ ಒಣಗಿದ ಕುಸುಮವಾದಡೂ

ತ್ರಿಕರಣಶುದ್ಧವಾಗಿ ತ್ರಿಗುಣಾತ್ಮನ ಏಕವ ಮಾಡಿ

" ತ್ರಿಶಕ್ತಿಯ ಇಚ್ಛೆಯ ಮುಚ್ಚಿ ನಿಶ್ಚಯದಿಂದ ಮಾಡಿ ಮಾಡದಿದ್ದರೂ

ಮುಟ್ಟಿದಲ್ಲಿ ತೊಟ್ಟು ಬಿಟ್ಟ ಹಣ್ಣಿನಂತಿರಬೇಕು,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು,

ಉಭಯ ಲೇಪವಾದ ಕಾರಣ . || ೧೮ ||

೧೧೫೨

ಕರ್ಮದೊಳಗಣ ಸತ್ಕರ್ಮ, ಮರ್ಮದೊಳಗಣ ನಿಜವರ್ಮ,

ಅರಿವಿನೊಳಗಣ ಅರಿವ, ತರಹದೊಳಗಣ ತೆರವ ಕುರುಹಿಟ್ಟು,

ಕುರುಹ ಕುರುಹು ಅವಗವಿಸಿ,

ಅಭಿನ್ನವಿಲ್ಲದೆ ನಿರ್ವಾಹ ನಿರ್ಲಿಪವಾದುದು.

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು

ತಾನೆ ಕುರುಹು ಅರಿವಾದನು . || ೧೯ ||

೧೧೫೩

ಕಲ್ಲ ಬಿತ್ತಿ ನೀರನೆರೆದಲ್ಲಿ

ಪಲ್ಲವಿಸುವುದೆ ದಿಟದ ಬೀಜದ ವೃಕ್ಷದಂತೆ ?

ಶ್ರದ್ಧೆ ಸನ್ಮಾರ್ಗ ಭಕ್ತಿ ಇಲ್ಲದಲ್ಲಿ

ಗುರುಭಕ್ತಿ , ಶಿವಲಿಂಗಪೂಜೆ, ಚರಸೇವೆ

ತ್ರಿವಿಧ ಇತ್ರವೆ ಉಳಿಯಿತ್ತು .

ಮತ್ತೆ ನಿಜವಸ್ತುವಿನ ಸುದ್ದಿ ನಿಮಗೆತ್ತಣದೊ ?


ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ವಿಶ್ವಾಸಬೇಕು. || ೨೦ |
ಮೋಳಿಗೆಮಹಾದೇವಿಯ ವಚನಗಳು

ಕಾಣಿಗೆ ಹೋರಿಕಡವರವ ನೀಗಲೇತಕ್ಕೆ ?

ಅಲುಗಾಡಿ ತುಂಬಿದಕೊಡನ ಹೊಡೆಗೆಡಹಲೇತಕ್ಕೆ ?

ನಿನ್ನಂಗದಲ್ಲಿ ಗುರುಕೊಟ್ಟ ಲಿಂಗವೆಂಬುದೊಂದು ಕುರುಹು ಇರುತ್ತಿರಲಿಕ್ಕೆ

ಆ ನಿಜಲಿಂಗದ ಸಂಗವನರಿಯದೆ

ಸಂದಿಗೊಂದಿಯಲ್ಲಿ ಹೊಕ್ಕೆಹೆನೆಂಬ ಗೊಂದಣವೇತಕ್ಕೆ ?

ತಾ ನಿಂದಲ್ಲಿ ಕೆಡಹಿದ ಒಡವೆಯ , ಆಚೆಯಲ್ಲಿ ನೆನೆದು ಅರಸಿದಡಿಲ್ಲ .

ಅದು ಮತ್ತೆ ತನಗೆ ಸಂದಿಸುವುದೆ ?

ಘನಲಿಂಗ ನಿನ್ನಂಗದಲ್ಲಿದ್ದಂತೆ ಕಂಡೆ ಕಾಣೆನೆಂಬ

ನಿನ್ನ ನಿಜ ನಿಂದಲ್ಲಿಯೆ ಸಂದೇಹವ ತಿಳಿದುಕೊ ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ . || ೨೧ ||

- ಕಾಯಭ್ರಮೆಯಿಂದ ಕೈಲಾಸ,

ಜೀವಭ್ರಮೆಯಿಂದ ಮಹದಕೂಟವೆಂಬುದು.

ಕಾಯದ ಜೀವದ ಭೇದವನರಿತಲ್ಲಿ

ಅತ್ತಲಿತ್ತಲೆಂದು ಮತ್ತೆ ಹಲುಬಲಿಲ್ಲ .

ಇದು ನಿಶ್ಚಯದಕೂಟ,
|| ೨೨ ||
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ .

೧೧೫೬

ಕಾಯವಿಹನ್ನಕ್ಕ ಕರ್ಮವ ಬಿಟ್ಟ ಪರಿ ಇನ್ನೆಂತೊ ?

ಜೀವವಿಹನ್ನಕ್ಕ ಅರ್ಪಿಸದೆ ತಾನುಂಬ ಪರಿ ಇನ್ನೆಂತೊ ?


ಕೊಳದೊಳಗೆ ಕಾಲಿದ್ದು ಕೋಲಹಿಡಿದು

ಸಾಧನೆಯ ಮಾಡುವನ ತೆರನಂತೆ,

ಕರ್ಮಕಾಂಡಿಯಾಗಿ ತಾನಿರುತ್ತ

ಇದಿರಿಗೆ ವರ್ಮವಬೋಧಿಸಲೇತಕ್ಕೆ ?

ಇದು ನನ್ನಿಯ ಇರವಲ್ಲ .

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು

ಅವರಿಗೆ ಅನ್ಯನಾಗಿಪ್ಪನು. || ೨೩ ||
ಶಿವಶರಣೆಯರ ವಚನಸಂಪುಟ

೧೧೫೭

ಕಾಯವುಳ್ಳನ್ನಕ್ಕ ಲಿಂಗಪೂಜೆ, ಆತ್ಮವುಳ್ಳನ್ನಕ್ಕ ಅರಿವಿನ ಭೇದ.

ಪುರುಷ ನೀ , ಸತಿ ನಾನೆಂಬಲ್ಲಿ

ಉಭಯದ ಬೀಜ ನಾ ನೀನೆಂಬನ್ನಕ್ಕ .

ಅಂಗದ ಲಿಂಗದಲ್ಲಿಯೆ ನಿರಂಗವಾಗಬೇಕು,

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಾ. .. || ೨೪

೧೧೫೮

ಕಾಯವೆರಸಿ ಕೈಲಾಸಕ್ಕೆ ಹೋಹೆನೆಂಬರು,


ಇದು ಕ್ರಮವಲ್ಲ .

ಘನಲಿಂಗ ಕರಸ್ಥಲದೊಳಗಿಪ್ಪ ಅನುವನರಿಯದೆ

ಇಲ್ಲಿ ಕರ್ಮ, ಅಲ್ಲಿ ನಿಃಕರ್ಮವೆ ?

ಹೇಮದ ಮಾಟದ ಒಳಹೊರಗಿನಂತೆ

ಮರ್ತ್ಯ ಕೈಲಾಸವೆಂಬ ಕಟ್ಟಳೆಯಿಲ್ಲ .

ಆತ್ಮ ನಿಶ್ಚಯವಾದಲ್ಲಿಯೆ ಕೈವಲ್ಯ .

ಮತ್ತತ್ವವಾದಲ್ಲಿಯೆ ಮರ್ತ್ಯದೊಳಗು.

ಈ ಗುಣ ಸದಮಲಭಕ್ತನ ಯುಕ್ತಿ ;

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನನಿಕ್ಕಿದಗೊತ್ತು.

ಕಾಲಿದ್ದಂತೆ ತಲೆ ನಡೆದುದುಂಟೆ ಅಯ್ಯಾ ?

ಕಣ್ಣಿದ್ದಂತೆ ಕರ್ಣ ನೋಡಿದುದುಂಟೆ ಅಯ್ಯಾ ?

ಬಾಯಿದ್ದಂತೆ ನಾಸಿಕ ಉಂಡುದುಂಟೆ ಅಯ್ಯಾ ?

ತಾಯಿಲ್ಲದೆ ಮಕ್ಕಳು ಬಂದ ತೆರನ ಹೇಳಯ್ಯಾ ?

ನಿಮ್ಮ ಸೇವೆಯ ತೊತ್ತಿನ ಭಾವವ ಕೇಳಲೇತಕ್ಕೆ ?

ಪಟದೊಳಗಣ ಬಾಲಸರಕ್ಕೆ ಪ್ರತಿಸೂತ್ರ ನೇಣುಂಟೆ ?

ನಿಮ್ಮಲ್ಲಿಯೆ ಎನ್ನ ಭಾವಲೇಪ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿಯೆ. || ೨೬ |

೧೧೬೦

ಕಾಷ್ಠವ ಸುವರ್ಣವ ಮಾಡಿದೆನೆಂಬ ಘಾತುಕತನವೆ ನಿಮ್ಮ ಭಕ್ತಿ ?

ಸಕಲ ದೇಶಕೋಶ ವಾಸ ಭಂಡಾರ ಸವಾಲಕ್ಷ ಮುಂತಾದ ಸಂಬಂಧ,


ಮೋಳಿಗೆಮಹಾದೇವಿಯ ವಚನಗಳು

ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೆ ನಿಮ್ಮ ಭಕ್ತಿ ?

ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಂತಾದ

ಏಳುನೂರೆಪ್ಪತ್ತು ಅಮರಗಣಂಗಳ ಭಾವವಿದ್ದಂತೆ ನಿಮ್ಮ ಅಗಡವೇಕಯ್ಯಾ

ನಿಮ್ಮ ಅರಿವಿಂಗೆ ಇದಿರಿನಲ್ಲಿ ಕೂಡಿಹೆನೆಂಬ ಭಿನ್ನಭಾವವುಂಟೆ ಅಯ್ಯಾ ?

ಕರ್ಪೂರದ ಅರಣ್ಯವಕಿಚ್ಚು ಹತ್ತಿ ಬೆಂದಲ್ಲಿ

ಭಸ್ಮ ಇದ್ದಿಲೆಂದು ಲಕ್ಷಿಸಲುಂಟೆ ?

ನಿಮ್ಮ ಭಾವವ ನಿಮ್ಮಲ್ಲಿಗೆ ತಿಳಿದುಕೊಳ್ಳಿ.

ನಿಮ್ಮ ಕೂಟಕ್ಕೆ ಎನ್ನ ನಾಚಿಕೆಯ ಬಿಡಿಸಿದ ತೆರನ ತಿಳಿದುಕೊಳ್ಳಿ.

ಶಕ್ತಿಯ ಮಾತೆಂದು ಧಿಕ್ಕರಿಸಬೇಡಿ.

ಹೊರಗೆ ಕೂಡಿಹೆನೆಂಬುದು ನಿಮ್ಮ ಅರಿವಿಂಗೆ ಹಾನಿ.

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ,


|| ೨೭ ||
ನಿಮ್ಮ ಶರಣರ ನೆಲೆಯ ನೀವೇ ನೋಡಿಕೊಳ್ಳಿ.

೧೧೬೧

ಕೂಟಕ್ಕೆ ಕುರುಹಾದುದನರಿಯದೆ,

ಆತ್ಮಕ್ಕೆ ಅರಿವಾದುದನರಿಯದೆ,

ಕೈಲಾಸವೆಂಬ ಸೂತ್ರದ ಒಳಗಿಗೆ ಮನಸೋತಿರಲ್ಲಾ !

ಅಂಧಕನ ಕೈಯ ರತ್ನದಂತೆ ಆದಿರಲ್ಲಾ !

ಪಂಗುಳನ ಕರದ ಶಸ್ತ್ರದಂತೆ ಆದಿರಲ್ಲಾ !


ಈ ನಿರಂಗವ ತಿಳಿದು ನಿಂದಲ್ಲಿ ಬೇರೆ ಲಿಂಗವಡಗುವದಕ್ಕೆ

ಉಭಯವುಂಟೆಂಬ ದಂದುಗ ಬೇಡ.

ತಾ ನಿಂದಲ್ಲಿಯೆ ನಿಜಕೂಟ,

ತಿಳಿದಲ್ಲಿಯೆ ನಿರಂಗವೆಂಬುದು.

ಉಭಯವಿಲ್ಲ ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನನಲ್ಲಿ . | ೨

೧೧೬೨

ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ ?

ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ ?

ಕುತ್ತು ನಿವೃತ್ತಿಯಾದವಂಗೆ ಕಟ್ಟೋಗರದ ಹೊರೆಯ ಹೊರಲೇತಕ್ಕೆ ?

ನಿತ್ಯ ಅನಿತ್ಯವ ತಿಳಿದು, ಮರ್ತ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ.

ನಿಶ್ಚಯವ ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿಂದಲ್ಲಿ ,


೩೪೬
ಶಿವಶರಣೆಯರ ವಚನಸಂಪುಟ

ಆ ಬಚ್ಚಬಯಲ ಬೆಳಗೆ ನಿನ್ನ ನೀನೆ ನೋಡಿಕೊ

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ .

೧೧೬೩

ಕ್ರಿಯಾಪೂಜೆ ಒಡಲಾದ ಮತ್ತೆ ಪೂಜಿಸಲಿಲ್ಲ .

ಜ್ಞಾನನೇತ್ರ ಮುಸುಕ ತೆಗೆದ ಮತ್ತೆ ಏನುವ ನೋಡಲಿಲ್ಲ .

ಧ್ಯಾನ ನಿಧಾನಿಸಿ ನಿಂದ ಮತ್ತೆ ಏನುವ ನೆನೆಯಲಿಲ್ಲ .

ಈ ಗುಣಗ್ರಾಹಕಗ್ರಹೀತನ ಉಭಯ ಭಾವ ,

ಎನ್ನಯ್ಯಪ್ರಿಯ [ ಇಮ್ಮಡಿ] ನಿಃಕಳಂಕಮಲ್ಲಿಕಾರ್ಜುನನಲ್ಲಿ

ಕ್ರಿಯಾನಿರ್ವಾಹಸ್ಥಲ. || ೩೦ ||

೧೧೬೪

ಕ್ರಿಯಾಲಿಂಗ ಜ್ಞಾನಲಿಂಗಂಗಳೆಂಬಲ್ಲಿ ,

ಉಭಯವೆರಡು ಲಿಂಗವೆಂದು ಕಲ್ಪಿಸುವಲ್ಲಿ

ಅದಕ್ಕೆ ಭಿನ್ನಭಾವವಾವುದು ?

ಕುಂಭಂಗಳೊಳಗೆ ಹುದುಗಿಕ್ಕಿದ ಕಿಚ್ಚು ,

ಆ ಕುಂಭಗಳಿಗೆ ಒಳಗೆ ಮುಟ್ಟಿದರೂ ಹೊರಗೆ ಮುಟ್ಟಿದರೂ

ಪಾಕಪ್ರಯತ್ನ ತಪ್ಪದಾಗಿ,

ಇಂತೀ ದೃಷ್ಟದ ಲಕ್ಷಿತದಂತೆ ಹೊರಗಣ ಕ್ರಿಯಾಸಂಬಂಧ,

ಒಳಗಣ ಜ್ಞಾನಸಂಬಂಧವು; ಉಭಯದ ತತ್ತಿಲ್ಲ .

ಸಕ್ಕರೆಯ ರಾಶಿಗೆ ಕಿಸೆಯ ಕೆಲನುಂಟೆ ?

ನಿಶ್ಚಯದ ಲಿಂಗಾಂಗಿಗೆ ಉಭಯದ ತಟ್ಟುಮುಟ್ಟೆಂಬ ಗುಟ್ಟಿನ ಕುಲವಿಲ್ಲ ,

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಲಿಂಗವು

ಸ್ವಯಾನುಭಾವಸಿದ್ಧನಾದ ಕಾರಣ. || ೩೧ ||

೧೧೬೫

- ಗುರು ಅನಾಚಾರಿ, ಲಿಂಗವುನೇಮಸ್ಸ , ಜಂಗಮ ದುರಾಚಾರಿ

ಇಂತೀ ತ್ರಿವಿಧ ಭೇದ.

ಸ್ಕೂಲ ಸೂಕ್ಷ್ಮ ಕಾರಣ - ಇಂತೀ ತನುತ್ರಯ ಕೂಡಿ,

ತನುವಿಂಗೆ ಕುರುಹು, ಮನಕ್ಕೆ ಅರಿವು, ಅರಿವಿಂಗೆ ನಿಜದನೆಲೆ ಅಹನ್ನಕ್ಕ

ಸೂತಕಸುಳುಹು ಕೆಡದು, ಸರ್ವವ ನೇತಿಗಳೆವ ಮಾತು ಬಿಡದು.

ಇಂತೀ ತ್ರಿವಿಧದ ಭೇದವ ಭೇದಿಸಿ ನಿಂದಲ್ಲಿ


೩೪೭
ಮೋಳಿಗೆಮಹಾದೇವಿಯ ವಚನಗಳು

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು


|| ೩೨ ||
ವಿರಳವಿಲ್ಲದ ಅವಿರಳಸಂಬಂಧಿ.

೧೧೬೬

ಗುರುವನರಿದು ಲಿಂಗವನರಿವವರುಂಟು,

ಲಿಂಗವನರಿದು ಜಂಗಮವನರಿವವರುಂಟು,

ಪಂಚಾಚಾರವನರಿದು ಜಂಗಮವನರಿವವರುಂಟು,

ಆ ಜಂಗಮವನರಿದಲ್ಲಿ ಷಟ್‌ಸ್ಥಲಸಂಬಂಧವಾಯಿತ್ತು.

ಆ ಸಂಬಂಧ ಸಮಯ ನಿಂದು, ಉಭಯವಳಿದು ಏಕವಾದಲ್ಲಿ ,

ಹಲವು ನೆಲೆ ತನ್ನ ವಿಶ್ವಾಸದ ಹೊಲಬಿನಲ್ಲಿ ಅಡಗಿತ್ತು .

ಆ ಹೊಲದ ಹೊಲಬಿನಲ್ಲಿ ನಿಂದವಂಗೆ ಇಹಪರವೆಂಬ ಕಲೆ ಇಲ್ಲ ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಒಂದೆ ಎಂದಲ್ಲಿ . || ೩೩ ||

- ೧೧೬೭

ಚಿತ್ರದ ಬೊಂಬೆಯ ಹಾಹೆ ಎಲ್ಲಕ್ಕೂ ಆತ್ಮನಿಂದ ಚೇತರಿಸಿ ನಡೆಯುತ್ತಿಹವೆ ?

ಅವು ಸೂತ್ರಾಧಿಕನ ಭೇದ, ಎನ್ನ ಶಕ್ತಿಜಾತಿಯ ಲಕ್ಷಣ.

ನಿಮ್ಮ ಭಕ್ತಿಸೂತ್ರದಿಂದ ಎನ್ನ ಜಾತಿ ನಿಮ್ಮ ಶ್ರೀಪಾದದಲ್ಲಿ ಅಡಗಿತ್ತು .

ಎನಗೆ ಭಿನ್ನದ ಮಾತಿಲ್ಲ .


ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನನೆಂಬವರು ನೀವೆ! || ೩೪

೧೧೬೮ |

ತನ್ನ ಕಣ್ಣಿಂದ ಕನ್ನಡಿಯ ನೋಡಿ,

ಆ ದೃಷ್ಟಿ ಕಾಣಲಿಕ್ಕೆ ಕಣೋ ? ಕನ್ನಡಿಯೊ ?

ಆ ಉಭಯದ ದೃಷ್ಟಿಯಿಂದ ಇಷ್ಟದ ದೃಷ್ಟವಕಂಡು,

ಉಭಯ ನಿಶ್ಚಯವಾದಲ್ಲಿ ಕೈವಲ್ಯವೆಂಬ ಕರ್ಕಶ ಬೇಡ.

ಕೈಯ ಮುದ್ದೆಯ ಕೆಡಹಿದಲ್ಲಿ ಬಾಯಿಗೆ ಬಯಲು,

ಅದ ನಿಮ್ಮ ನೀವೇ ತಿಳಿದುಕೊಳ್ಳಿ,


|| ೩ ||
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.

೧೧೬೯

ತನುವಿನ ಮೇಲಿಪುದು ಇಷ್ಟಲಿಂಗವೆಂದೆಂಬರು.

ಆತ್ಮನ ನೆನಹಿನಲ್ಲಿಪುದು ಪ್ರಾಣಲಿಂಗವೆಂದೆಂಬರು.

ಇಂತೀ ಘಟಕ್ಕೂ ಆತ್ಮಕ್ಕೂ ಉಭಯ ಲಿಂಗವುಂಟೆ ?


೩೪೮ ಶಿವಶರಣೆಯರ ವಚನಸಂಪುಟ

ಹೊರಗಳ ಅಸ್ಥಿ ಚರ್ಮಕ್ಕೆ ಬೇರೊಂದು ಅಸುವ ಕಲ್ಪಿಸಬಹುದೆ ?

ಒಳಗಳ ಕರುಳು, ಮಜ್ಜೆ, ಮಾಂಸಕ್ಕೆ ಬೇರೊಂದು ಅಸುವಿನ ಕಲೆಯು

ಇದಕ್ಕೆ ದೃಷ್ಟವ ಕಂಡಡೆ ಇಷ್ಟಲಿಂಗ ಪ್ರಾಣಲಿಂಗವೆಂಬುದಕ್ಕೆ ಕಟ್ಟ

ಅದು ಅಚೇತನವಪ್ಪ ನಿರವಯಕ್ಕೆ ಅಚೇತನವಪ್ಪುದೊಂದು ದೃಷ್ಟ ;

ನಿರವಯ ಸಾವಯವದಲ್ಲಿ ಸಂಬಂಧಿಸಿ ಕುರುಹಾದ ಭೇದ.

ಆ ಕಾಯದ ಒಳ ಹೊರಗಿನ ನೋವಿನ ಭೇದದಂತೆ,

ಆ ಉಭಯವನರಿವ ಆತ್ಮ ಒಂದೆಯಾಗಿ ,

ಇಂತೀ ಕಾಯದ ಇಷ್ಟವೆಂದು , ಆತ್ಮನ ಅರಿವೆಂದು,

ಎರಡೆನಿಸುವ ಲಿಂಗವೆಂಬುದೊಂದು ಕುರುಹಿಲ್ಲ .

ಅದು ಏಕ ಏವ ಸ್ವರೂಪು; ಅದು ಚಿದ್ಘನ ಸ್ವರೂಪು;

ಅದು ಘಟಮಠದ ಬಯಲಿನ ಗರ್ಭದಂತೆ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು


|| ೩೬ ||
ಅತ್ಯತಿಷ್ಠದ್ದಶಾಂಗುಲನಾಗಿಪ್ಪನು.

೧೧೭೦

ತುಷರಸವಿದ್ದುದಕ್ಕಲ್ಲದೆ ಫಲ ಫಲಿಸಲಿಲ್ಲ .

ಕ್ರಿಯಾಸದ್ಭಾವವಿದ್ದಲ್ಲದೆ ಸತ್ಪಥಭಾವಿಯಲ್ಲ .

ತ್ರಿಸಂಧ್ಯಾಕಾಲಗಳಲ್ಲಿ ಉಚಿತ ವೇಳೆಯನರಿತು

ರಾಜಸ ತಾಮಸಂಗಳಿಲ್ಲದೆ ಪರಸೇವೆ ನಿಶ್ಚಯವಂತನಾಗಿ,

ಅನಲ ಅಹಿ ವ್ಯಾಘ್ರ ಚೋರರಾಜಭಯ ಮುಂತಾದುವೆಲ್ಲವ

ಲಿಂಗ ಕರಸ್ಥಲಕ್ಕೆ ಬಂದಿರಲಿಕ್ಕಾಗಿ,

ಆ ಲಿಂಗದ ಮೂರ್ತಿ ಮನಸ್ಥಲದಲ್ಲಿ ನಿರತಿಶಯದಿಂದ ನಿಂದಿರಲಿಕ್ಕಾಗ

ಇಂತೀ ಭಾವಂಗಳೆಲ್ಲವುಮೂರ್ಛಯಲ್ಲಿ ಮೂರ್ತಿಗೊಂಡು

ಅಮೂರ್ತಿಯಪ್ಪ ವಸ್ತು ಭಿನ್ನಭೇದವಿಲ್ಲದೆ

ಸ್ವಯ ಕ್ರಿಯಾಪೂಜೆ ಸರ್ವಜ್ಞಾನ ಸಂತೋಷ.

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ


|| ೩೭ ||
ಕ್ರಿಯಾಸಂಭವಕೂಟ.

೧೧೭೧

ದುಕೂಲ ಮುಂತಾದ ವಸ್ತ್ರಂಗಳಲ್ಲಿ ,

ಹೇಮ ಮುಂತಾದ ಆಭರಣಂಗಳಲ್ಲಿ ,

ಮೌಕಿಕ ರತ್ನ ಮುಂತಾದ ಪಾಷಾಣಂಗಳಲ್ಲಿ ,


ಮೋಳಿಗೆಮಹಾದೇವಿಯ ವಚನಗಳು

ಚಂದನ ಗಂಧ ಮುಂತಾದ ಸುವಾಸನೆಯಲ್ಲಿ,

ಅಂದಳ ಛತ್ರ ಚಾಮರಕರಿ ತುರಗಂಗಳು ಮುಂತಾದ

ತಾನು ಸೋಂಕುವ ವೈಭವ ಮುಂತಾದ

ಸಕಲಸುಖಂಗಳು ಲಿಂಗಕ್ಕೆಂದು ಕಲ್ಪಿಸಿ,

ಅಂಗೀಕರಿಸುವವನಿರವು ವಾಂಶಿಲೆನೋಡನೋಡಲಿಕ್ಕೆ ನೀರಾದ ತೆರದಂತೆ,

ಅಂಬರದ ವರ್ಣ ನಾನಾ ಚಿತ್ರದಲ್ಲಿ ಸಂಭ್ರಮಿಸಿ

ಕಂಗಳು ಮುಚ್ಚಿ ತೆರೆವುದಕ್ಕೆ ಮುನ್ನವೆ ಅದರಂದದ ಕಳೆ ಅಳಿದಂತಿರಬೇಕು.

ಇದು ಲಿಂಗಭೋಗೋಪಭೋಗಿಯ ಸಂಗದ ಸುಖ,

ನಿರಂಗದ ನಿಶ್ಚಯ.

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗದಲ್ಲಿ


|| ೩೮ ||
ವಿರಳವಿಲ್ಲದ ಪರಮಸುಖ.

೧೧೭೨

ನಿಚ್ಚಣಿಕೆಯನೇರಿ ತೆಗೆವುದಕ್ಕೆ

ಮುಂದೊಂದಟ್ಟಳೆಯಲ್ಲಿ ಬಯಕೆ ಲಕ್ಷಿಸಿದ್ದಿತ್ತು .

ಬಯಕೆಯುಳ್ಳನ್ನಕ್ಕ ನಿಚ್ಚಣಿಕೆಯನೆತ್ತುತ್ತ ಇಳುಹುತ್ತ

ಈ ಕೃತ್ಯದಲ್ಲಿ ಸಾಯಲಾರೆ.

ಎನ್ನಯ್ಯಾ, ಎನಗೊಂದು ಗೊತ್ತ ತೋರಾ,


|| ೩೯ ||
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.

೧೧೭೩

ನಿಮಿತ್ತಲಗ್ನ ಮಾಯಾಮರುವಡಿ ಬೇಳುವೆಮೂಲಿಕೆಯಿಂದ

ಕಡೆಯೆ ನಿನ್ನ ಇರವು ?

ನೀನೆ ಗತಿಯೆಂದು ಅರ್ಚಿಸುವವರಲ್ಲಿ ,

ನೀನೆ ಮತಿಯೆಂದು ನೆನೆವವರಲ್ಲಿ ,

ನೀನಲ್ಲದೆ ಪರತೊಂದನರಿಯದವರಲ್ಲಿ ,

ನೀನಿರದಿದ್ದಡೆ ನಿನಗದೆ ವಿಶ್ವಾಸಘಾತಕ , ನಿನಗದೆ ಪಾತಕ .

ನಿನ್ನ ಗುಣವ ನಾನಿನ್ನರಿದು ಮುಟ್ಟಿದೆನಾದಡೆ, ಪಂಚಮಹಾಪಾತಕ.

ಇದಕ್ಕೆ ದೃಷ್ಟ :' ಯಥಾ ಬೀಜಃ ತಥಾಂಕುರ' ದಂತೆ.

ಅದು ನಿನ್ನ ಗುಣ ಎನ್ನಲ್ಲಿ ಸುಳಿದ ಸುಳಿವು.

ಅದು ಬೀಜದ ನಷ್ಟ : ಫಲಕ್ಕೆ ಮೊದಲಿಲ್ಲ .

ಎನ್ನ ನಿನ್ನ ಮಾತಿನ ಬಳಕೆ ಬೇಡ;


೩೫೦ ಶಿವಶರಣೆಯರ ವಚನಸಂಪುಟ

ಎನ್ನಲ್ಲಿ ಸನ್ನದ್ಧನಾಗಿರು

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಾ. || ೪೦ ||

೧೧೭೪

ನಿರಂಜನೆ ರಂಜಿಸಲುಂಟೆ ?

ನಿಜ ನಿಶ್ಚಿಸಿದಲ್ಲಿ ಸಂಗಕ್ಕೆ ಒಳಗಪ್ಪುದೆ ?

ಈ ಸುಗುಣದಂಗವ ತಿಳಿದು ಲಿಂಗ ಆತ್ಮನಲ್ಲಿ ಸಂಗವಾಗಿ

ಆತ್ಮ ಲಿಂಗದಲ್ಲಿ ಮೂರ್ಛಗತವಾದ ಮತ್ತೆ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬ

ಸೊಲ್ಲೇಕೆ ಉಡುಗದು ? || ೪೦ ||

೧೧೭೫

ನೀರಿನ ಮೇಲೆ ಧರೆ ಹೊರೆಯಾಗಿ

ಮತ್ತಾ ನೀರನಾಶ್ರಯಿಸಿಕೊಂಡಿಪ್ಪಂತೆ,

ಬೀಜದ ಸಾರ ಬಲಿದು ಬೀಜವಾಗಿ

ಆ ಸಾರ ಬೀಜವನಿಂಬಿಟ್ಟುಕೊಂಡಿಪ್ಪಂತೆ,

ನಿರವಯವಸ್ತು ಕುರುಹಾಗಿ

ಆ ಕುರುಹಿಂಗೆ ತಾನರಿವಾಗಿ ಭಾವಿಸಿಕೊಂಬಂತೆ,

ದರ್ಪಣದಲ್ಲಿ ತನ್ನೊಪ್ಪವ ಕಾಣಿಸಿಕೊಂಬ ದೃಕ್ಕು

ದರ್ಪಣದಿಂದೆಂದಡೆ ನಿಶ್ಚಯವಲ್ಲ ; .

ದೃಕ್ಕಿನಿಂದೆಂದಡೆ ಇದಿರಿಟ್ಟು ಲಕ್ಷಿಸಬೇಕು.

ಇದು ಭಿನ್ನವಲ್ಲ , ಅಭಿನ್ನವಲ್ಲ ;ಕ್ರಿಯೆಯಲ್ಲ, ನಿಃಕ್ರಿಯೆಯಲ್ಲ ;

ಇದು ಭಿನ್ನವಲ್ಲ , ನಿರ್ಭಾವವಲ್ಲ .

ಅಹುದು ಅಲ್ಲವೆಂಬ ಸಂದೇಹ ಸಂಧಿಸಿ ನಿಂದಲ್ಲಿ

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು


* || ೪೨ ||
ಸ್ಟಯವಾದ ಸಂಬಂಧಸ್ಥಲ.

- ೧೧೭೬

ನೀರು ನೆಲನಿಲ್ಲದೆ ಇರಬಹುದೆ ?

ಬೀಜ ನೆಲೆಯಿಲ್ಲದೆ ಹುಟ್ಟಬಹುದೆ ?

ಜ್ಞಾನ ಕ್ರಿಯೆಯಿಲ್ಲದೆ ಅರಿಯಬಹುದೆ ?

ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ ?


೩ .೫೧
ಮೋಳಿಗೆಮಹಾದೇವಿಯ ವಚನಗಳು

ಇಂತೀ ಕೀ ಜ್ಞಾನ ಸಂಬಂಧಸ್ಥಲಭಾವ.

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ


|| ೪೩ ||
ಉಭಯಸ್ಥಲಭೇದ.

೧೧೭೭

ನುಡಿದ ನುಡಿಯೆಲ್ಲವುಮಹಾಪ್ರಸಂಗವಾದ ಮತ್ತೆ

ಲೆಕ್ಕವಿಲ್ಲದ ವೇದ, ಸಂಖ್ಯೆಯಿಲ್ಲದ ಶಾಸ್ತ್ರ ,

ಕಡೆ ನಡು ಮೊದಲಿಲ್ಲದ ಪುರಾಣವನೋದಲೇತಕ್ಕೆ ?

ಅಲಗು ಮರೆಉಳ್ಳವಂಗೆ ಶಸ್ತ್ರದ ಭಯವೇತಕ್ಕೆ ?

ಬಾಣದ ತೊಗಲುಳ್ಳವಂಗೆ ಅಂಬಿನ ಘಾಯವೇತಕ್ಕೆ ?

ಶಬ್ದ ಮುಗ್ಧವಾದವಂಗೆ ಇಚ್ಛೆಯ ನುಡಿದು ಕುಚಿತ್ತನಾಗಲೇಕೆ ?

ಅದು ತನ್ನ ಸ್ವಯದಿಂದ ಅಲ್ಲ ಅಹುದೆಂಬುದಕ್ಕೆ ದೃಷ್ಟವಾಯಿತ್ತು .

ಬೆಳಗಿನ ಮುಖದಿಂದ ಬೆಳಗಿನ ಕಳೆಯನರಿವಂತೆ

ನಿನ್ನಿಂದ ನೀನೇ ತಿಳಿ,


ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನ ಭಿನ್ನಭಾವವಿಲ್ಲದೆ || ೪ ||

೧೧೭೮

ಪೂಜಿಸಿ ಕಂಡೆಹೆನೆಂದಡೆ, ಆ ಪೂಜೆಗೆ ತನ್ಮಯಮೂರ್ತಿನೀನು.

ನೆನಹಿನಲ್ಲಿ ಅನುಕರಿಸಿ ಕಂಡೆಹೆನೆಂದಡೆ

ಆ ನೆನಹಿಂಗೆ ಆತ್ಮಸ್ವರೂಪನೀನು.

ಎಲ್ಲಾ ಎಡೆಯಲ್ಲಿ ಭಿನ್ನವ ಮಾಡಿ ಕಂಡೆಹೆನೆಂದಡೆ,

' ಅಣೋರಣೀಯಾನ್ ಮಹತೋ ಮಹೀಯಾನ್ ' ನೀನು.

ಸತ್ಯವೆಲಿದ್ದಿತ್ತು ಅಲ್ಲಿ ತಪ್ಪದೆ ಇಪ್ಪೆ ನೀನು,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ

ವಿಶ್ವಾಸವೆಲ್ಟಿಪುದೊ ಅಲ್ಲಿ ತಪ್ಪದೆ ಇದ್ರೆ ನೀನು. || ೪ ||

೧೧೭೯

ಪೂಜಿಸುವವರ ಕಂಡವರ ಕಂಡು,

ಆ ಗುಣವ ತಾ ಕೈಕೊಂಡು ಪೂಜಿಸದೆ

ವಾಗೃಹ್ಮವ ನುಡಿವವರ ಕಂಡು, ಶೇಷವನು ಈಚೆಯಲ್ಲಿ ನುಡಿಯದೆ,

ತನ್ನ ಸ್ವಯಾನುಭಾವ ಪೂಜೆ, ತನ್ನ ಸ್ವಯಸಿದ್ದವಾದ ನುಡಿ,

ಇಂತೀ ಉಭಯಸ್ವಲಗೂಡಿ,
& ೫೨
ಶಿವಶರಣೆಯರ ವಚನಸಂಪುಟ

ಕ್ಷೀರನೀರಿನಂತೆ ಹೊರೆಯಿಲ್ಲದೆ ವರ್ಣಭೇದವಿಲ್ಲದೆಕೂಡಬೇಕು,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ . || ೪೬ ||

೧೧೮೦

ಪೂಜೆಯಲ್ಲಿ ಲಕ್ಷಿತವಪ್ಪವರು ಪುಣ್ಯದ ಆಗಿಂಗೆ ಒಡಲು.

ದಾಸೋಹವೆಂಬಸೋಹವನರಿದಲ್ಲಿ

ಚತುರ್ವಿಧಫಲಪದದಾಸೆಗೆ ಒಡಲು.

ಇಂತೀ ಉಭಯದಪ್ರೀತಿಯನರಿತು ತೋರಿದ ತೋರಿಕೆ ಬಂದಂತೆ,

ಅವನಾರೈದು ಗುರುವಿಂಗೆ ತನು ಹೋಯಿತ್ತು ;

ಲಿಂಗಕ್ಕೆ ಮನಹೋಯಿತ್ತು ;

ಜಂಗಮಕ್ಕೆ ಧನ ಹೋಯಿತ್ತು .

ಇಂತೀ ಎಲ್ಲ ಲಕ್ಷದಲ್ಲಿ ಲಕ್ಷಿಸಿ,

ನೀವುಕೈಲಾಸಕ್ಕೆ ಹೋದಹೆನೆಂಬ ಕಲ್ಲೆದೆಗೆ ನಾನಂಜುವೆ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.|| ೪೭ ||

೧೧೮೧

ಬಯಲ ಹೊಲಬಿನಲ್ಲಿ ಹುಟ್ಟಿದ ಬೆಳಗು

ಶಿಲೆ ಲೋಹಕಂಚುಗಳಲ್ಲಿ ಬೆಳಗಿನ ಕಳೆ ತೋರುವಂತೆ,

ಎನ್ನ ಕರತಳದಲ್ಲಿ ಸ್ವಯಂಭುವಪ್ಪ ಲಿಂಗವೆ,

ನಿನ್ನ ಕಳೆ ಎನ್ನ ಕಂಗಳಿಗೆ ಹೋಲಬಾಗಿ ಏಕೆ ತೋರದು ?

ಅದು ಎನ್ನದು ಜಡವೊ ನಿನ್ನಯ ಪ್ರಕೃತಿಯೋ ?

ಅದು ನಿನ್ನ ಬಿನ್ನಾಣದ ಗನ್ನದ ಭೇದವೊ ?

ಎನ್ನಲ್ಲಿ ನೀನಿಲ್ಲದ ಕಾರಣವೊ ?

ನಾ ನಿನ್ನಲ್ಲಿ ಸುಗುಣವಿಲ್ಲದ ಕಾರಣವೊ

ಎನಗೆ ಭಿನ್ನನಾದೆ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜ


|| ೪೮ ||
ಎನ್ನಲ್ಲಿ ನೀ ಸನ್ನದ್ದನಾಗಿರು.

೧೧೮೨

ಬಯಲೆಂದಡೆಕೀಳು ಮೇಲಿನೊಳಗಾಯಿತ್ತು .

ನಿರವಯವೆಂದಡೆ ಸಾವಯದಿಂದ ಕುರುಹುದೊರಿತ್ತು .

ಸವಿದ ಸವಿಯನುಪಮಿಸಬಾರದೆಂದಡೆ
ಮೋಳಿಗೆಮಹಾದೇವಿಯ ವಚನಗಳು ೩೫೩

ಜಿಹೈಯಿಂದ ಕುರುಹುಗೊಂಡಿತ್ತು .

ಆ ಜಿಹ್ನೆ ಸಾಕಾರ , ಸವಿದ ಸವಿ ನಿರಾಕಾರವೆಂದಡೆ,

ನಾನಾ ಭೇದಂಗಳಿಂದ ರುಚಿಮಯವಾಯಿತ್ತು.

ಆ ಜಿಹೈಯ ಕೊನೆಯ ಮೊನೆಯಲ್ಲಿ ನಿಂದು,

ಅಹುದಲ್ಲವೆಂಬುದ ತಾನೆ ಕುರುಹಿಟ್ಟುಕೊಂಡಂತೆ

ಜಿಹ್ನೆ ಬಲ್ಲುದೆಂದಡೆ ತನ್ನಡಿಗೆ ಬಾರದುದನರಿಯಿತ್ತೆ ?

ಸಾರ ಸ್ವಾದ ಲೇಸೆಂದಡೆ ಜಿಹೈ ಹೊರತೆಯಾಗಿ

ಕುರುಹುಗೊಂಡಿತ್ತೆ ?

ಇದು ಕ್ರೀ ಜ್ಞಾನ ಸಂಪುಟಸ್ಥಲ.

ಈ ಉಭಯಸ್ಥಲ ಲೇಪವಾದ ಮತ್ತೆ

ನಿರುತ ನಿರ್ಯಾಣವೆಂಬುದು ನನ್ನಲ್ಲಿಯೊ ? ನಿನ್ನಲ್ಲಿಯೊ ?

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ

ಸದಾತ್ಮದಲ್ಲಿ ನಿನ್ನ ಕುರುಹೇಕೆ ಅಡಗದು ? || ೪೯ ||

- ೧೧೮೩

ಬಿಡುವುದಕ್ಕೆ ಮುನ್ನವೆ ಮೊನೆ ಮುಂಚಿದಂತಿರಬೇಕು.

ಅಡಿ ಏರುವುದಕ್ಕೆ ಮುನ್ನವ ಆ ಮೊನೆಯ ಜಾರಿ ,

ಮತ್ತೆ ತಾನಡಿಯೇರಿ ಮೀರಿ ಮುಂಚಿದಂತಿರಬೇಕು.

ನೀನೆಂಬನ್ನಕ್ಕ ಲಕ್ಷ್ಯದಲ್ಲಿ ಅಲಕ್ಷ್ಯವಾಗಬೇಕು,

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನ

ಎಂಬುದಕ್ಕೆ ಮುನ್ನವೆ ! || ೫೦ ||

೧೧೮೪

ಬಿತ್ತಿದ ಬಿತ್ತು , ಪೃಥ್ವಿಯ ಕೂಟ ಅಪ್ಪುವಿನ ದ್ರವದಿಂದ

ಮಸ್ತಕ ಒಡೆವುದಲ್ಲದೆ,

ಉಪ್ಟದ ಡಾವರಕ್ಕೆ , ಬೆಂಕಿಯ ಬೇಗೆಗೆ ಮಸ್ತಕ ಒಡೆವುದುಂಟೆ ?

ಲಿಂಗವು ಭಕ್ತಿಯ ಶ್ರದ್ಧೆಗೆ, ವಿಶ್ವಾಸದ ಸುಸಂಗಿಗೆ,

ನಿಶ್ಚಯವಪ್ಪ ಲಿಂಗಿಗೆ ದೃಷ್ಟವಪ್ಪುದಲ್ಲದೆ,

ಉನ್ಮತವಪ್ಪ ವಿಶ್ವಾಸಘಾತಕಂಗೆ , ವಂದಿಸಿ ನಿಂದಿಸುವಂಗೆ ,

ಹಿಂದೆ ಮುಂದೆ ಬಂದುದ ಬಾಯ್ಲಿಡುವವಂಗೆ

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಸಂಧಿಸನವಗೆ . || ೧ ||


೩೫೪
ಶಿವಶರಣೆಯರ ವಚನಸಂಪುಟ

೧೧೮೫

ಬೀಜದೊಳಗಣ ವೃಕ್ಷದ ಹಣ್ಣ ಅದನಾರು ಮೆಲಬಹುದು ?

ಸಸಿಯೊಳಗಣ ಲತೆ ಪರ್ಣ ತಲೆದೋರದ

ನಸುಗಂಪಿನ ಕುಸುಮವ ಅದಾರು ಮುಡಿವರು ?

ಇಂತೀ ಅರಿವಿನ ಅರಿವ ಕುರುಹಿಟ್ಟು ಕೂಡುವನೆ ಲಿಂಗಾಂಗಿ ?

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನನಲ್ಲಿ
* || ೧೨ ||
ಇದು ಸ್ವಾನುಭಾವಿಯ ಸನ್ನದ್ಧ ಸ್ಥಲ.

೧೧೮೬

ಭಕ್ತಂಗೆ ಭಕ್ತಸ್ಥಲವಲ್ಲದೆ ಮಾಹೇಶ್ವರಸ್ಥಲದಲ್ಲಿ ನಿಲ್ಲ ;

ಮಾಹೇಶ್ವರಂಗೆ ಮಾಹೇಶ್ವರಸ್ಥಲವಲ್ಲದೆ ಪ್ರಸಾದಿಸ್ಥಲದಲ್ಲಿ ನಿಲ್ಲ ;

ಪ್ರಸಾದಿಗೆ ಪ್ರಸಾದಿಸ್ಥಲವಲ್ಲದೆ ಪ್ರಾಣಲಿಂಗಿಸ್ಥಲದಲ್ಲಿ ನಿಲ್ಲ ;

ಪ್ರಾಣಲಿಂಗಿಗೆ ಪ್ರಾಣಲಿಂಗಿಸ್ಥಲವಲ್ಲದೆ ಶರಣಸ್ಥಲದಲ್ಲಿ ನಿಲ್ಲ ;

ಶರಣಂಗೆ ಶರಣಸ್ಥಲವಲ್ಲದೆ ಐಕ್ಯಸ್ಥಲದಲ್ಲಿ ನಿಲ್ಲ ;

ಐಕ್ಯಂಗೆ ಐಕ್ಯಸ್ಥಲವಲ್ಲದೆ ಮಹಾಬೆಳಗಿನ ಕಳೆಗೆ ನಿಲುಕ.

ಅದು ಪೂರ್ಣಭಾವ ಪರಿಪೂರ್ಣವಾಗಿಪ್ಪುದು.

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು

ಭಕ್ತಿಕಾರಣವಾಗಿ ಸ್ಥಲಂಗಳಿಗೆ ಗೊತ್ತಾದ ಭೇದ. || ೩ ||

೧೧೮೭

ಭಕ್ತಂಗೆ ವಿಶ್ವಾಸ, ಮಾಹೇಶ್ವರಂಗೆ ನೈಷ್ಠೆ, ಪ್ರಸಾದಿಗೆ ಅಯೋಚಿತ ,

ಪ್ರಾಣಲಿಂಗಿಗೆ ಮುಟ್ಟಿದಲ್ಲಿ ಅರ್ಪಿತಭೇದ,

ಶರಣಂಗೆ ದೃಷ್ಟದಲ್ಲಿ ಮುನ್ನವೆ ಬಿಡುಗಡೆ,

ಐಕ್ಯಂಗೆ ಕುರುಹುಗೊಂಬುದಕ್ಕೆ ಮುನ್ನವೆ ನಿರಾಳ.

ಇಂತೀ ಷಟ್‌ಸ್ಥಲವಾದ ಭೇದ.

ಎನ್ನಯ್ಯಪ್ರಿಯ [ ಇಮ್ಮಡಿ] ನಿಃಕಳಂಕಮಲ್ಲಿಕಾರ್ಜುನಲಿಂಗವು


|| ೫೪ ||
ಎನಗೆ ಉಮಾಮಹೇಶ್ವರನಾದಹನೆಂದು.

coeses

ಮಣ್ಣನಿತ್ತು ನಿಮ್ಮ ಕಂಡೆಹೆನೆಂದಡೆ ಜಗಭರಿತ ನೀನು;

ಹೊನ್ನನಿತ್ತು ನಿಮ್ಮ ಕಂಡೆಹೆನೆಂದಡೆ ಹಿರಣ್ಯಮೂರ್ತಿನೀನು;

ಹೆಣ್ಣನಿತ್ತು ನಿಮ್ಮ ಕಂಡೆಹೆನೆಂದಡೆ ತ್ರಿವಿಧಶಕ್ತಿಮೂರ್ತಿನೀನು,


೩೫೫
ಮೋಳಿಗೆಮಹಾದೇವಿಯ ವಚನಗಳು

ಮನವನಿತ್ತು ನಿಮ್ಮ ಕಂಡೆಹೆನೆಂದಡೆ ಮನೋಮೂರ್ತಿನೀನು;


ಎನಗೇನು ನಿನಗಿತ್ತು ಕಾಬ ಕಾಣಿಕೆ , ನೀನು ಸಿಕ್ಕುವುದಕ್ಕೆ ?

ಕ್ರೀಯಲ್ಲಿ ನಿರತ , ಸದ್ಭಾವದಲ್ಲಿ ಶುದ್ಧ ,

ಹಿಡಿದುದ ಬಿಡದೆ, ಬಿಟ್ಟುದ ಹಿಡಿಯದೆ,

ನಿಶ್ಚಯವಾದ ನಿಜಜ್ಞಾನಿಗಳಲ್ಲಿ ಬೆಚ್ಚಂತಿದ್ದಡೆ ನೀನು ಅಲ್ಲಿ ತಪ್ಪದಿಪ್ಪೆ,


|| ೫ ||
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.

೧೧೮೯

ಮನೆಯಲ್ಲಿ ವೀರ ಧೀರ;

ರಣದಲ್ಲಿ ಓಸರಿಸಿದ ಮತ್ತೆ ಭಾಷೆಯ ಬಂಟನಲ್ಲ .


ನೀ ಬಂದ ದೇಶ, ನೀ ಮಾಡುವ ಮಾಟ

ನೀ ಪ್ರಮಥರೆಲ್ಲರ ಹಂಗಿಸುವ ನಿರಂಗವಾಚಕನ

ಕೂಡಿಹೆನೆಂಬ ಸಂಧಿಯಲ್ಲಿಯೇ ನಿಂದಿತ್ತು ನಿಜಲಿಂಗದಕೂಟ.

ಆ ಸುಸಂಗವ ನಿನ್ನ ನೀನೆ ನೋಡಿಕೊ


|| ೬ ||
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.

೧೧೯೦

ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋದೆಹೆನೆಂಬುದು ಕೈಕೂಲಿ.

ಭಾಷೆಗೆ ತಪ್ಪಿ ಓಸರಿಸಿದ ಮತ್ತೆ ಅನಿಹಿತವ ಹೇಳಿದಲ್ಲಿ

ಮತ್ತೆ ಘಾತಕತನದಿಂದ ಎಯ್ದಿಹೆನೆಂಬುದು ಭಕ್ತಿಗೆ ವಿಹಿತವಲ್ಲ .

ದೃಷ್ಟದಲ್ಲಿ ಕೊಟ್ಟುದ ಲಕ್ಷಿಸಲರಿಯದೆ,

ಅಲಕ್ಷ್ಯವ ಲಕ್ಷಿಸಿ ಕಾಂಬುದಕ್ಕೆ ಲಕ್ಷ್ಯವೇನು ?

ಅದು ನಿರೀಕ್ಷಣೆಯ ಲಕ್ಷ್ಯದಿಂದಲ್ಲದೆ, ಆತ್ಮಂಗೆ ಲಕ್ಷ್ಯವಿಲ್ಲ .

ಇಂತೀ ಉಭಯದಲ್ಲಿ ಲಕ್ಷಿತವಾದವಂಗೆ ಮರ್ತ್ಯಕೈಲಾಸವೆಂಬುದು;

ತನ್ನರಿವುನಿಶ್ಚಯವಾದಲ್ಲಿ ಅದೆ ಲಕ್ಷ್ಯ .

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನ

ಅಲ್ಲಿ ಇಲ್ಲಿ ಎಲ್ಲಿಯೂ ತಾನೆ. || ೭ ||

೧೧೯೧

ಮೃತ್ತಿಕೆಯ ತಿಟ್ಟದಿಂದ ಮಯಣದ ಕರುವಿಟ್ಟು ,

ಆ ಘಟವ ಲಕ್ಷಿಸಲಿಕ್ಕಾಗಿ,

ಪುನರಪಿಯಾಗಿ ಮೃತ್ತಿಕೆಯ ಬಲಿದು


೩೫೬
ಶಿವಶರಣೆಯರ ವಚನಸಂಪುಟ

ಈ ಉಭಯದ ಮಧ್ಯದಲ್ಲಿ ನಿಂದ ತಿಟ್ಟದಂತೆ

ಇಂತೀ ತ್ರಿವಿಧ ಜಾರಿ ಉಳುಮೆ ಒಂದೆ ನಿಂದುದನರಿದು,

ಭಕ್ತಿಯ ಮರೆಯಲ್ಲಿದ್ದ ಸತ್ಯ ,

ಸತ್ಯದ ಮರೆಯಲ್ಲಿ ವಿಶ್ರಮಿಸಿದ್ದ ಜ್ಞಾನ,

ಜ್ಞಾನವ ವಿಶ್ರಮಿಸಿಕೊಂಡಿಹ ಶಿವಲಿಂಗಮೂರ್ತಿಧ್ಯಾನ,

ಅದು ತದ್ಘಾನವಾಗಲಿಕ್ಕಾಗಿ, ಅದು ನಿಜದ ಉಳುಮೆ ,

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನನಲ್ಲಿ

ಸಾವಧಾನಿಯ ಸಂಬಂಧ. || ೫೮ ||

ಲಿಂಗಭೋಗೋಪಭೋಗಿಎಂದು ತಾ ಮುನ್ನ ಬಿಟ್ಟುದ ಮುಟ್ಟಬಹುದ

ತನ್ನ ಸುಖಕ್ಕೆ ತಾ ಭೋಗಿಸಿ ಲಿಂಗಮುಂತಾಗಿ ಕೂಡಿದೆನೆನಬಹುದೆ ?

ಲಿಂಗದಂಗವನರಿದು ತಾ ಕೂಡಬಲ್ಲಡೆ

ತನ್ನ ಇಂದ್ರಿಯಗಳ ಇಚ್ಛೆ ಉಂಟೆ ?

ತಾ ಕದ್ದ ಕಳವ ಪರಿಹರಿಸಿಕೊಳಲರಿಯದೆ,

ಇದಿರ `ನೀವುಬನ್ನಿ ' ಎಂದು ಕರೆವ ಕದ್ದೆಹಕಾರನಂತೆ .

ಈ ದ್ವಯ ಇದಿರಿಡಬಾರದ ಕುರುಹು.

ಲಿಂಗಭೋಗೋಪಭೋಗಿ ತಾನಾದಡೆ

ಉರಿಗೂಡಿಯೆ ಕರಗುವ ಕರ್ಪೂರದ ಇರವಿನಂತೆ ಇರಬೇಕು,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನ

ಸಂಗಗೂಡಿ ಸುಖಿಸುವ ಲಿಂಗಾಂಗಿಯ ಇರವು. || ೫೯ ||

- ೧೧೯೩

ಶಿವಪೂಜಾಲಂಬನ ಕರ್ಮ ಕ್ರೀ , ದಾಸಿ ಕೊಡನ ಹೊತ್ತಂತೆ ;

ಶೇಷನ ಚಮತ್ಕಾರ ಭೇದದಂತೆ

ತತ್ಕಾಲದಲ್ಲಿ ಬಂದ ಗುರುವಿನಿಂದ ಜಂಗಮವ ಲಿಂಗದಲ್ಲಿ ವಿಶ್ರಮಿಸಿ,

ಮನದಲ್ಲಿ ಮುಯ್ಯಾಂತು, ಕಂಗಳ ದೃಷ್ಟಿಯಿಂದ ವಂದಿಸಿ,

ಲಿಂಗಾನುಭಾವಿಗಳ ಅವರಂಗವಳಿದು ಮೂರ್ತಿಗೊಳಿಸಿ,

ಶರಣತತಿಗಳಿಂದ ಕರಣಂಗಳ ನಿವಾರಿಸಿ

ಇಂತಪ್ಪ ಕ್ರಿಯಾಪೂಜೆ ಬಾಹ್ಯದ ಶ್ರದ್ಧೆ,

ಜ್ಞಾನದ ಬೆಳಗು, ಸ್ವಾನುಭಾವ ಸನ್ನದ್ಧ .

ಇಂತೀ ಕ್ರಿಯಾ ಸಾತ್ವಿಕ ನಿರ್ಧಾರವಾದಲ್ಲಿ ,


೩೫೭
ಮೋಳಿಗೆಮಹಾದೇವಿಯ ವಚನಗಳು

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನನರಸಿ


|| ೬೦ ||
ತೊಳಲಿ ಬಳಲಲಿಲ್ಲ .

೧೧೯೪

ಷಡುರುಚಿಯನರಿವನ್ನಕ್ಕ ಬೇಟದ ಚುನ್ನ ಬಿಡದು .

ಬೇಟ ಬಲಿದ ಮತ್ತೆ ಕೂಟಕ್ಕೆ ಸಮೀಪ.

ಸಂಭೋಗದ ಸುಖ ಮೈಯುಂಡವಂಗೆ,

ಲೋಕದ ನಚ್ಚು ಮಚ್ಚಿನ ಬಲೆಯೊಡಕು ತಪ್ಪದು.

ಇನಿತುಳ್ಳನ್ನಕ್ಕ ನಿರಂಗ ನಾನೆಂಬ ಮಾತು ಸಟೆ.

ಇನಿತುಳ್ಳ ಅನಂಗಸಂಗಿಗಳಿಗೆ ಭಕ್ತಿ ವಿರಕ್ತಿ ಎಲ್ಲಿಯದೊ ,


|| ೬೧
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ? ||

೧೧೯೫

ಸಂಸಾರಸಂಗದಿಂದಲುದಯಿಸಿದ

ಸುಖವೆ ದುಃಖವೆಂದರಿಯದೆ,

ಆ ಸುಖವನೆ ಮೆಚ್ಚಿ ಭವದುಃಖವೆಂಬ

ಕ್ರೂರ ಜನ್ಮಚಕ್ರಕ್ಕೀಡಾಗಿ,

ಅಲ್ಲಿ ತನ್ನ ಮರೆದು, ತನಗಿಲ್ಲದುದ ಭ್ರಮೆಯಿಂದ ತನ್ನದೆಂದು,

ಅಂತಪ್ಪ ಭವಘೋರನರಕದೊಳಾಳು ಮುಳುಗಾಡುತಿಪ್ಪ

ಅಜ್ಞಾನಿಜೀವಿಗಳು ನಿಮ್ಮನೆತ್ತ ಬಲ್ಲರಯ್ಯಾ

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ? || ೬೨ ||

೧೧೯೬

ಸಕಲದಲ್ಲಿ ಅಳಿದು ನಿಃಕಲದಲ್ಲಿ ಉಳಿದ ಮತ್ತೆ,

ಸಕಲವಕೂಡಿಹೆನೆಂಬ ನಿಃಕಲವುಂಟೆ ಅಯ್ಯಾ ?

ನಿಃಕಲದೊಳಗೆ ಸಕಲವಡಗಿ,

ಆ ಗುಣ ಉಪದೃಷ್ಟಕ್ಕೆ ಈಡಿಲ್ಲದಲ್ಲಿ ,

ಅಖಿಲಜಗವೆಂಬುದು ಹೊರಗು.

ಆ ಗುಣ ನಿನ್ನ ಸದ್ಭಾವಬೀಜವಾದಲ್ಲಿ ನಿನ್ನಂಗವೆ ಕೈಲಾಸ:

ಆ ಲಿಂಗದಕೂಟವೆ ನಿರ್ಯಾಣ.

ಇದು ನಿಸ್ಸಂಗದ ಸಂಗ; ನಿಮ್ಮ ನೀವೇ ತಿಳಿದುಕೊಳ್ಳಿ,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ. || ೬ ||


೩೫೮
ಶಿವಶರಣೆಯರ ವಚನಸಂಪುಟ

೧೧೯೭

ಸಕಲ ಸ್ಥಾವರ ಚರ ಘಟಪಟಾದಿಗಳೆಲ್ಲವುಪೃಥ್ವಿಯಿಂದವೆ ಜನನ

ಪೃಥ್ವಿಯ ಉತ್ಕಷ್ಟದಿಂದವೆ ಮರಣವೆಂಬುದನರಿತಲ್ಲಿ ,

ಕರ್ಮಕ್ರೀ ವರ್ಮವ ಬಲ್ಲವ.

ಸರ್ವಚೇತನ ಭೌತಿಕಕ್ಕೆಲ್ಲಕ್ಕೂ ಅಪ್ಪುವಿನಿಂದವೆಉತ್ಪತ್ಯ ,

ಅಪ್ಪುವಿನ ಉತ್ಕಷ್ಟದಿಂದವೆ ನಷ್ಟವೆಂಬುದನರಿತಲ್ಲಿ ,

ಜೀವನದ ಆಗುಚೇಗೆಯ ಬಲ್ಲವ.

ಸರ್ವದೀಪ್ತಿ ಪ್ರಕಾಶ ತೇಜಸ್ಸು ಅಗ್ನಿಯಿಂದವೆ ಉತ್ಪತ್ಯ ,

ಅಗ್ನಿಯ ಉತ್ಕಷ್ಟದಿಂದವೆ ನಷ್ಟವೆಂಬುದನರಿತಲ್ಲಿ ,

ಪರಮಪ್ರಕಾಶ ಬಲ್ಲವ.

ಸರ್ವಗೃಹೀತವಾಗಿ ಸುಳಿವ ಮಾರುತಘೋಷವಾಯುವಿನಿಂದವೆ ಉತ್ಪ

ವಾಯುವಿನ ಉತೃಷ್ಟದಿಂದವೆ ಲಯವೆಂಬುದನರಿದಲ್ಲಿ

ದಿವ್ಯಜ್ಞಾನ ಬಲ್ಲವ.

ಆಕಾಶ ಮಹದಾಕಾಶದಿಂದವೆ ಉತ್ಪತ್ಯ ,

ಮಹದಾಕಾಶ ಮಹದೊಡಗೂಡಿದಲ್ಲಿ

ಪಂಚಭೌತಿಕ ನಷ್ಟವೆಂಬುದನರಿದು

ಈ ಪಂಚಭೌತಿಕದ ತನು,

ಸಂಚಿತ ಪ್ರಾರಬ್ಧ ಆಗಾಮಿಗಳ ಕಂಡು ,

ಸಂಚಿತವೆ ಉತ್ಪತ್ಯ , ಪ್ರಾರಬ್ದವೆ ಸ್ಥಿತಿ,

ಆಗಾಮಿಯೆ ಲಯವೆಂಬುದ ತಿಳಿದು,

ಇಂತಿವರೊಳಗಾದ ಸಂಚದಲ್ಲಿ ಸಂಬಂಧಿಸಿಪ್ಪ

ಸರ್ವೆಂದ್ರಿಯದ ಗೊಂಚಲು ಮುರಿದು ನಿಂದ ಸ್ವಯಾನುಭಾವಿಗೆ

ಕಾಯಕ್ಕೆ ಕರ್ಮವೆಂಬುದಿಲ್ಲ ,

ಜ್ಞಾನಕ್ಕೆ ಇದಿರೆಡೆಯೆಂಬ ಕೂಟದ ಭಾವ ನಷ್ಟ .


|| ೬೪ ||
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು.

೧೧೯೮

ಸುಗಂಧದ ಮೂಲದ ಬೇರಿನ ಗಂಧ

ಎಲೆ ಬಳ್ಳಿಯನೇತಕ್ಕೆ ವೇಧಿಸದು ?

ಕುಸುಮದ ಸುವಾಸನೆ

ತನ್ನಯ ತೊಟ್ಟು ಎಲೆಕೊನರು ಬೇರುವನೇಕ ವೇಧಿಸದು ?


೩೫೯
ಮೋಳಿಗೆಮಹಾದೇವಿಯ ವಚನಗಳು

ಇದು ಇಷ್ಟ ಪ್ರಾಣಯೋಗದ ಭೇದ.

ಗಿಡುಗಿಡುವಿಗೆ ಕುರುಹಲ್ಲದೆ

ಗಂಧ ಗಂಧಕೂಡಿದಲ್ಲಿ ದ್ವಂದ್ವವಾಗಿ ಬೆರೆದಲ್ಲಿ ,

ಕದಂಬಗಂಧವಲ್ಲದೆ

ಒಂದರ ಗಂಧವೆಂದು ಸಂಧಿಸಿ ತೆಗೆಯಲಿಲ್ಲ .

ಅವರು ನಿಂದ ನಿಂದ ಸ್ವಲಕ್ಕೆ ಸಂಬಂಧವಾಗಿಪ್ಪರು.

ಇದು ದೃಷ್ಟಾನುಭಾವಸಿದ್ಧಿ ,

ಸರ್ವಸ್ಥಲಭೇದ,

ವಿಶ್ವತೋಮುಖರೂಪು.

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು


|| ೬೫ ||
ತತ್ವಭಿತ್ತಿಸ್ವರೂಪನು.

೧೧೯೯

ಸುಮನ ಸುಬುದ್ಧಿ ಭಕ್ತಿಸ್ಥಲ.

ಮಲ ಅಮಲ ಮಹೇಶ್ವರಸ್ಥಲ.

ಅಜ್ಞಾನ ಸುಜ್ಞಾನ ಪ್ರಸಾದಿಸ್ಥಲ.

ಉಭಯ ಕೂಟಸ್ಥವೆಂಬುದ ಪರಿಹರಿಸಿದಲ್ಲಿ ಪ್ರಾಣಲಿಂಗಿಸ್ಥಲ.


ಸ್ತುತಿ ನಿಂದ್ಯಾದಿಗಳಲ್ಲಿ ಒಡಲಳಿದುನಿಂದುದು ಶರಣಸ್ಥಲ.

ಇಂತೀ ಪಂಚಭೇದಂಗಳ ಸಂಚವನರಿತು ವಿಸಂಚವಿಲ್ಲದೆ,

ಪರುಷ ಪಾಷಾಣದಂತೆ ಭಿನ್ನಭಾವವಿಲ್ಲದೆ

ಅರಿದರುಹಿಸಿಕೊಂಬ ಕುರುಹು ಏಕವಾದಲ್ಲಿ ಐಕ್ಯಸ್ಥಲ.

ಎನ್ನಯ್ಯಾ, ಎನ್ನ ನಿನ್ನ ಷಟ್‌ಸ್ಥಲ

ಇದಕ್ಕೆ ಭಿನ್ನಭಾವವಿಲ್ಲ .

ಅದು ಎನ್ನ ನಿನ್ನ ಕೂಟದ ಸುಖದಂತೆ.

ಇದ ಚೆನ್ನಾಗಿ ತಿಳಿದುನೋಡಿಕೊಳ್ಳಿ.

ಅಲ್ಲಿ ಇಲ್ಲಿ ಎಂಬ ಗೆಲ್ಲಗೂಳಿತನ ಬೇಡ

ಹಾಗೆಂಬಲ್ಲಿಯೆ ಬಯಲಾಗಬೇಕು,

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ||. ೬೬ ||

೧೨೦೦

ಸ್ವಯವಿದ್ದಂತೆ

ಲಯವಕೂಡುವರೆ ಅಯ್ಯಾ ?
೩೬೦
ಶಿವಶರಣೆಯರ ವಚನಸಂಪುಟ

ಪರುಷವಿದ್ದಂತೆ

ಹೇಮವನರಸುವರೆ ಅಯ್ಯಾ ?

ಸ್ವಯಂಜ್ಯೋತಿಯಿದ್ದಂತೆ

ದೀಪವನರಸುವರೆ ಅಯ್ಯಾ ?

ನೀನಲ್ಲಿ ಇಲ್ಲಿ ಕೂಡಿಹೆನೆಂಬ ಕೂಟದ ಭಿನ್ನವ ಹೇಳಯ್ಯಾ ?

ಕಣ್ಣಿಲಿನೋಡಿಕಣ್ಣ ಮರೆದೆನೆಂದು

ಆ ಭಿನ್ನಭಾವದಂತೆ ಆದಿರಲ್ಲಾ !

ಅದು ನಿಮ್ಮ ಗುಣವಲ್ಲ , ಎನ್ನ ಗುಣ.

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಾ. || ೬೭ ||

೧೨೦೧

ಸ್ಟಾಣು ನರನೆಂದು, ರಜ್ಜು ಸರ್ಪನೆಂದು,

ಸ್ಪಟಿಕದ ಘಟದಲ್ಲಿ ನಿಂದ ಗಜ ದಿಟವೆಂದು ನಿಬದ್ದಿಸಿ ನೋಡಲಿಕ್ಕಾಗಿ,

ಸಂದೇಹ ನಿಂದಲ್ಲಿ ಮುನ್ನಿನಂದವೆ ಆ ನಿಜಗುಣ ?

ಈ ಸಂದೇಹ ನಿವೃತ್ತಿಯಾದಲ್ಲಿ

ಇಷ್ಟ ಪ್ರಾಣಲಿಂಗವೆಂಬ ಉಭಯದ ದೃಷ್ಟ ಒಂದೆ.

ಎನ್ನಯ್ಯಪ್ರಿಯ ಇಮ್ಮಡಿನಿಃಕಳಂಕಮಲ್ಲಿಕಾರ್ಜುನಾ. || ೬೮ ||

೧೨೦೨

ಹೇಮದ ಬೆಂಬಳಿಯ ಸ್ವರೂಪದಂತೆ,

ಗ್ರಾಮದ ಬೆಂಬಳಿಯ ಬಟ್ಟೆಯಂತೆ.

ಹೇಮದರೂಪವಳಿದು ಸ್ವರೂಪವಡಗಿದಲ್ಲಿ

ಕುಶಲಚಿತ್ರವೆಲ್ಲಿದ್ದಿತ್ತು ?

ಬಟ್ಟೆಯ ಮೆಟ್ಟಿ ಹೋಗಿ ಪುನರಪಿಯಾಗಿ ತಿರುಗಿದಲ್ಲಿ ,

ಊರ ಬಾಗಿಲ ಬಟ್ಟೆಯ ಒಂದರಲ್ಲಿ ಹೋಗಬೇಕು.

ಇದು ದೃಷ್ಟಕ್ಕೆ ಕೊಟ್ಟ ಇಷ್ಟ;

ಆ ಇಷ್ಟ ಚಿತ್ತದಲ್ಲಿ ಅಷ್ಟೊತ್ತಿದ ಮತ್ತೆ, ಆ ನಿಶ್ಚಯ ಉಭಯವ ತಿಳಿದಲ್ಲಿ ,

ಕಾಯಕ್ಕೆ ಕೈಲಾಸವೆಂಬುದಿಲ್ಲ , ಭಾವಕ್ಕೆ ಬಯಲೆಂಬುದಿಲ್ಲ .

ಅನಲನಲ್ಲಿ ಅರತ ದ್ರವ್ಯದಂತೆ ಅದು ಅಮೂರ್ತಿಭಾವ,


ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ .

೧೨೦೩

ಹೃತ್ಕಮಲಮಧ್ಯದಲ್ಲಿಪ್ಪ ಲಿಂಗವ ಸರ್ವಾಂಗದಲ್ಲಿ ವೇಧಿಸಿ,

ಪರಿಪೂರ್ಣವಪ್ಪ ಲಿಂಗವ
೩೬೧
ಮೋಳಿಗೆಮಹಾದೇವಿಯ ವಚನಗಳು

ಅಂತರ್ಮುಖದಿಂದ ಬಹಿರ್ಮುಖಕ್ಕೆ ತಂದು,

ಪಂಚಸ್ಥಾನದಲ್ಲಿಪ್ಪ ಲಿಂಗವ ಕರಸ್ಥಲದಲ್ಲಿ

ಮೂರ್ತಿಗೊಳಿಸಲಿಕ್ಕಾಗಿ,

ಕಂಗಳು ತುಂಬಿ , ಬಾಹ್ಯದೃಷ್ಟಿಯರತು,

ಲಿಂಗದೃಷ್ಟಿ ಪರಿಪೂರ್ಣವಾಗಿ,

ದೃಕ್ಕಿಂಗೆ ತೋರುವುದೆಲ್ಲವೂ ಲಿಂಗಮಯವಾಗಿ,

ಏನ ಮುಟ್ಟಿ ಹಿಡಿದಡೆಯೂ ಪುಷ್ಪಮಯವಾಗಿ,

ಜಿಹ್ನೆಯಲ್ಲಿ ತೋರುವ ಅಪ್ಪು ರಸ

ಮುಂತಾದುವೆಲ್ಲವು ಅರ್ಪಿತಮಯವಾಗಿ,

ಇಂತಪ್ಪ ವ್ಯವಧಾನ ಸರ್ವಾಂಗಲಿಂಗಿಯ ಅವಧಾನ.

ಇಷ್ಟದ ಅರಿವೆಂದು ಉಭಯದ ಗುಟ್ಟು ಕೆಟ್ಟಲ್ಲಿ

ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬುದಕ್ಕೆ


|| ೭೦ ||
ಇದಿರೆಡೆಯಿಲ್ಲ.

13
ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮನ ವ

೧೨೦೪

ಗರುಡಿಯಲ್ಲಿ ಕೋಲಲ್ಲದೆ ಕಾಳಗದಲ್ಲಿ ಕೋಲುಂಟೆ ?

ಭವಿಗೆ ಮೇಲುವ್ರತ ಪುನರ್ದಿಕ್ಷೆಯಲ್ಲದೆ ಭಕ್ತಂಗುಂಟೆ ?

ವ್ರತ ತಪ್ಪಲು ಶರೀರವಿಡಿವ ನರಕಿಗೆ ಮುಕ್ತಿಯಿಲ್ಲ

ಅಮುಗೇಶ್ವರಲಿಂಗದಲ್ಲಿ . || ೧ ||
ರೇವಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಕಮ್ಮನ ವಚನ

೧೨೦೫

ಲಿಂಗಬಾಹನ, ಆಚಾರಭ್ರಷ್ಟನ, ವ್ರತತಪ್ಪುಕನ,

ಗುರುಲಿಂಗಜಂಗಮವ ಕೊಂದವನ,

ಪಾದೋದಕ ಪ್ರಸಾದ ದೂಷಕನ,

ವಿಭೂತಿ ರುದ್ರಾಕ್ಷಿ ನಿಂದಕನ ಕಂಡಡೆ,

ಶಕ್ತಿಯುಳ್ಳಡೆ ಸಂಹಾರವ ಮಾಡುವುದು.

ಶಕ್ತಿಯಿಲ್ಲದಿದ್ದಡೆ ಕಣ್ಣು ಕರ್ಣನ ಮುಚ್ಚಿಕೊಂಡು

ಶಿವಮಂತ್ರ ಜಪಿಸುವುದು.

ಅಷ್ಟೂ ಆಗದಿದ್ದಡೆ, ಆ ಸ್ಥಳವ ಬಿಡುವುದು.

ಅದಲ್ಲದಿದ್ದಡೆ, ಕುಂಭೀಪಾತಕ ನಾಯಕನರಕದಲ್ಲಿಕ್ಕುವ


|| ೧ ||
ಶ್ರೀಗುರುಸಿದ್ದೇಶ್ವರನು.
ಸತ್ಯಕ್ಕನ ವಚನಗಳು

೧೨೦೬

ಅಡಿಗಡಿಗೆ ನಿಮ್ಮ ಶರಣರಡಿಗೆರಗಿ ಶರಣೆಂಬೆ .

ನುಡಿಯ ಬೋಧೆಯ ಮಾತು,

ಅನ್ಯನುಡಿ ಸಮನಿಸದು .

ಓಡುದೇಹದ ಶಿರಬಿಗಿದು, ಮಡುಗಟ್ಟಿ ಕಂಬನಿಯ ಕಡಲೊಳಗೆ

ತೇಲಾಡುತಂದಿಪ್ಪಿನೊ ?

ಮೃಡ ಶರಣು ಶರಣೆಂಬೆ ಶಬ್ದ ಒಡಲುಗೊಂಡು

ಶಂಭುಜಕ್ಕೇಶ್ವರದೇವರಿಗೆ
ಶರಣೆನುತ ಮೈಮರೆದೆಂದಿಪ್ಪನೊ ? || ೧ ||

೧೨೦೭

ಅರ್ಚನೆ ಪೂಜನೆ ನೇಮವಲ್ಲ ;

ಮಂತ್ರತಂತ್ರ ನೇಮವಲ್ಲ ;

ಧೂಪ ದೀಪಾರತಿನೇಮವಲ್ಲ ;

ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆನೇಮ .

ಶಂಭುಜಕ್ಕೇಶ್ವರನಲ್ಲಿ ಇವುಕಾಣಿರಣ್ಣಾ ನಿತ್ಯನೇಮ. || ೨ ||

೧೨೦೮

ಅಯ್ಯಾ , ಗುರುಶಿಷ್ಯರಿಬ್ಬರು ಪುಣ್ಯ - ಪಾಪ, ಇಹ- ಪರಂಗಳಿಗೆ

ಒಳಗಾದ ವಿಚಾರವೆಂತೆಂದಡೆ:

ಸತ್ಯ ಸದಾಚಾರಸಂಪತ್ತೆಂಬ ಶಿವಭಕ್ತರ ಹೃದಯದಲ್ಲಿ ಜನಿತನಾಗಿ

ಸತ್ಯನಡೆ ನಡೆಯದೆ,

ಲೋಕದ ಜಡಜೀವಿಯಂತೆ ಪಂಚಮಹಾಪಾತಕಂಗಳಲ್ಲಿ

ವರ್ತಿಸುವುದ ಕಂಡು ಅದ ಪರಿಹರಿಸದೆ,

ದ್ರವ್ಯದಭಿಲಾಷೆಯಿಂದ ತ್ರಿವಿಧದೀಕ್ಷೆಯ ಮಾಡುವನೊಬ್ಬ ಗುರು

ಹುಟ್ಟಂಧಕನೆಂಬೆನಯ್ಯಾ .

ಅಂತಪ್ಪ ಪರಮಪಾತಕಂಗೆ ಜಪವ ಹೇಳಿ,

ಪಾದೋದಕದಲ್ಲೇಕಭಾಜನವ ಮಾಡಿ, ಪ್ರಸಾದವಕೊಟ್ಟು,

ಷಟ್‌ಸ್ಥಲವ ಹೇಳುವನೊಬ್ಬ ಜಂಗಮ

ಕೆಟ್ಟಗಣ್ಣವನೆಂಬೆನಯ್ಯಾ .
೩೬೫
ಸತ್ಯಕ್ಕನ ವಚನಗಳು

ಇಂತೀ ಅಧಮ ಗುರು-ಶಿಷ್ಯ- ಜಂಗಮಕ್ಕೆ

ಭವಬಂಧನ ತಪ್ಪದು ನೋಡಾ,

ಶಂಭುಕೇಶ್ವರದೇವಾ,

ನೀನೊಲಿಯದೆ ಕೆಟ್ಟಿತ್ತೀ ಜಗವೆಲ್ಲ . || ೩ ||

- ೧೨೦೯

ಅಯ್ಯಾ ಪುಣ್ಯ - ಪಾಪ, ಇಹ- ಪರಂಗಳಿಗೆ ಹೊರಗಾದ

ಶಿಷ್ಯ - ಗುರು- ಜಂಗಮದ ವಿಚಾರವೆಂತೆಂದಡೆ :

ತನ್ನ ತಾನೆ ಪಕ್ವವಾಗಿ, ವೃಕ್ಷವ ತನ್ನೊಳಗೆ ಮಾಡಿಕೊಂಡು,


ಶಿವಾಜ್ಞೆಯಿಂದ ತೊಟ್ಟು ಬಿಟ್ಟ ಹಣ್ಣಿನಂತೆ

ಶಿವಭಕ್ತಮತ ಮೊದಲಾಗಿ

ಆವ ಜಾತಿಯಲ್ಲಿ ಜನಿತವಾದಡೇನು ?

ಪೂರ್ವಗುಣಧರ್ಮಗಳ ಮುಟ್ಟದೆ,

ಲೋಕಾಚಾರವ ಹೊದ್ದದೆ,

ಪಂಚಮಹಾಪಾತಕಂಗಳ ಬೆರಸದೆ,

ಸತ್ಯಶರಣರಸಂಗ, ಸತ್ಯ ನಡೆನುಡಿಯಿಂದಾಚರಿಸಿ,

ಲಿಂಗಾಚಾರ ಮೋಹಿಯಾಗಿ,

ಅಡಿಗೆರಗಿ ಬಂದ ಪೂರ್ವಜ್ಞಾನಿ ಪುನರ್ಜಾತಂಗೆ,

ಪಕ್ಷಿ ಫಳರಸಕ್ಕೆರಗುವಂತೆ ಮೋಹಿಸಿ,

ಅಂಗದ ಮಲಿನವ ತೊಡೆದು ಚಿದಂಗವ ಮಾಡಿ,

ಚಿನಲಿಂಗವ ಸಂಬಂಧಿಸಿ,

ಇಪ್ಪತ್ತೊಂದು ದೀಕ್ಷೆಯ ಕರುಣಿಸುವಾತನೆ

ತ್ರಿಣೇತ್ರವುಳ್ಳ ಗುರುವೆಂಬೆನಯ್ಯಾ .

ಅಂಥಾ ಗುರುಕರಜಾತನ ಭೇದಿಸಿ, ತ್ರಿವಿಧ ಜಪವ ಹೇಳಿ,

ತ್ರಿವಿಧಲಿಂಗಾನುಭಾವವ ಬೋಧಿಸುವಾತನೆ

ಸರ್ವಾಂಗಲೋಚನವುಳ್ಳ ಜಂಗಮವೆಂಬೆನೋಡಾ.

ಇಂಥಾ ಸನ್ಮಾರ್ಗಿಗಳಿಗೆ ಭವಬಂಧನ ನಾಸ್ತಿ ಕಾಣಾ

ಶಂಭುಜಕ್ಕೇಶ್ವರಾ.

೧೨೧೦

“ಅಯ್ಯಾ , ಮಹಾಲಿಂಗೈಕ್ಯಾನುಭಾವಿಯೆಂದು'

ಪೂರ್ವಾರ್ಜಿತವನುಂಡಡೆ ಭಂಗ;
೩೬೬
ಶಿವಶರಣೆಯರ ವಚನಸಂಪುಟ

ಹರಶರಣೆಂದು ಭವಮಾಲೆಗೆ ಒಳಗಾದಡೆ ಭಂಗ.

ಹರವಶವೆನಿಸಿ ವಿಧಿವಶವೆನಿಸಿದರೆ ಅದು ನಿಮಗೆ ಭಂಗ

ಕಾಣಾ ಶಂಭುಜಕ್ಕೇಶ್ವರಾ.

೧೨೧೧

ಆದಿಯಲ್ಲಿ ದೇವಾ, ನಿಮ್ಮನಾರು ಬಲ್ಲರು ?

ವೇದಂಗಳು ಮುನ್ನಲತ್ತಲರಿಯವು.

ವೇದಿಗಳು ಪರಬ್ರಹ್ಮವೆಂದೆಂಬರು.

ನಾದ ಬಿಂದು ಕಳಾತೀತನೆಂದೆಂಬರು.

ಸಾಧು ಸಜ್ಜನ ಸದ್ಭಕ್ತರಿಚ್ಛೆಗೆ ಬಂದೆಯಾಗಿ,

ಈಗೀಗ ದೇವನಾದ ಶಂಭುಜಕ್ಕೇಶ್ವರಾ.

೧೨೧೨

ಇನಿಯಂಗೆ ತವಕವಿಲ್ಲ ; ಎನಗೆ ಸೈರಣೆಯಿಲ್ಲ .

ಮನದಿಚ್ಛೆಯನರಿವ ಸಖಿಯರಿಲ್ಲ , ಇನ್ನೇವೆನವ್ವಾ ?

ಮನುಮಠವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು,

ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ ?

ದಿನ ವೃಥಾ ಹೋಯಿತ್ತಾಗಿ ಯೌವ್ವನ ಬೀಸರವಾಗದ ಮುನ್ನ

ಪಿನಾಕಿಯ ನೆರಹವ್ವಾ ಶಂಭುಜಕ್ಕೇಶ್ವರನ ! -|| ೭ ||

೧೨೧೩

ಉದಕದೊಳಗಣ ಕಿಚ್ಚಿನಂತೆ ಲಿಂಗೈಕ್ಯವು.

ವಾಯುನುಂಗಿದ ಪರಿಮಳದಂತೆ ಲಿಂಗೈಕ್ಯವು.

ಉರಿಯೊಳಡಗಿದ ಕರ್ಪೂರದಂತೆ ಲಿಂಗೈಕ್ಯವು.

ಭಾವವನಡಸಿದ ಬಯಲಿನಂತೆ ಲಿಂಗೈಕ್ಯವು.

ಅರಿವು ನುಂಗಿದ ಮರಹಿನಂತೆ ಲಿಂಗೈಕ್ಯವು.

“ ಯತೋ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹ”

ಎಂದುದಾಗಿ,

ವಾನಕ್ಕೆ ಅಗೋಚರವಾದ ಮಹಾಶರಣನ ಒಳಗೊಂಡು

ಥಳಥಳಿಸಿ ಬೆಳಬೆಳಗಿ ಹೊಳೆವುತ್ತ ,


|| ೮ ||
ನಿಶ್ಯಬ್ದಬ್ರಹ್ಮವಾಗಿರ್ದನಯ್ಯಾ ನಮ್ಮ ಶಂಭುಜಕ್ಕೇಶ್ವರನು.
ಸತ್ಯಕ್ಕನ ವಚನಗಳು

೧೨೧೪

ಏಕೆನ್ನ ಬಾರದ ಭವಂಗಳಲ್ಲಿ ಬರಿಸಿದೆ ?

ಏಕೆನ್ನ ಘೋರಸಂಸಾರದಲ್ಲಿರಿಸಿದೆ ?

ಏಕೆನಗೆ ಕರುಣಿಸಲೊಲ್ಲದೆ ಕಾಡಿದೆ ?

ಏಕೆ ಹೇಳಾ ಎನ್ನ ಲಿಂಗವೆ ? ಆನುಮಾಡಿದ ತಪ್ಪೇನು ?

ಸಾಕಲಾಗದೆಂದು ಅಕ್ಕೊತ್ತಿ ನೂಕಿದಡೆ

ಏಕೆ ನಾ ನಿಮ್ಮ ಬಿಡುವೆ ಶಂಭುಜಕ್ಕೇಶ್ವರಾ ?

೧೨೧೫

ಕಾರಣದಿಂದ ಕಾಯವ ಬಿಟ್ಟಡೆಶೋಕವೇಕೆ ?

ಶಿವಭಕ್ತರು ಶಿವಾತ್ಮಸ್ವರೂಪು,

ಎನ್ನವರು ಅನ್ಯರೆಂದುಂಟೆ ?

ಇದು ಗನ್ನದ ಮಾತೆಂದೆ ಶಂಭುಜಕ್ಕೇಶ್ವರಾ. || ೧೦ ||

- ೧೨೧೬

ಗಂಡಗಂಡರ ಎದೆಯ ಮೆಟ್ಟಿ ನಡೆವರುಂಟೆ ?

ಗಂಡಗಂಡರ ಚಲ್ಲಣವ ಮಾಡಿ ಉಟ್ಟವರುಂಟೆ ?

ಗಂಡಗಂಡರ ಚರ್ಮವ ಹೊದ್ದವರುಂಟೆ ?

ಗಂಡಗಂಡರ ತೊಟ್ಟವರುಂಟೆ ?

ಗಂಡಗಂಡರ ತುರುಬಿದವರುಂಟೆ ?

ಗಂಡಗಂಡರ ಭಸ್ಮವಮಾಡಿ ಹೂಸಿದವರುಂಟೆ ?

ಗಂಡಗಂಡರಿಗೆ ಗಂಡನ ಕಣ್ಣು ಕಾಲಲ್ಲದೆ.


ಗಂಡಗಂಡರಿಗೆ ಗಂಡನ ಶಿರ ಕರದಲ್ಲಿದೆ.

ಗಂಡುವೇಷವೆಂಬುದು ನಿಮ್ಮ ಶಕ್ತಿರೂಪು.

ಗಂಡರಿಗೆ ಗಂಡನು ನಡೆಯಿತ್ತೆ ಬಟ್ಟೆ ಎಂಬುದು ನಿಮಗೆ ಸಂದಿತ್ತು .

ಶಂಭುಜಕ್ಕೇಶ್ವರ ಶರಣ ಜಗದೊಳಗೊಬ್ಬನೆ ಗಂಡನು. || ೧೧ ||

೧೨೧೭

ಜನನ ಮರಣಂಗಳಲ್ಲಿ ಬರಿಸಬಾರದ ಭಾಷೆ,

ನಿತ್ಯ ನೀನೆಂದು ಮರೆಹೊಕ್ಕ ಕಾರಣ .

ಇಹದಲ್ಲಿ ಪರದಲ್ಲಿ ಇರಿಸಬಾರದ ಭಾಷೆ,

ತನ್ನಲ್ಲಿ ತನಗೆ ವಿವರಣೆ ಇಲ್ಲದ ಕಾರಣ .


೩೬೮
ಶಿವಶರಣೆಯರ ವಚನಸಂಪುಟ

ಪುಣ್ಯಪಾಪಂಗಳ ಉಣಿಸಬಾರದ ಭಾಷೆ,

ತನ್ನ ಪಾದೋದಕ ಪ್ರಸಾದಜೀವಿಯಾಗಿ,

ತಾ ಸಹಿತ ನಾನಿಪ್ಪೆ , ನಾ ಸಹಿತ ತಾನಿಪ್ಪ ಕಾರಣ ,

ವಂಚನೆ ಬಾರದು ಎನಗೆ ತನಗೆ.

ಶಂಭುಜಕ್ಕೇಶ್ವರದೇವಾ,

ಸದ್ಗುರು ಅಪ್ಪಣೆಯಿಂದ ನೀನೊಲಿದು ಸಲಹು

ಎನ್ನ ಪ್ರಾಣಲಿಂಗವಾಗಿ,

೧೨೧೮

ಜಾಣಾನುಭಾವಿಯೆಂಬ ಪಿನಾಕಿಯ ಮಾತ ಕೇಳಿ ಬಂದೆ.

ಹಿರಿದು ಆರತದಿಂದ ಕಾಣಿಸುವನ್ನಕ್ಕರ ತವಕ , ನುಡಿಗೆಡೆಗೊಡನೆಲಗೆ !

ಪ್ರಾಣಕ್ಕಾಧಾರ ಶಿವಶಿವಾ ಎಂಬ ಶಬುದ.

ಆತನ ಕಂಡಡೆ ಕಡೆಯದ ಕೀಲು ಕಳೆದಂತೆ

ಶಂಭುಜಕ್ಕೇಶ್ವರನ ಬೆರಸಲೊಡನೆ ಬೆರಗಾದೆನು. || ೧೩ ||

೧೨೧೯

ತಲೆಯ ಮೇಲೆತಲೆಯುಂಟೆ ? ಹಣೆಯಲ್ಲಿ ಕಣ್ಣುಂಟೆ ?

ಗಳದಲ್ಲಿ ವಿಷವುಂಟೆ ? ದೇವರೆಂಬವರಿಗೆಂಟೊಡಲುಂಟೆ ?

ತಂದೆಯಿಲ್ಲದವರುಂಟೆ ? ತಾಯಿಯಿಲ್ಲದವರುಂಟೆ ?

ಎಲವೊ , ನಿನ್ನ ಹಣೆಯಲ್ಲಿ ನೇಸರುಮೂಡದೆ ?


|| ೧೪ ||
ಶಂಭುಜಕ್ಕೇಶ್ವರನಲ್ಲದೆ ಉಳಿದ ದೈವಂಗಳುಂಟೆ ?

೧೨೨೦

ದೇವರದೇವ ನೀನೆಂದೆನಿಸಿಕೊಂಡೆ,

ಬಾಣನ ಬಾಗಿಲ ಕಾಯ್ದರೇನಯ್ಯಾ ?

ನಿತ್ಯತೃಪ್ತ ನೀನೆನಿಸಿಕೊಂಡೆ;

ಚೆನ್ನನ ಮನೆಯಲುಂಬರೇನಯ್ಯಾ ?

ಕರುಣಾಕರ ನೀನೆಂದೆನಿಸಿಕೊಂಡೆ ,

ಸಿರಿಯಾಳನ ಮಗನ ಬೇಡುವರೇನಯ್ಯಾ ?

ನಿಮ್ಮ ಮಹಿಮೆಯ ನೀನೆ ಬಲ್ಲಿರಿ,


|| ೧೫ ||
ಎನ್ನನುದ್ಧರಿಸಯ್ಯಾ ಶಂಭುಜಕ್ಕೇಶ್ವರಾ.
೩೬೯
ಸತ್ಯಕ್ಕನ ವಚನಗಳು

೧೨೨೧

ದೇವರೆಂದು ಅರ್ಚಿಸಿ ಪೂಜಿಸಿ ಭಾವಿಸಿ,

ಮತ್ತೆ ತ್ರಿವಿಧವ ಮುಟ್ಟಿದರೆಂದು

ಕಷ್ಟಗುಣವ ನುಡಿವ ಭಕ್ತಿಹೀನರ ಕಂಡಡೆ


|| ೧೬ ||
ಅವರನೊಚ್ಚತ ತೊಲಗಬೇಕು ಶಂಭುಜಕ್ಕೇಶ್ವರಾ.

ನಡೆದವರುಂಟೆ ಕೈಲಾಸಕ್ಕೆ ದಾಳಿಯ ?

ನುಡಿದವರುಂಟೆ ಶಿವಲಾಂಛನಕ್ಕೆ ವೇಳೆಯ ?

ಕುಡಿದವರುಂಟೆ ಕಾಳಕೂಟವಿಷವನಮೃತವ ಮಾಡಿ ?

ಮಡದಿಯ ಜಂಗಮಕ್ಕೆ ಕೊಟ್ಟು ನೋಡಿದವರುಂಟೆ ?

ಹಡೆದ ಮಕ್ಕಳ ಕೊಂದು ಜಂಗಮಕ್ಕೆ ಉಣಲಿಕ್ಕಿದರುಂಟೆ ?

ನೀವುಕೊಡುವುದು ಕೌತುಕವಲ್ಲ !

ಶಂಭುಜಕ್ಕೇಶ್ವರಾ,

ಎನ್ನೊಡೆಯನ ಸಾತ್ವಿಕ ಸದ್ಭಕ್ತರ ಮಹಿಮೆಗೆ

ನಾನು ನಮೋ ನಮೋ ಎಂಬೆನು . || ೧೭ ||

೧೨೨೩

ಭಕ್ತರಿಗೆ ಅಕ್ಕೆ ಶೋಕ ದುಃಖವುಂಟೆ ಅಯ್ಯಾ ?

ಅತ್ತು ಕಳೆವನೋವ ಹಾಡಿ ಕಳೆಯಲೇಕಯ್ಯಾ ?

ಈ ಮುಕ್ತಾಯಕ್ಕಗಳ ಕಕ್ಕುಲತೆಯ

ಶಂಭುಜಕ್ಕೇಶ್ವರನ ಶರಣರೊಪ್ಪರಯ್ಯಾ . || ೧೮ ||

೧೨೨೪

ಭವಿಯ ಬೆರಸಿದ ಭಕ್ತಿ , ಹವಿಯ ಬೆರಸಿದ ಬೀಜ,

ಉದಕ ಬೆರಸಿದ ಎಣ್ಣೆ ಜ್ಯೋತಿಪ್ರಜ್ವಲಿಸುವುದೆ ?

ಭವಿಯಲ್ಲ ಭಕ್ತನಲ್ಲ , ಹವಿಯಲ್ಲ ಬೀಜವಲ್ಲ , ಉದಕವಲ್ಲ ಎಣ್ಣೆಯಲ್ಲ !

ಒಡಲಿಚ್ಛೆಗೆ ಹೋಗಿಭವಿಯ ಮನೆಗೆ ತುತ್ತಿಡುವ

ನರಕಿಗಳಿಗೇಕೊಲಿವ ನಮ್ಮ ಶಂಭುಜಕ್ಕೇಶ್ವರನು ? || ೧೯ ||

೧೨೨೫

ಭಾವನೇಕೆ ಬಾರನೆನ್ನ ಮನೆಗೆ ?


ಹರಿಯಮಗನನುರುಹಿದ ಗರುವದ ಭಾವನೇಕೆ ಬಾರನೆನ್ನ ಮನೆಗೆ ?
೩೭೦ ಶಿವಶರಣೆಯರ ವಚನಸಂಪುಟ

ಅಸುರರ ಪುರವ ಸುಟ್ಟ ವೀರಭಾವನೇಕೆ ಬಾರನೆನ್ನ ಮನೆಗೆ ?

ದಕ್ಷನ ಶಿರವನರಿದು, ಯಾಗವ ಕೆಡಿಸಿ ಕುರಿದಲೆಯ ಹತ್ತಿಸಿ

ಬಿನ್ನಾಣದ ಬಲುಹ ಮೆರೆವ ಏಕೋಭಾವನೇಕೆ ಬಾರನೆನ್ನ ಮನೆಗೆ ?

ಹರಿಯ ನಯನದ ಪೂಜೆ ಚರಣದಲೊಪ್ಪಿತ್ತೆಂಬ

ದುರುಳತನವು ತನಗೆ ಬೇಡಪ್ಪಾ .

ಪರವಧುವಿಂಗಳುಪಿ ಇಲ್ಲವೆಂಬ ವಿಗಡತನದ ದುರುಳತನ ಬೇಡಪ್ಪಾ .

ಆತನ ಕರೆದು ತಾರವ್ವಾ , ಶಂಭುಜಕ್ಕೇಶ್ವರನ ನೆರೆದು ನೋಡುವೆನು

೧೨೨೬

ಮಂತ್ರ ಭಿನ್ನವಾಯಿತ್ತೆಂದು ಕಂಥೆಯ ಬಿಡುವರೆ ಅರಿವುಳ್ಳವರು ?

ಅದು ದ್ವೇಷವಲ್ಲದೆ ಅರಿವಿಂಗೆ ಸಂಬಂಧವಲ್ಲ .

“ ಮಂತ್ರಮಧ್ಯೆ ಭವೇಲ್ಲಿಂಗ ಲಿಂಗಮಧ್ಯೆ ಭವೇನ್ಮಂತ್ರಂ ||

ಮಂತ್ರಲಿಂಗದ್ವಯೋರೈಕ್ಕಂ ಇಷ್ಟಲಿಂಗಂತು ಶಾಂಕರಿ |”

ಎಂದುದಾಗಿ ,

ಆ ಮಂತ್ರ ಸರ್ವರ ಆಧಾರ, ಸರ್ವರ ಆತ್ಮಬೀಜವೆಂದರಿಯದೆ

ಕೇಸರಿಯ ಕನಸ ಕಂಡ ವಾರಣದಂತೆ,

ಈ ಭಾಷೆಹೀನರಿಗೇಕ ಶಂಭುಜಕ್ಕೇಶ್ವರನು ? || ೨೧ ||

೧೨೨೭

ಮಚ್ಚಿ ಗ್ರಾಹಿಗೊಂಡೆನು ನಿಮಗಾನು,

ನಲ್ಲನೆ, ಒಚ್ಚತವೋದವಳನುಳಿವರೆ ?

ವಿಕಳಗೊಂಡೆನು ಶಿವಶಿವಾ,

ಪ್ರಾಣಪದವಲ್ಲದೆ ಮತ್ತೊಂದನರಿಯೆನು

ಮನ ವಚನ ಕಾಯದಲ್ಲಿ .

ಉಚಿತವೆ ನಿಮಗೆ ? ಪುರುಷಲಕ್ಷಣವೆ ?

ಅತಃಪರಗಂಡರ ನಾನು ಬಲ್ಲಡೆ


|| ೨೨ ||
ಕರ್ತು ನಿಮ್ಮಾಣೆಯಯ್ಯಾ ಶಂಭುಜಕ್ಕೇಶ್ವರಾ.

೧೨೨೮

ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ .

ಕಾಸೆ ಮೀಸೆಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ .

ಅದು ಜಗದ ಹಾಹ ; ಬಲ್ಲವರ ನೀತಿಯಲ್ಲ .


೩೭೧
ಸತ್ಯಕ್ಕನ ವಚನಗಳು

ಏತರ ಹಣ್ಣಾದಡೂ ಮಧುರವೆ ಕಾರಣ,

ಅಂದವಿಲ್ಲದ ಕುಸುಮಕ್ಕೆ ವಾಸನೆಯ ಕಾರಣ .

ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ. || ೨೩ ||

೧೨೨೯

ಲಂಚವಂಚನಕ್ಕೆ ಕೈಯಾನದಭಾಷೆ.

ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ

ನಾನು ಕೈ ಮುಟ್ಟಿ ಎತ್ತಿದೆನಾದರೆ

ನಿಮ್ಮಾಣೆ ನಿಮ್ಮ ಪ್ರಮಥರಾಣೆ.

ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿ ಪೆನಾಗಿ,

ಇಂತಲ್ಲದೆ ನಾನು ಅಳಿಮನವ ಮಾಡಿ

ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,

ನೀನಾಗಲೆ ಎನ್ನ ನರಕದಲ್ಲಿ ಅದ್ದಿ


|| ೨೪ ||
ನೀನೆದ್ದು ಹೋಗಾಶಂಭುಜಕ್ಕೇಶ್ವರಾ.

೧೨೩೦

ವಿಶ್ವಾಸದಿಂದ ನಂಬಿದರಯ್ಯಾ ಭಿಲ್ಲಮರಾಯನವರು.

ವಿಶ್ವಾಸದಿಂದ ನಂಬಿದರಯ್ಯಾ ಗೊಲ್ಲಾಳರಾಯನವರು.

ವಿಶ್ವಾಸದಿಂದ ನಂಬಿದರಯ್ಯಾ ಕೆಂಭಾವಿಯ ಭೋಗಣ್ಣನವರು .

ವಿಶ್ವಾಸದಿಂದ ನಂಬಿದರಯ್ಯಾ ಬಳ್ಳೇಶ್ವರಮಲ್ಲಯ್ಯಗಳು.

ವಿಶ್ವಾಸದಿಂದ ನಂಬಿದರಯಾ ಸಾಮವೇದಿಗಳು.

ವಿಶ್ವಾಸದಿಂದ ನಂಬಿದರಯಾ ದಾಸದುಗ್ಗಳೆಯವರು .

ವಿಶ್ವಾಸದಿಂದ ನಂಬಿದರಯ್ಯಾ ಸಿರಿಯಾಳಚಂಗಳೆಯವರು.

ವಿಶ್ವಾಸದಿಂದ ನಂಬಿದರಯಾ ಸಿಂಧುಬಲ್ಲಾಳನವರು.

ವಿಶ್ವಾಸದಿಂದ ನಂಬಿದರಯ್ಯಾ ಬಿಬ್ಬಿ ಬಾಚಯ್ಯಗಳು.

ವಿಶ್ವಾಸದಿಂದ ನಂಬಿದರಯ್ಯಾ ಮರುಳಶಂಕರದೇವರು.

ಇಂತಪ್ಪ ವಿಶ್ವಾಸಿಗಳ ಶ್ರೀಪಾದಕ್ಕೆ ನಮೋ ನಮೋ

ಎನುತಿರ್ದೆನಯ್ಯಾ ಶಂಭುಜಕ್ಕೇಶ್ವರಾ. || ೨೫ ||

೧೨೩೧

ಹಿರಿಯತನಕ್ಕೆ ಪಥವೆ,
ಬಾಣನ ಮನೆಯ ಬಾಗಿಲ ಕಾಯುದು ?
೩೭೨
ಶಿವಶರಣೆಯರ ವಚನಸಂಪುಟ

ಮಹಂತತನಕ್ಕೆ ಪಥವೆ,

ನಂಬಿಗೆ ಕುಂಟಣಿಯಾದುದು ?

ಕರುಣಿತನಕ್ಕೆ ಪಥವೆ,

ಸಿರಿಯಾಳನ ಮಗನ ಕೋಲುವುದು ?

ದಾನಿತನಕ್ಕೆ ಪಥವೆ,

ದಾಸನ ವಸ್ತ್ರವ ಸೀಳುವುದು ?

ನಿಮ್ಮ ಹಿರಿಯತನಕ್ಕಿದು ಪಥವೆ,

ಬಲ್ಲಾಳನ ವಧುವ ಬೇಡುವುದು ?

ನಿಮ್ಮ ಗುರುತನಕ್ಕಿದು ಪಥವೆ,

ನಾರಿಯರಿಬ್ಬರೊಡನೆ ಇಪ್ಪುದು ?

ಶಿವಶಿವಾ ನಿಮ್ಮ ನಡವಳಿ !

ಶಂಭುಜಕ್ಕೇಶ್ವರಾ, ಅಲ್ಲದಿರ್ದಡೇಕೆ

ಶ್ರುತಿಗಳ ಕೈಯಿಂದತ್ತತ್ತಲೆನಿಸಿಕೊಂಬೆ ? || ೨೬ ||

೧೨೩೨

ಹೊರಗಿದ್ದಹನೆಂದು ನಾನು ಮರೆದು ಮಾತನಾಡಿದೆ;

ಅರಿಯಲೀಯದೆ ಬಂದೆನ್ನ ಅಂತರಂಗದಲ್ಲಿ ಪ್ರನು.

ತೆರಹಿಲ್ಲದಭವ ನುಡಿಗೆಡೆಗೊಡನು;

ಆತನ ಬಯಲಿಂಗೆ ಬೇಟಗೊಂಡೆನವ್ವಾ .

ನಾನೇನ ಮಾಡುವೆನೆಲೆ ತಾಯೆ ,

ಮರೆದಡೆ ಎಚ್ಚರಿಸುವ ಕುರುಹಿಲ್ಲದ ಗಂಡನು.


|| ೨೭ ||
ತನ್ನನರಿದಡೆ ಒಳ್ಳಿದನವ್ವಾ ನಮ್ಮ ಶಂಭುಜಕ್ಕೇಶ್ವರನು.
ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವಯ ವಚನ

೧೨೩೩

ವ್ರತಭ್ರಷ್ಟನ, ಲಿಂಗಬಾಹ್ಯನ ಕಂಡಡೆ

ಸತ್ಯ ನಾಯ , ಕಾಗೆಯ ಕಂಡಂತೆ .

ಅವರೊಡನೆ ನುಡಿಯಲಾಗದು ಭೀಮೇಶ್ವರಾ || ೧ ||


ಶಿವಶರಣೆಯರ ವಚನಸಂಪುಟ

ಸೂಳೆಸಂಕವ್ವಯ ವಚನ

೧೨೩೪

ಒತ್ತೆಯ ಹಿಡಿದು ಮತ್ತೊಯಹಿಡಿಯೆ .

ಹಿಡಿದಡೆ ಬತ್ತಲೆ ನಿಲಿಸಿಕೋಲುವರಯ್ಯಾ .

ವ್ರತಹೀನನನರಿದು ಬೆರೆದಡೆ

ಕಾದ ಕತ್ತಿಯಲ್ಲಿ ಕೈ ಕಿವಿ ಮೂಗಕೊಯ್ಯರಯ್ಯಾ .

|| ೧ ||
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೆಶ್ವರಾ.
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳ

೧೨೩೫

ಪಶ್ಚಿಮದ ಕದವ ತೆಗೆದು ಬಚ್ಚಬರಿಯ ಬೆಳಗನೋಡಲೊಲ್ಲದೆ,

ಕತ್ತಲೆಯ ಬಾಗಿಲಿಗೆ ಮುಗ್ಗಿ ,

ಕಣ್ಣು ಕಾಣದ ಅಂಧಕನಂತೆ ಜಾರಿ ಜರಿಯಲ್ಲಿ ಬಿದ್ದು ,

ಕರ್ಮಕ್ಕೆ ಗುರಿಯಾಗುವ ಮರ್ತ್ಯದ ಮನುಜರಿರಾ,

ನೀವುಕೇಳಿರೋ ಹೇಳಿಹೆನು, ನಮ್ಮ ಶರಣರ ನಡೆ ಎಂತೆಂದಡೆ :

ಕತ್ತಲೆಯ ಬಾಗಿಲಿಗೆ ಕದವನಿಕ್ಕಿ , ಪಶ್ಚಿಮದಕದವ ತೆಗೆದು,

ಬಚ್ಚಬರಿಯ ಬೆಳಗಿನೊಳಗೋಲಾಡುವ ಶರಣರ ಪಾದಕ್ಕೆ

ನಮೋ ಎಂದು ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೨೩೬

ಹೋಗುತ್ತ ಹೋಗುತ್ತ ಹೊಗೆಯ ಕಂಡೆ,

ಹೊಗೆಯೊಳಗೊಂದು ನಗೆಯಕಂಡೆ,

ನಗೆ ನಡೆಗೆಡಿಸಿ, ನಾನೆಂಬುದನರಿದು,

ತಾನು ತಾನೆಯಾಗಿ ತಲ್ಲಣವಿಲ್ಲದೆ,

ಎಲ್ಲವೂ ತಾನೆಂದರಿದು ತನ್ಮಯವಾಗಿ

ತರಹದಲ್ಲಿ ನಿಂದುನೋಡುತ್ತಿರಲು

ಉರಿಯ ಕಂಡೆ; ಉರಿಯೊಳಗೊಂದು ಹೊಳೆವಜ್ಯೋತಿಯ ಕಂಡೆ ,

ಆ ಜ್ಯೋತಿಯೊಳಗೊಂದು ಚಿಜ್ಯೋತಿಯ ಕಂಡೆ,

ಆ ಚಿಜ್ಯೋತಿಯೊಳಗೊಂದು ಚಿತ್ಪಕಾಶವ ಕಂಡೆ.

ಆ ಚಿತ್ಪಕಾಶವೆ ತಾನೆಯಾಗಿ ಆಡುವ ಶರಣನ ಇರವೆಂತೆಂದಡೆ :

ಇದ್ದೂ ಇಲ್ಲದಂತೆ, ಹೊದ್ದಿಯೂ ಹೊದ್ದದಂತೆ,


ಆಡಿಯೂ ಆಡದಂತೆ,ನೋಡಿಯೂ ನೋಡದಂತೆ,

ಕೂಡಿಯೂ ಕೂಡದಂತೆ, ಕುಂಭಕದೊಳು ನಿಂದು,

ತುಂಬಿದಮೃತವನುಂಡು, ಆ ಬೆಂಬಳಿಯಲ್ಲಾಡುವ ಶರಣ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ! || ೨ ||

೧೨೩೭

ಹೋಗುತ್ತ ಹೋಗುತ್ತ ಹೊಟ್ಟೆಯಡಿಯಾಯಿತ್ತು ;

ಬಟ್ಟಬಯಲಾಯಿತ್ತು .
೩೭೬
ಶಿವಶರಣೆಯರ ವಚನಸಂಪುಟ

ತುಟ್ಟತುದಿಯನೇರಿತೂರ್ಯಾತೀತನಾಗಿ,

ಇಷ್ಟ ಪ್ರಾಣ ಭಾವ ಬಯಲಾಯಿತ್ತು .

ಬಯಲಲ್ಲಿ ನಿಂದುಕೊಂಡು ನೋಡುತ್ತಿರಲು,

ಬ್ರಹ್ಮವೆಯಾಯಿತ್ತು , ಕರ್ಮ ಕಡೆಗೋಡಿತ್ತು .

ಅರಿವರತು ಮರಹು ನಷ್ಟವಾಯಿತ್ತು .

ತೆರನಳಿದು ನಿರಿಗೆ ನಿಃಪತಿಯಾಗಿ

ಮಿರುಗುವ ದೃಷ್ಟಿಯಲ್ಲಿ ನೋಡುತ್ತಿರಲು,

ನೋಟ ತ್ರಾಟಕವ ದಾಂಟಿಕೂಟದಲ್ಲಿ ಕೂಡಿ,

ಬೆರಸಿ ಬೇರಾಗದಿಪ್ಪ ಶರಣ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ. || ೩ ||

೧೨೩೮

ಹೋಗುತ್ತ ಹೋಗುತ್ತ ಹೋಲಬುದಪ್ಪಿತ್ತು,

ತನ್ನ ನೆಲೆಯ ತಿಳಿದಿತ್ತು .

ಕತ್ತಲೆಯೊಳಗೆ ನಿಂದು ನೋಡುತ್ತಿರಲು,

ನೋಟಹಿಂದಾಯಿತ್ತು ; ಆಟವಡಗಿತ್ತು ;

ಮಾಟ ನಿಂದಿತ್ತು ; ಬೇಟ ಬೆರಗಾಯಿತ್ತು .

ಊಟವನುಂಡುಕೂಟವ ಕೂಡಿ

ಉನ್ಮನಿಯ ಬೆಳಗಿನೊಳಗೆ ಒಂದೆಂದರಿದು,

ತನ್ನಂದವ ತಿಳಿದು, ಲಿಂಗದಲ್ಲಿ ಸಂದು, ಜಂಗಮದೊಳು ಬೆರೆದು,

ಮಂಗಳದ ಮಹಾಬೆಳಗಿನೊಳಗೆ ಆಡುವ ಶರಣ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆನೋಡಾ.

೧೨೩೯

ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು .

ಅದಕ್ಕೆ ಸುತ್ತಲು ಬೇರು ಆವರಿಸಿತ್ತು .

ಅದಕ್ಕೆ ಶತಕೋಟಿಕೊನೆ ಬಿಟ್ಟಿತ್ತು.

ಅಡಗಿದ ಬೇರನೆ ಸವರಿ, ಶತಕೋಟಿಕೊನೆಯನೆ ಕಡಿಯೆ ,

ಮರ ಒಣಗಿತ್ತು , ಉಲುಹು ನಿಂದಿತ್ತು , ಎಲೆ ಉದುರಿತ್ತು .

ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾ


|| ೫ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .
೩೭೭
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋಧೆಯ ವಚನಗಳು

೧೨೪೦

ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು .

ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು .

ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ,

ಜಗದೊಳಗೆ ನಚ್ಚುಮಚ್ಚಿಗೊಳಗಾಗಿ , ಚುಚ್ಚಳ ಪೂಜೆಗೆ ಸಿಲ್ಕಿ ,

ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ

ಮನುಜರ ಕಂಡು ನಾಚಿತ್ತೆನ್ನ ಮನವು.

ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು.

ಇದನೋಡಿನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ,

ಶರಧಿ ಬತ್ತಿತ್ತು , ಕಮಲ ಕಾಣಬಂದಿತ್ತು .

ಆ ಕಮಲ ವಿಕಾಸವಾಯಿತ್ತು ; ಪರಿಮಳವೆಂಬ ವಾಸನೆ ತೀಡಿತ್ತು .

ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ,

ಮಹಾಜೋತಿಯ ಬೆಳಗಿನಲಿ ಓಲಾಡುವ ಶರಣರ

ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು,


ಈ ಮಹಾಶರಣರ ನೆಲೆಯ , ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ? || ೬ ||

೧೨೪೧

ಬಟ್ಟಬಯಲಲ್ಲಿ ಒಂದು ಮೃಗ ಹುಟ್ಟಿತ್ತು .

ಅದ ಕಂಡಿಹೆನೆಂದಡೆ ಕಾಣಬಾರದು,

ಹೇಳಿಹೆನೆಂದಡೆ ಹೇಳಬಾರದು;

ಅದು ಚಿದ್ರೂಪು, ಚಿನ್ಮಯವು.

ಅದು ಗೊತ್ತ ಮೆಟ್ಟಿ ಆಡುವುದನರಿಯದೆ,

ಕತ್ತಲೆಯಲ್ಲಿ ಮುಳುಗಿ ಕಾಮನ ಬಾಧೆಗೆ ಸಿಕ್ಕಿ ,

ಎತ್ತಲೆಂದರಿಯದೆ ಭವಬಂಧನದಲ್ಲಿ ಮುಳುಗಿ

ಕಾಲನ ಬಾಧೆಗೊಳಗಾಗಿ,

ಸತ್ತು ಮೆಟ್ಟಿ ಹೂಣಿಸಿಕೊಂಬ ಮನುಜರು

ಮತ್ತೆ ಶಿವಶರಣರಕೂಡೆತತ್ವವ ಬಲ್ಲೆವೆಂದು ತರ್ಕಕ್ಕೆ ಬಹರು.

ಇದು ಹುಸಿ ; ನಮ್ಮ ಶರಣರು ಇದ ಮೆಚ್ಚರು.

ತತ್ವವೆಂಬುದನೆ ಮೆಟ್ಟಿನಿಂದು ಮಿಥ್ಯವ ನುಡಿವರ ತಮ್ಮ ಪುತ್ರರೆಂದು

ಸತ್ತು ಹುಟ್ಟುವರನೊತ್ತರಿಸಿ ನಿಶ್ಚಿಂತದಲ್ಲಿ ನಿಜವ ನೆಮ್ಮಿ ,

ಬಟ್ಟಬಯಲೊಳಗಣ ಮೃಗದ ಗೊತ್ತ ಮೆಟ್ಟಿ ,


೩೭೮
ಶಿವಶರಣೆಯರ ವಚನಸಂಪುಟ

ಬಚ್ಚಬರಿಯ ಬೆಳಗಿನೋಳಗೋಲಾಡುವ ಶರಣರ

ಈ ಸತ್ತು ಹುಟ್ಟಿ, ಹೂಣಿಸಿಕೊಂಬ ಮಿಥ್ಯಾವಾದಿಗಳೆತ್ತ ಬಲ್ಲರ

ನಿಮ್ಮ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ? || ೭ ||

೧೨೪೨

ನೆನೆವುತ್ತಿದೆ ಮನ, ದುರ್ವಾಸನೆಗೆ ಹರಿವುತ್ತಿದೆ ಮನ

ಕೊನೆಗೊಂಬೆಗೆ ಎಳೆವುತ್ತಿದೆ ಮನ,

ಕಟ್ಟಿಗೆ ನಿಲ್ಲದು ಮನ; ಬಿಟ್ಟಡೆ ಹೋಗದು ಮನ.

ತನ್ನಿಚ್ಛೆಯಲಾಡುವ ಮನವ ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ,

ಬಚ್ಚಬರಿಯ ಬಯಲಿನೊಳಗೆ ಓಲಾಡುವ

ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯಾ ,

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೮ ||

೧೨೪೩

ಮನವ ನಿರ್ಮಲವ ಮಾಡಿಹೆನೆಂದು

ತನುವ ಕರಗಿಸಿ ಮನವ ಬಳಲಿಸಿ ಕಳವಳಿಸಿ,

ಕಣ್ಣು ಕಾಣದ ಅಂಧಕರಂತೆ ಮುಂದುಗಾಣದೆ,

ಸಂದೇಹದಲ್ಲಿ ಮುಳುಗಿರುವ ಮನುಜರಿರಾ,

ನೀವುಕೇಳಿರೋ , ಹೇಳಿಹೆನು.

ಮನವ ನಿರ್ಮಲವ ಮಾಡಿ, ಆ ಘನವ ಕಾಂಬುದಕ್ಕೆ

ಆ ಮನವಂತಾಗಬೇಕೆಂದಡೆ :

ಗಾಳಿಬೀಸದ ಜಲದಂತೆ, ಮೋಡವಿಲ್ಲದ ಸೂರನಂತೆ,

ಬೆಳಗಿದ ದರ್ಪಣದಂತೆ ಮನನಿರ್ಮಲವಾದಲ್ಲದೆ

ಆ ಮಹಾಘನವ ಕಾಣಬಾರದೆಂದರು

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೯ ||

೧೨೪೪

ಮನವ ಗೆಜ್ಜೆಹೆನೆಂದು, ತನುವ ಕರಗಿಸಿ ಕಾಯವ ಮರುಗಿಸಿ,

ನಿದ್ರೆಯ ಕೆಡಿಸಿ ವಿದ್ಯೆಯ ಕಲಿತೆಹೆನೆಂಬ ಬುದ್ಧಿಹೀನರಿರಾ ನೀವುಕೇಳಿರೋ

ನಮ್ಮ ಶರಣರು ಮನವನೆಂತು ಗೆದ್ದಹರೆಂದಡೆ

ಕಾಮ ಕ್ರೋಧವ ನೀಗಿ, ಲೋಭಮೋಹ ಮದ ಮತ್ಸರವ ಛೇದಿಸಿ,

ಆಸೆ ರೋಷವಳಿದು, ಜಗದ ಪಾಶವ ಬಿಟ್ಟು ,


೩೭೯
೩೭೯
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋಧೆಯ ವಚನಗಳು

ಆ ಮರುಗಿಸುವ ಕಾಯವನೆ ಪ್ರಸಾದಕಾಯವ ಮಾಡಿ ಸಲಹಿದರು .

ಕೆಡಿಸುವ ನಿದ್ರೆಯನೆ ಯೋಗಸಮಾಧಿಯ ಮಾಡಿ,

ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತ ಬಲ್ಲರೊ


|| ೧೦ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?

೧೨೪೫

ಮನವ ನಿಲಿಸಿಹೆನೆಂದು, ಆ ಮನದ ನೆಲೆಯ ಕಾಣದೆ,

ಅರುಹು ಮರವೆಗೊಳಗಾಗಿ, ಕಳವಳವ ಮುಂದುಮಾಡಿ,

ಚಿಂತೆ ಸಂತೋಷವನೊಡಲುಮಾಡಿ ,

ಭ್ರಾಂತುಗೊಂಡು ತಿರುಗುವ ಮನುಜರಿರಾ, ನೀವುಕೇಳಿರೋ .

ಮನವ ನಿಲಿಸುವುದಕ್ಕೆ ಶರಣರ ಸಂಗಬೇಕು, ಜನನಮರಣವ ಗೆಲಬೇಕು.

ಗುರುಲಿಂಗಜಂಗಮದಲ್ಲಿ ವಂಚನೆಯಿಲ್ಲದೆ, ಮನಸಂಚಲವ ಹರಿದು,

ನಿಶ್ಚಿತವಾಗಿ ನಿಜವ ನಂಬಿ ಚಿತ್ರ ಸುಯಿದಾನವಾದಲ್ಲದೆ,

ಮನದೊಳಗೆ ಲಿಂಗವು ಅಷ್ಟೊತ್ತಿದಂತಿರದೆಂದರು


ಬಸವಣ್ಣನ ಶರಣರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೧೧ ||

೧೨೪೬

ಹೊತ್ತು ಹೊತ್ತಿಗೆ ಮೆಹಾಕಿ ತಿಪ್ಪೆಯಲ್ಲಿ ಕರ್ಪೂರವನರಸ

ತಿಪ್ಪೆಯಂತಹ ಒಡಲೊಳಗೆ ಕರ್ತುವನರಸಿಹೆನೆಂಬ ಅಣ್ಣಗಳಿರಾ,

ನೀವುಕೇಳಿರೋ , ಹೇಳಿಹೆನು .

ಆ ಕರ್ತುವನರಸುವುದಕ್ಕೆ ಚಿತ್ರ ಹೇಗಾಗಬೇಕೆಂದಡೆ

ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು.

ಮೋಡವಿಲ್ಲದ ಚಂದ್ರಮನಂತಿರಬೇಕು.

ಬೆಳಗಿನ ದರ್ಪಣದಂತಿರಬೇಕು.

ಇಂತು ಚಿತ್ತಶುದ್ಧವಾದಲ್ಲದೆ, ಆ ಕರ್ತೃವಿನ ನೆಲೆಯ ಕಾಣಬಾರದೆಂದರು,


|| ೧೨ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು .

೧೨೪೭

ಮನ ಕತ್ತಲೆ, ತನು ಹಮ್ಮು , ನೆನಹು ಮರವೆ,

ಇವರೊಳಗೆ ಇದ್ದು ಘನವ ಕಂಡೆಹೆನೆಂಬ ಅಣ್ಣಗಳಿರಾ, ನೀವುಕೇಳಿರೋ .

ಘನವ ಕಾಂಬುದಕ್ಕೆ ಮನವೆಂತಾಗಬೇಕೆಂದಡೆ,

ಅಕ್ಕಿಯ ಥಳಿಸಿದಂತೆ, ಹಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ,


೩೮೦
ಶಿವಶರಣೆಯರ ವಚನಸಂಪುಟ

ಮನ ನಿರ್ಮಲವಾದಲ್ಲದೆ ಘನವ ಕಾಣಬಾರದು

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . | ೧೩ ||

೧೨೪೮

ಮದ ಮತ್ಸರ ಬಿಡದು, ಮನದ ಕನಲು ನಿಲ್ಲದು, ಒಡಲಗುಣ ಹಿಂಗದು.

ಇವ ಮೂರನು ಬಿಡದೆ ನಡಸುವನ್ನಕ್ಕ ಘನವ ಕಾಣಬಾರದು.

ಘನವ ಕಾಂಬುದಕ್ಕೆ ಮದಮತ್ಸರವನೆ ಬಿಟ್ಟು ,

ಮನದ ಕನಲನೆ ನಿಲಿಸಿ, ಒಡಲಗುಣ ಹಿಂಗಿ,

ತಾ ಮೃಡರೂಪಾದಲ್ಲದೆ ಘನವ ಕಾಣಬಾರದೆಂದರು

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೧೪ ||

೧೨೪೯

ಮನ ಮಂಕಾಯಿತ್ತು; ತನು ಮರೆಯಿತ್ತು ; ವಾಯು ಬರತಿತ್ತು .

ಉರಿ ಎದ್ದಿತ್ತು , ಹೊಗೆ ಹರಿಯಿತ್ತು, ಸರೋವರವೆಲ್ಲ ಉರಿದುಹೋಯ

ಒಳಕ್ಕೆ ಹೊಕ್ಕು ಕದವ ತೆಗೆದು ಬಯಲು ನೋಡಿ ಬೆಳಗಕೂಡಿದಲ್ಲದೆ

ನಿಜಮುಕ್ತಿ ಇಲ್ಲವೆಂದರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೧೫

೧೨೫೦

ಮನವೆಂದಡೆ ಮರವೆಗೆ ಒಳಗುಮಾಡಿತ್ತು .

ತನುವೆಂದಡೆ ತಾಮಸಕ್ಕೋಳಗುಮಾಡಿತ್ತು .

ಧನವೆಂದಡೆ ಆಶೆಯೆಂಬ ಪಾಶಕ್ಕೋಳಗುಮಾಡಿತ್ತು .

ಇವೀಸು ಮಾಯಾಪಾಶವೆಂದು ಬಿಟ್ಟು ಹುಟ್ಟನರಿದು,

ಬಟ್ಟಬಯಲಲ್ಲಿ ನಿಂದು, ಚಿತ್ರನಿರ್ಮಲನಾಗಿ ನೋಡಿಕಂಡ ಶರಣಂಗೆ

ತನುವೆ ಗುರುವಾಯಿತ್ತು .

ಮನವೆ ಘನವಾಯಿತ್ತು , ಧನವೆ ಜಂಗಮವಾಯಿತ್ತು .

ಈ ತ್ರಿವಿಧವನು ತ್ರಿವಿಧಕಿತ್ತು ,

ತಾ ಬಯಲದೇಹಿಯಾದನಯ್ಯಾ ಆ ಮಹಾಶರಣನು.

ಇದರ ನೆಲೆಯನರಿಯದೆ, ಆ ಮನದ ಬೆಂಬಳಿಗೊಂಡಾಡಿದವರೆಲ್ಲ


|| ೧೬ ||
ನರಗುರಿಗಳಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

- ೧೨೫೧

ರಸವಡೆದಂತೆ ದೆಸೆದೆಸೆಯನಾಲಿಸುವ ಮನವ

ತನ್ನ ವಶವ ಮಾಡಿ ನಿಲಿಸಿ, ಹುಸಿಯ ಬಿಟ್ಟು ,


ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ಮಾಯೆಯ ಬಲೆಯ ನುಸುಳಿ, ತಾ ನಿಶ್ಚಿಂತನಾಗಿ,

ಧೀರವೀರನಾದಲ್ಲದೆ ಆ ಮಹಾಘನವ ಕಾಣಬಾರದು ಎಂದರು,


|| ೧೭ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೨೫೨

ಮನ ಮರವೆಗೆ ಮುಂದುಮಾಡಿತ್ತು .

ತನು ಕಳವಳಕ್ಕೆ ಮುಂದುಮಾಡಿತ್ತು .

ಆಸೆ ರೋಷವೆಂಬವು ಅಡ್ಡಗಟ್ಟಿದವು..

ಇವರೊಳಗೆ ಜಗದೀಶ್ವರನೆನಿಸಿಕೊಂಬವರ ನುಡಿಯು ಓಸರಿಸುವದು,


|| ೧೮ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೨೩

ತನುವ ಕರಗಿಸಿ , ಹರಿವ ಮನವ ನಿಲಿಸಿ,

ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ,

ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ

ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ || ೧೯


ಚೆನ್ನಬಸವಣ್ಣಾ ? ||

೧೨೫೪

ಮಹಾಬೆಳಗ ನೋಡಿ ಮನವ ನಿಮ್ಮ ವಶವ ಮಾಡಿ,

ತನುವ ಮರೆದು ಧನವ ಜಂಗಮಕಿತ್ತು ,

ತಾನು ಬಯಲದೇಹಿಯಾದಲ್ಲದೆ ನಿಜಮುಕ್ತಿ ಇಲ್ಲವೆಂದರು


|| ೨೦ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೨೫೫

ವ್ಯಾಪಾರವನೆ ಬಿಟ್ಟು ತಾಪತ್ರಯವನೆ ಹಿಂಗಿ,

ಲೋಕದ ಹಂಗನೆ ಹರಿದು ಬೇಕು ಬೇಡೆಂಬುವನೆ ನೂಕಿ,

ತಾನು ವಿವೇಕಿಯಾದಲ್ಲದೆ,ಜ್ಯೋತಿಯ ಬೆಳಗ ಕಾಣಬಾರದೆಂದರು,

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು. || ೨೧ ||

೧೨೫೬

ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯಾ ,

ನಿಮ್ಮ ನಂಬದ ಸದ್ಭಕ್ತ ಮಹೇಶ್ವರರು ಭವಬಂಧನವನೆ ಹಿಂಗಿ,

ಮರಣಭಯವ ಗೆದ್ದು , ಕರಣಂಗಳ ಸುಟ್ಟು , ಹರಿಮನವ ನಿಲಿಸಿ,


೩೮೨ ಶಿವಶರಣೆಯರ ವಚನಸಂಪುಟ

ಅನಲಪವನಗುಣವರತು, ಜನನಮರಣವಿರಹಿತವಾದ ಶರಣರ

ಭವಭಾರಿಗಳೆತ್ತ ಬಲ್ಲರು

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ? || ೨೨ ||

೧೨೫೭

ಕರುಳು ಒಣಗಿತ್ತು ತನು ಕರಗಿತ್ತು ;

ಮನ ನಿಂದಿತ್ತು ವಾಯು ಬರತಿತ್ತು ,

ಅಪ್ಪು ಅರತಿತ್ತು ಹಿಪ್ಪೆ ಉಳಿಯಿತ್ತು .

ನೆನಹು ನಿಷ್ಪತ್ತಿಯಾಗಿ ಬೆಳಗನೆ ಬೆರೆದ ಶರಣರ

ಜನನಮರಣಕ್ಕೊಳಗಾದ ಮನುಜರೆತ್ತ ಬಲ್ಲರು

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ? || ೨೩ ||

೧೨೫೮

- ತನು ನಷ್ಟವಾದಡೇನಯ್ಯಾ, ಮನನಷ್ಟವಾಗದನ್ನಕ್ಕ ?

ವಾಕ್ಕು ನಷ್ಟವಾದಡೇನಯ್ಯಾ , ಬೇಕುಬೇಡೆಂಬುದಳಿಯದನ್ನಕ್ಕ ?

ಅಂಗಸುಖ ನಷ್ಟವಾದಡೇನಯ್ಯಾ , ಕಂಗಳಪಟಲಹರಿಯದನ್ನಕ್ಕ


ahah ?

ಮನ ಮುಗ್ಧವಾದಡೇನಯ್ಯಾ , ಅಹಂ ಎಂಬುದ ಬಿಡದನ್ನಕ್ಕ ?

ಇವೆಲ್ಲರೊಳಗಿದ್ದು ವಲ್ಲಭನೆನಿಸಿಕೊಂಬವರ ನುಡಿಯ ಬಲ್ಲರು

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೨೪ ||

೧೨೫೯

ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯದೆ, ಕತ್ತಲೆಯೊಳು

ಕಾಮನ ಬಲೆಯೊಳಗೆ ಸಿಕ್ಕಿದ ಎಗ್ಗ ಮನುಜರಿರಾ, ನೀವುಕೇಳಿರೋ .

ನಿಮ್ಮ ಇರವು ಎಂತೆಂದಡೆ :

ಕಾಯವೆಂದಡೆ ಕಳವಳಕ್ಕೊಳಗಾಯಿತ್ತು ;

ಜೀವವೆಂದಡೆ ಅರುಹು ಮರವೆಗೊಳಗಾಯಿತ್ತು ;

ಮನವೆಂದಡೆ ಸಚರಾಚರವನೆಲ್ಲವ ಚರಿಸುವುದಕ್ಕೆ ಒಳಗಾಯಿತ್ತು ;

ಪ್ರಾಣವೆಂದಡೆ ಇವೆಲ್ಲವನು ಆಡಿಸಿನೋಡುವುದಕ್ಕೆ ಒಳಗಾಯಿತ್ತು .

ಇವರೊಳಗೆ ಬಿದ್ದು ಏಳಲಾರದ ಬುದ್ಧಿಹೀನರಿರಾ, ನೀವುಕೇಳಿ, ಹೇಳ

ನಮ್ಮ ಶರಣರು ಜಗದೊಳಗೆ ಹುಟ್ಟಿ ಜಗವನೆ ಮರೆದು,

ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ,

ಕಳವಳಕ್ಕೊಳಗಾಗಿದ್ದ ಕಾಯವನೆ ಸರ್ವಾಂಗಲಿಂಗವ ಮಾಡಿದರು .


೩೮೩.
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ಅರುಹು ಮರವೆಯೊಳಗಾಗಿದ್ದ ಜೀವನ ಬುದ್ಧಿಯನೆ

ಪರಮನ ಬುದ್ಧಿಯ ಮಾಡಿದರು.

ಸಚರಾಚರವ ಚರಿಸುವುದಕ್ಕೋಳಗಾಗಿದ್ದ ಮನವನೆ ಅರುಹು ಮಾಡಿದರು.

ಆಡಿಸಿನೋಡುವುದಕ್ಕೆ ಒಳಗಾಗಿದ್ದ ಪ್ರಾಣವನೆ ಲಿಂಗವಮಾಡಿದರು.

ಈ ಸರ್ವಾಂಗವನು ಲಿಂಗವ ಮಾಡಿ

ಆ ಲಿಂಗವನು ಕಂಗಳಲ್ಲಿ ಹೆರೆಹಿಂಗದೆ ನೋಡಿ,

ಆ ಮಂಗಳದ ಮಹಾಬೆಳಗಿನಲ್ಲಿ ಬಯಲಾದರಯ್ಯಾ ,


|| ೨೫ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೨೬೦

ಮಚ್ಚಬೇಡ, ಮರಳಿ ನರಕಕ್ಕೆರಗಿ ಕರ್ಮಕ್ಕೆ ಗುರಿಯಾಗಬೇಡ.

ನಿಶ್ಚಿತವಾಗಿ ನಿಜದಲ್ಲಿ ಚಿತ್ತವ ಸುಯಿದಾನವಮಾಡಿ,

ಲಿಂಗದಲ್ಲಿ ಮನವ ಅಟ್ಟೋದಂತಿರಿಸಿ ಕತ್ತಲೆಯನೆ ಕಳೆದು,


ಬಚ್ಚಬರಿಯ ಬೆಳಗಿನೊಳಗೆ ಓಲಾಡಿ ಸುಖಿಯಾಗೆಂದರು
|| ೨೬ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೨೬೧

ಅಂಗವ ಮರೆದವಂಗೆ ಲಿಂಗದ ಹಂಗೇಕೊ ?

ಅರಿವ ಕಂಡವಂಗೆ ಕುರುಹಿನ ಹಂಗೇಕೊ ?

ತಾನು ತಾನಾದವಂಗೆ ಧ್ಯಾನದ ಹಂಗೇಕೊ ?

ಮನ ಮುಗ್ಧವಾದವಂಗೆ ಮಾನವರ ಹಂಗೇಕೊ ?

ಆಸೆಯನಳಿದವಂಗೆ ರೋಷದ ಹಂಗೇಕೆ ?

ಕಾಮನ ಸುಟ್ಟವಂಗೆ ಕಳವಳದ ಹಂಗೇಕೊ ?

ನಡೆಗೆಟ್ಟವಂಗೆ ನುಡಿಯ ಹಂಗೇಕೊ ?

ನಿಶ್ಚಿತವಾದವಂಗೆ ಉಚ್ಚರಣೆಯ ಹಂಗೇಕೊ ?

ಬಯಲು ಬಯಲಾದವಂಗೆ ಭಾವದ ಹಂಗೇಕೊ ?

ತನ್ನ ಮರೆದು ನಿಮ್ಮನರಿದ ಶರಣಂಗೆ ಅಲ್ಲಿಯೆ ಐಕ್ಯ ಕಂಡೆಯಾ


|| ೨೭ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೨೬೨

ಅಯ್ಯಾ , ಕಿಚ್ಚಿನೊಳಗೆ ಬೆಂದ ಕಾಯಕ್ಕೆ ಅಚ್ಚುಗವುಂಟೆ ?

ತಾನು ತಾನಾದ ಬಳಿಕ ಮಾನವರ ಹಂಗುಂಟೆ ?


೩೮೪
ಶಿವಶರಣೆಯರ ವಚನಸಂಪುಟ

ಮನವು ಮಹದಲ್ಲಿ ನಿಂದ ಬಳಿಕ ಮರವೆಯುಂಟೆ ?

ತನುವ ಮರೆದಂಗೆ ಇನ್ನರಿಯಬೇಕೆಂಬ ಅರುಹುಂಟೆ ?

ಬೆಳಗ ಕಂಡವಂಗೆ ಕತ್ತಲೆಯ ಹಂಗುಂಟೆ ?

ಇವೆಲ್ಲವನ್ನು ಹಿಂಗಿ ಮಹಾಘನದಲ್ಲಿ ಬೆರೆದ ಶರಣಂಗೆ

ನಮೋ ನಮೋ ಎಂದು ಸುಖಿಯಾದೆನಯ್ಯಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೨೮ ||

೧೨೬೩

ಕಂಗಳ ಮುಂದಣ ಬೆಳಗ ಕಾಣದೆ, ಕಂಡಕಂಡವರ ಹಿಂದೆ ಹರಿದು,

ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ!

ತನ್ನ ತಾ ಸುಯಿದಾನಿಯಾಗಿ ನೋಡಲರಿಯದೆ,

ಭಿನ್ನಗಣ್ಣಿಲಿನೋಡಿಹೆನೆಂದು ತಮ್ಮ ಮರೆದು

ಇನ್ನುಂಟೆಂದು ಅರಸುವ ಅಣ್ಣಗಳಿರಾ, ನೀವುಕೇಳಿರೆ.

ಮನವು ಮಹದಲ್ಲಿ ನಿಂದುದೆ ಲಿಂಗ :

ಕರಣಂಗಳರತುದೆ ಕಂಗಳ ಮುಂದಣ ಬೆಳಗು.

ಇದನರಿಯದೆ, ಮುಂದೆ ಘನವುಂಟೆಂದು ತೋಳಲಿ ಬಳಲಿ ಅರಸಿಹೆನೆಂದ

ಅರೆಮರುಳಾಗಿ ಹೋದರಯ್ಯಾ ನಿಮ್ಮ ನೆಲೆಯನರಿಯದೆ


|| ೨೯ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೨೬೪

ಕಂಡು ಕೇಳಿಹೆನೆಂಬ ದಂದುಗವ ಬಿಟ್ಟು ,

ನೋಡಿ ನುಡಿವೆನೆಂಬ ನೋಟವ ನಿಲಿಸಿ ,

ಮಾಡಿ ಕೂಡಿಹೆನೆಂಬ ಮನ ನಿಂದು,

ತನುವ ಮರೆದು ತಾ ನಿಜಸುಖಿಯಾದಲ್ಲದೆ

ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . ||

೧೨೬೫

ಅಯ್ಯಾ , ಈ ಮಹಾಘನವ ಕಾಂಬುದಕ್ಕೆ

ಹಸಿವು ಕೆಡಬೇಕು; ತೃಷೆಯಡಗಬೇಕು; ವ್ಯಸನ ನಿಲ್ಲಬೇಕು;

ನಿದ್ರೆ ಹರಿಯಬೇಕು, ಜೀವನ ಬುದ್ದಿ ಹಿಂಗಬೇಕು;

ಮನ ಪವನ ಬಿಂದು ಒಡಗೂಡಬೇಕು;

ಚಿತ್ರ ಒತ್ತಟ್ಟಿಗೆ ಹೋಗದಿರಬೇಕು.


ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ಹೊತ್ತು ಹೊತ್ತಿಗೆ ಉತ್ತರವನೇರಿ ಬೆಚ್ಚು ಬೇರಿಲ್ಲದೆ

ಲಿಂಗದೊಳಗೆ ಅಟ್ಟೋದಂತೆ ಬೆರೆದಡೆ,

ಕತ್ತಲೆ ಹರಿವುದು, ಮರವೆ ಹಿಂಗುವುದು, ನಿದ್ರೆ ಹರಿವುದು,

ಹಸಿವುಕೆಡುವುದು, ತೃಷೆಯಡಗುವುದು, ವ್ಯಸನ ನಿಲುವುದು.


ಇವೆಲ್ಲವನ್ನು ಹಿಂಗಿಸಿ ತಾ ಲಿಂಗವ್ಯಸನಿಯಾಗಬಲ್ಲಡೆ,

ಮುಂದೆ ಮಹಾಮಂಗಳದ ಬೆಳಗು ಕಾಣಿಪುದೆಂದರು


|| ೩೧ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೨೬೬

ಮಾಣಿಕವ ಕಂಡವರು ತೋರುವರೆ ಅಯ್ಯಾ,

ಮುತ್ತ ಕಂಡವರು ಅಪ್ಪಿಕೊಂಬರಲ್ಲದೆ ?

ಬಿಚ್ಚಿ ಬಿಚ್ಚಿ ತೋರುವರೆ ಅಯ್ಯಾ ,

ಆ ಮುತ್ತಿನ ನೆಲೆಯನು, ಮಾಣಿಕದ ಬೆಲೆಯನು ?

ಬಿಚ್ಚಿ ಬೇರಾಗಿ ತೋರಿ ರಕ್ಷಣೆಯ ಮಾಡಿದ ಕಾರಣದಿಂದ

ಬಚ್ಚಬರಿಯ ಬೆಳಗಿನೊಳಗೋಲಾಡಿ

ನಿಮ್ಮ ಪಾದದೊಳಗೆ ನಿಜಮುಕ್ತಳಾದೆನಯ್ಯಾ , ಚೆನ್ನಮಲ್ಲೇಶ್ವರ


|| ೩೨ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೨೬೭

ಏರುವ ಇಳಿಯುವ ಆದಿಯ ಅನಾದಿಯನರಿದು,

ಭೇದವ ತಿಳಿದು ಸಾಧಿಸಿ ನೋಡಿ,

ಅಂತರಂಗದಲ್ಲಿ ವೇಧಿಸಿನೋಡುತಿರಲು,

ಭೋಗ್ಯವಲ್ಲದ ಮಣಿ ಪ್ರಜ್ವಲವಾಯಿತ್ತು ,

ಆ ಬೆಳಗಿನೊಳಗೆ ಪಶ್ಚಿಮದ ಕದವ ತೆಗೆದು ಪರಮನೊಡಗೂಡಿ,

ಬಚ್ಚಬರಿಯ ಬಯಲಬೆಳಗಿನೊಳಗಾಡುವ ಶರಣ


|| ೩ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.

೧೨೬೮

ಮೂಲಪ್ರಣವವನರಿದು ಮೂಲಮಂತ್ರದೊಳಗಾಡುತ್ತ ,

ಮುಂದನರಿದು, ಹಿಂದ ಹರಿದು, ಸಂದು ಸಂಶಯವಿಲ್ಲದೆ,

ಸ್ವಯವನೋಡುತ್ತ , ಪರವಕೂಡುತ್ತ , ಶಬ್ಬವಕೇಳುತ್ತ ,

ನಿರ್ಧರವಾಗಿ ನಿರ್ಬುದ್ದಿಯಲ್ಲಿ ನಿರಾಳವನೊಡಗೂಡಿ,

14
೩೮೬.
ಶಿವಶರಣೆಯರ ವಚನಸಂಪುಟ

ನಿಜದಲ್ಲಿ ಆನಂದಾಮೃತವ ಆರೋಗಣೆಯ ಮಾಡುವ ಪರಿಯೆಂತೆಂದಡೆ :

ಬೇಯದ ಬೆಂಕಿಯಲಿ ಬೆಂದು, ಕಾಯದ ಅಗ್ಗವಣಿಯಲಿ ಅಡಿಗೆಯ ಮಾಡಿ,

ಕಂದಲೊಡೆದು ಒಂದಾಗಿ ಉಂಡು, ಮಂಡೆಯಲ್ಲಿ ನಿಂದು ,

ಮಡದಿಯ ಸಂಗವ ಮಾಡಿ , ಮಾರುತನ ನಿಲಿಸಿ,

ಮದನನ ಮರ್ದಿಸಿ, ನಿರ್ಧರವಾಗಿ ನಿಂದ ಶರಣ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ. || ೩೪ ||

೧೨೬೯

ಮಾಯದ ಬೊಂಬೆಯ ಮಾಡಿ, ಕಂಗಳಿಗೆ ಕಾಮನ ಬಾಣವ ಹೂಡಿ,

ನಡೆನುಡಿಯೊಳಗೆ ರಂಜಕದ ತೊಡಿಗೆಯನೆ ತೊಡಿಸಿ ,

ಮುಂದುಗಾಣಿಸದೆ, ಹಿಂದನರಸದೆ, ಲಿಂಗವ ಮರಹಿಸಿ,

ಜಂಗಮವ ತೊರೆಯಿಸಿ, ಸಂದೇಹದಲ್ಲಿ ಸತ್ತು ಹುಟ್ಟುವ

ಈ ಭವಬಂಧನಿಗಳೆತ್ತ ಬಲ್ಲರೋ ಈ ಶರಣರ ನೆಲೆಯ ?

ಅವರ ನೆಲೆ ತಾನೆಂತೆಂದಡೆ :

ಒಂದನರಿದು, ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು,

ಜಗದ ಜಂಗುಳಿಗಳ ಹಿಂಗಿ, ಕಂಗಳ ಕರುಳನೆ ಕೊಯು,

ಮನದ ತಿರುಳನೆ ಹರಿದು, ಅಂಗಲಿಂಗವೆಂಬುಭಯವಳಿದು,

ಸರ್ವಾಂಗಲಿಂಗವಾಗಿ, ಮಂಗಳದ ಮಹಾಬೆಳಗಿನಲ್ಲಿ ಓಲಾಡುವ

ಶರಣರ ನೆಲೆಯ ಜಗದ ಜಂಗುಳಿಗಳೆತ್ತ ಬಲ್ಲರು


|| ೩ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?

- ೧೨೭೦

- ಬಂಡಿಯ ಮೇಗಣ ಹೆಳವನಂತೆ ಕಂಡ ಕಂಡಕಡೆಗೆ ಹಲುಬಿದಡೆ,

ನಿಮಗೆ ಬಂದುದೇನಿರೊ ?

ಆ ಮಹಾಘನವನರಿಯದನ್ನಕ್ಕ ಹಾಡಿದಡಿಲ್ಲ , ಹರಸಿದಡಿಲ್ಲ ;

ಹೇಳಿದಡಿಲ್ಲ , ಕೇಳಿದಡಿಲ್ಲ .

ಇವೇನ ಮಾಡಿದಡೂ ವಾಯಕ್ಕೆ ವಾಯವೆಂದರು


|| ೩೬ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೨೭೧

ನಿಶ್ಚಿತವಾದವಂಗೆ ಮತ್ಯಾರ ಹಂಗುಂಟೆ ?

ಚಿತ್ರಸುಯಿದಾನವಾದವಂಗೆ ತತ್ವವ ಕಂಡೆಹೆನೆಂಬುದುಂಟೆ ?


೩೮೭
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋಧೆಯ ವಚನಗಳು

ತಾನುತಾನಾದವಂಗೆ ಮಾನವರ ಹಂಗುಂಟೆ ?

ಭಾವಬಯಲಾದವಂಗೆ ಬಯಕೆಯೆಂಬುದುಂಟೆ ?

ಗೊತ್ತ ಕಂಡವಂಗೆ ಅತ್ತಿತ್ತಲರಸಲುಂಟೆ ?

ಇಂತು ನಿಶ್ಚಯವಾಗಿ ನಿಜವ ನೆಮ್ಮಿದ ಶರಣರ


|| ೩೭ ||
ಎನಗೊಮ್ಮೆ ತೋರಿಸಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೨೭೨

ಕಂಗಳ ಮುಂದೆ ಮಾಣಿಕವಿದ್ದು ಕಾಣಲೇಕರಿಯರಯ್ಯಾ ?

ಬಾಗಿಲ ಮುಂದೆ ಹಾಲಸಾಗರವಿದ್ದು ಒರತೆಯ ನೀರಿಗೆ ಹಾರುವಂತೆ

ಕಂಗಳ ಮುಂದೆ ಮಹಾಶರಣನಿದ್ದು ಕತ್ತಲೆ ಎನಲೇಕೆ ?

ಇನ್ನು ಬೇರೆ ಲಿಂಗವನರಸೆಹೆನೆನಲೇಕೆ ?

|| ೩೮ ||
ಆ ಮಹಾಶರಣ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೨೭೩

ಅಂಗವೆಂದಡೆ ಲಿಂಗದೊಳಡಗಿತ್ತು ;

ಲಿಂಗವೆಂದಡೆ ಅಂಗದೊಳಡಗಿತ್ತು .

ಅಂಗದೊಳಡಗಿದ ಲಿಂಗವನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ,

ಮಂಗಳದ ಮಹಾಬೆಳಗು ಕಾಣಿಸಿತ್ತು .

ಇಂತಪ್ಪ ಮಂಗಳದ ಮಹಾಬೆಳಗ ತೋರಿದ ಶರಣರಂಫ್ರಿಗೆರಗಿ


|| ೩೯ ||
ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೨೭೪

ಅಯ್ಯಾ , ನಾನು ಊರ ಮರೆದು ಆಡಹೋದಡೆ,

ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು .

ಇದ ಕಂಡು ಊರ ಹೊಕ್ಕೆ ,

ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ.

ಆ ಜ್ಞಾನಾಗ್ನಿಯ ಹೊತ್ತಿಸಲು,

ಉರಿ ಎದ್ದಿತ್ತು , ಉಷ್ಣಊರ್ಧ್ವಕ್ಕೇರಿತ್ತು .

ತಲೆಯೆತ್ತಿ ನೋಡಲು,

ಒಕ್ಕಲು ಓಡಿತ್ತು ,ಊರು ಬಯಲಾಯಿತ್ತು .


ಆ ಬಯಲನೆ ನೋಡಿ, ನಿರಾಳದೊಳಗಾಡಿ

ಮಹಾಬೆಳಗನೆ ಕೂಡಿ, ಸುಖಿಯಾದರಯ್ಯಾ

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು. || ೪೦ ||


೩೮೮
ಶಿವಶರಣೆಯರ ವಚನಸಂಪುಟ

೧೨೭೫

ಅಯ್ಯಾ , ಏನೂ ಇಲ್ಲದ ಬಯಲ ದೇಹಕ್ಕೆ ತಾಮಸವ ಮುಂದುಮಾಡಿ,

ಹೀಗೆಕೆಟ್ಟಿತ್ತಲ್ಲಾ ಜಗವೆಲ್ಲ .

ಅದೇನು ಕಾರಣವೆಂದಡೆ,

ಸುಖದ ಮುಖ ಕಂಡಿತ್ತು ; ಜಗದ ರಚನೆಯ ನೋಡಿತ್ತು ;

ಇಚ್ಛೆಯ ಮೆಚ್ಚಿತ್ತು , ಮನವ ನಿಶ್ಚಯವ ಮಾಡದು;

ಅಂಗಸುಖವ ಬಯಸಿತ್ತು ; ಕಂಗಳ ಕಾಮವನೆ ಮುಂದುಮಾಡಿತ್ತು ;

ಇದರಿಂದ ಲಿಂಗವ ಮರೆಯಿತ್ತು ; ಜಂಗಮವ ತೊರೆಯಿತ್ತು.

ಇದು ಕಾರಣದಿಂದ ಜಗದ ಮನುಜರು ಭವಬಂಧನಕ್ಕೊಳಗಾದರು.

ಇವೆಲ್ಲವನ್ನು ಹಿಂಗಿಸಿ, ನಮ್ಮ ಶಿವಶರಣರು ಲಿಂಗದಲ್ಲಿಯೆ ಬರದರು.

ಜಂಗಮಪ್ರಾಣವೆಂದು ಪಾದೋದಕ ಪ್ರಸಾದವ ಕೊಂಡು,

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು. || ೪೦ ||

೧೨೭೬

ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ !

ಕಾಳುವಿಷಯದಲ್ಲಿ ಬಿದ್ದು

ನುಡಿವುತ್ತ ಮರವೆ, ನಡೆವುತ್ತ ಮರವೆ,

ಮೆಟ್ಟುತ್ತ ಮರವೆ, ಕೇಳುತ್ತ ಮರವೆ,ನೋಡುತ್ತ ಮರವೆ.

ಇಂತು ಮರಹಿನೊಳಗಿದ್ದು

ಅರುಹ ಕಂಡೆಹೆನೆಂಬ ಅಣ್ಣಗಳಿರಾ, ನೀವುಕೇಳಿರೋ .

ನಮ್ಮ ಶರಣರ ನಡೆ ಎಂತೆಂದಡೆ ,

ಇದು ಗುಣವನೆ ಅಳಿದು, ಐದು ಹಿಡಿದು,

ನುಡಿವುತ್ತ ಲಿಂಗವಾಗಿ ನುಡಿವರು ; ನಡೆವುತ್ತ ಲಿಂಗವಾಗಿ ನಡೆವರು ;

ಮುಟ್ಟುತ್ತ ಲಿಂಗವಾಗಿ ಮುಟ್ಟುವರು; ಕೇಳುತ್ತ ಲಿಂಗವಾಗಿ ಕೇಳು

ನೋಡುತ್ತ ಲಿಂಗವಾಗಿ ನೋಡುವರು;

ಸರ್ವಾಂಗವು ಲಿಂಗವಾಗಿ ಅಂಗಲಿಂಗವೆಂಬ ಉಭಯವಳಿದು,

ಮಂಗಳದ ಮಹಾಬೆಳಗಿನಲ್ಲಿ ಲಿಂಗವೆ ಗೂಡಾಗಿದ್ದ ಕಾರಣ


|| ೪೨ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೨೭೭

ಆಸೆಯನಳಿದು,ರೋಷವ ನಿಲಿಸಿ,

ಜಗದ ಪಾಶವ ಹರಿದು,


೩೮೯
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋಧೆಯ ವಚನಗಳು

ಈಶ್ವರನೆನಿಸಿಕೊಂಬ ಶರಣರ

ಜಗದ ಹೇಸಿಗಳೆತ್ತಬಲ್ಲರು
| ೪೩ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?

೧೨೭೮

ಆಸೆಯುಳ್ಳನ್ನಕ್ಕ ರೋಷಬಿಡದು;

ಕಾಮವುಳ್ಳನ್ನಕ್ಕ ಕಳವಳ ಬಿಡದು;

ಕಾಯಗುಣವುಳ್ಳನ್ನಕ್ಕ ಜೀವನ ಬುದ್ದಿ ಬಿಡದು ;

ಭಾವವುಳ್ಳನ್ನಕ್ಕ ಬಯಕೆ ಸವೆಯದು;


ನಡೆಯುಳ್ಳನ್ನಕ್ಕ ನುಡಿಗೆಡದು.

ಇವೆಲ್ಲವು ಮುಂದಾಗಿದ್ದು ಒಂದನರಿದೆನೆಂಬ

ಸಂದೇಹಿಗಳಿರಾ, ನೀವುಕೇಳಿರೋ .

ನಮ್ಮ ಶರಣರು ಹಿಂದ ಹೇಗೆ ಅರಿದರೆಂದಡೆ :

ಆಸೆಯನಳಿದರು,ರೋಷವ ಹಿಂಗಿದರು,

ಕಾಮನ ಸುಟ್ಟರು, ಕಳವಳವ ಹಿಂಗಿದರು ,

ಕಾಯಗುಣವಳಿದರು, ಜೀವನ ಬುದ್ದಿಯ ಹಿಂಗಿದರು,

ಭಾವವ ಬಯಲುಮಾಡಿದರು , ಬಯಕೆಯ ಸವೆದರು .

ಹಿಂದನರಿದು ಮುಂದೆ ಲಿಂಗವೆ ಗೂಡಾದ ಶರಣರ

ಈ ಸಂದೇಹಿಗಳೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ||? ೪ ||

೧೨೭೯

ಉಸುರ ಉನ್ಮನಿಗಿತ್ತು , ಶಶಿರವಿಯೊಡಗೂಡಿ,

ಕುಶಲವ ತಿಳಿದು, ಮಿಶ್ರವನರಿದು,

ಎಸಗಿದ ಮಹಾಬೆಳಗಿನೊಳಗೆ ಹೆಜ್ಜೆವಿಡಿದು ಹೋಗಿ ಅಜನ ಕಂಡೆ.

ಅಜನ ಮಗಳ ಸಂಗವ ಮಾಡಲೊಡನೆ ಅಂಗಗುಣವಳಿಯಿತ್ತು ;

ಕಂಗಳ ಜಮಕಿ ಹಿಂಗಿತ್ತು ; ಸಂಗಸಂಯೋಗವಾಯಿತ್ತು .

ಮಂಗಳದ ಮಹಾಬೆಳಗಿನೊಳಗೆ ಅಜಗೆ ಅಳಿಯನಾಗಿ,

ಅಜ್ಜಿಗೆ ಮೊಮ್ಮಗನಾಗಿ,

ಒಮ್ಮತವಾಗಿ ಪರಬೊಮ್ಮನೆಯಾಗಿ ಆಡುವ ಶರಣ

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆನೋಡಾ.


೩೯೦
ಶಿವಶರಣೆಯರ ವಚನಸಂಪುಟ

೧೨೮೦

ಒಡಕುಮಡಿಕೆಯಂತೆ ಒಡೆದುಹೋಗುವ ಹಡಿಕೆಕಾಯವ ನೆಚ್ಚಿ ,

ತಟತಟನೆ ತಾಗಿ, ಮಠದ ಬೆಕ್ಕಾಗಿ ತಿಟ್ಟನೆ ತಿರುಗಿ,

ಬಟ್ಟೆಯಲಿಕ್ಕೆ ಕಡಿವ ಕಳ್ಳನನರಿಯದೆ, ತಿಂಬ ಹುಲಿಯನರಿಯದೆ,

ಒಡವೆಯ ಗಳಿಸಿಹೆನೆಂದು ಒಡೆಯನ ಮರೆದು ;

ತನ್ನ ಮಡದಿ ಮಕ್ಕಳಿಗೆಂದು

ಅವರ ಒಡವೆರೆದು ಹೋಗುವ ಮಡಿವರೊಡನೆ ನುಡಿಯರು,

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೪೬ ||

೧೨೮೧

ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ ಸಂದೇಹದಲ್ಲಿ ಮುಳುಗಿ,

ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವುಕೇಳಿರೆ, ಹೇಳಿಹೆನು.

ಕಾಣಬಾರದ ಘನವ ಹೇಳಬಾರದಾಗಿ,

ಹೇಳುವುದಕ್ಕೆ ನುಡಿಯಿಲ್ಲ ,ನೋಡುವುದಕ್ಕೆ ರೂಪಿಲ್ಲ .

ಇಂತಪ್ಪ ನಿರೂಪದ ಮಹಾಘನವು

ಶರಣರ ಹೃದಯದಲ್ಲಿ ನೆಲೆಗೊಂಬುದಲ್ಲದೆ,

ಈ ಜನನ ಮರಣಕ್ಕೊಳಗಾಗುವ ಮನುಜರೆತ್ತ ಬಲ್ಲರು

ಆ ಮಹಾಘನದ ನೆಲೆಯ , ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ? || ೪೭ ||

೧೨೮೨

ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ ,

ಉಂಡಿಹೆ ಉಟ್ಟಿಹೆನೆಂಬ ಹಂಗ ಬಿಟ್ಟು ,

ನಡೆದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ,

ಮಾಟಕೂಟ ಜಪಕೋಟಲೆಯೊಳು ಸಿಕ್ಕದೆ ದಾಟಿ ಹೋದ

ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯಾ


|| ೪೮ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೨೮೩

ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದವಂಗೆ,

ಚಿತ್ಯ ಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ .

ನಿತ್ಯ ಅನಿತ್ಯವೆಂಬುದಿಲ್ಲ ಕರ್ತೃ ತಾನಾದವಂಗೆ.


೩೯೧
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನೈದುವ

ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೪೯ ||

೧೨೮೪

ಕಾಯವೆಂಬ ಕದಳಿಯನೆ ಹೊಕ್ಕು , ನೂನ ಕದಳಿಯ ದಾಂಟಿ,

ಜೀವಪರಮರ ನೆಲೆಯನರಿದು, ಜನನಮರಣವ ಗೆದ್ದು ,

ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂದರು

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೫೦ ||

ប ។

ಕದಳಿಯ ಬನದೊಳಗಿರುವ ಲಿಂಗವ ಅರಸಿದಡೆ ಕಾಣಬಾರದು.

ನೋಡಿದಡೆನೋಟಕ್ಕಿಲ್ಲ , ಹಿಡಿದಡೆ ಹಸ್ತಕ್ಕಿಲ್ಲ ,

ನೆನೆದಡೆ ಮನಕ್ಕಗೋಚರ.

ಇಂತು ಮಹಾಘನವ ಹೃದಯದಲ್ಲಿ ನೆಲೆಗೊಳಿಸಿದ ಶರಣರ

ಕಂಗಳಲ್ಲಿ ಹೆರಹಿಂಗದೆನೋಡಿ, ಅವರಂಫ್ರಿಯಲ್ಲಿ ಐಕ್ಯವಾದನಯ್ಯ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೧ ||

೧೨೮೬

ಕೈಲಾಸ ಮರ್ತ್ಯಲೋಕಎಂಬರು.

ಕೈಲಾಸವೆಂದಡೇನೊ , ಮರ್ತ್ಯಲೋಕವೆಂದಡೇನೊ ?

ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ.

ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರ

ಕೈಲಾಸದವರೆ ದೇವರ್ಕಳೆಂಬರು;

ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು.

ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು.

ಇದ ಕಂಡು ನಮ್ಮ ಶರಣರು

ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ,

ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು,

ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೧ ||
ಶಿವಶರಣೆಯರ ವಚನಸಂಪುಟ

೧೨೮೭

ಜಗದೊಳಗೆ ಹುಟ್ಟಿ ಜಗದಪ್ರಪಂಚ ಹಿಂಗಿ,

ಜಂಗಮದೊಳಗಾಡುತ್ತ , ಲಿಂಗದೊಳಗೆನೋಡುತ್ತ ,

ಅಂಗನೆಯರ ಸಂಗವ ಮಾಡಿಹೆನೆಂಬಿರಿ.

ಅದೆಂತೆಂದಡೆ, ನೋಟಕಿಲ್ಲದ ಘನದಕೂಟವಕೂಡುವ ಪರಿಯೆಂತಯ್ಯ

ರೂಪಿಲ್ಲದುದ ರೂಪಿಗೆತರುವ ಪರಿಯೆಂತಯ್ಯಾ ?

ಹೇಳಬಾರದ ಘನವ ಕೇಳುವ ಪರಿಯೆಂತಯ್ಯಾ ?

ಅತ್ಯತಿಷ್ಠದ್ದಶಾಂಗುಲಂ ಎಂಬ ವಸ್ತು

ಹಿಡಿದಡೆ ಹಿಡಿಗಿಲ್ಲ , ನುಡಿದಡೆ ನುಡಿಗಿಲ್ಲ .

ಒಡಲೊಳಗಿಲ್ಲ ; ಹೊರಗಿಲ್ಲ , ಒಳಗಿಲ್ಲ .

ವಾಚಾತೀತ ಮನೆತೀತ ಭಾವಾತೀತವಾಗಿದ್ದ ವಸ್ತು

ತನ್ನೊಳಗೆ ತಾನೆ ತನ್ಮಯವಾಗಿ ಇರುವುದ

ತಿಳಿಯಲರಿಯದೆ ಭಿನ್ನವಿಟ್ಟರಸುವಿರಿ.

ಅದೆಂತೆಂದಡೆ : ಪುಷ್ಟ - ಪರಿಮಳದಂತೆ, ತುಪ್ಪ -ಕಂಪಿನಂತೆ ,

ಅಲೆ-ನೀರಿನಂತೆ, ಕಣ್ಣು -ಕಪ್ಪಿನಂತೆ, ಚಿನ್ನ - ಬಣ್ಣದಂತೆ,

ಸಿಪ್ಪೆ - ಹಣ್ಣಿನಂತೆ, ಒಪ್ಪ- ಚಿತ್ರದಂತೆ,

ಕರ್ಪೂರ ಜ್ಯೋತಿಯೊಳಡಗಿದಂತೆ ನೆನಹು ನಿಷ್ಪತ್ತಿಯಾದ ಶರಣ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆನೋಡಾ. || ೩ ||

೧೨೮೮

ತನ್ನ ತಾನರಿಯದೆ ಅನ್ಯರಿಗೆಬೋಧೆಯ ಹೇಳುವ

ಅಣ್ಣಗಳಿರಾ, ನೀವುಕೇಳಿರೊ .

ಅವರ ಬಾಳುವೆ ಎಂತೆಂದಡೆ :

ಕುರುಡ ಕನ್ನಡಿಯ ಹಿಡಿದಂತೆ.

ತನ್ನ ಒಳಗೆ ಮರೆದು ಇದಿರಿಂಗೆ ಬೋಧೆಯ ಹೇಳಿ,

ಉದರವ ಹೊರೆವ ಚದುರರೆಲ್ಲರೂ ಹಿರಿಯರೆ ? ಅಲ್ಲಲ್ಲ.

ಇದ ಮೆಚ್ಚುವರೆ ನಮ್ಮ ಶರಣರು ?

ಅವರ ನಡೆ ಎಂತೆಂದಡೆ:

ಒಳಗನರಿದು, ಹೊರಗ ಮರೆದು,

ತನುವಿನೊಳಗಣ ಅನುವ ಹಸುಗೆಯ ಮಾಡಿದರು .

ಪೃಥ್ವಿಗೆ ಅಪುವಿನ ಅಧಿಕವ ಮಾಡಿದರು.


೩೯೩
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ಅಗ್ನಿಯ ಹುದುಗಿದರು, ವಾಯುವ ಬೀರಿದರು, ಆಕಾಶದಲ್ಲಿ ನಿಂದರು ,

ಓಂಕಾರವನೆತ್ತಿದರು ; ಅದರೊಡಗೂಡಿದರು.

ಕಾಣದ ನೆಲೆಯನರಿದರು; ಪ್ರಮಾಣವನೊಂದುಗೂಡಿದರು.

ಮಹಾಬೆಳಗಿನಲ್ಲಿ ಓಲಾಡುವ ಶರಣರ ವಾಗ್ವಾಲವಕಲಿತುಕೊಂಡು ನುಡಿವ

ಕಾಕುಮನುಜರೆತ್ತ ಬಲ್ಲರು ನಿಮ್ಮ ನೆಲೆಯ


|| ೫೪ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?

೧೨೮೯

ತುಂಬಿದ ಕೆರೆಗೆ ಅಂಬಿಗ ಹರಿಗೋಲ ಹಾಕಿ ಬಲೆಯ ಬೀಸಿದಂತೆ,

ತುಂಬುತ್ತ ಕೆಡಹುತ್ತಿದ್ದು ಲಿಂಗವನೊಡಗೂಡಿದೆವೆಂದು,

ಜಂಗಮದ ನೆಲೆಯಕಾಣದೆ ಸಂದುಹೋದರಲ್ಲಾ ಈ ಲೋಕದವರೆಲ್ಲ .

ಲಿಂಗದ ನೆಲೆಯ ಕಾಂಬುದಕ್ಕೆ , ಹರಿಗೋಲನೆ ಹರಿದು, ಹುಟ್ಟ ಮುರಿದು,

ಆ ಬಲೆಯಲ್ಲಿ ಸಿಕ್ಕಿದ ಖಗಮೃಗವನೆ ಕೊಂದು,

ಆ ಬಲೆಯನೆ ಕಿತ್ತು , ಅಂಬಿಗ ಸತ್ತು ,

ಕೆರೆ ಬತ್ತಿ , ಮೆಯರೆದಲ್ಲದೆ ಆ ಮಹಾಘನವ ಕಾಣಬಾರದೆಂದರು


|| ೫ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೨೯೦

ನಿಶ್ಚಿಂತ ನಿರಾಳದಲ್ಲಿ ಆಡುವ ಮಹಾದೇವನ ಕರ್ತೃವೆಂದರಿದ ಕಾರಣ

ತತ್ವವೆಂಬುದನರಿದು, ಮನವ ನಿಶ್ಚಿಂತವ ಮಾಡಿ,

ನಿಜಸುಖದಲ್ಲಿ ನಿಂದು, ಕತ್ತಲೆಯ ಹರಿಯಿಸಿ,

ತಮವ ಹಿಂಗಿಸಿ, ವ್ಯಾಕುಳವನಳಿದು , ನಿರಾಕುಳದಲ್ಲಿ ನಿಂದು,

ಬೇಕು ಬೇಡೆಂಬುಭಯವಳಿದು, ಲೋಕದ ಹಂಗಹರಿದು,

ತಾನು ವಿವೇಕಿಯಾಗಿ ನಿಂದು ಮುಂದೆನೋಡಿದಡೆ

ಜ್ಯೋತಿಯ ಬೆಳಗ ಕಾಣಬಹುದೆಂದರು

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೨೯೧

ನೋಡುವ ನೋಟಕೂಡಿಬಯಲಲ್ಲಿ ಸಿಕ್ಕಿ ,

ಆಡಲೀಯದೆ ಅಲುಗದೆ ಅಗಲಿ, ಆಕಾಶದಲ್ಲಿ ಕೀಲಿಸಿ,

ಲೋಕಾದಿಲೋಕವ ನೋಡುತ್ತ , ಬೇಕಾದ ಠಾವಿಂಗೆಹೋಗುತ್ತ ,

ಆತ್ಮನೊಳು ಬೆರೆವು , ಮಾತಿನ ಕೀಲನರಿವು ,

14 %
೩೯೪
ಶಿವಶರಣೆಯರ ವಚನಸಂಪುಟ

ಪರಂಜ್ಯೋತಿಯ ಬೆಳಗಿನೊಳಗೆ ಅಜಾತನಾಗಿ

ಏತರೊಳಗೂ ಸಿಲುಕದೆ ಆಡುವ ಶರಣ

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ || ೭ |

೧೨೯೨

ಮರ್ತ್ಯದ ಮನುಜರು ತಾವು ಸತ್ಯರು ಸತ್ಯರು ಎನುತಿಪ್ಪರು,

ಮತ್ತೆ ಮತ್ತೆ ಮರಳಿ, ಮಲಮೂತ್ರ ಕೀವಿನಕೊಣದ ಉಚ್ಚೆಯ ಬಚ್ಚಲ ಮೆಚ್ಚಿ,

ಹುಚ್ಚುಗೊಂಡು ತಿರುಗುವ ಕತ್ತೆ ಮನುಜರ

ಮೆಚ್ಚರು ನಮ್ಮ ಶರಣರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೫೮ ||

೧೨೯೩

ಮರ್ತ್ಯದ ಮನುಜರು ಸತ್ತರೆಲ್ಲ !

ಕತ್ತಲೆಯೊಳು ಮುಳುಗಿ, ಮಾತು ಕಲಿತುಕೊಂಡು,

ತೂತುಬಾಯೊಳಗೆ ನುಡಿದು, ಕಾತರಿಸಿ ಕಂಗೆಟ್ಟು ,

ಹೇಸಿಕೆಯ ಮಲದ ಕೊಣದ ಉಚ್ಚೆಯ ಬಾವಿಗೆ ಮೆಚ್ಚಿ ,

ಕಚ್ಚಿಯಾಡಿ ಹುಚ್ಚುಗೊಂಡು ತಿರುಗುವ ಕತ್ತೆಮನುಜರ


|| ೯ ||
ಮೆಚ್ಚರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೨೯೪

ಸಾಯದ ಮುಂಚೆ ಸತ್ತಹಾಗೆ ಇರುವರು .

ಆರಿಗೂ ವಶವಲ್ಲ , ನಮ್ಮ ಶರಣರಿಗಲ್ಲದೆ.

ಅದು ಹೇಗೆಂದಡೆ: ಹಗಲಿರುಳೆಂಬ ಹಂಬಲ ಹರಿದರು ;

ಜಗದಾಟವ ಮರೆದರು ; ಆಡದ ಲೀಲೆಯನೆ ಆಡಿದರು .

ಆರು ಕಾಣದ ಘನವನೆ ಕಂಡರು .

ಮಹಾಬೆಳಗಿನೊಳಗೋಲಾಡಿ ಸುಖಿಯಾದರಯ್ಯಾ ,
|| ೬೦ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.

೧.೨೯೫

ಹುಟ್ಟಿದ ಮನುಜರೆಲ್ಲಾ ಬಂದ ಬಟ್ಟೆಯ ನೋಡಿ

ಭ್ರಮೆಗೊಂಡು ಬಳಲುತ್ತೆದಾರೆ.

ಇದನರಿದು ಬಂದ ಬಟ್ಟೆಯ ಮೆಚ್ಚಿ, ಕಾಣದ ಹಾದಿಯ ಕಂಡು,

ಹೋಗದ ಹಾದಿಯ ಹೊಗುತ್ತಿರಲು,

ಕಾಲ ಕಾಮಾದಿಗಳು ಬಂದು ಮುಂದೆ ನಿಂದರು.


೩೯೩
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋಧೆಯ ವಚನಗಳು

ಅಷ್ಟಮದಂಗಳು ಬಂದು ಅಡ್ಡಗಟ್ಟಿದವು.

ದಶವಾಯು ಬಂದು ಮುಸುಕುತಿವೆ.

ಸಪ್ತವ್ಯಸನ ಬಂದು ಒತ್ತರಿಸುತ್ತಿವೆ.

ಷಡುವರ್ಗ ಬಂದು ಸಮರಸವ ಮಾಡುತಿವೆ .

ಕರಣಂಗಳು ಬೆಂದು ಉರಿವುತಿವೆ.

ಮರವೆ ಎಂಬ ಮಾಯೆ ಬಂದು ಕಾಡುತಿವಳೆ.

ತೋರುವ ತೋರಿಕೆಯೆಲ್ಲವೂ ಸುತ್ತಮೊತ್ತವಾಗಿವೆ.

ಇವ ಕಂಡು ಅಂಜಿ ಅಳುಕಿ ಅಂಜನದಿಂದ ನೋಡುತ್ತಿರಲು

ತನ್ನಿಂದ ತಾನಾದೆನೆಂಬ ಬಿನ್ನಾಣವ ತಿಳಿದು,

ಮುನ್ನೇತರಿಂದಲಾಯಿತು, ಆಗದಂತೆ ಆಯಿತೆಂಬ ಆದಿಯನರಿದು,

ಹಾದಿಯ ಹತ್ತಿ ಹೋಗಿಕಾಲ ಕಾಮಾದಿಗಳ ಕಡಿದು ಖಂಡಿಸಿ,

ಅಷ್ಟಮದಂಗಳ ಒಟ್ಟುಗುಟ್ಟಿ , ದಶವಾಯುಗಳ ಹೆಸರುಗೆಡಿಸಿ ,

ಸಪ್ತವ್ಯಸನವತೊಳದುಳಿದು , ಷಡ್ವರ್ಗವ ಸಂಹರಿಸಿ ,

ಕರಣಂಗಳ ಸುಟ್ಟುರುಹಿ, ಮರವೆಯೆಂಬ ಮಾಯೆಯ ಮರ್ದಿಸಿ,

ನಿರ್ಧರವಾಗಿ ನಿಂದು ಸುತ್ತ ಮೊತ್ತವಾಗಿರುವವನೆಲ್ಲ ಕಿತ್ತು ಕೆದರಿ ,

ಮನ ಬತ್ತಲೆಯಾಗಿ, ಭಾವವಳಿದು ನಿರ್ಭಾವದಲ್ಲಿ ಆಡುವ ಶರಣ,

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆನೋಡಾ. || ೧ ||

೧೨೯೬

ಹೊತ್ತು ಹೊತ್ತಿಗೆಕಿಚ್ಚನೆಬ್ಬಿಸಿದಡೆ ಕಲೆ ಉರಿದುದೆಂದು,

ಹೊತ್ತು ಹೊತ್ತಿಗೆ ಪ್ರಾಣಕ್ಕೆ ಪ್ರಸಾದವಸ್ನಾನ ಮಾಡಿ,

ತನುವ ಖಂಡಿಸದೆ, ಕಾಯವ ಮರುಗಿಸದೆ,

ಭಾವವನೆ ಬಯಲು ಮಾಡಿ, ಬಯಕೆ ಸವೆದು,

ಕಾಣದ ಪಥವನೆ ಕಂಡು , ಮಹಾಬೆಳಗಿನಲ್ಲಿ ಬಯಲಾದರು ಕಾಣಾ,

ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು. || ೬೨ ||

೧೨೯೭

ಹೊಸ್ತಿಲೊಳಗಿರಿಸಿದಜ್ಯೋತಿಯಂತೆ

ಒಳಗೆ ನೋಡುವನು ತಾನೆ , ಹೊರಗೆನೋಡುವನು ತಾನೆ.

ಅರಿದೆನೆಂಬುವನು ತಾನೆ, ಮರೆದೆನೆಂಬುವನು ತಾನೆ .

ಕಂಡೆನೆಂಬವನು ತಾನೆ ಕಾಣೆನೆಂಬವನು ತಾನೆ.

ದೃಷ್ಟ ದೃಕ್ಕು ದೃಶ್ಯವೆಂಬ ತ್ರಿಪುಟಿ ಭೇದವ ಮೀರಿ.


೩೯೬ ಶಿವಶರಣೆಯರ ವಚನಸಂಪುಟ

ತ್ರಿಕೂಟವನೇರಿ, ಅತ್ತಲೆನೋಡುತ್ತಿರಲು,

ಹಿತ್ತಲ ಕದವ ತೆರೆದು ಮತ್ತವಾಗಿ ಎತ್ತಲೆಂದರಿಯದೆ,

ಸತ್ತುಚಿತ್ರಾನಂದದಲ್ಲಿ ಆಡುವ ಶರಣನ ಇರವೆಂತೆಂದಡೆ :

ಬಿತ್ತಲಿಲ್ಲ ಬೆಳೆಯಲಿಲ್ಲ ; ಒಕ್ಕಲಿಲ್ಲ ತೂರಲಿಲ್ಲ .

ಇವನೆಲ್ಲಾ ಇಕ್ಕಲಿಸಿ ನಿಂದು ಮಿಕ್ಕು ಮೀರಿ

ಕುಕ್ಕುಂಭೆ ಮೇಲೆಕುಳಿತುಕೊಂಡು ನೋಡುತ್ತಿರಲು,

ಹಡಗೊಡೆಯಿತ್ತು , ಒಡವೆ - ವಸ್ತು , ಮಡದಿ - ಮಕ್ಕಳು

ನೀರೊಳಗೆ ನೆರೆದು ಹೋಯಿತ್ತು .

ಒಡನೆ ತಂಗಾಳಿ ಬಂದು ಬೀಸಲು, ತಂಪಿನೊಳಗೆ ನಿಂದು,

ಗುಂಪುಬಯಲಾಗಿ ಗೂಢವಾಗಿ ಆಡುವ ಶರಣ,

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ. || ೬೩ ||

೧೨೯೮

ಕನಿಷ್ಕದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ,

ಸತ್ಯಶರಣರ ಪಾದವಿಡಿದೆ.

ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ,

ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ.

ಇಂತಿವರ ಕಂಡೆನ್ನ ಕಂಗಳಮುಂದಣ ಕತ್ತಲೆ ಹರಿಯಿತ್ತು .

ಕಂಗಳಮುಂದಣ ಕತ್ತಲೆ ಹರಿಯಲೊಡನೆ ,

ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೬೪ ||

೧೨೯೯

ಅಯ್ಯಾ , ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು .

ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ.

ಜನನವಾದವರಿಗೆ ಮರಣ ತಪ್ಪದು.

ಅದೇನು ಕಾರಣವೆಂದಡೆ :

ಮರವೆ ಮರವೆಗೆ ಮುಂದುಮಾಡಿತ್ತು ;

ಕರ್ಮಕ್ಕೆ ಗುರಿಮಾಡಿತ್ತು ; ಕತ್ತಲೆಯಲ್ಲಿ ಮುಳುಗಿಸಿತ್ತು .

ಕಣ್ಣು ಕಾಣದೆ ಅಂಧಕನಂತೆ ತಿರುಗುವುದ ನೋಡಿ,

ನಾ ಹೆದರಿಕೊಂಡು ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ,

ನಿಶ್ಚಿತವಾಗಿ ನಿಜವ ನೆಮ್ಮಿ ಅರುಹ ಕಂಡೆ.


೩೯೭
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋಧೆಯ ವಚನಗಳು

ಅರುಹುವಿಡಿದು ಆಚಾರವ ಕಂಡೆ ; ಆಚಾರವಿಡಿದು ಗುರುವ ಕಂಡೆ

ಗುರುವಿಡಿದು ಲಿಂಗವ ಕಂಡೆ; ಲಿಂಗವಿಡಿದು ಜಂಗಮವಕಂಡೆ,

ಜಂಗಮವಿಡಿದು ಪಾದೋದಕ ಪ್ರಸಾದವ ಕಂಡೆ.

ಪಾದೋದಕ ಪ್ರಸಾದವಿಡಿದು ಮಹಾಶರಣನ ಕಂಡೆ,

ಆ ಮಹಾಶರಣನ ಪಾದವಿಡಿದು ಎನ್ನ ಕಾಯಗುಣವಳಿಯಿತ್ತು ;

ಕರಣಗುಣ ಸುಟ್ಟಿತ್ತು ; ಅಂಗಗುಣ ಅಳಿಯಿತ್ತು;

ಲಿಂಗಗುಣ ನಿಂದಿತ್ತು ; ಭಾವ ಬಯಲಾಯಿತ್ತು; ಬಯಕೆ ಸವೆಯಿತ್ತ

ಮಹಾದೇವನಾದ ಶರಣನ ಬರಿಯ ಬೆಳಗಲ್ಲದೆ, ಕತ್ತಲೆ ಕಾಣಬಾರದು

ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೦೦

ಅಯ್ಯಾ , ನರರೊಳು ಹುಟ್ಟಿ , ಮರಹಿನೊಳಗೆ ಬಿದ್ದವಳ ತಂದು,

ಮಹಾಶರಣರು ಎನಗೆ ಕುರುಹ ತೋರಿದರು .

ಗುರುವೆಂಬುದನರುಹಿದರು; ಜಂಗಮವೆ ಜಗದ ಕರ್ತುವೆಂದರುಹಿದರು.

ಅವರ ನೆಲೆವಿಡಿದು ಮನವ ನಿಲಿಸಿದೆ, ಕಾಯ ಜೀವವೆಂಬುದನರಿದೆ,

ಭವಬಂಧನವ ಹರಿದೆ, ಮನವ ನಿರ್ಮಲವ ಮಾಡಿದೆ .

ಬೆಳಗಿದ ದರ್ಪಣದಂತೆ ಚಿತ್ರ ಶುದ್ಧವಾದಲ್ಲಿ ,

ನೀವುಅಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು

ನಾನು ನಿಜಮುಕ್ಕಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೦೧

ಅಯ್ಯಾ, ನಾ ಮರ್ತ್ಯದಲ್ಲಿ ಹುಟ್ಟಿ ಕಷ್ಟಸಂಸಾರಿ ಎನಿಸಿಕ

ಕತ್ತಲೆಯಲ್ಲಿ ಮುಳುಗಿ ಕರ್ಮಕ್ಕೆ ಗುರಿಯಾಗುತ್ತಿದ್ದಡೆ,

ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗವ ಕಟ್ಟಿದನು

ತಂದೆಯೆಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ ಊಡಿದನು.

ಪ್ರಾಣಕ್ಕೆ ಪ್ರಸಾದವನೂಡಲಾಗಲೆ ಕತ್ತಲೆ ಹರಿಯಿತ್ತು ;

ಕರ್ಮ ಹಿಂಗಿತ್ತು ಮನ ಬತ್ತಲೆಯಾಯಿತ್ತು ;

ಚಿತ್ರ ಸುಯಿದಾನವಾಯಿತ್ತು ; ನಿಶ್ಚಿತವಾಯಿತ್ತು.

ನಿಜವ ನೆಮ್ಮಿ ನೋಡುವನ್ನಕ್ಕೆ ,

ಎನ್ನ ಅತ್ತೆ ಮಾವರು ಅರತುಹೋದರು ;

ಅತ್ತಿಗೆ ನಾದಿನಿಯರು ಎತ್ತಲೋಡಿಹೋದರು,

ಸುತ್ತಲಿರುವ ಬಂಧುಗಳೆಲ್ಲ ಬಯಲಾದರು .


೩.೯೮
ಶಿವಶರಣೆಯರ ವಚನಸಂಪುಟ

ಎನ್ನ ತಂದೆ - ತಾಯಿ ಕಟ್ಟಿದ ಚಿಕ್ಕಂದಿನ ಗಂಡನ ನೋಡುವ ನೋಟಹೋಗಿ,

ಎನ್ನ ಮನಕ್ಕೆ ಸಿಕ್ಕಿತ್ತು ;

ಅಂಗ- ಲಿಂಗವೆಂಬ ಉಭಯವಳಿಯಿತ್ತು , ಸಂಗಸುಖ ಹಿಂಗಿತ್ತು .

ಮಂಗಳದ ಮಹಾಬೆಳಗಿನಲ್ಲಿ ಓಲಾಡಿ

ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . | ೬೭ ||

೧೩೦೨

ಏನೇನು ಇಲ್ಲದಾಗ ನೀವಿಲ್ಲದಿದ್ದಡೆ ನಾನಾಗಬಲ್ಲೆನೆ ಅಯ್ಯಾ ?

ಆದಿ ಅನಾದಿ ಇಲ್ಲದಂದು ನೀವಿಲ್ಲದಿದ್ದಡೆ ನಾನಾಗಬಲ್ಲೆನೆ ಅಯ್ಯಾ ?

ಮುಳುಗಿ ಹೋದವಳ ತೆಗೆದುಕೊಂಡು ,

ನಿಮ್ಮ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು

ರಕ್ಷಣೆಯ ಮಾಡಿದ ಶಿಶುವಾದ ಕಾರಣ

ಹಡದಪ್ಪಣ್ಣನೆ ಎನ್ನ ಕರಸ್ಥಲಕ್ಕೆ ಲಿಂಗವಾಗಿ ಬಂದು ನೆಲೆಗೊಂಡನು.

ಚೆನ್ನಮಲ್ಲೆಶ್ವರನೆ ಎನ್ನ ಮನಸ್ಸಲಕ್ಕೆ ಪ್ರಾಣವಾಗಿ ಬಂದು ಮೂರ್ತಗೊಂಡನು.

ಆ ಕರಸ್ಥಲದ ಲಿಂಗವನರ್ಚಿಸಿ ಪೂಜಿಸಿ

ವರವ ಬೇಡಿದಡೆ ತನುವ ತೋರಿದನು;

ಆ ತನುವಿಡಿದು ಮಹಾಘನವ ಕಂಡೆ,

ಆ ಘನವಿಡಿದು ಮನವ ನಿಲಿಸಿದೆ.

ಮನವ ನಿಲಿಸಿ ನೋಡುವನ್ನಕ್ಕ ಪ್ರಾಣದ ನೆಲೆಯನರಿದೆ;

ಪ್ರಣವವನೊಂದುಗೂಡಿದೆ.

ಕಾಣಬಾರದ ಕದಳಿಯನೆ ಹೊಕ್ಕು ನೂನ ಕದಳಿಯ ದಾಂಟಿದೆ.

ಜ್ಞಾನಜ್ಯೋತಿಯ ಕಂಡೆ.

ತಾನುತಾನಾಗಿಪ್ಪ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ ,

ಚೆನ್ನಮಲ್ಲೇಶ್ವರನ ಕರುಣದ ಶಿಶುವಾದ ಕಾರಣದಿಂದ


|| ೬೮ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

೧೩೦೩

ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ,

ಹೆಡೆಯೆತ್ತಿ ಆಡುತ್ತಿರಲು,

ಆ ಸರ್ಪನ ಕಂಡು, ನಾ ಹೆದರಿಕೊಂಡು,

ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು,

ನೋಟನಿಂದಿತ್ತು , ಹೆಡೆ ಅಡಗಿತ್ತು , ಹಾವು ಬಯಲಾಯಿತ್ತು.


೩,೯೯
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ಆ ಗುರುಕರುಣವೆಂಬ ಪರುಷವ ನಿಂದಿತ್ತು .

ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ

ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ ,


|| ೬೯ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೦೪

ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ ,

ಅಗ್ನಿಯನ ಅಪುವಿನೊಳಗೆ ಹುದುಗಿಸಿ,

ಅಸ್ತಿಯನೆ ಗಳುವ ಮಾಡಿ, ವಾಯುವನೆ ಬೀರಿ,

ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲುಕಟ್ಟ ಕಟ್ಟಿ ,

ಬಯಲಮಂಟಪವ ಶೃಂಗಾರವ ಮಾಡಿ,

ಒಡೆಯನ ಬರವ ಹಾರುತಿದ್ದೆನಯ್ಯಾ.


ಒಡೆಯನ ಬರವ ಹಾರೈಸುವ ಅವಸ್ಥೆಯನೆ ಕಂಡು,

ಹಡದಪ್ಪಣ್ಣನೆ ಕರ್ಪುರದ ಸಿಂಹಾಸನವಾಗಿ ನಿಂದರು.

ಅದಕ್ಕೆ ಚೆನ್ನಮಲ್ಲೇಶ್ವರನೆ ಜ್ಯೋತಿರ್ಮಯಲಿಂಗವಾಗಿ

ಬಂದು ನೆಲೆಗೊಂಡರು.

ಜ್ಯೋತಿರ್ಮಯಲಿಂಗವು ಕರ್ಪುರವು ಏಕವಾಗಿ

ಪ್ರಜ್ವಲಿಸಿ ಪರಮಪ್ರಕಾಶವಾಯಿತ್ತು .

ಈ ಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ,


| ೭೦ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೦೫

ನಾಮ ರೂಪಿಲ್ಲದ ಘನವ ನಾಮರೂಪಿಂಗೆ ತಂದಿರಯ್ಯಾ .


ಅದೇನು ಕಾರಣವೆಂದಡೆ,

ಎನ್ನ ಮನಕ್ಕೆ ಚೆನ್ನಮಲ್ಲೇಶ್ವರನಾದಿರಿ.

ಹೀಗೆಂದು ನಿಮ್ಮ ನಾಮಾಂಕಿತ.

ಹೀಗಾದಡೆಯು ಕಾಣಲರಿಯರು ಎಂದು

ನಡೆನುಡಿ ಚೈತನ್ಯ ವಿಡಿದು, ಕರದಲ್ಲಿ ಲಿಂಗವ ಹಿಡಿದು,

ಚೆನ್ನಮಲ್ಲೇಶ್ವರನೆಂಬ ನಾಮಾಂಕಿತವಿಡಿದು ಬರಲಾಗಿ,

ಮರ್ತ್ಯಲೋಕದಲ್ಲಿ ತನ್ನ ನೆನೆವ ಶಿವಭಕ್ತರ


ಪಾವನ ಮಾಡಬೇಕೆಂದು ಬಂದು,

ಭೂಮಿಯಮೇಲೆಲೀಲೆಯ ನಟಿಸಿ ,
ಶಿವಶರಣೆಯರ ವಚನಸಂಪುಟ

ತಮ್ಮ ಪಾದದಲ್ಲಿ ನಿಜಮುಕ್ತಳ ಮಾಡಿದರಯ್ಯಾ ಚೆನ್ನಮಲ್ಲೇಶ್ವರನು

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . | ೭೧ ||

೧೩೦೬

ತನುವೆಂಬ ಹುತ್ತದಲ್ಲಿ ಮನವೆಂಬ ಸರ್ಪ ಹೆಡೆಯನುಡುಗಿಕೊಂಡಿರ

ಜ್ಞಾನಶಕ್ತಿ ಬಂದು ಎಬ್ಬಿಸಲು,

ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ಧ್ವಕ್ಕೇರಲು,

ಅಷ್ಟಮದವೆಲ್ಲ ಒಟ್ಟುಗುಟ್ಟಿದವು; ಕರಣಂಗಳೆಲ್ಲ ಉರಿದುಹೋದವು.

ಇದ್ದ ಶಕ್ತಿಯನೆ ಕಂಡು, ಮನ ನಿಶ್ಚಯವಾದುದನೆನೋಡಿ,

ಪಶ್ಚಿಮದ ಕದವ ತೆಗೆದು, ಬಟ್ಟಬಯಲ ಬೆಳಗಿನೊಳಗೆ ಓಲಾಡಿ

ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೭೨ ||

೧೩೦೭

ಒಂದು ಹುತ್ತಕ್ಕೆ ಒಂಬತ್ತು ಬಾಗಿಲು.

ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪುದು.

ಒಂಬತ್ತು ಬಾಗಿಲಿಗೆ ಕದವನಿಕ್ಕಿ ,

ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು,

ತಿರುಗುವುದಕ್ಕೆ ತಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ,

ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊರ್ಧ್ವಕ್ಕೇರಲು,

ಶರಧಿ ಬತ್ತಿತ್ತು , ಅಲ್ಲಿದ್ದ ಖಗಮೃಗವೆಲ್ಲ ದಹನವಾದವು.

ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು.

ಮುಂದೆ ದಿಟ್ಟಿಸಿನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು .

ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು,

ಬಟ್ಟ ಬಯಲಲ್ಲಿ ನಿಂದು ನಾನು ಹೋದಹೆನೆಂದರಿಯೆನಯ್ಯಾ


|| ೭೩ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೦೮

ಒಂದು ಊರಿಗೆ ಒಂಬತ್ತು ಬಾಗಿಲು .

ಆ ಊರಿಗೆ ಐವರು ಕಾವಲು, ಆರುಮಂದಿ ಪ್ರಧಾನಿಗಳು,

ಇಪ್ಪತೈದು ಮಂದಿ ಪರಿವಾರ.

ಅವರೊಳಗೆ ತೊಟ್ಟನೆ ತೊಳಲಿ ಬಳಲಲಾರದೆ

ಎಚ್ಚತ್ತು ನಿಶ್ಚಿಂತನಾದ ಅರಸನ ಕಂಡೆ.


ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ಆ ಅರಸಿನ ಗೊತ್ತುವಿಡಿದು,

ಒಂಬತ್ತು ಬಾಗಿಲಿಗೆ ಲಿಂಗಸ್ಥಾಪ್ಯವ ಮಾಡಿ, ಒಂದು ಬಾಗಿಲಲ್ಲಿ ನಿಂದು,

ಕಾವಲವನೆ ಕಟ್ಟಿಸಿ, ಪ್ರಧಾನಿಗಳನೆ ಮೆಟ್ಟಿಸಿ,

ಪರಿವಾರವನೆ ಸುಟ್ಟು , ಅರಸನ ಮುಟ್ಟಿಹಿಡಿದು ಓಲೈಸಲು

ಸಪ್ತಧಾತು ಷಡುವರ್ಗವನೆ ಕಂಡು, ಕತ್ತಲೆಯ ಕದಳಿಯ ದಾಂಟಿ,

ನಿಶ್ಚಿಂತದಲ್ಲಿ ಬಚ್ಚಬರಿಯ ಬೆಳಗಿನೊಳಗೋಲಾಡಿ


|| ೭೪ ||
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೦೯

ತನುವೆಂಬ ರಾಜ್ಯಕ್ಕೆ ಮನವೆಂಬ ಅರಸು.

ಆ ಅರಸಿಂಗೆನೋಟಬೇಟದವರಿಬ್ಬರು.

ಅಷ್ಟಮಣಿಹ ಹರಿಮಣಿಹದವರು.

ಅವರ ಸುತ್ತ ಓಲೈಸುವರು ಇಪ್ಪತೈದು ಮಂದಿ.

ಅವರಿಗೆ ಕತ್ತಲೆಯ ಬಲೆಯ ಬೀಸಿಕೆಡಹಿ ,

ಅರಸಿನ ಗೊತ್ತುವಿಡಿದು ಉತ್ತರವನೇರಿ

ನಿಶ್ಚಿತವಾಗಿ ನಿಜದಲ್ಲಿ ನಿರ್ವಯಲನೆಯುವ ಶರಣರ ಪಾದವ ಹಿಡಿದು,


ಎತ್ತ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . ||

೧೩೧೦

ಬಯಲ ದೇಹದಲ್ಲಿ ಒಂದು ತೊಲಗದ ಕಂಬವ ಕಂಡೆ.

ತೊಲಗದ ಕಂಬವ ಹಿಡಿದು ಹೋಗುವನ್ನಕ್ಕ

ಮುಂದೆ ಸರೋವರವ ಕಂಡೆ.

ಆ ಸರೋವರವ ಒಳಹೊಕ್ಕು ನೋಡಲು,

ಮುಂದೆ ಗಟ್ಟ ಬೆಟ್ಟಗಳು , ಹೊಗಬಾರದು.

ಆನೆಗಳು ಅಡ್ಡಲಾದವು,ಕೋಡಗ ಮುಂದುವರಿದವು,


ನಾಯಿಗಳಟ್ಟಿಕೊಂಡು ಬಂದವು, ಇರುಹೆ ಕಟ್ಟಿಕೊಂಡು ಬಿಡವ

ಇದ ಕಂಡು ನಾ ಹೆದರಿಕೊಂಡು, ಮನವೆಂಬ ಅರಸನ ಹಿಡಿದು,

ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ, ಆ ಅರಸನ ಶಕ್ತಿವಿಡಿದು,

ಆ ಸರೋವರದೊಳಗಣ ಗಟ್ಟ ಬೆಟ್ಟವನೆ ದಾಂಟಿ ,

ಅಷ್ಟಮದವನೆ ಹಿಟ್ಟುಗುಟ್ಟಿ ,ಕೋಡಗನಕೊರಳ ಮುರಿದು,

ನಾಯಿಗಳನೆ ಕೊಂದು, ಇರುಹೆಯ ಗೂಡಿಗೆ ಕಿಚ್ಚನಿಕ್ಕಿ

ನಿರ್ಮಳವಾದ ದೇಹದಲ್ಲಿ ನಿಂದು ಮುಂದುವರಿದುನೋಡಲು


ಶಿವಶರಣೆಯರ ವಚನಸಂಪುಟ

ಇಟ್ಟೆಡೆಯ ಬಾಗಿಲ ಕಂಡೆ,

ಆ ಇಟ್ಟೆಡೆಯ ಬಾಗಿಲ ಹೊಕ್ಕು, ಹಿತ್ತಲ ಬಾಗಿಲಿನ ಕದವ ತೆಗೆದು ನೋಡಲು,

ಬಟ್ಟಬಯಲಾಯಿತ್ತು.

ಆ ಬಟ್ಟಬಯಲಲ್ಲಿ ನಿಂದು ನಾನು ಹೋದೆನೆಂದರಿಯೆನಯ್ಯಾ

ನಿಮ್ಮ ಪಾದವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೭೬ ||

೧೩೧೧

ಕಾಯವೆಂಬ ಕದಳಿಯ ಹೊಕ್ಕು ಜೀವಪರಮರ ನೆಲೆಯನರಿದು,

ರಸ ರುಧಿರ ಮಾಂಸ ಮಜ್ಜೆ ಮಿದುಳು ಅಸ್ತಿ ಶುಕ್ಲ -

ಈ ಸಪ್ತಧಾತುಗಳ ಸಂಚವ ತಿಳಿದು,

ಮತ್ತೆ ಮನ ಪವನ ಬಿಂದುವನೊಡಗೂಡಿ

ಉತ್ತರಕ್ಕೇರಿನೋಡಲು ಬಟ್ಟಬಯಲಾಯಿತ್ತು.

ಆ ಬಯಲಲ್ಲಿ ನಿಂದು, ನಿರಾಳದೊಳಗಾಡಿ ಮಹಾಬೆಳಗನೆಕೂಡಿ

|| ೭೭
ನಾ ನಿಜಮುಕ್ತಳಾದೆನಯ್ಯಾ , ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . ||

೧೩೧೨

ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು.

ಇದಾದಿಗೂ ಕಾಣಬಾರದು.

ಮಾರಿಹೆನೆಂದಡೆ ಮಾನವರಿಗೆ ಸಾಧ್ಯವಾಗದು.

ಸಾವಿರಕ್ಕೆ ಬೆಲೆಯಾಯಿತ್ತು .

ಆ ಬೆಲೆಯಾದ ಮಾಣಿಕ ನಮ್ಮ ಶಿವಶರಣರಿಗೆ ಸಾಧ್ಯವಾಯಿತ್ತು .

ಅವರು ಆ ಮಾಣಿಕವ ಹೇಗೆ ಬೆಲೆಮಾಡಿದರೆಂದಡೆ

ಕಾಣಬಾರದ ಕದಳಿಯ ಹೊಕ್ಕು, ನೂನಕದಳಿಯ ದಾಂಟಿ,

ಜಲವ ಶೋಧಿಸಿ, ಮನವ ನಿಲಿಸಿ,

ತನುವಿನೊಳಗಣ ಅನುವನೋಡುವನ್ನಕ್ಕ , ಮಾಣಿಕ ಸಿಕ್ಕಿತ್ತು.

ಆ ಮಾಣಿಕವ ನೋಡಿದೆನೆಂದು ಜಗದ ಮನುಜರನೆ ಮರೆದು,

ತಾನುತಾನಾಗಿ ಜ್ಞಾನಜ್ಯೋತಿಯ ಬೆಳಗಿನೋಳಗೋಲಾಡಿ

..! ೭೮ ||
ಸುಖಿಯಾದೆನಯ್ಯಾ , ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ||

೧೩೧೩

ನಾನೊಂದು ಹಾಳೂರಿಗೆ ಹೋಗುತ್ತಿರಲು, ಆ ಹಾಳೂರ ಹೊಕ್ಕಡೆ,

ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು,


೪೦೩,
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ಹುಲಿ ಕರಡಿ ಅಡ್ಡಲಾದವು.

ಇವ ಕಂಡು ನಾ ಹೆದರಿಕೊಂಡು

ನನ್ನ ಕೈಗೊಂದು ಕಲ್ಲ ತೆಕ್ಕೊಂಡುನೋಡುತ್ತ ಬರುತ್ತಿರಲು,

ಆ ನಾಯಿಗಳು ಓಡಿಹೋದವು.

ಹುಲಿ ಕರಡಿಗಳು ಅಲ್ಲಿಯೇ ಬಯಲಾದವು.

ಆ ಊರು ನಿರ್ಮಲವಾಯಿತು .
G.
ಆ ನಿರ್ಮಲವಾದ ಊರ ಹೊಕ್ಕು ನೋಡಲು,
G
ಆ ನೋಡುವ ನೋಟವು, ಆ ಊರನಾಳುವ ಅರಸು ,
G
ಆ ಊರುಕೂಡಿ ಒಂದಾದವು.

ಆ ಒಂದಾದುದನೆ ನೋಡಿ, ದ್ವಂದ್ವವನೆ ಹರಿದು,

ನಿಮ್ಮ ಸಂಗಸುಖದೊಳಗೋಲಾಡಿ ಸುಖಿಯಾದೆನಯಾ


|| ೭೯ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

- ೧೩೧೪

ನಿರಾಳಲಿಂಗವ ಕಾಂಬುದಕ್ಕೆ

ಮನ ಮತ್ತೊಂದೆಡೆಗೆ ಹರಿಯದಿರಬೇಕು;

ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕು;

ತನುವಿನಲ್ಲಿ ಮರಹಿಲ್ಲದಿರಬೇಕು; ಕಾಳಿಕೆ ಹೊಗದಿರಬೇಕು.

ಇಂತು ನಿಶ್ಚಿತವಾಗಿ ಚಿತ್ತಾರದ ಬಾಗಿಲವ ತೆರೆದು

ಮುತ್ತು ಮಾಣಿಕ ನವರತ್ನ ತೆತ್ತಿಸಿದಂತಹ

ಉಪ್ಪರಿಗೆ ಮೇಗಳ ಶಿವಾಲಯವ ಕಂಡು,

ಅದರೊಳಗೆ ಮನ ಅಚೊತ್ತಿದಂತಿದ್ದು ,

ಇತ್ಯ ಮರೆದು ಅತ್ತಲೆನೋಡಿನಿಜಮುಕ್ತಳಾದೆನಯ್ಯಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೮೦ ||

೧೩೧೫

ತನು ಕರಗಿತ್ತು , ಮನ ನಿಂದಿತ್ತು , ಉಲುಹು ಅಡಗಿತ್ತು ,

ನೆಲೆ ನಿಂದಿತ್ತು , ಮನ ಪವನ ಬಿಂದು ಒಡಗೂಡಿತ್ತು ,

ಉರಿ ಎದ್ದಿತ್ತು ,ಊರ್ಧ್ವಕ್ಕೇರಿತ್ತು , ಶರಧಿ ಬತ್ತಿತ್ತು ,

ನೊರೆ ತೆರೆ ಅಡಗಿತ್ತು , ಅಷ್ಟಮದವೆಲ್ಲ ಹಿಟ್ಟುಗುಟ್ಟಿತ್ತು .

ಕರಣಂಗಳೆಲ್ಲ ಹುರಿದು ಹೋದವು, ಸಪ್ತಧಾತು ಕೆಟ್ಟಿತ್ತು ,

ರಸವರತಿತ್ತು , ಅಪ್ಪು ಬರತಿತ್ತು .


ಶಿವಶರಣೆಯರ ವಚನಸಂಪುಟ

ಕೆಟ್ಟುಹೋದಬಿದಿರಿನಂತೆ ತೊಟ್ಟು ಬಿಟ್ಟು ಬಯಲೊಳಗೆ ಬಿದ್ದು

ನಾನೆ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . ||

೧೩೧೬

ನಿರ್ಮಳವಾದ ದೇಹದಲ್ಲಿ ಇನ್ನೊಂದ ಕಲ್ಪಿಸಲುಂಟೆ ?

ಲಿಂಗವಾದ ತನುವಿನೊಳಗೆ ಜಂಗಮದ ನೆನಹಲ್ಲದೆ,

ಇನ್ನೊಂದರ ನೆನಹುಂಟೆ ?

ಪ್ರಸಾದವಾದ ಕಾಯದೊಳಗೆ ತನ್ನ ಪ್ರಾಣಲಿಂಗದ ನೆನಹಲ್ಲದೆ,

ಇನ್ನೊಂದರ ನೆನಹುಂಟೆ ?

ಈ ಸರ್ವಾಂಗವೂ ಲಿಂಗವಾಗಿ , ಜಂಗಮನೆ ಪ್ರಾಣವಾಗಿ,

ಅವರ ಪಾದದಲ್ಲಿಯೇ ನಾನು ನಿಜಮುಕ್ತಳಾದೆನಯ್ಯಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೮೨ ||

೧೩೧೭

ಅಯ್ಯಾ , ನಿಮ್ಮ ಚರಣವಿಡಿದು ಮನವ ನಿಲಿಸಿದೆ,

ತನುವ ಮರೆದೆ ; ಮಹಾಘನವ ಕಂಡೆ ; ಲಿಂಗದನೆಲೆವಿಡಿದೆ.

ಅಂಗವ ಲಿಂಗವೆಂದು ನೋಡಲು ಕಂಗಳ ಮುಂದಣ ಬೆಳಗೇ ಲಿಂಗವಾಗಿ,

ಆ ಕಂಗಳ ಮುಂದಣ ಬೆಳಗನೋಡಿಹೆನೆಂದು ಸಂಗಸುಖವ ಮರೆದು,

ಆ ಮಂಗಳದ ಮಹಾಬೆಳಗಿನಲ್ಲಿ ನಾ ನಿಜಮುಕ್ತಳಾದೆನಯ್ಯಾ

|| ೮೩ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೧೮

ಕರಗವ ಸುಟ್ಟೆ, ಕಂದಲವನೊಡದೆ,

ಮರನ ಮುರಿದೆ, ಬಣ್ಣವ ಹರಿದೆ,

ಭಿನ್ನಗಣ್ಣು ಕೆಟ್ಟಿತ್ತು , ಜ್ಞಾನಗಣ್ಣಿಲಿ ನಿಮ್ಮನೆನೋಡಿ,

ಕೂಡಿ ಸುಖಿಯಾದೆನಯ್ಯಾ , ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೮೪

೧೩೧೯

ನರರ ಬೇಡೆನು, ಸುರರ ಹಾಡೆನು , ಕರಣಂಗಳ ಹರಿಯಬಿಡೆನು,

ಕಾಮನ ಬಲೆಗೆ ಸಿಲೆನು, ಮರವೆಗೊಳಗಾಗೆನು.

ಪ್ರಣವ ಪಂಚಾಕ್ಷರಿಯ ಜಪಿಸಿಹೆನೆಂದು

ತನುವ ಮರೆದು ನಿಜಮುಕ್ತಳಾದೆನಯ್ಯಾ ,

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೮೫ ||
೪ಂತಿ
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋಧೆಯ ವಚನಗಳು

೧೩೨೦

ಬಚ್ಚಬರಿಯ ಬೆಳಗ ನೋಡಿಹೆನೆಂದು,

ಮನೆಯಾತನ ಮಂಕುಮಾಡಿದೆ; ಭಾವನ ಬಯಲ ಮಾಡಿದೆ ;

ಕಂದನ ಕಣ್ಮುಚ್ಚಿದೆ; ನಿಂದೆ ಕುಂದುಗಳ ಮರೆದೆ; ಜಗದ ಹಂಗ ಹರಿದೆ.

ಜಂಗಮದ ಪಾದೋದಕ ಪ್ರಸಾದವ ಕೊಂಡ ಕಾರಣದಿಂದ

ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯಾ


|| ೮೬ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೨೧

ಈ ಪರಂಜ್ಯೋತಿಪ್ರಕಾಶವಾದ ಬೆಳಗ

ನೋಡಿನೋಟವ ಮರೆದೆ, ಕೂಡಿಕೂಟವ ಮರೆದೆ.

ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ನಾನು ಓಲಾಡಿ ಸುಖಿಯಾದೆನಯಾ

ಚೆನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೮೭ ||

೧೩೨೨

ಅಯ್ಯಾ, ಅದೇನು ಕಾರಣವೆಂದಡೆ,

ಕಂಗಳ ಕತ್ತಲೆಯನೆ ಹರಿದಿರಿ;

ಮನದ ಕಾಳಿಕೆಯನೆ ಹಿಂಗಿಸಿದಿರಿ ;

ಮಾತಿನ ಮೊದಲನೆ ಹರಿದಿರಿ ;

ಜೋತಿಯ ಬೆಳಗನೆ ತೋರಿದಿರಿ ;

ಮಾತು ಮಥನವ ಕೆಡಿಸಿದಿರಿ .

ವ್ಯಾಕುಳವನೆ ಬಿಡಿಸಿ , ವಿವೇಕಿಯ ಮಾಡಿ,

ನಿಮ್ಮ ಪಾದದಲ್ಲಿ ಏಕವಾದ ಕಾರಣದಿಂದ


ನಾ ನಿಜಮುಕ್ಕಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . ||

- ೧೩೨೩

ಅಯ್ಯಾ ನಾನು ಬಂದ ಬಂದ ಭವಾಂತರದಲ್ಲಿ


ನೀವುಕಡೆಹಾಯಿಸಿದಿರೆಂಬುದನರಿಯೆ .

ಕಂಗಳಿಗೆ ಕನ್ನಡಿಯ ತೋರಿದರೂ ನಿಮ್ಮ ಕಾಣದೆ ಇದ್ದೆನಯ್ಯಾ .

ಅದು ಕಾರಣದಿಂದ, ಮನಕ್ಕೆ ಪ್ರಾಣವಾಗಿ ಬಂದು ನಿಂದಿರಿ,

ತನುವಿಂಗೆ ರೂಪಾಗಿ ಬಂದು ಸುಳದಿರಿ.

ನಿಮ್ಮ ಸುಳುಹ ಕಾಣಲೊಡನೆ,


೪೦೬
ಶಿವಶರಣೆಯರ ವಚನಸಂಪುಟ

ಎನ್ನ ತನು ಕರಗಿ, ಮನ ಮಗ್ನವಾಯಿತ್ತು .

ಎನ್ನ ಮರಣಭಯ ಹಿಂಗಿತ್ತು , ಎನ್ನ ಕಾಯಗುಣ ಕೆಟ್ಟಿತ್ತು;

ಕರಣಗುಣ ಸುಟ್ಟಿತ್ತು; ಭಾವವಳಿಯಿತ್ತು; ಬಯಕೆ ಸವೆಯಿತ್ತು

ಮಹಾದೇವನಾದ ಶರಣ ಚೆನ್ನಮಲ್ಲೇಶ್ವರನ ಪಾದವಿಡಿದು

ನಾ ನಿಜಮುಕ್ತಳಾದೆನಯ್ಯಾ || ೮೯. ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ

೧೩೨೪

ಅಯ್ಯಾ, ನಾ ಕಾಬುದಕ್ಕೆ ನನ್ನ ಶಕ್ತಿಯಲ್ಲ ,

ನಿಮ್ಮಿಂದವ ಕಂಡೆನಯ್ಯಾ.

ಅದೇನು ಕಾರಣವೆಂದಡೆ :

ತನುವ ತೋರಿದಿರಿ, ಮನವ ತೋರಿದಿರಿ , ಘನವತೋರಿದಿರಿ.

ತನುವ ಗುರುವಿಗಿತ್ತು , ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು ,

ಇವೆಲ್ಲವುನಿಮ್ಮೊಡನೆ ಎಂದು ನಿಮಗಿತ್ತು .

ತಳ್ಳಿಬಳ್ಳಿಯನೆ ಹರಿದು ನಿಮ್ಮಲ್ಲಿಯೇ ನೆಲೆಗೊಂಡ ಕಾರಣ,

ಚೆನ್ನಮಲ್ಲೇಶ್ವರನ ಪಾದದಲ್ಲಿ ನಿರ್ಮುಕ್ತಳಾದೆನಯ್ಯಾ


|| ೯೦ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೨೫

ಎನ್ನ ಸತ್ಯಳ ಮಾಡಿ ನಿತ್ಯವತೋರಿ,

ತತ್ವವೆಂಬುದನರುಹಿದಿರಿ ; ಮತ್ಸರವ ಹಿಂಗಿಸಿದಿರಿ ;

ಆಸರೋಷವನೆ ಹಿಂಗಿಸಿದಿರಿ ; ಮಾತು ಮಥನವನೆ ಕೆಡಿಸಿದಿರಿ.

ವ್ಯಾಕುಳವನೆ ಕೆಡಿಸಿ,ಜ್ಯೋತಿಯ ಬೆಳಗನೆ ತೋರಿದನಯ್ಯಾ


|| ೯೦ ||
ಚೆನ್ನಮಲ್ಲೇಶ್ವರನು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೨೬

ಅದೇನು ಕಾರಣವೆಂದಡೆ,

ಘನಕ್ಕೆ ಘನವಾದರು ; ಮನಕ್ಕೆ ಮನವಾದರು;

ತನುವಿಂಗೆ ತನುವಾದರು, ನಡೆನುಡಿಗೆ ಚೈತನ್ಯವಾದರು ;

ನೋಡುವುದಕ್ಕೆ ನೋಟವಾದರು;ಕೂಡುವುದಕ್ಕೆ ಲಿಂಗವಾದರು.

ಈ ಒಳಹೊರಗೆ ಬೆಳಗುವ ಬೆಳಗು ನೀವೆಯಾದ ಕಾರಣ ,

ನಿಮ್ಮ ಪಾದದಲ್ಲಿ ನಾ ನಿಜಮುಕ್ತಳಾದೆನಯ್ಯಾ


| ೯೨ ||
ಚೆನ್ನಮಲ್ಲೇಶ್ವರ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .
೪೦೭
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

೧೩೨೭

ಕಾಮವಿಲ್ಲ ,ಕ್ರೋಧವಿಲ್ಲ , ಲೋಭವಿಲ್ಲ ,

ಮೋಹವಿಲ್ಲ , ಮದವಿಲ್ಲ , ಮತ್ಸರವಿಲ್ಲ

ಎಂಬ ಅಣ್ಣಗಳಿರಾ, ನೀವುಕೇಳಿರೊ ಹೇಳಿಹೆನು.

ಕಾಮವಿಲ್ಲದವಂಗೆ ಕಳವಳವುಂಟೆ ?

ಕ್ರೋಧವಿಲ್ಲದವಂಗೆ ರೋಷವುಂಟೆ ?

ಲೋಭವಿಲ್ಲದವಂಗೆ ಆಸೆವುಂಟೆ ?

ಮೋಹವಿಲ್ಲದವಂಗೆ ಪಾಶವುಂಟೆ ?

ಮದವಿಲ್ಲದವಂಗೆ ತಾಮಸವುಂಟೆ ?

ಮತ್ಸರವಿಲ್ಲದವನು ಮನದಲ್ಲಿ ಮತ್ತೊಂದ ನೆನೆವನೆ ?

ಇವು ಇಲ್ಲವೆಂದು ಮನವ ಕದ್ದು ನುಡಿವ

ಅಬದ್ದರ ಮಾತ ಮೆಚ್ಚುವನೆ


|| ೯ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ?

೧೩೨೮

ಈ ಮಹಾದೇವನಸ್ತೋತ್ರವ ಮಾಡುವುದಕ್ಕೆ ಜಿಹ್ನೆ ಮೆಟ್ಟದು.

ಆ ಮಹಾದೇವನಸ್ತೋತ್ರವಕೇಳುವುದಕ್ಕೆ ಕರ್ಣಮಟ್ಟದು.

ಮುಟ್ಟಿ ಪೂಜಿಸಿಹೆನೆಂದಡೆ ಹಸ್ತ ಮೆಟ್ಟದು.

ನೋಡಿಹೆನೆಂದಡೆ ನೋಟಕ್ಕೆ ಅಗೋಚರ, ಅಪ್ರಮಾಣ.

ಇಂತು ನಿಶ್ಚಿಂತ ನಿರಾಳ ಬಯಲದೇಹಿ ಎನ್ನಲ್ಲಿ ಅಜ್ಯೋತಿದಂತೆ ನಿಂದ ಕಾರಣದ

ಬಟ್ಟಬಯಲನೆ ಕಂಡೆ, ಮಹಾಬೆಳಗನೆಕೂಡಿದೆ .

ಚಿತ್ರದಲ್ಲಿ ಚೆನ್ನಮಲ್ಲೇಶ್ವರನು ನೆಲೆಗೊಂಡ ಕಾರಣದಿಂದ

ನಾನೆ ಹೋದೆನೆಂದರಿಯೆನಯ್ಯಾ , ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . ||

೧೩೨೯

ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು .

ಬೇರುವರಿಯಿತ್ತು , ಅದಕ್ಕೆ ಶತಕೋಟಿಶಾಖೆ ಬಿಟ್ಟಿತ್ತು .

ಆ ಶಾಖೆಯ ಬೆಂಬಳಿಗೊಂಡು ಆಡುವರೆಲ್ಲ ಮುಂದುಗಾಣದೆ ಸಂದುಹೋದ

ಇದನರಿದು ನಿಮ್ಮ ಶರಣರು ಹಿಂದೆನೋಡಿ

ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು ,

ಮನವೆಂಬ ಮರದ ಬೇರನಗಿದು ಶತಕೋಟಿಶಾಖೆಯನ್ನು ಸವರಿ ,


೪೦೮ ಶಿವಶರಣೆಯರ ವಚನಸಂಪುಟ

ತುತ್ತತುದಿಯ ಮೇಲೆ ನಿಂದುನೋಡುವನ್ನಕ್ಕ ,

ನಾನೆ ಹೋದೆನೆಂದರಿಯೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೩೦

ಬೆಟ್ಟ ಬೆಂದಿತ್ತು , ಬಿದಿರುಗಣ್ಣ ಒಡೆಯಿತ್ತು ;

ಸುತ್ತ ನೋಡಿದಡೆ ನಿರಾಳವಾಯಿತ್ತು; ಕತ್ತಲೆ ಹರಿಯಿತ್ತು ;

ಮನ ಬತ್ತಲೆಯಾಯಿತ್ತು ; ಚಿತ್ತ ಮನ ಬುದ್ದಿ ಏಕವಾದವು.

ಎಚ್ಚತ್ತು ನೋಡಿದಡೆ, ಬಚ್ಚಬರಿಯ ಬೆಳಗಲ್ಲದೆ

ಕತ್ತಲೆಯ ಕಾಣಬಾರದು ಕಾಣಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೯೬

೧೩೩೧

ಮರನನೇರಿದೆ, ಬೇರ ಸವರಿದೆ ,

ಕೊನೆಯ ತರಿದೆ, ಬುಡವ ಕೆಡಹಿದೆ,

ನಿರಾಲಂಬಿಯಾಗಿ, ನಿಮ್ಮ ಬೆಳಗನೆ ನೋಡಿಸುಖಿಯಾದೆನಯಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೯೭ ||

೧೩೩೨

ನಿಮ್ಮ ಪಾದವಿಡಿದು ಮನ ಪಾವನವಾಯಿತ್ತು ;

ಎನ್ನ ತನು ಶುದ್ಧವಾಯಿತ್ತು , ಕಾಯಗುಣವಳಿಯಿತ್ತು;

ಕರಣಗುಣ ಸುಟ್ಟು , ಭಾವವಳಿದು, ಬಯಕೆ ಸವೆದು,

ಮಹಾದೇವನಾದ ಶರಣರ ಪಾದವಿಡಿದು ನಿಜಮುಕ್ಕಳಾದೆನಯ್ಯಾ


|| ೯೮ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೩೩

ತುಂಬಿದ ಮನೆಯ ಹೊಕ್ಕಡೆ ದಂದಳವಾಯಿತ್ತು .

ಈ ಸಂದಳಿಗಾರದೆ ತುಂಬಿದ ಮನೆಗೆ

ಕಿಚ್ಚನಿಕ್ಕಿದಡೆ ನಿಶ್ಚಿಂತವಾಯಿತ್ತು .

ಬಟ್ಟಬಯಲ ಬರಿಯ ಮನೆಯೊಳಗೆ

ನಿಮ್ಮ ಬೆಳಗನೆ ನೋಡಿಸುಖಿಯಾದೆನಯ್ಯಾ


|| ೯೯ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೩೪

ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ.

ಆ ಸರೋವರದ ಮೇಲೆ ಮಹಾಘನವ ಕಂಡೆ.


೪೦೯
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ಆ ಮಹಾಘನವಿಡಿದು ಮನವ ನಿಲಿಸಿ

ಕಾಯಗುಣವನುಳಿದು ಕರಣಗುಣವ ಸುಟ್ಟು ,

ಆಸೆಯನೆ ಅಳಿದು,ರೋಷವನೆ ನಿಲಿಸಿ,

ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತಬಲ್ಲರು


|| ೧೦೦ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?

೧೩೩೫

ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ.

ಆ ಸರೋವರದ ಮೇಲೆ ಒಂದು ದಳದ ಕಮಲವ ಕಂಡೆ,

ಆ ಕಮಲವರಳಿ ವಿಕಸಿತವಾಗಿತ್ತು , ಪರಿಮಳವೆಸಗಿತ್ತು .

ಆ ಪರಿಮಳದ ಬೆಂಬಳಿವಿಡಿದು ಹೋಗುತ್ತಿರಲು,

ಮುಂದೆ ಒಂದು ದಾರಿಯ ಕಂಡು,

ಆ ಮುಂದಳ ದಾರಿಯಲ್ಲಿ ಹೋದವರೆಲ್ಲರು

ನಿಂದೆ ಕುಂದುಗಳಿಗೊಳಗಾಗಿ ಸಂದುಹೋದರು .

ಇದ ಕಂಡು ನಾ ಹೆದರಿಕೊಂಡು ಎಚ್ಚತ್ತು ,

ಚಿತ್ತವ ಸುಯಿದಾನವ ಮಾಡಿ,

ಹಿತ್ತಲ ಬಾಗಿಲ ಕದವ ತೆಗೆದು ನೋಡಿದಡೆ ಬಟ್ಟಬಯಲಾಗಿದ್ದಿತು .

ಆ ಬಟ್ಟಬಯಲೊಳಗೆ ಮಹಾಬೆಳಗನೆ ನೋಡಿ

ನಾ ಎತ್ತಹೋದೆನೆಂದರಿಯೆನಯ್ಯಾ
|| ೧೦೧ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೩೬

ನೋಟವನಿಟ್ಟು ನೋಡುತಿರಲು ಮೂರಾಯಿತ್ತು .

ಮೂರನೆ ಮೂಲಿಗನೆಂದರಿದು, ಮುದುಡ ಹರಿದು, ಸದವ ಬಡಿದು,

ಪೋದರಾ , ನಿರ್ದಸಿಗೆಯ ಪಿರಿದು ಕದಳಿಯ ಕಡಿದು,

ಕಂಭ ಬೇವ ಬೆಂಬಳಿವಿಡಿದು ಹೋಗುತಿರಲು, ಬೇರೆ ಕಂಡೆ.

ಕಿತ್ತಿಹೆನೆಂದಡೆತಿ ಕೀಳಬಾರದು, ನೆಟ್ಟಿಹೆನೆಂದಡೆ ನೆಡಬಾರದು.

ಬಯಲಲ್ಲಿ ಬೆಳೆದ ಬೇರ ಮುಟ್ಟಿ ಹುಟ್ಟುಗೆಟ್ಟು ಹೋದೆನಯ್ಯಾ ,

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ! || ೧೦೨ ||

೧೩೩೭

ನೆನೆದೆಹೆನೆಂದಡೆ ಏನ ನೆನೆವೆನಯ್ಯಾ !

ಮನ ಮಂಕಾಯಿತ್ತು, ತನು ಬಯಲಾಯಿತ್ತು ,


೪೧೦ ಶಿವಶರಣೆಯರ ವಚನಸಂಪುಟ

ಕಾಯ ಕರಗಿತ್ತು , ದೇಹ ಹಮ್ಮಳಿಯಿತ್ತು .

ತಾನು ತಾನಾಗಿ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ

|| ೧೦೩ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೩೮

ನೋಡುವೆನೆಂದಡೆ ನೋಟವಿಲ್ಲ ; ಕೇಳುವೆನೆಂದಡೆ ಕಿವಿಯಿಲ್ಲ ;

ವಾಸಿಸುವೆನೆಂದಡೆ ನಾಸಿಕವಿಲ್ಲ ; ನುಡಿವೆನೆಂದಡೆ ಬಾಯಿಯಿಲ್ಲ;

ಹಿಡಿವೆನೆಂದಡೆ ಹಸ್ತವಿಲ್ಲ ; ನಡೆವೆನೆಂದಡೆ ಕಾಲಿಲ್ಲ ; ನೆನೆವೆನೆಂದಡೆ ಮನವಿಲ್ಲ .

ಇಂತು ನೆನಹು ನಿಷ್ಪತ್ತಿಯಾಗಿ,

ಶರಣರ ಪಾದದಲ್ಲಿಯೆ ಬೆರೆದು ಸುಖಿಯಾದೆನಯ್ಯಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೧೦೪ ||

೧೩೩೯

ಆಧಾರವ ಬಲಿಯೆ ಬೇಗೆವರಿಯಿತ್ತು ;

ಕಿಚ್ಚು ಆವರಿಸಿಊರ್ಧ್ವಕ್ಕೇರಿತ್ತು .

ಸಾಸಿರದಳದ ಅಮೃತದಕೊಡಕಾಯಿತ್ತು .

ಕಾಯ್ದ ಅಮೃತಉಕ್ಕಿ ತೊಟ್ಟಿಕ್ಕೆ, ಅಮೃತವನುಂಡು

ಹಸಿವುಕೆಟ್ಟಿತ್ತು ; ತೃಷೆಯಡಗಿತ್ತು , ನಿದ್ರೆಯರತಿತ್ತು ;

ಅಂಗಗುಣವಳಿಯಿತ್ತು; ಲಿಂಗಗುಣ ನಿಂದಿತ್ತು ; ಸಂಗಸುಖ ಹಿಂಗಿತ್ತು .

ಅಂಗಲಿಂಗವೆಂಬ ಉಭಯವಳಿದು,

ಮಂಗಳ ಮಹಾಬೆಳಗಿನಲ್ಲಿಯೇ ಓಲಾಡಿ ಸುಖಿಯಾದೆನಯ್ಯಾ


|| ೧೦೫ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೪೦

ಸಹಸ್ರದಳ ಕಮಲವ ಸೂಸದೆ ಮೇಲುಕಟ್ಟು ಕಟ್ಟಿ ,

ಭಾಸುರವೆಂಬ ಹೃದಯದ ಸಿಂಹಾಸನವಿಕ್ಕಿ ,

ಲೇಸಾಗಿ ಗುರುಸ್ವಾಮಿಯ ಮೂರ್ತಮಾಡಿಸಿ ,

ನಾಲೈಸಳ ಪದ್ಮವ ಸಮ್ಮಾರ್ಜನೆಯ ಮಾಡಿ,

ಆರೆಸಳ ಪದ್ಮವ ರಂಗವಾಲೆಯ ತುಂಬಿ,

ಹತ್ತೆಸಳ ಪದ್ಮವಕರಕಮಲವಂ ಮಾಡಿ,

ನಿರ್ಭಾವವೆಂಬ ಅಗ್ಗವಣಿಯಲ್ಲಿ ಮಜ್ಜನಕ್ಕೆರೆದು,


ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ಚಿದ್ದೇಳಗೆಂಬ ಚಿದ್ವಿಭೂತಿಯ ಧರಿಸಿ, ಶಾಂತಿಯೆಂಬ ಗಂಧವ ಧರಿಸಿ,

ಚಿತ್ತನಿರ್ಮಲವೆಂಬ ಅಕ್ಷತೆಯನರ್ಪಿಸಿ,

ಹೃತ್ಕಮಲವೆಂಬ ಅರಳಿದ ಪುಷ್ಪವ ಧರಿಸಿ,

ಸುಗಂಧವೆಂಬ ಧೂಪವ ಬೀಸಿ,

ಕಂಗಳ ದೀಪ, ಕರ್ಣವೆ ಗಂಟೆ, ನಾಸಿಕವೆ ಆಲವಟ್ಟಲು,

ಜಿಹ್ವಯ ತಾಳ, ಪಾದವ ಪಾತ್ರದವರು , ಹಸ್ತವಸೇವಕರು,


0
ನಿಶ್ಚಿಂತವೆಂಬ ಅಕ್ಕಿಯ ತಂದು, ಪಶ್ಚಿಮವೆಂಬೊರಳಿಗೆನೀಡಿ,

ಏಕೋಭಾವವೆಂಬೊನಕೆಯ ಪಿಡಿದು ತಳಿಸಿ,

ಸುಬುದ್ದಿಯೆಂಬ ಮೊರದಲ್ಲಿ ಕೇರಿ, ತ್ರಿಕೂಟವೆಂಬ ಒಲೆಯ ಹೂಡಿ,

ಕರಣಂಗಳೆಂಬ ಸೌದೆಯನಿಟ್ಟು , ಜ್ಞಾನಾಗ್ನಿಯನುರುಹಲು,

ಒಮ್ಮನವೆಂಬ ಕಂದಲಿಗೆ ಆನಂದ ಜಲವೆಂಬಗ್ಗಣಿಯನೆತ್ತಿ ,

ನಿಶ್ಚಿಂತವೆಂಬಕ್ಕಿಯ ನೀಡಿ, ಸುಮ್ಮಾನವೆಂಬ ಹುಟ್ಟಿನಲ್ಲಿ ಉಕ್ಕಿರಿದು,

ಮನ ಬುದ್ಧಿಯೆಂಬ ಚಿಬ್ಬಲುಮರದಟ್ಟೆಯನಿಕ್ಕಿ ,
ಅಹಂಕಾರವೆಂಬ ಭಾಜನದಲ್ಲಿ ಬಾಗಿ,

ಜ್ಞಾತೃ ಜ್ಞಾನ ಕ್ಷೇಯವೆಂಬ ಅಡ್ಡಣಿಗೆಯನಿರಿಸಿ,


ಮನವೆಂಬ ಹರಿವಾಣದಲ್ಲಿ ಗಡಣಿಸಿ ,

ಆನಂದವೆಂಬಮೃತವನಾರೋಗಣೆಯ ಮಾಡಿ ,

ನಿತ್ಯವೆಂಬಗ್ಗವಣಿಯಲ್ಲಿ ಹಸ್ತಪ್ರಕ್ಷಾಲನವ ಮಾಡಿಸಿ,

ಸತ್ವ - ರಜ- ತಮವೆಂಬ ವೀಳೆಯವಕೊಟ್ಟು,

ಅಂತಃಕರಣಚತುಷ್ಟಯವೆಂಬ ನಾಲ್ಕು ಕಾಲು ಮಾಡಿ,

ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಮಂಚವ ಹಾಸಿ,

ನಾಸಿಕ ಜಿಜ್ಜೆ ನೇತ್ರ ತ್ವಕ್ಕುಶೂತ್ರ ಎಂಬ ಸುಪ್ಪತ್ತಿಗೆಯನ್ನು ಹಚ್ಚಡಿಸಿ,

ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಒರಗು ಇಕ್ಕಿ ,

ತತ್ವ ಪರತತ್ವವೆಂಬ ಹಸ್ತಕ್ಕೆ ಮೆತ್ತೆಯನಿಕ್ಕಿ ,

ಸುತ್ತಣ ಪರಿಚಾರಕರು, ಆನೆ ಕುದುರೆ ಅರಸು ಮನ್ನೆಯ ಪ್ರಧಾನಿಗಳು

ಎತ್ತ ಹೋದರೆಂದು ಅತ್ತಿತ್ತ ನೋಡುತ್ತಿರಲು,

ಊರು ಬಯಲಾಯಿತ್ತು , ಒಕ್ಕಲು ಓಡಿತ್ತು ,

ಮಕ್ಕಳ ಗಲಭೆ ನಿಂದಿತ್ತು , ಮಾತಿನ ಮಥನವಡಗಿತ್ತು .

ಉತ್ತರದಲ್ಲಿ ವಸ್ತುವ ಕಂಡು ಓಲಗಂಗೊಟ್ಟಿರಲು,

ಓಲಗದಲ್ಲಿ ಲೋಲುಪ್ತವನೆಯ್ಲಿ ಆವಲ್ಲಿ ಹೋದನೆಂದರಿಯೆನಯ್ಯಾ .

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆನೋಡಾ. || ೧೦೬ ||


೪೧೨ ಶಿವಶರಣೆಯರ ವಚನಸಂಪುಟ

೧೩೪೧.

ಸಾಸಿರದಳಕಮಲವೆಂದಡೆಸೂಸಿಕೊಂಡಿರುವ ಮನ.

ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು.

ಬಿಂದುವೆಂದಡೆ ಆಗುಮಾಡುವಂತಹದು.

ಈ ಮನ ಪವನ ಬಿಂದು ಮೂರನು ಒಡಗೂಡಿನೋಡಲು,

ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು .

ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ,

ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ , ನಿಮ್ಮ ಪಾದಕರುಣದಿಂದ. |

- ೧೩೪೨

ಅಂತರಂಗ ಬಹಿರಂಗ ಶುದ್ದವಿಲ್ಲದೆ ನುಡಿವರು ಸಂತೆಯ ಸೂಳೆಯರಂತೆ.

ಅಂತರಂಗ ಬಹಿರಂಗವೆಂಬುದಿಲ್ಲ ನಮ್ಮ ಶಿವಶರಣರಿಗೆ.

ಅಂತರಂಗವೆಲ್ಲ ಅರುಹಾಯಿತ್ತು; ಬಹಿರಂಗದಲ್ಲಿ ಲಿಂಗವಾಯಿತ್ತ

ಆ ಲಿಂಗದಲ್ಲಿ ನುಡಿದು, ಲಿಂಗದಲ್ಲಿ ನಡೆದು,

ಲಿಂಗದಲ್ಲಿ ಮುಟ್ಟಿ , ಲಿಂಗದಲ್ಲಿ ವಾಸಿಸಿ,

ಲಿಂಗದಲ್ಲಿ ಕೇಳಿ, ಲಿಂಗವಾಗಿ ನೋಡಿ,

ಸರ್ವಾಂಗವು ಲಿಂಗವಾಗಿ, ಆ ಲಿಂಗವನೋಡುವ ಕಂಗಳಲ್ಲಿ ಐಕ್ಯ .


|| ೧೦೮ ||
ಕಂಡೆಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

- ೧೩೪೩

ಜಂಗಮವೆ ಗುರು, ಜಂಗಮವೆ ಲಿಂಗ, ಜಂಗಮವೆ ಪ್ರಾಣವೆಂದಡೆ,

ಇಲ್ಲವೆಂಬ ಅಂಗಹೀನರಿರಾ, ನೀವುಕೇಳಿರೋ .

ಜಂಗಮವು ಗುರುವಲ್ಲದಿದ್ದಡೆ,

ಕಾಮ ಕ್ರೋಧಲೋಭಮೋಹಮದ ಮತ್ಸರವ ಹಿಂಗಿಸುವನೆ ?

ಜಂಗಮವು ಲಿಂಗವಲ್ಲದಿದ್ದಡೆ, ಪ್ರಾಣಲಿಂಗವತೋರುವನೆ ?

ಜಂಗಮವುಪ್ರಾಣವಲ್ಲದಿದ್ದರೆ, ಪ್ರಾಣಕ್ಕೆ ಪ್ರಸಾದವನೂಡುವನೆ ?

ಇದ ಕಂಡು ಕಾಣೆನೆಂಬ ಭಂಗಿತರ ನುಡಿಯ ಮೆಚ್ಚರು


|| ೧೦೯ ||
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ .

- ೧೩೪೪

ಬಸವೇಶ್ವರ ಚೆನ್ನಬಸವೇಶ್ವರ ಮಡಿವಾಳಯ್ಯ ಅಲ್ಲಮಪ್ರಭು

ಚೆನ್ನಮಲ್ಲೇಶ್ವರ ಹಡಪದಪ್ಪಣ್ಣ
ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳು

ತಮ್ಮೆಲ್ಲರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು

ಹೊತ್ತು ಹೊತ್ತಿಗೆ ಎಚ್ಚರವ ಪಾಲಿಸಿ ರಕ್ಷಣೆಯ ಮಾಡಿದ ಕಾರಣದಿಂದ

ತಮ್ಮೆಲ್ಲರಶ್ರೀಪಾದದಲ್ಲಿಯೆ ನಿಜಮುಕ್ತಳಾದೆನಯ್ಯಾ
|| ೧೧೦ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೪೫

ಜಂಗಮವೆ ಜಗತ್ಪಾವನವಯ್ಯಾ .

ಆ ಜಂಗಮದ ನೆನಹೆ ಲಿಂಗವಾಯಿತ್ತು .

ಅವರ ತನುವೆ ಎನ್ನ ಕಾಯವಾಯಿತ್ತು .

ಅವರ ದರ್ಶನವೆ ಎನಗೆ ಪರುಷವಾಯಿತ್ತು ,

ಆ ಪರುಷವಿಡಿದು ಮನವ ಲಿಂಗದಲ್ಲಿ ಬೆರಸಿ,

ಕನಸು ಕಳವಳಿಕೆ ಹೆಸರುಗೆಟ್ಟು ಹೋದುವಯಾ


|| ೧೧೧ ||
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

೧೩೪೬

ಮುಕ್ತಿಯ ಪಥವನರಿವುದಕ್ಕೆ ತತ್ವದ ಭಿತ್ತಿಯ ಕಾಣಬೇಕು :

ಚಿತ್ರ ಲಿಂಗದಲ್ಲಿ ಅಷ್ಟೋತ್ತಿದಂತಿರಬೇಕು;

ಮರ್ತ್ಯದ ಮಾನವರ ಸಂಗ ಹಿಂಗಬೇಕು;

ತಾನು ತಾನಾದ ಲಿಂಗೈಕ್ಯವನರಿವಡೆ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣ . || ೧೧೨ ||

೧೩೪೭

ಸಾಕಯ್ಯಾ, ಲೋಕದ ಹಂಗು ಹರಿಯಿತ್ತು ;

ತನುವಿನಾಸೆ ಬಿಟ್ಟಿತ್ತು ; ಮನದ ಸಂಚಲ ನಿಂದಿತ್ತು .

ನುಡಿಗಡಣ ಹಿಂಗಿತ್ತು ; ಘನವಬೆರೆಯಿತ್ತು , ಬೆಳಗಕೂಡಿತ್ತು .

ಬಯಲಿನೊಳಗೋಲಾಡಿ ಸುಖಿಯಾದೆನಯ್ಯಾ

ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ . || ೧೧೩ ||

೧೩೪೮

ಶರಣರೈಕ್ಯರೆಂದು ನುಡಿದಾಡುವರು ,

ಶರಣಸ್ಥಲವೆಂತಿರ್ಪುದೊಂದರಿಯರು.

ಅನ್ನವನಿಕ್ಕಿದವರೆಲ್ಲ ಶರಣರೆ ?

ಹೊನ್ನುಕೊಟ್ಟವರೆಲ್ಲ ಶರಣರೆ ?
೪೧೪ ಶಿವಶರಣೆಯರ ವಚನಸಂಪುಟ

ಹೆಣ್ಣು ಕೊಟ್ಟವರೆಲ್ಲ ಶರಣರೆ ?

ಮಣ್ಣುಕೊಟ್ಟವರೆಲ್ಲ ಶರಣರೆ ? ಅಲ್ಲಲ್ಲ.

ಅದಕ್ಕೆ ಪುಣ್ಯದಾ ಫಲವುಂಟು.

ಅದಂತಿರಲಿ

ಶರಣನಾದರೆ ತನ್ನ ಮರಣ ಬಾಧೆ ಗೆ[ ಲಿಯ ] ಬೇಕು.

ಮರಣ ಬಾಧೆಯ ಗೆದ್ದ ಶರಣರು ಕಂಡನುವೆ

ಅಂಗ ಮನ ಸುಸಂಗ.

ಅವರು ಹಿಡಿದ ಧನವೆ ಪದಾರ್ಥ.

ಇದೀಗ ನಮ್ಮ ಮುನ್ನಿನ ಶರಣರ ನಡೆನುಡಿ.

ಇದನರಿಯದೆ

“ಈಗ ಮನೆ ಮನೆಗೆ] ಶರಣರು,

ತನತನಗೆ ಶರಣರು'

- ಎಂದು ನುಡಿದಾಡುವರು.

ಈ ಬಿನುಗರ ನುಡಿಯ ಮೆಚ್ಚುವನೆ

ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ? || ೧೧೪ ||


ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮನ ವಚನ

೧೩೪೯

ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ .

ಆವ ವ್ರತವಾದಡೂ ಒಂದೆ ವ್ರತವಯ್ಯಾ .

ಆಯ ತಪ್ಪಿದಡೆ ಸಾವಿಲ್ಲ ; ವ್ರತತಪ್ಪಿದಡೆ ಕೂಡಲಿಲ್ಲ .

ಕಾಕಪಿಕದಂತೆಕೂಡಲು ನಾಯಕನರಕ

ಗಂಗೇಶ್ವರಲಿಂಗದಲ್ಲಿ . || ೧ ||
ಕುರಂಗೇಶ್ವರಲಿಂಗಾಂಕಿತ ವಚನ

೧೩೫೦

ಕಟ್ಟಕಡೆಯ ಕಟ್ಟಲು ಬಲಿವುದೆ ?

ವ್ರತ ಹೋದಲ್ಲಿ ವ್ರತ ಒಪ್ಪುವುದೆ ?

ಕೆಟ್ಟ ಕಣ್ಣಿಂಗೆ ದೃಷ್ಟಿಯುಂಟೆ ?

ಭವಹರ ಕುರಂಗೇಶ್ವರಲಿಂಗಾ ? || ೧ ||
ಮಸಣಯ್ಯಪ್ರಿಯ ಮಾರೇಶ್ವರಲಿಂಗ ಅಂಕಿತದ ವಚನ

೧೩೫೧

ಅಯ್ಯಾ , ಅಸ್ಥಿ ಚರ್ಮ ಮಾಂಸ ಶುಕ್ಲ ಶೋಣಿತದ ಗುಡಿಯ ಕಟ್ಟಿ,

ಹಂದಿಯ ದೇವರ ಮಾಡಿ ಕುಳ್ಳಿರಿಸಿ,

ಪಾದರಕ್ಷೆಯ ಪೂಜೆಯ ಮಾಡಿ

ನೈವೇದ್ಯವ ಹಿಡಿದು, ಮೂತ್ರದನೀರಕುಡಿಸಿ,

ಶ್ವಾನ ಕುಕ್ಕುಟನಂತೆ ಕೂಗಿಬೊಗುಳಿ ,

ದಡದಡ ನೆಲಕ್ಕೆ ಬಿದ್ದು ಕಾಡಿ ಕೊಂಡು

ಆ ದೇವರ ಒಡೆಯ ಮಾರೇಶ್ವರ

ಕಂಡ ಹೆಂಡಕೊಡುವನಲ್ಲದೆ ಅನ್ನ ನೀರುಕೊಡುವನೆ ?

ಆ ದೇವರಿಗೆ ಹೊಲೆಯರು ಮಚ್ಚುವರಲ್ಲದೆ,

ಉತ್ತಮರು ಮಚ್ಚರುನೋಡಯ್ಯ ,

ಮಸಣಯ್ಯಪ್ರಿಯ ಮಾರೇಶ್ವರಲಿಂಗವೆ . || ೧ ||

15
ಅನುಬಂಧ
ವಚನಗಳ ಅಕಾರಾದಿ

ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮನಬೋಧೆಯ ವಚನಗಳ

( ವಚನಾದಿಯ ಮುಂದಿರುವುದು ವಚನಕ್ರಮಾಂಕ)

೧೨೬೧ ಒಡಕು ಮಡಕೆಯಂತೆ ೧೨೮೦


ಅಂಗವ ಮರೆದವಂಗೆ

೧೨೭೩ ಕಂಗಳ ಮುಂದಣ ೧೨೬೩


ಅಂಗವೆಂದಡೆ

೧೩೪೨ ಕಂಗಳ ಮುಂದೆ ೧೨೭೨


ಅಂತರಂಗ ಬಹಿರಂಗ

೧೩೨೬ ಕಂಡಿಹೆ ಕೇಳಿಹೆನೆಂದು ೧೨೮೧


ಅದೇನು ಕಾರಣವೆಂದಡೆ
ಕಂಡಿಹೆ ಕೇಳಿಹೆನೆಂಬ ೧೨೮೨
ಅಯ್ಯಾ ಅದೇನು ೧೩೨೨
ಕಂಡುಕೇಳಿಹೆನೆಂಬ ೧೨೬೪
ಅಯ್ಯಾ ಈ ಮಹಾ ೧೨೬೫

೧೨೭೫ ಕತ್ತಲೆ ಬೆಳಗೆಂಬುದಿಲ್ಲ ೧೨೮೩


ಅಯ್ಯಾ ಏನೂ ಇಲ್ಲದ
೧೨೬ ೨ ಕದಳಿಯ ಬನದೊಳಗೆ ೧೨೮೫
ಅಯ್ಯಾ ಕಿಚ್ಚಿನೊಳಗೆ
ಅಯ್ಯಾ ನರರೊಳು ೧೩೦೦ ಕನಿಷ್ಕದಲ್ಲಿ ಹುಟ್ಟಿದೆ ೧೨೯೮
ಕರಗವ ಸುಟ್ಟೆ ೧೩೧೮
ಅಯಾ ನಾ ಕಾಬುದಕ್ಕೆ ೧೩೨೪
ಕರುಳು ಒಣಗಿತ್ತು ೧೨೫೭
ಅಯ್ಯಾ ನಾನು ಊರ ೧೨೭೪
ಕಾಣಬಾರದ ಕದಳಿ ೧೩೧೨
ಅಯ್ಯಾ ನಾನು ಬಂದ ೧೩೨೩
ಕಾಮವಿಲ್ಲ ಕ್ರೋಧವಿಲ್ಲ ೧೩೨೭
೧೩೦೧
ಅಯ್ಯಾ ನಾ ಮರ್ತ್ಯದಲ್ಲಿ
ಕಾಯವೆಂಬ ಕದಳಿ ೧೨೮೪
೧೨೯೯
ಅಯ್ಯಾ ನಾ ಹುಟ್ಟುವಾಗ
ಕಾಯವೆಂಬ ಕದಳಿಯ ಹೊಕ್ಕು ೧೩೧೧
ಅಯ್ಯಾ ನಿಮ್ಮ ಚರಣ ೧೩೧೭
ಕೈಲಾಸ ಮರ್ತ್ಯಲೋಕ ೧೨೮೬
೧೨೭೬
ಆಗದಾಗದು ಮರ್ತ್ಯದ
ಘಟವೆಂಬ ಮಠ ೧೩ ೨೯
ಆಧಾರವ ಬಲಿಯ ೧೩೩೯
ಜಂಗಮವೆ ಗುರು ೧೩೪೩
ಆಸೆಯನಳಿದು ೧೨೭೭
ಜಂಗಮವೆ ಜಗತ್ಪಾವನ ೧೩೪೫
ಆಸೆಯುಳ್ಳನ್ನಕ್ಕ ೧೨೭೮
ಜಗದೊಳಗೆ ಹುಟ್ಟಿ ೧೨೮೭
೧೩ ೨೧
ಈ ಪರಂಜ್ಯೋತಿ ತನ್ನ ತಾನರಿಯದೆ ೧೨೮೮

ಈ ಮಹಾದೇವನ ೧೩೨೮ ೧೩೧


ತನು ಕರಗಿತ್ತು
೧೨೭೯ ೧೨೫೮
ಉಸುರ ಉನ್ಮನಿಗಿತ್ತು ತನು ನಷ್ಟವಾದಡೆ
೧೩೨೫ ೧೨೩
ಎನ್ನ ಸತ್ಯಳ ಮಾಡಿ ತನುವ ಕರಗಿಸಿ

ಏನೇನು ಇಲ್ಲದಾಗ ೧೩೦೨ ೧೩೦೯


ತನುವೆಂಬ ರಾಜ್ಯಕ್ಕೆ

ಏರುವ ಇಳಿಯುವ ೧೨೬೭ ತನುವೆಂಬ ಹುತ್ತಕ್ಕೆ ೧೩೦೩

ಒಂದು ಊರಿಗೆ ೧೩೦೮ ತನುವೆಂಬ ಹುತ್ತದಲ್ಲಿ ೧೩೦೬

೧೩೦೭ ತುಂಬಿದ ಕೆರೆಗೆ ೧೨೮೯


ಒಂದು ಹುತ್ತಕ್ಕೆ
೪೨೨
ಶಿವಶರಣೆಯರ ವಚನಸಂಪುಟ

ತುಂಬಿದ ಮನೆಯ ೧೩೩೩ ೧೨ರ್೪


ಮನಮಂಕಾಯಿತ್ತು
ದಾರಿವಿಡಿದು ಬರಲು ೧೩೩೪ ಮನ ಮರವೆಗೆ ೧೨೫೦

ದಾರಿವಿಡಿದು ಬರಲು ೧೩೩೫ ಮನವ ಗೆದ್ದೆಹೆನೆಂದು ೧೨೪೪

ನರರ ಬೇಡೆನು ೧೩೧೯ ಮನವ ನಿರ್ಮಲವ ೧೨೪೩

ನಾನೊಂದು ಹಾಳೂರಿಗೆ ೧೩೧೩ ಮನವ ನಿಲಿಸಿಹೆನೆಂದು ೧೨೪೫

ನಾಮ ರೂಪಿಲ್ಲದ ೧೩೦೫ ಮನವೆಂದಡೆ ಮರವೆಗೆ ೧೨೫೨

ನಿಮ್ಮ ಪಾದವಿಡಿದು ೧೩೩೨ ಮರನನೇರಿದೆ ೧೩೩೧


ನಿರ್ಮಳವಾದ ದೇಹ ೧೩೧೬ ೧೨೯೨
ಮರ್ತ್ಯದ ಮನುಜರು ತಾವು

ನಿರಾಳಲಿಂಗವ ೧೩೧೪ ೧೨೯೩


ಮರ್ತ್ಯದ ಮನುಜರೆಲ್ಲರು

ನಿಶ್ಚಿಂತ ನಿರಾಳದಲ್ಲಿ ಮರ್ತ್ಯದಲ್ಲಿ


೧೨೯೦ ಹುಟ್ಟಿ೧೨೫೯

ನಿಶ್ಚಿತವಾದವಂಗೆ ೧೨೭೧ ಮಹಾಬೆಳಗ ನೋಡಿ ೧೨೫೪

ನೆನೆದೆಹೆನೆಂದಡೆ ೧೩೩೭ ಮಾಣಿಕವ ಕಂಡವರು ೧೨೬೬

ನೆನೆಯುತ್ತಿದೆ ಮನ ೧೨೪೨ ಮಾಯದ ಗೊಂಬೆಯ ೧೨೬೯

ನೋಟವನಿಟ್ಟು ೧೩೩೬ ಮುಕ್ಕಿಯಪಥವನರಿವುದಕ್ಕೆ ೧೩೪೬

ನೋಡುವ ನೋಟ ೧೨೯೧ ಮೂಲಪ್ರಣವವನರಿದು ೧೨೬೮


೧೩೩೮ ರಸವಡೆದಂತೆ ೧೨೫೧
ನೋಡುವೆನೆಂದಡೆ
೧೨೫
ಪಶ್ಚಿಮದಕದವ ವ್ಯಾಪಾರವನೆ ಬಿಟ್ಟು

ಪೃಥ್ವಿಯನೆ ಆದಿಯ ಮಾಡಿ ೧೩೦೪ ಶರಣರೈಕ್ಯರೆಂದು ೧೩೪೮

ಬಂಡಿಯ ಮೇಗಣ ೧೨೭೦ ಸಹಸ್ರದಳ ಕಮಲವ ೧೩೪೦


೧೩೪೭
ಬಟ್ಟಬಯಲಲ್ಲಿ ಒಂದು ಮರ ೧೨೩೯ ಸಾಕಯ್ಯ ಲೋಕದ
೧೨೯೪
ಬಟ್ಟಬಯಲಲ್ಲಿ ಒಂದು ಮೃಗ ೧೨೪೧ ಸಾಯದ ಮುಂಚೆ ಸತ್ತಹಾಗೆ
೧೩೪೧
ಬಟ್ಟಬಯಲಲ್ಲಿ ಒಂದು ಶರಧಿ ೧೨೪೦ ಸಾಸಿರದಳ ಕಮಲ
೧೩ .೨೦ ೧೨೯೫
ಬಚ್ಚಬರಿಯ ಬೆಳಗ ಹುಟ್ಟಿದ ಮನುಜರೆಲ್ಲ

ಬಯಲ ದೇಹದಲ್ಲಿ ೧೩೧೦ ಹೊತ್ತುಹೊತ್ತಿಗೆ೧೨೪೬

ಬಸವೇಶ್ವರ ಚನ್ನಬಸವೇಶ್ವರ ೧೩೪೪ ೧೨೯೬


ಹೊತ್ತುಹೊತ್ತಿಗೆ ಮತ್ತ
೧೩೩೦ ಹೊಸಿಲೊಳಗಿರಿಸಿದ ೧೨೯೭
ಬೆಟ್ಟ ಬೆಂದಿತ್ತು
ಹೋಗುತ್ತ ಹೋಗುತ್ತ ೧೨೩೬
ಬ್ರಹ್ಮಾಂಡದಲ್ಲಿ ಹುಟ್ಟಿ ೧೨೫೬
೧೨೬೦ ೧೨೩೭
ಮಚ್ಚಬೇಡ ಹೋಗುತ್ತ ಹೋಗುತ್ತ
೧೨೩೮
ಮದಮತ್ಸರ ಬಿಡದು ೧೨೪೮ | ಹೋಗುತ್ತ ಹೋಗುತ್ತ

ಮನ ಕತ್ತಲೆ ೧೨೪೭
ಈ ಸಂಪುಟದಲ್ಲಿ ಹೆಚ್ಚಿಗೆ ಸೇರಿಸಿದ ವಚನಗಳ ಅಕಾರಾದಿ

ಕಾಯವಿಕಾರಿಗೆ ೧೭೦
ಅಕ್ಕಮಹಾದೇವಿಯ ವಚನಗಳು
ಕೆತ್ತಿದ ಚೆಕ್ಕೆ ೧೮೦
ಅಂಗದಲ್ಲಿ ಆಚಾರವ
ಕೇಳವ್ವ ಕೇಳವ್ವ ೧೮೩
ಅಂದೂ ನೀನೆ
ಗಿರಿ ಕೈಯ ಧನವ ೧೮೪
ಅಕ್ಕ ಕೇಳಕ್ಕ
ಕೈಯ ಸಂಕಲೆಯ ೧೮೫
ಅಗ್ನಿ ಸರ್ವವ್ಯಾಪಕ
೧೯೨
ಗಂಡ ನೀನು
ಅನುತಾಪದೊಡಲಿಂಗೆ
೨೨ ಗಂಡ ಮನೆಗೆ ೧೯೩
ಅಮೃತವನುಂಬ
ಜಂಗಮದ ಕೈ
ಅಯ್ಯಾ ತನ್ನ
ಜೀವೇಶ್ವರಗಾಶ್ರಯ ೨೧೬
ಅಲ್ಲದವರೊಡನಾಡಿ
ತನುವ ಬೇಡಿದಡೆ ೨೨೩
ಅಸನದಿಂದ
೫೪ ತನುವೆಂಬ ಸಾಗರ ೨೨೮
ಆಡಬಹುದು
C ತಾಯ ತೊರದು ೨೩೬
ಆನು ನೊಂದೆನಯ್ಯ

ಆಳುತನದ ೭೦ ದೇಹವುಳ್ಳನ್ನಕ್ಕ

೮೪ ಧರೆಯ ಮೇಗಣ ೨೪೫


ಉರಕ್ಕೆ ಜವ್ವನ
೮೬ ನಾಳದ ಮರೆಯ ೨೫೭
ಉರಿಯೋಡಿದಡೆ
೮೮ ೨೬೩
ಉಳುಹುವ ನಿಮ್ಮ ಒಕ್ಕುದ
ನೀನು ಹೋಗೆಂದಡೆ ೨೬೫
ಊರ ಮುಂದೆ
|
೯೭ ನೀನಿಕ್ಕಿದ ಸರಿದೊಡಕ
ಎನ್ನ ತುಂಬಿದ
ನೋಡೆನೆಂಬವರ ೨೭೨
ಎನ್ನ ನಾಲಿಗೆಗೆ.
ಪರರೊಡತಣ ೨೭೮
ಎನ್ನನಿರಿದಡೆ
ಪುದುಗಿದ ಸಂಸಾರ ೨೮೧
ಎನ್ನ ಪ್ರಾಣ ಜಂಗಮ
೧೦೪ ಪೃಥ್ವಿಯಲ್ಲಿ ೨೮೬
ಎನ್ನ ಮನ ಪ್ರಾಣ
b
(*
ಎನ್ನ ಮೀಸಲ ೧೦೭ ಬಸವಣ್ಣನ ಪಾದವ
ಬಿಡು ಬಿಡು ಸಂಗವ ೩೦೪
ಎನ್ನ ಎಲುವಿಲ್ಲದ
C
0
ಎಲೆ ಕಾಲಂಗೆ ೧೧೩ ಭಕ್ತನೆ ಕುಲಜನೆಂಬ
8
ಮದನಾರಿಯೆಂಬ ೩೨೨
ಎಲೆ ತಾಯಿ
C ಕ(
6
ಎಳೆವರದಲ್ಲಿ ಮನ ಮುನ್ನ
C
ಮನೆಯೆನ್ನದು ೩೨೮
ಒಂದರಳ ಶಿವಂಗೆಂದ
೧೩೮ ಮುಡಿಬಿಟ್ಟು ೩೩೮
ಕಂಡಡೆ ಒಂದು
ಮುತ್ತು ಒಡೆದಡೆ ೩೪೦
ಕರ್ಮ ಶರಗ ೧೪೮

೧೫೯ ೩೪೨
ಕಾಮವುಳ್ಳವರಿಗೆ ಮುನ್ನ ಮಾಡಿ
ಮೊಲೆ ಬಿದ್ದು ೩೪೫
ಕಾಯದ ಗುಂಪ O
ಶಿವಶರಣೆಯರ ವಚನಸಂಪುಟ

ಲಾಂಛನ ಸಹಿತ ೩೫೦ ಅಡಿಯಿಡಲಿಲ್ಲ ೮೧೫

ಲಿಂಗಾನುಭಾವ ೩೫೯ ೮೧೯


ಅನಾದಿಯ ಸ್ಕೂಲ
ವಟವೃಕ್ಷದೊಳಡಗಿದ ೩೬೩ ಅರಸರಸಲು ನಾನು ೮೨೩

ವಿಷಯದ ಸುಖ ೩೭೦ ಅರಿವಡೆ ನಾನು ೮೨೭

ವೃಷಭನ ಹಿಂದೆ ೩೭೧ ಅರಿವನರಸಿ ೮೨೮


ಶರಣರ ಮನ ೩೭೩ ಅರಿಯೆನುರಿಯೆ ೮೨೫
ಶಿವನು ತಾನೆ ೩೭೬ ಅರಿಯೆನರಿಯೆ ೮೨೬
ಶಿವ ಶಿವ ಕರ್ಮ ೩೮೦ ಅರುಹನರಿಯಲು ೮೩೦

ಸಟೆ ಹಿರಿದಾಯಿತ್ತು ೩೮೮ ಅಲ್ಲಮನ ವಂಶ ೮೩೧

ಸತ್ತಾದಡೆ ಶರೀರಂ ೩೯೧ ಅಲ್ಲಲ್ಲಿಯ ಶರಣರು ೮೩೩

ಸತಿಯೆಂಬುದು ೩೯೨ ಆಟವಳಿದು ೮೩೬

ಸಪ್ತಧಾತುಗಳಿಂದ ೩೯೪ ಆಡದ ನುಡಿಯ ೮೩೭

ಸಾವಿರ ಹೊನ್ನಿಂಗೆ ೩೯೭ ಆಡದ ಮುನ್ನ ೮೩೯


?
ಸೂರ್ಯ ಪ್ರಕಾಶ ೪೦೨ ೮೪೧
ಆಡಲಿಲ್ಲ ಹಾಡಲಿಲ್ಲ

ಆನಳಿದೆನು ೮೪೫
ಸ್ಥಾನ ಭೇದ
ಹಸಿವು ತೃಷೆ ೪೧೪ ಆನು ನಿಷ್ಠೆಯುಳ್ಳವಳ ೮೪೬

ಹಸೆ ಹಂದರ ೪೧೬ ಆನು ಭಕ್ತಿಯಲ್ಲ ೮೪೭

ಹೊನ್ನು ಮುರಿದಡೆ ೪೩೧ ಆರ ಸಂಗವೂ ೮೪೯

೮೫೦
ಆರಾಧ್ಯರಿಲ್ಲದಂದು
ಅಮುಗೆರಾಯಮ್ಮನ ವಚನ
ಆರೆಸಳೆಂಬರು ೮೫೧
ವಿಶ್ವಮಯರೂಪವಾಗಿ ೬೮೬
೮೫೨
ಆವಾವ ಕಾಲದಲ್ಲಿ
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ ವಚನ ೮೫೪
ಇಬ್ಬರು ನಾವು
ಅಹುದು ಅಹುದು ೭೬೩ ಇರವರಿದು ೮೫೫

ಇರವಿಲ್ಲದ ವಸ್ತುವ ೮೫೬


ನೀಲಮ್ಮನ ವಚನಗಳು
ಎಂಟೆಸಳ ಹೂ ೮೬೦
ಅಂಗದ ಸಂಗವ ೮೦೧
osoa ಎಡೆದೆರಹಿಲ್ಲದ ೮೬೧
ಅಂಗನೆಯ ಸಂಗವ
೮೦೪ ಎಡಬಲನ ಕಾಯವ ೮೬೨
ಅಂಗವಡಗಿ
೮೦೫ ಎಡೆಯ ಮಾಡಿದ ೮೬೩
ಅಂಗವನರಿದು
೮೬೪
ಅಂಗವಿಲ್ಲವೆನಗೆ ೮೦೬ ಎಡೆಯಲ್ಲಿ ಹುಟ್ಟಿದ
೮೬೫
ಅಂಡದಲ್ಲಿ ಒಂದು ೮೦೯ ಎಡೆಯಿಲ್ಲ ಕಡೆಯಿಲ್ಲ

ಎಡೆಯಿಲ್ಲದ ಭಕ್ತಿಯ ೮೬೬


ಅಘೋರವಕ್ತ ೮೧೦
೮೧೨ ಎಡೆಯಿಲ್ಲದೂಟವ ೮೬೭
ಅಡಲಿಲ್ಲದಊಟ
ಎತ್ತಳ ಸುಖ ೮೬೮
ಅಡವಿಯ ಹುಯ್ಯಲು ೮೧೪
೪ ೨೫
ವಚನಗಳ ಅಕಾರಾದಿ

೮೬೯ ಐದರು ಎನಗೆ ೯೩೧


ಎತ್ತಿದ ಪ್ರಸಾದ
೮೭೧ ಒಡಲ ಗುಣವ ೯೩೨
ಎನಗಿನ್ನಾರು
೮೭೫ ಕರಣಂಗಳ ಹಂಗ. ೯೩೫
ಎನಗೆ ಈ ಪ್ರಾಣದ
೮೭೬ ಕಲಿಯುಗದಲ್ಲಿ ೯೩೮
ಎನಗೆ ಎಲ್ಲಿಯೂ
೮೭೮ ಕಾಮದ ಹಂಗಿಗನಲ್ಲ ೯೩೯
ಎನಗೆ ಸಂಸಾರ
ಕಾಮವನಳಿದ ೯೪೦
ಎನಗೆ ಹಿತಕಾರಿಗಳಾಗಿ ೮೮೦
೮೮೧ ೯೪೪
ಎನಗೆ ಹುಟ್ಟುವ ಕಾಯವಿಲ್ಲದ
೮೮೩ ೯೪೯
ಎನಗೇನೆಂಬೆನೆಂಬ ಕುಲವಳಿದ ಹೆಣ್ಣ
೮೮೪ ೯೫೧
ಎನ್ನ ಕೈಯಳ ಕ್ರಮವನರಿಯದೆ
೮೮೫ ಜನನ ಮರಣ ೯೫೩
ಎನ್ನಯ್ಯನೆನ್ನಲ್ಲಿ
೮೮೬ ಜಯ ಸುಖ ೯೫೪
ಎಪ್ಪತ್ತೈದು ಸಾವಿರ
ಎರಡಿಲ್ಲದಂಗಕ್ಕೆ ೯೫೫
eseses ಜ್ಞಾನವಿಲ್ಲದ ಕ್ರಿಯೆ
೮೯೦ ಠಾವಿಲ್ಲ ಠಾವಿಗೆ ೯೫೬
ಎಲ್ಲರ ಸಂಗ
೮೯೧ ತಿಳುವಿನ ಸಂಗ ೯೬೨
ಎಲ್ಲನರಿಯಬಹುದೆ

ಎಲ್ಲವನರಿಯನೆಂದರೆ USE 9 ತ್ರಿವಿಧ ಪ್ರಸಾದ EP

ಎಲೆ ಲಿಂಗವೆ ೮೯೮ ೯೬೫


ದಾಯದಲ್ಲಿ ಹುಟ್ಟಿದ

ಎಲೆಯಿಲ್ಲದೆ ೮೯೯ ದೃಢವಿಡಿದ ಭಕ್ತಿಗೆ ೯೬೬

ಎಸಳ ಕಂಡು ೯೦೧ ದ್ವಯಲಿಂಗವೆಂಬರು ೯೬೭

ಎಸಳ ಕರಣವ ೯೦೨ ನಡವ ಕಾಲಿಂಗೆ ೯೬೯

ಎಸಳಕ್ಷರವ ೯೦೩ ನಡೆನೋಟವಿಲ್ಲದೆ ೯೭೦

ಎಸಳ ಪಂಜರದ ೯೦೫ ನಡೆಯಲಿಲ್ಲ ೯೭೧

ಎಸಳು ಬಿಳಿದು ೯೦೬ ನನಗೊಂದು ತಾಣ ೯೭೨

ಎಸೆವಕ್ಷರಕ್ಕೆ ೯೧೦ ನನ್ನನಾರೂ ಅರಿಯರು ೯೭೩

ಏಕಮೂರ್ತಿ ೯೧೨ ನಾಡನಾಳಹೋದರೆ ೯೭೭


‫اهر‬
ಏಕಲಿಂಗದಲ್ಲಿ ೯೧೫ ನಾನಾವ ಗಮನವ

ಏಕಲಿಂಗನಿಷ್ಟ ೯೧೬ ೯೮೩


ನಾವು ನಮ್ಮ
ಏಕಸಂಗ ನಿಸ್ಸಂಗ ೯೧೭ ನಿಷ್ಠೆಯೆಂಬುದ ೯೮೭
‫( امب‬
ಏಕಾಕಾರ ನಿರಾಕಾರ ೯೧೮ ನೀರುಂಡ ಸಾರ
‫ام اهب‬
ಏತರ ಮಾರ್ಗ ೯೨೨ ನೆನೆಯಲಾಗದು
‫امب امب‬
ವಿತರಲ್ಲಿಯೂ ೯೨೩ ನೋಡುವಡೆಯನ್ನ
‫اهب اهب‬
ಏತರಲ್ಲಿಯೂ ತೆರಹಿಲ್ಲ ೯೨೪ ಪಯಣವಿಲ್ಲದೆ
‫انب اهب‬
ವಿತರಿಲ್ಲಯೂ ಪರಿಣಾಮ ೯೨೫ ಪ್ರಣವಾಕ್ಷರವ
‫انب اهب‬
ಏನೆಂದೆನ್ನಬಹುದಯ್ಯ ೯೨೮ ಪ್ರಸಾದಿಗಳು
೪೨೬ ಶಿವಶರಣೆಯರ ವಚನಸಂಪುಟ

ಪ್ರಾಣದ ಹಂಗೆಮಗಿಲ್ಲ εεε ಮೂವರಳಿದು ೧೦೫೮

ಪ್ರಾಣಯೋಗವ ೧೦೦೦ ಮೌಕ್ತಿಕದ ಮಂಟಪ ೧೦೫೯

ಪ್ರಾಣವಿಲ್ಲದ ಹೆಣ್ಣು ೧೦೦೧ ಮೃತವಳಿದು ೧೦೬೦

ಪ್ರಾಣವಿಲ್ಲ ಪ್ರಸಾದವಿಲ್ಲ ೧೦೦೨ ಯಕಿಯರಮನವ ೧೦೬೧

ಬಣ್ಣದ ಪುತ್ತಳಿಯ ೧೦೦೩ ಯುಗವಿಲ್ಲ ಜುಗವಿಲ್ಲ ೧೦೬೨

ಬಹಿರಂಗದಾರೋಗಣೆಯ ೧೦೧೦ ಲಿಂಗವಿದ್ದರೇನು ೧೦೬೬

ಬ್ರಹ್ಮದನಮ್ಮುಗೆ ೧೦೧೩ ಲಿಂಗಸಂಗದಲ್ಲಿ ೧೦೬೭

ಬ್ರಹ್ಮದ ಮುಂದೆ ೧೦೧೪ ಶಿರಭಾರಕರ್ಣಂಗಳ ೧೦೬೮


ಬ್ರಹ್ಮವಕೂಡಲು ೧೦೧೫ ಸಂಗನಿಸ್ಸಂಗ ೧೦೭೧

ಭಕ್ತಿಯಿಲ್ಲದ ೧೦೧೭ ಸಂಗಯ್ಯ ಸಂಗಯ್ಯ ೧೦೭೨

ನೃತ್ಯಾಚಾರವಳಿದು ೧೦೧೯ ಸರ್ವಾಂಗ ಶುದ್ದವಾಗಿ

ಮಂಗಳಸೂತ್ರವ ೧೦೨೦ ಸುವೀರವಾದಡಾಗಲಿ ೧೦೭೭

ಮಂಡೆಯಿಲ್ಲದೆ | ೧೦೨೧ ಸ್ವಯಸಮರಸದ ೧೦೭೮

ಮಂತ್ರಾಕ್ಷತೆಯ ೧೦೨೨ ಸ್ಥಾನಮಾನವಿಲ್ಲದೆ ೧೦೭೯

ಮನದ ಮಧ್ಯದ ೧೦೨೬ ಹಂದೆಯಲ್ಲ ನಾನು ೧೦೮೦

ಮನದ ಹಂದೆ ೧೦೨೭ ಹಿರಿಯತನಕ್ಕೆ ೧೦೮೧

ಮನವಿಲ್ಲದ ಮಾತು ೧೦೨೮ ಹುಟ್ಟಿಲ್ಲದ ಭೂಮಿಯಲ್ಲಿ ೧೦೮೨


ಮನವಿಲ್ಲದೆ ೧೦೨೯ ಹುಟ್ಟುಗೆಟ್ಟೆ ೧೦೮೩

ಮನ ಒಂದು ರೂಪಾಗಿ ೧೦೩೦ ಹೆಚ್ಚನರಿದು ೧೦೮೪

ಮಲಮೂತ್ರ ೧೦೩೧ ಹೆಸರಿಲ್ಲದ ರೂಪ ೧೦೮೫

ಮಾತನಳಿದು ೧೦೩೫
ಮೋಳಿಗೆ ಮಹಾದೇವಿಯ ವಚನ
ಮಾತಿನ ಹಂಗಿಲ್ಲದವಳಾದೆ ೧೦೩೬
ಆರುದೇವರ ನಿಮ್ಮ ೧೧೪೦
ಮಾಯದ ಮನದ ೧೦೪೧

ಮಾಹೇಶ್ವರನ ಸಂಗ ೧೦೪೨ ಹಡಪದ ಲಿಂಗಮ್ಮನ ವಚನ

ಮುಖದಂತರದ ೧೦೪೪ රට.


ಶರಣರೈಕ್ಯರೆಂದು
ಮುನ್ನಲೊಂದು ೧೦೪೭
ಕುರಂಗೇಶ್ವರಲಿಂಗಾಂಕಿತ ವಚನ
ಮುನ್ನವೆ ಮುನ್ನವೆ ೧೦೪೯
ಕಟ್ಟಕಡೆಯ ೧೩೫೦
ಮುನ್ನಳ ದೋಷ ೧೦೫೦

ಮೂನೂಲನಳಿದೆ ೧೦೫೨ ಮಸಣಯ್ಯಪ್ರಿಯ ಮಾಹೇಶ್ವರಲಿಂಗ

ಮೂರ್ತಿಯ ಸಂಗ ೧೦೩ ಅಂಕಿತದ ವಚನ


೧೦೫೫
ಮೂಲಪ್ರಣವ
ಅಯ್ಯಾ ಅಸ್ತಿ ಚರ್ಮ ೧೩೫
ಮೂಲಾಧಾರದ ೧೦೫೬

ಮೂಲಾಧಾರದ ಮಂಟಪ ೧೦೫೭


ಕಠಿಣ ಪದಕೋಶ

ಅಜಾತ - ಹುಟ್ಟಿಲ್ಲದವ, ಶರಣ

ಅಟಮಟ- ಮೋಸ, ಠಕ್ಕುತನ


ಅಂಗಗೊಳಿಸು - ಅಳವಡಿಸಿಕೊಳ್ಳು
ಅಟ್ಟಳೆ - ಅಟ್ಟ
ಅಂಗೈಸು - ಆಶ್ರಯಿಸು, ಜೊತೆಸೇರು
ಅಡಗು - ಮಾಂಸ
ಅಂಜನ - ಕಾಡಿಗೆ
ಅಡಹು - ಆಸರೆ
ಅಂಡಜ - ಬ್ರಹ್ಮಸೃಷ್ಟಿ
ಅಡಹ - ಆತಂಕ , ಅಡ್ಡಿ
ಅಂದ - ರೀತಿ, ಸ್ವರೂಪ
ಅಡು - ಮಾಡು, ಅಡುಗೆಮಾಡು
ಅಂದಳ - ಅಂದಣ , ಪಲ್ಲಕ್ಕಿ
ಅಣ್ಣೆವಾಲು - ಮಧುರವಾದ ಹಾಲು
ಅಂದುಗೆ - ಕಾಲ್ಕಡಗ
ಅಧವೆ - ಅನಾಥ |
ಅಂಧಕ - ಕುರುಡ
ಅತಿಗಳ - ತ್ಯಜಿಸು, ಬಿಡು
ಅಂಬುಧಿ - ಸಮುದ್ರ ಅರ್ತಿಕಾರ - ಯಾಚಕ

ಅಕ್ಕಜ - ಆಶ್ಚರ್ಯ ಅತೀತ - ಕೈಗೆ ನಿಲುಕದವ, ಮೀರಿದ


ಅಕ್ಕು - ಒಗ್ಗು , ಆಗು ಜೀರ್ಣವಾಗು ಸ್ಥಿತಿಯನ್ನು ಹೊಂದಿದವ
ಅಕ್ಕ - ದುಃಖ ಅದ್ದರಿಸು - ಗದ್ದಲಮಾಡು

ಅಕ್ಟೋತ್ತು - ಬಲವಾಗಿ ತಳ್ಳು ಅಪ್ರಮಾಣ - ಅಳತೆಗೆ ನಿಲುಕದ

ಅಗಡ - ಒರಟು, ಎಟ್ಟಿ ಅರ್ಪಿತ - ಅರ್ಪಿಸಿದ, ಪ್ರಸಾದ

ಅಗಮ್ಮ - ಸುಲಭವಾಗಿ ಸಿಗದ, ಅಬದ್ದ - ಅಸಂಬದ್ದ , ಅರ್ಥವಿಲ್ಲದ

ದೊಡ್ಡಸ್ತನದ ಸೊಬಗು ಅಬ್ಬರ - ಆರ್ಭಟೆ

ಅಗುಸೆ - ಊರ ಮಹಾದ್ವಾರ ಅಭಿಮಾನ - ಗೌರವಯುಕ್ತವಾದ ಪ್ರೀತಿ

ಅಗಲು - ನೈವೇದ್ಯ, ಎಡೆ ಅಮೇಧ್ಯ - ಮಲ, ಹೇಸಿಕೆ


ಅನಂಗ - ಕಾಮ
ಅಗ್ಗಣಿ - ಪೂಜೆಗಾಗಿ ತಂದ ನೀರು
ಅನಂತರು - ಅಸಂಖ್ಯರು
ಅಗಿ - ತಿನ್ನು

ಅಗೋಚರ - ಕಾಣದ ಅನಲ - ಅಗ್ನಿ , ಬೆಂಕಿ

ಅಘಹರ - ಪಾಪಹರ, ಶಿವ ಅನ್ನಕ್ಕರ - ಅಲ್ಲಿಯವರೆಗೆ


ಅನಿಲ - ಗಾಳಿ
ಅಘೋರ- ಭಯಂಕರ, ಶಿವನ
ಅನು - ಯೋಗ್ಯತೆ, ಹದ
ಪಂಚಮುಖಗಳಲ್ಲಿ ಒಂದು
ಅನುಜ್ಞೆ - ಅಪ್ಪಣೆ
ಅಚ್ಚುಗ - ಸಲುಗೆ, ಪ್ರೀತಿ
ಅನುಗೊಳಿಸು - ಸಂಬಂಧಿಸು,
ಅಚ್ಚುಗ - ಆಶ್ಚರ್ಯ, ಅದ್ಭುತ
ಗಟ್ಟಿಗೊಳಿಸು
ಅಷ್ಟೊತ್ತು - ಮುದ್ರಿಸು
ಅನುಮಾಡು - ರೂಪಿಸು
ಅಜ - ಬ್ರಹ್ಮ , ಆಡು
ಅನುವು- ಇಂಗಿತ, ರಹಸ್ಯ , ಸ್ಥಳ
೪ ೨೮
ಶಿವಶರಣೆಯರ ವಚನಸಂಪುಟ

ಅನುಸರಣೆ - ಹಿಂಬಾಲಿಸುವಿಕೆ, ವಂಚನೆ,

- ಮೋಸ .
ಆಣತಿ - ಅಪ್ಪಣೆ, ಆಜ್ಞೆ
ಅನೃತ - ಸುಳ್ಳು ಆತುರ - ಗಡಿಬಿಡಿ, ಅವಸರ
ಅಮಳೋಕ್ಯ - ಗಂಟಲು ಆದರಿಕೆ - ಗೌರವ
ಅರಕೆಗೆಡು- ಕೊರತೆಯಿಲ್ಲವಾಗು ಆಪ್ಯಾಯನ - ತೃಪ್ತಿ
ಅರತ - ಬತ್ತಿದ, ಹಿಂಗಿದ ಆಮಳಕ - ನೆಲ್ಲಿಕಾಯಿ
ಅರತುಹೋಗು- ಒಣಗಿಹೋಗು ಆಮಿಷ - ವಿಷಯಾಪೇಕ್ಷೆ
ಅರಲುಗೊಳ್ಳು - ಒಣಗು, ಬತ್ತು
ಆಯು - ಆಯುಷ್ಯ
ಅರಸು - ಹುಡುಕು
ಆರಡಿಗೊಳ್ಳು - ಆವರಿಸು
ಅರಿದು - ಆಶ್ಚರ್ಯ , ಅಸಾಧ್ಯ ಆರತ - ಸಂತೋಷ, ಪ್ರೀತಿ
ಅರೆ - ಬಂಡೆಗಲ್ಲು
ಆರೂಢ - ಜ್ಞಾನದ ಉನ್ನತ ನಿಲುವು
ಅಲಗು - ಕತ್ತಿ , ಚೂರಿ ಆರೋಗಣೆ - ಊಟ

ಅಲರು - ಹೂವು ಆರೈ - ವಿಚಾರಿಸು


ಅಲಸಿಕೆ - ಬೇಸರು ಆಲಯ - ಮನೆ

ಆಲಮಟ್ಟಲು - ತಾಟು
ಅಲುಪ್ತ - ಪರಿಪೂರ್ಣ, ಕೊರತೆಯಿಲ್ಲದ

ಅವಗಡಿಸು - ದೂರಮಾಡು ಆಲಿಸು - ಕೇಳು

ಅವಗಹಿಸು - ಅವಗ್ರಹಿಸು, ಆಲು - ಒದರು, ಕೂಗು, ಬೊಬ್ಬೆಯಿ


ಹಿಡಿದುಕೊಳ್ಳು ಆವರಣಿಸು - ಬಂಧಿಸು, ಮುಸುಕು

ಅವಧರಿಸು - ಕೇಳು ಆವಿಗೆ - ಕುಂಬಾರನ ಗಡಿಗೆ ಬೇಯಿಸುವ

ಅವಧಿ - ಸಮಯ ಕುಲುಮೆ

ಅವಾರಿ - ಅತಿಥಿ ಆವು - ಆಕಳು

ಅವಿಮುಕ್ತಿ ಕ್ಷೇತ್ರ - ಪುಣ್ಯಸ್ಥಳ ಆಹ್ವಾನಿಸು - ಸ್ವೀಕರಿಸು,


ಬರಮಾಡಿಕೊಳ್ಳು
ಅವಿರಳ - ಬಿಟ್ಟೂಬಿಡದ

ಅಶನ - ಅನ್ನ ಆಳ - ಒಡೆಯ

ಅಸಿ - ಖಡ್ಗ ಆಳಿ - ಯುಕ್ತಿ , ಕ್ರಮ

ಅಸು - ಪ್ರಾಣ, ಜೀವ ಆಳಿಗೊಳ್ಳು - ತಿರಸ್ಕರಿಸು, ಹಿಂಸಿಸು,


ಮೋಸಮಾಡು
ಅಹಿ - ಸರ್ಪ

ಅಹೋರಾತ್ರಿ - ಹಗಲಿರುಳು ಆಳುತನ - ಶೂರತನ, ಸೇವೆ

ಅಳಪು - ಆಸಮಾಡು

ಅಳಲು - ದುಃಖ

ಅಳಿ - ದುಂಬಿ ಇಂಗಳ - ಬೆಂಕಿ, ಕೆಂಡ


ಕಠಿಣ ಪದಕೋಶ ೪ ೨೯

ಇಂಬು - ಅವಕಾಶ ಉದ್ದಂಡವೃತ್ತಿ - ಗರ್ವ , ಅಹಂಕಾರ

ಇಕ್ಕಲಿಸು - ಒಟ್ಟುಗೂಡಿಸು ಉದಾಸಿ - ನಿರ್ಲಿಪ್ತ

ಇಕ್ಕು - ನೀಡು, ಎಡೆಮಾಡು ಉದುಮದ - ಅತಿಶಯವಾದ ಮದ

ಇಕ್ಕೆ - ವಾಸಸ್ಥಳ, ಮನೆ ಉನ್ಮಣಿನಿ - ಊರ್ಧ್ವಮುಖವಾದ

ಇಕ್ಷುದಂಡ - ಕಬ್ಬು ಮನಸ್ಸು

ಇಟ್ಟೆಡೆ - ಇಕ್ಕಟ್ಟು ಉಪಮಾತೀತ - ಹೊಲಿಕೆಗೆ ಮೀರಿದ

ಇಡು - ಹೊಡೆ ಉಪ್ಪರಿಸು - ಜಿಗಿ, ಹಾರು , ತೆಗೆ

ಇತರೇತರ - ಪರಸ್ಪರ, ಅನ್ನೋನ್ಯ ಭೇದ, ಉಭಯಕುಳ - ದ್ವಂದ್ವಗಳ ಪರಂಪರೆ

ದ್ವಂದ್ವ ಉರ - ಎದೆ

ಇಪ್ಪೆ - ಒಂದು ತರದ ಮುಳ್ಳು ಕಂಟಿ ಉರವಣೆ - ಉಪಟಳ, ಕಾಟ

ಇಮ್ಮನ- ಎರಡು ಮನಸ್ಸು , ಚಂಚಲತೆ ಉರೆ - ಚೆನ್ನಾಗಿ

ಇಮ್ಮೆ - ಎರಡು ಮಗ್ಗಲು ಉಲುಹು - ಧ್ವನಿ

ಇರಪರ - ಇಹಲೋಕ ಪರಲೋಕ, ಉಳಿ - ಬದುಕು, ಚಾಣ

ಬಂಧಮೋಕ್ಷ ಉಳ್ಳ - ಈರುಳ್ಳಿ , ಉಿಗಡ್ಡೆ

ಇರಪರನಾಯಕ - ಪರಶಿವ ಊಡು - ಉಣಿಸು, ತಿನಿಸು

ಇರವು - ಮೂಲಸ್ಥಿತಿ ಊಣೆಯ - ಕುಂದು ಕೊರತೆ

ಇಕ್ಷುದಂಡ - ಕಬ್ಬು ಊಳಿಗ - ಸೇವೆ

ಈಯು - ಕೊಡು
ಎ, ಏ, ಐ
ಈರೇಳು - ಹದಿನಾಲ್ಕು

ಎಕ್ಕಲ - ಹಂದಿ
ಈರೇಳುಭುವನ - ಹದಿನಾಲ್ಕು ಲೋಕ
ಎಗ್ಗ - ಹುಂಬ
ಈಸು - ಇಷ್ಟು , ಸ್ವಲ್ಪ
ಎಡರು - ತೊಂದರೆ
ಉ , ಊ
ಎಡೆಗೋಲು- ಅಡ್ಡಗೋಲು,
ಉಚ್ಚರಣೆ - ಹೊಯ್ದಾಟ ತಡೆಗೋಲು
ಉಡುಗು - ಕಡಿಮೆಯಾಗು, ಮುಚ್ಚು ,
ಎಯಿದೆ - ಚೆನ್ನಾಗಿ
ನಾಶವಾಗು, ಒಂದುಗೂಡಿಸು
ಎಬ್ಬಿಸು- ತಲುಪಿಸು, ಮುಟ್ಟಿಸು
ಉತ್ತರಪಥ - ಬ್ರಹ್ಮರಂಧ್ರ ಮಾರ್ಗ
ಎದ್ದು - ಹೊಂದು, ಧರಿಸು
ಉತ್ತು - ಹರಗು
ಎರಗು - ಮನಸ್ಸು ಹರಿ
ಉತ್ಪತ್ಯ - ಹುಟ್ಟು
ಎರೆ - ಮಣ್ಣು
ಉದರ - ಹೊಟ್ಟೆ ಎಲವದಮರ - ಬೂರಲಮರ
ಉದ್ಧತ - ಹೊರಬಂದ ಎಸಗು - ಹೋಳ
೪೩೦ ಶಿವಶರಣೆಯರ ವಚನಸಂಪುಟ

ಎಸಳು - ಹೂವಿನ ಪಕಳೆ ಒಲವರ - ಆನಂದ, ಪ್ರೀತಿ

ಎಸು - ಹೊಡೆ, ಬಾಣಬಿಡು - ಒಳಗಾದವರು, ಸಹಾಯಕರು :

ಎಸೆ - ಬಾಣಹೊಡೆ ಒಳಗುಂದು - ಕಾಂತಿಗುಂದು, ಬಣ್ಣಗೆಡು

ಎಳಕು - ಚಿಗುರು ಓ - ಮೆಚ್ಚುಗೆ

ಎಳಸು - ಬಯಸು ಓಗರ - ಅನ್ನ

ಏಕೀಕರಿಸು - ಒಂದುಗೂಡಿಸು ಓಲಾಡು - ಈಸು, ಸಂತೋಷಪಡು

ಏಡಿಸು - ಅಣಕಿಸು , ಹೀಯಾಳಿಸು ಓಲೈಸು - ಸೇವಿಸು

ಏಣ - ಚಿಗರಿ ಓಸರಿಸು - ಓರೆಯಾಗು , ಹಿಂದೆಸರಿ

ಏಣಾಂಕ - ಚಂದ್ರ , ಶಿವ

ಏರಿ - ಒಡ್ಡು
ಕಂಗಳಸೋನೆ- ಕಣ್ಣೀರು
ಏರು - ಗಾಯ , ಪೆಟ್ಟು
ಏಹೆ - ಏಂ ಅಹೆ, ಏನಾಗುವೆ ಕಂಗೆಡು - ಬುದ್ದಿಭ್ರಂಶವಾಗು,

ದಿಕ್ಕು ಕಾಣದಾಗು
ಐದು - ಹೊಂದು, ಪಂಚೇಂದ್ರಿಯ ,

- ಪಂಚಮಹಾಭೂತಗಳು ಕಂಗೊಳಿಸು - ಹೊಳೆ, ಪ್ರತ್ಯಕ್ಷಗೊಳಿಸು

ಐಸೆ - ಉಂಟೆ ಕಂದಲ - ಮಣ್ಣಿನಪಾತ್ರೆ , ತಲೆಬುರುಡೆ

ಕಂಥ - ಹರಕುಬಟ್ಟೆ,
ಒ, ಓ ಕಂಬಳ - ದಿನಗೂಲಿ

ಒಗತನ - ಬಾಳುವೆ ಕಟಕ - ಮೋಸ, ಕಪಟ

ಒಚ್ಚತ - ತೃಪ್ತಿಕರ, ಹಿತಕರ ಕಟಿಹಾದ - ಸೀಳಿದ, ಒಣಗಿದ

ಒಚ್ಚತವೋಗು - ನಂಬು, ನಚ್ಚು ಕಟ್ಟು - ನಿಯಂತ್ರಣ, ಅಂಕಿತ

ಒಚ್ಚತ್ತು - ಒಂದುಸಲ ಕಟ್ಟೋಗರ - ರುಚಿಯಾದ ಬುತ್ತಿ

ಒಚ್ಚರಿಸು - ಹಾರು , ಪುಟಿ | ಕಠಾರಿ - ಕತ್ತಿ

ಕಡವರ - ಬಂಗಾರ
ಒಬ್ಬರಿಸು - ಪುಟಿ , ಜಿಗಿ |

ಒಡ್ಡಣೆ - ಮೋಡದ ಸಮೂಹ ಕಡುಕ - ದುಷ್ಟ , ಒರಟ

ಒತ್ತರಿಸು - ಒಂದುಗೂಡಿಸು ಕಡೆಗೋಡು - ನಾಶವಾಗು

ಒತ್ತೆ - ಅಡವು, ಸೂಳೆಗೆ ಕೊಡುವ ಹಣ ಕತ್ತು - ಕುತ್ತಿಗೆ, ಕೊರಳು

ಕತ್ತಲೆ - ಅಜ್ಞಾತ, ತಮಸ್ಸು


ಒಪ್ಪಚ್ಚಿ - ಸ್ವಲ್ಪ , ತುಸು

ಒಮ್ಮನ - ಒಂದೆ ಮನಸ್ಸು , ಅಳತೆ ಕಥಾಕಳಿ - ಕಳವಳ

ಒರಗು - ಆನಿಕೆ, ಮಲಗು ಕದಂಬ - ಸಮೂಹ, ಮಿಶ್ರ

ಒರೆ - ತಿಕ್ಕಿನೋಡು, ಪರೀಕ್ಷಿಸು ಕದಳಿ - ನಿರ್ವಯಲು

ಕದ್ದಹಕಾರ - ಕಳ್ಳ
ಒರೆಕಟ್ಟು - ಕತ್ತಿಯನ್ನು ಕಟ್ಟು
ಕಠಿಣ ಪದಕೋಶ

ಕನಲು - ಕಸರು, ಮಾಲಿನ್ಯ ಕಾಳಿಕೆ - ಕಲಂಕ

ಕಬ್ಬಲಿಗ - ಅಂಬಿಗ, ಮೀನುಗಾರ ಕಾಳು - ಕೆಡಕು

ಕಬ್ಬಿಸಿಲು - ದಟ್ಟವಾದ ಬಿಸಿಲು ಕಿತ -ದೋಷ, ತಪ್ಪು

ಕದಗ - ಒಣಗಿದ ಮಣ್ಣಿನ ಪಾತ್ರೆ ಕಿರುವಳ್ಳ - ಝರಿ, ಸಣ್ಣಹಳ್ಳ

ಕರಣ - ಇಂದ್ರಿಯ ಕಿಲ್ಪಿಷ - ವಿಷ

ಕರತಳ - ಅಂಗೈ ಕಿಸುಕುಳ - ಹೊಲಸು

ಕರಿಗೊಳ್ಳು - ಸುಟ್ಟುಹೋಗು, ಕೀಟ - ಕ್ರೀಡೆ

ಲಯವಾಗು ಕೀಲ - ರಹಸ್ಯ

ಕರು - ಆಕಳುಕರು ಕೀಲಿಸು - ಜೋಡಿಸು

ಕರುಮಾಡ - ಉಪ್ಪರಿಗೆ ಮನೆ ಕೀಳುದೊತ್ತು - ಕೆಟ್ಟದಾಸಿ

ಕರುವಿಡು - ಎರಕಹೊಯ್ದು ಕುಂಚಿಗೆ - ಶೂದ್ರ


ಕರೆ - ಹಿಂಡು ಕುಂಜರ - ಆನೆ

ಕರ್ಕಶ - ಕಠಿಣ, ಒರಟು ಕುಂದು - ದೋಷ

ಕಲಕೇತ - ಜಾನಪದ ವೇಷಗಾರ ಕುಂಭ - ಕೊಡ

ಕಲ್ಪಿತ -ಊಹಿಸಿದ ಕುಕ್ಕುಂಭೆ - ತುಟ್ಟತುದಿ

ಕಸಬುಗೇರಿ - ವ್ಯಾಪಾರಿಗಳು ಕುಕ್ಕುಟ - ಕೊಳಿ

ವಾಸಿಸುವ ಸ್ಥಳ ಕುಠಾರ - ಕೊಡಲಿ

ಕಳ - ರಣಭೂಮಿ ಕುತ್ತು - ಆಪತ್ತು , ರೋಗ

ಕಳಲೆ - ಚಿಗುರು ಕುನ್ನಿ - ಮರಿ, ನಾಯಿಮರಿ

ಕಳವ - ಭತ್ತ ಕುರುಹು - ಗುರುತು , ಚಿಹ್ನ

ಕಳೆ - ಶಿವಕಳೆ, ಶಾಂತನಿಲವು ಕುಸುಕು - ಹಗುರಾಗಿ ತಳಿಸು,

ಕಾಕಾ - ಕಾಗೆಯ ಕಣ್ಣು ಮೆಲ್ಲಗೆಕುಟ್ಟು

ಕಾಕು - ಕ್ಷುದ್ರ, ಕೊಂಕು , ಕೆಟ್ಟ ಕುಳ - ವಂಶ

ಕೂಟ- ಸಮರಸ, ಐಕ್ಯ , ಹೊಂದಾಣಿಕೆ


ಕಾತರಿಸು - ಚಡಪಡಿಸು, ಗಡಿಬಿಡಿಗೊಳ್ಳು

ಕಾರ್ಪಣ್ಯ - ದೈನ್ಯಸ್ಥಿತಿ ಕೂಟಸ್ಥನಾಗು - ಬೆರೆ, ಒಂದಾಗು

ಕಾಬುದು - ಕಾಣುವುದು ಕೂಪಜಲ - ಹೊಂಡದ ನೀರು,

ಕಾಮಿತ - ಬಯಸಿದ ಚಿಲುಮೆನೀರು

ಕಾರುಕ - ಯಾಂತ್ರಿಕ, ಕಲೆಗಾರ ಕೂರಲಗು - ಹರಿತವಾದ ಕತ್ತಿ

ಕಾಲ - ಯಮ ಕೂರುಮ - ಆಮೆ

ಕಾವಲ - ರಕ್ಷಣೆ ಕೆಡೆ - ಬೀಳು

ಕಾಷ್ಠ - ಕಟ್ಟಿಗೆ ಕೆಲ - ಬದಿ, ಪಕ್ಕ


೪೩೨
ಶಿವಶರಣೆಯರ ವಚನಸಂಪುಟ

ಕೆಲಕ್ಕೆಸಾರು - ಬದಿಗೆ ಸರಿ , ಪಕ್ಕಕ್ಕೆ ಸರಿ ಗಸಣೆ - ಚಿಂತೆ, ದುಃಖ

ಕೆಮ್ - ಹೊಲ ಗಾತ್ರ - ಶರೀರ|

ಕೆಳದಿ - ಗೆಳತಿ ಗಾರಾದ - ತೊಳಲಿದ |

ಕೇಸರಿ - ಸಿಂಹ
ಗಾವಲಿಗ - ಕಾವಲುಗಾರ

ಕೈಗೊಳಿಸು - ಸ್ವಾಧೀನಮಾಡಿಕೊಳ್ಳುವ
ಗಾವಿಲ - ಗಾಂಪ, ಹೆಡ್ಡ

ಕೈದು - ಆಯುಧ ಗುಂಪ - ಗುಣ್ಣು , ಗಾಂಭೀರ , ಆಳ

ಕೈಯಮುದ್ದೆ - ಕೈತುತ್ತು ಗುಂಡಿಗೆ - ಎದೆ, ಪಾತ್ರೆ

ಕೈಯಾನು - ಬೇಡು, ಕೈಯೊಡ್ಡು ಗುಡಿಗೂರಿ - ಕುಗ್ಗಿ , ಹತ್ತಿಯಾಗಿ

ಕೈವಲ್ಯ - ಮೋಕ್ಷ ಕುಳಿತುಕೊ

ಕೊಂಬು - ಕಹಳೆ, ಊದುವ ವಾದ್ಯ ಗುಡಿ - ಧ್ವಜ

ಕೋಟ್ಟಣ - ಬತ್ತದ ಗದ್ದೆ ಗುರುಗಂಜಿ - ಗುಲಗಂಜಿ

ಕೊಣ - ಕೊಳ, ಕೆರೆ ಗುಲ್ಮ - ಪೊದೆ

ಕೊಷ್ಠ - ಕುಷ್ಠರೋಗಿ ಗುಹ್ಯ - ಗುಪ್ತಾಂಗ |

ಕೋಟಲೆ - ತೊಂದರೆ ಗುಳ್ಳೆ - ಗುರುಳೆ, ನೀರಿನ ನೊರೆ

ಕೋಳ - ಬೇಡಿ ಗೂಡು - ಆಶ್ರಯಸ್ಥಾನ, ಮನೆ

ಕ್ಷಪಣ - ಜೈನಯತಿ, ಸವಣ ಗೊಂದಣ - ಗದ್ದಲ, ಗೊಂದಲ

ಕ್ಷುತ್ತು - ಹಸಿವೆ ಗೊತ್ತು - ಸ್ಥಳ, ಎಡೆ

ಕ್ಷೀರ - ಹಾಲು ಗೊರವ - ಶಿವ, ಭಿಕ್ಷುಕ

ಕ್ರಮುಕ - ಅಡಕೆ ಗೊಜಡು - ಗೋಜು, ಗೊಂದಲ

ಕ್ರಮಗೇಡು - ದಾರಿತಪ್ಪು , ಹೆಜ್ಜೆ ತಪ್ಪು ಗೋವತ್ಸ - ಆಕಳಕರು, ಹೋರಿ

ಕ್ರಿ - ಕ್ರಿಯೆ , ಕಾವ್ಯ ಗೋವಿಂದ - ವಿಷ್ಣು

ಕ್ರಿಯಾಲಿಂಗ - ಇಷ್ಟಲಿಂಗ ಗ್ರಾಸ - ತುತ್ತು , ಅನ್ನ

ಖಳ - ನಾಲ್ಕು (ದ್ರೂತಪರಿಭಾಷೆ) ಘಟ - ದೇಹ

ಘನ - ಪರವಸ್ತು
ಗ, ಫ
ಘಾತ - ಆಳ
ಗಡಣ - ಸಮೂಹ
ಮೃತ - ತುಪ್ಪ
ಗಡಣಿಸು - ಕೂಡಿಸು

ಗನ್ನ - ಮೋಸ

ಗನ್ನಗದಕ - ಮೋಸ, ವಂಚನೆ ಚತುಷ್ಪಾದಿ - ನಾಲ್ಕು ಕಾಲಿನ ಪ್

ಗರುವ - ಶ್ರೇಷ್ಠ ಚರ - ಜಂಗಮ

ಗವುಡಿ - ದಾಸಿ, ತೊತ್ತು ಚರಣಾಯುಧ - ಕೋಳಿ


೪೩೩
ಕಠಿಣ ಪದಕೋಶ

ಚಲುಮೆ - ಒರತೆ, ನೀರಿನ ಬುಗ್ಗೆ ಟ , ಠ, ಡ

ಚಿತ್ - ಜ್ಞಾನ
ಟೊಣೆ - ಮೋಸಮಾಡು, ಹಾರಿಬಡಿ
ಚಿತ್ತಾರ - ಚಿತ್ರ
ಠಕ್ಕುಟವುಳು - ಮರೆಮೋಸ
ಚುನ್ನ - ನಿಂದೆ, ಅಪವಾದ
ಠಾವು - ಸ್ಥಳ
ಚುಳುಕು - ಅಂಗೈಯ ತಗ್ಗು ಭಾಗ,
ಡಾವರ - ದಾಹ, ಬೇಗೆ
ಚಿಕ್ಕದು
ಡೋವಿಗೆ - ತಲೆಬುರುಡೆ, ಕಪಾಲ
ಚೂರ್ಣ - ಸುಣ್ಣ
ಢಾಳಕ - ಧೂರ್ತ, ಜಾಣ
ಚೇಗೆ - ತಿರುಳು, ಸಾಮರ್ಥ್ಯ, ಹಾನಿ
ಢಾಳಕತನ - ಡಂಭಾಚಾರ
ಚೇತನಿಸು - ಚೈತನ್ಯಗೊಳ್ಳು

ಚೋಹ- ವೇಷ

ತಂಡುಲ - ಅಕ್ಕಿ

ತಕ್ಕೆ - ಆಲಿಂಗನ
ಜಂಗುಳಿ - ಗುಂಪು, ಸಮೂಹ ತಟಾಕ - ಕೆರೆ

ಜಂಜಡ - ತೊಂದರೆ, ಚಿಂತೆ


ತಟ್ಟುಮುಟ್ಟು - ದ್ವಂದ್ವಾನುಭಾವ,
ಜಂಬೂಕ - ನರಿ ಸುಖದುಃಖ
ಜಕ್ಕವಕ್ಕಿ - ಚಕ್ರವಾಕ ಪಕ್ಷಿ
ತಡಬಡಗೊಳ್ಳು - ಕಕ್ಕಾವಿಕ್ಕಿಯಾಗು,
ಜ ಗುಳಿಕೆ - ಕುಸಿ , ಬೀಳು
ತಡವರಿಸು
ಜಜ್ಜರಿಸು - ಬಲಗುಂದು,
ತಡಿಕೆ - ಹಂದರ
ನುಚ್ಚುನೂರಾಗು ತಡೆ - ನಿಲ್ಲಿಸು
ಜತನ - ರಕ್ಷಣಾ ಪ್ರಯತ್ನ ತತಿ - ಸಮೂಹ
ಜತಿ - ಯತಿ
ತನಿರಸ - ಮಧುರರಸ
ಜಮರೆ - ದ್ವಂದ್ವ ನೋಟ
ತಬ್ಬಲಿ - ಅನಾಥ, ಪರದೇಶಿ
ಜರಿ -ಹೀಯಾಳಿಸು, ಜಾರು ತರಗೆಲೆ - ಒಣಗಿದ ಎಲೆ
ಜಳವಟ್ಟಿಗೆ - ಒಂದುಬಗೆಯ ಆಭರಣ ತರಹ - ಪರಿವಿಡಿ, ಸಾಲು

ಜಾಗರ - ಎಚ್ಚರ, ಆರು (ದ್ರೂತಪರಿಭಾಷೆ) .ತರಹರಿಸು - ತಾಳು, ನಡುಗು,

ಜಾಲಗಾರ - ಮೀನುಗಾರ ಆತುರಪಡು


ಜುಗ - ಯುಗ
ತರಿ - ಕಡಿ, ಕತ್ತರಿಸು
ಜಿಡ್ಡು - ಜಿಗಿಯಾದ ಪದಾರ್ಥ
ತರಿಸಲುವೋಗು- ನಿಶ್ಚಯಿಸು
ಜಿಹ್ನೆ - ನಾಲಗೆ ತಲ್ಲಣ - ಕಳವಳ
ಜೋಟಿ- ದೋಟ
ತಲುಪಿರೇರು - ಮುಟ್ಟು , ಕೈವಶವಾಗು
ಝಂಕಿಸು - ಬಯ್ಯು , ನಿಂದಿಸು ತವಕ - ಆತುರ
೪೩೪ ಶಿವಶರಣೆಯರ ವಚನಸಂಪುಟ

ತವನಿಧಿ - ಅಕ್ಷಯ ಸಂಪತ್ತು ತೊಟ್ಟು - ತುಂಬು

ತಳವಾರ - ಕಾವಲುಗಾರ ತೊಡಿಗೆ - ಆಭರಣ

ತಳವೆಳಗಾಗು - ಬೆರಗಾಗು, ತೊಡೆ- ಅಳಿಸು

ದಿಗಿಲುಗೊಳ್ಳು ತೊಳದುಳಿ - ಗಿಜಿಬಿಜಿಯಾಗುವಂತೆ

ತಳ್ಳಿ - ಚಿಗುರು * ತುಳಿದು

ತಳ್ಳಿಬಳ್ಳಿ - ತೊಡಕು , ತೊಂದರೆ ತೊತ್ತು - ದಾಸಿ

ತಾರ್ಕಣೆ - ಹೊಂದಾಣಿಕೆ, ನಿರೀಕ್ಷಣೆ,ತೊಟ್ಟನೆ - ಒಮ್ಮೆಲೆ

ತರ್ಕಮಾಡುವುದು , ತೊರೆ- ನದಿ , ಪ್ರವಾಹ

ತಾಪತ್ರಯ - ಸಂಕಷ್ಟ ತೊಲಗು - ಬಿಟ್ಟುಹೋಗು .

ತಾಮಸ - ಅಜ್ಞಾನ, ಕತ್ತಲೆ ತೈಲ - ಎಣ್ಣೆ

ತಿಂತಿಣಿ - ಸಮೂಹ ತೃಣ - ಹುಲ್ಲುಕಡ್ಡಿ , ಸಣ್ಣದು

ತಿಗ - ಏಳು (ದೂತ ಪರಿಭಾಷಾ ಸಂಖ್ಯೆ


ತ್ರಿಕರಣ
) - ಮನ, ವಚನ, ಕಾಯ

ತಿಗುಡು - ಮರದ ತೊಗಟೆ ತ್ರಿಕೂಟ- ಭೂಮಧ್ಯ , ಇಡಾಪಿಂಗಳ

ತಿಗುರು - ಸುಗಂಧದ್ರವ್ಯ ಸುಷುಮ್ಮನಾಡಿಗಳ ಕೂಟಸ್ಥಾನ

ತಿಟ್ಟ - ದಿನ್ನೆ ತ್ರಾಣ - ರಕ್ಷಣೆ, ಶಕ್ತಿ

ತಿಬ್ಬಳಿ - ಕೊಳ್ಳುವ

ತಿಲ - ಎಳ್ಳು
ದಂದುಗ - ಕಷ್ಟ , ತಾಪ
ತುಡುಗುಣಿ - ಕದ್ದು ತಿನ್ನುವವ
ದಣಿಯಲೆರೆ - ತೃಪ್ತಿಯಾಗುವವರೆಗೆ
ತುತ್ತಿಡು - ಉಣ್ಣು
ನೀಡು
ತುಯಿ - ಜಗ್ಗು, ಸೆಳೆ

ತುಷ - ತೌಡು ದಧಿ - ಮೊಸರು

ದರ್ಪಣ - ಕನ್ನಡಿ
ತುಷ್ಟಿ - ತೃಪ್ತಿ , ಆನಂದ
ದಸರಿದೊಡಕು - ಬಿಡಿಸಬಾರದ
ತೂತ - ಡಾಂಭಿಕ
ಈ ರೇಶಿಮೆ ಗಂಟು
ತೂಬರ - ತುಂಬುರದ ಗಿಡ
ದಾಯ - ಪಾಲು, ಲಾಭ
ತೆಗ - ಸಂಬಂಧಿಕ
ದಾರವಂದ - ಬಾಗಿಲು
ತೆತ್ತಿಸು - ಕೀಲಿಸು

ತೆರ - ರೀತಿ ದಾವಾನಳ - ಕಾಳಿಚ್ಚು

ತೆರಣಿ - ಉಂಡೆ, ಗೆದ್ದಲು ದಿಂಡೆಯತನ - ಹುಂಬತನ

ತೆರಹು - ಖಾಲಿ , ಅವಕಾಶ ದಿಟ - ಸತ್ಯ

ದಿಟಪುಟ - ಸ್ಪಷ್ಟಸತ್ಯ
ತೇಜ - ಬೆಳಕು

ತೇಜಿ - ಕುದುರೆ ದಿಬ್ಬ - ದಿವ್ಯ , ಉಗ್ರ ಪರೀಕ್ಷೆ


ಕಠಿಣ ಪದಕೋಶ ೪೩೫

ದಿಬ್ಬಣಿಗ - ನಿಬ್ಬಣದವನು ನಿಧಾನಿಸು - ಸ್ಥಿರತ್ವಗೊಳ್ಳು,

ದಿಷ್ಟ - ದಿವ್ಯ , ಸತ್ಯ ಪರಿಪೂರ್ಣತೆಗೇರು

ದುರಿತ - ಕಷ್ಟ , ಪಾಪ ನಿಃಪತಿಯಾಗು - ಮಾಗು, ಒಂದುಗೂಡು

ದೇವಾಂಗ - ಬಟ್ಟೆ ನಿಃಪ್ರಪಂಚಿಕ - ಸಂಸಾರದ

ದೋಹಳ - ಆಸೆ | - ಜಂಜಡವಿಲ್ಲದವ

ದೃಕ್ಕು - ಕಣ್ಣು , ದೃಷ್ಟಿ ನಿಬದ್ಧಿಸು - ಒರೆಗೆಹಚ್ಚು

ದೃಷ್ಟ - ಕಂಡದ್ದು ನಿಬ್ಬೆರಗು - ಅತ್ಯಾಶ್ಚರ್ಯ

ಧನಪತಿ - ಕುಬೇರ ನಿರ್ಭರಿತ - ತೆರವಾದ

ಧವಳ - ಬಿಳಿ ನಿಭ್ರಾಂತ - ಭ್ರಾಂತಿರಹಿತ

ಧವಳಾರ - ಮನೆ, ಸೌಧ ನಿಮಂತ್ರವಾಗು - ಮಂತ್ರವನ್ನು ಮೀರು

ಧಾವತಿ - ಶ್ರಮ ನಿರ್ಯಾಣ - ಮುಕ್ಕಿ

ಧೂಮ್ರ - ಹೊಗೆ ನಿರಂಗ - ನಿರ್ದೆಹಸ್ಥಿತಿ, ಮುಕ್ತಿ


ನಿರಂಗಿ - ಅಂಗವಿಲ್ಲದ

ನಿರಂಜನ - ಮಾಯಾರಹಿತ
ನಂದಿ - ಐದು (ದೂತ ಪರಿಭಾಷೆಯಲ್ಲಿ)
ನಿರಕೆ - ನಿರ್ದಿಷ್ಟ
ನಖ - ಉಗುರು ನಿರವಯ - ಬಯಲುಸ್ಥಿತಿ
ನನ್ನಿ - ಸತ್ಯ , ನಿಜ ನಿರಾಕುಳ - ಶಾಂತವಾದ,

ನಯನ - ಕಣ್ಣು ಆತಂಕವಿಲ್ಲದ


ನಷ್ಟಮೂಲ- ಬೇರುನಷ್ಟವಾದ ನಿರಾಲಂಬ - ಅವಲಂಬನರಹಿತ,
ನಾಣ - ಗುಹೇಂದ್ರಿಯ ಆಶ್ರಯವಿಲ್ಲದ
ನಾರಂಗ - ತೆಂಗು
ನಿರಾಳ - ಪ್ರಶಾಂತ ನಿಲುವು
ನಾರಿವಾಳ - ತೆಂಗಿನಕಾಯಿ
ನಿರೂಪ- ಆಕಾರವಿಲ್ಲದ
ನಾಸ್ತಿ - ಇಲ್ಲ
ನಿರೋಧ- ತೊಂದರೆ
ನಿಃಕರ್ಮಿ - ಕರ್ಮವಿಲ್ಲದವ
ನಿಲವು- ಸ್ಥಿತಿ, ಔನ್ನತ್ಯ
ನಿಃಕಾಮ - ಕಾಮವಿಲ್ಲದ, ನಿರ್ಲಿಪಿ - ಲೇಪವಿಲ್ಲದ,
ಬಯಕೆಯಿಲ್ಲದಸ್ಥಿತಿ ಆಸಕ್ತಿಯಿಲ್ಲದ
ನಿಚ್ಚಟ - ನಿಷ್ಕಪಟ, ನಿತ್ಯ ನಿವಾತ - ಶಾಂತಗುಣವುಳ್ಳ
ನಿಟ್ಟೂರಸು - ಸಂಪೂರ್ಣವಾಗಿ
ನಿವೃತ್ತಿ - ನಿವಾರಣೆ, ಮೋಕ್ಷ,
ಇಲ್ಲವಾಗಿಸು ಬಿಡುಗಡೆ
ನಿತ್ಯ - ಅಮರ, ಶರಣ
ನಿರ್ವಯಲು - ಬಟ್ಟಬಯಲು
ನಿಧಾನ - ಹೂಳಿಟ್ಟ ದ್ರವ್ಯ
ನಿಃಸಂಗಿ - ಸಂಗರಹಿತ
೪೩೬
ಶಿವಶರಣೆಯರ ವಚನಸಂಪುಟ

ನಿಷ್ಪತ್ತಿ - ಮಾಗುವಿಕೆ, ಪರಿಣಾಮ ಪಡಿಹಾರ - ದ್ವಾರಪಾಲಕ

ಪಡುಗ - ಪಾತ್ರೆ
ನಿಷ್ಪತ್ತಿಯಾಗು - ಹಣ್ಣಾಗು, ಗಟ್ಟಿಗೊಳ್ಳು

ನಿಷ್ಕಳ - ನಿರೂಪ, ಕಳಂಕರಹಿತ ಪರ್ಣ - ಎಲೆ

ನಿಹಿತ - ಉಚಿತ, ಯೋಗ್ಯ ಪತಂಗ - ಸೂರ್ಯ , ಪಾತರಗಿತ್ತಿ

ನಿಕ್ಷೇಪ - ಹೂಳಿಟ್ಟ ಸಂಪತ್ತು ಪರಾಕಿ - ಸ್ತುತಿಪಾಠಕ

ನಿಕ್ಷೇಪಿಸು - ಹುದುಗಿಸು, ಇಡು, ಪರಿ - ಹರಿ

ಹುಗಿದಿಡು ಪರಿಕರ - ರೀತಿ

ನೀಕರಿಸು - ತಿರಸ್ಕರಿಸು ಪರಿಣಾಮ - ತೃಪ್ತಿ , ಆನಂದ

ನೀಸಲಾರದೆ - ನೀಗಲಾರದೆ ಪರಿಸ್ಪಂದ - ಸರಿಸಮಾನ

ನೂನ - ಕಡಿಮೆ , ಕೊರತೆ ಪಲ್ಲವಿಸು - ಚಿಗುರು

ಪವಣಿಗೆ - ಪೋಣಿಸುವುದು
ನೆಗ್ಗಿತ್ತು - ಹಿಚುಕು, ತುಳಿ, ಹಿಂಡು

ನೆಮ್ಮು - ಆಶ್ರಯಿಸು ಪವನ - ಗಾಳಿ

ನೆಮುಗೆ - ನಂಬಿಕೆ ಪಶ್ಚಿಮದಕದ - ಪಶ್ಚಿಮಚಕ್ರ ,


ನೆರಹು - ಕೂಡಿಸು ಸುಷುಮ್ಮ ದ್ವಾರಕವಾಟ

ನೆರೆ - ಕೂಡು ಪಸಾರ - ಅನುಗ್ರಹ, ಉಡುಗೊರೆ

ನೆರೆನಂಬು - ಚೆನ್ನಾಗಿ ನಂಬು ಪಹರಿ - ಕಾವಲು, ಚಲನವಲನ

ನೆಲೆ - ಆಶ್ರಯಸ್ಥಾನ ಪಾಕುಳ - ಪ್ರಾಕಾರ, ಪೌಳಿ, ಹಜಾರ

ನೆಲೆಗೊಳ್ಳು - ಆಶ್ರಯಿಸು ಪಾಣೆ - ಹಾದರಗಿತ್ತಿ

ನೆಲೆಮಾಡ - ನಿವಾಸಸ್ಥಾನ ಪಾತಕ - ಪಾಪ

ನೇಣು - ಹಗ್ಗ , ನೂಲು ಪಾದತ್ರಾಣ - ಪಾದರಕ್ಷೆ

ನೇತಿಗಳೆ - ಅಲ್ಲಗಳೆ, ತಿರಸ್ಕರಿಸು ಪಾದರೇಣು - ಪಾದಧೂಳಿ

ನೇಸರು - ಸೂರ ಪಾರದ್ಘಾರ - ಪರಸ್ತ್ರೀಗಮನ

ನೊಸಲು - ಹಣೆ ಪಾಳೆಯ - ಶಿಬಿರ, ದಂಡು

ಪಾಷಂಡಿ - ನಾಸ್ತಿಕ, ದೇವರಲ್ಲಿ

- ನಂಬಿಕೆಯಿಲ್ಲದವ
ಪಂಗುಳ - ಹೆಳವ, ಕುಂಟ ಪಾಷಾಣ - ಕಲ್ಲು

ಪಂಚೀಕೃತಿ - ಪಂಚಭೂತಗಳ ಹಂಚುವಿಕೆ ಪಿಂಡಜ - ಪಿಂಡದಲ್ಲಿ ಹುಟ್ಟಿದ್

ಪಗುಡಿ - ಹಾಸ್ಯಕ್ರಿಯೆ - ದೇಹದಲ್ಲಿ ಹುಟ್ಟಿದ್ದು


ಪಟ - ಗಾಳಿಪಟ ಪಿಕ - ಕೋಗಿಲೆ

ಪಟಲ - ತೆರೆ ಪಿನಾಕಿ - ಶಿವ

ಪಡಿಪುಚ್ಚ - ಸಂದೇಹ, ಸಂಶಯ ಪಿಪಿಲಿಕಾ - ಇರುವೆ


ಕಠಿಣ ಪದಕೋಶ ೪೩೭

ಪುತ್ಥಳಿ - ಗೊಂಬೆ ಬರು - ವ್ಯರ್ಥ

ಪುಷ್ಪಕ - ಪುಷ್ಪಕವೆಂಬ ಹೆಸರಿನ ವಿಮಾನ ಬರೆ - ಒಣಗು, ಕಾಣದಾಗು

ಪುಲ್ಲು - ಹುಲ್ಲು ಬಲದಾಯಿ - ಮಲತಾಯಿ

ಪೂಸರು - ಸುಳ್ಳಾಡುವವರು ಬಲ್ಲಿತ್ತು - ದೊಡ್ಡದು, ಬಲಿಷ್ಠವಾ

ಪೊಸ - ಹೊಸ ಬಲುಗೈ - ಪಟುತ್ವ , ವೀರತೆ, ಬಲ

ಪೈಕ- ಶ್ರಾದ್ಧ ಬವಹೇತು - ಹುಟ್ಟಿಗೆ ಕಾರಣ

ಪೈಸರ - ಹುಸಿ, ನಷ್ಟ ಬಸುರು - ಹೊಟ್ಟೆ

ಪ್ರಭೆ - ಆತ್ಮನಕಳೆ, ಆತ್ಮನಸ್ವರೂಪ ಬಳಲಿಕೆ - ದಣಿವು

ಪ್ರಸಂಗ - ವಿಷಯ , ಚರ್ಚೆ ಬಳಿವಿಡಿ - ಹಿಂಬಾಲಿಸು, ಅನುಸರಿಸು

ಪ್ರಸನ್ನ - ಶಾಂತ ಬಳು - ನರಿ

ಪ್ರಕ್ಷಾಲನ - ಚಿಮುಕಿಸುವುದು, ಬೆಳ್ಳಿ - ಬೆಳ್ಳುಳ್ಳಿ


ತೊಳೆಯುವದು ಬಾಂಧವರು - ಸಂಬಂಧಿಕರು

ಬಾಗಿಲತಪ್ಪಲ - ಬಾಗಿಲ ಬದಿಯ

ಸಮಸ್ಥಲ
ಬಗದಳ - ತೂತು, ಹೊರು,
ಬಾತೆ - ಪ್ರಯೋಜನ
- ರಂದ್ರ , ಹುಣ್ಣು
ಬಾಣಸ - ಅಡಿಗೆ
ಬಗಿ - ಸೀಳು ಬಾದಣ - ಕಿಡಿಕಿ, ಕಿಂಡಿ

ಬಗೆಗೊಳ್ಳು - ತಿಳಿ ಬಾನ - ಬೋನ, ಅನ್ನ


ಬಗೆದಿಡು - ಸೀಳಿಯಿಡು ಬಾಲಸರ - ಗಾಳಿಪಟದ ಬಾಲಂಗಸಿ
ಬಚ್ಚಣಿ - ಕಪಟಪ್ರೇಮಿ
ಬಾವನ್ನ - ಐವತ್ತೆರಡು
ಬಚ್ಚಣೆ - ಮರೆ, ಮೋಸ ಬಾಹಾರ - ಬರುವಾಗ
ಬಟ್ಟೆ - ಮಾರ್ಗ , ದಾರಿ ಬಿಂದು -ನೋಟ, ದೃಷ್ಟಿ
ಬಟ್ಟಿಹ - ದುಂಡಗಾದ
ಬಿಡಾಡಿ - ಕಟ್ಟು ಇಲ್ಲದುದು,
ಬಡತನ - ಬಡುಕು , ಸಣ್ಣಾದ
ಶಿವ, ದೇವ

ಬಣ್ಣನೆ - ವರ್ಣನೆ, ತೋರಿಕೆ ಬಿಜಯಂಗೆಯ್ - ತಂಗುಮನೆ,

ಬತ್ತೀಸು - ಮೂವತ್ತೆರಡು
ವಾಸಸ್ಥಳ
ಬಯಕೆ - ಇಚ್ಛೆ, ಆಸೆ ಬಿತ್ತು - ಬೀಜ
ಬಯಲುದೇಹಿ - ನಿರಾಕಾರ
ಬಿನ್ನಪ - ವಿನಂತಿ
ಬರ - ಹಸಿವು
ಬಿನ್ನಾಣ - ವಿಜ್ಞಾಪನೆ
ಬರಲುಗೊಳ್ಳು - ಒಣಗು
ಬಿನ್ನಾಣಿ - ಅನುಭವಿ
ಬರಸೆಳೆ - ಹರಜನ್ನು
ಬಿರಿದು - ಪಣ , ಬಿರುದು

16
೪೩೮ ಶಿವಶರಣೆಯರ ವಚನಸಂಪುಟ

ಬಿಯಗ - ಬೀಗ. ಭಾವಭ್ರಮೆ - ಅಜ್ಞಾನ

ಬೀಗಿಬೆಳೆದ - ಕೊಬ್ಬಿ ಬೆಳೆದ ಭಾಸುರ - ಪ್ರಕಾಶ

ಬೀಸರ - ವ್ಯರ್ಥ ಭುಂಜಕ - ಸೇವಿಸುವವ

ಬೀಸಾಟ - ಒಗೆದ, ಚೆಲ್ಲಿದ ಭುಂಜಿಸು - ಊಟಮಾಡು

ಬೂತು - ನಾಚಿಕೆಗೇಡು ಭಿನ್ನಗಣ್ಣು - ಚರ್ಮಚಕ್ಷು , ಭಿನ್ನ ದೃ

ಬೆಂಗೋಲು- ಬಾರಕೋಲು, ಚಬಕ ಭೇದ - ರಹಸ್ಯ

ಬೆಂಬಳ - ಸಹಾಯ , ಆಶ್ರಯ ಭೇದಿಸಿಕೊಡು- ತಿಳಿಸಿಹೇಳು

ಬೆಂಬಳಿ - ಬೆನ್ನಹಿಂದೆ ಭೈತ್ರ - ಹರಿಗೋಲು

ಬೆಚ್ಚು - ಬೆಸೆ ಭೋಗ್ಯ - ಉಪಯೋಗಕ್ಕೆ

ಬೆಡಗು - ಸೌಂದರ್ಯ ಯೋಗ್ಯವಾದ

ಬೆರಗು - ಆಶ್ಚರ್ಯ

ಬೆರಸು - ಕೂಡಿಸು
ಮಂಡಿ - ಮೊಣಕಾಲು
ಬೆರೆ - ಗರ್ವಿಷ್ಟನಾಗು

ಬೆವಹಾರ - ವ್ಯವಹಾರ ಮಚ್ಚರ - ಮತ್ಸರ ( )

ಮಚ್ಚು - ಆಸಕ್ತನಾಗು, ಮೋಹಿಸು


ಬೆಸಗೈ - ಅಪ್ಪಣೆ ಪಾಲಿಸು
ಮಾಣಿಸು - ಬಿಡಿಸು
ಬೆಸಗೊಳ್ಳು - ಕೇಳು
ಮಣಿಹ - ಕಾರ
ಬೆಸಲಾಗು - ಹಡೆ
ಮೆತ್ತೆ - ತಲೆಗಿಂಬು |
ಬೇಟ - ಆಸೆ, ಅಪೇಕ್ಷೆ , ಮೋಹ
ಮಥನ - ಘರ್ಷಣೆ
ಬೊಕ್ಕಣ - ಕಿಸೆ, ಜೇಬು
ಮದಕರಿ - ಸೊಕ್ಕಿದ ಆನೆ
ಬೊಬ್ಬುಲಿ - ಜಾಲಿಮರ
ಮರ್ದಿಸು - ದಂಡಿಸು, ನಾಶಮ
ಬೋನ- ನೈವೇದ್ಯ , ಅನ್ನ
ಮದ್ಯಕಲ್ಪ - ಕಾಲ್ಪನಿಕ ಪ್ರಪಂಚ
ಬೋಳೆಯ - ಸೌಮ್ಯ ಸ್ವಭಾವದವ,
ಮದ್ದು - ಔಷಧ
ಮುಗ್ಧ
ಮಧುರ - ಸಿಹಿ
ಬೈಚಿಡು - ಅಡಗಿಸು
ಮನಕತ - ದುಃಖ , ಸಿಟ್ಟು
ಬ್ರಹ್ಮತಿ- ಬ್ರಹ್ಮಹತ್ಯೆ
ಮನಸಿಜ - ಕಾಮ
ಭಂಗಿತ - ನಿರಾಶೆಗೊಂಡವ
ಮನ್ನೆಯ - ಮಾನ್ಯ , ಗೌರವಯು
ಭರಿತ - ತುಂಬಿದ
ಮನ್ನೆಯರು - ಗೌರವಾನ್ವಿತರು
ಭವ - ಸಂಸಾರ
ಮಯಣ - ಮೇಣ
ಭವಗೆಡು - ಹುಟ್ಟಿಲ್ಲವಾಗು
ಮರಸು - ಮುಚ್ಚು
ಭಾಜನ - ಪಾತ್ರೆ ೧೦೦.
ಮರೀಚಿಕಾಜಲ - ಬಿಸಿಲುದುರೆ
ಭಾರವಣಿ - ಹೊಣೆ, ಭಾರಣೆ
ಕಠಿಣ ಪದಕೋಶ ೪೩೯

ಮರುಜೀವಣಿ - ಸಂಜೀವಿನಿ, ಪುನರ್ಜನ್ಮಮುಕುತ - ಮುಕ್ತ

ತಂದುಕೊಡುವ ರತ್ನ ಮುಖ - ಮುಖ್ಯ , ಪ್ರಮುಖ

ಮರುಪತ್ತು - ಇದಿರುವಾದಿಸು ಮುಗುದ - ಮುಗ್ಧ , ಮೌನಿ

ಮರುಳಾಗು - ಹುಚ್ಚನಾಗು ಮುದ್ದು - ಎಡವು

ಮರುಳುಗೊಳ್ಳು - ಹುಚ್ಚು ಹಿಡಿ, ಮುಡಿ - ತಲೆಗೂದಲು, ಹೆಳಲು

- ಪಿಶಾಚಿಬಡಿ ಮುಡುಹು - ಹಿಂಡುವ ದನಗಳಿಗೆ

ಮರ್ಕಟ - ಮಂಗ ಹಾಕುವ ಆಹಾರ ವಿಶೇಷ

ಮಲೆ - ಪರ್ವತ ಮುದ್ರಿಸು - ಒತ್ತು , ಬಂಧಿಸು

ಮಹ - ಘನ, ಪರವಸ್ತು ಮುಯ್ಯಾನು - ಮನುಸ್ಸುಮಾಡು,

ಮಹಿಷಿ - ಎಮ್ಮೆ ಆಶ್ರಯಿಸು, ಅಪೇಕ್ಷಿಸು, ಎದುರಾಗು

ಮಕ್ಷಿಕ - ನೊಣ ಮುರುಟು - ಮುದುಡು,

ಮಾಗಿ - ಚಳಿಗಾಲ - ಸಂಕುಚಿತವಾಗು

ಮಾಟ - ಕರ್ಮ, ಕ್ರಿಯೆ ಮುಸುಕು - ಮುಚ್ಚು

ಮಾಟಕೂಟ - ಕ್ರಿಯಾಸಾಮರಸ್ಯ ಮೂದಲಿಸು - ತಿರಸ್ಕರಿಸು, ಬೈಯ್ಯು

ಮಾಣು - ಬಿಡು ಮೂಲ- ಮುಖ್ಯ

ಮಾಣಿಸು - ಬಿಡಿಸು, ದೂರಮಾಡು ಮೂಲಿಗ - ಮೂಲಪುರುಷ

ಮಾರ್ಜಾಲ - ಬೆಕ್ಕು ಮೂಷಕ - ಇಲಿ

ಮಾರ್ - ಎದುರು, ಪ್ರತಿಯಾಗು ಮೆಟ್ಟಡಿ - ಪಾದರಕ್ಷೆ

ಮಾರಾಂಕ - ಎದುರಾಳಿ, ವೈರಿ ಮೆರೆ - ಪ್ರಖ್ಯಾತಗೊಳಿಸು

ಮಾರುವೋಗು- ಆಕರ್ಷಿಸಲ್ಪಡು, ಮೆಲ್ಲು - ತಿನ್ನು

ಶರಣಾಗು ಮೆಳೆ - ಪೊದೆ, ಕಂಟಿ

ಮಿಟ್ಟಯ ಭಂಡರು - ಹಣೆಗೆ ಗಂಧ ಮೇರೆ - ಸೀಮೆ

ಹಚ್ಚಿಕೊಂಡವರು , ಕ್ಷುದ್ರಜೀವಿಗಳು ಮೇಲೋಗರ - ಅನ್ನ , ಸಾಧನ

ಮಿಟ್ಟೆ - ದಿಬ್ಬ ಪದಾರ್ಥ, ಕಾಯಿಪಲ್ಲೆ ಮೊದಲಾದವು

ಮಿಡಿ - ಚಿಮ್ಮಟಿಗೆ ಮೇಳಾಪ - ಸಮೂಹ

ಮಿಥ್ಯ - ಸುಳ್ಳು ಮೊತ್ತ - ಸಮೂಹ, ಗುಂಪು

ಮಿರುಗು - ಹೊಳೆ ಮೊನೆ - ತುದಿ, ತೀಕ್ಷ್ಯತೆ

ಮುಂಚು - ಮುಂದಾಗು, ಅತಿಕ್ರಮಿಸು ಮೋಹರ - ರಣಭೂಮಿ

ಮುಂಡಿಗೆ - ಒಗಟು, ಸಮಸ್ಯೆ , ಸವಾಲು ಮೊಳೆದೋರು- ಅಂಕುರಿಸು,

ಮುಂದುಗಾಣು - ವಿನು ಮೊಳಕೆಯೊಡೆ

ಮಾಡಬೇಕೆಂಬುದನ್ನು ತಿಳಿ ಮೊಳೆಮುಖ - ಮೊಳಕೆಯೊಡೆಯುವ ಭಾಗ


ပုပ္ပဝ
ಶಿವಶರಣೆಯರ ವಚನಸಂಪುಟ

ಮೈದೋರು- ಪ್ರತ್ಯಕ್ಷವಾಗು

ಮೈಮರೆ - ಎಚ್ಚರದಪ್ಪು
ವಂಕ - ಬಂಕ , ಪಡಸಾಲೆ, ಡೊಂಕು
ಮೃತ್ತಿಕೆ - ಮಣ್ಣು
ವರ್ಮ - ಗುಟ್ಟು , ರಹಸ್ಯ
ಯ ,ರ
ವಲ್ಲಭ - ಒಡೆಯ , ಗಂಡ

ಯತನ - ಯತ್ನ, ಪ್ರಯತ್ನ ವಾಚ - ಮಾತು, ಹೇಳಿಕೆ

ವಾನರ - ಮಂಗ
ರಂಜಕ - ಮೋಹಕ, ರಮ್ಯ
ವಾಯ - ವ್ಯರ್ಥ
ರಚ್ಚೆ - ಸೊಲ್ಲು , ಶಬ್ದ , ಬಯ್ಯು,
ಕೂಗು ವಾರಿಧಿ - ಸಮುದ್ರ

ವಾರಿಶಿಲೆ - ಆಣೆಕಲ್ಲು
ರಜ್ಜು - ಹಗ್ಗ
ವಾರುವ - ಕುದುರೆ
ರತಿ - ಪ್ರೀತಿ, ಆಸಕ್ತಿ
ವಿಕಸಿತ - ಅರಳಿದ
ರಪಣ - ಇಶ್ಚರ , ಜೂಜಿನಲ್ಲಿ ಒಡ್ಡುವ
ವಿಕಳ - ಅಗಲಿಕೆಯಿಂದುಂಟಾದ ಕಳವಳ
ಪಣ, ಸಾಮರ್ಥ್ಯ
ವಿಗಡ - ವಿಕಟ
ರುಜೆ -ರೋಗ, ಬೇನೆ

ರೂಹು - ರೂಪ, ಆಕಾರ ವಿತರಣ - ದಾನ, ಔದಾರ

ವಿದಳ - ದ್ವಿದಳ
ರೋಂಪ - ಕೊಂಪೆ

ರೋಗರುಜಿನ - ಬೇನೆ ಬೇಸರಿಕೆ ವಿದೂರ - ಹೊರತಾದ

ವಿಭಾಡ - ನಾಶಮಾಡುವವ

ವಿಮುಖ - ಮುಖತಿರುಗಿಸುವುದು

ಲಂಬಿಸು - ಅವಲಂಬಿಸು, ಜೋತಾಡು, ವಿವರ - ವಿಸ್ತಾರ, ವಿಶೇಷ

ಉದ್ದವಾಗು ವಿಲಾಸ - ಲೀಲೆ

ಲಲ್ಲೆ - ಪ್ರೀತಿ ವಿಸರ್ಜಿಸು - ಬಿಡು

ಲಿವಾತು - ಪ್ರೀತಿಯ ಮಾತು ವಿಹಂಗ - ಪಕ್ಷಿ

ಲವಣ - ಉಪ್ಪು ವೇದ್ಯ - ಬಲ್ಲವ

ಲಹರಿ - ಮದ, ತೆರೆ ವೇದಿ - ಜ್ಞಾನಿ

ಲಾಗು - ಸಂಪರ್ಕ, ಹೆಚ್ಚಳ, ನೆಗೆತ , ವೇದಿಸು - ತಿಳಿ, ತಿಳಿಸು

ವೇಧಿಸು - ಕೂಡು, ಬೆರಸು, ನಾಟು,


ಆಸೆ, ಇಚ್ಛೆ
ಅಂಟು, ಅಳವಡು
ಲೀಯ - ಅಡಕ , ಮುಳುಗಿದ, ಐಕ್ಯ

ಲುಬ್ದ ವಾಣಿ - ಅತ್ಯಾಸಕ್ತಿಯಿಂದ ಕೂಡಿದ ವ್ಯಾಕುಳ - ಕಳವಳ

ಮಾತು ವ್ಯಾಧ - ಬೇಡ

ಲೆಪ್ಪ - ಗೊಂಬೆ ವ್ಯವಧಾನ - ಎಚ್ಚರ


ಕಠಿಣ ಪದಕೋಶ ဂ

ಸನ್ನಿಹಿತ - ಒಂದಾದವ,ಕೂಡಿಕೊಂಡವ

ಸಯದಾನ - ಭಿಕ್ಷೆ
ಶಶಿ - ಚಂದ್ರ
ಸಮನಿಸು - ಲಭಿಸು, ದೊರೆ
ಶಯನ - ಹಾಸಿಗೆ
ಸಮಯ - ಶಿವಶರಣರ ಗುಂಪು
ಶಾಲಿ - ಅಕ್ಕಿ
ಸಮಯಾಚಾರಿ - ಶಿವಸಮಯ ಪಾಲಕ
ಶುನಕ - ನಾಯಿ
ಸಮರತಿ - ಪರಸ್ಪರ ಪ್ರೇಮ
ಶುನಿ - ನಾಯಿ
ಸಮ್ಮಾರ್ಜನೆಮಾಡು - ತೊಳೆ,
ಶಕರ - ಹಂದಿ
ಸ್ವಚ್ಛಮಾಡು
ಶೂನ್ಯ - ನಿರಾಕಾರದ ನಿಲವು
ಸಯವಪ್ಪ - ತಾನೆಯಾದ,
ಶ್ವಾನ - ನಾಯಿ
ಅನುರೂಪವಾದ
ಶ್ರುತ - ಕೇಳಿದ್ದು
ಸಯಿಧಾನ - ಅಡಿಗೆ ಪದಾರ್ಥ

ಸರ - ಸ್ವರ, ಧ್ವನಿ

ಸರಿ -ಕೋಡುಗಲ್ಲು
ಸಂಕಲೆ - ಬೇಡಿ, ಬಂಧನ
ಸಲ್ -ಕೂಡಿಕೊಳ್ಳು
ಸಂಕಷ್ಟ -ಕೂಡು, ಒಂದಾಗು

ಸಂಕುಳ - ಸಮೂಹ ಸವಣ - ಶ್ರವಣ, ಜೈನಯತಿ

ಸಂಚ - ರಹಸ್ಯ , ಸಂಬಂಧ ಸವರು - ಕೊಯ್ಯು

ಸಂಚಲ - ಹೊಯ್ದಾಟ ಸಲಾಕೆ - ಕಡ್ಡಿ ,ಕೋಲು

ಸವೆ - ಪೂರ್ಣವಾಗು, ಈಡೇರು


ಸಂದಣಿ - ಸಮೂಹ
ಸಾರಾಯ - ತಿರುಳು
ಸಂದು - ಬಿರುಕು , ಭೇದ

ಸಂದುಹೋಗು- ಸಾಯು ಸಾವಧಾನಿ - ಎಚ್ಚರವುಳ್ಳ

ಸಿಂಗಳೀಕ - ಕರಿಮಂಗ , ಮುಸುವ


ಸಂಧಿಸು - ಸೇರು,ಕೂಡು, ಎದುರಾಗು
ಸಿಂಗಿ - ಸರ್ಪ , ಒಂದು ಉಗ್ರ ವಿಷ
ಸಂಪನ್ನ - ಕೂಡಿಕೊಂಡ, ಸಾಧಿಸಿದ
ಸಿತಗ - ಠಕ್ಕ , ವಂಚಕ
ಸಂಪ್ರೋಕ್ಷಣ - ತೊಳೆಯುವುದು

ಸಂಸರ್ಗ - ಸಂಪರ್ಕ ಸಿದ್ದಲಿಕೆ - ಎಣ್ಣೆ ಅಳೆಯುವ ಪಾತ್ರೆ

ಸಗಳೆ - ತೊಗಲಿನ ಚೀಲ ಸೀಳ್ಳಾಯಿ - ನಾಯಿಯ ಒಂದು ಜಾ

ಸುಂಕಿಗ - ಸುಂಕತೆಗೆದುಕೊಳ್ಳುವವ
ಸಟೆ - ಸುಳ್ಳು
ಸುನಿ - ನಾಯಿ
ಸಚರಾಚರ - ಸ್ಥಾವರ ಜಂಗಮಗಳಿಂದ

- ಕೂಡಿದ ಸುಪ್ಪತ್ತಿಗೆ - ಶ್ರೀಮಂತಿಗೆ, ಮೆತ್ತನ್ನ


ಹಾಸಿಗೆ
ಸತ್ತಿಗೆ - ಕೊಡೆ

ಸದರ - ಯೋಗ ಸುಪ್ಪಾಣಿ - ಆಯ್ತು ತೆಗೆದ ಮುತ್ತು ,

ಶ್ರೇಷ್ಟ ಮುತ್ತು
၁ ಶಿವಶರಣೆಯರ ವಚನಸಂಪುಟ

ಸುಮ್ಮಾನಿ - ಆನಂದಿತ ಹಚ್ಚಡಿಸು - ಹಾಸು

ಸುಯಿಧಾನ - ಲಕ್ಷ್ಮ , ಎಚ್ಚರ ಹಡಿಕೆ - ದುರ್ವಾಸನೆ

ಸುಯಿಧಾನ - ಸಮಾಧಾನ, ಶಾಂತಿ | ಹದುಳ - ಸಂತೋಷ, ಕ್ಷೇಮ

ಸುರಾಳನಿರಾಳ - ಒಳಹೊರಗೆ ಶುದ್ಧವಾದ ಹದುಳಿಗ - ಸುಖಿ

* ಸಾಕಾರ ನಿರಾಕಾರವಾದ ವಸ್ತುಹರದ - ವ್ಯಾಪಾರಿ

ಸುಸರ - ಹಗುರ . ಹರವಶ - ಪರವಶ, ಮೂರ್ಛ


ಸೂಕರ - ಹಂದಿ
ಹಲ್ಲು ಸುಲಿ - ಹಲ್ಲು ತಿಕ್ಕುವುದು

ಸೂತಕ - ಮೈಲಿಗೆ ಹವಣ - ಪ್ರಮಾಣ, ಅಳತೆ

ಸೂಳೆಗಾರ - ಕಟುಕ, ಕೊಲೆಗಡುಕ ಹಸೆ - ಮಂಗಲಕಾರಗಳಲ್ಲಿ ಹಾಕುವ

ಸೆಜ್ಜೆ - ಹಾಸಿಗೆ, ಕರಡಿಗೆ ಪೀಠ, ಹಾಸಿದುದು

ಸೇಸೆ - ಅಕ್ಷತೆ ಹಸುಗೆಮಾಡು - ವಿಂಗಡಿಸು

ಸೊಡರು - ದೀಪ ಹಾರು - ಬಯಸು, ನಿರೀಕ್ಷಿಸು

ಸೋನೆ- ಧಾರಾಕಾರರೂಪದ ಮಳೆ ಹಾರೈಸು - ಅಪೇಕ್ಷಿಸು, ಆಸಮಾಡು,

ಸೋಪಾನ - ಮೆಟ್ಟಲು - ಬಯಸು

ಸೋಹಂ- ನಾನೆಂಬ ಅಹಂಕಾರ ಹಾಸು - ಹಾಸಿಗೆ

ಸೈವೆರಗಾಗು - ಆಶ್ಚರ್ಯಪಡು ಹಾಹೆ - ಗೊಂಬೆ, ಕಷ್ಟೊಂಬೆ

ಸೌಕರಿಯ - ಅನುಕೂಲ ಹಿಂಗು - ತೋಲಗು

ಸ್ವಯ - ಸ್ವಂತ, ತನ್ನ ಹಿಟ್ಟುಗುಟ್ಟು - ಪುಡಿಪುಡಿಮಾಡು .

ಸ್ವಾಯತ - ತನ್ನ ಆಧೀನದಲ್ಲಿರುವುದು ಹಿಡಿವಡೆದ - ಕೈಯಲ್ಲಿ ಸಿಕ್ಕ ,

ಸೃಜಿಸು - ಹುಟ್ಟಿಸು * ಹಿಡಿಯಲ್ಲಿ ಸಿಕ್ಕಿದ

ಸ್ಟಾಣು - ಕಂಬ , ಗಾಣದ ಕಂಬ, ಶಿವ ಹಿತ - ಸ್ನೇಹಿತ, ಒಳಿತುಬಯಸುವವ

ಹಿತ್ತಲಬಾಗಿಲು - ಪಶ್ಚಿಮಚಕ್ರ

ಹಿಪ್ಪೆ - ಸಿಪ್ಪೆ
ಹಂಗು - ಆಶ್ರಯ , ಋಣ, ಆಶೆ, ಹಿರಣ್ಯ - ಬಂಗಾರ
ಹಂಬಲ ಹುದುಗು - ಅಡಗಿಸು

ಹಂಚುಕಂತೆ - ವಿವಾಹಿತ ಭಕ್ತ ಹುಯ್ಯಲ - ಅಳುವು, ಕೂಗು

ಹಂಚುಹರಿ - ಚದುರಿಹೋಗು ಹುಲ್ಲೆ - ಚಿಗರಿ

ಹಂದೆ - ಹೇಡಿ ಹೊಣೆಹೊಗು- ಪ್ರತಿಜ್ಞೆಮಾಡು

ಹಂಬಲ - ಆಸೆ ಹೂಸು - ಪೂಸು, ಹಚ್ಚು , ಲೇಪಿಸು

ಹಗರಣ - ವ್ಯರ್ಥಮಾತು, ಹರಟೆ ಹೆರೆಹಿಂಗು - ಹಿಂದೆಸರಿ

ಹಗೆ - ವೈರಿ ಹೇತು - ಕಾರಣ


ಕಠಿಣ ಪದಕೋಶ

ಹೇಮ - ಬಂಗಾರ ಹೊರೆ - ಪೋಷಿಸು, ಹಬ್ಬು

ಹೇಯ - ಜಿಗುಪ್ಪೆ , ವಿಕಾರ ಹೊಲಬು - ಹಾದಿ, ರೀತಿ, ರಹಸ್ಯ

ಹೇರಂಡ - ಔಡಲ ಹೋಲಬಿಗ - ಮರ್ಮತಿಳಿದವ

ಹೊಂದೊಡಿಗೆ - ಬಂಗಾರದ ಆಭರಣ ಹೊಸೆ - ಕಡೆ, ತಿಕ್ಕು

ಹೊಡಕರಿಸು - ಹೊಡಮರಳು ಹೋಹ- ಕೆಡುಕು

ಹೊಡೆಗೆಡಹು - ಹೊಡೆದು ಕೆಡವು ಹೊಳಹು - ಸ್ವರೂಪ

ಹೊದಕುಳಿ - ದುಃಖ , ತಾಪ ಹೊಳಲು - ಪಟ್ಟಣ

ಹೊದ್ದು - ಸೇರು, ಆಶ್ರಯಿಸು ಹೊಳು - ಜೊಳ್ಳು

ಹೋರು- ಕಾದಾಡು
ಹೊನ್ನಾವರಿಕೆ - ಮಿಂಚುಹುಳ, ಬೆಂಕಿಹುಳ

ಹೊರತೆಯಾಗು - ಹೊರಗಾಗು
- ಆಕರ ಗ್ರಂಥಗಳು

ಪ್ರಕಟಿತ :

ಅಕ್ಕಗಳ ವಚನಗಳು

ಸಂ . ಡಾ . ಸಾ. ಶಿ. ಮರುಳಯ್ಯ

ಪ್ರ : ರಾಗಿಣಿ ಶಿಕ್ಷಣ ಪ್ರತಿಷಾ ನ, ಬೆಂಗಳೂರು

( ಪ್ರ . ಆ. ೧೯೯೩ )

ಅಕ್ಕನ ವಚನಗಳು

ಸಂ . ಡಾ . ಎಲ್ , ಬಸವರಾಜು

ಪ್ರ : ಗೀತಾ ಬುಕ್‌ಹೌಸ್, ಮೈಸೂರು

( ಪ್ರ . ಆ. ೧೯೬೬ )

ಅಕ್ಕಮ್ಮನ ವಚನಗಳು

( ಇದು ಶಿವಶರಣೆಯರ ವಚನಗಳು ಸಮಗ್ರ ಸಂಪುಟದ ಒಂದು ಭಾಗ )

ಸಂ . ಡಾ . ಆರ್ . ಸಿ . ಹಿರೇಮಠ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೬೮ )

ಅದ್ರೆ ತಾನಂದದ ವಚನಗಳು

ಸಂ . ಡಾ . ಬಿ. ಆರ್ . ಹಿರೇಮಠ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದರಮಠ, ಗದಗ

( ಪ್ರ . ಆ. ೧೯೮೩ ) |

ಅನುಭಾವಜ್ಞಾನ ಸಾರಾಮೃತ ಸಂಪಾದನಾಸ್ತೋತ್ರ

- ಸಂಪಾದನೆಯ ಪರ್ವತಾಚಾರ

ಸಂ . ಬಿ. ಆರ್ . ಹೂಗಾರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೯)
ಆಕರ ಗ್ರಂಥಗಳು ပုပ္ပ

ಅಮುಗೆ ರಾಯಮ್ಮನ ವಚನಗಳು

( ಇದು ಶಿವಶರಣೆಯರ ವಚನಗಳು ಸಮಗ್ರ ಸಂಪುಟದ ಒಂದು ಭಾಗ)

ಸಂ . ಡಾ . ಆರ್ . ಸಿ . ಹಿರೇಮಠ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೬೮)

ಅಷ್ಟಾವರಣದ ವಚನಗಳು

- ಎಳಮಲೆಯ ಗುರುಶಾಂತದೇವರು

( ಇದು ಎಳಮಲೆಯ ಗುರುಶಾಂತದೇವರ ವಚನ ಸಂಕಲನಗಳು ಕೃತಿಯ ಒಂದು ಭಾ

ಸಂ . ಡಾ . ವೀರಣ್ಣ ರಾಜೂರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ


( ಪ್ರ . ಆ. ೧೯೮೩)

ಆಚರಣೆಯ ಸಂಬಂಧದ ವಚನಗಳು

- ಸಂಪಾದನೆಯ ಹರತಾಳ ಚೆನ್ನಂಜೇದೇವ

ಸಂ . ಪಿ . ಎಂ . ಗಿರಿರಾಜು

ಪ್ರ : ಶರಣಸಂತಾನ ಪ್ರಕಾಶನ , ೪೪೭, ಸಂತೇಪೇಟೆ, ಮೈಸೂರು

( ಪ್ರ . ಆ. ೧೯೮೦)

ಆಚರಣೆ ಸಂಬಂಧದ ವಚನಗಳು

- ಸಂಪಾದನೆಯ ಸಿದ್ದ ವೀರೇಶ್ವರದೇವರು

ಸಂ . ಪಿ. ಎಂ . ಗಿರಿರಾಜು

ಪ್ರ : ಶರಣಸಂತಾನ ಪ್ರಕಾಶನ, ೪೪೭ , ಸಂತೇಪೇಟೆ, ಮೈಸೂರು

( ಪ್ರ . ಆ . ೧೯೮೦ )

ಎಲ್ಲ ಪುರಾತರಸ್ತೋತ್ರದ ವಚನಗಳು

ಸಂ . ಡಾ. ವೀರಣ್ಣ ರಾಜೂರ

ಪ್ರ : ವೀರಶೈವ ಅಧ್ಯಯನ ಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ


( ಪ್ರ . ಆ . ೧೯೮೮)
ဥပ္
ಶಿವಶರಣೆಯರ ವಚನಸಂಪುಟ

ಏಕೋತ್ತರಶತಸ್ಥಲ

- ಮಹಾಲಿಂಗದೇವ

ಸಂ . ಎಸ್ . ಎಸ್ . ಭೂಸನೂರಮಠ

ಪ್ರ : ಶ್ರೀ ನಿ. ಪ್ರ . ಸ್ವ , ಶಿವಬಸವಸ್ವಾಮಿಗಳು ರುದ್ರಾಕ್ಷಿಮಠ, ನಾಗನೂರ

ಹನುಮನಬೀದಿ ಬೆಳಗಾಂವಿ

( ಪ್ರ . ಆ. ೧೯೭೪)

ಗಣಭಾಷಿತರತ್ನಮಾಲೆ

- ಗುಬ್ಬಿಯ ಮಲ್ಲಣ್ಣ

ಸಂ . ಪ್ರಭುಸ್ವಾಮಿಗಳು

ಪ್ರ : ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆ

ಮುರುಘಾಮಠ, ಧಾರವಾಡ

( ಪ್ರ . ಆ. ೧೯೪೮)

ಚಿತ್ನಿಯಾಸಂಗ್ರಹ

( ಜಿಗುನಿ ಮರುಳದೇವರ ಕೃತಿಗಳು ಗ್ರಂಥದ ಒಂದು ಭಾಗ)

ಸಂ . ಡಾ . ಎಸ್ . ವಿದ್ಯಾಶಂಕರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೩)

ಚಿದ್ಭಸ್ಮಮಣಿಮಂತ್ರಮಹಾತ್ಮಯ ಸ್ಥಲದ ವಚನ

( ಇದು ವಚನ ಸಂಕಲನ ಸಂಪುಟ ಒಂದು, ಈ ಕೃತಿಯ ಒಂದು ಭಾಗ)

ಸಂ . ಡಾ . ಬಿ. ಆರ್. ಹಿರೇಮಠ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾಯ್ಯಮಠ, ಗದಗ

( ಪ್ರ . ಆ. ೧೯೯೦)

ಚಿದೈಶ್ವರ್ಯ ಚಿದಾಭರಣ

- ಗುರುಸಿದ್ಧದೇವ

ಸಂ . ಪಿ. ಎಂ . ಗಿರಿರಾಜು

ಪ್ರ : ಶರಣಸಂತಾನ ಪ್ರಕಾಶನ, ೪೪೭ , ಸಂತೇಪೇಟೆ, ಮೈಸೂರು

( ಪ್ರ . ಆ. ೧೯೮೪)
೪ ೪೭
ಆಕರ ಗ್ರಂಥಗಳು

ಚೆನ್ನಬಸವೇಶ್ವರಸ್ತೋತ್ರದ ವಚನಗಳು

- ಸಂಪಾದನೆಯ ಸಿದ್ದವೀರೇಶ್ವರದೇವರು

ಸಂ . ಜಿ . ಎ .ಶಿವಲಿಂಗಯ್ಯ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೯೧)

ಜ್ಞಾನಷಟ್‌ಸ್ಥಲಸಾರ

ಸಂ . ಡಾ . ವೀರಣ್ಣ ರಾಜೂರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೯೨)

ನಿರಾಸನದ ವಚನ

(ಇದು ವಚನ ಸಂಕಲನ ಸಂಪುಟ ಒಂದು, ಈ ಕೃತಿಯ ಒಂದು ಭಾಗ)

ಸಂ . ಡಾ . ಬಿ. ಆರ್ . ಹಿರೇಮಠ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೯೦)

ನೀಲಮ್ಮನ ವಚನಗಳು

ಸಂ . ಡಾ . ಸಾ . ಶಿ . ಮರುಳಯ್ಯ ಮತ್ತು ಎಸ್ . ಶಿವಣ್ಣ

ಪ್ರ : ಬಸವಸಮಿತಿ ಬೆಂಗಳೂರು - ೧

( ಪ್ರ . ಆ . ೧೯೯೩)

ನೀಲಮ್ಮನ ವಚನಗಳು

(ಇದು ಶಿವಶರಣೆಯರ ವಚನಗಳು ಸಮಗ್ರ ಸಂಪುಟ ಕೃತಿಯ ಒಂದು ಭಾಗ)

ಸಂ . ಡಾ . ಆರ್ . ಸಿ. ಹಿರೇಮಠ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೬೮)

ಪರಮಮೂಲಜ್ಞಾನಷಟ್‌ಸ್ಥಲ

- ಚಿಕ್ಕವೀರಣೋಡೆಯ

ಸಂ . ಡಾ . ಎಂ . ಎಸ್ . ಸುಂಕಾಪುರ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ


( ಪ್ರ . ಆ . ೧೯೭೭) .
೪೪೮ ಶಿವಶರಣೆಯರ ವಚನಸಂಪುಟ

ಪ್ರಭುದೇವರಸ್ತೋತ್ರದ ವಚನಗಳು |

- ಸಂಪಾದನೆಯ ಸಿದ್ಧವೀರೇಶ್ವರದೇವರು

( ಇದು ವಚನ ಸಂಕಲನ ಸಂಪುಟ ಮೂರು, ಈ ಕೃತಿಯ ಒಂದು ಭಾಗ)

ಸಂ . ಎಸ್. ಶಿವಣ್ಣ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ . ೧೯೯೧)

ಪ್ರಭುಲಿಂಗಲೀಲೆಯಲ್ಲಿ ಉಕ್ತವಾದ ವಚನಗಳು

( ಇದು ವೀರಶೈವಕಾವೊಕ್ಕ ವಚನಗಳು ಕೃತಿಯ ಒಂದು ಭಾಗ)

ಸಂ . ಬಸವರಾಜ ಹೂಗಾರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೯೧) .

ಪ್ರಸಾದಿಸ್ಥಲದ ವಚನಗಳು

ಸಂ . ಡಾ . ಎಂ . ಎಸ್ . ಸುಂಕಾಪುರ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ . ೧೯೭೭)

ಬಸವಸ್ತೋತ್ರದ ವಚನಗಳು

- ಸಂಪಾದನೆಯ ಹರತಾಳ ಚೆನ್ನಂಜೇದೇವ

ಸಂ . ಡಾ . ಎಂ . ಎಂ . ಕಲಬುರ್ಗಿ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೭೬)

ಬಸವಸ್ತೋತ್ರದ ವಚನಗಳು

- ಸಂಪಾದನೆಯ ಬೋಳಬಸವೇಶ್ವರ

ಸಂ . ಡಾ . ಎಂ . ಎಂ . ಕಲಬುರ್ಗಿ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೭೬ )

ಬಸವಸ್ತೋತ್ರದ ವಚನಗಳು

- ಸಂಪಾದನೆಯ ಬೋಳಬಸವೇಶ್ವರ

ಸಂ . ಡಾ . ವೀರಣ್ಣ ರಾಜೂರ
ಪ್ರ : ಬಸವಪಥ ೧೨ - ೧ ಎ . ೧೯೯೦

ಬಸವ ಸಮಿತಿ, ಬೆಂಗಳೂರು


ಆಕರ ಗ್ರಂಥಗಳು ೪ ೪೯

ಬ್ರಹ್ಮಾದೈತ ಸಿದ್ದಾಂತ ಷಟ್‌ಸ್ಥಲಾಭರಣ

– ಕರಸ್ಥಲದ ಮಲ್ಲಿಕಾರ್ಜುನ ಒಡೆಯ

ಸಂ. ಡಾ. ಆರ್ . ಸಿ. ಹಿರೇಮಠ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ . ೧೯೭೩ )

ಭಕ್ತಾನಂದ ಸುಧಾರ್ಣವ

ಸಂ . ಡಾ . ವೀರಣ್ಣ ರಾಜೂರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೬೪)

ಮಹಾದೇವಿಯಕ್ಕನ ಸಾಂಗತ್ಯ

- ರಾಚಯ್ಯ

ಸಂ . ಡಾ . ಎಸ್ . ವಿದ್ಯಾಶಂಕರ

ಪ್ರ : ತರಳಬಾಳು ಪ್ರಕಾಶನ, ಸಿರಿಗೆರೆ

( ಪ್ರ . ಆ. ೧೯೮೫)

ಮಿಶ್ರಸ್ತೋತ್ರದ ವಚನಗಳು
- ಸಂಪಾದನೆಯ ಹರತಾಳ ಚೆನ್ನಂಜೇದೇವ

ಸಂ . ಪ್ರಭುಸ್ವಾಮಿಗಳು ಹೊಸಳ್ಳಿ

ಪ್ರ : ಬೂದಿಸ್ವಾಮಿ ಸಂಸ್ಥಾನಮಠ, ಹೊಸಳ್ಳಿ

ಮಿಶ್ರಸ್ತೋತ್ರದ ವಚನಗಳು

- ಎಳಮಲೆಯ ಗುರುಶಾಂತದೇವ

( ಇದು ಎಳಮಲೆಯ ಗುರುಶಾಂತದೇವರ ವಚನ ಸಂಕಲಗಳು ಕೃತಿಯ ಒಂದು ಭಾಗ )


ಸಂ . ಡಾ . ವೀರಣ್ಣ ರಾಜೂರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೩ )|

ಲಿಂಗಚಿದಮೃತಬೋಧೆ

- ಶಾಂತಬಸವೇಶ್ವರ

ಸಂ . ಡಾ . ಎಂ . ಎಸ್ . ಸುಂಕಾಪುರ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ . ೧೯೬೮ ).
೪೫೦
ಶಿವಶರಣೆಯರ ವಚನಸಂಪುಟ

ಲಿಂಗಲೀಲಾ ವಿಲಾಸಚಾರಿತ್ರ

- ಕಲ್ಲುಮಠದಪ್ರಭುದೇವ

ಸಂ . ಎಸ್ . ಎಸ್ . ಭೂಸನೂರಮಠ

ಪ್ರ : ಶ್ರೀ ಬಾಲಲೀಲಾಮಹಾಂತ ಶಿವಯೋಗೀಶ್ವರ ಗ್ರಂಥಮಾಲೆ

ಮುರುಘಾಮಠ, ಧಾರವಾಡ

( ಪ್ರ . ಆ . ೧೯೫೬)

ಲಿಂಗವಿಕಳಾವಸ್ಥೆಯ ವಚನಗಳು

- ಎಳಮಲೆಯ ಗುರುಶಾಂತದೇವ

( ಇದು ಎಳಮಲೆಯ ಗುರುಶಾಂತದೇವರ ವಚನ ಸಂಕಲನಗಳು ಕೃತಿಯ ಒಂದು ಭಾಗ

ಸಂ . ಡಾ . ವೀರಣ್ಣ ರಾಜೂರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೩ )

ಲಿಂಗಸಾವಧಾನದ ವಚನಗಳು

- ಸಣ್ಣ ಬರಹದ ಗುರುಬಸವರಾಜದೇವರು

( ಇದು ವಚನ ಸಂಕಲನ ಸಂಪುಟ ಒಂದು ಕೃತಿಯ ಒಂದು ಭಾಗ)

ಸಂ . ಡಾ . ಬಿ. ಆರ್ . ಹಿರೇಮಠ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೯೦)

ಲಿಂಗಸ್ತೋತ್ರದ ವಚನಗಳು

- ಸಂಪಾದನೆಯ ಸಿದ್ಧವೀರೇಶ್ವರದೇವರು

ಸಂ . ವಿ . ರು , ಕೊಪ್ಪಳ |

ಪ್ರ :ಶ್ರೀಗುರುಬಸವಮಂಟಪ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ

( ಪ್ರ . ಆ. ೧೯೬೪)

ವಚನಸಾರ

- ಸಂ . ಡಾ . ವೀರಣ್ಣ ರಾಜೂರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೯)
೨೩೧
ಆಕರ ಗ್ರಂಥಗಳು

ವಚನಾಮೃತಸಾರ

ಸಂ . ಕಾಶಿಪುಟ್ಟ ಸೋಮಾರಾಧ್ಯ ಮತ್ತು ಡಾ . ವೀರಣ್ಣ ರಾಜೂರ

ಪ್ರ : ಮಂಗಳ ಪ್ರಕಾಶನ, ಕಲ್ಯಾಣನಗರ, ಧಾರವಾಡ

( ಪ್ರ . ಆ. ೧೯೭೯ )

ವಚನೈಕೋತ್ತರ ಶತಸ್ಥಲ
- ಚೆನ್ನಬಸವಣ್ಣ

ಸಂ . ಜಿ. ಎ. ಶಿವಲಿಂಗಯ್ಯ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೩)

ವಿರತಾಚರಣೆಯ ಮತ್ತು ಶರಣಸಂಬಂಧದ ವಚನಗಳು

- ಶಂಕರದೇವ

ಸಂ . ಪಿ. ಎಂ . ಗಿರಿರಾಜು

ಪ್ರ : ಶರಣಸಂತಾನ ಪ್ರಕಾಶನ, ೪೪೭ , ಸಂತೆಪೇಟೆ, ಮೈಸೂರು

( ಪ್ರ . ಆ. ೧೯೭೯ )

ವಿಶೇಷಾನುಭವ ಪಟ್ಲ '

- ಚೆನ್ನವೀರಾಚಾರ

ಸಂ . ಡಾ. ಆರ್ . ಸಿ. ಹಿರೇಮಠ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೭೧)

ವೀರಶೈವ ಚಿಂತಾಮಣಿ

- ಮಹದೇವಯೋಗಿ

ಸಂ . ಡಾ. ಆರ್ . ಸಿ. ಹಿರೇಮಠ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೭೧)

ಶರಣ ಚಾರಿತ್ರದ ವಚನಗಳು

- ಸಣ್ಣ ಬರಹದ ಗುರುಬಸವರಾಜದೇವರು

ಸಂ . ಡಾ . ಬಿ . ವಿ . ಶಿರೂರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ


೪೨ ಶಿವಶರಣೆಯರ ವಚನಸಂಪುಟ

ಶರಣ ಮುಖಮಂಡನ

ಸಂ . ಡಾ . ಬಿ. ವಿ. ಶಿರೂರ ಮತ್ತು ಬಸವರಾಜ ಹೂಗಾರ |

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೮) |

ಶರಣಸೂತ್ರದ ವಚನಗಳು

- ಎಳಮಲೆಯ ಗುರುಶಾಂತದೇವರು

(ಇದು ಎಳಮಲೆಯ ಗುರುಶಾಂತದೇವರ ವಚನ ಸಂಕಲನಗಳು ಕೃತಿಯ ಒಂದು ಭಾಗ )

ಸಂ . ಡಾ . ವೀರಣ್ಣ ರಾಜೂರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೩ )

ಶಿವನ ಬಿರುದಾವಳಿಸ್ತೋತ್ರದ ವಚನಗಳು

- ಸಂಪಾದನೆಯ ಸಿದ್ದವೀರೇಶ್ವರದೇವರು

(ಇದು ವಚನಸಂಕಲನ ಸಂಪುಟ ಮೂರು, ಕೃತಿಯ ಒಂದು ಭಾಗ)

ಸಂ . ಎಸ್ . ಶಿವಣ್ಣ

ಪ್ರ : ವೀರಶೈವ ಅಧ್ಯಯನಸಂಸ್ಥೆ ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೯೦)

ಶಿವಮಹಿಮಾಸ್ತೋತ್ರದ ವಚನಗಳು

- ವೀರಸಂಗಯ್ಯ

ಸಂ . ಡಾ . ವೀರಣ್ಣ ರಾಜೂರ

ಪ್ರ : ಕರ್ನಾಟಕ ಭಾರತಿ ೧೯ - ೨ ನವಂಬರ ೧೯೮೬

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

ಶಿವಯೋಗ ಚಿಂತಾಮಣಿ

- ಜಾಳಿಗೆಕಂತೆ ಸಿದ್ಧಲಿಂಗ ಶಿವಯೋಗಿ

ಸಂ . ಡಾ . ಎಂ . ಆರ್. ಉಮಾದೇವಿ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ . ೧೯೮೭)
೪೫೩
ಆಕರ ಗ್ರಂಥಗಳು

ಶೀಲಸಂಪಾದನೆ

ಸಂ . ಡಾ . ವೀರಣ್ಣ ರಾಜೂರ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೪)

ಶೂನ್ಯ ಸಂಪಾದನೆ

- ಶಿವಗಣಪ್ರಸಾದಿ ಮಹಾದೇವಯ್ಯ

ಸಂ . ಡಾ . ಆರ್. ಸಿ. ಹಿರೇಮಠ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೭೧)

ಶೂನ್ಯಸಂಪಾದನೆ

– ಗುಮ್ಮಳಾಪುರದ ಸಿದ್ಧಲಿಂಗ

ಸಂ . ಡಾ . ಆರ್ . ಸಿ. ಹಿರೇಮಠ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೭೨)

ಶೂನ್ಯಸಂಪಾದನೆ

- ಗೂಳೂರ ಸಿದ್ಧವೀರಣ್ಡೆಯ

ಸಂ . ಎಸ್ . ಎಸ್ . ಭೂಸನೂರಮಠ

ಪ್ರ : ರಾವೂರ ಶ್ರೀ ಸಿದ್ಧಲಿಂಗೇಶ್ವರಮಠ ಮತ್ತು

ಆದವಾನಿಯ ಕಲ್ಲುಮಠದ ಅಧಿಪತಿಗಳು

( ಪ್ರ . ಆ. ೧೯೫೮)

ಪಟ್ಟಕಾರ ಸಂಗ್ರಹ

- ಶಾಂತದೇವರು

ಸಂ . ಜಿ. ಎ. ಶಿವಲಿಂಗಯ್ಯ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೭ )
೪೫೪
ಶಿವಶರಣೆಯರ ವಚನಸಂಪುಟ

ಷಟ್ಟಕಾರ ಸಂಗ್ರಹ

- ಶಾಂತದೇವರು

ಸಂ . ಪಿ. ಎಂ . ಗಿರಿರಾಜು

ಪ್ರ : ಶರಣಸಂತಾನ ಪ್ರಕಾಶನ, ೪೪೭ , ಸಂತೆಪೇಟೆ, ಮೈಸೂರು

( ಪ್ರ . ಆ. ೧೯೮೭)

ಷಟ್‌ಸ್ಥಲ ಬ್ರಹ್ಮಾನಂದ ವಿರಕ್ತ ಚಾರಿತ್ರ ಸಂಪಾದನೆಯ ವಚನಗಳು

- ಸಂಪಾದನೆಯ ಬೋಳಬಸವೇಶ್ವರ

ಸಂ . ಎಸ್ . ಉಮಾಪತಿ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೪)

ಸಂಪಾದನೆಯ ಸಾರಾಮೃತ

- ಕಟ್ಟಿಗೆಹಳ್ಳಿ ಸಿದ್ಧಲಿಂಗ

ಸಂ . ಡಾ . ಬಿ . ಆರ್. ಹಿರೇಮಠ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೮)

ಸಂಬಂಧಾಚರಣೆಯ ವಚನಗಳು

ಸಂ . ಪಿ . ಎಂ . ಗಿರಿರಾಜು

ಪ್ರ : ಶರಣಸಂತಾನ ಪ್ರಕಾಶನ, ೪೪೭, ಸಂತೆಪೇಟೆ, ಮೈಸೂರು

( ಪ್ರ . ಆ. ೧೯೮೬) |

ಕಲಪುರಾತನರ ವಚನಗಳು (ಸಂಪುಟ - ೧) - -

ಸಂ . ಡಾ . ಆರ್ . ಸಿ. ಹಿರೇಮಠ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೭೨)

ಸಕಲಪುರಾತನರ ವಚನಗಳು ( ಸಂಪುಟ - ೨) .

ಸಂ . ಡಾ . ಎಂ . ಎಸ್ . ಸುಂಕಾಪುರ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ ೧೯೭೬ )
ಆಕರ ಗ್ರಂಥಗಳು ೫೫

ಸಕಲಪುರಾತನರ ವಚನಗಳು (ಸಂಪುಟ - ೩ ) .

ಸಂ . ಡಾ . ಎಂ . ಎಸ್ . ಸುಂಕಾಪುರ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ. ೧೯೭೮)

ಸಕಲಪುರಾತನರ ಬೆಡಗಿನ ವಚನಗಳು

- ಸಿಂಗಳದ ಸಿದ್ಧಬಸವರಾಜದೇವರು

ಸಂ . ಡಾ . ಎಂ. ಎಸ್ . ಸುಂಕಾಪುರ

ಪ್ರ : ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

( ಪ್ರ . ಆ . ೧೯೭೮)

ಸುಖಸಂಪಾದನೆಯ ವಚನಗಳು

ಸಂ . ಡಾ . ಬಿ. ಆರ್ . ಹಿರೇಮಠ

ಪ್ರ : ವೀರಶೈವ ಅಧ್ಯಯನಸಂಸ್ಥೆ , ಜಗದ್ಗುರು ತೋಂಟದಾರಮಠ, ಗದಗ

( ಪ್ರ . ಆ. ೧೯೮೭)

ಅಪ್ರಕಟಿತ :

ಏಕೋತ್ತರ ಶತಸ್ಥಲ ಬೊಲ್ಲಿ

(ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನಪೀಠದ ಹಸ್ತಪ್ರತಿ)

ಏಕೋತ್ತರ ಶತಸ್ಥಲಸಾರ

- ಕಟ್ಟಿಗೆಹಳ್ಳಿ ಸಿದ್ಧಲಿಂಗಸ್ವಾಮಿ

(ಕ. ವಿ. ವಿ . ಕನ್ನಡ ಅಧ್ಯಯನಪೀಠದ ಹಸ್ತಪ್ರತಿ)

ನಿಷ್ಕಲಲಿಂಗ ಚಿದಾನಂದಲೀಲೆ (ಕಾವ್ಯ )

(ಮೈಸೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ)

ಮೋಕ್ಷದರ್ಶನ ಸಂಗ್ರಹ ( ಶಾಸ್ತ್ರ ಕಾವ್ಯ )

( ಮೈಸೂರವಿಶ್ವವಿದ್ಯಾಲಯ ಕನ್ನಡ ಅಧ್ಯಯನಸಂಸ್ಥೆಯ ಹಸ್ತಪ್ರತಿ)

ಶೂನ್ಯ ಸಂಪಾದನೆ

- ಹಲಗೆದೇವ

(ಮೈಸೂರ ವಿಶ್ವವಿದ್ಯಾಲಯ ಕನ್ನಡ ಅಧ್ಯಯನಸಂಸ್ಥೆಯ ಹಸ್ತಪ್ರತಿ)


0 ೫೬ ಶಿವಶರಣೆಯರ ವಚನಸಂಪು

ಸಕಲಪುರಾತನರ ವಚನಗಳು (೬ ಸಾವಿರ ವಚನಗಳ ಕಟ್ಟು )

( ತಿಪಟೂರ ತಾಲೂಕ ಹೊನ್ನಹಳ್ಳಿ ಕರಿಸಿದ್ದೇಶ್ವರ ಮಠದ ಓಲೆಗರಿ ಹಸ್ತಪ್ರತಿ)

- ಗದುಗಿನ ತೋಂಟದಾಯ್ಯಮಠದ

ಓಲೆಗರಿ ಹಸ್ತಪ್ರತಿ ನಂ . ೨೮೦

- ಕನ್ನಡ ಅಧ್ಯಯನಕೇಂದ್ರ , ಬೆಂ . ವಿ. ವಿ. ಕಾಗದ ಪ್ರ . ೬೨೬ ಮತ್ತು ೯೬೯/

ಪತ್ರಿಕೆ :

ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಬೆಂಗಳೂರು ೭೧ - ೧

ಕರ್ನಾಟಕ ಭಾರತಿ , ಧಾರವಾಡ ೨೪ - ೪ ( ೧೯೯೨); ೨೫ - ೩ ( ೧೯೯೩ )

ಸಾಧನೆ, ಬೆಂಗಳೂರು ( ೪ - ೪, ೧೯೭೫)

ಬಸವಪಥ, ಬೆಂಗಳೂರು ( ೧೯ -೯ ಡಿ. ೯೭)


2

LE
ಸಮಗ್ರ ವಚನಸಾಹಿತ್ಯ ಪ್ರಕಟನ ಯೋಜನೆ

'ಸಮಗ್ರ ವಚನಸಾಹಿತ್ಯ ಪ್ರಕಟನ ಯೋಜನೆ' ಕರ್ನಾಟಕ

ಸರ್ಕಾರದ ಈವರೆಗಿನ ಸಾಹಿತ್ಯಕ ಸಾಧನೆಗಳಲ್ಲಿ ಒಂದು ಮಹತ್ವದ

ದಾಖಲೆಯಾಗಿದೆ. ಇದು ಒಂದು ಸಾಹಿತ್ಯಕೃತಿಯ ಪ್ರಕಟನೆಯಲ್ಲ

ಒಂದು ಸಾಹಿತ್ಯ ಪ್ರಕಾರದ ಪ್ರಕಟನೆ .

ತತ್ವಕ್ಕೆ ತತ್ವ , ಸಾಹಿತ್ಯಕ್ಕೆ ಸಾಹಿತ್ಯವಾಗಿರುವ ' ವಚನ

ವಾಹ್ಮಯ ' ಏಕಕಾಲಕ್ಕೆ ಆತ್ಮಕಲ್ಯಾಣವನ್ನ ಸಮಾ

ಕಲ್ಯಾಣವನ್ನೂ ಪ್ರತಿಪಾದಿಸುವ ಮೂಲಕ ಜಾಗತಿಕ ಮಹತ್ವ

ಗಳಿಸಿದೆ. ಈ ಮೌಲಿಕ ಸಾಹಿತ್ಯವನ್ನು ಸುಲಭ ಬೆಲೆಯಲ್ಲಿ ಜನತೆಗೆ

ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ .

ಇವತ್ತಿನ ಮಿತಿಗೆ ಸಿಗುವ ಬಸವಯುಗ ಮತ್ತು ಬಸವೋತ್

ಯುಗಗಳ ಎಲ್ಲ ಶರಣರ ಎಲ್ಲ ವಚನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ,

ಪ್ರಕಟಿಸಿದ ಪ್ರಯತ್ನವಿದು . ಈ ಮೂಲಕ ಬಸವಯುಗದ ಹಲವು

ಹೊಸ ವಚನಗಳು ಬೆಳಕಿಗೆ ಬರುವುದರೊಂದಿಗೆ , ಬಸವೋತ್ತರ

ಯುಗದ ಸಮಗ್ರ ವಚನ ಸಂಪತ್ತು ಪ್ರಥಮಸಲ ಹೊರ

ಬರುತ್ತಿರುವುದು ಈ ಯೋಜನೆಯ ವಿಶೇಷ ಸಾಧನೆಯಾಗಿದೆ .

- ೮೦೦ ವರ್ಷಗಳುದ್ದಕ್ಕೂ ಬೆಳೆದುಬಂದ ಈ ಸಾಹಿತ್ಯದ

ವ್ಯಾಪ್ತಿಯನ್ನು ಪ್ರಥಮಬಾರಿ ಗುರುತಿಸಿಕೊಡುತ್ತಿರುವ ಈ ಸಾಹಸದ

ಫಲವಾಗಿ, ಸಾವಿರ ವಚನಗಳು ಸುಮಾರು ಸಾವಿರ ಪುಟ ವ್ಯಾಪ್ತಿಯ

ಸಂಪುಟಗಳಲ್ಲಿ (ವಚನ ಪರಿಭಾಷಾಕೋಶ ಸೇರಿ) ಬೆಳಕು

ಕಾಣುತ್ತಿವೆ.

ISBN : 81 -7713 - 098- 6

You might also like