You are on page 1of 7

ಕರಡು ಪ್ರತಿ

ಮುನ್ನು ಡಿ

ಜಿ.ಬಿ.ಹರೀಶ

ಸಾವರ್ಕರ್‌ ಕ್ರಾಂತಿಕಾರಿ ಯುವ ಹಿಂದು ವಿದ್ವಾಂಸ- ಖೈದಿ ಮತ್ತು ವ್ಯ ಕ್ತಿ

1) ನಾನು ಮೂಲತಃ ಸಾಹಿತಿ. ಕಥೆ, ಕವನ, ಕಾದಂಬರಿ ಇವು ನನ್ನ ಕ಼ೇತ್ರ. ಈ ಮೊದಲು ವಿಮರ್ಶೆಯ ಕ್ಷೇತ್ರದಲ್ಲಿ ಕೆಲಸ

ಮಾಡಿದ ನನಗೆ ಅದು ನನ್ನ ನ್ನು ಹಿಡಿದಿಡಲು ಸಾಧ್ಯ ವಿಲ್ಲ ಎಂದು ತಿಳಿದುಬಂದಿದೆ. ಪ್ರಾಚೀನ ಇತಿಹಾಸವೂ ಸೇರಿದಂತೆ

ಭಾರತದ ಮತ್ತು ಪ್ರಪಂಚದ ಬೇರೆ ಬೇರೆ ದೇಶಗಳ ಇತಿಹಾಸ ಸಹ ನನ್ನ ಆಸಕ್ತಿಯ ವಿಷಯ. ಏಕೆಂದರೆ ಅದರಲ್ಲಿ

ಮನುಷ್ಯ ನ ಹಲವು ಬಗೆಯ ಏರಿಳಿತಗಳು, ಆದರ್ಶಗಳು, ಸಂಕಟಗಳು,ಪಿತೂರಿ, ಹಾದರ, ಪರಾಕ್ರಮ ಇವು

ಕಾಲಕಾಲಕ್ಕೆ ಪ್ರಾಮಾಣಿಕ ಇತಿಹಾಸಕಾರರಿಂದ ದಾಖಲಾಗುತ್ತವೆ. ಅದು ನನ್ನ ಅರಿವನ್ನು , ಪ್ರಜ್ಞೆಯನ್ನು ಜಾಗತಿಕವಾಗಿ

ಬೆಳಸಿಕೊಳ್ಳ ಲು ಸಾಹಿತಿಯಾಗಿ ನನಗಿರುವ ಒಂದು ದಾರಿ.

2) ವಿನಾಯಕ ದಾಮೋದರ ಸಾವರ್ಕರ್‌ಕುರಿತು ಕಳೆದ ನಾಲ್ಕೈದು ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿರುವೆ. ಈ

ಮೊದಲು ನಾನು ಗಾಂಧಿ, ಅಂಬೇಡ್ಕ ರ್‌ಲೋಹಿಯಾ, , ನೆಹರೂ ಇವರ ಸಾಹಿತ್ಯ ವನ್ನು ಮೂಲದಲ್ಲಿ ಓದಿದ್ದೆ.ಈ

ಸಮಯದಲ್ಲಿ ನನ್ನ ನ್ನು ಕಾಡಿದ ಹಲವು ಸಂಶೋಧನಾ ಸಮಸ್ಯೆ ಗಳಲ್ಲಿ ಒಂದು ಸಮಸ್ಯೆ , ಇಂಗ್ಲೆಂಡಿನಲ್ಲಿ ಬಂಧನಕ್ಕೆ ಒಳಗಾದ

ಯುವಕ ಹಡಗಿನಿಂದ ಸಮುದ್ರಕ್ಕೆ ಹಾರಿ ಅದನ್ನು ಈಜಿಕೊಂಡು ಇಂಗ್ಲೆಂಡಿನ ಚಾರಿತ್ರಿಕ ಶತ್ರು ರಾಷ್ಟ್ರವಾದ ಫ್ರಾನ್ಸಿನ ಗಡಿ

ತಲುಪಿದ ಮೇಲೆ, ಇಂಗ್ಲೆಂಡಿನ ಪೊಲೀಸರು ಅವರನ್ನು ಮತ್ತೆ ವಿದೇಶದ ನೆಲದಲ್ಲಿ ಬಂಧಿಸಿದರಷ್ಟೆ. ಇದು ಅಂದು

ಫ್ರಾನ್ಸಿನ ಮೇಲೆ ಹಾಗೂ ಅಂತಾರಾಷ್ಟ್ರೀಯ ಸಮುದಾಯ, ಕಾನೂನು ತಜ್ಞ ರು, ವಿವಿಧ ದೇಶಗಳ ಸ್ವಾತಂತ್ರ್ಯ ಪ್ರೇಮಿಗಳ
ಮೇಲೆ ಯಾವ ಪರಿಣಾಮ ಬೀರಿರಬಹುದು? ನನಗೆ ತಿಳಿದಂತೆ ಕನ್ನ ಡದಲ್ಲಿ ಈ ವಿಷಯ ಕುರಿತು ಇದುವರೆಗೂ

ಭಾರತದಲ್ಲಿ ಸಮಾಧಾನಕರವಾದ ಸಂಶೋಧನೆ ನಡೆದಿಲ್ಲ .

3) ಧನಂಜಯ್‌ಕೀರ್‌ ಅವರ ʼ ವೀರ ಸಾವರ್ಕರ್‌ʼ ಇದುವರೆಗೆ ಇಂಗ್ಲಿಷಿನಲ್ಲಿ ಬಂದಿರುವ ಸಾವರ್ಕರ್‌

ಜೀವನಚರಿತ್ರೆಗಳಲ್ಲಿ ನನ್ನ ಪ್ರಕಾರ ಅತ್ಯಂತ ಒಳ್ಳೆಯ ಬರವಣಿಗೆ. ಅದರಲ್ಲಿ ಜೀನ್‌ಲಾಂಗೆಟ್‌ಎಂಬ ಫ್ರಾನ್ಸ್‌ದೇಶದ

ಪತ್ರಕರ್ತನ ಪ್ರಸ್ತಾಪ ಪದೇ ಪದೇ ಬಂದಿದೆ. ಅವನು ಯಾರು ಎಂದು ತಿಳಿಯಲು ಸಂಶೋಧನೆ ನಡೆಸಿದಾಗ ಆತ ಬರೆದ

ಮೂಲ ಫ್ರೆಂಚ್‌ಬರಹಗಳು ದೊರಕಿದವು. ಅದನ್ನು ವಿಯತ್ನಾಮಿನಲ್ಲಿರುವ ನಾನು ಬೆಂಗಳೂರಿನಲ್ಲಿರುವ ಸಾವರ್ಕರ್‌

ಸಾಹಿತ್ಯ ಸಂಘದ ಕಾರ್ಯದರ್ಶಿ ಕೆ.ಆರ್.ಹರ್ಷ ಅವರಿಗೆ ಈ ಮೇಲ್‌ಮೂಲಕ ತಲುಪಿಸಿದೆ. ನಾವಿಬ್ಬ ರೂ

ಚರ್ಚೆಮಾಡಿದ ಮೇಲೆ ಇದನ್ನು ಕನ್ನ ಡಕ್ಕೆ ಅನುವಾದ ಮಾಡಿಸಿವುದು ಅಗತ್ಯ ಎಂದು ನಿರ್ಧಾರ ಮಾಡಿದ ಮೇಲೆ ಹರ್ಷ

ಬೆಂಗಳೂರಿನಲ್ಲಿ ನೆಲೆಸಿರುವ ಹೊಸ ಪೀಳಿಗೆಯ ಬರಹಗಾರ, ಅನುವಾದಕ ನರೇಂದ್ರ ಅವರಿಗೆ ತಲುಪಿಸಿದರು. ಈಗ

ಅವರು ಅನುವಾದಿಸಿರುವ ಕೃತಿ ನಿಮ್ಮ ಕೈಯಲ್ಲಿದೆ.

4) ಈ ಫ್ರೆಂಚ್‌ಪತ್ರಕರ್ತ ಜೀನ್‌ಲಾಂಗೆಟ್‌, ಕನ್ನ ಡ ಮತ್ತು ಭಾರತದ ವೈಚಾರಿಕ ಸಂದರ್ಭದಲ್ಲಿ ಮುಖ್ಯ ನಾಗಿರುವ

ಕಾರಣದಿಂದ ಈ ಪುಸ್ತಕ ಕನ್ನ ಡದಲ್ಲಿ ಬರಬೇಕಿತ್ತು . ಇದಕ್ಕೆ ಮುಖ್ಯ ಕಾರಣ ಪತ್ರಕರ್ತನಾಗಿ ಅವನು ಸಾವರ್ಕರ್‌ಬದುಕಿನ

ಮತ್ತು ಭಾರತದ ಕ್ರಾಂತಿಕಾರಿ ಸಂಘರ್ಷದ ಒಂದು ಮುಖ್ಯ ಘಟ್ಟ ದಲ್ಲಿ ಸಾವರ್ಕರ್‌ನಿಲುವನ್ನು ಸಮರ್ಥಿಸಿ, ಬ್ರಿಟಿಷರನ್ನು

ಮತ್ತು ತನ್ನ ಫ್ರಾನ್ಸ್‌ದೇಶದ ಸರ್ಕಾರವನ್ನು ಪ್ರಶ್ನಿಸಿದ್ದು . ಇದು ಯಾವುದೇ ದೇಶದ ಪತ್ರಕರ್ತನಲ್ಲಿ ಇರಬೇಕಾದ ಒಂದು

ಮೂಲ ಗುಣ. ಇನ್ನೂ ಸ್ವಾರಸ್ಯ ವೆಂದರೆ ಜೀನ್‌ಲಾಂಗೆಟ್‌ಮಾರ್ಕ್ಸವಾದದ ಜನಕ ಕಾರ್ಲ್‌ಮಾರ್ಕ್ಸ್‌ನ ಮಗಳ ಮಗ

ಅಂದರೆ ಮೊಮ್ಮ ಗ. ಸಾವರ್ಕರ್‌ಪರವಾಗಿ ಅವನು ಬರೆದ ಲೇಖನಗಳು ಫ್ರಾನ್ಸ್‌ಆಚೆಗೂ ಪರಿಣಾಮ ಬೀರಿ

ಸಾವರ್ಕರ್‌ಬಂಧನದ ಮೊಕದ್ದ ಮೆ ಹೇಗಿನ ಅಂತಾರಾಷ್ಟ್ರೀಯ ನ್ಯಾಯಾಧಿಕರಣದ ಮುಂದೆ ಬರುವಂತಾಯಿತು?


ಎಂಬ ವಿಷಯ ನರೇಂದ್ರ ಅವರ ಅನುವಾದದಲ್ಲಿ ಬಂದಿದೆ. ಅಂತ್ಯ ದಲ್ಲಿ ಅಂದಿನ ಫ್ರೆಂಚ್‌ಸರ್ಕಾರ ಯಾವುದೇ ಗಟ್ಟಿ

ನಿಲುವು ತಾಳದೇ ಹೋದ ಪರಿಣಾಮದಿಂದ ಈ ಪ್ರಕರಣ ಯುವ ಹಿಂದು ಕ್ರಾಂತಿಕಾರಿ ಸಾವರ್ಕರ್‌ಗೆ

ಅನುಕೂಲಕರವಾಗಲಿಲ್ಲ .

5) ಇಲ್ಲಿ ಮುಖ್ಯ ವಾಗುವ ಅಂಶವೆಂದರೆ ಆ ಕಾಲದ ಫ್ರೆಂಚ್‌ಪತ್ರಿಕೆಗಳಿಗೂ, ಬ್ರಿಟನ್ನಿನ ಪತ್ರಿಕೆಗಳಿಗೂ ನಡೆದ ವೈಚಾರಿಕ

ಮತ್ತು ಕಾನೂನಿನ ಜಗಳ. ಕರ್ನಾಟಕದಲ್ಲಿ, ಬಾರತದಲ್ಲಿ ಆಗ ದೊಡ್ಡ ಕಾನೂನು ವಿದ್ವಾಂಸರುಗಳು ಇದ್ದ ರೂ ಯಾರೂ

ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸದ ಹಾಗೆ ಕಾಣುವುದಿಲ್ಲ . ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ

ಸ್ವಾಂತ್ರ್ಯ-ಸಮಾನತೆ-ಬಂಧುತ್ವ ದ ಆದರ್ಶ ಘೋಷಿಸಿಕೊಂಡಿದ್ದ ಫ್ರಾನ್ಸ್‌ನ ಮರ್ಯಾದೆಗೆ ಈ ಪ್ರಕರಣದಿಂದ

ಅಂತಾರಾಷ್ಟ್ರೀಯವಾಗಿ ಅಷ್ಟ ರ ಮಟ್ಟಿಗೆ ಪೆಟ್ಟು ಬಿತ್ತು . ಅಧಿಕಾರದಲ್ಲಿದ್ದ ಫ್ರೆಂಚ್‌ಪ್ರಧಾನಿ ಮತ್ತು ಇತರ ರಾಜಕೀಯ

ಮುಖಂಡರು, ಆಗ ಗುಲಾಮಗಿರಿಯಲ್ಲಿದ್ದ ಭಾರತದ ಒಬ್ಬ ಹಿಂದು ಯುವ ವಿದ್ವಾಂಸ-ಕ್ರಾಂತಿಕಾರಿಯ ಪರವಾಗಿ

ನಿಲ್ಲು ವ ಅವಕಾಶ ವನ್ನು ಕಳೆದುಕೊಂಡಿತು. ಇಲ್ಲಿ ಫ್ರೆಂಚ್‌ಸರ್ಕಾರ, ಬ್ರಿಟಿಷ್‌ಸರ್ಕಾರ, ಭಾರತದಲ್ಲಿದ್ದ ಬ್ರಿಟಿಷರ

ಪ್ರತಿನಿಧಿಯಾಗಿದ್ದ ಸರ್ಕಾರ ಇವುಗಳು ಕಣ್ಣಾ ಮುಚ್ಚಾಲೆ ಆಡಿದವು. ಫ್ರಾನ್ಸಿನಲ್ಲಿ ಏನಾಗುತ್ತಿದೆ ಎಂಬುದರ ಪೂರ್ಣ

ವಿವರ ಸಾವರ್ಕರ್‌ಗೆ ದೊರಕದಂತೆ ನ್ಯಾಯಾಲಯ ಎಚ್ಚ ರಿಕೆ ವಹಿಸಿಕೊಂಡಿತು.

6) ಬ್ರಿಟನ್ನಿನಲ್ಲಿ ಪಾರ್ಲಿಯಮೆಂಟ್‌, ಆಡಳಿತ ಪಕ್ಷ-ವಿರೋಧ ಪಕ್ಷಗಳು ಇರಬಹುದು; ಆದರೆ ಆಗ ಭಾರತದಲ್ಲಿ ಇದ್ದ ದ್ದು

ಅತ್ಯಂತ ನಿರ್ಲಜ್ಜ , ಕಾನೂನನ್ನು ಬೆಲೆವೆಣ್ಣಿನಂತೆ ಬಳಸಿಕೊಳ್ಳು ತ್ತಿದ್ದ ಹೇಡಿ ಇಂಗ್ಲಿಷ್‌ಆಡಳಿತ ಮತ್ತು ಅದರ ವಂದಿ ಮಾಗಧ

ಪತ್ರಿಕೆಗಳು, ಭಾರತೀಯ ಸಹಾಯಕ ಅಧಿಕಾರಿಗಳು.

7) ಕನ್ನ ಡದಲಿ ಬಂದಿರುವ ಶಿವರಾಮು ಅವರ ʼ ಆತ್ಮಾಹುತಿʼ ಯಲ್ಲಿ ಸಾವರ್ಕರ್‌ಅವರ ಬಂಧನ, ಹಡಗಿನಿಂದ ಹಾರಿ

ಸಮುದ್ರ ಈಜಿದ್ದು ಮಾರ್ಸಲೆಸ್‌ನ ಬಂದರು ಕಟ್ಟೆಗೆ ಸಾವರ್ಕರ್‌ಮುಟ್ಟಿದ್ದು , ಓಡಿದ್ದು ಮತ್ತೆ ಮರಳಿ ಬಂಧನವಾದ್ದು
ಬರುತ್ತದೆ. ಆದರೆ ಫ್ರೆಂಚ್‌ಪತ್ರಿಕೆಗಳು ನಡೆಸಿದ ಸಾವರ್ಕರ್‌ಪರ ವೈಚಾರಿಕ ಸಮರದ ವಿಷಯ ಬಿಟ್ಟು ಹೋಗಿರುವುದು

ವಿಷಾದನೀಯ.

8) ಸಾವರ್ಕರ್‌ಅಭಿಮಾನಿಗಳೂ, ವಿರೋಧಿಗಳೂ ತಿಳಿದಿರುವಂತೆ ಅವರದ್ದು ಕೇವಲ ನಮ್ಮ ಭಾರತಕ್ಕೆ ಸೀಮಿತ ವಾದ

ವ್ಯ ಕ್ತಿತ್ವ ವಾಗಿರಲ್ಲ . ಹಲವು ಖಂಡಗಳಿಗೆ, ದೇಶಗಳಿಗೆ ಅವರ ವಿಚಾರ, ಸಾಹಿತ್ಯ , ಸ್ನೇಹ ಸಂಪರ್ಕಗಳು ಹಬ್ಬಿದ್ದ ವು. ಆ ಕಾಲದ

ಮಾರ್ಕ್ಸ್‌ವಾದದ ಅಲೆಯಲ್ಲಿ ಹಲವು ಪ್ರತಿಭಾವಂತರು ಕೊಚ್ಚಿಕೊಂಡು ಹೋದರು. ಈಗಲೂ ಅದು

ಮುಂದುವರೆದಿದೆ. ಆದರೆ ಸಾವರ್ಕರ್‌ಹಲವು ವೈಚಾರಿಕತೆಗಳನ್ನು ಅರಗಿಸಿಕೊಂಡ

ಅಗ್ನಿಪುರುಷ.ಶುದ್ಧ ವಿಚಾರಶೀಲರಾಗಿದ್ದ ಅವರಿಗೆ ಅಂದಿನ ಕಾಲದ ವಿವಿಧ ವಿಚಾರಧಾರೆಗಳ ಆಳವಾದ ಪರಿಚಯವಿದ್ದು

ಇದರಲ್ಲಿ ಮಾರ್ಕ್ಸ್‌, ಲೆನಿನ್‌ವಿಚಾರಗಳೂ ಸೇರಿದ್ದ ವು. ಯಾವ ಲಂಡನ್ನಿನಲ್ಲಿ ಮಾರ್ಕ್ಸ್‌ತನ್ನ ಮೇರುಕೃತಿ

ʼ ದಾಸ್‌ಕ್ಯಾಪಿಟಲ್‌ʼ ಬರೆದನೋ ಅದೇ ನಗರದ ಗ್ರಂಥಾಲಯದಲ್ಲಿ ಕುಳಿತು ಸಾವರ್ಕರ್‌ʼ ೧೮೫೭ದ ಪ್ರಥಮ ಸ್ವಾತಂತ್ರ್ಯ

ಸಂಗ್ರಾಮ ʼ ಗ್ರಂಥವನ್ನು ಮರಾಠಿಯಲ್ಲಿ ಬರೆದರು. ಇದರ ನಿರೂಪಣೆ ಮಾರ್ಕ್ಸ್‌ನ ೧೮೫೭ಕ್ಕಿಂತ ಅತ್ಯಂತ

ಭಿನ್ನ ವಾಗಿರುವುದನ್ನು ಗಮನಿಸಬೇಕು. ಇದರಿಂದ ಸಾವರ್ಕರ್‌ಗೆ ಮಾರ್ಕ್ಸ್‌ಮತ್ತು ಅವನ ಚಿಂತನೆ ತಿಳಿದಿತ್ತು ಆದರೆ

ಅದಕ್ಕಿಂತ ಅವರು ಭಿನ್ನ ದಾರಿ ತಿಳಿದಿದ್ದ ರು ಎಂದು ಹೊಳೆಯದಿರದು.

9) ರಷ್ಯಾದ ಕ್ರಾಂತಿಕಾರಿ ವ್ಲಾದಿಮರ್‌ಲೆನಿನ್‌ಮತ್ತು ವೀರ ಸಾವರ್ಕರ್‌ಸಮಕಾಲೀನರು, ಅವರಿಬ್ಬ ಗೆ ಮೇಡಂ

ಕಾಮಾರಂಥ ಸಮಾನ ಮನಸ್ಕ ರಾದ ಕ್ರಾಂತಿಕಾರಿ ಒಡನಾಡಿ. ಹೋರಾಟದ ಒಂದು ಸಂದರ್ಭದಲ್ಲಿ ಲೆನಿನ್‌ಗೆ

ಸಾವರ್ಕರ್‌ಲಂಡನ್ನಿನ ಭಾರತ ಭವನದಲ್ಲಿ ೩-೪ ದಿನಗಳು ಆಶ್ರಯಕೊಟ್ಟಿದ್ದ ಕ್ಕೆ ಉಲ್ಲೇಖಗಳಿವೆ. ಇದರ ಅರ್ಥ ಲೆನಿನ್‌

ಮತ್ತು ಸಾವರ್ಕರ್‌ಗೆ ಕ್ರಾಂತಿಯಲ್ಲಿ ಇದ್ದ ಸಮಾನ ನಂಬಿಕೆ ಮಾತ್ರ. ಅದರ ಒಳವಿವರಗಳಲ್ಲಿ ಭೇದವಿದ್ದೇ ಇದೆ. ಇದು

ಭಾರತದ ಯುವ ಶ್ರೇಷ್ಠ ಕ್ರಾಂತಿಕಾರಿ, ರಷ್ಯಾದ ಉದಯೋನ್ಮು ಖ ಕ್ರಾಂತಿಕಾರಿಗೆ ನೆರವು ನೀಡಿದ ಘಟನೆ. ಇಂಥ
ಎಷ್ಟೋ ಘಟನೆಗಳನ್ನು ನಮ್ಮ ದೇಶದ ಇತಿಹಾಸಕಾರರು ಅಡಗಿಸಿ ಇಟ್ಟಿದ್ದಾರೆ. (೧) ಮಾರ್ಕ್ಸ್‌ವಿಚಾರ ಮತ್ತು

ಸಾವರ್ಕರ್‌ವಿಚಾರದ ಸಾಮ್ಯ ಮತ್ತು ಭಿನ್ನ ತೆ ಅಧ್ಯ ಯನ ನಡೆದಿಲ್ಲ . (೨) ಫ್ರೆಂಚ್‌ಮಾರ್ಕಸ್‌ವಾದಿ ಕ್ರಾಂತಿಕಾರಿ, ಪತ್ರಕರ್ತ

ಜೀನ್‌ಲಾಂಗೆಟ್‌ ಮತ್ತು ಸಾವರ್ಕರ್‌ಸಂಬಂಧದ ದಾಖಲೆಗಳ ಅಧ್ಯ ಯನ ನಡೆದಿಲ್ಲ . (೩) ಲೆನಿನ್‌ಗೆ ಸಾವರ್ಕರ್‌

ಲಂಡನ್ನಿನ ಮನೆಯಲ್ಲಿ ಆಶ್ರಯ ನೀಡಿದ್ದು ಮರೆತು ಹೋಗಿದೆ.

10) ಇತಿಹಾಸಕಾರನ ಕೆಲಸ ಹಳೆ ಬಟ್ಟೆ ಒಗೆದಂತೆ ಅದೇ ಅದೇ ವಿಷಯಗಳನ್ನು ಹೇಳಿ ಕಾಲ ಕಳೆಯುವುದಲ್ಲ , ಬದಲಿಗೆ

ಚರಿತ್ರೆಯ ಕತ್ತಲೆಯ ಮೂಲೆಗಳ ಮೇಲೆ ಜ್ಞಾನದ ಬೆಳಕು ಬೀರುವುದು, ಹೊಸ ಸಾಧ್ಯ ತೆ, ಹೊಸ ಆಯಾಮ, ಹೊಸ

ವಾದಗಳಿಗೆ ಅವಕಾಶ ಮಾಡಿಕೊಡುವುದು.

11) ನರೇಂದ್ರ ಅವರು ಮೌನಿಗಳು, ಅಧ್ಯ ಯನ ಶೀಲರು, ಸ್ವ ಯಂ ಪ್ರಚಾರ ಬಯಸದವರು. ಅಂಥವರು ಮುಂದೆ ಬಂದು

ಗಾತ್ರದಲ್ಲಿ ಚಿಕ್ಕ ದಾದರೂ ಅಂದಿನ ಫ್ರೆಂಚ್‌ಜನತೆಯ ಸ್ವಾತಂತ್ರ್ಯ ಪ್ರೀತಿ, ಏನೇ ಭಿನ್ನಾಭಿಪ್ರಾಯಗಳಿದ್ದ ರೂ ಪರಸ್ಪ ರ

ವೈಚಾರಿಕ ಗೌರವವಿದ್ದ ಕಾಲದ ಕೆಲವು ಹಾಳೆಗಳನ್ನು ಫ್ರೆಂಚಿನಿಂದ ಕನ್ನ ಡಕ್ಕೆ ತಂದಿದ್ದಾರೆ. ಫ್ರೆಂಚ್‌, ಜರ್ಮನಿ, ರಷ್ಯಾ

ಮುಂತಾದ ಭಾಷೆಗಳಲ್ಲಿ, ಅಲ್ಲಿನ ಹಳೆಯ ಆರ್ಕೈವ್‌ಗಳಲ್ಲಿ ಭಾರತದ ಕಳೆದ ನೂರು-ಇನ್ನೂ ರು ವರ್ಷಗಳ

ಚರಿತ್ರೆಯನ್ನು ಹೊಸದಾಗಿ ನೋಡಲು ಸಾಧ್ಯ ವಾಗಬಹುದಾದ ಮುಖ್ಯ ದಾಖಲೆಗಳಿರಬಹುದು. ಆದರೆ ಇದಕ್ಕೆ ನಮ್ಮ

ರಾಜ್ಯ ದ ದೇಶದ ಇತಿಹಾಸ ವಿಭಾಗಗಳು ಮೈ ಕೊಡವಿ ಕೆಲಸ ಮಾಡಬೇಕು. ಆರ್‌.ಸಿ. ಮಜುಂದಾರ್‌, ಕೆ.ಎಂ.ಮುನ್ಶಿ

ಕಾಲದ ಇತಿಹಾಸ ಸಂಪುಟಗಳ ರಚನೆಯ ಕಾಲಕ್ಕೆ ಅವರ ದೊರಕದಿದ್ದ ಎಷ್ಟೋ ಹೊಸ ದಾಖಲೆಗಳು, ವೈಜ್ಞಾನಿಕ

ಸಂಶೋಧನೆಗಳನ್ನು ಬಳಸಿಕೊಂಡು ದೇಶದ ಚರಿತ್ರೆನ್ನು ಪರಿಷ್ಕ ರಣ ಮಾಡಬೇಕಿದೆ. ಕೆ.ಎಸ್‌.ನಾರಾಯಣಾಚಾರ್ಯ,

ಎಸ್‌.ಎನ್‌.ಬಾಲಗಂಗಾಧರ, ರಾಜೀವ್‌ಮಲಹೋತ್ರ, ಅರವಿಂದ ನೀಲಕಂಠನ್‌,ನೀಲೇಶ್‌ಓಕ್‌, ಮೃಗೇಂದ್ರ

ವಿನೋದ್‌, ಅನುಜ್‌ಧರ್‌, ಸಂಜೀವ್‌ಸನ್ಯಾಲ್‌, ಸಂದೀಪ ಬಾಲಕೃಷ್ಣ ಮುಂತಾದವರು ಸೀತಾರಂ ಗೋಯಲ್‌,


ಧರಂಪಾಲ್‌, ರಾಮಸ್ವ ರೂಪ್‌, ಅರುಣ್‌ಶೌರಿ, ಕೆ.ಎಸ್‌.ಲಾಲ್‌, ಎನ್‌.ಎಸ್‌.ರಾಜಾರಾಂ ಅವರ ಕೆಲಸಗಳನ್ನು ಅವರವರ

ಶೈಲಿಗಳಲ್ಲಿ ನಡೆಸುತ್ತಿದ್ದಾರೆ. ಅನುವಾದದ ಜೊತೆಗೆ ಕನ್ನ ಡದಲ್ಲೇ ಹಿಂದು ರಾಷ್ಟ್ರ, ಅದರ ಸಮಾಜ, ಇತಿಹಾಸ,

ರಾಜಕೀಯ, ಮನಶ್ಶಾಸ್ತ್ರ ಇವುಗಳನ್ನು ಕುರಿತು ಸ್ವ ತಂತ್ರ ಕೃತಿಗಳು ಬರಬೇಕು.

12) ಗಮನಿಸಬೇಕಾದ ಅಂಶವೆಂದರೆ ಮರಾಠಿಯಲ್ಲಿ, ಕನ್ನ ಡದಲ್ಲಿ ದಲಿತ ಮತ್ತು ಬಂಡಾಯ ಸಾಹಿತ್ಯ ಹುಟ್ಟಿದ್ದು ೧೯೭೦ರ

ದಶಕದಲ್ಲಿ. ಅದಕ್ಕೂ ೬೦-೭೦ ವರ್ಷಗಳ ಮೊದಲೇ ಇಡೀ ಭಾರತದಲ್ಲಿ ಭಾರತೀಯ-ಹಿಂದು ಬಂಡಾಯದ ಬಾವುಟ

ಹಾರಿಸಿದವರು ವೀರ ಸಾವರ್ಕರ್‌. ಇಪ್ಪ ತ್ತನೇ ಶತಮಾನದ ಆರಂಭದಲ್ಲೇ ಅಂದರೆ ಇಂದಿಗೆ (೨೦೨೧೦) ೧೨೦

ವರ್ಷಗಳ ಮೊದಲೇ ಭಾರತೀಯ ಪ್ರಜ್ಞೆಯ ಸಾಹಿತ್ಯ -ಸಂಸ್ಕೃತಿಗಳ ಬಂಡಾಯ ಚಳವಳಿಯನ್ನು ಹುಟ್ಟು ಹಾಕಿದವರು

ಸಾಹಿತಿ ಸಾವರ್ಕರ್‌. ಸಾವರ್ಕರ್‌ಸಾಹಿತ್ಯ ಭಾರತೀಯರ ಪಾಲಿಗೆ, ಜ್ಞಾನಪರಂಪರೆಯನ್ನು ಪ್ರೀತಿಸುವವರ ಪಾಲಿಗೆ

ಅಮೂಲ್ಯ ಸಂಪತ್ತು . ಅದರಲ್ಲಿ ಕವನ, ಕಾದಂಬರಿ, ಪ್ರಬಂಧ, ವಿಚಾರ ಸಾಹಿತ್ಯ , ವಿಜ್ಞಾನನಿಷ್ಠ ಬರಹ, ಇತಿಹಾಸ,

ರಾಜಕೀಯ, ಗೋವಿನ ವಿಚಾರ, ಆಸ್ತಿಯ ವಿಚಾರ, ಸಮಾಜ ಸುಧಾರಣೆ, ವಾದ-ವಿವಾದ, ಗಾಂಧಿ ಮತ್ತು ಅವರ

ವಾದದ ಟೀಕೆ, ಹಿಂದುತ್ವ , ಅಸ್ಪ ಶ್ಯ ತೆ, ಜಾತಿ, ವರ್ಣಾಶ್ರಮದ ವಿರೋಧ, ನಿಘಂಟು, ಭಾಷೆಯ ಶುದ್ಧ ತೆ, ಸಂಸ್ಕೃತ-ಹಿಂದಿ-

ಉರ್ದು ವಿಚಾರ ಮುಂತಾದ ಅಮೂಲ್ಯ ವಿಷಯಗಳಿವೆ.

13) ಬೆಂಗಳೂರಿನ ಸಾವರ್ಕರ್‌ಸಾಹಿತ್ಯ ಸಂಘ, ವೀರ ಸಾವರ್ಕರರ ಮೂಲ ಸಾಹಿತ್ಯ ದ ಅನುವಾದಗಳ ಜೊತೆಗೆ ಅವರ

ವಿಚಾರ, ಜೀವನಕ್ಕೆ ಸಂಬಂಧಿಸಿದ ಕೆಲವು ಮುಖ್ಯ ಪುಸ್ತಕಗಳನ್ನು , ಕಿರು ಹೊತ್ತಿಗೆಗಳನ್ನು ಕಾಲಕಾಲಕ್ಕೆ ಹೊರತರುತ್ತಿದ್ದು

ಇದು ನಾಡಿನ ವಿಚಾರವಂತರ, ಸಹೃದಯರ, ಸಾಹಿತಿಗಳ ಗಮನ ಸೆಳೆದಿರುವುದರಿಂದ ಮುಂದೆ ಇನ್ನ ಷ್ಟು ಬರೆಸಲು,

ಕಾರ್ಯ ಮಾಡಲು ಒಂದು ಭರವಸೆ. ಅನುವಾದಕರಾದ ಮಿತ್ರ ನರೇಂದ್ರ ಮತ್ತು ಸಹೃದಯ ಪ್ರಕಾಶ ಮಿತ್ರ
ಕೆ.ಆರ್‌.ಹರ್ಷ ಅವರಿಗೂ ಹಾರ್ದಿಕ ಅಭಿನಂದನೆಗಳು. ಕನ್ನ ಡದ ಸಹೃದಯರು ಈ ಅನುವಾದದ ಪುಸ್ತಕವನ್ನು

ಸ್ವಾಗತಿಸುತ್ತಾರೆಂದು ಮತ್ತು ಇದರಲ್ಲಿ ಕೊಟ್ಟಿರುವ ವಿಚಾರಗಳನ್ನು ಚರ್ಚಿಸುತ್ತಾರೆಂದು ನಂಬಿದ್ದೇನೆ.

ಜಿ.ಬಿ.ಹರೀಶ

ಮೇ ೧೬, ೨೦೨೧

ಹನಾಯಿ, ವಿಯತ್ನಾಂ

You might also like