You are on page 1of 2

ಪತ್ರಿಕಾರಂಗದ ಘನತೆಯನ್ನು ಕಲಿಸಿದ “ವಿಕ್ರಮ”

 ಬೇಳೂರು ಸುದರ್ಶನ

ಕನ್ನಡ ಪತ್ರಿಕಾರಂಗದ ಇತಿಹಾಸದಲ್ಲಿ “ವಿಕ್ರಮ”ದ್ದೇ ಒಂದು ವಿಕ್ರಮ! ಮೊದಲ ಸಂಪಾದಕರೇ 44 ವರ್ಷ


ಸಂಪಾದಕರಾಗಿ ಇದ್ದಿದ್ದು ಬಹುಶಃ ರಾಷ್ಟ್ರೀಯ ದಾಖಲೆ. ರಾಷ್ಟ್ರೀಯತೆಯ ವಿಚಾರಗಳನ್ನು ಬಿಂಬಿಸುವ ಕಾಯಕವು
ಒಂದು ತಪಸ್ಸು ಎಂದು ದಿ. ಬೆ ಸು ನಾ ಮಲ್ಯರು ಭಾವಿಸಿದ್ದೇ ಈ ದಾಖಲೆಗೆ ಕಾರಣ. ಹೊರತು, ಮಲ್ಯರ ಆಸ್ತಿಯೆಂದರೆ
ಪುಸ್ತಕ – ಪತ್ರಗಳು, ಪತ್ರಿಕಾ ತುಣುಕುಗಳು… ಆಗಾಗ ಮಿತ್ರರು ಕೊಡುತ್ತಿದ್ದ ಮಿಠಾಯಿಯೂ ಅವರ ಕೊಠಡಿಗೆ ಬಂದವರ
ಪಾಲಾಗುತ್ತಿತ್ತು. ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದ ಆಗಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರೂ
ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ಕರೆದರೆ ಮಲ್ಯರು ಇದ್ದಾರಾ ಎಂದು ಕೇಳಿ ಖಚಿತಪಡಿಸಿಕೊಂಡೇ ಶುರು
ಮಾಡುತ್ತಿದ್ದರು! ಅದು ಮಲ್ಯರ ಕಾಯಕನಿಷ್ಠೆಯ ಚಿಕ್ಕ ನಿದರ್ಶನ. ಅಂದಿನ ಕಾಲದಲ್ಲಿ ನ್ಯಾ. ರಾಮಾಜೋಯಿಸರೂ
ವಿಕ್ರಮಕ್ಕೆ ಹೆಗಲು ಕೊಟ್ಟಿದ್ದರು.

90 ರ ದಶಕದ ಆರಂಭದಲ್ಲಿ ಚಾಮರಾಜಪೇಟೆಯ ಐದನೆಯ ಮುಖ್ಯರಸ್ತೆಯಲ್ಲಿ ವಿಕ್ರಮ ಕಚೇರಿಗೆ ಹೋದರೆ ನಿಮಗೆ


ಕಾಣುತ್ತಿದ್ದುದು ದಶಕಗಳ ಹಿಂದಿನ ಅಚ್ಚು ಗಳನ್ನು ಪೇರಿಸಿದ ಕೋಣೆ; ಅತಿಹಳೆಯ ಪತ್ರಿಕಾ ತುಣುಕುಗಳನ್ನೂ
ಜತನದಿಂದ ಕಾಪಿಟ್ಟ ಕಪಾಟುಗಳು; ಹೊರಗೆ ಆವರಿಸಿಕೊಂಡ ಸಾಲುಮರಗಳು; ಒಳಗೆ ಕೊರೆಯುತ್ತಿದ್ದ ಥಂಡಿ ಛಳಿ;
ರೆಡ್‌ಆಕ್ಸೈಡ್‌ನೆಲದ ಹಾಸಿನಲ್ಲಿ ಅಚ್ಚು ಕಟ್ಟಾಗಿ ಜೋಡಿಸಿದ ಹಳೆಯ ಮೇಜುಗಳು; ಅವುಗಳನ್ನು ದಶಕಗಳಿಂದ
ಬಳಸುತ್ತಿದ್ದ ಶ್ರೀ ಎಂ. ಕೃಷ್ಣ ಪ್ಪ , ಶ್ರೀ ಕಾ.ರ. ಆಚಾರ್ಯರಂತಹ ಕಟು ಶಿಸ್ತಿನ ಬಳಗ; 44 ವರ್ಷಗಳಿಂದ ಒಂದು
ವಾರವೂ ಬಿಡದೆ (ತುರ್ತುಸ್ಥಿತಿ ಹೊರತುಪಡಿಸಿ) ಪತ್ರಿಕೆಯನ್ನು ಹೊರತಂದ ಬೆ.ಸು.ನಾ. ಮಲ್ಯ ಮಾಮರ ಘನತೆವೆತ್ತ
ಸಂಪಾದಕತ್ವ !

ಅವರ ಸ್ಥಾನಕ್ಕೆ ನಾನು ನಿಯುಕ್ತಿಯಾಗಿದ್ದು ನನ್ನ ಬದುಕನ್ನೇ ಬದಲಿಸಿತು. ಎರಡು ವರ್ಷಗಳ ಕಾಲ ವಿಕ್ರಮದ
ಸಂಪಾದಕನಾಗಿದ್ದೆ. ಮಲ್ಯ ಮಾಮರ ಪತ್ರಿಕಾಧರ್ಮದ ಪರಂಪರೆಯನ್ನು ಜತನದಿಂದ ಕಾಯ್ದು ಕೊಂಡೆ ಎಂಬ
ವಿಶ್ವಾಸವೂ ನನ್ನ ದಲ್ಲ ; ಆದರೂ, ವಿಕ್ರಮದ ಚಹರೆಯನ್ನು ಬದಲಾಯಿಸಬೇಕೆಂಬ ಹಲವರ ತುಡಿತಕ್ಕೆ ಪ್ರತಿನಿಧಿಯಾಗಿ
ಒಂದಷ್ಟು ಕೆಲಸ ಮಾಡಿದೆ ಎನ್ನ ಬಲ್ಲೆ.

ಆರಂಭದ ದಿನಗಳಲ್ಲಿ ನನ್ನ ಸಮಯವು ಮಲ್ಯ ಮಾಮರ ಕಪಾಟುಗಳಲ್ಲಿದ್ದ ಪತ್ರಗಳನ್ನು ಓದುವುದರಲ್ಲೇ ಕಳೆಯಿತು.
ಅವು ಪತ್ರಗಳಲ್ಲ ; ಕನ್ನ ಡ ಸಾಹಿತ್ಯ – ಪತ್ರಿಕಾರಂಗದ ಇತಿಹಾಸದ ಕ್ಷಣಗಳು. ಅವನ್ನು ಓದುತ್ತಿದ್ದಾಗ ಆ ಕಾಲದಲ್ಲಿ
ಐಡಿಯಾಲಜಿಗಳ ಹಂಗಿಲ್ಲ ದೆ ಎಲ್ಲ ಸಾಹಿತಿಗಳೂ ಕನ್ನ ಡಕ್ಕಾಗಿ, ದೇಶಕ್ಕಾಗಿ ತಮ್ಮೆಲ್ಲ ಶ್ರಮ ಹಾಕುತ್ತಿದ್ದ ರು; ಎಲ್ಲ
ಪತ್ರಿಕೆಗಳನ್ನೂ ಸಮಾನವಾಗಿ ಗೌರವಿಸಿ ಲೇಖನ, ಕತೆ ಬರೆದುಕೊಡುತ್ತಿದ್ದ ರು ಎಂಬ ಅಂಶ ಸ್ಪ ಷ್ಟ ವಾಗುತ್ತದೆ.
ನನ್ನ ಅಲ್ಪ ಕಾಲಾವಧಿಯಲ್ಲಿ ಡಾ॥ಶಿವರಾಮ ಕಾರಂತರೊಂದಿಗೂ ಪತ್ರ ಸಂಪರ್ಕ ಮಾಡುವ ಅವಕಾಶವನ್ನೂ ವಿಕ್ರಮ
ಒದಗಿಸಿತು. “ನನ್ನ ಲೇಖನಕ್ಕೆ ಗೌರವಧನ ಕಳಿಸಿದ್ದೇಕೆ?” ಎಂದು ಕಾರಂತರು ನನಗೆ ಬರೆದ ಕಟು ಬರಹದ ಕಾರ್ಡ್
ಸಹ ಈಗ ನೆನಪಾಗುತ್ತಿದೆ! ಅನಾರೋಗ್ಯ ದ ನಡುವೆಯೂ ತಮಗಿದ್ದ ಕ್ಷಣಗಳನ್ನೆಲ್ಲ ಸಮಾಜಕ್ಕಾಗಿಯೇ ಕೊಟ್ಟ ಶ್ರೀ
ಅರಕಲಿ ನಾರಾಯಣ, ನನ್ನ ನ್ನು ‘ವಿಕ್ರಮ’ಕ್ಕೆ ಎಳೆತಂದ ಶ್ರೀ ದಾ.ಮ. ರವೀಂದ್ರ – ಇಬ್ಬ ರೂ ಆಗಾಗ ಕರೆದು ನೀಡಿದ
ಕಿವಿಮಾತುಗಳೂ ನನಗೆ ರಕ್ಷೆಯಾದವು. ಕೇಸರಿ ಮುದ್ರಣಾಲಯವು ಮುಚ್ಚಿದಾಗ ಉಂಟಾದ ಸನ್ನಿವೇಶದಲ್ಲಿ ನಾನೂ
ಒಂದೆರಡು ವಾರಗಳ ಕಾಲ ವಿಕ್ರಮದ ಪುಟಗಳನ್ನು ಪೇಸ್ಟ ಪ್ ಮಾಡಿ ಮುದ್ರಣಕ್ಕೆ ಸಿದ್ಧ ಗೊಳಿಸಿದೆ ಎಂಬ ನೆನಪು
ಹಸುರಾಗಿದೆ.

1981 ರಲ್ಲಿ ಹೂವಿನಹಡಗಲಿಯಲ್ಲಿ ಪಿಯುಸಿ ಓದುವಾಗ ವಿಕ್ರಮ ಪತ್ರಿಕೆಯ ಏಜೆಂಟನಾಗಿ ಸೈಕಲ್ ತುಳಿದು
ಪತ್ರಿಕೆಗಳನ್ನು ಹಂಚುತ್ತಿದ್ದೆ ಎಂಬ ನೆನಪೂ ಹಸುರಾಗಿದೆ ಅರೆಕಾಲಿಕ ಹಾಕರ್ ಆಗಿದ್ದ ನಾನು 1996 ರಲ್ಲಿ ಪತ್ರಿಕೆಯ
ಸಂಪಾದಕನಾಗಿದ್ದು ನನ್ನ ಬದುಕಿನ ದೊಡ್ಡ ತಿರುವು.

ಈಗಲೂ ತನ್ನ ಪತ್ರಿಕಾಧರ್ಮವನ್ನು ಪಾಲಿಸಿಕೊಂಡು ಬಂದಿರುವ ವಿಕ್ರಮ ಬಹುಶಃ ಕನ್ನ ಡ ಪತ್ರಿಕಾರಂಗದ ಹಿರಿಯಣ್ಣ .
ಕನ್ನ ಡನಾಡಿನಲ್ಲಿ ಭಾರತೀಯ ಚಹರೆಗಳನ್ನು ಛಾಪಿಸಲು ನಿರಂತರ ಶ್ರಮಿಸುತ್ತಿರುವ ಏಕೈಕ ನೈಜ ಪತ್ರಿಕೆ. ಅದೇ
ನಿವೇಶನದಲ್ಲಿ ‘ವಿಕ್ರಮ’ದ ನೂತನ ಕಟ್ಟ ಡ ತಲೆಯೆತ್ತಿದೆ; ವಿಕ್ರಮದ ದೇಶ ಕಟ್ಟು ವ ಕಾಯಕ ಬದಲಾಗಿಲ್ಲ . ವಿಕ್ರಮದ
ಸಿಬ್ಬಂದಿ ವರ್ಗ ಬದಲಾಗಿದೆ; ಸಮಷ್ಟಿಹಿತದ ದೃಷ್ಟಿಕೋನ ಬದಲಾಗಿಲ್ಲ . ಪತ್ರಿಕೆಯ ವಿನ್ಯಾಸ, ಆಕಾರ ಬದಲಾಗಿದೆ;
ಸಮಾಜಮುಖಿ ಚಹರೆ ಬದಲಾಗಿಲ್ಲ . ಕನ್ನ ಡ ಸಾರಸ್ವ ತ ಲೋಕದ ದಿಗ್ಗ ಜರೆಲ್ಲ ರೂ ‘ವಿಕ್ರಮ’ದ ಲೇಖಕ ಬಳಗದಲ್ಲಿದ್ದಾರೆ.
ಅವರಲ್ಲಿ ವೈಚಾರಿಕ ಮತಭೇದಗಳನ್ನು ಹೊಂದಿದವರೂ ಇದ್ದಾರೆ ಎಂಬುದು ವಿಶೇಷ.

ಮಲ್ಯ ಮಾಮರಂತೆಯೇ ವಿಕ್ರಮವನ್ನು ಕಟ್ಟು ವಲ್ಲಿ ಸದ್ದಿಲ್ಲ ದೆ ಕೆಲಸ ಮಾಡುತ್ತಿರುವ ಶ್ರೀ ಕಾ ರಮಾನಂದ ಆಚಾರ್ಯ
ಈಗಲೂ ವಿಕ್ರಮದಲ್ಲಿ ಅವಿರತ ದುಡಿಯುತ್ತಿದ್ದಾರೆ ಎಂಬುದು ಇನ್ನೊಂದು ರಾಷ್ಟ್ರೀಯ ದಾಖಲೆಯೇ!

‘ವಿಕ್ರಮ’ ಪತ್ರಿಕೆಗೆ ನಾನೂ ಸಂಪಾದಕನಾಗಿದ್ದೆ ಎಂಬುದು ಗರ್ವದ ಸಂಗತಿಯಲ್ಲ ; ಗೌರವದ ಅನುಭವ. ವಿಕ್ರಮ’ದ
ಆಶಯಗಳು ತ್ರಿವಿಕ್ರಮ ಜಯ ಸಾಧಿಸುವಲ್ಲಿ ನನ್ನ ದೂ ಒಂದು ಪುಟ್ಟ ಹೊಣೆ ಅಷ್ಟೆ !

ಪ್ರೌಢ ‘ವಿಕ್ರಮ’ಕ್ಕೆ ನನ್ನ ಶರಣು ಶರಣಾರ್ಥಿಗಳು.

……………………………………….

You might also like