You are on page 1of 11

ಪ್ರಕಾಶಕರ ಮಾತು

೨೦೨೧ ನನಗೆ ಎರಡು ದೃಷ್ಟಿಗಳಿಂದ ಮುಖ್ಯ, ಒಂದು ಇದು ಕೇರಳದ ಮೋಪ್ಲಾ ದಂಗೆಗಳಲ್ಲಿ ಹಿಂದುಗಳು ಬರ್ಬರವಾಗಿ

ಹತ್ಯೆಯಾದ ನೂರನೇ ವರ್ಷ. ಇನ್ನೊಂದು ನಿಷ್ಠಾವಂತ, ಪ್ರಾಮಾಣಿಕ ಹಿಂದು ಇತಿಹಾಸಕಾರ ಸೀತಾರಾಂ ಗೋಯಲ್‌ಅವರು

ಹುಟ್ಟಿದ ನೂರನೇ ವರ್ಷ. ೧೯೧೯ರಲ್ಲಿ ಲೋಕಮಾನ್ಯ ಟಿಳಕರ ನಿಧನವಾಯಿತು. ಅದಕ್ಕೂ ಸುಮಾರು ೮೦೦ ವರ್ಷಗಳಿಂದ

ಮೊದಲೇ ಭಾರತ ದೇಶವನ್ನು ಇಸ್ಲಾಂ ಶಕ್ತಿಗಳು ಇಸ್ಲಾಮಿ ಸಾಮ್ರಾಜ್ಯ ಮಾಡಲು ಸತತ ಪ್ರಯತ್ನ ಮಾಡಿದ್ದವು. ಗುಲಾಮಿ

ಸಂತತತಿಯಿಂದ ಅಹಮದ್‌ಷಾ ಅಬ್ದಾಲಿ ತನಕ ಈ ಪರಂಪರೆ ಮುಂದುವರೆಯಿತು. ನಂತರ ವಿಶ್ವವಿದ್ಯಾನಿಲಯ, ಮೊಹಮ್ಮದ್‌

ಇಕ್ಬಾಲ್‌, ಅಲಿ ಸಹೋದರರು, ಮಹಮ್ಮದ ಅಲಿ ಜಿನ್ನಾ ಮತ್ತು ೧೯೪೭ರ ನಂತರ ಭಾರತದಲ್ಲಿ ಉಳಿದು ದೇಶದ ಸುರಕ್ಷತೆ-

ಸಂಸ್ಕೃತಿಗೆ ಮುಳ್ಳಾಗಿರುವ ತುಕಡೆ ಗ್ಯಾಂಗ್‌ಮೂಲಕ ಈಗಲೂ ಮುಂದುವರೆಯುತ್ತಿದೆ.

ಭಾರತದ ಸಾಹಿತ್ಯ, ಕಲೆ, ಅಧ್ಯಾತ್ಮ, ಧರ್ಮ ಇವುಗಳಿಗೆ ಇಸ್ಲಾಮಿನ ಕೊಡುಗೆ ಶೂನ್ಯ. ದೇವಾಲಯ-ವಿಹಾರ-ಬಸದಿಗಳ ನಾಶ,

ಹಿಂದು ಯುವತಿಯರ ಮೇಲೆ ಬಲಾತ್ಕಾರ ಮತ್ತು ಅವರನ್ನು ಮುಘಲ್‌ಬಾದಷಾಹ, ಸುಲ್ತಾನ, ಪಾಳೆಗಾರರ ಜನಾನಗಳಿಗೆ

ಕಾಮದ ಬೊಂಬೆಗಳಾಗಿ ಸೇರಿಸಿಕೊಳ್ಳುವುದು ಈ ಅವಧಿಯಲ್ಲಿ ನಡೆಯಿತು.ಈ ಪ್ರಕ್ರಿಯೆಯಲ್ಲಿ ಹಿಂದುಗಳ ಮಾನಸಿಕತೆ

ಕುಸಿಯಿತು. ಇಸ್ಲಾಮಿನ ದಾಳಿ ಎದುರಿಸಲು ಸಮಾಜವನ್ನು ಅಧ್ಯಾತ್ಮಿಕವಾಗಿ ಸಂಘಟಿಸಲು ಆರಂಭವಾಗಿದ್ದ ಭಕ್ತಿ ಚಳವಳಿ

ಆನಂತರ ಕೇವಲ ಭಜನೆಗೆ ಸೀಮಿತವಾಯಿತು. ಸಿಕ್ಖ ಪಂಥ ಆರಂಭವಾಗಿದ್ದು ಇಸ್ಲಾಮಿನ ಭೀಕರ ಆಕ್ರಮಣದಿಂದ ಹಿಂದು

ಸಮಾಜ ಹಾಗೂ ಧರ್ಮವನ್ನು ಉಳಿಸಲೆಂದು ಎಂಬ ವಾಸ್ತವ ಮರೆತುಹೋಯಿತು. ಈ ನಡುವೆ ಅರೇಬಿಯಾದಿಂದ ಬಂದ

ಇಸ್ಲಾಮಿನ ಬಿಸಿ ಅಲೆಗಳ ನಂತರ ಕ್ರೈಸ್ತ ಅಲೆ ಭಾರತದ ಸಮುದ್ರತೀರಗಳನ್ನು ಮುಟ್ಟಿತು. ವ್ಯಾಪಾರ, ವಂಚನೆ, ಮತಾಂತರವನ್ನು

ಡಚ್ಚರು, ಫ್ರೆಂಚರು, ಬ್ರಿಟಿಷರು ಆದಷ್ಟೂ ಮಾಡಿದರು. ಪೋರ್ಚುಗೀಸರು ಇವರಿಗಿಂತ ಬರ್ಬರವಾಗಿ ನಡೆದುಕೊಂಡು ಪರಶುರಾಮ

ಕ್ಷೇತ್ರವಾಗಿದ್ದ ಗೋಮಾಂತಕವನ್ನು (ಗೋವಾ) ಪೂರ್ವದ ಕ್ರೈಸ್ತ ರಿಲಿಜನ್ನಿನ ಹೆಬ್ಬಾಗಿಲು ಮಾಡಲು ಹಲವು ಶತಮಾನಗಳು

ಶ್ರಮಿಸಿದರು.

ಈ ಹಿನ್ನೆಲೆಯಿದ್ದಾಗ ಭಾರತದದಲ್ಲಿ ಹಿಂದು ಅಧ್ಯಾತ್ಮ, ಸಮಾಜವನ್ನು ಉಳಿಸಿಕೊಳ್ಳಲು ವಿವಿಧ ರೀತಿಯ ಚಳವಳಿಗಳು

ಆರಂಭವಾದವು. ಬ್ರಿಟಿಷರ ಮಾನಸಿಕ ಗುಲಾಮರನ್ನಾಗಿ ನಿರಂತರ ಉಳಿಸಿಕೊಳ್ಳುವ ಕಾರಣದಿಂದ ಭಾರತ ರಾಷ್ಟ್ರೀಯ

ಕಾಂಗ್ರೆಸ್ಸನ್ನು ಅಲನ್‌ಅಕ್ಟವಿನ್‌ಹ್ಯೂಮ್‌ಎಂಬ ಬ್ರಿಟಿಷ್‌ಅಧಿಕಾರಿ ಸ್ಥಾಪಿಸಿದ. ಅದು ಎಂದೂ ಭಾರತೀಯವೂ ಆಗಲಿಲ್ಲ,

ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಲೂ ಇಲ್ಲ. ಅದರ ಸೀಮಿತ ಚೌಕಟ್ಟಿನಲ್ಲೇ ಟಿಳಕರು ಶಿವಾಜಿ ಜಯಂತಿ, ಸಾರ್ವಜನಿಕ

ಗಣೇಶೋತ್ಸವಗಳನ್ನು ಆರಂಭಿಸಿದರು. ಟಿಳಕರೂ ಮರಾಠಿ, ಶಿವಾಜಿಯೂ ಮರಾಠಿ ಎಂಬ ಸಂಕುಚಿತ ದೃಷ್ಟಿ ಅದರಲ್ಲಿ ಇರದೆ,

ಬೇಟೆಗಾರ ರಿಲಿಜನ್‌ಆಗಿರುವ ಇಸ್ಲಾಮಿನ ಸಾಮ್ರಾಜ್ಯಶಾಹಿ ಅಲೆಯನ್ನು ಯಶಸ್ವಿಯಾಗಿ ಶಿವಾಜಿ ಯಾವ ರೀತಿ ಎದುರಿಸಿ ಹಿಂದು

ಸಾಮ್ರಾಜ್ಯವನ್ನು ಕಟ್ಟಿದ್ದನೋ ಅದರಂತೆ ಈಗ ಬ್ರಿಟಿಷರನ್ನು ಈಗಿನ ಕಾಲಕ್ಕೆ ತಕ್ಕ ತಂತ್ರ-ಮಾರ್ಗಗಳನ್ನು ಬಳಸಿ

ಹಿಮ್ಮೆಟ್ಟಿಸಬೇಕು ಎಂಬುದು ಗಾಂಧಿ ಪೂರ್ವದ ಅತಿ ದೊಡ್ಡ ರಾಷ್ಟ್ರನಾಯಕ ಟಿಳಕರ ಉದ್ದೇಶವಾಗಿತ್ತು. ಅಂದರೆ ಮುಸಲ್ಮಾನರ

ಅಥವಾ ಬೇರೆ ಸಣ್ಣ ಪುಟ್ಟ ಗುಂಪುಗಳನ್ನು ಅವಲಂಬಿಸಿ ಹಿಂದು ಸಮಾಜ ತನ್ನ ಸ್ವಾತಂತ್ರ್ಯ ಚಳವಳಿ ನಡೆಸಲಿಲ್ಲ. ಬ್ರಿಟಿಷರ
ವಿರುದ್ಧದ ಎರಡು ಶತಮಾನಗಳ ದೀರ್ಘ ಸಂಘರ್ಷದಲ್ಲಿ ಮುಸಲ್ಮಾನರ ಪಾತ್ರ ನಗಣ್ಯ ಆದರೆ ಈಗ ಬುದ್ಧಿಜೀವಿಗಳು ಹಿಂದು-

ಮುಸ್ಲಿಮರು ಒಗ್ಗಟ್ಟಿನಿಂದ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ದಿನವೂ ಮಿಥ್ಯಾವಾದ ಮಂಡಿಸುತ್ತಾರೆ.

ವಂದೇಮಾತರಂ ಎಂಬ ಮಹಾನ್‌ಗೀತೆಯನ್ನು ನಮಗೆ ನೀಡಿದ ಬಂಕಿಮ ಚಂದ್ರರಿಂದ ಟಿಳಕ್‌, ವಿವೇಕಾನಂದ,

ಶ್ರದ್ಧಾನಂದರವರೆಗೂ ಈ ಹೋರಾಟ ಕೇವಲ ತಕ್ಷಣದ ಶಾಸಕರಾದ ಬ್ರಿಟಿಷರ ವಿರುದ್ಧ ಮಾತ್ರವಲ್ಲ, ೮೦೦ ವರ್ಷಗಳ

ದುರಾಚಾರದ ಆಡಳಿತ ನಡೆಸಿದ ಸೂಫಿಗಳು, ಇಸ್ಲಾಮಿನ ರಾಜರು ಬಿತ್ತಿದ ಮಾನಸಿಕತೆ ವಿರುದ್ಧ ಕೂಡ ಎಂಬುದು ಅಂದಿನ

ದೇಶನಾಯಕರಿಗೆ ಸ್ಪಷ್ಟವಾಗಿತ್ತು. ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಚಟರ್ಜಿ) ಅವರ ʼ ಆನಂದಮಠ ʼ ಕಾದಂಬರಿಯಲ್ಲಿ

ಮುಸಲ್ಮಾನ ರಾಜರ ವಿರುದ್ಧ ಹಿಂದು ಸನ್ಯಾಸಿಗಳು ಬಂಡಾಯ ಸಾರುವುದು ಕೇವಲ ಕಾದಂಬರಿಯ ಅಗತ್ಯವಲ್ಲ ಬದಲಾಗಿ

ಇಸ್ಲಾಮಿನ ಅಲೆಯ ಆಘಾತಗಳನ್ನು ಮರೆಯದೆ, ಬ್ರಿಟಿಷರ ವಿರುದ್ಧ ಸಮರ ತಂತ್ರ ರಚಿಸಬೇಕು ಎಂಬ ಸ್ಪಷ್ಟ ಸಂದೇಶ. ವೇದ,

ಉಪನಿಷತ್ತು, ರಾಮಾಯಣ, ಮಹಾಭಾರತ; ಚಂದ್ರಗುಪ್ತ, ಚಾಣಕ್ಯ, ಸಮುದ್ರಗುಪ್ತ, ವಿಕ್ರಮಾದಿತ್ಯ, ಪೃಥ್ವಿರಾಜ, ವಿಜಯನಗರ,

ರಾಣಾಪ್ರತಾಪ್‌, ಶಿವಾಜಿ, ಗುರುಗೋವಿಂದ ಸಿಂಹರ ನೆನಪು ಗಾಂಧಿಯವರು ಭಾರತದ ರಾಜಕೀಯದಲ್ಲಿ ತಲೆಎತ್ತುವುದಕ್ಕೆ

ಮೊದಲು, ಅಂದಿನ ರಾಜಕಾರಣಗಳಲ್ಲಿತ್ತು. ಅದು ಆ ಕಾಲದ ಕಾವ್ಯ, ಕಾದಂಬರಿ ಸಾಹಿತ್ಯದಲ್ಲಿ ಪ್ರತಿಫಲಿತವಾಗಿದೆ.

ಹಿಂಸೆ-ಅಹಿಂಸೆಯ ಚರ್ಚೆ ಮಾತ್ರವಲ್ಲ ನಿಜ ಜೀವನದಲ್ಲಿ ಅದನ್ನು ಅಳವಡಿಸಿಕೊಂಡು ಬದುಕುವುದು ಹಿಂದು ಸಮಾಜ, ಹಿಂದು

ಜಾತಿಗಳಿಗೆ ಒಗ್ಗಿ ಹೋಗಿತ್ತು. ಇದಕ್ಕೆ ಧಾರ್ಮಿಕ ಶಿಕ್ಷಣದ ಜೊತೆ ಇಸ್ಲಾಮಿನ ಆಕ್ರಮಣದಿಂದ ಕುಗ್ಗಿಹೋಗಿದ್ದ ಕ್ಷಾತ್ರವೂ

ಕಾರಣವಾಗಿತ್ತು.ಈ ಮಾತು ಸತತವಾಗಿ ಮೊಘಲರ ದುರಾಚಾರಗಳಿಂದ ತತ್ತರಿಹೋಗಿದ್ದ ಉತ್ತರಭಾರತಕ್ಕೆ ಹೆಚ್ಚು

ಅನ್ವಯಿಸುತ್ತದೆ. ಇದರೊಂದಿಗೆ ಸಂಸ್ಕೃತಕ್ಕೆ ಬಹಳ ಗೌರವದ ಸ್ಥಾನ ಸಾಮಾಜಿಕ ಜೀವನದಲ್ಲಿತ್ತು. ಟಿಳಕರ ನಿಧನದ ನಂತರ

ಸಹಜವಾಗಿ ರಾಷ್ಟ್ರ ನಾಯಕರಾಗಬಹುದಾಗಿದ್ದವರು ಅರವಿಂದ ಘೋಷ್‌. ಆದರೆ ಅವರು ಅಂತರಂಗದ ದಿವ್ಯಕರೆಗೆ ಓಗೊಟ್ಟು

ಅವರು ಪಾಂಡಿಚೇರಿಗೆ ವಲಸೆಹೋದರು. ಅವರನ್ನು ಕಾಂಗೆಸ್ಸಿನ ಮುಖಂಡರನ್ನಾಗಿ ಮಾರ್ಗದರ್ಶನ ಮಾಡಿ ಎಂದು

ಮನವೊಲಿಸಲು ಶಿವರಾಮ ಮೂಂಜೆ ಮತ್ತು ಕೇಶವ ಬಲಿರಾಮ ಹೆಡ್ಗೇವಾರ್‌ ಪ್ರಯತ್ನ ಮಾಡಿದ್ದಿದೆ. ಹೀಗಾಗಿ ಲಾಲಾ ಲಜಪತ

ರಾಯ್‌, ಬಿಪಿನ್‌ಚಂದ್ರ ಪಾಲರನ್ನು ಪಕ್ಕಕ್ಕೆ ಸರಿಸಿ, ಗಾಂಧೀಜಿ ಕಾಂಗ್ರೆಸ್ಸಿನ ನಾಯಕರಾದರು. ಪ್ಯಾಂಟು, ಶರಟು, ಕೋಟು,

ವಿದೇಶಿ ಟೋಪಿ ಕಳಚಿದ ಬ್ಯಾರಿಸ್ಟರ್‌ಗಾಂಧಿ ಹಳ್ಳಿ ಮನುಷ್ಯನ ರೂಪದಲ್ಲಿ ಕಾಣಿಸಿಕೊಂಡರು. ಅವರ ಹೋರಾಟ, ಅವರ

ಚಿಂತನೆಗಳನ್ನು ಮೊದಲಿನಿಂದಲೂ ವಿರೋಧಿಸಿದವರು ಬಿಪಿನ ಚಂದ್ರ ಪಾಲ್‌. ಹೀಗಾಗಿ ಲೋಕಮಾನ್ಯ ಟಿಳಕರ ಮರಣದ ನಂತರ

ಅವರನ್ನು ಮೂಲೆಗುಂಪು ಮಾಡಲಾಯಿತು. (101 ವರ್ಷಗಳ ಹಿಂದೆ!). ಗಾಂಧಿಯಿಂದ ದೂರವಾದ ಮೇಲೆ, ಲಾಲಾ

ಲಜಪತರಾಯರಿಗೂ ಇದೇ ವೈಚಾರಿಕ ಗತಿಯೊದಗಿತು. ಪಾಲರ ನಂತರ ಸಾವರ್ಕರ್‌, ಬಾಬಾ ಸಾಹೇಬ್‌ಅಂಬೇಡ್ಕರ್‌, ಯೋಗಿ

ಅರವಿಂದರು, ರವೀಂದ್ರ ನಾಥ ಠಾಕೂರ್‌, ಚಿತ್ತರಂಜನ ದಾಸ್ ಹಾಗೂ ಅವರ ಶಿಷ್ಯ ನೇತಾಜಿ ಸುಭಾಷ್‌ಚಂದ್ರ ಬೋಸ್‌.

ಗಾಂಧಿವಾದಿಗಳ ಅಪ್ರಾಮಾಣಿಕತೆಯನ್ನು, ಸರಳ ಖಾದಿಯ ಹಿಂದಿನ ಸಂಕೀರ್ಣ ಮನಸ್ಥಿತಿಯನ್ನು ಹಾಸನದ ನನ್ನ ಬಾಲ್ಯದ

ದಿನಗಳಿಂದ ಕಂಡಿದ್ದೇನೆ. ಸತ್ಯವೆನ್ನುವುದು ಒಂದು ಮೌಲ್ಯ ಅದನ್ನು ಜೈನ, ಬೌದ್ಧ, ವೈದಿಕ ದರ್ಶನಗಳು ವಿವರವಾಗಿ ಚರ್ಚಿಸಿವೆ.
ಪುಣ್ಯಕೋಟಿಯ ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ, ಸತ್ಯವಾಕ್ಯಕೆ ತಪ್ಪಿನಡೆದರೆ ಮೆಚ್ಚ್ನಾ

ಪರಮಾತ್ಮನು'' ಎಂಬ ಹಾಡು ಕೇಳಿ ಬೆಳೆದಿರುವ ನಾಡಿನವರು ನಾವುಗಳು. ಹೀಗಾಗಿ ಗಾಂಧಿಯವರ ಮೂಲಕವೇ ಸತ್ಯವನ್ನು

ಆಶ್ರಯಿಸುವ ಆವಶ್ಯಕತೆ 2000 ವರ್ಷಗಳ ಸುದೀರ್ಘ ಸಾಂಸ್ಕೃತಿಕ ಸ್ವಂತಿಕೆ ಹೊಂದಿರುವ ಕನ್ನಡಿಗರಿಗಿಲ್ಲ. ಇದು ವಾಸ್ತವದ

ಮಾತು ಟೀಕಯೆ ನುಡಿಗಳಲ್ಲ.

ಗ್ರ್ರಾಮ ಭಾರತದವನ್ನು ಮಾತಿನಲಾದರೂ ಪ್ರತಿನಿಧಿಸುತ್ತಿದ್ದ ನಗರ ಮತ್ತು ಕೈಗಾರೀಕರಣಗೊಂಡ ಭಾರತದ ಕನಸು ಕಂಡ

ನೆಹರುವನ್ನು ಪಟೇಲ್ ಮತ್ತು ಕೃಪಲಾನಿ ಬದಲು ಮುಂದಕ್ಕೆ ತಳ್ಳಿದ್ದು ಅವರು ಮಾಡಿದ ನಿರ್ಣಾಯಕ ಅರಾಜಕತೆಗಳಲ್ಲಿ ಒಂದು.

ದಲಿತ ಬಂಡಾಯ ಚಿಂತನೆಗಳು ಗಾಂಧಿ, ಲೋಹಿಯಾ, ಅಂಬೇಡ್ಕರ್, ಮಾರ್ಕ್, ಲೆನಿನ್, ಎಲ್ರ ಚಿಂತನೆಗಳ ಮಿಶ್ರಣವಾಯಿತು.

ಇದರಿಂದ ಮುಂದಿನ ಪೀಳಿಗೆ ದಿಕ್ಕು ತಪ್ಪಿತು. ಧರ್ಮ, ವೈಯಕ್ತಿಕ ನಂಬಿಕೆಗಳನ್ನು ಮನೆಯೊಳಗೆ ಬಿಟ್ಟು ಬಂದು ಸಾಮಾಜಿಕ

ಜೀವನ ನಡೆಸಬೇಕು ಎಂದು ನಮ್ಮ ಬುದ್ಧಿಜೀವಿಗಳು ದಿನವೂ ಉಪದೇಶ ಮಾಡುತ್ತಾರೆ. ಆದರೆ ಅದು ನಮ್ಮಂಥ ಸಾಮಾನ್ಯರ

ಪಾಲಿಗೆ ಹೊರತು 'ಮಹಾತ್ಮ'ರಿಗಲ್ಲ. ಹಿಂದುಗಳ ರಘುಪತಿ ರಾಜಾರಾಂ ಭಜನೆಯನ್ನು ಯಾವ ನೈತಿಕ ಆಧಾರದ ಮೇಲೆ ಗಾಂಧಿ

ಹಾಳು ಮಾಡಿದರು? ಅವರಿಗೆ ಎಲ್ಲವೂ, ಎಲ್ಲರೂ ಅಹಿಂಸಾ ಪ್ರಯೋಗದ ವಸ್ತಗಳು. ಮಗ, ಹೆಂಡತಿ, ಹತ್ತಿರವಿದ್ದ ಬಾಲಕಿಯರು,

ನೆಹರು-ಪಟೇಲ್ ಇತ್ಯಾದಿ ಎಲ್ಲರೂ ಗಾಂಧಿ ಪ್ರಯೋಗ ಶಾಲೆಯ ಬಲಿಪಶುಗಳು.

ಗಾಂಧಿಗಿಂತ ಮೊದಲು, ಗಾಂಧಿ ಬದುಕಿದ್ದಾಗ ಹಾಗೂ ಗಾಂಧಿಯ ನಂತರ ನೂರಾರು ಜನ ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳು ನಮ್ಮ

ದೇಶದಲ್ಲಿ ಹುಟ್ಟಿದ್ದಾರೆ. ಅವರಿಗೆ ಭಾರತದಲ್ಲೇ ತಮ್ಮ ಜೀವನದ ಬಹಳ ಕಾಲ ಸವೆಸಿದ ಸಂತರು, ಋಷಿಗಳು, ಜಾನಪದ

ಜೀವಗಳು, ಕ್ರಾಂತಿಕಾರಿಗಳು, ಅಹಿಂಸಾವಾದಿಗಳ ತತ್ತ್ವಗಳ ಅರಿವಿದೆ. ಆದರೆ ಸರ್ಕಾರಿ ಆಡಳಿತ ಯಂತ್ರ ತೆರಿಗೆದಾರರ

ಹಣವನ್ನು ಅವರ ಅನುಮತಿ ಇಲ್ಲದೆ ಪ್ರತಿ ವರ್ಷ ಹತ್ತಾರು ಬಿಳಿ ಆನೆ-ಗಾಂಧಿ ಯೋಜನೆಗಳಿಗೆ ಸುರಿಯುತ್ತಿದೆ. ಇದರಿಂದ

ಯುರೋಪ್, ಅಮೆರಿಕಾ ಮತ್ತು ಆಸ್ಟ್ರೇಲಿಯಾದಂಥ ಬಿಳಿಯ ಜನಾಂಗದ ರಾಜ್ಯಗಳಲ್ಲಿ ಗಾಂಧಿ ಇಮೇಜ್ ಕಟ್ಟಲಾಗುತ್ತಿದೆ.

ನೇತಾಜಿಯವರ 125 ವರ್ಷದ ಆಚರಣೆ ಕೂಡ ಅತ್ಯಂತ ನೀರಸವಾಗಿ ಸಾಗುತ್ತಿರುವದೂ ಈ ಕಾರಣದಿಂದಲೆ. ಏಕೆಂದರೆ

ಶಂಕರನ್ ನಾಯರ್, ಗಾಂಧಿಯ ಆರಂಭದ ರಾಜಕೀಯ ಜೀವನದ ಟೀಕಾಕಾರ, ಅಂಬೇಡ್ಕರ್ ಗಾಂಧಿಯ ಮಧ್ಯಕಾಲದ

ರಾಜಕೀಯ ಜೀವನದ ಟೀಕಾಕಾರರಾದರೆ ನೇತಾಜಿ ಕೊನೆಯ ದಶಕದ ಅವರ ರಾಜಕೀಯ ಜೀವನದ ಟೀಕಾಕಾರ.

ಬಿಪಿನ್ ಚಂದ್ರ ಪಾಲ್, ಯೋಗಿ ಅರವಿಂದರಂತೆ ಗಾಂಧಿಯ ಬಗ್ಗೆ ಬಹಳ ಮೊದಲೇ ಗಾಂಧಿಯ ಮಾತು-ಕೃತಿಗಳ ನಡುವಿನ

ಅಂತರ, ಗಾಂಧಿಗಿರಿಯ ಅಪಾಯ, ಗಾಂಧಿಯವರ ಮನಸುಖರಾಯ ಧೋರಣೆಗಳನ್ನು ತೀಕ್ಷ್ಣವಾಗಿ ಗಮನಿಸಿದವರು ಕೇರಳದ

ಚೆಟ್ಟೂರ್‌ಶಂಕರನ್‌ನಾಯರ್‌. ಅವರೆ ಈಗ ಕನ್ನಡಕ್ಕೆ ಅನುವಾದವಾಗುತ್ತಿರುವ ಮೂಲ ಇಂಗ್ಲಿಷ್‌ಪುಸ್ತಕ ʼ ಗಾಂಧಿ ಅಂಡ್‌

ಅನಾರ್ಕಿʼ ಯ ಲೇಖಕರು.

ಅಂಬೇಡ್ಕರ್‌ತಮ್ಮ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಗ್ರಂಥದಲ್ಲಿ ಮುಸಲ್ಮಾನರು ಯಾಕೆ ಪಾಕಿಸ್ತಾನದ ಬೇಡಿಕೆ

ಇಡುತ್ತಿದ್ದಾರೆ ಎಂಬುದನ್ನು ವಿವರಿಸುವಾಗ ಖಿಲಾಫತ್‌ಆಂದೋಲನ, ಕೇರಳದ ಮೋಪ್ಲಾ (ಮಾಪಿಳ್ಳೆ) ದಂಗೆಯನ್ನು ಸವಿವರವಾಗಿ


ಬರೆದಿದ್ದಾರೆ. ಆದರೆ ಕನ್ನಡದ ಅಥವಾ ಭಾರತದ ಯಾವ ದಲಿತ ಸಾಹಿತಿ, ಅಂಬೇಡ್ಕರ್‌ಅಭಿಮಾನಿ ಚಿಂತಕರು ಅದನ್ನು

ಇದುವರೆಗೂ ಸಾರ್ವಜನಿಕವಾಗಿ ಉಲ್ಲೇಖಿಸಿದ್ದನ್ನು ನನ್ನ ಇಪ್ಪತ್ತು ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾನು ಕಂಡಿಲ್ಲ.ಮೇಲಾಗಿ

ಸರ್ಕಾರ ಪ್ರಕಟಿಸಿರುವ ಅವರ ಸಮಗ್ರ ಭಾಷಣಗಳು ಮತ್ತು ಬರಹಗಳು ಸಂಪುಟದಲ್ಲಿ ಅದನ್ನು ವಿರೂಪಗೊಳಿಸಿ ಪ್ರಕಟಿಸುವ

ಕೆಲಸ ಕೆಲವು ವರ್ಷಗಳ ಹಿಂದೆ ಕರ್ನಾಟಕ ಸರಕಾರದ ಒಂದು ಸಾರ್ವಜನಿಕ ಸಂಸ್ಥೆಯ ಮೂಲಕ ನಡೆಯಿತು. ಇದಕ್ಕೆ ಕಾರಣ

ಇಸ್ಲಾಂ ಮತ್ತು ಗಾಂಧಿ ರಕ್ಷಣೆ- ಸ್ವತಃ ಅಂಬೇಡ್ಕರರೇ ಬರೆದಿದ್ದರೂ ಸಹ!

ದೇಶ ಭೌಗೋಳಿಕ ಘಟಕ, ರಾಷ್ಟ್ರ ಸಾಂಸ್ಕೃತಿಕ, ಆಧ್ಯಾತ್ಮಿಕ ಘಟಕ. ದೇಶವನ್ನು ಮುಟ್ಟಬಹುದು, ರಾಷ್ಟ್ರವನ್ನು

ಅನುಭವಿಸಬಹುದು ಅಷ್ಟೆ. ದೇಶ ಹಾಗೂ ರಾಷ್ಟ್ರದ ನಡುವಿನ ವ್ಯತ್ಯಾಸ ಮರೆತುಹೋಗಿರುವುದು ಹಿಂದುಗಳ ದೊಡ್ಡ ದುರಂತ.

೧೯೪೭ರ ಆಗಸ್ಟ್‌೧೫ರಂದು ಭಾರತದ ಜನನವಾಗಲಿಲ್ಲ. ಹೂಣ, ಶಕ, ಮಂಗೋಲಿಯ್‌, ತುರುಕ, ಪಠಾಣ, ಮುಸಲ್ಮಾನ, ಡಚ್

ವಸಾಹತುಶಾಹಿಗಳನ್ನು ಸದೆಬಡಿದಿದ್ದ ಈ ರಾಷ್ಟ್ರದ ಅಂತಃಶಕ್ತಿ ಮತ್ತೊಮ್ಮೆ ಮೇಲೆದ್ದು ಬ್ರಿಟಿಷ್‌ಸಾಮ್ರಾಜ್ಯವನ್ನು ಹೊರಹೆ

ಹಾಕಿತು. ಇದಕ್ಕೆ ಅತಿ ಮುಖ್ಯ ಕಾರಣ ನಿರಂತರವಾಗಿ ಸಾಮಾನ್ಯ ಜನತೆ ನಡೆಸಿದ ವಿವಿಧ ರೀತಿಯ ಸಂಘರ್ಷ ಹಾಗೂ ನೇತಾಜಿ

ಸುಭಾಷ್‌ಚಂದ್ರ ಬೋಸರ ಐ.ಎನ್.ಎ. ಆದರೆ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ನಾನಾ ಸಾಹೇಬನಿಂದ

ನೇತಾಜಿಯವರೆಗೆ ದೇಶ ಮತ್ತು ರಾಷ್ಟ್ರ ನಡೆಸಿದ ಬಲಿದಾನವನ್ನು ಮರೆಮಾಚಲಾಯಿತು. ಕೇವಲ ಮತ್ತು ಕೇವಲ

ಅಹಿಂಸಾವಾದದಿಂದ ದೇಶ ಸ್ವತಂತ್ರವಾಯಿತು ಎಂಬ ಕಠೋರ ಸುಳ್ಳನ್ನು ಅತ್ಯಂತ ಅಧಿಕೃತವಾಗಿ ಪತ್ರಿಕೆ, ಆಕಾಶವಾಣಿ,

ದೂರದರ್ಶನದ ಮೂಲಕ ದಶಕಗಳುದ್ದಕ್ಕೂ ಪ್ರಸಾರ ಮಾಡಲಾಯಿತು. ಗಾಂಧಿ ಹೆಸರು ರಾಜಕೀಯವಾಗಿ ಲಾಭದಾಯವಾಗಿತ್ತು.

ಹೀಗಾಗಿ ಸಮಾಜವಾದಿ, ನೆಹರೂವಾದಿಗಳು ಮಾತ್ರವಲ್ಲ ದೇಶದ ಶಾಶ್ವತ ಶತ್ರುಗಳಾದ ಕಮ್ಯುನಿಸ್ಟರೂ ಸಹ ೧೯೪೭ರ ನಂತರ

ಮಾರ್ಕ್ಸ್‌ವಾದಿ ಗಾಂಧಿವಾದಿಗಳಾದರು. ಗಾಂಧಿ-ನೆಹರು ವಿಮರ್ಶೆ ದೇಶದ್ರೋಹವಾಯಿತು. ವಿಶ್ವವಿದ್ಯಾನಿಲಯಗಳ ಅಧ್ಯಯನ

ಪೀಠಗಳು ಪತ್ರಿಕೆಗಳು ಹಿಂದು ರಾಜರು, ಹಿಂದು ಚರಿತ್ರೆ, ಹಿಂದು ಶಿಲ್ಪಕಲೆ, ಹಿಂದು ಚಿತ್ರಕಲೆ, ಹಿಂದು ರಂಗಭೂಮಿ, ಹಿಂದುಗಳ

ಸಮುದ್ರದ ಆಚೆಗೆ ಕಟ್ಟಿದ ಸಾಮ್ರಾಜ್ಯಗಳ ಕಥನವನ್ನು ಸಂಪೂರ್ಣ ಜನರಿಂದ ಮುಚ್ಚಿಟ್ಟವು. ಭಾರತದ ಕೇಂದ್ರದ ಶಿಕ್ಷಣ,

ಸಂಸ್ಕೃತಿ ಸಚಿವರು, ಎನ್‌.ಸಿ.ಆರ್‌.ಟಿ. ಇದರಲ್ಲಿ ಸಿಂಹಪಾಲು ವಹಿಸಿತು. ನೆಹರು ವಂಶದವರು ಸ್ಥಾಪಿಸಿದ ಇಂಡಿಯನ್‌ಕೌನ್ಸಿಲ್‌

ಫಾರ್‌ಹಿಸ್ಟಾರಿಕಲ್‌ರಿಸರ್ಚ್‌ (ಐ.ಸಿ.ಎಚ್‌.ಆರ್‌.) ಲೆನಿನ್‌-ಮಾವೊವಾದಿ ಲೇಖಕರ ನೆಲೆಯಾಯಿತು.

ಗಾಂಧಿ ಮತ್ತು ಅರಾಜಕತೆ ಮೂಲಕ ಪುಸ್ತಕದ ಪ್ರಕಟವಾದ ೯೮ ವರ್ಷಗಳ ಬಳಿಕ ಕನ್ನಡಕ್ಕೆ ಇದೇ ಮೊದಲ ಸಲ

ಅನುವಾದವಾಗುತ್ತಿರುವಾಗ ಇದನ್ನೆಲ್ಲಾ ಹೇಳಲು ಕಾರಣವಿದೆ. ಮೈಸೂರು ಅಥವಾ ಬೆಂಗಳೂರಿನಿಂದ ಪ್ರಯಾಣ ಮಾಡಿದರೆ

ಕೆಲವೆ ಗಂಟೆಗಳಲ್ಲಿ ಉತ್ತರ ಕೇರಳದಲ್ಲಿರುವ ಮಲಬಾರ್‌, ಮಲ್ಲಪುರಂ ಭಾಗಗಳನ್ನು ತಲುಪಬಹುದು. ಭೌಗೋಳಿಕವಾಗಿ ಇಷ್ಟು

ಸಮೀಪವಿರುವ ಈ ಜಿಲ್ಲೆಗಳಲ್ಲಿ ಕೇವಲ ೧೦೦ ವರ್ಷಗಳ ಹಿಂದೆ (ಆಗಸ್ಟ್‌೨೨, ೧೯೨೧) ಹಿಂದುಗಳ ಬರ್ಬರ ಸಾಮೂಹಿಕ ಹತ್ಯೆ

ಬಗ್ಗೆ ಎಷ್ಟು ಜನ ಕನ್ನಡಿಗರಿಗೆ ಗೊತ್ತು? ಯಾವ ಸೆಮಿನಾರ್‌, ಪತ್ರಿಕೆ, ವಿಶ್ವವಿದ್ಯಾನಿಲಯ ಈ ಕುರಿತು ಅಧ್ಯಯನ ಮಾಡಿದೆ?

ಸತ್ಯದ ಈ ಅಧಿಕೃತ ನಿರಾಕರಣೆಯನ್ನು ಕಮ್ಯುನಿಸ್ಟ್‌, ಸೆಕ್ಯುಲರ್‌, ಕಾಂಗ್ರೆಸ್‌ಗುಂಪುಗಳು ವ್ಯವಸ್ಥಿತವಾಗಿ ಮಾಡಿವೆ. ಮೋಪ್ಲಾ

ಹತ್ಯಕಾಂಡದಲ್ಲಿ ತಪ್ಪಿಸಿಕೊಂಡ ಮನೆತನದವರೇ ಆದ ಕೇರಳದ ನಂಬೂದರಿ ಪಾಡ್‌ಇದನ್ನು ರೈತ ಹೋರಾಟ ಎಂದು

ವರ್ಣಿಸುತ್ತಾರೆ. ಬ್ರಾಹ್ಮಣ ಮತ್ತಿತರ ಮೇಲ್ಜಾತಿಯ ಭೂಮಾಲಿಕರ ವಿರುದ್ಧ ಶೋಷಣೆಗೆ ಒಳಗಾದ ಮುಸ್ಲಿಂ ಮಾಪಿಳ್ಳೆಗಳು ನಡೆಸಿದ
ರೈತ ಹೋರಾಟ ಎಂದು ಕಮ್ಯುನಿಸ್ಟ್‌ಪಕ್ಷ ಹೇಳುತ್ತಾ ಬಂದಿದೆ. ಹಾಗಾದರೆ ಡಾ. ಅಂಬೇಡ್ಕರ್‌ಬರೆದಿರುವುದು ಸುಳ್ಳೆ? ಪ್ರತ್ಯಕ್ಷ

ಮಲಬಾರಿಗೆ ಹೋಗಿ-ನೋಡಿ ಬರೆದಿರುವ ಆನಿಬೆಸೆಂಟ್‌ವರದಿಯನ್ನು ಎಲ್ಲಿ ಮುಚ್ಚಿಡುವುದು? ಆ ಭಾಗದ ರಾಣಿಗೆ ಅಸಹಾಯಕ

ಹಿಂದು ಹೆಣ್ಣು ಮಕ್ಕಳು ಮಾಡಿರುವ ಮನವಿ ಎಂಥ ಕಲ್ಲು ಹೃದಯದ ಸೆಕ್ಯುಲರ್‌ವಾದಿಗಳ ಹೃದಯಕ್ಕೆ ಸಾಮಾನ್ಯ ಹಿಂದು ಜನತೆ

ಎಸೆದಿರುವ ಸವಾಲು. ಈಗ ಮತ್ತೊಂದು ಹೊಸ ಕಥನ ಆರಂಭವಾಗಿದೆ. ಮೋಪ್ಲಾ ಹತ್ಯಾಕಾಂಡದ ಒಬ್ಬ ನಾಯಕನ ಮೇಲೆ

ಮಲಯಾಳಂ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಹಿಂದು ಹತ್ಯಾಕಾಂಡದ ಶತಮಾನೋತ್ಸವದ ಆಚರಣೆಯನ್ನು ಎಡಪಂಥ-

ಸೆಕ್ಯುಲರ್‌, ಕಾಂಗ್ರೆಸ್‌ಈ ರೀತಿ ನಡೆಸುತ್ತಿದೆ.

ರಾಷ್ಟ್ರೀಯ ಹೋರಾಟದ ಅಂಗವಾಗಿ ಎಲ್ಲರೂ ಬರಬೇಕು ಎಂಬ ಆಶಯವಿದ್ದ ಗಾಂಧಿ ಅದನ್ನು ಜಾರಿಗೆ ತರಲು ಯಾವ ಹಂತಕ್ಕೂ

ಹೋಗಲು ಸಿದ್ಧವಿದ್ದರು ಎಂಬುದಕ್ಕೆ ಅವರು ಹಿಂದು ಮುಸ್ಲಿಮರ ಏಕತೆ ತರಲು ೧೯೨೦ ದಶಕದಲ್ಲಿ ಆರಂಭಿಸಿದ ಕೆಲವು

ಕಾರ್ಯಯೋಜನೆಗಳೇ ಸಾಕ್ಷಿ. ಇಸ್ಲಾಮಿನ ರಾಜಕಾರಣದಲ್ಲಿ ಪ್ರವಾದಿ ಮಹಮ್ಮದರ ನಂತರ ಜಗತ್ತಿನ ಮುಸಲ್ಮಾನರಿಗೆ

ಮಾರ್ಗದರ್ಶನ ನೀಡುತ್ತಾ ಬಂದವರು ಖಲೀಫರು. ಅವರು ಪ್ರಪಂಚದ ಎಲ್ಲೆಡೆ ಇಸ್ಲಾಮಿನ ʼ ಬೆಳಕುʼ ಹರಡಬೇಕು ಎಂದು ಆಶಯ

ಇಟ್ಟು ಕೊಂಡು ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದರು. ಅವರ ಸಾಮ್ರಾಜ್ಯಕ್ಕೆ ಖಲೀಫರ ಸಾಮ್ರಾಜ್ಯವೆಂದು ಹೆಸರು. ದೀರ್ಘ

ಇತಿಹಾಸವಿರುವ ಹಾಗೂ ಕ್ರೈಸ್ತರ ಸಾಂಪ್ರದಾಯಿಕ ನಗರವಾಗಿದ್ದ ಕಾನ್ಸ್ಟಂಟಿನೋಪಲ್‌೧೪೫೩ ರಲ್ಲಿ ಅಟ್ಟೋಮನ್‌ಟರ್ಕರ

ಪಾಲಾಯಿತು. ೧೯೧೯ರಲ್ಲಿ ಟರ್ಕಿಯ ಸ್ವಾತಂತ್ರ್ಯ ಸಮರ ಆರಂಭವಾಗುವ ವರೆಗೆ ಈ ಇಸ್ಲಾಮಿನ ಸಾಮ್ರಾಜ್ಯದ ಆಡಳಿತ

ನಡೆಯಿತು. ಈ ವೇಳೆಗಾಗಲೆ ಯುರೋಪಿನ ಶಕ್ತಿ ಹೆಚ್ಚತೊಡಗಿತ್ತು.ಯುರೋಪಿನ ಇಸ್ಲಾಮೇತರ ಶಕ್ತಿಗಳು ೧೫೦೦-

೧೯೦೦ರವರೆಗೆ ಬಲಶಾಲಿಗಳಾಗುತ್ತಾ ಹೋದವು. ಇಸ್ಲಾಮಿನ ಶಕ್ತಿಗಳು ಯುರೋಪಿನ ಆಧುನಿಕ ಹಾಗೂ ಕ್ರೈಸ್ತ ಶಕ್ತಿಗಳ ಜೊತೆ

ಸೆಣಸಾಟ ಮುಂದುವರೆಸಿದ್ದವು. ಈ ನಡುವೆ ೧೯೨೨ರಲ್ಲಿ ಟರ್ಕಿಯಲ್ಲಿ ರಾಜಕೀಯ ಬದಲಾವಣೆಯಾಯಿತು. ಅಲ್ಲಿ ಚಾಲ್ತಿಯಲ್ಲಿದ್ದ

ಖಲೀಫರ ಆಡಳಿತವನ್ನು ಮುಸ್ತಫಾ ಕೆಮಲ್‌ಆಧುನಿಕ ಧೋರಣೆಯಿದ್ದ ಪ್ರಬಲ ರಾಜಕಾರಣಿ ಕಿತ್ತು ಹಾಕಿದ್ದರಿಂದ, ಆರನೇ

ಮೆಹಮ್ಮದ್‌ಎಂಬ ಕೊನೆಯ ಖಲೀಫನ ಆಡಳಿತ ೧೯೨೨ರಲ್ಲಿ ಅಂತ್ಯವಾಯಿತು.ಅದುವರೆಗೆ ಇಸ್ಲಾಮಿನ ಜಗತ್ತಿಗೆ

ಒಡೆಯರಾಗಿದ್ದವರು ಖಲೀಫರು. ಇದು ಕಳೆದ ನೂರು ವರ್ಷಗಳ ಹಿಂದೆ ಇಡೀ ಇಸ್ಲಾಮಿಗೆ ಜಾಗತಿಕವಾಗಿ ಉಂಟಾದ ಬಹು

ದೊಡ್ಡ ಶಾಕ್‌. ಭಾರತದಲ್ಲಿ ವಾಸಿಸುತ್ತಿದ್ದ ಮೌಲಾನ ಶೌಕತ್‌ಅಲಿ,ಮೌಲಾನಾ ಮಹಮ್ಮದ್‌ಅಲಿ, ಅಟ್ಟೋಮನ್‌ಸಾಮ್ರಾಜ್ಯದ

ಭಾಗವಾಗಿದ್ದ ಮಕ್ಕಾದಲ್ಲಿ ಜನಿಸಿ ಭಾರತಕ್ಕೆ ಬಂದು ಕಲ್ಕತ್ತಾದಲ್ಲಿ ಬೆಳೆದಿದ್ದ ಮೌಲಾನಾ ಅಬುಲ್‌ಕಲಾಂ ಆಜಾದ್‌ಈ ಶಾಕಿಗೆ

ಒಳಗಾದರು. ಅಸಲಿಗೆ ಇವರು ಭಾರತವನ್ನು ಆಕ್ರಮಿಸಿ ಕೂತಿದ್ದ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಹಿಂದುಗಳ ಜೊತೆ

ಕೈಜೋಡಿಸಬೇಕಿತ್ತು. ಆದರೆ ಮೂಲತಃ ಇವರಿಗೆ ಇದ್ದ ಆಸಕ್ತಿ ಅಂತಾರಾಷ್ಟ್ರೀಯ ಇಸ್ಲಾಮಿನ ಕೈಬಲ ಪಡಿಸುವ ರಾಜಕಾರಣದಲ್ಲಿ.

ಹಿಂದು ಕಾಫಿರರು ಬ್ರಿಟಿಷರನ್ನು ಭಾರತದಿಂದ ಓಡಿಸಿದರೆ ಇವರಿಗೆ ಏನು ಲಾಭ? ಈ ನಿಟ್ಟಿನಲ್ಲಿ ಕುಖ್ಯಾತ ಅಲಿ ಸಹೋದರರು

ದೇಶದಲ್ಲೆಲ್ಲ ಸಂಚಾರ ಮಾಡಿ ಇಸ್ಲಾಂ ಸಂಕಟದಲ್ಲಿದೆ ಎಂದು ಮುಸಲ್ಮಾನರನ್ನು ಎಚ್ಚರಿಸಿದರು.

ಭಾರತೀಯ ರಾಜಕಾರಣ ಪ್ರವೇಶಿಸುತ್ತಿದ್ದ ಗಾಂಧಿಗೆ ಆಗ ೫೩ ವರ್ಷ. ಅವರು ಆಫ್ರಿಕಾದಲ್ಲಿದ್ದಾಗಲೆ ಅನೇಕ ಮುಸಲ್ಮಾನ

ಸ್ನೇಹಿತರನ್ನು ಗಳಿಸಿದ್ದರು. ಅವರು ಇಸ್ಲಾಮಿನ ಸ್ಥಾಪಕ ಪ್ರವಾದಿ ಮಹಮ್ಮದರನ್ನು ಕುರಿತು, ಕ್ರೈಸ್ತಮತವನ್ನು ಕುರಿತು ಕೆಲವು

ಪುಸ್ತಕಗಳನ್ನು ಓದಿದ್ದರು. ಮುಂದೆ ಕೂಡ ೧೯೪೭ರ ನೌಕಲಿಯಲ್ಲಿ (ಬಂಗಾಳ) ಪ್ರವಾಸ ಮಾಡುವಾಗ ಕೂಡ ಪ್ರವಾದಿ
ಮಹಮ್ಮದರ ಜೀವನಚರಿತ್ರೆಯ ಪುಸ್ತಕವನ್ನು ಹೊಂದಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದು

ಭಾರತದಲ್ಲಿ ವಾಸಿಸುವ ಎಲ್ಲರ ಕರ್ತವ್ಯ ಎಂಬ ಸರಳ ಸತ್ಯ ಅವರಿಗೆ ಮರೆತು ಹೋಯಿತು. ಅವರು ನೀವು ಭಾರತದ

ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿ, ನೆರವಾಗಿ ನಾವು (ಅಂದರೆ ಗಾಂಧಿ) ಇರಾನಿನಲ್ಲಿ ಟರ್ಕಿಯ ಖಲೀಫರ ಸಾಮ್ರಾಜ್ಯ

ಮತ್ತೆ ಸ್ಥಾಪನೆಯಾಗಲು ಹಿಂದುಗಳ ಬೆಂಬಲ ಕೊಡಿಸುತ್ತೇನೆ ಎಂದು ಅಲಿ ಸಹೋದರರಿಗೆ ಹಾಗೂ ಉಳಿದ ಇಸ್ಲಾಮಿನ

ಮುಖಂಡರಿಗೆ ಭರವಸೆ ನೀಡಿದರು. ಹೀಗೆ ಭರವಸೆ ನೀಡುವಾಗ ಅವರು ಆಗ ಬದುಕಿದ್ದ ಭಾರತದ ಯಾವ ಪ್ರಮುಖ ಮುಖಂಡರ

ಸಲಹೆ, ಸಮಾಲೋಚನೆ ಪಡೆಯಲಿಲ್ಲ. ʼ ತಾನು ಹಿಡಿದ ಮೊಲಕ್ಕೆ ಮೂರೆ ಕಾಲುʼ ಇದು ಗಾಂಧಿ ರಾಜಕೀಯ ದರ್ಶನದ ಮೊದಲ

ಪಾಠ.

ಇದನ್ನು ಓದುವ ಅನೇಕ ಓದುಗರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡಬಹುದು. ಗಾಂಧಿಯವರು ಅಷ್ಟು ದೊಡ್ಡ ದೇಶಭಕ್ತರು

ಅವರು ದೇಶಕ್ಕಾಗಿ ದುಡಿದು ಮಡಿದವರುʼ ಅವರನ್ನು ಈ ರೀತಿ ವಿಮರ್ಶೆಗೆ ಒಳಪಡಿಸಬಹುದೆ ಎಂದು. ಇತಿಹಾಸವೆಂದರೆ ಹಾಗೆ.

ಅದು ನಮಗೆ ಬೇಕಾದಂತೆ ಸುಂದರವಾಗಿರುವುದಿಲ್ಲ. ಇಸ್ಲಾಮಿನ ಮೋಹಕ್ಕೆ, ಅಂದಿನ ಮುಸಲ್ಮಾನ ನಾಯಕರನ್ನು ಒಲಿಸುವ

ಕೆಲಸಕ್ಕೆ ಗಾಂಧಿ ತೊಡಗಿದ್ದು ಐತಿಹಾಸಿಕ ಸತ್ಯ. ಇದರ ಮುಂದುವರೆದ ಭಾಗವಾಗಿ ಅವರು “ರಘುಪತಿ ರಾಘವ ರಾಜಾರಾಂ”

ಭಜನೆಯನ್ನು ವಿಕೃತಗೊಳಿಸಿ “ಈಶ್ವರ ಅಲ್ಲಾ ತೇರೇ ನಾಮ್‌” ಎಂಬ ಸಾಲನ್ನು ಸೇರಿಸಿದರು. ಇದನ್ನೆಲ್ಲ ಖಿಲಾಫತ್‌ಚಳವಳಿಯ

ಯಾವ ಮುಖಂಡರೂ ಲೆಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು ಬೇರೆ ಮಾತು. ೧೯೧೫ರಿಂದ ಅದುವರೆಗೆ ನಡೆದ ಅನೇಕ ಕಾಂಗ್ರೆಸ್‌

ಅಧಿವೇಶನಗಳಲ್ಲಿ ಪ್ರಸಿದ್ಧ ಗಾಯಕ ವಿಷ್ಣು ದಿಗಂಬರ ಪಲುಸ್ಕರ್‌, ಸ್ವತಃ ಕಾಫಿ ರಾಗದಲ್ಲಿ ರಾಗಸಂಯೋಜನೆ ಮಾಡಿ ʼ ವಂದೇ

ಮಾತರಂʼ ಹಾಡಿದ್ದರು .ಅದುವರೆಗೂ ಹಾಡುತ್ತಿದ್ದ ಬಂಕಿಮ ಚಂದ್ರರ ಈ ಪ್ರಸಿದ್ಧ ಗೀತೆಗೆ ಆಂಧ್ರಪ್ರದೇಶದ ಕಾಕಿನಾಡದದಲ್ಲಿ

೧೯೨೩ರಲ್ಲಿ ನಡೆದ ಕಾಂಗ್ರೆಸ್‌ಅಧಿವೇಶನದಲ್ಲಿ ಈ ಗೀತೆ “ ಇಸ್ಲಾಮಿಗೆ ವಿರುದ್ಧ” ಎಂದು ವಿರೋಧ ಬಂತು. ವಿರೋಧಿಸಿದ್ದು ಬೇರೆ

ಯಾರೂ ಅಲ್ಲ ಸಮ್ಮೇಳನದ ಅಧ್ಯಕ್ಷ ಹಾಗೂ ಖಿಲಾಫತ್‌ಚಳವಳಿಯ ಮುಖಂಡರಾಗಿದ್ದ ಮೌಲಾನಾ ಮೊಹಮ್ಮದ ಅಲಿ. “ ಇದು

ರಾಷ್ಟ್ರೀಯ ವೇದಿಕೆ. ಐಆವುದೇ ಒಂದು ಸಮೂಹದ ವೇದಿಕೆಯಲ್ಲ. ಸಂಗೀತವನ್ನು ವಿರೋಧಿಸುವುದಕ್ಕೆ ಇದು ಮಸೀದಿಯಲ್ಲ. ಇಲ್ಲಿ

ಸಂಗೀತ ನಿಷೇಧಿಸುವುದಕ್ಕೆ ಯಾವ ಕಾರಣವೂ ಇಲ್ಲ. ಅಧ್ಯಕ್ಷರ ಮೆರವಣಿಗೆಯ ಸಮಯದಲ್ಲಿ ಈ ಗೀತೆಯನ್ನು ಕೇಳಿಸಿಕೊಂಡ

ಇವರು, ಇಲ್ಲೇಕೆ ಹಾಡಲು ಅಡ್ಡಿಪಡಿಸುತ್ತಿದ್ದಾರೆ?” ಎಂದು ಸ್ವಾಭಿಮಾನಿ ಗಾಯಕ ಪಲುಸ್ಕರ್‌ಪ್ರಶ್ನಿಸಿದರು ಹಾಗೂ ವಂದೇ

ಮಾತರಂ ಗೀತೆ ಹಾಡಿದರು. ಅಧಿವೇಶನದ ಅಧ್ಯಕ್ಷರು ಕೋಪಮಾಡಿಕೊಂಡು ಸಭಾತ್ಯಾಗ ಮಾಡಿದರು.

ಕೇರಳ ಮಾಪಿಳ್ಳೆಗಳ ಗೂಂಡಾಗಿರಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕೇರಳದಲ್ಲಿ ಮಲ್ಲಪುರಂ ಎಂಬ ಮುಸ್ಲಿಂ ಬಾಹುಳ್ಯ

ಜಿಲ್ಲೆಯ ರಚನೆಯ ವಿಷಬೀಜ ಇಲ್ಲಿವೆ.ಜಮ್ಮು-ಕಾಶ್ಮೀರದ ಮುಸಲ್ಮಾನರ ಪ್ರತ್ಯೇಕತಾವಾದಿ ಜಿಹಾದಿ ಮನೋಭಾವದ ಮೂಲ

ಇಲ್ಲಿದೆ. ಜೆಎನ್‌ಯು, ಅಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯ ಪಾಕಿಸ್ತನಾದ ರಚನೆಯ ಮದ್ದಿನ ಮನೆಯಾದ ಕತೆಯ ಮೂಲ ಇಲ್ಲಿದೆ.

ಗಾಂಧಿ ಅಂದು ಮೌಲಾನಾರಿಗೆ ಬುದ್ಧಿಹೇಳಿದ್ದರೆ ಮುಂದೆ ಈ ಸಂಕಟದ ದಿನಗಳು ಬರುತ್ತಿರಲಿಲ್ಲ. ಆದರೆ ಮನಸುಖರಾಯ

ಧೋರಣೆಯ ಕಾರಣದಿಂದ ಗಾಂಧಿ ಹಾಗೆ ಮಾಡಲಿಲ್ಲ. ವಿಶ್ವಮಟ್ಟದ ಇಸ್ಲಾಂ ಮರುಸ್ಥಾಪನೆಯ ಖಿಲಾಫತ್‌ಎಂಬ ಹೋರಾಟ

ವಿಫಲವಾಯಿತು. ಅದರಿಂದ ಭುಗಿಲೆದ್ದ ಅಸಮಾಧಾನದ ಜ್ವಾಲೆ ಕೇರಳ ಮಾಪಿಳ್ಳೆಗಳು ಹಿಂದುಗಳ ಮೇಲೆ ನಡೆಸಿದ ಅತ್ಯಾಚಾರ,
ಕಗ್ಗೊಲೆ. ಇದನ್ನು ಗಾಂಧಿ ಖಂಡಿಸಲಿಲ್ಲ. ಡಾ. ಬಿ.ಆರ್‌.ಅಂಬೇಡ್ಕರ್‌ ಖಿಲಾಫತ್‌ಮತ್ತು ಅದರ ಕೇರಳದ ಪರಿಣಾಮದ ಬಗ್ಗೆ

ಥಾಟ್ಸ್‌ಆನ್‌ಪಾಕಿಸ್ತಾನ್‌ಗ್ರಂಥದಲ್ಲಿ ವಿಸ್ತಾರವಾಗಿ ಬರೆದಿದ್ದಾರೆ: ಡಾ. ಸೈಫುದ್ದೀನ್‌ಖಿಚ್ಲು ಅವರು ಹೇಳಿದ್ದು:

“In a meeting held in Lahore in 1925 Dr. Kitchlew said* :— “The Congress was lifeless till the
Khilafat Committee put life in it. When the Khilafat Committee joined it, it did in one year what
the Hindu Congress had not done in 40 years. The Congress also did the work of uplifting the
seven crores of untouchables. This was purely a work for the Hindus, and yet the money of the
Congress was spent on it. Mine and my Musalman brethren’s money was spent on it like water.
But the brave Musalmans did not mind. Then why should the Hindus quarrel with us when we
Musalmans take up the Tanzim work and spend on it money that belongs neither to the Hindus
nor to the Congress? “ If we remove British rule from this country and establish Swaraj, and if
the Afghans or other Muslims invade India, then we Muslims will oppose them and sacrifice all
our sons in order to save the country from the invasion. But one thing I shall declare plainly.
Listen, my dear Hindu brothers, listen very attentively ! If you put obstacles in the path of our
Tanzim movement, and do not give us our rights, we shall make common cause with
Afghanistan or some other Musalman power and establish our rule in this country.”

(ಬಾಬಾ ಸಾಹೇಬ್‌ಅಂಬೇಡ್ಕರ್‌ರೈಟಿಂಗ್ಸ್‌ಅಂಡ್‌ಸ್ಪೀಚಸ್‌, ಸಂಪುಟ ೬, ಪುಟ ೨೭೨-ಇಂಗ್ಲಿಷ್‌ಆವೃತ್ತಿ).

ಇಸ್ಲಾಮಿನ ಅನುಯಾಯಿಗಳ ಬಗ್ಗೆ ಕವಿ ರವೀಂದ್ರನಾಥ ಠಾಕೂರ್‌ಹೇಳಿದ್ದನ್ನು ಡಾ. ಅಂಬೇಡ್ಕರ್‌ಈ ರೀತಿ ದಾಖಲಿಸಿದ್ದಾರೆ:

In 1924 the editor of a Bengalee paper had an interview with the poet Dr. Rabindra Nath
Tagore. The report of this interview states* :— “..... another very important factor which,
according to the poet, was making it almost impossible for the HinduMohamedan unity to
become an accomplished fact was that the Mohamedans could not confine their patriotism to
any one country ...... The poet said that he had very frankly asked many Mohamedans whether,
in the event of any Mohamedan power invading India, they would stand side by side with their
Hindu neighbours to defend their common land. He could not be satisfied with the reply he got
from them. He said that he could definitely state that even such men as Mr. Mahomed Ali had
declared that under no circumstances was it permissible for any Mohamedan, whatever his
country might be, to stand against any other Mohamedan. .”

(ಬಾಬಾ ಸಾಹೇಬ್‌ಅಂಬೇಡ್ಕರ್‌ರೈಟಿಂಗ್ಸ್‌ಅಂಡ್‌ಸ್ಪೀಚಸ್‌, ಸಂಪುಟ ೬, ಪುಟ ೨೭೬-ಇಂಗ್ಲಿಷ್‌ಆವೃತ್ತಿ).

೧೯೨೩ರ ಕಾಂಗ್ರೆಸ್‌ಅಧಿವೇಶನದಲ್ಲಿ ಗಾಂಧಿಯನ್ನು ಯೇಸು ಕ್ರಿಸ್ತನಿಗೆ ಹೋಲಿಸಿ ಹೊಗಳಿದ್ದ ಮೊಹಮ್ಮದ್‌ಅಲಿ ಕೇವಲ ಒಂದು

ವರ್ಷದ ನಂತರ ಹೇಳಿದ್ದನ್ನು ಡಾ. ಅಂಬೇಡ್ಕರ್‌ಮತ್ತೆ ಹೀಗೆ ದಾಖಲಿಸಿದ್ದಾರೆ:

A year after, Mr. Mahomed Ali speaking at Aligarh and Ajmere said: “ However pure Mr.
Gandhi’s character may be, he must appear to me from the point of view of religion inferior to
any Musalman, even though he be without character. ” The statement created a great stir. Many
did not believe that Mr. Mahomed Ali, who testified to so much veneration for Mr. Gandhi, was
capable of entertaining such ungenerous and contemptuous sentiments about him. When Mr.
Mahomed Ali was speaking at a meeting held at Aminabad Park in Lucknow, he was asked
whether the sentiments attributed to him were true. Mr. Mahomed Ali without any hesitation
or compunction replied*: - “Yes, according to my religion and creed, I do hold an adulterous
and a fallen Musalman to be better than Mr. Gandhi. ” *“ Through Indian Eyes,” Times of India,
dated 21-3-24.

(ಬಾಬಾ ಸಾಹೇಬ್‌ಅಂಬೇಡ್ಕರ್‌ರೈಟಿಂಗ್ಸ್‌ಅಂಡ್‌ಸ್ಪೀಚಸ್‌, ಸಂಪುಟ ೬, ಪುಟ ೩೦೨-ಇಂಗ್ಲಿಷ್‌ಆವೃತ್ತಿ).

ಇದು ಖಿಲಾಫತ್‌ಚಳವಳಿಯಲ್ಲಿ ಅಲಿ ಸಹೋದರರನ್ನು ನಂಬಿದ್ದಕ್ಕೆ ಗಾಂಧಿಯವರಿಗೆ ಸಿಕ್ಕ ಪ್ರತಿಫಲ. ಈ ಕಾಲದಲ್ಲಿ ಚಿತ್ತರಂಜನ್‌

ದಾಸ್‌ಅವರಿಗೆ ಲಾಲಾ ಲಜಪತರಾಯ್‌ಬರೆದ ಪತ್ರದಲ್ಲಿ ಖಿಲಾಫತ್‌ಅನಾಹುತಗಳು, ಇಸ್ಲಾಮಿನ ಭಾರತ ವಿರೋಧಿ

ಮನೋಭಾವದ ಜೀವಂತ ಚಿತ್ರಣವಿದೆ. ಆದರೆ ಡಾ. ಅಂಬೇಡ್ಕರ್‌ಅವರ ಇಷ್ಟು ಪ್ರಸಿದ್ಧವಾದ , ಇಂಗ್ಲಿಷ್‌, ಕನ್ನಡ, ಹಿಂದಿ,

ಮರಾಠಿಯಲ್ಲಿ ಲಭ್ಯವಿರುವ ಗ್ರಂಥದ ಚರ್ಚೆಯನ್ನು ಯಾವ ಅಂಬೇಡ್ಕರ್‌ವಾದಿಯೂ ಮಾಡುವುದಿಲ್ಲ ಎನ್ನುವುದು ಇತಿಹಾಸವನ್ನು

ಎಷ್ಟು ಸೆಲೆಕ್ಟಿವ್‌ಆಗಿ ಓದಲಾಗುತ್ತಿದೆ ಎಂಬುದಕ್ಕೆ ಹಿಡಿದ ಕನ್ನಡಿ.

ಖಿಲಾಫತ್‌ಆಂದೋಲನ ಟರ್ಕಿಯಲ್ಲಿ ವಿಫಲವಾಯಿತು. ಅದರ ಪರಿಣಾಮವಾಗಿ ಕೇರಳದ ಮಲಬಾರಿನಲ್ಲಿ ಮಾಪಿಳ್ಳೆ

ಮುಸಲ್ಮಾನರು ಹಿಂದುಗಳ ಮೇಲೆ ಅಮಾನುಷ ಹಲ್ಲೆ ಮಾಡಿದರು. ಇದನ್ನು ಡಾ. ಅಂಬೇಡ್ಕರ್‌ಸ್ಪಷ್ಟವಾಗಿ ದಾಖಲಿಸಿದ್ದಾರೆ:

“Beginning with the year 1920 there occurred in that year in Malabar what is known as the
Mopla Rebellion. It was the result of the agitation carried out by two Muslim organizations, the
Khuddam-i-Kaba (servants of the Mecca Shrine) and the Central Khilafat Committee. Agitators
actually preached the doctrine that India under the British Government was Dar-ul-Harab and
that the Muslims must fight against it and if they could not, they must carry out the alternative
principle of Hijrat. The Moplas were suddenly carried off their feet by this agitation. The
outbreak was essentially a rebellion against the British Government. The aim was to establish
the kingdom of Islam by overthrowing the British Government. Knives, swords and spears
were secretly manufactured, bands of desperadoes collected for an attack on British authority.
On 20th August a severe encounter took place between the moplas and the British forces at
Pirunangdi. Roads were blocked, telegraph lines cut, and the railway destroyed in a number of
places. As soon as the administration had been paralysed, the Moplas declared that Swaraj had
been established. A certain Ali Mudaliar was proclaimed Raja, Khilafat flags were flown, and
Ernad and Wallurana were declared Khilafat Kingdoms. As a rebellion against the British
Government it was quite understandable. But what baffled most was the treatment accorded by
the Moplas to the Hindus of Malabar. The Hindus were visited by a dire fate at the hands of the
Moplas. Massacres, forcible conversions, desecration of temples, foul outrages upon women,
such as ripping open pregnant women, pillage, arson and destruction— in short, all the
accompaniments of brutal and unrestrained barbarism, were perpetrated freely by the Moplas
upon the Hindus until such time as troops could be hurried to the task of restoring order
through a difficult and extensive tract of the country. This was not a Hindu-Moslem riot. This
was just a Bartholomew. The number of Hindus who were killed, wounded or converted, is not
known. But the number must have been enormous.”

ಬಾಬಾ ಸಾಹೇಬ್‌ಅಂಬೇಡ್ಕರ್‌ರೈಟಿಂಗ್ಸ್‌ಅಂಡ್‌ಸ್ಪೀಚಸ್‌, ಸಂಪುಟ ೬, ಪುಟ ೧೬೩-ಇಂಗ್ಲಿಷ್‌ಆವೃತ್ತಿ).

ಇಲ್ಲಿ ಡಾ. ಅಂಬೇಡ್ಕರ್‌ಗುರುತಿಸಿರುವ ಖಿಲಾಫತ್‌ಕಿಂಗ್‌ಡಮ್‌ಎಂದರೆ ಜಿಹಾದಿನ ನಂತರ ಪಡೆದುಕೊಳ್ಳುವ ರಾಜ್ಯ. ಭಾರತ

ಬ್ರಿಟಿಷರ ಕೈಗೆ ಸಿಲುಕಿ ದಾರ್‌-ಉಲ್‌-ಹರಬ್‌ಆಗಿದೆ, ಅದನ್ನು ದಾರ್‌-ಉಲ್‌-ಇಸ್ಲಾಂ ಮಾಡುವುದು ಖಿಲಾಫತ್ತಿನ ಮುಖ್ಯ

ಉದ್ದೇಶವಾಗಿತ್ತು. ಇಸ್ಲಾಮಿನ ಬಗ್ಗೆ ಯಾವುದೇ ಸೂಕ್ತ ಹಿನ್ನೆಲೆ, ಭಾರತೀಯ ಇತಿಹಾಸದ ಸರಿಯಾದ ಓದು ಇರದ

ಗಾಂಧಿಯವರು ತಮ್ಮ ಮನಸುಖರಾಯ ಧೋರಣೆಯಿಂದ ಹಿಂದುಗಳಿಗೆ ಏಕಮುಖವಾಗಿ ಅಹಿಂಸೆಯನ್ನು ಉದ್ದಕ್ಕೂ

ಬೋಧಿಸಿದರು.

ಮಲಬಾರಿನಲ್ಲಿ ಏನಾಯಿತು ಎಂಬುದು ಈ ಪುಸ್ತಕದ ಹೂರಣವಾಗಿದ್ದರಿಂದ ಅದನ್ನು ಇಲ್ಲಿ ವಿವರಿಸಬೇಕಿಲ್ಲ. ಖಿಲಾಫರತ್‌ಮತ್ತು


ಮೋಪ್ಲಾ ಹತ್ಯಾಕಾಂಡದ ಬಗ್ಗೆ ಗಾಂಧಿಯವರು ಸಾಕಷ್ಟು ಬರೆದಿದ್ದಾರೆ. ೧೯೨೧ರ ಸೆಪ್ಟೆಂಬರ್‌೮ರಂದು ಅಚವರು ಮೋಪ್ಲಾಗಳು “
ಕಟ್ಟುನಿಟ್ಟಾಗಿ ಅಹಿಂಸಾತ್ಮಕವಾಗಿ ಉಳಿಯದೇ ಹೋದ” ಬಗ್ಗೆ ದೋಷಿಸಿದರು. ಆದರೆ ಅವರನ್ನು “ಭೂಮಿಯ ಮೇಲಿನ
ಧೈರ್ಯಶಾಲಿಗಳು” ಎಂದು ಶ್ಲಾಘಿಸಿದರು! ೧೯೨೧ರ ಅಕ್ಟೋಬರ್‌೨೦ರಂದು “The Mussulmans must naturally feel
the shame and humiliation of the Moplah conduct about forcible conversions and looting, and
they must work away so silently and effectively that such things might become impossible even
on the part of the most fanatical among them.” ಎಂದು ಬರೆದರು.( ಮುಸಲ್ಮಾನರು ಬಲವಂತದ ಮತಾಂತರ
ಹಾಗೂ ಲೂಟಿಯ ಬಗ್ಗೆ ಸಹಜವಾಗಿ ನಾಚಿಕೆ ಪಡಬೇಕು ಹಾಗೂ ಮುಸಲ್ಮಾನರಲ್ಲಿ ಅತ್ಯಂತ ಕೋಮುವಾದಿಗಳಾದವರಿಗೂ
ಅಸಾಧ್ಯವಾಗುವ ಹಾಗೆ ಮೌನದಿಂದ ಮತ್ತು ಪರಿಣಾಮಕಾರಿಯಾಗಿ ಇಂಥದ್ದು ನಡೆಯದಂತೆ ಮಾಡಬೇಕು.)

ಮೋಪ್ಲಾಗೂ ಮೊದಲು ಅವರು ಖಿಲಾಫತ್‌ಚಳವಳಿ ಬಗ್ಗೆ ಎಷ್ಟು ಭರವಸೆ ಇಟ್ಟಿದ್ದರೆಂದರೆ, “ ಗೋರಕ್ಷಣೆಗಾಗಿ ಖಿಲಾಫತ್‌ನಲ್ಲಿ

ಹಿಂದುಗಳು ಭಾಗವಹಿಸುವುದು ಅತಿ ಶ್ರೇಷ್ಠ ಹಾಗೂ ಅತ್ಯುತ್ತಮ ಚಳವಳಿ” ಎಂದು ೧೯೨೧ರ ಮೇ ತಿಂಗಳಿನಲ್ಲಿ

ಬರೆದರು.”ಆದ್ದರಿಂದ ನಾನು ಖಿಲಾಫತ್ತನ್ನು ನಮ್ಮ ಕಾಮಧುಕ್‌ಎನ್ನುತ್ತೇನೆ” ಎಂದರು. (ಯಂಗ್‌ಇಂಡಿಯಾ, ೮-೬-೧೯೨೧).

ಸ್ವರಾಜ್ಯದ ಅಡಿಪಾಯ, ಭಾರತ ಸ್ವಾತಂತ್ರ್ಯದ ಅಡಿಗಲ್ಲು ಹಿಂದು ಮುಸಲ್ಮಾನರ ಏಕತೆಯೇ ಎಂಬುದನ್ನು ಹಿಂದು ಮತ್ತು

ಮುಸಲ್ಮಾನರು ದೃಢವಾಗಿ ತಿಳಿದುಕೊಳ್ಳಲಿ. ಖಿಲಾಫತ್ತಿನ ಹಿನ್ನೆಲೆಯಲ್ಲಿ ಭಾರತದ ಶಕ್ತಿಯನ್ನು ಆಧರಿಸಿ ಇಸ್ಲಾಮಿನ ರಕ್ಷಣೆ

ಸಾಧ್ಯವಾಗುವುದು ಹಿಂದು ಮುಸಲ್ಮಾನರ ಏಕತೆ ಅವರ ಬದುಕಿನಲ್ಲಿ ಒಂದು ಜೀವಂತ ಸಂಗತಿಯಾದರೆ ಮಾತ್ರ ಎನ್ನುವುದನ್ನು

ಇಬ್ಬರೂ ತಿಳಿದುಕೊಳ್ಳಲಿ. ಹಿಂದುಗಳು ಇಸ್ಲಾಮಿನ ರಕ್ಷಣೆಗಾಗಿ ಸಂಪೂರ್ಣ ಕೊಡುಗೆ, ಬೇಷರತ್ತಾದ ಹೃದಯಪೂರ್ವಕ ಕೊಡುಗೆ

ನೀಡಿದ ತಕ್ಷಣವೇ ಅದು ಹಿಂದುಧರ್ಮದ ರಕ್ಷಣೆಯ ಕಡೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಹಿಂದುಗಳು

ಅರ್ಥಮಾಡಿಕೊಳ್ಳಲಿ.” .(ಕಲೆಕ್ಟೆಡ್‌ವರ್ಕ್ಸ್‌ ಆಫ್‌ಮಹಾತ್ಮಾ ಗಾಂಧಿ ಸಂಪುಟ ೨೩, ಏಪ್ರಿಲ್‌೬, ೧೯೨೧- ೨೧ ಜುಲೈ, ೧೯೨೧,

ಪು೧. ೨೩)

[Let Hindus and Mussulmans understand firmly that the cornerstone of swaraj, the cornerstone
of the freedom of India is Hindu and Muslim unity. Let both understand that the defence of
Islam with reference to the Khilafat through the power of India is only possible if Hindu-
Muslim unity becomes a living factor in their life. Let Hindus understand that their full
contribution, their unconditional hearty contribution to the defence of Islam automatically
carries with it the defence of Hinduism itself.( CWMG VOL. 23 : 6 APRIL, 1921 - 21 JULY, 1921,
pp.13).]

ಸ್ವರಾಜ್ಯಕ್ಕೂ ಖಿಲಾಫತ್ತಿಗೂ ಏನು ಸಂಬಂಧ? ಭಾರತವನ್ನು ಆಳುತ್ತಿರುವವರು ಬ್ರಿಟಿಷರು. ಅವರು ಟರ್ಕಿಯಲ್ಲಿ ಇಸ್ಲಾಮಿನ

ಪ್ರತಿನಿಧಿಗಳಾದ ಖಲೀಫರನ್ನು ಕಿತ್ತು ಹಾಕಿದರೆ ಗಾಂಧಿಯವರಿಗೆ ಏನು ಆಗಬೇಕಿತ್ತು? ಒಂದು ವೇಳೆ ಅದು ಅವರ ಸ್ವಂತದ

ನಿಲುವಾಗಿದ್ದರೆ ಅದನ್ನು ಭಾರತದ ಸ್ವರಾಜ್ಯಕ್ಕೆ ಆಂದೋಲನಕ್ಕೆ, ಅಸಹಕಾರ ಚಳವಳಿಗೆ ತಂದು ಪೋಣಿಸುವ ಅಗತ್ಯವೇನಿತ್ತು?

ಇಷ್ಟಕ್ಕೂ ಭಾರತದಲ್ಲಿ ನೆಲೆಸಿದ್ದ ವಿಶ್ವ ಇಸ್ಲಾಂ ಬಂಧುತ್ವದ (ಪ್ಯಾನ್‌ಇಸ್ಲಾಮಿಸಂ) ಮುಖಂಡರಿಂದ ೧೯೧೯-೧೯೪೭ರವರೆಗೆ

ಭಾರತದ ಬಿಡುಗಡೆಗೆ ಯಾವ ರೀತಿಯ ಕೊಡುಗೆ ದೊರೆಯಿತು? ಉಳಿದ ಇತಿಹಾಸಕಾರರು ಶಂಕರನ್‌ನಾಯರ್‌, ಡಾ.

ಅಂಬೇಡ್ಕರ್‌, ಆನಿ ಬೆಸೆಂಟ್‌ಅವರಂತೆ ಯೋಚಿಸಿ, ಸ್ವಂತದ ದೃಷ್ಟಿಕೋನ ದಾಖಲಿಸುವ ಪರಿಸ್ಥಿತಿ ವಿಶ್ವವಿದ್ಯಾನಿಲಯಗಳಲ್ಲಿ

ಈಗಲೂ ಇಲ್ಲ. ಆದರೆ ಯೂಟ್ಯೂಬ್‌, ಟ್ವಿಟ್ಟರ್‌ಮುಂತಾದ ಮುಕ್ತ ವೇದಿಕೆಗಳಲ್ಲಿ ಅನೇಕರು ಈಗಾಗಗಲೆ ಖಿಲಾಫತ್‌, ಮೋಪ್ಲಾ

ಹತ್ಯಾಕಾಂಡದ ಬಗ್ಗೆ ತಮ್ಮ ಅರಿವನ್ನು ಹಂಚಿಕೊಂಡಿದ್ದಾರೆ.

ಕನ್ನಡಕ್ಕೆ ಇದೇ ಮೊದಲ ಸಲ ʼ ಗಾಂಧಿ ಮತ್ತು ಅರಾಜಕತೆʼ ಅನುವಾದವಾಗುತ್ತಿದೆ. ಇದರಲ್ಲಿ ಇರುವ ಅನುಬಂಧಗಳಲ್ಲಿ ಆಯ್ದ

ಮುಖ್ಯ ಅನುಬಂಧಗಳನ್ನು ಕೊಡಲಾಗಿದೆ. ಸ್ವತಃ ಕಾಂಗ್ರೆಸ್‌ಅಧ್ಯಕ್ಷರಾಗಿದ್ದವರು, ಬ್ರಿಟಿಷ್‌ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದವರು,

ಜಲಿಯನ್‌ವಾಲಾ ಬಾಗ್‌ಹತ್ಯಾಕಾಂಡದ ನಂತರ ಉದ್ಯೋಗಕ್ಕೆ ರಾಜೀನಾಮೆ ನೀಡಿದವರು ಸರ್‌. ಶಂಕರನ್‌ನಾಯರ್‌ಅವರು.

ಗಾಂಧಿಯವರನ್ನು ನೇರವಾಗಿ ಆಧಾರಸಹಿತ ಟೀಕಿಸಿದ್ದ ಕಾರಣಕ್ಕೆ ಸ್ವಾತಂತ್ರ್ಯ ಚಳವಳಿ ಸಮಯದಲ್ಲಿ ನಡೆದ ಹಿಂದು

ಹತ್ಯಾಕಾಂಡದ ಕಥನ ಮಾರ್ಕ್ಸ್‌, ಲೆನಿನ್‌, ಮಾವೋ, ಸ್ವಘೋಷಿತ ಅಹಿಂಸಾವಾದಿ ಚರಿತ್ರೆಕಾರರ ಗ್ರಂಥಗಳಲ್ಲಿ ಬರಲಿಲ್ಲ.

ಬಂದರೂ ಅದು ಅತೃಪ್ತ ರೈತಾಪಿ ವರ್ಗದ ಆಕ್ರೋಶದ ಮಾಮೂಲಿ ಕಮ್ಯುನಿಸ್ಟ್‌ಕಾರ್ಮಿಕ ಚಳವಳಿಯ ಕಥನದ ಭಾಗವಾಗಿ

ಬಂದಿತು. ಕನ್ನಡದ ಸ್ವಘೋಷಿತ ಲೋಹಿಯಾವಾದಿ-ಗಾಂಧಿವಾದಿಗಳು ಈಗಲೂ ಇದನ್ನೇ ಹೇಳುತ್ತಾರೆ.

ದೇಶದಲ್ಲಿ ಹಿಂದುಗಳ ಮೇಲಿನ ಹಿಂಸಾಚಾರದ ಅನೇಕ ವರದಿಗಳು ಅನೇಕ ವೇಳೆ ಪತ್ರಿಕೆಗಳಲ್ಲಿ , ಟಿವಿ ಮಾಧ್ಯಮಗಳಲ್ಲಿ

ವರದಿಯಾಗಿವೆ. ಹಿಂದು ಸಮಾಜವನ್ನು ಬೆದರಿಸುವ ಶಕ್ತಿಗಳ ಪೈಕಿ ಒಂದು ಮುಖವನ್ನು, ಅಧ್ಯಾಯವನ್ನು ಹಿಂದು ಜನತೆಯ

ಮುಂದೆ ತೆರೆದಿಡುವ ಪುಸ್ತಕ ಇದು.

ಇದು ವಂದೇ ಮಾತರಂ ಪ್ರಕಾಶನ ಸಂಸ್ಥೆಯ ಚೊಚ್ಚಲ ಕೃತಿ. ನಾನು ಇಷ್ಟಪಡುವ ಇತಿಹಾಸಕಾರ ಸೀತಾರಾಂ ಗೋಯಲ್‌

ಅವರ ಜನ್ಮಶತಮಾನೋತ್ಸವದ ವರ್ಷದಲ್ಲಿ ಈ ಪುಸ್ತಕ ಹೊರಬರುತ್ತಿದೆ. ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿರುವ

ವಿದ್ವನ್ಮಿತ್ರ ಡಾ. ವಾಸುದೇವ ಮೂರ್ತಿಯವರಿಗೆ ವಂದನೆಗಳು. ಹಲವು ರೀತಿಗಳಲ್ಲಿ ಈ ಕೆಲಸದಲ್ಲಿ ನೆರವಾಗಿರುವ ಸಮೃದ್ಧ

ಸಾಹಿತ್ಯ ಪ್ರಕಾಶನ ಸಂಸ್ಥೆಯ ಮಾಲಿಕರಾದ ಲೇಖಕ ಮಿತ್ರ ಕೆ.ಆರ್‌. ಹರ್ಷ ಅವರಿಗೆ ಧನ್ಯವಾದಗಳು.ಮುಖಪುಟ ವಿನ್ಯಾಸ
ಮಾಡಿರುವ ಚಂದ್ರಕಾಂತ ಪಟ್ಟಣ ಅವರಿಗೆ ಹಾಗೂ ಪುಸ್ತಕದ ಡಿ.ಟಿ.ಪಿ. ಮಾಡಿರುವ ಗೆಳೆಯರಾದ ರಾಮಕೃಷ್ಣ ಅವರಿಗೆ

ವಂದನೆಗಳು.

-ಪ್ರಕಾಶಕರು

೧೦-೭-೨೦೨೧

You might also like