You are on page 1of 5

03. ಸಿಂಧೂ ನಾಗರಿಕತೆನೋಟ್ಸ್ - KannadaPdf.

com

ತರಗತಿ : ದ್ವಿತೀಯ ಪಿ.ಯು.ಸಿ

ವಿಷಯ : ಇತಿಹಾಸ
ಪಾಠದ ಹೆಸರು : ಸಿಂಧೂ ನಾಗರಿಕತೆ

I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :

1. ಸಿಂಧೂ ನಾಗರೀಕತೆಯ ಹಡಗು ಕಟ್ಟೆ ಎಲ್ಲಿ ಪತ್ತೆಯಾಗಿದೆ ?

ಸಿಂಧೂ ನಾಗರೀಕತೆಯ ಹಡಗು ಕಟ್ಟೆ ಲೋಥಾಲ್ ನಲ್ಲಿ ಪತ್ತೆಯಾಗಿದೆ .

2. ಸಿಂಧೂ ಜನರ ಪ್ರಧಾನ ದೇವತೆಯನ್ನು ಹೆಸರಿಸಿ .

ಸಿಂಧೂ ಜನರ ಪ್ರಧಾನ ದೇವತೆ ಮಾತೃದೇವತೆ .

3. ಭಾರತೀಯ ಪುರಾತತ್ವ ಇಲಾಖೆಯನ್ನು ಯಾವ ವರ್ಷ ಸ್ಥಾಪಿಸಲಾಯಿತು ?

1904 .

4. ಮೊಹೆಂಜೊದಾರೋ ಪದದ ಅರ್ಥವೇನು ?

ಮೊಹೆಂಜೊದಾರೋ ಎಂದರೆ ಮಡಿದವರ ದಿಬ್ಬ .

5. ಸಿಂಧೂ ನಾಗರೀಕತೆಯ ಸ್ನಾನ ಗೃಹ ಎಲ್ಲಿದೆ ?

ಸಿಂಧೂ ನಾಗರೀಕತೆಯ ಸ್ನಾನ ಗೃಹ ಮೆಹೆಂಜೋದಾರೋನಲ್ಲಿದೆ .

II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :

1 . ಸಿಂಧೂ ಜನರ ಯಾವುದಾದರೂ ಎರಡು ಆಮದು ಗಳನ್ನು ತಿಳಿಸಿ .

ಅಮೂಲ್ಯವಾದ ಹರಳುಗಳು , ತಾಮ್ರ ಮತ್ತು ತವರ

2. ಸಿಂಧೂ ಜನರ ಯಾವುದಾದರೂ ಎರಡು ರಫ್ತುಗಳನ್ನು ತಿಳಿಸಿ.

ದಂತ , ಚಿನ್ನ , ಮುತ್ತು ಮತ್ತು ಮರದ ದಿಮ್ಮಿ .

3. ಹರಪ್ಪಾ ಮತ್ತು ಮೊಹೆಂಜೊದಾರೋಗಳನ್ನು ಯಾರು ಕಂಡು ಹಿಡಿದರು ?

Download: KannadaPDF.com https://KannadaPdf.com/

03. ಸಿಂಧೂ ನಾಗರಿಕತೆನೋಟ್ಸ್ - KannadaPdf.com
ಹರಪ್ಪಾ – ಡಾ ಆರ್.ಬಿ. ದಯಾರಾಮ್ ಸಹಾನಿ ಮೆಹೆಂಜೊದಾರೋ ಡಾ ಆರ್.ಡಿ.ಬ್ಯಾನರ್ಜಿ

4. ಸಿಂಧೂ ನಾಗರೀಕತೆಯಲ್ಲಿ ಪತ್ತೆಯಾದ ಯಾವುದಾದರೂ ಎರಡು ನಗರಗಳನ್ನು ಹೆಸರಿಸಿ .

ಕಾಲಿಬಂಗನ್ , ದೋಲವಿರಾ .

5. ಸಿಂಧೂ ಜನರ ಶವ ಸಂಸ್ಕಾರ ಪದ್ಧತಿಗಳನ್ನು ತಿಳಿಸಿ .

ದಹನ ಮತ್ತು ಹೂಳುವ ಪದ್ಧತಿ ,

6. ಸಿಂಧೂ ನಾಗರೀಕತೆಯ ಅಂತ್ಯಕ್ಕೆ ಕಾರಣವಾದ ಯಾವುದಾದರೂ ಎರಡು ಕಾರಣಗಳನ್ನು ತಿಳಿಸಿ .

* ಆರ್ಯರ ಆಕ್ರಮಣ

* ಪ್ರಕೃತಿ ವಿಕೋಪ

III . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15-20 ವಾಕ್ಯಗಳಲ್ಲಿ ಉತ್ತರಿಸಿ :

1. ಸಿಂಧೂ ನಾಗರೀಕತೆಯ ನಗರ ಯೋಜನೆಯನ್ನು ವಿವರಿಸಿ .

● ಸಿಂಧೂ ನಾಗರೀಕತೆಯ ನಗರ ಯೋಜನೆ ; ಅವರು ಅತ್ಯಂತ ಉನ್ನತ , ನಾಗರೀಕ ಮತ್ತು

ಅಭಿವೃದ್ಧಿ ಹೊಂದಿದ ಜೀವನವನ್ನು ನಡೆಸುತ್ತಿದ್ದರೆಂಬುದನ್ನು ಸಾಬೀತುಪಡಿಸುತ್ತದೆ .
● ಯೋಜನಾಬದ್ದ ನಗರ ನಿರ್ಮಾಣ ಕೆಲವು ನಗರಗಳು ಪಶ್ಚಿಮಕ್ಕೆ ಎತ್ತರದ ಪೀಠದ ಮೇಲೆ
ನಿರ್ಮಿತ ಮುರದುರ್ಗ ಹೊಂದಿವೆ .
● ರಸ್ತೆಯ ಬದಿಯಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದ್ದು ಇವುಗಳು ಒಂದು ಉತ್ತಮ
ನಗರಾಡಳಿತವಿತ್ತೆಂಬುದನ್ನು ಸಾಬೀತುಪಡಿಸುತ್ತದೆ .
● ಒಳಚರಂಡಿ ವ್ಯವಸ್ಥೆ , ಇಂಗುಗುಂಡಿ , ವಿಶಾಲವಾದ ರಸ್ತೆಗಳಿಂದ ಕೂಡಿತ್ತು .
● ಪೂರ್ವಕ್ಕೆ ಜನವಸತಿ ಪ್ರದೇಶವಿದೆ . ಅವೆರಡರ ಸುತ್ತಲೂ ಇಟ್ಟಿಗೆಗಳ ಬೃಹತ್ ಗೋಡೆಯಿದೆ .
ಬೀದಿಗಳು ನೇರವಾಗಿದ್ದು , ದೀಪದ ಕಂಬಗಳು ಕಂಡುಬಂದಿವೆ .
● ಮೆಹೆಂಜೋದಾರೋವಿನಲ್ಲಿ ಸ್ನಾನದ ಕೊಳ , ಉಗ್ರಾಣಗಳು ಕಂಡುಬಂದಿವೆ .
● ಸುಟ್ಟ ಇಟ್ಟಿಗೆಗಳಿಂದ , ಮೇಲ್ದಾವಣಿ ಹೊಂದಿದ ಒಂದು ಮತ್ತು ಬಹು ಅಂತಸ್ತಿನ ಮನೆಗಳೂ
ಕಂಡುಬಂದಿವೆ

2. ಸಿಂಧೂ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ತಿಳಿಸಿರಿ .

ಸಾಮಾಜಿಕ ಪರಿಸ್ಥಿತಿ

● ಸಮಾಜದಲ್ಲಿ ವೃತ್ತಿ ಆಧಾರಿತ ವರ್ಗಗಳಾದ ಪಂಡಿತ ವರ್ಗ , ಯೋಧರು , ವ್ಯಾಪಾರಿಗಳು

ಮತ್ತು ಶ್ರಮಿಕರು ಎಂಬುದಾಗಿದ್ದರು .

Download: KannadaPDF.com https://KannadaPdf.com/

03. ಸಿಂಧೂ ನಾಗರಿಕತೆನೋಟ್ಸ್ - KannadaPdf.com
● ಗೋಧಿ ಪ್ರಮುಖ ಆಹಾರವಾಗಿದ್ದು , ಬಾರ್ಲಿ , ಹಣ್ಣು ತರಕಾರಿ , ಹಾಲು , ಮೀನು , ಮಾಂಸ ,
ಹಂದಿಮಾಂಸ , ಕೋಳಿ , ಆಮೆ , ಮುಂತಾದವುಗಳನ್ನು ಉಪಯೋಗಿಸುತ್ತಿದ್ದರು .
● ಉಡುಪು ಸರಳವಾಗಿದ್ದು ಹತ್ತಿ ಮತ್ತು ಉಣ್ಣೆ ಬಟ್ಟೆಗಳನ್ನು ತೊಡುತ್ತಿದ್ದರು .
● ಪುರುಷರು ಮತ್ತು ಮಹಿಳೆಯರು ಮೇಲು ಉಡುಗೆ ಮತ್ತು ಧೋತಿಯನ್ನು ಧರಿಸುತ್ತಿದ್ದರು .
● ಸ್ತ್ರೀ ಪುರುಷರಿಬ್ಬರೂ ಆಭರಣಪ್ರಿಯರಾಗಿದ್ದು ಕಿವಿಯೋಲೆ , ಕಾಲುಗೆಜ್ಜೆ , ನಡುಪಟ್ಟಿ , ನತ್ತು
ಮತ್ತು ಕಂಚಿನ ಕನ್ನಡ ಮತ್ತು ದಂತದ ಬಾಚಣಿಗೆಯನ್ನು ಉಪಯೋಗಿ ಸುತ್ತಿದ್ದರು .
● ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಜನರಿಗೆ ಹೆಚ್ಚು ಒಲವಿತ್ತು .
● ಬೇಟೆ , ಪಗಡೆ , ಮೀನು ಹಿಡಿಯುವುದು , ಚದುರಂಗ , ನೃತ್ಯ , ಸಂಗೀತ ಪ್ರಮುಖ
ಹವ್ಯಾಸಗಳಾಗಿದ್ದವು .
● ಅಲಂಕೃತ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು .
● ತಾಮ್ರ ಮತ್ತು ಕಂಚಿನ ಆಯುಧಗಳಾದ ಕೊಡಲಿ , ಭರ್ಜಿ , ಕಠಾರಿ , ಗದೆ , ಕವಣೆ ,
ಬಿಲ್ಲುಬಾಣಗಳನ ಉಪಯೋಗಿಸುತ್ತಿದ್ದರು .
● ಶವಸಂಸ್ಕಾರವನ್ನು ದಹನ ಇಲ್ಲವೇ ಹೂಳುವ ಪದ್ಧತಿಗಳ ಮೂಲಕ ನಡೆಸುತ್ತಿದ್ದರು .

ಆರ್ಥಿಕ ಸ್ಥಿತಿ :

● ಕೃಷಿ ಪ್ರಮುಖ ಕಸುಬಾಗಿದ್ದು , ಅದರೊಂದಿಗೆ ಪಶುಪಾಲನೆ ಮತ್ತು ಹೈನುಗಾರಿಕೆ ಇತ್ತು .

● ನೀರಾವರಿ ಕಲೆಯೂ ಗೊತ್ತಿತ್ತು .
● ನೂಲುವುದು , ನೇಯುವುದು , ಬಣ್ಣ ಹಾಕುವುದು , ಕುಂಬಾರಿಕೆ , ಮರಗೆಲಸ ,
ಲೋಹಕೈಗಾರಿಕೆ , ಮುಂತಾದ ಕುಶಲ ಕೈಗಾರಿಕೆಗಳು ಅಸ್ಥಿತ್ವದಲ್ಲಿದ್ದವು .
● ಸಿಂಧೂ ಜನರಿಗೆ ತೂಕ ಮತ್ತು ಅಳತೆಗಳು ಗೊತ್ತಿದ್ದವು . ದಶಮಾಂಶ ಪದ್ಧತಿಯ ಜ್ಞಾನವಿತ್ತು .
● ವಸ್ತು ವಿನಿಮಯ ಪದ್ಧತಿಯ ಮೂಲಕ ವ್ಯಾಪಾರ ಚಟುವಟಿಕೆ ನಡೆಯುತ್ತಿತ್ತು .
● ದಕ್ಷಿಣ ಭಾರತ , ರಾಜಸ್ತಾನ , ಗುಜರಾತ್ ಮುಂತಾದವು ಗಳೊಂದಿಗೆ ಆಂತರಿಕ ವ್ಯಾಪಾರ
ಸಂಪರ್ಕ ಹೊಂದಿದ್ದರು .
● ದಂತ , ಚಿನ್ನ ಮತ್ತು ಮರದ ದಿಮ್ಮಿ ಮತ್ತು ಇತರ ವಸ್ತುಗಳನ್ನು ರಫ್ತು ಮಾಡುತ್ತಿದ್ದರು .
● ಅಮೂಲ್ಯ ಹರಳುಗಳು , ತಾಮ್ರ ಮತ್ತು ತವರ ಆಮದು ಮಾಡಿಕೊಳ್ಳುತ್ತಿದ್ದರು . ಆನೆ ಮತ್ತು
ಒಂಟೆಗಳನ್ನು ರಸ್ತೆ ಸಾರಿಗೆಗಾಗಿ ಉಪಯೋಗಿಸುತ್ತಿದ್ದರು .

3. ಸಿಂಧೂ ನಾಗರೀಕತೆಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

● ಸಿಂಧೂ ನಾಗರೀಕತೆಯ ನಗರ ಯೋಜನೆ ಅವರು ಅತ್ಯಂತ ಉನ್ನತ ನಾಗರೀಕ ಮತ್ತು

ಅಭಿವೃದ್ಧಿ ಹೊಂದಿದ ಜೀವನವನ್ನು ನಡೆಸುತ್ತಿದ್ದರೆಂಬುದನ್ನು ಸಾಬೀತುಪಡಿಸುತ್ತದೆ .
● ಯೋಜನಾ ಬದ್ದ ನಗರ ನಿರ್ಮಾಣ ಕೆಲವು ನಗರಗಳು ಪಶ್ಚಿಮಕ್ಕೆ ಎತ್ತರದ ಪೀಠದ ಮೇಲೆ
ನಿರ್ಮಿತ ಮುರದುರ್ಗ ಹೊಂದಿವೆ .
● ಪೂರ್ವಕ್ಕೆ ಜನವಸತಿ ಪ್ರದೇಶವಿದೆ . ಅವೆರಡರ ಸುತ್ತಲೂ ಇಟ್ಟಿಗೆಗಳ ಬೃಹತ್ ಗೋಡೆಯಿದೆ .
ಬೀದಿಗಳು ನೇರವಾಗಿದ್ದು , ದೀಪದ ಕಂಬಗಳು ಕಂಡುಬಂದಿವೆ .
● ರಸ್ತೆಯ ಬದಿಯಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದ್ದು ಇವುಗಳು ಒಂದು ಉತ್ತಮ
ನಗರಾಡಳಿತ ವಿತ್ತೆಂಬುದನ್ನು ಸಾಬೀತುಪಡಿಸುತ್ತದೆ .

Download: KannadaPDF.com https://KannadaPdf.com/

03. ಸಿಂಧೂ ನಾಗರಿಕತೆನೋಟ್ಸ್ - KannadaPdf.com
● ಒಳಚರಂಡಿ ವ್ಯವಸ್ಥೆ , ಇಂಗುಗುಂಡಿ , ವಿಶಾಲವಾದ ರಸ್ತೆಗಳಿಂದ ಕೂಡಿತ್ತು .
ಮೆಹೆಂಜೋದಾರೋವಿನಲ್ಲಿ ಸ್ನಾನದ ಕೊಳೆ , ಉಗ್ರಾಣಗಳು ಕಂಡುಬಂದಿವೆ .
● ಸುಟ್ಟ ಇಟ್ಟಿಗೆಗಳಿಂದ , ಮೇಲ್ದಾವಣಿ ಹೊಂದಿದ ಒಂದು ಮತ್ತು ಬಹು ಅಂತಸ್ತಿನ ಮನೆಗಳೂ
ಕಂಡುಬಂದಿವೆ .

ಸಾಮಾಜಿಕ ಪರಿಸ್ಥಿತಿ :

● ಸಮಾಜದಲ್ಲಿ ವೃತ್ತಿ ಆಧಾರಿತ ವರ್ಗಗಳಾದ ಪಂಡಿತ ವರ್ಗ , ಯೋಧರು , ವ್ಯಾಪಾರಿಗಳು

ಮತ್ತು ಶ್ರಮಿಕರು ಎಂಬುದಾಗಿದ್ದರು .
● ಗೋಧಿ ಪ್ರಮುಖ ಆಹಾರವಾಗಿದ್ದು , ಬಾರ್ಲಿ , ಅಕ್ಕಿ , ಹಣ್ಣು ತರಕಾರಿ , ಹಾಲು , ಮೀನು ,
ಮಾಂಸ , ಹಂದಿಮಾಂಸ , ಕೋಳಿ , ಆಮೆ , ಮುಂತಾದವುಗಳನ್ನು ಉಪಯೋಗಿಸುತ್ತಿದ್ದರು .
● ಉಡುಪು ಸರಳವಾಗಿದ್ದು ಹತ್ತಿ ಮತ್ತು ಉಣ್ಣೆ ಬಟ್ಟೆಗಳನ್ನು ತೊಡುತ್ತಿದ್ದರು .
● ಪುರುಷರು ಮತ್ತು ಮಹಿಳೆಯರು ಮೇಲು ಉಡುಗೆ ಮತ್ತು ಧೋತಿಯನ್ನು ಧರಿಸುತ್ತಿದ್ದರು .
● ಸ್ತ್ರೀ ಪುರುಷರಿಬ್ಬರೂ ಆಭರಣ ಪ್ರಿಯರಾಗಿದ್ದು ಕಿವಿಯೋಲೆ , ಕಾಲುಗೆಜ್ಜೆ , ನಡುಪಟ್ಟಿ , ನತ್ತು
ಮತ್ತು ಕಂಚಿನ ಕನ್ನಡಿ ಮತ್ತು ದಂತದ ಬಾಚಣಿಗೆಯನ್ನು ಉಪಯೋಗಿಸುತ್ತಿದ್ದರು .
● ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಜನರಿಗೆ ಹೆಚ್ಚು ಹಂಬಲವಿತ್ತು . ಬೇಟೆ , ಪಗಡೆ ,
ಮೀನು ಹಿಡಿಯುವುದು , ಚದುರಂಗ , ನೃತ್ಯ , ಸಂಗೀತ ಪ್ರಮುಖ ಹವ್ಯಾಸಗಳಾಗಿದ್ದವು .
● ಅಲಂಕೃತ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು .
● ತಾಮ್ರ ಮತ್ತು ಕಂಚಿನ ಆಯುಧಗಳಾದ ಕೊಡಲಿ , ಭರ್ಜಿ , ಕಠಾರಿ , ಗದೆ , ಕವಣೆ ,
ಬಿಲ್ಲುಬಾಣಗಳನ್ನು ಉಪಯೋಗಿಸುತ್ತಿದ್ದರು .
● ಶವಸಂಸ್ಕಾರವನ್ನು ದಹನ ಇಲ್ಲವೇ ಹೂಳುವ ಪದ್ದತಿಗಳ ಮೂಲಕ ನಡೆಸುತ್ತಿದ್ದರು .

ಆರ್ಥಿಕ ಸ್ಥಿತಿ :

● ಕೃಷಿ ಪ್ರಮುಖ ಕಸುಬಾಗಿದ್ದು , ಅದರೊಂದಿಗೆ ಪಶುಪಾಲನೆ ಮತ್ತು ಹೈನುಗಾರಿಕೆ ಇತ್ತು .

● ನೀರಾವರಿ ಕಲೆಯೂ ಗೊತ್ತಿತ್ತು .
● ನೂಲುವುದು , ನೇಯುವುದು , ಬಣ್ಣ ಹಾಕುವುದು , ಕುಂಬಾರಿಕೆ , ಮರಗೆಲಸ , ಲೋಹ ,
ಕೈಗಾರಿಕೆ , ಮುಂತಾದ ಕುಶಲ ಕೈಗಾರಿಕೆಗಳು ಅಸ್ತಿತ್ವದಲ್ಲಿದ್ದವು .
● ಸಿಂಧೂ ಜನರಿಗೆ ತೂಕ ಮತ್ತು ಅಳತೆಗಳು ಗೊತ್ತಿದ್ದವು . ದಶಮಾಂಶ ಪದ್ಧತಿಯ ಜ್ಞಾನವಿತ್ತು .
● ವಸ್ತು ವಿನಿಮಯ ಪದ್ಧತಿಯ ಮೂಲಕ ವ್ಯಾಪಾರ ಚಟುವಟಿಕೆ ನಡೆಯುತ್ತಿತ್ತು .
● ದಕ್ಷಿಣ ಭಾರತ , ರಾಜಸ್ತಾನ , ಗುಜರಾತ್ ಮುಂತಾದವು ಗಳೊಂದಿಗೆ ಆಂತರಿಕ ವ್ಯಾಪಾರ
ಸಂಪರ್ಕ ಹೊಂದಿದ್ದರು .
● ದಂತ , ಚಿನ್ನ ಮತ್ತು ಮರದ ದಿಮ್ಮಿ ಮತ್ತು ಇತರ ವಸ್ತುಗಳನ್ನು ರಫ್ತು ಮಾಡುತ್ತಿದ್ದರು .
● ಅಮೂಲ್ಯ ಹರಳುಗಳು , ತಾಮ್ರ ಮತ್ತು ತವರ ಆಮದು ಮಾಡಿಕೊಳ್ಳುತ್ತಿದ್ದರು .
● ಆನೆ ಮತ್ತು ಒಂಟೆಗಳನ್ನು ರಸ್ತೆ ಸಾರಿಗೆಗಾಗಿ ಉಪಯೋಗಿಸುತ್ತಿದ್ದರು .

ಹೆಚ್ಚುವರಿ ಪ್ರಶ್ನೋತ್ತರಗಳು:
1. ಪಾಕಿಸ್ತಾನದಲ್ಲಿರುವ ಕೋಟ್‌ಡಿಜಿ ಪ್ರದೇಶವನ್ನು ಕಂಡುಹಿಡಿದವರು ಯಾರು ?

Download: KannadaPDF.com https://KannadaPdf.com/

03. ಸಿಂಧೂ ನಾಗರಿಕತೆನೋಟ್ಸ್ - KannadaPdf.com
ಎಫ್.ಎ.ಖಾನ್ .

2. ಸುಮಾರು 5000 ವರ್ಷಗಳಿಂದ ನಿಸರ್ಗದ ಹೊಡೆತವನ್ನು ಎದುರಿಸಿ ಉಳಿದಿರುವ ಹರಪ್ಪ

ನಾಗರೀಕತೆಯ ಕುರುಹು ಯಾವುದು ?

ಮೊಹೇಂಜುದಾರೋವಿನ ಸ್ನಾನದ ಕೊಳ .

3 . ಸಿಂಧೂ ನಾಗರೀಕತೆ ಪ್ರಪಂಚದ ಇತರೆ ಯಾವ ನಾಗರೀಕತೆಗಳ ಸಮಕಾಲೀನ

ನಾಗರೀಕತೆಯಾಗಿದೆ ?

ಈಜಿಪ್ಟ್ , ಮೆಸಪಟೋಮಿಯಾ ಮತ್ತು ಚೀನಾ ನಾಗರೀಕತೆಗಳ ಸಮಕಾಲೀನ ನಾಗರೀಕತೆಯಾಗಿದೆ .

4.’ ಬನವಲಿ ‘ ಯಾವ ರಾಜ್ಯದಲ್ಲಿದೆ ?

ಹರಿಯಾಣ

5. ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಿರುವ ವೇದಿಕೆ ಎಲ್ಲಿ ಕಂಡುಬಂದಿದೆ ?

ಹರಪ್ಪಾ ಮತ್ತು ಕಾಲಿಬಂಗನ್‌ಗಳಲ್ಲಿ ,

Download: KannadaPDF.com https://KannadaPdf.com/

You might also like