You are on page 1of 17

06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.

com

ತರಗತಿ : ದ್ವಿತೀಯ ಪಿ.ಯು.ಸಿ


ವಿಷಯ : ಸಮಾಜಶಾಸ್ತ್ರ
ಪಾಠದ ಹೆಸರು : ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು

I. ಒಂದು ಅಂಕದ ಪ್ರಶ್ನೆಗಳು :


1. ವೆಲ್ತ್ಆಫ್ ನೇಷನ್ಸ್ ಕೃತಿಯ ಲೇಖಕ ಯಾರು ?

‘ ದ ವೆಲ್ತ್ ಆಫ್ ನೇಷನ್ಸ್ ‘ ಕೃತಿಯ ಲೇಖಕ ಆಡಮ್ ಸ್ಮಿತ್ . ಈ ಕೃತಿಯಲ್ಲಿ ಅಂದಿನ ಕಾಲದ
ಮಾರುಕಟ್ಟೆಯ ಆರ್ಥಿಕ ವ್ಯವಸ್ಥೆಯ ಸಂರಚನೆಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದರು .

2. ತಟಸ್ಥನೀತಿಯ ಮತ್ತೊಂದು ಹೆಸರೇನು ?

ತಟಸ್ಥನೀತಿಯ ಮತ್ತೊಂದು ಹೆಸರು ‘ ನಿಶ್ಚಿಯಾತ್ಮಕ ಕ್ರಿಯೆ ‘ , Affirmative Action . ಈ ಪದವನ್ನು


ಮೊದಲ ಬಾರಿಗೆ ಅಮೇರಿಕೆಯ ಅಧ್ಯಕ್ಷರಾಗಿದ್ದ ಜಾನ್ . ಎಫ್ . ಕೆನಡಿ ಜನಾಂಗೀಯ ತಾರತಮ್ಯದ
ವಿರುದ್ಧ ಹೋರಾಡಲು ಹೊರಡಿಸಿದ್ದ ಆಜ್ಞೆಯಲ್ಲಿ ಬಳಸಲಾಗಿತ್ತು . ತಾರತಮ್ಯ ಅಥವಾ ಅನ್ಯಾಯ ಅಥವಾ
ಶೋಷಣೆಗೊಳಗಾದವರಿಗೆ ಪರಿಹಾರ ಒದಗಿಸುವುದೇ ನಿಶ್ಚಯಾತ್ಮಕ ಕ್ರಿಯೆಯ ರೂಪವಾಗಿದೆ .

3. WWW . ಏನನ್ನು ಸೂಚಿಸುತ್ತದೆ .

WWW . ಎಂಬುದು ವರ್ಲ್ಡ್ ವೈಡ್ ವೆಬ್‌ನ್ನು ಸೂಚಿಸುತ್ತದೆ .

4. World Wide Web ಕಂಡುಹಿಡಿದವರು ಯಾರು ?

World Wide Web ನ್ನು ಎಂದರೆ ವರ್ಲ್ಡ್ ವೈಡ್ ವೆಬ್ ಸರ್ವರ್ ಮತ್ತು ಬೋಸರ್‌ನ್ನು ಟೀಮ್ ಬೆನ್ನರ್
ಲೀ Tim Berne’s Lee 1990 ರಲ್ಲಿ ಸೃಷ್ಟಿಸಿದರು . 1991 ರಲ್ಲಿ ಇದನ್ನು ವಾಣಿಜ್ಯ ಉಪಯೋಗಕ್ಕೆ
ಬಳಸಲಾಯಿತು .

5. ಯಾವ ವರ್ಷ ಕರಾಚಿ ನಿರ್ಣಯ ಮಾಡಲಾಯಿತು ?

ಕರಾಚಿ ನಿರ್ಣಯವನ್ನು 1931 ರಲ್ಲಿ ಘೋಷಿಸಲಾಯಿತು .

6. ಭಾರತ ಪ್ರಜಾಪ್ರಭುತ್ವ ಯಾವುದಾದರು ಎರಡು ಪ್ರಧಾನ ಮೌಲ್ಯಗಳನ್ನು ತಿಳಿಸಿರಿ ?

ಭಾರತದ ಪ್ರಜಾಪ್ರಭುತ್ವದ ಎರಡು ಪ್ರಧಾನ ಮೌಲ್ಯಗಳು ಸಮಾನತೆ ಮತ್ತು ಸ್ವಾತಂತ್ರ್ಯ

7. TRP ಯನ್ನು ವಿಸ್ತರಿಸಿ ?

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

TRP ಎಂದರೆ Television Rating Point ಯಾವ ಕಾರ್ಯ ಕ್ರಮಗಳನ್ನು ಹೆಚ್ಚು ವೀಕ್ಷಣೆ ಮಾಡುತ್ತಾರೆ
ಎಂದು ಅಳತೆ ಮಾಡುವ ವಿಧಾನವನ್ನು ದೂರದರ್ಶನ ಅಳತೆಯ ಬಿಂದು ಎಂದು ಕರೆಯುತ್ತಾರೆ .

8 . ಭಾರತದ ಎರಡು ವ್ಯಾಪಾರಿ ಸಮುದಾಯಗಳನ್ನು ತಿಳಿಸಿ ?

ಎರಡು ವ್ಯಾಪಾರಿ ಸಮುದಾಯಗಳು ನಗರ್ತಕರು ಮತ್ತು ಉತ್ತರ ಭಾರತದ ಭಾರತದ ತಮಿಳುನಾಡಿನ


ಬನಿಯ ಎಂಬ ವೈಶ್ಯರ ಸಮೂಹ .

9. ಪ್ರಜಾಪ್ರಭುತ್ವ ಎಂದರೇನು ?

ಪ್ರಜಾಪ್ರಭುತ್ವ ಎಂದರೆ ಜನರಿಂದ , ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ಸರ್ಕಾರದ


ವ್ಯವಸ್ಥೆಯಾಗಿರುತ್ತದೆ.

10. ಏಷ್ಯನ್ ಡ್ರಾಮಾ ಗ್ರಂಥದ ಕತೃ ಯಾರು ?

ಏಷ್ಯನ್ ಡ್ರಾಮಾ Asian Drama ಗ್ರಂಥವನ್ನು ಗುನ್ನರ್ ಮಿರ್ಡಲ್ ‘ ಎಂಬ ಸ್ವೀಡನ್ನಿನ ಅರ್ಥಶಾಸ್ತ್ರಜ್ಞ
ಮತ್ತು ಸಮಾಜ ಶಾಸ್ತ್ರಜ್ಞನು ರಚಿಸಿದ ಕೃತಿ .

II . ಎರಡು ಅಂಕದ ಪ್ರಶ್ನೆಗಳು


11. ಮಾರುಕಟ್ಟೆ ಎಂದರೇನು ?

ಮಾರುಕಟ್ಟೆ ಎಂಬುದು ಒಂದು ವ್ಯವಸ್ಥೆಯಾಗಿ ಸರಕು ಮತ್ತು ಸೇವೆಗಳ ವಿನಿಮಯವಾಗಿದೆ . ವಿವಿಧ


ವ್ಯವಸ್ಥೆಗಳು , ಸಂಸ್ಥೆಗಳು , ನಿಯಮ ಮತ್ತು ಸಂಬಂಧಗಳು ಮತ್ತು ಮೂಲಭೂತ ಪರಿಕರಗಳು
ಮಾರುಕಟ್ಟೆಯಲ್ಲಿ ಸೇರಿರುತ್ತವೆ . ಸಮಾಜಶಾಸ್ತ್ರದಲ್ಲಿ ಮಾರುಕಟ್ಟೆ ಎಂಬ ಪರಿಕಲ್ಪನೆಯು ಗ್ರಾಹಕರು ಮತ್ತು
ಮಾರಾಟಗಾರರು ಯಾವುದೇ ಪ್ರಕಾರದ ವಸ್ತುಗಳು , ಸೇವೆಗಳು ಮತ್ತು ಮಾಹಿತಿಗಳನ್ನು ಪರಸ್ಪರ
ವಿನಿಮಯ ಮಾಡಿಕೊಳ್ಳುವ ಸಂರಚನೆಯಾಗಿದೆ .

12. ಮಾರುಕಟ್ಟೆಯ ಎರಡು ಲಕ್ಷಣಗಳನ್ನು ತಿಳಿಸಿ ?

ಮಾರುಕಟ್ಟೆಯ ಲಕ್ಷಣಗಳು

i ) ಮಾರುಕಟ್ಟೆಯು ಒಂದು ಸ್ಥಳವಾಗಿದ್ದು ಸರಕು ಮತ್ತು ಸೇವೆಗಳ ವಿನಿಮಯವಾಗಿರುತ್ತದೆ . ಉದಾ :


ಹಣ್ಣಿನ ಮತ್ತು ದಿನಸಿ ಮಾರುಕಟ್ಟೆಗಳು .

ii ) ಮಾರುಕಟ್ಟೆಯು ಕೇವಲ ಭೌತಿಕ ಸ್ಥಳವಲ್ಲ . ಕೊಳ್ಳುವವರು ಮತ್ತು ಮಾರುವವರು ಸೇರುವ ಕೂಟ .


ಉದಾ : ಸಂತೆ

iii ) ಮಾರುಕಟ್ಟೆಯು ವ್ಯಾಪಾರ ಅಥವಾ ವ್ಯವಹಾರವಾಗಿದೆ ಉದಾ : ಕಾರು , ಸಿದ್ದಉಡುಪುಗಳು- ಹೀಗೆ


ಅಸಂಖ್ಯಾತ ವಸ್ತುಗಳಿರುತ್ತದೆ .

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

iv ) ಆರ್ಥಿಕ ಮತ್ತು ಸಾಂಸ್ಥಿಕ ಚಟುವಟಿಕೆಗಳೂ ಮಾರುಕಟ್ಟೆಯ ಕೇಂದ್ರ ಬಿಂದುವಾಗಿರುತ್ತದೆ .


ಮಾರುಕಟ್ಟೆಯು ಆರ್ಥಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿದೆ .

13. ಅಗೋಚರ ಮಾರುಕಟ್ಟೆ ಎಂದರೇನು ?

ಅಗೋಚರ ಮಾರುಕಟ್ಟೆ , ಇದನ್ನು ವರ್ಚುಯಲ್ ಮಾರುಕಟ್ಟೆ ಎಂದೂ ಸಹ ಕರೆಯುತ್ತಾರೆ . ಇದು ದೃಷ್ಟಿಗೆ


ಗೋಚರವಾಗುವುದಿಲ್ಲ . ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಆಧಾರದಿಂದ ಮಾರುಕಟ್ಟೆ
ಪ್ರಕ್ರಿಯೆಗಳು ಆನ್ ಲೈನ್‌ನಲ್ಲಿ ಏರ್ಪಡುವ ಕ್ರಿಯೆ , ಇ – ಕಾಮರ್ಸ್ , ಆನ್‌ಲೈನ್ ಪರ್ಚೆಸ್ , ಶೇರು
ಮಾರುಕಟ್ಟೆಯಲ್ಲಿ ಆನ್‌ಲೈನ್ ಮಾರ್ಕೆಟಿಂಗ್ ಇತ್ಯಾದಿಗಳು ಅಂತರ್ಜಾಲದ ಮೂಲಕ ಮಾರುಕಟ್ಟೆಯ
ಕಾರ್ಯಾಚರಣೆ ಪರಿವರ್ತನೆಗೊಂಡಿದೆ . ಇಲ್ಲಿ ಮಾರಾಟಗಾರನಿಗಿಂತ ಗ್ರಾಹಕರೇ ಸಾರ್ವಭೌಮರು , ‌

14. ಯಾವುದಾದರೂ ಎರಡು ಆನ್ – ಲೈನ್ ಶಾಪಿಂಗ್ ತಾಣಗಳನ್ನು ತಿಳಿಸಿ ?

ಪ್ರಸಕ್ತ ಭಾರತವು ಜಾಗತಿಕ ಮಾರುಕಟ್ಟೆಯಿಂದಾಗಿ ಜಾಗತಿಕ ಗ್ರಾಮವಾಗಿದೆ . ಮಾಹಿತಿ ತಂತ್ರಜ್ಞಾನದ


ಪ್ರಗತಿಯಿಂದಾಗಿ ಇಂಟರ್ ನೆಟ್ ಸೌಲಭ್ಯಗಳನ್ನು ವ್ಯಾಪಕವಾಗಿ ಆನ್ – ಲೈನ್ ಮೂಲಕ ವಸ್ತುಗಳ
ಮಾರಾಟ ವಾಗುತ್ತಿವೆ . ಭಾರತದಲ್ಲಿ ನೂರಾರು ಆನ್ – ಲೈನ್ ಶಾಪಿಂಗ್ ತಾಣಗಳಿವೆ . ಅವುಗಳಲ್ಲಿ
ಪ್ರಮುಖವಾದುದು ಸ್ಲಿಪ್ ಡಾಟ್ e Bay . in ಕಾಮ್ ಇ.ಬೇ.ಇನ್ ಮತ್ತು ಮೈನ್‌ತ್ರಾ , ಕಾಮ್ .
ಇತ್ಯಾದಿಗಳು .

15. ಸಾಮಾಜಿಕ ಸಂಪರ್ಕ ತಾಣ ಎಂದರೇನು ?

ಸಾಮಾಜಿಕ ಸಂಪರ್ಕ ತಾಣಗಳು ಎಂದರೆ Social Networking Sites ಈ ಸಾಮಾಜಿಕ ಸಂಪರ್ಕ


ತಾಣಗಳು ಎಸ್.ಎನ್.ಎಸ್ . ಆನ್‌ಲೈನ್ ಅಥವಾ ಅಗೋಚರ ವೇದಿಕೆಗಳಾಗಿ , ಸಾಮಾನ್ಯ ಆಸಕ್ತಿಗಳನ್ನು
ಹಂಚಿಕೊಳ್ಳುವ ಅಂತರ್ಜಾಲ ತಾಣಗಳಾಗಿವೆ . ಇವುಗಳು ಒಂದು ರೀತಿಯ ಅಗೋಚರ
ಸಮುದಾಯಗಳಾಗಿ Virtual Community ಅತ್ಯಂತ ಜನಪ್ರಿಯ ಸಂಪರ್ಕ ವೇದಿಕೆಗಳಾಗಿವೆ .
ಸಾಮಾಜಿಕ ಸಂಪರ್ಕ ತಾಣಗಳು ಸಂಪರ್ಕ , ಮನರಂಜನೆ , ಮಾಹಿತಿಯ ತಾಣ , ಫೇಸ್‌ಬುಕ್‌,
ಆರ್‌ಕೂಟ್ , ಗೂಗಲ್‌ಪ್ಲಸ್ ಇತ್ಯಾದಿ ಗಳ ಸಂಪರ್ಕ ತಾಣವಾಗಿದೆ .

16. ಮ್ಯಾಕ್‌ಡೋನಾಲೀಕರಣ ಎಂದರೇನು ?

ಮ್ಯಾಕ್‌ಡೋನಾಲೀಕರಣ ಎಂದರೆ ಅಮೇರಿಕಾ ಸಮಾಜಶಾಸ್ತ್ರಜ್ಞ ಜಾರ್ಜ್ ರಿಟ್‌ರ್ಜ ಕೈಗಾರಿಕಾ ದೇಶದಲ್ಲಿ


ನಡೆಯುವ ಆರ್ಥಿಕ ಚಟುವಟಿಕೆಗಳು ಎಂದು ವಿವರಿಸಿದ್ದಾರೆ ಈ ಪ್ರಕ್ರಿಯೆಗೆ ಮ್ಯಾಕ್‌ಡೋನಾಲ್ಡ್ ಎಂಬ
ಅಲಂಕಾರಿಕ ಪದವನ್ನು ಬಳಸುತ್ತಾರೆ ಎಂದರೆ ಸಮಾಜ ಮ್ಯಾಕ್‌ಡೋನಾಲೀಕರಣವಾಗುತ್ತಿದೆ ಎಂದು
ವಿಶ್ಲೇಷಿಸಿದ್ದಾರೆ . ಅಮೇರಿಕ ಮತ್ತು ಇತರೇ ರಾಷ್ಟ್ರಗಳಲ್ಲಿ ಶೀಘ್ರ ಆಹಾರ Fast food ವಿತರಿಸುವ
ಹೋಟೆಲ್‌ಗಳ ತಂತ್ರಗಾರಿಕೆಗಳು ಬೇರೆ ಬೇರೆ ವಲಯಗಳಿಗೆ ವಿಸ್ತರಿಸಿ ಪ್ರಾಬಲ್ಯವನ್ನು ಸಾಧಿಸುತ್ತಿದೆ .

17. ಜಾರ್ಜ್‌ರಿಟೈರ್ ಬಳಸಿದ ಮ್ಯಾಕ್‌ಡೋನಾಲ್ಡ್ ಕಂಪನಿಯ ನಿಯಮಗಳನ್ನು ತಿಳಿಸಿ ?

ಅಮೇರಿಕಾದ ಸಮಾಜಶಾಸ್ತ್ರಜ್ಞ ಜಾರ್ಜ್ ರಿಟ್ಟರ್ George Ritzer ಮೆಕಾಡೋನಾಲ್ಡ್ ಕೈಗಾರಿಕಾ


ಸಮಾಜಗಳಲ್ಲಿ ವೈವಿಧ್ಯಮಯ ರೀತಿಯಲ್ಲಿ ಮಾರ್ಪಾಡುಗಳನ್ನು ಪ್ರಕ್ರಿಯೆಗಳು ನಿರ್ಮಾಣ ಮಾಡುತ್ತಿವೆ .

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

ಎಂದು ವಾದಿಸುತ್ತಾರೆ . ಇವರ ಪ್ರಕಾರ ನಾಲ್ಕು ಮಾರ್ಗದರ್ಶಕ ತತ್ವಗಳು ಅಥವಾ ಕಂಪನಿಯ


ನಿಯಮಗಳು ಹೀಗಿವೆ .

i ) ದಕ್ಷತೆ – Officiency

ii ) ಲೆಕ್ಕಾಚಾರ – Calculability

iii) ಸಮರೂಪತೆ – Uniformity

iv ) ಸ್ವಯಂ ಚಾಲನೆ ಮೂಲಕ ನಿಯಂತ್ರಣ – Control through automation

18. ಅಂತರ್‌ಜಾಲ ಎಂದರೇನು ?

ಅಂತರ್‌ಜಾಲ ಎಂದರೆ Internet ಅಂತರ್ಜಾಲವು ಗಣಕಯಂತ್ರದ ಮೂಲಕ ಲಕ್ಷಾಂತರ ಖಾಸಗಿ ,


ಸಾರ್ವಜನಿಕ ಶೈಕ್ಷಣಿಕ , ವ್ಯವಹಾರಿಕ ಮುಂತಾದ ಸಂಗತಿಗಳನ್ನು ಮಾಹಿತಿ ತಂತ್ರಜ್ಞಾನದ ಮೂಲಕ
ಜಾಗತಿಕ ಮಟ್ಟದಲ್ಲಿ ಸಂಪರ್ಕ ಬೆಸೆಯುವ ವ್ಯವಸ್ಥೆಗೆ ಅಂತರ್ಜಾಲ ಎನ್ನುವರು . ಸರಳವಾಗಿ
ಹೇಳುವುದಾದರೆ ಅಂತರ್ಜಾಲ ಎಂದರೆ ಸಂಪರ್ಕಗಳ OF Netwrok in a Network of Net
Works .

19. ರಾಜಕೀಯ ಸಂಸ್ಥೆಗಳನ್ನು ವ್ಯಾಖ್ಯಾನಿಸಿ

ರಾಜಕೀಯ ಸಂಸ್ಥೆ ಒಂದು ಸಂಘಟನೆಯಾಗಿ ನಿರ್ದಿಷ್ಟ ವಿಧಾನಗಳ ಮೂಲಕ ಅಧಿಕಾರವನ್ನು


ಚಲಾಯಿಸುವ ವ್ಯವಸ್ಥೆಯಾಗಿದೆ . ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಲ್ಲಿ ನೆಲೆಸಿರುವ
ಜನಸಮೂಹದ ಮೇಲೆ ಆಳ್ವಿಕೆ ನಡೆಸುವ ಸಾಮರ್ಥ್ಯ ಹೊಂದಿರುವ ವ್ಯವಸ್ಥೆಯಾಗಿದೆ .

20. ಸಮೂಹ ಮಾದ್ಯಮ ಎಂದರೇನು ?

ಸಮೂಹ ಮಾಧ್ಯಮ ಎಂದರೆ ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಮಾಹಿತಿ ತಲುಪಿಸುವ ಸಂವಹನ
ವ್ಯವಸ್ಥೆ ಎನ್ನಬಹುದು . ಸಮೂಹ ಮಾಧ್ಯಮದ ಪ್ರಕಾರಗಳು ಎರಡು . ಅವು

i ) ಮುದ್ರಣ ಮಾಧ್ಯಮ : ದಿನಪತ್ರಿಕೆಗಳು , ವಾರಪತ್ರಿಕೆಗಳು , ಮ್ಯಾಗ್‌ಜೈನ್‌ಗಳು ಇತ್ಯಾದಿ .

ii ) ವಿದ್ಯುನ್ಮಾನ ಮಾಧ್ಯಮ : ರೇಡಿಯೋ , ಟಿ.ವಿ. ಅಂತರ್ಜಾಲಗಳು , ಸಾಮಾಜಿಕ ಸುರಕ್ಷತಾಗಳು .

III . ಐದು ಅಂಕದ ಪ್ರಶ್ನೆಗಳು


21. ಕನ್ನಡದ ಐದು ವಾರ್ತಾವಾಹಿನಿಗಳನ್ನು ಬರೆಯಿರಿ .

ರಾಜ್ಯಗಳಲ್ಲಿ ಕರ್ನಾಟಕವೂ ಒಂದು . ಉದಯ ವಾರ್ತೆಗಳು ಕನ್ನಡದ ಮೊದಲ ಖಾಸಗಿ ವಾರ್ತಾವಾಹಿನಿ


ಪ್ರಸ್ತುತ ಕನ್ನಡದಲ್ಲಿ ಉದಯ , ಈಟಿವಿ , ರಾಜ್ ನ್ಯೂಸ್ ಟಿ.ವಿ ವಾರ್ತೆಗಳನ್ನು ಬಿತ್ತರಿಸುತ್ತಿವೆ .

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

i ) ಟಿ.ವಿ-9

ii) ಸುವರ್ಣ ವಾರ್ತೆಗಳು

iii ) ಕಸ್ತೂರಿ ವಾರ್ತೆಗಳು

iv ) ಸಮಯ ವಾರ್ತೆಗಳು

v ) ಜನಶ್ರೀ ವಾರ್ತೆಗಳು

ಕನ್ನಡ ಭಾಷೆಯ ಚಾನೆಲ್‌ಗಳು ಹಲವಾರು . ಮೊಟ್ಟಮೊದಲು ದೂರದರ್ಶನವು 1959 ರ ಸೆಪ್ಟೆಂಬರ್‌ನಲ್ಲಿ


ಕೃಷಿ ದರ್ಶನ ಕಾರ್ಯಕ್ರಮವನ್ನು ಪ್ರಸಾರ ಮಾಡಿತು . ಈ ರೀತಿ ದೂರದರ್ಶನವು ಸಾರ್ವಜನಿಕ
ವಾಹಿನಿಯಾಯಿತು . ಡಿ.ಡಿ. ಚಂದನ ಕನ್ನಡ ಭಾಷೆಗೆ ಸೀಮಿತವಾಗಿರುವ ವಾಹಿನಿ , ಬಹುತೇಕ
ವಾರ್ತಾವಾಹಿನಿಗಳು ವಾರದ 24 ಗಂಟೆ ಎಂದರೆ 24×7 ವಾರ್ತೆಗಳನ್ನು ಪ್ರಸಾರ ಮಾಡುತ್ತಲೇ
ಇರುತ್ತಾರೆ .

ವಾರ್ತೆಗಳು ನೇರ ಮತ್ತು ಅನೌಪಚಾರಿಕವಾಗಿರುತ್ತದೆ ವಾರ್ತೆಗಳು ಸಾರ್ವಜನಿಕ ಚರ್ಚೆಯ ಮೂಲಕ


ಹೆಚ್ಚು ಜನರನ್ನು ತಲುಪುತ್ತದೆ . ಕನ್ನಡ ಭಾಷೆಯಲ್ಲಿ ಹಲವು ಚಾನೆಲ್‌ಗಳು ನಿರಂತರ ಸುದ್ದಿಯನ್ನು
ಭಿತ್ತರಿಸುತ್ತಿರುತ್ತದೆ . ಪ್ರಪಂಚದಾದ್ಯಂತ ನಡೆಯುವ ವಿಷಯಗಳ ಕೇಳಲು , ತಿಳಿದುಕೊಳ್ಳಲು ಮತ್ತು
ನೋಡುವ ಅವಕಾಶಗಳು ಈ ವಾರ್ತಾವಾಹಿನಿಗಳಿಂದ ಲಭ್ಯವಾಗುತ್ತದೆ . 1998 ರ ನಂತರ ಖಾಸಗಿ
ಉಪಗ್ರಹ ಆಧಾರಿತ ಚಾನೆಲ್‌ಗಳ ಸಂಖ್ಯೆ ದ್ವಿಗುಣಗೊಂಡಿದೆ . 1991 ರಲ್ಲಿ ಸರ್ಕಾರಿ ಪ್ರಾಯೋಜಿತ
ಏಕೈಕ ದೂರದರ್ಶನ ವಾಹಿನಿ ಭಾರತದಲ್ಲಿತ್ತು .

ವಾರ್ತಾ ಚಾನೆಲ್‌ಗಳು ಪ್ರಾದೇಶಿಕ ಸುದ್ದಿಯಿಂದ ರಾಜ್ಯ , ರಾಷ್ಟ್ರ ಹಾಗೂ ಜಗತ್ತುಗಳ ಸುದ್ದಿಯನ್ನು


ಪ್ರಸಾರಮಾಡುತ್ತವೆ . ವಾರ್ತಾ ವಾಹಿನಿಗಳಿಂದ ನಾವು ಎಲ್ಲಾ ರೀತಿಯ ವಿಷಯಗಳ ಜ್ಞಾನವನ್ನು
ಪಡೆದುಕೊಳ್ಳಬಹುದು . ವಿದ್ಯುನ್ಮಾನ ವಾಹಿನಿಗಳಲ್ಲಿ ವಾರ್ತಾ ವಾಹಿನಿಗಳು ಸುಲಭ ಮತ್ತು ಕಡಿಮೆ
ಖರ್ಚಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತವೆ . ಈ ವಾಹಿನಿಗಳು ದೈನಂದಿನ ಜೀವನವನ್ನು
ಸಾಮಾಜೀಕರಣಗೊಳಿಸಿ , ಜೀವನಶೈಲಿ , ಸಂಬಂಧಗಳು ಮುಂತಾದವುಗಳಲ್ಲಿ ಆಸಕ್ತಿಯನ್ನು ಹುಟ್ಟು
ಹಾಕುತ್ತವೆ .

22. ವಾರದ ಸಂತೆ ( ಮಾರುಕಟ್ಟೆ)ಯನ್ನು ಸಾಮಾಜಿಕ ಸಂಸ್ಥೆಯಾಗಿ ವ್ಯಾಖ್ಯಾನಿಸಿ .

ವಾರದ ಸಂತೆಯ ಒಂದು ಸಾಮಾಜಿಕ ಸಂಸ್ಥೆ Weakly Market as a Social Institution


ಪ್ರಪಂಚದ ಎಲ್ಲಾ ಕಡೆ ಕೃಷಿ ಅಥವಾ ರೈತ ಸಮುದಾಯಕ್ಕೆ ನಿಗದಿತ ವಾರದ ಸಂತೆಯು ಸಾಮಾಜಿಕ
ಮತ್ತು ಆರ್ಥಿಕ ಸಂಘಟನೆಯ ಕೇಂದ್ರ ಬಿಂದುವಾಗಿದೆ . ಈ ವಾರದ ಸಂತೆಯು ಆಕರ್ಷಕವಾಗಿದ್ದು
ಸುತ್ತಮುತ್ತಲಿನ ಜನರನ್ನು , ನೆರೆಹೊರೆ ಗ್ರಾಮಸ್ಥರನ್ನೂ ಒಟ್ಟಿಗೆ ಸೇರಿಸುವ ವ್ಯವಸ್ಥೆಯಾಗಿದೆ . ವಾರದ
ಸಂತೆಯಲ್ಲಿ ಗ್ರಾಮಸ್ಥರು ತಾವು ಬೆಳೆದಿರುವ ವಸ್ತುಗಳನ್ನು ಮಾರಲೋಸುಗ ಹಾಗೆಯೇ ತಮಗೆ ಬೇಕಾದ
ವಸ್ತುಗಳನ್ನು ಖರೀದಿಸಲೋಸುಗ ಬರುತ್ತಾರೆ . ಸಂತೆಯಲ್ಲಿ ಅವರಿಗೆ ಅವಶ್ಯಕವಾದ ವಸ್ತುಗಳೆಲ್ಲಾ
ದೊರೆಯುತ್ತದೆ .

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

ಅಷ್ಟೇ ಅಲ್ಲ ಸಂತೆಗೆ ಲೇವಾದೇವಿದ ಮನೋರಂಜನೆಯ ಕಲಾವಿದರು , ಆಟಿಗೆ ಮತ್ತು ಪ್ರದರ್ಶನಕಾರರು ,


ಜ್ಯೋತಿಷಿಗಳು ಹಾಗೂ ವಿವಿಧ ಕುಶಲ ಕರ್ಮಿಗಳು ತಮ್ಮ ಸರಕು ಮತ್ತು ಸೇವೆಗಳನ್ನು ಮಾರಾಟ
ಆಟದಮಾಡಲು ಬರುತ್ತಾರೆ . ವಾರದ ಸಂತೆಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿಯೂ ಸರ್ವೇ
ಸಾಮಾನ್ಯವಾಗಿದೆ . ವಾರದ ಸಂತೆಗಳಿಂದ ಅನೇಕ ಪ್ರಯೋಜನಗಳುಂಟು . ಅರಣ್ಯ ಪ್ರದೇಶದ
ನಿವಾಸಿಗಳಿಗೆ ಇಂತಹ ಸಂತೆಗಳಲ್ಲೇ ಅವರಿಗೆ ಅವಶ್ಯಕವಾದ ವಸ್ತುಗಳನ್ನು ಕೊಳ್ಳುವುದು
ಸಾಧ್ಯವಾಗುತ್ತದೆ .

ಇವರಿಗೆ ಸಾಮಾಜಿಕ ಸಂಪರ್ಕ ಬೆಳೆಸಿಕೊಳ್ಳುವ ಸಾಧನ ಈ ವಾರದ ಸಂತೆಗಳು , ಸ್ಥಳೀಯರು ತಾವೇ


ತಯಾರಿಸಿದ ವಸ್ತುಗಳನ್ನು , ಅರಣ್ಯ ಉತ್ಪನ್ನಗಳನ್ನು ಮಾರುತ್ತಾರೆ . ರೈತರು ಮತ್ತು ಆದಿವಾಸಿಗಳು ಕೃಷಿ
ಸಲಕರಣೆ , ಗೃಹಬಳಕೆ ವಸ್ತುಗಳು , ಉಪ್ಪು , ಮಡಿಕೆ ಇತ್ಯಾದಿಗಳನ್ನು ಕೊಳ್ಳುತ್ತಾರೆ . ಸಾಕಷ್ಟು ಜನರು
ಸಂತೆಗೆ ಬರುವುದು ತಮಗೆ ಬೇಕಾದ ಬಂಧು – ಬಳಗದವರು , ಪರಿಚಿತರು , ಸ್ನೇಹಿತರನ್ನು ಭೇಟಿ
ಯಾಗಲು , ವಿವಾಹ ಸಂಬಂಧಗಳನ್ನು ಕುದುರಿಸಲು , ಸ್ನೇಹ ಪೂರಕ ಮಾತುಕತೆಗಾಗಿ ಹರಟೆಗಾಗಿ ಸಹ
ಬರುವರು . ಆದಿವಾಸಿ ಪ್ರದೇಶಗಳಲ್ಲಿ ವಾರದ ಸಂತೆ ಬಹಳ ಪ್ರಾಚೀನ ಸಂಸ್ಥೆಯಾಗಿದೆ . ಈ
ಆದಿವಾಸಿಗಳಿಗೆ ಬಾಹ್ಯ ಪ್ರಪಂಚದೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು ಸಹಾಯಕವಾಗಿದೆ . ವಾರದ
ಸಂತೆಗಳು ಜನರಿಗೆ ಮನರಂಜನೆ , ತೃಪ್ತಿ ಮತ್ತು ಸಮಾಧಾನಗಳನ್ನು ಕೊಡುತ್ತವೆ . ಒಂದು ಸಲ
ಅಭ್ಯಾಸವಾದ ಈ ಸಂತೆಯ ಭೇಟಿ ಇಲ್ಲದಿದ್ದರೆ ಚಡಪಡಿಸುವ ಮನಸ್ಥಿತಿ ಉಂಟಾಗುವಷ್ಟು ಇದರ ಮೇಲೆ
ಅವಲಂಬಿತ ರಾಗಿದ್ದಾರೆ ಗ್ರಾಮೀಣ ಜನರು .

23 , ಬಸ್ತರ್ ಬುಡಕಟ್ಟು ಮಾರುಕಟ್ಟೆಯ ಬಗ್ಗೆ ಟಿಪ್ಪಣಿ ಬರೆಯಿರಿ .

ಬಸ್ತರ್ ಬುಡಕಟ್ಟು ಮಾರುಕಟ್ಟೆಯು ಚತ್ತೀಸ್‌ಘಡದ ಬಸ್ತಾರ್ ಆದಿವಾಸಿಗಳ ಮಾರುಕಟ್ಟೆಯಾಗಿದೆ .


ಆಲ್‌ರ್ಫಡ್ ಗೆಲ್ Alfred Gell ಎಂಬ ಮಾನವಶಾಸ್ತ್ರಜ್ಞರು ದೊರಾಯಿ ಸಂತೆಯನ್ನು 1982 ರಲ್ಲಿ
ಅಧ್ಯಯನ ಮಾಡಿದ್ದರು . ಈ ಸಂತೆಯು ಆರ್ಥಿಕ ಕಾರ್ಯಕ್ಕಿಂತ ಹೆಚ್ಚು ಮಹತ್ವ ಪಡೆದು ಕೊಂಡಿದೆ .
ಮಾರುಕಟ್ಟೆಯ ಭೌತಿಕ ವಿನ್ಯಾಸವೂ ಸಮೂಹದ ಸಾಮಾಜಿಕ ಏಣಿಶ್ರೇಣಿಯ ಸಂಕೇತವಾಗಿದೆ .
ಸಂತೆಯಲ್ಲಿ ಜಾತಿ ಆಧಾರವಾಗಿ ಸ್ಥಳವನ್ನು ನಿಗದಿ ಗೊಳಿಸುವುದರಿಂದ ಮಾರುಕಟ್ಟೆಯಲ್ಲೂ ಜಾತಿಯ ಏಣಿ
ಶ್ರೇಣಿಗಳು ಕಂಡು ಬರುತ್ತವೆ . ಅವು ಹೀಗಿವೆ .

1. ಸಂಪದ್ಭರಿತ ಮತ್ತು ಉನ್ನತ ಶ್ರೇಣಿಯ ರಜಪೂತರು ಆಭರಣದ ವ್ಯಾಪಾರಿಗಳು ಮತ್ತು ಮಧ್ಯಶ್ರೇಣಿಯ


ಸ್ಥಳೀಯ ವ್ಯಾಪಾರಿಗಳು ಮದ್ಯವಲಯದಲ್ಲಿ ವ್ಯಾಪಾರ ಮಾಡುತ್ತಾರೆ .

2. ಆದಿವಾಸಿ ಸಮೂಹದ ತರಕಾರಿ ಮಾರಾಟಗಾರರು ಮತ್ತು ಸ್ಥಳೀಯ ಪಾತ್ರೆ ಮತ್ತು ಮಡಕೆ


ಮಾರಾಟಗಾರರು ಹೊರವಲಯ ( Outer Circle ) ದಲ್ಲಿ ವ್ಯಾಪಾರ ಮಾಡುತ್ತಾರೆ .

3. ಸಾಮಾಜಿಕ ಸಂಬಂಧಗಳ ವ್ಯಕ್ತಿ ಮಾರಾಟ ಮಾಡುವ ವಸ್ತುಗಳ ಗುಣಮಟ್ಟದ ಮೇಲೆ ಅವಲಂಬಿಸಿದೆ .


ಉದಾ : ಆದಿವಾಸಿಗಳು ಮತ್ತು ಆದಿವಾಸಿಯೇತರ ಹಿಂದೂ ವರ್ತಕರ ನಡುವೆ ಸಾಮಾಜಿಕ ಏಣಿಶ್ರೇಣಿ
ಮತ್ತು ಸಾಮಾಜಿಕ ಅಂತರಗಳು ಅಸ್ತಿತ್ವದಲ್ಲಿದ್ದು ಸಾಮಾಜಿಕ ಸಮಾನತೆ ನಗಣ್ಯವಾಗಿದೆ . ಬಸ್ಸಾರನ
ಆದಿವಾಸಿ ಗ್ರಾಮಗಳ ಮಾರುಕಟ್ಟೆ ‘ ದೋರಯಿ ‘ ಛತ್ತೀಸ್‌ಘಡದ ಉತ್ತರ ಬಸ್ತಾರ್‌ನ ದಟ್ಟ ಅರಣ್ಯ
ಪ್ರದೇಶದಲ್ಲಿದೆ .

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

ಸಂತೆಯಿಲ್ಲದ ದಿನಗಳಲ್ಲಿ ದೋರಯಿ ಪ್ರದೇಶ ಜನರಹಿತವಾಗಿರುತ್ತದೆ . ‘ ದೋರಯಿ ‘ ಶುಕ್ರವಾರ


ದಿನದಂದು ಹೊರತು ಪಡಿಸಿ ಮಿಕ್ಕುಳಿದ ದಿನಗಳಲ್ಲಿ ಜನರಹಿತವಾಗಿರುತ್ತದೆ . ಸಂತೆಯ ದಿನ ವಿಶಿಷ್ಟ
ರೂಪದಿಂದ ಕಂಗೋಳಿಸುತ್ತಿರುತ್ತದೆ . ರಸ್ತೆಯ ಬದಿಯಲ್ಲಿ ವಾಹನಗಳ ದಟ್ಟಣೆಯಿರುತ್ತದೆ . ಅರಣ್ಯಾಧಿಕಾರಿ
ಗಳು ವಿಶ್ರಾಂತಿ ಗೃಹದ ವರಾಂಡದಲ್ಲಿ ಕುಳಿತು ಎಲ್ಲರನ್ನೂ ಗಮನಿಸುತ್ತಿರುತ್ತಾರೆ . ಈ ಸಂತೆಗೆ ತರಕಾರಿ
ಮಾರುವವರು , ವಿಶೇಷ ಪರಿಣಿತಿಯ ಕುಶಲ ಕರ್ಮಿಗಳು , ಕುಂಬಾರರು , ನೇಕಾರರು , ಕಮ್ಮಾರರು
ಬರುತ್ತಾರೆ .

ಮಾರುಕಟ್ಟೆಯು ಚತುರ್ಭುಜಾಕೃತಿ ಆಕಾರದ 100 ಗಜ ವಿಸ್ತೀರ್ಣವಿರುತ್ತದೆ . ಮಧ್ಯದಲ್ಲಿ ಬೃಹದ್ದಾಕಾರದ


ಆಲದ ಮರ ಕೇಂದ್ರ ಬಿಂದುವಾಗಿದೆ . ಅಂಗಡಿಗಳು , ಗುಡಿಸಲು ಮತ್ತು ಡೇರೆಯಿಂದ ನಿರ್ಮಿಸಿದ
ಇಕ್ಕಟ್ಟಾದ ಜಾಗಗಳಲ್ಲಿ ಗ್ರಾಹಕರು ಜಾಗರೂಕತೆಯಿಂದ ಸಾಗಬೇಕು . ಸ್ಥಳಾಭಾವ ದಿಂದ ಪ್ರತಿಯೊಬ್ಬರೂ
ಎಚ್ಚರಿಕೆಯಿಂದ ಇರಬೇಕಾಗುತ್ತದೆ .

24. ಬ್ರಿಟಿಷರ ಆಳ್ವಿಕೆಯಲ್ಲಿ ಉಗಮಗೊಂಡ ವ್ಯಾಪಾರಿ ಸಮುದಾಯಗಳನ್ನು ತಿಳಿಸಿ .

ಬ್ರಿಟಿಷರ ಆಳ್ವಿಕೆಯಲ್ಲಿ ಉಗಮಗೊಂಡ ವ್ಯಾಪಾರಿ ಸಮುದಾಯಗಳು ಭಾರತಕ್ಕೆ ವಸಾಹತುಶಾಹಿ


ರಾಷ್ಟ್ರಗಳ ವ್ಯವಸ್ಥೆ ಪ್ರವೇಶಿಸಿದ್ದಂತೆ ಆರ್ಥಿಕ ಕ್ಷೇತ್ರಗಳಲ್ಲಿ ಏರುಪೇರುಗಳಾದವು . ವ್ಯಾಪಾರ ಮತ್ತು ಗೃಹ
ಕೈಗಾರಿಕೆ ಉತ್ಪಾದನೆಯಲ್ಲಿ ವಿಘಟನೆ ಗೊಂಡಿತ್ತು . ಇಂಗ್ಲೆಂಡ್‌ನಲ್ಲಿ ತಯಾರಿಸಿದ ವಸ್ತುಗಳ ಮುಂದೆ
ಭಾರತದ ಕೈಗಾರಿಕಾ ವಸ್ತುಗಳ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗದೆ , ಅನೇಕ ಕೈಗಾರಿಕೆಗಳು
ನಾಶವಾದವು . ಬ್ರಿಟಿಷರ ಆಳ್ವಿಕೆಯಲ್ಲಿ ಭಾರತವು ಕಚ್ಚಾವಸ್ತುವನ್ನು ಮಾತ್ರ ರಫ್ತು ಮಾಡುತ್ತಿತ್ತು ,
ಇಂಗ್ಲೆಂಡಿನ ಕೈಗಾರಿಕೆಗೆ ಇದು ಅನುಕೂಲ ಕರವಾಗಿತ್ತು . ಪಾಶ್ಚಿಮಾತ್ಯ ದೇಶದ ವಸ್ತುಗಳ ಮಾರಾಟ
ಮತ್ತು ವಿಸ್ತರಣೆಯಿಂದಾಗಿ ವ್ಯಾಪಾರಿ ಸಮುದಾಯಗಳಿಗೆ ಹೊಸ ಅವಕಾಶ ದೊರೆಯಿತು . ಹಲವಾರು
ವ್ಯಾಪಾರಿ ಸಮುದಾಯಗಳು ಈ ಅವಕಾಶಗಳನ್ನು ಉಪಯೋಗಿಸಿ ಕೊಂಡು ಅಸ್ತಿತ್ವಕ್ಕೆ ಬಂದರು . ಅವರಲ್ಲಿ
ಮುಖ್ಯರಾದವರು ಮಾರ್ವಾಡಿಗಳು , ಭಾರತದಲ್ಲಿ ಬಿರ್ಲಾ , ಅಂಬಾನಿ , ಲಕ್ಷ್ಮಿವಿತ್ತಲ್ ಮುಂತಾದವರು ಈ
ಸಮುದಾಯಕ್ಕೆ ಸೇರಿದವರು .

ಮಾರ್ವಾಡಿಗಳು ದೇಶ , ನಗರ , ಪಟ್ಟಣದ ಬಜಾರ್‌ಅಥವಾ ಅ೦ಗಡಿ ಮಳಿಗೆಗಳಲ್ಲಿ ಯಶಸ್ವಿ ವ್ಯಾಪಾರಿ


ಸಮುದಾಯವಾಗಿದೆ . ಕಲ್ಕತ್ತಾ , ಬಾಂಬೆ ಮತ್ತು ಇನ್ನಿತರ ನಗರಗಳಲ್ಲಿ ಮತ್ತು ದೇಶಾದ್ಯಂತ ತಮ್ಮ
ಆರ್ಥಿಕ ಅಂತರ ಜಾಲವನ್ನು ಸ್ಥಾಪಿಸಿಕೊಂಡಿದ್ದಾರೆ . ವ್ಯಾಪಾರ ಕ್ಷೇತ್ರಗಳಲ್ಲಿ ಏಕಸ್ವಾಮ್ಯತೆ ಸಾಧಿಸಿ ,
ಭಾರತದ ಎಲ್ಲಾ ಕಡೆ ಅತಿ ಶ್ರೀಮಂತ ವರ್ಗವಾಗಿ ಮಾರ್ಪಾಡುಗೊಂಡಿದ್ದಾರೆ . ಮಾರ್ವಾಡಿಗಳು ಪರಸ್ಪರ
ನಂಬಿಕೆ ಮತ್ತು ವಿಶ್ವಾಸದಿಂದ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಿಕೊಳ್ಳಲು ಬೇಕಾದ ಗುಣ – ಸ್ವಭಾವಗಳನ್ನು
ಕಲಿತಿದ್ದಾರೆ .

ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯ ವಿಸ್ತಾರವಾದಂತೆ ಮಾರ್ವಾಡಿಗಳು ದೇಶದ ಆರ್ಥಿಕ ಕ್ಷೇತ್ರದಲ್ಲಿ


ವಿಸ್ತಾರವಾಗಿ ಬೆಳೆದಿದ್ದಾರೆ . ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಮಾರ್ವಾಡಿಗಳ ಉಗಮವಾಗಿ ,
ಕಾಲಕ್ರಮೇಣ ದೇಶದ ಅತಿ ದೊಡ್ಡ ಕೈಗಾರಿಕೋದ್ಯಮಿಗಳಾಗಿ ಮಾರ್ಪಾಡುಗೊಂಡಿದ್ದಾರೆ . ಈ ರೀತಿಯ
ಬೆಳವಣಿಗೆಯು ಸಾಮಾಜಿಕ ಸಂರಚನೆಯಲ್ಲಿ ಆರ್ಥಿಕ ಪ್ರಕ್ರಿಯೆಗಳ ಪ್ರಭಾವ ಮತ್ತು ಪ್ರಾಮುಖ್ಯತೆಗೆ
ಉತ್ತಮ ನಿದರ್ಶನವಾಗಿದೆ . ಇಂದಿಗೂ ಸಹ ಮಾರವಾಡಿಗಳೇ ಭಾರತೀಯ ಉದ್ಯೋಗಗಳ ಮೇಲೆ ಹೆಚ್ಚು
ಹಿಡಿತವನ್ನು ಸಾಧಿಸಿದ್ದಾರೆ . ಅವರ ಸಾಧನೆಯು ಆರ್ಥಿಕ ಸಂಪರ್ಕ ಸಂಬಂಧ ಜಾಲಗಳು ವ್ಯಾಪಾರದಲ್ಲಿ
ಹೇಗೆ ಮಹತ್ವ ವೆಂಬುದನ್ನು ಮನಗಾಣಬಹುದು .

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

25. ಪುಷ್ಕರ್ ಜಾತ್ರೆಯ ಬಗ್ಗೆ ಟಿಪ್ಪಣಿ ಬರೆಯಿರಿ .

ಪುಷ್ಕರ್‌ಜಾತ್ರೆಯು ವಾರ್ಷಿಕವಾಗಿ ನಡೆಯುವ ಒಂಟೆ ಮತ್ತು ಜಾನುವಾರುಗಳ ಜಾತ್ರೆಯಾಗಿದೆ .


ರಾಜಾಸ್ಥಾನದಲ್ಲಿ ಮರುಭೂಮಿ ಮತ್ತು ಅಲ್ಲಿನ ಹವಾಮಾನಕ್ಕೆ ಒಗ್ಗುವಂತಹ ಪ್ರಾಣಿ ಒಂಟೆ , ರಾಜಾಸ್ಥಾನದ
ಮುಷ್ಕರ್ ಪಟ್ಟದಲ್ಲಿ ನಡೆಯುವ ಈ ಒಂಟೆಯ ಜಾತ್ರೆ ವಿಶ್ವದ ಅತ್ಯಂತ ದೊಡ್ಡ ಒಂಟೆಯ ಜಾತ್ರೆಯಾಗಿದೆ .
ಐದು ದಿನಗಳ ಕಾಲ ನಡೆಯುತ್ತದೆ . ಈ ಜಾತ್ರೆಯು ಒಂಟೆಯನ್ನು ಮಾರುವ ಹಾಗೂ ಕೊಳ್ಳುವುದರ
ಜೊತೆಗೆ ಪ್ರವಾಸಿಗರನ್ನು ಆಕರ್ಷಿಸುವ ಜಾತ್ರೆಯಾಗಿದೆ . ಈ ಜಾತ್ರೆಗೆ ಸಾವಿರಾರು ಪ್ರವಾಸಿಗಳು
ಆಗಮಿಸುತ್ತಾರೆ . ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಪುಷ್ಕರ್ ಕ್ರೀಡಾತಂಡ ವಿದೇಶಿಯ ಟೀಂನೊಂದಿಗೆ
ಕ್ರಿಕೆಟ್ ಪಂದ್ಯವನ್ನು ಏರ್ಪಡಿಸಿದ್ದರು . ಮುಷ್ಕರ್ ಸರೋವರದ ಬಳಿ ಸಾವಿರಾರು ಜನ ಸೇರುತ್ತಾರೆ . ಒಂಟೆ
, ದನ , ಮೇಕೆ ಮುಂತಾದ ಪ್ರಾಣಿಗಳ ವ್ಯಾಪಾರ ನಡೆಯುತ್ತದೆ . ಹೆಂಗಸರು ಬಳೆ , ಆಟಿಕೆ , ಬಟ್ಟೆ ,
ಆಭರಣಗಳನ್ನು ಕೊಳ್ಳಲು ಮುಗಿ ಬೀಳುತ್ತಾರೆ .

ಒಂಟೆಯ ಓಟದ ಸ್ಪರ್ಧೆ , ಸಂಗೀತ ಹಾಡು , ಪ್ರದರ್ಶನ ಕಲೆಗಳು , ಮೀಸೆ ಪ್ರದರ್ಶನ ಈ ಜಾತ್ರೆಯ
ಆಕರ್ಷಣೆ ಈ ಜಾತ್ರೆಯು ಕಾರ್ತಿಕ ಮಾಸದ ಏಕಾದಶಿಯಿಂದ ಪೌರ್ಣಿಮೆಯ ನಡುವಿನ ಐದು ದಿನಗಳ
ಕಾಲ ನಡೆಯುತ್ತದೆ . ಪೂರ್ಣಿಮೆಯ ದಿನ ಅತ್ಯಂತ ಮುಖ್ಯವಾದ ದಿನ ಪುಷ್ಕರ್ ಸರೋವರದಲ್ಲಿ ಬ್ರಹ್ಮನು
ಸ್ನಾನ ಮಾಡಿದನೆಂಬ ನಂಬಿಕೆಯಿಂದ ಅಪಾರ ಸಂಖ್ಯೆಯ ಭಕ್ತರು ಆ ದಿನ ಪವಿತ್ರ ಸ್ನಾನವನ್ನು
ಮಾಡುತ್ತಾರೆ . ಹೀಗಾಗಿ ಪುಷ್ಕರ್‌ವಾರ್ಷಿಕ ಜಾತ್ರೆಯು ಧಾರ್ಮಿಕ , ಆರ್ಥಿಕ , ಸಾಂಸ್ಕೃತಿಕ ಹಾಗೂ
ಮನೋರಂಜನೆಯನ್ನು ಒದಗಿಸುವ ಜನಪ್ರಿಯ ಜಾತ್ರೆಯಾಗಿದೆ .

26. ತಳಮಟ್ಟದ ರಾಜಕಾರಣದ ಬಗ್ಗೆ ಟಿಪ್ಪಣಿ ಬರೆಯಿರಿ .

ತಳಮಟ್ಟದ ರಾಜಕಾರಣ

ವಿವಿಧ ರಾಜ್ಯಗಳಲ್ಲಿ ತಳಮಟ್ಟದಲ್ಲಿ ನಡೆದ ರಾಜಕೀಯ ಚಟುವಟಿಕೆಗಳ ಅಧ್ಯಯನವನ್ನು ಮಾಡಲಾಗಿದೆ .


1960 ರಲ್ಲಿ ರಾಜ್ಯಮಟ್ಟದಲ್ಲಿ ತಳಮಟ್ಟದ ರಾಜಕೀಯ ಚಟುವಟಿಕೆಗಳ ಸಮಗ್ರ ಅಧ್ಯಯನ
ಮೊದಲಬಾರಿಗೆ ಬ್ರಾಸ್ ಸೀತೂ ಪ್ರದೇಶದಲ್ಲಿ ನಡೆಸಿದರು . ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳು
ಮತ್ತು ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಜಿಲ್ಲಾ ಮಟ್ಟದಲ್ಲಿ ಭದ್ರ ನೆಲೆ ಕಂಡುಕೊಂಡಿವೆ .
ಆಂತರಿಕವಾಗಿ ಹೊಂದಾಣಿಕೆ ಮಾಡಿಕೊಂಡು ಸಮಂಜನಗೊಂಡಿದೆ . ಭಾರತದಲ್ಲಿ ಸ್ವಾತಂತ್ರ್ಯ ನಂತರ
ತಳಮಟ್ಟದ ರಾಜಕೀಯ ವ್ಯವಸ್ಥೆಯಲ್ಲಿ ಏನು ಸಂಭವಿಸಿದೆ ಎಂಬುದನ್ನು ರುಡಾಲ್ಫ್ ಕೆಳಕಂಡ ಅಂಶಗಳ
ಮೂಲಕ ತಿಳಿಸಿದ್ದಾರೆ .

1. ರಾಜಕೀಯ – ಆರ್ಥಿಕ ಅಭಿವೃದ್ಧಿ ಮತ್ತು ಅವಕಾಶಗಳಲ್ಲಿ ರಾಜಕೀಕರಣದ Politicization


ಹೆಚ್ಚಳವಾಗಿದೆ .

2. ಶೈಕ್ಷಣಿಕ ಸಂಸ್ಥೆಗಳು ಪ್ರಜಾಪ್ರಭುತ್ವದ ನಿಯಂತ್ರಣದಿಂದ ರಾಜಕಾರಣದ ಮಾರ್ಗಕ್ಕೆ ಸಾಗಿದೆ .

3. ಯೋಜನೆ ಮತ್ತು ಅಭಿವೃದ್ಧಿಗಳ ನಿಯಂತ್ರಣ ಮತ್ತು ವ್ಯವಸ್ಥಾಪಕದಲ್ಲಿ ಜಾತಿ ಮತ್ತು ವರ್ಗಗಳು


ಸ್ಪರ್ಧೆಗಿಳಿದಿವೆ.

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

4. ರಾಜಕೀಯ ಪಕ್ಷಗಳು ಜಾತಿ , ವರ್ಗ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಪ್ರವೇಶಿಸಿದೆ ಮತ್ತು ಇಡೀ
ಸಂಸ್ಥೆಯನ್ನು ರಾಜಕೀಕರಣಗೊಳಿಸಿದೆ . ಇದಕ್ಕೆ ಉತ್ತಮ ನಿದರ್ಶನ ಪಂಚಾಯತ್‌ರಾಜ್‌– ಇವೆಲ್ಲಾ
ರಾಜಕೀಯ ಪಕ್ಷಗಳ ಬೆಳವಣಿಗೆಯನ್ನು ತಳಮಟ್ಟದಲ್ಲಿ ನೆಲೆಸಲು ಅವಕಾಶ ಮಾಡಿದೆ .

ಸ್ಥಳೀಯ ರಾಜಕೀಯದ ವೈಜ್ಞಾನಿಕ ಅಧ್ಯಯನದ ಮೂಲಗಳು ಗ್ರಾಮಾಧ್ಯಯನದಲ್ಲಿ ಕಂಡು ಬರುತ್ತವೆ .


1950 ರ ದಶಕದಲ್ಲಿ ಭಾರತ ಸರ್ಕಾರ ಮತ್ತು ಫೋರ್ಡ್ ಫೌಂಡೇಶನ್ ಮತ್ತು ರಾಕ್‌ಫೆಲರ್ ಫೌಂಡೇಶನ್
ಮುಂತಾದ ನಿಯೋಗಿಗಳ ಮಾರ್ಗದರ್ಶನದಲ್ಲಿ ನಡೆಯಿತು . ಎಫ್.ಜಿ. ಬೈಲಿರವರು ಒರಿಸ್ಸಾ ಗ್ರಾಮದ
ಬಿಸಿಪರ ಅಧ್ಯಯನವು ಕೆಳಜಾತಿಗಳು ಹೊಸ ಆರ್ಥಿಕ ಮತ್ತು ರಾಜಕೀಯ ಅವಕಾಶಗಳನ್ನು ಬಳಸಿಕೊಂಡು
ಅಧಿಕಾರದಲ್ಲಿತಮ್ಮ ಸಂಬಂಧಗಳನ್ನು ಹೇಗೆ ಮಾರ್ಪಡಿಸಿಕೊಂಡಿವೆ ಎಂಬುದನ್ನು ವೈಜ್ಞಾನಿಕವಾಗಿ
ವಿಶ್ಲೇಷಿಸಿದ್ದಾರೆ . ಜಾತಿಗಳು ವರ್ಗವಾಗಿ ಮಾರ್ಪಡುವುದು ಭಾರತದಾದ್ಯಂತ ಸಂಭವಿಸಿವೆ . ಹೊಸ
ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬಳಸಿಕೊಂಡ ಜಾತಿಗಳು ಬಲಿಷ್ಠ ವರ್ಗಗಳಾಗಿ ರೂಪುಗೊಂಡಿ

27. ಸಾಮಾಜಿಕ ಸಂಪರ್ಕ ತಾಣಗಳ ಬಗ್ಗೆ ಟಿಪ್ಪಣಿ ಬರೆಯಿರಿ ,

ಸಾಮಾಜಿಕ ಸಂಪರ್ಕ ತಾಣಗಳು ಸಾಮಾಜಿಕ ಸಂಪರ್ಕ ತಾಣಗಳು ಎಂದರೆ Social Networking


Sites ಈ ಸಾಮಾಜಿಕ ಸಂಪರ್ಕ ತಾಣಗಳು ಎಸ್.ಎನ್.ಎಸ್ . ಆನ್‌ಲೈನ್ ಅಥವಾ ಅಗೋಚರ
ವೇದಿಕೆಗಳಾಗಿ , ಸಾಮಾನ್ಯ ಆಸಕ್ತಿಗಳನ್ನು ಹಂಚಿಕೊಳ್ಳುವ ಅಂತರ್ಜಾಲ ತಾಣಗಳಾಗಿವೆ . ಇವುಗಳು
ಒಂದು ರೀತಿಯ ಅಗೋಚರ ಸಮುದಾಯಗಳಾಗಿ Virtual Community ಅತ್ಯಂತ ಜನಪ್ರಿಯ ಸಂಪರ್ಕ
ವೇದಿಕೆಗಳಾಗಿವೆ . ಸಾಮಾಜಿಕ ಸಂಪರ್ಕ ತಾಣಗಳು ಸಂಪರ್ಕ , ಮನರಂಜನೆ , ಮಾಹಿತಿಯ ತಾಣ ,
ಫೇಸ್‌ಬುಕ್ , ಆರ್‌ಕೂಟ್ , ಗೂಗಲ್‌ಪ್ಲಸ್ ಇತ್ಯಾದಿ ಗಳ ಸಂಪರ್ಕ ತಾಣವಾಗಿದೆ . ಸಾಮಾಜಿಕ ಸಂಪರ್ಕ
ತಾಣಗಳು ಅತ್ಯಂತ ಜನಪ್ರಿಯ ಸಂಪರ್ಕ ವೇದಿಕೆಗಳಾಗಿವೆ . ಸಾಮಾಜಿಕ ಸಂಪರ್ಕ ತಾಣಗಳ ಮೂಲಕ
ಆನ್‌ಲೈನ್ ಗೆಳೆತನ , ಒಂದು ಸಮೂಹಕ್ಕೆ ಸೇರ್ಪಡೆ , ಮತ್ತು ಹೊಸ ಗೆಳೆಯ ಅಥವಾ ಹೊಸ ಗೆಳೆಯ
ಸಮೂಹದ ಸಂಪರ್ಕ ಅಥವಾ ಹಳೆ ಗೆಳೆತನದ ಮುಂದುವರಿಕೆ ಮತ್ತು ಸಮಾನ ಆಸಕ್ತಿಯ ಆಧಾರದ
ಮೇಲೆ ಗೆಳೆತನ ಮುಂದುವರಿಕೆ ಇತ್ಯಾದಿ ಸಾಧ್ಯವಾಗುತ್ತದೆ . ಇದರ ಜೊತೆಗೆ ಸಮಾನ ಆಸಕ್ತಿಗೆ
ಅನುಗುಣವಾಗಿ ವಿಷಯಗಳನ್ನು ಹಂಚಿಕೊಳ್ಳಬಹುದು . ಚರ್ಚೆಯಲ್ಲಿ ಭಾಗವಹಿಸಬಹುದು .

ಗೆಳೆತನದ ಪಟ್ಟಿಯನ್ನು ಹೆಚ್ಚಿಸಿಕೊಳ್ಳಬಹುದು . ಭಾರತವು ಸಾಮಾಜಿಕ ಸಂಪರ್ಕ ತಾಣಗಳ ಬಳಕೆಯಲ್ಲಿ


ಅಮೇರಿಕ ಮತ್ತು ಚೈನಾದ ನಂತರ ಮೂರನೆಯ ಸ್ಥಾನದಲ್ಲಿದೆ . ಇತ್ತೀಚೆಗೆ ಪ್ರಾಂತೀಯ ಭಾಷೆಗಳಲ್ಲಿಯೂ
ಇದರ ಸೇವೆಯನ್ನು ಪ್ರಾರಂಭಿಸಲಾಗಿದೆ . ಆಸ್ಟ್ರೇಲಿಯಾ ಮೂಲದ ರೂಪರ್ಟ್ ಮುರ್ಡೋಕ್ ಪ್ರಪಂಚದ
ಅತ್ಯಂತ ಶ್ರೀಮಂತ ಮಾಧ್ಯಮ ಉದ್ದಿಮೆದಾರ . ಇವರ ನ್ಯೂಸ್ ಕಾರ್ಪೊರೇಷನ್ ಮಾಲೀಕತ್ವದ
ಮಾಧ್ಯಮಗಳು ಆರು ಖಂಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ . 1970 ರಲ್ಲಿ ಅಮೇರಿಕಾದ ನ್ಯೂಯಾರ್ಕ್
ಒಂದರಲ್ಲೇ 130 ಕ್ಕೂ ಹೆಚ್ಚು ಪತ್ರಿಕೆಗಳ ಮಾಲೀಕತ್ವವನ್ನು ಹೊಂದಿದ್ದರು . ಇವರ ‘ ದಿಸನ್ ‘ ಪತ್ರಿಕೆಯು
ಪ್ರಪ ೦ ಚದಲ್ಲಿ ಅತಿ ಹೆಚ್ಚು ಪ್ರಸರಣವಾಗುವ ಪತ್ರಿಕೆ ಎಂಬ ಪ್ರಸಿದ್ಧಿ ಪಡೆಯಿತು . ಇಂದು ಸಾಮಾಜಿಕ
ಸಂಪರ್ಕ ತಾಣಗಳು ಅತ್ಯಂತ ಅವಶ್ಯಕವೆನಿಸಿದೆ .

28. ಆಂಗ್ಲ ಭಾಷೆಯ ಐದು ದಿನ ಪತ್ರಿಕೆಗಳನ್ನು ತಿಳಿಸಿ .

ಆಂಗ್ಲ ಭಾಷೆಯ ದಿನ ಪತ್ರಿಕೆಗಳು ಆಂಗ್ಲ ವಾರ್ತಾ ಪತ್ರಿಕೆಗಳನ್ನು ‘ ರಾಷ್ಟ್ರೀಯ ದೈನಿಕ ‘ ಗಳೆಂದು
ಕರೆಯುತ್ತಾರೆ . ಉದಾಹರಣೆಗೆ . 1.ದಿ ಡೈಮ್ಸ್ ಆಫ್ ಇಂಡಿಯಾ , 2 , ದಿ ಹಿಂದೂ 3. ದಿ ಇಂಡಿಯನ್
ಎಕ್ಸ್‌ಪ್ರೆಸ್ 4. ದಿ ಎಕಾನಿಮಿಕ್ ಟೈಮ್ಸ್ 5. ಹಿಂದೂಸ್ತಾನ ಟೈಮ್ಸ್ 6. ಡೆಕ್ಕನ್ ಹೆರಾಲ್ಡ್ ಇತ್ಯಾದಿ ,

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

ಇಂಗ್ಲೀಷ್ ಭಾಷೆಯ ಪತ್ರಿಕೆಗಳು ಉಳಿದ ಭಾಷೆಯ ಪತ್ರಿಕೆಗಳಂತೆಯೇ ಸ್ಪರ್ಧಾತ್ಮಕವಾಗಿ ಪೈಪೋಟಿ


ನಡೆಸುತ್ತಿದೆ . ವಿದ್ಯುನ್ಮಾನ ಮಾಧ್ಯಮದ ಜೊತೆ ಸ್ಪರ್ಧಿಸಿ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು
ಯತ್ನಿಸುತ್ತಿದೆ . ಅದಕ್ಕಾಗಿ ಪತ್ರಿಕೆಯ ಬೆಲೆ ಇಳಿಕೆ , ವಿವಿಧ ಕೇಂದ್ರಗಳಿಂದ ಮುದ್ರಣ ಆರಂಭಿಸುವುದು
ಮತ್ತು ಪ್ರಾಯೋಜಕತ್ವಕ್ಕಾಗಿ ಜಾಹೀರಾತು ದಾರರ ಮೇಲೆ ಹೆಚ್ಚಿನ ಅವಲಂಬನೆಯಾಗಿದೆ . ವಿದ್ಯುನ್ಮಾನ
ಮಾಧ್ಯಮದ ಮುಂದೆ ಮುದ್ರಣಮಾಧ್ಯಮ ಕ್ಷೀಣಿಸುತ್ತಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದರೂ
ಪತ್ರಿಕೆಗಳ ಪ್ರಸರಣ ಮಾತ್ರ ದಿನೇ ದಿನೇ ಹೆಚ್ಚಳವಾಗುತ್ತಿದೆ . ಜಾಗತೀಕರಣದ ವ್ಯವಹಾರಗಳು ಇಂಗ್ಲೀಷ್
ಭಾಷೆಯ ಹಿನ್ನೆಲೆಯಲ್ಲಿಯೇ ಹೆಚ್ಚಾಗಿ ನಡೆಯುತ್ತಿರುವುದರಿಂದ ಅದು ಎಲ್ಲೆಡೆ ಇಂಗ್ಲೀಷ್ ಭಾಷೆಯ
ಬೆಳವಣಿಗೆ ಪ್ರೋತ್ಸಾಹ ನೀಡುತ್ತಿದೆ . ಆ ನಿಟ್ಟಿನಲ್ಲಿ ಇಂಗ್ಲೀಷ್ ಭಾಷೆಯ ದಿನಪತ್ರಿಕೆಗಳ ಪ್ರಸಾರ ಹೆಚ್ಚಲು
ಉತ್ತಮ ಸನ್ನಿವೇಶ ಸೃಷ್ಟಿಯಾಯಿತು . ಎಂದು ಹೇಳಬಹುದು .

29 , ರೇಡಿಯೋ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ .

ರೇಡಿಯೋ : ಇದು ಒಂದು ವಿದ್ಯುನ್ಮಾನ ಮಾಧ್ಯಮ ವಾಗಿದೆ . 1920 ರಲ್ಲಿ ರೇಡಿಯೋ ಚೆನ್ನೈ ಮತ್ತು
ಕಲ್ಕತ್ತದಿಂದ ‘ ಹ್ಯಾಂ ಬ್ರಾಡ್‌ಕಾಸ್ಟಿಂಗ್ ಕ್ಲಬ್ ‘ ಮೂಲಕ ಹವ್ಯಾಸಿ ಪ್ರಸಾರ ಕೇಂದ್ರಗಳಾಗಿ ಕಾರ್ಯಾರಂಭ
ಮಾಡಿದವು 1940 ರ ಹೊತ್ತಿಗೆ ಸರ್ಕಾರದ ಪ್ರಸಾರ ಕೇಂದ್ರಗಳಾಗಿ ದ್ವಿತೀಯ ಮಹಾ ಯುದ್ಧದ ಕಾಲದಲ್ಲಿ
ಮಿತ್ರಪಡೆಗಳ ಪರವಾಗಿ ವರದಿ ಪ್ರಸಾರ ಮಾಡುವಲ್ಲಿ ನಿರತವಾಗಿತ್ತು . ಪ್ರಾರಂಭದಲ್ಲಿ ಆರು ಪ್ರಸಾರ
ಕೇಂದ್ರಗಳು , ಚರ್ಚೆ , ವಾರ್ತೆ , ಪ್ರಚಲಿತ ಘಟನೆಗಳನ್ನು ಶೋತೃಗಳಿಗೆ ಪ್ರಸಾರ ಮಾಡುತ್ತಿತ್ತು .
ಕರ್ನಾಟಕದ ಮೈಸೂರಿನಲ್ಲಿ ಈ ರೇಡಿಯೋ ಕಾರ್ಯಕ್ರಮಗಳಿಗೆ ‘ ಆಕಾಶವಾಣಿ ‘ ಎಂಬ ಹೆಸರನ್ನು
ಕೊಟ್ಟಿತು . ಸ್ವತಂತ್ರ ಭಾರತದಲ್ಲಿ ಅಭಿವೃದ್ಧಿಯ ವಿಭಿನ್ನತೆಗಳು ಹಾಗೂ ಅಭಿವೃದ್ಧಿಯ ಕುರಿತಾದ
ಚರ್ಚೆಗಳನ್ನು ಪ್ರಸಾರ ಮಾಡುತ್ತಿತ್ತು . ಮನರಂಜನೆಗಾಗಿ ವಿವಿಧ ಭಾರತಿ ‘ ಎಂಬ ಬಾನುಲಿಯು
ಚಲನಚಿತ್ರ ಗೀತೆಗಳನ್ನು ಪ್ರಸಾರ ಮಾಡುತ್ತಿತ್ತು . 1

957 ರ ಹೊತ್ತಿಗೆ ಇದು ಜನಪ್ರಿಯ ಮಾಧ್ಯಮವಾಗಿತ್ತು . ವಿವಿಧ ಭಾರತಿ ಯು ಪ್ರಾಯೋಜಿತ


ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರಿಂದ ಆದಾಯವೂ ಹೆಚ್ಚಿತ್ತು . ಬೆಂಗಳೂರು ಆಕಾಶವಾಣಿಯ
ಜೊತೆಗೆ ಮೈಸೂರು , ಭದ್ರಾವತಿ , ಧಾರವಾಡ , ಮಂಗಳೂರು ಮತ್ತು ಗುಲ್ಬರ್ಗಾ ಉಪಕೇಂದ್ರಗಳಿಂದ
ಮನರಂಜನೆ , ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಮತ್ತು ವಾಣಿಜ್ಯ ಕಾರ್ಯಕ್ರಮಗಳು
ಪ್ರಸಾರವಾಗುತ್ತಿದ್ದವು ‘ ಜಿ.ಆರ್ . ಗುಂಡಣ್ಣ ‘ ಮತ್ತು ` ಎಂ.ಟಿ. ಜಯಣ್ಣ ‘ ನವರು ನಡೆಸಿಕೊಡುತ್ತಿದ್ದ
ಕೃಷಿರಂಗ ‘ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿ ಜನಮನ್ನಣೆಗಳಿಸಿತ್ತು . ಭಾರತ ಸರ್ಕಾರವು
ಆಕಾಶವಾಣಿ ಕೇಂದ್ರಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಿತು . ಇಂದು 24
ಭಾಷೆಗಳು ಮತ್ತು 146 ಉಪಭಾಷೆಗಳ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ . ಆಕಾಶವಾಣಿಯು
ರಾಷ್ಟ್ರೀಯ , ಪ್ರಾಂತೀಯ ಮತ್ತು ಸ್ಥಳೀಯ ಕಾರ್ಯಕ್ರಮ ಗಳನ್ನು ಪ್ರಸಾರ ಮಾಡುತ್ತಿದೆ . ಪ್ರಸಾರದಲ್ಲಿ
ವೈವಿಧ್ಯತೆಯಿರುವುದರಿಂದ ಇಂದಿಗೂ ರೇಡಿಯೋ ತನ್ನ ಸ್ಥಾನವನ್ನು ಕಳೆದುಕೊಂಡಿಲ್ಲ .

30. ಕನ್ನಡದ ಐದು ದಿನಪತ್ರಿಕೆಗಳನ್ನು ತಿಳಿಸಿ ,

ಕನ್ನಡದ ಐದು ದಿನಪತ್ರಿಕೆಗಳು ಕರ್ನಾಟಕದಲ್ಲಿ ಕನ್ನಡ ಭಾಷೆಯ ಹಲವಾರು ಪತ್ರಿಕೆಗಳಿವೆ . ಅವುಗಳಲ್ಲಿ


ಪ್ರಮುಖವಾದುವು 1. – ಪ್ರಜಾವಾಣಿ 2 . ವಿಜಯ ಕರ್ನಾಟಕ 3 . ಉದಯವಾಣಿ 4.ಕನ್ನಡ ಪ್ರಭ
5.ಸಂಯುಕ್ತ ಕರ್ನಾಟಕ ಇತ್ಯಾದಿ .

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

ಭಾರತೀಯ ಪತ್ರಿಕೆಗಳ ಪ್ರಸರಣದಲ್ಲಿ ಪ್ರಗತಿಗೆ ಹಲವಾರು ಕಾರಣಗಳಿವೆ . ಮೊದಲನೆಯದಾಗಿ ನಗರ


ಪ್ರದೇಶದಲ್ಲಿ ಸುಶಿಕ್ಷಿತರ ವಲಸೆಯ ಹೆಚ್ಚಳ , ಇಂದಿನ ಶಿಕ್ಷಣ ಪದ್ಧತಿಯಿಂದಾಗಿ ಪತ್ರಿಕೆಗಳನ್ನು ಓದುವವರ
ಸಂಖ್ಯೆ ಹೆಚ್ಚುತ್ತಿದೆ . ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ವಿಷಯಗಳನ್ನು ತಿಳಿಯಲು ಪತ್ರಿಕೆಯೊಂದೇ ಸಮೂಹ
ಮಾಧ್ಯಮವಾಗಿತ್ತು . ಬಹಳಷ್ಟು ಮಂದಿ ಇಂದಿಗೂ ಬೆಳಿಗ್ಗೆಯ ಉಪಹಾರದಂತೆ ಪತ್ರಿಕೆಗಳನ್ನು ಅಷ್ಟೇ
ಕಡ್ಡಾಯವಾಗಿ ಓದುತ್ತಾರೆ . 1843 ರಲ್ಲಿ ಹೆರಮೆನ್ ಮೋಗ್ಲಿಂಗ್ ಎಂಬ ಭಾಷೆಲ್ ಕ್ರೈಸ್ತ ಧರ್ಮ
ಪ್ರಚಾರದಿಂದ ‘ ಮಂಗಳೂರು ಸಮಾಚಾರ ‘ ಎಂಬ ಕನ್ನಡದ ಪ್ರಪ್ರಥಮ ಪತ್ರಿಕೆ ಪ್ರಾರಂಭವಾಯಿತು .
ನಂತರ ಈ ಪತ್ರಿಕೆಯನ್ನು ‘ ಕನ್ನಡ ಸಮಾಚಾರ ‘ ಎಂದು ಮರುನಾಮಕರಣ ಮಾಡಿದರು .

ಹಲವಾರು ಕನ್ನಡ ವಾರ್ತಾಪತ್ರಿಕೆಗಳು ಪತ್ರಿಕಾ ಮಾಧ್ಯಮದಲ್ಲಿ ಗಣನೀಯ ಕೊಡುಗೆಯನ್ನು ಇಂದಿಗೂ


ನೀಡುತ್ತಿದೆ . ಪತ್ರಿಕೆಗಳ ಸುದ್ದಿಗಳು ಮಾರುಕಟ್ಟೆ , ಕೋರ್ಟು -ಕಚೇರಿ , ಉಪಾಹಾರ ಗೃಹ ( ಹೋಟೆಲ್ )
ಗಳು ಮುಂತಾದ ಕಡೆಗಳಲ್ಲಿ ಜನರ ಬಾಯಿಂದ ಬಾಯಿಗೆ ವಿಷಯಗಳು ಚಲಿಸುತ್ತಿರುತ್ತವೆ . ಸ್ವತಂತ್ರ
ಹೋರಾಟದಲ್ಲಿ ಪತ್ರಿಕೆಗಳು ಜನಾಭಿಪ್ರಾಯ ರೂಪಿಸಲು ಸಹಕಾರಿಯಾಗಿದ್ದವು . ಭಾರತೀಯ
ಸುದ್ದಿಮಾಧ್ಯಮಗಳು ಆಧುನಿಕ ಮುದ್ರಣ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ . ಹೆಚ್ಚುವರಿ ಪಟಗಳು
, ಪುರವಣಿಗೆ , ಸಾಹಿತ್ಯಕಗಳ ವಿಷಯಗಳನ್ನು ಪ್ರಸಾರ ಮಾಡುತ್ತವೆ . ದೈನಿಕ ಭಾಸ್ಕರ ಮತ್ತು ವಿಜಯ
ಕರ್ನಾಟಕ ಪತ್ರಿಕೆಗಳು ಗ್ರಾಹಕರನ್ನು ಭೇಟಿ ಮಾಡಿ ಸಂದರ್ಶನವನ್ನು ಪ್ರಸಾರ ಮಾಡುತ್ತಿವೆ . ಮನೆ –
ಮನೆ ಸರ್ವೇಕ್ಷಣೆ ಮತ್ತು ಸಂಶೋಧನೆಯ ಮೂಲಕ ಹೊಸ ಮಾರುಕಟ್ಟೆ ತಂತ್ರಗಾರಿಕೆಯನ್ನು
ಅಳವಡಿಸಿಕೊಂಡಿವೆ . ಇದರ ಜೊತೆಗೆ ಮುದ್ರಣ ಮಾಧ್ಯಮದವರು ವಿದ್ಯುನ್ಮಾನ ಮಾಧ್ಯಮದ
ಮಾಲಿಕತ್ವದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ .

IV . ಹತ್ತು ಅಂಕದ ಪ್ರಶ್ನೆಗಳು ,


31. ಸಮೂಹ ಮಾಧ್ಯಮಗಳ ಪ್ರಕಾರಗಳನ್ನು ವಿವರಿಸಿ .

ಸಮೂಹ ಮಾದ್ಯಮಗಳ ಪ್ರಕಾರಗಳು ಸೀಮಿತ ಸಮಯದಲ್ಲಿ ಬಹಳಷ್ಟು ಜನರಿಗೆ ಮಾಹಿತಿಯನ್ನು


ತಲುಪಿಸುವ ಸಂವಹನ ವ್ಯವಸ್ಥೆಗೆ ಸಮೂಹ ಮಾಧ್ಯಮಗಳು ಎನ್ನುತ್ತೇವೆ . ದಿನಪತ್ರಿಕೆಗಳು ,
ವಾರಪತ್ರಿಕೆಗಳು ,ರೇಡಿಯೋ , ದೂರದರ್ಶನ ಮತ್ತು ಸಮಾಜ ಸಂಪರ್ಕ ಜಾಲಗಳು ಇತ್ಯಾದಿಗಳು
ಸಮೂಹ ಮಾಧ್ಯಮಗಳಾಗಿವೆ . ಇವುಗಳು ಏಕಕಾಲಕ್ಕೆ ವೈವಿಧ್ಯ ಜನಸಮೂಹಕ್ಕೆ ಮಾಹಿತಿಯನ್ನು
ತಲುಪಿಸುವುದರಿಂದ ಇದನ್ನು ಸಮೂಹ ಸಂವಹನ ಎಂದೂ ಕರೆಯುತ್ತೇವೆ .

ಇತ್ತೀಚಿನ ದಿನಗಳಲ್ಲಿ ಸಮೂಹ ಮಾಧ್ಯಮಗಳು ಅಗಾಧವಾಗಿ ಬೆಳವಣಿಗೆಯಾಗಿದೆ . ಸಮೂಹ


ಮಾಧ್ಯಮಗಳ ಪ್ರಸ್ತುತತೆ ಮತ್ತು ಪ್ರಪಂಚದಲ್ಲಿ ಸಮೂಹ ಮಾಧ್ಯಮಗಳ ಬೆಳವಣಿಗೆ ವಿಶೇಷವಾಗಿ
ಭಾರತದಲ್ಲಿನ ಸಮೂಹ ಮಾಧ್ಯಮಗಳ ರಚನೆ , ವಸ್ತು ವಿಷಯ , ಆರ್ಥಿಕ , ರಾಜಕೀಯ , ಸಾಮಾಜಿಕ ,
ಸಾಂಸ್ಕೃತಿಕ ಹಿನ್ನೆಲೆಯಲ್ಲಿ ತಿಳಿದುಕೊಳ್ಳಬೇಕು . ಸಮಾಜ ಮಾಧ್ಯಮಗಳ ವ್ಯಾಪ್ತಿ ಮತ್ತು ಪಾತ್ರ ಆಯಾ
ಸಮಾಜದ ಸ್ಥಿತಿಗತಿಗೆ ಅನುಗುಣವಾಗಿ ರೂಪುಗೊಳ್ಳುತ್ತದೆ . ಹಾಗೆಯೇ ಸಮೂಹ ಮಾಧ್ಯಮಗಳೂ ಸಹ
ಸಮಾಜದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರುತ್ತವೆ . ಸಮೂಹ ಮಾಧ್ಯಮಗಳು ಇತರ ಸಂಪರ್ಕ
ಸಾಧನಗಳಿಗಿಂತ ವಿಭಿನ್ನವಾಗಿದೆ . ಏಕ ಕಾಲದಲ್ಲಿ ವಿಭಿನ್ನ ಜನರಿಗೆ ತಲುಪಲು ಔಪಚಾರಿಕ ಸಂಘಟನೆ
ಬಂಡವಾಳ , ಉತ್ಪಾದಕತೆ ಮತ್ತು ವ್ಯವಸ್ಥಾಪಕ ಮಂಡಲಿಯ ಅವಶ್ಯಕತೆ ಇದೆ . ಸಮೂಹ
ಮಾಧ್ಯಮಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು . ಅವುಗಳು

1. ಮುದ್ರಣ ಮಾಧ್ಯಮ

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

2. ವಿದ್ಯುನ್ಮಾನ ಮಾಧ್ಯಮ

1. ಮುದ್ರಣ ಮಾದ್ಯಮದಲ್ಲಿ ವಾರ್ತಾ ಪತ್ರಿಕೆಗಳು ಮತ್ತು ಮ್ಯಾಗ್‌ಜೀನ್ ಎಂದರೆ ನಿಯತಕಾಲಿಕಗಳು ,


ದೇಶದಾದ್ಯಂತ ಎಲ್ಲಾ ಭಾಷೆಯಲ್ಲಿಯ ವಾರ್ತಾಪತ್ರಿಕೆಗಳು ಪ್ರಸಾರವಾಗುತ್ತಿವೆ . ಅದೇ ರೀತಿ ಅನೇಕ
ರೀತಿಯ ನಿಯತ ಕಾಲಿಕಗಳೂ ಇವೆ .

2. ವಿದ್ಯುನ್ಮಾನ ಮಾಧ್ಯಮ : ಇವುಗಳು ರೇಡಿಯೋ , ದೂರದರ್ಶನ , ಅಂತರಜಾಲ ಮತ್ತು ಸಮಾಜ


ಸಂಪರ್ಕಜಾಲಗಳು ,

32. ಸಮೂಹ ಮಾಧ್ಯಮಗಳ ಕಾರ್ಯಗಳನ್ನು ವಿವರಿಸಿ .

ಸಮೂಹ ಮಾದ್ಯಮವು ಬಹುದೊಡ್ಡ ಸಂಖ್ಯೆಯ ಓದುಗರನ್ನು ಹಾಗೂ ಶೋತೃಗಳನ್ನು ಹೊಂದಿರುತ್ತದೆ .


ಸಮೂಹ ಮಾಧ್ಯಮಗಳಿಂದ ಸಂವಹನವು ಸಾಧ್ಯವಾಗುತ್ತದೆ .ಜಗತ್ತಿನ ಎಲ್ಲಾ ದೇಶಗಳಲ್ಲೂ ಇಂದು
ಸಮೂಹ ಮಾಧ್ಯಮಗಳು ಉಪಯುಕ್ತವಾಗಿ ಕಾರ್ಯವನ್ನು ನಿರ್ವಹಿಸುತ್ತಿವೆ . ಸಾಕ್ಷರತೆಯ ವ್ಯಾಪಕತೆ ,
ವಿರಾಮದ ಹೆಚ್ಚಳ ಮತ್ತು ಸಂವಹನದ ಸಾರ್ವಜನಿಕ ಬಳಕೆಯ ಮೇಲೆ ಸಮೂಹ ಮಾಧ್ಯಮವು ಬಹಳಷ್ಟು
ಅವಲಂಬಿಸಿದೆ . ಸಮೂಹ ಮಾದ್ಯಮಗಳ ಉದ್ದೇಶಕ್ಕನುಗುಣವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ . ಆ
ಕಾರ್ಯಗಳನ್ನು ಈ ರೀತಿ ವರ್ಗೀಕರಿಸಿ ಬಹುದು .

1. ಮಾಹಿತಿ- Information : ಸಮೂಹ ಮಾಧ್ಯಮಗಳು ನಾನಾ ಕಡೆಗಳಿಂದ , ನಾನಾ ರೀತಿಗಳಲ್ಲಿ


ಸುದ್ದಿಯನ್ನು ಸಂಗ್ರಹಿಸಿ ಪ್ರಸಾರ ಮಾಡುತ್ತವೆ . ಆ ಮಾಹಿತಿಯನ್ನು ವರ್ಗೀಕರಿಸಿ ರಾಷ್ಟ್ರ , ರಾಜ್ಯ ಮತ್ತು
ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯವೆಂದು ವಿಂಗಡಿಸಿ , ಪ್ರಪಂಚದ ಮೂಲೆ ಮೂಲೆಗಳಿಗೆ
ತಲುಪಿಸುತ್ತವೆ . ಈ ಎಲ್ಲಾ ಮಾಹಿತಿಯನ್ನು ವಾರ್ತಾಪ ರೇಡಿಯೋ , ದೂರದರ್ಶನಗಳ ಮೂಲಕ
ಬಿತ್ತರಿಸಲ್ಪಡುತ್ತದೆ . ಇವುಗಳಲ್ಲಿ ರಾಜಕೀಯ , ಕ್ರೀಡೆ , ಮನರಂಜನೆ , ಹವಾಮಾನ ವರದಿ , ಶೇರು
ಮಾರುಕಟ್ಟೆ ಮತ್ತು ಸಾಹಿತಿಗಳ ಸಾಹಿತ್ಯದ ವರದಿಯೂ ಇರುತ್ತದೆ . ಮಾಹಿತಿಯನ್ನು ಎಲ್ಲಾ
ಮೂಲಗಳಿಂದಲೂ ಸಂಗ್ರಹಿಸುತ್ತಾರೆ .

2. ಸಮನ್ವಯತೆ : Correlation : ಮಾದ್ಯಮಗಳು ಮಾಹಿತಿಯ ಅರ್ಥವನ್ನು ಗ್ರಹಿಸಿ , ಸಾಮಾಜಿಕ


ನಿಯಮಗಳನ್ನು ರೂಪಿಸಲು ಮತ್ತು ಮಕ್ಕಳ ಸಾಮಾಜೀಕರಣದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ .

3. ನಿರಂತರತೆ : Continuity : ಮಾದ್ಯಮಗಳು ಸಂಸ್ಕೃತಿಯ ನಿರಂತರತೆಯನ್ನು ಒಳಗೊಂಡು


ಸಾಮಾನ್ಯ ಮೌಲ್ಯಗಳು ಮತ್ತು ಪ್ರಗತಿಗೆ ಸಹಾಯಕವಾಗಿವೆ . ಸುದ್ದಿ ಸಮಾಚಾರಗಳು ಯಾವಾಗಲೂ
ಎಂದರೆ ನಿರಂತರವಾಗಿ ಹರಿಯುತ್ತಲೇ ಇರುತ್ತವೆ .

4. ಮನರಂಜನೆ : Entertainment : ಮುದ್ರಣ ಮಾಧ್ಯಮಕ್ಕಿಂತ ವಿದ್ಯುನ್ಮಾನ ಮಾಧ್ಯಮಗಳಾದ


ರೇಡಿಯೋ ಹಾಗೂ ದೂರದರ್ಶನಗಳಲ್ಲಿ ಬಿತ್ತರವಾಗುವ ಹಲವಾರು ಕಾರ್ಯಕ್ರಮಗಳು
ಮನೋರಂಜನೆಯ ಉದ್ದೇಶವನ್ನೇ ಹೊಂದಿರುತ್ತದೆ . ಇಂದು ವಿವಿಧ ಚಾನೆಲ್‌ಗಳು ಸ್ಪರ್ಧಾತ್ಮಕವಾಗಿ
ಜನರನ್ನು ಮನರಂಜಿಸುತ್ತಿದ್ದಾರೆ . ಮಕ್ಕಳಿಂದ ಮುದುಕರವರೆಗೂ ಇದರ ಮೇಲಿನ
ಅವಲಂಬನೆಯನ್ನುನೋಡಬಹುದಾಗಿದೆ .

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

5. ಕ್ರೋಢೀಕರಣ: Mobilization : ವಾದ್ಯಮಗಳು ಸಮಾಜದ ಉದ್ದೇಶಗಳ ಕ್ರೋಢೀಕರಣಕ್ಕೆ


ಸಹಕರಿಸಲು , ಆರ್ಥಿಕ ಪ್ರಗತಿ , ದುಡಿಮೆ ಅಥವಾ ಧಾರ್ಮಿಕ ವಿಚಾರ ವಿನಿಮಯ ಮತ್ತು ಯುದ್ಧ ಕಾಲದಲ್ಲಿ
ವಾರ್ತೆಗಳನ್ನು ಬಿತ್ತರಿಸಲು ಸಹಾಯಕವಾಗಿವೆ .

6. ರಾಜಕೀಯ ಸ೦ವಹನ : Political Communication : ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳ ಮತ್ತು


ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ . ಸರ್ಕಾರದ ನಿಯಮಾವಳಿಗಳು ,
ಕಾರ್ಯಕ್ರಮಗಳು , ಯೋಜನೆಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗಿದೆ .

7. ವ್ಯಾಪಾರ : Trade : ಮಾರುಕಟ್ಟೆ ವ್ಯವಸ್ಥೆ , ಪ್ರಚಾರ , ಸಾರ್ವಜನಿಕ ಸಂಪರ್ಕ ಇತ್ಯಾದಿಗಳು


ಸುಲಭವಾಗುತ್ತವೆ . ಉತ್ಪಾದಕರು ಜಾಹೀರಾತುಗಳ ಮೂಲಕ ತಮ್ಮ ವಸ್ತುಗಳನ್ನು ಗ್ರಾಹಕರಿಗೆ
ಪರಿಚಯಿಸಲು ಮತ್ತು ಗ್ರಾಹಕರಿಗೆ ಯಾವ ಯಾವ ವಸ್ತುಗಳ ಲಭ್ಯತೆಯಿದೆ ಎಂಬುದರ ಅರಿವು
ಉಂಟಾಗುತ್ತದೆ .

8. ದೇಶದ ಸಂಸ್ಕೃತಿ ಮತ್ತು ಕಲೆಗಳ ಪರಿಚಯ ಮತ್ತು ಮಹತ್ವ : Importance of Culture and Art
of the Country : ಮನರಂಜನೆಗಾಗಿ ಪ್ರಸಾರ ಮಾಡುವ ಸಂಗೀತ , ನಾಟಕ , ಸಾಹಿತ್ಯ , ಕಲೆ , ನೃತ್ಯ
ಇವುಗಳಿಂದ ಜನರಿಗೆ ಇವುಗಳ ಪರಿಚಯ ಮತ್ತು ಮಹತ್ವದ ಅರಿವಾಗುತ್ತದೆ . ಇದರ ಮೂಲಕ
ಕಲಾವಿದರನ್ನು ಪ್ರೋತ್ಸಾಹಿಸಲೂ ಸಹ ಸಹಕಾರಿಯಾಗುತ್ತದೆ . ಸಮೂಹ ಮಾಧ್ಯಮಗಳು ಅನೇಕ
ಕಾರ್ಯಗಳನ್ನು ಮಾಡುತ್ತದೆ . ಇದರಿಂದ ಶಿಕ್ಷಣ , ಜಾಗೃತಿ ಉಂಟಾಗುತ್ತದೆ . ಇಂದು ಸಮೂಹ
ಮಾದ್ಯಮಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ . ಇದನ್ನು ಬೇರ್ಪಡಿಸುವ ಮಾತೇ ಇಲ್ಲ .
ಮೂಲಭೂತ ಅವಶ್ಯಕತೆಗಳಲ್ಲಿ ಇದೂ ಸಹ ಸೇರಿ ಹೋಗಿದೆ ಎಂದರೆ ತಪ್ಪಾಗಲಾರದು .

33. ಅಗೋಚರ ಮಾರುಕಟ್ಟೆಯ ಬಗ್ಗೆ ವಿವರಿಸಿ .

ಅಗೋಚರ ಮಾರುಕಟ್ಟೆ , ಇದನ್ನು ವರ್ಚುಯಲ್ ಮಾರುಕಟ್ಟೆ ಎಂದೂ ಸಹ ಕರೆಯುತ್ತಾರೆ . ಇದು ದೃಷ್ಟಿಗೆ


ಗೋಚರವಾಗುವುದಿಲ್ಲ . ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಆಧಾರದಿಂದ ಮಾರುಕಟ್ಟೆ
ಪ್ರಕ್ರಿಯೆಗಳು ಆನ್ಲೈನ್‌ನಲ್ಲಿ ಏರ್ಪಡುವ ಕ್ರಿಯೆ . ಇ – ಕಾಮರ್‌ಆನ್‌ಲೈನ್ ಪರ್ಚೆಸ್ , ಶೇರು
ಮಾರುಕಟ್ಟೆಯಲ್ಲಿ ಆನ್‌ಲೈನ್ ಮಾರ್ಕೆಟಿಂಗ್ ಇತ್ಯಾದಿಗಳು ಅಂತರ್ಜಾಲದ ಮೂಲಕ ಮಾರುಕಟ್ಟೆಯ
ಕಾರ್ಯಾಚರಣೆ ಪರಿವರ್ತನೆಗೊಂಡಿದೆ . ಇಲ್ಲಿ ಮಾರಾಟಗಾರನಿಗಿಂತ ಗ್ರಾಹಕರೇ ಸಾರ್ವಭೌಮರು .
ಮಾರುಕಟ್ಟೆಯ ವಹಿವಾಟು ಆನ್ – ಲೈನ್‌ಗಳ ಮೂಲಕ ಮಾಹಿತಿ ಸಾಧನೆ ಮತ್ತು ಸಂವಹನ
ತಂತ್ರಜ್ಞಾನವನ್ನು ಬಳಸಿಕೊಂಡ ಹೊಸ ಶೈಲಿಯನ್ನು ಅಗೋಚರ ಮಾರುಕಟ್ಟೆ ಅಥವಾ ವರ್ಚುಯಲ್
ಮಾರುಕಟ್ಟೆ ಎಂದು ಕರೆಯುತ್ತೇವೆ ಇತ್ತೀಚೆಗೆ ಇ – ಕಾಮರ್ಸ್ , ಆನ್‌ಲೈನ್‌ಪರ್‌ಚೇಸ್ , ಆನ್ ಲೈನ್
ಟ್ರೇಡಿಂಗ್ ಮೂಲಕ ಶೇರ್ ಮತ್ತು ಸ್ಟಾಕ್‌ಗಳನ್ನು ಮಾರುಕಟ್ಟೆಯಲ್ಲಿ ವ್ಯವಹರಿಸಲಾಗುತ್ತದೆ . ಇಂತಹ
ಮಾರುಕಟ್ಟೆ ಯಲ್ಲಿ ನಡೆಯುವ ವಹಿವಾಟುಗಳು ಮತ್ತು ವಾಣಿಜ್ಯ ಕ್ರಿಯೆಯನ್ನು ಅಗೋಚರ ಮಾರುಕಟ್ಟೆ
ಎಂದು ಕರೆಯಲಾಗಿದೆ .

ಭಾರತದಲ್ಲಿ 21 ನೇ ಶತಮಾನದಲ್ಲಿ ಆನ್ – ಲೈನ್ ಮಾರುಕಟ್ಟೆಗಳು ವಿಪರೀತವಾಗಿ ಹೆಚ್ಚುತ್ತಿದೆ .


ಪಾಶ್ಚಾತ್ಯ ದೇಶದಲ್ಲಿ ಆನ್ – ಲೈನ್ ಮಾರುಕಟ್ಟೆಗಳು ಸಾಮಾನ್ಯ . ಆದರೆ ಭಾರತದಲ್ಲಿ ಮಾಹಿತಿ
ತಂತ್ರಜ್ಞಾನದಿಂದಾಗಿ ಇಲ್ಲಿಯೂ ವ್ಯಾಪಕವಾಗಿ ಬೆಳೆಯುತ್ತಿದೆ . ಅಗೋಚರ ಮಾರುಕಟ್ಟೆಗಳು ವಿದ್ಯುನ್ಮಾನ
ಅಥವಾ ಇ – ಕಾಮರ್ಸ್ ಪ್ರಕಾರವಾಗಿದ್ದು , ಇವುಗಳ ಮೂಲಕ ಗ್ರಾಹಕರು ತಮಗೆ ಬೇಕಾದ ವಸ್ತುಗಳು
ಮತ್ತು ಸೇವೆಗಳನ್ನು ಮಾರಾಟಗಾರರಿಂದ ವೆಬ್ ಬೋಸರ್ ಮೂಲಕ ನೇರವಾಗಿ ಕೊಂಡುಕೊಳ್ಳುವ

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

ಪ್ರಕ್ರಿಯೆಯಾಗಿದೆ . ಅಗೋಚರ ಮಾರುಕಟ್ಟೆಯನ್ನು ಇ – ಶಾಪ್‌, ಇಂಟರ್‌ನೆಟ್ ಶಾಪ್ , ಆನ್ – ಲೈನ್


ಸ್ಟೋರ್ ಎಂಬ ವಿವಿಧ ಹೆಸರಿನಲ್ಲಿ ಕರೆಯುತ್ತಾರೆ .

ಇಂದಿನ ದಿನಗಳಲ್ಲಿ ಆಧುನಿಕ ಮಾರುಕಟ್ಟೆಯ ಸ್ಥಿತಿಗತಿಯಲ್ಲಿ ಗ್ರಾಹಕರು ಮತ್ತು ಮಾರಾಟಗಾರರು


ಸೀಮಿತ ಪ್ರದೇಶವಾದ ಮಾರುಕಟ್ಟೆಗೆ ಭೇಟಿ ನೀಡಬೇಕಾಗಿಲ್ಲ . ಗ್ರಾಹಕರು ಮತ್ತು ಮಾರಾಟಗಾರರು
ಪರಸ್ಪರ ಭೇಟಿಯಾಗದೆ ವಸ್ತು ಮತ್ತು ಹಣ ವಿನಿಮಯವಾಗುತ್ತದೆ . ಅಗೋಚರ ಮಾರುಕಟ್ಟೆಯಲ್ಲಿ
ಪ್ರತಿಯೊಂದು ಘಟನೆಗಳು ದೃಢೀಕೃತ ದಾಖಲೆಯಾಗುತ್ತದೆ . ಎಲ್ಲಾ ರೀತಿಯ ಭೌಗೋಳಿಕ ಮತ್ತು
ಸಾಮಾಜಿಕ ಅಡೆತಡೆಗಳನ್ನು ಮೀರಿದ ಜಾಗತಿಕ ಹಂತದಲ್ಲಿ ಅಗೋಚರ ಮಾರುಕಟ್ಟೆ ಅಥವಾ ಆನ್ –
ಲೈನ್ ಮಾರುಕಟ್ಟೆಯ ಉಗಮವು ಒಂದು ಹೊಸ ಆಯಾಮವಾಗಿದೆ . 1960 ರಲ್ಲಿ ಈ ಅಗೋಚರ
ಮಾರುಕಟ್ಟೆಯ ಪರಿಕಲ್ಪನೆ ಪ್ರಾರಂಭವಾಯಿತು .

1990 ರ ದಶಕದಲ್ಲಿ ವಾಸ್ತವಿಕವಾಗಿ ಅನುಷ್ಠಾನಗೊಂಡಿತು . ಮೈಕಲ್ ಆಲ್‌ಡಿರಿಜ್ 1979 ರಲ್ಲಿ ಮೊಟ್ಟ


ಮೊದಲ “ ಟೆಲಿಶಾಪಿಂಗ್ ‘ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು . ಇದೇ ವರ್ಷದಲ್ಲಿ ‘ ವಿಡಿಯೋ
ಟೆಕ್ಸ್ ‘ ಎಂಬುದರ ಬಗ್ಗೆ ಸಂಶೋಧನೆ ಕೈಗೊಂಡರು . 1982 ರಲ್ಲಿ ಶೇರು ಮಾರುಕಟ್ಟೆಯ ವಹಿವಾಟು
ಪ್ರಾರಂಭವಾಯಿತು . 1995 ರಲ್ಲಿ ಅಮೆಜ್ಜಾನ್ . ಕಾಮ್ ಎಂಬುದು ಅಗೋಚರ ಮಾರ್ಕೆಟಿಂಗ್ ಸೈಟನ್ನು
ಅನುಷ್ಠಾನಗೊಳಿಸಿತ್ತು ಮತ್ತು ಅದೇ ಇಸವಿಯಲ್ಲಿ ಇ – ಬೇ ಎಂಬ ಆನ್ – ಲೈನ್ ಶಾಪಿಂಗ್ ವೆಬ್ ಸೈಟ್
ಪ್ರಾರಂಭಿಸಿತು .

34. ಸಾಂಪ್ರದಾಯಿಕ ವ್ಯಾಪಾರಿ ಸಮುದಾಯಗಳ ಸಾಮಾಜಿಕ ಸಂಘಟನೆಯನ್ನು ವಿವರಿಸಿ .

ಭಾರತದ ಆರ್ಥಿಕ ಮತ್ತು ಸಮಾಜ ವ್ಯವಸ್ಥೆ ತಟಸ್ಥವಾದುದು ಮತ್ತು ಆರ್ಥಿಕ ಮಾರ್ಪಾಡುಗಳು


ವಸಾಹತುಶಾಹಿ ಆಗಮನದಿಂದ ಆರಂಭವಾಯಿತು . ಭಾರತದ ಗ್ರಾಮಗಳ ಆರ್ಥಿಕ ವ್ಯವಸ್ಥೆ
ಪ್ರಾಥಮಿಕವಾಗಿ ಮಾರುಕಟ್ಟೆ ರಹಿತವಾಗಿತ್ತು . ವಸಾಹತುಶಾಹಿಯ ಪೂರ್ವ ದಲ್ಲಿಯೇ ಭಾರತದ ಆರ್ಥಿಕ
ವ್ಯವಸ್ಥೆ ವ್ಯಾಪಕವಾಗಿ ಹಣ ನಾಣ್ಯ ಚಲಾವಣೆ ಇತ್ತು . ಭಾರತದಲ್ಲಿ ಸಂಕೀರ್ಣವಾದ ವ್ಯಾಪಾರಿ ಜಾಲಗಳು
ಅಸ್ತಿತ್ವದಲ್ಲಿದ್ದವು . ಸಾಂಪ್ರದಾಯಿಕ ವಾಣಿಜ್ಯ ಸಮುದಾಯಗಳು ಅಥವಾ ಜಾತಿಗಳು ತಮ್ಮದೇ ಆದ
ಬ್ಯಾಂಕ್ ಮತ್ತು ಲೇವಾದೇವಿ ವ್ಯವಸ್ಥೆ ಹೊಂದಿದ್ದವು . ಉದಾ : ಹುಂಡಿ ಅಥವಾ ವಸ್ತು ವಿನಿಮಯ ಚೀಟಿಯು
( Bill of exchange ) ವಸ್ತುಗಳ ವಿನಿಮಯದ ಪ್ರಮುಖ ಸಾಧನವಾಗಿತ್ತು . ಆಗ ವ್ಯಾಪಾರದ
ವಹಿವಾಟುಗಳು ಜಾತಿಯೊಳಗೆ ನಡೆಯುತ್ತಿತ್ತು . ದೇಶದ ಒಂದು ಭಾಗದ ವರ್ತಕನು ನೀಡುವ ಹುಂಡಿ
ಇನ್ನೊಂದು ಭಾಗದಲ್ಲಿರುವ ಮತ್ತೊಬ್ಬ ವರ್ತಕನು ಸ್ವೀಕರಿಸಬಹುದಾಗಿತ್ತು .

ತಮಿಳುನಾಡಿನ ನಗರ್ತಕರ ಜಾತಿ ಆಧಾರಿತ ವ್ಯಾಪಾರ ವ್ಯವಸ್ಥೆ : ಜಾತಿ ಆಧಾರಿತ ಆಂತರಿಕ ವಹಿವಾಟು
ವ್ಯವಸ್ಥೆಗೆ ತಮಿಳುನಾಡಿನ ನಗರ್ತಕರು ಒಂದು ಉದಾಹರಣೆ . ಇವರು ತಮ್ಮೊಳಗೆ ಹಣದ
ವಹಿವಾಟುಗಳಾದ ಸಾಲ ಮತ್ತು ಉಳಿತಾಯದ ಠೇವಣಿ ಮಾಡುತ್ತಾ ಆಂತರಿಕವಾಗಿ ಸಾಮಾಜಿಕ
ಸಂಬಂಧಗಳನ್ನು ಭದ್ರಪಡಿಸಿಕೊಂಡಿದ್ದಾರೆ . ಹಲವಾರು ಸಾ ೦ ಪ್ರದಾಯಿಕ ವ್ಯಾಪಾರಿ
ಸಮುದಾಯಗಳಂತೆ ನಗರ್ತಕರ ಬ್ಯಾಂಕ್ ವ್ಯವಸ್ಥೆಯು ಅವಿಭಕ್ತ ಕುಟುಂಬಗಳ ವ್ಯಾಪಾರಿ ಮಳಿಗೆಯಂತೆ
ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ . ಇದರಿಂದ ವ್ಯಾಪಾರ ಮತ್ತು ಬ್ಯಾಂಕಿಂಗ್‌ಸಂಘಟಿತವಾಗಿದೆ .
ಸಾಂಪ್ರದಾಯಿಕ ವಾಣಿಜ್ಯ ಅಥವಾ ವ್ಯಾಪಾರ ಸಮುದಾಯಗಳು ಭಾರತದಲ್ಲಿ ಜಾತಿ ಮತ್ತು ಆರ್ಥಿಕ
ವ್ಯವಸ್ಥೆಯು ನಿಕಟ ಸಂಬಂಧವನ್ನು ಹೊಂದಿವೆ . ಈ ರೀತಿಯ ಸಂಬಂಧವನ್ನು ಭೂಮಿಯ ಒಡೆತನ ,
ವೃತ್ತಿಯ ವೈವಿದ್ಯತೆ ಮತ್ತು ಇನ್ನಿತರ ಅಂಶಗಳಲ್ಲಿ ಗಮನಿಸಬಹುದಾಗಿದೆ .

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

ವಾಸ್ತವಿಕವಾಗಿ ವೈಶ್ಯ ಎಂಬುದು ಚತುವರ್ಣದಲ್ಲಿ ಒಂದು ವರ್ಗವಾಗಿದೆ . ಈ ರೀತಿ ವ್ಯಾಪಾರಿಗಳನ್ನು


ಪ್ರಾಚೀನ ಭಾರತದ ವರ್ಣಾಶ್ರಮ ವ್ಯವಸ್ಥೆಯಲ್ಲಿ ಗುರ್ತಿಸಿಕೊಳ್ಳುವ ಮೂಲಕ ವ್ಯಾಪಾರೋದ್ಯಮಿ ಮತ್ತು
ವಾಣಿಜ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿತ್ತು . ಉತ್ತರ ಭಾರತದ ‘ ಬನಿಯ ‘ ಎಂಬ ವೈಶ್ಯರ ಸಮೂಹ
ಅನಾದಿಕಾಲದಿಂದಲೂ ವಾಣಿಜ್ಯ ಅಥವಾ ವ್ಯಾಪಾರವು ಸಾಂಪ್ರದಾಯಿಕ ವೃತ್ತಿಯಾಗಿತ್ತು . ಕೆಲವು ನಿರ್ದಿಷ್ಟ
ಜಾತಿ ಸಮೂಹಗಳು ಕೂಡ ವ್ಯಾಪಾರೋದ್ಯಮಗಳಿಗೆ ಪ್ರವೇಶಿಸಿ ಏಣಿಶ್ರೇಣಿಯಲ್ಲಿ ಉನ್ನತ ಅಂತಸ್ತನ್ನು
ಪಡೆದುಕೊಂಡಿದ್ದಾರೆ .

ಸಾಂಪ್ರದಾಯಿಕ ವ್ಯಾಪಾರಿ ಸಮುದಾಯಗಳ ಉಗಮ

ಭಾರತದ ವ್ಯಾಪಾರಿ ಚಟುವಟಿಕೆ ಕೇವಲ ‘ ವೈಶ್ಯ ‘ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ ಇದರಲ್ಲಿ


ಇನ್ನಿತರ ಧಾರ್ಮಿಕ ಹಾಗೂ ಜಾತಿ ಸಮೂಹಗಳಿವೆ . ಉದಾ : ಪಾರ್ಸಿಗಳು , ಸಿಂಧಿಗಳು , ಭೋಹರಾಸ್ ,
ಜೈನರು ಮತ್ತು ಮಾರ್ವಾಡಿಗಳು , ವಸಾಹತುಶಾಹಿ ಅವಧಿಯಲ್ಲಿ ಹಿಂದುಳಿದ ಆದಿವಾಸಿ ಸಮೂಹವಾದ
ಬಂಜಾರ ಸಮೂಹ ನಿಯಂತ್ರಿಸುತ್ತಿತ್ತು . ಈ ಸಮುದಾಯಗಳು ವಿವಿಧ ಸಂಘಟನೆ ಯಾಗಿ ಮಾರ್ಪಾಡಾಗಿ
ವಾಣಿಜ್ಯ ಅಥವಾ ವ್ಯಾಪಾರ ಸಮೂಹವಾಗಿದೆ . ಈ ರೀತಿ ವಿವಿಧ ಸಾಂಪ್ರದಾಯಿಕ ವ್ಯಾಪಾರಿ
ಸಮುದಾಯಗಳು ಸಾಮಾಜಿಕವಾಗಿ ಸಂಘಟನೆಯಾಯಿತು .

35. ಪ್ರಸ್ತುತ ಜಗತ್ತಿನಲ್ಲಿ ಮಾದ್ಯಮಗಳ ಬಗ್ಗೆ ವಿವರಣೆ ನೀಡಿರಿ .

21 ನೇ ಶತಮಾನದಲ್ಲಿ ಸಂವಹನ ತಂತ್ರಜ್ಞಾನವು ಮಿಲಿಯನ್‌ಗಟ್ಟಲೆ ಜನ ಕ್ಷಣಾರ್ಧದಲ್ಲಿ ಮಾಹಿತಿಯನ್ನು


ಒಂದೇ ಕಾಲದಲ್ಲಿ ವಿಶ್ವದ ಮೂಲೆ ಮೂಲೆಯಲ್ಲಿ ಹಂಚಿಕೊಳ್ಳಬಹುದು . ಮಾಹಿತಿಯನ್ನು ವ್ಯಕ್ತಿಯಿಂದ ವ್ಯಕ್ತಿ
ಅಥವಾ ಸಮೂಹಕ್ಕೆ ಮಾತಿನ ಮೂಲಕ ಅಥವಾ ಸಮೂಹ ಮಾಧ್ಯಮಗಳ ಮೂಲಕ ವರ್ಗಾಯಿಸುವ
ಸಂವಹನ ಕ್ರಿಯೆಯು ಹೆಚ್ಚಿನ ಮಹತ್ವ ಪಡೆದಿದೆ . ಮಾಧ್ಯಮ ನೀಡುವ ಮಾಹಿತಿಗಿಂತ ಮಾಧ್ಯಮದ
ಪ್ರಕಾರದಿಂದ ಸಮಾಜವು ಪ್ರಭಾವಿತವಾಗುತ್ತದೆ . ವಿದ್ಯುನ್ಮಾನ ಮಾಧ್ಯಮವು ಜಾಗತಿಕ ಗ್ರಾಮವನ್ನು
ಸೃಷ್ಟಿಸಿದೆ . ದಿನದ 24 ಗಂಟೆಯೂ ವಾರ್ತಾವಾಹಿನಿಗಳು ವಾರ್ತೆಯನ್ನು ಪ್ರಸಾರ ಮಾಡುತ್ತಲೇ ಇರುತ್ತದೆ
. ಅಂತರ್ಜಾಲವು ಸಂವಹನದ ಕೇಂದ್ರ ಬಿಂದುವಾಗಿದೆ . ಧ್ವನಿ ಗುರ್ತಿಸುವಿಕೆ , ಬ್ರಾಡ್ ಬ್ಯಾಂಡ್
ಟ್ರಾನ್ಸಿಷನ್ , ವೆಬ್ ಕಾಸ್ಟಿಂಗ್ ಮತ್ತು ಕೇಬಲ್ ಸಂಪರ್ಕಗಳ ತಂತ್ರಜ್ಞಾನ ಪ್ರಗತಿಯಿಂದ ಅಂತರ್ಜಾಲದ
ಮೂಲಕ ಮಾಹಿತಿ , ಮನರಂಜನೆ , ಜಾಹಿರಾತು ಮತ್ತು ವಾಣಿಜ್ಯ ಮಾಹಿತಿಗಳು ಸಮೂಹ ಪ್ರೇಕ್ಷಕರಿಗೆ
ಕ್ಷಣಾರ್ಧದಲ್ಲಿ ತಲುಪುತ್ತದೆ .

ಷೋಸ್ಟ್‌ಮ್ಯಾನ್ ಪ್ರಕಾರ ಮುದ್ರಣ ಮಾಧ್ಯಮವು ಜನರ ತಾರ್ಕಿಕ ಆಲೋಚನೆಯನ್ನು ಬೆಳೆಸಿದರೆ ,


ವಿದ್ಯುನ್ಮಾನ ಮನರಂಜನೆಯನ್ನು ಸೃಷ್ಟಿಸುತ್ತದೆ . ರಾಬರ್ಟ್ ಪುಟ್ನಂರವರು ಮಾಧ್ಯಮವನ್ನು ಸಾಮಾಜಿಕ
ಬಂಡವಾಳ ಎಂದು ಹೋಲಿಕೆ ಮಾಡಿದ್ದಾರೆ . ದೂರದರ್ಶನ ವೀಕ್ಷಣೆಯು ಸಾಮಾಜಿಕ ನಂಬಿಕೆ ಮತ್ತು
ಸಾಮೂಹಿಕ ಸದಸ್ಯತ್ವಕ್ಕೆ ಮಾರಕವಾಗಿದೆ . ಇದೇ ಮಾನದಂಡವನ್ನು ಬಳಸಿ , ದಿನಪತ್ರಿಕೆಗಳನ್ನು
ಓದುವುದರಿಂದ ಸಾಮಾಜಿಕ ನಂಬಿಕೆ ಮತ್ತು ಸಾಮೂಹಿಕ ಸದಸ್ಯತ್ವಕ್ಕೆ ಪೂರಕವಾಗುತ್ತದೆ . ಮಾಧ್ಯಮವು
ಖಾಸಗಿ ಬಂಡವಾಳ ಶಾಹಿಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ ಮತ್ತು ಬಡವರ ಹಿತಾಸಕ್ತಿಗಳು
ಕ್ಷೀಣಿಸುತ್ತವೆ .

ಸಂಸ್ಕೃತಿಯ ಪ್ರಕಾರಗಳಿಂದ ಮನರಂಜನೆ ನೀಡಲೋಸುಗ ಇದನ್ನು ಲಾಭಕೋರತನಕ್ಕೆ ಬಳಸುತ್ತಾರೆ .


ಇದರಿಂದ ಕಲೆಯು ಕ್ಷೀಣಿಸಿ , ವಾಣಿಜ್ಯಕರಣಗೊಂಡರೆ , ಸಂಸ್ಕೃತಿಯು ಮನರಂಜನೆಯಾಗಿ
ಮಾರ್ಪಡುತ್ತದೆ . ಸಾರ್ವಜನಿಕ ವಲಯವು ಸಮಾನ ಮನಸ್ಕರ ಮುಕ್ತ ಚರ್ಚೆಯ ಕೇಂದ್ರಗಳಾಗಿರುತ್ತವೆ .

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

ಸಮೂಹ ಮಾಧ್ಯಮಗಳ ಮನರಂಜನೆಯ ಬೆಳವಣಿಗೆಯಿಂದ ಸಾರ್ವಜನಿಕ ವಲಯಗಳು ಕ್ಷೀಣಿಸಿದೆ .


ಜನಾಭಿಪ್ರಾಯವು ಮುಕ್ತ ಮತ್ತು ತಾರ್ಕಿಕ ಚರ್ಚೆಯಿಲ್ಲದೆ ಕೈಚಳಕ ಮತ್ತು ನಿಯಂತ್ರಣದಿಂದ
ರೂಪುಗೊಳ್ಳುತ್ತದೆ . ಉದಾ : ಜಾಹಿರಾತುಗಳು ಜೀನ್ ಬುಡ್ರಿಲಾರ್ಡ್ ರವರು ಸಮೂಹ ಮಾದ್ಯಮಗಳ
ಪ್ರಭಾವವನ್ನು ‘ ಕೃತಕ ನೈಜತೆ ‘ ಎಂದಿದ್ದಾರೆ . ಜೀವನವು ದೂರದರ್ಶನದಿಂದ ತುಂಬಾ
ಪ್ರಭಾವಿತವಾಗಿದೆ . ದೂರದರ್ಶನವು ನಮ್ಮ ಜೀವನವನ್ನು ಪ್ರತಿನಿಧಿಸುವ ಬದಲು ನಾವು ಹೇಗಿರಬೇಕು
ಎಂದು ನಿರ್ದೇಶಿಸುತ್ತದೆ .

1994-95 ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಓ.ಜೆ. ಸಿಂಸನ್‌ನ ಕೋರ್ಟ್ ವಿಚಾರಣೆಯ ಪ್ರಕರಣ
ಇದನ್ನು ‘ ಈ ಶತಮಾನದ ವಿಚಾರಣೆ ‘ ಎನ್ನಬಹುದು . ಸಮೂಹ ಮಾಧ್ಯಮಗಳು ಹೊಸ ಸತ್ಯ ಎಂದರೆ
ಕೃತಕ ಸತ್ಯವನ್ನು ಮಾದ್ಯಮ ಚಿತ್ರಣದ ಮೂಲಕ ಸೃಷ್ಟಿಸುತ್ತಾರೆ ಎಂಬ ಅಭಿಪ್ರಾಯವಿದೆ .

36. ಸಮೂಹ ಮಾಧ್ಯಮಗಳ ಮೇಲೆ ಜಾಗತೀಕರಣದ ಪ್ರಭಾವವನ್ನು ವಿವರಿಸಿ .

ಸಮೂಹ ಮಾಧ್ಯಮಗಳ ಮೇಲೆ ಜಾಗತೀಕರಣದ ಪ್ರಭಾವ ಜಾಗತಿಕ ಪ್ರಪಂಚದಲ್ಲಿ ಮಾದ್ಯಮಗಳು


ಅತ್ಯಂತ ಪ್ರಭಾವಶಾಲಿ ಪಾತ್ರ ವಹಿಸುತ್ತವೆ . 1970 ರ ತನಕ ಸ್ಥಳೀಯ ಸರ್ಕಾರದ ನೀತಿ – ನಿಯಮಗಳ
ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು . ಕಳೆದ ನಾಲ್ಕು ದಶಕಗಳಲ್ಲಿ ಮಾದ್ಯಮ ಉದ್ದಿಮೆಯು
ಗಣನೀಯವಾಗಿ ಬದಲಾಗಿದೆ . ರಾಷ್ಟ್ರೀಯ ಮಾರುಕಟ್ಟೆಗಳು ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ
ಜಾಗತಿಕ ಮಾರುಕಟ್ಟೆಯಾಗಿ ರೂಪಾಂತರವಾಗಿದೆ . ಪ್ರಾಂತೀಯ ಮುದ್ರಣ ಮಾದ್ಯಮದ ಮೇಲೆ
ಜಾಗತೀಕರಣದ ಪ್ರಭಾವ ಭಾರತೀಯ ಪತ್ರಿಕೆಗಳ ಪ್ರಸರಣದಲ್ಲಿ ಪ್ರಗತಿಗೆ ಹಲವಾರು ಕಾರಣಗಳಿವೆ .
ಮೊದಲನೆಯದಾಗಿ ನಗರ ಪ್ರದೇಶಗಳಿಗೆ ಶಿಕ್ಷಿತರ ವಲಸೆಯ ಹೆಚ್ಚಳ , ಹಿಂದೂಸ್ಥಾನ್ ಹಿಂದಿ
ದಿನಪತ್ರಿಕೆಯ 64,000 ಪ್ರತಿಗಳನ್ನು ಮುದ್ರಿಸುತ್ತಿದ್ದರು .

2005 ರ ಹೊತ್ತಿಗೆ 4,25,000 ಪ್ರತಿಗಳು ಪ್ರಸರಣ ವಾಗುತ್ತಿದ್ದವು . ಇದಕ್ಕೆ ಕಾರಣ ದೆಹಲಿಯ ಒಟ್ಟು
ಜನಸಂಖ್ಯೆ ಒಂದು ಕೋಟಿ 47 ಲಕ್ಷವಾಗಿತ್ತು . ಈ ರೀತಿ ಮುದ್ರಣ ಪ್ರಸರಣದಲ್ಲಿ ಕ್ರಾಂತಿಯುಂಟಾಗಿ
ಪ್ರತಿಗಳ ಸಂಖ್ಯೆ ಏರತೊಡಗಿತು . ವಿವಿಧ ಹೆಸರಿನ ಪತ್ರಿಕೆಗಳು ಹೊಸದಾಗಿ ಪ್ರಾರಂಭಿಸಲ್ಪಟ್ಟವು . ಅನೇಕ
ರೀತಿಯ ತಾಂತ್ರಿಕತೆ ಬಳಸಿಕೊಂಡು ಮುದ್ರಣ ಮಾದ್ಯಮದವರು ವಿದ್ಯುನ್ಮಾನ ಮಾದ್ಯಮದ ಮಾಲಿಕತ್ವದ
ಮೇಲೆ ಹಿಡಿತ ಸಾಧಿಸುತ್ತಿದ್ದಾರೆ . ವಿದ್ಯುನ್ಮಾನ ಮಾದ್ಯಮದ ಮುಂದೆ ಮುದ್ರಣ ಮಾಧ್ಯಮ ಕ್ಷೀಣಿಸುತ್ತದೆ
ಎಂಬ ಆತಂಕವಿದ್ದರೂ ಪತ್ರಿಕೆಗಳ ಪ್ರಸರಣ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ . ಇದು
ಜಾಗತೀಕರಣದ ಪ್ರತ್ಯಕ್ಷ ಪ್ರಭಾವ .

ವಿದ್ಯುನ್ಮಾನ ಮಾದ್ಯಮವಾದ ದೂರದರ್ಶನದ ಮೇಲೆ ಜಾಗತೀಕರಣದ ಪ್ರಭಾವ

1991 ರಲ್ಲಿ ಸರ್ಕಾರಿ ಪ್ರಾಯೋಜಿತ ಏಕೈಕ ದೂರ ದರ್ಶನ ವಾಹಿನಿ ಭಾರತದಲ್ಲಿತ್ತು . 1998 ರ ಹೊತ್ತಿಗೆ
ಜಾಗತೀಕರಣದ ನೇರ ಪ್ರಭಾವದಿಂದಾಗಿ ಖಾಸಗಿ ಉಪಗ್ರಹ ಆಧಾರಿತ ಚಾನೆಲ್‌ಗಳ ಸಂಖ್ಯೆ
ಹೆಚ್ಚಳವಾಗತೊಡಗಿತು . 70 ಚಾನೆಲ್‌ಗಳು ಪ್ರಾರಂಭಗೊಂಡವು . ಈ ರೀತಿ ಉಪಗ್ರಹ ಆಧಾರಿತ
ಚಾನೆಲಗಗಳ ಹೆಚ್ಚಳವು ಭಾರತದ ಪ್ರಗತಿಯ ಮಾನದಂಡವಾಗಿದೆ . ಕೌಟುಂಬಿಕ ಕಾರ್ಯಕ್ರಮಗಳು
ಭಾರತೀಯ ವೀಕ್ಷಕರನ್ನು ಆಕರ್ಷಿಸುತ್ತವೆ . ಆದ್ದರಿಂದ ಈ ಕಂಪನಿಗಳೂ ಕೂಡ ಪ್ರಾದೇಶಿಕ
ವಾಹಿನಿಗಳನ್ನು ಆರಂಭಿಸಿದ್ದಾರೆ . ಜಾಗತೀಕರಣದ ಪ್ರಭಾವದಿಂದ ಸಮೂಹ ಮಾದ್ಯಮಗಳು ಅತ್ಯಂತ
ಜನಪ್ರಿಯತೆಯನ್ನು ಗಳಿಸಿಕೊಂಡಿದೆ . ಜಗತ್ತು ಚಿಕ್ಕದಾಗುತ್ತಿದೆ . ವೈವಿದ್ಯಮಯಾದ ವಿಷಯಗಳನ್ನು ಬೆರಳ

Download: KannadaPDF.com https://KannadaPdf.com/


06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು ನೋಟ್ಸ್ - KannadaPdf.com

ತುದಿಯಿಂದ ಪಡೆಯಬಹುದು . ಒಟ್ಟಿನಲ್ಲಿ ಹೇಳುವುದಾದರೆ ಸಮೂಹ ಮಾಧ್ಯಮದಲ್ಲಿ ಶೀಘ್ರ ಪ್ರಗತಿಯನ್ನು


ಕಂಡಿದ್ದೇವೆ .

Download: KannadaPDF.com https://KannadaPdf.com/

You might also like