You are on page 1of 1

ಇಂದಿನ ಸಮಾಜದಲ್ಲಿ, ಮಾಧ್ಯಮವು ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ.

ಸಮಾಜವನ್ನು ಸದೃಢಗೊಳಿಸುವಲ್ಲಿ ಮಾಧ್ಯಮವು ಮಹತ್ವದ ಪಾತ್ರ ವಹಿಸಿದೆ.


ಮಾಧ್ಯಮವನ್ನು ಸಮಾಜದ "ಕನ್ನಡಿ" ಎಂದೇ ಹೇಳಬಹುದು. ನಮ್ಮ ಸಮಾಜವು ಹಲವಾರು
ರೀತಿಯಲ್ಲಿ ಮಾಧ್ಯಮಗಳಿಂದ ಪ್ರಭಾವಿತವಾಗಿರುತ್ತದೆ. ಜನಸಾಮಾನ್ಯರಿಗೆ ಸಾಕಷ್ಟು
ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು
ರೂಪಿಸಲು ಮಾಧ್ಯಮ ಸಹಕಾರಿಯಾಗಿದೆ! ಜನರ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ,
ಜಗತ್ತಿನೆಲ್ಲೆಡೆಯ ಆಗುಹೋಗಗಳನ್ನು ನಾವಿದ್ದಲ್ಲಿಗೆ ತಲುಪಿಸುವಲ್ಲಿ ಮಾಧ್ಯಮವು
ನಿಸ್ಸಂದೇಹವಾಗಿ ಮಹತ್ವದ ಪಾತ್ರವನ್ನು ವಹಿಸಿದೆ. ಆದರೆ ದುರದೃಷ್ಟವಶಾತ್, ಮಾಧ್ಯಮವು
ಇಂದಿನ ದಿನಗಳಲ್ಲಿ ಉದ್ಯಮವಾಗಿ ಮಾರ್ಪಟ್ಟಿದೆ. ವಾಣಿಜ್ಯ ವಲಯದ ಎಲ್ಲ ತಂತ್ರಗಳು
ಇಲ್ಲಿ ಸಹ ಮನೆಮಾಡಿವೆ. ಬಂಡವಾಳಶಾಹಿಗಳ ಹೂಡಿಕೆ, ಜಾಹೀರಾತುಗಳ ಅಬ್ಬರ, ರಾಜಕೀಯ
ಒತ್ತಡ, propaganda, ನೆಗಟಿವ್ ಸುದ್ದಿಗಳು... ಹೆಚ್ಚಿದ್ದು ಟೆಲಿವಿಷನ್ ರೇಟಿಂಗ್ ಅಂಕಗಳನ್ನು
ಗಳಿಸುವುದೇ ಗುರಿಯಾಗಿದೆ. ಇಂತಹ ಮಾಧ್ಯಮ ಎಷ್ಟರ ಮಟ್ಟಿಗೆ ನಿಷ್ಪಕ್ಷವಾಗಿ
ಸಾರ್ವಜನಿಕ ಪ್ರಜ್ಞೆ ಮೂಡಿಸಬಲ್ಲುದು ಎಂಬ ಪ್ರಶ್ನೆಯನ್ನು ಸೃಷ್ಟಿಸಿದೆ! ಮಾಧ್ಯಮ
ಎಂಬುದು ಪ್ರಜಾಪ್ರಭುತ್ವದ 4ನೇ ಸ್ಥಂಬವಾಗಿದ್ದು, ಪ್ರಭುತ್ವವನ್ನು ಖುಷಿ ಪಡಿಸಲು
ಶ್ರಮಿಸದೆ, ಗಟ್ಟಿಯಾಗಿ ಪ್ರಶ್ನಿಸಬೇಕು. ಮಾಧ್ಯಮವು ತನ್ನ ಜವಾಬ್ದಾರಿಯನ್ನು
ಗುರುತಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದಲ್ಲಿ ಮಾತ್ರ ಅದು ರಾಷ್ಟ್ರವನ್ನು ಕಟ್ಟುವಲ್ಲಿ
ದೊಡ್ಡ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾನು ನಂಬುತ್ತೇನೆ. ಇಲ್ಲವಾದಲ್ಲಿ
ಮಾಧ್ಯಮದ ಮೇಲೆ ವಿಶ್ವಾಸಾರ್ಹತೆಯ ಕೊರತೆ ಇನ್ನೂ ಹೆಚ್ಚುವಲ್ಲಿ ಯಾವುದೇ
ಆಶ್ಚರ್ಯವಿಲ್ಲ!

You might also like