You are on page 1of 116

ಔಷಧೀಯ ಗುಣವುಳ್ಳ '

ಉಪಯುಕ
ಔಷಧೀಯ ಗುಣವುಳ್ಳ
ಉಪಯುಕ್ತ ಸೊಪ್ಪು-ತರಕಾರಿಗಳು

ಲೇಖಕರು:

ಡಾ॥ ವಸುಂಧರಾ ಭೂಪತಿ


ಆಯುರ್ವೇದ ತಜ್ಞವೈದ್ಕೆ

ಕಾಟ ಹೊ. ಶ್ರೀನಿಬಾಸಯ್ಯನವಕ


S T TIT ನ”
NoCORE es ಪಣ ee ತ ಪುತಾರ್ಥಾ ತಾಸ PES 7.

ಪ್ರಕಾಶಕರು
ದಿವ್ಯಚಂದ್ರ ಪ್ರಕಾಶನ
ೆ,
ನಂ. 45, 1 ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತ
್‌ಬೋರ್ಡ್‌ ಕಾಲೋನಿ
ಪಾಪಣ್ಣ ನ ತೋಟ, ಕರ್ನಾಟಕ ಹೌಸಿಂಗ
ಗಳೂರು-560 079
2ನೇ ಹಂತ, ಬಸವೇಶ್ವ ರನಗರ, ಬೆಂ
“Qushadiya Gunavulla UPAYUKTHA SOPPU-THARAKARIGALU”-
written by Dr. Vasundhara Bhupathi and Published by
Smt. B. M. Komala for M/s. Divyachandra Prakashana, No. 45,
I Main, 2nd Cross, Papanna Garden, KHB Colony, 11 Stage,
Basaveshwaranagar, Bangalore - 560 079. Ph : 3404627

ಪ್ರಥಮ ಮುದ್ರಣ : 2001

ಮುಖಚಿತ್ರ ವಿನ್ಯಾಸ ಕಲೆ : ಶಂಭುಲಿಂಗ ಹಿರೇಮಠ್‌

ಹಕ್ಕುಗಳು: ಲೇಖಕಿಯದು

ಪುಟಗಳು : 112

ಬೆಲೆ : ರೂ. 20-00

ಮಾರಾಟ ಮಳಿಗೆ ವಿಳಾಸ :


ದಿವ್ಯಚಂದ್ರ ಪ್ರಕಾಶನ
6/7, "ಕಾಳಿಕಾ ಸೌಧ, ಪೂರ್ಣಯ್ಯ ಛತ್ರದ
ರಸ್ತೆ
(ಶ್ರೀ ವೆಂಕಟೇಶ್ವರ ಸ್ವೀಟ್‌ ಸ್ಟಾಲ್‌ ಪಕ್ಕದ ರಸ್ತೆ),
ಬಳೇಪೇಟೆ ಕ್ರಾಸ್‌, ಬೆಂಗಳೂರು - 560053. ದೂರವಾಣಿ : 3404627

ಮುದ್ರಕರು: ಜಗನ್ನಾಥ್‌ ಆಫ್‌ಸೆಟ್‌ ಪ್ರಿಂಟರ್ಸ್‌, ಬೆಂಗಳೂರು -53


ಪೂಜನೀಯರಾದ
ತಾಳಿಕೋಟೆ
ದಿಟ ಶಿ
ಶ್ರೀ ವೆಂಕರೋಬರಾಯರಿಗೆ
ಸ್ನೇಹ ನುಡಿ
ಈ ತಲೆಕಟ್ಟನ್ನು ಓದಿದವರಿಗೆ ಆಶ್ಚರ್ಯವಾಗಬಹುದು. ಎಲ್ಲಾ
ಪುಸ್ತಕಗಳೂ ಮುನ್ನುಡಿಯನ್ನು ಹೊಂದಿರುವಾಗ ಈ ಪುಸ್ತಕದಲ್ಲಿ ಇದೇನು ಹೊಸ
ರೀತಿಯ "ಸ್ನೇಹ ನುಡಿ' ಎಂದು. ಇದಕ್ಕೆ ಕಾರಣವಿದೆ. ಡಾ|| ವಸುಂಧರಾ
ಭೂಪತಿಯವರ ಪುಸ್ತಕಗಳಿಗೆ ಮುನ್ನುಡಿ ಬರೆಯುವಷ್ಟು ಸಾಹಿತ್ಯ ಪ್ರಪಂಚದಲ್ಲಿ
ನಾನು ದೊಡ್ಡವನಲ್ಲ. ವೈದ್ಯ ಸಾಹಿತ್ಯಕ್ಕೆ ಅವರು ಮಾಡಿರುವಷ್ಟು ಸೇವೆಯನ್ನೂ
ನಾನು ಮಾಡಿಲ್ಲ. ಆದರೂ ಡಾ|| ವಸುಂಧರರ ಬಗ್ಗೆ ಇರುವ ಸ್ನೇಹ ಭಾವದಿಂದ
ಕೆಲವು ಪದಗಳನ್ನು ನಾನು ಬರೆಯುತ್ತಿದ್ದೇನೆ.
ಸೊಪ್ಪು ತರಕಾರಿಗಳನ್ನು ಎಲ್ಲರೂ ಆಹಾರವಾಗಿ ಬಳಸುತ್ತಾರೆ. ಇವುಗಳ
ಆಹಾರ ಗುಣಗಳಾಗಲೀ, ಔಷಧೀಯ ಗುಣಗಳಾಗಲೀ ತಿಳಿದವರು ವಿರಳ.
ಆದ್ದರಿಂದ ಸೊಪ್ಪು ತರಕಾರಿಗಳ ಔಷಧೀಯ, ಆಹಾರ ಗುಣಗಳ ಬಗ್ಗೆ ಪುಸ್ತಕವನ್ನು
ಬರೆದ ಡಾ|| ವಸುಂಧರ ಭೂಪತಿಯವರು ಅಭಿನಂದನಾರ್ಹರು.
ಪ್ರಪಂಚದಲ್ಲೇ ಅತ್ಯಂತ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೇದವು,
ನಾವು ಪ್ರತಿನಿತ್ಯ ಬಳಸುವ ಸೊಪು ಗಳನ್ನು "ಶಾಕಾ' ಎಂಬ ಸಂಸ್ಕೃತದ ಹೆಸರನ್ನು
ಕೊಟ್ಟಿದೆ ಮತ್ತು ಸೊಪು ಗಳನ್ನು "ಅಪರ' [ಕೀಳುದರ್ಜೆ] ಆಹಾರ ಎಂದು
ಪರಿಗಣಿಸಿದೆ. ಅದಕ್ಕೆ ಕಾರಣಗಳು ಹೀಗಿರಬಹುದು. ಹಿಂದೆ ಸಸ್ಮಸಮೃದ್ದಿ
ಇದ್ದಿದ್ದರಿಂದ ಜನರು ಹಣ್ಣು, ಹಂಪಲುಗಳನ್ನು ಶ್ರೇಷ್ಠವಾದ ಆಹಾರವೆಂದೂ,
ಎಲ್ಲೆಂದರಲ್ಲಿ ಬೆಳೆಯುತ್ತಿದ್ದ ಸೊಪು ಎಗಳನ್ನು ಕೀಳುದರ್ಜೆಯ ಆಹಾರವೆಂದೂ
ಪರಿಗಣಿಸುತ್ತಿದ್ದರು. ಹೀಗಿದ್ದರೂ ಹಿಂದಿನ ಕಾಲದಲ್ಲಿ ಬೆಳೆಯುತ್ತಿದ್ದ ಸೊಪ್ಪುಗಳ
ಗುಣಗಳು ಆಯುರ್ವೇದ ಗ್ರಂಥಗಳಲ್ಲಿ ವರ್ಣಿಸಲಾಗಿದೆ.
ಈ ಪುಸ್ತಕದಲ್ಲಿ ನಾವು ಬಳಸುವ ಅನೇಕ ತರಕಾರಿ, ಸೊಪ್ಪುಗಳ ಗುಣಗಳನ್ನು
ಲೇಖಕಿಯು ಸರಳವಾದ ಭಾಷೆಯನ್ನು ಬಳಸಿ, ಪರಿಣಾಮಕಾರಿಯಾದ ಧಾಟಿಯಲ್ಲಿ
ಬರೆದಿದ್ದಾರೆ. ಇವುಗಳ ಜೊತೆಗೆ ಅಡಿಗೆ ಮನೆಯಲ್ಲಿರುವ ಮೆಣಸು, ಧನಿಯ.
ತುಪ್ಪ ಮುಂತಾದವುಗಳ ಗುಣಗಳು ವರ್ಣಿತವಾಗಿದೆ. “ಆಹಾರ ಮತ್ತು ಮನಸ್ಸು''
ಎಂಬ ವಿಷಯದೊಂದಿಗೆ ಪ್ರಾರಂಭವಾಗಿರುವ ಈ ಪುಸ್ತಕದಲ್ಲಿ ಲೇಖಕಿಯು
ಆಹಾರವನ್ನು ಸೇವಿಸುವಾಗ ಮನಸ್ಸಿಟ್ಟು ತಿನ್ನಬೇಕು ಎಂದು ತಿಳಿಸುತ್ತಾರೆ.
ಡಾಟ ವಸುಂಧರಾ ಭೂಪತಿಯವರು ಸೊಪ್ಪು, ತರಕಾರಿಗಳ ಬಗ್ಗೆ
ತಿಳಿಸುವಾಗ ಉಪಲಬ್ಧವಿರುವ ಗಾದೆಗಳನ್ನು ಸೇರಿಸಬಹುದಿತ್ತು. ಉದಾಹರಣೆಗೆ,
“ಹೊನೆಗೊನೆ ಸೊಪ್ಪು ಹೋದ ಕಣ್ಣನ್ನು ಬರಿಸಿತು' ಎಂಬ ಜಾನಪದ ಗಾದೆಯನ್ನು
ಸೇರಿಸಬಹುದು.
ಅನೇಕ ಜನೋಪಯೋಗಿ ಪುಸ್ತಕಗಳನ್ನು ಬರೆದಿರುವ ಡಾ।! ವಸುಂಧರಾ
ಭೂಪತಿಯವರಿಗೆ ಇನ್ನೂ ಹೆಚ್ಚು ಉಪಯುಕ್ತ ಪುಸ್ತಕಗಳನ್ನು ರಚಿಸುವೆ
ಶಕ್ತಿಯನ್ನು ಕೊಡಲಿ ಎಂದು ವೈದ್ಯ ದೇವತೆಯಾದ ಭಗವಾನ್‌ ಧನ್ವಂತರಿಯನ್ನು
ಪ್ರಾರ್ಥಿಸುತ್ತೇನೆ.

ಡಾ|| ಎನ್‌. ಅನಂತರಾಮನ್‌


ಅನಂತ ಆಯುರ್ವೇದಿಕ್‌ ಸೆಂಟರ್‌
ಬಸವನ ಗುಡಿ, ಬೆಂಗಳೂರು
ಕೃತಜ್ಞತೆಗಳು
ನನ್ನ ಹೃತ್ಪೂರ್ವಕ ಕೃತಜ್ಞತೆಗಳು
* ಇಲ್ಲಿನ ಲೇಖನಗಳನ್ನು ಪ್ರಕಟಿಸಿದ "ಜೀವನಾಡಿ',
"ಕರ್ಮವೀರ, "ಸುಧಾ' ಪತ್ರಿಕೆಯ ಸಂಪಾದಕ ವರ್ಗಕ್ಕೆ

* ಪುಸ್ತಕಕ್ಕೆ ಸ್ಪೇಹ ನುಡಿ ಬರೆದು ಕೊಟ್ಟಿರುವ


ಡಾ! ಎನ್‌. ಅನಂತರಾಮನ್‌ರವರಿಗೆ

* ಪುಸ್ತಕ ಪ್ರಕಟಿಸಿದ ದಿವೃಚಂದ್ರ ಪ್ರಕಾಶನದ ಸೋದರಿ


ಶ್ರೀಮತಿ ಕೋಮಲರವರಿಗೆ
* ತಪ್ಪಿಲ್ಲದೆ ಅಂದವಾಗಿ ಮುದ್ರಿಸಿದ ಮುದ್ರಕರಿಗೆ
ಕರಡು ಪ್ರತಿಯನ್ನು ತಿದ್ದಿದ ದಿವ್ಮಚಂದ್ರ ಪ್ರಕಾಶನದ ಪ್ರೂಫ್‌
ರೀಡರ್‌ಗೆ

ಡಾ|| ವಸುಂಧರಾ ಭೂಪತಿ


ಬಿ.ಎ.ಎಂ.ಎಸ್‌., ಡಿ.ಇ.ಎಂ., ಎಂ.ಡಿ. (ಎ.ಎಂ)
ಸಿದ್ದಾರ್ಥ ಆಯುರ್ವೇದ ಕ್ಲಿನಿಕ್‌
No. 20/3], 6 ನೇ "ಎ' ಮೇನ್‌
| ನೇ ಹಂತ, ಕೆ. ಹೆಚ್‌. ಬಿ. ಕಾಲೋನಿ
ಬಸವೇಶ್ವರ ನಗರ, ಬೆಂಗಳೂರು - 79.
ದೂರವಾಣಿ : 340 1858
ಅನುಕ್ರಮಣಿಕೆ
ಆರೋಗ್ಯ ಮತ್ತು ಮನಸ್ಸು . ಕೆಂಪು ಬಸಳೆ
ಸೊಪ್ಪಿನ ಉಪಯುಕ್ತತೆ 17 22. 39
ಂಟಿನ ಸೊಪ್ಪು 17 23. ಬಿಳಿದಿಂಡಿ ಸೊಪ್ಪು 4]
ಮೆಂತ್ಯದ ಸೊಪ್ಪು 19 24. ಚಕ್ರಮುನಿ ಸೊಪ್ಪು 4]
ಪುದೀನಾ 20 2 ಸೂರ್ಯಕಾಂತಿ ಸೊಪ್ಪು 42
22 26. ಮುಳ್ಳರೇಖಿ ಸೊಪ್ಪು 42
ಸಬ್ಬಸಿಗೆ ಸೊಪ್ಪು 23 ZT. ಅಣ್ಣೆ ಸೊಪ್ಪು 43
ಕೊತ್ತಂಬರಿ ಸೊಪ್ಪು 24 28. ತೋಟದ ಸೊಪ್ಪು 43
ಕರಿಬೇವಿನಸೊಪ್ಪು 26 2%. ಶತಾವರಿ 44
ಬಸಳೆ ಸೊಪ್ಪು 27 30. ಹಾಲೇ ಸೊಪ್ಪು 45
ಡು

ಕಂ
ಟೋ
ಟೂ
ey ಪಳ್ಳಂಪುರುಚ 28 ಶ್‌ ಸಣ್ಣ ನೆಗ್ಗಿಲು ಸೊಪ್ಪು 45
10. ಅಗಸೆ ಸೊಪ್ಪು 29 32. ತುಂಬೆ ಸೊಪ್ಪು 45
. ಗೋಣಿ ಸೊಪ್ಪು 30 33. ವೀಳೆದೆಲೆ 46
. ಹಕ್ಕರಿಕೆ ಸೊಪ್ಪು 31 34, ವಿಷ್ಣುಕಾಂತಿ ಸೊಪ್ಪು 47
. ಕಾಕಮಾಚಿ 32 93 ಎಲೆಕೋಸು 48

. ಪುಂಡಿ ಸೊಪ್ಪು 33 36. ಮುಳ್ಳ ಹರಿವೆ ಸೊಪ್ಪು 49


. ಚಕ್ಕೋತ ಸೊಪ್ಪು 34 37. ನುಗ್ಗೆಕಾಯಿ 49
. ಹರಿವೆ ಸೊಪ್ಪು 35 38. ಬೀಟ್‌ರೂಟ್‌ 51
. ಕಿರುಕಸಾಲೆ ಸೊಪ್ಪು 36 33: ಕೆಸುವಿನ ಗೆಡ್ಡೆ 51
. ಮೂಲಂಗಿ ಸೊಪ್ಪು 36 40). ನವಿಲು ಕೋಲು ೨2
. ಕೆಸುವಿನ ಎಲೆ ಕ್ಕಿ 41, ಮೆಣಸಿನ ಕಾಯಿ 52
, ದೊಡ್ಡಪತ್ರೆ ಸೊಪ್ಪು 38 42. ಕುಂಬಳ ೨4
, ಬೆಂಡೆಕಾಯಿ . ಕೇಸರಿ
, ಮುಳ್ಳಿನ ಸೌತೆಕಾಯಿ . ಗಸಗಸೆ
. ಸೋರೆಕಾಯಿ . ಕಾಫಿ ಗಿಡ
, ಸುವರ್ಣಗೆಡ್ಡೆ
. ತೊಂಡೆಕಾಯಿ . ಹೆಸರು ಕಾಳು
. ಮೂಲಂಗಿ . ಬಡೇಸೋಪು
. ಗಜ್ಜರಿ ಅಥವಾ ಕ್ಯಾರೆಟ್‌ . ಇಂಗು
. ಗೆಣಸು . ಲವಂಗ
. ತುಪ್ಪದ ಹೀರೆಕಾಯಿ . ಜೀರಿಗೆ
, ಬಾಳೆದಿಂಡು ದಾಲ್ಚಿನ್ನಿ
. ಪಡುವಲಕಾಯಿ . ದನಿಯ
. ಬೂದಗುಂಬಳ ಕಾಯಿ
. ಮಡಿಹಾಗಲ
. ಹೀರೆಕಾಯಿ
. ಹಾಗಲ ಬಳ್ಳಿ
. ಅರಿಶಿನ
ಆಹಾರ ಮತ್ತು ಮನಸ್ಸು
ನಮ್ಮ ಜೀವನದಲ್ಲಿ ಆನಂದ ಮತ್ತು ತೃಪ್ತಿ ಪ್ರಧಾನ ಭಾವನೆಗಳಾಗಿರ
ಬೇಕಾದರೆ ನಮಗೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಪ್ರಶಾಂತತೆ ಎರಡೂ
ಅತ್ಯವಶ್ಶಕ. ನಮ್ಮ ಆರೋಗ್ಯ ಹದಗೆಟ್ಟಾಗ ನಮ್ಮ ಮನಸ್ಸು ಪ್ರಶಾಂತ
ವಾಗಿರುವುದು ಕಷ್ಟ. ಹಾಗೆಯೇ ಯಾವುದೇ ಕಾರಣದಿಂದ ನಮ್ಮ ಮನಸ್ಸು
ಪ್ರಕ್ಷುಬ್ರವಾಗಿ ಮಾನಸಿಕ ಒತ್ತಡ ಹೆಚ್ಚಾದರೆ ಅದರಿಂದ ನಮಗೆ ಅನಾರೋಗ್ಯ
ಉಂಟಾಗಿ ಅನೇಕ ತರದ ಕಾಯಿಲೆಗಳು ಉದ್ಭವಿಸುತ್ತವೆ.
ನಾವು ಸೇವಿಸುವ ಆಹಾರ ಮತ್ತು ಮನಸ್ಸಿಗೆ ಒಂದಕ್ಕೊಂದು ಪೂರಕವಾದ
ಸಂಬಂಧವಿದೆ. ಆಹಾರದ ಪ್ರಭಾವ ಮನಸ್ಸಿನ ಮೇಲೂ ಉಂಟಾಗುತ್ತದೆ.
ಆಹಾರವು ಶರೀರ ಪೋಷಣೆ ಮಾಡುವುದು ಮಾತ್ರವಲ್ಲ, ಮನಸ್ಸಿನ ಮೇಲೂ
ಪರಿಣಾಮ ಬೀರುತ್ತದೆ. ಮನಸ್ಸಿನ ಆರೋಗ್ಯ ಹಾಗೂ ಅನಾರೋಗ್ಯ ಆಹಾರದ
ಮೇಲೆ ಅವಲಂಬಿತವಾಗಿದೆ. ಆಹಾರ ಸೇವನೆಯು ನಮ್ಮ ಬಲ, ವರ್ಣ, ಆಯುಷ್ಯ
ಹಾಗೂ ಸೌಖ್ಯವನ್ನು ಹೆಚ್ಚಿಸುತ್ತದೆ.
ಆಹಾರ ಸೇವನೆಯನ್ನು ಪೂಜಾ ಭಾವನೆಯಿಂದಲೇ ಮಾಡಬೇಕು.
ಹಿತಭುಕ್‌, ಮಿತಭುಕ್‌ ಹಾಗೂ ಖತಭುಕ್‌ ಎಂದಿದ್ದಾರೆ. ಹಿತಭುಕ್‌ ಎಂದರೆ
ಹಿತವಾದುದನ್ನು - ಸಾತ್ವಿಕವಾದುದನ್ನು, ಮಿತಭುಕ್‌ ಎಂದರೆ ಮಿತವಾಗಿ,
ಯತಭುಕ್‌ ಎಂದರೆ ಕಾಲಕಾಲವರಿತು ಸೇವಿಸಬೇಕು. ಸಾತ್ವಿಕವಾದ ಆಹಾರವನ್ನೇ
ಆದರೂ ಮಿತವಾಗಿ ಕಾಲವರಿತು ಸೇವಿಸಬೇಕು. ನಮ್ಮ ಎಲ್ಲ ರೋಗಕ್ಕೂ ನಾವು
ಸೇವಿಸುವ ಆಹಾರವೇ ಕಾರಣವೆಂಬುದನ್ನು ಮರೆಯಬಾರದು.
ಮನಸ್ಸು ಸೂಕ್ಷ್ಮ ಹಾಗೂ ಸರ್ವವ್ಯಾಪಿ. ಮನಸ್ಸು ಆತ್ಮ ಹಾಗೂ ಶರೀರಗಳ
ಮಧ್ಯೆ ಸೇತುವೆಯಂತಿದೆ. ಮನುಷ್ಯನ ದೇಹವನ್ನು ಅವನ ಮನಸ್ಸು ಆಳುತ್ತದೆ.
'ಮನಸ್ಸೇನಾದರೂ ತನ್ನ ಅಧೀನದ ದೇಹವನ್ನು ನಿಷ್ಕಾಳಜಿ ಮಾಡಿದರೆ ಅದು
ತನಗಾದ ನೋವನ್ನು ಕ್ಷಮಿಸುವುದಿಲ್ಲ. ದೇಹವನ್ನು ಉದಾಸೀನ ಮಾಡಿದರೆ

ಮನಸ್ಸು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ.


10 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಮನಸ್ಸು ರೋಗವನ್ನು ಸೃಷ್ಟಿಸಬಲ್ಲದು ಹಾಗೂ ಗುಣಪಡಿಸಬಲ್ಲದು.


ತಾಳ್ಮೆ, ಪ್ರೀತಿ, ಕರುಣೆ, ದಾನಬುದ್ದಿ ಹಾಗೂ ನಿಸ್ವಾರ್ಥ ಸೇವಾ ಮನೋಭಾವ
ಇವೇ ಮೊದಲಾದ ರಚನಾತ್ಮಕ ಭಾವನೆಗಳು ದೇಹದ ಎಲ್ಲಾ ಭಾಗಗಳಲ್ಲಿ
ಉತ್ಸಾಹಯುತ ಆರೋಗ್ಯಕರ ಚಟುವಟಿಕೆಗಳಿಗೆ ಕಾರಣವಾಗುತ್ತವೆ. ನಮ್ಮಲ್ಲಿ
ಸಂತೋಷ, ತೃಪ್ತಿ ಹಾಗೂ ಸೃಜನಶೀಲ ಪ್ರವೃತ್ತಿಗಳನ್ನು ಜಾಗೃತಗೊಳಿಸುತ್ತವೆ.
ಹಾಗೆಯೇ ಭಯ, ಚಿಂತೆ, ದ್ವೇಷ, ಅಸೂಯೆ, ಸೋಲಿನ ಮನೋಭಾವ ಹಾಗೂ
ಸ್ವಾರ್ಥವು ಸಮಸ್ತ ದೇಹ ಮತ್ತು ಅಂಗಾಂಗಗಳಿಗೆ ಕೆಡಕನ್ನುಂಟುಮಾಡಿ ಕಾಯಿಲೆಗೆ
ಕಾರಣವಾಗುತ್ತವೆ.
ಪ್ರಸನ್ನತೆ, ಶಾಂತತೆ, ಧೈರ್ಯ, ಆತ್ಮವಿಶ್ವಾಸ ಹಾಗೂ ದೃಢನಿಶ್ಚಯದಂತಹ
ಭಾವನೆಗಳು ಶರೀರದ ಸುಸ್ಥಿತಿಗೆ ಆರೋಗ್ಯವರ್ಧಕ ಟಾನಿಕ್ಕಿಗಿಂತ ಹೆಚ್ಚಿನ ಸಹಾಯ
ಮಾಡುತ್ತವೆ. ಮನಸ್ಸು ಅಸಂಖ್ಯ ಯೋಚನೆ, ಭಾವನೆ, ಕಲ್ಪನೆ, ಸಂಕಲ್ಪ,
ಕ್ರಿಯಾತ್ಮಕ ಯೋಚನೆಗಳಿಂದ ಕೂಡಿದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುವ
ಜಟಿಲವೂ, ಅತ್ಯಂತ ಸೂಕ್ಷ್ಮವೂ, ಸಂಕೀರ್ಣವೂ ಆದ ಒಂದು ವಿಶಿಷ್ಟ ಶಕ್ತಿ.
ಬದುಕಿನ ಎಲ್ಲ ಸಾಧನೆಗಳು ಮನಸ್ಸಿನಲ್ಲಿ ಉದಿಸಿದ ಯೋಚನೆ, ಕಲ್ಪನೆ, ಸಂಕಲ್ಪ
ಭಾವನೆಗಳ ಮಾದರಿಯನ್ನನುಸರಿಸಿಯೇ ಸಾಧ್ಯವಾಗುತ್ತವೆ. ತ
“ನೀನೇನು ತಿನ್ನುವೆಯೋ ಅದರಿಂದ ಹೊಟ್ಟೆ ಹುಣ್ಣು ಬರುವುದಿಲ್ಲ;
ನಿನ್ನನ್ನೇನು ತಿನ್ನುತ್ತದೆಯೋ ಅದರಿಂದಲೇ ಹೊಟ್ಟೆಯಲ್ಲಿ ಹುಣ್ಣಾಗುವುದು ತಿಳಿ.”

- ಡಾ| ಜೋಸೆಫ್‌ ಎಫ್‌. ಮಾಂಟಿಗ್‌


ಕತ್ತಲೆ ಇರುವಾಗಲೇ ಆಕಾಶದ ವೈಭವ ನಮಗೆ ಗೋಚರವಾಗುತ್ತದೆ. '
ಅದೇ ರೀತಿ ಮನಸ್ಸಿನ ಸ್ಥಿತಿಯು ದೈಹಿಕ ಆರೋಗ್ಯದ ಮೇಲೆ ಬೆಳಕನ್ನು ಚೆಲ್ಲುತ್ತದೆ.
ಆಹ್ಲಾದಕತೆಯು ಮನಸ್ಸಿನ ಆರೋಗ್ಯವನ್ನು ತೋರಿಸಿಕೊಡುತ್ತದೆ. ಆರೋಗ್ಯ
ಮನುಷ್ಯನ ಮುಖಕ್ಕೆ ಹೊಸ ಕಳೆಯನ್ನು, ಮೆರುಗನ್ನು ತಂದುಕೊಡುತ್ತದೆ.
ಹೊರಗಿನ ಅನಾರೋಗ್ಯಕರ ಹವೆಗಿಂತ ಮನಸ್ಸಿನೊಳಗಿನ ಅನಾರೋಗ್ಯಕರ
ಹವೆಯು ಮನುಷ್ಯನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದು ಆ ವ್ಯಕ್ತಿಯನ್ನು
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು ||

ಲೆಸ್ವಸ್ಥಗೊಳಿಸುತ್ತದೆ ಮಾತ್ರವಲ್ಲದೇ ಆವ್ಯಕ್ತಿಯು ತನ್ನ ಸಂಪರ್ಕಕ್ಕೆ ಬಂದ


ತನ್ನಅಸ್ಪಸ್ಹಗೊಳಿಸುತ್ತಾನೆ.
ವನದ ನಿಜವಾದಶ್ರೀಮಂತಿಕೆಯೆಂದರೆ ಆಸೆ, ಆನಂದಗಳೇ ಆಗಿವೆ.
ನಿಜವಾದ ಬಡತನವೆಂದರೆ ನಿರಾಸೆ, ಖಿನ್ನತೆಗಳೇ ಆಗಿವೆ. ಮನಸ್ಸಿನ ಆಹ್ಲಾದ
ಕತೆಯು ಸುತ್ತಲೂ ಆಹ್ಲಾದಕತೆಯನ್ನು ಉಂಟುಮಾಡುತ್ತದೆ. ಸುಖ,
ಸಂತೋಷದಿಂದ ಇರಬೇಕೆನ್ನುವ ಮನುಷ್ಯ ತನ್ನ ಮನಸ್ಸಿನಲ್ಲಿ ಲವಲವಿಕೆಯನ್ನು,
ಹಾಗೂ ಆಹ್ಲಾದಕತೆಯನ್ನೂ ಇರಿಸಿಕೊಂಡಿರಬೇಕು.
ಜಗತ್ತಿನ ಅರ್ಧ ಮಾತ್ರವಲ್ಲ ಮುಕ್ಕಾಲು ಪಾಲು ಜನರು ಅನಾರೋಗ್ಯದ
ತೊಂದರೆಯಿಂದ ಬಳಲುತ್ತಿರುತ್ತಾರೆ. ವೈದ್ಯರು ಅವರ ಕಾಯಿಲೆಗೆ ಔಷಧಿ
ಕೊಡಬಹುದು. ಆದರೆ ಆರೋಗ್ಯಕ್ಕೆ ಔಷಧಿ ಕೊಡಲಾರರು. ಆರೋಗ್ಯದ ಔಷಧಿ
ಮನುಷ್ಯನ ಕೈಯಲ್ಲಿಯೇ ಇದೆ. ಅದನ್ನು ಅವನು ತಾನೇ ಪಡೆದುಕೊಳ್ಳಬೇಕು.
ಪ್ರಪಂಚದಲ್ಲಿ ನಿಜವಾದ ಸಂಪತ್ತು ಆರೋಗ್ಯವೊಂದೇ ಆಗಿದೆ. ಎಲ್ಲ ಶ್ರೀಮಂತಿಕೆ,
ಅಧಿಕಾರಗಳಿಗಿಂತ ಮನಸ್ಸಿನ ಪ್ರಸನ್ನತೆ ಹೆಚ್ಚಿನದು. ಎಂತಹ ಶ್ರೀಮಂತಿಕೆ
ಯಿಂದಲೂ ಮನಸ್ಸಿನ ಪ್ರಸನ್ನತೆಯನ್ನು ಕೊಂಡುಕೊಳ್ಳುವುದಕ್ಕೆ ಆಗುವುದಿಲ್ಲ.
ಪಾಕಿಸ್ತಾನಕ್ಕೆ ಸೇರಿರುವ ಹಿಮಾಲಯದ ಹನ್ಹಾ ಕಣಿವೆಯ ಜನರಲ್ಲಿ
ನಮ್ಮಲ್ಲಿ ಅತಿ ಸಾಮಾನ್ಯವಾಗಿರುವ ಅನೇಕ ಕಾಯಿಲೆಗಳು ಹುಡುಕಿದರೂ
ಸಿಕ್ಕುವುದಿಲ್ಲ. ಅವರಲ್ಲಿ ಬಹಳಷ್ಟು ಜನರು ಸುಲಭವಾಗಿ 90-100 ವರ್ಷ
ಜೀವಿಸುತ್ತಾರೆ. 70-80 ವರ್ಷ ವಯಸ್ಸಿನವರು ದೇಹಕ್ಕೆ ಅತಿ ಪ್ರಯಾಸಕರವಾದ
ಪೋಲೋ ಆಟವಾಡುತ್ತಾರೆ. ಅವರಲ್ಲಿ ಸಾವು ಕೂಡ ರೋಗಗಳಿಲ್ಲದ,
ನರಳಾಟವಿಲ್ಲದ ತುಂಬು ಜೀವನದ ನಂತರ ಅನಾಯಾಸವಾಗಿ ಬರುತ್ತದೆ.
ಹನ್ಹಾ ಜನರ ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡ ಹೆಚ್ಚಿಲ್ಲದ
ಸರಳ ಜೀವನ ಅವರ ಆರೋಗ್ಯಕ್ಕೆ ಮುಖ್ಯವಾದ ಕಾರಣಗಳೆಂದು ಡಾ|| ರಾಬರ್ಟ್‌
ಮೆಕ್ಕಾರಿಸನ್‌ ಎಂಬ ವಿಜ್ಞಾನಿ 1930 ರಲ್ಲೇ ರುಜುವಾತು ಮಾಡಿದ್ದರು. ಆಹಾರ
ಪದ್ಧತಿ ಮತ್ತು ಮಾನಸಿಕ ಒತ್ತಡಗಳು ಕಾಯಿಲೆಗಳಿಗೆ ಅತಿ ಮುಖ್ಯ
ಕಾರಣಗಳೆಂಬುದನ್ನು ಕಳೆದ 50 ವರ್ಷಗಳಲ್ಲಿ ನಡೆದಿರುವ ಅನೇಕ
1) ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಸಂಶೋಧನೆಗಳು ದೃಢೀಕರಿಸಿವೆ. ಆಯುರ್ವೇದ ಶಾಸ್ತ್ರದಲ್ಲಿ ತಿಳಿಸಿರುವಂತೆ ಅನೇಕ


ಮಹರ್ಷಿಗಳು ರಸಾಯನ ಸೇವನೆಯಿಂದ ಹಾಗೂ ಸರಳ ಜೀವನ ನಡೆಸುವುದರ
ಮೂಲಕ ನೂರಾರು ವರ್ಷಗಳ ಕಾಲ ಆರೋಗ್ಯಕರವಾಗಿ ಜೀವಿಸಿದ್ದರೆಂದು ತಿಳಿದು
ಬರುತ್ತದೆ. ಈಗ ಚೃವನ ಮಹರ್ಷಿಗಳ ಹೆಸರಿನದೇ ಆದ "ಚೈವನಪ್ರಾಶ' ಎಂಬ
ರಸಾಯನ ದೊರೆಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಈಗ ಪ್ರಪಂಚದ
ಎಲ್ಲ ದೇಶದ ವಿಜ್ಞಾನಿಗಳು ಹೆಚ್ಚು ಪ್ರಾಕೃತಿಕವಾಗಿ ಬದುಕುವುದು ಹೇಗೆಂಬುದರ
ಬಗ್ಗೆ ಚಿಂತಿಸುತ್ತಿದ್ದಾರೆ. ಅದಕ್ಕಾಗಿ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ
ಮುಂತಾದವುಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ.
ಮನಸ್ಸು ಆತ್ಮ ಹಾಗೂ ಶರೀರಗಳ ಮಧ್ಯ ಕೊಂಡಿಯಂತಿದೆ. ಪಂಚ
ಜ್ಞಾನೇಂದ್ರಿಯಗಳು ಹಾಗೂ ಪಂಚ ಕರ್ಮೇಂದ್ರಿಯಗಳ ನಿಯಂತ್ರಣ ಮಾಡುವುದು
ಮನಸ್ಸಿನ ಕೆಲಸವಾಗಿದೆ. ಮಿದುಳಿನ ವಿವಿಧ ಭಾಗಗಳು ಮನಸ್ಸಿನ ವಿವಿಧ ಕೆಲಸ,
ಚಟುವಟಿಕೆಗಳನ್ನು ನಿಯಂತ್ರಿಸಿ ನಿರ್ದೇಶಿಸುತ್ತವೆ. ಮಿದುಳಿನ ಮುಂಭಾಗ ನಮ್ಮ
ಆಲೋಚನೆ, ವಿಶ್ಲೇಷಣೆ, ಸಾಮಾಜಿಕ ಚಿಂತನೆ, ನಡವಳಿಕೆಗೆ ಕಾರಣವಾಗಿರುತ್ತದೆ.
ಮಿದುಳಿನ ಕಪಾಲ ಭಾಗ, ಧ್ವನಿ, ವಾಸನೆ, ರುಚಿಗಳ ವಿಶ್ಲೇಷಣೆ ಮತ್ತು ಅವುಗಳನ್ನು
ನೆನಪಿನಲ್ಲಿಟ್ಟುಕೊಳ್ಳುವುದನ್ನು ಮಾಡುತ್ತದೆ. ಮಿದುಳಿನ ಮಧ್ಯಭಾಗದ ಲಿಂಬಿಕ್‌
ವ್ಯವಸ್ಥೆಯು ಆಹಾರ ಸೇವನೆ, ನಿದ್ರೆ, ಲೈಂಗಿಕ ಕ್ರಿಯೆ ಹಾಗೂ ಭಾವನೆಗಳನ್ನು
ಪ್ರಚೋದಿಸಿದರೆ, ಮಿದುಳಿನ ಮೇಲ್ಮೈ ನಮ್ಮ ಬುದ್ದಿವಂತಿಕೆ ಮತ್ತು ವಿವಿಧ
ಕೌಶಲಗಳನ್ನು ಪ್ರದರ್ಶಿಸಲು ನೆರವಾಗುತ್ತದೆ.
ಮಿದುಳಿನ ಬೆಳವಣಿಗೆ ಹಾಗೂ ಮನಸ್ಸಿನ ಪ್ರಶಾಂತತೆಗೆ ಪುಷ್ಟಿಕರ ಆಹಾರ
ಬಹು ಮುಖವಾಗಿರುತ್ತದೆ.
ಆಯುರ್ವೇದದಲ್ಲಿ ಆಹಾರ ಸೇವಿಸುವ ವಿಧಿಯನ್ನು ವಿವರವಾಗಿ
ತಿಳಿಸಿದ್ದಾರೆ. ದೇಹಕ್ಕೆ ಒಗ್ಗುವಂತಹದನ್ನೇ ನಾವು ಸೇವಿಸಬೇಕು. ನಾವು
ಯಾವುದನ್ನು ಜೀರ್ಣಿಸಿಕೊಳ್ಳುವುದಿಲ್ಲವೋ ಅದು ನಮ್ಮ ದೇಹಕ್ಕೆ ಒಳ್ಳೆಯದಲ್ಲ.
ನಮ್ಮ ಆರೋಗ್ಯವು ನಮಗೆ ನೀಡಿದ ಬಹು ಶ್ರೇಷ್ಠ ಕಾಣಿಕೆ ಎಂದರೆ ನಮ್ಮ
ಜೀರ್ಣಶಕ್ತಿ ಎಂದರೆ ತಪ್ಪಾಗಲಾರದು. ಮನಸ್ಸಿನ ಗುಣಗಳು ಮೂರು- ಸತ್ವ,
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 13

ರಜ ಹಾಗೂ ತಮೋ. ಮನಸ್ಸು ಉದ್ವಿಗ್ನವಾದಾಗ, ಕೋಪಗೊಂಡಾಗ,


ಶೋಕತಪ್ತವಾಗಿರುವಾಗ ಹಾಗೂ ಭಯದಿಂದ ಕೂಡಿದಾಗ ಸೇವಿಸಿದ ಆಹಾರವು
ಸುಲಭವಾಗಿ ಜೀರ್ಣವಾಗುವುದಿಲ್ಲ. ಮನಸ್ಸಿಗೆ ಆಪ್ಕಾಯಮಾನವಾದವರ ಹಾಗೂ
ಪ್ರಿಯರಾದವರ ಕೈಯಿಂದ ಬಡಿಸಿಕೊಂಡು ಸೇವಿಸಬೇಕು. ಹೀಗಾದಾಗ ಮಾತ್ರ
ಆಹಾರ ಜೀರ್ಣವಾಗಿ ಶರೀರ, ಮನಸ್ಸು ಪುಷ್ಟಿಗೊಳ್ಳುವುದು. ಇಲ್ಲದಿದ್ದರೆ ಊಟ
ಕೇವಲ ಯಾಂತ್ರಿಕವಾಗಿಬಿಡುತ್ತದೆ. ಇಷ್ಟವಿಲ್ಲದ ಆಹಾರ ಸೇವನೆಯಿಂದ ಯಾವ
ವಿಧದ ಪ್ರಯೋಜನವೂ ಇಲ್ಲ. ಆಹಾರ ಜೀರ್ಣಿಸಲಿಕ್ಕೆ ಅಗತ್ಯವಾದ
ಜೀರ್ಣರಸಗಳ ಉತ್ಪತ್ತಿಗೆ ಮನಸ್ಸಿನ ಪಾತ್ರವೂ ಅತ್ಯಂತ ಮಹತ್ವವಾದುದು.
ಮನಸ್ಸು ಖಿನ್ನತೆಯಿಂದ ಕೂಡಿದ್ದರೆ ಈ ರಸಗಳ ಉತ್ಪತ್ತಿ ಕುಗ್ಗಿ ಆಹಾರ
ಜೀರ್ಣವಾಗುವುದಿಲ್ಲ.
ಆಹಾರವನ್ನು ಸಾತ್ವಿಕ, ರಾಜಸಿಕ ಹಾಗೂ ತಾಮಸಿಕ ಎಂದು ಮೂರು
ವಿಧವಾಗಿ ವಿಂಗಡಿಸಿದ್ದಾರೆ. ಸ
ಸಾತ್ವಿಕ ಆಹಾರವೆಂದರೆ ಸೇಬು, ಸಪೋಟ, ಬಾಳೇ, ಮಾವು, ದ್ರಾಕ್ಷಿ
ಮುಂತಾದ ಹಣ್ಣುಗಳು, ಶೇಂಗಾಬೀಜ, ಬಾದಾಮಿ, ಮೊಳಕೆ ಬರಿಸಿದ ಕಾಳು,
ಎಲ್ಲ ರೀತಿಯ ಸೊಪ್ಪು, ಸೌತೆ, ಗಜ್ಜರಿ, ಹುರುಳಿಕಾಯಿ ಮುಂತಾದ ತರಕಾರಿಗಳು.
ಇವುಗಳು ಅತ್ಯಂತ ರುಚಿಕರವೂ ಆರೋಗ್ಯಕರವೂ ಆಗಿರುತ್ತವೆ. ಸಾತ್ವಿಕ ಆಹಾರವು
ಆಯಸ್ಸು, ಉತ್ಸಾಹ, ಶಕ್ತಿ, ಸುಖ, ಪ್ರೀತಿಗಳನ್ನು ಹೆಚ್ಚಿಸಿ ಶರೀರದಲ್ಲಿ
ಉಳಿಯುವಂತಹುದು.
ಟ ರಾಜಸಿಕ ಆಹಾರಗಳೆಂದರೆ ಮಸಾಲೆ ವಡೆ, ಉದ್ದಿನ ವಡೆ, ಪಕೋಡ,
ಬಹಳ ಖಾರ, ಹುಳಿ, ಉಪ್ಪು, ಬಿಸಿ, ತೀಕ್ಷ್ಯವಾಗಿದ್ದು, ಒಣಗಿಹೋಗಿರು
ವವುಗಳು, ಸೀದುಹೋಗಿರುವಂತಹವುಗಳು ಹಾಗೂ ಹುರಿದವುಗಳು. ಇವೆಲ್ಲ
ರುಚಿಕರವಾಗಿದ್ದರೂ ಸಹ .ನಮ್ಮ ಆರೋಗ್ಯಕ್ಕೆ ಮಾರಕವಾದವುಗಳು.
ಇವೆಲ್ಲವೂ ನೋವು, ದುಃಖ ಹಾಗೂ ಕಾಯಿಲೆಯನ್ನು ಉಂಟುಮಾಡತಕ್ಕಂತಹ
ಆಹಾರಗಳು. ಇಂದಿನ ಆಧುನಿಕತೆಯ ಯುಗದಲ್ಲಿ ಚಾಟ್‌ ಕಾರ್ನರ್‌ಗಳಲ್ಲಿ
14 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಎಲ್ಲೆಂದರಲ್ಲಿ ನಿಂತು ತಿನ್ನುವ, ರಸ್ತೆ ಬದಿಯಲ್ಲಿ ಮಾಡುವ ಬೋಂಡಾ, ಬಜ್ಜಿ,


ಪಕೋಡ ತಿನ್ನುವ ಪರಿಪಾಠ ಹೆಚ್ಚಾಗಿದೆ. ಫಾಸ್ಟ್‌ಫುಡ್‌ಗಳ ವ್ಯಾಮೋಹವೂ
ಹೆಚ್ಚಾಗಿದೆ. ಇವುಗಳನ್ನು ರಾಜಸಿಕ ಆಹಾರಗಳೆಂದು ಹೇಳಬಹುದು. ಇನ್ನು
ಮನೆಮನೆಗಳಲ್ಲಿ ಕಾಣುವ ಸಾಮಾನ್ಯವಾದ ದೃಶ್ಯವೆಂದರೆ ಮಕ್ಕಳಿಂದ ಹಿಡಿದು
ಹಿರಿಯರವರೆಗೂ ಎಲ್ಲರೂ ದೂರದರ್ಶನದ ಮುಂದೆ ಕುಳಿತು ಆಹಾರ
ಸೇವಿಸುತ್ತಿರುತ್ತಾರೆ. ಟಿ. ವ. ಪರದೆಯ ಮೇಲೆ ಭೀಭತ್ಸ, ಭಯಂಕರ ಹಾಗೂ
ಹಿಂಸೆಯಿಂದ ಕೂಡಿದ ದೃಶ್ಶಗಳನ್ನು ವೀಕ್ಷಿಸುತ್ತ ಕುರುಕಲು ತಿಂಡಿಯನ್ನೋ,
ಪಾನೀಯಗಳನ್ನೋ ಸೇವಿಸುತ್ತಾರೆ. ಕಣ್ಣು, ಕಿವಿ, ಮನಸ್ಸು ಎಲ್ಲವೂ ಟಿ.ವಿ.ಯ
ಮೇಲೇ ಕೇಂದ್ರೀಕೃತವಾಗಿದ್ದು ಕೈ, ಬಾಯಿ ಮಾತ್ರ ಯಾಂತ್ರಿಕವಾಗಿ ಕೆಲಸ
ಮಾಡುತ್ತಿರುತ್ತದೆ. ಹೀಗಾದಾಗ ಆಹಾರ ಜೀರ್ಣವಾಗುವುದು ಕಷ್ಟವಾಗುತ್ತದೆ.
ಅಲ್ಲದೇ ಇಂದಿನ ದಿನಗಳಲ್ಲಿ ಯಾವುದೇ ಸಭೆ, ಸಮಾರಂಭವಿರಲಿ ಭೋಜನದ
ನಂತರ ಬಾಳೆಹಣ್ಣು ತಿನ್ನಲು ಕೊಡುತ್ತಾರೆ. ಹೊಟ್ಟೆ ಬಿರಿಯುವಷ್ಟು ಭಾರಿ
ಭೋಜನವನ್ನುಂಡು ಮತ್ತೆ ಬಾಳೆಹಣ್ಣು ತಿನ್ನುವುದು ಖಂಡಿತ ಸರಿಯಲ್ಲ. ಅದು
ಗುರು ಆಹಾರವೆನಿಸಿಕೊಳ್ಳುತ್ತದೆ. ಜೀರ್ಣವಾಗುವುದು ಕಷ್ಟ.
ಇನ್ನು ತಾಮಸಿಕ ಆಹಾರ ಯಾವುದೆಂದರೆ ಅರ್ಧ ಬೆಂದಿರುವುದು, ಬೆಂದು
ಒಂದು ಜಾವ ಸಮಯವಾಗಿರುವುದು, ರೂಕ್ಷ ಅಂದರೆ ಒಣಗಿಹೋಗಿರುವುದು,
ದುರ್ಗಂಧದಿಂದ ಕೂಡಿರುವುದು, ಬೆಂದ ಮೇಲೆ ರಾತ್ರಿ ಕಳೆದಿರುವುದು ಅಂದರೆ
ತಂಗಳಾಗಿರುವುದು, ಅತಿಯಾಗಿ ತಣ್ಣಗಿರುವುದು. ನಾವು ದಿನಗಟ್ಟಲೆ ತಂಗಳು
ಪೆಟ್ಟಿಗೆ (ರೆಫ್ರಿಜರೇಟರ್‌) ಯಲ್ಲಿಟ್ಟು ಮತ್ತೆ ಬಿಸಿಮಾಡಿಕೊಂಡು ಸೇವಿಸುವ ಆಹಾರ
ಪದಾರ್ಥಗಳು, ರಾತ್ರಿ ಹೊತ್ತಾದ ಮೇಲೆ ಹೊಟ್ಟೆ ಬಿರಿಯುವಂತೆ ತಿನ್ನುವ ಆಹಾರ
ತಾಮಸಿಕ ಆಹಾರ ಎನಿಸಿಕೊಳ್ಳುತ್ತದೆ.
ಇನ್ನು ಪಥ್ಕಾಪಥ್ಮದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣವೆ?
“ಪಥ್ಮಂಚ ಅಪಥ್ಯ ಂಚ ತಯೋಃ
ಸಮಾಹಾರ: ಪಥ್ಕಾ ಪಥ್ಮಃ ''!!
ಪಥ್ಕಾಪಥ್ಯವೆಂಬ ಶಬ್ದವು "ಪಥ್ಯ' ಮತ್ತು "ಅಪಥ್ಮ' ಎಂಬ ಎರಡು
~

ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 15

ವಿಧಗಳಿಂದ ಕೂಡಿದೆ. ಪಥ್ಯದ ತದ್ವಿರುದ್ದವಾದ ಗುಣಗಳನ್ನು ಹೊಂದಿರುವುದು


ಮಾತ್ರ ಅಪಥ್ಕ ಎನಿಸಿಕೊಳ್ಳುತ್ತದೆ.
"ಪಥಿ ಸಾಧುಃ ಪದ್ಯ: ''
ನಮ್ಮ ಜೀವನದಾರಿಗೆ ಪೂರಕವಾದದ್ದೇ ಪಥ್ಯ.
ಯಾವ ಆಹಾರ ಸೇವನೆಯಿಂದ ಶರೀರ ಮತ್ತು ಮನಸ್ಸಿನಲ್ಲಿ ಯಾವುದೇ
ವಿಧವಾದಂತಹ ಕೆಟ್ಟ ಬದಲಾವಣೆಯುಂಟಾಗುವುದಿಲ್ಲವೋ, ಯಾವುದು ಶರೀರಕ್ಕೆ
ಮತ್ತು ಮನಸ್ಸಿಗೆ ಹಿತವೋ, ಸುಖ ಸಂತೋಷವನ್ನುಂಟುಮಾಡುತ್ತದೆಯೋ ಅದುವೆ
“ಪಥ್ಮ'. ಅದಕ್ಕೆ ಧಕ್ಕೆಯನ್ನುಂಟು ಮಾಡುವವುಗಳೇ "ಅಪಥ್ಕ' ಎಂದು
ಸುಶ್ರುತಾಚಾರ್ಯರು ತಿಳಿಸಿದ್ದಾರೆ. ಒಬ್ಬ ಮನುಷ್ಯನು ಸ್ವಸ್ತನಾಗಿರಬೇಕಾದರೆ
ಅವನು ಸೇವಿಸುವ ಆಹಾರಗಳಲ್ಲಿ ಮತ್ತು ಕೈಗೊಳ್ಳುವ ವಿಹಾರಗಳಲ್ಲಿ ಯುಕ್ತತೆ
ಇರಬೇಕು. ಭಗವದ್ಗೀತೆಯಲ್ಲಿ,
"ಯುಕ್ತಾಹಾರ ವಿಹಾರಸ್ಕ ಯುಕ್ತಚೇಷ್ಟಸ್ಕ್ಥ ಕರ್ಮಸು
ಯಕ್ತಸ್ವಷ್ಟ ಅವಭೋದಸ್ಕ್ಥ ಯೋಗೋ ಭವತಿ ಸುಖಃ”!
ಎಂದು ಹೇಳಲಾಗಿದೆ. ಮಾನವನಲ್ಲಿ ಸದ್ವಿಚಾರ, ಸದ್ಭಾವನೆಯನ್ನುಂಟು ಮಾಡಿ
ಸತ್ಪಥವನ್ನು 'ತೋರುವ ಆಹಾರ: ಮತ್ತು ವಿಹಾರಗಳೇ ಪಥ. ಅಂತೆಯೇ
ದುಷ್ಪಥವನ್ನು ತೋರಿ ಮಾನವನ ಪತನಕ್ಕೆ ಕಾರಣವಾಗುವುವು ಅಪಥ್ಯ
ಎನಿಸಿಕೊಳ್ಳುತ್ತವೆ. ಸರಿಯಾದ ಪಥ್ಮ ಅಂದರೆ ಮಾನವನು ತನಗೆ ಒಗ್ಗುವಂತಹ
ಆಹಾರ ಸೇವಸುತ್ತಿದ್ದರೆ ಕಾಯಿಲೆ ಹತ್ತಿರ ಸುಳಿಯಲಾರದು.
ಆಹಾರ ವ್ಯವಸ್ಥೆ ಪುಷ್ಟಿಕರವಾಗಿದ್ದು ಪ್ರಶಾಂತ ಮನಸ್ಸಿತಿ ಇರುವವರಿಗೆ
ಕಾಯಿಲೆಗಳು ಬರುವುದು ಅಪರೂಪ. ಏಕೆಂದರೆ ಇಂತಹ ಮನಸ್ಥಿತಿಯಲ್ಲಿ ದೇಹದ
ಎಲ್ಲ ಚಟುವಟಿಕೆಗಳು ಸರಾಗವಾಗಿ ಹಾಗೂ ನಿರಾಳವಾಗಿ ನಡೆಯುತ್ತಿರುತ್ತವೆ.
ಆದರೆ ನಮ್ಮ ಮನಸ್ಸು ಉದ್ವಿಗ್ನಗೊಂಡಿದ್ದರೆ, ನಮ್ಮ ಮನಸ್ಸಿನ ಮೇಲೆ ತೀವ್ರ
ಮಾನಸಿಕ ಒತ್ತಡ ಬಹುಕಾಲ ಮುಂದುವರೆದರೆ ಅದು ನಮ್ಮ ಆರೋಗ್ಯಕ್ಕೆ
ಮಾರಕವಾಗುತ್ತದೆ. ತೀವ್ರವಾದ ಮಾನಸಿಕ ಒತ್ತಡದಿಂದ ನಮ್ಮ ದೇಹದಲ್ಲಿ
ಕೆಲವು ಮಹತ್ತರ ಪರಿಣಾಮಗಳುಂಟಾಗುತ್ತವೆ.
16 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ದೇಹದ ಬೇರೆ ಬೇರೆ ಅಂಗಗಳಲ್ಲಿ ಕೂಡಿಟ್ಟ ಸಕ್ಕರೆ ಮತ್ತು ಕೊಬ್ಬು


ರಕ್ತದಲ್ಲಿ ತುಂಬಿಕೊಳ್ಳುತ್ತದೆ. ಉಸಿರಾಟದ ಗತಿ ತೀವ್ರವಾಗಿ ದೇಹವು ಹೆಚ್ಚು
ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಹೃದಯದ ಬಡಿತ ಜೋರಾಗಿ ರಕ್ತದ ಒತ್ತಡ
ಹೆಚ್ಚಾಗುತ್ತದೆ. ರಕ್ತ ಹೆಪ್ಪುಗಟ್ಟುವುದಕ್ಕೆ ಬೇಕಾದ ರಾಸಾಯನಿಕ ಬದಲಾವಣೆ
ಗಳುಂಟಾಗುತ್ತವೆ ಮತ್ತು ಹೆಪ್ಪುಗಟ್ಟಿದ ರಕ್ತದ ಗರಣೆಗಳು ರಕ್ತನಾಳಗಳಲ್ಲಿ
ಸೇರಿಕೊಂಡು ರಕ್ತದ ಪರಿಚಲನೆಗೆ ಅಡ್ಡಿಯುಂಟುಮಾಡುತ್ತದೆ. ಇದರಿಂದ
ಹೃದಯಾಘಾತವಾಗುವ ಸಾಧ್ಯತೆ ಹೆಚ್ಚುತ್ತದೆ. ಆಹಾರವನ್ನು ಪಚನ ಮಾಡುವ
ಶಕ್ತಿ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಸ್ನಾಯುಗಳಿಗೆ ಮತ್ತು ಮಿದುಳಿಗೆ ಹೆಚ್ಚು
ರಕ್ತ ಹರಿಯುತ್ತದೆ. ಹೆಚ್ಚು ಬೆವರುತ್ತದೆ ಮತ್ತು ಜೊಲ್ಲು ಸುರಿಯುತ್ತದೆ. ಈ
ಎಲ್ಲ ಚಟುವಟಿಕೆಗಳಿಗೂ ಅನೇಕ ಆಹಾರಾಂಶಗಳು ಅಧಿಕ ಪ್ರಮಾಣದಲ್ಲಿ
ಖರ್ಚಾಗುತ್ತವೆ. ಖರ್ಚಾದ ಆಹಾರಾಂಶಗಳನ್ನು ನಮ್ಮ ಆಹಾರದಿಂದ ತುಂಬಿ
ಕೊಡುವುದು ಸಾಧ್ಯವಾಗದೇ ಅವುಗಳ ಕೊರತೆಯುಂಟಾಗುತ್ತದೆ. ಇದರಿಂದ ನಮ್ಮ
ಜಠರಾಮ್ಲ ಹೆಚ್ಚುತ್ತದೆ. ಜಠರ - ಕರಳುಗಳಲ್ಲಿ ಹುಣ್ಣಾಗುವುದು, ಒತ್ತಡದ
ತಲೆನೋವು ಬರುವುದು, ರಕ್ತದೊತ್ತಡ ಏರುವುದು ಹಾಗೂ ಹೃದಯರೋಗಗಳು
ಬರುವ ಸಾದ್ಯತೆ ಹೆಚ್ಚಾಗಿರುತ್ತದೆ. ನಮ್ಮ ದೇಹದಲ್ಲಿ ಪ್ರತಿ ಕ್ಷಣವೂ ನೂರಾರು
ರಾಸಾಯನಿಕ ಕ್ರಿಯೆಗಳು ನಡೆಯುತ್ತಿರುತ್ತವೆ. ಇವುಗಳಿಗೆ ಬೇಕಾದ ಸುಮಾರು
ಅರವತ್ತಕ್ಕೂ ಹೆಚ್ಚು ಆಹಾರಾಂಶಗಳನ್ನು ನಾವು ಆಹಾರದ ಮೂಲಕ ಒದಗಿಸ
ಬೇಕು.
ಆದ್ದರಿಂದ ದೇಹಕ್ಕೆ ಅವಶ್ಶಕವಾದ ಪೌಷ್ಟಿಕಾಂಶದಿಂದ ಕೂಡಿದ ಸಾತ್ವಿಕ
ಆಹಾರವನ್ನು ನಿಯಮಿತವಾಗಿ, ಸಾವಕಾಶವಾಗಿ ಪ್ರಶಾಂತ ಮನಃಸ್ಥಿತಿಯಿಂದ
ಸೇವಿಸುತ್ತಿದ್ದರೆ ಮನುಷ್ಕನು ಆರೋಗ್ಯಕರ ದೇಹದೊಂದಿಗೆ ಆರೋಗ್ಯಕರ
ಮನಸ್ಸನ್ನು ಹೊಂದಿರುವುದು ಸಾಧ್ಯವಾಗುತ್ತದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 17

ಸೊಪ್ಪಿನ ಉಪಯುಕ್ತತೆ
ಸೊಪ್ಪುಗಳನ್ನು ಆಹಾರದ ಜೊತೆಗೆ ಅಧಿಕವಾಗಿ ಬಳಸುವುದರಿಂದ
ಪಚನಶಕ್ತಿ ವೃದ್ದಿಯಾಗುತ್ತದೆಯಲ್ಲದೇ ಮಲಬದ್ದತೆಯೂ ನಿವಾರಣೆಯಾಗುತ್ತದೆ.
ಸೊಪ್ಪುಗಳಿಂದ ದೇಹಕ್ಕೆ ಬೇಕಾದ ಖನಿಜಾಂಶಗಳು ದೊರೆಯುತ್ತವೆ. ಸೊಪ್ಪುಗಳು
ಅತೀ ಸುಲಭ ಬೆಲೆಯಲ್ಲಿ ಖನಿಜ ಮತ್ತು ಜೀವಸತ್ವಗಳನ್ನು ಪೂರೈಸುವಂತಹವು
ಗಳಾಗಿವೆ. ಸೊಪ್ಪುಗಳು ಆಹಾರದಲ್ಲಿ ವಿಶೇಷ ಸ್ವಾದವನ್ನುಂಟುಮಾಡುತ್ತವೆ.
ಕೆಲವು ಸೊಪ್ಪುಗಳ ಸೇವನೆಯಿಂದ ನಿದ್ರೆಯು ಚೆನ್ನಾಗಿ ಬರುತ್ತದೆ. ಸೊಪ್ಪಿನ
ಸೇವನೆಯಿಂದ ಶರೀರಕ್ಕೆ ಶಕ್ತಿ ಹಾಗೂ ಉಷ್ಣತೆ ದೊರಕುತ್ತದೆ. ಸೊಪ್ಪುಗಳು
ಆಹಾರವಾಗಿ ಮಾತ್ರವಲ್ಲ ಔಷಧಿಯಾಗಿಯೂ ಉಪಯುಕ್ತವಾಗಿವೆ.
ಸೊಪ್ಪುಗಳನ್ನು ಸಾಧ್ಯವಾದಷ್ಟು ತಾಜಾ ಇರುವಾಗಲೇ ಉಪಯೋಗಿಸ
ಬೇಕು. ಸೊಪ್ಪುಗಳನ್ನು ಕತ್ತರಿಸುವುದಕ್ಕೆ ಮುಂಚೆ ಶುದ್ಧವಾದ ನೀರಿನಲ್ಲಿ ತೊಳೆದು
ಸ್ವಚ್ಛಗೊಳಿಸಬೇಕು. ಸೊಪ್ಪುಗಳನ್ನು ಬೇಯಿಸುವಾಗ ಹೆಚ್ಚು ನೀರು ಹಾಕಬಾರದು.
ಅಕಸ್ಮಾತ್‌ ನೀರು ಹೆಚ್ಚಾಗಿದ್ದರೂ ಆ ನೀರನ್ನು ಚೆಲ್ಲದೇ ಸಾರಿಗೆ ಉಪಯೋಗಿಸಿ
ಕೊಳ್ಳಬೇಕು. ಸೊಪ್ಪನ್ನು ಬೇಯಿಸುವಾಗ ಪಾತ್ರೆಯ ಮೇಲೆ ಮುಚ್ಚಿರಬೇಕು.
ಒಂದು ದಿನಕ್ಕೆ ಸೊಪ್ಪು ಶೇಖರಿಸಿಡಬೇಕೆಂದರೆ ಅವುಗಳನ್ನು ನೀರಿನಲ್ಲಿ ಅದ್ದಿ
ಹಿಂಡಿದ ಬಟ್ಟೆಯೊಳಗೆ ಸುತ್ತಿ ತಂಪಾದ ಸ್ಥಳದಲ್ಲಿರಿಸಬೇಕು. ಸೊಪ್ಪನ್ನು ಹಬೆಯಲ್ಲಿ
ಬೇಯಿಸುವುದರಿಂದ ಪೌಷ್ಟಕಾಂಶಗಳು ನಷ್ಟವಾಗುವುದಿಲ್ಲ.

ದಂಟಿನ ಸೊಪ್ಪಿನಿಂದ ಪಲ್ಕ, ಸಾರು, ಹುಳಿ ಎಲ್ಲವನ್ನೂ ತಯಾರಿಸಬಹುದು.


ಇದು ರುಚಿಕರವಾಗಿರುತ್ತದೆ.
18 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

100 ಗ್ರಾಂ ದಂಟಿನ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :


ತೇವಾಂಶ 90.0 ಗ್ರಾಂ ಕೊಬ್ಬು 0.04 ಗ್ರಾಂ
ಶರ್ಕರ ಪಿಷ್ಠ 6.00 ಗ್ರಾಂ ರಂಜಕ 83.0 ಗ್ರಾಂ
ಸುಣ್ಣ(ಕ್ಕಾಲ್ಸಿಯಂ) 397 ಮಿಲಿಗ್ರಾಂ ಸಸಾರಜನಕ 4.90 ಗ್ರಾಂ
ಕಬ್ಬಿಣ 25.5 ಮಿಲಿಗ್ರಾಂ... ಪೊಟ್ಕಾಷಿಯಂ 314 ಮಿಲಿಗ್ರಾಂ
ಸೋಡಿಯಂ 230 ಮಿಲಿಗ್ರಾಂ ಮೆಗ್ನೀಷಿಯಂ 247 ಮಿಲಿಗ್ರಾಂ
"ಎ' ಜೀವಸತ್ವ 10970 ಐ.ಯು. . "ಬಿ' ಜೀವಸತ್ವ. 36 ಎಂ. ಸಿ.ಜಿ.
ನಯಾಸಿನ್‌ , 11.1 ಮಿಲಿಗ್ರಾಂ . "ಸಿ' ಜೀವಸತ್ವ... 150 ಮಿಲಿಗ್ರಾಂ
ಉಪಯೋಗ:
೧ ದಂಟಿನ ಸೊಪ್ಪನ್ನು ಬೇಯಿಸಿ ಜೇನಿನೊಂದಿಗೆ ಸೇವಿಸಿದರೆ ಮಲಬದ್ಧತೆ
ನಿವಾರಣೆಯಾಗುತ್ತದೆ.
೧ ಬಾಣಂತಿಯರು ಒಂದು ಲೋಟ ತಾಜಾ ಸೊಪ್ಪಿನ ರಸವನ್ನು ಜೇನುತುಪ್ಪ
ಹಾಗೂ ಏಲಕ್ಕಿ ಪುಡಿಯೊಂದಿಗೆ ಸೇವಿಸಿದರೆ ಹಾಲಿನ ಉತ್ಪತ್ತಿ ಹೆಚ್ಚುತ್ತದೆ.
೧ ಮೂಲವ್ಯಾಧಿಯಿಂದ ಬಳಲುವವರು ದಂಟಿನ ಸೊಪ್ಪಿನ ಕಷಾಯವನ್ನು
ತಯಾರಿಸಿ ಒಂದು ಲೋಟ ಸೇವಿಸಿದರೆ ನೋವು ಹಾಗೂ ಉರಿ ಕಡಿಮೆಯಾಗುತ್ತದೆ.
೧ ಸ್ತ್ರೀಯರಿಗೆ ಅತಿಯಾಗಿ ರಕ್ತಸ್ರಾವವಾಗುತ್ತಿದ್ದರೆ ದಂಟಿನ ಸೊಪ್ಪಿನ
ರಸವನ್ನು ಸೇವಿಸುವುದರಿಂದ ಕಡಿಮೆಯಾಗುತ್ತದೆ.
೧ ಯಕೃತ್ತಿನ (Liver) ತೊಂದರೆ ಇರುವವರು ದಂಟಿನ ಸೊಪ್ಪನ್ನು ಪ್ರತಿದಿನ
ಆಹಾರಕ್ಕೆ ಉಪಯೋಗಿಸುವುದು ಒಳ್ಳೆಯದು.
[0 ದಂಟಿನ ಸೊಪ್ಪಿನ ರಸಕ್ಕೆ ನಿಂಬೆರಸ ಬೆರೆಸಿ (ಸ್ವಲ್ಪ ಪ್ರಮಾಣ)
ಕೈಕಾಲುಗಳಿಗೆ ಹಚ್ಚಿಕೊಂಡರೆ ಚರ್ಮದ ಕಾಂತಿಯು ಚುಮು
೧ ದಂಟಿನ ಸೊಪ್ಪನ್ನು ಅರೆದು ತಲೆಗೆ ಲೇಪಿಸಿಕೊಂಡು ಸ್ವಲ್ಪ ಹೊತ್ತು
ಬಿಟ್ಟು ಸ್ನಾನ ಮಾಡುತ್ತಿದ್ದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
೧ ಮೊಡವೆಗಳಿಗೆ ದಂಟಿನ ಸೊಪ್ಪನ್ನು ಸುಟ್ಟು ಅದರ ಬೂದಿಯನ್ನು
ನೀರಿನಲಿ ಕಲೆಸಿ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ಶೀಘ್ರವೇ ನಿವಾರಣೆಯಾಗುತ್ತದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 19

ಮೆಂತ್ಮದ ಸೊಪ್ಪಿನಿಂದ ಪಲ್ಕ, ಸಾರು, ಭಾತ್‌, ರೊಟ್ಟಿ, ಪರೋಟ, ವಡೆ,


ಹುಳಿ ಏನೆಲ್ಲ ತಯಾರಿಸಬಹುದು. ಎಲ್ಲವೂ ಒಂದಕ್ಕಿಂತ ಒಂದು ರುಚಿಕರವೇ
ಆಗಿರುತ್ತದೆ. ಮೆಂತ್ಯದ ಕಡುಬು ತಯಾರಿಸಬಹುದು.
100 ಗ್ರಾಂ ಮೆಂತ್ಯದ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ಪಿಷ್ಮ 10 ಗ್ರಾಂ ಸಸಾರಜನಕ 4.4ಗ್ರಾಂ
ಕೊಬ್ಬು 1 ಗ್ರಾಂ ರಂಜಕ 49 ಮಿಲಿಗ್ರಾಂ
ಸುಣ್ಣ 455 ಮಿಲಿಗ್ರಾಂ ಕಬ್ಬಿಣ 17 ಮಿಲಿಗ್ರಾಂ
ತೇವಾಂಶ 86.1 ಗ್ರಾಂ ಖನಿಜಾಂಶ 1.5 ಗ್ರಾಂ
ಕಾರ್ಬೋಹೈಡ್ರೇಟ್ಸ್‌ 6.0 ಗ್ರಾಂ ನಿಯಾಸಿನ್‌ 0.8 ಮಿಲಿಗ್ರಾಂ
'ಬಿ' ಜೀವಸತ್ವ 49 ಎಂ. ಸಿ. ಜಿ... "ಎ' ಜೀವಸತ್ವ 6450 ಐ. ಯು.
“ಬಿ' ಜೀವಸತ್ವ 165 ಎಂ. ಸಿ. ಜಿ. ಥಿಯಾಮಿನ್‌ 0.04 ಮಿಲಿಗ್ರಾಂ
ಉಪಯೋಗ:
೧ ಸೊಪ್ಪುಗಳನ್ನು ಹಬೆಯಲ್ಲಿ ಬೇಯಿಸಿ ಬಸಿಯದೇ ತಿನ್ನುವುದು ಉತ್ತಮ
ವಾದುದು. ಇದರಿಂದ ನಮ್ಮ ಶರೀರಕ್ಕೆ ಸೊಪ್ಪಿನಲ್ಲಿರುವ ಕ್ಷಾರಗಳು ಸಂಪೂರ್ಣ
ವಾಗಿ ಸೇರುತ್ತವೆ.
ರ ಮೆಂತ್ಯದ ಸೊಪ್ಪು ವಾತಸಂಬಂಧವಾದ ಎಲ್ಲ ವಿಕಾರಗಳನ್ನು
ಶಾಂತಗೊಳಿಸುತ್ತದೆ.
೧0 ಮೆಂತ್ಯದ ಹಸಿಯ ಸೊಪ್ಪಿಗೆ ಉಪ್ಪು, ಜೀರಿಗೆ ಹಾಗೂ ಕಾಳು ಮೆಣಸಿನ
ಪುಡಿಯನ್ನು ಸೇರಿಸಿ ತಿನ್ನುವುದರಿಂದ ಹೊಟ್ಟೆಯಲ್ಲಿನ ವಾಯು ನಾಶವಾಗುತ್ತದೆ.
೧0 ಸಂಧಿವಾತದಿಂದ ಬಳಲುವವರು ಪ್ರತಿನಿತ್ಯ ಮೆಂತ್ಮದ ಸೊಪ್ಪನ್ನು
ಬೇಯಿಸಿ ಉಪ್ಪು, ಮೆಣಸಿನ ಪುಡಿಯೊಡನೆ ಸೇವಿಸಿದರೆ ಒಳ್ಳೆಯದು.
೧0 ಮೆಂತ್ಯದ ಕಾಳು 50 ಗ್ರಾಂ, ನೆಲ್ಲಿಕಾಯಿ ಪುಡಿ 50 ಗ್ರಾಂ, ಕೊತ್ತಂಬರಿ
ಬೀಜ 50 ಗ್ರಾಂ, ಈ ಮೂರನ್ನು ರಾತ್ರಿ ನೀರಿನಲ್ಲಿ ನೆನಸಿ ಪ್ರಾತಃಕಾಲದಲ್ಲಿ
20 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು '

ನುಣ್ಣಗೆ ಅರೆದು ತಲೆಗೆ ಹಚ್ಚಿಕೊಂಡು ಸ್ವಲ್ಪ ಹೊತ್ತಾದ ನಂತರ ಸ್ನಾನವನ್ನು '


ಮಾಡಬೇಕು. ಇದರಿಂದ ತಲೆಯ ಹೊಟ್ಟು ಕಡಿಮೆಯಾಗುವುದಲ್ಲದೇ |
ಕೂದಲುದುರುವುದೂ ನಿಲ್ಲುತ್ತದೆ.
೧0 ಮೆಂತ್ಕ 100 ಗ್ರಾಂ, ಹೆಸರುಕಾಳು 100 ಗ್ರಾಂ, ಕೊತ್ತಂಬರಿ ಬೀಜ
30 ಗ್ರಾಂ, ಕಚೋರ 30 ಗ್ರಾಂ ಹಾಗೂ ಕಸ್ತೂರಿ ಅರಿಶಿನ 30 ಗ್ರಾಂ ಇವುಗಳನ್ನು
ಟ್ಟಿ ನುಣ್ಣಗಿನ ಪುಡಿ ಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ನೀರಿನೊಡನೆ
ಕಲೆಸಿ ಶರೀರಕ್ಕೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಚರ್ಮವು ಸ್ವಚ್ಛ,
ಮೃದುವೂ ಆಗುವುದಲ್ಲದೇ ಮೈಮೇಲೆ ಉಂಟಾದ ಪಿತ್ತದ ಗುಳ್ಳೆಗಳು
ನಾಶವಾಗುತ್ತವೆ.
[0 ಮಧುಮೇಹದ ರೋಗಿಗಳು ಪ್ರತಿ ದಿನ ಒಂದು ಟೇಬಲ್‌
ಚಮಚೆಯಷ್ಟು ಮೆಂತ್ಕ ಸೊಪ್ಪಿನ ರಸವನ್ನು ಸೇವಿಸಿದರೆ ಒಳ್ಳೆಯದು.
೧ ಮೆಂತ್ಮ ಸೊಪ್ಪನ್ನು ಅರೆದು ರಾತ್ರಿ ಮಲಗುವುದಕ್ಕೆ ಮುಂಚೆ ಮುಖಕ್ಕೆ
ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ
ತೊಳೆದುಕೊಳ್ಳುವ ಅಭ್ಯಾಸವಿಟ್ಟುಕೊಂಡರೆ ಮೊಡವೆಗಳು ನಿವಾರಣೆಯಾಗಿ
ಮುಖವು ಕಾಂತಿಯುಕ್ತವಾಗುತ್ತದೆ.
೧0 ಮೆಂತ್ಕದ ಹಿಟ್ಟಿನ ಪೊಲ್ಬೀಸನ್ನುಮಾಡಿ ಕುರುಗಳ ಮೇಲೆ ಕಟ್ಟಿದರೆ
ಊತ, ನೋವು ಎರಡೂ ಕಡಮೆಯಾಗುತ್ತವೆ.
೧ ಅಕ್ಕಿ ಅಥವಾ ಗೋಧಿಗೆ ಕಾಲುಭಾಗ ಮೆರತ್ಕವನ್ನು ಸೇರಿಸಿ ಹಿಟ್ಟು
ಮಾಡಿಟ್ಟುಕೊಳ್ಳಬೇಕು. ಈ ಹಿಟ್ಟಿನಿಂದ ಮಾಡಿದ ದೋಸೆ ಇಲ್ಲವೇ ರೊಟ್ಟಿಯನ್ನು
ಮಾಡಿ ಮೆಂತ್ಕದ ಸೊಪ್ಪಿನ ಪಲ್ಕದೊಡನೆ ತಿನ್ನುವುದರಿಂದ ಹೊಟ್ಟೆಯೊಳಗಿನ
ದೂಷಿತ ವಾಯು ನಾಶವಾಗಿ ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ.

3. ಪುದೀನಾ

ಪುದೀನಾವನ್ನು ಮನೆಯ ಹಿತ್ತಲಲ್ಲಿ ಸುಲಭವಾಗಿ ಬೆಳೆಸಬಹುದಾಗಿದೆ.


ಇದರಿಂದ ಚಟ್ನಿ, ಪಲಾವ್‌, ವಡೆ ಹಾಗೂ ಪಕೋಡಾವನ್ನು ತಯಾರಿಸಬಹುದು.
| ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 21

ಪುದೀನಾ ರುಚಿಯಲ್ಲಿ ಖಾರವಾಗಿದ್ದು ಬಾಯಲ್ಲಿಟ್ಟು ಜಗಿದಾಗ ನಾಲಿಗೆಯ ರುಚಿ


ಗ್ರಹಣವನ್ನು ಹೆಚ್ಚಿಸಿ, ಜೊಲ್ಲು ಸುರಿಯುವಂತೆ ಮಾಡುತ್ತದೆ.
100 ಗ್ರಾಂ ಪುದೀನಾ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ತೇವಾಂಶ 84.9 ಗ್ರಾಂ ಸಸಾರಜನಕ 4.9 ಗ್ರಾಂ
ಕೊಬ್ಬು 0.6 ಗ್ರಾಂ ಖನಿಜಾಂಶ 1.9 ಗ್ರಾಂ
ಕಾರ್ಬೋಹೈಡ್ರೇಟ್ಸ್‌ 8.8 ಗ್ರಾಂ ಫಾಸ್ಪರಸ್‌ 62 ಮಿಲಿಗ್ರಾಂ
ಕ್ಕಾಲ್ಸಿಯಂ (ಸುಣ್ಣ) 200 ಮಿಲಿ ಗ್ರಾಂ ಕಬ್ಬಿಣ 15.6ಮಿಲಿಗ್ರಾಂ
ಥಿಯಾಮಿನ್‌ 0.05 ಮಿಲಿಗ್ರಾಂ ನಿಯಾಸಿನ್‌ 1.0 ಮಿಲಿಗ್ರಾಂ
ರೈಬೋಫ್ಲಾವಿನ್‌ 0.26 ಮಿಲಿಗ್ರಾಂ. "ಸಿ' ಜೀವಸತ್ವ . 27 ಮಿಲಿಗ್ರಾಂ
“ಎ' ಜೀವಸತ್ವ 6100 ಐ. ಯು. ಆಕ್ಸಾಲಿಕ್‌ ಆಮ್ಲ 3.8 ಮಿಲಿಗ್ರಾಂ
ಉಪಯೋಗ: |
೧ ಪುದೀನಾ ಸೊಪ್ಪನ್ನು ಅಗಿಯುವುದರಿಂದ ಬಾಯಿಯ ದುರ್ವಾಸನೆ
ದೂರವಾಗುತ್ತದೆ.
ರ ನೆಗಡಿ, ಕೆಮ್ಮು ಇದ್ದಾಗ ಪುದೀನಾ ಸೊಪ್ಪಿನಿಂದ ಚಹಾವನ್ನು ತಯಾರಿಸಿ
ಸ್ವಲ್ಪ ಸ್ವಲ್ಪವೇ ಕುಡಿಯಬೇಕು.
[0 ಜ್ವರವಿದ್ದಾಗ ಸೊಪ್ಪಿನ ಕಷಾಯ ಸೇವನೆ ಮಾಡಬೇಕು.
೧ ಅಜೀರ್ಣವಿದ್ದಾಗ ಪುದೀನಾ ಸೊಪ್ಪಿನ ಜೊತೆಗೆ ಹಸಿ ಶುಂಠಿಯನ್ನು
ಸೇರಿಸಿ ಕಷಾಯ ತಯಾರಿಸಿ ಕುಡಿಯಬೇಕು.
ರ ಹೊಟ್ಟೆನೋವು, ಹೊಟ್ಟೆ ಉಬ್ಬರವಿದ್ದಾಗ ಪುದೀನಾ ರಸಕ್ಕೆ ಸ್ವಲ್ಪ ಸಕ್ಕರೆ
ಸೇರಿಸಿ ಕುಡಿದರೆ ಕಡಿಮೆಯಾಗುತ್ತದೆ. ತಿಂಗಳ ಮುಟ್ಟಿನ ಸಮಯದಲ್ಲಿ ಬರುವ
ಹೊಟ್ಟೆನೋವಿಗೂ ಇದೇ ಔಷಧವನ್ನು ಉಪಯೋಗಿಸಬಹುದು.
೧0 ಮೊಡವೆಗಳಾದಾಗ, ಪುದೀನಾ ಎಲೆಗಳ ಜೊತೆಗೆ ಸ್ವಲ್ಪ ಅರಿಶಿನ ಸೇರಿಸಿ
ಅರೆದುಕೊಂಡು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಬಿಸಿನೀರಿನಲ್ಲಿ ಮುಖ
ತೊಳೆಯಬೇಕು.
೧0 ಪುದೀನಾ ಸೊಪ್ಪಿನ ಚಟ್ನಿಯನ್ನು ಸೇವಿಸುವುದರಿಂದ ಹಸಿವೆ ಹೆಚ್ಚುತ್ತದೆ.
ಊಟವಾದ ನಂತರ ನಾಲ್ಕಾರು ಪುದೀನಾ ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು
72 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಜಗಿದು ತಿನ್ನುವುದರಿಂದ ಹಲ್ಲುಗಳು ಹುಳುಕಾಗುವುದಿಲ್ಲ ಹಾಗೂ ಒಸಡುಗಳಿಗೆ


ಶಕ್ತಿ ಬರುತ್ತದೆ.

ಈ ಸೊಪ್ಪಿನಿಂದ ಪಲ್ಕ, ಸಾರು ತಯಾರಿಸಬಹುದು.


ಈ ಸೊಪ್ಪಿನಿಂದ ಶರೀರಕ್ಕೆ ಪುಷ್ಟಿ ದೊರೆಯುವುದು. ನಿಶ್ಶಕ್ತರಿಗೆ, ಮಕ್ಕಳಿಗೆ,
ವೃದ್ದರಿಗೆ ಈ ಸೊಪ್ಪನ್ನು ಆಹಾರವಾಗಿ ಕೊಡುವುದಶಂದ ಶಕ್ತಿಯು ಹೆಚ್ಚುತ್ತದೆ.
100 ಗ್ರಾಂ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ತವಾಶ ಗ್ರಾ ಇ ಸಾರವ ಗ್ರಾ
ಕೊಬ್ಬು 0.7 ಗ್ರಾಂ ಖನಿಜಾಂಶ 2.5 ಗ್ರಾಂ
ನಾರಿನಾಂಶ 2.8 ಗ್ರಾಂ ಕಾರ್ಬೋಹೈಡ್ರೇಟ್ಸ್‌ 11.6 ಗ್ರಾಂ
ಕ್ಕಾಲ್ಸಿಯಂ 10 ಮಿಲಿಗ್ರಾಂ ಫಾಸ್ಫರಸ್‌ 60 ಮಿಲಿಗ್ರಾಂ
ಕಬ್ಬಿಣ 16.7 ಮಿಲಿಗ್ರಾಂ ನಿಯಾಸಿನ್‌ 1.2 ಮಿಲಿಗ್ರಾಂ
ರೈಬೋಫ್ಲಾವಿನ್‌ 0.14 ಮಿಲಿಗ್ರಾಂ. "ಸಿ' ಜೀವಸತ್ವ 17.0 ಮಿಲಿಗ್ರಾಂ
ಉಪಯೋಗ:
೧ ಮೂಲವ್ಕಾಭಯಿಂದ ಬಳಲುವವರು ಹೊನಗೊನೆ ಸೊಪ್ಪಿನ ರಸಕ್ಕೆ
ಸಮ ಪ್ರಮಾಣ ಮೂಲಂಗಿ ಸೊಪ್ಪಿನ ರಸ ಹಾಗೂ ಸ್ವಲ್ಪ ಸೈಂಧವ ಲವಣವನ್ನು
ಸೇರಿಸಿ ಕುಡಿಯಬೇಕು. ಹಾಗೆಯೇ ಹೊನಗೊನೆ ಸೊಪ್ಪಿನ ಪಲ್ಕ ಅಥವಾ ಸಾರನ್ನು
ಸೇವಿಸೆಬೇಕು.
೧ ಬಾಣಂತಿಯರು ಹೊನಗೊನೆ ಸೊಪ್ಪಿನ ಪಲ್ಕ ಸೇವಿಸುವುದರಿಂದ
ಹಾಲಿನ ಉತ್ಪತ್ತಿ ಚೆನ್ನಾಗಿ ಆಗುತ್ತದೆ.
೧ ಹೊನಗೊನೆ ಸೊಪ್ಪಿನ ಕಾಡಿಗೆಯನ್ನು ತಯಾರಿಸಿ ಕಣ್ಣಿಗೆ
ಹಚ್ಚುವುದರಿಂದ ಕಣ್ಣಿನ ಕಾಂತಿ ಹೆಚ್ಚುತ್ತದೆ.
೧ ಒಂದುಲೋಟ ಎಳ್ಳೆಣ್ಣೆ ತೆಗೆದುಕೊಂಡು ಅದಕ್ಕೆ ಹೊನಗೊನೆ ಸೊಪ್ಪಿನ
| ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 23

ರಸ ಸೇರಿಸಿ ಕುದಿಸಿ ತೈಲವನ್ನು ತಯಾರಿಸಿಟ್ಟುಕೊಂಡು ತಲೆಗೆ ಉಪಯೋಗಿಸಿದರೆ


ಕಣ್ಣು ಉರಿ ಕಡಿಮೆಯಾಗುವುದಲ್ಲದೇ ಕೂದಲೂ ಚೆನ್ನಾಗಿ ಬೆಳೆಯುತ್ತದೆ.

ಇದರಿಂದ ಪಲ್ಕ, ರೊಟ್ಟಿ, ವಡೆ, ಕೂಟು ತಯಾರಿಸಬಹುದು. ಸಬ್ಬಸಿಗೆ


ಸೊಪ್ಪು ಉಷ್ಣ, ಸಿಹಿ ಗುಣ ಹೊಂದಿದ್ದು ಅಗ್ನಿಯನ್ನು ವೃದ್ದಿಗೊಳಿಸುವುದಲ್ಲದೇ
ರುಚಿಕರವಾಗಿರುತ್ತದೆ.
100 ಗ್ರಾಂ ಸಬ್ಬಸಿಗೆ ಸೊಪ್ಪಿನಲ್ಲಿ ಪೋಷಕಾಂಶಗಳು :

ಕೊಬ್ಬು 0.5 ಗ್ರಾಂ ಖನಿಜಾಂಶ 2.2 ಗ್ರಾಂ


ನಾರಿನಾಂಶ 1.1 ಗ್ರಾಂ ಕಾರ್ಬೋಹೈಡ್ರೇಟ್ಸ್‌ 5.2 ಗ್ರಾಂ
ಕ್ಯಾಲ್ಸಿಯಂ 190 ಮಿಲಿ ಗ್ರಾಂ ಫಾಸ್ಫರಸ್‌ 4.2 ಮಿಲಿಗ್ರಾಂ
ಕಬ್ಬಿಣ 17.4 ಮಿಲಿಗ್ರಾಂ ಥಿಯಾಮಿನ್‌ 0.03 ಮಿಲಿಗ್ರಾಂ
ರೈಬೋಫ್ಲಾವಿನ್‌ 0.18 ಮಿಲಿಗ್ರಾಂ ನಿಯಾಸಿನ್‌ 0.20 ಮಿಲಿಗ್ರಾಂ
"ಸಿ' ಜೀವಸತ್ವ 25 ಮಿಲಿಗ್ರಾಂ
ಉಪಯೋಗ:
2 ಸಬ್ಬಸಿಗೆ ಸೊಪ್ಪಿನ ಪಲ್ಕವನ್ನು ಸೇವಿಸುವುದರಿಂದ ಮಲಬದ್ದತೆಯು
ನಿವಾರಣೆಯಾಗುತ್ತದೆ.
0 ಸಬ್ಬಸಿಗೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ಉಪ್ಪು ಮತ್ತು ಮೆಣಸಿನ
ಪುಡಿಯನ್ನು ಹಾಕಿ ಬಾಣಂತಿಗೆ ಸೇವಿಸಲು ಕೊಡುವುದರಿಂದ ಎದೆ ಹಾಲು ಚೆನ್ನಾಗಿ
ಉತ್ಪತ್ತಿ ಆಗುತ್ತದಲ್ಲದೇ ಜೀರ್ಣಶಕ್ತಿಗೂ ಸಹಕಾರಿಯಾಗುತ್ತದೆ. ಬಾಣಂತಿಗೆ
ಹೊಟ್ಟೆನೋವು ಬಂದಾಗ ಸಬ್ಬಸಿಗೆ ಬೀಜಗಳ ಕಷಾಯ ಕುಡಿಸುವುದರಿಂದ
ಕಡಿಮೆಯಾಗುತ್ತದೆ.
೧ ಸಬ್ಬಸಿಗೆ ಸೊಪ್ಪು ಅಥವಾ ಬೀಜ ಮತ್ತು ಸೈಂಧವ ಲವಣ ಇವುಗಳನ್ನು
24 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು |

ಅರೆದು ತುಪ್ಪದೊಡನೆ ಕೂಡಿಸಿ ಜೇನು ನೊಣಗಳು ಕಚ್ಚಿದ ಜಾಗದಲ್ಲಿ '


ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ.
೧ ಸಬ್ಬಸಿಗೆ ಬೀಜವನ್ನು ಇಪ್ಪೆಯ ಎಣ್ಣೆಯೊಡನೆ ಅರೆದು ಕೀಲುಗಳಿಗೆ
ಉಜ್ಜಿದರೆ ನೋವು ಕಡಿಮೆಯಾಗುತ್ತದೆ.
2. ಸಬ್ಬಸಿಗೆ ಬೀಜ, ಲವಂಗ, ಅಜವಾನ ಹಾಗೂ ಬಿಡಾಲವಣ ಈ
ನಾಲ್ಕನ್ನೂ ಸಮವಾಗಿ ಸೇರಿಸಿ ಕುಟ್ಟಿ ನಿಂಬೆ ರಸದಲ್ಲಿ ಅರೆದು ಗುಳಿಗೆಗಳನ್ನು
ಮಾಡಿ ನೆರಳಿನಲ್ಲಿ ಒಣಗಿಸಿಟ್ಟುಕೊಳ್ಳಬೇಕು. ಅಜೀರ್ಣದಿಂದ ಬಳಲುವವರು
ಪ್ರತಿ ದಿನ ಒಂದೊಂದು ಮಾತ್ರೆಯನ್ನು ಊಟಕ್ಕೆ ಮುಂಚೆ ಸೇವಿಸಬೇಕು.
೧0 ಸಬ್ಬಸಿಗೆ ಸೊಪ್ಪನ್ನು ಒಣಗಿಸಿ ಚಟ್ನಿಪುಡಿ ತಯಾರಿಸಿ ಆಗಾಗ್ಗೆ
ಆಹಾರದೊಂದಿಗೆ ಉಪಯೋಗಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.
೧ ಸಬ್ಬಸಿಗೆ ಸೊಪ್ಪನ್ನು ನುಣ್ಣಗೆ ಅರೆದು ಅದರೊಂದಿಗೆ ಸ್ವಲ್ಪ ಅರಿಶಿನ
ಪುಡಿಯನ್ನು ಬೆರೆಸಿ. ವ್ರಣಗಳ ಮೇಲೆ ಲೇಪಿಸುವುದರಿಂದ ವ್ರಣಗಳು ಬೇಗ
ಮಾಯುತ್ತವೆ.
೧ ಖತುಸ್ರಾವ ಸರಿಯಾಗಿ ಆಗದೇ ಇರುವಂತಹ ಸ್ತ್ರೀಯರು ಒಂದು
ಔನ್ಸ್‌ ಸೊಪ್ಪಿನ ರಸವನ್ನು ಸೇವಿಸಿದರೆ ಯತುಸ್ರಾವವು ನಿಯಮಿತವಾಗಿ ಆಗುತ್ತದೆ.
೧0 ಅಜೀರ್ಣದಿಂದ ಹಾಲು ವಾಂತಿಯಾಗುವ ಮಕ್ಕಳಿಗೆ ಒಂದು ಚಮಚ
ಸಬ್ಬಸಿಗೆ ಸೊಪ್ಪಿನ ಕಷಾಯವನ್ನು ಹಾಲಿನೊಂದಿಗೆ ಬೆರೆಸಿಕೊಟ್ಟರೆ ಅಜೀರ್ಣ
ನಿವಾರಣೆಯಾಗಿ ವಾಂತಿ ನಿಲ್ಲುತ್ತದೆ.

ಕೊತ್ತಂಬರಿ ಸೊಪ್ಪನ್ನು ಉಪಯೋಗಿಸದವರಾರು ? ಇದರಿಂದ ಚಟ್ನಿ,


ವಡೆ ತಯಾರಿಸುವರಲ್ಲದೇ ಸಾರು, ಹುಳಿ, ಪಲ್ಕಗಳಿಗೆ ಇದನ್ನು ಉಪ
ಯೋಗಿಸುತ್ತಾರೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 25

100 ಗ್ರಾಂ ಕೊತ್ತಂಬರಿ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :


ತೇವಾಂಶ 863ಗ್ರಾಂ ಸಸಾರಜನಕ 3.3ಗ್ರಾಂ
ಕೊಬ್ಬು 0.6 ಗ್ರಾಂ ಖನಿಜಾಂಶ 2.3 ಗ್ರಾಂ
ಕಾರ್ಬೋಹೈಡ್ರೇಟ್ಸ್‌ 6.3 ಗ್ರಾಂ ಕ್ಕಾಲ್ಸಿಯಂ 184 ಮಿಲಿಗ್ರಾಂ
ಫಾಸ್ಪರಸ್‌ 71 ಮಿಲಿಗ್ರಾಂ ಕಬ್ಬಿಣ 8.5 ಮಿಲಿಗ್ರಾಂ
ಥಿಯಾಮಿನ್‌ 0.05 ಮಿಲಿಗ್ರಾಂ. ರೈಬೋಫ್ಲಾಮಿನ್‌ 0.06 ಮಿಲಿಗ್ರಾಂ
ನಿಯಾಸಿನ್‌ 0.7 ಮಿಲಿಗ್ರಾಂ "ಬಿ2' ಜೀವಸತ್ವ 60 ಎಂ. ಸಿ. ಜಿ.
“ಎ' ಜೀವಸತ್ವ 8645 - 135807 ಐ. ಯು.
ಪೊಟ್ಕಾಸಿಯಂ 453 ಮಿಲಿಗ್ರಾಂ "ಸಿ' ಜೀವಸತ್ವ 131 ಮಿಲಿಗ್ರಾಂ
“ಬಿ' ಜೀವಸತ್ವ 49 ಎಂ. ಸಿ. ಜಿ. ಆಕ್ಸಾಲಿಕ್‌ ಆಮ್ಲ 5 ಮಿಲಿಗ್ರಾಂ

ಉಪಯೋಗ: ಸ
೧0 ಪ್ರತಿದಿನ ಒಂದು ಚಮಚ ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಅಷ್ಟೇ
ಪ್ರಮಾಣದ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ನೆನಪಿನ ಶಕ್ತಿ
ವೃದ್ದಿಯಾಗುತ್ತದೆ.
[0 ಬಾಯಿಹುಣ್ಣು ಇರುವಾಗ ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಬಾಯಿ
ಮುಕ್ಕಳಿಸಬೇಕು.
50 ಒಂದು ಲೋಟ ಮಜ್ಜಿಗೆಯಲ್ಲಿ ಎರಡು ಚಮಚ ಕೊತ್ತಂಬರಿ ಸೊಪ್ಪಿನ
ತಾಜಾ ರಸವನ್ನು ದಿನಕ್ಕೆ ಎರಡು ಸಲ ಸೇವನೆ ಮಾಡುವುದರಿಂದ ಅಜೀರ್ಣ,
ವಾಂತಿ ಹಾಗೂ ಬಿಕ್ಕಳಿಕೆ ನಿವಾರಣೆಯಾಗುತ್ತದೆ.
೧ ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಹಸಿಯಾಗಿ ತಿನ್ನುವುದರಿಂದ ಹಲ್ಲು
ಹುಳುಕಾಗುವುದಿಲ್ಲ.
26 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಇದರಿಂದ ಚಟ್ನಿ, ಚಟ್ನಿಪುಡಿ ತಯಾರಿಸುತ್ತಾರೆ. ನಾಲಿಗೆಗೆ ರುಚಿಯನ್ನು


ಮತ್ತು ಸೇವಿಸಿದ ಆಹಾರವನ್ನು ಜೀರ್ಣಿಸುವ ಗುಣಗಳಿರುವುದರಿಂದ ಇದನ್ನು
ಸಾರು, ಹುಳಿ, ಮಜ್ಜಿಗೆಯೊಂದಿಗೆ ಬಳಸುತ್ತೇವೆ.
100 ಗ್ರಾಂ ಕರಿಬೇವಿನಲ್ಲಿ ರುವ ಪೋಷಕಾಂಶಗಳು :
ತೇವಾಂಶ 63.8 ಗ್ರಾಂ ಸಸಾರಜನಕ 6.1 ಗ್ರಾಂ
ಕೊಬ್ಬು 1.0 ಗ್ರಾಂ ಖನಿಜಾಂಶ 4.0 ಗ್ರಾಂ
ನಾರಿನಂಶ 6.4 ಗ್ರಾಂ ಕಾರ್ಬೋಹೈಡ್ರೇಟ್ಸ್‌ 18.7 ಗ್ರಾಂ
ಕ್ಕಾಲ್ಸಿಯಂ 830 ಮಿಲಿಗ್ರಾಂ ಫಾಸ್ಫರಸ್‌ 57 ಮಿಲಿಗ್ರಾಂ
ಕಬ್ಬಿಣ 4.0 ಮಿಲಿಗ್ರಾಂ ಥಿಯಾಮಿನ್‌ 0.08 ಮಿಲಿಗ್ರಾಂ
ರೈಬೋಫ್ಲಾವಿನ್‌ 0.21 ಮಿಲಿಗ್ರಾಂ ನಿಯಾಸಿನ್‌ 3.0 ಮಿಲಿಗ್ರಾಂ
"ಎ' ಜೀವಸತ್ವ 13,580 ಐ. ಯು 'ಬಿ1' ಜೀವಸತ್ವ 192 ಎಂ. ಸಿ. ಜಿ.
'ಬಿ2' ಜೀವಸತ್ವ 192 ಎಂ. ಸಿ. ಜಿ. "ಸಿ' ಜೀವಸತ್ವ 4 ಮಿಲಿಗ್ರಾಂ
ಉಪಯೋಗ:
2 ಜ್ವರವಿದ್ದಾಗ ಬಾಯಾರಿಕೆಯನ್ನು ಕಡಿಮೆಮಾಡಲು ಅರ್ಧ ಲೋಟ
ದಷ್ಟು ಕರಿಬೇವಿನ ಎಲೆಗಳ ಕಷಾಯವನ್ನು ಮೇಲಿಂದ ಮೇಲೆ ಸೇವಿಸಬೇಕು.
೧, ವಾಂತಿಯಾಗುವಾಗ ಕರಿಬೇವಿನ ಎಲೆಗಳನ್ನು ಅಗಿಯುತ್ತಿದ್ದರೆ
ಒಳ್ಳೆಯದು. ಗರ್ಭಿಣಿಯರಲ್ಲಿ ಬರುವ ವಾಂತಿಯನ್ನು ಹತೋಟಿಗೆ ತರಲು ಎರಡು
ಚಮಚದಷ್ಟು ಎಳೆಯ ಎಲೆಗಳ ರಸವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ
ನಿಂಬೆರಸ ಸೇರಿಸಿ ಮೇಲಿಂದ ಮೇಲೆ ಸೇವಿಸಬೇಕು.
2 . ಬೊಜ್ಜನ್ನು ಕರಗಿಸಲು ಇಚ್ಛಿಸುವವರು ಪ್ರತಿದಿನ ಬೆಳಿಗ್ಗೆ 10 ಎಲೆ
ಕರಿಬೇವನ್ನು ತಿನ್ನಬೇಕು.
\
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 27

ರ ಕೊಬ್ಬರಿ ಎಣ್ಣೆಯೊಂದಿಗೆ ಕರಿಬೇವಿನ ಸೊಪ್ಪನ್ನು ಸೇರಿಸಿ ಕುದಿಸಿದ


ತೈಲವನ್ನು ತಲೆಗೆ ಹಚ್ಚಲು ಉಪಯೋಗಿಸಿದರೆ ಕೂದಲು ಉದುರುವುದು
ನಿಲ್ಲುವುದಲ್ಲದೇ ಕೂದಲೂ ಕಪ್ಪಾಗುತ್ತದೆ.
೧ರ. ಕರಿಬೇವಿನ ಎಲೆಗಳನ್ನು ಅಗೆದು ತಿಂದರೆ ಬಳಲಿಕೆ ನಿವಾರಣೆ
ಯಾಗುವುದಲ್ಲದೇ ಜೀರ್ಣಶಕ್ತಿ ಹೆಚ್ಚುತ್ತದೆ.
೧ರ ಮಧುಮೇಹ ರೋಗವಿರುವವರು ಪ್ರತಿದಿನ ಬೆಳಿಗ್ಗೆ ಖಾಲಿ
ಹೊಟ್ಟೆಯಲ್ಲಿ ಐದಾರು ಹಸಿ ಎಲೆಗಳನ್ನು ಅಗೆದು ತಿನ್ನುವುದು ಒಳ್ಳೆಯದು.
2 ಮೂಲವ್ಯಾಧಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು
ಜೇನುತುಪ್ಪದಲ್ಲಿ ಅದ್ದಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಉರಿ ಹಾಗೂ
ನೋವು ಕಡಿಮೆಯಾಗುತ್ತದೆ.

ಇದು ಬಳ್ಳಿ ಜಾತಿಗೆ ಸೇರಿದುದಾಗಿದೆ. ಇದರ ಕಾಂಡವು ತೆಳ್ಳಗಿದ್ದು ಹಬ್ಬುತ್ತ


ಹೋಗುತ್ತದೆ. ಎಲೆಯು ಮೃದುವಾಗಿದ್ದು ದಪ್ಪವಾಗಿರುತ್ತದೆ. ಹಣ್ಣು ಬಟಾಣಿ
ಆಕಾರದಲ್ಲಿರುತ್ತದೆ. ಭಾರತದ ಎಲ್ಲ ಭಾಗಗಳಲ್ಲಿಯೂ ಇದನ್ನು ಬೆಳೆಯ
ಲಾಗುತ್ತದೆ. ಬಸಳೆ ಸೊಪ್ಪಿನಿಂದ ಸಾರು, ಪಲ್ಕ, ಕೂಟು ಮುಂತಾದವುಗಳನ್ನು
ತಯಾರಿಸುತ್ತಾರೆ.
ನೂರು ಗ್ರಾಂ ಒಸಳೆ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ತೇವಾಂಶ 90.8 ಗ್ರಾಂ ಸಸಾರಜನಕ 2.8 ಗ್ರಾಂ
ಕೊಬ್ಬು 0.4 ಗ್ರಾಂ ಖನಿಜಾಂಶ 1.8 ಗ್ರಾಂ
ಶರ್ಕರಪಿಷ್ಟ 14.2 ಗ್ರಾಂ , ಸುಣ್ಣ 200 ಮಿಲಿಗ್ರಾಂ
ರಂಜಕ 35 ಮಿ. ಗ್ರಾಂ ಕಬ್ಬಿಣ 10 ಮಿಲಿಗ್ರಾಂ
ವಿಟಮಿನ್‌ ಥಯಮೈನ್‌ 0.03 ಮಿ.ಗ್ರಾಂ
ಬಿ ರೈಬೋಫ್ಲಾವಿನ್‌ 0.1 ಮಿ.ಗ್ರಾಂ
ಕಾಂಪ್ಲೆಕ್ಸ್‌ ! ನಿಯಾಸಿನ್‌ 0.5 ಮಿ.ಗ್ರಾಂ "ಸಿ' ಜೀವಸತ್ವ 87.0 ಮಿ.ಗ್ರಾಂ
28 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು ಇಪ - ತರಕಾರಿಗಳು

ಉಪಯೋಗ:
ರ ಈ ಸೊಪ್ಪಿನ ಸೇವನೆಯಿಂದ ಹಸಿವು ಹೆಚ್ಚುತ್ತದೆ. ಮಲಬದ್ಧತೆಯಿಂದ
ಬಳಲುವವರು ಬಸಳೆಸೊಪ್ಪಿನ ಪಲ್ಕ ಸೇವನೆ ಮಾಡಬೇಕು.
0 ದೇಹದ ತೂಕ ಹೆಚ್ಚಿಸಬೇಕೆನ್ನುವವರು ಈ ಸೊಪ್ಪನ್ನು ಸೇವಿಸಬೇಕು.
೧ ಆಮಶಂಕೆಯಾಗುತ್ತಿದ್ದರೆ ಬಸಳೆಸೊಪ್ಪಿನ ರಸ ಸೇವಿಸಬೇಕು. ಸ್ವರ
ಒಡೆದಿದ್ದರೆ ಈ ಸೊಪ್ಪಿನ ರಸ ಸೇವನೆ ಮಾಡಬೇಕು.
೧ ಬಸಳೆಸೊಪ್ಪು ಜ್ವರ ನಿವಾರಕ, ಶಕ್ತಿವರ್ಧಕವಾಗಿಯೂ ಕೆಲಸಮಾಡುತ್ತದೆ.
೧ ಎಲೆಯನ್ನು ಜಜ್ಜಿ ಕುರುಗಳ ಮೇಲೆ ಹಚ್ಚುವುದರಿಂದ ಕುರು ಬೇಗನೆ
ಪಕ್ಚವಾಗುತ್ತವೆ.
[] ಸುಟ್ಟಗಾಯ ಹಾಗೂ ಬೊಬ್ಬೆಗಳಾಗಿರುವಾಗ ಬಸಳೆ ಎಲೆಯ ರಸವನ್ನು
ಬೆಣ್ಣೆಯಲ್ಲಿ ಮಿಶ್ರಮಾಡಿ ಹಚ್ಚಬೇಕು.
೧0 ಮೇಲಿಂದ ಮೇಲೆ ತಲೆನೋವು ಬರುತ್ತಿದ್ದರೆ ಬಸಳೆಯ ಲೋಳೆಯಂತಹ
ರಸವನ್ನು ಹಣೆಯ ಮೇಲೆ ಲೇಪಿಸಿಕೊಳ್ಳಬೇಕು.

ಎಲ್ಲೆಂದರಲ್ಲಿ ಬೆಳೆಯುವ ಪುಟ್ಟ ಗಿಡ ಪುಳ್ಳಂಪುರುಚಿ. ಇದನ್ನು ಸಂಸ್ಕೃತದಲ್ಲಿ


"ಚಾಂಗೇರಿ' ಎಂದೂ ಕನ್ನಡದಲ್ಲಿ “ಹುಳಿ ಸೊಪ್ಪು' ಎಂದೂ ಕರೆಯುತ್ತಾರೆ. ಈ
ಸೊಪ್ಪಿನ ರುಚಿಯ ಹುಳಿಯಾದ್ದರಿಂದ ಇದರಿಂದ ತಯಾರಿಸಿದ ಸಾರು ಹೆಚ್ಚು
ರುಚಿಕರವಾಗಿರುವುದಲ್ಲದೇ ಆರೋಗ್ಯಕರವೂ ಆಗಿರುತ್ತದೆ. ಆದರೆ ಇದು ಬೇರೆ
ಸೊಪ್ಪುಗಳಷ್ಟು ಬಳಕೆಯಲ್ಲಿಲ್ಲ.
ಉಪಯೋಗ:
೧ ಇದು ಬಾಯಿ ರುಚಿಯನ್ನು ಹಾಗೂ ಹಸಿವೆಯನ್ನು ಹೆಚ್ಚಿಸುತ್ತದೆ.
ಪುಳ್ಳಂಪುರುಚಿ ಸೊಪ್ಪಿನ ರಸಕ್ಕೆ ಸಕ್ಕರೆ ಸೇರಿಸಿ ಶರಬತ್ತು ತಯಾರಿಸುವುದರಿಂದ
ರುಚಿಕರ ಪಾನೀಯವೂ ಆಗುತ್ತದೆ. ಆಮಶಂಕೆಯಿಂದ ಬಳಲುವಾಗ
ಪುಳ್ಳಂಪುರುಚಿಯನ್ನು ಮಜ್ಜಿಗೆಯಲ್ಲರೆದು ಸೇವಿಸಬೇಕು. ಮೈ ನವೆಯಿದ್ದಾಗ
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 29

ಪುಳ್ಳಂಪುರುಚಿ ಸೊಪ್ಪನ್ನು ಅರೆದು ಮೈಗೆ ಲೇಪಿಸಿ ಸ್ವಲ್ಪ ಸಮಯ ಬಿಟ್ಟು ಸ್ನಾನ


ಮಾಡುವುದರಿಂದ ನವೆಯು ಕಡಿಮೆ ಆಗುವುದು. ಹೊಟ್ಟೆನೋವಿದ್ದಾಗ ಈ
ಸೊಪ್ಪಿನ ರಸದೊಡನೆ ಹುರಿದ ಹಿಂಗು, ಹಿಪ್ಪಲಿ, ಹುರಿದ ಜೀರಿಗೆ, ಮೆಣಸು
ಹಾಗೂ ಸೈಂಧವಲವಣ ಸೇರಿಸಿ ದಿನಕ್ಕೆ ಎರಡು ಹೊತ್ತು ಉಪಯೋಗಿಸಬೇಕು.

10. ಅಗಸ ಸೂಪ್ಪು


ಅಗಸೆ ಸೊಪ್ಪಿನಿಂದ ಸಾರು, ಪಲ್ಕ ಹಾಗೂ ರುಚಿಯಾದ ಪಕೋಡವನ್ನು
ತಯಾರಿಸುತ್ತಾರೆ.
ನೂರು ಗ್ರಾಂ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ತೇವಾಂಶ 73.1 ಗ್ರಾಂ ಸಸಾರಜನಕ 8.4 ಗ್ರಾಂ
ಕೊಬ್ಬು 1.4 ಗ್ರಾಂ ಖನಿಜಾಂಶ 3.1 ಗ್ರಾಂ
ನಾರಿನಂಶ 2.2 ಗ್ರಾಂ ಶರ್ಕರ ಪಿಷ್ಟ 11.8 ಗ್ರಾಂ
ಸುಣ್ಣ 11.3 ಮಿ.ಗ್ರಾಂ ರಂಜಕ 80 ಮಿ.ಗ್ರಾಂ
ಕಬ್ಬಿಣ 3.9 ಮಿ.ಗ್ರಾಂ ಥಯಮೈನ್‌ 0.21 ಮಿ.ಗ್ರಾಂ
ರೈಬೊಫ್ಲಾವಿನ್‌ 0.09 ಮಿ.ಗ್ರಾಂ ನಯಾಸಿನ್‌ 1.2 ಮಿ.ಗ್ರಾಂ
"ಸಿ' ಜೀವಸತ್ವ 169 ಮಿ.ಗ್ರಾಂ "ಎ' ಜೀವಸತ್ವ 2556 ಐ.ಯು.
ಉಪಯೋಗ:
ರ ಜ್ವರಮತ್ತು ಕೆಮ್ಮು ಇರುವಾಗ ಅಗಸೆ ಹೂವಿನ ಕಷಾಯವನ್ನು ಸೇವನೆ
ಮಾಡಬೇಕು.
೧0 ಅಗಸೆ ಸೊಪ್ಪನ್ನು ಸೇವಿಸುತ್ತಿದ್ದರೆ ನೆನಪಿನ ಶಕ್ತಿ ಹೆಚ್ಚುವುದು.
೧0 ಶ್ವಾಸ (ಉಬ್ಬಸ, ದಮ್ಮು) ರೋಗದಿಂದ ಬಳಲುವವರು ಅಗಸೆ
ಹೂವಿನ ಕಷಾಯ ಹಾಗೂ ಅಗಸೆ ಸೊಪ್ಪಿನ ಪಲ್ಮ ಸೇವಿಸಬೇಕು.
೧ ಬಿಳಿ ಸೆರಗಿನಿಂದ ಬಳಲುವವರು ಅಗಸೆ ಹೂವನ್ನು ಪಲ್ಕಮಾಡಿ
ಸೇವಿಸಬೇಕು. '
೧0 ಗಾಯವಾದಾಗ ಅಗಸೆ ಸೊಪ್ಪನ್ನು ಅರೆದು ಕಟ್ಟುವುದರಿಂದ ಬೇಗ ಗಾಯ
30 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಮಾಯುವುದು. ಕರುಳು ಹುಣ್ಣು ಹಾಗೂ ಮೂರ್ಛೆರೋಗವಿರುವವರು ಈ


ಸೊಪ್ಪಿನ ಪಲ್ಕ ಸೇವಿಸುವುದು ಒಳ್ಳೆಯದು.

ಗೋಣಿ ಅಥವಾ ಗೋಳಿ ಸೊಪ್ಪಿನ ಸಾರು ಹಾಗೂ ಪಲ್ಮ ತುಂಬ


ರುಚಿಯಾಗಿರುತ್ತದೆ. ಎಲೆ ರುಚಿಯಲ್ಲಿ ಸ್ವಲ್ಪ ಹುಳಿಯಾಗಿರುತ್ತದೆ.
ನೂರು ಗ್ರಾಂ ಸೊಪ್ಪಿನಲ್ಲಿರುವ ಪೋಷಕಾಂಶಗಳು :
ತೇವಾಂಶ 90.5 ಗ್ರಾಂ ಸಸಾರಜನಕ 2.1ಗ್ರಾಂ
ಕೊಬ್ಬು 0.6 ಗ್ರಾಂ ಖನಿಜಾಂಶ 2.3 ಗ್ರಾಂ
ನಾರಿನಂಶ 1.3 ಗ್ರಾಂ ಶರ್ಕರ ಪಿಷ್ಟ 2.9ಗ್ರಾಂ
ಸುಣ್ಣ 111 ಮಿ.ಗ್ರಾಂ ರಂಜಕ 46 ಮಿ.ಗ್ರಾಂ
ಕಬ್ಬಿಣ 14.5 ಮಿ.ಗ್ರಾಂ. 'ಸಿ' ಜೀವಸತ್ವ 29 ಮಿ.ಗ್ರಾಂ
ಜೀವಸತ್ವ [- ಥಯಮೈನ್‌ 0.10 ಮಿ.ಗ್ರಾಂ
"ಬಿ' | ರೈಬೋಫ್ಲಾವಿನ್‌ 0.22 ಮಿ.ಗ್ರಾಂ
ಕಾಂಪ್ಲೆಕ್ಸ್‌ !_ ನಯಸಿನ್‌ 0.7 ಮಿ.ಗ್ರಾಂ
ಉಪಯೋಗ:
೧0 ಚರ್ಮರೋಗದಿಂದ ಬಳಲುವವರು ಆಹಾರದಲ್ಲಿ ಗೋಣಿ ಸೊಪ್ಪಿನ
ಪಲ್ಮ ಉಪಯೋಗಿಸಬೇಕು.
೧ ಆಮ ಹಾಗೂರಕ್ತದಿಂದ ಕೂಡಿ ಭೇದಿಯಾಗುತ್ತಿದ್ದರೆ ಗೋಣಿ ಸೊಪ್ಪಿನ
ಪಲ್ಕ ಸೇವನೆ ಮಾಡಬೇಕು.
ಔ ಕೆಮ್ಮು ಹೆಚ್ಚಾಗಿದ್ದರೆ ಗೋಣಿ ಸೊಪ್ಪಿನ ರಸವನ್ನು ಜೇನುತುಪ್ಪ
ದೊಂದಿಗೆ ಸೇವಿಸಬೇಕು.
[0 ಮಲಬದ ಶ್ರತೆಯಿರುವವರು ಗೋಣಿಸೊಪ್ಪಿನ ಪಲ್ಮ ಇಲ್ಲ
ವೇ ಸಾರು
ಸೇವನೆ ಮಾಡಬೇಕು.
೧ ಬಾಯಿ ಹುಣ್ಣಾಗಿದ್ದರೆ ಈ ಸೊಪ್ಪನ್ನು ಅಗಿದು ತಿನ್ನಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 31

೧ ಬೆವರುಗುಳ್ಳೆಯಾಗಿದ್ದರೆಈ ಸೊಪ್ಪಿನ ರಸ ಮೈಗೆ ಹಚ್ಚಿ ಸ್ನಾನ


ಮಾಡಬೇಕು. ಚೇಳು ಕಚ್ಚಿದಾಗ ಆ ಜಾಗಕ್ಕೆ ೪ ಸೊಪ್ಪು ಅರೆದು ಹಚ್ಚುವುದರಿಂದ


ಉರಿ ಕಡಿಮೆ ಆಗುತ್ತದೆ.

ಇದು ಸ್ವಾಭಾವಿಕವಾಗಿ ಹೊಲಗಳಲ್ಲಿ ಬೆಳೆಯುತ್ತವೆ. ಉತ್ತರ


ಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು. ಇದರಿಂದ ಪಲ್ಕ, ಸಾರು ತಯಾರಿಸುತ್ತಾರೆ.
ಅಲ್ಲದೇ ಹಸಿಯಾಗಿಯೇ ಸಣ್ಣಗೆ ಕತ್ತರಿಸಿ ಉಪ್ಪು, ಖಾರ ಮತ್ತುಸ್ವಲ್ಪ ಎಣ್ಣೆ
ಬೆರೆಸಿ ರೊಟ್ಟಿಯ ಜೊತೆಗೆ ತಿನ್ನುವ ಅಭ್ಯಾಸವೂ ಇದೆ.
ನೂರು ಗ್ರಾಂ ಹಕ್ಕರಿಕೆ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ಶರಾ 3ಸ್ರಾ ಸಾರ್‌ ಗ್ರಾ
ಕೊಬ್ಬು 0.3 ಗ್ರಾಂ :.ಪೂೊಟ್ಕಾಸಿಯಂ 329 ಮಿ.ಗ್ರಾಂ
ಸುಣ್ಣ 49 ಮಿ.ಗ್ರಾಂ ಪೋಲಿಕ್‌ ಆಮ್ಲ 16ಎಂ. ಸಿ. ಜಿ.
ಆಕ್ಸಾಲಿಕ್‌ ಆಮ್ಲ 13.6 ಎಂ. ಸಿ. ಜಿ. ಸೋಡಿಯಂ 9 ಮಿ.ಗ್ರಾಂ
"ಎ' ಜೀವಸತ್ವ 1112 ಐಯು. "ಬಿ' ಜೀವಸತ್ವ 38 ಮಿ.ಗ್ರಾಂ

ಉಪಯೋಗ:
೧0 ದೀರ್ಥಕಾಲದ ಬಾಯಿಹುಣ್ಣಿನಿಂದ ಬಳಲುವವರು ಹಕ್ಕರಿಕೆ ಸೊಪ್ಪಿನ
ಎಲೆಗಳನ್ನು ಅಗಿದು ತಿನ್ನಬೇಕು.
ರ ರಾತ್ರಿ ಕುರುಡಿನಿಂದ ಬಳಲುವವರು ಈ ಸೊಪ್ಪನ್ನು ಹೆಚ್ಚು
ಉಪಯೋಗಿಸಬೇಕು.
೧ ಬಿಳಿ ಸೆರಗಿನ ಸಮಸ್ಯೆ ಇರುವ ಸ್ತ್ರೀಯರು ಈ ಸೊಪ್ಪನ್ನು ಸೇವಿಸಬೇಕು.
[0 ಮಲಬದ್ಧತೆಯಿರುವವರು ಸೊಪ್ಪಿನ ರಸ ಇಲ್ಲವೇ ಸೊಪ್ಪನ್ನು
ಹಸಿಯಾಗಿಯೇ ತಿನ್ನಬೇಕು.
32 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಇದು ಚಿಕ್ಕದಾಗಿ ಪೊದೆಯಂತೆ ಬೆಳೆಯುವ ಗಿಡವಾಗಿದೆ. ಇದು ಜಗತ್ತಿನ


ಎಲ್ಲ ಉಷ್ಣ ಪ್ರದೇಶಗಳಲ್ಲಿ ಕಂಡುಬರುವ ಗಿಡ. ಇದನ್ನು ಕೃಷಿ ಮಾಡದಿದ್ದರೂ
ತರಕಾರಿಯಾಗಿ ಉಪಯೋಗಿಸುವುದು ಸರ್ವೇಸಾಮಾನ್ಯವಾಗಿದೆ. ಇದರ ಕಾಂಡವು
ನೇರವಾಗಿ ಬೆಳೆಯುತ್ತದೆ. ಮುಖ್ಯ ಕಾಂಡದಿಂದ ರೆಂಬೆ ಮತ್ತು ಕವಲುಗಳು
'ಹುಟ್ಟುತ್ತವೆ. ಎಲೆಯ: ಕಂಕುಳದಿಂದ ಚಿಕ್ಕದಾದ ಹೂಗಳು ಛತ್ರಿಯಂತಹ
ಗೊಂಚಲಿನಲ್ಲಿ ಬಿಡುತ್ತವೆ. ಇದರ ಹಣ್ಣು ಚಿಕ್ಕದಾಗಿರುತ್ತದೆ. ಬೀಜವು
ಹಳದಿಯಾಗಿರುತ್ತದೆ. ಇದರ
ಚಿಗುರೆಲೆ ಮತ್ತು ಎಳೆಯ ದಂಟುಗಳನ್ನು
ಪಲ್ಕಮಾಡಲು ಉಪಯೋಗಿಸುತ್ತಾರೆ. ಹಣ್ಣನ್ನು ಹಸಿಯಾಗಿ ತಿನ್ನಬಿಷಾಧ
ಇದಕ್ಕೆ ಕಾಕಿ ಹಣ್ಣು ಎಂತಲೂ ಕರೆಯುತ್ತಾರೆ.
ಔಷಧಿಗೆ ಉಪಯುಕ್ತ ಭಾಗಗಳು : ಗಿಡ, ಬೇರು, ಎಲೆ, ಹಣ್ಣು.
ನೂರು ಗ್ರಾಂ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ತೇವಾಂಶ 82.1 ಗ್ರಾಂ ಸಸಾರಜನಕ 5.9 ಗ್ರಾಂ
ಕೊಬ್ಬು 1.0 ಗ್ರಾಂ ಖನಿಜಾಂಶ 2.1 ಗ್ರಾಂ
ಶರ್ಕರ ಪಿಷ್ಟ 8.9 ಗ್ರಾಂ ಸುಣ್ಣ 410 ಮಿ.ಗ್ರಾಂ
ರಂಜಕ 70 ಮಿ.ಗ್ರಾಂ ಕಬ್ಬಿಣ 20.5 ಮಿ.ಗ್ರಾಂ
ರೈಬೊಫ್ಲಾವಿನ್‌ 0.59 ಮಿ.ಗ್ರಾಂ. ನಯಸಿನ್‌ 0.9 ಮಿ.ಗ್ರಾಂ
'ಎ' ಜೀವಸತ್ವ 100 ಐ.ಯು. 'ಸಿ' ಜೀವಸತ್ವ 11 ಮಿ.ಗ್ರಾಂ
ಉಪಯೋಗ:
೧0 ದೀರ್ಥಕಾಲದ ಬಾಯಿಹುಣಿ ನಿಂದ ಬಳಲುವವ
ರು ಅದರ ನಿವಾರಣೆಗೆ
ಕಾಚಿ ಸೊಪ್ಪಿನ ಪಲ್ಕ ಸೇವಿಸಬೇಕು.
೧0 ಸ್ತ್ರೀಯರಲ್ಲಿ ಅಧಿಕ ರಕ5,ಸ
ಸಾ್ರಾವವಾಗುತ್ತಿದ್ದರೆ ಕಾಚಿ ಸೊಪ್ಪಿನ ರಸವನ್ನು
ಜೇನುತುಪ್ಪದೊಂದಿಗೆ ಕುಡಿಯಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 33

2 ಮೂಲವ್ಯಾಧಿಯಲ್ಲಿ ರಕ್ತ ಬೀಳುತ್ತಿದ್ದರೆ ಈ ಸೊಪ್ಪಿನ ಪಲ್ಕ ತಿನ್ನಬೇಕು.


೧ ಕುರುಗಳಾಗಿದ್ದರೆ ಈ ಸೊಪ್ಪನ್ನು ಬಿಸಿಮಾಡಿ ಅರಿಶಿನದೊಂದಿಗೆ
ಲೇಪಿಸಬೇಕು.
[0 ಈ ಸೊಪ್ಪಿನ ಸೇವನೆಯಿಂದ ಹಸಿವು ಹೆಚ್ಚಾಗುವುದಲ್ಲದೇ ಬಾಯಿಗೆ
ರುಚಿಯೂ ಹಚ್ಚುತ್ತದೆ.
೧ ದೀರ್ಥಕಾಲದಿಂದ ಜ್ವರವಿರುವಾಗ ಈ ಸೊಪ್ಪಿನ ರಸ ಜೇನಿನೊಂದಿಗೆ
ಸೇವಿಸಬೇಕು.
ರ ಕೆಮ್ಮು ಹೆಚ್ಚಾಗಿದ್ದರೆ ಕಾಚಿ ಸೊಪ್ಪಿನ ಪಲ್ಕ ಸೇವಿಸಬೇಕು.
ಮಲಬದ್ದತೆಯಿದ್ದರೆ ಕಾಚಿಹಣ್ಣನ್ನು ಹಾಗೂ ಸೊಪ್ಪಿನ ಪಲ್ಕವನ್ನು ಸೇವನೆ
ಮಾಡಬೇಕು.
] ಉರಿ ಮೂತ್ರದಿಂದ ಬಳಲುವವರು ಕಾಚಿ ಸೊಪ್ಪಿನ ರಸ ಇಲ್ಲವೇ
ಕಾಚಿ ಹಣ್ಣಗಳನ್ನು ಸೇವಿಸಬೇಕು.
ರ ಜಲೋದರ ಹಾಗೂ ಚರ್ಮರೋಗಗಳ ತೊಂದರೆಯಿಂದ
ಬಳಲುವವರು ಕಾಚಿ ಹೂಗಳ ಕಷಾಯ ಸೇವನೆ ಮಾಡಬೇಕು.

ಪುಂಡಿ ಸೊಪ್ಪು ಉತ್ತರ ಕರ್ನಾಟಕದವರಿಗೆ ಹಚ್ಚು ಪರಿಚಿತ. ರೊಟ್ಟಿಯ


ಜೊತೆಗೆ ಪುಂಡಿಸೊಪ್ಪಿನ ಚಟ್ನಿ, ಪಲ್ಕದ ರುಚಿ ಅದನ್ನು ಸವಿದವರಿಗೇ ಗೊತ್ತು.
ನೂರು ಗ್ರಾಂ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ಸಸಾರಜನಕ 1.7 ಗ್ರಾಂ ಕೊಬ್ಬು 1.1 ಗ್ರಾಂ
ಖನಿಜಗಳು 0.2 ಗ್ರಾಂ ಕಬ್ಬಿಣ 5.0 ಮಿ.ಗ್ರಾಂ
“ಎ' ಜೀವಸತ್ವ. 4830 ಐ.ಯು. . ರೈಬೋಪಫ್ಲಾವಿನ್‌ 0.21 ಮಿ.ಗ್ರಾಂ
ಥಯಾಮೈನ್‌ 0.07 ಮಿ.ಗ್ರಾಂ... "ಸಿ' ಜೀವಸತ್ವ 20ಮಿ.ಗ್ರಾಂ
34 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಉಪಯೋಗ:
೧0 ಈ ಸೊಪ್ಪಿನ ಸೇವನೆಯಿಂದ ಹಸಿವು ಹೆಚ್ಚುತ್ತದೆ. ಮಲಬದ್ಧತೆಯಿಂದ
ಬಳಲುವವರು ಪುಂಡಿ ಸೊಪ್ಪಿನ ಚಟ್ನಿ ಸೇವಿಸುವುದು ಒಳ್ಳೆಯದು.
೧ ಕೆಮ್ಮು ಇರುವಾಗ ಪುಂಡಿ ಸೊಪ್ಪಿನ ಕಷಾಯ ಸೇವನೆ ಮಾಡಬೇಕು.
೧ ವಾಂತಿಯಾಗುತ್ತಿದ್ದರೆ ಪುಂಡಿ ಸೊಪ್ಪಿನ ರಸಕ್ಕೆ ಸಕ್ಕರೆ ಹಾಗೂ ಕರಿ
ಮೆಣಸಿನ ಪುಡಿ ಸೇರಿಸಿ ಕುಡಿಯಬೇಕು.

ಚಕ್ಕೋತ ಸೊಪ್ಪಿನಿಂದ ಸಾರು, ಹುಳಿ, ಪಲ್ಕ ಹಾಗೂ ಕೂಟು ತಯಾರಿಸುತ್ತಾರೆ.


ನೂರು ಗ್ರಾಂ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ತೇವಾಂಶ 89.6 ಗ್ರಾಂ ಸಸಾರಜನಕ 3.7 ಗ್ರಾಂ
ಕೊಬ್ಬು 0.4 ಗ್ರಾಂ ಖನಿಜಾಂಶ 2.7 ಗ್ರಾಂ
ಶರ್ಕರ ಪಿಷ್ಟ 2.9 ಗ್ರಾಂ ನಾರಿನಂಶ 0.8 ಗ್ರಾಂ
ಸುಣ್ಣ 150 ಮಿ.ಗ್ರಾಂ ರಂಜಕ 80 ಮಿ.ಗ್ರಾಂ
ಕಬ್ಬಿಣ 4.2 ಮಿ.ಗ್ರಾಂ ಥಯಮೈನ್‌ 0.01 ಮಿ.ಗ್ರಾಂ
ರೈಬೋಫ್ಲಾವಿನ್‌ 0.6 ಮಿ.ಗ್ರಾಂ "ಸಿ' ಜೀವಸತ್ವ 35 ಮಿ.ಗ್ರಾಂ
ನಯಸಿನ್‌ 0.6 ಮಿ.ಗ್ರಾಂ
ಉಪಯೋಗ:
೧ ಕಾಮಾಲೆಯಿಂದ ಬಳಲುವವರು ಈ ಸೊಪ್ಪಿನ ಪಲ್ಕಉಪಯೋಗಿಸಬೇಕು.
೧ ಮೂಲವ್ಯಾಧಿಯಿಂದ ಬಳಲುವವರು ಹಾಗೂ ಮಲಬದ್ದತೆ
ಇರುವವರಿಗೂ ಈ ಸೊಪ್ಪು ಒಳ್ಳೆಯದು.
೧ ಈ ಸೊಪ್ಪಿನ ಸೇವನೆಯಿಂದ ಆಹಾರವು ಚೆನ್ನಾಗಿ ಜೀರ್ಣ
ವಾಗುವುದಲ್ಲದೇ ಹಸಿವೂ ಹೆಚ್ಚುತ್ತದೆ.
೧0 "ಉರಿ ಮೂತ್ರವಿರುವಾಗ ಈ ಸೊಪ್ಪಿನ ರಸ ಕುಡಿಯಬೇಕು.
ಡಿ ನರ ದೌರ್ಬಲ್ಕವಿರುವವರೂ ಈ ಸೊಪ್ಪನ್ನು ಆಹಾರವಾಗಿ
ಉಪಯೋಗಿಸಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 35

ಇದು ನೈಸರ್ಗಿಕವಾಗಿ ಹಾಳುಬಿದ್ದ ಜಾಗದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.


ಇದರಲ್ಲಿ ಹಸಿರು ಮತ್ತು ಕೆಂಪು ಬಣ್ಣದ ತಳಿಗಳು ಕಂಡುಬರುತ್ತವೆ. ಎಲೆ ಮತ್ತು
ದಂಟನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಹರಿವೆ ಸೊಪ್ಪಿನಿಂದ ಪಲ್ಕ,
ಸಾರು, ಕೂಟು ಮುಂತಾದವುಗಳನ್ನು ತಯಾರಿಸುತ್ತಾರೆ.
ಉಪಯುಕ್ತ ಭಾಗ- ಪೂರ್ಣ ಗಿಡ.
ಬೇರು: ಇದಕ್ಕೆ ಕಫ ನಿವಾರಕ ಗುಣವಿದೆ. ಸ್ತ್ರೀಯರಲ್ಲಿ ಅಧಿಕ ರಕ್ತಸ್ರಾವ
ವಾಗುತ್ತಿದ್ದರೆ ಬೇರಿನ ರಸ ಸೇವಿಸಬೇಕು. ಕುರುಗಳಿಗೆ ಬೇರಿನ ಪೋಲ್ಟೀಸ್‌ ಮಾಡಿ
ಕಟ್ಟಿದರೆ ಬೇಗನೇ ಒಡೆಯುತ್ತವೆ.
ಸೊಪ್ಪು : ಜ್ವರದಿಂದ ಬಳಲುವಾಗ ಬಾಯಾರಿಕೆ ಹೆಚ್ಚಾಗಿದ್ದರೆ ಹರಿವೆ
ಸೊಪ್ಪಿನ ರಸ ಸೇವನೆ ಮಾಡಬೇಕು.
೧ ಹರಿವೆ ಸೊಪ್ಪು ಅರೆದು ಅರಿಶಿನ ಬೆರೆಸಿ ಮುಖ, ಕೈಕಾಲಿಗೆ
ಹಚ್ಚಿಕೊಂಡರೆ ಚರ್ಮದ ಕಾಂತಿ ಹೆಚ್ಚುತ್ತದೆ.
೧ ಹರಿವೆ ಸೊಪ್ಪನ್ನು ಸುಟ್ಟು ಬೂದಿಯನ್ನು ನೀರಿನಲ್ಲಿ ಬೆರೆಸಿ ಮುಖಕ್ಕೆ
ಹಚ್ಚುವುದರಿಂದ ಮೊಡವೆಗಳು ನಿವಾರಣೆಯಾಗುತ್ತವೆ.
ರ ಹರಿವೆ ಸೊಪ್ಪಿನ ಸೇವನೆಯಿಂದ ಹಸಿವು ಹೆಚ್ಚುತ್ತದೆ. ಯಕೃತ್ತಿನ
ತೊಂದರೆಯಿಂದ ಬಳಲುವವರಿಗೂ ಈ ಸೊಪ್ಪು ಒಳ್ಳೆಯದು.
[0 ಮೂಲವ್ಮಾಧಿಯಿಂದ ಬಳಲುವವರು ಪ್ರತಿದಿನ ಹರಿವೆ ಸೊಪ್ಪಿನ ಪಲ್ಕ
ಉಪಯೋಗಿಸಬೇಕು.
[0 ಮಕ್ಕಳಿಗೆ ಮಲಬದ್ದತೆಯ ತೊಂದರೆಯಿದ್ದರೆ ಹರಿವೆ ಸೊಪ್ಪಿನ ಪಲ್ಕ
ತಿನ್ನಲು ಕೊಡಬೇಕು.
ರ ಹರಿವೆ ಸೊಪ್ಪಿನ ಸೇವನೆಯಿಂದ ಬಾಣಂತಿಯರಲ್ಲಿ ಹಾಲು ಉತ್ಪಾದನೆ
ಹೆಚ್ಚುತ್ತದೆ.
ಎದಿ
36 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಈ ಸೊಪ್ಪು ಸ್ವಾಭಾವಿಕವಾಗಿ ಹೊಲ ಮತ್ತು ತೋಟಗಳಲ್ಲಿ ಬೆಳೆಯುತ್ತದೆ.


ಇದರಿಂದ ಪಲ್ಕ ಹಾಗೂ ಸಾರು ತಯಾರಿಸುತ್ತಾರೆ...
ನೂರು ಗ್ರಾಂ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ತೇವಾಂಶ 90 ಗ್ರಾಂ ಸಸಾರಜನಕ 2.8 ಗ್ರಾಂ
ಕೊಬ್ಬು 0.3 ಗ್ರಾಂ ಖನಿಜಾಂಶ 2.1 ಗ್ರಾಂ
ಶರ್ಕರ ಪಿಷ್ಟ 4.8 ಗ್ರಾಂ ಸುಣ್ಣ 251 ಮಿ.ಗ್ರಾಂ
ರಂಜಕ 55 ಮಿ.ಗ್ರಾಂ ಕಬ್ಬಿಣ 27.3 ಮಿ.ಗ್ರಾಂ
ಉಪಯೋಗ:
೧ ಉರಿ ಮೂತ್ರದಿಂದ ಬಳಲುವವರು ಕಿರುಕಸಾಲೆ ಸೊಪ್ಪಿನ ರಸಕ್ಕೆ ಜೇನು
ತುಪ್ಪ ಮತ್ತು ನಿಂಬೆ ರಸ ಬೆರೆಸಿ ಕುಡಿಯುವುದರಿಂದ ಉರಿ ಶಮನವಾಗುತ್ತದೆ.
೧ ಬೇಸಿಗೆಯಲ್ಲಿ ಈ ಸೊಪ್ಪಿನ ಸೇವನೆಯಿಂದ ಶರೀರದಲ್ಲಿನ ಉಷ್ಣ
ನಿವಾರಣೆಯಾಗಿ ತಂಪು ದೊರಕುವುದು. |
|], ಮಲಬದ್ದತೆಯಿರುವವರು ಈ ಸೊಪ್ಪಿನ ಪಲ್ಕ ಸೇವನೆ ಮಾಡಬೇಕು.
೧ ಕಿರುಕಸಾಲೆ ಸೊಪ್ಪಿನ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುವುದು.

ಮೂಲಂಗಿ ಸೊಪ್ಪು ಎಲ್ಲರಿಗೂ ಸುಪರಿಚಿತವಾದುದು. ಇದರಿಂದ ಪಲ್ಮ,


ಸಾರು ತಯಾರಿಸುತ್ತಾರೆ. ಹಸಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಉಪ್ಪು, ಖಾರ ಬೆರೆಸಿ
ರೊಟ್ಟಿಯ ಜೊತೆಗೆ ಸೇವಿಸಬಹುದು.
| ನೂರು ಗ್ರಾಂ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :
ಶರ್ಕರ ಪಿಷ್ಟ 4.2 ಗ್ರಾಂ ಸಸಾರಜನಕ 0.7 ಗ್ರಾಂ
ಕೊಬ್ಬು 0.4 ಗ್ರಾಂ ಸುಣ್ಣ 35 ಮಿ.ಗ್ರಾಂ
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 37

ರಂಜಕ 22 ಮಿ.ಗ್ರಾಂ ಕಬ್ಬಿಣ * 0.3 ಮಿ.ಗ್ರಾಂ


ಆಕ್ಸಾಲಿಕ್‌ ಆಮ್ಲ 9.2 ಮಿ.ಗ್ರಾಂ ನಿಕೋಟಿನಿಕ್‌ ಆಮ್ಲ 0.5 ಮಿ.ಗ್ರಾಂ
ಥಯಾಮೈನ್‌ 60 ಎಂ. ಸಿ. ಜಿ. ನಯಾಸಿನ್‌ 0.4 ಮಿ.ಗ್ರಾಂ
ಸೋಡಿಯಂ 41 ಮಿ.ಗ್ರಾಂ... ಪೊಟ್ಕಾಸಿಯಂ 325 ಮಿ.ಗ್ರಾಂ
ನಾರಿನಂಶ 0.8 ಗ್ರಾಂ
ಉಪಯೋಗ:
[3] ಬಾಯಿ ಹುಣ್ಣಿನಿಂದ ಬಳುವವರು ಮೂಲಂಗಿ ಸೊಪ್ಪಿನ ರಸವನ್ನು
ಜೇನಿನೊಂದಿಗೆ ಸೇವಿಸಬೇಕು.
೧ . ಕಾಮಾಲೆ ರೋಗವಿರುವಾಗ ಮೂಲಂಗಿ ಸೊಪ್ಪಿನ ಪಲ್ಕ ಸೇವಿಸಬೇಕು.
2 ಮಲಬದ್ದತೆಯಿರುವವರು ಮೂಲಂಗಿ ಹಸಿಯಾಗಿಯೇ ತಿನ್ನಬೇಕು.
೧ ಉರಿಮೂತ್ರದ ತೊಂದರೆಯಿರುವಾಗ ಈ ಸೊಪ್ಪಿನ ರಸವನ್ನು
ಕುಡಿಯಬೇಕು.

ಇದು ಅಗಲವಾದ ಎಲೆಯಿಂದ ಕೂಡಿದ್ದು, ನೀರು ಹೆಚ್ಚಾಗಿರುವ ಜಾಗದಲ್ಲಿ


ಬೆಳೆಯುತ್ತದೆ. ಮನೆಯ ಹಿತ್ತಲಲ್ಲಿಯೂ ಇದನ್ನು ಬೆಳೆಸಬಹುದು. ಕೆಸುವಿನ
ಎಲೆಯಿಂದ ಪಲ್ಯ, ಚಟ್ನಿ ಮತ್ತು ಪತ್ರೊಡೆ ತಯಾರಿಸುತ್ತಾರೆ. ಪತ್ರೊಡೆ ತುಂಬ
ರುಚಿಯಾಗಿರುತ್ತದೆ.
ನೂರು ಗ್ರಾಂ ಕೆಸುವಿನ ಎಲೆಯಲ್ಲಿ ರುವ ಪೋಷಕಾಂಶಗಳು :
ಶರ್ಕರ ಪಿಷ್ಟ 22 ಗ್ರಾಂ ಸಸಾರಜನಕ 3 ಗ್ರಾಂ
ಕೊಬ್ಬು 0.4 ಗ್ರಾಂ ಸುಣ್ಣ 28 ಮಿ.ಗ್ರಾಂ
ರಂಜಕ 140 ಮಿ.ಗ್ರಾಂ ಕಬ್ಬಿಣ 2 ಮಿ.ಗ್ರಾಂ
ಪೊಟ್ಕಾಷ್‌ 264 ಮಿ.ಗ್ರಾಂ "ಎ' ಜೀವಸತ್ತ 40 ಐ.ಯು.
“ಬಿ1' ಜೀವಸತ್ವ 90 ಎಂ.ಸಿ.ಜಿ. "ಬಿ2' ಜೀವಸತ್ವ 31 ಎಂ.ಸಿ.ಜಿ.
38 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ನಯಾಸಿನ್‌ 0.4 ಮಿ.ಗ್ರಾಂ ಸೋಡಿಯಂ 25 ಮಿ.ಗ್ರಾಂ


ಆಕ್ಸಾಲಿಕ್‌ ಆಮ್ಲ 133.4 ಮಿ.ಗ್ರಾಂ
ಉಪಯೋಗ:
ರ ಇದನ್ನು ಚೆನ್ನಾಗಿ ಬೇಯಿಸಿಯೇ ಉಪಯೋಗಿಸಬೇಕು. ಇಲ್ಲದಿದ್ದರೆ
ನಾಲಿಗೆ ಹಾಗೂ ಗಂಟಲಿನಲ್ಲಿ ನವೆ ಉಂಟಾಗಬಹುದು.
೧ ಮೂಲವ್ಯಾಧಿಯಿಂದ ಬಳಲುವವರು ಇದನ್ನು ಪ್ರತಿ ದಿನ ಆಹಾರದಲ್ಲಿ
ಬಳಸಬೇಕು.
೧ ದಪ್ಪವಾಗಬೇಕೆನ್ನುವವರು ಕೆಸುವಿನ ಪಲ್ಕವನ್ನು ಹೆಚ್ಚಾಗಿ ಸೇವಿಸಬೇಕು.
[ರ ಮಲಬದ್ಧತೆಯಿರುವವರು ಇದನ್ನು ಆಹಾರದಲ್ಲಿ ಹೆಚ್ಚಾಗಿ
ಉಪಯೋಗಿಸುವುದು ಒಳ್ಳೆಯದು.

ಇದನ್ನು ಮನೆಯಂಗಳದಲ್ಲಿ ಬೆಳೆಸಬಹುದು. ದೊಡ್ಡ ಪತ್ರೆ ಎಲೆ


ಮೃದುವಾಗಿ ರೇಷ್ಮೆಯಂತಿರುತ್ತದೆ. ಎಲೆ ಹಾಗೆಯೇ ತಿಂದರೆ ಖಾರವಾಗಿರುತ್ತದೆ.
ಇದನ್ನು ಜಜ್ಜಿ, ಚಟ್ನಿ ಹಾಗೂ ತಂಬುಳಿ ತಯಾರಿಸುತ್ತಾರೆ.
ಉಪಯೋಗಗಳು:
೧ ಕೆಮ್ಮು ಹಾಗೂ ಗಂಟಲು ನೋವಿನಿಂದ ಬಳಲುವವರು ದೊಡ್ಡ ಪತ್ರೆ
ಸೊಪ್ಪಿನ ರಸವನ್ನು ಜೇನು ತುಪ್ಪದೊಂದಿಗೆ ಸೇವನೆ ಮಾಡಬೇಕು.
೧ ಪಿತ್ತದ ಗಂದೆಗಳಾದಾಗ ದೊಡ್ಡ ಪತ್ರೆಯ ಎಲೆಗಳನ್ನು ಉಪ್ಪು ಬೆರೆಸಿ
ತಿಂದು, ಎಲೆಗಳ ರಸವನ್ನು ಮೈಗೆ ಹಚ್ಚಿಕೊಂಡರೆ ನವೆ ಕಡಿಮೆಯಾಗುತ್ತದೆ.
೧ ಮಕ್ಕಳಲ್ಲಿ ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದರೆ ದೊಡ್

ಪತ್ರೆ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಎರಡು ಚಮಚದಷ್ಟು
ಕುಡಿಸಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 39

21. ಕೆಂಪು ಬಸಳೆ

Indian Spinach (Basella Rubra)


ಇದು ಬಹುವಾರ್ಷಿಕ ಪೊದೆಯಂತೆ ಬೆಳೆಯುವ ಬಳ್ಳಿ ಜಾತಿಗೆ ಸೇರಿದ
ಸೊಪ್ಪಿನ ತರಕಾರಿ. ಇದರ ಕಾಂಡವು ತೆಳ್ಳಗೆ ಸಾಮಾನ್ಯವಾಗಿ ಹಬ್ಬುತ್ತ
ಹೋಗುತ್ತದೆ. ಎಲೆಯು ಮೃದುವಾಗಿದ್ದು ದಪ್ಪವಾಗಿರುತ್ತದೆ. ಕೆಂಪು ಹೂ
ಬಿಡುತ್ತದೆ. ಹಣ್ಣು ಒಟಾಣಿ ಆಕಾರದಲ್ಲಿರುತ್ತದೆ. ಭಾರತದ ಎಲ್ಲ ಭಾಗ
ಗಳಲ್ಲಿಯೂ ಇದು ಕಂಡುಬರುತ್ತದೆ. ಎಲೆ, ಕಾಂಡಗಳನ್ನು ಪಲ್ಕಮಾಡಲು
ಉಪಯೋಗಿಸುತ್ತಾರೆ.
ಉಪಯುಕ್ತ ಭಾಗ- ಎಲೆ.
ರ ಉಷ್ಣವನ್ನುಂಟುಮಾಡುವ, ನಿದ್ರಾಕಾರಕ, ಕಾಮೋತ್ತೇಜಕ, ಕೊಬ್ಬು
ಬರಿಸುವ, ಸೌಮ್ಮ ರೇಚಕ ಗುಣಗಳನ್ನು ಹೊಂದಿರುತ್ತದೆ. ಇದು ಹಸಿವೆಯನ್ನು
ಹೆಚ್ಚಿಸುತ್ತದೆ. ಕುಷ್ಟರೋಗ, ಆಮಶಂಕೆಯಲ್ಲಿ ಉಪಯುಕ್ತ. ಇದಕ್ಕೆ
ಕಫವನ್ನುಂಟುಮಾಡುವ ಗುಣವಿದೆ. ಇದರಲ್ಲಿ ಮಾದಕ ಪದಾರ್ಥ ಇದೆ.
ಶಕ್ತಿವರ್ಧಕ, ಜ್ವರನಿವಾರಕ ಹಾಗೂ ಸ್ವರವನ್ನು ಸುಧಾರಿಸುತ್ತದೆ. ಎಲೆಯನ್ನು
ಜಜ್ಜಿ ಕುರುಗಳ ಮೇಲೆ ಹಚ್ಚುವುದರಿಂದ ಕುರು ಬೇಗ ಪಕ್ವವಾಗುತ್ತದೆ. ಇದು
ಮೃದುಕಾರಕ ಮತ್ತು ಮೂತ್ರಜನಕವಾಗಿರುತ್ತದೆ. ಸುಟ್ಟಗಾಯ, ಬೊಬ್ಬೆಗಳಿಗೆ
ಎಲೆಯ ರಸವನ್ನು ಬೆಣ್ಣೆಯಲ್ಲಿ ಮಿಶ್ರಮಾಡಿ ಹಚ್ಚಬೇಕು. ಲೋಳೆಯಂತಹ
ರಸವನ್ನು ಆಗಾಗ್ಗೆ ಬಾಧಿಸುತ್ತಿರುವ ತಲೆನೋವಿಗೆ ಹಚ್ಚಬೇಕು.

100 ಗ್ರಾಂ ನುಗ್ಗೆ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :


ತೇವಾಂಶ 75.9 ಗ್ರಾಂ ಸಸಾರಜನಕ 6.7 ಗ್ರಾಂ
ಮೇದಸ್ಸು 1.7 ಗ್ರಾಂ ಖನಿಜಾಂಶ 2.3 ಗ್ರಾಂ
40 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ನಾರಿನಂಶ 0.9 ಗ್ರಾಂ ಕಾರ್ಬೋಹೈಡ್ರೇಟ್ಸ್‌ 12.5 ಗ್ರಾಂ


ಸುಣ್ಣಾಂಶ 440 ಮಿಲಿಗ್ರಾಂ ರಂಜಕ 5 700 ಮಿಲಿಗ್ರಾಂ
ಕಬ್ಬಿಣ 7.0 ಮಿಲಿಗ್ರಾಂ ಥಯಾಮೈನ್‌ 0.06 ಮಿಲಿಗ್ರಾಂ
ರೈಬೋಫ್ಲಾವಿನ್‌ 0.05 ಮಿಲಿಗ್ರಾಂ ನಿಯಾಸಿನ್‌ 0.8 ಮಿಲಿಗ್ರಾಂ
ಮೆಗ್ನಿಷಿಯಂ 24.0 ಮಿಲಿಗ್ರಾಂ ಆಕ್ಸಾಲಿಕ್‌ ಆಮ್ಲ 101.0 ಮಿಲಿಗ್ರಾಂ
ನಿಕೋಟಿಕ್‌ ಆಮ್ಲ 0.80 ಮಿಲಿಗ್ರಾಂ ಕ್ಕಾಲೊರಿ 92.00
"ಎ' ಜೀವಸತ್ವ. 1130 ಐ. ಯು 'ಸಿ' ಜೀವಸತ್ವ 220 ಮಿಲಿಗ್ರಾಂ
ನುಗ್ಗೆ ಸೊಪ್ಪಿನಿಂದ ಪಲ್ಕ, ಸಾರು ತಯಾರಿಸುತ್ತಾರೆ.
ಔಷಧೀಯ ಗುಣಗಳು:
೧0 "ರಾತ್ರಿ ಕುರುಡು' ಖಾಯಿಲೆಯಿಂದ ನರಳುವ ಮಕ್ಕಳು ಹಾಗೂ "ಎ'
ಜೀವಸತ್ವದ ಕೊರತೆಯಿರುವವರು ನುಗ್ಗೆ ಸೊಪ್ಪಿನ ರಸವನ್ನು ದಿನಕ್ಕೆ ಎರಡು
ಸಾರಿ ಒಂದು ಚಮಚ ಸೇವಿಸಬೇಕು. ಈ ಸೊಪ್ಪಿನ ರಸದ ಸೇವನೆಯಿಂದ ರೋಗ
ನಿರೋಧಕ ಶಕ್ತಿಯು ಹೆಚ್ಚುತ್ತದೆ.
೧ ಮೂಲವ್ಯಾಧಿಯಿಂದ ಬಳಲುವವರು ಪ್ರತಿ ದಿನವೂ ನುಗ್ಗೆಸೊಪ್ಪಿನ
ಪಲ್ಕ ಸೇವನೆ ಮಾಡಬೇಕು.
೧ ಶ್ವಾಸಕೋಶದ ತೊಂದರೆ ಹಾಗೂ ನರ ದೌರ್ಬಲ್ಯದಿಂದ ಬಳಲುವವರು
ನುಗ್ಗೆ ಸೊಪ್ಪನ್ನು ಕುದಿಸಿ ರಸ ತೆಗೆದು ಅದಕ್ಕೆ ಒಂದು ಚಿಟಿಕೆ ಉಪ್ಪು, ಕಾಳು
ಮೆಣಸಿನ ಪುಡಿ ಮತ್ತು ಕಾಲು ಚಮಚ ನಿಂಬೆಯ ರಸವನ್ನು ಬೆರೆಸಿ ಪ್ರತಿ ದಿನ
ಬೆಳಿಗ್ಗೆ ಸೇವಿಸಬೇಕು.
೧ ನುಗ್ಗೆ ಸೊಪ್ಪಿನ ರಸಕ್ಕೆ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ
ಕಾಂತಿ ಹೆಚ್ಚುತ್ತದೆ. |
ಔ ಕೆಮ್ಮಿನಿಂದ ಬಳಲುವವರು ನುಗ್ಗೆ ಸೊಪ್ಪಿನ ರಸಕ್ಕೆ ಚೇನು ಬೆರೆಸಿ
ಸೇವಿಸಬೇಕು. ೨
೧ ಭೇದಿ ಮತ್ತು ಆಮಶಂಕೆಯ ತೊಂದರೆಯಿರುವಾಗ ನುಗ್ಗೆ ಸೊಪ್ಪಿನ
ರಸಕ್ಕೆ ಜೇನುತುಪ್ಪ ಮತ್ತು ಎಳನೀರನ್ನು ಬೆರೆಸಿ ಸೇವಿಸಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 41
೧ ಬಾಣಂತಿಯರಿಗೆ ನುಗ್ಗೆ ಸೊಪ್ಪನ್ನು ಬೇಯಿಸಿ ರಸ ತೆಗೆದು
ಕುಡಿಸುವುದರಿಂದ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.

23. ಬಿಳಿ ದಿಂಡಿ ಸೊಪ್ಪು


ಬಿಳಿ ದಿಂಡಿ ಸೊಪ್ಪಿನಿಂದ ಚಟ್ನಿ, ಪಲ್ಕ ಹಾಗೂ ಸಾರು ತಯಾರಿಸುತ್ತಾರೆ.
ಔಷಧೀಯ ಗುಣಗಳು:
3 ಬಿಳಿ ದಿಂಡಿನ ಸೊಪ್ಪಿನ ಪಲ್ಕ ನಿಯಮಿತವಾಗಿ ಸೇವನೆ ಮಾಡುವುದರಿಂದ
ಮೂತ್ರಸ್ರಾವ ಧಾರಾಳವಾಗಿ ಆಗುತ್ತದೆ.
[0 ಮೂತ್ರಕೋಶದಲ್ಲಿ ಕಲ್ಲು ಮುಂತಾದ ಇತರ ಮೂತ್ರಕೋಶದ
ತೊಂದರೆಯಿಂದ ಬಳಲುವವರು ಬಿಳಿದಿಂಡಿ ಸೊಪ್ಪಿನ ಚಟ್ನಿ ಹಾಗೂ ನೀರು
ಸೇವಿಸಬೇಕು.

24. ಚಕ್ರ ಮುನಿಸಸೂಪ್ಪು

100 ಗ್ರಾಂ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :


ಸಸಾರಜನಕ 7.4 ಗ್ರಾಂ ಶಕ್ತಿ 54 ಕ್ಕಾಲೊರಿ
"ಎ' ಜೀವಸತ್ವ 47500 ಐ.ಯು. “ಬಿ' ಜೀವಸತ್ವ 51 ಮಿಲಿಗ್ರಾಂ
"ಸಿ' ಜೀವಸತ್ವ 110 ಮಿಲಿಗ್ರಾಂ
ಚಕ್ರಮುನಿ ಸೊಪ್ಪಿನಿಂದ ಸಾರು, ಸಜ ತಯಾರಿಸುತ್ತಾರೆ.
ಔಷಧೀಯ ಗುಣಗಳು:
[0 ಚಕ್ರಮುನಿ ಸೊಪ್ಪನ್ನು ಆಹಾರದಲ್ಲಿ ಹಸಿಯಾಗಿ ಸೇವಿಸುವುದರಿಂದ
ಸಸಾರಜನಕ ಹಾಗೂ ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿ ದೊರೆಯುತ್ತ ವೆ.
42 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

25. ಸೂರ್ಯಕಾಂತಿ ಸೊಪ್ಪು

ಸೂರ್ಯಕಾಂತಿ ಸೊಪ್ಪಿನಿಂದ ಪಲ್ಕ ಹಾಗೂ ಸಾರು ತಯಾರಿಸುತ್ತಾರೆ.


ಷಧೀಯ ಗುಣಗಳು:
೧ ನರಗಳ ದೌರ್ಬಲ್ಯದಿಂದ ನರಳುವವರು ಸೂರ್ಯಕಾಂತಿ ಸೊಪ್ಪಿನ
ಪಲ್ಕ ನಿಯಮಿತವಾಗಿ ಸೇವನೆ ಮಾಡಬೇಕು.
೧ ನಿದ್ರಾಹೀನತೆಯ ತೊಂದರೆಯವರು ರಾತ್ರಿ ಸಮಯ ಸೂರ್ಯಕಾಂತಿ
ಸೊಪ್ಪಿನ ಸಾರನ್ನು ಸೇವನೆ ಮಾಡಿದರೆ ನಿದ್ರೆ ಚೆನ್ನಾಗಿ ಬರುತ್ತದೆ.

ಮುಳ್ಳು ಕೀರೆ ಸೊಪ್ಪಿ ನಿಂದ ಪಲ್ಕ, ಸಾರು ಮುಂತಾದವುಗಳನ್ನು


ತಯಾರಿಸಬಹುದು.

ಔಷಧೀಯ ಗುಣಗಳು:
೧ ಹೆರಿಗೆಯ ನಂತರಸ್ತಿಸ್ತ್ರೀಯರು ಮುಳ್ಳು ಕೀರೆಸೊಪ್ಪಿನ ತಾಜಾರಸವನ್ನು
ಜೇನುತುಪ್ಪ ಮತ್ತು ಏಲಕ್ಕಿ ಪುಡಿಯೊಂದಿಗೆ ಸೇವಿಸಿದರೆ ಹಾಲಿನ
ಉತ್ಪ ತ್ರಿ
ಹೆಚ್ಚುತ್ತದೆ.
೧ ತಲೆ ಕೂದಲು ಉದುರುತ್ತಿದ್ದರೆ ಮುಳ್ಳು ಕೀರೆ ಸೊಪ್ಪನ್ನು
ಅರೆದು
ತಲೆಗೆ ಹಚ್ಚಿಕೊಂಡು ಸ್ದಾ_ನ ಮಾಡುವುದರಿಂದ ಕೂದಲು
ಸೊಂಪಾಗಿ ಬೆಳೆಯುತತ್ರದೆ.
2 ಮಲಬದ ತೆಯ ತೊಂದರೆಯಿರುವವರು ಮುಳ್ಳು ಕೀರೆ ಸೊಪ್ಪನ್ನು
ಬೇಯಿಸಿ ಚೀನುಕುಪದೊಂದಿಗೆ ಸೇವ
ಿಸಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 43

ಅಣ್ಣೆ ಸೊಪ್ಪಿನಿಂದ ಪಲ್ಕ, ಸಾರು ತಯಾರಿಸಬಹುದು.


ಔಷಧೀಯ ಗುಣಗಳು:
೧0 ಬಾಯಿಹುಣ್ಣಿನ ತೊಂದರೆಯಿರುವವರು ಅಣ್ಣೆಸೊಪ್ಪಿನ ಪಲ್ಕ ಸೇವನೆ
ಮಾಡಬೇಕು.
೧ರ ದೃಷ್ಟಿ ದೋಷದ ತೊಂದರೆ ಇರುವವರು ಅಣ್ಣೆಸೊಪ್ಪನ್ನು ಅಧಿಕವಾಗಿ
ಸೇವನೆ ಮಾಡಬೇಕು.

100 ಗ್ರಾಂ ಸೊಪ್ಪಿನಲ್ಲಿ ರುವ ಪೋಷಕಾಂಶಗಳು :


ಸಸಾರಜನಕ 6ಗ್ರಾಂ ಪಿಷ್ಟ 9ಗ್ರಾಂ
ಕೊಬ್ಬು 0.4 ಗ್ರಾಂ ಸುಣ್ಣ 220 ಮಿಲಿಗ್ರಾಂ
ಸೋಡಿಯಂ 91 ಮಿಲಿಗ್ರಾಂ ರಂಜಕ 140 ಮಿಲಿಗ್ರಾಂ
ಕಬ್ಬಿಣ 4.3 ಮಿಲಿಗ್ರಾಂ ಪೊಟ್ಕಾಸಿಯಂ 290 ಮಿಲಿಗ್ರಾಂ
` "ಎ' ಜೀವಸತ್ವ. 6 ಮಿಲಿಗ್ರಾಂ
ತೋಟದ ಸೊಪ್ಪಿನಿಂದ ಸಾರು, ಪಲ್ಕ ತಯಾರಿಸುತ್ತಾರೆ.
ಔಷಧೀಯ ಗುಣಗಳು:
ರ ಗಂಟಲು ನೋವಿನಿಂದ ಬಳಲುವವರು ತೋಟದ ಸೊಪ್ಪಿನ ಬೀಜದ
ಕಷಾಯದಿಂದ ಬಾಯಿ ಮುಕ್ಕಳಿಸಬೇಕು.
2. ಹಲ್ಲುನೋವಿರುವವರು ಹುಳುಕು ಹಲ್ಲಿಗೆ ತೋಟದ ಸೊಪ್ಪಿನ
ಬೀಜವನ್ನು ಇಟ್ಟುಕೊಳ್ಳಬೇಕು.
2. ಕೆಮ್ಮು ಇರುವಾಗ ತೋಟದ ಸೊಪ್ಪಿನ ಬೀಜಗಳನ್ನು ಚೀಪಿ ಅದರ
ರಸ ಸೇವನೆ ಮಾಡಬೇಕು.
44 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

100 ಗ್ರಾಂ ಶತಾವರಿಯಲ್ಲಿ ರುವ.ಪೋಷಕಾಂಶಗಳು :

ಸಸಾರಜನಕ 2.2 ಗ್ರಾಂ ಕೊಬ್ಬು 0.2 ಗ್ರಾಂ


ನಾರಿನಂಶ 0.7 ಗ್ರಾಂ ಕಬ್ಬಿಣ 0.960 ಗ್ರಾಂ
ರಂಜಕ 0.039 ಗ್ರಾಂ ಸುಣ್ಣ 0.025 ಗ್ರಾಂ
"ಎ' ಜೀವಸತ್ವ 1400 ಐ.ಯು. "ಬಿ1' ಜೀವಸತ್ವ 0.180 ಗ್ರಾಂ
"ಬಿ2' ಜೀವಸತ್ವ 0.130 ಗ್ರಾಂ "ಸಿ' ಜೀವಸತ್ವ 0.040 ಗ್ರಾಂ
ಶತಾವರಿ ಸೊಪ್ಪಿನಿಂದ ಪಲ್ಕ, ಸೂಪ್‌ ಹಾಗೂ ಉಪ್ಪಿನಕಾಯಿ
ತಯಾರಿಸಬಹುದು.
ಔಷಧೀಯ ಗುಣಗಳು:
೧ ಅತಿಸಾರ ಭೇದಿಯಿಂದ ಬಳಲುವವರು ಶತಾವರಿ ಗಡ್ಡೆಯ
ಚೂರ್ಣವನ್ನು ಸೇವಿಸಬೇಕು.
ಡ ಹೃದ್ರೋಗದ ತೊಂದರೆಯಿರುವವರು ಶತಾವರಿ ಪಲ್ಕವನ್ನು
ನಿಯಮಿತವಾಗಿ ಸೇವನೆ ಮಾಡಬೇಕು.
೧ ಶತಾವರಿ ಸೊಪ್ಪಿನ ಪಲ್ಕ ಸೇವನೆ ಮಾಡುವುದರಿಂದ ಮೂತ್ರಸ್ತಾ್ರಿವ
ಸರಾಗವಾಗಿ ಆಗುತ್ತದೆ.
೧ ಶತವಾರಿ ಗಡ್ಡೆಯನ್ನು ಎಳ್ಳೆಣ್ಣೆಯಲ್ಲಿ ಹಾಕಿ ನೋವಿರುವ ಭಾಗಗಳಿಗೆ
ಲೇಪಿಸಿದರೆ ನೋವು ನಿವಾರಣೆಯಾಗುತ್ತದೆ.
೧ ಶತಾವರಿ ಗಡ್ಡೆಯ ಚೂರ್ಣವನ್ನು ಹಾಲಿನಲ್ಲಿ ಪ್ರಭದಿನ
ಉಪಯೋಗಿಸಿದರೆ ವೀರ್ಯ ವೃದ್ಧಿಯಾಗುತ್ತದೆ.
೧ ಶತಾವರಿ ಗಡೆಶೈಯನ್ನು ಕುಟ್ಟಿ ಪುಡಿ ಮಾಡಿ ಹಾಲಿನೊಂದಿಗೆ ಸೇವಿಸಿದರೆ
ಬಾಣಂತಿಯರಲ್ಲಿ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 45

30. ಹಾಲೇ ತ್ವಾಪೆಸೊಪ್ಪು


ಹಾಲೇ ಸೊಪ್ಪಿನಿಂದ ಪಲ್ಕ ಹಾಗೂ ಸಾರು ತಯಾರಿಸುತ್ತಾರೆ.
ಔಷಧೀಯ ಗುಣಗಳು:
2 ಹಾಲೇ ಸೊಪ್ಪಿನ ಪಲ್ಯವನ್ನು ಪ್ರತಿದಿನ ಸೇವಿಸುವುದರಿಂದ ಅನೇಕ
ರೀತಿಯ ಜೀವಸತ್ವಗಳು ಶರೀರಕ್ಕೆ ದೊರೆಯುತ್ತವೆ.
[ರ ಅರ್ಬುದ ರೋಗ (ಕ್ಕಾನ್ಸರ್‌) ದಿಂದ ಬಳಲುವವರು ಹಾಲೇ ಸೊಪ್ಪನ್ನು
ಆಹಾರದಲ್ಲಿ ಹೆಚ್ಚಾಗಿ ಸೇವನೆ ಮಾಡಬೇಕು.

ಸಣ್ಣ ನೆಗ್ಗಿಲು ಸೊಪ್ಪಿನ ಪಲ್ಕ, ಸಾರು ತಯಾರಿಸಬಹುದು.


ಔಷಧೀಯ ಗುಣಗಳು:
[0 ಮೂತ್ರಕೋಶದ ತೊಂದರೆಯಿರುವವರು ಸಣ್ಣ ನೆಗ್ಗಿಲು ಸೊಪ್ಪಿನ
ಸಾರನ್ನು ಸೇವನೆ ಮಾಡುವುದರಿಂದ ಮೂತ್ರ ಸರಾಗವಾಗಿ ಆಗುತ್ತದೆ.
2 ಸಣ್ಣ ನೆಗ್ಗಿಲು ಸೊಪ್ಪಿನ ಪಲ್ಕವನ್ನು ಪ್ರತಿದಿನ ಆಹಾರದಲ್ಲಿ
ಉಪಯೋಗಿಸುವುದರಿಂದ ಶರೀರಕ್ಕೆ ಬೇಕಾದ ಜೀವಸತ್ವಗಳು ದೊರೆಯುತ್ತವೆ.

32. ತುಂಬೆ ಸೊಪ್ಪು

ತುಂಬೆ ಗಿಡಗಳು ಎಲ್ಲೆಂದರಲ್ಲಿ ಬೆಳೆಯುತ್ತವೆ. ಹೂಗಳು ಸಣ್ಣಗಿದ್ದು


ಬಿಳಿಯ ಬಣ್ಣ ಹೊಂದಿರುತ್ತವೆ. ಇದರಲ್ಲಿ ಪಂಚಾಂಗಗಳು ವಿಶೇಷವಾಗಿ ಸೊಪ್ಪು
ಉಪಯುಕ್ತವಿರುತ್ತದೆ.
46 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಹಧೀಯ ಗುಣಗಳು:
೧0 ಜ್ವರದ ತೊಂದರೆಯಿರುವಾಗ ತುಂಬೆ ಸೊಪ್ಪಿನ ರಸದೊಡನೆ ಒಂದು
ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ ಬೆರೆಸಿ ಸೇವಿಸಬೇಕು.
೧0 ಕೆಮ್ಮು ಹಾಗೂ ದಮ್ಮಿನಿಂದ ಬಳಲುವವರು ತುಂಬೆ ಗಿಡದ
ಪಂಚಾಂಗಗಳ ರಸವನ್ನು ಸೇವಿಸಬೇಕು.
2 ಊತವಿರುವಾಗ ತುಂಬೆ ಸೊಪ್ಪಿನ ಕಷಾಯದಿಂದ ಶಾಖ ಕೊಡಬೇಕು.
2 ಅಜೀರ್ಣವುಂಟಾದಾಗ ಇದರ ಪಂಚಾಂಗದ ಕಷಾಯದಲ್ಲಿ ಸೈಂಧವ
ಲವಣವನ್ನು ಬೆರೆಸಿ ತೆಗೆದುಕೊಳ್ಳಬೇಕು.


33.ವೀಳದಲ
ಮಿಲಿ

ಇದನ್ನು ಎಲ್ಲೆಡೆಗೂ ಬೆಳೆಯಲಾಗುತ್ತದೆ. ಇದರಲ್ಲಿ ಕರಿಯ ಮತ್ತು


ಅಂಬಾಡಿ ಎಲೆ ಎಂಬ ಮುಖ್ಯವಾದ ಎರಡು ಪ್ರಭೇದಗಳಿವೆ. ಗುಣದಲ್ಲಿ ಕರಿಯ
ಎಲೆಯೇ ಶ್ರೇಷ್ಕವಾಗಿರುತ್ತದೆ.

ಔಷಧೀಯ ಗುಣಗಳು:
೧0ಕಫ ಜ್ವರವಿರುವಾಗ ವೀಳೆದೆಲೆ ಬೇರಿನ ಕಷಾಯ ತಯಾರಿಸಿ ಅದಕ್ಕೆ
ಜೇನುತುಪ್ಪ ಬೆರೆಸಿ ಕೊಡಬೇಕು.
ಡ ಕೀಲು ನೋವಿರುವಾಗ ವೀಳೆದೆಲೆ ರಸವನು ಹಚ್ಚಿಉಜ್ಜಿಕೊಳ
್ಳಬೇಕು.
ನಂತರ ಬಿಸಿ ಶಾಖ ತೆಗೆದುಕೊಳ್ಳ ಬೇಕು.
[] ಕೆಮ್ಮು ಹಾಗೂ ದಮ್ಮಿನ ತೊಂದರೆಯಿರುವವರು
ವೀಳೆದೆಲೆಯ ರಸಕ್ಕೆ
ಜೇನುತುಪ್ಪ ಬೆರೆಸಿ ಸೇವನೆ ಮಾಡಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 47

೧ ಜಂತುಗಳಾಗಿದ್ದರೆ ವೀಳೆದೆಲೆಯ ಆರು ತುಂಬುಗಳನ್ನು ಸಕ್ಕರೆಯೊಂದಿಗೆ


ಅರೆದು ತಿನ್ನಬೇಕು.
[0 ಬಾಯಿಯ ದುರ್ವಾಸನೆಯಿರುವಾಗ ತಾಂಬೂಲವನ್ನು ಸೇವನೆ ಮಾಡಬೇಕು.

ವಿಷ್ಣುಕಾಂತಿ ಸೊಪ್ಪಿನಿಂದ ಪಲ್ಕ ಹಾಗೂ ಸಾರು ತಯಾರಿಸಬಹುದು.


ಔಷಧೀಯ ಗುಣಗಳು:
2 ಬಿಳಿ ಜಾತಿಯ ವಿಷ್ಣುಕಾಂತಿ ಸೊಪ್ಪು ಸೇವನೆ ಮಾಡುವುದರಿಂದ
ದೃಷ್ಟಿದೋಷವಿದ್ದರೆ ನಿವಾರಣೆಯಾಗುತ್ತದೆ.
2 ಜಂತುಹುಳುಗಳ ತೊಂದರೆಯಿರುವವರು ಬಿಳಿ ಜಾತಿಯ ವಿಷ್ಣುಕಾಂತಿ
ಸೊಪ್ಪಿನ ಪಲ್ಕ ಸೇವನೆ ಮಾಡಬೇಕು.
೧ ಪಿತ್ಕಾಧಿಕ್ಕದಿಂದ ಬಳಲುವವರು ವಿಷ್ಣುಕಾಂತಿ ಸೊಪ್ಪಿನ ಪಲ್ಕ
ಸೇವಿಸಬೇಕು.
0 ಜ್ವರದ ಬಾಧೆಯಿಂದ ಬಳಲುವವರು ನೀಲಿ ಜಾತಿಯ ವಿಷ್ಣುಕಾಂತಿ
ಸೊಪ್ಪಿನ ಸೇವನೆ ಮಾಡಬೇಕು.
2 ವಿಷ್ಣುಕಾಂತಿ ಸೊಪ್ಪನ್ನು ಅರೆದು ತಲೆಗೆ ಹಚ್ಚಿಕೊಂಡು ಸ್ನಾನ
ಮಾಡುವುದರಿಂದ ಕೂದಲುದುರುವುದು ನಿಲ್ಲುತ್ತದೆ.
೧ ವಿಷ್ಣುಕಾಂತಿ ಸೊಪ್ಪಿನ ಪಲ್ಕ ಪ್ರತಿ ದಿನ ಆಹಾರದಲ್ಲಿ ಸೇವನೆ
ಮಾಡುವುದರಿಂದ ಸ್ಮರಣಶಕ್ತಿಯು ಹೆಚ್ಚುತ್ತದೆ.
ರಕ್ತಭೇದಿಯಾಗುತ್ತಿರುವಾಗ ವಿಷ್ಣುಕಾಂತಿ ಸೊಪ್ಪಿನ ಪಲ್ಕ ಸೇವನೆ
ಮಾಡಬೇಕು.
೧ ವಿಷ್ಣುಕಾಂತಿ ಸೊಪ್ಪಿನ ಬೇರನ್ನು ಅರೆದು ಅದಕ್ಕೆ ಕಲ್ಲುಸಕ್ಕರೆ ಮತ್ತು
ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ವಾರಗಳ ಕಾಲ
ಸೇವಿಸುವುದರಿಂದ ಮುಟ್ಟಿನ ಹೊಟ್ಟೆನೋವು ಗುಣವಾಗುತ್ತದೆ.
48 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

100 ಗ್ರಾಂ ಎಲೆಕೋಸಿನಲ್ಲಿ ರುವ ಪೋಷಕಾಂಶಗಳು :


ಸಸಾರಜನಕ 2ಗ್ರಾಂ ಪಿಷ್ಠ 5ಗ್ರಾಂ
ಕೊಬ್ಬು 0.3 ಗ್ರಾಂ ಕಬ್ಬಿಣ 0.7 ಮಿಲಿಗ್ರಾಂ
ರಂಜಕ 49 ಮಿಲಿಗ್ರಾಂ ಸುಣ್ಣ 30 ಮಿಲಿಗ್ರಾಂ
ಸೋಡಿಯಂ 277 ಮಿಲಿಗ್ರಾಂ ಮೆಗ್ನಿಷಿಯಂ 36 ಮಿಲ್ಫಿಗ್ರಾಂ
ಆಕ್ಸಾಲಿಕ್‌ ಆಮ್ಲ 12 ಮಿಲಿಗ್ರಾಂ ನಿಯಾಸಿನ್‌ 0.4 ಮಿಲಿಗ್ರಾಂ

ಎಲೆಕೋಸಿನಿಂದ ಪಲ್ಕ, ಕೋಸಂಬರಿ, ಹುಳಿ, ಕೂಟು ಹಾಗೂ ಪಕೋಡ


ತಯಾರಿಸಬಹುದು.
ಔಷಧೀಯ ಗುಣಗಳು:
೧ ರಕ್ತ ವಾಂತಿಯಾಗುತ್ತಿರುವಾಗ ಎಲೆಕೋಸಿನ ರಸಕ್ಕೆ ಜೇನುತುಪ್ಪ ಬೆರೆಸಿ
ಸೇವಿಸಬೇಕು.
[] ಮೂಲವ್ಯಾಧಿಯಿಂದ ಬಳಲುವವರು ಎಲೆಕೋಸನ್ನು ಆಹಾರದಲ್ಲಿ
ಹೆಚ್ಚಾಗಿ ಉಪಯೋಗಿಸಬೇಕು.
೧ ಕರುಳು ಹುಣ್ಣಿನಿಂದ ನರಳುವವರು ಎಲೆಕೋಸಿನ ರಸಕ್ಕೆ ಒಂದು ಚಮಚ
ಜೇನುತುಪ್ಪ ಬೆರೆಸಿ ಸೇವಿಸಬೇಕು.
ಹೊಟ್ಟೆನೋವು ಹಾಗೂ ಉರಿ ಇರುವಾಗ ಎಲೆಕೋಸನ್ನು ಅಕ್ಕಿ ತೊಳೆದ
ನೀರಿನಲ್ಲಿ ಬೇಯಿಸಿ ಕಲ್ಲುಸಕ್ಕರೆ ಬೆರೆಸಿ ಕುಡಿಯಬೇಕು.
೧ ಎಲೆಕೋಸನ್ನು ಬಿಸಿಮಾಡಿ ಊತ ಬಂದಿರುವ ಜಾಗಕ್ಕೆ ಪಟ್ಟು
ಹಾಕುವುದರಿಂದ ಊತ ಇಳಿದು ನೋವು ಕಡಿಮೆಯಾಗುತ್ತದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 49

ಭಾರತದಲ್ಲಿ ಇದು ಒಂದು ಸಾಮಾನ್ಯ ತರಕಾರಿಯಾಗಿರುತ್ತದೆ. ಸುಮಾರು


30 ರಿಂದ 60 ಸೆಂಟಿಮೀಟರ್‌ ಎತ್ತರಕ್ಕೆ ಬೆಳೆಯುತ್ತದೆ. ಇದರಲ್ಲಿ ಹಸಿರು ಮತ್ತು
ಕೆಂಪು ಬಣ್ಣದ ತಳಿಗಳು ಕಂಡುಬರುತ್ತವೆ. ನೈಸರ್ಗಿಕವಾಗಿ ಹಾಳುಬಿದ್ದ ಸ್ಹಳದಲ್ಲಿ
ಬೆಳೆಯುತ್ತಿರುತ್ತದೆ. ಎಲೆ ಮತ್ತು ದಂಟನ್ನು ತರಕಾರಿಯಾಗಿ ಉಪಯೋಗಿಸ
ಬಹುದು.
ಉಪಯುಕ್ತ ಭಾಗ- ಪೂರ್ಣಗಿಡ
ಬೇರು : ಕಫ ನಿವಾರಕ ಗುಣವಿದೆ. ಖುತುಸ್ರಾವ ಅಧಿಕವಾದರೆ
ಕಡಿಮೆಗೊಳಿಸುತ್ತದೆ. ಪ್ರಮೇಹ ರೋಗದಲ್ಲಿ ಉಪಯುಕ್ತ. ಕುರುಗಳಿಗೆ ಇದರ
ಪೋಲ್ಟೀಸ್‌ಮಾಡಿ ಕಟ್ಟಿದರೆ ಬೇಗನೆ ಒಡೆಯುತ್ತದೆ. ಇದರ ಸೇವನೆಯಿಂದ
ಬಾಣಂತಿಯರಲ್ಲಿ ಹಾಲು ಉತ್ಪಾದನೆ ಹಚ್ಚುತ್ತದೆ. ಹೊಟ್ಟೆನೋವು ಕಡಿಮೆ
ಯಾಗುತ್ತದೆ. ಎಲೆ ಮತ್ತು ಬೇರನ್ನು ಬೇಯಿಸಿ ಮಕ್ಕಳಿಗೆ ಸೌಮ್ಮರೇಚಕವಾಗಿ
ಕೊಡಬಹುದು.
ಸಸಿ : ತಂಪುಕಾರಕ, ರೋಗ ನಿರೋಧಕ, ಸೌಮ್ಮರೇಚಕ, ಮೂತ್ರಜನಕ,
ಜ್ವರನಿವಾರಕ, ಹಸಿವನ್ನುಂಟುಮಾಡುವ ಗುಣವಿದೆ. ಕಫ ನಿವಾರಕ, ರಕ್ತಸಂಬಂಧೀ
ರೋಗಗಳಲ್ಲಿ, ಬಿಳಿ ಸೆರಗು ಹಾಗೂ ಮೂಲವ್ಯಾಧಿಯಲ್ಲಿ ಉಪಯುಕ್ತ.

Moringa Pterygosperma

ನುಗ್ಗೆಯು ಒಂದು ಬಹುವಾರ್ಷಿಕ ತರಕಾರಿಯಾಗಿರುತ್ತದೆ. ಎಂಟರಿಂದ


ಹತ್ತು ಮೀಟರ್‌ ಎತ್ತರ ಬೆಳೆಯುತ್ತದೆ. ವರ್ಷದಲ್ಲಿ 2-3 ಸಲ ಹೂ ಬಿಡುತ್ತದೆ.
ಹೂ ಬಿಳಿಯಾಗಿದ್ದು ಗೊಂಚಲು ಗೊಂಚಲಾಗಿ ಬಿಡುತ್ತದೆ. ಎಲೆಯು ಭಿನ್ನ
50 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಪತ್ರವಾಗಿರುತ್ತದೆ. ಇದು ಉತ್ತಮ ತರಕಾರಿಯಾಗಿರುತ್ತ ದೆ. ಇದರಿಂದ ನಾನಾ


ಬಗೆಯ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಎಲೆಯನ್ನು ಪಲ್ಕ, ಚಟ್ನಿ
ವಗೈರೆಯಲ್ಲಿ ಉಪಯೋಗಿಸುತ್ತಾರೆ. ಅದೇ ರೀತಿ ಹೂವನ್ನು ತರಕಾರಿಯಾಗಿ
ಮತ್ತು ಇತರ ತಿನಿಸುಗಳಲ್ಲಿ ಉಪಯೋಗಿಸುತ್ತಾರೆ. ಕಾಂಡದ ತೊಗಟೆ ಮಾತ್ರ
ವಿಷಯುಕ್ತ.
ಉಪಯುಕ್ತ ಭಾಗಗಳು: ಬೇರು, ಎಲೆ, ಹೂ, ಹಣ್ಣು, ಬೀಜ,
ಬೇರು- ಶ್ವಾಸಕೋಶ ಮತ್ತು ಶರೀರದ ಶಕ್ತಿವರ್ಧಕ. ಮುಟ್ಟು ಸರಿಯಾಗಿ
ಆಗುವಂತೆ ಮಾಡುವ, ಸೌಮ್ಮರೇಚಕ, ಮೂತ್ರಜನಕ, ರಕ್ತವೃದ್ದಿಗೊಳಿಸುವುದು.
ಗಂಟಲು ನೋವು, ಕಫಜ್ವರ, ಮೂಲವ್ಕಾಧಿ, ಹಸಿವೆಯ ಕೊರತೆ ನಿವಾರಿಸಲು
ಉಪಯುಕ್ತ. ಬೇರಿನ ರಸವನ್ನು ಹಾಲಿನ ಜೊತೆ ಅಸ್ತಮಾ ರೋಗಿಗಳು
ಉಪಯೋಗಿಸ ಬಹುದು. ಬೇರಿನ ತೊಗಟೆಯ ರಸವನ್ನು ಕಿವಿನೋವಿಗೆ
ಉಪಯೋಗಿಸಬಹುದು. ಇದರ ರಸವನ್ನು ಗರ್ಭಪಾತವನ್ನು ಂಟು ಮಾಡಲು
ಉಪಯೋಗಿಸುತ್ತಾರೆ.
ಹೂ: ಜಂತು ನಿವಾರಕ, ಕಫನಿವಾರಕ, ವಾಯುನಿವಾರಕ ಗ್ರಾ ನಿ
ಕಫಜ್ವರ ಕಡಿಮೆ ಮಾಡುತ್ತದೆ.
ಕಾಯಿ : ಉಷ್ಣ, ಜೀರ್ಣಕಾರಕ, ಕಾಮೋತ್ತೇಜಕ, ರೋಗ ನಿರೋಧಕ,
ಜಂತು ನಿವಾರಕ, ನೋವು ನಿವಾರಕವಾಗಿರುತ್ತದೆ. ಹಸಿವೆ ಹೆಚ್ಚಿಸುತ್ತದೆ. ಹೃದಯ
ಮತ್ತು ಕಣ್ಣಿನ ರೋಗಗಳಿಗೆ ಉಪಯುಕ್ತ. ತೊದಲುವಿಕೆ, ಹುಣ್ಣುಗಳಿಗೆ
ಪ್ರಯೋಜನಕಾರಿಯಾಗಿದೆ. ತ
ಬೀಜ: ಎಣ್ಣೆಯನ್ನು ಸಂಧಿವಾತದ ನೋವಿಗೆ ಮತ್ತು ಹೆಬ್ಬೆರಳು ನೋವಿಗೆ
ಹಚ್ಚಬೇಕು.
\
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 51

38. ಬೀಟ್‌ರೂಟ್‌

ಉಪಯೋಗ:
2 ಯಕೃತ್ತಿನ ತೊಂದರೆಗಳಿಂದ ಬಳಲುವವರು ಬೀಟ್‌ರೂಟಿನ ರಸವನ್ನು
ಕುಡಿಯಬೇಕು. ಸುಟ್ಟ ಗಾಯಗಳಾದಾಗ ಬೀಟ್‌ರೂಟ್‌ ರಸವನ್ನು ಕೊಬ್ಬರಿ
ಎಣ್ಣೆಯಲ್ಲಿ ಬೆರೆಸಿ ಲೇಪಿಸುವುದರಿಂದ ಉರಿ ಕಡಿಮೆಯಾಗುತ್ತದೆ.
[5 ಮಲಬದ್ದತೆ ಹಾಗೂ ಮೂಲವ್ಮಾಧಿಯಿಂದ ಬಳಲುವವರು ಅರ್ಧ
ಲೋಟ ಬೀಟ್‌ರೂಟಿನ ಕಷಾಯವನ್ನು ರಾತ್ರಿ ಮಲಗುವ ಮುಂಚೆ ಕುಡಿಯಬೇಕು.
ಔಣ ಗರ್ಭಕೋಶದ ತೊಂದರೆಗಳಿಂದ ಬಳಲುವವರು ಆಹಾರದಲ್ಲಿ
ಬೀಟ್‌ರೂಟನ್ನು ಹೆಚ್ಚು ಬಳೆಸಬೇಕು.
[೧ ಮೈ ನವೆ ಮತ್ತು ತಲೆಯ ಹೊಟ್ಟಿನಿಂದ ಬಳಲುವವರು ಬೀಟ್‌ರೂಟಿನ
ಕಷಾಯಕ್ಕೆ ಸ್ವಲ್ಪ ವಿನಿಗರ್‌ ಬೆರೆಸಿ ಹಚ್ಚಿಕೊಳ್ಳಬೇಕು. ಅರ್ಧ ಗಂಟೆ ಬಿಟ್ಟು
ನಂತರ ಸ್ನಾನ ಮಾಡಬೇಕು. ಇದರ ಕಷಾಯದಿಂದ ವ್ರಣಗಳನ್ನು ತೊಳೆಯುವು
ದರಿಂದ ಬೇಗ ಮಾಯವಾಗುತ್ತದೆ.
2 ಮೂತ್ರಜನಕಾಂಗದ ತೊಂದರೆಗಳಲ್ಲಿಯೂ ಇದು ಉಪಯುಕ್ತ.

ಉಪಯೋಗ:
೧0 ಬಾಣಂತಿಯರು ಕೆಸುವಿನ ಗಡ್ಡೆ ಬೇಯಿಸಿ ಪಲ್ಕ ಇಲ್ಲವೇ ಬಜ್ಜಿ
ತಯಾರಿಸಿಕೊಂಡು ಸೇವನೆ ಮಾಡುವುದರಿಂದ ಎದೆಹಾಲು ಹೆಚ್ಚುತ್ತದೆ.
೧ ಅಶಕ್ತತೆಯಿಂದ ಬಳಲುವವರು ಕೆಸುವಿನ ಗಡ್ಡೆಯನ್ನು ತುರಿದು
ತುಪ್ಪದಲ್ಲಿ ಚೆನ್ನಾಗಿ ಹುರಿದು ಅದರಲ್ಲಿ ಸಮ ಪ್ರಮಾಣ ಸಕ್ಕರೆ ಬೆರೆಸಿಟ್ಟುಕೊಂಡು
ಪ್ರತಿ ದಿನ ಒಂದು ಚಮಚದಷ್ಟು ತಿಂದು ನಂತರ ಹಾಲು ಕುಡಿಯುವುದರಿಂದ
ಶರೀರದಲ್ಲಿ ಬಲವು ಹೆಚ್ಚುತ್ತದೆ. |
52 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳ:

[0 ಮೂಲವ್ಮಾಧಿಯಿಂದ ಬಳಲುವವರು ಕೆಸುವಿನ ಎಲೆ ಹಾಗೂ


ಗಡ್ಡೆಯನ್ನು ಸಣ್ಣಗೆ ಕತ್ತರಿಸಿ ಬೇಯಿಸಿಕೊಂಡು ಕೆನೆಮೊಸರಿನೊಡನೆ ಉಪ್ಪು
ಬೆರೆಸಿ ಸೇವಿಸಬೇಕು.

40. ನವಿಲು ಕೋಲು

ಉಪಯೋಗ:
2 ಗಡ್ಡೆಕೋಸು ಮೂತ್ರಜನಕಾಂಗದ ಕಾಯಿಲೆಗಳಲ್ಲಿ ಬಹು ಉಪಯುಕ್ತ.
ಕುರುಗಳಾದಾಗ ಗಡ್ಡೆಯನ್ನು ಕುದಿಸಿ ಪೋಲ್ಟೀಸ್‌ ಹಾಕಬೇಕು.
|
41. ಮೆಣಸಿನ ಕಾಯಿ
|

ಭಾರತ ಮಸಾಲೆ ಹಾಗೂ ಸಂಬಾರ ಬೆಳೆಗಳ ತವರು. ನಮ್ಮ ದಿನನಿತ್ಯದ


ಆಹಾರ ಪದಾರ್ಥಗಳಲ್ಲಿ ಮಸಾಲೆ ಮತ್ತು ಸಂಬಾರ ದಿನಸಿಗಳ ಬಳಕ
ಜಗತ್ತಿನಲ್ಲಿಯೇ ಅತೀ ಹೆಚ್ಚು. ಭಾರತ ಅನೇಕ ಮಸಾಲೆ ಮತ್ತು ಸಂಬಾರ
ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು, ಉತ್ಪಾದಿಸಿ ನಮ್ಮ ಬೇಡಿ!
ಪೂರೈಸುವುದಲ್ಲದೇ ಅನೇಕ ದೇಶಗಳಿಗೆ ಸಾಕಷು ಪ್ರಮಾಣದಲ್ಲಿ ರಫ್ತುಮಾಡುವ
ಒಂದು ಅತಿ ದೊಡ್ಡ ರಾಷ್ಟ್ರವಾಗಿದೆ.
ದಕ್ಷಿಣ ಮತ್ತು ಮಧ್ಯ ಅಮೇರಿಕಾದ ಮೆಕ್ಸಿಕೋ, ಪೆರು, ಬೊಲಿವಿಯಾ
ಈಕ್ವಡಾರ್‌ ದೇಶಗಳು ಮೆಣಸಿನಕಾಯಿ ಬೆಳೆಯ ಮೂಲ. ಕೊಲಂಬಸನು ತನ
ಅಮೇರಿಕೆಯ ಪ್ರವಾಸದಿಂ
ಪ ದ (1492 ಮತ್ತು 1494) ಹಿಂದಿರುಗುವಾಗ ಮೆಣಸಿ:
ಬೀಜವನ್ನು ಯೂರೋಪಿಗೆ ತಂದನೆಂದು ನಂಬಲಾಗಿದೆ. ಇಲ್ಲಿಂದ ಮೆಣಸಿನಕಾಯಿ
ಬೆಳೆ ಬೇರೆ ಬೇರೆಪ್ರದೇಶಗಳಿಗೆ ಹರಡಿತು.
ಯೂರೋಪ್‌ ದೇಶದ ತಂಪಾದ ಹವಾಮಾನ ಮತ್ತು ಮಣ್ಣಿನ ಗುಣ!
ಕಾರಣ ಇಲ್ಲಿ ಬೆಳೆದ ಮೆಣಸಿನಕಾಯಿ ಖಾರವಾಗಿರದೇ ಸಿಹಿಯಾಗಿರುವುದು ಒಂದ
ವೈಶಿಷ್ಟ್ಯ. ಪೋರ್ಚುಗೀಸರು 1585ರಲ್ಲಿ ಮೆಣಸಿನಕಾಯಿ ಬೆಳೆಯನ:
'*ಿಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

53

'ತ್ರಿಜಿಲ್‌ನಿಂದ ಭಾರತಕ್ಕೆ ತಂದವರಲ್ಲಿ ಮೊದಲಿಗರು. ನಂತರ ಅದು 1700


ಸಲ್ಲಿ ಚೀನಾ ದೇಶಕ್ಕೆ ತಲುಪಿತೆಂದು ನಂಬಲಾಗಿದೆ.
ಇದು ಸೋಲನೇಸಿ ಕುಟುಂಬಕ್ಕೆ ಸೇರಿದೆ, ಕ್ಯಾಪ್ಸಿಕಮ್‌ ಜಾತಿಗೆ ಸೇರಿದೆ.
ಇದರಲ್ಲಿ 22 ಪ್ರಭೇದಗಳಿದ್ದು 5 ಪ್ರಭೇದಗಳು ಬೇಸಾಯದಲ್ಲಿವೆ. ಜಗತ್ತಿನ
ಅತಿ ಹಚ್ಚಿನ ಕ್ಷೇತ್ರಗಳಲ್ಲಿ ಕ್ಯಾಪ್ಸಿಕಮ್‌ ಅನ್ನು ಬೆಳೆಯುತ್ತಾರೆ. ಭಾರತದಲ್ಲಿಯೂ
ಹೆಚ್ಚಿನ ಕ್ಷೇತ್ರದಲ್ಲಿ ಕ್ಯಾಪ್ಸಿಕಮ್‌, ಅಲ್ಪಸ್ವಲ್ಪ ಕ್ಷೇತ್ರದಲ್ಲಿ ಕ್ಯಾಪ್ಸಿಕಮ್‌ ಫ್ರಟಸೆನಸು
ಬೆಳೆಯಲಾಗುತ್ತದೆ.
' ಹಣ್ಣು ಮೆಣಸಿನಕಾಯಿಯಲ್ಲಿ ಕ್ಕಾಪ್ಸಸಿನ್‌ ಪ್ರಮಾಣ 0.5 ರಿಂದ 0.9
ಇರುವುದು. ಹಣ್ಣಿನಲ್ಲಿ ವಿಟಮಿನ್‌ “ಎ'' ಅಂಶ ಕಾಯಿ ಮಾಗುವಾಗ ಅತಿ
ಹೆಚ್ಚಾಗಿರುವುದು. ಮೆಣಸಿನಕಾಯಿಯಲ್ಲಿ ವಿಟಮಿನ್‌ “ಸಿ” ಪ್ರಮಾಣ
ಟೊಮೋಟೋ ಹಣ್ಣಿಗಿಂತ ಹೆಚ್ಚಾಗಿರುತ್ತದೆ. ಇದನ್ನು ಕಂಡುಹಿಡಿದ ಹಂಗರಿ
ದೇಶದ ವಿಜ್ಞಾನಿ ಡಾ|| ಸ್ವಂಟ್‌ ಗೊರ್ಲಿ ಅವರಿಗೆ 1937ರಲ್ಲಿ ನೊಬೆಲ್‌
ಪಾರಿತೋಷಕ ದೊರಕಿತು. ಭಾರತದಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ,
ಕರ್ನಾಟಕ, ತಮಿಳುನಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಒಣಮೆಣಸಿನಕಾಯಿ
ಯನ್ನು ಸಾಂಬಾರ ಪದಾರ್ಥಗಳಲ್ಲಿ, ಹಸಿಮೆಣಸಿನಕಾಯಿಯನ್ನು (ಡೊಣ್ಣೆ)
ತರಕಾರಿಯಾಗಿ ಬಳಸುವರು. ಮೆಣಸಿನಕಾಯಿಯಿಂದ ಉಪ್ಪಿನಕಾಯಿ, ಎಣ್ಣೆಗಾಯಿ,
ಬಜ್ಜಿ ಮೊದಲಾದವುಗಳನ್ನು ತಯಾರಿಸುವರು.
ಔಷಧೀಯ ಗುಣಗಳು:
೧0 ಇದು ಕೆಮ್ಮು, ಜ್ವರ, ಅರುಚಿ ಇತ್ಕಾದಿಗಳನ್ನು ಹೋಗಲಾಡಿಸುತ್ತದೆ.
ರ ಬಾವು ಬಂದಿದ್ದರೆ ಎಳೆ ಮೆಣಸಿನ ಎಲೆಗಳನ್ನು ಅರೆದು ಕಟ್ಟಬೇಕು.
೧0 ಕಫಯುಕ್ತ ಜ್ವರದಲ್ಲಿ ಇದರ ಬೇರಿನ ಕಷಾಯವನ್ನು ತಯಾರಿಸಿ
ಕಲ್ಲುಸಕ್ಕರೆ ಹಾಕಿ ಕುಡಿಸಬೇಕು.
೧0 ಅರುಚಿ (ರುಚಿ ಇಲ್ಲದಿರುವಾಗ) ಮತ್ತು ಅಗ್ನಿಮಾಂದ್ಕ ಅಂದರೆ ಹಸಿವೆ
ಸರಿಯಾಗಿ ಆಗದಿದ್ದಾಗ ಒಂದು ಹಣ್ಣು ಮೆಣಸಿನಕಾಯಿ ರಸದಲ್ಲಿ ಅಷ್ಟೇ ನಿಂಬೇ
ಹುಳಿ ರಸ ಮತ್ತು ಸ್ವಲ್ಪ ಸೈಂಧವಲವಣ ಸೇರಿಸಿ ಕೊಡಬೇಕು.
54 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

0 10 ಗ್ರಾಂ ಮೆಣಸಿನ ಪುಡಿಯನ್ನು 750 ಮಿ.ಲೀ. ನೀರಿನಲ್ಲಿ ಹಾಕಿ


ಕದಡಿ ಒಂದು ದಿನ ಬಿಟ್ಟು ಮೇಲಿನ ತಿಳಿಯನ್ನು ಶೋಧಿಸಿ ಬಾಟಲಿಯಲ್ಲಿ |
ತುಂಬಿಡಬೇಕು. ಈ ನೀರನ್ನು ಪ್ರತಿದಿನ 5 ಮಿ.ಲೀ. ಕುಡಿಯುವುದರಿಂದ
ಅಜೀರ್ಣ, ಅಗ್ನಿಮಾಂದ್ಯ, ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.

42. ಕುಂಬಳ (Pumpkin)

Cucurbita Pepo
ಇದರ ಮೂಲ ಸ್ಥಾನವು ಅಮೆರಿಕಾವೆಂದು ತಿಳಿದುಬರುತ್ತದೆ. ಭಾರತದಲ್ಲಿ
ಹಲವಾರು ಭಾಗಗಳಲ್ಲಿ ತರಕಾರಿಯಾಗಿ ಬಳಸುತ್ತಾರೆ. ಇದು ಬಳ್ಳಿ ಜಾತಿಗೆ
ಸೇರಿದ್ದು, ಬಳ್ಳಿ ಕಾಂಡದ ದಪ್ಪ ಕಡಿಮೆ ಇದ್ದು ಉದ್ದವಾಗಿ ಬೆಳೆಯುತ್ತದೆ.
ಬಳ್ಳಿಯನ್ನು ನೆಲದಲ್ಲಿ ಹರಡಲು ಬಿಡಬಹುದು. ಇದರ ಎಲೆ, ಚಿಗುರೆಲೆ, ಹೂ
ಇವುಗಳನ್ನೆಲ್ಲ ಪಲ್ಕ ಅಥವಾ ತಿಂಡಿ ತಿನಿಸು ಮಾಡಲು ಉಪಯೋಗಿಸುತ್ತಾರೆ.
ಬೀಜವನ್ನು ಹುರಿದು ತಿನ್ನುತ್ತಾರೆ.
ಉಪಯುಕ್ತ ಭಾಗಗಳು: ಬೇರು, ಎಲೆ, ಹಣ್ಣು, ಬೀಜ
ಬೇರು- ಗರ್ಭಪಾತದಿಂದ ಗರ್ಭಕೋಶದಲ್ಲಿ ರಕ್ತ ಹೆಪ್ಪುಗಟ್ಟಿದುದನ್ನು
ನಿವಾರಿಸಲು ಉಪಯುಕ್ತ. |
ಎಲೆ : ಎಲೆಗಳನ್ನು ಸುಟ್ಟು ಗಾಯಗಳಿಗೆ ಹಚ್ಚಬೇಕು. ಜೀರ್ಣಕಾರಕ
ರಕ್ತವೃದ್ದಿಕರ, ನೋವು ನಿವಾರಕ.
ಹಣ್ಣು : ಬಹಳ ತಂಪುಕಾರಕ, ಹಸಿವೆಯನ್ನು ಹೆಚ್ಚಿಸುತ್ತದೆ. ಕಫ, ವಾತ,
ಬಾಯಾರಿಕೆ, ದಣಿವನ್ನು ನಿವಾರಿಸುತ್ತದೆ. ರಕ್ತ ಶುದ್ಧೀಕರಿಸುತ್ತದೆ. ಸೌಮ್ಮರೇಚಕ.
ಹಲ್ಲು, ಗಂಟಲು ಮತ್ತು ಕಣ್ಣು ಇವುಗಳಿಗೆ ಉತ್ತಮ. ಹಣ್ಣಿನ ಸಿಪ್ಪೆಯು
. ಮೂಲವ್ಯಾಧಿಯಲ್ಲಿ ಉಪಯುಕ್ತ.
ಬೀಜ : ಮೂತ್ರಜನಕ, ಶಕ್ತಿವರ್ಧಕ, ಕೊಬ್ಬನ್ನು ಹೆಚ್ಚಿಸುತ್ತದೆ. ಕಫ,
ಜ್ವರ ನಿವಾರಿಸುತ್ತದೆ. ಮೂತ್ರಪಿಂಡ ಮತ್ತು ಮೆದುಳಿಗೆ ಉತ್ತಮ, ಬೀಜವು
ಜಂತುನಿವಾರಕ ಸಹ ಆಗಿರುತ್ತದೆ. ಮೃದುಕಾರಕ ಗುಣವಿದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 55

| 43. ಬೆಂಡೆಕಾಯಿ (Ladies Finger)

ಇದರ ಮೂಲಸ್ತಾನವುಆಫ್ರಿಕಾ ಎಂದು ತಿಳಿದುಬಂದಿದೆ. ಭಾರತದ ಎಲ್ಲ


ಕಡೆಯೂ ಬೆಳೆಯುತ್ತಾರೆ. ಸಸಿಯು ನೇರವಾಗಿ ಎತ್ತರಕ್ಕೆ ಬೆಳೆಯುತ್ತದೆ.
ಕಾಯಿಯಲ್ಲಿ ಲೋಳೆಯಂತಹ ಪದಾರ್ಥವಿರುತ್ತದೆ. ಇದರಿಂದ ಅನೇಕ ಬಗೆಯ
ಆಹಾರ ಪದಾರ್ಥ ತಯಾರಿಸುತ್ತಾರೆ.
ಉಪಯುಕ್ತ ಭಾಗ: ಎಲೆ, ಹಣ್ಣು, ಬೀಜ.
ಎಲೆ : ಕುರುಗಳಿಗೆ ಎಲೆಯನ್ನು ಕುದಿಸಿ ಪೋಲ್ಟೀಸ್‌ ಮಾಡಿ ಕಟ್ಟ
ಬಹುದು.
ಹಣ್ಣು : ಶಕ್ತಿವರ್ಧಕ, ಕಾಮೋತ್ತೇಜಕ ಗುಣಹೊಂದಿದೆ. ಇದು ಕಫ,
ಅಜೀರ್ಣ ಮತ್ತು ವಾತವನ್ನುಂಟುಮಾಡುತ್ತದೆ. ರಕ್ತವೃದ್ದಿ ಮಾಡುತ್ತದೆ. ಇದರ
ಲೋಳೆ ಪದಾರ್ಥದಲ್ಲಿ ಪೆಕ್ಟಿನ್‌ ಮತ್ತು ಪಿಷ್ಟವಿರುತ್ತದೆ. ಉತ್ತಮ ಮೂತ್ರಜನಕ,
" ಹಣ್ಣಿನಿಂದ ಬೀಜ ಬೇರ್ಪಡಿಸಿ ಕಷಾಯ ತಯಾರಿಸಿ ತೆಗೆದುಕೊಂಡರೆ ಜ್ವರ ಮತ್ತು
. ಜನನಾಂಗದ ತುರಿಕೆ ನಿಲ್ಲಿಸುತ್ತದೆ.

Cucumis 92111115
ಉತ್ತರ ಭಾರತವು ಇದರ ಮೂಲಸ್ಥಾನವೆಂದು ತಿಳಿದುಬರುತ್ತದೆ. ಹಸಿಯಾಗಿ
ತಿನ್ನಲು ಉಪಯೋಗಿಸುವಂತಹ ಜನಪ್ರಿಯ ತರಕಾರಿ. ಭಾರತದ ಎಲ್ಲ ಭಾಗಗಳಲ್ಲಿ
ಇದನ್ನು ಬೆಳೆಯುತ್ತಾರೆ. ಅಗಲವಾದ ಹಸಿರು ಎಲೆಯನ್ನು ಹೊಂದಿದ್ದು ಉದ್ದವಾದ
ಬಳ್ಳಿಯಾಗಿರುತ್ತದೆ. ಕಾಯಿಯನ್ನು ಪಲ್ಕ ಮತ್ತು ಚಟ್ನಿ ಮಾಡಲು ಉಪಯೋಗಿಸು
ತ್ತಾರೆ. ಎಳೆಕಾಯಿಯನ್ನು ಉಪ್ಪಿನಕಾಯಿಯಾಗಿ ತಯಾರಿಸುತ್ತಾರೆ. ಸಿಪ್ಪೆ,
ಬೀಜವನ್ನು ಸಹ ಚಟ್ನಿ ತಯಾರಿಸಲು ಉಪಯೋಗಿಸಬಹುದು.
56 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಉಪಯುಕ್ತ ಭಾಗ: ಬೇರು, ಎಲೆ, ಹಣ್ಣು, ಬೀಜ.


ಬೇರು : ಗರ್ಭಿಣಿಯರಿಗೆ ಗರ್ಭಕೋಶದಲ್ಲಿನ ನೋವು ಉಪಶಮನಕ್ಕೆ
ಉಪಯುಕ್ತ. ವಮನಕಾರಕವೂ ಹೌದು.
ಎಲೆ : ಎಲೆಯನ್ನು ಕುದಿಸಿ ನಂತರ ಜೀರಿಗೆಯ ಜೊತೆಗೆ ಹುರಿದು
ಪುಡಿಮಾಡಿ ಗಂಟಲು ನೋವಿರುವಾಗ ಸೇವಿಸಬೇಕು.
ಹಣ್ಣು : ಎಳೆಯ ಕಾಯಿಗಳು ತಂಪುಕಾರಕ, ಮೂತ್ರಜನಕ ಗುಣವನ್ನು
ಹೊಂದಿವೆ. ಹಣ್ಣನ್ನು ಕತ್ತರಿಸಿ ಊದಿರುವ ಭಾಗಕ್ಕೆ ಹಚ್ಚಿದರೆ ಬಾವು ಕಡಿಮೆ
ಯಾಗುತ್ತದೆ. ಬಿಸಿಲಿನ ತಾಪದಿಂದ ಮೂರ್ಛೆಹೋದವರಿಗೆ ಸೌತೆಕಾಯಿ
ತುಂಡುಗಳನ್ನು ತಲೆಯ ಮೇಲಿಡಬೇಕು.
ಬೀಜ : ಮೂತ್ರಜನಕ, ವಿರೇಚಕ, ಜ್ವರನಿವಾರಕ, ರಕ್ತವೃದ್ಧಿ ಹಾಗೂ
ಬಾಯಾರಿಕೆ ಹೋಗಲಾಡಿಸುತ್ತದೆ. ಕಾಂತಿಯನ್ನು ತರುತ್ತದೆ. ಬೀಜದ ಎಣ್ಣೆಯನ್ನು
ಜ್ವರದಲ್ಲಿ ಉಪಯೋಗಿಸಬಹುದು. ಹುರಿದ ಬೀಜದ ಪುಡಿಯು ಮೂತ್ರಜನಕ,
ಮೆದುಳು ಮತ್ತು ಶರೀರಕ್ಕೆ ಉತ್ತಮವಾದುದು.

Lagenara Sicerasia
ಇದು ಸಹ ಕುಂಬಳ ಜಾತಿಗೆ ಸೇರಿದ ಬಳ್ಳಿ. ಇದರ ಮೂಲವು ಆಫ್ರಿಕಾ
ದೇಶವೆಂದು ತಿಳಿಯುತ್ತದೆ. ಮಾನವನು ಇದನ್ನು 7000 ವರ್ಷಗಳಿಗಿಂತಲೂ
ಮೊದಲು ಉಪಯೋಗಿಸುತ್ತಿದ್ದನೆಂದು ಆಧಾರಗಳಿಂದ ತಿಳಿದುಬಂದಿದೆ. ಇದಕ್ಕೆ
ಕನ್ನಡದಲ್ಲಿ ಹಾಲುಗುಂಬಳ ಎಂದು ಕರೆಯುತ್ತಾರೆ. ಹಸಿರು ಕಾಂಡ, ಅಗಲವಾದ
ಎಲೆ ಹೊಂದಿರುತ್ತದೆ, ಬಿಳಿ ಹೂ ಬಿಡುತ್ತದೆ. ಕಾಯಿ ಹಸಿರಾಗಿದ್ದು ಬೇರೆ ಬೇರೆ
ಗಾತ್ರ, ಆಕಾರಗಳನ್ನು ಕಾಣಬಹುದು. ಎಳೆಯದಿದ್ದಾಗ ಕಾಯಿಯನ್ನು ಸಿಪ್ಪೆಸಮೇತ
ಉಪಯೋಗಿಸಬಹುದು. ಕಾಯಿ, ಎಲೆ, ಚಿಗುರುಗಳಿಂದ ಪಲ್ಕ ಮಾಡುತ್ತಾರೆ.
| ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 57

' ಕಾಯಿಯನ್ನು ನಾನಾ ರೀತಿಯ ಸಿಹಿ ತಿಂಡಿಗಳನ್ನು ಮಾಡಲು ಉಪಯೋಗಿಸುತ್ತಾರೆ.


' ನಮ್ಮ ದೇಶದ ಎಲ್ಲ ಭಾಗಗಳಲ್ಲಿಯೂ ಬೆಳಸುತ್ತಾರೆ. ಇದು ಮುಖ್ಯವಾಗಿ ಬೇಸಿಗೆ
' ಕಾಲದ ಬೆಳೆ. ಇದರ ಹಣ್ಣಿನ ಗಟ್ಟಿಯಾದ ಸಿಪ್ಪೆಯು ಬುರುಡೆ ಪಾತ್ರೆಗಳಾಗಿ
' ನೀರಿನಲ್ಲಿ ತೇಲುವುದರಿಂದ ಈಜಾಡಲು, ಮೀನಿನ ಬಲೆಗಳಲ್ಲಿ ಹಾಗೂ ಸಂಗೀತದ
ಉಪಕರಣಗಳಲ್ಲಿ ಬಳಸುತ್ತಾರೆ.
ಇದರ ಆಧಾರಕ್ಕೆ ಚಪ್ಪರ, ಮರ, ವಗೈರೆ ಒದಗಿಢಿದರೆ ಉತ್ತಮ. ಸಿಪ್ಪೆ
' ಗಟ್ಟಿಯಾಗಿರುವುದರಿಂದ ಒಳಗಿನ ಬೀಜ, ತಿರುಳು ತೆಗೆದ ನಂತರ ಬುರುಡೆಯಲ್ಲಿ
ಜಾ

ನೀರು, ಪಾನೀಯ ಶೇಖರಿಸಿಡಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಬಾಟಲು


! ಗಾರ್ಡ್‌ ಎಂಬ ಹೆಸರು ಬಂದಿದೆ.
' ಉಪಯುಕ್ತ ಭಾಗ- ಬೇರು, ಎಲೆ, ಹೂ, ಹಣ್ಣು, ಬೀಜ.
ಬೇರು : ಕಹಿ ಜಾತಿಯ ಬೇರು ಬಾವು ಕಡಿಮೆ ಮಾಡುತ್ತದೆ.
ಎಲೆ: ರೇಚಕ ಹಾಗೂ ಕಾಮಾಲೆ ರೋಗಗಳಲ್ಲಿ ಎಲೆಯ ಕಷಾಯದೊಂದಿಗೆ
' ಸಕ್ಕರೆ ಬೆರೆಸಿ ಕೊಡುತ್ತಾರೆ.
ಹಣ್ಣು: ಸಿಹಿ ಜಾತಿ ವಾಯು ಹೆಚ್ಚಿಸುತ್ತದೆ. ಸೌಮ್ಯ ರೇಚಕ, ಶಕ್ತಿವರ್ಧಕ,
ಕಾಮೋತ್ತೇಜಕ ಹಾಗೂ ಕೊಬ್ಬು ಹಚ್ಚಿಸುತ್ತದೆ. ರುಚಿ ಹೆಚ್ಚಿಸುತ್ತದೆ,
ಳಿಸೆರಗನ್ನು ಕಡಿಮೆಮಾಡುತ್ತದೆ. ಭ್ರೂಣದ ಅಭಿವೃದ್ದಿಗೆ ಉತ್ತಮ.
ಕಹಿಜಾತಿ : ಮೂತ್ರಜನಕ, ಗರ್ಭಕೋಶ ಹಾಗೂ ಯೋನಿ ಸಂಬಂಧದ
ರೋಗಗಳಿಗೆ, ಕಿವಿನೋವಿಗೆ ಉತ್ತಮವಾದುದು. ವಮನಕಾರಕ, ರೋಗ
ನಿರೋಧಕ, ಅಸ್ತಮ, ಹೊಟ್ಟೆಹುಣ್ಣು ಹಾಗೂ ನೋವನ್ನು ಗುಣಪಡಿಸುತ್ತದೆ.
ಬೀಜ : ಬೀಜದಿಂದ ದೊರೆಯುವ ಎಣ್ಣೆಯನ್ನು ತಲೆಗೆ ಹಚ್ಚಿದರೆ
ತಲೆನೋವು ಕಡಿಮೆಯಾಗುತ್ತದೆ. ಬಾವು ಇರುವಾಗ ಇದರ ಎಣ್ಣೆಯನ್ನು
ಲೇಪಿಸಬೇಕು.
58 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಸುವರ್ಣ ಅಥವಾ ಸೂರಣ ಗಡ್ಡೆಯ ಮೂಲಸ್ಥಾನ ಭಾರತವೆಂದು


ತಿಳಿದುಬಂದಿದೆ. ಗಡ್ಡೆಯನ್ನು ನೆಟ್ಟು ಬೆಳಸುತ್ತಾರೆ. ಮೇಲ್ಬಾ ಗದ ಕಾಂಡವು ಮೃದು
ವಾಗಿದ್ದು ಬಿಳಿಯ ಚುಕ್ಕಿಗಳು ಕಂಡುಬರುತ್ತವೆ ಎಲೆಯು ಅಗಲವಾಗಿರುತ್ತದೆ.
ಭೂಮಿಯ ಮೇಲ್ಭಾಗದ ಕಾಂಡ ಬೆಳೆಯುತ್ತಾ ಹೋದಂತೆ ಮಣ್ಣಿನೊಳಗಿನ
ಕಾಂಡವೂ ಅಗಲ ಮತ್ತು ದಪ್ಪವಾಗುವುದು. ಇದನ್ನೇ ತರಕಾರಿಯಾಗಿ
ಉಪಯೋಗಿಸುವುದು. ಗಡ್ಡೆಯಿಂದ ಪಲ್ಕ ಮಾಡುತ್ತಾರೆ. ಉಪ್ಪಿನಕಾಯಿ
ಹಾಕಬಹುದು. ಕೆಲವು ತಳಿಗಳನ್ನು ತಿಂದಾಗ ಕೆಲವರಿಗೆ ತುರಿಕೆ ಉಂಟಾಗುತ್ತದೆ.
ಆದರೆ ಬೇಯಿಸಿದಾಗ ಈ ಗುಣವು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ.
ಉಪಯುಕ್ತ ಭಾಗಗಳು - ಬೇರು, ಗಡ್ಡೆ.
ಬೇರು: ಬೇರನ್ನು ಕಣ್ಣು ಊದಿಕೊಂಡಾಗ ಮತ್ತು ಕುರುಗಳಿಗೆ ಹಚ್ಚಬೇಕು.
ಇದನ್ನು ಆರ್ತವಕಾರಕವಾಗಿ ಉಪಯೋಗಿಸಬಹುದು.
ಗೆಡ್ಡೆ : ಒಗರು, ಖಾರಯುಕ್ತ, ಹಸಿವೆಯನ್ನುಂಟುಮಾಡುವ, ರುಚಿಯನ್ನು
ಹೆಚ್ಚಿಸುವ ಗುಣವನ್ನು ಹೊಂದಿರುತ್ತದೆ. ಮೂಲವ್ಕಾಧಿ, ಗುಲ್ಮ, ಆಸ್ತಮ,
ಜ್ವರ, ವಾಂತಿ, ಹೊಟ್ಟೆನೋವು, ರಕ್ತ ಸಂಬಂಧ ರೋಗ, ಆನೆಕಾಲು ರೋಗ
ಮುಂತಾದವುಗಳಲ್ಲಿ ಉಪಯೋಗವಿದೆ. ಕಫವನ್ನು
ಹೆಚ್ಚಿಸುತ್ತದೆ.
ಸಂಧಿವಾತದಲ್ಲಿ ನೋವಿರುವ ಭಾಗಗಳಿಗೆ ಹಚ್ಚಿದರೆ ನೋವು ಕಡಿಮೆಯಾಗುತ್ತ
ದೆ.

47, ತೊಂಡೆಕಾಯಿ Smooth gourd

ಇದು ಬಹುವಾರ್ಷಿಕ ಬೆಳೆ. ಉದ _ವಾಗಿ ಎತ್ತರಕ್ಕೆ ಬೆಳ


ೆಯುವ ಬಳ್ಳಿ. ಒಮ್ಮೆ
ನೆಟ್ಟರೆ ಹಲವು ವರ್ಷಗಳವರೆಗೆ ಫಸಲನ್ನು ಕೊಡು
ತ್ತದೆ. ಇದು ಸೌತೆ ಜಾತಿಗೆ
ಸೇರಿದ ತರಕಾರಿ. ಉಷ ವಲಯದ ಹವಾಮಾನ
ಇರುವ ಎಲ್ಲ ಕಡೆ ಇದು
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 59
ಕಂಡುಬರುತ್ತದೆ. ಎಳೆಯ ಮತ್ತು ಬೆಳೆದ ಕಾಯಿಗಳನ್ನು ತರಕಾರಿಯಾಗಿ
ಉಪಯೋಗಿಸುತ್ತಾರೆ.
ಬೆಳೆದು ಪಕ್ವವಾದಾಗ ಕೆಂಪುಬಣ್ಣಕ್ಕೆ ತಿರುಗುತ್ತದೆ. ಕಾಯಿಗಳನ್ನು ಕತ್ತರಿಸಿ,
ಒಣಗಿಸಿ ಇಲ್ಲವೇ ಮಜ್ಜಿಗೆಯಲ್ಲಿ ಹಾಕಿ ಒಣಗಿಸಿ ಶೇಖರಿಸಿಡಬಹುದು.
ಕಾಯಿಯಿಂದ ಉಪ್ಪಿನಕಾಯಿ ತಯಾರಿಸಬಹುದು.
ಉಪಯುಕ್ತ ಭಾಗಗಳು- ಬೇರು, ಎಲೆ, ಹೂ, ಹಣ್ಣು.
ಬೇರು: ತಂಪುಕಾರಕ, ಕಾಮೋತ್ತೇಜಕ ಗುಣವಿದೆ. ವಾಂತಿ ಹಾಗೂ ಪಾದ,
ಕೈಗಳ ಉರಿಯುವಿಕೆಯನ್ನು ನಿಲ್ಲಿಸುತ್ತದೆ. ಜ್ವರದಿಂದ ನರಳುವಾಗ ಬೇರಿನ
ಪುಡಿಯನ್ನು ಎಲೆಯ ರಸದ ಜೊತೆಗೆ ಸೇರಿಸಿ ಇಡೀ ಶರೀರಕ್ಕೆ ಹಚ್ಚಿದರೆ ಚೆನ್ನಾಗಿ
ಬೆವರು ಬರುತ್ತದೆ. ತಾಯಿ ಬೇರಿನ ರಸ ಸಿಹಿಮೂತ್ರ ರೋಗದಲ್ಲಿ ಉಪಯುಕ್ತ.
ಎಲೆ: ಕಫ, ಪಿತ್ತವನ್ನು ನಾಶಮಾಡುತ್ತದೆ. ಗುಳ್ಳೆಗಳು ಕಾಣಿಸಿಕೊಂಡಾಗ
ಎಲೆಯ ರಸವನ್ನು ಹಚ್ಚಬೇಕು. ಸಿಹಿಮೂತ್ರ ರೋಗಿಗಳಿಗೆ ಇದರ ಎಲೆಯ ರಸ
ಒಳ್ಳೆಯದು. ;
ಹೂ : ತುರಿಕೆಯನ್ನು ವಾಸಿಮಾಡುತ್ತದೆ. ಕಾಮಾಲೆ ರೋಗದಲ್ಲಿಯೂ
ಉಪಯುಕ್ತ.
ಹಣ್ಣು : ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಜ್ವರ ನಿವಾರಕ,
ಅಸ್ತಮ ರೋಗಿಗಳಿಗೆ ಒಳ್ಳೆಯದು. ಕಾಮೋತ್ತೇಜಕ ಹಾಗೂ ಬಾಯಾರಿಕೆ
ನಿವಾರಿಸುತ್ತದೆ.

Raphanus 9೩1೪115

ಇದು ತರಕಾರಿಯಲ್ಲಿ ಜನಪ್ರಿಯವಾದುದು. ಇದರ ಬೆಳೆಯ ಕಾಲಾವಧಿಯು


' (30-40 ದಿನಗಳು) ಅಲ್ಪವಾದುದರಿಂದ ಸುಲಭದಲ್ಲಿ ಬೆಳೆಯಬಹುದಾಗಿದೆ.
ಭಾರತದಲ್ಲಿ ಎಲ್ಲ ಕಡೆಗೆ ಬೆಳೆಯುತ್ತಾರೆ. ಇದರ ಮೂಲಸ್ಥಾನ ಮಧ್ಯ ಅಥವಾ
60 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಪಶ್ಚಿಮ ಚೈನಾ ಮತ್ತು ಭಾರತವೆಂದು ಊಹಿಸಲಾಗಿದೆ. ಬೇರು ಮಾತ್ರವಲ್ಲದೇ


ಎಲೆಯನ್ನೂ ತರಕಾರಿಯಾಗಿ ಉಪಯೋಗಿಸುತ್ತಾರೆ. ಮೂಲಂಗಿ ಕಾಯಿಯನ್ನು
ಎಳೆಯದಿದ್ದಾಗ ತರಕಾರಿಯಾಗಿ ಬಳಸುತ್ತಾರೆ. ಇದು ತಂಪು ಹವೆಯ
ಬೆಳೆಯಾದರೂ ವರ್ಷದ ಎಲ್ಲ ಕಾಲದಲ್ಲಿ ಬೆಳೆಯುವ ಸಾಧ್ಯತೆಯಿದೆ.
ಉಪಯುಕ್ತ ಭಾ -ಗಬೇರು, ಎಲೆ, ಹೂ, ಹಣ್ಣು, ಬೀಜ.
ಬೇರು : ಮೂಲವ್ಮಾಧಿ ಮತ್ತು ಮೂತ್ರನಾಳ ಸಂಬಂಧಿ ರೋಗಗಳಲ್ಲಿ
ಪ್ರಯೋಜನಕಾರಿ. ಹೊಟ್ಟೆನೋವಿಗೆ ಹಾಗೂ ಲೈಂಗಿಕ ರೋಗಗಳಿಗೆ ಉಪಯುಕ್ತ.
ಜಂತು ನಿವಾರಕ ಹಾಗೂ ವಾತ ನಿವಾರಿಸುವ ಶಕ್ತಿ ಹೊಂದಿದೆ. ಮೂಲವ್ಯಾಧಿ,
ಹೃದಯ ರೋಗಿಗಳಿಗೆ, ಅಸಹಜ ಮುಟ್ಟು ನಿಲ್ಲುವಿಕೆ, ಬಿಕ್ಕಳಿಕೆ, ಕುಷ್ಟರೋಗ
ಮತ್ತು ಕಾಲರಾಗಳಲ್ಲಿ ಪ್ರಯೋಜನವಿದೆ. ಇದನ್ನು ಊಟಕ್ಕೆ ಮೊದಲು ಸೇವಿಸಿದರೆ
ಹಸಿವೆಯನ್ನು ಹೆಚ್ಚಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಎಲೆ: ತಾಜಾ ಎಲೆಯ ರಸ ಮೂತ್ರಜನಕ ಮತ್ತು ರೇಚಕವಾಗಿರುತ್ತದೆ.
ಹೂ : ಕೆಮ್ಮುನಿವಾರಕ.
ಹಣ್ಣು ಮತ್ತು ಬೀಜ: ಕಹಿ, ಸೌಮ್ಕರೇಚಕ, ಶಕ್ತಿವರ್ಧಕ, ಆರ್ತವಕಾರಕ,
ವಾಯುನಿವಾರಕ ಗುಣ ಹೊಂದಿದೆ. ಗುಲ್ಮ, ಪಾರ್ಶ್ವವಾಯು ರೋಗಿಗಳಿಗೆ ಉತ್ತಮ.

ಗಜ್ಜರಿಯ ಹಲ್ವ ತುಂಬ ರುಚಿಕರವಾಗಿರುತ್ತದೆ. ಗಜ್ಜರಿ ತುರಿದು ಪಲ್ಕ


ಮಾಡುತ್ತಾರೆ. ಹಸಿಯಾಗಿಯೇ ಕೋಸಂಬರಿ ತಯಾರಿಸಿಕೊಂಡು ತಿನ್ನುವುದು
ರೂಢಿಯಲ್ಲಿದೆ.
ಔಷಧೀಯ ಗುಣಗಳು:
೧ ಅತಿಸಾರ ಅಂದ್ರೆ ಭೇದಿಯಾಗುತ್ತಿದ್ದರೆ ಗಜ್ಜರಿ ರಸವನ್ನು ತೆಗೆದು
ಅದರಲ್ಲಿ ಸೈಂಧವಲವಣ ಸೇರಿಸಿ ಕುಡಿಯಬೇಕು.
೧ ಹೊಟ್ಟೆಯುಬ್ಬರ ಹಾಗೂ ಹೊಟ್ಟೆನೋವು ಇರುವಾಗ ಗಜ್ಜರಿಯ
ರಸದಲ್ಲಿ ಸ್ವಲ್ಪ ಉಪ್ಪು ಬೆರೆಸಿ ಸೇವಿಸಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 61

[0 ಮೂಲವ್ಯಾಧಿಯಿಂದ ಬಳಲುವವರು ಗಜ್ಜರಿಯನ್ನು ತುರಿದು ಮೊಸರು


ಇಲ್ಲವೇ ಮಜ್ಜಿಗೆಯಲ್ಲಿ ಬೆರೆಸಿ ತಿನ್ನಬೇಕು.
೧ ಉಸಿರಿನ ದುರ್ವಾಸನೆಯಿರುವಾಗ ಗಜ್ಜರಿಯನ್ನು ಹಸಿಯಾಗಿಯೇ
ತಿನ್ನಬೇಕು.
೧ ಅತಿ ಬಾಯಾರಿಕೆಯಾದಾಗ ಗಜ್ಜರಿಯ ರಸದಲ್ಲಿ ಸಕ್ಕರೆ ಬೆರೆಸಿ
ಕುಡಿಯಬೇಕು.
೧ ಗಜ್ಜರಿಯ ಸೇವನೆಯಿಂದ ಹಸಿವು ಹೆಚ್ಚುತ್ತದೆ. ಇದು ಅಸ್ತಮದಿಂದ
ನರಳುವವರಿಗೂ ಹಾಗೂ ಹೃದಯ ರೋಗದಿಂದ ಬಳಲುವವರಿಗೂ ಬಹಳ
ಉತ್ತಮ ತರಕಾರಿ.
2. ಗಜ್ಜರಿಯು ಶಕ್ತಿವರ್ಧಕ, ಕಾಮೋತ್ತೇಜಕ ಹಾಗೂ ಕಫ ನಿವಾರಕ
ವಾಗಿಯೂ ಕೆಲಸಮಾಡುತ್ತದೆ. ವಾತರೋಗ ಹಾಗೂ ಮೂತ್ರಜನಕಾಂಗದ
ತೊಂದರೆಗಳಿರುವವರಿಗೂ ಇದು ಬಹು ಉಪಯುಕ್ತ.

ಸಂಸ್ಕೃತ- ಪಿಂಡಾಲು ಮರಾಠಿ- ರತಾಳೆ ಕನ್ನಡ- ಗೆಣಸು


ಇದರಲ್ಲಿ ಸೊಪ್ಪು ಹಾಗೂ ಗಡ್ಡೆ ಎರಡೂ ಉಪಯುಕ್ತವಿದೆ.
ಔಷಧೀಯ ಗುಣಗಳು:
೧ ಅಶಕ್ತತೆ ನಿವಾರಿಸಲು ಗೆಣಸನ್ನು ತುರಿದು ತುಪ್ಪದಲ್ಲಿ ಚೆನ್ನಾಗಿ ಹುರಿದು
ಸಕ್ಕರೆ ಸೇರಿಸಿ ತಿನ್ನಬೇಕು.
೧0 ದಾಹವಿರುವಾಗ ಗೆಣಸಿನ ಸೊಪ್ಪಿನ ರಸವನ್ನು ತೆಗೆದು ಅದರಲ್ಲಿ ಸಕ್ಕರೆ
ಬೆರೆಸಿ ತೆಗೆದುಕೊಳ್ಳಬೇಕು.
[0 ಮೂತ್ರಕೋಶದ ತೊಂದರೆಯಿಂದ ಬಳಲುವವರು ಸೊಪ್ಪಿನ ರಸವನ್ನು
ಅಕ್ಕಿ ತೊಳೆದ ನೀರಿನಲ್ಲಿ ಬೆರೆಸಿ ಸೇವಿಸಬೇಕು.
೧ ಪಿತ್ರಾಧಿಕೃವಾಗಿರುವಾಗ ಗೆಣಸನ್ನು ಬೇಯಿಸಿ ತುಪ್ಪ ಸಕ್ಕರೆ ಸೇರಿಸಿ
ಸೇವಿಸಬೇಕು.
62 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು
51. ತುಪ್ಪದ ಹೀರೆಕಾಯಿ

ಸಂಸ್ಕೃತ- ಕೋಶಾತಕಿ ಮರಾರಿ- ಗೋಡ ದೋಡಕಾ


ಹಿಂದಿ- ತೋರಯಿ ಕನ್ನಡ - ತುಪ್ಪದ ಹೀರೆಕಾಯಿ
ಇದನ್ನು ಎಲ್ಲೆಡೆ ಬೆಳೆಯಲಾಗುತ್ತದೆ. ತುಪ್ಪದ ಹೀರೆಕಾಯಿಯಿಂದ
ತಯಾರಿಸಿದ ಪಲ್ಕ ತುಂಬ ರುಚಿಕರವಾಗಿರುತ್ತದೆ. ಇದೊಂದು ಬಳ್ಳಿಯಾಗಿದ್ದು
ಕಾಯಿ ಹಾಗೂ ಸೊಪ್ಪು ಉಪಯುಕ್ತ ಭಾಗಗಳಾಗಿರುತ್ತವೆ.
ಹಧೀಯ ಗುಣಗಳು:
[] ವಿಷದ ಬಾಧೆಯಿರುವಾಗ ಕಹಿ ಹೀರೆಕಾಯಿಸೊಪ್ಪಿನ ರಸದಲ್ಲಿ ಅಥವಾ
ಬೀಜಗಳ ಕಷಾಯದಲ್ಲಿ ತುಪ್ಪ ಬೆರೆಸಿ ಸೇವನೆ ಮಾಡಬೇಕು. ವಾಂತಿಯಾಗಿ ವಿಷದ
ಪ್ರಭಾವ ಕಡಿಮೆಯಾಗುತ್ತದೆ.
2 ಮಲಬದ್ಧ್ದತೆಯಿರುವಾಗ ತುಪ್ಪದ ಹೀರೆಕಾಯಿ ಘ್‌ ಚೂರ್ಣ
ಹಾಗೂ ಸಮಭಾಗ ಅಳಲೆಕಾಯಿ ಚೂರ್ಣ ಎರಡನ್ನೂ ಬಿಸಿನೀರಿನಲ್ಲಿ ರಾತ್ರಿಹೊತ್ತು
ಸೇವನೆ ಮಾಡಬೇಕು.
೧ ಚರ್ಮರೋಗ ತೊಂದರೆಯಿರುವವರು ಕಹಿ ಹೀರೆಕಾಯಿ ಬೀಜಗಳನ್ನು
ಪುಡಿಮಾಡಿ ಅದರ ನಾಲ್ಕು ಪಟ್ಟು ಎಳ್ಳೆಣ್ಣೆಯಲ್ಲಿ ಹಾಕಿ ಸಣ್ಣಗಿನ ಉರಿಯ
ಮೇಲೆ ಬಿಸಿಮಾಡಿ ನಂತರ ಆ ಎಣ್ಣೆಯನ್ನು ಲೇಪಿಸಿಕೊಳ್ಳಬೇಕು.

ಸಂಸ್ಕೃತ- ಕದಲೀ ಗರ್ಭ ಮರಾಠಿ- ಗಾಭಾ ಕನ್ನಡ- ಬಾಳೆದಿಂಡು


ಔಷಧೀಯ ಗುಣಗಳು:
0 ವಾಂತಿಯು ಹೆಚ್ಚಾಗಿ ಆಗುತ್ತಿರುವಾಗ ಬಾಳೆಗಡ್ಡೆಯ ರಸದಲ್ಲಿ
ಜೇನುತುಪ್ಪ ಇಲ್ಲವೆ ಕಲ್ಲುಸಕ್ಕರೆ ಬೆರೆಸಿ ಸೇವನೆ ಮಾಡಬೇಕು
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 63

[0 ವಿಷವಿಕಾರದಲ್ಲಿ ಬಾಳೆದಿಂಡಿನ ರಸ ಕುಡಿಯಬೇಕು.


೧ ಮೂತ್ರಕೋಶದ ತೊಂದರೆಯಿರುವಾಗ ಬಾಳೆದಿಂಡಿನ ರಸವನ್ನು ಸ್ವಲ್ಪ
ಬಿಸಿಮಾಡಿ ತುಪ್ಪ ಸೇರಿಸಿ ಸೇವಿಸಬೇಕು.
2 ಮೂಲವ್ಯಾಧಿಯ ತೊಂದರೆಯಿಂದ ಬಳಲುವವರು ರಾತ್ರಿ ಮಲಗುವಾಗ
ಬಾಳೆದಿಂಡನ್ನು ಸಣ್ಣಗೆ ಕತ್ತರಿಸಿ ಮೊಸರಿನಲ್ಲಿ ಬೆರೆಸಿಟ್ಟು ಬೆಳಿಗ್ಗೆ ರುಚಿಗೆ ತಕ್ಕಷ್ಟು
ಉಪ್ಪು ಬೆರೆಸಿ ತಿನ್ನಬೇಕು.
[0 ಆಗಾಗ ಅಜೀರ್ಣದಿಂದ ಹೊಟ್ಟೆನೋವು ಬರುತ್ತಿದ್ದರೆ ಬಾಳೆದಿಂಡಿನ
ರಸದಲ್ಲಿ ಚಿಟಿಕೆಯಷ್ಟು ಅಜವಾನದ ಚೂರ್ಣ ಮತ್ತು ಸೈಂಧವಲವಣ ಬೆರೆಸಿ
ಊಟವಾದ ಮೇಲೆ ತೆಗೆದುಕೊಳ್ಳಬೇಕು.

53. ಪಡುವಲ ಕಾಯಿ

ಸಂಸ್ಕೃತ- ಪಟೋಲ ಮರಾಠಿ- ಪಡುವಳ


- ಹಿಂದಿ- ಪಟೋಲ ಕನ್ನಡ- ಪಡುವಲ
ಇದರಲ್ಲಿ ಪಂಚಾಂಗಗಳೂ ಉಪಯುಕ್ತವಿರುತ್ತವೆ. ಕಹಿ ಹಾಗೂ ಸಿಹಿ
ಪಡುವಲವೆಂದು ಎರಡು ವಿಧಗಳಿವೆ. ಔಷಧಿಯಲ್ಲಿ ಉಪಯೋಗಿಸಲು
ಕಹಿಪಡುವಲ ಶ್ರೇಷ್ಮವಾಗಿರುತ್ತದೆ.
ಔಷಧೀಯ ಗುಣಗಳು:
೧0 ದಾಹವಿರುವಾಗ ಸಿಹಿ ಪಡುವಲಕಾಯಿಯ ರಸಕ್ಕೆ ಸಕ್ಕರೆ ಬೆರೆಸಿ
ಕುಡಿಯಬೇಕು. ಕ್ಲ
೧) ಕೂದಲು ಉದುರುತ್ತಿದ್ದರೆ ಪಡುವಲ ಸೊಪ್ಪಿನ ರಸವನ್ನು ತಲೆಗೆ ಹಚ್ಚಿ
ಉಜ್ಜಿಕೊಂಡು ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡಬೇಕು.
೧0 ಕೆಮ್ಮು ಇರುವಾಗ ಕಹಿಪಡುವಲಕಾಯಿಯ ಕಷಾಯ ತಯಾರಿಸಿ ಅದಕ್ಕೆ
' ಸೈಂಧವಲವಣ ಬೆರೆಸಿ ಕೊಡಬೇಕು. ವಾಂತಿಯಾಗಿ ಕಫವೆಲ್ಲ ಹೋಗುತ್ತದೆ.
64 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

0 ಮಲಬದ್ದತೆಯಿರುವವರು ಕಹಿಪಡುವಲ ಬೀಜದಿಂದ ತಯಾರಿಸಿದ


ಕಷಾಯಮಾಡಿ ಕುಡಿಯುವುದರಿಂದ ಮಲವಿಸರ್ಜನೆ ಸಲೀಸಾಗಿ ಆಗುತ್ತದೆ.
ದ ಮೂಲವ್ಮಾಧಿಯ ತೊಂದರೆಯಿಂದ ಬಳಲುವವರು ಸಿಹಿಪಡುವಲ
ಬೀಜವನ್ನು ಮೊಸರಿನಲ್ಲಿ ಅರೆದು ಸ್ವಲ್ಪ ಉಪ್ಪು ಬೆರೆಸಿ ತಿನ್ನಬೇಕು. |

54. ಬೂದಗುಂಬಳಕಾಯಿ

ಸಂಸ್ಕೃತ- ಕೂಷ್ಮಾಂಡ ಮರಾಠಿ - ಕೋಹಳಾ


ಹಿಂದಿ- ಕುಮ್ಹಡಾ ಕನ್ನಡ- ಬೂದಗುಂಬಳಕಾಯಿ |
ಬಲಿತ ಮೇಲೆ ಬೂದಿಯ ಬಣ್ಣ ಬಂದಿರುವುದನ್ನೇ ಔಷಧಿಯಲ್ಲಿ '
ಉಪಯೋಗಿಸಬೇಕು. ಕಾಯಿಯ ಸ್ವರಸ, ಕಾಯಿ, ಬೀಜ ಎಲ್ಲವೂ ಔಷಧಿಯಲ್ಲಿ
ಉಪಯುಕ್ತವಾಗಿವೆ.
ಔಷಧೀಯ ಗುಣಗಳು:
ಔ ಎದೆ ಉರಿ, ಹೊಟ್ಟೆನೋವಿನಿಂದ ಬಳಲುವವರಿಗೆ ಬೂದಗುಂಬಳ
ರಸದಲ್ಲಿ ಸಕ್ಕರೆ ಬೆರೆಸಿ ಕೊಡಬೇಕು.
೧ ಅಪಸ್ಮಾರ ರೋಗವಿರುವವರಿಗೆ ಬೂದಗುಂಬಳ ಬೀಜದ ಪುಡಿಯನ್ನು
ಬ್ರಾಹ್ಮಿರಸದೊಡನೆ ಸಕ್ಕರೆ ಬೆರೆಸಿ ಕೊಡಬೇಕು.
೧ ನಿಶ್ಶಕ್ತಿ ಉಂಟಾಗಿರುವಾಗ ಬೂದಗುಂಬಳಕಾಯಿ ಹೆರೆದು ತುಪ್ಪದಲ್ಲಿ
ಚೆನ್ನಾಗಿ ಹುರಿದು ಅದಕ್ಕೆ ಸಕ್ಕರೆ ಬೆರೆಸಿ ಪ್ರತಿದಿನ ಸೇವನೆ ಮಾಡಬೇಕು.
೧ ಕೆಮ್ಮು, ದಮ್ಮು ಹಾಗೂ ಮಲಬದ್ಧತೆ ಇರುವವರು ಬೂದಗುಂಬಳದ
ರಸ ತೆಗೆದು ಸಕ್ಕರೆಯ ಎಳೆಪಾಕದೊಂದಿಗೆ ಕುದಿಸಿಟ್ಟುಕೊಂಡು ಪ್ರತಿ ದಿನ ಎರಡು
ಹೊತ್ತು ಸೇವನೆ ಮಾಡಬೇಕು.
೧ ವಿಷ ವಿಕಾರಗಳಲ್ಲಿ ಬೂದಗುಂಬಳ ರಸದಲ್ಲಿ ಬೆಲ್ಲ ಸೇರಿಸಿ ಕುಡಿಸಬೇಕು.
೧ ಮೂತ್ರಕೋಶದ ತೊಂದರೆಯಿಂದ ಬಳಲುವವರು ಬೂದಗುಂಬಳದ
ರಸದೊಡನೆ ಯವಕ್ಸಾರ ಸೇರಿಸಿ ಸೇವನೆ ಮಾಡಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 65

55 `ಮಡಿಹಾಗಲ

ಸಂಸ್ಕೃತ- ಕರ್ಟೋಲಿ ಮರಾಠಿ- ಕರ್ಬೋಲಿ


ಹಿಂದಿ - ಕರ್ಕೋಟ ಕನ್ನಡ- ಮಡಿಹಾಗಲ
ಮಲೆನಾಡಿನಲ್ಲಿ ಹೆಚ್ಚಾಗಿ ಮಡಿಹಾಗಲ .ಬಳ್ಳಿಗಳು ಬೆಳೆಯುತ್ತವೆ.
ಕಾಯಿಗಳು ಹಾಗಲಕಾಯಿಯಂತೆ ಇದ್ದು ಮೇಲೆ ಸಣ್ಣ ಸಣ್ಣ ಮುಳ್ಳುಗಳು
ಇರುತ್ತವೆ. ಇದರ ಕಾಯಿಗಳಿಂದ ಪಲ್ಕ ಹಾಗೂ ಹುಳಿ ತಯಾರಿಸುತ್ತಾರೆ.
ಮಡಿಹಾಗಲದ ಬೇರು, ಕಾಯಿ ಅಲ್ಲದೇ ಇಡೀ ಬಳ್ಳಿ ಔಷಧಿಯಲ್ಲಿ ಉಪಯುಕ್ತ.
ಔಷಧೀಯ ಗುಣಗಳು:
ಔಡ. ಹಾವು ಕಚ್ಚಿದಾಗ ಮಡಿಹಾಗಲದ ಬೇರನ್ನು ನೀರಿನಲ್ಲಿತೇಯ್ತ್ದು
ಕುಡಿಸಬೇಕು ಹಾಗೂ ಗಾಯಕ್ಕೂ ಲೇಪಿಸಬೇಕು.
೧0 ವಿಷ ಪ್ರಾಶನವಾದಾಗ ವಾಂತಿ ಮಾಡಿಸಲು ಮಡಿಹಾಗಲದ ಬೇರನ್ನು
ಅಕ್ಕಿನೆನಸಿದ ನೀರಿನಲ್ಲಿ ತೇಯ್ದು ಸಕ್ಕರೆ ಸೇರಿಸಿ ಕುಡಿಸಬೇಕು.
೧0 ಚರ್ಮರೋಗದ ತೊಂದರೆಯಿರುವವರು ಮಡಿಹಾಗಲ ಸೊಪ್ಪಿನ ರಸಕ್ಕೆ
ಜೇನು ಬೆರೆಸಿ ಕುಡಿಯಬೇಕು.
೧0 ತಲೆನೋವಿರುವಾಗ ಸೊಪ್ಪನ್ನು ಜಜ್ಜಿ ಲೇಪ ಹಾಕಿಕೊಳ್ಳಬೇಕು.
ರ ವ್ರಣಗಳಾಗಿರುವಾಗ ಮಡಿಹಾಗಲದ ಬೇರನ್ನು ತೇಯ್ದ, ಇಲ್ಲವೇ
ಸೊಪ್ಪಿನ ರಸವನ್ನು ಲೇಪಮಾಡಬಹುದು. ಸ

56. ಹೀರೆಕಾಯಿ

ಸಂಸ್ಕೃತ- ಕೋಶಾತಕಿ ಮರಾಠಿ- ದೋಡಿಕೀ


ಹಿಂದಿ- ತೋರಯೀ ಕನ್ನಡ- ಹೀರೆಕಾಯಿ
ಇದರಲ್ಲಿ ಕಾಯಿ ಮತ್ತು ಸೊಪ್ಪು ಎರಡೂ ಔಷಧಿಯಲ್ಲಿ ಉಪಯುಕ್ತ.
66 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಹಧೀಯ ಗುಣಗಳು:
೧0 ದಾಹವಿರುವಾಗ ಹೀರೆಕಾಯಿಯ ತಿರುಳನ್ನು ತುಪ್ಪದಲ್ಲಿ ಬೇಯಿಸಿ
ಮೊಸರು ಕಲೆಸಿ ತಿನ್ನಬೇಕು.
೧0 ಶರೀರದ ಯಾವುದೇ ಭಾಗದಲ್ಲಿ ಉರಿ ಉಂಟಾಗಿದ್ದರೆ ಹೀರೆಕಾಯಿಯ |
ತಿರುಳನ್ನು ಚೆನ್ನಾಗಿ ಅರೆದು ಲೇಪಹಾಕಬೇಕು.
೧ ಮೂತ್ರಕೋಶದ ತೊಂದರೆಯಿಂದ ಬಳಲುವವರಿಗೆ ಹೀರೆಕಾಯಿಯ |
ಬಲಿತ ಬೀಜಗಳನ್ನು ಅರೆದು ಅದಕ್ಕೆ ಕಲ್ಲುಸಕ್ಕರೆ ಹಾಗೂ ಜೀರಿಗೆ ಪುಡಿ ಬೆರೆಸಿ :
ಸೇವಿಸಲು ಹೇಳಬೇಕು.
[0 ರಕ್ತವಾಂತಿಯಾಗುತ್ತಿದ್ದರೆ ಹೀರೆಕಾಯಿಯ ಬಲಿತ ಬೀಜಗಳಲ್ಲಿನ |
ತಿರುಳನ್ನು ಸಮಪ್ರಮಾಣ ನೀರಿನೊಡನೆ ಸೇವಿಸಲು ಹೇಳಬೇಕು.
[0 ಜ್ವರದ ಬಾಧೆಯಿರುವಾಗ ಹೀರೆಕಾಯಿಯ ಎಲೆಗಳ ಕಷಾಯ ತಯಾರಿಸಿ
ಸಕ್ಕರೆ ಬೆರೆಸಿ ಕೊಡಬೇಕು.

ಸಂಸ್ಕೃತ- ಕಾರವೇಲ್ಲಕ ಮರಾಠಿ - ಕಾರಲೀ


ಹಿಂದಿ - ಕರೇಲಾ ಕನ್ನಡ - ಹಾಗಲಕಾಯಿ
ಹಾಗಲಕಾಯಿಯಿಂದ ಪಲ್ಕ, ಗೊಜ್ಜು ತಯಾರಿಸುತ್ತಾರೆ. ಇದರಲ್ಲಿ ಬಿಳಿ
ಹಾಗೂ ಹಸಿರು ಹಾಗಲ ಎಂದು ಎರಡು ವಿಧ ಇದೆ. ಹಸಿರು ಹಾಗಲ
ಶ್ರೇಷ್ಠವಾದದ್ದು. ಇದರಲ್ಲಿ ಕಾಯಿ ಹಾಗೂ ಸೊಪ್ಪು ಎರಡೂ ಔಷಧಿಯಲ್ಲಿ
ಉಪಯುಕ್ತವಿರುತ್ತವೆ.
ಔಷಧೀಯ ಗುಣಗಳು:
|. ಜಂತುಗಳಾಗಿರುವಾಗ ಹಾಗಲಸೊಪ್ಪಿನ ರಸದಲ್ಲಿ ಇಂಗಿನ ಪುಡಿ ಸೇರಿಸಿ
ಕೊಡಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 67

೧ ಮೂಲವ್ಯಾಧಿಯಿಂದ ಬಳಲುವವರು ಹಾಗಲಕಾಯಿ ರಸದಲ್ಲಿ ಸಕ್ಕರೆ


ಸೇರಿಸಿ ಕುಡಿಯಬೇಕು. ್ಥ
೧ ಚಳಿಜ್ವರವುಂಟಾದಾಗ ಹಾಗಲ ರಸದೊಡನೆ ಹಿಪ್ಪಲಿಪುಡಿ ಮತ್ತು
ಜೇನುತುಪ್ಪ ಸೇರಿಸಿ ಸೇವನೆ ಮಾಡಬೇಕು.
೧ ವ್ರಣ ಹಾಗೂ ಗಾಯಗಳುಂಟಾದಾಗ ಹಾಗಲಸೊಪ್ಪನ್ನು ಅರದು
ಲೇಪಿಸಬೇಕು.

ಅರಿಶಿನವು ಬಹು ಉಪಯುಕ್ತವಾದುದು. ನಮ್ಮ ದೇಶದಲ್ಲಿ


ಅರಿಶಿನವಿಲ್ಲದೇ ಯಾವ ಶುಭಕಾರ್ಯಗಳೂ ಜರುಗುವುದಿಲ್ಲ. ಇದು ಪೂಜಾ
ಸಾಮಗ್ರಿ ಮಾತ್ರವಲ್ಲದೇ ಜನಪ್ರಿಯ ಸಂಬಾರ ಪದಾರ್ಥವೂ ಹೌದು.
ಅರಿಶಿನವಿಲ್ಲದೇ ಯಾವ ಅಡುಗೆಯೂ ಇಲ್ಲ.
ನಾವು ಅಡುಗೆಯಲ್ಲಿ ಬಳಸುವ ಅರಿಶಿನ ಆಹಾರಕ್ಕೆ ರುಚಿ, ಬಣ್ಣ ಮತ್ತು
ವಾಸನೆಗಳನ್ನು ಕೊಡುವುದಲ್ಲದೇ ಉತ್ತಮ ವಿಷನಾಶಕವೂ ಆಗಿದೆ. ನಾವು
ಸೇವಿಸುವ ಅಹಾರ ಪದಾರ್ಥಗಳಲ್ಲಿ ಅನೇಕ ಅಪಾಯಕಾರಿ ರಾಸಾಯನಿಕ
ವಸ್ತುಗಳೂ ಸೇರಿರುತ್ತವೆ. ನಾವು ಬೆಳೆಗಳಿಗೆ ಉಪಯೋಗಿಸುವ ರಾಸಾಯನಿಕ
ಗೊಬ್ಬರಗಳು, ಧಾನ್ಯಗಳನ್ನು ಶೇಖರಿಸಲು ಉಪಯೋಗಿಸುವ ರಾಸಾಯನಿಕಗಳು
ಹಾಗೂ ನೀರನ್ನು ಶುದ್ದಿಮಾಡಲು ಬಳಸುವ ರಾಸಾಯನಿಕಗಳು- ಹೀಗೆ ಅನೇಕ
ರಾಸಾಯನಿಕಗಳಿಂದ ಬೆರೆತ ಆಹಾರವನ್ನು ಸೇವಿಸುವುದರಿಂದ ಶರೀರದ ಮೇಲೆ
ಹಲವಾರು ದುಷ್ಪರಿಣಾಮಗಳು ಉಂಟಾಗುತ್ತವೆ. ಆದರೆ ವಿಷನಾಶಕವಾಗಿರುವ
ಅರಿಶಿನದ ಪುಡಿಯನ್ನು ಆಹಾರದಲ್ಲಿ ಬಳಸುವುದರಿಂದ ಅದು ಈ ರಾಸಾಯನಿಕಗಳ
ಪ್ರಭಾವವನ್ನು ಕಡಿಮೆಮಾಡಿ ಆರೋಗ್ಯವನ್ನು ಕಾಪಾಡುತ್ತದೆ.
ಯುವತಿಯರು ತಮ್ಮ ಸೌಂದರ್ಯವನ್ನು ರಕ್ಷಿಸಿಕೊಳ್ಳಲು`ಏನೆಲ್ಲ ಆಧುನಿಕ
ಸೌಂದರ್ಯವರ್ಧಕ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಅವುಗಳಿಂದ
08 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಪ್ರಯೋಜನಕ್ಕಿಂತ ದುಷ್ಪರಿಣಾಮಗಳೇ ಅಧಿಕ. ಸುಲಭದಲ್ಲಿ ದೊರೆಯುವ


ಅರಿಶಿನವು ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ ಸೌಂದರ್ಯ ಸಾಧನವಾಗಿದೆ.
ಅರಿಶಿನ ಹಾಗೂ ಶ್ರೀಗಂಧವನ್ನು ತೇಯ್ದು ಪ್ರತಿದಿನ ಮುಖಕ್ಕೆ ಹಚ್ಚಿಕೊಂಡರೆ
ಮುಖವು ಕಾಂತಿಯುತವಾಗುತ್ತ ದೆ.ಮೊಡವೆ ಹಾಗೂ ಕಲೆಗಳು ಕೂಡ ಇದರಿಂದ
ನಿವಾರಣೆಯಾಗುತ್ತವೆ.
ಉಪಯೋಗ:
೧ ಶೀತ, ನೆಗಡಿ, ಗಂಟಲು ಕೆರೆತ ಇರುವಾಗ ಒಂದು ಲೋಟ ಬಿಸಿ ಹಾಲಿಗೆ
ಒಂದು ಚಮಚ ಅರಿಶಿನಪುಡಿ ಹಾಗೂ ಬೆಲ್ಲ ಸೇರಿಸಿ ದಿನಕ್ಕೆ ಎರಡು ಬಾರಿ
ಕುಡಿಸಬೇಕು.
೧ ಶರೀರದ ಯಾವುದೇ ಭಾಗಕ್ಕೆ ಪೆಟ್ಟುಬಿದ್ದು ಊದಿಕೊಂಡಿದ್ದರೆ ಅರಿಶಿನ
ಪುಡಿ, ಉಪ್ಪು ಸೇರಿಸಿ ನಿಂಬೆರಸದಲ್ಲಿ ಅರೆದು ಲೇಪ ತಯಾರಿಸಿಕೊಂಡು ಅದನ್ನು
ಬಿಸಿಮಾಡಿ ಪೆಟ್ಟುಬಿದ್ದಿರುವ ಜಾಗಕ್ಕೆ ಹಚ್ಚಿದರೆ ಊತ ಕಡಿಮೆಯಾಗಿ ನೋವೂ
ನಿವಾರಣೆಯಾಗುತ್ತದೆ.
೧ ಅರಿಶಿನಪುಡಿ ಒಂದು ಉತ್ತಮ ಕ್ರಿಮಿನಾಶಕ. ಅಡುಗೆ ಮನೆಯಲ್ಲಿ
ಹರಿತವಾದ ಚಾಕು, ಈಳಿಗೆ ಮಣೆ ತಗುಲಿ ಗಾಯವಾಗಿ ರಕ್ತ ಸುರಿಯುತ್ತಿದ್ದರೆ
ಅರಿಶಿನಪುಡಿ ಮೆತ್ತಿ, ಒತ್ತಿಹಿಡಿದರೆ ರಕ್ತಸ್ರಾವ ನಿಲ್ಲುತ್ತದೆ. ಹಾಗೆಯೇ ಗಾಯವು
ಕೀವಾಗದೇ ಬೇಗ ವಾಸಿಯಾಗುತ್ತದೆ. ಅರಿಶಿನದ ಕಷಾಯದಿಂದ ವ್ರಣಗಳನ್ನು
ತೊಳೆದರೆ ಬೇಗ ಮಾಯುತ್ತವೆ.
0 ಇತ್ತೀಚಿನ ಸಂಶೋಧನೆಗಳಿಂದ ಅರಿಶಿನಕ್ಕೆ ಸ್ತನ ಹಾಗೂ ಗರ್ಭಕೋಶದ
ಅರ್ಬುದ ರೋಗ ಅಂದರೆ ಕ್ಯಾನ್ಸರ್‌ ರೋಗ ನಿಯಂತ್ರಣದಲ್ಲಿ ಬಳಸಲಾಗುತ್ತದೆ
ಎಂದು ತಿಳಿದುಬಂದಿದೆ. ಇದಲ್ಲದೇ ಅರಿಶಿನಕ್ಕೆ ಎದೆಹಾಲನ್ನು ಶುದ್ದಿಮಾಡುವ '
ಗುಣವೂ ಇದೆ. ಆದ್ದರಿಂದ ಇದನ್ನು ಬಾಣಂತಿಯರು ಪ್ರತಿ ದಿನ ಆಹಾರದಲ್ಲಿ
ಹೆಚ್ಚು ಸೇವಿಸುವುದರಿಂದ ಅವರ ಆರೋಗ್ಯ ಹೆಚ್ಚುವುದಲ್ಲದೇ ತಾಯಿ ಹಾಲನ್ನು
ಕುಡಿದ ಮಗುವಿನಲ್ಲಿಯೂ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 09

2 ಕೆಮ್ಮು ಉಂಟಾದಾಗ ಒಂದು ಚಮಚ ಅರಿಶಿನ ಪುಡಿಯನ್ನು


ಜೇನುತುಪ್ಪದಲ್ಲಿ ಬೆರೆಸಿ ಸೇವಿಸಬೇಕು. ನಂತರ ಬಿಸಿ ಹಾಲು ಕುಡಿಯಬೇಕು.
) ಮಧುಮೇಹ ಅಂದರೆ ಸಿಹಿಮೂತ್ರರೋಗಕ್ಕೆ ಅರಿಶಿನ ಒಂದು ಶ್ರೇಷ್ಠ
ಔಷಧಿ. 1 ಚಮಚ ನೆಲ್ಲಿಕಾಯಿ ಪುಡಿ ಹಾಗೂ 2 ಚಮಚ ಅರಿಶಿನ ಪುಡಿ ಸೇರಿಸಿ
ನೀರಿನೊಂದಿಗೆ ದಿನಕ್ಕೆ ಎರಡು ಬಾರಿ ಖಾಲಿ ಹೊಟ್ಟೆಯಲ್ಲಿ ಜೀವಿಸಿ ಪಥ್ಯವನ್ನು
ಮಾಡುವುದರಿಂದ ಸಿಹಿಮೂತ್ರ ರೋಗ ಬಹುಬೇಗ ನಿಯಂತ್ರಣಕ್ಕೆ ಬರುತ್ತದೆ.

ಏಲಕ್ಕಿ ಸಂಬಾರ ವಸ್ತುಗಳ ರಾಣಿ. ದಕ್ಷಿಣ ಭಾರತದ ಸಂಬಾರ ವಸ್ತುಗಳು


ವಿದೇಶೀ ಮಾರುಕಟ್ಟೆಗೆ ಐದು ಸಾವಿರ ವರ್ಷಗಳ ಹಿಂದೆಯೇ ಪ್ರವೇಶಿಸಿದ
ವೆಂಬುದು ಪ್ರಸಿದ್ಧವಾದದ್ದು. ಏಲಕ್ಕಿ ಹಾಗೂ ಸಂಬಾರ ವಸ್ತುಗಳು ಮುತ್ತು
ರತ್ನಗಳಂತೆ ಪರಿಗಣಿಸಲ್ಪಡುತ್ತಾ ಬಂದಿವೆ. ಕೇರಳವನ್ನು ಪೂರ್ವಪ್ರಾಂತ್ಮದ
"ಏಲಕ್ಕಿನಾಡು' ಎಂದು ಕರೆಯಲಾಗುತ್ತಿತ್ತು. ಈಜಿಪ್ತಿನ ಮಹಿಳೆಯರು ತಮ್ಮ
ಸೌಂದರ್ಯ ವರ್ಧನೆಗೆ ಸಂಬಾರ ವಸ್ತುಗಳನ್ನು ಕರಗಿಸಿದ ನೀರಿನಲ್ಲಿ ಸ್ನಾನ
ಮಾಡುತ್ತಾರಂತೆ. ಸಂಬಾರ ವಸ್ತುಗಳ ರಾಣಿಯೆಂದು ಪ್ರಸಿದ್ಧ ಪಡೆದ ಏಲಕ್ಕಿ
ಪ್ರಪಂಚದಲ್ಲಿ ಅತ್ಕಮೂಲ್ಕ ವಸ್ತು. ಕರಿಮೆಣಸು ಸಂಬಾರ ವಸ್ತುಗಳ ರಾಜ.
ಇದಕ್ಕೆ ಪ್ರಥಮ ಸ್ಥಾನ. ಏಲಕ್ಕಿಗೆ ದ್ವಿತೀಯ ಸ್ಥಾನ.
ನಮ್ಮ ನಾಡಿನ ಪುರಾತನ ಗ್ರಂಥಗಳಲ್ಲಿ ಇದರ ಉಲ್ಲೇಖವಿದೆ. ಕಾಳಿದಾಸನ
ಕೃತಿಗಳಲ್ಲಿ (ಕ್ರಿ.ಶ. 4ನೇ ಶತಮಾನ) ಏಲಕ್ಕಿಯ ಸುಗಂಧಯುಕ್ತ ಸುವಾಸನೆಯ
ಬಗ್ಗೆ ಉಲ್ಲೇಖವಿದೆ.
ಜಾನಪದ ಸಾಹಿತ್ಯದಲ್ಲಿ ಸತಿಪತಿಯರ ಪ್ರೇಮದಲ್ಲಿ ಏಲಕ್ಕಿ ತಂಪಿನ
ಉಲ್ಲೇಖವಿದೆ. ಜಾನಪದ ಗರತಿ ಗಂಡನ ಊಟವೇ ತನ್ನ ಊಟವೆಂದು ಭಾವಿಸುವ
ಮನೋಧರ್ಮವುಳ್ಳವಳು. ಗಂಡನಿಲ್ಲದಾಗ ಬಗೆಬಗೆಯ ಭಕ್ಸ್ಮಭೋಜ್ಯವನ್ನು
ಮಾಡಿ ಪ್ರಯೋಜನವೇನು ?
70 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಯಾಲಕ್ಕಿ ಕಾಯ್‌ ಸುಲಿದು


ಯಾವಡಿಗೆ ಮಾಡಲಿ
ಊರಿಗೋಗ್ಕಾರ ರಾಯರು ಬಾರದೆ
ಯಾವಡಿಗೆ ಮಾಡಿ ಫಲವೇನು ?
ತಾಂಬೂಲ ಪ್ರಿಯರಿಗಂತೂ ಏಲಕ್ಕಿ ಅತಿ ಮೆಚ್ಚಿಗೆಯದು. ಎಲಿಟ್ಟೀರಿಯಾ
ಕಾರ್ಡಮಮ್‌ ನೋಟಾನ್‌ ಎಂದು ಹೆಸರು. ಇದು ಸಿಚಾಮಿನಿ ಸಸ್ಕವರ್ಗದ
(ಜಂಜಿ ಬರೇಸಿ) ಶುಂಠಿ ಜಾತಿಗೆ ಸೇರಿದೆ.
ಉಹಯೋಗ:
೧ ರಕ್ತಪ್ರದರ, ರಕ್ತಪಿತ್ತಗಳಲ್ಲಿ ಏಲಕ್ಕಿ ಪುಡಿಯನ್ನು ಸಕ್ಕರೆ ತುಪ್ಪದೊಡನೆ
ಸೇರಿಸಿ ದಿನಕ್ಕೆ ಎರಡು ಬಾರಿ ಕೊಡಬೇಕು. ನಂತರ ಹಾಲು ಕುಡಿಯಬೇಕು.
೧0 ಉರಿಮೂತ್ರವಿದ್ದಾಗ ಏಲಕ್ಕಿಯ ಪುಡಿಯನ್ನು ಮೊಸರಿನ ತಿಳಿಯಲ್ಲಿ
ಸ್ವಲ್ಪ ಸಕ್ಕರೆ ಸೇರಿಸಿ ಸೇವನೆ ಮಾಡಬೇಕು.
8) ವಾಂತಿಯು ಹಚ್ಚಾಗಿ ಆಗುತ್ತಿದ್ದರೆ ಏಲಕ್ಕಿ ಪುಡಿಯನ್ನು
ಜೇನುತುಪ್ಪದಲ್ಲಿ ಕಲೆಸಿ ಕೊಡಬೇಕು.
೧ ಬಿಕ್ಕು ಬರುತ್ತಿದ್ದರೆ ಏಲಕ್ಕಿ ಪುಡಿಯನ್ನು ಜೇನುತುಪ್ಪದಲ್ಲಿ ಸೇರಿಸಿ
ಕೊಡಬೇಕು.

60. ಅಡಿಕೆ

ಭಾರತದಲ್ಲಿ ಎಲ್ಲ ವರ್ಗದ ಜನರೂ ಅಡಿಕೆಯನ್ನು ಉಪಯೋಗಿಸುತ್ತಾರೆ.


ಧಾರ್ಮಿಕ ಮತ್ತು ಸಾಮಾಜಿಕ ಸಮಾರಂಭಗಳಲ್ಲಿ ಇದು ಅನಿವಾರ್ಯವಾದ ಫಲ
ವಸ್ತು. ಅನೇಕ ಪುರಾತನ ಕೃತಿಗಳಲ್ಲೂ ಅಡಿಕೆ ಉಪಯೋಗಗಳ ಬಗ್ಗೆ ಹಲವಾರು
ಉಲ್ಲೇಖಗಳಿವೆ. ಶಿಶುಮಾಯಣನು ಕ್ರಿ.ಪೂ. 1300) ರಚಿಸಿದ "ಅಂಜನ ಚರಿತ್ರೆ'
ಯಲ್ಲಿ ಪುಷ್ಪಗುಚ್ಛ ಮತ್ತು ಕಾಯಿಗಳ ಗೊಂಚಲುಗಳೊಂದಿಗಿರುವ ಅಡಿಕೆ ಮರಗಳ
ಮನೋಹರ ದೃಶ್ಯದ ಉಲ್ಲೇಖವಿದೆ. ಮಹಾಕವಿ ಮಾಘನು (ಕ್ರಿ.ಪೂ.
650)
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 7!

| ರಚಿಸಿರುವ "ಶಿಶುಪಾಲವಧ' ಪದ್ಮದಲ್ಲಿ ದ್ವಾರಕೆಯಿಂದ ಹೊರಟ ಶ್ರೀಕೃಷ್ಣನ


"ಸೈನ್ಯ ಜೌಗು ಪ್ರದೇಶವೊಂದರಲ್ಲಿ ತಂಗಿದ್ದಾಗ ಅಲ್ಲಿದ್ದ ತೆಂಗು ಮತ್ತು ಅಡಿಕೆ
| ತೋಟವನ್ನು ಕಂಡು ಎಳನೀರು ಕುಡಿದು ಹಣ್ಣು ಅಡಿಕೆಯನ್ನು ಜಗಿದರೆಂಬ
! ಉಲ್ಲೇಖವಿದೆ. ಕಾಳಿದಾಸನ ರಘುವಂಶದಲ್ಲೂ ಅಡಿಕೆಯ ಮರಗಳಿಗೆ
ಹಬ್ಬಿಕೊಂಡ ವೀಳೆಯದೆಲೆ ಬಳ್ಳಿಗಳ ವರ್ಣನೆ ಬರುತ್ತದೆ. ವಾಲ್ಮೀಕಿ
ರಾಮಾಯಣದಲ್ಲಿ ಶ್ರೀರಾಮನು ಸೀತೆಗೆ ಭಾರತದ ಪಶ್ಚಿಮ ಕರಾವಳಿಯಲ್ಲಿ
| ಸಮೃದ್ಧವಾಗಿ ಫಲ "ಬಿಟ್ಟಿದ್ದ ಅಡಿಕೆ ಮರಗಳನ್ನು ಕುರಿತು ವರ್ಣಿಸುವ
| ಉಲ್ಲೇಖವಿದೆ. ಅಜಂತಾ ಗುಹೆಗಳಲ್ಲಿ ಅಡಿಕೆಯ ಮರಗಳ ಅತ್ಮಂತ ಕಲಾತ್ಮಕ
ಕೆತ್ತನೆಗಳಿವೆ. ಅಡಿಕೆಯ ಉಗಮಸ್ಥಾನ ಫಿಲಿಪೈನ್ಸ್‌ ಎಂದು ನಂಬಲಾಗಿದೆ.
ತೇವಾಂಶ 13.30, ಪ್ರೊಟೀನ್‌ 4.90, ಕೊಬ್ಬು 4.40, ಒಟ್ಟು ಖನಿಜಾಂಶ
1.00, ನಾರು 11.20, ಶರ್ಕರಪಿಷ್ಟುದಿ 41.20, ಕ್ಯಾಲ್ಸಿಯಂ 0.05, ರಂಜಕ
0.13, ಕಬ್ಬಿಣ 1.50 ಮಿ. ಗ್ರಾಂ ಹಸಿ ಅಡಿಕೆಯಲ್ಲಿ ಈ ಪ್ರಮಾಣದಲ್ಲಿದೆ.
100 ಗ್ರಾಂ ಅಡಿಕೆಯಲ್ಲಿ ಅಡಗಿರುವ ಕ್ಕಾಲೊರಿ ಮೌಲ್ಯ 248. ಅಡಿಕೆಯಲ್ಲಿ
ಟ್ಯಾನಿನ್‌ ಮತ್ತು ಅಲ್ಕಲಾಯ್ಡ್‌ಗಳಿವೆ. ಬಹು ಎಳೆಯ ಅಡಿಕೆಯಲ್ಲಿ ಶೆ. 43.85
ಟಾನಿನ್‌ ಇರುತ್ತದೆ. ಕಾಯಿ ಚೆನ್ನಾಗಿ ಹಣ್ಣಾದ ಮೇಲೆ ಈ ಟ್ಯಾನಿನ್‌ ಶೆ. 17.8
ಪ್ರಮಾಣಕ್ಕೆ ಇಳಿಯುತ್ತದೆ. ಅಲ್ಕಲಾಯ್ಡ್‌ಗಳಲ್ಲಿ ಅತಿ ಮುಖ್ಯವಾದದ್ದು
ಅರೆಕೋಲಿನ್‌. ಅದರ ಪ್ರಮಾಣ ಶೇ. ಒಂದಕ್ಕಿಂತ ಕಡಿಮೆ. ಹಸಿ ಅಡಿಕೆ ಅಗಿದಾಗ
ತಲೆಸುತ್ತುವಿಕೆಗೆ ಈ ದ್ರವ್ಯವೇ ಕಾರಣ.
""ಪೂಗೀಫಲ ಸಮಾಯುಕ್ತಂ ನಾಗವಲ್ಲೀ ದಳ್ಳೆರ್ಯತಂ ಕರ್ಪೂರ ಚೂರ್ಣ
ಸಂಯುಕ್ತಂ ತಾಂಬೂಲಂ ಪ್ರತಿಗೃಹ್ಮತಾಂ'' ಎಂಬ ಮಂತ್ರವನ್ನು ಕೇಳದವರೇ
ಇಲ್ಲ. ದೇವತಾಕಾರ್ಯ, ಮದುವೆ ಮೊದಲಾದ ಮಂಗಲ ಕಾರ್ಯಗಳಲ್ಲಿ ಮೊಟ್ಟ
ಮೊದಲಾಗಿ ದೇವರಿಗೆ ಸಮರ್ಪಿಸುವ ತಾಂಬೂಲದಲ್ಲಿ "ಪೂಗಿಫಲ' ಅಂದರೆ
ಅಡಿಕೆ ಇದ್ದೇ ಇರಬೇಕು. ಎಲೆ ಅಡಿಕೆ ಇರದ ಪೂಜೆ ಇಲ್ಲ.
ಅಡಿಕೆಯನ್ನು ಬಹು ಹಿಂದಿನ ಕಾಲದಿಂದಲೂ ವೀಳೆಯದೆಲೆ ಮತ್ತು ಸುಣ್ಣದ
72 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಜೊತೆ ತಾಂಬೂಲವಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ಕೆಲವೊಮ್ಮೆ ಏಲಕ್ಕಿ-


ಲವಂಗ, ಪಚ್ಚಕರ್ಪೂರ, ಇದರೊಂದಿಗೆ ಸೇರಿಸಿ ಅಗಿಯುವುದುಂಟು.
ತಾಂಬೂಲದಿಂದ ಅನೇಕ ಉಪಯೋಗಗಳಿವೆ. ತಾಂಬೂಲ ಸೇವನೆಯಿಂದ
ಜೊಲ್ಲು ಮತ್ತು ಜಠರ ರಸದ ಉತ್ಪಾದನೆ ಹೆಚ್ಚಿ ಜೀರ್ಣಶಕ್ತಿ ಹೆಚ್ಚುತ್ತದೆ.
ಬಾಯಿಯ ದುರ್ವಾಸನೆ ದೂರವಾಗುತ್ತದೆ. ಅಡಿಕೆಯ ಚೂರುಮಾಡಿ ಏಲಕ್ಕಿ |
ಲವಂಗ, ಜಾಯಿಕಾಯಿ, ಜಾಪತ್ರೆ, ಪಚ್ಚಕರ್ಪೂರ ಮುಂತಾದವುಗಳ ಜತೆ '
ಮಿಶ್ರಮಾಡಿ ಊಟವಾದ ಮೇಲೆ ಬಾಯಿಗೆ ಹಾಕಿಕೊಳ್ಳುವ ಪರಿಪಾಠ ನಮ್ಮಲ್ಲಿ '
ಎಲ್ಲ ಕಡೆಯಲ್ಲೂ ಉಂಟು.
ಉಪಯೋಗಗಳು:
2ಜಂತು ವಿಕಾರಗಳಲ್ಲಿ ಅಡಿಕೆ ಪುಡಿ ಮತ್ತು ಕೊಡಸಿಗದ ಚೂರ್ಣಗಳನ್ನು
ಸಮ ಪ್ರಮಾಣದಿಂದ ಸಕ್ಕರೆಯೊಂದಿಗೆ ಕೊಡಬೇಕು.
೧ ಗಜಕರ್ಣ, ತದ್ದು ಮುಂತಾದವುಗಳಿಗೆ ಅಡಿಕೆಯನ್ನು ನಿಂಬೆಹುಳಿಯಲ್ಲಿ
ತೇದು ಹಚ್ಚಬೇಕು.
೧ ಅಡಿಕೆಯನ್ನು ಕುದಿಸಿ ಉಳಿದ ನೀರಿನಲ್ಲಿ ಅರ್ಧಭಾಗ ಸಕ್ಕರೆ ಹಾಕಿ
ಎಳೆಪಾಕ ಮಾಡಿಟ್ಟುಕೊಳ್ಳಬೇಕು. ಇದನ್ನು ಪ್ರತಿನಿತ್ಯ ಬೆಳಿಗ್ಗೆ ಒಂದು ಚಮಚ
ಸೇವಿಸುವುದರಿಂದ ಶ್ವೆತಪ್ರದರ, ರಕ್ತಪ್ರದರ ಮತ್ತು ರಕ್ತಪಿತ್ತಗಳು
ಕಡಮೆಯಾಗುತ್ತವೆ.
೧0 ಅತಿಸಾರ ಮತ್ತು ಆಮಶಂಕೆ ಭೇದಿಗಳಲ್ಲಿ ಚಿಕಣಿಯ ಅಡಿಕೆಯನ್ನು
ಮಜ್ಜಿಗೆಯಲ್ಲಿ ತೇಯ್ದು ಸೈಂಧವಲವಣ ಸೇರಿಸಿ ಕೊಡಬೇಕು.
ಔ ಅಡಿಕೆಯಲ್ಲಿನ ಕೊಬ್ಬನ್ನು ಸಿಹಿತಿಂಡಿ, ಬಿಸ್ಕತ್‌ ತಯಾರಿಕೆಯಲ್ಲೂ
ಉಪಯೋಗಿಸುತ್ತಾರೆ. ಅಡಿಕೆ ಕೊಬ್ಬನ್ನು ಟೂತ್‌ಪೇಸ್ಟ್‌ ಹಾಗೂ
ಚ್ಕುಯಿಂಗ್‌ಗಮ್‌ ತಯಾರಿಕೆಯಲ್ಲೂ ಬಳಸುತ್ತಾರೆ.
ಅಡಿಕೆಯ ಸಿಪೆಯಲ್ಲಿ ಸುಮಾರು ಶೇ. 57 ಸೆಲ್ಕುಲೋಸ್‌ ಮತ್ತ

ನಾರು ಇರುತ್ತದೆ. ಈ ಸಿಪ್ಪೆಯನ್ನು ಕಾರ್ಡ್‌ಬೋರ್ಡ್‌,
ಪ್ಕಾಡಿಂಗ್‌
ಮೆಟೀರಿಯಲ್‌, ಹಾರ್ಡ್‌ಬೋರ್ಡ್‌, ಫೈಲ್‌ ತಯಾರಿಸಲು ಬಳಸುತ್ತಾರೆ
. ಅಡಿಕೆ
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 73

ಸಿಪ್ಪೆಯಲ್ಲಿ ರಾಸಾಯನಿಕ ಪೋಷಕಾಂಶಗಳೂ ಇರುವುದರಿಂದ ಅದನ್ನು


ಕಾಂಪೋಸ್ಟ್‌ ಗೊಬ್ಬರದ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.
೧ ಅಡಿಕೆ ಸೋಗೆಯನ್ನು ಚಪ್ಪರಕ್ಕೆ, ಮಾಡಿನ ಮೇಲ್ಭಾವಣಿ ಹೊದಿಕೆಗೆ
ಉಪಯೋಗಿಸುವುದುಂಟು. ಬಹು ಹಿಂದಿನ ಕಾಲದಿಂದಲೂ ತೋಟಗಳಲ್ಲಿ ಕೆಲಸ
ಮಾಡುವವರು ಅಡಿಕೆ ಹಾಳೆಗಳನ್ನು ಟೋಪಿಗಳಾಗಿ ಉಪಯೋಗಿಸುವರು.
ಮನೆಯಲ್ಲಿ ಊಟದ ತಟ್ಟೆಗೆ ಬದಲು ಅಡಿಕೆ ಹಾಳೆಯನ್ನೇ ಆಯ್ದುಕೊಳ್ಳುತ್ತಾರೆ.
ಉಪಯೋಗಿಸಿ ಎಸೆಯುವ ಅಡಿಕೆ ಹಾಳೆಯಿಂದ ಕಪ್‌ ಮತ್ತು ಪ್ಲೇಟ್‌ಗಳನ್ನು
ಹಾಗೂ ಟ್ರೇಗಳನ್ನು ತಯಾರಿಸುತ್ತಾರೆ. ಅಡಿಕೆ ಹಾಳೆಯನ್ನು ವಾರ್ನಿಷ್‌, ಫ್ರೆಂಚ್‌
ಪಾಲಿಷ್‌ನಿಂದ ಚೆನ್ನಾಗಿ ಪಾಲಿಷ್‌ಮಾಡಿ ಪೋಟೋ ಮೌಂಟ್‌ ಆಗಿ, ಅಲಂಕಾರದ
. ಹಲಗೆಯಾಗಿಯೂ ಉಪಯೋಗಿಸಬಹುದು. ಮನೆ ಬಳಕೆಗೆ ಚಪ್ಪಲಿಯನ್ನೂ
ತಯಾರಿಸಿಕೊಳ್ಳಬಹುದು.
೧ ಅಡಿಕೆ ಮರದ ಕಾಂಡವನ್ನು ಇಡಿಯ್ಯಾಗಿಯೂ; ಸೀಳಿಯೂ, ಚಪ್ಪರ
ಹಾಕಲು, ಮದುವೆ ಮುಂಜಿ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿಯೂ
ಉಪಯೋಗಿಸುತ್ತಾರೆ. ಅಲ್ಲದೇ ಇದನ್ನು ರೋಲರ್‌, ಪೇಪರ್‌, ಕಟ್ಟರ್‌,
ಬುಕ್‌ಷೆಲ್ಫ್‌, ವೇಸ್ಟ್‌ಪೇಪರ್‌ ಬಾಸ್ಕೆಟ್‌ ಆಗಿಯೂ ಬಳಸುವುದುಂಟು.
ರ ತೆಂಗಿನ ಹೊಂಬಾಳೆಯಂತೆ ಅಡಿಕೆ ಹೊಂಬಾಳೆಗಳಿಗೂ ಧಾರ್ಮಿಕ
ಹಾಗೂ ಸಾಮಾಜಿಕ ಸಂದರ್ಭಗಳಲ್ಲಿ ಅಗ್ರಸ್ಥಾನ. ಕರ್ನಾಟಕದಲ್ಲಿ ಕರಾವಳಿ
ಮತ್ತು ಮಲೆನಾಡಿನ ಕೆಲವು ಸ್ತ್ರೀಯರು ಸಿಂಗಾರಕ್ಕೆ ಹೂವನ್ನು ಮುಡಿದು
ಕೊಳ್ಳುತ್ತಾರೆ.
2. ಹೀಗೆ ಅಡಿಕೆ ಮರದ ಪ್ರತಿಯೊಂದು ಭಾಗವೂ ಒಂದಲ್ಲ ಒಂದು
ವಿಧದಲ್ಲಿ ಉಪಯುಕ್ತವೆನಿಸುತ್ತದೆ. ಆದ್ದರಿಂದ ತೆಂಗಿನಮರದಂತೆ ಅಡಿಕೆಯ
ಮರವನ್ನು “ಕಲ್ಪತರು' ಎಂದು ಕರೆಯುವುದರಲ್ಲಿ ಅತಿಶಯೋಕ್ತಿ ಏನಿಲ್ಲ.
74 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಕನ್ನಡ - ಉದ್ದು ಸಂಸ್ಕೃತ- ಮಾಷ:


ಮರಾಠಿ- ಉಡೀದ ಹಿಂದಿ- ಉಡದ
ಇದು ಎಲ್ಲೆಡೆಯೂ ದೊರೆಯುತ್ತದೆ. ಕಾಡಿನಲ್ಲಿ ತನ್ನಿಂದ ತಾನೇ ಬೆಳೆದುದಕ್ಕೆ
ಅಡವಿ ಉದ್ದು ಎನ್ನುತ್ತಾರೆ. ಔಷಧಿಯಲ್ಲಿ ಉಪಯೋಗಿಸಲು ಇದೇ
ಶ್ರೇಷ್ಠವಾದುದ್ದಾಗಿರುತ್ತದೆ. ಇದು ಸಿಗದಿದ್ದಲ್ಲಿ ಮಾತ್ರ ಹೊಲಗಳಲ್ಲಿ ಬೆಳೆದ
ಉದ್ದನ್ನು ಉಪಯೋಗಿಸಬೇಕು. ಇದರಲ್ಲಿ ಪಂಚಾಂಗಗಳೂ ಉಪಯುಕ್ತ
ವಾಗಿರುತ್ತವಾದರೂ ವಿಶೇಷವಾಗಿ ಕಾಳು ಬಹು ಉಪಯುಕ್ತ.
ಔಷಧೀಯ ಉಪಯೋಗ:
ದ ಅತಿಸಾರದಿಂದ ಬಳಲುವವರಿಗೆ ಉದ್ದಿನ ಬಳ್ಳಿಯ ಕಷಾಯ ತಯಾರಿಸಿ
ಕೊಡಬೇಕು.
೧ , ಜ್ವರವಿರುವಾಗ ಕಾಡು ಉದ್ದಿನ ಕಷಾಯ ತಯಾರಿಸಿ ಅದಕ್ಕೆ ಹಿಪ್ಪಲಿ
ಪುಡಿ ಮತ್ತು ಜೇನುತುಪ್ಪ ಬೆರೆಸಿ ಕೊಡಬೇಕು.
೧ ವಿಪರೀತ ದಾಹವಾಗಿರುವಾಗ ಹಾಗೂ ಹೊಟ್ಟೆಯಲ್ಲಿ ಉರಿ ಇರುವಾಗ
ಉದ್ದಿನ ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು ಸ್ವಲ್ಪ ಸಮಯದ ನಂತರ ಶೋಧಿಸಿ
ಅದಕ್ಕೆ ಸಕ್ಕರೆ ಬೆರೆಸಿ ತೆಗೆದುಕೊಳ್ಳಬೇಕು...
ಡಿ. ಆಮದಿಂದ ಕೂಡಿದ ಭೇದಿಯಾಗುತ್ತಿದ್ದರೆ ಉದ್ದಿನ ಹಿಟ್ಟನ್ನು
ಮೊಸರಿನಲ್ಲಿ ಕಲೆಸಿ ಒಂದು ಚಿಟಕಿ ಮೆಣಸಿನಪುಡಿ ಮತು _ ಸೈಂಧವ ಲವಣ ಹಾಕಿ
ಅನ್ನಕ್ಕೆ ಕಲೆಸಿಕೊಂಡು ಊಟ ಮಾಡಬೇಕು.
೧ ಕುರುಗಳಾಗಿದ್ದರೆ ಉದ್ದನ್ನು ನೀರಿನಲ್ಲಿ ಅರೆದು ಸುತ್ತಲೂ ಲೇಪ
ಹಾಕುವುದರಿಂದ ಬೇಗ ಒಡೆಯುತ್ತವೆ.
0 ಉದ್ದಿನ ಬೇಳೆಯನ್ನು ಕುದಿಸಿ ಪಾಯಸ ತಯಾರಿಸಿಕೊಂಡು
ಸೇವಿಸುವುದರಿಂದ ವೀರ್ಯ ವೃದ್ದಿಯಾಗುತ್ತದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 75

ಸಂಸ್ಕೃತ- ತಿಲ | ಮರಾಠಿ- ತೀಳ


ಹಿಂದಿ - ತಿಲ ಕನ್ನಡ- ಎಳ್ಳು
ಇದನ್ನು ದೇಶದ ಎಲ್ಲೆಡೆ ಬೆಳೆಯಲಾಗುತ್ತದೆ. ಇದರ ಬೀಜ, ಎಣ್ಣೆ ಹಾಗೂ
ದಂಟು ಎಲ್ಲವೂ ಉಪಯುಕ್ತವಾಗಿರುತ್ತವೆ.
ಔಷಧೀಯ ಗುಣಗಳು:
೧ ಬಾಣಂತಿಯರಲ್ಲಿ ಎದೆ ಹಾಲಿನ ಉತ್ಪತ್ತಿಗೆ ಬಿಳಿಯ ಎಳ್ಳನ್ನು ಹಾಲಿನಲ್ಲಿ
ಅರೆದು ಸಕ್ಕರೆ ಬೆರೆಸಿ ಕುಡಿಸಬೇಕು.
೧ ಕೂದಲು ಸೊಂಪಾಗಿ ಬೆಳೆಯಲು ಎಳ್ಳೆಣ್ಣೆಯನ್ನು ಪ್ರತಿದಿನ
ನಿಯಮಿತವಾಗಿ ಬಳಸಬೇಕು.
ದ ಭೃಂಗರಾಜ ಸೊಪ್ಪಿನ ರಸ ಹಾಗೂ ಒಂದೆಲಗದ ರಸ ಒಂದೊಂದು
ಭಾಗ ತೆಗೆದುಕೊಂಡು ಸಮಭಾಗ ಎಳ್ಳೆಣ್ಣೆ ಸೇರಿಸಿ ಸಣ್ಣಗಿನ ಉರಿಯಲ್ಲಿ ಕಾಯಿಸಿ
ನೀರಿನಂಶ ಹೋದ ಮೇಲೆ ಉಳಿದ ಎಣ್ಣೆಯನ್ನು ಶೋಧಿಸಿ ತೆಗೆದಿಟ್ಟುಕೊಂಡು
ಪ್ರತಿದಿನ ತಲೆಗೆ ಉಪಯೋಗಿಸಬೇಕು. |
೧ ಕೀಲು ನೋವಿನಿಂದ ಬಳಲುವವರು ಎಳ್ಳೆಣ್ಣೆಯನ್ನು ನೋವಿರುವ
ಜಾಗಕ್ಕೆ ಹಚ್ಚಿ ನೀವಿಕೊಳ್ಳಬೇಕು.
5೦ ಮೂತ್ರಕೋಶದಲ್ಲಿ ಕಲ್ಲು ಇರುವಾಗ ಎಳ್ಳಿನ ದಂಟಿನ ಬೂದಿಯನ್ನು
| ಅಕ್ಕಿತೊಳೆದ ನೀರಿನೊಡನೆ ಕೊಡಬೇಕು.
೧ ಅರುಚಿಯಿರುವಾಗ ಎಳ್ಳು ಬೆಲ್ಲ ಕುಟ್ಟಿ ಉಂಡೆ ತಯಾರಿಸಿಕೊಂಡು
ತಿನ್ನಬೇಕು.
76 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಸಂಸ್ಕೃತ- ಕುಂಕುಮಂ, ಕೇಶರಂ ಮರಾಠಿ - ಕೇಶರ್‌


ಹಿಂದಿ - ಕೇಶರ್‌ ಕನ್ನಡ - ಕೇಸರಿ
ಕೇಸರಿ ಗಿಡಗಳನ್ನು ಕಾಶ್ಮೀರ, ಇರಾಣ, ಸ್ಪೇನ್‌ ದೇಶಗಳಲ್ಲಿ ಬೆಳೆಯುತ್ತಾರೆ.
ಹೂಗಳಿಗೆ 3 ದಳೆಗಳಿರುತ್ತವೆ" ಒಳಗಡೆ ಇರುವ ತಂತುಗಳಿಗೆ ಕೇಶರವೆನ್ನುತ್ತಾರೆ.
ಕೇಶರದ ಬಣ್ಣವು ನಸುಗೆಂಪು ಇದ್ದು ತಂತುಗಳು ಉದ್ದುದ್ದವಾಗಿ ಸುಗಂಧವಾಗಿದ್ದ
ಕೇಶರವು ಉತ್ತಮವೆಂದು ತಿಳಿಯಬೇಕು.
ಷಧೀಯ ಗುಣಗಳು:
2 ಅರ್ಧ ತಲೆನೋವು ಇರುವವರು ಕೇಸರಿಯನ್ನು ತುಪ್ಪದಲ್ಲಿ ಅರೆದು
ನಸ್ಕ ಮಾಡಬೇಕು.
೧ ಜಂತುಗಳಾಗಿರುವಾಗ ಹಾಲಿನೊಡನೆ ಕೇಸರಿಯನ್ನು ಅರೆದು ಅದರಲ್ಲಿ
ಸ್ವಲ್ಪ ಸಕ್ಕರೆ ಮತ್ತು ಎರಡು ಗುಂಜಿ ಕೇಸರವನ್ನು ಬೆರೆಸಿ ಸೇವಿಸಬೇಕು.
೧ ಹಾಲನ್ನು ಸಣ್ಣಗಿನ ಉರಿಯಲ್ಲಿ ಕೆನೆ ಬರುವಂತೆ ಚೆನ್ನಾಗಿ ಕಾಯಿಸಿ
ಅದಕ್ಕೆ ಸಕ್ಕರೆ ಬೆರೆಸಿ ಒಂದು ಗುಂಜಿ ಕೇಸರಿ ಬೆರೆಸಿ ಕುಡಿದರೆ ಕಾಮೋತ್ತೇಜನ
ವಾಗುತ್ತದೆಯಲ್ಲವೇ ವೀರ್ಯವೃದ್ದಿಯೂ ಆಗುತ್ತದೆ.
೧ ಜೇನುತುಪ್ಪದಲ್ಲಿ ಕೇಸರಿ ಮಿಶ್ರಮಾಡಿ ಸೇವನೆ ಮಾಡುವುದರಿಂದ
ರಕ್ತವೃದ್ಧಿಯಾಗುತ್ತದೆ.
ಡಿ. ಚರ್ಮದ ಬಣ್ಣ ತಿಳಿಯಾಗಬೇಕೆನ್ನುವವರು ಕೇಸರಿಯನ್ನು ನಿಂಬೆ
ರಸದಲ್ಲಿ ಅರೆದು ಲೇಪಿಸಿಕೊಳಸಬೇಕು. (ಸುಡುವುದು ಮುಂತಾದ ಕಾರಣಗಳಿಂದ
ಚರ್ಮದ ಬಣ್ಣ ಕಪ್ಪಾಗಿದ್ದಲ್ಲಿ).
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 77

64. ಗಸಗಸ

ಸಂಸ್ಕೃತ- ಖಸಬೀಜಮ್‌ ಮರಾಠಿ- ಖಸಖಸ


ಹಿಂದಿ- ಖಸಖಸ ಕನ್ನಡ- ಗಸಗಸೆ, ಖಸಖಸ
ಇದನ್ನು ಹೊಲಗಳಲ್ಲಿ ಬೆಳೆಯುತ್ತಾರೆ. ಪೇಟೆಯಲ್ಲಿ ಗಸಗಸೆ ಬೀಜಗಳು:
ದೊರೆಯುತ್ತವೆ. ಇದರ ಮೇಲಿನ ಸಿಪ್ಪೆಗೆ ಪೋಸ್ತಕಾಯಿ ಎನ್ನುತ್ತಾರೆ. ಇದೂ
ಸಹ ಅಂಗಡಿಯಲ್ಲಿ ಸಿಗುತ್ತದೆ. ಹೊಲದಲ್ಲಿ ಕಾಯಿಗಳಾದಾಗ ಕಾಯಿಯ ಮೇಲಿನ
ಭಾಗವನ್ನು ಕೊಯ್ದುತೆಗೆದು ಬರುವ ಅಂಟನ್ನು ಶೇಖರಿಸುತ್ತಾರೆ. ಇದು ಲಿಫು
ಎಂದು ಮಾರಲ್ಪಡುತ್ತದೆ. ಇದು ಬಹಳ ಮಾದಕ ಪದಾರ್ಥವಾಗಿದೆ.
ಔಷಧೀಯ ಗುಣಗಳು:
೧ ನಿದ್ರಾಹೀನತೆಯಿಂದ ಬಳಲುವವರು ಗಸಗಸೆಯನ್ನು ಹಾಲಿನಲ್ಲಿ ಚೆನ್ನಾಗಿ
ಅರೆದು ಸಕ್ಕರೆ ಕೂಡಿಸಿ ಸೇವನೆ ಮಾಡಬೇಕು.
ಅತಿಸಾರ ಹಾಗೂ ಆಮದಿಂದ ಕೂಡಿ ಭೇದಿಯಾಗುತ್ತಿರುವಾಗ
ಗಸಗಸೆಯನ್ನು ಮಜ್ಜಿಗೆಯೊಡನೆ ಅರೆದು ಸೈಂಧವ ಲವಣವನ್ನು ಬೆರೆಸಿ
ಕುಡಿಯಬೇಕು.
2 ನಿಶ್ಶಕ್ತಿ ಉಂಟಾದಾಗ ನೀರಿನಲ್ಲಿ ಗಸಗಸೆ ನೆನಸಿ ಸ್ವಲ್ಪ ಹೊತ್ತಿನ ನಂತರ
ಅದನ್ನು ರುಬ್ಬಿ ಶೋಧಿಸಿ ಸಕ್ಕರೆ ಬೆರೆಸಿ ಕುಡಿಯಬೇಕು.
2 ಗಾಯಗಳಾಗಿದ್ದರೆ ಪೋಸ್ತಕಾಯಿಯ ಕಷಾಯ ತಯಾರಿಸಿ ಗಾಯ
ತೊಳೆಯಲು ಉಪಯೋಗಿಸಬೇಕು.
2 ಗಸಗಸೆಯನ್ನು ಸ್ವಲ್ಪ ಬಿಸಿಮಾಡಿ ಸಣ್ಣಗೆ ಕುಟ್ಟಿ ಅದಕ್ಕೆ ಸಮಪ್ರಮಾಣ
ಸಕ್ಕರೆ, ತುಪ್ಪ ಬೆರೆಸಿ ಪ್ರತಿದಿನ ಸೇವನೆ ಮಾಡುವುದರಿಂದ ವೀರ್ಯವೃದ್ದಿಯಾಗುತ್ತದೆ.
78 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

65. ಕಾಫಿ ಗಿಡ

ಇದನ್ನು ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದರ ಕಾಯಿಗಳು


ಹಸಿಯಾಗಿದ್ದು ಹಣ್ಣುಗಳು ಹಳದಿಯಾಗಿರುತ್ತದೆ. ಇದರ ಬೀಜಗಳಿಗೆ
ಕಾಫಿಬೀಜಗಳೆನ್ನುತ್ತಾರೆ. ಇವುಗಳನ್ನು
ನ್ನುಹುರಿದು ಕುಟ್ಟಿ ಪುಡಿಮಾಡುತ್ತಾರೆ. ಇದರಲ್ಲಿ
ಬೀಜ ಮತ್ತು ಎಲೆಉಪಯುಕ್ತ ವಾಗಿರುತ್ತವೆ. ಕಾಫಿಯ ರುಚಿ ಸವಿಯದವರಾರು?
ಔಷಧೀಯ ಗುಣಗಳು:
೧0 ಜ್ವರವಿರುವಾಗ ಕಾಫಿ ಎಲೆಗಳ ಕಷಾಯ ತಯಾರಿಸಿ ಜೇನುತುಪ್ಪ ಬೆರೆಸಿ
ಸೇವಿಸೆಬೇಕು.
DO ಮೂತ್ರ ದ ತಡೆ ಉಂಟಾಗಿದ್ದರೆ ಹಸಿಯ ಕಾಫಿ ಬೀಜಗಳ ಚೂರ್ಣವನ್ನು
ಅಕ್ಕಿತೊಳೆದ ನೀರಿನಲ್ಲಿ ಹಾಕಿ ಸಕ್ಕರೆ ಬೆರೆಸಿ ಸೇವನೆ ಮಾಡಬೇಕು.
೧ ಆಲಸ್ಕತೆ, ಸುಸ್ತು ಉಂಟಾಗಿರುವಾಗ ಕಾಫಿಪುಡಿಯನ್ನು ಬಿಸಿನೀರಿನಲ್ಲಿ '
ಹಾಕಿ ಶೋಧಿಸಿ ಹಾಲು ಸಕ್ಕರೆ ಬೆರೆಸಿ ಕುಡಿಯಬೇಕು.
ಔ ಕಫ ದೋಷದಿಂದ ಉಂಟಾದ ಜ್ವರವಿರುವಾಗ ಬಿಸಿಯಾದ ಕಾಫಿ
ಕುಡಿಯಬೇಕು.

ಸಂಸ್ಕೃತ- ಸರ್ಷಪ ಮರಾಠಿ- ಮೊಹರೀ


ಹಿಂದಿ - ಸರಸೊ ” ಕನ್ನಡ- ಸಾಸುವೆ
ಇದರ ಪಂಚಾಂಗಗಳೂ ಔಷಧಿಯಲ್ಲಿ ಉಪಯುಕ್ತ. ವಿಶೇಷವಾಗಿ ಬೀಜ
ಹಾಗೂ ಎಣ್ಣೆ ಉಪಯುಕ್ತ. ಇದರಲ್ಲಿ ಬಿಳಿಯ ಹಾಗೂ ಕರಿಯ ಎರಡು ವಿಧಗಳು
ಇವೆ.
ಔಷಧೀಯ ಗುಣಗಳು:
೧ ಕೆಮ್ಮು ಹಾಗೂ ಉಬ್ಬಸಗಳಿರುವಾಗ ಸಾಸುವೆ ಎಣೆ_ಯನ್ನು
ಬೆಲ್ಲದಲ್ಲಿ
ಬೆರೆಸಿ ಸೇವಿಸಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 79

[]) ಜಂತುಗಳಾಗಿರುವಾಗ ಸಾಸುವೆ ಮತ್ತು ವಿಡಂಗದ ಚೂರ್ಣವನ್ನು


ಸಮಪ್ರಮಾಣದಲ್ಲಿ ಜೇನುತುಪ್ಪದೊಂದಿಗೆ ಸೇವಿಸಬೇಕು.
) ಕೀಲು ನೋವಿರುವಾಗ ಸಾಸುವೆ ಎಣ್ಣೆಯೊಡನೆ ಎಳ್ಳೆಣ್ಣೆ ಬೆರೆಸಿ ಸ್ವಲ್ಪ
ಬಿಸಿಮಾಡಿ ನೋವಿರುವ ಜಾಗಕ್ಕೆ ಉಜ್ಜಿಕೊಳ್ಳಬೇಕು.

ಸಂಸ್ಕ್ರತ- ಮುದ್ದ ಮರಾಠಿ- ಮೂಗ


ಹಿಂದಿ- ಮೂಂಗ ಕನ್ನಡ- ಹೆಸರು
ದೇಶದೆಲ್ಲೆಡೆ ಇದನ್ನು ಬೆಳೆಯಲಾಗುತ್ತದೆ. ಕಾಡಿನಲ್ಲಿ ತನ್ನಿಂದ ತಾನೇ
ಬೆಳೆಯುವ ಹೆಸರು ಔಷಧಿಯಲ್ಲಿ ಬಹು ಉಪಯುಕ್ತ. ಅದು ಸಿಗದಿದ್ದ ಪಕ್ಷದಲ್ಲಿ
ಹೊಲದಲ್ಲಿ ಬೆಳೆಯುವ ಹೆಸರನ್ನೇ ಉಪಯೋಗಿಸಬಹುದು. ಇದರಲ್ಲಿ
ಪಂಚಾಂಗಗಳೂ ಉಪಯುಕ್ತ. ವಿಶೇಷವಾಗಿ ಕಾಳು ಉಪಯುಕ್ತ.
ಔಷಧೀಯ ಗುಣಗಳು:
[0 ದಾಹವಿರುವಾಗ ಹೆಸರುಕಾಳಪಿನೆನಸಿ ರುಬ್ಬಿ ಶೋಧಿಸಿಕೊಂಡು ಅದಕ್ಕೆ
ಸಕ್ಕರೆ ಬೆರೆಸಿ ಕುಡಿಯಬೇಕು.
[0 ಜ್ವರವಿರುವಾಗ ಕಾಡು ಹೆಸರುಬಳ್ಳಿಯ ಕಷಾಯ ತಯಾರಿಸಿ ಅದಕ್ಕೆ
ಜೇನುತುಪ್ಪ ಬೆರೆಸಿ ಕುಡಿಯಬೇಕು.
2 ರಕ್ತ ವಾಂತಿಯಾಗುತ್ತಿದ್ದರೆ ಹೆಸರನ್ನು ನೆನಸಿ ಹಾಲಿನೊಡನೆ ರುಬ್ಬಿ
ಶೋಧಿಸಿಕೊಂಡು ಅದರಲ್ಲಿ ಕಲ್ಲುಸಕ್ಕರೆ ಪುಡಿ ಮತ್ತು ಜೀರಿಗೆ ಪುಡಿ ಬೆರೆಸಿ
ಸೇವಿಸಬೇಕು.
ರ ಪಿತ್ತಾಧಿಕ್ಕವುಂಟಾದಾಗ ಹೆಸರುಬೇಳೆ ಪಾಯಸ ತಯಾರಿಸಿ ಅದಕ್ಕೆ ಸಕ್ಕರೆ
ಹಾಕಿ ಸೇವನೆ ಮಾಡಬೇಕು.
೧ ಅಶಕ್ತತೆ ಉಂಟಾದಾಗ ಹೆಸರುಕಾಳು ಹುರಿದು ಹಿಟ್ಟು ತಯಾರಿಸಿಕೊಂಡು
ಅದಕ್ಕೆ ಸಕ್ಕರೆ ಹಾಗೂ ತುಪ್ಪ ಬೆರೆಸಿ ಸೇವಿಸಿ ನಂತರ ಹಾಲು ಕುಡಿಯಬೇಕು.
80 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

68. ಬಡೇಸೋಪು

ಸಂಸ್ಕೃತ- ಶತಪುಷ್ಪ ಮರಾಠಿ- ಬಡೀಶೇಪ


ಹಿಂದಿ - ಬಡೇಶೇಪ ಕನ್ನಡ- ಬಡೇಸೋಪು
, ಇದನ್ನು' ಎಲ್ಲೆಡೆ ಬೆಳೆಯಲಾಗುತ್ತದೆ. ಇದರ ಬೀಜ ಅಂಗಡಿಯಲ್ಲಿ
ದೊರೆಯುತ್ತದೆ. ಬೀಜ ಹಾಗೂ ಬೀಜದಿಂದ ತೆಗೆದ ಅರ್ಕ ಔಷಧಿಯಲ್ಲಿ
ಉಪಯುಕ್ತ. '

ಔಷಧೀಯ ಗುಣಗಳು:
'
೧ ಅರುಚಿಯಿಂದ ಬಳಲುವವರು ರಾತ್ರಿ ಮಲಗುವಾಗ ಬಡೇಸೋಪಿನ
'
ಪುಡಿಯನ್ನು ಬಿಸಿನೀರಿನೊಡನೆ ತೆಗೆದುಕೊಳ್ಳಬೇಕು. |
|
2 ಮೂತ್ರಕೋಶದ ತೊಂದರೆಗಳಿರುವಾಗ ಬಡೇಸೋಪಿನ ಕಷಾಯ
ತಯಾರಿಸಿ ಅದು ತಣ್ಣಗಾದ ಮೇಲೆ ಸಕ್ಕರೆ ಬೆರೆಸಿ ಕುಡಿಯಬೇಕು.
2 ಚಿಕ್ಕಮಕ್ಕಳಲ್ಲಿ ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದರೆ
ಬಡೇಸೋಪಿನ ಕಷಾಯ ತಯಾರಿಸಿ ಹಾಲು ಸಕ್ಕರೆ ಬೆರೆಸಿ ಕುಡಿಸಬೇಕು.
೧0 ಜ್ವರದಿಂದ ಬಳಲುವಾಗ ಬಡೇಸೋಪಿನ ಚೂರ್ಣ ಮತ್ತು ಹಿಪ್ಪಲಿ
ಚೂರ್ಣಗಳನ್ನು ಸಮಪ್ರಮಾಣದಲ್ಲಿ ಜೇನುತುಪ್ಪದೊಡನೆ ಸೇವಿಸಬೇಕು.
೧ ಕಣ್ಣು ನೋವು ಬಂದಾಗ ಬಡೇಸೋಪಿನ ಕಷಾಯ ತಯಾರಿಸಿ ಶುದ್ದ
ವಾದ ಬಟ್ಟೆಯನ್ನು ಕಷಾಯದಲ್ಲಿ ಅದ್ದಿ ಕಣ್ಣಿನ ಮೇಲ್ಭಾಗಕ್ಕೆ ಶಾಖ ಕೊಡಬೇಕು.

69. ಇಂಗು

ಇಂಗನ್ನು ಸಂಸ್ಕೃತದಲ್ಲಿ "ಸೂಪಧೂಪನ' ಎಂದು ಕರೆಯುತ್ತಾರೆ. ಸೂಪ


ಎಂದರೆ ಅಡುಗೆಗೆ ಸುವಾಸನೆಯನ್ನು ಕೊಡುವ ಈ ಇಂಗು ಒಂದು ಜನಪ್ರಿಯ
ಸಂಬಾರಪದಾರ್ಥ. ಸಾರು, ಗೊಜ್ಜು, ಉಪ್ಪಿನಕಾಯಿ, ಹಪ್ಪಳ, ಚಟ್ನಿ ಮುಂತಾ

ವೃಂಜನಗಳಲ್ಲಿ ರುಚಿ ಮತ್ತು ವಾಸನೆಯನ್ನು ಹೆಚ್ಚಿಸಲು ಬಳಸುವ ಇಂಗು
| ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 81

ಉತ್ತೇಜಕವಾಗಿದ್ದು, ಒಳ್ಳೆಯ ಪಚನಕಾರಿಯೂ ಆಗಿದೆ. ಹೊಟ್ಟೆಯಲ್ಲಿ


ಉಂಟಾಗುವ ಅನೇಕ ರೀತಿಯ ವಾಯುವಿನ ತೊಂದರೆಗಳನ್ನು ನಿವಾರಿಸುವ
ಶಕ್ತಿಯನ್ನು ಇದು ಹೊಂದಿದೆ.
ಇಂಗು ಮರದಲ್ಲಿ ಉತ್ಪತ್ತಿಯಾಗುವ ಒಂದು ಅಂಟು (ಗೋಂದು).
ಆಫ್ಸಾನಿಸ್ತಾನ್‌, ಇರಾನ್‌, ಟರ್ಕಿ ದೇಶಗಳಲ್ಲಿ ವಿಶೇಷವಾಗಿ ಬೆಳೆಯುವ ಇದು
ನಮ್ಮ ಭಾರತದ ಪಂಜಾಬ್‌, ರಾಜಸ್ಥಾನಗಳಲ್ಲಿ ಅಲ್ಪ ಪ್ರಮಾಣದಲ್ಲಿ
ಬೆಳೆಯುತ್ತದೆ.
ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಇದಕ್ಕೆ ಅಗೂಢಗಂಧ, ಜಂತುಘ್ನ,
ಭೂತನಾಶಕ ಮುಂತಾದ ಹೆಸರುಗಳುಂಟು. ಇಂಗು ತಿಕ್ತ (ಕಹಿ) ರಸವುಳ್ಳದ್ದಾಗಿದ್ದು
ಉಷ್ಣ, ತೀಕ್ಷ್ಣ ಹಾಗೂ ಉಗ್ರ ಗಂಧವನ್ನು ಹೊಂದಿದೆ. ಇದು ಶ್ರೇಷ್ಠ ಜಂತುಘ್ನ.
ಅಂದರೆ ಜಂತುಹುಳುವನ್ನು ನಾಶಮಾಡುವ ಗುಣವನ್ನು ಹೊಂದಿದೆ.
ಶುದ್ದ ಇಂಗಿನ ಲಕ್ಷಣ: ಮಾರುಕಟ್ಟೆಯಲ್ಲಿ ಸಿಗುವ ಇಂಗು ಅನೇಕ ವೇಳೆ
ಕೃತಕ ಇಲ್ಲವೇ ಕಲಬೆರೆಕೆಯಿಂದ ಕೂಡಿರುತ್ತದೆ. ಆದುದರಿಂದ ಅದನ್ನು ಪರೀಕ್ಷಿಸಿ
ಉಪಯೋಗ ಮಾಡಬೇಕು.
ಒಂದು ಗಾಜಿನ ಲೋಟದಲ್ಲಿ ನೀರನ್ನು ತೆಗೆದುಕೊಂಡುಸ್ವಲ್ಪ ಇಂಗನ್ನು
ಅದರಲ್ಲಿ ಹಾಕಿದರೆ ಅದು ಕರಗಿ ಬಿಳಿಧಾರೆಯಂತೆ ಕಾಣುತ್ತದೆ. ಅದು ಘರ್ನಾದಾಗಿ
ಕರಗಿದ ಮೇಲೆ ನೀರು ಹಾಲಿನಂತೆ ಬೆಳ್ಳಗಿನ ದ್ರಾವಣವಾಗುತ್ತದೆ. ಪಾತ್ರೆಯ
ಅಡಿಯಲ್ಲಿರುವ ಕಿಟ್ಟದಂಥ ಅಂಶವೂ ಉಳಿಯುವುದಿಲ್ಲ. ಅಂತಹ ಇಂಗು
ಶುದ್ಧವಾಗಿರುತ್ತದೆ.
ಶುದ್ದ ಇಂಗನ್ನು ಬೆಂಕಿಯ ಕೆಂಡದ ಮೇಲೆ ಹಾಕಿದರೆ ಅದು ಹತ್ತಿಕೊಂಡು
ಕರ್ಪೂರದಂತೆ ಪೂರ್ತಿಯಾಗಿ ಉರಿದುಹೋಗುತ್ತದೆ. ಬೆಳ್ಳಗಿನ ಧೂಮ ಮತ್ತು
"ವಾಸನೆ ಬರುತ್ತ ದೆ.
ಇಂಗಿನ ಸಂಸ್ಕಾರ: ಅಡಿಗೆ ಮತ್ತು ಔಷಧಿಗಳನ್ನು ಉಪಯೋಗಿಸುವ
ಮೊದಲು ಇಂಗನ್ನು ಸಂಸ್ಕರಿಸಿ ಅನಂತರ ಉಪಯೋಗಿಸಬೇಕು. ಇಂಗಿಗೆ ಹಸುವಿನ
ತುಪ್ಪವನ್ನು ಹಾಕಿ Ape ಮೇಲಿಟ್ಟು ಹುರಿಯಬೇಕು. ತುಪ್ಪವು ಹಿಂಗಿದ ಮೇಲೆ
' ಇದನ್ನು ತೆಗೆದು ಉಪಯೋಗಿಸಬೇಕು.
ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

82 ಔಷಧೀಯ

ಹಲವು ಸಾಮಾನ್ಯ ರೋಗಗಳಲ್ಲಿ ಇಂಗಿನ ಉಪಯೋಗ:


ಉದರ ಶೂಲದಲ್ಲಿ : ಕೆಲವು ಹೆಣ್ಣುಮಕ್ಕಳಲ್ಲಿ ಮುಟ್ಟಾಗುವಾಗ
ಅರ್ತವಸ್ರಾವ ಕಡಿಮೆ ಇದ್ದು ವಿಪರೀತ ಹೊಟ್ಟೆನೋವು ಉಂಟಾಗುತ್ತದೆ. ಇಂಥ
ಸಮಯದಲ್ಲಿ ಒಂದು ಹೆಸರುಕಾಳಿನಷ್ಟು ಪ್ರಮಾಣದ ಶುದ್ದ ಇಂಗನ್ನು ಬಾಳೆಹಣ್ಣಿನ
ಮಧ್ಯ ಇಟ್ಟು ನುಂಗಿಸಿದರೆ ಸ್ವಲ್ಪ ಸಮಯದಲ್ಲೆ ಹೊಟ್ಟೆನೋವು ಕಡಿಮೆಯಾಗಿ
ಆರಾಮವೆನಿಸುತ್ತದೆ ಅಲ್ಲದೆ ಮಾಸಿಕ ಸ್ರಾವ ಸರಾಗವಾಗುತ್ತದೆ.
ವಾಯುವಿನಿಂದ ಹೂಟ್ಟೆ ಉಬ್ಬರವಿದ್ದರೆ: ಒಂದು ಲೋಟ ಬಿಸಿನೀರಿನಲ್ಲಿ
ಒಂದು ಹೆಸರುಕಾಳಿನ ಪ್ರಮಾಣ ಇಂಗನ್ನು ಕರಗಿಸಿ ಅದರಲ್ಲಿ ಸ್ವಲ್ಪ ತುಪ್ಪ ಮತ್ತು
ಸೈಂಧವ ಲವಣಗಳನ್ನು ಸೇರಿಸಿ ತೆಗೆದುಕೊಂಡರೆ ಅತಿ ಶೀಘ್ರವಾಗಿ ಹೊಟ್ಟೆಯ
ಉಬ್ಬರ ಕಡಿಮೆಯಾಗಿ ಆರಾಮವೆನಿಸುತ್ತ ದೆ.
ಹುಳುಕು ಹಲ್ಲಿನ ನೋವುಂಟಾದಾಗ ಇಂಗನ್ನು ನೀರಿನಲ್ಲಿ ಕರಗಿಸಿ ಆ
ದ್ರಾವಣದಲ್ಲಿ ಹತ್ತಿಯನ್ನು ಅದ್ದಿ ಹುಳುಕು ಹಲ್ಲಿನ ಮೇಲೆ ಇಟ್ಟರೆ ಸ್ವಲ್ಪ
ಸಮಯದಲ್ಲೇ ನೋವು ಕಡಿಮೆಯಾಗುತ್ತದೆ. ಇದಲ್ಲದೆ ಇನ್ನೂ ಅನೇಕ ಮನೆಯ
ಔಷಧಿಯಲ್ಲಿ ಇಂಗನ್ನು ಬಳಸುತ್ತಾರೆ. KY

ಸುಗಂಧಭರಿತ ಸಂಬಾರ ಪದಾರ್ಥಗಳಲ್ಲಿ ಲವಂಗದ್ದು ಅಗ್ರಸ್ಥಾನ. ಆಹಾರ


ಪದಾರ್ಥಗಳಿಗೆ ಪರಿಮಳ ಮತ್ತು ರುಚಿಯನ್ನು ಕೊಡುವ ಲವಂಗವನ್ನು ದಕ್ಷಿಣ
ಭಾರತದ ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ವಾಣಿಜ್ಯ ಬೆಳೆಯಾಗಿ
ಬೆಳೆಸುತ್ತಾರೆ.
ಉಪಯೋಗ:
೧ ದಿನನಿತ್ಯದ ಅಡುಗೆಯಲ್ಲಿ ಅದರಲ್ಲೂ ಮುಖ್ಯವಾಗಿ ಮಾಂಸಾಹಾರದ
ಅಡುಗೆಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಇದನ್ನು ಸಿಹಿತಿಂಡಿಗಳು ಹಾಗೂ
ತಾಂಬೂಲದ ಜೊತೆಯಲ್ಲಿಯೂ ಉಪಯೋಗಿಸುತ್ತಾರೆ. ಇದರಿಂದ
| ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 83

|ಪರಿಮಳಯುಕ್ತವಾದ ತೈಲವನ್ನು ತೆಗೆದು ಹಲ್ಲುಪುಡಿ, ಟೂತ್‌ಪೇಸ್ಟ್‌, ಸಾಬೂನು,


ಸೌಂದರ್ಯವರ್ಧಕಗಳು ಹಾಗೂ ಅಗರಬತ್ತಿ ತಯಾರಿಕೆ ಮುಂತಾದವುಗಳಲ್ಲಿ
(ಬಳಸುತ್ತಾರೆ. ಔಷಧಿಗಳ ತಯಾರಿಕೆಯಲ್ಲೂ ಇದರ ಬಳಕೆ ಉಂಟು.
(ಈ. ಆಯುರ್ವೇದ ವೈದ್ಯ ಪದ್ದತಿಯಲ್ಲಿ ಲವಂಗವನ್ನು ದೇವ ಕುಸುಮ,
'ಚಂದನ ಪುಷ್ಪ, ಶಿಖರಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಕೆಮ್ಮು, ಕ್ಷಯ,
'ಬಾಯಾರಿಕೆ, ವಾಂತಿ ಮುಂತಾದ ರೋಗಗಳಲ್ಲಿ ಉಪಯೋಗಕ್ಕೆ ಬರುತ್ತದೆ.
[ಬಾಯಿಯ ದುರ್ಗಂಧ ಹಾಗೂ ಹಲ್ಲುನೋವು ನಿವಾರಣೆಗೆ ಒಂದು ಶ್ರೇಷ್ಠ
ಔಷಧವಾಗಿದೆ.
'--ಡ ಒಂದು ಅಥವಾ ಎರಡು ಲವಂಗವನ್ನು ಒಂದು ಸೂಜಿಗೆ ಚುಚ್ಚಿ ಎಣ್ಣೆ :
ದೀಪದ ಉರಿಯಲ್ಲಿ ಹಿಡಿದು ಸುಡಬೇಕು. ಹೀಗೆ ಸುಟ್ಟ ಲವಂಗದ ಕರುಕನ್ನು
ಸ್ವಲ್ಪಜೇನುತುಪ್ಪದಲ್ಲಿ ಕಲೆಸಿ ಕೊಟ್ಟರೆ ಮಕ್ಕಳಿಗೆ ವಾಂತಿಯಾಗುವುದು ನಿಲ್ಲುತ್ತದೆ.
ಮಕ್ಕಳಲ್ಲಿ ಬಿಕ್ಕಳಿಕೆ ಇದ್ದಾಗಲೂ ಇದು ಒಂದು ಉತ್ತಮ ಔಷಧ. ಸ್ವಲ್ಪ ಹೆಚ್ಚಿನ
ಪ್ರಮಾಣದಲ್ಲಿ ದೊಡ್ಡವರಿಗೂ ಕೊಡಬಹುದು.
2. ಹಲ್ಲು ಹುಳುಕಾಗಿ ನೋವು ಉಂಟಾದರೆ ಸ್ವಲ್ಪ ಹತ್ತಿಯನ್ನು ಲವಂಗದ
ಎಣ್ಣೆಯಲ್ಲಿ ಅದ್ದಿ ನೋವಿರುವ ಜಾಗದಲ್ಲಿ ಇಟ್ಟು ಒತ್ತಿ ಹಿಡಿದರೆ ನೋವು
ಕಡಿಮೆಯಾಗುತ್ತದೆ. ಲವಂಗದ ಎಣ್ಣೆ ದೊರಕದಿದ್ದಾಗ ಒಂದು ಲವಂಗದ
ಹೂವನ್ನು ತೆಗೆದುಕೊಂಡು ಹಲ್ಲಿನಿಂದ ಕಚ್ಚಿ ಅದರ ಮೇಲೆ ಒತ್ತಿ ಹಿಡಿದರೆ
ಸಹಾಯವಾಗುತ್ತದೆ.
೧ ಅತಿಯಾದ ಬಾಯಾರಿಕೆಗೆ: ಒಂದು ಲೋಟ ಬಿಸಿನೀರಿಗೆ 250ರಿಂದ
1300 ಮಿ.ಗ್ರಾಂ ಲವಂಗದ ಚೂರ್ಣವನ್ನು ಹಾಕಿ ಮುಚ್ಚಿ ಇಡಬೇಕು. ಸುಮಾರು
2-3 ಗಂಟೆಗಳ ನಂತರ ನೀರು ತಣ್ಣಗಾದ ಮೇಲೆ ಅದನ್ನು ಚೆನ್ನಾಗಿ ಕದಡಿ
'ಶೋದಿಸಿ, ಸಕ್ಕರೆ ಬೆರೆಸಿ ಕೊಟ್ಟರೆ ಬಾಯಾರಿಕೆ, ಬಾಯಿ ಒಣಗುವುದು,
'ಬಿಕ್ಕಳಿಕೆಗಳು ದೂರವಾಗುತ್ತದೆ. ದೀರ್ಪುಕಾಲದ ರೋಗಗಳಿಂದ ಬಳಲು
'ಶ್ರಿರುವವರಿಗೆ ಬಾಯಾರಿಕೆ ಇದ್ದರೆ ಇದು ಒಂದು ಶ್ರೇಷ್ಠ ಪೇಯ.
k-
84 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ದಿನನಿತ್ಯ ಅಡುಗೆಗೆ ಬೇಕಾಗುವ ಒಂದು ಪ್ರಮುಖ ಸಂಬಾರ ಪದಾರ್ಥ


ಜೀರಿಗೆ. ಇದರ ಕಾಳು ಸುವಾಸನೆಯಿಂದ ಕೂಡಿದ್ದು, ಆಹಾರ ಪದಾರ್ಥಗಳಿಗೆ '
ರುಚಿ ಮತ್ತು ಪರಿಮಳವನ್ನು ಕೊಡುತ್ತದೆ. ಮಸಾಲೆಪುಡಿ, ಸಾರು, ಪಲ್ಕ|
ಉಪ್ಪಿನಕಾಯಿ ಮುಂತಾದವುಗಳ ತಯಾರಿಕೆಯಲ್ಲಿ ಜೀರಿಗೆ ಇರಲೇಬೇಕು.
ಉಪಯೋಗ: |
ಇದರಲ್ಲಿರುವ ಸುವಾಸನಾಭರಿತ ತೈಲವನ್ನು ತೆಗೆದು ಬೇಕರಿ ಪದಾರ್ಥಗಳು
ಮತ್ತು ಅನೇಕ ಪೇಯಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಭಾರತದ
ಎಲ್ಲಾ ಕಡೆ ಬೆಳೆಯುವ ಇದು ಒಂದು ಮುಖ್ಯ ವಾಣಿಜ್ಯ ಬೆಳೆಯೂ ಆಗಿದೆ.
ಜೀರಿಗೆ ಒಂದು ಶ್ರೇಷ್ಠ ಜೀರ್ಣಕಾರಿಯಾಗಿದ್ದು ಮಸಾಲೆಯಂತೆ ಆಹಾರದಲ್ಲಿ
ಸೇರಿದ ಇದು ಜೀರ್ಣಾಂಗಗಳನ್ನು ಉತ್ತೇಜಿಸಿ ಆಹಾರ ಸುಲಭವಾಗಿ
ಜೀರ್ಣವಾಗುವಂತೆ ಮಾಡುತ್ತದೆ.
ಆಯುರ್ವೆದ ವೈದ್ಯಶಾಸ್ತ್ರದಲ್ಲಿ ಜೀರಿಗೆ ಒಂದು ಶ್ರೇಷ್ಠ ದೀಪನ, ಪಚನ
ಗುಣವುಳ್ಳ ಔಷಧಿಯೆಂದು ಪರಿಗಣಿಸಲಾಗಿದೆ. ಸ್ತನೃಶೋಧಕವಾಗಿ ಇದು ಪ್ರಸೂತ
ಸ್ತ್ರೀಯರಿಗೆ ಪಥ್ಯವಾಗಿದ್ದು ಗರ್ಭಾಶಯದ ಬಲಹೀನತೆಯನ್ನು ನಿವಾರಿಸುತ್ತದೆ.
ಜೀರಿಗೆಯಲ್ಲಿ ಎರಡು ವಿಧ. ಶ್ವೇತ ಜೀರಕ ಮತ್ತು ಕೃಷ್ಣ ಜೀರಕ. ಶ್ವೇತ
ಜೀರಿಗೆ ಅಂದರೆ ಬಿಳಿಜೀರಿಗೆಯನ್ನು ಮಸಾಲೆ ಪದಾರ್ಥ ಹಾಗೂ ಔಷಧಿಗಳಲ್ಲಿ
ಉಪಯೋಗಿಸುತ್ತಾರೆ. ಕೃಷ್ಣ ಅಂದರೆ ಕಪ್ಪು ಜೀರಿಗೆಯನ್ನು ಕೇವಲ ಔಷಧಿಗಳಲ್ಲಿ
ಮಾತ್ರ ಉಪಯೋಗ ಮಾಡುತ್ತಾರೆ.
ಔಷಧೀಯ ಉಪಯೋಗ: ಕ
೧ ಅಸಾತ್ಮ್ಮ ಆಹಾರ ಪದಾರ್ಥ ಮತ್ತು ಪಾನೀಯಗಳ ಸೇವನೆಯಿಂ
ಮೈಮೇಲೆ ಕೆಂಪಾದ ನವೆವುಳ್ಳ ಪಿತ್ತದ ಗಂದೆಗಳು ಉಂಟಾಗುತ್ತವೆ. ಇದಕ್ಕೆ ಶೀತ
ಪಿತ್ತ ಅಥವಾ ಪಿತ್ತದ ಗಂದೆ ಎಂದು ಕರೆಯುತ್ತಾರೆ. ಇದು ಪಿತ್ತವಿಕಾರದಿಂ
ಉಂಟಾಗುವ ಒಂದು ರೋಗ. ಜೀರಿಗೆ, ಹುಣಸೆಹಣ್ಣು ಮತ್ತು ಬೆಲ್ಲ
*' ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು
»
85
| ಮೂರನ್ನು ತೆಗೆದುಕೊಂಡು ಒಟ್ಟಾಗಿ ಸೇರಿಸಿ, ಚೆನ್ನಾಗಿ ಅರೆದು ಲೇಹ್ಮದಂತೆ
ಮಾಡುವುದು. ಇದನ್ನು ಎರಡು ಸಾರಿ ಸುಮಾರು ಐದು ಗ್ರಾಂನಷ್ಟು ಸೇವಿಸಿದರೆ
ಶೀತಪಿತ್ತ ರೋಗ ಗುಣವಾಗುತ್ತದೆ.
ಔ ಪಿತ್ತ ಹೆಚ್ಚಾಗಿ, ಅಜೀರ್ಣದಿಂದ ಭೇದಿಯಾಗುತ್ತಿದ್ದರೆ ಕಾಲು ಚಮಚ
'"ಜೀರಿಗೆ ಚೂರ್ಣವನ್ನು ಸಿಹಿಮೊಸರಿನಲ್ಲಿ ಕಲೆಸಿ ದಿನಕ್ಕೆ ಎರಡು ಮೂರು ಬಾರಿ
' ತೆಗೆದುಕೊಂಡರೆ ಅತಿಸಾರ ನಿಲ್ಲುತ್ತದೆ. ಪಚನ ಶಕ್ತಿ ಹೆಚ್ಚಿ ಅಗ್ನಿಮಾಂದ್ಕ
' ದೂರವಾಗುತ್ತದೆ.
೧ ಇದಲ್ಲದೆ ಅನೇಕ ಪಿತ್ತರೋಗಗಳಿಗೆ ಜೀರಿಗೆ ಕಷಾಯ (ಕಾಫಿ) ಒಂದು
ಎ ಉತ್ತಮ ಔಷಧಿಯಾಗಿದೆ.
ಜೀರಿಗೆ ಕಾಫಿ (ಕಷಾಯ) ಮಾಡುವ ವಿಧಾನ : ಒಂದು ಲೋಟ ನೀರಿಗೆ
' ಒಂದು ಚಮಚ ಜೀರಿಗೆಯನ್ನು ಹಾಕಿ ಅದರ ಬಾಯನ್ನು ಮುಚ್ಚಿ ಒಲೆಯ
ಮೇಲಿಟ್ಟು ಚೆನ್ನಾಗಿ ಕುದಿಸಬೇಕು, ಅನಂತರ ಅದನ್ನು ಶೋಧಿಸಿಕೊಂಡು ಸಕ್ಕರೆ
ಮತ್ತು ಹಾಲನ್ನು ಬೆರೆಸಿ ಕುಡಿಯಬೇಕು. ಈ ಕಾಫಿಯನ್ನು ಕುಡಿಯುವುದರಿಂದ
ಶೀತ-ಪಿತ್ತ, ವಾಂತಿ, ಅಜೀರ್ಣ ಮುಂತಾದ ವಿವಿಧ ಪಿತ್ತರೋಗಗಳು
ನಿವಾರಣೆಯಾಗುತ್ತವೆ. ಜೀರ್ಣಶಕ್ತಿ ಹೆಚ್ಚಾಗಿ, ಆರೋಗ್ಯ ವೃದ್ದಿಯಾಗುತ್ತದೆ.
ಇನ್ನು ಜೀರಿಗೆಯ ಸಾರಿನ ರುಚಿ ಎಲ್ಲರಿಗೂ ಗೊತ್ತೇ ಇದೆ.
೧ ಜೀರಕಾದಿ ಲೇಹ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಔಷಧಿ.
ಇದನ್ನು ಅಜೀರ್ಣ, ಅಗ್ನಿಮಾಂದ್ಯ, ಅರುಚಿ ಮುಂತಾದ ರೋಗಗಳೇ ಅಲ್ಲದೆ
ವಿವಿಧ ಪಿತ್ತ ವಿಕಾರಗಳಲ್ಲಿ ವಿಶೇಷವಾಗಿ ಬಳಸುತ್ತಾರೆ.
[0 ಸ್ತ್ರೀಯರಲ್ಲಿ ಹೆರಿಗೆಯ ಸಮಯದಲ್ಲಿ ಗರ್ಭಾಶಯ ಮತ್ತು
ಜನನಾಂಗಗಳು ವಿಕಾಸಗೊಂಡು ಶಿಥಿಲವಾಗಿರುತ್ತವೆ. ಆಗ ಜೀರಕಾದ್ಕಾರಿಷ್ಟ
ಮತ್ತು ದಶಮೂಲಾರಿಷ್ಟ ಎರಡನ್ನು ಸಮಪ್ರಮಾಣದಲ್ಲಿ ಮಿಶ್ರಮಾಡಿ, 30ರಿಂದ
40 ಮಿ.ಲೀ. ಪ್ರಮಾಣದಲ್ಲಿ ಊಟದ ನಂತರ ತೆಗೆದುಕೊಂಡರೆ ಗರ್ಭಾಶಯ
ಮತ್ತು ಇತರ ಅಂಗಗಳು ಸಂಕುಚಿತಗೊಂಡು ಪ್ರಾಕೃತ ಸ್ಥಿತಿಗೆ ಬರುತ್ತವೆ. ಇದನ್ನು
ಹೆರಿಗೆಯ ದಿನದಿಂದ. ಹಿಡಿದು ಮೂರು ವಾರಗಳ ಕಾಲ ತೆಗೆದುಕೊಳ್ಳಬೇಕು.
86 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಇದರಿಂದ ಪ್ರಸವಾನಂತರ ಉಂಟಾಗಬಹುಧಾದ ಉಪದ್ರವಗಳು


ಉಂಟಾಗುವುದಿಲ್ಲ. ಜೀರ್ಣಶಕ್ತಿ ಹೆಚ್ಚಾಗುತ್ತದೆ. ಎದೆಯ ಹಾಲು
ವೃದ್ದಿಯಾಗುತ್ತದೆ; ಶುದ್ಧಿಯಾಗುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯ
ರಕ್ಷಣೆಯಾಗುತ್ತದೆ.

72 ದಾಲ್ಚಿನ್ನಿ (ಚೆಕ್ಕೆ
ಪ್ರಮುಖವಾದ ಸಂಬಾರ ಪದಾರ್ಥವಾದ ದಾಲ್ಜಿನ್ನಿ ಒಂದು ಮರದ
ತೊಗಟೆ, ಆದುದರಿಂದ ಇದನ್ನು ಚಕ್ಕೆ ಎಂದೂ ಕರೆಯುತ್ತಾರೆ. ಬಹಳ ಪ್ರಾಚೀನ
ಕಾಲದಿಂದಲೂ ಮಸಾಲೆ ಪದಾರ್ಥವಾಗಿ, ಔಷಧಿ ದ್ರವ್ಯವಾಗಿ ಉಪಯೋಗಿಸಲ್ಪಡು
ತ್ತಿರುವ ದಾಲ್ಚಿನ್ನಿಯನ್ನು ದಕ್ಷಿಣ ಭಾರತದ ಕೇರಳ, ಕರ್ನಾಟಕ, ತಮಿಳುನಾಡು
ರಾಜ್ಯಗಳಲ್ಲಿ ವಿಶೇಷವಾಗಿ ಬೆಳೆಯುತ್ತಾರೆ. ಭಾರತದ ವಾಣಿಜ್ಯ ಬೆಳೆಗಳಲ್ಲಿ
ದಾಲ್ಚಿನ್ನಿಗೆ ಒಂದು ವಿಶಿಷ್ಟ ಸ್ಥಾನವಿದೆ. ಆಹಾರ ಪದಾರ್ಥಗಳಿಗೆ ವಾಸನೆ ಮತ್ತು
ರುಚಿಯನ್ನು ಕೊಡುವ ಇದನ್ನು ಅನೇಕ ಸಿಹಿತಿಂಡಿಗಳಲ್ಲಿಯೂ ಹಾಗೂ
ವಿಶೇಷವಾಗಿ ಮಾಂಸಾಹಾರದ ಅಡುಗೆಯಲ್ಲಿ ಉಪಯೋಗಿಸುತ್ತಾರೆ. ಇದರಿಂದ
ತೆಗೆದ ಸುಗಂಧಭರಿತ ತೈಲವನ್ನು ಬೇಕರಿ ಪದಾರ್ಥಗಳು, ಸಾಬೂನು,
ಮದ್ಮಪಾನೀಯಗಳು, ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಎಲೆಗೆ.
ಲವಂಗ ಪತ್ರೆ ಅಥವಾ ತಮಾಲ ಪತ್ರ ಎಂದು ಕರೆಯುತ್ತಾರೆ. ಇದನ್ನು ಸಹ
ಒಂದು ಮಸಾಲೆ ಪದಾರ್ಥವಾಗಿ ಉಪಯೋಗಿಸುತ್ತಾರೆ.
ಆಯುರ್ವೆದ ವೈದ್ಯರು ದಾಲ್ಚಿನ್ನಿಯನ್ನು ತ್ವಕ್‌, ವನಪ್ರಿಯ, .ವರಾಂಗ
ಮುಂತಾದ ಹೆಸರುಗಳಿಂದ ಕರೆಯುತ್ತ ರೆ. ಇದು ವೀರ್ಯವರ್ಧಕ ಹಾಗೂ
ವಿಷಹರ ಔಷಧಿಯಾಗಿದೆ.
ದಾಲ್ಚಿನ್ನಿಯನ್ನು ಅತಿಯಾಗಿ ಉಪಯೋಗಿಸಿದರೆ ಪಿತ್ತವನ್ನು ಕೆರಳಿಸಿ
ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.
ಏಕಮೂಲಿಕ್ತ ಔಷಧಿಯಾಗಿ ದಾಲ್ಚಿನ್ನಿಯನ್ನು ಹೆಚ್ಚಾಗಿ ಬಳಸುವುದಿಲ್ಲ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 87
ಬೇರು ಮೂಲಿಕೆಗಳ ಜೊತೆಯಲ್ಲಿ ಇದನ್ನು ಬಳಸುತ್ತಾರೆ. ಚೂರ್ಣ, ಲೇಹ,
ಜಾನಾ

ಆಸವ, ಅರಿಷ್ಠ ಮುಂತಾದ ಆಯುರ್ವೇದ ಔಷಧಿಗಳಲ್ಲಿ ಸುವಾಸನೆ ಮತ್ತು


ರುಚಿಗಾಗಿ ಹಾಗೂ ರೋಗಹರ ದ್ರವವಾಗಿ ಬಳಸುತ್ತಾರೆ.
ಬಾಟಾ
Re

ಅತಿಸಾರದಲ್ಲಿ : ದಾಲ್ಚಿನ್ನಿ ಮತ್ತು ಜಾಕಾಯಿಗಳ ಚೂರ್ಣವನ್ನು


' ಸಮಪ್ರಮಾಣದಲ್ಲಿ ಸೇರಿಸಿ, 250ರಿಂದ 300 ಮಿ.ಗ್ರಾಂನಷ್ಟು ಪ್ರಮಾಣದಲ್ಲಿ
' ಜೇನುತುಪ್ಪದಲ್ಲಿ ಸೇವಿಸಿದರೆ ಪರಿಣಾಮಕಾರಿಯಾಗಿರುತ್ತದೆ. '

73. ದನಿಯ

ಪ್ರಾಚೀನ ಕಾಲದಿಂದಲೂ ಬಹುಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು


ಪ್ರಮುಖ ಸಂಬಾರ ಪದಾರ್ಥ ಕೊತ್ತಂಬರಿ.
ಉಪಯೋಗ:
ಕೊತ್ತಂಬರಿಯ ಬೀಜ ಮತ್ತು ಸೊಪ್ಪನ್ನು ವಿವಿಧ ಅಡುಗೆಗಳಲ್ಲಿ
ಮಸಾಲೆಯಾಗಿ ಬಳಕೆ ಮಾಡುತ್ತಾರೆ. ಬೀಜವನ್ನು ಹದವಾಗಿ ಹುರಿದು ಪುಡಿಮಾಡಿ
ತಯಾರಿಸಿದ ಮಸಾಲೆಯನ್ನು ಸಾರು, ಹುಳಿ, ಗೊಜ್ಜು ಮುಂತಾದವುಗಳಲ್ಲಿ
ಅದರಲ್ಲೂ ವಿಶೇಷವಾಗಿ ಮಾಂಸಾಹಾರದ ಅಡುಗೆಗಳಲ್ಲಿ ಉಪಯೋಗಿಸುತ್ತಾರೆ.
ಹಸಿ ಕೊತ್ತಂಬರಿ ಸೊಪ್ಪು ಇದ್ದರೆ ಕೋಸಂಬರಿ, ಚಟ್ನಿ, ಪಚ್ಚಡಿ, ವಡೆ,
ನ ಬೋಂಡ ಮುಂತಾದವುಗಳಿಗೆ ಒಂದು ವಿಶಿಷ್ಟ ರುಚಿ ಬರುತ್ತದೆ. ಇದಲ್ಲದೆ
' ಕೊತ್ತಂಬರಿ ಬೀಜದಿಂದ ತೆಗೆದ ಸುಗಂಧಭರಿತ ತೈಲವನ್ನು ಸಿಹಿತಿಂಡಿ, ಬೇಕರಿ
ತಿನಿಸುಗಳು, ಮಾದಕ ಪಾನೀಯಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
ಸಾಮಾನ್ಯವಾಗಿ ಭಾರತದ ಎಲ್ಲಾ ಭಾಗದಲ್ಲಿಯೂ ಬೆಳೆಯುವ ಕೊತ್ತಂಬರಿ
ಒಂದು ಪ್ರಮುಖ ವಾಣಿಜ್ಯ ಬೆಳೆಯೂ ಹೌದು.
ಅನೇಕ ಆಯುರ್ವೇದ ಔಷಧಿಗಳಲ್ಲಿ ಉಪಯೋಗಿಸಲ್ಪಡುವ
ಕೊತ್ತಂಬರಿಯನ್ನು ಸಂಸ್ಕೃತದಲ್ಲಿ ಧಾನ್ಯಕ, ಕುಸ್ತುಂಬರ, ಛತ್ರಧಾನ್ಯ ಮುಂತಾದ
ಹೆಸರುಗಳಿಂದ ಕರೆಯುತ್ತಾರೆ.
88 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು '

ಉಪಯೋಗ: |
೧0 ಕೊತ್ತಂಬರಿ ಬೀಜವನ್ನು ಸ್ವಲ್ಪ ಬಿಸಿಮಾಡಿ, ಕುಟ್ಟಿ ಪುಡಿ|
ಮಾಡಿಕೊಳ್ಳಬೇಕು (ಬಹಳ ನುಣ್ಣನೆ ಪುಡಿ ಮಾಡಬಾರದು). ಒಂದು ಲೋಟ!
ಬಿಸಿ ನೀರಿಗೆ ಒಂದು ಚಮಚ ಪುಡಿಯನ್ನು ಹಾಕಿ ಒಂದೆರಡು ಗಂಟೆಗಳ ಕಾಲ!
ಮುಚ್ಚಿ ಇಡಬೇಕು. ಅನಂತರ ಅದನ್ನು ಶೋಧಿಸಿಕೊಂಡು ಸಕ್ಕರೆ ಬೆರೆಸಿ
ಕುಡಿಯಲ ಕೊಟ್ಟರೆ, ಬಾಯಾರೆಕೆ (ದಾಹ) ಕಡಿಮೆಯಾಗುತ್ತದೆ. ಮೇಲೆ
ಹೇಳಿರುವ ಬೀಜದ ಪುಡಿಯ್ದನ್ನು ರಾತ್ರಿ ನೀರಿನಲ್ಲಿ ಹಾಕಿ ಇಟ್ಟು ಬೆಳಿಗ್ಗೆ ಅದನ್ನು
ಶೋಧಿಸಿಕೊಂಡು ಸಕ್ಕರೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ತೆಗೆದುಕೊಂಡರೆ
ಪಿತ್ತದಿಂದಾಗುವಂತಹ ಹುಳಿತೇಗು, ಎದೆ ಉರಿಗಳು, ಕಣ್ಣು, ಕಾಲು ಉರಿಗಳು
ಕಡಿಮೆಯಾಗುತ್ತದೆ.
೧0 ಪಿತ್ತದ ಜ್ವರದಿಂದ ಮತ್ತು ದೀರ್ಥುಕಾಲದ ಕಾಯಿಲೆಗಳಿಂದ
ನರಳುವವರಲ್ಲಿ ಉಂಟಾಗುವ ದಾಹ, ಬಾಯಾರಿಕೆ, ಬಿಕ್ಕಳಿಕೆಗಳಿಗೆ ಇದು ಒಂದು
ಉತ್ತಮ ಔಷಧಿ ಹಾಗೂ ಪೇಯ.
ಧಿ ಕೊತ್ತಂಬರಿ ಬೀಜದ ಕಾಫಿ : ಕೊತ್ತಂಬರಿ ಬೀಜವನ್ನು ಹದವಾಗಿ
ಹುರಿದು, ದಪ್ಪಗಾಗಿ ಪುಡಿಮಾಡಿ ಇಟ್ಟುಕೊಳ್ಳಬೇಕು. ಕಾಫಿಯನ್ನು ತಯಾರಿಸುವ
ರಿಸಿತಿಯಲ್ಲಿ. ನೀರನ್ನು ಕುದಿಸಿ ಅದಕ್ಕೆ ಕೊತ್ತಂಬರಿ ಪುಡಿಯನ್ನು ಹಾಕಿ ಸ್ವಲ್ಪ
ಕುದಿಸಿ. 'ಬೆಂಕಿಯ ಮೇಲಿಗದ ತೆಗೆದು ಕೆಲವು ನಿಮಿಷಗಳ ಕಾಲ ಮುಚ್ಚಿ ಇಡಬೇಕು.
| ಅನಂತರ ಅದನ್ನು ಶೋಧಿಸಿಕೊಂಡು ಸಕ್ಕರೆ ಮತ್ತು ಹಾಲನ್ನು ಬೆರೆಸಿ ಕಾಫಿಯಂತೆ
ಕುಡಿಯಬೆಹುದು. ಇದನ್ನು ಕುಡಿಯುವುದರಿಂದ ದೇಹದ ಹೆಚ್ಚು 'ಉಷ್ಣತೆ
ಕಡಿಮೆಯಾಗಿ ಪಚನಶಕಿ ಕಿಹೆಚ್ಚಿ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
ಮಲಬದ್ಧತೆ ನಿವಾರಣೆಯಾಗುತ್ತದೆ.
೧ ಬೆಳಗಿನ ಹೊತ್ತು ಬೆಡ್‌ ಕಾಫಿ ಕುಡಿಯುವ ಅಭ್ಯಾಸವಿರುವವರು ಅದಕ್ಕೆ
ಬದಲಾಗಿ ಮೇಲೆ ಹೇಳಿರುವ ಕೊತ್ತಂಬರಿ ಬೀಜದ ಕಾಫಿಯನ್ನು ಪ್ರತಿ ದಿನ
ತೆಗೆದುಕೊಂಡರೆ ಕಾಫಿಯಿಂದಾಗುವ ದುಷ್ಪರಿಣಾಮಗಳು ತಪ್ಪಿ ಆರೋಗ್ಯ
ವೃದ್ದಿಯಾಗುತ್ತದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 89

74, ಈರುಳ್ಳಿ

ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ಉಪಯೋಗಿಸುವ ಒಂದು


ಜನಪ್ರಿಯ ಮಸಾಲೆ ಪದಾರ್ಥ ಈರುಳ್ಳಿ. ಇದು ರುಚಿಕರವಾದ ಮಸಾಲೆ
ಪದಾರ್ಥವೇ ಅಲ್ಲದೇ ಪೌಷ್ಟಿಕವಾದ ತರಕಾರಿಯೂ ಹೌದು. ಸಾರು, ಹುಳಿ,
ಪಲ್ಕ, ಚಟ್ನಿ, ಗೊಜ್ಜು ಮುಂತಾದವುಗಳಲ್ಲಿ ರುಚಿ ಮತ್ತು ವಾಸನೆಗಾಗಿ
ಉಪಯೋಗಿಸಲ್ಪಡುವ ಈರುಳ್ಳಿ ಮಾಂಸಾಹಾರದ ಅಡುಗೆಗಳಲ್ಲಿ ವಿಶೇಷವಾಗಿ
ಬಳಸುತ್ತಾರೆ. ಕೆಲವರು ಹಸಿ ಈರುಳ್ಳಿಯನ್ನು ಹಾಗೆಯೇ ತಿನ್ನುತ್ತಾರೆ. ಖಾರವಾದ
ರುಚಿಯುಳ್ಳ ಇದು ತಿಂದ ಮೇಲೆ ಬಾಯಿಯಲ್ಲಿ ಒಂದು ರೀತಿಯ ನಾರುವ
ವಾಸನೆಯನ್ನುಂಟುಮಾಡುವುದರಿಂದ ಕೆಲವರು ಇದನ್ನು ಹಸಿಯಾಗಿ ತಿನ್ನಲು
ಇಷ್ಟಪಡುವುದಿಲ್ಲ. ಮತ್ತೆ ಕೆಲವರು ಹಸಿ ಈರುಳ್ಳಿಯನ್ನು ಸಲಾಡ್‌, ಮೊಸರುಬಜ್ಜಿ
ಮುಂತಾದ ವ್ಯಂಜನಗಳನ್ನು ತಯಾರಿಸಿ ಉಪಯೋಗಿಸುತ್ತಾರೆ. ಹಸಿ ಈರುಳ್ಳಿಯ
ಸೇವನೆ ಆರೋಗ್ಯಟೆ” ದೃಷ್ಟಿಯಿಂದ ಬಹಳ ಒಳ್ಳೆಯದು. ಭಾರತದ ಎಲ್ಲಾ
ರಾಜ್ಯಗಳಲ್ಲಿ ಈರುಳ್ಳಿಯನ್ನು ಒಂದು ಮುಖ್ಯ ವಾಣಿಜ್ಮ ಬೆಳೆಯನ್ನಾಗಿ
ಬೆಳೆಯುತ್ತಾರೆ. ಈರುಳ್ಳಿಯಲ್ಲಿ ಎರಡು ವಿಧ. ಬಿಳಿ ಮತ್ತು ಕೆಂಪು: ಸಂಸ್ಕೃತದಲ್ಲಿ
ಈರುಳ್ಳಿಗೆ ಫಲಾಂಡು, ಲಕಾರ್ಕ, ಯವನೇಷ್ಟ ಮುಂತಾದ ಹೆಸರುಗಳುಂಟು.
ಇದನ್ನು ಹಸಿಯಾಗಿ ತಿಂದಾಗ ಬಾಯಿಯಲ್ಲಿ ಒಂದು ರೀತಿಯ ದುರ್ಗಂಧ
ಉಂಟಾಗುವುದರಿಂದ ಇದಕ್ಕೆ ಮುಖದೂಷಕವೆಂದೂ ಕರೆಯುತ್ತಾ ರೆ.
ಉಪಯೋಗ: ;
೧ ಮನೆಯಲ್ಲಿ ಚಾಕು, ಕತ್ತರಿ, ಬ್ಲೇಡು ಮುಂತಾದ ಹರಿತವಾದ ವಸ್ತುಗಳು
ತಗುಲಿ ಸಣ್ಣಪುಟ್ಟ ಗಾಯಗಳಾಗುತ್ತವೆ. ಅಲ್ಲದೇ ಮಕ್ಕಳು ಒರಟಾದ ಕಲ್ಲು
ಮುಂತಾದ ಕಡೆ ಬಿದ್ದಾಗ ಚರ್ಮ ಕಿತ್ತು ತರಚಿದ ಗಾಯಗಳಾದಾಗ ಈರುಳ್ಳಿ,
ಕೊಬ್ಬರಿ ಎಣ್ಣೆ ಮತ್ತು ಅರಿಶಿನದ ಪುಡಿಗಳನ್ನು ಸೇರಿಸಿ, ಕಾಯಿಸಿ ತಯಾರಿಸಿದ
ಔಷಧೀಯ ತೈಲವು ಅತ್ಯಂತ ಪರಿಣಾಮಕಾರಿ ಹಾಗೂ ನಿರಪಾಯಕಾರಿ
ಔಷಧವಾಗಬಲ್ಲದು. |
90 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

0 ಎರಡು ಪಾಲು ಈರುಳ್ಳಿ ರಸ, ಒಂದು ಪಾಲು ಕೊಬ್ಬರಿಎಣ್ಣೆ ಮತ್ತು


ಅರ್ಧ ಭಾಗ ಅರಿಶಿನದ ಪುಡಿ ಇವು ಮೂರನ್ನು ಸೇರಿಸಿ ಒಂದು ಬಟ್ಟಲಿನಲ್ಲಿ
ಹಾಕಿ ಚೆನ್ನಾಗಿ ಕಾಯಿಸಬೇಕು. ಈ ಮಿಶ್ರಣದಲ್ಲಿರುವ ಈರುಳ್ಳಿ ರಸದ ಅಂಶವೆಲ್ಲಾ
ಆವಿಯಾಗಿ ಹೋದಮೇಲೆ ಅದನ್ನು ತೆಗೆದು ಬಾಟಲಿಯಲ್ಲಿ ಇಟ್ಟುಕೊಳ್ಳಬೇಕು.
ಗಾಯವನ್ನು ಚೆನ್ನಾಗಿ ಶುಚಿಮಾಡಿ ಅದಕ್ಕೆ ಈ ತೈಲವನ್ನು ಹಚ್ಚಿದರೆ ಗಾಯದಲ್ಲಿ
ನೋವು ಕಡಿಮೆಯಾಗುವುದಲ್ಲದೆ ವ್ರಣವೂ ಸಹ ಬೇಗ ವಾಸಿಯಾಗುವುದು.
2 ಹೊಲದಲ್ಲಿ, ತೋಟದಲ್ಲಿ ಕೆಲಸಮಾಡುವಾಗ ಗುದ್ದಲಿ, ಕೊಡಲಿ,
ಮಚ್ಚು ಮುಂತಾದವುಗಳಿಂದ ಪೆಟ್ಟು ಬಿದ್ದು ಗಾಯವಾದಾಗ ಈರುಳ್ಳಿಯನ್ನು
ಚೆನ್ನಾಗಿ ಜಜ್ಜಿ ಅದಕ್ಕೆ ಕೊಬ್ಬರಿ ಎಣ್ಣೆ ಮತ್ತು ಅರಿಶಿನದ ಪುಡಿಯನ್ನು ಸೇರಿಸಿ
ಚೆನ್ನಾಗಿ ಕುದಿಸಿ ಗಾಯಕ್ಕೆ ಕಟ್ಟಿದರೆ ಗಾಯ ಬಹಳ ಬೇಗ ಗುಣವಾಗುತ್ತದೆ.
೧ ಚೇಳು ಕಚ್ಚಿದ ಜಾಗಕ್ಕೆ ಈರುಳ್ಳಿ ರಸವನ್ನು ಹಚ್ಚುವುದರಿಂದ ಉರಿ
ಮತ್ತು ನೋವು ಕಡಿಮೆಯಾಗುತ್ತದೆ. |
೧ ಕೀಲುನೋವು ಇದ್ದಾಗ: ಈರುಳ್ಳಿ ರಸ ಮತ್ತು ಸಾಸಿವೆ ಎಣ್ಣೆಗಳನ್ನು
ಸೇರಿಸಿ ಕಾಯಿಸಿ ಹಚ್ಚಿದರೆ ಕೈಕಾಲುಗಳ ಕೀಲುಗಳಲ್ಲಿ ಇರುವ ನೋವು
ನಿವಾರಣೆಯಾಗುತ್ತದೆ.
೧ ಈರುಳ್ಳಿ ರಸ ಮತ್ತು ಜೇನುತುಪ್ಪಗಳನ್ನು ಸಮಪ್ರಮಾಣದಲ್ಲಿ ಬೆರೆಸಿ
ಕೊಟ್ಟರೆ ಮಕ್ಕಳಿಗೆ ಕೆಮ್ಮು, ಕಫ ಕಡಿಮೆಯಾಗುತ್ತದೆ.
೧0 ಹಸಿ ಈರುಳ್ಳಿಯನ್ನು ತಿಳಿಯಾದ ಕಡೆದ ಮಜ್ಜಿಗೆಯಲ್ಲಿ ಜಜ್ಜಿಹಾಕಿ,
ರುಚಿಗೆ ಸೈಂಧವ ಲವಣವನ್ನು ಬೆರೆಸಿ ಪ್ರತಿ ದಿನ ತೆಗೆದುಕೊಳ್ಳುತ್ತಿದ್ದರೆ ದೇಹದಲ್ಲಿ
ಕೊಬ್ಬಿನ ಅಂಶ ಹೆಚ್ಚುವುದಿಲ್ಲ ಹಾಗೂ ಹೆಚ್ಚಾಗಿರುವ ಕೊಬ್ಬಿನ ಅಂಶ
ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ.
ಇತ್ತೀಚಿನ ಸಂಶೋಧನೆಗಳಿಂದ ಈರುಳ್ಳಿಯಲ್ಲಿ ಸುಮಾರು 50ಕ್ಕೂ ಹೆಚ್ಚು
ರಾಸಾಯನಿಕಗಳಿದ್ದು ಇವು ಆರೋಗ್ಯ ರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸುತ್ತವೆ
ಎಂದು ತಿಳಿದುಬಂದಿದೆ. ಈರುಳ್ಳಿ ಸೇವನೆಯಿಂದ ಶರೀರದ ರೋಗನಿರೋಧಕ
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 9]

ಶಕ್ತಿ ಹಚ್ಚಾಗುತ್ತದೆ. ಇದರಲ್ಲಿ ಇರುವ ಕೆಲವು ರಾಸಾಯನಿಕ ಅಂಶಗಳು ಹೊಟೆ ಕೆ


ಮತ್ತು ಜೀರ್ಣಾಂಗಗಳಲ್ಲಿ ಉಂಟಾಗುವ ಕ್ಕಾನ್ಸರ್‌ ರೋಗವನ್ನು ತಡೆಗಟ್ಟುವ
ಶಕ್ತಿಯನ್ನು ಹೊಂದಿವೆ ಎಂದು ತಿಳಿದುಬಂದಿದೆ.
ಈ ರೀತಿಯಾಗಿ ಸಾಮಾನ್ಯ ಸಂಬಾರ ಪದಾರ್ಥವಾಗಿರುವ ಈರುಳ್ಳಿ ಅನೇಕ
ಸಾಧಾರಣ ರೋಗಗಳಿಗೆ ಅಲ್ಲದೆ ಕ್ಕಾನ್ಸರ್‌ಗಿಂತ ಮಹಾಮಾರಿ ರೋಗಕ್ಕೂ
ಔಷಧಿಯಾಗಬಲ್ಲುದಾಗಿದೆ.

75. ಬಜೆ

ಸಂಸ್ರತ- ವಚಾ ಹಿಂದಿ- ವಚ


ಮರಾಠಿ- ವೇಖಂಡ ತಮಿಳು - ಚಟನಂ
ಬಜೆಯಲ್ಲಿ ನಾಲ್ಕು ವಿಧಗಳಿವೆ. ಔಷಧಿಯಲ್ಲಿ ಉಪಯುಕ್ತ. ಬೇರು ಈ
ಸಸ್ಯದ ಉಪಯುಕ್ತ ಭಾಗ. ಇದು ಕಟು, ತಿಕ್ತರಸ ಹೊಂದಿದ್ದು, ಉಷ್ಣವೀರ್ಯ
ವುಳ್ಳದ್ದಾಗಿದೆ.
ಉಪಯೋಗಗಳು:
ರ ಕೆಮ್ಮು ಇರುವಾಗ ಬಜೆಯ ಪುಡಿಯನ್ನು ಸೈಂಧವಲವಣದೊಡನೆ
ಬಿಸಿ ನೀರಿನಲ್ಲಿ ಸೇವಿಸಿದರೆ ಕೆಮ್ಮು ನಿಲ್ಲುತ್ತದೆ. ಬಜೆಯ ಚೂರ್ಣವನ್ನು
ಬ್ರಾಹ್ಮೀ ರಸದಲ್ಲಿ ಸಕ್ಕರೆ ಬೆರೆಸಿ ಸೇವಿಸಿದರೆ ಅಪಸ್ಮಾರ (Epilepsy)ದ ನಿವಾರಣೆ
ಸಾಧ್ಯ.
0 ಬಜೆಯ ಕಷಾಯದಿಂದ ತೊಳೆಯುವುದರಿಂದ ವ್ರಣಗಳು ಬೇಗ
ಮಾಯವಾಗುತ್ತವೆ. ಚಿಕ್ಕಮಕ್ಕಳಿಗೆ ಬಜೆ ಬೇರನ್ನು ತೇಯ್ದು ನೆಕ್ಕಿಸುವುದರಿಂದ
ಜೀರ್ಣಶಕ್ತಿ, ಬುದ್ದಿಶಕ್ತಿ ಹೆಚ್ಚುತ್ತದೆ.
೧. ಬಜೆಯ ಚೂರ್ಣವನ್ನು ಮಜ್ಜಿಗೆಯೊಡನೆ ಸೇವನೆಮಾಡಿದರೆ
ಹೊಟ್ಟೆನೋವು, ಹೊಟ್ಟೆ ಉಬ್ಬರ ಕಡಿಮೆಯಾಗುವುವು.
92 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು
೧. ಜಂತುಗಳಾಗಿದ್ದರೆ ಬಜೆಯ ಚೂರ್ಣವನ್ನು ಜೇನುತುಪ್ಪ ಸೇರಿಸಿ
ಸೇವಿಸಬೇಕು.
[] ಕಫ ಹೆಚ್ಚಾಗಿ ಉಸಿರಾಟದ ತೊಂದರೆಯಾದಾಗ ಬಜೆಯ ಕಷಾಯ
ತಯಾರಿಸಿ ಅದಕ್ಕೆ ಕರಿಬೇವು ಹಾಗೂ ಕರಿಮೆಣಸನ್ನು ಸೇರಿಸಿ ಸೇವಿಸಿದರೆ ಉಸಿರಾಟ
ಸಲೀಸಾಗುವುದು.
ಡಿ: ಬಜೆ ಬೇರಿನ ಪುಡಿಯನ್ನು ಮಜ್ಜಿಗೆಯೊಡನೆ ಸೇವಿಸಿದರೆ ಬೇದಿ
ನಿಲ್ಲುವುದು.
೧ ಜ್ವರವಿರುವಾಗ ಬಜೆಯ ಪುಡಿಯನ್ನು ಅಮೃತಬಳ್ಳಿಯ ರಸದೊಡನೆ
ಸೇವಿಸಬೇಕು. ಚಿಕ್ಕ ಮಕ್ಕಳಿಗೆ ಸ್ನಾನಮಾಡಿಸಿದ ಮೇಲೆ ಬಜೆಯ ಪುಡಿಯಿಂದ
ಧೂಪ ಕೊಡಿಸಿದರೆ ಬಹಳ ಒಳ್ಳೆಯದು. '
೧0 ಬಜೆಯು ಜೀರ್ಣಶಕ್ತಿ ಹಾಗೂ ಸ್ಮರಣಶಕ್ತಿಯನ್ನು ಹೆಚ್ಚಿಸಬಲ್ಲದು.

ಸಂಸ್ಕೃತ - ಲಶುನ, ರಸೋನ ಮರಾಠಿ - ಲಸೂಣ


ಹಿಂದಿ- ಲಹಶೂನ ತೆಲುಗು
- ತೆಲ್ಲಗಡ್ಡ
ಇದರಲ್ಲಿ ಮೂರು ವಿಧಗಳಿವೆ. ಸಣ್ಣ, ದೊಡ್ಡ ಹಾಗೂ ಹಳದಿ ಬೆಳ್ಳುಳ್ಳಿ.
ಗಡ್ಡೆಯು ಇದರ ಉಪಯುಕ್ತ ಭಾಗ. ಇದು ಮಧುರ, ಕಟುರಸ ಹೊಂದಿದು
ಉಷ್ಣವೀರ್ಯವುಳ್ಳದ್ಹಾಗಿದೆ. ಸ
ಉಪಯೋಗಗಳು:
೧ ಅಜೀರ್ಣವಾದಾಗ ಬೆಳ್ಳುಳ್ಳಿಯನ್ನು ಸೈಂಧವ ಲವಣದೊಂದಿಗೆ ಸೇವಿಸಿ
ನಂತರ ಮಜ್ಜಿಗೆ ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆ ಸುಲಭವಾಗುವುದು.
ಬೆಳ್ಳುಳ್ಳಿ ರಸದಲ್ಲಿ ತುಪ್ಪ ಸೇರಿಸಿ ಸೇವಿಸಿದರೆ ಉದರ ಬೇನೆ ಮಾಯವಾಗುವುದು.
ಕೆಮ್ಮು, ದಮ್ಮುಗಳಿರುವಾಗ ಬೆಳ್ಳುಳ್ಳಿ ರಸದಲ್ಲಿ ಜೇನುತುಪ್ಪ ಸೇರಿಸಿ ಸೇವಿಸಿದರೆ
ಹಚ್ಚು ಪರಿಣಾಮಕಾರಿ. '
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 93
೧ ಅಶಕ್ತತೆ ಇರುವಾಗ ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಹುರಿದು ಸಕ್ಕರೆ ಸೇರಿಸಿ
ಸೇವಿಸಿ ನಂತರ ಹಾಲು ಕುಡಿಯಬೇಕು.
ರ ಪಕ್ಷಾಘಾತ (Paralysis) ಹಾಗೂ ಅರ್ದಿತ (Facial Paralysis)
ಗಳಲ್ಲಿ ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಸೇವಿಸಿದರೆ ವಾಸಿಯಾಗುವ
ಸಾಧ್ಯತೆ ಇದೆ. (ಚೆಳ್ಳುಳ್ಳಿಯ 5 ಹಿಲಕುಗಳನ್ನು-ಒಂದು ಲೋಟ ಹಾಲು, 4
ಲೋಟ ನೀರಿಗೆ ಹಾಕಿ ಕಾಯಿಸಿ ಹಾಲಿನಷ್ಟಕ್ಕೆ ಇಳಿಸಬೇಕು).
೧ ಕ್ರಿಮಿರೋಗವಿದ್ದಾಗ ಬೆಳ್ಳುಳ್ಳಿ ರಸದಲ್ಲಿ ಜೇನು ಸೇರಿಸಿ ಸೇವಿಸಬೇಕು.
ಔ ಬೆಳ್ಳುಳ್ಳಿ ಹಾಕಿ ತಯಾರಿಸಿದ ತೈಲವನ್ನು ಅಮವಾತ, ಬೆನ್ನು
ನೋವುಗಳಲ್ಲಿ ಮೇಲೆ ಉಜ್ಜಿಕೊಳ್ಳುವುದಕ್ಕೆ (11೩55೩86) ಉಪ್ಪಯೋಗಿಸ
ಬೇಕು.
2. ಚೇಳು ಕಚ್ಚಿದ ಜಾಗಕ್ಕೆ ಬೆಳ್ಳುಳ್ಳಿ, ಸಾಸುವೆಯನ್ನು ಹಾಕಿ ಉಜ್ಜಿದರೆ
ಉರಿ ನಿಂತುಹೋಗುತ್ತದೆ.
೧ ಬೆಳ್ಳುಳ್ಳಿಯನ್ನು ಪ್ರತಿ ದಿನ ಆಹಾರದಲ್ಲಿ ಉಪಯೋಗಿಸುವುದರಿಂದ
ಶರೀರದ ಬಲ, ವರ್ಣ ಹೆಚ್ಚುತ್ತದೆ. ಇದು ಕಣ್ಣಿಗೆ ಹಿತಕಾರಿ ಕೂಡಾ. ರಕ್ತದಲ್ಲಿನ
ಕೊಲೆಸ್ಟಾಲ್‌ ಅಂಶವನ್ನು ಇದು ಕಡಿಮೆಮಾಡಬಲ್ಲದು.
೧0 ಸ್ವರಭಂಗ ಅಂದರೆ ಧ್ವನಿ ಒಡೆದಿದ್ದರೆ. ಬೆಳ್ಳುಳ್ಳಿ ರಸದೊಡನೆ
ಹಿಪ್ಪಲಿಪುಡಿ, ಅತಿಮಧುರದ ಪುಡಿ ಸೇರಿಸಿ ಸೇವಿಸಬೇಕು.

ಸಂಸ್ಕೃತ- ಮರೀಚ ಮರಾಠಿ- ಮಿರೀ ಹಿಂದಿ- ಕಾಲಿಮಿರ್ಚಿ


ತೆಲುಗು- ಮಿರಿಯಾಲು ತಮಿಳು - ಮಳಗು
ಮೆಣಸಿನಲ್ಲಿ ಎರಡು ವಿಧ - ಕರಿಮೆಣಸು ಮತ್ತು ಬಿಳಿಮೆಣಸು. ಬೇರು
ಮತ್ತು ಕಾಳು ಇವು ಮೆಣಸಿನ ಎರಡು ಉಪಯುಕ್ತ ಭಾಗಗಳು. ಇದು ಕಟುರಸ
ಹೊಂದಿದ್ದು, ಉಷ್ಣವೀರ್ಯವುಳ್ಳದ್ದಾಗಿರುತ್ತದೆ.
94 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಉಪಯೋಗಗಳು:
೧. ನೆಗಡಿಯಾದಾಗ ಮೆಣಸಿನ ಕಷಾಯಮಾಡಿ ಅದಕ್ಕೆ ಕಲ್ಲುಸಕ್ಕರೆ ಬೆರೆಸಿ
ಸೇವಿಸಿದರೆ ಶೀತದ ಬಾಧೆ ತಪ್ಪುತ್ತದೆ. ಅಜೀರ್ಣವಾದಾಗ ಕರಿಮೆಣಸಿನ ಪುಡಿಗೆ
ಉಪ್ಪು, ತುಪ್ಪ ಸೇರಿಸಿ ಅನ್ನದೊಂದಿಗೆ ಸೇವಿಸಬೇಕು.
೧ ಕರಿಮೆಣಸಿನ ಪುಡಿಯನ್ನು ಸೈಂಧವ ಲವಣದೊಡನೆ ಮಜ್ಜಿಗೆಯಲ್ಲಿ
ಸೇವಿಸಿದಲ್ಲಿ ಹೊಟ್ಟೆನೋವು ಕಡಿಮೆಯಾಗುತ್ತದೆ.
[] ಕೆಮ್ಮು ಇರುವಾಗ ಮೆಣಸಿನಪುಡಿಯನ್ನು ಜೇನುತುಪ್ಪದೊಡನೆ
ಸೇವಿಸಬೇಕು. ಆಮವಾತದಲ್ಲಿ ಮೆಣಸಿನ ಕಷಾಯದಲ್ಲಿ ತುಪ್ಪ ಬೆರೆಸಿ
ಸೇವಿಸಬೇಕು.
[0 ಮೆಣಸನ್ನು ನೀರಲ್ಲಿ ತೇಯ್ದು ಲೇಪಿಸುವುದು ಮುಖದಲ್ಲಿನ
ಮೊಡವೆಗಳಿಗೆ ಪರಿಣಾಮಕಾರಿ ಮದ್ದು.
2 ಮಲಬದ್ಧತೆಯಿಂದ ಬಳಲುವವರು ಬಿಳಿಮೆಣಸಿನ ಪುಡಿಯನ್ನು ಬಿಸಿ
ನೀರಿನೊಂದಿಗೆ ಸೇವನೆಮಾಡಿದರೆ ಮಲಬದ್ದತೆ ಸಮಸ್ಯೆಪರಿಹಾರವಾಗುವುದು.
[0 ಧ್ವನಿ ಒಡೆದಿದ್ದರೆ ಮೆಣಸಿನ ಕಷಾಯಕ್ಕೆ ಹಾಲು ಸೇರಿಸಿ ಸೇವಿಸಬೇಕು. '
೧ ಹೃದ್ರೋಗ, ಮೂಲವ್ಮಾಧಿ, ಶೂಲ, ಕ್ರಿಮಿರೋಗಗಳಲ್ಲಿಯೂ ಇದು
ಉಪಯುಕ್ತ ಔಷಧಿ ದ್ರವ್ಯ.

ಸಂಸ್ಕೃತ-ನಾಗರಮ್‌, ವಿಶ್ವಭೇಷೆಜಮ್‌ ' ಮರಾಠಿ-ಸುಂಠ


ಹಿಂದಿ-ಸೋಂಟ್‌ ತಮಿಳು-ಶುಕ್ಕೂ ತೆಲುಗು-ಸೋಂಟ
ಬೇರು ಈ ಗಿಡದ ಉಪಯುಕ್ತ ಭಾಗ. ಹಸಿ ಶುಂಠಿಗೆ ಆರ್ದ್ರಕವೆಂದೂ
ಒಣಶುಂಠಿಗೆ "ಶುಂಠಿ' ಎಂದೂ ಕರೆಯುವರು. ತ
ಇದು ಕಟುರಸ ಹೊಂದಿದ್ದು, ಉಷ್ಣವೀರ್ಯವುಳ್ಳದ್ದಾಗಿದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 95

ಉಪಯೋಗಗಳು:
ಶುಂಠಿಯ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಕೊಟ್ಟರೆ ಜ್ವರ ನಿಲ್ಲುವುದು.
೧ ಅರುಚಿ, ಅಗ್ನಿಮಾಂದ್ಕಗಳಿರುವಾಗ ಶುಂಠಿಪುಡಿಯನ್ನು ನಿಂಬೆರಸ
ಹಾಗೂ ಸೈಂಧವ ಲವಣದೊಡನೆ ಸೇರಿಸಿ ಸೇವಿಸಬೇಕು.
೧ ಶುಂಠಿಯನ್ನು ಹಾಲಿನಲ್ಲಿ ಕುದಿಸಿ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಅಶಕ್ತತೆ
ದೂರವಾಗುತ್ತದೆ.
೧ ಕೆಮ್ಮು, ದಮ್ಮುಗಳಿರುವಾಗಲೂ ಶುಂಠಿಯ ಪುಡಿಯನ್ನು ಜೇನುತುಪ್ಪ
ದೊಂದಿಗೆ ಸೇವಿಸುವುದೊಳಿತು.
೧ ಪಿತ್ತವಿಕಾರವಿದ್ದಾಗ ಶುಂಠಿಯ ಪುಡಿಯೊಂದಿಗೆ ತುಪ್ಪ, ಸಕ್ಕರೆ ಸೇರಿಸಿ
ಸೇವಿಸಬೇಕು. |
[0 ಶುಂಠಿ ರಸಕ್ಕೆ ಜೇನುತುಪ್ಪ ಸೇರಿಸಿ ಅರ್ಧ ಗಂಟೆಗೊಮ್ಮೆ ಕುಡಿದಲ್ಲಿ
ವಾಂತಿ ನಿಲ್ಲುವುದು.
೧0 ನೆಗಡಿಯಾದಾಗ ಹಸಿಶುಂಠಿಯ ರಸಕ್ಕೆ ಬೆಲ್ಲ ಸೇರಿಸಿ ಸೇವಿಸಬೇಕು.
ಮಲಬದ್ದತೆಯಿರುವಾಗ ರಾತ್ರಿ ಹೊತ್ತು ಮಲಗುವ ಮೊದಲು ಎರಡು ಚಮಚ
ಶುಂಠಿ ರಸಕ್ಕೆ ಜೇನು ಸೇರಿಸಿ ಸೇವಿಸಬೇಕು.
೧0 ಆಮದ ತೊಂದರೆಯಿರುವಾಗ ಶುಂಠಿಯ ರಸಕ್ಕೆ ಹರಳೆಣ್ಣೆ ಸೇರಿಸಿ
ಸೇವಿಸಬೇಕು.
೧0 ಶುಂಠಿ ಮತ್ತು ಕೊತ್ತಂಬರಿ ಬೀಜವನ್ನು ಪುಡಿಮಾಡಿ ನೀರಿನಲ್ಲಿ ಕುದಿಸಿ
' ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಹಸಿವೆ ಚೆನ್ನಾಗಿ ಆಗುತ್ತದೆ.
ಶುಂಠಿಯು ಕ್ರಿಮಿಹರವಾಗಿಯೂ ಕೆಲಸಮಾಡುತ್ತದೆ. ಹಸಿಶುಂಠಿಯು ಮೂತ್ರವನ್ನು
ಹೆಚ್ಚಿಸುವುದು.
೧ ಶುಂಠಿಯು ಹೃದ್ರೋಗ, ಪಾಂಡುರೋಗ, ಆನೆಕಾಲು ರೋಗ
(Elephantiasis)ದಲ್ಲಿಯೂ ಉಪಯುಕ್ತ.
96 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

79. ಹಿಪ್ಪಲಿ
ಸಂಸ್ಕ ತ-ಪಿಪ್ಪಲಿ ಮರಾಠಿ-ಪಿಂಪಳೀ ಹಿಂದಿ-ಪೀಪಲ್‌
ತೆಲುಗು-ಏಪುಲ ತಮಿಳು-ಟಿಪ್ಪಿಲಿ
ಫಲ ಮತ್ತು ಬೇರು ಹಿಪ್ಪಲಿಯ ಉಪಯುಕ್ತ ಭಾಗಗಳು. ಗಜಹಿಪ್ಪಲಿ
ಮತ್ತು ಸಣ್ಣ ಹಿಪ್ಪಲಿಗಳನ್ನು ಔಷಧದಲ್ಲಿ ಉಪಯೋಗಿಸಲಾಗುವುದು. ಇದು
ಕಟುರಸ ಹೊಂದಿದ್ದು ಉಷ್ಣವೀರ್ಯವುಳ್ಳದ್ದಾಗಿದೆ.
ಉಪಯೋಗಗಳು:
[0 ಮೂಲವ್ಯಾಧಿಯಿಂದ ಬಳಲುವವರು ಹಿಪ್ಪಲಿ ಚೂರ್ಣವನ್ನು ರಾತ್ರಿ
ಮಲಗುವ ಸಮಯದಲ್ಲಿ ಮಜ್ಜಿಗೆಯೊಡನೆ ಸೇವಿಸುವುದು ಉತ್ತಮ. ಜ್ವರವಿದ್ದಾಗ
ಹಿಪ್ಪಲಿ ಚೂರ್ಣವನ್ನು ಜೇನುತುಪ್ಪದೊಡನೆ ಸೇವಿಸಬೇಕು. ಇದರಿಂದ ಕೆಮ್ಮು,
ಉಸಿರಾಟದ ತೊಂದರೆಯೂ ನಿವಾರಣೆಯಾಗುತ್ತವೆ. ಹಿಪ್ಪಲಿಯ ಚೂರ್ಣವನ್ನು
ಕಲ್ಲುಸಕ್ಕರೆಯ ಪುಡಿ ಹಾಗೂ ತುಪ್ಪ ಸೇರಿಸಿ ಸೇವಿಸಿದಲ್ಲಿ ಆಮ್ಲಪಿತ್ತದ ನಿವಾರಣೆ .
ಸಾಧ್ಯ.
೧ ಕುಷ್ಟರೋಗದ ತಡೆಗೆ ಹಿಪ್ಪಲಿ ಚೂರ್ಣವನ್ನು ಸಕ್ಕರೆ, ತುಪ್ಪದೊಂದಿಗೆ
ಸೇವಿಸಬೇಕು. |
೧ ಅಶಕ್ತತೆಯಿರುವವರಿಗೆ ಹಾಲು, ಸಕ್ಕರೆಯೊಡನೆ ಬೆರೆಸಿದ ಹಿಪ್ಪಲಿಪುಡಿ
ಒಳ್ಳೆಯದು.
೧ ಪಿತ್ತವಿಕಾರ, ತಲೆಸುತ್ತು ಇರುವಾಗ ಹಸಿ ಹಿಪ್ಪಲಿಯನ್ನು ಜೇನುತುಪ್ಪ
ದೊಂದಿಗೆ ಸೇವಿಸಬೇಕು.
೧ ಹಿಪ್ಪಲಿ ರಸಾಯನ ಅಂದರೆ ದಿನಕ್ಕೆ ಒಂದೊಂದು ಹಿಪ್ಪಲಿಯನ್ನು
ಹೆಚ್ಚಿಸುತ್ತ ಹೋಗಿ ನಂತರ ಕಡಿಮೆ ಮಾಡುತ್ತ ಬರಬೇಕು. ಈ ಹಿಪ್ಪಲಿ
ರಸಾಯನವು ಕೆಮ್ಮು, ದಮ್ಮು, ಕ್ಷಯರೋಗಿಗಳಿಗೆ ಬಹಳ ಒಳ್ಳೆಯದು.
೧ ಇದು ಹೃದಯಕ್ಕೆ ಹಿತಕಾರಿ. ಕ್ರಿಮಿಹರ, ಜೀರ್ಣಶಕ್ತಿ ಹೆಚ್ಚಿಸುತ್ತದೆ.
ಅಪಸ್ಮಾರ, ಕಾಲರಾ, ಬೆನ್ನುನೋವು ಹಾಗೂ ಇತರ ವಾತರೋಗಗಳಲ್ಲಿಯೂ
ಉಪಯುಕ್ತ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 97

ಮಜ್ಜಿಗೆಯು ಭೂಲೋಕದ ಅಮೃತ ಎಂದು ಕರೆಯಲ್ಪಡುತ್ತದೆ. ಮೂರು


ಭಾಗ ಮೊಸರು ಹಾಗೂ ಒಂದು ಭಾಗ ನೀರು ಬೆರೆಸಿ ಮಜ್ಜಿಗೆ ತಯಾರಿಸಬೇಕು.
ಉಪಯೋಗಗಳು:
[ರ ಅಜೀರ್ಣವುಂಟಾಗಿರುವಾಗ ಮಜ್ಜಿಗೆಯಲ್ಲಿ ಸೈಂಧವಲವಣ ಮತ್ತು
ಶುಂಠಿಯ ಪುಡಿ ಸೇರಿಸಿ ಕುಡಿಯಬೇಕು.
2 ಆಮದಿಂದ ಕೂಡಿದ ಭೇದಿಯಾಗುತ್ತಿದ್ದರೆ ಮಜ್ಜಿಗೆಯಲ್ಲಿ ಉಪ್ಪು
ಮತ್ತು ಒಂದು ಚಿಟಿಕೆ ಕರಿಮೆಣಸಿನ ಪುಡಿ ಬೆರೆಸಿ ಕುಡಿಯಬೇಕು.
ಸಂಧಿವಾತದಿಂದ ಬಳಲುವವರಿಗೆ ದಿನಾಲು ಮೂರು ನಾಲ್ಕು ಬಾರಿ
ಮಜ್ಜಿಗೆ ಕುಡಿಯಲು ಕೊಡಬೇಕು.
2. ವಾತದೋಷದ ತೊಂದರೆಯಿರುವವರು ಮಜ್ಜಿಗೆಯೊಡನೆ ನಿಂಬೆಯ
ರಸ ಮತ್ತು ಸೈಂಧವ ಲವಣ ಬೆರೆಸಿಕೊಂಡು, ಪಿತ್ತದೋಷದ ತೊಂದರೆ
ಯಿರುವವರು ಮಜ್ಜಿಗೆಯಲ್ಲಿ ಸಕ್ಕರೆ ಬೆರೆಸಿಕೊಂಡು ಹಾಗೂ ಕಫದೋಷದ
ತೊಂದರೆಯಿರುವವರು ಮಜ್ಜಿಗೆಯಲ್ಲಿ ಶುಂಠಿ, ಮೆಣಸು ಹಾಗೂ ಹಿಪ್ಪಲಿ ಪುಡಿ
ಸೇರಿಸಿ ಕುಡಿಯಬೇಕು.
[0 ಬಹಳ ವರ್ಷಗಳಿಂದ ಹೊಟ್ಟೆನೋವು ಬಾಧಿಸುತ್ತಿದ್ದರೆ ಯಾವುದೇ
ಬೇರೆ ಆಹಾರವನ್ನು ಸೇವಿಸದೇ ಕೇವಲ ಮಜ್ಜಿಗೆಯನ್ನು ಸೇವಿಸಬೇಕು.

ಹಸುವಿನ ತುಪ್ಪವು ಶ್ರೇಷ್ಠವಾದದ್ದು, ಹಸುವಿನ ತುಪ್ಪ ಸಿಗದಿದ್ದಲ್ಲಿ


ಎಮ್ಮೆಯ ತುಪ್ಪ ಬಳಸಬಹುದು.
ಔಷಧೀಯ ಗುಣಗಳು:
೧0 ಸಂಧಿವಾತದ ತೊಂದರೆಯಿರುವವರು ನೋವು ಉಂಟಾಗಿರುವ ಜಾಗಕ್ಕೆ
ತುಪ್ಪ ಹಾಕಿ ಉಜ್ಜಿಕೊಂಡು ಬಿಸಿನೀರು ಹಾಕಿಕೊಳ್ಳಬೇಕು.
98 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

೧] ಯಾವುದೇ ರೀತಿಯ ಗಾಯಗಳಾಗಿದ್ದರೂ ತುಪ್ಪವನ್ನು ಲೇಪಿಸಬೇಕು.


ಗಾಯಗಳಿಗೆ ಲೇಪಿಸುವಾಗ ತುಪ್ಪ ಹಳೆಯದಿದ್ದಷ್ಟು ಉತ್ತಮ.
೧ ಅರುಚಿ ಹಾಗೂ ಮಂದಾಗ್ನಿಯುಳ್ಳವರು ಊಟ ಮಾಡುವಾಗ ಮೊದಲ
ತುತ್ತಿಗೆ ಒಂದು ಚಮಚ ತುಪ್ಪ ಹಾಗೂ ಸೈಂಧವ ಲವಣ ಬೆರೆಸಿ ತಿನ್ನಬೇಕು.

ಮಧು, ಮಕರಂದ, ಜೇನು, ಜೇನುತುಪ್ಪ, ಹನಿ ಎಂದು ಕರೆಯಲ್ಪಡುವ


ಇದನ್ನು ತಿಳಿಯದವರ್ಕಾರು 7? ಇದು ಸ್ವಲ್ಪ ಜಿಗುಟಾಗಿ, ಪಾರದರ್ಶಕವಾಗಿ,
ಭಾರವಾಗಿ, ಸುವಾಸನಾಯುಕ್ತವಾಗಿ, ಮಂದವಾಗಿ, ಅತಿಮಧುರವಾಗಿ, ನೀರಲ್ಲಿ
ಹಾಕಿದಾಗ ತಕ್ಷಣ ಮುಳುಗುವ ಗುಣವುಳ್ಳ ವಿಶೇಷ ದ್ರವಪದಾರ್ಥವಾಗಿರುತ್ತದೆ.
ಆಯುರ್ವೇದೀಯ ಚಿಕಿತ್ಸಾ ಪ್ರಪಂಚದಲ್ಲಿ ಮಧುವು ಅತ್ಯಂತ ಮಹತ್ವ
ಪೂರ್ಣ ಸ್ಥಾನವನ್ನು ಅಲಂಕರಿಸಿದೆ. ಜೇನುತುಪ್ಪ ಯಾವ ಔಷಧದೊಡನೆ
ಸೇರಿದರೂ ಆ ಔಷಧದ ಗುಣವನ್ನು ಶರೀರಕ್ಕೆ ಬಹುಬೇಗ ವ್ಯಾಪಿಸುವಂತೆ
ಮಾಡುತ್ತದೆ. ಆಯುರ್ವೇದ ಗ್ರಂಥಗಳಲ್ಲಿ ಜೇನುತುಪ್ಪ ಅತ್ಕಮೂಲ್ಕ.
ಜನೋಪಕಾರಕವೂ, ಪವಿತ್ರವೂ ಆಗಿರುವುದು ತಿಳಿದುಬರುತ್ತದೆ. ವೈದಿಕ
ಸಾಹಿತ್ಯದಲ್ಲಿಯೂ ಜೇನುತುಪ್ಪವು ಸರ್ವತೋಮುಖವಾಗಿ ವ್ಯಾಪಿಸಿಕೊಂಡಿದೆ.
""ಮುಧುಮತೀ ರೋಷಧೀದ್ಯಾ ಪಆಪೋ ಮಧುಮನ್ಹೋ ಭವತ್ವಂತರಿಕ್ಷ ೦1
ಕ್ಷೇತ್ರಸ್ಯ ಪತಿರ್ಮಧು ಮನ್ನೋ ಅಸ್ತ್ವ್ಯರಿಷ್ಠಂತೋ ಅನ್ಸೇನಂ ಚರೇಮ!!:
ಪನ್ನಾಯ್ಯಂ ತದಶ್ಚಿನಾ ಕೃತಂ ವಾ ವೃಷಭೋ ದಿವೋ ರಜಸಃ ಪೃಥಿವ್ಯಾ: !
ಸಹಸ್ರಂ ಶಂಸಾ ಉತಯೇ ಗವಿಷ್ಟೌ ಸರ್ವಾಂ ಇತ್‌ ತಾಂ ಉಪಯತಾ
ಪಿಭದ್ದೈ॥”
- "ಅಥರ್ವಣ ವೇದ, ಮಧುಸೂಕ್ತ'
“ಸಕಲ ವನಸ್ಪತಿಗಳೂ ಮಧುಯುಗಗಳಾಗಲಿ; ಆಕಾಶ ಮತ್ತು ಜಲವೂ
ಮಧುಮಯವಾಗಲಿ; ಅಂತರಿಕ್ಷವೂ ನಮಗಾಗಿ ಮಧುಭರಿತವಾಗಲಿ; ನಮ್ಮ :
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 99
ದೇಶಪಾಲಕನಾದರೂ ಮಧುವಿನಿಂದ ತುಂಬಿ ತುಳುಕಿಹೋಗಲಿ; ನಾವುಗಳೂ ಸಹ
ಮಧುವಿನಿಂದ ಸಂಪೂರ್ಣ ಭರಿತರಾಗಿ ಮತ್ತು ನಿಶ್ಚಿಂತರಾಗಿ ಪವಿತ್ರ ಮಧುವಿಗೆ
ಅನುಕೂಲವಾದ ಆಚರಣೆ ಆಚರಿಸೋಣ.''
ಜಗತ್ತಿನಲ್ಲಿ ಮಧುವು ಉಪಮಾನರಹಿತವಾದ, ಪರಮಪವಿತ್ರವಾದ,
ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವೃಪದಾರ್ಥ
ವಾಗಿರುತ್ತದೆ. ಈ ಅಮೃತ ಸದೃಶವಾದ ಮಧುವಿನ ಮಾಧುರ್ಯದಿಂದ ಶಿಶುಗಳ
ಸಮುದಾಯವು ಆನಂದಭರಿತವಾಗುತ್ತದೆ. ತರುಣ ಸಮುದಾಯವು ಮಧುವಿನ
ರಸಾಸ್ವಾದನೆಯಿಂದ ಮತ್ತರಾಗಿಬಿಡುತ್ತದೆ. ವೃದ್ದರು ಇದರಿಂದ ತಮ್ಮ
ಅವಯವಗಳಲ್ಲಿ ಬಂದು ಸೇರಿಕೊಂಡಿರುವ ಶಿಥಿಲತೆ ನಿವಾರಣೆ ಮಾಡಿಕೊಂಡು,
ಮತ್ತೊಮ್ಮೆ ಶಕ್ತಿಯನ್ನು ಸಂಪಾದಿಸಿಕೊಂಡು ಆನಂದ ಅನುಭವಿಸುತ್ತಾರೆ.
ಆಯುರ್ವೇದದಲ್ಲಿ ಜೇನು ಹುಳುವಿನ ಜಾತಿಗಳಿಗನುಸಾರವಾಗಿ ಮಧುವನ್ನು
ವಿಂಗಡಿಸಿದ್ದಾರೆ.
(1) ಪೌತ್ತಿಕ (2) ಭ್ರಾಮರ (3) ಕ್ಷಾದ್ರ (4) ಮಾಕ್ಷಿಕ
(5) ಛಾತ್ರ (6) ಔದ್ದಾಲಕ (7) ಅರು (8) ದಾಲ
ಆಯಾ ಜಾತಿಯ ಹುಳುವಿನಿಂದ ತಯಾರಾದ ಜೇನಿಗೆ ಅವುಗಳ
ಹೆಸರಿನಿಂದಲೇ ಕರೆಯುತ್ತಾರೆ. ಮೊದಲಿನ ಆರು ಬಗೆಯ ಜೇನುತುಪ್ಪ ಆರು
ಜಾತಿಯ ಜೇನುಹುಳುಗಳಿಂದ ತಯಾರಾಗುತ್ತದೆ. ಅರು ಮತ್ತು ದಾರು ಎಂಬವು
ವೃಕ್ಸದಿಂದ ಉತ್ಪತ್ತಿಯಾದವು ಎಂದು ಸುಶ್ರುತಾಚಾರ್ಯರು ಹೇಳಿದ್ದಾರೆ. ಅಂದರೆ
ಹೂವಿನ ರಸ ಉಕ್ಕಿ ಹರಿದು ಅದೇ ವೃಕ್ಷದ ಎಲೆಗಳ ಮೇಲೆ ಹನಿಹನಿಯಾಗಿ
ತೊಟ್ಟಿಕ್ಕಿ ಮಂದವಾಗಿ ಜೇನಿನ ತರಹ ಕಾಣಿಸುತ್ತದೆ. ಇದಕ್ಕೆ ದಾಲ ಮಧು
ಎನ್ನುತ್ತಾರೆ. ಯಾವ ವೃಕ್ಸದಿಂದ ತಯಾರಾಗುವುದೋ ಅದೇ ವೃಕ್ಷದ ವರ್ಣ,
ರಸ, ಗಂಧ, ರುಚಿ ಹೊಂದಿರುತ್ತದೆ.
ಅರ್ಫ್ಥ್ಯ ಎಂಬ ಹೆಸರಿನ ಮಧು ಮಧೂಕ (ಹಿಪ್ಪೆ) ಎನ್ನುವ ಮರದಲ್ಲಿ
ತಯಾರಾಗುತ್ತದೆ. ಮಧೂಕ ಪುಷ್ಪದಿಂದ ತೊಟ್ಟಿಕ್ಕುವಾಗಲೇ ದ್ರವರೂಪದಲ್ಲಿರದೇ
: ಸ್ವಲ್ಪ ಗಟ್ಟಿಯಾಗಿಯೇ ಇರುತ್ತದೆ. ಇದು ನೋಡಲು ಶುದ್ಧವಾಗಿ, ಪಾರದರ್ಶಕ
ವಾಗಿದ್ದು, ಅತ್ಯಂತ ಮಧುರವಾಗಿರುತ್ತದೆ. ಕಮಲದ ಹೂಗಳಿಂದ ಸಂಗ್ರಹಿಸಿದ
ಮಧುವಿಗೆ ಪದ್ಮಮಧು ಎನ್ನುತ್ತಾರೆ. ಇದು ನೇತ್ರರೋಗಗಳಲ್ಲಿ ಉಪಯುಕ್ತ.
100 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಜೇನುಹುಳು ಒಂದು ಕರ್ಮಯೋಗಿ. ಹುಟ್ಟಿದ ದಿನದಿಂದ ಸಾಯುವ


ಕ್ಷಣದವರೆಗೂ ದುಡಿಯುವದೇ ಅದರ ಜೀವನ. ಅದರ ದುಡಿಮೆ ಸ್ವಾರ್ಥಕ್ಕಾಗಿ
ಅಲ್ಲ, ಪರರ ಹಿತಕ್ಕಾಗಿದೆ. ಒಂದೊಂದು ಜೇನು ಕುಟುಂಬದಲ್ಲಿ 30 - 40
ಸಹಸ್ರ ಜೇನುಹುಳುಗಳಿರುತ್ತ ವೆ. ಪ್ರತಿಯೊಂದು ಜೇನು ಹುಳು ತನ್ನ ಜವಾಬ್ದಾರಿ
ಆವ ಹಗಲಿರುಳು ತಾನೇ ತಾನಾಗಿ ದುಡಿಯುತ್ತಿ ರುತ್ತದೆ. ಜೇನು
ಹುಳುಗಳ ಸಹಬಾಳ್ವೆ, ನಿಸ್ವಾರ್ಥ ಸಮಾಜ ಜೀವನ, ದುಡಿಮೆಯ ವಿಭಜನೆ,
ದುಡಿಮೆಯಲ್ಲಿ ಗೌರವ, ತ್ಯಾಗ, ರಕ್ಷಣೆ, ಮಿತವ್ಯಯ, ಶುಚಿತ್ವ ಇವುಗಳು ನಾಗರಿಕ
ಸಮೂಹಕ್ಕೆ ಒಂದು ಸವಾಲಿನಂತಿದೆ.
ನಮ್ಮ ದೇಶದಲ್ಲಿ ನಾಲ್ಕು ಜಾತಿಯ ಜೇನುನೊಣಗಳಿವೆ.
(1) ತುಡುವೆ ಜೇನು (2) ಹೆಜ್ಜೇನು
(3) ಕೋಲು ಜೇನು (4) ಮುಜಂಟಿ ಜೇನು
(1) ತುಡುವೆ ಜೇನು- ಇವು ಸಾಮಾನ್ಯವಾಗಿ ಕತ್ತಲು ಪ್ರದೇಶದಲ್ಲಿ ಅಂದರೆ
ಮರದ ಪೊಟರೆ ಅಥವಾ ಹುತ್ತಗಳಲ್ಲಿ ವಾಸಿಸುತ್ತವೆ. ತುಡುವೆ ಕುಟುಂಬಗಳಲ್ಲಿ
ವಲಸೆ ಹೋಗುವ ಸ್ವಭಾವವಿರುವುದಿಲ್ಲ. ಇವುಗಳು ಚುಚ್ಚುವುದು ಕಡಿಮೆ.
ಇವುಗಳನ್ನು ಪೆಟ್ಟಿಗೆಯಲ್ಲಿ ಸಾಕಬಹುದು.
(2) ಹೆಚ್ಚೇನು - ಎತ್ತರವಾದ ಮರದ ಕೊಂಬೆಗಳಲ್ಲಿ, ಗೋಪುರಗಳ
ಬದಿಯಲ್ಲಿ ಹಾಗೂ ಸೇತುವೆಗಳ ಅಡಿಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸುತ್ತವೆ.
ಇದು ತುಂಬ ಮುಂಗೋಪಿಯಾಗಿ, ಚುಚ್ಚುವ ಸ್ವಭಾವ ಹೆಚ್ಚಾಗಿರುವುದರಿಂದ
ಗಾಳಿ ಬೆಳಕು ಅಪೇಕ್ಷಿಸುವುದರಿಂದ ಇವುಗಳನ್ನು ಸಾಕಲಾಗುವುದಿಲ್ಲ. ಇದರ
ಜೇನುತುಪ್ಪ ತುಂಬಾ ತೆಳುವಾಗಿರುತ್ತದೆ.
(3) ಕೋಲು ಜೇನು - ಇದು ಪೊದರುಗಳಲ್ಲಿ ಚಿಕ್ಕ ಚಿಕ್ಕ ಕಡ್ಡಿಗಳಲ್ಲಿ
ಒಂದೇ ಒಂದು ಎರಿಯನ್ನು ಕಟ್ಟಿಕೊಂಡು ವಾಸವಾಗಿರುತ್ತ ದೆಇದು ಗಾತ್ರದಲ್ಲಿ
ಚಿಕ್ಕದು ಹಾಗೂ ವಲಸೆ ಹೋಗುವ ಸ್ವಭಾವವಿರುವಂತಹದು. ಇದಕ್ಕೆಚುಚ್ಚುವ
ಸ್ವಭಾವ ಕಡಿಮೆ.
(4) ಮುಜಂಟಿ ಜೇನು - ಇವುಗಳು ಹಚ್ಚಾಗಿ ಮರದ ಚಿಕ್ಕ ಚಿಕ್ಕ
ಪೊಟರೆಗಳಲ್ಲಿಯೂ, ಕಟ್ಟಿಡಗಳ ತಳಭಾಗದ ಸಂದಿಗಳಲ್ಲಿಯೂ, ಗೋಡೆಗಳ
ಬಿರುಕುಗಳಲ್ಲಿ) ಯೂ ವಾಸಿಸುತ್ತnf ಇದಕ್ಕೆ ಚುಚ್ಚುವ ಮುಳ್ಳುಗಳಿರುವುದಿಲ್ಲ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 101
ಗಾಬರಿಯಾದಾಗ ಹಾರಿ ಬಂದು ಮೈ ಮೇಲೆ ಕುಳಿತುಕೊಳ್ಳುತ್ತದೆ. ಇದು
ಸೊಳ್ಳೆಯಂತೆ ಇರುವುದರಿಂದ ಕೆಲವರು ಇದನ್ನ ನುಸುಳೆ ಜೇನೆಂದು ಕರೆಯುತ್ತಾರೆ.
ಇದರ ಜೇನುತುಪ್ಪವು ಬೇರೆ ಎಲ್ಲಾ ಜಾತಿಯ ಜೇನುತುಪ್ಪಗಳಿಗಿಂತ ಹೆಚ್ಚಿನ
ಔಷಧೀಯ ಗುಣವನ್ನು ಹೊಂದಿರುತ್ತದೆ. ಇದು ಎಲ್ಲ ಜಾತಿಯ ಸಣ್ಣ ಸಣ್ಣ
ಹೂಗಳಿಂದ ಮಕರಂದವನ್ನು ಹೀರಿ ತರುವುದರಿಂದ ಇದರ ಜೇನುತುಪ್ಪ ತುಂಬ
ಉಪಯುಕ್ತ. ಇದು ದ್ರಾಕ್ಷಿಯ ಗೊಂಚಲಿನಂತೆ ಗೂಡು ಕಟ್ಟಿಕೊಂಡಿರುತ್ತದೆ.
ಇದನ್ನು ಪೆಟ್ಟಿಗೆಗಳಲ್ಲಿ ಸಾಕಬಹುದಾಗಿದೆ. ಸ
ಜೇನು ಹುಳುಗಳ ಸಾಕಣೆ, ಪೋಷಣೆ, ಮಧು ಸಂಗ್ರಹಣೆ ಬಹಳ
ಲಾಭಕರವಾಗಿದೆ. ದೇಶವಿದೇಶಗಳಲ್ಲಿ ಹಣ ಗಳಿಕೆಗಾಗಿ ಇದರ ವ್ಯವಸಾಯವನ್ನು
ಕೈಗೊಂಡಿದ್ದಾರೆ. ಹೊಸ ಸಂಶೋಧನೆಗಳು ನಡೆಯುತ್ತಾ ಇವೆ. ಇದಕ್ಕಾಗಿ ಅನೇಕ
ಜೇನುಸಾಕಣೆ ಕೇಂದ್ರಗಳು ಕೆಲಸ ಮಾಡುತ್ತಿವೆ.
ಚೇನುತುಪ್ಪದ ಉತ್ಪಾದನೆ : ಹೂವಿನ ಮಕರಂದ ಜೇನುನೊಣಗಳ
ಹೊಟ್ಟೆಯಲ್ಲಿ ಇನ್‌ವರ್ಬೇಸ್‌ ಕಿಣ್ವರಸದ ಮೂಲಕ ಪಚನ ಹೊಂದುತ್ತದೆ. ಪಚನ
ಹೊಂದಿದ ಮಕರಂದವನ್ನು ಜೇನು ನೊಣ ಹೊಟ್ಟೆಯಿಂದ ನಾಲಗೆ ಮೂಲಕ
ಹೊರತಂದು ಗೂಡಿನ ಎರಿಯ ಸಾವಿರಾರು ಕಣದಲ್ಲಿ ತುಂಬಿ ಅದರಲ್ಲಿನ ಹೆಚ್ಚಿನ
ತೇವಾಂಶವನ್ನು ರೆಕ್ಕೆ ಬಡಿತದ ಮೂಲಕ ಆವಿಯಾಗಿ ಹೊರದೂಡಿದ ನಂತರ
ಕಣಗಳಿಗೆ ಮೊಹರು ಮಾಡುತ್ತದೆ. ಹೀಗೆ ಜೇನುತುಪ್ಪ ಉತ್ಪತ್ತಿಯಾಗುತ್ತದೆ.
ಇದರ ಪ್ರಥಮ ಉತ್ಪತ್ತಿ ಸ್ಥಾನ ಸಸ್ಕ, ಅದರ ಕುಸುಮ ಹಾಗೂ ಅದರ ಮಕರಂದ
ಗ್ರಂಥಿಯಾದರೆ ಎರಡನೆಯ ಉತ್ಪತ್ತಿ ಸ್ತಾನ ಜೇನಿನ ಮಧು ಜಠರ, ಜೇನಿನಗೂಡು.
ಜೇನುತುಪ್ಪದಲ್ಲಿ ರುವ ಘಟಕಗಳು :
ತೇವಾಂಶ (Moisture) ಶೇಕಡ 17ರಿಂದ 25
ಫಲಸಕ್ಕರೆ (Levulose) ಶೇಕಡ 34 ರಿಂದ 40
ಗ್ಲುಕೋಸ್‌ ಸಕ್ಕರೆ (Dextrose) ಶೇಕಡ 32ರಿಂದ 38
ಸಾಮಾನ್ಯ ಸಕ್ಕರೆ (Sucrose) ಶೇಕಡ 2 ರಿಂದ 5
ಅಂಟು (Dextrin) ಶೇಕಡ 1 ರಿಂದ 2
(1) ಖನಿಜಗಳು (Minerals) - ಕಬ್ಬಿಣ, ಮಗ್ನೀಶಿಯಂ, ಸುಣ್ಣ
(Calcium), ಮ್ಯಾಂಗನೀಸ್‌, ತಾಮ್ರ (Copper)
102 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

(2) ಸಾವಯವ ಆಮ್ಹಗಳು(೦rganic 60105) - ಫಾರ್ಮಿಕ್‌, ಅಸಿಟಿಕ್‌,


ಮ್ಯಾಲಿಕ್‌, ಸಿಟ್ರಿಕ್‌, ಅಮೈನೋ, ಸಕ್ಸಿನಿಕ್‌.
(3) ಪೋಷಕ ದ್ರವ್ಯಗಳು (Proteins)
(4) ವಿಟಮಿನ್ಸ್‌- ಬಿ1, ಬಿ2, ಬಿ3, ಬಿ4, ಬಿ6, ಬಿ12, ಸಿ ಮತ್ತು ಕೆ.
ಮಧುವು ನೈಸರ್ಗಿಕ ಮೂಲದಿಂದ ಬಂದು ಸರಳ ರಚನೆಯ ಶರ್ಕರ
ವಸ್ತುಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿದ, ಸುವಾಸನೆಯುಳ್ಳ ಹಾಗೂ
ಒಳ್ಳೆಯ ರುಚಿಯುಳ್ಳದ್ದಾಗಿ ಅಮೃತವೆನಿಸಿಕೊಳ್ಳುವ ಅರ್ಹತೆ ಹೊಂದಿದೆ. ದೈಹಿಕ
ಚೈತನ್ಯವನ್ನು ನೀಡಬಲ್ಲ ಜೇನುತುಪ್ಪ ಹಾಲಿನೊಂದಿಗೆ ಸೇವಿಸಿದರೆ ಪರಿಪೂರ್ಣ
ಆಹಾರವಾಗಬಲ್ಲದು. ಬೇಗ ಜೀರ್ಣವಾಗಿ ರಕ್ತಗತವಾಗುವುದರಿಂದ ಮಕ್ಕಳಿಗೆ,
ವೃದ್ದರಿಗೆ, ರೋಗಿಗಳಿಗೆ ಒಳ್ಳೆಯ ಆಹಾರ.
ಹಾಲಿನಲ್ಲಿ, ನೀರಿನಲ್ಲಿ ಜೇನುತುಪ್ಪ ಸೇವಿಸುವುದಲ್ಲದೆ, ಕಾಫಿ, ಟೀಯಲ್ಲಿ
ಸಕ್ಕರೆಗೆ ಬದಲು ಮಧು ಸೇರಿಸಿ ಕುಡಿಯಬಹುದು. ಚಪಾತಿಯ ಜೊತೆಗೆ
ಜೇನುತುಪ್ಪ, ಬೆಣ್ಣೆ ಬೆರೆಸಿ ತಿಂದರೆ ಸ್ವಾದಿಷ್ಟವಾಗಿರುತ್ತದೆ. ಬೇಸಿಗೆಯಲ್ಲಿ ಒಂದು
ಲೋಟ ತಣ್ಣೀರಿಗೆ ಒಂದು ಹೋಳು ನಿಂಬೆಯ ರಸ, ಒಂದು ಔನ್ಸ್‌ ಜೇನುತುಪ್ಪ
ಸೇರಿಸಿ ಕುಡಿಯಬೇಕು. ಚಳಿಗಾಲದಲ್ಲಿ ಬಿಸಿನೀರಿಗೆ ಜೇನುತುಪ್ಪ, ನಿಂಬೆರಸ ಬೆರೆಸಿ
ಕುಡಿಯಬೇಕು. ಬ್ರೆಡ್‌, ಬಿಸ್ಕತ್‌ಗಳನ್ನು ಸುಡುವಾಗ ಜೇನುತುಪ್ಪ ಸೇರಿಸಿದರೆ
ಅವುಗಳ ರುಚಿ, ಸುವಾಸನೆಯನ್ನು ಉತ್ತಮಗೊಳಿಸುವುದಲ್ಲದೆ ಕೆಡದಂತೆ ಹೆಚ್ಚು
ಕಾಲ ಇರುವುದು. ಜೇನುತುಪ್ಪಕ್ಕೆ ತೇವರಹಿತ ಗುಣವಿರುವುದರಿಂದ ಈ ಖಾದ್ಮ
ವಸ್ತುಗಳು ಒಣಗದೇ ಮೆದುವಾಗಿರುವುವು. ಹಣ್ಣುಗಳು, ಲಘು ತಿಂಡಿ, ಕೋಸಂಬರಿ
ಗಳೊಂದಿಗೆ ರುಚಿ ಮತ್ತು ಸುವಾಸನೆಗಾಗಿ ಜೇನುತುಪ್ಪ ಸೇರಿಸಬಹುದು.
ಮಧು ಸೌಂದರ್ಯವರ್ಥಕವೆಂದೂ ಹೇಳಲ್ಪಟ್ಟಿದೆ. ಮಹಿಳೆಯರು
ಪ್ರತಿದಿನವೂ ಮಿತವಾಗಿ ಸೇವಿಸುವುದಾದರೆ ಮುಖಕ್ಕೆ ಕಾಂತಿಯನ್ನು, ಕಣ್ಣಿಗೆ
ಹೊಳಪನ್ನು ಕೊಡುತ್ತದೆ. ಹಿಂದುಗಳಲ್ಲಿ ಯಜ್ಞಯಾಗಾದಿ, ದೇವತಾರ್ಚನೆ ಶ್ರಾದ್ದ
ಗಳಲ್ಲೂ; ಶಿಶುಜನನವಾದ ಕೂಡಲೇ ಶುದ್ದಿಯ ಸಂಕೇತವಾಗಿ ಚೀಪಿಸುವುದಕ್ಕೂ
ಜೇನುತುಪ್ಪ ಬಳಕೆಯಲ್ಲಿದೆ. ರೋಮನ್‌ ಕ್ಯಾಥೋಲಿಕ್‌ ಕ್ರೈಸ್ತರು ಹಬ್ಬಗಳಲ್ಲಿ
ಮಧುರಸವನ್ನು (Mead) ತಯಾರಿಸಿ ಉಪಯೋಗಿಸುವರು. ಪವಿತ್ರ ಕುರಾನಿನಲ್ಲಿ
ಮಧು ಮತ್ತು ಅದರ ಉಪಯೋಗದ ಮೇಲೆ ಒಂದು ಅಧ್ಯಾಯವೇ ಇದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 103
ಪಾಶ್ಚಿಮಾತ್ಮ ದೇಶಗಳಲ್ಲಿ ನಮಗೆ ವಿಚಿತ್ರವೆನಿಸುವ ಅನೇಕ ರೀತಿಗಳಲ್ಲಿ
ಜೇನುತುಪ್ಪ ಉಪಯೋಗಿಸುವರು. ದ್ರಾಕ್ಷಾರಸ, ಮೀಡ್‌ ಮತ್ತು ಮದ್ಯಸಾರ
ಸಂಬಂಧದ ಪಾನೀಯಗಳ ತಯಾರಿಕೆ, ಚರ್ಮದ ಮತ್ತು ಕಾಂತಿವರ್ಧಕ ಔಷಧಗಳು
(Lotions); ಹಸುಗಳ ಹಾಲಿನ ಉತ್ಪನ್ನ ಹೆಚ್ಚಿಸುವುದಕ್ಕೆ, ಜೂಜಿನ ಕುದುರೆಗಳ
ಸತ್ವ ಹೆಚ್ಚಿಸಲು, ಮಾಂಸಕ್ಕಾಗಿ ಬೆಳೆಸಿದ ದನ, ಕೋಳಿ, ಮೀನುಗಳನ್ನು
ಕೊಬ್ಬಿಸುವುದಕ್ಕೆ; ಸಿಗರೇಟು ಮತ್ತು ಹೊಗೆಸೊಪ್ಪು ರಚನೆ ಮತ್ತು ರುಚಿ ಉತ್ತಮ
ಗೊಳಿಸುವುದಕ್ಕೆ ಮತ್ತು ಅದರಲ್ಲಿ ತೇವವಿರುವಂತೆ ಮಾಡಲು; ಚ್ಕುಯಿಂಗ್‌
ಗಮ್‌ಗೆ ಸಿಹಿರುಚಿ ಕೊಡುವುದಕ್ಕೆ ಜೇನುತುಪ್ಪ ಉಪಯೋಗಿಸುವರು. ಮೋಟಾರು
ವಾಹನಗಳ ಶಾಕ್‌ ಅಬ್ಸಾರ್ಬರ್ಸ್‌ಗಳಲ್ಲಿ, ಗಾಲ್ಫ್‌, ಆಟದ ಚೆಂಡುಗಳ ಒಳಗೂ
ಮಧುವನ್ನು ಉಪಯೋಗಿಸುತ್ತಾರೆ. ಸಸ್ಕ ಬೆಳವಣಿಗೆಗೆ ಉತ್ತೇಜಕವೆಂದೂ ಹಾಗೂ
ಕಡ್ಡಿಗಳು ಬೇರು ಬಿಡಲು ಸಹಾಯಕವೆಂದು ತಿಳಿದುಬಂದಿದೆ. ಅಮೇರಿಕದಲ್ಲಿ
ಭೋಜನ ಕಾಲದಲ್ಲಿ ಜನರು ಚಟ್ನಿ, ಉಪ್ಪಿನಕಾಯಿಗಳಿಗೆ ಉಪಭೋಕ್ಸ್ಯವಾಗಿ
ಉಪಯೋಗಿಸುತ್ತಾರೆ. ಜೇನುತುಪ್ಪವು ಸದಾ ಒಂದೇ ಸಮನಾದ ಗುಣ
ಹೊಂದಿರುವುದಿಲ್ಲ. ಬೇರೆ ಬೇರೆ ಕಾಲಗಳಲ್ಲಿ, ದೇಶಗಳಲ್ಲಿ, ಹೂಗಳಲ್ಲಿ,
ಜೇನುಹುಳುಗಳು ಜೇನು ಸಂಗ್ರಹಿಸುವುದರಿಂದ, ಆಯಾ ದೇಶ, ಕಾಲ, ಹೂಗಳ
ಗುಣಕ್ಕನುಸಾರವಾಗಿ ವಿಭಿನ್ನಗುಣ ಹೊಂದಿರುವುದು ಸ್ವಾಭಾವಿಕವಾಗಿರುತ್ತವೆ.
ಕಾಲದ ದೃಷ್ಟಿಯಿಂದ ವಿಶ್ಲೇಷಿಸಿದರೆ ಶೀತಕಾಲದಲ್ಲಿ ಸಂಗ್ರಹಿಸಿದ ಜೇನು
ಉತ್ತಮಗುಣವುಳ್ಳದ್ದು. ಬೆಂಕಿಯ ಮೇಲೆ ಕಾಯಿಸಿದ ಜೇನು ವಿಷಕ್ಕೆ
ಸಮಾನವಾಗಿರುತ್ತದೆ. ಹಿಮಾಲಯ ಪ್ರದೇಶಗಳಲ್ಲಿ ದೊರಕುವ ಜೇನು ಇತರ
ಪ್ರದೇಶಗಳಲ್ಲಿ ದೊರೆತ ಜೇನಿನ ಗುಣಕ್ಕಿಂತ ಕಡಿಮೆ ಗುಣ ಉಳ್ಳದ್ದಾಗಿರುತ್ತದೆ.
ಗುಣಗಳು:- ಯೋಗವಾಹೀ : ಅನೇಕ ವಿಧ ಪುಷ್ಪಗಳಿಂದ ಮಕರಂದವನ್ನು
ಸಂಗ್ರಹಿಸಿ ಜೇನು ನೊಣಗಳು ಜೇನುತುಪ್ಪವನ್ನು ತಯಾರಿಸುವುದರಿಂದ
"ಯೋಗವಾಹೀ' ಗುಣವನ್ನು ಹೊಂದಿರುತ್ತದೆ. ಔಷಧಯೋಗಗಳೊಡನೆ
ಜೇನುತುಪ್ಪವನ್ನು ಅನುಪಾನರೂಪದಿಂದ ಸೇವಿಸಿದರೆ ಅನೇಕ ರೋಗಗಳು
ನಾಶವಾಗುತ್ತವೆ. ಜೇನುತುಪ್ಪವು ಯಾವ ಔಷಧದೊಡನೆ ಅಥವಾ ಯಾವ
ಪದಾರ್ಥದೊಡನೆ ಸೇರಿದರೂ ಆ ಔಷಧ ಮತ್ತು ಆ ಪದಾರ್ಥದ ಗುಣವನ್ನು
ವಿಕಾಸಗೊಳಿಸಿ ಸಂಪೂರ್ಣ ಶರೀರವನ್ನು ಶೀಘ್ರವಾಗಿ ವ್ಯಾಪಿಸುತ್ತದೆ.
104 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಆಯುರ್ವೆದ ಪದ್ದತಿಯಲ್ಲಿ ಹೇಳಿರುವಂತೆ ಜೇನುತುಪ್ಪವನ್ನು ಪ್ರಮಾಣಪೂರ್ವಕ


ಉಪಯೋಗಿಸಿದರೆ ನಿಜವಾಗಿಯೂ ಅಮೃತ ಸಮಾನವಾಗಿರುತ್ತದೆ.
ಲೇಪನ: ಶರೀರದ ಯಾವ ಭಾಗದಲ್ಲಿಯಾದರೂ ಕಪವು ಪ್ರಕುಪಿತವಾಗಿ
ಊದಿಕೊಂಡಿದ್ದರೆ ಬೇರೆ ಔಷಧಗಳೊಡನೆ ಜೇನುತುಪ್ಪ ಸೇರಿಸಿ ಶರೀರದ ಒಳಗೆ
ಹಾಗೂ ಹೊರಗೆ ಉಪಯೋಗಿಸುತ್ತಿದ್ದರೆ ಆ ಭಾಗದಲ್ಲಿ ಹೆಚ್ಚಾಗಿದ್ದ ಕಫವು
ಕರಗಿಹೋಗುತ್ತದೆ.
ದೀಪಕ: ಅಜೀರ್ಣವನ್ನು ಉಂಟುಮಾಡುವಂತಹ ಪದಾರ್ಥಗಳನ್ನು ಬಹಳ
ದಿನಗಳಿಂದ ಅತಿಯಾಗಿ ಸೇವಿಸುವುದರಿಂದ, ಮಿತಿಮೀರಿದ ಆಹಾರ ಸೇವನೆಯಿಂದ,
ಅಹಿತ ಪದಾರ್ಥಗಳ ಸೇವನೆಯಿಂದ ಜಠರಾಗ್ನಿ ಮಂದವಾಗಿದ್ದರೆ ಅಂದರೆ ಹಸಿವಾಗ
ದಿರುವುದು, ಹೊಟ್ಟೆಯುಬ್ಬರ, ಎದೆಉರಿ ಮುಂತಾದವುಗಳು ಉಂಟಾಗಿದ್ದರೆ
ಜೇನುತುಪ್ಪವೊಂದನ್ನೇ ಸ್ವತಂತ್ರವಾಗಿ ಇಲ್ಲವೇ ಇತರ ಔಷಧ ಗಳೊಡನೆ ಸೇರಿಸಿ
ಕೊಂಡು ಸೇವಿಸುತ್ತಿದ್ದರೆ ಆಮಾಶಯದಲ್ಲಿರುವ ರಸಗ್ರಂಥಿಗಳು ಪಾಚಕರಸವನ್ನು
ಹುಟ್ಟಿಸಲಾರಂಭಿಸುತ್ತವೆ. ಜಠರಾಗ್ನಿಯು ದೀಪ್ತಗೊಳ್ಳುತ್ತದೆ. ಹಸಿವು ಹೆಚ್ಚಾಗ
ಲಾರಂಭಿಸುತ್ತದೆ. ಜಠರಾಗ್ನಿಯನ್ನು ಪ್ರದೀಪ್ತಗೊಳಿಸುವುದರಿಂದ "ದೀಪಕ' ಎಂದು
ಹೇಳಲಾಗಿದೆ. |
ಗ್ರಾಹೀ : ಹಳೆಯ ಅತಿಸಾರ, ಸಂಗ್ರಹಣಿ, ಮಲಬಂಧ ಮುಂತಾದವು
ಗಳುಂಟಾದಾಗ ಜೇನುತುಪ್ಪವನ್ನು ಎನಿಮಾದ ಮೂಲಕ ಕರುಳುಗಳಿಗೆ ಸೇರಿಸಿದರೆ
ರಸವು ಸಾಕಾದಷ್ಟು ಬರುವುದರಿಂದ ಆಹಾರರಸವು ಸರಿಯಾದ ರೀತಿಯಲ್ಲಿ ಶರೀರದ
ಅಂಗಾಂಗಗಳಿಗೆ ಸೀರುತ್ತದೆ. ಮೇಲೆ ಹೇಳಿದ ತೊಂದರೆಗಳೂ ದೂರ
ವಾಗುವುದರಿಂದ "ಗ್ರಾಹಿ' ಎಂದು ಹೇಳಿದ್ದಾರೆ.
ಚಿಕ್ಷುಷ್ಠ : ಕಣ್ಣುಗಳಿಗೆ ದಿನಕ್ಕೊಂದು ಸಲ ಪರಿಶುದ್ಧ ಜೇನುತುಪ್ಪವನ್ನು
ಹಚ್ಚುತ್ತಿದ್ದರೆ ಕಣ್ಣಿನಿಂದ ಗೀಜು ಬರುವುದು, ಕಣ್ಣುಗಳು ಅಂಟಿಕೊಳ್ಳುವುದು
ಮೊದಲಾದವು ನಾಶವಾಗಿ ಕಣ್ಣುಗಳು ಸ್ವಚ್ಛವಾಗುವುವು. ಇದಲ್ಲದೇ ಜೇನುತುಪ್ಪ
ಸೇವಿಸುವುದರಿಂದಲೂ ಕಣ್ಣುಗಳಿಗೆ ಕಾಂತಿ ಉಂಟಾಗುತ್ತದೆ.
ಸ್ವರಶುದ್ಧ : ಗಂಟಲಿನಲ್ಲಿ ಕಫದೋಷವು ಹೆಚ್ಚಾಗಿ ಸ್ವರಭಂಗವಾಗಿದ್ದರೆ
ಅಂದರೆ ಒಡಕು ಸ್ವರ ಬರುತ್ತಿದ್ದರೆ ಜೇನುತುಪ್ಪವನ್ನು ದಿನಕ್ಕೆ ಏಳರಿಂದ ಎಂಟು
ಸಲ ನೆಕ್ಕುತ್ತಿದ್ದರೆ ಸ್ವರವು ಶುದ್ಧವಾಗುತ್ತದೆ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 105
ವೃಷ್ಠ : ಬಹಳ ಕ್ಲೀಣವಾಗಿರುವವರು ಅಥವಾ ಯಕೃತ್ತಿನ (iver)
ದುರ್ಬಲತೆಯಿಂದ ನರಳುತ್ತಿರುವವರಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ
ಆಹಾರವಾಗಿ ಉಪಯೋಗಿಸುವುದು ಉತ್ತಮವಾಗಿದೆ. ಕಾಮೋದ್ದೀಪಕವಾಗಿಯೂ
ಕೆಲಸ ಮಾಡುತ್ತದೆ.
ಮೇಧ್ವ : ಪ್ರತಿದಿನ ಜೇನುತುಪ್ಪ ಸೇವಿಸುತ್ತಿದ್ದರೆ ಮೆದುಳಿನ ದುರ್ಬಲತೆ
ದೂರವಾಗಿ ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ.
ವ್ರಣಶೋಧಕ : ವ್ರಣಗಳು ಊದಿಕೊಂಡು ಕೀವು, ರಕ್ತ ಸೋರುತ್ತಿದ್ದರೆ
ಜೇನುತುಪ್ಪವನ್ನು ಹಚ್ಚುವುದರಿಂದ ವ್ರಣವು ಶುದ್ದವಾಗುತ್ತದೆ.
ವ್ರಣರೋಪಕ: ವ್ರಣಗಳು ಬೇಗ ಗುಣವಾಗಬೇಕಾದರೆ ಜೇನುತುಪ್ಪವನ್ನು
ಆಯಿಂಟ್‌ಮೆಂಟ್‌ನಂತೆ ಮೇಲೆ ಹಚ್ಚಬೇಕು.
]) ಮಧುಮೇಹ (ಡಯಾಬಿಟೀಸ್‌) ರೋಗದಲ್ಲಿ ಇದು ಉತ್ತಮವಾದ
ಪಥ್ಮವಾಗಿರುತ್ತದೆ. ಈ ಕಾಯಿಲೆಯಲ್ಲಿ ಯಕೃತ್‌ ಮತ್ತು ಪಿತ್ತಕೋಶಗಳ
ಕ್ರಿಯೆಗಳು ಕುಂಠಿತಗೊಂಡಿರುತ್ತವೆ. ಈ ಕಾರಣದಿಂದ ರೋಗಿಯು ಸಕ್ಕರೆ ಹಾಗೂ
ಇತರ ಮಧುರ ಪದಾರ್ಥಗಳನ್ನು ಅರಗಿಸಿಕೊಳ್ಳುವುದಿಲ್ಲ. ಸಕ್ಕರೆಯು ಜೀರ್ಣ
ವಾಗದೇ ಮಲಮೂತ್ರಗಳ ಮಾರ್ಗದಿಂದ ಹೊರಗೆ ಬಂದುಬಿಡುತ್ತದೆ. ಉಳಿದಿದ್ದು
ಕಲ್ಮಶ ರೂಪದಲ್ಲಿ ಉದರದಲ್ಲಿ ಉಳಿಯುತ್ತದೆ. ಸಾಮಾನ್ಯವಾಗಿ ಮಧುರರಸ
ಪ್ರಧಾನವಾದ ಆಹಾರವು ಉದರದಲ್ಲಿ ರಾಸಾಯನಿಕ ಕ್ರಿಯೆಯಿಂದ ದ್ರಾಕ್ಷಾ ಶರ್ಕರ
(ಗ್ಲುಕೋಸ್‌) ರೂಪ ತಾಳುವುದು ಸ್ವಾಭಾವಿಕವಾಗಿರುತ್ತದೆ. ಆದರೆ ಮಧುಮೇಹ
ರೋಗವು ಹೆಚ್ಚಾದಾಗ ಯಕೃತ್ತಿನಲ್ಲಿ ಆ ಸಕ್ಕರೆ ಮಾಡುವ ಶಕ್ತಿಯು ಇರುವುದಿಲ್ಲ.
ಆಗ ಮಧುರ ಪದಾರ್ಥಗಳು ಬೇಗನೆ ಗ್ಲುಕೋಸ್‌ ರೂಪವನ್ನು ಹೊಂದುವುದಿಲ್ಲ.
ಶರೀರ ಪೋಷಣೆಗೆ ಅತ್ಕಾವಶ್ಯಕವಾಗಿರುವ ಈ ಸಕ್ಕರೆಯ ಅಭಾವವನ್ನು ದೂರ
ಮಾಡುವುದಕ್ಕಾಗಿ ಇತರ ವಿಧ ಸಕ್ಕರೆಗಳನ್ನು ಸೇವಿಸುವುದು ಅಪಥ್ಯವಾಗುತ್ತದೆ.
ಇದಕ್ಕೆ ದುಗ್ಧ ಶರ್ಕರಾ, ಫಲಶರ್ಕರಾ ಉಪಯೋಗಿಸಬೇಕಾಗುತ್ತದೆ.
ಉಪಯೋಗಿಸಿದರೂ ಇದರಲ್ಲಿ ಅಧಿಕಾಂಶದಲ್ಲಿ ದ್ರಾಕ್ಷಾ ಶರ್ಕರಾ ಇರುವುದಿಲ್ಲ.
ಆದಕಾರಣ ಜೇನುತುಪ್ಪ ಉಪಯೋಗಿಸುವುದು ಬಹಳ ಹಿತಕರವಾಗಿರುತ್ತದೆ.
ಜೇನುತುಪ್ಪದಲ್ಲಿ ಸ್ವಾಭಾವಿಕ ರೀತಿಯಲ್ಲಿ ಸಂಗ್ರಹಿಸಲ್ಪಟ್ಟಿರುವ ದ್ರಾಕ್ಷಾಶರ್ಕರಾ
(ಗ್ಲುಕೋಸ್‌) ಅತ್ಯಧಿಕ ಪ್ರಮಾಣದಿಂದ ಅಡಕವಾಗಿರುತ್ತದೆ. ಅಗ್ನಿದೀಪನ
100 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಗುಣವಿರುವುದರಿಂದ ಯಕೃತ್ತಿಗೆ ಆಯಾಸವಾಗದಂತೆ ವರ್ತಿಸುವ ಗುಣವಿದ್ದ ಕಾರಣ


ಇದು ಉತ್ತಮ. ಮಧುಮೇಹ ರೋಗಿಗಳು ವೈದ್ಯರನ್ನು ಸಂಪರ್ಕಿಸಿ ಎಷ್ಟು
ಪ್ರಮಾಣದಲ್ಲಿ ಜೇನುತುಪ್ಪ ಸೇವಿಸಬಹುದು ಎಂಬುದನ್ನು ನಿರ್ಧರಿಸಬೇಕು. ಬೇರೆ
ಜುಮಷಷ ಔಷಧಗಳೊಡನೆ ಅನುಪಾನವಾಗಿ ಜೇನು ಸೇವಿಸಬಹುದು.
ರ ಬಹಳ ಉಷ್ಣದಿಂದ ಬಾಯೊಳಗೆ ಹುಣ್ಣಾಗಿದ್ದರೆ (50718005) ಜೇನು
ತುಪ್ಪ ಹಚ್ಚುವುದರಿಂದ ಇಲ್ಲವೇ ನೀರಿನೊಡನೆ ಸೇರಿಸಿ ಬಾಯಿ ಮುಕ್ಕಳಿಸು
ವುದರಿಂದ ಹುಣ್ಣು ವಾಸಿಯಾಗುತ್ತದೆ.
೧ ಭೇದಿಯಾಗುತ್ತಿದ್ದರೆ ದಾಳಿಂಬೆಯ ರಸದಲ್ಲಿ ಜೇನುತುಪ್ಪ ಸೇರಿಸಿ
ಕುಡಿಯಬೇಕು.
೧0 ವಾಂತಿಯಾಗುತ್ತಿದ್ದರೆ ಅಳಲೆಕಾಯಿ ಚೂರ್ಣದೊಡನೆ ಬೆರೆಸಿ
ಉಪಯೋಗಿಸಬೇಕು.
2. ನೆಗಡಿ ಅಥವಾ ಶೀತದಿಂದ ಗಂಟಲು ಕಟ್ಟಿ ಧ್ವನಿಯು ಸರಿಯಾಗಿ
ಹೊರಡದಿದ್ದರೆ ದಿನಕ್ಕೆ ಮೂರು ನಾಲ್ಕು ಸಲ ಅರ್ಧ ಚಮಚದಿಂದ ಒಂದು
ಚಮಚದವರೆಗೆ ಜೇನುತುಪ್ಪ ನೆಕ್ಕುತ್ತಿರಬೇಕು.
0 ಬೊಜ್ಜು ಕರಗುವುದಕ್ಕೆ ಕುದಿಸಿ ಆರಿಸಿದ ಒಂದು ಲೋಟ ನೀರಿಗೆ ಎರಡು
ಚಮಚ ಜೇನುತುಪ್ಪ ಸೇರಿಸಿ ಕುಡಿಯುತ್ತಿದ್ದರೆ ತೂಕ ಕಡಿಮೆಯಾಗುತ್ತದೆ.
೧ ಚೇಳು ಕಡಿದಾಗ ಆ ಭಾಗಕ್ಕೆ ಜೇನುತುಪ್ಪ ಪದೇ ಪದೇ ಲೇಪನ
ಮಾಡುತ್ತಿದ್ದರೆ ಉರಿ ಕಡಿಮೆಯಾಗುತ್ತದೆ.
೧ ಬಿಕ್ಕಳಿಕೆಯಲ್ಲಿ - ನವಿಲುಗರಿ ಸುಟ್ಟ ಬೂದಿ ಮತ್ತು ಜೇನುತುಪ್ಪ
ಮಿಶ್ರಮಾಡಿ ಸೇವಿಸಬೇಕು.
೧ ಶ್ವೇತಪದರ- (ಬಿಳಿಸೆರಗು) ರಸಬಾಳೆ ಹಣ್ಣನ್ನು ತೆಗೆದುಕೊಂಡು ಅದರ
ಜೊತೆಗೆ % ಚಮಚ ತುಪ್ಪ, % ಚಮಚ ಜೇನುತುಪ್ಪ ಬೆರೆಸಿ ಬೆಳಿಗ್ಗೆ ಮತ್ತು
ರಾತ್ರಿ ಒಂದು ವಾರದವರೆಗೆ ಸೇವಿಸಬೇಕು. ಬಾಳೆಹಣ್ಣು ನೆಲ್ಲಿಕಾಯಿ ರಸ್ತ
ಚೇನುತುಪ್ಪ ಸೇರಿಸಿ ಸೇವಿಸುವುಧರಿಂದಲೂ ಬಿಳಿಸೆರಗು ಕಡಿಮೆಯಾಗುತದೆ. ಈ
ಸಮಯದಲ್ಲಿ ಉಷ್ಣಪದಾರ್ಥ' ಸೇವನೆ ವರ್ಜಿಸಬೇಕು.
ರ ಕೆಮ್ಮು - ತುಂಬೆ ಸೊಪ್ಪಿನ ರಸ 1 ಚಮಚ, ಆಡೆ ಸೋಗೆ ರಸ 1
ಚಮಚ ಜೇನುತುಪದಲ್ಲಿ ಸೇರಿಸಿ ಸೇವಿಸಬೇಕು. ಈರುಳ್ಳಿಯನ್ನು ತುಪ್ಪದಲ್ಲಿ
ಹುರಿದು ಜೇನು ಬೆರೆಸಿ ದಿನಕ್ಕೆ ಮೂರು ಸಲ ಸೇವಿಸಬೇಕು.
ಔಷಧೀಯ ಗುಣವುಳ್ಳ ಉಪಯುಕ್ತ ಹಾದಿ
ಸೊಪ್ಪು - ತರಕಾರಿಗಳು 107
ಔ ಶುಂಠಿ, ಹಿಪ್ಪಲಿ, ತೇಜಪತ್ರೆ, ಸೈಂಧವಲವಣಗಳ ಸಮಭಾಗ
ಚೂರ್ಣವನ್ನು ಜೇನುತುಪ್ಪದೊಡನೆ ಸೇರಿಸಿ ದಂತಗಳಿಗೆ ಉಜ್ಜಬೇಕು. ಇದರಿಂದ
ಹಲ್ಲುಗಳಲ್ಲಿ ರಕ್ತ ಸೋರುವುದು, ಒಸಡು ಊದಿಕೊಳ್ಳುವುದು ಕಡಿಮೆಯಾಗುತ್ತದೆ.
೧ ಕ್ರಿಮಿ - ವಾಯುವಿಡಂಗ ಮತ್ತು ನುಗ್ಗೆಚಕ್ಕೆ ಕುಟ್ಟಿ ಕಷಾಯಮಾಡಿ
ಜೇನುತುಪ್ಪದೊಡನೆ ಸೇವಿಸಿದರೆ ಉದರದಲ್ಲಿರುವ ಕ್ರಿಮಿಗಳು ನಾಶವಾಗುವುವು.
೧ ತಾಯಿಯ ಹಾಲನ್ನು ಸೇವಿಸದ ಮಗುವಿನ ತೂಕ ಕಡಿಮೆ ಇರುತ್ತದೆ.
ಹಸುವಿನ ಹಾಲಾಗಲೀ, ತಾಯಿಯ ಹಾಲಾಗಲೀ ಹೆಚ್ಚು ಸೇವಿಸುವ ಮಕ್ಕಳಿಗೆ
ಕಬ್ಬಿಣದಂಶ ಹೆಚ್ಚಾಗಿ ಸಿಗದಿರುವುದರಿಂದ ಮಕ್ಕಳು ಚುರುಕಾಗಿರುವುದಿಲ್ಲ.
ಇದನ್ನು ನೀಗಿಸಲು ಜೇನುತುಪ್ಪ ಕೊಡಬೇಕು.
[2 ಮಲಗುವ ಮೊದಲು ಒಂದು ಲೋಟ ಹಾಲಿಗೆ ಎರಡು ಚಮಚ ಜೇನು
ಸೇರಿಸಿ ಕುಡಿಯುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.
೧' ಗರ್ಭಿಣಿಯರು ಜೇನುತುಪ್ಪ ಸೇವಿಸಿದರೆ ಎದೆ ಹಾಲಿನ ಉತ್ಪತ್ತಿ,
ಮಗುವಿನ ಬೆಳವಣಿಗೆ ಚೆನ್ನಾಗಿ ಆಗುವುದು. ಹೆರಿಗೆಯಾಗಿ 4ನೇ ದಿನದಿಂದ
ಜೇನುತುಪ್ಪವನ್ನು ಎರಡು ತಿಂಗಳ ತನಕ ದಿನಕ್ಕೆ ಎರಡು ಚಮಚ ಸೇವಿಸಿದರೆ
ಶರೀರಕ್ಕೆ ಶಕ್ತಿಯು ಬರುವುದು.
೧ರ ರಕ್ತದೊತ್ತಡ ಹೆಚ್ಚಾಗಿರುವವರು ಬೆಳಿಗ್ಗೆ ಖಾಲಿ ಹೊಟ್ಟೆಗೆ ಮೂರು
ಚಮಚ ಜೇನುತುಪ್ಪವನ್ನು ನೀರಿನಲ್ಲಿ ಸೇರಿಸಿ ಕುಡಿಯಬೇಕು.
೧0 ಹೃದಯರೋಗದಿಂದ ಬಳಲುವವರು ಪೊಟಾಷಿಯಂ ಮತ್ತು
ಖನಿಜಗಳು ಅಧಿಕ ಪ್ರಮಾಣದಲ್ಲಿರುವ ಜೇನುತುಪ್ಪವನ್ನು ದಿನಕ್ಕೆ ಎರಡು ಸಲ
ಎರಡೆರಡು ಚಮಚದಂತೆ ಸೇವಿಸಬೇಕು.
೧. ಕುಸ್ತಿಪಟುಗಳು ಹಾಗೂ ದಿನಾಲೂ ವ್ಯಾಯಾಮ ಮಾಡುವವರು
ಜೇನುತುಪ್ಪವನ್ನು ಶಕ್ತಿವರ್ಧಕವಾಗಿ ಉಪಯೋಗಿಸಬೇಕು.
ವರ್ಜನೀಯ ಮಧು - ಜೇನುತುಪ್ಪವನ್ನು ಬೆಂಕಿಯ ಮೇಲೆ ಬಿಸಿ
ಮಾಡಬಾರದು. ಹಾಗೆ ಮಾಡಿದರೆ ವಿಷಕ್ಕೆ ಸಮಾನವಾಗುತ್ತದೆ. ಉಷ್ಣಕಾಲದಲ್ಲಿ
ಬಿಸಿನೀರಿನೊಡನೆ ಸೇವಿಸಬಾರದು. ಜೇನುತುಪ್ಪ ಮತ್ತು ತುಪ್ಪವನ್ನು
ಸಮಪ್ರಮಾಣದಲ್ಲಿ ಮಿಶ್ರಮಾಡಿ ಸೇವಿಸಬಾರದು. ಜೇನುತುಪ್ಪವನ್ನು ಅಳತೆಮೀರಿ
ಸೇವನೆ ಮಾಡಬಾರದು.
108 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಶುದ್ದ ಮಧುವಿನ ಪರಿಶೀಲನೆ : ಪರಿಶುದ್ಧವಾದ ಜೇನುತುಪ್ಪವು


ಅಮೃತವಾದರೆ ನಕಲಿ ಹಾಗೂ ಅಶುದ್ಧವಾದ ಜೇನುತುಪ್ಪವು ವಿಷವಾಗಿರುವುದು.
ಇತರ ವಸ್ತುಗಳಂತೆ ಜೇನುತುಪ್ಪ ವನ್ನೂ ಸಹ ಸಾದೃಶ್ಯ ವಸ್ತುಗಳಿಂದ ಕಲಬೆರಕೆ
ಯಾಗಿ ಅಸಲೀ ಜೇನುತುಪ್ಪವನ್ನು ಮೀರಿಸಿ 'ಲಾಗಡಿಗಳನ್ನು ಮಾರಾಟ
ಮಾಡುತ್ತಾರೆ. ಜೇನಿನಲ್ಲಿ ಸಕ್ಕರೆ, ಬೆಲ್ಲ, ಮೈದಾ, ಜಿಲಾಟಿನ್‌, ಆರಾರೋಟ್‌
ಮುಂತಾದ ವಸ್ತುಗಳನ್ನು ಮಿಶ್ರಮಾಡಿ ನಿಜವಾದ ಜೇನುತುಪ್ಪಕ್ಕೆ ತಲೆಹೊಡೆದಂತೆ
ಮಾರುತ್ತಾರೆ. ಇಂತಹ ಕೃತ್ರಿಮತೆ ಇರುವುದರಿಂದ ನಿಜವಾದ ಜೇನಾವುದು, ಸುಳ್ಳು
ಜೇನಾವುದು ಎಂದು ಗುರುತಿಸುವುದು ಅವಶ್ಯಕ. ಸರ್ಕಾರದವರು ಪರೀಕ್ಷಿಸಿ
ಪರಿಶುದ್ಧತೆಯ ಗುರುತಾದ ""ಅಗ್‌ಮಾರ್ಕ್‌ ಲೇಬಲ್‌'' ಅಂಟಿಸಿರುವ
ಜೇನುತುಪ್ಪವನ್ನು, ಅದರಲ್ಲಿಯೂ ಅತ್ಯಂತ ಶ್ರೇಷ್ಠವೆನಿಸಿದ ""ಅಗ್‌ಮಾರ್ಕ್‌
ಎ ಗ್ರೇಡಿನ'' ಜೇನುತುಪ್ಪವನ್ನೇ ಗ್ರಾಹಕರು ಕೊಂಡುಕೊಳ್ಳಬೇಕು.
ಶುದ್ಧ ಜೇನುತುಪ್ಪವನ್ನು ತಿಳಿಯುವ ಬಗೆ-
(1) ಒಂದು ಚಮಚ ಶುದ್ಧ ಜೇನುತುಪ್ಪವನ್ನು ಅಂಗೈಯಲ್ಲಿ ಹಾಕಿ ಒಂದು
ಚಿಟಿಕೆ ಸುಣ್ಣ ಬೆರೆಸಿ ಕಲಸಿದರೆ ಕೂಡಲೇ ಕೈಗೆ ಸಹಿಸಲು ಅಸಾಧ್ಯವಾದ ಬಿಸಿ
ಏರುತ್ತದೆ. ಕೃತ್ರಿಮತೆ ಇದ್ದರೆ ಬಿಸಿ ಕಡಿಮೆ ಇರುತ್ತದೆ.
(2) ಜೇನುತುಪ್ಪವನ್ನು ನೀರಿನ ಲೋಟಕ್ಕೆ ಹಾಕಿದಾಗ ನೀರಿನ ತಳಭಾಗಕ್ಕೆ
ಜೇನುತುಪ್ಪ ಹೋಗಿ ನಿಂತರೆ ಅದು ಶುದ್ಧವೆನಿಸುವುದು. ಏಕೆಂದರೆ ಜೇನುತುಪ್ಪದ
ಸಾಂದ್ರತೆಯು ನೀರಿನ ಸಾಂದ್ರತೆಗಿಂತ ಭಾರವಾಗಿರುವುದು. ಆದ ರಿಂದ ಅದು
ತಳಭಾಗಕ್ಕೆ ಇಳಿಯುತ್ತದೆ. ಪ ಜೇನುತುಪ್ಪವು ಶುದ್ಧವಾಗಿರುವುದರಿಂದ ಇದನ್ನು
ಉತ್ತಮ ಎಂದು ನಿರ್ಧರಿಸಬಹುದು.
(3) ಜೇನುತುಪ್ಪವನ್ನು ಶುಚಿಯಾದ, ಬಣ್ಣವಿಲ್ಲದ ಗ್ಲಾಸಿಗೆ ಹಾಕಿದಾಗ
ಮೊದಲು ನೀರಿನಂತೆ ವಿಪರೀತ ತಿಳಿಯಾಗಿದ್ದು. ಕೊನೆಗೆ ದಪ್ಪವಾಗಿ ಬೇರೆ
ಬೇರೆಯಾಗಿ ಕಂಡುಬಂದರೆ ಈ ಜೇನುತುಪ್ಪ ಅಷ್ಟೊಂದು ಉತ್ತಮವಲ್ಲ.
ಆದ್ದರಿಂದ ಗ್ಲಾಸಿಗೆ ಜೇನುತುಪ್ಪ ಹಾಕಿದಾಗ ಅದು ಏಕರೂಪವಾಗಿದ್ದರೆ ಶುದ್ದ
ಚೇನುತುಪ್ಪವೆನಿಸವುದು.
(4) ಜೇನುತುಪ್ಪವನ್ನು ಶುಚಿಯಾದ ವರ್ಣವಿಲ್ಲದ ಗ್ಲಾಸಿಗೆ ಸುರಿದು ಬೆಳಕಿನ
ಕಡೆಗೆ ಹಿಡಿದು ಮತ್ತೊಂದು ಬದಿಯಿಂದ ನೋಡಿದಾಗ ಪಾರದರ್ಶಕವಾದ
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 109
ಹೊಳೆಯುವ ಗುಣವಿದ್ದು ಕನ್ನಡಿಯಂತೆ ಅದರಲ್ಲಿ ನಮ್ಮ ಮುಖ ಕಂಡರೆ ಇಂತಹ
ಜೇನುತುಪ್ಪವು ಶುದ್ದವೆನಿಸುವುದು.
(5) ಜೇನುತುಪ್ಪ ತುಂಬಿರುವ ಬಾಟಲಿಯಿಂದ ಜೇನುತುಪ್ಪವನ್ನು ಅಂಗೈಗೆ
ಹಾಕಿಕೊಳ್ಳುವಾಗ ಅದು ಏಕರೂಪವಾಗಿ ಅಂಗೈಗೆ ಸುರುಳಿ ಸುರುಳಿಯಾಗಿ ಚಕ್ರ
ತಿರುಗಿದಂತೆ ಬಿದ್ದರೆ ಶುದ್ದವಾಗಿದೆ ಎಂದು ತಿಳಿಯಬೇಕು. ಜೇನುತುಪ್ಪವು ಅಂಗೈಗೆ
ಚಕ್ರದಂತೆ ಬೀಳದೇ ಸಿಕ್ಕಾಪಟ್ಟೆಬೀಳುತ್ತಾ ಮಧ್ಯದಲ್ಲಿ ಇಳಿಯುವಾಗ ತುಂಡಾದರೆ
ಸಿ ಶುದ್ದವಲ್ಲ ಸಂತು ತಿಳಿಯಬೇಕು.
(6) ಶುದ್ಧವಾದ ಜೇನುತುಪ್ಪ ಪಾರದರ್ಶಕವಾಗಿದ್ದು ಪರಾಗದ
ಸುವಾಸನೆಯಿಂದ ಕೂಡಿ ಪರಾಗದ ಬಣ್ಣವನ್ನು ಹೋಲುತ್ತದೆ.
(7) ಅಸಲೀ ಜೇನನ್ನು ನಾಯಿಯು ಮೂಸುತ್ತದೆಯೇ ಹೊರತು
ತಿನ್ನುವುದಿಲ್ಲ.
(8) ಹತ್ತಿಯಿಂದ ಬತ್ತಿಮಾಡಿ, ಜೇನಲ್ಲಿ ಮುಳುಗಿಸಿ ದೀಪದಂತೆ ಉರಿಸಿದರೆ,
ಯಾವ ತರಹದ ಶಬ್ದಮಾಡದೇ ಉರಿಯುತ್ತದೆ.
ಒಂದು ಕೆ.ಜಿ. ಜೇನುತುಪ್ಪದಲ್ಲಿ 3,500 ಕ್ಕಾಲೊರಿ ದೊರೆಯುತ್ತದೆ.
(1) ಒಂದು ಕೆ.ಜಿ. ಜೇನುತುಪ್ಪ - 65 ಕೋಳಿ ಮೊಟ್ಟೆಗಳಿಗೆ ಸಮವಾಗಿರುತ್ತದೆ.
(2) ಒಂದು ಕೆ.ಜಿ. ಭು -: 12 ಕೆ.ಜಿ. ಸೇಬುಹಣ್ಣು ಗಳಿಗೆ ಸಮ
Rc 0% - 100 ರಸಬಾಳೆ ಹಣ್ಣು ಗಳಿಗೆ ಸಮ
ಯ 1.೫... ೨20ಕೆಜಿ. ಖರ್ಜೂರಕ್ಕೆ ಸಮ
(5) ೧೦ರ. ೫. . ೬ 6ಕಜಿ ದ್ರಾಕ್ಷಿಹಣ್ಣುಗಳಿಗೆ ಸಮ
(kp ಸಕ p _ 7% ಲೀಟರ್‌ ಹಾಲಿಗೆ ಸಮ.
ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರು ನಿತ್ಯದ ತಮ್ಮ ಭೋಜನದ
ಪಟ್ಟಿಯಲ್ಲಿ ಜೇನುತುಪ್ಪವನ್ನು ಸೇರಿಸುತ್ತಿದ್ದರೆಂಬುದು ಎಲ್ಲರಿಗೂ ತಿಳಿದೇ ಇದೆ.
ಕಾಶೀ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪಂಡಿತ ಮದನ್‌ ಮೋಹನ
ಮಾಳವೀಯ ಅವರು ಕಾಯಕಲ್ಪ ಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ಸಮಯದಲ್ಲಿ
ಚೇನುತುಪ್ಪದಲ್ಲಿ ನೆನೆಸಿದ ನೆಲ್ಲಿಕಾಯಿಗಳನ್ನು ಸೇವಿಸುತ್ತಿದ್ದರು.
ಗ್ರೀಕ್‌ ದೇಶದ ವೈದ್ಯಶಾಸ್ತ್ರಜ್ಞ ಹಿಪೋಕ್ರೆಟಿಸ್‌ ಬಹುಕಾಲ ಬದುಕುವ
ಪ್ರ ಸೇವಿಸುವಂತೆ ಉಪದೇಶಿಸು
ಇಚ್ಛೆಯುಳ್ಳ ವ್ಯಕ್ತಿಗಳು ಜೇನುತುಪ್ಪವನ್ನು ಪ್ರತಿದಿನ
ತ್ತಿದ್ದರು. ಪ್ರಸಿದ್ದ ಗಣಿತಶಾಸ್ತ್ರಜ್ಞ ಪೈಥಾಗೋರಸ್‌ ದೀರ್ಫಾಯುಷ್ಕಕ್ಕೆ
110 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು

ಚೇನುತುಪ್ಪವೇ ಮುಖ್ಯ ವಸ್ತುವೆಂದು ಹೇಳಿದ್ದಾರೆ. ರೋಮ್‌ ದೇಶದ ಪ್ಲೀನಿ


ಎಂಬ ತಜ್ಞನು ಪ್ರಪಂಚವನ್ನು ಸುತ್ತಿ ಕೊನೆಗೆ ಜೇನುತುಪ್ಪವನ್ನು ಎಲ್ಲಿ ಹೆಚ್ಚಾಗಿ
ಬಳಸುತ್ತಾರೆಯೋ ಅಲ್ಲಿಯವರು ಸುಖೀ ಜೀವಿಗಳಾಗಿ ದೀರ್ಫಾಯುರಾರೋಗ್ಯ
ಗಳಿಂದ ಜೀವಿಸುತ್ತಾರೆ ಎಂದಿದ್ದಾರೆ. ರಷ್ಕ ದೇಶದ ವಿಜ್ಞಾನಿಯೊಬ್ಬರು ಹುಡುಗರ
ಮೇಲೆ ಜೇನುತುಪ್ಪದ ಪ್ರಯೋಗವನ್ನುಮಾಡಿ ಅವರ ರಕ್ತದಲ್ಲಿ ಹಿಮೋಗ್ಲೋಬಿನ್‌
ಅಂಶ ಜಾಸ್ತಿಯಾಗುವುದು ಕಂಡುಬಂತೆಂದು ತಿಳಿಸಿದ್ದಾ ರೆ. ಸ್ಮಾಟ್‌ಲೆಂಡಿನ ಸರ್‌
ಜವನ್‌ ಆರೋಗ್ಯವಾಗಿದ್ದು 124 ವರ್ಷ ಬದುಕಿದ್ದು ವೃದ್ಧಾಪ್ಯದಲ್ಲೂ ಕೆಲವು
ಮೈಲು ನಡೆಯುತ್ತಿದ್ದನಂತೆ. ಇದಕ್ಕೆ ಕಾರಣ ಅವನ ಆಹಾರವು ಜೇನು, ಹಾಲು,
ತರಕಾರಿ, ನೀರು ಹಾಗೂ ದ್ರಾಕ್ಷಾರಸವಾಗಿತ್ತಂತೆ.
ಭಾರತದಲ್ಲಿ ತಮಿಳುನಾಡಿನ "ಕನ್ಮಾಕುಮಾರಿ' ಜಿಲ್ಲೆಯ ಬೆಟ್ಟಗಳ
ಪ್ರದೇಶವಾದ "ಮಾರ್ತಾಂಡಂ'ಎಂಬುದು ಅತ್ಮಧಿಕ ಜೇನು ಉತ್ಪತ್ತಿಯಾಗುವ
ಸ್ಥಳವಾಗಿರುತ್ತದೆ. ಈ ಸ್ಥಳವನ್ನು ಭಾರತದ 'ಮಧು ಸಾಗರ' ಎನ್ನಬಹುದು.
ಅನಂತರ ಎರಡನೇ ಸ್ಥಾನ ಕೇರಳ ಮತ್ತು ಮಧ್ಯಪ್ರದೇಶದ್ದಾ ಗಿರುತ್ತದೆ. 3ನೇ
ಸ್ಥಾನವು ಕರ್ನಾಟಕವಾಗಿರುವುದು. ಕರ್ನಾಟಕದಲ್ಲಿ ಕೊಡಗು, ದಕ್ಷಿಣ ಕನ್ನಡ,
ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೇನು ಉತ್ಪಾದನೆ ಹೆಚ್ಚಾಗಿ ಕಂಡುಬರುತ್ತ ದೆ.
ಜೇನು ಮೇಣ- ಜೇನು ಮೇಣ ಜೇನುತುಪ್ಪದ್ದೇ ರೂಪಾಂತರ. ಜೇನುಹುಳು
ತಿಂದ ಜೇನುತುಪ್ಪ ಅದರ ಹೊಟ್ಟೆಯಲ್ಲಿರುವ ಮೇಣದ ಗ್ರಂಥಿಗಳಲ್ಲಿ ಮೇಣವಾಗಿ
ಪರಿವರ್ತನೆ ಹೊಂದಿ ಹೊಟ್ಟೆಯ ಅಡಿಭಾಗದಲ್ಲಿರುವ ನಾಲ್ಕು ಜೊತೆ ಮೇಣದ
ಪೊರೆಗಳ ಮೂಲಕ ಹೊರಗೆ ಬರುತ್ತದೆ. ಒಂದು ಕೆ.ಜಿ. ಮೇಣ ಉತ್ಪಾದಿಸಲು
ಜೇನುಹುಳು ಅಂದಾಜು 10 ರಿಂದ 12 ಕೆ.ಜಿ.ಯಷ್ಟು ಜೇನುತುಪ್ಪ ತಿನ್ನ
ಬೇಕಾಗುತ್ತದೆ. ಜೇನುಮೇಣ ತೆಳುಹಳದಿಯಿಂದ ಬೂದುಮಿಶ್ರಿ ತ ಕಂದು ಬಣ್ಣ ಹ
ಘನವಸ್ತು. ಮತ್ತು ಮಧುವಿನ ವಾಸನೆಯುಳ್ಳದ್ದಾಗಿರುತ್ತ ಡೆ ತಣ್ಣಗಿರುವಾಗ
ಪ್ರಡಿಪುಡಿಯಾಗುವಂಥದ್ದು ಮತ್ತು ಹಾಗೇ ಒಡೆದಾಗ ತರಿತರಿಯಾದ ಮತ್ತು
ಸ್ಪಟಿಕಾಕೃತಿ ರೂಪ ಹೊಂದಿದೆ. ಕೈಯಲ್ಲಿ ಹಿಡಿದಾಗ ಕೈಯ ಶಾಖದಿಂದ
ಮೆದುವಾಗುತ್ತದೆ. ಇದು ನೀರಿನಲ್ಲಿ ಕರಗುವುದಿಲ್ಲ. ಆದರೆ ಈಥರ್‌,
ಕ್ಲೊೀರೋಫಾರಂ ಮತ್ತು ಸ್ಲಿರ, ಅಸ್ಥಿರ ತೈಲಗಳಲ್ಲಿ ಪೂರ್ತಿ ಕರಗುತ್ತದೆ.
ರಾಸಾಯನಿಕವಾಗಿ ಜೇನುಮೇಣ ಸಿರೋಟಿಕ್‌ ಅಮ್ಮಮತ್ತು ಮಿರಿಕ್ಸಾನ್‌ ಅಥವಾ
ಮಿರಿಕ್ಕೆಲ್‌ ಪಾಮಿಟೇಜ್‌ಗಳ ಮಿಶ್ರಣ.
ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು 111
ಉಪಯೋಗ:
೧0 ಕಾಂತಿವರ್ಧಕ (€೦smtics) ಗಳ ತಯಾರಿಕೆಯಲ್ಲಿ ಇದರ ಪಾತ್ರ
ಬಹುಮುಖ್ಯ. ಮೇಣದ ಬತ್ತಿ (Candles) ಗಳ ತಯಾರಿಕೆಗೆ ಉಪಯೋಗಿಸು
ತ್ತಾರೆ. ಜೇನುಸಾಕಣೆಯಲ್ಲಿ ಆಧಾರ ಹಾಳೆಗಳ ತಯಾರಿಕೆಗೆ ಅವಶ್ಶಕವಾಗಿದೆ.
ಮುಖಲೇಪಗಳು (8೩೦೮ ೦೮೩/7೪), ಮುಲಾಮುಗಳು (Ointments), ಔಷಧ
ದ್ರವಗಳು (Lಂtions), ಸುಗಂಧಾಂಜನಗಳ (00718605), ರಂಗುಲೇಪಗಳು
(Rouses), ತುಟಿ ಕಡ್ಡಿಗಳು (Lipsticks), ಮೆರಗು ಪದಾರ್ಥಗಳು (Polishes),
ಕುದುರೆಗಳ ಸಜ್ಜು ತೈಲ (8೩೯೧೦55 ೦11), ಮೃದುಚಾಲಕ ವಸ್ತುಗಳು
(Lubricants), ವಿದ್ಯುತ್‌ ಅವಾಹಕ ಸಾಧನಗಳು (Electric insulating
apparatus), ದಂತ ವೈದ್ಯರ ಸಲಕರಣೆಗಳು, ಮಾದರಿಗಾಗಿ ಪ್ರತಿಕೃತಿ ಮಾಡಲು
(Modelling), ಪ್ಲಾಸ್ಟಿಕ್‌ ಆಕೃತಿ, ಶಿಲ್ಪಕಲೆ, ರಕ್ಷಕ ಲೇಪಗಳು (Protective
೦೦೩78), ಜಲಾಭೇದ್ಧ ಸಂಯೋಗ ವಸ್ತುಗಳು (Water proofing
೦೦7೦೪765), ಮೆರುಗೆಣ್ಣೆ ಅಥವಾ ವಾರ್ನೀಷ್‌ಗಳು (Varnishes),
ಬಣ್ಣಗಳು, ಶಾಹಿಗಳು, ಮೇಣಗಳು ಇತ್ಯಾದಿ. ಇದನ್ನು ನೋಡಿದರೆ ಈ ಪ್ರಪಂಚ
ದಲ್ಲಿ ಜೇನುಮೇಣಕ್ಕೆ ಎಂತಹ ಭಾರಿ ಬೇಡಿಕೆಯಿದೆ ಎಂಬುದು ತಿಳಿಯುತ್ತದೆ.
2 ಶರೀರದ ಯಾವ ಭಾಗದಲ್ಲಾದರೂ ನೋವಿದ್ದಾಗ : ಐದು ತೊಲ
ಮೇಣವನ್ನು ಒಂದು ಬಟ್ಟಲಿನಲ್ಲಿ ಹಾಕಿ ಕರಗಿಸಬೇಕು. ಮೇಣವು ಕರಗಿದ ನಂತರ
ಅದರಲ್ಲಿ ಕಾಲು ತೊಲ ಸೈಂಧವಲವಣವನ್ನು ಪುಡಿಮಾಡಿ ಹಾಕಬೇಕು. ನಂತರ
ನೀರಿನಿಂದ. ತುಂಬಿದ ಒಂದು ಪಾತ್ರೆಯ ಬಾಯಿಗೆ ಬಟ್ಟೆಕಟ್ಟಿ ಅದರ ಮೇಲೆ
ಕರಗಿರುವ ಮೇಣವನ್ನು ಹಾಕಬೇಕು. ಸ್ವಲ್ಪ ಸಮಯದ ನಂತರ ನೀರಿನೊಳಗೆ
ಗಟ್ಟಿಯಾಗಿರುವ ಮೇಣವನ್ನು ರೊಟ್ಟಿಯಂತೆ ಅಗಲವಾಗಿ ಮಾಡಿ ಇಟ್ಟು
ಕೊಂಡಿದ್ದು, ಈ ರೊಟ್ಟಿಯನ್ನು ಕಡಿಮೆ ಶಾಖದಲ್ಲಿ ಸ್ವಲ್ಪ ಬಿಸಿಮಾಡಿ ನೋವಿರುವ
ಭಾಗಕ್ಕೆ ಶಾಖವನ್ನು ಕೊಡಬೇಕು. ರೊಟ್ಟಿಯನ್ನು ಕಟ್ಟಲೂಬಹುದು. ಇದರಿಂದ
ನೋವು ಶೀಘ್ರವಾಗಿ ಕಡಿಮೆಯಾಗುವುದು.
ಜೇನು ಚುಚ್ಚುಮುಳ್ಳು : ಗುಲಾಬಿಗೆ ಮುಳ್ಳಿನ ಕಳಂಕವಿರುವಂತೆ
ಅಮೃತದಂತಹ ಜೇನಿನಲ್ಲಿ ಚುರುಕು ಕೊಂಡಿ ಇದೆ. ಮಧುವನ್ನು ಆಸ್ವಾದಿಸು
ವವನು ಜೇನು ಮುಳ್ಳಿನ ಚುರುಕು ಅನುಭವಿಸಬೇಕಾದ್ದು ಅನಿವಾರ್ಯ. ಜೇನಿನ
ಕೊಂಡಿಯ ಅಪಾಯವಿಲ್ಲದಂತೆಯೇ ಅದು ಸಂಗ್ರಹಿಸಿದ ಮಧುವನ್ನು ಕಸಿದು
ಕೊಳ್ಳುವ ಚಾಕಚಕ್ಕತೆಯನ್ನು ಮನುಷ್ಯ ಕರಗತ ಮಾಡಿಕೊಂಡಿರುವುದಲ್ಲದೇ ಜೇನು
112 ಔಷಧೀಯ ಗುಣವುಳ್ಳ ಉಪಯುಕ್ತ ಸೊಪ್ಪು - ತರಕಾರಿಗಳು '

ಮುಳ್ಳಿಗೂ ಉಪಯೋಗ ಹುಡುಕಿಕೊಂಡಿದ್ದಾನೆ.


ಪಾಶ್ಚಿಮಾತ್ಮ ವೈದ್ಯಕೀಯ ಸಂಶೋಧಕರು ಸಂಧಿವಾತ (%(೧೯1!15,
Gout), ಕಟಿವಾಯು (Sciatica), ಇಸುಬು (8026002), ತೊನ್ನು ಮುಂತಾದ
ರೋಗಗಳಿಗೆ ಜೇನುಮುಳ್ಳು ಒಳ್ಳೆಯ ಔಷಧವೆಂದು ಹೇಳಿದ್ದಾರೆ. ಕಾಯಿಲೆಯ
ತೀವ್ರತೆಯನ್ನು ಅನುಸರಿಸಿ ಜೇನುಕುಟುಕುಗಳ ಸಂಖ್ಯೆ ನಿಯಂತ್ರಿಸಬೇಕಾಗುವುದು.
ಅಂದರೆ ರೋಗಸ್ಲಿತಿ ಕಠಿಣವಾದಷ್ಟೂ ಕುಟುಕಲು ಉಪಯೋಗಿಸುವ ಜೇನುಗಳ
ಸಂಖ್ಯೆ ಹೆಚ್ಚಿಸಬೇಕು.
“Bee in his bonnet‘ ಎಂಬ ಇಂಗ್ಲಿಷ್‌ ನಾಣ್ನುಡಿ ತಮಾಷೆಗೆ ಬದಲು
ಅರ್ಥಪೂರ್ಣವಾಗುವ ಸನ್ನಿವೇಶವಿದು. ಜೇನು ಕುಟುಕು ಕೊಂಡಿಯ ವಿಷವನ್ನು
ಸಣ್ಣ ಶೀಷೆಗಳಲ್ಲಿ ತುಂಬಿ ಚುಚ್ಚುಮದ್ದಿನ (Injection) ರೂಪದಲ್ಲಿ
ಉಪಯೋಗಿಸುವ ಪರಿಪಾಠವೂ ಬೆಳೆದಿದೆಯಂತೆ. ರೋಗಗಳ ಚಿಕಿತ್ಸೆಗೆ ಜೇನಿನ
ಉಪಯೋಗ ಪಾಶ್ಚಿಮಾತ್ಮ ದೇಶಗಳಲ್ಲಿ ಎಷ್ಟು ಮುಂದುವರೆದಿದೆ ಎಂದರೆ ಆ
ಪದ್ಧತಿಗೆ "ಭ್ರಮರ ಚಿಕಿತ್ಸೆ' (Apitherapy) ಎಂಬ ವಿಶೇಷ ಹೆಸರನ್ನು
ನೀಡಲಾಗಿದೆ. ಭಾರತದಲ್ಲಿ ಜೇನುಕೊಂಡಿಯ ವೈದ್ಯಕೀಯ ಬಳಕೆ ಬೆಳೆದಿಲ್ಲ.
'ಆದರೂ ಅದರ ಕುಟುಕು ಸಂಧಿವಾತ ರೋಗಿಗಳಿಗೆ ಒಳ್ಳೆಯದೆಂದೂ ತಿಳಿದು
ಬಂದಿದೆ. ಜೇನು ಸಾಕಣೆಯಲ್ಲಿ ನಿರತರಾಗಿರುವವರಿಗೆ, ಆಗಾಗ್ಗೆ ಜೇನಿನಿಂದ
ಕುಟುಕಿಸಿಕೊಳ್ಳುವ ಕಾರಣ, ಸಂಧಿವಾತ ಮತ್ತು ತತ್ಸಂಬಂಧದ ರೋಗಗಳು
ಬರದಿರುವುದು ಸ್ಲಿರಪಟ್ಟಿದೆ ಎಂದು ಜೇನು ಕೃಷಿ ತಜ್ಞರು ತಿಳಿಸಿದ್ದಾರೆ.
ಆಯುರ್ವೇದದಲ್ಲಿ ಮಧುವನ್ನು ವಾತಾರಿ (ವಾತ * ಅರಿ) ಅಂದರೆ ವಾತರೋಗದ
ಶತ್ರುವೆಂದು ಹೇಳೇ ದಿವ

2. ನ್ಯೂಟ್ರಟಜೆ ಸ್‌ು ಡೆ
ಸಾ ಹಚ ಮತ್ತು ಗೋ ಮಣ್ಯಂ
£2 ಸುಶ್ರು ತ ಸಂಹಿತೆ
4. ಚರಕ ಸಂಹಿತೆ 5, ಅಜ್ಟಾಂಗ ಸಂಗ್ರಹ
ಔಷಧೀಯ ಗುಣವುಳ್ಳ
ಉಪಯುಕ್ತ ಸೊಪ್ಪು - ತರಕಾರಿಗಳು
- ಡಾ॥ ವಸುಂಧರಾ ಭೂಪತಿ
ಹರಿವೆ ಸೊಪ್ಪು, ಮೆಂತ್ಯೆ ಸೊಪ್ಪು, ಸಬ್ಬ ಸಿಗೆ ಸೊಪ್ಪು, ಪುದೀನಾ ಸೊಪ್ಪು,
ನುಗ್ಗೆ ಸೊಪ್ಪು, ಕರಿಬೇವಿನ ಸೊಪ್ಪು, ರಾಜಗೀರ ಸೊಪ್ಪುಗಳಲ್ಲಿ ದೊರೆಯುವ
ಸುಣ್ಣದಂಶ ಮತ್ತು ಕಬ್ಬಿಣದಂಶಗಳು ರಕ್ತದಲ್ಲಿ ಹಿಮೊಗ್ಲೋಬಿನ್‌ ಅಂಶದ ಹೆಚ್ಚಳ,
ಹಲ್ಲು ಹಾಗೂ ಎಲುಬಿನ ಬೆಳವಣಿಗೆಯಲ್ಲಿ "ಮುಖ್ಯ ಪಾತ್ರ ವಹಿಸುತ್ತವೆ. «ಬಿ
ಗುಂಪಿಗೆ ಸೇರಿದ ರೈಬೋಫ್ಲಾಮಿನ್‌ ಎಂಬ ಜೀವಸತ್ವವು ಹಸಿರು ಸೊಪು ಎಗಳಲ್ಲಿ
ಹೆಚ್ಚಾಗಿ ದೊರೆಯುತ್ತದೆ. “ಎ” ಜೀವಸತ್ವವು ಹಳದಿ, ಕೇಸರಿ ಬಣ್ಣದ ತರಕಾರಿ
ಗಳಲ್ಲದೆ ಗಜ್ಜರಿ, ಕುಂಬಳಕಾಯಿ, ರಾಜಗೀರ, ಮೂಲಂಗಿ, ಬಸಳಸೊಪ್ಪುಗಳಲ್ಲಿ
ಅಧಿಕವಾಗಿರುತ್ತದೆ. “ಎ'' ಜೀವಸತ್ವ ಅಂಧತ್ವ ನಿವಾರಣೆಗೆ ಅತಿ ಮುಖ್ಯ. ನಾರಿನ
ಅಂಶ ಇರುವ ತರಕಾರಿಗಳನ್ನು ಬಳಸುವುದರಿಂದ ಅಧಿಕ ರಕ್ತದ ಒತ್ತಡ (ಬ್ಲಡ್‌
ಪ್ರೆಷರ್‌) ಹತೋಟಿಗೆ ತರಬಹುದು. ಸೌತೇಕಾಯಿ, ನಿಂಬೆಹಣ್ಣು, ಹಾಗಲಕಾಯಿ
ಬಳಕೆ ಸಿಹಿ ಮೂತ್ರರೋಗಿಗಳಿಗೆ ಒಳ್ಳೆಯದು.
ಇದು ಸೊಪು ಕ ತರಕಾರಿಗಳಲ್ಲಿ ಔಷಧೀಯ ಗುಣವುಳ್ಳ
ಅಂಶವನ್ನು ಪರಿಚಯಿಸುವ ಒಂದು ಉಪಪಯುಕ್ತ ಕೃತಿ. ಜೆ
| “ಬಿ.ಎಂ ಕೋಮಲ
ಸಾ ಕ ಪ್ರಕಾಶಕಿ

You might also like