You are on page 1of 7

ಎತ್ತಿನಹೊಳೆ ಕಾಮಗಾರಿಗೆ ಭೂಮಿ ಪೂಜೆ

ಶಿಷ್ಟಾಚಾರ ಉಲ್ಲಂಘನೆ
ತಾಲ್ಲೂಕು ಪಂಚಾಯಿತಿ ಸದಸ್ಯರ ಆಕ್ರೋಶ
ಕೊನೇಹಳ್ಳಿ ಹುಲ್ಲುಗಾವಲು ಬಿದಿರೆಗುಡಿ ಸಮೀಪ ಎತ್ತಿನಹೊಳೆ ಯೋಜನೆ ಕಾಮಗಾರಿಗೆ
ಭೂಮಿಪೂಜೆ ನಡೆದದ್ದು ಸರ್ಕಾರಿ ಕಾರ್ಯಕ್ರಮವಾಗಿರುವುದೆಂದು ಭಾವಿಸಬಾರದು.
ಶಾಸಕರು ಮತ್ತು ಸಂಸದರನ್ನು ಆಹ್ವಾನಿಸಿ ಗುತ್ತಿಗೆದಾರರು ಕಾಮಗಾರಿ ಭೂಮಿ ಪೂಜೆ
ನೆರವೇರಿಸಿರುತ್ತಾರೆ. ಭೂಮಿ ಪೂಜೆ ಸರ್ಕಾರಿ ಕಾರ್ಯಕ್ರಮವಾಗಿರುವುದಿಲ್ಲ ಎಂದು
ಎತ್ತಿನಹೊಳೆ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಈಶ್ವರಪ್ಪ
ತಾಲೂಕು ಪಂಚಾಯಿತಿ ಸದಸ್ಯರಿಗೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ
ಸ್ಪಷ್ಟಪಡಿಸಿದರು.
ದಿನಾಂಕ 10-1-2020 ರಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ೨೦೧೯
ನೇ ಸಾಲಿನ ನವೆಂಬರ್ ಮಾಸಾಂತ್ಯಕ್ಕೆ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ
ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ,
ಮಾತನಾಡಿದ ಅವರು; ಭೂಮಿ ಪೂಜೆ ಮಾಡಿಸಿದ್ದು ಗುತ್ತಿಗೆದಾರರೆಂದು ಸಭೆಗೆ
ಉತ್ತರಿಸಿದಾಗ, ಸ್ಥಳೀಯ ಅಧಿಕಾರಿ ನಿಮ್ಮನ್ನು ಅಲ್ಲಿಗೆ ಕರೆದವರು ಯಾರು? ಎಂದು
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಮತ್ತು ತಾಲೂಕು
ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಣಕಿಕೆರೆ ರವಿಕುಮಾರ್ ಹಾಗೂ ತಾಲೂಕು
ಪಂಚಾಯಿತಿ ಸದಸ್ಯ ಸಿದ್ದಾಪುರ ಸುರೇಶ್ ಮೇಲಿಂದ ಮೇಲೆ ಪ್ರಶ್ನಿಸಿದರು.
ಎ.ಇ.ಇ ಈಶ್ವರಪ್ಪ ಮತ್ತೆ ಮತ್ತೆ ಉತ್ತರಿಸುತ್ತಾ ಅದು ಸರ್ಕಾರಿ ಕಾರ್ಯಕ್ರಮವಲ್ಲ.
ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮತ್ತು ವರಿಷ್ಠಾಧಿಕಾರಿಗಳು, ಮುಖ್ಯ
ಇಂಜಿನಿಯರ್‌ರವರು ಸ್ಥಳದಲ್ಲಿದ್ದುದ್ದರಿಂದ ನಾವು ಹೋಗಬೇಕಾಗಿತ್ತು ಎಂದು ತಿಳಿಸಿದರು.
ಓರಿಜಿನಲ್‌ ಡಿ.ಪಿ.ಆರ್‌ ಪ್ರಕಾರ ತಿಪಟೂರು ತಾಲ್ಲೂಕಿಗೆ ಎತ್ತಿನ ಹೊಳೆ
ಯೋಜನೆಯಡಿಯಲ್ಲಿ ೩೦೧ ಎಂ.ಸಿ.ಎಫ್.ಟಿ ನೀರು ನಿಗಧಿ ಆಗಿರುವುದು. ಹೆಚ್ಚುವರಿ ನೀರು
ಅಲೋಕೇಶನ್‌ ಮಾಡಿಕೊಡುವಂತೆಯೂ ಸ್ಥಳೀಯ ಶಾಸಕರು ಸರ್ಕಾರವನ್ನು
ಒತ್ತಾಯಿಸಿರುತ್ತಾರೆ.
ಶಾಸಕರ ಶಿಫಾರಸ್ಸಿನ ಪ್ರಕಾರ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಶಾಸಕರು ಸರ್ಕಾರದ ಜೊತೆ ಸಮಾಲೋಚನೆಯಲ್ಲಿದ್ದರು. ತಿಪಟೂರು ತಾಲ್ಲೂಕಿಗೆ
ಹೆಚ್ಚುವರಿಯಾಗಿ 500 ಎಂ.ಸಿ.ಎಫ್.ಟಿ ನೀರಿಗೆ ಸಮಿತಿಯ ಶಿಫಾರಸ್ಸು ಆಗಿದೆ ಎಂದು
ಚರ್ಚೆಯಲ್ಲಿದೆ. ಸರ್ಕಾರದಿಂದ ಜೀವೊ ಹೊರಡಬೇಕಾಗಿರುವುದು. ವಾಟರ್‌ ಅಲೊಕೇಶನ್
ಅಂತಿಮ ಆದೇಶ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ಡಿ.ಪಿ.ಆರ್ ಮಾಡಲು ಸಣ್ಣ
ನೀರಾವರಿ ಇಲಾಖೆಗೆ ಒಪ್ಪಿಸಲಾಗಿದೆ. ಇಲ್ಲಿಯವರೆಗೂ ಪ್ರಗತಿಯಲ್ಲಿರುವ ಡಿ.ಪಿ.ಆರ್
ಪೂರ್ಣಗೊಳ್ಳಲು ಅಂತಿಮ ಹಂತದ ತಯಾರಿಯಲ್ಲಿ ಯೋಜನೆಯ
ಕೆಲಸಗಳಾಗುತ್ತಿವೆಯೆಂದು ಎತ್ತಿನಹೊಳೆ ಯೋಜನೆ ಸಹಾಯಕ ಕಾರ್ಯಪಾಲಕ
ಇಂಜಿನಿಯರ್ ಈಶ್ವರಪ್ಪ ಸಂಕ್ಷಿಪ್ತವಾಗಿ ವಿವರಿಸಿದರು.
ಜೆ.ಎಂ.ಸಿ ಆಗದಿರುವುದರಿಂದ ರೈತರು ಕಾಮಗಾರಿಗೆ ಜಮೀನು ಬಿಟ್ಟುಕೊಡಲು
ನಿರಾಕರಿಸುತ್ತಿರುವರು. ಭೂ ಸ್ವಾಧೀನ ಪ್ರಕ್ರಿಯೆಗಳು ಚಾಲ್ತಿಯಲ್ಲಿರುತ್ತವೆ. ಭೂ
ಸ್ವಾಧೀನವಾಗದೆ ಯಾರೂ ಕಾಮಗಾರಿ ಕೈಗೊಳ್ಳಲಾಗದು. ಜೀರೋ ದಿಂದ ೨೮೦
ಕಿಲೋಮೀಟರ್‌ವರೆಗೂ ಎತ್ತಿನ ಹೊಳೆ ಯೋಜನೆಯ ಅಲೈನ್‌ ಮೆಂಟ್‌ ಆಗಿದೆ.
ಸ್ಥಳೀಯವಾಗಿ ಹಿಡುವಳಿದಾರರು ಜಮೀನು ನೀಡಿದರೆ ಬೌಂಡ್ರಿ ಫಿಕ್ಸ್ ಮಾಡಿ
ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಇದೇ ಹಿನ್ನೆಲೆಯನ್ನು ಆಧರಿಸಿ ಭೂಸ್ವಾಧೀನ
ಪ್ರಕ್ರಿಯೆ ನಡೆಯುತ್ತಿದೆ ಎಂದು ವಿವರಿಸುವಾಗ ಸದಸ್ಯರು ಶಿಷ್ಟಾಚಾರದ ಪ್ರಶ್ನೆಗಳನ್ನೇ
ಕೇಳುವುದನ್ನು ಮುಂದುವರಿಸುತ್ತಲೇಯಿದ್ದರು.
ಸಾಮಾನ್ಯ ಸಭೆ ಪ್ರಶ್ನೋತ್ತರ ಸಭೆಯಾಗಿ ಚರ್ಚೆಗಳು ಮುಂದುವರೆಯತೊಡಗಿದಾಗ,
ಸದಸ್ಯ ಪುಟ್ಟರಾಜು ಮಧ್ಯಪ್ರವೇಶಿಸಿ, ನೀರು ಕೊಡುವುದು ಸರ್ಕಾರ. ಕಾಮಗಾರಿ
ಪೂರ್ಣಗೊಳಿಸುವುದು ಸಂಬಂಧ ಪಟ್ಟ ಗುತ್ತಿಗೆದಾರ. ಭೂ ಸ್ವಾಧೀನ ಪ್ರಕ್ರಿಯೆಗಳನ್ನು
ಕೈಗೆತ್ತಿಕೊಳ್ಳಬೇಕಾದವರು ಜಿಲ್ಲಾ ಭೂ ಸ್ವಾಧೀನಾಧಿಕಾರಿಗಳು. ಎತ್ತಿನಹೊಳೆ
ಯೋಜನೆಯ ಸಂಕ್ಷಿಪ್ತ ಮಾಹಿತಿಯನ್ನು ಒದಗಿಸುತ್ತಿರುವ ಎ.ಇ.ಇ ಯವರನ್ನು ಎಲ್ಲಾ
ಬಗೆಯ ಪ್ರಶ್ನೆಗಳನ್ನು ಕೇಳಿದರೆ ಅವರು ಹೇಗೆ ಉತ್ತರಿಸಲು ಸಾಧ್ಯ? ಎನ್ನುತ್ತಾ ಸಾಮಾನ್ಯ
ಸಭೆಯ ಚರ್ಚೆಯನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸಿದರು.
ಸರ್ಕಾರ ಕೈಗೊಳ್ಳುವ ಕ್ರಮ, ಹೊರಡಿಸುವ ಆದೇಶಗಳು, ಮುಖ್ಯ ಇಂಜಿನಿಯರ್
ಹೊರಡಿಸುವ ಶಿಫಾರಸುಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಅವುಗಳ
ಪೂರ್ವಾ ಪರಗಳು ಸಾಮಾನ್ಯವಾಗಿ ಗೊತ್ತಾಗಲಾರವು. ಅವರನ್ನು ಸಾಮಾನ್ಯ ಸಭೆಗೆ
ಆಹ್ವಾನಿಸಿದ್ದೇವೆ. ಯೋಜನೆಯನ್ನು ಕುರಿತು ಲಭ್ಯವಿರುವ ಮಾಹಿತಿಗಳನ್ನು ಎ.ಇ.ಇ
ಅವರಿಂದ ಪಡೆಯೋಣವೆಂದು ಪುಟ್ಟರಾಜು ಸಭೆಯ ಗಮನವನ್ನು ವಿಷಯಾಧಾರಿತ
ಚರ್ಚೆಯತ್ತ ಸೆಳೆದರು.
ಯೋಜನೆಯ ವಿವರ ಬಯಸುವಾಗ ಇಷ್ಟೊಂದು ಮಾತನಾಡುವ ಅವಶ್ಯಕತೆ ಇರುವುದಿಲ್ಲ.
ನಿಮಗೆ ತಿಳಿದ ಹಾಗೆ ನೀವು ಯೋಜನೆಯನ್ನು ಅಪಾರ್ಥ ಮಾಡಿಕೊಂಡರೆ ನಾನು
ಉತ್ತರಿಸಲಾಗದು. ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಲಾಗುವ ತೀರ್ಮಾನಗಳಿಗೆ ಎ.ಇ.ಇ
ಉತ್ತರಿಸಲಾಗುತ್ತದೆಯೇ? ಎಂದು ಈಶ್ವರಪ್ಪ ನಿಖರವಾಗಿ ಹೇಳಬಯಸುವಾಗ,
ಮಧ್ಯಪ್ರವೇಶಿಸಿ ಮಾತನಾಡಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನ್ಯಾಕೆನಹಳ್ಳಿ
ಸುರೇಶ್ ಮತ್ತು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಣಕಿಕೆರೆ ರವಿಕುಮಾರ್, ಆಯಿತು;
ನಿಮಗೆ ಗೊತ್ತಿಲ್ಲದ ಮಾಹಿತಿಗಳನ್ನು ಸಭೆಗೆ ನೀಡಿದರೆಂದು ನಾವು ಹಿಂಸೆ ಮಾಡುವುದಕ್ಕೆ
ಆಗುವುದಿಲ್ಲವೆಂದು, ಚರ್ಚೆಗೆ ತೆರೆ ಎಳೆದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರು, ತಾಲ್ಲೂಕು ಪಂಚಾಯಿತಿ
ಸಾಮಾನ್ಯ ಸಭೆಗೆ ಹಾಜರ್ ಆಗದಿರುವುದನ್ನು ಗಮನಿಸಿದ ತಾಲ್ಲೂಕು ಪಂಚಾಯಿತಿ
ಅಧ್ಯೆಕ್ಷ ಜಿ.ಎಸ್.ಶಿವಸ್ವಾಮಿ ಮತ್ತು ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಹಕಾರಿ
ಇಲಾಖೆಯವರು ಪ್ರಥಮ ದರ್ಜೆಯ ಸಹಾಯಕ ಸಂಜಯ್ ಎಂಬುವರನ್ನು ಸಭೆಗೆ
ಕಳುಹಿಸಿದ್ದರು. ಸಾಮಾನ್ಯ ಸಭೆಗೆ ಹಾಜರಾಗಿದ್ದ ಸಹಕಾರ ಸಂಘಗಳ ಸಹಾಯಕ
ನಿಬಂಧಕರ ಕಚೇರಿ ಪ್ರಥಮ ದರ್ಜೆ ಸಹಾಯಕ ಸಂಜಯ್ ಸಹ ಅಪೂರ್ಣ
ಮಾಹಿತಿಗಳೊಂದಿಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಬಂದಿದ್ದರು. ಅವರು
ಇಲಾಖೆಯ ವಿವರಗಳನ್ನು ತಿಳಿಸಲು ಬಂದಾಗ ಸಾಮಾನ್ಯ ಸಭೆಯ ಅಧ್ಯೆಕ್ಷತೆ ವಹಿಸಿದ್ದ
ಜಿ.ಎಸ್. ಶಿವಸ್ವಾಮಿ ನಿಮ್ಮ ಅಧಿಕಾರಿಗಳು ಎಲ್ಲಿಗೆ ಹೋಗಿದ್ದಾರೆ. ಅವರು ತಾಲ್ಲೂಕು
ಪಂಚಾಯಿತಿ ಸಾಮಾನ್ಯ ಸಭೆಗಳಿಗೆ, ಏಕೆ? ಹಾಜರಾಗುತ್ತಿಲ್ಲ. ಸಭೆಯು ಬಯಸಿದ ಎಲ್ಲಾ
ಮಾಹಿತಿಗಳನ್ನು ಸಮರ್ಪಕವಾಗಿ ನೀವು, ನೀಡುವಿರೋ? ಇಲಾಖೆಯ ಸಿಬ್ಬಂದಿಯಾದ
ನೀವು ಇಲಾಖೆಯ ಸಾಮಾನ್ಯ ಮಾಹಿತಿಗಳೊಂದಿಗೆಯಾದರೂ ಬಂದಿದ್ದೀರಾ? ಎಂದು
ಗರಂ ಆದರೂ, ಅಧ್ಯಕ್ಷರ ಪ್ರಶ್ನೆಗಳಿಗೆ ತಡಬಡಾಯಿಸಿದ ಪ್ರಥಮ ದರ್ಜೆ ಸಹಾಯಕ;
ನನಗೆ ಗೊತ್ತಿರುವುದನ್ನು ಹೇಳುತ್ತೇನೆ. ಗೊತ್ತಿಲ್ಲದಿರುವುದನ್ನು ಸಾಯಿಂಕಾಲದ ವೇಳೆಗೆ
ಬಂದು ಹೇಳುತ್ತೇನೆಂದು ಹೇಳಿದಾಗ ಸಭೆಯೇ ನಗುವಂತಾಯಿತು. ತಾಲ್ಲೂಕು
ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ತಾಲ್ಲೂಕಿನಲ್ಲಿ ಹಾಲು ಉತ್ಪಾದಕರ
ಸಹಕಾರ ಸಂಘಗಳು ಎಷ್ಟಿವೆ? ಎಂದು ಪ್ರಶ್ನಿಸಿದರು. ದಿಡೀರನೆ ಉತ್ತರಿಸಿದ ಸಹಕಾರಿ
ಇಲಾಖೆಯ ಸಂಜಯ್ ಹಾಲು ಉತ್ಪಾದಕರ ಸಹಕಾರ ಸಂಘಗಳು ೩೦೦ ಇವೆ ಎಂದು
ತಿಳಿಸಿದಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಇಲಾಖೆಯನ್ನು ಮತ್ತೆ
ನಗೆಪಾಟಲಿಗೆ ಈಡು ಮಾಡಿದಂತಾಗಿತ್ತು ಅವರ ಉತ್ತರ.
ಸಭೆಯ ಸಮಯ ಹಾಳು ಮಾಡಬೇಡಿ. ಇಲಾಖೆಯ ಪ್ರಗತಿಯ ಅಂಕಿ-
ಅಂಶಗಳೊಂದಿಗೆ ಕರೆಕ್ಟಾಗಿ ಮಾಹಿತಿ ನೀಡಿ. ಯಾವ ಇಲಾಖೆಯಿಂದ ಬಂದಿದ್ದೀಯಾ
ನೀನು. ಇದು ಕೇಸ್ ವರ್ಕರ್ಗಳ ಸಭೆ ಎಂದು ಭಾವಿಸಿದ್ದೀಯೇನು? ತಾಲ್ಲೂಕು ಪಂಚಾಯಿತಿ
ಸಾಮಾನ್ಯ ಸಭೆಯಿದು ಎಂದು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮಣಕಿಕೆರೆ
ರವಿಕುಮಾರ್‌ಗರಂ ಆದರು.
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ, ಸಹಕಾರ ಸಂಘಗಳ ಸಹಾಯಕ
ನಿಬಂಧಕರು ಒಂದು ಸಲವೂ ಹಾಜರಾಗುತ್ತಿಲ್ಲ. ಸಾಮಾನ್ಯ ಸಭೆಯ ದಿನಾಂಕದಂದೇ
ಕೋರ್ಟ್ ನಡೆಯುತ್ತದೆ ಎಂದು ತಪ್ಪಿಸಿಕೊಳ್ಳುತ್ತಿದ್ದಾರೆಂದು ಸದಸ್ಯರು ಅಸಮಾಧಾನ
ವ್ಯಕ್ತಪಡಿಸಿದರು.
ಲೋಕೋಪಯೋಗಿ ಮತ್ತು ಒಳನಾಡು ಬಂದರು ಇಲಾಖೆಯ ಇಂಜಿನಿಯರ್
ದೊಡ್ಡಯ್ಯ ಇಲಾಖೆಯ ಪ್ರಗತಿ ಮಾಹಿತಿ ನೀಡಲು ಮುಂದಾದರು. ದೊಡ್ಡಯ್ಯನವರು
ಎ,ಇ,ಇ ಆಗಿ ಬಡ್ತಿ ಹೊಂದಿರುತ್ತಾರೆ. ಅವರು ಪಧೋನ್ನತಿ ಹೊಂದಿ ಇದೇ ತಾಲ್ಲೂಕಿನ ಸಣ್ಣ
ನೀರಾವರಿ ಇಲಾಖೆಯ ಎ.ಇ.ಇ ಆಗಿ ವರ್ಗಾವಣೆಗೊಂಡಿರುವರು. ಪಿ.ಡಬ್ಲೂ.ಡಿ ಇಲಾಖೆಗೆ
ಇತ್ತೀಚೆಗೆ, ವರ್ಗಾವಣೆ ಆಗಿರುವ ಎ.ಇ.ಇ ಹೊನ್ನೇಶಪ್ಪನವರನ್ನು ಸಭೆಗೆ ಕರಸುವಂತೆ
ಸದಸ್ಯರು ಪಟ್ಟುಯಿಡಿದರು.
ನಗರದ ಪ್ರವಾಸಿ ಮಂದಿರವು ಸೆಕ್ಷನ್ ಆಫೀಸರ್ ಮೃತ್ಯುಂಜಯ ಅವರ
ವ್ಯಾಪ್ತಿಯಲ್ಲಿದೆ. ಕೃಷಿ ಉತ್ಫನ್ನ ಮಾರುಕಟ್ಟೆ ಸಮಿತಿಯ ಮಾಜಿ ಸದಸ್ಯ ಹಾಗೂ ದಲಿತ
ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮತ್ತು ತಾಲೂಕು
ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಕೆನಹಳ್ಳಿ ಸುರೇಶ್ ಪ್ರವಾಸಿ ಮಂದಿರಕ್ಕೆ ಹೋದಾಗ,
ಪ್ರವಾಸಿ ಮಂದಿರದಲ್ಲಿ ಕುಳಿತು ಮಾತನಾಡಲು ಅವಕಾಶ ನಿರಾಕರಿಸಲಾಯಿತು ಎಂದು
ಇಲಾಖೆಯನ್ನು ಸುರೇಶ್ ತೀವ್ರ ತರಾಟೆಗೆ ತೆಗೆದುಕೊಂಡರು. ಚುನಾಯಿತ ಪ್ರತಿನಿಧಿಗಳಿಗೆ
ಪ್ರವಾಸಿ ಮಂದಿರ ಪ್ರವೇಶಿಸಲು ನಿರಾಕರಿಸಿದ ವಿಷಯ ಸಾಮಾನ್ಯಸಭೆಯಲ್ಲಿ
ಕಾವೇರಿದಾಗ ಸಭೆಗೆ ಎ.ಇ.ಇ. ಕರೆಸುವಂತೆ ಆಗ್ರಹಿಸಲಾಯಿತು.
ಹೊನ್ನವಳ್ಳಿ ಹೋಬಳಿ ಕಾಮಗಾರಿಗಳ ಪರಿಶೀಲನೆಗೆ ಹೋಗಿದ್ದಂತಹ ಹೊನ್ನೇಶಪ್ಪ
ಸಾಮಾನ್ಯ ಸಭೆ ಮುಗಿಯುವ ವೇಳೆಗೆ ಸಭೆಗೆ ಹಾಜರಾಗಿ ಉತ್ತರಿಸಬೇಕಾಯಿತು.
ಪ್ರವಾಸಿ ಮಂದಿರ ಸರ್ಕಾರಿ ಸ್ವತ್ತು. ಯಾರದೇ ಖಾಸಗಿ ಸ್ವತ್ತಲ್ಲ. ಇಂಜಿನಿಯರ್‌
ಗಳ ಖಾಸಗೀ ಆಸ್ತಿ ಆಗಿದ್ದರೆ ಬಣ್ಣ ಹೊಡೆಸಿ ಬಾಡಿಗೆಗೆ ಕೊಟ್ಟುಕೊಳ್ಳಲಿ. ವಾಸಕ್ಕೆ ಬಾಡಿಗೆಗೆ
ಕೊಟ್ಟುಕೊಳ್ಳಲಿ. ಪ್ರವಾಸಿ ಮಂದಿರದ ಆವರಣದಲ್ಲಿ ಮನೆ, ಸೈಟು ಮಾಡಿಕೊಂಡು
ಹಂಚಿಕೊಳ್ಳಿರೆಂದು ನ್ಯಾಕೆನಹಳ್ಳಿ ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವರ್ಷಕ್ಕೆ ಒಂದು ಸಲ ತಳಕ್ಕೆ ಮಣ್ಣು ಸುರಿದು, ರಸ್ತೆ ಮೇಲಿನ ಗುಂಡಿ ಮುಚ್ಚಿದರೆ
ಅದನ್ನು ರಸ್ತೆಗಳ ನಿರ್ವಹಣೆ ಎನ್ನಲಾಗದು. ನವೀಕರಣ ಮತ್ತು ನಿರ್ವಹಣೆಗೂ
ವ್ಯತ್ಯಾಸವಿದೆ. ನಗರ ವಲಯದ ಹಾಲ್ಕುರಿಕೆ ರಸ್ತೆ ಅಗೆಯುವುದು ತೋಡುವುದೇ ಆಗಿದೆ.
ಕಾಮಗಾರಿ ನಡೆದ ನಂತರ ರಸ್ತೆಯನ್ನು ನೀಟು ಮಾಡದಿದ್ದರೆ ಕ್ರಮ ಕೈಗೊಳ್ಳಿ.
ಬೇಸಿಗೆಯಲ್ಲಿ ನಡೆದ ಕಾಮಗಾರಿಗಳು ಮಳೆಗಾಲದಲ್ಲಿ ಅವುಗಳ ಮಣ್ಣು ಕುಸಿದಾಗ
ರಸ್ತೆಗಳನ್ನು ನವೀಕರಿಸಬೇಕು ಎಂದು ಮಣಕಿಕೆರೆ ರವಿಕುಮಾರ್ ಇಲಾಖೆಯ ಕಿವಿ
ಹಿಂಡಿದರು.
ಅಂಗನವಾಡಿಗಳಿಗೆ ಬೇಟಿ ನೀಡಿದ್ದೇನೆ. ಮಕ್ಕಳಿಗೆ ಸರಿಯಾಗಿ ಮೆಡಿಸಿನ್
ವಿತರಿಸಲಾಗದಿರುವುದು ಕಂಡುಬಂದಿದೆ. ನಿಗದಿತ ಸಮಯದಲ್ಲಿ ಮಕ್ಕಳಿಗೆ ಔಷಧ
ನೀಡಲಾಗುತ್ತಿಲ್ಲ. ಹೆಲ್ತ್‌ಕಿಟ್ ವಿತರಣೆ ಆಗದೆ ನಿರುಪಯುಕ್ತ ಆಗುತ್ತಿರುವುದನ್ನು
ಗಮನಿಸಿರುವೆನೆಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಸ್ವಾಮಿ ಸಿ.ಡಿ.ಪಿ.ಒ
ಓಂಕಾರಪ್ಪನವರಿಗೆ ತಿಳಿಸಿ, ಹೆಲ್ತ್‌ಕಿಟ್‌ಗಳನ್ನು ಸರಿಯಾದ ಸಮಯಕ್ಕೆ ಸಕಾಲದಲ್ಲಿ
ಅಂಗನವಾಡಿ ಮಕ್ಕಳಿಗೆ ಪೋಷಕರ ಮೂಲಕ ನೀಡುವಂತೆ ಸಲಹೆ ಮಾಡಿದರು.
ಅಂಗನವಾಡಿಗಳಿಗೆ ಮತ್ತು ಗ್ರಾಮಪಂಚಾಯ್ತಿಗಳಿಗೂ ಸಂಬಂಧವಿಲ್ಲ
ಎಂಬಂತಾಗಿದೆ. ಗ್ರಾಮಪಂಚಾಯ್ತಿಗಳು ಸ್ಥಳೀಯ ಸರ್ಕಾರಗಳೆಂಬುದನ್ನು
ಮರೆಯಬಾರದು ಎಂಬುದನ್ನು ಸಿ.ಡಿ.ಪಿ.ಒ ಅವರಿಗೆ ಮಣಕಿಕೆರೆ ರವಿಕುಮಾರ್ ಕಿವಿಮಾತು
ಹೇಳಿದರು.
ಸಾಮಾನ್ಯ ಸಭೆಯ ಚರ್ಚೆಯು ಕಾರ್ಮಿಕ ಇಲಾಖೆಯನ್ನು ಕೇಂದ್ರೀಕರಿಸಿತು.
ನಂತರ ಕೃಷಿ ಇಲಾಖೆಯ ಕಾರ್ಯಕ್ರಮಗಳ ಚರ್ಚೆಗೆ ಹೊರಳಿತು.
2019- 2020 ನೇ ಸಾಲಿನ ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದ್ದ ಕೃಷಿ
ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ ನೀಡಿದ ಹಾಗೂ ಕಾರ್ಯಕ್ರಮದ
ಯಶಸ್ವಿಗೆ ಸಹಕರಿಸಿದ ತಾಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ, ಕೃಷಿ
ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ಧೇಗೌಡ್ರು ಅಭಿನಂದನೆ ತಿಳಿಸಿದರು.
ರಾಗಿ ಖರೀದಿ ಕೇಂದ್ರ ತೆರೆಯಲಾಗುತ್ತಿದೆ. ರೈತರು ಖರೀದಿ ಕೇಂದ್ರದ ಮೂಲಕ
ರಾಗಿ ಮಾರಾಟ ಮಾಡಬಹುದು. ಶೇ.೮೦ರಷ್ಟು ಬೆಳೆ ರೈತರ ಕೈ ಸೇರಿರುವುದು.
ವಾಡಿಕೆಗಿಂತ ಹೆಚ್ಚಾಗಿ ತಾಲೂಕಿನಲ್ಲಿ ಮಳೆ ಆಗಿರುವುದೆಂದು ಸಿದ್ಧೇಗೌಡ್ರು ಸಭೆಯಲ್ಲಿ
ವಿವರಿಸಿದರು.
2019-೨೦ 20 ನೇ ಸಾಲಿನ ಕೃಷಿ ಸಂಸ್ಕರಣೆ ಮತ್ತು ಪಿ.ಎಂ.ಕೆ.ಎಸ್.ವೈ ತುಂತುರು
ನೀರಾವರಿ ಯೋಜನೆ, ಕೃಷಿ ಯಾಂತ್ರೀಕರಣ, ಸಸ್ಯ ಸಂರಕ್ಷಣಾ ಯೋಜನೆ, ಕೃಷಿ
ಹಿಂಗಾರು ಹಂಗಾಮಿನ ವಿವಿಧ ಬೆಳೆಗಳ ಬಿತ್ತನೆ ಗುರಿ ಮತ್ತು ಪ್ರಗತಿ, ಬಿತ್ತನೆ ಬೀಜ
ದಾಸ್ತಾನು ವಿವರಣೆ ಹಾಗೂ ಮಳೆ ಮಾಹಿತಿ ವಿವರಗಳನ್ನು ಸಾಮಾನ್ಯ ಸಭೆಯಲ್ಲಿ ಅವರು
ಸದಸ್ಯರಿಗೆ ತಿಳಿಸಿದರು.
ಪರೀಕ್ಷೆಗಳು ಮಕ್ಕಳಲ್ಲಿ ಗಾಬರಿ ಹುಟ್ಟಿಸುತ್ತವೆ. ಮಕ್ಕಳು ಪರೀಕ್ಷಾ ಪೂರ್ವ ತಯಾರಿ
ಯಲ್ಲಿರುವಾಗ, ಅವರಲ್ಲಿ; ಪರೀಕ್ಷೆಯ ಭಯ ಹೋಗಲಾಡಿಸಿ. ಒಂದೇ ಶಾಲೆಯ ಮಕ್ಕಳು
ಬೇರೆಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವಂತಾಗಿದೆ. ಅವರಲ್ಲಿ ಮತ್ತಷ್ಟು ಗಾಬರಿ
ಆಗುವುದಿಲ್ಲವೇ? ಇಂತಹ ಕ್ರಮ ಇಲಾಖೆ ಏಕೆ ಜಾರುಗೊಳಿಸುತ್ತಿದೆ ಎಂದು ಸ್ಥಾಯಿ
ಸಮಿತಿಯ ಮಾಜಿ ಅಧ್ಯಕ್ಷ ಮಣಕಿಕೆರೆ ರವಿಕುಮಾರ್ ಬಿ.ಇ.ಒ ಮಂಗಳಗೌರಮ್ಮನವರನ್ನು
ಕೇಳಿದರು. ಮಕ್ಕಳಲ್ಲಿರುವ ಪರೀಕ್ಷೆ ಭಯ ಹೋಗಲಾಡಿಸುವುದು ಹಾಗು ಅವರಲ್ಲಿ ಇರುವ
ಪರೀಕ್ಷಾ ಗಾಬರಿಯನ್ನು ಕಮ್ಮಿ ಮಾಡಲು ಒಂದೇ ಶಾಲೆಯ ಮಕ್ಕಳು ಬೇರೆ ಬೇರೆ
ಶಾಲೆಗಳ, ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲೆಂದೇ ಶಿಕ್ಷಣ ಇಲಾಖೆಯ ಆಯುಕ್ತರ
ಕಾರ್ಯಾಲಯ ಆದೇಶಿಸಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿಗಳು ಸಭೆಗೆ ವಿವರಿಸಿದರು.
ನೊಣವಿನಕೆರೆ ಹೋಬಳಿ ಶಿಗ್ಗಾವಿ ಶಾಲೆಯ ಶಾಲಾ ಮಕ್ಕಳ ವಾಹನ ಪಲ್ಟಿ ಪ್ರಕರಣ
ಕುರಿತು ಸದಸ್ಯ ನಾಗರಾಜ್ ಬಿ.ಇ.ಒ. ರವರನ್ನು ವಿವರಿಸುವಂತೆ ಕೇಳಿದಾಗ, ಶಾಲಾ
ವಾಹನ ರಿಪೇರಿಯಲ್ಲಿದ್ದಾಗ ಪೋಷಕರ ವಾಹನದಲ್ಲಿ ಶಾಲಾಮಕ್ಕಳು ಶಾಲೆಗೆ
ತೆರಳುವಾಗ ವಾಹನ ಪಲ್ಟಿಯಾಗಿದೆ. ಮಕ್ಕಳಿಗೆ ತೊಂದರೆ ಆಗಿಲ್ಲ. ಮುಂಜಾಗ್ರತೆ
ಕ್ರಮವಾಗಿ ಶಾಲೆಗಳಲ್ಲಿ ಸ್ಕೂಲ್‌ ಕಾಬ್ ಕಮಿಟಿ ರಚನೆ ಮಾಡುವಂತೆ ತಿಳಿಸಲಾಗಿದೆ
ಎಂದು ಮಂಗಳ‌ಗೌರಮ್ಮ ವಿವರಿಸಿದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಸಾಮಾನ್ಯ ಸಭೆಗೆ ಹೇಳಿದ್ದೇ
ಉತ್ತರ. ನಡೆದದ್ದೇ ನಡವಳಿಕೆ. ಅವರು ತೋಚಿದ್ದನ್ನು ಹೇಳುವರು. ಬಾಯಿಗೆ ಬಂದದ್ದನ್ನು
ಹೇಳುವರು. ಮಣಕಿಕೆರೆ ಗ್ರಾಮ ಪಂಚಾಯಿತಿ ಆಯೋಜಿಸಿದ್ದ ಸಾಮಾಜಿಕ ಲೆಕ್ಕ
ಪರಿಶೋಧನಾ ಗ್ರಾಮ ಸಭೆಗೆ ಇವರನ್ನು ನೋಡಲ್‌ ಅಧಿಕಾರಿಯನ್ನಾಗಿ
ನಿಯೋಜಿಸಲಾಗಿತ್ತು. ಏಕೆ? ನೀವು ಗ್ರಾಮ ಸಭೆಗೆ ಹೋಗಿರಲಿಲ್ಲ ಎಂದು ಕೇಳಿದಾಗ,
ನಾನು ಹೋಗಲು ಒಪ್ಪಿಕೊಂಡಿರಲಿಲ್ಲ ಎಂದರು.
ಪೋನ್‌ಮಾಡಿದ್ದರು. ಕರ ಪತ್ರದಲ್ಲಿ ಹೆಸರು ಹಾಕಿಸುತ್ತಾರೆ. ಸೋಷಿಯಲ್‌ಆಡಿಟ್
ಅದೆಂತಹದ್ದೋ ನಡೆಯುತ್ತದೆ ಎಂದರು. ತಾಲ್ಲೂಕು ಮಟ್ಟದ ಅಧಿಕಾರಿ ಪ್ರಕಾಶ್.‌ ಇವರಿಗೆ
ಅವರು ಹೊಂದಿರುವ ಹುದ್ದಯೇ ತಲೆನೋವಾಗಿರುವಂತಿದೆ. ಪಾಂಪ್ಲೆಂಟ್‌, ಕರಪತ್ರ,
ಪೋನ್‌, ಹೆಸರು, ನೋಡಲ್‌ ಅಧಿಕಾರಿ, ಸೋಷಿಯಲ್‌ ಆಡಿಟ್‌, ಮಹಾತ್ಮ ಗಾಂಧಿ
ಗ್ರಾಮೀಣಾಭಿವೃದ್ಧಿ ಉಧ್ಯೋಗ ಖಾತರಿ ಯೋಜನೆ ಇತ್ಯಾಧಿಗಳು ಇವರಿಗೆ ಮುಖ್ಯವೂ
ಅಲ್ಲ; ಅಮುಖ್ಯವೂ ಅಲ್ಲ. ಇವರ ಕಾರ್ಯವೈಖರಿಗೆ ಇವರನ್ನು ಮಣಕಿಕೆರೆ ಗ್ರಾಮ
ಪಂಚಾಯಿತಿ ನೋಡಲ್‌ ಅಧಿಕಾರಿಯನ್ನಾಗಿ ನಿಯೋಜಿಸಿರುವ ತಾಲ್ಲೂಕು
ಪಂಚಾಯಿತಿಯವರೇ ಉತ್ತರಿಸಬೇಕು.
ಮುದ್ರಾ ಯೋಜನೆಯಡಿ ಸಾಲ ಕೊಟ್ಟಿದ್ದೀನಿ ಅಂತ ಪ್ರಧಾನ ಮಂತ್ರಿಯವರು
ಹೇಳುತ್ತಾರೆ. ಸಾಲ ಕೊಟ್ಟಿಲ್ಲವೆಂದು ಸದಸ್ಯ ಸಿದ್ಧಾಪುರ ಸುರೇಶ್‌ ಕೇಳಿದಾಗ, ಮುಂದಿನ
ಸಭೆಗೆ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಕರೆಸಿ ಮಾಹಿತಿ ಕೊಡಿಸಲು ಸಭೆಯಲ್ಲಿ
ತೀರ್ಮಾನಿಸಲಾಯಿತು.

You might also like