You are on page 1of 4

SHIKSHA INTERNATIONAL ACADEMY

(Affiliated to CBSE)
No.10/1, Hosahalli, Gollarapalya, Magadi main road, Kempegowdanagar Bengaluru,
Karnataka - 560091. 

ನಾಟಕದ ವಿಷಯ :- ಆಹಾರದ ಭದ್ರತ

ದಿನಾಂಕ:- 31/08/2023

ಎಲ್ಲರಿಗೂ ಶುಭೋದಯ

ನಾವು ಶಿಕ್ಷ ಇಂಟರ್ನ್ಯಾಷನಲ್ ಅಕಾಡೆಮಿಯ ಶಾಲೆಯ ವಿದ್ಯಾರ್ಥಿಗಳು

ನಮ್ಮ ನಾಟಕದ ವಿಷಯ ಆಹಾರದ ಭದ್ರತೆ

ನನ್ನ ಹೆಸರು ಪ್ರತಿಕ್ಷ ನಾನು ಈ ನಾಟಕದಲ್ಲಿ ನಿರ್ದೇಶಕಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ

ನನ್ನ ಹೆಸರು ಧನ್ವಿ ನಾನು ಈ ನಾಟಕದಲ್ಲಿ ಭೂಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ


ನನ್ನ ಹೆಸರು ದೀಕ್ಷಾ ನಾನು ಈ ನಾಟಕದಲ್ಲಿ ನೀರಿನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ

ನನ್ನ ಹೆಸರು ಮನೋಜ್ ನಾನು ಈ ನಾಟಕದಲ್ಲಿ ರೈತನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ

ನನ್ನ ಹೆಸರು ಸಾಹಿಲ್ ನಾನು ಈ ನಾಟಕದಲ್ಲಿ ಕಲಾವಿದನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ

ನನ್ನ ಹೆಸರು ಶಿವಪ್ರಸಾದ್ ನಾನು ಈ ನಾಟಕದಲ್ಲಿ ಕಲಾವಿದನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ

ನನ್ನ ಹೆಸರು ನಿತಿನ್ ನಾನು ಈ ನಾಟಕದಲ್ಲಿ ಕಲಾವಿದನ

ಪಾತ್ರವನ್ನು ನಿರ್ವಹಿಸುತ್ತಿದ್ದೇನೆ

ನನ್ನ ಹೆಸರು ಜೈ ಶ್ರೀ ನಾನು ಈ ನಾಟಕದಲ್ಲಿ ಕಲಾವಿದಯ ಪಾತ್ರವನ್ನು.


ವಿಶ್ವಸಂಸ್ಥೆಯು ಪ್ರತಿವರ್ಷ ಅಕ್ಟೋಬರ್ 16 ರನ್ನು ವಿಶ್ವ ಆಹಾರ ದಿನವನ್ನಾಗಿ ಆಚರಿಸುತ್ತದೆ ಹಸಿವನ್ನು ನಿರ್ಮೂಲನೆ ಮಾಡುವ
ಮತ್ತು ಎಲ್ಲರಿಗೂ ಆಹಾರದ ಭದ್ರತೆಯನ್ನು ಖಾತರಿ ಪಡಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮತವನ್ನು
ಪ್ರದರ್ಶಿಸುತ್ತಿದ್ದೇವೆ

ದೃಶ್ಯ:1 ಆಹಾರ ದೃಶ್ಯ

ನಿರ್ದೇಶಕಿ:- (ಒಂದು ಶಾಲೆಯಲ್ಲಿ ಇಬ್ಬರು ಸ್ನೇಹಿತರು  ಇರುತ್ತಾರೆ) . (ಕಲಾವಿದ 1 &2 ನಾಟಕ)

ನಿರ್ದೇಶಕಿ:- ಒಬ್ಬ ವಿದ್ಯಾರ್ಥಿ ಅಮ್ಮನು ಮಾಡಿದ ಶುಚಿಯಾಗಿರುವ ಮತ್ತು ಶಕ್ತಿಯುತವಾದ ಆರೋಗ್ಯ ಪೂರ್ಣವಾದ
ಆಹಾರವನ್ನು ತಂದಿರುತ್ತಾನೆ. (ಕಲಾವಿದ 1 ನಾಟಕ)

ನಿರ್ದೇಶಕಿ:- ಇನ್ನೊಬ್ಬ ವಿದ್ಯಾರ್ಥಿಯು ಬಣ್ಣ ಬಣ್ಣದ ಟಿಫನ್ ಬಾಕ್ಸ್ಅಲ್ಲಿ ಪಿಜ್ಜಾ ,ಬರ್ಗರ್ ,ಬ್ರೆಡ್ ಮತ್ತಿತರ ಆರೋಗ್ಯಕ್ಕೆ
ಹಾನಿಕಾರಕವಾದ ಆಹಾರವನ್ನು ತಂದಿರುತ್ತಾನೆ .[ ಕಲಾವಿದ 2 ನಾಟಕ)]

ಕಲಾವಿದ 2:- ಜಂಕ್ ಫುಡ್ ತಿಂದ ವಿದ್ಯಾರ್ಥಿಯು ದಪ್ಪವಾದ ಕಾರಣ ಔಷಧಿ ಖರೀದಿಸಲು ಮುಂದಾಗುತ್ತಾನೆ
ಮತ್ತು ಎಲ್ಲಾ ತರಹದ ಪ್ರೋಟೀನ್ ಮಿಲ್ಕ್ ಶೇಕ್ ಅನ್ನು ಸೇವಿಸಿ
ವಿದ್ಯಾರ್ಥಿಯು ಇನ್ನಷ್ಟು ತೂಕವನ್ನು ಹೆಚ್ಚಿಸಿ ಕೊನೆಗೆ ಔಷಧಿಯ ಅಡ್ಡ ಪರಿಣಾಮದಿಂದ ಸತ್ತು ಹೋಗುತ್ತಾನೆ.

ನಿರ್ದೇಶಕಿ:- ಮನೆಯಲ್ಲಿ ಸ್ವಚ್ಛತೆಯಿಂದ ತಯಾರಿಸಿದ ಆಹಾರವನ್ನು ತಿಂದ ವಿದ್ಯಾರ್ಥಿಯು ಎಲ್ಲಾ ಕಾರ್ಯ ಶೀಲ
ಚಟುವಟಿಕೆಯಲ್ಲಿ ತೊಡಗಿಸಿಕೊಂಡು.

ಮುಂದೆ ಚುರುಕಾಗಿ ಬೆಳೆಯುತ್ತಾನೆ ,.( ಕಲಾವಿದ 1 ನಾಟಕ))

ಭೂಮಿ( ಪಾತ್ರ ಉದ್ಭವ)

ನೀರು ( ಪಾತ್ರ ಉದ್ಭವ)

ರೈತ ( ಪಾತ್ರ ಉದ್ಭವ) :- ನಾವು ರೈತರು ಬೆಳೆಯುವ ಬೆಳೆಗೆ ಮತ್ತು ರೈತರಿಗೆ ಗೌರವವನ್ನು ಕೊಡಬೇಕು. ಜನರು ಕೆಲಸದ
ನಿಮಿತ್ಯವಾಗಿ ಹಳ್ಳಿಯನ್ನು ಬಿಟ್ಟು ವಲಸೆ ಹೋಗುತ್ತಿದ್ದಾರೆ .ನಗರಗಳಲ್ಲಿ ಕೆಲಸಗಳನ್ನು ಮಾಡುತ್ತಾ , ಅಲ್ಲಿನ ಸುಂದರ ಜೀವನಕ್ಕೆ
ಆಕರ್ಷಿತರಾಗಿ. ಹಳ್ಳಿಯಲ್ಲಿರುವ ಹೊಲಗದ್ದೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಇದರಿಂದಾಗಿ ರೈತನಿಗೆ ಬೆಳೆಯಲು ಭೂಮಿಯೂ ಇಲ್ಲ ರೈತನು ಬೆಳೆ ಬೆಳೆಯದಿದ್ದರೆ ಮುಂದೊಂದು ದಿನ ಮುಂದಿನ
ಪೀಳಿಗೆಯ ಆಹಾರ ಧಾನ್ಯಕ್ಕಾಗಿ ಪರಿತಪಿಸುವ ಪರಿಸ್ಥಿತಿಯು ಉಂಟಾದರೂ ಆಗಬಹುದು.

ದೃಶ್ಯ;-2 ಹೋಟೆಲ್ಗ ದೃಶ್ಯ;

ನಿರ್ದೇಶಕಿ:- ಒಂದು ದಿನ ಸಮಯಕ್ಕೆ ಅಮ್ಮ ಮಗ ಒಂದು ಹೋಟೆಲ್ಗೆ ಹೋಗುತ್ತಾರೆ.

ಮಾಣಿ ಬಂದು

ಕಲಾವಿದ 3:- ನಿಮಗೆ ಏನು ಬೇಕು ಎಂದು ಕೇಳುತ್ತಾನೆ.

ಕಲಾವಿದ 4 & ಕಲಾವಿದ 5:- ಅಮ್ಮ ಮಗ ನಮಗೆ ಮೊದಲು ಕುಡಿಯಲು ನೀರು ಕುಡಿಯು ಎಂದು ಕೇಳುತ್ತಾರೆ.

ಕಲಾವಿದ 3:- ಆಗ waiter ಬಂದು ಮಿನರಲ್ ವಾಟರ್ ಅಥವಾ ನಾರ್ಮಲ್ ವಾಟರ್ ಯಾವ ನೀರು ಕೊಡಲಿ ಎಂದು
ಕೇಳುತ್ತಾನೆ.

ಕಲಾವಿದ 4:- ನಮಗೆ ಸಾಧಾರಣ ನೀರು ಕುಡಿ ಸಾಕು ಎಂದು ಅಮ್ಮ ಮಾಡುವ ಹೇಳುತ್ತಾರೆ.

ನಿರ್ದೇಶಕಿ:- ಆಗ waiter ಚಿಕ್ಕ ಬಾಟ್ಲುಗಳಲ್ಲಿ ನಾರ್ಮಲ್ ನೀರನ್ನು ತಂದು ಕೊಡುತ್ತಾನೆ. [ ಕಲಾವಿದ 3 ನಾಟಕ)]

ನಿರ್ದೇಶಕಿ:- ಕುಡಿದು ನೋಡಿದರೆ ಅದರಲ್ಲಿಯೂ ಕೂಡ ಸ್ವಲ್ಪ ಸೋಡಾ ಮಿಕ್ಸ್ ಆಗಿರುತ್ತದೆ. ಆಗ ಅಮ್ಮ ಮತ್ತು ಮಗಳು ದುಡ್ಡು
ಕೊಟ್ಟು ಮಿನರಲ್ ವಾಟರ್ ಅನ್ನು ತೆಗೆದುಕೊಂಡು ಕುಡಿದರು. (ಕಲಾವಿದ 4&5 ನಾಟಕ)

ನೀರು:-

ಹಿಂದಿನ ಕಾಲದಲ್ಲಿ ಮನೆಗೆ ಬಂದರೆ ಮೊದಲು ನೀರನ್ನು ಕೊಟ್ಟು ಉಪಚರಿಸುತ್ತಿದ್ದರು ಮತ್ತು ಹೋಟೆಲ್ಗಳಲ್ಲಿ ಡಾಬಾ ಗಳಲ್ಲಿ
ಊಟಕ್ಕೆ ಮುಂಚೆ ನೀರು ಕೊಡುವ ಪದ್ಧತಿ ಇತ್ತು.

ಭೂಮಿ:- ಇದೇ ರೀತಿಯಾಗಿ ನಾವೆಲ್ಲರೂ ನೀರು ಮತ್ತು ಆಹಾರದ ನಾಶವನ್ನು ಮಾಡಿದರೆ, ಮುಂದೊಂದು ದಿನ ನೀರಿಗಾಗಿ
ಆಹಾರಕ್ಕಾಗಿ ಪರಿತಪಿಸುವ ಪರಿಸ್ಥಿತಿ ಬಂದರೂ ಬರಬಹುದು.

ರೈತ:- ಈ ವರ್ಷ ಒಳ್ಳೆ ಬೆಳೆ ಬಂದಿದೆ ಎರಡು ತಿಂಗಳಿನಲ್ಲಿ ಭತ್ತ ಬೆಳೆದಿದೆ, ಎಲ್ಲಾ ಈ ರಾಸಾಯನಿಕ ಮತ್ತು ಕೀಟಗಳ ಪ್ರಭಾವ .
ಈ ಸಲ ಒಳ್ಳೆಯ ಲಾಭ ಬರುತ್ತದೆ.

ದೃಶ್ಯ;-3 ಊಟ ಮಾಡುತ್ತಿರುವ ದೃಶ್ಯ....

ನಿರ್ದೇಶಕಿ:- ಮಗು ಊಟ ಮಾಡುತ್ತಿರುವ ದೃಶ್ಯ....( ಕಲಾವಿದ 5 & 6 ನಾಟಕ))

ನಿರ್ದೇಶಕಿ:- ಮಗು ವಾಂತಿ......( ಕಲಾವಿದ 6 ನಾಟಕ)


ದೃಶ್ಯ;-4 ಆಸ್ಪ ತ್ರೆ ದೃಶ್ಯ

ನಿರ್ದೇಶಕಿ:- ಮಗುವಿನ ಪರೀಕ್ಷೆ ಮಾಡಿದ ಡಾಕ್ಟರ್ ಹೇಳುತ್ತಾರೆ.

ಕಲಾವಿದ 5:- ಡಾಕ್ರೆ ನನ್ನ ಮಗುವಿಗೆ ಏನಾಗಿದೆ? ಬೆಳಗ್ಗೆ ತಾನೇ ಚೆನ್ನಾಗಿದ್ದ ಆಟ ಆಡ್ಕೊಂಡು ಆರಾಮಾಗಿದ್ದ ಈಗ ಏನಾಯ್ತು
ಡಾಕ್ಟ್ರೇ?

ಕಲಾವಿದ 7:- ನೋಡಿ ಈಗ ಮಾರುಕಟ್ಟೆಗೆ ಬರುತ್ತಿರುವ ಆಹಾರ ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ
.ಅದರಿಂದ ಮಕ್ಕಳು ಇನ್ನಿತರ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಇದೆಲ್ಲಕ್ಕೂ ಕಾರಣ ರಾಸಾಯನಿಕ .ಗೊಬ್ಬರಗಳ
ಬಳಕೆಯಿಂದ ಬೆಳೆದ ಬೆಳೆಗಳೇ ಕಾರಣ ಇದನ್ನು ನಿಲ್ಲಿಸಿ. ಸಾವಯವ ಗೊಬ್ಬರಗಳನ್ನು ಬಳಸಿಕೊಂಡು ಮಣ್ಣಿನ
ಫಲವತ್ತತೆಯನ್ನು ಹೆಚ್ಚಿಸಿ ಅದನ್ನು ಸರಿಯಾದ ರೀತಿಯಲ್ಲಿ ಬೆಳೆಸಿ .

ದೃಶ್ಯ;-5 ವ್ಯಾಪಾರ ಮಾರುಕಟ್ಟೆ

ಕಲಾವಿದ 9:ಮುಲ್ಲಂಗಿ ಎಷ್ಟು?

ಕಲಾವಿದ 8: ಕೆಜಿ 10 ರೂಪಾಯಿ.

ಕಲಾವಿದ 9 :ಅಣ್ಣ ಟೊಮೋಟೊ ಎಷ್ಟು ಅಣ್ಣ?

ಕಲಾವಿದ 8 : ಒಂದು ಕೆಜಿ ಟೊಮಟೆಗೆ 120 ರೂಪಾಯಿ.

ಟಮೊಟೊ ಮಾರ್ಕೆಟ್ ಅಲ್ಲಿ ಬರ್ತಿಲ್ಲ ಅದಕ್ಕೆ ಒಂದು ಕೆಜಿ ಟೊಮಟಿಗೆ 120 ಆಗಿದೆ.

ಕಲಾವಿದ 9: ಸರಿ ಅಣ್ಣ ಒಂದು ಕೆಜಿ ಮೂಲಂಗಿ ಕೊಡಿ.

ಕಲಾವಿದ 8: ಏನೋ ಅದು ಏನ್ ತಗೊಂಡ್ ಹೋಗುತ್ತಿದ್ದೀಯಾ?

ಕಲಾವಿದ 9 :ಏನೂ ಇಲ್ಲ ಅಣ್ಣ!

ಕಲಾವಿದ 8: ಹಾಗಾದರೆ ತೋರಿಸು?

ಏನೋ ಇದು ಟೊಮೇಟೊ ಯಾಕೆ ಕರೀತಿದ್ದೀರಾ ಅದನ್ನ ಯಾಕೆ ತಗೊಂಡು ಹೋಗುತ್ತಿದ್ದೀಯಾ?

ಕಲಾವಿದ 9:- ಅದು ಅಣ್ಣ........

ಹೆಂಡತಿ ಟೊಮೆಟೊ ತಗೊಂಡು ಬರ್ಲಿಲ್ಲ ಅಂದ್ರೆ ಮನೆಗೆ ಬರೋದು ಬೇಡ ಅಂತ ಹೇಳಿದ್ದಾಳೆ. ಟಮೋಟ ಖರೀದಿ
ಮಾಡುವಷ್ಟು ದುಡ್ಡಿಲ್ಲ ಅದಕ್ಕೆ ಹೀಗೆ ತಗೊಂಡು ಹೋಗ್ತಿದ್ದೀನಿ..

ಭೂಮಿ:- ರೈತರು ಬೆಳೆದ ಬೆಳೆಗಳು ಮಾರುಕಟ್ಟೆಗೆ ತಲುಪುವ ಮೊದಲೇ ಮಧ್ಯವರ್ತಿಗಳು ಅದನ್ನು ಖರೀದಿಸಿ ಸ್ಟೋರೇಜ್
ಮಾಡಿ ಬೆಲೆ ಏರಿಕೆ ಆದ ನಂತರ ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ. ಬೆಲೆಗಳು ಏರಿಕೆಯಿಂದ ಬೆಳೆಗಳ
ಅಭಾವ ಉಂಟಾಗಿ ಜನಸಾಮಾನ್ಯರಿಗೆ ಆಹಾರ ಬೆಳೆಗಳು ಸಿಗುತ್ತಿಲ್ಲ .ಬೆಳೆಯುವ ಮಕ್ಕಳಿಗೆ ಸಮತೋಲನ ಆಹಾರದ
ಕೊರತೆಯಿಂದ ಮಕ್ಕಳ ರೋಗ ನಿರೋಧಕ ಶಕ್ತಿ ಕಡಿಮೆ ಆ ಕಡಿಮೆ ಆಗುತಿದೆ.  .

( ಕೊನೆಯಲ್ಲಿ ಭೂಮಿ ನೀರು ರೈತ ಬರುತ್ತಾರೆ)

ನಿರ್ದೇಶಕಿ:-
ಈ ನಾಟಕದ ಸಾರಾಂಶ ಏನೆಂದರೆ ಆದಷ್ಟು ಆರೋಗ್ಯಕರವಾದ ಊಟವನ್ನು ಸೇವಿಸುವುದು ಮತ್ತು ರಾಸಾಯನಿಕ
ಗೊಬ್ಬರವನ್ನು ಕಡಿಮೆ ಮಾಡಬೇಕು
ಮತ್ತು ವ್ಯಾಪಾರಿಗಳು ತರಕಾರಿಗಳ ಬೆಲೆ ಹೆಚ್ಚಾದಾಗ ಮಾತ್ರ ಮಾರುಕಟ್ಟೆಗೆ ತರನು ಅನ್ನುವುದು ಸರಿಯಲ್ಲ
ಇದರಿಂದ ಅದನ್ನು ಖರೀದಿಸುವುದು ಕೆಲವರಿಗೆ ಕಷ್ಟವಾಗುತ್ತದೆ

ಈ ಆಹಾರದ ಭದ್ರತೆಯ ಅರ್ಥ ಎಲ್ಲಾ ವರ್ಗದ ಜನರಿಗೆ ಆಹಾರವನ್ನು ತಲುಪಿಸುವುದು.

ಧನ್ಯ ವಾದಗಳು

You might also like