You are on page 1of 2

೨.

ಸಾರ್ಥಕ – ದಿನಕರ ದೇಸಾಯಿ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. .

೧. ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಎಲ್ಲಿ ಬೀಳುತ್ತದೆ?


ಉತ್ತರ : ಗಾಳಿಯಲ್ಲಿ ಬೂದಿಯನ್ನು ತೂರಿದಾಗ  ಭತ್ತ ಬೆಳೆಯುವ ನಾಡಿನಲ್ಲಿ ಹೋಗಿ ಬೀಳುತ್ತದೆ.

೨. ಬೂದಿಯನ್ನು ಹೊಳೆಯಲ್ಲಿ  ಹರಿಯಬಿಟ್ಟಾಗ ಯಾರಿಗೆ ಸಿಗುತ್ತದೆ?


ಉತ್ತರ : ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಮೀನಿನ ಬಾಯಿಗೆ ಸಿಗುತ್ತದೆ.

೩. ದೇಹ ಏಕೆ ವ್ಯ ರ್ಥವಾಗಿದೆ?


ಉತ್ತರ : ತನ್ನ ದೇಹ ಸ್ವಾರ್ಥವ ನೆನೆದು ವ್ಯ ರ್ಥವಾಗಿದೆ.

೪. ಬೂದಿಯನ್ನು ಕೊಳದಲ್ಲಿ ಬಿಡುವುದರಿಂದ ಬದುಕು ಧನ್ಯ ವಾಗುವುದು ಹೇಗೆ? – ವಿವರಿಸಿ.


ಉತ್ತರ : ನಮ್ಮ ಹೆಣದ ಬೂದಿಯನ್ನು ನೀರಿನಲ್ಲಿ ಬಿಡುವುದರಿಂದ ಅದು ಕೆಸರಿನೊಡನೆ ಕೂಡಿ
ಫಲವತ್ತಾದ ಮಣ್ಣಾಗುತ್ತದೆ. ಅದರಲ್ಲಿ ಕಮಲ ಅರಳಿದಾಗ ನಾವು ಹುಟ್ಟು ಸಾವಿನಿಂದ ಮುಕ್ತರಾಗಿ ನಮ್ಮ
ಬದುಕು ಧನ್ಯ ವಾಗುತ್ತದೆ.

೫. ಸಾರ್ಥಕ ಪದ್ಯ ದ ಯಾವ ಅಂಶಗಳನ್ನು ನೀವು ಮೆಚ್ಚು ವಿರಿ?


ಉತ್ತರ : ಮಾನವನು ತನ್ನ ಸ್ವಾರ್ಥ ಗುಣಗಳನ್ನು ತೊರೆದು ಪರೋಪಕಾರಿಯಾದಾಗ ಬದುಕು ಸಾರ್ಥಕ
ಎಂಬ ಅಂಶವನ್ನು ನಾನು ಮೆಚ್ಚು ತ್ತೇನೆ.

೩. ಆಹುತಿ – ಕೊಡಗಿನ ಗೌರಮ್ಮ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. .

೧. ರೈಲಿನಲ್ಲಿ ಸಿಕ್ಕಿ ದ ಮುದುಕನ ಉದ್ಯೋಗವೇನು?


ಉತ್ತರ : ರೈಲಿನಲ್ಲಿ ಸಿಕ್ಕಿ ದ ಮುದುಕನು ಒಬ್ಬ ರತ್ನ ದ ವ್ಯಾಪಾರಿ ಆಗಿದ್ದ ನು.
೨. ಯುವಕನು ರೈಲಿನಲ್ಲಿ ಸಿಕ್ಕಿ ದ ಮುದುಕನ ಮನೆಗೆ ಏಕೆ ಬಂದನು?
ಉತ್ತರ : ಯುವಕನು ರೈಲಿನಲ್ಲಿ ಸಿಕ್ಕಿ ದ ಮುದುಕನ ಮಗಳು ಮತ್ತು ಸೊಸೆಗೆ ಪಾಠ ಹೇಳಿಕೊಡುವ
ಕೆಲಸಕ್ಕಾಗಿ ಮುದುಕನ ಮನೆಗೆ ಬಂದನು.

೩. ಮುದುಕನ ಮಗಳು ಮತ್ತು   ಸೊಸೆಯ ಹೆಸರೇನು?


ಉತ್ತರ : ಮುದುಕನ ಮಗಳ ಹೆಸರು ಸೀತೆ, ಸೊಸೆಯ ಹೆಸರು ಶಾಂತಿ.

೪. ವರದಕ್ಷಿಣೆಯ ಪಿಶಾಚಿ ಯಾರನ್ನು ಬಲಿ ತೆಗೆದುಕೊಂಡಿದೆ?


ಉತ್ತರ : ವರದಕ್ಷಿಣೆಯ ಪಿಶಾಚಿ ಅನೇಕ ಸುಕುಮಾರಿ ಹೆಣ್ಣು ಮಕ್ಕ ಳನ್ನು ಬಲಿ ತೆಗೆದುಕೊಂಡಿದೆ.

೫. ಯುವಕನು ಬಡವರ ಹುಡುಗಿಯನ್ನು ಮದುವೆಯಾಗದಿರಲು ಕಾರಣಗಳೇನು?


ಉತ್ತರ : ಯುವಕನಿಗೆ ಲಂಡನ್ನಿನಲ್ಲಿ ಲಾ ಕಲಿತು, ಬ್ಯಾರಿಸ್ಟ ರ್ ಆಗಬೇಕೆಂಬ ಬಲವಾದ ಇಚ್ಚೆ ಯಿತ್ತು .
ಆದ್ದ ರಿಂದ ಅವನು ಬಡವರ ಮನೆಯ ಹುಡುಗಿಯನ್ನು ಮದುವೆ ಆಗಲಿಲ್ಲ .

೬. ಪತ್ರಿಕೆಯನ್ನು ತೋರಿಸಿ  ವಿಜಯಳು ಅಣ್ಣ ನಿಗೆ ಏನು ಹೇಳಿದಳು?

ಉತ್ತರ : ಪತ್ರಿಕೆಯನ್ನು ತೋರಿಸಿ  ವಿಜಯಳು ಅಣ್ಣ ನಿಗೆ  “ ನೋಡುತ್ತಿದ್ದು ದು ನೀನು ಕೊಂದ


ಹುಡುಗಿಯನ್ನು ” ಎಂದು ಹೇಳಿದಳು 

You might also like