You are on page 1of 3

ಈ ಕಥೆ ಮತ್ತು ಇದರಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ.

ಇದೊಂದು ಅತ್ಯಂತ ಸರಳ ಕಥೆ. ಹಾಗಾಗಿ Don’t expect more.

ಒಬ್ಬ ಅಮಾಯಕ ಹುಡುಗ ಹೆಸರು ಪ್ರಸನ್ನ . ಈ ಅಮಾಯಕನ ಹಿಂದೆ ಬಿದ್ದದು ಒಬ್ಬಳು ಭಯಾನಕ ಹುಡುಗಿ. ಅವಳು ಹೆಸರು
ಸ್ಫೂರ್ತಿ. ಪ್ರೀತ್ಸೆ ಸಿನಿಮಾದಲ್ಲಿ ಉಪೇಂದ್ರ ಅವರ ಥರ ಈ ಹುಡುಗಿ , ನಮ್ ಪ್ರಸನ್ನ ನ love ಮಾಡು love ಮಾಡು ಅಂತ
ಪ್ರಾಣ ತಿನ್ನುತ್ತಾ ಇರ್ತಾಳೆ.

ಪ್ರಸನ್ನ ಬೇಸತ್ತು ಹೋಗಿದ್ದ. ರೋಡಲ್ಲಿ , ಪಾರ್ಕಲ್ಲಿ, ಶಾಪಿಂಗ್ ಮಾಲ್ ಅಲ್ಲಿ,ಬಸ್ ಸ್ಟಾಪ್ ಅಲ್ಲಿ ಎಲ್ ನೋಡಿದ್ರೂ ಬೆನ್ ಹಿಂದ್
ಸ್ಫೂರ್ತಿ . Gents toilet ಬಿಟ್ಟು ಮತ್ತೆಲ್ಲ ಕಡೆ ಇವನನ್ನೇ follow ಮಾಡ್ತಾ ಇದ್ದಳು. ಈ ದೆವ್ವದಿಂದ ನೆಮ್ಮದಿ ಪಡೆಯೋಕೆ
ದೇವಸ್ಥಾನಕ್ಕೆ ಹೋದರೆ ಅಲ್ಲು ಅವಳು ಪ್ರತ್ಯಕ್ಷ.

ಅಲ್ಲಿವರೆಗೂ ಸುಮ್ಮನೆ ಇದ್ದ ಪ್ರಸನ್ನ full ಧೈರ್ಯ ದಿಂದ ಕೇಶ್ತಾನೆ “ ಏನ್ ಬೇಕ ನಿಂಗೆ”.

“ನಿನ್ನ ಹೃದಯಾ” ಅಂತ romantic ಆಗಿ ಹೇಳ್ತಾಳೆ.

ಅಣ್ಣಾ ಸ್ವಲ್ಪ heart ಕಡೆ ನೋಡ್ತಾನೆ .

ಹಾಗೇ I love you ಅಂತಾಳೆ.

ಅದಕ್ಕೆ ಪ್ರಸನ್ನ “ ಇಲ್ಲಾ ಮೇಡಮ್, ಪ್ರೀತಿ ಒಂದು ರೋಗ.

Love ಮಾಡಿದ್ರೆ ಸಾಯ್ತಿಯಾ ಬೇಗ. ಅಂತಾ ನಮ್ಮ ಅಪ್ಪ ಹೇಳಿದ್ದಾರೆ ಅಂತಾನೆ

ಅವಳು ನಗುತ್ತಾ.” ಅದೆಲ್ಲಾ ನಂಗ್ ಗೊತ್ತಿಲ್ಲಾ ಮುಚ್ಚೊಂಡ್ ಲವ್ ಮಾಡ್ಬೇಕ್ ಅಷ್ಠೆ”

“ ಇಲ್ಲಾ ಮೇಡಮ್ ನೀವು ಸ್ಪೂರ್ತಿ. ನಾನು ಸ್ವಾರ್ಥಿ ನಮ್ ಈಡು ಜೋಡು ಸರಿ ಆಗಲ್ಲ”

“ಮನಸು ಮಾಡಿ ಆಗುತ್ತೆ.”

“ ಇಲ್ಲ ನನ್ ಕೈಯಲ್ಲಿ ಆಗಲ್ಲ”

“ಇಲ್ಲ ನನ್ ಕೈಯಲ್ಲಿ ಆಗಲ್ಲಾ”

“ಇಲ್ಲ ನನ್ ಕೈಯಲ್ಲಿ ಆಗಲ್ಲಾ”

ನಿನ್ ಕೈಯಲ್ಲಿ ಆಗಲಿಲ್ಲ ಅಂದ್ರೆ ನಮ್ ಕೈ ಯಲ್ಲಿ ಆಗುತ್ತೆ. ಏಳೋ ಬಡ್ಡಿ ಮಗನೇ ಬೆಳಿಗ್ಗೆ 8 ಗಂಟೆ ಆಯ್ತು , ಏಳು ಅಂದ್ರೆ ಇಲ್ಲ ನನ್
ಕೈಯಲ್ಲಿ ಆಗಲ್ಲ ಅಂತೆ daily dream ಅಲ್ಲೇ ಜೀವನ ಸಾಗಿಸ್ತಾನೆ ಬರ್ಗೆಟ್ ಬೇವರ್ಸಿ. ಅಂತ ಗೊಣಗುತ್ತಾ ಪ್ರಸನ್ನನ ಏಳಿಸ್ತಾನೆ

ಪ್ರಸನ್ನ ಎದ್ದು ಕಣ್ಣುಜ್ಜಿ ನೋಡ್ತಾನೆ. ಇಲ್ಲಿವರೆಗೂ ಕಂಡಿದ್ದು ಕನಸು. ಈಗ ಅವನು ಇರುವುದು ಅದೇ ಹಳೇ ಬಾಡಿಗೆ ಮನೆಯಲ್ಲಿ
ಕಿತ್ತೋದ್ ಫ್ರೆಂಡ್ಸ್ ಗಳ ಮಧ್ಯೆ, ಛೆ ...
ಒಂದು ಬಾಡಿಗೆ ಮನೆ , ಐದು ಜನ ಸ್ನೇಹಿತರು. ಇಷ್ಟು ಹೊತ್ತು ಕನಸು ಕಂಡ ಅಲ್ವಾ ಅವನು ಪ್ರಸನ್ನ. ಒಂಥರಾ ಕಥಾನಾಯಕ.
ಇನ್ನು ಉಳಿದ 4 ಜನರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

1.ಅವಿನಾಶ್ : ಇವನಿಗೆ photography ಅಂದ್ರೆ ಹುಚ್ಚು. ಹಂಗೆ ಗೆಳತಿ ಕಾವ್ಯ ಅಂದ್ರೆ ಅಚ್ಚುಮೆಚ್ಚು. ಎಲ್ಲರೂ
ಮಧ್ಯ ರಾತ್ರಿಯಲ್ಲಿ ಮಲಗಿ ಗೊರಕೆ ಹೊಡಿತಾ ಇದ್ರೆ , ಈ ನನ ಮಗಂದು ಫೋನ್ ಕಾಲ್ ಮುಗಿದಿರಲ್ಲ.

2. ವಿಜಯ್: ಸಧ್ಯಕ್ಕೆ ಒಂದು private company ಅಲ್ಲಿ ಕೆಲಸ ಮಾಡ್ತಾ ಇದಾನೆ. ಈ ಕೆಲಸ ಬಿಟ್ಟು ಊರಲ್ಲೆ settle
ಆಗಬೇಕು ಅನ್ನೋ plan ಇವನದು. ಏನ್ ಮಿಸ್ ಆದ್ರೂ daily ಊರಿಗೆ call ಮಾಡೋದು ಮಾತ್ರಾ
ಮಿಸ್ ಮಾಡೋದೇ ಇಲ್ಲ . ಕೇಳಿದ್ರೆ ಅಮ್ಮನ ಹತ್ರ ಮಾತಾಡೋದು ಅಂತಾನೆ. ನಿಜವಾದ ವಿಷ್ಯ ಏನಂದ್ರೆ ಅವನ
ಮಾವನ ಮಗಳು ಅಮೃತ ಕೂಡ ಅಲ್ಲೇ ಇರೋದು.

3. ಅಶ್ವಿನ್ : ಇವನು ಒಂದು showroom ಅಲ್ಲಿ ಕೆಲಸ ಮಾಡ್ತಾ ಇದಾನೆ. ಇವನು ಒಂಥರಾ singles ಸಂಘದ ಅಧ್ಯಕ್ಷ
ಇದ್ದ ಹಾಗೇ. ಎಲ್ಲರ ಎದುರು Love ಮಾಡುವವರನ್ನು ನೋಡಿ ನಿಬ್ಬ , ನಿಬ್ಬಿ ಅಂಥಾ ಆಡ್ಕೊಂಡು ನಗ್ತಾನೆ. ಆದರೆ
ಒಳಗೊಳಗೆ ನಮಗೆ ಯಾರು ಇಲ್ಲಲ್ಲ ಅಂತಾ ಬೇಜಾರು ಮಾಡ್ಕೋತಾನೆ. ಹಾಗೇ ಇವನಿಗೆ ಬೇಜಾರುಆಗೋದು
ಏನಂದ್ರೆ ಅವನ ಹೆಸರನ್ನ ಅಶ್ವಿನಿ ಅಂಥಾ ಕರೆಯೋದು.ಒಂದು ಒಳ್ಳೆ ಕಾರು ತಗೋಬೇಕು ಅನ್ನೋದೇ ಇವನ ಸಧ್ಯದ
ಕನಸು.

4. ರಿತೇಶ್ : ಇವನು ಇಲ್ಲಿರೋ ಎಲ್ಲರಿಗಿಂತ ವಿಚಿತ್ರ. ಕೆಲ್ಸ ಏನು ಅಂತ ಹೇಳೋದು. ಇವನಿಗೆ ರಿತೇಶ್ ಅಂದ್ರೆ 4 ಹಲ್ಲು
ತೋರಿಸಿದರೆ ,Reels star ರೀತೇಶ್ ಅಂದ್ರೆ 32 ಹಲ್ಲು ತೋರಿಸಿ ನಗ್ತಾನೆ. ದಿನವಿಡೀ ಮೊಬೈಲ್ ಎದುರುಗಡೆ ನಿಂತು
ಕೊಂಡು ಏನೇನೋ ವಿಚಿತ್ರವಾಗಿ ಆಡ್ತಾ ಇರ್ತಾನೆ. ಇವನಿಗೆ love ಇದ್ಯಾ ಇಲ್ವೋ ಗೊತ್ತಿಲ್ಲ ಆದ್ರೆ.
“Hi ಅನಿತಾ, gm ಸುಶ್ಮಿತಾ, ಊಟ ಆಯ್ತಾ ವನಿತಾ, good night ಗೀತಾ”ಹೀಗೆ ಫೋನ್ call ಅಲ್ಲಿ ಮಾತಾಡ್ತಾ
ಫ್ರೆಂಡ್ಸ್ ಹೊಟ್ಟೆ ಉರಿಸ್ತಾ ಇರ್ತಾನೆ.

ಇನ್ನೂ ಕನಸು ಕಂಡ ಅಲ್ವಾ ಪ್ರಸನ್ನ. ಅವನು ಬಗ್ಗೆ ಏನು ಹೇಳೋದ್ ಬೇಡ ಅನ್ಸುತ್ತೆ. ಏಕೆಂದರೆ ನಂಗೆ ಗೊತ್ತಿಲ್ಲ.
ಯಾವಾಗಲು ಒಬ್ನೆ ಇರ್ತಾನೆ. ಊಟ ತಿಂಡಿ ಸರಿಯಾಗಿ ಮಾಡ್ತಾನೋ ಇಲ್ವೋ ಗೊತ್ತಿಲ್ಲಾ ಆದ್ರೇ Sad status ಹಾಕೇ
ಹಾಕ್ತಾನೆ. ಇವನ ಬಗ್ಗೆ ಮುಂದೆ ತಿಳಿಬಹುದೇನೋ ನೋಡೋಣ.

ಇಷ್ಟ ಹೊತ್ತು ಇದನ್ನೆಲ್ಲಾ ಹೇಳಿದ್ನಲ್ಲಾ ನಾನ್ಯಾರು ಗೊತ್ತಾಯಿತು.

ಈ room ನ ಗೋಡೆ. ಆಶ್ಚರ್ಯ ಪಡಬೇಡಿ ಈ ಕಥೆಯ srarting line ಒಂದ್ ಸಲ ನೋಡಿ. ಗೋಡೆಗು ಕಿವಿ ಇರುತ್ತೆ,,
ಮಾತು ಬರುತ್ತೆ ಜೋಪಾನ ಆಯ್ತಾ..
ಹಾಗೇ ಮುಖ್ಯವಾದ ಇನ್ನು ಎರಡು ವ್ಯಕ್ತಿಗಳನ್ನು ಪರಿಚಯಿಸಬೇಕು.
ಮನೆ owner ರಾಮಕೃಷ್ಣ ಮತ್ತು ಅವರ ಧರ್ಮಪತ್ನಿ ಸುಲೋಚನಾ. ಒಬ್ಬರ ಹತ್ರ ರಾಗದ ಬಗ್ಗೆ ತಿಳಿದುಕೊಂಡರೆ
ಇನ್ನೋಬರ ಹತ್ರ ರೋಗದ ಬಗ್ಗೆ ತಿಳಿದುಕೊಳ್ಳಬಹುದು.
ಅಂದ್ರೆ ಗಂಡ ಡಾಕ್ಟ್ರು , ಹೆಂಡತಿ ಹಾಡುಗಾರ್ತಿ. ಇಬ್ಬರು ಕುಂದಾಪುರದವರು. ಈಗ ಇರೋದು ಬೆಂಗಳೂರಲ್ಲಿ .

ಒಬ್ಬ ಮಗ ಬೇರೆ ಇದಾನೆ ಆದ್ರೆ ಅವನಿಗೆ 3 ವರ್ಷದ ಹಿಂದೇನೆ ಮದುವೆ ಆಗಿ, foreign ಅಲ್ಲಿ ಇದಾರೆ. ಈ ಹುಡುಗರು ,
uncle aunty ಜೊತೆ ಫುಲ್ close. ಇವ್ರ ಥರ owners ಎಲ್ಲೂ ಸಿಗಲ್ಲ ಅನ್ನೋದು ಹುಡುಗರ ಮನದಾಳದ ಮಾತು..
ಹುಡುಗರ ಜೊತೆ ಗಮ್ಮತ್ತ್ ಮಾಡ್ತಾ, ಕುಂದಾಪುರದ ಭಾಷೆ, ಸಂಸ್ಕೃತಿ ಎಲ್ಲ uncle ಹೇಳ್ತಾ ಇರ್ತಾರೆ.ಕೆಲವು ಸಲ
ಅಂತೂ lecture ಕೊಡ್ತಾರೆ . ಹೀಗೆ ಮಾಡಿದ್ರೆ ನಮ್ ಹುಡುಗರು ಹೇಳ್ದೆ ಕೇಳ್ದ ತಮ್ಮ ಕೋಣೆ ಸೇರಿಕೊಂಡ
ಉದಾಹರಣೆಗಳಿವೆ.
Aunty ಅಂತೂ ತುಂಬಾ ಒಳ್ಳೆವರು,ಈ ಗೋಡೆಗಳಿಗೆ ಅಂದ್ರೆ ನನಗೂ ಮನಸು ಇದೆ ಅಂದ್ರೆ ಒಪ್ಪೋರು ಇವರು ಒಬ್ರೆ
ಇರಬೇಕು. ಹಾಡೋದು, serial ನೋಡೋದು, ಎಲ್ಲರ ಜೊತೆ ತಮಾಷೆ ಮಾಡೋದು ನಮ್ಮ ಸುಲೋಚನಾ ಅವರ
ಗುಣ. ಅವರು ಸಿಟ್ಟು ಮಾಡಿಕೊಳ್ಳೋದು ಯಾವುದಕ್ಕೆ ಅಂದ್ರೆ, ನಂಗೆ ನೋವಾದ್ರೆ, ಅಂದ್ರೆ ಗೋಡೆ ಕಲೆ ಆದ್ರೆ.
ಹಾಗೇ ನಮ್ ಹುಡುಗರಲ್ಲಿ ಪ್ರಸನ್ನ ನ ಬಿಟ್ಟು ಮತ್ತೆಲ್ಲರೂ ಅಲ್ಲಿಗೆ ಬರ್ತಾ ಇರ್ತಾರೆ. ಯಾಕಂದ್ರೆ ಪ್ರಸನ್ನ ನಿಗೆ ಒಬ್ನೆ
ಇರೋದು ಅಂದ್ರೆ ಇಷ್ಟ .
ಅವತ್ತು ಆದಿತ್ಯವಾರ ಹುಡುಗರು ತಮ್ಮ ಕೆಳಗಿಳಿದು aunty ,uncle ಜೊತೆ ಮಾತಾಡಲಿಕ್ಕೆ ಹೋಗಿದ್ದರು, ಹಾಗೇ
Sunday special ಉಪ್ಪಿಟ್ಟು ಕೂಡ ತಿಂದ್ರು. ಹೀಗೆ ಮಾತಾಡ್ತಾ , aunty ಖುಷಿಯಿಂದ ಈ ವಾರ ಮಗ ,ಸೊಸೆ ಬರ್ತಾ
ಇದಾರೆ ಅನ್ನೋ ವಿಷ್ಯ ಹೇಳುತ್ತಾರೆ.,uncle ಅವರ ಕಾಲದ ಬಗ್ಗೆ ಹೇಳೋಕೆ ಶುರು ಮಾಡ್ತಾರೆ.
ಇವರು ತಲೆ ಕೆಟ್ಟು ಅವರು ತಿರುಗುವಾಗ ಎಲ್ಲರೂ ಓಡಿ ಬರ್ತಾರೆ.
ಹೀಗೆ ಇರುವಾಗ ಒಂದು ದಿನ ನಮ್ ರೀಲ್ ಸ್ಟಾರ್ ರೀತೆಷ್ ಗೆ

You might also like