You are on page 1of 27

ರಮದಾನ್ ತಿಂಗಳ ಶ್ರೇಷ್ಠತೆಗಳು | 1

23

ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್‌ಉಸೈಮೀನ್

‫مدرسة الصفة اإلسالمية‬


MADRASATU SUFFAH AL ISLAMIYYA
SKYWAY COMPLEX, 6TH BLOCK, KRISHNAPURA,
SURATKAL, MANGALORE - 575 014
PH: 0824-2271449 MOB: 8722695551
ರಮದಾನ್ ತಿಂಗಳ ಶ್ರೇಷ್ಠತೆಗಳು | 2

ನೀ
ರು, ಮಣ್ಣು ಹಾಗೂ ಇತರೆಲ್ಲ ಸೃಷ್ಟಿಗಳನ್ನು
ಯಾವುದೇ ಪೂರ್ವ ಮಾದರಿಯಿಲ್ಲದೆ ಸೃಷ್ಟಿ-
ಸಿದ ಅಲ್ಲಾಹನಿಗೆ ಸರ್ವಸ್ತುತಿ. ಇರುಳಿನ ಅಂಧಕಾರದಲ್ಲಿ
ಸಂಚರಿಸುವ ಒಂದು ಚಿಕ್ಕ ಇರುವೆಯು ಕೂಡ ಅವನ
ದೃಷ್ಟಿಯಿಂದ ಮರೆಯಾಗಿಲ್ಲ. ಆಕಾಶದಲ್ಲಿ ಅಥವಾ
ಭೂಮಿಯಲ್ಲಿ ಅಣುವಿನಷ್ಟು ತೂಕವಿರುವ ವಸ್ತು ಕೂಡ
ಅವನ ಜ್ಞಾನದಿಂದ ಹೊರತಾಗಿಲ್ಲ.

‫﴿ﮎ ﮏ ﮐ ﮑ ﮒ ﮓ ﮔ ﮕ‬
‫ﮖﮗﮘﮙﮚﮛﮜ‬
‫ﮝﮞﮟﮠﮡﮢﮣﮤ‬
﴾ ‫ﮥ ﮦ ﮧﮨ ﮩ ﮪ ﮫ ﮬ‬
“ಆಕಾಶಗಳಲ್ಲಿ, ಭೂಮಿಯಲ್,ಲಿ ಅವೆರಡರ ಮಧ್ಯಭ ಾ-
ಗದಲ್ಲಿ ಮತ್ತು ಮಣ್ಣಿನಡಿಯಲ್ಲಿರುವ ಎಲ್ಲವೂ ಅವನಿಗೆ
ಸೇರಿದ್ದು. ತಾವು ಗಟ್ಟಿಯ ಾಗಿ ಮಾತನಾಡಿದರೂ (ಇಲ್ಲ-
ರಮದಾನ್ ತಿಂಗಳ ಶ್ರೇಷ್ಠತೆಗಳು | 3

ದಿದ್ದರೂ) ಅವನು ರಹಸ್ಯವಾಗಿರುವುದನ್ನೂ ಅತಿನಿಗೂ-


ಢವಾಗಿರುವುದನ್ನೂ ಅರಿಯುತ್ತಾನೆ. ಅಲ್ಲಾಹು, ಅವನ
ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ. ಅವನಿಗೆ ಅತಿಸುಂದ-
ರವಾದ ಹೆಸರುಗಳಿವೆ.” (ತಾಹಾ 6-8)

ಅವನು ಆದಮ್ ರನ್ನು ಸೃಷ್ಟಿಸಿ ಅವರನ್ನು


ಪರೀಕ್ಷಿಸಿದನು. ನಂತರ ಅವರನ್ನು ಆರಿಸಿದನು, ಅವರ
ಪಶ್ಚಾತ ್ತಾಪವನ್ನು ಸ್ವೀಕರಿಸಿ ಅವರಿಗೆ ಮಾರ್ಗದರ್ಶನ
ಮಾಡಿದನು.

ಅವನು ನೂಹ್ ರನ್ನು ಸಂದೇಶವಾಹಕರನ್ನಾಗಿ


ಮಾಡಿ ಕಳುಹಿಸಿದನು. ಅವರು ಅಲ್ಲಾಹನ ಆಜ್ಞೆಯ
ಪ್ರಕ ಾರ ಚಲಿಸುವ ಒಂದು ನಾವೆಯನ್ನು ನಿರ್ಮಿಸಿದರು.

ಅವನು ಇಬ್ರಾಹೀಮ್ ರನ್ನು ಬೆಂಕಿಯಿಂದ ರಕ್ಷಿ-


ಸಿದನು. ಆಗ ಅದರ ಉರಿಯು ಅವರ ಪಾಲಿಗೆ ತಂಪು
ಮತ್ತು ಸುರಕ್ಷೆಯಾಗಿ ಮಾರ್ಪಟ್ಟಿತ ು. (ಜನರೇ) ಅಲ್ಲಿ
ರಮದಾನ್ ತಿಂಗಳ ಶ್ರೇಷ್ಠತೆಗಳು | 4

ಜರುಗಿದ ಘಟನೆಗಳಿಂದ ಪಾಠ ಕಲಿಯಿರಿ.

ಅವನು ಮೂಸಾ ರಿಗೆ ಹತ್ತು ದೃಷ್ಟಾಂತಗಳನ್ನು


ದಯಪಾಲಿಸಿದನು. ಆದರೆ ಫಿರ್‌ಔನ್ ಅದರ ಬಗ್ಗೆ ಚಿಂ-
ತಿಸಲಿಲ್ಲ, (ಧಿಕ್ಕಾರ ಪ್ರವೃತ್ತಿಯನ್ನು) ಬಿಟ್ಟುಬಿಡಲೂ ಇಲ್ಲ.

ಜಗತ್ತನ್ನೇ ನಿಬ್ಬೆರಗುಗೊಳಿಸುವಂತಹ ದೃಷ್ಟಾಂತದೊಂ-


ದಿಗೆ ಅವನು ಈಸಾ ರನ್ನು ಕಳುಹಿಸಿದನು.

ಸುಸ್ಟಷ್ಟ ಪುರಾವೆಗಳು ಮತ್ತು ಮಾರ್ಗದರ್ಶನವಿರುವ


ಗ್ರಂಥವನ್ನು ಅವನು ಮುಹಮ್ಮದ್ ರವರಿಗೆ ಅವ-
ತೀರ್ಣಗೊಳಿಸಿದನು.

ಒಂದರ ಹಿಂದೆ ಒಂದರಂತೆ ನಿರಂತರವಾಗಿ ಬರುವ


ಅವನ ಅನುಗ್ರಹಗಳಿಗಾಗಿ ನಾನು ಅವನನ್ನು ಸ್ತು-
ತಿಸುತ್ತೇನೆ. ಉಮ್ಮುಲ್ ಕುರಾ (ಮಕ್ಕಾ) ಕ್ಕೆ ಕಳುಹಿ-
ಸಲಾದ ಅವನ ಪ್ರವ ಾದಿ ಮುಹಮ್ಮದ್ ರವರ
ಮೇಲೆ ಅವನ ಸಲಾತ್ ಮತ್ತು ಸಲಾಂ ಇರಲಿ. ಅವರ
ರಮದಾನ್ ತಿಂಗಳ ಶ್ರೇಷ್ಠತೆಗಳು | 5

ಮೇಲೆ, ಗುಹೆಯಲ್ಲಿ ಅವರ ಸಂಗಾತಿಯಾಗಿದ್ದ ಅಬೂ-


ಬಕರ್ ರವರ ಮೇಲೆ, ತನ್ನ ಅಭಿಪ್ರಾಯಕ್ಕೆ ತಕ್ಕಂತೆ
ವಹ್ಯ್ ಅವತೀರ್ಣಗೊಳ್ಳುತ್ತಿದ್ದ ಮತ್ತು ಅಲ್ಲಾಹನ ಬೆಳಕಿ-
ನಲ್ಲಿ ಚಲಿಸುತ್ತಿದ್ದ ಉಮರ್ ರವರ ಮೇಲೆ, ಅವರ
ಅಳಿಯ (ಮಗಳ ಗಂಡ) ಉಸ್ಮಾನ್ ರವರ ಮೇಲೆ,
ವಿದ್ಯಾಸಾಗರರೂ, ಮಹಾ ಧೈರ್ಯಶಾಲಿಯೂ, ಅವರ
ದೊಡ್ಡಪ್ಪನ ಮಗನೂ ಆದ ಅಲೀ ರವರ ಮೇಲೆ,
ತಮ್ಮ ಶ್ರೇಷ್ಠತೆಗಳಿಂದ ಜಾಗತಿಕ ಪ್ರಸಿದ್ಧಿಯನ್ನು ಗಳಿಸಿದ
ಅವರ ಇತರ ಕುಟುಂಬಿಕರ ಮತ್ತು ಸಹಾಬಾಗಳ ಮೇಲೆ
ಅಲ್ಲಾಹನ ಸಲಾತ್ ಮತ್ತು ಸಲಾಂ ಇರಲಿ.

ಸಹ�ೋದರರೇ! ಒಂದು ಆದರಣೀಯ ತಿಂಗಳು ಮತ್ತು


ಮಹಾ ಋತುಕಾಲವು ನಿಮ್ಮ ಬಳಿಗೆ ಆಗಮಿಸಿದೆ. ಈ
ತಿಂಗಳಲ್ಲಿ ಅಲ್ಲಾಹು ಪ್ರತಿಫಲವನ್ನು ಅಗಾಧಗೊಳಿಸು-
ತ್ತಾನೆ ಮತ್ತು ಅತ್ಯಧಿಕ ಕೊಡುಗೆಗಳನ್ನು ನೀಡುತ್ತಾನೆ.
ಸ್ವರ್ಗಕ್ಕಾಗಿ ಹಂಬಲಿಸುವ ಪ್ರತಿಯೊಬ್ಬ ವ್ಯಕ್ತಿಗೂ ಅದರ-
ರಮದಾನ್ ತಿಂಗಳ ಶ್ರೇಷ್ಠತೆಗಳು | 6

ಲ್ಲಿ ಒಳಿತುಗಳ ದ್ವಾರಗಳನ್ನು ತೆರೆದುಕೊಡುತ್ತಾನೆ. ಅದು


ಒಳಿತುಗಳ ಮತ್ತು ಸಮೃದ್ಧಿಗಳ ತಿಂಗಳು. ಉಡುಗೊರೆ
ಮತ್ತು ಕೊಡುಗೆಗಳ ತಿಂಗಳು.

‫﴿ﮘ ﮙ ﮚ ﮛ ﮜ‬
‫ﮝﮞﮟﮠ‬
﴾ ‫ﮡ ﮢ ﮣﮤ‬
“ಮನುಷ್ಯರಿಗೆ ಒಂದು ಮಾರ್ಗದರ್ಶನವಾಗಿ, ಸನ್ಮಾರ್ಗ-
ವನ್ನು ತ�ೋರಿಸಿಕೊಡುವ ಮತ್ತು ಸತ್ಯಾಸತ್ಯತೆಗಳನ್ನು ವಿ-
ವರಿಸಿಕೊಡುವ ಸುಸ್ಪಷ್ಟ ಆಧಾರಗ್ರಂಥವಾಗಿ ಕುರ್‌ಆನ್
ಅವತೀರ್ಣವಾದ ತಿಂಗಳಾಗಿದೆ ರಮದಾನ್.” (ಅಲ್‌ಬ-
ಕರ 185)

ಅದು ಕರುಣೆ, ಕ್ಷಮೆ ಮತ್ತು ನರಕಮುಕ್ತಿಯನ್ನು ಒಡಲಲ್ಲಿ


ತುಂಬಿಕೊಂಡಿರುವ ತಿಂಗಳು. ಅದರ ಮೊದಲಭಾಗವು
ರಮದಾನ್ ತಿಂಗಳ ಶ್ರೇಷ್ಠತೆಗಳು | 7

ಕರುಣೆ, ಮಧ್ಯಭ ಾಗವು ಕ್ಷಮೆ ಮತ್ತು ಕೊನೆಯ ಭಾಗವು


ನರಕಮುಕ್ತಿಯಾಗಿದೆ. ಅದರ ಶ್ರೇಷತೆ
್ಠ ಗಳನ್ನು ವಿವರಿಸುವ
ಹದೀಸ್‌ಗಳು ಪ್ರಸಿದ್ಧವಾಗಿವೆ. ಮುತವಾತಿರ್ ಆಗಿ ವರ-
ದಿಯಾಗಿವೆ.

‫َع ْن َأبِي ُه َر ْي َر َة َر ِض َي ال َّل ُه َعنْ ُه َأنَّ النَّبِ َّي‬


ِ
َ ‫ «إِ َذا َج‬:‫َص َّلى ال َّل ُه َع َل ْيه َو َس َّل َم َق َال‬
‫اء‬
‫ت‬ ْ ‫اب ا ْل َجن َِّة َو ُغ ِّل َق‬ َ ‫ت َأ ْبـ‬
ُ ‫ـو‬ ْ ‫َر َم َضانُ ُفت َِّح‬
ِ ِ ِ ‫اب الن‬
.»‫ين‬ ُ ‫الش َياط‬ َّ ‫َّار َو ُص ِّفدَ ت‬ ُ ‫َأ ْب َو‬
ಅಬೂ ಹುರೈರಾ ರಿಂದ ವರದಿ: ಪ್ರವ ಾದಿ
ರವರು ಹೇಳಿದರು: “ರಮದಾನ್ ಆಗಮಿಸಿದರೆ ಸ್ವರ್ಗದ
ಬಾಗಿಲುಗಳನ್ನು ತೆರೆಯಲಾಗುತ್ತದೆ, ನರಕದ ಬಾಗಿಲು-
ಗಳನ್ನು ಮುಚ್ಚಲ ಾಗುತ್ತದೆ ಮತ್ತು ಶೈತಾನರನ್ನು ಸಂಕ�ೋ-
ಲೆಗಳಿಂದ ಬಂಧಿಸಲಾಗುತ್ತದೆ.” (ಅಲ್‌ಬುಖಾರಿ ಮತ್ತು
ಮುಸ್ಲಿಮ್)
ರಮದಾನ್ ತಿಂಗಳ ಶ್ರೇಷ್ಠತೆಗಳು | 8

ಈ ತಿಂಗಳಲ್ಲಿ ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗು-


ವುದು ಇದರಲ್ಲಿ ಜನರು ಅತ್ಯಧಿಕ ಸತ್ಕರ್ಮಗಳನ್ನು ಮಾ-
ಡುವುದರಿಂದ ಮತ್ತು ಕರ್ಮವೆಸಗುವವರಿಗೆ ಒಂದು
ಪ್ರೋತ್ಸಾಹವಾಗಲೆಂಬ ನೆಲೆಯಿಂದಾಗಿದೆ. ನರಕದ
ಬಾಗಿಲುಗಳನ್ನು ಮುಚ್ಚಲ ಾಗುವುದು ವಿಶ್ವಾಸಿಗಳು ಅತಿ-
ಕಡಿಮೆ ದುಷ್ಕರ್ಮವೆಸಗುವುದರಿಂದಾಗಿದೆ. ಶೈತಾನರನ್ನು
ಸಂಕ�ೋಲೆಗಳಿಂದ ಬಂಧಿಸಲಾಗುವ ಕಾರಣ ಇತರ ತಿಂ-
ಗಳುಗಳಲ್ಲಿ ಮಾಡುವುದನ್ನು ಈ ತಿಂಗಳಲ್ಲಿ ಮಾಡಲು
ಅವರಿಗೆ (ಶೈತಾನರಿಗೆ) ಸಾಧ್ಯವಾಗುವುದಿಲ್ಲ.

‫َع ْن َأبِي ُه َر ْي َر َة َر ِض َي ال َّل ُه َعنْ ُه َأنَّ النَّبِ َّي‬


‫ت ُأ َّمتِي‬ ْ ‫«أ ْعطِ َي‬ُ :‫َص َّلى ال َّل ُه َع َل ْي ِه َو َس َّل َم َق َال‬
‫ال فِي َر َم َضانَ َل ْم ُت ْع َط ُه َّن ُأ َّم ٌة‬ ٍ ‫َخم َس ِخ َص‬
ْ
َ ِ ُ ‫ ُخ ُل‬.‫ِم َن ال َم ِم َق ْب َل َها‬
َ ْ
‫ب‬ ُ ‫الصائ ِم أ ْط َي‬ َّ ‫وف َف ِم‬
‫ َوت َْس َتغ ِْف ُر َل ُه ُم‬،‫ك‬ ِ ‫ِعنْدَ ال َّل ِه ِمن ِريحِ ا ْل ِمس‬
ْ ْ
‫‪ರಮದಾನ್ ತಿಂಗಳ ಶ್ರೇಷ್ಠತೆಗಳು | 9‬‬

‫ا ْل َمالئِ َك ُة َحتَّى ُي ْفطِ ُروا‪َ ،‬و ُي َز ِّي ُن ال َّل ُه ك َُّل َي ْو ٍم‬


‫الصالِ ُحونَ َأنْ‬ ‫ي َّ‬
‫وش ُ ِ ِ‬
‫ك ع َباد َ‬
‫ول‪ :‬ي ِ‬
‫َجنَّ َت ُه َو َي ُق ُ ُ‬
‫ِ‬ ‫ِ‬
‫ُي ْل ُقوا َعن ُْه ُم ا ْل ُم ْؤ َن َة َو ْالَ َذى َو َيص ُيروا إِ َل ْيك‪،‬‬
‫ين‪َ ،‬فال َيخْ ُل ُصونَ‬ ‫الش َياطِ ِ‬
‫َوت َُص َّفدُ فِ ِيه َم َر َد ُة َّ‬
‫إِ َلى َما كَانُوا َيخْ ُل ُصونَ إِ َل ْي ِه فِي َغ ْي ِر ِه‪َ ،‬و ُي ْغ َف ُر‬
‫ول ال َّل ِه!‬ ‫يل‪َ :‬يا َر ُس َ‬ ‫آخ ِر َل ْي َل ٍة»‪ِ .‬ق َ‬
‫َلهم فِي ِ‬
‫ُ ْ‬
‫ِ‬ ‫ِ‬
‫«ل‪َ ،‬و َلك َّن ا ْل َعام َل‬ ‫َأ ِه َي َل ْي َل ُة ا ْل َقدْ ِر؟ َق َال‪َ :‬‬
‫إِن ََّما ُي َو َّفى َأ ْج َر ُه إِ َذا َق َضى َع َم َل ُه»‪.‬‬
‫‪ಅಬೂ ಹುರೈರಾ‬‬ ‫‪ರಿಂದ ವರದಿ: ಪ್ರವ ಾದಿ‬‬
‫‪ರವರು ಹೇಳಿದರು: “ರಮದಾನ್ ತಿಂಗಳಲ್ಲಿ ನನ್ನ‬‬
‫‪ಸಮುದಾಯಕ್ಕೆ ಐದು ವೈಶಿಷ್ಟ್ಯಗಳನ್ನು ನೀಡಲಾಗಿದೆ.‬‬
‫‪ಇದಕ್ಕಿಂತ ಮುಂಚಿನ ಯಾವುದೇ ಸಮುದಾಯಕ್ಕೂ ಈ‬‬
‫‪ವೈಶಿಷ್ಟ್ಯಗಳನ್ನು ನೀಡಲಾಗಿಲ್ಲ.‬‬
ರಮದಾನ್ ತಿಂಗಳ ಶ್ರೇಷ್ಠತೆಗಳು | 10

1. ಉಪವಾಸಿಗನ ಬಾಯಿಯ ದುರ್ಗಂಧಕ್ಕೆ ಅಲ್ಲಾಹನ


ಬಳಿ ಕಸ್ತೂರಿಗಿಂತಲೂ ಹೆಚ್ಚು ಪರಿಮಳವಿದೆ.

2. ಉಪವಾಸ ಪಾರಣೆ ಮಾಡುವ ತನಕ ಮಲಕ್‌ಗಳು


ಉಪವಾಸ ಆಚರಿಸಿದವರಿಗೆ ಕ್ಷಮೆಯಾಚಿಸುತ್ತಾರೆ.

3. ಅಲ್ಲಾಹು ದಿನನಿತ್ಯ ಸ್ವರ್ಗವನ್ನು ಸಿಂಗರಿಸುತ್ತಾ


ಹೇಳುತ್ತಾರೆ: “ನನ್ನ ಸಜ್ಜನ ದಾಸರು ಕಷ್ಟಕ�ೋಟ-
ಲೆಗಳನ್ನೂ ಕಿರುಕುಳಗಳನ್ನೂ ಸಹಿಸಿ ನಿನ್ನ ಕಡೆಗೆ
ಮರಳುವರು.”

4. ಅದರಲ್ಲಿ (ರಮದಾನ್ ತಿಂಗಳಲ್ಲಿ) ಕಡು ಧಿಕ್ಕಾರಿ-


ಗಳಾದ ಶೈತಾನರನ್ನು ಸಂಕ�ೋಲೆಗಳಿಂದ ಬಂ-
ಧಿಸಲಾಗುತ್ತದೆ. ಆದ್ದರಿಂದ ಇತರ ತಿಂಗಳುಗಳಲ್ಲಿ
ಮಾಡುವುದನ್ನು ಈ ತಿಂಗಳಲ್ಲಿ ಮಾಡಲು ಅವರಿಗೆ
ಸಾಧ್ಯವಾಗುವುದಿಲ್ಲ.

5. ಕೊನೆಯ ರಾತ್ರಿಯಲ್ಲಿ ಅವರಿಗೆ (ಉಪವಾಸಿಗರಿಗೆ)


ರಮದಾನ್ ತಿಂಗಳ ಶ್ರೇಷ್ಠತೆಗಳು | 11

ಕ್ಷಮಿಸಲಾಗುತ್ತದೆ.”

ಸಹಾಬಾಗಳು ಕೇಳಿದರು: “ಓ ಅಲ್ಲಾಹನ ಸಂದೇಶವಾ-


ಹಕರೇ! ಕೊನೆಯ ರಾತ್ರಿ ಎಂದರೆ ಲೈಲತುಲ್ ಕದ್ರ್‌ನ
ರಾತ್ರಿಯೇ?” ಪ್ರವಾದಿ ರವರು ಹೇಳಿದರು: “ಅಲ್ಲ,
ಅದು ಲೈಲತುಲ್ ಕದ್ರ್‌ನ ರಾತ್ರಿ ಅಲ್ಲ. ಕೆಲಸಗಾರನಿಗೆ
ವೇತನ ನೀಡುವುದು ಕೆಲಸ ಮಾಡಿ ಮುಗಿಸಿದ ಬಳಿಕ-
ವಾಗಿದೆ.” (ಅಹ್ಮದ್, ಅಲ್‌ಬಝ್ಝಾರ್ ಮತ್ತು ಅಬುಶ್ಶೈಖ್
ತಮ್ಮ ಕಿತಾಬು ಸ್ಸವಾಬ್‌ನಲ್ಲಿ)

ಸಹ�ೋದರರೇ! ಈ ಐದು ವೈಶಿಷ್ಟ್ಯಗಳನ್ನು ಅಲ್ಲಾಹು


ನಿಮಗಾಗಿ ತೆಗೆದಿಟ್ಟಿದ ್ದಾನೆ. ಇತರ ಸಮುದಾಯಗಳಿಗೆ
ನೀಡದೆ ನಿಮಗೆ ಮಾತ್ರ ಇವುಗಳನ್ನು ನೀಡಿದ್ದಾನೆ. ನಿಮ್ಮ
ಮೇಲಿರುವ ಅವನ ಅನುಗ್ರಹಗಳನ್ನು ಪೂರ್ಣಗೊ-
ಳಿಸಲು ಇದನ್ನು ಅವನು ನಿಮಗೆ ಒಂದು ಕೃಪೆಯಾಗಿ
ದಯಪಾಲಿಸಿದ್ದಾನೆ. ಅಲ್ಲಾಹು ದಯಪಾಲಿಸಿದ ಅನು-
ಗ್ರಹ ಮತ್ತು ಶ್ರೇಷ್ಠತೆಗಳಿಗೆ ಲೆಕ್ಕವಿದೆಯೇ?
ರಮದಾನ್ ತಿಂಗಳ ಶ್ರೇಷ್ಠತೆಗಳು | 12

‫﴿ﭞ ﭟ ﭠ ﭡ ﭢ‬
‫ﭣﭤﭥﭦ‬
﴾ ‫ﭧ ﭨ ﭩﭪ‬
“ನೀವು ಜನರಿಗಾಗಿ ಹೊರತರಲಾದ ಒಂದು ಉತ್ತಮ
ಸಮುದಾಯವಾಗಿದ್ದೀರಿ. ನೀವು ಸದಾಚಾರವನ್ನು
ಆದೇಶಿಸುತ್ತೀರಿ, ದುರಾಚಾರವನ್ನು ವಿರ�ೋಧಿಸುತ್ತೀ-
ರಿ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ.” (ಆಲು
ಇಮ್ರಾನ್ 110)

ಮೊದಲನೆಯ ವೈಶಿಷ್ಟ್ಯ:

‫ب ِعنْدَ ال َّل ِه ِم ْن‬ ِ


ُ ‫الصائ ِم َأ ْط َي‬
َّ ‫وف َف ِم‬ َ
َ ‫«أنَّ ُخ ُل‬
ِ ِ
.»‫ِريحِ ا ْلم ْسك‬
“ಉಪವಾಸಿಗನ ಬಾಯಿಯ ದುರ್ಗಂಧಕ್ಕೆ ಅಲ್ಲಾಹನ
ಬಳಿ ಕಸ್ತೂರಿಗಿಂತಲೂ ಹೆಚ್ಚು ಪರಿಮಳವಿದೆ.” (ಅಲ್‌ಬು-
ರಮದಾನ್ ತಿಂಗಳ ಶ್ರೇಷ್ಠತೆಗಳು | 13

ಖಾರಿ ಮತ್ತು ಮುಸ್ಲಿಮ್)

ಖಲೂಫ್ ಅಥವಾ ಖುಲೂಫ್ ಎಂದರೆ ಆಹಾರವಿಲ್ಲದೆ


ಹೊಟ್ಟೆಯು ಖಾಲಿಯಿರುವಾಗ ಬಾಯಿಯಲ್ಲುಂಟಾ-
ಗುವ ವಾಸನೆ. ಈ ವಾಸನೆಯನ್ನು ಜನರು ಇಷ್ಟಪಡುವು-
ದಿಲ್ಲ. ಆದರೆ ಅಲ್ಲಾಹನ ಬಳಿ ಇದಕ್ಕೆ ಕಸ್ತೂರಿಗಿಂತಲೂ
ಹೆಚ್ಚು ಪರಿಮಳವಿದೆ. ಕಾರಣ, ಅದು ಉದ್ಭವವಾಗುವು-
ದು ಅಲ್ಲಾಹನ ಆರಾಧನೆ ಮತ್ತು ಆಜ್ಞಾಪಾಲನೆಯಿಂದ.
ಅಲ್ಲಾಹನ ಆರಾಧನೆ ಮತ್ತು ಆಜ್ಞಾಪಾಲನೆಯಿಂದ
ಉದ್ಭವವಾಗುವುದೆಲ್ಲವೂ ಅಲ್ಲಾಹನಿಗೆ ಅತ್ಯಂತ ಇಷ್ಟ-
ವಾಗಿದೆ. ಅದಕ್ಕಿಂತಲೂ ಉತ್ತಮವಾದ, ಶ್ರೇಷ್ಠವ ಾದ
ಮತ್ತು ಪರಿಮಳವುಳ್ಳ ಒಂದನ್ನು ಅವನು ಬದಲಿಯಾಗಿ
ಆ ವ್ಯಕ್ತಿಗೆ ನೀಡುವನು.

ಅಲ್ಲಾಹನ ವಚನವು ಅತ್ಯುನ್ನತವಾಗಿರಬೇಕೆಂಬ ಉದ್ದೇ-


ಶದಿಂದ ಜಿಹಾದ್ ಮಾಡಿ ಹುತಾತ್ಮನಾದ ವ್ಯಕ್ತಿಯ ಬಗ್ಗೆ
ನೀವು ಕೇಳಿಲ್ಲವೇ? ಪುನರುತ್ಥಾನ ದಿನ ಅವನು ನೆತ್ತರು
ರಮದಾನ್ ತಿಂಗಳ ಶ್ರೇಷ್ಠತೆಗಳು | 14

ಹರಿಯುತ್ತಿರುವ ಗಾಯಗಳೊಂದಿಗೆ ಬರುವನು. ಅದರ


ಬಣ್ಣ ಕೆಂಪಾಗಿದರ
್ದ ೂ ಅದರ ಪರಿಮಳವು ಕಸ್ತೂರಿಯ
ಪರಿಮಳದಂತೆ ಇರುತ್ತದೆ. ಹಜ್ಜ್‌ನ ಸಮಯದಲ್ಲಿ
ಅಲ್ಲಾಹು ತನ್ನ ಮಲಕ್‌ಗಳಿಗೆ ಹಾಜಿಗಳನ್ನು ತ�ೋರಿಸಿ
ಪ್ರಶಂಸೆಯ ಮಾತುಗಳನ್ನಾಡುತ್ತಾ ಹೇಳುತ್ತಾನೆ:

.»‫اءونِي ُش ْع ًثا ُغ ْب ًرا‬ ِ ِ


ُ ‫ َج‬،‫«ا ْن ُظ ُروا إِ َلى ع َبادي‬
“ನನ್ನ ಈ ದಾಸರನ್ನು ನ�ೋಡಿರಿ. ಕೆದರಿದ ಕೂದಲು
ಮತ್ತು ಧೂಳು ತುಂಬಿದ ದೇಹಗಳೊಂದಿಗೆ ಅವರು ನನ್ನ
ಬಳಿಗೆ ಬಂದಿದ್ದಾರೆ.” (ಅಹ್ಮದ್ ಮತ್ತು ಇಬ್ನ್ ಹಿಬ್ಬಾನ್
ತಮ್ಮ ಸಹೀಹ್‌ನಲ್ಲಿ)

ಈ ಸ್ಥಳದಲ್ಲಿ ಕೆದರಿದ ಕೂದಲು ಮತ್ತು ಧೂಳು ತುಂಬಿದ


ದೇಹ ಅಲ್ಲಾಹನಿಗೆ ತುಂಬಾ ಇಷ್ಟ. ಏಕೆಂದರೆ ಅದು
ಉದ್ಭವವಾದದ್ದು ಇಹ್ರಾಮಿನ ನಿಷಿದ್ಧಗಳನ್ನು ವರ್ಜಿಸುವ
ಮೂಲಕ ಮತ್ತು ಸುಖಭ�ೋಗಗಳನ್ನು ತೊರೆಯುವ
ರಮದಾನ್ ತಿಂಗಳ ಶ್ರೇಷ್ಠತೆಗಳು | 15

ಮೂಲಕ ಅಲ್ಲಾಹನ ಆಜ್ಞಾಪಾಲನೆ ಮಾಡಿದ ಕಾರ-


ಣದಿಂದಾಗಿದೆ.

ಎರಡನೆಯ ವೈಶಿಷ್ಟ್ಯ:

.»‫«أنَّ ا ْل َم َلئِ َك َة ت َْس َتغ ِْف ُر َل ُه ُم َحتَّى ُي ْفطِ ُروا‬


َ
“ಉಪವಾಸ ಪಾರಣೆ ಮಾಡುವ ತನಕ ಮಲಕ್‌ಗಳು
ಅವರಿಗಾಗಿ ಕ್ಷಮೆಯಾಚಿಸುತ್ತಾರೆ.”

ಮಲಕ್‌ಗಳು ಅಲ್ಲಾಹನ ಬಳಿ ಆದರಣೀಯ ದಾಸರು.


ಅವರು ಅಲ್ಲಾಹನ ಆಜ್ಞೆಯನ್ನು ಮೀರುವುದಿಲ್ಲ. ತಮಗೆ
ಆಜ್ಞಾಪಿಸಲಾಗುವುದನ್ನು ಅವರು ನಿರ್ವಹಿಸುತ್ತಾರೆ.
ಅಲ್ಲಾಹು ಅವರಿಗೆ ಅನುಮತಿ ನೀಡಿದ ಕಾರಣ ಅವರು
ಉಪವಾಸಿಗರಿಗಾಗಿ ಪ್ರಾರ್ಥಿಸುತ್ತಾರೆ. ಈ ಪ್ರಾರ್ಥನೆಗೆ
ಅಲ್ಲಾಹು ಖಂಡಿತ ಉತರ
್ತ ಕೊಡುತ್ತಾನೆ. ಈ ಸಮುದಾ-
ಯದ ಉಪವಾಸಿಗರಿಗಾಗಿ ಮಲಕ್‌ಗಳು ಕ್ಷಮೆಯಾಚನೆ
ಮಾಡಲು ಅಲ್ಲಾಹು ಅನುಮತಿ ನೀಡಿದ್ದು ಈ ಸಮುದಾ-
ರಮದಾನ್ ತಿಂಗಳ ಶ್ರೇಷ್ಠತೆಗಳು | 16

ಯದ ಶ್ರೇಷ್ಠತೆಯನ್ನು ಎತ್ತಿತ�ೋರಿಸುವುದಕ್ಕೆ, ಅವರ ಕೀ-


ರ್ತಿಯನ್ನು ಉನ್ನತಗೊಳಿಸುವುದಕ್ಕೆ ಮತ್ತು ಉಪವಾಸದ
ಶ್ರೇಷ್ಠತೆಯನ್ನು ವಿವರಿಸಿಕೊಡುವುದಕ್ಕಾಗಿದೆ.

ಕ್ಷಮೆಯಾಚನೆ ಎಂದರೆ ಕ್ಷಮೆ ಬೇಡುವುದು. ಅಂದರೆ


ಪಾಪಗಳನ್ನು ಇಹಲ�ೋಕದಲ್ಲೂ ಪರಲ�ೋಕದ-
ಲ್ಲೂ ಮರೆಮಾಚಬೇಕೆಂದು ಮತ್ತು ಕ್ಷಮಿಸಬೇಕೆಂದು
ಅಲ್ಲಾಹನಲ್ಲಿ ಮೊರೆಯಿಡುವುದು. ಅದು (ಅಲ್ಲಾಹನ
ಕ್ಷಮೆ) ಅತಿದೊಡ್ಡ ಉದ್ದೇಶವೂ ಅತ್ಯುನ್ನತ ಗುರಿಯೂ
ಆಗಿದೆ. ಏಕೆಂದರೆ ಮನುಷ್ಯರೆಲ್ಲರೂ ಪಾಪಿಗಳು ಮತ್ತು
ಸ್ವಯಂ ಅತಿರೇಕವೆಸಗಿದವರು. ಅವರೆಲ್ಲರೂ ಅಲ್ಲಾಹನ
ಕ್ಷಮೆಯ ಅತ್ಯಗತ್ಯವುಳ್ಳವರು.

ಮೂರನೆಯ ವೈಶಿಷ್ಟ್ಯ:
ِ ‫ ي‬:‫ول‬ َ
‫ك‬ ُ ‫وش‬ ُ ُ ‫«أنَّ ال َّل َه ُي َز ِّي ُن ك َُّل َي ْو ٍم َجنَّ َت ُه َو َي ُق‬
‫الصالِ ُحونَ َأنْ ُي ْل ُقوا َعن ُْه ُم ا ْل ُم ْؤ َن َة‬ َّ ‫ي‬
ِ ِ
َ ‫ع َباد‬
ರಮದಾನ್ ತಿಂಗಳ ಶ್ರೇಷ್ಠತೆಗಳು | 17

ِ ‫و ْالَ َذى وي ِصيروا إِ َلي‬


.»‫ك‬ ْ ُ ََ َ
“ಅಲ್ಲಾಹು ದಿನನಿತ್ಯ ಸ್ವರ್ಗವನ್ನು ಸಿಂಗರಿಸುತ್ತಾ
ಹೇಳುವನು: ನನ್ನ ಸಜ್ಜನ ದಾಸರು ಕಷ್ಟಕ�ೋಟಲೆಗಳನ್ನೂ
ಕಿರುಕುಳಗಳನ್ನೂ ಸಹಿಸಿ ನಿನ್ನ ಕಡೆಗೆ ಮರಳುವರು.”

ಅಲ್ಲಾಹು ಅವನ ಸಜ್ಜನ ದಾಸರಿಗೆ ಪೂರ್ವ ತಯಾರಿ-


ಯಾಗಿ ಮತ್ತು ಅದಕ್ಕೆ ಮರಳಲು ಅವರಿಗೆ ಪ್ರೋತ್ಸಾಹ
ನೀಡುವುದಕ್ಕಾಗಿ ದಿನನಿತ್ಯ ಸ್ವರ್ಗವನ್ನು ಸಿಂಗರಿಸುವನು.
ಅಲ್ಲಾಹು ಹೇಳುವನು: “ನನ್ನ ಸಜ್ಜನ ದಾಸರು ಕಷ್ಟ-
ಕ�ೋಟಲೆಗಳನ್ನೂ ಕಿರುಕುಳಗಳನ್ನೂ ಸಹಿಸುವರು.”
ಅಂದರೆ ಇಹಲ�ೋಕದ ಕಷ್ಟ, ಸುಸ್ತು ಮತ್ತು ಕಿರುಕುಳ-
ಗಳನ್ನು. ಇಹಲ�ೋಕದಲ್ಲೂ ಪರಲ�ೋಕದಲ್ಲೂ ಅವರ
ಸೌಭಾಗ್ಯವನ್ನು ನಿರ್ಣಯಿಸುವ ಕರ್ಮಗಳನ್ನು ಮಾಡಲು
ಅವರು ಸನ್ನದರ
್ಧ ಾಗುವುದಕ್ಕಾಗಿ ಹಾಗೂ ಶಾಂತಿ ಮತ್ತು
ಗೌರವದ ಭವನವನ್ನು (ಸ್ವರ್ಗವನ್ನು) ಸೇರಿಕೊಳ್ಳುವುದ-
ಕ್ಕಾಗಿ ಅಲ್ಲಾಹು ರಮದಾನ್ ತಿಂಗಳಲ್ಲಿ ದಿನನಿತ್ಯ ಸ್ವರ್ಗ-
ರಮದಾನ್ ತಿಂಗಳ ಶ್ರೇಷ್ಠತೆಗಳು | 18

ವನ್ನು ಸಿಂಗರಿಸುವನು.

ನಾಲ್ಕನೆಯ ವೈಶಿಷ್ಟ್ಯ:

ِ ِ‫الش َياط‬
.» َ‫ين ُي َص َّفدُ ون‬ َ
َّ ‫«أنَّ َم َر َد َة‬
“ಕಡು ಧಿಕ್ಕಾರಿಗಳಾದ ಶೈತಾನರನ್ನು ಬಂಧಿಸಲಾಗುವು-
ದು.” (ಅಲ್‌ಬುಖಾರಿ ಮತ್ತು ಮುಸ್ಲಿಮ್) ಇನ್ನೊಂದು
ವರದಿಯಲ್ರ
ಲಿ ುವಂತೆ: “ಸಂಕ�ೋಲೆ ಮತ್ತು ಬೇಡಿಗ-
ಳಿಂದ.”

ಆದ್ದರಿಂದ ಅಲ್ಲಾಹನ ಸಜ್ಜನ ದಾಸರನ್ನು ಪಥಭ್ರಷ್ಟಗೊ-


ಳಿಸಲು ಮತ್ತು ಒಳಿತಿನ ಕಾರ್ಯಗಳನ್ನು ಬಿಟ್ಟು ಇತರ
ವಿಷಯಗಳಲ್ಲಿ ಅವರನ್ನು ಮಗ್ನರ ಾಗುವಂತೆ ಮಾಡಲು
ಶೈತಾನರಿಗೆ ಸಾಧ್ಯವ ಾಗುವುದಿಲ್ಲ. ನರಕವಾಸಿಗಳಾಗು-
ವಂತೆ ತನ್ನ ಪಕ್ಷದವರಿಗೆ ಕರೆ ನೀಡುವ ತಮ್ಮ ಶತ್ರುವನ್ನು
ಈ ತಿಂಗಳಲ್ಲಿ ಬಂಧಿಸಿಟ್ಟಿರುವುದು ಅಲ್ಲಾಹು ಉಪವಾ-
ಸಿಗರಿಗೆ ಮಾಡಿದ ಬಹು ದೊಡ್ಡ ಉಪಕಾರವಾಗಿದೆ. ಈ
ರಮದಾನ್ ತಿಂಗಳ ಶ್ರೇಷ್ಠತೆಗಳು | 19

ಕಾರಣದಿಂದಲೇ ಒಳಿತಿನ ಕಾರ್ಯಗಳಲ್ಲಿ ಮಗ್ನರ ಾಗ-


ಲು ಮತ್ತು ಕೆಡುಕುಗಳಿಂದ ದೂರವಾಗಲು ಸಜ್ಜನರು
ಈ ತಿಂಗಳಲ್ಲಿ ಇತರ ತಿಂಗಳುಗಳಿಗಿಂತಲೂ ಹೆಚ್ಚು ಉತ್ಸು-
ಕರಾಗುತ್ತಾರೆ.

ಐದನೆಯ ವೈಶಿಷ್ಟ್ಯ:

‫«أنَّ ال َّل َه َيغ ِْف ُر ِلُ َّم ِة ُم َح َّم ٍد َص َّلى ال َّل ُه َع َل ْي ِه‬
َ
.»‫الش ْه ِر‬ ِ ٍ ِ ِ
َّ ‫َو َس َّل َم في آخ ِر َل ْي َلة م ْن َه َذا‬
“ಈ ತಿಂಗಳ ಕೊನೆಯ ರಾತ್ರಿಯಲ್ಲಿ ಅಲ್ಲಾಹು ಮುಹ-
ಮ್ಮದ್ ರವರ ಸಮುದಾಯವನ್ನು ಕ್ಷಮಿಸುವನು.”
(ಅಲ್‌ಬೈಹಕೀ)

ಆದರೆ ಇದು ಈ ಅನುಗ್ರಹೀತ ತಿಂಗಳಲ್ಲಿ ಉಪವಾಸ


ಮತ್ತು ನಮಾಝ್‌ಗಳನ್ನು ನಿರ್ವಹಿಸಬೇಕಾದ ರೀ-
ತಿಯಲ್ಲಿ ನಿರ್ವಹಿಸಿದವರಿಗೆ ಮಾತ್ರ. ಉಪವಾಸಿಗರು
ರಮದಾನ್ ತಿಂಗಳ ಶ್ರೇಷ್ಠತೆಗಳು | 20

ತಮ್ಮ ಉಪವಾಸವನ್ನು ಮುಗಿಸುವಾಗಲೇ ಅಲ್ಲಾಹು


ಅವರಿಗೆ ಅವರ ಪ್ರತಿಫಲವನ್ನು ನೀಡುವುದು ಅಲ್ಲಾಹನ
ಔದಾರ್ಯವಾಗಿದೆ. ಕಾರಣ, ಕೆಲಸದವವನಿಗೆ ವೇತನ
ನೀಡವುದು ಕೆಲಸ ಮಾಡಿ ಮುಗಿಸಿದ ಬಳಿಕವಾಗಿದೆ.

ಅಲ್ಲಾಹು ಅವನ ದಾಸರಿಗೆ ಈ ಪ್ರತಿಫಲವನ್ನು


ಮೂರು ವಿಧಗಳಲ್ಲಿ ನೀಡುತ್ತಾನೆ.

ಮೊದಲನೆಯ ವಿಧ:

ಅವರ ಪಾಪಗಳು ಕ್ಷಮಿಸಲು ಮತ್ತು ಅವರ ಸ್ಥಾನಮಾ-


ನವು ಎತರ
್ತ ಕ್ಕೇರಲು ಅವನು ಅವರಿಗೆ ಕೆಲವು ಸತ್ಕರ್ಮ-
ಗಳನ್ನು ಮಾಡುವಂತೆ ನಿರ್ದೇಶಿಸಿದ್ದಾನೆ. ಅವನು ಅವು-
ಗಳನ್ನು ನಿರ್ದೇಶಿಸದೆ ಇರುತ್ತಿದ್ದರೆ ಅವುಗಳ ಮೂಲಕ
ಅವನನ್ನು ಆರಾಧಿಸಲು ಮನುಷ್ಯರಿಗೆ ಸಾಧ್ಯವಾಗುತ್ತಿರ-
ಲಿಲ್ಲ. ಕಾರಣ, ಅಲ್ಲಾಹು ಪ್ರವಾದಿಗಳಿಗೆ ನೀಡಿದ ದಿವ್ಯ-
ಸಂದೇಶದ ಆಧಾರದಲ್ಲಿರುವ ಆರಾಧನೆಗಳಲ್ಲದೆ ಬೇರೆ
ರಮದಾನ್ ತಿಂಗಳ ಶ್ರೇಷ್ಠತೆಗಳು | 21

ಯಾವ ಆರಾಧನೆಯನ್ನೂ ಅಲ್ಲಾಹು ಸ್ವೀಕರಿಸುವುದಿ-


ಲ್ಲ. ಈ ಕಾರಣದಿಂದಲೇ (ದಿವ್ಯಸಂದೇಶದ ಆಧಾರವಿ-
ಲ್ಲದೆ) ಆರಾಧನೆಗಳನ್ನು ಮಾಡುವವರನ್ನು ಅಲ್ಲಾಹು
ವಿರ�ೋಧಿಸುತ್ತಾನೆ. ಅದನ್ನು ಶಿರ್ಕ್‌ನಲ್ಲಿ ಸೇರಿದ ಒಂದು
ವಿಧವೆಂದು ಹೇಳಿದ್ದಾನೆ. ಅಲ್ಲಾಹು ಹೇಳುತ್ತಾನೆ:

‫﴿ﮭ ﮮ ﮯ ﮰ ﮱ‬
‫ﯓ ﯔ ﯕ ﯖ ﯗ ﯘ ﯙﯚ ﯛ‬
‫ﯜ ﯝ ﯞ ﯟﯠ ﯡ‬
﴾‫ﯢﯣﯤﯥﯦ‬
“ಅಲ್ಲಾಹು ಅನುಮತಿ ನೀಡದ ವಿಷಯಗಳನ್ನು
ಅವರಿಗೆ ಧರ್ಮವನ್ನಾಗಿ ಮಾಡಿಕೊಟ್ಟ ಯಾವುದಾದ-
ರೂ ಸಹಭಾಗಿಗಳು ಅವರಿಗೆ ಇದ್ದಾರೆಯೇ? ನಿರ್ಣಾಯಕ
ವಿಧಿಯು ಇಲ್ಲದಿರುತ್ತಿದ್ದರೆ ಅವರ ನಡುವೆ ಈಗಾಗಲೇ
ತೀರ್ಮಾನಿಸಿ ಬಿಡಲಾಗುತ್ತಿತ್ತು. ಖಂಡಿತವಾಗಿಯೂ
ರಮದಾನ್ ತಿಂಗಳ ಶ್ರೇಷ್ಠತೆಗಳು | 22

ಅನ್ಯಾಯವೆಸಗುವವರಿಗೆ ಯಾತನಾಮಯ ಶಿಕ್ಷೆ


ಕಾದಿದೆ.” (ಅಶ್ಶೂರಾ 21)

ಎರಡನೆಯ ವಿಧ:

ಮನುಷ್ಯರಿಗೆ ಅವನು ಸತ್ಕರ್ಮವನ್ನು ಮಾಡುವ ಭಾ-


ಗ್ಯವನ್ನು ನೀಡಿದ್ದಾನೆ. ಆದರೆ ಜನರಲ್ಲಿ ಹೆಚ್ಚಿನವರಿಗೆ
ಆ ಭಾಗ್ಯವಿಲ್ಲ. ಸತ್ಕರ್ಮ ಮಾಡುವವರಿಗೆ ಅಲ್ಲಾಹನ
ಸಹಾಯ ಮತ್ತು ಸೌಭಾಗ್ಯವಿಲ್ಲದಿದ್ದರೆ ಅವರದನ್ನು
ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಮಾಡುವ ಸತ್ಕ-
ರ್ಮದ ಔದಾರ್ಯ ಮತ್ತು ಕೃಪೆ ಅಲ್ಲಾಹನಿಗೆ ಸಲ್ಲುತ್ತದೆ.

‫﴿ﯳ ﯴ ﯵ ﯶﯷ ﯸ ﯹ ﯺ‬
‫ﯻ ﯼﯽ ﯾ ﯿ ﰀ ﰁ ﰂ ﰃ‬
﴾‫ﰄﰅﰆﰇﰈ‬
“ತಾವು ಇಸ್ಲಾಮ್ ಸ್ವೀಕರಿಸಿರುವುದನ್ನು ತಮ್ಮ ಮೇಲೆ
ರಮದಾನ್ ತಿಂಗಳ ಶ್ರೇಷ್ಠತೆಗಳು | 23

ತ�ೋರಿಸಿದ ಕೃಪೆಯೆಂದು ಅವರು ಪರಿಗಣಿಸುತ್ತಿದ್ದಾರೆ.


ಹೇಳಿರಿ: ನೀವು ಇಸ್ಲಾಮ್ ಸ್ವೀಕರಿಸಿರುವುದನ್ನು ನನ್ನ
ಮೇಲೆ ತ�ೋರಿಸಿದ ಕೃಪೆಯೆಂದು ಪರಿಗಣಿಸಬೇಡಿರಿ.
ಬದಲಾಗಿ, ನಿಮಗೆ ವಿಶ್ವಾಸದೆಡೆಗೆ ಮಾರ್ಗದರ್ಶನ
ಮಾಡಿರುವುದು ಅಲ್ಲಾಹು ನಿಮ್ಮ ಮೇಲೆ ತ�ೋರಿಸಿದ
ಕೃಪೆಯೆಂದು ಪರಿಗಣಿಸಿರಿ.” (ಅಲ್‌ಹುಜುರಾತ್ 17)

ಮೂರನೆಯ ವಿಧ:

ಪ್ರತಿಫಲವು ಹಲವು ಪಟ್ಟು ಇಮ್ಮಡಿಯಾಗುತ್ತದೆ. ಒಂದು


ಒಳಿತಿಗೆ ಹತ್ತರಿಂದ ಏಳು ನೂರರವರೆಗೆ ಅದಕ್ಕಿಂತಲೂ
ಅನೇಕ ದುಪ್ಪಟ್ಟು ಪ್ರತಿಫಲವಿದೆ. ಆದ್ದರಿಂದ ಸತ್ಕರ್ಮ-
ವನ್ನು ನಿರ್ದೇಶಿಸಿ ನಂತರ ಅದನ್ನು ಮಾಡಿದವರಿಗೆ ಪ್ರ-
ತಿಫಲ ನೀಡುವುದು ಅಲ್ಲಾಹನ ಔದಾರ್ಯವಾಗಿದೆ.
ಸರ್ವಲ�ೋಕಗಳ ರಬ್ಬ್ ಆದ ಅಲ್ಲಾಹನಿಗೆ ಸರ್ವಸ್ತುತಿ.

ಸಹ�ೋದರರೇ! ರಮದಾನ್ ತಲುಪಿದವರಿಗೆ, ಆಜ್ಞೋ-


ರಮದಾನ್ ತಿಂಗಳ ಶ್ರೇಷ್ಠತೆಗಳು | 24

ಲ್ಲಂಘನೆ ತೊರೆದು ಆಜ್ಞಾಪಾಲನೆ ಮಾಡುವವರಿಗೆ,


ಅಲಕ್ಷ್ಯವನ್ನು ತೊರೆದು ಲಕ್ಷ್ಯದೆಡೆಗೆ ಮರಳುವವರಿಗೆ,
ಅಲ್ಲಾಹನಿಂದ ದೂರವಾಗಿ ಪುನಃ ಅಲ್ಲಾಹನೆಡೆಗೆ
ಮರಳುವವರಿಗೆ ಮತ್ತು ಅಲ್ಲಾಹನ ಕಡೆಗೆ ಮರಳುವ
ಮೂಲಕ ರಮದಾನ್ ತಿಂಗಳ ಹಕ್ಕನ್ನು ನೆರವೇರಿಸು-
ವವರಿಗೆ ರಮದಾನ್ ತಿಂಗಳು ಒಂದು ದೊಡ್ಡ ಅನು-
ಗ್ರಹವಾಗಿದೆ.

‫ب‬ ٍ ‫ْب فِي َر َج‬ َّ ‫َيا َذا ا َّل ِذي َما َك َفا ُه‬
ُ ‫الذن‬
ِ ‫َحتَّى َع َصى َر َّب ُه فِي َش ْه ِر َش ْع َب‬
‫ان‬ 
َ ‫َل َقدْ َأ َظ َّل‬
َّ ‫ك َش ْه ُر‬
‫الص ْو ِم َب ْعدَ ُه َما‬
ِ ‫َف َل ت َُص ِّي ْر ُه َأ ْي ًضا َش ْه َر ِع ْص َي‬
‫ان‬ 
‫َوات ُْل ا ْل ُق ْرآنَ َو َس ِّب ْح فِ ِيه ُم ْجت َِهدً ا‬
ِ ‫َفإِ َّن ُه َش ْه ُر ت َْسبِيحٍ َو ُق ْر‬
‫آن‬ 
ರಮದಾನ್ ತಿಂಗಳ ಶ್ರೇಷ್ಠತೆಗಳು | 25

ٍ ‫ف ِممن صام فِي س َل‬


‫ف‬ َ َ َ ْ َّ ُ ‫ْت َت ْع ِر‬ َ ‫ك َْم ُكن‬
‫ان‬ ٍ ‫ِم ْن َب ْي ِن َأ ْه ٍل َو ِج َير‬
ِ ‫ان َوإِ ْخ َو‬ 
‫اق َب ْعدَ ُه ُمو‬ ُ ‫َأ ْفن‬
َ ‫َاه ُم ا ْل َم ْو ُت َو ْاس َت ْب َق‬
‫اصي ِم َن الدَّ انِي‬ ِ ‫حيا َفما َأ ْقرب ا ْل َق‬
َ َ َ ًّ َ 
“ರಜಬ್ ತಿಂಗಳಲ್ಲಿ ಪಾಪವೆಸಗುವುದನ್ನು ಸಾಕು
ಮಾಡದೆ, ಶಅ್‌ಬ ಾನ್ ತಿಂಗಳಲ್ಲೂ ಅಲ್ಲಾಹನನ್ನು ಧಿ-
ಕ್ಕರಿಸಿ ನಡೆದವನೇ!

ಅವೆರಡು ತಿಂಗಳುಗಳ ಬಳಿಕ ರಮದಾನ್ ತಿಂಗಳು


ಇಗ�ೋ ನಿಮ್ಮ ಬಳಿಗೆ ಬಂದಿದೆ. ಇದನ್ನು ಸಹ ನೀವು
ಆಜ್ಞೋಲ್ಲಂಘನೆಯ ಮಾಸವನ್ನಾಗಿ ಮಾಡಬೇಡಿ!

ಕುರ್‌ಆನ್ ಪಾರಾಯಣ ಮತ್ತು ತಸ್ಬೀಹ್‌ಗಳ ಮೂಲಕ


ಪರಿಶ್ರಮಪಡಿರಿ. ಕಾರಣ, ಇದು ತಸ್ಬೀಹ್ ಮತ್ತು ಕುರ್‌ಆ-
ನ್‌ನ ತಿಂಗಳಾಗಿದೆ!
ರಮದಾನ್ ತಿಂಗಳ ಶ್ರೇಷ್ಠತೆಗಳು | 26

ಈ ಹಿಂದೆ ಉಪವಾಸ ಆಚರಿಸಿದ ನಿಮ್ಮ ಕುಟುಂಬ,


ನೆರೆಹೊರೆ ಮತ್ತು ಸಹ�ೋದರರಲ್ಲಿ ಸೇರಿದ ಎಷ್ಟೋ
ಜನರ ಪರಿಚಯವಿಲ್ಲವೇ ನಿಮಗೆ!

ಮರಣವು ಅವರನ್ನು ಕಣ್ಮರೆಯಾಗುವಂತೆ ಮಾಡಿ


ಅವರ ಮರಣಾನಂತರವೂ ನಿನ್ನನ ್ನು ಜೀವಂತವಾಗಿ
ಉಳಿಸಿದೆ. ಸಮೀಪದಲ್ಲಿರುವ ವ್ಯಕ್ತಿಗಿಂತ ದೂರದಲ್ಲಿರು-
ವವನು ಎಷ್ಟು ಹತ್ತಿರವಾಗಿದ್ದಾನೆ!”

ಓ ಅಲ್ಲಾಹ್! ಅಲಕ್ಷ್ಯದ ನಿದ್ದೆಯಿಂದ ನಮ್ಮನ್ನು ಎಬ್ಬಿಸು.


ಮರಣಕ್ಕಿಂತ ಮುಂಚೆ ತಕ್ವವನ್ನು ಸಿದ್ಧವ ಾಗಿಟ್ಟುಕೊ-
ಳ್ಳುವ ಭಾಗ್ಯವನ್ನು ಕರುಣಿಸು. ನಿರ್ದಿಷ್ಟ ಅವಧಿಯನ್ನು
ಹೊಂದಿರುವ ಈ ಪುಣ್ಯ ಕಾಲವನ್ನು ಸದುಪಯೋ-
ಗಪಡಿಸುವಂತೆ ಮಾಡು. ಕರುಣೆ ತ�ೋರುವವರಲ್ಲಿ
ಅತ್ಯಧಿಕ ಕರುಣೆ ತ�ೋರುವವನೇ! ನಿನ್ನ ಕರುಣೆಯ
ಮೂಲಕ ನಮಗೆ, ನಮ್ಮ ಮಾತಾಪಿತರಿಗೆ ಮತ್ತು ಸಕಲ
ಮುಸಲ್ಮಾನರಿಗೆ ಕ್ಷಮಿಸು. ನಮ್ಮ ಪ್ರವಾದಿ ಮುಹಮ್ಮದ್
ರಮದಾನ್ ತಿಂಗಳ ಶ್ರೇಷ್ಠತೆಗಳು | 27

ರವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು


ಅವರ ಸಹಾಬಾಗಳೆಲ್ಲರ ಮೇಲೆ ಅಲ್ಲಾಹನ ಸಲಾತ್
ಮತ್ತು ಸಲಾಂ ಇರಲಿ.

‫الحركة النصيحة اإلسالمية‬


ANNASEEHA ISLAMIC MOVEMENT
SURATKAL, MANGALORE - 575 014
MOB: 9731593091 / 9945171612

Jamiyathe Ahle Hadees


Mangalore

You might also like