You are on page 1of 45

ಪ್ರವಾದಿ(ಸ) ಯವರ ಹಿತವಚನಗಳು | 1

21

‫مدرسة الصفة اإلسالمية‬


MADRASATU SUFFAH AL ISLAMIYYA
SKYWAY COMPLEX, 6TH BLOCK, KRISHNAPURA,
SURATKAL, MANGALORE - 575 014
PH: 0824-2271449 MOB: 8722695551
‫‪ಪ್ರವಾದಿ(ಸ) ಯವರ ಹಿತವಚನಗಳು | 2‬‬

‫‌್‪ಪ್ರಸಿದ್ಧ ಸಹಾಬಿವರ್ಯ ಅಬು ದ್ದರ ್ದಾಅ‬‬ ‫‪ಹೇ-‬‬


‫‪ಳುತ್ತಾರೆ:‬‬

‫ول ال َّل ِه َص َّلى ال َّل ُه َع َل ْي ِه َو َس َّل َم‬ ‫َأ ْو َصانِي َر ُس ُ‬


‫ت‬ ‫بِتِ ْسعٍ‪َ :‬ل ت ُْش ِر ْك بِال َّل ِه َش ْيئًا‪َ ،‬وإِنْ ُق ِّط ْع َ‬
‫الص َل َة ا ْل َم ْكتُو َب َة‬ ‫ت‪َ ،‬و َل َتت ُْرك ََّن َّ‬ ‫َأ ْو ُح ِّر ْق َ‬
‫َت ِمنْ ُه‬ ‫ُم َت َع ِّمدً ا‪َ ،‬و َم ْن ت ََرك ََها ُم َت َع ِّمدً ا َب ِرئ ْ‬
‫ِ‬
‫َاح‬‫الذ َّم ُة‪َ ،‬و َل ت َْش َر َب َّن ا ْلخَ ْم َر‪َ ،‬فإِن ََّها م ْفت ُ‬ ‫ِّ‬
‫اك أنَْ‬ ‫َ‬
‫ك‪َ ،‬وإِنْ أ َم َر َ‬ ‫ِ‬ ‫ِ‬ ‫َ‬
‫ك ُِّل َش ٍّر‪َ ،‬وأط ْع َوالدَ ْي َ‬
‫ِ‬
‫اخ ُر ْج َل ُه َما‪َ ،‬و َل ُتنَاز َع َّن‬ ‫اك َف ْ‬ ‫تَخْ ُر َج ِم ْن ُد ْن َي َ‬
‫ْت‪َ ،‬و َل ت َِف َّر‬ ‫َّك َأن َ‬ ‫ت َأن َ‬ ‫ُو َل َة ْالَ ْم ِر‪َ ،‬وإِنْ َر َأ ْي َ‬
‫ك‪،‬‬ ‫ْت َو َف َّر َأ ْص َحا ُب َ‬ ‫ف‪َ ،‬وإِنْ َه َلك َ‬ ‫ِمن الزَّح ِ‬
‫ْ‬ ‫َ‬
‫ك‪َ ،‬و َل ت َْر َف ْع‬ ‫ِ‬ ‫َ‬
‫ك َع َلى أ ْهل َ‬ ‫ِ‬ ‫ِ‬
‫َو َأنْف ْق م ْن َط ْول َ‬‫ِ‬
ಪ್ರವಾದಿ(ಸ) ಯವರ ಹಿತವಚನಗಳು | 3

‫ َو َأ ِخ ْف ُه ْم فِي ال َّل ِه َع َّز‬،‫ك‬


َ ِ‫اك َع ْن َأ ْهل‬
َ ‫َع َص‬
.‫َو َج َّل‬
“ಪ್ರವಾದಿ ಯವರು ನನಗೆ ಒಂಬತ್ತು ಹಿತವಚನ-
ಗಳನ್ನು ನೀಡುತ್ತಾ ಹೇಳಿದರು:

1. “ನಿಮ್ಮನ್ನು ತುಂಡು ತುಂಡಾಗಿ ಕೊಚ್ಚಿ ಹಾಕಿದರೂ,


ಅಥವಾ ಬೆಂಕಿಯಲ್ಲಿ ಹಾಕಿ ಸುಟ್ಟರ ೂ ನೀವು
ಅಲ್ಲಾಹನೊಡನೆ ಯಾರನ್ನೂ ಸಹಭಾಗಿಯನ್ನಾಗಿ
ಮಾಡಬೇಡಿ.

2. ಕಡ್ಡಾಯ ನಮಾಝ್‍ಗಳನ್ನು ಉದ್ದೇಶಪೂರ್ವಕ


ತೊರೆಯಬೇಡಿ. ಕಾರಣ, ಅದನ್ನು ಉದ್ದೇಶಪೂ-
ರ್ವಕ ತೊರೆಯುವವರು ಕರಾರಿನಿಂದ ಮುಕರ
್ತ ಾ-
ಗುತ್ತಾರೆ.

3. ಮದ್ಯಪ ಾನ ಮಾಡಬೇಡಿ. ಕಾರಣ, ಅದು ಎಲ್ಲ ಕೆ-


ಡುಕುಗಳ ಕೀಲಿಕೈಯಾಗಿದೆ.
ಪ್ರವಾದಿ(ಸ) ಯವರ ಹಿತವಚನಗಳು | 4

4. ನಿಮ್ಮ ಮಾತಾಪಿತರನ್ನು ಅನುಸರಿಸಿರಿ. ನೀವು ನಿಮ್ಮ


ಇಹಲ�ೋಕವನ್ನು ಸಂಪೂರ್ಣವಾಗಿ ತೊರೆದು ಹೊ-
ರಟುಹ�ೋಗಬೇಕೆಂದು ಅವರು ನಿಮಗೆ ಆದೇಶಿ-
ಸಿದರೆ, ನೀವದನ್ನು ಸಂಪೂರ್ಣವಾಗಿ ತೊರೆದು
ಹ�ೋಗಿರಿ.

5. ಆಡಳಿತಗಾರರೊಂದಿಗೆ ವಾದ ಮಾಡಬೇಡಿ. ಆ ಸ್ಥಾ-


ನಕ್ಕೆ ನೀವೇ ಅರ್ಹರೆಂದು ನಿಮಗೆ ಅನ್ನಿಸಿದರೂ ಸಹ.

6. ಯುದ್ಧಭೂಮಿಯಿಂದ ಪಲಾಯನ ಮಾಡಬೇಡಿ.


ನೀವು ಸತ್ತರ ೂ ಅಥವಾ ನಿಮ್ಮ ಸಂಗಡಿಗರು
ಪಲಾಯನ ಮಾಡಿದರೂ ಸಹ.

7. ನಿಮ್ಮ ಸಂಪತ್ತಿನಿಂದ ನಿಮ್ಮ ಕುಟುಂಬಕ್ಕೆ ಖರ್ಚು


ಮಾಡಿ.

8. ನಿಮ್ಮ ಬೆತ್ತವನ್ನು ನಿಮ್ಮ ಕುಟುಂಬದಿಂದ ದೂರ


ಇಡಬೇಡಿ.
ಪ್ರವಾದಿ(ಸ) ಯವರ ಹಿತವಚನಗಳು | 5

9. ಅಲ್ಲಾಹನ ಬಗ್ಗೆ ನಿಮ್ಮ ಕುಟುಂಬವನ್ನು ಹೆದರಿಸು-


ತ್ತಿರಿ.”

ಇವೆಲ್ಲವೂ ಪ್ರವ ಾದಿ ಯವರು ಅಬು ದ್ದರ ್ದಾಅ್


ಎಂಬ ಸಹಾಬಿವರ್ಯರಿಗೆ ಕೊಟ್ಟ ಹಿತವಚನ-
ಗಳಾಗಿವೆ. ಅಲ್‍ಬುಖಾರಿ ತಮ್ಮ ‘ಅಲ್‍ಅದಬುಲ್
ಮುಫ್ರದ್’ನಲ್ಲಿ ವರದಿ ಮಾಡಿದ ಈ ಹದೀಸನ್ನು ಶೈಖ್
ಅಲ್‍ಅಲ್ಬಾನೀ ಹಸನ್ ಎಂದು ಹೇಳಿದ್ದಾರೆ. ಈ ಹದೀ-
ಸಿನಲ್ಲಿ ಒಟ್ಟು ಒಂಬತ್ತು ಹಿತವಚನಗಳಿವೆ. ಈ ಹಿತವ-
ಚನಗಳೆಲ್ಲವೂ ಮಹತ್ವಪೂರ್ಣವೂ ಪ್ರಾಮುಖ್ಯವೂ
ಆಗಿರುವುದರಿಂದ ಇವುಗಳನ್ನು ನಾವು ಒಂದೊಂದಾಗಿ
ಕಲಿತು ನಮ್ಮ ಜೀವನದಲ್ಲಿ ಅಳವಡಿಸ�ೋಣ. ಅಲ್ಲಾಹು
ಅನುಗ್ರಹಿಸಲಿ.

ಮೊದಲನೆಯದಾಗಿ: ಪ್ರವ ಾದಿ ಹೇಳುತ್ತಾರೆ: “ನಿ-


ಮ್ಮನ್ನು ತುಂಡು ತುಂಡಾಗಿ ಕೊಚ್ಚಿ ಹಾಕಿದರೂ, ಅಥವಾ
ಬೆಂಕಿಯಲ್ಲಿ ಹಾಕಿ ಸುಟ್ಟರೂ ನೀವು ಅಲ್ಲಾಹನೊಡನೆ
ಪ್ರವಾದಿ(ಸ) ಯವರ ಹಿತವಚನಗಳು | 6

ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿ.”

ಈ ಮೊದಲನೇ ಹಿತವಚನದಲ್ಲಿ ಪ್ರವಾದಿ ಯವರು


ಹೇಳುವುದೇನೆಂದರೆ: ಅಲ್ಲಾಹನನ್ನು ಮಾತ್ರ ಆರಾಧಿಸಿ-
ರಿ. ಯಾವುದೇ ಕಾರಣಕ್ಕೂ ಅವನೊಡನೆ ಯಾರನ್ನೂ
ಅಥವಾ ಏನನ್ನೂ ಸಹಭಾಗಿಯನ್ನಾಗಿ ಮಾಡಬೇಡಿ.
ಅಂದರೆ ಎಂತಹ ಪರಿಸ್ಥಿತಿಯಲ್ಲೂ, ಎಂತಹ ಸಂದಿಗ್ಧ
ಘಟ್ಟದಲ್ಲೂ ಶಿರ್ಕ್ ಮಾಡಬೇಡಿ. ಶತ್ರುಗಳು ನಿಮ್ಮ-
ನ್ನು ತುಂಡು ತುಂಡಾಗಿ ಕತರಿ
್ತ ಸಿದರೂ ಸಹ ಶಿರ್ಕ್
ಮಾಡಬೇಡಿ. ಅವರು ನಿಮ್ಮನ್ನು ಬೆಂಕಿಯಲ್ಲಿ ಎಸೆದು
ಉರಿಸಿದರೂ ಶಿರ್ಕ್ ಮಾಡಬೇಡಿ. ಕಾರಣ, ಶಿರ್ಕ್ ಎನ್ನು-
ವುದು ಅಂತಿಂತಹ ಪಾಪವಲ್ಲ. ಅದೊಂದು ಘೋರ
ಮಹಾಪಾಪ. ಮಹಾಪಾಪಗಳಲ್ಲೇ ಅತಿದೊಡ್ಡ ಪಾಪ.
ಅದಕ್ಕಿಂತ ದೊಡ್ಡ ಪಾಪ ಬೇರೆಯಿಲ್ಲ. ಅಲ್ಲಾಹು ಎಲ್ಲ
ಪಾಪಗಳನ್ನೂ ಕ್ಷಮಿಸುತ್ತಾನೆ. ಆದರೆ ಶಿರ್ಕ್ ಎಂಬ ಈ
ಮಹಾಪಾಪವನ್ನು ಅವನು ಎಂದಿಗೂ ಕ್ಷಮಿಸುವುದಿಲ್ಲ.
ಪ್ರವಾದಿ(ಸ) ಯವರ ಹಿತವಚನಗಳು | 7

ಮಾತ್ರವಲ್ಲ, ಶಿರ್ಕ್ ಮಾಡಿದವನಿಗೆ ಸ್ವರ್ಗ ನಿಷಿದ್ಧವಾಗಿ-


ದೆ. ಅವನ ವಾಸಸ್ಥಳ ನರಕಾಗ್ನಿಯಾಗಿದೆ. ಶಿರ್ಕ್ ಅಲ್ಲದ
ಬೇರೆ ಪಾಪಗಳನ್ನು ಮಾಡಿದವರು ತಮ್ಮ ಪಾಪಕ್ಕೆ ಶಿ-
ಕ್ಷೆಯನ್ನು ಅನುಭವಿಸಿದ ಬಳಿಕ ಕೊನೆಯ ಘಳಿಗೆಯ-
ಲ್ಲಾದರೂ ಸ್ವರ್ಗವನ್ನು ಪ್ರವೇಶಿಸುತ್ತಾರೆ. ಆದರೆ ಶಿರ್ಕ್
ಮಾಡಿದವರಿಗೆ ಸ್ವರ್ಗ ಪ್ರವೇಶ ನಿಷಿದ್ಧ. ಅವರು ಶಾಶ್ವತ
ನರಕವಾಸಿಗಳು. ಅವರ ಯಾವುದೇ ಸತ್ಕರ್ಮವನ್ನೂ
ಅಲ್ಲಾಹು ಸ್ವೀಕರಿಸುವುದಿಲ್ಲ.

ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ಶಿರ್ಕ್


ಮಹಾ ಅಕ್ರಮವಾಗಿದೆ.” [ಕುರ್‍ಆನ್ 31:13]

“ತನ್ನೊಡನೆ ಶಿರ್ಕ್ ಮಾಡುವುದನ್ನು ಅಲ್ಲಾಹು ಖಂಡಿತ


ಕ್ಷಮಿಸುವುದಿಲ್ಲ. ಅದಲ್ಲದ ಬೇರೆ ಪಾಪಗಳನ್ನು ಅವನಿ-
ಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ. ಅಲ್ಲಾಹನೊಡನೆ
ಶಿರ್ಕ್ ಮಾಡಿದವರು ವಿದೂರವಾದ ಪಥಭ್ರಷ್ಟತೆಯಲ್ಲಿ-
ದ್ದಾರೆ.” [ಕುರ್‍ಆನ್ 4:116]
ಪ್ರವಾದಿ(ಸ) ಯವರ ಹಿತವಚನಗಳು | 8

“ಅಲ್ಲಾಹನೊಡನೆ ಬೇರೆ ಆರಾಧ್ಯರನ್ನು ಇಟ್ಟು ಆರಾಧಿಸ-


ಬೇಡಿ. ಹಾಗೇನಾದರೂ ಮಾಡಿದರೆ ನೀವು ಆಕ್ಷೇಪಿತರಾ-
ಗಿ ಅಸಹಾಯಕರಾಗಿ ಕೂರುವಿರಿ.” [ಕುರ್‍ಆನ್ 17:22]

“ನೀವೇನಾದರೂ ಶಿರ್ಕ್ ಮಾಡಿದರೆ ನಿಮ್ಮ ಕರ್ಮಗ-


ಳೆಲ್ಲವೂ ನಿಷ್ಫಲವಾಗುವುದು ಮತ್ತು ನೀವು ಎಲ್ಲವ-
ನ್ನೂ ಕಳಕೊಂಡವರಲ್ಲಿ ಸೇರಿದವರಾಗುವಿರಿ ಎಂದು
ನಿಮಗೂ ನಿಮಗಿಂತ ಮುಂಚಿನವರಿಗೂ ದಿವ್ಯಸಂದೇ-
ಶದ ಮೂಲಕ ತಿಳಿಸಲಾಗಿದೆ. ಇಲ,್ಲ ನೀವು ಅಲ್ಲಾಹನನ್ನು
ಮಾತ್ರ ಆರಾಧಿಸಬೇಕು ಮತ್ತು ಕೃತಜ್ಞತೆ ಸಲ್ಲಿಸುವವರಲ್ಲಿ
ಸೇರಬೇಕು.” [ಕುರ್‍ಆನ್ 39:65-66]

“ಅಲ್ಲಾಹನೊಡನೆ ಶಿರ್ಕ್ ಮಾಡಿದವರು ಯಾರ�ೋ,


ಅವರಿಗೆ ಅಲ್ಲಾಹು ಸ್ವರ್ಗವನ್ನು ನಿಷಿದ್ಧಗ ೊಳಿಸಿದ್ದಾನೆ
ಮತ್ತು ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಅಕ್ರ-
ಮಿಗಳಿಗೆ ಸಹಾಯಕರಾಗಿ ಯಾರೂ ಇಲ.್ಲ ” [ಕುರ್‍ಆನ್
5:72]
ಪ್ರವಾದಿ(ಸ) ಯವರ ಹಿತವಚನಗಳು | 9

ಶಿರ್ಕ್‍ನಲ್ಲಿ ಎರಡು ವಿಧವಿದೆ. ಒಂದು ಹಿರಿಯ ಶಿರ್ಕ್


(ಅಶ್ಶಿರ್ಕುಲ್ ಅಕ್ಬರ್). ಇನ್ನೊಂದು ಕಿರಿಯ ಶಿರ್ಕ್
(ಅಶ್ಶಿರ್ಕುಲ್ ಅಸ್ಗರ್).

ರಿಯಾಅ್ (ಜನಮನ್ನಣೆ, ತ�ೋರಿಕೆ ಮತ್ತು ಪ್ರಶಂಸೆಗಾ-


ಗಿ ಕೆಲಸ ಮಾಡುವುದು) ಕಿರಿಯ ಶಿರ್ಕ್‌ನಲ್ಲಿ ಸೇರುತ್ತದೆ.
ಇದರ ಬಗ್ಗೆ ಪ್ರವಾದಿ ಯವರು ಪದೇ ಪದೇ ಎಚ್ಚ-
ರಿಕೆ ನೀಡುತ್ದ
ತಿ ರ
್ದ ು. ಅವರು ಹೇಳುತ್ತಾರೆ: “ನಾನು ನಿಮ್ಮ
ಬಗ್ಗೆ ಭಯಪಡುವ ಅತಿದೊಡ್ಡ ಭಯ ನೀವು ಕಿರಿಯ
ಶಿರ್ಕ್‌ನಲ್ಲಿ ಬೀಳುವಿರ�ೋ ಎನ್ನುವುದು.” ಸಹಾಬಾಗಳು
ಕಿರಿಯ ಶಿರ್ಕ್ ಏನೆಂದು ಕೇಳಿದಾಗ ಅವರು ಉತ್ತರಿಸಿದ-
ರು: “ರಿಯಾಅ್ (ಜನಮನ್ನಣೆ, ತ�ೋರಿಕೆ ಮತ್ತು ಪ್ರಶಂ-
ಸೆಗಾಗಿ ಕೆಲಸ ಮಾಡುವುದು)” [ಅಹ್ಮದ್]

ಅಲ್ಲಾಹು ಅಲ್ಲದವರ ಮೇಲೆ ಆಣೆ ಹಾಕುವುದು


ಕಿರಿಯ ಶಿರ್ಕ್‌ನಲ್ಲಿ ಸೇರುತ್ತದೆ. ಪ್ರವ ಾದಿ ಹೇಳು-
ತ್ತಾರೆ: “ಅಲ್ಲಾಹು ಅಲದ
್ಲ ವರ ಮೇಲೆ ಆಣೆ ಹಾಕಿದವ-
ಪ್ರವಾದಿ(ಸ) ಯವರ ಹಿತವಚನಗಳು | 10

ರು ಸತ್ಯನಿಷೇಧಿಗಳಾದರು ಅಥವಾ ಶಿರ್ಕ್ ಮಾಡಿದರು.”


[ಅತ್ತಿರ್ಮಿದಿ]

ಅಲ್ಲಾಹನ ಸೃಷ್ಟಿಗಳನ್ನು ಅವನಿಗೆ ಸರಿಸಾಟಿಯಾಗಿ ನಿ-


ಶ್ಚಯಿಸುವುದು ಹಿರಿಯ ಶಿರ್ಕ್ ಆಗಿದೆ. ಉದಾ: ಅಲ್ಲಾ-
ಹನನ್ನು ಪ್ರೀತಿಸುವಂತೆ ಅಲ್ಲಾಹು ಅಲ್ಲದವರನ್ನು ಪ್ರೀತಿ-
ಸುವುದು, ಅಲ್ಲಾಹನಿಗೆ ನಿಷ್ಠೆ ತ�ೋರಿಸುವಂತೆ ಅಲ್ಲಾಹು
ಅಲ್ಲದವರಿಗೆ ನಿಷ್ಠೆ ತ�ೋರಿಸುವುದು, ಅಲ್ಲಾಹನಲ್ಲಿ ನಿ-
ರೀಕ್ಷೆಯಿಡುವಂತೆ, ಅಲ್ಲಾಹನನ್ನು ಭಯಪಡುವಂತೆ,
ಅಲ್ಲಾಹು ಅಲ್ಲದವರಲ್ಲಿ ನಿರೀಕ್ಷೆಯಿಡುವುದು, ಭಯ-
ಪಡುವುದು, ಅಲ್ಲಾಹನಿಗೆ ಸಮೀಪವಾಗಲು ಮಾಡುವ
ಕರ್ಮಗಳನ್ನು ಅಲ್ಲಾಹು ಅಲ್ಲದವರಿಗೆ ಸಮೀಪವಾಗಲು
ಮಾಡುವುದು, ಅಂದರೆ ಅಲ್ಲಾಹು ಅಲ್ಲದವರ ಹೆಸರ-
ಲ್ಲಿ ಹರಕೆ ಹೊರುವುದು, ಬಲಿ ನೀಡುವುದು, ಅಲ್ಲಾಹು
ಅಲ್ಲದವರನ್ನು ಕರೆದು ಪ್ರಾರ್ಥಿಸುವುದು ಇವೆಲ್ಲವೂ
ಅಲ್ಲಾಹು ಅಲ್ಲದವರನ್ನು ಅಲ್ಲಾಹನೊಡನೆ ಸಹಭಾ-
ಪ್ರವಾದಿ(ಸ) ಯವರ ಹಿತವಚನಗಳು | 11

ಗಿಗಳಾಗಿ ನಿಶ್ಚಯಿಸುವುದಾಗಿದೆ. ಇವೆಲ್ಲವೂ ಹಿರಿಯ


ಶಿರ್ಕ್ ಆಗಿವೆ. ಪ್ರಾರ್ಥನೆ ಅಲ್ಲಾಹನೊಡನೆ ಮಾತ್ರ
ಮಾಡಬೇಕು. ಅವನ ಹೊರತು ಯಾರಲ್ಲೂ ಪ್ರಾರ್ಥಿ-
ಸಬಾರದು. ಅಲ್ಲಾಹು ಹೇಳುತ್ತಾನೆ: “ಅಲ್ಲಾಹನನ್ನು
ಬಿಟ್ಟು ತನಗೆ ಹಾನಿಯನ್ನೋ ಪ್ರಯೋಜನವನ್ನೋ
ಮಾಡದವರನ್ನು ಅವು ಕರೆದು ಪ್ರಾರ್ಥಿಸುತ್ತಿದ್ದಾರೆ.
ಅತಿವಿದೂರ ಪಥಭ್ರಷ್ಟತೆಯೆಂದರೆ ಇದೇ ಆಗಿದೆ.”
[ಕುರ್‍ಆನ್ 22:12]

“ಅಲ್ಲಾಹನನ್ನು ಬಿಟ್ಟು, ಪುನರುತ್ಥಾನ ದಿನದ ತನಕ


ತನಗೆ ಉತ್ತರ ನೀಡದವರನ್ನು ಕರೆದು ಪ್ರಾರ್ಥಿಸುವ-
ವರಿಗಿಂತಲೂ ದೊಡ್ಡ ಪಥಭ್ರಷ್ಟರು ಇನ್ನಾರು? ಅವರಿಗೆ
ಇವರು ಪ್ರಾರ್ಥಿಸುತ್ತಿರುವುದರ ಬಗ್ಗೆ ಯಾವ ಪ್ರಜ್ಞೆಯೂ
ಇಲ್ಲ. ಜನರನ್ನು ಒಟ್ಟುಗೂಡಿಸಲಾಗುವ ದಿನ ಅವರು
ಇವರಿಗೆ ಶತ್ರುಗಳಾಗಿ ಮಾರ್ಪಡುವರು. ಇವರ ಆರಾ-
ಧನೆಯನ್ನು ಅವರು ನಿಷೇಧಿಸಿ ಬಿಡುವರು.” [ಕುರ್‍ಆನ್
ಪ್ರವಾದಿ(ಸ) ಯವರ ಹಿತವಚನಗಳು | 12

46:5-6]

ಆದ್ದರಿಂದ ನಾವು ಪ್ರಾರ್ಥಿಸುವುದಾದರೆ ಅಲ್ಲಾಹ-


ನಲ್ಲಿ ಮಾತ್ರ ಪ್ರಾರ್ಥಿಸಬೇಕು. ಸಹಾಯ ಕೇಳುವು-
ದಾದರೆ ಅಲ್ಲಾಹನಲ್ಲಿ ಮಾತ್ರ ಸಹಾಯ ಕೇಳಬೇಕು.
ಕಷ್ಟಗಳು ಎದುರಾದರೆ ಅಲ್ಲಾಹನಲ್ಲಿ ಮಾತ್ರ ಆಶ್ರಯ
ಕ�ೋರಬೇಕು. ಅಲ್ಲಾಹನ ಮೇಲೆ ಮಾತ್ರ ಭರವಸೆಯಿಡ-
ಬೇಕು. ಅಲ್ಲಾಹನ ಹೊರತು ಬೇರೊಂದು ಅವಲಂಬನೆ
ನಮಗಿರಬಾರದು. ಅಲ್ಲಾಹು ಹೇಳುತ್ತಾನೆ:

“ಕಷ್ಟದಲ್ಲಿರುವವರು ಕರೆದು ಪ್ರಾರ್ಥಿಸುವಾಗ ಅವರ


ಪ್ರಾರ್ಥನೆಗೆ ಉತ್ತರ ಕೊಟ್ಟು, ಆ ಕಷ್ಟವನ್ನು ನಿವಾರಿಸು-
ವವನು ಮತ್ತು ಭೂಮಿಯಲ್ಲಿ ನಿಮ್ಮನ್ನು ಪ್ರತಿನಿಧಿಗಳನ್ನಾ-
ಗಿ ಮಾಡುವವನು ಯಾರು? ಅಲ್ಲಾಹನೊಡನೆ ಬೇರೆ
ದೇವರು ಇದ್ದಾರ�ೋ? ನೀವು ಸ್ವಲ್ಪವೇ ಚಿಂತಿಸುತ್ತೀರಿ.
ನೆಲ ಮತ್ತು ಜಲದ ಅಂಧಕಾರಗಳಲ್ಲಿ ನಿಮಗೆ ದಾರಿ
ತ�ೋರಿಸುವವನು ಮತ್ತು ತನ್ನ ದಯೆಗೆ ಮುನ್ನುಡಿಯಾ-
ಪ್ರವಾದಿ(ಸ) ಯವರ ಹಿತವಚನಗಳು | 13

ಗಿ ಮಾರುತಗಳನ್ನು ಒಂದು ಶುಭವಾರ್ತೆಯಾಗಿ ಕಳುಹಿ-


ಸುವವನು ಯಾರು? ಅಲ್ಲಾಹನೊಡನೆ ಬೇರೆ ದೇವರು
ಇದ್ದಾರ�ೋ? ಅವರು ಮಾಡುವ ಈ ಸಹಭಾಗಿತ್ವದಿಂದ
ಅಲ್ಲಾಹು ಎಷ್ಟೋ ಉನ್ನತನು. ಸೃಷ್ಟಿಯನ್ನು ಆರಂಭಿಸಿ,
ನಂತರ ಅದನ್ನು ಪುನರಾವರ್ತಿಸುವವನು ಮತ್ತು ಆಕಾ-
ಶದಿಂದಲೂ ಭೂಮಿಯಿಂದಲೂ ನಿಮಗೆ ಆಹಾರವಸ್ತು
ಗಳನ್ನು ಒದಗಿಸುವವನು ಯಾರು? ಅಲ್ಲಾಹನೊಡನೆ
ಬೇರೆ ದೇವರು ಇದ್ದಾರ�ೋ? ಹೇಳಿರಿ: ನೀವು ಸತ್ಯವಂ-
ತರಾಗಿದ್ದರೆ ನಿಮ್ಮ ಪುರಾವೆಯನ್ನು ತನ್ನಿರಿ.” [ಕುರ್‍ಆನ್
27:62-64]

ಮಕ್ಕಳಿಗೆ, ಅಥವಾ ಬೇರೆ ಯಾರಿಗಾದರೂ ಉಪದೇಶ


ಕೊಡುವಾಗ ಮೊತ್ತಮೊದಲು ಶಿರ್ಕ್‌ನ ಬಗ್ಗೆ ಎಚ್ಚರಿಕೆ
ಕೊಡಬೇಕೆಂದು ಈ ಹದೀಸ್ ಕಲಿಸುತ್ತದೆ. ಪ್ರವಾದಿ(ಸ)
ರವರ ಅನೇಕ ಉಪದೇಶಗಳಲ್ಲಿ ಇದನ್ನು ಕಾಣಬಹುದು.
ಯಅ್‌ಕೂಬ್ ಮುಂತಾದ ಪ್ರವ ಾದಿಗಳು ತಮ್ಮ
ಪ್ರವಾದಿ(ಸ) ಯವರ ಹಿತವಚನಗಳು | 14

ಮಕ್ಕಳಿಗೆ ಉಪದೇಶ ಕೊಡುವಾಗ ಶಿರ್ಕ್‌ನ ಬಗ್ಗೆ ಎಚ್ಚ-


ರಿಕೆ ನೀಡಿದ್ದರು. ಲುಕ್ಮಾನ್ ರ ಉಪದೇಶದಲ್ಲೂ
ಇದನ್ನು ಕಾಣಬಹುದು.

ಎರಡನೆಯದಾಗಿ, ಪ್ರ ವ ಾದಿ ಹೇಳುತ್ತಾ ರೆ:


“ಕಡ್ಡಾಯ ನಮಾಝ್‍ಗಳನ್ನು ಉದ್ದೇಶಪೂರ್ವಕ ತೊ-
ರೆಯಬೇಡಿ. ಕಾರಣ, ಅದನ್ನು ಉದ್ದೇಶಪೂರ್ವಕ ತೊರೆ-
ಯುವವರು ಕರಾರಿನಿಂದ ಮುಕ್ತರ ಾಗುತ್ತಾರೆ. ”

ಈ ಹಿತವಚನದಲ್ಲಿ ಪ್ರವಾದಿ ಯವರು ಹೇಳುವು-


ದೇನೆಂದರೆ, ಯಾವುದೇ ಕಾರಣಕ್ಕೂ ಉದ್ದೇಶಪೂರ್ವ-
ಕವಾಗಿ ಕಡ್ಡಾಯ ನಮಾಝ್‍ಗಳನ್ನು ತೊರೆಯಬೇಡಿ.
ಕಾರಣ, ನಮಾಝ್ ಒಂದು ಕರಾರು.. ನಮಾಝ-
ನ್ನು ಸರಿಯಾಗಿ ನಿರ್ವಹಿಸುವ ಸತ್ಯವಿಶ್ವಾಸಿಯೊಂದಿಗೆ
ಅಲ್ಲಾಹು ಕರಾರು ಮಾಡಿಕೊಳ್ಳುತ ್ತಾನೆ. ಆ ಕರಾರು
ಏನೆಂದರೆ ಅವನನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವು-
ದು. ಆದ್ದರಿಂದ ನೀವು ಉದ್ದೇಶಪೂರ್ವಕ ನಮಾಝ-
ಪ್ರವಾದಿ(ಸ) ಯವರ ಹಿತವಚನಗಳು | 15

ನ್ನು ತೊರೆದರೆ ಅಲ್ಲಾಹು ಆ ಕರಾರನ್ನು ತೊರೆಯುತ್ತಾ-


ನೆ. ನಂತರ ನಿಮ್ಮನ್ನು ಶಿಕ್ಷಿಸುವುದ�ೋ, ಕ್ಷಮಿಸುವುದ�ೋ
ಅಲ್ಲಾಹನಿಗೆ ಬಿಟ್ಟ ವಿಚಾರ. ಇದನ್ನು ವ್ಯಕಪ
್ತ ಡಿಸುತ್ತಾ
ಪ್ರವಾದಿ ಹೇಳುತ್ತಾರೆ:

“ಐದು ನಮಾಝ್‍ಗಳು. ಅಲ್ಲಾಹು ಅವುಗಳನ್ನು ದಾಸರ


ಮೇಲೆ ಕಡ್ಡಾಯಗೊಳಿಸಿದ್ದಾನೆ. ಯಾರು ಅವುಗಳ ಹಕ್ಕ-
ನ್ನು ಹಗುರವಾಗಿ ಪರಿಗಣಿಸದೆ, ಅವುಗಳಲ್ಲಿ ಸೇರಿದ
ಏನನ್ನೂ ಹಾಳುಮಾಡದೆ, ಅವುಗಳನ್ನು ಪೂರ್ಣವಾದ
ರೀತಿಯಲ್ಲಿ ನಿರ್ವಹಿಸುತ್ತಾರ�ೋ ಅವರನ್ನು ಸ್ವರ್ಗಕ್ಕೆ
ಪ್ರವೇಶ ಮಾಡಿಸಬೇಕೆಂಬ ಕರಾರು ಅಲ್ಲಾಹನ ಬಳಿ
ಅವರಿಗೆ ಇದೆ. ಆದರೆ ಯಾರು ಹೀಗೆ ಮಾಡುವುದಿಲ-್ಲ
ವೋ ಅವರಿಗೆ ಅಲ್ಲಾಹನ ಬಳಿ ಯಾವುದೇ ಕರಾರಿಲ್ಲ.
ಅಲ್ಲಾಹು ಇಚ್ಛಿಸಿದರೆ ಅವರನ್ನು ಶಿಕ್ಷಿಸುತ್ತಾನೆ. ಅಥವಾ
ಅಲ್ಲಾಹು ಇಚ್ಛಿಸಿದರೆ ಅವರನ್ನು ಕ್ಷಮಿಸುತ್ತಾನೆ.” [ಅಬೂ
ದಾವೂದ್]
ಪ್ರವಾದಿ(ಸ) ಯವರ ಹಿತವಚನಗಳು | 16

ಇಸ್ಲಾಂನಲ್ಲಿ ನಮಾಝ್‍ಗೆ ಬಹಳ ಪ್ರಾಮುಖ್ಯತೆ-


ಯಿದೆ. ಅದು ಇಸ್ಲಾಂ ಧರ್ಮದ ಎರಡನೇ ಆಧಾರ
ಸ್ಥಂಭ. ಅದರ ಹೊರತು ಇಸ್ಲಾಂ ನೆಲೆನಿಲ್ಲುವುದಿಲ್ಲ.
ಅದು ಸತ್ಯವಿಶ್ವಾಸ ಮತ್ತು ಸತ್ಯನಿಷೇಧವನ್ನು ಬೇರ್ಪ-
ಡಿಸುವ ಮಾನದಂಡ. ಇಸ್ಲಾಂನಲ್ಲಿ ಮೊತ್ತಮೊದಲು
ಕಡ್ಡಾಯಗೊಳಿಸಲಾದ ಆರಾಧನೆ ನಮಾಝ್. ಅಂ-
ತ್ಯದಿನ ಮೊತ್ತಮೊದಲು ಪ್ರಶ್ನಿಸಲಾಗುವ ಆರಾಧನಾ
ಕರ್ಮ ನಮಾಝ್. ನಮಾಝ್ ಸಂಸ್ಥಾಪಿಸುವವರನ್ನು
ಅಲ್ಲಾಹು ಪ್ರಶಂಸಿಸಿದ್ದಾನೆ. ಅವರಿಗೆ ಅಲ್‍ಫಿರ್ದೌಸ್
ಎಂಬ ಉನ್ನತ ಸ್ವರ್ಗವನ್ನು ವಾಗ್ದಾನ ಮಾಡಿದ್ದಾನೆ.
ಅದರ ಛಾವಣಿ ಅಲ್ಲಾಹನ ಸಿಂಹಾಸವಲ್ಲದೆ (ಅರ್ಶ್)
ಇನ್ನೇನೂ ಅಲ್ಲ.

ಅಲ್ಲಾಹು ಹೇಳುತ್ತಾನೆ: “ತಮ್ಮ ನಮಾಝ್‍ಗಳನ್ನು


ಸಂರಕ್ಷಿಸುವವರು. ಅವರೇ ವಾರಸುದಾರರು. ಅವರು
ಅಲ್‍ಫಿರ್ದೌಸ್ ಎಂಬ ಸ್ವರ್ಗವನ್ನು ವಾರಸು ಸೊತ್ತಾಗಿ
ಪ್ರವಾದಿ(ಸ) ಯವರ ಹಿತವಚನಗಳು | 17

ಪಡೆಯುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿ-


ಸುವರು.” [ಕುರ್‍ಆನ್ 23:9-11]

ನಮಾಝನ್ನು ಹಾಳು ಮಾಡುವವರ ಬಗ್ಗೆ ಅಲ್ಲಾಹು


ಹೇಳುತ್ತಾನೆ: “ಅವರ ನಂತರ ಬೇರೊಂದು ತಲೆಮಾರು
ಬಂತು. ಅವರು ನಮಾಝನ್ನು ಹಾಳು ಮಾಡಿದರು
ಮತ್ತು ಸ್ವೇಚ್ಗ
ಛೆ ಳನ್ನು ಹಿಂಬಾಲಿಸಿದರು. ಅವರು ಮುಂದೆ
ಗಯ್ಯ್ ಎಂಬ ನರಕಾಗ್ನಿಯನ್ನು ಭೇಟಿಯಾಗುವರು.”
[ಕುರ್‍ಆನ್ 19:59]

ನಮಾಝನ್ನು ಹಾಳು ಮಾಡಿದವರು ಎಂದರೆ ನಮಾ-


ಝನ್ನು ಸಂಪೂರ್ಣವಾಗಿ ತೊರೆದವರಲ.್ಲ ಬದಲಾಗಿ
ಸಮಯನಿಷ್ಠೆಯಿಲ್ಲದೆ ಮನಸ್ಸು ಬಂದಾಗ ನಮಾಝ್
ಮಾಡುವವರು. ನಮಾಝನ್ನು ಸಂಪೂರ್ಣವಾಗಿ ತೊ-
ರೆದವರಿಗೆ ಇರುವುದು ಸಕರ್ ಎಂಬ ನರಕ. ಅಲ್ಲಾಹು
ಹೇಳುತ್ತಾನೆ: “ನಿಮ್ಮನ್ನು ಸಕರ್‌ಗೆ ಪ್ರವೇಶ ಮಾಡಿಸಿದ್ದು
ಏನು? ಅವರು ಹೇಳುವರು: ನಾವು ನಮಾಝ್ ಮಾ-
ಪ್ರವಾದಿ(ಸ) ಯವರ ಹಿತವಚನಗಳು | 18

ಡುವವರಲ್ಲಿ ಒಳಪಟ್ಟಿರಲಿಲ್ಲ.” [ಕುರ್‍ಆನ್ 74:42-43]

ಸಕರ್ ಎಂಬ ನರಕದ ಬಗ್ಗೆ ಅಲ್ಲಾಹು ಹೇಳುವುದ-


ನ್ನು ನ�ೋಡಿ: “ಸಕರ್ ಎಂದರೆ ಏನೆಂದು ತಮಗೇನು
ಗೊತ್ತು? ಅದು (ಯಾರನ್ನೂ ಸುಡದೆ) ಬಾಕಿಯುಳಿಸು-
ವುದಾಗಲಿ, ಬಿಟ್ಟುಬಿಡುವುದಾಗಲಿ ಇಲ್ಲ. ಅದು ಚರ್ಮ-
ವನ್ನು ಸುಟ್ಟುಹಾಕಿ ಬಿಡುವ ಅಗ್ನಿಯಾಗಿದೆ.” [ಕುರ್‍ಆನ್
74:27-29]

ನಮಾಝನ್ನು ಸಂರಕ್ಷಿಸುವುದು ಎಂದರೆ ಪೂರ್ಣವಾದ


ರೂಪದಲ್ಲಿ ವುದೂ ನಿರ್ವಹಿಸುವುದು, ಆದ್ಯಸಮಯ-
ದಲ್ಲೇ ನಮಾಝ್ ನಿರ್ವಹಿಸುವುದು, ಜಮಾಅತ್‍ನಲ್ಲಿ
ಪಾಲ್ಗೊಳ್ಳುವುದು, ಭಯಭಕ್ತಿಯಿಂದ ನಿರ್ವಹಿಸುವುದು,
ರುಕೂಅ್ ಮತ್ತು ಸುಜೂದ್‍ಗಳನ್ನು ಪೂರ್ಣರೂಪದಲ್ಲಿ
ನಿರ್ವಹಿಸುವುದು, ಇಂಪಾಗಿ ಕುರ್‍ಆನ್ ಪಾರಾಯಣ
ಮಾಡುವುದು, ಪಾರಾಯಣ ಮಾಡುವಾಗ ಅದರ
ಅರ್ಥವನ್ನು ಮನಸ್ಸಿಗೆ ತರುವುದು ಇತ್ಯಾದಿ. ಈ ರೀತಿ
ಪ್ರವಾದಿ(ಸ) ಯವರ ಹಿತವಚನಗಳು | 19

ನಮಾಝ್ ಮಾಡುವವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿ-


ಸುವೆನು ಎಂಬ ಕರಾರು ಅಲ್ಲಾಹು ಮಾಡಿಕೊಳ್ಳುತ್ತಾನೆ.
ಈ ರೀತಿ ನಮಾಝ್ ಮಾಡದವರಿಗೆ ಅಥವಾ ನಮಾ-
ಝನ್ನು ತೊರೆದವರಿಗೆ ಅಲ್ಲಾಹನ ಬಳಿ ಯಾವುದೇ
ಕರಾರಿಲ್ಲ.

ಮೂರನೆಯದಾಗಿ, ಪ್ರವಾದಿ ಹೇಳುತ್ತಾರೆ: “ಮದ್ಯ-


ಪಾನ ಮಾಡಬೇಡಿ. ಕಾರಣ, ಅದು ಎಲ್ಲ ಕೆಡುಕುಗಳ
ಕೀಲಿಕೈಯಾಗಿದೆ. ”

ಈ ಹಿತವಚನದಲ್ಲಿ ಪ್ರವಾದಿ ಯವರು ಹೇಳುವು-


ದೇನೆಂದರೆ, ಯಾವತ್ತೂ ಮದ್ಯ ಸೇವಿಸಬೇಡಿ. ಕಾರಣ,
ಅದು ಸರ್ವ ಕೆಡುಕುಗಳ ಕೀಲಿಕೈಯಾಗಿದೆ. ಮದ್ಯಪ ಾನ
ಸರ್ವ ಕೆಡುಕುಗಳನ್ನು ತೆರೆದುಕೊಡುತ್ತದೆ. ಮದ್ಯಪ ಾನ-
ದಿಂದ ಉಂಟಾಗುವ ಅನಾಹುತಗಳ ಬಗ್ಗೆ ವಿವರಿಸಬೇ-
ಕಾದ ಅಗತ್ಯವೇ ಇಲ್ಲದಷ್ಟು ಅವುಗಳ ಬಗ್ಗೆ ನಾವು ದಿನ-
ನಿತ್ಯ ಕಾಣುತ್ತಲೂ ಕೇಳುತ್ತಲೂ ಇದ್ದೇವೆ.
ಪ್ರವಾದಿ(ಸ) ಯವರ ಹಿತವಚನಗಳು | 20

ಮದ್ಯಕ್ಕೆ ಅರೇಬಿಕ್ ಭಾಷೆಯಲ್ಲಿ ‘ಖಮ್ರ್’ ಎಂದು


ಹೆಸರು. ಖಮ್ರ್ ಎಂದರೆ ಮುಚ್ಚುವುದು. ಮದ್ಯ ಸೇವಿಸಿದ
ತಕ್ಷಣ ಅದು ಬುದ್ಧಿಯನ್ನು ಮುಚ್ಚುವುದರಿಂದಲೇ ಇದಕ್ಕೆ
ಈ ಹೆಸರು ಬಂದಿದೆ. ಬುದ್ಧಿ ಮನುಷ್ಯನನ್ನು ಮೃಗಗಳಿಂದ
ಬೇರ್ಪಡಿಸುತ್ತದೆ. ಆದರೆ ಮದ್ಯಪಾನ ಮಾಡಿದಾಗ ಬುದ್ಧಿ
ನಿಷ್ಕ್ರಿಯವಾಗುತ್ತದೆ. ತನ್ನಿಮಿತ್ತ ಮನುಷ್ಯನು ಮೃಗದಂತೆ
ವರ್ತಿಸುತ್ತಾನೆ. ಕೆಲವೊಮ್ಮೆ ಅದಕ್ಕಿಂತಲೂ ಕೀಳಾಗಿ
ವರ್ತಿಸುತ್ತಾನೆ.

ಮದ್ಯದ ಆಘಾತಕಾರಿ ಅಂಶಗಳ ಬಗ್ಗೆ ಪ್ರವಾದಿ(ಸ) ಹೇ-


ಳುತ್ತಾರೆ: “ಮದ್ಯವು ಸರ್ವ ನೀಚಕೃತ್ಯಗಳ ಮಾತೆ. ಅದು
ಮಹಾಪಾಪಗಳಲ್ಲೇ ಅತಿದೊಡ್ಡದ ು. ಅದನ್ನು ಕುಡಿ-
ದವನು ತನ್ನ ತಾಯಿ, ತಾಯಿಯ ಸಹ�ೋದರಿ ಮತ್ತು
ತಂದೆಯ ಸಹ�ೋದರಿಯೊಂದಿಗೆ ವ್ಯಭಿಚಾರ ಮಾಡು-
ತ್ತಾನೆ.” [ಅತಬ
್ತ ರಾನೀ] ಅಂದರೆ ಅವನಿಗೆ ತನ್ನ ಪತ್ನಿ
ಯಾರು? ತಾಯಿ ಯಾರು? ಚಿಕ್ಕಮ್ಮ ಯಾರು? ಅತ್ತೆ
ಪ್ರವಾದಿ(ಸ) ಯವರ ಹಿತವಚನಗಳು | 21

ಯಾರು? ಎನ್ನುವುದೇ ಗೊತ್ತಿರುವುದಿಲ್ಲ.

ಉಸ್ಮಾನ್ ಹೇಳುತ್ತಾರೆ: “ನೀವು ಮದ್ಯದಿಂದ


ದೂರವಾಗಿರಿ. ಕಾರಣ, ಅದು ಹೊಲಸುಗಳ ಮಾತೆ.
ನಿಮಗಿಂತ ಮುಂಚೆ ಒಬ್ಬ ವ್ಯಕ್ತಿಯಿದ್ದರ ು. ಅವರು
ಮಹಾ ದೇವಭಕ್ತರ ು. ಜನರಿಂದ ದೂರವಾಗಿ
ಒಂಟಿಯಾಗಿ ಆರಾಧನೆಯಲ್ಲಿ ಮುಳುಗಿದ್ದರ ು. ಆಗ
ಒಬ್ಬ ನೀಚ ಮಹಿಳೆಗೆ ಅವರ ಮೇಲೆ ಇಷ್ಟವ ಾಯಿತು.
ಆಕೆ ತನ್ನ ದಾಸಿಯನ್ನು ಕಳುಹಿಸಿ ಯಾವುದ�ೋ ಒಂದು
ವಿಷಯಕ್ಕೆ ಸಾಕ್ಷಿ ಹೇಳಲು ಅವರನ್ನು ಕರೆತರುವಂ-
ತೆ ಹೇಳಿದಳು. ಆಕೆ ಅವರನ್ನು ಕರೆತಂದಳು. ಅವರು
ಮನೆಯೊಳಗಿನ ಒಂದೊಂದು ಬಾಗಿಲನ್ನು ಪ್ರವೇಶಿಸಿ-
ದಂತೆಯೇ ಆಕೆ (ದಾಸಿ) ಆ ಬಾಗಿಲುಗಳನ್ನು ಮುಚ್ಚು-
ತ್ತಾ ಬಂದಳು. ಕೊನೆಗೆ ಬೆಳ್ಳಗೆ ಮಿಂಚುವ ಆ ಮಹಿಳೆಯ
ಬಳಿಗೆ ಆ ವ್ಯಕ್ತಿ ತಲುಪಿದರು. ಆಕೆಯ ಬಳಿ ಒಬ್ಬ ಹುಡುಗ
ಮತ್ತು ಮದ್ಯದ ಒಂದು ಹೂಜಿಯಿತ್ತು. ಆಕೆ ಹೇಳಿದಳು:
ಪ್ರವಾದಿ(ಸ) ಯವರ ಹಿತವಚನಗಳು | 22

“ತಮ್ಮನ್ನು ನಾನು ಕರೆಸಿದ್ದು ಸಾಕ್ಷಿ ಹೇಳುವುದಕ್ಕೆ ಅಲ್ಲ.


ತಾವು ಒಂದ�ೋ ನನ್ನೊಂದಿಗೆ ವ್ಯಭಿಚಾರ ಮಾಡಬೇಕು,
ಅಥವಾ ಈ ಹುಡುಗನನ್ನು ಸಾಯಿಸಬೇಕು ಅಥವಾ ಈ
ಹೂಜಿಯಲ್ಲಿರುವ ಮದ್ಯವನ್ನು ಕುಡಿಯಬೇಕು. ಇಲ್ಲದಿ-
ದ್ದರೆ ನಾನು ನಿಮ್ಮನ್ನು ಇಲ್ಲಿಂದ ಹೊರಹ�ೋಗಲು ಬಿಡು-
ವುದಿಲ್ಲ.” ವ್ಯಭಿಚಾರ ಮತ್ತು ಕೊಲೆ ಮಾಡುವುದಕ್ಕಿಂತ
ಮದ್ಯ ಕುಡಿಯುವುದೇ ಲೇಸೆಂದು ಅವರು ಭಾವಿಸಿ-
ದರು. ಅವರು ಮದ್ಯವನ್ನು ಆರಿಸಿದರು. ಆಕೆ ಅವರಿಗೆ
ಒಂದು ಲ�ೋಟ ಮದ್ಯ ಕುಡಿಸಿದಳು. ಅದನ್ನು ಕುಡಿದಾಗ
ಅವರು ಇನ್ನೂ ಬೇಕೆಂದು ಆಸೆಯಾಯಿತು. ಆಕೆ ಇನ್ನೂ
ಕುಡಿಸಿದಾಗ ಅದರ ನಶೆಯಲ್ಲಿ ಅವರು ಆಕೆಯೊಡನೆ
ವ್ಯಭಿಚಾರ ಮಾಡಿದರು. ನಂತರ ಆಕೆ ಹೇಳಿದಂತೆ ಆ
ಹುಡುಗನನ್ನೂ ಕೊಂದರು. ಆದ್ದರಿಂದ ನೀವು ಮದ್ಯ-
ದಿಂದ ದೂರವಾಗಿರಿ. ಕಾರಣ, ಮದ್ಯ ಮತ್ತು ಈಮಾನ್
ಒಂದೇ ಸಮಯ ಒಂದೇ ಸ್ಥಳದಲ್ಲಿರಲು ಸಾಧ್ಯವಿಲ್ಲ.
ಪ್ರವಾದಿ(ಸ) ಯವರ ಹಿತವಚನಗಳು | 23

ಒಂದು ಬರುವಾಗ ಇನ್ನೊಂದು ಹ�ೋಗಲೇ ಬೇಕು.”


[ಅಸ್ಸುನನುಲ್ ಕುಬ್ರಾ]

ಅಲ್ಲಾಹು ಹೇಳುತ್ತಾನೆ: “ಓ ವಿಶ್ವಾಸವಿಟ್ಟವರೇ! ಮದ್ಯ,


ಜೂಜು, ಪ್ರತಿಷ್ಠಾಪನೆಗಳು ಮತ್ತು ಭಾಗ್ಯವನ್ನು ಪರೀಕ್ಷೆ
ಮಾಡುವ ಬಾಣಗಳು ಶೈತಾನನ ಕೃತ್ಯಗಳಲ್ಲಿ ಸೇರಿದ
ಹೇಯಕೃತ್ಯಗಳಾಗಿವೆ. ಇವುಗಳಿಂದ ಸಂಪೂರ್ಣ ದೂ-
ರವಾಗಿರಿ. ನೀವು ಯಶಸ್ವಿಯಾಗುವುದಕ್ಕಾಗಿ. ಮದ್ಯ
ಮತ್ತು ಜೂಜಿನ ಮೂಲಕ ನಿಮ್ಮ ಮಧ್ಯೆ ಶತ್ರುತ್ವ ಮತ್ತು
ವಿದ್ವೇಷವನ್ನು ಹಾಕಿಬಿಡಲು, ಮತ್ತು ನಿಮ್ಮನ್ನು ಅಲ್ಲಾ-
ಹನ ಸ್ಮರಣೆಯಿಂದ ಹಾಗೂ ನಮಾಝ್‍ನಿಂದ ದೂರ
ಮಾಡಲು ಶೈತಾನನು ಉದ್ದೇಶಿಸುತ್ತಾನೆ. ಆದ್ದರಿಂದ
ನೀವು ಈಗಲಾದರೂ ಅದನ್ನು ಬಿಟ್ಟುಬಿಡುವಿರಾ?”
[ಕುರ್‍ಆನ್ 5:90-91]

ಪ್ರವಾದಿ ಯವರು ಮದ್ಯಪಾನವನ್ನು ತೀಕ್ ವ


ಷ್ಣ ಾಗಿ ವಿ-
ರ�ೋಧಿಸುತ್ತಾ ಹೇಳುತ್ತಾರೆ: “ಮದ್ಯ ಹೊಲಸುಗಳ ಮಾತೆ.
ಪ್ರವಾದಿ(ಸ) ಯವರ ಹಿತವಚನಗಳು | 24

ಅದನ್ನು ಕುಡಿದವನ ನಮಾಝ್ ನಲ್ವತ್ತು ದಿನಗಳ ಕಾಲ


ಸ್ವೀಕಾರವಲ್ಲ. ಅದು ಹೊಟ್ಟೆಯಲ್ಲಿರುವ ಸ್ಥಿತಿಯಲ್ಲಿ ಸಾ-
ಯುವವನು ಜಾಹಿಲೀಕಾಲದ ಮರಣದೊಂದಿಗೆ ಸಾ-
ಯುತ್ತಾನೆ.” [ಅದ್ದಾರಕುತ್ನೀ]

ಪ್ರವಾದಿ ಹೇಳಿದರು: “ಮದ್ಯಪಾನದ ಚಟವಿರುವ-


ವನು (ದಿನನಿತ್ಯ ಮದ್ಯ ಸೇವಿಸುವವನು) ವಿಗ್ರಹಾರಾಧಕ-
ನಂತೆ.” [ಇಬ್ನ್ ಮಾಜ]

ಪ್ರವಾದಿ ಹೇಳಿದರು: “ಮೂರು ರೀತಿಯ ಜನರು


ಸ್ವರ್ಗ ಪ್ರವೇಶಿಸುವುದಿಲ್ಲ. ಮದ್ಯಪ ಾನದ ಚಟವಿರುವ-
ವರು, ಮಾತಾಪಿತರು ಹೇಳಿದಂತೆ ಕೇಳದವರು ಮತ್ತು
ಕೊಟ್ಟದನ
್ದ ್ನು ಎತ್ತಿ ಹೇಳುವವರು.” [ಅಹ್ಮದ್]

ಪ್ರವ ಾದಿ ಹೇಳಿದರು: “ಅಮಲು ಪದಾರ್ಥ ಸೇ-


ವಿಸಿದವನಿಗೆ ‘ತೀನತುಲ್ ಖಬಾಲ್’ ಕುಡಿಸುವೆನೆಂ-
ದು ಅಲ್ಲಾಹು ಶಪಥ ಮಾಡಿದ್ದಾನೆ.” ಸಹಾಬಾಗ-
ಪ್ರವಾದಿ(ಸ) ಯವರ ಹಿತವಚನಗಳು | 25

ಳು ಕೇಳಿದರು: “ಓ ಪ್ರವ ಾದಿಯವರೇ! ‘ತೀನತುಲ್


ಖಬಾಲ್’ ಎಂದರೇನು?” ಪ್ರವ ಾದಿ ಹೇಳಿದರು:
“ನರಕವಾಸಿಗಳ ಬೆವರು.” [ಮುಸ್ಲಿಂ]

ನಾಲ್ಕನೆಯದಾಗಿ, ಪ್ರವ ಾದಿ ಹೇಳುತ್ತಾರೆ: “ನಿಮ್ಮ


ಮಾತಾಪಿತರನ್ನು ಅನುಸರಿಸಿರಿ. ನೀವು ನಿಮ್ಮ ಇಹಲ�ೋ-
ಕವನ್ನು ಸಂಪೂರ್ಣವಾಗಿ ತೊರೆದು ಹೊರಟುಹ�ೋಗ-
ಬೇಕೆಂದು ಅವರು ನಿಮಗೆ ಆದೇಶಿಸಿದರೆ, ನೀವದನ್ನು
ಸಂಪೂರ್ಣವಾಗಿ ತೊರೆದು ಹ�ೋಗಿರಿ.”

ಈ ಹಿತವಚನದಲ್ಲಿ ಪ್ರವ ಾದಿ ಯವರು ಹೇಳು-


ವುದೇನೆಂದರೆ, ನಿಮ್ಮ ಮಾತಾಪಿತರನ್ನು ಅನುಸರಿಸಿರಿ.
ಇನ್ನು ನೀವು ನಿಮ್ಮ ಇಹಲ�ೋಕವನ್ನು ಸಂಪೂರ್ಣವಾಗಿ
ತೊರೆದು ಹ�ೋಗಬೇಕೆಂದು ಅವರು ತಮಗೇನಾದರೂ
ಆಜ್ಞಾಪಿಸಿದರೆ ಮರುಮಾತಿಲ್ಲದೆ ಅವರಿಗಾಗಿ ನಿಮ್ಮ ಇಹ-
ಲ�ೋಕವನ್ನು ತೊರೆದು ಹ�ೋಗಿರಿ.
ಪ್ರವಾದಿ(ಸ) ಯವರ ಹಿತವಚನಗಳು | 26

ಪಾಪವಲ್ಲದ ಪ್ರತಿಯೊಂದು ವಿಷಯದಲ್ಲೂ ಮಾತಾಪಿ-


ತರನ್ನು ಅನುಸರಿಸುವುದು ಕಡ್ಡಾಯವಾಗಿದೆ. ಅಲ್ಲಾ-
ಹನ ಆಜ್ಞೆಗೆ ವಿರುದ್ಧವಲ್ಲದ ಎಲ್ಲ ವಿಷಯಗಳಲ್ಲೂ ಅವರ
ಆಜ್ಞಾಪಾಲನೆ ಮಾಡುವುದು ಕಡ್ಡಾಯವಾಗಿದೆ. ಕಾರಣ,
ಅವರು ತ�ೋರಿಸಿದ ಔದಾರ್ಯ ಅತಿದೊಡ್ಡದು. ಮಕ್ಕಳ
ಮೇಲೆ ತಂದೆ ತ�ೋರಿಸುವಷ್ಟು ಔದಾರ್ಯ ಜಗತ್ತಿನಲ್ಲಿ
ಯಾರೂ ತ�ೋರಿಸಿಲ್ಲ. ಮಕ್ಕಳಿಗೆ ತಾಯಿ ಮಾಡುವ ಸೇ-
ವೆಯನ್ನು ಜಗತ್ತಿನಲ್ಲಿ ಯಾರಿಗೂ ಮಾಡಲು ಸಾಧ್ಯವಿಲ್ಲ.
ಆದ್ದರಿಂದ ಮಾತಾಪಿತರ ಹಕ್ಕುಗಳಿಗೆ ಇಸ್ಲಾಂ ಬಹಳ
ಪ್ರಾಮುಖ್ಯತೆ ನೀಡಿದೆ.

ಅಲ್ಲಾಹು ಹೇಳುತ್ತಾನೆ: “ನಾವು ಮನುಷ್ಯನಿಗೆ, ಅವನ


ಮಾತಾಪಿತರಿಗೆ ಸಂಬಂಧಿಸಿ ಉಪದೇಶ ನೀಡಿದ್ದೇವೆ.
ಅವನ ತಾಯಿ ಕಷ್ಟದ ಮೇಲೆ ಕಷ್ಟ ಸಹಿಸಿ ಅವನನ್ನು
ಗರ್ಭ ಧರಿಸಿದಳು ಮತ್ತು ಅವನ ಸನ
್ತ ಪಾನ ಸ್ಥಗಿತ-
ಗೊಳ್ಳುವುದು ಎರಡು ವರ್ಷದಲ್ಲಾಗಿದೆ. ನೀನು ನನಗೆ
ಪ್ರವಾದಿ(ಸ) ಯವರ ಹಿತವಚನಗಳು | 27

ಮತ್ತು ನಿನ್ನ ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸು. (ನಿಮ್ಮೆ-


ಲರ
್ಲ ) ಮರಳುವಿಕೆ ನನಗೆ ಬಳಿಗೇ ಆಗಿದೆ. ಇನ್ನು ನಿನಗೆ
ಯಾವುದೇ ಅರಿವಿಲ್ಲದ ವಿಷಯದಲ್ಲಿ ನನ್ನೊಡನೆ ಸಹ-
ಭಾಗಿಗಳನ್ನು ಮಾಡಬೇಕೆಂದು ಅವರಿಬ್ಬರ ೂ ನಿನ್ನ
ಮೇಲೆ ಒತ್ತಡ ಹೇರಿದರೆ ಆಗ ನೀನು ಅವರ ಮಾತನ್ನು
ಕೇಳಬೇಡ. ಆದರೆ ಐಹಿಕ ಜೀವನದಲ್ಲಿ ಅವರೊಡನೆ
ಉತ್ತಮ ರೀತಿಯಲ್ಲಿ ಸಹಬಾಳ್ವೆ ಮಾಡು ಮತ್ತು ನನ್ನ
ಕಡೆಗೆ ಬಾಗಿದವರ (ಸತ್ಯವಿಶ್ವಾಸಿಗಳ) ಮಾರ್ಗದಲ್ಲಿ
ಚಲಿಸು. ನಂತರ ನೀವೆಲ್ಲರೂ ನನ್ನ ಕಡೆಗೇ ಮರಳುವಿ-
ರಿ. ಆಗ ನೀವೇನು ಮಾಡುತ್ತಿದ್ದಿರಿ ಎನ್ನುವುದನ್ನು ನಾನು
ನಿಮಗೆ ತಿಳಿಸಿಕೊಡುವೆನು.” [ಕುರ್‍ಆನ್ 31:14-15]

“ಮತ್ತು ನಿನ್ನ ರಬ್ಬ್ ವಿಧಿಸಿದ್ದು ನೀನು ಅವನ ಹೊರತು


ಬೇರೆ ಯಾರನ್ನೂ ಆರಾಧಿಸಬಾರದು. ಮಾತಾಪಿತ-
ರೊಂದಿಗೆ ಉತ್ತಮವಾಗಿ ವರ್ತಿಸಬೇಕು. ಅವರಲ್ಲೊಬ್ಬ-
ರು ಅಥವಾ ಅವರಿಬ್ಬರೂ ನಿನ್ನ ಉಪಸ್ಥಿತಿಯಲ್ಲಿ ವೃದ್ಧಾ-
ಪ್ರವಾದಿ(ಸ) ಯವರ ಹಿತವಚನಗಳು | 28

ಪ್ಯವನ್ನು ತಲುಪಿದರೆ, ಅವರೊಡನೆ ಛೇ ಎಂದು ಕೂಡ


ಹೇಳಬಾರದು. ಅವರನ್ನು ಗದರಿಸಬಾರದು. ಬದಲಾಗಿ
ಅವರೊಡನೆ ಸನ್ಮಾನ್ಯವಾದ ಗೌರವಾರ್ಹ ಮಾತುಗಳ-
ನ್ನಾಡು. ಅವರ ಮುಂದೆ ದಯೆಯಿಂದ ಕೂಡಿದ ವಿ-
ನಮ್ರತೆಯ ರೆಕ್ಕೆಗಳನ್ನು ತಗ್ಗಿಸು ಮತ್ತು ಓ ನನ್ನ ರಬ್ಬೇ!
ಇವರು ಚಿಕ್ಕಂದಿನಲ್ಲಿ ನನ್ನನ್ನು ಸಾಕಿ ಸಲಹಿದಂತೆ ಇವರ
ಮೇಲೆ ದಯೆ ತ�ೋರು ಎಂದು ಪ್ರಾರ್ಥಿಸು.” [ಕುರ್‍ಆನ್
17:23-24]

ನೀವು ನಿಮ್ಮ ಮಾತಾಪಿತರನ್ನು ಅನುಸರಿಸಿರಿ. ನೀವು


ನಿಮ್ಮ ಇಹಲ�ೋಕವನ್ನು ಸಂಪೂರ್ಣವಾಗಿ ತೊರೆದು
ಹೊರಟುಹ�ೋಗಬೇಕೆಂದು ಅವರು ನಿಮಗೆ ಆದೇಶಿಸಿ-
ದರೆ, ನೀವದನ್ನು ಸಂಪೂರ್ಣವಾಗಿ ತೊರೆದು ಹ�ೋಗಿರಿ
ಎಂಬ ಮಾತಿನ ಅರ್ಥ: ನೀವು ಸಂಪಾದಿಸಿದ ಸಂಪತ-್ತ
ನ್ನು ಸಂಪೂರ್ಣವಾಗಿ ಅವರ ಕೈಗೆ ಒಪ್ಪಿಸಬೇಕೆಂದು
ಅವರು ನಿಮಗೆ ಆಜ್ಞಾಪಿಸಿದರೆ ನೀವು ಮರು ಮಾತ-
ಪ್ರವಾದಿ(ಸ) ಯವರ ಹಿತವಚನಗಳು | 29

ನಾಡದೆ ಅವೆಲವ
್ಲ ನ್ನೂ ಅವರ ಕೈಗೆ ಒಪ್ಪಿಸಬೇಕು. ಕಾರಣ
ನೀವು ಮತ್ತು ನಿಮ್ಮ ಸಂಪತ್ತೆಲ್ಲವೂ ಅವರಿಗೆ ಸೇರಿದ್ದು.
ಆದ್ದರಿಂದ ಅವರು ಯಾವಾಗ ಕೇಳಿದರೂ ಅದನ್ನು
ಅವರಿಗೆ ಕೊಡಬೇಕು.

ಐದನೆಯದಾಗಿ, ಪ್ರವಾದಿ ಯವರು ಹೇಳುತ್ತಾರೆ:


“ಆಡಳಿತಗಾರರೊಂದಿಗೆ ವಾದ ಮಾಡಬೇಡಿ. ಆ ಸ್ಥಾ-
ನಕ್ಕೆ ನೀವೇ ಅರ್ಹರೆಂದು ನಿಮಗೆ ಅನ್ನಿಸಿದರೂ ಸಹ.”

ಈ ಹಿತವಚನದಲ್ಲಿ ಪ್ರವಾದಿ ಯವರು ಹೇಳುವು-


ದೇನೆಂದರೆ, ಆಡಳಿತಗಾರರನ್ನು ಅನುಸರಿಸಿರಿ. ಅವ-
ರೊಂದಿಗೆ ವಾದ ಮಾಡಬೇಡಿ. ಆಡಳಿತ ನಡೆಸಲು
ಅವರಿಗಿಂತಲೂ ಹೆಚ್ಚು ಅರ್ಹತೆಯಿರುವ ವ್ಯಕ್ತಿ
ನೀವೆಂದು ನಿಮಗೆ ಅನ್ನಿಸಿದರೂ ಸಹ ಅವರೊಂದಿಗೆ
ವಾದ ಮಾಡಬೇಡಿ. ಅವರ ವಿರುದ್ಧ ಬಂಡೇಳಬೇಡಿ.
ಅವರ ಅನುಸರಣೆ ಮಾಡುವುದನ್ನು ನಿಲ್ಲಿಸಬೇಡಿ.
ಕಾರಣ ಶಾಂತಿ ಮತ್ತು ಸುರಕ್ಷೆ ಜಾರಿಯಲ್ಲಿದರೆ
್ದ ಮಾತ್ರ
ಪ್ರವಾದಿ(ಸ) ಯವರ ಹಿತವಚನಗಳು | 30

ನೆಮ್ಮದಿಯಿಂದ ಅಲ್ಲಾಹನ ಆರಾಧನೆ ಮಾಡಲು ಸಾಧ್ಯ.

ಅಲ್ಲಾಹು ಮನುಷ್ಯರನ್ನು ಸೃಷ್ಟಿಸಿದ ಮೂಲ ಉದ್ದೇಶ


ಅವನನ್ನು ಆರಾಧಿಸುವುದಾಗಿದೆ. ಅಲ್ಲಾಹನನ್ನು
ಆರಾಧಿಸಲು ಸಹಾಯಕವಾಗುವ ವಾತಾವರಣವನ್ನು
ನಿರ್ಮಾಣ ಮಾಡುವುದು ಕಡ್ಡಾಯವಾಗಿದೆ. ಆಡಳಿತ-
ಗಾರರೊಂದಿಗೆ ವಾದ ಮಾಡಿದರೆ, ಅವರ ವಿರುದ್ಧ ಬಂ-
ಡೆದ್ದರೆ, ನಾಡಿನ ಶಾಂತಿ ಹಾಳಾಗಿ ಅರಾಜಕತೆ ತಾಂಡ-
ವವಾಡುತ್ತದೆ. ಹಿಂಸೆ ಆರಂಭವಾಗುತ್ತದೆ. ಇದರಿಂದ
ಜನರಿಗೆ ಇಬಾದತ್ ಮಾಡುವ ಸ್ಫೂರ್ತಿ ಹೊರಟು-
ಹ�ೋಗುತ್ತದೆ. ಅಲ್ಲಾಹನ ಹಕ್ಕುಗಳನ್ನು ನೆರವೇರಿಸಲು
ಮನುಷ್ಯರಿಗೆ ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ
ಅನೇಕ ಹದೀಸುಗಳಲ್ಲಿ ಆಡಳಿತಗಾರರ ವಿರುದ್ಧ ಬಂ-
ಡೇಳುವುದನ್ನು ವಿರ�ೋಧಿಸಲಾಗಿದೆ. ಆಡಳಿತಗಾರರು
ಸರ್ವಾಧಿಕಾರಿಗಳಾದರೂ ಸಹ ಅವರನ್ನು ಅನುಸರಿ-
ಸುವುದು ಕಡ್ಡಾಯ. ಪ್ರವಾದಿ ಹೇಳುತ್ತಾರೆ: “ಆಡ-
ಪ್ರವಾದಿ(ಸ) ಯವರ ಹಿತವಚನಗಳು | 31

ಳಿತಗಾರರಾಗಲು ನಿಮಗೆ ಬಹಳ ಆಸೆಯಿದೆಯೆಂದು


ನನಗೆ ಗೊತ್ತು. ಆದರೆ ವಾಸ್ತವವಾಗಿ ಪುನರುತ್ಥಾನ ದಿನ
ಅದು ನಿಮಗೆ ವಿಷಾದ ಮತ್ತು ಖೇದಕ್ಕೆ ಕಾರಣವಾಗು-
ತ್ತದೆ.” [ಅಹ್ಮದ್]

ಅಲ್ಲಾಹು ಹೇಳುತ್ತಾನೆ: “ಓ ಸತ್ಯವಿಶ್ವಾಸಿಗಳೇ! ನೀವು


ಅಲ್ಲಾಹನನ್ನು ಅನುಸರಿಸಿರಿ, ರಸೂಲರನ್ನು ಅನುಸರಿ-
ಸಿರಿ ಮತ್ತು ನಿಮ್ಮಲ್ರ
ಲಿ ುವ ಆಡಳಿತಗಾರರನ್ನು ಅನುಸ-
ರಿಸಿರಿ.” [ಕುರ್‍ಆನ್ 4:59]

ಪ್ರ ವ ಾದಿ ಹೇಳಿದರು: “ಆಡಳಿತಗಾರರು


ಹೇಳಿದಂತೆ ಕೇಳಿರಿ ಮತ್ತು ಅವರನ್ನು ಅನುಸರಿಸಿರಿ.
ನಿಮ್ಮ ಮೇಲೆ ಆಡಳಿತ ನಡೆಸುವುದು ದ್ರಾಕ್ಷೆಯಂತಹ
ತಲೆಯನ್ನು ಹೊಂದಿರುವ ಒಬ್ಬ ನೀಗ್ರೋ ಗುಲಾಮನಾ-
ಗಿದ್ದರೂ ಸಹ.” [ಅಲ್‍ಬುಖಾರಿ]

ಒಮ್ಮೆ ಸಲಮ ಇಬ್ನ್ ಯಝೀದ್‍ ಪ್ರವ ಾದಿ


ಪ್ರವಾದಿ(ಸ) ಯವರ ಹಿತವಚನಗಳು | 32

ರೊಂದಿಗೆ ಕೇಳಿದರು: “ಓ ಪ್ರವ ಾದಿಯವರೇ! ನಮ್ಮ


ಮೇಲೆ ಆಡಳಿತ ನಡೆಸುವವರು ಅವರ ಹಕ್ಕುಗಳನ್ನು
ನಮ್ಮಿಂದ ಪಡೆದು ನಮ್ಮ ಹಕ್ಕುಗಳನ್ನು ನಮಗೆ ನೀಡ-
ದಿದ್ದರೆ ನಾವು ಅವರು ಹೇಳಿದಂತೆ ಕೇಳಬೇಕೇ? ತಾವು
ನಮಗೆ ಏನು ಆಜ್ಞಾಪಿಸುತ್ತೀರಿ?” ಈ ಪ್ರಶ್ನೆಗೆ ಉತ್ತರ
ಕೊಡದೆ ಪ್ರವಾದಿ ಯವರು ಮುಖ ತಿರುಗಿಸಿದರು.
ಅವರು ಮೂರು ಬಾರಿ ಪ್ರಶ್ನೆ ಕೇಳಿದಾಗಲೂ ಪ್ರವಾದಿ
ಯವರು ಉತರಿ
್ತ ಸದೆ ಮುಖ ತಿರುಗಿಸಿದರು.
ನಂತರ ಪ್ರವಾದಿ ಯವರು ಹೇಳಿದರು: “ಅವರು
ಹೇಳಿದಂತೆ ಕೇಳಿರಿ. ಅವರ ಮಾಡಿದ್ದು ಅವರಿಗೆ. ನೀವು
ಮಾಡಿದ್ದು ನಿಮಗೆ.” [ಮುಸ್ಲಿಂ]

ಪ್ರವಾದಿ ಹೇಳುತ್ತಾರೆ: “ಬನೂ ಇಸ್ರಾಈಲರನ್ನು ಪ್ರ-


ವಾದಿಗಳು ಆಳುತ್ತಿದರ
್ದ ು. ಒಬ್ಬ ಪ್ರವಾದಿ ಮರಣಹೊಂದಿ-
ದರೆ ಅವರ ಹಿಂದೆಯೇ ಇನ್ನೊಬ್ಬ ಪ್ರವಾದಿ ಬರುತ್ತಿದರ
್ದ ು.
ಆದರೆ ನನ್ನ ಬಳಿಕ ಪ್ರವಾದಿ ಬರಲಿಕ್ಕಿಲ್ಲ. ಆದರೆ ಖಲೀಫ-
ಪ್ರವಾದಿ(ಸ) ಯವರ ಹಿತವಚನಗಳು | 33

ರುಗಳು ಹೆಚ್ಚು ಹೆಚ್ಚಾಗಿ ಬರುವರು.” ಆಗ ಸಹಾಬಾಗಳು


ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ, ತಾವು
ನಮಗೆ ಏನು ಆದೇಶ ನೀಡುತ್ತೀರಿ.” ಪ್ರವ ಾದಿ
ಹೇಳಿದರು: “ನೀವು ಅವರಲ್ಲಿ ಒಬ್ಬರ ನಂತರ ಒಬ್ಬರಿಗೆ
ಬೈಅತ್ ಮಾಡಿ ಅದನ್ನು ಪೂರ್ಣವಾಗಿ ನೆರವೇರಿಸಿರಿ.
ಅವರ ಹಕ್ಕುಗಳನ್ನು ಅವರಿಗೆ ಕೊಡಿ. ಅವರು ಹೇಗೆ
ಆಡಳಿತ ಮಾಡಿದರು ಎಂಬ ಬಗ್ಗೆ ಅಲ್ಲಾಹು ಅವರ-
ನ್ನು ವಿಚಾರಣೆ ಮಾಡುವನು.” [ಅಲ್‍ಬುಖಾರಿ ಮತ್ತು
ಮುಸ್ಲಿಂ]

ಪ್ರವಾದಿ ಯವರು ಹೇಳಿದರು: “ಎರಡು ಖಲೀಫ-


ರಿಗೆ ಬೈಅತ್ ಮಾಡಲಾದರೆ ಆ ಎರಡನೇ ಖಲೀಫರನ್ನು
ಕೊಂದುಹಾಕಿರಿ.” [ಮುಸ್ಲಿಂ]

ಪ್ರವ ಾದಿ ಹೇಳಿದರು: “ನಿಮ್ಮ ಆಡಳಿತವು ಏಕೈಕ


ವ್ಯಕ್ತಿಯ ಕೈಯಲ್ಲಿರ ುವಾಗ ಇನ್ನೊಬ್ಬ ವ್ಯಕ್ತಿ ಬಂದು
ನಿಮ್ಮ ಐಕ್ಯತೆಯನ್ನು ಒಡೆಯಲು, ನಿಮ್ಮ ಒಗ್ಗಟ್ಟನ ್ನು
ಪ್ರವಾದಿ(ಸ) ಯವರ ಹಿತವಚನಗಳು | 34

ಮುರಿಯಲು ಉದ್ದೇಶಿಸಿದರೆ ಅವನನ್ನು ಕೊಂದು


ಹಾಕಿರಿ.” [ಮುಸ್ಲಿಂ]

ಆರನೆಯದಾಗಿ, ಪ್ರವ ಾದಿ ಯವರು ಹೇಳುತ್ತಾ-


ರೆ: “ಯುದ್ಧಭೂಮಿಯಿಂದ ಪಲಾಯನ ಮಾಡಬೇಡಿ.
ನೀವು ಸತ್ತರೂ ಅಥವಾ ನಿಮ್ಮ ಸಂಗಡಿಗರು ಪಲಾಯನ
ಮಾಡಿದರೂ ಸಹ.”

ಈ ಹಿತವಚನದಲ್ಲಿ ಪ್ರವಾದಿ ಯವರು ಹೇಳುವು-


ದೇನೆಂದರೆ, ಯಾವುದೇ ಕಾರಣಕ್ಕೂ ಯುದ್ಧಭೂಮಿ-
ಯಿಂದ ಓಡಿ ಹ�ೋಗಬೇಡಿ. ನಿಮ್ಮ ಜೀವಕ್ಕೆ ಅಪಾಯ
ಬಂದರೂ ಸಹ ನೀವು ಯುದ್ಧಭ ೂಮಿಯಿಂದ ಓಡಿ-
ಹ�ೋಗಬೇಡಿ. ನಿಮ್ಮೊಂದಿಗೆ ಇರುವವರೆಲರ
್ಲ ೂ ನಿಮ್ಮನ್ನು
ಒಂಟಿಯಾಗಿ ಬಿಟ್ಟು ಯುದ್ಧಭೂಮಿಯಿಂದ ಓಡಿದರೂ
ನೀವು ಓಡಿಹ�ೋಗಬೇಡಿ. ಕಾರಣ, ಯುದ್ಧಭ ೂಮಿ-
ಯಿಂದ ಓಡಿಹ�ೋಗುವುದು ಮಹಾಪಾಪವಾಗಿದೆ.
ಪ್ರವಾದಿ(ಸ) ಯವರ ಹಿತವಚನಗಳು | 35

ಪ್ರವ ಾದಿ ಹೇಳಿದರು: “ಏಳು ಮಹಾವಿನಾಶಗ-


ಳಿಂದ ದೂರವಾಗಿರಿ.” ಸಹಾಬಾಗಳು ಕೇಳಿದರು: “ಓ
ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು?”
ಪ್ರವ ಾದಿ ಹೇಳಿದರು: “ಅಲ್ಲಾಹನೊಂದಿಗೆ ಶಿರ್ಕ್
ಮಾಡುವುದು, ಮಾಟ ಮಾಡುವುದು, ಅಲ್ಲಾಹು
ಪವಿತ್ರಗೊಳಿಸಿದ ಮನುಷ್ಯ ಜೀವಿಯನ್ನು ಅನ್ಯಾಯವಾ-
ಗಿ ಕೊಲೆ ಮಾಡುವುದು, ಬಡ್ಡಿ ತಿನ್ನುವುದು, ಅನಾಥರ
ಸೊತ್ತು ಕಬಳಿಸುವುದು, ಯುದ್ಧಭೂಮಿಯಿಂದ ಓಡಿ-
ಹ�ೋಗುವುದು ಮತ್ತು ಸುಶೀಲೆಯರೂ, ವ್ಯಭಿಚಾರದ
ಬಗ್ಗೆ ಯೋಚಿಸದವರೂ ಆದ ಸತ್ಯವಿಶ್ವಾಸಿ ಸ್ತ್ರೀಯರ
ಮೇಲೆ ವ್ಯಭಿಚಾರದ ಆರ�ೋಪ ಹೊರಿಸುವುದು.”
[ಅಲ್‍ಬುಖಾರಿ ಮತ್ತು ಮುಸ್ಲಿಂ]

ಯುದ್ಧಭೂಮಿಯಲ್ಲಿ ಕೆಚ್ಚೆದೆಯಿಂದ ಹ�ೋರಾಟ ಮಾ-


ಡುವುದಕ್ಕೆ ಸಹಾಬಾಗಳ ಜೀವನದಲ್ಲಿ ಅನೇಕ ಉದಾ-
ಹರಣೆಗಳಿವೆ. ಅವರು ಶತ್ರುವಿಗೆ ಎದೆಕೊಟ್ಟು ನಿಂತು
ಪ್ರವಾದಿ(ಸ) ಯವರ ಹಿತವಚನಗಳು | 36

ಹ�ೋರಾಡುತ್ತಿದರ
್ದ ು. ಹೇಡಿಗಳಂತೆ ಯುದ್ಧಭ ೂಮಿ-
ಯಿಂದ ಕಾಲ್ತೆಗೆಯುತ್ತಿರಲಿಲ್ಲ.

ಅನಸ್ ಇಬ್ನ್ ಮಾಲಿಕ್ ಹೇಳುತ್ತಾರೆ: “ನನ್ನ ಚಿಕ್ಕಪ್ಪ


ಅನಸ್ ಇಬ್ನು ನ್ನದ್ರ್ ಬದ್ರ್ ಯುದ್ಧದಲ್ಲಿ ಪಾಲ್ಗೊಂ-
ಡಿರಲಿಲ್ಲ. ಒಂದಿನ ಅವರು ಪ್ರವಾದಿ ರವರ ಬಳಿಗೆ
ಬಂದು ಹೇಳಿದರು: ಓ ಪ್ರವ ಾದಿಯವರೇ! ಮುಶ್ರಿಕರ
ವಿರುದ್ಧ ತಾವು ಹ�ೋರಾಡಿದ ಮೊತಮೊ
್ತ ದಲ ಯುದ್ಧ-
ದಲ್ಲಿ ಪಾಲ್ಗೊಳ್ಳಲು ನನಗೆ ಸಾಧ್ಯವ ಾಗಲಿಲ್ಲ. ಮುಂದೆ
ಯಾವಾಗಲಾದರೂ ಮುಶ್ರಿಕರ ವಿರುದ್ಧ ನಡೆಯುವ
ಯುದ್ಧದಲ್ಲಿ ಪಾಲ್ಗೊಳ್ಳುವ ಭಾಗ್ಯವನ್ನು ಅಲ್ಲಾಹು ನನಗೆ
ಕರುಣಿಸಿದರೆ ನಾನು ಆ ಯುದ್ಧದಲ್ಲಿ ಏನು ಮಾಡುವೆ-
ನೆಂದು ನಾನು ಅಲ್ಲಾಹನಿಗೆ ತ�ೋರಿಸಿಕೊಡುವೆನು. ಹೀಗೆ
ಉಹುದ್ ಯುದ್ಧದ ಸಂದರ್ಭದಲ್ಲಿ ಅನಸ್ ಇಬ್ನು ನ್ನದ್ರ್
ಶತ್ರುಗಳ ವಿರುದ್ಧ ಹ�ೋರಾಡಲು ಧೈರ್ಯದಿಂದ
ಸಾಗಿದರು. ಆಗ ಅವರಿಗೆ ಸಅ್‌ದ್ ಇಬ್ನ್ ಮುಆಝ್
ಪ್ರವಾದಿ(ಸ) ಯವರ ಹಿತವಚನಗಳು | 37

ಸಿಕ್ಕಿದರು. ಅನಸ್ ಇಬ್ನು ನ್ನದ್ರ್ ಹೇಳಿದರು:


“ಓ ಸಅ್‌ದ್‌ರವರೇ! ನದ್ರ್‌ನ ಒಡೆಯನಾಗಿರುವ ಅಲ್ಲಾ-
ಹನ ಮೇಲಾಣೆ! ನಾನು ಉಹುದ್ ಪರ್ವತದ ಹಿಂಭಾ-
ಗದಿಂದ ಸ್ವರ್ಗದ ಪರಿಮಳವನ್ನು ಅನುಭವಿಸುತ್ತಿದ್ದೇನೆ.”

ಹೀಗೆ ಹೇಳುತ್ತಾ ಅವರು ಕೆಚ್ಚೆದೆಯಿಂದ ಮುನ್ನುಗ್ಗಿ


ಹ�ೋರಾಡಿದರು. ಯುದ್ಧ ಮುಗಿದ ನಂತರ ಅವರ
ದೇಹದ ಗುರುತು ಸಿಗುತ್ರ
ತಿ ಲಿಲ.್ಲ ಶತ್ರುಗಳು ಅವರ
ಅಂಗಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದರ ು.
ಅವರ ದೇಹದಲ್ಲಿ ಖಡ್ಗ, ಭರ್ಚಿ ಮತ್ತು ಬಾಣಗಳಿಂದ
ಉಂಟಾದ ಎಂಬತ್ತಕ್ಕಿಂತಲೂ ಹೆಚ್ಚು ಗಾಯಗಳಿದ್ದ-
ವು. ಅವರ ಬೆರಳನ್ನು ನ�ೋಡಿ ಅವರ ತಂಗಿ ಅವರ
ಗುರುತು ಹಚ್ಚಿದರ
್ದ ು. “ಸತ್ಯವಿಶ್ವಾಸಿಗಳಲ್ಲಿ ಕೆಲವರಿದ್ದಾರೆ.
ತಾವು ಅಲ್ಲಾಹನೊಂದಿಗೆ ಮಾಡಿದ ಕರಾರಿನಲ್ಲಿ ಅವರು
ಸತ್ಯಸಂಧತೆಯನ್ನು ಪಾಲಿಸಿದ್ದಾರೆ. ಅವರಲ್ಲಿ ಕೆಲವರು
ಈಗಾಗಲೇ ತಮ್ಮ ಕರಾರನ್ನು ಪೂರ್ಣಗೊಳಿಸಿದ್ದಾರೆ.
ಪ್ರವಾದಿ(ಸ) ಯವರ ಹಿತವಚನಗಳು | 38

ಇತರ ಕೆಲವರು ಅದನ್ನು ನಿರೀಕ್ಷಿಸ ುತ್ತಿದ್ದಾರೆ. ಅವರು


ಅದಕ್ಕೆ ಯಾವುದೇ ಬದಲಾವಣೆಯನ್ನೂ ಮಾಡಿಲ್ಲ.”
[ಕುರ್‍ಆನ್ 33:23] ಎಂಬ ಆಯತ್ ಅವತೀರ್ಣವಾ-
ದದ್ದು ಇವರ ಬಗ್ಗೆ ಎಂದು ಹೇಳಲಾಗುತ್ತದೆ.

ಏಳನೆಯದಾಗಿ, ಪ್ರವ ಾದಿ ಯವರು ಹೇಳುತ್ತಾ-


ರೆ: “ನಿಮ್ಮ ಸಂಪತ್ತಿನಿಂದ ನಿಮ್ಮ ಕುಟುಂಬಕ್ಕೆ ಖರ್ಚು
ಮಾಡಿ.”

ಈ ಹಿತವಚನದಲ್ಲಿ ಪ್ರವಾದಿ ಯವರು ಹೇಳುವು-


ದೇನೆಂದರೆ, ನಿಮ್ಮ ಕುಟುಂಬಕ್ಕೆ ಖರ್ಚು ಮಾಡಿ. ನೀವು
ನಿಮ್ಮ ಕುಟುಂಬಕ್ಕೆ ಖರ್ಚು ಮಾಡುವ ಒಂದೊಂದು
ಪೈಸೆಗೂ ಅಲ್ಲಾಹನ ಬಳಿ ಪ್ರತಿಫಲವಿದೆ. ಇಲ್ಲಿ ಕುಟುಂಬ
ಎಂದರೆ ಯಾರ ಪಾಲನೆ–ಪೋಷಣೆ ಮಾಡುವುದು
ನಿಮ್ಮ ಕರ್ತವ್ಯವೋ ಅವರು. ಅಂದರೆ ಪತ್ನಿ, ಮಕ್ಕಳು,
ತಂದೆ, ತಾಯಿ ಇತ್ಯಾದಿ.
ಪ್ರವಾದಿ(ಸ) ಯವರ ಹಿತವಚನಗಳು | 39

ಪ್ರವಾದಿ ಯವರು ಹೇಳುತ್ತಾರೆ: “ಅಲ್ಲಾಹನ ಮು-


ಖವನ್ನು ಬಯಸಿ ನೀವು ಏನು ಖರ್ಚು ಮಾಡಿದರೂ
ಅದಕ್ಕೆ ನಿಮಗೆ ಪ್ರತಿಫಲ ಸಿಗದೆ ಇರುವುದಿಲ್ಲ. ಎಲ್ಲಿಯ-
ವೆರೆಗೆಂದರೆ ನೀವು ತಮ್ಮ ಪತ್ನಿಯ ಬಾಯಲ್ಲಿ ಹಾಕುವ
ಒಂದು ತುತ್ತು ಅನ್ನಕ್ಕೂ ಪ್ರತಿಫಲವಿದೆ.” [ಅಲ್‍ಬುಖಾರಿ
ಮತ್ತು ಮುಸ್ಲಿಂ]

ಪ್ರವಾದಿ ಹೇಳುತ್ತಾರೆ: “ಒಬ್ಬ ವ್ಯಕ್ತಿ ಅಲ್ಲಾಹನಲ್ಲಿ ಪ್ರ-


ತಿಫಲ ಬೇಡುತ್ತಾ ತನ್ನ ಕುಟುಂಬಕ್ಕೆ ಖರ್ಚು ಮಾಡಿದರೆ
ಅದು ಅವನ ಪಾಲಿಗೆ ದಾನಧರ್ಮವಾಗಿ ಮಾರ್ಪಡು-
ತ್ತದೆ.” [ಅತ್ತಬರಾನೀ]

ಕುಟುಂಬಕ್ಕೆ ಖರ್ಚು ಮಾಡದೆ ಜಿಪುಣತನ ತ�ೋರಿಸು-


ವುದು ಪಾಪವಾಗಿದೆ. ಪ್ರವಾದಿ ಯವರು ಹೇಳು-
ತ್ತಾರೆ: “ಯಾರಿಗೆ ಆಹಾರ ಕೊಡುವುದು ತನ್ನ ಕರ್ತವ್ಯ-
ವೋ ಅವರಿಗೆ ಆಹಾರ ಕೊಡದಿರುವುದು ಒಬ್ಬ ವ್ಯಕ್ತಿಗೆ
ಪಾಪವಾಗಿ ಸಾಕು.” [ಅಬೂ ದಾವೂದ್]
ಪ್ರವಾದಿ(ಸ) ಯವರ ಹಿತವಚನಗಳು | 40

ಕುಟುಂಬಕ್ಕೆ ಖರ್ಚು ಮಾಡುವುದನ್ನು ಪ್ರವ ಾದಿ


ಯವರು ಅತಿಯಾಗಿ ಪ್ರೋತ್ಸಾಹಿಸುತ್ದ
ತಿ ರ
್ದ ು. ಅವರು
ಹೇಳುತ್ತಿದರ
್ದ ು: “ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು
ಮಾಡಿದ ಹಣ, ಗುಲಾಮ ವಿಮೋಚನೆಗೆ ಖರ್ಚು
ಮಾಡಿದ ಹಣ, ಬಡವರಿಗೆ ದಾನ ಮಾಡಿದ ಹಣ ಮತ್ತು
ನಿಮ್ಮ ಕುಟುಂಬಕ್ಕೆ ಖರ್ಚು ಮಾಡಿದ ಹಣ. ಇವುಗಳಲ್ಲಿ
ಅತ್ಯಧಿಕ ಪ್ರತಿಫಲವಿರುವುದು ನೀವು ನಿಮ್ಮ ಕುಟುಂಬಕ್ಕೆ
ಖರ್ಚು ಮಾಡಿದ ಹಣಕ್ಕೆ.” [ಮುಸ್ಲಿಂ]

ಅವರು ಹೇಳುತ್ತಿದರ
್ದ ು: “ಒಬ್ಬ ವ್ಯಕ್ತಿ ಖರ್ಚು ಮಾಡುವ
ಅತಿಶ್ರೇಷ್ಠ ಹಣವು ತನ್ನ ಕುಟುಂಬಕ್ಕಾಗಿ ಖರ್ಚು
ಮಾಡುವ ಹಣವಾಗಿದೆ.” [ಮುಸ್ಲಿಂ]

ಆದರೆ ಕುಟುಂಬಕ್ಕೆ ಖರ್ಚು ಮಾಡುವಾಗ ಅತಿಯಾಗಿ


ಖರ್ಚು ಮಾಡಬಾರದು. ಮಿತಿಮೀರಿ ಖರ್ಚು ಮಾಡು-
ವುದನ್ನು ಇಸ್ಲಾಂ ವಿರ�ೋಧಿಸಿದೆ. ಅದೇ ರೀತಿ ಅಗತ್ಯ-
ಕ್ಕಿಂತ ಕಮ್ಮಿ ಖರ್ಚು ಮಾಡುವುದನ್ನೂ ವಿರ�ೋಧಿಸಿದೆ.
ಪ್ರವಾದಿ(ಸ) ಯವರ ಹಿತವಚನಗಳು | 41

ಅಲ್ಲಾಹು ಹೇಳುತ್ತಾನೆ: “ಅವರು ಖರ್ಚು ಮಾಡುವಾಗ


ಅತಿಯಾಗಿ ಖರ್ಚು ಮಾಡುವವರ�ೋ, ಜಿಪುಣತನ
ತ�ೋರುವವರ�ೋ ಅಲ್ಲ. ಬದಲಾಗಿ ಅವೆರಡರ ನಡು-
ವಿನಲ್ಲಿರುವ ಮಧ್ಯಮಸ್ಥಿತಿಯನ್ನು ಅವಲಂಬಿಸುವವರು.”
[ಕುರ್‍ಆನ್ 25:67]

ಕುಟುಂಬಕ್ಕೆ ಖರ್ಚು ಮಾಡುವುದರಲ್ಲಿ ಜಿಪುಣತನ


ತ�ೋರಿಸಿದರೆ ಪತ್ನಿ ಮಕ್ಕಳು ಅಡ್ಡದಾರಿ ಹಿಡಿಯುವು-
ದರಲ್ಲಿ ಸಂಶಯವಿಲ.್ಲ ಹಾಗೆಯೇ ಅತಿಯಾಗಿ ಖರ್ಚು
ಮಾಡಿದರೂ ಅವರು ಹಾಳಾಗುವುದರಲ್ಲಿ ಸಂಶಯ-
ವಿಲ್ಲ. ಆದ್ದರಿಂದ ಖರ್ಚು ಮಾಡುವುದು ಇವೆರಡರ
ಮಧ್ಯಮ ಸ್ಥಿತಿಯಲ್ಲಾಗಿರಬೇಕು.

ಎಂಟನೆಯದಾಗಿ, ಪ್ರವಾದಿ ಯವರು ಹೇಳುತ್ತಾ-


ರೆ: “ನಿಮ್ಮ ಬೆತ್ತವನ್ನು ನಿಮ್ಮ ಕುಟುಂಬದಿಂದ ದೂರ
ಇಡಬೇಡಿ.”
ಪ್ರವಾದಿ(ಸ) ಯವರ ಹಿತವಚನಗಳು | 42

ಈ ಹಿತವಚನದಲ್ಲಿ ಪ್ರವ ಾದಿ ಯವರು ಹೇಳು-


ವುದೇನೆಂದರೆ, ನೀವು ನಿಮ್ಮ ಕುಟುಂಬದ ಸದಸ್ಯರಿಗೆ
ಕಾಣುವ ರೀತಿಯಲ್ಲಿ ನಿಮ್ಮ ಬೆತ್ತವನ್ನು ಇಡಿ. ಅವರಿಗೆ
ಕಾಣದಂತೆ ಅದನ್ನು ಎಲ್ಲೋ ಬಚ್ಚಿಡಬೇಡಿ. ಅಂದರೆ
ಇದರ ಅರ್ಥ ನಿಮಗೆ ನಿಮ್ಮ ಕುಟುಂಬದ ಮೇಲೆ
ಪೂರ್ಣ ಗಮನವಿರಲಿ. ಪತ್ನಿಯ ಬಗ್ಗೆ, ಮಕ್ಕಳ ಬಗ್ಗೆ ಸೂ-
ಕ್ಷ್ಮವಾಗಿ ವೀಕ್ಷಿಸುತ್ತಿರಿ. ಅವರ ಬಗ್ಗೆ ನಿರ್ಲಕ್ಷ್ಯ ತಾಳಬೇಡಿ.
ಅವರು ದಾರಿತಪ್ಪದಂತೆ ಎಚ್ಚರ ವಹಿಸಿ. ಕಾರಣ, ನಿಮ್ಮ
ಕುಟುಂಬ ದಾರಿತಪ್ಪಿದರೆ ಅದಕ್ಕೆ ನೀವೇ ಹೊಣೆಗಾರ-
ರಾಗುತ್ತೀರಿ. ನೀವು ನಿಮ್ಮ ಕುಟುಂಬದ ಮೇಲ್ವಿಚಾರ-
ಕರು. ನಿಮ್ಮ ಕುಟುಂಬದ ಬಗ್ಗೆ ಅಲ್ಲಾಹು ವಿಚಾರಣೆ
ಮಾಡುವುದು ನಿಮ್ಮಲ್.ಲಿ ಪ್ರವ ಾದಿ ಯವರು ಹೇ-
ಳುತ್ತಾರೆ: “ನಿಮ್ಮಲ್ಲಿ ಪ್ರತಿಯೊಬ್ಬರೂ ಮೇಲ್ವಿಚಾರಕರು.
ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಅವರ ಅಧೀನದಲ್ಲಿರುವ-
ವರ ಬಗ್ಗೆ ವಿಚಾರಣೆ ಮಾಡಲಾಗುವುದು. ಮುಖಂಡನು
ಪ್ರವಾದಿ(ಸ) ಯವರ ಹಿತವಚನಗಳು | 43

ಮೇಲ್ವಿಚಾರಕನು. ಅವನ ಅಧೀನದಲ್ಲಿರುವವರ ಬಗ್ಗೆ


ಅವನಲ್ಲಿ ವಿಚಾರಣೆ ಮಾಡಲಾಗುವುದು. ಗಂಡಸು
ಕುಟುಂಬದ ಮೇಲ್ವಿಚಾರಕನು. ಅವನ ಅಧೀನದಲ್ಲಿ-
ರುವವರ ಬಗ್ಗೆ ಅವನಲ್ಲಿ ವಿಚಾರಣೆ ಮಾಡಲಾಗುವು-
ದು.” [ಅಲ್‍ಬುಖಾರಿ ಮತ್ತು ಮುಸ್ಲಿಂ]

ಒಂಬತ್ತನೆಯದಾಗಿ, ಪ್ರವಾದಿ ಯವರು ಹೇಳಿದರು


“ಅಲ್ಲಾಹನ ಬಗ್ಗೆ ನಿಮ್ಮ ಕುಟುಂಬವನ್ನು ಹೆದರಿಸುತ್ತಿರಿ.”

ಈ ಹಿತವಚನದಲ್ಲಿ ಪ್ರವ ಾದಿ ಯವರು ಹೇಳು-


ವುದೇನೆಂದರೆ, ನಿಮ್ಮ ಕುಟುಂಬದ ಬಗ್ಗೆ ನಿರ್ಲಕ್ಷ್ಯ
ಮನ�ೋಭಾವ ತಾಳಬೇಡಿ. ಬದಲಾಗಿ ಅವರಿಗೆ ಅಲ್ಲಾ-
ಹನ ಬಗ್ಗೆ ಎಚ್ಚರಿಕೆ ನೀಡುತ್ತಿರಿ. ಅಲ್ಲಾಹನ ವಿಧಿ–ನಿಯ-
ಮಗಳ ಬಗ್ಗೆ ಅವರಿಗೆ ತಿಳಿಸುತ್ತಿರಿ. ಕಾರಣ, ಕುಟುಂಬವು
ಒಂದು ಹಡಗಿನಂತೆ. ಕುಟುಂಬದ ಯಜಮಾನ ಅದರ
ಕಪ್ತಾನ. ಆ ಹಡಗನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸು-
ವುದು ಅವನ ಹೊಣೆಯಾಗಿದೆ. ಈ ಹೊಣೆಯನ್ನು
ಪ್ರವಾದಿ(ಸ) ಯವರ ಹಿತವಚನಗಳು | 44

ಅವನು ಹೇಗೆ ನಿಭಾಯಿಸಿದನು ಎಂಬ ಬಗ್ಗೆ ಅವನ-


ನ್ನು ವಿಚಾರಣೆ ಮಾಡಲಾಗುವುದು. ಆದ್ದರಿಂದ ದೊಡ್ಡ
ದೊಡ್ಡ ಅಲೆಗಳು ಹಾಗೂ ಹೆದ್ದೆರೆಗಳು ಹಡಗನ್ನು ಅಪ್ಪಳಿ-
ಸದಂತೆ, ಅತ್ಯಂತ ಜಾಗರೂಕತೆಯಿಂದ ಅದನ್ನು ದಡಕ್ಕೆ
ಸೇರಿಸುವುದು ಅವನ ಹೊಣೆಗಾರಿಕೆಯಾಗಿದೆ. ಈ ಹೊ-
ಣೆಗಾರಿಕೆಯಲ್ಲಿ ಅವನು ಮಾಡುವ ಸಣ್ಣ ಬೇಜವಾಬ್ದಾರಿ-
ತನ ಕೂಡ ಹಡಗನ್ನು ಮುಳುಗಿಸಿ ಬಿಡುವ ಸಾಧ್ಯತೆಯಿದೆ.
ಅಲ್ಲಾಹು ಹೇಳುತ್ತಾನೆ: “ಓ ವಿಶ್ವಾಸವಿಟ್ಟವರೇ! ನೀವು
ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ
ಪಾರು ಮಾಡಿರಿ. ಅದರ ಇಂಧನವು ಮನುಷ್ಯರು ಮತ್ತು
ಕಲ್ಲುಗಳಾಗಿವೆ. ಅದರಲ್ಲಿ ಕಠ�ೋರ ಹೃದಯದ ಶಕ್ತಿಶ ಾ-
ಲಿ ಮಲಕ್‍ಗಳಿದ್ದಾರೆ. ಅವರಿಗೆ ಅಲ್ಲಾಹು ಏನು ಆಜ್ಞಾ-
ಪಿಸಿದರೂ ಅವರದನ್ನು ಉಲ್ಲಂಘಿಸುವುದಿಲ್ಲ. ತಮಗೆ
ಆಜ್ಞಾಪಿಸಲಾಗುವುದನ್ನು ಅವರು ತಕ್ಷಣ ಕಾರ್ಯರೂ-
ಪಕ್ಕೆ ತರುತ್ತಾರೆ.” [ಕುರ್‍ಆನ್ 66:6]
ಪ್ರವಾದಿ(ಸ) ಯವರ ಹಿತವಚನಗಳು | 45

“ತಮ್ಮ ಕುಟುಂಬದವರೊಂದಿಗೆ ನಮಾಝ್ ಮಾಡಲು


ಆಜ್ಞಾಪಿಸಿರಿ. ತಾವೂ ಅದರಲ್ಲಿ ಅಚಲವಾಗಿರಿ.”
[ಕುರ್‍ಆನ್ 20:132]

ಪ್ರವ ಾದಿ ಯವರು ಹೇಳಿದರು: “ನಿಮ್ಮ ಮಕ್ಕ-


ಳಿಗೆ ಏಳು ವರ್ಷವಾಗುವಾಗ ಅವರಿಗೆ ನಮಾಝ್
ಮಾಡಲು ಆದೇಶಿಸಿರಿ. ಅವರಿಗೆ ಹತ್ತು ವರ್ಷವಾಗಿಯೂ
ನಮಾಝ್ ನಿರ್ವಹಿಸದಿದ್ದರೆ ಅವರಿಗೆ ಹೊಡೆಯಿರಿ.
ರಾತ್ರಿ ಅವರನ್ನು ಬೇರೆ ಬೇರೆಯಾಗಿ ಮಲಗಿಸಿರಿ.”
[ಅಬೂದಾವೂದ್]

‫الحركة النصيحة اإلسالمية‬


ANNASEEHA ISLAMIC MOVEMENT
SURATKAL, MANGALORE - 575 014
MOB: 9731593091 / 9945171612

Jamiyathe Ahle Hadees


Mangalore

You might also like