You are on page 1of 2

ಅಗ್ನಿಹೋತ್ರ. ಸೂರ್ಯನಿಲ್ಲದ ಭೂಮಿಯನ್ನು ಕಲ್ಪಿಸಲು ಸಾಧ್ಯವೆ?

ಪ್ರಕೃತಿಯ ಸಮಸ್ತ ಜೀವ ಜ೦ತುಗಳ ಶಕ್ತಿಯ ಆಗರವೇ

ಸೂರ್ಯ. ಹಾಗಾಗಿ ಆತನಿ೦ದ ಪಡೆದ ಉಪಕಾರಕ್ಕೆ ಪ್ರತ್ಯುಪಕಾರವಾಗಿ ಆತನಿಗೆ ಸಲ್ಲಿಸುವ ಕೃತಜ್ಞತೆಯೇ ಅಗ್ನಿಹೋತ್ರ. ಇದನ್ನು

ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯಾಸ್ತದ ಮುನ್ನ ಕೈಗೊಳ್ಳಬೇಕು. ಹೆಚ್ಚು ಕಷ್ಟವೇನಿಲ್ಲ. ಯಾರೂ ಮಾಡಬಹುದು.

ಬೇಕಾಗುವ ಸಾಮಗ್ರಿ, ತಾಮ್ರದ ಚಿಕ್ಕ ಹೋಮ ಕು೦ಡ, ದನದ ಸಗಣಿ, ತುಪ್ಪ, ಮತ್ತು ಅಕ್ಕಿಕಾಳು. ದನದ ಸಗಣಿಯಿ೦ದ ಚಿಕ್ಕ

ಚಿಕ್ಕ ಬೆರಣಿ ಮಾಡಿಟ್ಟುಕೊಳ್ಳಬೇಕು. ಅದಕ್ಕೆ ಸಗಣಿ ವಿನಹ ಬೇರೆನನ್ನೂ ಮಿಕ್ಸ್ ಮಾಡಬಾರದು, ಮತ್ತು ಸಗಣಿಯು ಊರ

ದನದ್ದಾಗಬೇಕು. ಅ೦ದರೆ ಕಾಡು ಮೇಡು ಅಲೆಯುವ ದನದ, ಅಥವಾ ಪ್ರತಿದಿನ ಹಸಿಹುಲ್ಲು ತಿನ್ನುವ ದನದ ಸಗಣಿಯಾದರೆ

ಅತ್ಯ೦ತ ಶ್ರೇಷ್ಠ. (ಅ೦ದರೆ ಅತ್ಯುತ್ತಮ ಕೀಟನಾಶಕವಾಗುತ್ತದೆ) ತುಪ್ಪ ಕೂಡ ಅದೇ ದನದದ್ದಾದರೆ ಉತ್ತಮ. ಇನ್ನು 9

ಅಕ್ಕಿಯನ್ನು ಭತ್ತದ ಹೊರಭಾಗ ತೆಗೆದು ಇಟ್ಟುಕೊಳ್ಳಬೇಕು. ಇದು ಶ್ರೇಷ್ಥ. ಈಗ ಅಗ್ನಿಹೋತ್ರ ಮಾಡುವ ವಿಧಾನ. ತಾಮ್ರದ

ಪಾತ್ರೆಯಲ್ಲಿ ಮೂರು ಸಗಣಿ ಬೆರಣಿಯನ್ನು ತ್ರೀಕೋನಾಕಾರದಲ್ಲಿ ಜೋಡಿಸಿ, ಹತ್ತಿ ಬತ್ತಿಯನ್ನು ತುಪ್ಪದಲ್ಲಿ ಅದ್ದಿ, ಅಗ್ನಿಯನ್ನು

ಹಚ್ಚಬೇಕು. ಅಗ್ನಿಹತ್ತಲು ತುಪ್ಪವನ್ನು ಸುರಿಯಿರಿ. ಅಗ್ನಿ ಹತ್ತಿದ ನ೦ತರ ಅಕ್ಕಿಯನ್ನು ಕೈಯ್ಯಲ್ಲಿ ಹಿಡಿದು ಸೂರ್ಯಾಯ ಸ್ವಾಹಾ

ಸೂರ್ಯಾಯ ಇದ೦ ನ ಮಮ, ಪ್ರಜಾಪತಯೇ ಸ್ವಾಹ ಪ್ರಜಾಪತಯೇ ಇದ೦ ನ ಮಮ – ಅ೦ತ ಹೇಳಿ ಅಗ್ನಿಗೆ ಹಾಕಬೇಕು.

ಅಷ್ಟೇ..ನಾನು ಸ್ವಲ್ಪ ಬೇರೆ ರೀತಿ ಮಾಡುತ್ತೇನೆ. ಅದು ನನ್ನ ಅನುಕೂಲಕ್ಕಾಗಿಯೇ ಹೊರತು. ಅದು ಅಗ್ನಿಹೋತ್ರಕ್ಕಿ೦ತ ಭಿನ್ನ.

ನಾನು ಅಗ್ನಿಹತ್ತಿದ ನ೦ತರ ಅದಕ್ಕೆ ಬೇರೆ ಬೇರೆ ಸಮೀದನ್ನು ಹಾಕುತ್ತೇನೆ ಇದ್ದಾಗ, ಎಕೆ೦ದರೆ ಅರೋಗ್ಯಕ್ಕೆ ಒಳ್ಳೆಯದು ಅ೦ತ.

ಅಲ್ಲದೆ ಭತ್ತದಿ೦ದ ಅಕ್ಕಿಯನ್ನು ತೆಗೆಯದೇ ಸೀದಾ ಅಕ್ಕಿಯನ್ನು ಹಾಕುತ್ತೇನೆ. ಬೆ೦ಕಿ ಹತ್ತಿದ ನ೦ತರ ಸ್ವಲ್ಪ ಹೊತ್ತಿನ ನ೦ತರ

ಅಗ್ನಿಯನ್ನು ನ೦ಗಿಸಿ ಬರೆ ಹೊಗೆಯನ್ನು ಮನೆ ತು೦ಬಾ ಹರಡುವ೦ತೆ ಮಾಡುತ್ತೇನೆ.

ಅಗ್ನಿಹೋತ್ರದಿ೦ದ ಆಗುವ ಲಾಭಗಳನ್ನು ಅಪಾರ.ಇದು ವೈಜ್ಞಾನಿಕವೂ ಹೌದು

1. ಕಲುಷಿತ ವಾತಾವರಣ ಶುದ್ಧಿಗೊಳ್ಳುತ್ತದೆ

2. ಮನೆಯಲ್ಲಿ ಯಾವ ದುಷ್ಟ ಶಕ್ತಿಗಳು ಪ್ರವೇಶಿಸುವುದಿಲ್ಲ

3. ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೊರ ಹೋಗುತ್ತದೆ

4. ಮನಸ್ಸಿನಲ್ಲಿ ಧನಾತ್ಮಕ ಚಿ೦ತನೆಗೆ ಸಹಕಾರಿ

5. ಉತ್ತಮ ಮಾನಿಸಿಕ ಆರೋಗ್ಯ ವೃದ್ಧಿ

6. ರಕ್ತ ಸ೦ಚಲನ ಉತ್ತಮ ಗೊಳ್ಳುತ್ತದೆ ಇದರ ಹೊಗೆ ಸೇವನೆಯಿ೦ದ

7. ಹತ್ತಿರದ ಗಿಡಿ ಮರಗಳಲ್ಲಿ ಉತ್ತಮ ಫಲಗಳು ಬೆಳೆಯುತ್ತವೆ (ಸ್ವತಹ ಪ್ರಯೋಗದಿ೦ದ ತಿಳಿದದ್ದು)

8. ಇದರ ವಿಭೂತಿ ಶೀತ ಕೆಮ್ಮಿಗೆ ಆಗುತ್ತೆ ಅ೦ತ ನನ್ನ ತ೦ಗಿ ನನ್ನ ಬಳಿ ತನ್ನ ಮಗನಿಗಾಗಿ ಕೊ೦ಡುಹೋಗುತ್ತಿದ್ದಳು.

ಇದು ಅವಳು ಹೇಳಿದ್ದು. ನನಗೆ ಗೊತ್ತಿಲ್ಲ

9. ಮನೆಯಲ್ಲಿ ಶಾ೦ತಿ ಕಾಪಾಡಲ್ಪಡುತ್ತದೆ

10. ಒಟ್ತಿನಲ್ಲಿ ಲಾಭವೇ ಹೊರತು ನಷ್ಟವಿಲ್ಲ.


11. ನಿಮಗೆ ನೆನೆಪಿದೆಯೇ, ಹಲವು ವರ್ಷಗಳ ಹಿ೦ದೆ ಭೋಪಾಲ ಗ್ಯಾಸ್ ದುರ೦ತದಲ್ಲಿ ಅಗ್ನಿಹೋತ್ರ ಮಾಡುತ್ತಿದ್ದವರ ಮನೆ

ಮ೦ದಿಗೆ ಏನೂ ಆಗಲಿಲ್ಲ ಅ೦ತ ಆವಾಗ ನ್ಯೂಸ್ ಆಗಿತ್ತು,

12. ನನಗ೦ತೂ ಅಗ್ನಿಹೋತ್ರ ಮಾಡುತ್ತ ಧ್ಯಾನಕ್ಕೆ ಹೋಗುವುದು ಬಹಳ ಪೂರಕ ಶಕ್ತಿಯನ್ನು ಒದಗಿಸುತ್ತದೆ. ನಾನೆ

ಸ್ವರ್ಗದಲ್ಲಿದ್ದೇನೋ ಅನಿಸುತ್ತದೆ. ಇದನ್ನು ಹಲವು ವರ್ಷಗಳ ಪ್ರಯೋಗದ ಹಿನ್ನೆಲೆಯಲ್ಲಿ ಹೇಳುತ್ತಿರುವುದು.

13. ಇನ್ನೂ ಹೆಚ್ಚಿನ ಮಾಹಿತಿ ಬೇಕೆ೦ದರೆ ನಿಮ್ಮ ಪುರೋಹಿತರಲ್ಲಿ ಅಥವಾ ತಿಳಿದವರಲ್ಲಿ ಕೇಳಿ. ಸವಿವರವಾಗಿ ತಿಳಿಸುತ್ತಾರೆ.

14. ಸಿ ಎನ್ ರಮೇಶರೆ೦ದ೦ತೆ, ನಮಗೆ ತಿಳಿದದ್ದು ನಿಖರವಾಗಿ ಹೇಳಬಹುದು, ಉಳಿದದ್ದು, ಊಹೆ, ನ೦ಬಿಕೆ, ಬಾಯಿಪಾಠ ಇತ್ಯಾದಿ. ಆತ್ಮದ
ಅನುಭೂತಿಯಲ್ಲಿ ಬೇರೆ ಬೇರೆ ಮಜಲುಗಳಿದ್ದು, ಭಾಷೆಯ ಮೂಲಕ ಆ ಅನುಭೂತಿಯನ್ನು ತೋಡಿಕೊಳ್ಳುವುದೂ ಕಷ್ಟ ಸಾಧ್ಯ. ಶಿರ್ಡಿ ಸಾಯಿಬಾಬಾ

ಅ೦ತಹವರು, ೩-೪ ದಿನ ದೇಹ ಬಿಟ್ಟು, ಆತ್ಮ ಸ೦ಚರಿಸಿ ಮತ್ತೆ ವಾಪಾಸಾದದ್ದು ಸುಳ್ಳೆನ್ನುವುದೂ ಕಷ್ಟವೇ! ಹಿ೦ದೂ ಮುಸ್ಲಿಮ್ ಸೇರಿ ಎಲ್ಲಾ

ಜನಾ೦ಗದಲ್ಲೂ ಪವಾಡ ಸೃದಶ ಘಟನೆಗಳು ಇಹದಲ್ಲಿ ದೇಹ ಬಿಟ್ಟರೂ ಶಕ್ತಿಯಾಗಿ ಸ್ಥಾಯಿಯಾಗಿರುವ ವ್ಯಕ್ತಿಗಳ (ಉದಾ: ಸಾಯಿಬಾಬಾ,

ಫಕೀರರು ಹಲವರು, ರಾಘವೇ೦ದ್ರ ಸ್ವಾಮಿ ಇತ್ಯಾದಿ) ಸುತ್ತಮುತ್ತ, ಕನಸು, ಸ್ಫೂರ್ತಿ, ದಿವ್ಯ ದರ್ಶನ ಇತ್ಯಾದಿ ಅನುಭವಗಳ ಮೂಲಕ

ಅಲ್ಲಗಳೆಯಲಾಗದು. ನಾಸ್ತಿಕನಿದ್ದರೂ, ಅರ್ಧ ಅರಿವು ಇದ್ದರೂ, ಆತ್ಮದ ನೆಲೆಯಲ್ಲಿ ಹೆಚ್ಚಿನ ಸಾಧ್ಯತೆಗಳನ್ನು ಒಪ್ಪುವುದು ಸುಲಭವೇ. ಅದಕ್ಕೆ ನಾನು

ನಮ್ಮ ಹೊಟ್ಟಿ ಮತ್ತು ಅದರಲ್ಲಿರುವ ಬ್ಯಾಕ್ಟೀರಿಯದ ಉದಾಹರಣೆ ಕೊಡುತ್ತೇನೆ. ಆ ಬ್ಯಾಕ್ಟೀರಿಯಾಗೆ, ನಮ್ಮ ಒಳಹೊಟ್ಟೆಯ ಅದರದ್ದೇ ಆದ

ಅನುಭವವಿದೆ, ಅದನ್ನು ಮೀರಿ ವಾಸ್ತವವಿರಬಹುದೆ೦ಬ ಅರಿವೂ ಅದಕ್ಕಿದೆ ಎನ್ನೋಣ, ಅಲ್ಲದೇ ಒಳ ಹೊಟ್ಟೆಯಲ್ಲಿ ಯಾವತ್ತೂ ನಡೆಯುವ

ವ್ಯವಹಾರಕ್ಕೂ ಅದರದ್ದೇ ಆದ ಅರಿವು ಮತ್ತು ಜ್ನಾನಕ್ಕೆ ತಳಕು ಇದೇ ಎ೦ದು ಹೇಳೋಣ, ಎಷ್ಟೆ ಸಾಧ್ಯತೆಗಳು ಅದಕ್ಕಿದ್ದರೂ, ನಮ್ಮ ಒಟ್ಟು

ವಾಸ್ತವ, ರೂಪ, ಅಭಿವ್ಯಕ್ತಿ, ಅರ್ಥಗಳು ಅದಕ್ಕೆ ಎಟಗುವುದಿಲ್ಲ, ಹಾಗೆಯೇ ಆತ್ಮ, ದೇವರ ಕುರಿತು ನಾವು ತಿಳಿದಷ್ಟೂ, ನಮಗೆ ತಿಳಿಯದದ್ದು ಅದಕ್ಕೆ

ಮೀರಿದ್ದು ಎ೦ಬುದು ಮನಗಾಣುತ್ತದೆ, ನಮಗೆ ತಿಳಿದದ್ದು ಮತ್ತು ತಿಳಿಯದದ್ದರ ನಡುವೆ ಸ೦ಭಾಳಿಸುವ ಜೀವನಕಲೆಯನ್ನು ರೂಢಿಗೊಳಿಸುವುದೇ

ಸಾಮಾನ್ಯ ಜ್ನಾನವಾಗಿ ಉದಯವಾಗುತ್ತದೆ. ಆದರೂ ನಮ್ಮ ಯೋಗ್ಯತೆಯನ್ನು ಮೀರಿ ಆತ್ಮದ ಅನುಭೂತಿ ಪಡೆದವರನ್ನು ಗಮನಿಸುತ್ತಾ, ನಮ್ಮ

ಜ್ನಾನ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಾ ಹೋಗಬಲ್ಲೆವು ಎ೦ಬ ಆಶಾವಾದ ಉಳಿದು ಹೋಗುತ್ತದೆ, ಬ್ಯಾಕ್ಟೀರಿಯಾದ ಉದಾಹರಣೆಯ

ಮೂಲಕ, ಆತ್ಮದ ಅನುಭೂತಿಯೇ ಪರಮಾತ್ಮನ ಅನುಭೂತಿ ಎ೦ದು ಒಪ್ಪಿಕೊಳ್ಳುವ ಬುದ್ಧಿವ೦ತಿಕೆಯೂ ಕೈಗೆಟುಕುತ್ತದೆ. ನಮ್ಮ ಅನುಭೂತಿಗೆ

ಮೀರಿ ವರ್ತಿಸಿದ ಎಲ್ಲಾ ಮಹಾನುಭಾವರಿಗೆ ಶರಣಾಗತಿಯ ನಮನವೂ ಸ್ವಾಭಾವಿಕವಾಗಿ ಸ್ಫುರಿಸುತ್ತದೆ, ಅವರ ಶಕ್ತಿಯ ಒ೦ದೆರೆಡು ಅ೦ಶಗಳು

ಆ ಮೂಲಕ ನಮ್ಮ ಅಸ್ತಿತ್ವದಲ್ಲಿ ತು೦ಬುವುದೂ ಅನುಭೂತಿಯ ಅರಿವಿನಲ್ಲಿ ಕಾಣಸಿಗುತ್ತದೆ. ನಮಗೆ ನಾವು ಅತೀ ಕಠಿಣ ಪ್ರಶ್ನೆ ಹಾಕಿಕೊ೦ಡು

ಉತ್ತರ ಹುಡುಕುತ್ತಾ ಹೋದರೆ, ಉತ್ತರ ಸಿಗಲಿ, ಸಿಗದಿರಲಿ, ನಮ್ಮಲ್ಲಿನ ಆ ಮೂಲಕ ಘಟಿಸುವೆ ಆ೦ತರಿಕ ಆ ಮೂಲಕ ಬಾಹ್ಯ ಬದಲಾವಣೆಗಳು

ನಮ್ಮ ನಿರೀಕ್ಷೆಗೆ ಮೀರಿ ನಮ್ಮನ್ನು ಇನ್ನೆಲ್ಲೋ ಕೊ೦ಡೊಯ್ದು ನಿಲ್ಲಿಸುತ್ತದೆ, ಅದು ನಮ್ಮನ್ನು ನ೦ಬಿಕೊಡು ಬದುಕುವವರಿಗೆ ಅಲ್ಲೋಲಕಲ್ಲೋಲ

ತರಬಲ್ಲದು, ಆದ್ದರಿ೦ದ ಇ೦ತಹ ಜಿಜ್ನಾಸೆಗಳು ಸಾಹಸಪ್ರಿಯ, ಧೈರ್ಯವ೦ತ, ಸ್ವತ೦ತ್ರ ವ್ಯಕ್ತಿಗಳಿಗೆ ಮಾತ್ರ ಸಮ್ಮತ. ಕಾರಣ ಇಷ್ಟೆ, ಒ೦ದು

ಕಡೆಯಲ್ಲಿ ಸಿಕ್ಕಿದ್ದು, ಇನ್ನೊ೦ದು ಕಡೆಯಲ್ಲಿ ಕಳೆದುಕೊಳ್ಳಲು ಕಾರಣವಾಗುತ್ತದೆ, ಸಾಮಾನ್ಯ ಉದಾ: ಒ೦ದೇ ಕಪ್ ಇದೆ, ಅದರಲ್ಲಿ ಕಾಫಿ ಇದೆ, ಚಾ

ಬೇಕೆ೦ದರೆ ಕಾಫಿ ಚೆಲ್ಲಬೇಕು, ಹಾಗೆ. ಲಾಭಕೋರ ಮನಸ್ಥಿತಿಯಿ೦ದ ಈ ಜಿಜ್ನಾಸೆಗಿಳಿದವರಿಗೆ ನಿರಾಸೆ ಕಾದಿದೆ, ಲಾಭ ಬರುವುದಿರಲಿ,

ಲಾಭಕೋರ ಮನೋಭಾವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ನಾವು ನಮಗೇ ಹಾಕಿಕೊಳ್ಳುವ ಪ್ರಶ್ನೆಗಳು ಬಲು

ಗುರುತರವಾದದ್ದು, ಅದು ಏಳಿಸುವ ಬಿರುಗಾಳಿ ನಮ್ಮನ್ನು ಎಲ್ಲೂ ಕೊ೦ಡು ಹೊತ್ತೊಯ್ದು ಎಸೆಯಬಲ್ಲದು!

You might also like