You are on page 1of 1

ಒತ್ತಡ ನಿರ್ವಹಣೆ

ತನ್ನ ಕೆಲಸ ಮತ್ತು ಆಕಾ೦ಕ್ಷೆಗಳು ಕೈ ಗೂಡದಾಗ , ನಷ್ಠಗಳು ಸ೦ಭವಿಸಿದಾಗ, ಸಾವು ನೋವುಗಳನ್ನು ಎದುರಿಸುವಾಗ ಇನ್ನೂ
ಹತ್ತೂ ಹಲವು ಸ೦ದರ್ಭಗಳಲ್ಲಿ ಮನುಷ್ಯ ಒತ್ತಡಕ್ಕೆ ಒಳಗಾಗುತ್ತಾನೆ. ಈ ಒತ್ತಡವು ತಿನ್ನುವ ಅಭ್ಯಾಸದ ಮೇಲೆ ಪರಿಣಾಮ

ಬೀರುತ್ತದೆ. ಹಾಗಾಗಿ ಪ್ರಚೋದಕ ವಸ್ತುಗಳನ್ನು ಸೇವಿಸುವತ್ತ ಆಕರ್ಷಿತರಾಗುತ್ತಾರೆ. ಬಿಡಿ, ಸಿಗರೇಟು, ಕುಡಿತ, ಜೂಜಾಟ

ಗ೦ಡಸರಿಗಾದರೆ ಹೆ೦ಗಸರು ಹೆಚ್ಚು ಕಾಪಿ ಕುಡಿಯುವುದು, ಬೇಡದಿದ್ದರೂ ತಿನ್ನುವುದು, ಹಸಿವಾದರೂ ತಿನ್ನದೇ ಇರುವುದು ಈ

ರೀತಿಯ ಅಭ್ಯಾಸಗಳಿಗೆ ಒಳಗಾಗುತ್ತಾರೆ. ಮಾನಸಿಕವಾಗಿ ಇವರು ಕೂಡಲೇ ಆಕ್ರಮಣಕಾರೀ ಸ್ವಭಾವ ತೋರುತ್ತಾರೆ ಅಥವಾ

ಗುಲಾಮರ೦ತೆ ಇತರರ ಮಾತನ್ನು ಕೇಳುತ್ತಾರೆ. ಒತ್ತಡದಿ೦ದ ಹೊರಬರಲು ಈ ಕ್ರಮವನ್ನು ಕೈಗೊ೦ಡಲ್ಲಿ ಸಹಾಯಕವಾಗುತ್ತದೆ.

1. ತಿನ್ನುವ ಅಭ್ಯಾಸವನ್ನು ನಿಯ೦ತ್ರಣದಲ್ಲಿಡುವುದು (ದಿನಕ್ಕೆ ಮೂರು ಬಾರಿ ತಿನ್ನುವುದು, ನಿಯಮಿತ ತಿನ್ನುವುದು


(balanced diet).
2. ವಾರಕ್ಕೆ ನಾಲ್ಕು ದಿನವಾದರೂ ವ್ಯಾಯಾಮ ಮಾಡುವುದು.
3. ಆಪ್ತ ಸಮಾಲೋಚಕರನ್ನು ಸ೦ಪರ್ಕಿಸಿ ವಿಶ್ವಾಸಪೂರ್ಣ ವರ್ತನೆಯನ್ನು ಅಭ್ಯಸಿಸುವುದು
4. ಕಷ್ಠಗಳನ್ನು ಗೆಳೆಯರೊ೦ದಿಗೆ ಅಥವಾ ಮನೆಮ೦ದಿ ಅಥವಾ ಆಪ್ತರಾದವರಲ್ಲಿ ಹ೦ಚಿಕೊಳ್ಳುವುದು.
5. ಒತ್ತಡ ನಿಯ೦ತ್ರಣವನ್ನು ಪ್ರಾರ೦ಭಿಕ ಹ೦ತದಲ್ಲೇ ಕೈಗೊಳ್ಳುವುದು.
6. ಉತ್ತಮ ಸ೦ಗೀತ ಆಲಿಸುವುದು.
7. ಪ್ರಕೃತಿಯೊ೦ದಿಗೆ ಕಾಲ ಕಳೆಯುವುದು.
8. ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು.
9. ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು
10. ಉತ್ತಮ ಜನರ ಸ೦ಗ ಮಾಡುವುದು.
11. ಉತ್ತಮ ಗುಣಮಟ್ಟದಲ್ಲಿ ಸಮಯ ಕಳೆಯುವುದು.
12. ಪೌಷ್ಠಿಕ ಆಹಾರ ಸೇವನೆ.
13. ಸತ್ಸ೦ಗಗಳಲ್ಲಿ ಭಾಗವಹಿಸುವುದು.
14. ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವುದು. (ಒ೦ಟಿತನ ಕಳೆಯಲು).
15. ಹಲವಾರು ಒತ್ತಡ ನಿಯ೦ತ್ರಣಾ ತ೦ತ್ರಗಳಲ್ಲಿ ನಗು, ಅಳು, ಹಾಸ್ಯ, ಅನುಕ್ರಮಿಕ ವಿಶ್ರಾ೦ತಿ, ಧ್ಯಾನ, ಯೋಗ, ಜೈವಿಕ
ಹಿಮ್ಮಾಹಿತಿ, ಜ್ಞಾನಾತ್ಮಕ ಚಿಕಿತ್ಸೆ ಮತ್ತು ಸಾಮಾಜಿಕ ಬೆ೦ಬಲ ಇವುಗಳ ಮೂಲಕ ಒತ್ತಡವನ್ನು
ನಿವಾರಿಸಿಕೊಳ್ಳಬಹುದು.
16. ಮೇಲಿನ ಯಾವುದೇ ತ೦ತ್ರಗಳು ಉಪಯೋಗವಾಗದಿದ್ದಾಗ ಔಷಧದ ಸೇವನೆಗೆ ಮೊರೆ ಹೋಗಬಹುದು.

You might also like