You are on page 1of 1

ಪರಿಸರ ಸಂರಕ್ಷಣೆ ನಮ್ಮ ಹೊಣೆ.

ಡಾ. ಸಂದೀಪ ಜಯರಾಮ ನಾಯಕ


ಅಧ್ಯಕ್ಷರು, ಸವಿ ಫೌಂಡೇಶನ್‌, ಮೂಡುಬಿದ್ರೆ.(ದ.ಕ)

ಪ್ರತಿ ವರ್ಷ ಜೂನ್ ‌5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುವುದು. ಆ ದಿನ ಶಾಲಾ ಕಾಲೇಜುಗಳಲ್ಲಿ ವಿವಿಧ ಸ್ಪರ್ದೆ, ಗಿಡ
ನೆಡುವುದು, ಪರಿಸರ ಸಂಬಂಧಿ ಘೋಷಣೆ ಮುಂತಾದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಪ್ಲಾಸ್ಟಿಕ್‌
ಬಳಸದಿರುವುದು, ಪರಿಸರ ಸ್ನೇಹಿ ಜೀವನ, ಗಿಡಗಳ ಪಾಲನೆ ಮತ್ತು ಪೋಷಣೆ, ಮಿತ ವಾಹನ ಬಳಕೆ, ತ್ಯಾಜ್ಯದ ಸದ್ಬಳಕೆ, ವಿದ್ಯುತ್‌
ಮಿತವ್ಯಯದ ಕ್ರಮಗಳು ಈ ನಿಟ್ಟಿನಲ್ಲಿಅತ್ಯವಶ್ಯವಾಗಿದೆ

ಪರಿಸರ ಸಂರಕ್ಷಣೆಯ ಮುಖ್ಯ ಉದ್ದೇಶಗಳು:


 ಜೈವಿಕವಾಗಿ ನಶಿಸದ (Non Bio-degradable ) ವಸ್ತುಗಳ ಬದಲಿಗೆ ಜೈವಿಕವಾಗಿ ನಶಿಸುವ (Bio-degradable )
ವಸ್ತುಗಳನ್ನು ಬಳಸುವುದು.
 4R ತತ್ವಗಳನ್ನು ರೂಢಿಗತಗೊಳಿಸುವುದು. ನಿರಾಕರಿಸು (Refuse ), ಕಡಿತಗೊಳಿಸು (Reduce ) ಪುನರ್ಬಳಸು(Re-use ),
ಪುನರ್‌ರೂಪಿಸು (Re-cycle )

ಪರಿಸರ ಸಂರಕ್ಷಣೆಯ ಅಗತ್ಯತೆಗಳು:


 ಮುಂದಿನ ಪೀಳಿಗೆಗೆ ಉತ್ತಮ ಪರಿಸರ ದೊರಕಿಸಿಕೊಡಲು.
 ಸಂಪನ್ಮೂಲಗಳನ್ನು ಮುಂದಿನ ಜನಾಂಗಕ್ಕೆ ಕಾಯ್ದಿರಿಸಲು.
 ಜನರ ಸ್ವಸ್ತ ಆರೋಗ್ಯವನ್ನು ಕಾಪಾಡಿಕೊಳ್ಳಲು.
 ವನ್ಯ ಜೀವಿಗಳನ್ನು ಸಂರಕ್ಷಿಸಲು.
 ಜಾಗತಿಕ ತಾಪಮಾನವನ್ನು ನಿಯಂತ್ರಿಸಲು.
 ಓಝೋನ್‌ಪದರವನ್ನು ರಕ್ಷಿಸಲು.
 ಭೀಕರ ಕ್ಷಾಮವನ್ನು ತಡೆಗಟ್ಟಲು.
 ಭೂ ಸವಕಳಿಯನ್ನು ನಿಯಂತ್ರಿಸಿ ಫಲವತ್ತತೆಯನ್ನು ಕಾಪಾಡಲು.
 ಪರಿಸರದಲ್ಲಿ ಜೈವಿಕ ಹಾಗೂ ಅಜೈವಿಕ ಸಮತೋಲನವನ್ನು ಕಾಪಾಡಿಕೊಳ್ಳಲು.

20 ನೇ ಶತಮಾನದ ಆರಂಭದಲ್ಲಿ160 ಕೋಟಿ ಇದ್ದ ಪ್ರಪಂಚದ ಜನಸಂಖ್ಯೆ ಈಗ 800 ಕೋಟಿಗೆ ತಲುಪಿದೆ. ಆದರೆ ನೈಸರ್ಗಿಕ
ಸಂಪನ್ಮೂಲಗಳ ಲಭ್ಯತೆಯಲ್ಲಿ ಯಾವುದೇ ಏರಿಕೆ ಇಲ್ಲ. ಇದು ಜೀವಿಗಳ ಅವನತಿಯಲ್ಲಿ ಪರ್ಯಾವಸನ ಗೊಳ್ಳುತ್ತದೆ. . “ ಪ್ಲಾಸ್ಟಿಕ್‌
ಬಳಸದಿರಿ” ( BEAT PLASTIC POLLUTION ) ಎಂಬುದು 2023 ರ ವಿಶ್ವ ಪರಿಸರ ದಿನದ ಧ್ಯೇಯವಾಕ್ಯವಾಗಿರುತ್ತದೆ. ಈ ವರ್ಷ
ಎಪ್ರಿಲ್‌, ಮೇ ತಿಂಗಳಲ್ಲಿ ತಾಪಮಾನ ಅತೀ ಹೆಚ್ಚು ದಾಖಲಾಗಿದ್ದು ಸಾಮಾನ್ಯರು ಕೂಡ ಎರ್‌ಕಂಡೀಷನರ್‌, ಕೂಲರ್, ರೆಫ್ರಿಜರೇಟರ್‌
ಅಳವಡಿಸಿರುವುದು ವಾತಾವರಣದ ಮಾಲಿನ್ಯ ಹೆಚ್ಚಲು ಪೂರಕವಾಗಿದೆ. ಸಮುದ್ರ ಮಟ್ಟ ಏರುತ್ತಿದ್ದು ಎಲ್ನಿನೋ ( El Nino)
ಪರಿಣಾಮದಿಂದ ಮಳೆಯ ಪ್ರಮಾಣ ಹಾಗೂ ಪ್ರಾರಂಭ ವ್ಯತ್ಯಾಸವಾಗುತ್ತಿದ್ದು ಸಾಮಾನ್ಯ ಜನರು/ರೈತರು ತೊಂದರೆಯನ್ನು
ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಯವಸಮುದಾಯ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು
ಸಂರಕ್ಷಿಸಿ ತನ್ಮೂಲಕ ಪರಿಸರ ಸಾಮರಸ್ಯತೆಯನ್ನು ಕಾಪಾಡುವಂತಾಗಲಿ.

You might also like