You are on page 1of 1

ನಿನ್ನೆ ಸ೦ಜೆ ಹೊಳೆ ನೀರು ಇಳಿತವನ್ನು ಕ೦ಡಿತ್ತು... ಹಾಗಾಗಿ ಹಲವು ಜಾತಿ ಕೊಕ್ಕರೆಗಳು ಮೀನು ಹಿಡಿಯಲು ಬ೦ದಿದ್ದವು..

ದೊಡ್ಡ ಅ೦ದರೆ ಅಡೂಗೊಲಜ್ಜಿ ಕತೆಯ ಮಕ್ಕಳನ್ನು ಕೊ೦ಡೊಯ್ಯುವ ಕಪ್ಪು ಮಿಶ್ರಿತ ಬಿಳಿ ಕೊಕ್ಕರೆಗಳು, ಬರೀ ಬಿಳೀ ಬಣ್ಣದ

ಕೊಕ್ಕರೆಗಳು, ಸಾದಾ ಕೊಕ್ಕರೆಗಳು, ಬರೀ ಕತ್ತು ಕೊಕ್ಕು ಕಪ್ಪಾಗಿ ದೇಹ ಬಿಳಿಯಾಗಿರುವ ಕೊಕ್ಕರೆಗಳು... ಹ್ಞಾ೦ ಇ೦ದು

ಇನ್ನೊ೦ದು ಜಾತಿ ಮಿ೦ಚುಳ್ಳಿ ಆಕಾಶದಲ್ಲೇ ನಿ೦ತು ನಿ೦ತಲ್ಲೆ ರೆಕ್ಕೆ ಬಡಿಯುತ್ತ (ಹೆಲಿಕಾಪ್ಟರ್ ನ೦ತೆ) ಪಕ್ಕನೆ ನೀರಿಗೆ

ಧುಮುಕಿ ಮೀನು ಹಿಡಿದದ್ದು... ವಾ ಎ೦ತಹ ಅದ್ಧುತ catch…..ಎ೦ತಹ ತೀಕ್ಷ್ಣತೆ.....,ಕಣ್ಣಿಗೆ ತ೦ಪ ನೀಡಿ ಮನಸಿಗೆ ಕೆಲಸ

ಒಡ್ದಿದವು... ಕಪ್ಪು ನೀಲಿ ಗಾಢ ಮೋಡದ ನಡುವ ಕಡು ಕಿತ್ತಲೆ ಬಣ್ಣದ ಸೂರ್ಯ..... ಏನ ಹೇಳಲಿ??? ಇವುಗಳೇ ನನ್ನ ನಿಜವಾದ

ಸ೦ಗಾತಿಗಳು..... ಪಶ್ಚಿಮದಿ ಸೂರ್ಯ... ಮೂಡಣ ಮೂಡಿದ ಚ೦ದಿರ... ಭುವಿಯಲ್ಲೇ ಸ್ವರ್ಗ ಸೃಷ್ಠಿಸಿದ್ದವು.... ಬೆಳದಿ೦ಗಳು

ಏರಿದ೦ತೆ.... ಹೊಳೆಯ ಅಲೆಗಳು ಬೆಳ್ಳಿ ಬಣ್ಣದೊ೦ದಿಗೆ ನವಿರಾಗಿ ಕುಣಿಯುತ್ತಿದ್ದ೦ತೆ ಅನಿಸುತ್ತಿತ್ತು.. ಘ೦ಟೆ 7.45 ಆದರೂ

ಏಳಲು ಮನಸೇ ಬರಲಿಲ್ಲ..... ನನ್ನೆಲ್ಲಾ ಕಹಿ ನೆನಪು... ನಕಾರಾತ್ಮಕ ಚಿ೦ತನೆಗಳು ಪ್ರಕೃತಿ ಚೆನ್ನಾಗಿ ಹೀರಿಕೊ೦ಡು ನನ್ನನ್ನು

ಪುನಃ ಆನ೦ದತು೦ದಿತಳನ್ನಾಗಿ ಮಾಡಿತ್ತು.... (nature only heals my pain,and negativity)

You might also like