You are on page 1of 2

ಉಪಯು ಕ್ತ ಮಾಹಿತಿ

about an hour ago


ನೆಲ್ಲಿಕಾಯಿ:

ಅತಿ ಸಾಧಾರಣ ನೆಲ್ಲಿಕಾಯಿ ಪುಡಿಯಲ್ಲಿ ಹಲವಾರು ಕಾಯಿಲೆಗಳನ್ನು ವಾಸಿಮಾಡುವ ಔಷದೀಯ ಗುಣಗಳಿವೆ. ಜೊತೆಗೆ ಈ ನೆಲಿಕಾಯಿ
ಸೌಂದರ್ಯವರ್ಧಕ ಕೂಡ. ಹಾಗಾಗಿ ಮಹಿಳೆಯರು ಪ್ರತಿನಿತ್ಯ ಇದನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸುವುದು ಉತ್ತಮ. 

ಮಾಮೂಲಿ ತೊಂದರೆಗಳಾದ ಆಸಿಡಿಟಿ, ಕಣ್ಣಿನ ಸಮಸ್ಯೆ, ಅರ್ಜೀರ್ಣ, ನಿದ್ರಾಹೀನತೆ ಮುಂತಾದವುಗಳನ್ನು ಇದು ಕಡಿಮೆ ಮಾಡುತ್ತದೆ.
ಜೊತೆಗೆ ಕೂದಲಿಗೆ, ಚರ್ಮಕ್ಕೆ ಹೊಳಪನ್ನು ಕೂಡ ಕೊಡುತ್ತದೆ. ಇಲ್ಲೊಂದಿಷ್ಟು ನೆಲ್ಲಿ ಗುಣಗಳಿವೆ. ನಿಮ್ಮ ಸಮಸ್ಯೆಗಳೀಲ್ಲಾ ಇದರಿಂದ
ಗುಣವಾದಾವು ನೋಡಿ. 

1. ನೆಲ್ಲಿಕಾಯಿಯನ್ನು ಜಜ್ಜಿ ಅದರ ರಸವನ್ನು ತಲೆಗೆ ಹಾಕುವುದರಿಂದ ಕೂದಲು ಹೊಳಪಾಗುತ್ತದೆ. ಅಲ್ಲದೇ ಚಿಕ್ಕವಯಸ್ಸಿನಿಂದಲೇ
ನೆಲ್ಲಿಕಾಯಿ ಸ್ನಾನ ಮಾಡುತ್ತ ಬಂದರೆ ಕೂದಲು ಬೇಗ ಬೆಳ್ಳಗಾಗುವುದನ್ನು ತಪ್ಪಿಸಬಹುದು. 

2. ಪ್ರತಿದಿನ ರಾತ್ರಿ ಮಲಗುವ ಮುನ್ನ ಆಮ್ಲ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿದರೆ ನಿದ್ರೆ ಚೆನ್ನಾಗಿ ಬರುತ್ತದೆ. ಜೊತೆಗೆ ಕೂದಲು
ಕೂಡ ಸಿಲ್ಕೀಆಗುತ್ತದೆ. 

3. ದಿನವೂ ಮುಂಜಾನೆ ಅರ್ಧ ಚಮಚ ಆಮ್ಲಪುಡಿ ಮತ್ತು ಅರ್ಧ ಚಮಚ ಜೇನು ಕಲೆಸಿ ಸೇವಿಸಿದರೆ ರಕ್ತಶುದ್ಧಿಯಾಗಿ ರಕ್ತದಲ್ಲಿನ ದೋಶ
ಹೋಗುತ್ತದೆ. 

4. 100 ಗ್ರಾಂ ಕೊಬ್ಬರಿ ಎಣ್ಣೆಗೆ 5 ಅಥವಾ 6 ಚಮಚ ಒಣಗಿದ ನೆಲ್ಲಿಕಾಯಿ ಚೂರು ಸೇರಿಸಿ ಚೆನ್ನಾಗಿ ಕುದಿಸಿ ಸೋಸಿ ತಲೆಗೆ ದಿನವೂ
ಹಚ್ಚಿದರೆ ಬಾಲನೆರೆ ತಡೆಯಬಹುದು. 

5. ಊಟದ ನಂತರ 1 ಚಮಚ ಆಮ್ಲಪುಡಿ ಮತ್ತು ಜೇನು ತುಪ್ಪ ಸೇರಿಸಿ ಅಸಿಡಿಟಿ ಕಡಿಮೆಯಾಗುತ್ತದೆ. 

6. ಒಣ ಚರ್ಮದವರು ಟೀ ಕುದಿಸುವಾಗ ಅರ್ಧ ಚಮಚ ಆಮ್ಲಪುಡಿ ಸೇರಿಸಿ ಕುದಿಸಿ ದಿನಕ್ಕೆರೆಡು ಬಾರಿ ಟೀ ಸೇವಿಸಿದರೆ ಒಣ ಚರ್ಮ
ಹೋಗಿ ಚರ್ಮ ಕಾಂತಿಯುತವಾಗುತ್ತದೆ. 

7. ರಕ್ತಹೀನತೆ ಇದ್ದವರು ಕ್ರಮವಾಗಿ ಆಮ್ಲಪುಡಿ ಅಥವಾ ಆಮ್ಲಜ್ಯೂಸ್ ಸೇವನೆಯಿಂದ ಹಿಮೋಗ್ಲೋಬಿನ್ ವೃದ್ಧಿಯಾಗುತ್ತದೆ. 

8. ಆಮ್ಲಪೇಸ್ಟ್ ಅನ್ನು ದಿನವೂ ಬೆಳಿಗ್ಗೆ ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಮುಖ ತೊಳೆದರೆ ಮೊಡವೆ ಮತ್ತು ಅದರ ಕಲೆಗಳು
ಹೋಗುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆಮ್ಲಪುಡಿ ಅತ್ಯುತ್ತಮ. 

9. 1 ಕಪ್ ಹಾಲಿನಲ್ಲಿ ಅರ್ಧ ಚಮಚ ನೆಲ್ಲಿಪುಡಿ ಮತ್ತು ಕಾಲು ಚಮಚ ತುಪ್ಪ ಕಲಿಸಿ ಬಿಸಿಮಾಡಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

You might also like