You are on page 1of 1

ಇ೦ದು ಬೆಳಿಗ್ಗೆ ಪೋಲೀಸು ಇಲಾಖೆಯಿ೦ದ ಒ೦ದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಮಹಿಳಾ ಲೈ೦ಗಿಕ ದೌರ್ಜನ್ಯ ಮತ್ತು

ಮಕ್ಕಳ ಅಪರಾಧಗಳನ್ನು ಕಡಿಮೆ ಮಾಡುವ ಮತ್ತು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಜತೆಸೇರಿ ಏನು ಮಾಡಬಹುದು ಅನ್ನುವ

ಕುರಿತು. ಸ್ವ ಸಹಾಯ ಸ೦ಘ, ಶಾಲಾ ಪ್ರಾ೦ಶುಪಾಲರು, ವಕೀಲರು, ತಾಲೂಕು ಪ೦ಚಾಯತ್ ಅಧ್ಯಕ್ಷರು ಮತ್ತು ಎನ್.ಜಿ.ಓ ಗಳು

ಈ ನಿಟ್ಟಿನಲ್ಲಿ ಏನೇನು ಮಾಡಬಹುದು ಎನ್ನುವ ಕುರಿತು ಚರ್ಚೆ ನಡೆಯಿತು. ಮಕ್ಕಳ ಅಪರಾದದ ಹಿನ್ನೆಲೆ, ಮಕ್ಕಳನ್ನು

ಅರಿಯುವುದು ಹೇಗೆ, ಮಹಿಳಾ ಲೈ೦ಗಿಕ ದೌರ್ಜನ್ಯಕ್ಕೆ ಮೂಲಭೂತ ಕಾರಣಗಳೇನು, ಮಹಿಳೆಯರು ಸ್ವ ಸುರಕ್ಷಾ ಕ್ರಮವನ್ನು

ಯಾವ ರೀತಿಯಲ್ಲಿ ಉಪಯೋಗಿಸಬಹುದು ಅನ್ನುವ ಕುರಿತು ನಾನು ಸ೦ಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತಾಡಿದೆ.

ಪೋಲೀಸು ಇಲಾಖೆ ಈ ನಿಟ್ಟಿನಲ್ಲಿ ಗಮನ ಹರಿಸಿದ್ದು ನನಗೆ ಖುಷಿ ಕೊಟ್ಟ ವಿಚಾರ ಮತ್ತು ಶ್ಲಾಘನೀಯ.

You might also like