You are on page 1of 3

ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮರಣೋತ್ತರ

ಕ್ರಿಯಾಕರ್ಮಗಳು ಮತ್ತು ಶ್ರಾದ್ಧಾದಿ ವಿಧಿಗಳ ಮಹತ್ವ


೧. ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮೃತದೇಹದ ದಹನ ಮಾಡಿ ಅದರ ಅಸ್ಥಿಗಳನ್ನೂ
ಪವಿತ್ರ ಜಲದಲ್ಲಿ ವಿಸರ್ಜನೆ ಮಾಡುವ ಮೂಲಕ ಶರೀರದಲ್ಲಿನ
ಪಂಚಮಹಾಭೂತಾತ್ಮಕ ಭಾಗಗಳನ್ನು ಆ ಮಹಾಭೂತಗಳಿಗೆ ಹಿಂದಿರುಗಿಸುವುದು
‘ವ್ಯಕ್ತಿಯು ಮೃತಪಟ್ಟ ನಂತರ ಕೆಲವು ಗಂಟೆಗಳಲ್ಲಿ ಶರೀರದೊಳಗೆ ವಿಘಟನಾಕ್ರಿಯೆಯು
ಆರಂಭವಾಗುತ್ತದೆ. ಆದುದರಿಂದ ದುರ್ಗಂಧವು ಬರತೊಡಗುತ್ತದೆ. ಈ ದುರ್ಗಂಧವು ಹೊರ ಬೀಳುವ
ಮುನ್ನ ನಾವು ನಮ್ಮ ಪದ್ಧತಿಗನುಸಾರ ಆ ದೇಹವನ್ನು ಸುಡುತ್ತೇವೆ, ಅಂದರೆ ಆ ಸ್ಥೂಲದೇಹವನ್ನು
ಸಂಪೂರ್ಣ ನಾಶ ಮಾಡುತ್ತೇವೆ. ಯಾವ ಪಂಚಮಹಾಭೂತಗಳಿಂದ ಈ ದೇಹದ
ನಿರ್ಮಿತಿಯಾಗಿದೆಯೋ, ಆ ಪಂಚಮಹಾಭೂತಗಳಿಗೆ ನಾವು ಆ ದೇಹವನ್ನು ಹಿಂದಿರುಗಿಸುತ್ತೇವೆ.
ಏನನ್ನೂ ಉಳಿಸಿಕೊಳ್ಳುವುದಿಲ್ಲ. ಕೇವಲ ಅವನ ಅಸ್ಥಿ, ಅಂದರೆ ಬೂದಿಯು ಉಳಿಯುತ್ತದೆ. ಆ
ಅಸ್ಥಿಗಳಲ್ಲಿ ಸ್ಪಂದನಗಳಿರುತ್ತವೆಯೆಂದು, ಅವುಗಳನ್ನು ಪವಿತ್ರ ನದಿ, ನದಿಗಳ ಸಂಗಮ ಅಥವಾ
ಸಮುದ್ರಗಳಲ್ಲಿ ವಿಸರ್ಜಿಸಲಾಗುತ್ತದೆ. ‘ಅನಂತರವೇ ಆ ಮೃತ ವ್ಯಕ್ತಿಯ ಸಂಪೂರ್ಣ ಅಸ್ತಿತ್ವ
ಮುಗಿಯಿತು’, ಎಂದು ನಾವು ಹೇಳಬಹುದು.
೨. ‘ಅಸ್ಥಿಗಳಲ್ಲಿ ಸ್ಪಂದನಗಳಿರುತ್ತವೆಯೇ ?’ ಎಂಬ ಬಗ್ಗೆ ಓರ್ವ ವಿಮರ್ಶಕನು ಮಾಡಿದ
ಪ್ರಯೋಗ ಮತ್ತು ನಿಷ್ಕರ್ಷ
೨ ಅ. ಓರ್ವ ವಿಮರ್ಶಕನು ತನ್ನ ಮನೆಯಲ್ಲಿ ಓರ್ವ ವ್ಯಕ್ತಿಯು ಮೃತಪಟ್ಟಾಗ ಆತನ ಅಸ್ಥಿಗಳನ್ನು
ಮಡಿಕೆಯಲ್ಲಿ ಹಾಕಿ ಆ ಮಡಿಕೆಯನ್ನು ಮನೆಯ ಹಿಂದೆ ಒಂದು ಬಟ್ಟೆಯಲ್ಲಿ ಸುತ್ತಿಡುವುದು : ‘ಅಸ್ಥಿಗಳಲ್ಲಿ
ನಿಜವಾಗಿಯೂ ಸ್ಪಂದನಗಳಿರುತ್ತವೆಯೇ ?’ ಎಂದು ತಿಳಿಯಲು ಓರ್ವ ವಿಮರ್ಶಕನು ತನ್ನ ಮನೆಯಲ್ಲಿ
ಓರ್ವ ವ್ಯಕ್ತಿಯ ಮರಣದ ನಂತರ ಹಿಂದೂ ಧರ್ಮಶಾಸ್ತ್ರದ ಪದ್ಧತಿಗನುಸಾರ ಮೃತದೇಹವನ್ನು
ದಹನ ಮಾಡಿದ ಮರುದಿನ ಮತ್ತು ಮೃತ್ಯುವಾದ ಮೂರನೇಯ ದಿನ ಸ್ಮಶಾನದಿಂದ ಸ್ವಲ್ಪ
ಅಸ್ಥಿಗಳನ್ನು ಒಂದು ಮಡಿಕೆಯಲ್ಲಿ ಸಂಗ್ರಹಿಸಿ ಮನೆಗೆ ತಂದನು ಮತ್ತು ಮನೆಯ ಹಿಂದೆ ಮೇಲಿನ
ಬದಿಗೆ ಆ ಮಡಿಕೆಯನ್ನು ಬಟ್ಟೆಯಲ್ಲಿ ಸುತ್ತಿಟ್ಟನು.
೨ ಆ. ಮಡಿಕೆಯನ್ನು ಇಟ್ಟಾಗಿನಿಂದ ಅನೇಕ ಕಾಗೆಗಳು ಬಂದು ಮಡಿಕೆಯ ಸುತ್ತಲೂ ತಿರುಗುವುದು
ಮತ್ತು ಅವು ಮಡಿಕೆಗೆ ಕೊಕ್ಕಿನಿಂದ ಕುಕ್ಕತೊಡಗುವುದು : ಮರುದಿನದಿಂದ ಅನೇಕ ಕಾಗೆಗಳು ಬಂದು
ಆ ಮಡಕೆಯ ಸುತ್ತಲೂ ‘ಕಾವ್ ಕಾವ್’ ಎನ್ನುತ್ತಾ ತಿರುಗತೊಡಗಿದವು. ಕೆಲವು ಕಾಗೆಗಳು ಆ
ಮಡಿಕೆಗೆ ಕೊಕ್ಕೆಯಿಂದ ಕುಕ್ಕತೊಡಗಿದ್ದವು. ಕಾಗೆಗಳನ್ನು ಓಡಿಸಲು ಪ್ರಯತ್ನಿಸಿದರೂ ಅವುಗಳು
ಅಷ್ಟರ ಮಟ್ಟಿಗೆ ದೂರ ಹೋಗಿ ಪುನಃ ಬಂದು ಆ ಮಡಿಕೆಯ ಪಕ್ಕಕ್ಕೆ ಕುಳಿತುಕೊಳ್ಳುತ್ತಿದ್ದವು.
೨ ಇ. ನಾಶಿಕಗೆ ಹೋಗಿ ಅಸ್ಥಿ ವಿಸರ್ಜನೆಯ ನಂತರ ಆ ಖಾಲಿ ಮಡಿಕೆಯನ್ನು ಪುನಃ ಮನೆಯಲ್ಲಿ
ಹಾಗೆಯೇ ಬಟ್ಟೆಯಿಂದ ಸುತ್ತಿಡುವುದು, ಆದರೆ ಒಂದೇ ಒಂದು ಕಾಗೆಯು ಬರದಿರುವುದು : ನಾಲ್ಕು
ದಿನ ಆ ವಿಮರ್ಶಕನು ಅದನ್ನು ಹೇಗೋ ಸಹಿಸಿಕೊಂಡನು. ಕೊನೆಗೆ ಅವನು ಬೇಸತ್ತು ಅಸ್ಥಿಗಳ
ಕಲಶವನ್ನು ತೆಗೆದುಕೊಂಡು ನಾಶಿಕಕ್ಕೆ ಹೋದನು. ಅವನು ಅಲ್ಲಿನ ಬ್ರಾಹ್ಮಣರಿಂದ ಶಾಸ್ತ್ರೋಕ್ತವಾಗಿ
ವಿಧಿಯನ್ನು ಮಾಡಿಸಿ ರಾಮಕುಂಡದಲ್ಲಿ ಅಸ್ಥಿಗಳ ವಿಸರ್ಜನೆಯನ್ನು ಮಾಡಿದನು. ನಂತರ ಅವನು
ಖಾಲಿ ಮಡಿಕೆಯನ್ನು ಅದೇ ಬಟ್ಟೆಯಲ್ಲಿ ಸುತ್ತಿ ತಂದು ಮನೆಯಲ್ಲಿ ಮೊದಲು ಇಟ್ಟ ಜಾಗದಲ್ಲಿಯೇ
ಕಟ್ಟಿಟ್ಟನು; ಆದರೆ ಮರುದಿನದಿಂದ ಒಂದೇ ಒಂದು ಕಾಗೆಯೂ ಆ ಕಡೆಗೆ ಸುಳಿಯಲಿಲ್ಲ ಅಥವಾ
ಮಡಿಕೆಯ ಪಕ್ಕದಲ್ಲಿ ಬಂದು ಸಹ ಕುಳಿತುಕೊಳ್ಳಲಿಲ್ಲ ಅಥವಾ ಮಡಿಕೆಗೆ ಕೊಕ್ಕಿನಿಂದ ಕುಕ್ಕಲೂ ಇಲ್ಲ.
೩. ಸ್ಥೂಲದೇಹವನ್ನು ಸುಟ್ಟು ಸಂಪೂರ್ಣ ನಾಶ ಮಾಡಿದರೂ ಮತ್ತು ಅಸ್ಥಿಗಳನ್ನು
ವಿಸರ್ಜಿಸಿದರೂ ಆ ಮೃತ ವ್ಯಕ್ತಿಯ ಆಸೆ ಆಕಾಂಕ್ಷೆಗಳು (ವಾಸನೆಗಳು) ಬಾಕಿ
ಇರುವುದು, ಆ ಮೃತ ವ್ಯಕ್ತಿಯ ವಾಸನಾಪೂರ್ತಿ ಮಾಡಿದಾಗಲೇ ಆ ಮೃತ ವ್ಯಕ್ತಿಗೆ
ಮುಂದಿನ ಗತಿ ಪ್ರಾಪ್ತವಾಗುವುದು
ಮನುಷ್ಯನ ದೇಹವು ಅನ್ನಮಯವಾಗಿದೆ. ಅವನು ಆಹಾರ ಸೇವಿಸಿದರೆ ಮಾತ್ರ ಅವನ ದೇಹವು
ಕೆಲಸವನ್ನು ಮಾಡುತ್ತದೆ. ಅವನು ಆಹಾರವನ್ನು ಸೇವಿಸದಿದ್ದರೆ ಅವನಿಗೆ ಬೇಗನೆ ಆಯಾಸವಾಗಿ
ಅಶಕ್ತನಾಗುವನು; ಆದುದರಿಂದ ಮೃತ ವ್ಯಕ್ತಿಯ ವಾಸನೆಗಳು (ಆಸೆಆಕಾಂಕ್ಷೆಗಳು) ಆದಷ್ಟು
ಆಹಾರದಲ್ಲಿ ಉಳಿದುಕೊಂಡಿರುತ್ತದೆ. ಅದಕ್ಕಾಗಿ ಹದಿಮೂರನೇಯ ದಿನ ಶಾಸ್ತ್ರೋಕ್ತ ವಿಧಿಯನ್ನು
ಮಾಡಿ ಅನ್ನದಾನವನ್ನು ಮಾಡಲಾಗುತ್ತದೆ. ‘ಅವನು ಯಾವುದೇ ರೂಪದಲ್ಲಿ ಬಂದು ಅನ್ನಗ್ರಹಣ
ಮಾಡಿ ತೃಪ್ತನಾಗಬೇಕು’, ಎಂಬುದು ಅದರ ಹಿಂದಿನ ಉದ್ದೇಶವಾಗಿರುತ್ತದೆ.
೪. ಶ್ರಾದ್ಧ-ಪಕ್ಷಗಳನ್ನು ಟೀಕಿಸುವ ಸುಧಾರಕರಿಗೆ ಜೀವನವು ಕಲಿಸಿದ ಪಾಠ !
೪ ಅ. ‘ಶ್ರಾದ್ಧ-ಪಕ್ಷಗಳು ಕಟ್ಟುಕಥೆಯಾಗಿದ್ದು ಬ್ರಾಹ್ಮಣರು ದಕ್ಷಿಣೆಗಾಗಿ ಭಯ ಹುಟ್ಟಿಸುತ್ತಾರೆ,
ಪಿಂಡದಾನವನ್ನು ಮಾಡಿ ಅನ್ನವನ್ನು ವ್ಯರ್ಥ ಮಾಡುತ್ತಾರೆ, ಯಾರಾದರೂ ಪಿಂಡದಾನವನ್ನು
ಮಾಡಿದರೆ, ಪಿಂಡವನ್ನು ನಾವೇ ತಿನ್ನುವೆವು’ ಎಂದು ಪಂಢರಾಪುರದ ಕೆಲವು ಸುಧಾರಕರು
ಹೇಳುವುದು : ಪಂಢರಾಪುರದಲ್ಲಿ ಕೆಲವು ಸುಧಾರಣಾವಾದಿಗಳು ಧರ್ಮವನ್ನು ಟೀಕಿಸುತ್ತಿದ್ದರು ಮತ್ತು
‘ಶ್ರಾದ್ಧ-ಪಕ್ಷ ಇತ್ಯಾದಿಗಳೆಲ್ಲವೂ ಕಟ್ಟುಕಥೆಯಾಗಿವೆ. ವ್ಯಕ್ತಿಯು ಮರಣಹೊಂದಿದ ನಂತರ ಯಾರೂ
ಹತ್ತನೇ ಮತ್ತು ಹದಿಮೂರನೇಯ ದಿನದ ವಿಧಿಯನ್ನು ಮಾಡಿ ವಿನಾಕಾರಣ ಪಿಂಡದಾನವನ್ನು ಮಾಡಿ
ಇಷ್ಟು ದುಬಾರಿಯ ಅನ್ನವನ್ನು ಹಾಳು ಮಾಡಬಾರದು. ಈ ಅನ್ನದಿಂದ ಕೆಲವು ಬಡವರ ಹೊಟ್ಟೆ
ತುಂಬುವುದು. ಬ್ರಾಹ್ಮಣರು ದಕ್ಷಿಣೆಗಾಗಿ ಸಾಮಾನ್ಯ ಜನರನ್ನು ವಿನಾಕಾರಣ ಹೆದರಿಸುತ್ತಾರೆ.
ಆದುದರಿಂದ ಯಾರೂ ಶ್ರಾದ್ಧದ ಸಮಯದಲ್ಲಿ ಪಿಂಡದಾನ ಮಾಡಬಾರದು. ಯಾರಾದರೂ ಈ ರೀತಿ
ಪಿಂಡದಾನ ಮಾಡಿದರೆ ನಾವು ಆ ಅನ್ನವನ್ನು ವ್ಯರ್ಥಗೊಳಿಸದೇ ಎಲ್ಲರೆದುರು ಆ ಪಿಂಡಗಳ
ಅನ್ನವನ್ನು ಸ್ವೀಕರಿಸಿ ಅದನ್ನು ಸೇವಿಸುವೆವು” ಎಂದು ಹೇಳುತ್ತಿದರು.
೪ ಆ. ಪಂಢರಾಪುರದ ಸುಧಾರಕರು ಓರ್ವ ಮೃತ ವ್ಯಕ್ತಿಯ ಹದಿಮೂರನೇಯ ದಿನ ಮಾಡಿದ
ಪಿಂಡದಾನವನ್ನು ತಿನ್ನುವುದು ಮತ್ತು ಮರುದಿನದಿಂದಲೇ ಅವರ ಪೂರ್ತಿ ಶರೀರದ ಮೇಲೆ ತೊನ್ನು
ರೋಗವಾಗುವುದು : ನಾಲ್ಕು-ಆರು ದಿನಗಳ ನಂತರ ಓರ್ವ ವ್ಯಕ್ತಿಯು ಮೃತ ಹೊಂದಿದ ನಂತರ
ಪದ್ಧತಿಗನುಸಾರ ಅವನ ಮನೆಯ ಜನರು ಹದಿಮೂರನೇಯ ದಿನ ಪಿಂಡದಾನವನ್ನು ಮಾಡಿದರು.
ಆಗ ಆ ಸುಧಾರಣಾ ವಿಚಾರಸರಣಿಯ ಇಬ್ಬರು ಸಹೋದರರು ಅಲ್ಲಿಗೆ ಹೋದರು ಮತ್ತು ಎಲ್ಲರೆದುರು
ಅವರು ಅದನ್ನು ತಿಂದರು. ಮರು ದಿನದಿಂದ ಆ ಇಬ್ಬರು ಸಹೋದರರ ಶರೀರದ ಮೇಲೆ ತೊನ್ನು
ನಿರ್ಮಾಣವಾಗಿ ಅವರ ಸಂಪೂರ್ಣ ಶರೀರವು ಬಿಳುಪಾಯಿತು. ಅದೃಶ್ಯ ಶಕ್ತಿಯು ಅವರಿಗೆ ಶಿಕ್ಷೆಯನ್ನು
ವಿಧಿಸಿತು. ‘ಈ ರೀತಿ ಅದೃಶ್ಯ ಜಗತ್ತು ಇದೆ ಮತ್ತು ಅದರಲ್ಲಿ ಅದೃಶ್ಯ ಸ್ವರೂಪದಲ್ಲಿರುವ
ಕಾರಣದೇಹಗಳೂ ಇವೆ’ ಎಂದು ಸಹ ಸಿದ್ಧವಾಯಿತು.
೫. ವ್ಯಕ್ತಿಯು ಮೃತ ಪಟ್ಟ ತಿಥಿಯಂದು, ಆ ವ್ಯಕ್ತಿಯನ್ನು ಶಾಸ್ತ್ರೋಕ್ತ ಪದ್ಧತಿಯಿಂದ
ಆವಾಹನೆಯನ್ನು ಮಾಡಿದ ನಂತರ ಮೃತ ವ್ಯಕ್ತಿಯ ಆತ್ಮವು ಯಾವುದಾದರೊಂದು
ರೂಪದಲ್ಲಿ ಬರುವುದು ಮತ್ತು ನೀಡಿದ ಅನ್ನವನ್ನು ಸ್ವೀಕರಿಸಿ ತೃಪ್ತವಾಗುವುದು
ಯಾವ ತಿಥಿಯಂದು ಮನೆಯಲ್ಲಿ ವ್ಯಕ್ತಿಯ ಮೃತ್ಯುವಾಗಿರುತ್ತದೋ, ಆ ತಿಥಿಯಂದು ಪ್ರತಿವರ್ಷ
ಮನೆಯಲ್ಲಿ ಶ್ರಾದ್ಧ ಮಾಡುವ ಪದ್ಧತಿಯಿದೆ. ಆ ದಿನ ಆ ಮೃತ ವ್ಯಕ್ತಿಗೆ ಇಷ್ಟವಾದ ಆಹಾರವನ್ನು
ಬೇಯಿಸಿ ಬ್ರಾಹ್ಮಣರು ಮತ್ತು ಇತರ ಬಡಬಗ್ಗರಿಗೆ ಉಣಬಡಿಸುವ ಪದ್ದತಿ ಇದೆ. ಶಾಸ್ತ್ರೋಕ್ತ
ಪದ್ಧತಿಯಿಂದ ಆವಾಹನೆ ಮಾಡಿದ ನಂತರ ಮೃತ ವ್ಯಕ್ತಿಯ ಆತ್ಮವು ಯಾವುದೇ ರೂಪದಲ್ಲಿ ಬಂದು
ಅನ್ನವನ್ನು ಸ್ವೀಕರಿಸಿ ತೃಪ್ತವಾಗುತ್ತದೆ. ಈ ರೀತಿ ಅದಕ್ಕೆ ಮುಂದಿನ ಗತಿ ಸಿಗುತ್ತದೆ.
೬. ಅಣ್ಣ-ತಮ್ಮಂದಿರು ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಪ್ರತಿಯೊಬ್ಬರು ಪ್ರತ್ಯೇಕ
ಶ್ರಾದ್ಧವನ್ನು ಮಾಡಬೇಕು.
೭. ಗಯಾದಲ್ಲಿ (ಬಿಹಾರ) ಶ್ರಾದ್ಧ ಮಾಡಿದರೂ ಎಲ್ಲ ಪೂರ್ವಜರು
ಮುಕ್ತರಾಗದಿರುವುದರಿಂದ ಪ್ರತಿವರ್ಷ ಶ್ರಾದ್ಧ ಮಾಡುವುದೇ ಯೋಗ್ಯವಾಗಿದೆ !
ತಂದೆಯವರ ಶ್ರಾದ್ಧವನ್ನು ಗಯಾದಲ್ಲಿ ಮಾಡುತ್ತಾರೆ. ಗಯಾದಲ್ಲಿ ವಿಷ್ಣುಪಾದದಲ್ಲಿ ಪಿಂಡದಾನ
ಮಾಡಿದರೂ ಪ್ರತಿವರ್ಷ ಶ್ರಾದ್ಧವನ್ನು ಮಾಡಲೇಬೇಕು; ಏಕೆಂದರೆ ‘ಎಲ್ಲ ಪೂರ್ವಜರಿಗೆ ಮುಕ್ತಿ ಸಿಕ್ಕೇ
ಸಿಗುತ್ತದೆ ಎಂದೇನಿಲ್ಲ’. ಗಯಾದಲ್ಲಿ ಶ್ರಾದ್ಧದ ಫಲ ಅಕ್ಷಯವಾಗುತ್ತದೆ. ಹೀಗಿದ್ದರೂ ಮಹಾಲಯ
ಮುಂತಾದ ನಿಯಮಿತ ಶ್ರಾದ್ಧಗಳನ್ನು ಮಾಡಲೇಬೇಕು.
೮. ದೃಶ್ಯಮಾನ ಜಗತ್ತಿನ ದೇಹಧಾರಿ ವ್ಯಕ್ತಿಯು ಪ್ರತ್ಯಕ್ಷ ಅನ್ನವನ್ನು ಸೇವಿಸಿ
ಸಂತುಷ್ಟನಾಗುತ್ತಾನೆ ಮತ್ತು ಅದೃಶ್ಯ ಜಗತ್ತಿನ ವ್ಯಕ್ತಿಯು ಕೇವಲ ವಾಸನೆಯಿಂದ
ತೃಪ್ತನಾಗುವುದು, ಇದಕ್ಕಾಗಿ ಮೃತ ವ್ಯಕ್ತಿಗಳ ಹೆಸರುಗಳನ್ನು ಆವಾಹನೆ ಮಾಡಿ
ಅನ್ನವನ್ನಿಟ್ಟಾಗ ಅವುಗಳು ಅಲ್ಲಿಗೆ ಬಂದು ಆ ಅನ್ನದ ವಾಸನೆಯಿಂದ ತೃಪ್ತವಾಗುವುದು
ಮಾರ್ಗದಲ್ಲಿ ಹೋಗುವಾಗ ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುವ ನೀರುಳ್ಳಿಭಜ್ಜಿ ಮತ್ತು ಇತರ
ಆಹಾರಪದಾರ್ಥಗಳ ಪರಿಮಳವು ನಿಮ್ಮನ್ನು ಆಕರ್ಷಿಸುತ್ತವೆ. ಆ ಪರಿಮಳದಿಂದ ನಿಮ್ಮ ಮನಸ್ಸಿನಲ್ಲಿ
ತಿನ್ನುವ ಆಸೆ, ಅಂದರೆ ತಿನ್ನುವ ಇಚ್ಛೆ ಉಂಟಾಗುತ್ತದೆ. ಆ ಪರಿಮಳವು ಬರದಿದ್ದರೆ, ತಿನ್ನುವ ಆಸೆಯೇ 
ಮನಸ್ಸಿನಲ್ಲಿ ಬರುತ್ತಿರಲಿಲ್ಲ.
ಮನುಷ್ಯನ ದೇಹವು ಅನ್ನಮಯ ಪಿಂಡವಾಗಿದೆ. ದೃಷ್ಟಿಗೋಚರ ಜಗತ್ತಿನ ವ್ಯಕ್ತಿಯೆಂದರೆ ಯಾರಿಗೆ
ಆಕಾರವಿದೆಯೋ, ಅವನು ಪ್ರತ್ಯಕ್ಷ ಉಂಡು ಸಂತುಷ್ಟನಾಗುತ್ತಾನೆ. ಯಾರಿಗೆ ಆಕಾರವಿಲ್ಲವೋ,
ಅಂತಹ ದೃಷ್ಟಿಅಗೋಚರ ಜಗತ್ತಿನ ವ್ಯಕ್ತಿಯು ಕೇವಲ ವಾಸನೆಯಿಂದ (ಪರಿಮಳದಿಂದ)
ಸಂತುಷ್ಟನಾಗುತ್ತಾನೆಂದು ಅವನ ಶ್ರಾದ್ಧವನ್ನು ಮಾಡಿ ಸಂತುಷ್ಟಗೊಳಿಸಬೇಕಾಗುತ್ತದೆ.
ಯಾರಾದರೊಬ್ಬ ವ್ಯಕ್ತಿಯ ಹೆಸರಿನಲ್ಲಿ ಆವಾಹನೆ ಮಾಡಿ ವಾಸ, ಅಂದರೆ ಅನ್ನವನ್ನು ಇಡಲಾಗುತ್ತದೆ,
ಆಗ ಅಲ್ಲಿ ಆ ಮೃತ ವ್ಯಕ್ತಿಯು ಉಪಸ್ಥಿತನಾಗುತ್ತಾನೆ ಮತ್ತು ಅವನಿಗಾಗಿ ಇಟ್ಟ ಅನ್ನದ ವಾಸನೆಯಿಂದ
ತೃಪ್ತನಾಗುತ್ತಾನೆಂದು ‘ಪಿಂಡದಾನ ಮಾಡುವುದು’ ಪರಿಣಾಮಕಾರಿ ಮತ್ತು ಉತ್ತಮ ವಿಚಾರವಾಗಿದೆ.
೯. ಕಾರಣದೇಹದಿಂದಾಗಿ ಪೃಥ್ವಿಯ ಮೇಲೆ ಉತ್ಪತ್ತಿಯಾಗುವುದು; ಆದುದರಿಂದ
ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಿದ ಶ್ರಾದ್ಧಕರ್ಮಗಳು ಯೋಗ್ಯವಾಗಿವೆ
ವಾಸನಾದೇಹವು ನಾಶವಾಗುತ್ತಿದ್ದರೆ ಪೃಥ್ವಿಯ ಮೇಲೆ ಭವಿಷ್ಯದಲ್ಲಿ ಉತ್ಪತ್ತಿಯೇ ಆಗುತ್ತಿರಲಿಲ್ಲ .
ಇಂದು ಪೃಥ್ವಿಯ ಮೇಲೆ ಕಾಣಿಸುವ ೭೬೦ ಕೋಟಿ ಜನಸಂಖ್ಯೆಯು ವಾಸನಾದೇಹದಿಂದಾಗಿಯೇ
ನಿರ್ಮಾಣವಾಗಿದೆ. ಯಾವ ಅಜ್ಞಾನದಿಂದ ಈ ಕರ್ಮಗಳನ್ನು ಮಾಡುವುದಿಲ್ಲವೋ, ಅವರು
ತಪ್ಪುತ್ತಾರೆ. ತಂದೆಯವರು ತಮ್ಮ ತಂದೆಯ ಶ್ರಾದ್ಧ ಮಾಡಿದರು ಮತ್ತು ಇದನ್ನು ಅವರ ಮಗನು
ನೋಡಿದರೆ ತಂದೆಯವರು ಹೋದ ನಂತರ ಮಗನೂ ತನ್ನ ತಂದೆಯ ಶ್ರಾದ್ಧವನ್ನು ಮಾಡುವನು. ಈ
ರೀತಿ ಮಕ್ಕಳ ಮೇಲೆ ಒಳ್ಳೆಯ ಸಂಸ್ಕಾರವನ್ನು ಮಾಡಿರಿ ಮತ್ತು ತಮ್ಮ ಮುಂದಿನ ಗತಿಯ
ವ್ಯವಸ್ಥೆಯನ್ನು ಮಾಡಿರಿ. ನಮ್ಮ ಉತ್ಕೃಷ್ಟ ಸಂಸ್ಕೃತಿಯ ನಾಶವಾದರೆ, ಭಾರತದ ನಾಶವಾಗುವುದು.
೧೦. ‘ಧಾರ್ಮಿಕ ವಿಧಿಯನ್ನು ಮಾಡಿ ಪಿಂಡದಾನವನ್ನು ಮಾಡಲಾಗುತ್ತದೆ ಆಗಲೇ
ಮೃತ ವ್ಯಕ್ತಿಯ ಆತ್ಮವು ತೃಪ್ತಗೊಳ್ಳುತ್ತದೆ’, ಎಂಬುದು ನಿರ್ವಿವಾದ ಸತ್ಯವಾಗಿದೆ
ಆದುದರಿಂದ ಶ್ರಾದ್ಧವನ್ನು ಮಾಡುವುದು ಆವಶ್ಯಕ
ಇತ್ತೀಚೆಗೆ ವಿದೇಶಿ ಜನರು ನಮ್ಮ ಮೇಲೆ ಬಹಳ ಪ್ರಭಾವವನ್ನು ಬೀರಿದ್ದಾರೆ. ಇನ್ನೊಂದು ಎಂದರೆ
ಕೆಲವು ಜನರು ಅತಿ ವಿದ್ಯಾ ವಂತರಾಗಿದ್ದಾರೆ. ಅವರು “ಶ್ರಾದ್ಧವನ್ನೇಕೆ ಮಾಡಬೇಕು ? ಯಾರು
ಹೋದರೋ, ಅವರದು ಮುಗಿಯಿತು” ಎಂದು ಕೇಳುತ್ತಾರೆ. ಅವರಿಗೆ, ಶ್ರಾದ್ಧದಲ್ಲಿ ಅನ್ನದ
ಅಪವ್ಯಯವಾಗುತ್ತದೆ ಮತ್ತು ವಿನಾಕಾರಣ ಹಣವು ಖರ್ಚಾಗುತ್ತದೆ. ಅದರ ಬದಲು ಆ ಹಣವನ್ನು
ಯಾವುದಾದರೂ ಸಾಮಾಜಿಕ ಸಂಸ್ಥೆಗೆ ಸಹಾಯವೆಂದು ನೀಡಬಹುದು ಮತ್ತು ಕೊಂಚ ಪ್ರಮಾಣದಲ್ಲಿ
ಸಮಾಜದ ಋಣವನ್ನು ತೀರಿಸಬಹುದು ಎಂದು ಅನಿಸುತ್ತದೆ. ನಮ್ಮ ಅಭಿಪ್ರಾಯದಲ್ಲಿ ಈ
ವಿಚಾರಸರಣಿಯು ತಪ್ಪಾಗಿದೆ. ಶ್ರಾದ್ಧದ ಪದ್ಧತಿ ಅಥವಾ ಅದರ ಹಿಂದಿನ ಉದ್ದೇಶವು ನಿಮ್ಮ ಗಮನಕ್ಕೆ
ಬರಲಿಲ್ಲ ಎಂದ ಮಾತ್ರಕ್ಕೆ ಈ ಪದ್ಧತಿ ತಪ್ಪಾಗಿದೆ ಎಂದು ಹೇಳುವುದು ಯೋಗ್ಯವಲ್ಲ. ನಾವು ಧಾರ್ಮಿಕ
ವಿಧಿಯನ್ನು ಮಾಡಿ ಪಿಂಡದಾನವನ್ನು ಮಾಡುತ್ತೇವೆ. ಆಗಲೇ ಮೃತ ವ್ಯಕ್ತಿಯ ಆತ್ಮವು
ತೃಪ್ತವಾಗುತ್ತದೆ’, ಇದು ನಿರ್ವಿವಾದ ಸತ್ಯವಾಗಿದೆ.
– ಪ.ಪೂ. ದಿ. ರಾಮಕೃಷ್ಣ ಕ್ಷೀರಸಾಗರ ಮಹಾರಾಜ, ನಗರ (ಆಧಾರ : ‘ಗುರುವಾಣಿ’ (ಶ್ರಾದ್ಧವಿಧಿ)
ಪುಷ್ಪ ೧೦)

ಮನೆತನವನ್ನೇ ನಾಶಮಾಡುವ ಪಿತೃದೋಷ


೧೦೦ ರಲ್ಲಿ ೯೯ ಜನರು ಇಚ್ಛೆ- ಆಕಾಂಕ್ಷೆಯನ್ನು ಹಿಂದಕ್ಕೆ ಇಟ್ಟು ಮರಣ ಹೊಂದುತ್ತಾರೆ. ಯಾವುದೇ
ವ್ಯಕ್ತಿಯು ಹೋಗುವ ಮೊದಲು ಅವನ ಎಲ್ಲಾ ಇಚ್ಛೆಯು ಪೂರ್ಣವಾಗುತ್ತದೆ ಎಂದಿರುವುದಿಲ್ಲ.
ಅದರಿಂದಲೆ ನಂತರ ಪಿತೃದೋಷ ಉಂಟಾಗುತ್ತದೆ. ಅತೃಪ್ತ ಆತ್ಮವು ತನ್ನ ಯಾವ ಇಚ್ಛೆ ಉಳಿದಿದೆ,
ಎಂದು ತೋರಿಸಲು ಸಾಧ್ಯವಿಲ್ಲ ಅಥವಾ ಹೇಳಲು ಸಾಧ್ಯವಿಲ್ಲ ಅಥವಾ ಅಂತಹ ಸಂಕೇತವನ್ನು
ನೀಡಲು ಸಾಧ್ಯವಿಲ್ಲ ಸ್ವಪ್ನದಲ್ಲಿ ಬರುವ ಅರ್ಹತೆಯು ಇರುವುದಿಲ್ಲ. ಅವರು ಕೇವಲ ಕಷ್ಟಕೊಡುವುದಷ್ಟೆ
ಮಾಡುತ್ತಾರೆ. ಒಂದು ವೇಳೆ ಮನೆಯ ತಂದೆ-ತಾಯಿ, ಅಜ್ಜನು ಹೋದರೆ ಅವರಿಗೆ ಮಕ್ಕಳ ಬಗ್ಗೆ
ಅವರ ಪೌತ್ರರ ಬಗ್ಗೆ ಅರಿವು ಉಳಿದಿರುವುದಿಲ್ಲ. ತಾವು ಮಕ್ಕಳಿಗೆ, ಮೊಮ್ಮಗನಿಗೆ ಕಷ್ಟವನ್ನು
ನೀಡುತ್ತಿದ್ದೇವೆಯೋ ಎಂಬುದು ಅವರಿಗೆ ತಿಳಿಯುವುದಿಲ್ಲ. ಕೇವಲ ಆ ಮನೆತನದಿಂದ, ವಿಶೇಷವಾಗಿ
ಕರ್ತಾ ಮಗನಿಂದ ಸ್ವತಃದ ಇಚ್ಛೆಯನ್ನು ಪೂರ್ಣಗೊಳಿಸುವುದಷ್ಟೆ ಅವರಿಗೆ ತಿಳಿದಿರುತ್ತದೆ.
ಪಿತೃದೋಷದಿಂದ ದೊಡ್ಡದೊಡ್ಡ ಮನೆತನವೇ ನಾಶವಾಗಿರುವ ಉದಾಹರಣೆಗಳಿವೆ.
(ಆದರಪೂರ್ವಕ : ಮನೆತನದ ದೋಷ, ಪ.ಪೂ.ರಾಮಕೃಷ್ಣ ಕ್ಷೀರಸಾಗರ ಮಹಾರಾಜ ಇವರ
ಗುರುವಾಣಿ, ಪುಷ್ಪ ೧೦)

You might also like