You are on page 1of 75

32

‫مدرسة الصفة اإلسالمية‬


MADRASATU SUFFAH AL ISLAMIYYA
SKYWAY COMPLEX, 6TH BLOCK, KRISHNAPURA,
SURATKAL, MANGALORE - 575 014
PH: 0824-2271449 MOB: 8722695551
ಸಹೃದಯರೊಬ್ಬರು ತಮ್ಮ
ತಂದೆ–ತಾಯಿಯ ಹೆಸರಲ್ಲಿ
ನೀಡಿದ ಧನಸಹಾಯದಿಂದ
ಈ ಪುಸ್ತಕವನ್ನು ರಚಿಸಲಾಗಿದೆ.
ಅಲ್ಲಾಹು ಅವರಿಗೂ ಅವರ
ತಂದೆ–ತಾಯಿಗಳಿಗೂ
ಪಾಪಮುಕ್ತಿಯನ್ನು ದಯಪಾಲಿಸಿ
ಸ್ವರ್ಗಲ�ೋಕಕ್ಕೆ ಪ್ರವೇಶ ಮಾಡಿಸಲಿ
–ಆಮೀನ್
ವುದೂ ನಿರ್ವಹಿಸುವುದು 3

ವುದೂ ಎಂದರೇನು?

y ಭಾಷಿಕ ಅರ್ಥ: ‘ವುದೂ’ (‫)و ُض وء‬


ُ ಎಂಬ ಪದವು
‘ವದಾಅ’ (‫)و َض َاءة‬
َ ಎಂಬ ಪದದಿಂದ ಬಂದಿದೆ. ಭಾಷಿಕ
ಅರ್ಥದಲ್ಲಿ ‘ವುದೂ’ ಎಂದರೆ ಶುಚಿತ್ವ, ಸೌಂದರ್ಯ
ಮತ್ತು ಹೊಳಪು. ‘ವುದೂ’ (‫)و ُض وء‬
ُ ಎಂದರೆ ನಾವು
ನಿರ್ವಹಿಸುವ ವುದೂ. ‘ವದೂ’ (‫)و ُض وء‬
َ ಎಂದರೆ
ವುದೂ ನಿರ್ವಹಿಸಲು ಬಳಸುವ ನೀರು.

y ಧಾರ್ಮಿಕ ಅರ್ಥ: ಧಾರ್ಮಿಕ ಅರ್ಥದಲ್ಲಿ ‘ವುದೂ’


ಎಂದರೆ ಅಲ್ಲಾಹನ ಆರಾಧನೆ ಮಾಡುತ್ತೇನೆ ಎಂಬ
ನಿಯತ್ತಿನೊಂದಿಗೆ ನೀರು ಬಳಸಿ ದೇಹದ ನಿರ್ದಿಷ್ಟ ಅಂ-
ಗಗಳನ್ನು ತೊಳೆಯುವುದು ಅಥವಾ ಸವರುವುದು.
ವುದೂ ನಿರ್ವಹಿಸುವುದು 4

ನಿಯಮ

y ಚಿಕ್ಕ ಅಶುದ್ಧಿಯಲ್ಲಿರುವವರು ನಮಾಝ್ ನಿರ್ವಹಿಸಲು


ಬಯಸಿದರೆ ವುದೂ ನಿರ್ವಹಿಸುವುದು ಕಡ್ಡಾಯವಾಗಿ-
ದೆ. ಏಕೆಂದರೆ ಅಲ್ಲಾಹು ಹೇಳುತ್ತಾನೆ:

‫﴿ﭑ ﭒ ﭓ ﭔ ﭕ ﭖ‬
‫ﭗﭘﭙﭚ‬
‫ﭛﭜﭝﭞ‬
﴾ ‫ﭟ ﭠ ﭡﭢ‬
“ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್ ನಿರ್ವಹಿಸ-
ಲು ಬಯಸಿದರೆ ನಿಮ್ಮ ಮುಖಗಳನ್ನು ತೊಳೆಯಿರಿ,
ಕೈಗಳನ್ನು ಮೊಣಕೈಗಳವರೆಗೆ ತೊಳೆಯಿರಿ, ತಲೆಯ-
ನ್ನು ಸವರಿರಿ ಮತ್ತು ಕಾಲುಗಳನ್ನು ಹರಡುಗಂಟುಗಳ
ವುದೂ ನಿರ್ವಹಿಸುವುದು 5

ತನಕ ತೊಳೆಯಿರಿ.”[1]

y ವುದೂ ನಮಾಝಿನ ಷರತ್ತುಗಳಲ್ಲಿ ಒಂದಾಗಿ-


ದ್ದು, ವುದೂ ನಿರ್ವಹಿಸದೆ ನಮಾಝ್ ಮಾಡಿದರೆ
ನಮಾಝ್ ಸಿಂಧುವಾಗುವುದಿಲ್ಲ.

‫َع ْن َأبِي ُه َر ْي َر َة َر ِض َي ال َّل ُه َعنْ ُه َأنَّ النَّبِ َّي‬


‫«ل َي ْق َب ُل ال َّل ُه‬َ :‫َص َّلى ال َّل ُه َع َل ْي ِه َو َس َّل َم َق َال‬
».‫ث َحتَّى َيت ََو َّض َأ‬ َ َ‫َص َل َة َأ َح ِدك ُْم إِ َذا َأ ْحد‬
ಅಬೂ ಹುರೈರ(h) ರಿಂದ ವರದಿ: ಪ್ರವ ಾದಿ(g)
ಯವರು ಹೇಳಿದರು: “ನಿಮ್ಮಲ್ಲಿ ಯಾರಾದರೂ ಚಿಕ್ಕ
ಅಶುದ್ಧಿಯಲ್ಲಿದರೆ
್ದ ಅವರು ವುದೂ ನಿರ್ವಹಿಸುವ ತನಕ
ಅಲ್ಲಾಹು ಅವರ ನಮಾಝನ್ನು ಸ್ವೀಕರಿಸುವುದಿಲ್ಲ.”[2]

1  ಸೂರ ಅಲ್‌ಮಾಇದ 6
2  ಅಲ್‌ಬುಖಾರಿ, ಮುಸ್ಲಿಂ
ವುದೂ ನಿರ್ವಹಿಸುವುದು 6

َّ‫ب َر ِض َي ال َّل ُه َع ْن ُه َأن‬


ٍ ِ‫َع ْن َعلِ ِّي ْب ِن َأبِي َطال‬
ِ ِ
ُ ‫ «م ْفت‬:‫ال َّنبِ َّي َص َّلى ال َّل ُه َع َل ْيه َو َس َّل َم َق َال‬
‫َاح‬
ِ
ُ ‫الص َلة ال ُّط ُه‬
.»‫ور‬ َّ
ಅಲಿ ಇಬ್ನ್ ಅಬೂ ತಾಲಿಬ್(h) ವರದಿ: ಪ್ರವ ಾದಿ-
(g) ಯವರು ಹೇಳಿದರು: “ನಮಾಝ್‌ನ ಕೀಲಿಕೈ
ಶುದ್ದಿಯಾಗಿದೆ.”[3]

ಎಲ್ಲಾ ನಮಾಝ್‌ಗಳಿಗೂ ವುದೂ ನಿರ್ವಹಿಸುವುದು


ಅಪೇಕ್ಷಣೀಯವಾಗಿದೆ

y ಚಿಕ್ಕ ಅಶುದ್ಧಿ ಇಲ್ಲದಿದ್ದರ ೂ ಸಹ ಎಲ್ಲಾ ಕಡ್ಡಾಯ


ನಮಾಝ್‌ಗಳಿಗೂ ಹೊಸದಾಗಿ ವುದೂ ನಿರ್ವಹಿಸು-
ವುದು ಅಪೇಕ್ಷಣೀಯವಾಗಿದೆ.

‫ك َر ِض َي ال َّل ُه َعنْ ُه َأنَّ النَّبِ َّي‬


ٍ ِ‫َس ب ِن مال‬
َ ْ ِ ‫َع ْن َأن‬
3  ಅಹ್ಮದ್, ಅತ್ತಿರ್ಮಿದಿ, ಅಬೂದಾವೂದ್, ಇಬ್ನ್ ಮಾಜ
ವುದೂ ನಿರ್ವಹಿಸುವುದು 7

‫ كَانَ ال َّنبِ ُّي َص َّلى‬:‫َص َّلى ال َّل ُه َع َل ْي ِه َو َس َّل َم َق َال‬


.‫ال َّل ُه َع َل ْي ِه َو َس َّل َم َيت ََو َّض ُأ ِعنْدَ ك ُِّل َص َل ٍة‬
ُ‫ ُي ْج ِزئ‬:‫ف ُك ْنت ُْم ت َْص َن ُعونَ ؟ َق َال‬ َ ‫ َك ْي‬:‫ت‬ ُ ‫ُق ْل‬
ِ
.‫ث‬ ْ ‫وء َما َل ْم ُي ْحد‬ ُ ‫َأ َحدَ نَا ا ْل ُو ُض‬
ಅನಸ್ ಇಬ್ನ್ ಮಾಲಿಕ್(h) ಹೇಳುತ್ತಾರೆ: ಪ್ರವ ಾದಿ-
(g) ಯವರು ಎಲ್ಲಾ ನಮಾಝ್‌ಗಳಿಗೂ ಮುಂಚೆ
(ಹೊಸದಾಗಿ) ವುದೂ ನಿರ್ವಹಿಸುತ್ತಿದರ
್ದ ು. ವರದಿಗಾ-
ರರಲ್ಲಿ ಒಬ್ಬರ ು ಕೇಳುತ್ತಾರೆ: “ನೀವೇನು ಮಾಡುತ್ತಿ-
ದ್ದಿರಿ?” ಆಗ ಅನಸ್(h) ಹೇಳಿದರು: “ಚಿಕ್ಕ ಅಶುದ್ಧಿ
ಉಂಟಾಗದಿದರೆ
್ದ ನಮಗೆ ಆ ವುದೂ (ಹಳೆಯ ವುದೂ)
ಸಾಕಾಗುತ್ತಿತ್ತು.”[4]

4  ಅಲ್‌ಬುಖಾರಿ
‫‪ವುದೂ ನಿರ್ವಹಿಸುವುದು‬‬ ‫‪8‬‬

‫‪ವುದೂವಿನ ಶ್ರೇಷ್ಠತೆಗಳು‬‬

‫‪y ವುದೂವಿನ ಮೂಲಕ ಪಾಪಗಳನ್ನು ಅಳಿಸಲಾಗುತ್ತದೆ.‬‬

‫َع ْن َأبِي ُه َر ْي َر َة َر ِض َي ال َّل ُه َعنْ ُه َأنَّ النَّبِ َّي‬


‫َص َّلى ال َّل ُه َع َل ْي ِه َو َس َّل َم َق َال‪« :‬إِ َذا ت ََو َّض َأ ا ْل َع ْبدُ‬
‫ا ْل ُم ْسلِ ُم — َأ ِو ا ْل ُم ْؤ ِم ُن — َفغ ََس َل َو ْج َه ُه‪،‬‬
‫َخ َر َج ِم ْن َو ْج ِه ِه ك ُُّل َخطِيئ ٍَة َن َظ َر إِ َل ْي َها بِ َع ْينَ ْي ِه‬
‫اء — َفإِ َذا‬ ‫آخ ِر َق ْط ِر ا ْلم ِ‬ ‫اء — َأو مع ِ‬ ‫مع ا ْلم ِ‬
‫َ‬ ‫ْ َ َ‬ ‫َ َ َ‬
‫غ ََس َل َيدَ ْي ِه َخ َر َج ِم ْن َيدَ ْي ِه ك ُُّل َخطِيئ ٍَة كَانَ‬
‫آخ ِر َق ْط ِر‬ ‫اء — َأو مع ِ‬ ‫ب َط َشتْها يدَ اه مع ا ْلم ِ‬
‫ْ َ َ‬ ‫َ َ ُ َ َ َ‬ ‫َ‬
‫ت ك ُُّل‬ ‫ِ‬
‫اء — َفإِ َذا غ ََس َل ِر ْج َل ْيه َخ َر َج ْ‬ ‫ا ْلم ِ‬
‫َ‬
‫اء — َأ ْو َم َع‬ ‫َخطِيئ ٍَة م َشتْها ِرج َله مع ا ْلم ِ‬
‫ْ ُ َ َ َ‬ ‫َ‬ ‫َ‬
‫اء — َحتَّى َيخْ ُر َج ن َِق ًّيا ِم َن‬ ‫آخ ِر َق ْط ِر ا ْلم ِ‬
‫َ‬
‫ِ‬
ವುದೂ ನಿರ್ವಹಿಸುವುದು 9

ِ ‫الذن‬
».‫ُوب‬ ُّ
ಅಬೂ ಹುರೈರ(h) ರಿಂದ ವರದಿ: ಪ್ರವ ಾದಿ(g)
ಯವರು ಹೇಳಿದರು: “ಒಬ್ಬ ಮುಸಲ್ಮಾನ ದಾಸ –
ಅಥವಾ ಸತ್ಯವಿಶ್ವಾಸಿ ದಾಸ – ವುದೂ ನಿರ್ವಹಿಸು-
ತ್ತಾ ತನ್ನ ಮುಖವನ್ನು ತೊಳೆಯುವಾಗ, ಅವನು ತನ್ನ
ಕಣ್ಣುಗಳ ಮೂಲಕ ನ�ೋಡಿದ ಎಲ್ಲಾ ಪಾಪಗಳೂ
ಆ ನೀರಿನೊಂದಿಗೆ – ಅಥವಾ ಆ ನೀರಿನ ಕೊನೆಯ
ಬಿಂದುವಿನೊಂದಿಗೆ –ತೊಳೆದು ಹ�ೋಗುತ್ತವೆ.
ಅವನು ಕೈಗಳನ್ನು ತೊಳೆಯುವಾಗ, ಅವನು ತನ್ನ
ಕೈಗಳ ಮೂಲಕ ಮಾಡಿದ ಪಾಪಗಳೆಲವೂ
್ಲ ಆ ನೀ-
ರಿನೊಂದಿಗೆ – ಅಥವಾ ಆ ನೀರಿನ ಕೊನೆಯ ಬಿಂ-
ದುವಿನೊಂದಿಗೆ –ತೊಳೆದು ಹ�ೋಗುತ್ತವೆ. ಅವನು
ತನ್ನ ಕಾಲುಗಳನ್ನು ತೊಳೆಯುವಾಗ, ಅವನು ತನ್ನ
ಕಾಲುಗಳಿಂದ ಮಾಡಿದ ಪಾಪಗಳೆಲ್ಲವೂ ಆ ನೀರಿ-
ನೊಂದಿಗೆ – ಅಥವಾ ಆ ನೀರಿನ ಕೊನೆಯ ಬಿಂದು-
ವುದೂ ನಿರ್ವಹಿಸುವುದು 10

ವಿನೊಂದಿಗೆ –ತೊಳೆದು ಹ�ೋಗುತ್ತವೆ. ಹೀಗೆ (ವುದೂ


ಮುಗಿಯುವಾಗ) ಅವನು ಎಲ್ಲಾ ಪಾಪಗಳಿಂದಲೂ
ಶುದ್ಧನಾಗುತ್ತಾನೆ.”[5]

ಸದಾ ವುದೂ ನಿರ್ವಹಿಸಿದ ಸ್ಥಿತಿಯಲ್ಲಿರುವುದರ


ಶ್ರೇಷ್ಠತೆ

y ಸದಾ ವುದೂ ನಿರ್ವಹಿಸಿದ ಸ್ಥಿತಿಯಲ್ಲಿರುವುದು ಸತ್ಯ


ವಿಶ್ವಾಸದ (ಈಮಾನಿನ) ಚಿಹ್ನೆಯಾಗಿದೆ.

‫َع ْن َث ْو َبانَ َر ِض َي ال َّل ُه َعنْ ُه َأنَّ النَّبِ َّي َص َّلى ال َّل ُه‬
ِ ِ
.‫يموا َو َل ْن ت ُْح ُصوا‬ ُ ‫«استَق‬ ْ :‫َع َل ْيه َو َس َّل َم َق َال‬
ِ
‫ َو َل ْن‬.ُ‫الص َلة‬ َّ ‫َوا ْع َل ُموا َأنَّ َخ ْي َر َأ ْع َمالك ُُم‬
».‫وء إِ َّل ُم ْؤ ِم ٌن‬ ِ ‫يحافِ َظ ع َلى ا ْلو ُض‬
ُ َ َ ُ
ಸೌಬಾನ್(h) ರಿಂದ ವರದಿ: ಪ್ರವಾದಿ(g) ಯವರು

5  ಮುಸ್ಲಿಂ
ವುದೂ ನಿರ್ವಹಿಸುವುದು 11

ಹೇಳಿದರು: “ಎಲ್ಲಾ ಒಳಿತುಗಳನ್ನು ಮಾಡಲು ನಿಮಗೆ


ಸಾಧ್ಯವ ಾಗದಿದರ
್ದ ೂ ಸಹ ಒಳಿತಿನ ಕರ್ಮಗಳೊಂದಿಗೆ
ಅಂಟಿಕೊಂಡಿರಲು ಪ್ರಯತ್ನಿಸಿರಿ. ತಿಳಿಯಿರಿ! ನಿಮ್ಮ
ಕರ್ಮಗಳಲ್ಲಿ ಅತ್ಯುತ್ತಮವಾದದ್ದು ನಮಾಝ್ ಆಗಿದೆ.
ಸತ್ಯವಿಶ್ವಾಸಿ ಅಲ್ಲದೆ ಇನ್ನಾರಿಗೂ ಸದಾ ವುದೂ ನಿರ್ವ-
ಹಿಸಿದ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ.”[6]

y ಮಾತ್ರವಲ್ಲ, ಅದು ಸತ್ಯವಿಶ್ವಾಸದ (ಈಮಾನಿನ) ಅರ್ಧ


ಭಾಗವಾಗಿದೆ.

َّ‫ي َر ِض َي ال َّل ُه َعنْ ُه َأن‬ ٍ ِ


ِّ ‫َع ْن َأبِي َمالك ْالَ ْش َع ِر‬
ِ
‫ور‬ُ ‫ «ال ُّط ُه‬:‫النَّبِ َّي َص َّلى ال َّل ُه َع َل ْيه َو َس َّل َم َق َال‬
».‫ان‬ ِ ‫يم‬ ِ ْ ‫َش ْط ُر‬
َ ‫ال‬
ಅಬೂ ಮಾಲಿಕ್ ಅಲ್‌ಅಶ್‌ಅರಿ(h) ರಿಂದ ವರದಿ:
ಪ್ರವಾದಿ(g) ಯವರು ಹೇಳಿದರು: “ಶುದ್ಧಿಯು ಸತ್ಯ-

6  ಅಹ್ಮದ್
ವುದೂ ನಿರ್ವಹಿಸುವುದು 12

ವಿಶ್ವಾಸದ ಅರ್ಧ ಭಾಗವಾಗಿದೆ.”[7]

y ಕಡ್ಡಾಯ ವುದೂವನ್ನು ಸರಿಯಾಗಿ ಪಾಲಿಸುವವರು


ಮತ್ತು ಹೆಚ್ಚು ಹೆಚ್ಚು ಐಚ್ಛಿಕ ವುದೂ ನಿರ್ವಹಿಸುವವರಿಗೆ
ಪುನರುತ್ತಾನ ದಿನ ಮಹಾ ಪ್ರಕ ಾಶವಿರುತ್ತದೆ.

‫َع ْن َأبِي ُه َر ْي َر َة َر ِض َي ال َّل ُه َعنْ ُه َأنَّ النَّبِ َّي‬


‫ «إِنَّ ُأ َّمتِي‬:‫َص َّلى ال َّل ُه َع َل ْي ِه َو َس َّل َم َق َال‬
‫ين ِم ْن َأ َث ِر‬ ِ ِ ِ
َ ‫َي ْأتُونَ َي ْو َم ا ْلق َي َامة غ ًُّرا ُم َح َّجل‬
‫يل‬ َ ِ‫اع ِمنْك ُْم َأنْ ُيط‬ ِ
ْ ‫ َف َم ِن‬.‫ا ْل ُو ُضوء‬
َ ‫اس َت َط‬
».‫غ َُّر َت ُه َف ْل َي ْف َع ْل‬
ಅಬೂ ಹುರೈರ(h) ರಿಂದ ವರದಿ: ಪ್ರವ ಾದಿ(g)
ಯವರು ಹೇಳಿದರು: “ನನ್ನ ಸಮುದಾಯವು ವುದೂ
ನಿರ್ವಹಿಸಿದ ಪರಿಣಾಮವಾಗಿ ಪುನರುತ್ತಾನ ದಿನ ಬೆಳ್ಳಗೆ

7  ಮುಸ್ಲಿಂ
ವುದೂ ನಿರ್ವಹಿಸುವುದು 13

ಬೆಳಗುವ ಪ್ರಕಾಶವಿರುವ ಮುಖ ಮತ್ತು ಕೈಕಾಲುಗಳ-


ನ್ನು ಹೊಂದಿದವರಾಗಿ ಬರುವರು. ಆದ್ದರಿಂದ ಯಾರಿಗೆ
ತಮ್ಮ ಪ್ರಕ ಾಶವನ್ನು ದೀರ್ಘಗೊಳಿಸಲು ಸಾಧ್ಯವೋ
ಅವರು ಅದನ್ನು ಮಾಡಲಿ.”[8]

ಸುನ್ನತಿನಲ್ಲಿರುವ ಪ್ರಕಾರ ವುದೂ ನಿರ್ವಹಿಸುವುದರ


ಶ್ರೇಷ್ಠತೆ

y ಕುರ್‌ಆನ್ ಮತ್ತು ಸುನ್ನತಿನಲ್ಲಿ ಹೇಗೆ ವುದೂ ನಿರ್ವಹಿಸ-


ಬೇಕೆಂದು ಹೇಳಲಾಗಿದೆಯೋ ಅದೇ ರೀತಿ ವುದೂ ನಿ-
ರ್ವಹಿಸುವವರ ಪಾಪಗಳನ್ನು ಅಳಿಸಲಾಗುತ್ತದೆ ಮತ್ತು
ಅವರ ಪದವಿಗಳನ್ನು ಏರಿಸಲಾಗುತ್ತದೆ.

‫َع ْن َأبِي ُه َر ْي َر َة َر ِض َي ال َّل ُه َعنْ ُه َأنَّ النَّبِ َّي‬


‫«أ َل َأ ُد ُّلك ُْم‬ َ :‫َص َّلى ال َّل ُه َع َل ْي ِه َو َس َّل َم َق َال‬
‫َع َلى َما َي ْم ُحو ال َّل ُه بِ ِه ا ْلخَ َطا َيا َو َي ْر َف ُع بِ ِه‬
8  ಅಲ್‌ಬುಖಾರಿ, ಮುಸ್ಲಿಂ
ವುದೂ ನಿರ್ವಹಿಸುವುದು 14

!‫ول ال َّل ِه‬ َ ‫ َيا َر ُس‬،‫ َب َلى‬:‫ات؟» َقا ُلوا‬ ِ ‫الدَّ رج‬
َ َ
‫ َو َك ْث َر ُة‬،‫َار ِه‬
ِ ‫وء َع َلى ا ْل َمك‬ ِ ‫ «إِسبا ُغ ا ْلو ُض‬:‫َق َال‬
ُ َ ْ
ِ ِ ِ ِ
‫ع‬ ‫ب‬ ‫ة‬
َ‫ُ َّ َ ْ د‬‫ل‬َ ‫الص‬ ‫ار‬ َ
‫ظ‬ ‫ْت‬
‫ن‬ ‫ا‬ ‫و‬
َ ، ‫د‬ ‫اج‬ َ ‫ا ْلخُ َطا إِ َلى ا ْل َم‬
‫س‬
ُ ‫الر َب‬ ِ ِ
».‫اط‬ ِّ ‫ َف َذلك ُُم‬.‫الص َلة‬ َّ
ಅಬೂ ಹುರೈರ(h) ರಿಂದ ವರದಿ: ಪ್ರವ ಾದಿ(g)
ಯವರು ಕೇಳಿದರು: “ನಿಮ್ಮ ಪಾಪಗಳನ್ನು ಅಳಿಸುವ
ಮತ್ತು ನಿಮ್ಮ ಪದವಿಗಳನ್ನು ಏರಿಸುವ ಒಂದು
ವಿಷಯದ ಬಗ್ಗೆ ನಾನು ನಿಮಗೆ ತಿಳಿಸಿ ಕೊಡಲೇ?”
ಸಹಾಬಿಗಳು ಹೇಳಿದರು: “ಓ ಪ್ರವಾದಿಯವರೇ, ತಿಳಿ-
ಸಿಕೊಡಿ.” ಅವರು ಹೇಳಿದರು: “ಪ್ರತಿಕೂಲ ಸನ್ನಿವೇ-
ಶಗಳಲ್ಲಿ[9] ಬಹಳ ಚೆನ್ನಾಗಿ ವುದೂ ನಿರ್ವಹಿಸುವುದು,
ಮಸೀದಿಗೆ ಹೆಚ್ಚು ಹೆಚ್ಚು ಹೆಜ್ಜೆ ಹಾಕುವುದು ಮತ್ತು

9  ಪ್ರತಿಕೂಲ ಸನ್ನಿವೇಶಗಳು ಎಂದರೆ ಅತಿಯಾದ ಚಳಿ, ಕಾಯಿಲೆ


ಮುಂತಾದ ಸಂದರ್ಭಗಳು.
ವುದೂ ನಿರ್ವಹಿಸುವುದು 15

ಒಂದು ನಮಾಝ್ ನಿರ್ವಹಿಸಿದ ಬಳಿಕ ಇನ್ನೊಂದು


ನಮಾಝ್‌ಗಾಗಿ ಕಾಯುವುದು. ಅದೇ ರಿಬಾತ್ (ಗಟ್ಟಿ-
ಯಾಗಿ ನೆಲೆನಿಲ್ಲುವುದು).”[10]

y ವುದೂವಿನ ಮೂಲಕ ಗತ ಪಾಪಗಳನ್ನು ಕ್ಷಮಿಸಲಾ-


ಗುತ್ತದೆ.

‫َع ْن ُع ْث َمانَ َر ِض َي ال َّل ُه َعنْ ُه َأنَّ النَّبِ َّي َص َّلى‬


‫«م ْن ت ََو َّض َأ َهك ََذا غ ُِف َر‬ ِ
َ :‫ال َّل ُه َع َل ْيه َو َس َّل َم َق َال‬
‫َت َص َل ُت ُه َو َم ْش ُي ُه‬ْ ‫ َوكَان‬.‫َل ُه َما َت َقدَّ َم ِم ْن َذ ْنبِ ِه‬
».‫ج ِد نَافِ َل ًة‬
ِ ‫إِ َلى ا ْل َم ْس‬
ಉಸ್ಮಾನ್(h) ವರದಿ: ಪ್ರವ ಾದಿ(g) ಯವರು
ಹೇಳಿದರು: “ಯಾರು ಈ ರೀತಿಯಲ್ಲಿ ವುದೂ ನಿರ್ವ-
ಹಿಸುತ್ತಾರ�ೋ ಅವರ ಗತ ಪಾಪಗಳು ಕ್ಷಮಿಸಲ್ಪಡುತ್ತವೆ.

10  ಅಲ್‌ಬುಖಾರಿ ಮುಸ್ಲಿಂ


ವುದೂ ನಿರ್ವಹಿಸುವುದು 16

ಅವರ ನಮಾಝ್ ಮತ್ತು ಅವರು ಮಸೀದಿಗೆ ಹಾಕಿದ


ಹೆಜ್ಜೆಗಳಿಗೆ ಪ್ರತ್ಯೇಕ ಪ್ರತಿಫಲಗಳಿವೆ.”[11]

‫وب َر ِض َي ال َّل ُه َعنْ ُه َأنَّ النَّبِ َّي‬ ٍ ‫َع ْن َأبِي َأ ُّي‬


‫«م ْن ت ََو َّض َأ‬ ِ
َ :‫َص َّلى ال َّل ُه َع َل ْيه َو َس َّل َم َق َال‬
‫ غ ُِف َر َل ُه َما َت َقدَّ َم‬،‫ َو َص َّلى ك ََما ُأ ِم َر‬،‫ك ََما ُأ ِم َر‬
».‫ِم ْن َع َم ٍل‬
ಅಬೂ ಅಯ್ಯೂಬ್(h) ರಿಂದ ವರದಿ: ಪ್ರವಾದಿ(g)
ಯವರು ಹೇಳಿದರು: “ಆದೇಶಿಸಲಾದ ರೀತಿಯಲ್ಲಿ
ವುದೂ ನಿರ್ವಹಿಸುವವರು ಮತ್ತು ಆದೇಶಿಸಲಾದ
ರೀತಿಯಲ್ಲಿ ನಮಾಝ್ ನಿರ್ವಹಿಸುವವರು ಯಾರ�ೋ
ಅವರ ಗತ ಪಾಪಗಳನ್ನು ಕ್ಷಮಿಸಲಾಗುವುದು.”[12]

y ವುದೂವಿನ ಮೂಲಕ ಮುಂದಿನ ಹತ್ತು ದಿನಗಳ ಪಾ-

11  ಮುಸ್ಲಿಂ
12  ಅಹ್ಮದ್, ಅನ್ನಸ ಾಈ, ಇಬ್ನ್ ಮಾಜ
ವುದೂ ನಿರ್ವಹಿಸುವುದು 17

ಪಗಳನ್ನು ಮನ್ನಿಸಲಾಗುತ್ತದೆ.

‫َع ْن َأبِي ُه َر ْي َر َة َر ِض َي ال َّل ُه َعنْ ُه َأنَّ النَّبِ َّي‬


‫«م ْن ت ََو َّض َأ‬ ِ
َ :‫َص َّلى ال َّل ُه َع َل ْيه َو َس َّل َم َق َال‬
‫است ََم َع‬ ْ ‫ َف‬،‫ ُث َّم َأتَى ا ْل ُج ُم َع َة‬،‫وء‬َ ‫َف َأ ْح َس َن ا ْل ُو ُض‬
،‫ غ ُِف َر َل ُه َما َب ْينَ ُه َو َب ْي َن ا ْل ُج ُم َع ِة‬،‫ت‬ َ ‫َو َأن َْص‬
».ٍ‫َو ِز َيا َد ُة َث َل َث ِة َأ َّيام‬
ಅಬೂ ಹುರೈರ(h) ರಿಂದ ವರದಿ: ಪ್ರವ ಾದಿ(g)
ಯವರು ಹೇಳಿದರು: “ಯಾರಾದರೂ ಅತ್ಯುತ್ತಮ
ರೀತಿಯಲ್ಲಿ ವುದೂ ನಿರ್ವಹಿಸಿ, ಜುಮಾ ನಮಾಝ್‌ಗೆ
ಬಂದು, ಮೌನವಾಗಿ ಕುಳಿತು ಕುತುಬ ಆಲಿಸಿದರೆ, ಆ
ಜುಮುಅ (ಶುಕ್ರವಾರ) ಮತ್ತು ಮುಂದಿನ ಜುಮುಅದ
(ಶುಕ್ರವ ಾರದ) ನಡುವೆ ಸಂಭವಿಸುವ ಪಾಪಗಳನ್ನು
ಮನ್ನಿಸಲಾಗುವುದು. ಮಾತ್ರವಲ್ಲ ಹೆಚ್ಚುವರಿ ಮೂರು
ವುದೂ ನಿರ್ವಹಿಸುವುದು 18

ದಿನಗಳ ಪಾಪಗಳನ್ನೂ ಮನ್ನಿಸಲಾಗುವುದು.”[13]

y ವುದೂನಿಂದಾಗಿ ಸ್ವರ್ಗ ಕಡ್ಡಾಯವಾಗುತ್ತದೆ.

‫َع ْن َع ْق َب َة ْب ِن َع ِام ٍر َر ِض َي ال َّل ُه َعنْ ُه َأنَّ النَّبِ َّي‬


‫«ما ِم ْن ُم ْسلِ ٍم‬ ِ
َ :‫َص َّلى ال َّل ُه َع َل ْيه َو َس َّل َم َق َال‬
ِ
‫ ُث َّم َي ُقو ُم َف ُي َص ِّلي‬،‫وء ُه‬ َ ‫ َف ُي ْحس ُن ُو ُض‬،‫َيت ََو َّض ُأ‬
‫ إِ َّل‬،‫ ُم ْقبِ ٌل َع َل ْي ِه َما بِ َق ْلبِ ِه َو َو ْج ِه ِه‬،‫َر ْك َع َت ْي ِن‬
».‫ت َل ُه ا ْل َجنَّ ُة‬
ْ ‫َو َج َب‬
ಉಕ್ಬ ಇಬ್ನ್ ಆಮಿರ್(h) ರಿಂದ ವರದಿ: ಪ್ರವಾದಿ(g)
ಯವರು ಹೇಳಿದರು: “ಒಬ್ಬ ಮುಸಲ್ಮಾನನು ಅತ್ಯು-
ತಮ
್ತ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಹೃದಯ
ಮತ್ತು ಮುಖವನ್ನು ಕೇಂದ್ರೀಕರಿಸಿ ಎರಡು ರಕಅತ್
ನಮಾಝ್ ನಿರ್ವಹಿಸಿದರೆ ಅವನಿಗೆ ಸ್ವರ್ಗವು ಕಡ್ಡಾ-

13  ಮುಸ್ಲಿಂ
‫‪ವುದೂ ನಿರ್ವಹಿಸುವುದು‬‬ ‫‪19‬‬

‫]‪ಯವಾಗದೆ ಇರುವುದಿಲ್ಲ.”[14‬‬

‫‪y ವುದೂನಿಂದಾಗಿ ಸ್ವರ್ಗದ ಎಂಟು ಬಾಗಿಲುಗಳು ತೆ-‬‬


‫‪ರೆಯುತ್ತವೆ.‬‬

‫اب َر ِض َي ال َّل ُه َعنْ ُه‬ ‫َع ْن ُع َم َر ْب ِن ا ْلخَ َّط ِ‬


‫ِ‬
‫«ما‬ ‫َأنَّ النَّبِ َّي َص َّلى ال َّل ُه َع َل ْيه َو َس َّل َم َق َال‪َ :‬‬
‫ِمنْك ُْم ِم ْن َأ َح ٍد َيت ََو َّض ُأ َف ُي ْبلِغُ — َأ ْو َف ُي ْسبِغُ‬
‫ول‪َ :‬أ ْش َهدُ َأنْ َل إِ َل َه إِ َّل‬ ‫وء‪ُ ،‬ث َّم َي ُق ُ‬
‫— ا ْل َو ُض َ‬
‫ال َّل ُه‪َ ،‬و َأنَّ ُم َح َّمدً ا َع ْبدُ ال َّل ِه َو َر ُسو ُل ُه إِ َّل‬
‫اب ا ْل َجن َِّة ال َّث َمانِ َي ُة‪َ ،‬يدْ ُخ ُل‬ ‫ت َل ُه َأ ْب َو ُ‬‫ُفتِ َح ْ‬
‫ِ‬
‫اء‪».‬‬‫م ْن َأ ِّي َها َش َ‬
‫‪ಉಮರ್ ಇಬ್ನುಲ್ ಖತ್ತಾಬ್(h) ರಿಂದ ವರದಿ: ಪ್ರ-‬‬
‫‪ವಾದಿ(g) ಯವರು ಹೇಳಿದರು: “ನಿಮ್ಮಲ್ಲೊಬ್ಬರು‬‬

‫‪14  ಮುಸ್ಲಿಂ‬‬
ವುದೂ ನಿರ್ವಹಿಸುವುದು 20

ಅತ್ಯುತಮ
್ತ ರೀತಿಯಲ್ಲಿ ವುದೂ ನಿರ್ವಹಿಸಿ ನಂತರ
‘ಅಶ್‌ಹದು ಅನ್ ಲಾ ಇಲಾಹ ಇಲ್ಲಲ
್ಲ ್ಲಾಹ್, ವಅನ್ನ
ಮುಹಮ್ಮದನ್ ಅಬ್ದುಹೂ ವರಸೂಲುಹೂ’ ಎಂದು
ಹೇಳಿದರೆ ಅವರಿಗೆ ಸ್ವರ್ಗದ ಎಂಟು ಬಾಗಿಲುಗಳು
ತೆರೆಯದೆ ಇರುವುದಿಲ್ಲ. ಅವುಗಳಲ್ಲಿ ಯಾವ ಬಾಗಿಲಿನ
ಮೂಲಕವೂ ಅವರಿಗೆ ಸ್ವರ್ಗವನ್ನು ಪ್ರವೇಶಿಸಬಹು-
ದು.”[15]

ವುದೂ ನಿರ್ವಹಿಸುವ ವಿಧಾನ

y ನಿಯ್ಯತ್: “ನಾನು ವುದೂ ನಿರ್ವಹಿಸುತ್ತೇನೆ” ಎಂದು


ಹೃದಯದಲ್ಲಿ ನಿಯ್ಯತ್ ಮಾಡುವುದು. ನಿಯತ್ತ-
ನ್ನು ಬಾಯಿ ಮೂಲಕ ಉಚ್ಚರಿಸಬಾರದು. ನಿಯತ್
ಮಾಡುವುದು ಕಡ್ಡಾಯವಾಗಿದೆ.

َّ‫اب َر ِض َي ال َّل ُه َعنْ ُه َأن‬


ِ ‫َع ْن ُع َم َر ْب ِن ا ْلخَ َّط‬

15  ಮುಸ್ಲಿಂ
ವುದೂ ನಿರ್ವಹಿಸುವುದು 21

‫ «إِن ََّما‬:‫ال َّنبِ َّي َص َّلى ال َّل ُه َع َل ْي ِه َو َس َّل َم َق َال‬


‫ َوإِن ََّما لِك ُِّل ْام ِر ٍئ َما‬،‫ات‬ ِ ‫ْالَعم ُال بِال ِّني‬
َّ َ ْ
».‫ن ََوى‬
ಉಮರ್ ಇಬ್ನುಲ್ ಖತ್ತಾಬ್(h) ರಿಂದ ವರದಿ: ಪ್ರ-
ವಾದಿ(g) ಯವರು ಹೇಳಿದರು: “ಕರ್ಮಗಳು ನಿ-
ಯತ್ತನ್ನು ಅವಲಂಬಿಸಿಕೊಂಡಿವೆ. ಪ್ರತಿಯೊಬ್ಬ ವ್ಯಕ್ತಿ-
ಗೂ ಅವನು ನಿಯ್ಯತ್ ಮಾಡಿದ್ದು ಮಾತ್ರ ಸಿಗುತ್ತದೆ.”[16]

ಮಿಸ್ವಾಕ್ ಮಾಡುವುದು

y ನಂತರ ಮಿಸ್ವಾಕ್ ಬಳಸಿ ಹಲ್ಲುಜ್ಜಬೇಕು. ಇದು ಸು-


ನ್ನತ್ತಾಗಿದೆ.

‫َع ْن َأبِي ُه َر ْي َر َة َر ِض َي ال َّل ُه َعنْ ُه َأنَّ النَّبِ َّي‬


‫ « َل ْو َل َأنْ َأ ُش َّق‬:‫َص َّلى ال َّل ُه َع َل ْي ِه َو َس َّل َم َق َال‬
16  ಅಲ್‌ಬುಖಾರಿ, ಮುಸ್ಲಿಂ
ವುದೂ ನಿರ್ವಹಿಸುವುದು 22

ِ ‫اك مع ا ْلو ُض‬


ِ ِ
».‫وء‬ ُ َ َ ‫الس َو‬ِّ ِ‫َع َلى ُأ َّمتي َلَ َم ْرت ُُه ْم ب‬
ಅಬೂ ಹುರೈರ(h) ರಿಂದ ವರದಿ: ಪ್ರವ ಾದಿ(g)
ಯವರು ಹೇಳಿದರು: “ನನ್ನ ಸಮುದಾಯಕ್ಕೆ ಕಷ್ಟವಾ-
ಗಲಾರದು ಎಂದಾಗಿದ್ದರೆ ವುದೂ ನಿರ್ವಹಿಸುವುದಕ್ಕೆ
ಮುಂಚೆ ಮಿಸ್ವಾಕ್ ಮಾಡಬೇಕೆಂದು ನಾನು ಅವರಿಗೆ
ಆದೇಶಿಸುತ್ತಿದ್ದೆ.”[17]

ُّ‫ ُكنَّا ن ُِعد‬:‫ت‬ ْ ‫َع ْن َعائِ َش َة َر ِض َي ال َّل ُه َعن َْها َقا َل‬
ْ‫اء َأن‬ ِ
َ ‫َل ُه س َوا َك ُه َو َط ُه‬
َ ‫ َف َي ْب َع ُث ُه ال َّل ُه َما َش‬.‫ور ُه‬
.‫ َو َيت ََو َّض ُأ‬،‫ َف َيت ََس َّو ُك‬.‫َي ْب َع َث ُه ِم َن ال َّل ْي ِل‬
ಆಯಿಶ(i) ರಿಂದ ವರದಿ: “ನಾವು ಪ್ರವ ಾದಿ(g)
ಯವರಿಗೆ ಮಿಸ್ವಾಕ್ ಮತ್ತು ವುದೂ ನಿರ್ವಹಿಸುವುದ-
ಕ್ಕಿರುವ ನೀರನ್ನು ಸಿದ್ಧಪಡಿಸುತ್ತಿದ್ದೆವು. ರಾತ್ರಿ ಅಲ್ಲಾಹು

17  ಅಹ್ಮದ್
ವುದೂ ನಿರ್ವಹಿಸುವುದು 23

ಇಚ್ಛಿಸಿದಾಗ ಅವರು ಎದ್ದು ಮಿಸ್ವಾಕ್ ಮಾಡುತ್ತಿದರ


್ದ ು
ಮತ್ತು ವುದೂ ನಿರ್ವಹಿಸುತ್ತಿದರ
್ದ ು.”[18]

ಬಿಸ್ಮಿಲ್ಲಾಹ್ ಹೇಳುವುದು

y ನಂತರ ಬಿಸ್ಮಿಲ್ಲಾಹ್ ಎಂದು ಹೇಳಬೇಕು.

‫ك َر ِض َي ال َّل ُه َعنْ ُه َأنَّ النَّبِ َّي‬ ٍ ِ‫َس ب ِن مال‬


َ ْ ِ ‫َع ْن َأن‬
ِ ‫ص َّلى ال َّله ع َلي ِه وس َّلم و َضع يدَ ه فِي ا ْلم‬
‫اء‬ َ ُ َ َ َ َ َ َ ْ َ ُ َ
ِ ِ
:‫» َق َال‬.‫ «ت ََو َّضئُوا بِ ْس ِم ال َّله‬:‫َو َق َال ل ْص َحابِه‬َ ِ

‫اء َيخْ ُر ُج ِم ْن َب ْي ِن َأ َصابِ ِع ِه َحتَّى‬ َ ‫ت ا ْل َم‬ ُ ‫َف َر َأ ْي‬


.‫آخ ِر ِه ْم‬
ِ ‫تَو َّضئُوا ِمن ِعن ِْد‬
ْ َ
ಅನಸ್(h) ರಿಂದ ವರದಿ: ಪ್ರವ ಾದಿ(g) ಯವರು
ಕೈಯನ್ನು ನೀರಿನಲ್ಲಿಟ್ಟು ಸಹಾಬಿಗಳೊಡನೆ ಹೇಳಿದರು:
“ಅಲ್ಲಾಹನ ಹೆಸರು ಹೇಳಿ ವುದೂ ನಿರ್ವಹಿಸಿರಿ.”

18  ಮುಸ್ಲಿಂ
ವುದೂ ನಿರ್ವಹಿಸುವುದು 24

ಅನಸ್(h) ಹೇಳುತ್ತಾರೆ: “ಆಗ ಅವರ ಬೆರಳುಗಳ


ಸಂಧಿಯಿಂದ ನೀರು ಹರಿದು ಬರುವುದನ್ನು ನಾನು
ಕಾಣುತ್ತಿದ್ದೆ. ಸಹಾಬಿಗಳಲ್ಲಿ ಕೊನೆಯ ವ್ಯಕ್ತಿ ವುದೂ ನಿ-
ರ್ವಹಿಸುವ ತನಕ ನೀರು ಬರುತ್ತಲೇ ಇತ್ತು.”[19]

ಅಂಗೈಗಳನ್ನು ತೊಳೆಯುವುದು

y ನಂತರ ಅಂಗೈಗಳನ್ನು ಮೂರು ಸಲ ತೊಳೆಯಬೇಕು.


ಇದು ಸುನ್ನತ್ತಾಗಿದೆ.

‫َع ْن ُح ْم َرانَ َأنَّ ُع ْث َمانَ َر ِض َي ال َّل ُه َعنْ ُه‬


،‫ث ِم َر ٍار‬ َ ‫ َف َأ ْف َر َغ َع َلى َك َّف ْي ِه َث َل‬،‫َاء‬
ٍ ‫دعا بِإِن‬
َ َ
ِ‫ول ال َّله‬َ ‫ت َر ُس‬ َ َ
ُ ‫ َرأ ْي‬:‫ ُث َّم َقال‬...‫َفغ ََس َل ُه َما‬
‫َص َّلى ال َّل ُه َع َل ْي ِه َو َس َّل َم ت ََو َّض َأ ن َْح َو ُو ُضوئي‬
ِ

.‫َه َذا‬

19  ಅನ್ನಸಾಈ
ವುದೂ ನಿರ್ವಹಿಸುವುದು 25

ಹುಮ್ರಾನ್‌(h) ರಿಂದ ವರದಿ: ಉಸ್ಮಾನ್(h) ರವರು


ನೀರಿನ ಪಾತ್ರೆಯನ್ನು ತರಿಸಿದರು. ನೀರನ್ನು ತಮ್ಮ
ಅಂಗೈಗಳ ಮೇಲೆ ಮೂರು ಸಲ ಸುರಿದು ಅವುಗಳ-
ನ್ನು ತೊಳೆದರು.... ನಂತರ ಹೇಳಿದರು: “ನಾನು ಈಗ
ವುದೂ ನಿರ್ವಹಿಸಿದ ರೀತಿಯಲ್ಲಿಯೇ ಪ್ರವ ಾದಿ(g)
ಯವರು ವುದೂ ನಿರ್ವಹಿಸುವುದನ್ನು ನಾನು ಕಂ-
ಡಿದ್ದೇನೆ.”[20]

y ನಿದ್ದೆಯಿಂದ ಎದ್ದಾಗ ಅಂಗೈಗಳನ್ನು ಮೂರು ಸಲ ತೊ-


ಳೆಯುವುದು ಕಡ್ಡಾಯವಾಗಿದೆ.

‫َع ْن َأبِي ُه َر ْي َر َة َر ِض َي ال َّل ُه َعنْ ُه َأنَّ النَّبِ َّي‬


ِ
ْ ‫ «إِ َذا‬:‫َص َّلى ال َّل ُه َع َل ْيه َو َس َّل َم َق َال‬
‫اس َت ْي َق َظ‬
ِ ‫الن‬
‫َاء‬ ِ ْ ‫ َف َل َيغ ِْم ْس َيدَ ُه فِي‬،‫َأ َحدُ ك ُْم ِم ْن ن َْو ِم ِه‬
‫َت‬ ْ ‫ َفإِ َّن ُه َل َيدْ ِري َأ ْي َن َبات‬.‫َحتَّى َيغ ِْس َل َها َث َل ًثا‬
20  ಅಲ್‌ಬುಖಾರಿ, ಮುಸ್ಲಿಂ
ವುದೂ ನಿರ್ವಹಿಸುವುದು 26

».‫َيدُ ُه‬
ಅಬೂ ಹುರೈರ(h) ರಿಂದ ವರದಿ: ಪ್ರವ ಾದಿ(g)
ಯವರು ಹೇಳಿದರು: “ನಿಮ್ಮಲ್ಲೊಬ್ಬರು ನಿದ್ದೆಯಿಂದ
ಎದ್ದರೆ ತನ್ನ ಕೈಯನ್ನು ಮೂರು ಸಲ ತೊಳೆಯುವ
ತನಕ ಪಾತ್ರೆಯಲ್ಲಿ ಮುಳುಗಿಸಬಾರದು. ಏಕೆಂದರೆ
ರಾತ್ರಿ ತನ್ನ ಕೈ ಎಲ್ಲಿತ್ತೆಂದು ಅವನಿಗೆ ತಿಳಿದಿಲ್ಲ.”[21]

ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರೆಳೆದು


ಹೊರ ಬಿಡುವುದು

y ನಂತರ ಬಾಯಿ ಮುಕ್ಕಳಿಸಬೇಕು. ನೀರನ್ನು ಬಾಯಿಗೆ


ಹಾಕಿ ಚೆನ್ನಾಗಿ ಅಲ್ಲಾಡಿಸಬೇಕು. ನಂತರ ಮೂಗಿನೊ-
ಳಗೆ ನೀರನ್ನು ಎಳೆದು ರಭಸವಾಗಿ ಹೊರ ಬಿಡಬೇಕು.

‫َع ْن ُح ْم َرانَ َأنَّ ُع ْث َمانَ َر ِض َي ال َّل ُه َعنْ ُه‬

21  ಅಲ್‌ಬುಖಾರಿ, ಮುಸ್ಲಿಂ


ವುದೂ ನಿರ್ವಹಿಸುವುದು 27

،‫ ُث َّم ت ََم ْض َم َض‬،‫وء‬ ِ ‫َأد َخ َل ي ِمي َنه فِي ا ْلو ُض‬


َ ُ َ ْ
‫ت‬ ‫ي‬
ُ ْ َ َ
‫أ‬ ‫ر‬ : َ
‫ال‬ َ
‫ق‬ ‫م‬ َّ ُ
‫ث‬ ... ‫ر‬ َ
َ ْ َ ْ َ َ َ ْ ‫َو‬
‫ث‬ ‫ن‬ ‫ت‬ ‫اس‬ ‫و‬ ، ‫ق‬ َ
‫ْش‬ ‫ن‬ ‫ت‬ ‫اس‬
‫ول ال َّل ِه َص َّلى ال َّل ُه َع َل ْيه َو َس َّل َم ت ََو َّض َأ‬
ِ َ ‫َر ُس‬
ِ
.‫ن َْح َو ُو ُضوئي َه َذا‬
ಹುಮ್ರಾನ್‌(h) ರಿಂದ ವರದಿ: ಉಸ್ಮಾನ್(h) ರವರು
ತಮ್ಮ ಬಲಗೈಯನ್ನು ನೀರಿನ ಪಾತ್ರೆಗೆ ತೂರಿಸಿದರು.
ನಂತರ ಬಾಯಿ ಮುಕ್ಕಳಿಸಿದರು ಮತ್ತು ಮೂಗಿನೊಳಗೆ
ನೀರು ಎಳೆದು ಹೊರ ಬಿಟ್ಟರು... ನಂತರ ಹೇಳಿದರು:
“ನಾನು ಈಗ ವುದೂ ನಿರ್ವಹಿಸಿದ ರೀತಿಯಲ್ಲಿಯೇ
ಪ್ರವ ಾದಿ(g) ಯವರು ವುದೂ ನಿರ್ವಹಿಸುವುದನ್ನು
ನಾನು ಕಂಡಿದ್ದೇನೆ.”[22]

y ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರೆಳೆ-


ಯುವುದು ಒಂದೇ ಕೈಯಲ್ಲಿ ಒಟ್ಟೊಟ್ಟಿಗೆ ಆಗಿರಬೇಕು.

22  ಅಲ್‌ಬುಖಾರಿ, ಮುಸ್ಲಿಂ


ವುದೂ ನಿರ್ವಹಿಸುವುದು 28

ಇದನ್ನು ಮೂರು ಸಲ ಆವರ್ತಿಸಬೇಕು.

‫َع ْن َع ْب ِد ال َّل ِه ْب ِن َز ْي ٍد َر ِض َي ال َّل ُه َعنْ ُه َأ َّن ُه‬


.‫احــدَ ٍة‬ ِ ‫َف و‬ ِ
َ ٍّ ‫اس َتن َْش َق م ْن ك‬ ْ ‫َم ْض َم َض َو‬
َ
َ‫ َهك ََذا كَان‬:‫ ُث َّم َقال‬.‫ك َث َل ًثا‬ َ ِ‫َف َف َع َل َذل‬
.‫ول ال َّل ِه َص َّلى ال َّل ُه َع َل ْي ِه َو َس َّل َم‬
ِ ‫ُو ُضوء رس‬
ُ َ ُ
ಅಬ್ದುಲ ್ಲಾಹ್ ಇಬ್ನ್ ಝೈದ್(h) ರಿಂದ ವರದಿ: ಅವರು
ಒಂದೇ ಕೈಯಿಂದ ಬಾಯಿಗೆ ಮತ್ತು ಮೂಗಿಗೆ ನೀರು
ಹಾಕಿ ಬಾಯಿ ಮುಕ್ಕಳಿಸಿದರು ಮತ್ತು ಮೂಗಿಗೆ ನೀರೆ-
ಳೆದರು. ಅವರು ಇದನ್ನು ಮೂರು ಸಲ ಮಾಡಿದರು.
ನಂತರ ಹೇಳಿದರು: “ಪ್ರವಾದಿ(g) ಯವರ ವುದೂ
ಇದೇ ರೀತಿಯಲ್ಲಿತ್ತು.”[23]

y ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀ-

23  ಮುಸ್ಲಿಂ
ವುದೂ ನಿರ್ವಹಿಸುವುದು 29

ರೆಳೆಯುವುದು ಬಲಗೈಯಿಂದಾಗಿರಬೇಕು ಮತ್ತು


ಮೂಗಿನಿಂದ ನೀರು ಹೊರ ಹಾಕುವುದು ಎಡಗೈ-
ಯಿಂದಾಗಿರಬೇಕು.

‫ب َر ِض َي‬ ٍ ِ‫َع ْن َع ْب ِد َخ ْي ٍر َأنَّ َعلِ َّي ْب َن َأبِي َطال‬


،‫أل َف َم ُه‬ َ ‫ َف َم‬،‫ال َّل ُه َعنْ ُه َأ ْد َخ َل َيدَ ُه ا ْل ُي ْمنَى‬
.‫ َو َن َث َر بِ َي ِد ِه ا ْل ُي ْس َرى‬،‫ َو ْاس َتن َْش َق‬،‫َف َم ْض َم َض‬
ْ‫ َم ْن َس َّر ُه َأن‬:‫ ُث َّم َق َال‬.‫ات‬ ٍ ‫ث مر‬
َّ َ َ ‫َف َع َل َه َذا َث َل‬
ِ‫ول ال َّل ِه ص َّلى ال َّله ع َليه‬ ِ ‫ور َر ُس‬ِ ‫َينْ ُظ َر إِ َلى ُط ُه‬
ْ َ ُ َ
ُ ‫َو َس َّل َم َف َه َذا ُط ُه‬
.‫ور ُه‬
ಅಬ್ದು ಖೈರ್(h) ರಿಂದ ವರದಿ: ಅಲಿ ಇಬ್ನ್ ಅಬೂ
ತಾಲಿಬ್(h) ಬಲಗೈಯಿಂದ ನೀರು ತೆಗೆದು ಬಾಯಿಗೆ
ತುಂಬಿಸಿ ಮುಕ್ಕಳಿಸಿದರು ಮತ್ತು ಮೂಗಿಗೆ ನೀರೆಳೆದರು.
ನಂತರ ಎಡಗೈಯಿಂದ ನೀರನ್ನು ಹೊರಗೆ ಹಾಕಿದರು.
ವುದೂ ನಿರ್ವಹಿಸುವುದು 30

ಅವರು ಇದನ್ನು ಮೂರು ಸಲ ಮಾಡಿದರು. ನಂತರ


ಹೇಳಿದರು: “ಪ್ರವಾದಿ(g) ಯವರು ವುದೂ ನಿರ್ವ-
ಹಿಸಿದ ವಿಧಾನವನ್ನು ನ�ೋಡಲು ಯಾರಿಗಾದರೂ
ಇಷ್ಟವಿದ್ದರೆ ನ�ೋಡಿ, ಇದೇ ಅವರು ವುದೂ ನಿರ್ವಹಿ-
ಸಿದ ವಿಧಾನ”.[24]

y ಮೂಗಿಗೆ ನೀರೆಳೆಯುವುದು ಕಡ್ಡಾಯವಾಗಿದೆ. ವಿಶೇ-


ಷವಾಗಿ ನಿದ್ದೆಯಿಂದ ಎದ್ದಾಗ.

‫َع ْن َأبِي ُه َر ْي َر َة َر ِض َي ال َّل ُه َعنْ ُه َأنَّ النَّبِ َّي‬


‫ «إِ َذا ت ََو َّض َأ‬:‫َص َّلى ال َّل ُه َع َل ْي ِه َو َس َّل َم َق َال‬
».‫ ُث َّم لِ َينْتَثِ ْر‬،‫اء‬ ِِ ِ ِ
ً ‫َأ َحدُ ك ُْم َفل َي ْج َع ْل في َأنْفه َم‬
ಅಬೂ ಹುರೈರ(h) ರಿಂದ ವರದಿ: ಪ್ರವ ಾದಿ(g)
ಯವರು ಹೇಳಿದರು: “ನಿಮ್ಮಲ್ಲೊಬ್ಬರು ವುದೂ ನಿರ್ವ-
ಹಿಸುವಾಗ ತನ್ನ ಮೂಗಿನಲ್ಲಿ ನೀರನ್ನು ಹಾಕಿ ನಂತರ

24  ಅದ್ದಾರಿಮಿ
ವುದೂ ನಿರ್ವಹಿಸುವುದು 31

ಹೊರಗೆ ಬಿಡಲಿ.”[25]

ಅಲ್‌ಬುಖಾರಿ ಮತ್ತು ಮುಸ್ಲಿಮ್‌ನಲ್ಲಿರುವ ಇನ್ನೊಂದು


ವರದಿಯಲ್ಲಿ ಪ್ರವಾದಿ(g) ಯವರು ಹೇಳುತ್ತಾರೆ:

‫َام ِه َف ْل َي ْس َتنْثِ ْر‬


ِ ‫«إِ َذا اس َتي َق َظ َأحدُ كُم ِمن من‬
َ ْ ْ َ ْ ْ
َ
‫يت َعلى‬ ِ َ ِ ٍ
َّ َّ‫ َفإن‬.‫ث َم َّرات‬
ُ ‫الش ْيطانَ َيب‬ َ ‫َث َل‬
.»‫يم ِه‬ِ ‫اش‬
ِ ‫َخي‬
َ
“ನಿಮ್ಮಲ್ಲೊಬ್ಬರು ನಿದ್ದೆಯಿಂದ ಎದ್ದರೆ ಮೂರು ಸಲ
ಮೂಗಿಗೆ ನೀರೆಳೆದು ಹೊರಬಿಡಲಿ. ಏಕೆಂದರೆ ರಾತ್ರಿ
ಶೈತಾನನು ಮೂಗಿನೊಳಗೆ ವಾಸ ಮಾಡುತ್ತಾನೆ.”

y ಉಪವಾಸ ಇಲ್ಲದಿದ್ದರೆ ಮೂಗಿನೊಳಗೆ ಗರಿಷ್ಠವ ಾಗಿ


ನೀರೆಳೆಯಬೇಕು.

25  ಅಲ್‌ಬುಖಾರಿ, ಮುಸ್ಲಿಂ


ವುದೂ ನಿರ್ವಹಿಸುವುದು 32

َّ‫يط ْب ِن َصبِ َر َة َر ِض َي ال َّل ُه َع ْن ُه َأن‬ ِ ‫عن َل ِق‬


ْ َ
‫«أ ْسبِ ِغ‬ َ :‫ال َّنبِ َّي َص َّلى ال َّل ُه َع َل ْي ِه َو َس َّل َم َق َال‬
ْ‫ إِ َّل َأن‬،‫اق‬ ِ ‫ َو َبالِغْ فِي ِال ْستِن َْش‬،‫ا ْل ُو ُضوء‬
َ
».‫َت ُكونَ َصائِ ًما‬
ಲಕೀತ್ ಇಬ್ನ್ ಸಬಿರ(h) ರಿಂದ ವರದಿ: ಪ್ರವಾದಿ(g)
ಯವರು ಹೇಳಿದರು: “ಅತ್ಯುತಮ
್ತ ವಾಗಿ ವುದೂ ನಿರ್ವ-
ಹಿಸಿರಿ. ಮೂಗಿಗೆ ಗರಿಷ್ಠವಾಗಿ ನೀರು ಎಳೆಯಿರಿ. ನೀವು
ಉಪವಾಸ ಇಲ್ಲದವರಾಗಿದ್ದರೆ ಮಾತ್ರ.”[26]

ಮುಖ ತೊಳೆಯುವುದು

y ನಂತರ ಮುಖವನ್ನು ತೊಳೆಯಬೇಕು. ಮುಖ


ಎಂದರೆ ಹಣೆಯಲ್ಲಿ ಕೂದಲು ಬೆಳೆಯುವ ಜಾಗದಿಂದ
ತೊಡಗಿ ಗಲ್ಲ ಮತ್ತು ದಾಡಿಯವರೆಗೆ ಹಾಗೂ ಒಂದು

26  ಅಬೂದಾವೂದ್
ವುದೂ ನಿರ್ವಹಿಸುವುದು 33

ಕಿವಿಯಿಂದ ಇನ್ನೊಂದು ಕಿವಿಯವರೆಗಿನ ಭಾಗ.


ಮುಖ ತೊಳೆಯುವುದು ಕಡ್ಡಾಯವಾಗಿದೆ. ಏಕೆಂದರೆ
ಅಲ್ಲಾಹು ಹೇಳುತ್ತಾನೆ:

‫﴿ﭑ ﭒ ﭓ ﭔ ﭕ‬
﴾‫ﭖﭗﭘﭙﭢ‬
“ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್ ನಿರ್ವಹಿಸ-
ಲು ಬಯಸಿದರೆ ನಿಮ್ಮ ಮುಖಗಳನ್ನು ತೊಳೆಯಿರಿ...”[27]

y ಮುಖವನ್ನು ಮೂರು ಸಲ ತೊಳೆಯಬೇಕು.

‫َع ْن ُح ْم َرانَ َأنَّ ُع ْث َمانَ َر ِض َي ال َّل ُه َعنْ ُه غ ََس َل‬


ُ ‫ َر َأ ْي‬:‫ ُث َّم َق َال‬...‫ات‬ ٍ ‫ث مــر‬
‫ت‬ َّ َ َ ‫َو ْج َه ُه َث َل‬
‫ول ال َّل ِه َص َّلى ال َّل ُه َع َل ْيه َو َس َّل َم ت ََو َّض َأ‬
ِ َ ‫َر ُس‬

27  ಸೂರ ಅಲ್‌ಮಾಇದ 6


ವುದೂ ನಿರ್ವಹಿಸುವುದು 34

.‫ن َْح َو ُو ُضوئِي َه َذا‬


ಹುಮ್ರಾನ್(h) ರಿಂದ ವರದಿ: ಉಸ್ಮಾನ್(h)ರವರು
ಮೂರು ಸಲ ಮುಖವನ್ನು ತೊಳೆದರು. ನಂತರ
ಹೇಳಿದರು: “ನಾನು ಈಗ ವುದೂ ನಿರ್ವಹಿಸಿದ ರೀತಿ-
ಯಲ್ಲಿಯೇ ಪ್ರವಾದಿ(g) ಯವರು ವುದೂ ನಿರ್ವಹಿ-
ಸುವುದನ್ನು ನಾನು ಕಂಡಿದ್ದೇನೆ.”[28]

y ದಾಡಿ ದಟ್ಟವ ಾಗಿದ್ದರೆ ಅದರ ಒಳಭಾಗಗಳಿಗೆ ನೀರು


ಹಾಯಿಸುವುದು ಸುನ್ನತ್ತಾಗಿದೆ.

‫َع ْن ُع ْث َمانَ َر ِض َي ال َّل ُه َعنْ ُه َأنَّ النَّبِ َّي َص َّلى‬


.‫ال َّل ُه َع َل ْي ِه َو َس َّل َم كَانَ ُيخَ ِّل ُل لِ ْح َي َت ُه‬
ಉಸ್ಮಾನ್(h)ರಿಂದ ವರದಿ: ಪ್ರವಾದಿ(g) ಯವರು
ದಾಡಿ ರ�ೋಮಗಳ ನಡುವೆ ತಮ್ಮ ಬೆರಳುಗಳನ್ನು

28  ಅಲ್‌ಬುಖಾರಿ, ಮುಸ್ಲಿಂ


ವುದೂ ನಿರ್ವಹಿಸುವುದು 35

ತೂರಿಸಿ ತಿಕ್ಕುತ್ದ
ತಿ ರ
್ದ ು.”[29]

y ದಾಡಿ ತೊಳೆಯುವ ವಿಧಾನ: ನೀರನ್ನು ದಾಡಿಯ ಕೆ-


ಳಭಾಗದಿಂದ ತಂದು ದಾಡಿಯ ರ�ೋಮಗಳ ನಡುವೆ
ಬೆರಳುಗಳನ್ನು ತೂರಿಸಿ ತಿಕ್ಕಬೇಕು.

‫َس َر ِض َي ال َّل ُه َعنْ ُه َأنَّ النَّبِ َّي َص َّلى ال َّل ُه‬ ٍ ‫َع ْن َأن‬
‫ َأ َخ َذ َك ًّفا ِم ْن‬،‫َع َل ْي ِه َو َس َّل َم كَانَ إِ َذا ت ََو َّض َأ‬
،‫ َفخَ َّل َل بِ ِه لِ ْح َي َت ُه‬،‫ت َحنَكِ ِه‬ ٍ ‫م‬
َ ‫ َف َأ ْد َخ َل ُه ت َْح‬،‫اء‬ َ
ِ َ
».‫«هك ََذا أ َم َرني َر ِّبي َع َّز َو َج َّل‬ َ :‫َو َق َال‬
ಅನಸ್(h) ರಿಂದ ವರದಿ: ಪ್ರವ ಾದಿ(g) ಯವರು
ವುದೂ ನಿರ್ವಹಿಸುವಾಗ ಅಂಗೈ ತುಂಬಾ ನೀರನ್ನು
ತೆಗೆದು ಅದನ್ನು ತಮ್ಮ ದಾಡಿಯ ಕೆಳಭಾಗದಿಂದ
ದಾಡಿಯೊಳಗೆ ತೂರಿಸುತ್ತಿದ್ದರ ು. ನಂತರ ದಾಡಿ

29  ಅಹ್ಮದ್, ಅತ್ತಿರ್ಮಿದಿ


ವುದೂ ನಿರ್ವಹಿಸುವುದು 36

ರ�ೋಮಗಳ ನಡುವೆ ಬೆರಳುಗಳನ್ನು ತೂರಿಸಿ ತಿಕ್ಕುತ್-ತಿ


ದ್ದರು. ನಂತರ ಹೇಳುತ್ತಿದರ
್ದ ು: “ನನ್ನ ರಬ್ಬ್ ಈ ರೀತಿ
ಮಾಡಲು ನನಗೆ ಆಜ್ಞಾಪಿಸಿದ್ದಾನೆ.”[30]

ಕೈಗಳನ್ನು ಮೊಣಕೈಗಳ ತನಕ ತೊಳೆಯುವುದು

y ನಂತರ ಕೈಗಳನ್ನು ಮೊಣಕೈಗಳ ಸಹಿತ ಪೂರ್ಣವಾಗಿ


ತೊಳೆಯಬೇಕು. ಇದು ಕಡ್ಡಾಯವಾಗಿದೆ. ಏಕೆಂದರೆ
ಅಲ್ಲಾಹು ಹೇಳುತ್ತಾನೆ:

‫﴿ﭑ ﭒ ﭓ ﭔ ﭕ‬
‫ﭖﭗﭘﭙ‬
﴾‫ﭚﭛﭜ‬
“ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್ ನಿರ್ವಹಿಸಲು
ಬಯಸಿದರೆ ನಿಮ್ಮ ಮುಖಗಳನ್ನು ತೊಳೆಯಿರಿ ಮತ್ತು

30  ಅಬೂದಾವೂದ್
ವುದೂ ನಿರ್ವಹಿಸುವುದು 37

ಕೈಗಳನ್ನು ಮೊಣಕೈಗಳವರೆಗೆ ತೊಳೆಯಿರಿ...”[31]

‫ت‬ ُ ‫ َر َأ ْي‬:‫َع ْن ُن َع ْي ِم ْب ِن َع ْب ِد ال َّل ِه ا ْل ُم ْج ِم ِر َق َال‬


َ‫ َفغ ََس َل َو ْج َه ُه َف َأ ْس َبغ‬،‫َأ َبا ُه َر ْي َر َة َيت ََو َّض ُأ‬
‫ ُث َّم غ ََس َل َيدَ ُه ا ْل ُي ْمنَى َحتَّى َأ ْش َر َع‬،‫وء‬ َ ‫ا ْل ُو ُض‬
‫ ُث َّم َيدَ ُه ا ْل ُي ْس َرى َحتَّى أ ْش َر َع في‬،‫فِي ا ْل َع ُضد‬
ِ َ ِ

‫ول ال َّل ِه‬ َ ‫ت َر ُس‬ ُ ‫ َهك ََذا َر َأ ْي‬:‫ ُث َّم َق َال‬،‫ا ْل َع ُض ِد‬
.‫َص َّلى ال َّل ُه َع َل ْي ِه َو َس َّل َم َيت ََو َّض ُأ‬
ನುಐಮ್ ಇಬ್ನ್ ಅಬ್ದುಲ ್ಲಾಹ್ ಅಲ್ ಮುಜ್ಮಿರ್(h)
ರಿಂದ ವರದಿ: ಅಬೂ ಹುರೈರ(h) ವುದೂ ಮಾಡು-
ವುದನ್ನು ನಾನು ಕಂಡಿದ್ದೇನೆ.... ಅವರು ಮುಖವನ್ನು
ಅತ್ಯುತ್ತಮ ರೀತಿಯಲ್ಲಿ ತೊಳೆದರು. ನಂತರ ಬಲಗೈ-
ಯನ್ನು ತ�ೋಳಿನ ತನಕ ತೊಳೆದರು. ನಂತರ ಎಡ-

31  ಸೂರ ಅಲ್‌ಮಾಇದ 6


ವುದೂ ನಿರ್ವಹಿಸುವುದು 38

ಗೈಯನ್ನು ಸಹ ತ�ೋಳಿನ ತನಕ ತೊಳೆದರು. ನಂತರ


ಹೇಳಿದರು: “ಪ್ರವಾದಿ(g) ಯವರು ಈ ರೀತಿ ವುದೂ
ಮಾಡುವುದನ್ನು ನಾನು ಕಂಡಿದ್ದೇನೆ.”[32]

y ಕೈಗಳನ್ನು ಮೂರು ಸಲ ತೊಳೆಯಬೇಕು. ಬಲಗೈಯ-


ನ್ನು ಮೊದಲು ತೊಳೆಯಬೇಕು.

‫َع ْن ُح ْم َرانَ َأنَّ ُع ْث َمانَ َر ِض َي ال َّل ُه َعنْ ُه غ ََس َل‬


ٍ ‫ث مر‬ ِ
‫ ُث َّم‬،‫ات‬ َّ َ َ ‫َيدَ ُه ا ْل ُي ْمنَى إِ َلى ا ْلم ْر َف ِق َث َل‬
:‫ ُث َّم َق َال‬...‫ك‬ َ ِ‫غ ََس َل َيدَ ُه ا ْل ُي ْس َرى ِم ْث َل َذل‬
‫ول ال َّل ِه َص َّلى ال َّل ُه َع َل ْي ِه َو َس َّل َم‬
َ ‫ت َر ُس‬ ُ ‫َر َأ ْي‬
ِ َ
.‫ت ََو َّضأ ن َْح َو ُو ُضوئي َه َذا‬
ಹುಮ್ರಾನ್(h) ರಿಂದ ವರದಿ: ಉಸ್ಮಾನ್(h)
ರವರು ಬಲಗೈಯನ್ನು ಮೊಣಕೈಯ ತನಕ ಮೂರು

32  ಮುಸ್ಲಿಂ
ವುದೂ ನಿರ್ವಹಿಸುವುದು 39

ಸಲ ತೊಳೆದರು. ನಂತರ ಅದೇ ರೀತಿ ಎಡಗೈಯನ್ನು


ತೊಳೆದರು. ನಂತರ ಹೇಳಿದರು: “ನಾನು ಈಗ ವುದೂ
ನಿರ್ವಹಿಸಿದ ರೀತಿಯಲ್ಲಿಯೇ ಪ್ರವಾದಿ(g) ಯವರು
ವುದೂ ನಿರ್ವಹಿಸುವುದನ್ನು ನಾನು ಕಂಡಿದ್ದೇನೆ.”[33]

َ‫ كَان‬:‫ت‬ ْ ‫َع ْن َعائِ َش َة َر ِض َي ال َّل ُه َعن َْها َقا َل‬


ِ ِ
‫ب ال َّت َي ُّم َن‬ ُّ ‫ال َّنبِ ُّي َص َّلى ال َّل ُه َع َل ْيه َو َس َّل َم ُيح‬
.‫ َو َت َن ُّعلِ ِه‬،‫ َوت ََر ُّجلِ ِه‬،‫ور ِه‬
ِ ‫فِي ُط ُه‬
ಆಯಿಶ(i) ರಿಂದ ವರದಿ: ಪ್ರವ ಾದಿ(g) ಯವರು
ಶುದ್ಧೀಕರಣ, ತಲೆ ಬಾಚುವುದು, ಪಾದರಕ್ಷೆ ಧರಿಸುವು-
ದು ಮುಂತಾದವುಗಳನ್ನು ಮಾಡುವಾಗ ಬಲಭಾಗಕ್ಕೆ
ಪ್ರಾಶಸ್ತ್ಯ ನೀಡುತ್ತಿದರ
್ದ ು.”[34]

y ಕೈಬೆರಳುಗಳ ಮಧ್ಯಭ ಾಗವನ್ನು ತೊಳೆಯಬೇಕು.

33  ಅಲ್‌ಬುಖಾರಿ, ಮುಸ್ಲಿಂ


34  ಅಲ್‌ಬುಖಾರಿ, ಮುಸ್ಲಿಂ
ವುದೂ ನಿರ್ವಹಿಸುವುದು 40

َّ‫يط ْب ِن َصبِ َر َة َر ِض َي ال َّل ُه َع ْن ُه َأن‬ ِ ‫عن َل ِق‬


ْ َ
‫«أ ْسبِ ِغ‬ َ :‫ال َّنبِ َّي َص َّلى ال َّل ُه َع َل ْي ِه َو َس َّل َم َق َال‬
».ِ‫ َو َخ ِّل ْل َب ْي َن ْالَ َصابِع‬،‫وء‬
َ ‫ا ْل ُو ُض‬
ಲಕೀತ್ ಇಬ್ನ್ ಸಬಿರ(h) ರಿಂದ ವರದಿ: ಪ್ರವಾದಿ(g)
ಯವರು ಹೇಳಿದರು: “ಅತ್ಯುತಮ
್ತ ವಾಗಿ ವುದೂ ನಿರ್ವ-
ಹಿಸಿರಿ. ಬೆರಳುಗಳ ಮಧ್ಯಭ ಾಗವನ್ನು ತಿಕ್ಕಿರಿ.”[35]

‫اس َر ِض َي ال َّل ُه َعنْ ُه َأنَّ النَّبِ َّي‬ ٍ ‫َع ِن ا ْب ِن َع َّب‬


‫ «إِ َذا ت ََو َّض ْأ َت‬:‫َص َّلى ال َّل ُه َع َل ْي ِه َو َس َّل َم َق َال‬
».‫ك‬ َ ‫ك َو ِر ْج َل ْي‬ َ ‫َفخَ ِّل ْل َب ْي َن َأ َصابِ ِع َيدَ ْي‬
ಇಬ್ನ್ ಅಬ್ಬಾಸ್(h) ರಿಂದ ವರದಿ: ಪ್ರವ ಾದಿ(g)
ಯವರು ಹೇಳಿದರು: “ನೀನು ವುದೂ ನಿರ್ವಹಿಸು-
ವಾಗ ಕೈಬೆರಳುಗಳ ಮತ್ತು ಕಾಲು ಬೆರಳುಗಳ ಮಧ್ಯ-

35  ಅಬೂದಾವೂದ್, ಅತ್ತಿರ್ಮಿದಿ, ಅನ್ನಸ ಾಈ, ಇಬ್ನ್ ಮಾಜ


ವುದೂ ನಿರ್ವಹಿಸುವುದು 41

ಭಾಗವನ್ನು ತಿಕ್ಕಬೇಕು.”[36]

ತಲೆ ಸವರುವುದು

y ನಂತರ ನೀರಿನಿಂದ ತಲೆಯನ್ನು ಸವರಬೇಕು. ಇದು


ಕಡ್ಡಾಯವಾಗಿದೆ. ಏಕೆಂದರೆ ಅಲ್ಲಾಹು ಹೇಳುತ್ತಾನೆ:

‫﴿ﭑ ﭒ ﭓ ﭔ ﭕ ﭖ‬
‫ﭗﭘﭙﭚ‬
﴾‫ﭛﭜﭝﭞ‬
“ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್ ನಿರ್ವಹಿಸಲು
ಬಯಸಿದರೆ ನಿಮ್ಮ ಮುಖಗಳನ್ನು ತೊಳೆಯಿರಿ, ಕೈಗಳ-
ನ್ನು ಮೊಣಕೈಗಳವರೆಗೆ ತೊಳೆಯಿರಿ ಮತ್ತು ತಲೆಯನ್ನು
ಸವರಿರಿ...”[37]

36  ಅತ್ತಿರ್ಮಿದಿ
37  ಸೂರ ಅಲ್‌ಮಾಇದ 6
ವುದೂ ನಿರ್ವಹಿಸುವುದು 42

y ತಲೆ ಸವರುವ ವಿಧಾನ: ತಲೆಯನ್ನು ಸಂಪೂರ್ಣವಾಗಿ


ಒಂದು ಸಲ ಸವರಬೇಕು. ತಲೆಯ ಮುಂಭಾಗದಿಂದ
ಆರಂಭಿಸಿ ಕತ್ನ
ತಿ ಹಿಂಭಾಗದ ತನಕ ನಂತರ ಪುನಃ
ತಲೆಯ ಮುಂಭಾಗದ ತನಕ ಎರಡು ಕೈಗಳಿಂದ ತಲೆ-
ಯನ್ನು ಸವರಬೇಕು.

‫َع ْن َع ْب ِد ال َّل ِه ْب ِن َز ْي ٍد َر ِض َي ال َّل ُه َعنْه َأ َّن ُه‬


‫ َبدَ َأ‬،‫ َف َأ ْق َب َل بِ ِه َما َو َأ ْد َب َر‬.‫َم َس َح َر ْأ َس َه بِ َيدَ ْي ِه‬
ِ ِ
،‫ب بِ ِه َما إِ َلى َق َفا ُه‬ َ ‫بِ ُم َقدَّ ِم َر ْأسه َحتَّى َذ َه‬
‫وفِي‬. ِ ِ ِ ‫ُثم ردهما إِ َلى ا ْلمك‬
َ ‫َان ا َّلذي َبدَ َأ منْ ُه‬ َ َ ُ َّ َ َّ
ِ ٍ
».ً‫«م َّر ًة َواحدَ ة‬ َ :‫ِر َوا َية‬
ಅಬ್ದುಲ ್ಲಾಹ್ ಇಬ್ನ್ ಝೈದ್(h) ರಿಂದ ವರದಿ: ಅವರು
ತಮ್ಮ ತಲೆಯನ್ನು ಎರಡು ಕೈಗಳಿಂದ ಸವರಿದರು.
ಎರಡು ಕೈಗಳನ್ನು ತಲೆಯ ಮುಂಭಾಗದಿಂದ ಹಿಂಭಾ-
ಗಕ್ಕೆ ಮತ್ತು ಹಿಂಭಾಗದಿಂದ ಮುಂಭಾಗಕ್ಕೆ ತಂದರು.
ವುದೂ ನಿರ್ವಹಿಸುವುದು 43

ಅಂದರೆ ತಲೆಯ ಎದುರುಭಾಗದಿಂದ ಆರಂಭಿಸಿ ಕತ್ತಿನ


ಹಿಂಭಾಗಕ್ಕೆ ತಲುಪುವ ತನಕ ಸವರಿದರು. ನಂತರ ಕೈ-
ಗಳನ್ನು ಅದೇ ರೀತಿ ತಲೆಯ ಮುಂಭಾಗಕ್ಕೆ, ಸವರಲು
ಆರಂಭಿಸಿದ ಸ್ಥಳಕ್ಕೆ ಮರಳಿಸಿದರು.”[38] ಇನ್ನೊಂದು
ವರದಿಯಲ್ಲಿ “ಅವರು ತಲೆಯನ್ನು ಒಂದು ಸಲ ಸವ-
ರಿದರು” ಎಂದು ಹೇಳಲಾಗಿದೆ.

y ತಲೆ ಸವರಲು ಬೇರೆಯೇ ನೀರನ್ನು ತೆಗೆದುಕೊಳ್ಳಬ-


ಹುದು.

‫َع ْن َع ْب ِد ال َّل ِه ْب ِن َز ْي ٍد َر ِض َي ال َّل ُه َعنْ ُه َأ َّن ُه‬


‫ول ال َّل ِه َص َّلى ال َّل ُه َع َل ْي ِه َو َس َّل َم‬ َ ‫َر َأى َر ُس‬
.‫اء َغ ْي ِر َف ْض ِل َي ِد ِه‬
ٍ ‫مسح بِر ْأ ِس ِه بِم‬
َ َ َ َ َ
ಅಬ್ದುಲ ್ಲಾ ಇಬ್ನ್ ಝೈದ್(h) ರಿಂದ ವರದಿ: ಪ್ರವ ಾ-
ದಿ(g) ಯವರು ತಮ್ಮ ಕೈಯಲ್ಲಿ ಉಳಿದ ನೀರಿಲ್ಲದ

38  ಅಲ್‌ಬುಖಾರಿ ಮುಸ್ಲಿಂ


ವುದೂ ನಿರ್ವಹಿಸುವುದು 44

ಬೇರೆಯೇ ನೀರನ್ನು ತೆಗೆದು ತಲೆಯನ್ನು ಸವರಿದರು.[39]

َّ‫ْت ُم َع ِّو ٍذ َر ِض َي ال َّل ُه َعن َْها َأن‬


ِ ‫ع ِن الربي ِع بِن‬
ِّ َ ُّ َ
ِ‫النَّبِي ص َّلى ال َّله ع َلي ِه وس َّلم مسح بِر ْأ ِسه‬
َ َ َ َ َ َ َ ْ َ ُ َ َّ
ِ.‫اء كَانَ فِي ي ِده‬ ٍ ‫ِمن َف ْض ِل م‬
َ َ ْ
ರುಬಯ್ಯಿಅ್ ಬಿನ್ತ್ ಮುಅವ್ವಿಝ್(i) ರಿಂದ ವರದಿ:
ಪ್ರವ ಾದಿ(g) ಯವರು ತಮ್ಮ ಕೈಯಲ್ಲಿ ಉಳಿದ
ನೀರಿನಿಂದ ತಲೆಯನ್ನು ಸವರಿದರು.[40]

y ತಲೆಯನ್ನು ಸವರುವುದರ ಜೊತೆಗೆ ಕಿವಿಗಳನ್ನೂ ಸವ-


ರಬೇಕು.

‫َع ْن َأبِي ُأ َم َام َة َر ِض َي ال َّل ُه َعنْ ُه َأنَّ النَّبِ َّي َص َّلى‬


».‫س‬ ِ ‫الر ْأ‬ ِ ِ ‫«الُ ُذن‬ ْ :‫ال َّل ُه َع َل ْي ِه َو َس َّل َم َق َال‬
َّ ‫َان م َن‬
39  ಮುಸ್ಲಿಂ
40  ಅಬೂದಾವೂದ್
ವುದೂ ನಿರ್ವಹಿಸುವುದು 45

ಅಬೂ ಉಮಾಮ(h) ರಿಂದ ವರದಿ: ಪ್ರವಾದಿ(g)


ಯವರು ಹೇಳಿದರು: “ಎರಡು ಕಿವಿಗಳು ತಲೆಗೆ ಸೇ-
ರಿದ್ದಾಗಿವೆ.”[41]

y ಕಿವಿಯನ್ನು ಸವರುವ ವಿಧಾನ: ಎರಡು ತ�ೋರು ಬೆ-


ರಳುಗಳನ್ನು ಕಿವಿಗಳ ಒಳಗೆ ತೂರಿಸಿ ಎರಡು ಹೆಬ್ಬೆರ-
ಳುಗಳಿಂದ ಕಿವಿಯ ಹೊರಭಾಗವನ್ನು ಮತ್ತು ತ�ೋರು
ಬೆರಳುಗಳಿಂದ ಒಳಭಾಗವನ್ನು ಸವರಬೇಕು. ಕಿವಿಯ
ಒಳಭಾಗ ಮತ್ತು ಹೊರಭಾಗಗಳನ್ನು ಒಟ್ಟೊಟ್ಟಿಗೆ ಸವ-
ರಬೇಕು.

‫َع ْن َع ْب ِد ال َّل ِه ْب ِن َع ْم ٍرو َر ِض َي ال َّل ُه َعنْ ُه‬


‫َأنَّ النَّبِ َّي َص َّلى ال َّل ُه َع َل ْي ِه َو َس َّل َم َم َس َح‬
‫اح َت ْي ِن فِي‬ ِ ِ ِ
َّ ‫ َف َأ ْد َخ َل إِ ْص َب َع ْيه‬،‫بِ َر ْأسه‬
َ ‫الس َّب‬
،‫اه ِر ُأ ُذ َن ْي ِه‬
ِ ‫ ومسح بِإِبهامي ِه ع َلى َظ‬،‫ُأ ُذ َني ِه‬
َ َْ َْ َ َ َ َ ْ
41  ಅಹ್ಮದ್, ಅಬೂದಾವೂದ್, ಅತ್ತಿರ್ಮಿದಿ, ಇಬ್ನ್ ಮಾಜ
ವುದೂ ನಿರ್ವಹಿಸುವುದು 46

.‫اح َت ْي ِن َباطِ َن ُأ ُذ َن ْي ِه‬ َّ ِ‫َوب‬


َ ‫الس َّب‬
ಅಬ್ದುಲ ್ಲಾ ಇಬ್ನ್ ಅಮ್ರ್(h) ರಿಂದ ವರದಿ: ಪ್ರವಾದಿ-
(g) ಯವರು ತಲೆಯನ್ನು ಸವರಿದರು. ನಂತರ ತಮ್ಮ
ಎರಡು ತ�ೋರುಬೆರಳುಗಳನ್ನು ಕಿವಿಗಳ ಒಳಗೆ ತೂರಿಸಿ-
ದರು. ತಮ್ಮ ಎರಡು ಹೆಬ್ಬೆರಳುಗಳಿಂದ ಕಿವಿಯ ಹೊರ-
ಭಾಗಗಳನ್ನು ಸವರಿದರು. ತ�ೋರುಬೆರಳುಗಳಿಂದ ಕಿವಿ
ಒಳಭಾಗಗಳನ್ನು ಸವರಿದರು.[42]

y ರುಮಾಲು ಧರಿಸಿದರೆ
್ದ ಮುಂಗುರಳನ್ನು ಮತ್ತು ರುಮಾ-
ಲನ್ನು ಸವರಿದರೆ ಸಾಕು.

َّ‫َع ِن ا ْل ُم ِغ َير َة ْب ِن ُش ْع َب َة َر ِض َي ال َّل ُه َعنْ ُه َأن‬


‫ َف َم َس َح‬،‫النَّبِ َّي َص َّلى ال َّل ُه َع َل ْي ِه َو َس َّل َم ت ََو َّض َأ‬
.‫ َو َع َلى ا ْلخُ َّف ْي ِن‬،‫ َو َع َلى ا ْل ِع َم َام ِة‬،‫َاص َيتِ ِه‬
ِ ‫بِن‬

42  ಅಬೂದಾವೂದ್
ವುದೂ ನಿರ್ವಹಿಸುವುದು 47

ಅಲ್‌ಮುಗೀರ ಇಬ್ನ್ ಶುಅ್‌ಬ(h) ರಿಂದ ವರದಿ: ಪ್ರ-


ವಾದಿ(g) ಯವರು ವುದೂ ನಿರ್ವಹಿಸುವಾಗ ಮುಂ-
ಗುರುಳನ್ನು ಮತ್ತು ರುಮಾಲನ್ನು ಹಾಗೂ ಎರಡು ಪಾ-
ದರಕ್ಷೆಗಳನ್ನು ಸವರಿದರು.[43]

y ರುಮಾಲನ್ನು ಮಾತ್ರ ಸವರಿದರೂ ಸಾಕು.

:‫َع ْن َع ْم ٍرو ْب ِن ُأ َم َّي َة َر ِض َي ال َّل ُه َعنْ ُه َق َال‬


‫ت النَّبِ َّي َص َّلى ال َّل ُه َع َل ْي ِه َو َس َّل َم َي ْم َس ُح‬
ُ ‫َر َأ ْي‬
ِ.‫ع َلى ِعمامتِ ِه و ُخ َّفيه‬
ْ َ َ َ َ
ಅಮ್ರ್ ಇಬ್ನ್ ಉಮಯ್ಯ(h) ರಿಂದ ವರದಿ: ಪ್ರವ ಾ-
ದಿ(g) ಯವರು ರುಮಾಲಿನ ಮೇಲೆ ಮತ್ತು ಪಾದ-
ರಕ್ಷೆಗಳ ಮೇಲೆ ಸವರುವುದನ್ನು ನಾನು ಕಂಡಿದ್ದೇನೆ.[44]

43  ಮುಸ್ಲಿಂ
44  ಅಲ್‌ಬುಖಾರಿ
ವುದೂ ನಿರ್ವಹಿಸುವುದು 48

ಎರಡು ಕಾಲುಗಳನ್ನು ಹರಡು ಗಂಟುಗಳ ತನಕ


ತೊಳೆಯುವುದು

y ನಂತರ ಕಾಲುಗಳನ್ನು ಹರಡು ಗಂಟುಗಳ ಸಹಿತ


ತೊಳೆಯಬೇಕು. ಇದು ಕಡ್ಡಾಯವಾಗಿದೆ. ಏಕೆಂದರೆ
ಅಲ್ಲಾಹು ಹೇಳುತ್ತಾನೆ:

‫﴿ﭑ ﭒ ﭓ ﭔ ﭕ ﭖ‬
‫ﭗﭘﭙﭚ‬
‫ﭛﭜﭝﭞ‬
﴾ ‫ﭟ ﭠ ﭡﭢ‬
“ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್ ನಿರ್ವಹಿಸ-
ಲು ಬಯಸಿದರೆ ನಿಮ್ಮ ಮುಖಗಳನ್ನು ತೊಳೆಯಿರಿ,
ಕೈಗಳನ್ನು ಮೊಣಕೈಗಳವರೆಗೆ ತೊಳೆಯಿರಿ, ತಲೆಯ-
ನ್ನು ಸವರಿರಿ ಮತ್ತು ಕಾಲುಗಳನ್ನು ಹರಡುಗಂಟುಗಳ
ವುದೂ ನಿರ್ವಹಿಸುವುದು 49

ತನಕ ತೊಳೆಯಿರಿ.”[45]

‫ت‬ ُ ‫ َر َأ ْي‬:‫َع ْن ُن َع ْي ِم ْب ِن َع ْب ِد ال َّل ِه ا ْل ُم ْج ِم ِر َق َال‬


‫ ُث َّم غ ََس َل ِر ْج َل ُه‬:‫ َق َال‬،‫َأ َبا ُه َر ْي َر َة َيت ََو َّض ُأ‬
ِ ‫الس‬ ِ
‫ ُث َّم غ ََس َل‬،‫اق‬ َّ ‫ا ْل ُي ْمنَى َحتَّى َأ ْش َر َع في‬
ِ ‫الس‬ ِ
‫ ُث َّم‬،‫اق‬ َّ ‫ِر ْج َل ُه ا ْل ُي ْس َرى َحتَّى َأ ْش َر َع في‬
‫ول ال َّل ِه َص َّلى ال َّل ُه‬ َ ‫ت َر ُس‬ ُ ‫ َهك ََذا َر َأ ْي‬:‫َق َال‬
.‫َع َل ْي ِه َو َس َّل َم َيت ََو َّض ُأ‬
ನುಐಮ್ ಇಬ್ನ್ ಅಬ್ದುಲ ್ಲಾಹ್ ಅಲ್ ಮುಜ್ಮಿರ್(h)
ರಿಂದ ವರದಿ: ಅಬೂ ಹುರೈರ(h) ವುದೂ
ಮಾಡುವುದನ್ನು ನಾನು ಕಂಡಿದ್ದೇನೆ.... ನಂತರ
ಅವರು ತಮ್ಮ ಬಲಗಾಲನ್ನು ಕಣಕಾಲುಗಳ ತನಕ
ತೊಳೆದರು. ನಂತರ ಎಡಗಾಲನ್ನು ಕಣಕಾಲುಗಳ

45  ಸೂರ ಅಲ್‌ಮಾಇದ 6


ವುದೂ ನಿರ್ವಹಿಸುವುದು 50

ತನಕ ತೊಳೆದರು. ನಂತರ ಹೇಳಿದರು: “ಪ್ರವ ಾದಿ-


(g) ಯವರು ಈ ರೀತಿ ವುದೂ ಮಾಡುವುದನ್ನು
ನಾನು ಕಂಡಿದ್ದೇನೆ.”[46]

y ಕಾಲುಗಳನ್ನು ಮೂರು ಸಲ ತೊಳೆಯಬೇಕು. ಬಲಗಾ-


ಲನ್ನು ಮೊದಲು ತೊಳೆಯಬೇಕು.

‫َع ْن ُح ْم َرانَ َأنَّ ُع ْث َمانَ َر ِض َي ال َّل ُه َعنْ ُه غ ََس َل‬


ٍ ‫ث مر‬
‫ ُث َّم‬،‫ات‬ َّ َ َ ‫ِر ْج َل ُه ا ْل ُي ْمنَى إِ َلى ا ْل َك ْع َب ْي ِن َث َل‬
‫ت‬ ُ ‫ َر َأ ْي‬:‫ ُث َّم َق َال‬...‫ك‬ َ ِ‫غ ََس َل ا ْل ُي ْس َرى ِم ْث َل َذل‬
‫ول ال َّل ِه َص َّلى ال َّل ُه َع َل ْي ِه َو َس َّل َم ت ََو َّض َأ‬ َ ‫َر ُس‬
ِ
.‫ن َْح َو ُو ُضوئي َه َذا‬
ಹುಮ್ರಾನ್(h) ರಿಂದ ವರದಿ: ಉಸ್ಮಾನ್(h) ರವರು
ಬಲಗಾಲನ್ನು ಹರಡು ಗಂಟುಗಳ ತನಕ ಮೂರು

46  ಮುಸ್ಲಿಂ
ವುದೂ ನಿರ್ವಹಿಸುವುದು 51

ಸಲ ತೊಳೆದರು. ನಂತರ ಎಡಗಾಲನ್ನು ಅದೇ ರೀತಿ


ತೊಳೆದರು. ನಂತರ ಹೇಳಿದರು: “ನಾನು ಈಗ ವುದೂ
ನಿರ್ವಹಿಸಿದ ರೀತಿಯಲ್ಲಿಯೇ ಪ್ರವಾದಿ(g) ಯವರು
ವುದೂ ನಿರ್ವಹಿಸುವುದನ್ನು ನಾನು ಕಂಡಿದ್ದೇನೆ.”[47]

‫َع ْن َأبِي ُه َر ْي َر َة َر ِض َي ال َّل ُه َع ْن ُه َأنَّ ال َّنبِ َّي‬


‫ «إِ َذا ت ََو َّض ْأت ُْم‬:‫َص َّلى ال َّل ُه َع َل ْي ِه َو َس َّل َم َق َال‬
».‫َفا ْبدَ ُءوا بِ َم َي ِامنِك ُْم‬
ಅಬೂ ಹುರೈರ(h) ರಿಂದ ವರದಿ: ಪ್ರವ ಾದಿ(g)
ಯವರು ಹೇಳಿದರು: “ನೀವು ವುದೂ ನಿರ್ವಹಿಸು-
ವಾಗ ಬಲಭಾಗದಿಂದ ಆರಂಭಿಸಿರಿ.”[48]

y ಕಾಲುಗಳನ್ನು ಎಡಗೈಯಿಂದ ತೊಳೆಯಬೇಕು.

47  ಅಲ್‌ಬುಖಾರಿ, ಮುಸ್ಲಿಂ


48  ಅಹ್ಮದ್, ಅಬೂದಾವೂದ್, ಇಬ್ನ್ ಮಾಜ
‫‪ವುದೂ ನಿರ್ವಹಿಸುವುದು‬‬ ‫‪52‬‬

‫ب َر ِض َي‬ ‫َع ْن َع ْب ِد َخ ْي ٍر َأنَّ َعلِ َّي ْب َن َأبِي َطالِ ٍ‬


‫َاء‪ُ ،‬ث َّم‬ ‫الن ِ‬ ‫ال َّل ُه َعنْه َأ ْد َخ َل َيدَ ُه ا ْل ُي ْمنَى فِي ْ ِ‬
‫ث‬ ‫ب َع َلى ِر ْجلِ ِه ا ْل ُي ْمنَى‪َ ،‬فغ ََس َل َها َث َل َ‬ ‫َص َّ‬
‫ِ‬
‫ب بِ َيده ا ْل ُي ْمنَى‬ ‫ِ‬ ‫ِ‬ ‫ِ‬ ‫ٍ‬
‫َم َّرات بِ َيده ا ْل ُي ْس َرى‪ُ ،‬ث َّم َص َّ‬
‫ث مراتٍ‬ ‫ِِ‬
‫َع َلى ِر ْجله ا ْل ُي ْس َرى‪َ ،‬فغ ََس َل َها َث َل َ َ َّ‬
‫بِ َي ِد ِه ا ْل ُي ْس َرى‪ُ ،‬ث َّم َأ ْد َخ َل َيدَ ُه ا ْل ُي ْمنَى فِي‬
‫اء‪ُ ،‬ث َّم َش ِر َب ِم ْن ُه‪ُ ،‬ث َّم‬ ‫لها ِمن ا ْلم ِ‬
‫النَاء َف َم َ َ َ َ َ‬
‫ِْ ِ‬

‫ور َنبِ ِّي ال َّل ِه َص َّلى ال َّل ُه َع َل ْي ِه‬ ‫َق َال‪َ :‬ه َذا َط ُه ُ‬
‫ور رس ِ‬
‫ول‬ ‫َو َس َّل َم‪َ .‬م ْن َس َّر ُه َأنْ َي ْن ُظ َر إِ َلى ُط ُه ِ َ ُ‬
‫ِ‬ ‫ِ‬
‫ور ُه‪.‬‬ ‫ال َّله َص َّلى ال َّل ُه َع َل ْيه َو َس َّل َم َف َه َذا ُط ُه ُ‬
‫‪ಅಬ್ದು ಖೈರ್(h) ರಿಂದ ವರದಿ: ಅಲಿ ಇಬ್ನ್ ಅಬೂ‬‬
‫‪ತಾಲಿಬ್(h) ತನ್ನ ಬಲಗೈಯನ್ನು ಪಾತ್ರೆಯ ಒಳಗೆ‬‬
‫)‪ತೂರಿಸಿದರು. ನಂತರ (ಬಲಗೈಯಿಂದ ನೀರು ತೆಗೆದು‬‬
ವುದೂ ನಿರ್ವಹಿಸುವುದು 53

ಬಲಗಾಲಿನ ಮೇಲೆ ಸುರಿದರು. ಅವರು ಅದನ್ನು


ಮೂರು ಸಲ ತಮ್ಮ ಎಡಗೈಯಿಂದ ತೊಳೆದರು.
ನಂತರ ಬಲಗೈಯಿಂದ ಎಡಗಾಲಿಗೆ ನೀರು ಸುರಿದರು.
ಅದನ್ನು ಮೂರು ಸಲ ಎಡಗೈಯಿಂದ ತೊಳೆದರು.
ನಂತರ ಬಲಗೈಯನ್ನು ಪಾತ್ರೆಗೆ ತೂರಿಸಿ ಅಂಗೈ
ತುಂಬಾ ನೀರನ್ನು ತೆಗೆದು ಅದರಿಂದ ಸ್ವಲ್ಪ ಕುಡಿದರು.
ನಂತರ ಹೇಳಿದರು: “ಪ್ರವಾದಿ(g) ಯವರು ವುದೂ
ನಿರ್ವಹಿಸಿದ ವಿಧಾನವನ್ನು ನ�ೋಡಲು ಯಾರಿಗಾದ-
ರೂ ಇಷ್ಟವಿದ್ದರೆ ನ�ೋಡಿ, ಇದೇ ಅವರು ವುದೂ ನಿ-
ರ್ವಹಿಸಿದ ವಿಧಾನ”.[49]

y ಕಿರುಬೆರಳಿನಿಂದ ಕಾಲು ಬೆರಳುಗಳ ಮಧ್ಯಭ ಾಗವನ್ನು


ತಿಕ್ಕಬೇಕು.

:‫َع ِن ا ْل ُم ْست َْو ِر ِد ْب ِن َشدَّ ٍاد َر ِض َي ال َّل ُه َعنْ ُه َق َال‬

49  ಇಬ್ನುಲ್ ಜಾರೂದ್


ವುದೂ ನಿರ್ವಹಿಸುವುದು 54

‫ول ال َّل ِه َص َّلى ال َّل ُه َع َل ْي ِه َو َس َّل َم إِ َذا‬ ُ ‫َر َأ ْي‬


َ ‫ت َر ُس‬
ِ.‫خنْص ِره‬ ِ ِ‫تَو َّض َأ يخَ ِّل ُل َأصابِع ِرج َلي ِه ب‬
َ ْ ْ َ َ ُ َ
ಅಲ್‌ಮುಸ್ತೌರಿದ್ ಇಬ್ನ್ ಶದ್ದಾದ್(h) ರಿಂದ ವರದಿ:.
ಪ್ರವಾದಿ(g) ಯವರು ವುದೂ ನಿರ್ವಹಿಸುವಾಗ ತಮ್ಮ
ಕಿರುಬೆರಳಿನಿಂದ ಕಾಲ್ಬೆರಳುಗಳ ಮಧ್ಯಭ ಾಗವನ್ನು ತಿ-
ಕ್ಕುವುದನ್ನು ನಾನು ಕಂಡಿದ್ದೇನೆ.”[50]

y ಹಿಮ್ಮಡಿಗಳನ್ನು ತೊಳೆಯಲು ವಿಶೇಷ ಗಮನ


ನೀಡಬೇಕು.

‫َع ْن َأبِي ُه َر ْي َر َة َر ِض َي ال َّل ُه َع ْن ُه َأنَّ ال َّنبِ َّي‬


‫َص َّلى ال َّل ُه َع َل ْي ِه َو َس َّل َم َر َأى َر ُج ًل َل ْم َيغ ِْس ْل‬
».‫َّار‬ ِ ‫اب ِم َن الن‬ ِ ‫ل ْع َق‬ َ ْ ِ‫«و ْي ٌل ل‬ ِ ِ
َ :‫ َف َق َال‬،‫َعق َب ْيه‬
ಅಬೂ ಹುರೈರ(h) ರಿಂದ ವರದಿ: ಒಬ್ಬ ವ್ಯಕ್ತಿ ವುದೂ

50  ಅಹ್ಮದ್, ಅಬೂದಾವೂದ್, ಅತ್ತಿರ್ಮಿದಿ, ಇಬ್ನ್ ಮಾಜ


ವುದೂ ನಿರ್ವಹಿಸುವುದು 55

ನಿರ್ವಹಿಸುವಾಗ ಹಿಮ್ಮಡಿಗಳನ್ನು ತೊಳೆಯದೆ ಬಿಟ್ಟಿ-


ರುವುದನ್ನು ಪ್ರವ ಾದಿ(g) ಯವರು ಕಂಡರು. ಆಗ
ಅವರು ಹೇಳಿದರು: “ಹಿಮ್ಮಡಿಗಳಿಗೆ ನರಕಾಗ್ನಿಯ
ಶಿಕ್ಷೆ ಕಾದಿದೆ.”[51]

y ಪಾದಗಳ ಹೊರಭಾಗವನ್ನು ತೊಳೆಯಬೇಕು.

َّ‫اب َر ِض َي ال َّل ُه َعنْ ُه َأن‬ ِ ‫َع ْن ُع َم َر ْب ِن ا ْلخَ َّط‬


ِ،‫ َفتَر َك مو ِضع ُظ ُف ٍر ع َلى َقدَ ِمه‬،‫ال تَو َّض َأ‬
َ َ َْ َ َ ً ‫َر ُج‬
ِ
:‫َف َأ ْب َص َر ُه النَّبِ ُّي َص َّلى ال َّل ُه َع َل ْيه َو َس َّل َم َف َق َال‬
ِ
‫ ُث َّم‬،‫» َف َر َج َع‬.‫وء َك‬ َ ‫ َف َأ ْحس ْن ُو ُض‬،‫«ار ِج ْع‬ ْ
.‫َص َّلى‬
ಉಮರ್ ಇಬ್ನುಲ್ ಖತ್ತಾಬ್(h) ರಿಂದ ವರದಿ:
ಒಬ್ಬ ವ್ಯಕ್ತಿ ವುದೂ ನಿರ್ವಹಿಸುತ್ತಾ ಪಾದದಲ್ಲಿ ಒಂದು

51  ಅಲ್‌ಬುಖಾರಿ, ಮುಸ್ಲಿಂ


ವುದೂ ನಿರ್ವಹಿಸುವುದು 56

ಉಗುರಿನ ಗಾತ್ರದಷ್ಟು ಸ್ಥಳವನ್ನು ತೊಳೆಯದೇ ಬಿಟ್ಟಿ-


ರುವುದನ್ನು ಪ್ರವ ಾದಿ(g) ಯವರು ಕಂಡರು. ಆಗ
ಅವರು ಹೇಳಿದರು: “ಹ�ೋಗು. ಉತ್ತಮ ರೀತಿಯಲ್ಲಿ
ವುದೂ ನಿರ್ವಹಿಸು.” ಆ ವ್ಯಕ್ತಿ ಹ�ೋಗಿ ವುದೂ ನಿರ್ವ-
ಹಿಸಿದ ನಂತರ ನಮಾಝ್ ಮಾಡಿದರು.[52]

y ಶುದ್ದಿಯಲ್ಲಿರುವಾಗಲೇ ಪಾದರಕ್ಷೆ ಧರಿಸಿದರೆ


್ದ ಅವುಗಳ
ಮೇಲೆ ಸವರಬಹುದು.

‫ب َر ِض َي ال َّل ُه َعنْ ُه‬ ٍ ِ‫َع ْن َعلِ ِّي ْب ِن َأبِي َطال‬


‫ول ال َّل ِه َص َّلى ال َّل ُه َع َل ْي ِه‬ ُ ‫ َج َع َل َر ُس‬:‫َق َال‬
‫ َو َي ْو ًما‬،‫َو َس َّل َم َث َل َث َة َأ َّيا ٍم َو َل َيالِ َي ُه َّن لِ ْل ُم َسافِ ِر‬
.‫ي فِي ا ْل َم ْسحِ َع َلى ا ْلخُ َّف ْي ِن‬ ِ ِ
ْ ‫ َأ‬.ِ‫َو َل ْي َل ًة ل ْل ُمقيم‬
ಅಲಿ ಇಬ್ನ್ ಅಬೂ ತಾಲಿಬ್(h) ರಿಂದ ವರದಿ: ಪ್ರ-

52  ಮುಸ್ಲಿಂ
ವುದೂ ನಿರ್ವಹಿಸುವುದು 57

ವಾದಿ(g) ಯವರು ಪ್ರಯ ಾಣಿಕರಿಗೆ ಮೂರು ದಿನ


ರಾತ್ರಿ ಮತ್ತು ಪ್ರಯ ಾಣಿಕರಲ್ಲದವರಿಗೆ ಒಂದು ದಿನ
ರಾತ್ರಿಯನ್ನು ನಿಶ್ಚಯಿಸಿದರು. ಅಂದರೆ ಪಾದರಕ್ಷೆಗಳ
ಮೇಲೆ ಸವರಲು.[53]

ಅಲಿ ಇಬ್ನ್ ಅಬೂ ತಾಲಿಬ್(h) ರಿಂದ ಅಬೂದಾ-


ವೂದ್ ವರದಿ ಮಾಡಿದ ಹದೀಸ್‌ನಲ್ಲಿ ಹೀಗಿದೆ.

‫ف‬ ِّ ُ‫الر ْأ ِي َل َكانَ َأ ْس َف ُل ا ْلخ‬ َّ ِ‫ين ب‬ ُ ِّ‫َل ْو كَانَ الد‬


‫ت‬ ُ ‫ َو َقدْ َر َأ ْي‬،‫ـا ُه‬ ِ
َ ‫َأ ْو َلى بِا ْل َم ْسحِ م ْن َأ ْعـ‬
‫ول ال َّل ِه َص َّلى ال َّل ُه َع َل ْيه َو َس َّل َم َي ْم َس ُح‬
ِ َ ‫َر ُس‬
ِ.‫اه ِر ُخ َّفيه‬
ِ ‫ع َلى َظ‬
ْ َ
“ಒಂದು ವೇಳೆ ಧಾರ್ಮಿಕ ನಿಯಮಗಳು ಅಭಿಪ್ರಾಯ-
ಗಳ ಆಧಾರದ ಮೇಲೆ ನಿರ್ಮಿತವಾಗಿರುತ್ತಿದರೆ
್ದ ಪಾದ-

53  ಮುಸ್ಲಿಂ
ವುದೂ ನಿರ್ವಹಿಸುವುದು 58

ರಕ್ಷೆಗಳ ಮೇಲ್ಭಾಗಕ್ಕಿಂತಲೂ ಅವುಗಳ ಅಡಿಭಾಗಗಳ-


ನ್ನು ಸವರುವುದು ಹೆಚ್ಚು ಯೋಗ್ಯವಾಗಿರುತ್ತಿತ್ತು. ಆದರೆ
ಪ್ರವಾದಿ(g) ಯವರು ಪಾದರಕ್ಷೆಗಳ ಮೇಲ್ಭಾಗವನ್ನು
ಸವರುವುದನ್ನು ನಾನು ಕಂಡಿದ್ದೇನೆ.”

ತರ್ತೀಬ್ (ಒಂದರ ನಂತರ ಒಂದನ್ನು


ನಿರ್ವಹಿಸುವುದು)

y ಮೇಲೆ ವಿವರಿಸಿದ ರೀತಿಯಲ್ಲಿಯೇ ಕ್ರಮ ಾನುಕ್ರಮವಾ-


ಗಿ ವುದೂ ನಿರ್ವಹಿಸಬೇಕು. ಇದು ಕಡ್ಡಾಯವಾಗಿದೆ.

َّ‫َع ْن ِر َفا َع َة ْب ِن َرافِ ٍع َر ِض َي ال َّل ُه َعنْ ُه َأن‬


‫ول ال َّل ِه َص َّلى ال َّل ُه َع َل ْي ِه َو َس َّل َم َق َال‬َ ‫َر ُس‬
‫ «ت ََو َّض ْأ ك ََما َأ َم َر َك ال َّل ُه‬:‫يء َص َلتِ ِه‬ ِ ‫ْل ْلم ِس‬
ُ
».َّ‫َج َّل َو َعز‬
ರಿಫಾಅ ಇಬ್ನ್ ರಾಫಿಅ್(h) ರಿಂದ ವರದಿ: ಕೆಟ್ಟ ರೀತಿ-
ವುದೂ ನಿರ್ವಹಿಸುವುದು 59

ಯಲ್ಲಿ ನಮಾಝ್ ನಿರ್ವಹಿಸಿದ ವ್ಯಕ್ತಿಯೊಂದಿಗೆ ಪ್ರವಾ-


ದಿ(g) ಯವರು ಹೇಳಿದರು: “ಅಲ್ಲಾಹು ಆಜ್ಞಾಪಿಸಿದ
ರೀತಿಯಲ್ಲಿಯೇ ವುದೂ ನಿರ್ವಹಿಸಿರಿ.”[54]

ಮುವಾಲಾತ್ (ನಡುವೆ ಹೆಚ್ಚು ಅಂತರವಿಲ್ಲದೆ ಒಂದರ


ನಂತರ ಒಂದು ನಿರ್ವಹಿಸುವುದು)

y ವುದೂವಿನ ಅಂಗಗಳನ್ನು ತೊಳೆಯುವಾಗ ಒಂದನ್ನು


ತೊಳೆದು ಹೆಚ್ಚು ತಡಮಾಡದೆ ಇನ್ನೊಂದನ್ನು ತೊಳೆ-
ಯಬೇಕು. ಅವುಗಳ ಮಧ್ಯೆ ದೀರ್ಘ ಸಮಯದ ಅಂತ-
ರವಿರಬಾರದು. ದೀರ್ಘ ಸಮಯದ ಅಂತರವುಂಟಾ-
ದರೆ ವುದೂವನ್ನು ಪುನರಾರಂಭಿಸಬೇಕು.

ِ ‫ض َأ ْص َح‬
‫اب‬ ِ ‫ان َع ْن َب ْع‬ ٍ َ‫َع ْن َخالِ ِد ْب ِن َم ْعد‬
‫النَّبِ ِّي َص َّلى ال َّل ُه َع َل ْي ِه َو َس َّل َم َأنَّ النَّبِ َّي َص َّلى‬
‫ َوفِي‬،‫ال ُي َص ِّلي‬ ً ‫ال َّل ُه َع َل ْي ِه َو َس َّل َم َر َأى َر ُج‬
54  ಅಬೂದಾವೂದ್, ಅತ್ತಿರ್ಮಿದಿ
ವುದೂ ನಿರ್ವಹಿಸುವುದು 60

‫َظ ْه ِر َقدَ ِم ِه ُل ْم َع ٌة َقدْ ُر الدِّ ْر َه ِم َل ْم ُي ِص ْب َها‬


‫ َف َأ َم َر ُه ال َّنبِ ُّي َص َّلى ال َّل ُه َع َل ْي ِه َو َس َّل َم‬،‫اء‬ُ ‫ا ْل َم‬
ِ
.َ‫الص َلة‬
َّ ‫وء َو‬َ ‫َأنْ ُيعيدَ ا ْل ُو ُض‬
ಖಾಲಿದ್ ಇಬ್ನ್ ಮಅ್‌ದ ಾನ್(h) ರವರು ಕೆಲವು
ಸಹಾಬಿಗಳಿಂದ ವರದಿ ಮಾಡುತ್ತಾರೆ. ಒಬ್ಬ ವ್ಯಕ್ತಿ
ನಮಾಝ್ ಮಾಡುವುದನ್ನು ಪ್ರವಾದಿ(g) ಯವರು
ಕಂಡರು. ಅವರ ಒಂದು ಪಾದದ ಹಿಂಭಾಗದಲ್ಲಿ
ಒಂದು ನಾಣ್ಯದ ಗಾತ್ರದಷ್ಟು ಸಣ್ಣ ಸ್ಥಳವಿತ್ತು. ಅದಕ್ಕೆ
ನೀರು ತಾಗಿರಲಿಲ್ಲ. ಆಗ ಪ್ರವ ಾದಿ(g) ಯವರು ಆ
ವ್ಯಕ್ತಿಯೊಡನೆ ವುದೂ ಮತ್ತು ನಮಾಝನ್ನು ಪುನಃ ನಿ-
ರ್ವಹಿಸಲು ಆದೇಶಿಸಿದರು.[55]

55  ಅಬೂದಾವೂದ್
ವುದೂ ನಿರ್ವಹಿಸುವುದು 61

ಎಲ್ಲ ಅಂಗಗಳನ್ನು ಒಂದೊಂದು ಬಾರಿ


ತೊಳೆಯುವುದು

y ವುದೂ ನಿರ್ವಹಿಸುವಾಗ ಎಲ್ಲ ಅಂಗಗಳನ್ನು


ಒಂದೊಂದು ಬಾರಿ ತೊಳೆಯಬಹುದು.

‫ ت ََو َّض َأ‬:‫اس َر ِض َي ال َّل ُه َع ْن ُه َق َال‬ ٍ ‫َع ِن ا ْب ِن َع َّب‬


ِ
.ً‫ال َّنبِ ُّي َص َّلى ال َّل ُه َع َل ْيه َو َس َّل َم َم َّر ًة َم َّرة‬
ಇಬ್ನ್ ಅಬ್ಬಾಸ್(h) ರಿಂದ ವರದಿ: ಪ್ರವ ಾದಿ(g)
ಯವರು ಅಂಗಗಳನ್ನು ಒಂದೊಂದು ಬಾರಿ ತೊಳೆ-
ಯುತ್ತಾ ವುದೂ ನಿರ್ವಹಿಸಿದರು.[56]

ಎಲ್ಲ ಅಂಗಗಳನ್ನು ಎರಡೆರಡು ಬಾರಿ ತೊಳೆಯುವುದು

y ವುದೂ ನಿರ್ವಹಿಸುವಾಗ ಎಲ್ಲ ಅಂಗಗಳನ್ನು ಎರಡೆರ-


ಡು ಬಾರಿಯೂ ತೊಳೆಯಬಹುದು.

56  ಅಲ್‌ಬುಖಾರಿ
ವುದೂ ನಿರ್ವಹಿಸುವುದು 62

‫َع ْن َع ْب ِد ال َّل ِه ْب ِن َز ْي ٍد َر ِض َي ال َّل ُه َع ْن ُه َأنَّ ال َّنبِ َّي‬


.‫َص َّلى ال َّل ُه َع َل ْي ِه َو َس َّل َم ت ََو َّض َأ َم َّر َت ْي ِن َم َّر َت ْي ِن‬
ಅಬ್ದುಲ ್ಲಾಹ್ ಇಬ್ನ್ ಝೈದ್(h) ರಿಂದ ವರದಿ: ಪ್ರ-
ವಾದಿ(g) ಯವರು ಅಂಗಗಳನ್ನು ಎರಡೆರಡು ಬಾರಿ
ತೊಳೆಯುತ್ತಾ ವುದೂ ನಿರ್ವಹಿಸಿದರು.[57]

ಮೂರು ಬಾರಿಗಿಂತ ಹೆಚ್ಚು ತೊಳೆಯಬಾರದು

y ಅಂಗಗಳನ್ನು ಮೂರು ಬಾರಿಗಿಂತ ಹೆಚ್ಚು ಬಾರಿ ತೊ-


ಳೆಯಬಾರದು.

‫َع ْن َع ْب ِد ال َّل ِه ْب ِن َع ْم ٍرو َر ِض َي ال َّل ُه َعنْ ُه‬


‫اء َأ ْع َرابِ ٌّي إِ َلى النَّبِ ِّي َص َّلى ال َّل ُه‬ َ ‫ َج‬:‫َق َال‬
‫ َف َأ َرا ُه َث َل ًثا‬.‫َع َل ْي ِه َو َس َّل َم َي ْس َأ ُل ُه َع ِن ا ْل ُو ُضوء‬
ِ

57  ಅಲ್‌ಬುಖಾರಿ
ವುದೂ ನಿರ್ವಹಿಸುವುದು 63

‫ َف َم ْن زَا َد َع َلى‬،‫وء‬ َ :‫ ُث َّم َق َال‬،‫َث َل ًثا‬


ُ ‫«ه َذا ا ْل ُو ُض‬
َ ‫َه َذا َف َقدْ َأ َس‬
».‫ َو َظ َل َم‬،‫ َو َت َعدَّ ى‬،‫اء‬
ಅಬ್ದುಲ ್ಲಾಹ್ ಇಬ್ನ್ ಅಮ್ರ್(h) ರಿಂದ ವರದಿ:
ವುದೂ ನಿರ್ವಹಿಸುವುದು ಹೇಗೆಂದು ಕಲಿಯಲು
ಒಬ್ಬ ಅಲೆಮಾರಿ ಅರಬಿ ಪ್ರವಾದಿ(g) ಯವರ ಬಳಿಗೆ
ಬಂದರು. ಪ್ರವಾದಿ(g) ಯವರು ಅವರಿಗೆ ಅಂಗಗ-
ಳನ್ನು ಮೂರು ಮೂರು ಸಲ ತೊಳೆಯುವ ಮೂಲಕ
ವುದೂ ನಿರ್ವಹಿಸುವುದನ್ನು ತ�ೋರಿಸಿದ ನಂತರ
ಹೇಳಿದರು: “ಇದೇ ಸರಿಯಾದ ವುದೂ. ಯಾರಾದರೂ
ಇದಕ್ಕಿಂತ ಹೆಚ್ಚು ನಿರ್ವಹಿಸಿದರೆ (ಮೂರಕ್ಕಿಂತ ಹೆಚ್ಚು
ಬಾರಿ ತೊಳೆದರೆ) ಅವನು ಕೆಟ್ಟದನ
್ದ ್ನು, ಅತಿರೇಕವನ್ನು
ಮತ್ತು ಅನ್ಯಾಯವನ್ನು ಎಸಗಿದ್ದಾನೆ.”[58]

58  ಅಹ್ಮದ್, ಅಬೂದಾವೂದ್, ಅನ್ನಸ ಾಈ, ಇಬ್ನ್ ಮಾಜ


‫‪ವುದೂ ನಿರ್ವಹಿಸುವುದು‬‬ ‫‪64‬‬

‫‪ಮಿಶ್ರ ರೀತಿಯಲ್ಲಿ ವುದೂ ನಿರ್ವಹಿಸುವುದು‬‬

‫‪y ಅಂಗಗಳನ್ನು ತೊಳೆಯುವಾಗ ಕೆಲವು ಅಂಗಗಳನ್ನು‬‬


‫‪ಒಂದು ಸಲ ಇನ್ನು ಕೆಲವು ಅಂಗಗಳನ್ನು ಎರಡು‬‬
‫‪ಅಥವಾ ಮೂರು ಸಲ ತೊಳೆಯುವ ಮೂಲಕ ವುದೂ‬‬
‫‪ನಿರ್ವಹಿಸಬಹುದು.‬‬

‫َع ْن َع ْب ِد ال َّل ِه ْب ِن َز ْي ٍد َر ِض َي ال َّل ُه َعنْ ُه‬


‫َأ َّن ُه غ ََس َل َو ْج َه ُه َث َل ًثا‪ُ ،‬ث َّم َأ ْد َخ َل َيدَ ُه‪،‬‬
‫استَخْ َر َج َها َفغ ََس َل َيدَ ْي ِه إِ َلى ا ْل ِم ْر َف َق ْي ِن‬
‫َف ْ‬
‫استَخْ َر َج َها‬ ‫َم َّر َت ْي ِن َم َّر َت ْي ِن‪ُ ،‬ث َّم َأ ْد َخ َل َيدَ ُه‪َ ،‬ف ْ‬
‫َف َم َس َح بِ َر ْأ ِس ِه‪َ ،‬ف َأ ْق َب َل بِ َيدَ ْي ِه َو َأ ْد َب َر‪ُ ،‬ث َّم غ ََس َل‬
‫ِر ْج َل ْي ِه إِ َلى ا ْل َك ْع َب ْي ِن‪ُ ،‬ث َّم َق َال‪َ :‬هك ََذا كَانَ‬
‫ول ال َّل ِه َص َّلى ال َّل ُه َع َل ْي ِه َو َس َّل َم‪.‬‬ ‫ُو ُضوء رس ِ‬
‫ُ َ ُ‬
‫‪ಅಬ್ದುಲ ್ಲಾಹ್ ಇಬ್ನ್ ಝೈದ್(h) ರಿಂದ ವರದಿ: ಅವರು‬‬
ವುದೂ ನಿರ್ವಹಿಸುವುದು 65

ತಮ್ಮ ಮುಖವನ್ನು ಮೂರು ಸಲ ತೊಳೆದರು. ನಂತರ


ಕೈಯನ್ನು ನೀರಿಗೆ ತೂರಿಸಿ ಹೊರತೆಗೆದು ಎರಡು ಕೈಗ-
ಳನ್ನು ಮೊಣಕೈಗಳ ತನಕ ಎರಡೆರಡು ಸಲ ತೊಳೆದರು.
ನಂತರ ಕೈಯನ್ನು ನೀರಿನೊಳಗೆ ತೂರಿಸಿ ಹೊರತೆಗೆದು
ತಲೆಯನ್ನು ಸವರಿದರು. ಅಂದರೆ ತಲೆಯನ್ನು ಮುಂ-
ಭಾಗದಿಂದ ಹಿಂಭಾಗದ ತನಕ ಮತ್ತು ಹಿಂಭಾಗದಿಂದ
ಮುಂಭಾಗದ ತನಕ ಸವರಿದರು. ನಂತರ ಎರಡು
ಕಾಲುಗಳನ್ನು ಹರಡು ಗಂಟುಗಳ ತನಕ ತೊಳೆದರು.
ನಂತರ ಹೇಳಿದರು: “ಪ್ರವಾದಿ(g) ಯವರ ವುದೂ
ಇದೇ ರೀತಿಯಾಗಿತ್ತು.”[59]

ವುದೂ ನಿರ್ವಹಿಸುವಾಗ ನೀರನ್ನು ಮಿತವಾಗಿ


ಬಳಸುವುದು

y ಒಂದು ಮುದ್ದ್[60] ನೀರಿನಿಂದ ವುದೂ ನಿರ್ವಹಿಸು-

59  ಅಲ್‌ಬುಖಾರಿ, ಮುಸ್ಲಿಂ


60  ಒಂದು ಮುದ್ದ್ ಎಂದರೆ ಒಬ್ಬ ಆರ�ೋಗ್ಯವಂತ ವ್ಯಕ್ತಿ ತನ್ನ ಎರಡು
ವುದೂ ನಿರ್ವಹಿಸುವುದು 66

ವುದು

َ‫ كَان‬:‫َس ْب ِن َمالِ ٍك َر ِض َي ال َّل ُه َعنْ ُه َق َال‬ ِ ‫َع ْن َأن‬


، ِّ‫النَّبِ ُّي َص َّلى ال َّل ُه َع َل ْي ِه َو َس َّل َم َيت ََو َّض ُأ بِا ْل ُمد‬
ٍ َ‫ إِ َلى َخمس ِة َأمد‬،ِ‫وي ْغت َِس ُل بِالصاع‬
.‫اد‬ ْ َ ْ َّ ََ
ಅನಸ್(h) ರಿಂದ ವರದಿ: ಪ್ರವ ಾದಿ(g) ಯವರು
ಒಂದು ಮುದ್ದ್ ನೀರಿನಿಂದ ವುದೂ ನಿರ್ವಹಿಸುತ್ದ
ತಿ -್ದ
ರು ಮತ್ತು ಒಂದು ಸಾಅ್[61] ದಿಂದ ಐದು ಮುದ್ದ್‌ವ-
ರೆಗಿನ ನೀರಿನಲ್ಲಿ ಸ್ನಾನ ಮಾಡುತ್ತಿದರ
್ದ ು.[62]

y ನೀರನ್ನು ಪೋಲು ಮಾಡಬಾರದು.

َّ‫َع ْن َع ْب ِد ال َّل ِه ْب ِن ُم َغ َّف ٍل َر ِض َي ال َّل ُه َعنْ ُه َأن‬

ಕೈಗಳನ್ನು ಜ�ೋಡಿಸಿ ಬಾಚುವಷ್ಟು ಪ್ರಮ ಾಣ


61  ಒಂದು ಸಾಅ್ ಎಂದರೆ ಐದು ಮುದ್ದ್‌ಗಳು
62  ಮುಸ್ಲಿಂ
ವುದೂ ನಿರ್ವಹಿಸುವುದು 67

‫ «إِ َّن ُه‬:‫ال َّنبِ َّي َص َّلى ال َّل ُه َع َل ْي ِه َو َس َّل َم َق َال‬


‫َس َي ُكونُ فِي َه ِذ ِه ْالُ َّم ِة َق ْو ٌم َي ْعتَدُ ونَ فِي‬
ِ ‫ور والدُّ ع‬
».‫اء‬ َ َ ِ ‫ال َّط ُه‬
ಅಬ್ದುಲ ್ಲಾ ಇಬ್ನ್ ಮುಗಫ್ಫಲ್(h) ರಿಂದ ವರದಿ: ಪ್ರ-
ವಾದಿ(g) ಯವರು ಹೇಳಿದರು: “ಶುದ್ಧೀಕರಣ ಮತ್ತು
ಪ್ರಾರ್ಥನೆಯ ವಿಷಯದಲ್ಲಿ ಹದ್ದು ಮೀರುವ ಒಂದು
ಜನಸಮೂಹವು ಈ ಸಮುದಾಯದಲ್ಲಿ ಬರಲಿದ್ದಾರೆ.”[63]

ವುದೂ ನಿರ್ವಹಿಸಿದ ನಂತರ ಪ್ರಾರ್ಥಿಸುವುದು

y ವುದೂ ನಿರ್ವಹಿಸಿದ ನಂತರ ಹದೀಸಿನಲ್ಲಿ ಬಂದ ಪ್ರಾ-


ರ್ಥನೆಯನ್ನು ಪ್ರಾರ್ಥಿಸಬೇಕು.

‫اب َر ِض َي ال َّل ُه َعنْ ُه‬ ِ ‫َع ْن ُع َم َر ْب ِن ا ْلخَ َّط‬


ِ
‫«ما‬ َ :‫َأنَّ النَّبِ َّي َص َّلى ال َّل ُه َع َل ْيه َو َس َّل َم َق َال‬
63  ಅಹ್ಮದ್, ಅಬೂದಾವೂದ್
ವುದೂ ನಿರ್ವಹಿಸುವುದು 68

ُ‫ِم ْنك ُْم ِم ْن َأ َح ٍد َيت ََو َّض ُأ َف ُي ْبلِغُ — َأ ْو َف ُي ْسبِغ‬


‫ َأ ْش َهدُ َأنْ َل إِ َل َه إِ َّل‬:‫ول‬ ُ ‫ ُث َّم َي ُق‬،‫وء‬
َ ‫— ا ْل َو ُض‬
ِ
‫ َو َأنَّ ُم َح َّمدً ا َع ْبدُ ال َّله َو َر ُسو ُل ُه إِ َّل‬،‫ال َّل ُه‬
‫اب ا ْل َجن َِّة ال َّث َمانِ َي ُة َيدْ ُخ ُل ِم ْن‬ ُ ‫ت َل ُه َأ ْب َو‬ ْ ‫ُفتِ َح‬
‫اج َع ْلنِي‬ ْ ‫ «ال َّل ُه َّم‬:‫» وزاد الترمذي‬.‫اء‬ َ ‫َأ ِّي َها َش‬
ِ ِ ِ
.»‫ين‬ َ ‫اج َع ْلني م َن ا ْل ُم َت َط ِّه ِر‬ ْ ‫ َو‬،‫ين‬ َ ِ‫م َن الت ََّّواب‬
ಉಮರ್ ಇಬ್ನುಲ್ ಖತ್ತಾಬ್(h) ರಿಂದ ವರದಿ: ಪ್ರ-
ವಾದಿ(g) ಯವರು ಹೇಳಿದರು: “ನಿಮ್ಮಲ್ಲೊಬ್ಬರು
ಅತ್ಯುತಮ
್ತ ರೀತಿಯಲ್ಲಿ ವುದೂ ನಿರ್ವಹಿಸಿ ನಂತರ
‘ಅಶ್‌ಹದು ಅನ್ ಲಾ ಇಲಾಹ ಇಲ್ಲಲ
್ಲ ್ಲಾಹ್, ವಅನ್ನ
ಮುಹಮ್ಮದನ್ ಅಬ್ದುಹೂ ವರಸೂಲುಹೂ’ ಎಂದು
ಹೇಳಿದರೆ ಅವರಿಗೆ ಸ್ವರ್ಗದ ಎಂಟು ಬಾಗಿಲುಗ-
ಳು ತೆರೆಯದೆ ಇರುವುದಿಲ್ಲ. ಅವುಗಳಲ್ಲಿ ಯಾವ
ಬಾಗಿಲಿನ ಮೂಲಕವೂ ಅವರಿಗೆ ಸ್ವರ್ಗವನ್ನು ಪ್ರವೇ-
‫‪ವುದೂ ನಿರ್ವಹಿಸುವುದು‬‬ ‫‪69‬‬

‫]‪ಶಿಸಬಹುದು.”[64‬‬

‫್‪ಅತ್ರ‬‬
‫‪ತಿ ಮಿದಿಯಲ್ಲಿ ಹೆಚ್ಚುವರಿಯಾಗಿ ಹೀಗೆ ವರದಿಯಾ-‬‬
‫‪ಗಿದೆ. ‘ಅಲ್ಲಾಹುಮ್ಮಜ್‌ಅಲ್‌ನೀ ಮಿನ ತ್ತವ ್ವಾಬೀನ್,‬‬
‫’‪ವಜ್‌ಅಲ್‌ನೀ ಮಿನಲ್ ಮುತತಹ್ಹಿರೀನ್.‬‬

‫ي َر ِض َي ال َّل ُه َعنْ ُه‬ ‫ِ ٍ‬


‫َع ْن َأبِي َسعيد ا ْلخُ دْ ِر ٍّ‬
‫ِ‬
‫«م ْن‬ ‫َأنَّ النَّبِ َّي َص َّلى ال َّل ُه َع َل ْيه َو َس َّل َم َق َال‪َ :‬‬
‫اغ ِه‬‫تَو َّض َأ‪َ ،‬ف َأسبغَ ا ْلو ُضوء‪ُ ،‬ثم َق َال ِعنْدَ َفر ِ‬
‫َ‬ ‫َ َّ‬ ‫ْ َ ُ‬ ‫َ‬
‫ِ‬ ‫ِ‬
‫َك ال َّل ُه َّم َوب َح ْمد َك‪،‬‬ ‫ِم ْن ُو ُضوئه‪ُ :‬س ْب َحان َ‬
‫ِ‬ ‫ِ‬
‫ِ‬
‫ُوب‬ ‫ْت‪َ ،‬أ ْس َتغْف ُر َك َو َأت ُ‬ ‫َأ ْش َهدُ َأنْ َل إِ َل َه إِ َّل َأن َ‬
‫ت‬ ‫ت ت َْح َ‬ ‫ك‪ُ ،‬ختِ َم َع َل ْي َها بِخَ ا َتمٍ‪َ ،‬ف ُو ِض َع ْ‬ ‫إِ َل ْي َ‬
‫ش‪َ ،‬ف َل ْم ُيك َْس ْر إِ َلى َي ْو ِم ا ْل ِق َي َام ِة‪».‬‬ ‫ا ْل َع ْر ِ‬
‫‪ಅಬೂ ಸಈದ್ ಅಲ್‌ಖುದ್ರಿ(h) ರಿಂದ ವರದಿ: ಪ್ರ-‬‬

‫‪64  ಮುಸ್ಲಿಂ‬‬
ವುದೂ ನಿರ್ವಹಿಸುವುದು 70

ವಾದಿ(g) ಯವರು ಹೇಳಿದರು: “ಯಾರು ಅತ್ಯುತ-್ತ


ಮವಾಗಿ ವುದೂ ನಿರ್ವಹಿಸಿ, ನಂತರ ಕೊನೆಯಲ್ಲಿ, ‘ಸು-
ಬ್‌ಹಾನಕಲ್ಲಾಹುಮ್ಮ ವಬಿಹಮ್ದಿಕ, ಅಶ್‌ಹದು ಅನ್
ಲಾ ಇಲಾಹ ಇಲ್ಲಾ ಅನ್ತ, ಅಸ್ತಗ್ಫಿರ ುಕ ವಅತೂಬು
ಇಲೈಕ’ ಎಂದು ಹೇಳಿದರೆ ಆ ಪ್ರಾರ್ಥನೆಯ ಮೇಲೆ
ಮುದ್ರೆ ಹಾಕಿ ಅದನ್ನು ಅಲ್ಲಾಹನ ಸಿಂಹಾಸನದ
(ಅರ್ಶ್) ಕೆಳಭಾಗದಲ್ಲಿ ಇಡಲಾಗುವುದು. ಪುನರು-
ತ್ಥಾನದ ತನಕ ಅದನ್ನು ತೆರೆಯಲಾಗುವುದಿಲ್ಲ.[65]

ವುದೂ ನಿರ್ವಹಿಸಿದ ನಂತರ ಎರಡು ರಕಅತ್


ನಮಾಝ್ ಮಾಡುವುದು

y ವುದೂ ನಿರ್ವಹಿಸಿದ ನಂತರ ಅತ್ಯಂತ ಭಯ ಭಕ್ತಿ-


ಯಿಂದ ಕೂಡಿದ ಎರಡು ರಕಅತ್ ನಮಾಝ್ ನಿ-
ರ್ವಹಿಸಬೇಕು.

65  ಇಬ್ನು ಸ್ಸುನ್ನಿ ತಮ್ಮ ಅಮಲುಲ್ ಯೌಮಿ ವಲ್ಲೈಲದಲ್ಲಿ


ವುದೂ ನಿರ್ವಹಿಸುವುದು 71

‫َع ْن ُع ْق َب َة ْب ِن َع ِام ٍر َر ِض َي ال َّل ُه َع ْن ُه َأنَّ ال َّنبِ َّي‬


‫«ما ِم ْن ُم ْسلِ ٍم‬ ِ
َ :‫َص َّلى ال َّل ُه َع َل ْيه َو َس َّل َم َق َال‬
ِ
‫ ُث َّم َي ُقو ُم َف ُي َص ِّلي‬،‫وء ُه‬ َ ‫ َف ُي ْحس ُن ُو ُض‬،‫َيت ََو َّض ُأ‬
‫ ُم ْقبِ ٌل َع َل ْي ِه َما بِ َق ْلبِ ِه َو َو ْج ِه ِه إِ َّل‬،‫َر ْك َع َت ْي ِن‬
».‫ت َل ُه ا ْل َج َّن ُة‬
ْ ‫َو َج َب‬
ಉಕ್ಬ ಇಬ್ನ್ ಆಮಿರ್(h) ರಿಂದ ವರದಿ: ಪ್ರವಾದಿ(g)
ಯವರು ಹೇಳಿದರು: “ಒಬ್ಬ ಮುಸಲ್ಮಾನನು ಅತ್ಯು-
ತಮ
್ತ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಹೃದಯ
ಮತ್ತು ಮುಖವನ್ನು ಕೇಂದ್ರೀಕರಿಸಿ ಎರಡು ರಕಅತ್
ನಮಾಝ್ ನಿರ್ವಹಿಸಿದರೆ ಅವನಿಗೆ ಸ್ವರ್ಗವು ಕಡ್ಡಾ-
ಯವಾಗದೆ ಇರುವುದಿಲ್ಲ.”[66]

َّ‫ان َر ِض َي ال َّل ُه َعنْ ُه َأن‬


ٍ ‫َع ْن ُع ْث َمانَ ْب ِن َع َّف‬

66  ಮುಸ್ಲಿಂ
ವುದೂ ನಿರ್ವಹಿಸುವುದು 72

ِ
َ :‫ال َّنبِ َّي َص َّلى ال َّل ُه َع َل ْيه َو َس َّل َم َق َال‬
‫«م ْن‬
‫ ُث َّم َقا َم َف َرك ََع‬،‫ت ََو َّض َأ ن َْح َو ُو ُضوئِي َه َذا‬
‫يه َما َن ْف َس ُه غ ُِف َر َل ُه َما‬
ِ ِ‫ث ف‬
ُ ِّ‫ َل ُي َحد‬،‫َر ْك َع َت ْي ِن‬
».‫َت َقدَّ َم ِم ْن َذ ْنبِ ِه‬
ಉಸ್ಮಾನ್ ಇಬ್ನ್ ಅಫ್ಫಾನ್(h) ರಿಂದ ವರದಿ: ಪ್ರವಾ-
ದಿ(g) ಯವರು ಹೇಳಿದರು: “ನಾನು ವುದೂ ನಿರ್ವ-
ಹಿಸಿದ ಇದೇ ವಿಧಾನದಲ್ಲಿ ವುದೂ ನಿರ್ವಹಿಸಿ, ನಂತರ
ಐಹಿಕವಾದ ಯಾವುದೇ ವಿಚಾರಗಳ ಬಗ್ಗೆ ಚಿಂತಿಸದೆ
ಎರಡು ರಕಅತ್ ನಮಾಝ್ ನಿರ್ವಹಿಸಿದರೆ ಅವನ
ಗತ ಪಾಪಗಳೆಲ್ಲವೂ ಕ್ಷಮಿಸಲಾಗುವುದು.”[67]

y ಇಷ್ಟವಿದ್ದರೆ ಎರಡಕ್ಕಿಂತಲೂ ಹೆಚ್ಚು ರಕ್ಅತ್ ನಿರ್ವ-


ಹಿಸಬಹುದು.

67  ಅಲ್‌ಬುಖಾರಿ, ಮುಸ್ಲಿಂ


‫‪ವುದೂ ನಿರ್ವಹಿಸುವುದು‬‬ ‫‪73‬‬

‫َع ْن َأبِي ُه َر ْي َر َة َر ِض َي ال َّل ُه َع ْن ُه َق َال‪َ :‬ق َال‬


‫ول ال َّل ِه َص َّلى ال َّل ُه َع َل ْي ِه َو َس َّل َم لِبِ َل ٍل‬ ‫َر ُس ُ‬
‫ِعنْدَ َص َلة ا ْلغَدَ اة‪َ « :‬يا بِ َل ُل َحدِّ ْثني بِ َأ ْر َجى‬
‫ِ‬ ‫ِ‬ ‫ِ‬

‫ال ْس َل ِم َم ْن َف َع ًة‪َ ،‬فإِنِّي‬ ‫َع َم ٍل َع ِم ْل َت ُه ِعنْدَ َك فِي ْ ِ‬


‫ي فِي‬ ‫ك َب ْي َن َيدَ َّ‬ ‫ف َن ْع َل ْي َ‬ ‫ت ال َّل ْي َل َة َخ ْش َ‬ ‫َس ِم ْع ُ‬
‫ت َع َم ًل فِي‬ ‫ا ْل َجن َِّة‪َ ».‬ق َال بِ َل ٌل‪َ :‬ما َع ِم ْل ُ‬
‫ال ْس َل ِم َأ ْر َجى ِعن ِْدي َم ْن َف َع ًة‪ِ ،‬م ْن َأنِّي َل‬ ‫ِْ‬
‫ِ‬ ‫ٍ‬ ‫ِ‬
‫َاما‪ ،‬في َسا َعة م ْن َل ْي ٍل َو َل‬ ‫ورا ت ًّ‬ ‫َأ َت َط َّه ُر ُط ُه ً‬
‫َب‬ ‫ك ال ُّط ُه ِ‬ ‫ِ‬
‫ت بِ َذل َ‬ ‫ار‪ ،‬إِ َّل َص َّل ْي ُ‬ ‫ن ََه ٍ‬
‫ور‪َ ،‬ما َكت َ‬
‫ِ‬
‫ال َّل ُه لي َأنْ ُأ َص ِّل َي‪».‬‬
‫)‪ಅಬೂ ಹುರೈರ(h) ರಿಂದ ವರದಿ: ಪ್ರವ ಾದಿ(g‬‬
‫‪ಯವರು ಫಜ್ರ್ ನಮಾಝಿನ ಸಮಯದಲ್ಲಿ ಬಿಲಾ-‬‬
‫‪ಲ್‌ರೊಂದಿಗೆ ಕೇಳಿದರು. “ಓ ಬಿಲಾಲ್, ತಾವು‬‬
ವುದೂ ನಿರ್ವಹಿಸುವುದು 74

ಇಸ್ಲಾಮ್ ಸ್ವೀಕರಿಸಿದ ಬಳಿಕ ಅತ್ಯುನ್ನತ ಫ್ರತಿಫಲ ಸಿ-


ಗಬೇಕೆಂಬ ಅತೀವ ನಿರೀಕ್ಷೆಯಿಂದ ನಿರ್ವಹಿಸಿದ ಆ
ಕರ್ಮದ ಬಗ್ಗೆ ನನಗೆ ತಿಳಿಸಿ ಕೊಡಿ. ಖಂಡಿತವಾಗಿ-
ಯೂ ನಿನ್ನೆ ರಾತ್ರಿ ಸ್ವರ್ಗದಲ್ಲಿ ನನ್ನ ಮುಂಭಾಗದಲ್ಲಿ
ನಾನು ತಮ್ಮ ಹೆಜ್ಜೆ ಸಪ್ಪಳವನ್ನು ಕೇಳಿದ್ದೆ.” ಬಿಲಾಲ್
ಹೇಳಿದರು: “ನಾನು ಇಸ್ಲಾಂ ಸ್ವೀಕರಿಸಿದ ಬಳಿಕ ಅತ್ಯು-
ನ್ನತ ಪ್ರತಿಫಲ ಸಿಗಬೇಕೆಂಬ ಅತೀವ ನಿರೀಕ್ಷೆಯಿಂದ
ಯಾವುದೇ ಕರ್ಮವನ್ನು ಮಾಡಿಲ್ಲ. ಆದರೆ ನಾನು ರಾ-
ತ್ರಿಯ ಾಗಲಿ ಹಗಲಾಗಲಿ ಪೂರ್ಣ ರೀತಿಯಲ್ಲಿ ವುದೂ
ನಿರ್ವಹಿಸಿದರೆ, ನಂತರ ಆ ವುದೂವಿನಲ್ಲಿ ಅಲ್ಲಾಹು
ಇಚ್ಛಿಸಿದಷ್ಟು ಸಂಖ್ಯೆಯ ನಮಾಝ್ ನಿರ್ವಹಿಸುತ್ತಿದ್ದೆ.”[68]

68  ಅಲ್‌ಬುಖಾರಿ, ಮುಸ್ಲಿಂ


ವುದೂ ನಿರ್ವಹಿಸುವುದು 75

ನಮ್ಮ ಇತರ ಲೇಖನಗಳಿಗೆ ಸಂದರ್ಶಿಸಿ:

bit.ly/msi_all

‫الحركة النصيحة اإلسالمية‬


ANNASEEHA ISLAMIC MOVEMENT
SURATKAL, MANGALORE - 575 014
MOB: 9731593091 / 9945171612

Jamiyathe Ahle Hadees


Mangalore

You might also like