You are on page 1of 31

33

ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್‌ಉಸೈಮೀನ್

‫مدرسة الصفة اإلسالمية‬


MADRASATU SUFFAH AL ISLAMIYYA
SKYWAY COMPLEX, 6TH BLOCK, KRISHNAPURA,
SURATKAL, MANGALORE - 575 014
PH: 0824-2271449 MOB: 8722695551
ಸಹೃದಯರೊಬ್ಬರು ತಮ್ಮ
ತಂದೆ–ತಾಯಿಯ ಹೆಸರಲ್ಲಿ
ನೀಡಿದ ಧನಸಹಾಯದಿಂದ
ಈ ಪುಸ್ತಕವನ್ನು ರಚಿಸಲಾಗಿದೆ.
ಅಲ್ಲಾಹು ಅವರಿಗೂ ಅವರ
ತಂದೆ–ತಾಯಿಗಳಿಗೂ
ಪಾಪಮುಕ್ತಿಯನ್ನು ದಯಪಾಲಿಸಿ
ಸ್ವರ್ಗಲ�ೋಕಕ್ಕೆ ಪ್ರವೇಶ ಮಾಡಿಸಲಿ
–ಆಮೀನ್
ಫಿತ್ರ್ ಝ 3


ರ್ವಜ್ಞನೂ, ಯುಕ್ತಿಪೂರ್ಣನೂ, ಅತ್ಯುನ್ನತನೂ,
ಸರ್ವಶಕ್ತನ ೂ ಆದ ಅಲ್ಲಾಹನಿಗೆ ಸರ್ವಸ್ತುತಿ-
ಗಳು ಮೀಸಲು. ಅವನು ಎಲ್ಲ ವಸ್ತುಗಳನ್ನು ಸೃಷ್ಟಿಸಿ
ಅವುಗಳನ್ನು ಸರಿಯಾದ ವಿಧದಲ್ಲಿ ನಿರ್ಣಯಿಸಿದ್ದಾನೆ.
ಸೃಷ್ಟಿಗಳಿಗೆ ಒಂದು ವಿವರಣೆ ಮತ್ತು ಒಳದೃಷ್ಟಿಯ ಾಗಿ
ತನ್ನ ಪರಿಪೂರ್ಣ ಯುಕ್ತಿಯಿಂದ ಕೂಡಿದ ಶರೀಅತ್‌ನ
ನಿಯಮಗಳನ್ನು ನಿರ್ಮಿಸಿದ್ದಾನೆ. ಅವನ ಸಮಗ್ರ ಗುಣ
ವಿಶೇಷಣಗಳಿಗಾಗಿ ನಾನು ಅವನನ್ನು ಸ್ತುತಿಸುತ್ತೇನೆ.
ಅವನ ವಿಪುಲ ಅನುಗ್ರಹಗಳಿಗಾಗಿ ನಾನು ಅವನಿಗೆ
ಕೃತಜ್ಞತೆ ಸಲ್ಲಿಸುತ್ತೇನೆ.

ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ಅವನು


ಏಕೈಕನು ಮತ್ತು ಸಹಭಾಗಿಗಳಿಲ್ಲದವನು ಎಂದು
ನಾನು ಸಾಕ್ಷ್ಯ ವಹಿಸುತ್ತೇನೆ. ಆಧಿಪತ್ಯ ಸಂಪೂರ್ಣವಾ-
ಗಿಯೂ ಅವನಿಗೇ ಸೇರಿದ್ದು ಮತ್ತು ಸರ್ವಸ್ತುತಿಯು
ಫಿತ್ರ್ ಝ 4

ಅವನಿಗೆ ಮಾತ್ರ ಮೀಸಲು. ಅವನು ಎಲ್ಲ ವಿಷಯಗ-


ಳಲ್ಲೂ ಸಾಮರ್ಥ್ಯವುಳ್ಳವನು.

ಮುಹಮ್ಮದ್(g) ರವರು ಅಲ್ಲಾಹನ ದಾಸ ಮತ್ತು


ಸಂದೇಶವಾಹಕರಾಗಿದ್ದಾರೆ ಎಂದು ನಾನು ಸಾಕ್ಷ್ಯ
ವಹಿಸುತ್ತೇನೆ. ಅವರು ಶುಭವಾರ್ತೆ ತಿಳಿಸುವವರು
ಮತ್ತು ಮುನ್ನೆಚ್ಚರಿಕೆ ನೀಡುವವರಾಗಿದ್ದಾರೆ. ಅವರ
ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಾ-
ಬಾಗಳ ಮೇಲೆ ಮತ್ತು ಪ್ರತಿಫಲ ದಿನದ ತನಕ ಅವ-
ರನ್ನು ಅತ್ಯುತಮ
್ತ ವಾಗಿ ಅನುಸರಿಸಿದವರೆಲ್ಲರ ಮೇಲೆ
ಅಲ್ಲಾಹನ ಸಲಾತ್ ಮತ್ತು ಸಲಾಂ ಸದಾ ಇರಲಿ.

ಆತ್ಮೀಯ ಸಹ�ೋದರರೇ! ಈ ಪವಿತ್ರ ತಿಂಗಳು,


ರಮದಾನ್ ತಿಂಗಳು, ನಮ್ಮಿಂದ ವಿದಾಯಕ�ೋರ-
ಲು ಸಿದ್ಧವ ಾಗಿ ನಿಂತಿದೆ. ಕೆಲವು ದಿನಗಳ ಹೊರತು
ಬೇರೇನೂ ಬಾಕಿಯುಳಿದಿಲ್ಲ. ಈ ತಿಂಗಳಲ್ಲಿ ಸತ್ಕರ್ಮ-
ವೆಸಗಿದವರು ಸತ್ಕರ್ಮವೆಸಗುವ ಭಾಗ್ಯವನ್ನು ದಯ-
ಫಿತ್ರ್ ಝ 5

ಪಾಲಿಸಿದ್ದಕ ್ಕಾಗಿ ಅಲ್ಲಾಹನನ್ನು ಸ್ತುತಿಸಲಿ ಮತ್ತು ತಮ್ಮ


ಕರ್ಮಗಳನ್ನು ಸ್ವೀಕರಿಸುವಂತೆ ಅಲ್ಲಾಹನಲ್ಲಿ ನಿರಂತರ
ಪ್ರಾರ್ಥಿಸಲಿ. ಇನ್ನು ಯಾರಾದರೂ ಈ ತಿಂಗಳಲ್ಲಿ ಸತ್ಕ-
ರ್ಮವೆಸಗಲು ಅಸಡ್ಡೆ ವಹಿಸಿದ್ದರೆ ಅದಕ್ಕಾಗಿ ಅಲ್ಲಾಹನ
ಕಡೆಗೆ ಪಶ್ಚಾತ್ತಾಪಪಟ್ಟು ಮರಳಿ ತಮ್ಮ ನಿರ್ಲಕ್ಷ್ಯಕ ್ಕಾಗಿ
ಅಲ್ಲಾಹನಲ್ಲಿ ಕ್ಷಮೆಯನ್ನು ಬೇಡಿಕೊಳ್ಳಲಿ. ಮರಣಕ್ಕೆ
ಮುಂಚೆ ಮಾಡುವ ಕ್ಷಮೆಯಾಚನೆಯು ಸ್ವೀಕೃತವಾ-
ಗಿದೆ.

ಪ್ರೀತಿಯ ಸಹ�ೋದರರೇ! ಈದ್ ನಮಾಝ್‌ ನಿರ್ವ-


ಹಿಸುವುದಕ್ಕೆ ಮುಂಚೆ ಫಿತ್ರ್ ಝಕಾತನ್ನು ನೀಡಬೇ-
ಕೆಂದು ಅಲ್ಲಾಹ ು ನಮಗೆ ಆಜ್ಞಾಪಿಸಿದ್ದಾನೆ. ನಾವು
ಈ ಲೇಖನದಲ್ಲಿ ಫಿತ್ರ್ ಝಕಾತ್‌ನ ನಿಯಮ, ಯುಕ್ತಿ,
ಫಿತ್ರ್ ಝಕಾತ್ ನೀಡಬೇಕಾದ ಆಹಾರದ ವಿಧ, ಅದರ
ಪ್ರಮ ಾಣ, ನೀಡಬೇಕಾದ ಕಡ್ಡಾಯ ಸಮಯ, ರೀತಿ
ಮತ್ತು ಸ್ಥಳದ ಕುರಿತು ತಿಳಿಸುವೆವು. ಇನ್ ಶಾ ಅಲ್ಲಾಹ್.
ಫಿತ್ರ್ ಝ 6

ಫಿತ್ರ್ ಝಕಾತ್‌ನ ನಿಯಮ:

ಫಿತ್ರ್ ಝಕಾತ್ ಕಡ್ಡಾಯವಾಗಿದೆ. ಏಕೆಂದರೆ ಅಲ್ಲಾ-


ಹನ ಸಂದೇಶವಾಹಕರು(g) ಅದನ್ನು ಮುಸಲ್ಮಾ-
ನರ ಮೇಲೆ ಕಡ್ಡಾಯಗೊಳಿಸಿದ್ದಾರೆ. ಅಲ್ಲಾಹನ ಸಂ-
ದೇಶವಾಹಕರು(g) ಯಾವುದಾದರೂ ವಿಷಯವನ್ನು
ಕಡ್ಡಾಯಗೊಳಿಸಿದರೆ ಅಥವಾ ಆಜ್ಞಾಪಿಸಿದರೆ ಅದು
ಅಲ್ಲಾಹು ಕಡ್ಡಾಯಗೊಳಿಸಿದಂತೆ ಅಥವಾ ಆಜ್ಞಾಪಿ-
ಸಿದಂತೆ ಆಗಿದೆ. ಏಕೆಂದರೆ ಅಲ್ಲಾಹು ಹೇಳುತ್ತಾನೆ:

‫﴿ﭑ ﭒ ﭓ ﭔ ﭕ ﭖﭗ ﭘ‬
﴾‫ﭙﭚﭛﭜﭝﭞ‬
“ಯಾರು ಸಂದೇಶವಾಹಕರನ್ನು ಅನುಸರಿಸುತ್ತಾ-
ರ�ೋ ಅವರು ಅಲ್ಲಾಹನನ್ನು ಅನುಸರಿಸಿದ್ದಾರೆ. ಇನ್ನು
ಯಾರಾದರೂ ಮುಖ ತಿರುಗಿಸಿ ನಡೆಯುವುದಾದರೆ
(ಓ ಪ್ರವಾದಿಯವರೇ) ನಾನು ತಮ್ಮನ್ನು ಅವರ ಮೇಲೆ
ಫಿತ್ರ್ ಝ 7

ರಕ್ಷಕನನ್ನಾಗಿ ಮಾಡಿ ಕಳುಹಿಸಿಲ್ಲ.” (ಅನ್ನಿಸಾಅ್‌80)

ಅಲ್ಲಾಹು ಹೇಳುತ್ತಾನೆ:

‫﴿ﭮ ﭯ ﭰ ﭱ ﭲ‬
‫ﭳﭴﭵﭶﭷﭸﭹ‬
‫ﭺﭻﭼﭽﭾ‬
﴾ ‫ﭿﮀ ﮁ ﮂ ﮃ‬
“ಮಾರ್ಗದರ್ಶನವು ಸ್ಪಷ್ಟವಾದ ಬಳಿಕವೂ ಸಂದೇಶ-
ವಾಹಕರ ಆಜ್ಞೆಗೆ ವಿರುದ್ಧವಾಗಿ ಚಲಿಸುವವರು ಮತ್ತು
ಸತ್ಯವಿಶ್ವಾಸಿಗಳ ಮಾರ್ಗವಲ್ಲದ ಬೇರೆ ಮಾರ್ಗವನ್ನು
ಹಿಂಬಾಲಿಸುವವರು ಯಾರ�ೋ, ಅವರು ತಿರುಗಿದ
ಮಾರ್ಗದ ಕಡೆಗೆ ನಾವು ಅವರನ್ನು ತಿರುಗಿಸುವೆವು
ಮತ್ತು ಅವರನ್ನು ನರಕಾಗ್ನಿಯಲ್ಲಿ ಉರಿಸುವೆವು. ಅದು
ಬಹಳ ಕೆಟ್ಟ ತಲುಪುದಾಣವಾಗಿದೆ.” (ಅನ್ನಿಸಾಅ್‌115)
ಫಿತ್ರ್ ಝ 8

ಅಲ್ಲಾಹು ಹೇಳುತ್ತಾನೆ:

‫﴿ﮠ ﮡ ﮢ ﮣ‬
﴾ ‫ﮤ ﮥ ﮦ ﮧﮨ‬
“ಸಂದೇಶವಾಹಕರು ನಿಮಗೆ ಏನನ್ನು ನೀಡುತ್ತಾರ�ೋ
ಅದನ್ನು ಸ್ವೀಕರಿಸಿ ಮತ್ತು ಅವರು ಯಾವುದನ್ನು ವಿ-
ರ�ೋಧಿಸುತ್ತಾರ�ೋ ಅದರಿಂದ ದೂರವಿರಿ.” [ಅಲ್‌ಹ-
ಶ್ರ್ 7]

ಮುಸಲ್ಮಾನರಾದ ಹಿರಿಯರು, ಕಿರಿಯರು, ಗಂಡಸರು,


ಹೆಂಗಸರು, ಸ್ವತಂತ್ರರು ಮತ್ತು ಗುಲಾಮರ ಮೇಲೆ ಫಿತ್ರ್
ಝಕಾತ್ ಕಡ್ಡಾಯವಾಗಿದೆ.

ಅಬ್ದುಲ ್ಲಾಹ್ ಇಬ್ನ್ ಉಮರ್(h) ಹೇಳುತ್ತಾರೆ:

‫ول ال َّل ِه َص َّلى ال َّل ُه َع َل ْي ِه َو َس َّل َم‬


ُ ‫َف َر َض َر ُس‬
ಫಿತ್ರ್ ಝ 9

‫َزكَا َة ا ْل ِف ْط ِر َصا ًعا ِم ْن ت َْم ٍر َأ ْو َصا ًعا ِم ْن‬


َّ ‫َش ِع ٍير َع َلى ا ْل َع ْب ِد َوا ْل ُح ِّر َو‬
‫الذك َِر َو ْالُ ْن َثى‬
ِِ ِ ِ ‫و‬
.‫ين‬ َ ‫الصغ ِير َوا ْل َكبِ ِير م َن ا ْل ُم ْسلم‬ َّ َ
“ಪ್ರವ ಾದಿ(g) ರವರು ಒಂದು ಸಾಅ್ ಖರ್ಜೂರ,
ಅಥವಾ ಒಂದು ಸಾಅ್ ಬಾರ್ಲಿಯನ್ನು ಫಿತ್ರ್ ಝಕಾತ್
ಆಗಿ ನೀಡುವುದನ್ನು ಮುಸಲ್ಮಾನರಾದ ಗುಲಾಮರು,
ಸ್ವತಂತ್ರರು, ಗಂಡಸರು, ಹೆಂಗಸರು, ಹಿರಿಯರು ಮತ್ತು
ಕಿರಿಯರ ಮೇಲೆ ಕಡ್ಡಾಯಗೊಳಿಸಿದ್ದಾರೆ.” (ಅಲ್‌ಬು-
ಖಾರಿ ಮತ್ತು ಮುಸ್ಲಿಮ್)

ಗರ್ಭದಲ್ಲಿರ ುವ ಶಿಶುವಿನ ಹೆಸರಲ್ಲಿ ಫಿತ್ರ್ ಝಕಾತ್


ಕೊಡುವುದು ಕಡ್ಡಾಯವಿಲ.್ಲ ಆದರೆ ಕೊಟ್ಟರೆ ತೊಂ-
ದರೆಯಿಲ್ಲ. ಏಕೆಂದರೆ ಅಮೀರುಲ್ ಮುಅ್‌ಮಿನೀ-
ನ್ ಉಸ್ಮಾನ್ ಇಬ್ನ್ ಅಫ್ಫಾನ್(h) ಗರ್ಭದಲ್ಲಿರ ುವ
ಶಿಶುವಿನ ಹೆಸರಲ್ಲೂ ಫಿತ್ರ್ ಝಕಾತ್ ಕೊಡುತ್ತಿದರ
್ದ ು.
ಫಿತ್ರ್ ಝ 10

ಫಿತ್ರ್ ಝಕಾತನ್ನು ಪ್ರತಿಯೊಬ್ಬರ ೂ ತಮ್ಮ ಹೆಸರ-


ಲ್ಲಿ ಕೊಡುವುದು ಕಡ್ಡಾಯವಾಗಿದೆ. ಅದೇ ರೀತಿ
ತಮ್ಮ ಮಡದಿ–ಮಕ್ಕಳು, ಕುಟುಂಬಿಕರು ಮುಂತಾದ
ತಮ್ಮ ಖರ್ಚಿನಲ್ಲಿ ಬದುಕುತ್ತಿರ ುವವರ ಹೆಸರಲ್ಲೂ
ಕೊಡುವುದು ಕಡ್ಡಾಯವಾಗಿದೆ. ಆದರೆ ಮಡದಿ–
ಮಕ್ಕಳು, ಕುಟುಂಬಿಕರು ಮುಂತಾದವರಿಗೆ ಅವರ ಹೆ-
ಸರಲ್ಲಿ ಸ್ವತಃ ಫಿತ್ರ್ ಝಕಾತ್ ಕೊಡುವ ಸಾಮರ್ಥ್ಯವಿದ್ದರೆ
ಅವರೇ ಫಿತ್ರ್ ಝಕಾತ್ ಕೊಡುವುದು ಅತ್ಯಂತ ಶ್ರೇ-
ಷ್ಠವಾಗಿದೆ. ಏಕೆಂದರೆ, ಹದೀಸಿನಲ್ಲಿ ಪ್ರತಿಯೊಬ್ಬರನ್ನೂ
ಹೆಸರೆತ್ತಿ ಫಿತ್ರ್ ಝಕಾತ್ ನೀಡಬೇಕೆಂದು ಹೇಳಲಾಗಿದೆ.

ಈದುಲ್ ಫಿತ್ರ್‌ನ (ರಮಝಾನ್ ಹಬ್ಬದ) ಹಗಲು


ಮತ್ತು ರಾತ್ರಿ ತಮಗೂ ತನ್ನ ಕುಟುಂಬಕ್ಕೂ ಸಾಕಾಗು-
ವಷ್ಟು ಪ್ರಮ ಾಣದಲ್ಲಿ ಆಹಾರವಸ್ತುಗಳ ದಾಸ್ತಾನು ಇಲ್ಲ-
ದವರು ಫಿತ್ರ್ ಝಕಾತ್ ಕೊಡುವುದು ಕಡ್ಡಾಯವಿಲ್ಲ.
ತಮಗೂ ತಮ್ಮ ಕುಟುಂಬಕ್ಕೂ ಸಾಕಾಗುವ ಪ್ರಮ ಾ-
ಫಿತ್ರ್ ಝ 11

ಣಕ್ಕಿಂತ ಒಂದೇ ಒಂದು ಸಾಅ್ ಹೆಚ್ಚಿಗೆ ಇದ್ದರೂ ಫಿತ್ರ್


ಝಕಾತ್ ಕೊಡುವುದು ಕಡ್ಡಾಯವಾಗಿದೆ. ಏಕೆಂದರೆ
ಅಲ್ಲಾಹು ಹೇಳುತ್ತಾನೆ:

﴾ ‫﴿ﮧ ﮨ ﮩ ﮪ‬
“ನಿಮಗೆ ಸಾಧ್ಯವ ಾಗುವಷ್ಟು ನೀವು ಅಲ್ಲಾಹನನ್ನು
ಭಯಪಡಿರಿ.” (ಅತ್ತಗಾಬುನ್ 16)

ಪ್ರವಾದಿ(g) ರವರು ಹೇಳುತ್ತಾರೆ:

.»‫«إِ َذا َأ َم ْر ُتك ُْم بِ َأ ْم ٍر َف ْأتُوا ِمنْ ُه َما ْاس َت َط ْعت ُْم‬
“ನಾನು ನಿಮಗೆ ಏನಾದರೂ ಆಜ್ಞಾಪಿಸಿದರೆ ನಿಮಗೆ
ಸಾಧ್ಯವಾದಷ್ಟು ಅದನ್ನು ನಿರ್ವಹಿಸಲು ಪ್ರಯತ್ನಿಸಿರಿ.”
(ಅಲ್‌ಬುಖಾರಿ ಮತ್ತು ಮುಸ್ಲಿಮ್)
ಫಿತ್ರ್ ಝ 12

ಫಿತ್ರ್ ಝಕಾತ್‌ನ ಯುಕ್ತಿ:

ಫಿತ್ರ್ ಝಕಾತ್‌ ಕಡ್ಡಾಯಗೊಳಿಸಿರುವುದ ಹಿಂದಿರುವ


ಯುಕ್ತಿಯು ಅತ್ಯಂತ ಸ್ಪಷ್ಟವ ಾಗಿದೆ. ಫಿತ್ರ್ ಝಕಾತಿನ
ಉದ್ದೇಶ ಬಡವರಿಗೆ ಸಹಾಯ ಮಾಡುವುದು ಮತ್ತು
ಈದ್ ದಿನ (ಹಬ್ಬದ ದಿನ) ಬಡವರು ಭಿಕ್ಷೆ ಬೇಡದಂತೆ
ತಡೆಗಟ್ಟುವುದಾಗಿದೆ. ಅದೇ ರೀತಿ ಬಡವರು ಕೂಡ
ಈದ್‌ನ (ಹಬ್ಬದ) ಸಂತ�ೋಷ ಮತ್ತು ಸಂಭ್ರಮ-
ದಲ್ಲಿ ಶ್ರೀಮಂತರೊಂದಿಗೆ ಭಾಗಿಯಾಗಿ ಎಲ್ಲರ ೂ
ಜೊತೆಯಾಗಿ ಹಬ್ಬವನ್ನು ಆಚರಿಸುವಂತಾಗುವು-
ದು ಫಿತ್ರ್ ಝಕಾತಿನ ಇನ್ನೊಂದು ಉದ್ದೇಶವಾಗಿದೆ.
ಔದಾರ್ಯ, ಅನುಕಂಪ, ಸಾಂತ್ವನ, ಪ್ರೀತಿ ಮುಂತಾದ
ಗುಣಗಳು ಫಿತ್ರ್ ಝಕಾತ್‌ನಲ್ಲಿ ಅಭಿವ್ಯಕ್ತವ ಾಗುತ್ತದೆ.
ಮಾತ್ರವಲ್ಲ, ಉಪವಾಸದಲ್ಲಿ ಉಂಟಾದ ಕೊರತೆ,
ಅನಗತ್ಯ ಮಾತು ಮತ್ತು ಪಾಪ–ದ�ೋಷಗಳನ್ನು
ಫಿತ್ರ್ ಝಕಾತ್ ಶುದ್ಧೀಕರಿಸುತ್ತದೆ. ರಮದಾನ್ ತಿಂ-
ಫಿತ್ರ್ ಝ 13

ಗಳಲ್ಲಿ ಪೂರ್ಣವಾಗಿ ಉಪವಾಸ ಆಚರಿಸಲು, ರಾತ್ರಿ


ನಮಾಝ್ ನಿರ್ವಹಿಸಲು, ಸತ್ಕರ್ಮಗಳನ್ನು ನಿರ್ವಹಿ-
ಸಲು ಸೌಭಾಗ್ಯ ಒದಗಿಸಿ ಸುಲಭೀಕರಿಸಿ ಕೊಟ್ಟದಕ
್ದ ್ಕಾ-
ಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವುದು ಕೂಡ ಫಿತ್ರ್
ಝಕಾತ್‌ನ ಉದ್ದೇಶದಲ್ಲಿ ಒಳಪಡುತ್ತದೆ.

ಇಬ್ನ್ ಅಬ್ಬಾಸ್(h) ಹೇಳುತ್ತಾರೆ:

‫ول ال َّل ِه َص َّلى ال َّل ُه َع َل ْي ِه َو َس َّل َم‬ ُ ‫َف َر َض َر ُس‬


ِ
‫لصائ ِم م َن ال َّلغ ِْو‬ ِ ِ ِ
َّ ‫َز َكــا َة ا ْلف ْط ِر ُط ْه َر ًة ل‬
‫ َم ْن َأ َّد َاها َق ْب َل‬.‫ين‬ ِ ِ‫ث َو ُط ْع َم ًة لِ ْل َم َساك‬ ِ ‫والر َف‬
َّ َ
َ‫ َو َم ْن َأ َّد َاها َب ْعد‬.‫الص َل ِة َف ِه َي َزكَا ٌة َم ْق ُبو َل ٌة‬
َّ
.‫ات‬ ِ ‫الص َل ِة َف ِهي صدَ َق ٌة ِمن الصدَ َق‬
َّ َ َ َ َّ
“ಉಪವಾಸಿಗರಿಂದ ಉಂಟಾದ ಅಸಭ್ಯ ಮತ್ತು ಅಶ್ಲೀಲ
ಮಾತುಗಳನ್ನು ಶುದ್ಧೀಕರಿಸುವುದಕ್ಕಾಗಿ ಮತ್ತು ಬಡ-
ಫಿತ್ರ್ ಝ 14

ವರಿಗೆ ಒಂದು ಆಹಾರವೆಂಬ ನೆಲೆಯಲ್ಲಿ ಅಲ್ಲಾಹನ


ಸಂದೇಶವಾಹಕರು(g) ಫಿತ್ರ್ ಝಕಾತನ್ನು ಕಡ್ಡಾ-
ಯಗೊಳಿಸಿದ್ದಾರೆ. ಅದನ್ನು ಈದ್ ನಮಾಝ್‌ ನಿರ್ವ-
ಹಿಸುವುದಕ್ಕೆ ಮುಂಚೆ ನೀಡಿದರೆ ಅದು ಸ್ವೀಕೃತ ಫಿತ್ರ್
ಝಕಾತ್ ಆಗುತ್ತದೆ. ಅದನ್ನು ಈದ್ ನಮಾಝ್‌ ನಿ-
ರ್ವಹಿಸಿದ ನಂತರ ನೀಡಿದರೆ ಅದು ಕೇವಲ ಒಂದು
ದಾನ ಮಾತ್ರವ ಾಗಿದೆ.” (ಅಬೂದಾವೂದ್ ಮತ್ತು
ಇಬ್ನ್ ಮಾಜ)

ಫಿತ್ರ್ ಝಕಾತ್ ಆಗಿ ಕೊಡಬೇಕಾದ ಆಹಾರ


ಯಾವುದು?

ಫಿತ್ರ್ ಝಕಾತ್ ಆಗಿ ಕೊಡಬೇಕಾದ ಆಹಾರವು


ಖರ್ಜೂರ, ಧಾನ್ಯ, ಅಕ್ಕಿ, ಒಣದ್ರಾಕ್ಷಿ, ಬೆಣ್ಣೆ ಮುಂತಾದ
ಮನುಷ್ಯರು ತಿನ್ನುವ ಆಹಾರವಾಗಿದೆ.

ಇಬ್ನ್ ಉಮರ್(h) ರವರು ಹೇಳುತ್ತಾರೆ:


ಫಿತ್ರ್ ಝ 15

‫ول ال َّل ِه َص َّلى ال َّل ُه َع َل ْي ِه َو َس َّل َم‬


ُ ‫َف َر َض َر ُس‬
‫َزكَا َة ا ْل ِف ْط ِر َصا ًعا م ْن ت َْم ٍر َأ ْو َصا ًعا م ْن‬
ِ ِ

.‫َش ِع ٍير‬
“ಪ್ರವ ಾದಿ(g) ರವರು ಒಂದು ಸಾಅ್ ಖರ್ಜೂರ,
ಅಥವಾ ಒಂದು ಸಾಅ್ ಬಾರ್ಲಿಯನ್ನು ಫಿತ್ರ್
ಝಕಾತ್ ಆಗಿ ನೀಡುವುದನ್ನು ಕಡ್ಡಾಯಗೊಳಿಸಿದ್ದಾ-
ರೆ.” (ಅಲ್‌ಬುಖಾರಿ ಮತ್ತು ಮುಸ್ಲಿಮ್)

ಆ ಕಾಲದಲ್ಲಿ ಬಾರ್ಲಿ ಅವರ ಸಾಮಾನ್ಯ ಆಹಾರವಾ-


ಗಿತ್ತು. ಅಬೂ ಸಈದ್ ಅಲ್‌ಖುದ್ರೀ(h) ಹೇಳುತ್ತಾರೆ:

‫ول ال َّل ِه َص َّلى ال َّل ُه‬


ِ ‫ُكنَّا نُخْ ِر ُج فِي َع ْه ِد رس‬
ُ َ
.ٍ‫َع َل ْي ِه َو َس َّل َم َي ْو َم ا ْل ِف ْط ِر َصا ًعا ِم ْن َط َعام‬
‫يب َو ْالَ ِق ُط‬ ِ َّ ‫وكَانَ َطعامنَا‬
ُ ِ‫الشع ُير َوال َّزب‬ َ َ َ
.‫َوالت َّْم ُر‬
ಫಿತ್ರ್ ಝ 16

“ಪ್ರವಾದಿ(g) ರವರ ಕಾಲದಲ್ಲಿ ನಾವು ಫಿತ್ರ್‌ ಝಕಾತ್


ಆಗಿ ಒಂದು ಸಾಅ್ ಆಹಾರವನ್ನು ಕೊಡುತ್ತಿದ್ದೆವು. ಆಗ
ನಮ್ಮ ಆಹಾರವು ಬಾರ್ಲಿ, ಒಣದ್ರಾಕ್ಷಿ, ಬೆಣ್ಣೆ ಮತ್ತು
ಖರ್ಜೂರಗಳಾಗಿದವು
್ದ .” (ಅಲ್‌ಬುಖಾರಿ)

ಆಹಾರವಸ್ತುಗಳಲ್ಲದ ಬೇರೇನಾದರೂ
ಕೊಡಬಹುದೇ?

ಫಿತ್ರ್ ಝಕಾತ್ ಆಗಿ ಜಾನುವಾರುಗಳು ತಿನ್ನುವ ಆಹಾ-


ರವನ್ನು ಕೊಟ್ಟರೆ ಸಿಂಧುವಾಗುವುದಿಲ.್ಲ ಏಕೆಂದರೆ, ಪ್ರ-
ವಾದಿ(g) ರವರು ಕಡ್ಡಾಯ ಮಾಡಿದ್ದು ಮನುಷ್ಯರು
ತಿನ್ನುವ ಆಹಾರವನ್ನಾಗಿದೆಯೇ ಹೊರತು ಪ್ರಾಣಿಗಳು
ತಿನ್ನುವ ಆಹಾರವನ್ನಲ.್ಲ

ಅದೇ ರೀತಿ ಮನುಷ್ಯರು ತಿನ್ನುವ ಆಹಾರವನ್ನು ಬಿಟ್ಟು


ಬಟ್ಟೆ, ಚಾಪೆ, ಪಾತ್ರೆ, ಪಗಡಿ ಮುಂತಾದ ಪರಿಕರಗಳನ್ನು
ಫಿತ್ರ್ ಝಕಾತ್ ಆಗಿ ಕೊಟ್ಟರೂ ಸಿಂಧುವಾಗುವುದಿಲ್ಲ.
ಫಿತ್ರ್ ಝ 17

ಏಕೆಂದರೆ, ಪ್ರವಾದಿ(g) ರವರು ಕಡ್ಡಾಯ ಮಾಡಿದ್ದು


ಆಹಾರವಸ್ತುವನ್ನಾಗಿದೆ. ಆದ್ದರಿಂದ ಪ್ರವ ಾದಿ(g)
ರನ್ನು ನಿಗದಿಗೊಳಿಸಿದ ವಸ್ತುವನ್ನಲ್ಲದೆ ಬೇರೇನಾದ-
ರೂ ಕೊಟ್ಟರೆ ಫಿತ್ರ್ ಝಕಾತ್ ಸಿಂಧುವಾಗುವುದಿಲ್ಲ.

ಆಹಾರದ ಬದಲು ಹಣ ಕೊಡಬಹುದೇ?

ಆಹಾರದ ಬದಲು ಅದರ ಮೌಲ್ಯವನ್ನು ಹಣದ ರೂಪ-


ದಲ್ಲಿ ಕೊಟ್ಟರೂ ಫಿತ್ರ್ ಝಕಾತ್ ಸಿಂಧುವಾಗುವುದಿಲ.್ಲ
ಏಕೆಂದರೆ, ಅದು ಅಲ್ಲಾಹನ ಸಂದೇಶವಾಹಕರು(g)
ಆಜ್ಞಾಪಿಸಿದ ಆಜ್ಞೆಗೆ ವಿರುದ್ಧವ ಾಗಿದೆ. ಪ್ರವ ಾದಿ(g)
ರವರು ಹೇಳಿದರು:

.»‫«م ْن َع ِم َل َع َم ًل َل ْي َس َع َل ْي ِه َأ ْم ُرنَا َف ُه َو َر ٌّد‬


َ
“ನಮ್ಮ ಆಜ್ಞೆಯಿಲ್ಲ ದ ಒಂದು ಕರ್ಮವನ್ನು
ಯಾರಾದರೂ ಮಾಡಿದರೆ ಅದು ತಿರಸ್ಕೃತವಾಗಿದೆ.”
(ಅಲ್‌ಬುಖಾರಿ ಮತ್ತು ಮುಸ್ಲಿಮ್‌)
ಫಿತ್ರ್ ಝ 18

ಇನ್ನೊಂದು ವರದಿಯಲ್ಲಿ:

‫ث فِي َأ ْم ِرنَا َه َذا َما َل ْي َس ِمنْ ُه َف ُه َو‬


َ َ‫«م ْن َأ ْحد‬َ
.»‫َر ٌّد‬
“ನಮ್ಮ ಈ ಧರ್ಮದಲ್ಲಿಲದ
್ಲ ಒಂದು ಹೊಸ ಕಾರ್ಯ-
ವನ್ನು ಯಾರಾದರೂ ನಿರ್ವಹಿಸಿದರೆ ಅದು ತಿರಸ್ಕೃತ-
ವಾಗಿದೆ.” (ಮುಸ್ಲಿಂ)

ಆಹಾರದ ಮೌಲ್ಯವನ್ನು ಕೊಡುವುದು ಸಹಾಬಾಗಳ


ವರ್ತನೆಗೂ ವಿರುದ್ಧವಾಗಿದೆ. ಏಕೆಂದರೆ, ಅಂದು ಹಣ
ಅಸ್ತಿತ್ವದಲ್ಲಿದ್ದೂ ಕೂಡ ಅವರು ಒಂದು ಸಾಅ್ ಆಹಾ-
ರವನ್ನೇ ಕೊಡುತ್ತಿದರ
್ದ ು. ಹಣವನ್ನು ಕೊಡುತ್ತಿರಲಿಲ್ಲ.

ಪ್ರವಾದಿ(g) ರವರು ಹೇಳಿದರು:

ِ ِ ِ ِ ِ
‫ين‬ َّ ‫« َع َل ْيك ُْم بِ ُسنَّتي َو ُسنَّة ا ْلخُ َل َفاء‬
َ ‫الراشد‬
.»‫ين ِم ْن َب ْع ِدي‬ ِ
َ ‫ا ْل َم ْهد ِّي‬
ಫಿತ್ರ್ ಝ 19

“ನೀವು ನನ್ನ ಸುನ್ನತನ


್ತ ್ನು ಮತ್ತು ನನ್ನ ನಂತರ ಬರುವ
ಸನ್ಮಾರ್ಗಿಗಳಾದ ಅಲ್‌ಖುಲಫಾಉ ರ್‍ರಾಶಿದೂನ್‌ಗಳ
ಸುನ್ನತನ
್ತ ್ನು ಬಿಗಿಯಾಗಿ ಹಿಡಿಯಿರಿ.” (ಅಹ್ಮದ್, ಅಬೂ-
ದಾವೂದ್, ಇಬ್ನ್ ಮಾಜ ಮತ್ತು ಅತ್ತಿರ್ಮುದಿ)

ಫಿತ್ರ್ ಝಕಾತ್ ಎನ್ನುವುದು ಒಂದು ಆರಾಧನೆಯಾಗಿ-


ದೆ. ಒಂದು ನಿರ್ದಿಷ್ಟ ವಿಧದ ಆಹಾರವನ್ನು ಬಡವರಿಗೆ
ಕೊಡುವ ಮೂಲಕ ಅಲ್ಲಾಹನಿಗೆ ಈ ಆರಾಧನೆಯನ್ನು
ನಿರ್ವಹಿಸಬೇಕಾಗಿದೆ. ಫಿತ್ರ್ ಝಕಾತ್ ಕೊಡಬೇಕಾದ
ಸಮಯದಲ್ಲಿ ಕೊಡದೆ ಬೇರೆ ಸಮಯದಲ್ಲಿ ಕೊಟ್ಟರೆ
ಹೇಗೆ ಫಿತ್ರ್ ಝಕಾತ್ ಸಿಂಧುವಾಗುವುದಿಲ್ಲವೋ
ಹಾಗೆಯೇ ಫಿತ್ರ್ ಝಕಾತ್ ಆಗಿ ನಿಗದಿಪಡಿಸಿದ ಆಹಾ-
ರವಸ್ತುವನ್ನು ಕೊಡದೆ ಬೇರೆ ವಸ್ತುವನ್ನು ಕೊಟ್ಟರೂ
ಫಿತ್ರ್ ಝಕಾತ್ ಸಿಂಧುವಾಗುವುದಿಲ.್ಲ ಏಕೆಂದರೆ,
ಪ್ರವ ಾದಿ(g) ರವರು ಫಿತ್ರ್ ಝಕಾತ್ ಆಗಿ ಅನೇಕ
ವಿಧದ ಆಹಾರಗಳನ್ನು ನಿಗದಿಪಡಿಸಿದ್ದಾರೆ. ಸಾಮಾ-
ಫಿತ್ರ್ ಝ 20

ನ್ಯವಾಗಿ ಅವುಗಳ ಮೌಲ್ಯವೂ ಭಿನ್ನವಾಗಿವೆ.

ಫಿತ್ರ್ ಝಕಾತ್‌ನ ಬದಲು ಅದರ ಮೌಲ್ಯವನ್ನು ಕೊಟ್ಟರೆ


ಅದು ಫಿತ್ರ್ ಝಕಾತ್ ಎಂಬ ಇಸ್ಲಾಮಿನ ಲಾಂಛನವ-
ನ್ನು ಗುಪ್ತವಾಗಿ ಕೊಡುವ ಒಂದು ದಾನಕ್ಕೆ ಪರಿವರ್ತಿ-
ಸುತ್ತದೆ. ಏಕೆಂದರೆ, ಒಂದು ಸಾಅ್ ಆಹಾರವನ್ನು ಫಿತ್ರ್
ಝಕಾತ್ ಆಗಿ ಕೊಟ್ಟರೆ ಅದು ಮುಸಲ್ಮಾನರ ನಡುವೆ
ಬಹಿರಂಗವಾಗುತ್ತದೆ, ಮಕ್ಕಳಿಗೆ ಅದರ ಬಗ್ಗೆ ಅರಿವು
ಮೂಡುತ್ತದೆ, ಅದನ್ನು ಅಳೆಯುವುದು, ಹಂಚುವುದು
ಮುಂತಾದವುಗಳನ್ನು ಅವರು ನೇರವಾಗಿ ಕಾಣುತ್ರೆ
ತಾ .
ಆದರೆ ಅದರ ಬದಲು ಕಾಸನ್ನು ಕೊಟ್ಟರೆ ಅದು ಕೊ-
ಡುವವನ ಮತ್ತು ತೆಗೆದುಕೊಳ್ಳುವವನ ಮಧ್ಯೆ ಗುಪ್ತ-
ವಾಗಿರುತ್ತದೆ.

ಫಿತ್ರ್ ಝಕಾತ್ ಎಷ್ಟು ಕೊಡಬೇಕು?

ಪ್ರವಾದಿ(g) ರವರ ಕಾಲದಲ್ಲಿ ಫಿತ್ರ್ ಝಕಾತ್ ಆಗಿ


ಫಿತ್ರ್ ಝ 21

ಒಂದು ಸಾಅ್‌ಆಹಾರವನ್ನು ಕೊಡುತ್ತಿದರ


್ದ ು. ಅಂದಿನ
ಕಾಲದ ಒಂದು ಸಾಅ್ ಎಂದರೆ 480 ಮಿಸ್ಕಾಲ್ ತೂ-
ಗವಷ್ಟು ಉತಮ
್ತ ಜಾತಿಯ ಧಾನ್ಯ. ಇಂದಿನ ತೂಕ-
ದಲ್ಲಿ ಒಂದು ಮಿಸ್ಕಾಲ್ ಎಂದರೆ 4.25 ಗ್ರಾಂ. 480
ಮಿಸ್ಕಾಲ್‌ ಎಂದರೆ 2.04 ಕಿಲ�ೋಗ್ರಾಂ ಆಗುತ್ತದೆ. ಪ್ರ-
ವಾದಿ(g) ಯವರ ಕಾಲದಲ್ಲಿ ಬಳಸುತ್ತಿದ್ದ ಸಾಅ್‌ನ
ಪ್ರಮ ಾಣವನ್ನು ಅರಿಯಬೇಕಾದರೆ 2.04 ಕಿಲ�ೋಗ್ರಾಂ
ಧಾನ್ಯವನ್ನು ತೂಗಿ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ
ಅದರ ಪ್ರಮ ಾಣದಷ್ಟು ಅಳೆದು ನೀಡಬೇಕು.

ಫಿತ್ರ್ ಝಕಾತ್ ಯಾವಾಗ ಕೊಡಬೇಕು?

ಈದುಲ್ ಫಿತ್ರ್‌ನ (ರಮ್‌ಝಾನ್ ಹಬ್ಬದ) ಹಿಂದಿನ


ದಿನ (ಉಪವಾಸದ ಕೊನೆಯ ದಿನ) ಸೂರ್ಯಾಸ್ತದ
ಬಳಿಕ ಫಿತ್ರ್ ಝಕಾತ್ ಕೊಡಬೇಕು. ಆ ಸಮಯದ-
ಲ್ಲಿ ಯಾರಿಗೆಲ್ಲಾ ಫಿತ್ರ್ ಝಕಾತ್ ಕೊಡುವುದು ಕಡ್ಡಾ-
ಯವಾಗಿದೆಯೋ ಅವರೆಲರ
್ಲ ಹೆಸರಲ್ಲಿ ಫಿತ್ರ್ ಝಕಾತ್
ಫಿತ್ರ್ ಝ 22

ಕೊಡುವುದು ಕಡ್ಡಾಯವಾಗಿದೆ.

ಯಾರಾದರೂ ಸೂರ್ಯಾಸ್ತಕ್ಕೆ ಮುಂಚೆ ನಿಧನರಾದ-


ರೆ –ಅವರು ನಿಧನರಾದದ್ದು ಸೂರ್ಯಾಸ್ತಕ್ಕೆ ಕೆಲವೇ
ಕ್ಷಣಗಳ ಮುಂಚೆಯಾದರೂ ಸರಿ– ಅವರ ಹೆಸರಲ್ಲಿ
ಫಿತ್ರ್ ಝಕಾತ್ ಕೊಡುವುದು ಕಡ್ಡಾಯವಿಲ್ಲ. ಆದರೆ
ಯಾರಾದರೂ ಸೂರ್ಯಾಸದ
್ತ ಬಳಿಕ ನಿಧನರಾದರೆ
–ಅವರು ನಿಧನರಾದದ್ದು ಸೂರ್ಯಾಸ್ತದ ಕೆಲವೇ ಕ್ಷ-
ಣಗಳ ನಂತರವಾದರೂ ಸರಿ– ಅವರ ಹೆಸರಲ್ಲಿ ಫಿತ್ರ್
ಝಕಾತ್ ಕೊಡುವುದು ಕಡ್ಡಾಯವಾಗಿದೆ.

ಸೂರ್ಯಾಸ್ತದ ನಂತರ ಮಗು ಹುಟ್ಟಿದರೆ –ಅದು


ಹುಟ್ಟಿದ ್ದು ಸೂರ್ಯಾಸ್ತದ ಕೆಲವೇ ಕ್ಷಣಗಳ ನಂತ-
ರವಾದರೂ ಸರಿ– ಅದರ ಹೆಸರಲ್ಲಿ ಫಿತ್ರ್ ಝಕಾತ್
ಕೊಡುವುದು ಕಡ್ಡಾ ಯ ವಾಗಿದೆ. ಈಗಾಗಲೇ
ಹೇಳಿದಂತೆ ಗರ್ಭದಲ್ಲಿರುವ ಮಗುವಿನ ಹೆಸರಲ್ಲಿ ಫಿತ್ರ್
ಝಕಾತ್ ಕೊಡಬೇಕಾಗಿಲ್ಲ.
ಫಿತ್ರ್ ಝ 23

ಫಿತ್ರ್ ಝಕಾತ್ ಕಡ್ಡಾಯವಾಗುವುದು ಈದುಲ್


ಫಿತ್ರ್ ಹಬ್ಬದ ಹಿಂದಿನ ದಿನ (ಉಪವಾಸದ ಕೊನೆಯ
ದಿನ) ಸೂರ್ಯಾಸದ
್ತ ಬಳಿಕವಾಗಿದೆ. ಏಕೆಂದರೆ, ಅದು
ರಮದಾನ್ ತಿಂಗಳಿಗೆ ವಿದಾಯಕ�ೋರುವ ಸಮಯ-
ವಾಗಿದೆ.

ಫಿತ್ರ್ ಝಕಾತ್ ಕೊಡಲು ಎರಡು ಸಮಯಗಳಿವೆ:


ಶ್ರೇಷ್ಠವ ಾದ ಸಮಯ ಮತ್ತು ಅನುಮತಿಯಿರುವ
ಸಮಯ.

ಶ್ರೇಷ್ಠವ ಾದ ಸಮಯ: ಶ್ರೇಷ್ಠವಾದ ಸಮಯ ಎಂದರೆ


ಈದುಲ್ ಫಿತ್ರ್‌ನ ದಿನ (ರಮಝಾನ್ ಹಬ್ಬದ ದಿನ)
ಬೆಳಗ್ಗೆ ಈದ್ ನಮಾಝ್ ಮಾಡುವುದಕ್ಕೆ ಮುಂಚೆ.

ಅಬೂ ಸಈದ್ ಅಲ್‌ಖುದ್ರೀ(h) ಹೇಳುತ್ತಾರೆ:

‫ول ال َّل ِه َص َّلى ال َّل ُه‬


ِ ‫ُكنَّا نُخْ ِر ُج فِي َع ْه ِد رس‬
ُ َ
ಫಿತ್ರ್ ಝ 24

.ٍ‫َع َل ْي ِه َو َس َّل َم َي ْو َم ا ْل ِف ْط ِر َصا ًعا ِم ْن َط َعام‬


“ಪ್ರವ ಾದಿ(g) ರವರ ಕಾಲದಲ್ಲಿ ನಾವು ಈದುಲ್
ಫಿತ್ರ್‌ನ (ಹಬ್ಬದ) ದಿನ ಒಂದು ಸಾಅ್ ಆಹಾರವನ್ನು
ಫಿತ್ರ್ ಝಕಾತ್ ಆಗಿ ಕೊಡುತ್ತಿದ್ದೆವು.” (ಅಲ್‌ಬುಖಾರಿ)

ಇಬ್ನ್ ಉಮರ್(h) ಹೇಳುತ್ತಾರೆ:

‫ول ال َّل ِه َص َّلى ال َّل ُه َع َل ْي ِه َو َس َّل َم َأ َم َر‬ َ ‫َأنَّ َر ُس‬


ِ ‫َاة ا ْل ِف ْط ِر َأنْ ت َُؤ َّدى َق ْب َل ُخ ُروجِ الن‬
‫َّاس‬ ِ ‫بِ َزك‬

.‫الص َل ِة‬
َّ ‫إِ َلى‬
“ಜನರು ಈದ್ ನಮಾಝ್‌ಗೆ ಹೊರಡುವುದಕ್ಕೆ
ಮುಂಚೆಯೇ ಫಿತ್ರ್ ಝಕಾತ್ ಕೊಟ್ಟುಬಿಡಲು ಪ್ರ-
ವಾದಿ(g) ರವರು ಆಜ್ಞಾಪಿಸಿದ್ದಾರೆ.” (ಅಲ್‌ಬುಖಾ-
ರಿ, ಮುಸ್ಲಿಂ)

ಈ ಕಾರಣದಿಂದಲೇ ಫಿತ್ರ್ ಝಕಾತ್ ಕೊಡಲು ಸು-


ಫಿತ್ರ್ ಝ 25

ಗಮವಾಗುವುದಕ್ಕಾಗಿ ಈದುಲ್ ಫಿತ್ರ್ ನಮಾಝನ್ನು


ಸ್ವಲ್ಪ ತಡಮಾಡುವುದು ಶ್ರೇಷ್ಠವಾಗಿದೆ.

ಅನುಮತಿಯಿರುವ ಸಮಯ: ಅನುಮತಿಯಿರುವ


ಸಮಯ ಎಂದರೆ ಈದುಲ್ ಫಿತ್ರ್ ಹಬ್ಬಕ್ಕೆ ಒಂದು
ಅಥವಾ ಎರಡು ದಿನ ಮಂಚೆ.

ನಾಫಿಅ್(h) ಹೇಳುತ್ತಾರೆ:

‫الص ِغ ِير َوا ْل َكبِ ِير‬ ِ


َّ ‫كَانَ ا ْب ُن ُع َم َر ُي ْعطي َع ِن‬
‫ َوكَانَ ُي ْعطِ َيها‬.‫َحتَّى إِنْ كَانَ لِ ُي ْعطِي َع ْن َبن ِ َّي‬
‫ َوكَانُوا ُي ْع ُطونَ َق ْب َل ا ْل ِف ْط ِر‬.‫ين َي ْق َب ُلون ََها‬ ِ
َ ‫ا َّلذ‬
.‫بِ َي ْو ٍم َأ ْو َي ْو َم ْي ِن‬
“ಇಬ್ನ್ ಉಮರ್(h) ರವರು ಕಿರಿಯರು ಮತ್ತು
ಹಿರಿಯರ ಹೆಸರಲ್ಲಿ ಫಿತ್ರ್ ಝಕಾತ್ ನೀಡುತ್ತಿದರ
್ದ ು.
ಎಲ್ಲಿಯವರೆಗೆಂದರೆ ನನ್ನ ಮಕ್ಕಳ ಹೆಸರಲ್ಲೂ ಅವರು
ಫಿತ್ರ್ ಝ 26

ಫಿತ್ರ್ ಝಕಾತ್ ನೀಡುತ್ತಿದರ


್ದ ು. ಅವುಗಳನ್ನು ಸ್ವೀಕರಿ-
ಸುವ ಜನರಿಗೆ ಮಾತ್ರ ಅವರು ಅದನ್ನು ನೀಡುತ್ತಿದರ
್ದ ು.
ಈದುಲ್ ಫಿತ್ರ್ ಹಬ್ಬಕ್ಕೆ ಒಂದು ಅಥವಾ ಎರಡು ದಿನ
ಮುಂಚೆ ಅದನ್ನು ನೀಡಲಾಗುತ್ತಿತ್ತು.” (ಅಲ್‌ಬುಖಾರಿ)

ಆದರೆ ಈದ್ ನಮಾಝ್‌ ನಿರ್ವಹಿಸುವ ತನಕ ಅದನ್ನು


ತಡಮಾಡಬಾರದು. ಯಾವುದೇ ವಿನಾಯಿತಿಯಿಲ್ಲದೆ
ಈದ್ ನಮಾಝ್‌ ನಿರ್ವಹಿಸುವ ತನಕ ತಡಮಾಡಿದರೆ
ಅದು ಸ್ವೀಕಾರಾರ್ಹವಲ್ಲ. ಏಕೆಂದರೆ, ಅದು ಅಲ್ಲಾಹನ
ಸಂದೇಶವಾಹಕರು(g) ಆಜ್ಞಾಪಿಸಿದ ಆಜ್ಞೆಗೆ ವಿರುದ್ಧ-
ವಾಗಿದೆ. ಈಗಾಗಲೇ ಉಲ್ಲೇಖಿಸಿದಂತೆ ಇಬ್ನ್ ಅಬ್ಬಾ-
ಸ್(h) ಹೇಳುತ್ತಾರೆ:

.‫الص َل ِة َف ِه َي َزكَا ٌة َم ْق ُبو َل ٌة‬


َّ ‫َم ْن َأ َّد َاها َق ْب َل‬
‫الص َل ِة َف ِه َي َصدَ َق ٌة ِم َن‬ َّ َ‫َو َم ْن َأ َّد َاها َب ْعد‬
.‫ات‬ِ ‫الصدَ َق‬
َّ
ಫಿತ್ರ್ ಝ 27

“ಈದ್ ನಮಾಝ್‌ ನಿರ್ವಹಿಸುವುದಕ್ಕೆ ಮುಂಚೆ


ಅದನ್ನು ನೀಡಿದರೆ ಅದು ಸ್ವೀಕೃತ ಫಿತ್ರ್ ಝಕಾತ್
ಆಗಿದೆ. ಅದನ್ನು ಈದ್ ನಮಾಝ್‌ ನಿರ್ವಹಿಸಿದ
ನಂತರ ನೀಡಿದರೆ ಅದು ಕೇವಲ ಒಂದು ದಾನ ಮಾ-
ತ್ರವಾಗಿದೆ.”

ಆದರೆ ವಿನಾಯಿತಿಯಿಂದಾಗಿ ಅದನ್ನು ತಡಮಾಡಿದ-


ರೆ ಅದರಲ್ಲಿ ತೊಂದರೆಯಿಲ.್ಲ ಉದಾಹರಣೆಗೆ, ಫಿತ್ರ್
ಝಕಾತ್ ಆಗಿ ನೀಡಲು ಏನೂ ಸಿಗದ ಸ್ಥಳದಲ್ಲಿರುವ-
ವರು ಅಥವಾ ಅದನ್ನು ಸ್ವೀಕರಿಸಲು ಯಾರೂ ಇಲ್ಲದ
ಸ್ಥಳದಲ್ಲಿರುವವರು. ಈದುಲ್ ಫಿತ್ರ್ ಹಬ್ಬವನ್ನು ಅನಿ-
ರೀಕ್ಷಿತವಾಗಿ ಘೋಷಿಸಲಾಗಿ ನಮಾಝ್‌ಗೆ ಮುಂಚೆ
ಫಿತ್ರ್ ಝಕಾತ್ ನೀಡಲು ಸಾಧ್ಯವಾಗದವರು. ಅಥವಾ
ತನ್ನ ಹೆಸರಲ್ಲಿ ಫಿತ್ರ್ ಝಕಾತ್ ನೀಡಲು ಬೇರೊಬ್ಬ ವ್ಯ-
ಕ್ತಿಯನ್ನು ನೇಮಿಸಿ ಆತ ಅದನ್ನು ಕೊಡಲು ಮರೆತುಬಿ-
ಡುವುದು. ಇಂತಹ ಸಂದರ್ಭಗಳಲ್ಲಿ ಈದುಲ್ ಫಿತ್ರ್
ಫಿತ್ರ್ ಝ 28

ಹಬ್ಬವು ಕಳೆದ ಬಳಿಕ ಫಿತ್ರ್ ಝಕಾತ್ ನೀಡಬಹುದು.


ಏಕೆಂದರೆ, ಇವರಿಗೆ ಅದರಲ್ಲಿ ವಿನಾಯಿತಿಯಿದೆ.

ಫಿತ್ರ್ ಝಕಾತ್ ಹೇಗೆ ಮತ್ತು ಯಾರಿಗೆ ಕೊಡಬೇಕು?

ಈದ್ ನಮಾಝ್‌ ನಿರ್ವಹಿಸುವುದಕ್ಕೆ ಮುಂಚಿತವಾ-


ಗಿ ಫಿತ್ರ್ ಝಕಾತ್‌ನ ಅರ್ಹ ಫಲಾನುಭವಿಗಳ ಬಳಿಗೆ
ತೆರಳಿ ಅವರಿಗೆ ಫಿತ್ರ್ ಝಕಾತ್ ಕೊಡುವುದು ಅಥವಾ
ಆ ಫಲಾನುಭವಿಗಳ ಪರವಾಗಿ ಫಿತ್ರ್ ಝಕಾತ್ ಸ್ವೀಕರಿ-
ಸಲು ನಿಶ್ಚಯಿಸಲಾದ ವ್ಯಕ್ತಿಗೆ ಕೊಡುವುದು ಕಡ್ಡಾಯ-
ವಾಗಿದೆ. ಆದರೆ ಇಂತಿಂತಹ ವ್ಯಕ್ತಿಗೆ ಅಥವಾ ಅವನ
ಪರವಾಗಿ ಸ್ವೀಕರಿಸಲು ನಿಶ್ಚಯಿಸಲಾದ ವ್ಯಕ್ತಿಗೆ ನೀಡು-
ತ್ತೇನೆಂದು ನಿಯ್ಯತ್ ಮಾಡಿ ಆ ವ್ಯಕ್ತಿ ಸಿಗದಿದರೆ
್ದ ಅದನ್ನು
ಬೇರೊಬ್ಬ ಅರ್ಹ ಫಲಾನುಭವಿಗೆ ನೀಡಬೇಕು. ಮೊ-
ದಲನೆಯವನನ್ನು ಹುಡುಕುತ್ತಾ ತಡ ಮಾಡಬಾರದು.
ಫಿತ್ರ್ ಝ 29

ಫಿತ್ರ್ ಝಕಾತ್ ನೀಡಬೇಕಾದ ಸ್ಥಳ

ಫಿತ್ರ್ ಝಕಾತ್ ಕಡ್ಡಾಯವಾಗುವ ಸಮಯದಲ್ಲಿ ನೀವು


ಎಲ್ಲಿದ್ದೀರ�ೋ ಅಲ್ಲಿಯ ಬಡವರಿಗೆ ನೀಡಬೇಕು. ಅದು
ನಿಮ್ಮ ಊರಾಗಿದ್ದರೂ ಅಥವಾ ಬೇರೆ ಊರಾಗಿದ್ದರೂ
ಸರಿ. ವಿಶೇಷವಾಗಿ, ಶ್ರೇಷ್ಠ ಸ್ಥಳಗಳಾದ ಮಕ್ಕಾ ಮತ್ತು
ಮದೀನಾದಲ್ಲಿದರೆ
್ದ ಅಲ್ಲಿಯ ಬಡವರಿಗೇ ನೀಡಬೇಕು.
ಅಥವಾ ಯಾವ ಸ್ಥಳದಲ್ಲಿರ ುವ ಬಡವರು ಫಿತ್ರ್
ಝಕಾತ್‌ಗೆ ಅತ್ಯಧಿಕ ಅರ್ಹರ�ೋ ಆ ಸ್ಥಳದಲ್ಲಿರ ುವ
ಬಡವರಿಗೆ ನೀಡಬೇಕು. ನೀವಿರುವ ಊರಿನಲ್ಲಿ ಫಿತ್ರ್
ಝಕಾತ್ ಸ್ವೀಕರಿಸುವವರು ಇಲ್ಲದಿದ್ದಲ್,ಲಿ ಅಥವಾ
ಅಲ್ಲಿ ಫಿತ್ರ್ ಝಕಾತ್ ಯಾರಿಗೆ ನೀಡಬೇಕೆಂದು
ನಿಮಗೆ ಗೊತ್ತಿಲದಿ
್ಲ ದ್ದಲ್ಲಿ ಅರ್ಹ ಸ್ಥಳದಲ್ಲಿ ಅದನ್ನು
ವಿತರಣೆ ಮಾಡಲು ನಿಶ್ಚಯಿಸಲಾದ ಸಂಸ್ಥೆಗೆ ಅದನ್ನು
ಒಪ್ಪಿಸಬೇಕು.

ಫಿತ್ರ್ ಝಕಾತ್‌ನ ಫಲಾನುಭವಿಗಳು ಬಡವರು ಮಾತ್ರ.


ಫಿತ್ರ್ ಝ 30

ಆದರೆ ಸಾಲವಿದ್ದು ಅದನ್ನು ಸಂದಾಯ ಮಾಡಲು


ಒದ್ದಾಡುವವರಿಗೂ ಅವರಿಗೆ ಅವಶ್ಯವಿದ್ದಷ್ಟು ನೀಡ-
ಬಹುದು. ಫಿತ್ರ್ ಝಕಾತನ್ನು ಒಬ್ಬರಿಗಿಂತ ಹೆಚ್ಚು ಬಡ-
ವರಿಗೆ ನೀಡಬಹುದು. ಅಥವಾ ಒಂದು ದೊಡ್ಡ ಚೀಲ
ಫಿತ್ರ್ ಝಕಾತನ್ನು ಒಬ್ಬನೇ ಬಡವನಿಗೂ ನೀಡಬಹು-
ದು. ಏಕೆಂದರೆ, ಪ್ರವಾದಿ(g) ರವರು ಕೊಡಬೇಕಾದ
ಪ್ರಮ ಾಣವನ್ನು ನಿರ್ಣಯಿಸಿದ್ದಾರೆಯೇ ವಿನಾ ಯಾರಿಗೆ
ಎಷ್ಟು ಕೊಡಬೇಕೆಂದು ನಿರ್ಣಯಿಸಿಲ್ಲ.

ಓ ಅಲ್ಲಾಹ್! ನೀನು ತೃಪ್ತಿಪಡುವ ವಿಧದಲ್ಲಿ ನಿನ್ನ ಆಜ್ಞೆ-


ಗಳನ್ನು ಪಾಲಿಸುವ ಸೌಭಾಗ್ಯವನ್ನು ನಮಗೆ ದಯಪಾ-
ಲಿಸು. ನಮ್ಮ ಶರೀರಗಳನ್ನು, ಸಂಪತ್ತನ್ನು, ಕರ್ಮಗಳನ್ನು
ಸಂಸ್ಕರಿಸು. ಕೆಟ್ಟ ವಿಶ್ವಾಸ, ಮಾತು ಮತ್ತು ಕರ್ಮಗಳಿಂದ
ನಮ್ಮನ್ನು ಶುದ್ಧೀಕರಿಸು. ನೀನು ಅತ್ಯುದಾರಿಯೂ ಗೌ-
ರವಾರ್ಹನೂ ಆಗಿರುವೆ. ನಮ್ಮ ಪ್ರವಾದಿ ಮುಹಮ್ಮ-
ದ್(g) ರವರ ಮೇಲೆ, ಅವರ ಕುಟುಂಬದ ಮೇಲೆ
ಫಿತ್ರ್ ಝ 31

ಮತ್ತು ಅವರ ಸಹಾಬಾಗಳೆಲ್ಲರ ಮೇಲೆ ಅಲ್ಲಾಹನ


ಸಲಾತ್ ಮತ್ತು ಸಲಾಂ ಇರಲಿ.

ನಮ್ಮ ಇತರ ಲೇಖನಗಳಿಗೆ ಸಂದರ್ಶಿಸಿ:

bit.ly/msi_all

‫الحركة النصيحة اإلسالمية‬


ANNASEEHA ISLAMIC MOVEMENT
SURATKAL, MANGALORE - 575 014
MOB: 9731593091 / 9945171612

Jamiyathe Ahle Hadees


Mangalore

You might also like